lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ : 20-07-18 ಸ್ಮಾರ್ಟ್ ಸಿಟಿ ಅಧಿಕಾರಿಗಳೆಂದು ವಂಚಿಸಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 20-07-2018       ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 09-07-2018 ಕೊಲೆ ಆರೋಪಿಗಳ ಬಂಧನ ******* ದಿನಾಂಕ 04.07.2018 ರಂದು... >>   ಪತ್ರಿಕಾ ಪ್ರಕಟಣೆ ದಿನಾಂಕ : 07-07-2018. ಪೂರ್ವಾನುಮತಿ ಪಡೆಯದೇ ಹೆದ್ದಾರಿ ತಡೆ ನಡೆಸಿ,... >> ದಿನಾಂಕ.03.07.2018. ಪತ್ರಿಕಾ ಪ್ರಕಟಣೆ ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ 11 ಲಕ್ಷ 70 ಸಾವಿರ ಬೆಲೆ ಬಾಳುವ ಚಿನ್ನ-ಬೆಳ್ಳಿ  ಹಾಗೂ ಮೊಬೈಲ್‌‌‌... >>   ಪತ್ರಿಕಾ ಪ್ರಕಟಣೆ. ತುಮಕೂರು ಜಿಲ್ಲಾ ಪೊಲೀಸ್, ತುಮಕೂರು. ಕೋರಾ ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 27.06.2018 ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಸಾರ್ವಜನಿಕರ... >> ಪತ್ರಿಕಾ ಪ್ರಕಟಣೆ ದಿನಾಂಕ:- 23/06/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಖನ್ನ... >> ಪತ್ರಿಕಾ ಪ್ರಕಟಣೆ ದಿನಾಂಕ: 21-06-2018. ಸುಲಿಗೆಕೋರರ ಬಂಧನ: ದಿನಾಂಕ:18-06-2018 ರಂದು... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< July 2018 >
Mo Tu We Th Fr Sa Su
            1
2 3 4 5 6 7 8
10 11 12 13 14 15
16 17 18 19 20 21 22
23 24 25 26 27 28 29
30 31          
Monday, 09 July 2018
ಪತ್ರಿಕಾ ಪ್ರಕಟಣೆ ದಿ: 09-07-18

ಪತ್ರಿಕಾ ಪ್ರಕಟಣೆ.

ದಿನಾಂಕ : 09-07-2018


ಕೊಲೆ ಆರೋಪಿಗಳ ಬಂಧನ

*******

ದಿನಾಂಕ 04.07.2018 ರಂದು ಗುಬ್ಬಿ ಪೊಲೀಸ್ ಠಾಣಾ ವ್ಯಾಪ್ತಿಯ ಬ್ಯಾಲಹಳ್ಳಿ ಬಳಿ ದಾಸರಕಲ್ಲಹಳ್ಳಿ ಸ.ನಂ - 17/1 ಪಿ ರ ಗೋಮಾಳದಲ್ಲಿ ಸುಮಾರು 40 ವರ್ಷ ವಯಸ್ಸಿನ ಅಪರಿಚಿತ ಹೆಂಗಸನ್ನು ಯಾರೋ ಯಾವುದೋ ಉದ್ದೇಶದಿಂದ ಕೊಲೆ ಮಾಡಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿರುತ್ತೆ. ಮೃತ ಅಪರಿಚಿತ ಹೆಂಗಸಿನ ಪತ್ತೆ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿ ಈಕೆಯು ತುಮಕೂರು ತಾಲ್ಲೋಕು ರಾಮಗೊಂಡನಹಳ್ಳಿ  ಬಳಿ ರಸ್ತೆ ಬದಿಯಲ್ಲಿ ಟೆಂಟ್ ಹಾಕಿಕೊಂಡು ವಾಸವಾಗಿದ್ದ ರಂಗಮ್ಮ ಎಂಬುದಾಗಿ ತಿಳಿದುಬಂದಿರುತ್ತೆ .  ಮೃತೆ ರಂಗಮ್ಮರವರು ಗುಬ್ಬಿ ತಾಲ್ಲೋಕು ಕಡಬಾ ವಾಸಿ ರಂಗಪ್ಪನ  ಜೊತೆ ಅನೈತಿಕ ಸಂಬಂದ ಇಟ್ಟುಕೊಂಡಿರುವುದಾಗಿ ತಿಳಿದುಬಂದಿರುತ್ತೆ.

