lowborn ಅಪರಾಧ ಘಟನೆಗಳು 09-03-18 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ: 21-06-2018. ಸುಲಿಗೆಕೋರರ ಬಂಧನ: ದಿನಾಂಕ:18-06-2018 ರಂದು... >>   ಪೊಲೀಸ್ ಪ್ರಕಟಣೆ ತುಮಕೂರು ಜಿಲ್ಲಾ ಪೊಲೀಸ್ ಪ್ರಕಟಣೆ   ಆತ್ಮೀಯ ನಾಗರೀಕರಲ್ಲಿ... >> ತುಮಕೂರು ಜಿಲ್ಲೆಯಲ್ಲಿ 2018 ನೇ ಮೇ ಮಾಹೆಯಲ್ಲಿ ಸಂಭವಿಸಿದ ರಸ್ತೆ ಅಪಘಾತಗಳ ಅಂಕಿ ಅಂಶಗಳ... >> ಪತ್ರಿಕಾ ಪ್ರಕಟಣೆ ದಿ 19.04.18 ಪೊಲೀಸ್ ಇಲಾಖೆಯು ಈ ಮೂಲಕ ಸಾರ್ವಜನಿಕರಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ: 15-05-2018 ರಂದು ತುಮಕೂರು ನಗರದ ವಿಶ್ವವಿದ್ಯಾನಿಲಯ ಕಲಾ... >>     ಪತ್ರಿಕಾ ಪ್ರಕಟಣೆ. ದಿನಾಂಕ: 10-05-2018 8 ಲಕ್ಷ ಬೆಲೆ ಬಾಳುವ ಮೊಬೈಲ್ ಮತ್ತು  ವಾಹನ ಕಳ್ಳರ... >> ಪತ್ರಿಕಾ ಪ್ರಕರಣೆ, ದಿನಾಂಕ: 07-05-18 ವಾರಸುದಾರರಿಲ್ಲದ 2,98,01,000/- ರೂ  ಹಣ ಪತ್ತೆ     ದಿನಾಂಕ:... >> ಪತ್ರಿಕಾ ಪ್ರಕಟಣೆ:- -:ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿಯ ಬಂಧನ:- ದಿನಾಂಕ :... >> ಪತ್ರಿಕಾ ಪ್ರಕಟಣೆ ದಿಃ25-04-2018. ದಿನಾಂಕ:24-04-2018 ರ ರಾತ್ರಿ 3 ಜನ ಅನುಮಾನಸ್ಪದ ವ್ಯಕ್ತಿಗಳು... >> ಪತ್ರಿಕಾ ಪ್ರಕಟಣೆ ದಿನಾಂಕ: 21-04-2018. ಕೊಲೆ ಆರೋಪಿಯ ಬಂಧನ:   ಹೆಬ್ಬೂರು ಪೊಲೀಸ್ ಠಾಣಾ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ಅಪರಾಧ ಘಟನೆಗಳು 09-03-18

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆಯ 12/18 ಕಲಂ 279, 304(ಎ) ಐಪಿಸಿ

