lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ : 20-07-18 ಸ್ಮಾರ್ಟ್ ಸಿಟಿ ಅಧಿಕಾರಿಗಳೆಂದು ವಂಚಿಸಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 20-07-2018       ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 09-07-2018 ಕೊಲೆ ಆರೋಪಿಗಳ ಬಂಧನ ******* ದಿನಾಂಕ 04.07.2018 ರಂದು... >>   ಪತ್ರಿಕಾ ಪ್ರಕಟಣೆ ದಿನಾಂಕ : 07-07-2018. ಪೂರ್ವಾನುಮತಿ ಪಡೆಯದೇ ಹೆದ್ದಾರಿ ತಡೆ ನಡೆಸಿ,... >> ದಿನಾಂಕ.03.07.2018. ಪತ್ರಿಕಾ ಪ್ರಕಟಣೆ ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ 11 ಲಕ್ಷ 70 ಸಾವಿರ ಬೆಲೆ ಬಾಳುವ ಚಿನ್ನ-ಬೆಳ್ಳಿ  ಹಾಗೂ ಮೊಬೈಲ್‌‌‌... >>   ಪತ್ರಿಕಾ ಪ್ರಕಟಣೆ. ತುಮಕೂರು ಜಿಲ್ಲಾ ಪೊಲೀಸ್, ತುಮಕೂರು. ಕೋರಾ ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 27.06.2018 ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಸಾರ್ವಜನಿಕರ... >> ಪತ್ರಿಕಾ ಪ್ರಕಟಣೆ ದಿನಾಂಕ:- 23/06/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಖನ್ನ... >> ಪತ್ರಿಕಾ ಪ್ರಕಟಣೆ ದಿನಾಂಕ: 21-06-2018. ಸುಲಿಗೆಕೋರರ ಬಂಧನ: ದಿನಾಂಕ:18-06-2018 ರಂದು... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< July 2018 >
Mo Tu We Th Fr Sa Su
            1
2 3 4 5 7 8
9 10 11 12 13 14 15
16 17 18 19 20 21 22
23 24 25 26 27 28 29
30 31          
Friday, 06 July 2018
ಅಪರಾಧ ಘಟನೆಗಳು 06-07-18

ತಿಪಟೂರು ನಗರ ಪೊಲೀಸ್ ಠಾಣಾ ಮೊ.ನಂ - 102/2018 ಕಲಂ:  304(A) IPC

ದಿನಾಂಕ: 06/07/2018 ರಂದು ಬೆಳಗ್ಗೆ 02-00 ಗಂಟೆಗೆ ಪಿರ್ಯಾದಿ ಸುನಂದ ಕೋಂ ಆಂಜನಪ್ಪ,  ದುಂಡ ಗ್ರಾಮ, ದಂಡಿನಶಿವರ ಹೋಬಳಿ, ತುರುವೇಕೆರೆ ತಾಲ್ಲೋಕ್‌  ರವರು ನೀಡಿರುವ ದೂರಿನ ಅಂಶವೇನೆಂದರೆ, ನಮಗೆ ಎರಡೂವರೆ ತಿಂಗಳ ಕುಶಾಲ್‌ಗೌಡ ಎಂಬ ಹೆಸರಿನ ಗಂಡು ಮಗು ಇದ್ದು, ಮಗುವಿಗೆ ಜ್ವರ ಬಂದಿದ್ದರಿಂದ ದಿನಾಂಕ:05/07/2018 ರಂದು ಮಧ್ಯಾನ್ಹ 03-00 ಗಂಟೆ ಸಮಯದಲ್ಲಿ ಮಗುವಿಗೆ ಚಿಕಿತ್ಸೆ ಕೊಡಿಸಲು ತಿಪಟೂರು ಟೌನ್‌ ಗಂಗಾ ಕ್ಲಿನಿಕ್‌ಗೆ ಕರೆದುಕೊಂಡು ಬಂದು ಡಾ// ಸುದರ್ಶನ್‌ ರವರಿಗೆ ತೋರಿಸಿದಾಗ, ಸ್ವಲ್ಪ ಒಳಜ್ವರವಿದೆ ಅಂತ ಹೇಳಿ ಅವರೇ ಚೀಟಿಯನ್ನು ಬರೆದು ಅಲ್ಲಿದ್ದ ನರ್ಸ್‌ ಮೂಲಕ 4 ತರಹದ ಡ್ರಾಪ್ಸ್‌ ನ್ನು ಕೊಟ್ಟರು. ಈ 4 ಡ್ರಾಪ್ಸ್‌ಗಳನ್ನು ತೋರಿಸಿ ಮನೆಗೆ ಹೋಗಿ ತಲಾ 0.5 ಎಂಎಲ್‌ ಹಾಕುವಂತೆ ಹೇಳಿದರು. ಅದರಂತೆ ನಾವು ಸಂಜೆ 05-30 ಗಂಟೆಗೆ ವಾಪಸ್‌ ದುಂಡ ಗ್ರಾಮಕ್ಕೆ ಬಂದು ಸಂಜೆ 6 ಗಂಟೆ ಸಮಯಕ್ಕೆ ಡಾ// ಸುದರ್ಶನ್‌ ಹೇಳಿದಂತೆ ಜ್ವರದ ಸಿರಪ್ Domstal ನ್ನು 0.5 ಎಂಎಲ್‌ ಹಾಕಿದೆನು, ಇದಾದ 5 ನಿಮಿಷದ ನಂತರ Macpod ಡ್ರಾಪ್ಸ್‌ ನ್ನು 0.5 ಎಂಎಲ್‌ ಹಾಕಿ ನಂತರ Baby gesice ನ್ನು 0.5 ಎಂಎಲ್‌, ನಂತರ Asthakind-LS ನ್ನು 0.5 ಎಂಎಲ್‌ ಹಾಕಿದೆನು, ಮಗು ಸ್ವಲ್ಪ ಹೊತ್ತು ನಿದ್ದೆ ಮಾಡಿತು, ಆ ಸಮಯದಲ್ಲಿ ಇದ್ದಕ್ಕಿದಂತೆ ಕಿರುಚಾಡಿತು, ಮತ್ತೆ ನಿದ್ದೆ ಮಾಡಿತು. ನಾವು ಮಗುವನ್ನು ಎಬ್ಬಿಸಲು ಪ್ರಯತ್ನಿಸಿದಾಗ ಮಗು ಏಳಲಿಲ್ಲ, ತಕ್ಷಣ ಮಗುವನ್ನು ತುರುವೇಕೆರೆ ರವಿ ನರ್ಸಿಂಗ್‌ಹೋಮ್‌ ಗೆ ಕರೆದುಕೊಂಡು ಹೋಗಿ ತೋರಿಸಿದಾಗ ಮಗು ಸತ್ತು ಹೋಗಿದೆ ಎಂದು ಹೇಳಿದರು, ಆ ಸಮಯದಲ್ಲಿ ರಾತ್ರಿ 8 ಗಂಟೆ ಆಗಿತ್ತು. ತಿಪಟೂರು ಟೌನ್ ಗಂಗಾ ಕ್ಲಿನಿಕ್‌ನ ಡಾ// ಸುದರ್ಶನ್‌ ರವರು ನನ್ನ ಮಗುವನ್ನು ನೋಡಿ ಅವರು ಕೊಟ್ಟಿದ್ದ 4 ಬಗೆಯ ಡ್ರಾಪ್ಸ್‌ ಗಳನ್ನು ಅವರು ಹೇಳಿದಂತೆ ಹಾಕಿದ್ದು, ಮಗು ಸ್ವಲ್ಪ ಸಮಯ ನಿದ್ದೆ ಮಾಡಿದ್ದು, ಮತ್ತೆ ನಿದ್ದೆಯಿಂದ ಎಚ್ಚರಗೊಳ್ಳಲಿಲ್ಲ, ಆದ್ದರಿಂದ ವೈದ್ಯಾಧಿಕಾರಿಗಳಾದ ಸುದರ್ಶನ್‌ ರವರು ಸರಿಯಾದ ಚಿಕಿತ್ಸೆ ಕೊಡದೆ ನಿರ್ಲಕ್ಷತೆ ವಹಿಸಿದ್ದರಿಂದ ನನ್ನ ಮಗು ಸಾಯಲು ಕಾರಣವಾಗಿರುತ್ತಾರೆ. ಆದ್ದರಿಂದ ಡಾ// ಸುದರ್ಶನ್‌ ರವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಂತ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಮಿಡಿಗೇಶಿ ಪೊಲೀಸ್ ಠಾಣಾ ಮೊ.ಸಂ.69/2018, ಕಲಂ: 399, 402 ಐಪಿಸಿ.

