lowborn ಅಪರಾಧ ಘಟನೆಗಳು 06-03-18 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ: 21-06-2018. ಸುಲಿಗೆಕೋರರ ಬಂಧನ: ದಿನಾಂಕ:18-06-2018 ರಂದು... >>   ಪೊಲೀಸ್ ಪ್ರಕಟಣೆ ತುಮಕೂರು ಜಿಲ್ಲಾ ಪೊಲೀಸ್ ಪ್ರಕಟಣೆ   ಆತ್ಮೀಯ ನಾಗರೀಕರಲ್ಲಿ... >> ತುಮಕೂರು ಜಿಲ್ಲೆಯಲ್ಲಿ 2018 ನೇ ಮೇ ಮಾಹೆಯಲ್ಲಿ ಸಂಭವಿಸಿದ ರಸ್ತೆ ಅಪಘಾತಗಳ ಅಂಕಿ ಅಂಶಗಳ... >> ಪತ್ರಿಕಾ ಪ್ರಕಟಣೆ ದಿ 19.04.18 ಪೊಲೀಸ್ ಇಲಾಖೆಯು ಈ ಮೂಲಕ ಸಾರ್ವಜನಿಕರಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ: 15-05-2018 ರಂದು ತುಮಕೂರು ನಗರದ ವಿಶ್ವವಿದ್ಯಾನಿಲಯ ಕಲಾ... >>     ಪತ್ರಿಕಾ ಪ್ರಕಟಣೆ. ದಿನಾಂಕ: 10-05-2018 8 ಲಕ್ಷ ಬೆಲೆ ಬಾಳುವ ಮೊಬೈಲ್ ಮತ್ತು  ವಾಹನ ಕಳ್ಳರ... >> ಪತ್ರಿಕಾ ಪ್ರಕರಣೆ, ದಿನಾಂಕ: 07-05-18 ವಾರಸುದಾರರಿಲ್ಲದ 2,98,01,000/- ರೂ  ಹಣ ಪತ್ತೆ     ದಿನಾಂಕ:... >> ಪತ್ರಿಕಾ ಪ್ರಕಟಣೆ:- -:ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿಯ ಬಂಧನ:- ದಿನಾಂಕ :... >> ಪತ್ರಿಕಾ ಪ್ರಕಟಣೆ ದಿಃ25-04-2018. ದಿನಾಂಕ:24-04-2018 ರ ರಾತ್ರಿ 3 ಜನ ಅನುಮಾನಸ್ಪದ ವ್ಯಕ್ತಿಗಳು... >> ಪತ್ರಿಕಾ ಪ್ರಕಟಣೆ ದಿನಾಂಕ: 21-04-2018. ಕೊಲೆ ಆರೋಪಿಯ ಬಂಧನ:   ಹೆಬ್ಬೂರು ಪೊಲೀಸ್ ಠಾಣಾ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ಅಪರಾಧ ಘಟನೆಗಳು 06-03-18

ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ.ನಂ 68/2018 ಕಲಂ 3,4,5,7 & 8 ಐ ಟಿ ಪಿ ಆಕ್ಟ್  1956 ಮತ್ತು 370  ರೆ/ವಿ 34 ಐ ಪಿ ಸಿ

