lowborn ಅಪರಾಧ ಘಟನೆಗಳು 19-04-18 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ.16/08/2018 ತುಂಬೆ (ತುಮಕೂರು ಬೈಸಿಕಲ್ ಪೊಲೀಸ್)     ಜನಸ್ನೇಹಿ... >> :: ಪತ್ರಿಕಾ ಪ್ರಕಟಣೆ :: ದಿನಾಂಕ. 14.08.2018. 2018 ನೇ ಜುಲೈ ತಿಂಗಳಲ್ಲಿ ತುಮಕೂರು ನಗರ ವೃತ್ತದ... >> ಪತ್ರಿಕಾ ಪ್ರಕಟಣೆ ದಿನಾಂಕ 14/08/2018     ಸಿರಾ ತಾಲ್ಲೋಕ್ ತಾವರೆಕೆರೆ ಗ್ರಾಮದಲ್ಲಿರುವ... >> ಪತ್ರಿಕಾ ಪ್ರಕಟಣೆ   ಅಂತರ್ ರಾಜ್ಯ ಕಳ್ಳನ ಬಂಧನ, 75 ಸಾವಿರ ರೂ ಬೆಲೆಬಾಳುವ 10 ಮೊಬೈಲ್... >> ಪ ತ್ರಿ ಕಾ  ಪ್ರ ಕ ಟ ಣೆ ದಿನಾಂಕ: 03/08/2018 ತುಮಕೂರು ನಗರದಲ್ಲಿ ಒಟ್ಟು 3,420 ಅಭ್ಯರ್ಥಿಗಳಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ : 23.07.2018. ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ ದಿನಾಂಕ:- 23/07/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಕನ್ನ... >> : ಪತ್ರಿಕಾ ಪ್ರಕಟಣೆ  : : ದಿನಾಂಕ:21-07-2018 : -: ಮನೆಕಳ್ಳನ ಬಂಧನ :  7.5 ಲಕ್ಷ ರೂ ಮೌಲ್ಯದ ವಡವೆ... >> ಪತ್ರಿಕಾ ಪ್ರಕಟಣೆ ದಿನಾಂಕ : 20-07-18 ಸ್ಮಾರ್ಟ್ ಸಿಟಿ ಅಧಿಕಾರಿಗಳೆಂದು ವಂಚಿಸಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 20-07-2018       ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ಅಪರಾಧ ಘಟನೆಗಳು 19-04-18

ಜಯನಗರ ಪೊಲೀಸ್ ಠಾಣಾ ಮೊ ನಂ 64/2018 ಕಲಂ 457, 380 ಐಪಿಸಿ

