lowborn Crime Incidents 29-11-17 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ : 20-07-18 ಸ್ಮಾರ್ಟ್ ಸಿಟಿ ಅಧಿಕಾರಿಗಳೆಂದು ವಂಚಿಸಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 20-07-2018       ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 09-07-2018 ಕೊಲೆ ಆರೋಪಿಗಳ ಬಂಧನ ******* ದಿನಾಂಕ 04.07.2018 ರಂದು... >>   ಪತ್ರಿಕಾ ಪ್ರಕಟಣೆ ದಿನಾಂಕ : 07-07-2018. ಪೂರ್ವಾನುಮತಿ ಪಡೆಯದೇ ಹೆದ್ದಾರಿ ತಡೆ ನಡೆಸಿ,... >> ದಿನಾಂಕ.03.07.2018. ಪತ್ರಿಕಾ ಪ್ರಕಟಣೆ ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ 11 ಲಕ್ಷ 70 ಸಾವಿರ ಬೆಲೆ ಬಾಳುವ ಚಿನ್ನ-ಬೆಳ್ಳಿ  ಹಾಗೂ ಮೊಬೈಲ್‌‌‌... >>   ಪತ್ರಿಕಾ ಪ್ರಕಟಣೆ. ತುಮಕೂರು ಜಿಲ್ಲಾ ಪೊಲೀಸ್, ತುಮಕೂರು. ಕೋರಾ ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 27.06.2018 ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಸಾರ್ವಜನಿಕರ... >> ಪತ್ರಿಕಾ ಪ್ರಕಟಣೆ ದಿನಾಂಕ:- 23/06/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಖನ್ನ... >> ಪತ್ರಿಕಾ ಪ್ರಕಟಣೆ ದಿನಾಂಕ: 21-06-2018. ಸುಲಿಗೆಕೋರರ ಬಂಧನ: ದಿನಾಂಕ:18-06-2018 ರಂದು... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

Crime Incidents 29-11-17

ಕೆ.ಬಿ.ಕ್ರಾಸ್ ಪೊಲೀಸ್ ಠಾಣಾ ಮೊ ನಂ 100/2017 ಕಲಂ 279,304(ಎ)

ದಿನಾಂಕ:-29.11.2017 ರಂದು ಬೆಳಗ್ಗೆ 09.15 ಗಂಟೆಯ ಸಮಯದಲ್ಲಿ ಪಿರ್ಯಾದಿ ಲಕ್ಷ್ಮೀಶ ಕೆ.ಎಸ್ ಬಿನ್ ಕೆ.ಆರ್ ಶಿವಣ್ಣ ರವರು ಠಾಣೆಗೆ ಹಾಜರಾಗಿ ನೀಡಿದ ದೂರು ಏನೆಂದರೆ, ದಿನಾಂಕ:-29.11.2017 ರಂದು ಬೆಳಗ್ಗೆ ನನ್ನ ಅತ್ತೆಯವರಾದ ಇಂದ್ರಮ್ಮನವರಿಗೆ ಉಷಾರಿಲ್ಲದ ಕಾರಣ ನೋಡಿಕಂಡು ಬರಲು ಬಿಳಿಗೆರ ಗ್ರಾಮಕ್ಕೆ ಹೋಗಿದ್ದು ಅತ್ತೆಯ ಮನೆಯಲ್ಲಿ ಇರುವಾಗ ಬೆಳಿಗ್ಗೆ ಸುಮಾರು 07-15 ಗಂಟೆಯ ಸಮಯದಲ್ಲಿ ಬಿಳಿಗೆರೆ ಗ್ರಾಮದ ಎನ್.ಹೆಚ್. 206 ರಸ್ತೆಯ ಕೆ.ಇ.