lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ.16/08/2018 ತುಂಬೆ (ತುಮಕೂರು ಬೈಸಿಕಲ್ ಪೊಲೀಸ್)     ಜನಸ್ನೇಹಿ... >> :: ಪತ್ರಿಕಾ ಪ್ರಕಟಣೆ :: ದಿನಾಂಕ. 14.08.2018. 2018 ನೇ ಜುಲೈ ತಿಂಗಳಲ್ಲಿ ತುಮಕೂರು ನಗರ ವೃತ್ತದ... >> ಪತ್ರಿಕಾ ಪ್ರಕಟಣೆ ದಿನಾಂಕ 14/08/2018     ಸಿರಾ ತಾಲ್ಲೋಕ್ ತಾವರೆಕೆರೆ ಗ್ರಾಮದಲ್ಲಿರುವ... >> ಪತ್ರಿಕಾ ಪ್ರಕಟಣೆ   ಅಂತರ್ ರಾಜ್ಯ ಕಳ್ಳನ ಬಂಧನ, 75 ಸಾವಿರ ರೂ ಬೆಲೆಬಾಳುವ 10 ಮೊಬೈಲ್... >> ಪ ತ್ರಿ ಕಾ  ಪ್ರ ಕ ಟ ಣೆ ದಿನಾಂಕ: 03/08/2018 ತುಮಕೂರು ನಗರದಲ್ಲಿ ಒಟ್ಟು 3,420 ಅಭ್ಯರ್ಥಿಗಳಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ : 23.07.2018. ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ ದಿನಾಂಕ:- 23/07/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಕನ್ನ... >> : ಪತ್ರಿಕಾ ಪ್ರಕಟಣೆ  : : ದಿನಾಂಕ:21-07-2018 : -: ಮನೆಕಳ್ಳನ ಬಂಧನ :  7.5 ಲಕ್ಷ ರೂ ಮೌಲ್ಯದ ವಡವೆ... >> ಪತ್ರಿಕಾ ಪ್ರಕಟಣೆ ದಿನಾಂಕ : 20-07-18 ಸ್ಮಾರ್ಟ್ ಸಿಟಿ ಅಧಿಕಾರಿಗಳೆಂದು ವಂಚಿಸಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 20-07-2018       ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< July 2018 >
Mo Tu We Th Fr Sa Su
            1
2 3 4 5 6 7 8
9 10 11 13 14 15
16 17 18 19 20 21 22
23 24 25 26 27 28 29
30 31          
Thursday, 12 July 2018
ಅಪರಾಧ ಘಟನೆಗಳು 12-07-18

ಶಿರಾ ಪೊಲೀಸ್ ಠಾಣಾ ಮೊ ನಂ 273/2018 ಕಲಂ 279-304 (ಎ) ಐ.ಪಿ.ಸಿ

ದಿನಾಂಕ:11-07-2018 ರಂದು ರಾತ್ರಿ 09-00 ಗಂಟೆಗೆ ಪಿರ್ಯಾದುದಾರರಾದ  ಭಕ್ತಕುಮಾರ.ಎಸ್ ಬಿನ್ ಲೇಟ್ ಸೊಕ್ಕಣ್ಣ, 33 ವರ್ಷ, ಎ.ಡಿ ಜನಾಂಗ, ಪೊಲೀಸ್ ಕಾನ್ಸಟೇಬಲ್, ಶಿರಾ ಪೊಲೀಸ್ ಠಾಣೆ, ವಾಸ:ಪೊಲೀಸ್ ವಸತಿ ಗೃಹ, ಕಾಳಿದಾಸ ನಗರ, ಶಿರಾ ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ಪಿರ್ಯಾದಿನ ಸಾರಾಂಶವೇನೆಂದರೆ, ನಾನು ಶಿರಾ ಪೊಲೀಸ್  ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುತ್ತೇನೆ. ನನ್ನ ಮಗಳಾದ 04 ವರ್ಷ, 02 ತಿಂಗಳ ಜಾನವಿ.ಎಸ್.ಬಿ, ಎಲ್.ಕೆ.ಜಿ ವಿದ್ಯಾಬ್ಯಾಸವನ್ನು ಶಿರಾ ಟೌನ್ ಬಾಲಾಜಿ ನಗರದ ಕದಂಭ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ವಿದ್ಯಾಬ್ಯಾಸ ಮಾಡುತ್ತಿರುತ್ತಾಳೆ. ಪ್ರತಿ ದಿನ ಬೆಳಗ್ಗೆ 08-30 ಗಂಟೆಗೆ ಕಾಳಿದಾಸ ನಗರದ ಪೊಲೀಸ್ ವಸತಿ ಗೃಹದ ಬಳಿ ಮುಖ್ಯ ರಸ್ತೆಯಲ್ಲಿ ಸ್ಕೂಲ್ ವ್ಯಾನ್ ಬರುತ್ತದೆ, ಸದರಿ ಸ್ಕೂಲ್ ವ್ಯಾನ್ ನಲ್ಲಿ ನನ್ನ ಮಗಳನ್ನು ಶಾಲೆಗೆ ಕಳುಹಿಸುತ್ತೇವೆ, ಪ್ರತಿದಿನದಂತೆ ದಿನಾಂಕ:11-07-2018 ರಂದು ಬೆಳಗ್ಗೆ 08-30 ಗಂಟೆಗೆ KA-53-B-0056 ನೇ ಸ್ಕೂಲ್ ವ್ಯಾನ್ ಗೆ ಮೇಲ್ಕಂಡ ನನ್ನ ಮಗಳನ್ನು ಕಳುಹಿಸಿಕೊಟ್ಟೆವು. ಸಾಯಂಕಾಲ ಸುಮಾರು 04-30 ಗಂಟೆಗೆ ಸದರಿ ಸ್ಕೂಲ್ ವ್ಯಾನ್ ಚಾಲಕ ನಿಖಿಲ್ ಎಂಬುವನು ನನಗೆ ದೂರವಾಣಿ ಕರೆ ಮಾಡಿ, ನಿಮ್ಮ ಮಗಳು ಜಾನವಿ ಸ್ಕೂಲ್ ವ್ಯಾನ್ ನಿಂದ ಬಿದ್ದಿದ್ದಾಳೆ, ಮೈ ಕೈ ಗೆ, ತಲೆಗೆ  ಪೆಟ್ಟುಗಳಾಗಿವೆ ಬೇಗ ಬನ್ನಿ ಎಂದು ತಿಳಿಸಿದನು. ನನಗೆ ಗಾಬರಿಯಾಗಿ ಕದಂಭ ಸ್ಕೂಲ್ ಬಳಿ ಹೋದೆನು. ಆಗ ಸ್ಕೂಲ್ ನ ಶಿಕ್ಷಕಿ ನನ್ನ ಮಗಳನ್ನು ತೊಡೆಯ ಮೇಲೆ ಮಲಗಿಸಿಕೊಂಡಿದ್ದರು. ನನ್ನ ಮಗಳು ಜೋರಾಗಿ ಅಳುತ್ತಿದ್ದಳು. ಅಲ್ಲಿಯೇ ಸ್ಕೂಲ್ ಮುಂಭಾಗದ ರಸ್ತೆಯ ಮೇಲೆ KA-53-B-0056 ನೇ ಸ್ಕೂಲ್ ವ್ಯಾನ್ ಇತ್ತು, ಅದರ ಚಾಲಕ ನಿಖಿಲ್ ಸಹಾ ಅಲ್ಲಿಯೇ ಇದ್ದನು. ನಾನು ಕೂಡಲೇ ಜಾನವಿಯನ್ನು ಅಲ್ಲಿಗೆ ಬಂದ ಮತ್ತೊಬ್ಬರ ಸಹಾಯದಿಂದ ನನ್ನ  ಮೋಟಾರ್ ಸೈಕಲ್ ನಲ್ಲಿ ಶಿರಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗೆ ಸೇರಿಸಿದೆನು. ಅಲ್ಲಿನ ವೈದ್ಯರು ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿಗೆ ಹೋಗಲು ತಿಳಿಸಿದರು, ನಾನು ಆಂಬುಲೆನ್ಸ್ ವಾಹನದಲ್ಲಿ ನನ್ನ ಮಗಳನ್ನು ತುಮಕೂರಿನ ಶ್ರೀದೇವಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕರೆದುಕೊಂಡು ಹೋದಾಗ, ನನ್ನ ಮಗಳನ್ನು ಪರೀಕ್ಷಿಸಿದ ವೈದ್ಯರು ಮಗು ಮೃತಪಟ್ಟಿದೆ ಎಂದು ತಿಳಿಸಿದರು. ಆಗ ಸಮಯ ಸಾಯಂಕಾಲ 06-15 ಗಂಟೆ ಆಗಿತ್ತು. ಸದರಿ ಸ್ಕೂಲ್ ವ್ಯಾನ್ ಚಾಲಕನು ನನ್ನ ಮಗಳು ವ್ಯಾನ್ ಗೆ ಹತ್ತುತ್ತಿರುವಾಗ ಏಕಾ ಏಕಿ ವ್ಯಾನ್ ಅನ್ನು ಅತಿವೇಗವಾಗಿ ಮತ್ತು ನಿರ್ಲಕ್ಷತನದಿಂದ ಚಾಲನೆ ಮಾಡಿದ ಪರಿಣಾಮ ಮತ್ತು ವ್ಯಾನ್ ನ ಕ್ಲೀನರ್ ಪವನ್ ಎಂಬುವನು ಮಗುವನ್ನು ಸುರಕ್ಷಿತವಾಗಿ ಬಸ್ಸಿಗೆ ಹತ್ತಿಸದೇ, ನಿರ್ಲಕ್ಷತನ ತೋರಿದ್ದರಿಂದ ನನ್ನ ಮಗಳು ವ್ಯಾನ್ ಡೋರ್ ನಿಂದ ಕೆಳಗೆ ಬಿದ್ದು ತಲೆಯ ಹಿಂಭಾಗ, ಎಡಭಾಗ, ಎಡ ಮೊಣಕಾಲಿಗೆ, ಬಲಕಿವಿಯ ಕೆಳಭಾಗ, ಎಡಭುಜಕ್ಕೆ ಪೆಟ್ಟುಗಳು ಬಿದ್ದು ಗಾಯಗಳಾಗಿ ಬಾಯಿಯಲ್ಲಿ ಹಾಗೂ ಮೂಗಿನಲ್ಲಿ ರಕ್ತಸ್ರಾವ ಆಗಿ ಮೃತಪಟ್ಟಿರುತ್ತಾಳೆ. ಸದರಿ ಅಪಘಾತಕ್ಕೆ ವ್ಯಾನ್ ಚಾಲಕ ನಿಖಿಲ್ ಮತ್ತು ಕ್ಲೀನರ್ ಪವನ್ ರವರೇ ಕಾರಣರಾಗಿರುತ್ತಾರೆ. ಆರೋಪಿಗಳ ಮೇಲೆ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ಕೋರುತ್ತೇನೆಂದು ನೀಡಿದ ಪಿರ್ಯಾದನ್ನು ಸ್ವೀಕರಿಸಿ ಪ್ರಕರಣ ದಾಖಲು ಮಾಡಿರುತ್ತೆ.

ಜಯನಗರ ಪೊಲೀಸ್ ಠಾಣಾ ಯುಡಿಆರ್ ನಂ. 10/2018 ಕಲಂ 174 ಸಿಆರ್‌ಪಿಸಿ .

