lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿ 19.04.18 ಪೊಲೀಸ್ ಇಲಾಖೆಯು ಈ ಮೂಲಕ ಸಾರ್ವಜನಿಕರಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ: 15-05-2018 ರಂದು ತುಮಕೂರು ನಗರದ ವಿಶ್ವವಿದ್ಯಾನಿಲಯ ಕಲಾ... >>     ಪತ್ರಿಕಾ ಪ್ರಕಟಣೆ. ದಿನಾಂಕ: 10-05-2018 8 ಲಕ್ಷ ಬೆಲೆ ಬಾಳುವ ಮೊಬೈಲ್ ಮತ್ತು  ವಾಹನ ಕಳ್ಳರ... >> ಪತ್ರಿಕಾ ಪ್ರಕರಣೆ, ದಿನಾಂಕ: 07-05-18 ವಾರಸುದಾರರಿಲ್ಲದ 2,98,01,000/- ರೂ  ಹಣ ಪತ್ತೆ     ದಿನಾಂಕ:... >> ಪತ್ರಿಕಾ ಪ್ರಕಟಣೆ:- -:ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿಯ ಬಂಧನ:- ದಿನಾಂಕ :... >> ಪತ್ರಿಕಾ ಪ್ರಕಟಣೆ ದಿಃ25-04-2018. ದಿನಾಂಕ:24-04-2018 ರ ರಾತ್ರಿ 3 ಜನ ಅನುಮಾನಸ್ಪದ ವ್ಯಕ್ತಿಗಳು... >> ಪತ್ರಿಕಾ ಪ್ರಕಟಣೆ ದಿನಾಂಕ: 21-04-2018. ಕೊಲೆ ಆರೋಪಿಯ ಬಂಧನ:   ಹೆಬ್ಬೂರು ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 17.04.2018 ತುಮಕೂರು ಜಿಲ್ಲಾ ಪೊಲೀಸರ ಭರ್ಜರಿ ಬೇಟೆ: 65 ಕೆ.ಜಿ.... >> : ಪತ್ರಿಕಾ ಪ್ರಕಟಣೆ : ದಿನಾಂಕ:- 16-04-2018 ದಿನಾಂಕ;- 14-04-18 ರಂದು ರಾತ್ರಿ  2018 ರ ವಿಧಾನಸಭಾ... >> -: ಪತ್ರಿಕಾ ಪ್ರಕಟಣೆ :- ಈ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡುವುದೇನೆಂದರೆ,... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< May 2018 >
Mo Tu We Th Fr Sa Su
  1 2 3 4 5 6
7 8 9 11 12 13
14 15 16 17 18 19 20
21 22 23 24 25 26 27
28 29 30 31      
Thursday, 10 May 2018
Press Note 10-05-18

 

 

ಪತ್ರಿಕಾ ಪ್ರಕಟಣೆ.

ದಿನಾಂಕ: 10-05-2018

8 ಲಕ್ಷ ಬೆಲೆ ಬಾಳುವ ಮೊಬೈಲ್ ಮತ್ತು  ವಾಹನ ಕಳ್ಳರ ಬಂಧನ

ತುಮಕೂರು ನಗರದ ವಿವಿಧ ಬಡಾವಣೆಗಳಲ್ಲಿ  ಸರಗಳ್ಳತನ, ವಾಹನ ಮತ್ತು ಮೊಬೈಲ್ ಕಳ್ಳತನ ಆಗುತ್ತಿದ್ದು  ಈ ಸಂಬಂದ ತಿಲಕ್ ಪಾಕರ್್ ಪೊಲೀಸ್ ಠಾಣೆ ಮೊ ನಂ 66/2018 ಕಲಂ 379 ಐ ಪಿ ಸಿ,  ಜಯ ನಗರ ಪೊಲೀಸ್  ಠಾಣೆ ಮೊ ನಂ 159/2017 ಕಲಂ 392 ಐ ಪಿ ಸಿ , ಮೊ ನಂ 169/2017 ಕಲಂ 392 ಐ ಪಿ ಸಿ  ಮತ್ತು  ಹೊಸ ಬಡಾವಣೆ ಪೊಲೀಸ್  ಠಾಣೆ     ಮೊ ನಂ 157/2017 ಕಲಂ 392 ,34 ಐ ಪಿ ಸಿ ರೀತ್ಯ ಪ್ರಕರಣ ಧಾಖಲಾಗಿರುತ್ತೆ.

ವಿಚಾರಣೆ ಕಾಲದಲ್ಲಿ ಆರೋಪಿಗಳಿಂದ ತಿಲಕ್ ಪಾಕರ್್ ಪೊಲೀಸ್ ಠಾಣಾ ಸರಹದ್ದು  ಮತ್ತು ಜಯನಗರ ಪೊಲೀಸ್ ಠಾಣಾ ಸರಹದ್ದಾದ ಮಾರುತಿ ನಗರ ಹಾಗೂ ಹೊಸ ಬಡಾವಣೆ ಪೊಲೀಸ್ ಠಾಣಾ ಸರಹದ್ದಾದ ಮಹಾಲಕ್ಷ್ಮಿ ನಗರ ಹಾಗೂ ವಿವಿಧ ಕಡೆಗಳಲ್ಲಿ  4,26,000/-ರೂ ಬೆಲೆ ಬಾಳುವ 1)ಒಂದು ಚಿನ್ನದ ಮಾಂಗಲ್ಯ ತೂಕ 37 ಗ್ರಾಂ, 2)ಒಂದು  ಚಿನ್ನದ ಸರ 40 ಗ್ರಾಂ ತೂಕ  3)ಒಂದು ಎರಡು ಎಳೆಯ ಚಿನ್ನದ ಮಾಂಗಲ್ಯ ಸರ ತೂಕ 65 ಗ್ರಾಂ ವಡವೆಯನ್ನು ಮತ್ತು ಸುಮಾರು 2,55,000/-ರೂ ಬೆಲೆ ಬಾಳುವ 06 ದ್ವಿಚಕ್ರ ವಾಹನಗಳು ಹಾಗೂ ಸುಮಾರು 1,25,000/- ರೂ  ಬೆಲೆ ಬಾಳುವ 12 ವಿವಿಧ ಕಂಪನಿಯ ಮೊಬೈಲ್ ಪೋನ್ಗಳನ್ನು  ವಶಪಡಿಸಿಕೊಳ್ಳಲಾಗಿರುತ್ತೆ. ಈ ಕೇಸುಗಳ ಆರೋಪಿತರಾದ 1)ಸೋಮೇಶ್ವರ ರೇವಣಕರ್ @ ಸೂರ್ಯ ಬಿನ್ ಲೇಟ್ ಆನಂದಮೂತರ್ಿ ರೇವಣಕರ್, ಪುರದ ಓಣಿ, ಹಾವೇರಿ 2) ಸ್ಟೀಫನ್ @ ರಾಕೇಶ್ ಬಿನ್ ಲೇಟ್ ಬಾಲಾಜಿ, ಪಟಾಲಮ್ಮ ದೇವಸ್ಥಾನದ ಪಕ್ಕ, ಕೆಲಮಂಗಲ, ಹೊಸೂರು ತಾಲ್ಲಾಕು, ಕೃಷ್ಣಗಿರಿ ಜಿಲ್ಲೆ, ತಮಿಳುನಾಡು 3)ಶರತ್ ಕಾರಂತ್ @ ರಾಜೇಶ್ ಬಿನ್ ಶ್ರೀಕಾಂತ್  ಕಾರಂತ್, ಕಲಾಮಂದಿರ ರಸ್ತೆ, ಗದಗ 4)ಮುಬಾರಕ್ ಷಫೀವುಲ್ಲಾ @ ಷಫಿ ಬಿನ್ ಸೈಯದ್ ಜಾಫರ್, 4 ನೇ ಕ್ರಾಸ್, ಪಿ.ಹೆಚ್.ಕಾಲೋನಿ, ತುಮಕೂರು  5)ವಿನೋಧ ಬಿನ್ ಲೇಟ್ ಭೀಮಣ್ಣ, ಜಾಲಹಳ್ಳಿ, ದೇವದುರ್ಗ ತಾಲ್ಲೂಕು, ರಾಯಚೂರು ಜಿಲ್ಲೆ ಎಂಬುವರನ್ನು ಪತ್ತೆ ಮಾಡಿ, ದಸ್ತಗಿರಿ ಮಾಡಲಾಗಿರುತ್ತೆ.

ಈ ಪ್ರಕರಣವನ್ನು ಪತ್ತೆ ಮಾಡಲು ಎಸ್ಪಿ ಡಾ|| ದಿವ್ಯಾ,ವಿ,ಗೋಪಿನಾಥ್ ಐ.ಪಿ.ಎಸ್ ರವರ ನಿದರ್ೇಶನದಲ್ಲಿ, ಹೆಚ್ಚುವರಿ ಎಸ್ಪಿ ಡಾ|| ಶೋಭಾರಾಣಿ ರವರು .ತುಮಕೂರು ನಗರ ಡಿಎಸ್ಪಿ ಕೆ.ಎಸ್ ನಾಗರಾಜು ರವರ ಮಾರ್ಗದರ್ಶನದಲ್ಲಿ, ತಿಲಕ್ಪಾಕರ್್ ವೃತ್ತ ನಿರೀಕ್ಷಕರಾದ ರಾಧಾಕೃಷ್ಣ.ಟಿ.ಎಸ್. ರವರ ನೇತೃತ್ವದ ತಂಡದವರಾದ ಪಿಎಸ್ಐ ಲಕ್ಷ್ಮಯ್ಯ.ಎಂ.ಬಿ. ,ಸಿಬ್ಬಂದಿಗಳಾದ, ಎಂ.ಆರ್. ಸತ್ಯನಾರಾಯಣ,  ಶಾಂತರಾಜು,ಎ ಮಂಜುನಾಥ್ ಪ್ರಸನ್ನ ಕುಮಾರ್, ಈರಣ್ಣ ಜೆ , ರಘು ಎಸ್ ಆರ್, ಜಿಲ್ಲಾ ಪೊಲೀಸ್ ಕಛೇರಿಯ ನರಸಿಂಹರಾಜು  ರವರುಗಳು ಪತ್ತೆಗೆ  ಶ್ರಮಿಸಿರುತ್ತಾರೆ. ಜಿಲ್ಲಾ ಪೊಲೀಸ್ ಅಧೀಕ್ಷಕರು ಆರೋಪಿ ಹಾಗೂ ಮಾಲು ಪತ್ತೆಗಾಗಿ ಶ್ರಮಿಸಿದ ಅಧಿಕಾರಿ ಮತ್ತು ಸಿಬ್ಬಂದಿಯವರನ್ನು ಅಭಿನಂದಿಸಿರುತ್ತಾರೆ.

