lowborn ಅಪರಾಧ ಘಟನೆಗಳು 17-04-18 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ.16/08/2018 ತುಂಬೆ (ತುಮಕೂರು ಬೈಸಿಕಲ್ ಪೊಲೀಸ್)     ಜನಸ್ನೇಹಿ... >> :: ಪತ್ರಿಕಾ ಪ್ರಕಟಣೆ :: ದಿನಾಂಕ. 14.08.2018. 2018 ನೇ ಜುಲೈ ತಿಂಗಳಲ್ಲಿ ತುಮಕೂರು ನಗರ ವೃತ್ತದ... >> ಪತ್ರಿಕಾ ಪ್ರಕಟಣೆ ದಿನಾಂಕ 14/08/2018     ಸಿರಾ ತಾಲ್ಲೋಕ್ ತಾವರೆಕೆರೆ ಗ್ರಾಮದಲ್ಲಿರುವ... >> ಪತ್ರಿಕಾ ಪ್ರಕಟಣೆ   ಅಂತರ್ ರಾಜ್ಯ ಕಳ್ಳನ ಬಂಧನ, 75 ಸಾವಿರ ರೂ ಬೆಲೆಬಾಳುವ 10 ಮೊಬೈಲ್... >> ಪ ತ್ರಿ ಕಾ  ಪ್ರ ಕ ಟ ಣೆ ದಿನಾಂಕ: 03/08/2018 ತುಮಕೂರು ನಗರದಲ್ಲಿ ಒಟ್ಟು 3,420 ಅಭ್ಯರ್ಥಿಗಳಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ : 23.07.2018. ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ ದಿನಾಂಕ:- 23/07/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಕನ್ನ... >> : ಪತ್ರಿಕಾ ಪ್ರಕಟಣೆ  : : ದಿನಾಂಕ:21-07-2018 : -: ಮನೆಕಳ್ಳನ ಬಂಧನ :  7.5 ಲಕ್ಷ ರೂ ಮೌಲ್ಯದ ವಡವೆ... >> ಪತ್ರಿಕಾ ಪ್ರಕಟಣೆ ದಿನಾಂಕ : 20-07-18 ಸ್ಮಾರ್ಟ್ ಸಿಟಿ ಅಧಿಕಾರಿಗಳೆಂದು ವಂಚಿಸಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 20-07-2018       ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ಅಪರಾಧ ಘಟನೆಗಳು 17-04-18

ತಾವರೆಕೆರೆ ಪೊಲೀಸ್ ಠಾಣೆ ಮೊ.ಸಂ :22/2018 ಕಲಂ 279, 304 () ಐಪಿಸಿ

ದಿನಾಂಕ-16-04-2018 ರಂದು ಸಂಜೆ 06-45 ಗಂಟೆಗೆ ಪಿರ್ಯಾದಿ ಬಿ.ಹೆಚ್. ನಾಗರಾಜು ಬಿನ್ ಲೇಟ್ ಹಾಲಪ್ಪ, 54 ವರ್ಷ, ಕುಂಚಿಟಿಗರು, ಬಸವನಹಳ್ಳಿ ಗ್ರಾಮ, ಹುಲಿಕುಂಟೆ ಹೋಬಳಿ, ಶಿರಾ ತಾಲ್ಲೂಕು ಮೊ ನಂ-7353745416 ಠಾಣೆಗೆ ಹಾಜರಾಗಿ ಕೊಟ್ಟ ಲಿಖಿತ ದೂರಿನ ಸಾರಾಂಶವೇನೆಂದರೆ, ನನ್ನ ಸಂಬಂಧಿ ಮಂಜುನಾಥ ಜವಗೊಂಡನಹಳ್ಳಿ ಗ್ರಾಮದಲ್ಲಿ ನಿರ್ಮಿತಿ ಕೇಂದ್ರದಿಂದ ಕೆಲಸ ಮಾಡಿಸುತ್ತಿದ್ದು ಕೆಲಸ ನೋಡಿಕೊಂಡು ಬರಲು  ಈ ದಿನ ದಿನಾಂಕ 16-04-2018 ರಂದು ನಾನು ಮತ್ತು ಮಂಜುನಾಥ ಇಬ್ಬರು ನಮ್ಮ ನಮ್ಮ ಮೋಟಾರ್ ಸೈಕಲ್ ಗಳಲ್ಲಿ ಜವಗೊಂಡನಹಳ್ಳಿ ಗ್ರಾಮಕ್ಕೆ ಹೋಗಿದ್ದೆವು ಕೆಲಸ ನೊಡಿಕೊಂಡು ವಾಪಾಸ್  ಊರಿಗೆ ಹೋಗಲು ಸಾಯಂಕಾಲ 4-30 ಗಂಟೆಗೆ ಜವಗೊಂಡನಹಳ್ಳಿ ಗ್ರಾಮದಿಂದ ಹೊರಟು ಹಿರಿಯೂರಿನಿಂದ ಶಿರಾಕ್ಕೆ ಹೋಗುವ ಎನ್.ಹೆಚ್.48 ರಸ್ತೆಯಲ್ಲಿ ಹೋಗುತ್ತಿದ್ದೆವು ಮಂಜುನಾಥ ನನ್ನ ಮೋಟಾರ್ ಸೈಕಲ್ ಮುಂದೆ ಹೋಗುತ್ತಿದ್ದನು ನಾನು ಅವನ ಹಿಂಭಾಗ ಹೋಗುತ್ತಿದ್ದೆನು. ಸಾಯಂಕಾಲ ಸುಮಾರು 5-15 ಗಂಟೆ ಸಮಯದಲ್ಲಿ ಯರಗುಂಟೇಶ್ವರ ನಗರದ ಸಮೀಪ ಮಲ್ಲಣ್ಣ ಸ್ಮಾರಕ ಶಾಲೆ ಮುಂಭಾಗ ಮಂಜುನಾಥನ ಮೋಟಾರ್ ಸೈಕಲ್ ಮುಂದೆ  2ನೇ ಟ್ರಾಕ್ ನಲ್ಲಿ  ಹೋಗುತ್ತಿದ್ದ  ಲಾರಿಯನ್ನು ಅದರ ಚಾಲಕ  ಎಕಾಎಕಿ ಬ್ರೇಕ್ ಹಾಕಿ ಲಾರಿಯನ್ನು ನಿರ್ಲಕ್ಷತೆಯಿಂದ ಬಲಭಾಗದಿಂದ ಎಡಭಾಗದ 3ನೇ ಟ್ರಾಕ್ ಗೆ ತಿರುಗಿಸಿದ ಪರಿಣಾಮ ಲಾರಿಯ ಹಿಂಭಾಗದ ಬಾಡಿ ಮೋಟಾರ್ ಸೈಕಲ್ ಗೆ ಡಿಕ್ಕಿಹೊಡೆದ ಪರಿಣಾಮ ಮೋಟಾರ್ ಸೈಕಲ್ ಲಾರಿಯ ಕೆಳಭಾಗಕ್ಕೆ ಬಿದ್ದು ಜಖಂಗೊಂಡಿತು. ಮಂಜುನಾಥ ರಸ್ತೆಯ ಮೇಲೆ ಬಿದ್ದು ತಲೆಗೆ ಮೈಕೈಗೆ ಪೆಟ್ಟುಗಳಾಗಿ ಸ್ಥಳದಲ್ಲಿಯೇ ಮೃತಪಟ್ಟನು. ಲಾರಿಯ ಚಾಲಕ  ಲಾರಿಯನ್ನು ಸ್ಥಳದಲ್ಲಿಯೇ ಬಿಟ್ಟು  ಓಡಿಹೋದನು ಆತನನ್ನು  ನೋಡಿದೆನು. ಅಪಘಾತ ಪಡಿಸಿದ ಲಾರಿಯ ನಂಬರ್  ನೋಡಲಾಗಿ  ಎಂ.ಹೆಚ್-13-ಆರ್-3201 ಲಾರಿಯಾಗಿತ್ತು ಮಂಜುನಾಥನ ಮೋಟಾರ್ ಸೈಕಲ್ ನಂಬರ್ ನೋಡಲಾಗಿ ಕೆಎ-64-ಎಲ್-4745 ನೇ ಹಿರೋಹೊಂಡಾ ಪ್ಯಾಷನ್ ಪ್ರೋ ಮೊಟಾರ್ ಸೈಕಲ್ ಆಗಿತ್ತು. ನಂತರ ಸ್ಥಳಕ್ಕೆ ಬಂದ ಹೈವೇ ಆಂಬ್ಯುಲೆನ್ಸ್ ನಲ್ಲಿ  ಮೃತ ಮಂಜುನಾಥನ ಶವವನ್ನು  ಶಿರಾ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ಕಳುಹಿಸಿಕೊಟ್ಟರು. ಈ ಅಪಘಾತವು ಎಂಹೆಚ್-13-ಆರ್-3201 ನೇ ಲಾರಿಯ ಚಾಲಕನ ನಿರ್ಲಕ್ಷತೆಯ ಚಾಲನೆಯಿಂದ ಉಂಟಾಗಿರುತ್ತೆ. ಅಪಘಾತಪಡಿಸಿ ಪರಾರಿಯಾಗಿರುವ  ಮೇಲ್ಕಂಡ  ಲಾರಿಯ ಚಾಲಕನ ಮೇಲೆ ಕ್ರಮ ಜರುಗಿಸಬೇಕೆಂತ ಕೋರುತ್ತೇನೆಂತ ಕೊಟ್ಟ ದೂರಿನ ಸಾರಾಂಶವಾಗಿರುತ್ತೆ.