ರಂಗಪ್ಪನ ಅಕ್ರಮ ಸಂಬಂದ ರಂಗಪ್ಪನ ತಮ್ಮ ಮಾರ ಮತ್ತು ರಂಗಪ್ಪನ ಚಿಕ್ಕಪ್ಪನ ಮಗ ಮಾರ @ ಮಹೇಶ  ಇಬ್ಬರು ರಂಗಪ್ಪನಿಗೆ ನೀನು ಬುಡುಬಡುಕೆ ಜನಾಂಗದ ರಂಗಮ್ಮನ ಸಹವಾಸ ಬಿಡು ಅವಳು ನಮ್ಮ ಜಾತಿಯವಳಲ್ಲ ನೀನು ಅವಳ ಸಹವಾಸ ಬಿಡದೇ ಇದ್ದರೆ ಅವಳನ್ನು ಒಂದು ಗತಿ ಕಾಣಿಸುತ್ತೇವೆ ಎಂತಾ ಹೇಳುತ್ತಿದ್ದು ಅದರೂ ರಂಗಮ್ಮನ ಜೊತೆಯಲ್ಲೆ ಈಗ್ಗೆ 02 ತಿಂಗಳಿಂದ ಕೆ.ಜಿ ಟೆಂಪಲ್ ರಸ್ತೆ ಬದಿ ಬಿಡಾರ ಹಾಕಿಕೊಂಡು ವಾಸವಾಗಿದ್ದ ರಂಗಪ್ಪನನ್ನು  ದಿನಾಂಕ 02.07.2018 ರಂದು ಮದ್ಯಾಹ್ನ  ಮಾರ ಮತ್ತು ಅವರ ಚಿಕ್ಕಪ್ಪನ ಮಗ ಮಾರ @ ಮಹೇಶ್ ರವರು ಬಂದು ನಿಮ್ಮ ತಂದೆಗೆ ಉಷಾರಿಲ್ಲ ಬೇಗ ಬಾ ಎಂತಾ ಹೇಳಿ ರಂಗಪ್ಪನನ್ನು ಆತನ ಜೊತೆ ವಾಸವಿದ್ದ ರಂಗಮ್ಮಳನ್ನು ಆಟೋದಲ್ಲಿ  ಕಡಬಾಕ್ಕೆ ಹೋಗೋಣ ಎಂತಾ ಹೇಳಿ ಬ್ಯಾಲಹಳ್ಳಿ ಹತ್ತಿರ ದಾಸರಕಲ್ಲಹಳ್ಳಿ ಗೋಮಾಳಕ್ಕೆ ರಂಗಪ್ ಮತ್ತು ರಂಗಮ್ಮಳನ್ನು ಕರೆದುಕೊಂಡು ಹೋಗಿ ಅಲ್ಲಿ ಇಬ್ಬರಿಗೂ  ಮದ್ಯಪಾನ ಮಾಡಿಸಿ ಹೊಂಗೆ ಕಡ್ಡಿಯಿಂದ ಹಲ್ಲೆ ಮಾಡಿ ನಂತರ ರಂಗಪ್ಪನಿಗೆ ನೀನು ಇವಳು ಜೀವಂತವಾಗಿ ಇದ್ದರೇ ತಾನೇ ಅವಳ ಸಂಗ ಮಾಡುವುದು ಇವಳನ್ನು ಮುಗಿಸುತ್ತೇವೆಂತ ಹೇಳಿ ರಂಗಮ್ಮಳಿಗೆ ಕಲ್ಲಿನಿಂದ ಮುಖಕ್ಕೆ ತಲೆಗೆ ಹಲ್ಲೆ ಮಾಡಿ ನೆಲಕ್ಕೆ ಕೆಡವಿಕೊಂಡು ಕಾಲಿನಿಂದ ತುಳಿದು ಸಾಯಿಸಿ ಪರಾರಿಯಾಗಿರುತ್ತಾರೆ.

ತುಮಕೂರು ಗ್ರಾಮಾಂತರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ವೆಂಕಟೇಶ್ ನಾಯ್ಡು  ರವರ ಮಾರ್ಗದರ್ಶನದಲ್ಲಿ, ಗುಬ್ಬಿ ವೃತ್ತ ನಿರೀಕ್ಷಕರಾದ ಶ್ರೀ ರಂಗಸ್ವಾಮಿ, ಮತ್ತು ಸಿಬ್ಬಂದಿಗಳ  ತಂಡವು ಕೊಲೆ ಆರೋಪಿಗಳಾದ 1) ಮಾರಣ್ಣ ಬಿನ್ ವೆಂಕಟಪ್ಪ, 30 ವರ್ಷ, ಕೂಲಿ, ಸುಡುಗಾಡು ಸಿದ್ದರ ಜನಾಂಗ, ಕಡಬಾ ಗುಬ್ಬಿ ತಾಲ್ಲೋಕು ಮತ್ತು   2) ಮಾರ@ಮಹೇಶ್ ಬಿನ್ ಗಂಗಾದರಪ್ಪ  ಸುಡುಗಾಡು ಸಿದ್ದರ ಜನಾಂಗ, ಕಡಬಾ ಗುಬ್ಬಿ ತಾಲ್ಲೋಕು ಇವರುಗಳನ್ನು  ಪತ್ತೆ ಮಾಡಿರುತ್ತಾರೆ.  ಈ ತಂಡವನ್ನು ಪೊಲೀಸ್ ಅಧೀಕ್ಷಕರು ಅಭಿನಂದಿಸಿರುತ್ತಾರೆ.


