lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ : 20-07-18 ಸ್ಮಾರ್ಟ್ ಸಿಟಿ ಅಧಿಕಾರಿಗಳೆಂದು ವಂಚಿಸಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 20-07-2018       ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 09-07-2018 ಕೊಲೆ ಆರೋಪಿಗಳ ಬಂಧನ ******* ದಿನಾಂಕ 04.07.2018 ರಂದು... >>   ಪತ್ರಿಕಾ ಪ್ರಕಟಣೆ ದಿನಾಂಕ : 07-07-2018. ಪೂರ್ವಾನುಮತಿ ಪಡೆಯದೇ ಹೆದ್ದಾರಿ ತಡೆ ನಡೆಸಿ,... >> ದಿನಾಂಕ.03.07.2018. ಪತ್ರಿಕಾ ಪ್ರಕಟಣೆ ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ 11 ಲಕ್ಷ 70 ಸಾವಿರ ಬೆಲೆ ಬಾಳುವ ಚಿನ್ನ-ಬೆಳ್ಳಿ  ಹಾಗೂ ಮೊಬೈಲ್‌‌‌... >>   ಪತ್ರಿಕಾ ಪ್ರಕಟಣೆ. ತುಮಕೂರು ಜಿಲ್ಲಾ ಪೊಲೀಸ್, ತುಮಕೂರು. ಕೋರಾ ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 27.06.2018 ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಸಾರ್ವಜನಿಕರ... >> ಪತ್ರಿಕಾ ಪ್ರಕಟಣೆ ದಿನಾಂಕ:- 23/06/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಖನ್ನ... >> ಪತ್ರಿಕಾ ಪ್ರಕಟಣೆ ದಿನಾಂಕ: 21-06-2018. ಸುಲಿಗೆಕೋರರ ಬಂಧನ: ದಿನಾಂಕ:18-06-2018 ರಂದು... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< July 2018 >
Mo Tu We Th Fr Sa Su
            1
2 3 4 5 6 7 8
9 11 12 13 14 15
16 17 18 19 20 21 22
23 24 25 26 27 28 29
30 31          
Tuesday, 10 July 2018
ಅಪರಾಧ ಘಟನೆಗಳು 10-07-18

