lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ : 20-07-18 ಸ್ಮಾರ್ಟ್ ಸಿಟಿ ಅಧಿಕಾರಿಗಳೆಂದು ವಂಚಿಸಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 20-07-2018       ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 09-07-2018 ಕೊಲೆ ಆರೋಪಿಗಳ ಬಂಧನ ******* ದಿನಾಂಕ 04.07.2018 ರಂದು... >>   ಪತ್ರಿಕಾ ಪ್ರಕಟಣೆ ದಿನಾಂಕ : 07-07-2018. ಪೂರ್ವಾನುಮತಿ ಪಡೆಯದೇ ಹೆದ್ದಾರಿ ತಡೆ ನಡೆಸಿ,... >> ದಿನಾಂಕ.03.07.2018. ಪತ್ರಿಕಾ ಪ್ರಕಟಣೆ ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ 11 ಲಕ್ಷ 70 ಸಾವಿರ ಬೆಲೆ ಬಾಳುವ ಚಿನ್ನ-ಬೆಳ್ಳಿ  ಹಾಗೂ ಮೊಬೈಲ್‌‌‌... >>   ಪತ್ರಿಕಾ ಪ್ರಕಟಣೆ. ತುಮಕೂರು ಜಿಲ್ಲಾ ಪೊಲೀಸ್, ತುಮಕೂರು. ಕೋರಾ ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 27.06.2018 ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಸಾರ್ವಜನಿಕರ... >> ಪತ್ರಿಕಾ ಪ್ರಕಟಣೆ ದಿನಾಂಕ:- 23/06/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಖನ್ನ... >> ಪತ್ರಿಕಾ ಪ್ರಕಟಣೆ ದಿನಾಂಕ: 21-06-2018. ಸುಲಿಗೆಕೋರರ ಬಂಧನ: ದಿನಾಂಕ:18-06-2018 ರಂದು... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< July 2018 >
Mo Tu We Th Fr Sa Su
            1
2 3 5 6 7 8
9 10 11 12 13 14 15
16 17 18 19 20 21 22
23 24 25 26 27 28 29
30 31          
Wednesday, 04 July 2018
ಅಪರಾಧ ಘಟನೆಗಳು 04-07-18

ಅಮೃತೂರು ಪೊಲೀಸ್ ಠಾಣಾ ಮೊನಂ-121/2018 ಕಲಂ-15(ಎ), 32(3) ಕರ್ನಾಟಕ ರಾಜ್ಯ ಅಬಕಾರಿ ಕಾಯ್ದೆ-1965

ದಿನಾಂಕ: 03-07-2018 ರಂದು ರಾತ್ರಿ 8-30 ಗಂಟೆಯಲ್ಲಿ ನಮ್ಮ ಠಾಣೆಯ ಸಿಪಿಸಿ-1039 ರಂಗನಾಥ.ಎನ್.ಇ ರವರು ನೀಡಿದ ವರದಿಯ ಅಂಶವೇನೆಂದರೆ, ದಿನಾಂಕ: 03-07-2018 ರಂದು ರಾತ್ರಿ ನಾನು ಠಾಣಾಧಿಕಾರಿಗಳ ಆದೇಶದಂತೆ ಅಮೃತೂರು ರಾತ್ರಿ ಗಸ್ತು ಕರ್ತವ್ಯಕ್ಕೆ ನೇಮಕವಾಗಿದ್ದು, ಅದರಂತೆ ನಾನು ಹೆಚ್.ಜಿ-425 ಮಧುಸೂದನ್ ರವರೊಂದಿಗೆ ಅಮೃತೂರು ರಾತ್ರಿ ಗಸ್ತು ಕರ್ತವ್ಯ ನಿರ್ವಹಿಸುತ್ತಿರುವಾಗ್ಗೆ ರಾತ್ರಿ ಸುಮಾರು 8-20 ಗಂಟೆ ಸಮಯದಲ್ಲಿ ಅಮೃತೂರು-ಜಿನ್ನಾಗರ ಕ್ರಾಸ್ ಕಡೆ ಗಸ್ತಿಗೆ ಹೋಗುತ್ತಿರುವಾಗ್ಗೆ ಒಬ್ಬ ಆಸಾಮಿಯು ಜಿನ್ನಾಗರ ಕ್ರಾಸ್ ನಲ್ಲಿರುವ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿರುವ ಸೇತುವೆಯ ಮೇಲೆ ಕುಳಿತು ಮದ್ಯಪಾನ ಮಾಡುತ್ತಿರುವಂತೆ ಕಂಡು ಬಂದ ಮೇರೆಗೆ ಹತ್ತಿರ ಹೋಗಿ ನೋಡಲಾಗಿ ಆತನು ಮದ್ಯಪಾನ ಮಾಡುತ್ತಿರುವುದು ನಿಜವಾಗಿತ್ತು. ಆತನು ಸೇತುವೆಯ ಮೇಲೆ ಕುಳಿತು ಒಂದು ಒಂದು ಲೀಟರ್ ವಾಟರ್ ಕ್ಯಾನ್ ನಲ್ಲಿ ಅರ್ಧದಷ್ಟು ನೀರು ಮತ್ತು 90 ಎಂ.ಎಲ್ ನ ರಾಜ ವಿಸ್ಕಿ ಎಂಬ ಹೆಸರಿನ ಒಂದು ತುಂಬಿದ ಹಾಗೂ ಒಂದು ಖಾಲಿ ಮದ್ಯದ ಸಾಚೆಟ್ ಇದ್ದು ಆಸಾಮಿಯು ಪ್ಲಾಸ್ಟಿಕ್ ಲೋಟದಲ್ಲಿ ಮದ್ಯ ಹಾಕಿಕೊಂಡು ಮದ್ಯಪಾನ ಮಾಡುತ್ತಿದ್ದನು. ಈತನನ್ನು ವಿಚಾರ ಮಾಡಲಾಗಿ ನನಗೆ ಮದ್ಯಪಾನ ಮಾಡುವ ಚಟವಿದ್ದು, ಅಮೃತೂರಿನ ವೈನ್ ಸ್ಟೋರ್ ನಲ್ಲಿ ಮದ್ಯವನ್ನು ಖರೀದಿಸಿ ದಾರಿ ಮದ್ಯೆ ಎಲ್ಲಿಯಾದರೂ ಸೇತುವೆಯ ಮೇಲೆ ಅಥವಾ ರಸ್ತೆಯ ಪಕ್ಕದಲ್ಲಿ ಕುಳಿತು ಮದ್ಯಪಾನ ಮಾಡಿಕೊಂಡು ನಂತರ ಮನೆಗೆ ಹೋಗುತ್ತೇನೆಂದು ತಿಳಿಸಿದ್ದು, ಈತನ ಹೆಸರು ವಿಳಾಸ ಕೇಳಲಾಗಿ ಶಂಕರಪ್ಪ ಬಿನ್ ಲೇಟ್ ಭಂಗಿಗೌಡ, 50 ವರ್ಷ, ಒಕ್ಕಲಿಗರು, ಚಿಲ್ಲರೆ ಅಂಗಡಿ ವ್ಯಾಪಾರ, ಹೊಸಕೆರೆ ಗ್ರಾಮ, ಅಮೃತೂರು ಹೋಬಳಿ, ಕುಣಿಗಲ್ ತಾಲೋಕ್ ಎಂದು ತಿಳಿಸಿರುತ್ತಾನೆ. ಅಲ್ಲಿಂದ ಮಾಲು ಮತ್ತು ಆಸಾಮಿಯನ್ನು ಕರೆತಂದು ಮುಂದಿನ ಕ್ರಮ ಜರುಗಿಸಲು ಈ ನನ್ನ ವರದಿಯನ್ನು ನೀಡಿರುತ್ತೇನೆ ಎಂದು ಇದ್ದ ವರದಿಯ ಮೇರೆಗೆ ಪ್ರಕರಣವನ್ನು ದಾಖಲಿಸಿರುತ್ತೆ.