ಜಿಲ್ಲಾ ಪೊಲೀಸ್ ಕಛೇರಿ

ತುಮಕೂರು.

 


ಅಪರಾಧ ಘಟನೆಗಳು 10-05-18

ಹುಲಿಯೂರುದುರ್ಗ ಪೊಲೀಸ್‌ ಠಾಣಾ ಮೊ.ನಂ. 117/2018, ಕಲಂ: 323 324 504 506  ಐಪಿಸಿ

ದಿನಾಂಕ: 09/05/2018 ರಂದು ಮದ್ಯಾಹ್ನ 12-10 ಗಂಟೆಗೆ ಪಾರ್ವತಮ್ಮ ಕೋಂ ರಮೇಶ, ಹಾಲಗೆರೆ, ಅಮೃತೂರು ಹೋಬಳಿ, ಕುಣಿಗಲ್ ತಾಲ್ಲೋಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ದಿನಾಂಕ: 07/05/2018 ರಂದು ಸಂಜೆ 07-00 ಗಂಟೆ ಸಮಯದಲ್ಲಿ ಪಿರ್ಯಾದಿಯು ಅವರ ಮನೆಯಲ್ಲಿರುವಾಗ್ಗೆ ಪಿರ್ಯಾದಿಯ ನಾದಿನಿಯಾದ ಹಾಲಗೆರೆ ಗ್ರಾಮದ ವಾಸಿಯಾದ ಸುಜಾತ ಕೋಂ ಹುಚ್ಚಪ್ಪ ರವರು ಏಕಾಏಕಿ ಬಂದು “ ನನ್ನ ತಾಯಿತಂದೆಯನ್ನು ಯಾಕೆ ಬೈಯ್ಯುತ್ತೀಯಾ”  ಎಂದು ತಲೆಜುಟ್ಟು ಹಿಡಿದು ಎಳೆದಾಡಿ ಕೆಳಕ್ಕೆ ಕೆಡವಿಕೊಂಡು ಕಲ್ಲಿನಿಂದ ಪಿರ್ಯಾದಿಯ ಮುಖಕ್ಕೆ, ತಲೆಗೆ, ಕೈಗಳಿಗೆ ಹೊಡೆದು ಗಾಯಪಡಿಸಿ, ಕಳ್ಳಮುಂಡೆ, ಸೂಳೆ ಮುಂಡೆ ಎಂತ ಅವಾಚ್ಯ ಶಬ್ದಗಳಿಂದ ಬೈದು, ಕೊಲೆ ಮಾಡಿಸುತ್ತೇನೆಂತ ಪ್ರಾಣ ಬೆದರಿಕೆ ಹಾಕಿರುತ್ತಾರೆ. ಆಗ ಪಿರ್ಯಾದಿಯ ಗಂಡ ರಮೇಶ, ಮತ್ತು ಚಿಕ್ಕಗಂಗಮ್ಮ ಕೋಂ ಶ್ರೀನಿವಾಸಯ್ಯ ಎಂಬುವವರು ಬಂದು ಜಗಳ ಬಿಡಿಸಿರುತ್ತಾರೆ. ನಂತರ ಪಿರ್ಯಾದಿಯು ಹುಲಿಯೂರುದುರ್ಗ ಸರ್ಕಾರಿ ಆಸ್ಪತ್ರೆಗೆ ಬಂದು ಪ್ರಥಮ ಚಿಕಿತ್ಸೆ ಪಡೆದು ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡಿರುತ್ತಾರೆ. ಆದ್ದರಿಂದ ಮೇಲ್ಕಂಡ  ಸುಜಾತ ಕೋಂ ಹುಚ್ಚಪ್ಪ ರವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿರುತ್ತೆ.

