lowborn Crime Incidents 30-11-17 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ : 20-07-18 ಸ್ಮಾರ್ಟ್ ಸಿಟಿ ಅಧಿಕಾರಿಗಳೆಂದು ವಂಚಿಸಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 20-07-2018       ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 09-07-2018 ಕೊಲೆ ಆರೋಪಿಗಳ ಬಂಧನ ******* ದಿನಾಂಕ 04.07.2018 ರಂದು... >>   ಪತ್ರಿಕಾ ಪ್ರಕಟಣೆ ದಿನಾಂಕ : 07-07-2018. ಪೂರ್ವಾನುಮತಿ ಪಡೆಯದೇ ಹೆದ್ದಾರಿ ತಡೆ ನಡೆಸಿ,... >> ದಿನಾಂಕ.03.07.2018. ಪತ್ರಿಕಾ ಪ್ರಕಟಣೆ ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ 11 ಲಕ್ಷ 70 ಸಾವಿರ ಬೆಲೆ ಬಾಳುವ ಚಿನ್ನ-ಬೆಳ್ಳಿ  ಹಾಗೂ ಮೊಬೈಲ್‌‌‌... >>   ಪತ್ರಿಕಾ ಪ್ರಕಟಣೆ. ತುಮಕೂರು ಜಿಲ್ಲಾ ಪೊಲೀಸ್, ತುಮಕೂರು. ಕೋರಾ ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 27.06.2018 ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಸಾರ್ವಜನಿಕರ... >> ಪತ್ರಿಕಾ ಪ್ರಕಟಣೆ ದಿನಾಂಕ:- 23/06/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಖನ್ನ... >> ಪತ್ರಿಕಾ ಪ್ರಕಟಣೆ ದಿನಾಂಕ: 21-06-2018. ಸುಲಿಗೆಕೋರರ ಬಂಧನ: ದಿನಾಂಕ:18-06-2018 ರಂದು... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

Crime Incidents 30-11-17

ಪಟ್ಟನಾಯಕನಹಳ್ಳಿಪೊಲೀಸ್ ಠಾಣಾ ಮೊ ನಂ 130/17 ಕಲಂ 87ಕೆ ಪಿ ಆಕ್ಟ್

ದಿನಾಂಕ:29/11/2017 ರಂದು ಮದ್ಯಾಹ್ನ 03:00ಗಂಟೆ ಸಮಯದಲ್ಲಿ ಪಿರ್ಯಾದಿ  ಹೆಚ್ ವಿ ಸುದರ್ಶನ್ ಸಿ.ಪಿ.ಐ  ಶಿರಾ ರವರು ಶಿರಾ ಗ್ರಾಮಾಂತರ ವೃತ್ತ ಕಛೇರಿಯಲ್ಲಿದ್ದಾಗ ಪಟ್ಟನಾಯಕನಹಳ್ಳಿ ಪೊಲೀಸ್ ಠಾಣಾ ಸರಹದ್ದಿನ ಕರಿದಾಸರಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಪಾಠ ಶಾಲೆಯ  ಹಿಂಭಾಗದ ಸಾರ್ವಜನಿಕ ಸ್ಥಳದಲ್ಲಿ ಯಾರೊ ಆಸಾಮಿಗಳು ದುಂಡಾಕಾರವಾಗಿ ಕುಳಿತುಕೊಂಡು ಹಣವನ್ನು ಪಣವಾಗಿಕಟ್ಟಿಕೊಂಡು ಕಾನೂನು  ಬಾಹಿರ ಇಸ್ಪೀಟ್ ಜೂಜಾಟ ಆಡುತ್ತಿದ್ದರೆಂತ  ಖಚಿತ ಬಾತ್ಮೀ ಬಂದ ಮೇರೆಗೆ ನಾನು ದಾಳಿಮಾಡಲು ಸಾಯಂಕಾಲ 04:00 ಗಂಟೆಗೆ ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದುಕೊಂಡು ಪಟ್ಟನಾಯಕಹಳ್ಳಿ ಪೊಲೀಸ್ ಠಾಣೆಯ ಪಿ ಎಸ್ ಐ ಚಂದ್ರಶೇಖರ್, ಸಿಬ್ಬಂದಿಗಳು ಮತ್ತು ಪಂಚಾಯ್ತುದಾರರುಗಳನ್ನು ಇಲಾಖಾ ಜೀಪಿನಲ್ಲಿ ಕರೆದುಕೊಂಡು  ಹೋಗಿ ಮೇಲ್ಕಂಡ  ಸ್ಥಳದ  ಸ್ವಲ್ಪ ದೂರದ ಮರೆಯಲ್ಲಿ ಜೀಪನ್ನು ನಿಲ್ಲಿಸಿ ಜೀಪಿನಿಂದ  ಇಳಿದು ನೋಡಲಾಗಿ ಯಾರೊ ಆಸಾಮಿಗಳು  ಸ್ಥಳದಲ್ಲಿ ದುಂಡಾಕಾರವಾಗಿ ಕುಳಿತುಕೊಂಡಿದ್ದ  ಇಸ್ಪೀಟ್ ಎಲೆಗಳ ಸಹಾಯದಿಂದ  ಕಾನೂನು ಬಾಹಿರ  ಇಸ್ಪೀಟ್ ಜೂಜಾಟ ಆಡುತ್ತಿದ್ದ ಆಸಾಮಿಗಳ ಮೇಲೆ ಪಂಚರ ಸಮಕ್ಷಮ  ನಾನು  ಸಿಬ್ಬಂದಿಗಳು ದಾಳಿ ಮಾಡಿ ಆಸಾಮಿಗಳನ್ನು ಹಿಡಿದು ಅವರುಗಳ ಹೆಸರು ಮತ್ತು ವಿಳಾಸ ಕೇಳಲಾಗಿ 1)ಮುದ್ದರಾಜು ಬಿನ್  ಮಾಹದೇವಪ್ಪ , ಸುಮಾರು 42ವರ್ಷ, ಕುಂಚಿಟಿಗರು, ಜಿರಾಯ್ತಿ, ಕರಿದಾಸರಹಳ್ಳಿ ಗ್ರಾಮ, ಶಿರಾ ತಾ  2) ಕರಿಯಣ್ಣ ಬಿನ್ ಚಿಕ್ಕಣ್ಣ,47ವರ್ಷ, ವಕ್ಕಲಿಗರು, ಜಿರಾಯ್ತಿ, ಕರಿದಾಸರಹಳ್ಳಿ ಗ್ರಾಮ, ಶಿರಾ ತಾ 3)ರಂಗನಾಥ ಬಿನ್ ಲೇಟ್ ರಂಗಣ್ಣ, ಸುಮಾರು 35ವರ್ಷ, ವಕ್ಕಲಿಗರು, ಜಿರಾಯ್ತಿ, ಕರಿದಾಸರಹಳ್ಳಿ ಗ್ರಾಮ, ಶಿರಾ ತಾ    4) ಶ್ರೀನಿವಾಸ  ಬಿನ್ ಗೋವಿಂದಪ್ಪ, 39ವರ್ಷ, ವಕ್ಕಲಿಗರು, ಜಿರಾಯ್ತಿ, ಕರಿದಾಸರಹಳ್ಳಿ ಗ್ರಾಮ, ಶಿರಾ ತಾ 5) ಶಿವಣ್ಣ ಬಿನ್  ಲೇಟ್  ತಾಡಪ್ಪ, ಸುಮಾರು 35ವರ್ಷ, ಛಲವಾದಿ ಜನಾಂಗ, ಕೂಲಿಕೆಲಸ, ಕರಿದಾಸರಹಳ್ಳ  ಗ್ರಾಮ, ಶಿರಾ ತಾ 6) ರಾಮಣ್ಣ  ಬಿನ್ ಲೇಟ್ ಸಂಜೀವಪ್ಪ, ಸುಮಾರು 70ವರ್ಷ, ಮಡಿವಾಳ ಜನಾಂಗ, ಕರಿದಾಸರಹಳ್ಳಿ  ಗ್ರಾಮ, ಶಿರಾ ತಾಲ್ಲೋಕ್ ಎಂತ ತಿಳಿಸಿದ್ದು, ಆಕಾಡದಲ್ಲಿ ಚಲ್ಲಾಪಿಲ್ಲಿಯಾಗಿ ಬಿದ್ದಿದ್ದ ಹಣವನ್ನು ಏಣಿಸಲಾಗಿ 8140/-ರೂ ನಗದು ಹಣ, 52  ಇಸ್ಪೀಟ್ ಎಲೆಗಳು,  2 ಸ್ಯಾಮಸಂಗ್ ಮೊಬೈಲ್ , 1 ಇಂಟೆಕ್ಸ್  ಮತ್ತು  1 ಜಿನೆಕ್ಸ್ ಮೊಬೈಲ್  ಮತ್ತು  ಒಂದು ಹಳೇಯ  ನ್ಯೂಸ್ ಪೇಪರ್ ಅನ್ನು ಸಂಜೆ 05:30 ಗಂಟೆಯಿಂದ ಸಂಜೆ 06:30ಗಂಟೆಯವರೆಗೆ ಪಂಚನಾಮೆ ಬರೆದು ಪಂಚನಾಮೆ ಮೂಲಕ ಮಾಲುಗಳನ್ನು ,ಆಸಾಮಿಗಳನ್ನು ವಶಕ್ಕೆ ಪಡೆದು ರಾತ್ರಿ 07:30 ಗಂಟೆಗೆ ವಾಪಸ್ ಬಂದು  ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆಗೆ ಬಂದು   ಆಸಾಮಿಗಳನ್ನು ಮತ್ತು ಮಾಲುಗಳನ್ನು ನೀಡಿ ಮುಂದಿನ ಕ್ರಮ ಜರುಗಿಸಲು ಸೂಚಿಸಿದ್ದನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಮಿಡಿಗೇಶಿ ಪೊಲೀಸ್ ಠಾಣಾ ಮೊ.ಸಂ.106/2017, ಕಲಂ:279, 304(ಎ) ಐಪಿಸಿ.

