lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿ 19.04.18 ಪೊಲೀಸ್ ಇಲಾಖೆಯು ಈ ಮೂಲಕ ಸಾರ್ವಜನಿಕರಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ: 15-05-2018 ರಂದು ತುಮಕೂರು ನಗರದ ವಿಶ್ವವಿದ್ಯಾನಿಲಯ ಕಲಾ... >>     ಪತ್ರಿಕಾ ಪ್ರಕಟಣೆ. ದಿನಾಂಕ: 10-05-2018 8 ಲಕ್ಷ ಬೆಲೆ ಬಾಳುವ ಮೊಬೈಲ್ ಮತ್ತು  ವಾಹನ ಕಳ್ಳರ... >> ಪತ್ರಿಕಾ ಪ್ರಕರಣೆ, ದಿನಾಂಕ: 07-05-18 ವಾರಸುದಾರರಿಲ್ಲದ 2,98,01,000/- ರೂ  ಹಣ ಪತ್ತೆ     ದಿನಾಂಕ:... >> ಪತ್ರಿಕಾ ಪ್ರಕಟಣೆ:- -:ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿಯ ಬಂಧನ:- ದಿನಾಂಕ :... >> ಪತ್ರಿಕಾ ಪ್ರಕಟಣೆ ದಿಃ25-04-2018. ದಿನಾಂಕ:24-04-2018 ರ ರಾತ್ರಿ 3 ಜನ ಅನುಮಾನಸ್ಪದ ವ್ಯಕ್ತಿಗಳು... >> ಪತ್ರಿಕಾ ಪ್ರಕಟಣೆ ದಿನಾಂಕ: 21-04-2018. ಕೊಲೆ ಆರೋಪಿಯ ಬಂಧನ:   ಹೆಬ್ಬೂರು ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 17.04.2018 ತುಮಕೂರು ಜಿಲ್ಲಾ ಪೊಲೀಸರ ಭರ್ಜರಿ ಬೇಟೆ: 65 ಕೆ.ಜಿ.... >> : ಪತ್ರಿಕಾ ಪ್ರಕಟಣೆ : ದಿನಾಂಕ:- 16-04-2018 ದಿನಾಂಕ;- 14-04-18 ರಂದು ರಾತ್ರಿ  2018 ರ ವಿಧಾನಸಭಾ... >> -: ಪತ್ರಿಕಾ ಪ್ರಕಟಣೆ :- ಈ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡುವುದೇನೆಂದರೆ,... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< May 2018 >
Mo Tu We Th Fr Sa Su
  1 2 3 4 5 6
7 8 9 10 11 12 13
14 15 16 17 18 19 20
21 22 23 24 26 27
28 29 30 31      
May 2018

Friday, 25 May 2018

ಅಪರಾಧ ಘಟನೆಗಳು 25-05-18

ತಿಪಟೂರು ನಗರ ಪೊಲೀಸ್ ಠಾಣಾ ಮೊ.ನಂ - 78/2018 ಕಲಂ: 143, 323, 324, 354, 504, 506 ರೆ/ವಿ 149 ಐಪಿಸಿ

ದಿನಾಂಕ:24/05/2018 ರಂದು ರಾತ್ರಿ 11-00 ಗಂಟೆಯಿಂದ 11-30 ಗಂಟೆಯವರೆಗೆ ತಿಪಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು  ಆಲಿಂಪಾಷ ಬಿನ್‌ ಸಲೀಂಪಾಷ, 24 ವರ್ಷ, ಕೂಲಿ ಕೆಲಸ, ಮುಸ್ಲಿಂ ಜನಾಂಗ, ಬೋವಿಕಾಲೋನಿ, 1ನೇ ಕ್ರಾಸ್‌, ಗಾಂಧಿನಗರ,  ತಿಪಟೂರು ಟೌನ್‌ ರವರು ನೀಡಿದ ಲಿಖಿತ ಹೇಳಿಕೆ ಅಂಶವೇನೆಂದರೆ, ಈ ದಿನ ದಿನಾಂಕ:24-05-2018 ರಂದು ಸಂಜೆ 04 ಗಂಟೆ ಸಮಯದಲ್ಲಿ ಕರಿಬಸಪ್ಪ ಕಾಲೋನಿ ಬಳಿ ಯೂಸಫ್‌‌ ರವರಿಗೂ  ಅಝಗರ್‌, ಖುದ್ದೂಸ್‌, ಇಮ್ರಾನ್‌, ಅಪ್ಪು, ದಸ್ತಗಿರ್‌ ಇತರೆಯವರ ಜೊತೆ ಸೇರಿಕೊಂಡು ಗಲಾಟೆ ಮಾಡಿದ್ದು, ಇದೇ ಗಲಾಟೆ ದ್ವೇಷದಿಂದ ಈ ದಿನ ರಾತ್ರಿ ಸುಮಾರು 10 ಗಂಟೆ ಸಮಯದಲ್ಲಿ ಗಾಂಧಿನಗರದ ಬೋವಿಕಾಲೋನಿ 2ನೇ ಕ್ರಾಸ್‌ನಲ್ಲಿ ಇರುವ ನಮ್ಮ ತಂದೆಯ ತಂಗಿ ಹಸೀನಾಬಾನುರವರ ಮನೆಯ ಬಳಿ ಮೇಲ್ಕಂಡ 5 ಜನ ಅಸಾಮಿಗಳು ಇತರೆಯವರೊಂದಿಗೆ ಅಕ್ರಮವಾಗಿ ಗುಂಪು ಕಟ್ಟಿಕೊಂಡು ಬಂದು ನಮ್ಮ ಅಪ್ಪನ ತಂಗಿ ಹಸೀನಾಬಾನು ರವರನ್ನು ಲೋಫರ್‌ಮುಂಡೆ, ಸುವರ್‌ಮುಂಡೆ ಎಂತ ಕೆಟ್ಟ ಮಾತುಗಳಿಂದ ಬೈದು ಅವರು ಕೇಳಿದ್ದಕ್ಕೆ ಅವರನ್ನು ಮೇಲ್ಕಂಡ 5 ಜನರು ಹಿಡಿದುಕೊಂಡು ಬಟ್ಟೆಯನ್ನು ಹಿಡಿದು ಎಳೆದಾಡಿ ಮಾನಭಂಗಕ್ಕೆ ಪ್ರಯತ್ನಿಸಿದರು. ಅಷ್ಟರಲ್ಲಿ ನಾನು ನಮ್ಮ ತಂದೆ ಹೋಗಿ ಕೇಳಲು ಹೋದಾಗ ದಸ್ತಗಿರ್‌ ಎಂಬುವನು ಕಬ್ಬಿಣದ ರಾಡಿನಿಂದ ನನ್ನ ಹಣೆಗೆ ಹೊಡೆದು ರಕ್ತಗಾಯಪಡಿಸಿದ ನಂತರ ನಮ್ಮ ತಂದೆಗೆ ಅಝಗರ್, ಇಮ್ರಾನ್‌, ಖುದ್ದೂಸ್‌ ರವರು ಸಹ ಕಬ್ಬಿಣದ ರಾಡಿನಿಂದ ನಮ್ಮ ತಂದೆ ಸಲೀಂಪಾಷ ರವರಿಗೆ ತಲೆಗೆ, ಮೈ ಕೈಗೆ ಹೊಡೆದು ಗಾಯಪಡಿಸಿರುತ್ತಾರೆ.ನಂತರ ಅಲ್ಲಿಗೆ ಬಂದ ಯೂಸಫ್‌ ಹಾಗೂ ಶಬ್ಬೀರ್ ಮತ್ತು ಬಿಲಾಲ್‌ ಇತರೆಯವರು ಈ ಗಲಾಟೆಯನ್ನು ಬಿಡಿಸಿದರು. ನಂತರ ಮೇಲ್ಕಂಡ 5 ಜನರು ಹೋಗುವಾಗ ನಿಮ್ಮನ್ನು ಇಷ್ಟಕ್ಕೆ ಬಿಡುವುದಿಲ್ಲ ಕೊಲೆ ಮಾಡುತ್ತೇನೆಂತ ಕೊಲೆ ಬೆದರಿಕೆ ಹಾಕಿದರು, ನಂತರ ಬಿಲಾಲ್‌ ಹಾಗೂ ಯೂಸಫ್‌ ರವರು ನಮ್ಮನ್ನು ಚಿಕಿತ್ಸೆಗೆ ತಿಪಟೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಸಿದರು. ಆದ್ದರಿಂದ ಈ ಗಲಾಟೆ ಮಾಡಿದ ಮೇಲ್ಕಂಡ 5 ಜನರ ಮೇಲೆ ಕಾನೂನು ಕ್ರಮ ಜರುಗಿಸಬೇಕಂತ ನೀಡಿದ ಹೇಳಿಕೆ ಪಡೆದು ಪ್ರಕರಣ ದಾಖಲಿಸಿರುತ್ತೆ.

ತಿಪಟೂರು ನಗರ ಪೊಲೀಸ್ ಠಾಣಾ ಮೊ.ನಂ - 79/2018 ಕಲಂ:323,324,354504,506 R/W 34 IPC

ದಿನಾಂಕ:24/25-05-2018 ರಂದು ರಾತ್ರಿ 11-30 ಗಂಟೆಯಿಂದ 00-10 ಗಂಟೆಯವರೆಗೆ ತಿಪಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು  ಶ್ರೀಮತಿ ಶಬೀನಾತಾಜ್‌ ಕೋಂ ಇಮ್ರಾನ್‌‌ಖಾನ್‌, 23 ವರ್ಷ, ಗೃಹಿಣಿ, ಮುಸ್ಲಿಂ ಜನಾಂಗ, 2ನೇ ಕ್ರಾಸ್‌, ಬೋವಿಕಾಲೋನಿ, ಗಾಂಧಿನಗರ,  ತಿಪಟೂರು ಟೌನ್‌ ರವರು ನೀಡಿದ ಲಿಖಿತ ಹೇಳಿಕೆ ಅಂಶವೇನೆಂದರೆ, ದಿನಾಂಕ:24-05-2018 ರಂದು ಮಧ್ಯಾನ್ಹ ಸುಮಾರು 4 ಗಂಟೆ ಸಮಯದಲ್ಲಿ ಗಾಂಧಿನಗರದ ಕರಿಬಸಪ್ಪ ಕಾಲೋನಿ ಬಳಿ ಯೂಸಫ್‌, ನನ್ನ ಗಂಡ ಇಮ್ರಾನ್‌ಖಾನ್‌ ಹಾಗೂ ಇತರೆಯವರಿಗೂ ಗಲಾಟೆಯಾಗಿದ್ದು, ಇದೇ ವಿಚಾರವಾಗಿ ಅದೇ ದ್ವೇಷವನ್ನು ಇಟ್ಟುಕೊಂಡು ಈ ದಿನ ರಾತ್ರಿ ಸುಮಾರು 10-15 ಗಂಟೆ ಸಮಯದಲ್ಲಿ ಮನೆಗೆ ಬಳಿ ಇದ್ದಾಗ ಗಾಂಧಿನಗರದ ಯೂಸಫ್‌, ಬಿಲಾಲ್‌, ಸಲೀಂ ಹಾಗೂ ಹಸೀನಾ ಬಾನು ಇರವರುಗಳು ನಮ್ಮ ಮನೆಯ ಬಳಿ ಬಂದು ಏಕಾಏಕೀ ಜಗಳ ತೆಗೆದು ಲೋಫರ್‌ ಮುಂಡೇರ, ಸುವರ್‌ ಮುಂಡೇರ ಅಂತ ಕೆಟ್ಟ ಮಾತುಗಳಿಂದ ಬೈದರು. ಆಗ ನಾನು ಶಾಕೀರಾಬೀ, ಶಬೀನಬಾನು ಹಾಗೂ ಫಾತಿಮಾ ಖಾನಂ ರವರುಗಳು ಏಕೆ ಜಗಳ ಮಾಡುತ್ತೀರ ಎಂದು ಕೇಳಿದಾಗ ಯೂಸಫ್‌ ರವರು ಒಂದು ಕಲ್ಲಿನಿಂದ ಮೂಗಿನ ಮೇಲ್ಬಾಗಕ್ಕೆ ಹೊಡೆದು ರಕ್ತಗಾಯಪಡಿಸಿದರು, ನಂತರ ನಮ್ಮ ಜೊತೆ ಯಲ್ಲಿದ್ದ ಶಾಕೀರಾಬೀ ರವರಿಗೆ ಹಸೀನಾಬಾನು ಪರಕೆಯಿಂದ ಪಕ್ಕೆಗೆ ಹೊಡೆದು ನೊವುಂಟು ಮಾಡಿದರು ಹಾಗೂ ಶಬೀನಾಖಾನಂ ಹಾಗೂ ಫರ್ಹತ್‌ಖಾನಂ ರವರಿಗೆ ಯೂಸಫ್‌‌, ಸಲೀಂ, ಹಸೀನಾಬಾನು ಹಾಗೂ ಬಿಲಾಲ್‌ ರವರು ಕೈಯಿಂದ ಮೈಕೈಗೆ ಹೊಡೆದು ಕಾಲಿನಿಂದ ಒದ್ದು ನೋವುಂಟು ಮಾಡಿದರು. ಹಾಗಗೂ ಬಿಡಿಸಲು ಬಂದ ಅಝಗರ್‌ ರವರಿಗೆ ಯೂಸಫ್‌‌, ಬಿಲಾಲ್‌ ರವರು ನೆಲಕ್ಕೆ ಕೆಡವಿ ದೊಣ್ಣೆಯಿಂದ ಕೈ ಮತ್ತು ಮೈಗೆ ಹೊಡೆದು ನೋವುಂಟು ಮಾಡಿದರು. ಯೂಸಫ್‌, ಸಲೀಂ ರವರು ನನಗೆ ಮತ್ತು ಶಾಕೀರಾಬೀ ಹಾಗೂ ಶಬನಾಖಾನಂ ರವರನ್ನು ಹಿಡಿದು ಎಳೆದಾಡಿ ಮಾನಭಂಗಕ್ಕೆ ಪ್ರಯತ್ತಿಸಿದರು. ನಂತರ ಅಲ್ಲಿಗೆ ಬಂದ ಫಾತಿಮಾಖಾನಂ ಕೋಂ ಇರ್ಫಾನ್‌, ಇರ್ಫಾನ್‌ ಬಿನ್‌ ಮಹಮ್ಮದ್‌ಗೌಸ್‌ ಹಾಗೂ ಇತರೆಯವರು ಸೇರಿಕೊಂಡು ಗಲಾಟೆ ಬಿಡಿಸಿ ನಮ್ಮನ್ನು ಚಿಕಿತ್ಸೆಗಾಗಿ ತಿಪಟೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಸಿರುತ್ತಾರೆ. ಆದ್ದರಿಂದ ಈ ಗಲಾಟೆ ಮಾಡಿದ ಮೇಲ್ಕಂಡ ಯೂಸಫ್‌, ಹಸೀನಾಬಾನು, ಸಲೀಂ ಹಾಗೂ ಬಿಲಾಲ್‌ ರವರ  ಮೇಲೆ ಕಾನೂನು ರೀತಿಯಕ್ರಮ ಜರುಗಿಸಬೇಕಂತ ನೀಡಿದ ಹೇಳಿಕೆಯನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಹುಳಿಯಾರು ಪೊಲೀಸ್ ಠಾಣಾ ಮೊ.ನಂ 63/2018, ಕಲಂ: 279, 304(A) IPC.

ದಿನಾಂಕ 24/05/2018 ರಂದು ಸಂಜೆ 07-00 ಗಂಟೆಗೆ ಪಿರ್ಯಾದುದಾರರಾದ ಅನಂತಕುಮಾರ್ ಬಿನ್ ಲಕ್ಷ್ಮಯ್ಯ, ವಿಜಯನಗರ ಬಡಾವಣೆ, ಹುಳಿಯಾರು ಟೌನ್, ಚಿಕ್ಕನಾಯಕನಹಳ್ಳಿ ತಾಲ್ಲೂಕು ಇವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ನಮ್ಮ ತಂದೆ ಲಕ್ಷ್ಮಯ್ಯ ಸುಮಾರು 58 ಇವರು ದಿನಾಂಕ:24/05/2018 ರಂದು ಸಂಜೆ 05-00 ಗಂಟೆ ಸಮಯದಲ್ಲಿ ಕೆ.ಎ-44 ಕ್ಯೂ-1445 ನೇ ಟಿ.ವಿ.ಎಸ್ ಎಕ್ಸ್.ಎಲ್ ಹೆವಿಡ್ಯೂಟಿ ದ್ವಿಚಕ್ರ ವಾಹನದಲ್ಲಿ ತರಕಾರಿ ತರಲು ಮನೆಯಿಂದ ಹೋಗಿದ್ದು, ಇದೇ ದಿನ ಸಂಜೆ 05-45 ಗಂಟೆ ಸಮಯದಲ್ಲಿ ನಮ್ಮ ಚಿಕ್ಕಪ್ಪರವರಾದ ಶಂಕರಪ್ಪ ರವರು ನನಗೆ ಫೋನ್ ಮಾಡಿ ನಿಮ್ಮ ತಂದೆ ಲಕ್ಷ್ಮಯ್ಯ ರವರು ಹುಳಿಯಾರು ಟೌನ್ ಐ.ಬಿ ಕಡೆಯಿಂದ ಹುಳಿಯಾರು ಬಸ್ ನಿಲ್ದಾಣದ ಕಡೆಗೆ ಸಂಜೆ ಸುಮಾರು 05-30 ಗಂಟೆ ಸಮಯದಲ್ಲಿ ಹೋಗುವಾಗ ಪೆಟ್ರೋಲ್ ಬಂಕ್ ಕಡೆಯಿಂದ ಬಂದ ಕೆ.ಎ 02 ಎ.ಇ 9144 ನೇ ಟ್ಯಾಂಕರ್ ಲಾರಿಯ ಚಾಲಕ ತನ್ನ ಲಾರಿಯನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು, ಮುಂದೆ ಹೋಗುತ್ತಿದ್ದ ಲಕ್ಷ್ಮಯ್ಯ ರವರ ಟಿ.ವಿ.ಎಸ್ ಎಕ್ಸ್.ಎಲ್ ಗೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿ ಲಕ್ಷ್ಮಯ್ಯನವರ ತಲೆಯ ಮೇಲೆ ಲಾರಿ ಚಕ್ರ ಹತ್ತಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆಂದು ಫೋನ್ ಮೂಲಕ ತಿಳಿಸಿದರು. ನಾನು ತಕ್ಷಣ ಸ್ಥಳಕ್ಕೆ ಬಂದು ನೋಡಲಾಗಿ ನನ್ನ ತಂದೆಯ ತಲೆಗೆ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದರು. ನಂತರ ಸ್ಥಳದಲ್ಲಿ ನನ್ನ ಚಿಕ್ಕಪ್ಪ ಮತ್ತು ನನಗೆ ಪರಿಚಯವಿದ್ದ ಹುಳಿಯಾರಿನ ವೆಂಕಟೇಶ್ ಬಿನ್ ರಾಮಣ್ಣ ಹಾಗೂ ಇತರರು ನನ್ನ ತಂದೆಯ ಶವವನ್ನು ಹುಳಿಯಾರು ಆಸ್ಪತ್ರೆಯ ಶವಗಾರದಲ್ಲಿಟ್ಟು, ನಮ್ಮ ತಂದೆಗೆ ಅಪಘಾತ ಪಡಿಸಿದ ಕೆ.ಎ-02 ಎ.ಇ-9144 ನೇ ಟ್ಯಾಂಕರ್ ಲಾರಿ ಚಾಲಕನ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

ಅಮೃತೂರು ಪೊಲೀಸ್‌ ಠಾಣಾ ಮೊನಂ-101/2018, ಕಲಂ-392 ಐಪಿಸಿ

ದಿನಾಂಕ: 24-05-2018 ರಂದು ಮದ್ಯಾಹ್ನ 3-05 ಗಂಟೆಯಲ್ಲಿ ಪಿರ್ಯಾದಿ ಶ್ರೀಮತಿ ವೆಂಕಟಲಕ್ಷ್ಮಮ್ಮ ಕೋಂ ಲೇಟ್ ಎ.ಟಿ.ಗೋಪಾಲ, 47 ವರ್ಷ, ಒಕ್ಕಲಿಗರು, ಜಿರಾಯ್ತಿ, ಪೇಟೆ ಬೀದಿ, ಅಮೃತೂರು ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ, ದಿನಾಂಕ: 24-05-2018 ರಂದು ನಾನು ಅಮೃತೂರಿನಿಂದ ಶಾನುಬೋಗನಹಳ್ಳಿ ಗ್ರಾಮದ ರಸ್ತೆಯ ಪಕ್ಕದಲ್ಲಿ ಇರುವ ಅಮೃತೂರು ಟೌನ್‌‌ನ ಮರಳೂರಪ್ಪ ರವರ ತೆಂಗಿನ ತೋಟದ ಪಕ್ಕದಲ್ಲಿ ನಮ್ಮ ಹಸುಗಳನ್ನು ಮೇಹಿಸುತ್ತಿದ್ದಾಗ ಮದ್ಯಾಹ್ನ ಸುಮಾರು 2-00 ಗಂಟೆ ಸಮಯದಲ್ಲಿ ಯಾರೋ ಇಬ್ಬರು ಹುಡುಗರು ಒಂದು ಬೈಕಿನಲ್ಲಿ ಅಮೃತೂರು ಕಡೆಯಿಂದ ಬಂದು ರಸ್ತೆಯ ಪಕ್ಕದಲ್ಲಿದ್ದ ನನ್ನ ಮುಂದೆ ಸ್ವಲ್ಪ ದೂರದಲ್ಲಿ ಬೈಕನ್ನು ನಿಲ್ಲಿಸಿ, ಹಿಂದೆ ಕುಳಿತಿದ್ದವನು ಬೈಕಿನಿಂದ ಕೆಳಗಿಳಿದು ನನ್ನ ಬಳಿ ಬಂದು ಏಕಾ ಏಕಿ ನನ್ನನ್ನು ನೆಲದ ಮೇಲೆ ತಳ್ಳಿ ಬೀಳಿಸಿ ನನ್ನ ಕೊರಳಲ್ಲಿದ್ದ ಸುಮಾರು 50 ಗ್ರಾಂ ತೂಕದ 1,15,000/- ಬೆಲೆ ಬಾಳುವ ಎರಡು ಎಳೆ ಚಿನ್ನದ ಸರವನ್ನು ಕಿತ್ತುಕೊಂಡು, ಆತನು ಓಡಿಹೋಗಿ ಬೈಕಿನಲ್ಲಿ ಹತ್ತಿಕೊಂಡು ಇಬ್ಬರೂ ವೇಗವಾಗಿ ಶಾನುಬೋಗನಹಳ್ಳಿ ಗ್ರಾಮದ ಕಡೆಗೆ ಹೊರಟು ಹೋದರು. ಅವರು ನನ್ನ ಚಿನ್ನದ ಸರವನ್ನು ಕಿತ್ತುಕೊಳ್ಳುವಾಗ ಏನನ್ನೂ ಮಾತನಾಡಲಿಲ್ಲ, ಅವರು ಸುಮಾರು 30 ರಿಂದ 35 ವರ್ಷ ವಯಸ್ಸಿನವರಾಗಿದ್ದು, ನನ್ನ ಚಿನ್ನದ ಸರವನ್ನು ಕಿತ್ತು ಕೊಂಡವನು ಕಪ್ಪು ಪಟ್ಟೆಗಳುಳ್ಳ ಹಳದಿ ಬಣ್ಣದ ಟೀ ಶರ್ಟ ಮತ್ತು ಕಪ್ಪು ಅಥವಾ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದನು. ನನ್ನ ಚಿನ್ನದ ಸರವನ್ನು ಕಿತ್ತುಕೊಂಡು ಹೋಗಿರುವ ಆ ಇಬ್ಬರು ವ್ಯಕ್ತಿಗಳನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಜರುಗಿಸಿ ನನ್ನ ಚಿನ್ನದ ಸರವನ್ನು ನನಗೆ ಕೊಡಿಸಿಕೊಡಬೇಕೆಂದು ತಮ್ಮಲ್ಲಿ ಕೋರಿಕೊಳ್ಳುತ್ತೇನೆ ಎಂದು ಇದ್ದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿರುತ್ತೆThursday, 24 May 2018

ಅಪರಾಧ ಘಟನೆಗಳು 24-05-18

ತುಮಕೂರು ಸಂಚಾರ ಪೊಲೀಸ್ ಠಾಣಾ ಮೊ.ಸಂಖ್ಯೆ 106/2018 ಕಲಂ 279,304(ಎ) ಐಪಿಸಿ & 134(ಎ&ಬಿ) 187 ಐಎಂವಿ ಆಕ್ಟ್.

ದಿನಾಂಕ 19.05.2018 ರಂದು ರಾತ್ರಿ 2-00 ಗಂಟೆಗೆ ಪಿರ್ಯಾದಿ ಹುಚ್ಚೀರಣ್ಣ, ಹೆಚ್.ಸಿ.284, ಸಂಚಾರ ಪೊಲೀಸ್ ಠಾಣೆ, ತುಮಕೂರು ಇವರು ನೀಡಿದ ದೂರಿನ ಅಂಶವೇನೆಂದರೆ, ದಿನಾಂಕ 19.05.2018 ರಂದು ರಾತ್ರಿ 12-15 ಗಂಟೆಯಲ್ಲಿ ಕೆಎ.06.ಇಎಲ್.6963 ನೇ ಬೈಕ್ ಸವಾರ ಜಗದೀಶ್ ಎಂಬುವರು, ತುಮಕೂರು ಕಡೆಯಿಂದ ಭೀಮಸಂದ್ರ ಕಡೆಗೆ ಬೈಕನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ  ಭೀಮಸಂದ್ರ ಗ್ರಾಮದ ಬಳಿ,  ಎನ್.ಹೆಚ್.206 ರಸ್ತೆ ಪಕ್ಕದಲ್ಲಿ ರಸ್ತೆ ದಾಟಲು ನಿಂತಿದ್ದ ಸುಮಾರು 60 ವರ್ಷದ ಅಪರಿಚಿತ ಮಹಿಳೆಗೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದ್ದರಿಂದ, ಅಪರಿಚಿತ ಮಹಿಳೆಗೆ ಪೆಟ್ಟು ಬಿದ್ದು ರಕ್ತಗಾಯಗಳಾಗಿದ್ದು, ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುತ್ತಿರುವಾಗ, ಚಿಕಿತ್ಸೆ ಫಲಕಾರಿಯಾಗದೆ, ದಿನಾಂಕ 22.05.2018 ರಂದು ಬೆಳಿಗ್ಗೆ 10-45 ಗಂಟೆಯಲ್ಲಿ ಅಪರಿಚಿತ ಮಹಿಳೆ ಮೃಪಟ್ಟಿರುತ್ತಾರೆಂತ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

 

ತಿಪಟೂರು ನಗರ ಪೊಲೀಸ್ ಠಾಣಾ ಮೊ.ನಂ.77/2018 ಕಲಂ: ಮನುಷ್ಯ ಕಾಣೆಯಾಗಿದ್ದಾನೆ.

