lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

:: ಪತ್ರಿಕಾ ಪ್ರಕಟಣೆ :: ದಿನಾಂಕ. 14.08.2018. 2018 ನೇ ಜುಲೈ ತಿಂಗಳಲ್ಲಿ ತುಮಕೂರು ನಗರ ವೃತ್ತದ... >> ಪತ್ರಿಕಾ ಪ್ರಕಟಣೆ ದಿನಾಂಕ 14/08/2018     ಸಿರಾ ತಾಲ್ಲೋಕ್ ತಾವರೆಕೆರೆ ಗ್ರಾಮದಲ್ಲಿರುವ... >> ಪತ್ರಿಕಾ ಪ್ರಕಟಣೆ   ಅಂತರ್ ರಾಜ್ಯ ಕಳ್ಳನ ಬಂಧನ, 75 ಸಾವಿರ ರೂ ಬೆಲೆಬಾಳುವ 10 ಮೊಬೈಲ್... >> ಪ ತ್ರಿ ಕಾ  ಪ್ರ ಕ ಟ ಣೆ ದಿನಾಂಕ: 03/08/2018 ತುಮಕೂರು ನಗರದಲ್ಲಿ ಒಟ್ಟು 3,420 ಅಭ್ಯರ್ಥಿಗಳಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ : 23.07.2018. ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ ದಿನಾಂಕ:- 23/07/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಕನ್ನ... >> : ಪತ್ರಿಕಾ ಪ್ರಕಟಣೆ  : : ದಿನಾಂಕ:21-07-2018 : -: ಮನೆಕಳ್ಳನ ಬಂಧನ :  7.5 ಲಕ್ಷ ರೂ ಮೌಲ್ಯದ ವಡವೆ... >> ಪತ್ರಿಕಾ ಪ್ರಕಟಣೆ ದಿನಾಂಕ : 20-07-18 ಸ್ಮಾರ್ಟ್ ಸಿಟಿ ಅಧಿಕಾರಿಗಳೆಂದು ವಂಚಿಸಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 20-07-2018       ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 09-07-2018 ಕೊಲೆ ಆರೋಪಿಗಳ ಬಂಧನ ******* ದಿನಾಂಕ 04.07.2018 ರಂದು... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< June 2018 >
Mo Tu We Th Fr Sa Su
        1 2 3
4 5 6 7 8 9 10
11 12 13 14 15 16 17
18 19 20 21 22 23 24
25 26 27 28 29 30  
June 2018

Saturday, 30 June 2018

ಪತ್ರಿಕಾ ಪ್ರಕಟಣೆ ದಿ.30-06-18

ಪತ್ರಿಕಾ ಪ್ರಕಟಣೆ

11 ಲಕ್ಷ 70 ಸಾವಿರ ಬೆಲೆ ಬಾಳುವ ಚಿನ್ನ-ಬೆಳ್ಳಿ  ಹಾಗೂ ಮೊಬೈಲ್‌‌‌ ಪೋನ್‌‌‌ಗಳ ಕಳ್ಳರ ಬಂಧನ

 

ಇತ್ತೀಚೆಗೆ ತುಮಕೂರು ನಗರದ ವಿವಿಧ ಬಡಾವಣೆಗಳಲ್ಲಿ ಮನೆಕಳ್ಳತನ ಹಾಗೂ ಸರಗಳ್ಳತನ  ಮಾಡುತ್ತಿದ್ದ ಆರೋಪಿಗಳಾದ 1) ಸತೀಶ @ ಸತಿ ಬಿನ್. ಲೇ|| ಆಂಜಿನಪ್ಪ, ಎನ್.ಆರ್. ಕಾಲೋನಿ, ತುಮಕೂರು ಟೌನ್ 2) ಮಂಜುನಾಥ @ ಮಂಜ ಬಿನ್. ಲೇ|| ಬೋಜಣ್ಣ,ಎನ್.ಆರ್. ಕಾಲೋನಿ, ತುಮಕೂರು ಟೌನ್  3) ಮಂಜುನಾಥ @ ಆಟೋಮಂಜ ಬಿನ್. ಲೇ|| ನರಸಿಂಹಮೂರ್ತಿ ಕುಂದರನಹಳ್ಳಿ ಕಾಲೋನಿ, ಗುಬ್ಬಿ ತಾಲ್ಲೂಕು ರವರುಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿ ವಿಚಾರಣಾ ಸಮಯದಲ್ಲಿ  ಆರೋಪಿಗಳು  ನೀಡಿದ ಮಾಹಿತಿ ಮೇರೆಗೆ ಆರೊಪಿತರಿಂದ ಸುಮಾರು 11 ಲಕ್ಷ 70 ಸಾವಿರ ಬೆಲೆಬಾಳುವ 331 ಗ್ರಾಂ ಚಿನ್ನ, ½ ಕೆ.ಜಿ. ಬೆಳ್ಳಿ, ಹಾಗೂ 11 ಮೊಬೈಲ್‌‌ ಪೋನ್‌‌ಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಈ ಸಂಬಂಧ  ಜಯನಗರ ಪೊಲೀಸ್ ಠಾಣೆಯಲ್ಲಿ ಒಟ್ಟು 05 ಪ್ರಕರಣಗಳು ಹಾಗೂ ಬೆಳ್ಳಾವಿ ಪೊಲೀಸ್ ಠಾಣೆಯಲ್ಲಿ ಮತ್ತು ತುಮಕೂರು ಗ್ರಾಮಾಂತರ ಠಾಣೆಯಲ್ಲಿ ಒಂದು ಪ್ರಕರಣಗಳು ದಾಖಲಾಗಿರುತ್ತವೆ.

ಮಾಲು ಮತ್ತು ಆರೋಪಿಗಳ ಪತ್ತೆಗಾಗಿ ತುಮಕೂರು ನಗರ ಡಿ.ಎಸ್.ಪಿ. ಕೆ.ಎಸ್.ನಾಗರಾಜು ರವರ ಮಾರ್ಗದರ್ಶನದಲ್ಲಿ ತಿಲಕ್‌‌ಪಾರ್ಕ್‌ ವೃತ್ತ ನಿರೀಕ್ಷಕರಾದ ಶ್ರೀ ರಾಧಾಕೃಷ್ಣ ಟಿ.ಎಸ್. ರವರ ನೇತೃತ್ವದಲ್ಲಿ ಪಿ.ಎಸ್.ಐ  ಶ್ರೀ ನವೀನ್‌‌ ಹೆಚ್.ಎಸ್. ಹಾಗೂ ಅಪರಾಧ ವಿಭಾಗದ ಸಿಬ್ಬಂದಿಯವರು ಆರೋಪಿಗಳು ಮತ್ತು ಮಾಲುಗಳ  ಪತ್ತೆಗಾಗಿ ಶ್ರಮಿಸಿರುತ್ತಾರೆ.

ಈ ಪ್ರಕರಣದ ಆರೋಪಿಗಳು ಮತ್ತು ಮಾಲು ಪತ್ತೆಗಾಗಿ ಶ್ರಮಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಮಾನ್ಯ ಪೊಲೀಸ್ ಅಧೀಕ್ಷಕರವರು ಅಭಿನಂದಿಸಿರುತ್ತಾರೆ.

 

ಜಿಲ್ಲಾ ಪೊಲೀಸ್ ಕಛೇರಿ,

ತುಮಕೂರು.


ಪತ್ರಿಕಾ ಪ್ರಕಟಣೆ ದಿ.30-06-18

 

ಪತ್ರಿಕಾ ಪ್ರಕಟಣೆ.

ತುಮಕೂರು ಜಿಲ್ಲಾ ಪೊಲೀಸ್, ತುಮಕೂರು.

ಕೋರಾ ಪೊಲೀಸ್ ಠಾಣಾ ಮೊ.ನಂ:100/2018 ಕಲಂ-302,201 ಐ.ಪಿ.ಸಿ

 

ದಿನಾಂಕ-16-06-2018 ರ ರಾತ್ರಿ ಸುಮಾರು 10-00 ಗಂಟೆಯಿಂದ ದಿನಾಂಕ 17-06-2018 ರ ಬೆಳಗಿನ 06-30 ಗಂಟೆಯೊಳಗಿನ ಯಾವುದೋ ಸಮಯದಲ್ಲಿ ಸೋಮಸಾಗರ ಗೇಟ್ ಸಮೀಪ ಬೆಂಕಿಯಿಂದ ಹೊಗೆಯಾಡುತ್ತಿರುವ ಗಂಡಸಿನ ಮೃತದೇಹವು ಇದ್ದು, ತಲೆಯಿಂದ ಮಂಡಿಯವರೆಗೆ ಸುಟ್ಟು ಹೋಗಿರುತ್ತೆ. ಸದರಿ ಮೃತಪಟ್ಟಿರುವ ವ್ಯಕ್ತಿಯನ್ನು ಯಾರೋ ದುರಾತ್ಮರು ಯಾವುದೋ ಕಾರಣಕ್ಕೆ ಈತನ ತಲೆಯ ಮೇಲೆ ಕಲ್ಲು ಎತ್ತು ಹಾಕಿ ಕೊಲೆಮಾಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕೋರಾ ಪೊಲೀಸ್ ಠಾಣೆಯಲ್ಲಿ ಮೊ.ನಂ:100/2018 ಕಲಂ-302, 201 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.

ದಿನಾಂಕ:17-06-2018 ರಂದು ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಆರೋಪಿತರನ್ನು ಶೀಘ್ರವಾಗಿ ಪತ್ತೆಮಾಡಿದ್ದು ಆರೋಪಿಗಳಾದ 1] ತಿಪ್ಪೇಸ್ವಾಮಿ @ ತಿಪ್ಪಯ್ಯ ಬಿನ್ ಕೃಷ್ಣಾರೆಡ್ಡಿ, 25 ವರ್ಷ, ಬೆಂಗಳೂರಿನ ಹೆಚ್.ಎಸ್.ಬಿ.ಸಿ ಕಾಲ್ ಸೆಂಟರ್‌ನಲ್ಲಿ ಸೆಕ್ಯೂರಿಟಿ ಕೆಲಸ, ಸ್ವಂತ ಊರು: ಹೊನ್ನೂರು, ದೇವರಹಳ್ಳಿ ಪೋಸ್ಟ್‌, ತಳಕು ಹೋಬಳಿ, ಚಳ್ಳಕೆರೆ ತಾ. ಚಿತ್ರದುರ್ಗ ಜಿಲ್ಲೆ. 2] ಸಂಗೀತ ಕೋಂ ಲೇಟ್ ನಾಗಾನಂದ 26 ವರ್ಷ, ನಾಯ್ಡು ಜನಾಂಗ, ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿರುವ ಜಾಕಿ ಗಾರ್ಮೆಂಟ್ಸ್ ನಲ್ಲಿ ಕೆಲಸ, ಮಂಜುನಾಥ ಬೇಕರಿ ಹತ್ತಿರ, ಕೃಷ್ಣ ಲೇಹೌಟ್, ಬೆಂಗಳೂರು ಇವರುಗಳನ್ನು ಪತ್ತೆಮಾಡಿ ದಸ್ತಗಿರಿ ಮಾಡಿರುತ್ತಾರೆ. ಆರೋಪಿಗಳು ಅನೈತಿಕ ಸಂಬಂಧ ಹೊಂದಿದ್ದು, ಈ ಸಂಬಂಧಕ್ಕೆ ಅಡ್ಡಿ ಬರುತ್ತಾನೆಂಬ ಕಾರಣದಿಂದ, ಆರೋಪಿಗಳು ಸಂಚು ಮಾಡಿ ನಾಗಾನಂದ ರವರನ್ನು ದಿನಾಂಕ:16-06-2018 ರಂದು ಊರಿಗೆ ಹೋಗೋಣವೆಂತ ಕರೆದುಕೊಂಡು ಬಂದು ಮದ್ಯಪಾನ ಮಾಡಿಸಿ, ನಶೆಯಲ್ಲಿದ್ದ ನಾಗಾನಂದನ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿ ಶವದ ಗುರುತು ಮರೆಮಾಚಲು ಪೆಟ್ರೋಲ್ ಸುರಿದು ಬೆಂಕಿ ಇಟ್ಟಿರುತ್ತಾನೆ, ಇದಕ್ಕೆ ನಾಗಾನಂದನ ಪತ್ನಿಯಾದ ಸಂಗೀತ @ ಗೀತಾ ರವರು ಸಹಕರಿಸಿರುತ್ತಾರೆ.

ಸದರಿ ಪ್ರಕರಣವನ್ನು ಪತ್ತೆಹಚ್ಚುವಲ್ಲಿ ತುಮಕೂರು ನಗರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ನಾಗರಾಜು, ಡಿ.ಎಸ್.ಪಿ ಸೂರ್ಯನಾರಾಯಣ ಎಸ್ ರವರ ಮಾರ್ಗದರ್ಶನದಲ್ಲಿ ತುಮಕೂರು ಗ್ರಾಮಾಂತರ ವೃತ್ತ ನಿರೀಕ್ಷಕರಾದ ಶ್ರೀ ಜಿ.ಕೆ ಮಧೂಸೂದನ್ ಹಾಗೂ ಕೋರಾ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಶ್ರೀ ರವಿಕುಮಾರ್ ಸಿ ಹಾಗೂ ಸಿಬ್ಬಂದಿಯವರಾದ ಶಾಂತಕುಮಾರ, ಪ್ರಸನ್ನಕುಮಾರ್, ವೆಂಕಟೇಶ್ ಮತ್ತು ರಮೇಶ್ ಪಿ.ಸಿ,ಜಿಲ್ಲಾ ಪೊಲೀಸ್ ಕಛೇರಿ ರವರು ಶ್ರಮಿಸಿರುತ್ತಾರೆ.

ಆರೋಪಿಗಳನ್ನು ಪತ್ತೆ ಹಚ್ಚಿದತಂಡವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀಮತಿ ಡಾ// ವಿ.ಗೋಪಿನಾಥ್ಐ.ಪಿ.ಎಸ್ ರವರು ಶ್ಲಾಘಿಸಿ, ಸೂಕ್ತ ಬಹುಮಾನದ ಘೋಷಣೆ ಮಾಡಿರುತ್ತಾರೆ.