ದಿನಾಂಕ: 11/07/2018 ರಂದು ರಾತ್ರಿ 7-30 ಗಂಟೆ ಸಮಯದಲ್ಲಿ ತುಮಕೂರು ಟೌನ್‌, ರಾಮಜ್ಯೊಯಿಷಿನಗರ ವಾಸಿ ಮಂಜುಳಾ ಡಿ.ಎಸ್ ಕೋಂ ವಿ.ಪಿ ಮೋಹನ್ ಕುಮಾರ್ ರವರು ಠಾಣೆಗೆ ಹಾಜರಾಗಿ ನೀಡಿದ ಕಂಪ್ಯೂಟರ್ ಮುದ್ರಿತ ದೂರಿನ ಅಂಶವೇನೆಂದರೆ, ನಾನು, ನನ್ನ ಗಂಡ ವಿ.ಪಿ. ಮೋಹನ್‌‌ಕುಮಾರ್‌‌ ಹಾಗೂ ನಮ್ಮ ಒಬ್ಬಳೇ ಮಗಳು ತೇಜಸ್ವಿನಿ ತುಮಕೂರು ಟೌನ್ 1 ನೇ ಕ್ರಾಸ್‌‌ ರಾಮಜ್ಯೋಯಿಷಿ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುತ್ತೇವೆ.   ನಾನು ಸಿದ್ದಗಂಗಾ ಮಹಿಳಾ ಕಾಲೇಜಿನಲ್ಲಿ ಅಟೆಂಡರ್‌‌ ಆಗಿ ಕೆಲಸ ಮಾಡುತ್ತಿರುತ್ತೇನೆ.  ನಮ್ಮ ಯಜಮಾನರು ಮೈಸೂರಿನಲ್ಲಿ ವೆಟರ್ನರಿ ಕ್ಲೀನಿಕ್‌‌ನಲ್ಲಿ ಹೆಲ್ಪರ್‌‌ ಆಗಿ ಕೆಲಸ ಮಾಡಿಕೊಂಡಿದ್ದು, ಮೈಸೂರಿನಲ್ಲಿಯೇ ಒಂದು ಬಾಡಿಗೆ ರೂಮಿನಲ್ಲಿ ವಾಸವಾಗಿದ್ದರು. ಈಗ್ಗೆ ಸುಮಾರು 2 ತಿಂಗಳ ಹಿಂದೆ ಅಲ್ಲಿ ಕೆಲಸವನ್ನು ಬಿಟ್ಟು, ವಾಪಾಸ್ಸು ತುಮಕೂರಿಗೆ ಬಂದು ಮನೆಯಲ್ಲಿಯೇ ಇದ್ದರು. ಮೈಸೂರಿನಿಂದ ಬಂದ ನಂತರ ಎಲ್ಲಿಯೂ ಕೆಲಸಕ್ಕೆ ಹೋಗುತ್ತಿರಲಿಲ್ಲ. ನಮ್ಮ ಯಜಮಾನರುಯ ಮೊದಲಿನಿಂದಲೂ ಸ್ವಲ್ಪ ಸೈಕೋ ರೀತಿಯಲ್ಲಿ ವರ್ತಿಸುತ್ತಿದ್ದು,  ಮೈಸೂರಿನಲ್ಲಿ ಕೆಲಸ ಬಿಟ್ಟು ಬಂದ ನಂತರ ಯಾರೊಂದಿಗೂ ಬೆರೆಯದೇ ಮನೆಯಲ್ಲಿ ಒಬ್ಬರೇ ಇರುತ್ತಿದ್ದರು. ಸಣ್ಣಪುಟ್ಟ ವಿಚಾರವನ್ನೆಲ್ಲಾ ಮನಸ್ಸಿಗೆ ತೆಗೆದುಕೊಂಡು ಒಳಗೊಳಗೇ ಚಿಂತೆ ಮಾಡುತ್ತಿದ್ದರು.  ಇತ್ತೀಚೆಗಂತೂ ತುಂಬಾ ಮೋಡಿಯಾಗಿ ಒಬ್ಬಂಟಿಯಾಗಿದ್ದರು.   ಈ ದಿನ ದಿನಾಂಕ: 11-07-2018 ರಂದು ನಾನು ಬೆಳಿಗ್ಗೆ 9-15 ಕ್ಕೆ ಮಹಿಳಾ ಕಾಲೇಜಿಗೆ ಅಟೆಂಟರ್‌‌ ಕೆಲಸಕ್ಕೆ ಹೋಗಿದ್ದೆನು.  ನಮ್ಮ ಮಗಳು ತೇಜಸ್ವಿನಿ 10 ನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ಆಕೆಯೂ ಸಹಾ ಬೆಳಿಗ್ಗೆ 9-00 ಗಂಟೆಗೆ ಮನೆಯಲ್ಲಿ ತಿಂಡಿ ತಿಂದು ವಿದ್ಯಾನಿಕೇತನ ಸ್ಕೂಲ್‌‌‌ಗೆ ಹೋಗಿದ್ದಳು. ಸಾಯಂಕಾಲ ಸುಮಾರು 4-15 ಗಂಟೆ ಸಮಯದಲ್ಲಿ ನನ್ನ ಮಗಳು ತೇಜಸ್ವಿನಿ ಸ್ಕೂಲ್‌‌ ಮುಗಿಸಿಕೊಂಡು ಮನೆಗೆ ಬಂದಾಗ ನನಗೆ ಪೂನ್‌‌ ಮಾಡಿ ಮನೆಯಲ್ಲಿ ಅಪ್ಪ ಚಾಕುವಿನಿಂದ ಎಡಮೊಣಕೈ ಕೂಯ್ದುಕೊಂಡು ಹಾಲ್‌‌ನಲ್ಲಿ ನೆಲದ ಮೇಲೆ ಬಿದ್ದು ಒದ್ದಾಡುತ್ತಿದ್ದಾರೆ ತಕ್ಷಣ ಬರುವಂತೆ ತಿಳಿಸಿದ್ದು,  ನನಗೆ ಗಾಬರಿಯಾಗಿ ತಕ್ಷಣ ಸಾಯಂಕಾಲ ಸುಮಾರು 4-30 ಗಂಟೆ ಸಮಯಕ್ಕೆ ನಮ್ಮ ಮನೆಯ ಬಳಿಗೆ ಬಂದು ನೋಡಲಾಗಿ, ನಮ್ಮ ಯಜಮಾನರು ಎಡಮೊಣಕೈಯ್ಯಲ್ಲಿ ಅಲ್ಲಲ್ಲಿ ಕೂಯ್ದುಕೊಂಡಿದ್ದರು. ನಾನು ನಮ್ಮ ಯಜಮಾರನ್ನು ವಿಚಾರ ಮಾಡಲು ಹೋದಾಗ ಏನನ್ನೂ ಸಹಾ ತಿಳಿಸದೇ ಹಾಗೆಯೇ ಬಾತ್‌‌ರೂಂಗೆ ಹೋದರು. ನಾವು ಬಾತ್‌ರೂಂಗೆ ಹೋಗಿದ್ದಾರೆ ಬರುತ್ತಾರೆಂದು ತಿಳಿದು, ನಾನು ನನ್ನ ಮಗಳು ಮನೆಯ ಹಾಲ್‌‌ನಲ್ಲಿಯೇ ಕುಳಿತಿದ್ದೆವು. ಎಷ್ಟು ಹೊತ್ತಾದರೂ ಸಹಾ ಬಾತ್‌‌ರೂಮಿನಿಂದ ಬಾರದ ಕಾರಣ ಬಾತ್‌‌ರೂಮಿನ ಬಾಗಿಲನ್ನು ಜೋರಾಗಿ ತೆಳ್ಳಿ, ಬಾತ್‌‌‌ರೂಮಿನೊಳಕ್ಕೆ ಹೋಗಿ ನೋಡಲಾಗಿ, ನಮ್ಮ ಯಜಮಾನರು ಅವರ ಪ್ಯಾಂಟಿಗೆ ಹಾಕಿಕೊಳ್ಳುವ ಲೆದರ್‌‌‌ಬೆಲ್ಟ್‌‌ನಿಂದ ಬಾತ್‌ರೂಂನ ವೆಂಟರ್‌‌‌ಲೇಟ್‌‌ ಕಿಟಕಿಗೆ ಕಟ್ಟಿಕೊಂಡು ಮತ್ತೊಂದು ತುದಿಯನ್ನು ಕುತ್ತಿಗೆಗೆ ಬಿಗಿದುಕೊಂಡು ನೇಣು ಹಾಕಿಕೊಂಡು ನೇತಾಡುತ್ತಿದ್ದರು.  ಆಗ ನಮಗೆ ಗಾಬರಿಯಾಗಿ ಮನೆಯ ಹೊರಗೆ ಬಂದು ಕೂಗಾಡಿದಾಗ ಅಕ್ಕ ಪಕ್ಕದ ಮನೆಯವರಾದ ಸತೀಶ ಎಂಬುವರು ಬಂದರು.  ಆಗ ನಾನು ಹಾಗೂ ಸತೀಶ್‌‌ ಇಬ್ಬರೂ ಸೇರಿ ನಮ್ಮ ಯಜಮಾನರಿಗೆ ಇನ್ನೂ ಜೀವ ಇರಬಹುದೆಂದು ತಿಳಿದು, ಚಾಕುವಿನಿಂದ ನೇಣು ಹಾಕಿಕೊಂಡಿದ್ದ ಬೆಲ್ಟನ್ನು ಕತ್ತರಿಸಿ, ನಮ್ಮ ಯಜಮಾನರನ್ನು ಮನೆಯ ಹಾಲ್‌‌‌‌ಗೆ ಎತ್ತಿಕೊಂಡು ಬಂದು ಹಾಲ್‌‌ನಲ್ಲಿರುವ ದಿವಾನ್‌‌‌ ಕಾಟ್‌‌‌ ಮೇಲೆ ಮಲಗಿಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಲೆಂದು ಆಟೋವನ್ನು ಕರೆದುಕೊಂಡು ಬರುವಷ್ಟರಲ್ಲಿ ನಮ್ಮ ಯಜಮಾನರು ಮನೆಯ ಹಾಲ್‌‌ನಲ್ಲಿ ತೀರಿ ಹೋಗಿರುತ್ತಾರೆ.   ನಮ್ಮ ಯಜಮಾನರು ಕೆಲಸ ಇಲ್ಲವೆಂದು ಮನಸ್ಸಿಗೆ ಬೇಜಾರು ಮಾಡಿಕೊಂಡೋ ಅಥವಾ ಇನ್ಯಾವುದೋ ವಯಕ್ತಿಕ ವಿಚಾರಕ್ಕಾಗಿ ಮನಸ್ಸಿಗೆ ಬೇಜಾರು ಮಾಡಿಕೊಂಡು, ಜೀವನದಲ್ಲಿ ಜಿಗುಪ್ಸೆಗೊಂಡು ಈ ರೀತಿ ತನ್ಮೂಲಕ ತಾನೇ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾರೆ.  ನಮ್ಮ ಯಜಮಾನರ ಸಾವಿನಲ್ಲಿ ಬೇರೆ ಯಾವುದೇ ಅನುಮಾನ ಇರುವುದಿಲ್ಲ.  ಆದ್ದರಿಂದ ತಾವು ಸ್ಥಳಕ್ಕೆ ಬಂದು, ಶವಪರಿಶೀಲಿಸಿ, ನಮ್ಮ ಯಜಮಾನರ ಶವವನ್ನು ಅಂತಿಮ ಸಂಸ್ಕಾರ ಮಾಡಲು ಅನುವು ಮಾಡಿಕೊಡಬೇಕೆಂದು ಕೋರುತ್ತೇನೆ. ನಮ್ಮ ಯಜಮಾನರು ಮೃತಪಟ್ಟಿರುವ ವಿಚಾರವನ್ನು ನಮ್ಮ ಸಂಬಂಧಿಕರಿಗೆಲ್ಲಾ ತಿಳಿಸಿ, ಈಗ ತಡವಾಗಿ ಪೊಲೀಸ್ ಠಾಣೆಗೆ ಬಂದು ದೂರು ನೀಡಿರುತ್ತೇನೆಂತ ಪಿರ್ಯಾದು ಅಂಶವಾಗಿರುತ್ತೆ.

ಅಮೃತೂರು ಪೊಲೀಸ್‌ ಠಾಣಾ ಮೊನಂ-128/2018, ಕಲಂ-397 ಐಪಿಸಿ

ದಿನಾಂಕ: 11-07-2018 ರಂದು 11-30 ಗಂಟೆ ಸಮಯದಲ್ಲಿ ಪಿರ್ಯಾದಿ  ಜಿ.ಬಿ.ಚಂದ್ರಶೇಖರ್ ಬಿನ್ ಬಿ.ಸಿ.ಬಸ್ಸಪ್ಪ, 70 ವರ್ಷ, ವೀರಶೈವ ಲಿಂಗಾಯ್ತರು ಜನಾಂಗ, ತುಮಕೂರು ಖಾಸಗಿ ಬಸ್ ಮಾಲೀಕರ ಸಂಘದ ಆಫೀಸ್ ಕೆಲಸ, ವಾಸ ನಂ-713, ಸಿದ್ದಲಿಂಗಕೃಪ, 9 ನೇ ಕ್ರಾಸ್, 2 ನೇ ಮೇನ್, ಎಸ್.ಐ.ಟಿ. ಬಡಾವಣೆ, ತುಮಕೂರು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ, ದಿನಾಂಕ: 10-07-2018 ರಂದು ನಾನು ಮತ್ತು ನನ್ನ ತಮ್ಮ ಜಿ.ಬಿ.ನಾಗರಾಜು ಹಾಗೂ ನಮ್ಮ ಮೊಮ್ಮಕ್ಕಳಾದ ವಚನ್ ಹೊನ್ನುಡಿಕೆ, ಚೇತನ್.ಎಸ್. ರವರುಗಳು ಕುಣಿಗಲ್ ತಾಲ್ಲೂಕ್, ಎಡೆಯೂರು ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ದೇವಸ್ಥಾನಕ್ಕೆ ಹೋಗಲು ಕೆ.ಎ-06, ಸಿ-7867 ರ ಇಂಡಿಕಾ ಕಾರಿನಲ್ಲಿ ರಾತ್ರಿ 10-30 ಗಂಟೆ ಸಮಯಕ್ಕೆ ತುಮಕೂರನ್ನು ಬಿಟ್ಟು ಮಧ್ಯರಾತ್ರಿ ಎಡೆಯೂರಿಗೆ ಬಂದು ದೇವಸ್ಥಾನದ ಬಳಿ ಕಾರಿನಲ್ಲಿ ಮಲಗಿದ್ದು, ನಂತರ ದಿನಾಂಕ: 11-07-2018 ರಂದು ಬೆಳಗಿನ ಜಾವ ಸುಮಾರು 2-00 ಗಂಟೆ ಸಮಯದಲ್ಲಿ ಟೀ ಕುಡಿಯೋಣವೆಂದು ಎಡೆಯೂರು, ಚಾಕೇನಹಳ್ಳಿ ಕಡೆಗಳಲ್ಲಿ ಹುಡುಕಿದೆವು. ಆ ವೇಳೆಯಲ್ಲಿ ಯಾರೂ ಇನ್ನೂ ಹೋಟೇಲ್ ಗಳನ್ನು ತೆಗೆದಿಲ್ಲವಾದ್ದರಿಂದ ಚಾಕೇನಹಳ್ಳಿ ಗ್ರಾಮದ ಬಳಿ ಇರುವ ಬೈರವೇಶ್ವರ ಹೋಟೆಲ್ ಮುಂಭಾಗದಲ್ಲಿ ಹಾದು ಹೋಗಿರುವ ಎನ್.