lowborn ಪ್ರತಿಕಾ ಪ್ರಕಟಣೆ. ದಿ:16-03-18 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿಃ25-04-2018. ದಿನಾಂಕ:24-04-2018 ರ ರಾತ್ರಿ 3 ಜನ ಅನುಮಾನಸ್ಪದ ವ್ಯಕ್ತಿಗಳು... >> ಪತ್ರಿಕಾ ಪ್ರಕಟಣೆ ದಿನಾಂಕ: 21-04-2018. ಕೊಲೆ ಆರೋಪಿಯ ಬಂಧನ:   ಹೆಬ್ಬೂರು ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 17.04.2018 ತುಮಕೂರು ಜಿಲ್ಲಾ ಪೊಲೀಸರ ಭರ್ಜರಿ ಬೇಟೆ: 65 ಕೆ.ಜಿ.... >> : ಪತ್ರಿಕಾ ಪ್ರಕಟಣೆ : ದಿನಾಂಕ:- 16-04-2018 ದಿನಾಂಕ;- 14-04-18 ರಂದು ರಾತ್ರಿ  2018 ರ ವಿಧಾನಸಭಾ... >> -: ಪತ್ರಿಕಾ ಪ್ರಕಟಣೆ :- ಈ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡುವುದೇನೆಂದರೆ,... >> ಪತ್ರಿಕಾ ಪ್ರಕಟಣೆ ದಿನಾಂಕ: 25-03-2018. ಮೊಬೈಲ್‌‌ ಪೋನ್‌‌ಗಳನ್ನು ಕಳವು ಮಾಡುತ್ತಿದ್ದ... >> ತುಮಕೂರು ಜಿಲ್ಲಾ ಪೊಲೀಸ್ ಪತ್ರಿಕಾ ಪ್ರಕಟಣೆ ದಿನಾಂಕ. 20.03.2018. ಯುಗಾದಿ ಹಬ್ಬದ ಪ್ರಯುಕ್ತ... >> ಪತ್ರಿಕಾ ಪ್ರಕಟಣೆ ದಿನಾಂಕ : 17-03-2018 -: ಚೂರಿಯಿಂದ ಇರಿದು ದರೋಡೆ ಮಾಡುತ್ತಿದ್ದ ಆರೋಪಿಗಳ... >> ಪ್ರತಿಕಾ ಪ್ರಕಟಣೆ. ದಿ: 16/03/18 ಮೂವರು ಮನೆ ಕಳ್ಳರ ಬಂಧನ, 5 ಲಕ್ಷ ಮೌಲ್ಯದ... >> ಪತ್ರಿಕಾ ಪ್ರಕಟಣೆ ದಿನಾಂಕ: 15-03-2018 ಎ.ಟಿ.ಎಂ ನಲ್ಲಿ ಹಣ ಡ್ರಾ ಮಾಡಿಕೊಡುವುದಾಗಿ ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ಪ್ರತಿಕಾ ಪ್ರಕಟಣೆ. ದಿ:16-03-18

ಪ್ರತಿಕಾ ಪ್ರಕಟಣೆ.

ದಿ: 16/03/18

ಮೂವರು ಮನೆ ಕಳ್ಳರ ಬಂಧನ, 5 ಲಕ್ಷ ಮೌಲ್ಯದ ಚಿನ್ನಾಭರಣಗಳು, ಐದು ದ್ವಿಚಕ್ರ ವಾಹನಗಳು, ಲ್ಯಾಪ್ಟಾಪ್ ಮತ್ತು ಮೊಬೈಲ್‌ ಗಳ  ವಶ

 

ದಿ:26-12-2017ರಂದು ರಾತ್ರಿ ಯಾರೋ ಕಳ್ಳರು ಪಾವಗಡ ಪಟ್ಟಣದ ರಾಮಾಂಜಿನೇಯ್ಯಶೆಟ್ಟಿ ರವರ ಮನೆಯ ಬೀಗ ಮುರಿದು ಒಳಗೆ ಪ್ರವೇಶಿಸಿ ಮನೆಯಲ್ಲಿದ್ದ ಚಿನ್ನಾಭರಣಗಳು ಹಾಗೂ ಹಣವನ್ನು ಕಳುವು ಮಾಡಿಕೊಂಡು ಹೋಗಿದ್ದು ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತೆ.