ಅಪರಾಧ ಘಟನೆಗಳು 30-06-18

ಜಯನಗರ ಪೊಲೀಸ್ ಠಾಣಾ ಮೊ.ನಂ. 95/2018 ಕಲಂ 41(ಡಿ), 102 ಸಿಆರ್‌ಪಿಸಿ ರೆ.ವಿ 379 ಐಪಿಸಿ

ದಿನಾಂಕ: 29/06/2018 ರಂದು ರಾತ್ರಿ 8-30 ಗಂಟೆಗೆ ಠಾಣಾ ಪಿಸಿ 614 ರವರು ಆರೋಪಿ ಮಂಜುನಾಥ ಹಾಗೂ ಮಾಲುಗಳನ್ನು ಹಾಜರುಪಡಿಸಿ ನೀಡಿದ ಕಂಪ್ಯೂಟರ್ ಮುದ್ರಿತ ದೂರಿನ ಅಂಶವೇನೆಂದರೆ, ಈ ದಿನ ದಿನಾಂಕ: 29-06-2018 ರಂದು ನಮ್ಮ ಠಾಣಾ ಪಿ.ಎಸ್.ಐ ರವರು ನನಗೆ ಹಾಗೂ ನಮ್ಮ ಠಾಣಾ ಅಪರಾಧ ವಿಭಾಗದ ಪಿ.ಸಿ. 370 ಪರಶುರಾಮಪ್ಪ ಹೆಚ್. ರವರಿಗೆ ನಮ್ಮ ಠಾಣೆಯಲ್ಲಿ ವರದಿಯಾಗಿರುವ ಕಳವು ಪ್ರಕರಣಗಳಲ್ಲಿ ಕಳವು ಮಾಲು ಮತ್ತು ಆರೋಪಿಗಳ ಪತ್ತೆಗಾಗಿ ನೇಮಕ ಮಾಡಿದ್ದು, ನೇಮಕದಂತೆ ನಾವಿಬ್ಬರೂ ಈ ದಿನ ಸಾಯಂಕಾಲ ಠಾಣಾ ಸರಹದ್ದಿನಲ್ಲಿ ಬನಶಂಕರಿ,  ಗೂಡ್‌‌ಶೆಡ್‌‌ ಕಾಲೋನಿ, ಕಡೆಗಳಲ್ಲಿ ಗಸ್ತು ಮಾಡಿಕೊಂಡು ಉಪ್ಪಾರಹಳ್ಳಿ ಮುಖ್ಯರಸ್ತೆಯಲ್ಲಿ ಗಸ್ತು ಮಾಡುತ್ತಿದ್ದಾಗ ರಾತ್ರಿ ಸುಮಾರು 7-45 ಗಂಟೆಯಲ್ಲಿ  ಭಾತ್ಮಿದಾರರೊಬ್ಬರು ಯಾರೋ ಒಬ್ಬ ವ್ಯಕ್ತಿಯು ಸರ್ವೋದಯ ಸ್ಕೂಲ್ ಮುಂಭಾಗ ರಸ್ತೆಯಲ್ಲಿ ಒಂದು ಬ್ಯಾಗಿನಲ್ಲಿ ಮೊಬೈಲ್‌‌ ಪೋನ್‌‌ಗಳನ್ನು ಇಟ್ಟುಕೊಂಡು ಧಾರಿಯಲ್ಲಿ ಹೋಗುತ್ತಿರುವವರಿಗೆ ಮಾರಾಟ ಮಾಡುತ್ತಿರುತ್ತಾನೆಂತಾ ತಿಳಿಸಿದ್ದು, ಅದರಂತೆ ನಾವಿಬ್ಬರೂ ರಾತ್ರಿ ಸುಮಾರು 8-00 ಗಂಟೆಗೆ ಸರ್ವೋದಯ ಸ್ಕೂಲ್‌‌‌ ಬಳಿಗೆ ಹೋದಾಗ, ಸ್ಕೂಲ್‌ ಮುಂಭಾಗ ರಸ್ತೆಯಲ್ಲಿ ಜನರು ಗುಂಪು ಸೇರಿದ್ದು, ನಾವು ಅಲ್ಲಿಗೆ ಹೋದಾಗ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಸದರಿ ಸ್ಥಳದಲ್ಲಿ ಒಂದು ಬ್ಯಾಗನ್ನು ಹಿಡಿದುಕೊಂಡಿದ್ದವನು ಓಡಿ ಹೋಗಲು ಪ್ರಯತ್ನಿಸಿದ್ದು, ನಾವಿಬ್ಬರೂ ಆತನನ್ನು ಸುತ್ತುವರೆದು ಹಿಡಿದು ವಿಚಾರ ಮಾಡಲಾಗಿ, ತನ್ನ ಹೆಸರು ಮಂಜುನಾಥ ಮತ್ತೊಂದು ಸಾರಿ ಆಟೋ ಮಂಜ ತಂದೆ ಲೇ|| ನರಸಿಂಹಮೂರ್ತಿ, ನಿರ್ವಾಣಿ ಲೇಔಟ್‌‌, ಎಂತಲೂ, ಮತ್ತೊಂದು ಸಾರಿ ಗುಬ್ಬಿ ತಾಲ್ಲೂಕು ಕುಂದರನಹಳ್ಳಿ ಕಾಲೋನಿ ಎಂತಲೂ ತಿಳಿಸಿದ್ದು, ಬ್ಯಾಗಿನಲ್ಲಿ ಏನಿದೆ ಎಂತಾ ಕೇಳಲಾಗಿ, ಒಂದು ಸಾರಿ ಬಟ್ಟೆಗಳು ಇರುವುದಾಗಿ, ಮತ್ತೊಂದು ಸಾರಿ ಮೊಬೈಲ್‌‌ ಪೋನ್‌‌ಗಳು ಇರುವುದಾಗಿ ತಿಳಿಸಿದ್ದು,  ಬ್ಯಾಗನ್ನು ಪರಿಶೀಲಿಸಲಾಗಿ, ಬ್ಯಾಗಿನಲ್ಲಿ ವಿವಧ ಕಂಪನಿಯ 11 ಮೊಬೈಲ್‌‌ ಪೋನ್‌‌ಗಳು ಇದ್ದು, ಸದರಿ ಮೊಬೈಲ್‌‌ ಪೋನ್‌‌ಗಳ ಬಗ್ಗೆ ವಿಚಾರ ಮಾಡಲಾಗಿ ಸಮಂಜಸವಾದ ಉತ್ತರ ನೀಡಿರುವುದಿಲ್ಲ.  ಆದ್ದರಿಂದ ಸದರಿ ಆಸಾಮಿಯನ್ನು ಹಾಗೂ ಆತನ ಬಳಿ ದೊರೆತ ಮೊಬೈಲ್‌‌ ಪೋನ್‌‌ಗಳನ್ನು ಇಟ್ಟಿರುವ ಬ್ಯಾಗನ್ನು ವಶಕ್ಕೆ ತೆಗೆದುಕೊಂಡು ರಾತ್ರಿ 8-30 ಗಂಟೆಗೆ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು, ಮುಂದಿನ ಕ್ರಮಕ್ಕಾಗಿ  ಹಾಜರ್ಪಡಿಸಿ ನೀಡಿದ ಪಿರ್ಯಾದು ಅಂಶವಾಗಿರುತ್ತೆ.

ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ಮೊನಂ: 163/2018 ಕಲಂ 457, 380 ಐಪಿಸಿ

ದಿನಾಂಕ: 29/06/2018 ರಂದು ಪಿರ್ಯಾದಿ ಲಕ್ಷ್ಮೀನಾರಾಯಣ ರವರು ನೀಡಿದ ದೂರಿನ ಅಂಶವೇನೆಂದರೆ, ನಾನು ಮತ್ತು ನನ್ನ ಹೆಂಡತಿ ನಮ್ಮ ಗ್ರಾಮದ ಜಲಧಿಹಳ್ಳದ ಸಮೀಪ ಇರುವ ನಮ್ಮ ಜಮೀನಿನಲ್ಲಿ ಶೀಟಿನ ಮನೆಯನ್ನು ನಿರ್ಮಿಸಿಕೊಂಡು ನಾನು ಮತ್ತು ನನ್ನ ಹೆಂಡತಿ ಈಗ್ಗೆ ಸುಮಾರು ವರ್ಷದಿಂದ ವಾಸವಿರುತ್ತೇವೆ. ನನ್ನ ಮಕ್ಕಳೆಲ್ಲರಿಗೂ ಮದುವೆಯಾಗಿ ಬೇರೆ ಬೇರೆ ವಾಸವಾಗಿರುತ್ತಾರೆ. ನಾನು ನನ್ನ ಹೆಂಡತಿಗೆಂದು ನೆಕ್ಲೇಸ್ ಮತ್ತು ನನಗೆ ಚಿನ್ನದ ಕೊರಳಚೈನು, ಉಂಗುರವನ್ನು ಮಾಡಿಸಿ, ಮನೆಯ ಬೀರುವಿನಲ್ಲಿ ಇಟ್ಟಿರುತ್ತೇವೆ, ದಿನಾಂಕ;24-11-2017 ರಂದು ಮದ್ಯಾನ ನಾನು ಮತ್ತು ನನ್ನ ಹೆಂಡತಿ ಅಲ್ಲೇ ಪಕ್ಕದಲ್ಲಿರುವ ಜಮೀನಿನಲ್ಲಿ ಕೆಲಸಕ್ಕೆಂದು ಹೋಗಿದ್ದೇವು. ಕೆಲಸ ಮುಗಿಸಿಕೊಂಡು ಎಂದಿನಂತೆ ಮನೆಗೆ ಬಂದಿರುತ್ತೇವೆ, ಮಾರನೇ ದಿನ ದಿನಾಂಕ;-25-11-2017 ರಂದು ಬೆಳಿಗ್ಗೆ ನನ್ನ ಹೆಂಡತಿ ಮನೆಯಲ್ಲಿ ಕಸ ಹೊಡೆಯುವ ಸಮಯದಲ್ಲಿ ಬೀರುವಿನ ಬೀಗ ಹೊಡೆದಿರುವುದನ್ನು ನೋಡಿ ಕೂಗಿಕೊಂಡರು ನಾನು ಹೋಗಿ ನೋಡಿದಾಗ ಬೀರುವಿನ ಬೀಗ ಹೊಡೆದು ಸೇಪ್ಠಿ ಲಾಕರ್ ನ ಲಾಕ್ ಅನ್ನು ಸಹ ಮುರಿದಿದ್ದು. ಲಾಕರ್ ನಲ್ಲಿ ನಮ್ಮ ಯಾವುದೆ ವಡವೆ ಕಾಣಲಿಲ್ಲ ಯಾರೋ ಕಳ್ಳರು ದಿನಾಂಕ;24-11-2017 ರಂದು ಮದ್ಯಾನ ನಾವು ಕೆಲಸಕ್ಕೆ ಹೋಗಿದ್ದ ಸಮಯದಲ್ಲಿ ಮನೆಯ ಮತ್ತು ಬೀರುವಿನ ಬೀಗ ಹೊಡೆದು ಭೀರುವಿನಲ್ಲಿಟ್ಟಿದ್ದ ಸುಮಾರು 25 ಗ್ರಾಂ ತೂಕದ ಚಿನ್ನದ ನೇಕ್ಲೇಸ್, ಡಾಲರ್ ಇರುವ 20 ಗ್ರಾಂ ತೂಕದ ಚಿನ್ನದ  ಕೊರಳ ಚೈನು, 10 ಗ್ರಾಂ ತೂಕದ ಮತ್ತೊಂದು ಚಿನ್ನದ ಚೈನು, 10 ಗ್ರಾಂ ತೂಕದ ಹವಳದ ಉಂಗುರವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರು. ಇದರ ಬೆಲೆ ಸುಮಾರು 1,50,000/- ಕ್ಕಿಂತ ಹೆಚ್ಚಾಗಿರುತ್ತೆ  ನಾವು ಅಕ್ಕ ಪಕ್ಕದಲ್ಲಿ ವಿಚಾರ ಮಾಡಲಾಗಿ ವಡವೆ ಬಗ್ಗೆ ಯಾವುದೆ ಸುಳಿವು ಸಿಗಲಿಲ್ಲ. ಕಳ್ಳತನವಾಗಿರುವ ವಡವೆ ಸಿಗುವುದಿಲ್ಲವೆಂದು ಸುಮ್ಮನಾಗಿದೇವು. ಈ ದಿನ ದಿನಾಂಕ;-29-06-2018 ರಂದು ಜಯನಗರ ಪೊಲೀಸ್ ಠಾಣೆ ಪೊಲೀಸರು ಒಬ್ಬ ಆಸಾಮಿಯೊಂದಿಗೆ ಮನೆಯ ಬಳಿ ಬಂದರು. ಆ ಆಸಾಮಿಯು ನಮ್ಮ ಮನೆಯನ್ನು ತೋರಿಸಿ ಇದೇ ಮನೆಯಲ್ಲಿ ಈಗ್ಗೆ ಸುಮಾರು 07 ತಿಂಗಳ ಹಿಂದೆ ಮದ್ಯಾನ ಸುಮಾರು 02,30 ಗಂಟೆ ಸಮಯದಲ್ಲಿ ವಡವೆಗಳನ್ನು ಕಳ್ಳತನ ಮಾಡಿರುತ್ತೇನೆಂದು ವಡವೆಯ ವಿವರವನ್ನು ತಿಳಿಸಿದನು. ಆತನ ಹೆಸರು ಕೇಳಲಾಗಿ ಮಂಜುನಾಥ @ ಮಂಜ ಬಿನ್ ಬೋಜಣ್ಣ ಎನ್.ಆರ್ ಕಾಲೋನಿ ತುಮಕೂರು ಎಂದು ತಿಳಿಸಿರುತ್ತಾನೆ, ಆರೋಪಿ ಕಳ್ಳತನ ಮಾಡಿ ತಿಳಿಸಿರುವ ವಡವೆಗೂ ಹಾಗೂ ನಮ್ಮ ಮನೆಯಲ್ಲಿ ಕಳ್ಳತನವಾಗಿರುವ ವಡವೆಯೂ  ಒಂದೇ ಆಗಿರುತ್ತದೆ ಆದ್ದರಿಂದ ದಿನಾಂಕ;24-11-2017 ರಂದು ನಮ್ಮ ಮನೆಯ ಬೀಗ ಹೊಡೆದು ಒಳ ಪ್ರವೇಶಿಸಿ ಬೀರುವಿನ ಸೇಪ್ಟಿ ಲಾಕರ್ ಮುರಿದು ಅದರಲ್ಲಿದ್ದ ಸುಮಾರು 65 ಗ್ರಾಂ ತೂಕದ ಮೇಲ್ಕಂಡ ಚಿನ್ನದ ವಡವೆಗಳನ್ನು ಕಳ್ಳತನ ಮಾಡಿರುವ ಮಂಜುನಾಥ @ ಮಂಜ ಬಿನ್ ಬೋಜಣ್ಣ ಎನ್.ಆರ್ ಕಾಲೋನಿ ಇವರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ಈ ದಿನ ತಡವಾಗಿ ಠಾಣೆಗೆ ಬಂದು ನೀಡಿದ ದೂರನ್ನು ಪಡೆದು ಪ್ರರಕಣ ದಾಖಲಿಸಿದೆ.

