lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ : 20-07-18 ಸ್ಮಾರ್ಟ್ ಸಿಟಿ ಅಧಿಕಾರಿಗಳೆಂದು ವಂಚಿಸಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 20-07-2018       ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 09-07-2018 ಕೊಲೆ ಆರೋಪಿಗಳ ಬಂಧನ ******* ದಿನಾಂಕ 04.07.2018 ರಂದು... >>   ಪತ್ರಿಕಾ ಪ್ರಕಟಣೆ ದಿನಾಂಕ : 07-07-2018. ಪೂರ್ವಾನುಮತಿ ಪಡೆಯದೇ ಹೆದ್ದಾರಿ ತಡೆ ನಡೆಸಿ,... >> ದಿನಾಂಕ.03.07.2018. ಪತ್ರಿಕಾ ಪ್ರಕಟಣೆ ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ 11 ಲಕ್ಷ 70 ಸಾವಿರ ಬೆಲೆ ಬಾಳುವ ಚಿನ್ನ-ಬೆಳ್ಳಿ  ಹಾಗೂ ಮೊಬೈಲ್‌‌‌... >>   ಪತ್ರಿಕಾ ಪ್ರಕಟಣೆ. ತುಮಕೂರು ಜಿಲ್ಲಾ ಪೊಲೀಸ್, ತುಮಕೂರು. ಕೋರಾ ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 27.06.2018 ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಸಾರ್ವಜನಿಕರ... >> ಪತ್ರಿಕಾ ಪ್ರಕಟಣೆ ದಿನಾಂಕ:- 23/06/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಖನ್ನ... >> ಪತ್ರಿಕಾ ಪ್ರಕಟಣೆ ದಿನಾಂಕ: 21-06-2018. ಸುಲಿಗೆಕೋರರ ಬಂಧನ: ದಿನಾಂಕ:18-06-2018 ರಂದು... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< July 2018 >
Mo Tu We Th Fr Sa Su
            1
2 3 4 5 6 7 8
9 10 11 12 13 14 15
16 17 18 19 21 22
23 24 25 26 27 28 29
30 31          
July 2018

Friday, 20 July 2018

ಪತ್ರಿಕಾ ಪ್ರಕಟಣೆ ದಿ 20-07-18

ಪತ್ರಿಕಾ ಪ್ರಕಟಣೆ

ದಿನಾಂಕ : 20-07-18

ಸ್ಮಾರ್ಟ್ ಸಿಟಿ ಅಧಿಕಾರಿಗಳೆಂದು ವಂಚಿಸಿ ಆಭರಣಗಳನ್ನು ದೋಚುತ್ತಿದ್ದ ಅಂತರ್ ರಾಜ್ಯ ಕಳ್ಳರ ಬಂಧನ

 

 

ತುಮಕೂರು, ಮೈಸೂರು, ಬೆಂಗಳೂರು ನಗರಗಳಲ್ಲಿ ವಯಸ್ಸಾದವರನ್ನು ಮತ್ತು ಒಂಟಿ ಮಹಿಳೆಯರು ಇರುತ್ತಿದ್ದ ಮನೆಗಳನ್ನು  ಗುರ್ತಿಸಿ ತಾವು ಸ್ಮಾರ್ಟ್ ಸಿಟಿ ಅಧಿಕಾರಿಗಳೇಂದು ಹೇಳಿಕೊಂಡಿ ವಂಚಿಸಿ ಮನೆಯೊಳಗೆ ನುಗ್ಗಿ ಆಭರಣಗಳನ್ನು ಮತ್ತು ಹಣವನ್ನು ದೋಚುತ್ತಿದ್ದ ತಂಡವನ್ನು ಬಂಧಿಸಿ ಅವರಿಂದ  500 ಗ್ರಾಂ ಬಂಗಾರ ಮತ್ತು 2,52,500/- ರೂ ನಗದು ಹಣವನ್ನು ಹಾಗೂ ಒಂದು ಹೀರೋ ಹೋಂಡ ಬೈಕನ್ನು ವಶಪಡಿಸಿಕೊಳ್ಳಲಾಗಿದೆ.

ತುಮಕೂರಿನಲ್ಲಿ ಒಂದೇ ದಿನ ಕ್ಯಾತ್ಸಂದ್ರ , ಸಿ ಎಸ್ ಐ ಲೇಔಟ್, ಮತ್ತು ಜಯನಗರ ಠಾಣಾ ವ್ಯಾಪ್ತಿಯಲ್ಲಿ ಕೃತ್ಯವೆಸಗಿದ ಆರೋಪಿಗಳಾದ

1) ಗಣೇಶ್ , ಡಿ ಬಿನ್ ದೊರೈ ಸ್ವಾಮಿ, 42 ವರ್ಷ,ತಮಿಳ್ ಗೌಂಡರ್ ಜನಾಂಗ, ( ವನ್ನಿಯಾರ್ ) ವ್ಯಾಪಾರ ವೃತ್ತಿ, ವಾಸ :- ಮನೆ ನಂ:- 1/79 ಪೆಳ್ಳಿಯಾರ್ ಕೊವಿಲ್ ತೇರು, ( ಬೀದಿ ) ಶ್ರೀನಿವಾಸನ್ ರೇಷನ್ ಅಂಗಡಿ ಪಕ್ಕ, ತುತ್ತಿಪಟ್ ,ಆಂಬೂರು ಟೌನ್ ,ವೇಲೂರು ಜಿಲ್ಲೆ, ತಮಿಳುನಾಡುರಾಜ್ಯ ( ಈತನ ಮೇಲೆ ಒಟ್ಟು 24 ಪ್ರಕರಣಗಳು ಚೆನ್ನೈ ಮತ್ತು ಆಂಬೂರಿನಲ್ಲಿ ಇರುತ್ತವೆ )

2) ಡಿ,ಎಂ. ರಾಮಚಂದ್ರ @ ಕುಕ್ಕೋಡಿ ಬಿನ್ ಮಲ್ಲೇಶಪ್ಪ ,32 ವರ್ಷ, ಬೋವಿ ಜನಾಂಗ, ವ್ಯವಸಾಯ ಮತ್ತು ಕೂಲಿ ಕೆಲಸ, ವಾಸ:- ದೊಡ್ಡೇರಿ ಗ್ರಾಮ, ಗಂಗೂರು ಪೋಸ್ಟ್, ಕೂಡ್ಲಿಗೆರೆ ಪೋಸ್ಟ್, ಭದ್ರಾವತಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ,( ಈತನ ಮೇಲೆ ಮನೆಗಳ್ಳತನ, ಸುಲಿಗೆ ಹಾಗೂ ಅಪಹರಣದ ಪ್ರಕರಣಗಳು ಇರುತ್ತವೆ)

3) ಫರೀದುಲ್ ಇಂತಿಯಾಝ್ ಮೊಲ್ಲ @ ಮುಲ್ಲಾ ಬಿನ್ ಇಂತೆಖಾಬ್ ಆಲಂ ಮೊಲ್ಲ ,26 ವರ್ಷ, ಮುಸ್ಲಿಂ ಜನಾಂಗ, ಬೀಡಿ ಸಿಗರೇಟ್ ವ್ಯಾಪಾರ, ವಾಸ :- ಮನೆ ನಂ:- 4151, ಫ್ಲೋರಿಡಾ ಎಸ್ಟೇಟ್ ಹತ್ತಿರ, ಕೇಶವನಗರ್ ಪುಣೆ , ಮಹಾರಾಷ್ಟ್ರ ರಾಜ್ಯ, ಸ್ವಂತ ವಿಳಾಸ :- ಇಎ180, ಖಾಜಿ ಮೊಹಲ್ಲ, ಜಲಂಧರ್ , ಸಿಟಿ, ಪಂಜಾಬ್ ರಾಜ್ಯ.

ಇವರುಗಳ ಪೈಕಿ ಗಣೇಶ್ ಮತ್ತು ರಾಮಚಂದ್ರ ಮೊದಲಿಗೆ ಸ್ಮಾರ್ಟ್ ಸಿಟಿ ಅಧಿಕಾರಿಗಳು ನಿಮ್ಮ ಮನೆಯ  ಯು,ಜಿ,ಡಿ.ಅಥವಾ ವಾಟರ್ ಕನೆಕ್ಷನ್ ನೋಡಬೇಕೆಂದು ಮಾಲೀಕರ ಗಮನವನ್ನು ಬೇರೆಡೆಗೆ ಸೆಳೆದು ಮನೆಯ ಮೇಲೆ ಕರೆದುಕೊಂಡು ಹೋದಾಗ ಒಬ್ಬ ಮನೆಯೊಳಗೆ ಹೋಗಿ ಆಭರಣಗಳನ್ನು ದೋಚುತ್ತಿದ್ದ  ಕೃತ್ಯವಾದ ನಂತರ ಹೊರಗಡೆ ಇರುತ್ತಿದ್ದ  ಫರೀದುಲ್ ಇಂತಿಯಾಝ್ ಮೊಲ್ಲ ಮನೆಯ ಮೇಲೆ ಇರುತ್ತಿದ್ದ ಗಣೇಶ ಮತ್ತು ರಾಮಚಂದ್ರನಿಗೆ ಸನ್ನೆ ಮಾಡುತ್ತಿದ್ದು, ಆ ಸಮಯದಲ್ಲಿ ಕೃತ್ಯ ನಡೆಸಿರುತ್ತಾರೆ.  ಸದರಿ ಮೇಲ್ಕಂಡ ಆರೋಪಿತರು ದ್ವಿ ಚಕ್ರ ವಾಹನದಲ್ಲಿ ಬರುತ್ತಿದ್ದ ವೇಳೆ ನಂಬರ್ ಪ್ಲೇಟ್ ಮೇಲೆ ನಂಬರ್ ಗಳು ತಿರುಚಿದ್ದಂತೆ ಕಂಡಾಗ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ TN-23 ಎಂಬುದು KA-23 ಎಂಬುದಾಗಿ ಬದಲಾಯಿಸಿದ್ದು ಮೋಟರ್ ಸೈಕಲ್ ಸಹ ವೆಲ್ಲೂರು ನಗರದಲ್ಲಿ ಕಳ್ಳತನ ಮಾಡಿರುವುದಾಗಿ ತಿಳಿದು ಬಂದಿರುತ್ತೆ.

ಸದರಿ ಆರೋಪಿಗಳ ಪತ್ತೆಗಾಗಿ ತುಮಕೂರು ನಗರ ಉಪಾಧೀಕ್ಷಕರಾದ ಶ್ರೀ ನಾಗರಾಜು ರವರ ಮಾರ್ಗದರ್ಶನದಲ್ಲಿ ಪೊಲೀಸ್ ವಿಶೇಷ ತಂಡವಾದ ಸಿಪಿಐರವರುಗಳಾದ ಶ್ರೀ ರಾಧಾಕೃಷ್ಣ, ಶ್ರೀ. ರಾಮಕೃಷ್ಣಯ್ಯ, ಪಿ.ಎಸ್.ಐ. ರವರಾದ ಶ್ರೀ ಲಕ್ಷ್ಮಯ್ಯ, ಸಿಬ್ಬಂದಿಗಳಾದ ನರಸಿಂಹರಾಜು, ಸೈಮನ್ ವಿಕ್ಟರ್, ಮುನಾವರ್ ಪಾಷ, ಮೋಹನ್ ಕುಮಾರ್, ಶಾಂತರಾಜು. ರಮೇಶ ಮತ್ತು ಪ್ರಸನ್ನ ರವರುಗಳು ಶ್ರಮಿಸಿರುತ್ತಾರೆ.

ಈ ಪ್ರಕರಣದ ಆರೋಪಿಗಳು ಮತ್ತು ಮಾಲು ಪತ್ತೆಗಾಗಿ ಶ್ರಮಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಮಾನ್ಯ ಪೊಲೀಸ್ ಅಧೀಕ್ಷಕರವರು ಅಭಿನಂದಿಸಿರುತ್ತಾರೆ.


ಅಪರಾಧ ಘಟನೆಗಳು 20-07-18

ಹುಳಿಯಾರು ಪೊಲೀಸ್ ಠಾಣಾ ಮೊ.ನಂ 83/2018 ಕಲಂ: 324, 504 R/w 34 IPC.

ದಿನಾಂಕ:19/07/2018 ರಂದು ಸಂಜೆ 07-15 ಗಂಟೆಗೆ ಪಿರ್ಯಾದಿ ಇಳಿಯಾಜ್ ಪಾಷ ಬಿನ್ ಇಂತಿಯಾಜ್ ಸಾಬ್, 40 ವರ್ಷ, ಕಡ್ಡಿ ವ್ಯಾಪಾರ, ಮುಸ್ಲೀಂ ಜನಾಂಗ, ವೈ.ಎಸ್ ಪಾಳ್ಯ, ಹುಳಿಯಾರು ಹೋಬಳಿ, ಚಿಕ್ಕನಾಯಕನಹಳ್ಳಿ ತಾಲ್ಲೂಕು, ಇವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ನಮ್ಮ ಮುತ್ತಾತ ಹುಸೇನ್ ಸಾಬ್ ರವರ ಹೆಸರಿನಲ್ಲಿ ಜಮೀನಿದ್ದು, ಸದರಿ ಜಮೀನಿನ ವಿಚಾರವಾಗಿ ನಾನು ಮತ್ತು ವಹಾಬ್ ಸಾಬ್ ರವರು ಗಲಾಟೆ ಮಾಡಿಕೊಂಡು ಕೋರ್ಟ್ ಗೆ ದಾವೆ ಹಾಕಿರುತ್ತೇವೆ. ದಿನಾಂಕ:19/07/2018 ರಂದು ಬೆಳಿಗ್ಗೆ 09-30 ರ ಸಮಯದಲ್ಲಿ ವೈ.ಎಸ್ ಪಾಳ್ಯದ ವಾಸಿಗಳಾದ ವಹಾಬ್ ಸಾಬ್ ಬಿನ್ ಪೀರಾನ್ ಸಾಬ್, ನಯಾಜ್ ಬಿನ್ ವಹಾಬ್ ಸಾಬ್, ಇಸ್ಮಾಯಿಲ್ ಸಾಬ್ ಬಿನ್ ಪಿರಾನ್ ಸಾಬ್, ಮನ್ಸೂರ್ ಬಿನ್ ಇಸ್ಮಾಯಿಲ್ ಇವರುಗಳು ಸದರಿ ಜಮೀನಿಗೆ ಬಂದು ಜಮೀನಿನಲ್ಲಿ ಕೆಲಸ ಮಾಡುತ್ತಿರುತ್ತಾರೆ. ಆಗ ನಾನು ಹೋಗಿ ಏಕೆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದೀರ ಎಂದು ಕೇಳಿದ್ದಕ್ಕೆ, ಇವರುಗಳು ಏಕಾ ಏಕಿ ನನ್ನ ಮೇಲೆ ಗಲಾಟೆಗೆ ಬಂದು ನನಗೆ ಅವಾಚ್ಯ ಶಬ್ದಗಳಿಂದ ಬೈಯ್ದು ದೊಣ್ಣೆ ಮತ್ತು ಕಲ್ಲಿನಿಂದ ನನಗೆ ಹೊಡೆದು ರಕ್ತಗಾಯ ಮಾಡಿರುತ್ತಾರೆ. ಸ್ವಾಮಿ ಇವರುಗಳನ್ನು ಕರೆಯಿಸಿ ನನಗೆ ನ್ಯಾಯ ರಕ್ಷಣೆ ನೀಡಬೇಕಾಗಿ ತಮ್ಮಲ್ಲಿ ಕೋರುತ್ತೇನೆ ಎಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

ತಿಪಟೂರು ನಗರ ಪೊಲೀಸ್ ಠಾಣಾ ಮೊ.ನಂ – 111/2018 ಕಲಂ:  379 IPC

ದಿನಾಂಕ:19/07/2018 ರಂದು ಬೆಳಿಗ್ಗೆ 11-30 ಗಂಟೆಗೆ ಪಿರ್ಯಾದಿ ಸೋಮಶೇಖರಯ್ಯ ಬಿನ್ ಲೇಟ್ ಅಲ್ಲಪ್ಪ 57 ವರ್ಷ, ಲಿಂಗಾಯಿತರು, ವ್ಯವಸಾಯ,ರಂಗಾಫುರ, ಕಸಬಾ ಹೋಬಳಿ, ತಿಪಟೂರು ತಾಲ್ಲೋಕ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಾನು ದಿನಾಂಕ 06/07/2018 ರಂದು ವಾಸುದೇರಹಳ್ಳಿಯ ನಮ್ಮ ಸಂಬಂಧಿಕರ ಮದುವೆ ಕಾರ್ಯವು ತಿಪಟೂರಿನ ಕೆ,ಆರ್, ಬಡಾವಣೆಯಲ್ಲಿರುವ ಸೀತಾರಾಮಯ್ಯ ಕಲ್ಯಾಣ ಮಂಟಪದಲ್ಲಿ ಇದ್ದುದ್ದರಿಂದ ನಾನು ಆ ದಿನ ಬೆಳಿಗ್ಗೆ 10=00 ಗಂಟೆಗೆ ನನ್ನ ಬಾಬ್ತು ಕೆ.ಎ 44 ಕೆ 5617 ನೇ ನಂಬರಿನ ಹೀರೋ ಹೊಂಡಾ ಫ್ಯಾಷನ್ ಪ್ರೋ ದ್ವಿಚಕ್ರವಾಹನದಲ್ಲಿ ಮನೆಯಿಂದ ಹೊರಟು ಸೀತಾರಾಮಯ್ಯ ಕಲ್ಯಾಣ ಮಂಟಪದ ಹತ್ತಿರಕ್ಕೆ 10=30 ಗಂಟೆಗೆ ಬಂದು ಕಲ್ಯಾಣ ಮಂಟಪದ ಎದುರಿನಲ್ಲಿರುವ ಅರಳೀಕಟ್ಟೆಯ ಪಕ್ಕದಲ್ಲಿ ದ್ವಿಚಕ್ರವಾಹನವನ್ನು ಹ್ಯಾಂಡಲ್ ಲಾಕ್ ಮಾಡಿ ನಿಲ್ಲಿಸಿ, ಕಲ್ಯಾಣ ಮಂಟಪದ ಒಳಗೆ ಹೋಗಿ ಮಹೂರ್ತ ಕಾರ್ಯ ಮುಗಿಸಿ ಸುಮಾರು ಬೆಳಗ್ಗೆ 11=00 ಗಂಟೆಗೆ ಕಲ್ಯಾಣ ಮಂಟಪದಿಂದ ಹೊರ ಬಂದು ನೋಡಲಾಗಿ ನಾನು ನಿಲ್ಲಿಸಿದ್ದ  ನನ್ನ ಬಾಬ್ತು ಕೆ.ಎ 44 ಕೆ 5617 ನೇ ನಂಬರಿನ ಹಿರೋ ಹೊಂಡಾ ಫ್ಯಾಷನ್ ಪ್ರೋ ದ್ವಿಚಕ್ರವಾಹನವು ಕಾಣಲಿಲ್ಲ, ಮದುವೆಗೆ ಬಂದಿದ್ದ ನಮ್ಮ ಸಂಬಂಧಿಕರಾದ ಕೆರೆಗೋಡಿ ಯೋಗಾನಂದಮೂರ್ತಿರವರಿಗೆ ವಿಚಾರ ತಿಳಿಸಿ, ನಾನು ಮತ್ತು ಅವರು ತಿಪಟೂರಿನ ಎಲ್ಲಾ ಕಡೆ ಹುಡುಕಾಡಿದರೂ ಸಹ ಪತ್ತೆಯಾಗಲಿಲ್ಲ, ನಂತರ ನಾನು  ಮನೆಗೆ ಹೋಗಿ ನನ್ನ ಮಗ  ಮಧುರವರಿಗೆ  ಬೈಕ್ ಕಳ್ಳತನವಾಗಿರುವ ವಿಚಾರ ತಿಳಿಸಿ ನಾನು ಮತ್ತು ನನ್ನ ಮಗ ಅಂದಿನಿಂದ ಇಲ್ಲಿಯವರೆವಿಗೆ ತಿಪಟೂರು ಸುತ್ತ-ಮುತ್ತ ಹುಡುಕಾಡಿದರೂ ಸಹ ನನ್ನ ಬೈಕ್ ಪತ್ತೆಯಾಗಿರುವುದಿಲ್ಲ, ಆ ದಿನ ಯಾರೋ ಕಳ್ಳರು ನನ್ನ ಬಾಬ್ತು ದ್ವಿಚಕ್ರವಾಹನದ ಹ್ಯಾಂಡಲ್ ಲಾಕ್ ಮುರಿದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ, ನನ್ನ ಬೈಕಿನ ಚಾಸ್ಸೀಸ ನಂಬರ್ MBLHA10AWCGD14380 ಆಗಿದ್ದು, ಇಂಜಿನ್ ನಂಬರ್ HA10ENCGD14278 ಆಗಿರುತ್ತದೆ,  ಬೈಕಿನ ಅಂದಾಜು ಬೆಲೆ ಸುಮಾರು 15,000=00 ರೂ  ಆಗಬಹುದು. ಇದುವರೆವಿಗೂ ಎಲ್ಲಿಯೂ ಪತ್ತೆಯಾಗದ ಕಾರಣ ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದು, ನನ್ನ ಬೈಕನ್ನು ಕಳ್ಳತನ ಮಾಡಿರುವವರನ್ನು ಪತ್ತೆ ಮಾಡಿ ಅವರ ಮೇಲೆ ಕಾನೂನು ರೀತ್ಯ ಕ್ರಮ ಕೈಗೊಳ್ಳಬೇಕೆಂದು ಇತ್ಯಾದಿಯಾಗಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

 

ಮಿಡಿಗೇಶಿ ಪೊಲೀಸ್ ಠಾಣಾ ಮೊ.ಸಂ.73/2018, ಕಲಂ: 279, 304(ಎ) ಐ.ಪಿ.ಸಿ.

ದಿನಾಂಕ:19/07/2018 ರಂದು ಬೆಳಿಗ್ಗೆ 08:30 ಗಂಟೆಗೆ ಪಿರ್ಯಾದಿ ಶಾಂತಮ್ಮ ಕೋಂ ಲಕ್ಷ್ಮೀನರಸಪ್ಪ, 33 ವರ್ಷ, ಎ.ಕೆ.ಜನಾಂಗ, ಕೂಲಿ ಕೆಲಸ, ಐ.ಡಿ.ಹಳ್ಳಿ ಗ್ರಾಮ, ಮಧುಗಿರಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನನ್ನ ಗಂಡ ಲಕ್ಷ್ಮೀನರಸಪ್ಪ ಹಾಗೂ ಮೂರು ಜನ ಮಕ್ಕಳೊಂದಿಗೆ ಐ.ಡಿ.ಹಳ್ಳಿಯಲ್ಲಿ ಜೀವನ ಸಾಗಿಸುತ್ತಿದ್ದು, ದಿನಾಂಕ:18/07/2018 ರಂದು ನಮ್ಮ ಸಂಬಂಧಿಕರಾದ ದೊಡ್ಡಯಲ್ಕೂರು ಅಂಜಿನಪ್ಪ ರವರ ಮನೆಯಲ್ಲಿ ಗ್ರಾಮ ದೇವತೆ ಜಾತ್ರೆಗೆ ನಾನು, ನನ್ನ ಗಂಡ, ಮಕ್ಕಳೊಂದಿಗೆ ಹೋಗಿದ್ದು, ನಂತರ ಸಂಜೆ ಊಟ ಮುಗಿಸಿಕೊಂಡು ನನ್ನ ಮಕ್ಕಳೊಂದಿಗೆ ನಮ್ಮ ಊರಾದ ಐ.ಡಿ.ಹಳ್ಳಿಗೆ ಹೋರಟು ಹೋಗಿದ್ದು, ಸ್ವಲ್ಪ ಸಮಯದಲ್ಲೇ ಅಂದರೆ ಸಂಜೆ 07:30 ಗಂಟೆಗೆ ನನ್ನ ಭಾವನಾದ ನರಸಿಂಹಮೂರ್ತಿ ರವರು ನನಗೆ ದೂರವಾಣಿ ಕರೆಮಾಡಿ ಐ.ಡಿ.ಹಳ್ಳಿ ಸರ್ಕಲು-ಹೊಸಕೆರೆ ರಸ್ತೆಯ ಸೇತುವೆಯ ಹತ್ತಿರ ನಿನ್ನ ಗಂಡ ರಸ್ತೆಯ ಎಡ ಬದಿಯಲ್ಲಿ ಹೊಸಕೆರೆ-ಐ.ಡಿ.ಹಳ್ಳಿ ರಸ್ತೆಯಲ್ಲಿ ಹೋಗುತ್ತಿರುವಾಗ ಅದೇ ಸಮಯಕ್ಕೆ ಐ.ಡಿಹಳ್ಳಿ ಸರ್ಕಲ್ ಕಡೆಯಿಂದ ಒಂದು ದ್ವಿ ಚಕ್ರ ವಾಹನ ಸವಾರ ಮತ್ತು ಆತನ ಅಜಾಗರುಕತೆಯಿಂದ ಅತೀವೇಗವಾಗಿ ಓಡಿಸಿಕೊಂಡು ಬಂದು ರಸ್ತೆಯ ಎಡ ಬದಿಯಲ್ಲಿ ಹೋಗುತ್ತಿದ್ದ ನಿನ್ನ ಗಂಡನ ಬೈಕಿಗೆ ಡಿಕ್ಕಿ ಹೊಡೆದು ಅಪಘಾತ ಉಂಟುಮಾಡಿದ ಪರಿಣಾಮ ಎರಡು ಬೈಕುಗಳು ಜಖಂಗೊಂಡು ರಸ್ತೆಯ ಮೇಲೆ ಬಿದ್ದವು. ಕೂಡಲೇ ನಾನು ಅಪಘಾತವನ್ನು ನೋಡಿ ಅಪಘಾತಕೀಡಾಗಿದ್ದ ನಿನ್ನ ಗಂಡನ ತಲೆ ಮತ್ತು ಎದೆಗೆ ಬಲವಾಗಿ ತೀರ್ವ ತರವಾದ ಗಾಯಗಳಾಗಿದ್ದು ನಿನ್ನ ಗಂಡ ಲಕ್ಷ್ಮೀನರಸಪ್ಪನವರು  ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ಇವರು ಸಾವಿಗೆ ಕಾರಣವಾದ ಕೆಎ-06-ಇ.ಎನ್-0960 ನೇ ಬೈಕಿನ ಚಾಲಕನ ಹೆಸರು ಕೇಳಲಾಗಿ ರಾಮಲಿಂಗಪ್ಪ ಬಿನ್ ಕದರಪ್ಪ, ನೀರಕಲ್ಲು ಎಂತ ತಿಳಿದು ಬಂದಿರುತ್ತದೆ. ಮತ್ತು ಲಕ್ಷ್ಮೀನರಸಪ್ಪ ಬಿನ್ ಹನುಮಂತಪ್ಪನವರು ಮೃತ ವ್ಯಕ್ತಿ ಆತನ ಬೈಕ್ ನಂ.ಕೆಎ-04-ವಿ-2602 ಸಿ.ಡಿ-100 ರವರಗಿಗೆ 40 ವರ್ಷ ವಯಸ್ಸು. ನಾನು ಸ್ಥಳಕ್ಕೆ ಬಂದು ನೋಡಲಾಗಿ ಮೇಲ್ಕಂಡ ವಿಷಯ ನಿಜವಾಗಿದ್ದು, ನಂತರ ನನ್ನ ಗಂಡನ ಶವವನ್ನು ಯಾವುದೋ ವಾಹನದಲ್ಲಿ ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತೇವೆ. ಮೇಲ್ಕಂಡ ಅಪಘಾತದ ವಿಷಯವನ್ನು ನಮ್ಮ ಸಂಬಂಧಿಕರಿಗೆ ತಿಳಿಸಿ ತಡವಾಗಿ ಬಂದು ದೂರು ನೀಡಿದ್ದು, ನನ್ನ ಗಂಡನ ಸಾವಿಗೆ ಕಾರಣನಾದ ಕೆಎ-06-ಇ.ಎನ್-0960 ಬೈಕ್ ಸವಾರನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ಪಿರ್ಯಾದು.Thursday, 19 July 2018

ಅಪರಾಧ ಘಟನೆಗಳು 19-07-18

ತಿಪಟೂರು ನಗರ ಪೊಲೀಸ್ ಠಾಣಾ ಮೊ.ನಂ – 110/2018 ಕಲಂ: 279,337 IPC

ದಿನಾಂಕ:18/07/2018 ರಂದು ರಾತ್ರಿ 08-30 ಗಂಟೆಯಿಂದ 09-00 ಗಂಟೆಯವರೆಗೆ ತಿಪಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಸುನೀಲ್‌. ಇ.ಸಿ ಬಿನ್‌ ಚಿದಾನಂದ್‌, 26 ವರ್ಷ, ಲಿಂಗಾಯಿತರು,ಶ್ರೀ ಲಕ್ಷ್ಮೀ ಮೊಬೈಲ್‌ ಅಂಗಡಿ ಮಾಲೀಕರು, ಮೀಸೆ ತಿಮ್ಮನಹಳ್ಳಿ, ಹೊನ್ನವಳ್ಳಿ ಹೋಬಳಿ, ತಿಪಟೂರು ತಾಲ್ಲೋಕ್‌ ರವರು ನೀಡಿದ ಹೇಳಿಕೆ ಅಂಶವೇನೆಂದರೆ, ದಿನಾಂಕ:18/07/2018 ರಂದು ರಾತ್ರಿ 08-00 ಗಂಟೆ ಸಮಯದಲ್ಲಿ ನಾನು ನಮ್ಮ ಮೊಬೈಲ್‌ ಅಂಗಡಿ ಬೀಗ ಹಾಕಿಕೊಂಡು ಅರಳೀಕಟ್ಟೆ ಹತ್ತಿರ ಇರುವ ಗೌತಮ್‌ ಎಲೆಕ್ಟ್ರಿಕಲ್ಸ್‌‌ ಹತ್ತಿರ ಕುಕ್ಕರ್‌ನ ಸೇಪ್ಟಿವಾಲ್‌ನ್ನು ತೆಗೆದುಕೊಂಡು ರಸ್ತೆಯನ್ನು ಕ್ರಾಸ್‌ ಮಾಡುವಾಗ ತಿಪಟೂರು  ದೊಡ್ಡಪೇಟೆ ರಸ್ತೆ ಕಡೆಯಿಂದ ಬಂದ ಒಂದು ಯಮಹ ಸೈಜನಸ್‌ ದ್ವಿಚಕ್ರ ವಾಹನದ ಸವಾರ ತನ್ನ ವಾಹನವನ್ನು ಅತಿಜೋರಾಗಿ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನನಗೆ ಡಿಕ್ಕಿ ಹೊಡೆಸಿದ ಪರಿಣಾಮ ನನ್ನ ಬಲಗಾಲಿಗೆ ರಕ್ತಗಾಯವಾಗಿದ್ದು, ಆಗ ಅಲ್ಲೆ ಇದ್ದ ನನ್ನ ಪರಿಚಯಸ್ದರಾದ ಈಡೇನಹಳ್ಳಿ ಗ್ರಾಮದ ಗುರುಪ್ರಸಾದ್‌ ಮತ್ತು ಗುರುಸ್ವಾಮಿ ಎಂಬುವರು ಬಂದು ನನ್ನನ್ನು ಉಪಚರಿಸಿದರು, ನಂತರ ಅಪಘಾತ ಉಂಟುಮಾಡಿದ ದ್ವಿಚಕ್ರ ವಾಹನದ ನಂಬರ್‌ನ್ನು ನೋಡಲಾಗಿ ಕೆಎ-44-ಎಸ್‌‌-0753 ನೇ ನಂಬರ್‌ನ YAMAHA SYGUNUS ದ್ವಿ ಚಕ್ರ ವಾಹನವಾಗಿತ್ತು, ನಂತರ ನನ್ನನ್ನು ತಿಪಟೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲು ಮಾಡಿರುತ್ತಾರೆ.   ಆದ್ದರಿಂದ ಈ ಅಪಘಾತವನ್ನುಂಟುಮಾಡಿದ ಬೈಕ್‌ನ ಚಾಲಕನ ಹೆಸರು ಮತ್ತು ವಿಳಾಸ ಗೊತ್ತಿರುವುದಿಲ್ಲ, ಈತನ ಮೇಲೆ ಕಾನೂನು ಕ್ರಮ ಜರುಗಿಸಬೇಕಂದು ನೀಡಿದ ಹೇಳಿಕೆಯನ್ನು  ಪಡೆದು ಪ್ರಕರಣ ದಾಖಲಿಸಿರುತ್ತೆ.

 

ಕೆ ಬಿ ಕ್ರಾಸ್ ಪೊಲೀಸ್ ಠಾಣಾ ಮೊ ನಂ 81/2018 ಕಲಂ 454,380 ಐ.ಪಿ.ಸಿ

ದಿನಾಂಕ 18.07.2018 ರಂದು ಪಿರ್ಯಾದಿ ಜಯ್ಯಣ್ಣ ಬಿನ್ ನರಸಿಂಹಯ್ಯ 62 ವರ್ಷ ವಕ್ಕಲಿಗರು, ಜಿರಾಯ್ತಿ, ಗುಡ್ಡದಪಾಳ್ಯ ಕಿಬ್ಬನಹಳ್ಳಿ ಹೋಬಳಿ, ತಿಪಟೂರು ತಾಲ್ಲೂಕು.   ರವರು ತನ್ನ ಮನೆಯಲ್ಲಿ ನೀಡಿದ ಲಿಖಿತ ದೂರಿನ ಅಂಶವೆಂದರೆ, ಈ ದಿನ ಬೆಳಗ್ಗೆ ನನ್ನ ಮೊಮ್ಮಗಳು ಚೈತ್ರ ಬೆಳಗ್ಗೆ 08.30 ಗಂಟೆಗೆ ಬಾಣಸಂದ್ರ ಕಾಲೇಜಿಗೆ ಹೋಗಿದ್ದು, ನನ್ನ ಎರಡನೇ ಮಗ ಪ್ರಸನ್ನಕುಮಾರ ಟ್ರಾಕ್ಟರ್ ತೆಗೆದುಕೊಂಡು ಕೆಲಸಕ್ಕೆ ಹೋಗಿರುತ್ತಾನೆ. ನಾನು ನನ್ನ ಹೆಂಡತಿ ಶಿವಗಂಗಮ್ಮ ಇಬ್ಬರೂ ಮದ್ಯಾಹ್ನ 1.00 ಗಂಟೆ ಸಮಯದಲ್ಲಿ ಮನೆಗೆ ಬೀಗ ಹಾಕಿಕೊಂಡು ತೋಟದ ಹತ್ತಿರ ಹೋಗಿರುತ್ತೇವೆ. ಈ ದಿನ ಸಮಯ 5.00 ಗಂಟೆಯಲ್ಲಿ ಕಾಲೇಜಿಗೆ ಹೋಗಿದ್ದ ನನ್ನ ಮೊಮ್ಮಗಳು ಚೈತ್ರ ಮನೆಗೆ ವಾಪಸ್ ಬಂದು ಮನೆಯ ಬೀಗವನ್ನು ತೆಗೆದು ಒಳಗೆ ಹೋಗಿ ನೋಡಲಾಗಿ, ಮನೆಯ ಹಿಂದಿನ ಬಾಗಿಲು ತೆಗೆದಿದ್ದು ಮನೆಯ ಒಳಗಿನ ರೂಮಿನ ಕಬ್ಬಿಣದ ಬೀರುವಿನ ಬಾಗಿಲು ಕೂಡಾ ತೆರೆದಿರುತ್ತದೆ. ಮನೆಯಲ್ಲಿ ಯಾರೋ ಕಳ್ಳತನ ಮಾಡಿರುತ್ತಾರೆ ಬೇಗ ಮನೆಯ ಹತ್ತಿರ ಬನ್ನಿ ಎಂದು ನನಗೆ ತಿಳಿಸಿದ್ದು, ನಾನು ಕೂಡಲೇ ಮನೆಯ ಹತ್ತಿರ ಬಂದು ನೋಡಲಾಗಿ ನನ್ನ ಮೊಮ್ಮಗಳು ಹೇಳಿದಂತೆ ಕಳ್ಳತನ ಆಗಿರುವುದು ನಿಜವಾಗಿದ್ದು, ನಾನು ನೋಡಲಾಗಿ  ಮನೆಯ ಹಿಂಬದಿಯ ಬಾಗಿಲನ್ನು ಮೀಟಿ ತೆಗೆದು ಒಳಗಡೆಬಂದು ರೂಮಿನಲ್ಲಿ ಇದ್ದ ಕಬ್ಬಿಣದ ಬೀರನ್ನು ಹೊಡೆದು ತೆಗೆದು ಬೀರುವಿನಲ್ಲಿದ್ದ ಬಟ್ಟೆ ಇನ್ನಿತರೇ ವಸ್ತುಗಳನ್ನು ಚೆಲ್ಲಾಪಿಲ್ಲಿಯಾಗಿ ಎಸೆದು ಬೀರುವಿನಲ್ಲಿ ಇಟ್ಟಿದ್ದ ಎರಡು ಸುಮಾರು 50 ಗ್ರಾಂ ತೂಕವುಳ್ಳ ಚಿನ್ನದ ಬಳೆಗೆಳು 20 ಗ್ರಾಂ ತೂಕದ ಚಿನ್ನದ ನಕ್ಲೇಸ್, 25 ಗ್ರಾಂ ತೂಕದ ಚಿನ್ನದ ಕೈ ಚೈನು, ಹಾಗೂ 50ಸಾವಿರ ರೂ ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಇವುಗಳ ಒಟ್ಟು ಬೆಲೆ 2,40,000ರೂ ಗಳಾಗಿರುತ್ತೆ. ನಾವು ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿಕೊಂಡು ಯಾರೋ ಕಳ್ಳರು ಮನೆಯ ಹಿಂಬದಿಯ ಬಾಗಿಲನ್ನು ಮೀಟಿ ಡೋರನ್ನು ತೆಗೆದು ಮನೆಯ ಒಳಗೆ ಬಂದು ಬೀರಿನಲ್ಲಿ ಇದ್ದ ಒಡವೆ ಹಾಗೂ ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಳ್ಳತನ ಮಾಡಿರುವವರನ್ನು ಪತ್ತೆಮಾಡಿ ನಮಗೆ ನ್ಯಾಯ ದೊರಕಿಸಿಕೊಡಬೇಕೆಂದು ಕೋರುತ್ತೇನೆ ಎಂದು ಗುಡ್ಡದಪಾಳ್ಯದ  ಪಿರ್ಯಾದಿಯವರ ಮನೆಯಲ್ಲಿ ನೀಡಿದ ಲಿಖಿತ ದೂರನ್ನು ಪಡೆದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.

ಹುಳಿಯಾರು ಪೊಲೀಸ್ ಠಾಣಾ ಮೊ.ನಂ. 82/2018 ಕಲಂ 279, 304(ಎ) ಐ.ಪಿ.ಸಿ ಮತ್ತು 134 (&ಬಿ) .ಎಂ.ವಿ ಆಕ್ಟ್

ದಿನಾಂಕ 18/07/2018 ರಂದು ಮಧ್ಯಾಹ್ನ 02-00 ಗಂಟೆಗೆ ಪಿರ್ಯಾದಿ ಕೊಟ್ಟೂರರಾಧ್ಯ ಬಿನ್ ಚೆನ್ನಬಸವರಾಧ್ಯ, 63 ವರ್ಷ, ಜಂಗಮ ಜನಾಂಗ, ವ್ಯವಸಾಯ, ನಂದೀಹಳ್ಳಿ, ಹುಳಿಯಾರು ಹೋಬಳಿ, ಚಿಕ್ಕನಾಯಕನಹಳ್ಳಿ ತಾಲ್ಲೂಕು, ರವರು ಠಾಣೆಗೆ ಹಾಜರಾಗಿ ನೀಡಿದ ಟೈಪ್ ಮಾಡಿಸಿದ ದೂರಿನ ಸಾರಾಂಶವೇನೆಂದರೆ, ನನ್ನ ಅಣ್ಣ 66 ವರ್ಷದ ಮರುಳಾರಾಧ್ಯ ಇವರು ನಿವೃತ್ತ ಶಿಕ್ಷಕರಾಗಿದ್ದು, ಇವರ ಹೆಂಡತಿ ಸಿದ್ದಗಂಗಮ್ಮ ಹಾಗೂ ಮಕ್ಕಳಾದ ಮಗಳು ರೇಣುಕಮ್ಮ ಮತ್ತು ಮಗ ನಟರಾಜು ರವರೆಲ್ಲರೂ ನಂದೀಹಳ್ಳಿ ಗ್ರಾಮದಲ್ಲಿ ವಾಸವಾಗಿದ್ದು, ದಿನಾಂಕ:-07/07/2018 ರಂದು ನಾನು ನನ್ನ ಮನೆಯಲ್ಲಿ ಇದ್ದಾಗ ನಮ್ಮ ಗ್ರಾಮದ ಮುನಿಯಪ್ಪ ಬಿನ್ ಲೇಟ್ ಬಸಪ್ಪ, 50 ವರ್ಷ, ಕುರುಬ ಜನಾಂಗ ರವರು ನನ್ನ ಬಳಿ ಬಂದು, ನನ್ನ ಬಾಬ್ತು ದ್ವಿಚಕ್ರ ವಾಹನದಲ್ಲಿ ಹುಳಿಯಾರಿನಿಂದ ಬರುವಾಗ ಅಯ್ಯನ ಕೆರೆಯ ಏರಿಯ ಮೇಲೆ ರಮೇಶಚಾರ್ ರವರ ತೋಟದ ಬಳಿ ಹಾದು ಹೋಗಿರುವ ಹುಳಿಯಾರು-ನಂದೀಹಳ್ಳಿಯ ಟಾರ್ ರಸ್ತೆಯಲ್ಲಿ ದಿನಾಂಕ 07/07/2018 ರಂದು ಸಂಜೆ ಸುಮಾರು 07-30 ರ ಸಮಯದಲ್ಲಿ ನನ್ನ ಮುಂದೆ  KA-44 H-9634 ನೇ TVS XL ನಲ್ಲಿ ನಿಮ್ಮ ಅಣ್ಣ ಮರುಳಾರಾಧ್ಯರು ಹೋಗುತ್ತಿದ್ದಾಗ ಎದುರಿನಿಂದ ನಂದೀಹಳ್ಳಿ ಕಡೆಯಿಂದ ಬಂದ KA-44 Q-3302 ನೇ Hero HF Deluxe ಬೈಕಿನ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಬೈಕನ್ನು ಚಲಾಯಿಸಿಕೊಂಡು ಬಂದವನೇ ಮರುಳಾರಾಧ್ಯರವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಪಡಿಸಿರುತ್ತಾನೆಂದು ಹೇಳಿದ್ದು, ಆಗ ನಾನು ಮತ್ತು ಮರುಳಾರಾಧ್ಯರವರ ಮಗ ನಟರಾಜು ರವರು ಸ್ಥಳಕ್ಕೆ ಹೋಗಿ ನೋಡಲಾಗಿ ಅಪಘಾತ ನಡೆದಿದ್ದು, ಮರುಳಾರಾಧ್ಯರವರಿಗೆ ಮುಖದ ಭಾಗಕ್ಕೆ ತೀವ್ರ ಪೆಟ್ಟು ಬಿದ್ದು ರಕ್ತ ಸೋರುತ್ತಿತ್ತು. ಹಾಗೂ ಅಪಘಾತ ಪಡಿಸಿದ ವ್ಯಕ್ತಿ ಸ್ಥಳದಲ್ಲಿ ಇರಲಿಲ್ಲ. ಅಪಘಾತ ಪಡಿಸಿದ KA-44 Q-3302 ನೇ Hero HF Deluxe ಬೈಕ್ ಸ್ಥಳದಲ್ಲಿ ಬಿದ್ದಿತ್ತು. ಆಗ ನಾನು ಮತ್ತು ನಟರಾಜು ರವರು ಕಾರಿನಲ್ಲಿ ಮರುಳಾರಾಧ್ಯರವರನ್ನು ಹುಳಿಯಾರು ಸರ್ಕಾರಿ ಆಸ್ಪತ್ರೆಗೆ ತೋರಿಸಲು ಹೋದಾಗ ಆಸ್ಪತ್ರೆಯಲ್ಲಿ ವೈದ್ಯರು ಇಲ್ಲದ ಕಾರಣ ನಟರಾಜು ರವರು ಮರುಳಾರಾಧ್ಯರವರನ್ನು ಚಿಕ್ಕನಾಯಕನಹಳ್ಳಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ, ವೈದ್ಯರ ಸಲಹೆ ಮೇರೆಗೆ ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ನಂತರ ವೈದ್ಯರ ಸಲಹೆ ಮೇರೆಗೆ ಬೆಂಗಳೂರು ನಿಮ್ಹಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು, ದಿನಾಂಕ 09/07/2018 ರಂದು ವೈದ್ಯರ ಸಲಹೆ ಮೇರೆಗೆ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು, ದಿನಾಂಕ 16/07/2018 ರಂದು ಈ ಆಸ್ಪತ್ರೆಯಿಂದ ಬಿಡುಗಡೆಗೊಳಿಸಿಕೊಂಡು ಯಶವಂತಪುರದ ಇವರ ನಾದಿನಿ ಶಿವಮ್ಮ ರವರ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ದಿನಾಂಕ:18/07/2018 ರ ಬೆಳಿಗ್ಗೆ 08-00 ಗಂಟೆಗೆ ಮುರುಳಾರಾಧ್ಯರು ನನಗೆ ಸುಸ್ತಾಗುತ್ತಿದೆ ಎಂದಾಗ ಇವರನ್ನು ಎಂ.ಎಸ್ ರಾಮಯ್ಯ ಆಸ್ಪತ್ರೆಗೆ ತೋರಿಸಲಾಗಿ ವೈದ್ಯರು ಮರುಳಾರಾಧ್ಯ ರವರು ಮೃತಪಟ್ಟಿರುತ್ತಾರೆಂದು ತಿಳಿಸಿದರು. ಈ ವಿಚಾರವನ್ನು ನಂದೀಹಳ್ಳಿ ಗ್ರಾಮದಲ್ಲಿದ್ದ ನನಗೆ ಮರುಳಾರಾಧ್ಯರವರ ಮಗ ನಟರಾಜು ರವರು ಫೋನ್ ಮಾಡಿ ತಿಳಿಸಿದರು. ಅಪಘಾತವಾದ ತಾರೀಖಿನಿಂದ ಮರುಳಾರಾಧ್ಯ ರವರಿಗೆ ಚಿಕಿತ್ಸೆ ಕೊಡಿಸುತ್ತಿದ್ದರಿಂದ ದೂರು ನೀಡಲು ಸಾದ್ಯವಾಗದ ಕಾರಣ ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು, ಸದರಿ ಅಪಘಾತ ಉಂಟುಮಾಡಿದ್ದ ಮೇಲ್ಕಂಡ KA-44 Q-3302 ನೇ Hero HF Deluxe ಬೈಕ್ ಸವಾರನ ಮೇಲೆ ಕಾನೂನು ಕ್ರಮವನ್ನು ತೆಗೆದುಕೊಳ್ಳಬೇಕೆಂದು ತಮ್ಮಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ ಎಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

ಮಿಡಿಗೇಶಿ ಪೊಲೀಸ್ ಠಾಣಾ ಯು.ಡಿ.ಆರ್.ನಂ.08/2018, ಕಲಂ:174(ಸಿ) ಸಿ.ಆರ್.ಪಿ.ಸಿ.