ದಿನಾಂಕ:08-03-18 ರಂದು 04-15 ಎ ಎಂಗೆ ಈ ಕೇಸಿನ  ಪಿರ್ಯಾದಿ ವಿವೇಕಾನಂದ ಸ್ವಾಮಿ ಆರ ವಿ ಬಿನ್ ವಿರಾಪ್ಪಸ್ವಾಮಿ, 26 ವರ್ಷ, ಲಿಂಗಾಯ್ತರು, ಜಿರಾಯ್ತಿ,  ರಾಮಚಂದ್ರಪುರ,ಕಸಬಾ ಹೋಬಳಿ, ತಿಪಟೂರು ತಾಲ್ಲೋಕು ರವರು ಠಾಣೆಗೆ ಹಾಜರಾಗಿ ನೀಡಿದ  ದೂರಿನ ಅಂಶವೇನೆಂದರೆ ನಾನು ರಾತ್ರಿ ಮನೆಯಲ್ಲಿ ಮಲಗಿರುವಾಗ ನಮ್ಮ ಗ್ರಾಮದ ವಿಶ್ವನಾಥರವರು  ರಾತ್ರಿ 1 -30 ಗಂಟೆ ಸಮಯದಲ್ಲಿ ನನಗೆ ಫೋನ್ ಮಾಡಿ ವಿಚಾರ ತಿಳಿಸಿದೇನೆಂದರೆ, ನಿನ್ನ ತಮ್ಮನಾದ ಮಲ್ಲಿಕಾರ್ಜುನಯ್ಯ ಮತ್ತು ನಾನು ತಿಪಟೂರು ಗುರುಕುಲ ಕಲ್ಯಾಣ ಮಂಟಪದಲ್ಲಿ ಸಂಬಂದಿಕರ ಮದುವೆ ಕಾರ್ಯ ಮುಗಿಸಿಕೊಂಡು ಮಾದಿಹಳ್ಳಿಯಲ್ಲಿರುವ ಸಂಬಂದಿಕರ ಮನೆಗೆ ಹೋಗಲು ನಾವುಗಳು ಬೇರೆ ಬೇರೆ ಬೈಕ್ ನಲ್ಲಿ ದಿ:08/03/2018 ರಂದು ರಾತ್ರಿ 01-15 ರ ಸಮಯದಲ್ಲಿ ಎನ್ ಹೆಚ್ 206 ಮಾದಿಹಳ್ಳಿ ಹತ್ತಿರ ರಸ್ತೆಯ ಎಡಭಾಗದಲ್ಲಿ ಹೋಗುತ್ತಿದ್ದೆವು ನನ್ನ ಮುಂದೆ ಮಲ್ಲಿಕಾರ್ಜುನಯ್ಯರವರು ಕೆಎ-44, ಇ-7026 ನೇ ಬಜಾಜ್ ಡಿಸ್ಕವರ್ ಬೈಕ್ ನಲ್ಲಿ ರಸ್ತೆಯ ಎಡ ಭಾಗದಲ್ಲಿ ಮುಂದೆ ಹೋಗುತ್ತಿದ್ದನು. ಎದುರಿಗೆ ಅಂದರೆ ಅರಸೀಕೆರೆ ಕಡೆಯಿಂದ ಕೆಎ-42, ಎಫ್-1829 ನೇ ಕೆ ಎಸ್ ಆರ್ ಟಿ ಸಿ ಬಸ್ ನ ಚಾಲಕ ಬಸ್ಸನ್ನು ಅತೀವೇಗ ಮತ್ತು ಅಜಾಗರುಕತೆಯಿಂದ ಓಡಿಸಿಕೊಂಡು ಬಂದು ಮಲ್ಲಿಕಾರ್ಜುನಯ್ಯ ಚಾಲನೆ ಮಾಡಿಕೊಂಡು ಹೋಗುತ್ತಿದ್ದ ಕೆಎ-44, ಇ-7026 ನೇ ಬಜಾಜ್ ಡಿಸ್ಕವರ್ ದ್ದಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ. .ಬೈಕ್ ಸಮೇತ ಮಲ್ಲಿಕಾರ್ಜುನಯ್ಯ ಕೆಳಕ್ಕೆ ಬಿದ್ದನು.ಅವನಿಗೆ ತಲೆಗೆ ಪೆಟ್ಟು ಬಿದ್ದು ರಕ್ತಸ್ರಾವವಾಗಿದ್ದು,ತಕ್ಷಣ ನಾನು ಮತ್ತು ಬಸ್ ನಲ್ಲಿದ್ದ  ಪ್ರಯಾಣಿಕರು 108 ಆಂಬುಲೆನ್ಸ್ ಗೆ ಕರೆ ಮಾಡಿ ಸದರಿ ಸ್ಥಳದಿಂದ ಮಲ್ಲಿಕಾರ್ಜುನಯ್ಯ ನನ್ನು 108 ಆಂಬುಲೆನ್ಸ್ ನಲ್ಲಿ ಚಿಕಿತ್ಸೆಗಾಗಿ ತಿಪಟೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಮಲ್ಲಿಕಾರ್ಜುನಯ್ಯ ಮೃತಪಟ್ಟಿರುತ್ತಾನೆ. ಎಂದು  ನನಗೆ ತಿಳಿಸಿದ್ದರಿಂದ ತಕ್ಷಣ ನಾನು ಆಸ್ಪತ್ರೆಗೆ ಬಂದು ನೋಡಲಾಗಿ ನನ್ನ ತಮ್ಮನಾದ ಮಲ್ಲಿಕಾರ್ಜುನಯ್ಯ ಮೃತಪಟ್ಟಿದ್ದು ಇವನ ಸಾವಿಗೆ ಕೆಎ-42, ಎಫ್-1829  ನೇ ಕೆ ಎಸ್ ಆರ್ ಟಿ ಸಿ ಬಸ್ ಚಾಲಕನ ಅತೀವೇಗ ಮತ್ತು ಅಜಾಗರರೂಕತೆ ಚಾಲನೆ ಕಾರಣವಾಗಿದ್ದು, ಆದ್ದರಿಂದ ಈ ಮೇಲ್ಕಂಡ ಕೆ ಎಸ್ ಆರ್ ಟಿ ಸಿ ಬಸ್ ಚಾಲಕನ ಮೇಲೆ ಕಾನೂನು ರೀತಿಯ ಕ್ರಮ ಕೈಗೊಂಡು ನಮ್ಮಗೆ ನ್ಯಾಯದೊರಕಿಸಿಕೊಡ ಬೇಕಾಗಿ ಕೋರುತ್ತೇನೆ ಎಂತಾ ದೂರು ನೀಡಿದ್ದನ್ನು  ಪಡೆದು ದಾಖಲಿಸಿರುತ್ತೆ.