ದಿನಾಂಕ: 23/05/2018 ರಂದು ಸಂಜೆ 6-30 ಗಂಟೆಗೆ ಪಿರ್ಯಾದಿ ಶ್ರೀಮತಿ ಶ್ವೇತ ಕೋಂ ಲೋಹಿತ್ ಎಂ.ಹೆಚ್.ಆರ್ ಗುಬ್ಬಿ ಲೇಔಟ್ ತಿಪಟೂರು ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ದಿನಾಂಕ: 21/05/2018 ರಂದು ನನ್ನ ಗಂಡನಾದ ಲೋಹಿತ್ ಎಂ.ಹೆಚ್.ಆರ್ 37ವರ್ಷ ರವರು ತಮ್ಮ ದಿನ ನಿತ್ಯದ ಕೆಲಸಗಳನ್ನು ಮುಗಿಸಿ ನಂತರ ಹೊರಗೆ ಹೋಗಿ ಬರುತ್ತೇನೆಂದು ಹೇಳಿ ಸುಮಾರು ಬೆಳಿಗ್ಗೆ 11-15 ಗಂಟೆಯಲ್ಲಿ ಮೊಬೈಲ್ ಹಾಗೂ ಗಾಡಿಯನ್ನು ಮನೆಯಲ್ಲಿಯೇ ಬಿಟ್ಟು ಹೋಗಿದ್ದು, ಸಂಜೆಯಾದರೂ ವಾಪಸ್ ಮನೆಗೆ ಬಂದಿರುವುದಿಲ್ಲ.  ದಿನಾಂಕ: 22/05/2018 ರಂದು ಸಹ ಮನೆಗೆ ಬರದ ಕಾರಣ ಸಂಬಂದಪಟ್ಟವರನ್ನು ವಿಚಾರಿಸಿ, ಇದುವರೆವಿಗೂ ಎಲ್ಲಾ ಕಡೆ ಹುಡುಕಲಾಗಿ ಯಾವುದೇ ಸುಳಿವು ಸಿಕ್ಕಿರುವುದಿಲ್ಲ. ಅವರು ಗ್ರೇ ಮತ್ತು ನೀಲಿ ಪಟ್ಟಿಯುಳ್ಳ ಟೀಶರ್ಟ್, ಗ್ರೇ ಬಣ್ಣದ ಪ್ಯಾಂಟ್ ಹಾಗೂ ಕ್ರೀಂ ಬಣ್ಣದ ಟೋಪಿಯನ್ನು ಧರಿಸಿದ್ದು, ಕಾಣೆಯಾಗಿರುವ ನಮ್ಮ ಯಜಮಾನರನ್ನು ಪತ್ತೆಮಾಡಿಕೊಡಬೇಕೆಂದು ಕೋರಿ ಇತ್ಯಾದಿಯಾಗಿ ನೀಡಿರುವ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

 

ಚಿಕ್ಕನಾಯಕನಹಳ್ಳಿ ಪೊಲೀಸ್ ಮೊ.ನಂ. 80/2018 32,34 ಕೆ.ಇ ಕಾಯ್ದೆ.

 

ದಿನಾಂಕ: 23-05-2018 ರಂದು ಸಂಜೆ 7-00 ಗಂಟೆಯಲ್ಲಿ ತೀರ್ಥಪುರ ಗ್ರಾಮದಲ್ಲಿ ಪರಮೇಶ್ ಬಿನ್ ನಿಂಗಯ್ಯ ರವರು ತಮ್ಮ ವಾಸದ ಮನೆಯ ಹತ್ತಿರ ಒಂದು ಪ್ಲಾಸ್ಟಿಕ್ ಚೀಲದಲ್ಲಿ ಸುಮಾರು 1771.80/- ಬೆಲೆ ಬಾಳುವ 90 M.L.ನ Raja WHISKY ಯ 60 ಸಾಚೆಟ್‌ಗಳನ್ನು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು, ಪಂಚರು ಹಾಗೂ ಸಿಬ್ಬಂದಿಯೊಂದಿಗೆ ದಾಳಿ ಮಾಡಿ , ಆಪಾದಿತನನ್ನು ವಶಕ್ಕೆ ಪಡೆದು ವಿಚಾರ ಮಾಡಲಾಗಿ ಇವುಗಳನ್ನು ಮಾರಾಟ ಮಾಡಲು ತಂದು ಇಟ್ಟುಕೊಂಡಿರುವುದಾಗಿ ತಿಳಿಸಿದನು. ಸದರಿ ಮದ್ಯ ತುಂಬಿದ ಪ್ಯಾಕೇಟ್ ಗಳಿಗೆ ಮತ್ತು ಮಾರಾಟ ಮಾಡಲು ಪರವಾನಿಗೆ ಹಾಗೂ ಬಿಲ್ಲು ಕೇಳಲಾಗಿ ಆಸಾಮಿಯು ಯಾವುದೇ ಪರವಾನಿಗೆ ಇಲ್ಲವೆಂದು ತಿಳಿಸಿರುತ್ತಾನೆ. ಇದರಲ್ಲಿ ಒಂದನ್ನು ಬೆಂಗಳೂರು ಎಫ್.ಎಸ್.ಎಲ್.ಗೆ ಪರೀಕ್ಷೆಗಾಗಿ ಕಳುಹಿಸಲು ಬಿಳಿ ಬಟ್ಟೆಯಲ್ಲಿ ಪ್ರತ್ಯೆಕವಾಗಿ ಸುತ್ತಿ “R” ಎಂಬ ಅಕ್ಷರದಿಂದ ಸೀಲ್ ಮಾಡಿ, ಪಂಚರು ಮತ್ತು ನನ್ನ ಸಹಿ ಇರುವ ಚೀಟಿಯನ್ನು ಅಂಟಿಸಿರುತ್ತೆ. ಸ್ಥಳದಲ್ಲಿ ಪಂಚರ ಸಮಕ್ಷಮದಲ್ಲಿ ಪಂಚನಾಮೆಯನ್ನು ಸಂಜೆ 07-15 ಗಂಟೆಯಿಂದ ರಾತ್ರಿ 8-15 ಗಂಟೆಯವರೆಗೆ ಜರುಗಿಸಲಾಯಿತು. ಆಸಾಮಿಯನ್ನು ಸ್ಥಳದಲ್ಲಿಯೇ ವಶಕ್ಕೆ ಪಡೆದು ಆರೋಪಿ ಮತ್ತು ಮಾಲಿನ ಸಮೇತ ಠಾಣೆಗೆ ಬಂದು ಸರ್ಕಾರದ ಪರವಾಗಿ ವರದಿಯನ್ನು ತಯಾರಿಸಿ, ಮುಂದಿನ ಕ್ರಮಕ್ಕಾಗಿ ಪಿ.ಎಸ್.ಐ. ರವರು ನೀಡಿದ ವರದಿಯನ್ನು ಪಡೆದು ಠಾಣಾ ಮೊ.ನಂ. 80/2018 ಕಲಂ : 32.34 ಕೆ.ಇ.ಆಕ್ಟ್ ರೀತ್ಯಾ ಪ್ರಕರಣ ದಾಖಲು ಮಾಡಿರುತ್ತೆ.

ಹೊನ್ನವಳ್ಳಿ ಪೊಲೀಸ್‌ ಠಾಣೆ ಯು.ಡಿ.ಆರ್ ನಂ.13/2018 ಕಲಂ 174 ಸಿ.ಆರ್.ಪಿ.ಸಿ

ದಿನಾಂಕ: 23.05.2018 ರಂದು ಬೆಳಗಿನ ಜಾವ  2-00 ಗಂಟೆಗೆ ತಿಪಟೂರು ತಾ: ಹೊನ್ನವಳ್ಳಿ ಹೋಬಳಿ, ಕೃಷ್ಣಪ್ಪ ಬಿನ್‌ಲೇ ರಂಗಪ್ಪ ಲಿಂಗದಹಳ್ಳಿ ಸಾರ್ಥವಳ್ಳಿ ಮಜರೆ ಗ್ರಾಮ  ಉಪ್ಪಾರ ಜನಾಂಗ, ಆದ ನಾನು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೆನೆಂದರೆ. ನನಗೆ ಇಬ್ಬರು ಗಂಡು ಮಕ್ಕಳಿದ್ದು ಇಬ್ಬರಿಗೂ ವಿವಾಹ ಮಾಡಿದ್ದು ಎಲ್ಲರೂ ಒಟ್ಟಿಗೆ ಸಂಸಾರ ಮಾಡಿಕೊಂಡು ಇದ್ದು ನನ್ನ 2 ನೇ ಮಗ ನಂಜುಂಡಪ್ಪ ಡ್ರೈವಿಂಗ್‌ಕೆಲಸ ಮಾಡುತ್ತಿದ್ದು ಪ್ರತಿ ದಿನ ಹಗಲು ರಾತ್ರಿ ಮಧ್ಯಪಾನ ಮಾಡುತ್ತಿದ್ದು. ಇತನಿಗೆ ಸುಮಾರು 5-6 ತಿಂಗಳುಗಳಿಂದ ಹೊಟ್ಟೆ ನೋವು ಬರುತ್ತಿದ್ದು ಆಸ್ಪತ್ರೆಗೆ ತೋರಿಸಲು ಕಳುಹಿಸಿದರೆ ತೋರಿಸದೇ ಕುಡಿದು ಬರುತ್ತಿದ್ದಾ ಈಗ್ಗೆ 5 ವರ್ಷಗಳ ಹಿಂದೆ ಬೆನ್ನನಾಯಕನಹಳ್ಳಿ ಪಾತಯ್ಯನ ಮಗಳಾದ ಲೀಲಾವತಿ ಎಂಬುವಳೊಂದಿಗೆ ವಿವಾಹವಾಗಿರುತ್ತೆ, ಇವರಿಗೆ ಮಕ್ಕಳಿರುವುದಿಲ್ಲಾ ದಿನಾಂಕ 22-05-2018 ರಂದು ಬೆಳಿಗ್ಗೆ ತಿಪಟೂರಿಗೆ ಹೋಗಿದ್ದು ಮದ್ಯಾಹ್ನ ವಾಪಸ್‌ಬಂದು ಸಂಜೆ 6-00 ಗಂಟೆ ಸಮಯದಲ್ಲಿ ಹೊಟ್ಟೆ ನೋವು ಜಾಸ್ತಿ ಯಾಗಿದೆ ಆಸ್ಪತ್ರೆಗೆ ತೋರಿಸಿಕೊಂಡು ಬರುವುದಾಗಿ ಹೇಳಿ ಹೋದವನು ಅರ್ದ ಗಂಟೆಯಾದರು ಮನೆಗೆ ಬರಲಿಲ್ಲಾ, ಫೋನ್‌ಸಹ ಮಾಡಿದರೆ ತೇಗೆಯದೇ ಇದ್ದುದರಿಂದ, ಆತನ ಹೆಂಡತಿ ಲೀಲಾವತಿ ಎಲ್ಲಿ ಹೋದರು ಎಂದು ಹುಡುಕಿಕೊಂಡು ಹೋದಾಗ ನನ್ನ ಮಗ ನಂಜುಂಡಪ್ಪ ಶಂಕರಪ್ಪ ನವರ ಜಮೀನಿನ ಹುಣಸೆ ಮರಕ್ಕೆ ನೇಣು ಹಾಕಿಕೊಡಿರುವುದನ್ನು ನೋಡಿ ಗಾಬರಿಯಿಂದ ಕೂಗಿಕೊಂಡಳು ಆಗ ನಾನು ಮತ್ತು ನಮ್ಮ ಅಕ್ಕ ಪಕ್ಕದ ಮನೆಯವರು ಹೋಗಿ ನೋಡಲಾಗಿ ನನ್ನ ಮಗ ಹುಣಸೆಮರದ ಕೊಂಬೆಗೆ ಧನ ಕಟ್ಟುವ ಹಗ್ಗದಿಂದ ನೇಣು ಹಾಕಿಕೊಂಡಿದ್ದು, ಜೀವವಿರಬಹುದೆಂದು ಆಸ್ಪತ್ರೆಗೆ ತೋರಿಸಲೆಂದು ನಾನು ಮತ್ತು ನನ್ನ ಮಗ ರಂಗಸ್ವಾಮಿ, ಊರಿನವರು ಕೇಳಗೆ ಇಳಿಸಿ ಕೊಂಡೆವು, ಆದರೆ ಅಷ್ಠರಲ್ಲಿ ನನ್ನ ಮಗನ ಪ್ರಾಣ ಹೋಗಿತ್ತು. ಈತನು ತನಗೆ ಬರುತ್ತಿದ್ದ ಹೊಟ್ಟೇನೋವು ತಾಳಲಾರದೇ ಬೇಸರಗೊಂಡು ತನ್ನಮೂಲಕ ತಾನೇ ನೇಣು ಹಾಕಿಕೊಂಡು ಮೃತ ಪಟ್ಟಿರುತ್ತಾನೆ. ಮೃತನ ಸಾವಿನಲ್ಲಿ ಯಾವುದೇ ಅನುಮಾನ ಇರುವುದಿಲ್ಲಾ. ಆದ್ದರಿಂದ ಮೃತಪಟ್ಟಿರುವ ಬಗ್ಗೆ ಮುಂದಿನ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಮ್ಮಲ್ಲಿ ಕೋರುತ್ತೇನೆ. ಎಂದು ನೀಡಿದ ಪಿರ್ಯಾದಿವನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಹುಲಿಯೂರುದುರ್ಗ ಪೊಲೀಸ್‌ಠಾಣಾ ಮೊ ನಂ 124/2018, ಕಲಂ: 279 337 ಐ ಪಿಸಿ

ದಿನಾಂಕ: 23-05-2018 ರಂದು ಬೆಳಿಗ್ಗೆ 10-00 ಗಂಟೆಗೆ ಪುಟ್ಟಯ್ಯ ಬಿನ್ ಲೇಟ್ ಲಕ್ಷ್ಮಯ್ಯ, ಕಲ್ಲುವಡ್ಡರಪಾಳ್ಯ(ಹುಲಿಕಟ್ಟೆ) , ಮಾಡಬಾಳ್ ಹೋಬಳಿ, ಮಾಗಡಿ ತಾಲ್ಲೋಕು, ರಾಮನಗರ ಜಿಲ್ಲೆ. ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ದಿನಾಂಕ: 21-05-2018 ರಂದು ಪಿರ್ಯಾದಿಯ ಅಣ್ಣನಾದ ತಿಮ್ಮಯ್ಯ ಬಿನ್ ಲೇ. ಲಕ್ಷ್ಮಯ್ಯ ರವರು ಕೆಲಸದ ನಿಮಿತ್ತ ಕೆಎ05-ಇಪಿ-2480 ನೇ ವಾಹನದಲ್ಲಿ ಚೌಡನಕುಪ್ಪೆಗೆ ಹೋಗಿ ವಾಪಸ್ ಊರಿಗೆ ಬರಲು ಮಧ್ಯಾಹ್ನ 03-20 ಗಂಟೆಯಲ್ಲಿ ಚೌಡನಕುಪ್ಪೆ ಹತ್ತಿರ ಬರುತ್ತಿದ್ದಾಗ ಕೆಎ04-ಎಎ-9674 ನೇ ಕಾರಿನ ಚಾಲಕನು ಅತಿವೇಗ & ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿಯ ಅಣ್ಣನ ವಾಹನಕ್ಕೆ ಡಿಕ್ಕಿಪಡಿಸಿ ಅಪಘಾತವುಂಟುಮಾಡಿದ ಪರಿಣಾಮ ತಿಮ್ಮಯ್ಯ ರವರಿಗೆ ತಲೆಯ ಮೆದುಳಿನ ಭಾಗಕ್ಕೆ ಬಲವಾದ ಪೆಟ್ಟು ಬಿದ್ದಿರುತ್ತೆ. ಮತ್ತು ತೀವ್ರ ರಕ್ತಸ್ರಾವವಾಗಿರುತ್ತೆ.  ಗಾಯಗೊಂಡಿದ್ದ ತಿಮ್ಮಯ್ಯನನ್ನು ಹುಲಿಯೂರುದುರ್ಗ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ನಂತರ ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರು ಮಾನಸಿಕ ಮತ್ತು ನರ ವಿಜ್ಞಾನ ಆಸ್ಪತ್ರೆಗೆ ದಾಖಲಿಸಿರುತ್ತೆ. ಈ ಅಪಘಾತ ನಡೆದ ಕೃತ್ಯವನ್ನು ರಮೇಶ ಬಿನ್ ಲೇ.ತಿಮ್ಮಾಬೋವಿ, ಪಾದರಹಳ್ಳಿ ಮತ್ತು ಶ್ರೀನಿವಾಸ ಬಿನ್ ಲೇ.ಈರಣ್ಣ, ಕಲ್ಲುವಡ್ಡರಪಾಳ್ಯ ಇವರುಗಳು ನೋಡಿದ್ದು ಪ್ರತ್ಯಕ್ಷ ಸಾಕ್ಷಿಗಳಾಗಿರುತ್ತಾರೆ. ಇವರುಗಳು ಅಪಘಾತ ನಡೆದ ಬಗ್ಗೆ ಪಿರ್ಯಾದಿಗೆ ದೂರವಾಣಿ ಕರೆ ಮಾಡಿ ತಿಳಿಸಿರುತ್ತಾರೆ. ಪಿರ್ಯಾದಿಯು ಆರೋಗ್ಯ ಸರಿ ಇಲ್ಲದ ಕಾರಣ ಬೆಂಗಳೂರು ಕೆಂಪೇಗೌಡ ಆಸ್ಪತ್ರೆಗೆ ಹೋಗಿದ್ದು ವಿಷಯ ತಿಳಿದು ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡಿರುತ್ತಾರೆ. ಅಪಘಾತಪಡಿಸಿದ  ಕೆಎ04-ಎಎ-9674 ನೇ ಕಾರಿನ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

ಜಯನಗರ ಪೊಲೀಸ್ ಠಾಣಾ ಮೊ ನಂ 76/2018 ಕಲಂ 341, 504, 506 , 307 ಐಪಿಸಿ

 

ದಿನಾಂಕ: 23-05-2018 ರಂದು ರಾತ್ರಿ 21-45 ಗಂಟೆಗೆ ತುಮಕೂರು ಸರ್ಕಾರಿ ಜಿಲ್ಲಾ ಆಸ್ಪತ್ರೆಯಿಂದ ಬಂದ ಮಾಹಿತಿ ಮೇರೆಗೆ ಆಸ್ಪತ್ರೆಗೆ ರಾತ್ರಿ 10-15 ಗಂಟೆಗೆ ಭೇಟಿ ನೀಡಿ ಗಾಯಾಳು ಆಸಿಯಾ ಕೋಂ ಲೇಟ್ ಮಹಮ್ಮದ್‌ ರವರ ಹೇಳಿಕೆಯನ್ನು ವೈದ್ಯರ ಸಮಕ್ಷಮ ಪಡೆಯಲಾಗಿ, ನನ್ನ ಗಂಡ ಮಹಮ್ಮದ್ ಈಗ್ಗೆ ಸುಮಾರು 5 ವರ್ಷಗಳ ಹಿಂದೆ ಕ್ಯಾನ್ಸರ್ ಖಾಯಿಲೆಯಿಂದ ಮೃತಪಟ್ಟಿರುತ್ತಾರೆ.  ನಾನು ಹಾಗೂ ನನ್ನ ನಾಲ್ಕು ಜನ ಮಕ್ಕಳು ಮೊದಲು ತುಮಕೂರು ಟೌನ್ ಪುರಸ್ ಕಾಲೋನಿಯಲ್ಲಿ ವಾಸವಾಗಿದ್ದು ನನ್ನ ಗಂಡನ ಸ್ನೇಹಿತ ಮರದ ಪ್ಲೇನಿಂಗ್ ಕೆಲಸ ಮಾಡುವ ಸಲೀಂ ಎಂಬುವರು  ಈಗ್ಗೆ ಸುಮಾರು 3 ವರ್ಷದಿಂದ ನನ್ನ ಜೊತೆ ಅಕ್ರಮ ಸಂಬಂಧ ಹೊಂದಿದ್ದು, ಈಗ್ಗೆ ಒಂದು ವರ್ಷದಿಂದ ಉಪ್ಪಾರಹಳ್ಳಿಯಲ್ಲಿ ಒಂದು ಬಾಡಿಗೆ ಮನೆ ಮಾಡಿ ನನ್ನನ್ನು ಹಾಗೂ ನನ್ನ ಮಕ್ಕಳನ್ನು ಇರಿಸಿದ್ದು ಒಂದು ತಿಂಗಳ ಹಿಂದೆ ನನಗೂ ಸಲೀಂ ಗೂ ಜಗಳವಾಗಿ ಅಂದಿನಿಂದ ಆತ ನಮ್ಮ ಮನೆಗೆ ಬರುತ್ತಿರಲಿಲ್ಲ.  ಈ ದಿನ ದಿನಾಂಕ: 23-05-2018 ರಂದು ರಾತ್ರಿ ಸುಮಾರು 7-30 ಗಂಟೆಗೆ ನಾನು ಗೌತಮ ಆಸ್ಪತ್ರೆಗೆ ಆಯಾ ಕೆಲಸಕ್ಕೆ ಹೋಗಲು ಉಪ್ಪಾರಹಳ್ಳಿ ಆಟೋ ಸ್ಟಾಂಡ್ ಬಳಿಗೆ ಹೋದಾಗ ಆಟೋ ಸ್ಟಾಂಡ್ ನಲ್ಲಿ ನಿಂತಿದ್ದ ಸಲೀಂ ಏಕಾಏಕಿ ನನ್ನ ಬಳಿ ಬಂದವನೇ ನನ್ನನ್ನು ಅಡ್ಡಗಟ್ಟಿ ತಡೆದು ಅವಾಚ್ಯ ಶಬ್ದಗಳಿಂದ ಬೈಯ್ದು ನನ್ನನ್ನು ಬಿಟ್ಟು ಬೇರೆ ಇನ್ನೋಬ್ಬನನ್ನು ನೋಡಿಕೊಂಡಿದ್ದೀಯೇನೆ ಎಂತ ತನ್ನ ಬಳಿ ಇದ್ದ ಚಾಕುವಿನಿಂದ ನನ್ನನ್ನು ಕೊಲೆ ಮಾಡುವ ಉದ್ದೇಶದಿಂದ ಕುತ್ತಿಗೆಗೆ ಚುಚ್ಚಲು ಪ್ರಯತ್ನಿಸಿದ್ದು ನಾನು ತಪ್ಪಿಸಿಕೊಂಡಿದ್ದರಿಂದ ಚಾಕುವಿನ ಏಟು ನನ್ನ ಎಡಕೆನ್ನೆ ಗದ್ದದ ಬಳಿ ಎಳೆದು ರಕ್ತಗಾಯಪಡಿಸಿದನು.  ಅಷ್ಟರಲ್ಲಿ ಅಲ್ಲಿದ್ದ ಆಟೋ ಡ್ರೈವರ್ ಗಳು ಹಾಗೂ ನಮ್ಮ ಭಾವ ಸಮೀರ್ ಬಂದು ಜಗಳ ಬಿಡಿಸಿದರು.  ಸಲೀಂ ನನ್ನನ್ನು ಕುರಿತು ನಿನ್ನನ್ನು ಕೊಲೆ ಮಾಡದೇ ಬಿಡುವುದಿಲ್ಲ ಎಂತ ಕೊಲೆ ಬೆದರಿಕೆ ಹಾಕಿ ಅಲ್ಲಿಂದ ಹೊರಟು ಹೋದನು.  ನಂತರ ಗಾಯಗೊಂಡಿದ್ದ ನನ್ನನ್ನು ನಮ್ಮ ಭಾವ ಸಮೀರ್ ಯಾವುದೋ ಆಟೋದಲ್ಲಿ ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗೆ ದಾಖಲಿಸಿರುತ್ತಾರೆ.  ನನ್ನನ್ನು ಕೊಲೆ ಮಾಡಲು ಪ್ರಯತ್ನಿಸಿದ ಸಲೀಂ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಪಿರ್ಯಾದು ಅಂಶವಾಗಿರುತ್ತೆ.

 

 

 

 

 

 

 

 

 

 

 

 

 

 

 

 

 Wednesday, 23 May 2018

ಅಪರಾಧ ಘಟನೆಗಳು 23-05-18

ಬಡವನಹಳ್ಳಿ ಪೊಲೀಸ್ ಠಾಣಾ ಯು ಡಿ ಆರ್‌‌ ನಂ 07/2018 ಕಲಂ 174 ಸಿ ಆರ್‌ ಪಿ ಸಿ

ದಿನಾಂಕ:22/05/2018 ರಂದು  ಮದ್ಯಾಹ್ನ 3-30 ಗಂಟೆಗೆ ಪಿರ್ಯಾದಿ ಮಂಜಮ್ಮ ಕೊಂ ಹುಲಿಯಪ್ಪ, ಗೊದ್ದನಪಾಳ್ಯ @ ಹೊಸಪಾಳ್ಯ ಗ್ರಾಮ ರವರು  ಠಾಣೆಗೆ ಹಾಜರಾಗಿ ನೀಡಿದ ಫಿರ್ಯಾದು ಅಂಶವೇನೆಂದರೆ, ನನ್ನ ಗಂಡನಾದ ಹುಲಿಯಪ್ಪನಿಗೆ ಗೊದ್ದನಪಾಳ್ಯ ಸರ್ವೆ ನಂ 14 ರಲ್ಲಿ 1 ಎಕರೆ 15 ಗುಂಟೆ ಜಮೀನಿದ್ದು ಈ ಜಮೀನನ್ನು ನಾವು ಸುಮಾರು 20 ವರ್ಷಗಳಿಂದಲೂ ಅನುಭವಿಸಿಕೊಂಡು ಬಂದಿದ್ದು, ಈ ಜಮೀನು ನಮ್ಮ ಜೀವನಕ್ಕೆ ಆದಾರವಾಗಿದ್ದು, ಈ ಜಮೀನಿನ ಮೇಲೆ  ನಮ್ಮ ಯಜಮಾನರಾದ ಹುಲಿಯಪ್ಪ ರವರು ಅಡವು ಮಾಡಿ ಡಿ ಕೈಮರದಲ್ಲಿರುವ  ಕೆ ಜಿ ಬಿ ಬ್ಯಾಂಕ್‌ನಲ್ಲಿ  ಸುಮಾರು 3 ಲಕ್ಷ ಸಾಲ ಮಾಡಿದ್ದು, ಹಾಗೂ ಕೈ ಸಾಲವಾಗಿ ಸುಮಾರು 3 ಲಕ್ಷ ರೂ ಗಳನ್ನು ಸಾಲ ಮಾಡಿಕೊಂಡು ಈ ಹಣವನ್ನೆಲ್ಲಾ ಜಮೀನಿಗೆ ಬಂಡವಾಳ ಹಾಕಿದ್ದು, ಬೆಳೆ ಬಾರದೆ ಕೈ ಸುಟ್ಟುಕೊಂಡು ಕುಳಿತಿದ್ದು , ನಾವು ಏನು ಹೇಳಿದರೂ ನಮ್ಮ ಮಾತಿಗೆ ತಲೆ ಕೊಡದೆ ಅವರವರೇ ಏನೋ  ಒಂದು ವಿಚಾರ ಮಾತನಾಡಿಕೊಂಡು ಅತಿಯಾದ ಮದ್ಯ ವ್ಯಸನಿಗಳಾಗಿದ್ದರು, ಈ ವಿಚಾರಕ್ಕೆ ನನ್ನ ಗಂಡ ತಲೆ ಕೆಡಿಸಿಕೊಂಡು ಸಾಲ ಬಾದೆ ತಾಳಲಾರದೆ ಈಗ್ಗೆ 2 ದಿನಗಳ ಹಿಂದೆ ಅಂದರೆ ದಿ:20/05/2018 ರಂದು ಮನೆಯಿಂದ ಹೋಗಿ ಯಾರಿಗೂ ಕಾಣದಂತೆ ಗೊದ್ದನಪಾಳ್ಯ ಕರಿಯಣ್ಣ ರವರ ಜಮೀನಿನಲ್ಲಿ ಹೊಂಗೆ ತೋಪಿನ ಮದ್ಯೆ ಇರುವ  ಬೇವಿನ ಮರಕ್ಕೆ ನೇಣು ಹಾಕಿಕೊಂಡು ಮರಣ ಹೊಂದಿದ್ದು, ನನಗೆ ಈ ವಿಚಾರ ಈ ದಿನ ಮದ್ಯಾಹ್ನ 12 ಗಂಟೆಗೆ ತಿಳಿದು ಬಂತು, ನನ್ನ ಗಂಡ  ಹುಲಿಯಪ್ಪ ಮೃತನಾಗಿರುವ ವಿಚಾರದಲ್ಲಿ ನನಗೆ ಯಾವುದೆ ಅನುಮಾನ ಇರುವುದಿಲ್ಲ. ಆದುದ್ದರಿಂದ ತಾವುಗಳು ಸ್ಥಳ ಪರಿಶೀಲನೆ ಮಾಡಿ , ಕಾನೂನು ರೀತ್ಯಾ ಮುಂದಿನ ಕ್ರಮ ಜರುಗಿಸಬೇಕೆಂದು ತಮ್ಮಲ್ಲಿ ಮನವಿ..

