lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ : 20-07-18 ಸ್ಮಾರ್ಟ್ ಸಿಟಿ ಅಧಿಕಾರಿಗಳೆಂದು ವಂಚಿಸಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 20-07-2018       ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 09-07-2018 ಕೊಲೆ ಆರೋಪಿಗಳ ಬಂಧನ ******* ದಿನಾಂಕ 04.07.2018 ರಂದು... >>   ಪತ್ರಿಕಾ ಪ್ರಕಟಣೆ ದಿನಾಂಕ : 07-07-2018. ಪೂರ್ವಾನುಮತಿ ಪಡೆಯದೇ ಹೆದ್ದಾರಿ ತಡೆ ನಡೆಸಿ,... >> ದಿನಾಂಕ.03.07.2018. ಪತ್ರಿಕಾ ಪ್ರಕಟಣೆ ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ 11 ಲಕ್ಷ 70 ಸಾವಿರ ಬೆಲೆ ಬಾಳುವ ಚಿನ್ನ-ಬೆಳ್ಳಿ  ಹಾಗೂ ಮೊಬೈಲ್‌‌‌... >>   ಪತ್ರಿಕಾ ಪ್ರಕಟಣೆ. ತುಮಕೂರು ಜಿಲ್ಲಾ ಪೊಲೀಸ್, ತುಮಕೂರು. ಕೋರಾ ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 27.06.2018 ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಸಾರ್ವಜನಿಕರ... >> ಪತ್ರಿಕಾ ಪ್ರಕಟಣೆ ದಿನಾಂಕ:- 23/06/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಖನ್ನ... >> ಪತ್ರಿಕಾ ಪ್ರಕಟಣೆ ದಿನಾಂಕ: 21-06-2018. ಸುಲಿಗೆಕೋರರ ಬಂಧನ: ದಿನಾಂಕ:18-06-2018 ರಂದು... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< July 2018 >
Mo Tu We Th Fr Sa Su
            1
2 4 5 6 7 8
9 10 11 12 13 14 15
16 17 18 19 20 21 22
23 24 25 26 27 28 29
30 31          
Tuesday, 03 July 2018
ಪತ್ರಿಕಾ ಪ್ರಕಟಣೆ ದಿ.03.07.18

ದಿನಾಂಕ.03.07.2018.

ಪತ್ರಿಕಾ ಪ್ರಕಟಣೆ


ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು ರಸ್ತೆ ಸುರಕ್ಷತಾ ಮಾಹೆಯನ್ನಾಗಿ ಆಚರಿಸಲಾಗುತ್ತಿದೆ.  ಈ ತಿಂಗಳಲ್ಲಿ ವಿಶೇಷ ಅಭಿಯಾನದಡಿ ಸಂಚಾರಿ ನಿಯಮ ಉಲ್ಲಂಘನೆ ಮಾಡುವ ಚಾಲಕರುಗಳ ಮೇಲೆ ಕ್ರಮ ಕೈಗೊಂಡು ಅಪಘಾತ ಪ್ರಕರಣಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ.                 ದಿನಾಂಕ : 02-07-2018 ರಂದು ತುಮಕೂರು ಜಿಲ್ಲೆಯಾದ್ಯಂತ ಈ ವಿಶೇಷ ಅಭಿಯಾನದಡಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿರುವ ಒಟ್ಟು 1636 ಪ್ರಕರಣಗಳನ್ನು ಮತ್ತು  ಮದ್ಯಪಾನ  ಮಾಡಿ ವಾಹನ ಚಾಲನೆ ಮಾಡಿದ ಅರೋಪದಡಿ  ಒಟ್ಟು 76 ಪ್ರಕರಣಗಳನ್ನು ದಾಖಲಿಸಿ 4,19,300/- ರೂ ದಂಡವನ್ನು ವಸೂಲಿ ಮಾಡಲಾಗಿದೆ.


ತುಮಕೂರು ನಗರದಲ್ಲಿ ನಿಯಮಗಳನ್ನು ಉಲ್ಲಂಘನೆ ಮಾಡಿ ದ್ವಿಚಕ್ರ ವಾಹನವನ್ನು ಚಾಲನೆ ಮಾಡುತ್ತಿದ್ದ  45 ಜನ ಅಪ್ರಾಪ್ತ ವಯಸ್ಸಿನ ಶಾಲಾ ಮಕ್ಕಳ ವಾಹನಗಳನ್ನು ಪೊಲೀಸ್ ವಶಕ್ಕೆ ಪಡೆದು ಅವರ ಪೊಷಕರನ್ನು ಕರೆಸಿ ಇನ್ನು ಮುಂದೆ ಈ ರೀತಿ ಪುನರಾವರ್ತನೆಯಾಗದಂತೆ ತಿಳುವಳಿಕೆ ನೀಡಿ ದಂಡ ವಿಧಿಸಿರುತ್ತೆ.


