lowborn ಅಪರಾಧ ಘಟನೆಗಳು 12-04-18 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ. ದಿನಾಂಕ : 10-07-2018   ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 09-07-2018 ಕೊಲೆ ಆರೋಪಿಗಳ ಬಂಧನ ******* ದಿನಾಂಕ 04.07.2018 ರಂದು... >>   ಪತ್ರಿಕಾ ಪ್ರಕಟಣೆ ದಿನಾಂಕ : 07-07-2018. ಪೂರ್ವಾನುಮತಿ ಪಡೆಯದೇ ಹೆದ್ದಾರಿ ತಡೆ ನಡೆಸಿ,... >> ದಿನಾಂಕ.03.07.2018. ಪತ್ರಿಕಾ ಪ್ರಕಟಣೆ ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ 11 ಲಕ್ಷ 70 ಸಾವಿರ ಬೆಲೆ ಬಾಳುವ ಚಿನ್ನ-ಬೆಳ್ಳಿ  ಹಾಗೂ ಮೊಬೈಲ್‌‌‌... >>   ಪತ್ರಿಕಾ ಪ್ರಕಟಣೆ. ತುಮಕೂರು ಜಿಲ್ಲಾ ಪೊಲೀಸ್, ತುಮಕೂರು. ಕೋರಾ ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 27.06.2018 ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಸಾರ್ವಜನಿಕರ... >> ಪತ್ರಿಕಾ ಪ್ರಕಟಣೆ ದಿನಾಂಕ:- 23/06/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಖನ್ನ... >> ಪತ್ರಿಕಾ ಪ್ರಕಟಣೆ ದಿನಾಂಕ: 21-06-2018. ಸುಲಿಗೆಕೋರರ ಬಂಧನ: ದಿನಾಂಕ:18-06-2018 ರಂದು... >>   ಪೊಲೀಸ್ ಪ್ರಕಟಣೆ ತುಮಕೂರು ಜಿಲ್ಲಾ ಪೊಲೀಸ್ ಪ್ರಕಟಣೆ   ಆತ್ಮೀಯ ನಾಗರೀಕರಲ್ಲಿ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ಅಪರಾಧ ಘಟನೆಗಳು 12-04-18

ಸಿ.ಎಸ್.ಪುರ  ಠಾಣಾ ಯು.ಡಿ.ಆರ್ ನಂ. 03/2018. ಕಲಂ:174 ಸಿ,.ಆರ್.ಪಿ.ಸಿ