ದಿನಾಂಕ; 05/03/18 ರಂದು ಸಂಜೆ 6-30 ಗಂಟೆ ಸಮಯದಲ್ಲಿ ಪಿರ್ಯಾದಿ ಕೆ ಆರ್ ರಾಘವೇಂದ್ರ ಪಿ ಐ ಜಿಲ್ಲಾ ಸಿ ಇ ಎನ್ ಸಿ ಪೊಲಿಸ್ ಠಾಣೆ ರವರು ನೀಡಿದ ದೂರಿನ ಅಂಶವೆನೆಂದರೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಅಂತರಸನಹಳ್ಳಿ ಭೋವಿ ಪಾಳ್ಯದ ಕೆ ಐ ಎ ಡಿ ಬಿ ಕಾಂಪೌಂಡ್ ಪಕ್ಕದಲ್ಲಿರುವ ರಾಜಣ್ಣ ರವರ ಶೀಟಿನ ಮನೆಯಲ್ಲಿ ಭಾಡಿಗೆಗೆ ವಾಸವಾಗಿರುವ ಗಜೇಂದ್ರ @ ಗಣೇಶ ಎಂಬುವರು ಹೊರಗಡೆಯಿಂಧ ಹೆಣ್ಣುಮಕ್ಕಳನ್ನು ಕರೆಯಿಸಿ ವೇಶ್ಯಾವಾಟಿಕೆಯನ್ನು ನಡೆಸುತ್ತಿದ್ದಾರೆಂದು ಮಾಹಿತಿ ಬಂದ ಮೇರೆಗೆ  ಪಿ ಎಸ್ ಐ  ಕಾಂತರಾಜು ಮತ್ತು ಶ್ರೀಮತಿ ವಿಜಯ ಲಕ್ಷ್ಮೀ , ಸಿಬ್ಬಂದಿಗಳಾದ ಹೆಚ್ ಸಿ 317 ನಾಗರಾಜು , ಹೆಚ್ ಸಿ 225 ಮಲ್ಲೇಶ್ ರವರೊಂದಿಗೆ ರವರೊಂದಿಗೆ ಸಂಜೆ ಸುಮಾರು 06.00 ಗಂಟೆಗೆ ಸದರಿ ಸ್ಥಳದ ಬಳಿ ಹೋಗಿ ಅಲ್ಲಿ ಕೆ ಐ ಎ ಡಿ ಬಿ ಕಾಂಪೌಂಡ್ ನ ಮರೆಯಲ್ಲಿ ನಿಂತು ನೋಡಲಾಗಿ ರಾಜಣ್ಣ ರವರ ಶೀಟ್ ಮನೆಯ ಮುಂಬಾಗ ನಾಲ್ಕೂ ಜನರಿದ್ದು ಅದರಲ್ಲಿ ಒಬ್ಬ ಪುರುಷನಿಂದ ಗಜೇಂದ್ರನು ಹಣ ಪಡೆದು ಒಬ್ಬ ಹೆಂಗಸ್ಸನ್ನು ಅವನ ಜೊತೆ ಮಾಡಿ ಶೀಟಿನ ಮನೆಯ ಒಳಗೆ ಕಳುಹಿಸಿಕೊಟ್ಟನು.ಅಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವುದನ್ನು ಖಚಿತ ಪಡಿಸಿಕೊಂಡು ಸ್ಥಳದಲ್ಲಿ ಸದರಿ ಆರೋಪಿಗಳ ಬಗ್ಗೆ ನಿಗಾವಹಿಸುವಂತೆ ಪಿ ಎಸ್ ಐ ಮತ್ತು ಸಿಬ್ಬಂದಿಗಳಿಗೆ ಸೂಚನೆ ನೀಡಿ ಠಾಣೆಗೆ ಆಗಮಿಸಿ ವರದಿಯನ್ನು ನೀಡಿದ್ದು ವೆಶ್ಯಾವಾಟಿಕೆ ನಡೆಸುತ್ತಿರುವ ಗಜೆಂದ್ರ ಮತ್ತು ಇತರೆಯವರ ವಿರುದ್ದ  ಕಾನೂನು ಕ್ರಮ ಜರುಗಿಸಲು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡಿರುತ್ತೆ