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣಾ  ಮೊ.ನಂ 44/18, ಕಲಂ 279, 337 ಐಪಿಸಿ

ದಿನಾಂಕ:22-05-18 ರಂದು   ಸಂಜೆ 4-00  ಗಂಟೆ ಸಮಯದಲ್ಲಿ  ಈ ಕೇಸಿನ ಪಿರ್ಯಾದಿ  ಹೆಚ್. ಮಂಜೇಗೌಡ ಬಿನ್  ಹೊನ್ನಯ್ಯ, 49 ವರ್ಷ,  ವ್ಯವಸಾಯ, ವಕ್ಕಲಿಗರು, ಹಳ್ಳಿಕೆರೆ, ಬರಂದೂರು ಪೋ, ಭದ್ರಾವತಿ ತಾ ರವರು ಠಾಣೆಗೆ ಹಾಜರಾಗಿ ನೀಡಿದ  ದೂರಿನ   ಅಂಶವೇನೆಂದರೆ,  ದಿ:22-05-18 ರಂದು  ನಮ್ಮ ಪರಿಚಯಸ್ಥರಾದ   ಮಾಯಮ್ಮ & ನವೀನ್ ರವರೊಂದಿಗೆ ಸಂತೋಷ್ ರವರ  ಬಾಬ್ತು  ಕೆಎ-14, ಹೆಚ್-4729 ನೇ ಮಾರುತಿ ವ್ಯಾನಿನಲ್ಲಿ  ನಾನು ಚಾಲಕನಾಗಿ  ಶಿವಮೊಗ್ಗದಿಂದ ಬಾರಂದೂರಿನಿಂದ  ನಾಗಮಂಗಲ ಕ್ಕೆ  ಹೋಗಲು  ಎನ್. ಹೆಚ್.  206  ರಸ್ತೆಯ ಮಡೇನೂರು ಗೇಟ್ ಹತ್ತಿರ  ಇರುವ ಕಬ್ಬಿಣದ ಸೇತುವೆ ಬಳಿ  ಸುಮಾರು  7-30 ಗಂಟೆ  ಸಮಯದಲ್ಲಿ  ಎಡಭಾಗದಲ್ಲಿ ಹೋಗುತ್ತಿರುವಾಗ  ಎದುರಿಗೆ ತಿಪಟೂರು ಕಡೆಯಿಂದ ಬಂದ  ಕೆಎ-14, ಎ-2655 ಕ್ಯಾಂಟರ್  ಲಾರಿ ಚಾಲಕ    ಲಾರಿಯನ್ನು ಅತಿ ವೇಗ & ಆಜಾಗರೂಕತೆಯಿಂದ  ಓಡಿಸಿ  ಬಂದು ನಮ್ಮ  ಕಾರಿನ ಬಲಭಾಗಕ್ಕೆ  ಡಿಕ್ಕಿ ಹೊಡೆದ ಪರಿಣಾಮ  ಕಾರಿನಲ್ಲಿದ್ದ  ಮಾಯಮ್ಮ  ರವರಿಗೆ  ಬಲಕೈ & ಬಲಪಕ್ಕೆಗೆ  ಪೆಟ್ಟು ಬಿದ್ದಿರುತ್ತೆ  ತಕ್ಷಣ  ತಿಪಟೂರು ಸರ್ಕಾರಿ ಆಸ್ಪತ್ರೆಗೆ  ಚಿಕಿತ್ಸೆಗೆ  ಸೇರಿಸಿರುತ್ತೇವೆ.  ಕಾರಿನಲ್ಲಿದ್ದ  ಬೇರೆ ಯಾರಿಗೂ ಗಾಯಗಳಾಗಿರುವುದಿಲ್ಲ.  ಈ ಅಪಘಾತಕ್ಕೆ  ಕಾರಣವಾದ  ಕೆಎ-14-ಎ-2655 ಕ್ಯಾಂಟರ್  ಲಾರಿ  ಚಾಲಕನಾದ ವಿಕ್ರಂ ಬಿನ್ ಗೋಪಾಲ, ಶಿವಮೊಗ್ಗ ರವರ     ರವರ ಮೇಲೆ ಕಾನೂನು ರೀತ್ಯಾ   ಕ್ರಮ ಜರುಗಿಸಿ ಎಂತಾ ನೀಡಿದ ದೂರಿನ ಮೇರೆಗೆ ಠಾಣಾ  ಕೇಸು ದಾಖಲಿಸಿರುತ್ತೆ.

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣಾ  ಮೊ.ನಂ 44/18, ಕಲಂ 279, 337 ಐಪಿಸಿ

ದಿನಾಂಕ:22-05-18 ರಂದು   ಸಂಜೆ 4-00  ಗಂಟೆ ಸಮಯದಲ್ಲಿ  ಈ ಕೇಸಿನ ಪಿರ್ಯಾದಿ  ಹೆಚ್. ಮಂಜೇಗೌಡ ಬಿನ್  ಹೊನ್ನಯ್ಯ, 49 ವರ್ಷ,  ವ್ಯವಸಾಯ, ವಕ್ಕಲಿಗರು, ಹಳ್ಳಿಕೆರೆ, ಬರಂದೂರು ಪೋ, ಭದ್ರಾವತಿ ತಾ ರವರು ಠಾಣೆಗೆ ಹಾಜರಾಗಿ ನೀಡಿದ  ದೂರಿನ   ಅಂಶವೇನೆಂದರೆ,  ದಿ:22-05-18 ರಂದು  ನಮ್ಮ ಪರಿಚಯಸ್ಥರಾದ   ಮಾಯಮ್ಮ & ನವೀನ್ ರವರೊಂದಿಗೆ ಸಂತೋಷ್ ರವರ  ಬಾಬ್ತು  ಕೆಎ-14, ಹೆಚ್-4729 ನೇ ಮಾರುತಿ ವ್ಯಾನಿನಲ್ಲಿ  ನಾನು ಚಾಲಕನಾಗಿ  ಶಿವಮೊಗ್ಗದಿಂದ ಬಾರಂದೂರಿನಿಂದ  ನಾಗಮಂಗಲ ಕ್ಕೆ  ಹೋಗಲು  ಎನ್. ಹೆಚ್.  206  ರಸ್ತೆಯ ಮಡೇನೂರು ಗೇಟ್ ಹತ್ತಿರ  ಇರುವ ಕಬ್ಬಿಣದ ಸೇತುವೆ ಬಳಿ  ಸುಮಾರು  7-30 ಗಂಟೆ  ಸಮಯದಲ್ಲಿ  ಎಡಭಾಗದಲ್ಲಿ ಹೋಗುತ್ತಿರುವಾಗ  ಎದುರಿಗೆ ತಿಪಟೂರು ಕಡೆಯಿಂದ ಬಂದ  ಕೆಎ-14, ಎ-2655 ಕ್ಯಾಂಟರ್  ಲಾರಿ ಚಾಲಕ    ಲಾರಿಯನ್ನು ಅತಿ ವೇಗ & ಆಜಾಗರೂಕತೆಯಿಂದ  ಓಡಿಸಿ  ಬಂದು ನಮ್ಮ  ಕಾರಿನ ಬಲಭಾಗಕ್ಕೆ  ಡಿಕ್ಕಿ ಹೊಡೆದ ಪರಿಣಾಮ  ಕಾರಿನಲ್ಲಿದ್ದ  ಮಾಯಮ್ಮ  ರವರಿಗೆ  ಬಲಕೈ & ಬಲಪಕ್ಕೆಗೆ  ಪೆಟ್ಟು ಬಿದ್ದಿರುತ್ತೆ  ತಕ್ಷಣ  ತಿಪಟೂರು ಸರ್ಕಾರಿ ಆಸ್ಪತ್ರೆಗೆ  ಚಿಕಿತ್ಸೆಗೆ  ಸೇರಿಸಿರುತ್ತೇವೆ.  ಕಾರಿನಲ್ಲಿದ್ದ  ಬೇರೆ ಯಾರಿಗೂ ಗಾಯಗಳಾಗಿರುವುದಿಲ್ಲ.  ಈ ಅಪಘಾತಕ್ಕೆ  ಕಾರಣವಾದ  ಕೆಎ-14-ಎ-2655 ಕ್ಯಾಂಟರ್  ಲಾರಿ  ಚಾಲಕನಾದ ವಿಕ್ರಂ ಬಿನ್ ಗೋಪಾಲ, ಶಿವಮೊಗ್ಗ ರವರ     ರವರ ಮೇಲೆ ಕಾನೂನು ರೀತ್ಯಾ   ಕ್ರಮ ಜರುಗಿಸಿ ಎಂತಾ ನೀಡಿದ ದೂರಿನ ಮೇರೆಗೆ ಕೇಸು ದಾಖಲಿಸಿರುತ್ತೆ.

ಬಡವನಹಳ್ಳಿ ಪೊಲೀಸ್ ಠಾಣಾ ಯು ಡಿ ಆರ್‌‌ ನಂ 07/2018 ಕಲಂ 174 ಸಿ ಆರ್‌ ಪಿ ಸಿ

ದಿನಾಂಕ:22/05/2018 ರಂದು  ಮದ್ಯಾಹ್ನ 3-30 ಗಂಟೆಗೆ ಪಿರ್ಯಾದಿ ಮಂಜಮ್ಮ ಕೊಂ ಹುಲಿಯಪ್ಪ, ಗೊದ್ದನಪಾಳ್ಯ @ ಹೊಸಪಾಳ್ಯ ಗ್ರಾಮ ರವರು  ಠಾಣೆಗೆ ಹಾಜರಾಗಿ ನೀಡಿದ ಫಿರ್ಯಾದು ಅಂಶವೇನೆಂದರೆ, ನನ್ನ ಗಂಡನಾದ ಹುಲಿಯಪ್ಪನಿಗೆ ಗೊದ್ದನಪಾಳ್ಯ ಸರ್ವೆ ನಂ 14 ರಲ್ಲಿ 1 ಎಕರೆ 15 ಗುಂಟೆ ಜಮೀನಿದ್ದು ಈ ಜಮೀನನ್ನು ನಾವು ಸುಮಾರು 20 ವರ್ಷಗಳಿಂದಲೂ ಅನುಭವಿಸಿಕೊಂಡು ಬಂದಿದ್ದು, ಈ ಜಮೀನು ನಮ್ಮ ಜೀವನಕ್ಕೆ ಆದಾರವಾಗಿದ್ದು, ಈ ಜಮೀನಿನ ಮೇಲೆ  ನಮ್ಮ ಯಜಮಾನರಾದ ಹುಲಿಯಪ್ಪ ರವರು ಅಡವು ಮಾಡಿ ಡಿ ಕೈಮರದಲ್ಲಿರುವ  ಕೆ ಜಿ ಬಿ ಬ್ಯಾಂಕ್‌ನಲ್ಲಿ  ಸುಮಾರು 3 ಲಕ್ಷ ಸಾಲ ಮಾಡಿದ್ದು, ಹಾಗೂ ಕೈ ಸಾಲವಾಗಿ ಸುಮಾರು 3 ಲಕ್ಷ ರೂ ಗಳನ್ನು ಸಾಲ ಮಾಡಿಕೊಂಡು ಈ ಹಣವನ್ನೆಲ್ಲಾ ಜಮೀನಿಗೆ ಬಂಡವಾಳ ಹಾಕಿದ್ದು, ಬೆಳೆ ಬಾರದೆ ಕೈ ಸುಟ್ಟುಕೊಂಡು ಕುಳಿತಿದ್ದು , ನಾವು ಏನು ಹೇಳಿದರೂ ನಮ್ಮ ಮಾತಿಗೆ ತಲೆ ಕೊಡದೆ ಅವರವರೇ ಏನೋ  ಒಂದು ವಿಚಾರ ಮಾತನಾಡಿಕೊಂಡು ಅತಿಯಾದ ಮದ್ಯ ವ್ಯಸನಿಗಳಾಗಿದ್ದರು, ಈ ವಿಚಾರಕ್ಕೆ ನನ್ನ ಗಂಡ ತಲೆ ಕೆಡಿಸಿಕೊಂಡು ಸಾಲ ಬಾದೆ ತಾಳಲಾರದೆ ಈಗ್ಗೆ 2 ದಿನಗಳ ಹಿಂದೆ ಅಂದರೆ ದಿ:20/05/2018 ರಂದು ಮನೆಯಿಂದ ಹೋಗಿ ಯಾರಿಗೂ ಕಾಣದಂತೆ ಗೊದ್ದನಪಾಳ್ಯ ಕರಿಯಣ್ಣ ರವರ ಜಮೀನಿನಲ್ಲಿ ಹೊಂಗೆ ತೋಪಿನ ಮದ್ಯೆ ಇರುವ  ಬೇವಿನ ಮರಕ್ಕೆ ನೇಣು ಹಾಕಿಕೊಂಡು ಮರಣ ಹೊಂದಿದ್ದು, ನನಗೆ ಈ ವಿಚಾರ ಈ ದಿನ ಮದ್ಯಾಹ್ನ 12 ಗಂಟೆಗೆ ತಿಳಿದು ಬಂತು, ನನ್ನ ಗಂಡ  ಹುಲಿಯಪ್ಪ ಮೃತನಾಗಿರುವ ವಿಚಾರದಲ್ಲಿ ನನಗೆ ಯಾವುದೆ ಅನುಮಾನ ಇರುವುದಿಲ್ಲ. ಆದುದ್ದರಿಂದ ತಾವುಗಳು ಸ್ಥಳ ಪರಿಶೀಲನೆ ಮಾಡಿ , ಕಾನೂನು ರೀತ್ಯಾ ಮುಂದಿನ ಕ್ರಮ ಜರುಗಿಸಬೇಕೆಂದು ತಮ್ಮಲ್ಲಿ ಮನವಿ..Tuesday, 22 May 2018

ಅಪರಾಧ ಘಟನೆಗಳು 22-05-18

ತಿಪಟೂರು ಗ್ರಾಮಾಂತರಪೊಲೀಸ್ ಠಾಣಾ  ಮೊ.ನಂ 43/18, ಕಲಂ 143, 323,324,504,506 ರೆ:ವಿ 149 ಐಪಿಸಿ

ದಿನಾಂಕ:21-05-18 ರಂದು  ಮಧ್ಯಾಹ್ನ 3-15  ಗಂಟೆಯಿಂದ  4-00  ಗಂಟೆಯವೆರೆಗೆ    ತಿಪಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಈ ಕೇಸಿನ ಗಾಯಾಳು ಶ್ರೀಮತಿ  ಸರೋಜಮ್ಮ ಕೋಂ ಬಸವರಾಜು, 43 ವರ್ಷ, ಗೊಲ್ಲರು, ಚಿಕ್ಕಮಾರ್ಪನಹಳ್ಳಿ ಗೊಲ್ಲರಹಟ್ಟಿ ಗ್ರಾಮ, ತಿಪಟೂರು  ತಾ  ರವರು   ನೀಡಿದ ಹೇಳಿಕೆ  ಅಂಶವೇನೆಂದರೆ,  ಈ ದಿವಸ  ದಿ:21-05-18  ರಂದು ಬೆಳಿಗ್ಗೆ   ಸುಮಾರು 10-00 ಗಂಟೆ ಸಮಯದಲ್ಲಿ   ಚಿಕ್ಕಮಾರ್ಪನಹಳ್ಳಿ  ಗೊಲ್ಲರಹಟ್ಟಿಯ  ನಮ್ಮ ಮನೆಯ ಹತ್ತಿರ ನಾನು ಹೊಲಕ್ಕೆ ಹೋಗಿ   ತೆಂಗಿನ ಸಸಿ  ನಡೆಲು  ಸಾಮಾನುಗಳನ್ನು  ತಗೆದುಕೊಳ್ಳುತ್ತಿರುವಾಗ  ನಮ್ಮ  ಮನೆಯ ಮುಂಭಾಗಕ್ಕೆ ಹಳೆಯ ದ್ವೇಷದಿಂದ  ನಮ್ಮ ಯಜಮಾನರ ಅಣ್ಣನಾದ ಕುಮಾರಯ್ಯ @ ಕುಮಾರ ಗೌಡ ರವರು  & ಇವರ ಮಗ ರಂಗಸ್ವಾಮಿ  ಹಾಗೂ ಕುಮಾರಯ್ಯನ ಹೆಂಡತಿ ಶ್ರೀಮತಿ ಶಾಂತಮ್ಮ, ದೇವರಾಜುವಿನ ಹೆಂಡತಿ ನಿರ್ಜಿತ, ತಿಮ್ಮೇಗೌಡನ ಹೆಂಡತಿ ಶ್ರೀಮತಿ ವಿಶಾಲಮ್ಮ, ಚಂದ್ರಯ್ಯನ ಹೆಂಡತಿ ಶ್ರೀಮತಿ ನರಸಮ್ಮ  ಇವರುಗಳು ಗುಂಪು ಕಟ್ಟಿಕೊಂಡು ಬಂದು, ಅವಾಚ್ಯ ಶಬ್ದಗಳಿಂದ ಲೋಫರ್, ಬೇವರ್ಸಿ ಎಂತಾ  ಬೈಯ್ದು, ಕುಮಾರಯ್ಯ ಹೆಂಡತಿ ಶಾಂತಮ್ಮ ಮೈ ಕೈಗೆ  ಕೈಗಳಿಂದ  ಹೊಡೆದು  ನೋವುಂಟು ಮಾಡಿದಳು, ಅಲ್ಲೆ ಇದ್ದ ದೊಣ್ಣೆಯಿಂದ ಕುಮಾರಯ್ಯ  ನನ್ನ ಎಡಭುಜಕ್ಕೆ ಹೊಡೆದು ರಕ್ತಗಾಯಪಡಿಸಿದ್ದು ಮೂಳೆಗೆ  ಪೆಟ್ಟು ಬಿದ್ದಿರುತ್ತೆ,  ನಾನು ಅವರಿಗೆ ಏಕೆ ಗಲಾಟೆ ಮಾಡುತ್ತೀರ ಎಂತಾ ಕೇಳಿದ್ದಕ್ಕೆ ಅವರೆಲ್ಲರೂ  ಬಾಯಿಗೆ  ಬಂದಂತೆ ಬೈಯ್ದರು ಹಾಗೂ ಕುಮಾರಯ್ಯ & ಆತನ ಮಗ ರಂಗಸ್ವಾಮಿ  ನೀನು ಊರಿಗೆ ಬಾ ನಿನ್ನನ್ನು ಒಂದು ಕೈ ನೋಡಿಕೊಳ್ಳುತ್ತೇವಂತ  ಪ್ರಾಣ ಬೆದರಿಕೆ  ಹಾಕಿರುತ್ತಾರೆ. ನಾನು ಒಬ್ಬಳೆ ಇದ್ದ ಕಾರಣ  ನನ್ನ ತಂಗಿ ಶಾಂತಮ್ಮ ಕೊಂ ಚಂದ್ರಯ್ಯ ರವರು ನನ್ನನ್ನು  ಬಿಡಿಸಿ 108 ವಾಹನದಲ್ಲಿ ತಿಪಟೂರು ಸರ್ಕಾರಿ ಆಸ್ಪತ್ರೆಗೆ  ಚಿಕಿತ್ಸೆಗೆ ದಾಖಲಿಸಿರುತ್ತಾರೆ. ನನ್ನ ಈ ಸ್ಥಿತಿಗೆ ಕಾರಣವಾಗಿರುವ  ಮೇಲ್ಕಂಡವರುಗಳ ಮೇಲೆ ಕಾನೂನು   ರೀತ್ಯಾ ಕ್ರಮ ಜರುಗಿಸಿ ಎಂತಾ ನೀಡಿದ  ಹೇಳಿಕೆ ಮೇರೆಗೆ  ಕೇಸು ದಾಖಲಿಸಿರುತ್ತೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ 117/2018 ಕಲಂ 379 ಐಪಿಸಿ

ದಿನಾಂಕ:21-05-2018 ರಂದು ಮಧ್ಯಾಹ್ನ 3-00 ಗಂಟೆಗೆ ಪಿರ್ಯಾದಿಯಾದ ಮಹಲಿಂಗಪ್ಪ, ಸಬ್‌ ಡಿವಿಜನಲ್‌ ಇಂಜಿನಿಯರ್‌(ಗ್ರಾಮಾಂತರ) (ಎಸ್. ಡಿ. ಇ.) ತುಮಕೂರು, ತುಮಕೂರು ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂಧರೆ ಎ,ಕೆ,ಕಾವಲ್‌ ಹೊನ್ನುಡಿಕೆ ಹ್ಯಾಂಡ್‌ಪೋಸ್ಟ್‌‌ ನಲ್ಲಿರುವ ಶ್ರೀ ಸಿದ್ದಲಿಂಗಪ್ಪ ಬಿನ್ ಲೇ|| ಶಿವನಂಜಪ್ಪ ರವರ ಜಮೀನಿನಲ್ಲಿರುವ ಬಿ,ಎಸ್,ಎನ್,ಎಲ್‌ ಗೆ ಸೇರಿದ ಮೊಬೈಲ್ ಟವರ್‌ ಅನ್ನು ಸದರಿ ಜಮೀನಿನ ಮಾಲೀಕರಾದ ಸಿದ್ದಲಿಂಗಪ್ಪ ರವರು ಕೇರ್ ಟೇಕರ್‌ ಆಗಿ ಕೆಲಸ ಮಾಡಿಕೊಂಡಿರುತ್ತಾರೆ. ದಿನಾಂಕ: 19-05-2018 ರಂದು ರಾತ್ರಿ ಸುಮಾರು 11-00 ಗಂಟೆ ಸಮಯದಲ್ಲಿ ಸಿದ್ದಲಿಂಗಪ್ಪ ರವರು ಮೇಲ್ಕಂಡ ಟವರ್‌ನ ಬಳಿ ಹೋಗಿ ಲೈಟ್‌ ಹಾಕಿ ಸದರಿ ಟವರ್‌ನ ಉಪಕರಣಗಳು ಕೆಲಸ ಮಾಡುತ್ತಿರುವ ಬಗ್ಗೆ ಖಾತ್ರಿ ಪಡಿಸಿಕೊಂಡು ನಂತರ ವಾಪಸ್ ಮನೆಗೆ ಹೋಗಿರುತ್ತಾರೆ. ನಂತರ ದಿನಾಂಕ: 20-05-2018 ರಂದು ಬೆಳಿಗ್ಗೆ ಸುಮಾರು 06-00 ಗಂಟೆ ಸಮಯದಲ್ಲಿ ಸಿದ್ದಲಿಂಗಪ್ಪ ರವರು ಎಂದಿನಂತೆ ಸದರಿ ಟವರ್‌ನ ಬಳಿ ಹೋಗಿ ನೋಡಲಾಗಿ ಸದರಿ ಟವರ್‌ನಲ್ಲಿ ಅಳವಡಿಸಿರುವ ಲೋಡಿಂಗ್‌ ಬ್ಯಾಟರಿಗಳ ಪೈಕಿ 400 ಎ.ಹೆಚ್ ಸಾಮರ್ಥ್ಯದ ಸುಮಾರು 22 ಬ್ಯಾಟರಿಗಳು(ಸೆಲ್) ಕಳುವಾಗಿರುವುದು ಕಂಡು ಬಂದಿದ್ದು, ನಂತರ ಸದರಿ ವಿಚಾರವನ್ನು ಸಿದ್ದಲಿಂಗಪ್ಪ ರವರು ನನಗೆ ಪೋನ್ ಮಾಡಿ ತಿಳಿಸಿದರು. ಎ,ಕೆ,ಕಾವಲ್‌ ಹೊನ್ನುಡಿಕೆ ಹ್ಯಾಂಡ್‌ಪೋಸ್ಟ್‌ನ ಬಿ,ಎಸ್,ಎನ್,ಎಲ್‌ ಮೊಬೈಲ್ ಟವರ್‌ನಲ್ಲಿದ್ದ 22 ಬ್ಯಾಟರಿಗಳನ್ನು(ಸೆಲ್) ಯಾರೋ ಕಳ್ಳರು ದಿನಾಂಕ: 19-05-2018 ರ ರಾತ್ರಿ 11-00 ಗಂಟೆಯಿಂದ ದಿನಾಂಕ: 20-05-2018 ರ ಬೆಳಿಗ್ಗೆ 06-00 ಗಂಟೆಯ ಮದ್ಯೆ ಕಳವು ಮಾಡಿರುತ್ತಾರೆ. ಕಳುವಾಗಿರುವ ಬ್ಯಾಟರಿಗಳ ಬೆಲೆಯನ್ನು ತಿಳಿಯಬೇಕಾಗಿರುತ್ತೆ. ಆದ್ದರಿಂದ ಕಳ್ಳತನ ಮಾಡಿರುವ ಆಸಾಮಿಗಳನ್ನು ಪತ್ತೆ ಮಾಡಿ ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ಈ ಮೂಲಕ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ. ನಾನು ಕೃತ್ಯ ನಡೆದ ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿ ನಂತರ ನನ್ನ ಇಲಾಖಾ ಮೇಲಾಧಿಕಾರಿಗಳಿಗೆ ತಿಳಿಸಿ, ಅವರ ಆದೇಶದಂತೆ ಈ ದಿವಸ ತಡವಾಗಿ ಬಂದು ದೂರು ನೀಡುತ್ತಿದ್ದೇನೆ ಎಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

 