ಹೊನ್ನವಳ್ಳಿ ಪೊಲೀಸ್‌  ಠಾಣೆ ಮೊ ನಂ 42/2018 ಕಲಂ: 279.337.304 (ಎ) ಐಪಿಸಿ

ದಿನಾಂಕ:29/06/2018 ರಂದು ರಾತ್ರಿ  8-00 ಗಂಟೆಗೆ  ತಿಪಟೂರು ಸರ್ಕಾರಿ ಅಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಜಿ.ಎಸ್‌ ಬಸವರಾಜು ಬಿನ್‌ ಸಿದ್ದಪ್ಪ 40ವರ್ಷ, ಉಪ್ಪಾರ ಜನಾಂಗ ಜಿರಾಯ್ತಿ ಗುರುಗದಹಳ್ಳಿ ಕಸಬಾ ಹೋ|| ತಿಪಟೂರು ತಾ|| ರವರು ನೀಡಿದ ಹೇಳಿಕೆಯ ಅಂಶವೆನೆಂದರೆ, ಈ ದಿನ  ದಿನಾಂಕ-29/06/2018 ನಾನು ನಮ್ಮ ದೊಡ್ಡಪ್ಪ ಮೂಡ್ಲಯ್ಯನ ಮಗ ಶಂಕರ ನಾವುಗಳಿಬ್ಬರು ನಾನು ಹಾಲಿ ವಾಸವಿರುವ ಕೆರೆಬಂಡಿಪಾಳ್ಯಕ್ಕೆ ಹೋಗಲು ಶಂಕರನು ಆತನ ಸ್ನೇಹಿತನ ಬೈಕ್‌ ನಂ, ಕೆಎ.44.ಎಲ್‌.9815 ನೇ ಹಿರೋ ಹೊಂಡ ಸ್ಪ್ಲೆಂಡರ್‌ ಪ್ರೋ ಬೈಕ್‌ ತೆಗೆದುಕೊಂಡು ಬೈಕ್‌ನಲ್ಲಿ ಗುರುಗದಹಳ್ಳಿಯಿಂದ ಸಂಜೆ ಸುಮಾರು 6-00 ಗಂಟೆಗೆ ಹೊರಟು ಬಿದರೆಗುಡಿ ಮಾರ್ಗವಾಗಿ ಬರುತ್ತಿದ್ದಾಗ, ಬೈಕ್‌ಅನ್ನು ಶಂಕರನೇ ಓಡಿಸುತ್ತಿದ್ದು, ಹಿಂಬದಿಯಲ್ಲಿ ನಾನು ಕುಳಿತುಕೊಂಡಿದ್ದೆ. ಬಿದರೆಗುಡಿ ಬಿಟ್ಟು ಕೆ. ಲಕ್ಕಿಹಳ್ಳಿ ಗೇಟ್‌ ಬಳಿ ಸಂಜೆ ಸುಮಾರು 6-45 ಕ್ಕೆ ಹೋಗುವಾಗ ಶಂಕರನು ಬೈಕನ್ನು ತುಂಬಾ ಜೋರಾಗಿ ಓಡಿಸಿಕೊಂಡು ಹೋದವನೆ ರಸ್ತೆಯ ಪಕ್ಕದ ಗುಂಡಿಗೆ ಇಳಿಸಿದ್ದರಿಂದ ಇಬ್ಬರೂ ಬೈಕ್ ಸಮೇತ ಗುಂಡಿಗೆ ಬಿದ್ದೆವು, ಶಂಕರನಿಗೆ ಬಲಕಣ್ಣಿನ ಕೆಳಭಾಗ, ಎದೆಗೆ, ತುಂಬಾ ಪೆಟ್ಟು ಬಿದ್ದು ಸ್ಥಳದಲ್ಲಿಯೇ  ಮೃತಪಟ್ಟಿರುತ್ತಾನೆ, ನನಗೆ ಎಡಸೊಂಟ, ಎದೆಗೆ, ತಲೆಗೆ ಪೆಟ್ಟಾಗಿದ್ದು  ತುಂಬಾ ನೋವಾಗಿರುತ್ತೆ. ಈ ಅಪಘಾತ ನೋಡಿದ ಅಲ್ಲಿನ ಸಾರ್ವಜನಿಕರು ನನಗೆ ಉಪಚರಿಸಿ ಗಾಯಗೊಂಡಿದ್ದ ನನ್ನನ್ನು ಮತ್ತು ಸ್ಥಳದಲ್ಲಿ ಮೃತಪಟ್ಟಿದ್ದ ಶಂಕರನ್ನು ಯಾವುದೋ ಒಂದು ಆಟೋದಲ್ಲಿ ಹಾಕಿಕೊಂಡು ತಿಪಟೂರು ಸರ್ಕಾರಿ ಆಸ್ಪತ್ರೆಗೆ  ಕರೆದುಕೊಂಡು ಬಂದು ಚಿಕಿತ್ಸೆಗೆ ದಾಖಲಿಸಿರುತ್ತಾರೆ,ಮೃತ ಶಂಕರನ ಹೆಣವು ತಿಪಟೂರು ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿರುತ್ತೆ, ಈ ಅಪಘಾತವಾಗಲು ನಮ್ಮ ದೊಡ್ಡಪ್ಪನ ಮಗ ಶಂಕರ ಆತನ ಸ್ನೇಹಿತನ ಬಾಬ್ತು ಕೆಎ.44ಎಲ್‌.9815 ನೇ ಬೈಕನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿರುವುದೇ ಕಾರಣವಾಗಿರುತ್ತದೆ, ಆದ್ದರಿಂದ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ನೀಡಿದ ಹೇಳಿಕೆಯನ್ನು ಪಡೆದು ಪ್ರರಕಣ ದಾಖಲಿಸಿದೆ.

ತಿಪಟೂರು ಗ್ರಾಮಾಂತರ ಪೊಲೀಸ್  ಠಾಣಾ ಮೊ ನಂ 51/2018 ಕಲಂ 457,380 ಐಪಿಸಿ

ದಿನಾಂಕ:29-06-2018 ರಂದು  ಮಧ್ಯಾಹ್ನ  1-30  ಗಂಟೆಗೆ  ಈ ಕೇಸಿನ ಪಿರ್ಯಾದಿ  ಪ್ರಸಾದ್ ಡಿ.ಕೆ ಬಿನ್ ಕೃಷ್ನೇಗೌಡ ಡಿ.ಟಿ. 40 ವರ್ಷ, ವಕ್ಕಲಿಗರು, ಜಿರಾಯ್ತಿ ಕೆಲಸ, ರಾಮನಗರ ತೊಟದ ಮನೆ, ದಸರಿಘಟ್ಟ, ತಿಪಟೂರು ತಾ  ರವರು ಠಾಣೆಗೆ ಹಾಜರಾಗಿ  ನೀಡಿದ ಲಿಖಿತ ದೂರಿನ ಅಂಶವೇನೆಂದರೆ  ನಾನು  ದಿನಾಂಕ:28-06-18 ರಂದು  ಸಂಜೆ ಸುಮಾರು 5-30 ಗಂಟೆ ಸಮಯದಲ್ಲಿ  ಅರಸೀಕೆರೆ ತಾ ಶ್ರೀ ಜೇನುಕಲ್  ಸಿದ್ದೇಶ್ವರ ಸ್ವಾಮಿಯವರ  ಹುಣ್ಣಿಮೆ ಪೂಜೆಗೆಂದು ನಮ್ಮ  ಸಂಸಾರ ಸಮೇತ ಮನೆಗೆ  ಬೀಗ ಹಾಕಿಕೊಂಡು  ಹೋಗಿದ್ದು,  ಪೂಜೆ  ಮುಗಿಸಿಕೊಂಡು ವಾಪಸ್  ಅದೇ ದಿನ ರಾತ್ರಿ ಸುಮಾರು 10-00 ಗಂಟೆ ಸಮಯದಲ್ಲಿ  ಮನೆಯ ಹತ್ತಿರ  ಬಂದು ನೊಡಲಾಗಿ ಮನೆಗಳ ಬಾಗಿಲುಗಳನ್ನು  ಯಾರೋ ಕಳ್ಳರು ತೆಂಗಿನಕಾಯಿ ಸುಲಿಯುವ ದಸಿಯಿಂದ  ತಗೆದಿದ್ದು, ನನ್ನ  ತಂದೆ  ವಾಸವಿದ್ದ ಮನೆಗೆ ಹಾಕಿದ್ದ ಬೀಗವನ್ನು  ಹೊಡದು ನಾನು ವಾಸವಿರುವ  ಮನೆಯ ಬಾಗಿಲನ್ನು  ಸಹ ಹೊಡೆದಿದ್ದು  ನಾನು & ನನ್ನ  ಹೆಂಡತಿ ಒಳಗಡೆ ಹೋಗಿ ನೊಡಲಾಗಿ  ಬೀರುವಿನಲ್ಲಿದ್ದ ಬಟ್ಟೆಗಳು & ಇತರೆ  ವಸ್ತುಗಳು  ಚಲ್ಲಾಪಿಲ್ಲಿಯಾಗಿದ್ದು, ನನ್ನ  ರೂಂಮಿನ ಬೀರುವಿನಲ್ಲಿದ್ದ  ನನ್ನ ಮಗನ  ಕಾಲಿನ ಬೆಳ್ಳಿಯ ಚೈನು, ರೆಡ್ ಮಿ ಮೊಬೈಲ್  ಹಾಗೂ ನಗದು ಸೇರಿದಂತೆ ಒಟ್ಟು 24,500/- ರೂಗಳಾಗಬಹುದು. ಇವುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ .  ನಾನು ಎಲ್ಲಾ ಕಡೆ  ವಿಚಾರ ಮಾಡಿ ಈಗ ಠಾಣೆಗೆ ಬಂದು ದೂರು  ನೀಡಿರುತ್ತೇನೆ  ನನ್ನ ಮನೆಯಲ್ಲಿ ಕಳ್ಳತನ ಮಾಡಿರುವ ಕಳ್ಳರನ್ನು ಪತ್ತೆ ಹಚ್ಚಿ  ಕಳ್ಳತನವಗಿರುವ  ವಸ್ತುಗಳನ್ನು ಕೊಡಿಸಿಕೊಡಬೇಕಂತ  ನೀಡಿದ  ದೂರಿನ ಮೇರೆಗೆ  ಪ್ರರಕಣ ದಾಖಲಿಸಿದೆ.

 Friday, 29 June 2018

ಅಪರಾಧ ಘಟನೆಗಳು 29-06-18

ಕಳ್ಳಂಬೆಳ್ಳ  ಪೊಲೀಸ್‌ ಠಾಣಾ ಮೊ.ನಂ: 149/2018. ಕಲಂ-279, 304(ಎ) ಐಪಿಸಿ ರೆ/ವಿ 187 ಐಎಂವಿ ಆಕ್ಟ್

ದಿನಾಂಕ: 28/06/2018 ರಂದು ರಾತ್ರಿ 11-20 ಗಂಟೆಯಲ್ಲಿ ಪಿರ್ಯಾದಿ ಕೃಷ್ಣಮೂರ್ತಿ ಬಿನ್ ಲೇಟ್ ಚನ್ನರಾಯಪ್ಪ, 52 ವರ್ಷ, ಈಡಿಗ ಜನಾಂಗ, ಆಟೋಡ್ರೈವರ್ ಕೆಲಸ, ತರೂರು ಗ್ರಾಮ ಕಳ್ಳಂಬೆಳ್ಳ ಹೋಬಳಿ, ಸಿರಾ ತಾಲ್ಲೂಕ್, ಹಾಲಿವಾಸ: ಸಂತೇಪೇಟೆ ಸಿರಾ ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ಪಿರ್ಯಾದು ಅಂಶವೇನೆಂದರೆ, ನನಗೆ ಇಬ್ಬರು ಮಕ್ಕಳಿದ್ದು ಮೊದಲನೆಯವಳು ಮಗಳು ನಾಗಲಕ್ಷ್ಮಿ, 24 ವರ್ಷ, ಎರಡನೆಯವನು ಮಗ ಚೇತನ್ ಕುಮಾರ್ ಟಿ.ಕೆ, 22 ವರ್ಷ, ನನ್ನ ಮಗ ಚೇತನ್ ಕುಮಾರ್ ಟಿ,ಕೆ ಐಟಿಐ ವಿದ್ಯಾಭ್ಯಾಸ ಮಾಡಿದ್ದು ಬೆಂಗಳೂರಿನಲ್ಲಿ ಇಂದ್ರ ಕ್ಯಾಂಟಿನ್ ನಲ್ಲಿ ಕೆಲಸಮಾಡುತ್ತಿದ್ದು ಆಗಿಂದ್ದಾಗ್ಗೆ ಮನೆಗೆ ಬಂದು ನಮ್ಮನ್ನು ನೋಡಿಕೊಂಡು ಹೋಗುತ್ತಿದ್ದನು. ಅದೇ ರೀತಿ ನಮ್ಮನ್ನು ನೋಡಿಕೊಂಡು ಹೋಗಲು ಈದಿನ ದಿನಾಂಕ: 28/06/2018 ರಂದು ಬೆಳಿಗ್ಗೆ  ಸಿರಾದಲ್ಲಿರುವ ನಮ್ಮ ಮನೆಗೆ ಬೆಂಗಳೂರಿನಿಂದ ಬಂದಿದ್ದನು.  ಸಂಜೆವರೆಗೂ ನಮ್ಮ ಮನೆಯಲ್ಲಿಯೇ ಇದ್ದನು.  ನಾಳೆ ಬೆಂಗಳೂರಿನಲ್ಲಿ ಇಂದ್ರಕ್ಯಾಂಟಿನ್ ಗೆ ಹೋಗಬೇಕಾಗಿದ್ದರಿಂದ ನನ್ನ ಮಗ ಚೇತನ್ ಕುಮಾರ್ ಈದಿನ ದಿನಾಂಕ: 28/06/2018 ರಂದು ರಾತ್ರಿ ಸುಮಾರು  7-30 ಗಂಟೆಯಲ್ಲಿ  KA-64-E-9135 ನೇ ಹೀರೋ ಪ್ಯಾಷನ್ ಪ್ರೋ ಬೈಕಿನಲ್ಲಿ ಸಿರಾ ದಿಂದ ಬೆಂಗಳೂರಿಗೆ ಹೋದನು. ನಂತರ ಈದಿನ ರಾತ್ರಿ ಸುಮಾರು 9-30 ಗಂಟೆಯಲ್ಲಿ ನಮ್ಮ ತರೂರು ಗ್ರಾಮದ  ತಿಪ್ಪಣ್ಣ ಎಂಬುವರು ನನಗೆ ಪೋನ್ ಮಾಡಿ ನಿನ್ನ ಮಗ ಚೇತನ್ ಕುಮಾರ್ ಬೈಕ್ ಗೆ ಈದಿನ ರಾತ್ರಿ ಸುಮಾರು 9-00 ಗಂಟೆಯಲ್ಲಿ  ಜೋಗಿಹಳ್ಳಿ ಬಾರೆ ಹತ್ತಿರ ಸಿರಾ-ತುಮಕೂರು ಎನ್.ಹೆಚ್.48 ರಸ್ತೆಯಲ್ಲಿ ಯಾವುದೋ ವಾಹನ ಅಪಘಾತಪಡಿಸಿದ್ದು ಈ ಅಪಘಾತದಿಂದ ನಿನ್ನ ಮಗ ಚೇತನ್ ಕುಮಾರ್ ಗೆ ತಲೆಗೆ ಮೈಕೈ ಇತರೆ ಕಡೆ ಪೆಟ್ಟುಗಳಾಗಿ ರಕ್ತ ಬಂದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಬೇಗ ಬಾ ಎಂದು ತಿಳಿಸಿದರು. ತಕ್ಷಣ ನಾನು ಹೊರಟು  ಅಪಘಾತ ಸ್ಥಳಕ್ಕೆ ಬಂದು ನೋಡಲಾಗಿ ನನ್ನ ಮಗ ಚೇತನ್ ಕುಮಾರ್ ಅಪಘಾತದಿಂದ ತಲೆಗೆ, ಮೈಕೈ ಇತರೆ ಪೆಟ್ಟು ಬಿದ್ದು ರಕ್ತ ಬಂದು ಸ್ಥಳದಲ್ಲಿಯೇ ಮೃತಪಟ್ಟಿದ್ದನು, ನನ್ನ ಮಗ ಚಾಲನೆ ಮಾಡಿಕೊಂಡು ಬಂದಿದ್ದ KA-64-E-9135 ನೇ ಹೀರೋ ಪ್ಯಾಷನ್ ಪ್ರೋ ಬೈಕ್ ಸಹ ಅಪಘಾತದಲ್ಲಿ ಪೆಟ್ಟುಬಿದ್ದು ಜಖಂ ಆಗಿ ಅಪಘಾತ ಸ್ಥಳದಲ್ಲಿಯೇ ಬಿದ್ದಿತ್ತು, ನಂತರ ವಿಷಯ ತಿಳಿದು ಅಪಘಾತ ಸ್ಥಳಕ್ಕೆ ಬಂದಿದ್ದ ಹೈವೆ ಆಂಬ್ಯುಲೆನ್ಸ್ ನವರು ಮತ್ತು ಪೊಲೀಸರು ಸುಗಮ ಸಂಚಾರಕ್ಕಾಗಿ ನನ್ನ ಮಗನ ಮೃತ ದೇಹವನ್ನು ತೆರವು ಗೊಳಿಸಿ ಹೈವೆ ಆಂಬ್ಯುಲೆನ್ಸ್ ನಲ್ಲಿ ಕಳ್ಳಂಬೆಳ್ಳ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿರುತ್ತಾರೆ.  ನನ್ನ ಮಗನ ಚೇತನ್ ಕುಮಾರ್ ನ KA-64-E-9135 ನೇ ಹೀರೋ ಪ್ಯಾಷನ್ ಪ್ರೋ ಬೈಕ್ ಗೆ ಅಪಘಾತ ಪಡಿಸಿ ನನ್ನ ಮಗನ ಸಾವಿಗೆ ಕಾರಣನಾದ ಯಾವುದೋ ವಾಹನದ ಚಾಲಕನನ್ನು ಪತ್ತೆ ಮಾಡಿ ಮುಂದಿನ ಕಾನೂನು ಕ್ರಮ ಜರುಗಿಸ ಬೇಕೆಂದು ಕೋರಿ ನೀಡಿದ ದೂರನ್ನು ಪಡೆದು  ಪ್ರಕರಣ ದಾಖಲಿಸಿಕೊಂಡು  ತನಿಖೆ ಕೈಗೊಂಡಿರುತ್ತೆ

