lowborn ಅಪರಾಧ ಘಟನೆಗಳು 15-03-18 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ. ದಿನಾಂಕ : 10-07-2018   ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 09-07-2018 ಕೊಲೆ ಆರೋಪಿಗಳ ಬಂಧನ ******* ದಿನಾಂಕ 04.07.2018 ರಂದು... >>   ಪತ್ರಿಕಾ ಪ್ರಕಟಣೆ ದಿನಾಂಕ : 07-07-2018. ಪೂರ್ವಾನುಮತಿ ಪಡೆಯದೇ ಹೆದ್ದಾರಿ ತಡೆ ನಡೆಸಿ,... >> ದಿನಾಂಕ.03.07.2018. ಪತ್ರಿಕಾ ಪ್ರಕಟಣೆ ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ 11 ಲಕ್ಷ 70 ಸಾವಿರ ಬೆಲೆ ಬಾಳುವ ಚಿನ್ನ-ಬೆಳ್ಳಿ  ಹಾಗೂ ಮೊಬೈಲ್‌‌‌... >>   ಪತ್ರಿಕಾ ಪ್ರಕಟಣೆ. ತುಮಕೂರು ಜಿಲ್ಲಾ ಪೊಲೀಸ್, ತುಮಕೂರು. ಕೋರಾ ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 27.06.2018 ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಸಾರ್ವಜನಿಕರ... >> ಪತ್ರಿಕಾ ಪ್ರಕಟಣೆ ದಿನಾಂಕ:- 23/06/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಖನ್ನ... >> ಪತ್ರಿಕಾ ಪ್ರಕಟಣೆ ದಿನಾಂಕ: 21-06-2018. ಸುಲಿಗೆಕೋರರ ಬಂಧನ: ದಿನಾಂಕ:18-06-2018 ರಂದು... >>   ಪೊಲೀಸ್ ಪ್ರಕಟಣೆ ತುಮಕೂರು ಜಿಲ್ಲಾ ಪೊಲೀಸ್ ಪ್ರಕಟಣೆ   ಆತ್ಮೀಯ ನಾಗರೀಕರಲ್ಲಿ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ಅಪರಾಧ ಘಟನೆಗಳು 15-03-18

ವೈ ಎನ್  ಹೊಸಕೋಟೆ  ಪೊಲೀಸ್ ಠಾಣಾ ಮೊ. ನಂ-  25/2018   ಕಲಂ: 32(3)K E Act

 

