lowborn Press Note 17_06_17 | Tumakuru District Police | Tumkur Police | Karnataka Police

Dr. Divya V. Gopinath IPS,
Superintendent of Police,
Tumakuru Dt., Karnataka.

Message from SP

  : : ಪತ್ರಿಕಾ ಪ್ರಕಟಣೆ : : ::   ದಿನಾಂಕ: 21-09-2017 : : ದಿನಾಂಕ: 20-09-2017 ರಂದು ಕಳವು ಪ್ರಕರಣಗಳಲ್ಲಿ... >> ಜಿಲ್ಲಾ ಪೊಲೀಸ್ ಕಛೇರಿ, ತುಮಕೂರು ಜಿಲ್ಲೆ, ಅಡಿಕೆ ತೋಟದ ಹರಾಜು ಪ್ರಕ್ರಿಯೆ ಪತ್ರಿಕಾ... >> :- ಪತ್ರಿಕಾ ಪ್ರಕಟಣೆ   :- ದಿನಾಂಕ: 19-09-2017.   ದಿನಾಂಕ:19-09-2017 ರಂದು ಬೆಳಿಗಿನ ಜಾವ... >> ::  Press Note  :: Date : 15-09-17   ಹೆಬ್ಬೂರು ಪೊಲೀಸ್ ಠಾಣೆಯ ಮೊ ನಂ -158/2017 ಕಲಂ 379 ಐಪಿಸಿ ಪ್ರಕರಣದ ಸಂಬಂಧ... >> :: ಪತ್ರಿಕಾ ಪ್ರಕಟಣೆ   ::   : ದಿನಾಂಕ 11/09/2017  :   ದಿನಾಂಕ 02/09/2017 ರಂದು ದಂಡಿನಶಿವರ ಪೊಲೀಸ್... >> :: ಪತ್ರಿಕಾ ಪ್ರಕಟಣೆ :: ದಿನಾಂಕ: 29.08.2017 ಕೋರ ಪೊಲೀಸ್ ಠಾಣಾ ಮೊ.ನಂ. 154/2017 ಕಲಂ: 379, 511 ಐಪಿಸಿ ... >> ಪತ್ರಿಕಾ ಪ್ರಕಟಣೆ ತುಮಕೂರು ಜಿಲ್ಲೆಯ ಸಮಸ್ತ ನಾಗರೀಕರಿಗೆ ಗೌರಿ-ಗಣೇಶ ಹಬ್ಬದ... >> ದಿನಾಂಕ 23-08-2017 ರಂದು ತುಮಕೂರು ಜಿಲ್ಲಾ  ಹೆಚ್ಚುವರಿ ಪೊಲೀಸ್‌ ಆಧೀಕ್ಷಕರಾಗಿ ಶೋಭರಾಣೆ ... >> ಪತ್ರಿಕಾ ಪ್ರಕಟಣೆ. 48 ಗಂಟೆಗಳಲ್ಲಿ    ಕೊಲೆ ಆರೋಪಿಯ ಬಂಧನ ******* ದಿನಾಂಕ 08/08/2017 ರಂದು... >> :: ಪತ್ರಿಕಾ ಪ್ರಕಟಣೆ :: ಬೆಂಗಳೂರು ನಗರದ ಸಿಪಿಸಿ/ಮಪಿಸಿ ಹುದ್ದೆಗಳ ನೇಮಕಾತಿ ಸಂಬಂಧ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

Report Archive

< June 2017 >
Mo Tu We Th Fr Sa Su
      1 2 3 4
5 6 7 8 9 10 11
12 13 14 15 16 18
19 20 21 22 23 24 25
26 27 28 29 30    

Press Note 17_06_17

 

ದಿಃ17-06-2017.