ಅಪರಾಧ ಘಟನೆಗಳು 09-07-18

ತಿಪಟೂರು ನಗರ ಪೊಲೀಸ್ ಠಾಣಾ ಯು.ಡಿ.ಅರ್ ನಂ-15/2018 ಕಲಂ: 174 ಸಿ.ಆರ್.ಪಿ.ಸಿ

ದಿನಾಂಕ: 08/07/2018 ರಂದು ರಾತ್ರಿ 8-45 ಗಂಟೆಗೆ ಪಿರ್ಯಾದಿ ರುದ್ರೇಶ್ ಬಿನ ಮಹದೇವಪ್ಪ 26 ವರ್ಷ, ಲಿಂಗಾಯಿತರು, ಸವಿರುಚಿ ಹೋಟೆಲ್ ನಲ್ಲಿ ಕೆಲಸ, ಹಾವೇನಹಳ್ಳಿ ಪಾಳ್ಯ ತಿಪಟೂರು ತಾಲ್ಲೋಕ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಾನು ಈಗ್ಗೆ ಎರಡು ವರ್ಷಗಳಿಂದ ನನ್ನ ಸ್ವಂತ ಅತ್ತೆಯಾದ ರುದ್ರಾಣಮ್ಮ ಮಾವ ತ್ರಿಲೋಚನಮೂರ್ತಿ ರವರ ಮನೆಯಲ್ಲಿ ಇದ್ದಕೊಂಡಿದ್ದು, ಹೋಟೆಲ್ ಕೆಲಸ ಮಾಡಿಕೊಂಡಿರುತ್ತೇನೆ. ಅವರಿಗೆ ಇಬ್ಬರು ಮಕ್ಕಳಿದ್ದು ಮದುವೆಯಾಗಿರುತ್ತದೆ. ನಮ್ಮ ಅತ್ತೆ ರುದ್ರಾಣಮ್ಮನವರಿಗೆ ಸುಮಾರು 55 ವರ್ಷ ವಯಸ್ಸಾಗಿದ್ದು, ಈಗ್ಗೆ 3 ವರ್ಷಗಳಿಂದ ಹೊಟ್ಟೆನೋವು ಬರುತ್ತಿದ್ದು, ಜೊತೆಗೆ ಬಿ.ಪಿ ಮತ್ತು ಶುಗರ್ ಇತ್ತು. ಅವರು ಖಾಯಿಗೆ ಚಿಕಿತ್ಸೆ ಪಡೆಯುತ್ತಿದ್ದು, ಗುಣಮುಖವಾಗಿರಲಿಲ್ಲ. ದಿನಾಂಕ:06/07/2018 ರಂದು ನಾನು ಹೋಟೆಲ್ ಕೆಲಸಕ್ಕೆ ಹೋಗಿದ್ದೆನು ಮನೆಯಲ್ಲಿ ನಮ್ಮ ಅತ್ತೆ ಒಬ್ಬರೆ ಇದ್ದರು. ಅವರಿಗೆ ಬರುತ್ತಿದ್ದ ಹೊಟ್ಟೆನೋವಿನ ಭಾದೆಯನ್ನು ತಾಳಲಾರದೇ ಮನಸ್ಸಿಗೆ ಬೇಜಾರು ಮಾಡಿಕೊಂಡು ಸುಮಾರು ಮಧ್ಯಾಹ್ನ 3-00 ಗಂಟೆಯ ಸಮಯದಲ್ಲಿ ಹೆಸರು ಕಾಳಿಗೆ ಹಾಕಿದ್ದ ಕ್ರಿಮಿನಾಶಕ ಮಾತ್ರೆಗಳನ್ನು ಸೇವಿಸಿ ಮನೆಯ ರೂಮಿನಲ್ಲಿ ಒದ್ದಾಡುತ್ತಿದ್ದು, ಹೋಟೆಲ್ ಕೆಲಸ ಮುಗಿಸಿ ಬಂದು ನನಗೆ ವಿಷಯ ತಿಳಿಯಿತು. ತಕ್ಷಣ ನಾನು ಮನೆಯವರಿಗೆ ಕರೆ ಮಾಡಿ ತಿಳಿಸಿ ತಿಪಟೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದು, ನಂತರ ವೈದ್ಯರ ಸಲಹೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಅವರ ಮಗ ಮಲ್ಲೇಶನೊಂದಿಗೆ ತುಮಕೂರಿನ ಸಿದ್ದಗಂಗ ಆಸ್ಪತ್ರೆಗೆ ಕರೆದಕೊಂಡು ಹೋಗಿ ಚಿಕಿತ್ಸೆಗೆ ದಾಖಲು ಮಾಡಿದ್ದು, ನಮ್ಮ ಅತ್ತೆಗೆ ಚಿಕಿತ್ಸೆಯಿಂದ ಗುಣಮುಖವಾಗದೇ ದಿನಾಂಕ; 08/07/2018 ರಂದು ಸಂಜೆ 5-30 ಗಂಟೆಯಲ್ಲಿ ಆಸ್ಪತ್ರೆಯಲ್ಲಿಯೇ ಮೃತಪಟ್ಟಿರುತ್ತಾರೆ. ನಮ್ಮ ಅತ್ತೆಯು ತನಗೆ ಬರುತ್ತಿದ್ದ ಹೊಟ್ಟೆನೋವಿನ ಬಾದೆಯನ್ನು ತಾಳಲಾರದೇ ಮನಸ್ಸಿನಲ್ಲೇ ಜಿಗುಪ್ಸೆಗೊಂಡು ಕ್ರಮಿನಾಶಕ ಮಾತ್ರೆಗಳನ್ನು ಸೇವಿಸಿ ಮೃತಪಟ್ಟಿರುತ್ತಾರೆ ವಿನಃ ಬೇರೆ ಯಾವುದೇ ಕಾರಣವಿರುವುದಿಲ್ಲ. ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ಕೋರಿ ನೀಡಿರುವ ದೂರನ್ನು ಪಡೆದು ಯು.ಡಿ.ಆರ್ ಪ್ರಕರಣ ದಾಖಲಿಸಿರುತ್ತೆ.

ಮಿಡಿಗೇಶಿ ಪೊಲೀಸ್ ಠಾಣಾ ಯುಡಿಆರ್.ನಂ-07/2018, ಕಲಂ: 174 ಸಿಆರ್.ಪಿ.ಸಿ.

ದಿನಾಂಕ:08/07/2018 ರಂದು ಮದ್ಯಾಹ್ನ 02:45 ಗಂಟೆಗೆ ಪಿರ್ಯಾದಿ ಆರ್.ಮಧು ಬಿನ್ ಎಂ.ರಾಜಣ್ಣ, 19 ವರ್ಷ, ವಕ್ಕಲಿಗರು, ವ್ಯವಸಾಯ, ರೆಡ್ಡಿಹಳ್ಳಿ ಗ್ರಾಮ, ಮಿಡಿಗೇಶಿ ಹೋಬಳಿ, ಮಧುಗಿರಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಮ್ಮ ಗ್ರಾಮದಲ್ಲಿ ಲಕ್ಷ್ಮೀದೇವರ ನೂತನ ವಿಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕಾಗಿ ನಮ್ಮ ಗ್ರಾಮದಲ್ಲಿರುವ ವೀರನಾಗಮ್ಮನ ದೇವಸ್ಥಾನದ ಹತ್ತಿರವಿರುವ ಲಕ್ಷ್ಮೀ ದೇವಸ್ಥಾನದ ಬಳಿ ದೇವರ ಕಾರ್ಯವನ್ನು ಮಾಡುವ ಸಲವಾಗಿ ನಮ್ಮ ತಂದೆಯಾದ ಎಂ.ರಾಜಣ್ಣ ರವರು ದಿನಾಂಕ:08/07/2018 ರಂದು ಬೆಳಿಗ್ಗೆ ಸುಮಾರು 08:00 ಗಂಟೆಯಲ್ಲಿ ದೇವಸ್ಥಾನದ ಬಳಿ ಹೋದರು. ನಾನು, ನಮ್ಮ ತಾಯಿಯವರು ದೇವರ ಪತ್ರಿಕೆಗಳನ್ನು ಹಂಚಲು ರಂಗಾಪುರ ಗ್ರಾಮಕ್ಕೆ ಹೋದೆವು. ಮದ್ಯಾಹ್ನ ಸುಮಾರು 02:30 ಗಂಟೆಯ ಸಮಯದಲ್ಲಿ ನಮ್ಮ ಗ್ರಾಮದ ರಾಮಕೃಷ್ಣಯ್ಯ ಎಂಬುವರು ನಮ್ಮ ತಾಯಿಗೆ ಪೋನ್ ಮಾಡಿ ನಿಮ್ಮ ಗಂಡ ಎಂ.ರಾಜಣ್ಣ ರವರು ದೇವಸ್ಥಾನದ ಬಳಿ ದೇವಸ್ಥಾನದ ಪಕ್ಕದಲ್ಲಿರುವ ಕೆ.ಇ.ಬಿ.ಕಂಬದಲ್ಲಿ ವಿದ್ಯುತ್ ದೀಪವನ್ನು ಅಳವಡಿಸಲು ನಮ್ಮ ಗ್ರಾಮದಲ್ಲಿ ಎಲೆಕ್ಟ್ರೀಷಿಯನ್ ಕೆಲಸ ಮಾಡುವವರು ಯಾರು ಇಲ್ಲದ ಕಾರಣ ಸಾರ್ವಜನಿಕರಿಗೆ ಅನುಕೂಲವಾಗಲೆಂದು ವಿದ್ಯುತ್ ದೀಪವನ್ನು ಕೆ.ಇ.ಬಿ.ಕಂಬಕ್ಕೆ ಅಳವಡಿಸಲು ದೇವಸ್ಥಾನದ ಪಕ್ಕ ಇರುವ ಕೆ.ಇ.ಬಿ.