ಹೆಬ್ಬೂರು ಠಾಣಾ ಮೊ ನಂ 113/2018 ಕಲಂ 279,304(ಎ) ಐಪಿಸಿ.

ದಿನಾಂಕ-09/05/2018 ರಂದು ಮಧ್ಯಾಹ್ನ 1-30 ಗಂಟೆಗೆ ಪಿರ್ಯಾದಿಯಾದ ಕೃಷ್ಣಪ್ಪ ಬಿನ್ ಲೇ|| ಗಂಗಪ್ಪ, 50 ವರ್ಷ, ಕುರುಬ ಜನಾಂಗ, ಕೂಲಿ ಕೆಲಸ, 6 ನೇಕ್ರಾಸ್‌‌, ಸದಾಶಿವನಗರ, ತುಮಕೂರು ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂಧರೆ ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ನನ್ನ ಮಗನಾದ ಸುಮಾರು 28 ವರ್ಷ ವಯಸ್ಸಿನ ಪುನೀತ್‌ @ ದೀಪು ರವರು ದಿನಾಂಕ 08-05-2018 ರಂದು ಬೆಳಿಗ್ಗೆ ತುಮಕೂರಿನಿಂದ ತನ್ನ ಅತ್ತೆ ಮಾವನ ಮನೆಯಾದ ಹೆಬ್ಬೂರು ಹೋಬಳಿ ಜಲ್ಲಿಪಾಳ್ಯ ಗ್ರಾಮಕ್ಕೆ ಹೋಗಿ ಬರಲೆಂದು ತನ್ನ ಸ್ನೇಹಿತನ ಬಾಬ್ತು ಕೆಎ-06-ಇ,ಎನ್‌‌-7931 ನೇ ದ್ವಿಚಕ್ರ ವಾಹನದಲ್ಲಿ ಹೋಗಿದ್ದು, ನಂತರ ಅದೇ ದಿವಸ ತುಮಕೂರಿನ ವಾಸಿಯಾದ ನಾಗರಾಜು ಎಂಬುವರು ನನಗೆ ಪೋನ್‌ ಮಾಡಿ ಮಧ್ಯಾಹ್ನ ಸುಮಾರು 12-00 ಗಂಟೆ ಸಮಯದಲ್ಲಿ ನಿಮ್ಮ ಮಗ ಪುನೀತ್‌ @ ದೀಪು ರವರು ಕೆಎ-06-ಇ,ಎನ್‌‌-7931 ನೇ ದ್ವಿಚಕ್ರ ವಾಹನದಲ್ಲಿ ಹೆಬ್ಬೂರು ಕಡೆಯಿಂದ ಜಲ್ಲಿಪಾಳ್ಯದ ಕಡೆಗೆ ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ರಸ್ತೆಯ ಎಡಭಾಗಕ್ಕೆ ಬಂದು ರಸ್ತೆಯ ಎಡಭಾಗದಲ್ಲಿದ್ದ ಒಂದು ಕೆ,ಇ,ಬಿ ಕಂಬಕ್ಕೆ ಡಿಕ್ಕಿ ಹೊಡಿಸಿ ಅಪಘಾತಪಡಿಸಿದ್ದು, ಪರಿಣಾಮವಾಗಿ ಪುನೀತ್‌ @ ದೀಪು ರವರಿಗೆ ತಲೆಗೆ  ಕುತ್ತಿಗೆಯ ಭಾಗಕ್ಕೆ ಏಟು ಬಿದ್ದು ತೀವ್ರತರವಾದ ಗಾಯಗಳಾಗಿದ್ದು, ನಾನು ಸಾರ್ವಜನಿಕರ ಸಹಾಯದಿಂದ ತುಮಕೂರಿಗೆ ಕರೆದುಕೊಂಡು ಬರುತ್ತಿದ್ದೇನೆ ಎಂತಾ ತಿಳಿಸಿದರು. ನಂತರ ನಾನು ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಬಳಿ ಹೋಗಿ ನೋಡಲಾಗಿ ನನ್ನ ಮಗ ಪುನೀತ್‌ @ ದೀಪು ರವರಿಗೆ ಅಪಘಾತವಾಗಿ ಗಾಯಗಳಾಗಿರುವುದು ನಿಜವಾಗಿತ್ತು. ನಂತರ ನಾನು ಜಿಲ್ಲಾ ಆಸ್ಪತ್ರೆಯ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆದುಕೊಂಡು ಹೋಗುತ್ತಿರುವಾಗ್ಗೆ, ಮಾರ್ಗಮಧ್ಯೆ ಬೆಂಗಳೂರಿನ ಯಶವಂತಪುರದ ಬಳಿ ಸಾಯಂಕಾಲ ಸುಮಾರು 05-00 ಗಂಟೆ ಸಮಯದಲ್ಲಿ ನನ್ನ ಮಗ ಪುನೀತ್‌ @ ದೀಪು ರವರು ಮೃತಪಟ್ಟಿರುತ್ತಾರೆ. ನಾನು ಸದರಿ ವಿಚಾರವನ್ನು ನನ್ನ ಸಂಬಂಧಿಕರಿಗೆ ತಿಳಿಸಿ ಈ ದಿವಸ ತಡವಾಗಿ ಬಂದು ಕಾನೂನು ರೀತ್ಯ ಮುಂದಿನ ಕ್ರಮ ಜರುಗಿಸಬೇಕೆಂದು ದೂರು ನೀಡುತ್ತಿದ್ದೇನೆ. ಅಪಘಾತಪಡಿಸಿದ ದ್ವಿಚಕ್ರ ವಾಹನ ಜಲ್ಲಿಪಾಳ್ಯ ಗ್ರಾಮದ ವೆಂಕಟೇಶ್‌ ರವರ ಮನೆಯ ಬಳಿ ನಿಲ್ಲಿಸಿರುತ್ತೆ. ನನ್ನ ಮಗ ಪುನೀತ್‌ @ ದೀಪು ರವರ ಮೃತ ದೇಹವು ತುಮಕೂರು ಜಿಲ್ಲಾ ಆಸ್ಪತ್ರೆಯ ಶವಗಾರದಲ್ಲಿರುತ್ತೆ ಎಂತಾ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