ದಿನಾಂಕ:18/07/2018 ರಂದು ಮದ್ಯಾಹ್ನ 02:30 ಗಂಟೆಗೆ ಪಿರ್ಯಾದಿ ರತ್ನಮ್ಮ ಕೋಂ ಲೇ||ಹನುಮಂತರಾಯಪ್ಪ, 47 ವರ್ಷ, ಉಪ್ಪಾರ ಜನಾಂಗ, ಮನೆ ಕೆಲಸ, ಹುಣಸವಾಡಿ ಗ್ರಾಮ, ಪುರವಾರ ಹೋಬಳಿ, ಮಧುಗಿರಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನನ್ನ ಮಗಳಾದ ಸರಸ್ವತಿ, 30 ವರ್ಷ, ಎಂಬುವಳನ್ನು ಐ.ಡಿ.ಹಳ್ಳಿ ಹೋಬಳಿ, ತಿಪ್ಪಾಪುರ ಗ್ರಾಮದ ನರಸಿಂಹಮೂರ್ತಿ ಬಿನ್ ಲೇ||ನರಸಿಂಹಪ್ಪ ರವರಿಗೆ ಕೊಟ್ಟು ಈಗ್ಗೆ 11 ವರ್ಷಗಳ ಹಿಂದ ಮದುವೆ ಮಾಡಿದ್ದು, ಅವರಿಗೆ ಒಂದು ಗಂಡು, ಒಂದು ಹೆಣ್ಣು ಮಕ್ಕಳಿದ್ದು, ನನ್ನ ಅಳಿಯ ಮತ್ತು ಮಗಳು ಆಗಾಗ್ಗೆ ಸಂಸಾರದ ವಿಚಾರದಲ್ಲಿ ಸಣ್ಣಪುಟ್ಟ ವಿಚಾರಗಳಿಗೆ ಗಲಾಟೆ ಮಾಡಿಕೊಳ್ಳುತ್ತಿದ್ದರು. ಆ ಸಮಯದಲ್ಲಿ ನಾನು ಇಬ್ಬರಿಗೂ ಬುದ್ದಿ ಹೇಳಿ ಸಮಾಧಾನಪಡಿಸುತ್ತಿದ್ದೆನು. ಹೀಗಿರುವಾಗ ದಿನಾಂಕ:17/07/2018 ರಂದು ಸಂಜೆ 06:40 ಗಂಟೆಯ ಸಮಯದಲ್ಲಿ ನನ್ನ ಅಳಿಯನ ಅಣ್ಣನಾದ ಹನುಮಪ್ಪನು ನಮಗೆ ಪೋನ್ ಮಾಡಿ ನಿಮ್ಮ ಮಗಳು ಸರಸ್ವತಿ ಇದೇ ದಿನ ಸಂಜೆ 05:30 ಗಂಟೆಯ ಸಮಯದಲ್ಲಿ ಮನೆಯಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾಳೆ ಎಂತ ವಿಷಯ ತಿಳಿಸಿದರು. ಆಗ ನಾನು ಮತ್ತು ನನ್ನ ಮೈದ ನಾಗರಾಜು ತಿಪ್ಪಾಪುರ ಗ್ರಾಮಕ್ಕೆ ಬಂದು ನೋಡಲಾಗಿ ವಿಚಾರ ನಿಜವಾಗಿದ್ದು, ನನ್ನ ಮಗಳ ಶವವನ್ನು ಕೆಳಗೆ ಇಳಿಸಿ ಮಂಚದ ಮೇಲೆ ಮಲಗಿಸಿದ್ದರು. ಈ ಬಗ್ಗೆ ನನ್ನ ಅಳಿಯ ನರಸಿಂಹಮೂರ್ತಿ ಯನ್ನು ವಿಚಾರ ಮಾಡಿದಾಗ, ನಾನು ಊರ ಒಳಗೆ ಹೋಗಿದ್ದೆ, ಆ ಸಮಯದಲ್ಲಿ ನೇಣು ಹಾಕಿಕೊಂಡಿರುತ್ತಾಳೆಂತ ತಿಳಿಸಿರುತ್ತಾನೆ. ನಂತರ ನನ್ನ ಮಗಳ ಶವವನ್ನು ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಇಟ್ಟಿರುತ್ತೇವೆ. ನನ್ನ ಮಗಳ ಸಾವಿನಲ್ಲಿ ನಮಗೆ ಅನುಮಾನವಿರುತ್ತೆ. ಆದ್ದರಿಂದ ತಾವು ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ನೀಡಿದ ದೂರಿನ ಅಂಶವಾಗಿರುತ್ತೆ.

ಶಿರಾ ಪೊಲೀಸ್ ಠಾಣಾ ಮೊ ನಂ 283/2018 ಕಲಂ 279-337 IPC

ದಿನಾಂಕ-18-07-2018 ರಂದು ಬೆಳಗ್ಗೆ 11-00 ಗಂಟೆಗೆ ಪಿರ್ಯಾದಿ ಸಂದೀಪ್ ಕುಮಾರ್ ಬಿನ್ ಕದುರಯ್ಯ, 26ವರ್ಷ, ಆದಿ ಕರ್ನಾಟಕ ಜನಾಂಗ, ಕೂಲಿಕೆಲಸ, ರಾಮಲಿಂಗಾಪುರ.ಶಿರಾ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಮ್ಮ ತಂದೆ-ತಾಯಿಗೆ ಮೂರು ಗಂಡು ಹಾಗೂ ಒಂದು ಹೆಣ್ಣು ಮಗಳು ಇದ್ದು, ನನ್ನ ಅಕ್ಕ ಮಂಗಳಮ್ಮನನ್ನು ಓಜುಗುಂಟೆಯ ಸೋಮಕುಮಾರ್ ರವರಿಗೆ ಕೊಟ್ಟು ಮದುವೆ ಮಾಡಿದ್ದು. ದಿನಾಂಕ-10-07-2018 ರಂದು ನಾನು ಮತ್ತು ನನ್ನ ಅಣ್ಣ ನರಸಿಂಹಮೂರ್ತಿ ಇಬ್ಬರು ನನ್ನ ಅಕ್ಕನ ಮನೆಗೆ ನಮ್ಮ ಬಾಬ್ತು KA-52-E-8758 ನೇ ಹೀರೋಹೊಂಡಾ ಪ್ಯಾಷನ್ ಪ್ರೋ ಬೈಕಿನಲ್ಲಿ ಹೋಗಿದ್ದು, ವಾಪಸ್ಸು ನಮ್ಮ ಊರಾದ ರಾಮಲಿಂಗಾಪುರಕ್ಕೆ ಹೋಗಲು ನಮ್ಮ ಬಾಬ್ತು KA-52-E-8758 ನೇ ಹೀರೋಹೊಂಡಾ ಪ್ಯಾಷನ್ ಪ್ರೋ ಬೈಕನ್ನು ನಾನು ಚಾಲನೆ ಮಾಡಿಕೊಂಡು ಬೈಕಿನ  ಹಿಂಬದಿಯಲ್ಲಿ ನನ್ನ ಅಣ್ಣನನ್ನು ಕೂರಿಸಿಕೊಂಡು ಶಿರಾ-ಬುಕ್ಕಾಪಟ್ಟಣ ರಸ್ತೆಯಲ್ಲಿ ಹೊನ್ನೇನಹಳ್ಳಿಯ ಬಳಿ ಹೋಗುತ್ತಿದ್ದಾಗ ಸಂಜೆ ಸುಮಾರು 6-15 ಗಂಟೆಯಲ್ಲಿ ಶಿರಾ ಮಾರ್ಗವಾಗಿ ಹಿಂದಿನಿಂದ ಬಂದ ಒಂದು ಕಾರನ್ನು ಅದರ ಚಾಲಕ ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಮ್ಮ ಬೈಕಿ ಹಿಂಬದಿ ಡಿಕ್ಕಿ ಹೊಡೆಸಿ ಅಪಘಾತವನ್ನುಂಟು ಮಾಡಿದ್ದು. ಇದರಿಂದ ನನ್ನ ಬೈಕು ಹಾಗೂ ಕಾರು ರಸ್ತೆಯ ತಗ್ಗಿಗೆ ಬಿದ್ದು ಅಪಘಾತಕ್ಕೀಡಾದವು. ಈ ಅಪಘಾತದಲ್ಲಿ ನನಗೆ ಸಣ್ಣಪುಟ್ಟ ತರಚು ಗಾಯಗಳಾಗಿದ್ದು, ನನ್ನ ಅಣ್ಣ ನರಸಿಂಹಮೂರ್ತಿಗೆ ಅಪಘಾತದಿಂದಾಗಿ ಮುಖಕ್ಕೆ, ಕೈ-ಕಾಲುಗಳಿಗೆ ಹೆಚ್ಚಿನ ರಕ್ತಗಾಯಗಳಾಗಿದ್ದು, ಅಪಘಾತಪಡಿಸಿದ ಕಾರಿನ ನಂಬರ್ ನೋಡಲಾಗಿ ಇದರ ನಂಬರ್ ಪ್ಲೇಟ್ ಮೇಲೆ  KA-05-MT-2686 ನೇ ನಂಬರ್ ಇತ್ತು. ಕಾರಿನ ಚಾಲಕನನ್ನು ವಿಚಾರಿಸಲಾಗಿ ಈತನು ಪ್ರಶಾಂತ್ ಕುಮಾರ್ ಬಿನ್ ಲಕ್ಷ್ಮಿನಾರಾಯಣ ರೆಡ್ಡಿ, ಇಟ್ಟಗಲ್ ಪುರ, ಬೆಂಗಳೂರು ಎಂದು ತಿಳಿಯಿತು. ಕಾರಿನಲ್ಲೂ ಮೂರು ಜನರಿದ್ದು ಅವರಿಗೂ ಸಹಾ ಅಪಘಾತದಲ್ಲಿ ಪೆಟ್ಟುಗಳಾಗಿದ್ದವು. ಇವರ ಹೆಸರು ವಿಳಾಸವನ್ನು ವಿಚಾರಿಸಲಾಗಿ ಗುರುರಾಜ್, ಗೌತಮ್, ಜಯಶ್ರೀ, ಬೆಂಗಳೂರು ಎಂದು ತಿಳಿಯಿತು. ನಂತರ ಅಲ್ಲೆ ರಸ್ತೆಯಲ್ಲಿ ಬಂದ ಒಂದು ಕಾರಿನಲ್ಲಿ ನನ್ನ ಅಣ್ಣ ನರಸಿಂಹಮೂರ್ತಿಯನ್ನು ಶಿರಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ಸೇರಿಸಿ, ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗೆ ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ನಂತರ ಸಿದ್ದಾರ್ಥ ಆಸ್ಪತ್ರೆಗೆ ಸೇರಿಸಿ ಇಲ್ಲಿಯವರೆಗೆ ಚಿಕಿತ್ಸೆಯನ್ನು ಕೊಡಿಸಿ ಈ ದಿನ ತಡವಾಗಿ ಠಾಣೆಗೆ ಬಂದಿದ್ದು, ಈ ಅಪಘಾತವು KA-05-MT-2686 ನೇ ಕಾರಿನ ಚಾಲಕ ಪ್ರಶಾಂತ್ ರವರ ನಿರ್ಲಕ್ಷತೆಯಿಂದಲೇ ಆಗಿದ್ದು, ಈತನ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಿ ನನಗೆ ಅನುಕೂಲ ಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

ಜಯನಗರ ಪೊಲೀಸ್ ಠಾಣಾ ಮೊ.ನಂ. 102/2018 ಕಲಂ 420 ರೆ.ವಿ 34 ಐಪಿಸಿ

ದಿನಾಂಕ: 18/07/2018 ರಂದು ಮದ್ಯಾಹ್ನ 2-00 ಗಂಟೆಗೆ ತುಮಕೂರು, ಸಪ್ತಗಿರಿ ಬಡಾವಣೆ ಹಾಲಿ ವಾಸ: ಮೋಹನ್ ಕುಮಾರ್ ನಗರ, ಯಶವಂತಪುರ ಬೆಂಗಳೂರು ವಾಸಿ ಬಿ.ಕಾವ್ಯ ಶ್ರೀ ಕೋಂ ಮುರಳಿಧರ್ ಕೆ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ, ನಮ್ಮ ಸ್ವಂತ ಊರು ತುಮಕೂರು ಸಪ್ತಗಿರಿ ಬಡಾವಣೆಯಾಗಿದ್ದು, ನಾನು ಮದುವೆಯಾದ ನಂತರ ನಮ್ಮ ಗಂಡನ ಮನೆಯಲ್ಲಿ ವಾಸವಾಗಿರುತ್ತೇನೆ.  ನಮ್ಮ ಮನೆಯಲ್ಲಿ ನಮ್ಮ ತಾಯಿಯವರಾದ ಸುಬ್ಬಲಕ್ಷ್ಮಮ್ಮ ಒಬ್ಬರೆ ಇರುತ್ತಾರೆ.  ದಿನಾಂಕ: 14/06/2018 ರಂದು ನಮ್ಮ ತಾಯಿಯವರು ನನಗೆ ಪೋನ್ ಮಾಡಿ ನಮ್ಮ ಮನೆಗೆ ಇಬ್ಬರು ಅಪರಿಚಿತ ವ್ಯಕ್ತಿಗಳು ಬಂದು ನಾವು ತುಮಕೂರು ಮಹಾನಗರ ಪಾಲಿಕೆಯಿಂದ ಬಂದಿರುತ್ತೇವೆ.  ನಿಮ್ಮ ಮನೆಯ ಯು.ಜಿ.ಡಿ ಕನೆಕ್ಷನ್ ನೋಡಬೇಕು.  ನಾವು ತುಮಕೂರು ಸ್ಮಾರ್ಟ್‌ ಸಿಟಿ ಅಧಿಕಾರಿಗಳು ಎಂದು ಹೇಳಿಕೊಂಡು ಬಂದಿದ್ದರು.  ಅವರ ನಮ್ಮ ಮನೆಯ ಟಾಯ್‌ಲೆಟ್ ಗಳು ಮತ್ತು ನೀರಿನ ಟ್ಯಾಂಕ್ ಅಳವಡಿಸಿರುವ ಪೈಪ್ ಗಳು ಇವುಗಳನ್ನು ಪರಿಶೀಲಿಸಬೇಕು ಎಂದು ಕೇಳಿದರು.  ಅದಕ್ಕೆ ನಮ್ಮ ತಾಯಿ ಎಲ್ಲಾ ಕಡೆ ಕರೆದುಕೊಂಡು ಹೋಗಿ ತೋರಿಸಿದರು.  ನಂತರ ಮಹಡಿಯ ಮೇಲಿನ ಓವರ್ ಹೆಡ್ ಟ್ಯಾಂಕ್ ಅನ್ನು ಸಹ ತೋರಿಸಿರುತ್ತೇನೆ. ಅಂತ ನನಗೆ ಪೋನ್ ಮಾಡಿ ತಿಳಿಸದರು.  ಅಕ್ಕೆ ನಾನು ನಮ್ಮ ತಾಯಿಗೆ ನಾನು ಬಂದ ನಂತರ ಬರುವುದಕ್ಕೆ ಹೇಳಿ ಒಬ್ಬಳೇ ಇರುವಾಗ ಬಾಗಿಲು ತೆಗೆಯಬೇಡ ಎಂದು ಹೇಳಿದೆ.  ನಂತರ ನಮ್ಮ ಸ್ನೇಹಿತರ ಗ್ರೂಪ್ ನಲ್ಲಿ ತುಮಕೂರಿನಲ್ಲಿ ಇತ್ತೀಚೆಗೆ ನಾವು ಸ್ಮಾರ್ಟ್ ಸಿಟಿಯವರು ಯುಜಿಡಿ ಕನಕ್ಷನ್ ನೋಡಬೇಕು ಅಂತ ಹೇಳಿಕೊಂಡು ಮನೆಗೆ ಬಂದು ಮೋಸಮಾಡುವವರು ಇದ್ದಾರೆ.  ಆ ರೀತಿ ಯಾರಾದರೂ ಹೇಳಿಕೊಂಡು ಮನೆಗೆ ಬಂದರೆ ಪೊಲೀಸರಿಗೆ ತಿಳಿಸಬೇಕು ಎಂದು ಮೆಸೇಜ್ ಅನ್ನು ನೋಡಿದ್ದೆ.  ಅದರಂತೆ ನನಗೆ ಅನುಮಾನ ಬಂದು ನಮ್ಮ ತಾಯಿ ಹೇಳಿದ್ದಕ್ಕೆ ನಾನು ದಿನಾಂಕ: 16/06/2018 ರಂದು ಬೆಳಿಗ್ಗೆ 10 ರಷ್ಟಿಗೆ ನಮ್ಮ ತಾಯಿ ಮನೆಗೆ ಬಂದು ವಿಚಾರ ಮಾಡಿರುತ್ತೇನೆ.  ನನ್ನ ತಾಯಿ ಬಳಿ ನಾನು ನಡೆದ ಬಗ್ಗೆ ವಿವರವಾಗಿ ತಿಳಿದು ಮನೆಯಲ್ಲಿಟ್ಟಿದ್ದ ಒಡವೆ ದುಡ್ಡಿನ ಬಗ್ಗೆ ಚಕ್ ಮಾಡಿದೆ. ಆಗ ನಮ್ಮ ಬೀರುವಿನ ಲಾಕರ್ ನಲ್ಲಿ ಇಟ್ಟಿದ್ದ 2 ಚಿನ್ನದ ಬಳೆಗಳು ಕಾಣಲಿಲ್ಲ.  ಗಾಬರಿಯಾಗಿ ನನ್ನ ತಾಯಿಯನ್ನು ಕೇಳಿದೆ.  ಆಗ ನಮ್ಮ ತಾಯಿ ನನಗೆ ಸರಿಯಾಗಿ ಗೊತ್ತಿಲ್ಲ.  ಅಂತ ಹೇಳಿದರು.  ದಿನಾಂಕ: 14/06/2018 ರಂದು ನಮ್ಮ ಮನೆಗೆ ಯುಜಿಡಿ ಕನೆಕ್ಷನ್ ಅಂತ ಹೇಳಿಕೊಂಡು ಮನೆಗೆ ಬಂದಿದ್ದ ಇಬ್ಬರು ಅಪರಿಚಿತ ವ್ಯಕ್ತಿಗಳು ನಮ್ಮ ತಾಯಿಯವರ ಗಮನವನ್ನು ಬೇರೆಡೆ ಸೆಳೆದು ಮೋಸ ಮಾಡುವ ಉದ್ದೇಶದಿಂದ ಬೀರುವಿನಲ್ಲಿಟ್ಟಿದ್ದ ಸುಮಾರು 30 ಗ್ರಾಂ ತೂಕದ ಚಿನ್ನದ ಎರಡು ಬಳೆಗಳನ್ನು ತೆಗೆದುಕೊಂಡು ಹೋಗಿರುತ್ತಾರೆ.  ಬಳೆಗಳು ಸುಮಾರು 1 ಲಕ್ಷ ರೂ ಬೆಲೆಬಾಳುತ್ತವೆ. ಈ ವಿಚಾರವನ್ನು ನಮ್ಮ ಮನೆಯವರಿಗೆ ತಿಳಿಸಿ, ಈ ದಿನ ತಡವಾಗಿ ಬಂದು ನಮ್ಮ ತಾಯಿಯವರ ಗಮನವನ್ನು ಸೆಳೆದು ಮೋಸಮಾಡುವ ಉದ್ದೇಶದಿಂದ ಈ ರೀತಿ ಮಾಡಿರುವವರನ್ನು ಪತ್ತೆ ಮಾಡಿ ಅವರ ಮೇಲೆ ಕ್ರಮ ಜರುಗಿಸಲು ಕೋರಿ ನೀಡಿರುವ ಪಿರ್ಯಾದು ಅಂಶವಾಗಿರುತ್ತೆ.

 

ಹಂದನಕೆರೆ ಪೊಲೀಸ್ ಠಾಣಾ ಮೊ ನಂ:62/2018 ಕಲಂ 279, 337 ಐಪಿಸಿ 187 ಐಎಂವಿ ಆಕ್ಟ್

ದಿನಾಂಕ:18/07/2018 ರಂದು ರಾತ್ರಿ 8-00 ಗಂಟೆ ಸಮಯದಲ್ಲಿ ಪಿರ್ಯಾದಿ ಮಂಜಮ್ಮ ಕೋಂ ಬೈರನಾಯಕ , 30 ವರ್ಷ, ನಾಯಕ ಜನಾಂಗ, ಬೊಮ್ಮೇನಹಳ್ಳಿ, ಹೊನ್ನವಳ್ಳಿ ಹೋಬಳಿ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೆನೆಂದರೆ, ದಿ:13/07/2018 ರಂದು ಬೆಳಿಗ್ಗೆ ಸುಮಾರು 7-00 ಗಂಟೆ ಸಮಯದಲ್ಲಿ ಮನೆಯಿಂದ ಪಿರ್ಯಾದಿ ಗಂಡ ಬೈರಾನಾಯ್ಕ್ ರವರು ಪ್ರತಿದಿನದಂತೆ ಕೂಲಿ ಕೆಲಸಕ್ಕೆ ಹೋಗಿದ್ದವರು ಆ ದಿನ ರಾತ್ರಿ ಮನೆಗೆ ಬಾರದೇ ಇದ್ದಾಗ ಪಿರ್ಯಾದಿ ಕೂಲಿ ಕೆಲಸದ ಮೇಲೆ ಹೋಗಿರಬೇಕು ಎಂದು ಸುಮ್ಮನೆ ಇದ್ದು ಮಾರನೇ ದಿನ ದಿ:14/07/2018 ರಂದು ಪಿರ್ಯಾದಿ ಕೂಲಿ ಕೆಲಸಕ್ಕೆ ಹೋಗಿ ಮದ್ಯಾಹ್ನ ಸಮಯಕ್ಕೆ ಮನೆಗೆ ಬಂದಿದ್ದಾಗ ಮದ್ಯಾಹ್ನ ಸುಮಾರು 3-00 ಗಂಟೆಯಲ್ಲಿ ಪಿರ್ಯಾದಿ ಗಂಡ ಬೈರನಾಯಕ ರವರನ್ನು ಕಾಮಾಲಪುರ ಗ್ರಾಮದ ಮಂಜುನಾಥ ಎಂಬುವರು ಮನೆಯ ಬಳಿ ತಂದು ಬಿಟ್ಟು ಹೋದ ಮೇಲೆ ಮನೆಯಲ್ಲಿ ಮಲಗಿದ್ದ ಗಂಡ ಬೈರನಾಯಕ ರವರು ಬೆನ್ನು ನೋವು ಎಂತ ತಿಳಿಸಿದ ಮೇಲೆ  ಪಿರ್ಯಾದಿ ಮಂಜುನಾಥ ರವರು ಮನೆಗೆ ಕರೆದುಕೊಂಡು ಬಂದಾಗ ಜೊತೆಯಲ್ಲಿ ತಂದಿದ್ದ ಆಯನ್ ಮೆಂಟ್ ನನ್ನು ಹಚ್ಚಿ ಸುಮ್ಮನೆ ಆಗಿದ್ದು ನಂತರ ದಿ:15/07/2018 ರಂದು ಭಾನುವಾರವಾಗಿದ್ದರಿಂದ ದಿ:16/07/2018 ರಂದು ಪಿರ್ಯಾದಿ ತನ್ನ ಗಂಡನಿಗೆ ಬೆನ್ನು ನೋವು ಜಾಸ್ತಿ ಯಾಗಿದ್ದರಿಂದ ತಮ್ಮೂರಿನ ಗಂಗಾಧರ್, ನಿಜಲಿಂಗಮೂರ್ತಿ ರವರೊಂದಿಗೆ ತಿಪಟೂರಿನ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ನಂತರ ಅಲ್ಲಿನ ವೈದ್ಯರ ಸಲಹೆ ಮೇರೆಗೆ ತುಮಕೂರಿನ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿ ನಂತರ ಕಾಮಾಲಪುರ ಗ್ರಾಮದ ಮಂಜುನಾಥ ರವರನ್ನು ವಿಚಾರ ಮಾಡಲಾಗಿ ದಿ:13/07/2018 ರಂದು ರಾತ್ರಿ ಸುಮಾರು 8-00 ಗಂಟೆಯಲ್ಲಿ ತಮ್ಮ ಜಮೀನಿನಲ್ಲಿ ಕೆಎ-44 ಟಿ-4074 ನೇ ಟ್ರಾಕ್ಟರ್ ಟ್ರೈಲರ್‌ ಗೆ ಮಣ್ಣು ತುಂಬಿಕೊಂಡು ಟ್ರಾಕ್ಟರ್‌ ಚಾಲಕ ಟ್ರಾಕ್ಟರ್ ನನ್ನು ಮುಂದೆ ತೆಗೆದುಕೊಂಡು ಹೋಗಲು ಹೋದಾಗ ಟ್ರೈಲರ್ ಹಿಂದೆ ನಿಂತಿದ್ದ ಬೈರನಾಯಕ ರವರಿಗೆ ಡಿಕ್ಕಿ ಹೊಡೆಯಿಸಿರುತ್ತಾನೆಂತ ತಿಳಿಯಿತು. ಆದ್ದರಿಂದ ಗಂಡ ಬೈರನಾಯಕ ರವರಿಗೆ ನಿರ್ಲಕ್ಷತೆಯಿಂದ ಕೆಎ-44 ಟಿ-4074 ನೇ ಟ್ರಾಕ್ಟರ್ ಟ್ರೈಲರ್ ನಲ್ಲಿ ಡಿಕ್ಕಿ ಹೊಡೆಸಿ ಅಪಘಾತಪಡಿಸಿದ ಟ್ರಾಕ್ಟರ್‌ ಚಾಲಕನ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಈ ದಿನವರೆವಿಗೂ ಗಂಡ ಬೈರನಾಯಕ ರವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನೋಡಿಕೊಳ್ಳುವವರು ಯಾರು ಇಲ್ಲದ ಕಾರಣ ಈ ದಿನ ತಡವಾಗಿ ಬಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

ಜಯನಗರ ಪೊಲೀಸ್ ಠಾಣಾ ಮೊ.ನಂ. 102/2018 ಕಲಂ 420 ರೆ.ವಿ 34 ಐಪಿಸಿ

ದಿನಾಂಕ: 18/07/2018 ರಂದು ಮದ್ಯಾಹ್ನ 2-00 ಗಂಟೆಗೆ ತುಮಕೂರು, ಸಪ್ತಗಿರಿ ಬಡಾವಣೆ ಹಾಲಿ ವಾಸ: ಮೋಹನ್ ಕುಮಾರ್ ನಗರ, ಯಶವಂತಪುರ ಬೆಂಗಳೂರು ವಾಸಿ ಬಿ.ಕಾವ್ಯ ಶ್ರೀ ಕೋಂ ಮುರಳಿಧರ್ ಕೆ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ, ನಮ್ಮ ಸ್ವಂತ ಊರು ತುಮಕೂರು ಸಪ್ತಗಿರಿ ಬಡಾವಣೆಯಾಗಿದ್ದು, ನಾನು ಮದುವೆಯಾದ ನಂತರ ನಮ್ಮ ಗಂಡನ ಮನೆಯಲ್ಲಿ ವಾಸವಾಗಿರುತ್ತೇನೆ.  ನಮ್ಮ ಮನೆಯಲ್ಲಿ ನಮ್ಮ ತಾಯಿಯವರಾದ ಸುಬ್ಬಲಕ್ಷ್ಮಮ್ಮ ಒಬ್ಬರೆ ಇರುತ್ತಾರೆ.  ದಿನಾಂಕ: 14/06/2018 ರಂದು ನಮ್ಮ ತಾಯಿಯವರು ನನಗೆ ಪೋನ್ ಮಾಡಿ ನಮ್ಮ ಮನೆಗೆ ಇಬ್ಬರು ಅಪರಿಚಿತ ವ್ಯಕ್ತಿಗಳು ಬಂದು ನಾವು ತುಮಕೂರು ಮಹಾನಗರ ಪಾಲಿಕೆಯಿಂದ ಬಂದಿರುತ್ತೇವೆ.  ನಿಮ್ಮ ಮನೆಯ ಯು.ಜಿ.ಡಿ ಕನೆಕ್ಷನ್ ನೋಡಬೇಕು.  ನಾವು ತುಮಕೂರು ಸ್ಮಾರ್ಟ್‌ ಸಿಟಿ ಅಧಿಕಾರಿಗಳು ಎಂದು ಹೇಳಿಕೊಂಡು ಬಂದಿದ್ದರು.  ಅವರ ನಮ್ಮ ಮನೆಯ ಟಾಯ್‌ಲೆಟ್ ಗಳು ಮತ್ತು ನೀರಿನ ಟ್ಯಾಂಕ್ ಅಳವಡಿಸಿರುವ ಪೈಪ್ ಗಳು ಇವುಗಳನ್ನು ಪರಿಶೀಲಿಸಬೇಕು ಎಂದು ಕೇಳಿದರು.  ಅದಕ್ಕೆ ನಮ್ಮ ತಾಯಿ ಎಲ್ಲಾ ಕಡೆ ಕರೆದುಕೊಂಡು ಹೋಗಿ ತೋರಿಸಿದರು.  ನಂತರ ಮಹಡಿಯ ಮೇಲಿನ ಓವರ್ ಹೆಡ್ ಟ್ಯಾಂಕ್ ಅನ್ನು ಸಹ ತೋರಿಸಿರುತ್ತೇನೆ. ಅಂತ ನನಗೆ ಪೋನ್ ಮಾಡಿ ತಿಳಿಸದರು.  ಅಕ್ಕೆ ನಾನು ನಮ್ಮ ತಾಯಿಗೆ ನಾನು ಬಂದ ನಂತರ ಬರುವುದಕ್ಕೆ ಹೇಳಿ ಒಬ್ಬಳೇ ಇರುವಾಗ ಬಾಗಿಲು ತೆಗೆಯಬೇಡ ಎಂದು ಹೇಳಿದೆ.  ನಂತರ ನಮ್ಮ ಸ್ನೇಹಿತರ ಗ್ರೂಪ್ ನಲ್ಲಿ ತುಮಕೂರಿನಲ್ಲಿ ಇತ್ತೀಚೆಗೆ ನಾವು ಸ್ಮಾರ್ಟ್ ಸಿಟಿಯವರು ಯುಜಿಡಿ ಕನಕ್ಷನ್ ನೋಡಬೇಕು ಅಂತ ಹೇಳಿಕೊಂಡು ಮನೆಗೆ ಬಂದು ಮೋಸಮಾಡುವವರು ಇದ್ದಾರೆ.  ಆ ರೀತಿ ಯಾರಾದರೂ ಹೇಳಿಕೊಂಡು ಮನೆಗೆ ಬಂದರೆ ಪೊಲೀಸರಿಗೆ ತಿಳಿಸಬೇಕು ಎಂದು ಮೆಸೇಜ್ ಅನ್ನು ನೋಡಿದ್ದೆ.  ಅದರಂತೆ ನನಗೆ ಅನುಮಾನ ಬಂದು ನಮ್ಮ ತಾಯಿ ಹೇಳಿದ್ದಕ್ಕೆ ನಾನು ದಿನಾಂಕ: 16/06/2018 ರಂದು ಬೆಳಿಗ್ಗೆ 10 ರಷ್ಟಿಗೆ ನಮ್ಮ ತಾಯಿ ಮನೆಗೆ ಬಂದು ವಿಚಾರ ಮಾಡಿರುತ್ತೇನೆ.  ನನ್ನ ತಾಯಿ ಬಳಿ ನಾನು ನಡೆದ ಬಗ್ಗೆ ವಿವರವಾಗಿ ತಿಳಿದು ಮನೆಯಲ್ಲಿಟ್ಟಿದ್ದ ಒಡವೆ ದುಡ್ಡಿನ ಬಗ್ಗೆ ಚಕ್ ಮಾಡಿದೆ. ಆಗ ನಮ್ಮ ಬೀರುವಿನ ಲಾಕರ್ ನಲ್ಲಿ ಇಟ್ಟಿದ್ದ 2 ಚಿನ್ನದ ಬಳೆಗಳು ಕಾಣಲಿಲ್ಲ.  ಗಾಬರಿಯಾಗಿ ನನ್ನ ತಾಯಿಯನ್ನು ಕೇಳಿದೆ.  ಆಗ ನಮ್ಮ ತಾಯಿ ನನಗೆ ಸರಿಯಾಗಿ ಗೊತ್ತಿಲ್ಲ.  ಅಂತ ಹೇಳಿದರು.  ದಿನಾಂಕ: 14/06/2018 ರಂದು ನಮ್ಮ ಮನೆಗೆ ಯುಜಿಡಿ ಕನೆಕ್ಷನ್ ಅಂತ ಹೇಳಿಕೊಂಡು ಮನೆಗೆ ಬಂದಿದ್ದ ಇಬ್ಬರು ಅಪರಿಚಿತ ವ್ಯಕ್ತಿಗಳು ನಮ್ಮ ತಾಯಿಯವರ ಗಮನವನ್ನು ಬೇರೆಡೆ ಸೆಳೆದು ಮೋಸ ಮಾಡುವ ಉದ್ದೇಶದಿಂದ ಬೀರುವಿನಲ್ಲಿಟ್ಟಿದ್ದ ಸುಮಾರು 30 ಗ್ರಾಂ ತೂಕದ ಚಿನ್ನದ ಎರಡು ಬಳೆಗಳನ್ನು ತೆಗೆದುಕೊಂಡು ಹೋಗಿರುತ್ತಾರೆ.  ಬಳೆಗಳು ಸುಮಾರು 1 ಲಕ್ಷ ರೂ ಬೆಲೆಬಾಳುತ್ತವೆ. ಈ ವಿಚಾರವನ್ನು ನಮ್ಮ ಮನೆಯವರಿಗೆ ತಿಳಿಸಿ, ಈ ದಿನ ತಡವಾಗಿ ಬಂದು ನಮ್ಮ ತಾಯಿಯವರ ಗಮನವನ್ನು ಸೆಳೆದು ಮೋಸಮಾಡುವ ಉದ್ದೇಶದಿಂದ ಈ ರೀತಿ ಮಾಡಿರುವವರನ್ನು ಪತ್ತೆ ಮಾಡಿ ಅವರ ಮೇಲೆ ಕ್ರಮ ಜರುಗಿಸಲು ಕೋರಿ ನೀಡಿರುವ ಪಿರ್ಯಾದು ಅಂಶವಾಗಿರುತ್ತೆ.

 

ಮಧುಗಿರಿ ಪೊಲೀಸ್ ಠಾಣಾ ಮೊ.ನಂ 133/2018, u/s 379 IPC

ಈ ಕೇಸಿನ ಪಿರ್ಯಾದಿಯಾದ ಸದನಂದದಾಸ್ ಬಿನ್ ಲೇಟ್ ಹನುಮಂತರಾಯಪ್ಪ ಶ್ರೀನಿವಾಸ ಬಡಾವಣೆ ಮಧುಗಿರಿ ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ದಿನಾಂಕ: 14-06-18 ರಂದು ಬೆಳಿಗ್ಗೆ 10-50 ಗಂಟೆಗೆ ಪುರಸಭೆ ಕಾರ್ಯಾಲಯ ಮುಂಭಾಗ ತನ್ನ ಬಾಬ್ತು ದ್ವಿಚಕ್ರವಾಹನ ಸಂಖ್ಯೆ  KA-06 EM-1724 Unicorn Block Colour  ವಾಹನವನ್ನು ಪಾರ್ಕಿಂಗ್ ಸ್ಥಳದಲ್ಲಿ ನಿಲುಗಡೆ ಮಾಡಿ ವೈಯಕ್ತಿಕ ಕೆಲಸ ನಿಮಿತ್ತ ಕಛೇರಿಗೆ ಹೋಗಿರುತ್ತೇನೆ ತದನಂತರ ಮಧ್ಯಾಹ್ನ 12-50 ಗಂಟೆಗೆ ಹಿಂದುರುಗಿ ಬಂದು ಸ್ಥಳದಲ್ಲಿ ವಾಹನ ಇಲ್ಲದೆ ಇರುವುದು ಕಂಡುಬಂದಿದ್ದು ಆಜು ಬಾಜು ಪರಿಶೀಲಿಸಲಾಗಿ ವಾಹನ ಕಾಣದೆ ಇರುವುದರಿಂದ ವಾಹನ ಕಳುವಾಗಿರುವುದು ದೃಡಪಟ್ಟಿದ್ದು ದಿನಾಂಕ:14-06-2018 ರಿಂದ ಇಲ್ಲಿಯವರೆಗೂ ವಾಹನವನ್ನು ಹುಡುಕಿದರೂ ಸಿಗದ ಕಾರಣ ತಡವಾಗಿ ದೂರನ್ನು ನೀಡುತ್ತಿದ್ದು ,ದ್ವಿಚಕ್ರ ವಾಹನದ ಕಳ್ಳತನವಾಗಿರುವ KA-06 EM-1724 Unicorn Block Colour  ದ್ವಿಚಕ್ರವಾಹನವನ್ನು ಮತ್ತು ಕಳ್ಳನನ್ನು ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.Wednesday, 18 July 2018

ಅಪರಾಧ ಘಟನೆಗಳು 18-07-18

ತಿಪಟೂರು ನಗರ ಪೊಲೀಸ್ ಠಾಣಾ ಮೊ.ನಂ - 109/2018 ಕಲಂ: 324, 149 ಐ.ಪಿ.ಸಿ

ದಿನಾಂಕ: 17/07/2018 ರಂದು ಬೆಳಗಿನ ಜಾವ 2-30 ಗಂಟೆಗೆ ಠಾಣಾ ಎ.ಎಸ್.ಐ ಶ್ರೀ ಲಿಂಗರಾಜು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ದಿನಾಂಕ:16-07-2018 ರಂದು ನನಗೆ  ತಿಪಟೂರು ನಗರ ಠಾಣಾ ಸರಹದ್ದಿನಲ್ಲಿ ರಾತ್ರಿ ರೌಂಡ್ಸ್ ಕರ್ತವ್ಯಕ್ಕೆ ನೇಮಕಮಾಡಿದ್ದು ನೇಮಕದಂತೆ ನಗರದಲ್ಲಿ ರೌಂಡ್ಸ್ ಮಾಡುತ್ತಿದ್ದಾಗ, ರಾತ್ರಿ 11-45 ಗಂಟೆ ಸಮಯದಲ್ಲಿ ತಿಪಟೂರು ಟೌನ್‌ನ ಬಿ.ಹೆಚ್‌ ರಸ್ತೆ ಕಾಮತ್‌ ಹೊಟೆಲ್‌ ಬಳಿ ಯಾರೋ ಒಬ್ಬ ವ್ಯಕ್ತಿ ಅಟೋದಲ್ಲಿ ಕಬ್ಬಿಣದ ರಾಡು ಮತ್ತು ಮರದ ರೀಪರ್‌ಗಳನ್ನು ತೆಗೆದುಕೊಂಡು ಬಂದು ಸಾರ್ವಜನಿಕರ ಮೇಲೆ ಬರ್ರೋ ನನ್ನ ಮಕ್ಕಳಾ ಇವತ್ತು ನಿಮ್ಮನ್ನು ಕೊಲೆ ಮಾಡುತ್ತೇನೆಂತ ಜೋರಾಗಿ ಕೂಗಾಡಿಕೊಂಡು ಹಲ್ಲೆ ಮಾಡುತ್ತಿದ್ದಾರೆಂತ ಬಂದ ಮಾಹಿತಿ ಮೇರೆಗೆ ಸ್ಥಳಕ್ಕೆ ಹೋದಾಗ ಆ ವ್ಯಕ್ತಿ ತಾನು ತೆಗೆದುಕೊಂಡು ಬಂದಿದ್ದ ಕೆಎ-44-1248 ನೇ ಆಟೋರಿಕ್ಷಾದಲ್ಲಿದ್ದ ಕಬ್ಬಿಣದ ರಾಡನ್ನು ತೆಗೆದುಕೊಂಡು  ಇಂದಿರಾನಗರ ಪ್ರಕಾಶ್‌ ಎಂಬ ವ್ಯಕ್ತಿಗೆ ಹೊಡೆಯುತ್ತಿದ್ದ, ಆಗ ನಾವು ಹಾಗೂ ಇನ್ನಿತರ ಇಬ್ಬರು ಸಾರ್ವಜನಿಕರು ಹೋಗಿ ಗಲಾಟೆ ಮಾಡುತ್ತಿದ್ದ ಆಸಾಮಿಯನ್ನು ತಡೆಯಲು ಹೊದಾಗ ಆತ ಕಬ್ಬಿಣದ ರಾಡಿನಿಂದ ಹೊಡೆಯುತ್ತಿದ್ದ ವ್ಯಕ್ತಿಯನ್ನು ಬಿಟ್ಟು ಬಿಡಿಸಲು ಹೋದ ಹಳೇಪಾಳ್ಯದ ರಂಗನಾಥ್ ಎಂಬುವರಿಗೆ ಮರದ ರೀಪಿಸ್‌ನಿಂದ ಬಲಗಾಲಿನ ಪಾದಕ್ಕೆ ಹೊಡೆದು ಗಾಯವನ್ನುಂಟುಮಾಡಿದ ಮತ್ತೊಬ್ಬ ಇಂದಿರಾನಗರದ ಹರೀಶ್‌ ಎಂಬುವರಿಗೆ ನೆಲಕ್ಕೆ ಕೆಡವಿಕೊಂಡು ಅಲ್ಲೇ ಬಿದ್ದದ್ದ ಒಂದು ದಪ್ಪ ಕಲ್ಲನ್ನು ತೆಗೆದುಕೊಂಡು ಆತನನ್ನು ಕೊಲೆ ಮಾಡುವ ಉದ್ದೇಶದಿಂದ ಕಲ್ಲನ್ನು ತಲೆಯ ಮೇಲೆ ಎತ್ತಿಹಾಕಿ ಸಾಯಿಸಲು ಪ್ರಯತ್ನಿಸಿದಾಗ ಆತ ತಪ್ಪಿಸಿಕೊಂಡಿದ್ದರಿಂದ ಆ ಕಲ್ಲು ಆತನ ಬಲಗಾಲಿನ ಪಾದಕ್ಕೆ ಬಿದ್ದು ಪೆಟ್ಟಾಯಿತು, ನಂತರ ಗಲಾಟೆ ಮಾಡುತ್ತಿದ್ದ ಆಸಾಮಿ ತಾನು ತೊಟ್ಟಿದ್ದ ಬಟ್ಟೆಯನ್ನು ಕಿತ್ತೇಸೆದು ಕೂಗಾಡುತ್ತಿದ್ದಾಗ ಬಿಡಿಸಲು ಹೋದ ನನಗೆ ಮತ್ತು ನಮ್ಮ ಚಾಲಕನ ಮೇಲೆ ಕರ್ತವ್ಯಕ್ಕೆ ಅಡ್ಡಿಪಡಿಸಿ ಏನೋ ಪೊಲೀಸ್‌ ಸೂಳೆ ಮಕ್ಕಳಾ ಎಂದು ಕೆಟ್ಟ ಮಾತುಗಳಿಂದ ಬೈಯುತ್ತಾ ಅಷ್ಟರಲ್ಲಿ ಅಲ್ಲಿಗೆ ಬಿ.ಹೆಚ್‌ ರಸ್ತೆಯಲ್ಲಿ ಬಂದ ಎರಡು ಕೆಎಸ್‌ಅರ್‌ಟಿಸಿಗೆ ಸೇರಿದ ಕೆಎ-31-ಎಫ್‌-1446 ಮತ್ತು ಕೆಎ-14-ಎಫ್‌-0038 ಬಸ್‌ಗಳನ್ನು ತಡೆದು ಎರಡು ವಾಹನಗಳಿಗೆ ಕೈಯಲ್ಲಿದ್ದ ಮರದ ರೀಪರ್‌ನಿಂದ ಹೊಡೆದು ಮುಂದಿನ ಗಾಜುಗಳನ್ನು ಜಖಂಗೊಳಿಸಿ ಸಾರ್ವಜನಿಕ ಆಸ್ತಿಯನ್ನು ನಷ್ಟಗೊಳಿಸಿದ, ನಂತರ ನಮ್ಮ ಹೆದ್ದಾರಿ ಗಸ್ತು ವಾಹನದ ಹಿಂಭಾಗದ ಗಾಜಿಗೆ ಮತ್ತು ನಮ್ಮ ಜೀಪಿನ ಮುಂದಿನ ಗಾಜುಗಳನ್ನು ಕಲ್ಲಿನಿಂದ ಹೊಡೆದು ಜಖಂಗೊಳಿಸಿ ಸಾರ್ವಜನಿಕ ಆಸ್ತಿಯನ್ನು ನಷ್ಟವನ್ನುಂಟುಮಾಡಿದ ನಂತರ ಈತ ಕೆಎಸ್‌‌ಆರ್‌ಟಿಸಿ ಬಸ್‌ಗೆ ತಾನೇ ತಲೆಯಿಂದ ಗುದ್ದಿಕೊಂಡು ಹಾಗೂ ಕಲ್ಲಿನಿಂದ ಆತನೇ ತಲೆಗೆ ಕುಟ್ಟಿಕೊಂಡು ಯಾರೋ ಬರ್ರೋ ನನ್ನನ್ನು ಹಿಡಿಯುವವರು ಎಂದು ಕೂಗಾಡುತ್ತಿದ್ದಾಗ ಸಾರ್ವಜನಿಕರು ಈತನನ್ನು ಹಿಡಿಯಲು ಪ್ರಯತ್ನ ಪಟ್ಟಾಗ ಅವರ ಮೇಲೆ ಹಲ್ಲೇ ಮಾಡಲು ಹೋದಾಗ ಸಾರ್ವಜನಿಕರು ಆತನ ಕೈಯಲ್ಲಿದ್ದ ಮರದ ರಿಪೀಸ್ ನ್ನು ಕಿತ್ತುಕೊಂಡು ಆತನಿಗೆ ಹೊಡೆದಿರುತ್ತಾರೆ. ಈತನಿಗೆ ಮೇಲ್ನೋಟಕ್ಕೆ ತಲೆಗೆ ಮತ್ತು ಕಾಲಿಗೆ ಗಾಯವಾಗಿರುತ್ತದೆ.  ತಕ್ಷಣ ಈತನನ್ನು ಚಿಕಿತ್ಸೆಗಾಗಿ ತಿಪಟೂರು ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿರುತ್ತೆ. ರಾತ್ರಿ ಕತ್ತಲಾಗಿದ್ದರಿಂದ ಈತನಿಗೆ ಹೊಡೆದಿರುವ ಸಾರ್ವಜನಿಕರು ಯಾರೂ ಎಂಬುದು ತಿಳಿದು ಬಂದಿರುವುದಿಲ್ಲ, ಆದ್ದರಿಂದ ಆಟೋ ಚಾಲಕ ಅಶೋಕ ರವರಿಗೆ ಹೊಡೆದಿರುವ ಸಾರ್ವಜನಿಕರ ಮೇಲೆ ಕಾನೂನು ಕ್ರಮ ಜರುಗಿಸಲು ಸೂಚಿಸಿ ನೀಡಿರುವ ವರದಿಯ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