ಪಟ್ಟನಾಯಕನಹಳ್ಳಿ ಪೊಲೀಸ್ ಠಾಣಾ ಯು ಡಿ ಆರ್ ನಂ 17-18 ಕಲಂ 174 ಸಿ ಆರ್ ಪಿ ಸಿ

ದಿನಾಂಕ:21-05-2018 ರಂದು  ಬೆಳಿಗ್ಗೆ 11-00 ಗಂಟೆಗೆ ಪಿರ್ಯಾದಿ ಮಂಜುಳಾ ಕೊಂ ರಂಗಸ್ವಾಮಿ, ಕರೆಕಲ್ಲಹಟ್ಟಿ ಗ್ರಾಮ,  ಹುಲಿಕುಂಟೆ ಹೋಬಳಿ, ಶಿರಾ ತಾಲ್ಲೂಕ್ ರವರು ಠಾಣೆಗೆ ಹಾಜರಾಗಿ  ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ಪಿರ್ಯಾದಿ ರವರ ತವರು ಮನೆ ಚಿಕ್ಕನಕೋಟೆ ಗ್ರಾಮವಾಗಿದ್ದು, ಸುಮಾರು 10 ವರ್ಷಗಳ ಹಿಂದೆ ಕರೆಕಲ್ಲಹಟ್ಟಿಯ ರಂಗಸ್ವಾಮಿ ಬಿನ್ ಕೃಷ್ಣಪ್ಪ  ಎಂಬುವರೊಂದಿಗೆ ಮದುವೆಯಾಗಿದ್ದು, ಇವರಿಗೆ  ಕಿರಣ್ ಮತ್ತು ಪವನ್  ಎಂಬ   ಇಬ್ಬರು   ಗಂಡು ಮಕ್ಕಳಿದ್ದು ಸಂಸಾರ  ಸಮೇರ ಕರೆಕಲ್ಲಹಟ್ಟಿ ಗ್ರಾಮದಲ್ಲಿ  ತನ್ನ ಅತ್ತೆಯಾದ ಯಶೋಧಮ್ಮಕೊಂ  ಕೃಷ್ಣಪ್ಪ ಎಂಬುವರ ತಂದೆ  ಬಲಿಕೇರಪ್ಪ ರವರ ಜಮೀನಿನಲ್ಲಿ  ವ್ಯವಸಾಯ ಮಾಡಿಕೊಂಡು  ಜೀವನ ಸಾಗಿಸುತ್ತಿದ್ದು,  ಜೊತೆಯಲ್ಲಿ  ಉಪಕಸುಬುಗಳಾಗಿ  ಕುರಿಗಳನ್ನು ಕಾಯುತ್ತಿದ್ದು  ಮೇವಿನ ಕೊರತೆಯಿಂದ ಪಿರ್ಯಾದಿ  ಗಂಡ ರಂಗಸ್ವಾಮಿ ಬೇಸಿಗೆ ಕಾಲದಲ್ಲಿ ಮೈಸೂರು,ಹುಣಸೂರು,ಮಂಡ್ಯ,ಮದ್ದೂರು ಕಡೆ ಅವರಿವೆ ಕುರಿಗಳೊಂದಿಗೆ ಇವರ ಕುರಿಗಳನ್ನು  ವಲಸೆ  ಹೊಡೆದುಕೊಂಡು  ಹೋಗಿ  ಮಳೆಗಾಲದಲ್ಲಿ ವಾಪಸ್   ಬರುತ್ತಿದ್ದು, ಈಗ ಪಿರ್ಯಾದಿ ರವರ ಕುರಿಗಳು ಮೈಸೂರು ಕಡೆಯಿದ್ದು , ಯಾರನ್ನೊ ಕುರಿ ನೋಡಿಕೊಳ್ಳಲು ಕಾವಲು  ಬಿಟ್ಟು ಊರಿನಲ್ಲಿ  ವ್ಯವಸಾಯ ಕೆಲಸಕ್ಕೆ ಪಿರ್ಯಾದಿ ಗಂಡ  ರಂಗಸ್ವಾಮಿ ಬಂದಿದ್ದು  ದಿನಾಂಕ:20-05-18 ರಂದು  ರಾತ್ರಿ ಹೊಲಕ್ಕೆ ಹೋದಾಗ ನಿಮ್ಮ ಯಜಮಾರಿಗೆ  ಯಾವುದೊ  ವಿಷಪೂರಿತಹಾವು ಕಚ್ಚಿರುತ್ತೆ ಎಂದು ದಿನಾಂಕ 21-05-18 ರಂದು ಬೆಳಗ್ಗೆ ಸುಮಾರು 06-00 ಗಂಟೆಗೆ  ಯಾರೊ ಪೋನ್ ಮಾಡಿ ತಿಳಿಸಿದ್ದು  ತಕ್ಷಣ ಪಿರ್ಯಾದಿ ಮತ್ತು ಕುಟುಂಬದವರು  ಬಂದು ನೋಡಲಾಗಿ ಪಿರ್ಯಾದಿ ಯಜಮಾನರ ಬಾಯಿಂದ  ಬಿಳಿ ನೊರೆ ಬಂದಿತ್ತು. ಕಾಲಿನ ಬಲಪಾದದ ಮೇಲೆ ಏನೊ ಕಡಿದಂತೆ ಗುರುತು ಕಂಡ ಬಂತು , ಹಾವು ಕಡಿದಿದ್ದರಿಂದ ಮೈಯೆಲ್ಲಾ ವಿಷ ಪಸರಿಸಿ  ಮೃತಪಟ್ಟಿರುತ್ತಾರೆ. ಮೃತನ ಸಾವಿನಲ್ಲಿ ಬೇರೆ ಅನುಮಾನ  ಇರುವುದಿಲ್ಲ  ಸ್ಥಳಕ್ಕೆ ಬಂದು ಮುಂದಿನ ಕ್ರಮ  ಜರುಗಿಸಲು  ನೀಡಿದ ಪಿರ್ಯಾದನ್ನು ಪಡೆದು  ಪ್ರಕರಣ ದಾಖಲಿಸಿರುತ್ತೆ.

ಹೊನ್ನವಳ್ಳಿ ಪೊಲೀಸ್‌  ಠಾಣೆ ಮೊ ನಂ 31/2018 ಕಲಂ:279.337. ಐಪಿಸಿ ರೆ/ವಿ 187 ಐಎಂವಿ ಆಕ್ಟ್‌

ದಿನಾಂಕ 21/05/2018 ರಂದು ಮದ್ಯಾಹ್ನ 2-00 ಗಂಟೆಗೆ ತಿಪಟೂರು ತಾ|| ಕಸಬಾ ಹೋ|| ಕೋಡಿಹಳ್ಳಿ ತೋಟದಮನೆ  ವಾಸಿ ಬಸವರಾಜಪ್ಪ ಬಿನ್‌ ಲಕ್ಕಣ್ಣ ಸು. 55 ವರ್ಷ ಉಪ್ಪಾರ ಜನಾಂಗದವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೆನೆಂದರೆ, ನಾನು ಎಲೆಕ್ಟ್ರಿಕಲ್‌‌‌‌ ಗುತ್ತಿಗೆದಾರನಾಗಿ ಕೆಲಸ ಮಾಡಿಕೊಂಡಿರುತ್ತೇನೆ. ದಿನಾಂಕ:10.05.2018 ರಂದು ನನ್ನ ಸ್ವಂತ ಕೆಲಸದ ನಿಮಿತ್ತವಾಗಿ ತಿಪಟೂರು ತಾ: ಹಾಲ್ಕುರಿಕೆ ಗ್ರಾಮಕ್ಕೆ ಹೋಗಲು ನಾನು ಮತ್ತು ನನ್ನ ಸ್ನೇಹಿತನಾದ ತಿಪಟೂರಿನ ಎಸ್.ಕೆ.ಪಿ.ಟಿ. ರಸ್ತೆ ವಾಸಿ ಉಮೇಶ್‌‌ ಎಸ್.ಸಿ. ಬಿನ್‌‌ ಚನ್ನಪ್ಪ ಎಸ್.ಕೆ.ಎಂಬುವರೊಂದಿಗೆ ನನ್ನದೇ ಆದ ಕೆ.ಎ.29.ಎಂ.ಇ.4222 ನೇ ಮಾರುತಿ ಸ್ವಿಪ್ಟ್‌‌‌ ಕಾರಿನಲ್ಲಿ ತಿಪಟೂರಿನಿಂದ ಸಾಯಂಕಾಲ ಸುಮಾರು 4-10 ಗಂಟೆ ಸಮಯದಲ್ಲಿ ಹಾಲ್ಕುರಿಕೆ ಹತ್ತಿರ ಇರುವ ಪವರ್‌ ಸ್ಟೇಷನ್‌‌‌ ಮುಂಭಾಗ ತಿಪಟೂರು-ಹುಳಿಯಾರು ರಸ್ತೆಯ ಎಡಭಾಗದಲ್ಲಿ ಹೋಗುತ್ತಿದ್ದೆವು. ಕಾರನ್ನು ಉಮೇಶ್‌‌ರವರೇ ಚಾಲನೆ ಮಾಡುತ್ತಿದ್ದರು. ಆ ಸಮಯದಲ್ಲಿ ತಿಪಟೂರು ಕಡೆಯಿಂದ ಅಂದರೆ ನನ್ನ ಕಾರಿನ ಹಿಂದೆ ಬರುತ್ತಿದ್ದ ಕೆ.ಎ.35.ಎಫ್.327 ನೇ ಕೆ.ಎಸ್.ಆರ್.ಟಿ.ಸಿ.ಬಸ್‌‌ ಚಾಲಕ ಬಸ್ಸನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ನನ್ನ ಕಾರಿನ ಬಲಭಾಗದ ಹಿಂಬದಿಗೆ ಡಿಕ್ಕಿ ಹೊಡೆಸಿದಾಗ, ಕಾರು ನಮ್ಮ ಕಾರಿನ ಚಾಲಕನ ಹಿಡಿತ ತಪ್ಪಿ ರಸ್ತೆಯ ಎಡಬದಿಯ ಚರಂಡಿಗೆ ಕಾರಿನ ಮುಂಭಾಗವು ಬಿದ್ದು ಜಖಂಗೊಂಡಿರುತ್ತೆ. ಮತ್ತು ಕಾರಿನ ಬಲಭಾಗದ ಹಿಂಬದಿಯು ಜಖಂಗೊಂಡಿರುತ್ತೆ. ಅಪಘಾತದ ನಂತರ ಬಸ್ಸಿನ ಚಾಲಕ ಸ್ವಲ್ಪ ಮುಂದೆ ಹೋಗಿ ಬಸ್ಸನ್ನು ನಿಲ್ಲಿಸಿ ನಮ್ಮ ಕಾರಿನ ಹತ್ತಿರ ಬಂದು ಕಾರನ್ನು ಮತ್ತು ಕಾರಿನಲ್ಲಿದ್ದ ನಮ್ಮನ್ನು  ನೋಡಿ ನಂತರ ಏನೂ ಮಾತನಾಡದೇ ಅಲ್ಲಿಂದ ಬಸ್ಸನ್ನು ತೆಗೆದುಕೊಂಡು ಹೊರಟು ಹೋದನು. ಚಾಲಕನ ಹೆಸರು ಗೊತ್ತಾಗಿರುವುದಿಲ್ಲ.  ಈ ಅಪಘಾತದಿಂದ ಕಾರಿನ ಮುಂಭಾಗ ಎಡಭಾಗದಲ್ಲಿ ಕುಳಿತಿದ್ದ ನನಗೆ ಎಡಗೈ ಮುಂಗೈಗೆ ಮತ್ತು ಹಣೆಗೆ ಪೆಟ್ಟಾಗಿದ್ದು, ತಕ್ಷಣ ನನ್ನನ್ನು ಉಮೇಶ್‌ರವರು ರಸ್ತೆಯಲ್ಲಿ ಬಂದ ಯಾವುದೋ ಒಂದು ಕಾರಿನಲ್ಲಿ ಹಾಲ್ಕುರಿಕೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದರು. ನಂತರ ಅದೇ ದಿನ ಅಲ್ಲಿಂದ ತಿಪಟೂರಿನ ಸರ್ಕಾರಿ ಆಸ್ಪತ್ರೆ, ಮುದ್ರಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿರುತ್ತೇನೆ. ಆದ್ದರಿಂದ ಚಿಕಿತ್ಸೆ ಪಡೆದು ಈ ದಿನ ತಡವಾಗಿ ಠಾಣೆಗೆ ಬಂದು ಈ ಅಪಘಾತಕ್ಕೆ ಕಾರಣವಾಗಿರುವ ಮೇಲ್ಕಂಡ ಕೆ.ಎಸ್.ಆರ್.ಟಿ.ಸಿ. ಬಸ್‌ ಚಾಲಕನ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರನ್ನು  ಪಡೆದು ಪ್ರಕರಣ ದಾಖಲು ಮಾಡಿರುತ್ತೆ.

ಹುಲಿಯೂರುದುರ್ಗ ಪೊಲೀಸ್‌ ಠಾಣಾ ಮೊ ನಂ 123/2018, ಕಲಂ: 279 337 ಐ ಪಿಸಿ

ದಿನಾಂಕ: 21-05-2018 ರಂದು ಮದ್ಯಾಹ್ನ  12-00 ಗಂಟೆಗೆ ಪಿರ್ಯಾದಿ ನಾಗರಾಜು ಬಿನ್ ಚಿಕ್ಕತಿಮ್ಮಯ್ಯ, ತಿಪ್ಪನಾಯಕನಹಳ್ಳಿ,  ಹುರ್ತಿದುರ್ಗ ಹೋಬಳಿ, ಕುಣಿಗಲ್ ತಾಲೋಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನಂಶವೇನೆಂದರೆ ದಿನಾಂಕ: 19-05-2018  ರಂದು  ಪಿರ್ಯಾದಿಯು ತಮ್ಮ ಬಾಬ್ತು ದ್ವಿಚಕ್ರ ವಾಹನ ನಂಬರ್ KA-06-5622  ರಲ್ಲಿ ಕೆಲಸದ ನಿಮಿತ್ತ ಹುಲಿಯೂರುದುರ್ಗಕ್ಕೆ ಬಂದಿದ್ದು, ನಂತರ  ಸಂಜೆ 04-00 ಗಂಟೆಯಲ್ಲಿ ವಾಪಾಸ್ ಊರಿಗೆ ಹೋಗಲು ತನ್ನ ಹೆಂಡತಿ ನಾಗಮ್ಮ ಹಾಗೂ ತನ್ನ ಮಗ ಗೋವಿಂದರಾಜು ರವರೊಂದಿಗೆ ಹುಲಿಯೂರುದುರ್ಗದ ಮಂಡಿಗುಡ್ಡೆ ಕ್ರಾಸ್ ಹತ್ತಿರ ರಸ್ತೆಯ ಎಡಬದಿಯಲ್ಲಿ ಹೋಗುತ್ತಿದ್ದು ಯೂ-ಟರ್ನ್ ಕ್ರಾಸ್ ಮಾಡುವ ಸಮಯದಲ್ಲಿ ಕುಣಿಗಲ್ ಕಡೆಯಿಂದ ಬಂದ ಕೆಎ-16-ಎಮ್-5520 ನೇ ಕಾರಿನ ಚಾಲಕನು ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿಯ ಬೈಕಿಗೆ ಡಿಕ್ಕಿಪಡಿಸಿ ಅಪಘಾತವುಂಟುಮಾಡಿದ್ದು ಪರಿಣಾಮ ಬೈಕ್ ಸಮೇತ ಕೆಳಕ್ಕೆ ಬಿದ್ದು ಹೋಗಿದ್ದು, ಪಿರ್ಯಾದಿಗೆ ಮತ್ತು ಅವರ ಹೆಂಡತಿಗೆ ಸಣ್ಣಪುಟ್ಟ ಗಾಯಗಳಾಗಿರುತ್ತೆ,. ಮತ್ತು ಪಿರ್ಯಾದಿಯ ಮಗ ಗೋವಿಂದರಾಜುವಿಗೆ ಮೊಣಕಾಲಿನ ಕೆಳಗೆ ತೀವ್ರ ಸ್ವರೂಪದ ರಕ್ತಗಾಯವಾಗಿದ್ದು ಮೂಳೆ ಮುರಿದಿರುತ್ತೆ. ಆಗ ಪಿರ್ಯಾದಿ ಮತ್ತು ಅವರ ಸಂಬಂದಿಯಾದ ಮಾದುಗೋನಹಳ್ಳಿ ಗ್ರಾಮದ ನಿಂಗೇಗೌಡ ಬಿನ್ ಕೆಂಪಯ್ಯ ರವರು ಸೇರಿ ಗಾಯಗೊಂಡಿದ್ದ ಪಿರ್ಯಾದಿಯ ಮಗನನ್ನು ಹುಲಿಯೂರುದುರ್ಗ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿ ನಂತರ ವೈದ್ಯರ ಸಲಹೆ ಮೇರೆಗೆ ಮಂಡ್ಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಕೆ ಆರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿ ಅಲ್ಲಿಯೇ ಇದ್ದು ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು, ಈ ಅಪಘಾತಕ್ಕೆ ಕಾರಣವಾದ ಕೆಎ-16-ಎಮ್-5520 ನೇ ಕಾರಿನ ಚಾಲಕನ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.Monday, 21 May 2018

ಅಪರಾಧ ಘಟನೆಗಳು 21-05-18

ತುಮಕೂರು ಸಂಚಾರ ಪೊಲೀಸ್ ಠಾಣಾ ಮೊ.ಸಂಖ್ಯೆ 107/2018 ಕಲಂ 279,337,304(ಎ) ಐಪಿಸಿ

ದಿನಾಂಕ 20.05.2018 ರಂದು ರಾತ್ರಿ 9-00 ಗಂಟೆಗೆ ಗೋವಿಂದರಾಜು ಬಿನ್ ವೆಂಕಟಗಂಗಯ್ಯ, 46ವರ್ಷ,  ಕುರುಬರು ಜನಾಂಗ, ಕಾರ್ ಡ್ರೈವರ್ ಕೆಲಸ, ತಿಟಿ.ಪಾಳ್ಯ,  ತುಮಕೂರು ತಾ,,  ಇವರು ನೀಡಿದ ದೂರಿನ ಅಂಶವೇನೆಂದರೆ,     ದಿನಾಂಕ 20.05.2018 ರಂದು  ನನ್ನ ಸ್ನೇಹಿತ   ಶ್ರೀನಿವಾಸ, 50ವರ್ಷ, ತಿಗಳರು, ಕಾರಿನ ಡ್ರೈವರ್,  ಬಿಎಂ.ತೋಟ, ತುಮಕೂರು ಮತ್ತು ನಾನು, ಇಬ್ಬರೂ ಶ್ರೀನಿವಾಸ ರವರ  ಕೆಎ.01.ಇಹೆಚ್.4623  ನೇ ಬೈಕಿನಲ್ಲಿ ನಾನು ಕುಳಿತುಕೊಂಡು     ರಾತ್ರಿ 7-55 ಗಂಟೆ ಸಮಯದಲ್ಲಿ ಶ್ರೀನಿವಾಸ ರವರೇ ಬೈಕನ್ನು ಚಾಲನೆ ಮಾಡಿಕೊಂಡು  ಶಿರಾಗೇಟ್ ಸಮೀಪ  ಶಿರಾಗೇಟ್ ಕಡೆಯಿಂದ ತುಮಕೂರು ಕಡೆಗೆ ಹಳೇ ಎನ್.ಹೆಚ್-4 ರಸ್ತೆಯಲ್ಲಿ ಬರುತ್ತಿರುವಾಗ ಶ್ರೀನಿವಾಸ ರವರು ರಾತ್ರಿ 7-55 ಗಂಟೆ ಸಮಯದಲ್ಲಿ   ಬೈಕನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಶಿರಾಗೇಟ್ ಸಮೀಪ ಇರುವ ಟ್ರೇಂಡ್ ಶಾಪ್ ಮುಂಭಾಗ ಸಡನ್ ಆಗಿ ಬ್ರೇಕ್ ಹಾಕಿದ್ದರಿಂದ  ನನಗೆ  ಪೆಟ್ಟು ಬಿದ್ದು ರಕ್ತಗಾಯಗಳಾದವು.   ಶ್ರೀನಿವಾಸ ರವರ ತಲೆಗೆ ಪೆಟ್ಟು ಬಿದ್ದು ರಕ್ತಗಾಯಗಳಾಗಿ  ಮೃತಪಟ್ಟಿರುತ್ತಾರೆಂತ ದೂರಿನ ಅಂಶ.

ಹೊನ್ನವಳ್ಳಿ ಪೊಲೀಸ್‌  ಠಾಣೆ ಯು,ಡಿ,ಆರ್ ನಂ-12/2018 ಕಲಂ 174 (ಸಿ)  ಸಿ,ಆರ್,ಪಿ,ಸಿ

ದಿನಾಂಕ:20.05.2018 ರಂದು ಸಂಜೆ 5-15 ಗಂಟೆಗೆ ತಿಪಟೂರು ತಾ: ಹೊನ್ನವಳ್ಳಿ ಹೋಬಳಿ, ಕಲ್ಕೆರೆ  ಗ್ರಾಮದ   ವಾಸಿ  ಅಮರ್ ಸಿಂಗ್ ಬಿನ್ ಠಾಕೂರ್ ಸಿಂಗ್, 52 ವರ್ಷ ರಜಪೂತ   ಜನಾಂಗ, ಆದ ನಾನು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೆನೆಂದರೆ. ನಾನು ಈ ದಿನ ದಿನಾಂಕ 20.05.2018 ರಂದು ನನ್ನ ಸ್ವಂತ ಕೆಲಸದ ನಿಮಿತ್ತ ಹರಿಸಮುದ್ರ ಗ್ರಾಮಕ್ಕೆ ಹೋಗಿದ್ದು ಸಾಯಂಕಾಲ ಸುಮಾರು 04.00 ಗಂಟೆ ಸಮಯದಲ್ಲಿ ನಾನು ವಾಪಸ್ ನಮ್ಮೂರಿಗೆ ಹೋಗಲು ವಿರುಪಾಕ್ಷಪುರ ಗೇಟ್ ನಿಂದ ಮೀಸೆತಿಮ್ಮನಹಳ್ಳಿ ಗ್ರಾಮದ ಕಡೆಗೆ ಹೋಗಲು ಬೈಕ್ ನಲ್ಲಿ ಹೋಗುತ್ತಿರುವಾಗ ವಿರುಪಾಕ್ಷಿಪುರ ಗೇಟ್ ಹತ್ತಿರ ಹರಿಸಮುದ್ರ ಗ್ರಾಮದ ಶಿವಲಿಂಗಯ್ಯ ಬಿನ್ ಲೇಟ್ ರುದ್ರಪ್ಪ, ಎಂಬುವವರಿಗೆ ಸೇರಿದ ಜಮೀನಿನಲ್ಲಿ 4 -5 ಜನರು ನಿಂತು ಕೊಂಡು ಏನ್ನನ್ನೊ ನೊಡುತ್ತಿದ್ದು, ನಾನು ಹತ್ತಿರ ಹೋಗಿ ನೊಡಿದಾಗ ಜಮೀನಿನಲ್ಲಿ ಸುಮಾರು 35 ರಿಂದ 45 ವರ್ಷ ವಯಸ್ಸಿನ ವ್ಯಕ್ತಿಯೋಬ್ಬ ಮಕಾಡೆಯಾಗಿ ಬಿದ್ದಿದ್ದು, ನೊಡಲಾಗಿ ಕಣ್ಣುಗಳು ಮತ್ತು  ಎಡ ಕೆನ್ನೆ ಕಪ್ಪಾಗಿ ಊದಿಕೊಂಡಾಂತೆ ಇರುತ್ತೆ, ಎಡಕಾಲಿನ ತೋಡೆಯ ಹತ್ತಿರ ಮತ್ತು ಮೀನು ಕಂಡದ ಹತ್ತಿರ ಚರ್ಮ ಸುಲಿದಂತೆ ಇರುತ್ತೆ, ಮೈಮೇಲೆ ಇರುವೆಗಳು ಮತ್ತು ಗೊದ್ದಗಳು ಕಚ್ಚಿಕೊಂಡಂತೆ ಇರುತ್ತೆ ಮೂಗಿನಿಂದ ಕೆಂಪು ಮಿಶ್ರಿತ ನೀಚ ನೀರು ಬರುತ್ತಿರುತ್ತೆ ಮೈಮೇಲೆ ಬಿಳಿ ಕೆಂಪು ಬಣ್ಣ ಮಿಶ್ರಿತ ಉದ್ದ ಗೀರುಗಳ್ಳುಳ್ಳಾ ತುಂಬು ತೋಳಿನ ಶರ್ಟು, ಕಾಪಿ  ಬಣ್ಣದ ಕಾಚಾ, ಆಕಾಶ ನೀಲಿ ಬಣ್ಣದ ಸಣ್ಣ ಸಣ್ಣ ಚೌಕಳಿ ಇರುವ ಲೂಂಗಿ ಪಂಚೆ ಇರುತ್ತೆ, ಬಲಗೈ ಯಲ್ಲಿ ಕಪ್ಪು ಬಣ್ಣದ ರಬ್ಬರ ಬೆಂಡ್ ಮತ್ತು ಒಂದು ಹಸಿರು ಕೆಂಪು ಮಿಶ್ರಿತ ಬಣ್ಣದ ಪಟ್ಟಿ ತರಹದ ದಾರ ಕಟ್ಟಿರುತ್ತೆ, ಜೇಬಿನಲ್ಲಿ ಪೋನ್ ನಂಬರ್ ಬರೆದಿರುವ 7-8 ಹಾಳೆ ಇರುವ ಪುಸ್ತಕ ಇರುತ್ತೆ, ಸದರಿ ಆಸಾಮಿಯನ್ನು ಸುತ್ತ ಮುತ್ತಲ ಜನರು ನೋಡಿದ್ದು ಯಾರು ಗುರುತಿಸಿರುವುದಿಲ್ಲ ಹೆಣದ ಪಕ್ಕದಲ್ಲಿ haywrdS whiskey ಯ 90 ಎಮ್ ಎಲ್ ನ ಎರಡು ತುಂಬಿರುವ ಎರಡು ಖಾಲಿ ಇರುವ ಟೆಟ್ರಾ ಪಾಕೇಟ್ ಗಳು ಮತ್ತು ಕಾಲಿನ ಹತ್ತಿರ PRIDE ಕಂಪನಿಯ ಒಂದು ಜೊತೆ ಚರ್ಮದ ತರಹದ ಚಪ್ಪಲಿ ಬಿದ್ದಿರುತ್ತವೆ ಸದರಿ ಆಸಾಮಿ ಎಲ್ಲಿಂದಲ್ಲೋ ಕುಡಿದು ಬಂದು ಇಲ್ಲಿ ಮಕಾಡೆಯಾಗಿ ಬಿದ್ದು ಕಣ್ಣುಗಳಿಗೆ ಮತ್ತು ಮೂಗಿಗೆ ಪೆಟ್ಟಾಗಿ ಸ್ಥಳದಲ್ಲಿಯೇ ಸುಮಾರು  2 ದಿನಗಳ ಹಿಂದೆಯೇ ಮೃತ ಪಟ್ಟಿರುತ್ತಾನೆಂದು ತಿಳಿದು ಬಂದಿರುತ್ತೆ, ಆದರೂ ಸಹ ಮೃತನ ಸಾವಿನಲ್ಲಿ ಅನುಮಾನ ಇರುತ್ತೆ. ಆದ್ದರಿಂದ ಮೃತಪಟ್ಟಿರುವ ಬಗ್ಗೆ ಮುಂದಿನ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಮ್ಮಲ್ಲಿ ಕೋರುತ್ತೇನೆ. ಎಂದು ನೀಡಿದ ಪಿರ್ಯಾದಿಯನ್ನು  ಪಡೆದು  ಪ್ರಕರಣ ದಾಖಲಿಸಿರುತ್ತೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ ಮೊ ನಂ-115/2018 ಕಲಂ 279,337 ಐಪಿಸಿ

 