ಚೇಳೂರು   ಪೊಲೀಸ್  ಠಾಣಾ ಯು.ಡಿ.ಆರ್ ನಂ:06/2018 ಕಲಂ 174 (ಸಿ) ಸಿ.ಆರ್.ಪಿ.ಸಿ

ದಿನಾಂಕ;05/03/2018  ರಂದು  ರಾತ್ರಿ 10-00 ಗಂಟೆಗೆ  ಪಿರ್ಯಾದಿ  ರಾಮಕ್ಕನವರು  ಠಾಣೆಗೆ  ಹಾಜರಾಗಿ  ನೀಡಿದ  ಪಿರ್ಯಾದು  ಅಂಶವೇನಂದರೆ,  ನನ್ನ  ಗಂಡ ನಿಂಗರಾಜು  ರವರು   ಗಾರೆ  ಕೆಲಸ ಮತ್ತು  ಕೂಲಿ ಕೆಲಸವನ್ನು  ಮಾಡಿಕೊಂಡು  ಇದ್ದು,  ದಿನಾಂಕ; 04/03/2018  ರಂದು  ಸಂಜೆ  04  ಗಂಟೆ  ಸಮಯದಲ್ಲಿ  ನನ್ನ   ಗಂಡ  ನಿಂಗರಾಜು ಬಿನ್ ಲೇ ಸುಬ್ಬಯ್ಯ, 45 ವರ್ಷ, ರವರು   ನಮ್ಮ  ಗ್ರಾಮದ  ಮೈಲಾರಯ್ಯ  ಬಿನ್ ಲೇ  ಮುದ್ದಯ್ಯ  ರವರ  ಟ್ರಾಕ್ಟರ್  ಗೆ  ಮಣ್ಣನ್ನು  ತುಂಬವ  ಕೂಲಿ  ಕೆಲಸಕ್ಕೆ   ಹೋಗುವುದಾಗಿ   ತಿಳಿಸಿ   ಮನೆಯಿಂದ  ಹೊರಗಡೆ  ಹೋಗಿದ್ದು,   ರಾತ್ರಿಯಾದರೂ   ಮನೆಗೆ  ಬರದೇ  ಇದ್ದಾಗ  ನನ್ನ  ಗಂಡ  ಕೂಲಿ ಕೆಲಸಕ್ಕೆ ಹೋಗಿದ್ದ ಟ್ರಾಕ್ರ್  ಮಾಲೀಕರಾದ  ಮೈಲಾರಯ್ಯ  ಬಿನ್ ಲೇ  ಮುದ್ದಯ್ಯ  ರವರ  ಟ್ರಾಕ್ಟರ್  ಗೆ   ಮನೆಯ  ಬಳಿಗೆ  ಹೋದಾಗ  ಮೈಲಾರಯ್ಯನವರ  ಮಗ  ಚಿರಂಜೀವಿ   ನಿನ್ನ  ಗಂಡ  ಕೂಲಿ  ಕೆಲಸಕ್ಕೆಂದು  ಟ್ರಾಕ್ಟರ್  ನಲ್ಲಿ    ಬಂದು  ಹೊಸಕೆರೆ  ಗ್ರಾಮದ  ಬಸ್  ನಿಲ್ದಾಣದಲ್ಲಿ   ಟ್ರಾಕ್ಟರ್  ನಿಂದ   ಇಳಿದು  ಹೋದರು.   ಎಂದು  ತಿಳಿಸಿದರು.  ನಂತರ  ಮೈಲಾರಯ್ಯನನ್ನು  ವಿಚಾರ  ಮಾಡಿದಾಗ  ನಿನ್ನ  ಗಂಡ   ನಮ್ಮ ಟ್ರಾಕ್ಟರ್  ಕೆಲಸಕ್ಕೆ   ಬಂದೇ  ಇಲ್ಲ   ಎಂದು  ತಿಳಿಸಿದರು.  ಆಗ  ನಾವು  ನಮ್ಮ  ಸಂಬಂದಿಕರ  ಮನೆಗಳಲ್ಲಿ  ಹಾಗೂ  ನಮ್ಮ  ಗ್ರಾಮದಲ್ಲಿ  ಹುಡುಕಾಡಿದರು.  ಪತ್ತೆಯಾಗಿರುವುದಿಲ್ಲ. ದಿನಾಂಕ; 05/03/2018  ರಂದು   ರಾತ್ರಿ  8-00  ಗಂಟೆ  ಸಮಯದಲ್ಲಿ   ನಾನು  ನಮ್ಮ  ಮನೆಯ   ಬಳಿ  ಇದ್ದಾಗ  ನನ್ನ   ಮೈದುನ  ಮಲ್ಲೇಶ  ನನ್ನ  ಬಳಿಗೆ  ಬಂದು  ನಿಂಗರಾಜು   ಹೊಸಕೆರೆ  ಗ್ರಾಮದ   ಕೆರೆಯ  ಅಂಗಳಲ್ಲಿ  ಮೃತಪಟ್ಟಿರುವುದನ್ನು  ಯಾರೋ  ನೋಡಿ  ಮೃತ  ದೇಹದ ಪೋಟೋಗಳನ್ನು ನಮ್ಮ   ಗ್ರಾಮದ   ರವಿ ಬಿನ್ ಪುಟ್ಟಯ್ಯರವರ  ಮೊಬೈಲ್   ಗೆ  ವಾಟ್ಸ್ ಅಪ್  ಮೂಲಕ  ಹಾಕಿದ್ದು, ಈ  ವಿಚಾರವನ್ನು  ನನಗೆ  ರವಿರವರು ತಿಳಿಸಿದರು  ಎಂದು   ಹೇಳಿದರು.  ಆಗ  ನಾನು  ಮತ್ತು  ನನ್ನ  ಮೈದುನ   ಮಲ್ಲೇಶ  ಹಾಗೂ  ನಮ್ಮ  ಗ್ರಾಮಸ್ಥರುಗಳು  ಹೊಸಕೆರೆ   ಕೆರೆಯ  ಬಳಿಗೆ  ಬಂದು  ನೋಡಿದೆವು.  ವಿಚಾರ  ನಿಜವಾಗಿತ್ತು.  ದಿನಾಂಕ;  04/03/2018  ರಂದು  ಸಂಜೆ 4-00  ಗಂಟೆಯದಲ್ಲಿ  ನನ್ನ  ಗಂಡ  ನಮ್ಮ  ಗ್ರಾಮದ ಮೈಲಾರಯ್ಯ  ಬಿನ್ ಲೇ  ಮುದ್ದಯ್ಯ  ರವರ  ಟ್ರಾಕ್ಟರ್  ಗೆ    ಮಣ್ಣು  ತುಂಬಲು  ಹೋಗುತ್ತೇನೆಂದು   ಮನೆಯಲ್ಲಿ  ಹೇಳಿ ಹೋಗಿದ್ದು, ಮನೆಗೆ  ವಾಪಸ್ಸು  ಬರದೇ  ಹೊಸಕೆರೆ  ಗ್ರಾಮದ  ಕೆರೆಯ  ಅಂಗಳದಲ್ಲಿ ಯಾವುದೋ ಸಮಯದಲ್ಲಿ ಯಾವುದೋ ಕಾರಣದಿಂದ  ಮೃತಪಟ್ಟಿರುತ್ತಾರೆ.   ಮೃತ ನನ್ನ  ಗಂಡನ  ಸಾವಿನಲ್ಲಿ  ಅನುಮಾನ   ಇರುತ್ತೆ.  ಆದ್ದರಿಂದ   ತಾವುಗಳು  ಮುಂದಿನ  ಕಾನೂನು ರೀತ್ಯ  ಕ್ರಮ  ಜರುಗಿಸಲು  ಕೋರುತ್ತೇನೆ.

ತುಮಕೂರು ನಗರ ಪೊಲೀಸ್‌ ಠಾಣಾ  ಮೊ.ನಂ. 67/2018, ಕಲಂ: CR NO 67/2018 U/S 279,337,143,435,504  IPC 1860

ದಿನಾಂಕ 05-03-2018 ರಂದು ಬೆಳಗಿನ ಜಾವ 03-30 ಗಂಟೆಗೆ ಶಮೀರ್ ಪಾಷ ಬಿನ್ ಫಯಾಜ್ ಅಹಮದ್ ತುಮಕೂರು ರವರು ನೀಡಿದ ಹೇಳಿಕೆ ಅಂಶವೆನೆಂದರೆ, ದಿನಾಂಕ 04-03-2018 ರಂದು ಮಧ್ಯರಾತ್ರಿ 11-30 ಗಂಟೆ ಸಮಯದಲ್ಲಿ ನಾನು ಮತ್ತು ನನ್ನ ಸ್ನೇಹಿತ ಸಲ್ಮಾನ್ ರವರು ಟೌನ್ ಹಾಲಿ ಬಳಿ ಟೀ ಕುಡಿಯಲು ಬಂದಿದ್ದಾಗ ಅಲ್ಲಿಗೆ ನನ್ನ ಪರಿಚಯಸ್ಥರಾದ ಸಾರೂಕ್ ಬಿನ್ ಮಹಮದ್ ಶಬ್ಬೀರ್ ರವರು ಅವರ ಬಾಬ್ತು ಕೆಎ04-ಇಜಿ-2622 ನೇ ಯಮಹಾ ಕ್ರಕ್ಸ್ ಮೋಟಾರ್ ಸೈಕಲ್ ನಲ್ಲಿ ಬಂದು ನಮ್ಮನ್ನು ಮನೆಗೆ ಹೋಗೋಣ ಬನ್ನಿ ಎಂತ ಕರೆದಾಗ ನಾನು ಮತ್ತು ಸಲ್ಮಾನ್ ರವರು ಸಾರೂಕ್ ಬೈಕಿನಲ್ಲಿ ಕುಳಿತುಕೊಂಡಾಗ ಸಾರೂಕ್ ಬೈಕನ್ನು ಓಡಿಸುತ್ತಿದ್ದು ಮಧ್ಯರಾತ್ರಿ ಸುಮಾರು 12-00 ಗಂಟೆ ಸಮಯದಲ್ಲಿ ಬಿ.ಹೆಚ್.ರಸ್ತೆಯ (ಜೋಡಿ ದರ್ಗಾ ರಸ್ತೆಯಲ್ಲಿರುವ) ಎಟಿಎಂ ಮುಂಭಾಗ ಸಾರೂಕ್ ಬೈಕನ್ನು ಬಹಳ ಜೋರಾಗಿ ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಬೈಕನ್ನು ವೀಲಿಂಗ್ ಮಾಡಿ ಆಯತಪ್ಪಿ ಕೆಳಗೆ ಜೋರಾಗಿ ಬಿದ್ದಾಗ ಸಾರೂಕ್ ನ ಎಡಗಾಲಿನ ಮಂಡಿಗೆ ಏಟಾಗಿರುತ್ತೆ. ನನಗೆ ಮತ್ತು ಸಲ್ಮಾನ್ ಗೆ ಏಟಾಗಿರುವುದಿಲ್ಲ. ಅಷ್ಟರಲ್ಲಿ ಟೌನ್ ಹಾಲ್ ಬಳಿ ಬಸ್ಸಿಗೆ ಕಾಯುತ್ತಿದ್ದ ಸಾರ್ವಜನಿಕರು ಸುಮಾರು 30-40 ಜನ ಬಂದವರೆ ಮಧ್ಯರಾತ್ರಿ ವೀಲಿಂಗ್ ಮಾಡಲು ಬಂದು ಸಾರ್ವಜನಿಕರಿಗೆ ತೊಂದರೆ ಕೊಡುತ್ತೀರೇನೋ ಎಂತ ನಮಗೆ ಬೈದಾಗ ಅದೇ ವೇಳೆಗೆ ಪೊಲೀಸ್ ಜೀಪ್ ಬರುವುದನ್ನು ನೋಡಿ ನಾವು ಓಡಲು ಪ್ರಯತ್ನಿಸಿದಾಗ  ಸಾರ್ವಜನಿಕರು ನಮ್ಮನ್ನು ಬೆನ್ನಟ್ಟಿ ಹಿಡಿದುಕೊಂಡು  ನಾವು ಬಿದ್ದ ಜಾಗಕ್ಕೆ ಕರೆದುಕೊಂಡು ಬರುವಷ್ಟರಲ್ಲಿ ಯಾರೋ ನಾವು ಬಿದ್ದ ಮೋಟಾರ್ ಸೈಕಲ್ ಗೆ ಬೆಂಕಿ ಹಚ್ಚಿದ್ದು ಬೈಕು ಸಂಪೂರ್ಣ ಸುಟ್ಟು ಹೋಗಿರುತ್ತೆ. ಅಷ್ಟರಲ್ಲಿ ಪೊಲೀಸರು ಬಂದಾಗ ಸಾರ್ವಜನಿಕರು ನಮ್ಮನ್ನು ಪೊಲೀಸರ ವಶಕ್ಕೆ ನೀಡಿರುತ್ತಾರೆ. ನಮ್ಮ ಬೈಕಿಗೆ ಬೆಂಕಿ ಹಚ್ಚಿದವರು ಯಾರು ಅಂತ ಗೊತ್ತಿಲ್ಲ. ಆದ್ದರಿಂದ ಈ ಬಗ್ಗೆ ಪರಿಶೀಲಿಸಿ ಕಾನೂನು ಕ್ರಮ ಕೈಗೊಳ್ಳಿ ಇತ್ಯಾದಿ.

