lowborn ಅಪರಾಧ ಘಟನೆಗಳು 06-01-18 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ. ದಿನಾಂಕ : 10-07-2018   ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 09-07-2018 ಕೊಲೆ ಆರೋಪಿಗಳ ಬಂಧನ ******* ದಿನಾಂಕ 04.07.2018 ರಂದು... >>   ಪತ್ರಿಕಾ ಪ್ರಕಟಣೆ ದಿನಾಂಕ : 07-07-2018. ಪೂರ್ವಾನುಮತಿ ಪಡೆಯದೇ ಹೆದ್ದಾರಿ ತಡೆ ನಡೆಸಿ,... >> ದಿನಾಂಕ.03.07.2018. ಪತ್ರಿಕಾ ಪ್ರಕಟಣೆ ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ 11 ಲಕ್ಷ 70 ಸಾವಿರ ಬೆಲೆ ಬಾಳುವ ಚಿನ್ನ-ಬೆಳ್ಳಿ  ಹಾಗೂ ಮೊಬೈಲ್‌‌‌... >>   ಪತ್ರಿಕಾ ಪ್ರಕಟಣೆ. ತುಮಕೂರು ಜಿಲ್ಲಾ ಪೊಲೀಸ್, ತುಮಕೂರು. ಕೋರಾ ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 27.06.2018 ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಸಾರ್ವಜನಿಕರ... >> ಪತ್ರಿಕಾ ಪ್ರಕಟಣೆ ದಿನಾಂಕ:- 23/06/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಖನ್ನ... >> ಪತ್ರಿಕಾ ಪ್ರಕಟಣೆ ದಿನಾಂಕ: 21-06-2018. ಸುಲಿಗೆಕೋರರ ಬಂಧನ: ದಿನಾಂಕ:18-06-2018 ರಂದು... >>   ಪೊಲೀಸ್ ಪ್ರಕಟಣೆ ತುಮಕೂರು ಜಿಲ್ಲಾ ಪೊಲೀಸ್ ಪ್ರಕಟಣೆ   ಆತ್ಮೀಯ ನಾಗರೀಕರಲ್ಲಿ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ಅಪರಾಧ ಘಟನೆಗಳು 06-01-18

ತಿಪಟೂರು ನಗರ ಪೊಲೀಸ್ ಠಾಣಾ ಮೊ. ನಂ 02/2018 ಕಲಂ: 8(ಸಿ), 20 (ಬಿ) ಎನ್.ಡಿ.ಪಿ.ಎಸ್ ಆಕ್ಟ್ 1985 .

