lowborn ಅಪರಾಧ ಘಟನೆಗಳು 09-04-18 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ. ದಿನಾಂಕ : 10-07-2018   ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 09-07-2018 ಕೊಲೆ ಆರೋಪಿಗಳ ಬಂಧನ ******* ದಿನಾಂಕ 04.07.2018 ರಂದು... >>   ಪತ್ರಿಕಾ ಪ್ರಕಟಣೆ ದಿನಾಂಕ : 07-07-2018. ಪೂರ್ವಾನುಮತಿ ಪಡೆಯದೇ ಹೆದ್ದಾರಿ ತಡೆ ನಡೆಸಿ,... >> ದಿನಾಂಕ.03.07.2018. ಪತ್ರಿಕಾ ಪ್ರಕಟಣೆ ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ 11 ಲಕ್ಷ 70 ಸಾವಿರ ಬೆಲೆ ಬಾಳುವ ಚಿನ್ನ-ಬೆಳ್ಳಿ  ಹಾಗೂ ಮೊಬೈಲ್‌‌‌... >>   ಪತ್ರಿಕಾ ಪ್ರಕಟಣೆ. ತುಮಕೂರು ಜಿಲ್ಲಾ ಪೊಲೀಸ್, ತುಮಕೂರು. ಕೋರಾ ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 27.06.2018 ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಸಾರ್ವಜನಿಕರ... >> ಪತ್ರಿಕಾ ಪ್ರಕಟಣೆ ದಿನಾಂಕ:- 23/06/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಖನ್ನ... >> ಪತ್ರಿಕಾ ಪ್ರಕಟಣೆ ದಿನಾಂಕ: 21-06-2018. ಸುಲಿಗೆಕೋರರ ಬಂಧನ: ದಿನಾಂಕ:18-06-2018 ರಂದು... >>   ಪೊಲೀಸ್ ಪ್ರಕಟಣೆ ತುಮಕೂರು ಜಿಲ್ಲಾ ಪೊಲೀಸ್ ಪ್ರಕಟಣೆ   ಆತ್ಮೀಯ ನಾಗರೀಕರಲ್ಲಿ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ಅಪರಾಧ ಘಟನೆಗಳು 09-04-18

ಕುಣಿಗಲ್ ಪೊಲೀಸ್ ಠಾಣಾ ಮೊ.ನಂ: 196/2018 ಕಲಂ; 279.337,  304 () ..ಪಿ ಸಿ

ದಿನಾಂಕ 08/04/2018 ರಂದು ರಾತ್ರಿ 08-00 ಗಂಟೆ ಸಮಯದಲ್ಲಿ  ಈ ಕೇಸಿನ ಪಿರ್ಯಾದಿ ಬಿ ಮಧುಕುಮಾರ್ ಬಿನ್ ಬೋರಯ್ಯ 30 ವರ್ಷ ವಕ್ಕಲಿಗರು ನಂ ಎ-66 1 ನೇ ಮುಖ್ಯ ರಸ್ತೆ ಮುನೇಶ್ವರ ಬ್ಲಾಕ್ ,ಪ್ಯಾಲೇಸ್ ಗುಟ್ಟಳ್ಳಿ ಬೆಂಗಳೂರು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನಂದರೆ, ದಿನಾಂಕ 08/04/2018 ರಂದು ನಾಗಮಂಗಲ ತಾಲ್ಲೋಕ್ ಬೆಳ್ಳೂರು ಕ್ರಾಸ್ ನಲ್ಲಿ ನಮ್ಮ ಸಂಭಂಧಿಕರ ಮದುವೆ ಇದ್ದ ಪ್ರಯುಕ್ತ ನಾನು ನನ್ನ ಅಣ್ಣ ಗಂಗಾಧರ  ಇಬ್ಬರೂ ಬೆಳ್ಳೂರು ಕ್ರಾಸ್  ಗೆ ಮದುವೆಗೆ ಹೋಗಿದ್ದರು, ಸದರಿ ಮದುವೆಗೆ ನನ್ನ ಸಂಭಂಧಿಕರಾದ ಅಂದರೆ ನನ್ನ ಮಾವ ಚನ್ನಪ್ಪನವರ ಮಗ ಬಸವರಾಜು, ಕರಿಯಪ್ಪನ ಮಗ ಮರಿಗೌಡ ಮತ್ತು ಸಿದ್ದಲಿಂಗಯ್ಯನ ಮಗ ಕೆಂಪೇಗೌಡ ಮೂವರು ಕೆ.