lowborn ಅಪರಾಧ ಘಟನೆಗಳು 07-04-18 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ. ದಿನಾಂಕ : 10-07-2018   ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 09-07-2018 ಕೊಲೆ ಆರೋಪಿಗಳ ಬಂಧನ ******* ದಿನಾಂಕ 04.07.2018 ರಂದು... >>   ಪತ್ರಿಕಾ ಪ್ರಕಟಣೆ ದಿನಾಂಕ : 07-07-2018. ಪೂರ್ವಾನುಮತಿ ಪಡೆಯದೇ ಹೆದ್ದಾರಿ ತಡೆ ನಡೆಸಿ,... >> ದಿನಾಂಕ.03.07.2018. ಪತ್ರಿಕಾ ಪ್ರಕಟಣೆ ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ 11 ಲಕ್ಷ 70 ಸಾವಿರ ಬೆಲೆ ಬಾಳುವ ಚಿನ್ನ-ಬೆಳ್ಳಿ  ಹಾಗೂ ಮೊಬೈಲ್‌‌‌... >>   ಪತ್ರಿಕಾ ಪ್ರಕಟಣೆ. ತುಮಕೂರು ಜಿಲ್ಲಾ ಪೊಲೀಸ್, ತುಮಕೂರು. ಕೋರಾ ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 27.06.2018 ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಸಾರ್ವಜನಿಕರ... >> ಪತ್ರಿಕಾ ಪ್ರಕಟಣೆ ದಿನಾಂಕ:- 23/06/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಖನ್ನ... >> ಪತ್ರಿಕಾ ಪ್ರಕಟಣೆ ದಿನಾಂಕ: 21-06-2018. ಸುಲಿಗೆಕೋರರ ಬಂಧನ: ದಿನಾಂಕ:18-06-2018 ರಂದು... >>   ಪೊಲೀಸ್ ಪ್ರಕಟಣೆ ತುಮಕೂರು ಜಿಲ್ಲಾ ಪೊಲೀಸ್ ಪ್ರಕಟಣೆ   ಆತ್ಮೀಯ ನಾಗರೀಕರಲ್ಲಿ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ಅಪರಾಧ ಘಟನೆಗಳು 07-04-18

ಹೊಸಬಡಾವಣೆ ಪೊಲೀಸ್ ಠಾಣಾ UDR No 06/2018  U/S 174 CrPC

ದಿನಾಂಕ : 06-04-2018 ರಂದು ರಾತ್ರಿ 11-30 ಗಂಟೆಗೆ ಪಿರ್ಯಾದಿ ಆನಂದ ಕುಮಾರ್ ಬಿನ್ ಲೇಟ್ ಗೋವಿಂದರಾಜು (19) ವಾಸ ಎಕೆ ಕಾಲೋನಿ, ಬಟವಾಡಿ, ತುಮಕೂರು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿ ತಂದೆಯಾದ ಮೃತ ಗೋವಿಂದರಾಜು ರವರು ಸ್ಟೋನ್ ಡಿಸೈನರ್ ಆಗಿ ಕೆಲಸ ಮಾಡಿಕೊಂಡಿದ್ದು ಸದರಿ ಕೆಲಸದಲ್ಲಿ ಹೆಚ್ಚಿನ ಹಣ ಸಂಪಾದನೆ ಆಗುತ್ತಿಲ್ಲವೆಂದು ಮನೆಯಲ್ಲಿ ಆಗಾಗ ತಮ್ಮ ಹೆಂಡತಿ ಬಳಿ ಮತ್ತು ಪಿರ್ಯಾದಿ ಬಳಿ ಹೇಳಿಕೊಳ್ಳುತ್ತಿದ್ದು ದಿನಾಂಕ : 10-03-2018 ರಂದು ರಾತ್ರಿ 00-30 ಗಂಟೆಯಲ್ಲಿ ಯಾವುದೋ ವಿಷಯುಕ್ತ ಕೀಟನಾಶಕ ಸೇವಿಸಿ ವೈಶಾಲಿ ಕಂಫರ್ಟ್‌ ಮುಂಭಾಗ ಫುಟ್ ಪಾತ್ ನಲ್ಲಿ ಬಿದ್ದಿದ್ದು ಅವರನ್ನು ತುಮಕೂರು ಜಿಲ್ಲಾ ಆಸ್ಪತ್ರೆಗೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರ ಸಲಹೆ ಮೇರೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ : 06-04-2018 ರಂದು ಗೋವಿಂದರಾಜು ರವರು ಮೃತಪಟ್ಟಿರುತ್ತಾರೆ ಈ ಬಗ್ಗೆ ಮುಂದಿನ ಕ್ರಮ ಜರುಗಿಸಬೇಕೆಂದು ನೀಡಿದ ದೂರು

ಹುಳಿಯಾರು ಪೊಲೀಸ್ ಠಾಣಾ ಮೊ.ನಂ 33/2018, ಕಲಂ: 323, 324, 143, 147, 341, 504,506 ರೆ/ವಿ 149 ಐ.ಪಿ.ಸಿ.