ಹೆಚ್-75 ರ ಬೆಂಗಳೂರು-ಹಾಸನ ರಸ್ತೆಯ ಎಡಪಕ್ಕದ ಪುಟ್ ಪಾತ್ ನಲ್ಲಿ ನಮ್ಮ ಕಾರನ್ನು ನಿಲ್ಲಿಸಿಕೊಂಡು ನಾವೆಲ್ಲರೂ ಕಾರಿನಲ್ಲಿ ಮಲಗಿರುವಾಗ್ಗೆ, ಬೆಳಗಿನ ಜಾವ ಸುಮಾರು 2-30 ಗಂಟೆ ಸಮಯದಲ್ಲಿ ಬೆಂಗಳೂರು ಕಡೆಯಿಂದ ಬಂದ ಒಂದು ಇಂಡಿಕಾ ಕಾರು ನಮ್ಮ ಕಾರಿನ ಪಕ್ಕಕ್ಕೆ ಬಂದು ನಿಂತಿತು. ಆ ಕಾರಿನಲ್ಲಿ 6 ಹುಡುಗರಿದ್ದು, ಅವರಲ್ಲಿ 4 ಜನ ಹುಡುಗರು ಇಳಿದು ನಮ್ಮ ಕಾರಿನ ಬಳಿ ಬಂದು ನಮ್ಮನ್ನು ಕೂಗಿ ಎಬ್ಬಿಸಿ, ಮೈಸೂರಿಗೆ ಯಾವ ಕಡೆ ಹೋಗಬೇಕು ಎಂದು ಕೇಳಿದಾಗ ನಾವು ಇದೇ ರಸ್ತೆಯಲ್ಲಿ ಮುಂದೆ ಹೋಗಿ ಎಂದು ಹೇಳುತ್ತಿದ್ದಂತೆ, ಅವರಲ್ಲಿದ್ದ ಒಬ್ಬನು ತನ್ನ ಬಳಿ ಇದ್ದ ಚಾಕುವನ್ನು ಮತ್ತು ಮತ್ತೊಬ್ಬನು ಒಂದು ರಾಡನ್ನು ತೋರಿಸಿ, ಏ ಬೋಳಿ ಮಕ್ಕಳಾ ನಿಮ್ಮ ಬಳಿ ಇರುವ ದುಡ್ಡು, ಮೊಬೈಲ್ ಕೊಡಿ ಇಲ್ಲವಾದರೆ ನಿಮ್ಮನ್ನು ಹೊಡೆದು ಸಾಯಿಸುತ್ತೇವೆಂದು ನಮಗೆ ಹೆದರಿಸಿ ನನ್ನ ಬಳಿ ಇದ್ದ 500/-ರೂ ಹಣ, ಸೆಲ್ಕನ್ ಮೊಬೈಲನ್ನು ಮತ್ತು ನನ್ನ ತಮ್ಮನ ಬಳಿ ಇದ್ದ 300/-ರೂ ಹಣ, ವಿವೋ ಮೊಬೈಲನ್ನು, ಎಸ್.ಬಿ.ಐ. ಬ್ಯಾಂಕಿನ ಎ.ಟಿ.ಎಂ. ಕಾರ್ಡ್, ಕೆ.ಎಸ್.ಆರ್.ಟಿ.ಸಿ. ಬಸ್ಸಿನ ಸಿನಿಯರ್ ಐ.ಡಿ. ಕಾರ್ಡನ್ನು ಹಾಗೂ ನನ್ನ ಮೊಮ್ಮಗ ಚೇತನ್ ಬಳಿ ಇದ್ದ 5,700/- ಹಣವನ್ನು ಕಿತ್ತುಕೊಂಡು, ಹೋಗುವಾಗ ಚಾಕು ಹಿಡಿದ್ದಿದ್ದವನು ಚಾಕುವಿನ ಹಿಡಿಯಿಂದ ನನ್ನ ಹಣೆಗೆ ಮತ್ತು ಬಲ ಕೆನ್ನೆಗೆ ಗುದ್ದಿ ಗಾಯಗೊಳಿಸಿ, ಆನಂತರ ಕಾರನ್ನು ಹತ್ತಿಕೊಂಡು ಹಾಸನ ಕಡೆಗೆ ಹೊರಟು ಹೋದರು. ಈ ರೀತಿ ನಮ್ಮನ್ನು ಹೆದರಿಸಿ ಹಣ ದೋಚುವಾಗ ನಮ್ಮ ಮೊಮ್ಮಗ ಚೇತನ್ ಅವರು ಬಂದಿದ್ದ ಇಂಡಿಕಾ ಕಾರಿನ ನಂಬರ್ ನೋಡಿಕೊಂಡು ನನಗೆ ಹೇಳಿದ್ದು, ಆ ಇಂಡಿಕಾ ಕಾರಿನ ನಂಬರ್ ಕೆ.ಎ-02 ಎ.ಇ-4137 ಆಗಿರುತ್ತೆ. ನಮ್ಮ ಬಳಿ ಬಂದ 4 ಜನ ಹುಡುಗರು ಕನ್ನಡದಲ್ಲಿಯೇ ಮಾತನಾಡುತ್ತಿದ್ದರು. ಆ 4 ಜನ ಹುಡುಗರನ್ನು ನಾನು ಹತ್ತಿರದಿಂದ ನೋಡಿರುತ್ತೇನೆ, ಮತ್ತೆ ನೋಡಿದರೆ ಗುರ್ತಿಸುತ್ತೇನೆ. ಈ ವಿಚಾರವನ್ನು ಮನೆಗೆ ತಿಳಿಸಿ ಈಗ ಬಂದು ತಡವಾಗಿ ದೂರು ನೀಡುತ್ತಿದ್ದೇನೆ. ನಮಗೆ ಚಾಕು ಮತ್ತು ರಾಡನ್ನು ತೋರಿಸಿ ಹೊಡೆದು ಹೆದರಿಸಿ, ನಮ್ಮ ಬಳಿ ಇದ್ದ ಹಣ, ಮೊಬೈಲ್ ಗಳು, ಎ.ಟಿ.ಎಂ. ಕಾರ್ಡ್‌‌, ಕೆ.ಎಸ್.ಆರ್.ಟಿ.ಸಿ. ಬಸ್ಸಿನ ಸಿನಿಯರ್ ಐ.ಡಿ. ಕಾರ್ಡನ್ನು ಕಿತ್ತುಕೊಂಡು ಹೋಗಿರುವ ಕೆ.ಎ-02 ಎ.ಇ-4137 ಇಂಡಿಕಾ ಕಾರನ್ನು ಮತ್ತು ಆ ಕಾರಿನಲ್ಲಿದ್ದ 6 ಜನ ಹುಡುಗರನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರುತ್ತೇನೆ ಎಂದು ಇದ್ದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿರುತ್ತೆ.

ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆ. ಮೊ.ನಂ 175/2018  ಕಲಂ 279,304(ಎ) ಐಪಿಸಿ.

ದಿನಾಂಕ:11/07/2018 ರಂದು ಬೆಳಿಗ್ಗ 8-30 ಗಂಟೆಗೆ ತುಮಕೂರಿನ ಎಸ್‌ಎಸ್ ಪುರಂ ಚನ್ನಪ್ಪನಪಾಳ್ಯ ವಾಸಿ ಮಹೇಶ್.ಜಿ ಬಿನ್ ಗುರುಮೂರ್ತಿ ರವರು ನೀಡಿದ ದೂರಿನಂಶವೇನೆಂದರೆ, ನಮ್ಮ ತಂದೆಯವರಿಗೆ ಇಬ್ಬರು ಮಕ್ಕಳಿದ್ದು ನಾನು ಹಿರಿಯ ಮಗನಾಗಿರುತ್ತೇನೆ. ನಮ್ಮ ತಂದೆ ಗುರುಮೂರ್ತಿರವರು ಟೈಲರಿಂಗ್ ಕೆಲಸ ಮಾಡಿಕೊಂಡಿದ್ದು, ದಿನಾಂಕ:10/07/2018 ರಂದು ಕೆಲಸ ಮುಗಿಸಿಕೊಂಡು ನಾಗವಲ್ಲಿಯಲ್ಲಿ ವಿವಾಹಕ್ಕೆ ಹೋಗಿಬರಲು ನನ್ನ ಬಾಬ್ತು KA-06-HA-7298ನೇ ದ್ವಿಚಕ್ರ ವಾಹನದಲ್ಲಿ ರಾತ್ರಿ 8-15 ಗಂಟೆಗೆ ಮನೆಯಿಂದ ಹೊರಟಿದ್ದು, ರಾತ್ರಿ ಸುಮಾರು 9-45 ಗಂಟೆಯಿಂದ 10-00 ಗಂಟೆಯ ಅವಧಿಯಲ್ಲಿ ನನಗೆ ನಮ್ಮ ತಂದೆಯವರ ಪೋನ್‌ನಿಂದ ಕರೆ ಬಂದಿದ್ದು ಯಾರೋ ದಾರಿಹೋಕರು ಮಾತನಾಡಿ ಈ ಪೋನ್ ನಂಬರಿನ ವ್ಯಕ್ತಿಗೆ ಗೂಳೂರು ಸರ್ಕಾರಿ ಶಾಲೆಯ ಮುಂಭಾಗದ ರಸ್ತೆಯ ನಿರ್ಮಾಣದ ಹಂತದಲ್ಲಿರುವ ರಸ್ತೆ ಹಂಪ್ಸ್ ಬಳಿ ಅಪಘಾತವಾಗಿ ಬಿದ್ದಿರುತ್ತಾರೆ ಎಂದು ತಿಳಿಸಿದ ಕೂಡಲೇ ನಾನು ಗಾಬರಿಗೊಂಡು ಗೂಳೂರಿನ ಸರ್ಕಾರಿ ಶಾಲೆಯ ಮುಂಭಾಗದಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಯಲ್ಲಿ ನಿರ್ಮಿಸಿರುವ ಹಂಪ್ಸ್ ಬಳಿಗೆ ಹೋಗಿ ನೋಡಲಾಗಿ ನನ್ನ ತಂದೆ ರಸ್ತೆಯ ಹಂಪ್ಸ್ ಇರುವುದು ಗಮನಕ್ಕ ಬಾರದೇ ಹಂಪ್ಸನ್ನು ಎಗರಿಸಿರುವುದರಿಂದ ದ್ವಿಚಕ್ರ ವಾಹನ ನಿಯಂತ್ರಣಕ್ಕೆ ಬಾರದೇ ಬೈಕಿನಿಂದ ರಸ್ತೆಯ ಮೇಲೆ ಬಿದ್ದಿದ್ದು ತಲೆಗೆ ತೀವ್ರ ತರಹದ ಪೆಟ್ಟಾಗಿ ರಕ್ತಸ್ರಾವದಿಂದ ಒದ್ದಾಡುತ್ತಿದ್ದವರನ್ನು ಕಂಡು ಕೂಡಲೇ ಗೂಳೂರಿನ ಸರ್ಕಾರಿ ಆಸ್ಪತ್ರೆ 108 ರಲ್ಲಿ ಕರೆದುಕೊಂಡು ಹೋಗಿದ್ದು ಹೆಚ್ಚಿನ ಚಿಕಿತ್ಸೆಗಾಗಿತುಮಕೂರಿನ ಜಿಲ್ಲಾ ಆಸ್ಪತ್ರೆ ವೈದ್ಯರಲ್ಲಿ ತೋರಿಸಲು ಕರೆದುಕೊಂಡು ಬಂದಿದ್ದಾಗ ಮಾರ್ಗಮಧ್ಯೆ ನನ್ನ ತಂದೆ ಗುರುಮೂರ್ತಿರವರು ಮೃತಪಟ್ಟಿರುತ್ಥಾರೆಂದು ವೈದ್ಯರು ತಿಳಿಸಿರುತ್ತಾರೆ. ನನ್ನ ತಂದೆ ಮೃತಪಡಲು ಗೂಳೂರು ಸರ್ಕಾರಿ ಶಾಲೆಯ ಮುಂಭಾಗ ಹಾದುಹೋಗುವ ರಸ್ತೆಗೆ ನಿರ್ಮಾಣ ಹಂತದಲ್ಲಿರುವ ರಸ್ತೆ ಹಂಪ್ಸ್ ಸುಮಾರು ಎತ್ತರಕ್ಕಿದ್ದು ಈ ರಸ್ತೆ ಹಂಪ್ಸ್ ಯಾವುದೇ ರೀತಿಯ ಸೂಚನೆಗಳನ್ನು ನೀಡುವಂತಹ ಚಿಹ್ನೆಗಳನ್ನು ಹಾಕಿಲ್ಲದೇ ಇರುವುದರಿಂದ ನನ್ನ ತಂದೆಯ ಗಮನಕ್ಕೆ ಹಂಪ್ಸ್ ರಾತ್ರಿ ವೇಳೆ ಕಂಡುಬರದೇ ಇದ್ದುದರಿಂಧ ನನ್ನ ತಂದೆ ಬೈಕನ್ನು ಹಂಪ್ಸ್ ಮೇಲೆ ಎಗರಿಸಿರುತ್ತಾರೆ. ಎಗರಿಸಿದ್ದರಿಂದ ವಾಹನ ನಿಯಂತ್ರಣಕ್ಕೆ ಬಾರದೇ ರಸ್ತೆ ಮೇಲೆ ಬಿದ್ದು ರಸ್ತಸ್ರಾವದಿಂದ ಮೃತಪಟ್ಟಿರುತ್ತಾರೆ. ಆದ್ದರಿಂದ ಗೂಳೂರು ರಸ್ತೆಯ ಹಂಪ್ಸ್ ನ್ನು ನಿರ್ಮಾಣ ಮಾಡುತ್ತಿರುವ ಕೆಶಿಪ್ ಸಂಸ್ಥೆಯ ಮೇಲೆ ಕಾನೂನು ರೀತಿ ಕ್ರಮ ಕೈಗೊಂಡು ನಮಗೆ ನ್ಯಾಯ ಒದಗಿಸಿಕೊಡಬೇಕೆಂದು ಮತ್ತು ಮೃತ ನನ್ನ ತಂದೆ ಗುರುಮೂರ್ತಿ ರವರ ಮೃತದೇಹವು ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿರುತ್ತದೆ. ಆದ್ದರಿಂಧ ಮುಂದಿನ ಕ್ರಮ ಜರುಗಿಸಿಕೊಡಬೇಕೆಂದು ತಡವಾಗಿ ಬಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿದೆ.