ಶಿರಾ ಪೊಲೀಸ್ ಠಾಣಾ ಮೊ ನಂ 282/2018 ಕಲಂ 379 IPC

ದಿನಾಂಕ-17-07-2018 ರಂದು ಬೆಳಿಗ್ಗೆ 5.30 ಗಂಟೆಗೆ ಪಿ,ಐ ಸಾಹೇಬರವರು ಠಾಣೆಗೆ ಹಾಜರಾಗಿ ನೀಡಿದ ದುರಿನ ಸಾರಾಂಶವೇನೆಂದರೆ    ಸಿರಾ ನಗರ  ಠಾಣೆಯ ಪೋಲೀಸ್  ಇನ್ಸ್ ಪೆಕ್ಟರ್   ವಿ ಲಕ್ಷ್ಮಯ್ಯ   ಆದ  ನನಗೆ   ದಿನಾಂಕ 17-07-2018  ರಂದು ಬೆಳಗಿನ ಜಾವ  4.00 ಗಂಟೆಯ ಸಮಯದಲ್ಲಿ  ಹಲ್ಕೂರು   ಕಡೆಯಿಂದ ಸಿರಾ ಟೌನ್ ಕಡೆಗೆ  ಯಾವುದೋ ಎರಡು  ಟ್ರಾಕ್ಟರ್ ಮತ್ತು ಟ್ರೈಲರ್ ಗಳಲ್ಲಿ   ಅಕ್ರಮವಾಗಿ ಕಳ್ಳತನದಿಂದ ಮರಳನ್ನು ತುಂಬಿಕೊಂಡು ಬರುತ್ತಿದ್ದಾರೆಂತ  ಬಂದ ಮಾಹಿತಿ ಮೇರೆಗೆ  ರಾತ್ರಿ ಗಸ್ತುನಲ್ಲಿ ಇದ್ದ ಪಿ,ಎಸ್ ಐ ಚೇತನ್ ಕುಮಾರ್ ರವರನ್ನು ಬರಮಾಡಿಕೊಂಡು  ಪಿ,ಸಿ 682   ರವರೊಂದಿಗೆ   ಜೀಪಿನಲ್ಲಿ  ಬೆಳಗಿನ ಜಾವ  4.15  ಗಂಟೆಗೆ  ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ  ಬಳಿ ಹೋದಾಗ ಎರಡು  ಟ್ರಾಕ್ಟರ್ ಮತ್ತು ಟ್ರೈಲರ್ ನಲ್ಲಿ  ಮರಳು ತುಂಬಿಕೊಂಡು ಬರುತ್ತಿದ್ದು ಸದರಿ ಟ್ರಾಕ್ಟರ್  ಟ್ರೈಲರ್ ಚಾಲಕರುಗಳು   ಪೋಲೀಸ್ ಜೀಪನ್ನು  ನೋಡಿ  ಟ್ರಾಕ್ಟರ್‌ ಅನ್ನು ನಿಲ್ಲಿಸಿ  ಓಡಿ ಹೋದರು.   ನಂತರ ಪಂಚರರನ್ನು ಬರಮಾಡಿಕೊಂಡು  ಪಂಚರ ಸಮಕ್ಷಮ ಟ್ರಾಕ್ಟರ್  ಮತ್ತು  ಟ್ರಾಕ್ಟರನ್ನು ಪರಿಶೀಲಿಸಿ ನೋಡಲಾಗಿ 1)ಕೆಎ-42,ಟಿ-0559/60 ನೇ ನಂಬರಿನ ಮಹೇಂದ್ರ ಕಂಪನಿಯ  ಟ್ರಾಕ್ಟರ್  ಮತ್ತು ಟ್ರೈಲರ್ ಆಗಿರುತ್ತದೆ.  ಟ್ರಾಕ್ಟರ್ ಮತ್ತು ಟ್ರೈಲರ್ ಕೆಂಪು ಬಣ್ಣದಾಗಿದ್ದು, ಟ್ರೈಲರ್  ತುಂಬಾ  ಮರಳು ತುಂಬಿರುತ್ತದೆ. 2)ಕೆಎ-06,ಟಿಎ-3238/39 ನೇ ನಂಬರಿನ ಮಹೇಂದ್ರ ಕಂಪನಿಯ ಟ್ರಾಕ್ಟರ್ ಮತ್ತು ಟ್ರೈಲರ್ ಅಗಿರುತ್ತದೆ. ಟ್ರಾಕ್ಟರ್ ಕೆಂಪು ಬಣ್ಣದಾಗಿದ್ದು, ಟ್ರೈಲರ್ ಹಸಿರು ಬಣ್ಣದಾಗಿರುತ್ತದೆ.  ಟ್ರೈಲರ್ ತುಂಬಾ ಮರಳು ತುಂಬಿರುತ್ತದೆ.  ಈ ಎರಡೂ  ಟ್ರಾಕ್ಟರ್ ಮತ್ತು ಟ್ರೈಲರ್ ನಲ್ಲಿರುವ  ಮರಳಿನ ಪೈಕಿ ತಲಾ ಒಂದೊಂದು  ಬೊಗಸೆಯಷ್ಟು ಮರಳನ್ನು ತೆಗೆದುಕೊಂಡು ಪ್ರತ್ಯೇಕವಾಗಿ ಒಂದೊಂದು ಬಿಳಿ ಬಟ್ಟೆಯ ಚೀಲದಲ್ಲಿಟ್ಟು ಬಾಯಿ ಕಟ್ಟಿಭದ್ರಪಡಿಸಿ ಶ್ಯಾಂಪಲ್ ಗಾಗಿ ಸಂಗ್ರಹಿಸಿಕೊಂಡಿರುತ್ತೆ. ಮರಳು ತುಂಬಿರುವ  ಎರಡೂ ಟ್ರಾಕ್ಟರ್ ಮತ್ತು ಟ್ರೈಲರ್ ಗಳನ್ನು  ಹಾಗು ಎರಡು ಸ್ಯಾಂಪಲ್ ಮರಳು ಪ್ಯಾಕೆಟ್ ಗಳನ್ನು ಬೆಳಗಿನ ಜಾವ  4.30  ಗಂಟೆಯಿಂದ 5.15  ಗಂಟೆಯವರೆಗೆ ಪಂಚನಾಮೆ ಕ್ರಮ ಜರುಗಿಸಿ  ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡಿರುತ್ತದೆ. ಸದರಿ  ಮರಳು ತುಂಬಿರುವ ಎರಡೂ ಟ್ರಾಕ್ಟರ್ ಟ್ರೈಲರ್ ಮತ್ತು ಶ್ಯಾಂಪಲ್ ಗಾಗಿ ಸಂಗ್ರಹಿಸಿಕೊಂಡಿರುವ ಎರಡು ಮರಳು ಪ್ಯಾಕೆಟ್ ಮತ್ತು ಪಂಚನಾಮೆಯೊಂದಿಗೆ ಬೆಳಿಗ್ಗೆ 5.30 ಗಂಟೆಗೆ ವಾಪಸ್ ಠಾಣೆಗೆ ಬಂದು  ಯಾವುದೇ ಪರವಾನಗಿ ಇಲ್ಲದೇ ಅಕ್ರಮವಾಗಿ ಎಲ್ಲಿಯೋ ಕಳ್ಳತನದಿಂದ ಮರಳನ್ನು ತುಂಬಿಕೊಂಡು ಬಂದಿದ್ದರಿಂದ   ಮೇಲ್ಕಂಡ  ಎರಡೂ ಟ್ರಾಕ್ಟರ್ ಟ್ರೈಲರ್  ಚಾಲಕ  ಮತ್ತು  ಮಾಲೀಕರ  ಮೇಲೆ  ಕಾನೂನು ರೀತಿ ಕ್ರಮ ಜರುಗಿಸಲು ಸೂಚಿಸಿ ನೀಡಿದ ದೂರಿನ ಮೇರೆಗೆ ಈ ಪ್ರ ವ ವರದಿ

ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆ.ಮೊ. ನಂ : 180/2018 ಕಲಂ 279, 337 ಐಪಿಸಿ.

ದಿನಾಂಕ:17/07/2018 ರಂದು ಬೆಳಿಗ್ಗ 11-30 ಗಂಟೆಗೆ ಬೆಳಗಾವಿ ಜಿಲ್ಲೆ ಕಿತ್ತೂರು ತಾಲ್ಲೋಕಿನ ಹುಣಶೀಕಟ್ಟಿ ಗ್ರಾಮದ ರುದ್ರಪ್ಪ ಬಿನ್ ಫಕ್ಕೀರಪ್ಪ ರವರು ನೀಡಿದ ದೂರಿನ ಅಂಶವೇನೆಂದರೆ, ನಾನು KA-24-A-1176ನೇ ಗೂಡ್ಸ್ ವಾಹನದ ಚಾಲಕನಾಗಿದ್ದು ದಿ:16/07/2018 ರಂದು ನನ್ನ ವಾಹನದಲ್ಲಿ ಸೋಪಾ ಸೆಟ್‌ನ್ನು ಲೋಡ್ ಮಾಡಿಕೋಂಡು ರಾತ್ರಿ 12-00 ಗಂಟೆಯಲ್ಲಿ ಬೆಂಗಳೂರು ಬಿಟ್ಟು ಶಿರಾ ಕಡೆಗೆ ಎನ್ ಹೆಚ್ 48 ರಸ್ತೆಯಲ್ಲಿ ತುಮಕೂರು ಬಳಿ ರಂಗಾಪುರ-ಊರುಕೆರೆ ಸಮೀಪ ಹೋಗುತ್ತಿರುವಾಗ್ಗೆ ರಾತ್ರಿ 3-30 ಗಂಟೆ ಸಮಯದಲ್ಲಿ ನನ್ನ ವಾಹನದ ವ್ಹೀಲ್ ಜಾಮ್ ಅಗಿ ನಿಂತುಕೊಂಡಿತು. ನಾನು ವಾಹನದಿಂದ ಇಳಿದು ನನ್ನ ಮೊಬೈಲ್ ಲೈಟಿನಿಂದ ಬದಿಗೆ ಹೋಗುವಂತೆ ತಿಳಿಸುತ್ತಿದ್ದೆನು. ಮತ್ತು ರಾಷ್ಟ್ರೀಯ ಹೆದ್ದಾರಿ ಸಹಾಯಕರಿಗೆ ಪೋನ್ ಮೂಲಕ ತಿಳಿಸಿದೆನು. ಹತ್ತಿರದಲ್ಲಿ ಕಲ್ಲು-ಗಿಡಗಳು ಸಿಗದ ಕಾರಣ ನಾನೇ ವಾಹನದ ಇಂಡಿಕೇಟರ್‌ಗಳನ್ನು ಹಾಕಿಕೊಂಡು ಸುಮಾರು 6-30 ಗಂಟೆಯವರೆಗೂ ಬೆಂಗಳೂರು-ಶಿರಾ ಎನ್ ಹೆಚ್ 48 ರಸ್ತೆಯ ಬೆಂಗಳೂರು ಕಡೆಯಿಂದ ಬರುವ ವಾಹನಗಳಿಗೆ ಸೂಚನೆ ನಿಡುತ್ತಾ ನಿಂತುಕೊಂಡಿದ್ದಾಗ ಬೆಳಿಗ್ಗೆ 6-30 ಗಂಟೆ ಸಮಯದಲ್ಲಿ ಬೆಂಗಳೂರು ಕಡೆಯಿಂದ ಬಂದ KA-20-Z-1346ನೇ ಕಾರಿನ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಕಾರನ್ನ ಚಾಲನೆ ಮಾಡಿಕೊಂಡು ನಾನು ಸೂಚನೆ ನೀಡಿದರೂ ಕಾರನ್ನು ನಿಯಂತ್ರಣಕ್ಕೆ ಇದ್ದುದರಿಂದ ನಾನು ಹೆದರಿ ನಾನು ಪಕ್ಕಕ್ಕೆ ಹೋದಾಗ ನನ್ನ ಗೂಡ್ಸ್ ವಾಹನಕ್ಕೆ ಡಿಕ್ಕಿ ಹೊಡೆಸಿ ಅಪಘಾತ ಉಂಟುಮಾಡಿದ್ದರಿಂದ  ಕಾರು ಮುಂಭಾಗ ಸಂಪೂರ್ಣ ಜಖಂಗೊಂಡು ಅದರಲ್ಲಿದ್ದ ಚಾಲಕ ಹಾಗೂ ಇತರೆ 4 ಜನರಿಗೆ ಏಟು ಬಿದ್ದು ರಕ್ತಗಾಯಗಳಾಗಿದ್ದು ಅವರನ್ನು ಸಾರ್ವಜನಿಕರ ಸಹಾಯದಿಂದ ಆಸ್ಪತ್ರೆಗಳಿಗೆ ಕಳುಹಿಸಿಕೊಟ್ಟಿರುತ್ತೆ. ನನ್ನ ವಾಹನಕ್ಕೆ ಡಿಕ್ಕಿ ಹೊಡೆಸಿದ ರಭಸಕ್ಕೆ ನನ್ನ ವಾಹನ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಉಲ್ಟಾ ಆಗಿ ನಿಂತಿರುತ್ತೆ. ಅಪಘಾತ ಉಂಟು ಮಾಡಿರುವ ಕಾರಿನ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು, ಗೂಡ್ಸ್ ವಾಹನದ ಮಾಲಿಕರಿಗೆ ವಿಚಾರ ತಿಳಿಸಿ ತಡವಾಗಿ ಬಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿದೆ.

 

ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆ.ಮೊ. ನಂ : ಮೊ. ನಂ : 181/2018 ಕಲಂ 279, 304(ಎ) ಐಪಿಸಿ.

ದಿ:17/07/2018  ಕುಂಬ ಗ್ರಾಮದ ಲಕ್ಷ್ಮೀನರಸಯ್ಯ ಬಿನ್ ಕೆಂಚಲರೆಡ್ಡಿ ರವರು ನೀಡಿದ ದೂರಿನಂಶವೇನೆಂದರೆ, ನನ್ನ ತಮ್ಮ ಬೋಮ್ಮಲ ಪೆಂಚಲರೆಡ್ಡಿ ರವರಿಗೆ ಬೊಮ್ಮನ ಮನೋಹರ ರೆಡ್ಡಿ ಮತ್ತು ನರಸಿಂಹ ಎಂಬ ಇಬ್ಬರು ಮಕ್ಕಳಿದ್ದು, ಇವರಲ್ಲಿ ಬೊಮ್ಮನ ಮನೋಹರ ರೆಡ್ಡಿ ರವರು ಗುತ್ತಿಗೆದಾರರಾದ ಸಾಂಭಶಿವರೆಡ್ಡಿ ಹತ್ತಿರ ರೈಲ್ವೆ ಕಾಮಗಾರಿಯಲ್ಲಿ ಕೆಲಸ ಮಾಡಿಕೊಂಡಿದ್ದು ತುಮಕೂರು-ರಾಯದುರ್ಗ ರೈಲ್ವೆ ಕಾಮಗಾರಿಯ ಸೂಪರ್ ವೈಸರ್ ಕೆಲಸ ಮಾಡುತ್ತಿದ್ದು, ಈ ದಿನ ದಿನಾಂಕ:17/07/2018 ರಂದು ಬೆಳಿಗ್ಗೆ ಸುಮಾರು 9-00 ಗಂಟೆ ಸಮಯದಲ್ಲಿ ನಾನು ಗುಬ್ಬಿ ಹತ್ತಿರ ಕೆಲಸ ಮಾಡುತ್ತಿರುವಾಗ್ಗೆ ನಮ್ಮ ಗ್ರಾಮದಿಂದ ನಮ್ಮ ಸಂಭಂದಿಕರು ನನಗೆ ಪೋನ್ ಮಾಡಿ ಬೊಮ್ಮನ ಮನೋಹರ ರೆಡ್ಡಿ ರವರು ರಾತ್ರಿ ಟ್ರಾಕ್ಟರ್ ಅಪಘಾತದಲ್ಲಿ ಮೃತಪಟ್ಟಿರುತ್ತಾರೆಂತಾ ಆತನ ಜೊತೆ ಕೆಲಸ ಮಾಡುವವರು ತಿಳಿಸಿರುತ್ತಾರೆ. ನಾವು ಇಲ್ಲಿಂದ ಬರುವುದು ತಡವಾಗುತ್ತೆ. ಅದರಿಂದ ನೀನು ಸ್ತಳಕ್ಕೆ ಹೋಗಿ ನೋಡು ಎಂದು ತಿಳಿಸಿರುತ್ತಾರೆ. ಅದರಂತೆ ನಾನು ಸುಮಾರು 10-00 ಗಂಟೆಗೆ ಮಧುಗಿರಿ-ತುಮಕೂರು ರಸ್ತೆ ಸಿಂಗೋನಹಳ್ಳಿ ಗೇಟ್ ಸಮೀಪ ನನ್ನ ತಮ್ಮನ ಮಗ ಮನೋಹರನು ಅಪಘಾತ ಮಾಡಿಕೊಮಡಿದ್ದ ಸ್ಥಳವನ್ನು ನೋಡಿರುತ್ತೇನೆ. ಮತ್ತು ಆತನ ಜೊತೆ ಕೆಲಸ ಮಾಡುತ್ತಿದ್ದ ಮಲ್ಲೇಶ್ವರ ರೆಡ್ಡಿ, ನಾಗಾರ್ಜುನ ರವರನ್ನು ವಿಚಾರ ಮಾಡಲಾಗಿ ನಿನ್ನೆ ದಿನಾಂಕ;16/07/2018 ರಂದು ರಾತ್ರಿ ಸುಮಾರು 11-45 ಗಂಟೆ ಸಮಯದಲ್ಲಿ ಬೊಮ್ಮನ ಮನೋಹರ ರೆಡ್ಡಿ ಕಾಮಗಾರಿ ಬಳಿ ಕೆಲಸ ಮಾಡುತ್ತಿರುವರು ಕ್ಯಾಂಪ್ ಬಳಿ ಹೋಗಲು ನಮ್ಮ ಕಾಮಗಾರಿಯ AP-04-TT-4387 ನೇ ಮಹಿಂದ್ರಾ ಕಂಪನಿಯ ಟ್ರಾಕ್ಟರ್ ಇಂಜಿನನ್ನು ರಸ್ತೆಯಲ್ಲಿ ಅತಿವೇಗ ಮತ್ತು ಅಜಾಗರೂಕತೆಯಿಂದ ರಸ್ತೆ ಎಡಬದಯಿಂದ ಬಲಕ್ಕೆ ಹೋಡಿಸಿಕೊಂಡು ಹೋಗಿ ನಂತರ ಬಲಬದಿಯಿಂದ ರಸ್ತೆಯ ಎಡಬದಿಗೆ ತುಮಕೂರು ಸಿಂಗೋನಹಳ್ಳಿ, ಮುದ್ದರಾಮಯ್ಯನಪಾಳ್ಯ ಎಂಬ ದೊಡ್ಡ ನಾಮಫಲಕ ಇರುವ ಸ್ತಳದ ಬಳಿ ಟ್ರಾಕ್ಟರನ್ನು ರಸ್ತೆಯ ಪಕ್ಕದ ಚರಂಡಿಯಂತೆ ಇರುವ ಹಳ್ಳಕ್ಕೆ ಇಳಿಸಿದ ಪರಿಣಾಮ ಟ್ರಾಕ್ಟರ್ ಇಂಜಿನ್‌ನ ಮುಮಭಾಗದ ಎರಡು ಚಕ್ರಗಳು ಜಖಂಗೊಂಡು ಟ್ರಾಕ್ಟರ್ ಇಂಜಿನ್ ಪಲ್ಟಿ ಹೊಡೆದ ಪರಿಣಾಮ ಟ್ರಾಕ್ಟರ್ ಚಾಲನೆ ಮಾಡುತ್ತಿದ್ದ ಬೊಮ್ಮನ ಮನೋಹರ ರೆಡ್ಡಿ ರವರು ನೆಲಕ್ಕೆ ಬಿದ್ದು ಟ್ರಾಕ್ಟರ್ ಇಂಜಿನ್ ಆತ ಮೇಲೆ ಬಿದ್ದು ಸ್ತಳದಲ್ಲಿ ಮೃತಪಟ್ಟಿದ್ದು ನಂತರ ಟ್ರಾಕ್ಟರ್ ಇಂಜಿನ್ ಎತ್ತಿ ಸೈಡ್ ನಿಲ್ಲಿಸಿ ಮೃತಪಟ್ಟಿದ್ದ ಬೊಮ್ಮನ ಮನೋಹರ ರೆಡ್ಡಿ ಯನ್ನು ತುಮಕೂರು ಜಿಲ್ಲಾ ಸರ್ಕಾರಿ ಶವಾಗಾರಕ್ಕೆ ತಂದಿರುತ್ತೇವೆ ಎಂದು ತಿಳಿಸಿರುತ್ತಾರೆ. ನಾನು ಆಸ್ಪತ್ರೆಗೆ ಬಳಿ ಹೋಗಿ ನೋಡಿದಾಗ ಬೊಮ್ಮನ ಮನೋಹರ ರೆಡ್ಡಿ ಮೇಲೆ ಟ್ರಾಕ್ಟರ್ ಪಲ್ಟಿ ಹೊಡೆದಾಗ ಆತನ ಎದೆ, ಕಾಲು ಹಾಗೂ ಇತರೆ ಕಡೆ ಪೆಟ್ಟು ಬಿದ್ದು ಗಾಯಗಳಾಗಿದ್ದವು. ಈ ಅಪಘಾತಕ್ಕೆ ನೆನ್ನೆ ರಾತ್ರಿ ಬೊಮ್ಮನ ಮನೋಹರ ರೆಡ್ಡಿ AP-04-TT-4387ನೇ ಟ್ರಾಕ್ಟರ್ ಇಂಜಿನ್ ನ್ನು ಚಾಲನೆ ಮಾಡಿಕೊಂಡು ಹೋಗಿ ರಸ್ತೆಯ ಪಕ್ಕದ ಚರಂಡಿಗೆ ನಿರ್ಲಕ್ಷತೆಯಿಂದ ಓಡಿಸಿದ ಪರಿಣಾಮ ಬೊಮ್ಮನ ರೆಡ್ಡಿಯ ಮೇಲೆ ಟ್ರಾಕ್ಟರ್ ಪಲ್ಟಿ ಹೊಡೆದಿರುವುದೇ ಆತನ ಸಾವಿಗೆ ಕಾರಣವಾಗಿರುತ್ತೆ. ಆದ್ದರಿಂದ ಸ್ತಳ ಪರಿಶೀಲನೆ ಮಾಡಿ ಮುಂದಿನ ಕ್ರಮ ಕೈಗೊಳ್ಳಲು ಸ್ಥಳಕ್ಕೆ ಹಾಗೂ ಆಸ್ಪತ್ರೆಯ ಶವಾಗಾರದ ಬಳಿ ಹೋಗಿ ನೋಡಿ ತಡವಾಗಿ ಬಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿದೆ.

 

ತಿಪಟೂರು ನಗರ ಪೊಲೀಸ್ ಠಾಣಾ ಮೊ.ನಂ - 109/2018 ಕಲಂ: 324, 149 ಐ.ಪಿ.ಸಿ

ದಿನಾಂಕ: 17/07/2018 ರಂದು ಬೆಳಗಿನ ಜಾವ 2-30 ಗಂಟೆಗೆ ಠಾಣಾ ಎ.ಎಸ್.ಐ ಶ್ರೀ ಲಿಂಗರಾಜು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ದಿನಾಂಕ:16-07-2018 ರಂದು ನನಗೆ  ತಿಪಟೂರು ನಗರ ಠಾಣಾ ಸರಹದ್ದಿನಲ್ಲಿ ರಾತ್ರಿ ರೌಂಡ್ಸ್ ಕರ್ತವ್ಯಕ್ಕೆ ನೇಮಕಮಾಡಿದ್ದು ನೇಮಕದಂತೆ ನಗರದಲ್ಲಿ ರೌಂಡ್ಸ್ ಮಾಡುತ್ತಿದ್ದಾಗ, ರಾತ್ರಿ 11-45 ಗಂಟೆ ಸಮಯದಲ್ಲಿ ತಿಪಟೂರು ಟೌನ್‌ನ ಬಿ.ಹೆಚ್‌ ರಸ್ತೆ ಕಾಮತ್‌ ಹೊಟೆಲ್‌ ಬಳಿ ಯಾರೋ ಒಬ್ಬ ವ್ಯಕ್ತಿ ಅಟೋದಲ್ಲಿ ಕಬ್ಬಿಣದ ರಾಡು ಮತ್ತು ಮರದ ರೀಪರ್‌ಗಳನ್ನು ತೆಗೆದುಕೊಂಡು ಬಂದು ಸಾರ್ವಜನಿಕರ ಮೇಲೆ ಬರ್ರೋ ನನ್ನ ಮಕ್ಕಳಾ ಇವತ್ತು ನಿಮ್ಮನ್ನು ಕೊಲೆ ಮಾಡುತ್ತೇನೆಂತ ಜೋರಾಗಿ ಕೂಗಾಡಿಕೊಂಡು ಹಲ್ಲೆ ಮಾಡುತ್ತಿದ್ದಾರೆಂತ ಬಂದ ಮಾಹಿತಿ ಮೇರೆಗೆ ಸ್ಥಳಕ್ಕೆ ಹೋದಾಗ ಆ ವ್ಯಕ್ತಿ ತಾನು ತೆಗೆದುಕೊಂಡು ಬಂದಿದ್ದ ಕೆಎ-44-1248 ನೇ ಆಟೋರಿಕ್ಷಾದಲ್ಲಿದ್ದ ಕಬ್ಬಿಣದ ರಾಡನ್ನು ತೆಗೆದುಕೊಂಡು  ಇಂದಿರಾನಗರ ಪ್ರಕಾಶ್‌ ಎಂಬ ವ್ಯಕ್ತಿಗೆ ಹೊಡೆಯುತ್ತಿದ್ದ, ಆಗ ನಾವು ಹಾಗೂ ಇನ್ನಿತರ ಇಬ್ಬರು ಸಾರ್ವಜನಿಕರು ಹೋಗಿ ಗಲಾಟೆ ಮಾಡುತ್ತಿದ್ದ ಆಸಾಮಿಯನ್ನು ತಡೆಯಲು ಹೊದಾಗ ಆತ ಕಬ್ಬಿಣದ ರಾಡಿನಿಂದ ಹೊಡೆಯುತ್ತಿದ್ದ ವ್ಯಕ್ತಿಯನ್ನು ಬಿಟ್ಟು ಬಿಡಿಸಲು ಹೋದ ಹಳೇಪಾಳ್ಯದ ರಂಗನಾಥ್ ಎಂಬುವರಿಗೆ ಮರದ ರೀಪಿಸ್‌ನಿಂದ ಬಲಗಾಲಿನ ಪಾದಕ್ಕೆ ಹೊಡೆದು ಗಾಯವನ್ನುಂಟುಮಾಡಿದ ಮತ್ತೊಬ್ಬ ಇಂದಿರಾನಗರದ ಹರೀಶ್‌ ಎಂಬುವರಿಗೆ ನೆಲಕ್ಕೆ ಕೆಡವಿಕೊಂಡು ಅಲ್ಲೇ ಬಿದ್ದದ್ದ ಒಂದು ದಪ್ಪ ಕಲ್ಲನ್ನು ತೆಗೆದುಕೊಂಡು ಆತನನ್ನು ಕೊಲೆ ಮಾಡುವ ಉದ್ದೇಶದಿಂದ ಕಲ್ಲನ್ನು ತಲೆಯ ಮೇಲೆ ಎತ್ತಿಹಾಕಿ ಸಾಯಿಸಲು ಪ್ರಯತ್ನಿಸಿದಾಗ ಆತ ತಪ್ಪಿಸಿಕೊಂಡಿದ್ದರಿಂದ ಆ ಕಲ್ಲು ಆತನ ಬಲಗಾಲಿನ ಪಾದಕ್ಕೆ ಬಿದ್ದು ಪೆಟ್ಟಾಯಿತು, ನಂತರ ಗಲಾಟೆ ಮಾಡುತ್ತಿದ್ದ ಆಸಾಮಿ ತಾನು ತೊಟ್ಟಿದ್ದ ಬಟ್ಟೆಯನ್ನು ಕಿತ್ತೇಸೆದು ಕೂಗಾಡುತ್ತಿದ್ದಾಗ ಬಿಡಿಸಲು ಹೋದ ನನಗೆ ಮತ್ತು ನಮ್ಮ ಚಾಲಕನ ಮೇಲೆ ಕರ್ತವ್ಯಕ್ಕೆ ಅಡ್ಡಿಪಡಿಸಿ ಏನೋ ಪೊಲೀಸ್‌ ಸೂಳೆ ಮಕ್ಕಳಾ ಎಂದು ಕೆಟ್ಟ ಮಾತುಗಳಿಂದ ಬೈಯುತ್ತಾ ಅಷ್ಟರಲ್ಲಿ ಅಲ್ಲಿಗೆ ಬಿ.ಹೆಚ್‌ ರಸ್ತೆಯಲ್ಲಿ ಬಂದ ಎರಡು ಕೆಎಸ್‌ಅರ್‌ಟಿಸಿಗೆ ಸೇರಿದ ಕೆಎ-31-ಎಫ್‌-1446 ಮತ್ತು ಕೆಎ-14-ಎಫ್‌-0038 ಬಸ್‌ಗಳನ್ನು ತಡೆದು ಎರಡು ವಾಹನಗಳಿಗೆ ಕೈಯಲ್ಲಿದ್ದ ಮರದ ರೀಪರ್‌ನಿಂದ ಹೊಡೆದು ಮುಂದಿನ ಗಾಜುಗಳನ್ನು ಜಖಂಗೊಳಿಸಿ ಸಾರ್ವಜನಿಕ ಆಸ್ತಿಯನ್ನು ನಷ್ಟಗೊಳಿಸಿದ, ನಂತರ ನಮ್ಮ ಹೆದ್ದಾರಿ ಗಸ್ತು ವಾಹನದ ಹಿಂಭಾಗದ ಗಾಜಿಗೆ ಮತ್ತು ನಮ್ಮ ಜೀಪಿನ ಮುಂದಿನ ಗಾಜುಗಳನ್ನು ಕಲ್ಲಿನಿಂದ ಹೊಡೆದು ಜಖಂಗೊಳಿಸಿ ಸಾರ್ವಜನಿಕ ಆಸ್ತಿಯನ್ನು ನಷ್ಟವನ್ನುಂಟುಮಾಡಿದ ನಂತರ ಈತ ಕೆಎಸ್‌‌ಆರ್‌ಟಿಸಿ ಬಸ್‌ಗೆ ತಾನೇ ತಲೆಯಿಂದ ಗುದ್ದಿಕೊಂಡು ಹಾಗೂ ಕಲ್ಲಿನಿಂದ ಆತನೇ ತಲೆಗೆ ಕುಟ್ಟಿಕೊಂಡು ಯಾರೋ ಬರ್ರೋ ನನ್ನನ್ನು ಹಿಡಿಯುವವರು ಎಂದು ಕೂಗಾಡುತ್ತಿದ್ದಾಗ ಸಾರ್ವಜನಿಕರು ಈತನನ್ನು ಹಿಡಿಯಲು ಪ್ರಯತ್ನ ಪಟ್ಟಾಗ ಅವರ ಮೇಲೆ ಹಲ್ಲೇ ಮಾಡಲು ಹೋದಾಗ ಸಾರ್ವಜನಿಕರು ಆತನ ಕೈಯಲ್ಲಿದ್ದ ಮರದ ರಿಪೀಸ್ ನ್ನು ಕಿತ್ತುಕೊಂಡು ಆತನಿಗೆ ಹೊಡೆದಿರುತ್ತಾರೆ. ಈತನಿಗೆ ಮೇಲ್ನೋಟಕ್ಕೆ ತಲೆಗೆ ಮತ್ತು ಕಾಲಿಗೆ ಗಾಯವಾಗಿರುತ್ತದೆ.  ತಕ್ಷಣ ಈತನನ್ನು ಚಿಕಿತ್ಸೆಗಾಗಿ ತಿಪಟೂರು ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿರುತ್ತೆ. ರಾತ್ರಿ ಕತ್ತಲಾಗಿದ್ದರಿಂದ ಈತನಿಗೆ ಹೊಡೆದಿರುವ ಸಾರ್ವಜನಿಕರು ಯಾರೂ ಎಂಬುದು ತಿಳಿದು ಬಂದಿರುವುದಿಲ್ಲ, ಆದ್ದರಿಂದ ಆಟೋ ಚಾಲಕ ಅಶೋಕ ರವರಿಗೆ ಹೊಡೆದಿರುವ ಸಾರ್ವಜನಿಕರ ಮೇಲೆ ಕಾನೂನು ಕ್ರಮ ಜರುಗಿಸಲು ಸೂಚಿಸಿ ನೀಡಿರುವ ವರದಿಯ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

 

 Tuesday, 17 July 2018

ಅಪರಾಧ ಘಟನೆಗಳು 17-07-18

ಶಿರಾ ಪೊಲೀಸ್ ಠಾಣಾ ಮೊ ನಂ 281/2018 ಕಲಂ 279-304(a) IPC

ದಿನಾಂಕ:16-07-2018 ರಂದು ರಾತ್ರಿ 07-00 ಗಂಟೆಯಲ್ಲಿ ಪಿರ್ಯಾದುದಾರರಾದ ರೇಖಮ್ಮ ಕೊಂ ರಂಗಸ್ವಾಮಿ, 26 ವರ್ಷ, ಎ.ಕೆ ಜನಾಂಗ, ಮದ್ದಿಹಳ್ಳಿ, ಧರ್ಮಪುರ  ಹೋಬಳಿ, ಹಿರಿಯೂರು ತಾಲ್ಲೂಕ್ ಚಿತ್ರದುರ್ಗ ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ಪಿರ್ಯಾದಿನ ಅಂಶವೇನೆಂದರೆ, ನನ್ನ ತವರು ಮನೆ ಇದೇ ಹಿರಿಯೂರು ತಾಲ್ಲೂಕ್ ನಂದಿಹಳ್ಳಿ ಆಗಿರುತ್ತೆ. ನನ್ನನ್ನು ಈಗ್ಗೆ ಸುಮಾರು 11 ವರ್ಷದ ಹಿಂದೆ ಮದ್ದಿಹಳ್ಳಿ ಗ್ರಾಮದ ಗೋವಿಂದಪ್ಪ ರವರ ಮಗ ರಂಗಸ್ವಾಮಿ ರವರಗೆ ಕೊಟ್ಟು ಮದುವೆ ಮಾಡಿದ್ದರು, ನಮಗೆ 1).ಅಭಿಶೇಕ್, 2).ಸಂತೋಷ್ ಎಂಬ ಇಬ್ಬರು ಗಂಡು ಮಕ್ಕಳಿರುತ್ತಾರೆ. ನನ್ನ ಗಂಡ ಕೂಲಿ ಕೆಲಸ ಮಾಡುತ್ತಿರುತ್ತಾರೆ. ನಾನು ಹಾಗೂ ನನ್ನ ಗಂಡ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕ್ ಸೂಲಿಬೆಲೆ ಗ್ರಾಮದ ಬಳಿ ಸುಗುಣ ಕಂಪನಿಯ ಕೋಳಿ ಫಾರಂ ನಲ್ಲಿ ಕೂಲಿ ಕೆಲಸ ಮಾಡುತ್ತಿರುತ್ತೇವೆ. ನನ್ನ ಮೊದಲನೇ ಮಗ ಹಿರಿಯೂರಿನ ಹಾಸ್ಟೆಲ್ ನಲ್ಲಿ ಇರುತ್ತಾನೆ, ಕಿರಿಯ ಮಗ ನನ್ನ ತಾಯಿಯ ಮನೆಯಲ್ಲಿ ಇಟ್ಟುಕೊಂಡು ವಿದ್ಯಾಬ್ಯಾಸ ಮಾಡುತ್ತಿರುತ್ತಾರೆ. ದಿನಾಂಕ:09-07-2018 ರಂದು ಸಾಯಂಕಾಲ 05-00 ಗಂಟೆಗೆ ನನ್ನ ಗಂಡ ರಂಗಸ್ವಾಮಿ ನಮ್ಮ ಮಕ್ಕಳ ಕ್ಯಾಸ್ಟ್ ಸರ್ಟಿಫಿಕೆಟ್ ಮಾಡಿಸಿಕೊಡಲು ನನ್ನ ಗಂಡನ ಸ್ನೇಹಿತ ಶಿವಮೂರ್ತಿ ರವರ ಬಾಬ್ತು KA-43-L-176 ನೇ ಹೀರೋ ಪ್ಯಾಷನ್ ಪ್ರೋ ಮೋಟಾರ್ ಸೈಕಲ್ ನಲ್ಲಿ   ನಂದಿಹಳ್ಳಿಗೆ ಹೋಗಿದ್ದರು. ಕೆಲಸ ಮುಗಿಸಿಕೊಂಡು ಮಾರನೇ ದಿನ ಅಂದರೆ ದಿನಾಂಕ:10-07-2018 ರಂದು ಬೆಳಗಿನ ಜಾವ ಸುಮಾರು 05-00 ಗಂಟೆಗೆ ನಂದಿ ಹಳ್ಳಿಯಿಂದ ಬೆಂಗಳೂರಿಗೆ ಬರಲು ಹೊರಟಿರುತ್ತಾರೆ. ಬೆಳಗ್ಗೆ ಸುಮಾರು 06-30 ಗಂಟೆಗೆ ಯಾರೋ ಲಾರಿಯ ಚಾಲಕ ನನಗೆ ನನ್ನ ಗಂಡನ ಪೋನ್ ನಿಂದ ದೂರವಾಣಿ ಕರೆ ಮಾಡಿ, ಶಿರಾ ಸಮೀಪ ಬುಕ್ಕಾಪಟ್ಟಣ ಬ್ರಿಡ್ಜ್ ಬಳಿ ಹಿರಿಯೂರು-ತುಮಕೂರು ಎನ್.ಹೆಚ್-48 ರಸ್ತೆಯಲ್ಲಿ ಒಬ್ಬ ಮೋಟಾರ್ ಸೈಕಲ್ ಸವಾರ ಮೋಟಾರ್ ಸೈಕಲ್ ಸಮೇತ ರಸ್ತೆಯ ಮೇಲೆ ಬಿದ್ದು, ಗಾಯಗೊಂಡಿದ್ದನು. ಆತನ ಜೇಬಿನಲ್ಲಿದ್ದ ಮೊಬೈಲ್ ಪೋನ್ ತೆಗೆದುಕೊಂಡು ಅದರಲ್ಲಿದ್ದ  ಒಂದು ನಂಬರ್ ಗೆ ಕರೆ ಮಾಡಿರುತ್ತೇನೆ ಎಂದು ತಿಳಿಸಿದನು ಹಾಗೂ ಸದರಿ ಗಾಯಾಳುವನ್ನು ಶಿರಾ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆ ಕಳುಹಿಸುತ್ತಿದ್ದೇವೆ ಎಂದು ಹೇಳಿದರು, ತಕ್ಷಣ ನಾನು ನನ್ನ ತಂದೆ ಸಣ್ಣಪ್ಪ ರವರಿಗೆ ದೂರವಾಣಿ ಕರೆ ಮಾಡಿ, ಅಪಘಾತದ ವಿಚಾರವನ್ನು ತಿಳಿಸಿದೆನು. ನನ್ನ ತಂದೆ ತಾಯಿ ಶಿರಾ ಸರ್ಕಾರಿ ಆಸ್ಪತ್ರೆಗೆ ಬಂದು ನನ್ನ ಗಂಡನನ್ನು ತುಮಕೂರು ಸರ್ಕಾರಿ ಆಸ್ಪತ್ರೆಗೆ ಕರೆತಂದಿರುತ್ತಾರೆ, ನಾನು ಅದೇ ದಿನ ಬೆಳಗ್ಗೆ 11-00 ಗಂಟೆಗೆ ತುಮಕೂರು ಸರ್ಕಾರಿ ಆಸ್ಪತ್ರೆಗೆ ಹೋಗಿ ನನ್ನ ಗಂಡನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಅದೇ ದಿನ ದಾಖಲಿಸಿರುತ್ತೇನೆ. ಅದೇ ದಿನ ನನ್ನ ಗಂಡನನ್ನು ನಿಮ್ಹಾನ್ಸ್ ಆಸ್ಪತ್ರೆಯ ವೈದ್ಯರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲು ತಿಳಿಸಿದ್ದು, ನಾನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದೆನು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನನ್ನ ಗಂಡ ಚಿಕಿತ್ಸೆ ಫಲಾಕರಿಯಾಗದೇ, ದಿನಾಂ:16-07-2018 ರಂದು ಬೆಳಗ್ಗೆ 06-15 ಗಂಟೆಯಲ್ಲಿ ಮೃತಪಟ್ಟಿರುತ್ತಾರೆ. ದಿನಾಂಕ:10-07-2018 ರಂದು ಬೆಳಗ್ಗೆ ಸುಮಾರು 06-00 ಗಂಟೆಯಲ್ಲಿ ನನ್ನ ಗಂಡ ಮೇಲ್ಕಂಡ ಮೋಟಾರ್ ಸೈಕಲ್ ಅನ್ನು ಹಿರಿಯೂರು ಕಡೆಯಿಂದ ತುಮಕೂರು ಕಡೆಗೆ ಅತಿವೇಗ ಮತ್ತು ನಿರ್ಲಕ್ಷತನದಿಂದ ಚಾಲನೆ ಮಾಡಿಕೊಂಡು ಬಂದು ಬುಕ್ಕಾಪಟ್ಟಣ ಬ್ರಿಡ್ಜ್ ಸಮೀಪ ರಸ್ತೆಯ ಮೇಲೆ ಮೋಟಾರ್ ಸೈಕಲ್ ಬೀಳಿಸಿ, ಅಪಘಾತಪಡಿಸಿದ ಮರಿಣಾಮ ನನ್ನ ಗಂಡನ ತಲೆಗೆ ಹಾಗೂ ಮೈ ಕೈ ಗೆ ಪೆಟ್ಟುಗಳು ಬಿದ್ದು, ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ:16-07-2018 ರಂದು ಬೆಳಗ್ಗೆ 06-15 ಗಂಟೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ. ಕಾನೂನು ರೀತಿ ಕ್ರಮ ಜರುಗಿಸಬೇಕೆಂದು  ನೀಡಿದ ಪಿರ್ಯಾದಿನ ಮೇರೆಗೆ ಈ ಪ್ರ.ವ.ವರದಿ