ಸಾರ್ವಜನಿಕರು ಸಂಚಾರಿ ನಿಯಮಗಳನ್ನು ಪಾಲನೆ ಮಾಡಿ ಅಪಘಾತಗಳು ಸಂಭವಿಸದಂತೆ ಎಲ್ಲಾ ರೀತಿಯ ಮುನ್ನಚ್ಚರಿಕಾ ಕ್ರಮಗಳನ್ನು ಕೈಗೊಂಡು ತಮ್ಮ ಅಮೂಲ್ಯವಾದ ಜೀವವನ್ನು ಕಾಪಾಡಿಕೊಳ್ಳುವುದರ ಜೊತೆಗೆ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕಾಗಿ ಕೋರಲಾಗಿದೆ.


ಅಪರಾಧ ಘಟನೆಗಳು 03-07-18

ಹುಳಿಯಾರು ಪೊಲೀಸ್ ಠಾಣಾ ಮೊ.ನಂ 73/2018, ಕಲಂ:78(3) KP Act.

ದಿನಾಂಕ:-02-07-2018 ರಂದು ಸಂಜೆ 4.15 ಗಂಟೆಗೆ ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ನೀಡಿದ ಜ್ಞಾಪನದ ಸಾರಾಂಶವೇನೆಂದರೆ, ದಿನಾಂಕ:02-07-2018 ರಂದು ಮದ್ಯಾಹ್ನ 01:45 ಗಂಟೆಗೆ ನನಗೆ ಹುಳಿಯಾರು ಪೊಲೀಸ್ ಠಾಣಾ ವ್ಯಾಪ್ತಿಯ ಹುಳಿಯಾರು ಟೌನ್ ಬಸ್ ನಿಲ್ದಾಣದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟ ನಡೆಯುತ್ತಿದೆ ಎಂತಾ ಖಚಿತ ವರ್ತಮಾನ ಬಂದಿದ್ದು ಸದರಿ ಮಟ್ಕಾ ಜೂಜಾಟದ ಮೇಲೆ ದಾಳಿ ಮಾಡಲು ಘನ ಎ.ಸಿ.ಜೆ (ಜೆ.ಡಿ) & ಜೆ.ಎಂ.ಎಫ್.ಸಿ ಚಿ. ನಾ ಹಳ್ಳಿ ನ್ಯಾಯಾಲಯದಿಂದ ಅನುಮತಿಯನ್ನು ಪಡೆದು ಠಾಣೆಗೆ ಪಂಚರನ್ನು ಬರಮಾಡಿಕೊಂಡು ನಾನು, ಸಿಬ್ಬಂದಿ ಮತ್ತು ಪಂಚರೊಂದಿಗೆ ಮದ್ಯಾಹ್ನ 02:45 ಗಂಟೆಗೆ ಠಾಣೆಯನ್ನು ಬಿಟ್ಟು ಇಲಾಖಾ ಜೀಪಿನಲ್ಲಿ ಬಸ್ ನಿಲ್ದಾಣದ ಬಳಿ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಒಬ್ಬ ಆಸಾಮಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರನ್ನು ಗುಂಪು