ಹೆಬ್ಬೂರು  ಪೊಲೀಸ್ ಠಾಣಾ ಮೊ ನ-144/2018 ಕಲಂ 323,324,504,ರೆ/ವಿ 34 ಐಪಿಸಿ

ದಿನಾಂಕ-09/07/2018 ರಂದು ರಾತ್ರಿ 8-50 ಗಂಟೆಯಿಂದ 9-50 ಗಂಟೆವರೆಗೆ ಠಾಣಾ ಹೆಚ್ ಸಿ 418 ರಾಮಯ್ಯ ರವರು ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಓಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದ ಶ್ರೀಮತಿ ತೋಳಸಮ್ಮ ಕೊಂ ಲಕ್ಷ್ಮಯ್ಯ, 45 ವರ್ಷ, ಆದಿಕರ್ನಾಟಕ, ಚಿಲ್ಲರೆ ಅಂಗಡಿ ವ್ಯಾಪಾರ, ನಿಂಗೀಕಟ್ಟೆ, ಹೆಬ್ಬೂರು ಹೋಬಳಿ, ತುಮಕೂರು ತಾಲ್ಲೋಕು ರವರು ನೀಡಿದ ಹೇಳಿಕೆಯ ಅಂಶವೇನೆಂಧರೆ ನಾನು ಈ ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ, ನನಗೆ ಇಬ್ಬರು ಮಕ್ಕಳಿದ್ದು, ಇಬ್ಬರಿಗೂ ಮದುವೆ ಮಾಡಿಕೊಟ್ಟಿದ್ದು, ನಾನು ಮತ್ತು ನನ್ನ ಗಂಡ ಲಕ್ಷ್ಮಯ್ಯ ಇಬ್ಬರು ಒಟ್ಟಿಗೆ ವಾಸವಾಗಿರುತ್ತೇವೆ, ನಾನು ನಮ್ಮ ಗ್ರಾಮದ ಅಂಜನಮೂರ್ತಿ ಬಿನ್ ಲಿಂಗಪ್ಪ ಎಂಬುವವರಿಗೆ ಈಗ್ಗೆ 6 ವರ್ಷದ ಹಿಂದೆ ಕೈ ಸಾಲವಾಗಿ 10,000/ರೂ ಹಣವನ್ನು ನನ್ನ ಹತ್ತಿರ ಪಡೆದುಕೊಂಡಿದ್ದು, ನಾನು ಪ್ರತಿ ದಿವಸ ನಾನು ಹಣವನ್ನು ಕೇಳುತ್ತಿದ್ದೆ, ದಿನಾಂಕ-08-07-2018 ರಂದು ಮಧ್ಯಾಹ್ನ 3-00 ಗಂಟೆ ಸಮಯದಲ್ಲಿ ಅಂಜನ್ ಮೂರ್ತಿರವರ ಮನೆಯ ಬಳಿ ಹೋಗಿ ನಾನು ಕೊಟ್ಟಿದ್ದ ಹಣವನ್ನು ನಾನು ಕೇಳಿದಕ್ಕೆ ಅಂಜನಮೂರ್ತಿ ಬಿನ್ ಲಿಂಗಪ್ಪ ಮತ್ತು ಆತನ ಹೆಂಡತಿ ಆಶಾ ಎಂಬುವವರು ಏಕಾ ಏಕಿ ಬಂದು ಅಂಜನ್ ಮೂರ್ತಿರವರು ದೊಣ್ಣೆಯಿಂದ ನನ್ನ ತಲೆಗೆ, ಬಲಗಾಲಿನ ಮೊಣಕಾಲಿಗೆ ಮತ್ತು ಹೊಟ್ಟೆಗೆ ಹೊಡೆದು ರಕ್ತಗಾಯ ಪಡಿಸಿದನು. ಆತನ ಹೆಂಡತಿ ಆಶಾ ನೀನು ಮನೆಯ ಬಳಿ ಬಂದು ಹಣ ಕೇಳುತ್ತೀಯಾ ಅಂತಾ ಬೇವರ್ಸಿ ಮುಂಡೆ ಅಂತಾ ಅವ್ಯಾಚ್ಯಶಬ್ದಗಳಿಂದ ಬೈದು ನನ್ನ ಜುಟ್ಟು ಹಿಡಿದು ಏಳೆದಾಡಿ ಕೈಗಳಿಂದ ಹೊಡೆದು ಮೈಕೈಗೆ ನೋವುಂಟು ಮಾಡಿರುತ್ತಾಳೆ, ನಂತರ ಅಲ್ಲೇ ಇದ್ದ ಗಂಗನರಸಮ್ಮ ಕೋಂ ಹನುಮಂತರಾಯಪ್ಪ ಮತ್ತು ಕುಮಾರ್ ಬಿನ್ ಲೇಟ್ ರಂಗಯ್ಯ ಎಂಬುವವರು ಗಲಾಟೆ ನೆಡೆಯುತ್ತಿದ್ದ ಸ್ಥಳಕ್ಕೆ ಬಂದು ಗಲಾಟೆ ಬಿಡಿಸಿದರು. ನನಗೆ ತಲೆಗೆ ಮತ್ತು ಕಾಲಿಗೆ, ಹೊಟ್ಟೆಗೆ ಪೆಟ್ಟು ಬಿದ್ದ ರಕ್ತಗಾಯವಾಗಿದ್ದರಿಂದ ಯಾವುದೋ ಒಂದು ವಾಹನದಲ್ಲಿ ಚಿಕಿತ್ಸೆಗಾಗಿ ನಾಗವಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಿ ಚಿಕಿತ್ಸೆ ಪಡೆದಿದ್ದು, ವೈಧ್ಯರ ಸಲಹೆ ಮೇರೆಗೆ ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಬಂದು ಓಳರೋಗಿಯಾಗಿ ಚಿಕತ್ಸೆ ಪಡೆಯುತ್ತಿರುತ್ತೇನೆ, ನನಗೆ ಹೊಡೆದ ಅಂಜನಮೂರ್ತಿ ಮತ್ತು ಆಶಾಳ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ ಹೇಳಿಕೆಯನ್ನು ಪಡೆದು ರಾತ್ರಿ 10-45 ಗಂಟೆಗೆ ಠಾಣೆಗೆ ಬಂದು ಹಾಜರು ಪಡಿಸಿದ ಹೇಳೀಕೆಯನ್ನು ಸ್ವೀಕರಿಸಿ ಪ್ರಕರಣ ದಾಖಲಿಸಿರುತ್ತೆ.