ಅಮೃತೂರು ಪೊಲೀಸ್ ಠಾಣಾ ಮೊನಂ-132/2018 ಕಲಂ-15(ಎ), 32(3) ಕೆ.ಇ ಆಕ್ಟ್

ದಿನಾಂಕ: 16-07-2018 ರಂದು ರಾತ್ರಿ 9-00 ಗಂಟೆಯಲ್ಲಿ ನಮ್ಮ ಠಾಣೆಯ ಪಿಎಸ್‌‌ಐ ರವರು ನೀಡಿದ ವರದಿಯ ಅಂಶವೇನೆಂದರೆ, ಈ ಮೂಲಕ ನಿಮಗೆ ಸೂಚಿಸುವುದೇನೆಂದರೆ ದಿನಾಂಕ: 16-07-2018 ರಂದು ನಾನು ಎನ್.ಹೆಚ್-75 ರಸ್ತೆಯಲ್ಲಿ ಸಂಜೆ ಗಸ್ತಿನಲ್ಲಿದ್ದ ಸಮಯದಲ್ಲಿ ರಾತ್ರಿ 7-45 ಗಂಟೆ ಸಮಯದಲ್ಲಿ ನಮ್ಮ ಠಾಣಾ ವ್ಯಾಪ್ತಿಯ ಎಡೆಯೂರು ಹೋಬಳಿ, ಕೊಪ್ಪ ಸರ್ಕಲ್ ನ ಎನ್.ಹೆಚ್-75 ರಸ್ತೆ ಪಕ್ಕದ ಸರ್ವೀಸ್ ರಸ್ತೆಯ ಪಕ್ಕದಲ್ಲಿರುವ ಶ್ರೀವೆಂಕಟೇಶ್ವರ ಪ್ರಾವಿಜನ್ ಸ್ಟೋರ್ ನ ಮಾಲಿಕರಾದ ವೆಂಕಟೇಶ್ ರವರು ತಮ್ಮ ಅಂಗಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿರುತ್ತಾರೆಂದು ಮಾಹಿತಿ ಬಂದಿದ್ದು, ರಾತ್ರಿ 8-00 ಗಂಟೆ ಸಮಯಕ್ಕೆ ಹೋಗಿ ನೋಡಲಾಗಿ ಅಂಗಡಿಯ ಮುಂದೆ ನೆಲದ ಮೇಲೆ ಕುಳಿತು ಒಬ್ಬ ವ್ಯಕ್ತಿ ಕುಳಿತುಕೊಂಡು ಪ್ಲಾಸ್ಟಿಕ್ ಲೋಟದಲ್ಲಿ  ಮದ್ಯಪಾನ ಮಾಡುತ್ತಿದ್ದನು. ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿದ ತಕ್ಷಣ ಮದ್ಯಪಾನ ಮಾಡುತ್ತಿದ್ದ ಒಬ್ಬ ವ್ಯಕ್ತಿ ತನ್ನ ಕೈಲಿದ್ದ ಮದ್ಯ ತುಂಬಿದ ಪ್ಲಾಸ್ಟಿಕ್ ಲೋಟವನ್ನು ಕೆಳಗೆ ಎಸೆದು ಓಡಿ ಹೋಗಲು ಪ್ರಯತ್ನಿಸಿದ್ದು, ಅಲ್ಲೇ ಕತ್ತಲೆಯಲ್ಲಿ ಯಾವುದೋ ವಸ್ತುವಿಗೆ ಕಾಲು ಎಡವಿಕೊಂಡು ಕಾಲಿಗೆ ಪೆಟ್ಟು ಮಾಡಿಕೊಂಡು ನಿಂತನು. ಆತನ ಹೆಸರು ವಿಳಾಸ ಕೇಳಿ ತಿಳಿಯಲಾಗಿ ಕೆ.ಆರ್.ಲಕ್ಕಣ್ಣ ಬಿನ್ ಲೇಟ್ ರಂಗಯ್ಯ, 58 ವರ್ಷ, ಒಕ್ಕಲಿಗರು,  ಹಾಲಿನ ಡೈರಿ ಸೆಕ್ರೇಟರಿ, ಕೊಪ್ಪ ಸರ್ಕಲ್, ಮಾಗಡಿಪಾಳ್ಯ, ಎಡೆಯೂರು ಹೋಬಳಿ, ಕುಣಿಗಲ್ ತಾಲೋಕ್ ಎಂದು ತಿಳಿಸಿದರು. ಆತನು ಮದ್ಯಪಾನ ಮಾಡುತ್ತಿದ್ದ ಸ್ಥಳದಲ್ಲಿ ಮದ್ಯದ ಸಾಚೆಟ್ ಗಳಿದ್ದು,  ಪರಿಶೀಲಿಸಲಾಗಿ ರಾಜ ವಿಸ್ಕಿಯ 90 ಎಂ.ಎಲ್ ನ ಖಾಲಿಯಾದ ಒಂದು ಸ್ಯಾಚೆಟ್‌ ಹಾಗೂ ಒಂದು ತುಂಬಿದ 90 ಎಂ.ಎಲ್ ನ ರಾಜವಿಸ್ಕಿ ಸಾಚೆಟ್, ಅರ್ಧ ನೀರಿರುವ ಒಂದು ಲೀಟರ್ ನ ವಾಟರ್ ಬಾಟಲ್ ಇರುತ್ತವೆ. ಅಲ್ಲೇ ಕುರುಕಲು ತಿಂಡಿಗಳು ಸಹ ಇರುತ್ತವೆ. ಅಲ್ಲೇ ಇದ್ದ ಅಂಗಡಿ ಮಾಲಿಕನ ಹೆಸರು ವಿಳಾಸ ಕೇಳಿ ತಿಳಿಯಲಾಗಿ ವೆಂಕಟೇಶ್ ಬಿನ್ ಲೇಟ್ ಗೋವಿಂದಯ್ಯ, 43 ವರ್ಷ, ಒಕ್ಕಲಿಗರು, ಶ್ರೀವೆಂಕಟೇಶ್ವರ ಪ್ರಾವಿಜನ್ ಸ್ಟೋರ್ ನ ಮಾಲಿಕ, ಕೊಪ್ಪ ಸರ್ಕಲ್, ಮಾಗಡಿಪಾಳ್ಯ, ಎಡೆಯೂರು ಹೋಬಳಿ, ಕುಣಿಗಲ್ ತಾಲೋಕ್ ಎಂದು ತಿಳಿಸಿದನು. ಮುಂದುವರೆದು ವಿಚಾರ ಮಾಡಲಾಗಿ ತನ್ನ ಅಂಗಡಿಗೆ ಬರುವ ಕೆಲವು ಗಿರಾಕಿಗಳು ಇಲ್ಲಿ ಬಂದು ಕುರುಕಲು ತಿಂಡಿಗಳನ್ನು ಖರೀದಿಸಿ ಹೊರಗಡೆಯಿಂದ ಮದ್ಯವನ್ನು ತೆಗೆದುಕೊಂಡು ಬಂದು ಇಲ್ಲಿ ಮದ್ಯಪಾನ ಮಾಡಿಕೊಂಡು ಹೋಗುತ್ತಾರೆ ಎಂದು ತಿಳಿಸಿದನು. ಸಾರ್ವಜನಿಕ ಸ್ಥಳವಾದ ಅಂಗಡಿಯ ಮುಂದೆ ವ್ಯಾಪಾರಕ್ಕಾಗಿ ಬರುವ ಗಿರಾಕಿಗಳಿಗೆ ಕುರುಕಲು ತಿಂಡಿಗಳನ್ನು ಮಾರಾಟ ಮಾಡಿ ಮದ್ಯಪಾನ ಮಾಡಲು ಅಂಗಡಿ ಮಾಲಿಕರಾದ ವೆಂಕಟೇಶ್ ಎಂಬುವರು ಅವಕಾಶ ಮಾಡಿಕೊಟ್ಟಿರುವುದರಿಂದ ಮತ್ತು ಇದೇ ಸಾರ್ವಜನಿಕ ಸ್ಥಳದಲ್ಲಿ ಲಕ್ಕಣ್ಣ ಎಂಬಾತನು ಮದ್ಯಪಾನ ಮಾಡುತ್ತಿದ್ದರಿಂದ ಇವರುಗಳ ಮೇಲೆ ಕಲಂ-15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ ರೀತ್ಯ ಕಾನೂನು ಕ್ರಮ ಜರುಗಿಸುವುದು. ತಪ್ಪಿಸಿಕೊಂಡು ಓಡಿ ಹೋಗಲು ಹೋಗಿ ಕಾಲಿಗೆ ಗಾಯ ಮಾಡಿಕೊಂಡಿರುವ ಲಕ್ಕಣ್ಣ ಎಂಬಾತನಿಗೆ ಅಮೃತೂರು ಸರ್ಕಾರಿ ಆಸ್ಪತ್ರೆಯಲ್ಲಿ ತೋರಿಸಿ ಚಿಕಿತ್ಸೆ ಕೊಡಿಸಿದ್ದು, ಮದ್ಯಪಾನ ಮಾಡಿರುವ ಬಗ್ಗೆ ವೈದ್ಯಕೀಯ ಪರೀಕ್ಷೆ ಮಾಡಿಸಿ ಸದರಿಯವರುಗಳ ಮೇಲೆ ಕ್ರಮ ಜರುಗಿಸುವುದು. ಈ ವರದಿಯೊಂದಿಗೆ ಸ್ಥಳದಲ್ಲಿ ಸಿಕ್ಕ ಮಾಲುಗಳನ್ನು ನಿಮ್ಮ ವಶಕ್ಕೆ ನೀಡಿರುತ್ತೆ ಎಂದು ಇದ್ದುದರ ಮೇರೆಗೆ ಪ್ರಕರಣವನ್ನು ದಾಖಲಿಸಿರುತ್ತೆ

ತಿಪಟೂರು ನಗರ ಪೊಲೀಸ್ ಠಾಣಾ ಮೊ.ನಂ - 108/2018 ಕಲಂ:  323,324,307,353,427,504,506 ಐಪಿಸಿ ಜೋತೆಗೆ 2(A) Karanataka Prevention Of Distruction and Loss of Property Act 1981

ದಿನಾಂಕ:17/07/2018 ರಂದು ಬೆಳಗ್ಗೆ 01-30 ಗಂಟೆಗೆ ಪಿರ್ಯಾದಿ ಲಕ್ಷ್ಮಣ ಕೆ.ಡಿ, ಸಹಾಯಕ ಸಬ್‌ ಇನ್ಸ್‌ಪೆಕ್ಟರ್‌, ತಿಪಟೂರು ಗ್ರಾಮಾಂತರ ಪೊಲೀಸ್‌ ಠಾಣೆ ರವರು ಠಾಣೆಗೆ ಹಾಜರಾಗಿ ನೀಡಿರುವ ದೂರಿನ ಅಂಶವೇನೆಂದರೆ,   ನಾನು ದಿನಾಂಕ:16/07/2018 ರಂದು  ತಿಪಟೂರು ಪೊಲೀಸ್‌ ಉಪವಿಭಾಗದ ವ್ಯಾಪ್ತಿಗೆ ಒಳಪಟ್ಟ ಹೆದ್ದಾರಿ ಗಸ್ತು ರಾತ್ರಿ ಪಾಳಿ ಕರ್ತವ್ಯಕ್ಕೆ   ನೇಮಕವಾಗಿದ್ದು, ಅದರಂತೆ ತಿಪಟೂರು ಉಪವಿಭಾಗದ ಹೆದ್ದಾರಿ ಗಸ್ತು ಕರ್ತವ್ಯದ ವಾಹನ ಕೆಎ-03-ಜಿ-1431 ನೇ ವಾಹನದಲ್ಲಿ ಚಾಲಕ  ಎಪಿಸಿ 238, ಜೀವನ್‌ ರವರೊಂದಿಗೆ  ಕರ್ತವ್ಯ ನಿರ್ವಹಿಸುತ್ತಿದ್ದು, ದಿನಾಂಕ:16/07/2018 ರಂದು ರಾತ್ರಿ 11-45 ಗಂಟೆ ಸಮಯದಲ್ಲಿ ತಿಪಟೂರು ಟೌನ್‌ನ ಬಿ.ಹೆಚ್‌ ರಸ್ತೆ ಕಾಮತ್‌ ಹೊಟೆಲ್‌ ಬಳಿ ಯಾರೋ ಒಬ್ಬ ವ್ಯಕ್ತಿ ಅಟೋದಲ್ಲಿ ಕಬ್ಬಿಣದ ರಾಡು ಮತ್ತು ಮರದ ರೀಪರ್‌ಗಳನ್ನು ತೆಗೆದುಕೊಂಡು ಬಂದು ಸಾರ್ವಜನಿಕರ ಮೇಲೆ ಬರ್ರೋ ನನ್ನ ಮಕ್ಕಳಾ ಇವತ್ತು ನಿಮ್ಮನ್ನು ಕೊಲೆ ಮಾಡುತ್ತೇನೆಂತ ಜೋರಾಗಿ ಕೂಗಾಡಿಕೊಂಡು ಹಲ್ಲೆ ಮಾಡುತ್ತಿದ್ದಾರೆಂತ ಬಂದ ಮಾಹಿತಿ ಮೇರೆಗೆ ಸ್ದಳಕ್ಕೆ ಹೋದಾಗ ಆ ವ್ಯಕ್ತಿ ತಾನು ತೆಗೆದುಕೊಂಡು ಬಂದಿದ್ದ ಕೆಎ-44-1248 ನೇ ಆಟೋರಿಕ್ಷಾದಲ್ಲಿದ್ದ ಕಬ್ಬಿಣದ ರಾಡನ್ನು ತೆಗೆದುಕೊಂಡು  ಇಂದಿರಾನಗರ ಪ್ರಕಾಶ್‌ ಎಂಬ ವ್ಯಕ್ತಿಗೆ ಹೊಡೆಯುತ್ತಿದ್ದ, ಆಗ ನಾವು ಹಾಗೂ ಇನ್ನಿತರ ಇಬ್ಬರು ಸಾರ್ವಜನಿಕರು ಹೋಗಿ ಗಲಾಟೆ ಮಾಡುತ್ತಿದ್ದ ಆಸಾಮಿಯನ್ನು ತಡೆಯಲು ಹೊದಾಗ ಆತ ಕಬ್ಬಿಣದ ರಾಡಿನಿಂದ ಹೊಡೆಯುತ್ತಿದ್ದ ವ್ಯಕ್ತಿಯನ್ನು ಬಿಟ್ಟು ಬಿಡಿಸಲು ಹೋದ ಹಳೇಪಾಳ್ಯದ ರಂಗನಾಧ್‌ ಎಂಬುವರಿಗೆ ಮರದ ರೀಪಿಸ್‌ನಿಂದ ಬಲಗಾಲಿನ ಪಾದಕ್ಕೆ ಹೊಡೆದು ಗಾಯವನ್ನುಂಟುಮಾಡಿದ ಮತ್ತೋಬ್ಬ ಇಂದಿರಾನಗರದ ಹರೀಶ್‌ ಎಂಬುವರಿಗೆ ನೆಲಕ್ಕೆ ಕೆಡವಿಕೊಂಡು ಅಲ್ಲೇ ಬಿದ್ದದ್ದ ಒಂದು ದಪ್ಪ ಕಲ್ಲನ್ನು ತೆಗೆದುಕೊಂಡು ಆತನನ್ನು ಕೊಲೆ ಮಾಡುವ ಉದ್ದೇಶದಿಂದ ಕಲ್ಲನ್ನು ತಲೆಯ ಮೇಲೆ ಎತ್ತಿಹಾಕಿ ಸಾಯಿಸಲು ಪ್ರಯತ್ನಿಸಿದಾಗ ಆತ ತಪ್ಪಿಸಿಕೊಂಡಿದ್ದರಿಂದ ಆ ಕಲ್ಲು ಆತನ ಬಲಗಾಲಿನ ಪಾದಕ್ಕೆ ಬಿದ್ದು ಪೆಟ್ಟಾಯಿತು, ನಂತರ ಗಲಾಟೆ ಮಾಡುತ್ತಿದ್ದ ಆಸಾಮಿ ತಾನು ತೊಟ್ಟಿದ್ದ ಬಟ್ಟೆಯನ್ನು ಕಿತ್ತೇಸೆದು ಕೂಗಾಡುತ್ತಿದ್ದಾಗ ಬಿಡಿಸಲು ಹೋದ ನನಗೆ ಮತ್ತು ನಮ್ಮ ಚಾಲಕನ ಮೇಲೆ ಕರ್ತವ್ಯಕ್ಕೆ ಅಡ್ಡಿಪಡಿಸಿ ಏನೋ ಪೊಲೀಸ್‌ ಸೂಳೆ ಮಕ್ಕಳಾ ಎಂದು ಕೆಟ್ಟ ಮಾತುಗಳಿಂದ ಬೈಯುತ್ತಾ ಅಷ್ಟರಲ್ಲಿ ಅಲ್ಲಿಗೆ ಬಿ.ಹೆಚ್‌ ರಸ್ತೆಯಲ್ಲಿ ಬಂದ ಎರಡು ಕೆಎಸ್‌ಅರ್‌ಟಿಸಿಗೆ ಸೇರಿದ ಕೆಎ-31-ಎಫ್‌-1446 ಮತ್ತು ಕೆಎ-14-ಎಫ್‌-0038 ಬಸ್‌ಗಳನ್ನು ತಡೆದು ಎರಡು ವಾಹನಗಳಿಗೆ ಕೈಯಲ್ಲಿದ್ದ ಮರದ ರೀಪರ್‌ನಿಂದ ಹೊಡೆದು ಮುಂದಿನ ಗಾಜುಗಳನ್ನು ಜಖಂಗೊಳಿಸಿ ಸಾರ್ವಜನಿಕ ಆಸ್ತಿಯನ್ನು ನಷ್ಟಗೊಳಿಸಿದ, ನಂತರ ನಮ್ಮ ಹೆದ್ದಾರಿ ಗಸ್ತು ವಾಹನದ ಹಿಂಬಾಗದ ಗಾಜಿಗೆ ಹಾಗೂ ವಿಚಾರ ತಿಳಿದು ಅಲ್ಲಿಗೆ ಬಂದ ತಿಪಟೂರು ನಗರ ಗಸ್ತಿನಲ್ಲಿದ್ದ ನಗರ ಠಾಣೆಯ ಎಎಸ್‌ಐ ಲಿಂಗರಾಜು ರವರಿದ್ದ ಇಲಾಖೆ ಜೀಪ್‌ ನಂಬರ್‌ ಕೆಎ-06-ಜಿ-0347 ರ ಮುಂದಿನ ಗಾಜುಗಳನ್ನು ಕಲ್ಲಿನಿಂದ ಹೊಡೆದು ಜಖಂಗೊಳಿಸಿ ಸಾರ್ವಜನಿಕ ಆಸ್ತಿಯನ್ನು ನಷ್ಟವನ್ನುಂಟುಮಾಡಿದ ನಂತರ ಈತ ಕೆಎಸ್‌‌ಆರ್‌ಟಿಸಿ ಬಸ್‌ಗೆ ತಾನೇ ತಲೆಯಿಂದ ಗುದ್ದಿಕೊಂಡು ಹಾಗೂ ಕಲ್ಲಿನಿಂದ ಆತನೇ ತಲೆಗೆ ಕುಟ್ಟಿಕೊಂಡು ಯಾರೋ ಬರ್ರೋ ನನ್ನನ್ನು ಹಿಡಿಯುವವರು ಎಂದು ಕೂಗಾಡುತ್ತಿದ್ದಾಗ ಸಾರ್ವಜನಿಕರು ಈತನ ಮೇಲೆ ಹಲ್ಲೆ ಮಾಡಲು ಪ್ರಯತ್ನಿಸಿದ್ದು, ಆಗ ನಾವು ಮತ್ತು ನಗರ ಠಾಣೆಯ ಸಿಬ್ಬಂದಿ ಸೇರಿ ಸಾರ್ವಜನಿಕರಿಂದ ಈತನನ್ನು ಬೇರ್ಪಡಿಸಿ ಹೆಸರು ವಿಳಾಸ ತಿಳಿಯಲಾಗಿ ಅಶೋಕ, ಟಿ.ಎಲ್‌ ಪಾಳ್ಯ, ಆಟೋಚಾಲಕ ಎಂದು ತಿಳಿಯಿತು ಈ ಬಗ್ಗೆ ಮೇಲಾಧಿಕಾರಿಗಳಿಗೆ ವಿಚಾರ ತಿಳಿಸಿ ತಿಪಟೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುತ್ತೇವೆ. ಆದ್ದರಿಂದ ಈತನ ಮೇಲೆ ಕಾನೂನು ಕ್ರಮ ಜರುಗಿಸಿ ಎಂದು ನೀಡಿರುವ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ವೈ ಎನ್  ಹೊಸಕೋಟೆ  ಪೊಲೀಸ್ ಠಾಣಾ ಮೊ. ನಂ-  61/2018, ಕಲಂ: 87 KP Act

ದಿನಾಂಕ:14/07/2018 ರಂದು ಸಾಯಂಕಾಲ 5:00 ಗಂಟೆ ಸಮಯದಲ್ಲಿ ನಾನು ವೈ ಎನ್ ಹೊಸಕೋಟೆ ಟೌನ್ ನಲ್ಲಿ ಸಂಜೆ ಗಸ್ತಿನಲ್ಲಿರುವಾಗ್ಗೆ  ವೈ ಎನ್ ಹೊಸಕೋಟೆ ಠಾಣಾ ಸರಹದ್ದು ವೈ ಎನ್ ಹೊಸಕೋಟೆ ಗ್ರಾಮದ ಹೊರವಲಯದಲ್ಲಿರುವ ದಳವಾಯಿಹಳ್ಳಿ ರಸ್ತೆ ಬಳಿ ಇರುವ ಸರ್ಕಾರಿ ಹಳ್ಳದಲ್ಲಿ  ಅಂದರ್ ಬಾಹರ್ ಇಸ್ಪೀಟ್ ಜೂಜಾಟ ನಡೆಯುತ್ತಿದೆ ಎಂತ ಬಂದ ಖಚಿತ ವರ್ತಮಾನದ ಮೇರೆಗೆ ಪಂಚಾಯ್ತದಾರರನ್ನು ಬರಮಾಡಿಕೊಂಡು ಸಿಬ್ಬಂದಿಯೊಂದಿಗೆ   ಮೇಲ್ಕಂಡ ಸ್ಥಳಕ್ಕೆ ಸರ್ಕಾರಿ ಜೀಪ್ ನಲ್ಲಿ ಹೋಗಿ ಸ್ವಲ್ಪ ದೂರದಲ್ಲಿ ಜೀಪ್ ನಿಲ್ಲಿಸಿ ಮರೆಯಲ್ಲಿ ನಿಂತು ನೋಡಲಾಗಿ ವೈ ಎನ್ ಹೊಸಕೋಟೆ  ಗ್ರಾಮದಿಂದ ದಳವಾಯಿಹಳ್ಳಿ ಕಡೆಗೆ ಹೋಗುವ ಸರ್ಕಾರಿ ಹಳ್ಳದಲ್ಲಿ ಸುಮಾರು 04-05 ಜನರು  ಗುಂಡಾಕಾರವಾಗಿ ಕುಳಿತು ಹಣವನ್ನು ಪಣಕ್ಕೆ ಕಟ್ಟಿಕೊಂಡು ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದ ಆಸಾಮಿಗಳ ಮೇಲೆ ದಾಳಿ ಮಾಡಿ ಸುತ್ತುವರೆದು ಹಿಡಿಯಲು ಹೋದಾಗ್ಗೆ ಜನರು ಓಡಿ ಹೋಗಿದ್ದು ಸ್ಥಳದಲ್ಲಿ 52 ಇಸ್ಪೀಟ್ ಎಲೆಗಳು ಪಣಕ್ಕೆ ಕಟ್ಟಿದ್ದ  4490=00 ರೂಪಾಯಿ ನಗದು ಹಣವಿದ್ದು ಸದರಿ ವಸ್ತುಗಳನ್ನು ಅಮಾನತ್ತು ಪಡಿಸಿಕೊಂಡು  ಇಸ್ಪೀಟ್ ಜೂಜಾಟ ಆಡುತ್ತಿದ್ದ 04 ಜನ ಆಸಾಮಿಗಳು ಓಡಿ ಹೋಗಿದ್ದು ಒಬ್ಬ  ಆಸಾಮಿಯು ಕೈಗೆ ಸಿಕ್ಕಿದ್ದು  ಆತನ  ಹೆಸರು ವಿಳಾಸ ಕೇಳಲಾಗಿ  1]ರಮೇಶ ಬಿನ್ ವೆಂಕಟೇಶಪ್ಪ, 35 ವರ್ಷ, ವೈಷ್ಯ ಜನಾಂಗ, ಎಸ್.ಕೆ.ಪಿ.ಟಿ ರಸ್ತೆ ವೈ ಎನ್ ಹೊಸಕೋಟೆ ಎಂತ ತಿಳಿಸಿದ್ದು ಸ್ಥಳದಿಂದ ಓಡಿ ಹೋದ ಆಸಾಮಿಗಳ ಹೆಸರು ವಿಳಾಸ ತಿಳಿಯಲಾಗಿ 2] ಮದಕರಿನಾಯಕ  ಬಿನ್ ತಿಮ್ಮಪ್ಪ, 28 ವರ್ಷ, ನಾಯಕ ಜನಾಂಗ, ದಳವಾಯಿಹಳ್ಳಿ, 3] ಮಾದವರಾಜು ಬಿನ್ ಮಾಟಯ್ಯ ,26 ವರ್ಷ, ನಾಯಕ ಜನಾಂಗ, ದಳವಾಯಿಹಳ್ಳಿ ,4] ಪಾಲಯ್ಯ @ ಗುಂಡಾಚಾರಿ ಬಿನ್ ಈರಣ್ಣ, 25 ವರ್ಷ, ನಾಯಕ ಜನಾಂಗ, ಕೂಲಿಕೆಲಸ ದಳ ವಾಯಿಹಳ್ಳಿ ಗ್ರಾಮ 5] ಮಂಜುನಾಥ ಬಿನ್ ಪಾಲಯ್ಯ, 30 ವರ್ಷ, ನಾಯಕ ಜನಾಂಗ, ದಳವಾಯಿಹಳ್ಳಿ ಗ್ರಾಮ ಎಂತ ತಿಳಿಸಿದ್ದು ಸ್ಥಳದಲ್ಲಿ ಇಸ್ಪೀಟ್ ಜೂಜಾಟಕ್ಕೆ ಪಣಕ್ಕೆ ಕಟ್ಟಿದ್ದ ಹಣವನ್ನು ಎಣಿಸಲಾಗಿ 4490 =00 ರೂ ಗಳಿದ್ದು ಪಂಚರ ಸಮಕ್ಷಮ ಸ್ಥಳದಲ್ಲಿ ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದ 52 ಇಸ್ಪೀಟ್ ಎಲೆಗಳು , ಒಂದು ಹಳೆಯ ಟವಲ್ ಅನ್ನು ವಶಕ್ಕೆ ತೆಗೆದುಕೊಂಡು ಆಸಾಮಿಗಳನ್ನು ಸ್ಥಳದಿಂದ ಕಳುಹಿಸಲಾಗಿರುತ್ತದೆ ಠಾಣೆಗೆ ಸಾಯಂಕಾಲ  6-30 ಗಂಟೆಗೆ  ಬಂದು ಅಸಾಮಿಗಳ ವಿರುದ್ದ  ಠಾಣಾ ಎನ್.ಸಿ.ಆರ್ : 73/2018  ರಲ್ಲಿ ನೊಂದಾಯಿಸಿ ಈ ಪ್ರಕರಣವು ಅಸಂಜ್ಞೇಯ ಅಪರಾಧವಾಗಿರುವುದರಿಂದ ಮುಂದಿನ ತನಿಖೆ ಕೈಗೊಳ್ಳಲು ಘನ ನ್ಯಾಯಾಲಯವು ಸಂಜ್ಞೇಯ ಅಪರಾಧವಾಗಿ ಪರಿಗಣಿಸಿ ಕಲಂ :87 ಕೆ.ಪಿ. ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲು ಅನುಮತಿ ನೀಡ ಬೇಕಾಗಿ ಘನ ನ್ಯಾಯಾಲಯದಲ್ಲಿ ಕೋರಿದ್ದು ದಿನಾಂಕ:16/07/2018  ರಂದು ನ್ಯಾಯಲಯವು ಅನುಮತಿ ಆದೇಶ ನೀಡಿದ್ದರಿಂದ ದಿನಾಂಕ:16/07/2018 ರಂದು ಬೆಳಿಗ್ಗೆ  11:30 ಗಂಟೆಗೆ ಆಸಾಮಿಗಳ ವಿರುದ್ದ ಠಾಣಾ ಮೊ.ನಂ:61/2018, ಕಲಂ:87 ಕೆ.ಪಿ.ಆಕ್ಟ್ ರೀತ್ಯಾ ಪ್ರಕರಣ  ದಾಖಲಿಸಿರುತ್ತದೆ,

ಮಿಡಿಗೇಶಿ  ಪೊಲೀಸ್ ಠಾಣಾ ಮೊ.ಸಂ.72/2018, ಕಲಂ: 279, 304(ಎ) ಐಪಿಸಿ.

ದಿನಾಂಕ:16/07/2018 ರಂದು ಬೆಳಿಗ್ಗೆ 10:30 ಗಂಟೆಗೆ ಪಿರ್ಯಾದಿ ನರಸಿಂಹರಾಜು ಬಿನ್ ಲೇ||ಕೆಂಪಣ್ಣ, 42 ವರ್ಷ, ವಕ್ಕಲಿಗರು, ಜಿರಾಯ್ತಿ, ಶಿವನಗೆರೆ ಗ್ರಾಮ, ದೊಡ್ಡೇರಿ ಹೋಬಳಿ, ಮಧುಗಿರಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರೇನೆಂದರೆ,  ನನ್ನ ತಮ್ಮ ಈರಣ್ಣ, 32 ವರ್ಷ ರವರು ಇದೇ ಮಧುಗಿರಿ ತಾಲ್ಲೂಕಿನ ಐ.ಡಿ.ಹಳ್ಳಿ ಹೋಬಳಿಗೆ ಸೇರಿದ ನಲ್ಲಹಳ್ಳಿ ಗ್ರಾಮದ ಹೆಂಜಾರಪ್ಪನ ಒಬ್ಬಳೇ ಮಗಳಾದ ಭಾಗ್ಯಮ್ಮ ರವರನ್ನು ಮಧುವೆಯಾಗಿದ್ದು, ಭಾಗ್ಯಮ್ಮನ ತಂದೆ-ತಾಯಿಗೆ ಗಂಡು ಮಕ್ಕಳಿಲ್ಲದ ಕಾರಣ ನನ್ನ ತಮ್ಮ ಈರಣ್ಣನು ಶಿವನಗೆರೆ ಮತ್ತು ನಲ್ಲಹಳ್ಳಿ ಎರಡು ಕಡೆ ಸಂಸಾರಗಳನ್ನು ನೋಡಿಕೊಂಡಿದ್ದರು. ಈ ದಿನ ಅಂದರೆ ದಿನಾಂಕ:16/07/2018 ರಂದು ಶಿವನಗೆರೆಗೆ ಬರಲು ಬೆಳಿಗ್ಗೆ ಸುಮಾರು 07:30 ಗಂಟೆಗೆ ಮನೆಯಿಂದ ಹೊರಟು ಐ.ಡಿ.ಹಳ್ಳಿ-ಹೊಸಕೆರೆ ರಸ್ತೆಯಲ್ಲಿ ಬಂಡೇನಹಳ್ಳಿ ಕ್ರಾಸ್ ಬಳಿ ನಿನ್ನ ತಮ್ಮ ಈರಣ್ಣ ಕೆಎ-64-ಹೆಚ್-4176 ನೇ ಹಿರೊ ಹೊಂಡಾ ದ್ವಿ ಚಕ್ರ ವಾಹನದಲ್ಲಿ ಬರುತ್ತಿರುವಾಗ್ಗೆ ಬೆಳಿಗ್ಗೆ ಸುಮಾರು 08:00 ಗಂಟೆಗೆ ಹೊಸಕೆರೆ ಕಡೆಯಿಂದ ಅದೇ ರಸ್ತೆಯಲ್ಲಿ ಬಂದ ಕೆಎ-51-4833 ನೇ ನಂಬರಿನ ಮಾರುತಿ ಕೃಪ ಬಸ್ಸಿನ ಚಾಲಕ ಬಸ್ಸನ್ನು ಅತಿವೇಗವಾಗಿ ಮತ್ತು ಅಡ್ಡದಿಡ್ಡಿಯಾಗಿ ಓಡಿಸಿಕೊಂಡು ಬಂದು ರಸ್ತೆಯ ಎಡ ಬದಿಯಲ್ಲಿ ಬರುತ್ತಿದ್ದ ನಿನ್ನ ತಮ್ಮ ಈರಣ್ಣನ ಬೈಕಿಗೆ ಡಿಕ್ಕಿ ಹೊಡೆಸಿದ್ದರಿಂದ ಬೈಕ್ ಜಖಂಗೊಂಡು ನಿನ್ನ ತಮ್ಮ ಈರಣ್ಣನಿಗೆ ಹಣೆಗೆ, ಬಲಗಣ್ಣಿನ ಹುಬ್ಬಿನ ಹತ್ತಿರ, ಬಲ ಮುಂಗೈಗೆ, ಬಲ ಮೊಣ ಕಾಲಿಗೆ ತೀರ್ವ ತರಹದ ಪೆಟ್ಟುಗಳು ಬಿದ್ದು ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆಂತ ನಲ್ಲಹಳ್ಳಿ ಗ್ರಾಮ ರವಿ ಬಿನ್ ನಾರಾಯಣಪ್ಪ ರವರು ದೂರವಾಣೆ ಮೂಲಕ ವಿಚಾರ ತಿಳಿಸಿದರು. ನಾನು ಕೂಡಲೇ ಅಪಘಾತವಾದ ಸ್ಥಳಕ್ಕೆ ಹೋಗಿ ನೋಡಲಾಗಿ ವಿಚಾರ ನಿಜವಾಗಿದ್ದು, ನನ್ನ ತಮ್ಮನ ಶವವನ್ನು ಮಧುಗಿರಿ ಸರ್ಕಾರಿ ಆಸ್ಪತ್ರೆಯಲ್ಲಿಟ್ಟು ನಂತರ ಠಾಣೆಗೆ ಬಂದು ಈ ಅಪಘಾತಕ್ಕೆ ಕಾರಣನಾದ ಕೆಎ-51-4833 ನೇ ಮಾರುತಿ ಕೃಪ ಬಸ್ಸಿನ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ಪಿರ್ಯಾದು ಅಂಶವಾಗಿರುತ್ತೆ

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ 148/2018 ಕಲಂ 353,504,506 ರೆ/ವಿ 34 ಐಪಿಸಿ

 

ದಿನಾಂಕ.16-07-2018 ರಂದು ಮುಂಜಾನೆ 5-00 ಗಂಟೆ ಸಮಯದಲ್ಲಿ ಹೆಬ್ಬೂರು ಪೊಲೀಸ್‌ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಪಿಸಿ-977 ದೇವರಾಜು ಕೆ.ಓ ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಅಂಶವೇನೆಂದರೆ, ನಾನು ಪೊಲೀಸ್‌ಇಲಾಖೆಯಲ್ಲಿ ಸುಮಾರು ಹತ್ತು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದು, ಈಗ್ಗೆ ಕಳೆದ 01 ವರ್ಷದಿಂದ ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುತ್ತೇನೆ. ನೆನ್ನೆಯ ದಿನ ಅಂದರೆ ದಿನಾಂಕ-15-07-2018 ರಂದು ಹೆಚ್‌ಸಿ-323 ಶ್ರೀ ಏಜಾಜ್‌ಹುಸೇನ್‌ರವರೊಂದಿಗೆ ಹೊನ್ನುಡಿಕೆ ಉಪಠಾಣೆಯಲ್ಲಿ ರಾತ್ರಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಅದರಂತೆ ನಾವುಗಳು ರಾತ್ರಿ 8-00 ಗಂಟೆ ಯಿಂದ ಹೊನ್ನುಡಿಕೆ ವ್ಯಾಪ್ತಿಯಲ್ಲಿ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದು, ರಾತ್ರಿ 11-30 ಗಂಟೆ ಸಮಯದಲ್ಲಿ ಹೊನ್ನುಡಿಕೆ ಗ್ರಾಮದ ಎಸ್‌.ಎಲ್‌.ಎನ್‌ಬಾರಿನ ಬಳಿಯಲ್ಲಿ ಕೆಲ ಯುವಕರು ಗುಂಪುಕಟ್ಟಿಕೊಂಡು ಪುಂಡಾಟಿಕೆಯನ್ನು ನಡೆಸುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ ಕೂಡಲೇ ನಾನು ಹೆಚ್‌ಸಿ-323 ರವರೊಂದಿಗೆ ಸದರಿ ಸ್ಥಳಕ್ಕೆ ತೆರಳಿ ನೋಡಲಾಗಿ ಅಲ್ಲಿ ಸುಮಾರು 6-8 ಜನ ಯುವಕರು ಗಲಾಟೆ ಮಾಡಿಕೊಳ್ಳುತ್ತಿದ್ದು ನಂತರ ನಾವು ಅವರನ್ನು ಲಾಠಿಯಿಂದ ಬೆದರಿಸಿ ಕಳುಹಿಸಿ ನಾವು ಗಸ್ತು ಕರ್ತವ್ಯ ಮುಂದುವರೆಸಿದೆವು. ನಂತರ ನಾವು ಹೊನ್ನುಡಿಕೆ ವ್ಯಾಪ್ತಿಯ ಸಾಸಲು ಕಡೆಯಿಂದ ಗಸ್ತುಮಾಡಿಕೊಂಡು ರಾತ್ರಿ ಸುಮಾರು 1-30 ಗಂಟೆ ಸಮಯದಲ್ಲಿ ಹೊನ್ನುಡಿಕೆ ಉಪ-ಠಾಣೆಗೆ ಬರುತ್ತಿದ್ದಂತೆ, ಇದೇ ಹೊನ್ನುಡಿಕೆ ಗ್ರಾಮವಾಸಿಗಳಾದ 1. ಹರ್ಷ ಬಿನ್‌ರೇಣುಕಾ ಪ್ರಸಾದ್‌. 2. ವಿನಯ್ ಬಿನ್‌ರೇಣುಕಾ ಪ್ರಸಾದ್‌, 3. ರಾಜಣ್ಣ @ ಟೈಲರ್‌ ರಾಜ ರವರುಗಳು ಠಾಣೆಯೊಳಗೆ ಏಕಾಏಕಿ ಬಂದು ನಮ್ಮನ್ನು ಕುರಿತು ‘ ಏ-ಯಾರೋ ನೀವು ನಮ್ಮನ್ನು ಓಡಿಸಲಿಕ್ಕೆ, ಏ-ಯಾರೋ ನೀನು ಹೊಸಬಾ, ಸೂಳೇ ಮಕ್ಕಳಾ, ಬೋಳಿ ಮಕ್ಕಳಾ, ಎಂತ ನನ್ನ ಮೇಲೆ ಬೆರಳನ್ನು ತೋರಿಸುತ್ತಾ ಠಾಣೆಯ ಒಳಗೆ ಬಂದು ಹರ್ಷ ಬಿನ್‌ರೇಣುಕಾ ಪ್ರಸಾದ್ ಎಂಬಾತನು, ಅವನ ಬಲಗೈ ಯಿಂದ ನನ್ನ ಎಡ ಕಪಾಳಕ್ಕೆ ಭಲವಾಗಿ  ಹೊಡೆದನು. ನಂತರ ನನ್ನನ್ನು ಕೆಳಕ್ಕೆ ಬೀಳಿಸಿ, ನಾನು ಏನು ಎಂತ ಕೇಳಲು ಆಸ್ಪದ ಕೊಡದೆ ನನ್ನ ಸಮವಸ್ತ್ರವನ್ನು ಇಡಿದು ಎಳೆದು, ಅರಿದು ನನ್ನನ್ನು ತುಳಿಯಲು ಪ್ರಯತ್ನಿಸಿದರು. ನಂತರ ಇವರನ್ನು ಹಿಡಿಯಲು ಬಂದ ಹೆಚ್‌ಸಿ-323 ಏಜಾಜ್‌ರವರನ್ನು ಕೆಳಕ್ಕೆ ಬೀಳಿಸಿದರು. ನನ್ನನ್ನು ಹಿಡಿದುಕೊಂಡಿದ್ದ ಹರ್ಷ ಎಂಬಾತನು ನನ್ನ ಎಡಗೈನ ಉಂಗುರ ಬೆರಳಿಗೆ ಕಚ್ಚಿ ನನ್ನಿಂದ ಬಿಡಿಸಿಕೊಂಡು, ಇದು ನನ್ನ ಏರಿಯಾ ಇಲ್ಲಿನ ಬಾರ್‌ಸಹ ನನ್ನದೇ, ಏರಿಯಾ ಸಹ ನನ್ನದೆಂದು ಕೂಗಾಡುತ್ತಾ ಪರಾರಿಯಾದರು. ಕೂಡಲೇ ನಾವು ಹೆಬ್ಬೂರು ಠಾಣೆಯ ಎನ್‌.ಆರ್‌.ಓ ರವರರಾದ ಎಎಸ್‌ಐ-ರಾಮಚಂದ್ರಯ್ಯ ರವರಿಗೆ ಸದರಿ ವಿಚಾರವನ್ನು ತಿಳಿದೆವು. ನಂತರ ಅವರು ಸ್ಥಳಕ್ಕೆ ಬಂದು ಸದರಿ ಆರೋಪಿಗಳನ್ನು ಹುಡುಕಾಡಲಾಗಿ ಎಲ್ಲಿಯೂ ಸಿಕ್ಕಿರುವುದಿಲ್ಲ. ನಂತರ ನಾನು ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು ಬಂದು ಸದರಿ ದೂರನ್ನು ನೀಡುತ್ತಿದ್ದು, ಕರ್ತವ್ಯದಲ್ಲಿದ್ದ ನನ್ನನ್ನು ಏಕಾಏಕಿ ಹಿಡಿದು ಒಡೆದು, ನನ್ನ ಸಮವಸ್ತ್ರ ಅರಿದು ನನ್ನ ಕರ್ತವ್ಯಕ್ಕೆ ಅಡ್ಡಿಪಡಿಸಿದ ಮೇಲ್ಕಂಡ ಆಸಾಮಿಗಳ ಮೇಲೆ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳುವಂತೆ ನೀಡಿದ ದೂರಿನ ಮೇರೆಗೆ ಠಾಣಾ ಮೊ ನಂ 148/2018 ಕಲಂ 353,504,506 ರೆ/ವಿ 34 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

 

ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆ.ಯು.ಡಿ.ಆರ್ ನಂ : 12/2018 ಕಲಂ 174 ಸಿಆರ್‌ಪಿಸಿ.

ದಿನಾಂಕ:15/16-07-2018 ರಂದು ರಾತ್ರಿ 1-15 ಗಂಟೆಗೆ ತುಮಕೂರು ತಾಲ್ಲೋಕ್ ಗೂಳೂರು ಹೋಬಳಿ ಹಾಲು ಹೊಸಳ್ಳಿ ಗ್ರಾಮದ ರಂಗಸ್ವಾಮಯ್ಯ ಬಿನ್ ಮರಿಗುಡ್ಡಯ್ಯ ರವರು ನೀಡಿದ ದೂರಿನ ಅಂಶವೇನೆಂದರೆ, ನನಗೆ ಒಬ್ಬಗಂಡು ಹಾಗೂ ಒಬ್ಬ ಹೆಣ್ಣು ಮಗಳು ಇದ್ದು ಮಗಳನ್ನು ಮದುವೆ ಮಾಡಿಕೊಟ್ಟಿರುತ್ತೇನೆ. ಗಂಡು ಮಗ ರವಿಕುಮಾರ ತನ್ನ ಇಬ್ಬರು ಗಂಡುಮಕ್ಕಳು ಹಾಗೂ ಹೆಂಡತಿಯೊಂದಿಗೆ ಪ್ರತ್ಯೇಕವಾಗಿ ವಾಸವಾಗಿದ್ದು, ಈ ದಿನ ದಿನಾಂಕ:15/07/2018 ರಂದು ರವಿಕುಮಾರನು ಸಂಜೆ 7-00 ಗಂಟೆ ಸಮಯದಲ್ಲಿ ನಮ್ಮ ಮನೆಗೆ ಬಂದು ರವಿಕುಮಾರ ನನ್ನ ಮನೆಗೆ ಹೋಗಿ ಬರುತ್ತೇನೆಂದು ಹೇಳಿಹೋಗಿದ್ದು ವಾಪಸ್ ಬರಲಿಲ್ಲ. ಆದ್ದರಿಂದ ನಾನು ರಾತ್ರಿ 9-30 ಗಂಟೆಗೆ ಅವನ ಮನೆಯ ಹತ್ತಿರ ಊಟಕ್ಕ ಕರೆಯಲು ಹೋಗಿ ಕೂಗಿದಾಗ ಆತ ಬರಲಿಲ್ಲ. ಮನೆ ಬಾಗಿಲು ತೆರೆದಿತ್ತು ನಾನು ಒಳಗೆ ಹೋಗಿ ನೋಡಲಾಗಿ ನನ್ನ ಮಗ ರವಿಕುಮಾರ ಮನೆಯಲ್ಲಿರುವ ಬೆಡ್ ಶೀಟ್‌ನಿಂದ ಮನೆಯ ತೊಲೆಗೆ ಗಂಟು ಹಾಕಿ ನೇಣು ಬಿಗಿದುಕೊಂಡು ನೇತಾಡುತ್ತಿದ್ದನು. ನನ್ನ ಮಗ ರವಿಕುಮಾರ ಕುಡಿತಕ್ಕೆ ಬಿದ್ದು ಯಾವುದೋ ಕಾರಣಕ್ಕೆ ಜೀವನದಲ್ಲಿ ಜಿಗುಪ್ಸೆಗೊಂಡು ತನ್ಮೂಲಕ ತಾನೇ ನೇಣು ಬೀಗಿದುಕೊಂಡು ಮೃತಪಟ್ಟಿರುತ್ತಾನೆ. ಇದರಲ್ಲಿ ಯಾವುದೇ ಅನುಮಾನವಿರುವುದಿಲ್ಲ. ಮುಂದಿನ ಕ್ರಮ ಕೈಗೊಳ್ಳಲು ನಿಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿದೆMonday, 16 July 2018

ಅಪರಾಧ ಘಟನೆಗಳು 16-07-18

ತುಮಕೂರು ಗ್ರಾ. ಪೋಲೀಸ್  ಠಾಣಾ ಯು.ಡಿ.ಆರ್ ನಂ : 12/2018 ಕಲಂ 174 ಸಿಆರ್‌ಪಿಸಿ.

ದಿನಾಂಕ:15/16-07-2018 ರಂದು ರಾತ್ರಿ 1-15 ಗಂಟೆಗೆ ತುಮಕೂರು ತಾಲ್ಲೋಕ್ ಗೂಳೂರು ಹೋಬಳಿ ಹಾಲು ಹೊಸಳ್ಳಿ ಗ್ರಾಮದ ರಂಗಸ್ವಾಮಯ್ಯ ಬಿನ್ ಮರಿಗುಡ್ಡಯ್ಯ ರವರು ನೀಡಿದ ದೂರಿನ ಅಂಶವೇನೆಂದರೆ, ನನಗೆ ಒಬ್ಬಗಂಡು ಹಾಗೂ ಒಬ್ಬ ಹೆಣ್ಣು ಮಗಳು ಇದ್ದು ಮಗಳನ್ನು ಮದುವೆ ಮಾಡಿಕೊಟ್ಟಿರುತ್ತೇನೆ. ಗಂಡು ಮಗ ರವಿಕುಮಾರ ತನ್ನ ಇಬ್ಬರು ಗಂಡುಮಕ್ಕಳು ಹಾಗೂ ಹೆಂಡತಿಯೊಂದಿಗೆ ಪ್ರತ್ಯೇಕವಾಗಿ ವಾಸವಾಗಿದ್ದು, ಈ ದಿನ ದಿನಾಂಕ:15/07/2018 ರಂದು ರವಿಕುಮಾರನು ಸಂಜೆ 7-00 ಗಂಟೆ ಸಮಯದಲ್ಲಿ ನಮ್ಮ ಮನೆಗೆ ಬಂದು ರವಿಕುಮಾರ ನನ್ನ ಮನೆಗೆ ಹೋಗಿ ಬರುತ್ತೇನೆಂದು ಹೇಳಿಹೋಗಿದ್ದು ವಾಪಸ್ ಬರಲಿಲ್ಲ. ಆದ್ದರಿಂದ ನಾನು ರಾತ್ರಿ 9-30 ಗಂಟೆಗೆ ಅವನ ಮನೆಯ ಹತ್ತಿರ ಊಟಕ್ಕ ಕರೆಯಲು ಹೋಗಿ ಕೂಗಿದಾಗ ಆತ ಬರಲಿಲ್ಲ. ಮನೆ ಬಾಗಿಲು ತೆರೆದಿತ್ತು ನಾನು ಒಳಗೆ ಹೋಗಿ ನೋಡಲಾಗಿ ನನ್ನ ಮಗ ರವಿಕುಮಾರ ಮನೆಯಲ್ಲಿರುವ ಬೆಡ್ ಶೀಟ್‌ನಿಂದ ಮನೆಯ ತೊಲೆಗೆ ಗಂಟು ಹಾಕಿ ನೇಣು ಬಿಗಿದುಕೊಂಡು ನೇತಾಡುತ್ತಿದ್ದನು. ನನ್ನ ಮಗ ರವಿಕುಮಾರ ಕುಡಿತಕ್ಕೆ ಬಿದ್ದು ಯಾವುದೋ ಕಾರಣಕ್ಕೆ ಜೀವನದಲ್ಲಿ ಜಿಗುಪ್ಸೆಗೊಂಡು ತನ್ಮೂಲಕ ತಾನೇ ನೇಣು ಬೀಗಿದುಕೊಂಡು ಮೃತಪಟ್ಟಿರುತ್ತಾನೆ. ಇದರಲ್ಲಿ ಯಾವುದೇ ಅನುಮಾನವಿರುವುದಿಲ್ಲ. ಮುಂದಿನ ಕ್ರಮ ಕೈಗೊಳ್ಳಲು ನಿಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿದೆ.

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣಾ ಯು.ಡಿ.ಆರ್ ನಂ 08/2018 ಕಲಂ 174 ಸಿ.ಆರ್.ಪಿ.ಸಿ.