ದಿನಾಂಕ:05/07/2018 ರಂದು ರಾತ್ರಿ 08:50 ಗಂಟೆಗೆ ಠಾಣಾ ಪಿ.ಎಸ್.ಐ-ಪುರಷೋತ್ತಮ.ಜಿ. ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ಮೂಲಕ ನಿಮಗೆ ತಿಳಿಯಪಡಿಸುವುದೆನೆಂದರೆ, ಈ ದಿವಸ ದಿನಾಂಕ:05/07/2018 ರಂದು ರಾತ್ರಿ ಸುಮಾರು 07:30 ಗಂಟೆಯಲ್ಲಿ ಮಿಡಿಗೇಶಿ ಪೊಲೀಸ್ ಠಾಣೆಯ ಪಿ.ಎಸ್.ಐ-ಪುರುಷೋತ್ತಮ.ಜಿ ಆದ ನಾನು ಮಾನ್ಯ ಸಿ.ಪಿ.ಐ. ಮಧುಗಿರಿ ರವರ ಕಛೇರಿಯಲ್ಲಿದ್ದಾಗ ಗಿರಿಯಮ್ಮನಪಾಳ್ಯ ಗ್ರಾಮದ ಬಳಿಯಿರುವ ಜಿ.ಎಂ.ಎಸ್.ಫಾರಂ ಬಳಿ ರಸ್ತೆ ಪಕ್ಕದಲ್ಲಿ ಯಾರೋ 4-5 ಜನ ಆಸಾಮಿಗಳು ಕತ್ತಲಲ್ಲಿ ಮೂರು ಬೈಕುಗಳನ್ನು ನಿಲ್ಲಿಸಿಕೊಂಡು ತಮ್ಮ ಕೈಗಳಲ್ಲಿ ಕಬ್ಬಿಣದ ರಾಡು & ಚಾಕುಗಳನ್ನು ಹಿಡಿದುಕೊಂಡು ಗುಂಪು ಕಟ್ಟಿಕೊಂಡು ನಿಂತುಕೊಂಡಿರುತ್ತಾರೆಂತ ಮಾಹಿತಿ ಬಂದ ಮೇರೆಗೆ ನಾನು ಮತ್ತು ಮಧುಗಿರಿ ಪೊಲೀಸ್ ಠಾಣೆಯ ಪಿ.ಎಸ್.ಐ-ಪಾಲಾಕ್ಷಪ್ರಭು ಹಾಗೂ ಠಾಣಾ ಸಿಬ್ಬಂದಿಗಳಾದ ಹೆಚ್.ಸಿ-159, ಹೆಚ್.ಸಿ-96, ಪಿಸಿ-400, ಪಿಸಿ-288, ಪಿಸಿ-580 ರವರುಗಳೊಂದಿಗೆ ಪೊಲೀಸ್ ಜೀಪಿನಲ್ಲಿ ಜಿ.ಎಂ.ಎಸ್.ಫಾರಂ ಹತ್ತಿರ ಹೋಗಿ ಸ್ವಲ್ಪ ದೂರದಲ್ಲಿ ಜೀಪನ್ನು ನಿಲ್ಲಿಸಿ ಜೀಪಿನಿಂದ ಇಳಿದು ಜಿ.ಎಂ.ಎಸ್.ಫಾರಂ ಬಳಿ ರಸ್ತೆ ಪಕ್ಕದಲ್ಲಿ ಯಾರೋ 4-5 ಜನ ಆಸಾಮಿಗಳು ತಮ್ಮ ಕೈಗಳಲ್ಲಿ ಕಬ್ಬಿಣದ ರಾಡುಗಳನ್ನು  ಮತ್ತು ಚಾಕುಗಳನ್ನು ಹಿಡಿದುಕೊಂಡು ಕತ್ತಲಿನಲ್ಲಿ ಯಾರಿಗೋ ಹೊಂಚು ಹಾಕುತ್ತಾ ದರೋಡೆ ಮಾಡುವ ಉದ್ದೇಶದಿಂದ ಕಾಯುತ್ತಿರುವುದು