ದಿನಾಂಕ: 05/01/2018 ರಂದು ಸಂಜೆ 5-45 ಗಂಟೆಗೆ ಮಾನ್ಯ ಪಿ.ಐ ಸಾಹೇಬರು ಠಾಣೆಗೆ ಹಾಜರಾಗಿ ನೀಡಿದ ಜ್ಞಾಪನದ ಅಂಶವೇನೆಂದರೆ, ದಿನಾಂಕ 05-01-2018 ರಂದು ಮಧ್ಯಾಹ್ನ 2-30 ಗಂಟೆಯಲ್ಲಿ ತಿಪಟೂರು ಟೌನ್‌ ಮಕಾನ್‌ ಲೇನ್‌‌ನ ಎಂ ಎಸ್‌ ಹೋಟೆಲ್‌ ಮುಂಭಾಗ ಇಬ್ಬರು ಆಸಾಮಿಗಳು ನಿಂತು ಯಾರಿಗೂ ಗೊತ್ತಾಗದಂತೆ ಕೈಯ್ಯಲ್ಲಿ ಗಾಂಜಾ ಸೊಪ್ಪಿನ ಪ್ಯಾಕೆಟ್‌‌ಗಳನ್ನು ಹಿಡಿದುಕೊಂಡು ಮಾರಾಟ ಮಾಡುತ್ತಿದ್ದಾರೆಂದು ಖಚಿತ ಮಾಹಿತಿ ಬಂದ ಮೇರೆಗೆ ಪಂಚರು ಮತ್ತು ಸಿಬ್ಬಂದಿಗಳೊಂದಿಗೆ  ಮೇಲ್ಕಂಡ ಸ್ಥಳಕ್ಕೆ ಹೋಗಿ ನೋಡಲಾಗಿ ಮಾವಿನತೋಪಿನ ಮನ್ಸೂರ್‌ ಎಂಬುವನು ನಮ್ಮನ್ನು ನೋಡಿ, ತನ್ನ ಕೈಯ್ಯಲ್ಲಿದ್ದ ಗಾಂಜಾ ಸೊಪ್ಪಿರುವ ಪ್ಯಾಕೆಟ್‌ಗಳಿರುವ ಒಂದು ಕಪ್ಪು ಬಣ್ಣದ ಪ್ಲಾಸ್ಟಿಕ್‌ ಕವರ್‌ ಅನ್ನು ಬಿಸಾಡಿ ಆಟೋದಲ್ಲಿ ತಪ್ಪಿಸಿಕೊಂಡು ಹೋಗಿದ್ದು, ಸ್ಥಳದಲ್ಲಿದ್ದ ಮತ್ತೊಬ್ಬನ ಹೆಸರು ವಿಳಾಸ ಕೇಳಲಾಗಿ ಮಾರುತಿ ಬಿನ್ ಲೇ: ಹನುಮಂತರಾಯಪ್ಪ ಸುಮಾರು 47 ವರ್ಷ  ನಾಯಕ ಜನಾಂಗ ಬಾಳೆಹಣ್ಣಿನ ವ್ಯಾಪಾರ ಪೈ ಸರ್ಕಲ್‌ ವಾಸ: ಮಾರುತಿ ಬಡಾವಣೆ ಕೋಟನಾಯಕನಹಳ್ಳಿ ತಿಪಟೂರು ತಾ: ಎಂದು ತಿಳಿಸಿದ್ದು, ಈತನನ್ನು ನಿನ್ನ ಬಳಿ ಗಾಂಜಾ ಸೊಪ್ಪಿನ ಪ್ಯಾಕೆಟ್‌ ಇದೆ ಅಂತ ನಮಗೆ ಖಚಿತ ಮಾಹಿತಿ ಬಂದಿದೆ. ನಿನ್ನನ್ನು ನಾವು ಅಂಗಶೋಧನೆ ಮಾಡುವುದೋ ಅಥವಾ ಗೆಜೆಟೆಡ್‌‌ ಆಪೀಸರ್‌‌ನಿಂದ ಶೋಧನೆ ಮಾಡಿಸಲೇ ಎಂದು ಕೇಳಿದಾಗ,ಗೆಜೆಟೆಡ್‌‌ ಅಧಿಕಾರಿಯಿಂದ ಶೋಧನೆ ಮಾಡಿಸಿ ಎಂದು ತಿಳಿಸಿದ್ದರಿಂದ ಪಂಚರ ಸಮಕ್ಷಮ ಮಧ್ಯಾಹ್ನ 3-15 ಗಂಟೆಯಿಂದ ಮಧ್ಯಾಹ್ನ 3-45 ಗಂಟೆಯವರೆವಿಗೆ ಕ್ರಮ ಕೈಗೊಂಡು ಮಾರುತಿಯನ್ನು ವಶಕ್ಕೆ ಪಡೆದು ಸಿಬ್ಬಂದಿಗಳ ಸಹಾಯದಿಂದ ಮಾರುತಿಯನ್ನು ತಾಲ್ಲೋಕು ದಂಡಾಧಿಕಾರಿಯವರಿಂದ ಅಂಗಶೋಧನೆ ಮಾಡಿಸುವ ಸಲುವಾಗಿ ವಶಕ್ಕೆ ತೆಗೆದುಕೊಂಡು ಮಾನ್ಯ ತಾಲ್ಲೋಕು ದಂಡಾಧಿಕಾರಿಯವರ ಮುಂದೆ ಮಧ್ಯಾಹ್ನ 4-00 ಗಂಟೆಗೆ ಹಾಜರ್ಪಡಿಸಿ, ಅಂಗಶೋಧನೆ ಮಾಡಿಸಲಾಗಿ, ಮಾರುತಿ ಬಳಿ ಒಂದು ನ್ಯೂಸ್‌ ಪೇಪರ್‌‌ನಲ್ಲಿ 13 ಗ್ರಾಂ ತೂಕದ ಗಾಂಜಾ ಸೊಪ್ಪಿನ ಪುಡಿ ಇದ್ದು,ಮತ್ತು ಗಾಂಜಾ ಸೊಪ್ಪಿನ ಪುಡಿಯನ್ನು ಮಾರಾಟ ಮಾಡಿ ಗಳಿಸಿದ ಹಣ 1100-00 ರೂ ನಗದನ್ನು ಅಮಾನತ್ತು ಪಡಿಸಿಕೊಂಡು, ನಂತರ ಸ್ಥಳದಲ್ಲಿ ಮನ್ಸೂರ್‌ ಬಿಸಾಡಿ ಹೋಗಿದ್ದ ಒಂದು ಪ್ಲಾಸ್ಟಿಕ್‌ ಕವರ್‌ ಅನ್ನು ಮಾರುತಿ ತೆಗೆದು ಇಟ್ಟುಕೊಂಡಿದ್ದು, ಅದರಲ್ಲಿ ಒಟ್ಟು 05 ಗಾಂಜಾ ಸೊಪ್ಪಿರುವ ಪ್ಯಾಕೆಟ್‌‌ಗಳು ಇದ್ದು ಇವುಗಳ ಒಟ್ಟು 50 ಗ್ರಾಂ ತೂಕವಿದ್ದು,ಇವುಗಳನ್ನು ಪಂಚರ ಸಮಕ್ಷಮ ಪಂಚನಾಮೆ ಮೂಲಕ ತಾಲ್ಲೋಕು ದಂಡಾಧಿಕಾರಿಯವರ ಕಚೇರಿಯಲ್ಲಿ ಅಮಾನತ್ತು ಪಡಿಸಿಕೊಂಡಿರುತ್ತೆ. ಸದರಿ ಮೇಲ್ಕಂಡ ಆಸಾಮಿ ಮಾರುತಿ ಮತ್ತು ಅಮಾನತ್ತು ಪಡಿಸಿಕೊಂಡಿರುವ ನಗದು 1100-00 ರೂ 13 ಗ್ರಾಂ ತೂಕದ ಗಾಂಜಾ ಸೊಪ್ಪಿನ ಪುಡಿ ಮತ್ತು 50 ಗ್ರಾಂ ತೂಕದ 05 ಗಾಂಜಾ ಸೊಪ್ಪಿನ ಪುಡಿಯನ್ನು ಹಾಗೂ ದಾಖಲಾತಿಗಳನ್ನು ನೀಡಿ  ಮಾರುತಿ ಮತ್ತು ಮಾವಿನತೋಪಿನ ಮನ್ಸೂರ್‌ರವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ನೀಡಿದ ಜ್ಞಾಪನವನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

 

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ-03/2018 ಕಲಂ 279,337 ಐಪಿಸಿ