 

ಸಿ.ಎಸ್.ಪುರ ಠಾಣಾ ಮೊ.ನಂ:75/2018. ಕಲಂ:379 ಐಪಿಸಿ

ದಿನಾಂಕ:09.07.2018 ರಂಧು ತುಮಕೂರು ತುಮಕೂರು ಜಿಲ್ಲಾ ಪೊಲೀಸ್ ಕಛೇರಿಯ ಡಿಸಿಐಬಿ ಘಟಕದ ಪಿ.ಐ.ರವರಾದ ಎಂ.ಜಿ ನಾಗರಾಜು ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೆಂಧರೆ, ದಿ:09/07/2018 ರಂದು 5-00 ಪಿ.ಎಂ. ಗಂಟೆ ಸಮಯದಲ್ಲಿ ಕಛೇರಿಯಲ್ಲಿರುವಾಗ್ಗೆ ಸಿ.ಎಸ್. ಪುರ ಠಾಣಾ ಸರಹದ್ದಿನ ಕಲ್ಲೂರು ಬಳಿ ಅಕ್ರಮ ಮರಳು ಸಾಗಾಣಿಕೆ ಬಗ್ಗೆ ಬಂದ ಮಾಹಿತಿ ಮೇರೆಗೆ ಮಾನ್ಯ ಎಸ್.ಪಿ. ಸಾಹೇಬರಿಗೆ ಮಾಹಿತಿ ತಿಳಿಸಿ ಅವರ ಮಾರ್ಗದರ್ಶನದಲ್ಲಿ,  ನಮ್ಮ ಕಛೇರಿಯ ಸಿಬ್ಬಂದಿಗಳಾದ ಹೆಚ್.ಸಿ-290, ಹನುಮಂತರಾಯಪ್ಪ, ಹೆಚ್.ಸಿ-14 ಸಿದ್ದೇಶ್ವರಯ್ಯ, ಪಿಸಿ-454 ಶಶಿಕುಮಾರ್ ರವರುಗಳೊಂದಿಗೆ ಗುಬ್ಬಿ ತಾಲ್ಲೋಕು, ಕಡಬಾ ಹೋಬಳಿ, ಕಲ್ಲೂರು ಸಮೀಪ ಶಿಂಷಾ ನದಿ ಹತ್ತಿರ 6-30 ಪಿ.ಎಂ.ಗೆ ಬಂದು ನೋಡಲಾಗಿ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡಲು ಟ್ರಾಕ್ಟರನ್ನು ನಿಲ್ಲಿಸಿಕೊಂಡು ಮರಳನ್ನು ತುಂಬುತ್ತಿದ್ದು, ನಾವು ಬರುವುದನ್ನು ನೋಡಿ ಸ್ಥಳದಲ್ಲಿ ಟ್ರಾಕ್ಟರನ್ನು ಬಿಟ್ಟು ಓಡಿ ಹೋದರು.ನಾವು ಹತ್ತಿರ ಹೋಗಿ ಪರಿಶೀಲಿಸಿ ನೋಡಲಾಗಿ ನೀಲಿಬಣ್ಣದ ನಂಬರ್ ಇಲ್ಲದೇ ಇರುವ ಸೊನಾಲಿಕಾ ಕಂಪನಿಯ ಒಂದು ಟ್ರಾಕ್ಟರ್ ಆಗಿರುತ್ತದೆ. ಟ್ರಾಕ್ಟರ್ ಗೆ  ಸ್ವಲ್ಪ ಮರಳನ್ನು ತುಂಬಿರುವುದು ಕಂಡು ಬಂದಿರುತ್ತೆ. ಸದರಿ ಟ್ರಾಕ್ಟರ್ ಗೆ  ಅಕ್ರಮವಾಗಿ ಮರಳನ್ನು ತುಂಬಿಸಾಗಾಣಿಕೆ ಮಾಡುತ್ತಿದ್ದುದು ಕಂಡುಬಂದಿದ್ದು, ಈ ಬಗ್ಗೆ ಸಿ.ಎಸ್.ಪುರ ಠಾಣಾಧಿಕಾರಿಯವರನ್ನು ಸ್ಥಳಕ್ಕೆ ಕರೆಸಿ ಟ್ರಾಕ್ಟರ್ ನ್ನು ಅವರ ವಶಕ್ಕೆ ನೀಡಿ 8-00 ಪಿ.ಎಂಗೆ ವಾಪಾಸ್ ಠಾಣೆಗೆ ಬಂದು ಟ್ರಾಕ್ಟರ್ ಮಾಲೀಕ ಮತ್ತು ಚಾಲಕನ ವಿರುದ್ದ ಕ್ರಮ ಕೈಗೊಳ್ಳಲು ಕೋರಿ ನೀಡಿದ ವರದಿ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

ತಾವರೆಕೆರೆ ಪೊಲೀಸ್ ಠಾಣಾ ಮೊ ನಂ-: 49/2018 ಕಲಂ  279, 304[ಎ] ಐಪಿಸಿ

 

ದಿನಾಂಕ:09-07-2018 ರಂದು ರಾತ್ರಿ 8-30 ಗಂಟೆಗೆ ಪಿರ್ಯಾದಿ ರಂಗನಾಥ್‌ ಬಿನ್‌ ಮಹಾಲಿಂಗಪ್ಪ, 45 ವರ್ಷ, ಲಕ್ಷ್ಮೀಸಾಗರ, ಸಿರಾ ತಾಲ್ಲೋಕ್‌ ರವರು ಠಾಣೆಗೆ ಹಾಜರಾಗಿ ಕೊಟ್ಟ ಲಿಖಿತ ದೂರಿನ ಸಾರಾಂಶವೇನೆಂದರೆ, ದಿನಾಂಕ:09-07-18 ರಂದು ಸಂಜೆ ಸುಮಾರು 4-30 ಗಂಟೆಯಲ್ಲಿ ನಮ್ಮೂರ ಶ್ರೀನಿವಾಸಮೂರ್ತಿರವರು ಕೆಎ-07-ಟಿಎ-2236 ನೇ ಟ್ರಾಕ್ಟರ್‌ನಲ್ಲಿ ಮಣ್ಣು ತುಂಬಲು ಟ್ರಾಕ್ಟರ್‌ ಟ್ರೈಲರನ್ನು ಕೆರೆಯ ಹತ್ತಿರ ಬಿಟ್ಟು, ಟ್ರಾಕ್ಟರ್‌ ಇಂಜಿನನ್ನು ತೆಗೆದುಕೊಂಡು ಬರುವಾಗ ನಮ್ಮೂರ ಸಮೀಪ ಶ್ರೀನಿಧಿ ಟೆಕ್ಸ್‌ಟೈಲ್ಸ್‌ ಮಾಲೀಕರ ಜಮೀನಿಗೆ ಹೋಗುವ ದಾರಿಯಲ್ಲಿ ಅತಿವೇಗವಾಗಿ ಅಜಾಗರೂಕತೆಯಿಂದ ಓಡಿಸಿ ರಸ್ತೆಯ ಎಡ ಬದಿ ನಡೆದುಕೊಂಡು ಹೋಗುತಿದ್ದ ನನ್ನ ಮಗನಾದ 19 ವರ್ಷದ ದಿಲೀಪ ಎಂಬುವನಿಗೆ ಡಿಕ್ಕಿ ಹೊಡೆಸಿದ ಪರಿಣಾಮ ನನ್ನ ಮಗನ ಸಮೇತ ಟ್ರಾಕ್ಟರನ್ನು ರಸ್ತೆಯ ಪಕ್ಕದ ಗುಂಡಿಗೆ ಬೀಳಿಸಿ ಅಪಘಾತಪಡಿಸಿದ್ದರಿಂದ ನನ್ನ ಮಗ ಸ್ಥಳದಲ್ಲೇ ಮರಣಿಸಿರುತ್ತಾನೆಂತ ವಿಚಾರವನ್ನು ನಮ್ಮೂರಿನ ಎಲ್‌.ಕೆ. ರಾಮುರವರು ತಿಳಿಸಿದ್ದು, ನಾನು ಸಹ ಸ್ಥಳಕ್ಕೆ ಹೋಗಿ ನೀಡಲಾಗಿ ನಿಜವಾಗಿರುತ್ತೆ. ಆದ್ದರಿಂದ ಅಪಘಾತಕ್ಕೆ ಕಾರಣನಾಗಿರುವ ಮೇಲ್ಕಂಡ ಚಾಲಕನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂತ ಇತ್ಯಾದಿಯಾಗಿ ಕೊಟ್ಟ ದೂರಿನ ಸಾರಾಂಶವಾಗಿರುತ್ತೆ

ಮಿಡಿಗೇಶಿ ಪೊಲೀಸ್ ಠಾಣಾ ಮೊ.ನಂ-70/2018, ಕಲಂ: 78 ಕೆ.ಪಿ.ಆಕ್ಟ್.