ಎ-04 ಡಿ-2932 ರ ಕಾರಿನಲ್ಲಿ ಪ್ಯಾಲೇಸ್ ಗುಟ್ಟಳ್ಳಿ ಬೆಂಗಳೂರಿನಿಂದ ಬೆಳ್ಳೂರು ಕ್ರಾಸ್ ಗೆ ಬಂದಿದ್ದರು ಮದುವೆ ಮುಗಿಸಿಕೊಂಡು ವಾಪಸ್ ಬೆಂಗಳೂರಿಗೆ ಹೋಗಲು ಮೇಲ್ಕಂಡ ಕೆಂಪೇಗೌಡನು ಮೇಲ್ಕಂಡ ಕಾರನ್ನು ಚಾಲನೆ ಮಾಡಿಕೊಂಡು ಬಸವರಾಜು ಮತ್ತು ಮರಿಗೌಡರನ್ನು ಕಾರಿನಲ್ಲಿ ಕುಳ್ಳಿರಿಸಿಕೊಂಡು ಎನ್.ಎಚ್-75 ಬೈಪಾಸ್ ರಸ್ತೆ ಅಂಚೆಪಾಳ್ಯದ ಬಳಿ ಸಂಜೆ ಸುಮಾರು 04-15 ಗಂಟೆ ಸಮಯದಲ್ಲಿ ಮೇಲ್ಕಂಡ ಕಾರಿನ ಚಾಲಕ ಕೆಂಪೇಗೌಡ ತನ್ನ ಕಾರನ್ನು ಅತಿವೇಗವಾಗಿ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ವೇಗ ನಿಯಂತ್ರಣ ತಪ್ಪಿ ಎಡರಸ್ತೆಯ ಹಳ್ಳಕ್ಕೆ ಪಲ್ಟಿ ಹೊಡೆದು ಸರ್ವೀಸ್ ರಸ್ತೆಯಿಂದ ಆಚೆ ಹೋಗಿ ಗದ್ದೆಯಲ್ಲಿ ಬಿದ್ದಿರುತ್ತದೆ. ನಾನು ಮತ್ತು ನನ್ನ ಅಣ್ಣ ಗಂಗಾಧರ ಅದೇ ಸಮಯದಲ್ಲಿ ಬೆಂಗಳೂರಿಗೆ ವಾಪಸ್‌ ಹೋಗಲು ಅಪಘಾತದ ಸ್ಥಳದಿಂದ ಸುಮಾರು 200 ಅಡಿ ದೂರದಲ್ಲಿ ನಮ್ಮ ಕಾರಿನಲ್ಲಿ ಬರುತ್ತಿದ್ದು, ಸದರಿ ಅಪಘಾತವನ್ನು ದೂರದಿಂದ ನೋಡಿ ಹೋಗಿ ನೋಡಲಾಗಿ ಕಾರ್ ಸಂಪೂರ್ಣ ಜಖಂ ಗೊಂಡಿದ್ದು ಕಾರ್ ಚಾಲಕ ಕೆಂಪೇಗೌಡರಿಗೆ ತಲೆಗೆ ಮತ್ತು ಮೈ ಕೈಗಳಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದವು, ಕೆಂಪೇಗೌಡರಿಗೆ ತಲೆಗೆ ಮತ್ತು ಸೊಂಟಕ್ಕೆ ತೀವ್ರ ಸ್ವರೂಪದ ಗಾಯಗಳಾಗಿದ್ದವು, ಮರಿಗೌಡರಿಗೂ ಸಹ ಏಟುಗಳು ಬಿದ್ದಿದ್ದವು ನಾನು ನಮ್ಮ ಅಣ್ಣ ಗಂಗಾಧರ ಗಾಯಾಳು ಬಸವರಾಜು ಮತ್ತು ಕೆಂಪೇಗೌಡರನ್ನು ನಮ್ಮ ವಾಹನದಲ್ಲಿ ಹಾಕಿಕೊಂಡು ಕುಣಿಗಲ್ ಸರ್ಕಾರಿ ಆಸ್ಪತ್ರೆಯ ಹತ್ತಿರ ಬಂದಾಗ ಬಸವರಾಜು ಗೇಟಿನ ಹತ್ತಿರ ಸುಮಾರು 04-45 ಗಂಟೆ ಸಮಯದಲ್ಲಿ ಮರಣ ಹೊಂದಿದರು, ಕೆಂಪೇಗೌಡರನು ತುರ್ತು ವಾಹನದಲ್ಲಿ ಬೆಳ್ಳೂರು ಕ್ರಾಸ್ ನ ಎ.ಸಿ ಗಿರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು . ಎ.ಸಿ ಗಿರಿ ಆಸ್ಪತ್ರೆಯ ಹತ್ತಿರ ಸಂಜೆ ಸುಮಾರು 05-45 ಗಂಟೆ ಸಮಯದಲ್ಲಿ ಮರಣ ಹೊಂದಿರುತ್ತಾರೆ ಮೃತ ಕೆಂಪೇಗೌಡರವನ್ನು ವಾಪಸ್ ತಂದು ಕುಣಿಗಲ್ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ಇಟ್ಟಿರುತ್ತೇನೆ. ಇನ್ನೋಬ್ಬ ಗಾಯಾಳು ಮರಿಗೌಡರವರನ್ನು ಹೆಚ್ಚಿನ ಚಿಕಿತ್ಸೆಗೆಂದು ಸಪ್ತಗಿರಿ ಆಸ್ಪತ್ರೆಯಿಂದ ಎ.ಸಿ ಗಿರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತೇವೆ.  ಆದ್ದರಿಂದ ತಾವುಗಳು ಅಪಘಾತ ಮಾಡಿದ ಕಾರ್ ನಂಬರ್ ಕೆ.ಎ-04 ಡಿ-2932 ರ ಚಾಲಕ ಕೆಂಪೇಗೌಡರ ವಿರುದ್ದ ಕಾನೂನು ಕ್ರಮ ಜರುಗಿಸಿಬೇಕೆಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

ಪಟ್ಟನಾಯಕನಹಳ್ಳಿ ಪೊಲೀಸ್ ಠಾಣಾ ಮೊ ನಂ 41-18 ಕಲಂ 87 ಕೆ ಪಿ ಆಕ್ಟ್