 

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ 136/2018 ಕಲಂ; 420, 477, 506 ಐಪಿಸಿ,

ದಿನಾಂಕ-28-06-2018 ರಂದು ಬೆಳಿಗ್ಗೆ 9-30 ಗಂಟೆ ಸಮಯದಲ್ಲಿ ನ್ಯಾಯಾಲಯದ ಸಿಬ್ಬಂದಿ ಹೆಚ್‌ಸಿ-37 ದೇವರಾಜು ರವರು ತಂದು ಹಾಜರುಪಡಿಸಿದ ಪಿರ್ಯಾದಿ ನರಸಿಂಹಯ್ಯ ಬಿನ್‌ ಮುನಿಸ್ವಾಮಯ್ಯ, 45 ವರ್ಷ, ಕೆಂಪರಸಯ್ಯನಪಾಳ್ಯ, ಹೆಬ್ಬೂರು ಹೋಬಳಿ, ತುಮಕೂರು ತಾಲ್ಲೋಕು ರವರ ಪಿಸಿಆರ್‌ ನಂ.348/15 ದೂರಿನ ಅಂಶವೇನೆಂದರೆ, ತುಮಕೂರು ತಾಲ್ಲೋಕು, ಹೆಬ್ಬೂರು ಹೋಬಳಿ, ನಿಡುವಳಲು ಗ್ರಾಮದಲ್ಲಿ ವಾಸವಾಗಿರುವ ಶ್ರೀನಿವಾಸ್‌ ಬಿನ್‌ ಹನುಮಂತಯ್ಯ ರವರು ಹಂಚಿಪುರದಲ್ಲಿ ವಾಸವಾಗಿರುವ ಮುಳುಕಟ್ಟಯ್ಯ ಬಿನ್‌ ದಾಸಣ್ಣ ರವರೊಂದಿಗೆ ಆಗಸ್ಟ್‌ ಮೊದಲನೇ ವಾರದಲ್ಲಿ ಬೇಟಿಯಾಗಿ ಶ್ರೀನಿವಾಸ್‌ ರವರ ಮನೆಯನ್ನು ಗುತ್ತಿಗೆ ಆಧಾರದಲ್ಲಿ ನಿರ್ಮಿಸಿಕೊಡುವಂತೆ ಕೋರಿದ್ದು, ಅದರಂತೆ ಚದರವೊಂದಕ್ಕೆ 16,000/- ರೂ ಗಳಂತೆ ಶ್ರೀನಿವಾಸ್‌ ರವರು ಪಿರ್ಯಾದಿಗೆ ನೀಡುವುದಾಗಿ ಒಪ್ಪಂದವಾಗಿರುತ್ತೆ. ಅದಂತೆ 5000/- ರೂ ಗಳನ್ನು ಮುಂಗಡವಾಗಿ ನೀಡಿರುತ್ತಾರೆ. ನಂತರ ಪಿರ್ಯಾದಿಯು ಮನೆಯ ಕಾಮಗಾರಿಯನ್ನು ಪೂರ್ಣಗೊಳಿಸಿದ್ದು 84,000/- ರೂಗಳನ್ನು ಶ್ರೀನಿವಾಸ್ ರವರು ಪಾವತಿಸಿರುತ್ತಾರೆ. ಕಾಮಗಾರಿಯ ಒಟ್ಟು ವೆಚ್ಚ 1,19,000/- ರೂಗಳಾಗಿದ್ದು ಬಾಕಿ 35,000/- ರೂ ನೀಡಬೇಕಾಗಿದ್ದು ಸದರಿ ವಿಚಾರವಾಗಿ ಪಿರ್ಯಾದಿ ದಿನಾಂಕ-12-01-2018 ರಂದು ಮಧ್ಯಾಹ್ನ 2-00 ಗಂಟೆ ಸಮಯದಲ್ಲಿ ಮುಳುಕಟ್ಟಯ್ಯ ಬಿನ್‌ ದಾಸಣ್ಣ ರವರೊಂದಿಗೆ ವಿಚಾರಮಾಡಲಾಗಿ ಸದರಿ ಮೇಲ್ಕಂಡ ಇಬ್ಬರೂ ಆರೋಪಿತರುಗಳು ಪಿರ್ಯಾದಿಯನ್ನು ಅವಾಚ್ಯ ಶಬ್ದಗಳಿಂದ ನಿಂಧಿಸಿ ಪಿರ್ಯಾದಿಯ ಬಳಿ ಇದ್ದ ಲೆಕ್ಕದ ಪುಸ್ತಕವನ್ನು ಶ್ರೀನಿವಾಸ್‌ ರವರು ಹರಿದು ಹಾಕಿದ್ದಲ್ಲದೆ, ಮತ್ತೆ ಹಣ ಕೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುತ್ತಾರೆ. ಆದ್ದರಿಂದ ಸದರಿ ರವರ ಮೇಲೆ ಕಾನೂನು ಕ್ರಮವನ್ನು ಕೈಗೊಳ್ಳುವಂತೆ ನೀಡಿದ ಇತ್ಯಾದಿ ದೂರಿನ ಅಂಶವಾಗಿರುತ್ತೆ.

ತಿಪಟೂರು ನಗರ ಪೊಲೀಸ್ ಠಾಣಾ ಮೊ.ನಂ - 100/2018 ಕಲಂ: 394 IPC

ದಿನಾಂಕ:28-06-2018 ರಂದು ರಾತ್ರಿ 10 ಗಂಟೆಗೆ ಪಿರ್ಯಾದಿ ಗುರುಮೂರ್ತಿ ಜಿ.ಡಿ ಬಿನ್‌ ದಾಸಪ್ಪ, 51 ವರ್ಷ ಕುರುಬ ಜನಾಂಗ, ಲಕ್ಷ್ಮಯ್ಯ ಲೇಔಟ್‌, ಸರ್ಕಾರಿ ಅಸ್ಪತ್ರೆ ಹಿಂಬಾಗ, ಅಣ್ಣಾಪುರ, ತಿಪಟೂರು ಟೌನ್‌ ರವರು ಠಾಣೆಗೆ ಹಾಜರಾಗಿ ನೀಡಿರುವ ದೂರಿನ ಅಂಶವೇನೆಂದರೆ, ದಿನಾಂಕ:28-06-2018 ರಂದು ನಾನು ಕೆಲಸ ಮುಗಿಸಿ ಮನೆಗೆ ಬಂದಿದ್ದು, ರಾತ್ರಿ ಸುಮಾರು 7-30 ಗಂಟೆ ಸಮಯದಲ್ಲಿ ಯಾರೋ ಮನೆಯ ಬಾಗಿಲನ್ನು ತಟ್ಟಿದಾಗ ಹಾಲ್‌ನಲ್ಲಿದ್ದ ನನ್ನ ತಂದೆಯವರು ನನ್ನ ಮಗ ಅಮೃತೇಶನಿಗೆ ಬಾಗಿಲನ್ನು ತೆಗೆಯುವಂತೆ ಹೇಳಿದ್ದರಿಂದ ಬಾಗಿಲನ್ನು ತೆಗೆದಾಗ ಯಾರೋ 3 ಜನ ಅಪರಿಚಿತರು ಮನೆಯೊಳಗೆ ಬಂದವರು ಒಬ್ಬ ಕೈಯಲ್ಲಿ ಕಬ್ಬಿಣದ ಲಾಂಗ್‌ನ್ನು ಹಿಡಿದಿದ್ದು, ಮತ್ತೊಬ್ಬನು ಕೈಯಲ್ಲಿ ಚಾಕು ಹಿಡಿದು ಒಂದನೇ ಅಂತಸ್ತಿನ ರೂಮ್‌ಗೆ ಬಂದಿದ್ದು, ಆ ಸಮಯದಲ್ಲಿ ನಾನು ನನ್ನ ವಿಧ್ಯಾರ್ಥಿಗೆ ಪಾಠ ಹೇಳಿಕೊಡುತ್ತಿದ್ದು, ಅವರುಗಳ ಪೈಕಿ ಒಬ್ಬ ಲಾಂಗ್‌ನ್ನು ನನಗೆ ತೋರಿಸಿ ಎಲ್ಲವನ್ನು ಕೊಡಬೇಕು ಇಲ್ಲದಿದ್ದರೆ ಕೊಚ್ಚಿ ಹಾಕುತ್ತೇನೆ ಅಂತ ಬೆದರಿಸಿದರು, ಆಗ ನಾನು ಅವರ ಜೊತೆ ತಳ್ಳಾಡುತ್ತಿದ್ದಾಗ ನನ್ನ ಹೆಂಡತಿ ಪುಷ್ಪಲತಾ ನನ್ನ ಗಂಡನನ್ನು ಏನೂ ಮಾಡಬೇಡಿ ಬಿಟ್ಟುಬಿಡಿ ಅಂತ ಅಡ್ಡ ಬಂದಾಗ ನಾನು ಅವರ ಕೈಯಲ್ಲಿದ್ದ ಲಾಂಗ್‌ನ್ನು ಹಿಡಿದುಕೊಂಡು ಅವರಿಬ್ಬರನ್ನು ಹಿಡಿದುಕೊಂಡು ತಳ್ಳಾಡುತ್ತಿದ್ದಾಗ ನನ್ನ ಹೆಂಡತಿಯೂ ಸಹ ಲಾಂಗ್‌ನ್ನು ಹಿಡಿದುಕೊಂಡು ಕಿತ್ತುಕೊಳ್ಳಲು ಪ್ರಯತ್ನಿಸಿದೆವು, ಮೂರನೇ ವ್ಯಕ್ತಿ ಚಾಕು ಹಿಡಿದು ನಮ್ಮನ್ನು ಚುಚ್ಚಲು ಮುಂದಾದ, ಅದರೂ ನಾವು ಅವರನ್ನು ತಳ್ಳಿಕೊಂಡು ಕೆಳಗಡೆ ಹಾಲ್‌ಗೆ ಬಂದೆವು, ಅಷ್ಟರಲ್ಲಿ ನಾನು ಅವರ ಕೈಯಲ್ಲಿದ್ದ ಲಾಂಗ್‌ನ್ನು ಕಿತ್ತುಕೊಂಡಾಗ ಅವರ ಪೈಕಿ ಒಬ್ಬ ನಾವು ತಳ್ಳಿಕೊಂಡು ಬರುತ್ತಿದ್ದ ಸಂಧರ್ಭದಲ್ಲಿ ನನ್ನ ಹೆಂಡತಿಯ ಕುತ್ತಿಗೆಯಲ್ಲಿದ್ದ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡನು. ನಾನು ನನ್ನ ಕೈಯಲ್ಲಿದ್ದ ಲಾಂಗ್‌ನಿಂದ ಇಬ್ಬರನ್ನು ತಳ್ಳಿಕೊಂಡು ಮನೆಯಿಂದ ಹೊರಗಿನವರೆಗೆ ತಳ್ಳಿಕೊಂಡು ಹೊಗುತ್ತಿದ್ದಾಗ ಮತ್ತೊಬ್ಬನನ್ನು ಬಾರೋ ಹೋಗೋಣ ಎಂದು ಕರೆದು ಹೊರಟು ಹೋದರು. ನಂತರ ನಾನು ಮನೆಯ ಬಳಗೆ ಬಂದಾಗ ಹಾಲ್‌ನಲ್ಲಿದ್ದ ಮತ್ತೊಬ್ಬ ನನಗೆ ಚಾಕು ತೋರಿಸಿ ನನ್ನ  ಕೈಯಲ್ಲಿದ್ದ ಲಾಂಗ್‌ನಿಂದ ಹೊಡಿ ನೋಡೋಣ ಎಂದು ಬೆದರಿಸಿದ, ನನ್ನ ಕೈಯಲ್ಲಿ ಲಾಂಗ್‌ ಇದ್ದದನ್ನು ನೋಡಿ ಅವನು ಹೊರಗೆ ಓಡಿ ಹೋದ, ಅಷ್ಟರಲ್ಲಿ ಅಕ್ಕ-ಪಕ್ಕದವರು ಬಂದರು. ಅವರ ಕೈಯಲ್ಲಿದ್ದ ಲಾಂಗ್‌ನ್ನು ನಾನು ನನ್ನ ಹೆಂಡತಿ ಕಿತ್ತುಕೊಳ್ಳಲು ಪ್ರಯತ್ನಿಸುತ್ತಿದ್ದಾಗ ನನ್ನ ಎಡಗೈನ ಹೆಬ್ಬೆರಳ ಪಕ್ಕ ಲಾಂಗ್‌ ತಗುಲಿ ಸಣ್ಣ ರಕ್ತಗಾಯವಾಗಿರುತ್ತದೆ, ನನ್ನ ಹೆಂಡತಿಯ ಎಡಗೈನ ಮಧ್ಯದ ಬೆರಳ ಪಕ್ಕ ಲಾಂಗ್ ತಗುಲಿ ರಕ್ತ ಗಾಯವಾಗಿರುತ್ತದೆ. ಈ ಮೂರು ಜನ ಅಪರಿಚಿತರ ಪೈಕಿ ಒಬ್ಬ ತೆಳ್ಳಗೆ ಉದ್ದವಾಗಿದ್ದು, ಮತ್ತೊಬ್ಬ ಸಾಧಾರಣ ಮೈಕಟ್ಟಿನವನಾಗಿದ್ದು, ಹಾಗೂ ಮತ್ತೊಬ್ಬ ಕುಳ್ಳಗೆ ಸಾಧಾರಣ ಮೈಕಟ್ಟಿನವನಾಗಿರುತ್ತಾನೆ. ಈ ಮೇಲ್ಕಂಡ ಮೂರು ಜನರ ವಯಸ್ಸು ಸುಮಾರು 25 ರಿಂದ 30 ವರ್ಷ ವಯಸ್ಸಿನವರಾಗಿರುತ್ತಾರೆ. ಇವರು ಕನ್ನಡ ಮಾತನಾಡುತ್ತಿದ್ದರು, ನನ್ನ ಪತ್ನಿಯ ಕೊರಳಲ್ಲಿದ್ದ ಚಿನ್ನದ ಮಾಂಗಲ್ಯ ಸರ ಸುಮಾರು 35 ಗ್ರಾಂ ತೂಕವುಳ್ಳದ್ದಾಗಿದ್ದು, ಇದರ ಬೆಲೆ ಸುಮಾರು 20,000 ರೂ ಆಗಿರುತ್ತದೆ, ಆದ್ದರಿಂದ ಮೇಲ್ಕಂಡ ಮೂರು ಜನ ಅಪರಿಚಿತರನ್ನು ಪತ್ತೆ ಮಾಡಿ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕಂತ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

 Thursday, 28 June 2018

ಪತ್ರಿಕಾ ಪ್ರಕಟಣೆ ದಿ: 27.06.18

ಪತ್ರಿಕಾ ಪ್ರಕಟಣೆ

ದಿನಾಂಕ: 27.06.2018

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಸಾರ್ವಜನಿಕರ ಅನುಕೂಲಕ್ಕಾಗಿ  ಪೊಲೀಸ್ ಆ್ಯಪ್.