ದಿನಾಂಕ:11.04.2018 ರಂದು  ಈ ಕೇಸಿನ  ಫಿರ್ಯಾದಿಯಾದ  ಗೌರಮ್ಮ ಕೊಂ ಚೌಡೇಗೌಡ, 33 ವರ್ಷ, ವಕ್ಕಲಿಗರು, ಅಂಕಳ  ಕೊಪ್ಪ, ಸಿ.ಎಸ್.ಪುರ  ಹೋಬಳಿ, ಗುಬ್ಬಿ ತಾಲ್ಲೂಕು ರವರು  ಠಾಣೆಗೆ ಹಾಜರಾಗಿ ನೀಡಿದ  ದೂರಿನ ಸಾರಾಂಶವೆಂದರೆ, ದಿನಾಂಕ:08.04.2018 ರಂದು ಬೆಳಗ್ಗೆ 11.00 ಗಂಟೆ ಸಮಯದಲ್ಲಿ ಈ ಕೇಸಿನ ಫಿರ್ಯಾದಿ ಗೌರಮ್ಮರವರ ಭಾವನಾದ  ರಂಗಸ್ವಾಮಿರವರು  ತಮ್ಮ ಬಾಬ್ತು ಟಿ.ವಿ.ಎಸ್. ದ್ವಿ ಚಕ್ರವಾಹನಕ್ಕೆ ಪೆಟ್ರೋಲ್ ಹಾಕಿಸಲು  ತಮ್ಮ ಗ್ರಾಮದ ಶಕೀಲಾಬೀ ರವರ ಮನೆಯ ಹತ್ತಿರ ಪೆಟ್ರೋಲ್ ಹಾಕಿಸಲು ಹೋಗಿದ್ದು, ರಂಗಸ್ವಾಮಿರವರು ಟಿ.ವಿ.ಎಸ್.  ವಾಹನವನ್ನು ಆಫ್ ಮಾಡದೇ , ರನ್ನಿಂಗ್ ನಲ್ಲಿ ಇರುವಾಗಲೇ ಪೆಟ್ರೋಲ್  ಹಾಕಿಸುವಾಗ, ದ್ವಿ ಚಕ್ರವಾಹನವು ಹೀಟ್ ಆಗಿದ್ದುದರಿಂದ, ದ್ವಿ ಚಕ್ರವಾಹನಕ್ಕೆ ಆಕಸ್ಮಿಕವಾಗಿ  ಬೆಂಕಿ ಹತ್ತಿಕೊಂಡು , ರಂಗಸ್ವಾಮಿರವರ ದೇಹದ ಎಲ್ಲಾ ಕಡೆ ಬೆಂಕಿ ತಗುಲಿ  ಸುಟ್ಟಗಾಯಗಳಾಗಿದ್ದು, ಇವರನ್ನು  ತುಮಕೂರು  ಜಿಲ್ಲಾ  ಆಸ್ಪತ್ರೆಗೆ  ಕರೆದುಕೊಂಡು  ಹೋಗಿದ್ದು,  ನಂತರ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ  ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು  ಹೋಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ರಂಗಸ್ವಾಮಿರವರು ದಿನಾಂಕ:11.04.2018 ರಂಧು ಮಧ್ಯಾಹ್ನ 3.00 ಗಂಟೆಗೆ ಮೃತಪಟ್ಟಿರುತ್ತಾರೆ ಎಂದು ಇತ್ಯಾದಿಯಾಗಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಜಯನಗರ ಪೊಲೀಸ್ ಠಾಣಾ ಮೊ ನಂ 59/2018 ಕಲಂ 324, 504, 506 ರೆ/ವಿ 34 ಐಪಿಸಿ