ದಿನಾಂಕ:29/11/2017 ರಂದು ಮದ್ಯಾಹ್ನ 03:00 ಗಂಟೆಗೆ ಪಿರ್ಯಾದಿ ರಾಜಮ್ಮ ಕೋಂ ಶಿವರಾಮ, 24 ವರ್ಷ, ವಕ್ಕಲಿಗ ಜನಾಂಗ, ಜಿರಾಯ್ತಿ, ರೆಡ್ಡಿಹಳ್ಳಿ ಗ್ರಾಮ, ಮಿಡಿಗೇಶಿ  ಹೋಬಳಿ, ಮಧುಗಿರಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ಮೇಲ್ಕಂಡ ವಿಳಾಸದಲ್ಲಿ ನಾನು, ನನ್ನ ಗಂಡ ಶಿವರಾಮ ಹಾಗೂ ಒಂದೂವರೆ ವರ್ಷದ ನಮ್ಮ ಗಂಡು ಮಗು ಹಾಗೂ ನನ್ನ ಅತ್ತೆಯೊಂದಿಗೆ ವಾಸವಾಗಿರುತ್ತೆನೆ. ನನ್ನ ಗಂಡ ಶಿವರಾಮ ರವರು ಈ ದಿನ ಅಂದರೆ ದಿನಾಂಕ:29/11/2017 ರಂದು ಮದ್ಯಾಹ್ನ ಸುಮಾರು 01:30 ಗಂಟೆಯ ಸಮಯದಲ್ಲಿ ಕೆಲಸ ನಿಮಿತ್ತಾ ನಮ್ಮ ಊರಿಗೆ ಬಂದಿದ್ದ ತಾಡಿ ಗ್ರಾಮದ ವಾಸಿಯಾದ ಮಂಜುನಾಥ ಎಂಬುವರ ದ್ವಿ ಚಕ್ರ ವಾಹನದಲ್ಲಿ ಕೆಲಸ ನಿಮಿತ್ತಾ ಮಿಡಿಗೇಶಿಗೆ ಹೋಗಿ ಬರುತ್ತೇನೆಂತ ಮನೆಯಲ್ಲಿದ್ದ ನನಗೆ ಹೇಳಿ ಮಂಜುನಾಥ ರವರ ಬಾಬ್ತು ದ್ವಿಚಕ್ರ ವಾಹನದ ಹಿಂಬದಿಯಲ್ಲಿ ನನ್ನ ಗಂಡ ಶಿವರಾಮರವರು ಕುಳಿತುಕೊಂಡು ಮಿಡಿಗೇಶಿಗೆ ಬಂದರು. ನಮ್ಮ ಮನೆಯಿಂದ ನನ್ನ ಗಂಡ ಹೊರಟು ಬಂದ ಸುಮಾರು ಅರ್ಧ ಗಂಟೆಯ ನಂತರ ನಮ್ಮ ಗ್ರಾಮದ ಗ್ರಾಮ ಪಂಚಾಯ್ತಿ ಮೆಂಬರ್ ಆದ ರಾಜಣ್ಣ ಎಂಬುವರು ಪೋನ್ ಮಾಡಿ ನಾನು ಈ ದಿನ ಮದ್ಯಾಹ್ನ ಸುಮಾರು 02:00 ಗಂಟೆಯ ಸಮಯದಲ್ಲಿ ಕಸಾಪುರ ಗ್ರಾಮದ ಹತ್ತಿರವಿರುವ ಶನಿಮಹಾತ್ಮ ದೇವಸ್ಥಾನದ ಬಳಿ ಹುಣಸೆಗಿಡದ ಕೆಳಗೆ ಕುಳಿತ್ತಿದ್ದೆನು, ಅದೇ ಸಮಯಕ್ಕೆ ಕಸಾಪುರದ ಕಡೆಯಿಂದ ಮಿಡಿಗೇಶಿ ಕಡೆಗೆ ಹೋಗಲು ರೆಡ್ಡಿಹಳ್ಳಿ-ಮಿಡಿಗೇಶಿ ರಸ್ತೆಯಲ್ಲಿ ಬಂದ ಕೆಎ-64-ಎಲ್-5443 ನೇ ನಂಬರಿನ ದ್ವಿಚಕ್ರ ವಾಹನದ ಸವಾರನು ತನ್ನ ದ್ವಿಚಕ್ರ ವಾಹನವನ್ನು ಅತಿ ಜೋರಾಗಿ ಮತ್ತು ಅಡ್ಡಾದಿಡ್ಡಿಯಾಗಿ ಓಡಿಸಿಕೊಂಡು ಬಂದು ಹುಣಸೆ ಮರದ ಹತ್ತಿರ ರಸ್ತೆ ಪಕ್ಕವಿರುವ ಕಲ್ಲು ಗುಂಡಿಗೆ ಡಿಕ್ಕಿ ಹೊಡಿಸಿದ್ದರಿಂದ ಸದರಿ ದ್ವಿಚಕ್ರ ವಾಹನದ ಹಿಂಬದಿಯಲ್ಲಿ ಕುಳಿತಿದ್ದ ನಿನ್ನ ಗಂಡ ಶಿವರಾಮನು ಕೆಳಕ್ಕೆ ಅಂಗಾತವಾಗಿ ಬಿದ್ದನು. ಆಗ ಅಲ್ಲಿಯೇ ಇದ್ದ ನಾನು ಕೆಳಗೆ ಬಿದ್ದಿದ್ದ ನಿನ್ನ ಗಂಡನ ಬಳಿ ಹೋಗಿ ನೋಡಲಾಗಿ ಶಿವರಾಮನ ಮೂಗು, ಬಾಯಿ ಹಾಗೂ ಕಿವಿಗಳಲ್ಲಿ ರಕ್ತ ಬರುತ್ತಿತ್ತು. ಆಗ ನಾನು ಮತ್ತು ಸದರಿ  ದ್ವಿಚಕ್ರ ವಾಹನದ ಸವಾರ ಮಂಜುನಾಥ ಇಬ್ಬರೂ ಸೇರಿ ನಿನ್ನ ಗಂಡನನ್ನು ಉಪಚರಿಸುತ್ತಿದ್ದಾಗ ನಿನ್ನ ಗಂಡ ಶಿವರಾಮನು ಸ್ಥಳದಲ್ಲಿಯೇ ಮೃತಪಟ್ಟನು. ಆದ್ದರಿಂದ ನೀನು ಬೇಗ ಬಾ ಎಂತ ತಿಳಿಸಿದರು, ವಿಷಯ ತಿಳಿದ  ನಾನು ನಮ್ಮ ಗ್ರಾಮದ ದತ್ತಾತ್ರೆಯ ರವರ ಜೊತೆಯಲ್ಲಿ ಅಪಘಾತ ನಡೆದ ಸ್ಥಳಕ್ಕೆ ಹೋಗಿ ನೋಡಲಾಗಿ ವಿಚಾರ ನಿಜವಾಗಿತ್ತು. ಅಪಘಾತಪಡಿಸಿ ನನ್ನ ಗಂಡನ ಸಾವಿಗೆ ಕಾರಣನಾದ ಕೆಎ-64-ಎಲ್-5443 ನೇ ದ್ವಿಚಕ್ರ ವಾಹನದ ಸವಾರ ಮಂಜುನಾಥನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ಪಿರ್ಯಾದು ಅಂಶವಾಗಿರುತ್ತೆ.