 

ಹುಲಿಯೂರುದುರ್ಗ ಪೊಲೀಸ್‌ ಠಾಣಾ  ಮೊ.ನಂ. 76/2018, ಕಲಂ: 279, 337 ಐ.ಪಿ.ಸಿ

ದಿನಾಂಕ: 08/03/2018 ರಂದು ಸಂಜೆ 06.15 ಗಂಟೆಗೆ ಕೃಷ್ಣಪ್ಪ ಆರ್ ಬಿನ್ ರಾಜಣ್ಣ, ಸುಮಾರು 36 ವರ್ಷ, ವಕ್ಕಲಿಗರು, ಜಿರಾಯ್ತಿ, ಹೆಗ್ಗಡತಿಹಳ್ಳಿ, ಕಸಬಾ ಹೋಬಳಿ, ಕುಣಿಗಲ್ ತಾ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ ದಿನಾಂಕ: 05-03-2018 ರಂದು ಪಿರ್ಯಾದಿ ಮತ್ತು ಅವರ ಗ್ರಾಮದ ವಾಸಿಯಾದ ರಾಮಕೃಷ್ಣ ಬಿನ್ ಭೋಜಯ್ಯ, 45 ವರ್ಷ, ಈಡಿಗರು, ಕಾರ್ಪೆಂಟರ್, ಇಬ್ಬರೂ ಭಾನುವಾರ ರಾತ್ರಿ ಸಂತೆಮಾವತ್ತೂರು ಬಸವಣ್ಣನ ದೇವಸ್ಥಾನದ ಜಾತ್ರೆಗೆ ಹೋಗಿದ್ದು ಜಾತ್ರೆ ಮುಗಿಸಿಕೊಂಡು ವಾಪಸ್ ಊರಿಗೆ ಹೋಗಲೆಂದು ಬೆಳಗಿನ ಜಾವ 04-00 ಗಂಟೆ ಸಮಯದಲ್ಲಿ ಬಸವಣ್ಣನ ದೇವಸ್ಥಾನದ ಬಳಿ ಸಂತೆಮಾವತ್ತೂರು-ಅಮೃತೂರು ಮುಖ್ಯ ರಸ್ತೆಯ ಎಡಬದಿಯಲ್ಲಿ ನಡದುಕೊಂಡು ಹೋಗುತ್ತಿರಬೇಕಾದರೆ ಅದೇ ಸಮಯಕ್ಕೆ ಸಂತೆಮಾವತ್ತೂರು ಕಡೆಯಿಂದ ಅಮೃತೂರು ಕಡೆಗೆ ಹೋಗಲು ಬಂದ ಒಬ್ಬ ಬೈಕ್ ಚಾಲಕ ತನ್ನ ಬೈಕನ್ನು ಅತಿವೇಗ & ಅಜಾಗರೂಕತೆಯಿಂದ ತನ್ನ ವಾಹನವನ್ನು ಚಾಲನೆ ಮಾಡಿಕೊಂಡು ಬಂದು ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ರಾಮಕೃಷ್ಣ ರವರಿಗೆ ಹಿಂದಿನಿಂದ ಪಡಿಸಿ ಅಪಘಾತಪಡಿಸಿದ್ದು, ರಾಮಕೃಷ್ಣ ರವರಿಗೆ ಮೈ ಕೈ ಕಾಲುಗಳಿಗೆ ಪೆಟ್ಟು ಬಿದ್ದಿರುತ್ತೆ. ಅಪಘಾತಪಡಿಸಿದ ಬೈಕ್ ನಂಬರ್ ಕೆಎ44-ಹೆಚ್-5499 ಆಗಿರುತ್ತೆ. ಹಾಗೂ ವಾಹನದ ಚಾಲಕನ ಹೆಸರು ನಾಗರಾಜು ಬಿನ್ ಜವರೇಗೌಡ, ದಡದಹಳ್ಳಿ, ಚನ್ನರಾಯಪಟ್ಟಣ ತಾ. ಹಾಸನ ಜಿಲ್ಲೆ ಎಂತ ತಿಳಿದಿರುತ್ತೆ.  ಪಿರ್ಯಾದಿಯು ಗಾಯಾಳು ರಾಮಕೃಷ್ಣ ನನ್ನು ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರು ಸಪ್ತಗಿರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿ ಅಲ್ಲಿಯೇ ಇದ್ದು ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು ಸದರಿ ಅಪಘಾತಪಡಿಸಿದ ಕೆಎ44-ಹೆಚ್-5499 ನೇ ವಾಹನದ ಚಾಲಕ ನಾಗರಾಜು ರವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು, ಅಪಘಾತಪಡಿಸಿದ  ಕೆಎ44-ಹೆಚ್-5499 ನೇ ವಾಹನವು ಬಸವಣ್ಣನ ದೇವಸ್ಥಾನದ ಆವರಣದಲ್ಲಿ ನಿಂತಿರುತ್ತೆಂತ ಇತ್ಯಾದಿಯಾಗಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿರುತ್ತೆ.