ದಿನಾಂಕ 06/04/2018 ರಂದು ಸಂಜೆ 04-15 ಗಂಟೆಗೆ ಪಿರ್ಯಾದಿ ಸೈಯದ್ ಅಹಮದ್ ಬಿನ್ ಲೇಟ್ ದಸ್ತಗಿರ್ ಸಾಬ್, ಗಾಂದಿಪೇಟೆ, ಹುಳಿಯಾರು ಟೌನ್, ಚಿಕ್ಕನಾಯಕನಹಳ್ಳಿ ತಾಲ್ಲೂಕು ಇವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ದಿನಾಂಕ 06/04/2018 ರ ಮಧ್ಯಾಹ್ನ 02-30 ರ ಸಮಯದಲ್ಲಿ ಹುಳಿಯಾರು ಗ್ರಾಮ ವಾಸಿ ಜಾಮೀಯ ಮಸೀದಿ ಮಾಜಿ ಮುತುವಲ್ಲಿ ಸೈಯದ್ ಜಬೀವುಲ್ಲಾ ಮತ್ತು ಆತನ ಸಹಚರರು 14 ಜನ ನಾನು ನಮ್ಮ ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿಕೊಂಡು ಮನೆಗೆ ಹೋಗುವಾಗ ಹುಳಿಯಾರು ಜಾಮೀಯ ಮಸೀದಿ ಮುಂಭಾಗ ರಸ್ತೆಯಲ್ಲಿ ಇವರೆಲ್ಲರೂ ಸೇರಿ ಅಡ್ಡಗಟ್ಟಿ ನನಗೆ ಮಾರಾಣಾಂತಿಕವಾಗಿ ಹಲ್ಲೆ ಮಾಡಿ ಕಲ್ಲು ಮತ್ತು ದೊಣ್ಣೆಗಳಿಂದ ಹೊಡೆದಿರುತ್ತಾರೆ. ನನಗೆ ಪೆಟ್ಟು ಬಿದ್ದು ಮೂರ್ಚೆ ಹೋಗಿ ಕೆಳಗೆ ಬಿದ್ದಾಗ ಹುಳಿಯಾರು ಗ್ರಾಮದ ವಾಸಿ ಸೈಯದ್ ಇಸ್ಮಾಯಿಲ್ ಮತ್ತು ಮಹಮದ್ ರಫೀ ರವರು ನನಗೆ ಹುಳಿಯಾರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ 1] ಸೈಯದ್ ನಿಜಾಮುದ್ದೀನ್ ಬಿನ್ ಸೈಯದ್ ಜಬೀವುಲ್ಲಾ, 2] ಸೈಯದ್ ಜಹೀರ್ ಬಿನ್ ಸೈಯದ್ ಮಹಬೂಬ್ ಸಾಬ್, 3] ಸೈಯದ್ ಜುಬೇರ್ ಬಿನ್ ಸೈಯದ್ ಜಹೀರ್, 4] ಸೈಯದ್ ಮತೀನ್ ಬಿನ್ ಲೇಟ್ ನಜೀರ್ ಜಾನ್, 5] ಸೈಯದ್ ಮುನೀರ್ ಬಿನ್ ಲೇಟ್ ವಜೀರ್ ಜಾನ್, 6] ಇಮ್ರಾಜ್ ಬಿನ್ ಅರಕೇಶ್, 7] ಇಮ್ರಾನ್ ಬಿನ್ ಅರಕೇಶ್, 8] ಅಕ್ರಂ ಬಿನ್ ಲೇಟ್ ಅಬ್ದುಲ್, 9] ಸೈಯದ್ ಗೌಸಿ ಬಿನ್ ಸೈಯದ್ ಅಬ್ದುಲ್ ಸಾಬ್, 10] ಸೈಯದ್ ಸೈಫುಲ್ಲಾ ಬಿನ್ ಲೇಟ್ ಸೈಯದ್ ಮಹಬೂಬ್ ಸಾಬ್, 11] ಸೈಯದ್ ಅಮೀತ್ ಬಿನ್ ಸೈಯದ್ ಸೈಫುಲ್ಲಾ, 12] ಅರಕೇಶ್ ಬಿನ್ ಹುಸೇನ್, 