ಬಿ ಆಪೀಸ್ ಸಮೀಪ ನಿಮ್ಮ ಮಾವನರಿಗೆ ಅಪಘಾತವಾಗಿದೆ ಎಂದು ತಿಳಿಸಿದ ಮೇರೆಗೆ ನಾನು ಕೂಡಲೇ ಸ್ಥಳಕ್ಕೆ ಹೋಗಿ ನೋಡಲಾಗಿ ನಮ್ಮ ಮಾವ ಬಿ. ಪುರುಷೋತ್ತಮ್ ರವರು ತೋಟಕ್ಕೆ ಹೋಗಿ ವಾಪಸ್ ಮನೆಗೆ ಬರಲು ಬೆಳಗ್ಗೆ ಸುಮಾರು 07.00 ಗಂಟೆಯ ಸಮಯದಲ್ಲಿ ಅವರ ಬಾಬ್ತು ಕೆ.ಎ. 44-ಕೆ-9354ನೇ ಡಿಸ್ಕವರ್ ಬೈಕಿನಲ್ಲಿ ಎನ್.ಹೆಚ್ 206 ರಸ್ತೆಯಲ್ಲಿ ಕೆ.ಇ.ಬಿ. ಅಪೀಸ್ ಪಕ್ಕದ ಪಂಚರ್ ಅಂಗಡಿ ಮುಂಬಾಗದಲ್ಲಿ ಎಡಗಡೆ ಬರುತ್ತಿರುವಾಗ್ಗೆ ತಿಪಟೂರು ಕಡೆಯಿಂದ ಬಂದ ಕಾರಿನ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಕಾರನ್ನು ನಡೆಸಿಕೊಂಡು ಬಂದು ಹಿಂದಿನಿಂದ ಡಿಕ್ಕಿ ಹೊಡೆಸಿದ ಪರಿಣಾಮ ನಮ್ಮ ಮಾವನವರು ಕೆಳಕ್ಕೆ ಬಿದ್ದು ಪೆಟ್ಟಾಗಿ ರಕ್ತ ಗಾಯಗಳಾಗಿದ್ದು ಬೈಕ್ ಸಹ ಜಖಂ ಆಗಿದ್ದು ಅಪಘಾತವೆಸಗಿದ ವಾಹನದ ನಂಬರ್ ನೋಡಲಾಗಿ ಕೆ.ಎ-13-ಎನ್-6726ನೇ ಮಾರುತಿ ಸಿಯಾಜ್ ಕಾರಾಗಿದ್ದು ಚಾಲಕನ ಹೆಸರು ತಿಳಿಯಲಾಗಿ ಹೆಚ್.ಜಿ. ವೆಂಕಟೇಶ ಬಾಬು , ಅರಸೀಕೆರೆ ಟೌನ್ ಎಂದು ತಿಳಿದು ಬಂದಿದ್ದು ಕೂಡಲೇ ಸ್ಥಳಕ್ಕೆ 108 ಅಂಬುಲೆನ್ಸ್ ಕರೆಸಿ ಸಾರ್ವಜನಿಕರ ಸಹಾಯದಿಂದ ಚಿಕಿತ್ಸೆ ಬಗ್ಗೆ ತಿಪಟೂರು ಜನರಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದ್ದು , ವೈದ್ಯರು ಚಿಕಿತ್ಸೆ ನೀಡುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಈ ದಿನ ಬೆಳಿಗ್ಗೆ 08-10 ಗಂಟೆಯ ಸಮಯದಲ್ಲಿ ನನ್ನ ಮಾವ  ಮೃತರಾಗಿರುತ್ತಾರೆ ಈ ಸಾವಿಗೆ ಮೇಲ್ಕಂಡ ಕಾರಿನ ಚಾಲಕನ ನಿರ್ಲಕ್ಷತೆಯ ಕಾರಣವಾಗಿರುತ್ತೆ. ಈ ಅಪಘಾತಕ್ಕೆ ಕಾರಣರಾದ ಕೆ.ಎ-13-ಎನ್-6726ನೇ ಮಾರುತಿ ಸಿಯಾಜ್  ಕಾರಿನ ಚಾಲಕನ ಮೇಲೆ ಸೂಕ್ತ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ನೀಡಿದ ದೂರಿನಂತೆ ಪ್ರಕರಣ ದಾಖಲಿಸಿರುತ್ತೆ.

ಅಮೃತೂರು ಪೊಲೀಸ್ ಠಾಣೆಯ ಮೊನಂ-214/2017 ಕಲಂ-379 ಐಪಿಸಿ.

ದಿನಾಂಕ: 28-11-2017 ರಂದು 21-05 ಗಂಟೆಯಲ್ಲಿ ಪಿರ್ಯಾದಿ ಲಾವಣ್ಯ.ಎಸ್. ಕೋಂ ಶ್ರೀಧರ್.ಕೆ.