ಹುಲಿಯೂರುದುರ್ಗ ಪೊಲೀಸ್‌ ಠಾಣಾ  ಮೊ.ನಂ. 77/2018, ಕಲಂ: 323 324 504 R/W 34 ಐ.ಪಿ.ಸಿ

ಈ ಕೇಸಿನ ಸಾರಾಂಶವೇನೆಂದರೆ ದಿನಾಂಕ: 08/03/2018 ರಂದು ಸಂಜೆ 07.00 ಗಂಟೆಗೆ ವೆಂಕಟಾಚಲಯ್ಯ ಬಿನ್ ಭದ್ರಯ್ಯ, ನೀಲಸಂದ್ರ, ಹುಲಿಯೂರುದುರ್ಗ ಹೋಬಳಿ, ಕುಣಿಗಲ್ ತಾ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ ದಿನಾಂಕ: 06.03.2018 ರಂದು ರಾತ್ರಿ 09-30 ಗಂಟೆ ಸಮಯದಲ್ಲಿ ಪಿರ್ಯಾದಿಯ ಗ್ರಾಮದವರಾದ ಜಯಕುಮಾರ ಬಿನ್ ಶಿವಣ್ಣ , ಈತನ ತಮ್ಮನಾದ ಆನಂದ ರವರು ಅವರ ಜಮೀನಿಗೆ ಪಿರ್ಯಾದಿರವರ ಮೇಕೆಗಳು ಹೋಗಿದ್ದವೆಂತ ಪಿರ್ಯಾದಿಯವರ ಮನೆಯ ಬಳಿಗೆ ಬಂದು ಏಕಾಏಕಿ ಪಿರ್ಯಾದಿಯ ತಾಯಿಯನ್ನು ಬೈಯ್ಯುತ್ತಿದ್ದು ಆಗ ಪಿರ್ಯಾದಿಯು ಅವರನ್ನು ಕುರಿತು ಏಕೆ ಈ ರೀತಿ ನಮ್ಮ ತಾಯಿಯನ್ನು ಬೈಯ್ಯುತ್ತಿದ್ದೀರಾ ಕೇಳಿದಾಗ ಪಿರ್ಯಾದಿಗೂ ಸಹ ಬಾಯಿಗೆ ಬಂದಂತೆ ಬೈದು ಕೈಗಳಿಂದ ಹಾಗೂ ದೊಣ್ಣೆಗಳಿಂದ ಪಿರ್ಯಾದಿಯ ಎಡಮಂಡಿಗೆ, ಬಲಗೈ ಮುಂಗೈಗೆ, ಹೊಡೆದು ನೋವುಂಟುಮಾಡಿರುತ್ತಾರೆ. ಅಷ್ಟರಲ್ಲಿ ಗಲಾಟೆ ಶಬ್ದ ಕೇಳಿ ಪಿರ್ಯಾದಿ ಗ್ರಾಮದ ಸುರೇಶ ಬಿನ್ ವೆಂಕಟಾಚಲಯ್ಯ ಹಾಗೂ ನಾಗರಾಜು ಬಿನ್ ದಾಸಯ್ಯ, ಸತೀಶ, ಸುರೇಶ ಎಂಬುವವರು ಸೇರಿಕೊಂಡು ಗಲಾಟೆಯನ್ನು ಬಿಡಿಸಿದರು. ನಂತರ ಪಿರ್ಯಾದಿಯು ಹುಲಿಯೂರುದುರ್ಗಕ್ಕೆ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದುಕೊಂಡು ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡಿರುತ್ತಾರೆ. ಆದ್ದರಿಂದ ಮೇಲ್ಕಂಡವರ ವಿರುದ್ದ ಸೂಕ್ತ ಕ್ರಮ ಜರುಗಿಸಬೇಕೆಂದು  ಇತ್ಯಾದಿಯಾಗಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿರುತ್ತೆ.