ಕಂಡು ಬಂದಿದ್ದರಿಂದ, ನಾವುಗಳು ಅವರುಗಳ ಮೇಲೆ ದಾಳಿಮಾಡಲು ಹೋದಾಗ ನಮ್ಮನ್ನ ನೋಡಿದ 4-5 ಜನ ಆಸಾಮಿಗಳು ಬೈಕುಗಳ ಸಮೇತ ಪರಾರಿಯಾಗಲು ಪ್ರಯತ್ನಿಸಿದರು ಆಗ ನಾವುಗಳೆಲ್ಲರೂ ಸೇರಿ 04 ಜನ ಆಸಾಮಿಗಳನ್ನು ಹಿಡಿದುಕೊಂಡೆವು ಒಬ್ಬ ಆಸಾಮಿಯು ಬೈಕನ್ನು ಸ್ಥಳದಲ್ಲಿಯೇ ಬಿಟ್ಟು ಕತ್ತಲಲ್ಲಿ ತಪ್ಪಿಸಿಕೊಂಡು ಓಡಿ ಹೋದನು. ಕೈಗೆ ಸಿಕ್ಕಿದ ಆಸಾಮಿಗಳ ಹೆಸರು, ವಿಳಾಸ ಕೇಳಲಾಗಿ 1)ಮಾರುತಿ.ಆರ್. ಬಿನ್ ರಾಮಾಂಜನೇಯಲು, 26 ವರ್ಷ, ಮಡಿವಾಳರು, ಬೆಂಗಳೂರಿನಲ್ಲಿ ವಾಷರ್ ಫ್ಯಾಕ್ಟರಿಯಲ್ಲಿ ಕೆಲಸ, ಶಂಕರಗಲ್ಲು ಗ್ರಾಮ, ಗುಡಿಬಂಡೆ ಮಂಡಲ್, ಮಡಕಶಿರಾ ತಾಲ್ಲೂಕು, ಅನಂತಪುರ ಜಿಲ್ಲೆ, ಆಂಧ್ರಪ್ರದೇಶ ರಾಜ್ಯ, 2)ಜನಾರ್ಧನ @ ಜಾನು ಬಿನ್ ರಂಗೇಗೌಡ, 23 ವರ್ಷ, ವಕ್ಕಲಿಗರು, ಟೆಂಪೋ ಡ್ರೈವರ್ ಕೆಲಸ, ಶಂಕರಗಲ್ಲು ಗ್ರಾಮ, ಗುಡಿಬಂಡೆ ಮಂಡಲ್, ಮಡಕಶಿರಾ ತಾಲ್ಲೂಕು, ಅನಂತಪುರ ಜಿಲ್ಲೆ, ಆಂಧ್ರಪ್ರದೇಶ ರಾಜ್ಯ, 3)ಹರೀಶ.ಎಂ. ಬಿನ್ ಮಾರಪ್ಪ, 26 ವರ್ಷ, ಮರಾಠಿ ಜನಾಂಗ, ಬೆಂಗಳೂರಿನಲ್ಲಿ ಪ್ಯಾರಗನ್ ಚಪ್ಪಲಿ ಪ್ಯಾಕ್ಟರಿಯಲ್ಲಿ ಕೆಲಸ, ಶಂಕರಗಲ್ಲು ಗ್ರಾಮ, ಗುಡಿಬಂಡೆ ಮಂಡಲ್, ಮಡಕಶಿರಾ ತಾಲ್ಲೂಕು, ಅನಂತಪುರ ಜಿಲ್ಲೆ, ಆಂಧ್ರಪ್ರದೇಶ ರಾಜ್ಯ, 4)ಮಧುಸೂಧನ.ಬಿ. ಬಿನ್ ಲೇ||ತಿಮ್ಮಪ್ಪ, 24 ವರ್ಷ, ವಕ್ಕಲಿಗರು, ಕೂಲಿ ಕೆಲಸ, ಶಂಕರಗಲ್ಲು ಗ್ರಾಮ, ಗುಡಿಬಂಡೆ ಮಂಡಲ್, ಮಡಕಶಿರಾ ತಾಲ್ಲೂಕು, ಅನಂತಪುರ ಜಿಲ್ಲೆ, ಆಂಧ್ರಪ್ರದೇಶ ರಾಜ್ಯ ಎಂತ ತಿಳಿಸಿದರು.