ದಿನಾಂಕ:09/07/2018 ರಂದು ಠಾಣಾ ಸರಹದ್ದು ಗ್ರಾಮಗಳಲ್ಲಿ ಮಟ್ಕಾ, ಇಸ್ಪೀಟ್ ಜೂಜಾಟಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ನೇಮಿಸಿದ್ದ ಠಾಣಾ ಸಿಪಿಸಿ-716 ದಯಾನಂದ.ಎಸ್. ರವರು ಇದೇ ದಿನ ಸಂಜೆ 06:30 ಗಂಟೆಗೆ ವಾಪಸ್ಸ್ ಠಾಣೆಗೆ ಹಾಜರಾಗಿ, ಈ ದಿನ ಠಾಣಾಧಿಕಾರಿಯವರು ನನಗೆ ಮಿಡಿಗೇಶಿ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ಗ್ರಾಮಗಳಲ್ಲಿ ಗಸ್ತು ಮಾಡಿಕೊಂಡು ಮಟ್ಕಾ ಮತ್ತು ಇಸ್ಪೀಟ್ ಜೂಜಾಟಗಳ ಬಗ್ಗೆ ಮಾಹಿತಿ ಸಂಗ್ರಹಿಸಿಕೊಂಡು ಬರುವಂತೆ ಕರ್ತವ್ಯಕ್ಕೆ ನೇಮಿಸಿದ್ದು, ಅದರಂತೆ ನಾನು ಮಿಡಿಗೇಶಿ, ನಲ್ಲೇಕಾಮನಹಳ್ಳಿ, ಸತ್ತಿಗಾನಹಳ್ಳಿ, ಬೆನಕನಹಳ್ಳಿ ಗ್ರಾಮಗಳಲ್ಲಿ ಗಸ್ತು ಮಾಡಿಕೊಂಡು ನಂತರ ಸಾಯಂಕಾಲ 06:00 ಗಂಟೆಯ ಸಮಯದಲ್ಲಿ ಮಿಡಿಗೇಶಿ ಹೋಬಳಿ, ಲಕ್ಷ್ಮೀಪುರ ಗ್ರಾಮಕ್ಕೆ ಹೋಗಿ ಗಸ್ತಿನಲ್ಲಿರುವಾಗ್ಗೆ, ಸದರಿ ಗ್ರಾಮದ ಹೊರವಲಯದಲ್ಲಿ ಮಲ್ಲನಾಯಕನಹಳ್ಳಿ ರಸ್ತೆಯ ಪಕ್ಕದಲ್ಲಿರುವ ಅರಳಿ ಕಟ್ಟೆಯ ಬಳಿ ಸಾರ್ವಜನಿಕ ಸ್ಥಳದಲ್ಲಿ ಯಾರೋ ಒಬ್ಬ ಆಸಾಮಿಯು ಸಾರ್ವಜನಿಕರನ್ನು ಗುಂಪು  ಸೇರಿಸಿಕೊಂಡು 01 ರೂಪಾಯಿಗೆ 70 ರೂಪಾಯಿ ಕೊಡುತ್ತೇನೆ ಇದು ಮಟ್ಕಾ ಜೂಜಾಟ ಬನ್ನಿ ಬನ್ನಿ ನಿಮ್ಮ ನಿಮ್ಮ ಅದೃಷ್ಟದ ನಂಬರ್‌ಗಳನ್ನು ಬರೆಸಿಕೊಳ್ಳಿ ಎಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಡೆದು ಮಟ್ಕಾ ನಂಬರ್‌ ಬರೆದುಕೊಳ್ಳುತ್ತಾ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟ ನಡೆಸುತ್ತಿದ್ದಾನೆಂತ ಮಾಹಿತಿ ಬಂದಿರುತ್ತೆ ಆದ್ದರಿಂದ ಮುಂದಿನ ಕ್ರಮಕ್ಕಾಗಿ ನೀಡಿದ ವರದಿಯ ಅಂಶವಾಗಿರುತ್ತೆ.