ಚೇಳೂರು  ಪೊಲೀಸ್  ಠಾಣಾ  ಮೊ. ನಂ 62/2018  ಕಲಂ 323.324.448.504.  ರೆ/ವಿ 34  ಐ.ಪಿ.ಸಿ

ದಿನಾಂಕ;08/03/2018 ರಂದು  ಬೆಳಗ್ಗೆ 10-00 ಗಂಟೆ  ಸಮಯದಲ್ಲಿ ನಮ್ಮ  ಠಾಣಾ ಸತ್ರ ನ್ಯಾಲಯದ ಹೆಚ್.ಸಿ- 319 ಮಂಜುನಾಥರವರು  ತುಮಕೂರು  ಎಂ.ಸಿ. ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆಯುತ್ತಿರುವ  ಗಾಯಾಳು ಕುಮಾರಸ್ವಾಮಿ ರವರ  ಹೇಳಿಕೆ  ಪಡೆದು ತಂದು  ಹಾಜರ್  ಪಡಿಸಿದ  ಹೇಳಿಕೆ   ಅಂಶವೇನಂದರೆ,  ನನ್ನ  ಸ್ವಂತ  ಗ್ರಾಮ ಗಳಿಗೆಕೆರೆ  ಗ್ರಾಮವಾಗಿದ್ದು,  ನಾನು ಹಾಗಲವಾಡಿ  ಗ್ರಾಮದ ಕೊಲ್ಲಾಪುರದಮ್ಮ ದೇವಸ್ಥಾನದ ಹತ್ತಿರ ನಾನು ಕ್ಷೌರಿಕ ಅಂಗಡಿಯನ್ನು  ಇಟ್ಟುಕೊಂಡಿರುತ್ತೇನೆ. ನನ್ನ ಪಕ್ಕದಲ್ಲಿಯೇ  ರವಿ  ಕುಮಾರ್  ಮತ್ತು  ಪ್ರದೀಪ್ @ ಪುಟ್ಟ   ಎಂಬುವರು  ಅಂಗಡಿಯನ್ನು  ಇಟ್ಟುಕೊಂಡಿದ್ದು,  ನನಗೆ  ತುಂಬಾ ಚೆನ್ನಾಗಿ  ವ್ಯಾಪಾರವಾಗುತ್ತಿದ್ದು,  ಇದನ್ನು  ನೋಡಿ  ಸಹಿಸದೆ  ರವಿ ಕುಮಾರ್  ಮತ್ತು  ಪ್ರದೀಪ್  @  ಪುಟ್ಟ ಎಂಬುವರು  ನನ್ನ  ಮೇಲೆ  ಹಾಗಾಗ್ಗೆ  ಗಲಾಟೆ  ಮಾಡುತ್ತಿದ್ದರು.  ದಿನಾಂಕ  07/03/2018 ರಂದು  ಸಂಜೆ 5-00   ಗಂಟೆ  ಸಮಯದಲ್ಲಿ  ನಾನು  ನನ್ನ ಅಂಗಡಿಯಲ್ಲಿ  ಕೆಲಸ ಮಾಡುತ್ತಿದ್ದು,  ರವಿ  ಕುಮಾರ  ನನ್ನಅಂಗಡಿಗೆ  ಏಕಾ  ಏಕೀ ನುಗ್ಗಿ  ಈ ಸೂಳೆ   ಮಗನಿಂದ ನಮ್ಮ  ಅಂಗಡಿಗೆ  ವ್ಯಾಪಾರ   ಆಗುವುದಿಲ್ಲ  ಎಂದು  ಅಲ್ಲೇ ಬಿದ್ದಿದ್ದ   ರಿಪೀಸ್  ಅನ್ನು  ತೆಗೆದುಕೊಂಡು  ಗ್ಲಾಸ್ ಗಳನ್ನು  ಹೊಡೆದು  ಹಾಕಿ  ನಾನು ಅಂಗಡಿಯಿಂದ ಹೊರಗೆ  ಬಂದೆನು.   ತಕ್ಷಣ ಪ್ರದೀಪ್  @  ಪುಟ್ಟ  ಮತ್ತು  ರವಿ ಕುಮಾರ್  ನನ್ನನ್ನು  ಹಿಡಿದುಕೊಂಡು  ಕೈಗಳಿಂದ  ಮತ್ತು  ಕಾಲುಗಳಿಂದ  ತುಳಿದರು.  ನಂತರ   ರವಿ  ಕುಮಾರ  ತನ್ನ  ಕೈಯಲ್ಲಿ  ಇದ್ದ  ರಿಪೀಸ್ ನಿಂದ  ನನ್ನನ್ನು  ಹೊಡೆಯಲು  ಬಂದಾಗ  ನಾನು  ನನ್ನ  ಬಲ  ಕೈಯನ್ನು  ಅಡ್ಡಕೊಟ್ಟಾಗ  ನನ್ನ ಕೈ ಮುರಿದು  ರಕ್ತ ಗಾಯವಾಯಿತ್ತು.  ನಾನು ತಕ್ಷಣ  ಕೆಳಗೆ  ಬಿದ್ದೆನು.  ನಂತರ   ಅಲ್ಲೇ  ಇದ್ದ  ಧರಣೇಶ್  ಅಲ್ಲೇ ಬಿದ್ದಿದ  ಕಲ್ಲನ್ನು  ತೆಗೆದುಕೊಂಡು  ನನಗೆ  ಹಾಕಲು  ಬಂದನು  ಆಗ ನನ್ನನ್ನು  ಹರೀಶ್   ಬಿನ್  ಮಹದೇವಯ್ಯ  ಎಂಬುವರು  ನನ್ನ  ಬಿಡಿಸಿಕೊಂಡು  ರವಿ ಕುಮಾರ್  ಮತ್ತು  ಪ್ರದೀಪ್  @  ಪುಟ್ಟ ಮತ್ತು ಧರಣೇಶ ರವರನ್ನು  ಕಳುಹಿಸಿದರು.  ನಂತರ  ಹರೀಶರವರು  ಯಾವುದೋ  ಕಾರಿನಲ್ಲಿ  ನಾಗರಾಜು  ಬಿನ್  ಲಕ್ಷಯ್ಯರವರು  ತುಮಕೂರು  ಎಂ.ಸಿ.  ಮೊಳೆ ಮತ್ತು ಕೀಲು  ಆಸ್ಪತ್ರೆಗೆ  ಸೇರಿಸಿ  ಚಿಕಿತ್ಸೆ  ಕೊಡಿಸಿರುತ್ತಾರೆ.  ಈ ಘಟನೆಗೆ  ರವಿಕುಮಾರ್  ಮತ್ತು  ಪ್ರದೀಪ್  @ ಪುಟ್ಟ ಹಾಗೂ ಧರಣೇಶರವರೇ  ಕಾರಣರಾಗಿರುತ್ತಾರೆ.  ಇವರುಗಳ  ಮೇಲೆ  ಕಾನೂನು  ರೀತ್ಯ  ಕ್ರಮ  ಜರುಗಿಸಬೇಕೆಂದು  ಕೋರಿ  ಇತ್ಯಾದಿಯಾದ  ಹೇಳಿಕೆ  ಅಂಶ.

ಹೆಬ್ಬೂರು  ಪೊಲೀಸ್ ಠಾಣಾ ಮೊ,ನಂ-70/2018 ಕಲಂ 279, 337, 304(ಎ) ಐ,ಪಿ,ಸಿ ರೆ/ವಿ 134(ಎ)&(ಬಿ), 187 ಐ,ಎಂ,ವಿ ಆಕ್ಟ್‌

ದಿನಾಂಕ: 08-03-2018 ರಂದು ಬೆಳಿಗ್ಗೆ 10-30 ಗಂಟೆಗೆ ಪಿರ್ಯಾದುದಾರರಾದ ಶಿವಲಿಂಗಯ್ಯ,ಬಿ ಬಿನ್ ಟಿ,ಕೆ,ಬಸವರಾಜು, 46 ವರ್ಷ, ಲಿಂಗಾಯಿತರು, ವ್ಯವಸಾಯ, ತಮ್ಮಡೀಹಳ್ಳಿ, ಮಸ್ಕಲ್‌ ಪೋಸ್ಟ್‌, ಗೂಳೂರು ಹೋಬಳಿ, ತುಮಕೂರು ತಾಲ್ಲೂಕು & ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ, ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು, ನನ್ನ ಅಕ್ಕ ಸುಮಾರು 48 ವರ್ಷ ವಯಸ್ಸಿನ ಸರೋಜಮ್ಮ ರವರು ತನ್ನ ಗಂಡನಾದ ಸೋಮಶೇಖರಯ್ಯ ರವರು ತೀರಿಕೊಂಡಿದ್ದರಿಂದ ಈಗ್ಗೆ ಸುಮಾರು 35 ವರ್ಷಗಳಿಂದ ನಮ್ಮ ಜೊತೆಯಲ್ಲಿಯೇ ವಾಸವಿರುತ್ತಾರೆ. ನನ್ನ ಅಕ್ಕ ಸರೋಜಮ್ಮ ರವರಿಗೆ ಹುಷಾರಿಲ್ಲದ ಕಾರಣ ಆಸ್ಪತ್ರೆಗೆ ತೋರಿಸಲೆಂದು ದಿನಾಂಕ: 27-02-2018 ರಂದು ನಾನು ಕೆಎ-06-ಇ.ಜೆ-2373 ನೇ ದ್ವಿಚಕ್ರ ವಾಹನದಲ್ಲಿ ತಮ್ಮಡೀಹಳ್ಳಿ ಗ್ರಾಮದಿಂದ ಹೊನ್ನುಡಿಕೆಗೆ ಹೋಗಲೆಂದು ನಾನು ದ್ವಿಚಕ್ರ ವಾಹನವನ್ನು ಚಾಲನೆ ಮಾಡಿಕೊಂಡು ನನ್ನ ಅಕ್ಕ ಸರೋಜಮ್ಮ ರವರು ಹಿಂಬದಿಯಲ್ಲಿ ಕುಳಿತುಕೊಂಡು ಬಸವೇಗೌಡನಪಾಳ್ಯದ ರಾಮಚಂದ್ರಯ್ಯ ರವರ ಮನೆಯ ಮುಂಭಾಗದ ಶಿವಗಂಗೆ-ಹೊನ್ನುಡಿಕೆ ರಸ್ತೆಯಲ್ಲಿ ಬೆಳಿಗ್ಗೆ ಸುಮಾರು 11-00 ಗಂಟೆಗೆ ಹೊನ್ನುಡಿಕೆ ಕಡೆಗೆ ಹೋಗುತ್ತಿರುವಾಗ್ಗೆ, ಹಿಂಬದಿಯಿಂದ ಅಂದರೆ ಶಿವಗಂಗೆ ಕಡೆಯಿಂದ ಹೊನ್ನುಡಿಕೆ ಕಡೆಗೆ ಹೋಗಲು ಬಂದ ಕೆಎ-06-ಟಿ.ಬಿ-1079 ನೇ ಟ್ರಾಕ್ಟರ್ ವಾಹನದ ಚಾಲಕ ತನ್ನ ಟ್ರಾಕ್ಟರ್ ಅನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಾನು ಮತ್ತು ನನ್ನ ಅಕ್ಕ ಹೋಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಹಿಂದಿನಿಂದ ಡಿಕ್ಕಿ ಹೊಡೆಸಿ ಅಪಘಾತಪಡಿಸಿದ ಪರಿಣಾಮ ನಾವಿಬ್ಬರೂ ದ್ವಿಚಕ್ರ ವಾಹನದ ಸಮೇತ ಕೆಳಗೆ ಬಿದ್ದಿದ್ದು, ಸದರಿ ಅಪಘಾತದಿಂದ ನನಗೆ ತಲೆಗೆ, ಬಲಗಾಲಿಗೆ, ಬಲರೊಂಡಿಗೆ ಗಾಯಗಳಾದವು. ನನ್ನ ಅಕ್ಕ ಸರೋಜಮ್ಮ ರವರಿಗೆ ತಲೆಗೆ, ಎಡಭುಜ, ಎದೆಯ ಭಾಗಕ್ಕೆ ಏಟು ಬಿದ್ದು ರಕ್ತಗಾಯಗಳಾಗಿದ್ದು, ಅಪಘಾತಪಡಿಸಿದ ಟ್ರಾಕ್ಟರ್‌ ವಾಹನದ ಚಾಲಕ ತನ್ನ ಟ್ರಾಕ್ಟರ್ ಅನ್ನು ಸ್ಥಳದಿಂದ ತೆಗೆದುಕೊಂಡು ಹೊರಟು ಹೋದನು. ನಂತರ ಗಾಯಗೊಂಡಿದ್ದ ನನ್ನನ್ನು ಹಾಗೂ ನನ್ನ ಅಕ್ಕ ಸರೋಜಮ್ಮ ರವರನ್ನು ಸ್ಥಳಕ್ಕೆ ಬಂದ ಯಾವುದೋ ಒಂದು ವಾಹನದಲ್ಲಿ ಸ್ಥಳದಲ್ಲಿಯೇ ಇದ್ದ ಹೊನ್ನುಡಿಕೆ ಕೋಡಿಪಾಳ್ಯದ ವಾಸಿಯಾದ ಹನುಮಂತರಾಯಪ್ಪ ರವರು ಹೊನ್ನುಡಿಕೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಅಲ್ಲಿನ ವೈದ್ಯರ ಸಲಹೆ ಮೇರೆಗೆ 108 ಆಂಬುಲೆನ್ಸ್ ವಾಹನದಲ್ಲಿ ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದರು. ನನಗೆ ಸಣ್ಣ ಪುಟ್ಟ ಗಾಯಗಳಾಗಿದ್ದರಿಂದ ನಾನು ಹೊರ ರೋಗಿಯಾಗಿ ಚಿಕಿತ್ಸೆ ಪಡೆದಿದ್ದು, ಅಲ್ಲಿನ ವೈದ್ಯರ ಸಲಹೆ ಮೇರೆಗೆ ನನ್ನ ಅಕ್ಕ ಸರೋಜಮ್ಮ ರವರನ್ನು ನಾನು ಬೆಂಗಳೂರಿನ ನಿಮಾನ್ಸ್‌ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದೆವು. ಅಲ್ಲಿನ ವೈದ್ಯರ ಸಲಹೆ ಮೇರೆಗೆ ದಿನಾಂಕ: 28-02-2018 ರಂದು ನನ್ನ ಅಕ್ಕ ಸರೋಜಮ್ಮ ರವರನ್ನು ತುಮಕೂರಿನ ವಿನಾಯಕ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗೆ ದಾಖಲಿಸಿದೆವು. ನನ್ನ ಅಕ್ಕ ಸರೋಜಮ್ಮ ರವರು ಚಿಕಿತ್ಸೆ ಫಲಕಾರಿಯಾಗದೇ  ದಿನಾಂಕ: 07-03-2018 ರಂದು ಮದ್ಯಾಹ್ನ ಸುಮಾರು 03-20 ಗಂಟೆಗೆ ತುಮಕೂರಿನ ವಿನಾಯಕ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ. ಆದ್ದರಿಂದ ಈ ಅಪಘಾತಕ್ಕೆ ಕಾರಣನಾದ ಕೆಎ-06-ಟಿ.ಬಿ-1079 ನೇ ಟ್ರಾಕ್ಟರ್ ವಾಹನದ ಚಾಲಕನ ಮೇಲೆ ಕಾನೂನು ರೀತ್ಯಾ ಮುಂದಿನ ಕ್ರಮ ಜರುಗಿಸಬೇಕೆಂದು, ನಾನು ನನ್ನ ಅಕ್ಕ ಸರೋಜಮ್ಮ ರವರನ್ನು ಆಸ್ಪತ್ರೆಯಲ್ಲಿ ನೋಡಿಕೊಳ್ಳಲು ಯಾರೂ ಇರಲಿಲ್ಲವಾದ್ದರಿಂದ ನಾನೇ ಅವರ ಜೊತೆಯಲ್ಲಿದ್ದು ಚಿಕಿತ್ಸೆ ಕೊಡಿಸುತ್ತಿದ್ದು, ಅವರು ಮರಣ ಹೊಂದಿದ ನಂತರ ಸದರಿ ವಿಚಾರವನ್ನು ನಮ್ಮ ಸಂಬಂಧಿಕರುಗಳಿಗೆಲ್ಲಾ ತಿಳಿಸಿ ಈ ದಿವಸ ತಡವಾಗಿ ಬಂದು ದೂರು ನೀಡುತ್ತಿದ್ದೇನೆ. ಅಪಘಾತಕ್ಕೊಳಗಾದ ದ್ವಿಚಕ್ರ ವಾಹನ ಗೋವಿಂದಪ್ಪ ರವರ ವಾಸದ ಮನೆಯ ಬಳಿ ನಿಲ್ಲಿಸಿರುತ್ತೆ ಎಂತಾ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ. ಮೃತ ದೇಹವು ಜಿಲ್ಲಾ ಆಸ್ಪತ್ರೆಯ ಶವಗಾರದಲ್ಲಿ ಇರುತ್ತೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ,ನಂ-71/2018 ಕಲಂ 324 ರೆ/ವಿ 34 ಐಪಿಸಿ