ದಿನಾಂಕ: 18-04-2018 ರಂದು ರಾತ್ರಿ 7-30 ಗಂಟೆಗೆ ತುಮಕೂರು ಟೌನ್‌, ಉಪ್ಪಾರಹಳ್ಳಿ ಮುಖ್ಯರಸ್ತೆ,  ಶಿರಾನಿ ಗಾರ್ಡನ್‌ ವಾಸಿ ಎಮ್‌.ಕೆ ಶಿರಾನಿ ಬಿನ್ ಲೇಟ್ ಹಮೀದ್ ಖಾನ್ ಶಿರಾನಿ ರವರು ಠಾಣೆಗೆ ಹಾಜರಾಗಿ ನೀಡಿದ ಕಂಪ್ಯೂಟರ್ ಮುದ್ರಿತ ದೂರಿನ ಅಂಶವೇನೆಂದರೆ,  ನಾವು ದಿನಾಂಕ: 14-08-2018 ರಂದು ಸಂಜೆ 4-00 ಗಂಟೆಗೆ ನಮ್ಮ ಮನೆಗೆ ಡೋರ್‌ ಲಾಕ್ ಮಾಡಿಕೊಂಡು ಮೈಸೂರಿನ ಉದಯಗಿರಿಯಲ್ಲಿ ವಾಸವಾಗಿರುವ ನಮ್ಮ ಮಗಳ ಮನೆಗೆ  ನಮ್ಮ ಮೊಮ್ಮಕ್ಕಳನ್ನು ಕರೆದುಕೊಂಡು ಬರಲು ಹೋಗಿದ್ದೆವು.  ಈ ದಿನ ದಿನಾಂಕ: 18-04-2018 ರಂದು ಬೆಳಿಗ್ಗೆ ಸುಮಾರು 7-00 ಗಂಟೆಗೆ ನಮ್ಮ ಸಂಬಂಧಿಕರಾದ ಹಮೀದ್ ಖಾನ್ ಶಿರಾನಿ ರವರು ಪೋನ್ ಮಾಡಿ ನಿಮ್ಮ ಮನೆಯಲ್ಲಿ ನಿನ್ನೆ ದಿನಾಂಕ: 17-04-2018 ರಂದು ರಾತ್ರಿ ಕಳ್ಳತನವಾಗಿದೆ ಎಂದು ತಿಳಿಸಿದ್ದು, ನಾವು ಮೈಸೂರಿನಿಂದ ಈ ದಿನ ಮದ್ಯಾಹ್ನ 12-00 ಗಂಟೆಗೆ ನಮ್ಮ ಮನೆಗೆ ಬಂದು ನೋಡಲಾಗಿ ನಮ್ಮ ಮನೆಯ ಡೋರ್‌ ಲಾಕ್ ಮುರಿದಿದ್ದು, ಒಳಗೆ ಪ್ರವೇಶಿಸಿ ನೋಡಲಾಗಿ ರೂಮಿನ ಡೋರ್ ಲಾಕ್ ಸಹ ಮುರಿದಿದ್ದು, ರೂಮಿನಲ್ಲಿದ್ದ ಗಾಡ್ರೇಜ್ ಬೀರುವಿನ ಡೋರ್ ತೆರೆದಿತ್ತು.  ನಾವು ಪರಿಶೀಲಿಸಲಾಗಿ ಬೀರುವಿನಲ್ಲಿಟ್ಟಿದ್ದ 1] ಸುಮಾರು 5 ಗ್ರಾಂ ನ ಗೋಲ್ಡ್ ರಿಂಗ್‌ 2] ಸುಮಾರು 12 ಗ್ರಾಂ ನ ಕೆಂಪು ಕಲ್ಲಿನ ಚಿನ್ನದ ರಿಂಗ್ ಮತ್ತು ಬಿಳಿ ಕಲ್ಲಿನ ಚಿನ್ನದ ರಿಂಗ್ 3] ಸುಮಾರು 12 ಗ್ರಾಂ ನ ಗ್ರೀನ್ ಸ್ಟೋನ್ ಸೆಟ್‌ 4] ಸುಮಾರು 30 ಗ್ರಾಂ ನ ಗೋಲ್ಡ್ ಕಾಯಿನ್  5] ಸುಮಾರು 95 ಗ್ರಾಂ ನ ಗೋಲ್ಡ್ ಚೈನ್‌ 6] ಸುಮಾರು 30 ಗ್ರಾಂ ನ ನವರತ್ನ ಸೆಟ್‌ 7] ಸುಮಾರು 25 ಗ್ರಾಂ ನ ಮುತ್ತಿನ ಸೆಟ್ 8] ಸುಮಾರು 35 ಗ್ರಾಂ ತೂಕದ 7 ಬ್ಯಾಂಗಲ್ಸ್‌ 9] ಸುಮಾರು 25 ಗ್ರಾಂ ನ ಚಿನ್ನದ ಮಿನಿ ಸೆಟ್ 10] ಸುಮಾರು 20 ಗ್ರಾಂ ಜರ್ ಖಾನ್ ವೈಟ್ ಸೆಟ್‌ 11] ಸುಮಾರು 20 ಗ್ರಾಂ ತೂಕದ ರೂಬಿ ಚೈನ್ 12] ಸುಮಾರು 30 ಗ್ರಾಂ ತೂಕದ ಚಿನ್ನದ ಟಾಪ್ಸ್‌ & ಜಿಗನಿ 13] ಸುಮಾರು 10 ಗ್ರಾಂ ತೂಕದ ಚಿನ್ನದ ಬಿಳಿ ಕಲ್ಲಿನ ಉಂಗುರ ಇವುಗಳ ಒಟ್ಟ ತೂಕ 349 ಗ್ರಾಂ ಆಗಿದ್ದು, ಬೆಲೆ ಸುಮಾರು 3,49,000 ರೂ ಆಗಿರುತ್ತೆ. ಹಾಗೂ 14] ಸುಮಾರು 2,00,000 ರೂ ಬೆಲೆ ಬಾಳುವ ಒಂದು ಡೈಮೆಂಡ್ ನೆಕ್ಲೆಸ್‌ 15] ಸುಮಾರು 2,00,000 ರೂ ಬೆಲೆ ಬಾಳುವ ಒಂದು ಡೈಮೆಂಡ್ ರೊಲಾಕ್ಸ್ ವಾಚ್‌  ಗಳು ಕಳ್ಳತನವಾಗಿದ್ದವು.  ಮೇಲ್ಕಂಡ ಸುಮಾರು 7,49,000 ರೂ ಬೆಲೆ ಬಾಳುವ ವಸ್ತುಗಳನ್ನು ನಾವು ಮನೆಯಲ್ಲಿಲ್ಲದ ಸಮಯದಲ್ಲಿ ದಿನಾಂಕ: 17-04-2018 ರಂದು ರಾತ್ರಿ ಯಾರೋ ಕಳ್ಳರು ಮನೆಯ ಡೋರ್‌ ಲಾಕ್‌ ನ್ನು ಯಾವುದೋ ಆಯುಧದಿಂದ ಮೀಟಿ ಮನೆಯ ಒಳಗೆ ಪ್ರವೇಶಿಸಿ ರೂಮಿನ ಡೋರ್ ಲಾಕ್ ಮೀಟಿ ನಂತರ ಬೀರುವಿನ ಲಾಕ್ ಮೀಟಿ ಕಳುವು ಮಾಡಿಕೊಂಡು ಹೋಗಿರುತ್ತಾರೆ. ಕಳುವಾಗಿರುವ ವಸ್ತುಗಳ ಬಗ್ಗೆ ನಾವು ನಮ್ಮ ಮನೆಯಲ್ಲಿ ಕೂಲಂಕುಶವಾಗಿ ಪರಿಶೀಲಿಸಿ, ಕಳುವಾಗಿರುವ ವಿಚಾರ ಸಂಬಂಧಿಕರಿಗೆ ತಿಳಿಸಿ ನಂತರ ತಡವಾಗಿ ಪೊಲೀಸ್ ಠಾಣೆಗೆ ಬಂದು ದೂರು ನೀಡುತ್ತಿದ್ದು, ಕಳುವಾಗಿರುವ ಮೇಲ್ಕಂಡ ವಸ್ತುಗಳನ್ನು ಪತ್ತೆ ಮಾಡಿ ಕಳುವು ಮಾಡಿರುವ ಆರೋಪಿಗಳ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

ತುಮಕೂರು ನಗರ ಪೊಲೀಸ್‌ ಠಾಣಾ ಮೊ.ನಂ.122/2018 ಕಲಂ 353.504.506 IPC

ದಿನಾಂಕ:18/04/2018 ರಂದು ಮಧ್ಯಾಹ್ನ 2-15 ಗಂಟೆಗೆ ಪಿರ್ಯಾದಿ ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ನಾನು ಈಗ್ಗೆ 03 ತಿಂಗಳಿಂದ ಸಂಚಾರಿ ಪೂರ್ವ ಪೊಲೀಸ್ ಠಾಣೆಯಲ್ಲಿ ಹೋಮ್ ಗಾರ್ಡ್ ಆಗಿ ಕರ್ತವ್ಯ ನಿರ್ವಹಿಸುತ್ತಿರುತ್ತೇನೆ. ನಾನು ಎಂದಿನಂತೆ ಈ ದಿನ ದಿನಾಂಕ:18/04/2018 ರಂದು ಬಿ.ಜಿ.ಎಸ್. ಸರ್ಕಲ್‌ನಲ್ಲಿ ಕರ್ತವ್ಯಕ್ಕೆ ನೇಮಕವಾಗಿ ಬೆಳಿಗ್ಗೆ 9-00 ಗಂಟೆಗೆ ಕರ್ತವ್ಯಕ್ಕೆ ಹಾಜರಾಗಿ ಕರ್ತವ್ಯ ನಿರ್ವಹಿಸುತ್ತಿರುವಾಗ ಸುಮಾರು ಬೆಳಿಗ್ಗೆ 11-45 ಗಂಟೆ ಸಮಯದಲ್ಲಿ ಟೌನ್ ಹಾಲ್ ಸರ್ಕಲ್‌ ನ ಪ್ರೀ ಲೆಪ್ಟ್ ಬಳಿ ಆಟೋ ನಂ. ಕೆಎ-06-ಡಿ-8294 ನೇ ನೇ ಆಟೋ ಚಾಲಕ ನೋ ಪಾರ್ಕಿಂಗ್ ಸ್ಥಳದಲ್ಲಿ ಆಟೋವನ್ನು ನಿಲ್ಲಿಸಿಕೊಂಡು ನಿಂತ್ತಿದ್ದಾಗ ನಾನು ಆಟೋವನ್ನು ತೆಗೆಯಲು ಹೇಳಿದಾಗ ಆತನು ಆಟೋ ತೆಗೆಯದೇ ನನ್ನ ಮೇಲೆ ಏಕಾಏಕಿ ಜಗಳ ತೆಗೆದು ಯಾಕೋ ನಿನ್ನಮ್ಮನ್ನಕ್ಯಾಯ  ನೀನು ಯಾವನೋ ಎಂದು ಅವಾಚ್ಯ ಶಬ್ಧಗಳಿಂದ ಬೈಯ್ದು ನನ್ನ ಕರ್ತವ್ಯಕ್ಕೆ ಅಡ್ಡಿ ಪಡಿಸಿ ನಿನ್ನನ್ನು ಸುಮ್ಮನೇ ಬಿಡುವುದಿಲ್ಲವೆಂದು ಪ್ರಾಣ ಬೆದರಿಕೆ ಹಾಕಿದ್ದು, ನಾನು ತಕ್ಷಣ ನಂಜುಂಡೇಶ್ವರ ಪಾಯಿಂಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಿ.ಸಿ. 916 ಸುಧಾಕರ್‌ ರವರನ್ನು ನನ್ನ ಹತ್ತಿರ ಕರೆಸಿಕೊಂಡು ಆಟೋ ಚಾಲಕನ ಹೆಸರು ವಿಳಾಸ ಕೇಳಲಾಗಿ ನಾರಾಯಣಮೂರ್ತಿ ಎಂದು ತಿಳಿಯಿತು.ನಾನು ಆಟೋ ತೆಗೆಯಲು ಆತನಿಗೆ ಹೇಳಿದಾಗ ನನ್ನ ಕಾಲಿನ ಮೇಲೆ ಆಟೋ ಹತ್ತಿಸಿ ನೋವುಂಟು ಮಾಡಿರುತ್ತಾನೆ. ನಾನು ಈ ವಿಚಾರವನ್ನು ಮೇಲಾಧಿಕಾರಿಗಳಿಗೆ ತಿಳಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ಸುಧಾಕರ್ ರವರ ಸಹಾಯದಿಂದ ಠಾಣೆಗೆ ಆತನನ್ನು ಆಟೋ ಸಮೇತ ಕರೆದುಕೊಂಡು ಬಂದು ಮುಂದಿನ ಕ್ರಮಕ್ಕಾಗಿ ತಡವಾಗಿ ಠಾಣೆಗೆ ಬಂದು ದೂರು ನೀಡಿರುತ್ತೇನೆ.

ಸಿ.ಎಸ್.ಪುರ  ಠಾಣಾ ಯುಡಿಆರ್ ನಂ.04/2018. ಕಲಂ:174 ಸಿ.ಆರ್.ಪಿ.ಸಿ

ದಿನಾಂಕ:18.04.2018 ರಂದು ಈ ಕೇಸಿನ ಫಿರ್ಯಾದುದಾರರಾದ  ರಮೇಶ  ಬಿನ್ ಲೇಟ್ ದೊಡ್ಡಯ್ಯ, 38 ವರ್ಷ, ತಿಗಳರ  ಜನಾಂಗ, ಹಿಂಡಿಸ್ಕೆರೆ  ಗ್ರಾಮ, ಸಿ.ಎಸ್.ಪುರ  ಹೋಬಳಿ, ಗುಬ್ಬಿ  ತಾಲ್ಲೂಕುರವರು ಠಾಣೆಗೆ  ಹಾಜರಾಗಿ ನೀಡಿದ  ದೂರಿನ ಸಾರಾಂಶವೆಂದರೆ, ಈ ಕೇಸಿನ ಫಿರ್ಯಾದುದಾರರ ತಂದೆಯು ಈಗಾಗಲೇ ಮೃತಪಟ್ಟಿದ್ದು, ಇವರ ತಾಯಿ ದೊಡ್ಡ ಸಿದ್ದಮ್ಮನವರು ಬೇರೆ ವಾಸವಿದ್ದು,ಇವರಿಗೆ ಸುಮಾರು 75 ವರ್ಷ ವಯಸ್ಸಾಗಿರುತ್ತೆ. ಇವರು ಸುಮಾರು ದಿನಗಳಿಂದ ಅನಾರೋಗ್ಯದಿಂದ ಬಳಲುತಿದ್ದು, ಇವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತಿದ್ದು, ಈಗಿರುವಾಗ ದಿನಾಂಕ:15.04.2018 ರಂದು ಸಂಜೆ 6.30 ಗಂಟೆ ಸಮಯದಲ್ಲಿ  , ದೊಡ್ಡಸಿದ್ದಮ್ಮರವರು ಖಾಯಿಲೆ ಇದ್ದುದರಿಂದ ಮನಸ್ಸಿಗೆ ಬೇಜಾರು ಮಾಡಿಕೊಂಡು  ಮನೆಯಲ್ಲಿ  ಯಾವುದೋ ವಿಷ ಸೇವಿಸಿ ಒದ್ದಾಡುತಿದ್ದು, ಇದನ್ನು ಕಂಡ ಮನೆಯ ಅಕ್ಕಪಕ್ಕದವರು ವಿಷಯ ತಿಳಿಸಿದ್ದು,  ತಕ್ಷಣ ಈ ಕೇಸಿನ ಫಿರ್ಯಾದಿ ರಮೇಶ & ಇವರ ಅಕ್ಕನಾದ ಮಹದೇಮ್ಮ ಇಬ್ಬರೂ ಸೇರಿ 108 ವಾಹನದಲ್ಲಿ  ಗುಬ್ಬಿ ಸರ್ಕಾರಿ ಆಸ್ಪತ್ರೆಗೆ  ಕರೆದುಕೊಂಡು  ಹೋಗಿ ಚಿಕಿತ್ಸೆ  ಕೊಡಿಸಿದ್ದು, ನಂತರ ಹೆಚ್ಚಿನ ಚಿಕಿತ್ಸೆಗೆ  ತುಮಕೂರು ಜಿಲ್ಲಾ ಆಸ್ಪತ್ರೆಗೆ ಸೇರಿಸಿದ್ದು, ದಿನಾಂಕ:18.04.2018 ರಂದು ಮಧ್ಯಾಹ್ನ  ಸುಮಾರು 1.15 ಗಂಟೆ ಸಮಯದಲ್ಲಿ ಚಿಕಿತ್ಸೆ ಫಲಕಾರಿಯಾಗದೇ ದೊಡ್ಡ ಸಿದ್ದಮ್ಮರವರು ಮೃತಪಟ್ಟಿರುತ್ತಾರೆ  ಎಂದು ಇತ್ಯಾದಿಯಾಗಿ ನೀಡಿದ ದೂರನ್ನು  ಪಡೆದು  ಪ್ರಕರಣ ದಾಖಲಿಸಿರುತ್ತೆ.