ದಿನಾಂಕ:08-04-18 ರಂದು ಸಂಜೆ 04-45  ಪಿರ್ಯಾದಿ ಪಿ ಎಸ್ ಐ ಪ್ರೀತಮ್ ಎ.ಡಿ ರವರು ಠಾಣೆಯ ಬಳಿ ಇದ್ದಾಗ ನಾದೂರು ಗ್ರಾಮದ ಪರಿಶಿಷ್ಠ ಜನಾಂಗ ಕಾಲೋನಿಯ ರಸ್ತೆಯ ಬಳಿ ಇರುವ  ಶ್ರೀರಾಮ ಭಜನೆ ಮಂದಿರದ ಹಿಂಭಾಗದ ಸಾರ್ವಜನಿಕ ಸ್ಥಳದಲ್ಲಿ ಯಾರೊ ಆಸಾಮಿಗಳು ದುಂಡಾಕಾರವಾಗಿ ಕುಳಿತುಕೊಂಡು ಹಣವನ್ನು ಪಣವಾಗಿಕಟ್ಟಿಕೊಂಡು ಕಾನೂನು  ಬಾಹಿರ ಇಸ್ಪೀಟ್ ಜೂಜಾಟ ಆಡುತ್ತಿದ್ದರೆಂತ ಖಚಿತ ಬಾತ್ಮೀ ಬಂದ ಮೇರೆಗೆ ನಾನು ದಾಳಿ ಮಾಡಲು ಘನ ನ್ಯಾಯಾಲಯದಿಂದ ಅನುಮತಿ ಪಡೆದು ಠಾಣೆಯ ಸಿಬ್ಬಂದಿಗಳು ಮತ್ತು ಪಂಚಾಯ್ತುದಾರರುಗಳನ್ನು ಇಲಾಖಾ ಜೀಪಿನಲ್ಲಿ ಕರೆದುಕೊಂಡು  ಹೋಗಿ ಮೇಲ್ಕಂಡ  ಸ್ಥಳದ  ಸ್ವಲ್ಪ ದೂರದ ಮರೆಯಲ್ಲಿ ಜೀಪನ್ನು ನಿಲ್ಲಿಸಿ, ಜೀಪಿನಿಂದ ಇಳಿದು ನೋಡಲಾಗಿ ಯಾರೊ ಆಸಾಮಿಗಳು ಸ್ಥಳದಲ್ಲಿ ದುಂಡಾಕಾರವಾಗಿ ಕುಳಿತುಕೊಂಡಿದ್ದ  ಇಸ್ಪೀಟ್ ಎಲೆಗಳ ಸಹಾಯದಿಂದ  ಕಾನೂನು ಬಾಹಿರ  ಇಸ್ಪೀಟ್ ಜೂಜಾಟ ಆಡುತ್ತಿದ್ದ ಆಸಾಮಿಗಳ ಮೇಲೆ ಪಂಚರ ಸಮಕ್ಷಮ  ನಾನು  ಮತ್ತು ಸಿಬ್ಬಂದಿಗಳು ದಾಳಿ ಮಾಡಿದಾಗ ಇಸ್ಪೀಟ್ ಜೂಜಾಟ ಆಡುತ್ತಿದ್ದ ಆಸಾಮಿಗಳನ್ನು ಹಿಡಿದು ಹೆಸರು ವಿಳಾಸ ತಿಳಿಯಲಾಗಿ 1)ನರಸಿಂಹಮೂರ್ತಿ ಬಿನ್ ಲಕ್ಷ್ಮಣ ,23 ವರ್ಷ,ಆದಿ ಕರ್ನಾಟಕ ಜನಾಂಗ, ಅಂಗಡಿ ವ್ಯಾಪಾರ, ನಾದೂರು ಗ್ರಾಮ,ಶಿರಾ ತಾಲ್ಲೂಕ್ 2)ಮಂಜುನಾಥ ಬಿನ್ ಜವಗಣ್ಣ, 30 ವರ್ಷ, ಗೊಲ್ಲರು, ಜಿರಾಯ್ತಿ, ನಾದೂರುಗ್ರಾಮ,ಶಿರಾ ತಾಲ್ಲೋಕ್ 3)ರಾಮಣ್ಣ ಬಿನ್ ಸಣ್ಣೀರಪ್ಪ, 45 ವರ್ಷ, ಗೊಲ್ಲರು, ಜಿರಾಯ್ತಿ, ನಾದೂರು ಗ್ರಾಮ,ಶಿರಾ ತಾಲ್ಲೂಕ್ 4)ನಾರಾಯಣ ಬಿನ್ ಗೋವಿಂದಪ್ಪ, 36ವರ್ಷ, ಆದಿ ಕರ್ನಾಟಕ ಜನಾಂಗ,ಕೂಲಿಕೆಲಸ, ನಾದೂರು ಗ್ರಾಮ,ಶಿರಾ ತಾಲ್ಲೂಕ್, ಎಂತ ತಿಳಿಸಿದ್ದು ಅಖಾಡದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಇಸ್ಪೀಟ್ ಎಲೆಗಳನ್ನು ಏಣಿಸಲಾಗಿ 52 ಇಸ್ಪೀಟು ಎಲೆಗಳು, 1630/-ರೂ ನಗದು ಹಣ, ಒಂದು ಹಳೇಯ ನ್ಯೂಸ್ ಪೇಪರ್ ನ್ನು ಈ ದಿನ ಸಂಜೆ 05:15 ಗಂಟೆಯಿಂದ ಸಂಜೆ 06:15 ಗಂಟೆಯವರೆಗೆ ಪಂಚನಾಮೆ ಬರೆದು, ಪಂಚನಾಮೆ ಮೂಲಕ ಆಸಾಮಿಗಳನ್ನು ಮತ್ತು ಮಾಲುಗಳನ್ನು ವಶಕ್ಕೆ ಪಡೆದು ಸಂಜೆ-06-30ಗಂಟೆಗೆ ಆಸಾಮಿಗಳನ್ನು ಮತ್ತು ಮಾಲುಗಳೊಂದಿಗೆ ಠಾಣೆಗೆ ವಾಪಸ್ ಬಂದು ಮುಂದಿನ ಕ್ರಮ ಜರುಗಿಸಲು  ಸೂಚಿಸಿ ನೀಡಿದ ವರದಿಯನ್ನು ಪಡೆದು ಠಾಣಾ  ಪ್ರಕರಣ ದಾಖಲಿಸಿರುತ್ತೆ.

 

ಹುಳಿಯಾರು ಪೊಲೀಸ್ ಠಾಣಾ ಮೊ.ನಂ 36/2018, ಕಲಂ: 143, 147, 148, 324, 504 ರೆ/ವಿ 149 ಐ.ಪಿ.ಸಿ.