13] ಮುಬಾರಕ್ ಬಿನ್ ಅಜಗರೀ ಇವರುಗಳೆಲ್ಲಾ ನಮ್ಮ ಮನೆಯ ಹತ್ತಿರ ಹೋಗಿ ಮನೆಯಲ್ಲಿದ್ದ ನನ್ನ ಹೆಂಡತಿ ಮಕ್ಕಳಿಗೆಲ್ಲಾ ಅವಾಚ್ಯವಾಗಿ ನಿಂದಿಸಿ ನಿನ್ನ ಗಂಡನನ್ನ ಕೊಲೆ ಮಾಡುತ್ತೇವೆ. ಅವನ ತೋರಿಸಿ ಎಂದು ಗಲಾಟೆ ಮಾಡಿ, ನನಗೂ ಪ್ರಾಣ ಬೆದರಿಕೆ ಹಾಕಿ, ಚಾಕು ಚೂರಿ ತಂದಿದ್ದು ಸಾಯಿಸುತ್ತೇವೆ ಎಂದು ಹೆದರಿಸಿದರು. ಮೇಲ್ಕಂಡವರ ಮೇಲೆ ಕಾನೂನು ಕ್ರಮ ಜರುಗಿಸಿ ನಮಗೆ ನ್ಯಾಯಕೊಡಿಸಿ ರಕ್ಷಣೆ ಕೊಡಬೇಕೆಂದು ಇತ್ಯಾದಿಯಾಗಿ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

ಹುಳಿಯಾರು ಪೊಲೀಸ್ ಠಾಣಾ ಮೊ.ನಂ 34/2018, ಕಲಂ 160 ಐ.ಪಿ.ಸಿ.

ದಿನಾಂಕ 06/04/2018 ರಂದು ಸಂಜೆ 04-45 ಗಂಟೆಗೆ ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ನೀಡಿದ ಜ್ಞಾಪನದ ಅಂಶವೇನೆಂದರೆ, ದಿನಾಂಕ 06/04/2018 ರಂದು ನಾನು ಮತ್ತು ಸಿಬ್ಬಂದಿರವರು ಹುಳಿಯಾರಿನಲ್ಲಿ ದುರ್ಗಮ್ಮನ ದೇವಿ ರಥೋತ್ಸವದ ಬಂದೋಬಸ್ತ್ ಕರ್ತವ್ಯ ನಿರ್ವಹಿಸುತ್ತಿದ್ದಾಗ ಮಧ್ಯಾಹ್ನ ಸುಮಾರು 02-30 ಗಂಟೆ ಸಮಯದಲ್ಲಿ ಜಬೀವುಲ್ಲಾ ಮತ್ತು ಅವರ ಸಹಚರರು ಹಾಗೂ ಅಮಾನುಲ್ಲಾ ಹಾಗೂ ಅವರ ಸಹಚರರಾದ  1] ಸೈಯದ್ ನಿಜಾಮುದ್ದೀನ್ ಬಿನ್ ಸೈಯದ್ ಜಬೀವುಲ್ಲಾ, 2] ಸೈಯದ್ ಜಹೀರ್ ಬಿನ್ ಸೈಯದ್ ಮಹಬೂಬ್ ಸಾಬ್, 3] ಸೈಯದ್ ಜುಬೇರ್ ಬಿನ್ ಸೈಯದ್ ಜಹೀರ್, 4] ಸೈಯದ್ ಮತೀನ್ ಬಿನ್ ಲೇಟ್ ನಜೀರ್ ಜಾನ್, 5] ಸೈಯದ್ ಮುನೀರ್ ಬಿನ್ ಲೇಟ್ ವಜೀರ್ ಜಾನ್, 6] ಇಮ್ರಾಜ್ ಬಿನ್ ಅರಕೇಶ್, 37 ವರ್ಷ, ಡ್ರೈವರ್, ಮಾರುತಿ ನಗರ, ಹುಳಿಯಾರು, 7] ಇಮ್ರಾನ್ ಬಿನ್ ಅರಕೇಶ್, 8] ಅಕ್ರಂ ಬಿನ್ ಲೇಟ್ ಅಬ್ದುಲ್, 9] ಸೈಯದ್ ಗೌಸಿ ಬಿನ್ ಸೈಯದ್ ಅಬ್ದುಲ್ ಸಾಬ್, 10] ಸೈಯದ್ ಸೈಫುಲ್ಲಾ ಬಿನ್ ಲೇಟ್ ಸೈಯದ್ ಮಹಬೂಬ್ ಸಾಬ್, 11] ಸೈಯದ್ ಅಮೀತ್ ಬಿನ್ ಸೈಯದ್ ಸೈಫುಲ್ಲಾ, 12] ಅರಕೇಶ್ ಬಿನ್ ಹುಸೇನ್, 13] ಮುಬಾರಕ್ ಬಿನ್ ಅಜಗರೀ, 14] ಜಬೀ ವುಲ್ಲಾ ಬಿನ್ ಗಫಾರ್ ಖಾನ್, 41 ವರ್ಷ, ವಠಾರ, ಹುಳಿಯಾರು, 15] ಸಾದತ್ ಷರೀಫ್, ಡ್ರೈವರ್, ಷರೀಫ್ ಮೊಹಲ್ಲಾ, ಹುಳಿಯಾರು, 16] ರಹಮತುಲ್ಲಾ, ಮಟನ್ ಅಂಗಡಿ, ಇಂದಿರಾ ನಗರ, ಹುಳಿಯಾರು, 17] ಯಾಸಿನ್ ಬಿನ್ ಗೌಸ್, ಹುಳಿಯಾರು, 18] ಶೌಕತ್ ಬಿನ್ ಬಾಷಾ ಸಾಬ್, ಲಿಂಗಾಯತರ ಬೀದಿ, ಹುಳಿಯಾರು, 19] ದಾದಾಫೀರ್ ಬಿನ್ ಬಾಜಿಸಾಬ್, 35 ವರ್ಷ, ಉರ್ದು ಶಾಲೆ ರಸ್ತೆ, ಹುಳಿಯಾರು, 20] ಸೈಯದ್ ಪೀರ್, ಪಂಚರ್ ಅಂಗಡಿ, ನುರಾನಿ ಮಸೀದಿ ಹತ್ತಿರ, ಹುಳಿಯಾರು, 21] ಆರುನ್ ಷರೀಫ್ ಬಿನ್ ಷರೀಫ್ ಸಾಬ್, 42 ವರ್ಷ, ಮುಸ್ಲೀಂ ಜನಾಂಗ, ಈರುಳ್ಳಿ ವ್ಯಾಪಾರ, ಆಜಾದ್ ನಗರ, ಹುಳಿಯಾರು, 22] ಮುನ್ನಾ, ಹಣ್ಣಿನ ವ್ಯಾಪಾರ, ಆಜಾದ್ ನಗರ, ಹುಳಿಯಾರು, 23] ಮುಬಾರಕ್, ಹಣ್ಣಿನ ವ್ಯಾಪಾರ, ನುರಾನಿ ಮಸೀದಿ ಹತ್ತಿರ, ಹುಳಿಯಾರು, 24] ಸಿದ್ದು ಬಿನ್ ಫ್ರೂಟ್ ನಜೀರ್, 30 ವರ್ಷ, ಬಾಲಾಜಿ ಟಾಕೀಸ್ ಹಿಂಬಾಗ, ಹುಳಿಯಾರು, 25] ಸಾದತ್ ಬಿನ್ ಇನಾಯತ್ ಸಾಬ್, ಡ್ರೈವರ್, ಮದೀನ ಮಸೀದಿ ಹತ್ತಿರ, ಹುಳಿಯಾರು, 26] ಜಾಫರ್ ಬಿನ್ ದುಬೈ ನಜೀರ್, 25 ವರ್ಷ, ಇಂದಿರಾ ನಗರ, ಹುಳಿಯಾರು, 27] ಇಸ್ಮಾಯಿಲ್ ಸಾಬ್, ಜಾಮೀಯ ಮಸೀದಿ ಹತ್ತಿರ, ಹುಳಿಯಾರು, 28] ಖದೀರ್ ಬಿನ್ ಅಮಾನುಲ್ಲಾ, ಲಿಂಗಾಯಿತರ ಬೀದಿ, ಹುಳಿಯಾರು, 29] ದುಬೈ ನಜೀರ್, ಇಂದಿರಾ ನಗರ, ಹುಳಿಯಾರು, 30] ಅಹಮದ್  ಬಿನ್ ಶಬ್ಬೀರ್ ಸಾಬ್, ಮೆಕ್ಯಾನಿಕ್, ಇಂದಿರಾಮಗರ, ಹುಳಿಯಾರು, 31] ಮುಬಾರಕ್ ಬಿನ್ ಸೈಕಲ್ ಶಾಪ್ ಮಹಮದ್, ವಿಜಯನಗರ, ಹುಳಿಯಾರು, 