ದಿನಾಂಕ:05-12-2017 ರಂದು ಸಂಜೆ 6-45 ಗಂಟೆಗೆ ಪಿರ್ಯಾದುದಾರರಾದ ಬಸವರಾಜು,ಎ,ಎಸ್‌ ಬಿನ್ ಲೇ|| ಸಿದ್ದಪ್ಪ, 38 ವರ್ಷ, ಲಿಂಗಾಯಿತರು, ಡ್ರೈವರ್ ಕೆಲಸ, ಸ್ವಂತ ವಿಳಾಸ: ಆಲ್ಬೂರು ಗೇಟ್‌, ತಿಪಟೂರು ತಾ||, ಹಾಲಿ ವಾಸ: ವಿವೇಕಾನಂದ ಸ್ಕೂಲ್‌ ರೋಡ್‌, 7 ನೇ ಕ್ರಾಸ್, ವಿದ್ಯಾ ನಗರ, ತುಮಕೂರು ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಾನು ಮತ್ತು ನನ್ನ ಹೆಂಡತಿಯಾದ ವನಜಾಕ್ಷಿ ಇಬ್ಬರೂ ದಿನಾಂಕ:17-12-2017 ರಂದು ಹೆಬ್ಬೂರಿನ ಕಲ್ಕೆರೆ ಗ್ರಾಮದ ನಮ್ಮ ಸ್ನೇಹಿತರ ಮನೆಗೆ ಹೋಗಿದ್ದು, ನಂತರ ವಾಪಸ್‌ ಕಲ್ಕೆರೆ ಗ್ರಾಮದಿಂದ ತುಮಕೂರಿಗೆ ಬರಲೆಂದು ಬೆಳಿಗ್ಗೆ ಸುಮಾರು 11-00 ಗಂಟೆ ಸಮಯದಲ್ಲಿ ಕಲ್ಕೆರೆ ಕ್ರಾಸ್‌ನಲ್ಲಿ ಬಸ್ಸಿಗಾಗಿ ಕಾಯುತ್ತಾ ರಸ್ತೆಯ ಎಡಭಾಗದಲ್ಲಿ ನಿಂತಿರುವಾಗ್ಗೆ, ಕುಣಿಗಲ್ ಕಡೆಯಿಂದ ತುಮಕೂರು ಕಡೆಗೆ ಹೋಗಲು ಬಂದ ಒಂದು ದ್ವಿಚಕ್ರ ವಾಹನದ ಸವಾರನು ತನ್ನ ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ರಸ್ತೆಯ ಎಡಭಾಗದಲ್ಲಿ ನಿಂತಿದ್ದ ನನಗೆ ಡಿಕ್ಕಿ ಹೊಡೆಸಿ ಅಫಘಾತಪಡಿಸಿದನು. ಪರಿಣಾಮವಾಗಿ ನನಗೆ ಬಲಗಾಲಿನ ಮಂಡಿಗೆ, ಮೂಗಿಗೆ ಹಾಗೂ ದೇಹದ ಇತರೆ ಭಾಗಗಳಿಗೆ ಏಟು ಬಿದ್ದು ರಕ್ತಗಾಯವಾಯಿತು. ಅಪಘಾತಪಡಿಸಿದ ದ್ವಿಚಕ್ರ ವಾಹನದ ನಂಬರ್ ನೋಡಲಾಗಿ ಕೆಎ-06-ಇ.ಎಸ್‌-7871 ಆಗಿತ್ತು. ನಂತರ ಸದರಿ ದ್ವಿಚಕ್ರ ವಾಹನದ ಸವಾರನ ಹೆಸರು ವಿಳಾಸ ತಿಳಿಯಲಾಗಿ ರವಿ,ಆರ್ ಬಿನ್ ರೇವಣ್ಣ ಎಂತಾ ತಿಳಿಯಿತು. ನಂತರ ಗಾಯಗೊಂಡಿದ್ದ ನನ್ನನ್ನು ನನ್ನ ಹೆಂಡತಿ ವನಜಾಕ್ಷಿ ಹಾಗೂ ರವಿ,ಆರ್ ಇಬ್ಬರೂ ಸೇರಿಕೊಂಡು ಸ್ಥಳಕ್ಕೆ ಬಂದ ಯಾವುದೋ ಒಂದು ವಾಹನದಲ್ಲಿ ತುಮಕೂರಿನ ಎಂ,ಸಿ ಆರ್ಥೋಪೆಡಿಕ್‌ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದರು. ನಂತರ ಅಫಘಾತಪಡಿಸಿದ ದ್ವಿಚಕ್ರ ವಾಹನದ ಸವಾರನಾದ ರವಿ,ಆರ್ ರವರು ನನಗೆ ಚಿಕಿತ್ಸೆಯ ವೆಚ್ಚವನ್ನು ಭರಿಸುವುದಾಗಿ ಹೇಳಿ ಹೋದನು. ನಂತರ ಅಪಘಾತಪಡಿಸಿದ ದ್ವಿಚಕ್ರ ವಾಹನದ ಸವಾರನಾದ ರವಿ,ಆರ್ ರವರು ಇಲ್ಲಿಯವರೆವಿಗೂ ಬರಲಿಲ್ಲವಾದ್ದರಿಂದ ಹಾಗೂ ನಾನು ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದರಿಂದ ನನಗೆ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿದ್ದು ಹಾಗೂ ನಾನು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ ನಂತರ ನನಗೆ ತೀವ್ರತರವಾದ ನೋವು ಇದ್ದುದ್ದರಿಂದ ಈ ದಿವಸ ತಡವಾಗಿ ಬಂದು ಅಪಘಾತಪಡಿಸಿದ ಕೆಎ-06-ಇ.ಎಸ್‌-7871 ನೇ ದ್ವಿಚಕ್ರ ವಾಹನದ ಸವಾರನಾದ ರವಿ,ಆರ್ ಬಿನ್ ರೇವಣ್ಣ ರವರ ಮೇಲೆ ಕಾನೂನು ರೀತ್ಯಾ ಮುಂದಿನ ಕ್ರಮ ಜರುಗಿಸಬೇಕೆಂದು ದೂರು ನೀಡುತ್ತಿದ್ದೇನೆ ಎಂತಾ ನೀಡಿದ ದೂರನ್ನು ಪಡೆದು ಠಾಣಾ ಪ್ರಕರಣ ದಾಖಲಿಸಿರುತ್ತೆ.

ತಿಪಟೂರು ನಗರ ಪೊಲೀಸ್ ಠಾಣಾ ಮೊ. ನಂ 01/2018 ಕಲಂ: 279,337 ಐ.ಪಿ.ಸಿ & 134 (ಎ&ಬಿ) ಐ.ಎಂ.ವಿ ಆಕ್ಟ್.

ದಿನಾಂಕ:05-01-2018 ರಂದು ಗಾಯಾಳು ಸಂಬಂದಿಯಾದ ಪಿರ್ಯಾದಿ ಸಿದ್ದಬಸಪ್ಪ ಬಿನ್ ಲೇಟ್ ಪರಮಶಿವಯ್ಯ, 53 ವರ್ಷ, ಲಿಂಗಾಯಿತರು. ಮತಿಘಟ್ಟ, ನೊಣವಿನಕೆರೆ ಹೋಬಳಿ, ತಿಪಟೂರು ತಾಲ್ಲೋಕ್ ರವರು ತಿಪಟೂರು ಸರ್ಕಾರಿ ಆಸ್ಪತ್ರೆಯಲ್ಲಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ, ದಿನಾಂಕ:05-01-2018 ರಂದು ಬೆಳಗ್ಗೆ 10.00 ಗಂಟೆ ಸಮಯದಲ್ಲಿ ಕಮಲ ಎಂಬುವರು ನನಗೆ ಪೋನ್‌ ಮಾಡಿ ನಿಮ್ಮ ತಮ್ಮನಾದ ಶಶಿಧರ್‌ ರವರು ಮತ್ತು ಅವರ ಪತ್ನಿಯಾದ ಸಾವಿತ್ರಮ್ಮ ರವರು ಬೆಳಗ್ಗೆ 09.45 ಗಂಟೆ ಸಮಯದಲ್ಲಿ ತಿಪಟೂರು