ಕಟ್ಟಿಸಿಕೊಂಡು 1 ರೂಪಾಯಿಗೆ 70 ರೂಪಾಯಿ ಕೊಡುತ್ತೇನೆ ನಿಮ್ಮ ನಿಮ್ಮ ಅದೃಷ್ಠ ಸಂಖ್ಯೆಗಳನ್ನು ಬರೆಸಿ ಎಂದು ಕೂಗೂತ್ತಾ ಸಾರ್ವಜನಿಕರಿಂದ ಹಣವನ್ನು ಪಣವಾಗಿ ಕಟ್ಟಿಸಿಕೊಂಡು ಮಟ್ಕಾ ನಂಬರ್ ಬರೆಯುತ್ತಿದ್ದವನ ಮೇಲೆ ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ನಡೆಸಿ ಆಸಾಮಿಯನ್ನು ಹಿಡಿದುಕೊಂಡು ಹೆಸರು ವಿಳಾಸ ಕೇಳಲಾಗಿ ಅನ್ವರ್ ಸಾಬ್ ಬಿನ್ ಲೇಟ್ ಇಬ್ರಾಹಿಂ ಸಾಬ್, 48 ವರ್ಷ, ಮುಸ್ಲಿಂ ಜನಾಂಗ, ಗಾರೆ ಕೆಲಸ, ಇಂದಿರಾನಗರ, ಹುಳಿಯಾರು ಟೌನ್ ಎಂತ ತಿಳಿಸಿದ್ದು ಮಟ್ಕಾ ಚೀಟಿಯ ಪಟ್ಟಿಯನ್ನು ಪ್ರೂಟ್ ನಯಾಜ್, ಇಂದಿರಾನಗರ, ಹುಳಿಯಾರು ಟೌನ್ ರವರಿಗೆ ನೀಡುತ್ತಿದ್ದೆ ಎಂತ ತಿಳಿಸಿರುತ್ತಾರೆ. ಹಾಗೂ ಈತನ ಬಳಿ ಇದ್ದ 280/- ರೂ ನಗದು ಹಣ, ಮಟ್ಕಾ ನಂಬರ್ ಬರೆದಿರುವ 2 ಮಟ್ಕಾ ಚೀಟಿ , ಒಂದು ಬಾಲ್ ಪೆನ್ ಅನ್ನು ಪಂಚರ ಸಮಕ್ಷಮ ಮದ್ಯಾಹ್ನ 03:00 ಗಂಟೆಯಿಂದ 04:00 ಗಂಟೆಯವರೆಗೆ ಲ್ಯಾಪ್ ಟಾಪ್ ಮೂಲಕ ಪಂಚನಾಮೆ ಕ್ರಮ ಕೈಗೊಂಡು ಆರೋಪಿ ಮತ್ತು ಒಟ್ಟು 280/- ರೂ ನಗದು ಹಣ, ಮಟ್ಕಾ ನಂಬರ್ ಬರೆದಿರುವ 2 ಮಟ್ಕಾ ಚೀಟಿ, 1 ಬಾಲ್ ಪೆನ್ನು ಅನ್ನು ಅಮಾನತ್ತು ಪಡಿಸಿಕೊಂಡು ವಾಪಸ್‌‌ ಠಾಣೆಗೆ ಬಂದು ಆರೋಪಿ ಅನ್ವರ್ ಸಾಬ್ ಮತ್ತು ಮಟ್ಕಾ ಚೀಟಿಯ ಪಟ್ಟಿಯನ್ನು ಪಡೆಯುತ್ತಿರುವ ಪ್ರೂಟ್ ನಯಾಜ್ ರವರ ವಿರುದ್ಧ ಕ್ರಮ ಜರುಗಿಸಲು ಜ್ಞಾಪನವನ್ನು ನೀಡಿರುತ್ತೇನೆ.  ಎಂತ ನೀಡಿದನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