ದಿನಾಂಕ:20-05-2018 ರಂದು ರಾತ್ರಿ 7-00 ಗಂಟೆಗೆ ಪಿರ್ಯಾದಿಯಾದ ಆಕಾಶ್‌‌ ಮೌರಿ ಬಿನ್‌‌ ದಿಲೀಪ್‌‌‌, 31 ವರ್ಷ, ಹಿಂದೂ ಮರಾಟ ಜನಾಂಗ, ವ್ಯಾಪಾರ, ನಂಬರ್‌-437, ಶಿವಾಜಿ ನಗರ, ಪುಣೆ, ಮಹಾರಾಷ್ಟ್ರ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ದಿನಾಂಕ 19-05-2018 ರಂದು ನಾನು ಮತ್ತು ನನ್ನ ಸ್ನೇಹಿತನಾದ ಪ್ರವೀಣ್‌‌ ಸುಖದೇವ್‌‌ ಥೋರ್ವೆ ಹಾಗೂ ಅವರ ಕುಟುಂಬದವರು ಮತ್ತು ಇತರ ಸ್ನೇಹಿತರು ಪ್ರವೀಣ್‌‌ ಸುಖದೇವ್‌‌ ಥೋರ್ವೆ ರವರ ಬಾಬ್ತು ಎಂ,ಹೆಚ್‌‌-14-ಎಫ್‌‌,ಎಂ-7377 ನೇ ಮಹೀಂದ್ರ ಸ್ಕಾರ್ರ್ಪಿಯೋ ಕಾರಿನಲ್ಲಿ ಪ್ರವಾಸಕ್ಕೆಂದು ದಿನಾಂಕ 15-05-2018 ರಂದು ಪುಣೆಯನ್ನು ಬಿಟ್ಟು ಪ್ರವೀಣ್‌‌ ಸುಖದೇವ್‌‌ ಥೋರ್ವೆ  ರವರು ಕಾರನ್ನು ಚಾಲನೆ ಮಾಡಿಕೊಂಡು ದಿನಾಂಕ 19-05-2018 ರಂದು ಮೈಸೂರನ್ನು ನೋಡಿಕೊಂಡು ವಾಪಸ್‌‌ ಪುಣೆ ಹೋಗಲು ಕುಣಿಗಲ್‌-ತುಮಕೂರು ಟಾರ್‌‌ ರಸ್ತೆಯಲ್ಲಿ ಹೆಬ್ಬೂರಿನಿಂದ ಮುಂದೆ ಇರುವ ಚೋಳಾಪುರ ಕ್ರಾಸ್‌‌ ಬಳಿಯಲ್ಲಿ ಮಧ್ಯ ರಾತ್ರಿ ಸುಮಾರು 02-00 ಗಂಟೆ ಸಮಯದಲ್ಲಿ ಹೋಗುತ್ತಿರುವಾಗ್ಗೆ, ನನ್ನ ಸ್ನೇಹಿತ ಪ್ರವೀಣ್‌‌ ಸುಖದೇವ್‌‌ ಥೋರ್ವೆ  ರವರು ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಲಭಾಗದ ಸಿಗ್‌‌ನಲ್‌‌ ಕಂಭಕ್ಕೆ ಡಿಕ್ಕಿ ಹೊಡಿಸಿ ಹಳ್ಳಕ್ಕೆ ಬೀಳಿಸಿದ್ದರಿಂದ ಕಾರಿನಲ್ಲಿದ್ದ ನನ್ನ ಸ್ನೇಹಿತ ಪ್ರವೀಣ್‌‌ ಸುಖದೇವ್‌‌ ಥೋರ್ವೆ ರವರ ಹೆಂಡತಿಯಾದ ದೀಪಾಲಿ ಪ್ರವೀಣ್‌ ಥೋರ್ವೆ ರವರಿಗೆ ಮುಖಕ್ಕೆ ಮತ್ತು ನಿಲೇಶ್‌‌ ಖಡಕೆ ರವರಿಗೆ ಬಲಗಾಲಿಗೆ ಹಾಗೂ ಒಂದು ವರ್ಷದ ಮಗುವಾದ ಅದ್ವಿಕ್‌‌‌‌ ಅತುಲ್‌‌ ಸಾವಂತ್‌‌ ರವರಿಗೆ ತಲೆಗೆ ರಕ್ತಗಾಯಗಳಾಗಿದ್ದು, ಕಾರನ್ನು ಚಾಲನೆ ಮಾಡುತ್ತಿದ್ದ ನನ್ನ ಸ್ನೇಹಿತ ಪ್ರವೀಣ್‌‌ ಸುಖದೇವ್‌‌ ಥೋರ್ವೆ ರವರಿಗೆ ಬಲಗೈಯ ಹಸ್ತಕ್ಕೆ, ಎದೆಗೆ ರಕ್ತಗಾಯಗಳಾಗಿದ್ದು, ಕಾರಿನ ಮುಂಭಾಗ ಹಾಗೂ ಹಿಂಭಾಗ ಜಖಂಗೊಂಡಿರುತ್ತೆ. ನಂತರ ನಾನು ಗಾಯಾಳುಗಳನ್ನು ಉಪಚರಿಸಿ ಸ್ಥಳದಲ್ಲಿದ್ದ ಸಾರ್ವಜನಿಕರ ಸಹಾಯದಿಂದ ಸ್ಥಳಕ್ಕೆ ಬಂದ 108 ಆ್ಯಂಬುಲೆನ್ಸ್‌‌ ವಾಹನದಲ್ಲಿ ಗಾಯಾಳುಗಳನ್ನು ತುಮಕೂರಿನ ಜಿಲ್ಲಾ ಆಸ್ಪತ್ರೆಗೆ ಹೋಗಿ ಅಲ್ಲಿ ಚಿಕಿತ್ಸೆ ಕೊಡಿಸಿ ನಂತರ ಅಲ್ಲಿನ ವೈದ್ಯರ ಸಲಹೆ ಮೇರೆಗೆ ಬೆಂಗಳೂರಿನ ಸ್ಪರ್ಶ್‌ ಆಸ್ಪತ್ರೆಗೆ ಹೋಗಿ ಚಿಕಿತ್ಸೆಗೆ ದಾಖಲಿಸಿರುತ್ತೇನೆ. ನನಗೆ ಸಣ್ಣಪುಟ್ಟ ಗಾಯಗಳಾಗಿದ್ದರಿಂದ ನಾನು ಯಾವುದೇ ರೀತಿಯ ಚಿಕಿತ್ಸೆಯನ್ನು ಪಡೆದಿರುವುದಿಲ್ಲಾ. ಆದ್ದರಿಂದ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಈ ಅಪಘಾತಕ್ಕೆ ಕಾರಣನಾದ ಎಂ,ಹೆಚ್‌‌-14-ಎಫ್‌‌,ಎಂ-7377 ನೇ ಮಹೀಂದ್ರ ಸ್ಕಾರ್ರ್ಪಿಯೋ ಕಾರಿನ ಚಾಲಕನಾದ ಪ್ರವೀಣ್‌‌ ಸುಖದೇವ್‌‌ ಥೋರ್ವೆ ರವರ ಮೇಲೆ ಕಾನೂನು ರೀತ್ಯಾ ಮುಂದಿನ ಕ್ರಮ ಜರುಗಿಸಬೇಕೆಂದು ಈ ಮೂಲಕ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ. ನಾನು ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದುದರಿಂದ ಈ ದಿನ ತಡವಾಗಿ ಬಂದು ದೂರನ್ನು ನೀಡಿರುತ್ತೇನೆ. ಅಪಘಾತಪಡಿಸಿದ ಕಾರು ಕೃತ್ಯ ನಡೆದ ಸ್ಥಳದಲ್ಲಿರುತ್ತೆ ಎಂತಾ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಹುಲಿಯೂರುದುರ್ಗ ಪೊಲೀಸ್‌ ಠಾಣಾ ಯುಡಿಆರ್ ನಂ: 08/2018, ಕಲಂ: 174 ಸಿ ಆರ್ ಪಿಸಿ

ದಿನಾಂಕ 20/05/2018 ರಂದು ಬೆಳಗ್ಗೆ 7;30 ಗಂಟೆಗೆ ಹುಲಿಯೂರುದುರ್ಗ ಹೋಬಳಿ , ಕಾಚಿಹಳ್ಳಿ ಗ್ರಾಮದ ಒಕ್ಕಲಿಗ ಜನಾಂಗದ ಮಹದೇವಮ್ಮ ಕೋಂ ಕೆ.ಸಿ ಬೋರೇಗೌಡರವರು ಠಾಣೆಗೆ ಹಾಜರಾಗಿ ನೀಡದ ದೂರಿನ ಅಂಶವೇನೆಂದರೆ. ಈಗ್ಗೆ  ಮದುವೆಯಾಗಿ ಸುಮಾರು 08 ವರ್ಷ ವಾಗಿದ್ದು. ನನಗೆ 06 ವರ್ಷದ ಶಶಾಂಕ್  ಮತ್ತು 03 ವರ್ಷದ ಶರತ್ ಎಂಬ ಇಬ್ಬರು ಗಂಡು  ಮಕ್ಕಳು ಇರುತ್ತಾರೆ . ನನ್ನ ಗಂಡ ಮತ್ತು ಮಕ್ಕಳೊಂದಿಗೆ ಊರಿನಲ್ಲಿ ಸಂಸಾರ ಮಾಡಿಕೊಂಡು ಅನ್ಯೊನ್ಯವಾಗಿದ್ದೆವು. ನನ್ನ ಗಂಡನಿಗೆ ಊರಿನಲ್ಲಿ 02 ಎಕರೆ ಜಮೀನು ಇದ್ದು. ಕೃಷಿ ಕೆಲಸಗಳ ನಿರ್ವಹಣೆಗಾಗಿ ಅದರಲ್ಲಿ 06 ಬೋರ್ ವೆಲ್ ಗಳನ್ನು ಕೊರೆಸಿದ್ದು. ಅವುಗಳಲ್ಲಿ ನೀರು ಇಲ್ಲದೆ ಒಣಗಿ ಹೋಗಿರುತ್ತವೆ. ಅವುಗಳ ನಿರ್ವಹಣೆಗಾಗಿ ನನ್ನ ಗಂಡ ಸಂಬಂದಿಕರ ಬಳಿ ಸುಮಾರು 05 ಲಕ್ಷ  ಕೈ ಸಾಲ ಮಾಡಿಕೊಂಡಿದ್ದರು. ದಿನಾಂಕ 16/05/2018 ರಂದು ರಾತ್ರಿ 10;00 ಗಂಟೆಗೆ ಹೊಲದಿಂದ ವಾಪಾಸ್ ಮನೆಗೆ ಬಂದು ಸಾಲವನ್ನು ತೀರಿಸಲು ನನ್ನ ಕೈಯಲ್ಲಿ ಆಗುವುದಿಲ್ಲ. ಅವರ ಮುಂದೆ ಹೇಗೆ ತಲೆ ಎತ್ತಿಕೊಂಡು ಬದುಕಲಿ ಎಂದು ಹೇಳಿ ಹೊಲದ ಬಳಿ ಮನನೊಂದು ಕಳೆ ಔಷದಿಯನ್ನು ಕುಡಿದಿರುವುದಾಗಿ ನನ್ನ ಬಳಿ ತಿಳಿಸಿದರು. ತಕ್ಷಣ ನಾವು  ಅವರನ್ನು ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ವೈದ್ಯರ ಸಲಹೆಯ ಮೆರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಸರ್ಕಾರಿ ಆಸ್ಪತ್ರೆಗೆ  ದಾಖಲಿಸಿದೆವು. ಅಲ್ಲಿ ಚಿಕಿತ್ಸಾ ವೆಚ್ಚವನ್ನು ಭರಿಸಲಾಗದೆ 17/05/2018 ರಂದು ಮದ್ಯಾಹ್ನ 2;00 ಗಂಟೆಗೆ ಕೆ. ಆರ್ ಆಸ್ಪತ್ರೆ ಮೈಸೂರುಗೆ ದಾಖಲಿಸಿದೆವು. ಆಗ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ದಿನಾಂಕ: 19/05/2018 ರಂದು ರಾತ್ರಿ 8;00 ಗಂಟೆ ಸಮಯದಲ್ಲಿ ಮೃತಪಟ್ಟಿರುತ್ತಾರೆ. ನನ್ನ ಗಂಡನ ಸಾವಿನ ಬಗ್ಗೆ ಯಾವುದೆ ಅನುಮಾನವಿರುವುದಿಲ್ಲ. ಮುಂದಿನ ಕ್ರಮ ಜರುಗಿಸಬೇಕಾಗಿ ನೀಡಿದ ದೂರಿನ ಅಂಶವಾಗಿರುತ್ತದೆ.Sunday, 20 May 2018

ಅಪರಾಧ ಘಟನೆಗಳು 20-05-18

ಹುಳಿಯಾರು ಪೊಲೀಸ್ ಠಾಣಾ ಮೊ.ನಂ 60/2018, ಕಲಂ: 44 KMMCR, 21(1) MMDR Act & 379 IPC,

ದಿನಾಂಕ 19-05-2018 ರಂದು ಸಂಜೆ 06-30 ಗಂಟೆಗೆ ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ನೀಡಿದ ಜ್ಞಾಪನದ ಅಂಶವೇನೆಂದರೆ, ನಾನು ದಿನಾಂಕ:-19-05-2018 ರಂದು ಹುಳಿಯಾರು ಠಾಣಾ ವ್ಯಾಪ್ತಿಯಲ್ಲಿ ಗಸ್ತು ಮಾಡಿಕೊಂಡು ಹುಳಿಯಾರು ಕಡೆ ಬರುತ್ತಿದ್ದಾಗ ಸಂಜೆ 05:30 ಗಂಟೆ ಸಮಯದಲ್ಲಿ ಹುಳಿಯಾರು ಹೋಬಳಿ ಹೊಸಹಳ್ಳಿ ಕೈಮರದ ಬಳಿ ಬರುತ್ತಿದ್ದಾಗ ಯಳನಡು ಕಡೆಯಿಂದ ಬಂದ ಒಂದು ಟ್ರಾಕ್ಟರ್ ಟ್ರೈಲರ್ ಚಾಲಕ ಪೊಲೀಸ್ ವಾಹನವನ್ನು ನೋಡಿ ಕೈಮರದ ಬಳಿ ತನ್ನ ಟ್ರಾಕ್ಟರ್ ಟ್ರೈಲರ್ ಅನ್ನು ನಿಲ್ಲಿಸಿ ಓಡಿ ಹೋಗಿದ್ದು ನಾನು ಮತ್ತು ನನ್ನ ಜೊತೆಯಲ್ಲಿದ್ದ ಠಾಣಾ ಸಿಬ್ಬಂದಿ ಸಿ.ಪಿ.ಸಿ 506 ನಾಗರಾಜು ರವರು ಆತನನ್ನು ಹಿಡಿಯಲು ಪ್ರಯತ್ನಿಸಿದ್ದು ಚಾಲಕ ಸಿಗದೇ ತಪ್ಪಿಸಿಕೊಂಡು ಓಡಿಹೋಗಿದ್ದು, ನಂತರ ಟ್ರಾಕ್ಟರ್ ಟ್ರೈಲರ್ ಅನ್ನು ಪರಿಶೀಲಿಸಲಾಗಿ FARMTRAC ಕಂಪನಿಯ ಕೆಎ 44 ಎಂ 2144 ನೇ ಟ್ರಾಕ್ಟರ್ ಆಗಿದ್ದು ಇದರ ಟ್ರೈಲರ್ ನಂಬರ್ ನೋಡಲಾಗಿ ನೊಂದಣಿ ಸಂಖ್ಯೆ ಇರುವುದಿಲ್ಲ. ಈ ಟ್ರೈಲರ್ ತುಂಬಾ ಮರಳನ್ನು ತುಂಬಿದ್ದು ಇದರ ಮೇಲೆ 3 ಸಲ್ಕೆ ಹಾಗೂ 3 ಪ್ಲಾಸ್ಟಿಕ್ ಬಾಂಡ್ಲಿಗಳು ಇರುತ್ತವೆ. ಸದರಿ ಟ್ರಾಕ್ಟರ್ ಟ್ರೈಲರ್ ನ ಚಾಲಕ ಮರಳನ್ನು ತುಂಬಲು ಸರ್ಕಾರದಿಂದ ಯಾವುದೇ ಪರವಾನಗಿ ಪಡೆಯದೆ, ಸರ್ಕಾರಕ್ಕೆ ಯಾವುದೇ ರೀತಿಯ ಹಣವನ್ನು ಪಾವತಿ ಮಾಡದೇ ಎಲ್ಲಿಯೋ ಕಳ್ಳತನದಿಂದ ಮರಳನ್ನು ತುಂಬಿಕೊಂಡು ಸಾಗಿಸುತ್ತಿರುವುದಾಗಿ ತಿಳಿದು ಬಂದ ಮೇರೆಗೆ ಭಾತ್ಮೀದಾರರ ಸಹಾಯದಿಂದ ಟ್ರಾಕ್ಟರ್ ಟ್ರೈಲರ್ ಅನ್ನು ಮತ್ತು ಮೇಲ್ಕಂಡ ಮಾಲುಗಳನ್ನು ಪೊಲೀಸ್ ಠಾಣೆಗೆ ತಂದು ಓಡಿ ಹೋದ ಕೆಎ 44 ಎಂ 2144 ನೇ ಟ್ರಾಕ್ಟರ್ ಟ್ರೈಲರ್ ಮಾಲೀಕ/ಚಾಲಕನ ಮೇಲೆ ಮುಂದಿನ ಕ್ರಮ ಕೈಗೊಳ್ಳಲು ನೀಡಿದ ಜ್ಞಾಪನದ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

ಚೇಳೂರು  ಪೊಲೀಸ್  ಠಾಣಾ ಮೊ. ನಂ 96/2018 ಕಲಂ 457.380  ಐ.ಪಿ.ಸಿ.

ದಿನಾಂಕ;19/05/2018 ರಂದು  ಸಂಜೆ 5-30  ಗಂಟೆಗೆ  ಪಿರ್ಯಾದಿ  ಗಿರೀಶ್  ರವರು  ಠಾಣೆಗೆ  ಹಾಜರಾಗಿ  ನೀಡಿದ  ಪಿರ್ಯಾದು ಅಂಶವೇನಂದರೆ, ನಾನು  ಈಗ್ಗೆ   ಸುಮಾರು 02  ವರ್ಷಗಳ  ಹಿಂದೆ  ಬೆಂಗಳೂರು  ಕೋರಮಂಗಲದಲ್ಲಿ ಇರುವ  ನಿಸಾ ಸೆಕ್ಯುರಿಟೀಸ್ ಲಿಮಿಟೆಡ್ ನಲ್ಲಿ ಸೂಪರ್ ವೈಜರ್ ಕೆಲಸಕ್ಕೆ ಸೇರಿಕೊಂಡು ನಮ್ಮ ಕಂಪನಿಯಿಂದ ತುಮಕೂರು ಜಿಲ್ಲೆಗೆ ಮ್ಯಾನೇಜರ್ ಆಗಿ ಶಿವಕುಮಾರ್  ಎಂಬುರವನ್ನು ನೇಮಕ ಮಾಡಿದ್ದು, ನಾನು ಅವರ ಕೈ ಕೆಳಗೆ  ತುಮಕೂರು ಜಿಲ್ಲೆಯಲ್ಲಿ ಇರುವ ಮೊಬೈಲ್ ಟವರ್ ಗಳ    ಸೆಕ್ಯೂರಿಟಿ   ಸೂಪರ್  ವೈಸರ್  ಆಗಿ    ಕೆಲಸ  ಮಾಡುತ್ತಿರುತ್ತೇನೆ  ನಮ್ಮ  ಕಂಪನಿಗೆ  ಗುಬ್ಬಿ  ತಾಲ್ಲೋಕ್,  ನಿಟ್ಟೂರು  ಹೋ,  ಕೋಡಿನಾಗೇನಹಳ್ಳಿ  ಗೇಟ್  ನಲ್ಲಿ  ಏರ್  ಟೆಲ್ ಟವರ್ ಗೆ   ನೀಸಾ  ಕಂಪನಿಯಿಂದ  ಸೂಪರ್  ವೈಸರ್   ಆಗಿ    ನನ್ನನ್ನು  ನೇಮಕ  ಮಾಡಿದ್ದು,  ಅದರಂತೆ  ನಾನು  ಕರ್ತವ್ಯ  ನಿರ್ವಹಿಸುತ್ತಿರುತ್ತೇನೆ.   ನಾನು   ದಿನಾಂಕ; 16/05/2018   ರಂದು   ಸಂಜೆ  6-00  ಗಂಟೆ  ಸಮಯದಲ್ಲಿ   ಕೊಡಿನಾಗೇನಹಳ್ಳಿ  ಗೇಟ್  ನಲ್ಲಿ  ಇರುವ  ಟವರ್  ನನ್ನು  ಚೆಕ್  ಮಾಡಿಕೊಂಡು  ಸದರಿ  ಟವರ್  ನ  ಬೀಗ  ಹಾಕಿಕೊಂಡು   ಹೊರಟು  ಹೋಗಿದ್ದು,   ದಿನಾಂಕ; 17/05/2018  ರಂದು   ಬೆಳಗ್ಗೆ  7-00  ಗಂಟೆ  ಸಮಯದಲ್ಲಿ  ನನ್ನ  ಕಂಪನಿಯ   ಟೆಕ್ನೀಷಿಯನ್   ಆದ   ವಿನಾಯಕ್  ರವರು  ನನಗೆ  ಪೋನ್  ಮಾಡಿ  ನಮ್ಮ  ಕಂಪನಿಯವರು  ಹಾಕಿರುವ  ಕೋಡಿನಾಗೇನಹಳ್ಳಿಯ  ಗೇಟ್  ಬಳಿ  ಇರುವ   ಮೊಬೈಲ್  ಟವರ್ ನ   ಬ್ಯಾಟರಿ  ರೂಂ  ಶೆಲ್ಟರ್ ಗೆ  ಹಾಕಿದ್ದ  ಬೀಗವನ್ನು  ಮುರಿದು  ರೂಂ ( ಶೆಲ್ಟರ್  )   ನಲ್ಲಿ  ಇದ್ದ  ಬ್ಯಾಟರಿಗಳನ್ನು  ಕಳ್ಳತನ  ಮಾಡಿಕೊಂಡು  ಹೋಗಿರುತ್ತಾರೆಂದು   ತಿಳಿಸಿದರು.  ಆಗ  ನಾನು   ಕೋಡಿನಾಗೇನಹಳ್ಳಿ  ಬಳಿಗೆ   ನಮ್ಮ  ಏರ್  ಟೆಲ್   ಟವರ್  ಬಳಿಗೆ  ಬಂದು  ನೋಡಿದೆ  ವಿಚಾರ  ನಿಜವಾಗಿತ್ತು.   ಆಗ  ನಾನು  ನೋಡಲಾಗಿ  ನನ್ನ    ಟವರ್  ನ  ಶೆಲ್ಟರ್  ನಲ್ಲಿ  ಇದ್ದ  55   ಬ್ಯಾಟರಿಗಳನ್ನು   ಯಾರೋ  ಕಳ್ಳರು  ಕಳ್ಳತನ  ಮಾಡಿಕೊಂಡು  ಹೋಗಿದ್ದು,  ಬ್ಯಾಟರಿಗಳ  ನಂಬರ್  1) IN  1096998,  2) IN  1236081   3)  IN  1301190 4)  IN  1119835    5) IN  1020549 ಆಗಿದ್ದು,   ಇವುಗಳನ್ನು  ದಿನಾಂಕ 16/05/2018 ರಂದು  ಸಂಜೆ 6-00 ಗಂಟೆಯಿಂದ   ದಿನಾಂಕ 17/05/2018  ರಂದು   ಬೆಳಗ್ಗೆ 6-00  ಗಂಟೆಯ  ಒಳಗೆ  ಯಾವುದೋ   ವೇಳೆಯಲ್ಲಿ  ಯಾರೋ  ಕಳ್ಳರು  ಕಳ್ಳತನ  ಮಾಡಿಕೊಂಡು  ಹೋಗಿರುತ್ತಾರೆ. ಕಳ್ಳತನ  ವಾಗಿರುವ    ಟವರ್  ಬ್ಯಾಟರಿಗಳ   ಬೆಲೆ  ಸುಮಾರು 3.00.000 ರೂ  ಗಳಾಗಿರುತ್ತವೆ.  ಈ ವಿಚಾರವನ್ನು  ನಮ್ಮ  ಕಂಪನಿಯ  ಮೇಲಾಧಿಕಾರಿಗಳಿಗೆ  ತಿಳಿಸಿ   ಈ  ದಿನ  ತಡವಾಗಿ  ಠಾಣೆಗೆ  ಬಂದು   ದೂರು  ನೀಡಿರುತ್ತೇನೆ.   ಆದ್ದರಿಂದ   ನಮ್ಮ  ಬ್ಯಾಟರಿಗಳನ್ನು  ಕಳ್ಳತನ  ಮಾಡಿರುವವರ  ಮೇಲೆ  ಕಾನೂನು  ರೀತ್ಯ  ಕ್ರಮ  ಜರುಗಿಸಲು   ಕೋರಿ  ಇತ್ಯಾದಿಯಾದ  ಪಿರ್ಯಾದು  ಅಂಶ.