ದಿನಾಂಕ 08/04/2018 ರಂದು ಮಧ್ಯಾಹ್ನ 12-00 ಗಂಟೆಗೆ ಪಿರ್ಯಾದಿ ಇಮ್ರಾನ್ ಖಾನ್ ಬಿನ್ ಜಬೀವುಲ್ಲಾ ಖಾನ್, 22 ವರ್ಷ, ವಿಜಯನಗರ, ಹುಳಿಯಾರು, ಚಿಕ್ಕನಾಯಕನಹಳ್ಳಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ನನ್ನ ತಂದೆ ಜಬೀವುಲ್ಲಾ ಖಾನ್ ಮತ್ತು ಹೆಚ್.ಆರ್.ರಹಮತುಲ್ಲಾ ರವರು ದಿನಾಂಕ 06/04/2018 ರಂದು ಶುಕ್ರವಾರ ಮಧ್ಯಾಹ್ನ 03-15 ಗಂಟೆ ಸಮಯದಲ್ಲಿ ಹುಳಿಯಾರು ಟೌನ್ ಟಿಪ್ಪು ಸರ್ಕಲ್ ಉರ್ದು ಸ್ಕೂಲ್ ರಸ್ತೆಯಲ್ಲಿರುವ ಮಹಮದ್ ಶೌಕತ್ ರವರ ಮನೆಯ ಮುಂದೆ ಜಾಮೀಯಾ ಮಸೀದಿಯಲ್ಲಿ ನಮಾಜ್ ಮುಗಿಸಿಕೊಂಡು ಬರುವಾಗ ಈ ಕೆಳಕಂಡವರು ನನ್ನ ತಂದೆಯ ಮೇಲೆ ಮಾರಾಣಾಂತಿಕ ಹಲ್ಲೆ ಮಾಡಿರುತ್ತಾರೆ. ಅವರುಗಳೆಂದರೆ 1] ಸೈಯದ್ ಅಹಮದ್ ಬಿನ್ ಲೇಟ್ ಮ// ದಸ್ತಗಿರ್ ಸಾಬ್, ಗಾಂದಿಪೇಟೆ, ಹುಳಿಯಾರು. 2] ದಸ್ತಗಿರ್ ಬಿನ್ ಲೇಟ್ ಶೇಖ್ ಮೊಹಿದ್ದೀನ್, ಮುತುವಲ್ಲಿ ನುರಾನಿ ಮಸೀದಿ, ಹುಳಿಯಾರು. 3] ಮಹಮದ್ ನಯಾಜ್ ಬಿನ್ ದಸ್ತಗಿರ್, ಮೀನಿನ ವ್ಯಾಪಾರ, ಹುಳಿಯಾರು. 4] ಮಹಮದ್ ಇಸ್ಮಾಯಿಲ್ ಬಿನ್ ದಸ್ತಗಿರ್ ಸಾಬ್, ಮೀನಿನ ವ್ಯಾಪಾರ, ಹುಳಿಯಾರು. 5] ಮಹಮದ್ ಜಾಫರ್ ಬಿನ್ ದಸ್ತಗಿರ್ ಸಾಬ್, ಮೀನಿನ ವ್ಯಾಪಾರ, ಇಂದಿರಾಗರ, ಹುಳಿಯಾರು. 6] ಮುಬಾರಕ್ ಪಾಷ @ ಖಜೂರಿ ಬಿನ್ ಲೇಟ್ ಅಬ್ದುಲ್ ರಷೀದ್ ಸಾಬ್, ಮಾರುತಿ ನಗರ, ಹುಳಿಯಾರು. 7] ಸೈಯದ್ ಮೊಹಿದ್ದೀನ್ ಬಿನ್ ಲೇಟ್ ಸೈಯದ್ ಬಾಷಾ ಸಾಬ್, ಇಂದಿರಾನಗರ, ಹುಳಿಯಾರು. 8] ಅಬೂಬ್ಖರ್ ಸಿದ್ದಿಕ್ ಬಿನ್ ಜಮೀರ್, ಹಣ್ಣಿನ ವ್ಯಾಪಾರಿ, ಹುಳಿಯಾರು. 9] ದುಬೈ ನಜೀರ್ ಬಿನ್ ಜಲೀಲ್ ಸಾಬ್, ಇಂದಿರಾನಗರ, ಹುಳಿಯಾರು. 10] ಮಹಮದ್ ಸಲೀಂ ಬಿನ್ ಬಾಷಾ ಸಾಬ್, ಡ್ರೈವರ್, ಬಾಲಾಜಿ ಟಾಕೀಸ್ ಮುಂಭಾಗ, ಹುಳಿಯಾರು. 11] ಚಾಂದು ಬಿನ್ ಹಾಜಿ ಇಲಾಯಿ, ಲಾರಿ ಮಾಲೀಕರು, ಹುಳಿಯಾರು. 12] ಮಹಮದ್ ಯಾಸೀನ್ ಬಿನ್ ಮಹಮದ್ ಗೌಸ್, ಮೀನಿನ ವ್ಯಾಪಾರಿ, ಹುಳಿಯಾರು. 13] ಮಹಮದ್ ಸಾಧತ್ ಖಾನ್ ಬಿನ್ ಮಹಮದ್ ಗೌಸ್, ಮೀನಿನ ವ್ಯಾಪಾರಿ, ಹುಳಿಯಾರು. 14] ಬಿ.ಕೆ ಇಕ್ಬಾಲ್ ಅಹಮದ್ ಬಿನ್ ಲೇಟ್ ಅಬ್ದುಲ್ ರಷೀದ್ ಸಾಬ್, ಇಂದಿರಾನಗರ, ಹುಳಿಯಾರು. 15] ಚೋಟಿ ಮುನ್ನ ಬಿನ್ ಲೇಟ್ ಟೈಲರ್ ಅಜೀಜ್ ಸಾಬ್, ಆಜಾದ್ ನಗರ, ಹುಳಿಯಾರು. 16] ಮಹಮದ್ ಜಾವೀದ್ ಬಿನ್ ಲೇಟ್ ಮೆಹಬೂಬ್ ಆಲಂ, ಕಾರ್ಯದರ್ಶಿ ನುರಾನಿ ಮಸೀದಿ, ಹುಳಿಯಾರು. 17] ಆರೂನ್ ಷರೀಫ್ ಬಿನ್ ಲೇಟ್ ಷರೀಫ್ ಸಾಬ್, ಬಸವೇಶ್ವರ ನಗರ, ಹುಳಿಯಾರು. 18] ಮುಜಮಿಲ್ ಖಾನ್ ಬಿನ್ ರಫಿಕ್ ಖಾನ್, ಇಂದಿರಾನಗರ, ಹುಳಿಯಾರು. 