ಪ್ರಕರಣದಲ್ಲಿ ಆರೋಪಿಗಳಾದ ಹೇಮಂತಕುಮಾರ್, ಕಾಂತೇಶ, ಸಂತೋಷ ರವರುಗಳನ್ನು ಬಂಧಿಸಿದ್ದು, ಆರೋಪಿಯಾದ ಕಾಂತೇಶ ಪಾವಗಡ ತಾಲ್ಲೂಕು ಕನ್ನಮೇಡಿ ಗ್ರಾಮದ ವಾಸಿಯಾಗಿದ್ದು ಪಾವಗಡ ಪೊಲೀಸ್ ಠಾಣೆಯಲ್ಲಿ ಮನೆ ಕಳುವು ಪ್ರಕರಣದ ಎಂ.ಓ.ಬಿ. ಅಸಾಮಿಯಾಗಿರುತ್ತಾನೆ. ಆರೋಪಿಗಳು ಪಟ್ಟಣದ ರಾಮಾಂಜಿನೇಯ್ಯಶೆಟ್ಟಿ ಮತ್ತು ಧನುಂಜಯ್ಯರವರ ಮನೆಗಳಲ್ಲಿ ಕಳುವು ಮಾಡಿದ್ದು, ಆರೋಪಿಗಳಿಂದ 2.50 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಮತ್ತು ಲ್ಯಾಪ್ಟಾಪ್, ಮೊಬೈಲ್ ಪೋನ್ಗಳು ಹಾಗೂ ಆರೋಪಿಗಳು ದೊಡ್ಡಬಳ್ಳಾಪುರದಲ್ಲಿ ಕಳುವು ಮಾಡಿದ್ದ 5 ಮೋಟಾರ್ ಸೈಕಲ್ಗಳನ್ನು ಸಹ ವಶಕ್ಕೆ ಪಡೆದಿರುತ್ತೆ.

ಆರೋಪಿಗಳು ಪಾವಗಡದ ಮನೆಗಳಲ್ಲಿ ಕಳುವು ಮಾಡಿರುವ ಕೆಲವು ಮಾಲುಗಳನ್ನು ಬೆಂಗಳೂರಿನ ಯಲಹಂಕ ಅಥಿಕ ಗೋಲ್ಡ್ ಕಂಪನಿಗೆ ಮಾರಾಟ ಮಾಡಿದ್ದು, ಸದರಿ ಕಂಪನಿಯವರು ಸ್ವೀಕರಿಸಿರುವ ಕಳುವು ಮಾಲುಗಳನ್ನು ಹಿಂದಿರುಗಿಸಿರುವುದಿಲ್ಲ.

ಈ ಪತ್ತೆ ಕಾರ್ಯಕ್ಕಾಗಿ ಶ್ರೀ ಓ.ಬಿ. ಕಲ್ಲೇಶಪ್ಪ, ಡಿ.ವೈ.ಎಸ್.ಪಿ. ಮಧುಗಿರಿ ಉಪವಿಭಾಗ ರವರ ಮಾರ್ಗದರ್ಶನದಲ್ಲಿ ಪಾವಗಡ ವೃತ್ತ ನಿರೀಕ್ಷಕರಾದ ಶ್ರೀ.ಹೆಚ್.ಜಿ.ಮಹೇಶ್, ಪಿ.ಎಸ್.ಐ. ಮಧುಸೂದನ್ ಮತ್ತು ಸಿಬ್ಬಂದಿಗಳಾದ ಎ.ಎಸ್.ಐ. ರಾಮಾಂಜಿನೇಯ್ಯ, ಗೋವಿಂದರಾಜು, ಸೋಮಶೇಖರ್, ಜಿ.ಟಿ.ಶ್ರೀನಿವಾಸ್, ಮಂಜುನಾಥ್, ಭರತ್, ಸಾಧಿಕ್, ಜಾವೀದ್ ಗಂಗಾಧರಪ್ಪರವರುಗಳು ಆರೋಪಿಗಳನ್ನು ಬಂಧಿಸಿ ಮಾಲುಗಳನ್ನು ವಶಪಡಿಸಿಕೊಳ್ಳಲು ಶ್ರಮಿಸಿರುತ್ತಾರೆ. ಈ ಪತ್ತೆ ತಂಡಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ||ದಿವ್ಯ ವಿ.ಗೋಪಿನಾಥ್, ಐ.ಪಿ.ಎಸ್ ರವರು ಶ್ಲಾಘಿಸಿರುತ್ತಾರೆ.