ತಿಪಟೂರು ನಗರ ಪೊಲೀಸ್ ಠಾಣಾ ಮೊ. ನಂ - 76/2018 ಕಲಂ: 323. 324, 427, 504 r/w 149 IPC

ದಿನಾಂಕ:19/05/2018 ರಂದು ಮದ್ಯಾಹ್ನ 12-30 ಗಂಟೆಗೆ ಪಿರ್ಯಾದುದಾರರಾದ ಅಬ್ದುಲ್‌ ಅಜೀಮ್‌ @ ಮುನ್ನಾ ಬಿನ್‌ ಮಹಮದ್ ಯೂಸಫ್‌, 48 ವರ್ಷ, ಮುಸ್ಲಿಂ, ಮರದ ವ್ಯಾಪಾರ, 6ನೇ ಕ್ರಾಸ್‌, ಚಾಮುಂಡೇಶ್ವರಿ ಬಡಾವಣೆ, ಗಾಂಧಿನಗರ, ತಿಪಟೂರು ಟೌನ್‌ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನನ್ನ ಮಗ ನದೀಮ್‌ ರವರಿಗೂ ಚಾಮುಂಡಿ ಬಡಾವಣೆಯ ಕುಬೇಬ್‌ ರವರಿಗೂ ನನ್ನ ನಾದಿನಿ ಮಗಳ ವಿಚಾರದಲ್ಲಿ ದ್ವೇಷವಿದ್ದು, ಈ ದ್ವೇಷದಿಂದ ನನ್ನ ಮಗ ದಿನಾಂಕ:18-05-2018 ರಂದು ರಾತ್ರಿ 9-15 ಗಂಟೆ ಸಮಯದಲ್ಲಿ ಬೋವಿ ಕಾಲೋನಿ ಮುಖ್ಯರಸ್ತೆಯ ಅಂಗಡಿ ಬಳಿ ಕುಳಿತ್ತಿದ್ದಾಗ, ಇದೇ ಸಮಯಕ್ಕೆ ಅಲ್ಲಿಗೆ ಬಂದ ಕುಬೇಬ್‌ ನನ್ನ ಮಗನ ಮೇಲೆ ಜಗಳ ತೆಗೆದು ಯಾವುದೋ ಆಯುಧದಿಂದ ಎದೆಗೆ ಹೊಡೆದು ರಕ್ತಗಾಯಪಡಿಸಿ ಮತ್ತು ಕೈಗಳಿಂದ ತಲೆಗೆ ಹೊಡೆದು ಗಾಯಪಡಿಸಿದರು. ಆಗ ಮನೆಯಲ್ಲಿ ಇದ್ದ ನನಗೆ ಈ ವಿಚಾರವನ್ನು ತಿಳಿಸಿದಾಗ ನಾನು ಮತ್ತು ನನ್ನ ದೊಡ್ಡ ಮಗ ಖಾಲಿದ್‌ ಕೂಡಲೇ ಸ್ದಳಕ್ಕೆ ಹೋದಾಗ ಅಲ್ಲಿ ಇದ್ದ ಪಾಜೀಲ್‌ ಈ ಗಲಾಟೆ ವಿಚಾರ ತಿಳಿಸಿದರು. ನಂತರ ನಮ್ಮನ್ನು ಈ ಗಲಾಟೆ ವಿಚಾರದ ಬಗ್ಗೆ ಮಸೀದಿ ಬಳಿ ಮಾತನಾಡಲು ಹೇಳಿದ್ದರಿಂದ ನಾನು ಮತ್ತು ನನ್ನ ಮಗ ದೊಡ್ಡ ಮಸೀದಿ ಬಳಿ ಹೋದಾಗ, ಮಸೀದಿ ಗೇಟ್‌ ಬಳಿ ಇದ್ದ ಅತೀಕ್‌ ಬಿನ್‌ ಮಹಬೂಬ್‌, ಅಜಗರ್‌, ಹಫೀಜ್‌ ಖುದ್ದಸ್‌, ನಯಾಜ್‌ ರವರುಗಳು  ಸುವಾರ್‌ ನನ್ನ ಮಗನೆ ಎಂತ ಕೆಟ್ಟ ಮಾತುಗಳಿಂದ ಬೈದು 4 ಜನ ಸೇರಿ ಕೈನಿಂದ ನನಗೆ ಮತ್ತು ನನ್ನ ಮಗನಿಗೆ ಹೊಡೆದರು. ಈ ಗಲಾಟೆಯು ರಾತ್ರಿ 10 ಗಂಟೆಗೆ ನಡೆದಿತ್ತು, ಅಲ್ಲೆ ಇದ್ದ ಬಾಬು ಹಾಗೂ ಇತರೆಯವರು ಗಲಾಟೆ ಬಿಡಿಸಿದರು. ನಾವು ಮನೆಗೆ ಹೊದೆವು. ಆಗ ಮೇಲ್ಕಂಡವರು ಮನೆಯ ಬಳಿ ಬಂದು ಕಲ್ಲಿನಿಂದ ಕಿಟಕಿಗೆ ಹೊಡೆದು ನಷ್ಟ ಉಂಟು ಮಾಡಿರುತ್ತಾರೆ. ನನ್ನ ಮಗನಿಗೆ ಚಿಕಿತ್ಸೆ ಕೊಡಿಸಿ ಈ ದಿನ ತಡವಾಗಿ ಬಂದು ದೂರು ನೀಡಿರುತ್ತೇನೆ. ಆದ್ದರಿಂದ ಮೇಲ್ಕಂಡವರ ಮೇಲೆ ಕಾನೂನು ಕ್ರಮ ಜರುಗಿಸಬೇಕಂತ ನೀಡಿರುವ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಚೇಳೂರು ಪೊಲೀಸ್ ಠಾಣಾ ಮೊ.ನಂ 96 /2018, ಕಲಂ:457.380. ಐ.ಪಿ.ಸಿ

ದಿನಾಂಕ;19/05/2018 ರಂದು  ಸಂಜೆ 5-30  ಗಂಟೆಗೆ  ಪಿರ್ಯಾದಿ  ಗಿರೀಶ್  ಬಿನ್  ಮಹದೇವಯ್ಯ, 24ವರ್ಷ, ಲಿಂಗಾಯ್ತರು  ಜನಾಂಗ,  ಸೂಪರ್ ವೈಜರ್  ಕೆಲಸ, ನಿಸಾ ಸೆಕ್ಯುರಿಟೀಸ್ ಲಿಮಿಟೆಡ್, ಕೋರಮಂಗಲ, ಬೆಂಗಳೂರು. ಸ್ವಂತ ಊರು ನಾಗವಲ್ಲಿ, ಹೆಬ್ಬೂರು ಗ್ರಾಮ,  ಹೋಬಳಿ, ತುಮಕೂರು  ತಾಲ್ಲೋಕ್. ರವರು  ಠಾಣೆಗೆ  ಹಾಜರಾಗಿ  ನೀಡಿದ  ಪಿರ್ಯಾದು ಅಂಶವೇನಂದರೆ, ನಾನು  ಈಗ್ಗೆ   ಸುಮಾರು 02  ವರ್ಷಗಳ  ಹಿಂದೆ  ಬೆಂಗಳೂರು  ಕೋರಮಂಗಲದಲ್ಲಿ ಇರುವ  ನಿಸಾ ಸೆಕ್ಯುರಿಟೀಸ್ ಲಿಮಿಟೆಡ್ ನಲ್ಲಿ ಸೂಪರ್ ವೈಜರ್ ಕೆಲಸಕ್ಕೆ ಸೇರಿಕೊಂಡು ನಮ್ಮ ಕಂಪನಿಯಿಂದ ತುಮಕೂರು ಜಿಲ್ಲೆಗೆ ಮ್ಯಾನೇಜರ್ ಆಗಿ ಶಿವಕುಮಾರ್  ಎಂಬುರವನ್ನು ನೇಮಕ ಮಾಡಿದ್ದು, ನಾನು ಅವರ ಕೈ ಕೆಳಗೆ  ತುಮಕೂರು ಜಿಲ್ಲೆಯಲ್ಲಿ ಇರುವ ಮೊಬೈಲ್ ಟವರ್ ಗಳ    ಸೆಕ್ಯೂರಿಟಿ   ಸೂಪರ್  ವೈಸರ್  ಆಗಿ    ಕೆಲಸ  ಮಾಡುತ್ತಿರುತ್ತೇನೆ  ನಮ್ಮ  ಕಂಪನಿಗೆ  ಗುಬ್ಬಿ  ತಾಲ್ಲೋಕ್,  ನಿಟ್ಟೂರು  ಹೋ,  ಕೋಡಿನಾಗೇನಹಳ್ಳಿ  ಗೇಟ್  ನಲ್ಲಿ  ಏರ್  ಟೆಲ್ ಟವರ್ ಗೆ   ನೀಸಾ  ಕಂಪನಿಯಿಂದ  ಸೂಪರ್  ವೈಸರ್   ಆಗಿ    ನನ್ನನ್ನು  ನೇಮಕ  ಮಾಡಿದ್ದು,  ಅದರಂತೆ  ನಾನು  ಕರ್ತವ್ಯ  ನಿರ್ವಹಿಸುತ್ತಿರುತ್ತೇನೆ.   ನಾನು   ದಿನಾಂಕ; 16/05/2018   ರಂದು   ಸಂಜೆ  6-00  ಗಂಟೆ  ಸಮಯದಲ್ಲಿ   ಕೊಡಿನಾಗೇನಹಳ್ಳಿ  ಗೇಟ್  ನಲ್ಲಿ  ಇರುವ  ಟವರ್  ನನ್ನು  ಚೆಕ್  ಮಾಡಿಕೊಂಡು  ಸದರಿ  ಟವರ್  ನ  ಬೀಗ  ಹಾಕಿಕೊಂಡು   ಹೊರಟು  ಹೋಗಿದ್ದು,   ದಿನಾಂಕ; 17/05/2018  ರಂದು   ಬೆಳಗ್ಗೆ  7-00  ಗಂಟೆ  ಸಮಯದಲ್ಲಿ  ನನ್ನ  ಕಂಪನಿಯ   ಟೆಕ್ನೀಷಿಯನ್   ಆದ   ವಿನಾಯಕ್  ರವರು  ನನಗೆ  ಪೋನ್  ಮಾಡಿ  ನಮ್ಮ  ಕಂಪನಿಯವರು  ಹಾಕಿರುವ  ಕೋಡಿನಾಗೇನಹಳ್ಳಿಯ  ಗೇಟ್  ಬಳಿ  ಇರುವ   ಮೊಬೈಲ್  ಟವರ್ ನ   ಬ್ಯಾಟರಿ  ರೂಂ  ಶೆಲ್ಟರ್ ಗೆ  ಹಾಕಿದ್ದ  ಬೀಗವನ್ನು  ಮುರಿದು  ರೂಂ ( ಶೆಲ್ಟರ್  )   ನಲ್ಲಿ  ಇದ್ದ  ಬ್ಯಾಟರಿಗಳನ್ನು  ಕಳ್ಳತನ  ಮಾಡಿಕೊಂಡು  ಹೋಗಿರುತ್ತಾರೆಂದು   ತಿಳಿಸಿದರು.  ಆಗ  ನಾನು   ಕೋಡಿನಾಗೇನಹಳ್ಳಿ  ಬಳಿಗೆ   ನಮ್ಮ  ಏರ್  ಟೆಲ್   ಟವರ್  ಬಳಿಗೆ  ಬಂದು  ನೋಡಿದೆ  ವಿಚಾರ  ನಿಜವಾಗಿತ್ತು.   ಆಗ  ನಾನು  ನೋಡಲಾಗಿ  ನನ್ನ    ಟವರ್  ನ  ಶೆಲ್ಟರ್  ನಲ್ಲಿ  ಇದ್ದ  55   ಬ್ಯಾಟರಿಗಳನ್ನು   ಯಾರೋ  ಕಳ್ಳರು  ಕಳ್ಳತನ  ಮಾಡಿಕೊಂಡು  ಹೋಗಿದ್ದು,  ಬ್ಯಾಟರಿಗಳ  ನಂಬರ್  1) IN  1096998,  2) IN  1236081   3)  IN  1301190 4)  IN  1119835    5) IN  1020549 ಆಗಿದ್ದು,   ಇವುಗಳನ್ನು  ದಿನಾಂಕ 16/05/2018 ರಂದು  ಸಂಜೆ 6-00 ಗಂಟೆಯಿಂದ   ದಿನಾಂಕ 17/05/2018  ರಂದು   ಬೆಳಗ್ಗೆ 6-00  ಗಂಟೆಯ  ಒಳಗೆ  ಯಾವುದೋ   ವೇಳೆಯಲ್ಲಿ  ಯಾರೋ  ಕಳ್ಳರು  ಕಳ್ಳತನ  ಮಾಡಿಕೊಂಡು  ಹೋಗಿರುತ್ತಾರೆ. ಕಳ್ಳತನ  ವಾಗಿರುವ    ಟವರ್  ಬ್ಯಾಟರಿಗಳ   ಬೆಲೆ  ಸುಮಾರು 3.00.000 ರೂ  ಗಳಾಗಿರುತ್ತವೆ.  ಈ ವಿಚಾರವನ್ನು  ನಮ್ಮ  ಕಂಪನಿಯ  ಮೇಲಾಧಿಕಾರಿಗಳಿಗೆ  ತಿಳಿಸಿ   ಈ  ದಿನ  ತಡವಾಗಿ  ಠಾಣೆಗೆ  ಬಂದು   ದೂರು  ನೀಡಿರುತ್ತೇನೆ.   ಆದ್ದರಿಂದ   ನಮ್ಮ  ಬ್ಯಾಟರಿಗಳನ್ನು  ಕಳ್ಳತನ  ಮಾಡಿರುವವರ  ಮೇಲೆ  ಕಾನೂನು  ರೀತ್ಯ  ಕ್ರಮ  ಜರುಗಿಸಲು   ಕೋರಿ  ಇತ್ಯಾದಿಯಾದ  ಪಿರ್ಯಾದು  ಪಿರ್ಯಾದು  ಮೇರೆಗೆ  ಠಾಣಾ   ಮೊ. ನಂ 96/2018 ಕಲಂ 457.380. ಐ.ಪಿ.ಸಿ  ರೀತ್ಯ  ಪ್ರಕರಣ  ಪ್ರಕರಣ ದಾಖಲಿಸಿಕೊಂಡು  ಅಸಲು ಪ್ರ.ವ.ವರದಿಯನ್ನು ಘನ ನ್ಯಾಯಾಲಯಕ್ಕೂ ಹಾಗೂ ನಕಲುಗಳನ್ನು ತುರ್ತು ಈ-ಮೇಲ್ ಸಂದೇಶದೊಂದಿಗೆ   ಇಲಾಖಾ  ಮೇಲಾಧಿಕಾರಿಗಳಿಗೆ  ರವಾನಿಸಿಕೊಂಡಿರುತ್ತೆ.

 

ಹುಲಿಯೂರುದುರ್ಗ ಪೊಲೀಸ್‌ ಠಾಣಾ ಮೊ.ನಂ. 122/2018, ಕಲಂ: 279 337 ಐಪಿಸಿ

ದಿನಾಂಕ: 19-05-2018 ರಂದು ಸಂಜೆ 04-00 ಗಂಟೆಗೆ ಪುನೀತ್ ಕುಮಾರ್ ಬಿನ್ ಬಲರಾಮ್, ಸುಮಾರು 24 ವರ್ಷ, ವಕ್ಕಲಿಗರು, ಕೂಲಿಕೆಲಸ, ಜಿನ್ನಾಗರ, ಅಮೃತೂರು ಹೋಬಳಿ, ಕುಣಿಗಲ್ ತಾಲ್ಲೋಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ದಿನಾಂಕ: 11-05-2018 ರಂದು ಪಿರ್ಯಾದಿ ಮತ್ತು ಅವರ ತಂದೆಯಾದ ಬಲರಾಮ್ ಬಿನ್ ಲೇಟ್ ಗುಂಡಪ್ಪ, ಸುಮಾರು 48 ವರ್ಷ, ಇವರು ಸಣಭ ಗ್ರಾಮದ ಬಳಿ ಇರುವ ತಮ್ಮ ಗದ್ದೆಗೆ ಹೋಗಿ ವಾಪಸ್ ತಮ್ಮ ಗ್ರಾಮಕ್ಕೆ ಬರಲೆಂದು ಸಣಭ ಗ್ರಾಮದ ಬಳಿ ರಾತ್ರಿ ಸುಮಾರು 07-30 ಗಂಟೆಯಲ್ಲಿ ಆಟೋ ಕಾಯುತ್ತಾ ರಸ್ತೆಯ ಎಡಬದಿಯಲ್ಲಿ ನಿಂತಿರುವಾಗ್ಗೆ ಯಡವಾಣಿ ಕಡೆಯಿಂದ ಅಮೃತೂರು ಕಡೆಗೆ ಹೋಗಲು ಬಂದ ಒಬ್ಬ ಬೈಕಿನ ಚಾಲಕನು ತನ್ನ ಬೈಕನ್ನು ಅತಿವೇಗ & ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆಯ ಎಡಬದಿಯಲ್ಲಿ ನಿಂತಿದ್ದ ಪಿರ್ಯಾದಿಯ ತಂದೆಯವರಿಗೆ ಡಿಕ್ಕಿಪಡಿಸಿ ಅಪಘಾತವುಂಟುಮಾಡಿದ್ದು, ಪರಿಣಾಮ ಪಿರ್ಯಾದಿಯ ತಂದೆಗೆ ಬಲಕಾಲು, ಮೈ ಕೈ ಗೆ ಪೆಟ್ಟು ಬಿದ್ದಿರುತ್ತೆ. ನಂತರ ಅಪಘಾತಪಡಿಸಿದ ಬೈಕ್ ನಂಬರ್ ನೋಡಲಾಗಿ KA02-EY-3570 ಆಗಿರುತ್ತೆ. ಇದರ ಚಾಲಕ ಶಿವಣ್ಣ ಬಿನ್ ಗಂಗಣ್ಣ, ಮಣೆಕುಪ್ಪೆ, ಗುಬ್ಬಿ ತಾ. ಆಗಿದ್ದು, ನಂತರ ಅಲ್ಲಿಯೇ ಇದ್ದ ಸಣಭ ಗ್ರಾಮದ ರಾಮಚಂದ್ರಪ್ಪ ಎಂಬುವವರ ಸಹಾಯದಿಂದ 108 ವಾಹನದಲ್ಲಿ ಪಿರ್ಯಾದಿಯ ತಂದೆಯನ್ನು ಕುಣಿಗಲ್ ನ ಎಂ.ಎಂ ಆಸ್ಪತ್ರೆಗೆ ಕರೆದುಕೊಂಡು ಬಂದು  ಒಳರೋಗಿಯಾಗಿ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದು, ಅಪಘಾತಪಡಿಸಿದ ಬೈಕಿನ ಚಾಲಕ ಶಿವಣ್ಣ ರವರು ಆಸ್ಪತ್ರೆಯ ಚಿಕಿತ್ಸಾ ವೆಚ್ವವನ್ನು ಕೊಡುವುದಾಗಿ ಹೇಳಿ ಈ ವರೆಗೂ ಬಂದಿರುವುದಿಲ್ಲ. ಪಿರ್ಯಾದಿಯು ಆಸ್ಪತ್ರೆಯಲ್ಲಿಯೇ ಇದ್ದು ತಮ್ಮ ತಂದೆಯನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು, ಅಪಘಾತಪಡಿಸಿದ  KA02-EY-3570 ನೇ ಬೈಕಿನ ಚಾಲಕ ಶಿವಣ್ಣ ರವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿರುತ್ತೆ.Saturday, 19 May 2018

ಪತ್ರಿಕಾ ಪ್ರಕಟಣೆ ದಿ 19.04.18

ಪತ್ರಿಕಾ ಪ್ರಕಟಣೆ

ದಿ 19.04.18ಪೊಲೀಸ್ ಇಲಾಖೆಯು ಈ ಮೂಲಕ ಸಾರ್ವಜನಿಕರಿಗೆ ತಿಳಿಸುವುದೇನೆಂದರೆ ಈ ರೀತಿಯಾದ ಯಾವುದೇ ಪ್ರಕರಣಗಳು ಜಿಲ್ಲೆಯಲ್ಲಿ ಇದುವರೆವಿಗೂ ದಾಖಲಾಗಿರುವುದಿಲ್ಲ. ಯಾರೋ ಕಿಡಿಗೇಡಿಗಳು ಜನರಲ್ಲಿ ಅತಂಕ ಸೃಷ್ಠಿಸುವ ಉದ್ದೇಶದಿಂದ ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಪೋಟೋಗಳು ಹಾಗೂ ಸುಳ್ಳು ಸಂದೇಶಗಳನ್ನು ಹರಿಯಬಿಟ್ಟಿರುತ್ತಾರೆ. ಸಾರ್ವಜನಿಕರು ಇಂತಹ ಸುಳ್ಳು ಸುದ್ದಿಗಳಿಗೆ, ವದಂತಿಗಳಿಗೆ ಕಿವಿಗೊಡಬಾರದು. ಯಾರೇ ಅನುಮಾನಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ನಿಮ್ಮ ಬೀಟ್ ಸಿಬ್ಬಂದಿಗಳಿಗೆ ಮಾಹಿತಿಯನ್ನು ನೀಡುವುದು.   ತುಮಕೂರು ಜಿಲ್ಲೆಯಲ್ಲಿ ಇತ್ತೀಚಿಗೆ ಮಕ್ಕಳ ಅಪಹರಣ ತಂಡದ ಬಗ್ಗೆ ವಂದಂತಿಗಳು ಹಬ್ಬಿರುವುದು ಇಲಾಖೆಯ ಗಮನಕ್ಕೆ ಬಂದಿರುತ್ತದೆ. ಮಕ್ಕಳನ್ನು ಕದ್ದೊಯ್ದು ಕಿಡ್ನಿ ಮತ್ತು ಇತರೆ ಅಂಗಾಗಳನ್ನು ಕದಿಯುತ್ತಾರೆ ಎಂಬ ಬಗ್ಗೆ ವ್ಯಾಪಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳು ಹರಿದಾಡುತ್ತಿದ್ದು ಜನರಲ್ಲಿ ಅತಂಕದ ವಾತಾವರಣ ಮೂಡಿರುತ್ತದೆ. 
ಅಪರಾಧ ಘಟನೆಗಳು 19-05-18

ಪಟ್ಟನಾಯಕನಹಳ್ಳಿ ಪೊಲೀಸ್ ಠಾಣಾ ಯು ಡಿ ಆರ್ ನಂ 15-18 ಕಲಂ 174 ಸಿ ಆರ್ ಪಿ ಸಿ

ದಿನಾಂಕ:19-05-18 ರಂದು  ಬೆಳಿಗ್ಗೆ08-45 ಗಂಟೆ ಸಮಯದಲ್ಲಿ  ಪಿರ್ಯಾದಿ  ಬೋಜರಾಜ ಬಿನ್ ಆನಂದಪ್ಪ, ಹುಳಿಗೆರೆ ಗ್ರಾಮ, ಶಿರಾ ತಾಲ್ಲೂಕ್   ರವರು ಠಾಣೆಗೆ ಹಾಜರಾಗಿ  ನೀಡಿದ ಲಿಖಿತ  ದೂರಿನ ಸಾರಾಂಶವೇನೆಂದರೆ, ಪಿರ್ಯಾದಿ ತಂದೆ ಆನಂದಪ್ಪ ರವರಿಗೆ  1) ಚಂದ್ರಕಲಾ  2) ಬೋಜರಾಜ 3) ಉಮಾದೇವಿ ಎಂಬ ಮೂರು ಜನ ಮಕ್ಕಳಿದ್ದು, ಪಿರ್ಯಾದಿ ತಂಗಿ ಉಮಾದೇವಿ ರವರು  ಶಿರಾ ಸರ್ಕಾರಿ ಪ್ರಥಮ ದರ್ಜೆ  ಕಾಲೇಜಿನಲ್ಲಿ ಬಿಕಾಂ ಅಂತಿಮ  ವರ್ಷದ  ಪರೀಕ್ಷೆ ಬರೆದು ಹುಳಿಗೆರೆಯ ತಮ್ಮ ಮನೆಯಲ್ಲಿದ್ದು, ದಿನಾಂಕ:15-05-18 ರಂದು ಬೆಳಿಗ್ಗೆ ಸುಮಾರು 10-00 ಗಂಟೆ ಸಮಯದಲ್ಲಿ ಅಂಡೆ ಒಲೆಗೆ ನೀರು ಕಾಯಿಸುವ ಸಲುವಾಗಿ ಸೌದೆಗೆ ಸೀಮೆ ಎಣ್ಣೆ ಹಾಕಿ ಒಲೆ  ಹತ್ತಿಸುವಾಗ  ಆಕಸ್ಮಿಕಾಗಿ ಬೆಂಕಿ ಜ್ವಾಲೆಯು ಮೈ ಮೇಲೆ  ತೊಟ್ಟಿದ್ದ ವೇಲ್  ಹಾಗೂ ಬಟ್ಟೆಗೆ  ಸೀಮೆ ಎಣ್ಣೆ ಸಮೇತ ತಗುಲಿ ಬೆಂಕಿ ಹತ್ತಿಕೊಂಡಿದ್ದು,ಪಿರ್ಯಾದಿ ತಂಗಿ ಉಮಾದೇವಿ ರವರು ಕಿರುಚಿಕೊಂಡಾಗ ಮನೆಯಲ್ಲಿದ್ದ ಪಿರ್ಯಾದಿ ರವರು ಮತ್ತು ಅಕ್ಕಪಕ್ಕದವರು  ಬೆಂಕಿಯನ್ನು ಹಾರಿಸುವಷ್ಠರಲ್ಲಿ ಉಮಾದೇವಿ ರವರಿಗೆ ಕುತ್ತಿಗೆ, ಎದೆಯ ಮುಂಭಾಗ, ಎಡಗೈ ಮತ್ತು ಎಡಗಾಲು ಶರೀರದ ಕೆಲವು ಭಾಗಕ್ಕೆ ಸುಟ್ಟಗಾಯಗಲಾಗಿದ್ದು ತಕ್ಷಣ ಶಿರಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ  ವೈದ್ಯರ ಸಲಹೇ ಮೇರೆಗೆ  ಹೆಚ್ಚಿನ ಚಿಕಿತ್ಸೆಗಾಗಿ ಅದೇ ದಿನ  ವಿಕ್ಟೋರಿಯ   ಆಸ್ಪತ್ರೆಗೆ ಕರೆದುಕೊಂಡು ಹೋಗಿ  ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ:18-05-18 ರಂದು  ರಾತ್ರಿ ಸುಮಾರು 01-00 ಗಂಟೆಯಲ್ಲಿ  ವಿಕ್ಟೋರಿಯ  ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ  ವಿನಃ ಮೃತಳ ಸಾವಿನಲ್ಲಿ ಬೇರೆ ಯಾವುದೇ ಅನುಮಾನ  ಇರುವುದಿಲ್ಲ  ಮುಂದಿನ ಕ್ರಮ ಕೈಗೊಳ್ಳಲು ನೀಡಿದ ಲಿಖಿತ ಪಿರ್ಯಾದನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ತಿಪಟೂರು ನಗರ ಪೊಲೀಸ್ ಠಾಣಾ ಮೊ. ನಂ - 75/2018 ಕಲಂ: 324,504,506 r/w 34 IPC

