lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿ 19.04.18 ಪೊಲೀಸ್ ಇಲಾಖೆಯು ಈ ಮೂಲಕ ಸಾರ್ವಜನಿಕರಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ: 15-05-2018 ರಂದು ತುಮಕೂರು ನಗರದ ವಿಶ್ವವಿದ್ಯಾನಿಲಯ ಕಲಾ... >>     ಪತ್ರಿಕಾ ಪ್ರಕಟಣೆ. ದಿನಾಂಕ: 10-05-2018 8 ಲಕ್ಷ ಬೆಲೆ ಬಾಳುವ ಮೊಬೈಲ್ ಮತ್ತು  ವಾಹನ ಕಳ್ಳರ... >> ಪತ್ರಿಕಾ ಪ್ರಕರಣೆ, ದಿನಾಂಕ: 07-05-18 ವಾರಸುದಾರರಿಲ್ಲದ 2,98,01,000/- ರೂ  ಹಣ ಪತ್ತೆ     ದಿನಾಂಕ:... >> ಪತ್ರಿಕಾ ಪ್ರಕಟಣೆ:- -:ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿಯ ಬಂಧನ:- ದಿನಾಂಕ :... >> ಪತ್ರಿಕಾ ಪ್ರಕಟಣೆ ದಿಃ25-04-2018. ದಿನಾಂಕ:24-04-2018 ರ ರಾತ್ರಿ 3 ಜನ ಅನುಮಾನಸ್ಪದ ವ್ಯಕ್ತಿಗಳು... >> ಪತ್ರಿಕಾ ಪ್ರಕಟಣೆ ದಿನಾಂಕ: 21-04-2018. ಕೊಲೆ ಆರೋಪಿಯ ಬಂಧನ:   ಹೆಬ್ಬೂರು ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 17.04.2018 ತುಮಕೂರು ಜಿಲ್ಲಾ ಪೊಲೀಸರ ಭರ್ಜರಿ ಬೇಟೆ: 65 ಕೆ.ಜಿ.... >> : ಪತ್ರಿಕಾ ಪ್ರಕಟಣೆ : ದಿನಾಂಕ:- 16-04-2018 ದಿನಾಂಕ;- 14-04-18 ರಂದು ರಾತ್ರಿ  2018 ರ ವಿಧಾನಸಭಾ... >> -: ಪತ್ರಿಕಾ ಪ್ರಕಟಣೆ :- ಈ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡುವುದೇನೆಂದರೆ,... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< May 2018 >
Mo Tu We Th Fr Sa Su
  1 2 3 4 5 6
8 9 10 11 12 13
14 15 16 17 18 19 20
21 22 23 24 25 26 27
28 29 30 31      
Monday, 07 May 2018
ಪತ್ರಿಕಾ ಪ್ರಕರಣೆ ದಿ:07-05-18

ಪತ್ರಿಕಾ ಪ್ರಕರಣೆ,

ದಿನಾಂಕ: 07-05-18

ವಾರಸುದಾರರಿಲ್ಲದ 2,98,01,000/- ರೂ  ಹಣ ಪತ್ತೆ

 

 