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆಯ ಮೊ ನಂ 32/2018 ಕಲಂ 323,324,447,504,506 ರೆ/ವಿ 34 ಐ.ಪಿ.ಸಿ

ದಿನಾಂಕ 18/04/2018 ರಂದು ತಿಪಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಬಸಪ್ಪ ಬಿನ್ ಲೇ,ಚಿತ್ತಯ್ಯ 52 ವರ್ಷ,ಗೊಲ್ಲರು ಜನಾಂಗ,ವಕೀಲರು,ಮಡೇನೂರು ಬೋವಿಕಾಲೋನಿ ತೋಟದ ಮನೆ,ಕಸಬಾ ಹೋಬಳಿ ತಿಪಟೂರು ತಾ,ರವರು ನೀಡಿದ ಹೇಳಿಕೆಯ ಅಂಶವೇನೆಂದರೆ, ದಿನಾಂಕ 18-04-2018 ರಂದು ಬೆಳಿಗ್ಗೆ 09-30 ಗಂಟೆ ಸಮಯದಲ್ಲಿ ನಾನು ನನ್ನ ಸರ್ವೆ ನಂ 190/1 A(1) ರ ಜಮೀನಿನಲ್ಲಿರುವಾಗ ಸದರಿ ಗ್ರಾಮದ ಚಿತ್ತಯ್ಯ ರವರ ಮಗ ಧನಂಜಯ ನನ್ನ ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿ ಮತ್ತು ಸೋಮಶೇಖರ ಮತ್ತು ಪಂಚಾಕ್ಷರಿ ರವರು ಸಹ ನನ್ನನ್ನು ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ನನ್ನ ತಲೆಗೆ ಗುದ್ದಿ ಕಾಲಿನಿಂದ ಒದ್ದು, ಪಂಚಾಕ್ಷರಿ ದೊಣ್ಣೆಯಿಂದ ಬಲ ಭುಜಕ್ಕೆ ಹೊಡೆದು ಮತ್ತು ಸೋಮಶೇಖರ ಮಚ್ಚಿನ ಹಿಡಿಯಿಂದ ಸೊಂಟಕ್ಕೆ ಜೋರಾಗಿ ಗುದ್ದಿದ,ಅಲ್ಲದೆ ಅವರುಗಳು ಮುಖಕ್ಕೆ ಹೊಡೆದು ಮೂಗಿಗೆ ಹೊಡೆದು ರಕ್ತಗಾಯ ಪಡಿಸಿದರು. ಇವರೆಲ್ಲರೂ ಹಳೆ ದ್ವೇಶದಿಂದ ನನಗೆ ಈ ಕೃತ್ಯ ಮಾಡಿರುತ್ತಾರೆ,ಎಂತ ನೀಡಿದ ಹೇಳಿಕೆಯ ಮೇರೆಗೆ ಕೇಸು ದಾಖಲಿಸಿರುತ್ತದೆ.

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 73 guests online
Content View Hits : 322828