 

ಹುಳಿಯಾರು ಪೊಲೀಸ್ ಠಾಣಾ ಮೊ.ನಂ 74/2018, ಕಲಂ:78(3) KP Act.

ದಿನಾಂಕ:-02-07-2018 ರಂದು ಸಂಜೆ 6.30 ಗಂಟೆಗೆ ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ನೀಡಿದ ಜ್ಞಾಪನದ ಜ್ಞಾಪನದ ಅಂಶವೇನೆಂದರೆ,  ದಿನಾಂಕ:02-07-2018 ರಂದು ಸಂಜೆ 04:20 ಗಂಟೆಗೆ ನಾನು ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಶ್ರೀ ಕೇಶವಮೂರ್ತಿ, ಪಿ.ಎಸ್.ಐ,  ಸಿ.ಇ.ಎನ್ ಪೊಲೀಸ್ ಠಾಣೆ, ತುಮಕೂರು ರವರು ಠಾಣೆಗೆ ಬಂದು  ಹುಳಿಯಾರು ಪೊಲೀಸ್ ಠಾಣಾ ವ್ಯಾಪ್ತಿಯ ಹುಳಿಯಾರು ಟೌನ್ ನಲ್ಲಿರುವ ಕೆನರಾ ಬ್ಯಾಂಕ್ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟ ನಡೆಯುತ್ತಿದ್ದು ಮಟ್ಕಾ ಜೂಜಾಟ ನಡೆಸುತ್ತಿರುವ ವ್ಯಕ್ತಿಯ ಚಲನ ವಲನಗಳ ಬಗ್ಗೆ ನಿಗಾ ಇಡಲು ಸಿಬ್ಬಂದಿಯವರನ್ನು ಬಿಟ್ಟು ಬಂದಿರುವುದಾಗಿ ಮಾಹಿತಿಯನ್ನು ನೀಡಿದ್ದು ಸದರಿ ಮಟ್ಕಾ ಜೂಜಾಟದ ಮೇಲೆ ದಾಳಿ ಮಾಡಲು ಘನ ಎ.ಸಿ.ಜೆ (ಜೆ.ಡಿ) & ಜೆ.ಎಂ.ಎಫ್.ಸಿ ಚಿ. ನಾ ಹಳ್ಳಿ ನ್ಯಾಯಾಲಯದಿಂದ ಅನುಮತಿಯನ್ನು ಪಡೆದು ಠಾಣೆಗೆ ಪಂಚರನ್ನು ಬರಮಾಡಿಕೊಂಡು ನಾನು, ಸಿ.ಇ.ಎನ್ ಪೊಲೀಸ್ ಠಾಣೆಯ ಪಿ.ಎಸ್.ಐ, ಠಾಣಾ ಸಿಬ್ಬಂದಿ ಮತ್ತು ಪಂಚರೊಂದಿಗೆ ಸಂಜೆ 05:00 ಗಂಟೆಗೆ ಠಾಣೆಯನ್ನು ಬಿಟ್ಟು ಇಲಾಖಾ ಜೀಪಿನಲ್ಲಿ ಕೆನರಾ ಬ್ಯಾಂಕ್ ಸಮೀಪ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಒಬ್ಬ ಆಸಾಮಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರನ್ನು ಗುಂಪು ಕಟ್ಟಿಸಿಕೊಂಡು 1 ರೂಪಾಯಿಗೆ 70 ರೂಪಾಯಿ ಕೊಡುತ್ತೇನೆ ನಿಮ್ಮ ನಿಮ್ಮ ಅದೃಷ್ಠ ಸಂಖ್ಯೆಗಳನ್ನು ಬರೆಸಿ ಎಂದು ಕೂಗೂತ್ತಾ ಸಾರ್ವಜನಿಕರಿಂದ ಹಣವನ್ನು ಪಣವಾಗಿ ಕಟ್ಟಿಸಿಕೊಂಡು ಮಟ್ಕಾ ನಂಬರ್ ಬರೆಯುತ್ತಿದ್ದವನ ಮೇಲೆ ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ನಡೆಸಿ ಆಸಾಮಿಯನ್ನು ಹಿಡಿದುಕೊಂಡು ಹೆಸರು ವಿಳಾಸ ಕೇಳಲಾಗಿ ಮಹಮದ್ ಅತಿಕ್ ಬಿನ್ ವಹಾಬ್ ಜಾನ್, 22 ವರ್ಷ, ಮುಸ್ಲೀಂ ಜನಾಂಗ, ವ್ಯಾಪಾರ, ವಾಸ ಇಂದಿರಾನಗರ, ಹುಳಿಯಾರು ಟೌನ್ ಎಂತ ತಿಳಿಸಿದ್ದು ಮಟ್ಕಾ ಚೀಟಿಯ ಪಟ್ಟಿಯನ್ನು ಪ್ರೂಟ್ ನಯಾಜ್ ವುಲ್ಲಾ ಖಾನ್, ಇಂದಿರಾನಗರ, ಹುಳಿಯಾರು ಟೌನ್ ರವರಿಗೆ ನೀಡುತ್ತಿದ್ದೆ ಎಂತ ತಿಳಿಸಿರುತ್ತಾರೆ. ಹಾಗೂ ಈತನ ಬಳಿ ಇದ್ದ 13740/- ರೂ ನಗದು ಹಣ, ಮಟ್ಕಾ ನಂಬರ್ ಬರೆದಿರುವ 2 ಮಟ್ಕಾ ಚೀಟಿ , ಒಂದು ಬಾಲ್ ಪೆನ್, ಕಪ್ಪು ಬಣ್ಣದ ಕೆ 9 ಕಾರ್ಬನ್ ಕಂಪನಿಯ ಮೊಬೈಲ್ ಪೋನ್, ಕಪ್ಪು ಬಣ್ಣದ ಲಾವಾ ಕಂಪನಿಯ ಮೊಬೈಲ್ ಪೋನ್, ನೀಲಿ ಬಣ್ಣದ ಐಟೆಲ್ ಕಂಪನಿಯ ಮೊಬೈಲ್ ಪೋನ್ ಹಾಗೂ ಸಿಲ್ವರ್  ಬಣ್ಣದ ಸ್ಯಾಮ್ ಸಂಗ್ ಮೊಬೈಲ್ ಪೋನ್ ಗಳನ್ನು  ಅನ್ನು ಪಂಚರ ಸಮಕ್ಷಮ ಸಂಜೆ 05:15 ಗಂಟೆಯಿಂದ 06:15 ಗಂಟೆಯವರೆಗೆ ಲ್ಯಾಪ್ ಟಾಪ್ ಮೂಲಕ ಪಂಚನಾಮ ಕ್ರಮ ಕೈಗೊಂಡು ಆರೋಪಿ ಮತ್ತು ಒಟ್ಟು 13740/- ರೂ ನಗದು ಹಣ, ಮಟ್ಕಾ ನಂಬರ್ ಬರೆದಿರುವ 2 ಮಟ್ಕಾ ಚೀಟಿ, 1 ಬಾಲ್ ಪೆನ್ನು, 4 ಮೊಬೈಲ್ ಪೋನ್ ಗಳನ್ನು  ಅಮಾನತ್ತು ಪಡಿಸಿಕೊಂಡು ವಾಪಸ್‌‌ ಠಾಣೆಗೆ ಬಂದು ಆರೋಪಿ ಮಹಮ್ಮದ್ ಅತಿಕ್ ಮತ್ತು ಮಟ್ಕಾ ಚೀಟಿಯ ಪಟ್ಟಿಯನ್ನು ಪಡೆಯುತ್ತಿರುವ ಪ್ರೂಟ್ ನಯಾಜ್ ರವರ ವಿರುದ್ಧ ಕ್ರಮ ಜರುಗಿಸಲು ಜ್ಞಾಪನವನ್ನು ನೀಡಿರುತ್ತೇನೆ.   ಎಂತ ನೀಡಿದನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

