lowborn Crime Incidents 26-11-17 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ : 20-07-18 ಸ್ಮಾರ್ಟ್ ಸಿಟಿ ಅಧಿಕಾರಿಗಳೆಂದು ವಂಚಿಸಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 20-07-2018       ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 09-07-2018 ಕೊಲೆ ಆರೋಪಿಗಳ ಬಂಧನ ******* ದಿನಾಂಕ 04.07.2018 ರಂದು... >>   ಪತ್ರಿಕಾ ಪ್ರಕಟಣೆ ದಿನಾಂಕ : 07-07-2018. ಪೂರ್ವಾನುಮತಿ ಪಡೆಯದೇ ಹೆದ್ದಾರಿ ತಡೆ ನಡೆಸಿ,... >> ದಿನಾಂಕ.03.07.2018. ಪತ್ರಿಕಾ ಪ್ರಕಟಣೆ ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ 11 ಲಕ್ಷ 70 ಸಾವಿರ ಬೆಲೆ ಬಾಳುವ ಚಿನ್ನ-ಬೆಳ್ಳಿ  ಹಾಗೂ ಮೊಬೈಲ್‌‌‌... >>   ಪತ್ರಿಕಾ ಪ್ರಕಟಣೆ. ತುಮಕೂರು ಜಿಲ್ಲಾ ಪೊಲೀಸ್, ತುಮಕೂರು. ಕೋರಾ ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 27.06.2018 ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಸಾರ್ವಜನಿಕರ... >> ಪತ್ರಿಕಾ ಪ್ರಕಟಣೆ ದಿನಾಂಕ:- 23/06/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಖನ್ನ... >> ಪತ್ರಿಕಾ ಪ್ರಕಟಣೆ ದಿನಾಂಕ: 21-06-2018. ಸುಲಿಗೆಕೋರರ ಬಂಧನ: ದಿನಾಂಕ:18-06-2018 ರಂದು... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

Crime Incidents 26-11-17

ಜಯನಗರ ಪೊಲೀಸ್ ಠಾಣಾ ಮೊ.ನಂ. 156/2017 ಕಲಂ 20 (ಬಿ) ಎನ್.ಡಿ.ಪಿ.ಎಸ್ ಆಕ್ಟ್

ದಿನಾಂಕ: 25-11-2017 ರಂದು ಬೆಳಿಗ್ಗೆ 11-00 ಗಂಟೆಯಲ್ಲಿ ಠಾಣಾ ಪಿಎಸ್‌ಐ ರವರು ಠಾಣೆಗೆ ಹಾಜರಾಗಿ ನೀಡಿದ ವರದಿ ಅಂಶವೇನೆಂದರೆ,  ದಿನಾಂಕ: 25-11-2017 ರಂದು ಬೆಳಿಗ್ಗೆ: 10-00 ಗಂಟೆಯಲ್ಲಿ ನಾನು ಮತ್ತು ಠಾಣೆಯ ಅಪರಾಧ ವಿಭಾಗ ಸಿಬ್ಬಂದಿಗಳಾದ ತಿಪ್ಪೇಸ್ವಾಮಿ ಬಿ.ಟಿ ಹೆಚ್‌.ಸಿ 134, ಲೋಕೇಶ್ ಕೆ.