ಶಿರಾ ಪೊಲೀಸ್ ಠಾಣಾ ಮೊ ನಂ 272/2018 ಕಲಂ 279-337 ಐ.ಪಿ.ಸಿ ರೆ/ವಿ 187 ಐ.ಎಂ.ವಿ ಆಕ್ಟ್

ದಿನಾಂಕ 09-07-2018 ರಂದು  ಸಂಜೆ 05-10 ಗಂಟೆಗೆ ಫಿರ್ಯಾದಿ ದೇವರಾಜು  ಬಿನ್ ಅಂಜಿನಪ್ಪ, 35 ವರ್ಷ, ಹೇರ್ ಕಟಿಂಗ್ ಕೆಲಸ,  ಜ್ಯೋತಿ ನಗರ, ಶಿರಾ ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ಫಿರ್ಯಾದಿನ ಅಂಶವೇನೆಂದರೆ,  ದಿನಾಂಕ 09-07-2018 ರಂದು ನಾನು  ಬಾಲಾಜಿ ನಗರದಲ್ಲಿರುವ ಹೇರ್ ಕಟಿಂಗ್ ಶಾಪ್ ನಲ್ಲಿ  ಕೆಲಸ ಮಾಡುತ್ತಿದ್ದಾಗ ಬೆಳಿಗ್ಗೆ ಸುಮಾರು 12:15 ರ ಸಮಯದಲ್ಲಿ ನನ್ನ ತಂಗಿ ಗಂಡನಾದ ಲಕ್ಷ್ಮಿನಾರಾಯಣ್  ರವರು ನನ್ನ ಮೊಬೈಲ್ ಗೆ ಕರೆ ಮಾಡಿ ಶಿರಾದ ಐ.ಬಿ ಸರ್ಕಲ್ ನಲ್ಲಿ ಅಪಘಾತ ವಾಗಿದ್ದು ಚಿಕಿತ್ಸೆಗಾಗಿ ಶಿರಾ  ಸರ್ಕಾರಿ ಆಸ್ಪತ್ರೆಗೆ   ಕರೆದು ಕೊಂಡು ಬಂದಿದ್ದು ಬೇಗ ಬಾ ಎಂದು ತಿಳಿಸಿದ್ದು ಆಸ್ಪತ್ರೆಗೆ ಹೋಗಿ ನೋಡಲಾಗಿ  ಲಕ್ಷ್ಮೀನಾರಾಯಣ ಹಾಗೂ ಆತನ  ಸ್ನೇಹಿತ ರಾಘವೇಂದ್ರ ರವರು ಚಿಕಿತ್ಸೆ ಪಡೆದಿದ್ದು   ವಿಚಾರ ಮಾಡಲಾಗಿ  ಶಿರಾಕ್ಕೆ ಇಬ್ಬರೂ ಕುರಿ ವ್ಯಾಪಾರಕ್ಕೆ ಬಂದಿದ್ದು  ಊರಿಗೆ ವಾಪಸ್ಸು ಹೋಗಲು  ಶಿರಾ ದಲ್ಲಿರುವ ಐ.ಬಿ ಸರ್ಕಲ್ ನಲ್ಲಿ ಬಸ್ಸಿಗಾಗಿ ಕಾಯುತ್ತಾ   ನಿಂತಿದ್ದಾಗ  ಬಸ್ ಸ್ಟಾಂಡ್ ಕಡೆಯಿಂದ ಬುಲೆಟ್  ಮೋಟಾರ್ ಸೈಕಲ್ ನಂ ಸಿ.ಎನ್.ಬಿ 7851  ನೇ ಚಾಲಕ  ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು  ಪಟ್ಟನಾಯಕನಹಳ್ಳಿ   ರಸ್ತೆ ಕಡೆಗೆ ತಿರುಗಿಸಿ  ರಸ್ತೆಯ ಪಕ್ಕದ ಬಸ್ ಸ್ಟಾಂಡ್ ರಸ್ತೆಯಲ್ಲಿ ಬಸ್ಸಿಗಾಗಿ ಕಾಯುತ್ತಾ ನಿಂತಿದ್ದ ಇಬ್ಬರಿಗೂ ಡಿಕ್ಕಿ ಹೊಡೆಸಿ ಅಪಘಾತ  ಪಡಿಸಿದನೆಂದು ತಿಳಿಯಿತು  ಮೋಟಾರ್ ಬೈಕ್ ಸವಾರನ ಹೆಸರು ತಿಳಿಯಲಾಗಿ ಜಯರಾಮಯ್ಯ ಬಿನ್ ಗ್ಯಾರಪ್ಪ, ಯಲಹಂಕ, ಬೆಂಗಳೂರು  ಎಂದು ತಿಳಿಯಿತು  ಅಪಘಾತದಲ್ಲಿ ಲಕ್ಷ್ಮೀನಾರಾಯಣನಿಗೆ  ಎಡಗಾಲು ಎಡಗೈ ತಲೆಗೆ ಏಟುಗಳಾಗಿದ್ದು, ರಾಘವೇಂದ್ರನಿಗೆ ಬಲಗಾಲಿಗೆ ಕೈಯಿಗೆ ತಲೆಗೆ ಏಟುಗಳು ಬಿದ್ದಿದ್ದವು. ಆದ್ದರಿಂದ ಅಪಘಾತ ಪಡಿಸಿದ ಮೋಟಾರ್ ಸೈಕಲ್ ಸವಾರನ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿರುತ್ತೆ.

ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆ. ಮೊ.ನಂ 174/2018  ಕಲಂ 406,408,420, ರೆ/ವಿ 34 ಐಪಿಸಿ.