ಜಯನಗರ ಪೊಲೀಸ್ ಠಾಣಾ ಮೊ.ನಂ. 42/2018 ಕಲಂ 323, 307 ರೆ/ವಿ 34 ಐಪಿಸಿ

ದಿನಾಂಕ: 05/03/2018 ರಂದು ಬೆಳಿಗ್ಗೆ 6.30 ಗಂಟೆಯ ಸಮಯದಲ್ಲಿ ಬೆಂಗಳೂರು ಟಿ.ದಾಸರಹಳ್ಳಿ ವಾಸಿ ರಾಕೇಶ ಎನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಾನು ತುಮಕೂರಿನಲ್ಲಿ ನಮ್ಮ ತಾತ ಹನುಮಂತರವರ ಮನೆಯಲ್ಲಿ ಓದಿಕೊಂಡಿದ್ದು, ಈಗ್ಗೆ ಒಂದು ವರ್ಷದ ಹಿಂದೆ ನಾನು ಬೆಂಗಳೂರಿಗೆ ಹೋಗಿ, ಬೆಂಗಳೂರಿನಲ್ಲಿ ಅಸೆಂಜರ್‌‌‌ ಕಂಪನಿಯಲ್ಲಿ ಜೂಸ್‌‌ ಪ್ಯಾಕ್‌‌ ಮಾಡುವ ಕೆಲಸ ಮಾಡಿಕೊಂಡಿದ್ದೆನು. ನಿನ್ನೆ ದಿನ ದಿನಾಂಕ: 04-03-2018 ರಂದು ರಾತ್ರಿ ಸುಮಾರು 12-00 ಗಂಟೆಯಲ್ಲಿ ನಾನು ನನ್ನ ಸ್ನೇಹಿತರಾದ ಕೇಶವ, ನವೀನ ರವರಿಗೆ ತುಮಕೂರಿನಲ್ಲಿರುವ ನಮ್ಮ ತಾತನ ಮನೆಗೆ ಹೋಗಿ ಬರಬೇಕು, ನಾಳೆ ಕೆಲಸಕ್ಕೆ ಹೋಗುವಷ್ಟರಲ್ಲಿ ವಾಪಾಸ್ಸು ಬಂದು ಬಿಡೋಣಾ ಬನ್ನಿ ಎಂತಾ ಹೇಳಿ ಮೂರೂ ಜನರು ನವೀನನ ಮೋಟಾರ್‌‌ ಬೈಕಿನಲ್ಲಿ ತುಮಕೂರಿಗೆ ಬರಲು ಹೊರಟಿದ್ದು, ನಾನು ಹಾಗೂ ನವೀನ ಇಬ್ಬರು ಮೋಟಾರ್‌‌ ಬೈಕಿನಲ್ಲಿ ಮದ್ಯೆ ಕುಳಿತುಕೊಂಡಿದ್ದೆವು.  ಕೇಶವ ಮೋಟಾರ್‌‌ ಬೈಕನ್ನು ಚಾಲನೆ ಮಾಡಿಕೊಂಡು ಮದ್ಯರಾತ್ರಿ ಸುಮಾರು 2-40 ಗಂಟೆಗೆ ತುಮಕೂರಿಗೆ ಶಾಂತಿನಗರಕ್ಕೆ ಬಂದೆವು.   ಶಾಂತಿನಗರದಲ್ಲಿರುವ ಹಬೀಬಿಯಾ ಮಸೀದಿಯ ಬಳಿ ಹೋಗುತ್ತಿದ್ದಾಗ, ಮಸೀದಿಯ ಬಳಿ ವಾಸವಾಗಿರುವ  ಸಿಕಂದರ್‌‌ @ ಬೇಟನ ಹೆಂಡತಿ, ಶಿಫಾ ಎಂಬುವರು ಸಿಕ್ಕಿದ್ದು, ನಾವು ಆಕೆಯನ್ನು ಮಾತನಾಡಿಸುತ್ತಿದ್ದೆವು.  ಅದೇ ಸಮಯಕ್ಕೆ ಅದೇ ಮೊಹಲ್ಲಾದಲ್ಲಿ ವಾಸವಾಗಿರುವ ಆಸೀಪ್‌‌‌ ಹಾಗೂ ಆತನ ಜೊತೆಯಲ್ಲಿದ್ದ ಇನ್ನೂ ಇಬ್ಬರು ಆಸಾಮಿಗಳು ಏಕಾಏಕಿ ನಮ್ಮ ಬಳಿಗೆ ಬಂದವರೇ, ಯಾರೋ ನೀವು, ಇಷ್ಟು ಹೊತ್ತಿನಲ್ಲೇಕೆ ಬಂದಿದ್ದೀರೋ, ನಮ್ಮ ಹುಡುಗಿ ಶಿಫಾಳನ್ನು ಏಕೆ ಮಾತನಾಡಿಸುತ್ತಿದ್ದೀರೋ  ಸೂಳೇ ಮಕ್ಕಳಾ ಬೋಳಿ ಮಕ್ಕಳಾ ಎಂತಾ ಏಕಾಏಕಿ ನಮ್ಮಗಳ ಮೇಲೆ ಜಗಳ ತೆಗೆದು ಆಸೀಪನು