ಕಂಬಕ್ಕೆ ಮದ್ಯಾಹ್ನ ಸುಮಾರು 01:45 ಗಂಟೆಯ ಸಮಯದಲ್ಲಿ ಏಣಿ ಹಾಕಿಕೊಂಡು ವಿದ್ಯುತ್ ದೀಪವನ್ನು ಅಳವಡಿಸುತ್ತಿರುವಾಗ ಆಕಸ್ಮಿಕವಾಗಿ ವಿದ್ಯುತ್ ತಗಲಿಯೋ ಅಥವಾ ಏಣಿ ಜಾರಿಯೋ ಕೆಳಗೆ ಬಿದ್ದು ಗಾಯಗೊಂಡವರನ್ನು ನಾನು ಹಾಗೂ ನಮ್ಮ ಗ್ರಾಮದ ಚಂದ್ರಣ್ಣ ಇತರರ ಸಹಾಯದಿಂದ ಯಾವುದೋ ವಾಹನದಲ್ಲಿ ಚಿಕಿತ್ಸೆಗಾಗಿ ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ವೈದ್ಯರ ಬಳಿ ಹೋದಾಗ ವೈದ್ಯರು ಎಂ.ರಾಜಣ್ಣ ನನ್ನು ಪರೀಕ್ಷಿಸಿ ರಾಜಣ್ಣರವರು ಮೃತಪಟ್ಟಿರುತ್ತಾರೆಂತ ಎಂತ ತಿಳಿಸಿರುತ್ತಾರೆ. ನೀವು ಬೇಗ ಮಧುಗಿರಿ ಸರ್ಕಾರಿ ಆಸ್ಪತ್ರೆಯ ಬಳಿ ಬನ್ನಿ ಎಂದು ಹೇಳಿದಾಗ ನಾನು ಮತ್ತು ತಾಯಿಯವರು ಮಧುಗಿರಿ ಸರ್ಕಾರಿ ಆಸ್ಪತ್ರೆಯ ಬಳಿ ಹೋಗಿ ನೋಡಿದಾಗ ಈ ವಿಚಾರವು ನಿಜವಾಗಿತ್ತು. ನಮ್ಮ ತಂದೆಯ ಮೃತ ದೇಹವನ್ನು ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇಟ್ಟಿರುತ್ತಾರೆ. ನಮ್ಮ ತಂದೆ ರಾಜಣ್ಣ ರವರು ದಿ:08/07/2018 ರಂದು ಮದ್ಯಾಹ್ನ 01:45 ಗಂಟೆಯಲ್ಲಿ  ನಮ್ಮ ಗ್ರಾಮದ ಬಳಿಯಿರುವ ಲಕ್ಷ್ಮೀದೇವಸ್ಥಾನದ ಪಕ್ಕದಲ್ಲಿರುವ ವಿದ್ಯುತ್ ಕಂಬಕ್ಕೆ ವಿದ್ಯುತ್ ದೀಪವನ್ನು ಅಳವಡಿಸಲು ಏಣಿ ಮುಖಾಂತರ ಹತ್ತಿದಾಗ ಆಕಸ್ಮಿಕವಾಗಿ ಈ ಘಟನೆ ಸಂಭವಿಸಿರುತ್ತದೆ. ನಮ್ಮ ತಂದೆಯವರ ಸಾವಿನಲ್ಲಿ ಬೇರೆ ಯಾವುದೇ ಕಾರಣ ಇರುವುದಿಲ್ಲ ಹಾಗೂ ಯಾರ ಮೇಲು ಅನುಮಾನವಿರುವುದಿಲ್ಲ, ಆದ್ದರಿಂದ ತಾವು ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ಕೋರುತ್ತೇನೆಂತ ನೀಡಿದ ಪಿರ್ಯಾದು ಅಂಶವಾಗಿರುತ್ತೆ.

ಹುಳಿಯಾರು ಪೊಲೀಸ್ ಠಾಣಾ ಮೊ.ನಂ 76/2018, ಕಲಂ:15 (A), 32(3) K.E Act.