ದಿನಾಂಕ:11-04-2018 ರಂದು ಮದ್ಯಾಹ್ನ 2-30 ಗಂಟೆಗೆ ಲಕ್ಷ್ಮೀ ಬಿನ್ ಉತ್ತರ ರೆಡ್ಡಿ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ, ನಮ್ಮ ತಾಯಿಯ ಅಕ್ಕನಾದ ರಾಮಕ್ಕ, ಅವರ ಮಗ ವೆಂಕಟೇಶ್, ಸೊಸೆ ಮಮತಾ, ಮಗಳಾದ ಚಂದ್ರಕಲಾ ರವರು ಆಗ್ಗಾಗ್ಗೆ ನಮ್ಮ ಮೇಲೆ ವಿನಾ ಕಾರಣ ನೀರಿನ ವಿಚಾರವಾಗಿ, ನಾವೇ ಮೊದಲು ನೀರು ಹಿಡಿಯಬೇಕೆಂದು ಮತ್ತು ನೀವು ಸೋಲಾರ್ ಹಾಕಿಸಿಕೊಳ್ಳಬೇಕು ಅದರಿಂದ ನನಗೆ ಕಮೀಷನ್ ಬರುತ್ತದೆ.  ನೀವು ಹಾಕಿಸಿಕೊಳ್ಳದಿದ್ದರೆ ನಿಮ್ಮನ್ನು ಇಲ್ಲಿಂದ ಖಾಲಿ ಮಾಡಿಸುತ್ತೇನೆ ಎಂದು ಜಗಳ ಮಾಡುತ್ತಿದ್ದರು.  ಹೀಗಿರುವಾಗ ನಿನ್ನೆ ಅಂದರೆ ದಿನಾಂಕ: 10-04-2018 ರಂದು ರಾತ್ರಿ 8-00 ಗಂಟೆಗೆ ನಮ್ಮ ತಾಯಿಯಾದ ಮಂಜುಳ ಮತ್ತು ನನ್ನ ಅಜ್ಜಿಯಾದ ನಾಗಮ್ಮನವರು ನೀರು ಹಿಡಿಯಬೇಕಾದರೆ ಅಲ್ಲಿಗೆ ಬಂದ ರಾಮಕ್ಕ, ಅವರ ಮಗ ವೆಂಕಟೇಶ, ಮಮತಾ ಮತ್ತು ಚಂದ್ರಕಲಾ ರವರು ಏಕಾಏಕಿ ಬಂದು ಅವಾಚ್ಯ ಶಬ್ದಗಳಿಂದ ಬೈಯ್ದು ನಿಮ್ಮನ್ನು ಜೀವಂತವಾಗಿ ಬಿಡುವುದಿಲ್ಲ ಸಾಯಿಸುತ್ತೇನೆ ಎಂದು ಬೆದರಿಕೆ ಹಾಕಿ ಅಲ್ಲೆ ಇದ್ದ ದೊಣ್ಣೆ ಮತ್ತು ಕಲ್ಲುಗಳಿಂದ ನನ್ನ ತಾಯಿಗೆ ಮತ್ತು ಅಜ್ಜಿಯಾದ ನಾಗಮ್ಮನವರ ಮೇಲೆ ಹಲ್ಲೆ ಮಾಡಿ ರಕ್ತಗಾಯಪಡಿಸಿರುತ್ತಾರೆ.  ನಂತರ ಅಲ್ಲೆ ಇದ್ದ ಎಲ್ಲಾ ಜನಗಳು ಬಂದು ಜಗಳ ಬಿಡಿಸಿದರು.  ನನ್ನ ತಾಯಿ ಪ್ರಜ್ಞೆ ತಪ್ಪಿದ್ದರಿಂದ ತುಮಕೂರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಇಂದು ಬಂದು ದೂರು ನೀಡುತ್ತಿದ್ದು, ಮೇಲ್ಕಂಡ ರಾಮಕ್ಕ, ಅವರ ಮಗನಾದ ವೆಂಕಟೇಶ್, ಮಗಳು ಚಂದ್ರಕಲಾ ಮತ್ತು ಅವರ ಸೊಸೆಯಾದ ಮಮತಾ ರವರ ಮೇಲೆ ಕಾನೂನು ಕ್ರಮ ಜರುಗಿಸಲು ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

ಜಯನಗರ ಪೊಲೀಸ್ ಠಾಣಾ ಮೊ ನಂ 60/2018 ಕಲಂ 143, 147, 323, 354, 504, 506 ರೆ.ವಿ 149 ಐಪಿಸಿ