ಟೌನ್‌ ಕೆಂಪಮ್ಮ ದೇವಸ್ದಾನ ಬಳಿ ರಸ್ತೆಯಲ್ಲಿ ಅಪಘಾತವಾಗಿ ಪೆಟ್ಟಾಗಿದೆ ಚಿಕಿತ್ಸೆಗಾಗಿ ತಿಪಟೂರು ಸರ್ಕಾರಿ ಅಸ್ಪತ್ರೆಗೆ ಕರೆದುಕೊಂಡು ಬಂದಿದ್ದೆವೆಂದು ತಿಳಿಸಿದ್ದರ ಮೇರೆಗೆ ನಾನು ಸರ್ಕಾರಿ ಅಸ್ಪತ್ರೆಗೆ ಹೋಗಿ ನೋಡಿದೆ, ನನ್ನ ತಮ್ಮ ಶಶಿಧರ್‌  ಮತ್ತು ಅವರ ಪತ್ನಿ ಸಾವಿತ್ರಮ್ಮ ರವರಿಗೆ ಅಪಘಾತದಲ್ಲಿ ಪೆಟ್ಟಾಗಿ ಚಿಕಿತ್ಸೆ ಪಡೆಯುತ್ತಿದ್ದರು, ಅವರನ್ನು ವಿಚಾರ ಮಾಡಲಾಗಿ ನಾವು ಈ ದಿನ ಬೆಳಗ್ಗೆ 09.45 ಗಂಟೆಯಲ್ಲಿ ಕೆಎ-44-ಕೆ-8376 ನೇ ಟಿವಿಎಸ್ ಎಕ್ಸ್.ಎಲ್‌ ನಲ್ಲಿ ತಿಪಟೂರು ಟೌನ್‌ನಿಂದ ಕೋಡಿ ಸರ್ಕಲ್‌ ಕಡೆ ಎನ್‌ಹೆಚ್‌ 206 ರಸ್ತೆಯಲ್ಲಿ ಕೆಂಪಮ್ಮ ದೇವಸ್ದಾನದ ಬಳಿ ಇಂಡಿಕೇಟರ್‌ ಹಾಕಿ ರಸ್ತೆಯ ಬಲಗಡೆಗೆ ತಿರುಗಿಸಿಕೊಳ್ಳುತ್ತಿದ್ದಾಗ ಅದೇ ಸಮಯಕ್ಕೆ ಹಿಂಬದಿಯಿಂದ ಕೋಡಿ ಸರ್ಕಲ್‌ ಕಡೆಗೆ ಹೋಗಲು ಬಂದ ಒಂದು ಬಿಳಿ ಬಣ್ಣದ ಬುಲೆರೋಪಿಕಪ್ ವಾಹನದ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ನಾವು ಹೋಗುತ್ತಿದ್ದ ಟಿವಿಎಸ್‌ಗೆ ಡಿಕ್ಕಿ ಹೊಡೆಸಿದ ಪರಿಣಾಮ ಶಶಧರ್‌ನಿಗೆ ತಲೆಗೆ, ಬಲಕೈಗೆ ಹಾಗೂ ಕಾಲುಗಳಿಗೆ ಪೆಟ್ಟುಗಳಾಗಿದ್ದು,  ಸಾವಿತ್ರಮ್ಮನಿಗೆ ತಲೆಗೆ, ಸೊಂಟಕ್ಕೆ, ಮೂಗು ಹಾಗೂ ಎರಡು ಕಾಲುಗಳಿಗೆ ಪೆಟ್ಟಾಗಳಾಗಿರುತ್ತವೆ. ಈ ಅಪಘಾತ ಮಾಡಿದ ಬುಲೆರೋ ಪಿಕೆಪ್‌ ವಾಹನದ ಚಾಲಕನು ತನ್ನ ವಾಹನವನ್ನು ನಿಲ್ಲಿಸದೆ ಕೋಡಿ ಸರ್ಕಲ್‌ ಕಡೆ ಹೊರಟು ಹೋದನು ಎಂತ ತಿಳಿಸಿರುತ್ತಾರೆ, ಆದ್ದರಿಂದ ಸದರಿ ಬುಲೆರೋ ವಾಹನ ಮತ್ತು ಚಾಲಕಕನನ್ನು ಪತ್ತೆ ಮಾಡಿ ಕಾನೂನು ರೀತಿ ಕ್ರಮ ಜರುಗಿಸಬೇಕಂತ ನೀಡಿದ ದೂರನ್ನು ಪಡೆದು 11-00 ಗಂಟೆಗೆ ಠಾಣೆಗೆ ಬಂದು ಪ್ರಕರಣ ದಾಖಲಿಸಿರುತ್ತೆ.