ದಿನಾಂಕ:08/07/2018 ರಂದು ಮಧ್ಯಾಹ್ನ 01-00 ಗಂಟೆಗೆ ಪಿ.ಎಸ್. ರವರು ಠಾಣೆಗೆ ಹಾಜರಾಗಿ ನೀಡಿದ ಜ್ಞಾಪನ ಏನೆಂದರೆ, ನಾನು ದಿನಾಂಕ:-08-07-2018 ರಂದು ಬೆಳಗ್ಗೆ  11:00 ಗಂಟೆ ಸಮಯದಲ್ಲಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ದೊಡ್ಡಬೆಳವಾಡಿ ಗ್ರಾಮದ ಬೀಟ್ ಸಿಬ್ಬಂದಿ ನನ್ನ ಬಳಿ ಬಂದು ಹುಳಿಯಾರು ಹೋಬಳಿ ದೊಡ್ಡಬೆಳವಾಡಿ ಗ್ರಾಮದಲ್ಲಿರುವ ಕಿರಿಯ ಪ್ರಾಥಮಿಕ ಪಾಠಶಾಲೆಯ ಮುಂಭಾಗದ ಜೆಲ್ಲಿ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ಆಸಾಮಿ ಮದ್ಯದ ಟೆಟ್ರಾ ಪ್ಯಾಕೇಟ್ ಗಳನ್ನು ಇಟ್ಟುಕೊಂಡು ಒಂದು ಟೆಟ್ರಾ ಪ್ಯಾಕೇಟ್ ಅನ್ನು ಓಪನ್ ಮಾಡಿ ಮದ್ಯಪಾನ ಮಾಡುತ್ತಿರುತ್ತಾನೆ ಎಂತ ಮಾಹಿತಿ ಬಂದಿರುತ್ತದೆಂದು ತಿಳಿಸಿದ್ದು, ನಾನು ಮತ್ತು ಬೀಟ್ ಸಿಬ್ಬಂದಿ ಪಿ.ಸಿ-824  ಚೇತನ್ ಜಿ ಎಸ್,  ರವರು ಇಲಾಖಾ ಜೀಪಿನಲ್ಲಿ ಸದರಿ ಸ್ಥಳಕ್ಕೆ ಬೆಳಗ್ಗೆ 11:30 ಗಂಟೆಗೆ ಹೋಗಿ ನೋಡಲಾಗಿ ಒಬ್ಬ ಆಸಾಮಿ ದೊಡ್ಡಬೆಳವಾಡಿ ಗ್ರಾಮದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯ ಮುಂಭಾಗದ ಜೆಲ್ಲಿ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ 1 ಮದ್ಯದ ಪ್ಯಾಕೇಟ್ ಅನ್ನು ಇಟ್ಟುಕೊಂಡು ಮತ್ತೊಂದು ಮದ್ಯದ ಪ್ಯಾಕೇಟ್ ಅನ್ನು ಓಪನ್ ಮಾಡಿ ಒಂದು ಪ್ಲಾಸ್ಟಿಕ್ ಲೋಟದಲ್ಲಿ ಹಾಕಿಕೊಂಡು ಪಕ್ಕದಲ್ಲಿ ಎರಡು ಲೀಟರ್ ನ ಒಂದು ವಾಟರ್ ಬಾಟಲ್ ಅನ್ನು ಇಟ್ಟುಕೊಂಡು ಮದ್ಯಪಾನ ಮಾಡುತ್ತಿದ್ದು ಆತನನ್ನು ಹಿಡಿದು ಸದರಿ ಸ್ಥಳಕ್ಕೆ ಸ್ಥಳದಲ್ಲಿದ್ದ ಪಂಚರನ್ನು ಬರಮಾಡಿಕೊಂಡು ವಿಚಾರವನ್ನು ತಿಳಿಸಿ ಆತನನ್ನು ವಿಚಾರ ಮಾಡಲಾಗಿ ಆತನ ಹೆಸರು ದೇವರಾಜಯ್ಯ ಬಿನ್ ಲೇ ತಿಮ್ಮಯ್ಯ. 55 ವರ್ಷ, ಅಂಗಡಿಯಲ್ಲಿ ಕೆಲಸ, ತಿಗಳರು, ದೊಡ್ಡಬೆಳವಾಡಿ,  ಹುಳಿಯಾರು ಹೋಬಳಿ, ಚಿ. ನಾ ಹಳ್ಳಿ ತಾಲ್ಲೂಕು ಎಂತ ತಿಳಿಸಿರುತ್ತಾನೆ ಸ್ಥಳದಲ್ಲಿ ಆತನ ಬಳಿ ಇದ್ದ ರಾಜಾ ವಿಸ್ಕಿ 90 ಎಂ.