lowborn ಅಪರಾಧ ಘಟನೆಗಳು 05-01-18 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ. ದಿನಾಂಕ : 10-07-2018   ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 09-07-2018 ಕೊಲೆ ಆರೋಪಿಗಳ ಬಂಧನ ******* ದಿನಾಂಕ 04.07.2018 ರಂದು... >>   ಪತ್ರಿಕಾ ಪ್ರಕಟಣೆ ದಿನಾಂಕ : 07-07-2018. ಪೂರ್ವಾನುಮತಿ ಪಡೆಯದೇ ಹೆದ್ದಾರಿ ತಡೆ ನಡೆಸಿ,... >> ದಿನಾಂಕ.03.07.2018. ಪತ್ರಿಕಾ ಪ್ರಕಟಣೆ ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ 11 ಲಕ್ಷ 70 ಸಾವಿರ ಬೆಲೆ ಬಾಳುವ ಚಿನ್ನ-ಬೆಳ್ಳಿ  ಹಾಗೂ ಮೊಬೈಲ್‌‌‌... >>   ಪತ್ರಿಕಾ ಪ್ರಕಟಣೆ. ತುಮಕೂರು ಜಿಲ್ಲಾ ಪೊಲೀಸ್, ತುಮಕೂರು. ಕೋರಾ ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 27.06.2018 ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಸಾರ್ವಜನಿಕರ... >> ಪತ್ರಿಕಾ ಪ್ರಕಟಣೆ ದಿನಾಂಕ:- 23/06/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಖನ್ನ... >> ಪತ್ರಿಕಾ ಪ್ರಕಟಣೆ ದಿನಾಂಕ: 21-06-2018. ಸುಲಿಗೆಕೋರರ ಬಂಧನ: ದಿನಾಂಕ:18-06-2018 ರಂದು... >>   ಪೊಲೀಸ್ ಪ್ರಕಟಣೆ ತುಮಕೂರು ಜಿಲ್ಲಾ ಪೊಲೀಸ್ ಪ್ರಕಟಣೆ   ಆತ್ಮೀಯ ನಾಗರೀಕರಲ್ಲಿ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ಅಪರಾಧ ಘಟನೆಗಳು 05-01-18

ಕುಣಿಗಲ್ ಪೊಲೀಸ್ ಠಾಣೆ ಮೊ.ಸಂ07/2018   ಕಲಂ; 279, 304(ಎ) ಐಪಿಸಿ )  