ದಿನಾಂಕ:14/03/2018  ರಂದು ರಾತ್ರಿ  8:00 ಗಂಟೆಗೆ  ತಿರುಮಣಿ ವೃತ್ತದ ಸಿ.ಪಿ.ಐ ರವರಾದ ಶ್ರೀ ಜಿ.ಟಿ ಶ್ರೀಶೈಲಮೂರ್ತಿ  ರವರು ನೀಡಿದ ಪಂಚನಾಮೆ ವರದಿ ಅಂಶವೇನೆಂದರೆ ಈ  ದಿನ ದಿನಾಂಕ:14/03/2018 ರಂದು ಸಾಯಂಕಾಲ 6:00 ಗಂಟೆ ಸಮಯದಲ್ಲಿ  ನಾನು ವೈ.ಎನ್ ಹೊಸಕೋಟೆ ಪೋಲಿಸ್  ಠಾಣಾ ಸರಹದ್ದು ಪೋತಗಾನಹಳ್ಳಿ  ಗ್ರಾಮದ ಗೇಟ್ ಬಳಿ ಗಸ್ತಿನಲ್ಲಿರುವಾ ಗ್ಗೆ ಮಂಜುನಾಥ ಬಿನ್ ಸಕ್ರಪ್ಪ, 37 ವರ್ಷ, ಲಂಬಾಣೀ ಜನಾಂಗ. ಅಂಗಡಿ ವ್ಯಾಪಾರ ಪೋತಗಾನಹಳ್ಳಿ ,ಪಾವಗಡ ತಾ|| ಈತನು ಜನರಿಗೆ ಮಧ್ಯಸೇವನೆ ಮಾಡಲು ತನ್ನ ಅಂಗಡಿ ಬಳಿ ಅಕ್ರಮವಾಗಿ  ಸ್ಥಳಅವಕಾಶ ಮಾಡಿಕೊಟ್ಟಿದ್ದಾನೆಂತ ಖಚಿತ ಮಾಹಿತಿ ಬಂದಿದ್ದರಿಂದ ಪಂಚಾಯ್ತುದಾರನ್ನು ಬರಮಾಡಿಕೊಂಡು ಪೋತಗಾನಹಳ್ಳಿ ಗ್ರಾಮದ ಮಂಜುನಾಥ ಎಂಬುವವರ ಅಂಗಡಿ ಸಮೀಪ ಹೋಗಿ ನೋಡಲಾಗಿ ಸಾರ್ವಜನಿಕ ಗಿರಾಕಿಗಳು   ಮದ್ಯ ಸೇವನೆ ಮಾಡುತ್ತಿದ್ದು ದಾಳಿ ಮಾಡಲು ಹೋದಾಗ್ಗ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಸ್ಥಳದಲ್ಲಿ ಇದ್ದ ಜನರು ಓಡಿ ಹೋಗಿರುತ್ತಾರೆ, ಸ್ಥಳದಲ್ಲಿ 02 ಪ್ಲಾಸ್ಟಿಕ್ ಗ್ಲಾಸ್ ಮತ್ತು ಮದ್ಯ ತುಂಬಿದ್ದ   180 ಎಂ .ಎಲ್ ನ 07 ಓಲ್ಡ್ ಟವರಿನ್ ಟೆಟ್ರಾ ಪ್ಯಾಕೆಟ್  ಹಾಗೂ 90 ಎಂ.ಎಲ್ ನ 14 ಬೆಂಗಳೂರು ಮಾಲ್ಟ್ ವಿಸ್ಕಿ ಟೆಟ್ರಾ ಪ್ಯಾಕಟ್ ಬಿದ್ದಿದ್ದು ಸದರಿಯವುಗಳನ್ನು ಪಂಚನಾಮ ಮುಖೇನ ಮಾನತ್ತು ಪಡಿಸಿಕೊಂಡು ಈ ಸ್ಥಳದಲ್ಲಿ ಕುಡಿಯಲು ಸ್ಥಳ ಅವಕಾಶ ಮಂಜುನಾಥ ಬಿನ್ ಸಕ್ರಪ್ಪ, 37 ವರ್ಷ, ಲಂಬಾಣೀ ಜನಾಂಗ. ಅಂಗಡಿ ವ್ಯಾಪಾರ ಪೋತಗಾನಹಳ್ಳಿ ,ಪಾವಗಡ ತಾ|| ರವರನ್ನು ವಶಕ್ಕೆ ಪಡೆದು ಠಾಣೆಗೆ ಹಾಜರಾಗಿ ಮುಂದಿನ ಕ್ರಮಕ್ಕಾಗಿ ನೀಡಿದ ಪಂಚನಾಮೆ ವರದಿ ಪಡೆದು ಆಸಾಮಿ ವಿರುದ್ದ ಪ್ರಕರಣ ದಾಖಲಿಸಿದೆ