ಅಮೃತೂರು ಪೊಲೀಸ್ ಠಾಣಾ ಮೊನಂ-122/2018 ಕಲಂ-15(ಎ), 32(3) ಕರ್ನಾಟಕ ರಾಜ್ಯ ಅಬಕಾರಿ ಕಾಯ್ದೆ-1965

ದಿನಾಂಕ: 03-07-2018 ರಂದು ರಾತ್ರಿ 9-40 ಗಂಟೆ ಸಮಯದಲ್ಲಿ ನಮ್ಮ ಠಾಣೆಯ ಪಿಸಿ-1082 ಕಾಶಿನಾಥ ಪೂಜಾರಿ ರವರು ನೀಡಿದ ವರದಿಯ ಅಂಶವೇನೆಂದರೆ, ದಿನಾಂಕ: 03-07-2018 ರಂದು ರಾತ್ರಿ ನಾನು ಠಾಣಾಧಿಕಾರಿಗಳ ಆದೇಶದಂತೆ ಅಮೃತೂರು ರಾತ್ರಿ ಗಸ್ತು ಕರ್ತವ್ಯಕ್ಕೆ ನೇಮಕವಾಗಿದ್ದು, ಅದರಂತೆ ನಾನು ಹೆಚ್.ಜಿ-427 ಕೃಷ್ಣ ರವರೊಂದಿಗೆ ಅಮೃತೂರು ರಾತ್ರಿ ಗಸ್ತು ಕರ್ತವ್ಯ ನಿರ್ವಹಿಸುತ್ತಿರುವಾಗ್ಗೆ ರಾತ್ರಿ 9-30 ಗಂಟೆ ಸಮಯದಲ್ಲಿ ಅಮೃತೂರು-ಕೊಡಿಗೆಹಳ್ಳಿ ಕಡೆ ಗಸ್ತಿಗೆ ಹೋಗುತ್ತಿರುವಾಗ್ಗೆ ಒಬ್ಬ ಆಸಾಮಿಯು ಇಂದಿರಾ ನಗರದಲ್ಲಿರುವ ಸಾರ್ವಜನಿಕ ಬಸ್ ನಿಲ್ದಾಣದ ಬಳಿ ಇರುವ ಸೇತುವೆಯ ಮೇಲೆ ಕುಳಿತು ಮದ್ಯಪಾನ ಮಾಡುತ್ತಿರುವಂತೆ ಕಂಡು ಬಂದ ಮೇರೆಗೆ ಹತ್ತಿರ ಹೋಗಿ ನೋಡಲಾಗಿ ಆತನು ಮದ್ಯಪಾನ ಮಾಡುತ್ತಿರುವುದು ನಿಜವಾಗಿತ್ತು. ಆತನು ಸಾರ್ವಜನಿಕ ಬಸ್ ನಿಲ್ದಾಣದ ಬಳಿ ಇರುವ ಸೇತುವೆಯ ಮೇಲೆ ಕುಳಿತು ಒಂದು ಲೀಟರ್ ವಾಟರ್ ಕ್ಯಾನ್ ನಲ್ಲಿ ಅರ್ಧದಷ್ಟು ನೀರು ಮತ್ತು 90 ಎಂ.ಎಲ್ ನ ಓಲ್ಡ್ ಟವರಿನ್ ಎಂಬ ಹೆಸರಿನ ಒಂದು ತುಂಬಿದ ಹಾಗೂ ಒಂದು ಖಾಲಿ ಮದ್ಯದ ಸಾಚೆಟ್ ಇದ್ದು ಅಸಾಮಿಯು ಪ್ಲಾಸ್ಟಿಕ್ ಲೋಟದಲ್ಲಿ ಮದ್ಯ ಹಾಕಿಕೊಂಡು ಮದ್ಯಪಾನ ಮಾಡುತ್ತಿದ್ದನು. ಈತನನ್ನು ವಿಚಾರ ಮಾಡಲಾಗಿ ನನಗೆ ಮದ್ಯಪಾನ ಮಾಡುವ ಚಟವಿದ್ದು, ಅಮೃತೂರಿನ ವೈನ್ಸ್ ಸ್ಟೋರ್ ನಲ್ಲಿ ಮದ್ಯವನ್ನು ಖರೀದಿಸಿ ದಾರಿ ಮದ್ಯೆ ಎಲ್ಲಿಯಾದರೂ ಸೇತುವೆ ಅಥವಾ ರಸ್ತೆಯ ಪಕ್ಕದಲ್ಲಿ ಕುಳಿತು ಮದ್ಯಪಾನ ಮಾಡಿಕೊಂಡು ನಂತರ ಮನೆಗೆ ಹೋಗುತ್ತೇನೆಂದು ತಿಳಿಸಿದ್ದು, ಈತನ ಹೆಸರು ವಿಳಾಸ ಕೇಳಲಾಗಿ ಗುರುಸ್ವಾಮಿ ಬಿನ್ ಲೇಟ್ ಕೆಂಗಯ್ಯ, 45 ವರ್ಷ, ಭಜಂತ್ರಿ ಜನಾಂಗ, ಹೇರ್ ಕಟಿಂಗ್ ಕೆಲಸ, ಕಗ್ಗೆರೆ ಗ್ರಾಮ, ಯಡೆಯೂರು ಹೋಬಳಿ, ಕುಣಿಗಲ್ ತಾಲೋಕ್ ಎಂದು ತಿಳಿಸಿರುತ್ತಾನೆ. ಅಲ್ಲಿಂದ ಮಾಲು ಮತ್ತು ಆಸಾಮಿಯನ್ನು ಕರೆತಂದು ಮುಂದಿನ ಕ್ರಮ ಜರುಗಿಸಲು ಈ ನನ್ನ ವರದಿಯನ್ನು ನೀಡಿರುತ್ತೇನೆ ಎಂದು ಇದ್ದ ವರದಿಯ ಮೇರೆಗೆ ಪ್ರಕರಣವನ್ನು ದಾಖಲಿಸಿರುತ್ತೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ 139/2018 ಕಲಂ 324,504,506 ಐಪಿಸಿ

ದಿನಾಂಕ:03-07-2018 ರಂದು ಸಂಜೆ 6-30 ಗಂಟೆಗೆ ಪಿರ್ಯಾದಿಯಾದ ಮಂಜುಳ ಕೋಂ ನಾಗರಾಜು, 35 ವರ್ಷ, ಗಂಗೋನಹಳ್ಳಿ, ಹೆಬ್ಬೂರು ಹೋಬಳಿ, ತುಮಕೂರು ತಾಲ್ಲೂಕು & ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂಧರೆ ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ, ನನ್ನ ಅಕ್ಕನಾದ ಕವಿತರವರನ್ನು ನಾಗವಲ್ಲಿ ಗ್ರಾಮದ ಲೇಟ್ ರಂಗನರಸಯ್ಯರವರ ಮಗನಾದ ರಾಜಣ್ಣರವರಿಗೆ 25 ವರ್ಷಗಳ ಹಿಂದೆ ಮದುವೆ ಮಾಡಿಕೊಟ್ಟಿದ್ದು, ನನ್ನ ಅಕ್ಕ ಕವಿತ ಮತ್ತು ರಾಜಣ್ಣರವರು ಸಂಸಾರದ ವಿಚಾರದಲ್ಲಿ ಒಬ್ಬರೊಗೊಬ್ಬರು ಗಲಾಟೆ ಮಾಡಿಕೊಂಡಿದ್ದರು, ಈ ವಿಷಯವನ್ನು ತಿಳಿದ ನಾನು ದಿನಾಂಕ-03/07/2018 ರಂದು ಮಧ್ಯಾಹ್ನ 3-30 ಗಂಟೆ ಸಮಯದಲ್ಲಿ ನಾಗವಲ್ಲಿ ಗ್ರಾಮದ ನಮ್ಮ ಅಕ್ಕ ಕವಿತರವರ ಮನೆಗೆ ನಾನು ಮತ್ತು ನನ್ನ ತಾಯಿ ಕುಂಭಮ್ಮ ಮತ್ತು ನನ್ನ ಅತ್ತೆ ನರಸಮ್ಮ ರವರುಗಳು ಮನೆಗೆ ಹೋಗಿ ನನ್ನ ಅಕ್ಕರವರನ್ನು ಯಾಕೆ ಗಲಾಟೆ ಮಾಡಿಕೊಂಡಿದ್ದೀರಾ ಬಾ ಆಸ್ಪತ್ರೆಗೆ ಹೋಗಿ ತೋರಿಸಿಕೊಂಡು ಬರೋಣ ಅಂತಾ ಕರೆಯುತ್ತಿದ್ದಾಗ ನಮ್ಮ ಅಕ್ಕನ ಗಂಡ ರಾಜಣ್ಣ ಮನೆಯೊಳಗೆ ಬಂದು ಲೇ ಬೋಳಿ ಮುಂಡೆ, ಸೂಳೆ ಮುಂಡೆ, ನೀನು ಯಾವಳೇ ನನ್ನ ಹೆಂಡತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಎಂದು ಅವ್ಯಾಚ್ಯಶಬ್ದಗಳಿಂದ ಬೈದು ನನಗೆ ಮನೆಯಲ್ಲಿಯೇ ಇದ್ದ ಒಂದು ನೀಲಿಗಿರಿ ದೊಣ್ಣೆಯಿಂದ ನನ್ನ ಎಡಗೈಗೆ ಹೊಡೆದು ಊತಗಾಯ ಪಡಿಸಿದನು, ಲೇ ಮುಂಡೆ ನಮ್ಮ ಮನೆಯ ತಂಟೆಗೆ ಬಂದರೆ ನಿನ್ನನ್ನು ಕೊಲೆ ಮಾಡುತ್ತೇನೆ ಎಂದು ಕೊಲೆ ಬೆದರಿಕೆ ಹಾಕದನು ಅಷ್ಠರಲ್ಲಿ ನನ್ನ ತಾಯಿ ಕುಂಭಮ್ಮ ಹಾಗೂ ಅತ್ತೆ ನರಸಮ್ಮ ರವರು ಗಲಾಟೆ ಬಿಡಿಸಿ ತಕ್ಷಣ ನನ್ನನ್ನು ಯಾವುದೋ ಒಂದು ವಾಹನದಲ್ಲಿ ಹೆಬ್ಬೂರಿನ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿದರು, ಆದ್ದರಿಂದ ನನ್ನ ಮೇಲೆ ಗಲಾಟೆ ಮಾಡಿದ ರಾಜಣ್ಣ ರವರ ಮೇಲೆ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ 140/2018 ಕಲಂ 447,324,504,506 ಐಪಿಸಿ

ದಿನಾಂಕ-03/07/2018 ರಂದು ರಾತ್ರಿ 7-15 ಗಂಟೆಗೆ ಪಿರ್ಯಾದಿಯಾದ ಮೂಡ್ಲಯ್ಯ ಬಿನ್ ಲೇಟ್ ತಿಮ್ಮಯ್ಯ, 74 ವರ್ಷ, ಒಕ್ಕಲಿಗರು, ಜಿರಾಯ್ತಿ, ಕಲ್ಯಾಣಪುರ, ಹೆಬ್ಬೂರು ಹೋಬಳಿ, ತುಮಕೂರು ತಾ// & ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂಧರೆ ದಿನಾಂಕ-02/07/2018 ರಂದು ಮಧ್ಯಾಹ್ನ ಸುಮಾರು 3-30 ಗಂಟೆ ಸಮಯದಲ್ಲಿ ನನ್ನ ಬಾಬ್ತು ಸ.