ತುಮಕೂರು ಗ್ರಾಮಾಂತರ ಮೊ.ನಂ 176/2018  ಕಲಂ 279,304(ಎ) ಐಪಿಸಿ ರೆ/ವಿ 187 ಐಎಂವಿ ಆಕ್ಟ್.

ದಿನಾಂಕ:11/07/2018 ರಂದು ಬೆಳಿಗ್ಗೆ 9-45 ಗಂಟೆಗೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೆಚ್ ಸಿ 191 ನಂಜೇಗೌಡ ರವರು ನೀಡಿದ ದೂರಿನಂಶವೇನೆಂದರೆ, ದಿನಾಂಕ:11/07/2018 ರಂದು ಬೆಳಿಗ್ಗೆ 6-00 ಗಂಟೆಗೆ ತುಮಕೂರು ಗ್ರಾಮಾಂತರ ಠಾಣಾ ಸರಹದ್ದು ಚೀತಾ-11 ಗಸ್ತಿಗೆ ನೇಮಕವಾಗಿ ಬೆಳಿಗ್ಗೆ 7-15 ಗಂಟೆ ಸಮಯದಲ್ಲಿ ಡಿ.ಎಂ ಪಾಳ್ಯ ಬಳಿ ವಿತ್ರಿ ಮೋಟಾರ್ಸ್ ಮುಂಬಾಗ ಎನ್‌ಹೆಚ್ 48 ರಸ್ತೆಯಲ್ಲಿ ಗಸ್ತು ಮಾಡಿಕೊಂಡು ಹೋಗುತ್ತಿರುವಾಗ ತುಮಕೂರು-ಶಿರಾ ಕಡೆ ಹೋಗುವ ಎನ್‌ಹೆಚ್-48 ರಸ್ತೆಯ 1ನೇ ಟ್ರ್ಯಾಕ್‌ನಲ್ಲಿ ಯಾವುದೋ ವ್ಯಕ್ತಿಯ ಮೇಲೆ ಅಪರಿಚಿತ ವಾಹನವು ಹತ್ತಿ ದೇಹವು ಮಾಂಸದ ಮುದ್ದೆಯಂತೆ ಆಗಿತ್ತು, ಹತ್ತಿರ ಹೋಗಿ ನೋಡಲಾಗಿ ಬಿಳಿ & ಕಪ್ಪು ಗೀರುಳ್ಳ ಚೌಕಳಿ ಹರಿದಿರುವ ಶರ್ಟ್‌ ಆಗಿರುತ್ತೆ. ಕಾಫಿ ಬಣ್ಣದ ಮಾಸಲು ನಿಕ್ಕರ್ ಇದ್ದು ಭಿಕ್ಷುಕನಂತೆ ಕಂಡುಬರುವ ಅಪರಿಚಿತ ಶವವಾಗಿರುತ್ತೆ. ಈತನ ಚೆಹರೆ ಹೆಸರು, ವಿಳಾಸ ಪತ್ತೆಯಾಗಿರುವುದಿಲ್ಲ ಈತನು ತುಮಕೂರು,ಶಿರಾ ಬೆಂಗಳುರು ಮಾರ್ಗವಾಗಿ ಹೋಗುವ ಎನ್‌ಹೆಚ್ 48 ರಸ್ತೆಯಲ್ಲಿ ಅಂದರೆ ದಿ:10/07/2018 ರಂದು ರಾತ್ರಿ ಯಾವುದೋ ವೇಳೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ್ಗೆ ಯಾವುದೋ ವಾಹನದ ಚಾಲಕನು ಡಿಕ್ಕಿ ಹೊಡೆದುಕೊಂಡು ಹೋಗಿದ್ದ ತದನಂತರ ಈ ವ್ಯಕ್ತಿ ಮೇಲೆ ಹಲವಾರು ವಾಹನಗಳು ಮೇಲೆ ಹಲವಾರು ವಾಹನಗಳು ಮೇಲೆ ಹರಿದು ಹೋಗಿರುವುದರಿಂದ ಮಂಸ ಮುದ್ದೆಯಂತೆ ಕಂಡು ಬಂದಿದ್ದು ವಾರಸುದಾರರ ಪತ್ತೆಗಾಗಿ ನಾನು ವಿಚಾರ ಮಾಡಿದ್ದು ಯಾರು ಪತ್ತೆಯಾಗಿರುವುದಿಲ್ಲ. ಸುಹೇಲ್ ಎಂಬುವರ ಕಾಸಗಿ ತುರ್ತುವಾಹನವನ್ನು ಸ್ಥಳಕ್ಕೆ ಬೆಮಾಡಿಕೊಂಡು ಅಪರಿಚಿತ ವ್ಯಕ್ತಿಯ ಮುದ್ದೆಯಾಗಿರುವ ದೇಹವನ್ನು ತುಮಕೂರು ಜಿಲ್ಲಾ ಆಸ್ಪತ್ರೆಯ ಶವಾಗಾರದ ಶೀಥಿಲೀಕರಣದಲ್ಲಿ ಬೆಳಿಗ್ಗೆ 9-30 ಗಂಟೆಗೆ ಇರಿಸಿ ಮುಂದಿನ ಕ್ರಮಕ್ಕಾಗಿ ನಿಡಿದ ವರದಿಯನ್ನು ಪಡೆದು ಪ್ರಕರಣ ದಾಖಲಿಸಿದೆ.