19] ಸೈಯದ್ ಸಲಿಂ ಬಿನ್ ಸೈಯದ್ ಗೌಸ್ ಸಾಬ್, ಇಂದಿರಾನಗರ, ಹುಳಿಯಾರು. 20] ಮಹಮದ್ ಜಾಫರ್ ಬಿನ್ ಲೇಟ್ ಅಬ್ದುಲ್ ಘನಿ ಸಾಬ್, ಷರೀಫ್ ಮೊಹಲ್ಲಾ, ಹುಳಿಯಾರು. 21] ಸೈಯದ್ ಆಸಿಫ್ ಬಿನ್ ಸೈಯದ್ ಅಹಮದ್, ಲಾರಿ ಮಾಲೀಕರು, ಹುಳಿಯಾರು. 22] ಇಸ್ಮಾಯಿಲ್ ಷರೀಫ್ ಬಿನ್ ಲೇಟ್ ಸುಲೇಮಾನ್ ಷರೀಫ್. ಜಾಮೀಯಾ ಮಸೀದಿ ಹತ್ತಿರ, ಹುಳಿಯಾರು. 23] ಇಬ್ರಾಹಿಂ ಬಿನ್ ಲೇಟ್ ಇಮಾಮ್ ಸಾಬ್, ಲಾರಿ ಮಾಲೀಕರು, ಹುಳಿಯಾರು. 24] ಶಮೀಲ್ ಷರೀಫ್ ಬಿನ್ ಇಸ್ಮಾಯಿಲ್ ಷರೀಫ್, ಹುಳಿಯಾರು 25] ಜಿಯಾ ವುಲ್ಲಾ ಷರೀಫ್ ಬಿನ್ ಇಸ್ಮಾಯಿಲ್ ಷರೀಫ್, ಹುಳಿಯಾರು. 26] ತೋಫಿಕ್ ಷರೀಫ್ ಬಿನ್ ಜಿಯಾವುಲ್ಲಾ ಷರೀಫ್, ರಬ್ಬಾನಿ ಟೈಲರ್, ಹುಳಿಯಾರು. 27] ಮುಜ್ಜು ಷರೀಫ್ ಬಿನ್ ಜಿಯಾವುಲ್ಲಾ ಷರೀಫ್, ರಬ್ಬಾನಿ ಟೈಲರ್, ಹುಳಿಯಾರು. 28] ಮಹಮದ್ ಆಲಂ ಬಿನ್ ಲೇ ಅಮೀರ್ ಸಾಬ್, ಶಾಮಿಲ್, ಮದೀನ ಸರ್ಕಲ್, ಹುಳಿಯಾರು. 29] ಸೈಯದ್ ಏಜಾಜ್ ಬಿನ್ ಸೈಯದ್ ರಜಾಕ್ ಸಾಬ್, ಆಜಾದ್ ನಗರ, ಹುಳಿಯಾರು. 30] ಬೋರ್ ಸಮೀವುಲ್ಲಾ ಬಿನ್ ಅಜೀಜ್ ಸಾಬ್, ಬಸವೇಶ್ವರ ನಗರ, ಹುಳಿಯಾರು. 31] ಇಮ್ರಾನ್ ಬಿನ್ ಬೋರ್ ಸಮೀವುಲ್ಲಾ, ಆಜಾದ್ ನಗರ, ಹುಳಿಯಾರು. 32] ಸೈಯದ್ ಜಾಫ್ರಿ ಬಿನ್ ಸೈಯದ್ ಬಷೀರ್ ಸಾಬ್, ಆಜಾದ್ ನಗರ, ಹುಳಿಯಾರು. 33] ಇಸ್ರಾರ್ ಷರೀಫ್ ಬಿನ್ ಲೇಟ್ ಷರೀಫ್ ಸಾಬ್, ಈರುಳ್ಳಿ ವ್ಯಾಪಾರಿ, ಹುಳಿಯಾರು. 34] ಅಮ್ಜದ್ ಷರೀಫ್ ಬಿನ್ ಶಬ್ಬೀರ್ ಷರೀಫ್, ಮೆಕ್ಯಾನಿಕ್, ಇಂದಿರಾನಗರ, ಹುಳಿಯಾರು. 35] ಅಹಮದ್ ಷರೀಫ್ ಬಿನ್ ಶಬ್ಬೀರ್ ಷರೀಫ್, ಮೆಕ್ಯಾನಿಕ್, ಇಂದಿರಾನಗರ, ಹುಳಿಯಾರು. 36] ಸೈಯದ್ ಮಜರ್ ಬಿನ್ ಸೈಯದ್ ಬಷೀರ್ ಸಾಬ್, ಮಟನ್ ವ್ಯಾಪಾರಿ, ಉರ್ದು ಸ್ಕೂಲ್ ಹತ್ತಿರ, ಹುಳಿಯಾರು. 37] ಸೈಯದ್ ಸಾಲೆಹಾ ಬಿನ್ ಲೇಟ್ ಸೈಯದ್ ನಜೀರ್ ಸಾಬ್, ಚಿಕನ್ ವ್ಯಾಪಾರಿ, ಉರ್ದು ಸ್ಕೂಲ್ ಹತ್ತಿರ, ಹುಳಿಯಾರು. 38] ಸೈಯದ್ ಖಲೀಂ ಬಿನ್ ಲೇಟ್ ಯುಸೂಫ್ ಸಾಬ್, ಮಟನ್ ವ್ಯಾಪಾರಿ, ಉರ್ದು ಸ್ಕೂಲ್ ಹತ್ತಿರ, ಹುಳಿಯಾರು. 39] ಮಹಮದ್ ಸಜ್ಜಾದ್ ಬಿನ್ ಲೇಟ್ ಮೀರ್ ಹುಸೇನ್ ಷರೀಫ್, ಇಂದಿರಾನಗರ, ಹುಳಿಯಾರು. 40] ಮಹಮದ್ ಜಾಫರ್ ಸಾಬ್ ಬಿನ್ ಲೇಟ್ ಅಬ್ದುಲ್ ಹೈ, ಲಾರಿ ಮಾಲೀಕರು, ಹುಳಿಯಾರು. 