ದಿನಾಂಕ:09/07/2018 ರಂದು ಸಂಜೆ 5-00 ಗಂಟೆಗೆ ತುಮಕೂರು ತಾಲ್ಲೋಕ್, ಕಸಬಾ ಹೋಬಳಿ, ಯಲ್ಲಾಪುರ ಗ್ರಾಮದ ಎಸ್‌ಬಿಐ ಬ್ಯಾಂಕ್ ಮ್ಯಾನೇಜರ್ ಶ್ವೇತಾ.ಡಿ ರವರು ನೀಡಿದ ದೂರಿನ ಅಂಶವೇನೆಂದರೆ, ನಮ್ಮ ಬ್ಯಾಂಕಿನಲ್ಲಿ ಸಿದ್ದಲಿಂಗಪ್ಪ ಎಂಬುವರು ದಿ:17/01/2014 ರಂದು 6 ಚಿನ್ನದ ಬಳೆಗಳನ್ನು ಅಡವಿಟ್ಟು 1 ಲಕ್ಷ ರೂ ಹಣವನ್ನು ಪಡೆದಿದ್ದು, ಆದಿ ಬಳೆಗಳನ್ನು ನಮ್ಮ ಬ್ಯಾಂಕಿನ ಅಪ್ರೈಸರ್ ರವರರಾದ ಪವನ್, ರಕ್ಷಾ ಜ್ಯೂಯಲರ್ಸ್ ಯಲ್ಲಾಪುರ ರವರಿಂದ ಚೆಕ್ ಮಾಡಿಸಿದ್ದು ಚಿನ್ನದ ಬಳೆಗಳೆಂದು ದೃಢೀಕರಿಸಿ ಸಹಿಮಾಡಿರುತ್ತಾರೆ. ನಂತರ ದಿ:09/02/2018 ರಂದು ರವಿಕುಮಾರ್, ಕಾಳಿಕಾಂಬ ಜ್ಯೂಯಲರ್ಸ್ ರವರಿಂದ ಚೆಕ್ ಮಾಡಿಸಿದ್ದು ಚಿನ್ನದ್ದೆಂದು ದೃಢೀಕರಿಸಿರುತ್ತಾರೆ. ಸದರಿ ಸಿದ್ದಲಿಂಗಪ್ಪ ರವರು ಬಳೆಗಳನ್ನು ಬಿಡಿಸಿಕೊಳ್ಳಲು ಪೋನ್ ಮೂಲಕ ಹಾಗೂ ನೋಟೀಸ್‌ನ್ನು ನೀಡಿದ್ದು, ಸದರಿಯವರು ಬಿಡಿಕೊಳ್ಳದೇ ಇದ್ದುದರಿಂದ ದಿ:28/06/2018 ರಂದು ಹರಾಜು ಪ್ರಕ್ರಿಯೆ ನಡೆಸಿದ್ದು, ಈ ಸಮಯದಲ್ಲಿ ಸಿದ್ದಾಚಾರ್ ಎಂಬುವರು ಬಳೆಗಳನ್ನು ನೋಡಿ ಅದನ್ನು ಚೆಕ್ ಮಾಡುವುದಾಗಿ ತಿಳಿಸಿ, ಅದನ್ನು ಕಟ್ ಮಾಡಿದಾಗ ಬಳೆಗಳ ಮೇಲೆ ಚಿನ್ನದ ಕೋಟ್ ಇದ್ದು ಒಳಗಡೆ ತಾಮ್ರವಿರುವುದಾಗಿ ತಿಳಿಸಿರುತ್ತಾರೆ. ನಂತರ ಅದನ್ನು ಅಪ್ರೈಸರ್ ಶಂಭುಲಿಂಗ ಶ್ರೀ ವೀರಭದ್ರ ಜ್ಯೂಯಲರ್ ವರ್ಕ್ಸ್ ರವರಿಂದ ದೃಢೀಕರಿಸಿ ಚಿನ್ನದ ಬಳೆಗಳಲ್ಲವೆಂದು ಫೇಕ್ ಸರ್ಟಿಫಿಕೇಟ್ ಅನ್ನು ಪಡೆದುಕೊಂಡಿರುತ್ತೇವೆ. ನಮ್ಮ ಬ್ಯಾಂಕಿಗೆ ಅಧಿಕೃತ ಅಪ್ರೈಸರ್ ರವರಾದ ಪವನ್ ಹಾಗೂ ರವಿಕುಮಾರ್ ರವರುಗಳು 1,00,000/- ರೂ ಬೆಲೆಯ ಚಿನ್ನವಲ್ಲದ ವಡವೆಗಳನ್ನು ಚಿನ್ನದೆಂದು ದೃಢೀಕರಿಸಿ ನಂಬಿಕೆ ದ್ರೋಹ ಮತ್ತು ಮೋಸ ಮಾಡಿರುತ್ತಾರೆ. ಹಾಗೂ ವಡವೆಗಳ ಮಾಲಿಕರಾದ ಸಿದ್ದಲಿಂಗಪ್ಪ ರವರು ನಕಲಿ ಚಿನ್ನದ ಬಳೆಗಳ ಎಂದು ಗೊತ್ತಿದ್ದರೂ ಸಹ ಚಿನ್ನದ ವಡವೆಗಳು ಎಂದು ಅಪ್ರೈಸರ್ ರವರಾದ ಪವನ್ ಹಾಗೂ ರವಿಕುಮಾರ್ ರವರುಗಳ ಜೊತೆ ಸೇರಿ ನಮ್ಮ  ಬ್ಯಾಂಕಿನಲ್ಲಿ ಪಡೆದಿರುವ ಸಾಲ ಮತ್ತು ಬಡ್ಡಿ ಸೇರಿ 1,52,000/- ರೂ ಗಳನ್ನು ಮೋಸ ಮಾಡಿರುತ್ತಾರೆ. ಇವರುಗಳ ವಿರುದ್ದ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿದೆ.

