lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿ 19.04.18 ಪೊಲೀಸ್ ಇಲಾಖೆಯು ಈ ಮೂಲಕ ಸಾರ್ವಜನಿಕರಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ: 15-05-2018 ರಂದು ತುಮಕೂರು ನಗರದ ವಿಶ್ವವಿದ್ಯಾನಿಲಯ ಕಲಾ... >>     ಪತ್ರಿಕಾ ಪ್ರಕಟಣೆ. ದಿನಾಂಕ: 10-05-2018 8 ಲಕ್ಷ ಬೆಲೆ ಬಾಳುವ ಮೊಬೈಲ್ ಮತ್ತು  ವಾಹನ ಕಳ್ಳರ... >> ಪತ್ರಿಕಾ ಪ್ರಕರಣೆ, ದಿನಾಂಕ: 07-05-18 ವಾರಸುದಾರರಿಲ್ಲದ 2,98,01,000/- ರೂ  ಹಣ ಪತ್ತೆ     ದಿನಾಂಕ:... >> ಪತ್ರಿಕಾ ಪ್ರಕಟಣೆ:- -:ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿಯ ಬಂಧನ:- ದಿನಾಂಕ :... >> ಪತ್ರಿಕಾ ಪ್ರಕಟಣೆ ದಿಃ25-04-2018. ದಿನಾಂಕ:24-04-2018 ರ ರಾತ್ರಿ 3 ಜನ ಅನುಮಾನಸ್ಪದ ವ್ಯಕ್ತಿಗಳು... >> ಪತ್ರಿಕಾ ಪ್ರಕಟಣೆ ದಿನಾಂಕ: 21-04-2018. ಕೊಲೆ ಆರೋಪಿಯ ಬಂಧನ:   ಹೆಬ್ಬೂರು ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 17.04.2018 ತುಮಕೂರು ಜಿಲ್ಲಾ ಪೊಲೀಸರ ಭರ್ಜರಿ ಬೇಟೆ: 65 ಕೆ.ಜಿ.... >> : ಪತ್ರಿಕಾ ಪ್ರಕಟಣೆ : ದಿನಾಂಕ:- 16-04-2018 ದಿನಾಂಕ;- 14-04-18 ರಂದು ರಾತ್ರಿ  2018 ರ ವಿಧಾನಸಭಾ... >> -: ಪತ್ರಿಕಾ ಪ್ರಕಟಣೆ :- ಈ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡುವುದೇನೆಂದರೆ,... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< May 2018 >
Mo Tu We Th Fr Sa Su
  1 2 3 4 6
7 8 9 10 11 12 13
14 15 16 17 18 19 20
21 22 23 24 25 26 27
28 29 30 31      
Saturday, 05 May 2018
ಅಪರಾಧ ಘಟನೆಗಳು 5-05-18

ತಿಪಟೂರು ಗ್ರಾಮಾಂತರ ಪೊಲೀಸ್  ಠಾಣಾ ಮೊ ನಂ 39/2018 ಕಲಂ 279,304(a) IPC .