41] ಕೋಳಿ ಅಂಗಡಿ ಸಾಲೆಹಾ ಬಿನ್ ಲೇಟ್ ಬಿಸ್ಮಿಲ್ಲಾ ಸಾಬ್, ಉರ್ದು ಸ್ಕೂಲ್ ರಸ್ತೆ, ಹುಳಿಯಾರು, ಈ ಮೇಲ್ಕಂಡ ಎಲ್ಲರೂ ನನ್ನ ತಂದೆ ಮತ್ತು ರಹಮತುಲ್ಲಾ ರವರನ್ನು ಜಾಮೀಯಾ ಮಸೀದಿ ವಿಚಾರವಾಗಿ ಇವರನ್ನು ಹೀಗೆ ಬಿಟ್ಟಲ್ಲಿ ಇವರು ನಮ್ಮನ್ನು ಬಿಡುವುದಿಲ್ಲವೆಂದು ಇವರಿಗೆ ಬುದ್ದಿ ಕಲಿಸಿ ಜಾಮೀಯಾ ಮಸೀದಿಯಿಂದ ಹೊರಹಾಕಿ ಸಾಯಿಸಬೇಕೆಂಬ ಉದ್ದೇಶದಿಂದ ಕೈಗಳಲ್ಲಿ ಚಾಕು, ಇಟ್ಟಿಗೆಗಳನ್ನು ಹಿಡಿದುಕೊಂಡು ಅಕ್ರಮವಾಗಿ ಗುಂಪುಕಟ್ಟಿಕೊಂಡು ಏಕಾಏಕಿ ನಮ್ಮ ತಂದೆ ಹಾಗೂ ರೆಹಮತುಲ್ಲಾ ರವರ ಮೇಲೆ ಎಲ್ಲರೂ ಒಟ್ಟಿಗೆ ನುಗ್ಗಿ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಮೇಲ್ಕಂಡವರುಗಳು ಕೈಗಳಿಂದ & ಕಾಲುಗಳಿಂದ ಒದ್ದಿರುತ್ತಾರೆ. ಇವರುಗಳ ಪೈಕಿ ಸೈಯದ್ ಅಹಮದ್  ಬಿನ್ ಲೇಟ್ ಮಹಮದ್ ದಸ್ತಗಿರ್ ಸಾಬ್ ರವರು ಚಾಕುವಿನಿಂದ ನನ್ನ ತಂದೆಯ ಮುಖದ ಬಲಭಾಗಕ್ಕೆ ಗಾಯ ಮಾಡಿರುತ್ತಾನೆ. ನಂತರ ಇಸ್ಮಾಯಿಲ್ ಷರೀಫ್ & ಬಿ.ಆರ್ ಮುಬಾರಕ್ ರವರು  ನನ್ನ ತಂದೆ ಹಾಗೂ ರೆಹಮತುಲ್ಲಾ ರವರ ದೆ ಹಾಗೂ ಬೆನ್ನಿಗೆ ಹೊಡೆದು ಗಾಯಗೊಳಿಸಿರುತ್ತಾರೆ. ಈ ಕೃತ್ಯವನ್ನು ಸೈಯದ್ ಜಹೀರ್ ಮತ್ತು ಅಫ್ರೋಜ್ ಪಾಷ ರವರು ಬಿಡಿಸಲು ಹೋದಾಗ ನಿಂದಿಸಿ ಹೊರತಳ್ಳಿರುತ್ತಾರೆ. ನಾನು ಸಹ ಸ್ಥಳದಲ್ಲಿದ್ದು ನನ್ನನ್ನು ಸಹ ಹೊರಗೆ ನೂಕಿರುತ್ತಾರೆ. ನಾವು ತಕ್ಷಣ ಹುಳಿಯಾರು ಸರ್ಕಾರಿ ಆಸ್ಪತ್ರೆಗೆ ಹೋಗಿ, ನಂತರ ವೈದ್ಯರ ಸಲಹೆ ಮೇರೆಗೆ ಚಿಕ್ಕನಾಯಕನಹಳ್ಳಿ ಸರ್ಕಾರಿ ಆಸ್ಪತ್ರೆಗೆ ಹೋಗಿ ದಾಖಲಾಗಿರುತ್ತಾರೆ. ಆದ್ದರಿಂದ ಮೇಲ್ಕಂಡವರುಗಳ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಿ ರಕ್ಷಣೆ ಕೊಡಬೇಕೆಂದು ಇತ್ಯಾದಿಯಾಗಿ ನೀಡಿದ ಲಿಖಿತ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

ಹುಲಿಯೂರುದುರ್ಗ ಪೊಲೀಸ್‌ ಠಾಣಾ ಮೊ.ನಂ.99/2018  ಕಲಂ: 279    304(A)   IPC

ದಿನಾಂಕ:07-04-2018 ರಂದು ರಾತ್ರಿ 10-15 ಗಂಟೆಗೆ ಪಿರ್ಯಾದಿಯಾದ ಕುಣಿಗಲ್ ತಾಲ್ಲೂಕು ಅಮೃತೂರು ಹೋಬಳಿ ದೊಡ್ಡಕಲ್ಲಹಳ್ಳಿ ಗ್ರಾಮದ ವಾಸಿಯಾದ ಕೆ.ಆರ್.ರಘುಕುಮಾರನ್  ಬಿನ್ ಲೇಟ್ ರಾಮಾನುಜನ್ ಸುಮಾರು 63 ವರ್ಷ ಶ್ರೀವೈಷ್ಣವರು ವ್ಯವಸಾಯ ಮತ್ತು ಅರ್ಚಕ ಕೆಲಸ  ಇವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ನನಗೆ ಮೂರು ಜನ ಮಕ್ಕಳಿದ್ದು ಕೊನೆಯ ಮಗನಾದ  ಡಿ.ಆರ್.ಲಕ್ಷ್ಮಿನರಸಿಂಹನ್ ಉರುಫ್ ಶ್ರೀನಾಥ ಎಂಬುವನೊಂದಿಗೆ ದೊಡ್ಡಕಲ್ಲಹಳ್ಳಿಯಲ್ಲಿ ವಾಸವಾಗಿರುತ್ತೇನೆ. ನಮ್ಮದು ಹಳೆಯ ಮನೆಯಾಗಿದ್ದರಿಂದ ಹೊಸದಾಗಿ ಕಟ್ಟಲು ಕಿತ್ತು ಹಾಕಿರುತ್ತೇವೆ. ಮನೆಯನ್ನು ಕಟ್ಟಲು ಕಬ್ಬಿಣವನ್ನು ತರಬೇಕಾಗಿದ್ದರಿಂದ ನನಗೆ ಪರಿಚಯವಿದ್ದ ಸಣಭ ಗ್ರಾಮದ ವಾಸಿಯಾದ ಮಾಯಮ್ಮ ಕೋಂ ಲೇಟ್ ಹುಚ್ಚೇಗೌಡ ರವರ ಟ್ರಾಕ್ಟರ್ ಮತ್ತು ಟ್ರೈಲರ್‌‌ನ್ನು  ಈ ದಿವಸ ದಿನಾಂಕ:07-04-2018 ರಂದು ಮದ್ಯಾಹ್ನ ಸುಮಾರು 2-00 ಗಂಟೆಯಲ್ಲಿ ಇಸ್ಕೊಂಡು ನಾನು ಮತ್ತು ನನ್ನ ಮಗನಾದ ಡಿ.