ತುಮಕೂರು ಸಂಚಾರ ಪೊಲೀಸ್ ಠಾಣಾ ಮೊ.ಸಂಖ್ಯೆ 154/2018 ಕಲಂ 279, 304(ಎ) ಐಪಿಸಿ

ದಿನಾಂಕ 09.07.2018 ರಂದು  ಬೆಳಿಗ್ಗೆ 10-00 ಗಂಟೆಗೆ  ಪಿರ್ಯಾದಿ   ದೀಪಕ್ ಬಿನ್ ಪ್ರೇಮ್, 31ವರ್ಷ, ವಿಶ್ವಕರ್ಮ ಜನಾಂಗ, ಸೆಕ್ಯೂರಿಟಿ ಕೆಲಸ, ಭೀಮಸಂದ್ರ, ತುಮಕೂರು ಸ್ವಂತ ಊರು ನೇಪಾಳ,    ಇವರು ನೀಡಿದ ದೂರಿನ ಅಂಶವೇನೆಂದರೆ,  ದಿನಾಂಕ 08.07.2018 ರಂದು ನನ್ನ ತಮ್ಮ  ಸೋನು ಬಿನ್ ಪ್ರೇಮ್. 29ವರ್ಷ, ಸಾಮಿಲ್ ಕೆಲಸ, ಭೀಂಸಂದ್ರ, ತುಮಕೂರು ಮತ್ತು ಆತನ ಸ್ನೇಹಿತ ರಾಮ್ ಧನ್ ಇಬ್ಬರೂ  ಭೀಮಸಂದ್ರ ಗ್ರಾಮದ ಹಿಂಧೂಸ್ಥಾನ್ ಸಾಮಿಲ್   ಮುಂಭಾಗ ರಾತ್ರಿ 8-00 ಗಂಟೆಯಲ್ಲಿ ಎನ್.ಹೆಚ್.206 ರಸ್ತೆಯನ್ನು ದಾಟುತ್ತಿರುವಾಗ, ತುಮಕೂರು ಕಡೆಯಿಂದ  ಗುಬ್ಬಿ ಕಡೆಗೆ ಒಂದು ಕಾರನ್ನು  ಅದರ ಚಾಲಕ ಅತಿವೇಗ ಮತ್ತು  ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಸೋನು ರವರಿಗೆ     ಡಿಕ್ಕಿ ಹೊಡೆಸಿದ್ದರಿಂದ ಆತ ಕೆಳಗೆ ರಸ್ತೆಯ ಮೇಲೆ ಬಿದ್ದಾಗ, ತುಮಕೂರು ಕಡೆಯಿಂದ ಗುಬ್ಬಿ ಕಡೆಗೆ ಮತ್ತೊಂದು ಕಾರನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಕೆಳಗೆ ರಸ್ತೆಯ ಮೇಲೆ ಬಿದ್ದಿದ್ದ ಸೋನು ರವರ ಕಾಲುಗಳ ಮೇಲೆ ಹತ್ತಿಸಿಕೊಂಡು ಎರಡೂ ಕಾರುಗಳನ್ನು  ನಿಲ್ಲಿಸದೇ ಗುಬ್ಬಿ ಕಡೆಗೆ ಹೊರಟು ಹೋಗಿರುತ್ತಾರೆ.   ಗಾಯಾಳು ಸೋನು ರವರನ್ನು ತುಮಕೂರು ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸುತ್ತಿರುವಾಗ ಚಿಕಿತ್ಸೆ ಫಲಕಾರಿಯಾಗದೇ ರಾತ್ರಿ 9-00 ಗಂಟೆಯಲ್ಲಿ ಮೃತಪಟ್ಟಿರುತ್ತಾನೆಂತ ದೂರು.


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 90 guests online
Content View Hits : 304506