:: ಪತ್ರಿಕಾ ಪ್ರಕಟಣೆ ::

 


ದಿನಾಂಕ: 09-06-2017 ರಂದು ಪಿರ್ಯಾದಿಯಾದ ಶ್ರೀ ರಾಘವೇಂದ್ರ, ಲಿಂಗದಹಳ್ಳಿ, ಪಾವಗಡ ತಾಲ್ಲೂಕ್ ರವರು ಅರಸೀಕೆರೆ ಪೊಲೀಸ್ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆಪಿರ್ಯಾದಿಯವರಿಗೆ ದಿನಾಂಕ: 01-06-2017 ರಂದು ಆರೋಪಿಯು ದೂರವಾಣಿ ಮೂಲಕ ಕರೆ ಮಾಡಿ ರೂ. 5 ಲಕ್ಷ ಹಣ ನೀಡಬೇಕು ಇಲ್ಲದಿದ್ದರೆ ನಿನ್ನ ಮಗುವನ್ನು ಕಿಡ್ನಾಪ್ ಮಾಡುತ್ತೇನೆ, ನಿನ್ನನ್ನು ಶೂಟ್ ಮಾಡಿ ಸಾಯಿಸುತ್ತೇನೆ ಇತ್ಯಾದಿಯಾಗಿ ಇಂದಿನವರೆಗೂ ಫೋನ್ ಮಾಡುತ್ತಾ ಹಣದ ಬೇಡಿಕೆಯಿಟ್ಟು ಮಾನಸಿಕ ಹಿಂಸೆ ನೀಡುತ್ತಿದ್ದಾನೆ ಈ ಬಗ್ಗೆ ಕಾನೂನು ಕ್ರಮ ಜರುಗಿಸಿ  ಎಂದು ನೀಡಿದ ದೂರನ್ನು ಪೊಲೀಸ್ ಸಬ್ ಇನ್ಸ್ಪೆಕ್ಟರ್ ರವರು ಪಡೆದು ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ಅಪಹರಣದ ಪ್ರಕರಣವನ್ನು  ಪಿ.ಎಸ್.ಐ. ರವರು ದಾಖಲಿಸಿ ತನಿಖೆ ಕೈಗೊಳ್ಳಲಾಗಿರುತ್ತದೆ. ಈ ಪ್ರಕರಣದಲ್ಲಿ ಪಿರ್ಯಾದಿ    ಶ್ರೀ ರಾಘವೇಂದ್ರ ರವರಿಗೆ ಆರೋಪಿಗಳು ಹಣದ ಬೇಡಿಕೆಯನ್ನಿಟ್ಟು ದೂರವಾಣಿಯಲ್ಲಿ  ಬೆದರಿಕೆ ಹಾಕಿರುವುದು ಸಾಭೀತಾಗಿರುತ್ತದೆ.