ಮಿಡಿಗೇಶಿ  ಪೊಲೀಸ್ ಠಾಣಾ ಮೊ.ಸಂ.42/2018, ಕಲಂ:279,337 ಐಪಿಸಿ.134(ಎ)&(ಬಿ)187 ಐಎಂವಿ ಆಕ್ಟ್‌

ದಿನಾಂಕ:16/04/2018 ರಂದು ಸಂಜೆ 06-30 ಗಂಟೆಗೆ ಪಿರ್ಯಾದಿ ಗಂಗಪ್ಪ ಕೆ. ಬಿನ್ ಲೇ|| ಸಣ್ಣಕರಿಯಪ್ಪ 68 ವರ್ಷ,ಎ.ಕೆ.ಜನಾಂಗ ತರಕಾರಿ ವ್ಯಾಪಾರ ಪಿಲಿಗುಂಡ್ಲು ಗ್ರಾಮ ರೊಳ್ಳಮಂಡಲ್‌ ಮಡಕಶಿರಾ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೆನೆಂದರೆ ದಿನಾಂಕ:15/04/2018 ರಂದು ಬೆಳಿಗ್ಗೆ ನಾನು ನನ್ನ ಹೆಂಡತಿ ಇಬ್ಬರೂ ಮಧುಗಿರಿ ತಾಲ್ಲೂಕಿನ ಐ.ಡಿ.ಹಳ್ಳಿ ಗ್ರಾಮಕ್ಕೆ ಹೋಗಿ ಸಂತೆಯಲ್ಲಿ ವ್ಯಾಪಾರ ಮಾಡಿಕೊಂಡು ಸಂಜೆ ವಾಪಸ್ಸು ಊರಿಗೆ ಹೋಗಲು ಐ.ಡಿ.ಹಳ್ಳಿಯಿಂದ ಹೊಸಕೆರೆಗೆ ಬಸ್ಸಿನಲ್ಲಿ ಬಂದು ನಂತರ ನಮ್ಮ ಊರಾದ ಪಿಲಿಗುಂಡ್ಲುಗೆ ಹೋಗಲು ನಾನು ಮತ್ತು ನನ್ನ ಹೆಂಡತಿ ಅದೇ ದಿನ ರಾತ್ರಿ ಸುಮಾರು 07-30 ಗಂಟೆ ಸಮಯದಲ್ಲಿ ಹೊಸಕೆರೆ ಬಸ್ ನಿಲ್ದಾಣದಲ್ಲಿರುವ ಪ್ರಯಾಣಿಕರ ತಂಗುದಾಣದ ಮುಂದೆ ಪುಟ್ಪಾತ್ ರಸ್ತೆಯ ಮೇಲೆ ಬಸ್ಸಿಗಾಗಿ ಕಾಯುತ್ತ ನಿಂತಿದ್ದಾಗ ಅದೇ ಸಮಯಕ್ಕೆ ಮಧುಗಿರಿ-ಪಾವಗಡ ಮುಖ್ಯರಸ್ತೆಯಲ್ಲಿ ಮಧುಗಿರಿ ಕಡೆಯಿಂದ ಬಂದ AP-21-W-9888 ನೇ ಲಾರಿಯ ಚಾಲಕ ತನ್ನ ಲಾರಿಯನ್ನು ಅತೀ ಜೋರಾಗಿ ಮತ್ತು ಅಡ್ಡಾದಿಡ್ಡಿಯಾಗಿ ಓಡಿಸಿಕೊಂಡು  ಬಂದು ನನ್ನ ಜೊತೆಯಲ್ಲಿ ನಿಂತಿದ್ದ ನನ್ನ ಹೆಂಡತಿ ಹನುಮಕ್ಕಳಿಗೆ ಡಿಕ್ಕಿ ಹೊಡೆಸಿದ್ದರಿಂದ ಆಕೆಯು ರಸ್ತೆ ಮೇಲೆ ಬಿದ್ದ ಪರಿಣಾಮ ನನ್ನ ಹೆಂಡತಿಯ ಬಲಭುಜಕ್ಕೆ ಹಣೆಗೆ ಮತ್ತು ಸೊಂಟಕ್ಕೆ ಪೆಟ್ಟು ಬಿದ್ದು ಹಣೆಯಲ್ಲಿ ರಕ್ತಗಾಯವಾಗಿದ್ದವಳನ್ನು  ಮೇಲೆತ್ತಿ ಉಪಚರಿಸುತ್ತಿದ್ದಾಗ ಅಪಘಾತಪಡಿಸಿದ ಮೇಲ್ಕಂಡ ಲಾರಿಯ ಚಾಲಕ ಲಾರಿಯನ್ನು ತೆಗೆದುಕೊಂಡು ಹೊರಟು ಹೋದನು. ನಂತರ ನಾನು ಗಾಯಗೊಂಡಿದ್ದ ನನ್ನ ಹೆಂಡತಿಯನ್ನು ಕೂಡಲೇ ಹೊಸಕೆರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ನಂತರ ವೈಧ್ಯರ ಸಲಹೆಯಮೇರೆಗೆ ಹೆಚ್ಚಿನ  ಚಿಕಿತ್ಸೆಗಾಗಿ ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲು ಮಾಡಿ ಆಕೆಯ ಯೋಗಕ್ಷೇಮ ನೋಡಿಕೊಂಡು ಈ ದಿನ ತಡವಾಗಿ ಬಂದು ದೂರು ನೀಡಿರುತ್ತೇನೆ. ಸದರಿ ಲಾರಿಯ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ಪಿರ್ಯಾದು ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

ಪಟ್ಟನಾಯಕನಹಳ್ಳಿ ಪೊಲೀಸ್ ಠಾಣಾ ಮೊ ನಂ 44-18 ಕಲಂ 87 ಕೆ ಪಿ ಆಕ್ಟ್

ದಿನಾಂಕ:16-04-18 ರಂದು ಪ್ರೀತಮ್.ಎ.ಡಿ  ಪಿ ಎಸ್ ಐ  ಸಂಜೆ 06-30ಠಾಣೆಯ ಬಳಿ ಇದ್ದಾಗ ತಾಡಿಪಾಳ್ಯ ಗ್ರಾಮದ ವಾಸಿಯಾದ ಶಿವಣ್ಣ ಬಿನ್ ದಾಸೇಗೌಡ ರವರ ಬಾಬ್ತು ಮಾವಿನ ತೋಪಿನ  ಸಾರ್ವಜನಿಕ ಸ್ಥಳದಲ್ಲಿ ಯಾರೊ ಆಸಾಮಿಗಳು ದುಂಡಾಕಾರವಾಗಿ ಕುಳಿತುಕೊಂಡು ಹಣವನ್ನು ಪಣವಾಗಿಕಟ್ಟಿಕೊಂಡು ಕಾನೂನು  ಬಾಹಿರ ಇಸ್ಪೀಟ್ ಜೂಜಾಟ ಆಡುತ್ತಿದ್ದರೆಂತ ಖಚಿತ ಬಾತ್ಮೀ ಬಂದ ಮೇರೆಗೆ ನಾನು ದಾಳಿ ಮಾಡಲು ಘನ ನ್ಯಾಯಾಲಯದಿಂದ ಅನುಮತಿ ಪಡೆದು ಠಾಣೆಯ ಸಿಬ್ಬಂದಿಗಳು ಮತ್ತು ಪಂಚಾಯ್ತುದಾರರುಗಳನ್ನು ಇಲಾಖಾ ಜೀಪಿನಲ್ಲಿ ಕರೆದುಕೊಂಡು  ಹೋಗಿ ಮೇಲ್ಕಂಡ  ಸ್ಥಳದ  ಸ್ವಲ್ಪ ದೂರದ ಮರೆಯಲ್ಲಿ ಜೀಪನ್ನು ನಿಲ್ಲಿಸಿ, ಜೀಪಿನಿಂದ ಇಳಿದು ನೋಡಲಾಗಿ ಯಾರೊ ಆಸಾಮಿಗಳು ಸ್ಥಳದಲ್ಲಿ ದುಂಡಾಕಾರವಾಗಿ ಕುಳಿತುಕೊಂಡಿದ್ದ  ಇಸ್ಪೀಟ್ ಎಲೆಗಳ ಸಹಾಯದಿಂದ  ಕಾನೂನು ಬಾಹಿರ  ಇಸ್ಪೀಟ್ ಜೂಜಾಟ ಆಡುತ್ತಿದ್ದ ಆಸಾಮಿಗಳ ಮೇಲೆ ಪಂಚರ ಸಮಕ್ಷಮ  ನಾನು  ಮತ್ತು ಸಿಬ್ಬಂದಿಗಳು ದಾಳಿ ಮಾಡಿದಾಗ ಇಸ್ಪೀಟ್ ಜೂಜಾಟ ಆಡುತ್ತಿದ್ದ ಆಸಾಮಿಗಳನ್ನು ಹಿಡಿದು ಹೆಸರು ವಿಳಾಸ ತಿಳಿಯಲಾಗಿ 1)ಹನುಮಂತರಾಯಪ್ಪ ಬಿನ್ ಲೇಟ್ ಮಹಾಲಿಂಗಪ್ಪ, 56ವರ್ಷ, ಕುಂಚಿಟಿಗರು, ಜಿರಾಯ್ತಿ, ಹುಚ್ಚಗೀರನಹಳ್ಳಿ ಗ್ರಾಮ, ಶಿರಾ ತಾಲ್ಲೂಕ್  2) ನಾಗರಾಜು ಬಿನ್ ದೊಡ್ಡಯ್ಯ, 60ವರ್ಷ, ಕುಂಚಿಟಿಗರು, ಜಿರಾಯ್ತಿ, ಹುಚ್ಚಗೀರನಹಳ್ಳಿ ಗ್ರಾಮ, ಶಿರಾ ತಾಲ್ಲೂಕ್ 3) ಕಾಮರಾಜು ಬಿನ್ ನಾರಾಯಣಪ್ಪ, 52 ವರ್ಷ, ವಕ್ಕಲಿಗರು, ಆಟೋಡ್ರೈವರ್, ಜ್ಯೋತಿನಗರ, ಶಿರಾ ಟೌನ್ 4) ರಾಮಚಂದ್ರಪ್ಪ ಬಿನ್  ಹನುಮಂತಪ್ಪ, 63ವರ್ಷ, ವಕ್ಕಲಿಗರು, ಜಿರಾಯ್ತಿ ಮತ್ತು ಅಂಗಡಿ ವ್ಯಾಪಾರ, ತಾಡಿಪಾಳ್ಯ ಗ್ರಾಮ, ಶಿರಾ ತಾಲ್ಲೂಕ್ 5) ಹನುಮಂತೇಗೌಡ ಬಿನ್ ಲೇಟ್ ಬೀರಲಿಂಗಪ್ಪ, 56 ವರ್ಷ, ವಕ್ಕಲಿಗರು, ಜಿರಾಯ್ತಿ, ಜ್ಯೋತಿನಗರ, ಶಿರಾ ಟೌನ್ ಎಂತ ತಿಳಿಸಿದ್ದು ಅಖಾಡದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ  ಇಸ್ಪೀಟ್ ಎಲೆಗಳನ್ನು ಏಣಿಸಲಾಗಿ 52 ಇಸ್ಪೀಟು ಎಲೆಗಳು, 5950/-ರೂ ನಗದು ಹಣವನ್ನು  ಈ ದಿನ ರಾತ್ರಿ 07-00 ಗಂಟೆಯಿಂದ 08-00 ಗಂಟೆಯವರೆಗೆ ಗ್ಯಾಸ್ ಲೈಟಿನ ಬೆಳಕಿನಲ್ಲಿ ಪಂಚನಾಮೆ ಬರೆದು, ಪಂಚನಾಮೆ ಮೂಲಕ ಆಸಾಮಿಗಳನ್ನು ಮತ್ತು ಮಾಲುಗಳನ್ನು ವಶಕ್ಕೆ ಪಡೆದು ರಾತ್ರಿ 08-15ಗಂಟೆಗೆ ಆಸಾಮಿಗಳನ್ನು ಮತ್ತು ಮಾಲುಗಳೊಂದಿಗೆ ಠಾಣೆಗೆ ವಾಪಸ್ ಬಂದು ಮುಂದಿನ ಕ್ರಮ ಜರುಗಿಸಲು ಸೂಚಿಸಿದ್ದನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 74 guests online
Content View Hits : 322829