ಆರ್.ಲಕ್ಷ್ಮಿನರಸಿಂಹನ್ ಉರುಫ್ ಶ್ರೀನಾಥನೊಂದಿಗೆ ಕುಣಿಗಲ್‌ಗೆ  ಹೋಗಿ  ಕಬ್ಬಿಣವನ್ನು ಕೊಂಡುಕೊಂಡೆವು. ಟ್ರಾಕ್ಟರ್‌ನಲ್ಲಿ  ಕಬ್ಬಿಣವನ್ನು ಲೋಡ್ ಮಾಡಿದ ನಂತರ  ಟ್ರಾಕ್ಟರ್ ಓಡಿಸಿಕೊಂಡು ಊರಿಗೆ ಬರುವಂತೆ ನನ್ನ ಮಗನಿಗೆ ಹೇಳಿ ನಾನು ಬಸ್ಸಿನಲ್ಲಿ ನಮ್ಮ ಊರಿಗೆ ಹೋಗಿ   ಮನೆಯ ಹತ್ತಿರವಿರುವಾಗ್ಗೆ ಸಂಜೆ ಸುಮಾರು 5-45 ಗಂಟೆಯ ಸಮಯಕ್ಕೆ ನಮ್ಮ ಊರಿನ  ಶ್ರೀನಿವಾಸ ಬಿನ್ ಲೇಟ್ ಮರಿಯಪ್ಪ ರವರು ನನಗೆ ಫೋನ್ ಮಾಡಿ ಈಗ ಸ್ವಲ್ಪ ಹೊತ್ತಿನ ಮುಂದೆ ಸಂಜೆ 5-35 ಗಂಟೆಯಲ್ಲಿ ನಿಮ್ಮ ಮಗ ಶ್ರೀನಾಥ ಕಬ್ಬಿಣವನ್ನು ತುಂಬಿಕೊಂಡು ನಮ್ಮ ಊರಿನ ಗೇಟ್ ಹತ್ತಿರ ಪಡುವಗೆರೆ ರೋಡ್‌ನಲ್ಲಿ  ಕುಮಾರ್ ರವರ ಜಮೀನು ಹತ್ತಿರ ಟ್ರಾಕ್ಟರ್‌ನ್ನು  ಜೋರಾಗಿ ಓಡಿಸಿಕೊಂಡು ಬಂದಿದ್ದರಿಂದ  ಟ್ರಾಕ್ಟರ್, ಟ್ರೈಲರ್ ಪಲ್ಟಿಯಾಗಿ ಬಿದ್ದು  ಹೋಗಿ ನಿಮ್ಮ ಮಗ ಟ್ರಾಕ್ಟರ್ ಕೆಳಕ್ಕೆ ಸಿಕ್ಕಿಹಾಕಿಕೊಂಡು ಇಲ್ಲೆ ಸತ್ತು ಹೋಗಿರುತ್ತಾನೆಂದು ತಿಳಿಸಿದರು. ನಾನು ಕೂಡಲೇ ನಮ್ಮ ಊರಿನ ಇತರೆ ಕೆಲವರೊಂದಿಗೆ ನಮ್ಮ ಊರಿನ ಗೇಟ್ ಹತ್ತಿರವಿರುವ ಪಡುವಗೆರೆ ರೋಡ್ ಹತ್ತಿರಕ್ಕೆ ಹೋಗಿ ನೋಡಿದೆ. ನನ್ನ ಮಗ ಟ್ರಾಕ್ಟರ್ ಕೆಳಕ್ಕೆ ಸಿಕ್ಕಿಹಾಕಿಕೊಂಡು ಸ್ಥಳದಲ್ಲಿಯೇ ಸತ್ತು ಹೋಗಿರುತ್ತಾನೆ. ಟ್ರಾಕ್ಟರ್ ನಂಬರ್ ಕೆಎ-06-ಟಿಬಿ-5892-5893 ಆಗಿರುತ್ತೆ. ನಂತರ ನಮ್ಮ ಊರಿನ ಜನರು ಸೇರಿಕೊಂಡು ಟ್ರಾಕ್ಟರ್ ಕೆಳಗೆ ಸಿಕ್ಕಿ ಹಾಕಿಕೊಂಡಿದ್ದ ನನ್ನ ಮಗನ ಹೆಣವನ್ನು ಈಚೆಗೆ ತೆಗೆದು ಯಾವುದೋ ಒಂದು ವಾಹನದಲ್ಲಿ ಹಾಕಿಕೊಂಡು ಹೋಗಿ ಕುಣಿಗಲ್ ಆಸ್ಪತ್ರೆಯ ಶವಾಗಾರದಲ್ಲಿ ಇಟ್ಟಿರುತ್ತೇವೆ. ಆದ್ದರಿಂದ ತಾವುಗಳು ಮುಂದಿನ ಕ್ರಮವನ್ನು ಜರುಗಿಸಿ ನನ್ನ ಮಗನ ಹೆಣವನ್ನು ಶವ ಸಂಸ್ಕಾರ ಮಾಡಿಕೊಳ್ಳಲು ಅನುವು ಮಾಡಿಕೊಡಬೇಕೆಂದು ಕೋರಿಕೊಂಡಿರುತ್ತೇನೆಂದು ಇತ್ಯಾದಿಯಾಗಿ ದೂರಿನ ಅಂಶವಾಗಿರುತ್ತೆ.

ಹುಲಿಯೂರುದುರ್ಗ ಪೊಲೀಸ್‌ ಠಾಣಾ ಮೊ.ನಂ.100/2018  ಕಲಂ:  379 IPC

ದಿನಾಂಕ:08-04-2018 ರಂದು ಬೆಳಿಗ್ಗೆ 6-50 ಗಂಟೆಗೆ ಹುಲಿಯೂರುದುರ್ಗ ಪೊಲೀಸ್‌ ಠಾಣಾ ಪಿಎಸ್‌ಐ ರವರಾದ  ಶ್ರೀ ಮಂಜು ಬಿ.ಪಿ ರವರು ಠಾಣಾ ಸಿಬ್ಬಂದಿಯಾದ ರಂಗಸ್ವಾಮಿ  ಪಿಸಿ-426 ರವರ ಮುಖೇನ ಕಳುಹಿಸಿಕೊಟ್ಟ ದೂರಿನ ಅಂಶವೇನೆಂದರೆ ದಿನಾಂಕ:08-04-2018  ರಂದು ಬೆಳಗಿನ ಜಾವ 5-00 ಗಂಟೆ ಸಮಯದಲ್ಲಿ ಪಿಎಸ್‌ಐ ರವರಿಗೆ  ಬಂದ ಮಾಹಿತಿ ಏನೆಂದರೆ ಠಾಣಾ ಸರಹದ್ದು ಕೆ.