ಈ ಸಂಬಂಧ ಆರೋಪಿ ಪತ್ತೆಗಾಗಿ ಡಾ: ದಿವ್ಯ ವಿ. ಗೋಪಿನಾಥ್, ಐಪಿಎಸ್., ಪೊಲೀಸ್ ಅಧೀಕ್ಷಕರು ಮತ್ತು ಶ್ರೀ ಹೆಚ್.ಡಿ. ಆನಂದಕುಮಾರ್,ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ತುಮಕೂರು ಜಿಲ್ಲೆ ರವರ ಮಾರ್ಗದರ್ಶನದಲ್ಲಿ ಹಾಗೂ ಶ್ರೀ ಓ.ಬಿ.ಕಲ್ಲೇಶಪ್ಪ, ಪೊಲೀಸ್ ಉಪಾಧೀಕ್ಷಕರು, ಮಧುಗಿರಿ ಉಪ ವಿಭಾಗ, ಶ್ರೀ ಹೆಚ್.ಜಿ. ಮಹೇಶ್, ಪೊಲೀಸ್ ವೃತ್ತ ನಿರೀಕ್ಷಕರು, ಪಾವಗಡ ವೃತ್ತ ರವರ ಸಲಹೆಯಂತೆ       ಶ್ರೀ ಲಕ್ಷ್ಮೀಕಾಂತ್ ಎಸ್., ಪೊಲೀಸ್ ಸಬ್ ಇನ್ಸ್ಪೆಕ್ಟರ್, ಅರಸೀಕೆರೆ ಪೊಲೀಸ್ ಠಾಣೆ ಮತ್ತು ಪೊಲೀಸ್ ಸಿಬ್ಬಂದಿಗಳಾದ ಶ್ರೀಯುತರಾದ ಜಗನ್ನಾಥ್, ರಾಮಾಂಜಿನಯ್ಯ, ರಂಜಿತ್ ಕುಮಾರ್, ಹರೀಶ್, ರಘುನಾಥ್ ರವರನ್ನು ಒಳಗೊಂಡ ವಿಶೇಷ ತಂಡ ರಚಿಸಿ, ಜಿಲ್ಲಾ ಪೊಲೀಸ್ ಕಛೇರಿಯ ತಾಂತ್ರಿಕ ವಿಭಾಗದ ಸಿಬ್ಬಂದಿಗಳ ನೆರವಿನಿಂದ ಈ ಪ್ರಕರಣದ ರಹಸ್ಯವನ್ನು ಭೇದಿಸಿ ಹಣದ ಬೇಡಿಕೆಯನ್ನಿಟ್ಟು ದೂರವಾಣಿ ಮುಖಾಂತರ ಅಪಹರಣವೆಸಗುವ ಹಾಗೂ ಗುಂಡು ಹಾರಿಸುವ ಬೆದರಿಕೆ ಹಾಕಿದ ಆರೋಪಿಗಳಾದ 1) ಚಂದ್ರ ಬಿನ್ ತಮ್ಮಣ್ಣ, 27 ವರ್ಷ, ನಾಯಕರು, ಲಿಂಗದಹಳ್ಳಿ, ಪಾವಗಡ ತಾಲ್ಲೂಕ್ 2) ರಘು ಬಿನ್ ರಂಗನಾಥ್, 25 ವರ್ಷ, ವಕ್ಕಲಿಗರು, ಕೊಟ್ಟ ಗ್ರಾಮ, ಶಿರಾ ತಾಲ್ಲೂಕ್ ರವರುಗಳನ್ನು ದಸ್ತಗಿರಿ ಮಾಡಿದ್ದು, ಕೃತ್ಯಕ್ಕೆ ಬಳಸಿದ ಸುಮಾರು ರೂ.1,75,000/- ಮೌಲ್ಯದ ಬುಲೆಟ್ ದ್ವಿಚಕ್ರ ವಾಹನವನ್ನು ಮತ್ತು ಪ್ರಕರಣಕ್ಕೆ ಸಂಬಂಧಿಸಿದ 04 ಮೊಬೈಲ್ ಹ್ಯಾಂಡ್ ಸೆಟ್ ಗಳನ್ನು ವಿಶೇಷ ತಂಡದವರು ವಶ ಪಡಿಸಿಕೊಂಡಿರುತ್ತಾರೆ.

 

ಮೇಲ್ಕಂಡ ಪ್ರಕರಣದ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಶ್ರಮಿಸಿದ ಮೇಲಿನ ವಿಶೇಷ ತಂಡದ ಕಾರ್ಯವನ್ನು ಡಾ: ದಿವ್ಯ ವಿ. ಗೋಪಿನಾಥ್, ಪೊಲೀಸ್ ಅಧೀಕ್ಷಕರು, ತುಮಕೂರು ಜಿಲ್ಲೆ ರವರು ಮುಕ್ತ ಕಂಠದಿಂದ ಪ್ರಶಂಶಿಸಿರುತ್ತಾರೆ.

 

ಸಹಿ/-

(ಡಾ: ದಿವ್ಯ ವಿ.ಗೋಪಿನಾಥ್, ಐಪಿಎಸ್.)

ಪೊಲೀಸ್ ಅಧೀಕ್ಷಕರು, ತುಮಕೂರು ಜಿಲ್ಲೆ.

Report a Crime


Tumkur Police App

Helpline Contacts

POLICE
100
POLICE CONTROL ROOM
0816-2278000
AMBULANCE
108
FIRE BRIGADE
101
BESCOM HELPLINE
1912
SENIOR CITIZEN HELPLINE
1090
WOMEN HELPLINE
1091
CHILD HELPLINE
1098
SP OFFICE
0816-2275451
ADDITIONAL SP
0816-2274130
DEPUTY COMMISSIONER
0816-2272480
DISTRICT GENERAL HOSPITAL
0816-2278377
DISTRICT RTO OFFICE
0816-2278473

Gundappa
9448617529

Tilak
9739596920

Nandeesh
9845134445

Pasha
9900089813

Hyder
9980976954


 

Today's Weather

We have 112 guests online
Content View Hits : 166249