ದಿನಾಂಕ 15-07-2018 ರಂದು ರಾತ್ರಿ 7-45 ಗಂಟೆಗೆ ನಿತೀಶ ಕೆ.ಕೆ ಬಿನ್ ಕುಮಾರಸ್ವಾಮಿ,19ವರ್ಷ,ಲಿಂಗಾಯ್ತರು ಜನಾಂಗ,ವಿದ್ಯಾರ್ಥಿ,ಕೆರೆಗೋಡಿ,ಕಸಬಾ ಹೋಬಳಿ,ತಿಪಟೂರು ತಾಲ್ಲುಕ್, ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ಪಿರ್ಯಾದು ಅಂಶವೇನೆಂದರೆ,ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ,ನಾವು ಕೆರೆಗೋಡಿ ಗ್ರಾಮದ ತೋಟದ ಮನೆಯಲ್ಲಿ ವಾಸವಾಗಿರುತ್ತೇನೆ,ಈ ದಿವಸ ದಿನಾಂಕ 15-07-2018 ರಂದು ನಮ್ಮ ತೋಟದಲ್ಲಿರುವ ಪಂಪ್ ಸೆಟ್ ಹತ್ತಿರ ಕೇಬಲ್ ರಿಪೇರಿಯನ್ನು ನಮ್ಮ ತಂದೆಯಾದ ಕುಮಾರ ಸ್ವಾಮಿ,ರಾಜಶೇಖರ, ಚಂದ್ರಯ್ಯ, ಸುರೇಶ ಬಾಬುರವರೊಂದಿಗೆ ಕೆಲಸ ಮಾಡುತ್ತಿರುವಾಗ ಸಂಜೆ ಸುಮಾರು 04-00 ಗಂಟೆ ಸಮಯದಲ್ಲಿ ಗಾಳಿ ಜೋರಾಗಿ ಬೀಸಿದಾಗ ನಮ್ಮ ತೋಟದ ಸುಮಾರು 60ಅಡಿ ಎತ್ತರದ ತೆಂಗಿನ ಮರ ನಮ್ಮ ತಂದೆ ಕುಮಾರಸ್ವಾಮಿ ರವರ ಮೇಲೆ ಬಿದ್ದಾಗ ತಲೆಗೆ ಮತ್ತು ದೇಹಕ್ಕೆ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ,ಇವರ ಸಾವಿಗೆ ಬೇರೆ ಯಾವುದೇ ಕಾರಣವಿರುವುದಿಲ್ಲ ಮುಂದಿನ ಕ್ರಮ ಜರುಗಿಸಬೇಕೆಂತ  ನೀಡಿದ ಪಿರ್ಯಾದು ಮೇರೆಗೆ ಕೇಸು ದಾಖಲಿಸಿರುತ್ತದೆ.

ಶಿರಾ ಪೊಲೀಸ್ ಠಾಣಾ ಮೊ ನಂ 280/2018 ಕಲಂ 279 IPC

ದಿನಾಂಕ-15/07/2018 ರಂದು ಬೆಳಗ್ಗೆ 11-00 ಗಂಟೆಗೆ ಪಿರ್ಯಾದಿ ಎ.ವಿ. ಶ್ರೀನಿವಾಸ್ ಬಿನ್ ವೆಂಕಟರಾಮಯ್ಯ. 60 ವರ್ಷ.ಅಡ್ವೋಕೇಟ್.ವಿಳಾಸ ನಂ 107. ಗಾಂಧಿಬಜಾರ್. ಬಸವನಗುಡಿ. ಬೆಂಗಳೂರು.ಆದ ನಾನು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಾನು ಈ ದಿನ ದಿನಾಂಕ-15/07/2018 ರಂದು ಬೆಳಗ್ಗೆ 10-00 ಗಂಟೆಯ ವೇಳೆಯಲ್ಲಿ ಶಿರಾ-ಟೌನ್ ನ ಬಳಿ ಇರುವ ಕೊಕ್ಕರೆ ಉದ್ಯಾನವನಕ್ಕಾಗಿ ನನ್ನ ಕಾರಿನ ನಂಬರ್ KA-41-Z-935 CHEVERLET-SAIL-SEDAN ಅನ್ನು ಚಾಲನೆ ಮಾಡಿಕೊಂಡು ಬೆಂಗಳೂರು-ಪೂನಾ ಹೆದ್ದಾರಿಯಲ್ಲಿ ರೆಸ್ಟ್ ಏರಿಯಾ ದಾಟಿ ಶಿರಾ ಟೌನ್ ಗೆ ವಾಹನವನ್ನು ನಿಧಾನವಾಗಿ ಬಲಗಡೆ ತಿರುಗುವ ಸೂಚನೆಯ ದೀಪವನ್ನು ಹಾಕಿ ಬಲಗಡೆ ತಿರುಗಿಸಿಕೊಳ್ಳುತ್ತಿದ್ದಾಗ,ತುಮಕೂರು ಕಡೆಯಿಂದ ಬರುತ್ತಿದ್ದ ಒಂದು ಬೆಳ್ಳಿ ಬಣ್ಣದ ಮಾರುತಿ ಆಲ್ಟೋ ಕಾರನ್ನು ಅದರ ಚಾಲಕನು  ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು,ನಮ್ಮ ಕಾರಿನ  ಚಾಲಕನ ಬಾಗಿಲಿಗೆ ಡಿಕ್ಕಿ ಹೊಡೆದು ಕಾರಿಗೆ ತೀವ್ರ ಸ್ವರೂಪದ ಜಖಂಗೊಂಡಿದ್ದು, ಅಪಘಾತವನ್ನು ಮಾಡಿದ ವಾಹನವನ್ನು ನೋಡಲಾಗಿ ಇದು  -KA06-M-3591 ನೇ ನಂಬರಿನ ಮಾರುತಿ ಆಲ್ಟೋ ಕಾರ್ ಆಗಿದ್ದು, ಈ ಅಪಘಾತದಲ್ಲಿ ಎರಡು ವಾಹನಗಳು ಸ್ಥಗಿತವಾದ ನಂತರ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಪೊಲೀಸ್ ಸಿಬ್ಬಂದಿ ಕೂಡಲೇ ನಮ್ಮ ಮನವಿಗೆ ಸ್ಪಂದಿಸಿ ಸ್ಥಳಕ್ಕೆ ಬಂದು ವಿವರಗಳನ್ನು ಸಂಗ್ರಹಿಸಿದರು, ಈ ಅಪಘಾತದಲ್ಲಿ ಯಾರಿಗೂ ದೈಹಿಕವಾಗಿ ಯಾವುದೇ ತೊಂದರೆಗಳು ಆಗಲಿಲ್ಲ ನಾನು ಚಾಲನೆ ಮಾಡುತ್ತಿದ್ದ ಕಾರಿನ ಬಲಭಾಗದಲ್ಲಿ ಸಂಪೂರ್ಣ ಜಖಂ ಆಗಿ ಚಾಲನೆ ಮಾಡಲು ಸಾಧ್ಯವಿಲ್ಲ. ಈ ಮೇಲ್ಕಂಡ ವಾಹನದ ಚಾಲಕನನ್ನು ಗುರ್ತಿಸಬಲ್ಲೆ ಆದ್ದರಿಂದ KA06-M-3591 ನೇ ನಂಬರಿನ ಮಾರುತಿ ಆಲ್ಟೋ ಕಾರ್ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

ಕಳ್ಳಂಬೆಳ್ಳ  ಪೊಲೀಸ್‌ ಠಾಣಾ ಮೊ.ನಂ: 163/2018 ಕಲಂ-279, 337, 304(ಎ) ಐಪಿಸಿ

ದಿನಾಂಕ: 15/07/2018 ರಂದು 2-30 ಎ.ಎಂ ಗಂಟೆಯಲ್ಲಿ ರಂಗರಾಜು ಹೆಚ್.ಸಿ.470, ಕಳ್ಳಂಬೆಳ್ಳ ಪೊಲೀಸ್ ಠಾಣೆ ರವರು ಸಿರಾ ಸರ್ಕಾರಿ ಆಸ್ಪತ್ರೆಯಲ್ಲಿ ಜೋಗಿಹಳ್ಳಿ ಹತ್ತಿರ ಅಪಘಾತವಾಗಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಪರಶುರಾಮ್ ರವರ ಹೇಳಿಕೆಯನ್ನು ಪಡೆದು ಠಾಣೆಗೆ ಬಂದು ಹಾಜರ್ಪಡಿಸಿದ್ದ ಗಾಯಾಳು ಹೇಳಿಕೆ ಅಂಶವೇನೆಂದರೆ, ನಾನು ನನ್ನ ತಮ್ಮನಾದ ಪ್ರಕಾಶನ ಬಾಬ್ತು KA-35-C-0518 ನೇ ಬೊಲೇರೋ ಪಿಕ್ ಅಪ್ ಗೂಡ್ಸ್ ವಾಹನದಲ್ಲಿ ಕ್ಲೀನರ್ ಆಗಿ ಕೆಲಸ ಮಾಡುತ್ತಿರುತ್ತೇನೆ. ದಿನಾಂಕ: 13/7/2018 ರಂದು ರಾತ್ರಿ ಸದರಿ ವಾಹನದಲ್ಲಿ ಹೊಸಪೇಟೆಯಲ್ಲಿ ಪಾಲಿಪ್ಯಾಕ್(ಪ್ಲಾಸ್ಟೀಕ್ ಚೀಲ)ಗಳನ್ನು ತುಂಬಿಕೊಂಡು ಬೆಂಗಳೂರಿನಲ್ಲಿರುವ ಆಡುಗೋಡಿ ಹತ್ತಿರ ಅನ್ ಲೋಡ್ ಮಾಡಲು ದಿನಾಂಕ: 13/7/2018 ರಂದು ರಾತ್ರಿ ನನ್ನ ತಮ್ಮ ಪ್ರಕಾಶ KA-35-C-0518 ನೇ ಬೊಲೇರೋ ಪಿಕ್ ಅಪ್ ಗೂಡ್ಸ್ ವಾಹನವನ್ನು ಚಾಲನೆಮಾಡಿಕೊಂಡು ದಿನಾಂಕ: 14/7/2018 ರಂದು ಬೆಳಿಗ್ಗೆ ಬೆಂಗಳೂರಿನಲ್ಲಿ ಅನ್ ಲೋಡ್ ಮಾಡಿ, ನಂತರ ಬೆಂಗಳೂರಿಂದ ಹೊಸಪೇಟೆಯಲ್ಲಿರುವ ಲಕ್ಷ್ಮೀಟ್ರಾನ್ಸ್ ಪೋರ್ಟ್ ಗೆ ನೀಡಲು ಮನೆ ಸಾಮಾನುಗಳನ್ನು ತುಂಬಿಕೊಂಡು ದಿನಾಂಕ: 14/7/2018 ರಂದು ಸಂಜೆ 5-00 ಗಂಟೆ ಸುಮಾರಿಗೆ ಬೆಂಗಳೂರನ್ನು ಬಿಟ್ಟು ಮದ್ಯದಲ್ಲಿ ನಾನು ನನ್ನ ತಮ್ಮ ಪ್ರಕಾಶ ಊಟಮಾಡಿಕೊಂಡು ನಂತರ ಹೊರಟು ಹೊಸಪೇಟೆಗೆ ಬರುತ್ತಿರುವಾಗ್ಗೆ, ನನ್ನ ತಮ್ಮ ಪ್ರಕಾಶ ತುಮಕೂರು ಬಿಟ್ಟು ಮುಂದೆ ತುಮಕೂರು-ಸಿರಾ ಎನ್.ಹೆಚ್.48 ರಸ್ತೆಯಲ್ಲಿ ಮೇಲ್ಕಂಡ ವಾಹನವನ್ನು ಚಾಲನೆಮಾಡಿಕೊಂಡು ಬರುತ್ತಿರುವಾಗ್ಗೆ ದಿನಾಂಕ: 14/7/2018 ರಂದು ರಾತ್ರಿ ಸುಮಾರು 11-10 ಗಂಟೆಯಲ್ಲಿ ಜೋಗಿಹಳ್ಳಿ ಹತ್ತಿರ ನನ್ನ ತಮ್ಮ ಪ್ರಕಾಶ KA-35-C-0518 ನೇ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆಯ (ಎನ್.ಹೆಚ್.48) ಎಡಪಕ್ಕದ ಸೇತುವೆ ಗೋಡೆಗೆ ತನ್ನ ವಾಹನವನ್ನು ಡಿಕ್ಕಿ ಹೊಡೆಸಿದ ಪರಿಣಾಮ KA-35-C-0518 ನೇ ವಾಹನಕ್ಕೆ ಅಪಘಾತವಾಗಿ ವಾಹನದ ಸ್ಟೇರಿಂಗ್ ನನ್ನ ತಮ್ಮನಿಗ  ತಗುಲಿ ಸದರಿ ವಾಹನವನ್ನು ಚಾಲನೆ ಮಾಡುತ್ತಿದ್ದ ನನ್ನ ತಮ್ಮ ಪ್ರಕಾಶ ಸ್ಥಳದಲ್ಲಿಯೇ  ಮೃತಪಟ್ಟನು.  ನನಗೆ ಎಡಕೆನ್ನೆಯ ಹತ್ತಿರ ರಕ್ತಗಾಯವಾಗಿ,  ಬಲಕಾಲು, ಸೊಂಟದ ಹತ್ತಿರ ಪೆಟ್ಟುಗಳಾದವು. ನಂತರ ಅಪಘಾತವನ್ನು ತಿಳಿದು ಬಂದ ಹೈವೆ ಆಂಬ್ಯುಲೆನ್ಸ್ ನವರು  ನನಗೆ ಉಪಚರಿಸಿ ಸಿರಾ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗೆ ಸೇರಿಸಿರುತ್ತಾರೆ. ನನ್ನ ತಮ್ಮನ ಶವವನ್ನು ಸಿರಾ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿರಿಸಿರುತ್ತಾರೆ.  ಈ ಅಪಘಾತಕ್ಕೆ ನನ್ನ ತಮ್ಮ ಪ್ರಕಾಶ KA-35-C-0518 ನೇ ಬೊಲೇರೋ ಪಿಕ್ ಅಪ್ ಗೂಡ್ಸ್ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆಮಾಡಿಕೊಂಡು ಬಂದು ರಸ್ತೆಯ ಎಡಭಾಗದ ಸೇತುವೆಯ ಗೋಡೆಗೆ ಡಿಕ್ಕಿ ಹೊಡೆಸಿದ್ದೆ ಕಾರಣವಾಗಿರುತ್ತೆ.  ಈ ಅಪಘಾತಕ್ಕೆ ಕಾರಣನಾದ ನನ್ನ ತಮ್ಮ ಪ್ರಕಾಶನ ಮೇಲೆ ಮುಂದಿನ ಕಾನೂನು ರೀತಿ ಕ್ರಮ ಜರುಗಿಸ ಬೇಕೆಂದು ನೀಡಿದ ಹೇಳಿಕೆಯನ್ನು ಪಡೆದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೆ.Sunday, 15 July 2018

ಅಪರಾಧ ಘಟನೆಗಳು 15-07-18

ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆ. 1) ಮೊ.ನಂ: 179/2018  ಕಲಂ 454,380 ಐಪಿಸಿ.

ದಿನಾಂಕ:14/07/2018 ರಂಧು ರಾತ್ರಿ 7-00 ಗಂಟೆಗೆ ತುಮಕೂರು ತಾಲ್ಲೋಕ್ ಗೂಳೂರು ಹೋಬಳಿ ಹೆತ್ತೇನಹಳ್ಳಿ ಗ್ರಾಮದ ನಾಗರತ್ನ.ಕೆ.ಎನ್ ಕೋಂ ಲೇಟ್ ಕೃಷ್ಣೋಜಿರಾವ್ ರವರು ನೀಡಿದ ದೂರಿನ ಅಂಶವೇನೆಂದರೆ, ನಾನು ನನ್ನ ಮೊಮ್ಮಗಳೊಂದಿಗೆ ವಾಸವಾಗಿದ್ದು ದೇವರ ಸೀರೆಗಳನ್ನು ಕೊಂಡು ಸಂತೆ ಹಾಗೂ ನಗರ ಪ್ರದೇಶಗಳಲ್ಲಿ ಮಾರಾಟ ಮಾಡಿಕೊಂಡಿರುತ್ತೇನೆ. ದಿನಾಂಕ:24/05/2018 ರಂದು ಸಂತೆಗೆ ಸೀರೆಗಳನ್ನು ಮಾರಾಟ ಮಾಡಲು ಸಿದ್ದಗೊಳ್ಳುವಾಗ ಮನೆಯ ಪಕ್ಕದ ಮನೆಯವರು ಬಂದು ಮಾತನಾಡಿಕೊಂಡು ಹೋದರು. ಮದ್ಯಾಹ್ನ ಸುಮಾರು 1-00 ಗಂಟೆಯ ಸಮಯದಲ್ಲಿ ಮನೆಯ ಹಿಂಭಾಗಿಲಿಗೆ ಚಿಲಕ ಹಾಕಿಕೊಂಡು ಮುಂದಿನ ಬಾಗಿಲಿಗೆ ಬೀಗ ಹಾಕಿಕೊಂಡು ವ್ಯಾಪಾರಕ್ಕೆ ಹೋಗಿ ಸಂಜೆ ಸುಮಾರು 5-00 ಗಂಟೆಯ ಸಮಯಕ್ಕೆ ಮನೆಯ ಬೀಗ ತೆಗೆದು ನೋಡಿದಾಗ ಮನೆಯಲ್ಲಿದ್ದ ಬೀರುವನ್ನು ಮೀಟಿ ತೆಗೆದು ಬೀರುವಿನಲ್ಲಿದ್ದ 1) ಚಿನ್ನದ ಸರ 18ಗ್ರಾಂ, 2) ಮುತ್ತಿನ ಸರ ಮದ್ಯದಲ್ಲಿ ಎರಡು ಗುಂಡು ಹಾಗೂ ಡಾಲರ್ 4ಗ್ರಾಂ, 3) ಕಲ್ಲಿನ ಓಲೆ 5ಗ್ರಾಂ, 4) ಕಲ್ಲಿನ ಓಲೆ 10ಗ್ರಾಂ, 5) ಚಿನ್ನದ ಓಲೆ & ಜುಮುಕಿ 6 ಗ್ರಾಂ, 6) ಒಂದು ಜೊತೆ ಹ್ಯಾಂಗಿಂಗ್ಸ್ 8 ಗ್ರಾಂ, 7) ಲೇಡಿಸ್ ಉಂಗುರ 3ಗ್ರಾಂ, 8) ಲೇಡಿಸ್ ಉಂಗುರ 3ಗ್ರಾಂ, 9) ಒಂದು ಜೊತೆ ಮಾಟಿ 5ಗ್ರಾಂ, ಹಾಗೂ 2-3 ಮೂಗಿನ ನತ್ತು ಹಾಗೂ ನಗದು ಹಣ 1,50,000/- ರೂ ಗಳು ಕಳ್ಳತನವಾಗಿರುತ್ತವೆ, ನನಗೆ ನಮ್ಮ ಮನೆಯ ಬಳಿ ಇರುವ ಮರಿಯಮ್ಮ ಹಾಗೂ ನಾಗರತ್ನ ಎಂಬುವವರ ಮೇಲೆ ಅನುಮಾನವಿರುತ್ತೆ. ಸದರಿಯವರನ್ನು ವಿಚಾರಣೆ ಮಾಡಿ ನಮ್ಮ ಮನೆಯಲ್ಲಿ ಕಳ್ಳತನವಾಗಿರುವ ಚಿನ್ನದ ವಡವೆ ಹಾಗೂ ನಗದು ಹಣವನ್ನು ಕೊಡಿಸಿ, ಕಳ್ಳತನ ಮಾಡಿದವರ ವಿರುದ್ದ ಕಾನೂನು ಕ್ರಮ ಜರುಗಿಸಲು, ಅಕ್ಕ-ಪಕ್ಕದವರಲ್ಲಿ ವಿಚಾರ ಮಾಡಿ ಈ ದಿನ ತಡವಾಗಿ ಬಂದು ನಿಡಿದ ದೂರನ್ನು ಪಡದು ಪ್ರಕರಣ ದಾಖಲಿಸಿದೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ ನ- ಯು ಡಿ ಆರ್ ನಂ-11/2018 ಕಲಂ 174 ಸಿಆರ್‌ಪಿಸಿ

ದಿನಾಂಕ-14/07/2018 ರಂದು ಬೆಳಿಗ್ಗೆ 8-45 ಗಂಟೆಗೆ ಪಿರ್ಯಾದಿಯಾದ ಸಿದ್ದೇಗೌಡ ಬಿನ್ ಗಂಗರಂಗಯ್ಯ, 40 ವರ್ಷ, ಒಕ್ಕಲಿಗರು, ಜಿರಾಯ್ತಿ, ಕಲ್ಲುಪಾಳ್ಯ, ಗುಳೂರು ಹೋಬಳಿ, ತುಮಕೂರು ತಾಲ್ಲೋಕು & ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂಧರೆ ದಿನಾಂಕ-14/07/18 ರಂದು ಬೆಳಿಗ್ಗೆ 8-00 ಸಮಯದಲ್ಲಿ ನಾನು ಕೋಡಿಪಾಳ್ಯದಲ್ಲಿರುವ ಅಡಿಕೆ ತೋಟಕ್ಕೆ ಹೋಗಿ ಬರಲು ನಾನು ನಮ್ಮ ಗ್ರಾಮದಿಂದ ಹೋಗುತ್ತಿರುವಾಗ್ಗೆ ಹೊನ್ನುಡಿಕೆ ಕೆರೆ ಏರಿ ಮೇಲೆ ಸುಮಾರು ಸಾರ್ವಜನಿಕರು ನಿಂತಿದ್ದು ನಾನು ಹತ್ತಿರ ಹೋಗಿ ನೋಡಲಾಗಿ ಹೊನ್ನುಡಿಕೆ ಕೆರೆಯಲ್ಲಿ ಸುಮಾರು 60-65 ವರ್ಷ ಗಂಡಸಿನ ಶವ ಇದ್ದು, ನಂತರ ಶವದ ಹತ್ತಿರ ಹೋಗಿ ನೋಡಲಾಗಿ ಸುಮಾರು 3-4 ದಿವಸದ ಹಿಂದೆ ಕೆರೆ ನೀರಿಗೆ ಬಿದ್ದು ಮೃತಪಟ್ಟಿರುವಂತೆ ಕಂಡು ಬಂದಿರುತ್ತೆ, ಸುಮಾರು 5 ಅಡಿ ಎತ್ತರ, ತುಂಬು ತೋಳಿನ ಬಿಳಿ ಮತ್ತು ತಿಳಿನೀಲಿ ಗೀರುವುಳ್ಳ ಶರ್ಟ್ ಧರಿಸಿದ್ದು, ಲಾಡಿ ನಿಕ್ಕರ್ ಹಾಕಿರುತ್ತಾನೆ, ಮೃತ ದೇಹದ ಮೇಲೆ ಜಲ ಪ್ರಾಣಿಗಳು ಕಿತ್ತು ತಿಂದಿರುವಂತೆ ಕಂಡು ಬಂದಿರುತ್ತೆ. ಆದ್ದರಿಂದ ಸುಮಾರು 60-65 ವರ್ಷದ ಅಪರಿಚಿತ ಗಂಡಸಿನ ಶವದ ಹೆಸರು ಮತ್ತು ವಿಳಾಸ ತಿಳಿದು ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿದೆ ಎಂದು ನೀಡಿದ ದೂರನ್ನು ಪಡೆದು ಠಾಣಾ ಯು ಡಿ ಆರ್ ನಂ-11/2018 ಕಲಂ 174 ಸಿಆರ್‌ಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

 Saturday, 14 July 2018

ಅಪರಾಧ ಘಟನೆಗಳು 14-07-18

ಕಳ್ಳಂಬೆಳ್ಳ  ಪೊಲೀಸ್‌ ಠಾಣಾ ಮೊ.ನಂ: 162/2018 ಕಲಂ-279, 337, 304(ಎ) ಐಪಿಸಿ

ದಿನಾಂಕ: 14/07/2018 ರಂದು ಬೆಳಗಿನ ಜಾವ 3.05 ಗಂಟೆಯಲ್ಲಿ ಪಿರ್ಯಾದಿ ಪಂಕಜ್ ರಸ್ಕರ ಬಿನ್ ಜ್ಙಾನೇಶ್ವರ್,43 ವರ್ಷ, ನಂ;ಎ/4, ಪುಷ್ಪಹಾಸ್, ಪುಣೆ - ಸತಾರ ರೋಡ್, ಪುಣೆ ನಗರ ,ಮಹಾರಾಷ್ಟ್ರ ರಾಜ್ಯ. ರವರು ಠಾಣೆಗೆ ಹಾಜರಾಗಿ ಇಂಗ್ಲೀಷ್ ನಲ್ಲಿ ನೀಡಿದ ಪಿರ್ಯಾದು ಅಂಶವೇನೆಂದರೆ, ನಾನು ಮತ್ತು ನನ್ನ ಸ್ನೇಹಿತರಾದ 1]ಭರತ್  ಮೆರೂರ್ಕರ್ 2] ಶಿವಾಜಿ ಶೇಟೆ 3] ಖಂಡು ಪವಾರ್ 4] ನಿತೀನ್ ಗೋರುಲೆ 5]ಗಣೇಶ ಜೇದೆ ರವರು ದಿನಾಂಕ 11/07/2018 ರಂದು ಪುಣೆಯಿಂದ  ಆಂದ್ರಪ್ರಧೇಶ ದಲ್ಲಿರುವ ತಿರುಪತಿಯ ದೇವಸ್ಥಾನಕ್ಕೆ ಹೋಗಲು MH-12 KY-6763 ನೇ ಟೋಯೊಟಾ ಇನ್ನೋವ ಕಾರನ್ನು ತೆಗೆದುಕೊಂಡು ತಿರುಪತಿಯ ದರ್ಶನಕ್ಕೆ ಹೋಗಿದ್ದು ದಿನಾಂಕ 13/07/2018 ರಂದು ಸಂಜೆ 4-00ಗಂಟೆ ಸಮಯದಲ್ಲಿ ತಿರುಪತಿಯಿಂದ ವಾಪಸ್ಸು ಪುಣೆಗೆ ಹೋಗಲು ನಾನು ಮತ್ತು ನನ್ನ ಸ್ನೇಹಿತರು MH-12 KY-6763 ನೇ ಟೋಯೊಟಾ ಇನ್ನೋವ ಕಾರಿನಲ್ಲಿ ಬರುತ್ತಿರುವಾಗ ಕಾರನ್ನು ಗಣೇಶ ಜೇದೆ ರವರು ಚಾಲನೆ ಮಾಡುತ್ತಿದ್ದು ದಿನಾಂಕ: 13-14/07/2018 ರಂದು ರಾತ್ರಿ ಸುಮಾರು 1.00 ಗಂಟೆ ಸಮಯದಲ್ಲಿ ತುಮಕೂರು – ಸಿರಾ ಎನ್ .ಹೆಚ್ 48 ರಸ್ತೆ ಮಾರ್ಗವಾಗಿ ಸೀಬಿ ಪಾರೆಸ್ಟ್ ಬಳಿ ಜೋಗಿಹಳ್ಳಿ ಹತ್ತಿರ ಕಾರಿನಲ್ಲಿ ಬರುತ್ತಿರುವಾಗ ಕಾರಿನ ಚಾಲಕ ಗಣೇಶ ಜೇದೆ ಕಾರನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಹೋಗುತ್ತಿರುವಾಗ ಇದ್ದಕ್ಕಿದ್ದಂತೆ ಸಡನ್ನಾಗಿ ಕಾರಿಗೆ ಬ್ರೇಕ್ ಹಾಕಿದ್ದರಿಂದ ಕಾರು ಪಲ್ಟಿಯಾಗಿ ಬಿದ್ದು ಮೇಲಕ್ಕೆದ್ದಿತ್ತು ಪರಿಣಾಮವಾಗಿ ಕಾರಿನ ಚಾಲಕ ಗಣೇಶ ಜೇದೆ ಗೆ ಅಪಘಾತದಲ್ಲಿ ತಲೆಗೆ ಮತ್ತು ಇತರೆ ಕಡೆ ಪೆಟ್ಟುಬಿದ್ದು  ಸ್ಥಳದಲ್ಲಿಯೇ ಮೃತಪಟ್ಟು, ಕಾರಿನಲ್ಲಿದ್ದ  1]ಭರತ್  ಮೆರೂರ್ಕರ್ 2] ಶಿವಾಜಿಶೇಟೆ 3] ಖಂಡು ಪವಾರ್ ರವರಿಗೆ ಸಹ ಪೆಟ್ಟು ಬಿದ್ದು ರಕ್ತ ಗಾಯಗಳಾದವು,  ನನಗೆ ಮತ್ತು  ನಿತೀನ್ ಗೋರುಲೆ ರವರಿಗೆ ಯಾವದೇ ತೊಂದರೆಗಳಾಗಿರುವುದಿಲ್ಲ .ಗಾಯಗೊಂಡ 1]ಭರತ್  ಮೆರೂರ್ಕರ್  2] ಶಿವಾಜಿ ಶೇಟೆ 3] ಖಂಡು ಪವಾರ್ ರವರನ್ನು NHAI ಆಂಬ್ಯುಲೆನ್ಸ್ ನವರು ಸಿರಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಹಾಗೇ ಮೃತ ಕಾರಿನ ಚಾಲಕ ಗಣೇಶ ಜೇದೆ ಶವವನ್ನು  ಸಿರಾ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಿರುತ್ತಾರೆ. ಈ ಅಪಘಾತಕ್ಕೆ ಕಾರಣರಾದ MH-12 KY-6763 ನೇ ಟೋಯೊಟಾ ಇನ್ನೋವ ಕಾರಿನ ಚಾಲಕ ಗಣೇಶ ಜೇದೆ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂತ  ಕೋರಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿಕೊಂಡು ಪ್ರಕರಣ ದಾಖಲಿಸಿರುತ್ತೆ.

ತಿಪಟೂರು ನಗರ ಪೊಲೀಸ್ ಠಾಣಾ ಮೊ.ನಂ - 107/2018 ಕಲಂ:  279,337 IPC & 134(ಎ) & (ಬಿ) 187 ಐ.ಎಂ.ವಿ ಆಕ್ಟ್

ದಿನಾಂಕ: 13/07/2018 ರಂದು ರಾತ್ರಿ 8-30 ಗಂಟೆಗೆ ಪಿರ್ಯಾದುದಾರರಾದ ಮೋಹನ್‌ಕುಮಾರ್‌ ಬಿನ್‌ ನಾರಾಯಣಪ್ಪ, 29 ವರ್ಷ, ಹಳೇಪಾಳ್ಯ, ತಿಪಟೂರು ಟೌನ್‌ ರವರು ಠಾಣೆಗೆ ಹಾಜರಾಗಿ ನೀಡಿರುವ ದೂರಿನ ಅಂಶವೇನೆಂದರೆ, ದಿನಾಂಕ:11/07/2018 ರಂದು ರಾತ್ರಿ 08-30 ಗಂಟೆ ಸಮಯದಲ್ಲಿ ನಮ್ಮ ಅಕ್ಕನಾದ ಪ್ರಮೀಳ ರವರು ಪೋನ್‌ ಮಾಡಿ ಈ ದಿನ ಸಂಜೆ 07-30 ಗಂಟೆ ಸಮಯದಲ್ಲಿ ಅಮ್ಮ(ಪದ್ಮಾವತಿ) ರವರು ಅಂಗಡಿಗೆ ಹೋಗಿ ಮನೆಗೆ ವಾಪಸ್‌ ಬರಲು ಹಳೇಪಾಳ್ಯ ಸರ್ಕಾರಿ ಪ್ರೌಢಶಾಲೆ ಬಳಿ ರಸ್ತೆಯ ಎಡ ಪಕ್ಕದಲ್ಲಿ ನಡೆದುಕೊಂಡು ಬರುತ್ತಿದ್ದಾಗ ಇದೇ ಸಮಯಕ್ಕೆ ತಿಪಟೂರು ಟೌನ್‌ ಕಡೆಯಿಂದ ಬಂದ ಒಂದು ಹೊಂಡಾ ಶೈನ್‌ ದ್ವಿಚಕ್ರ ವಾಹನ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಅಮ್ಮನಿಗೆ ಹಿಂಬದಿಯಿಂದ ಅಪಘಾತವನ್ನುಂಟುಮಾಡಿದ ಕಾರಣ ಅಮ್ಮನಿಗೆ ತಲೆಗೆ, ಬೆನ್ನಿಗೆ, ಬಾಯಿಗೆ ಮತ್ತು ಕಾಲಿಗೆ ಪೆಟ್ಟಾಗಿದ್ದು, ಆಗ ಅಲ್ಲೆ ಇದ್ದ ಪ್ರಕಾಶ್‌ ಮತ್ತು ದಯಾನಂದ ಎಂಬುವರು ನನಗೆ ವಿಚಾರ ತಿಳಿಸಿದರು, ಆಗ ನಾನು ಸ್ದಳಕ್ಕೆ ಹೋಗಿ ನೋಡಿದೆ. ಅಮ್ಮನಿಗೆ ಅಪಘಾತವಾಗಿ ಪೆಟ್ಟಾಗಿತ್ತು. ಅಪಘಾತವನ್ನುಂಟುಮಾಡಿದ ಬೈಕ್‌ ನೋಡಲಾಗಿ ನಂಬರ್‌ ಇಲ್ಲದ ಹೊಸ ಹೊಂಡಾಶೈನ್‌ ಅಗಿದ್ದು, ಇದು ಕಪ್ಪು ಬಣ್ಣದಾಗಿರುತ್ತದೆ. ಅಪಘಾತಪಡಿಸಿ ಬೈಕಿನ ಚಾಲಕ ಬೈಕನ್ನು ಅಲ್ಲಿಯೇ ಬಿಟ್ಟು ಯಾರಿಗೂ ತಿಳಿಸಿದೆ ಹೊರಟು ಹೋಗಿದ್ದ, ನಂತರ ನಾನು, ಪ್ರಕಾಶ, ದಯಾನಂದ ಸೇರಿಕೊಂಡು ಚಿಕಿತ್ಸೆಗಾಗಿ ಅಮ್ಮನನ್ನು ತಿಪಟೂರು ಸರ್ಕಾರಿ ಆಸ್ಪತ್ರೆಗೆ ಸೇರಿಸಿದೆವು, ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಅಮ್ಮನನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಲು ತಿಳಿಸಿರುತ್ತಾರೆ. ನೀನು ಅಲ್ಲೇ ಇರು ಅಂತ ಪೋನ್‌ ಮೂಲಕ ಮೇಲ್ಕಂಡ ವಿಚಾರ ತಿಳಿಸಿ ನಂತರ ನಮ್ಮ ತಾಯಿಯನ್ನು ಬೆಂಗಳೂರಿಗೆ ಕರೆದುಕೊಂಡು ಬಂದರು. ನಾನು ಅಲ್ಲೇ ಇದ್ದು ನಮ್ಮ ತಾಯಿಯನ್ನು ಬೆಂಗಳೂರು ಹೆಸರುಘಟ್ಟ ರಸ್ತೆಯಲ್ಲಿರುವ ಸಪ್ತಗಿರಿ ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಿ ಈ ದಿನ ತಡವಾಗಿ ಬಂದು ಮೇಲ್ಕಂಡ ಬೈಕ್‌ನ ಚಾಲಕನ ಹೆಸರು ವಿಳಾಸ ಪತ್ತೆ ಮಾಡಿ ಕಾನೂನುಕ್ರಮ ಜರುಗಿಸಬೇಕಂತ ನೀಡಿರುವ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

 

ಜಯನಗರ ಪೊಲೀಸ್ ಠಾಣಾ ಯುಡಿಆರ್ ನಂ. 11/2018 ಕಲಂ 174 ಸಿ.ಆರ್‌.ಪಿ.ಸಿ

ದಿನಾಂಕ: 13-07-2018 ರಂದು ಸಾಯಂಕಾಲ 4-30 ಗಂಟೆ ಸಮಯದಲ್ಲಿ ತುಮಕೂರು ಟೌನ್ ಗೆದ್ದಲಹಳ್ಳಿ ವಾಸಿ ಶಿವಣ್ಣ ಬಿನ್. ಲೇ|| ಗಂಗಣ್ಣ ರವರು ಪೊಲೀಸ್ ಠಾಣೆಗೆ ಹಾಜರಾಗಿ ಕೊಟ್ಟ ಲಿಖಿತ ದೂರಿನ ಅಂಶವೇನೆಂದರೆ, ನನಗೆ ಮೂರು ಜನ ಗಂಡು ಮಕ್ಕಳಿದ್ದು, ನನ್ನ 2 ನೇ ಮಗ ಭಾಸ್ಕರ ಈಗ್ಗೆ ಸುಮಾರು 10 ವರ್ಷಗಳ ಹಿಂದೆ ಶೋಭ ಎಂಬುವರನ್ನು ಮದುವೆಯಾಗಿದ್ದು, ಇವರಿಗೆ ಇಬ್ಬರು ಹೆಣ್ಣು ಮಕ್ಕಳಿಗುರತ್ತಾರೆ.   ಗಂಡ-ಹೆಂಡತಿ ಹೊಂದಾಣಿಕೆ ಇಲ್ಲದೆ ಈಗ್ಗೆ ಒಂದು ವರ್ಷದಿಂದ ಬೇರೆ ಬೇರೆಯಾಗಿ ಇದ್ದರು.  ನನ್ನ ಮಗ ಭಾಸ್ಕರ ನಮ್ಮ ಮನೆಯಲ್ಲಿ ಒಂದು ಕಡೆ ಪ್ರತ್ಯೇಕವಾಗಿ ವಾಸವಾಗಿದ್ದು, ಗಾರೆ ಕೆಲಸ ಮಾಡಿಕೊಂಡಿದ್ದು, ದಿನಾಂಕ: 12-07-2018 ರಂದು ನನ್ನ ಮಗ ಭಾಸ್ಕರ ಮಾಮೂಲಿನಂತೆ ಊಟ ಮಾಡಿಕೊಂಡು ಮನೆಯಲ್ಲಿ ಮಲಗಿದ್ದನು.  ದಿನಾಂಕ: 13-07-2018 ರಂದು ಬೆಳಿಗ್ಗೆ ಎಷ್ಟು ಹೊತ್ತಾದರೂ ಮನೆಯ ಬಾಗಿಲನ್ನು ತೆಗೆಯಲಿಲ್ಲ.  ನಂತರ ನನ್ನ ಕೊನೆಯ ಮಗ ಲೋಹಿತ್‌‌ ಮದ್ಯಾಹ್ನ 1-30 ಗಂಟೆ ಸಮಯದಲ್ಲಿ ಮನೆಗೆ ಬಂದಾಗ ನನ್ನ ಹೆಂಡತಿ ಕೆಂಪಮ್ಮ ನನ್ನ ಮಗ ಲೋಹಿತನಿಗೆ ಭಾಸ್ಕರ ಮನೆಯ ಬಾಗಿಲು ತೆಗೆದಿಲ್ಲ, ಸ್ವಲ್ಪ ನೋಡು ಎಂತಾ ಹೇಳಿದರು.  ಆಗ ನಮ್ಮ ಮಗ ಲೋಹಿತ ಮನೆಯ ಮೇಲಕ್ಕೆ ಹತ್ತಿ ಹೆಂಚನ್ನು ತೆಗೆದು ನೋಡಲಾಗಿ ನನ್ನ ಮಗ ಭಾಸ್ಕರ ಮನೆಯ ಒಳಗೆ ಪ್ಯಾನಿಗೆ ನೇಣು ಹಾಕಿಕೊಂಡು ಸತ್ತು ಹೋಗಿರುತ್ತಾನೆ.  ಈಗನ ಹೆಂಡತಿಗೂ ಸಹಾ ಪೋನ್ ಮುಖಾಂತರ ವಿಷಯ ತಿಳಿಸಿರುತ್ತೇವೆ.  ನನ್ನ ಮಗ ಸಂಸಾರದ ವಿಚಾರದಲ್ಲಿ ಜಿಗುಪ್ಸೆಗೊಂಡು ತನ್ಮೂಲಕ ತಾನೇ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ.  ಈತನ ಮರಣ ಕಾರಣದಲ್ಲಿ ನಮಗೆ ಯಾವುದೇ ಅನುಮಾನವಿರುವುದಿಲ್ಲ.  ತಾವು ಸ್ಥಳಕ್ಕೆ ಬಂದು ಮುಂದಿನ ಕ್ರಮ ಕೈಗೊಳ್ಳಬೇಕೆಂದು ಇತ್ಯಾದಿ ಪಿರ್ಯಾದು ಅಂಶವಾಗಿರುತ್ತೆ.

ಕುಣಿಗಲ್ ಪೊಲೀಸ್ ಠಾಣಾ ಮೊ.ನಂ: 294//2018 ಕಲಂ; 279. 337, 304 (ಎ) ಐ ಐ.ಪಿ.ಸಿ 134 (ಎ) &(ಬಿ) 187 ಐ ಎಂ ವಿ ಆಕ್ಟ್

ದಿನಾಂಕ 13/06/2018 ರಂದು ರಾತ್ರಿ  07-15 ಗಂಟೆಗೆ ಪಿರ್ಯಾದಿ ಕೃಷ್ಣಪ್ಪ ಬಿನ್ ಲೇಟ್ ಪುಟ್ಟಸ್ವಾಮಿ 40 ವರ್ಷ ಬಲಜಿಗರು ಹೂವಿನ ವ್ಯಾಪಾರ ಹಗಲಕೋಟೆ ಕಸಬಾ ಹೋಬಳಿ ಕುಣಿಗಲ್ ತಾಲ್ಲೋಕ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ದಿನಾಂಕ 13/07/2018 ರಂದು ನಾನು ಸ್ವಂತ ಕೆಲಸದ ನಿಮಿತ್ತ ಕುಣಿಗಲ್ – ತುಮಕೂರು ರಸ್ತೆಯ ಕೊತ್ತಗೆರೆ ಕೆರೆ ಪಕ್ಕದಲ್ಲಿರುವ ವಿಜಯಲಕ್ಷ್ಮೀ ಡಾಬಾದ ಹತ್ತಿರ ಮದ್ಯಾಹ್ನ ಸುಮಾರು 1 ಗಂಟೆ ಸಮಯದಲ್ಲಿ ನಿಂತಿದ್ದೇನು , ಅದೇ ಸಮಯಕ್ಕೆ ಕುಣಿಗಲ್ ಕಡೆಯಿಂದ ತುಮಕೂರು ಕಡೆಗೆ ಹೋಗಲು ಬಂದಂಹ ಬಂದು ಗೂಡ್ಸ್ ವಾಹನದ ಚಾಲಕ ತನ್ನ ವಾಹನವನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ವೇಗ ನಿಯಂತ್ರಣ ತಪ್ಪಿ ತನ್ನ ವಾಹನವನ್ನು ಪಲ್ಟಿ ಹೊಡೆಸಿ ಕೆಳಗೆ ಬಿಳಿಸಿ ಅಪಘಾತವುಂಟು ಮಾಡಿದನು ತಕ್ಷಣ ನಾನು ಅಪಘಾತವನ್ನು ನೋಡಿ ಹತ್ತಿರ ಹೋಗಿ ನೋಡಲಾಗಿ ಕ್ಯಾಬೀನ್ ನಲ್ಲಿ ಕುಳಿತಿದ್ದ ಕ್ಲೀನರ್ / ಕೂಲಿ ಆಗಿದ್ದ ನಾಗನಹಳ್ಳಿ ಗ್ರಾಮದ ದೊಡ್ಡಯ್ಯನ ಮಗ ಶಿವಸ್ವಾಮಿ ಆಗಿದ್ದು, ಈತನಿಗೆ ತಲೆಗೆ ತೀವ್ರಸ್ವರೂಪದ ಗಾಯವಾಗಿದ್ದು ರಕ್ತಸ್ರಾವವಾಗುತ್ತಿತ್ತು. ಇನ್ನೋಬ್ಬ ಸದರಿ ವಾಹನದಲ್ಲಿ ಕೂಲಿ ಆಳಾಗಿದ್ದ ಅದೇ ಗ್ರಾಮದ ಸಾವಂದಯ್ಯನ ಮಗ ನಾಗೇಶ್ ಆಗಿದ್ದುಈತನಿಗೆ ಕೈಗೆ ಏಟಾಗಿತ್ತು, ಅಪಘಾತ ಮಾಡಿದ ವಾಹನ ನೋಡಲಾಗಿ ಬೆಲೆರೋ ಗೂಡ್ಸ್ ವಾಹನ ಸಂಖ್ಯೆ ಕೆ.ಎ-06 ಡಿ-0678 ಆಗಿತ್ತು, ತಕ್ಷಣ ನಾನು ಮತ್ತು ಅಲ್ಲಿದ್ದ ಸಾರ್ವಜನಿಕರು ಇಬ್ಬರೂ ಗಾಯಾಳುಗಳನ್ನು ತುರ್ತವಾಹನದಲ್ಲಿ ಹಾಕಿಕೊಂಡು ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ತಂದು ಪ್ರಥಮ ಚಿಕಿತ್ಸೆ ಕೊಡಿಸಿ ಶಿವಸ್ವಾಮಿಗೆ ತಲೆಗೆ ಹೆಚ್ಚಿನ ಏಟಾದ ಕಾರಣ ವೈದ್ಯರ ಸಲಹೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಕಳುಹಿಸಿ ಕೊಟ್ಟಿದ್ದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ.  ಇನ್ನೋಬ್ಬ ಗಾಯಾಳು ನಾಗೇಶನನ್ನು ಬೆಳ್ಳೂರು ಕ್ರಾಸಿಗೆ ಎ.ಸಿ ಗಿರಿ  ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಿಕೊಟ್ಟಿರುತ್ತೇನೆ.  ಗಾಯಾಳು ಶಿವಸ್ವಾಮಿಯನ್ನು ಆತನ ಅಣ್ಣ ಮಹೇಶ ಜೊತೆಯಲ್ಲಿ ನಿಮಾನ್ಸ್ ಆಸ್ಪತ್ರೆಗೆ ಕಳುಹಿಸಿ ಕೊಟ್ಟಿದ್ದು ಚಿಕಿತ್ಸೆ ಫಲಕಾರಿಯಾಗದೇ ಸಂಜೆ 06-50 ಗಂಟೆ ಸಮಯದಲ್ಲಿ ಮೃತಪಟ್ಟಿರುತ್ತಾರೆ ..ಅಪಘಾತ ಮಾಡಿದ ಚಾಲಕನು ಅಲ್ಲಿಂದ ಪರಾರಿಯಾಗಿರುತ್ತಾನೆ.

ಆದ್ದರಿಂದ ತಾವುಗಳು ಅಪಘಾತ ಪಡಿಸಿದ ಮೇಲ್ಕಂಡ ಬೆಲೆರೋ ಗೂಡ್ಸ್ ವಾಹನದ ಸಂಖ್ಯೆ ಕೆ.ಎ-06 ಡಿ-0678 ರ ಚಾಲಕನ ವಿರುದ್ದು ಕಾನೂನು ಕ್ರಮ ಜರುಗಿಸಬೇಕಾಗಿ ನೀಡಿದ ದೂರನ್ನುಪಡೆದು ಠಾಣಾ ಮೊನಂ 294/2018 ಕಲಂ 279, 337, 304 (ಎ) ಐ.ಪಿ.ಸಿ 134 (ಎ) &(ಬಿ) 187 ಐ ಎಂ ವಿ ಆಕ್ಟ್ ರೀತ್ಯ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ. ಆದ್ದರಿಂದ ಈ ತುರ್ತು ವರದಿ ನಿವೇದಿಸಿಕೊಂಡಿರುತ್ತೆ.