ದಿನಾಂಕ: 11-04-2018 ರಂದು ರಾತ್ರಿ 7-15 ಗಂಟೆ ಸಮಯದಲ್ಲಿ ತುಮಕೂರು ಟೌನ್‌, ಹಂದಿಜೋಗಿ ಶಾಖೆ, ಬನಶಂಕರಿ 2 ನೇ ಹಂತದ ವಾಸಿ ಮಮತಾ ಕೋಂ ವೆಂಕಟೇಶ್ ರವರು ಠಾಣೆಗೆ ಹಾಜರಾಗಿ ನೀಡಿದ ಕಂಪ್ಯೂಟರ್ ಮುದ್ರಿತ ದೂರಿನ ಅಂಶವೇನೆಂದರೆ, ದಿನಾಂಕ: 10-04-2018 ರಂದು ರಾತ್ರಿ ಸುಮಾರು 7-45 ಗಂಟೆ ಸಮಯದಲ್ಲಿ ನಮ್ಮ ಮನೆಯ ಪಕ್ಕದಲ್ಲಿರುವ ಕುಡಿಯುವ ನೀರಿನ ನಲ್ಲಿಯಲ್ಲಿ ನೀರು ತರಲು ನಾನು ಹೋಗಿದ್ದಾಗ, ಅಲ್ಲಿಗೆ ಮಂಜಮ್ಮ, ಆಕೆಯ ಗಂಡ ಸುಂಕಪ್ಪ @ ಸಣ್ಣಯ್ಯ, ಅವರ ಮಗಳು ಲಕ್ಷ್ಮೀ ಕೋಂ ಉತ್ತರ ರೆಡ್ಡಿ,  ಗಂಗಮ್ಮ ಕೋಂ. ಲೇ|| ಗುರುಮೂರ್ತಿ, ರವಿ @ ಸುಂಕಪ್ಪ ಹಾಗೂ ನಾಗರಾಜ ಬಿನ್. ಲೇ|| ಸುಂಕಪ್ಪ ರವರುಗಳು ನಾನು ಹೋಗಿದ್ದ ನೀರಿನ ನಲ್ಲಿಯ ಬಳಿಗೆ ಬಂದವರೇ ನನ್ನನ್ನು ಕುರಿತು ಸೂಳೇ ಮುಂಡೆ, ಬೋಸೂಡಿ,  ಈ ನಲ್ಲಿಯಲ್ಲಿ ನೀರು ಹಿಡಿಯಬೇಡವೆಂದು ಹೇ|ಳಿದರೂ ಸಹಾ ಇಲ್ಲಿಯೇ ನೀರು ಹಿಡಿಯಲು ಬರುತ್ತೀಯಾ ಎಂತಾ ಏಕಾಏಕಿ ಅವಾಚ್ಯ ಶಬ್ದಗಳಿಂದ ಭೈದು ನನ್ನ ಮೇಲೆ ಜಗಳ ತೆಗೆದು, ಮಂಜಮ್ಮ ನನ್ನ ಜುಟ್ಟು ಹಿಡಿದು ಎಳೆದಾಡಿದಳು, ಸುಂಕಪ್ಪ @ ಸಣ್ಣಯ್ಯ, ಲಕ್ಷ್ಮಮ್ಮ ಕೋಂ. ಗಣೇಶ,  ಗಂಗಮ್ಮ ಕೋಂ. ಲೇ|| ಗುರುಮೂತಿ, ನಾಗರಾಜ ಬಿನ್. ಲೇ|| ಸುಂಕಪ್ಪ ರವರು ಕೈಗಳಿಂದ ನನ್ನ ಮೈ ಮೇಲೆ ಹೊಡೆದರು ರವಿ @ ಸುಂಕಪ್ಪನು ನಾನು ತೊಟ್ಟಿದ್ದ ಚೂಡೀಧಾರ್ ಟಾಪನ್ನು ಹಿಡಿದು ಎಳೆದಾಡಿ, ಚೂಡೀಧಾರ್ ಟಾಫ್ ಹರಿದು ನನ್ನನ್ನು ಮಾನಭಂಗ ಮಾಡಲು ಪ್ರಯತ್ನಿಸಿದನು.  ಅಷ್ಟರಲ್ಲಿ ಅಲ್ಲಿಗೆ ಬಂದ ನನ್ನ ಗಂಡ, ವೆಂಕಟೇಶ, ನನ್ನ ಅತ್ತೆ ರಾಮಕ್ಕ ಹಾಗೂ ನನ್ನ ನಾದಿನಿ ಚಂದ್ರಕಲಾ ರವರಿಗೂ ಸಹಾ ಮೇಲ್ಕಂಡವರೆಲ್ಲಾ ಬಾಯಿಗೆ ಬಂದಂತೆ ಭೈದು ಕೈಗಳಿಂದ ಮೈ ಮೇಲೆಲ್ಲಾ  ಹೊಡೆದರು, ನಾಗರಾಜ ಬಿನ್. ಲೇ|| ಸುಂಕಪ್ಪನು ನನ್ನ ನಾದಿಯ ಚೂಡೀಧಾರ್ ಟಾಪನ್ನು ಹರಿದು ಹಾಕಿ ಆಕೆಯನ್ನು ಮಾನಭಂಗ ಮಾಡಲು ಪ್ರಯತ್ನಿಸಿದನು.  