ದಿನಾಂಕ: 06-05-2018 ರಂದು ರಾತ್ರಿ ಬೆಂಗಳೂರುನಿಂದ ತುಮಕೂರು ಕಡೆಗೆ ಬರುತ್ತಿರುವ ಗಜಾನನ ಬಸ್ಸಿನಲ್ಲಿ ಅಕ್ರಮವಾಗಿ ಹಣವನ್ನು ಸಾಗಿಸುತ್ತಿರುವ ಬಗ್ಗೆ ತುಮಕೂರು ಜಿಲ್ಲಾ ಪೊಲೀಸ್ ಕಂಟ್ರೋಲ್‌ ರೂಂಗೆ ಮಾಹಿತಿ ಬಂದ ಮೇರೆಗೆ ಕ್ಯಾತಸಂದ್ರ ಪೊಲೀಸ್ ಠಾಣೆಯ ಪಿ.ಎಸ್‌.ಐ.ರವರು ಕೂಡಲೇ ಜಾಸ್‌ ಟೋಲ್‌ ಗೇಟ್‌ ಬಳಿಗೆ ಬಂದು ಮದ್ಯರಾತ್ರಿ 12-15 ಗಂಟೆ ಸಮಯದಲ್ಲಿ ಬೆಂಗಳೂರು ಕಡೆಯಿಂದ ಬಂದ ಶ್ರೀ ಗಜಾನನಾ ಮೋಟಾರ್ ಟ್ರಾನ್ಸ್ ಪೋರ್ಟ್. (SGMT) ಬಸ್‌‌ ನಂ KA-18-B-1639 ನೇ ನಂಬರಿನ ತಡೆದು ನಿಲ್ಲಿಸಿ ಎಸ್‌‌ಎಸ್‌ಟಿ ತಂಡದ ಸಮಕ್ಷಮ ತಪಾಸಣೆ ಮಾಡಿದಾಗ ಬಸ್ಸಿನ ಒಳಗಡೆ ಸೀಟಿನ ಕೆಳಭಾಗದಲ್ಲಿ 2 ರೆಗ್ಸಿನ್ ಬ್ಯಾಗುಗಳಲ್ಲಿ ಹಣದ ಬಂಡೆಲ್‌ಗಳು ಇರುವುದು ಕಂಡು ಬಂದಿದ್ದು, ಈ ಹಣದ ಮಾಲೀಕರ ಬಗ್ಗೆ ವಿಚಾರ ಮಾಡಲಾಗಿ ಬಸ್ಸಿನಲ್ಲಿದ್ದ ಪ್ರಯಾಣಿಕರು ಹಾಗೂ ಬಸ್ಸಿನ ಚಾಲಕ ಮತ್ತು ಕ್ಲೀನರ್ ರವರುಗಳನ್ನು ವಿಚಾರ ಮಾಡಿದಾಗ ಹಣದ ಮಾಲೀಕರು ಯಾರೂ ಅಲ್ಲವೆಂದು ಎಂದು ತಿಳಿದು ಬಂದ ಮೇರೆಗೆ, ವಿಧಾನಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಜಾಸ್‌ ಟೋಲ್‌ ಬಳಿ ಇದ್ದ ಎಸ್.ಎಸ್.ಟಿ. ತಂಡದವರೊಂದಿಗೆ ಬ್ಯಾಗ್‌ನಲ್ಲಿದ್ದ ಹಣವನ್ನು ಎಣಿಸಿಲಾಗಿ ಒಟ್ಟು 2,98,01,000=00 ರೂ  ಹಣ ಇದ್ದು, ಈ ಹಣವನ್ನು ಯಾವುದೇ ದಾಖಲಾತಿಗಳಿಲ್ಲದೇ ಬಸ್‌ನಲ್ಲಿ ಸಾಗಾಣಿಕೆ ಮಾಡುತ್ತಿದ್ದರಿಂದ ಈ ಹಣದ ಬ್ಯಾಗ್‌ಗಳನ್ನು ಹಾಗೂ ಬಸ್ಸನ್ನು  ಮುಂದಿನ ತನಿಖೆಯ ಸಂಬಂಧ ವಶಕ್ಕೆ ಪಡೆದಿರುತ್ತೆ.  ಈ ಬಗ್ಗೆ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪ್ರಕರಣ ತನಿಖೆಯಲ್ಲಿರುತ್ತದೆ.

ಈ ಸಂಬಂಧ ಕ್ಯಾತ್ಸಂದ್ರ ಪೊಲೀಸ್ ಠಾಣೆಯ ಪಿ.ಎಸ್.ಐ. ಡಿ.ಎಲ್.ರಾಜು ಹಾಗೂ  ಸಿಬ್ಬಂದಿಯವರಿಗೆ ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರವರು ಶ್ಲಾಘನೆ ವ್ಯಕ್ತಪಡಿಸಿರುತ್ತಾರೆ.


ಅಪರಾಧ ಘಟನೆಗಳು 7-05-18

ಹೊನ್ನವಳ್ಳಿ ಪೊಲೀಸ್ ಠಾಣೆ ಮೊ ನಂ 28/2018 ಕಲಂ:324. 504. 506 ರೆ/ವಿ 34 ಐಪಿಸಿ

ದಿನಾಂಕ 06/05/2018 ರಂದು ತಿಪಟೂರು ಜನರಲ್‌ ಆಸ್ವತ್ರೆಯಲ್ಲಿ ಓಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಅನುಸೂಯಮ್ಮ ಕೋಂ ಲೇ|| ರೇಣುಕಯ್ಯ 40 ವರ್ಷ ಲಿಂಗಾಯ್ತಿರು ಜನಾಂಗ ಮಾಯಗೊಂಡನಹಳ್ಳಿ , ಹೊನ್ನವಳ್ಳಿ  ಹೋಬಳಿ, ತಿಪಟೂರು ತಾಲ್ಲೂಕು ರವರು ನೀಡಿದ ಹೇಳಿಕೆಯ ಅಂಶ ಏನೆಂದರೆ.ನಮಗೆ ನಮ್ಮ ಗ್ರಾಮದ ಸರ್ವೇನಂ 65/1 ರಲ್ಲಿ 20 ಗುಂಟೆ ಜಮೀನಿದ್ದು ಸದರಿ ಜಮೀನಿನ ವಿಚಾರವಾಗಿ ನಮಗೂ ಮತ್ತು ನಮ್ಮ ಗ್ರಾಮದ ಸಿದ್ದಯ್ಯ ಬಿನ್‌ ರೇವಣ್ಣ, ಚನ್ನಯ್ಯ ಬಿನ್‌ ರೇವಣ್ಣರವರಿಗೂ ವಿವಾದವಿದ್ದು ಈ ವಿಚಾರವಾಗಿ ತಿಪಟೂರು ಸಿವಿಲ್‌ ನ್ಯಾಯಾಲಯದಲ್ಲಿ ಕೇಸು ಇದ್ದು. ವಿಚಾರಣೆಯಲ್ಲಿರುತ್ತೆ, ಸದರಿ ಜಮೀನಿನಲ್ಲಿ ನಾವೇ ಅನುಭವದಲ್ಲಿರುತ್ತೇವೆ. ಆದರೆ ಈ ದಿನ ದಿನಾಂಕ 06/05/2018 ರಂದು ಮದ್ಯಾಹ್ನ 3-30 ಗಂಟೆಯ ಸಮಯದಲ್ಲಿ ನಾನು ಮತ್ತು ನನ್ನ ಮಗ ಗುರುರಾಜ ಇಬ್ಬರು ನಮ್ಮ ಮೇಲ್ಕಂಡ ಜಮೀನಿನ ಹತ್ತಿರ ಹೋಗಿ ಹೆಸರುಕಾಳು ಹಾಕಿಸಲೆಂದು ನೋಡುತ್ತಿದ್ದೇವು. ಅಷ್ಟರಲ್ಲಿ ಅಲ್ಲಿಯೇ ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಸಿದ್ದಯ್ಯ ಬಿನ್‌ ರೇವಣ್ಣ, ಚನ್ನಯ್ಯ ಬಿನ್‌ ರೇವಣ್ಣ ರವರುಗಳು ಬಂದು ಈ ಜಮೀನು ನಮ್ಮದು ನೀವು ಇಲ್ಲಿಗೆ ಏಕೆ ಬಂದಿದ್ದಿರಾ, ಬೋಳಿಮುಂಡೆ,ಲೋಫರ್‌ ಮುಂಡೆ, ಸೂಳೇಮಗನೆ ಎಂತ ನನ್ನನ್ನು ಮತ್ತು ನನ್ನ ಮಗನನ್ನು ಅವಾಚ್ಯ ಶಬ್ದಗಳಿಂದ ಬೈದು ಅವರಿಬ್ಬರು ತಮ್ಮ ಕೈಯಲ್ಲಿ ಹಿಡಿದುಕೊಂಡು ಬಂದಿದ್ದ ದೊಣ್ಣೆಗಳಿಂದ ನನ್ನ ತಲೆಗೆ, ಎಡರಟ್ಟೆಗೆ, ಎಡಗೈ ಮೊಣಕ್ಕೆ, ಬಲಗೈ ಮುಂಗೈ, ಸೊಂಟಕ್ಕೆ ಬಲಗೈಮೊಣಕ್ಕೆ, ಎಡಕಾಲಿನ ತೊಡೆಗೆ ಹೊಡೆದು ಗಾಯಪಡಿಸಿದರು, ನನ್ನನ್ನು ಬಿಡಿಸಿಕೊಳ್ಳಲು ಬಂದ ನನ್ನ ಮಗನಿಗೆ ಅವರಿಬ್ಬರು ದೊಣ್ಣೆಗಳಿಂದ ಎಡತೊಳಿಗೆ, ಎಡಮೊಣಕೈಗೆ, ಬೆನ್ನಿಗೆ, ಬಲಗೈ ಹೆಬ್ಬೇರಳಿಗೆ, ಹೊಡೆದು ಗಾಯ ಉಂಟುಮಾಡಿದರು, ಅಷ್ಠರಲ್ಲಿ ಅಲ್ಲಿಗೆ ಬಂದ ನಮ್ಮಗ್ರಾಮದ ಹಾಲೇಶ್‌ ಬಿನ್‌ ಮರುಳಯ್ಯ ಮತ್ತು ದರ್ಶನ್‌ ಬಿನ್‌ ಮಂಜುನಾಥ ರವರು ಜಗಳ ಬಿಡಿಸಿದರು. ಅವರಿಬ್ಬರು ಸುಮ್ಮನಾಗದೇ ಇನ್ನೊಂದು ಸಲ ಈ ಜಮೀನಿಗೆ ಕಾಲಿಟ್ಟರೆ ನಿಮ್ಮನ್ನು ತುಂಡು ತುಂಡಾಗಿ ಕತ್ತರಿಸುತ್ತೇವೆಂದು ಪ್ರಾಣ ಭಯ ಉಂಟುಮಾಡಿರುತ್ತಾರೆ, ನಂತರ ಹಾಲೇಶ್‌ ಮತ್ತು ದರ್ಶನ್‌ ಯಾವುದೋ ಇಂದು ಬೈಕ್‌ನಲ್ಲಿ  ತಿಪಟೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿರುತ್ತಾರೆ.ಆದ್ದರಿಂದ ನಮಗೆ ಹೊಡೆದು ಗಲಾಟೆ ಮಾಡಿದ ಮೇಲ್ಕಂಡವರುಗಳು ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳಲು ನೀಡಿದ ಹೇಳಿಕೆಯನ್ನು ಠಾಣಾ ಹೆಚ್‌ಸಿ 346  ರವರು ಪಡೆದು ಠಾಣೆಗೆ ರಾತ್ರಿ  10-00 ಗಂಟೆಗೆ ಬಂದು ನೀಡಿದ ಹೇಳಿಕೆಯನ್ನು ಪಡೆದು ಪ್ರಕರಣ ದಾಖಲು ಮಾಡಿರುತ್ತೆ.