 

ಸಾರ್ವಜನಿಕರ ಸುರಕ್ಷತೆಗಾಗಿ ಮತ್ತು ಉಪಯೋಗಕ್ಕಾಗಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ನೂತನವಾದ ಕರ್ನಾಟಕ ರಾಜ್ಯ ಪೊಲೀಸ್ ಎಂಬ ಮೊಬೈಲ್ ಅಪ್ಲಿಕೇಶನ್ನ್ನು ಅಭಿವೃದ್ಧಿಗೊಳಿಸಲಾಗಿದೆ. ಸದರಿ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡ ನಂತರ ಒಂದು ಬಾರಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಆ್ಯಪ್ ಆ್ಯಕ್ಟಿವೇಟ್ ಮಾಡಿಕೊಳ್ಳುವ  ಮೂಲಕ ಈ ಕೆಳಕಂಡ ಮಾಹಿತಿಗಳನ್ನು ಸಾರ್ವಜನಿಕರು ಪಡೆದುಕೊಳ್ಳಬಹುದು.

1.            ನೀವು ಇರುವ ಸ್ಥಳದ ಸಮೀಪ ಇರುವ ಠಾಣೆಯ ಮಾಹಿತಿ & ಆ ಠಾಣೆಗೆ ಸಂಬಂಧಪಟ್ಟ ಅಧಿಕಾರಿಗಳ ದೂರವಾಣಿ ಸಮೇತ ಮಾಹಿತಿ ಪಡೆಯಬಹುದು. ಆ ಪೊಲೀಸ್ ಠಾಣೆಗೆ ನೀವಿರುವ ಜಾಗದಿಂದ ಹೇಗೆ ತಲುಪಬೇಕು ಮತ್ತು ಎಷ್ಟು ದೂರ ಆಗುತ್ತದೆ ಎಂಬುದನ್ನು ಸಹ ತಿಳಿಸುತ್ತದೆ.

2.            ನೀವು ಯಾವುದೇ ರೀತಿಯ ತುರ್ತು  ಸಂದರ್ಭಗಳಲ್ಲಿ ಎಸ್ಓಎಸ್ ಎಂಬ ಬಟನ್ ಒತ್ತುವುದರಿಂದ ನೀವು ತಿಳಿಸಿದ  ಮೊಬೈಲ್ ನಂಬರ್ಗೆ ನೀವಿರುವ ಜಾಗದ ಮಾಹಿತಿ ಸಮೇತ ಮೇಸೇಜ್ ತಲುಪುತ್ತದೆ.

3.            ಕಳುವಾದ  ವಾಹನಗಳ ಮಾಹಿತಿ, ಕಾಣೆಯಾದ ವ್ಯಕ್ತಿಗಳ ಮಾಹಿತಿಗಳನ್ನು ಪಡೆಯಬಹುದು.

ಈ ಅಪ್ಲಿಕೇಶನ್ನು ಬಳಸಲು ಇಂಟರ್ನೆಟ್ ಸಂಪರ್ಕ ಮತ್ತು ಜಿಪಿಎಸ್ ಕೂಡ ಆನ್ ಇರಬೇಕಾಗುತ್ತದೆ. ಈ ಕೆಳಗಿನ ಲಿಂಕ್ ಉಪಯೋಗಿಸುವ ಮೂಲಕ ಡೌನ್‌ ಲೋಡ್‌ ಮೊಡಿ ಕೊಳ್ಳಬಹುದು .

 

For Android

https://play.google.com/store/apps/details?id=com.capulustech.ksppqrs

For iOS

https://itunes.apple.com/us/app/ksp/id1358964762?ls=1&mt=8


ಅಪರಾಧ ಘಟನೆಗಳು 28-06-18

ಬೆಳ್ಳಾವಿ ಪೊಲೀಸ್ ಠಾಣೆ ಮೊ.ಸಂ 52/18 ಕಲಂ 279, 337 ಐಪಿಸಿ

ದಿನಾಂಕ  27/06/2018 ರಂದು  ಸಂಜೆ 04-00 ಗಂಟೆಗೆ  ಅರ್ಜಿದಾರರು ಶೀಬಯ್ಯ ಲೇ ರಾಮಯ್ಯ ಸಲಪರ ಹಳ್ಳಿ  ಕಳ್ಳಂಬೆಳ್ಳ ಹೊ.  ರವರು   ಠಾಣೆಗೆ ಹಾಜರಾಗಿ  ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 25/06/2018 ರಂದು ತನ್ನ  ಮಗ ಸತೀಶನು ಕೆಲಸದ ನಿಮಿತ್ತ ತುಮಕೂರಿಗೆ ತನ್ನ  ಬಾಬ್ತು KA-64-E-5156 ನೇ ಹೋಂಡಾ ಯೂನಿಕಾರ್ನ್  ಬೈಕ್ ಅನ್ನು  ತೆಗೆದುಕೊಂಡು ಚೇಳೂರು ತುಮಕೂರು ಮಾರ್ಗವಾಗಿ ಹನುಮಂತಪುರ ಗ್ರಾಮದ ಬಳಿ ಸುಮಾರು ಸಂಜೆ 07-30 ಗಂಟೆಯಲ್ಲಿ  ಹೋಗುತ್ತಿರುವಾಗ್ಗೆ  ತುಮಕೂರು ಕಡೆಯಿಂದ KA-27-M-1678 ನೇ ಇಂಡಿಕಾ  ಡಿ.ಎಲ್.ಎಸ್ ನೇ  ಕಾರಿನ ಚಾಲಕ  ಅತಿವೇಗ  ಮತ್ತು  ಅಜಾಗರುಕತೆಯಿಂದ  ಚಾಲನೆ ಮಾಡಿಕೊಂಡು  ಬಂದು ಡಿಕ್ಕಿ ಹೋಡೆಸಿದ ಪರಿಣಾಮ  ಹಣೆಗೆ  ,ಕೆನ್ನೆಗೆ ಎಡಭುಜಕ್ಕೆ,ಹಾಗೂ  ಎಡಮೋಣಕೈ ಗೆ  ಎಟು ಬಿದ್ದು ತೀವ್ರ ತರಹದ ರಕ್ತ ಗಾಯವಾಗಿರುತ್ತದೆ   ಅಂತ  ಇತ್ಯಾದಿಯಾಗಿ  ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.Wednesday, 27 June 2018

ಅಪರಾಧ ಘಟನೆಗಳು 27-06-18

ಮಿಡಿಗೇಶಿ ಪೊಲೀಸ್ ಠಾಣಾ ಮೊ.ಸಂ.67/2018, ಕಲಂ: 324, 504, 506 ರೆ/ವಿ 34 ಐಪಿಸಿ.

ದಿನಾಂಕ:26/06/2018 ರಂದು ಸಂಜೆ 06:30 ಗಂಟೆಗೆ ಪಿರ್ಯಾದಿ ಕೊಂಡಪ್ಪ ಬಿನ್ ಲೇ||ದೊಡ್ಡಗುಂಡಪ್ಪ, 63 ವರ್ಷ, ಬ್ರಾಹ್ಮಣರು, ಸಾದರಹಳ್ಳಿ ಗ್ರಾಮ, ಐ.ಡಿ.ಹಳ್ಳಿ ಹೋಬಳಿ, ಮಧುಗಿರಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ಈ ದಿನ ಅಂದರೆ ದಿನಾಂಕ:26/06/2018 ರಂದು ಸಾಯಂಕಾಲ 04:00 ಗಂಟೆಯಲ್ಲಿ ನಮ್ಮ ಮನೆಯ ವಾಸದ ಮನೆಯ ಹತ್ತಿರ ಮುದ್ದನೇರಳೆಕೆರೆ ಗ್ರಾಮದ ಶ್ರೀರಾಮಪ್ಪ ಬಿನ್ ಚಂದಕಚರ್ಲಪ್ಪ, ದಾಸಪ್ಪನಪಾಳ್ಯದ ಸಣ್ಣನಾಗಪ್ಪ ಬಿನ್ ಲೇ||ದಾಸಪ್ಪ ರವರುಗಳಿಂದ ಶೌಚಾಲಯದ ಗುಂಡಿಯನ್ನು ತೆಗೆಸುತ್ತಿರುವಾಗ ನಮ್ಮ ಸಂಬಂಧಿಗಳಾದ ಕೃಷ್ಣಮೂರ್ತಿ ಬಿನ್ ಅಶ್ವಥಪ್ಪ ಮತ್ತು ಲಿಕಿತ ಬಿನ್ ಪ್ರಹ್ಲಾದ ರವರುಗಳು ವಿನಾಕಾರಣ ಜಗಳ ತೆಗೆದು ನನ್ನ ಮೇಲೆ ಗಲಾಟೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಇಲ್ಲಿ ಏಕೆ ಶೌಚಾಲಯದ ಗುಂಡಿಯನ್ನು ತೆಗೆಸುತ್ತಿದ್ದೀಯಾ ಎಂತ ಹೇಳುತ್ತಾ ಕೃಷ್ಣಮೂರ್ತಿ ಎಂಬುವನು ತನ್ನ ಕೈಯಲ್ಲಿದ್ದ ಕುಡುಗೋಲಿನಿಂದ ಏಕಾಏಕಿ ನನ್ನ ಎಡ ಮುಂಗೈಗೆ ಹೊಡೆದು ರಕ್ತಗಾಯಪಡಿಸಿದ ಲಿಕಿತ ಎಂಬುವನು ಕಲ್ಲಿನಿಂದ ನನ್ನ ಎಡಗಾಲಿನ ತೊಡೆಗೆ ಹೊಡೆದನು. ಅಷ್ಟರಲ್ಲಿ ಅಲ್ಲಿಯೇ ಶೌಚಾಲಯದ ಗುಂಡಿಯನ್ನು ತೆಗೆಯುತ್ತಿದ್ದ ಶ್ರೀರಾಮಪ್ಪ ಮತ್ತು ಸಣ್ಣನಾಗಪ್ಪ ರವರುಗಳು ಜಗಳ ಬಿಡಿಸಿ ಸಮಾದಾನಪಡಿಸಿದರು. ಅಷ್ಟಕ್ಕೂ ಸುಮ್ಮನಾಗದ ಆರೋಪಿಗಳು ಇಲ್ಲೇನಾದರೂ ಗುಂಡಿಯನ್ನು ತೆಗೆಸಿದರೆ ನಿಮಗೊಂದು ಗತಿ ಕಾಣಿಸುತ್ತೇವೆಂತ ಪ್ರಾಣ ಬೆದರಿಕೆ ಹಾಕಿರುತ್ತಾರೆಂತ ಇತ್ಯಾದಿ ದೂರು.

 

ಮಿಡಿಗೇಶಿ ಪೊಲೀಸ್ ಠಾಣಾ ಮೊ.ಸಂ.66/2018, ಕಲಂ: 379 ಐಪಿಸಿ.

ದಿನಾಂಕ:26/06/2018 ರಂದು ಬೆಳಿಗ್ಗೆ 11:00 ಗಂಟೆಗೆ ಪಿರ್ಯಾದಿ ತಿಮ್ಮೇಗೌಡ ಬಿನ್ ಗೋವಿಂದರಾಜುಲು, 32 ವರ್ಷ, ವಕ್ಕಲಿಗರು, ಎವರಿಡೆನಿಷನ್ ಕಂಪನಿಯಲ್ಲಿ ಕ್ವಾಲಿಟಿ ಚೆಕಿಂಗ್ ಕೆಲಸ, ಪೀಣ್ಯ ಇಂಡಸ್ಟ್ರೀಯಲ್ ಏರಿಯಾ, ಬೆಂಗಳೂರು-58, ಸ್ವಂತ ವಿಳಾಸ-ರಾಳಪಲ್ಲಿ ಗ್ರಾಮ, ಗುಡಿಬಂಡೆ ಮಂಡಲ್, ಮಡಕಶಿರಾ ತಾಲ್ಲೂಕು, ಅನಂತಪುರ ಜಿಲ್ಲೆ, ಆಂಧ್ರಪ್ರದೇಶ ರಾಜ್ಯ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೇ, ನಾನು ಬೆಂಗಳೂರಿನ ಪೀಣ್ಯ ಇಂಡಸ್ಟ್ರೀಯಲ್ ಏರಿಯಾದಲ್ಲಿರುವ ಎವರಿಡೆನಿಷನ್ ಕಂಪನಿಯಲ್ಲಿ ಕ್ವಾಲಿಟಿ ಚೆಕಿಂಗ್ ಕೆಲಸ ಮಾಡಿಕೊಂಡು ನನ್ನ ಸಂಸಾರ ಸಮೇತ ಬೆಂಗಳೂರಿನಲ್ಲಿಯೇ ವಾಸವಾಗಿರುತ್ತೇನೆ, ನನ್ನ ಸ್ವಂತ ಊರು ಆಂಧ್ರಪ್ರದೇಶದ ರಾಳಪಲ್ಲಿ ಗ್ರಾಮವಾಗಿದ್ದು, ನಾನು ಆಗಾಗ್ಗೆ ಊರಿಗೆ ಬಂದು ನನ್ನ ತಂದೆ-ತಾಯಿಯವರನ್ನು ನೋಡಿಕೊಂಡು ವಾಪಸ್ಸ್ ಬೆಂಗಳೂರಿಗೆ ಹೋಗುತ್ತಿದ್ದೆನು. ಈಗ್ಗೆ ಸುಮಾರು ಒಂದು ವಾರದ ಹಿಂದೆ ನಮ್ಮ ಅಜ್ಜಿ ನಿಧನರಾಗಿದ್ದು, ದಿನಾಂಕ:26/06/2018 ರಂದು ನಮ್ಮ ಅಜ್ಜಿಯ ತಿಥಿ ಕಾರ್ಯಕ್ರಮ ಇದುದ್ದರಿಂದ ನೆನ್ನೇ ಅಂದರೆ ದಿನಾಂಕ:25/06/2018 ರಂದು ರಾತ್ರಿ ಸುಮಾರು 08:00 ಗಂಟೆಗೆ ನಾನು ಮತ್ತು ನಮ್ಮ ಊರಿನ ಪಕ್ಕದ ಊರಾದ ಶಂಕರಗಲ್ಲು ಗ್ರಾಮದ ವಾಸಿಯಾದ ನನ್ನ ಸ್ನೇಹಿತ ಮಾರುತಿ ಬಿನ್ ರಾಮಾಂಜನೇಯಲು ಇಬ್ಬರು ನನ್ನ ಬಾಬ್ತು ಸುಮಾರು 30,000/-ರೂಪಾಯಿ ಬೆಲೆ ಬಾಳುವ KA-04-HW-5761 ನೇ ಬೈಕಿನಲ್ಲಿ ಬೆಂಗಳೂರಿನಿಂದ ಹೊರಟು ಕೊರಟಗೆರೆ, ಮಧುಗಿರಿ ಮಾರ್ಗವಾಗಿ ಮಧುಗಿರಿ-ಪಾವಗಡ ಮುಖ್ಯ ರಸ್ತೆಯಲ್ಲಿ ಅದೇ ದಿನ ರಾತ್ರಿ ಸುಮಾರು 11:30 ಗಂಟೆಯ ಸಮಯದಲ್ಲಿ ಹೊಸಕೆರೆ ಗ್ರಾಮದ ಕೆರೆಯ ಹಿಂಭಾಗದಲ್ಲಿರುವ ಸೇತುವೆಯ ಬಳಿ ನಾವು ಬರುತ್ತಿದ್ದ ಬೈಕನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿ ಬೈಕ್ ಕೀ ಯನ್ನು ಗಾಡಿಯಲ್ಲಿಯೇ ಬಿಟ್ಟು ಮೂತ್ರ ವಿಸರ್ಜನೆ ಮಾಡುತ್ತಿದ್ದಾಗ ನಮ್ಮ ಹಿಂದಿನಿಂದ ಮಧುಗಿರಿ ಕಡೆಯಿಂದ ಅದೇ ರಸ್ತೆಯಲ್ಲಿ ಒಂದು ಬೈಕಿನಲ್ಲಿ ಬಂದ ಸುಮಾರು 25-30 ವರ್ಷ ವಯಸ್ಸಿನ  ಮೂರು ಜನ ಅಪರಿಚಿತ ವ್ಯಕ್ತಿಗಳು ನಮ್ಮ ಬಳಿ ಬೈಕನ್ನು ನಿಲ್ಲಿಸಿದರು, ಅವರನ್ನು ನೋಡಿದ ನಾವು ಅವರು ಸಹ ಮೂತ್ರ ವಿಸರ್ಜನೆ ಮಾಡಲು ನಿಲ್ಲಿಸುತ್ತಿರಬಹುದೆಂದು ತಿಳಿದು ನಮ್ಮಪಾಡಿಗೆ ನಾವು ಮೂತ್ರ ವಿಸರ್ಜನೆ ಮಾಡುತ್ತಿದ್ದಾಗ ಬೈಕಿನಲ್ಲಿ ಬಂದ ಮೂರು ಜನ ಅಪರಿಚಿತ ವ್ಯಕ್ತಿಗಳಲ್ಲಿ ಒಬ್ಬ ನಾವು ನಿಲ್ಲಿಸಿದ್ದ ನನ್ನ ಬಾಬ್ತು KA-04-HW-5761 ನೇ ಬೈಕನ್ನು ಸ್ಟಾಟ್ ಮಾಡಿಕೊಂಡು ಮಧುಗಿರಿ ಕಡೆಗೆ ಸ್ಪೀಡಾಗಿ ಹೊರಟು ಹೋದರು. ನಾವು ಕೂಗಿಕೊಂಡರು ಸಹ ಅವರು ಬೈಕನ್ನು ನಿಲ್ಲಿಸಲಿಲ್ಲಾ, ನಾನು ರಾತ್ರಿ ವೇಳೆಯಾಗಿದ್ದರಿಂದ ಬೆಂಗಳೂರಿನಲ್ಲಿ ಹೊರಟಾಗ ನನ್ನ ಜೇಬಿನಲ್ಲಿದ್ದ 6000/-ರೂಪಾಯಿ ದುಡ್ಡು, ಹೆಚ್.ಡಿ.ಎಫ್.ಸಿ. ಬ್ಯಾಂಕಿನ ಒಂದು ಕ್ರೆಡಿಟ್ ಕಾರ್ಡ್‌, ಒಂದು ಡೆಬಿಟ್ ಕಾರ್ಡ್‌ ಇರುವ ಒಂದು ಪರ್ಸ್‌ ಅನ್ನು, ಸುಮಾರು 1500/-ರೂಪಾಯಿ ಬೆಲೆ ಬಾಳುವ ಒಂದು ಟೈಟಾನ್ ವಾಚನ್ನು ಮತ್ತು ಸುಮಾರು 8000/-ರೂಪಾಯಿ ಬೆಲೆ ಬಾಳುವ ವಿವೋ ಕಂಪನಿಯ ಒಂದು ಮೊಬೈಲನ್ನು ಆರೋಪಿಗಳು ಕಳ್ಳತನ ಮಾಡಿಕೊಂಡು ಹೋಗಿರುವ KA-04-HW-5761 ನೇ ನನ್ನ ಬೈಕಿನಲ್ಲಿ ಇಟ್ಟಿದ್ದೆನು. ನಮಗೆ ಗಾಬರಿಯಾಗಿ, ದಿಕ್ಕೂ ತೋಚದಂತಾಗಿ ಅಲ್ಲೇ ಹತ್ತಿರದಲ್ಲಿದ್ದ ಬಸ್ಸ್ ಶೆಲ್ಟರ್ ನಲ್ಲಿ ರಾತ್ರಿ ಮಲಗಿಕೊಂಡಿದ್ದು, ವಿಚಾರವನ್ನು ನಮ್ಮ ಮನೆಯವರಿಗೆ ತಿಳಿಸಿ ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದು, ದಿನಾಂಕ:25/06/2018 ರಂದು ರಾತ್ರಿ ಸುಮಾರು 11:30 ಗಂಟೆಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುವ KA-04-HW-5761 ನೇ ಬೈಕನ್ನು ಮತ್ತು ಬೈಕಿನ ಟ್ಯಾಂಕ್ ಕವರಲ್ಲಿ ಇಟ್ಟಿದ್ದ ವಸ್ತುಗಳನ್ನು ಪತ್ತೆ ಮಾಡಿಕೊಟ್ಟು, ಕಳ್ಳತನ ಮಾಡಿಕೊಂಡು ಹೋಗಿರುವ ಆರೋಪಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ಪಿರ್ಯಾದು ಅಂಶವಾಗಿರುತ್ತೆ.

ದಂಡಿನಶಿವರ ಪೊಲೀಸ್ ಠಾಣಾ ಮೊ.ನಂ 64/2018 ಕಲಂ 279.337.338.ಐ.ಪಿ.ಸಿ ಜೊತೆಗೆ 134(ಎ) (ಬಿ) ಮತ್ತು 187 ಐ,ಎಂ.ವಿ ಆಕ್ಟ್.

ದಿನಾಂಕ: 26/06/2018 ರಂದು ಠಾಣಾ ಎ.ಎಸ್.ಐ ಚಂದ್ರಶೇಖರಯ್ಯ ರವರು ತುಮಕೂರಿನ ಎಸ್.ಎಂ.ಎಸ್ ಆಸ್ಪತ್ರೆಯಲ್ಲಿ ಈ  ಕೇಸಿನ ಗಾಯಾಳು ರಹಮತ್ ವುಲ್ಲಾ ರವರಿಂದ ಹೇಳಿಕೆ ಪಡೆದು ತಂದು ಹಾಜರ್ಪಡಿಸಿದ್ದು. ಸದರಿ ಗಾಯಾಳು ರಹಮತ್ ವುಲ್ಲಾ ರವರು ಆಸ್ಪತ್ರೆಯಲ್ಲಿ ವೈದ್ಯರ ಸಮಕ್ಷಮ ನೀಡಿದ ಹೇಳಿಕೆ ಎನೆಂದರೆ ದಿನಾಂಕ: 03/06/2018 ರಂದು ನಾನು ಮತ್ತು ತುಮಕೂರು ನಗರದ ಪಿ.ಹೆಚ್. ಕಾಲೋನಿ ವಾಸಿಯಾದ ಚಾಂದ್ ಪಾಷ ಬಿನ್ ಲೇ. ಕೆ. ಮಹಮದ್ ಇಬ್ಬರೂ ಮಾವಿನ ಗಿಡಗಳಲ್ಲಿರುವ ಮಾವಿನ ಹಣ್ಣನ್ನು ವ್ಯಾಪಾರ ಮಾಡುವ ಸಲುವಾಗಿ ಕೊಂಡ್ಲಿಕ್ರಾಸ್ ಕಡೆ ಇರುವ ಮಾವಿನ ಮರದ ಮಾಲೀಕರುಗಳೊಂದಿಗೆ ಮಾತನಾಡಿಕೊಂಡು ವಾಪಾಸ್ ಕೊಂಡ್ಲಿಕ್ರಾಸ್ ಕಡೆಯಿಂದ ಅಮ್ಮಸಂದ್ರ ಕಡೆಗೆ ಮದ್ಯಾಹ್ನ 12-30 ಗಂಟೆಗೆ ಹೊನ್ನೇನಹಳ್ಳಿ ಗೇಟ್ ಹತ್ತಿರ ರಸ್ತೆಯ ಎಡಭಾಗದಲ್ಲಿ ನಡೆದುಕೊಂಡು ಬರುತ್ತಿರುವಾಗ್ಗೆ ಅಮ್ಮಸಂದ್ರಗೇಟ್ ಕಡೆಯಿಂದ ಎದುರಿಗೆ ಒಂದು ಮಿನಿಲಾರಿ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸಿಮೆಂಟ್ ರಸ್ತೆಯಲ್ಲಿ ಎಡಭಾಗದಲ್ಲಿ ನಡೆದುಕೊಂಡು ಹೋಗುತ್ತಿದ್ದ ನನಗೆ ಅಪಘಾತಪಡಿಸಿದನು. ಮಿನಿ ಲಾರಿ ಡಿಕ್ಕಿ ಹೊಡೆಯಿಸಿದ ಪರಿಣಾಮ ನಾನು ನೆಲಕ್ಕೆ ಬಿದ್ದೇನು. ಆಗ ನನ್ನ ಬಲಗಾಲಿನ ಮೊಣಕಾಲು. ಮತ್ತು ಬಲಗಾಲಿನ ಕುಂಡಿ ಹತ್ತಿರ ಪೆಟ್ಟು ಬಿದ್ದು ಮೂಲೆ ಮುರಿದು ಹೋಯಿತು. ಮತ್ತು ಬಲಗಾಲಿನ ಹೆಬ್ಬೆಟ್ಟುಗಳು ಮುರಿದು ರಕ್ತಗಾಯವಾಯಿತು. ನಂತರ ನಾನು ಅಪಘಾತಪಡಿಸಿದ ಮಿನಿ ಲಾರಿಯ ನಂಬರ್ ನೋಡಲಾಗಿ MYN 5637 ಆಗಿರುತ್ತೆ. ನನಗೆ ಅಪಘಾತಪಡಿಸಿದ ಮಿನಿ ಲಾರಿ ಯ ಚಾಲಕನನ್ನು ನೋಡಿರುವುದಿಲ್ಲ ಮತ್ತು ಹೆಸರು ವಿಳಾಸ ತಿಳಿದುಬಂದಿರುವುದಿಲ್ಲ. ನನ್ನ ಜೊತೆಯಲ್ಲಿ ಮಾವಿನ ಹಣ್ಣುಗಳನ್ನು ವ್ಯಾಪಾರ ಮಾಡಲು ಬಂದಿದ್ದ ಚಾಂದ್ ಪಾಷ ಅಮ್ಮಸಂದ್ರ ಕಡೆಯಿಂದ ಬರುತ್ತಿದ್ದ ಯಾವುದೋ ಒಂದು ಕಾರಿನಲ್ಲಿ ನನ್ನನ್ನು ತುಮಕೂರು ನಗರದಲ್ಲಿರುವ ಎಸ್.ಎಂ.ಎಸ್ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗೆ ದಾಖಲಿಸಿರುತ್ತಾರೆ. ಅಪಘಾತ ಪಡಿಸಿದ ಮಿನಿಲಾರಿಯ ಚಾಲಕ ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೆ ಹೋರಟು ಹೋಗಿರುತ್ತಾನೆ. ನನಗೆ ಬಲಗಾಲಿನ ಮೊಣಕಾಲು. ಮತ್ತು ಬಲಭಾಗದ ಸೊಂಟದ ಕುಂಡಿ ಹತ್ತಿರ ಅಪರೇಷನ್ ಆಗಿರುತ್ತದೆ. ಆದ್ದರಿಂದ ನನಗೆ ಅಪಘಾತಪಡಿಸಿದ MYN 5637 ರ ಮಿನಿ ಲಾರಿ ಚಾಲಕನ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರುತ್ತೇನೆಂತ ಇತ್ಯಾಧಿಯಾಗಿ ನೀಡಿದ ಹೇಳಿಕೆಯನ್ನು ಪಡೆದುತಂದು ಎ.ಎಸ್.ಐ ಚಂದ್ರಶೇಖರಯ್ಯ ರವರು ಹಾಜರ್ಪಡಿಸಿದ್ದನ್ನು ಸ್ವೀಕರಿಸಿ ಈ ಪ್ರಕರಣ ದಾಖಲಿಸಿರುತ್ತೆ.Tuesday, 26 June 2018

ಅಪರಾಧ ಘಟನೆಗಳು 26-06-18

ಹೆಬ್ಬೂರು  ಪೊಲೀಸ್ ಠಾಣಾ ಯು ಡಿ ಆರ್ ನಂ-09/2018 ಕಲಂ 174 ಸಿಆರ್‌ಪಿಸಿ

ದಿನಾಂಕ:25-06-2018 ರಂದು ಸಂಜೆ 6-00 ಗಂಟೆಗೆ ಪಿರ್ಯಾದಿಯಾದ ಸಿದ್ದಗಂಗಮ್ಮ ಕೋಂ ಸತೀಶ್,ಹೆಚ್,ಎಂ, 42 ವರ್ಷ, ಲಿಂಗಾಯಿತರು, ವ್ಯವಸಾಯ, ಹೊನಸಿಗೆರೆ, ಹೆಬ್ಬೂರು ಹೋಬಳಿ, ತುಮಕೂರು ತಾಲ್ಲೂಕು & ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ನನ್ನ ಗಂಡನಾದ ಸುಮಾರು 46 ವರ್ಷ ವಯಸ್ಸಿನ ಸತೀಶ ರವರಿಗೆ ಚರ್ಮ ರೋಗವಿದ್ದು, ಪರಿಣಾಮವಾಗಿ ಅವರಿಗೆ ಕಾಲುಗಳು ಊದಿಕೊಂಡಿದ್ದವು. ದಿನಾಂಕ:10-06-2018 ರಂದು ಬೆಳಗಿನ ಜಾವ ಸುಮಾರು 03-00 ಗಂಟೆ ಸಮಯದಲ್ಲಿ ನನ್ನ ಗಂಡ ಸತೀಶ ರವರು ತಮ್ಮ ಬಲಗಾಲಿನಲ್ಲಿ ಊತವು ಜಾಸ್ತಿಯಾಗಿ ನೋವು ಹೆಚ್ಚಾಗಿದ್ದರಿಂದ ಬಿಸಿ ನೀರನ್ನು ಕಾಲಿಗೆ ಹಾಕಿಕೊಳ್ಳಲೆಂದು ನಿದ್ದೆಗಣ್ಣಿನಲ್ಲಿ ಚೆನ್ನಾಗಿ ಕಾದಿದ್ದ ಬಿಸಿ ನೀರನ್ನು ಬಲಗಾಲಿನ ಊತದ ಭಾಗಕ್ಕೆ ಹಾಕಿಕೊಂಡಿದ್ದು, ಪರಿಣಾಮವಾಗಿ ನನ್ನ ಗಂಡ ಸತೀಶ ರವರ ಬಲಗಾಲಿಗೆ ಬೊಬ್ಬೆಗಳಾದವು. ನಂತರ ಅದೇ ದಿವಸ ಬೆಳಿಗ್ಗೆ ಸುಮಾರು 05-00 ಗಂಟೆಗೆ ನಮ್ಮ ಮನೆಯ ಬಳಿ ಬಂದ ಆಂಬುಲೆನ್ಸ್‌ ನಲ್ಲಿ ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದೆವು. ನಂತರ ದಿನಾಂಕ: 14-06-2018 ರಂದು ತುಮಕೂರು ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿಗಳ ಸಲಹೆ ಮೇರೆಗೆ ನನ್ನ ಗಂಡ ಸತೀಶ ರವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದೆವು. ನಂತರ ಇದೇ ದಿವಸ ಅಂದರೆ ದಿನಾಂಕ: 25-06-2018 ರಂದು ಬೆಳಿಗ್ಗೆ ಸುಮಾರು 09-00 ಗಂಟೆ ಸಮಯದಲ್ಲಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನನ್ನ ಗಂಡ ಸತೀಶ್‌ ರವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ. ನನ್ನ ಗಂಡ ಸತೀಶ್‌ ರವರು ಅತಿಯಾದ ಬಿಸಿ ನೀರನ್ನು ಬಲಗಾಲಿನ ಮೇಲೆ ಹಾಕಿಕೊಂಡು ಗಾಯಗೊಂಡಿದ್ದು, ಚರ್ಮ ರೋಗದಿಂದ ಬಳಲುತ್ತಿದ್ದು ಹಾಗೂ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆಯೇ ವಿನಃ ಅವರ ಸಾವಿನಲ್ಲಿ ಯಾವುದೇ ಅನುಮಾನವಿರುವುದಿಲ್ಲ. ಆದ್ದರಿಂದ ಕಾನೂನು ರೀತ್ಯಾ ಮುಂದಿನ ಕ್ರಮ ಜರುಗಿಸಬೇಕೆಂದು ಈ ಮೂಲಕ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ. ನನ್ನ ಗಂಡ ಸತೀಶ ರವರ ಮೃತ ದೇಹವು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರದಲ್ಲಿರುತ್ತೆ ಎಂದು ನೀಡಿದ ದೂರನ್ನು ಪಡೆದು ಠಾಣಾ ಯು ಡಿ ಆರ್ ನಂ-09/2018 ಕಲಂ 174 ಸಿಆರ್‌ಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