ಅಷ್ಟರಲ್ಲಿ ಲಕ್ಷ್ಮಣ ರವರ ಮಗ ವೆಂಕಟೇಶ, ರಾಮಣ್ಣನ ಮಗ ನಾಗರಾಜು ರವರುಗಳು ಬಂದು ಜಗಳ ಬಿಡಿಸಿ ಮೇಲ್ಕಂಡ ಆರೋಪಿಗಳಿಗೆ ಬುದ್ದಿ ಹೇಳಿ ಕಳುಹಿಸಿದರು.  ಮೇಲ್ಕಂಡವರೆಲ್ಲರೂ ಹೋಗುವಾಗ ನಮ್ಮನ್ನೆಲ್ಲಾ ಕುರಿತು ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ. ಕೊಲೆ ಮಾಡಿಯೇ ತೀರುತ್ತೇವೆಂತಾ ಪ್ರಾಣ ಬೆದರಿಕೆ ಹಾಕಿ ಹೊರಟು ಹೋದರು.  ನನಗೆ, ನನ್ನ ಗಂಡ ವೆಂಕಟೇಶ, ನಮ್ಮ ಅತ್ತೆ ರಾಮಕ್ಕ, ನನ್ನ ನಾದಿನಿ ಚಂದ್ರಕಲಾ ರವರುಗಳಿಗೆ ಆಸತ್ರೆಯಲ್ಲಿ ಚಿಕಿತ್ಸೆ ಪಡೆಯುವಂತಹ ಪೆಟ್ಟುಗಳು ಏನೂ ಬೀಳದ ಕಾರಣ ನಾವುಗಳು ಯಾವುದೇ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದಿರುವುದಿಲ್ಲ. ಆರೋಪಿಗಳೆಲ್ಲರೂ ನಮ್ಮ ಸಂಬಂಧಿಕರೇ ಆಗಿರುವುದರಿಂದ ನಮ್ಮ ಹಿರಿಯರು ನ್ಯಾಯ ಪಂಚಾಯ್ತಿ ಮಾಡಿ ಬಗೆಹರಿಸುತ್ತಾರೆಂತಾ ಇದುವರೆವಿಗೂ ಸಹಾ ಕಾದಿದ್ದು, ಯಾರೂ ಸಹಾ ನ್ಯಾಯ ಪಂಚಾಯ್ತಿ ಮಾಡಲು ಮುಂದೆ ಬಾರದ ಕಾರಣ  ಈ ದಿನ ತಡವಾಗಿ ಪೊಲೀಸ್ ಠಾಣೆಗೆ ಬಂದು ದೂರು ನೀಡುತ್ತಿದ್ದೇನೆ.  ತಾವು ದಯಮಾಡಿ ಮೇಲ್ಕಂಡ ಆರೋಪಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂತಾ ಕೋರಿ ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

ಬಡವನಹಳ್ಳಿ ಪೊಲೀಸ್ ಠಾಣಾ ಮೊ ನಂ 56/2018  - ಕಲಂ 279-337,338 ಐಪಿಸಿ ರೆ/ವಿ.134(ಎ)&(ಬಿ)  187 ಐ ಎಂ ವಿ     ಆಕ್ಟ್‌‌ . ದಿನಾಂಕ:-11/04/2018 ರಂದು ಸಂಜೆ 5-00 ಗಂಟೆ ಸಮಯದಲ್ಲಿ ಪಿರ್ಯಾದಿ ಹನುಮಂತಪ್ಪ ಬಿನ್ ಸಣ್ಣರಂಗಪ್ಪ, ಕಳಾಪುರ ಗ್ರಾಮ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ,  ದಿ:10/04/2018 ರಂದು ನಾನು , ನನ್ನ ಹೆಂಡತಿ ಜ್ಯೋತಿ ನನ್ನ ಸಂಬಂದಿ ಸತೀಶ್‌ ಹಾಗೂ ಈತನ ಹೆಂಡತಿ ರತ್ನ ರವರುಗಳು ಸತೀಶನ ಬಾಬ್ತು ಕೆಎ-05-ಎಜಿ-9644 ನೇ ಕಾರಿನಲ್ಲಿ ಬೆಂಗಳೂರಿನಿಂದ ಹೊರಟು ಗೊರವನಹಳ್ಳಿ ಲಕ್ಷ್ಮೀದೇವರ ದರ್ಶನದ ನಂತರ ಅಲ್ಲಿಂದ ದಂಡಿನ ಮಾರಮ್ಮ ದೇವಸ್ಥಾನಕ್ಕೆ ಬಂದು ಪೂಜೆ ಮಾಡಿಸಿಕೊಂಡು ನಮ್ಮೂರಿಗೆ ಹೋಗಲು  ನಾನೇ ಕಾರನ್ನು ಚಾಲನೆ ಮಾಡಿಕೊಂಡು ಶಿರಾ ಮಧುಗಿರಿ ರಸ್ತೆಯಲ್ಲಿ ಸಂಜೆ-6-30 ಗಂಟೆ ಸಮಯದಲ್ಲಿ  ಹರಿಹರಪುರದ ಗೇಟ್‌ ಹತ್ತಿರ ಬರುವಾಗ  ಎದುರುಗಡೆಯಿಂದ ಕೆಎ-06-ಎನ್‌‌-3517 ನೇ ನಂಬರಿನ ‌  ಜೆ ಸಿ ಬಿ ವಾಹನವನ್ನು ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಏಕಾಏಕಿ ವಾಹನವನ್ನು ಬಲಭಾಗಕ್ಕೆ ತಿರುವಿ ನಮ್ಮ ವಾಹನಕ್ಕೆ ಅಪಘಾತ ಪಡಿಸಿರುತ್ತಾರೆ. ಅಪಘಾತದಲ್ಲಿ ಕಾರು ಜಖಂಗೊಂಡಿರುತ್ತೆ. ಕಾರಿನಲ್ಲಿದ್ದ ನನಗೆ ಎಡಗೈ ಮುರಿದು, ಎಡಪಕ್ಕೆಗೆ ಪೆಟ್ಟು ಬಿದ್ದಿರುತ್ತೆ. ನನ್ನ ಹೆಂಡತಿಗೆ ಮೂಗಿನ ಕಂಬಕ್ಕೆ ಮತ್ತು ಎಡಭುಜಕ್ಕೆ ಪೆಟ್ಟು ಬಿದ್ದಿರುತ್ತೆ. ಸತೀಶನಿಗೆ ಎದೆಗೆ ಬಲಮುಂಗೈ ಮತ್ತು ಸೊಂಟಕ್ಕೆ ಪೆಟ್ಟುಗಳು ಬಿದ್ದಿರುತ್ತವೆ. ಸತೀಶನ ಹೆಂಡತಿಗೆ ಗಲ್ಲಕ್ಕೆ ಬಲಭುಜ , ಬಲಮೊಣಕೈಗೆ ಪೆಟ್ಟುಗಳಾಗಿರುತ್ತವೆ. ನಾವುಗಳು 108 ವಾಹನದಲ್ಲಿ ಮಧುಗಿರಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದು, ಜೆ ಸಿ ಬಿ ವಾಹನದ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಅಂಶವಾಗಿರುತ್ತೆ.

ಬಡವನಹಳ್ಳಿ ಪೊಲೀಸ್ ಠಾಣಾ ಮೊ ನಂ 55/2018  - ಕಲಂ 279-337 ಐಪಿಸಿ ರೆ/ವಿ.134(ಎ)&(ಬಿ) 187 ಐ ಎಂ ವಿ ಆಕ್ಟ್‌‌ .