ನಂ.-17 ರಲ್ಲಿ ಕೃಷಿ ಕೆಲಸ ಮಾಡುತ್ತಿದ್ದಾಗ ವೆಂಕಟೇಶಯ್ಯ ಬಿನ್ ಲೇಟ್ ವೆಂಕಟಪ್ಪ, 54 ವರ್ಷ, ಒಕ್ಕಲಿಗರು, ವಕ್ಕೋಡಯ್ಯನಪಾಳ್ಯದ ವಾಸಿ ಈತನ ವಿರುದ್ದ ಘನ ನ್ಯಾಯಾಲಯದಲ್ಲಿ ಶಾಶ್ವತ ನಿರ್ಭಂದಕಾಜ್ಞೆಯಾಗಿದ್ದರೂ ಸಹ (ಓ ಎಸ್ ನಂ-762/15 ) ನನ್ನ ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿ ಎಮ್ಮೆಯನ್ನು ಮೇಯಿಸಲು ಬಂದಾಗ ಪ್ರಶ್ನಿಸಿದ್ದಕ್ಕೆ ಏಕಾ ಏಕಿ ನೀಲಿಗಿರಿ ದೊಣ್ಣೆಯಿಂದ ನನ್ನ ಎಡಗೈಗೆ ಹೊಡೆದು, ರಕ್ತಗಾಯಗೊಳಿಸಿ, ಎಡಗೈ ಮತ್ತು ಬಲಗೈಗಳ ಬೆರಳುಗಳನ್ನು ಮುರಿದು, ಕೈಗಳನ್ನು ತಿರುಚಿ, ಮನದಂತೆ ಹೊಡೆದು, ಅವ್ಯಾಚ್ಯಶಬ್ದಗಳಿಂದ ನಿಂದಿಸಿ ಕೊಲಡ ಬೆದರಿಕೆ ಹಾಖಿರುತ್ತಾರೆ, ನಂತರ ಘಟನ ಸ್ಥಳಕ್ಕೆ ಬಂದ ಕೆಂಚಪ್ಪ ಬಿನ್ ಲೇಟ್ ತಿಮ್ಮಯ್ಯ ಎಂಬುವವರು ಗಲಾಟೆ ಬಿಡಿಸಿ ಕಳುಹಿಸಿರುತ್ತಾರೆ, ಗಾಬರಿಗೊಂಡು ನಾನು ಆತನಿಂದ ತಪ್ಪಿಸಿಕೊಂಡು ಹೆಬ್ಬೂರಿಗೆ ಬಂದು ಪ್ರಾಥಮಿಕ ಆರೋಗ್ಯ ಕೇಂಧ್ರದಲ್ಲಿ ಚಿಕಿತ್ಸೆ ಪಡೆದು ನಂತರ ವೈಧ್ಯರ ಸೂಚನೆ ಮೇರೆಗೆ ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಈ ದಿನ ತಡವಾಗಿ ಠಾಣೆಗೆ ಬಂದು ನನ್ನ ಮೇಲೆ ಗಲಾಟೆ ಮಾಡಿ ನಮ್ಮ ಕುಟುಂಬಕ್ಕೆ ಜೀವ ಬೆದರಿಕೆ ಹಾಕಿದ  ವೆಂಕಟೇಶಯ್ಯ ರವರ ಮೇಲೆ ಕಾನೂನು ಜರುಗಿಸಬೇಕೆಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 85 guests online
Content View Hits : 304505