 

ಹುಳಿಯಾರು ಪೊಲೀಸ್ ಠಾಣಾ ಮೊ.ನಂ 75/2018, ಕಲಂ:78(3) KP Act.

ದಿನಾಂಕ:-02-07-2018 ರಂದು ರಾತ್ರಿ 8.30 ಗಂಟೆಗೆ ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ನೀಡಿದ ಜ್ಞಾಪನದ ಸಾರಾಂಶವೇನೆಂದರೆ ದಿನಾಂಕ:02-07-2018 ರಂದು ಸಂಜೆ 06:45 ಗಂಟೆಗೆ ನನಗೆ ಹುಳಿಯಾರು ಪೊಲೀಸ್ ಠಾಣಾ ವ್ಯಾಪ್ತಿಯ ಹುಳಿಯಾರು ಟೌನ್ ಆರ್ ಜಿ ಸರ್ಕಲ್ ನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟ ನಡೆಯುತ್ತಿದೆ ಎಂತಾ ಖಚಿತ ವರ್ತಮಾನ ಬಂದಿದ್ದು ಸದರಿ ಮಟ್ಕಾ ಜೂಜಾಟದ ಮೇಲೆ ದಾಳಿ ಮಾಡಲು ಘನ ಎ.ಸಿ.ಜೆ (ಜೆ.ಡಿ) & ಜೆ.ಎಂ.ಎಫ್.ಸಿ ಚಿ. ನಾ ಹಳ್ಳಿ ನ್ಯಾಯಾಲಯದಿಂದ ಅನುಮತಿಯನ್ನು ಪಡೆದು ಠಾಣೆಗೆ ಪಂಚರನ್ನು ಬರಮಾಡಿಕೊಂಡು ನಾನು, ಸಿಬ್ಬಂದಿ ಮತ್ತು ಪಂಚರೊಂದಿಗೆ ಸಂಜೆ 07:15 ಗಂಟೆಗೆ ಠಾಣೆಯನ್ನು ಬಿಟ್ಟು ಇಲಾಖಾ ಜೀಪಿನಲ್ಲಿ ಆರ್. ಜಿ ಸರ್ಕಲ್ ಬಳಿ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಒಬ್ಬ ಆಸಾಮಿ ಸಾರ್ವಜನಿಕ ಸ್ಥಳದಲ್ಲಿ ಬೀದಿ ದೀಪದ ಕೆಳಗೆ ಸಾರ್ವಜನಿಕರನ್ನು ಗುಂಪು ಕಟ್ಟಿಸಿಕೊಂಡು 1 ರೂಪಾಯಿಗೆ 70 ರೂಪಾಯಿ ಕೊಡುತ್ತೇನೆ ನಿಮ್ಮ ನಿಮ್ಮ ಅದೃಷ್ಠ ಸಂಖ್ಯೆಗಳನ್ನು ಬರೆಸಿ ಎಂದು ಕೂಗೂತ್ತಾ ಸಾರ್ವಜನಿಕರಿಂದ ಹಣವನ್ನು ಪಣವಾಗಿ ಕಟ್ಟಿಸಿಕೊಂಡು ಮಟ್ಕಾ ನಂಬರ್ ಬರೆಯುತ್ತಿದ್ದವನ ಮೇಲೆ ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ನಡೆಸಿ ಆಸಾಮಿಯನ್ನು ಹಿಡಿದುಕೊಂಡು ಹೆಸರು ವಿಳಾಸ ಕೇಳಲಾಗಿ ಹೆಚ್.ಎಲ್ ನರೇಂದ್ರ  ಬಿನ್ ಲೇಟ್ ಹೆಚ್.ಎಸ್ ಲಕ್ಷ್ಮೀಕಾಂತಶೆಟ್ಟಿ, 45 ವರ್ಷ, ವೈಶ್ಯ ಜನಾಂಗ, ವ್ಯಾಪಾರ, ವಾಸ ಆಚಾರ್ ಬೀದಿ, ಹುಳಿಯಾರು ಟೌನ್ ಎಂತ ತಿಳಿಸಿದ್ದು ಮಟ್ಕಾ ಚೀಟಿಯ ಪಟ್ಟಿಯನ್ನು ಹುಳಿಯಾರು ಹೋಬಳಿ, ಚಿಕ್ಕಬಿದರೆ ನಜೀರ್ ಬಿನ್ ಭಾಷಾಸಾಬ್ ರವರಿಗೆ ನೀಡುತ್ತಿದ್ದೆ ಎಂತ ತಿಳಿಸಿರುತ್ತಾರೆ. ಹಾಗೂ ಈತನ ಬಳಿ ಇದ್ದ 250/- ರೂ ನಗದು ಹಣ, ಮಟ್ಕಾ ನಂಬರ್ ಬರೆದಿರುವ 2 ಮಟ್ಕಾ ಚೀಟಿ , ಒಂದು ಬಾಲ್ ಪೆನ್ ಅನ್ನು ಪಂಚರ ಸಮಕ್ಷಮ ಸಂಜೆ 07:30 ಗಂಟೆಯಿಂದ ರಾತ್ರಿ 08:15 ಗಂಟೆಯವರೆಗೆ ಸರ್ಚ್ ಲೈಟ್ ಬೆಳಕಿನಲ್ಲಿ ಹಾಗೂ ವಿದ್ಯುತ್ ದೀಪದ ಬೆಳಕಿನಲ್ಲಿ ಲ್ಯಾಪ್ ಟಾಪ್ ಮೂಲಕ ಪಂಚನಾಮೆಯನ್ನು ಕೈಗೊಂಡು ಆರೋಪಿ ಮತ್ತು ಒಟ್ಟು 250/- ರೂ ನಗದು ಹಣ, ಮಟ್ಕಾ ನಂಬರ್ ಬರೆದಿರುವ 2 ಮಟ್ಕಾ ಚೀಟಿ, 1 ಬಾಲ್ ಪೆನ್ನು ಅನ್ನು ಅಮಾನತ್ತು ಪಡಿಸಿಕೊಂಡು ವಾಪಸ್‌‌ ಠಾಣೆಗೆ ಬಂದು ಆರೋಪಿ ಹೆಚ್.ಎಲ್ ನರೇಂದ್ರ ಮತ್ತು ಮಟ್ಕಾ ಚೀಟಿಯ ಪಟ್ಟಿಯನ್ನು ಪಡೆಯುತ್ತಿರುವ ಚಿಕ್ಕಬಿದರೆ ನಜೀರ್ ಬಿನ್ ಭಾಷಾಸಾಬ್ ರವರ ವಿರುದ್ಧ ಕ್ರಮ ಜರುಗಿಸಲು ಜ್ಞಾಪನವನ್ನು ನೀಡಿರುತ್ತೇನೆ ಎಂತ ನೀಡಿದ ಜ್ಞಾಪನವನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

 