ದಿನಾಂಕ: 04/01/2018 ರಂದು ರಾತ್ರಿ 11-00 ಗಂಟೆ ಸಮಯದಲ್ಲಿ ಈ ಕೇಸಿನ ಪಿರ್ಯಾದಿ ಮಧುಸೂದನ್ ಬಿನ್  ಜೆ ಜಗದೀಶ ರಾಜ್, 23 ವರ್ಷ, ಅರಸು ಜನಾಂಗ, ಗೌರಿಕೊಪ್ಪಲು ಬಡಾವಣೆ, ಹಾಸನ ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ  ಅಂಶವೇನೆಂದರೆ,  ದಿನಾಂಕ: 04/01/2018 ರಂದು ಕೆ.ಎ-34-5903 ನೇ ನಂಬರಿನ ಹಾಸನ ಟೌನ್ ಹೇಮಾವತಿ ಆಸ್ಪತ್ರೆಯ ತುರ್ತುವಾಹನದಲ್ಲಿ ಹಾಸನ ಸರ್ಕಾರಿ  ಆಸ್ಪತ್ರೆಯಿಂದ ರೋಗಿಯನ್ನು ಪಿರ್ಯಾದಿ ತಮ್ಮನಾದ ಮಧೂಸೂದನ್ ಜೆ ರವರು ಹಾಸನದಿಂದ ಬೆಂಗಳೂರು ನಿಮಾನ್ಸ್  ಆಸ್ಪತ್ರೆಗೆ ಕರೆದುಕೊಂಡು ಹೋಗಿ ಬಿಟ್ಟು ವಾಪಸ್ ಹಾಸನಕ್ಕೆ ಬರಲು ಸದರಿ ವಾಹನವನ್ನು  ಚಾಲನೆ ಮಾಡಿಕೊಂಡು ನೆಲಮಂಗಲದ ಮೂಲಕ ಎನ್.ಹೆಚ್-75 ರಸ್ತೆಯಲ್ಲಿ ಚಾಲನೆ ಮಾಡಿಕೊಂಡು ಹಾಸನದ ಕಡೆಗೆ ಬರುತ್ತಿರುವಾಗ ಕುಣಿಗಲ್ ತಾಲ್ಲೊಕು ಹೇರೂರು ಗ್ರಾಮದ ಸಮೀಪ ಎನ್. ಹೆಚ್-75 ರಸ್ತೆಯಲ್ಲಿ   ಮದ್ಯಾಹ್ನ ಸುಮಾರು 12-20 ಗಂಟೆ ಸಮಯದಲ್ಲಿ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆಯ ಪಕ್ಕದ ಡಿವೈಡರ್ ಗೆ ಡಿಕ್ಕಿ ಹೊಡೆಸಿದ್ದರಿಂದ ವಾಹನ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಎಡಭಾಗದ ತಗ್ಗಿಗೆ  ವಾಹನವು ಉರುಳಿಬಿದ್ದು, ಪಿರ್ಯಾದಿ ತಮ್ಮನಾದ ಮದನ್ ಜೆ ರವರಿಗೆ ಕೈಕಾಲುಗಳು  ಮತ್ತು ತಲೆ ಹಾಗೂ ಇತರೆ ಕಡೆಗಳಿಗೆ  ಬಲವಾದ ಪೆಟ್ಟುಗಳು ಬಿದ್ದು,  ರಕ್ತಗಾಯಗಳಾಗಿದ್ದು, ಅಲ್ಲಿದ್ದ ಸಾರ್ವಜನಿಕರು ತುರ್ತುವಾಹನದಲ್ಲಿ ಪಿರ್ಯಾದಿ ತಮ್ಮನನ್ನು ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ಕಳಿಸಿಕೊಟ್ಟಿದ್ದು, ಅಲ್ಲಿನ ವೈದ್ಯರು ಪಿರ್ಯಾದಿ ತಮ್ಮನಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಆದಿಚುಂಚನಗಿರಿ ಆಸ್ಪತ್ರೆಗೆ ಕಳುಹಿಸಿರುತ್ತಾರೆ. ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ  ಪಿರ್ಯಾದಿ ತಮ್ಮ ಮದನ್ ಜೆ ರವರು  ಮದ್ಯಾಹ್ನ 3-20 ಗಂಟೆ ಸಮಯದಲ್ಲಿ ಮೃತಪಟ್ಟಿರುತ್ತಾರೆ. ಮತ್ತು ಅವರ ಮೃತ ದೇಹವು ಆದಿಚುಂಚನಗಿರಿ ಆಸ್ಪತ್ರೆಯ ಶವಾಗಾರದಲ್ಲಿ ಇರುತ್ತದೆ, ವಿಚಾರ ತಿಳಿದು ಪಿರ್ಯಾದಿ ದಿನಾಂಕ: 04/01/2018 ರಂದು ರಾತ್ರಿ ಠಾಣೆಗೆ ಹಾಜರಾಗಿ ಮುಂದಿನ ಕ್ರಮ ಜರುಗಿಸಬೇಕೆಂತ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸರುತ್ತೆ.

ಗುಬ್ಫ್ಬಿ ಪೊಲೀಸ್ ಠಾಣೆ ಮೊ.ಸಂ 04/2018 ಕಲಂ 279, 337, 304(ಎ)  ಐಪಿಸಿ

ದಿನಾಂಕ;04/01/2018 ರಂದು ಬೆಳಿಗ್ಗೆ 11-00 ಗಂಟೆ ಸಮಯದಲ್ಲಿ ಈ ಕೇಸಿನ ಪಿರ್ಯಾದಿ ಸುಮ ಕೋಂ ಬಸವರಾಜು  ಬೆಳಗುಂಬ ತುಮಕೂರು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ದಿನಾಂಕ;03.01.18 ರಂದು  ಸಂಜೆ 5-15 ಗಂಟೆ ಸಮಯದಲ್ಲಿ  ಪಿರ್ಯಾದಿ ಸ್ನೇಹಿತರಾದ  ನಾಗರಾಜು  ಬಿನ್ ಗಂಗಣ್ಣ ಮತ್ತು ಜಯಣ್ಣ ಬಿನ್ ಕೆಂಪನರಸಯ್ಯ ರವರೊಂದಿಗೆ  ಕುಂದೂರು ಗ್ರಾಮದಲ್ಲಿ ತೆಂಗಿನ ಕಾಯಿಗಳನ್ನು ತುಂಬಿಕೊಂಡು  ನಾಗರಾಜುರವರ  ಬಾಬ್ತು ಲಗೇಜ್ ಆಟೋ ಕೆ.ಎ-06 ಎಎ-1435 ನೇ ಆಟೋದಲ್ಲಿ ನಾಗರಾಜುರವರು ಚಾಲಕರಾಗಿ  ಅವರೊಂದಿಗೆ  ಪಿರ್ಯಾದಿ ಗಂಡ ಬಸವರಾಜು  ತುಮಕೂರಿನಿಂದ ಸಂಜೆ 4-30 ಗಂಟೆ ಸಮಯದಲ್ಲಿ  ಹೊರಟು  ಎನ್ ಹೆಚ್ 206 ರಸ್ತೆಯಲ್ಲಿ  ಗುಬ್ಬಿ ಕಡೆಗೆ  ಬರುವಾಗ  ಹೊಸಪಾಳ್ಯ  ಗೇಟಿನ ಹತ್ತಿರ ಓಂ ಪ್ಯಾಲೆಸ್ ಕಲ್ಯಾಣ ಮಂಟಪದ  ಹತ್ತಿರ  ರಸ್ತೆಯಲ್ಲಿ  ಬರುವಾಗ ಸದರಿ ಆಟೋವನ್ನು  ಚಾಲಕನು ಅತೀವೇಗ ಮತ್ತು ಅಜಾಗರೂಕತೆಯಿಂದ  ಓಡಿಸಿಕೊಂಡು ಬರುವಾಗ  ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಯ ಮರಕ್ಕೆ ಡಿಕ್ಕಿ ಹೊಡೆಸಿರುತ್ತಾರೆ ಎಂದು ದೂರವಾಣಿ ಮುಖಾಂತರ  ಪಿರ್ಯಾದಿಗೆ ವಿಚಾರ ತಿಳಿಸಿದರು. ಈ ಅಪಘಾತದಿಂದ  ಪಿರ್ಯಾದಿ ಗಂಡ  ಬಸವರಾಜು ರವರು ಸ್ಥಳದಲ್ಲೇ ಮೃತಪಟ್ಟವರನ್ನು ಗುಬ್ಬಿ ಸಕರ್ಾರಿ ಆಸ್ಪತ್ರೆಯ ಶವಗಾರದಲ್ಲಿ  ಇಟ್ಟಿರುತ್ತಾರೆ.  ಪಿರ್ಯಾದಿ ಗಂಡನೊಂದಿಗೆ  ಇದ್ದ  ನಾಗರಾಜು ಮತ್ತು ಜಯಣ್ಣರವರಿಗೂ ಸಹ ರಕ್ತಗಾಯಗಳಾಗಿರುತ್ತವೆ.  ಇವರನ್ನು ತುಮಕೂರು ಜಿಲ್ಲಾ ಸರ್ಕಾರಿ  ಆಸ್ಪತ್ರೆಗೆ  ಚಿಕಿತ್ಸೆಗೆ ದಾಖಲಿಸಿರುತ್ತಾರೆ. ಅಪಘಾತವನ್ನುಂಟು ಮಾಡಿದ ಕೆ.ಎ-06 ಎಎ-1435 ನೇ ಲಗೇಜ್ ಆಟೋ ಚಾಲಕನ ಮೇಲೆ ಕಾನೂನು ಕ್ರಮ ಕೈಗೊಳ್ಳಿ ಇತ್ಯಾದಿಯಾಗಿ ನೀಡಿದ ದೂರಿನ  ಮೇರೆಗೆ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರತ್ತೆ.

ಹುಳಿಯಾರು ಪೊಲೀಸ್ ಠಾಣಾ ಮೊ.ನಂ 02/2018. ಕಲಂ 279, 337 ಐಪಿಸಿ & 134 (ಎ&ಬಿ) ಐ.ಎಂ.ವಿ ಆಕ್ಟ್.