ಹೊನ್ನವಳ್ಳಿ ಪೊಲೀಸ್‌  ಠಾಣೆ ಠಾಣಾ ಯು,ಡಿ,ಆರ್ ನಂ-15/2018 ಕಲಂ 174 ಸಿ,ಆರ್,ಪಿ,ಸಿ

ದಿನಾಂಕ:25.06.2018 ರಂದು ಬೆಳಿಗ್ಗೆ 9-00  ಗಂಟೆಗೆ ತಿಪಟೂರು ತಾ: ಹೊನ್ನವಳ್ಳಿ ಹೋಬಳಿ, ಕೋಡಿಹಳ್ಳಿ ಬೋವಿಕಾಲೋನಿ ವಾಸಿ ಮುನಿಯಮ್ಮ ಕೋಂ ವೆಂಕಟರಾಮ ರವರು  ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೆನೆಂದರೆ. ನನ್ನ ಗಂಡನಿಗೆ ನಾನು ಮತ್ತು  ನ್ನ ಅಕ್ಕ ಹೀರಮ್ಮ ಹೆಂಡತಿಯರಾಗಿರುತ್ತೇವೆ. ನನಗೆ ಇಬ್ಬರು ಗಂಡು ಮಕ್ಕಳಿದ್ದು ನಮ್ಮ ಅಕ್ಕನಿಗೂ ಇಬ್ಬರು ಮಕ್ಕಳಿದ್ದು. ನಾವೆಲ್ಲಾ ಒಂದೇ ಮನೆಯಲ್ಲಿ ವಾಸವಾಗಿದ್ದೇವು, ನನ್ನ ಗಂಡ ಶಿಕಾರಿಪುರ, ಶಿವಮೊಗ್ಗದ ಕಡೆ ಹೋಗಿ ಕೆಲಸ ಮಾಡುತ್ತಿದ್ದು, ನನ್ನ ಗಂಡ ವೆಂಕಟರಾಮ ಪ್ರತಿ ದಿನ ಬೆಳಿಗ್ಗೆಯಿಂದ  ರಾತ್ರಿಯವರೆಗೆ ಊಟ ತಿಂಡಿ ಮಾಡದೇ ಮಧ್ಯಪಾನ ಮಾಡಿಕೊಂಡಿದ್ದು, ಬಿಡು ಎಂದು ಬುದ್ದಿ ಹೇಳಿದರು ಅಬ್ಯಾಸ ಬಿಟ್ಟಿರುವುದಿಲ್ಲಾ, ಕೇಳಿದರೆ ಜಗಳ ಮಾಡಿತ್ತಿದ್ದರು, ಈಗ್ಗೆ ಸುಮಾರು 3 ತಿಂಗಳಿಂದ ಮಗಳ ಮನೆಯಲ್ಲಿಯೇ ಇದ್ದು ಕೆಲಸ ಮಾಡುತ್ತಿದ್ದರು, ದಿನಾಂಕ-24-06-2018 ರಂದು ಕೂಲಿಕೆಲಸಕ್ಕೆ ಹೋಗಿ ಸಂಜೆ ಮನೆಗೆ ಬಂದಾಗ ನನ್ನ ಗಂಡ ಪ್ರತಿ ದಿವಸದಂತೆ ವಿಪರೀತ ಕುಡಿದು ಊಟ ಮಾಡದೆ ಮನೆಯಲ್ಲಿ ಮಲಗಿದ್ದರು, ಈ ದಿವಸ ದಿನಾಂಕ-25-06-2018 ರಂದು ಸುಮಾರು 7-00 ಗಂಟೆಗೆ ನನ್ನ ಯಜಮಾನರು ಇನ್ನೂ ಎದ್ದಿಲ್ಲಾ  ಎಂತ ನೋಡಿದಾಗ ಮನೆಯ ಹೊರಗಡೆ ಮಲಗಿದ್ದರು ಬಾಯಿಯಲ್ಲಿ ಬಿಳಿ ನೊರೆ ಬರುತ್ತಿದ್ದು ಗಾಬರಿಯಾಗಿ ಅಕ್ಕ ಪಕ್ಕದವರ ಸಹಾಯದಿಂದ 108 ಅಂಬುಲೇನ್ಸ್‌ ಗೆ ಪೋನ್‌ ಮಾಡಿ ಕರೆಸಿಕೊಂಡು ತಿಪಟೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ, ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುತ್ತಾರೆ ಎಂದು ತಿಳಿಸಿರುತ್ತಾರೆ. ನನ್ನ ಗಂಡ ಪ್ರತಿದಿನ ವಿಪರೀತ ಕುಡಿದು ಊಟ ತಿಂಡಿ ಮಾಡದೇ ಮೃತ ಪಟ್ಟಿರುತ್ತಾನೆ, ವಿನಃ ಬೇರೆ ಯಾವುದೇ ಅನುಮಾನ  ಅನುಮಾನ ಇರುವುದಿಲ್ಲಾ. ಆದ್ದರಿಂದ ಮೃತಪಟ್ಟಿರುವ ಬಗ್ಗೆ ಮುಂದಿನ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಮ್ಮಲ್ಲಿ ಕೋರುತ್ತೇನೆ. ಎಂದು ನೀಡಿದ ಪಿರ್ಯಾದಿಯನ್ನು  ಪಡೆದು  ಠಾಣಾ ಯು,ಡಿ,ಆರ್ ನಂ-15/2018 ಕಲಂ 174 ಸಿ,ಆರ್,ಪಿ,ಸಿ ರಿತ್ಯಾ ಪ್ರಕರಣ ದಾಖಲಿಸಿರುತ್ತೇನೆ,

ಹುಳಿಯಾರು ಪೊಲೀಸ್ ಠಾಣಾ ಯು.ಡಿ.ಆರ್ ನಂ:10/2018, ಕಲಂ: 174 ಸಿ.ಆರ್.ಪಿ.ಸಿ.

ದಿನಾಂಕ:-25/06/2018 ರಂದು ಬೆಳಿಗ್ಗೆ 10-00 ಗಂಟೆಗೆ ಪಿರ್ಯಾದುದಾರರಾದ ಗೌರಮ್ಮ ಕೋಂ ದೊಡ್ಡಮಲ್ಲಯ್ಯ, ಮಲ್ಲಿಹಳ್ಳಿ, ಶ್ರೀರಾಂಪುರ ಹೋಬಳಿ, ಹೊಸದುರ್ಗ ತಾಲ್ಲೂಕು, ಚಿರ್ತದುರ್ಗ ಜಿಲ್ಲೆ ಇವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ನಮಗೆ ಒಬ್ಬ ಮಗ ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದು ಎಲ್ಲರಿಗೂ ಮದುವೆಯಾಗಿರುತ್ತೆ. ದಿನಾಂಕ 23/06/2018 ರಂದು ನಮ್ಮ ಸಂಬಂಧಿಕರಾದ ಹುಳಿಯಾರು ಹೋಬಳಿ ಕುರಿಹಟ್ಟಿ ಗ್ರಾಮದ ಬಸವರಾಜು ರವರ ಮಗನ ಮದುವೆಗೆ ನನ್ನ ಮಗ ವೆಂಕಟೇಶ 40 ವರ್ಷ ಮತ್ತು ಸೊಸೆ ಜಯಮ್ಮ ಹಾಗೂ ಮೊಮ್ಮಕ್ಕಳಾದ ದರ್ಶನ, ಮೈಲಾರಿ ಹೋಗಿದ್ದರು. ದಿನಾಂಕ 24/06/2018 ರಂದು ಮಧ್ಯಾಹ್ನ 01-00 ಗಂಟೆಗೆ ನನ್ನ ತಂಗಿಯ  ಮಗನಾದ ಕುಮಾರ ರವರು ಫೋನ್ ಮಾಡಿ ವೆಂಕಟೇಶ ಹುಳಿಯಾರು ಬಸ್ ನಿಲ್ದಾಣದಲ್ಲಿ ಮದ್ಯಪಾನ ಮಾಡಿ ಸಂಸಾರದ ವಿಚಾರದಲ್ಲಿ ಜಿಗುಪ್ಸೆಗೊಂಡು ಕಾಳಿಗೆ ಹಾಕುವ ಮಾತ್ರೆಯನ್ನು ನುಂಗಿರುತ್ತಾನೆ ಎಂದು ತಿಳಿಸಿದನು. ನಾನು ನಮ್ಮ ಸಂಬಂಧಿಕರು ಹಾಗು ನನ್ನ ಸೊಸೆ ಜಯಮ್ಮ ರವರು ನನ್ನ ಮಗ ವೆಂಕಟೇಶನನ್ನು ತುಮಕೂರಿನ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ನನ್ನ ಮಗ ವೆಂಕಟೇಶ ದಿನಾಂಕ:25/06/2018 ರಂದು ಬೆಳಿಗ್ಗೆ ಸುಮಾರು 07-00 ಗಂಟೆ ಸಮಯದಲ್ಲಿ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ. ನನ್ನ ಮಗ ವೆಂಕಟೇಶನಿಗೆ ಮದ್ಯಪಾನ ಮಾಡುವ ಹವ್ಯಾಸವಿದ್ದು ಸಂಸಾರದ ವಿಚಾರದಲ್ಲಿ ಜಿಗುಪ್ಸೆಗೊಂಡು ಕಾಳಿಗೆ ಹಾಕುವ ಮಾತ್ರೆಯನ್ನು ನುಂಗಿ ಮೃತಪಟ್ಟಿರುತ್ತಾನೆ ವಿನಾಃ ನನ್ನ ಮಗನ ಸಾವಿನಲ್ಲಿ ಯಾವುದೇ ಅನುಮಾನವಿರುವುದಿಲ್ಲ. ನನ್ನ ಮಗನ ಶವವು ತುಮಕೂರಿನ ಸರ್ಕಾರಿ ಆಸ್ಪತ್ರೆಯಲ್ಲಿದ್ದು ಮುಂದಿನ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಯು.ಡಿ ಪ್ರಕರಣ ದಾಖಲಸಿರುತ್ತೆ.Monday, 25 June 2018

ಅಪರಾಧ ಘಟನೆಗಳು 25-06-18

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣಾ ಯು.ಡಿ.ಆರ್  ನಂ 07/2018  ಕಲಂ  174 ಸಿ ಆರ್ ಪಿ ಸಿ.

ದಿನಾಂಕ:-24/06/2018 ರಂದು ರಾತ್ರಿ 08-30ಗಂಟೆಗೆ ಪಿರ್ಯಾದಿ ಮಹಾಲಿಂಗಯ್ಯ ತಿಪಟೂರು ತಾ ರವರು  ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ನನ್ನ ತಮ್ಮನಾದ ವೇದಮೂರ್ತಿ ರವರು ಜಮೀನಿನ ಹತ್ತಿರ ಕೆಲಸ ಮಾಡುತ್ತಿರುವಾಗ ನಮ್ಮ ಜಮೀನಿನಲ್ಲಿರುವ  ಪಂಪ್ ಸೆಟ್ ಗೆ ಬೇರೆ ಜಮೀನಿನಲ್ಲಿರುವ ವಿದ್ಯುತ್ ಕಂಬದಿಂದ ವಿದ್ಯುತ್ (ಮೈನ್ಸ್ ) ವೈರನ್ನು  ಎಳೆದುಕೊಂಡಿರುತ್ತದೆ,ಹೀಗಿರುವಾಗ ವೇದ ಮೂರ್ತಿರವರು ಕೆಲಸ ಮಾಡುತ್ತಿರುವಾಗ ಆಕಸ್ಮಿಕವಾಗಿ ವಿದ್ಯುತ್ ವೈರ್ ಅಸ್ವಸ್ಥಗೊಂಡಿದ್ದು ಈ ವೇಳೆಗಾಗಲೇ ಸ್ಥಳಕ್ಕೆ 108 ಆಂಬುಲೆನ್ಸ್ ಬಂದಿದ್ದು ಜೀವವಿರಬಹುದೆಂದು ತಿಳಿದು ತಿಪಟೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲು ತಂದಾಗ ವೈದ್ಯರು ವಿದ್ಯತ್ ಶಾಕ್ ನಿಂದ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ಎಂದು ಮುಂದಿನ ಕಾನೂನು ಕ್ರಮ ಜರುಗಿಸಿಬೇಕೆಂದು ಕೇಳಿಕೊಳ್ಳುತ್ತೇನೆ.ಎಂತ  ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಚೇಳೂರು  ಪೊಲೀಸ್  ಠಾಣಾ ಮೊ. ನಂ 110/2018 ಕಲಂ 323.324.504.506 (ಬಿ) ರೆ/ವಿ 34 ಐ.ಪಿ.ಸಿ.