 

ನಗರ ಸಂಚಾರಿ ಪೊಲೀಸ್ ಠಾಣೆ ಮೊ.ಸಂ 232/2017 ಕಲಂ 279, 304[A]   IPC 134(A)(B) 187 IMV ACT

 

ದಿನಾಂಕ 29-11-2017 ರಂದು ಪಿರ್ಯಾದಿ  ಶರತ್ ಬಿನ್ ಪಳನಿ  ಮರಳೂರುದಿನ್ನೆ  ತುಮಕೂರು ರವರು  ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನಂದರೆ ನನ್ನ ತಂದೆಯವರಾದ  ಬಿ ಪಳನಿ ರವರು ಪ್ರತಿ ನಿತ್ಯ  ಎ ಪಿ ಎಂ ಸಿ ಯಾರ್ಡ  ಗೆ ಕೂಲಿ ಕೆಲಸಕ್ಕೆ  ಹೋಗುತ್ತಿದ್ದರು    ಒಂದೊಂದು  ದಿನ  ಕೆಲಸ ಜಾಸ್ತಿ ಇದ್ದಾಗ  ಬೆಳಗಿನ ಜಾವ ಮನೆಗೆ ಬರುತ್ತಿದ್ದರು.  ಈ ದಿನ ದಿನಾಂಕ 29-11-2017  ರಂದು ಬೆಳಗ್ಗೆ 7-30 ಗಂಟೆ ಸಮಯದಲ್ಲಿ ನಾನು ಮನೆಯಲ್ಲಿರುವಾಗ್ಗೆ  ಬಟವಾಡಿ ಹತ್ತಿರದಿಂದ ಯಾರೋ ಒಬ್ಬರು ಸಾರ್ವಜನಿಕರು ಪೋನ್ ಮಾಡಿ ಬಟವಾಡಿ ಹತ್ತಿರ  ಎ ಪಿ  ಎಂ ಸಿ ಯಾರ್ಡ  ಎದುರಿನ  ಶಿರಾ ಕಡೆ ಹೋಗುವ  ಪ್ಲೈ ಓವರ್ ನ  ಎನ್ ಹೆಚ್ 48 ರಸ್ತೆಯಲ್ಲಿ  ನಿಮ್ಮ ತಂದೆಗೆ ಯಾವುದೋ ವಾಹನದದಿಂದ ಅಪಘಾತವಾಗಿ  ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ ತಕ್ಷಣ  ಬಾ ಎಂದು  ತಿಳಿಸಿದರು.  ತಕ್ಷಣ ನಾನು ನಮ್ಮ ಸಂಬಂದಿಕರು ಎಲ್ಲರೂ ಅಪಘಾತ  ಸ್ಥಳಕ್ಕೆ ಹೋಗಿ  ನೋಡಲಾಗಿ  ನನ್ನ ತಂದೆ ಬಿ. ಪಳನಿ 49 ವರ್ಷ ರವರಿಗೆ  ಯಾವುದೋ  ವಾಹನದಿಂದ ಅಪಘಾತವಾಗಿ  ಕಾಲು ಕೈ ಗಳು  ಮುಖಕ್ಕೆ  ಮೈ ಗೆ ತೀವ್ರವಾಗಿ ಪೆಟ್ಟು ಬಿದ್ದು  ಜಜ್ಜಿದಂತಾಗಿ  ತೀವ್ರ ರಕ್ತ ಸ್ರಾವವಾಗಿ  ಸ್ಥಳದಲ್ಲಿಯೇ  ಮೃತಪಟ್ಟಿರುವುದು ಕಂಡು ಬಂತು ಅಲ್ಲಿ ನೆರೆದಿದ್ದ ಸಾರ್ವಜನಿಕರಿಂದ ವಿಚಾರ ತಿಳಿಯಲಾಗಿ  ನನ್ನ ತಂದೆ  ಎ ಪಿ ಎಂ ಸಿ ಯಾರ್ಡ ನಲ್ಲಿ ಕೂಲಿ ಕೆಲಸ  ಮುಗಿಸಿಕೊಂಡು ಮದ್ಯ ರಾತ್ರಿ ವಾಪಸ್  ಮನೆಗೆ  ಬರಲೆಂದು ಇದೇ ಬಟವಾಡಿ ಎ ಪಿ  ಎಂ ಸಿ ಯಾರ್ಡ  ಎದುರಿನ  ಶಿರಾ ಕಡೆ ಹೋಗುವ  ಎನ್ ಹೆಚ್ 48  ಪ್ಲೈ ಓವರ್  ರಸ್ತೆಯನ್ನು   ದಾಟುತ್ತಿರುವ  ಸಮಯದಲ್ಲಿ  ಅದೇ ಸಮಯಕ್ಕೆ   ಬೆಂಗಳೂರು ಕಡೆಯಿಂದ ಬಂದ   ಯಾವುದೋ ಅಪರಿಚಿತ ವಾಹನವನ್ನು  ಅದರ ಚಾಲಕ ಅತೀ ವೇಗ   ಮತ್ತು ಅಜಾಗರೂಕತೆಯಿಂದ    ಓಡಿಸಿಕೊಂಡು ಬಂದು  ರಸ್ತೆ ದಾಟುತ್ತಿದ್ದ ನಮ್ಮ ತಂದೆಗೆ ಡಿಕ್ಕಿ ಹೊಡೆದು  ಅಪಘಾತಪಡಿಸಿ  ನಿಲ್ಲಿಸದೆ  ಹೊರಟು ಹೋಗಿರುತ್ತಾನೆ   ಹಾಗೂ  ಈ ಅಪಘಾತವು  ಈ ದಿನ  ದಿನಾಂಕ 29-11-2017 ರಂದು ಬೆಳಗಿನ ಜಾವ 4-00 ಗಂಟೆಯಿಂದ 5-00 ಗಂಟೆಯ ಮದ್ಯದಲ್ಲಿ ಕೆಲಸ  ಮುಗಿಸಿಕೊಂಡು ವಾಪಸ್ ಮನೆಗೆ  ಬರುವ ಸಮಯದಲ್ಲಿ  ಆಗಿರಬಹುದೆಂತ ತಿಳಿಯಿತು.  ನಂತರ  ಸ್ಥಳಕ್ಕೆ ಬಂದ  ಟ್ರಾಪಿಕ್  ಪೊಲೀಸ್ ರವರು   ನನ್ನ ತಂದೆ   ಶವವನ್ನು  ಜಿಲ್ಲಾ  ಸರ್ಕಾರಿ ಆಸ್ವತ್ರೆಗೆ   ತೆಗೆದುಕೊಂಡು ಹೋದರು  ನಂತರ ನಾನು ನಮ್ಮ ಸಂಬಂದಿಕರಿಗೆಲ್ಲಾ ಮಾಹಿತಿ  ತಿಳಿಸಿ  ಠಾಣೆಗೆ ಬಂದು  ಈ ನನ್ನ ದೂರನ್ನು  ನೀಡುತ್ತಿದ್ದೇನೆ.  ನನ್ನ ತಂದೆಯವರ  ಸಾವಿಗೆ  ಕಾರಣವಾದ  ಯಾವುದೋ  ಅಪರಿಚಿತ ವಾಹನವನ್ನು ಹಾಗೂ  ಚಾಲಕನನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿರುತ್ತೇನೆ.    ಎಂತ  ನೀಡಿದ ದೂರನ್ನು  ಪಡೆದು ಪ್ರಕರಣ ದಾಖಲು ಮಾಡಿ ಪ್ರ ವ ವರದಿಯನ್ನು ಮಾನ್ಯ ಘನ ನ್ಯಾಯಾಲಯಕ್ಕೂ   ನಖಲುಗಳನ್ನು ತುರ್ತು ವರದಿಯೊಂದಿಗೆ ಇಲಾಖಾ  ಮೇಲಾಧಿಕಾರಿಗಳಿಗೂ ಸಲ್ಲಿಸಿಕೊಂಡಿರುತ್ತೆ

ವೈ ಎನ್  ಹೊಸಕೋಟೆ  ಪೊಲೀಸ್ ಠಾಣಾ ಮೊ. ನಂ 97/2017  ಕಲಂ:279,337, 304(a) IPC

ದಿನಾಂಕ:29/11/2017 ರಂದು ಬೆಳಿಗ್ಗೆ 10:00 ಗಂಟೆಗೆ ಪಿರ್ಯಾದಿ ನಾಗರಾಜು ಬಿನ್ ಫಕೀರಪ್ಪ, 38 ವರ್ಷ, ನಾಯಕ ಜನಾಂಗ, ಜಿರಾಯ್ತಿ ಕೆಲಸ ನೀಲಮ್ಮನಹಳ್ಳಿ ಗ್ರಾಮ, ಪಾವಗಡ ತಾ|| ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ  ದಿನಾಂಕ:28/11/2017 ರಂದು ಬೆಳಿಗ್ಗೆ  ನಮ್ಮ ತಂದೆಯ ಅಣ್ಣನಾದ ಲೇ|| ದೊಡ್ಡ ಓಬಳಪ್ಪ  ರವರ ಮಗ ಸುಬ್ಬರಾಯ ಮತ್ತು ನಮ್ಮ ಗ್ರಾಮದ   ರಂಗಪ್ಪ ಬಿನ್ ಹನುಮಂತರಾಯಪ್ಪ ಇಬ್ಬರೂ ಕೂಲಿಕೆಸಲಕ್ಕೆಂದು  ತನ್ನ ಬಾಬ್ತು ಕೆ.ಎ-64-ಈ-8322ನೇ ಹಿರೋ ಹೆಚ್.ಎಪ್. ಡಿಲಕ್ಸ್ ದ್ವಿ ಚಕ್ರ ವಾಹನದಲ್ಲಿ ಹೋಗಿದ್ದರು, ದಿನಾಂಕ:28/11/2017 ರಂದು ಸಂಜೆ 6:45 ಗಂಟೆ ಸಮಯದಲ್ಲಿ  ನಾನು ನಮ್ಮ ಮನೆಯ ಬಳಿ ಇರುವಾಗ್ಗೆ ಯಾರೋ ನನಗೆ ಪೋನ್ ಮಾಡಿ ನಿನ್ನ ದೊಡ್ಡಪ್ಪನ ಮಗ ಸುಬ್ಬರಾಯನಿಗೆ ಸೂಲನಾಯಕನಹಳ್ಳಿ ಗ್ರಾಮದ ಬಳಿ  ಅಪಘಾತವಾಗಿದೆ ಬನ್ನಿ ಎಂತ ತಿಳಿಸಿದ್ದು , ಆಗ ನಾನು ಮತ್ತು ನಮ್ಮ ಗ್ರಾಮದ ನಾಗಭೂಷಣ ರವರುಗಳು ಸೂಲನಾಯಕನಹಳ್ಳಿ  ಗ್ರಾಮದ ಬಳಿ ಹೋಗಿ ನೋಡಲಾಗಿ ಸುಬ್ಬರಾಯ ಮತ್ತು ರಂಗಪ್ಪ ರವರಿಗೆ ಅಪಘಾತವಾಗಿ ರಸ್ತೆಯಲ್ಲಿ ಬಿದ್ದಿದ್ದು ಸುಬ್ಬರಾಯನಿಗೆ ತಲೆಗೆ , ಬಲಕಾಲು , ಬೆನ್ನಿಗೆ ಹಾಗೂ ಮರ್ಮಾಂಗಕ್ಕೆ ಪೆಟ್ಟು ಬಿದ್ದು ರಕ್ತಗಾಯವಾಗಿದ್ದು , ಬೈಕ್ ನ ಹಿಂಬದಿಯಲ್ಲಿ ಕುಳಿತ್ತಿದ್ದ ರಂಗಪ್ಪನಿಗೆ ಬಲಕೈಗೆ ಪೆಟ್ಟಾಗಿದ್ದು ರಂಗಪ್ಪನನ್ನು ವಿಚಾರ ಮಾಡಲಾಗಿ ತಾನು ಮತ್ತು ಸುಬ್ಬರಾಯ ಕೂಲಿಕೆಲಸ ಮುಗಿಸಿಕೊಂಡು ಸಂಜೆ 6:00 ಗಂಟೆಗೆ ಸೂಲನಾಯಕನಹಳ್ಳಿ ಗ್ರಾಮದ ಗಂಗಮ್ಮ ಕೋಂ ಸತ್ಯಪ್ಪ ರವರ ಜಮೀನಿನಲ್ಲಿ  ಸೀತಾಫಲ ಹಣ್ಣು ಕಿತ್ತುಕೊಂಡು ವಾಪಸ್ ನೀಲಮ್ಮನಹಳ್ಳಿಗೆ ಬರಲೆಂದು ಸೂಲನಾಯಕನಹಳ್ಳಿ ಯಿಂದ ನೀಲಮ್ಮನಹಳ್ಳಿಗೆ ಹೋಗಲು ಸುಬ್ಬರಾಯ ತನ್ನ ಬೈಕ್ನ್ನು ಚಾಲನೆ ಮಾಡುತ್ತಿದ್ದು ನಾನು ಬೈಕ್ ನಲ್ಲಿ ಹಿಂಬದಿಯಲ್ಲಿ ಸೀತಾಫಲ ಹಣ್ಣಿನ ಚೀಲವನ್ನು  ಇಟ್ಟುಕೊಂಡು ಕುಳಿತ್ತಿದ್ದು ಸುಬ್ಬರಾಯನು ಸೀತಾಫಲ ಹಣ್ಣಿನ ಚೀಲವನ್ನು ಬೈಕ್ ಟ್ಯಾಂಕ್ ಮೇಲೆ ಇಟ್ಟುಕೊಂಡು   ಸೂಲನಾಯನಹಳ್ಳಿ ಯಿಂದ  ಬಳ್ಳಾರಿ ರಸ್ತೆ ಕಡೆಗೆ ಬರುತ್ತಿರುವಾಗ್ಗೆ  ಸಂಜೆ ಸುಮಾರು 6:30 ಗಂಟೆ ಸಮಯದಲ್ಲಿ ತನ್ನ ಬಾಬ್ತು ಕೆ.ಎ-64-ಈ-8322ನೇ ಬೈಕ್ ನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು  ಟ್ಯಾಂಕ್ ಮೇಲಿದ್ದ ಸೀತಾಫಲದ ಮೂಟೆಯಿಂದಾಗಿ ಹ್ಯಾಂಡಲ್ ನ್ನು ಸರಿಯಾಗಿ ತಿರುಗಿಸಲಾಗದೇ ರಸ್ತೆ ಮದ್ಯದಲ್ಲಿ ಗುಂಡಿ ತಪ್ಪಿಸಲು ಹೋಗಿ ಬಿದ್ದು ಅಪಘಾತವಾಗಿರುತ್ತದೆಂತ ತಿಳಿಸಿದನು, ಆಗ ನಾನು ಮತ್ತು ನನ್ನ ಜೊತೆ ಬಂದಿದ್ದ ನಾಗಭೂಷಣ ರವರು ಸ್ಥಳಕ್ಕೆ 