ದಿ:11/04/2018 ರಂದು ಬೆಳಗ್ಗೆ 11-30 ಗಂಟೆಗೆ ಪಿರ್ಯಾದಿ ಶಿವಣ್ಣ ಬಿನ್‌ ದೊಡ್ಡಯ್ಯ , ಬಡಿಗೊಂಡನಹಳ್ಳಿ ಗ್ರಾಮ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ:-11/03/2018 ರಂದು ಬೆಳಗ್ಗೆ 9-00 ಗಂಟೆ ಸಮಯದಲ್ಲಿ ನನ್ನ ಮಗ ಎಸ್‌ ಮನೋಹರ್‌  ಕೂಲಿ ಆಳುಗಳನ್ನು ಕರೆದುಕೊಂಡು ಬರಲು ಬಡಿಗೊಂಡನಹಳ್ಳಿಯಿಂದ ಮಲ್ಲೇನಹಳ್ಳಿ ಗೊಲ್ಲರಹಟ್ಟಿಗೆ ಹೋಗಲು ರಸ್ತೆಯ ತಿರುವಿನ ಎಡಬದಿಯಲ್ಲಿ ನಡೆದುಕೊಂಡು ಹೋಗುವಾಗ ಹಿಂದಿನಿಂದ ಕೆಎ-04-ಜೆ.ಹೆಚ್‌-8822 ನೇ ನಂಬರಿನ ಹಿರೋ ಸ್ಪೆಂಡರ್‌ ಪ್ಲಸ್‌ ಬೈಕ್‌ ಅನ್ನು ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿ ನನ್ನ ಮಗನಿಗೆ ಡಿಕ್ಕಿ ಹೊಡೆಸಿದ್ದರಿಂದ ನನ್ನ ಮಗನ ಎಡ ಮೊಣಕಾಲು ತಲೆ ಮೈ ಕೈ ಗೆ ರಕ್ತಗಾಯವಾಗಿದ್ದು, ಸ್ಥಳದಲ್ಲಿದ್ದವರು ನನ್ನ ಮಗನಿಗೆ ಉಪಚರಿಸಿ ಯಾವುದೋ ವಾಹನದಲ್ಲಿ ಕೈಮರಕ್ಕೆ ಬಂದು ನಂತರ 108 ವಾಹನದಲ್ಲಿ ತುಮಕೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ನನಗೆ ಪೋನ್ ಮೂಲಕ ತಿಳಿಸಿದರು. ನಂತರ ನಾನು ತುಮಕೂರು ಆಸ್ಪತ್ರೆಗೆ ಹೋಗಿ ನೋಡಿದೆ ವೈದ್ಯರ ಸಲಹೆಯಂತೆ ನನ್ನ ಮಗನನ್ನು ತುಮಕೂರಿನ ಹೇಮಾವತಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿರುತ್ತೇನೆ. ಚಾಲಕನ ಹೆಸರು ಮೋಹನ್‌ ಆರ್ ಬಿನ್ ರಂಗಶಾಮಯ್ಯ, ಬೇಡತ್ತೂರು ಗ್ರಾಮ ಮಿಡಿಗೇಶಿ ಹೋಬಳಿ, ಮಧುಗಿರಿ ತಾಲ್ಲೂಕು ಎಂದು ತಿಳಿದು ಬಂದಿರುತ್ತೆ. ಚಾಲಕ ಮೋಹನ್‌ ಆಸ್ಪತ್ರೆಯ ಖರ್ಚನ್ನು ಕೊಡುತ್ತೇನೆಂದು ಹೇಳಿ ಇದುವರೆವಿಗೂ ಕೊಡದೇ ಇದುದ್ದರಿಂದ ತಡವಾಗಿ ಬಂದು ದೂರು ನೀಡುತ್ತಿದ್ದು, ದ್ವಿ ಚಕ್ರ ವಾಹನ ಚಾಲಕ ಮೋಹನ್‌ ನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಅಂಶವಾಗಿರುತ್ತೆ

 

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 77 guests online
Content View Hits : 302221