ಜಯನಗರ ಪೊಲೀಸ್ ಠಾಣಾ ಮೊ ನಂ 72/2018 ಕಲಂ 143, 147, 341, 323, 324, 504, 506 R/W 149 IPC

ದಿನಾಂಕ: 06-05-2018 ರಂದು ಸಂಜೆ 7-00 ಗಂಟೆ ಸಮಯದಲ್ಲಿ ತುಮಕೂರು ಟೌನ್ ವಿನಾಯಕ ಆಸ್ಪತ್ರೆಯಿಂದ ರೊನಾಲ್ಡ್‌ ಸಬಾಸ್ಟೀನ್ ಎಂಬ ವ್ಯಕ್ತಿ ಹಲ್ಲೆಗೊಳಗಾಗಿ ಚಿಕಿತ್ಸೆಗೆ ದಾಖಲಾಗಿರುವುದಾಗಿ ಮಾಹಿತಿ ಬಂದಿದ್ದು, ರಾತ್ರಿ 7-15 ಕ್ಕೆ ವಿನಾಯಕ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಗಾಯಾಳು ರೊನಾಲ್ಡ್‌ ಸಬಾಸ್ಟೀನ್ ಬಿನ್ ರಾಜಶೇಖರ್‌, ವಾಸ: ದೇವನೂರು ಬಡಾವಣೆ, ತುಮಕೂರು ಟೌನ್ ರವರ ಹೇಳಿಕೆಯನ್ನು ವೈದ್ಯಾಧಿಕಾರಿಗಳ ಸಮಕ್ಷಮ ರಾತ್ರಿ 8-00 ಗಂಟೆಯವರೆಗೆ ಪಡೆಯಲಾಗಿ, ನಾನು ನನ್ನ ತಮ್ಮ ಆರೋನ್ ಹಾಗೂ ಸ್ನೇಹಿತರಾದ ರವಿಕಿರಣ್, ಚಂದನ್ ರವರುಗಳು ಈ ದಿನ ಸಯಿಂಕಾಲ ತುಮಕೂರು ರಿಂಗ್ ರಸ್ತೆಯ ಬಳಿಗೆ ಹೋಗಿ ಟೀ ಕುಡಿದು ವಾಪಾಸ್ ಮನೆಯ ಕಡೆಗೆ ಬರಲು ಹೊರಟಾಗ ಮಿನಿ ಮಾರ್ಕೇಟ್ ಸರ್ಕಲ್ ಬಳಿ ಎರಡು ದ್ವಿಚಕ್ರ ವಾಹನಗಳು ಅಪಘಾತವಾಗಿದ್ದು, ಅಪಘಾತಪಡಿಸಿದ ದ್ವಿಚಕ್ರ ವಾಹನದಲ್ಲಿ ಇದ್ದ ಮೂರು ಜನ ವ್ಯಕ್ತಿಗಳಿಗೆ ನಾವು ಬುದ್ದಿ ಹೇಳಿದ್ದಕ್ಕೆ ನೀವ್ಯಾರೂ ಬುದ್ದಿ ಹೇಳಲೂ ಎಂತ ಕೂಗಾಡಿಕೊಂಡು ಅಲ್ಲಿಂದ ಹೊರಟು ಹೋಗಿದ್ದು ಅಪಘಾತಕ್ಕೀಡಾದ ದ್ವಿಚಕ್ರ ವಾಹನ ಸವಾರನಿಗೂ ಸಹ ಯಾವುದೋ ಪೆಟ್ಟು ಬೀಳದೇ ಇದ್ದರಿಂದ ಆತನು ಸಹ ಆತನ ಬೈಕ್ ತೆಗೆದುಕೊಂಡು ಹೊರಟುಹೋದನು.  ನಂತರ ನಾವು ನಾಲ್ಕು ಜನರು ನಮ್ಮ ಮನೆಯ ಕಡೆಗೆ ಹೋಗಲು ಸಪ್ತಗಿರಿ ಬಡಾವಣೆ ಟಿ.ಪಿ.