ವೈ ಎನ್  ಹೊಸಕೋಟೆ  ಪೊಲೀಸ್ ಠಾಣಾ ಮೊ. ನಂ- 56/2018   ಕಲಂ: .323.324.504.506 RW 34 IPC

ದಿನಾಂಕ:02/07/2018 ಮದ್ಯಾಹ್ನ 3:30 ಗಂಟೆಗೆ ಪಿರ್ಯಾದಿ  ಚಿಟ್ಟಮ್ಮ ಕೋಂ ಸಿದ್ದರಾಮ,30ವರ್ಷ, ಆದಿ ಕರ್ನಾಟಕ ಜನಾಂಗ, ಕೂಲಿಕೆಲಸ ಚಿಕ್ಕಹಳ್ಳಿ ಗ್ರಾಮ ಪಾವಗಡ ತಾ|| ರವರು ಠಾಣೆಗೆ ಹಾಜರಾಗಿ  ನೀಡಿದ ದೂರಿನ ಅಂಶವೇನೆಂದರೆ  ನಾನು ಬೆಂಗಳೂರು ಬಿ.ಬಿ.ಎಂ.ಪಿ ಯಲ್ಲಿ ಕೂಲಿಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು ಈ ದಿನ 10;00 ಗಂಟೆಗೆ ಊರಿಗೆ ಬಂದು ನಾನು ನನ್ನ ಮಗಳಿಗೆ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಬಂದು ನಮ್ಮ ಮನೆಯ ಹತ್ತಿರ ಇದ್ದನು ಇದೇ ಸಮಯದಲ್ಲಿ ನಮ್ಮ ಗ್ರಾಮದ ನಾಗೇಂದ್ರ ಬಿನ್ ಹನುಮಂತಪ್ಪ 25 ವರ್ಷ ಮತ್ತು ಹನುಮಂತಪ್ಪ ಬಿನ್ ಮಾರಪ್ಪ 45 ವರ್ಷ ರವರುಗಳಿಗೂ   ನಮ್ಮ ಗ್ರಾಮದ ನಮ್ಮ ಬಾಬ್ತು ಖಾತೆ ನಂ:249 ರಲ್ಲಿ  ಅರ್ಧ ಭಾಗ ಹೊಸ ಮನೆ ಕಟ್ಟಿ ಉಳಿದ ಖಾಲಿ ನಿವೇಶನವನ್ನು ಶೌಚಾಲಯಕ್ಕೆ ಬಿಟ್ಟುಕೊಂಡಿರುತ್ತೇವೆ,  ಆ ನಿವೇಶನದ ವಿಚಾರವಾಗಿ ವೈಮನಸ್ಯ ಇರುತ್ತದೆ, ಹೀಗಿರುವಲ್ಲಿ ದಿನಾಂಕ: 02/07/2018 ರಂದು ಮದ್ಯಾಹ್ನ 1:30 ಗಂಟೆ ಸಮಯದಲ್ಲಿ  ನಾನು ಮತ್ತು ನನ್ನ ಅತ್ತೆ ಕೊಲ್ಲಮ್ಮ, ನನ್ನ ಭಾವ ಹೊನ್ನೂರಪ್ಪನ ಹೆಂಡತಿ ಗಾಯತ್ರಿ ರವರುಗಳು ನಮ್ಮ ಮನೆಯ ಬಳಿ ಇರುವಾಗ್ಗೆ ನಮ್ಮ ಗ್ರಾಮದ 1] ನಾಗೇಂದ್ರ ಬಿನ್ ಹನುಮಂತಪ್ಪ 25 ವರ್ಷ 2] ಶಿವಪ್ಪ ಬಿನ್ ಸಿದ್ದಲಿಂಗಪ್ಪ, 42 ವರ್ಷ ರೊದ್ದಂ ಗ್ರಾಮ ಪೆನುಗೊಂಡ ತಾ|| 3] ಸುಬ್ಬರಾಯ ಬಿನ್ ವೆಂಕಟಪ್ಪ, 35 ವರ್ಷ ಕುರಾಕಲಪಲ್ಲಿ, ಕಂಬದೂರು ಮಂಡಲ್ ಕಲ್ಯಾಣದುರ್ಗ ತಾ|| 4] ಹನುಮಂತಪ್ಪ ಬಿನ್ ಮಾರಪ್ಪ, 45 ವರ್ಷ 5] ಜಯಮ್ಮ ಕೋಂ ಹನುಮಂತಪ್ಪ, 40 ವರ್ಷ,   ರವರುಗಳು ನಮ್ಮ ನಿವೇಶನದ ಗೋಡೆಯನ್ನು ಕೆಡವುತ್ತಿದ್ದರು ಆಗ ನಾನು ಏಕೆ ನಮಗೆ ಸೇರಿದ ನಿವೇಶನದ ಗೋಡೆಯನ್ನು ಕೆಡವುತ್ತಿದ್ದೀರಾ ಎಂತ ಕೇಳಿದ್ದಕ್ಕೆ  ನಾಗೇಂದ್ರ, ಶಿವಪ್ಪ  ಹಾಗೂ ಸುಬ್ಬರಾಯ ರವರುಗಳು ಯಾಕೆ ಸೂಳೆ ಮುಂಡೆ ಬೋಳಿ ಮುಂಡೆ ನಿನ್ನಮ್ಮನ್ನ ಕ್ಯಾಯ ಈ ನಿವೇಶನದ ಜಾಗದ ವಿಚಾರಕ್ಕೆ ಬಂದರೆ ಕೊಲೆ ಮಾಡಿ ಸಾಯಿಸುತ್ತೇವೆಂತ   ಅವಾಚ್ಯ ಶಬ್ದಗಳಿಂದ ಬೈಯ್ದು ಜಗಳ ತೆಗೆದು ಅಲ್ಲಿಯೇ ಬಿದ್ದಿದ್ದ ಇಟ್ಟಿಗೆಯಿಂದ ನಾಗೇಂದ್ರ ಎಂಬುವವನು ನನ್ನ ಎಡ ಕಾಲಿಗೆ , ಬೆನ್ನಿಗೆ ಹೊಡೆದು ನೋವುಂಟು ಮಾಡಿದನು , ಶಿವಪ್ಪ  ಮತ್ತು ಸುಬ್ಬರಾಯ ಎಂಬುವವರುಗಳು ನನ್ನ ಜುಟ್ಟು ಹಿಡಿದು ಎಳೆದಾಡಿ ಕೈಗಳಿಂದ ಮೈ ಕೈಗಳಿಗೆ ಗುದ್ದಿ ಕಾಲಿನಿಂದ ಒದ್ದಿರುತ್ತಾರೆ, ಬಿಡಿಸಿಕೊಳ್ಳಲು ಬಂದ ನನ್ನ ಅತ್ತೆ ಕೊಲ್ಲಮ್ಮ ಮತ್ತು ನನ್ನ ಭಾವ ಹೊನ್ನೂರಪ್ಪನ ಹೆಂಡತಿ ಗರ್ಬಿಣಿಯಾದ ಗಾಯತ್ರಿ ರವರಿಗೆ ನಾಗೇಂದ್ರ ಮತ್ತು ಶಿವಪ್ಪ, ಜಯಮ್ಮ  ಹಾಗೂ ಸುಬ್ಬರಾಯರವರುಗಳು ಜುಟ್ಟು ಹಿಡಿದು ಎಳೆದಾಡಿ ಗೋಡೆಗೆ ನೂಕಿ ಕೆಳಕ್ಕೆ ಕೆಡವಿಕೊಂಡು ಕಾಲಿನಿಂದ ಒದ್ದು ಮೈ ಕೈ ಗಳಿಗೆ ನೋವುಂಟು ಮಾಡಿ ಮೇಲ್ಕಂಡವರೆಲ್ಲರೂ ನಿಮ್ಮನ್ನು ಮರಕ್ಕೆ ಕಟ್ಟಿ ಹಾಕಿ ಕಬ್ಬಿಣದ ಹಾರೆಯಿಂದ ಹೊಡೆದು ಕೊಲೆ ಮಾಡಿ ಸಾಯಿಸುತ್ತೇವೆಂತ ಪ್ರಾಣ ಬೆದರಿಕೆ ಹಾಕಿರುತ್ತಾರೆ. ಆಗ ಸ್ಥಳದಲ್ಲಿದ್ದ ನಮ್ಮ ಗ್ರಾಮದ ಲಕ್ಷ್ಮಕ್ಕ ಕೋಂ ನಾರಾಯಣಪ್ಪ, 40 ವರ್ಷ, ಪ.ಜಾತಿ , ಲಕ್ಷ್ಮಕ್ಕ ಕೋಂ ಲೇ|| ಚೌಡಪ್ಪ, 40 ವರ್ಷ, ಪ.ಜಾತಿ ಮತ್ತು ಗಂಗಮ್ಮ ಕೋಂ  ಹನುಮಂತರಾಯ, 30 ವರ್ಷ, ಪ.ಜಾತಿ , ಅಕ್ಕಮ್ಮ ಕೋಂ ನಾಗಪ್ಪ, 45 ವರ್ಷ ,ಪ.ಜಾತಿ ರವರುಗಳು ಹಾಗೂ ನನ್ನ ತಂಗಿಯಾದ ಅಲುವೇಲಮ್ಮ ಡಿ/ಓ ಪಾತಪ್ಪ, 21 ವರ್ಷ, ಪ.ಜಾತಿ ರವರುಗಳು ಬಂದು ಜಗಳ ಬಿಡಿಸಿ ನಮ್ಮನ್ನು ಸಮಾಧಾನ ಪಡಿಸಿರುತ್ತಾರೆ. ಆದ್ದರಿಂದ ನಮ್ಮ ಮೇಲೆ ವಿನಾಃ ಕಾರಣ ಜಗಳ ತೆಗೆದು ಹೊಡೆದು ನೋವುಂಟು ಮಾಡಿರುವ ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕೆಂತ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತದೆ..


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 91 guests online
Content View Hits : 304506