ಎಸ್ ಸಿಪಿಸಿ 614, ನರಸಿಂಹಮೂರ್ತಿ ಸಿಪಿಸಿ 291 ರವರುಗಳು ಜಯನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಕಳವು ಪ್ರಕರಣಗಳಲ್ಲಿ ಆರೋಪಿಗಳ ಮತ್ತು ಮಾಲುಪತ್ತೆಗಾಗಿ ಠಾಣಾ ಸರಹದ್ದಿನ ರಾಘವೇಂದ್ರ ನಗರದಲ್ಲಿ ಗಸ್ತಿನಲ್ಲಿರುವಾಗ್ಗೆ ಈ ದಿನ ಬೆಳಿಗ್ಗೆ: 10-30 ಗಂಟೆಯಲ್ಲಿ ಯಾರೋ ಬಾತ್ಮಿದಾರರು ನನಗೆ ಪೋನ್ ಮಾಡಿ ಶೆಟ್ಟಿಹಳ್ಳಿ ಮುಖ್ಯರಸ್ತೆಯಲ್ಲಿರುವ  HMS ಕಾಲೇಜು ಮುಂಭಾಗ ವಿಷ್ಣು ಪಿ. ಪ್ರಮೋದ್  ಎಂಬ ವ್ಯಕ್ತಿಯು ಅಕ್ರಮವಾಗಿ ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿರುತ್ತಾನೆಂದು ಮಾಹಿತಿ ನೀಡಿದ್ದರಿಂದ ನಾನು ಮತ್ತು ಸಿಬ್ಬಂದಿಗಳು HMS ಕಾಲೇಜು ಸಮೀಪದ ಸ್ಥಳಕ್ಕೆ ಈ ದಿನ ಬೆಳಿಗ್ಗೆ: 10-45 ಗಂಟೆಗೆ ಭೇಟಿ ನೀಡಿದ್ದು ಅಲ್ಲಿ ಕಾಲೇಜು ಬಲಭಾಗದಲ್ಲಿರುವ ಟೀ ಅಂಗಡಿಯ ಹತ್ತಿರ ಒಬ್ಬ ವ್ಯಕ್ತಿಯು ಒಂದು ಕಪ್ಪು ಬಣ್ಣದ ಪ್ಲಾಸ್ಟಿಕ್‌ ಕವರ್ ಹಿಡಿದುಕೊಂಡು ನಿಂತಿದ್ದು ಆತನ ಬಳಿ ಹೋಗುತ್ತಿದ್ದಾಗ ಆತನು ನಮ್ಮನ್ನು ನೋಡಿ ಓಡಿ ಹೋಗಲು ಪ್ರಯತ್ನಿಸಿದ್ದು, ನಾವು ಆತನನ್ನು ಬೆನ್ನಟ್ಟಿ ಹಿಡಿದು ಆತನ ಬಳಿ ಇದ್ದ ಕಪ್ಪು ಬಣ್ಣದ ಪ್ಲಾಸ್ಟಿಕ್ ಕವರ್‌ ಅನ್ನು ಪರಿಶೀಲಿಸಿದಾಗ ಅದರಲ್ಲಿ ಗಾಂಜಾಸೊಪ್ಪು ಇರುವುದನ್ನು ಖಚಿತಪಡಿಸಿಕೊಂಡಿದ್ದು, ಆತನ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಆತನು ತನ್ನ ಹೆಸರನ್ನು ವಿಷ್ಣು ಪಿ ಪ್ರಮೋದ್ ಬಿನ್ ಎಮ್‌.ಎನ್‌ ಪದ್ಮನಾಭನ್‌, 21 ವರ್ಷ, ವಿದ್ಯಾರ್ಥಿ, ವೈಷ್ಣವ ಜನಾಂಗ, 2 ನೇ ಕ್ರಾಸ್, ಅಶೋಕನಗರ, ದೋಭಿಘಾಟ್ ರಸ್ತೆ, ತುಮಕೂರು ಟೌನ್‌ ಎಂದು ತಿಳಿಸಿರುತ್ತಾನೆ. ಸದರಿ ವ್ಯಕ್ತಿಯನ್ನು ಮತ್ತು ಆತನ ಬಳಿ ಇರುವ ಗಾಂಜಾ ಸೊಪ್ಪಿನ ಕಪ್ಪು ಬಣ್ಣದ ಪ್ಲಾಸ್ಟಿಕ್ ಕವರ್ ಅನ್ನು ಸ್ಥಳದಲ್ಲಿಯೇ ಜೋಪಾನವಾಗಿ ನೋಡಿಕೊಂಡಿರುವಂತೆ ಸ್ಥಳದಲ್ಲಿ ಠಾಣಾ ಸಿಬ್ಬಂದಿಗಳಾದ ತಿಪ್ಪೇಸ್ವಾಮಿ ಬಿ.ಟಿ ಹೆಚ್‌.ಸಿ 134, ಲೋಕೇಶ್ ಕೆ.ಎಸ್ ಸಿಪಿಸಿ 614, ನರಸಿಂಹಮೂರ್ತಿ ಸಿಪಿಸಿ 291 ರವರನ್ನು ಬಿಟ್ಟಿದ್ದು, ಈತನ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸುವ ಸಲುವಾಗಿ ವಾಪಸ್ಸು ಠಾಣೆಗೆ ಬಂದಿದ್ದು ಈತನ ಮೇಲೆ ಎಫ್.ಐ.ಆರ್. ದಾಖಲಿಸಿ ವರದಿ ಮಾಡಲು ಸೂಚಿಸಿದ್ದರ ಮೇರೆಗೆ ಪ್ರಕರಣ ದಾಖಲಿಸಿರುತ್ತೆ

 

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ 215/2017 ಕಲಂ 279,337 ಐಪಿಸಿ

ದಿನಾಂಕ:25-11-2017 ರಂದು ರಾತ್ರಿ 9-15 ಗಂಟೆಗೆ ಪಿರ್ಯಾದಿಯಾದ ಮಹದೇವಯ್ಯ ಬಿನ್ ಭೈರಪ್ಪ, 36 ವರ್ಷ, ಒಕ್ಕಲಿಗರು, ವ್ಯವಸಾಯ, ಬೊಮ್ಮನಹಳ್ಳಿ, ಸಿರಿವರ ಪೋಸ್ಟ್‌, ಹೆಬ್ಬೂರು ಹೋಬಳಿ, ತುಮಕೂರು ತಾಲ್ಲೂಕು & ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೇಂಧರೆ ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ದಿನಾಂಕ:24-11-2017 ರಂದು ನಾನು ಮತ್ತು ನಮ್ಮ ಗ್ರಾಮದ ವಾಸಿಯಾದ ರಾಜಣ್ಣ ಇಬ್ಬರೂ ನಮ್ಮ ಸ್ವಂತ ಕೆಲಸದ ಮೇಲೆ ನಮ್ಮ ಗ್ರಾಮದಿಂದ ಸಿರಿವರ ಹ್ಯಾಂಡ್‌ಪೋಸ್ಟ್ ಗೆ ಬರುತ್ತಿರುವಾಗ್ಗೆ, ಸಿರಿವರ ಹ್ಯಾಂಡ್‌ಪೋಸ್ಟ್‌‌‌-ಕೆ,ಜಿ,ಟೆಂಪಲ್‌ ರಸ್ತೆಯಲ್ಲಿನ ಡಿ,ಎಸ್,ಪಾಳ್ಯ ಹಾಗೂ ಬೊಮ್ಮನಹಳ್ಳಿಗೆ ಹೋಗುವ ಕ್ರಾಸ್‌ನಲ್ಲಿ ಮದ್ಯಾಹ್ನ ಸುಮಾರು 01-00 ಗಂಟೆಗೆ ಸಿರಿವರ ಹ್ಯಾಂಡ್‌ಪೋಸ್ಟ್‌ ಕಡೆಯಿಂದ ಕೆಎ-06-ಇ.ಟಿ-4093 ನೇ ಹೀರೋ ಸ್ಪ್ಲೆಂಡರ್ ಫ್ರೋ ದ್ವಿಚಕ್ರ ವಾಹನದ ಸವಾರನು ಹಿಂಬದಿಯಲ್ಲಿ ಒಬ್ಬ ಆಸಾಮಿಯನ್ನು ಕೂರಿಸಿಕೊಂಡು ಕೆ,ಜಿ,ಟೆಂಪಲ್ ಕಡೆಗೆ ತನ್ನ ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ಬೊಮ್ಮನಹಳ್ಳಿ ಕಡೆಯಿಂದ ಸಿರಿವರ ಹ್ಯಾಂಡ್‌ಪೋಸ್ಟ್‌ ಕಡೆಗೆ ಹೋಗಲು ಬಂದ ಕೆಎ-06-ಇ.ಯು-2184 ನೇ ಟಿ,ವಿ,ಎಸ್ ಎಕ್ಸ್‌.ಎಲ್ ಸೂಪರ್ ಹೆವಿ ಡ್ಯೂಟಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದ ಪರಿಣಾಮ ಎರಡೂ ದ್ವಿಚಕ್ರ ವಾಹನದಲ್ಲಿದ್ದವರು ದ್ವಿಚಕ್ರ ವಾಹನ ಸಮೇತ ಕೆಳಗೆ ಬಿದ್ದರು. ನಂತರ ನಾನು ಹಾಗೂ ರಾಜಣ್ಣ ಇಬ್ಬರು ಸದರಿಯವರುಗಳನ್ನು ಉಪಚರಿಸಿ ನೋಡಲಾಗಿ, ಕೆಎ-06-ಇ.ಯು-2184 ನೇ ಟಿ,ವಿ,ಎಸ್ ಎಕ್ಸ್‌.ಎಲ್ ಸೂಪರ್ ಹೆವಿ ಡ್ಯೂಟಿ ದ್ವಿಚಕ್ರ ವಾಹನದ ಸವಾರನು ನಮ್ಮ ಗ್ರಾಮದ ವಾಸಿಯಾದ ಮುನಿರಾಜು ಆಗಿದ್ದು, ಹಿಂಬದಿಯಲ್ಲಿ ಕುಳಿತ್ತಿದ್ದವರು ಆತನ ತಂಗಿ ಲತಾಮಣಿ ಆಗಿದ್ದರು. ಮುನಿರಾಜು ರವರಿಗೆ ಮುಖಕ್ಕೆ ಹಾಗೂ ತಲೆಯ ಭಾಗಕ್ಕೆ ತೀವ್ರತರವಾದ ಏಟು ಬಿದ್ದು ರಕ್ತಗಾಯಗಳಾಗಿದ್ದವು. ಲತಾಮಣಿ ರವರಿಗೆ ತರಚಿದ ಗಾಯಗಳಾಗಿದ್ದವು. ಕೆಎ-06-ಇ.ಟಿ-4093 ನೇ ಹೀರೋ ಸ್ಪ್ಲೆಂಡರ್ ಫ್ರೋ ದ್ವಿಚಕ್ರ ವಾಹನದಲ್ಲಿದ್ದ ಇಬ್ಬರಿಗೂ ಗಾಯಗಳಾಗಿದ್ದವು. ಸದರಿಯವರುಗಳ ಹೆಸರು ವಿಳಾಸ ತಿಳಿಯಲಿಲ್ಲ. ನಂತರ ಗಾಯಗೊಂಡಿದ್ದ ಮುನಿರಾಜು ರವರನ್ನು ಸ್ಥಳಕ್ಕೆ ಬಂದ ಯಾವುದೋ ಒಂದು ಆಟೋದಲ್ಲಿ ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದೆನು. ಮತ್ತೊಂದು ದ್ವಿಚಕ್ರ ವಾಹನದಲ್ಲಿದ್ದ ಗಾಯಾಳುಗಳನ್ನು ಅಲ್ಲಿಯೇ ಇದ್ದ ಸಾರ್ವಜನಿಕರು ಯಾವುದೋ ಒಂದು ವಾಹನದಲ್ಲಿ ಆಸ್ಪತ್ರೆಗೆ ಕಳುಹಿಸಿಕೊಟ್ಟರು. ಮುನಿರಾಜುರವರನ್ನು ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದು, ನಂತರ ಮುನಿರಾಜು ರವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ನಂತರ ಅಲ್ಲಿಂದ ಬೆಂಗಳೂರಿನ ಮೆಡ್‌ಕೇರ್‌ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದೆವು. ಆದ್ದರಿಂದ ಸದರಿ ಅಪಘಾತಕ್ಕೆ ಕಾರಣರಾದ ಕೆಎ-06-ಇ.ಟಿ-4093 ನೇ ಹೀರೋ ಸ್ಪ್ಲೆಂಡರ್ ಫ್ರೋ ದ್ವಿಚಕ್ರ ವಾಹನದ ಸವಾರನ ಮೇಲೆ ಕಾನೂನು ರೀತ್ಯಾ ಮುಂದಿನ ಕ್ರಮ ಜರುಗಿಸಬೇಕೆಂದು ಈ ಮೂಲಕ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ. ಮೇಲ್ಕಂಡ ಎರಡೂ ದ್ವಿಚಕ್ರ ವಾಹನಗಳು ಸಿರಿವರ ಹ್ಯಾಂಡ್‌ಪೋಸ್ಟ್ ನ ಪ್ರದೀಪ್‌ ರವರ ಹೋಟೆಲ್‌ನ ಬಳಿ ನಿಲ್ಲಿಸಿರುತ್ತೆ. ನಾನು ಮುನಿರಾಜು ರವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದರಿಂದ ಈ ದಿವಸ ತಡವಾಗಿ ಬಂದು ದೂರು ನೀಡುತ್ತಿದ್ದೇನೆಎಂದು ನೀಡಿದ ದೂರನ್ನು ಪಡೆದು ಠಾಣಾ ಮೊ ನಂ 215/2017 ಕಲಂ 279,337 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 77 guests online
Content View Hits : 304496