ಹುಳಿಯಾರು ಪೊಲೀಸ್ ಠಾಣಾ ಮೊ.ನಂ 81/2018 ಕಲಂ: 279, 304(A) IPC. 134 (A & B )I M V Act

ದಿನಾಂಕ:-13-07-2018 ರಂದು ಮದ್ಯಾಹ್ನ 12.30 ಗಂಟೆಗೆ ಪಿರ್ಯಾದಿ ಮಹದೇವಪ್ಪ ಬಿನ್ ಗೋವಿಂದಪ್ಪ, 40 ವರ್ಷ, ಕುಂಚಿಟಿಗರು, ವ್ಯವಸಾಯ, ಹೊಸಹಳ್ಳಿ, ಬುಕ್ಕಾಪಟ್ಣ ಹೋಬಳಿ, ಸಿರಾ ತಾಲ್ಲೋಕು, ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ನಮ್ಮ ತಂದೆಯಾದ ಸುಮಾರು 70 ವರ್ಷ ವಯಸ್ಸಿನ ಗೋವಿಂದಪ್ಪ ಎಂಬುವವರು ದಿನಾಂಕ:-12-07-2018 ರಂದು  ತನ್ನ ಮಗಳನ್ನು ಕೊಟ್ಟು ಮದುವೆ ಮಾಡಿರುವ ಹುಳಿಯಾರು ಹೋಬಳಿ ದಸೂಡಿ ಗ್ರಾಮಕ್ಕೆ ಸೇರಿದ ಗವಿಯಪ್ಪನಪಾಳ್ಯಕ್ಕೆ   ಸಂಜೆ ಸುಮಾರು 07-30 ಗಂಟೆಯಲ್ಲಿ ಬಸ್ಸಿನಲ್ಲಿ ಪ್ರಯಾಣಿಸಿ ಗವಿಯಪ್ಪನಪಾಳ್ಯದ ಲೋಕಣ್ಣ ಎಂಬುವರ ಮನೆ ಹತ್ತಿರ ಬಸ್ಸಿನಿಂದ ಇಳಿದು ರಸ್ತೆಯ ಎಡ ಬದಿಯಲ್ಲಿ ಮುಂದೆ ತನ್ನ ಮಗಳ ಮನೆಗೆ ನಡೆದುಕೊಂಡು ಹೋಗುತ್ತಿರುವಾಗ ಹಿಂದಿನಿಂದ  ಯಾವುದೋ ಮೋಟಾರ್ ಸೈಕಲಿನಲ್ಲಿ ಭಜನಿನಾಯ್ಕ ಎಂಬುವನು ಗುದ್ದಿಕೊಂಡು ಹೋಗಿರುತ್ತಾನೆ ಈ ಸ್ಥಳದಲ್ಲಿ ತನ್ನ ಮಗಳ ಗಂಡ ನಾಗರಾಜು ಬಿನ್ ಮೂಡ್ಲಗಿರಿಯಪ್ಪನು ನೋಡಿ ಅಲ್ಲೆ ದಸೂಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಿ ಮನೆಗೆ ಕರೆದುಕೊಂಡು ಬಂದು ಹೊಸಹಳ್ಳಿ ನಮ್ಮ ಸ್ವಂತ ಊರಿಗೆ  ಪೋನ್ ಮೂಲಕ ನಮಗೆ ತಿಳಿಸಿದಾಗ ನಾವು ಅಲ್ಲಿಗೆ ಸುಮಾರು 09-00ಗಂಟೆಗೆ ಹೋಗಿ ಕಾರಿನಲ್ಲಿ ಚಿಕಿತ್ಸೆಗಾಗಿ ಶಿರಾ ನಗರಕ್ಕೆ ಹೋಗುತ್ತಿದ್ದ ಮಾರ್ಗದ ಮಧ್ಯೆ ಮೇಕೇರಹಳ್ಳಿ ಬಿಟ್ಟು ಸ್ವಲ್ಪ ಮುಂದೆ ಹೋಗುತ್ತಿದ್ದಾಗ ಸಮಯ ಸುಮಾರು 10-30 ಆಗಿದ್ದು ಆ ಸಮಯದಲ್ಲಿ ತೀರಿಕೊಂಡರು ನಾವು ಕಾರಿನಲ್ಲಿ ಶಿರಾ ಸರ್ಕಾರಿ ಆಸ್ಪತ್ರೆಗೆ ಹೋಗಿ ವೈದ್ಯರಲ್ಲಿ ತೋರಿಸಿದಾಗ ತೀರಿಕೊಂಡಿರುವುದು ಖಚಿತವಾಯಿತು ಗುದ್ದಿರುವ ವಾಹನ ಸಂಖ್ಯೆ ನಮಗೆ ಗೊತ್ತಿರುವುದಿಲ್ಲ ಆದುದರಿಂದ ಅಪಘಾತ ಮಾಡಿರುವ ವ್ಯಕ್ತಿಯ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೇಳುತ್ತಾ ನಮ್ಮ ತಂದೆಯವರು ಮೃತಪಟ್ಟಿರುವ ವಿಷಯವನ್ನು ಸಂಬಂಧಿಕರಿಗೆ ತಿಳಿಸಿ ತಡವಾಗಿ ಠಾಣೆಗೆ ದೂರು ನೀಡಿರುತ್ತೇನೆ ಇದನ್ನು ಪರಿಶೀಲಿಸಿ ನ್ಯಾಯ ದೊರಕಿಸಿಕೊಡಬೇಕೆಂತ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

ಶಿರಾ ಪೊಲೀಸ್ ಠಾಣಾ ಮೊ ನಂ 279/2018 ಕಲಂ 379 IPC

ದಿನಾಂಕ-13-07-2018 ರಂದು ಬೆಳಿಗ್ಗೆ 7.00 ಗಂಟೆ ಸಮಯದಲ್ಲಿ ಪಿ ಐ ಸಾಹೇಬರವರು ಠಾಣೆಗೆ ಹಾಜರಾಗಿ ನೀಡಿದ ದುರಿನ ಸಾರಾಂಶವೇನೆಂದರೆ,  ಸಿರಾ ನಗರ  ಠಾಣೆಯ ಪೋಲೀಸ್  ಇನ್ಸ್ ಪೆಕ್ಟರ್   ವಿ.ಲಕ್ಷ್ಮಯ್ಯ   ಆದ  ನಾನು   ದಿನಾಂಕ 13-07-2018  ರಂದು ಬೆಳಿಗ್ಗೆ 5.45  ಗಂಟೆಯ ಸಮಯದಲ್ಲಿ ಠಾಣೆಯಲ್ಲಿ ಇದ್ದಾಗ ಓಜುಕುಂಟೆ ಗ್ರಾಮದ ಕಡೆಯಿಂದ ಯಾವುದೋ ಒಂದು ಟ್ರಾಕ್ಟರ್ ನಲ್ಲಿ ಅಕ್ರಮವಾಗಿ ಕಳ್ಳತನದಿಂದ ಮರಳನ್ನು ತುಂಬಿಕೊಂಡು ಬರುತ್ತಿದೆ ಎಂತ  ಬಂದ ಮಾಹಿತಿ ಮೇರೆಗೆ  ಠಾಣೆಯ ಬಳಿ ಪಂಚರರನ್ನು ಬರಮಾಡಿಕೊಂಡು ಪಂಚರರು ಹಾಗು ಸಿಬ್ಬಂದಿಗಳಾದ ಪಿ.ಸಿ. 682 ಶಿವಕುಮಾರ್  ರವರೊಂದಿಗೆ  ಬೆಳಿಗ್ಗೆ 6.00 ಗಂಟೆಗೆ  ಬನ್ನಿನಗರದ ಆಂಜನೇಯ ಸ್ವಾಮಿ ದೇವಸ್ಥಾನದ ಹತ್ತಿರ  ಹೋದಾಗ ಒಂದು ಟ್ರಾಕ್ಟರ್ ಮತ್ತು ಟ್ರೈಲರ್ ನಲ್ಲಿ  ಮರಳು ತುಂಬಿಕೊಂಡು ಬರುತ್ತಿದ್ದು ಸದರಿ ಟ್ರಾಕ್ಟರ್  ಟ್ರೈಲರ್ ಚಾಲಕ  ನಮ್ಮನ್ನು ನೋಡಿ  ಟ್ರಾಕ್ಟರ್‌ ಅನ್ನು  ಬಿಟ್ಟು  ಓಡಿ ಹೋದನು.  ನಂತರ  ಪಂಚರ ಸಮಕ್ಷಮ ಟ್ರಾಕ್ಟರ್  ಮತ್ತು  ಟ್ರಾಕ್ಟರನ್ನು ಪರಿಶೀಲಿಸಿ ನೋಡಲಾಗಿ ಕೆಎ-06,ಟಿಎ-8901 ನೇ ನಂಬರಿನ ಮಹೇಂದ್ರ ಕಂಪನಿಯ ಕೆಂಪು ಬಣ್ಣದ  ಟ್ರಾಕ್ಟರ್ ಆಗಿದ್ದು ಇಂಜಿನ್ ನಂಬರ್ RKLW01301 ಆಗಿರುತ್ತದೆ. ಇದಕ್ಕೆ ಲಗತ್ತಾಗಿ ಟ್ರೈಲರ್ ಅಳವಡಿಸಿದ್ದು ಹಸಿರು  ಬಣ್ಣದಾಗಿರುತ್ತದೆ.  ಈ ಟ್ರೈಲರ್ ಗೆ  ನಂಬರ್ ಇರುವುದಿಲ್ಲ.  ಸದರಿ ಟ್ರೈಲರ್  ತುಂಬಾ  ಮರಳು ತುಂಬಿರುತ್ತದೆ.  ಈ ಟ್ರಾಕ್ಟರ್ ಟ್ರೈಲರ್ ನಲ್ಲಿರುವ  ಮರಳಿನ ಪೈಕಿ ಒಂದು ಬೊಗಸೆಯಷ್ಟು ಮರಳನ್ನು ತೆಗೆದುಕೊಂಡು ಒಂದು ಬಿಳಿ ಬಟ್ಟೆಯ ಚೀಲದಲ್ಲಿಟ್ಟು ಬಾಯಿ ಕಟ್ಟಿ ಭದ್ರಪಡಿಸಿ ಶ್ಯಾಂಪಲ್ ಗಾಗಿ ಸಂಗ್ರಹಿಸಿಕೊಂಡಿರುತ್ತೆ. ಮರಳು ತುಂಬಿರುವ  ಟ್ರಾಕ್ಟರ್ ಮತ್ತು ಟ್ರೈಲರ್ ಹಾಗು ಸ್ಯಾಂಪಲ್ ಮರಳು ಪ್ಯಾಕೆಟ್ ನ್ನು ಬೆಳಿಗ್ಗೆ 6.15 ಗಂಟೆಯಿಂದ 6.45 ಗಂಟೆಯವರೆಗೆ ಪಂಚನಾಮೆ ಕ್ರಮ ಜರುಗಿಸಿ   ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡಿರುತ್ತದೆ. ಸದರಿ  ಮರಳು ತುಂಬಿರುವ ಟ್ರಾಕ್ಟರ್ ಟ್ರೈಲರ್ ಮತ್ತು ಶ್ಯಾಂಪಲ್ ಗಾಗಿ ಸಂಗ್ರಹಿಸಿಕೊಂಡಿರುವ ಮರಳು ಪ್ಯಾಕೆಟ್ ಮತ್ತು ಪಂಚನಾಮೆಯೊಂದಿಗೆ ಬೆಳಿಗ್ಗೆ 7.00  ಗಂಟೆಗೆ ವಾಪಸ್ ಠಾಣೆಗೆ ಬಂದು  ಯಾವುದೇ ಪರವಾನಗಿ ಇಲ್ಲದೇ ಅಕ್ರಮವಾಗಿ ಎಲ್ಲಿಯೋ ಕಳ್ಳತನದಿಂದ ಮರಳನ್ನು ತುಂಬಿಕೊಂಡು ಬಂದಿದ್ದರಿಂದ   ಮೇಲ್ಕಂಡ ಟ್ರಾಕ್ಟರ್ ಟ್ರೈಲರ್  ಚಾಲಕ  ಮತ್ತು   ಮಾಲೀಕರ  ಮೇಲೆ  ಕಾನೂನು ರೀತಿ ಕ್ರಮ ಜರುಗಿಸಲು ಸೂಚಿಸಿ ನೀಡಿದ ದೂರಿನ ಮೇರೆಗೆ ಈ ಪ್ರ ವ ವರದಿ

ತಿಪಟೂರು ಗ್ರಾಮಾಂತರ ಪೊಲಿಸ್ ಠಾಣಾ ಮೊ ನಂ 52/2018 ಕಲಂ 379 ಐ.ಪಿ.ಸಿ

 

ದಿನಾಂಕ 13-07-2018 ರಂದು ಸಂಜೆ 05-05 ಗಂಟೆಗೆ ಈ ಕೇಸಿನ ಪಿರ್ಯಾದಿ  ಅನಿಲ್ ಕುಮಾರ್ ಬಿನ್ ಲೇ,ಕೆ.ವಿ.ಸಂಪತ್ ಕರಡಿ,ತಿಪಟೂರು ತಾ||,  ರವರು ಠಾಣೆಗೆ ಹಾಜರಾಗಿ ನನ್ನ ಬಾಬ್ತು KA-44–L-0472 ನೇ ಹಿರೋ ಸ್ಪ್ಲೆಂಡರ್ ಪ್ಲಸ್  ದ್ವಿಚಕ್ರ ವಾಹನವನ್ನು ದಿನಾಂಕ 26-05-2018 ರಂದು ರಾತ್ರಿ ಸುಮಾರು 08-00 ಗಂಟೆ ಸಮಯದಲ್ಲಿ  ನಮ್ಮ  ಮನೆಯ  ಮುಂಬಾಗ ಹೊರಗಡೆ  ನಿಲ್ಲಿಸಿದ್ದು, ಮರುದಿನ ಅಂದರೆ ದಿನಾಂಕ:27-05-2018  ರಂದು ಬೆಳಿಗಿನ ಜಾವ ಸುಮಾರು 5 -00 ಗಂಟೆ  ಬೈಕ್ ಅನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಎಲ್ಲಾ ಕಡೆ ಹುಡುಕಿದರು  ಪತ್ತೆಯಾಗಿರುವುದಿಲ್ಲ. ಎಂತ ನೀಡಿದ ಪಿರ್ಯಾದು ಮೇರೆಗೆ ಠಾಣಾ ಮೊ ನಂ 52/2018 ಕಲಂ 379 ಐ.ಪಿ.ಸಿ ರೀತ್ಯಾ ಕೇಸು ದಾಖಲಿಸಿರುತ್ತದೆ.Friday, 13 July 2018

ಅಪರಾಧ ಘಟನೆಗಳು 13-07-18

ಶಿರಾ ಪೊಲೀಸ್ ಠಾಣಾ ಮೊ ನಂ 278/2018 ಕಲಂ ಕಲಂ 279-337-304(A) ಐ.ಪಿ.ಸಿ ರೆ/ವಿ 122, 177, 187 ಐ.ಎಂ.ವಿ ಆಕ್ಟ್

ದಿನಾಂಕ 13-07-2018 ರಂದು ಬೆಳಗ್ಗೆ 05:15 ಗಂಟೆಗೆ ಫಿರ್ಯಾದಿ ನವೀನ್ ಕುಮಾರ್ ಇ ಬಿನ್ ಮರಿಸ್ವಾಮಿ25 ವರ್ಷ, ಈಡಿಗರು, ಕೆಎ-01 ಡಿ-5348 ನೇ ಎಸ್ ಹೆಚ್ ಟ್ರಾವೆಲ್ಸ್ ಬಸ್ ಚಾಲಕ, ತಳಕು ಚಳ್ಳಕೆರೆ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ದಙೂರಿನ ಅಂಶವೇನೆಂದರೆ,        ನಾನು ಈಗ್ಗೆ ಸುಮಾರು 15  ದಿನಗಳಿಂದ ಎಸ್. ಹೆಚ್. ಟ್ರಾವೆಲ್ಸ್ ಬಸ್ಸಿಗೆ ಚಾಲಕನಾಗಿ ಹೋಗುತ್ತಿರುತ್ತೇನೆ, ಸದರಿ ಬಸ್ಸಿನ ನೊಂದಣಿ ಸಂಖ್ಯೆ  ಕೆಎ-01 ಡಿ-5348  ಆಗಿರುತ್ತೆ. ಸದರಿ ಬಸ್ಸು ಹಗರಿ ಬೊಮ್ಮನಹಳ್ಳಿ ಯಿಂದ ಬೆಂಗಳೂರಿಗೆ ಹೋಗಿ ಪುನಃ ವಾಪಸ್ ಹಗರಿಬೊಮ್ಮನಹಳ್ಳಿಗೆ ಬರುತ್ತದೆ. ಪ್ರತಿದಿನದಂತೆ ದಿ: 12-07-2018 ರಂದು ರಾತ್ರಿ 09:45 ಗಂಟೆಗೆ ಹಗರಿಬೊಮ್ಮನಹಳ್ಳಿಯಿಂದ ಸದರಿ ಬಸ್ಸಿಗೆ ಚಾಲಕನಾಗಿ ಹೊರಟು ಎನ್ ಹೆಚ್ -48 ರಸ್ತೆಯಲ್ಲಿ ಬೆಮಗಳೂರಿಗೆ ಬರುತ್ತಿದ್ದೆನು ಮದ್ಯರಾತ್ರಿ ಸುಮಾರು 02:30 ಗಂಟೆಯಲ್ಲಿ ಸದರಿ ನನ್ನ ಬಸ್ಸನ್ನು ಹಿರಿಯೂರು- ತುಮಕೂರು ಎನ್ ಹೆಚ್ -48 ರಸ್ತೆಯಲ್ಲಿ ಹಿರಿಯೂರು ಕಡೆಯಿಂದ ತುಮಕೂರು  ಕಡೆಗೆ ಚಾಲನೆ ಮಾಡಿಕೊಂಡು ಹೋಗುತ್ತಿರುವಾಗ ಶಿರಾ ತಾಲ್ಲೂಕು ಭುವನಹಳ್ಳಿ ಗೇಟ್ ಸಮೀಪ ನಮ್ಮ ಮುಂದೆ ಹೋಗುತ್ತಿದ್ದ ಒಂದು ಕೆ.ಎಸ್.ಆರ್.ಟಿ.ಸಿ ಬಸ್ಸನ್ನು ಅದರ ಚಾಲಕ ಹಿರಿಯೂರು ಕಡೆಯಿಂದ ತುಮಕೂರು ಕಡೆಗೆ ಅತಿ ವೇಗ ಮತ್ತು ನಿರ್ಲಕ್ಷತನದಿಂದ ಚಾಲನೆ ಮಡಿಕೊಂಡು ಹೋಗುತ್ತಿದ್ದವನು, ಭುವನಹಳ್ಳಿ ಗೇಟ್ ನಲ್ಲಿರುವ ಎನ್ ಹೆಚ್ -48 ರಸ್ತೆಯ ಬ್ರಿಡ್ಜ್‌ ಮೇಲೆ ರಸ್ತೆಯ ಎಡಬದಿಯಲ್ಲಿ ನಿಂತಿದ್ದ  ಒಂದು ಲಾರಿಯ ಹಿಂಭಾಗಕ್ಕೆ ಡಿಕ್ಕಿ ಹೊಡೆಸಿ ಅಪಘಾತ ಪಡಿಸಿದನು, ಸದರಿ ಕೆ.ಎಸ್.ಆರ್.ಡಿ.ಸಿ ಬಸ್ಸು ಡಿಕ್ಕಿ ಹೊಡೆದು ಏಕಾ-ಏಕಿ ನಿಂತಾಗ  ಹಿಂದೆ ಬರುತ್ತಿದ್ದ ನನ್ನ ಬಸ್ಸಿನ ಮುಂಭಾಗ ಸದರಿ ಕೆ.ಎಸ್.ಆರ್.ಟಿ.ಸಿ  ಬಸ್ಸಿನ ಹಿಂಭಾಗಕ್ಕೆ ಡಿಕ್ಕಿ ಹೊಡೆಯಿತು  ಆಗ ನನ್ನ ಬಸ್ಸಿನ ಮುಂಭಾಗ ಸಹಾ ಜಖಂ ಆಯಿತು. ಕೆ.ಎಸ್.ಆರ್.ಟಿ.ಸಿ  ಬಸ್ಸಿನ ಮುಂಭಾಗ ಪೂರ್ಣ ಜಖಂ ಆಯಿತಿ ನಾನು ಬಸ್ಸನ್ನು ನಿಲ್ಲಿಸಿ ಕೆಳಗೆ ಇಳಿದು ನೋಡಲಾಗಿ ರಸ್ತೆಯ ಎಡಬದಿಯಲ್ಲಿ ನಿಲ್ಲಿಸಿದ್ದ ಲಾರಿಯ ನೊಂದಣಿ ಸಂಖ್ಯೆ TN-52 C-0732  ಆಗಿತ್ತು ಕೆ.ಎಸ್.ಆರ್.ಟಿ.ಸಿ ಬಸ್ಸಿನ   ನೊಂದಣಿ ಸಂಖ್ಯೆ KA-40 F-1140 ಆಗಿತ್ತು  ಲಾರಿಯ ಚಾಲಕ ಅಪಘಾತವಾದ ತಕ್ಷಣ ಸ್ಥಳದಿಂದ ಓಡಿಹೋದನು. ಸದರಿ ಲಾರಿಯ ಚಾಲಕ ಪಾರ್ಕಿಂಗ್ ಇಲ್ಲದ ಸ್ಥಳದಲ್ಲಿ ಯಾವುದೇ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೇ ಇಂಡಿಕೇಟರ್ ಲೈಟ್ ಹಾಕದೇ ಮತ್ತು ಪಾರ್ಕಿಂಗ್ ಲೈಟ್ ಹಾಕದೇ ಕತ್ತಲಲ್ಲಿ  ನಿರ್ಲಕ್ಷತನದಿಂದ ಲಾರಿಯನ್ನು ರಸ್ತೆಯ ಎಡಬದಿಯಲ್ಲಿ ನಿಲ್ಲಿಸಿದ್ದರಿಂದ ಮತ್ತು ಕೆ.ಎಸ್.ಆರ್.ಟಿ.ಸಿ ಬಸ್ಸನ್ನು ಅದರ ಚಾಲಕ ಅತಿ ವೇಗ ಮತ್ತು ನಿರ್ಲಕ್ಷತನದಿಂದ ಚಾಲನೆ ಮಾಡಿಕೊಂಡು ಬಂದಿದ್ದರಿಂದ ಈ ಅಪಘಾತ ಉಂಟಾಗಿರುತ್ತೆ. ಕೆ.ಎಸ್.ಆರ್.ಟಿ.ಸಿ ಬಸ್ಸಿನ ಚಾಲಕನ ಹೆಸರು ವಿಳಾಶ ತಿಳಿಯಲಾಗಿ ಮಂಜುನಾಥ ಕಮ್ಮಾರ್, ಬ್ಯಾಡ್ಜ್ ನಂ 13829, 6 ನೇ ಘಟಕ, ಕೇಂದ್ರೀಯ ವಿಭಾಗ, ಬೆಂಗಳೂರು ಎಂದು ತಿಳಿಯಿತು ಸದರಿ ಬಸ್ಸಿನ ಎಡಭಾಗದ ಮುಂದಿನ ಸೀಟ್ ನಲ್ಲಿ ಕುಳಿತಿದ್ದ ಸದರಿ ಬಸ್ಸಿನ ಡ್ರೈವರ್ ಮತ್ತು ಕಂಡಕ್ಟರ್ ಆದ ಹನುಮಂತಪ್ಪ .ಯು   ಬ್ಯಾಡ್ಜ್  ನಂ 6073,  6 ನೇ ಘಟಕ,  ಕೇಂದ್ರೀಯ ವಿಭಾಗ, ಬೆಂಗಳೂರು ರವರ ಎದೆಗೆ ಒತ್ತಿದ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದರು, ಸದರಿ ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಕೆಲವು ಪ್ರಯಾಣಿಕರಿಗೆ ಮೈಕೈಗೆ ಪೆಟ್ಟುಗಳು ಬಿದ್ದು ಗಾಯಗಳಾದವು, ಅವರ ಹೆಸರು ವಿಳಾಸ ತಿಳಿಯಲಾಗಿ 1) ಭೂದೇವಿ, ತೊರೆಕೋಲಮನಹಳ್ಳಿ, ಚಳ್ಳಕೆರೆ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ, 2) ರಾಘವೇಂದ್ರ ಆಜಾದ್ ನಗರ ಕೂಡ್ಲಿಗಿ, 3) ಕುಮಾರ ನಾಯ್ಕ , ಧೂಪದ ಹಳ್ಳಿ ತಾಂಡ, ಕೂಡ್ಲಿಗಿ ತಾಲ್ಲೂಕು, ಬಳ್ಳಾರಿ  4) ಸಂತೋಷ್, ಶ್ರೀರಾಮ ಶೆಟ್ಟಿಹಳ್ಳಿ, ಬಳ್ಳಾರಿ ಜಿಲ್ಲೆ, 5) ಸೌಮ್ಯ ಕೋಂ ರಾಜೇಶ್ ಖಾನಾಹೊಸಹಳ್ಳಿ, ಕೂಡ್ಲಿಗಿ ತಾಲ್ಲೂಕು, 6) ಮಂಜುನಾಥ, ಕುರಹಟ್ಟಿ ರೋಣಾ ತಾಲ್ಲೂಕು, ಗದಗ ಜಿಲ್ಲೆ, 7) ಮಂಜುನಾಥ ಕೆ, ಬಡೇಲಡಕು ಗ್ರಾಮ, ಕೂಡ್ಲಿಗಿ ತಾಲ್ಲೂಕು ಬಳ್ಳಾರಿ ಜಿಲ್ಲೆ, 8) ವಿ. ನಾಗೇಶ, ಕಾರಟಗಿ, ಕೊಪ್ಪಳ ಜಿಲ್ಲೆ 9) ದಯಾನಂದ, ಚಿಕ್ಕಬಿದರಕಲ್ಲು ಬೆಂಗಳೂರು,  ಎಂದು ತಿಳಿಯಿತು ಇವರುಗಳಿಗೆ ತಲೆಗೆ ಹಾಗೂ ಮೈ ಕೈ ಗಳಿಗೆ ಪೆಟ್ಟುಗಳು ಬಿದ್ದು ಗಾಯಗಳಾದವು, ಇನ್ನೂ ಕೆಲವರಿಗೆ ಮೈ ಕೈಗೆ ಪೆಟ್ಟುಗಳು ಬಿದ್ದು ಗಾಯಗಳಾಗಿದ್ದವು, ಅವರ ಹೆಸರುಗಳನ್ನು ತಿಳಿಯಲು ಸಾಧ್ಯವಾಗಿರುವುದಿಲ್ಲ. ನನ್ನ ಬಸ್ಸಿನಲ್ಲಿದ್ದ 10) ಬಾಲರಾಜು , ಹೊನ್ನಮರಡಿ ಗ್ರಾಮ, ದಾವಣಗೆರೆ ಜಿಲ್ಲೆ, 11) ಪರಸಪ್ಪ, ಹೂವಿನ ಹಡಗಲಿ, ಬಳ್ಳರಿ ಜಿಲ್ಲೆ, 12) ಲಕ್ಷ್ಮಣ ನಾಯ್ಕ ತಿಮ್ಮಲಾಪುರ ತಾಂಡ, ಬಳ್ಳಾರಿ ಜಿಲ್ಲೆ 13) ಮನೋಹರ್, ಪಳಕೆ ಹಳ್ಳಿ ಚಿತ್ರದುರ್ಗ ತಾ. ಎಂದು ತಿಳಿಯಿತು. ಇವರುಗಳಿಗೆ ಮೈ  ಕೈಗೆ ಪೆಟ್ಟುಗಳು ಬಿದ್ದು ಸಣ್ಣಪುಟ್ಟ ಗಾಯಗಾಳಗಿದ್ದವು, ನನ್ನ ಬಸ್ಸಿನ ಮುಂಭಾಗ ಜಖಂ ಆಗಿತ್ತು,  ತಕ್ಷಣ ಅಲ್ಲಿಗೆ  ಬಂದ ಪೊಲೀಸ್ ಹೈ-ವೇ ಮೊಬೈಲ್ ವಾಹನದ ಅಧಿಕಾರಿಗಳು ನಮ್ಮ ಬಳಿ ಬಂದು ಸ್ಥಳಕ್ಕೆ ಆಂಬುಲೆನ್ಸ್ ವಾಹನಗಳನ್ನು ಕರೆಸಿ ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಿದರು, ನಾನು ಅಪಘಾತದ ವಿಚಾರವನ್ನು ಬಸ್ಸಿನ ಮಾಲೀಕರಿಗೆ ತಿಳಿಸಿ ತಡವಾಗಿ ಬಂದು ದೂರು ಕೊಟ್ಟಿರುತ್ತೇನೆ. ಅಪಘಾತ ಪಡಿಸಿದ ಲಾರಿ ಚಾಲಕನ ಮೇಲೆ ಮತ್ತು ಕೆ.ಎಸ್.ಆರ್.ಟಿ.ಸಿ ಬಸ್ಸಿನ  ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರುತ್ತೇನೆ.  ಎಂದು ನೀಡಿದ ದೂರನ್ನು ಸ್ವೀಕರಿಸಿ ಪ್ರ.ವ.ವರದಿ ದಾಖಲಿಸಿರುತ್ತೆ.

 

ಶಿರಾ ಪೊಲೀಸ್ ಠಾಣಾ ಮೊ ನಂ 276/2018 ಕಲಂ 379 IPC

ದಿನಾಂಕ-12-07-2018 ರಂದು  ರಾತ್ರಿ 9.10  ಗಂಟೆಗೆ ಪಿ,ಐ ಸಾಹೇಬರವರು  ಠಾಣೆಗೆ ಹಾಜರಾಗಿ ನೀಡಿದ  ದೂರಿನ ಸಾರಾಂಶವೇನೆಂದರೆ  ಸಿರಾ ನಗರ  ಠಾಣೆಯ ಪೋಲೀಸ್  ಇನ್ಸ್ ಪೆಕ್ಟರ್   ವಿ ಲಕ್ಷ್ಮಯ್ಯ   ಆದ  ನಾನು    ದಿನಾಂಕ 12-07-2018  ರಂದು ರಾತ್ರಿ  7.30  ಗಂಟೆಯ ಸಮಯದಲ್ಲಿ ಸಿರಾ ನಗರದಲ್ಲಿ  ಐ ಬಿ ವೃತ್ತದ ಕಡೆ ಗಸ್ತುನಲ್ಲಿ ಇದ್ದಾಗ ಆರ್,ಟಿ ರಸ್ತೆಯಲ್ಲಿ ಇಂದಿರಾ ಕ್ಯಾಂಟೀನ ಬಳಿ  ಯಾವುದೋ ಒಂದು ಟ್ರಾಕ್ಟರ್ ನಲ್ಲಿ  ಅಕ್ರಮವಾಗಿ ಕಳ್ಳತನದಿಂದ ಮರಳನ್ನು ತುಂಬಿಕೊಂಡು ಹೋಗುತ್ತಿದ್ದಾರೆಂತ  ಬಂದ ಮಾಹಿತಿ ಮೇರೆಗೆ ಮಾನ್ಯ ಡಿ ಎಸ್ ಪಿ ಸಾಹೇಬರವರ  ಮಾರ್ಗದರ್ಶನದಲ್ಲಿ  ಸದರಿ ಮಾಹಿತಿಯ ಮೇರೆಗೆ  ರಾತ್ರಿ  7.45  ಗಂಟೆಗೆ  ಇಂದಿರಾ ಕ್ಯಾಂಟೀನ್ ಹತ್ತಿರ ಹೋದಾಗ ಒಂದು ಟ್ರಾಕ್ಟರ್  ಮರಳನ್ನು ಅನ್ ಲೋಡ್ ಮಾಡಿ ಹೊರಡುವ ಸ್ಥಿತಿಯಲ್ಲಿ ಇದ್ದು   ಸದರಿ ಟ್ರಾಕ್ಟರ್  ಟ್ರೈಲರ್ ಚಾಲಕ  ನಮ್ಮನ್ನು ನೋಡಿ  ಟ್ರಾಕ್ಟರ್‌ ಅನ್ನು ಅಲ್ಲಿಯೇ  ಬಿಟ್ಟು  ಓಡಿ ಹೋದನು.  ನಂತರ  ಸ್ಥಳಕ್ಕೆ ಪಂಚರರನ್ನು  ಬರಮಾಡಿಕೊಂಡು ಪಂಚರ ಸಮಕ್ಷಮ ಟ್ರಾಕ್ಟರ್   ಟ್ರಾಕ್ಟರನ್ನು ಪರಿಶೀಲಿಸಿ ನೋಡಲಾಗಿ ಎಪಿ-02,ಎಸ್-4453  ನೇ ನಂಬರಿನ ಕೆಂಪು ಬಣ್ಣದ  ಮಹೇಂದ್ರ ಕಂಪನಿಯ ಟ್ರಾಕ್ಟರ್ ಆಗಿರುತ್ತದೆ. ಇದಕ್ಕೆ ಲಗತ್ತಾಗಿ ಟ್ರೈಲರ್ ಇದ್ದು ಕಂಪು  ಬಣ್ಣದಾಗಿರುತ್ತದೆ.  ಈ ಟ್ರೈಲರ್ ಗೆ ನಂಬರ್ ಇರುವುದಿಲ್ಲ.  ಸದರಿ ಟ್ರೈಲರ್  ನಲ್ಲಿ  ಮರಳನ್ನು ಅನ್ ಲೋಡ್ ಮಾಡಿರುವ ನಿಶಾನೆ ಕಂಡು ಬರುತ್ತದೆ.  ಈ ಟ್ರಾಕ್ಟರ್ ನಿಂದ 20 ಅಡಿ ಅಂತರದಲ್ಲಿ ಮರಳನ್ನು ಅನ್ ಲೋಡ್ ಮಾಡಿದ್ದು ಒಂದು ಟ್ರಾಕ್ಟರ್ ಟ್ರೈಲರ್ ಲೋಡಿನಷ್ಟು ಮರಳು ಇರುತ್ತದೆ.  ಈ ಮರಳಿನ ಪೈಕಿ ಒಂದು ಬೊಗಸೆಯಷ್ಟು ಮರಳನ್ನು ತೆಗೆದುಕೊಂಡು ಒಂದು ಬಿಳಿ ಬಟ್ಟೆಯ ಚೀಲದಲ್ಲಿಟ್ಟು ಬಾಯಿ ಕಟ್ಟಿಭದ್ರಪಡಿಸಿ ಶ್ಯಾಂಪಲ್ ಗಾಗಿ ಸಂಗ್ರಹಿಸಿಕೊಂಡಿರುತ್ತೆ.ಅನ್ ಲೋಡ್ ಮಾಡಿರುವ  ಮರಳನ್ನು ಇದೇ ಟ್ರಾಕ್ಟರ್ ಟ್ರೈಲರ್ ಗೆ ಲೋಡ್ ಮಾಡಿಸಿಕೊಂಡು  ಟ್ರಾಕ್ಟರ್ ಮತ್ತು  ಟ್ರೈಲರ್  ಹಾಗೂ ಶ್ಯಾಂಪಲ್ ಗಾಗಿ ಸಂಗ್ರಹಿಸಿಕೊಂಡಿರುವ ಒಂದು  ಮರಳು ಪ್ಯಾಕೆಟ್ ನ್ನು ರಾತ್ರಿ 8.00 ಗಂಟೆಯಿಂದ 8.45 ಗಂಟೆಯವರೆಗೆ ಪಂಚನಾಮೆ ಕ್ರಮ ಜರುಗಿಸಿ   ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡಿರುತ್ತದೆ. ಸದರಿ  ಮರಳು ತುಂಬಿರುವ ಟ್ರಾಕ್ಟರ್ ಟ್ರೈಲರ್ ಮತ್ತು ಶ್ಯಾಂಪಲ್ ಗಾಗಿ ಸಂಗ್ರಹಿಸಿಕೊಂಡಿರುವ ಮರಳು ಪ್ಯಾಕೆಟ್ ಮತ್ತು ಪಂಚನಾಮೆಯೊಂದಿಗೆ ರಾತ್ರಿ 9.00  ಗಂಟೆಗೆ ವಾಪಸ್ ಠಾಣೆಗೆ ಬಂದು  ಯಾವುದೇ ಪರವಾನಗಿ ಇಲ್ಲದೇ ಅಕ್ರಮವಾಗಿ ಎಲ್ಲಿಯೋ ಕಳ್ಳತನದಿಂದ ಮರಳನ್ನು ತುಂಬಿಕೊಂಡು ಬಂದಿದ್ದರಿಂದ   ಮೇಲ್ಕಂಡ ಟ್ರಾಕ್ಟರ್ ಟ್ರೈಲರ್  ಚಾಲಕ  ಮತ್ತು   ಮಾಲೀಕರ  ಮೇಲೆ  ಕಾನೂನು ರೀತಿ ಕ್ರಮ ಜರುಗಿಸಲು ಸೂಚಿಸಿ ನೀಡಿದ ದುರಿನ ಮೆರೆಗೆ ಈ ಪ್ರ ವ ವರದಿ

ಶಿರಾ ಪೊಲೀಸ್ ಠಾಣಾ ಮೊ ನಂ 277/2018 ಕಲಂ 379 IPC

ದಿನಾಂಕ:12-07-2018 ರಂದು ರಾತ್ರಿ 11-00 ಗಂಟೆಯಲ್ಲಿ  ಸಿರಾ ನಗರ  ಠಾಣೆಯ ಪೋಲೀಸ್  ಇನ್ಸ್ ಪೆಕ್ಟರ್   ವಿ ಲಕ್ಷ್ಮಯ್ಯ   ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಅಂಶವೇನೆಂದರೆ,  ನಾನು   ದಿನಾಂಕ 12-07-2018  ರಂದು ರಾತ್ರಿ  9.00  ಗಂಟೆಯ ಸಮಯದಲ್ಲಿ ಠಾಣೆಯಲ್ಲಿ ಇದ್ದಾಗ ಭುವನಹಳ್ಳಿ ಗ್ರಾಮದ ಸಮೀಪ  ಅಟಲ್ ಬಿಹಾರಿ ವಾಜಪೇಯಿ ಸ್ಕೂಲ್ ಹತ್ತಿರ  ಯಾವುದೋ ಒಂದು ಟ್ರಾಕ್ಟರ್ ನಲ್ಲಿ  ಅಕ್ರಮವಾಗಿ ಕಳ್ಳತನದಿಂದ ಮರಳನ್ನು ತುಂಬಿಕೊಂಡು ಬರುತ್ತಿದ್ದಾರೆಂತ  ಬಂದ ಮಾಹಿತಿ ಮೇರೆಗೆ  ಠಾಣೆಯ ಬಳಿ ಪಂಚರರನ್ನು  ಬರಮಾಡಿಕೊಂಡು ಪಂಚರರು ಹಾಗು ಸಿಬ್ಬಂದಿಗಳಾದ ಹೆಚ್ ಸಿ-243 ಮತ್ತು ಪಿ,ಸಿ 478  ರವರುಳೊಂದಿಗೆ  ಜೀಪಿನಲ್ಲಿ  ರಾತ್ರಿ  9.20   ಗಂಟೆಗೆ  ಮುರಾರ್ಜಿ ವಸತಿ ಶಾಲೆಯ ಬಳಿ ಹೋದಾಗ ಒಂದು ಟ್ರಾಕ್ಟರ್ ಮತ್ತು ಟ್ರೈಲರ್ ನಲ್ಲಿ  ಮರಳು ತುಂಬಿಕೊಂಡು ಬರುತ್ತಿದ್ದು ಸದರಿ ಟ್ರಾಕ್ಟರ್  ಟ್ರೈಲರ್ ಚಾಲಕ  ನಮ್ಮನ್ನು ನೋಡಿ  ಟ್ರಾಕ್ಟರ್‌ ಅನ್ನು ಅಲ್ಲಿಯೇ  ಬಿಟ್ಟು  ಓಡಿ ಹೋದನು.  ನಂತರ  ಪಂಚರ ಸಮಕ್ಷಮ ಟ್ರಾಕ್ಟರ್  ಮತ್ತು  ಟ್ರಾಕ್ಟರನ್ನು ಪರಿಶೀಲಿಸಿ ನೋಡಲಾಗಿ ನೊಂದಣಿ ಸಂಖ್ಯೆ ಇಲ್ಲದ ನೀಲಿ ಬಣ್ಣದ  NEW HOLLAND-3037 ಟ್ರಾಕ್ಟರ್ ಆಗಿರುತ್ತದೆ. ಇಂಜಿನ್ ನಂಬರ್ S325 H73700 ಆಗಿರುತ್ತದೆ. ಇದಕ್ಕೆ ಲಗತ್ತಾಗಿ ಟ್ರೈಲರ್ ಅಳವಡಿಸಿದ್ದು ಹಸಿರು  ಬಣ್ಣದಾಗಿರುತ್ತದೆ.  ಈ ಟ್ರೈಲರ್ ಗೆ  ನಂಬರ್ ಇರುವುದಿಲ್ಲ.  ಸದರಿ ಟ್ರೈಲರ್  ತುಂಬಾ  ಮರಳು ತುಂಬಿರುತ್ತದೆ.  ಈ ಟ್ರಾಕ್ಟರ್ ಟ್ರೈಲರ್ ನಲ್ಲಿರುವ  ಮರಳಿನ ಪೈಕಿ ಒಂದು ಬೊಗಸೆಯಷ್ಟು ಮರಳನ್ನು ತೆಗೆದುಕೊಂಡು ಒಂದು ಬಿಳಿ ಬಟ್ಟೆಯ ಚೀಲದಲ್ಲಿಟ್ಟು ಬಾಯಿ ಕಟ್ಟಿಭದ್ರಪಡಿಸಿ ಶ್ಯಾಂಪಲ್ ಗಾಗಿ ಸಂಗ್ರಹಿಸಿಕೊಂಡಿರುತ್ತೆ. ಮರಳು ತುಂಬಿರುವ  ಟ್ರಾಕ್ಟರ್ ಮತ್ತು ಟ್ರೈಲರ್ ಹಾಗು ಸ್ಯಾಂಪಲ್ ಮರಳು ಪ್ಯಾಕೆಟ್ ನ್ನು ರಾತ್ರಿ 9.30 ಗಂಟೆಯಿಂದ 10.15 ಗಂಟೆಯವರೆಗೆ ಪಂಚನಾಮೆ ಕ್ರಮ ಜರುಗಿಸಿ   ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡಿರುತ್ತದೆ. ಸದರಿ  ಮರಳು ತುಂಬಿರುವ ಟ್ರಾಕ್ಟರ್ ಟ್ರೈಲರ್ ಮತ್ತು ಶ್ಯಾಂಪಲ್ ಗಾಗಿ ಸಂಗ್ರಹಿಸಿಕೊಂಡಿರುವ ಮರಳು ಪ್ಯಾಕೆಟ್ ಮತ್ತು ಪಂಚನಾಮೆಯೊಂದಿಗೆ ರಾತ್ರಿ 10.50  ಗಂಟೆಗೆ ವಾಪಸ್ ಠಾಣೆಗೆ ಬಂದು  ಯಾವುದೇ ಪರವಾನಗಿ ಇಲ್ಲದೇ ಅಕ್ರಮವಾಗಿ ಎಲ್ಲಿಯೋ ಕಳ್ಳತನದಿಂದ ಮರಳನ್ನು ತುಂಬಿಕೊಂಡು ಬಂದಿದ್ದರಿಂದ   ಮೇಲ್ಕಂಡ ಟ್ರಾಕ್ಟರ್ ಟ್ರೈಲರ್  ಚಾಲಕ  ಮತ್ತು   ಮಾಲೀಕರ  ಮೇಲೆ  ಕಾನೂನು ರೀತಿ ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಈ ಪ್ರ.ವ.ವರದಿ

ತಿಪಟೂರು ನಗರ ಪೊಲೀಸ್ ಠಾಣಾ ಮೊ.ನಂ. 106/2018 ಕಲಂ :454, 457, 380 ಐ.ಪಿ.ಸಿ.