ಕೆ ರಸ್ತೆ ನೀರಿನ ಓವರ್ ಟ್ಯಾಂಕ್ ಹತ್ತಿರ ಇರುವ ಪಾರ್ಕ್‌ ಬಳಿ ರಸ್ತೆಯಲ್ಲಿ ಹೋಗುತ್ತಿದ್ದಾಗ ಮೇಲ್ಕಂಡ ಅಪಘಾತಪಡಿಸಿದ ಮೂರು ಜನ ವ್ಯಕ್ತಿಗಳು ಹಾಗೂ ಅವರ ಜೊತೆ ಇನ್ನೂ ಮೂರು ಜನ ವ್ಯಕ್ತಿಗಳು ಒಂದು ಪಲ್ಸರ್ ದ್ವಿಚಕ್ರ ವಾಹನ ಹಾಗೂ ಡಿಯೋ ದ್ವಿಚಕ್ರ ವಾಹನದಲ್ಲಿ ಸಾಯಿಂಕಾಲ 4-45 ಗಂಟೆ ಸಮಯದಲ್ಲಿ ನಮ್ಮ ಬಳಿ ಬಂದವರೇ ನಮ್ಮನ್ನು ಅಡ್ಡಗಟ್ಟಿ ತಡೆದು ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ಬೈಯ್ದು ಪಾರ್ಥ ಎಂಬ ವ್ಯಕ್ತಿಯು ಅಲ್ಲೇ ಬಿದ್ದಿದ್ದ ಒಂದು ಕಲ್ಲನ್ನು ತೆಗೆದುಕೊಂಡು ನನ್ನ ತಲೆಗೆ ಹೊಡೆದು ರಕ್ತಗಾಯಪಡಿಸಿದ.  ಮತ್ತೊಬ್ಬ ವ್ಯಕ್ತಿ ದೊಣ್ಣೆಯಿಂದ ನನ್ನ ತಮ್ಮ ಆರೋನ್ ಗೆ ತಲೆಗೆ ಹೊಡೆದ. ಇನ್ನೋಬ್ಬ ವ್ಯಕ್ತಿ ನನ್ನ ಸ್ನೇಹಿತ ರವಿಕಿರಣ್ ಗೆ ಅಲ್ಲೇ ಬಿದ್ದಿದ್ದ ಕಲ್ಲಿನಿಂದ ಎಡಕಣ್ಣಿನ ಹುಬ್ಬಿನ ಮೇಲೆ ಹೊಡೆದನು.  ಇನ್ನೊಬ್ಬ ಸ್ನೇಹಿತ ಚಂದನ್ ಗೆ ಮತ್ತೊಬ್ಬ ವ್ಯಕ್ತಿ ಕೈಗಳಿಂದ ಹೊಡೆದನು.  ಉಳಿಕೆ ಇಬ್ಬರು ವ್ಯಕ್ತಿಗಳು ಕೈಗಳಿಂದ ನಮಗೆ ಹೊಡೆದಿರುತ್ತಾರೆ. ಅಷ್ಟರಲ್ಲಿ ಅದೇ ರಸ್ತೆಯಲ್ಲಿ ಬರುತ್ತಿದ್ದ ಪ್ರವೀಣ್ ಹಾಗೂ ಹಾಲ್ವಿನ್ ಮನೋಜ್ ಎಂಬುವರು ನಮ್ಮನ್ನು ಬಿಡಿಸಿಕೊಳ್ಳಲು ಬಂದಾಗ ಮೇಲ್ಕಂಡವರೆಲ್ಲರೂ ಪ್ರಾಣ ಬೆದರಿಕೆ ಹಾಕಿ ಅವರು ತಂದಿದ್ದ ಬಜಾಜ್ ಪಲ್ಸರ್ ಹಾಗೂ ಡಿಯೋ ದ್ವಿಚಕ್ರ ವಾಹನದಲ್ಲಿ ಹೊರಟು ಹೋಗಿರುತ್ತಾರೆ.  ಉಳಿಕೆ ಆರೋಪಗಳ ಹೆಸರು ವಿಳಾಸ ಹಾಗೂ ಅವರು ತಂದಿದ್ದ ದ್ವಿಚಕ್ರ ವಾಹನಗಳ ನಂಬರ್ ಗೊತ್ತಿರುವುದಿಲ್ಲ.  ಆರೋಪಿಗಳನ್ನು ಹಾಗೂ ದ್ವಿಚಕ್ರ ವಾಹನಗಳನ್ನು ನೋಡಿರುತ್ತೇನೆ. ಗುರ್ತಿಸುತ್ತೇನೆ.  ಆದ್ದರಿಂದ ಮೇಲ್ಕಂಡ ಆರು ಜನ ಆರೋಪಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿರುವ ಪಿರ್ಯದು ಅಂಶವಾಗಿರುತ್ತೆ.