108 ಆಂಬ್ಯೂಲನ್ಸ್ ಕರೆಸಿಕೊಂಡು ಗಾಯಾಳುಗಳನ್ನು ಪಾವಗಡ ಸರ್ಕಾರಿ  ಆಸ್ಪತ್ರೆ ಬಳಿಗೆ  ರಾತ್ರಿ ಸುಮಾರು 7:15 ಗಂಟೆಗೆ ಕರೆದುಕೊಂಡು ಹೋಗಿದ್ದು  ಆಸ್ಪತ್ರೆ ಬಳಿಗೆ  ಹೋಗುವಷ್ಟರಲ್ಲಿ ಸುಬ್ಬರಾಯನು ಮೃತಪಟ್ಟಿದ್ದು, ರಂಗಪ್ಪನನ್ನು ಚಿಕಿತ್ಸೆ ಬಗ್ಗೆ  ಆಸ್ಪತ್ರೆಗೆ ಸೇರಿಸಿರುತ್ತೇವೆ,  ಸುಬ್ಬರಾಯನು ತನ್ನ ಬಾಬ್ತು ಕೆ.ಎ-64-ಈ-8322ನೇ ಹೀರೋ ಹೆಚ್.ಎಫ್.ಡಿಲಕ್ಸ್ ಬೈಕ್ ನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ್ದರಿಂದ ಈ ಅಪಘಾತ ಸಂಭವಿಸಿರುತ್ತದೆಂತ , ಸುಬ್ಬರಾಯನ ಶವ ಪಾವಗಡ ಸರ್ಕಾರಿ ಆಸ್ಪತ್ರೆ ಶವಾಗಾರದಲ್ಲಿರುತ್ತದೆ. ನಾನು ರಾತ್ರಿ ವೇಳೆಯಾದ್ದರಿಂದ ಈ ದಿನ ಬೆಳಿಗ್ಗೆ ಬಂದು ಠಾಣೆಗೆ ದೂರು ನೀಡಿರುತ್ತೇನೆ, ತಾವು ಮುಂದಿನ  ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂತ ಇತ್ಯಾದಿಯಾಗಿ ನೀಡಿದ ಲಿಖಿತ ದೂರನ್ನು ಪ್ರಕರಣದಾಖಲಿಸಿರುತ್ತದೆ

 

ಬಡವನಹಳ್ಳಿ ಪೊಲೀಸ್ ಠಾಣಾ ಮೊ ನಂ 102/2017 ಕಲಂ 427-431 ಐಪಿಸಿ

ದಿನಾಂಕ:29/11/2017 ರಂದು ಮದ್ಯಾಹ್ನ 1-00 ಗಂಟೆ ಸಮಯದಲ್ಲಿ ಯೋಗ ಶ್ರೀನಿವಾಶ್‌‌ ಬಿ ಟಿ , ಚಂದ್ರಗಿರಿ ಗ್ರಾಮ ಪಂಚಾಯತಿಯ ಪಂಚಾಯತಿ ಅಭಿವೃದ್ಧಿ ಅಧಿಕಾರಿ  ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ,  ಚಂದ್ರಗಿರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಲ್ಲೇನಹಳ್ಳಿ ಗೊಲ್ಲರಹಟ್ಟಿ ಗ್ರಾಮದಲ್ಲಿ ಗ್ರಾಮ ಪಂಚಾಯತಿ ವತಿಯಿಂದ ಗ್ರಾಮ ಠಾಣಾ ವ್ಯಾಪ್ತಿಯಲ್ಲಿ ಅಂಗನವಾಡಿ ಕಟ್ಟಡ ನಿಮರ್ಿಸಲಾಗುತ್ತಿತ್ತು. ಸದರಿ ಕಟ್ಟಡವು ಪಾಯದ ಹಂತದಲ್ಲಿದ್ದಾಗ ಕೆ.ಈರಣ್ಣ ಬಿನ್ ಲೇ ಕದುರದಾಸಪ್ಪ ಎಂಬುವ ಆಸಾಮಿಯು ದಿನಾಂಕ: 23-11-2017 ರ ಸಂಜೆ 5 ರಿಂದ 5-30 ರ ಸಮಯದಲ್ಲಿ ಕಟ್ಟಡದ ಕಲ್ಲುಗಳನ್ನು ಕಿತ್ತು ವಿರುಕ್ತಿಗೊಳಿಸಿ ನಷ್ಟ ಉಂಟುಮಾಡಿರುತ್ತಾನೆ. ಈ ಸಮಯದಲ್ಲಿ ಸದರಿ ಕೃತ್ಯವನ್ನು ಗ್ರಾಮದ ಸಿದ್ದಪ್ಪ ಬಿನ್ ವದ್ದಿಗಪ್ಪ ಮತ್ತು ಜೋಗಣ್ಣ ಬಿನ್ ರಂಗಣ್ಣ, ಮತ್ತು ಇತರರು ನೋಡಿರುತ್ತಾರೆ. ಇದೇ ಕೆ.