ದಿನಾಂಕ: 12/07/2018 ರಂದು ರಾತ್ರಿ 08-30 ಗಂಟೆಗೆ  ಪಿರ್ಯಾದುದಾರರಾದ ಲಕ್ಷ್ಮೀಪ್ರಸಾದ್ ಬಿನ್‌ ಲೇಟ್‌ ಜಯರಾಂ ಎಂ.ಎಲ್‌, 62 ವರ್ಷ, ನಿವೃತ್ತ ಪ್ರೌಡಶಾಲಾ ಶಿಕ್ಷಕರು, ಬ್ರಾಹ್ಮಣ ಜನಾಂಗ, 2ನೇ ಕ್ರಾಸ್‌, ಶಾರದನಗರ, ತಿಪಟೂರು ಟೌನ್‌ ರವರು ಠಾಣೆಗೆ ಹಾಜರಾಗಿ ನೀಡಿರುವ ಲಿಖಿತ ದೂರಿನ ಅಂಶವೇನೆಂದರೆ, ನಮ್ಮ ಮನೆಯಲ್ಲಿ ನಾನು ನನ್ನ ಹೆಂಡತಿ ವಾಸವಾಗಿದ್ದು, ದಿನಾಂಕ:07/07/2018 ರಂದು ಬೆಂಗಳೂರಿನಲ್ಲಿರುವ ಮಗನನ್ನು ನೋಡಿಕೊಂಡು ಬರಲು ಬೆಂಗಳೂರಿಗೆ ಹೋಗಿದ್ದೆವು. ಹೋಗುವಾಗ ಮನೆಯ ಎಲ್ಲಾ ಬಾಗಿಲುಗಳನ್ನು ಬೀಗ ಹಾಕಿದ್ದು, ಈ ದಿವಸ ದಿನಾಂಕ:12/07/2018 ರಂದು ಸಂಜೆ 6-45 ಗಂಟೆ ಸುಮಾರಿಗೆ ಮನೆಗೆ ಬಂದಿದ್ದು, ಮನೆಯ ಬೀಗವನ್ನು ತೆಗೆಯಲು ಹೋದಾಗ ಡೋರ್‌ಲಾಕ್‌ ತೆರೆದಿದ್ದು, ನಂತರ ಒಳಗೆ ಹೋಗಿ ನೋಡಲಾಗಿ ಮನೆಯಲ್ಲಿದ್ದ ಬೀಗ ಹಾಕಿದ್ದ ಬೀರು ಮತ್ತು ವಾರ್ಡ್‌ ರೋಬ್‌ ತೆಗೆದಿದ್ದು ಅದರಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದು, ಮನೆಯ ವಸ್ತುಗಳನ್ನು ಬೀರುವಿನಿಂದ ಹೊರಗೆ ತೆಗೆದು ಹಾಕಿದ್ದು, ಬೀರುವಿನಲ್ಲಿ ಇದ್ದ 1) ಬೆಳ್ಳಿಯ ತಟ್ಟೆ, 2)ಬೆಳ್ಳಿಯ ಚೆಂಬು, 3) ಬೆಳ್ಳಿಯ ಚೆಂಬು (ಚಿಕ್ಕದು) 4)ಅರತಿ ತಟ್ಟೆ ಮತ್ತು 2 ದೀಪ, 5) 3 ಬೆಳ್ಳಿ ಲೋಟ, 6) ನಗದು 8 ಸಾವಿರ ರೂಪಾಯಿ, 7) ನಾಲ್ಕು ಜೋತೆ ದೀಪಗಳು, 8) ಒಂದು ಮಂಗಳಾರತಿ ಹಲಗೆ  9) 6 ಕುಂಕಮದ ಬಟ್ಟಲು, 10) 2 ಚಿಕ್ಕ ಉಂಗುರ, 11) 20 ಬೆಳ್ಳಿ ನಾಣ್ಯ, 12) 2 ಜೋತೆ ಚಿನ್ನದ ಓಲೆ, 13) ಬೆಳ್ಳಿಯ ಪಂಚಪಾತ್ರೆ, ಉದ್ದರಣೆ, ಅಘ್ಯುಪಾತ್ರೆ ಈ ಮೇಲ್ಕಂಡ ಎಲ್ಲಾ ವಸ್ತುಗಳನ್ನು ಯಾರೂ ಕಳ್ಳರು ಕಳವು ಮಾಡಿರುತ್ತಾರೆ. ಕಳುವಾಗಿರುವ ವಸ್ತುಗಳ ಅಂದಾಜು ಮೊತ್ತ 1 ಲಕ್ಷದ 36 ಸಾವಿರ ರೂಗಳಾಗಿರುತ್ತದೆ, ಕಳುವಾಗಿರುವ ಮೇಲ್ಕಂಡ ಎಲ್ಲಾ ವಸ್ತುಗಳನ್ನು ಪತ್ತೆ ಮಾಡಿಕೊಡಬೇಕಂತ ನೀಡಿರುವ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಜಯನಗರ ಪೊಲೀಸ್ ಠಾಣಾ ಮೊ.ನಂ. 99/2018 ಕಲಂ 379 ಐಪಿಸಿ

ದಿನಾಂಕ: 12/07/2018 ರಂದು ರಾತ್ರಿ 10-15 ಗಂಟೆಗೆ ತುಮಕೂರು ಟೌನ್‌, ಮೆಳೆಕೋಟೆ ವಾಸಿ ನಿಶ್ಚಿತ ಟಿ.ಎನ್ ಬಿನ್ ನಾಗರಾಜ ಟಿ.ಎಲ್ ರವರು ಠಾಣೆಗೆ ಹಾಜರಾಗಿ ನೀಡಿದ ಕಂಪ್ಯೂಟರ್ ಮುದ್ರಿತ ದೂರಿನ ಅಂಶವೇನೆಂದರೆ, ನಾನು ಈ ದಿನ ದಿನಾಂಕ: 12/07/2018 ರಂದು ಸಂಜೆ 6-00 ಗಂಟೆಯಲ್ಲಿ ತುಮಕೂರು ಟೌನ್‌, ಅಮರಜ್ಯೋತಿನಗರದಲ್ಲಿರುವ ಶ್ರೀ ಸಾಯಿಬಾಬಾ ದೇವಸ್ಥಾನಕ್ಕೆ ಹೋಗಲು ನನ್ನ ಬಾಬ್ತು ಕೆಎ06 ಇಜಿ3358 ನೇ ಮಹೀಂದ್ರಾ ರೋಡಿಯೋ ದ್ವಿಚಕ್ರವಾಹನವನ್ನು ಶ್ರೀ ಸಾಯಿಬಾಬಾ ದೇವಸ್ಥಾನದ ಮುಂಭಾಗ ನಿಲ್ಲಿಸಿ, ದೇವಾಸ್ಥಾನದಲ್ಲಿ ದರ್ಶನ ಮಾಡಿಕೊಂಡು ಸಂಜೆ 6-30 ಗಂಟೆ ಸಮಯದಲ್ಲಿ ವಾಪಾಸ್ ಬಂದು ನೋಡಲಾಗಿ ನನ್ನ ಬಾಬ್ತು ದ್ವಿಚಕ್ರ ವಾಹನದ ಡಿಕ್ಕಿ ಓಪನ್ ಆಗಿತ್ತು.  ಡಿಕ್ಕಿಯನ್ನು ನೋಡಲಾಗಿ ಅದರಲ್ಲಿಟ್ಟಿದ್ದ ನನ್ನ ಬಾಬ್ತು Lenovo ಮೊಬೈಲ್ ಇರಲಿಲ್ಲ.  ಯಾರೋ ಕಳ್ಳರು ನಾನು ದೇವಸ್ಥಾನದ ಒಳಗೆ ದರ್ಶನಕ್ಕಾಗಿ ಹೋಗಿದ್ದಾಗ ನನ್ನ ವಾಹನದ ಡಿಕ್ಕಿಯನ್ನು ಓಪನ್ ಮಾಡಿ ಅದರಲ್ಲಿಟ್ಟಿದ್ದ ನನ್ನ ಬಾಬ್ತು Lenovo ಮೊಬೈಲ್ ಅನ್ನು  ಕಳುವು ಮಾಡಿರುತ್ತಾರೆ. ಕಳುವಾಗಿರುವ ಮೊಬೈಲ್ ಸಿಲ್ವರ್ ಕಲ್ಲರ್ ನ Lenovo (A7020a48) ಆಗಿದ್ದು ಇದರ IMEI No. 869090024481963 & 869090024481955 ಆಗಿರುತ್ತೆ.  ಇದಕ್ಕೆ 7411699229 & 7975125430 ಸಿಮ್ ಗಳನ್ನು ಅಳವಡಿಸಿದ್ದೆನು.  ಇದರ ಬೆಲೆ 12,499 ರೂ ಗಳಾಗಿರುತ್ತೆ. ಮೊಬೈಲ್ ಕಳುವಾಗಿರುವ ಬಗ್ಗೆ ನಮ್ಮ ಮನೆಯಲ್ಲಿ ವಿಚಾರ ತಿಳಿಸಿ ತಡವಾಗಿ ಠಾಣೆಗೆ ಬಂದು  ಕಳುವಾಗಿರುವ ನನ್ನ ಮೊಬೈಲ್ ಅನ್ನು ಪತ್ತೆ ಮಾಡಿಕೊಡಲು ಹಾಗೂ ಮೊಬೈಲ್‌ ಕಳುವು ಮಾಡಿರುವವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿರುವ ದೂರಿನ ಅಂಶವಾಗಿರುತ್ತೆ.

ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆ.ಮೊ.ನಂ 178/2018  ಕಲಂ 457,380,511 ಐಪಿಸಿ.

ದಿನಾಂಕ:12/07/2018 ರಂದು ಸಂಜೆ 5-00 ಗಂಟೆಗೆ ತುಮಕೂರು ತಾಲ್ಲೋಕ್ ಗೂಳೂರು ಹೋಬಳಿ ಕಂಭತ್ತನಹಳ್ಳಿ ಗ್ರಾಮದ ಸುಂದರೇಶ ಬಿನ್ ಚಂದ್ರಪ್ಪ ರವರು ನೀಡಿದ ದೂರಿನ ಅಂಶವೇನೆಂದರೆ, ನಾನು ನಮ್ಮ ಗ್ರಾಮದ ಶ್ರೀ ಗಂಗಾಧರೇಶ್ವರ ದೇವಸ್ಥಾನದ ಪೂಜಾ ಕಾರ್ಯವನ್ನು ಮಾಡಿಕೊಂಡಿದ್ದು ದಿನಾಂಕ:11/07/2018 ರಂಧು ಸಂಜೆ ಪೂಜೆ ಮಾಡಿಕೊಂಡು 7-00 ಗಂಟೆಗೆ ದೇವಸ್ಥಾನದ ಬಾಗಿಲು ಬೀಗ ಹಾಕಿಕೊಂಡು ಮನೆಗೆ ಹೋಗಿದ್ದು, ಈ ದಿನ ದಿ:12/07/2018 ರಂದು ಬೆಳಿಗ್ಗೆ 5-00 ಗಂಟೆಗೆ ದೇವಾಲಯಕ್ಕ ಪೂಜೆ ಮಾಡಲು ಹೋಗಿದ್ದಾಗ ದೇವರ ಮುಖ್ಯದ್ವಾರದ ಬಾಗಿಲನ್ನು ಯಾರೋ ಕಳ್ಳರು ಮೀಟಿ ಇರುವುದನ್ನು ನೋಡಿ ಗ್ರಾಮಸ್ಥರುಗಳಿಗೆ ತಿಳಿಸಿದ್ದೆನು. ಗ್ರಾಮಸ್ಥರು ಠಾಣೆಗೆ ದೂರು ನಿಡುವಂತೆ ತಿಳಿಸಿದ್ದರಿಂದ ಈ ದಿನ ಠಾಣೆಗೆ ಹಾಜರಾಗಿ ಈ ಹಿಂದೆ ಇದೇ ರೀತಿ ಇದೇ ದೇವಾಲಯದ ಹುಂಡಿಯನ್ನು ಹೊಡೆದುಕೊಂಡು ಹೋಗಿದ್ದರು. ಈ ಬಗ್ಗೆ ಯಾವುದೇ ದೂರು ನೀಡಿರಲಿಲ್ಲ, ದಿ:11/07/18ರಿಂದ ದಿ:12/07/18ರ ಮುಂಜಾನೆ ಒಳಗೆ ದೇವರ ಮುಖ್ಯದ್ವಾರ ಬಾಗಿಲನ್ನು ಮಿಟಿ ಕಳ್ಳರು ಹೋಗಿರುತ್ತಾರೆ. ಕಳ್ಳತನ ಮಾಡುವ ಉದ್ದೇಶದಿಂದ ಬಾಗಿಲನ್ನು ಮೀಟಿ ಕಳ್ಳತನಕ್ಕೆ ಪ್ರಯತ್ನ ಪಟ್ಟಿರುತ್ತಾರೆ. ಆದ್ದರಿಂಧ ಕಾನೂನು ರೀತಿ ಕ್ರಮಕೈಗೊಳ್ಳಬೇಕೆಂಧು ಗ್ರಾಮಸ್ಥರಿಗೆ ತಿಳಿಸಿ ತಡವಾಗಿ ಬಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿದೆ.

 

ಹೆಬ್ಬೂರು  ಪೊಲೀಸ್ ಠಾಣಾ ಮೊ ನ-146/2018 ಕಲಂ 457,380 ಐಪಿಸಿ

ದಿನಾಂಕ-12/07/2018 ರಂದು ರಾತ್ರಿ 7-00 ಗಂಟೆಗೆ ಪಿರ್ಯಾದಿಯಾದ ಎಸ್,ವಿಜಯ್‌ಕುಮಾರ್ ಬಿನ್ ಶ್ರೀನಿವಾಸ್, 65 ವರ್ಷ, ಬ್ರಾಹ್ಮಣರು, ಬಾಲಕೃಷ್ಣಾನಂದ ಮಠದಲ್ಲಿ ವ್ಯವಸ್ಥಾಪಕರು(ಕಾಳಿಂಗಯ್ಯನಪಾಳ್ಯ), ಕಾಳಿಂಗಯ್ಯನಪಾಳ್ಯ, ಗೂಳೂರು ಹೋಬಳಿ, ತುಮಕೂರು ತಾಲ್ಲೂಕು & ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂಧರೆ ನಾನು ಕಾಳಿಂಗಯ್ಯನಪಾಳ್ಯದಲ್ಲಿರುವ ಬಾಲಕೃಷ್ಣಾನಂದ ಮಠದಲ್ಲಿ ವ್ಯವಸ್ಥಾಪಕರಾಗಿ ಕರ್ತವ್ಯ ನಿರ್ವಹಿಸಿಕೊಂಡು ಅಲ್ಲಿಯೇ ವಾಸವಾಗಿರುತ್ತೇನೆ. ನಮ್ಮ ಮಠದಲ್ಲಿ 5 ನಾಟಿ ಹಸುಗಳನ್ನು ಹಾಗೂ 3 ಕರುಗಳನ್ನು ಸಾಕಿಕೊಂಡಿದ್ದು, ಸದರಿ ಹಸು ಕರುಗಳನ್ನು ನಮ್ಮ ಮಠದಲ್ಲಿರುವ ನಾಗೇಂದ್ರ ಭಟ್‌ ರವರು ದಿನಾಂಕ: 20-06-2018 ರಂದು ಸಾಯಂಕಾಲ ಸುಮಾರು 06-00 ಗಂಟೆ ಸಮಯದಲ್ಲಿ ನಮ್ಮ ಮಠದ ಗೋಶಾಲೆಯಲ್ಲಿ ಕಟ್ಟಿ ಹಾಕಿದ್ದು, ನಂತರ ಅದೇ ದಿವಸ ರಾತ್ರಿ ಸುಮಾರು 12-30 ಗಂಟೆ ಸಮಯದಲ್ಲಿ ನಾಯಿ ಬೊಗಳುವ ಶಬ್ದ ಕೇಳಿದ್ದರಿಂದ ನಾಗೇಂದ್ರ ಭಟ್‌‌ ರವರು ಎಚ್ಚರಗೊಂಡು ತಾವು ಮಲಗಿದ್ದ ಹಾಲ್‌ನ ಬಾಗಿಲನ್ನು ತೆಗೆಯಲು ಹೋಗಲಾಗಿ, ಸದರಿ ಹಾಲ್‌ನ ಬಾಗಿಲನ್ನು ಯಾರೋ ಕಳ್ಳರು ಹೊರ ಭಾಗದಿಂದ ಚಿಲಕ ಹಾಕಿದ್ದು, ನಂತರ ನಾಗೇಂದ್ರ ಭಟ್ ರವರು ಮಠದ ಹಿಂಭಾಗಿಲಿನಿಂದ ಹೊರಗೆ ಬಂದು ನೋಡಲಾಗಿ ಒಂದು ಹಸು ಕೊಟ್ಟಿಗೆಯಿಂದ ಹೊರಗೆ ಬಂದಿದ್ದು, ಸದರಿ ಹಸುವನ್ನು ಕೊಟ್ಟಿಗೆಗೆ ಕಟ್ಟಲು ಕೊಟ್ಟಿಗೆಯ ಒಳಗೆ ಹೋಗಿದ್ದು, ಸದರಿ ಕೊಟ್ಟಿಗೆಯಲ್ಲಿದ್ದ 4 ಹಸುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುವುದು ಕಂಡು ಬರುತ್ತೆ. ನಂತರ ಸದರಿ ವಿಚಾರವನ್ನು ನಾಗೇಂದ್ರ ಭಟ್‌ ರವರು ನನಗೆ ಪೋನ್ ಮುಖಾಂತರ ತಿಳಿಸಿದರು. ನಂತರ ನಾನು ಮರು ದಿವಸ ಬೆಳಿಗ್ಗೆ 06-00 ಗಂಟೆಗೆ ವಾಪಸ್ ಮಠಕ್ಕೆ ಬಂದು ನೋಡಲಾಗಿ ನಮ್ಮ ಮಠದಲ್ಲಿನ 4 ನಾಟಿ ಹಸುಗಳನ್ನು ಯಾರೋ ಕಳ್ಳರು ದಿನಾಂಕ: 20-06-2018 ರಂದು ರಾತ್ರಿ ಸುಮಾರು 12-30 ಗಂಟೆ ಸಮಯದಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುವುದು ನಿಜವಾಗಿತ್ತು. ಆದ್ದರಿಂದ ನಮ್ಮ ಬಾಬ್ತು 4 ನಾಟಿ ಹಸುಗಳನ್ನು ಕಳ್ಳತನ ಮಾಡಿರುವ ಆಸಾಮಿಗಳನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಮುಂದಿನ ಕ್ರಮ ಜರುಗಿಸಬೇಕೆಂದು ಈ ಮೂಲಕ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ. ನಾನು ಕಳುವಾಗಿರುವ ನಮ್ಮ ಹಸುಗಳನ್ನು ಜಾತ್ರೆಗಳಲ್ಲಿ ಹಾಗೂ ಅಕ್ಕ ಪಕ್ಕದ ಗ್ರಾಮಗಳಲ್ಲಿ ಹುಡುಕಾಡಿ ಎಲ್ಲಿಯೂ ಪತ್ತೆಯಾಗಲಿಲ್ಲವಾದ್ದರಿಂದ ಈ ದಿವಸ ತಡವಾಗಿ ಬಂದು ದೂರು ನೀಡುತ್ತಿದ್ದೇನೆ ಎಂದು ನೀಡಿದ  ದೂರನ್ನು ಪಡೆದು ಠಾಣಾ ಮೊ ನಂ 146/2018 ಕಲಂ 457,380 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

ಶಿರಾ ಪೊಲೀಸ್ ಠಾಣಾ ಯು.ಡಿ.ಆರ್ ನಂ 17/2018  ಕಲಂ 174 CRPC

ಫಿರ್ಯಾದಿ ಸುದರ್ಶನ್  ಹೆಚ್.ಸಿ-243  ಶಿರಾ ನಗರ ಪೊಲೀಸ್ ಠಾಣೆ ರವರು ಮದ್ಯಾಹ್ನ 12:00  ಗಂಟೆಗೆ  ನೀಡಿದ ಫಿರ್ಯಾದಿನ ಅಂಶವೇನೆಂದರೆ, ದಿ: 12-07-18 ರಂದು ಮದ್ಯಾಹ್ನ 12:00 ಗಂಟೆಗೆ  ಫಿರ್ಯಾದಿಯು   ತಗ್ಗಿಹಳ್ಳಿ ಗೇಟ್  ಸಮೀಪದ ಹಲ್ಕೂರು ಕೆರೆ ಏರಿ ಹಿಂಭಾಗದ  ಸೀಮೆ ಜಾಲಿ ಪೊದೆಯಲ್ಲಿ  ಯಾರದೋ  ಸು: 50-55 ವರ್ಷ ವಯಸ್ಸಿನ ಅಪರಿಚಿತ ಗಂಡಸು ಸಾಯುವ ಉದ್ದೇಶದಿಂದ ಸುಮಾರು 5-6 ದಿನಗಳ ಹಿಂದೆ  ಯಾವುದೋ ರಾಸಾಯನಿಕ ವಿಷವನ್ನು ಮಧ್ಯದಲ್ಲಿ  ಬೆರೆಸಿಕೊಂಡು ಕುಡಿದು ಮೃತಪಟ್ಟಿದ್ದು  ಹೆಣವು ಕೊಳೆತ ಸ್ಥಿತಿಯಲ್ಲಿ ದೊರೆತಿದ್ದು  ಹೆಸರು ವಿಳಾಸ ತಿಳಿದುಬಂದಿರುವುದಿಲ್ಲ  ಸ್ಥಳಕ್ಕೆ ಬಂದು ಕ್ರಮ ಕೈಗೊಳ್ಳಿ ಎಂದು ಇತ್ಯಾದಿ ಅಂಶವಾಗಿರುತ್ತೆ.

ಶಿರಾ ಪೊಲೀಸ್ ಠಾಣಾ ಮೊ ನಂ 274/2018 ಕಲಂ 78(3) ಕೆ.ಪಿ ಆಕ್ಟ್

ದಿನಾಂಕ:12-07-2018 ರಂದು ಮದ್ಯಾಹ್ನ 01-00 ಗಂಟೆಯಲ್ಲಿ ಶಿರಾ ನಗರ  ಠಾಣೆಯ  ಪೋಲೀಸ್  ಇನ್ಸ್ ಪೆಕ್ಟರ್   ವಿ ಲಕ್ಷ್ಮಯ್ಯ  ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ಪಿರ್ಯಾದಿನ ಅಂಶವೇನೆಂದರೆ ನಾನು ಶಿರಾ ನಗರ  ಠಾಣೆಯ  ಪೋಲೀಸ್  ಇನ್ಸ್ ಪೆಕ್ಟರ್   ವಿ ಲಕ್ಷ್ಮಯ್ಯ  ಆದ ನಾನು ದಿನಾಂಕ-12-07-2018 ರಂದು ಬೆಳಿಗ್ಗೆ 11.30 ಗಂಟೆ ಸಮಯದಲ್ಲಿ ಶಿರಾ ನಗರದ ಬಸ್ ನಿಲ್ದಾಣದ ಕಡೆ ಗಸ್ತು ಕರ್ತವ್ಯದಲ್ಲಿದ್ದಾಗ  ಪಾರ್ಕ್ ಮೊಹಲ್ಲಾ ಹತ್ತಿರ ಹಳೇ ಆಸ್ಪತ್ರೆ ಮುಂಬಾಗ  ಸಾರ್ವಜನಿಕ  ಸ್ಥಳದಲ್ಲಿ ಕಾನೂನು ಬಾಹಿರ  ಮಟ್ಕಾ ಜೂಜಾಟ ನಡೆಯುತ್ತಿದೆ ಎಂತ  ನಮ್ಮ ಠಾಣೆಯ ಹೆಚ್ ಸಿ 101 ಅಬ್ದುಲ್ ಖಲೀಲ್ ರವರು ಖಚಿತ ಮಾಹಿತಿಯನ್ನು ನೀಡಿದ್ದು ಸದರಿ ಮಾಹಿತಿ ಮೇರೆಗೆ ಪಂಚರರು ಮತ್ತು ಸಿಬ್ಬಂದಿಗಳಾದ ಹೆಚ್ ಸಿ 101 ಅಬ್ದುಲ್ ಖಲೀಲ್   ಮತ್ತು  ಹೆಚ್ ಸಿ  80  ದುರ್ಗಯ್ಯ  ರವರೊಂದಿಗೆ  ಬೆಳಿಗ್ಗೆ 11.45  ಗಂಟೆಗೆ  ಹಳೇ  ಆಸ್ಪತ್ರೆಯ ಬಳಿ  ಹೋಗಿ ಸ್ವಲ್ಪ ದೂರದಲ್ಲಿ ಜೀಪನ್ನು ನಿಲ್ಲಿಸಿ ಮರೆಯಲ್ಲಿ ನಿಂತು ನೋಡಲಾಗಿ ಒಬ್ಬ ಆಸಾಮಿಯು ಆಸ್ಪತ್ರೆಯ ಮುಂಬಾಗ ಸಾರ್ವಜನಿಕ ಸ್ಥಳದಲ್ಲಿ ಜನರನ್ನು ಗುಂಪು ಸೇರಿಸಿಕೊಂಡು  01 ರೂಪಾಯಿಗೆ 70 ರೂಪಾಯಿ ಕೊಡುತ್ತೇನೆ ಬನ್ನಿ ನಿಮ್ಮ ಅದೃಷ್ಟದ ನಂಬರ್‌ಗಳನ್ನು ಬರೆಸಿ ಎಂತ ಕೂಗುತ್ತಾ ಸಾರ್ವಜನಿಕರಿಂದ  ಹಣವನ್ನು  ಪಣವಾಗಿ ಕಟ್ಟಿಸಿಕೊಳ್ಳುತ್ತಾ ಒಂದು ಚೀಟಿಯಲ್ಲಿ ಮಟ್ಕಾ ನಂಬರ್ ಗಳನ್ನು ಬರೆದುಕೊಳ್ಳುತ್ತಾ ಮಟ್ಕಾ ಜೂಜಾಟದಲ್ಲಿ ತೊಡಗಿದ್ದುದನ್ನು ಖಚಿತಪಡಿಸಿಕೊಂಡು ನಾನು ಮತ್ತು ಸಿಬ್ಬಂದಿಯವರು ಸುತ್ತುವರೆದು ಆಸಾಮಿಯನ್ನು ಹಿಡಿದು ಕೊಂಡು ಹೆಸರು ವಿಳಾಸ ಕೇಳಲಾಗಿ ಆಸಾಮಿ ತನ್ನ ಹೆಸರು ಫಯಾಜ್ ಖಾನ್ ಬಿನ್ ಲೇಟ್ ಮೋಹಿದ್ದೀನ್ ಖಾನ್ ಸುಮಾರು 42 ವರ್ಷ ಮುಸ್ಲೀಂ  ಜನಾಂಗ ಪಾತ್ರೆ ಕಲಾಯಿ ಕೆಲಸ  ಪಾರ್ಕ್ ಮೊಹಲ್ಲಾ  ಸಿರಾ ಟೌನ್  ಎಂತ  ತಿಳಿಸಿದನು.  ಸದರಿ ಆಸಾಮಿಯನ್ನು ಚೆಕ್ ಮಾಡಲಾಗಿ ಈತನ  ಬಳಿ ಮಟ್ಕಾ ಜೂಜಾಟದಲ್ಲಿ ಸಂಗ್ರಹಿಸಿದ್ದ ಹಣ ಇದ್ದು  ಎಣಿಸಲಾಗಿ 1560/ ರೂ ನಗದು ಹಣ,  ಮಟ್ಕಾ ನಂಬರ್ ಬರೆದಿದ್ದ  ಎರಡು ಚೀಟಿ, ಒಂದು ಲೆಡ್ ಪೆನ್ ದೊರೆತವು. ಆಸಾಮಿಯನ್ನು ಮತ್ತು ಈತನ ಬಳಿ ಇದ್ದ ಹಣ, ಮಟಕಾ ನಂಬರ್ ಚೀಟಿ, ಹಾಗು ಲೆಡ್ ಪೆನ್ ಗಳನ್ನು  ಮುಂದಿನ ನಡವಳಿಕೆ ಬಗ್ಗೆ  ಪಂಚರ ಸಮಕ್ಷಮ ಮದ್ಯಾನ 12.00  ಗಂಟೆಯಿಂದ 12.45 ಗಂಟೆವರೆಗೆ ಪಂಚನಾಮೆ ಕ್ರಮ ಜರುಗಿಸಿ  ಆರೋಪಿ ಮತ್ತು ಮಾಲನ್ನು ವಶಕ್ಕೆ ತೆಗೆದುಕೊಂಡು ಮದ್ಯಾನ 1.00  ಗಂಟೆಗೆ  ವಾಪಸ್ ಠಾಣೆಗೆ ಬಂದು  ಆರೋಪಿ ಮತ್ತು ಮಾಲನ್ನು ಹಾಜರ್ ಹಾಜರುಪಡಿಸಿ ಮುಂದಿನ ಕ್ರಮ ಕೈಗೊಳ್ಳಲು ಸೂಚಿಸಿದ್ದರ ಮೆರೆಗೆ ಈ ಪ್ರ ವ ವರದಿ

ತಿಪಟೂರು ನಗರ ಪೊಲೀಸ್ ಠಾಣಾ ಯು.ಡಿ.ಆರ್‌ ನಂ - 16/2018 ಕಲಂ:  174 ಸಿಆರ್‌ಪಿಸಿ

ದಿನಾಂಕ:12/07/2018 ರಂದು ಬೆಳಗ್ಗೆ 11-30 ಗಂಟೆಗೆ ಪಿರ್ಯಾದುದಾರರಾದ ಜಿ.ಕೆ ಪ್ರಸನ್ನ ಬಿನ್‌ ಲೇಟ್‌‌ ಕೆ.ಕೃಷ್ಣಯ್ಯ, ಶಂಕರ್‌ ರಸ್ತೆ, ತಿಪಟೂರು ಟೌನ್‌ ರವರು ನೀಡಿರುವ ದೂರಿನ ಅಂಶವೇನೆಂದರೆ, ನಮ್ಮ ಮನೆಯ ಪಕ್ಕ ವಾಸವಾಗಿರುವ ದರ್ಮೇಂದ್ರ ಜೈನ್‌ ರವರು ತಿಪಟೂರು ಟೌನ್‌ ಶಂಕರ್‌ ರಸ್ತೆಯಲ್ಲಿ ಬಳೆ ಅಂಗಡಿಯನ್ನಿಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದು, ಈತ ತನ್ನ ಕುಟುಂಬವನ್ನು ಊರಿಗೆ ಕಳುಹಿಸಿದ್ದು, ಈತ ಒಬ್ಬನೇ ವಾಸವಾಗಿದ್ದು, ಈತ ದಿನಾಂಕ:11-07-2018 ರಂದು ವ್ಯಾಪಾರ ಮುಗಿಸಿ ರಾತ್ರಿ ಮನೆಯಲ್ಲಿ ಒಬ್ಬನೇ ಇದ್ದಾಗ ಸುಮಾರು 12 ಗಂಟೆಯಲ್ಲಿ ಯಾವುದೋ ಕಾರಣಕ್ಕೂ ಅಧವಾ ವ್ಯಾಪಾರದಲ್ಲಿ ನಷ್ಟವಾಗಿರುತ್ತೆ ಎಂತಲೂ ಮನಸ್ಸಿಗೆ ಬೇಜಾರು ಮಾಡಿಕೊಂಡು ವಿಷದ ಔಷದಿಯನ್ನು ಕುಡಿದು ಆತನೇ ಎದ್ದು ಪಕ್ಕದ ಮನೆಯವರಿಗೆ ತಾನು ವಿಷ ಕುಡಿದ ವಿಚಾರವನ್ನು ತಿಳಿಸಿದಾಗ, ಅವರು ನನಗೆ ವಿಚಾರ ತಿಳಿಸಿದರು. ನಾನು ಅವರ ಮನೆಯ ಬಳಿ ಹೋಗಿ ನೋಡಲಾಗಿ ಧರ್ಮೇಂದರ್‌ ಜೈನ್‌ ಮನೆಯೊಳಗೆ ಬಿದ್ದು ಒದ್ದಾಡುತ್ತಿದ್ದಾಗ ನಾನು ಕೂಡಲೇ 108 ಅಂಬುಲೇನ್ಸ್‌ ನಲ್ಲಿ ಕರೆದುಕೊಂಡು ಹೋಗಿ ತಿಪಟೂರು ಸರ್ಕಾರಿ ಅಸ್ಪತ್ರೆಗೆ ಚಿಕಿತ್ಸೆಗೆ ಸೇರಿಸಿದ್ದು, ಬೆಳಗಿನ ಜಾವ ಸುಮಾರು 1-30 ಗಂಟೆಗೆ ಧರ್ಮೇಂದರ್‌ ಜೈನ್‌ ಮೃತಪಟ್ಟಿರುತ್ತಾರೆ, ಮೃತನ ಶವ ತಿಪಟೂರು ಸರ್ಕಾರಿ ಅಸ್ಪತ್ರೆಯ ಶವಗಾರದಲ್ಲಿರುತ್ತೆ, ತಾವುಗಳು ಮುಂದಿನ ಕ್ರಮ ಜರುಗಿಸಬೇಕಂತ ನೀಡಿದ ದೂರನ್ನು ಪಡೆದು ಕಲಂ: 174 ಸಿ.ಆರ್.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

ತಿಪಟೂರು ನಗರ ಪೊಲೀಸ್ ಠಾಣಾ ಮೊ.ನಂ - 105/2018 ಕಲಂ: 379 IPC

ದಿನಾಂಕ:12-07-2018 ರಂದು ಮಧ್ಯಾನ್ಹ 01-10 ಗಂಟೆಗೆ ಪಿರ್ಯಾದುದಾರರಾದ ದೇವರಾಜು ಬಿನ್‌ ಹನುಮಯ್ಯ, ಬಸವೇಶ್ವರಕಾಲೇಜು ಹಿಂಬಾಗ, 1ನೇ ಕ್ರಾಸ್‌, ಹೌಸಿಂಗ್‌ ಬೋರ್ಡ್‌, ತಿಪಟೂರು ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನನ್ನಪತ್ನಿಯು ಕೆ.ಬಿ ಕ್ರಾಸಿನಲ್ಲಿರುವ ಸಾನ್ವಿ ಕ್ಲಿನಿಕ್ ನಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡಿಕೊಂಡಿದ್ದು, ಇವರ ದಿನನಿತ್ಯದ ಕೆಲಸ ಕಾರ್ಯದ ನಿಮಿತ್ತ ದಿನಾಂಕ:26/6/2018 ರಂದು ತಿಪಟೂರಿನಲ್ಲಿರುವ ಶ್ರೀ ಜೇನುಕಲ್ ಯಮಹಾ ಷೋ ರೂಮ್ನಿಂದ ಹೊಸದಾಗಿ ಒಂದು ಯಮಹಾ ಫಸಿನೋ ದ್ವಿಚಕ್ರವಾಹನವನ್ನು ಖರೀದಿ ಮಾಡಿದ್ದು, ಸದರಿ ದ್ವಿಚಕ್ರವಾಹನವನ್ನು ನಮ್ಮ ಪತ್ನಿ ಕವಿತಾ ರವರು ದಿನನಿತ್ಯದ ಕೆಲಸ ಕಾರ್ಯಗಳಿಗೆ ಹೋಗಿ ಬರಲು ಉಪಯೋಗಿಸುತ್ತಿದ್ದರು, ದಿನಾಂಕ:01/7/2018 ರಂದು ನಾನು ರಾತ್ರಿ ಸುಮಾರು 9=00 ಗಂಟೆಗೆ ಮನೆಗೆ ವಾಪಸ್ಸು ಬಂದು ಯಮಹಾ ಫಸಿನೋ ದ್ವಿಚಕ್ರವಾಹನವನ್ನು  ನಾವು ವಾಸವಿರುವ ಮನೆಯ ಮುಂದೆ ಹ್ಯಾಂಡಲ್ ಲಾಕ್ ಮಾಡಿ ನಿಲ್ಲಿಸಿ, ರಾತ್ರಿ ಊಟ ಮಾಡಿ ಮಲಗಿಕೊಂಡಿದ್ದು, ಮರುದಿನ ಅಂದರೆ ದಿನಾಂಕ:02/7/2018 ಬೆಳಗಿನ ಜಾವ ಸುಮಾರು 5=00 ಗಂಟೆಗೆ ಎದ್ದು ನೋಡಲಾಗಿ ನಾನು ನಿಲ್ಲಿಸಿದ್ದ ನಮ್ಮ ಬಾಬ್ತು ಯಮಹಾ ಫಸಿನೋ ದ್ವಿಚಕ್ರ ವಾಹನವು ಕಾಣಲಿಲ್ಲ, ನಂತರ ನಾನು ನನ್ನ ಭಾಮೈದ ಪ್ರದೀಪ @ ಸಂದೀಪನಿಗೆ ವಿಚಾರ ತಿಳಿಸಿ ಎಲ್ಲಾ ಕಡೆ ಹುಡುಕಾಡಿದರೂ ಸಹ ಪತ್ತೆಯಾಗಿರುವುದಿಲ್ಲ, ಯಾರೋ ಕಳ್ಳರು ಹ್ಯಾಂಡಲ್ ಲಾಕ್ ಮುರಿದು ನಮ್ಮ ಬಾಬ್ತು ಯಮಹಾ ಫಸಿನೋ ದ್ವಿಚಕ್ರವಾಹನವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ , ಸದರಿ ಯಮಹಾ ಫಸಿನೋ ದ್ವಿಚಕ್ರವಾಹನವನ್ನು ಹೊಸದಾಗಿ ಖರೀದಿಸಿದ್ದರಿಂದ ಟೆಂರ್ಪವರಿ ರಿಜಿಸ್ಟ್ರೇಷನ್ ನಂಬರ್ KA09/NT007902/2018-19ಆಗಿದ್ದು, ಚಾಸ್ಸೀಸ್ ನಂಬರ್  ME1SED126J0187315, ಇಂಜಿನ್ ನಂಬರ್ E3Y3E0469001 ಆಗಿದ್ದು, ಇದರ ಬೆಲೆ ಸುಮಾರು 30,000 ಸಾವಿರ ಆಗಬಹುದು, ದಿನಾಂಕ:02/7/2018 ರಿಂದ ಇಲ್ಲಿಯವರೆವಿಗೆ ಎಲ್ಲಾ ಕಡೆ ಹುಡುಕಾಡಿದರೂ ಸಹ ಪತ್ತೆಯಾಗದ ಕಾರಣ ಈ ದಿನ ತಡವಾಗಿ ಬಂದು ದೂರು ನೀಡುತ್ತಿರುತ್ತೇನೆ, ನಮ್ಮ ಬಾಬ್ತು ಯಮಹಾ ಫಸಿನೋ ದ್ವಿಚಕ್ರ ವಾಹನವನ್ನು ಕಳ್ಳತನ ಮಾಡಿರುವವರನ್ನು ಪತ್ತೆ ಮಾಡಿ ಅವರ ಮೇಲೆ ಕಾನೂನು ಕ್ರಮ ಕೊಳ್ಳಬೇಕಂತ ನೀಡಿರುವ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

 

ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆ.ಮೊ.ನಂ 177/2018  ಕಲಂ 286,506 ಐಪಿಸಿ

ದಿನಾಂಕ;12/07/2018 ರಂದು ಮದ್ಯಾಹ್ನ 1-45 ಗಂಟೆಗೆ ತುಮಕೂರು ತಾಲ್ಲೋಕ್ ಅಗಳಕೋಟೆ ಬಳಿ ಇರುವ ಎನ್.ಎಸ್ ಪ್ಯುಯೆಲ್ಲಿಂಗ್ ಸರ್ವೀಸ್‌ ಮಾಲೀಕರಾದ ಸುಹಾಸ್.ಟಿ.ಎನ್ ರವರು ನೀಡಿದ ದೂರಿನಂಶವೇನೆಂದರೆ, ದಿನಾಂಕ:11/07/2018 ರಂದು ರಾತ್ರಿ ಸುಮಾರು 10-30 ಗಂಟೆ ಸಮಯದಲ್ಲಿ ಒಬ್ಬ ವ್ಯಕ್ತಿ ನಮ್ಮ ಬಂಕ್‌‌ಗೆ KA-04-P-4451ನೇ ಕಾರಿಗೆ ಪೆಟ್ರೋಲ್ ಹಾಕಿಸಿಕೊಳ್ಳಲು ಬಂದಿದ್ದು, ಆತನ ಬಳಿ ಹಣವಿಲ್ಲದ ಕಾರಣ ನಮ್ಮ ಬಂಕಿನ ಕೆಲಸ ಮಾಡುವ ಹುಡುಗರು ಪೆಟ್ರೋಲ್ ಹಾಕಲು ನಿರಾಕರಿಸಿರುತ್ತಾರೆ. ಅದರಿಂದ ಸಿಟ್ಟಿಗೆದ್ದ ವ್ಯಕ್ತಿಯು ಬಂಕ್‌ಗೆ ಬೆಂಕಿ ಇಡುತ್ತೇನೆಂದು ತನ್ನಲ್ಲಿರುವ ಬೆಂಕಿ ಪೊಟ್ಟಣವನ್ನು ತೆಗೆದು ಅಲ್ಲಿಯೇ ಕಟ್ಟಿಯನ್ನು ತೀಡಿರುತ್ತಾನೆ. ಅದೃಷ್ಟವಶಾತ್ ಯಾವುದೇ ರೀತಿಯ ಅನಾಹುತ ಸಂಭವಿಸಿರುವುದಿಲ್ಲ. ಆದ ಕಾರಣ ದಯವಿಟ್ಟು ಆ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಬೇಕೆಂದು ಹಾಗೂ ಆತನ ಮೊಬೈಲ್ ನಂ 9066616206 ಆಗಿರುತ್ತದೆ. ಮತ್ತು ವಿಡಿಯೋ ಪುಟೇಜ್ ಸಿ.ಡಿ ಲಗತ್ತಿಸಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿದೆ.

ಹುಲಿಯೂರುದುರ್ಗ ಪೊಲೀಸ್‌ ಠಾಣಾ ಮೊ.ನಂ: 146/2018 ಕಲಂ: 323 324 504 34 ಐಪಿಸಿ

ದಿನಾಂಕ: 12-07-2018 ರಂದು ಮಧ್ಯಾಹ್ನ 01-15 ಗಂಟೆಗೆ ಲಕ್ಷ್ಮಮ್ಮ ಕೋಂ ಕಾಡಯ್ಯ, ದೊಡ್ಡಕೊಪ್ಪಲು, ಹುಲಿಯೂರುದುರ್ಗ ಹೋಬಳಿ, ಕುಣಿಗಲ್ ತಾ. ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ,  ದಿನಾಂಕ: 11-07-2018 ರಂದು ಸಂಜೆ ಸುಮಾರು 04-00 ಗಂಟೆ ಸಮಯದಲ್ಲಿ ಪಿರ್ಯಾದುದಾರರ ಮನೆಯ ಪಕ್ಕದಲ್ಲಿ ದಕ್ಷಿಣ ಭಾಗದಲ್ಲಿ ಮನೆಯನ್ನು ಕಟ್ಟುತ್ತಿದ್ದು, ಸದರಿ ಇದೇ ಗ್ರಾಮದ ನಾಥಪ್ಪ ರವರ ಕಳಸಯ್ಯ @ ಕ್ಯಾತ ಮತ್ತು ಈತನ ಹೆಂಡತಿ ನಂಜಮ್ಮ ರವರಿಗೆ ಪಿರ್ಯಾದಿಯು “ನಮ್ಮ ನಿಮ್ಮ ಮನೆ ಮದ್ಯೆ ಗಲ್ಲಿ ಬಿಟ್ಟು ಗೋಡೆ ಕಟ್ಟಿ, ಕಿಟಕಿ ಇಡಬೇಡಿ” ಎಂದು ಹೇಳಿದ್ದಕ್ಕೆ ಹೀನಾಮಾನವಾಗಿ ಬೈದು ಮರದ ದೊಣ್ಣೆಯಿಂದ ಪಿರ್ಯಾದಿಯ ತಲೆ, ಬಲಭುಜಕ್ಕೆ, ಎಡಗೈ ಬೆರಳಿಗೆ ರಕ್ತಬರುವಂತೆ ಹೊಡೆದಿದ್ದು ರಕ್ತ ಪಿರ್ಯಾದಿಯ ಸೀರೆ ಬಟ್ಟೆ ಮೇಲೆಲ್ಲಾ ಚೆಲ್ಲಿರುತ್ತೆ. ಆಗ ಪಿರ್ಯಾದಿಯು ಕೆಳಕ್ಕೆ ಬಿದ್ದು ಹೋಗಿರುತ್ತಾರೆ. ಗಲಾಟೆ ನಡೆದಾಗ ಪಿರ್ಯಾದಿಯ ಗ್ರಾಮದ ತಮ್ಮಟಿನ ಹೆಂಡತಿ ಚಂದ್ರಮ್ಮ ರವರು ಸ್ಥಳದಲ್ಲೇ ಇದ್ದು ಪಿರ್ಯಾದಿಯನ್ನು ಉಪಚರಿಸಿ ಚಿಕಿತ್ಸೆಗೆ ಹುಲಿಯೂರುದುರ್ಗ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಸಿರುತ್ತಾರೆ.  ಆದ್ದರಿಂದ ಪಿರ್ಯಾದಿಯ ಮೇಲೆ ಗಲಾಟೆ ಮಾಡಿ ಹೊಡೆದ ಮೇಲ್ಕಂಡ ಅಸಾಮಿಗಳ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿರುತ್ತೆ.Thursday, 12 July 2018

ಅಪರಾಧ ಘಟನೆಗಳು 12-07-18

ಶಿರಾ ಪೊಲೀಸ್ ಠಾಣಾ ಮೊ ನಂ 273/2018 ಕಲಂ 279-304 (ಎ) ಐ.ಪಿ.ಸಿ

ದಿನಾಂಕ:11-07-2018 ರಂದು ರಾತ್ರಿ 09-00 ಗಂಟೆಗೆ ಪಿರ್ಯಾದುದಾರರಾದ  ಭಕ್ತಕುಮಾರ.ಎಸ್ ಬಿನ್ ಲೇಟ್ ಸೊಕ್ಕಣ್ಣ, 33 ವರ್ಷ, ಎ.ಡಿ ಜನಾಂಗ, ಪೊಲೀಸ್ ಕಾನ್ಸಟೇಬಲ್, ಶಿರಾ ಪೊಲೀಸ್ ಠಾಣೆ, ವಾಸ:ಪೊಲೀಸ್ ವಸತಿ ಗೃಹ, ಕಾಳಿದಾಸ ನಗರ, ಶಿರಾ ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ಪಿರ್ಯಾದಿನ ಸಾರಾಂಶವೇನೆಂದರೆ, ನಾನು ಶಿರಾ ಪೊಲೀಸ್  ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುತ್ತೇನೆ. ನನ್ನ ಮಗಳಾದ 04 ವರ್ಷ, 02 ತಿಂಗಳ ಜಾನವಿ.ಎಸ್.ಬಿ, ಎಲ್.ಕೆ.ಜಿ ವಿದ್ಯಾಬ್ಯಾಸವನ್ನು ಶಿರಾ ಟೌನ್ ಬಾಲಾಜಿ ನಗರದ ಕದಂಭ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ವಿದ್ಯಾಬ್ಯಾಸ ಮಾಡುತ್ತಿರುತ್ತಾಳೆ. ಪ್ರತಿ ದಿನ ಬೆಳಗ್ಗೆ 08-30 ಗಂಟೆಗೆ ಕಾಳಿದಾಸ ನಗರದ ಪೊಲೀಸ್ ವಸತಿ ಗೃಹದ ಬಳಿ ಮುಖ್ಯ ರಸ್ತೆಯಲ್ಲಿ ಸ್ಕೂಲ್ ವ್ಯಾನ್ ಬರುತ್ತದೆ, ಸದರಿ ಸ್ಕೂಲ್ ವ್ಯಾನ್ ನಲ್ಲಿ ನನ್ನ ಮಗಳನ್ನು ಶಾಲೆಗೆ ಕಳುಹಿಸುತ್ತೇವೆ, ಪ್ರತಿದಿನದಂತೆ ದಿನಾಂಕ:11-07-2018 ರಂದು ಬೆಳಗ್ಗೆ 08-30 ಗಂಟೆಗೆ KA-53-B-0056 ನೇ ಸ್ಕೂಲ್ ವ್ಯಾನ್ ಗೆ ಮೇಲ್ಕಂಡ ನನ್ನ ಮಗಳನ್ನು ಕಳುಹಿಸಿಕೊಟ್ಟೆವು. ಸಾಯಂಕಾಲ ಸುಮಾರು 04-30 ಗಂಟೆಗೆ ಸದರಿ ಸ್ಕೂಲ್ ವ್ಯಾನ್ ಚಾಲಕ ನಿಖಿಲ್ ಎಂಬುವನು ನನಗೆ ದೂರವಾಣಿ ಕರೆ ಮಾಡಿ, ನಿಮ್ಮ ಮಗಳು ಜಾನವಿ ಸ್ಕೂಲ್ ವ್ಯಾನ್ ನಿಂದ ಬಿದ್ದಿದ್ದಾಳೆ, ಮೈ ಕೈ ಗೆ, ತಲೆಗೆ  ಪೆಟ್ಟುಗಳಾಗಿವೆ ಬೇಗ ಬನ್ನಿ ಎಂದು ತಿಳಿಸಿದನು. ನನಗೆ ಗಾಬರಿಯಾಗಿ ಕದಂಭ ಸ್ಕೂಲ್ ಬಳಿ ಹೋದೆನು. ಆಗ ಸ್ಕೂಲ್ ನ ಶಿಕ್ಷಕಿ ನನ್ನ ಮಗಳನ್ನು ತೊಡೆಯ ಮೇಲೆ ಮಲಗಿಸಿಕೊಂಡಿದ್ದರು. ನನ್ನ ಮಗಳು ಜೋರಾಗಿ ಅಳುತ್ತಿದ್ದಳು. ಅಲ್ಲಿಯೇ ಸ್ಕೂಲ್ ಮುಂಭಾಗದ ರಸ್ತೆಯ ಮೇಲೆ KA-53-B-0056 ನೇ ಸ್ಕೂಲ್ ವ್ಯಾನ್ ಇತ್ತು, ಅದರ ಚಾಲಕ ನಿಖಿಲ್ ಸಹಾ ಅಲ್ಲಿಯೇ ಇದ್ದನು. ನಾನು ಕೂಡಲೇ ಜಾನವಿಯನ್ನು ಅಲ್ಲಿಗೆ ಬಂದ ಮತ್ತೊಬ್ಬರ ಸಹಾಯದಿಂದ ನನ್ನ  ಮೋಟಾರ್ ಸೈಕಲ್ ನಲ್ಲಿ ಶಿರಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗೆ ಸೇರಿಸಿದೆನು. ಅಲ್ಲಿನ ವೈದ್ಯರು ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿಗೆ ಹೋಗಲು ತಿಳಿಸಿದರು, ನಾನು ಆಂಬುಲೆನ್ಸ್ ವಾಹನದಲ್ಲಿ ನನ್ನ ಮಗಳನ್ನು ತುಮಕೂರಿನ ಶ್ರೀದೇವಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕರೆದುಕೊಂಡು ಹೋದಾಗ, ನನ್ನ ಮಗಳನ್ನು ಪರೀಕ್ಷಿಸಿದ ವೈದ್ಯರು ಮಗು ಮೃತಪಟ್ಟಿದೆ ಎಂದು ತಿಳಿಸಿದರು. ಆಗ ಸಮಯ ಸಾಯಂಕಾಲ 06-15 ಗಂಟೆ ಆಗಿತ್ತು. ಸದರಿ ಸ್ಕೂಲ್ ವ್ಯಾನ್ ಚಾಲಕನು ನನ್ನ ಮಗಳು ವ್ಯಾನ್ ಗೆ ಹತ್ತುತ್ತಿರುವಾಗ ಏಕಾ ಏಕಿ ವ್ಯಾನ್ ಅನ್ನು ಅತಿವೇಗವಾಗಿ ಮತ್ತು ನಿರ್ಲಕ್ಷತನದಿಂದ ಚಾಲನೆ ಮಾಡಿದ ಪರಿಣಾಮ ಮತ್ತು ವ್ಯಾನ್ ನ ಕ್ಲೀನರ್ ಪವನ್ ಎಂಬುವನು ಮಗುವನ್ನು ಸುರಕ್ಷಿತವಾಗಿ ಬಸ್ಸಿಗೆ ಹತ್ತಿಸದೇ, ನಿರ್ಲಕ್ಷತನ ತೋರಿದ್ದರಿಂದ ನನ್ನ ಮಗಳು ವ್ಯಾನ್ ಡೋರ್ ನಿಂದ ಕೆಳಗೆ ಬಿದ್ದು ತಲೆಯ ಹಿಂಭಾಗ, ಎಡಭಾಗ, ಎಡ ಮೊಣಕಾಲಿಗೆ, ಬಲಕಿವಿಯ ಕೆಳಭಾಗ, ಎಡಭುಜಕ್ಕೆ ಪೆಟ್ಟುಗಳು ಬಿದ್ದು ಗಾಯಗಳಾಗಿ ಬಾಯಿಯಲ್ಲಿ ಹಾಗೂ ಮೂಗಿನಲ್ಲಿ ರಕ್ತಸ್ರಾವ ಆಗಿ ಮೃತಪಟ್ಟಿರುತ್ತಾಳೆ. ಸದರಿ ಅಪಘಾತಕ್ಕೆ ವ್ಯಾನ್ ಚಾಲಕ ನಿಖಿಲ್ ಮತ್ತು ಕ್ಲೀನರ್ ಪವನ್ ರವರೇ ಕಾರಣರಾಗಿರುತ್ತಾರೆ. ಆರೋಪಿಗಳ ಮೇಲೆ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ಕೋರುತ್ತೇನೆಂದು ನೀಡಿದ ಪಿರ್ಯಾದನ್ನು ಸ್ವೀಕರಿಸಿ ಪ್ರಕರಣ ದಾಖಲು ಮಾಡಿರುತ್ತೆ.