ದಿನಾಂಕ;24/06/2018 ರಂದು ಮದ್ಯಾಹ್ನ 02-30 ಗಂಟೆಯ ಸಮಯದಲ್ಲಿ ಠಾಣಾ ಹೆಚ್,ಸಿ,- 319 ಮಂಜುನಾಥ್ ರವರು ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಗಾಯಾಳು  ಹೇಳಿಕೆಯನ್ನು ಪಡೆದು ತಂದು ಹಾಜರು ಪಡಿಸಿದ ಪಿರ್ಯಾದು ಅಂಶವೇನೆಂದರೆ, ಪಿರ್ಯಾದಿ ಪಟ್ಟರಾವತನಹಳ್ಳಿ  ತೋಟದ  ಮನೆಯಲ್ಲಿ ವಾಸವಾಗಿದ್ದು, ನಮ್ಮಗೆ ಸುಮಾರು 1¾ ಎಕರೆ ಜಮೀನು ಇದ್ದು ,ಇದರ ಪಕ್ಕದಲ್ಲಿ ಚಿಕ್ಕಣ್ಣನವರ ಜಮೀನು ಇದ್ದು ಕೂಡಿದ ಬದುವಾಗಿರುತ್ತದೆ, ನಮ್ಮ ಜಮೀನನ್ನು ಚಿಕ್ಕಣ್ಣನ ಮಗ ಉಮೇಶ್ ನು ಟ್ರಾಕ್ಟರ್ ನಿಂದ ಉಳುಮೆಯನ್ನು ದಿನಾಂಕ 23/06/2018 ರಂದು ಉಳುಮೆ ನಾಡಿದ್ದು, ಆಗ ನನಗೆ ಗೊತ್ತಾಗಿ ಸಂಜೆ ಸುಮಾರು 5-30 ಗಂಟೆಗೆ  ನಮ್ಮ ಮನೆಯ ಮುಂದೆ ಉಮೇಶ ಬಿನ್ ಚಿಕ್ಕಣ್ನ ನನ್ನು ಕೇಳಿದೆ ಆದಕ್ಕೆ ಅವನು  ಏನೋ ಸೋಳೆ  ಮಗನೆ ನನ್ನ ಜಮೀನು ಉಳುಮೆ ಮಾಡಲಿಕ್ಕೆ ನಿನ್ನ  ಕೇಳ ಬೇಕೆ ಎಂದು ಕೈಯಲ್ಲಿದ್ದ ದೋಣ್ಣೆಯಿಂದ ನನ್ನ ಎಡಗಾಲಿನ ತೊಡೆಯ ಭಾಗಕ್ಕೆ ಹೊಡೆದನು, ಆಗ ನನ್ನ ಕಾಲು ಹತೋಟಿಗೆ ಬರದೆ ಕೆಳಕ್ಕೆ ಬಿದ್ದೆನು,  ನನ್ನ ತೊಡೆ ಭಾಗ ಮುರಿದಂತೆ ನನಗೆ ಬಾಸವಾಯಿತು.  ಕೆಳಕ್ಕೆ ಬಿದ್ದೆನು.  ನನ್ನನು  ಕಾಲಿನಿಂದ ನನ್ನ ಎದೆಯ ಭಾಗಕ್ಕೆ ತುಳಿಕೊಂಡು ದೊಣ್ಣೆಯಿಂದ ನನ್ನ ಕೈಗಳಿಗೆ, ತಲೆಗೆ, ಕಾಲಿಗೆ ಹೊಡೆದನು,  ನಾನು ಕಿರುಚಾಟ ಕೇಳಿ ಮನೆಯ ಓಳಗೆ ಇದ್ದ  ನನ್ನ ಸೊಸೆ ಜಯಮ್ಮ ಬಿನ್ ಮಂಜುನಾಥ ಓಡಿ ಬಂದು ಬಿಡಿಸಿ ಕೊಳ್ಳಲು ಹೋದಳು, ಅವಳನ್ನು ಕೈಯಿಂದ ನೋಕಿ  ಏನೇ ಬೇವರ್ಸಿ ಮುಂಡೆ ಎಂದು ಕೈಯಲ್ಲಿ ಇದ್ದ ದೊಣ್ಣೆಯಿಂದ ಅವಳ ಕುಂಡಿಗೆ, ಬೆನ್ನಿಗೆ  ಹೊಡೆದನು, ಅವಳು ಕೂಗಿಕೊಂಡು ಈ ಕೂಗಾಟವನ್ನು ಕೇಳಿಸಿಕೊಂಡು ಚಿಕ್ಕಣ್ಣನ ಮತ್ತು ಅವನ ಮಗ ಗುರುರಾಜನು ಸಹ ಓಡಿ ಬಂದು ಉಮೇಶನಿಗೆ ಈ ನನ್ನ ಮಗನ್ನು ಬಿಡಿ ಬೇಡಿ ಇವತ್ತು ಸಾಯಿಸೇ ತೀರಬೇಕು ಎಂತ ಚಿಕ್ಕಣ್ಣ ನನ್ನ ಹೊಟ್ಟೆಗೆ ಒದ್ದನು ಕೈಗಳಿಂದ ನನ್ನ ತಲೆಗೆ ಮತ್ತು ಮುಖಕ್ಕೆ ಗುದ್ದಿದನು, ಗುರುರಾಜ ಅಲ್ಲೇ ಬಿದ್ದಿದ್ದ ಕಲ್ಲನ್ನು ಎತ್ತಿಕೊಂಡ ನನ್ನ ತಲೆಯ ಮೇಲೆ ಹಾಕಲು ಬಂದು ಈ ನನ್ನ ಮಕ್ಕಳನ್ನು ಸಾಯಿಸಿ ಜೈಲಿಗೆ ಹೋಗುತ್ತೇನೆ ಎಂದು ಕಿರುಚಾಡುತ್ತಿದ್ದನು, ಇದನ್ನು ಕೇಳಿಸಿ ಕೊಂಡು ಪಕ್ಕದ ತೋಟದ ಕಾಂತರಾಜು ಬಿನ್ ದೊಡ್ಡರಾಮಯ್ಯರವರು ಓಡಿ ಬಂದು ಮೂರು ಜನರನ್ನು  ನನ್ನನ್ನು  ಬಿಡಿಸಿ ಕಲ್ಲು ಮತ್ತು ದೊಣ್ಣೆಯನ್ನು ಕಿತ್ತು ಕೊಂಡರು ಅವರನ್ನು ಕಳುಹಿಸಿದರು.  ನಂತರ ನನಗೆ ಉಪಚರಿಸಿ ನನ್ನ ಸೊಸೆಯನ್ನು ಸಹ ಉಪಚರಿಸಿದರು. ಅಷ್ಟರಲ್ಲಿ ನನ್ನ ಮಗ ಮಂಜುನಾಥ  ಬಂದು  108  ಆಂಬುಲೆನ್ಸ್ ಗೆ  ಪೋನ್  ಮಾಡಿ  ಕರೆಸಿಕೊಂಡು  ನಂತರ  ಹೆಚ್ಚಿನ  ಚಿಕಿತ್ಸೆಗಾಗಿ  ತುಮಕೂರು  ಜಿಲ್ಲಾ  ಆಸ್ಪತ್ರೆಗೆ ಕರೆತಂದು ಒಳರೋಗಿಯಾಗಿ ಸೇರಿಸಿ ಚಿಕಿತ್ಸೆ  ನೀಡಿರುತ್ತಾರೆ.  ಈ ಘಟನೆಗೆ  ಚಿಕ್ಕಣ್ಣ, ಉಮೇಶ  ಮತ್ತು  ಗುರುರಾಜ ಕಾರಣರಾಗಿರುತ್ತಾರೆ.  ಇವರ  ಮೇಲೆ  ಕಾನೂನು  ರೀತ್ಯ  ಕ್ರಮ  ಜರುಗಿಸಬೇಕೆಂದು  ಕೋರಿ  ಇತ್ಯಾದಿಯಾದ  ಪಿರ್ಯಾದು ಅಂಶ.Sunday, 24 June 2018

ಅಪರಾಧ ಘಟನೆಗಳು 24-06-18

ಹೊನ್ನವಳ್ಳಿ ಪೊಲೀಸ್‌  ಠಾಣೆ ಠಾಣಾ ಮೊ ನಂ 41/2018 ಕಲಂ:279.337. ಐಪಿಸಿ

ದಿನಾಂಕ: 23/062018 ರಂದು  ಸಂಜೆ 4-00 ಗಂಟೆಗೆ  ಪಿರ್ಯಾದಿ ಸಂತೋಷ್ ಕುಮಾರ್.ಹೆಚ್.ಎಂ. ಬಿನ್ ಮಲ್ಲಿಕಾರ್ಜುನಯ್ಯ, 29 ವರ್ಷ, ಉಪ್ಪಾರರ ಜನಾಂಗ, ಡ್ರೈವರ್ ಕೆಲಸ. ಹೊನ್ನವಳ್ಳಿ ಗ್ರಾಮದ ಕುಂಬಾರ ಬೀದಿ, ಹೊನ್ನವಳ್ಳಿ ಹೋಬಳಿ, ತಿಪಟೂರು ತಾಲ್ಲೂಕು,  ಏನೆಂದರೆ, ದಿನಾಂಕ: 20-06-2018 ರಂದು ಸಂಜೆ ನಾನು ಮತ್ತು ನಮ್ಮ ತಂದೆ ಮಲ್ಲಿಕಾರ್ಜುನಯ್ಯ ಇಬ್ಬರು ನಮ್ಮ ತೋಟದ ಹತ್ತಿರ ಹೋಗಿದ್ದು, ಕೆಲಸ ಮುಗಿಸಿಕೊಂಡು ರಾತ್ರಿ ಸುಮಾರು 7-30 ಗಂಟೆ ಸಮಯದಲ್ಲಿ ಮನೆಗೆ ಹೋಗಲೆಂದು ಹೊನ್ನವಳ್ಳಿಯ ಬಾಲಾಜಿ ವೈನ್ಸ್ ಸ್ಟೋರ್ ಮುಂಭಾಗದ ಬಿದರೆಗುಡಿ-ಹುಳಿಯಾರು ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ನಮ್ಮ ಹಿಂದಿನಿಂದ ಅಂದರೆ ಹೊನ್ನವಳ್ಳಿ ಬಸ್ ನಿಲ್ದಾಣದ ಕಡೆಯಿಂದ ಬಂದ ಒಂದು ಬೈಕಿನ ಚಾಲಕ, ಹಿಂಬದಿಯಲ್ಲಿ ಒಬ್ಬ ಹುಡುಗನನ್ನು ಕೂರಿಸಿಕೊಂಡು ಬೈಕನ್ನು ವೇಗವಾಗಿ ಓಡಿಸಿಕೊಂಡು ಬಂದು ನಮ್ಮ ತಂದೆಗೆ ಡಿಕ್ಕಿ ಹೊಡೆಸಿ ಅಪಘಾತ ಪಡಿಸಿದ ಪರಿಣಾಮ ನಮ್ಮ ತಂದೆ ಕೆಳಗೆ ಬಿದ್ದು ತಲೆಗೆ, ಬಲಗಾಲು ಕಣಕಾಲಿಗೆ, ಬಲಸೊಂಟಕ್ಕೆ, ಎಡಗಾಲು ಮಂಡಿಯ ಹತ್ತಿರ ಪೆಟ್ಟು ಗಾಯಗಳಾಗಿರುತ್ತೆ. ಮತ್ತು ಅಪಘಾತ ಪಡಿಸಿದ ಬೈಕು ಸಹ ಕೆಳಗೆ ಬಿದ್ದಿದ್ದು ಬೈಕಿನ ಹಿಂಬದಿಯಲ್ಲಿ ಕುಳಿತಿದ್ದ ಹುಡುಗನ ಬಲಕೆನ್ನೆಗೆ ಪೆಟ್ಟು ಬಿದ್ದು ಗಾಯವಾಗಿರುತ್ತೆ. ಬೈಕಿನ ಹಿಂಬದಿಯಲ್ಲಿ ಕುಳಿತಿದ್ದ ಹುಡುಗನ ಹೆಸರು ವಿಳಾಸ ಕೇಳಲಾಗಿ ಯುವರಾಜ ಬಿನ್ ಪ್ರೇಮಕುಮಾರ, 17 ವರ್ಷ, ಸರ್ಪ ವಕ್ಕಲಿಗರು, ಹನುಮಂತಪುರ, ಹೊನ್ನವಳ್ಳಿ ಹೋಬಳಿ, ಎಂದು ಮತ್ತು ಬೈಕ್ ಓಡಿಸುತ್ತಿದ್ದವನು ಚಿಕ್ಕನಾಯಕನಹಳ್ಳಿ ತಾಲ್ಲೂಕು, ಹಂದನಕೆರೆ ಹೋಬಳಿಯ ಬೆಳಗುಲಿ ಗ್ರಾಮದ ಕಾಂತರಾಜು ರವರ ಮಗ ಸಂತೋಷ್.ಬಿ.ಕೆ ಎಂದು ತಿಳಿಯಿತು. ಅಪಘಾತ ಪಡಿಸಿದ ಬೈಕ್ ನಂಬರ್ ನೋಡಲಾಗಿ ಕೆಎ-02, ಹೆಚ್ ಜಿ-5692 ನಂಬರಿನ ಸ್ಪ್ಲೆಂಡರ್ ಪ್ಲಸ್ ಬೈಕಾಗಿರುತ್ತೆ. ನಂತರ ಗಾಯಗೊಂಡಿದ್ದ ನಮ್ಮ ತಂದೆ ಮಲ್ಲಿಕಾರ್ಜುನಯ್ಯ ಮತ್ತು ಯುವರಾಜನನ್ನು ಉಪಚರಿಸಿ, ಯಾವುದೋ ಒಂದು ಕಾರಿನಲ್ಲಿ ತಿಪಟೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ, ನಂತರ ನಮ್ಮ ತಂದೆಯನ್ನು ವೈದ್ಯರ ಸಲಹೆಯ ಮೇರೆಗೆ ಅದೇ ದಿನ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ, ದಿನಾಂಕ: 21-06-2018 ರಂದು ಮತ್ತೆ ವಾಪಸ್ ತಿಪಟೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಸಿ ಚಿಕಿತ್ಸೆ ಕೊಡಿಸುತ್ತಿರುತ್ತೇನೆ. ನಮ್ಮ ತಂದೆಯನ್ನು ಆಸ್ಪತ್ರೆಯಲ್ಲಿ ಯಾರು ನೋಡಿಕೊಳ್ಳುವವರು ಇಲ್ಲದೇ ಇದ್ದುದರಿಂದ ನಾನೇ ಇದುವರೆವಿಗೂ ಅವರ ಯೋಗಕ್ಷೇಮ ನೋಡಿಕೊಂಡು ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದು, ನಮ್ಮ ತಂದೆಗೆ ಅಪಘಾತ ಉಂಟು ಮಾಡಿದ ಕೆಎ-02, ಹೆಚ್ ಜಿ-5692 ಸ್ಪ್ಲೆಂಡರ್ ಪ್ಲಸ್ ಬೈಕಿನ ಚಾಲಕ ಸಂತೋಷ್.ಬಿ.ಕೆ ರವರ ಮೇಲೆ ಸೂಕ್ತ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ ಪಿರ್ಯಾದಿ  ಪಡೆದು ಠಾಣಾ ಮೊ ನಂ 41/2018 ಕಲಂ:279.337. ಐಪಿಸಿ ಆಕ್ಟ್‌ ರೀತ್ಯಾ ಪ್ರಕರಣ ದಾಖಲು ಮಾಡಿರುತ್ತೆನೆ

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ ನಂ 49/2018 ಕಲಂ 279 ಐ.ಪಿ.ಸಿ

ದಿನಾಂಕ 23-06-2018 ರಂದು ಮದ್ಯಾಹ್ನ 01-30 ಗಂಟೆಗೆ ಪಿರ್ಯಾದಿ  ಗೋವರ್ಧನ್ ಬಿನ್ ಸುಬ್ಬಯ್ಯ 31 ವರ್ಷ, ಅನಂತಪುರ ಟೌನ್, ಆಂಧ್ರಪ್ರದೇಶ ರವರು ಠಾಣೆಗೆ ಹಾಜರಾಗಿ ನೀಡಿದ ಪಿರ್ಯಾದಿ ಅಂಶವೇನೆಂದರೆ, ದಿನಾಂಕ-23/06/2018 ರಂದು ನಮ್ಮ ಕಂಪೆನಿಯ ಕಾರಾದ KA-04-MU 3089 ನೇ SkODA RAPID ಕಾರಿನಲ್ಲಿ ಕಾರಿಗೆ ಚಾಲಕನಾಗಿ ವೆಂಕಟಚಲಪತಿ ರವರು ಕಾರು ಚಾಲನೆ ಮಾಡುತ್ತಿದ್ದು, ಕಾರಿನಲ್ಲಿ ನಾನು, ಹರಿಕುಮಾರ್ ರವರೊಂದಿಗೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೋಗಲು ಹೋಗುತ್ತಿರುವಾಗ ಬೆಳಗ್ಗೆ 8-00 ಗಂಟೆ ಸಮಯದಲ್ಲಿ ಮಡೇನೂರು ಗೇಟ್ ಹತ್ತಿರ NH-206 ರಸ್ತೆಯಲ್ಲಿ ಕಾರಿನ ಚಾಲಕನಾದ ವೆಂಕಟಚಲಪತಿರವರು ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ರಸ್ತೆಯ ಎಡಭಾಗದ ಬದಿಯಲ್ಲಿರುವ ಮರಕ್ಕೆ ಡಿಕ್ಕಿ ಹೊಡೆಸಿರುತ್ತಾರೆ. ಕಾರು ಜಖಂಗೊಂಡಿರುತ್ತೆ. ಕಾರಿನಲ್ಲಿದ್ದವರಿಗೆ ಯಾವುದೇ ಗಾಯಗಳಾಗಿರುವುದಿಲ್ಲ. ಈ ಅಪಘಾತಕ್ಕೆ ಕಾರಣರಾದ KA-04-MU 3089 ನೇ ಕಾರಿನ ಚಾಲಕ ವೆಂಕಟಚಲಪತಿ ರವರ ಮೇಲೆ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ಎಂತ ನೀಡಿದ ಪಿರ್ಯಾದಿ ಪಡೆದು ಠಾಣಾ ಮೊ ನಂ 49/2018 ಕಲಂ 279 ಐ.ಪಿ.ಸಿ ರೀತ್ಯಾ ಕೇಸು ದಾಖಲಿಸಿರುತ್ತದೆ.


Page 1 of 4
Start
Prev
1

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 87 guests online
Content View Hits : 321525