ಈರಣ್ಣ ಬಿನ್ ಲೇ ಕದುರದಾಸಪ್ಪ ಎಂಬುವನು ತನ್ನ ಮನೆಗೆ ಓಡಾಡಲು ಬೇರೆಕಡೆಯಿಂದ ಜಾಗಯಿದ್ದರೂ ಸಹ, ಇದೇ ಕಟ್ಟಡ ನಿಮರ್ಾಣ ಕಾಮಗಾರಿ ಹಂತದಲ್ಲಿ ನಮ್ಮ ಮನೆಗೆ ಒಡಾಡಲು ಜಾಗಬೇಕೆಂದು ಇದೇ ಬಡವನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಎನ್.ಸಿ.ಆರ್ ಪ್ರಕರಣವನ್ನು ದಾಖಲಿಸಿ ನ್ಯಾಯಾಲಯದಿಂದ ತಡೆಯಾಜ್ಞೆ ತಂದು ಪೊಲೀಸರಿಗೆ ತಿಳಿಸಿ ಕಟ್ಟಡ ಕಾಮಗಾರಿಯನ್ನು ತಡೆಯಿಡಿದಿರುತ್ತಾನೆ. ಮತ್ತು ಈ ಬಗ್ಗೆ ಪ್ರಕರಣವು ನ್ಯಾಯಾಲಯದಲ್ಲಿ ಇನ್ನು ಜಾರಿ ಇರುವುದರಿಂದ ಮತ್ತು ಪಂಚಾಯತಿಯಿಂದ ಮತ್ತೊಂದು ಪ್ರಕರಣವನ್ನು ನ್ಯಾಯಾಲಯದಲ್ಲಿ ದಾಖಲಿಸಿರುವುದರಿಂದ ಪಂಚಾಯತಿಯಿಂದ ಕಾಮಗಾರಿಯನ್ನು ಸಹ ಮುಂದುವರೆಸಿರುವುದಿಲ್ಲ. ಈ ಸಮಯದಲ್ಲಿ ಸದರಿ ವ್ಯಕ್ತಿಯು ಕಟ್ಟಡದ ಕಲ್ಲುಗಳನ್ನು ಕಿತ್ತು ವಿರುಕ್ತಿಗೊಳಿಸಿ ನಷ್ಟ ಉಂಟುಮಾಡಿರುತ್ತ್ತಾನೆ. ಮಲ್ಲೇನಹಳ್ಳಿ ಗೊಲ್ಲರಹಟ್ಟಿ ಗ್ರಾಮದಲ್ಲಿ ಸುಮಾರು 45 ಅಂಗನವಾಡಿಗೆ ತೆರಳುವ ಮಕ್ಕಳು  ಮತ್ತು ಗರ್ಭಿಣಿ ಬಾಣಂತಿಯರಿಗೆ ಮದ್ಯಾಹ್ನ ಬಿಸಿ ಊಟ ಮತ್ತು ಕಿಶೋರಿಯರಿಗೆ ಪೌಷ್ಟಿಕ ಆಹಾರ ನೀಡುವ ಕಾರ್ಯಕ್ರಮಗಳಿಗೆ ಅಡ್ಡಿಯಾಗಿದೆ.   ಅದ್ದರಿಂದ ಸದರಿ ಕೆ.ಈರಣ್ಣ ಬಿನ್ ಲೇ ಕದುರದಾಸಪ್ಪ ಇವರು ನ್ಯಾಯಾಲಯ ಮತ್ತು ಪೊಲೀಸ್ ಠಾಣೆಗಳ ಬಗ್ಗೆ ಎಲ್ಲಾ ಅರಿವು ಉಳ್ಳವರಾಗಿದ್ದು, ಇವರು ಬುದ್ದಿಪೂರ್ವಕವಾಗಿ ದುರುದ್ದೇಶದಿಂದ ಅಕ್ರಮವಾಗಿ ಮಲ್ಲೇನಹಳ್ಳಿ ಗೊಲ್ಲರಹಟ್ಟಿಯಲ್ಲಿ ಗ್ರಾಮ ಪಂಚಾಯತಿಯಿಂದ ನಿಮರ್ಿಸುತ್ತಿದ್ದ ಅಂಗನವಾಡಿನ ಕಟ್ಟಡಪಾಯದ ಕಲ್ಲುಗಳನ್ನು ಕಿತ್ತು  ನಷ್ಟ ಉಂಟುಮಾಡಿರುವ ಇವರ ಮೇಲೆ ಸೂಕ್ತ ಮೊಕದ್ದಮೆಯನ್ನು ದಾಖಲಿಸಿ ಕ್ರಮ ಕೈಗೊಳ್ಳಬೇಕೆಂದು ಮೌಖಿಕವಾಗಿ ಮೇಲಧಿಕಾರಿಗಳಿಗೆ ತಿಳಿಸಿ ಈ ದಿನ ತಡವಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 77 guests online
Content View Hits : 304495