 

ದಂಡಿನಶಿವರ ಪೊಲೀಸ್ ಠಾಣಾ ಮೊ.ನಂ 02/2018 ಕಲಂ 279.337 ಐ,ಪಿ,ಸಿ

ದಿನಾಂಕ 05/01/2018 ರಂದು ಈ ಕೇಸಿನ ಪಿರ್ಯಾಧಿ ಸೋಮಶೇಖರ್ ಬಿನ್ ಲೇ, ಬಸವಲಿಂಗಯ್ಯ ರವರು ಠಾಣೆಗೆ ಹಾಜರಾಗಿ ನೀಡಿದ ಅರ್ಜಿಯ ಅಂಶವೇನೆಂದರೆ ದಿನಾಂಕ 02/01/2018 ರಂದು ರಾತ್ರಿ ನನ್ನ ತಮ್ಮ ಹೇಮಂತ್ ಕುಮಾರ್ ನ ಜಮೀನಿನಲ್ಲಿ ಜೋಳದ ಕಟ್ಟಿಗೆಯನ್ನು ಟ್ರ್ಯಾಕ್ಟರ್ ಗೆ ತುಂಬಲು ನಾನು ಮತ್ತು ಮಲ್ಲೇನಹಳ್ಳಿಯ ಉಮಾಶಂಕರ್ ಬಿನ್ ಲೇ, ನರಸೇಗೌಡ ರವರೊಂದಿಗೆ ರಾತ್ರಿ ಸುಮಾರು 08-30 ಗಂಟೆಯ ಸಮಯದಲ್ಲಿ ನಮ್ಮೂರಿನ ಪರಮೇಶ್ವರಯ್ಯ ರವರ ಜಮೀನಿನ ಪಕ್ಕ ಹಾದು ಹೋಗಿರುವ ಯಲ್ಲದಭಾಗಿ – ದಂಡಿನಶಿವರ (ಹಟ್ಟಿಹಳ್ಳಿ) ರಸ್ತೆಯ ಎಡಪಕ್ಕ ನಡೆದುಕೊಂಡು ಹೋಗುತ್ತಿರುವಾಗ್ಗೆ ಸೋಲಾರ್ ಪ್ಯಾಕ್ಟರಿ  ಕಡೆಯಿಂದ ನಮ್ಮ ಎದುರಿಗೆ ಒಂದು ಟ್ರ್ಯಾಕ್ಟರ್  ಟ್ರೈಲರ್ ಅನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದನು, ನಾವು ರಸ್ತೆಯ ಎಡಪಕ್ಕ ಹೋಗುತ್ತಿದ್ದಾಗ ಆ ಟ್ರಾಕ್ಟರ್ ನ ಟ್ರೈಲರ್ ನಲ್ಲಿ ಕಬ್ಬಿಣದ ಹ್ಯಾಗಲ್ ಗಳನ್ನು ಹಾಕಿಕೊಂಡು ಅಂದರೆ ಟ್ರೈಲರ್ ನಿಂದ ಹೊರಗೆ ಅಡ್ಡಲಾಗಿ ಹಾಕಿದ್ದ ಕಬ್ಬಿಣದ ಹ್ಯಾಗಲ್ ನನ್ನ ಎದೆಯ ಭಾಗಕ್ಕೆ ತಗಲಿದ ಪರಿಣಾಮ ನಾನು ಕೆಳಗೆ ಬಿದ್ದೆ, ನನ್ನ ಜೊತೆಯಲ್ಲಿದ್ದ ಉಮಾಶಂಕರ್ ಈತನ ಕೈ ನ ಹಸ್ತಕ್ಕೆ ಅಂದರೆ ಹಸ್ತ ಬಗ್ಗಿ ಕೈ ಮೇಲೆ ಎತ್ತಿದ್ದಾಗ ಆತನ ಕೈ ನ ಹಸ್ತಕೆ ತಗುಲಿ ಮೂಗೇಟಾಯಿತು, ನನಗೆ ನೋವು ಜಾಸ್ತಿ ಆಯಿತು, ಅಪಘಾತಪಡಿಸಿದ ಟ್ರಾಕ್ಟರ್ ಟ್ರೈಲರ್ ನೋಡಲಾಗಿ ನಂಬರ್ ಬರೆಸದ ಸೋನಾಲಿಕ ಕಂಪನಿಯ ಟ್ರಾಕ್ಟರ್ ಟ್ರೈಲರ್ ಆಗಿದ್ದು, ಅದನ್ನು ಸೋಲಾರ್ ಕಂಪನಿಯ ಕೆಲಸಕ್ಕೆ ನಮ್ಮೂರಿನ ಉದಯ್ ಕುಮಾರ್ (ರಾಜ) ಬಿನ್ ಲೇ ಮರಿಬಸವಯ್ಯ ಈತನು ಓಡಿಸುತ್ತಿದ್ದು,ನನಗೆ ಅಪಘಾತ ಪಡಿಸಿದಾಗಲೂ ಈತನೇ ಚಾಲಕನಾಗಿದ್ದನು, ನನಗೆ ನೋವು ಜಾಸ್ತಿಯಾದ ಕಾರಣ ದಂಡಿನಶಿವರ ಸರ್ಕಾರಿ ಆಸ್ಪತ್ರೆಗೆ  ಬಂದು ವೈದ್ಯರಿಲ್ಲದ ಕಾರಣ ಸಿಸ್ಟರ್ ಬಳಿ ಪ್ರಥಮ ಚಿಕಿತ್ಸೆ ಪಡೆದು ಮನೆಗೆ ಹೋದೆ, ನಂತರ ಮಾರನೇ ದಿನ ನನಗೆ ನೋವು ಜಾಸ್ತಿಯಾದ ಕಾರಣ ತುರುವೇಕೆರೆ ಸರ್ಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದಿರುತ್ತೇನೆ, ಉಮಾಶಂಕರ್ ಈತನಿಗೆ ಮೂಗೇಟಾಗಿದ್ದು, ಈತನು ಯಾವುದೇ ಚಿಕಿತ್ಸೆ ಪಡೆದಿರುವುದಿಲ್ಲ. ರಾತ್ರಿವೇಳೆಯಲ್ಲಿ ಟ್ರೈಲರ್ ಗೆ ಕಬ್ಬಿಣದ ಹ್ಯಾಂಗಲ್ ಹಾಕಿಕೊಂಡು ಹ್ಯಾಂಗಲ್ ಇರುವಿಕೆಯ ಬಗ್ಗೆ ಹ್ಯಾಂಗಲ್ ಬಳಿ ಯಾವುದೇ ಲೈಟ್ ಹಾಕದೆ, ಅತಿವೇಗವಾಗಿ ಚಲಾಯಿಸಿಕೊಂಡು ಬಂದು ಟ್ರೈಲರ್ ನಲ್ಲಿದ್ದ ಕಬ್ಬಿಣದ ಹ್ಯಾಂಗಲ್ ನಿಂದ ನನಗೆ ತಗುಲಿಸಿ ಅಪಘಾತ ಪಡಿಸಿರುವ ಮೇಲ್ಕಂಡ ಟ್ರಾಕ್ಟರ್ ಟ್ರೈಲರ್ ಚಲಾಕನಾದ ಉಮಾಶಂಕರ್ @ ರಾಜ ಈತನ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರುತ್ತೇನೆ, ಮತ್ತು ನಾನು ತುರುವೇಕೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದೇನೆಂತ ಇತ್ಯಾದಿಯಾಗಿ ನೀಡಿದ ದೂರನ್ನು ಸ್ವೀಕರಿಸಿ ಈ ಪ್ರಕರಣ ದಾಖಲಿಸಿರುತ್ತೆ.

 

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 34 guests online
Content View Hits : 302184