ದಿನಾಂಕ 04/01/2018 ರಂದು ಸಂಜೆ 04-30 ಗಂಟೆಗೆ ಪಿರ್ಯಾದಿ ಚಂದ್ರಹಾಸ ಬಿನ್ ತಿಮ್ಮಯ್ಯ, 33 ವರ್ಷ, ದಬ್ಬಗುಂಟೆ, ಹುಳಿಯಾರು ಹೋಬಳಿ, ಚಿಕ್ಕನಾಯಕನಹಳ್ಳಿ ತಾಲ್ಲೂಕು ಇವರು ಠಾಣೆಗೆ ಹಾಜರಾಗಿ ನೀಡಿದ ದೂರು ಏನೆಂದರೆ, ದಿನಾಂಕ 03/10/2017 ರಂದು ರಾತ್ರಿ ಸುಮಾರು 08-00 ಗಂಟೆ ಸಮಯದಲ್ಲಿ ದಬ್ಬಗುಂಟೆ ಗ್ರಾಮದಿಂದ 01 ಕಿಲೋಮೀಟರ್ ದೂರದಲ್ಲಿ ದಬ್ಬಗುಂಟೆ-ಮರೆನಡು ಮದ್ಯೆ ರಂಗಧಾಮಯ್ಯನವರ ಹೊಲದ ಹತ್ತಿರ ನಾನು ನನ್ನ ಅಣ್ಣ ಲೋಕೇಶ್ ಬಿನ್ ತಿಮ್ಮಯ್ಯ, ಚಂದ್ರನಾಯ್ಕ ಬಿನ್ ಕೃಷ್ಣನಾಯ್ಕ ಮೂರು ಜನರೂ ಸೇರಿ ಮರೆನಡು ಗ್ರಾಮಕ್ಕೆ ಹೋಗಿ ಸ್ನೇಹಿತನ ಮನೆಯಲ್ಲಿ ಊಟ ಮುಗಿಸಿಕೊಂಡು ರಸ್ತೆಯ ಎಡಭಾಗದಲ್ಲಿ ನಡೆದುಕೊಂಡು ಬರುತ್ತಿರುವಾಗ, ಅದೇ ಮಾರ್ಗವಾಗಿ ಎ.ಪಿ-29 ಎ.ಕೆ-1235 ಹೊಂಡಾ ಪ್ಯಾಷನ್ ಪ್ರೋ ಬೈಕ್ ನಲ್ಲಿ ಎದುರುಗಡೆಯಿಂದ ಬಂದ ಹುಯಲದೊರೆ ಗ್ರಾಮದ ಬಳಿ ಸೋಲಾರ್ ಫ್ಯಾಕ್ಟರಿಯ ಸೆಕ್ಯೂರಿಟಿಯಾಗಿ ಕೆಲಸ ಮಾಡುತ್ತಿರುವ ಯೋಗೀಶ್ ಬಿನ್ ಹನುಮಬೋವಿ ಎಂಬುವವನು ಅತಿವೇಗ ಮತ್ತು ಅಜಾಗರೂಕತೆಯಿಂದ ತನ್ನ ಬೈಕನ್ನು ಓಡಿಸಿಕೊಂಡು ಬಂದು ನನ್ನ ಅಣ್ಣ ಲೋಕೇಶ್ ಮತ್ತು ಚಂದ್ರನಾಯ್ಕ ರವರಿಗೆ ಡಿಕ್ಕಿಹೊಡೆಸಿ, ಬೈಕ್ ಸವಾರ ಯೋಗೀಶ್ ಸ್ಥಳದಿಂದ ನಾಪತ್ತೆಯಾದನು. ಆಗ ನಾನು ಇಬ್ಬರನ್ನು ನೋಡಲಾಗಿ ನನ್ನ ಅಣ್ಣ ಲೋಕೇಶನಿಗೆ ಬಲಗಾಲು ಮೂಳೆ ಮುರಿದಿತ್ತು, ಕೈಗೆ ತರಚಿದ ಗಾಯಗಳಾಗಿದ್ದವು. ಚಂದ್ರನಾಯ್ಕನಿಗೆ ಬಲಗಾಲು ಮೂಳೆ ಮತ್ತು ಕಾಲು ಬೆರಳುಗಳು ಮುರಿದಿತ್ತು. ತಕ್ಷಣ ನಾನು ನಮ್ಮೂರಿನ ರವಿಕುಮಾರ್ ರವರಿಗೆ ವಿಷಯ ತಿಳಿಸಿದಾಗ 108 ವಾಹನಕ್ಕೆ ಫೋನ್ ಮಾಡಿ ಕರೆಸಿದರು. ಆಗ ನಾನು ಸ್ನೇಹಿತರೊಂದಿಗೆ ಇಬ್ಬರನ್ನು ಶಿರಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ನಂತರ ವೈದ್ಯರ ಸಲಹೆ ಮೇರೆಗೆ ತುಮಕೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ನನ್ನ ಅಣ್ಣ ಲೋಕೇಶ್ ರವರ ಕಾಲಿಗೆ ತುಮಕೂರು ಸರ್ಕಾರಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಿರುತ್ತಾರೆ. ವೈದ್ಯರ ಸಲಹೆ ಮೇರೆಗೆ ಚಂದ್ರನಾಯ್ಕ ರವರಿಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಕಾಲಿನ ಶಸ್ತ್ರ ಚಿಕಿತ್ಸೆ ಮಾಡಿಸಿರುತ್ತೆ. ಅವರನ್ನು ನೋಡುವವರು ಯಾರು ಇಲ್ಲದ ಕಾರಣ  ಶಸ್ತ್ರ ಚಿಕಿತ್ಸೆಯಾದ ನಂತರ ಆಸ್ಪತ್ರೆಯಿಂದ ಬಂದು ಈ ದಿನ ತಡವಾಗಿ ದೂರು ನೀಡುತ್ತಿದ್ದೇನೆ. ಆದ್ದರಿಂದ ನನ್ನ ಅಣ್ಣ ಲೋಕೇಶ್ ಮತ್ತು ಚಂದ್ರನಾಯ್ಕ ರವರಿಗೆ ಡಿಕ್ಕಿ ಹೊಡೆಸಿದ ಚಾಲಕನ ವಿರುದ್ದ ಕಾನೂನು ಕ್ರಮ ಕೈಗಳ್ಳಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಸಿರುತ್ತೆ.

 

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 49 guests online
Content View Hits : 302201