ವಿ, 38 ವರ್ಷ, ಆರ್ಯ ವೈಶ್ಯ ಜನಾಂಗ, ಗೃಹಿಣಿ, ನಂ-113, ಮಖಾನ್ ರೋಡ್, ಶಿವಾಜಿ ನಗರ, ಬೆಂಗಳೂರು-01 ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ ನಾನು ಮೇಲೆ ಹೇಳಿದ ವಿಳಾಸದಲ್ಲಿ ನಾನು ನನ್ನ ಗಂಡ ಮತ್ತು ಮಕ್ಕಳೊಂದಿಗೆ ವಾಸವಾಗಿದ್ದು ಜೀವನ ಮಾಡಿಕೊಂಡಿರುತ್ತೇನೆ. ದಿನಾಂಕ: 03-11-2017 ರಂದು ಚನ್ನರಾಯಪಟ್ಟಣದಲ್ಲಿ ನಮ್ಮ ದೊಡ್ಡಪ್ಪ ರವರ ಮನೆಯಲ್ಲಿ ಗೃಹಪ್ರವೇಶವನ್ನು ಮುಗಿಸಿಕೊಂಡು ನಾನು ನನ್ನ ಗಂಡ ಶ್ರೀಧರ್, ನನ್ನ ಮಗಳು ಹೇಮಶ್ರೀ, ನನ್ನ ಮಗ ಶ್ರೀವತ್ಸ, ನನ್ನ ತಮ್ಮ ದಿಲೀಪ್ ಕುಮಾರ್, ನನ್ನ ನಾದಿನಿ ಪುಷ್ಟ, ನನ್ನ ತಮ್ಮನ ಮಗ ಹೃಷಿಕೇಶ್, ನನ್ನ ತಮ್ಮನ ಮಗಳು ಕೃತಿಕಾ ಹಾಗೂ ನನ್ನ ತಾಯಿ ಸರಸ್ಪತಮ್ಮ ಎಲ್ಲರೂ ನನ್ನ ತಮ್ಮನ ಸ್ನೇಹಿತನ ಇನ್ನೋವಾ ಕಾರು ನಂಬರ್-ಕೆಎ-02, ಎಂಎಸ್-504 ನೇ ಕಾರಿನಲ್ಲಿ ಚನ್ನರಾಯಪಟ್ಟಣದಿಂದ ಎಡೆಯೂರು ಮಾರ್ಗವಾಗಿ ಬೆಂಗಳೂರಿಗೆ ಹಿಂತಿರುಗಿ ಹೋಗುತ್ತಿರಬೇಕಾದರೆ ಕುಣಿಗಲ್ ತಾಲೋಕ್, ಎಡೆಯೂರು ಹೋಬಳಿ, ಚಾಕೇನಹಳ್ಳಿ ಗ್ರಾಮದ ಬಳಿ ನಮ್ಮ ಮುಂದೆ ಅಂದರೆ ಬೆಂಗಳೂರು ಕಡೆಗೆ ಹೋಗುತ್ತಿದ್ದ ಯಾವುದೋ ಒಂದು ಲಾಂಗ್ ಟ್ರಕ್ ಲಾರಿಯ ಬಲಭಾಗದಿಂದ ನನ್ನ ತಮ್ಮ ಸೈಡ್ ಹೊಡೆಯಲು ಹೋದಾಗ ಆ ಲಾಂಗ್ ಟ್ರಕ್ ಲಾರಿಯ ಚಾಲಕ ಯಾವುದೇ ಸಿಗ್ನಲ್ ನೀಡದೇ ಏಕಾ ಏಕಿ ಅಜಾಗರೂಕತೆಯಿಂದ ತನ್ನ ಟ್ರಕ್ ಲಾರಿಯನ್ನು ಬಲಭಾಗಕ್ಕೆ ತೆಗೆದುಕೊಂಡಿದ್ದರಿಂದ ನನ್ನ ತಮ್ಮ ಕಾರನ್ನು ನಿಯಂತ್ರಿಸಲಾಗದೇ ಆ ಟ್ರಕ್ ಲಾರಿಯ ಹಿಂಭಾಗಕ್ಕೆ ನಮ್ಮ ಕಾರು ಅಪಘಾತವಾಗಿ ಕಾರಿನ ಮುಂಭಾಗ ಜಖಂ ಆಗಿದ್ದು, ಕಾರಿನಲ್ಲಿದ್ದ ನನಗೆ ಮತ್ತು ಮೇಲೆ ತಿಳಿಸಿರುವ ಎಲ್ಲರಿಗೂ ಸಣ್ಣಪುಟ್ಟಗಾಯಗಳಾಗಿದ್ದು, ನಮ್ಮ ತಾಯಿಯವರಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮದ್ಯೆ ಮೃತಪಟ್ಟಿರುತ್ತಾರೆ. ಅಪಘಾತ ಸಮಯದಲ್ಲಿ ನಮ್ಮ ಬಳಿ ಇದ್ದ ಒಂದು ಡಬ್ಬಿಯಲ್ಲಿ ಹಾಕಿ ಇಟ್ಟುಕೊಂಡಿದ್ದ ವಡವೆಗಳನ್ನು ಯಾರೋ ಅಪರಿಚಿತ ವ್ಯಕ್ತಿಗಳು ಕಳ್ಳತನ ಮಾಡಿರುತ್ತಾರೆ. ಅವುಗಳೆಂದರೆ 1) ಚಿನ್ನದ ಕರಿಮಣಿ ಎರಡು ಬಳೆ, 2) ಎರಡು ಬಿಳಿ ಕಲ್ಲಿನ ಬಳೆ, 3) ಒಂದು ಸಾದಾ ಬಳೆ, 4) ಒಂದು ಚಿನ್ನದ ಸರದ ಜೊತೆ ಮೀನಿನ ಪೆಂಡೆಂಟ್, 5) ಒಂದು ಚಿನ್ನದ ಬ್ರಾಸ್ ಲೆಟ್, 6) ಒಂದು ಹಸಿರು ಕಲ್ಲಿನ ಉಂಗುರ, 7) ಒಂದು ಬಿಳಿ ಕಲ್ಲಿನ ನೆಕ್ಲೆಸ್, 8) ಒಂದು ಚಿಕ್ಕ ನೆಕ್ಲೆಸ್ ಇವುಗಳ ಒಟ್ಟು ತೂಕ 290 ಗ್ರಾಂ ಗಳಾಗಿರುತ್ತವೆ. ಈ ಮೇಲ್ಕಂಡ ಎಲ್ಲಾ ವಡವೆಗಳನ್ನು ನನ್ನ ಮದುವೆ ಕಾಲದಲ್ಲಿ ನಮ್ಮ ತಂದೆ ತಾಯಿ ಮತ್ತು ನನ್ನ ಗಂಡನ ಕಡೆಯವರು ಹಾಗೂ ಸಂಬಂದಿಗಳು ಉಡುಗೊರೆಯಾಗಿ ನೀಡಿರುತ್ತಾರೆ. ನಮ್ಮ ತಾಯಿ ನಿಧನದಿಂದ ನಾವುಗಳು ದುಖಿಃತರಾಗಿದ್ದು, ಆ ಸಮಯದಲ್ಲಿ ನಾವು ಠಾಣೆಗೆ ಬಂದು ದೂರು ನೀಡಲು ಸಾದ್ಯವಾಗಲಿಲ್ಲ. ಅವರ ತಿಥಿ ಕಾರ್ಯವನ್ನು ಮುಗಿಸಿಕೊಂಡು ನೀಡೋಣವೆಂದುಕೊಂಡಿದ್ದು ಅಷ್ಟರಲ್ಲಿ ಚಿಕ್ಕಜಾಲ ಪೊಲೀಸರು ನಮಗೆ ಕರೆ ಮಾಡಿ ನಿಮ್ಮ ವಡವೆಗಳನ್ನು ಕಳ್ಳತನ ಮಾಡಿರುವವರು ಸಿಕ್ಕಿದ್ದಾರೆ ನೀವು ಬಂದು ನಿಮ್ಮ ವಡವೆಗಳನ್ನು ಗುರುತಿಸಿ ಎಂದು ತಿಳಿಸಿದ ನಂತರ ನಾವು ಠಾಣೆಗೆ ಹೋಗಿ ವಡವೆಗಳನ್ನು ನೋಡಿದಾಗ ಅವುಗಳು ನಮ್ಮದಾಗಿರುತ್ತವೆ. ಕಳ್ಳನ ಬಗ್ಗೆ ವಿಚಾರ ಮಾಡಿದಾಗ ಸೋಮಶೇಖರ.ಎಸ್ @ ಮನೆ ಬಿನ್ ಶಿವಯ್ಯ, 33 ವರ್ಷ, ವಾಸ: ನಂ-22, ಎಲ್.ಐ.ಸಿ ಕಾಲೋನಿ, ಬಿ.ಕೆ ನಗರ, ಯಶವಂತಪುರ, ಬೆಂಗಳೂರು ಎಂದು ತಿಳಿಸಿದರು. ಆದ್ದರಿಂದ ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದೇವೆ. ನಮ್ಮ ವಡವೆಗಳನ್ನು ಕಳವು ಮಾಡಿರುವವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ದೂರು ನೀಡುತ್ತಿದ್ದೇವೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿರುತ್ತೆ.

ತಿಪಟೂರು ನಗರ ಪೊಲೀಸ್ ಠಾಣಾ ಮೊ .ನಂ- 182/2017 ಕಲಂ: 392 ಐ.ಪಿ.ಸಿ

ದಿನಾಂಕ : 28/11/2017  ರಂದು ರಾತ್ರಿ 8-00  ಗಂಟೆಗೆ ಪಿರ್ಯಾದಿ ಸಿ.ಕೆ ಲಲಿತಶ್ರೀ @ ಚಂದನ ರವರು ಠಾಣೆಗೆ ಹಾಜರಾಗಿ ನೀಡಿರುವ ದೂರಿನ ಅಂಶವೇನೆಂದರೆ,  ದಿನಾಂಕ:27/11/2017 ರಂದು ರಾತ್ರಿ ಸುಮಾರು 7.45 ಗಂಟೆಯಲ್ಲಿ  ತಿಪಟೂರು ಟೌನ್‌ ಕಲ್ಪತರು ಕ್ರಿಡಾಂಗಣದ ಹಿಂಬಾಗ ಇರುವ ಸುಬ್ರಮಣ್ಯ ದೇವಸ್ದಾನಕ್ಕೆ ಹೋಗಲು ನಾನು ಮತ್ತು ನನ್ನ ಗಂಡ ಮನೆಯಿಂದ ಹೊರಟಿದ್ದು, ನನ್ನ ಗಂಡ ಕಾರಿನ ಕೀ ತರಲು ಮತ್ತೆ ವಾಪಸ್‌ ಮನೆಗೆ ಹೋಗಿದ್ದು, ನಾನು ಮುಂದೆ ಹೋಗುತ್ತಿರುಣವೆಂದು ನಮ್ಮ ಮನೆಯಿಂದ ಸುಮಾರು 100 ಮೀಟರ್‌ ದೂರದಲ್ಲಿ ಚರ್ಚ್‌ ಕಾಂಪೌಂಡ್ ತಿರುವಿನಲ್ಲಿ  ನಡೆದುಕೊಂಡು ಹೋಗುತ್ತಿದ್ದಾಗ ಕಾಲು ಸ್ವಲ್ಪ ಎಡವಿ ಅಲ್ಲಿಯೇ ಇದ್ದ ಮನೆಯ ಮುಂದೆ ಒಂದು ಜಗುಲಿ  ಮೇಲೆ ಕುಳಿತುಕೊಂಡಾಗ ಯಾರೋ ಇಬ್ಬರು ವ್ಯಕ್ತಿಗಳು ಬೈಕ್‌ನಲ್ಲಿ ಬಂದು ಸ್ವಲ್ಪ ದೂರ ಹೋಗಿ ಬೈಕ್‌ನ್ನು ನಿಲ್ಲಿಸಿ ಹಿಂಬದಿ ಕುಳಿತವನು ವಾಪಸ್‌ ನನ್ನ ಬಳಿ ಬಂದವನೆ ಏಕಾಏಕೀ ನನ್ನ ಕಣ್ಣಿಗೆ ಕಾರದಪುಡಿಯನ್ನು ಎರಚಿ ನನ್ನ ಕುತ್ತಿಗೆಯಲ್ಲಿದ್ದ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಓಡಿಹೋಗಿ ಬೈಕ್‌ನ್ನು ಹತ್ತಿಕೊಂಡು ಪಂಪ್‌ಹೌಸ್‌ ರಸ್ತೆ ಕಡೆಗೆ ಹೊರಟು ಹೋದರು. ನನ್ನ ಚಿನ್ನದ ಮಾಂಗಲ್ಯಸರ, ತಾಳಿ, ಗುಂಡು ಸೇರಿ ಸುಮಾರು 35-40 ಗ್ರಾಂ ತೂಕವುಳ್ಳ ಚಿನ್ನದ ಮಾಂಗಲ್ಯ  ಸರವಾಗಿರುತ್ತದೆ. ಇದರ ಬೆಲೆ ಸುಮಾರು 1,10,000=00 ರೂ ಗಳಾಗಿರುತ್ತದೆ, ನನ್ನ ಚಿನ್ನದ ಸರವನ್ನು ಕಿತ್ತುಕೊಂಡು ಹೋದ ವ್ಯಕ್ತಿಗಳು ದೃಢಕಾಯ ವ್ಯಕ್ತಿಗಳಾಗಿದ್ದು, ಸುಮಾರು 35 ವರ್ಷ ವಯಸ್ಸಿನವರಾಗಿರುತ್ತಾರೆ. ನನ್ನ ಕಣ್ಣಿಗೆ ಕಾರದ ಪುಡಿ ಬಿದ್ದು, ತಲೆನೋವು ಬಂದಿದ್ದರಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಈ ದಿನ ದಿನಾಂಕ:28/11/2017 ರಂದು ತಡವಾಗಿ ಬಂದು ದೂರು ನೀಡಿರುತ್ತೇನೆ. ಆದ್ದರಿಂದ ನನ್ನ ಚಿನ್ನದ ಸರವನ್ನು ಕಿತ್ತುಕೊಂಡು ಹೋಗಿರುವ ಆಸಾಮಿಗಳನ್ನು ಪತ್ತೆ ಮಾಡಿ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ಕೋರಿ ನೀಡಿರುವ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಹುಲಿಯೂರುದುರ್ಗ ಪೊಲೀಸ್‌ ಠಾಣಾ; ಮೊ ನಂ: 231/2017 ಕಲಂ: 323, 504, 506, 149  IPC 3(1)(C), 3(1)(R), 3(1)(S), 3(2)(V-A) SC/ST (PA) ACT – 1989

ದಿನಾಂಕ: 28-11-2017 ರಂದು ಸಂಜೆ 04-30 ಗಂಟೆಗೆ ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೋಕು ಹುಲಿಯೂರುದುರ್ಗ ಹೋಬಳಿ ಟಿ-ಕೆಂಪನಹಳ್ಳಿ ಗ್ರಾಮದ ವಾಸಿಯಾದ ಶಿವನಂಜಯ್ಯ ಬಿನ್  ರಂಗಯ್ಯ ಸುಮಾರು 48 ವರ್ಷ, ಪರಿಶಿಷ್ಟ ಜಾತಿ ಜನಾಂಗ, ವ್ಯವಸಾಯ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಾನು ದಿನಾಂಕ;-07-08-2017 ರಂದು ಸಂಜೆ ಸುಮಾರು 07-00 ಗಂಟೆ ಸಮಯದಲ್ಲಿ ನಮ್ಮೂರಾದ ಟಿ-ಕೆಂಪನಹಳ್ಳಿ ಗ್ರಾಮದಲ್ಲಿ ನಾನು ನಮ್ಮ ಮನೆಯಿಂದ ಬಸ್ ಸ್ಟಾಂಡ್ ಕಡೆಗೆ ನಡೆದುಕೊಂಡು ನಮ್ಮೂರಿನ ಕಣಕಯ್ಯ ಮತ್ತು ಮಾದಯ್ಯ ರವರ ಮನೆಯ ಮುಂಭಾಗ ಇರುವ ಸಾರ್ವಜನಿಕ ಟಾರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ್ಗೆ ಏಕಾಏಕಿ ನಮ್ಮೂರಿನ ಸವರ್ಣಿಯ ಲಿಂಗಾಯತ ಜನಾಂಗದ ಶಿವರತ್ನಮ್ಮ ಕೋಂ ಮಹದೇವಯ್ಯ, ಶಾಂತಮಲ್ಲಯ್ಯ ಬಿನ್ ಲೇಟ್ ದುಬ್ಬಯ್ಯ, ಮಹದೇವಮ್ಮ ಕೋಂ ಶಾಂತಮಲ್ಲಯ್ಯ, ಶಿವಮಾದಯ್ಯ ಬಿನ್ ದುಬ್ಬಯ್ಯ, ನಂಜಮ್ಮ ಕೋಂ ಶಿವಮಾದಯ್ಯ, ಮಹದೇವಯ್ಯ ಬಿನ್ ಲೇಟ್ ದುಬ್ಬಯ್ಯ, ಇವರುಗಳು ನನ್ನನ್ನು ವಯಕ್ತಿಕ ವಿವಾದದ ಹಿನ್ನೆಲೆಯಲ್ಲಿ ಲೇ ಮಾದಿಗ ನನ್ನ ಮಗನೆ ನಮ್ಮ ವಿಚಾರಕ್ಕೆ ಬರುತ್ತೀಯಾ ಬೋಳಮಗನೆ ಎಂದು ಕೆಟ್ಟ ಪದಗಳಿಂದ ಬೈದು ಜಾತಿ ನಿಂದನೆ ಮಾಡಿ ಎಲ್ಲಾರು ನನಗೆ ಕೈಗಳಿಂದ ಮೈ ಮೇಲೆ ಮುಖಕ್ಕೆ ತಲೆಗೆ ಹೊಡೆದು ಲೇ ಹೊಲೆಮಾದಿಗ ನಮ್ಮ ವಿಚಾರಕ್ಕೆ ಬಂದರೆ ನಿನ್ನ ಜೀವಂತವಾಗಿ ಬಿಡುವುದಿಲ್ಲ ಎಂದು ಕೊಲೆ ಬೆದರಿಕೆ ಹಾಕಿದರು ಹಾಗ ಅಲ್ಲಿಯೇ ಇದ್ದ ನಮ್ಮೂರಿನ ಮಹದೇವಯ್ಯ ಮತ್ತು ನಿಂಗಣ್ಣ ಬಂದು ಜಗಳವನ್ನು ಬಿಡಿಸಿದರು ನಾನು ನಂತರ ಸುಮ್ಮನಾಗಿದ್ದು ಗ್ರಾಮದಲ್ಲಿ ಒಂಟಿಯಾಗಿದ್ದರಿಂದ ನನಗೆ ಆದಂತಹ ತೊಂದರೆ ನನಗೆ ಮತ್ತು ನನ್ನ ಕುಟುಂಬದವರಿಗೆ ಆಗಬಾರದೆಂದು ನಿರ್ಧರಿಸಿ ಈ ದಿನ ತಡವಾಗಿ ಪೋಲೀಸ್ ಠಾಣೆಗೆ ಬಂದು ದೂರು ನೀಡುತ್ತಿದ್ದೇನೆ ನನಗೆ ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿರುವ ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ಕೋರುತ್ತೇನೆ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಅಂಶವಾಗಿರುತ್ತೆ

ಮಧುಗಿರಿ ಪೊಲೀಸ್ ಠಾಣಾ ಮೊ.ಸಂ 212/2017 u/s 420 IPC.

ಪಿರ್ಯಾದಿ ಆಶಾ ಕೋಂ ರಂಗನಾಥ, 26 ವರ್ಷ, ಕೂಲಿಕೆಲಸ, ಸಿದ್ದಾಪುರ ಗೇಟ್, ಕಸಬಾ ಹೋಬಳಿ, ಮಧುಗಿರಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ಪಿರ್ಯಾದಿಗೆ ಮದುವೆಯಾಗಿ 4 ವರ್ಷ ವಾಗಿದ್ದು, ಮಕ್ಕಳಿರುವುದಿಲ್ಲ. ಪಿರ್ಯಾದಿಯು ಸುಮಾರು 1 ವರ್ಷದಿಂದ ಮಧುಗಿರಿ ಟೌನ್ ಇಸ್ಲಾಂಪುರದಲ್ಲಿರುವ ಮಯೂರ ಬೀಡಿ ವರ್ಕ್ಸ್ ನಲ್ಲಿ ಕೂಲಿಕೆಲಸಕ್ಕೆ ಹೋಗುತ್ತಿದ್ದು, ಪತಿ ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿರುತ್ತಾರೆ. ಪಿರ್ಯಾದಿಯು ದಿನಾಂಕ: 18-11-2017 ರಂದು ಇಸ್ಲಾಂಪುರದ ಮಯೂರ ಬೀಡಿ ವರ್ಕ್ಸ್ ನಲ್ಲಿ ಕೆಲಸ ಮಾಡುತ್ತಿದ್ದಾಗ, ಸುಮಾರು 30-32 ವರ್ಷ ವಯಸ್ಸಿನ ಯಾರೋ ಒಬ್ಬ ವ್ಯಕ್ತಿ ಪಿರ್ಯಾದಿ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಬಂದು, ಮಕ್ಕಳಿಲ್ಲದವರಿಗೆ ಮಕ್ಕಳಾಗುವ ಔಷಧಿಯನ್ನು ಕೊಡುತ್ತೇನೆ, ಮಾರ್ಕೆಟ್ ನಲ್ಲಿ ಇದು ಸುಮಾರು 20-25 ಸಾವಿರ ಆಗುತ್ತದೆಂತಾ ತಿಳಿಸಿದ್ದು, ಪಿರ್ಯಾದಿಗೆ ಮಕ್ಕಳಿಲ್ಲದ್ದರಿಂದ ಮಕ್ಕಳಾಗಬಹುದೆಂತಾ ನಂಬಿ ಆ ದಿನ ಔಷಧಿಯನ್ನು 4000/- ರೂ ಕೊಟ್ಟು ಖರೀದಿಸಿರುತ್ತಾರೆ. ಆತನು  ಪ್ರತಿವಾರ ಬರುತ್ತೇನೆಂತಾ ತಿಳಿಸಿ ಹೋಗಿದ್ದು, ದಿನಾಂಕ: 27-11-2017 ರಂದು ರಾತ್ರಿ ಸುಮಾರು 07.30 ಗಂಟೆಗೆ ಫೋನ್ ಮಾಡಿ ನಾಳೆ ಬರುತ್ತೇನೆಂತಾ ತಿಳಿಸಿ, ಅದರಂತೆ ದಿನಾಂಕ: 28-11-2017 ಬೆಳಿಗ್ಗೆ 09.30 ಪಿರ್ಯಾದಿ ಒಬ್ಬಳೆ ಮನೆಯಲ್ಲಿದ್ದಾಗ ಆ ಆಸಾಮಿಯು ಮನೆಗೆ ಬಂದು ಸ್ವಲ್ಪ ಸಮಯದ ನಂತರ ಕುಡಿಯಲು 1 ಲೋಟ ನೀರು ಕೊಡು ಎಂತಾ ಕೇಳಿರುತ್ತಾನೆ. ಪಿರ್ಯಾದಿಯು ಅಡಿಗೆ ಮನೆಯಿಂದ ಲೋಟದಲ್ಲಿ ಕುಡಿಯಲು ನೀರು ತಂದು ಕೊಟ್ಟಿರುತ್ತಾರೆ. ಆದಾದ ನಂತರ ಆ ವ್ಯಕ್ತಿಯು ಒಂದು ಕರವಸ್ತ್ರವನ್ನು ಪಿರ್ಯಾದಿಯ ಮುಖದ ಹತ್ತಿರ ಹಿಡಿದಿದ್ದು, ಪಿರ್ಯಾದಿಯು ಪ್ರಜ್ಞೆ ತಪ್ಪಿ, ನಂತರ ಸುಮಾರು 20 ನಿಮಿಷದ ನಂತರ ಎಚ್ಚರಗೊಂಡಾಗ ಪಿರ್ಯಾದಿಯ ಕತ್ತಿನಲ್ಲಿದ್ದ ಸುಮಾರು 30 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಕೊರಳಿನಲ್ಲಿರಲಿಲ್ಲ. ಆಗ ಪಿರ್ಯಾದಿಯು ಗಾಬರಿಗೊಂಡು ಮನೆ ಒಳಗೆ-ಹೊರಗೆ ಹುಡುಕಾಡಿದ್ದು, ಆ ವ್ಯಕ್ತಿಯು ಪತ್ತೆಯಾಗಲಿಲ್ಲ. ಆತನು ಪಿರ್ಯಾದಿಯ  ಗಮನವನ್ನು ಬೇರೆಡೆಗೆ ಸೆಳೆದು ಸುಮಾರು 80,000/- ಬೆಲೆ ಬಾಳುವ ಚಿನ್ನದ ಮಾಂಗಲ್ಯಸರವನ್ನು ಮೋಸದಿಂದ ತೆಗೆದುಕೊಂಡು ಹೋಗಿದ್ದು, ಗಮನವನ್ನು ಬೇರೆಡೆಗೆ ಸೆಳೆದು ಮೋಸದಿಂದ ತೆಗೆದುಕೊಂಡು ಹೋಗಿರುವ ಮಾಂಗಲ್ಯ ಸರವನ್ನು ಪತ್ತೆಮಾಡಿ, ಮೋಸ ಮಾಡಿರುವ ವ್ಯಕ್ತಿಯ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಕೋರುತ್ತೇನೆಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

ತುಮಕೂರು ಜಿಲ್ಲೆ, ಶಿರಾ ತಾಲೋಕ್, ಕಳ್ಳಂಬೆಳ್ಳ  ಪೊಲೀಸ್‌ ಠಾಣಾ ಮೊ.ನಂ: 270/2017 ಕಲಂ-279,337 304(ಎ) ಐಪಿಸಿ