ನಂತರ ಸದರಿ ಆಸಾಮಿಗಳನ್ನು ಸ್ಥಳದಿಂದ ತಪ್ಪಿಸಿಕೊಂಡು ಓಡಿ ಹೋದ ಆಸಾಮಿಯ ಬಗ್ಗೆ ವಿಚಾರಿಸಲಾಗಿ 5)ಹರಿಕೃಷ್ಣ ಬಿನ್ ನರಸಿಂಹ, 38 ವರ್ಷ, ಬೆಂಗಳೂರು ಆತನ ಪೂರ್ಣ ವಿಳಾಸ ನಮಗೆ ಗೊತ್ತಿಲ್ಲಾ ಎಂತ ತಿಳಿಸಿರುತ್ತಾರೆ.

ನಂತರ ಕೈಗೆ ಸಿಕ್ಕಿದ 04 ಜನ ಆಸಾಮಿಗಳನ್ನು ಚೆಕ್ ಮಾಡಿದಾಗ ಮಾರುತಿ ಎಂಬುವನ ಬಳಿ ಒಂದು ಕಬ್ಬಿಣದ ರಾಡು ಮತ್ತು ಕಾರದ ಪುಡಿ ಇರುವ ಒಂದು ಪ್ಲಾಸ್ಟಿಕ್ ಕವರ್, ಜನಾರ್ಧನ @ ಜಾನು ಎಂಬುವನ ಬಳಿ ಒಂದು ಕಬ್ಬಿಣದ ರಾಡು ಮತ್ತು ಕೆಎ-04-ಹೆಚ್.ಯು-1840 ನೇ ಬಜಾಜ್ ಪಲ್ಸರ್ ಬೈಕು, ಹರೀಶ ಎಂಬುವನ ಬಳಿ ಒಂದು ಚಾಕು ಮತ್ತು ಕೆಎ-04-ಹೆಚ್.ಡಬ್ಲ್ಯೂ-5761 ನೇ ಹಿರೊ ಪ್ಯಾಷನ್ ಪ್ರೋ ಬೈಕು,  ಮಧುಸೂಧನ ಎಂಬುವನ ಬಳಿ ಒಂದು ಚಾಕು ಇರುತ್ತೆ ಹಾಗೂ ಸ್ಥಳದಿಂದ ತಪ್ಪಿಸಿಕೊಂಡ ಆಸಾಮಿ ಹರಿಕೃಷ್ಣನ ಬಾಬ್ತು ಕೆಎ-01-ಇಟಿ-4435 ನೇ ಟಿ.ವಿ.ಎಸ್.ಅಪಾಚಿ ಬೈಕು ಸ್ಥಳದಲ್ಲಿರುತ್ತೆ. ನಂತರ ವಿಚಾರಣೆ ಮುಂದುವರೆಸಿ, ಸದರಿ ವ್ಯಕ್ತಿಗಳನ್ನು ಏಕೆ ನೀವುಗಳು ಇಷ್ಟು ಹೊತ್ತಿನಲ್ಲಿ ಕತ್ತಲಿನಲ್ಲಿ ಇಲ್ಲಿ ಇದ್ದೀರಿ ಎಂದು ಕೇಳಿದಾಗ ಅವರುಗಳು ಮಧುಗಿರಿ-ಪಾವಗಡ ರಸ್ತೆಯಲ್ಲಿ ರಾತ್ರಿ ವೇಳೆ ಓಡಾಡುವ ಸಾರ್ವಜನಿಕರನ್ನು ಅಡ್ಡಗಟ್ಟಿ ತಡೆದು ಅವರ ಬಳಿಯಿರುವ ಹಣ ಮತ್ತು ಇತರೆ ವಸ್ತುಗಳನ್ನು ಕಿತ್ತುಕೊಂಡು ಹೋಗಲು ಹೊಂಚು ಹಾಕುತ್ತಿದ್ದೆವು ಎಂತ ತಿಳಿಸಿದರು. ನಂತರ ನನ್ನ ಜೊತೆಯಲ್ಲಿದ್ದ ಮಧುಗಿರಿ ಠಾಣಾ ಪಿ.ಎಸ್.