 

 

 

ಪ್ರತಿಕಾ ಪ್ರಕಟಣೆ.

ದಿ: 16/03/18


ಹೆದ್ದಾರಿ ಸುಲಿಗೆ ಕೋರರ ಬಂಧನ, ಮೂರು ಬೈಕು ಮತ್ತು ಒಂದು ಚಾಕು, ನಗದು ಹಣ, ಇತರೆ ದಾಖಲಾತಿಗಳು ವಶ

 

ದಿನಾಂಕ: 12/3/2018 ರಂದು  ಸಂಜೆ 6-30 ಗಂಟೆಯಲ್ಲಿ ಪಿರ್ಯಾದಿ ಪಿಲೀಪ್ ಮದನ್ ಕುಮಾರ್, ಅಮ್ಮಸಂದ್ರ, ತುರುವೆಕೆರೆ ತಾಲ್ಲೊಕ್ ಇವರು ಕೆಎ-44-ಯು-2200 ನೇ ಆಕ್ಟೀವ್ ಹೊಂಡಾ ವಾಹನದಲ್ಲಿ ಬೆಂಗಳೂರಿನಿಂದ ಅಮ್ಮಸಂದ್ರಕ್ಕೆ ಎನ್ ಹೆಚ್-75 ರಸ್ತೆ ಯಲ್ಲಿ ಚೊಟ್ನಹಳ್ಳಿ ಬಳಿ ಹಮಾಮ್ ಹತ್ತಿರ ಹೋಗುತ್ತಿರುವಾಗ, 4 ಜನ ಅಪರಿಚಿತರು ದ್ವಿಚಕ್ರವಾಹನಗಳನ್ನು ಬಂದು ಪಿರ್ಯಾದಿಯನ್ನು ಅಡ್ಡಗಟ್ಟಿ  ಚಾಕು ತೋರಿಸಿ ಹೆದರಿಸಿ ಪಿರ್ಯಾದಿ ಬಳಿ ಇದ್ದ 2800/- ರೂ ಹಣವನ್ನು ಮತ್ತು ಕೆಎ-44-ಯು-2200 ನೇ ಆಕ್ಟೀವ್ ಹೊಂಡಾ ವಾಹನವನ್ನು ಕಿತ್ತುಕೊಂಡು ಹೋಗಿದ್ದು, ಈ ಸಂಬಂಧವಾಗಿ ಕುಣಿಗಲ್ ಪೊಲೀಸ್ ಠಾಣಾ ಮೊ ನಂ;166/2018, ಕಲಂ;392, ರೆ/ವಿತ್ 34 ಐಪಿಸಿ ರೀತ್ಯ ಪ್ರಕರಣ ದಾಖಲಾಗಿರುತ್ತೆ.

ಆರೋಪಿತರುಗಳ ವಿವರ

1)ಸಮೀರ್ ಖಾನ್ @ ಸೇಬು ಬಿನ್ ಲೇಟ್ ಸರ್ದಾರ್, 19 ವರ್ಷ, ಮುಸ್ಲಿಂ ಜನಾಂಗ, ಕಾರು ಡ್ರೈವರ್, ಹಾಲಿ ವಾಸ ಕೇರ್ ಆಫ್ ಸತ್ಯನಾರಾಯಣ, ಬಡಾವಣೆ ಆರ್ಚ್ ರೋಡ್, ಕಮಲಾನಗರ, ಮಾರ್ಕೆಟ್ ಹತ್ತಿರ ಬೆಂಗಳೂರು ಸ್ವಂತ ಊರು. ಬಿಳಿದೇವಾಲಯ, ಕಸಬಾ ಹೋಬಳಿ, ಕುಣಿಗಲ್ ತಾಲ್ಲೊಕ್