ಅಮೃತೂರು ಪೊಲೀಸ್‌ ಠಾಣಾ ಮೊನಂ-96/2018, ಕಲಂ-279, 304(ಎ)

 

ದಿನಾಂಕ: 06-05-2018 ರಂದು ಬೆಳಿಗ್ಗೆ 6-20 ಗಂಟೆ ಸಮಯದಲ್ಲಿ ಪಿರ್ಯಾದಿ ಶ್ರೀನಿವಾಸ್.ಕೆ.ಟಿ ಬಿನ್ ತಿಮ್ಮಪ್ಪ, 38 ವರ್ಷ, ನೇಕಾರರು, ಕೇರಳಾಪುರ ಹಿಂದೂ ಮಿಲ್ಟ್ರಿ ಹೋಟೆಲ್ ಮಾಲಿಕರು, ಗ್ರಾಮ ಪಂಚಾಯ್ತಿಯ ಬಳಿ ಬೀರಗಾನಹಳ್ಳಿ, ವಾಸ: ಕೇರಳಾಪುರ ಹೋಟೆಲ್ ನ ಹಿಂಭಾಗ, ಬೀರಗಾನಹಳ್ಳಿ, ಎಡೆಯೂರು ಹೋಬಳಿ, ಕುಣಿಗಲ್ ತಾಲೋಕ್,  ಸ್ವಂತ ಊರು: ಕೇರಳಾಪುರ ಗ್ರಾಮ, ರಾಮನಾಥಪುರ ಹೋಬಳಿ, ಅರಕಲಗೂಡು ತಾಲೋಕ್, ಹಾಸನ ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ, ದಿನಾಂಕ: 05-05-2018 ರಂದು ನಾನು ನಮ್ಮ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿರುವಾಗ್ಗೆ ರಾತ್ರಿ ಸುಮಾರು 8-25 ಗಂಟೆಯಲ್ಲಿ ಹೈವೇ ನಲ್ಲಿ ಗಲಾಟೆಯಾಗುತ್ತಿದ್ದ ಶಬ್ದ ಕೇಳಿಸಿತು. ನಾನು ಹೊರಗೆ ಬಂದು ನೋಡಲಾಗಿ ನಮ್ಮ ಹೋಟೆಲ್ ನ ಮುಂಭಾಗ ಎನ್.ಹೆಚ್-75 ರಸ್ತೆಯ ಬೆಂಗಳೂರು-ಹಾಸನ ರಸ್ತೆಯಲ್ಲಿ ಯಾರಿಗೋ ಅಪಘಾತವಾಗಿದ್ದು, ಜನ ಜಮಾವಣೆಗೊಂಡಿದ್ದರು. ನಾನು ಹೋಗಿ ನೋಡಲಾಗಿ ಒಬ್ಬ ವ್ಯಕ್ತಿಗೆ ಒಂದು ಕಾರಿನ ಚಾಲಕ ಅಪಘಾತ ಪಡಿಸಿದ್ದು, ಕಾರು ರಸ್ತೆಯ ಪಕ್ಕದಲ್ಲಿ ನಿಂತಿತ್ತು. ಅಪಘಾತಕ್ಕೊಳಗಾಗಿದ್ದ ವ್ಯಕ್ತಿ ಸ್ಥಳದಲ್ಲಿಯೇ ಸತ್ತು ಬಿದ್ದಿದ್ದನು. ಅಪಘಾತಗೊಂಡು ಸತ್ತು ಬಿದ್ದಿದ್ದ ವ್ಯಕ್ತಿಯನ್ನು ನೋಡಲಾಗಿ ಸದರಿ ವ್ಯಕ್ತಿಯು ಎಡೆಯೂರಿನ ಎಲ್ಲಾ ಚೌಟ್ರಿಗಳಲ್ಲಿ ಮತ್ತು ಹೋಟೆಲ್ ಗಳಲ್ಲಿ ಹಾಗೂ ಪುಟ್ ಪಾತ್ ನಲ್ಲಿ ಜನರು ಹೇಳಿದ ಕೆಲಸ ಮಾಡಿಕೊಂಡು ಓಡಾಡಿಕೊಂಡಿದ್ದ ವ್ಯಕ್ತಿಯಾಗಿದ್ದು, ಆತನು ಹೆಸರು ಶಿವಯ್ಯ, ತುಮಕೂರು ಎಂದು