lowborn ಅಪರಾಧ ಘಟನೆಗಳು 10-01-18 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ. ದಿನಾಂಕ : 10-07-2018   ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 09-07-2018 ಕೊಲೆ ಆರೋಪಿಗಳ ಬಂಧನ ******* ದಿನಾಂಕ 04.07.2018 ರಂದು... >>   ಪತ್ರಿಕಾ ಪ್ರಕಟಣೆ ದಿನಾಂಕ : 07-07-2018. ಪೂರ್ವಾನುಮತಿ ಪಡೆಯದೇ ಹೆದ್ದಾರಿ ತಡೆ ನಡೆಸಿ,... >> ದಿನಾಂಕ.03.07.2018. ಪತ್ರಿಕಾ ಪ್ರಕಟಣೆ ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ 11 ಲಕ್ಷ 70 ಸಾವಿರ ಬೆಲೆ ಬಾಳುವ ಚಿನ್ನ-ಬೆಳ್ಳಿ  ಹಾಗೂ ಮೊಬೈಲ್‌‌‌... >>   ಪತ್ರಿಕಾ ಪ್ರಕಟಣೆ. ತುಮಕೂರು ಜಿಲ್ಲಾ ಪೊಲೀಸ್, ತುಮಕೂರು. ಕೋರಾ ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 27.06.2018 ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಸಾರ್ವಜನಿಕರ... >> ಪತ್ರಿಕಾ ಪ್ರಕಟಣೆ ದಿನಾಂಕ:- 23/06/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಖನ್ನ... >> ಪತ್ರಿಕಾ ಪ್ರಕಟಣೆ ದಿನಾಂಕ: 21-06-2018. ಸುಲಿಗೆಕೋರರ ಬಂಧನ: ದಿನಾಂಕ:18-06-2018 ರಂದು... >>   ಪೊಲೀಸ್ ಪ್ರಕಟಣೆ ತುಮಕೂರು ಜಿಲ್ಲಾ ಪೊಲೀಸ್ ಪ್ರಕಟಣೆ   ಆತ್ಮೀಯ ನಾಗರೀಕರಲ್ಲಿ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ಅಪರಾಧ ಘಟನೆಗಳು 10-01-18