ಪಟ್ಟನಾಯಕನಹಳ್ಳಿ ಪೊಲೀಸ್ ಠಾಣಾ ಮೊ ನಂ 47-18 ಕಲಂ 79,337 ಐಪಿಸಿ

ದಿನಾಂಕ:10/05/2018 ರಂದು ಮಧ್ಯಾಹ್ನ 12:30 ಗಂಟೆಗೆ ಪಿರ್ಯಾದಿ ಧನುಂಜಯ ಬಿನ್ ರಾಜಣ್ಣ, ವೀರಗಾನಹಳ್ಳಿ ಗ್ರಾಮ,ಸಿರಾ ತಾಲ್ಲೂಕ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನಂದರೆ, ದಿನಾಂಕ:03/05/2018 ರಂದು ಮಧ್ಯಾಹ್ನ12:15 ಗಂಟೆ ಸಮಯದಲ್ಲಿ ಪಿರ್ಯಾದಿರವರು ಮನೆಯಲ್ಲಿದ್ದಾಗ ಈಶ್ವರ್ ರವರು ಪಿರ್ಯಾದಿರವರಿಗೆ ದೂರವಾಣಿ ಕರೆ ಮಾಡಿ ವೀರಗಾನಹಳ್ಳಿಯ ಫ್ಲೋರ್ ಮಿಲ್ ಬೀರಣ್ಣ ರವರ ಮನೆಯ ಮುಂಭಾಗ ಮಧ್ಯಾಹ್ನ 12:00 ಗಂಟೆಗೆ ಅಪಘಾತವಾಗಿರುತ್ತೆ ಎಂತಾ ತಿಳಿಸಿದ್ದು ನಾನು ಕೂಡಲೇ ಸ್ಥಳಕ್ಕೆ ಬಂದು ವಿಚಾರವನ್ನು ತಿಳಿಯಲಾಗಿ ಇದೇ ದಿನ ಪಿರ್ಯಾದಿ ತಮ್ಮನಾದ ಈಶ್ವರ ಮತ್ತು ಆತನ ಚಿಕ್ಕಪ್ಪನಾದ ಭೂತಣ್ಣ ಬಿನ್ ಪರಸಪ್ಪರವರು KA-04-HT-0897 ನೇ ಮೋಟಾರ್ ಸೈಕಲ್ ನಲ್ಲಿ ಭೂತಣ್ಣರವರು ಬೈಕ್ ಚಾಲನೆ ಮಾಡಿಕೊಂಡು ಈಶ್ವರ್ ರವರು ಬೈಕ್ ನ ಹಿಂಬದಿಯಲ್ಲಿ ಕುಳಿತುಕೊಂಡು ಶಿರಾಕ್ಕೆ ಹೋಗಿ ವಾಪಸ್ ಊರಿಗೆ ಬರಲು ಸಿರಾ-ವೀರಗಾನಹಳ್ಳಿ ರಸ್ತೆಯಲ್ಲಿ ಬರುತ್ತಿರುವಾಗ ಬೈಕ್ ಚಾಲನೆ ಮಾಡುತ್ತಿದ್ದ ಭೂತಣ್ಣರವರು ಬೈಕ್ ನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಬೀರಣ್ಣರವರ ಫ್ಲೋರ್ ಮಿಲ್ ಮುಂಭಾಗ ರಸ್ತೆಯಲ್ಲಿ ಹೋಗುತ್ತಿದ್ದ ಎಮ್ಮೆಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಿ ಆಯತಪ್ಪಿ ಕೆಳಗಡೆ ಬಿದ್ದು ಸೈಕಲ್ ಹಿಂಭಾಗ ಕುಳಿತಿದ್ದ ಈಶ್ವರ್ ರವರಿಗೆ ಎಡಗಾಲು ಮತ್ತು ಕೈಗಳಿಗೆ ಪೆಟ್ಟುಗಳು ಬಿದ್ದಿದ್ದು ಅಪಘಾತಪಡಿಸಿದ  ಮೇಲ್ಕಂಡ  ಬೈಕ್ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ನೀಡಿದ ಲಿಖಿತ ದೂರನ್ನು ಪಡೆದು  ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