ಎಲ್ ಎಂತ ಬರೆದಿರುವ ಮದ್ಯದ ಟೆಟ್ರಾ ಪ್ಯಾಕೇಟ್ ಬೆಲೆ 29.53 ಪೈಸೆ ಎಂತ ಬರೆದಿರುವ ಒಂದು ತುಂಬಿದ ಸೀಲ್ ಓಪನ್ ಮಾಡದ 1 ಟೆಟ್ರಾ ಪ್ಯಾಕೇಟ್ ಮತ್ತು ಮತ್ತೊಂದು ಓಪನ್ ಮಾಡಿದ್ದ ಒಂದು ರಾಜಾ ವಿಸ್ಕಿ 90 ಎಂ.ಎಲ್ ಎಂತ ಬರೆದಿರುವ ಮದ್ಯದ ಟೆಟ್ರಾ ಪ್ಯಾಕೇಟ್ ಬೆಲೆ 29.53 ಪೈಸೆ ಎಂತ ಬರೆದಿರುವ ಖಾಲಿ ಇರುವ ಒಂದು ಮದ್ಯದ ಟೆಟ್ರಾ ಪ್ಯಾಕೇಟ್ ಹಾಗೂ ಒಂದು ಪ್ಲಾಸ್ಟಿಕ್ ಲೋಟ, ಎರಡು ಲೀಟರ್ ನ ಒಂದು ವಾಟರ್ ಬಾಟಲ್ ಇದ್ದು ಆತನು ಮದ್ಯಪಾನ ಮಾಡುತ್ತಿದ್ದ ಸ್ಥಳವನ್ನು ಪರಿಶೀಲಿಸಲಾಗಿ ಸದರಿ ಸ್ಥಳವು ದೊಡ್ಡಬೆಳವಾಡಿ ಗ್ರಾಮದಲ್ಲಿರುವ ಕಿರಿಯ ಪ್ರಾಥಮಿಕ ಪಾಠಶಾಲೆಯ ಮುಂಭಾಗದ ಜೆಲ್ಲಿ ರಸ್ತೆಯಗಿದ್ದು, ಸದರಿ ಸ್ಥಳದಿಂದ ಉತ್ತರಕ್ಕೆ ಸುಮಾರು 20 ಅಡಿ ದೂರದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಫಾಠಶಾಲೆಯ ಕಟ್ಟಡವಿರುತ್ತೆ. ಆರೋಪಿಯಿಂದ ಮೇಲ್ಕಂಡ ಮದ್ಯದ 1) ರಾಜಾವಿಸ್ಕಿ 90 ಎಂ.ಎಲ್ ನ ಒಂದು ತುಂಬಿದ ಸೀಲ್ ಓಪನ್ ಮಾಡದ 1 ಟೆಟ್ರಾ ಪ್ಯಾಕೇಟ್ 2) ರಾಜಾ ವಿಸ್ಕಿ 90 ಎಂ.ಎಲ್ ನ ಒಂದು ಖಾಲಿ ಇರುವ ಒಂದು ಮದ್ಯದ ಟೆಟ್ರಾ ಪ್ಯಾಕೇಟ್ 3) ಒಂದು ಪ್ಲಾಸ್ಟಿಕ್ ಲೋಟ 4) ಎರಡು ಲೀಟರ್ ನ ಒಂದು ವಾಟರ್ ಬಾಟಲ್ ಹಾಗೂ ಆರೋಪಿಯನ್ನು ಪಂಚರ ಸಮಕ್ಷಮ ಬೆಳಗ್ಗೆ 11:45 ಗಂಟೆಯಿಂದ ಮದ್ಯಾಹ್ನ 12:30 ಗಂಟೆಯವರೆಗೆ ಪಂಚನಾಮ ಕ್ರಮವನ್ನು ಕೈಗೊಂಡು ವಶಕ್ಕೆ ಪಡೆದು ಮಾಲು ಮತ್ತು ಆರೋಪಿಯೊಂದಿಗೆ ಠಾಣೆಗೆ ಬಂದು ಮುಂದಿನ ಕ್ರಮ ಕೈಗೊಳ್ಳಲು ನೀಡಿದ ಜ್ಞಾಪನದ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