ನಮ್ಮನ್ನು ಕೊಲೆ ಮಾಡುವ ಉದ್ದೇಶದಿಂದ ಆತನ ಕೈಯ್ಯಲ್ಲಿದ್ದ ಚಾಕುವಿನಿಂದ,  ನನ್ನ ಜೊತೆ ಇದ್ದ ನನ್ನ ಸ್ನೇಹಿತ ಕೇಶವನಿಗೆ ಹೊಟ್ಟೆಗೆ ಬಲವಾಗಿ ತಿವಿದು ರಕ್ತಗಾಯ ಪಡಿಸಿದನು. ‌‌‌ ನಂತರ ಆಸೀಪನು ನನಗೆ ಹಾಗೂ ನವೀನನಿಗೂ ಸಹಾ ಚಾಕುವಿನಿಂದ ತಿವಿಯಲು ಬಂದನು ನಾವಿಬ್ಬರೂ ತಪ್ಪಿಸಿಕೊಂಡಾಗ, ಆತನ  ಜೊತೆಯಲ್ಲಿದ್ದ ಇಬ್ಬರು ವ್ಯಕ್ತಿಗಳ ಪೈಕಿ ಒಬ್ಬನು ನನಗೆ ಕುತ್ತಿಗೆಯ ಬಳಿ ಕೈಗಳಿಂದ ಬಲವಾಗಿ ಗುದ್ದಿ ನೋವುಂಟು ಮಾಡಿದನು.  ನವೀನನಿಗೂ ಸಹಾ ಇನ್ನೊಬ್ಬ ವ್ಯಕ್ತಿ  ಕೈಗಳಿಂದ ಮೈ ಮೇಲೆಲ್ಲಾ ಹೊಡೆದನು.   ನಂತರ ನಾವೂ ಮೂರೂ ಜನರು ಕಿರುಚಾಡಿದ್ದರಿಂದ  ಆಸೀಫ್‌‌ ಹಾಗೂ ಆತನ ಜೊತೆಯಲ್ಲಿದ್ದ ಇಬ್ಬರು ವ್ಯಕ್ತಿಗಳು ಓಡಿ ಹೋಗಿರುತ್ತಾರೆ.  ನಂತರ ಹೊಟ್ಟೆಯಿಂದ ರಕ್ತ ಸೋರುತ್ತಿದ್ದ ನನ್ನ ಸ್ನೇಹಿತ ಕೇಶವನನ್ನು ನಾನು ಹಾಗೂ ನವೀನ ಮೋಟಾರ್‌‌ ಬೈಕಿನಲ್ಲಿ ಮದ್ಯೆ ಕೂರಿಸಿಕೊಂಡು ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ಸೇರಿಸಿದ್ದು,  ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಕೇಶವನಿಗೆ ಚಿಕಿತ್ಸೆ ನೀಡಿ, ತುರ್ತಾಗಿ ಬೆಂಗಳೂರಿಗೆ ದೊಡ್ಡ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದರಿಂದ 108 ಆಂಬುಲೆನ್ಸ್‌‌ ವಾಹನದಲ್ಲಿ ನನ್ನ ಸ್ನೇಹಿತ ನವೀನನ ಜೊತೆಯಲ್ಲಿ ಕೇಶವನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತೇನೆ.  ನಂತರ ನಡೆದ ಘಟನೆಯ ಬಗ್ಗೆ ಈಗ ಈ ದಿನ ತಡವಾಗಿ ಪೊಲೀಸ್ ಠಾಣೆಗೆ ಬಂದು ಈ ದೂರು ನೀಡುತ್ತಿದ್ದೇನೆ.  ಆದ್ದರಿಂದ ತಾವು ದಯಮಾಡಿ ನಮ್ಮನ್ನು ಕೊಲೆ ಮಾಡಲು ಪ್ರಯತ್ನಿಸಿ, ನನ್ನ ಸ್ನೇಹಿತ ಕೇಶವನಿಗೆ ಚಾಕುವಿನಿಂದ ತಿವಿದು, ನನಗೆ ಹಾಗೂ ನವೀನನಿಗೆ ಕೈಗಳಿಂದ ಹೊಡೆದು ಮಾರಣಾಂತಿಕ ಹಲ್ಲೆ ನಡೆಸಿರುವ ಮೇಲ್ಕಂಡ ಆಸೀಫ್‌‌ ಹಾಗೂ ಇತರರ ಮೇಲೆ ಕಾನೂನು ಕ್ರಮ ಜರುಗಿಸಬೇಕಂತ ಪಿರ್ಯಾದು ಅಂಶವಾಗಿರುತ್ತೆ.