32] ಸೈಯದ್ ಅಹಮದ್ ಬಿನ್ ಲೇಟ್ ದಸ್ತಗಿರ್ ಸಾಬ್, ಗಾಂದಿಪೇಟೆ, ಹುಳಿಯಾರು, 33] ಸೈಕಲ್ ಷಾಪ್ ಮಹಮದ್, ವಿಜಯನಗರ, ಹುಳಿಯಾರು, 34] ರಫೀಕ್ ಬಿನ್ ಅಮಾನುಲ್ಲಾ, ಲಿಂಗಾಯತರ ಬೀದಿ, ಹುಳಿಯಾರು, 35] ಅತಿಕ್ ಬಿನ್ ಅಮಾನುಲ್ಲಾ. ಲಿಂಗಾಯತರ ಬೀದಿ, ಹುಳಿಯಾರು, 36] ಡಿಶ್ ಬಾಬು ಬಿನ್ ಬಾಷಾ ಸಾಬ್, ಲಕ್ಷ್ಮೀ ದೇವಸ್ಥಾನದ ಹಿಂಭಾಗ, ಹುಳಿಯಾರು, 37] ಜಬೀವುಲ್ಲಾ ಬಿನ್ ಬಾಷಾ ಸಾಬ್, ಲಾರಿ ಮಾಲೀಕರು, ಹುಳಿಯಾರು, 38] ಸಲೀಂ ಬಿನ್ ಬಾಷಾ ಸಾಬ್, ನುರಾನಿ ಮಸೀದಿ ಹತ್ತಿರ, ಹುಳಿಯಾರು, 39] ಸಲೀಂ ಬಿನ್ ಗೌಸ್ ಸಾಬ್, ಉರ್ದು ಶಾಲೆ ಹತ್ತಿರ, ಹುಳಿಯಾರು. 40] ಅಹಮದ್ ಬಿನ್ ಶಬ್ಬೀರ್ ಸಾಬ್, ಮೆಕ್ಯಾನಿಕ್, ಷರೀಫ್ ಮೊಹಲ್ಲಾ, ಹುಳಿಯಾರು, 41] ಹಮೀನ್ ಬಿನ್ ಆರೀಫ್, ಟಿಪ್ಪು ಸರ್ಕಲ್, ಹುಳಿಯಾರು [ಬೆಂಗಳೂರು], 42] ಅಫ್ರೋಜ್ ಬಿನ್ ಎಂ.ಎ.ಆರ್ ಸಮೀವುಲ್ಲಾ ಸಾಬ್, ಸಂತೇಬೀದಿ, ಹುಳಿಯಾರು, 43] ಸೈಯದ್ ಸದ್ದಾಂ ಬಿನ್ ಜಬೀವುಲ್ಲಾ, ಮಾರುತಿ ನಗರ, ಹುಳಿಯಾರು ರವರುಗಳು ಹಾಗೂ ಇತರರು ಹುಳಿಯಾರು ಟೌನ್ ನಲ್ಲಿರುವ ವಕ್ಫ್ ಬೋರ್ಡ್ ಗೆ ಸೇರಿದ ಜಾಮೀಯ ಮಸೀದಿ ಮತ್ತು ಜಮೀನಿನ ವಿಚಾರವಾಗಿ ಒಬ್ಬರಿಗೊಬ್ಬರು ಹುಳಿಯಾರು ಜಾಮೀಯ ಮಸೀದಿ ಮುಂಬಾಗ ಸಾರ್ವಜನಿಕ ಸ್ಥಳದಲ್ಲಿ, ಸಾರ್ವಜನಿಕರ ನೆಮ್ಮದಿಗೆ ಭಂಗ ಬರುವ ರೀತಿಯಲ್ಲಿ ಅವಾಚ್ಯ ಶಬ್ದಗಳಿಂದ ಬೈಯ್ದಾಡಿಕೊಂಡು ಹೊಡೆದಾಡಿರುತ್ತಾರೆ. ಸದರಿಯವರ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕೆಂದು ಸಂಜೆ 04-45 ಗಂಟೆಗೆ ವಾಪಸ್ ಠಾಣೆಗೆ ಬಂದು ಪ್ರಕರಣ ದಾಖಲಿಸಲು ಸೂಚಿಸಿ ನೀಡಿದ ಜ್ಞಾಪನದ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

ತಿಪಟೂರು ನಗರ ಪೊಲೀಸ್ ಠಾಣಾ ಮೊ. ನಂ - 43/2018 ಕಲಂ: 323,504,354 ರೆ/ವಿ 34 ಐ.ಪಿ.ಸಿ

ದಿನಾಂಕ:06/04/2018 ರಂದು ತಿಪಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ನಾಗಮಣಿ ಕೋಂ ರಾಜು, 32 ವರ್ಷ, ರೆಡ್ಡಿ ಜನಾಂಗ, ಗಾಯತ್ರಿನಗರ, ತಿಪಟೂರು ಟೌನ್ ರವರ ಇಂಟಿಮೇಷನ್ ಸ್ಲಿಪ್ ನ್ನು ಪಡೆದು ಮತ್ತು ನಾಗಮಣಿ ರವರು ನೀಡಿದ ಲಿಖಿತ ದೂರನ್ನು ಪಡೆದಿದ್ದು, ಸದರಿ ದೂರಿನ ಅಂಶವೇನೆಂದರೆ, ನಾನು ಕೂಲಿ ಹಣದಿಂದ ಉಳಿತಾಯ ಮಾಡಲು ಮುತ್ತೂಟ್ ಸಂಘದಲ್ಲಿ ಹಣ ಕಟ್ಟುತ್ತಿದ್ದೆನು. ದಿನಾಂಕ: 04/04/2018 ರಂದು ನಾನು ಮುತ್ತೂಟ್ ಸಂಘಕ್ಕೆ ಹಣ ಕಟ್ಟಬೇಕಾಗಿತ್ತು. ನನ್ನ ಬಳಿ ಹಣ ಕಟ್ಟಲು 200 ರೂ ಕಡಿಮೆ ಇತ್ತು. ಆದ್ದರಿಂದ ನಾನು ಮಂಜುನಾಥ ಸಂಘಕ್ಕೆ ಹಣ ಕಟ್ಟಿದ್ದು,  ವರಲಕ್ಷ್ಮಿ ಸಂಘದ ಹಣ ಬಂದಾಗ ಕಟ್ಟುತ್ತೇನೆ ಎಂದು ದ್ರಾಕ್ಷಾಯಿಣಿ ಮತ್ತು ಇವರ ಮಗನಿಗೆ ಹೇಳಿದೆನು. ಆಗ  ದ್ರಾಕ್ಷಾಯಿಣಿ ಮತ್ತು ಇವರ ಮಗ ನಟರಾಜು ರವರು ನನಗೆ ಬಾಯಿಗೆ ಬಂದಂತೆ ಬೈದು ದ್ರಾಕ್ಷಾಣಮ್ಮ ಇವರು ಕೈಗಳಿಂದ ನನಗೆ ಮೈಗೆ ಮತ್ತು ತಲೆಗೆ ಹೊಡೆದು, ಜುಟ್ಟು ಮತ್ತು ಬಟ್ಟೆಯನ್ನು ಎಳೆದಾಡಿದರು. ಇವರ ಮಗ ನಟರಾಜು ನನ್ನ ತಲೆಯ ಕೂದಲನ್ನು ಹಿಡಿದುಕೊಂಡನು. ಆಗ ನನ್ನ ತಮ್ಮ ಮಹೇಶನು ಬಿಡಿಸಲು ಬಂದನು. ಅವನನ್ನು ಸಹ ಅವಾಚ್ಯ ಶಬ್ದಗಳಿಂದ ಬೈದು ಅವನ ಗಲ್ಲಕ್ಕೆ  ಹೊಡೆದನು.  ಆಗ ರಾತ್ರಿ ಸುಮಾರು 9-00 ಗಂಟೆಯಾಗಿತ್ತು. ಆದ್ದರಿಂದ ಸದರಿಯವರುಗಳ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಂಡು ನಮಗೆ ರಕ್ಷಣೆಯನ್ನು ಕೊಡಬೇಕೆಂದು ಕೋರಿ  ನೀಡಿರುವ ದೂರನ್ನು ಪಡೆದು ಸಂಜೆ 4-30 ಗಂಟೆಗೆ ಠಾಣೆಗೆ ವಾಪಸ್ ಬಂದು ಪ್ರಕರಣ ದಾಖಲಿಸಿರುತ್ತೆ.