ಹಂದನಕೆರೆ ಪೊಲೀಸ್ ಠಾಣಾ ಮೊ ನಂ:59/2018 ಕಲಂ 279,337 ಐಪಿಸಿ

ದಿನಾಂಕ:08/07/2018 ರಂದು  ಸಾಯಂಕಾಲ 04.30 ಗಂಟೆ ಸಮಯದಲ್ಲಿ ಪಿರ್ಯಾದಿ ಚಿ ನಾ ಹಳ್ಳಿ ತಾಲ್ಲೂಕ್ ಹಂದನಕೆರೆ ಹೋಬಳಿ, ಮತಿಘಟ್ಟ ವಾಸಿ ಶಿವಮ್ಮ ಕೋಂ ಗಂಗಾಧರಯ್ಯ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:06/07/2018 ರಂದು ಸಂಜೆ 05 ಗಂಟೆ ಸಮಯದಲ್ಲಿ  ಪಿರ್ಯಾದಿರವರ ಮಗ ಸುಮಾರು 10 ವರ್ಷದ ದಿಲೀಪ್ ಕುಮಾರ್ ಶಾಲೆ ಮುಗಿಸಿಕೊಂಡು ಬರುತ್ತಿದ್ದಾಗ  ಪಿರ್ಯಾದಿರವರ ಮನೆಯ ಮುಂದೆ ರಸ್ತೆ ದಾಟುತ್ತಿರುವಾಗ ಸಡನ್ನಾಗಿ ಹಂದನಕೆರೆ ಬಂದ ಮೋಟಾರ್ ಸೈಕಲ್ ಚಾಲಕನು  ಅತಿವೇಗ ಮತ್ತು ಅಜಾಗರೂಕತೆಯಿಂದ ಬಂದು  ಪಿರ್ಯಾದಿರವರ ಮಗನಿಗೆ ಡಿಕ್ಕಿ ಹೊಡೆಸಿದ ಪರಿಣಾಮ ಆತನ ಎಡಗಾಲ ಮಂಡಿಯಿಂದ ಕೆಳಭಾಗಕ್ಕೆ ಜೋರಾಗಿ ಪೆಟ್ಟು ಬಿದ್ದು ಕೆಳಗೆ ರಸ್ತೆಯಲ್ಲಿ ಬಿದ್ದು ಕೂಗಿಕೊಂಡಾಗ ಪಿರ್ಯಾದಿರವರ ಮನೆಯ ಮುಂದೆ ಕುಳಿತಿದ್ದವರು ತಕ್ಷಣ ಹೋಗಿ ನೋಡಲಾಗಿ ಪಿರ್ಯಾದಿರವರ ಮಗನ ಕಾಲಿಗೆ ತೀವ್ರ ತರ ಪೆಟ್ಟಾಗಿ ಮೂಳೆ ಮುರಿದು ರಕ್ತಗಾಯವಾಗಿತ್ತು. ಅಪಘಾತಪಡಿಸಿದ ವಾಹನವನ್ನು  ನೋಡಲಾಗಿ ಕೆಎ-44.ಯು-5157 ನೇ ಹೀರೋ  ಪ್ಯಾಶನ್ ಪ್ರೋ ಆಗಿತ್ತು. ಚಾಲನೆ ಮಾಡುತ್ತಿದ್ದ ಮೋಟಾರ್ ಸೈಕಲ್ ಚಾಲಕನ ಹೆಸರು ನಮ್ಮ ದೇ ಊರಿನವನಾದ ಭರತ್ ರಾಜ್ ಬಿನ್ ರಾಜೇಂದ್ರನ್ , ತಮಿಳಿಯನ್ ಜನಾಂಗದವರಾಗಿರುತ್ತಾರೆ.  ಪಿರ್ಯಾದಿರವರು ತಕ್ಷಣ  ತನ್ನ ಮಗನಿಗೆ ಚಿಕಿತ್ಸೆ ಕೊಡಿಸಲು ತಿಪಟೂರು ಸರ್ಕಾರಿ ಆಸ್ಪತ್ರೆಗೆ ಅದೇ ದಿನ ಹೋಗಿ ಅಲ್ಲಿಂದ  ವೈದ್ಯರ ಸಲಹೆ ಮೇರೆಗೆ ತುಮಕೂರು  ಜಿಲ್ಲಾ ಆಸ್ಪತ್ರೆಗೆ ಹೋಗಿ ದಾಖಲಿಸಿ ಚಿಕಿತ್ಸೆ ಕೊಡಿಸಿರುತ್ತಾರೆ. ನೋಡಿಕೊಳ್ಳುವವರು ಯಾರೂ ಇಲ್ಲದ್ದರಿಂದ ಪಿರ್ಯಾದಿರವರೇ ಚಿಕಿತ್ಸೆಯ ಕಾಲದಲ್ಲಿದ್ದು ಈ ದಿನ ತಡವಾಗಿ  ಬಂದು ದೂರು ನೀಡಿರುತ್ತಾರೆ. ಈ ಅಪಘಾತ ನಡೆದಾಗ ಚಾಲಕನ ಹಿಂಬದಿಯಲ್ಲಿ ಕುಳಿತಿದ್ದ ರಾಜು ದೊರೈ ರವರ ಎಡಗಾಲಿನ ತೊಡೆ ಮತತು ಕೈಗಳ ಮೇಲೆ ಸಹ ಪೆಟ್ಟಾಗಿದ್ದವು. ದಯಮಾಡಿ ತಮ್ಮ ಮಗನಿಗೆ ಅಪಘಾತಪಡಿಸಿದ ವಾಹನ ಮತ್ತು ವಾಹನ ಚಾಲಕನ ಮೇಲೆ ಕಾನೂನು ರೀತ್ಯಾ  ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಈ ಪ್ರಕರಣ ದಾಖಲಿಸಿರುತ್ತದೆ.

 


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 89 guests online
Content View Hits : 304509