ಹೊನ್ನಮಾಚನಹಳ್ಳಿ  ಗ್ರಾಮದ ಸರ್ಕಾರಿ ಕೆರೆಯಲ್ಲಿ ಯಾರೋ ಅಸಾಮಿಗಳು ಯಾವುದೇ ಪರವಾನಗಿಯನ್ನು ಪಡೆಯದೇ ಮರಳನ್ನು ಮಾರಾಟ ಮಾಡುವ ಸಲುವಾಗಿ ಅಕ್ರಮವಾಗಿ ಟ್ರಾಕ್ಟರ್‌,ಟ್ರೈಲರ್‌ಗೆ ತುಂಬುತ್ತಿರುತ್ತಾರೆಂತ ಮಾಹಿತಿ ಬಂದಿದ್ದು ಅಕ್ರಮವಾಗಿ ಮರಳು ತುಂಬುತ್ತಿರುವವರ ಮೇಲೆ ಕಾನೂನು ಕ್ರಮವನ್ನು ಜರುಗಿಸುವ ಸಲುವಾಗಿ ಠಾಣೆಯ ಹತ್ತಿರಕ್ಕೆ ಬಂದು ಠಾಣಾ ಸಿಬ್ಬಂದಿಯವರಾದ ರಂಗಸ್ವಾಮಿ  ಪಿಸಿ-426, ಹರೀಶಕುಮಾರ್ ಪಿಸಿ-1032 ಮತ್ತು ವೆಂಕಟೇಶ ಪಿಸಿ-1034  ರವರೊಂದಿಗೆ ಬೆಳಗಿನ ಜಾವ 5-15 ಗಂಟೆಗೆ ಠಾಣೆಯಿಂದ ಹೊರಟು ಇಲಾಖಾ ಜೀಪಿನಲ್ಲಿ ಕೆ.ಹೊನ್ನಮಾಚನಹಳ್ಳಿ ಕೆರೆಯ  ಹತ್ತಿರ ಹೋಗಿ ಸ್ವಲ್ಪ ದೂರದಲ್ಲಿ ಜೀಪನ್ನು ನಿಲ್ಲಿಸಿ    ಕೆರೆಯ ಅಂಗಳದವರೆಗೆ ನಡದುಕೊಂಡು ಹೋಗಿ ಬೆಳಗಿನ ಜಾವ 5-40 ಗಂಟೆಯಲ್ಲಿ ನೋಡಲಾಗಿ ಕೆರೆಯ ಅಂಗಳದಲ್ಲಿ ಒಂದು ಟ್ರಾಕ್ಟರ್ ಟ್ರೈಲರ್ ನಿಂತಿದ್ದು ಅದಕ್ಕೆ ಮರಳು ತುಂಬುತ್ತಿದ್ದದು  ಕಂಡು ಬಂತು. ನಂತರ ಪಿಎಸ್‌ಐ ರವರು ಮತ್ತು ಸಿಬ್ಬಂದಿಯವರು ಸೇರಿಕೊಂಡು  ಟ್ರಾಕ್ಟರ್ ಬಳಿಗೆ ಹೋಗುವಷ್ಟರಲ್ಲಿ ಟ್ರಾಕ್ಟರ್ ಬಳಿ ಇದ್ದ ಅಸಾಮಿಗಳು ಅಲ್ಲಿಂದ ಕತ್ತಲಲ್ಲಿ ಓಡಿ ಹೋದರು ಆಗ ನಮ್ಮ ಸಿಬ್ಬಂದಿಯವರು ಅವರನ್ನು ಹಿಡಿಯಲು ಪ್ರಯತ್ನಿಸಿದರೂ ಸಹ ಸಿಗದೇ ತಪ್ಪಿಸಿಕೊಂಡು ಓಡಿ ಹೋಗಿರುತ್ತಾರೆ.  ನಂತರ ಟಾರ್ಚ್‌ ಬೆಳಕಿನಲ್ಲಿ ಮರಳು ತುಂಬಿದ ಟ್ರಾಕ್ಟರ್‌ ಮತ್ತು ಟ್ರೈಲರ್‌ನ್ನು ಪರಿಶೀಲನೆ ಮಾಡಲಾಗಿ ಟ್ರಾಕ್ಟರ್‌‌ಗೆ ಮತ್ತು ಟ್ರೈಲರ್‌ಗೆ ನೋಂದಣಿ ನಂಬರ್‌‌ ಇರುವುದಿಲ್ಲ. ಟ್ರಾಕ್ಟರ್‌ TAFE MASSEY FERGUSON ಕಂಪನಿಯದಾಗಿದ್ದು ಟ್ರಾಕ್ಟರ್‌ ಇಂಜಿನ್‌ ನಂಬರ್‌ S337A28170 ಆಗಿರುತ್ತೆ, ಚಾರ್ಸಿಸ್‌‌ ನಂಬರ್‌ 889720 ಆಗಿರುತ್ತೆ. ಟ್ರಾಕ್ಟರ್‌ ಟ್ರೈಲರ್‌ನಲ್ಲಿ ಪೂರ್ಣ ಪ್ರಮಾಣದಲ್ಲಿ ಮರಳನ್ನು ತುಂಬಿರುತ್ತೆ. ಈ ಟ್ರಾಕ್ಟರ್‌ ಚಾಲಕ ಮತ್ತು ಮಾಲೀಕರು ಸೇರಿಕೊಂಡು ಅಕ್ರಮವಾಗಿ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಸರ್ಕಾರದಿಂದ ಯಾವುದೇ ಪರವಾನಗಿಯನ್ನು ಪಡೆಯದೆ ಕೆ.ಹೊನ್ನಮಾಚನಹಳ್ಳಿ ಸರ್ಕಾರಿ ಕೆರೆಯ ಅಂಗಳದಲ್ಲಿ ನೈಸರ್ಗಿಕ ಖನಿಜ ಸಂಪತ್ತಾದ ಮರಳನ್ನು ಕಳ್ಳತನದಿಂದ ತುಂಬಿರುತ್ತಾರೆ. ಆದ್ದರಿಂದ ಮೇಲ್ಕಂಡ ಟ್ರಾಕ್ಟರ್‌ ಟ್ರೈಲರ್‌ ಚಾಲಕ ಮತ್ತು ಮಾಲೀಕನ ಮೇಲೆ ಕಲಂ 379 ಐಪಿಸಿ ಮತ್ತು ಕಲಂ: 4(1), 4(1ಎ), 21(1) ಎಂ.ಎಂ.ಆರ್‌.ಡಿ ಆಕ್ಟ್‌-1957 ಮತ್ತು ಕಲಂ 44(1),ಕೆ.ಎಂ.ಎಂ.ಸಿ.ಆರ್‌ ಆಕ್ಟ್‌-1994 ರೀತ್ಯ ಪ್ರಕರಣ ದಾಖಲಿಸಲು  ಕಳುಹಿಸಿ ಕೊಟ್ಟ ದೂರಿನ ಅಂಶವಾಗಿರುತ್ತೆ.

 

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 74 guests online
Content View Hits : 302219