ಹೊಸಬಡಾವಣೆ ಪೊಲೀಸ್ ಠಾಣಾ CR 45/2018 U/S 307, R/W 34 IPC

ದಿನಾಂಕ : 05/04/2018 ರಂದು ಬೆಳಗಿನ ಜಾವ 00-30 ಗಂಟೆಗೆ ಪಿರ್ಯಾದಿ ಶ್ರೀ ವೆಂಕಟಶಾಮಾಚಾರ್ ಬಿನ್ ಲೇಟ್ ವಿ. ಪಾಪಾಚಾರ್ (59) ವಾಸ ಶ್ರೀಕಂಠೇಶ್ವರ ನಿಲಯ, 11ನೇ ಕ್ರಾಸ್, ಅಶೋಕ ನಗರ, ತುಮಕೂರು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ   ದಿನಾಂಕ : 04/03/2018 ರಂದು  ರಾತ್ರಿ 9-00 ಗಂಟೆ ಸಮಯದಲ್ಲಿ ಎಸ್.ಐ.ಟಿ ಬಡಾವಣೆ 6ನೇ ಕ್ರಾಸ್ ನಲ್ಲಿ ಇರುವ ಪಿರ್ಯಾದಿ ಮಗನಾದ ನವೀನ್ ಕುಮಾರ್ ರವರ ಸ್ನೇಹಿತನಾದ ಸಂದರ್ಶ್‌  ರವರ ಮನೆಯ ಮುಂಭಾಗ ನವೀನ್  (27) ಹಾಗೂ ಸಂದರ್ಶ್‌  (28) ರವರುಗಳು ಮಾತನಾಡುತ್ತಾ ನಿಂತಿದ್ದಾಗ ಪಿರ್ಯಾದಿ ಮಗನಾದ ನವೀನ್ ಕುಮಾರ್ ರವರನ್ನು ಯಾರೋ ದುಷ್ಕರ್ಮಿಗಳು  ಕೊಲೆ ಮಾಡುವ ಉದ್ದೇಶದಿಂದ ಅಲ್ಲಿಗೆ ಹೋಗಿ ಏಕಾಏಕಿ ನವೀನ್ ಕುಮಾರ್ ರವರಿಗೆ ಯಾವುದೋ ಹರಿತವಾದ ಆಯುಧದಿಂದ ಚುಚ್ಚಿದ್ದು ಇದನ್ನು ಕಂಡು ಬಿಡಿಸಲು ಹೋದ ಸಂದರ್ಶ್‌ ರವರಿಗೂ ಸಹಾ ಮೇಲ್ಕಂಡವರು ಹರಿತವಾದ ಆಯುಧದಿಂದ ಚುಚ್ಚಿ ಅಲ್ಲಿಂದ ಪಲಾಯನವಾಗಿದ್ದು ಈ ಬಗ್ಗೆ ಕ್ರಮ ಕೋರಿ ನೀಡಿದ ದೂರು

 

 

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 69 guests online
Content View Hits : 289599