ದಿನಾಂಕ:18/05/2018 ರಂದು ರಾತ್ರಿ 10-30 ಗಂಟೆಗೆ ಪಿರ್ಯಾದುದಾರರಾದ ಸೈಯದ್‌ ನಾಸಿರ್‌ ಬಿನ್‌ ಸೈಯದ್‌ ಖಾಸಿಂಸಾಬ್‌, 50 ವರ್ಷ, 6ನೇ ಕ್ರಾಸ್‌, ಚಾಮುಂಡೇಶ್ವರಿ ಬಡಾವಣೆ, ಗಾಂಧಿನಗರ, ತಿಪಟೂರು ಟೌನ್‌ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ದಿನಾಂಕ:18/05/2018 ರಂದು ರಾತ್ರಿ 9-15 ಗಂಟೆ ಸಮಯದಲ್ಲಿ ನನ್ನ ಮಗನಾದ ಸೈಯದ್‌ ಖುಬೇಬ್‌ ರವರು ನಮಾಜಿಗೆ ಹೋಗಲು ಬೋವಿ ಕಾಲೋನಿ ಮುಖ್ಯ ರಸ್ತೆಯಲ್ಲಿ ಹೋಗುತ್ತಿದ್ದಾಗ, ಇದೇ ಸಮಯಕ್ಕೆ ಅಲ್ಲೆ ಇರುವ ಚಿಲ್ಲರೆ ಅಂಗಡಿ ಬಳಿ ಕುಳಿತಿದ್ದ ನನ್ನ ಮಗನಿಗೆ ಪರಿಚಯವಿರುವ ನದೀಂ ಬಿನ್‌ ಮುನ್ನಾ, ಚಾಮುಂಡೇಶ್ವರಿ ಬಡಾವಣೆ ರವರು ಇತರೆ ಮೂರು ಜನ ಹುಡುಗರೊಂದಿಗೆ ಸೇರಿಕೊಂಡು ನನ್ನ ಮಗನನ್ನು ಕರೆದು ಹಿಂದಿನ ದ್ವೇಷದಿಂದ ಲೋಫರ್‌ ನನ್ನ ಮಗನೆ ಎಂತ ಕೆಟ್ಟ ಮಾತುಗಳಿಂದ ಬೈದು ನದೀಂ ತನ್ನ ಬಳಿ ಇದ್ದ ಕೈ ಬೆರಳುಗಳಿಗೆ ಹಾಕಿಕೊಂಡು ಹೊಡೆಯುವ ಕಬ್ಬಿಣದ ಹ್ಯಾಂಡ್‌ ಪಂಚ್‌ನಿಂದ ಮುಖ ಮತ್ತು ದವಡೆಗೆ ಹೊಡೆದು ರಕ್ತಗಾಯ ಪಡಿಸಿರುದ್ದಾರೆ. ಹಾಗೂ ನದೀಂ ಮತ್ತು ಆತನ ಜೋತೆಯಲ್ಲಿದ್ದ ಇತರೆಯವರು ಸಹ ನನ್ನ ಮಗನಿಗೆ ಕೆಟ್ಟ ಮಾತುಗಳಿಂದ ಬೈದು ನಿನ್ನನ್ನು ಬಿಡುವುದಿಲ್ಲ ಕೊಲೆ ಮಾಡುತ್ತೇನೆ ಎಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ. ಅಷ್ಟರಲ್ಲಿ ನಮಾಜ್‌ ಮುಗಿಸಿಕೊಂಡು ಅಲ್ಲಿಗೆ ಬಂದ ನನಗೆ ಗಲಾಟೆ ಬಿಡಿಸಿದ ನನ್ನ ಇನ್ನೋಬ್ಬ ಮಗ ಅಸ್‌ರಾರ್‌, ಬಾಬು ರವರ ಮಗ ಅಲಿ, ಅತೀಖ್‌ ಬಿನ್‌ ಮಹಬೂಬ್‌ ಎಂಬುವರು ಗಲಾಟೆ ಬಿಡಿಸಿ ನನಗೆ ಸುದ್ದಿ ತಿಳಿಸಿ ನಂತರ ನನ್ನ ಮಗನನ್ನು ಚಿಕಿತ್ಸೆಗೆ ಆಸ್ಪತ್ರೆಗೆ ಕರೆದುಕೊಂಡು ಹೋದರು. ಆದ್ದರಿಂದ ನನ್ನ ಮಗನಿಗೆ ಹೊಡೆದು ಗಲಾಟೆ ಮಾಡಿರುವ ನದೀಂ ಮತ್ತು ಆತನ ಜೊತೆಯಲ್ಲಿ ಇದ್ದ ಇತರೆಯವರ ಮೇಲೆ ಕಾನೂನು ಕ್ರಮ ಜರುಗಿಸಬೇಕಂತ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಬಡವನಹಳ್ಳಿ ಪೊಲೀಸ್ ಠಾಣೆ  ಮೊ.ಸಂ 78/2018 ಕಲಂ 454 380 ಐಪಿಸಿ

ದಿನಾಂಕ:18/05/2018 ರಂದು ರಾತ್ರಿ 08-30 ಗಂಟೆಯಲ್ಲಿ ಮಧುಗಿರಿ ತಾ. ದೊಡ್ಡೇರಿ ಹೋ.ಮುದ್ದಪ್ಪನ ಪಾಳ್ಯ ಗ್ರಾಮದಲ್ಲಿ ವಾಸವಿರುವ ವಕ್ಕಲಿಗ ಜನಾಂಗದ ಜಿರಾಯ್ತಿ ಕಸುಬಿನ ರಾಮಣ್ಣ ರವರ ಮಗ ಸುಮಾರು 45 ವರ್ಷ ವಯಸ್ಸಿನ ರಾಮಕೃಷ್ಣಪ್ಪ ರವರು ಠಾಣೆಗೆ ಹಾಜರಾಗಿ, ನಾನು ಮೇಲ್ಕಂಡ ವಿಳಾಸದಲ್ಲಿ ನನ್ನ ಹೆಂಡತಿ ಮಕ್ಕಳೊಂದಿಗೆ ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿರುತ್ತೇನೆ. ದಿನಾಂಕ:18/05/2018 ರಂದು ಬೆಳಗ್ಗೆ ನನ್ನ ಹೆಂಡತಿ ಮಕ್ಕಳು ಮರಿತಿಮ್ಮನಹಳ್ಳಿಯ ನೆಂಟರ ಮನೆಗೆ ಕಾರ್ಯನಿಮಿತ್ತ ಹೋಗಿದ್ದರು. ನಾನು ಮದ್ಯಾಹ್ನ 3-00 ಗಂಟೆಯಲ್ಲಿ ಕರೆಂಟ್‌ ಬಂದಿದ್ದರಿಂದ ಅಡಿಕೆ ತೋಟಕ್ಕೆ ನೀರಾಯಿಸಲು ನಮ್ಮ ತೋಟಕ್ಕೆ ಹೋಗಲೆಂದು ಮನೆಗೆ ಬೀಗ ಹಾಕಿಕೊಂಡು ನಮ್ಮ ತೋಟದ ಹತ್ತಿರ ಹೋದೆ. ನಂತರ ಸಂಜೆ 6-00 ಗಂಟೆಯಲ್ಲಿ ಕರೆಂಟ್‌ ಹೋಗಿದ್ದರಿಂದ ಮನೆ ಹತ್ತಿರ ಬಂದು ನೋಡಲಾಗಿ, ನಮ್ಮ ಮನೆಯ ಬಾಗಿಲು ತೆಗೆದಿತ್ತು. ಏನಾಗಿರಬಹುದೆಂದು ಒಳಗೆ ಹೋಗಿ ನೋಡಲಾಗಿ ನಮ್ಮ ಮನೆಯ ಬಾಗಿಲ ಬೀಗವನ್ನು ಯಾರೋ ಕಳ್ಳರು ಯಾವುದೋ ಆಯುಧದಿಂದ ಮೀಟಿ ತೆಗೆದು ಮನೆಯ ಒಳಗೆ ಹೋಗಿ ಮನೆಯಲ್ಲಿದ್ದ ಬೀರುವಿನ ಬಾಗಿಲ ಬೀಗವನ್ನು ಯಾವುದೋ ಆಯುಧದಿಂದ ಮೀಟಿ ತೆಗೆದು ಬಟ್ಟೆಯನ್ನೆಲ್ಲಾ ಚೆಲ್ಲಾ ಪಿಲ್ಲಿಯಾಗಿ ಕಿತ್ತು ಹಾಕಿ ಬೀರುವಿನಲ್ಲಿದ್ದ 10000/- ರೂ ನಗದು ಹಣ ಮತ್ತು ಸುಮಾರು 40 ಗ್ರಾಂ ತೂಕದ ಬಂಗಾರದ ಮಾಂಗಲ್ಯ ಚೈನ್‌ ಸುಮಾರು 50 ಗ್ರಾಂ ತೂಕದ ಬಂಗಾರದ ಎರಡೆಳೆ ಸರ ಸುಮಾರು 7 ಗ್ರಾಂ ತೂಕದ 2 ಸೆಟ್‌ ಬಂಗಾರದ ಗುಂಡು ಡ್ರಾಪ್ಸ್‌ ಅನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಮೇಲ್ಕಂಡ ಬಂಗಾರದ ವಡವೆಗಳ ಅಂದಾಜು ಬೆಲೆ ಸುಮಾರು 2 ಲಕ್ಷ ರೂ ಗಳಾಗಬಹುದಾಗಿರುತ್ತೆ. ಆದ್ದರಿಂದ ನಮ್ಮ ಮನೆಯಲ್ಲಿ ಕಳ್ಳತನ ಮಾಡಿರುವ ಕಳ್ಳರನ್ನು ಪತ್ತೆ ಮಾಡಿ ನಮ್ಮ ವಡವೆ ಮತ್ತು ಹಣವನ್ನು ಕೊಡಿಸಿಕೊಡಬೇಕೆಂದು ತಮ್ಮಲ್ಲಿ ಕೋರುತ್ತೇನೆಂದು ಇತ್ಯಾದಿ ಅರ್ಜಿಯ ಅಂಶವಾಗಿರುತ್ತೆ.

ಹೊಸಬಡಾವಣೆ ಪೊಲೀಸ್ ಠಾಣಾ ಮೊ.ಸಂ 98/2018 U/S 379 IPC

 

ದಿನಾಂಕ : 18-05-2018 ರಂದು ಬೆಳಗ್ಗೆ 11-00 ಗಂಟೆಯಲ್ಲಿ  ಪಿರ್ಯಾದಿ ಶ್ರೀ ಬಾಳೇಗೌಡ ಬಿನ್ ಜಯಪ್ಪ, 46 ವರ್ಷ, ವಾಸ 60 ಅಡಿ ರಸ್ತೆ, ಗೋಕುಲ ಬಡಾವಣೆ, ತುಮಕೂರು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯು ಸ್ವಂತ ಉಪಯೋಗಕ್ಕೆಂದು KA06EM9331 ವಾಹನವನ್ನು ಹೊಂದಿದ್ದು ದಿ: 15-05-2018 ರಂದು ಮಧ್ಯಾಹ್ನ 1-50 ಗಂಟೆಯಲ್ಲಿ ತಮ್ಮ ವಾಹನವನ್ನು ಅಶೋಕನಗರ ಪೊಲೀಸ್ ಸ್ಮಾರಕ ಪಾರ್ಕ್‌ ಒಳಗೆ ನಿಲ್ಲಿಸಿ ನಂತರ 2-50 ಗಂಟೆಗೆ ಬಂದು ನೋಡಲಾಗಿ ಸದರಿ ವಾಹನವನ್ನು ಯಾರೋ ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕಳುವಾದ ವಾಹನದ ಬೆಲೆ 20,000/-ರೂಗಳಾಗಿದ್ದು ಕ್ರಮ ಕೋರಿ ನೀಡಿದ ದೂರು

ಹೊಸಬಡಾವಣೆ ಪೊಲೀಸ್ ಠಾಣಾ ಮೊ.ಸಂ 100/2018 U/S 182, 483, 420 IPC And 63, 65 Copy Right Act-1957

 

ದಿನಾಂಕ : 18-05-2018 ರಂದು ಸಂಜೆ 5-00 ಗಂಟೆಗೆ ಪಿರ್ಯಾದಿ ನಾಗರಾಜು ಬಿನ್ ಸಿದ್ಧಪ್ಪ, 25 ವರ್ಷ, ಬಿಂದು ಜೀರಾ ಫಿಜ್ಜಾ ಏರಿಯಾ ವ್ಯವಸ್ಥಾಪಕರು, ತುಮಕೂರು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯ ಮೆ|| ಮೆಘಾ ಪ್ರೂಟ್ ಪ್ರೊಸೆಸಿಂಗ್ ಪ್ರೈ ಲಿ ನರಿಮೊಗರು ಗ್ರಾಮ, ಪುತ್ತೂರು ತಾಲ್ಲೋಕ್, ರವರು ಬಿಂದು ಮತ್ತು ಬಿಂದು ಫಿಜ್ ಜೀರಾ ಮಸಾಲ ತಂಪು ಪಾನೀಯದ ಅಧಿಕೃತ ಮಾರಾಟಗಾರರಾಗಿದ್ದು ಆದರೆ ತುಮಕೂರಿನ ಮೆ|| ಸುರಭಿ ಬೆವ್ ಇಂಡಿಯಾ ಕಂಪನಿಯವರು ಪಿರ್ಯಾದಿ ಕಂಪನಿಯ ಹೆಸರನ್ನೇ ಹೋಲುವ ಸುರಭಿ ಜೀರಾ ಫಿಜ್ ಮಸಾಲ ಎಂಬ ಹೆಸರಿನಲ್ಲಿ ತಂಪು ಪಾನೀಯವನ್ನು ಅನಧೀಕೃತವಾಗಿ ತಯಾರಿಸಿ ಮಾರಾಟ ಮಾಡಿ ಪಿರ್ಯಾದಿ ಕಂಪನಿಗೆ ಮೋಸ ಹಾಗೂ ವ್ಯವಹಾರ ನಷ್ಠ ಉಂಟುಮಾಡುತ್ತಿದ್ದು ಈ ಬಗ್ಗೆ ಕ್ರಮ ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದೆ .

ಹೊನ್ನವಳ್ಳಿ ಪೊಲೀಸ್‌  ಠಾಣೆ ಠಾಣಾ ಮೊ ನಂ 30/2018 ಕಲಂ:279 ಐಪಿಸಿ

ದಿನಾಂಕ 18/05/2018 ರಂದು ಸಂಜೆ 6-30 ಗಂಟೆಗೆ ತಿಪಟೂರು ತಾಲ್ಲೂಕು, ಹೊನ್ನವಳ್ಳಿ ಹೋಬಳಿ, (ಸಾರ್ಥವಳ್ಳಿ) ಆಲೂರು ತೋಟದ ಮನೆ ವಾಸಿ ನಾಗರಾಜು ಎಸ್.ಟಿ. ಬಿನ್‌‌ ತಿಮ್ಮೇಗೌಡ ಲೇಟ್‌‌‌, ಸುಮಾರು 58 ವರ್ಷ, ಸರ್ಪ ಒಕ್ಕಲಿಗರ ಜನಾಂಗದವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೆನೆಂದರೆ  ನನ್ನ ಮಗನಾದ ಶ್ರೀನಿಧಿ ಎಸ್.ಎನ್. ಸುಮಾರು 26 ವರ್ಷ, ಈತನು ತಿಪಟೂರಿನ ಆಧ್ಯ ರೆಸಿಡೆನ್ಸಿ ಲಾಡ್ಜ್‌‌‌ ನಲ್ಲಿ ಮ್ಯಾನೇಜರ್‌ ಆಗಿ ಕೆಲಸ ಮಾಡಿಕೊಂಡಿರುತ್ತಾನೆ. ದಿನಾಂಕ:06.05.2018 ರಂದು ನನ್ನ ಮಗ ಎಂದಿನಂತೆ ತಿಪಟೂರಿಗೆ ಕೆಲಸಕ್ಕೆ ಹೋಗಿ ಸಂಜೆ ಸುಮಾರು 6 ಗಂಟೆಗೆ ವಾಪಾಸ್‌ ಮನೆಗೆ ಬಂದನು. ಸಂಜೆ ಸುಮಾರು 6-30 ರಲ್ಲಿ ನಮ್ಮೂರಿನ ಸಮೀಪದ ಘಟಿಕಿನಕೆರೆ ಗ್ರಾಮದ ಮೈಲಾರಪ್ಪ ಬಿನ್‌‌‌ ಮಲ್ಲಪ್ಪ ಎಂಬುವರು ನಮ್ಮ ಮನೆ ಹತ್ತಿರ ಬಂದು, ಹೊನ್ನವಳ್ಳಿ ಹೋಬಳಿ, ಹನುಮಂತಪುರಕ್ಕೆ ಹೋಗಿ ಸೀಮೆ ಹಸುವನ್ನು ವ್ಯಾಪಾರ ಮಾಡಿಕೊಂಡು ಬರಬೇಕೆಂದು ಹೇಳಿ ನನ್ನ ಮಗನನ್ನು ಅವರ ಕೆ.ಎ.44.ಕೆ.2982 ನೇ ಬಜಾಜ್‌ ಡಿಸ್ಕವರ್‌‌‌ ಬೈಕ್‌‌ನಲ್ಲಿ ಕೂರಿಸಿಕೊಂಡು ಹೋದರು. ನಂತರ ರಾತ್ರಿ ಸುಮಾರು 10-15 ಗಂಟೆ ಸಮಯದಲ್ಲಿ ಮೈಲಾರಪ್ಪ ನನಗೆ ಪೋನ್‌‌ ಮಾಡಿ, ನಾನು ಮತ್ತು ಶ್ರೀನಿಧಿ ಇಬ್ಬರೂ ಹನುಮಂತಪುರಕ್ಕೆ ಹೋಗಿ ಹಸುವಿನ ವ್ಯಾಪಾರ ಮಾಡಿಕೊಂಡು ವಾಪಾಸ್‌ ಊರಿಗೆ ಬರಲು ಹೊನ್ನವಳ್ಳಿ, ಗುಡಿಗೊಂಡನಹಳ್ಳಿ ಮಾರ್ಗವಾಗಿ ರಾತ್ರಿ ಸುಮಾರು 10-00 ಗಂಟೆ ಸಮಯದಲ್ಲಿ ತಿಮ್ಮಲಾಪುರದ ಹತ್ತಿರ ಹೋಗುತ್ತಿರುವಾಗ, ಅಪಘಾತವಾಗಿ ನಿಮ್ಮ ಮಗನ ಎಡಗಾಲಿಗೆ ಏಟಾಗಿರುತ್ತೆ,  ಅವನನ್ನು 108 ನಲ್ಲಿ ತಿಪಟೂರು ಜನರಲ್‌‌ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದೇನೆ ಆಸ್ಪತ್ರೆ ಹತ್ತಿರ ಬನ್ನಿ ಎಂದು ಹೇಳಿದರು. ತಕ್ಷಣ ಅಲ್ಲಿಗೆ ನಾನು ಮತ್ತು ನನ್ನ ಚಿಕ್ಕ ಮಗ ಶ್ರೀಧರ ಎಸ್.ಎನ್. ಇಬ್ಬರೂ ಹೋಗಿ ನೋಡಿದಾಗ ನನ್ನ ಮಗ ತಿಪಟೂರು ಜನರಲ್‌‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಎಡಗಾಲಿನ ಪಾದಕ್ಕೆ ತೀವ್ರತರವಾದ ಪೆಟ್ಟಾಗಿತ್ತು. ಮತ್ತು ಎಡ ಮೊಣಕೈಗೆ ತರಚಿದ ಗಾಯಗಳಾಗಿದ್ದವು. ನನ್ನ ಮಗ ಮಾತನಾಡುತ್ತಿದ್ದು, ಅಪಘಾತ ಹೇಗಾಯಿತೆಂದು ಕೇಳಿದ್ದಕ್ಕೆ, ಹನುಮಂತಪುರದಲ್ಲಿ ಹಸುವಿನ ವ್ಯಾಪಾರ ಮುಗಿಸಿಕೊಂಡು ವಾಪಾಸ್‌‌ ಊರಿಗೆ ಬರಲು ರಾತ್ರಿ ಸುಮಾರು 10-00 ಗಂಟೆ ಸಮಯದಲ್ಲಿ ತಿಮ್ಮಲಾಪುರದ ಹತ್ತಿರ ತಿಪಟೂರು-ಹೊನ್ನವಳ್ಳಿ ರಸ್ತೆಯಲ್ಲಿ ಬರುತ್ತಿರುವಾಗ ಮೈಲಾರಪ್ಪ ಬೈಕನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ರಸ್ತೆಯ ಎಡಭಾಗ ದಡದಲ್ಲಿದ್ದ ತಂತಿಬೇಲಿಯ ಕಲ್ಲು ಕಂಬದ ಹತ್ತಿರ ಹೋದಾಗ ನನ್ನ ಎಡಗಾಲಿನ ಪಾದವು ಕಲ್ಲು ಕಂಬಕ್ಕೆ ತುಗುಲಿದ್ದರಿಂದ ಪೆಟ್ಟಾಗಿರುತ್ತೆ. ನಂತರ ನಾನು ಆಯ ತಪ್ಪಿ ಕೆಳಕ್ಕೆ ಬಿದ್ದಾಗ ಎಡಗೈ ಮೊಣಕೈ ಹತ್ತಿರ ತರಚಿದ ಗಾಯವಾಗಿರುತ್ತೆ. ಮೈಲಾರಪ್ಪ ಬೈಕ್‌ ಸಮೇತ ಮುಂದೆ ಹೋಗಿದ್ದರಿಂದ ಅವರಿಗೆ ಯಾವುದೇ ಗಾಯಗಳಾಗಿಲ್ಲ, ಬೈಕ್‌‌ ಕೂಡ ಜಖಂ ಆಗಿಲ್ಲ, ಇದಕ್ಕೆ ಮೈಲಾರಪ್ಪನು ಬೈಕನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿದ್ದೇ ಕಾರಣವಾಗಿರುತ್ತೆ ಎಂದು ಹೇಳಿದ. ನಂತರ ತಿಪಟೂರು ಜನರಲ್‌‌ ಆಸ್ಪತ್ರೆಯ ವೈದ್ಯರ ಸಲಹೆ ಮೇರೆಗೆ ನನ್ನ ಮಗನನ್ನು ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿನ ಹೇಮಾವತಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿರುತ್ತೇನೆ. ನನ್ನ ಮಗನನ್ನು ನೋಡಿಕೊಳ್ಳುವವರು ಯಾರೂ ಇಲ್ಲದೇ ಇದ್ದ ಕಾರಣ ನಾನೇ ಆತನ ಆರೈಕೆಯಲ್ಲಿದ್ದುದರಿಂದ ಈ ದಿನ ದಿನಾಂಕ:18.05.2018 ರಂದು ತಡವಾಗಿ ಬಂದು ದೂರನ್ನು ನೀಡುತ್ತಿರುತ್ತೇನೆ. ಈ ಅಪಘಾತಕ್ಕೆ ಕಾರಣನಾಗಿರುವ ಮೈಲಾರಪ್ಪನವರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರನ್ನು  ಪಡೆದು ಪ್ರಕರಣ ದಾಖಲು ಮಾಡಿರುತ್ತೆ.

ಪಟ್ಟನಾಯಕನಹಳ್ಳಿ ಪೊಲೀಸ್ ಠಾಣಾ ಯು ಡಿ ಆರ್ ನಂ 14-18 ಕಲಂ 174 ಸಿ ಆರ್ ಪಿ ಸಿ

ದಿನಾಂಕ:18-05-2018 ರಂದು  ಬೆಳಿಗ್ಗೆ  08-00 ಗಂಟೆಗೆ ಪಿರ್ಯಾದಿ  ಸುಶೀಲಮ್ಮ ಕೊಂ ನಾಗರಾಜು @ ನಾಗಣ್ಣ, ಶಾಸಮರು ಗ್ರಾಮ, ಶಿರಾ ತಾಲ್ಲೂಕ್ ರವರು ಠಾಣೆಗೆ  ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ,  ಪಿರ್ಯಾದಿ ರವರು ಈಗ್ಗೆ ಸುಮಾರು 23 ವರ್ಷಗಳ ಹಿಂದೆ  ಶಾಸಮರು ಗ್ರಾದಮ ನಾಗರಾಜು ರವರನ್ನು ಮದುವೆಯಾಗಿದ್ದು ಇವರಿಗೆ 20 ವರ್ಷದ ಆನಂತ ಮತ್ತು 17 ವರ್ಷದ ಬಾಬು  ಎಂಬ  2 ಗಂಡು ಮಕ್ಕಳಿದ್ದು, ಪಿರ್ಯಾದಿ ಗಂಡನಾದ  ನಾಗರಾಜು @ ನಾಗಣ್ಣ ರವರು  ಅವರ ತಾಯಿಯ ತಮ್ಮನಾದ ನರಸಿಂಹಯ್ಯ ಬಿನ್  ಬೇವಿನಾಳಪ್ಪ ಜಮೀನಿನಲ್ಲಿ ಹುಳುಮೆ ಮಾಡಿಕೊಂಡು   ಜೀವನ ಸಾಗಿಸುತ್ತಿದ್ದು,  ದಿನಾಂಕ:17-05-2018 ರಂದು ಪಿರ್ಯಾದಿ ಗಂಡ  ಹುಳುಮೆ ಮಾಡಲು   ದನಗಳು  ಮತ್ತು ನೇಗಿಲು ಸಮೇತ  ಹೋಗಿದ್ದು, ಇದೇ ದಿನ ಸಂಜೆ 06-00 ಗಂಟೆಯಾದರು ಪಿರ್ಯಾದಿ ಗಂಡ ಮನೆಗೆ ಬರದೇ ಇದ್ದುದ್ದರಿಂದ ಪಿರ್ಯಾದಿ ಮಗನಾದ  ಅನಂತನು  ಹೊಲದ ಹತ್ತಿರ ಹುಡುಕುತ್ತಿದ್ದಾಗ  ನೀರಿನ ದಡದ ಬಳಿ ದನಗಳು ಕಂಡು ಬಂದಿದ್ದು,  ಗುಂಡಿಯಲ್ಲಿ ಒಬ್ಬ  ವ್ಯೆಕ್ತಿ ಬಿದ್ದಿರುವುದಾಗಿ ಪಿರ್ಯಾದಿ ರವರಿಗೆ ತಿಳಿಸಿದ್ದು  ನಂತರ ಪಿರ್ಯಾದಿ, ಅದೇ ಗ್ರಾಮದ  ಹನುಮೇಶ, ಹನುಮಂತ ಮತ್ತು ಪಿರ್ಯಾದಿ ಮಗನೊಂದಿಗೆ  ಹೋಗಿ ನೀರಿನಲ್ಲಿ ಮುಳುಗಿದ್ದ   ವ್ಯೆಕ್ತಿಯನ್ನು ಮೇಲಕ್ಕೆ ಎತ್ತಿ ನೋಡಲಾಗಿ  ಪಿರ್ಯಾದಿ  ಗಂಡ ನಾಗರಾಜು ರವರಾಗಿದ್ದು, ಇವರು ಆಕಸ್ಮೀಕವಾಗಿ ಕಾಲು ಜಾರಿ ನೀರಿಗೆ  ಬಿದ್ದು ನೀರು ಕುಡಿದು ಉಸಿರುಕಟ್ಟಿ  ಮೃತಪಟ್ಟಿರುತ್ತಾರೆ ವಿನಃ ಮೃತನ ಸಾವಿನಲ್ಲಿ  ಬೇರೆ  ಯಾವ  ಅನುಮಾನ ಇರುವುದಿಲ್ಲ  ಮುಂದಿನ ಕ್ರಮ ಜರುಗಿಸಲು ನೀಡಿದ ಲಿಖಿತ ಪಿರ್ಯಾದನ್ನು ಪಡೆದು ಪ್ರಕರಣ ದಾಖಲಿಸಿರುತ್ತೆFriday, 18 May 2018

ಅಪರಾಧ ಘಟನೆಗಳು 18-05-18

ಹೊನ್ನವಳ್ಳಿ ಪೊಲೀಸ್‌  ಠಾಣೆ ಠಾಣಾ ಮೊ ನಂ 29/2018 ಕಲಂ:279 ಐಪಿಸಿ

ದಿನಾಂಕ 06/05/2018 ರಂದು ಸಂಜೆ 6-30 ಗಂಟೆಗೆ ಉಡುಪಿ ಜಿಲ್ಲೆ ಮತ್ತು ತಾಲ್ಲೂಕು, ಕಾಪು ಹೋಬಳಿ, ಪಡುಬಿದ್ರೆ ಗ್ರಾಮದ ವಾಸಿ ಲೇಟ್‌‌ ಪಿ ಹರಿದಾಸ್‌‌ ಚಾರ್ಯರವರ ಮಗನಾದ ಮುರಳೀಧರ್‌‌ ಆಚಾರ್ಯ, ಸುಮಾರು 49 ವರ್ಷ, ಬ್ರಾಹ್ಮಣ ಜನಾಂಗದವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೆನೆಂದರೆ,ನಿನ್ನೆ ದಿನ ದಿನಾಂಕ:16.05.2018 ರಂದು ನಾನು ಮತ್ತು ನನ್ನ ಹೆಂಡತಿ ಸುಶ್ಮಾ ಎಂ. ಆಚಾರ್ಯರವರೊಂದಿಗೆ ತುಮಕೂರಿನಲ್ಲಿರುವ ನಮ್ಮ ಮಾವ ಹೆಚ್.ಎಸ್.ನರಸಿಂಹಮೂರ್ತಿರವರ ಮನೆಗೆ ನಮ್ಮದೇ ಆದ ಕೆ.ಎ.20ಎಂ.ಎ.8878 ನೇ Maruti Eco ಕಾರಿನಲ್ಲಿ ಹೋಗಿದ್ದು, ಅಲ್ಲಿಯೇ ಉಳಿದುಕೊಂಡಿದ್ದೆವು. ಈ ದಿನ ದಿನಾಂಕ:17.05.2018 ರಂದು ಅದೇ ಕಾರಿನಲ್ಲಿ ನಾವಿಬ್ಬರು ತುಮಕೂರಿನಿಂದ ವಾಪಾಸ್‌ ನಮ್ಮೂರಿಗೆ ಹೋಗಲು, ಕೆ.ಬಿ.ಕ್ರಾಸ್, ತಿಪಟೂರು ಮಾರ್ಗವಾಗಿ ಬಂದು ಸಾಯಂಕಾಲ ಸುಮಾರು 4-15 ಗಂಟೆ ಸಮಯದಲ್ಲಿ ತಿಪಟೂರು ತಾ: ಕಸಬಾ ಹೋಬಳಿ, ಶಂಕರಿಕೊಪ್ಪಲು ಗೇಟ್‌‌ ಹತ್ತಿರ ಬೆಂಗಳೂರು-ಶಿವಮೊಗ್ಗ ರಸ್ತೆಯಲ್ಲಿ ರಸ್ತೆಯ ಎಡಭಾಗದಲ್ಲಿ ಹೋಗುತ್ತಿದ್ದೆವು. ಕಾರನ್ನು ನಾನೇ ಓಡಿಸಿಕೊಂಡು ಹೋಗುತ್ತಿದ್ದೆನು. ಆ ಸಮಯದಲ್ಲಿ ನಮ್ಮ ಕಾರಿನ ಎದುರಿಗೆ ಅಂದರೆ ಅರಸೀಕೆರೆ ಕಡೆಯಿಂದ ಬರುತ್ತಿದ್ದ ಕೆ.ಎ.16.ಪಿ.5000 ನೇ ಟಾಟಾ ಇಂಡಿಗೋ ಕಾರಿನ ಚಾಲಕ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಆತನ ಮುಂದೆ ಬರುತ್ತಿದ್ದ ಯಾವುದೋ ಒಂದು ಕಾರನ್ನು ಓವರ್‌ ಟೇಕ್‌ ಮಾಡಿಕೊಂಡು ಮುಂದೆ ಹೋಗಲು ಬಂದವನು ರಸ್ತೆಯ ಬಲಭಾಗಕ್ಕೆ (ನಮ್ಮ ಕಡೆಗೆ) ಬಂದು ನಮ್ಮ ಕಾರಿಗೆ ಡಿಕ್ಕಿ ಹೊಡೆಸಿರುತ್ತಾನೆ. ಇದರಿಂದ ಎರಡೂ ಕಾರುಗಳು ಜಖಂಗೊಂಡಿರುತ್ತವೆ. ಕಾರಿನಲ್ಲಿದ್ದ ನಮಗೆ ಯಾವುದೇ ಗಾಯಗಳಾಗಿರುವುದಿಲ್ಲ. ಎದುರು ಕಾರಿನಲ್ಲಿ 04 ಜನರಿದ್ದು ಅವರಿಗೂ ಸಹ ಯಾವುದೇ ಪೆಟ್ಟಾಗಿರುವುದಿಲ್ಲ. ನಮ್ಮ ಕಾರಿಗೆ ಡಿಕ್ಕಿ ಹೊಡೆಸಿದ ಕಾರಿನ ಡ್ರೈವರ್‌ ಹೆಸರು ಮತ್ತು ವಿಳಾಸ ಗೊತ್ತಾಗಿರುವುದಿಲ್ಲ. ಈ ಅಪಘಾತಕ್ಕೆ ಕಾರಣವಾಗಿರುವ ಕೆ.ಎ.16.ಪಿ.5000 ನೇ ಟಾಟಾ ಇಂಡಿಗೋ ಕಾರಿನ ಚಾಲಕನ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರನ್ನು  ಪಡೆದು ಪ್ರಕರಣ ದಾಖಲು ಮಾಡಿರುತ್ತೆ.