ಹೇಳಿಕೊಂಡು ಪುಟ್ ಪಾತ್ ನ ಹೋಟೆಲ್ ಗಳಲ್ಲಿ ಹಾಗೂ ನನ್ನ ಹೋಟೆಲ್ ಗೆ ಆಗಾಗ್ಗೆ ಬಂದು ಸಣ್ಣಪುಟ್ಟ ಕೆಲಸ ಮಾಡಿ ಹೋಗುತ್ತಿದ್ದನು. ಈತನ ನಿಜವಾದ ವಿಳಾಸ ತಿಳಿದಿರುವುದಿಲ್ಲ. ಈತನು ಒಂದು ಕಡೆ ಶಾಶ್ವತವಾಗಿ ಕೆಲಸ ಮಾಡುತ್ತಿರಲಿಲ್ಲ. ಎಡೆಯೂರು ದಾಸೋಹ ಮತ್ತು ಚೌಟ್ರಿಗಳಲ್ಲಿ ಊಟ ಮಾಡಿಕೊಂಡು ಎಲ್ಲೆಂದರಲ್ಲಿ ಮಲಗುತ್ತಿದ್ದನು. ಈತನಿಗೆ ಆದ ಅಪಘಾತದ ಬಗ್ಗೆ ವಿಚಾರ ಮಾಡಲಾಗಿ ಇದೇ ದಿನ ರಾತ್ರಿ ಸುಮಾರು 8-20 ಗಂಟೆ ಸಮಯದಲ್ಲಿ ಈತನು ಎಡೆಯೂರು ಶುದ್ದ ಕುಡಿಯುವ ನೀರಿನ ಘಟಕದ ಕಡೆಯಿಂದ ಗ್ರಾಮ ಪಂಚಾಯ್ತಿಯ ಕಡೆಗೆ ಬರಲು ಎನ್.ಹೆಚ್-75 ಬೆಂಗಳೂರು-ಹಾಸನ ರಸ್ತೆಯನ್ನು ದಾಟುತ್ತಿದ್ದಾಗ ಬೆಂಗಳೂರು ಕಡೆಯಿಂದ ಹಾಸನ ಕಡೆಗೆ ಹೋಗಲು ಬಂದ ಕೆಎ-04, ಎಂಎಲ್-9632 ನೇ ನಂಬರಿನ ವ್ಯಾಗನರ್ ಕಾರಿನ ಚಾಲಕ ಕಾರನ್ನು ಅತಿವೇಗವಾಗಿ ಓಡಿಸಿಕೊಂಡು ಬಂದು ರಸ್ತೆಯನ್ನು ದಾಟುತ್ತಿದ್ದ ಶಿವಯ್ಯರವರಿಗೆ ಡಿಕ್ಕಿ ಪಡಿಸಿರುತ್ತಾನೆಂದು ತಿಳಿಯಿತು. ನಾನು ಮೃತನ ಶವವನ್ನು ಎ.ಸಿ ಗಿರಿ ಆಸ್ಪತ್ರೆಗೆ ಸಾಗಿಸಿ ಆತನ ವಾರಸುದಾರರು ಯಾರೂ ಬರದೇ ಇರುವುದರಿಂದ ಈಗ ಬಂದು ದೂರು ನೀಡುತ್ತಿದ್ದೇನೆ. ಆದ್ದರಿಂದ ಕಾರನ್ನು ಅತಿವೇಗವಾಗಿ ಚಲಾಯಿಸಿ ಅಪಘಾತಪಡಿಸಿ ಶಿವಯ್ಯರವರ ಸಾವಿಗೆ ಕಾರಣನಾದ ಕೆಎ-04, ಎಂಎಲ್-9632 ನೇ ನಂಬರಿನ ವ್ಯಾಗನರ್ ಕಾರಿನ ಚಾಲಕನ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕೋರುತ್ತೇನೆ ಎಂದು ಇದ್ದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿರುತ್ತೆ.


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 38 guests online
Content View Hits : 272923