2) ಚೇತನ್ ಬಿ ಎಲ್ @ ಚೇತು ಬಿನ್ ಲೇಟ್ ಬಿ ಕೆ ಲಕ್ಷ್ಮಣ್ 21 ವರ್ಷ, ಆದಿ ಕರ್ನಾಟಕ, ಎಲೆಕ್ಟ್ರೀಯನ್ ವಾಸ; ಬಿಳಿದೇವಾಲಯ ಕಸಬಾ ಹೋಬಳಿ, ಕುಣಿಗಲ್ ತಾಲ್ಲೊಕ್ ಇವರುಗಳು  ಇತರೆ ಇಬ್ಬರೊಂದಿಗೆ ಸೇರಿ ಕೃತ್ಯವೆಸಗಿರುವುದು ಪತ್ತೆಯಾಗಿರುತ್ತದೆ.

ತನಿಖಾ  ಸಮಯದಲ್ಲಿ  ಆರೋಪಿಗಳು  ಕೃತ್ಯಕ್ಕೆ ಉಪಯೋಗಿಸಿದ 3 ದ್ವಿಚಕ್ರವಾಹನ ಇವುಗಳ ಒಟ್ಟು ಬೆಲೆ ಸುಮಾರು 75,000/-ರೂ ಹಾಗೂ 1100/- ರೂ ಸಾವಿರ ನಗದು,(ಒಟ್ಟು 76.100/-ರೂ) ಒಂದು ಚಾಕು, ಮೊಬೈಲ್ ಪೋನ್ , ನಂಬರ್ ಪ್ಲೇಟ್ ಮತ್ತು ಇತರೆ ದಾಖಲಾತಿಗಳನ್ನು ವಶಪಡಿಸಿಕೊಂಡಿರುತ್ತೆ.

ಈ ಕಾರ್ಯಾಚರಣೆಯಲ್ಲಿ ಸುಲಿಗೆ  ಆರೋಪಿಗಳ  ಪತ್ತೆ ಬಗ್ಗೆ  ಕುಣಿಗಲ್  ಉಪವಿಭಾಗದ ಡಿ ಎಸ್ ಪಿ ರವರ ನೇತೃತ್ವದಲ್ಲಿ ಕುಣಿಗಲ್ ವೃತ್ತ ನಿರೀಕ್ಷಕರವರು ಆರೋಪಿತರನ್ನು ಬಂಧಿಸುವಲ್ಲಿ ಶ್ರಮಿಸಿರುತ್ತಾರೆ.   ಕುಣಿಗಲ್ ವೃತ್ತ ನಿರೀಕ್ಷಕರವರಾದ ಎ.ಎನ್ ಅಶೋಕ್ ಕುಮಾರ್  ಪಿ.ಎಸ್.ಐ ರವರುಗಳಾದ  ಪುಟ್ಟಸ್ವಾಮಿ,  ಶ್ರೀ.ಪುಟ್ಟೇಗೌಡ ಮತ್ತು ಸಿಬ್ಬಂದಿಯವರುಗಳು ಭಾಗವಹಿಸಿದ್ದರು.

ತುಮಕೂರು ನಗರ ಹಾಗೂ ಗ್ರಾಮಾಂತರಗಳಲ್ಲಿ ಇರುವ ಎಟಿಎಂ ಗಳಲ್ಲಿ ಮುಗ್ದ ಜನರನ್ನು ನಂಬಿಸಿ ಹಣವನ್ನು ಎಟಿಎಂ ನಿಂದ ಡ್ರಾ ಮಾಡಿಕೊಡುವುದಾಗಿ ಹೇಳಿ ಮೋಸ ಮಾಡುವವರಿದ್ದು, ಸಾರ್ವಜನಿಕರು ಎಚ್ಚರದಿಂದ ವ್ಯವಹರಿಸಲು ಪೊಲೀಸ್ ಇಲಾಖೆ ಮನವಿ.

ಜಿಲ್ಲಾ ಪೊಲೀಸ್ ಕಛೇರಿ,

ತುಮಕೂರು ಜಿಲ್ಲೆ, ತುಮಕೂರು.

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 62 guests online
Content View Hits : 260871