ಹುಲಿಯೂರುದುರ್ಗ ಪೊಲೀಸ್‌ ಠಾಣಾ; ಮೊ. ನಂ: 02/2018. ಕಲಂ: 279 337 IPC

ದಿನಾಂಕ: 08-01-2018 ರಂದು ಮಧ್ಯಾಹ್ನ 03-00 ಗಂಟೆಯಲ್ಲಿ ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಿಲಕ್ ಗೌಡ ರವರ ತಂದೆಯಾದ ಜಯರಾಮ ರವರ ಹೇಳಿಕೆಯನ್ನು ಪಡೆದುಕೊಂಡು ಬಂದು ಈ ದಿನ ದಿನಾಂಕ: 08-01-2018 ರಂದು ರಾತ್ರಿ 07-10 ಗಂಟೆಗೆ ಠಾಣೆಗೆ ತಂದು ಹಾಜರುಪಡಿಸಿದ್ದರ ಅಂಶವೇನೆಂದರೆ ಪಿರ್ಯಾದಿ ಜಯರಾಮರವರು ಈಗ್ಗೆ 12 ವರ್ಷಗಳಿಂದ ರಾಜಾಪುರದ ನಾಗಣ್ಣರವರ ತೋಟದ ಮನೆಯಲ್ಲಿ ಕೂಲಿ ಮತ್ತು ಜಿರಾಯ್ತಿ ಕೆಲಸ ಮಾಡಿಕೊಂಡು ವಾಸವಾಗಿದ್ದು ಇವರಿಗೆ 11 ವರ್ಷದ ತಿಲಕ್ ಗೌಡ ಎಂಬ ಗಂಡು ಮಗ ಇದ್ದು ಈತನು ಹುಲಿಯೂರುದುರ್ಗ ಟೌನ್ ಶ್ರೀ ಜ್ಞಾನ ಭಾರತಿ ಶಾಲೆಯಲ್ಲಿ 6 ನೇ ತರಗತಿಯಲ್ಲಿ ಓದುತ್ತಿದ್ದು, ದಿನಾಂಕ: 07-01-2018 ರಂದು ಮಧ್ಯಾಹ್ನ ಸುಮಾರು 01-45 ಗಂಟೆ ಸಮಯದಲ್ಲಿ ಪಿರ್ಯಾದಿಯ ಮಗ ತಿಲಕ್ ಗೌಡನು ಹೋಂ ವರ್ಕ್ ಮಾಡಲು ನೋಟ್ ಬುಕ್ ತರಲು ಹುಲಿಯೂರುದುರ್ಗಕ್ಕೆ ಹೋಗಿ ರಾಜಾಪುರ ಗೇಟ್ ಬಳಿ ಬಸ್ ಇಳಿದು ನಡೆದುಕೊಂಡು ಬರುತ್ತಿದ್ದಾಗ ಕುಣಿಗಲ್-ಮದ್ದೂರು ರಸ್ತೆಯಲ್ಲಿ ಹುಲಿಯೂರುದುರ್ಗ ಕಡೆಯಿಂದ ಬಂದ ಒಬ್ಬ ಮೋಟಾರು ಸೈಕಲ್ ಸವಾರನು ಮೋಟಾರು ಸೈಕಲ್ ನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ತಿಲಕ್ ಗೌಡ ನಿಗೆ ಎಡಕಾಲಿಗೆ  ಡಿಕ್ಕಿ ಪಡಿಸಿದ್ದು ನಿನ್ನ ಮಗ ಕೆಳಕ್ಕೆ ಬಿದ್ದಿದ್ದಾನೆ ಎಂತ ಪಿರ್ಯಾದಿಯ ಗ್ರಾಮದ ಹೇಮಾವತಿ ರವರು ಮಧ್ಯಾಹ್ನ 02-45 ಗಂಟೆಯಲ್ಲಿ ಬಂದು ಪಿರ್ಯಾದಿಗೆ ತಿಳಿಸಿದ್ದು ಆಗ ಪಿರ್ಯಾದಿ ಮತ್ತು ಅವರ ಹೆಂಡತಿ ಲಕ್ಷ್ಮಮ್ಮ ಇಬ್ಬರೂ ಸ್ಥಳಕ್ಕೆ ಹೋಗಿ ಪಿರ್ಯಾದಿಯ ಮಗನಿಗೆ ಮೋಟಾರು ಸೈಕಲ್ ಸವಾರನು ಡಿಕ್ಕಿ ಹೊಡೆಸಿದ್ದರಿಂದ ಆತನ ಎಡಕಾಲಿನ ತೊಡೆ ಮುರಿದಂತೆ ಕಂಡು ಬಂದಿದ್ದು, ಮೋಟಾರು ಸೈಕಲ್ ಸವಾರನು ತನ್ನ ವಾಹನವನ್ನು ನಿಲ್ಲಿಸದೇ ಹೊರಟು ಹೋಗಿರುತ್ತಾನೆ. ತಕ್ಷಣ ಪಿರ್ಯಾದಿ, ಅವರ ಹೆಂಡತಿ ಮತ್ತು ಅವರ  ಗ್ರಾಮದ ಚಂದ್ರ ರವರು ಸೇರಿಕೊಂಡು ಪಿರ್ಯಾದಿಯ ಮಗನನ್ನು ಯಾವುದೋ ಒಂದು ಕಾರಿನಲ್ಲಿ ಮಂಡ್ಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲು ಮಾಡಿದ್ದು, ವೈದ್ಯರು ಆತನಿಗೆ ಚಿಕಿತ್ಸೆ ನೀಡಿ ಶಸ್ತ್ರ ಚಿಕಿತ್ಸೆ ಮಾಡಬೇಕೆಂದು ಎಂತ ತಿಳಿಸಿರುತ್ತಾರೆ. ಈ ಅಪಘಾತವು ಮಧ್ಯಾಹ್ನ 02-30 ಗಂಟೆಯಲ್ಲಿ ನಡೆದಿರುತ್ತೆ. ಆದ್ದರಿಂದ ಪಿರ್ಯಾದಿಯ ಮಗನಿಗೆ ಅಪಘಾತಪಡಿಸಿದ ಮೋಟಾರು ಸೈಕಲ್ ಸವಾರನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲು ಮಾಡಿರುತ್ತೆ.