ತುಮಕೂರು ನಗರ ಪೊಲೀಸ್‌ ಠಾಣಾ  ಮೊ.ನಂ. 138/2018 ಕಲಂ ಹುಡುಗಿ ಕಾಣೆಯಾಗಿದ್ದಾಳೆ.

ದಿನಾಂಕ:09/05/2018 ರಂದು ಮಧ್ಯಾಹ್ನ 3-00 ಗಂಟೆಗೆ ಪಿರ್ಯಾದಿ ಠಾಣೆಗೆ ಹಾಜರಗಿ ನೀಡಿದ ದೂರಿನ ಅಂಶವೇನೆಂದರೆ  ನನಗೆ  ಇಬ್ಬರು ಹೆಣ್ಣು ಮಕ್ಕಳಿರುತ್ತಾರೆ. ನನ್ನ ಗಂಡ ಈಗ್ಗೆ 13 ವರ್ಷಗಳ ಹಿಂದೆ ಮೃತಪಟ್ಟಿರುತ್ತಾರೆ. ನನ್ನ ಹಿರಿಯ ಮಗಳಿಗೆ ಮದುವೆ ಮಾಡಿಕೊಟ್ಟಿರುತ್ತೇನೆ. ಎರಡನೇ ಮಗಳಾದ ಪಂಚಮಿ.ಎನ್. ಎಸ್.ಎಸ್.ಎಲ್.ಸಿ. ವ್ಯಾಸಂಗ ಮಾಡುತ್ತಿದ್ದು, ಪರೀಕ್ಷೆ ಬರೆದಿದ್ದಳು. ದಿನಾಂಕ:07/05/2018 ರಂದು  ಎಸ್.ಎಸ್.ಎಲ್.ಸಿ. ಫಲಿತಾಂಶ ಬಂದಿದ್ದು, ನನ್ನ ಮಗಳು ಎಸ್.ಎಸ್.ಎಲ್.ಸಿ.ಯಲ್ಲಿ ಅನುತ್ತೀರ್ಣಳಾಗಿದ್ದಳು. ಆಗಾಗಿ ಮನಸ್ಸಿಗೆ ಬೇಸರ ಮಾಡಿಕೊಂಡಿದ್ದಳು. ದಿನಾಂಕ:08/05/2018 ರಂದು ರಾತ್ರಿ 8-00 ಗಂಟೆಯಲ್ಲಿ ನನ್ನ ಮಗಳು ಸ್ನೇಹಿತೆಯ ಮನೆಗೆ ಹೋಗಿ ಬರುತ್ತೇನೆಂದು ಹೇಳಿ ಹೋದವಳು ರಾತ್ರಿ  ಎಷ್ಟೋತ್ತು ಆದರೂ ವಾಪಸ್ ಮನೆಗೆ ಬರಲಿಲ್ಲ. ನಾವು ನಮ್ಮ ಸಂಬಂಧಿಕರುಗಳ, ಅವಳ ಸ್ನೇಹಿತರ ಮನೆಗಳಲ್ಲಿ ವಿಚಾರಿಸಿದರು ನನ್ನ ಮಗಳು  ಪತ್ತೆಯಾಗಿರುವುದಿಲ್ಲ. ನನ್ನ ಮಗಳಿಗೆ ಸುಮಾರು 18 ವರ್ಷ ವಯಸ್ಸಾಗಿದ್ದು, ಕನ್ನಡ ಭಾಷೆ ಮಾಡನಾಡುತ್ತಾರೆ. ಸುಮಾರು 5 ಅಡಿ ಎತ್ತರ ಇದ್ದು, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಮೈ ಬಣ್ಣ,  ತಲೆಯಲ್ಲಿ ಕಪ್ಪು ಕೂದಲು, ಕಪ್ಪು ಬಣ್ಣದ ಪ್ಯಾಂಟ್, ಹಳದಿ ಬಣ್ಣದ ಟಾಪ್ ಧರಿಸಿರುತ್ತಾರೆ. ಬಲಗೈಯ ಮೇಲೆ ಟ್ಯಾಟೂ ಹಾಕಿರುತ್ತಾಳೆ. ಎಲ್ಲಾ ಕಡೆ ಹುಡುಕಿದರು ನನ್ನ ಮಗಳು ಸಿಗದಿದ್ದ ಕಾರಣ ಈ ದಿನ ತಡವಾಗಿ ಠಾಣೆಗೆ ಬಂದು ಕಾಣೆಯಾಗಿರುವ  ನನ್ನ ಮಗಳಾದ ಪಂಚಮಿ.ಎನ್. ರವರನ್ನು ಹುಡುಕಿಕೊಡಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

ತಾವರೆಕೆರೆ ಪೊಲೀಸ್ ಠಾಣಾ ಮೊ.ನಂ.13/18 ಕಲಂ  174 ಸಿಆರ್ ಪಿಸಿ.

ದಿನಾಂಕ-08-05-2018 ರಂದು ರಾತ್ರಿ 11-00 ಗಂಟೆಗೆ ಪಿರ್ಯಾದಿ ಮೂಡ್ಲಪ್ಪ ಬಿನ್ ತೊಪಣ್ಣ, 60ವರ್ಷ, ಗೊಲ್ಲರು ವ್ಯವಸಾಯ, ಬೇವಿನಹಳ್ಳಿ ಸಿರಾ ತಾಲೂಕ್ ಮೊ ನಂ-9742815671 ರವರು ಠಾಣೆಗೆ ಹಾಜರಾಗಿ ಕೊಟ್ಟ ದೂರಿನ ಸಾರಾಂಶವೇನೆಂದರೆ ದಿನಾಂಕ-08-05-2018 ರಂದು ಸಂಜೆ ಸುಮಾರು 07-10 ಗಂಟೆಗೆ  ಮಳೆ ಗಾಳಿ ಬೀಸಿದ್ದು ಮಳೆ ನಿಂತ ಮೇಲೆ ನನ್ನ ಅಣ್ಣನ ಮಗ 36 ವರ್ಷದ ನಾಗೇಂದ್ರಪ್ಪ ಎಂಬುವವರು ಬಹಿರ್ದೆಶೆಗೆಂದು ಹೋಗಿದ್ದು, ಬೇವಿನಹಳ್ಳಿ ಗ್ರಾಮದ ಸ.ನಂ-504/6 ರ ಜಮೀನಿನಲ್ಲಿರುವ ಅಡಿಕೆ ತೆಂಗು ಬೇಲಿ ಮೇಲೆ ಬಾವಿ ಪಂಪುಸೆಟ್ಗೆ ಅಳಢಿಸಿದ ವಿದ್ಯುತ್ ಸರಬರಾಜು ತಂತಿಗಳು ಒಂದಕ್ಕೊಂದು ಬಡಿದುಕೊಂಡು ಕಟ್ಟಾಗಿ ಕೆಳಗೆ ಬಿದ್ದಿದ್ದು  ವಾಪಾಸ್ ಬರುವಾಗ ತಂತಿ ಕಾಣದೇ ಅದನ್ನು ತುಳಿದು ವಿದ್ಯುತ್ತ ಸ್ಪರ್ಶದಿಂದ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ. ಇದು ಬೆಸ್ಕಾಂ ಇಲಾಖೆಯ ನಿರ್ಲಕ್ಷತೆಯಿಂದ ಉಂಟಾಗಿರುತ್ತೆ. ಮೃತ ನಾಗೇಂದ್ರಪ್ಪರವರ ಶವ ಸಿರಾ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿರುತ್ತೆ, ಕ್ರಮ ಜರುಗಿಸಿ ಕೊಡಿ ಎಂತ ಕೊಟ್ಟ ದೂರಿನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಬಡವನಹಳ್ಳಿ ಪೊಲೀಸ್ ಠಾಣಾ ಮೊ.ನಂ.75/2018 ಕಲಂ.279.337, 304(ಎ) ಐಪಇಸಿ 187 ಐಎಂವಿ ಕಾಯ್ದೆ.