ಚೇಳೂರು  ಪೊಲೀಸ್  ಠಾಣಾ  ಮೊ.ನಂ 81/2018  ಕಲಂ 379  ಐ.ಪಿ.ಸಿ

ದಿನಾಂಕ;06/04/2018  ರಂದು  ಪಿರ್ಯಾದಿ ಶಿವಣ್ಣನವರು  ಠಾಣೆಗೆ  ಹಾಜರಾಗಿ  ನೀಡಿದ  ಪಿರ್ಯಾದು ಅಂಶವೇನಂದರೆ, ದಿನಾಂಕ; 01/04/2018  ರಂದು  ರಾತ್ರಿ  ಗುಬ್ಬಿ  ತಾಲ್ಲೋಕ್,  ನಿಟ್ಟೂರು  ಹೋ,  ಸಾಗಸಂದ್ರ  ಗ್ರಾಮದಲ್ಲಿ   ಶ್ರೀ   ಕೆಂಪಮ್ಮ  ದೇವಿ  ದೇವರ  ಜಾತ್ರಾ ಕಾರ್ಯಕ್ರಮ  ವಿದ್ದು,   ಈ  ಜಾತ್ರಾ  ಕಾರ್ಯ ಕ್ರಮಕ್ಕೆ   ನನ್ನ ಬಾಬ್ತು  ಕೆಎ 06- ಇ.ವಿ- 9110  ನೇ ಟಿ.ವಿ.ಎಸ್. ಎಕ್ಸ್  ಎಲ್ – 100  ಸಿಸಿ.  ದ್ವಿ- ಚಕ್ರ  ವಾಹನದಲ್ಲಿ   ಹೋಗಿ   ಸದರಿ  ವಾಹನವನ್ನು    ದೇವಸ್ಥಾನದ   ಸ್ವಲ್ಪ  ದೂರದಲ್ಲಿ   ಎಲ್ಲಾರೂ    ದ್ವಿ- ಚಕ್ರ  ವಾಹನಗಳನ್ನು  ನಿಲ್ಲಿಸಿದ್ದ  ಸ್ಥಳದಲ್ಲಿ  ನನ್ನ  ಸಹ  ನನ್ನ  ದ್ವಿ- ಚಕ್ರ  ವಾಹನವನ್ನು   ರಾತ್ರಿ 9-00  ಗಂಟೆ  ಸಮಯದಲ್ಲಿ  ನಿಲ್ಲಿಸಿ  ಜಾತ್ರೆಗೆ   ಹೋಗಿದ್ದು,  ಶ್ರೀ ಕೆಂಪಮ್ಮದೇವಿಯ  ಪೂಜಾ  ಕಾರ್ಯ ಕ್ರಮ  ಹಾಗೂ   ರಥೋತ್ಸವ  ಕಾರ್ಯಕ್ರಮ  ಮುಗಿಸಿಕೊಂಡು  ದಿನಾಂಕ; 02/04/2018  ರಮದು  ಬೆಳಗಿನ  ಜಾವ 4-30  ಗಂಟೆ  ಸಮಯದಲ್ಲಿ  ವಾಪಸ್ಸು   ನಮ್ಮ    ಊರಿಗೆ  ಹೋಗಲು  ನಾನು   ನಿಲ್ಲಿಸಿದ್ದ  ನನ್ನ  ಬಾಬ್ತು  ದ್ವಿ- ಚಕ್ರ  ವಾಹನದ  ಬಳಿಗೆ  ಬಂದಾಗ  ನನ್ನ  ದ್ವಿ- ಚಕ್ರ  ವಾಹನ  ಇರಲಿಲ್ಲ  ನಾನು  ಜಾತ್ರೆಯಲ್ಲಿ  ಎಲ್ಲಾ  ಕಡೆ  ಹುಡುಕಿದರೂ   ನನ್ನ  ದ್ವಿ- ಚಕ್ರ  ವಾಹನ  ಪತ್ತೆಯಾಗಿಲಿಲ್ಲ   ಯಾರೋ  ಕಳ್ಳರು  ನನ್ನ  ಬಾಬ್ತು ಕೆಎ 06- ಇ.ವಿ- 9110  ನೇ ಟಿ.ವಿ.ಎಸ್. ಎಕ್ಸ್  ಎಲ್ – 100  ಸಿಸಿ.  ದ್ವಿ- ಚಕ್ರ  ವಾಹನವನ್ನು ರಾತ್ರಿ  ಯಾವುದೋ  ವೇಳೆಯಲ್ಲಿ  ಕಳ್ಳತನ  ಮಾಡಿಕೊಂಡು  ಹೋಗಿರುತ್ತಾರೆ.  ಇದರ  ಇಂಜಿನ್  ನಂಬರ್  OP1DG2181323     ಚಾರ್ಸಿ  ನಂ MD621CP18G2D79894   ಆಗಿದ್ದು, ನಾನು ಅಂದಿನಿಂದ ಇಲ್ಲಿಯವರೆಗೆ  ಎಲ್ಲಾ  ಕಡೆ ಹುಡುಕಿದರೂ  ಪತ್ತೆಯಾಗದ  ಕಾರಣ  ಈ ದಿನ  ತಡವಾಗಿ  ಬಂದು  ದೂರು  ನೀಡಿರುತ್ತೇನೆ.   ಈ ದ್ವಿ- ಚಕ್ರ  ವಾಹನದ  ಬೆಲೆ  ಸುಮಾರು 35.000 ರೂಗಳಾಗಿರುತ್ತೆ. ಆದ್ದರಿಂದ  ಕಳುವಾಗಿರುವ  ನನ್ನ  ಬಾಬ್ತು  ಕೆಎ 06- ಇ.ವಿ- 9110  ನೇ ಟಿ.ವಿ.ಎಸ್. ಎಕ್ಸ್  ಎಲ್ – 100  ಸಿಸಿ.  ದ್ವಿ- ಚಕ್ರ  ವಾಹನವನ್ನು ಪತ್ತೆ  ಮಾಡಿಕೊಡಲು  ಕೋರಿ ಇತ್ಯಾದಿಯಾದ  ಪಿರ್ಯಾದು  ಅಂಶ.

ಹೊಸಬಡಾವಣೆ ಪೊಲೀಸ್ ಠಾಣಾ CR 67/2018 U/S 420 IPC

ದಿನಾಂಕ : 06-04-2018 ರಂದು ಮಧ್ಯಾಹ್ನ 3-30 ಗಂಟೆಗೆ ಪಿರ್ಯಾದಿ ಶ್ರೀ ಮಣಿಕಂಠ ಬಿನ್ ವೆಂಕಟೇಶ್ 25 ವರ್ಷ, ಮಾರಾಟ ಪ್ರತಿನಿಧಿ, ಮಲಬಾರ್ ಗೋಲ್ಡ್ & ಡೈಮಂಡ್ ಬಿ.ಹೆಚ್ ರಸ್ತೆ, ತುಮಕೂರು ರವರು  ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯು ಮಲಬಾರ್ ಗೋಲ್ಡ್ & ಡೈಮಂಡ್ಸ್ ನಲ್ಲಿ 3 ವರ್ಷಗಳಿಂದ ಮಾರಾಟ ಪ್ರತಿನಿಧಿಯಾಗಿ ಕೆಲಸ ಮಾಡಿಕೊಂಡಿದ್ದು  ದಿನಾಂಕ : 02-04-2018 ರಂದು ಎಂದಿನಂತೆ ಕೆಲಸ ಮಾಡಿಕೊಂಡಿರುವಾಗ ಮಧ್ಯಾಹ್ನ ಸುಮಾರು 1-00 ಗಂಟೆಯಿಂದ ಮಧ್ಯಾಹ್ನ 1-40 ಗಂಟೆ ನಡುವಿನ ಅವಧಿಯಲ್ಲಿ ಸುಮಾರು 40 ರಿಂದ 45 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯೊಬ್ಬರು ಪಿರ್ಯಾದಿ ಷೋ ರೂಂಗೆ ಬಂದು ಪಿರ್ಯಾದಿಯನ್ನು ಚಿನ್ನದ ಉಂಗುರಗಳನ್ನು  ತೋರಿಸಲು ಕೋರಿದ್ದು ಅದರಂತೆ ಪಿರ್ಯಾದಿಯು  ಅವರಿಗೆ ಚಿನ್ನದ ಉಂಗುರಗಳನ್ನು ತೋರಿಸುತ್ತಿರುವಾಗ್ಗೆ ಸದರಿ ವ್ಯಕ್ತಿಯು ಆತನ ಮುಂದಿದ್ದ ಟ್ರೇನಲ್ಲಿ ಇದ್ದ  41,792/-ರೂ ಬೆಲೆ ಬಾಳುವ 11.571 ಗ್ರಾಂ ತೂಕದ ಚಿನ್ನದ ಉಂಗುರವನ್ನು ಪಿರ್ಯಾದಿ ಗಮನಕ್ಕೆ ಬಾರದಂತೆ ವಂಚಿಸಿ ತೆಗೆದುಕೊಂಡು ಅದರ ಬದಲಾಗಿ ಆತನು ಮೊದಲೇ ತಂದಿದ್ದ ನಕಲಿ ಚಿನ್ನದ ಉಂಗುರವನ್ನು ಇಟ್ಟು ಹೋಗಿರುತ್ತಾರೆ ಈ ಬಗ್ಗೆ ಮುಂದಿನ ಕ್ರಮ ಜರುಗಿಸಬೇಕೆಂದು ನೀಡಿದ ದೂರನ್ನು ಸ್ವೀಕರಿಸಿ ಠಾಣಾ ಮೊನಂ 67/2018 ಕಲಂ 420 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿದೆ

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 75 guests online
Content View Hits : 302223