 

ವೈ ಎನ್  ಹೊಸಕೋಟೆ  ಪೊಲೀಸ್ ಠಾಣಾ ಮೊ. ನಂ-  60/2018   ಕಲಂ: 78 Cls 3 Kp Act

ದಿನಾಂಕ 11/07/2018  ರಂದು  ಮದ್ಯಾಹ್ನ 12:00 ಗಂಟೆ ಸಮಯದಲ್ಲಿ ನಾನು ಠಾಣೆಯಲ್ಲಿರುವಾಗ್ಗೆ ವೈ ನ್ ಹೊಸಕೋಟೆ ಪೊಲೀಸ್ ಠಾಣಾ ಸರಹದ್ದು ವೈ ಎನ್ ಹೊಸಕೋಟೆ  ಗ್ರಾಮದ  ಕೆನರಾ ಬ್ಯಾಂಕ್ ಬಳಿ ಸಾರ್ವಜನಿಕ ಸ್ಥಳದಲ್ಲಿ   ಮಟ್ಕಾ ಜೂಜಾಟ ನಡೆಯುತ್ತಿದೆ ಎಂತ ಮಾಹಿತಿ ಬಂದ ಮೇರೆಗೆ ಪಂಚರು ಹಾಗೂ ಸಿಬ್ಬಂದಿಯೊಂದಿಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ಜೀಪ್ ನಿಲ್ಲಿಸಿ ಕೆಳಗಿಳಿದು ಸ್ವಲ್ಪ ದೂರು ನಡೆದುಕೊಂಡು ಕೆನರಾ ಬ್ಯಾಂಗ್ ಬಳಿ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ  ವೈ.ಎನ್,ಹೊಸಕೋಟೆ  ಗ್ರಾಮದ    ಕೆನರಾ ಬ್ಯಾಂಕ್ ಬಳಿ  ಒಬ್ಬ ಆಸಾಮಿಯು ಜನರನ್ನು ಕುರಿತು ಬನ್ನಿ ಮಟ್ಕಾ ಚೀಟಿ ಬರೆಸಿಕೊಳ್ಳಿ 1 ರೂಗೆ 70 ರೂ ಕೊಡುತ್ತೇನೆಂತ ಕೂಗೂತ್ತಾ ಜನರಿಂದ ಹಣವನ್ನು ಪಣವಾಗಿ ಕಟ್ಟಿಸಿಕೊಂಡು ಮಟ್ಕಾ ಚೀಟಿ ಬರೆದು ಕೊಡುತ್ತಾ  ಮಟ್ಕಾ ಜೂಜಾಟದಲ್ಲಿ  ತೊಡಗಿದ್ದವನನ್ನು  ನಾನು ಮತ್ತು ಸಿಬ್ಬಂದಿ ಹಾಗೂ ಪಂಚರೊಂದಿಗೆ ದಾಳಿ ನಡೆಸಿದ್ದು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಅಲ್ಲಿ ನೆರೆದಿದ್ದ ಜನರು ಓಡಿ ಹೋಗಿದ್ದು ಸಾರ್ವಜನಿಕರಿಂದ ಹಣವನ್ನು ಪಣಕ್ಕೆ ಕಟ್ಟಿಸಿಕೊಂಡು ಮಟ್ಕಾ ಚೀಟಿ ಬರೆದುಕೊಡುತ್ತಿದ್ದ  ಆಸಾಮಿಯನ್ನು   ಹಿಡಿದು ಆತನ  ಹೆಸರು ವಿಳಾಸ ಕೇಳಲಾಗಿ   ಜಿಲಾನಿ ಬಿನ್ ಲೇ|| ಮತೀನ್ ಸಾಬ್,40 ವರ್ಷ, ಕಾರ್ಪೆಂಟರ್ ಕೆಲಸ, ಮುಸ್ಲಿಂ ಜನಾಂಗ, ಎ-2 ಬ್ಲಾಕ್, ವೈ ಎನ್ ಹೊಸಕೋಟೆ ಟೌನ್,ಪಾವಗಡ ತಾ||  ಎಂತ ತಿಳಿಸಿದ್ದು ಆತನ ಬಳಿ ಇದ್ದ  ಮಟ್ಕಾ ನಂಬರ್ ಗಳನ್ನು  ಬರೆದಿರುವ ಒಂದು  ಚೀಟಿ, ಒಂದು ಲೆಡ್ ಪೆನ್ ಹಾಗೂ ಪಣಕ್ಕೆ ಕಟ್ಟಿಸಿಕೊಂಡಿದ್ದ 380=00 ರೂ ನಗದು ಹಣ ಇದ್ದು,   ಪಂಚರ ಸಮಕ್ಷಮ ಪಂಚನಾಮೆ ಮುಖೇನ ವಶಪಡಿಸಿಕೊಂಡು   ಸ್ಥಳದಲ್ಲಿ ಸಿಕ್ಕ  ಆಸಾಮಿಯನ್ನು ಸ್ಥಳದಿಂದ ಕಳುಹಿಸಲಾಗಿರುತ್ತದೆಂತ ,ನಂತರ ಠಾಣೆಗೆ ಮದ್ಯಾಹ್ನ 13:30  ಗಂಟೆಗೆ  ವಾಪಾಸ್ ಬಂದು   ಠಾಣಾ ಎನ್.ಸಿ.ಆರ್ : 71/2018   ರಲ್ಲಿ ನೊಂದಾಯಿಸಿ ಈ ಪ್ರಕರಣವು ಅಸಂಜ್ಞೇಯ ಅಪರಾಧವಾಗಿರುವುದರಿಂದ ಮುಂದಿನ ತನಿಖೆ ಕೈಗೊಳ್ಳಲು ಘನ ನ್ಯಾಯಾಲಯವು ಸಂಜ್ಞೇಯ ಅಪರಾಧವಾಗಿ ಪರಿಗಣಿಸಿ ಕಲಂ:78 ಕ್ಲಾಸ್ 3  ಕೆ.ಪಿ. ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲು ಅನುಮತಿ ನೀಡಲು ಘನ ನ್ಯಾಯಾಲಯದಲ್ಲಿ ಕೋರಿದ್ದು ದಿನಾಂಕ: 11/07/2018  ರಂದು ನ್ಯಾಯಾಲಯವು ಅನುಮತಿ ಆದೇಶ ನೀಡಿದ್ದರಿಂದ ದಿನಾಂಕ:11/07/2018  ರಂದು ಸಾಯಂಕಾಲ  4:30  ಗಂಟೆಗೆ ಆಸಾಮಿ  ವಿರುದ್ದ ಠಾಣಾ ಮೊ.ನಂ:60/2018 ಕಲಂ:78 ಕ್ಲಾಸ್ 3 ಕೆ.ಪಿ.ಆಕ್ಟ್ ರೀತ್ಯಾ ಪ್ರಕರಣ  ದಾಖಲಿಸಿರುತ್ತದೆ.


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 24 guests online
Content View Hits : 322800