ಜಯನಗರ ಪೊಲೀಸ್ ಠಾಣಾ ಯುಡಿಆರ್ ನಂ. 10/2018 ಕಲಂ 174 ಸಿಆರ್‌ಪಿಸಿ .

ದಿನಾಂಕ: 11/07/2018 ರಂದು ರಾತ್ರಿ 7-30 ಗಂಟೆ ಸಮಯದಲ್ಲಿ ತುಮಕೂರು ಟೌನ್‌, ರಾಮಜ್ಯೊಯಿಷಿನಗರ ವಾಸಿ ಮಂಜುಳಾ ಡಿ.ಎಸ್ ಕೋಂ ವಿ.ಪಿ ಮೋಹನ್ ಕುಮಾರ್ ರವರು ಠಾಣೆಗೆ ಹಾಜರಾಗಿ ನೀಡಿದ ಕಂಪ್ಯೂಟರ್ ಮುದ್ರಿತ ದೂರಿನ ಅಂಶವೇನೆಂದರೆ, ನಾನು, ನನ್ನ ಗಂಡ ವಿ.ಪಿ. ಮೋಹನ್‌‌ಕುಮಾರ್‌‌ ಹಾಗೂ ನಮ್ಮ ಒಬ್ಬಳೇ ಮಗಳು ತೇಜಸ್ವಿನಿ ತುಮಕೂರು ಟೌನ್ 1 ನೇ ಕ್ರಾಸ್‌‌ ರಾಮಜ್ಯೋಯಿಷಿ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುತ್ತೇವೆ.   ನಾನು ಸಿದ್ದಗಂಗಾ ಮಹಿಳಾ ಕಾಲೇಜಿನಲ್ಲಿ ಅಟೆಂಡರ್‌‌ ಆಗಿ ಕೆಲಸ ಮಾಡುತ್ತಿರುತ್ತೇನೆ.  ನಮ್ಮ ಯಜಮಾನರು ಮೈಸೂರಿನಲ್ಲಿ ವೆಟರ್ನರಿ ಕ್ಲೀನಿಕ್‌‌ನಲ್ಲಿ ಹೆಲ್ಪರ್‌‌ ಆಗಿ ಕೆಲಸ ಮಾಡಿಕೊಂಡಿದ್ದು, ಮೈಸೂರಿನಲ್ಲಿಯೇ ಒಂದು ಬಾಡಿಗೆ ರೂಮಿನಲ್ಲಿ ವಾಸವಾಗಿದ್ದರು. ಈಗ್ಗೆ ಸುಮಾರು 2 ತಿಂಗಳ ಹಿಂದೆ ಅಲ್ಲಿ ಕೆಲಸವನ್ನು ಬಿಟ್ಟು, ವಾಪಾಸ್ಸು ತುಮಕೂರಿಗೆ ಬಂದು ಮನೆಯಲ್ಲಿಯೇ ಇದ್ದರು. ಮೈಸೂರಿನಿಂದ ಬಂದ ನಂತರ ಎಲ್ಲಿಯೂ ಕೆಲಸಕ್ಕೆ ಹೋಗುತ್ತಿರಲಿಲ್ಲ. ನಮ್ಮ ಯಜಮಾನರುಯ ಮೊದಲಿನಿಂದಲೂ ಸ್ವಲ್ಪ ಸೈಕೋ ರೀತಿಯಲ್ಲಿ ವರ್ತಿಸುತ್ತಿದ್ದು,  ಮೈಸೂರಿನಲ್ಲಿ ಕೆಲಸ ಬಿಟ್ಟು ಬಂದ ನಂತರ ಯಾರೊಂದಿಗೂ ಬೆರೆಯದೇ ಮನೆಯಲ್ಲಿ ಒಬ್ಬರೇ ಇರುತ್ತಿದ್ದರು. ಸಣ್ಣಪುಟ್ಟ ವಿಚಾರವನ್ನೆಲ್ಲಾ ಮನಸ್ಸಿಗೆ ತೆಗೆದುಕೊಂಡು ಒಳಗೊಳಗೇ ಚಿಂತೆ ಮಾಡುತ್ತಿದ್ದರು.  ಇತ್ತೀಚೆಗಂತೂ ತುಂಬಾ ಮೋಡಿಯಾಗಿ ಒಬ್ಬಂಟಿಯಾಗಿದ್ದರು.   ಈ ದಿನ ದಿನಾಂಕ: 11-07-2018 ರಂದು ನಾನು ಬೆಳಿಗ್ಗೆ 9-15 ಕ್ಕೆ ಮಹಿಳಾ ಕಾಲೇಜಿಗೆ ಅಟೆಂಟರ್‌‌ ಕೆಲಸಕ್ಕೆ ಹೋಗಿದ್ದೆನು.  ನಮ್ಮ ಮಗಳು ತೇಜಸ್ವಿನಿ 10 ನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ಆಕೆಯೂ ಸಹಾ ಬೆಳಿಗ್ಗೆ 9-00 ಗಂಟೆಗೆ ಮನೆಯಲ್ಲಿ ತಿಂಡಿ ತಿಂದು ವಿದ್ಯಾನಿಕೇತನ ಸ್ಕೂಲ್‌‌‌ಗೆ ಹೋಗಿದ್ದಳು. ಸಾಯಂಕಾಲ ಸುಮಾರು 4-15 ಗಂಟೆ ಸಮಯದಲ್ಲಿ ನನ್ನ ಮಗಳು ತೇಜಸ್ವಿನಿ ಸ್ಕೂಲ್‌‌ ಮುಗಿಸಿಕೊಂಡು ಮನೆಗೆ ಬಂದಾಗ ನನಗೆ ಪೂನ್‌‌ ಮಾಡಿ ಮನೆಯಲ್ಲಿ ಅಪ್ಪ ಚಾಕುವಿನಿಂದ ಎಡಮೊಣಕೈ ಕೂಯ್ದುಕೊಂಡು ಹಾಲ್‌‌ನಲ್ಲಿ ನೆಲದ ಮೇಲೆ ಬಿದ್ದು ಒದ್ದಾಡುತ್ತಿದ್ದಾರೆ ತಕ್ಷಣ ಬರುವಂತೆ ತಿಳಿಸಿದ್ದು,  ನನಗೆ ಗಾಬರಿಯಾಗಿ ತಕ್ಷಣ ಸಾಯಂಕಾಲ ಸುಮಾರು 4-30 ಗಂಟೆ ಸಮಯಕ್ಕೆ ನಮ್ಮ ಮನೆಯ ಬಳಿಗೆ ಬಂದು ನೋಡಲಾಗಿ, ನಮ್ಮ ಯಜಮಾನರು ಎಡಮೊಣಕೈಯ್ಯಲ್ಲಿ ಅಲ್ಲಲ್ಲಿ ಕೂಯ್ದುಕೊಂಡಿದ್ದರು. ನಾನು ನಮ್ಮ ಯಜಮಾರನ್ನು ವಿಚಾರ ಮಾಡಲು ಹೋದಾಗ ಏನನ್ನೂ ಸಹಾ ತಿಳಿಸದೇ ಹಾಗೆಯೇ ಬಾತ್‌‌ರೂಂಗೆ ಹೋದರು. ನಾವು ಬಾತ್‌ರೂಂಗೆ ಹೋಗಿದ್ದಾರೆ ಬರುತ್ತಾರೆಂದು ತಿಳಿದು, ನಾನು ನನ್ನ ಮಗಳು ಮನೆಯ ಹಾಲ್‌‌ನಲ್ಲಿಯೇ ಕುಳಿತಿದ್ದೆವು. ಎಷ್ಟು ಹೊತ್ತಾದರೂ ಸಹಾ ಬಾತ್‌‌ರೂಮಿನಿಂದ ಬಾರದ ಕಾರಣ ಬಾತ್‌‌ರೂಮಿನ ಬಾಗಿಲನ್ನು ಜೋರಾಗಿ ತೆಳ್ಳಿ, ಬಾತ್‌‌‌ರೂಮಿನೊಳಕ್ಕೆ ಹೋಗಿ ನೋಡಲಾಗಿ, ನಮ್ಮ ಯಜಮಾನರು ಅವರ ಪ್ಯಾಂಟಿಗೆ ಹಾಕಿಕೊಳ್ಳುವ ಲೆದರ್‌‌‌ಬೆಲ್ಟ್‌‌ನಿಂದ ಬಾತ್‌ರೂಂನ ವೆಂಟರ್‌‌‌ಲೇಟ್‌‌ ಕಿಟಕಿಗೆ ಕಟ್ಟಿಕೊಂಡು ಮತ್ತೊಂದು ತುದಿಯನ್ನು ಕುತ್ತಿಗೆಗೆ ಬಿಗಿದುಕೊಂಡು ನೇಣು ಹಾಕಿಕೊಂಡು ನೇತಾಡುತ್ತಿದ್ದರು.  ಆಗ ನಮಗೆ ಗಾಬರಿಯಾಗಿ ಮನೆಯ ಹೊರಗೆ ಬಂದು ಕೂಗಾಡಿದಾಗ ಅಕ್ಕ ಪಕ್ಕದ ಮನೆಯವರಾದ ಸತೀಶ ಎಂಬುವರು ಬಂದರು.  ಆಗ ನಾನು ಹಾಗೂ ಸತೀಶ್‌‌ ಇಬ್ಬರೂ ಸೇರಿ ನಮ್ಮ ಯಜಮಾನರಿಗೆ ಇನ್ನೂ ಜೀವ ಇರಬಹುದೆಂದು ತಿಳಿದು, ಚಾಕುವಿನಿಂದ ನೇಣು ಹಾಕಿಕೊಂಡಿದ್ದ ಬೆಲ್ಟನ್ನು ಕತ್ತರಿಸಿ, ನಮ್ಮ ಯಜಮಾನರನ್ನು ಮನೆಯ ಹಾಲ್‌‌‌‌ಗೆ ಎತ್ತಿಕೊಂಡು ಬಂದು ಹಾಲ್‌‌ನಲ್ಲಿರುವ ದಿವಾನ್‌‌‌ ಕಾಟ್‌‌‌ ಮೇಲೆ ಮಲಗಿಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಲೆಂದು ಆಟೋವನ್ನು ಕರೆದುಕೊಂಡು ಬರುವಷ್ಟರಲ್ಲಿ ನಮ್ಮ ಯಜಮಾನರು ಮನೆಯ ಹಾಲ್‌‌ನಲ್ಲಿ ತೀರಿ ಹೋಗಿರುತ್ತಾರೆ.   ನಮ್ಮ ಯಜಮಾನರು ಕೆಲಸ ಇಲ್ಲವೆಂದು ಮನಸ್ಸಿಗೆ ಬೇಜಾರು ಮಾಡಿಕೊಂಡೋ ಅಥವಾ ಇನ್ಯಾವುದೋ ವಯಕ್ತಿಕ ವಿಚಾರಕ್ಕಾಗಿ ಮನಸ್ಸಿಗೆ ಬೇಜಾರು ಮಾಡಿಕೊಂಡು, ಜೀವನದಲ್ಲಿ ಜಿಗುಪ್ಸೆಗೊಂಡು ಈ ರೀತಿ ತನ್ಮೂಲಕ ತಾನೇ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾರೆ.  ನಮ್ಮ ಯಜಮಾನರ ಸಾವಿನಲ್ಲಿ ಬೇರೆ ಯಾವುದೇ ಅನುಮಾನ ಇರುವುದಿಲ್ಲ.  ಆದ್ದರಿಂದ ತಾವು ಸ್ಥಳಕ್ಕೆ ಬಂದು, ಶವಪರಿಶೀಲಿಸಿ, ನಮ್ಮ ಯಜಮಾನರ ಶವವನ್ನು ಅಂತಿಮ ಸಂಸ್ಕಾರ ಮಾಡಲು ಅನುವು ಮಾಡಿಕೊಡಬೇಕೆಂದು ಕೋರುತ್ತೇನೆ. ನಮ್ಮ ಯಜಮಾನರು ಮೃತಪಟ್ಟಿರುವ ವಿಚಾರವನ್ನು ನಮ್ಮ ಸಂಬಂಧಿಕರಿಗೆಲ್ಲಾ ತಿಳಿಸಿ, ಈಗ ತಡವಾಗಿ ಪೊಲೀಸ್ ಠಾಣೆಗೆ ಬಂದು ದೂರು ನೀಡಿರುತ್ತೇನೆಂತ ಪಿರ್ಯಾದು ಅಂಶವಾಗಿರುತ್ತೆ.

ಅಮೃತೂರು ಪೊಲೀಸ್‌ ಠಾಣಾ ಮೊನಂ-128/2018, ಕಲಂ-397 ಐಪಿಸಿ

ದಿನಾಂಕ: 11-07-2018 ರಂದು 11-30 ಗಂಟೆ ಸಮಯದಲ್ಲಿ ಪಿರ್ಯಾದಿ  ಜಿ.ಬಿ.ಚಂದ್ರಶೇಖರ್ ಬಿನ್ ಬಿ.ಸಿ.ಬಸ್ಸಪ್ಪ, 70 ವರ್ಷ, ವೀರಶೈವ ಲಿಂಗಾಯ್ತರು ಜನಾಂಗ, ತುಮಕೂರು ಖಾಸಗಿ ಬಸ್ ಮಾಲೀಕರ ಸಂಘದ ಆಫೀಸ್ ಕೆಲಸ, ವಾಸ ನಂ-713, ಸಿದ್ದಲಿಂಗಕೃಪ, 9 ನೇ ಕ್ರಾಸ್, 2 ನೇ ಮೇನ್, ಎಸ್.ಐ.ಟಿ. ಬಡಾವಣೆ, ತುಮಕೂರು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ, ದಿನಾಂಕ: 10-07-2018 ರಂದು ನಾನು ಮತ್ತು ನನ್ನ ತಮ್ಮ ಜಿ.ಬಿ.ನಾಗರಾಜು ಹಾಗೂ ನಮ್ಮ ಮೊಮ್ಮಕ್ಕಳಾದ ವಚನ್ ಹೊನ್ನುಡಿಕೆ, ಚೇತನ್.ಎಸ್. ರವರುಗಳು ಕುಣಿಗಲ್ ತಾಲ್ಲೂಕ್, ಎಡೆಯೂರು ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ದೇವಸ್ಥಾನಕ್ಕೆ ಹೋಗಲು ಕೆ.ಎ-06, ಸಿ-7867 ರ ಇಂಡಿಕಾ ಕಾರಿನಲ್ಲಿ ರಾತ್ರಿ 10-30 ಗಂಟೆ ಸಮಯಕ್ಕೆ ತುಮಕೂರನ್ನು ಬಿಟ್ಟು ಮಧ್ಯರಾತ್ರಿ ಎಡೆಯೂರಿಗೆ ಬಂದು ದೇವಸ್ಥಾನದ ಬಳಿ ಕಾರಿನಲ್ಲಿ ಮಲಗಿದ್ದು, ನಂತರ ದಿನಾಂಕ: 11-07-2018 ರಂದು ಬೆಳಗಿನ ಜಾವ ಸುಮಾರು 2-00 ಗಂಟೆ ಸಮಯದಲ್ಲಿ ಟೀ ಕುಡಿಯೋಣವೆಂದು ಎಡೆಯೂರು, ಚಾಕೇನಹಳ್ಳಿ ಕಡೆಗಳಲ್ಲಿ ಹುಡುಕಿದೆವು. ಆ ವೇಳೆಯಲ್ಲಿ ಯಾರೂ ಇನ್ನೂ ಹೋಟೇಲ್ ಗಳನ್ನು ತೆಗೆದಿಲ್ಲವಾದ್ದರಿಂದ ಚಾಕೇನಹಳ್ಳಿ ಗ್ರಾಮದ ಬಳಿ ಇರುವ ಬೈರವೇಶ್ವರ ಹೋಟೆಲ್ ಮುಂಭಾಗದಲ್ಲಿ ಹಾದು ಹೋಗಿರುವ ಎನ್.ಹೆಚ್-75 ರ ಬೆಂಗಳೂರು-ಹಾಸನ ರಸ್ತೆಯ ಎಡಪಕ್ಕದ ಪುಟ್ ಪಾತ್ ನಲ್ಲಿ ನಮ್ಮ ಕಾರನ್ನು ನಿಲ್ಲಿಸಿಕೊಂಡು ನಾವೆಲ್ಲರೂ ಕಾರಿನಲ್ಲಿ ಮಲಗಿರುವಾಗ್ಗೆ, ಬೆಳಗಿನ ಜಾವ ಸುಮಾರು 2-30 ಗಂಟೆ ಸಮಯದಲ್ಲಿ ಬೆಂಗಳೂರು ಕಡೆಯಿಂದ ಬಂದ ಒಂದು ಇಂಡಿಕಾ ಕಾರು ನಮ್ಮ ಕಾರಿನ ಪಕ್ಕಕ್ಕೆ ಬಂದು ನಿಂತಿತು. ಆ ಕಾರಿನಲ್ಲಿ 6 ಹುಡುಗರಿದ್ದು, ಅವರಲ್ಲಿ 4 ಜನ ಹುಡುಗರು ಇಳಿದು ನಮ್ಮ ಕಾರಿನ ಬಳಿ ಬಂದು ನಮ್ಮನ್ನು ಕೂಗಿ ಎಬ್ಬಿಸಿ, ಮೈಸೂರಿಗೆ ಯಾವ ಕಡೆ ಹೋಗಬೇಕು ಎಂದು ಕೇಳಿದಾಗ ನಾವು ಇದೇ ರಸ್ತೆಯಲ್ಲಿ ಮುಂದೆ ಹೋಗಿ ಎಂದು ಹೇಳುತ್ತಿದ್ದಂತೆ, ಅವರಲ್ಲಿದ್ದ ಒಬ್ಬನು ತನ್ನ ಬಳಿ ಇದ್ದ ಚಾಕುವನ್ನು ಮತ್ತು ಮತ್ತೊಬ್ಬನು ಒಂದು ರಾಡನ್ನು ತೋರಿಸಿ, ಏ ಬೋಳಿ ಮಕ್ಕಳಾ ನಿಮ್ಮ ಬಳಿ ಇರುವ ದುಡ್ಡು, ಮೊಬೈಲ್ ಕೊಡಿ ಇಲ್ಲವಾದರೆ ನಿಮ್ಮನ್ನು ಹೊಡೆದು ಸಾಯಿಸುತ್ತೇವೆಂದು ನಮಗೆ ಹೆದರಿಸಿ ನನ್ನ ಬಳಿ ಇದ್ದ 500/-ರೂ ಹಣ, ಸೆಲ್ಕನ್ ಮೊಬೈಲನ್ನು ಮತ್ತು ನನ್ನ ತಮ್ಮನ ಬಳಿ ಇದ್ದ 300/-ರೂ ಹಣ, ವಿವೋ ಮೊಬೈಲನ್ನು, ಎಸ್.ಬಿ.ಐ. ಬ್ಯಾಂಕಿನ ಎ.ಟಿ.ಎಂ. ಕಾರ್ಡ್, ಕೆ.ಎಸ್.ಆರ್.ಟಿ.ಸಿ. ಬಸ್ಸಿನ ಸಿನಿಯರ್ ಐ.ಡಿ. ಕಾರ್ಡನ್ನು ಹಾಗೂ ನನ್ನ ಮೊಮ್ಮಗ ಚೇತನ್ ಬಳಿ ಇದ್ದ 5,700/- ಹಣವನ್ನು ಕಿತ್ತುಕೊಂಡು, ಹೋಗುವಾಗ ಚಾಕು ಹಿಡಿದ್ದಿದ್ದವನು ಚಾಕುವಿನ ಹಿಡಿಯಿಂದ ನನ್ನ ಹಣೆಗೆ ಮತ್ತು ಬಲ ಕೆನ್ನೆಗೆ ಗುದ್ದಿ ಗಾಯಗೊಳಿಸಿ, ಆನಂತರ ಕಾರನ್ನು ಹತ್ತಿಕೊಂಡು ಹಾಸನ ಕಡೆಗೆ ಹೊರಟು ಹೋದರು. ಈ ರೀತಿ ನಮ್ಮನ್ನು ಹೆದರಿಸಿ ಹಣ ದೋಚುವಾಗ ನಮ್ಮ ಮೊಮ್ಮಗ ಚೇತನ್ ಅವರು ಬಂದಿದ್ದ ಇಂಡಿಕಾ ಕಾರಿನ ನಂಬರ್ ನೋಡಿಕೊಂಡು ನನಗೆ ಹೇಳಿದ್ದು, ಆ ಇಂಡಿಕಾ ಕಾರಿನ ನಂಬರ್ ಕೆ.ಎ-02 ಎ.ಇ-4137 ಆಗಿರುತ್ತೆ. ನಮ್ಮ ಬಳಿ ಬಂದ 4 ಜನ ಹುಡುಗರು ಕನ್ನಡದಲ್ಲಿಯೇ ಮಾತನಾಡುತ್ತಿದ್ದರು. ಆ 4 ಜನ ಹುಡುಗರನ್ನು ನಾನು ಹತ್ತಿರದಿಂದ ನೋಡಿರುತ್ತೇನೆ, ಮತ್ತೆ ನೋಡಿದರೆ ಗುರ್ತಿಸುತ್ತೇನೆ. ಈ ವಿಚಾರವನ್ನು ಮನೆಗೆ ತಿಳಿಸಿ ಈಗ ಬಂದು ತಡವಾಗಿ ದೂರು ನೀಡುತ್ತಿದ್ದೇನೆ. ನಮಗೆ ಚಾಕು ಮತ್ತು ರಾಡನ್ನು ತೋರಿಸಿ ಹೊಡೆದು ಹೆದರಿಸಿ, ನಮ್ಮ ಬಳಿ ಇದ್ದ ಹಣ, ಮೊಬೈಲ್ ಗಳು, ಎ.ಟಿ.ಎಂ. ಕಾರ್ಡ್‌‌, ಕೆ.ಎಸ್.ಆರ್.ಟಿ.ಸಿ. ಬಸ್ಸಿನ ಸಿನಿಯರ್ ಐ.ಡಿ. ಕಾರ್ಡನ್ನು ಕಿತ್ತುಕೊಂಡು ಹೋಗಿರುವ ಕೆ.ಎ-02 ಎ.ಇ-4137 ಇಂಡಿಕಾ ಕಾರನ್ನು ಮತ್ತು ಆ ಕಾರಿನಲ್ಲಿದ್ದ 6 ಜನ ಹುಡುಗರನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರುತ್ತೇನೆ ಎಂದು ಇದ್ದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿರುತ್ತೆ.

ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆ. ಮೊ.ನಂ 175/2018  ಕಲಂ 279,304(ಎ) ಐಪಿಸಿ.

ದಿನಾಂಕ:11/07/2018 ರಂದು ಬೆಳಿಗ್ಗ 8-30 ಗಂಟೆಗೆ ತುಮಕೂರಿನ ಎಸ್‌ಎಸ್ ಪುರಂ ಚನ್ನಪ್ಪನಪಾಳ್ಯ ವಾಸಿ ಮಹೇಶ್.ಜಿ ಬಿನ್ ಗುರುಮೂರ್ತಿ ರವರು ನೀಡಿದ ದೂರಿನಂಶವೇನೆಂದರೆ, ನಮ್ಮ ತಂದೆಯವರಿಗೆ ಇಬ್ಬರು ಮಕ್ಕಳಿದ್ದು ನಾನು ಹಿರಿಯ ಮಗನಾಗಿರುತ್ತೇನೆ. ನಮ್ಮ ತಂದೆ ಗುರುಮೂರ್ತಿರವರು ಟೈಲರಿಂಗ್ ಕೆಲಸ ಮಾಡಿಕೊಂಡಿದ್ದು, ದಿನಾಂಕ:10/07/2018 ರಂದು ಕೆಲಸ ಮುಗಿಸಿಕೊಂಡು ನಾಗವಲ್ಲಿಯಲ್ಲಿ ವಿವಾಹಕ್ಕೆ ಹೋಗಿಬರಲು ನನ್ನ ಬಾಬ್ತು KA-06-HA-7298ನೇ ದ್ವಿಚಕ್ರ ವಾಹನದಲ್ಲಿ ರಾತ್ರಿ 8-15 ಗಂಟೆಗೆ ಮನೆಯಿಂದ ಹೊರಟಿದ್ದು, ರಾತ್ರಿ ಸುಮಾರು 9-45 ಗಂಟೆಯಿಂದ 10-00 ಗಂಟೆಯ ಅವಧಿಯಲ್ಲಿ ನನಗೆ ನಮ್ಮ ತಂದೆಯವರ ಪೋನ್‌ನಿಂದ ಕರೆ ಬಂದಿದ್ದು ಯಾರೋ ದಾರಿಹೋಕರು ಮಾತನಾಡಿ ಈ ಪೋನ್ ನಂಬರಿನ ವ್ಯಕ್ತಿಗೆ ಗೂಳೂರು ಸರ್ಕಾರಿ ಶಾಲೆಯ ಮುಂಭಾಗದ ರಸ್ತೆಯ ನಿರ್ಮಾಣದ ಹಂತದಲ್ಲಿರುವ ರಸ್ತೆ ಹಂಪ್ಸ್ ಬಳಿ ಅಪಘಾತವಾಗಿ ಬಿದ್ದಿರುತ್ತಾರೆ ಎಂದು ತಿಳಿಸಿದ ಕೂಡಲೇ ನಾನು ಗಾಬರಿಗೊಂಡು ಗೂಳೂರಿನ ಸರ್ಕಾರಿ ಶಾಲೆಯ ಮುಂಭಾಗದಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಯಲ್ಲಿ ನಿರ್ಮಿಸಿರುವ ಹಂಪ್ಸ್ ಬಳಿಗೆ ಹೋಗಿ ನೋಡಲಾಗಿ ನನ್ನ ತಂದೆ ರಸ್ತೆಯ ಹಂಪ್ಸ್ ಇರುವುದು ಗಮನಕ್ಕ ಬಾರದೇ ಹಂಪ್ಸನ್ನು ಎಗರಿಸಿರುವುದರಿಂದ ದ್ವಿಚಕ್ರ ವಾಹನ ನಿಯಂತ್ರಣಕ್ಕೆ ಬಾರದೇ ಬೈಕಿನಿಂದ ರಸ್ತೆಯ ಮೇಲೆ ಬಿದ್ದಿದ್ದು ತಲೆಗೆ ತೀವ್ರ ತರಹದ ಪೆಟ್ಟಾಗಿ ರಕ್ತಸ್ರಾವದಿಂದ ಒದ್ದಾಡುತ್ತಿದ್ದವರನ್ನು ಕಂಡು ಕೂಡಲೇ ಗೂಳೂರಿನ ಸರ್ಕಾರಿ ಆಸ್ಪತ್ರೆ 108 ರಲ್ಲಿ ಕರೆದುಕೊಂಡು ಹೋಗಿದ್ದು ಹೆಚ್ಚಿನ ಚಿಕಿತ್ಸೆಗಾಗಿತುಮಕೂರಿನ ಜಿಲ್ಲಾ ಆಸ್ಪತ್ರೆ ವೈದ್ಯರಲ್ಲಿ ತೋರಿಸಲು ಕರೆದುಕೊಂಡು ಬಂದಿದ್ದಾಗ ಮಾರ್ಗಮಧ್ಯೆ ನನ್ನ ತಂದೆ ಗುರುಮೂರ್ತಿರವರು ಮೃತಪಟ್ಟಿರುತ್ಥಾರೆಂದು ವೈದ್ಯರು ತಿಳಿಸಿರುತ್ತಾರೆ. ನನ್ನ ತಂದೆ ಮೃತಪಡಲು ಗೂಳೂರು ಸರ್ಕಾರಿ ಶಾಲೆಯ ಮುಂಭಾಗ ಹಾದುಹೋಗುವ ರಸ್ತೆಗೆ ನಿರ್ಮಾಣ ಹಂತದಲ್ಲಿರುವ ರಸ್ತೆ ಹಂಪ್ಸ್ ಸುಮಾರು ಎತ್ತರಕ್ಕಿದ್ದು ಈ ರಸ್ತೆ ಹಂಪ್ಸ್ ಯಾವುದೇ ರೀತಿಯ ಸೂಚನೆಗಳನ್ನು ನೀಡುವಂತಹ ಚಿಹ್ನೆಗಳನ್ನು ಹಾಕಿಲ್ಲದೇ ಇರುವುದರಿಂದ ನನ್ನ ತಂದೆಯ ಗಮನಕ್ಕೆ ಹಂಪ್ಸ್ ರಾತ್ರಿ ವೇಳೆ ಕಂಡುಬರದೇ ಇದ್ದುದರಿಂಧ ನನ್ನ ತಂದೆ ಬೈಕನ್ನು ಹಂಪ್ಸ್ ಮೇಲೆ ಎಗರಿಸಿರುತ್ತಾರೆ. ಎಗರಿಸಿದ್ದರಿಂದ ವಾಹನ ನಿಯಂತ್ರಣಕ್ಕೆ ಬಾರದೇ ರಸ್ತೆ ಮೇಲೆ ಬಿದ್ದು ರಸ್ತಸ್ರಾವದಿಂದ ಮೃತಪಟ್ಟಿರುತ್ತಾರೆ. ಆದ್ದರಿಂದ ಗೂಳೂರು ರಸ್ತೆಯ ಹಂಪ್ಸ್ ನ್ನು ನಿರ್ಮಾಣ ಮಾಡುತ್ತಿರುವ ಕೆಶಿಪ್ ಸಂಸ್ಥೆಯ ಮೇಲೆ ಕಾನೂನು ರೀತಿ ಕ್ರಮ ಕೈಗೊಂಡು ನಮಗೆ ನ್ಯಾಯ ಒದಗಿಸಿಕೊಡಬೇಕೆಂದು ಮತ್ತು ಮೃತ ನನ್ನ ತಂದೆ ಗುರುಮೂರ್ತಿ ರವರ ಮೃತದೇಹವು ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿರುತ್ತದೆ. ಆದ್ದರಿಂಧ ಮುಂದಿನ ಕ್ರಮ ಜರುಗಿಸಿಕೊಡಬೇಕೆಂದು ತಡವಾಗಿ ಬಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿದೆ.

ತುಮಕೂರು ಗ್ರಾಮಾಂತರ ಮೊ.ನಂ 176/2018  ಕಲಂ 279,304(ಎ) ಐಪಿಸಿ ರೆ/ವಿ 187 ಐಎಂವಿ ಆಕ್ಟ್.

ದಿನಾಂಕ:11/07/2018 ರಂದು ಬೆಳಿಗ್ಗೆ 9-45 ಗಂಟೆಗೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೆಚ್ ಸಿ 191 ನಂಜೇಗೌಡ ರವರು ನೀಡಿದ ದೂರಿನಂಶವೇನೆಂದರೆ, ದಿನಾಂಕ:11/07/2018 ರಂದು ಬೆಳಿಗ್ಗೆ 6-00 ಗಂಟೆಗೆ ತುಮಕೂರು ಗ್ರಾಮಾಂತರ ಠಾಣಾ ಸರಹದ್ದು ಚೀತಾ-11 ಗಸ್ತಿಗೆ ನೇಮಕವಾಗಿ ಬೆಳಿಗ್ಗೆ 7-15 ಗಂಟೆ ಸಮಯದಲ್ಲಿ ಡಿ.ಎಂ ಪಾಳ್ಯ ಬಳಿ ವಿತ್ರಿ ಮೋಟಾರ್ಸ್ ಮುಂಬಾಗ ಎನ್‌ಹೆಚ್ 48 ರಸ್ತೆಯಲ್ಲಿ ಗಸ್ತು ಮಾಡಿಕೊಂಡು ಹೋಗುತ್ತಿರುವಾಗ ತುಮಕೂರು-ಶಿರಾ ಕಡೆ ಹೋಗುವ ಎನ್‌ಹೆಚ್-48 ರಸ್ತೆಯ 1ನೇ ಟ್ರ್ಯಾಕ್‌ನಲ್ಲಿ ಯಾವುದೋ ವ್ಯಕ್ತಿಯ ಮೇಲೆ ಅಪರಿಚಿತ ವಾಹನವು ಹತ್ತಿ ದೇಹವು ಮಾಂಸದ ಮುದ್ದೆಯಂತೆ ಆಗಿತ್ತು, ಹತ್ತಿರ ಹೋಗಿ ನೋಡಲಾಗಿ ಬಿಳಿ & ಕಪ್ಪು ಗೀರುಳ್ಳ ಚೌಕಳಿ ಹರಿದಿರುವ ಶರ್ಟ್‌ ಆಗಿರುತ್ತೆ. ಕಾಫಿ ಬಣ್ಣದ ಮಾಸಲು ನಿಕ್ಕರ್ ಇದ್ದು ಭಿಕ್ಷುಕನಂತೆ ಕಂಡುಬರುವ ಅಪರಿಚಿತ ಶವವಾಗಿರುತ್ತೆ. ಈತನ ಚೆಹರೆ ಹೆಸರು, ವಿಳಾಸ ಪತ್ತೆಯಾಗಿರುವುದಿಲ್ಲ ಈತನು ತುಮಕೂರು,ಶಿರಾ ಬೆಂಗಳುರು ಮಾರ್ಗವಾಗಿ ಹೋಗುವ ಎನ್‌ಹೆಚ್ 48 ರಸ್ತೆಯಲ್ಲಿ ಅಂದರೆ ದಿ:10/07/2018 ರಂದು ರಾತ್ರಿ ಯಾವುದೋ ವೇಳೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ್ಗೆ ಯಾವುದೋ ವಾಹನದ ಚಾಲಕನು ಡಿಕ್ಕಿ ಹೊಡೆದುಕೊಂಡು ಹೋಗಿದ್ದ ತದನಂತರ ಈ ವ್ಯಕ್ತಿ ಮೇಲೆ ಹಲವಾರು ವಾಹನಗಳು ಮೇಲೆ ಹಲವಾರು ವಾಹನಗಳು ಮೇಲೆ ಹರಿದು ಹೋಗಿರುವುದರಿಂದ ಮಂಸ ಮುದ್ದೆಯಂತೆ ಕಂಡು ಬಂದಿದ್ದು ವಾರಸುದಾರರ ಪತ್ತೆಗಾಗಿ ನಾನು ವಿಚಾರ ಮಾಡಿದ್ದು ಯಾರು ಪತ್ತೆಯಾಗಿರುವುದಿಲ್ಲ. ಸುಹೇಲ್ ಎಂಬುವರ ಕಾಸಗಿ ತುರ್ತುವಾಹನವನ್ನು ಸ್ಥಳಕ್ಕೆ ಬೆಮಾಡಿಕೊಂಡು ಅಪರಿಚಿತ ವ್ಯಕ್ತಿಯ ಮುದ್ದೆಯಾಗಿರುವ ದೇಹವನ್ನು ತುಮಕೂರು ಜಿಲ್ಲಾ ಆಸ್ಪತ್ರೆಯ ಶವಾಗಾರದ ಶೀಥಿಲೀಕರಣದಲ್ಲಿ ಬೆಳಿಗ್ಗೆ 9-30 ಗಂಟೆಗೆ ಇರಿಸಿ ಮುಂದಿನ ಕ್ರಮಕ್ಕಾಗಿ ನಿಡಿದ ವರದಿಯನ್ನು ಪಡೆದು ಪ್ರಕರಣ ದಾಖಲಿಸಿದೆ.

 

ವೈ ಎನ್  ಹೊಸಕೋಟೆ  ಪೊಲೀಸ್ ಠಾಣಾ ಮೊ. ನಂ-  60/2018   ಕಲಂ: 78 Cls 3 Kp Act

ದಿನಾಂಕ 11/07/2018  ರಂದು  ಮದ್ಯಾಹ್ನ 12:00 ಗಂಟೆ ಸಮಯದಲ್ಲಿ ನಾನು ಠಾಣೆಯಲ್ಲಿರುವಾಗ್ಗೆ ವೈ ನ್ ಹೊಸಕೋಟೆ ಪೊಲೀಸ್ ಠಾಣಾ ಸರಹದ್ದು ವೈ ಎನ್ ಹೊಸಕೋಟೆ  ಗ್ರಾಮದ  ಕೆನರಾ ಬ್ಯಾಂಕ್ ಬಳಿ ಸಾರ್ವಜನಿಕ ಸ್ಥಳದಲ್ಲಿ   ಮಟ್ಕಾ ಜೂಜಾಟ ನಡೆಯುತ್ತಿದೆ ಎಂತ ಮಾಹಿತಿ ಬಂದ ಮೇರೆಗೆ ಪಂಚರು ಹಾಗೂ ಸಿಬ್ಬಂದಿಯೊಂದಿಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ಜೀಪ್ ನಿಲ್ಲಿಸಿ ಕೆಳಗಿಳಿದು ಸ್ವಲ್ಪ ದೂರು ನಡೆದುಕೊಂಡು ಕೆನರಾ ಬ್ಯಾಂಗ್ ಬಳಿ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ  ವೈ.ಎನ್,ಹೊಸಕೋಟೆ  ಗ್ರಾಮದ    ಕೆನರಾ ಬ್ಯಾಂಕ್ ಬಳಿ  ಒಬ್ಬ ಆಸಾಮಿಯು ಜನರನ್ನು ಕುರಿತು ಬನ್ನಿ ಮಟ್ಕಾ ಚೀಟಿ ಬರೆಸಿಕೊಳ್ಳಿ 1 ರೂಗೆ 70 ರೂ ಕೊಡುತ್ತೇನೆಂತ ಕೂಗೂತ್ತಾ ಜನರಿಂದ ಹಣವನ್ನು ಪಣವಾಗಿ ಕಟ್ಟಿಸಿಕೊಂಡು ಮಟ್ಕಾ ಚೀಟಿ ಬರೆದು ಕೊಡುತ್ತಾ  ಮಟ್ಕಾ ಜೂಜಾಟದಲ್ಲಿ  ತೊಡಗಿದ್ದವನನ್ನು  ನಾನು ಮತ್ತು ಸಿಬ್ಬಂದಿ ಹಾಗೂ ಪಂಚರೊಂದಿಗೆ ದಾಳಿ ನಡೆಸಿದ್ದು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಅಲ್ಲಿ ನೆರೆದಿದ್ದ ಜನರು ಓಡಿ ಹೋಗಿದ್ದು ಸಾರ್ವಜನಿಕರಿಂದ ಹಣವನ್ನು ಪಣಕ್ಕೆ ಕಟ್ಟಿಸಿಕೊಂಡು ಮಟ್ಕಾ ಚೀಟಿ ಬರೆದುಕೊಡುತ್ತಿದ್ದ  ಆಸಾಮಿಯನ್ನು   ಹಿಡಿದು ಆತನ  ಹೆಸರು ವಿಳಾಸ ಕೇಳಲಾಗಿ   ಜಿಲಾನಿ ಬಿನ್ ಲೇ|| ಮತೀನ್ ಸಾಬ್,40 ವರ್ಷ, ಕಾರ್ಪೆಂಟರ್ ಕೆಲಸ, ಮುಸ್ಲಿಂ ಜನಾಂಗ, ಎ-2 ಬ್ಲಾಕ್, ವೈ ಎನ್ ಹೊಸಕೋಟೆ ಟೌನ್,ಪಾವಗಡ ತಾ||  ಎಂತ ತಿಳಿಸಿದ್ದು ಆತನ ಬಳಿ ಇದ್ದ  ಮಟ್ಕಾ ನಂಬರ್ ಗಳನ್ನು  ಬರೆದಿರುವ ಒಂದು  ಚೀಟಿ, ಒಂದು ಲೆಡ್ ಪೆನ್ ಹಾಗೂ ಪಣಕ್ಕೆ ಕಟ್ಟಿಸಿಕೊಂಡಿದ್ದ 380=00 ರೂ ನಗದು ಹಣ ಇದ್ದು,   ಪಂಚರ ಸಮಕ್ಷಮ ಪಂಚನಾಮೆ ಮುಖೇನ ವಶಪಡಿಸಿಕೊಂಡು   ಸ್ಥಳದಲ್ಲಿ ಸಿಕ್ಕ  ಆಸಾಮಿಯನ್ನು ಸ್ಥಳದಿಂದ ಕಳುಹಿಸಲಾಗಿರುತ್ತದೆಂತ ,ನಂತರ ಠಾಣೆಗೆ ಮದ್ಯಾಹ್ನ 13:30  ಗಂಟೆಗೆ  ವಾಪಾಸ್ ಬಂದು   ಠಾಣಾ ಎನ್.ಸಿ.ಆರ್ : 71/2018   ರಲ್ಲಿ ನೊಂದಾಯಿಸಿ ಈ ಪ್ರಕರಣವು ಅಸಂಜ್ಞೇಯ ಅಪರಾಧವಾಗಿರುವುದರಿಂದ ಮುಂದಿನ ತನಿಖೆ ಕೈಗೊಳ್ಳಲು ಘನ ನ್ಯಾಯಾಲಯವು ಸಂಜ್ಞೇಯ ಅಪರಾಧವಾಗಿ ಪರಿಗಣಿಸಿ ಕಲಂ:78 ಕ್ಲಾಸ್ 3  ಕೆ.ಪಿ. ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲು ಅನುಮತಿ ನೀಡಲು ಘನ ನ್ಯಾಯಾಲಯದಲ್ಲಿ ಕೋರಿದ್ದು ದಿನಾಂಕ: 11/07/2018  ರಂದು ನ್ಯಾಯಾಲಯವು ಅನುಮತಿ ಆದೇಶ ನೀಡಿದ್ದರಿಂದ ದಿನಾಂಕ:11/07/2018  ರಂದು ಸಾಯಂಕಾಲ  4:30  ಗಂಟೆಗೆ ಆಸಾಮಿ  ವಿರುದ್ದ ಠಾಣಾ ಮೊ.ನಂ:60/2018 ಕಲಂ:78 ಕ್ಲಾಸ್ 3 ಕೆ.ಪಿ.ಆಕ್ಟ್ ರೀತ್ಯಾ ಪ್ರಕರಣ  ದಾಖಲಿಸಿರುತ್ತದೆ.


Page 1 of 3
Start
Prev
1

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 81 guests online
Content View Hits : 304501