ಅಮೃತೂರು ಪೊಲೀಸ್‌ ಠಾಣಾ ಮೊನಂ-73/2018, ಕಲಂ-279, 304(ಎ) ಐಪಿಸಿ 134(ಎ&ಬಿ), 187 ಐಎಂವಿ ಆಕ್ಟ್

ದಿನಾಂಕ: 14-03-2018 ರಂದು ರಾತ್ರಿ 9-40 ಗಂಟೆಯಲ್ಲಿ ಪಿರ್ಯಾದಿ ರಾಮಲಿಂಗಯ್ಯ.ಬಿ.ಆರ್ ಬಿನ್ ರಾಮಚಂದ್ರಯ್ಯ, 59 ವರ್ಷ, ಪರಿಶಿಷ್ಟ ಜಾತಿ(ಎ.ಕೆ), ಸೆಕ್ಯೂರಿಟಿ ಕೆಲಸ, ದೀಪಕ್ ಬ್ಯಾಂಕ್ ಬೆಂಗಳೂರು. ವಾಸ: ಡೋರ್ ನಂಬರ್-20, 5ನೇ ಮುಖ್ಯ ರಸ್ತೆ, ಆರ್.ಜೆ ಕಾಲೋನಿ, ಲಕ್ಷ್ಮಿನಾರಾಯಣಪುರ, ಬೆಂಗಳೂರು-560021 ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ದಿನಾಂಕ: 14-03-2018 ರಂದು ಮದ್ಯಾಹ್ನ 2-00 ಗಂಟೆಗೆ ಬೆಂಗಳೂರನ್ನು ಬಿಟ್ಟು ಕುಣಿಗಲ್ ತಾಲೋಕ್, ಕಂಚಗಾಲಪುರ ಗ್ರಾಮದಲ್ಲಿ ನಮ್ಮ ಸೋದರ ಮಾವನವರಾದ ಸಟ್ಟಪ್ಪ @ ತಿಮ್ಮಯ್ಯ ರವರ ಸಾವಿಗೆ ಸಂಜೆ 5-00 ಗಂಟೆಗೆ ಬಂದಿದ್ದು, ನಾವು ಗ್ರಾಮದಲ್ಲಿರುವಾಗ್ಗೆ ಸಂಜೆ ಸುಮಾರು 6-15 ಗಂಟೆ ಸಮಯದಲ್ಲಿ ನನ್ನ ಮೊಬೈಲ್ ನಂಬರ್ ಗೆ ಯಾರೋ ಕರೆ ಮಾಡಿ ನಿಮ್ಮ ಮೊಬೈಲ್ ನಂಬರ್ ಅನ್ನು ಹೊಂದಿರುವ ಒಬ್ಬ ಹುಡುಗ ಸಿದ್ದಾಪುರ ಮಸೀದಿ ನೇರದಲ್ಲಿ ಕೆಎ-05, ಹೆಚ್.ಹೆಚ್-5925 ನೇ ಪಲ್ಸರ್ ಬೈಕಿನಲ್ಲಿ ಹೋಗುತ್ತಿದ್ದಾಗ ಬಿಳಿ ಬಣ್ಣದ ಸ್ವಿಪ್ಟ್ ಡಿಜೈರ್ ಕಾರಿನ ಚಾಲಕ ಅಪಘಾತಪಡಿಸಿ ಆಕ್ಸಿಡೆಂಟ್ ಮಾಡಿ ಕಾರನ್ನು ನಿಲ್ಲಿಸದೇ ಹೊರಟು ಹೋಗಿರುತ್ತಾನೆ ಎಂದು ತಿಳಿಸಿದರು. ಕೂಡಲೇ ನಾನು ನಮ್ಮ ಸಂಬಂದಿ ಕಂಚಗಾಲಪುರದ ವಾಸಿ ಹರೀಶ್ ರವರೊಂದಿಗೆ ಬಂದು ವಿಚಾರ ಮಾಡಲಾಗಿ ಅಲ್ಲಿ ಬಿದ್ದಿದ್ದ ಬೈಕ್ ನನ್ನ ಮಗನ ಬೈಕಾಗಿತ್ತು. ನನ್ನ ಮಗನನ್ನು 108 ಅಂಬ್ಯುಲೆನ್ಸ್ ನಲ್ಲಿ ಆದಿಚುಂಚನಗಿರಿ ಆಸ್ಪತ್ರೆಗೆ ಸಾಗಿಸಿದ್ದರು. ನಂತರ ನಾನು ಹರೀಶ್ ರವರೊಂದಿಗೆ ಆದಿಚುಂಚನಗಿರಿ ಆಸ್ಪತ್ರೆಗೆ ಹೋಗುವಷ್ಟರಲ್ಲಿ ನನ್ನ ಮಗ ಅಪಘಾತದಿಂದಾದ ತೀವ್ರಗಾಯಗಳಿಂದಾಗಿ ಮೃತಪಟ್ಟಿದ್ದನು. ನಂತರ ನಾನು ಆಕ್ಸಿಡೆಂಟ್ ನ ಬಗ್ಗೆ ವಿಚಾರ ಮಾಡಲಾಗಿ ನನ್ನ ಮಗನು ಬೆಂಗಳೂರಿನಿಂದ ನಮ್ಮ ಮಾವನವರ ಶವ ಸಂಸ್ಕಾರಕ್ಕಾಗಿ ಬೆಂಗಳೂರಿನಿಂದ ಕಂಚಗಾಲಪುರಕ್ಕೆ ಬರಲು ಎನ್.ಹೆಚ್-75 ರಸ್ತೆಯ ಸಿದ್ದಾಪುರ ಮಸೀದಿ ನೇರದಲ್ಲಿ ಬರುತ್ತಿರುವಾಗ್ಗೆ ಸಂಜೆ ಸುಮಾರು 5-45 ಗಂಟೆ ಸಮಯದಲ್ಲಿ ನನ್ನ ಮಗನ ಬೈಕ್ ನ ಹಿಂದೆ ಬರುತ್ತಿದ್ದ ಯಾವುದೋ ಒಂದು ಬಿಳಿ ಬಣ್ಣದ ಹಳದಿ ಬಣ್ಣದ ಬೋರ್ಡ್ ಹೊಂದಿದ್ದ ಸ್ವಿಪ್ಟ್ ಡಿಜೈರ್ ಕಾರಿನ ಚಾಲಕ ಹಿಂದಿನಿಂದ ಅತಿವೇಗವಾಗಿ  ತನ್ನ ಕಾರನ್ನು ಚಾಲನೆ ಮಾಡಿಕೊಂಡು ಬಂದು ನನ್ನ ಮಗನು ಚಲಾಯಿಸುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆಸಿ ಕಾರನ್ನು ನಿಲ್ಲಿಸದೇ ಹೊರಟು ಹೋಗಿರುತ್ತಾನೆಂದು ತಿಳಿಸಿದರು. ನಂತರ ನಾನು ಆಸ್ಪತ್ರೆಯ ಬಳಿಗೆ ತೆರಳಿ ವಿಚಾರಿಸಿದಾಗ ರಾಕೇಶನನ್ನು ಚಿಕಿತ್ಸೆಗಾಗಿ 108 ಅಂಬ್ಯುಲೆನ್ಸ್ ನಲ್ಲಿ ಆದಿಚುಂಚನಗಿರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸುತ್ತಿರುವಾಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಸಂಜೆ ಸುಮಾರು  6-45 ಗಂಟೆಗೆ ಸತ್ತು ಹೋದನೆಂದು ತಿಳಿಸಿದರು. ನನ್ನ ಮಗನು ಚಲಾಯಿಸುತ್ತಿದ್ದ ಬೈಕ್ ಗೆ ವೇಗವಾಗಿ ಬಂದು ಹಿಂದಿನಿಂದ ಡಿಕ್ಕಿ ಹೊಡೆಸಿ ಅಪಘಾತಪಡಿಸಿ ನನ್ನ ಮಗನ ಸಾವಿಗೆ ಕಾರಣನಾಗಿರುವ ಕಾರಿನ ಚಾಲಕನ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕೋರುತ್ತೇನೆ. ಎಂದು ಇದ್ದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿರುತ್ತೆ.

ತಿಪಟೂರು ಗ್ರಾಮಾಂತರ ಪೊಲೀಸ್  ಠಾಣಾ ಮೊ.ನಂ 14/2018 ಕಲಂ 323,324,504 ರೆ/ವಿ 149 ಐ.ಪಿ.ಸಿ

ದಿನಾಂಕ:-14/03/2018 ರಂದು ಶ್ರೀಮತಿ ಕವಿತ ಕೋಂ ಧನಂಜಯ್ಯ, 32 ವರ್ಷ, ಗೃಹಿಣಿ, ಭೋವಿ ಜನಾಂಗ, ಬಂಡೆಗೇಟ್ , ಕಸಬಾ ಹೋಬಳಿ, ತಿಪಟೂರು ತಾಲ್ಲೂಕ್ ರವರು ಸಂಜೆ 06-15 ಗಂಟೆಯಿಂದ 06-45 ಪಿ.ಎಂ ಗಂಟೆವರೆಗೆ ತಿಪಟೂರು ಸರ್ಕಾರಿ ಆಸ್ಪತ್ರೆಯಲ್ಲಿ ನೀಡಿದ ಹೇಳಿಕೆ ಅಂಶವೇನೆಂದರೆ, ಈ ದಿನ ದಿನಾಂಕ:-14/03/2018 ರಂದು ಸಂಜೆ 05-00 ಗಂಟೆ ಸಮಯದಲ್ಲಿ ನನ್ನ ಗುಡಿಸಲು ಮನೆ ಮುಂದೆ ಇರುವಾಗ ಈ ಗುಡಿಸಲು ಇರುವ ಜಾಗದ ವಿಚಾರಕ್ಕೆ ನಮ್ಮ ಗ್ರಾಮದ ರಾಮಕೃಷ್ಣ ಬಿನ್ ಲೇಟ್ ವೆಂಕಟಯ್ಯ, ನಾಗರಾಜು ಬಿನ್ ವೆಂಕಟಯ್ಯ, ರವೀಶ ಬಿನ್ ಯಲ್ಲಪ್ಪ, ಜಯಮ್ಮ ಕೋಂ ಲೇಟ್ ಯಲ್ಲಪ್ಪ, ಹೇಮಾವತಿ ಕೋಂ ರಾಮಕೃಷ್ಣ, ಗೀತಾ ಕೋಂ ರಮೇಶ, ಲಕ್ಷ್ಮಮ್ಮ ಕೋಂ ನಾಗರಾಜ, ರವರು ಬಂದು ನಮ್ಮೊಂದಿಗೆ ಜಗಳಮಾಡಿ  ನೀನು ಹಾಕಿಕೊಂಡಿರುವ ಗುಡಿಸಲು ಜಾಗ ನಮಗೆ ಸೇರಬೇಕಾಗಿದ್ದು, ಇಲ್ಲಿಂದ  ಜಾಗ ಖಾಲಿ ಮಾಡು ಎಂತಾ ಬಾಯಿಗೆ ಬಂದಂತೆ  ಎಲ್ಲರೂ ಸೂಳೆ ಮುಂಡೆ ಬೋಳಿಮುಂಡೆ ಎಂತಾ ಅವಾಚ್ಯ ಶಬ್ದಗಳಿಂದ  ಬೈಯ್ಯುತ್ತಿರುವಾಗ ರಾಮಕೃಷ್ಣರವರು ಕುಡುಗೋಲಿನಿಂದ ನನ್ನ ಬಲ ಕೈ ರಟ್ಟೆಗೆ ಹೊಡೆದು ರಕ್ತಗಾಯ ಪಡಿಸಿರುತ್ತಾನೆ, ಜಯಮ್ಮರವರು ಕೈಯಿಂದ ತಲೆಗೆ ಹೊಡೆದರು, ಹೇಮಾವತಿ ಮತ್ತು ಗೀತಾ ರವರು ಕೈಯಿಂದ ಎದೆಗೆ ಗುದ್ದಿರುತ್ತಾರೆ,  ಈ ಸಮಯಕ್ಕೆ ದೊಡ್ಡಮ್ಮ ಕೋಂ ನಾಗರಾಜು, ಮಂಜುನಾಥ ಬಿನ್ ತಿಮ್ಮಯ್ಯ  ಹಾಗೂ ಅಜ್ಜಯ್ಯ ರವರು ಬಂದು ಜಗಳ ಬಿಡಿಸಿರುತ್ತಾರೆ, ನಂತರ ನನ್ನನ್ನು ತಿಪಟೂರು ಸರ್ಕಾರಿ ಆಸ್ಪತ್ರೆಗೆ ಅಜ್ಜಯ್ಯರವರು ಚಿಕಿತ್ಸೆಗಾಗಿ ದಾಖಲಿಸಿರುತ್ತಾರೆ,  ಆದ್ದರಿಂದ ನನ್ನ ಮೇಲೆ ಹೊಡೆದು ರಕ್ತಗಾಯಪಡಿಸಿ ಅವಾಚ್ಯಶಬ್ದಗಳಿಂದ ಬೈದ ಮೇಲ್ಕಂಡವರ ಮೇಲೆ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ಆಸ್ಪತ್ರೆಯಲ್ಲಿ ನೀಡಿದ ಹೇಳಿಕೆ ಪಡೆದು  ಪ್ರಕರಣ ದಾಖಲಿಸಿರುತ್ತೆ

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 78 guests online
Content View Hits : 302226