ಬಡವನಹಳ್ಳಿ ಪೊಲೀಸ್ ಠಾಣಾ ಮೊ ನಂ 77/2017  - ಕಲಂ 279-337 ಐಪಿಸಿ 187 ಐ ಎಂ ವಿ ಆಕ್ಟ್‌ .

ದಿ:17/05/2018 ರಂದು ಸಂಜೆ  5-15 ಗಂಟೆಗೆ ಕವಣದಾಲ ಗ್ರಾಮದ ವಾಸಿ ರಾಜಣ್ಣ ಬಿನ್‌ ಲೇಟ್‌ ಚಿಕ್ಕಹನುಮಂತಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ಪಿರ್ಯಾದು ಅಂಶವೇನೆಂದರೆ,  ನಾನು ದಿ:11/05/2018 ರಂದು  ಸಂಜೆ 5-45 ಗಂಟೆ ಸಮಯದಲ್ಲಿ ನನ್ನ ಬಾಬ್ತು ಕೆಎ-64-ಕ್ಯೂ-2765 ನೇ ನಂಬರಿನ ಬೈಕ್‌‌ ನ ಹಿಂಬದಿಯ ಸೀಟಿನಲ್ಲಿ ನನ್ನ ಮಗ ಸ್ವಾಮಿನಾಥನನ್ನು ಕೂರಿಸಿಕೊಂಡು ಕವಣದಾಲದಿಂದ ಕೈಮರಕ್ಕೆ ಬರುವಾಗ ಮಾರ್ಗಮದ್ಯೆ  ಕವಣದಾಲ ಗ್ರಾಮದ ವೈನ್‌ ಶಾಪ್‌ ನಿಂದ ಸ್ವಲ್ಪ ಮುಂದೆ ಬಂದಾಗ ಎದುರಿಗೆ ಕೈಮರದ ಕಡೆಯಿಂದ ಕೆಎ-06-ಪಿ-1400 ನೇ ನಂಬರಿನ ಕಾರಿನ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನನ್ನ ಬೈಕಿಗೆ ಡಿಕ್ಕಿ ಪಡಿಸಿದ ಪರಿಣಾಮ  ನನ್ನ ಮಗನಿಗೆ  ತಲೆ ಮತ್ತು ಹಣೆಗೆ ಪೆಟ್ಟು ಬಿದ್ದು,  ಕೈ ಮತ್ತು ಕಾಲುಗಳಿಗೆ  ಗಾಯಗಳಾಗಿರುತ್ತೆ. ನನ್ನ  ದ್ವಿಚಕ್ರ ವಾಹನ ಮತ್ತು ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿರುತ್ತೆ. ನನಗೆ ಯಾವುದೇ ಗಾಯಗಳಾಗಿರುವುದಿಲ್ಲ. ಸ್ಥಳದಲ್ಲಿ ಇದ್ದ ನಮ್ಮ ಗ್ರಾಮದ ಮಂಜುನಾಥ ಬಿನ್‌ ಹನುಮಂತರಾಯಪ್ಪ  ಮತ್ತು ನಾನು ಸೇರಿಕೊಂಡು ನನ್ನ ಮಗನನ್ನು ಉಪಚರಿಸಿ ಯಾವುದೋ ಒಂದು ವಾಹನದಲ್ಲಿ  ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು,  ನಂತರ ವೈದ್ಯರ ಸಲಹೆ ಮೇರಗೆ ತುಮಕೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ, ಈ ದಿನ ತಡವಾಗಿ ಬಂದು ಅಪಘಾತ ಉಂಟು ಮಾಡಿದ ಕೆಎ-06-ಪಿ-1400 ನೇ ನಂಬರಿನ ಕಾರಿನ ಚಾಲಕ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಿ ಎಂತಾ ನೀಡಿದ ಪಿರ್ಯಾದು ಅಂಶ

ಮಿಡಿಗೇಶಿ ಪೊಲೀಸ್ ಠಾಣಾ ಮೊ.ಸಂ.54/2018, ಕಲಂ:279, 337 ಐಪಿಸಿ ರೆ/ವಿ 134(ಎ & ಬಿ), 187 ಐಎಂವಿ ಆಕ್ಟ್.

ದಿನಾಂಕ:17/05/2018 ರಂದು ಸಾಯಂಕಾಲ 03:30 ಗಂಟೆಗೆ ಪಿರ್ಯಾದಿ ಸಂತೋಷ್‌ ‌ಕುಮಾರ್‌ ಬಿನ್ ಕೋಟೆಕಲ್ಲಪ್ಪ 28 ವರ್ಷ, ನಾಯಕ ಜನಾಂಗ, ಡ್ರೈವರ್‌ ಕೆಲಸ, ಹರಿಹರಪುರ ಗ್ರಾಮ, ದೊಡ್ಡೇರಿ ಹೋಬಳಿ, ಮಧುಗಿರಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೆನೆಂದರೆ ನಾನು, ನಮ್ಮ ತಂದೆ-ತಾಯಿ, ಅಣ್ಣ-ಅತ್ತಿಗೆ ಎಲ್ಲರೂ ಒಟ್ಟಿಗೆ ವಾಸವಾಗಿರುತ್ತೇನೆ, ಮಡಕಶಿರಾ ತಾಲ್ಲೂಕು ರಂಗನಹಳ್ಳಿ ಗ್ರಾಮದ ವಾಸಿಯಾದ ನಮ್ಮ ಸಂಬಂಧಿಯಾದ ರಾಜಣ್ಣ ಬಿನ್ ಲೇ||ತಿಮ್ಮಣ್ಣ, 40 ವರ್ಷ ರವರು ದಿನಾಂಕ:14/05/2018 ರಂದು ನಮ್ಮ ಊರಿಗೆ ಬಂದಿದ್ದು, ಉಕ್ಕಡ ಜಾತ್ರೆಗೆ ಹೋಗಿ ಬರೋಣ ಬಾ ಎಂತ ಹೇಳಿ ನಮ್ಮ ತಂದೆಯಾದ ಕೋಟೆಕಲ್ಲಪ್ಪ ಬಿನ್ ಲೇ||ರಂಗಪ್ಪ, 45 ವರ್ಷ ರವರನ್ನು ಕರೆದುಕೊಂಡು ರಾಜಣ್ಣನವರು ಅವರ ಬಾಬ್ತು ಕೆಎ-03-ಹೆಚ್.ಇ-350 ನೇ ಬೈಕಿನಲ್ಲಿ ನಮ್ಮ ತಂದೆಯನ್ನು ಬೈಕಿನ ಹಿಂಬದಿಯಲ್ಲಿ ಕೂರಿಸಿಕೊಂಡು ದಿ:14/05/2018 ರಂದು ಸಂಜೆ ಸುಮಾರು 06:00 ಗಂಟೆಗೆ ನಮ್ಮ ಊರಾದ ಹರಿಹರಪುರ ಗ್ರಾಮದಿಂದ ಹೊರಟು ಬಂದರು. ನಮ್ಮ ತಂದೆ ಮತ್ತು ರಾಜಣ್ಣ ನಮ್ಮ ಮನೆಯಿಂದ ಹೊರಟು ಬಂದ ಸುಮಾರು ಒಂದು ಗಂಟೆಯ ನಂತರ ನಮ್ಮ ಸಂಬಂಧಿ ರಾಜಣ್ಣ ರವರು ನನಗೆ ಪೋನ್ ಮಾಡಿ ನಾನು ಮತ್ತು ನಿಮ್ಮ ತಂದೆ ನನ್ನ ಬೈಕಿನಲ್ಲಿ ಹರಿಹರಪುರದಿಂದ ಹೊರಟು ಮಧುಗಿರಿ ಮಾರ್ಗವಾಗಿ ನಮ್ಮ ಊರಾದ ರಂಗನಹಳ್ಳಿಗೆ ಹೋಗಲು ಸಂಜೆ ಸುಮಾರು 07:00 ಗಂಟೆಯ ಸಮಯದಲ್ಲಿ ಹೊಸಕೆರೆ ಗ್ರಾಮದಲ್ಲಿರುವ ಹಾಲಿನ ಡೈರಿಯ ಬಳಿ ಮಧುಗಿರಿ-ಪಾವಗಡ ಮುಖ್ಯ ರಸ್ತೆಯಲ್ಲಿ ರಸ್ತೆಯ ಎಡ ಬದಿಯಲ್ಲಿ ಮಧುಗಿರಿ ಕಡೆಯಿಂದ ಕೆಎ-03-ಹೆಚ್.ಇ-350 ನೇ ಬೈಕಿನಲ್ಲಿ ಬರುತ್ತಿದ್ದಾಗ ಅದೇ ಸಮಯಕ್ಕೆ ಅದೇ ರಸ್ತೆಯಲ್ಲಿ ಪಾವಗಡ ಕಡೆಯಿಂದ ಮಧುಗಿರಿ ಕಡೆಗೆ ಹೋಗಲು ಬಂದ ಒಂದು ಕಾರನ್ನು ಅದರ ಚಾಲಕ ತುಂಬಾ ಸ್ಪೀಡಾಗಿ, ಅಡ್ಡದಿಡ್ಡಿಯಾಗಿ ಓಡಿಸಿಕೊಂಡು ಬಂದು ಕೆಎ-03-ಹೆಚ್.ಇ-350 ನೇ ಬೈಕ್ ನಲ್ಲಿ ಬರುತ್ತಿದ್ದ ನಮಗೆ ಡಿಕ್ಕಿ ಹೊಡೆಸಿ ಅಪಘಾತ ಉಂಟುಮಾಡಿದ್ದರಿಂದ ಬೈಕನ್ನು ಓಡಿಸುತ್ತಿದ್ದ ನನ್ನ ತಲೆಗೆ, ಬೆನ್ನಿಗೆ ಗಾಯಗಳಾಗಿರುತ್ತವೆ, ಬೈಕಿನ ಹಿಂಬದಿಯಲ್ಲಿ ಕುಳಿತಿದ್ದ ನಿಮ್ಮ ತಂದೆ ಕೋಟೆಕಲ್ಲಪ್ಪನವರ ಬಲಗಾಲಿಗೆ ಮತ್ತು ಬಲಗಾಲಿನ ರೊಂಡಿಗೆ ಗಾಯಗಳಾಗಿರುತ್ತವೆ. ನಮಗೆ ಡಿಕ್ಕಿ ಪಡಿಸಿದ ಕಾರಿನ ನಂಬರ್ ನೋಡಲಾಗಿ ಕೆಎ-06-ಎನ್-2898 ಆಗಿರುತ್ತದೆ ಕಾರಿನ ಚಾಲಕ ಕಾರನ್ನು ಸ್ಥಳದಲ್ಲಿಯೇ ಬಿಟ್ಟು ಹೊರಟು ಹೊದನು, ಅಪಘಾತದಿಂದ ನಮ್ಮ ಬೈಕ್ ಮತ್ತು ಕಾರು ಜಖಂ ಆಗಿರುತ್ತವೆ. ನೀನು ಇಲ್ಲಿಗೆ ಬೇಗ ಬಾ ಎಂತ ಹೇಳಿದರು. ಕೂಡಲೇ ನಾನು ನಮ್ಮ ಊರಿನಿಂದ ಅಪಘಾತ ನಡೆದ ಸ್ಥಳಕ್ಕೆ ಬಂದು ನೋಡಲಾಗಿ ವಿಚಾರ ನಿಜವಾಗಿತ್ತು. ನಾನು ಕೂಡಲೇ ಅಪಘಾತದಿಂದ ಗಾಯಗೊಂಡಿದ್ದ ನಮ್ಮ ತಂದೆ ಕೋಟೆಕಲ್ಲಪ್ಪನನ್ನು ಮತ್ತು ನಮ್ಮ ಸಂಬಂಧಿ ರಾಜಣ್ಣನನ್ನು ಯಾವುದೋ ಒಂದು ವಾಹನದಲ್ಲಿ ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿರುತ್ತಾರೆ. ಇಲ್ಲಿಯವರೆಗೆ ನಮ್ಮ ತಂದೆ ಮತ್ತು ರಾಜಣ್ಣನ ಯೋಗಕ್ಷೇಮವನ್ನು ನೋಡಿಕೊಂಡು, ಈ ದಿನ ಅಂದರೆ ದಿ:17/05/2018 ರಂದು ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು, ದಿನಾಂಕ:14/05/2018 ರಂದು ಸಂಜೆ ಸುಮಾರು 07:00 ಗಂಟೆಯ ಸಮಯದಲ್ಲಿ ನಮ್ಮ ತಂದೆ ಮತ್ತು ರಾಜಣ್ಣ ಬರುತ್ತಿದ್ದ ಕೆಎ-03-ಹೆಚ್.ಇ-350 ನೇ ಬೈಕಿಗೆ ಎದುರುಗಡೆಯಿಂದ ಡಿಕ್ಕಿ ಹೊಡೆಸಿ ಅಪಘಾತಪಡಿಸಿರುವ ಕೆಎ-06-ಎನ್-2898 ನೇ ಕಾರಿನ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ತಮ್ಮಲ್ಲಿ ಕೋರಿಕೊಳ್ಳುತ್ತೇನೆ, ಅಪಘಾತಕ್ಕೆ ಸಂಬಂಧಿಸಿದ ಮೇಲ್ಕಂಡ ಕಾರು ಮತ್ತು ಬೈಕ್ ಅಪಘಾತ ನಡೆದ ಸ್ಥಳದಲ್ಲಿ ರಸ್ತೆಯ ಬದಿಯಲ್ಲಿ ಇರುತ್ತವೆ ಎಂತಾ ನೀಡಿದ ಪಿರ್ಯಾದು ಅಂಶವಾಗಿರುತ್ತೆ.

ಹುಳಿಯಾರು ಪೊಲೀಸ್ ಠಾಣಾ ಯು.ಡಿ.ನಂ 08/2018, ಕಲಂ: 174 ಸಿ.ಆರ್.ಪಿ.ಸಿ.

ದಿನಾಂಕ:-17/05/2018 ರಂದು ಬೆಳಿಗ್ಗೆ 08-30 ಗಂಟೆಗೆ ಪಿರ್ಯಾದುದಾರರಾದ ರವಿರಾಜ್ ಬಿನ್ ವರದರಾಜು, ಹೊನ್ನಯ್ಯನಹಟ್ಟಿ, ಸೋಮನಹಳ್ಳಿ ಮಜರೆ, ಹುಳಿಯಾರು ಹೋಬಳಿ, ಚಿಕ್ಕನಾಯಕನಹಳ್ಳಿ ತಾಲ್ಲೂಕು ಇವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ನಮ್ಮ ತಂದೆ ವರದರಾಜು, 54 ವರ್ಷ ಇವರು ವ್ಯವಸಾಯ ಮಾಡಿಕೊಂಡು ಜೀವನ ನಡೆಸುತ್ತಿದ್ದು, ಇವರಿಗೆ ಈಗ್ಗೆ 5-6 ತಿಂಗಳುಗಳಿಂದ ಹೊಟ್ಟೆನೋವು ಬರುತ್ತಿದ್ದು, ಹಲವಾರು ಆಸ್ಪತ್ರೆಗೆ ತೋರಿಸಿದರೂ ಹೊಟ್ಟೆನೋವು ಗುಣಮುಖವಾಗದೇ ಇದ್ದುದರಿಂದ ಮದ್ಯಪಾನ ಮಾಡುವ ಹವ್ಯಾಸವನ್ನು ರೂಡಿಸಿಕೊಂಡಿದ್ದು, ದಿನಾಂಕ 16/05/2018 ರಂದು ಮಧ್ಯಪಾನ ಮಾಡಿ ಸಂಜೆ ಸುಮಾರು 05-45 ಗಂಟೆ ಸಮಯದಲ್ಲಿ ನಮ್ಮ ಮನೆಯ ಹಿಂಭಾಗ ದನದ ಕೊಟ್ಟಿಗೆಯಲ್ಲಿ ನಮ್ಮ ತಂದೆ ವರದರಾಜುರವರು ಹೊಟ್ಟೆನೋವನ್ನು ತಾಳಲಾರದೆ ಮದ್ಯಪಾನದ ಜೊತೆ ಯಾವುದೋ ವಿಷವನ್ನು ಸೇವಿಸಿದ್ದು, ಇದನ್ನು ನೋಡಿದ ನಮ್ಮ ತಾಯಿ ಶಿವಮ್ಮ, ನಮ್ಮ ಚಿಕ್ಕಪ್ಪ ಕರಿಯಪ್ಪರವರು ಬೈಕಿನಲ್ಲಿ ಹುಳಿಯಾರು ಸರ್ಕಾರಿ ಆಸ್ಪತ್ರೆಗೆ ಬರುವಾಗ ಮಾರ್ಗಮದ್ಯೆ ಸುಮಾರು 06-30 ಗಂಟೆ ಸಮಯದಲ್ಲಿ ನಮ್ಮ ತಂದೆ ಮೃತಪಟ್ಟಿದ್ದಾರೆ ಎಂದು ನಮ್ಮ ತಾಯಿ ಶಿವಮ್ಮ ನಮಗೆ ತಿಳಿಸಿದರು. ನಂತರ ನಮ್ಮ ತಂದೆಯ ಶವವನ್ನು ಹುಳಿಯಾರು ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇಟ್ಟಿರುವುದಾಗಿ ತಿಳಿಸಿದ್ದು, ಈ ವಿಚಾರವನ್ನು ನಮ್ಮ ಸಂಬಂಧಿಕರಿಗೆ ತಿಳಿಸಿ ರಾತ್ರಿಯಾಗಿದ್ದರಿಂದ  ದಿನ ತಡವಾಗಿ ಠಾಣೆಗೆ ಬಂದು ಮೃತಪಟ್ಟಿರುವ ನಮ್ಮ ತಂದೆಯ ಅಂತ್ಯಕ್ರಿಯೆ ಮಾಡಲು ಮುಂದಿನ ಕ್ರಮ ಕೈಗೊಳ್ಳಬೇಕೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಯು.ಡಿ.ಆರ್ ದಾಖಲಿಸಿರುತ್ತೆ.Thursday, 17 May 2018

ಅಪರಾಧ ಘಟನೆಗಳು 17-05-18

ಹೊನ್ನವಳ್ಳಿ ಪೊಲೀಸ್‌  ಠಾಣೆ ಯು,ಡಿ,ಆರ್ ನಂ-11/2018 ಕಲಂ 174 (ಸಿ)ಸಿ,ಆರ್,ಪಿ,ಸಿ

ದಿನಾಂಕ:16.05.2018 ರಂದು  ರಾತ್ರಿ 10-00  ಗಂಟೆಗೆ  ತಿಪಟೂರು ತಾ: ಹೊನ್ನವಳ್ಳಿ ಹೋಬಳಿ, ಹೆಚ್‌. ಭೈರಾಪುರ ಗ್ರಾಮದ   ವಾಸಿ  ತಿಮ್ಮಯ್ಯ ಬಿನ್‌‌ ಲೇ|| ಗಿರಿಯಪ್ಪ  ಸುಮಾರು 60 ವರ್ಷ ಉಪ್ಪಾರ  ಜನಾಂಗ ಆದ ನಾನು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೆನೆಂದರೆ. ನನ್ನ ಮಗಳಾದ ಸಾವಿತ್ರಮ್ಮ ಎಂಬುವರನ್ನು ಈಗ್ಗೆ 5 ವರ್ಷಗಳ ಹಿಂದ ಹೊಸಪಟ್ಟಣದ ಲೇ|| ಗಂಗಣ್ಣನ ಮಗನಾದ ಹೊನ್ನಪ್ಪನವರಿಗೆ ಮದುವೆ ಮಾಡಿರುತ್ತೇನೆ  ಅವರಿಗೆ ಇಲ್ಲಿಯವರೆಗೆ ಮಕ್ಕಳಿರಲಿಲ್ಲಾ ಈಗ್ಗೆ 5 ತಿಂಗಳಿಂದ ನನ್ನ ಮಗಳು ಗರ್ಭಿಣಿಯಾಗಿದ್ದು ಆಕೆಯ ಗಂಡನಾದ ಹೊನ್ನಪ್ಪ ಹೊನ್ನವಳ್ಳಿ ಮತ್ತು ತಿಪಟೂರು ಆಸ್ಪತ್ರೆಗೆ ತೋರಿಸುತ್ತಿದ್ದು ಈ ದಿನ  ದಿನಾಂಕ 16-05-2018 ರಂದು ಸಂಜೆ 6-00 ಗಂಟೆಯಲ್ಲಿ ನಾನು ಊರಿನಲ್ಲಿದ್ದಾಗ ನನ್ನ ಅಳಿಯ ನಮ್ಮ ಗ್ರಾಮದ ಕೃಷ್ಣಪ್ಪನವರಿಗೆ ಫೋನ್‌ ಮಾಡಿ ಸಾವಿತ್ರಮ್ಮನಿಗೆ ಜ್ವರ ಬಂದಿದ್ದು ತಿಪಟೂರು ಸರ್ಕಾರಿ ಆಸ್ಪತ್ರೆ ಕರೆದುಕೊಂಡು ಬಂದಿದ್ದೇನೆ ಎಂದು ತಿಳಿಸಿದರು. ನಾನು ಜ್ವರ ತಾನೇ ಹೋಗೊಣ ಎಂದು ಇದ್ದೆ ನಂತರ ರಾತ್ರಿ 8-00 ಗಂಟೆಗೆ  ನನ್ನ ಅಳಿಯ ನಮ್ಮ ಗ್ರಾಮದ ಮಂಜಣ್ಣನಿಗೆ ಫೋನ್ ಸಾವಿತ್ರಮ್ಮ ಸತ್ತು ಹೋಗಿರುತ್ತಾಳೆ, ಆಸ್ಪತ್ರೆಗೆ ಬನ್ನಿ ಎಂದು ತಿಳಿಸಿದಳು ಆಗ ನಾನು ತಿಪಟೂರು ಸರ್ಕಾರಿ ಆಸ್ಪತ್ರೆಗೆ 9-00 ಗಂಟೆಗೆ ಬಂದು ನೋಡಲಾಗಿ ನನ್ನ ಮಗಳು ಸತ್ತುಹೋಗಿದ್ದಳು. ನನ್ನ ಮಗಳು ಗರ್ಭಿಣಿಯಾಗಿದ್ದು, ಆಗಾಗ್ಗೆ ಜ್ವರ ಬರುತ್ತಿದ್ದು ಆಸ್ಪತ್ರೆಗೆ ತೋರಿಸುತ್ತಿದ್ದರು, ಸಹ ಜ್ವರ ವಾಸಿಯಾಗದೆ ಅನಾರೋಗ್ಯದಿಂದ ಮೃತಪಟ್ಟಿರುತ್ತಾಳೆ, ನನ್ನ ಮಗಳ  ಮರಣದ ವಿಚಾರದಲ್ಲಿ ನನಗೆ ಅನುಮಾನವಿರುತ್ತೆ. ಆದ್ದರಿಂದ ಸಾವಿತ್ರಮ್ಮ ಮೃತಪಟ್ಟಿರುವ ಬಗ್ಗೆ ಮುಂದಿನ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಮ್ಮಲ್ಲಿ ಕೋರುತ್ತೇನೆ. ಎಂದು ನೀಡಿದ ಪಿರ್ಯಾದಿಯನ್ನು  ಪಡೆದು  ಪ್ರಕರಣ ದಾಖಲಿಸಿರುತ್ತೇನೆ,

 


Page 1 of 3
Start
Prev
1

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 54 guests online
Content View Hits : 272929