ದಿನಾಂಕ:28/11/2017 ರಂದು ಮದ್ಯಾಹ್ನ 2-00 ಗಂಟೆಯಲ್ಲಿ ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪಿರ್ಯಾದಿ ಟಿ.ವಿ ವಿಶ್ವಾಸ್ ರವರ  ಹೇಳಿಕೆಯನ್ನು ಪಿ.ಎಸ್.ಐ ರವರು ಮದ್ಯಾಹ್ನ 12-30 ಗಂಟೆಯಿಂದ 1-00 ಗಂಟೆವರೆಗೂ ಪಡೆದುಕೊಂಡು ಹೆಚ್,ಸಿ 85 ಮಂಜುನಾಥ್ ಆದ ನನ್ನೊಂದಿಗೆ ಠಾಣೆಗೆ ಕಳುಹಿಸಿದ ಹೇಳಿಕೆ ಅಂಶವೇನೆಂದರೆ ಟಿ.ವಿ ವಿಶ್ವಾಸ್ ಆದ ನಾನು  ಬೆಂಗಳೂರಿನ ಜೆ.ವಿ ಕಾಲೇಜಿನಲ್ಲಿ ಬಿ.ಬಿ.ಎಂ ವ್ಯಾಸಾಂಗ ಮಾಡುತ್ತಿರುತ್ತೇನೆ. ಹೆಚ್.ಎಸ್.ಆರ್ ಲೇಔಟ್ ವಾಸಿ ಪವನ್ ರವರು ನನ್ನ ಸ್ನೇಹಿತರಾಗಿರುತ್ತಾರೆ. ದಿನಾಂಕ:28/11/17 ರಂದು ನಾನು ನನ್ನ ಸ್ನೇಹಿತ ಪವನ್ ಇಬ್ಬರೂ ಕಾರಿನಲ್ಲಿ ಲಾಂಗ್ ಡ್ರೈವ್ ಹೋಗಲು ತೀರ್ಮಾನಿಸಿ ಬೆಳಗ್ಗೆ ಸುಮಾರು 9-30 ಗಂಟೆಗೆ ಬೆಂಗಳೂರಿನಿಂದ ಪವನ್ ರವರ ಬಾಬ್ತು ಕೆಎ-01-ಎಂ.ಎಲ್ 2426 ನೇ COROLLA ALTIS ಕಾರಿನಲ್ಲಿ ಹೊರಟೆವು ಕಾರನ್ನು ನನ್ನ ಸ್ನೇಹಿತ ಪವನ್ ರವರು ಚಾಲನೆ ಮಾಡುತ್ತಿದ್ದರು, ನಾನು ಮತ್ತು ಪವನ್ ಬೆಂಗಳೂರಿನಿಂದ ಚಿತ್ರದುರ್ಗ ಕಡೆಗೆ ಹೋಗುತ್ತಿದ್ದಾಗ ಈ ದಿನ ಬೆಳಗ್ಗೆ ಸುಮಾರು 11-45 ಗಂಟೆ ಸಮಯದಲ್ಲಿ ತುಮಕೂರು ಶಿರಾ ಎನ್.ಹೆಚ್ 48 ರಸ್ತೆಯಲ್ಲಿ ಜೋಗಿಹಳ್ಳಿ ಬಳಿ ಪವನ್ ಕಾರನ್ನು ಅತೀವೇಗ ಮತ್ತು ನಿರ್ಲಕ್ಷತೆಯಿಂದ ಚಾಲನೆ ಮಾಡಿದ ಪರಿಣಾಮ ಕಾರು ನನ್ನ ಸ್ನೇಹಿತನ ನಿಯಂತ್ರಣ ತಪ್ಪಿ ರಸ್ತೆ ಎಡಭಾಗಕ್ಕೆ ಪಲ್ಟಿಯಾಗಿ ಬಿತ್ತು ಕಾರಿನಲ್ಲಿದ್ದ ನನಗೆ ಬಲಕಾಲಿಗೆ ತಲೆಗೆ ಪೆಟ್ಟು ಬಿದ್ದು ರಕ್ತಗಾಯವಾಯಿತು, ಪವನ್ ನ ತಲೆಗೆ ಮೈಕೈಗೆ ಪೆಟ್ಟು ಬಿದ್ದು ಸ್ಥಳದಲ್ಲಿಯೇ ಮೃತಪಟ್ಟನು. ನಂತರ ಅಲ್ಲಿದ್ದ ಸಾರ್ವಜನಿಕರು ಯಾರೋ ನನ್ನನ್ನು 108 ಆಂಬುಲೆನ್ಸ್ ನಲ್ಲಿ ಚಿಕಿತ್ಸೆಗಾಗಿ ತುಮಕೂರಿನ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು ನಾನು ತುಮಕೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತೇನೆ. ಈ ಅಪಘಾತವು ನನ್ನ ಸ್ನೇಹಿತ ಪವನ್ ರವರ ಅತೀವೇಗ ಚಾಲನೆಯಿಂದ ಉಂಟಾಗಿರುತ್ತೆ. ಮುಂದಿನ ಕ್ರಮ ಎಂತ ಇತ್ಯಾದಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತೆ.

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 80 guests online
Content View Hits : 304499