ಐ-ಪಾಲಾಕ್ಷಪ್ರಭು ಮತ್ತು ಠಾಣಾ ಸಿಬ್ಬಂದಿಯವರನ್ನು ಸದರಿ 04 ಜನ ಆಸಾಮಿಗಳನ್ನು ನೋಡಿಕೊಳ್ಳಲು ಸ್ಥಳದಲ್ಲಿಯೇ ಬಿಟ್ಟು, ನಾನು ಠಾಣೆಗೆ ವಾಪಸ್ಸ್ ಆಗಿ ದರೋಡೆ ಮಾಡುವ ಉದ್ದೇಶಕ್ಕಾಗಿ ಆಯುಧಗಳೊಂದಿಗೆ ಸಿದ್ದತೆ ಮಾಡಿಕೊಂಡು ಹೊಂಚು ಹಾಕುತ್ತಿದ್ದ ಮೇಲ್ಕಂಡ 05 ಜನ ಆಸಾಮಿಗಳ ಮೇಲೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲು ಸೂಚಿಸಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

ವೈ ಎನ್  ಹೊಸಕೋಟೆ  ಪೊಲೀಸ್ ಠಾಣಾ ಮೊ. ನಂ-  57/2018   ಕಲಂ: 32(3)K E Act

ದಿನಾಂಕ:05/07/2018 ರಂದು ಸಾಯಂಕಾಲ 6:15 ಗಂಟೆಗೆ ತಿರುಮಣಿ ವೃತ್ತದ ವೃತ್ತ ನಿರೀಕ್ಷಕರಾದ ಶ್ರೀ ಜಿ.ಟಿ ಶ್ರೀಶೈಲಮೂರ್ತಿ ರವರು ಠಾಣೆಗೆ ಹಾಜರಾಗಿ ನೀಡಿದ ವರದಿ ಅಂಶವೇನೆಂದರೆ ಈ ದಿನ ದಿನಾಂಕ:05/07/2018 ರಂದು ಸಂಜೆ 5:00 ಗಂಟೆ ಸಮಯದಲ್ಲಿ ತಿರುಮಣಿ ವೃತ್ತ ವೈ.ಎನ್. ಹೊಸಕೋಟೆ ಪೋಲೀಸ್ ಠಾಣಾ ಸರಹದ್ದು ದೊಡ್ಡಹಳ್ಳಿ ಗ್ರಾಮದ ಬಸ್ ನಿಲ್ದಾಣದಲ್ಲಿ   ಗಸ್ತಿನಲ್ಲಿರುವಾಗ್ಗೆ ದೊಡ್ಡಹಳ್ಳಿ ಗ್ರಾಮದ ಅರುಣಕುಮಾರ್ ಎಂಬುವವರ ಪೆಟ್ಟಿಗೆ ಅಂಗಡಿಯ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ  ಮದ್ಯಪಾನ ಮಾಡುವ ಗಿರಾಕಿಗಳಿಗೆ ಅಕ್ರಮವಾಗಿ ಸ್ಥಳಾವಕಾಶ ಮಾಡಿಕೊಟ್ಟಿರುತ್ತಾನೆಂತ  ಮಾಹಿತಿ ಬಂದ ಮೇರೆಗೆ ಪಂಚಾಯ್ತುದಾರರನ್ನು ಬರಮಾಡಿಕೊಂಡು ಮೇಲ್ಕಂಡ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ದೊಡ್ಡಹಳ್ಳಿ ಗ್ರಾಮದ ಅರುಣ್ ಕುಮಾರ್ ರವರ ಅಂಗಡಿ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ  ಬಳಿ  ಕೆಲವರು ಕುಳಿತುಕೊಂಡು ಮದ್ಯಪಾನ ಮಾಡುತ್ತಿದ್ದುದ್ದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ನಾನು ಮತ್ತು ಸಿಬ್ಬಂದಿಯವರು ದಾಳಿ ನಡೆಸಿದ್ದು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಮದ್ಯಪಾನ ಮಾಡುತ್ತಿದ್ದ ಸಾರ್ವಜನಿಕ ಗಿರಾಕಿಗಳು ಓಡಿ ಹೋಗಿದ್ದು  ಮದ್ಯ ಕುಡಿಯಲು ಸಾರ್ವಜನಿಕ ಗಿರಾಕಿಗಳಿಗೆ ಅಕ್ರಮ ವಾಗಿ ಸ್ಥಳಾವಕಾಶ ಮಾಡಿಕೊಟ್ಟಿದ್ದ ಆಸಾಮಿಯ ಹೆಸರು ವಿಳಾಸ ಕೇಳಲಾಗಿ ಅರುಣ್ ಕುಮಾರ ಬಿನ್ ವೇದಮೂರ್ತಿ, 27 ವರ್ಷ, ಈಡಿಗ ಜನಾಆಂಗ ಅಂಗಡಿ ವ್ಯಾಪಾರ, ದೊಡ್ಡಹಳ್ಳಿ ಗ್ರಾಮ ಪಾವಗಡ ತಾ|| ಎಂತ ತಿಳಿಸಿದ್ದು ಸ್ಥಳದಲ್ಲಿ ಬಿದ್ದಿದ್ದ 05 ಪ್ಲಾಸ್ಟಿಕ್ ಖಾಲಿ ಲೋಟಗಳು ಮತ್ತು ಮದ್ಯ ತುಂಬಿದ್ದ 03 ಬಿ.ಪಿ. ವಿಸ್ಕಿ 180 ಎಂ.ಎಲ್, ಟೆಟ್ರಾ ಪ್ಯಾಕೆಟ್ , 180 ಎಂ.ಎಲ್.ನ 03 ಓಲ್ಡ್ ಟವರಿನ್ ಟೆಟ್ರಾ ಪ್ಯಾಕೆಟ್ , 90 ಎಂ.ಎಲ್ ನ 04 ಬೆಂಗಳೂರು ಮಾಲ್ಟ್ ಟೆಟ್ರಾ ಪ್ಯಾಕೆಟ್ , 90 ಎಂ.ಎಲ್ ನ 18 ರಾಜಾ ವಿಸ್ಕಿ ಸ್ಯಾಚೆಟ್ ಇದ್ದು ಇವುಗಳ ಒಟ್ಟು ಬೆಲೆ  1104=00ರೂ ಗಳಾಗಿರುತ್ತದೆ, ಸದರಿ ಮದ್ಯದ ಪ್ಯಾಕೆಟ್ ಗಳನ್ನು    ಪಂಚರ ಸಮಕ್ಷಮ  ಪಂಚನಾಮೆ ಮುಖೇನ ಮುಂದಿನ ನಡುವಳಿಕೆಗಾಗಿ ಅಮಾನತ್ತು ಪಡಿಸಿಕೊಂಡು ಆರೋಪಿ , ಮಾಲು ಮತ್ತು ಪಂಚನಾಮೆ ಯೊಂದಿಗೆ  ಠಾಣೆಗೆ ವಾಪಸ್ ಸಂಜೆ 6:15 ಗಂಟೆಗೆ ಬಂದು ನೀಡಿದ ವರದಿಯನ್ನು ಪಡೆದು  ಆಸಾಮಿ ವಿರುದ್ದ  ಪ್ರಕರಣ ದಾಖಲಿಸಿರುತ್ತದೆ.


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 85 guests online
Content View Hits : 304505