ದಿನಾಂಕ:-09/05/2018 ರಂದು ರಾತ್ರಿ 8-00 ಗಂಟೆಗೆ ಫಿರ್ಯಾದಿ ಲಿಂಗಣ್ಣ ಬಿನ್ ಎಮ್ಮೇಕಾಟಣ್ಣ, ದಿಣ್ಣೇಗೊಲ್ಲರಹಟ್ಟಿ, ಐ.ಡಿ ಹಳ್ಳಿ ಹೋ., ಮಧುಗಿರಿ ತಾರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ, ನಾನು ನನ್ನ ಹೆಂಡತಿ ಲಕ್ಷ್ಮಮ್ಮ, ಮಗ ಪಂಚಲಿಂಗ, ಈತನ ಹೆಂಡತಿ ಈರಮ್ಮ, ಮೊಮ್ಮಗಳು ನಾಗಮಣಿ ಒಟ್ಟಿಗೆ ಸಂಸಾರ ಮಾಡಿಕೊಂಡು ಜೀವನ ಮಾಡಿಕೊಂಡಿದ್ದೇವು. ದಿನಾಂಕ 09/05/2018 ರಂದು ಬೆಳಿಗ್ಗೆ 8-00 ಗಂಟೆಯಲ್ಲಿ ನನ್ನ ಮಗ ಪಂಚಲಿಂಗ, ಆತನ ಸ್ನೇಹಿತ ರಾಜೀವ ಇಬ್ಬರು ಸೋದೇನಹಳ್ಳಿಯಲ್ಲಿ ಕೂಲಿ ಕೆಲಸಕ್ಕೆಂದು ಹೋದರು. ಮದ್ಯಾಹ್ನ 12-00 ಗಂಟೆಗೆ ನಮ್ಮ ಮನೆಯ ಪೋನಿಗೆ ರಾಧಕೃಷ್ಣ ಎಂಬುವರು ಪೋನ್ ಮಾಡಿ ನಿನ್ನ ಮಗ ಪಂಚಲಿಂಗ, ರಾಜೀವ ಹಾಗೂ ಇತರೆ ಇಬ್ಬರು ವ್ಯಕ್ತಿಗಳು ಹೊಸಕೆರೆ ರಂಟವಾಳ ರಸ್ತೆಯಲ್ಲಿ ಜೀವಗೊಂಡನಹಳ್ಳಿ ಗೇಟಿನ ಸಮೀಪ ಬೆಳಿಗ್ಗೆ 11-30 ಗಂಟೆ ಸಮಯದಲ್ಲಿ ಟ್ರಾಕ್ಟರ್ ಮುಗುಚಿ ಬಿದ್ದು, ಟ್ರಾಕ್ಟರ್ ಅಡಿಯಲ್ಲಿ ಪಂಚಲಿಂಗ, ರಾಜೀವ ಹಾಗೂ ಇತರೆ ಇಬ್ಬರು ಸಿಕ್ಕಿ, ಪಂಚಲಿಂಗನ ತಲೆಗೆ ಮೈಕೈಗೆ ಪೆಟ್ಟು ಬಿದ್ದು, ಸ್ಥಳದಲ್ಲೇ ಮೃತಪಟ್ಟಿರುತ್ತಾನೆ. ರಾಜೀವ ಮತ್ತು ಇತರೆ ಇಬ್ಬರಿಗೆ ತಲೆಗೆ ಮೈಕೈಗೆ ಪೆಟ್ಟುಗಳು ಬಿದ್ದು ತೀವ್ರ ತರವಾದ ಗಾಯಗಳಾಗಿರುತ್ತವೆ. ಗಾಯಾಳಯಗಳನ್ನು ನಾನು ಮತ್ತು ಅಲ್ಲಿಯ ಗ್ರಾಮಸ್ಥರು ಸೇರಿ ಉಪಚರಿಸಿ, 108 ವಾಹನದಲ್ಲಿ ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟೇವು. ಅಪಘಾತ ಉಂಟು ಮಾಡಿದ ಟ್ರಾಕ್ಟರ್ ಸ್ಥಳದಲ್ಲೇ ಇದ್ದು, KA-06-B-7815-16 ನಂಬರಿನ ಟ್ರಾಕ್ಟರ್ ಆಗಿರುತ್ತೆ. ಟ್ರಾಕ್ಟರ್ ಚಾಲಕ ಪರಾರಿಯಾಗಿರುತ್ತಾನೆ. ಟ್ರಾಕ್ಟರ್ ಚಾಲಕನ ಅತಿವೇಗ ಅಜಾಗರೂಕತೆಯಿಂದ ಅಪಘಾತ ಉಂಟಾಗಿರುತ್ತೆಂದು ತಿಳಿಸಿದ್ದರ ಮೇರೆಗೆ ನಾನು ಮತ್ತು ನಮ್ಮೂರಿನ ಗ್ರಾಮಸ್ಥರು ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಬಂದು ನೋಡಲಾಗಿ ನನ್ನ ಮಗನ ಶವ ಮಧುಗಿರಿ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿದ್ದು, ವಿಚಾರ ನಿಜವಾಗಿತ್ತು. ಉಳಿದ ಗಾಯಾಳುಗಳನ್ನು ಮಧುಗಿರಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿಗೆ ಕಳುಹಿಸಿ ಕೊಟ್ಟೇವು. ಅಪಘಾತದ ವಿಚಾರವನ್ನು ನಮ್ಮ ಸಂಬಂಧಿಕರಿಗೆ ತಿಳಿಸಿ ತಡವಾಗಿ ಬಂದು ದೂರು ನೀಡುತ್ತಿದ್ದು, ಅಪಘಾತ ಪಡಿಸಿದ ಟ್ರಾಕ್ಟರ್ ಚಾಲಕನನ್ನು  ಪತ್ತೆ ಮಾಡಿ ಆತನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಅಂಶವಾಗಿರುತ್ತೆ.


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 55 guests online
Content View Hits : 272929