 

ದಿನಾಂಕ:08-03-2018 ರಂದು ಮಧ್ಯಾಹ್ನ 1-00 ಗಂಟೆಗೆ ಪಿರ್ಯಾದಿಯಾದ ಮಣ್ಣಮ್ಮ ಕೋಂ ಗೋವಿಂದಪ್ಪ, 60 ವರ್ಷ, ಒಕ್ಕಲಿಗರು, ಗೃಹಿಣಿ, ಬಳ್ಳಗೆರೆ, ಹೆಬ್ಬೂರು ಹೋಬಳಿ, ತುಮಕೂರು ತಾಲ್ಲೂಕು & ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನಂದರೆ ನಾನು ಮೇಲ್ಕಂಡ ವಿಳಾಸದಲ್ಲಿ ನನ್ನ ಪತಿ ಸುಮಾರು 65 ವರ್ಷದ ಗೋವಿಂದಪ್ಪ ರವರುಗಳೊಂದಿಗೆ ವಾಸವಾಗಿರುತ್ತೇನೆ. ನಮಗೆ ಇಬ್ಬರು ಹೆಣ್ಣು ಮಕ್ಕಳು ಮತ್ತು ಒಬ್ಬ ಗಂಡು ಮಗನಿದ್ದು, ಸದರಿ ಮಕ್ಕಳುಗಳಿಗೆ ಮಧುವೆ ಮಾಡಿ ಎಲ್ಲರೂ ಬೇರೆ ಬೇರೆ ಸಂಸಾರ ಮಾಡಿಕೊಂಡಿರುತ್ತಾರೆ. ದಿನಾಂಕ-07/03/2018 ರಂದು ಬೆಳಗಿನಜಾವ ಸುಮಾರು 5-15 ಗಂಟೆ ಸಮಯದಲ್ಲಿ ಹೊನಸಿಗೆರೆ ಕ್ರಾಸ್ ನಲ್ಲಿರುವ ನಮ್ಮ ಮನೆಯಲ್ಲಿ ನಾನು ಹಸುಗಳಿಂದ ಹಾಲು ಕರೆಯುತ್ತಿದ್ದು, ಮತ್ತು ನಮ್ಮ ಯಜಮಾನರು ಕೊಟ್ಟಿಗೆಯಲ್ಲಿ ಕಸವನ್ನು ಗುಡಿಸುತ್ತಿದ್ದಾಗ ಯಾರೋ ಇಬ್ಬರು ಅಪರಿಚಿತ ವ್ಯಕ್ತಿಗಳು ಮುಖಕ್ಕೆ ಮುಸುಕು ಹಾಕಿಕೊಂಡು ಕೊಟ್ಟಿಗೆಯಲ್ಲಿ ಕಸಹೊಡೆಯುತ್ತಿದ್ದ ನನ್ನ ಗಂಡ ಗೋವಿಂದಪ್ಪನನ್ನು ಒಬ್ಬ ಆಸಾಮಿಯು ಹಿಂದಿನಿಂದ ಬಂದು ಹಿಡಿದುಕೊಂಡು ಕಳಗೆ ಕೆಡವಿಕೊಂಡು ಮತ್ತೊಬ್ಬ ಆಸಾಮಿಯು ಅವರ ಎದೆಮೇಲೆ ಕುಳಿತು ಆತನ ಕೈಯಲ್ಲಿದ್ದ ಚಾಕುವಿನಿಂದ ನನ್ನ ಗಂಡನ ಕುತ್ತಿಗೆ ಭಾಗಕ್ಕೆ, ಎಡಕೈ ಬೆರಳುಗಳಿಗೆ ರಕ್ತಗಾಯ ಪಡಿಸಿದರು. ಅಷ್ಠರಲ್ಲಿ ನಾನು ಕೂಗಾಡಿದ್ದರಿಂದ ಶಬ್ದ ಕೇಳಿಸಿಕೊಂಡು ಸದರಿ ಆಸಾಮಿಗಳು ತನ್ನ ಚಾಕುವನ್ನು ಅಲ್ಲೆ ಬಿಸಾಡಿ ಓಡಿಹೋದರು. ಅಷ್ಟರಲ್ಲಿ ನಮ್ಮ ಪಕ್ಕದ ಮನೆಯವರಾದ ಶಂಕರಪ್ಪನವರು ಮತ್ತು ಇತರರು ಕೂಗಾಡಿದ ಶಬ್ದವನ್ನು ಕೇಳಿಸಿಕೊಂಡು ಅಪರಿಚಿತ ಆಸಾಮಿಗಳನ್ನು ಹಿಡಿಯಲು ಹೋದಾಗ ತಪ್ಪಿಸಿಕೊಂಡು ಓಡಿಹೋಗಿರುತ್ತಾರೆ. ನಂತರ ನಾನು ನನ್ನ ಗಂಡನನ್ನು ತುಮಕೂರು ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದೆನು. ನನ್ನ ಗಂಡನನ್ನು ಆಸ್ಪತ್ರೆಯಲ್ಲಿ ನೋಡಿಕೊಳ್ಳುತ್ತಿದ್ದರಿಂದ ಈ ದಿವಸ ತಡವಾಗಿ ಬಂದು ನನ್ನ ಗಂಡನ ಮೇಲೆ ಹಲ್ಲೆ ಮಾಡಿದ ಇಬ್ಬರು ಅಪರಿಚಿತ ಆಸಾಮಿಗಳ ಮೇಲೆ ಕಾನೂನು ರೀತ್ಯಾ ಮುಂದಿನ ಕ್ರಮ ಜರುಗಿಸಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ ಎಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

 

 

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 75 guests online
Content View Hits : 289602