ಹುಲಿಯೂರುದುರ್ಗ ಪೊಲೀಸ್‌ ಠಾಣಾ; ಮೊ. ನಂ: 03/2018. ಕಲಂ:  143 144 323 324 354 504 506 149 IPC

ದಿನಾಂಕ: 09-01-2018 ರಂದು ಸಂಜೆ 04-00 ಗಂಟೆಗೆ ಶ್ರೀಮತಿ ಪವಿತ್ರ ಕೋಂ ನಾಗೇಶ್, ಕರಿಕಲ್ಲುಪಾಳ್ಯ, ಡಿ.ಹೊಸಹಳ್ಳಿ ದಾಖ್ಲೆ, ಹುಲಿಯೂರುದುರ್ಗ ಹೋಬಳಿ, ಕುಣಿಗಲ್ ತಾ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ದಿನಾಂಕ: 08-01-2018 ರಂದು ಸಂಜೆ 05-30 ಗಂಟೆಯಲ್ಲಿ ಪಿರ್ಯಾದಿಯು ಮನೆಯಲ್ಲಿರುವಾಗ್ಗೆ ಅವರ ಮನೆಯ ಪಕ್ಕದವರಾದ 1)ಕುಮಾರ್ ಬಿನ್ ತಮ್ಮಣ್ಣ 2)ಗೌರಮ್ಮ ಕೋಂ ತಮ್ಮಣ್ಣ, 3)ಚಿಕ್ಕತಾಯಮ್ಮ ಕೋಂ ತಮ್ಮಣ್ಣ, ಮತ್ತು ಇತರೆ 4-5 ಜನ ಹುಡುಗರು ಬಂದು ಪಿರ್ಯಾದಿಗೆ ಏಕಾಏಕಿ  ಅವಾಚ್ಯ ಶಬ್ದಗಳಿಂದ ಬೈದು, ಕುಮಾರ್ ಎಂಬುವವನು ಪಿರ್ಯಾದಿಯ ಸೀರೆಯನ್ನು ಎಳೆದಾಡಿ ಹಾಗೂ ಜುಟ್ಟನ್ನು ಎಳೆದಾಡಿ ದೊಣ್ಣೆಯಿಂದ ಪಿರ್ಯಾದಿಗೆ ಹೊಡೆಯಲು ಬಂದಾಗ, ಪಿರ್ಯಾದಿಯ ಅತ್ತೆಯಾದ ತಿಮ್ಮಮ್ಮ ರವರು ಬಿಡಿಸಲು ಮಧ್ಯೆ ಬಂದಿದ್ದು, ಅವರ ಜುಟ್ಟನ್ನೂ ಸಹ ಹಿಡಿದು ಎಳೆದಾಡಿ, ದೊಣ್ಣೆಯಿಂದ ಅವರ ತಲೆಗೆ ಹೊಡೆದು ಕಾಲುಗಳಿಂದ ಅವರನ್ನು ತುಳಿದು ನೋವುಂಟುಮಾಡಿರುತ್ತಾರೆ. ಹಾಗೂ ಜೊತೆಯಲ್ಲಿ ಬಂದ 4-5 ಜನ ಹುಡುಗರು ಕೈಯಲ್ಲಿ ದೊಣ್ಣೆಯಿಂದ ಹೊಡೆದು ಹೆದರಿಸಿ ಹಳೆಯ ದ್ವೇಷದಿಂದ ಹೊಡೆದು “ನೀವು ಸ್ಟೇಷನ್ ಗೆ ಹೋಗಿ ನಮ್ಮ ಮೇಲೆ ಕಂಪ್ಲೆಂಟ್ ಕೊಟ್ಟರೆ ನಿಮ್ಮನ್ನು ಸಾಯಿಸಿಬಿಡುತ್ತೇವೆ” ಎಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ. ಆಗ ಶಿವನಂಜಯ್ಯ ಎಂಬುವವರು ಮಧ್ಯೆ ಬಂದು ಗಲಾಟೆಯನ್ನು ಬಿಡಿಸಿರುತ್ತಾರೆ. ಆದ್ದರಿಂದ ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ ಪಿರ್ಯಾದನ್ನು ಪಡೆದು ಪ್ರಕರಣ ದಾಖಲು ಮಾಡಿರುತ್ತೆ.

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 38 guests online
Content View Hits : 302187