ದಿನಾಂಕ 041/05/18 ರಂದು ರಾತ್ರಿ 08-15 ಗಂಟೆಗೆ ಶಿವಯ್ಯ ಬಿನ್ ದೊಡ್ಡಯ್ಯ, 65 ವರ್ಷ, ಆದಿ ಕರ್ನಾಟಕ, ಜಿರಾಯ್ತಿ, ಈಚನೂರು ತಿಪಟೂರು ತಾಲ್ಲೋಕ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ದಿನಾಂಕ 04/05/18 ರಂದು ಮದ್ಯಾಹ್ನ 03-45 ಗಂಟೆ ಸಮಯದಲ್ಲಿ ನಮ್ಮ ಗ್ರಾಮದ ರೇಣುಕಾ ಪ್ರಸಾದ್ ರವರು ಫೋನ್ ಮಾಡಿ ತಿಳಿಸಿದ ವಿಚಾರವೇನೆಂದರೆ, ನಿಮ್ಮ ಮಗನಾದ ಮಂಜುನಾಥ ರವರು ಕೆ.ಎ 51 ಇ.ಬಿ 1384 ನೇ ಬೈಕಿನಲ್ಲಿ ಮಂಜುನಾಥರವರು ಚಾಲಕರಾಗಿ ನಾನು ಹಿಂಬದಿಯಲ್ಲಿ ಕುಳಿತುಕೊಂಡು ಈಚನೂರಿನಿಂದ ದೇವರಹಳ್ಳಿ ಗೇಟಿಗೆ ಬಂದು ನನ್ನನ್ನು ದೇವರಹಳ್ಳಿ ಗೇಟಿನ ಈಚನೂರು ರಸ್ತೆಯಲ್ಲಿ ಬೈಕಿನಿಂದ ಇಳಿಸಿ ಮಂಜುನಾಥ ರವರು ಬೈಕನ್ನು ಈಚನೂರು ರಸ್ತೆಯಿಂಧ ಎನ್.,ಹೆಚ್ 206 ರಸ್ತೆಯಲ್ಲಿ ದೇವರಹಳ್ಳಿ ಗ್ರಾಮದ ಕಡೆ ರಸ್ತೆಯನ್ನು ದಾಟುತ್ತಿರುವಾಗ ತಿಪಟೂರು ಕಡೆಯಿಂದ ಕೆ.ಎ 05 ಎಂ.ಆರ್ 5241 ನೇ ಕಾರಿನ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಮಂಜುನಾಥ ರವರು ಚಾಲನೆ ಮಾಡುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆಸಿದ್ದರಿಂದ ಮಂಜುನಾಥ ರವರು ಬೈಕ್ ಸಮೇತ ಕೆಳಗೆ ಬಿದ್ದ, ತಲೆಗೆ ಮತ್ತು ಹೊಟ್ಟೆಗೆ ಪೆಟ್ಟು ಬಿದ್ದಿರುತ್ತದೆ. ನಾನು ತಕ್ಷಣ ಹೋಗಿ ಮಂಜುನಾಥ ರವರನ್ನು ಉಪಚರಿಸಿ ಯಾವುದೋ ವಾಹನದಲ್ಲಿ ತಿಪಟೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಿರುತ್ತೇನೆಂದು ತಿಳಿಸಿದಾಗ ನಾನು ತಕ್ಷಣ ತಿಪಟೂರು ಸರ್ಕಾರಿ ಆಸ್ಪತ್ರತೆಗೆ ಬಂದು ನೋಡಿದಾಗ ನನ್ನ ಮಗ ಮಂಜುನಾಥನ ತಲೆಗೆ ಮತ್ತು ಹೊಟ್ಟೆಗೆ ಪೆಟ್ಟಾಗಿರುತ್ತೆ. ಇಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಸರ್ಕಾರಿ ಆಸ್ಪತ್ರೆಗೆ ಹೋಗಲು ತಿಳಿಸಿದ್ದರಿಂದ ನನ್ನ ಮಗ ಗಾಯಾಳು ಮಂಜುನಾಥ ರವರರೊಂದಿಗೆ ರೇಣುಕಾ ಪ್ರಸಾದ್ ಮತ್ತು ನನ್ನ ದೊಡ್ಡ ಮಗನಾದ ನಾಗರಾಜು ರವರನ್ನು ಜೊತೆ ಮಾಡಿ ತುಮಕೂರಿಗೆ ಕಳುಹಿಸಿಕೊಟ್ಟೆನು.ನಂತರ ನಾಗರಾಜು ರವರು ಫೋನ್ ಮಾಡಿ ತುಮಕೂರು ಸರ್ಕಾರಿ ಆಸ್ಪತ್ರೆಗೆ ಮಂಜುನಾಥನನ್ನು ಚಿಕಿತ್ಸೆಗಾಗಿ ಸೇರಿಸಲು ಹೋದಾಗ ಅಲ್ಲಿನ ವೈದ್ಯರು ಮಂಜುನಾಥರವರು ಮೃತಪಟ್ಟಿರುತ್ತಾರೆಂತ ತಿಳಿಸಿ ಮೃತ ದೇಹವನ್ನುತುಮಕೂರು ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಕಳುಹಿಸಿಕೊಟ್ಟಿರುತ್ತಾರೆಂತ ಸಂಜೆ 05-45 ಗಂಟೆಗೆ ತಿಳಿಸಿರುತ್ತಾನೆ. ಆದ್ದರಿಂದ ನನ್ನ ಮಗನ ಸಾವಿಗೆ ಕಾರಣರಾಗಿರುವ ಕೆ.ಎ 05 ಎಂ.ಆರ್ 5241 ನೇ ಕಾರಿನ ಚಾಲಕ ಮೇಲೆ ಕಾನೂನಿನ ರೀತ್ಯ ಕ್ರಮ ಜರುಗಿಸಲು ಕೋರಿ ಇತ್ಯಾದಿ

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣಾ ಯು.ಡಿ.ಆರ್  ನಂ 06/2018  ಕಲಂ  174 ಸಿ.ಆರ್ .ಪಿ. ಸಿ.

ದಿನಾಂಕ:-04/05/2018 ರಂದು ಮಧ್ಯಾಹ್ನ 01:00 ಗಂಟೆಗೆ ಪಿರ್ಯಾದಿ ನವೀನ ಬಿನ್ ರಾಜಣ್ಣ, 28 ವರ್ಷ, ಮಡಿವಾಳರು, ಮಡೇನೂರು, ಕಸಬಾ ಹೋಬಳಿ, ತಿಪಟೂರು ತಾಲ್ಲೂಕ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ನಾನು ಮಡೇನೂರು ಗ್ರಾಮದಲ್ಲಿ ನಮ್ಮ ಅಜ್ಜಿ ದೊಡ್ಡಮ್ಮ ಮಾವ ರಾಜಶೇಖರ್‌ ರವರೊಂದಿಗೆ ವಾಸವಿರುತ್ತೇನೆ, ನಮ್ಮ ಮಾವ ರಾಜಶೇಖರ್‌ರವರಿಗೆ ಚಿಕ್ಕನಾಯಕನಹಳ್ಳಿಯ ಲಲಿತಮ್ಮ ಅವರೊಂದಿಗೆ ಮದುವೆಯಾಗಿದ್ದು ಈಗ್ಗೆ ಸುಮಾರು 15 ವರ್ಷಗಳ ಹಿಂದೆ ಲಲಿತಮ್ಮರವರು ಗಂಡನನ್ನು  ಬಿಟ್ಟು ಹೋಗಿದ್ದು ಅಂದಿನಿಂದ ನಮ್ಮ ಮಾವ ನಮ್ಮೊಂದಿಗೆ ಇರುತ್ತಾರೆ, ನಮ್ಮ ಮಾವ ರಾಜಶೇಖರ್‌ರವರಿಗೆ ಈಗ್ಗೆ 2 ವರ್ಷದಿಂದ ಫೈಲ್ಸ್ ಖಾಯಿಲೆ ಇದ್ದು  ಚಿಕಿತ್ಸೆಕೊಡಿಸುತ್ತಿರುತ್ತೇವೆ, ಅದರಂತೆ ನೆನ್ನೆ ದಿನಾಂಕ: 03/05/2018 ರಂದು ನಮ್ಮ ಮಾವನಿಗೆ ಫೈಲ್ಸ್ ಗೆ ಚಿಕಿತ್ಸೆ ಕೊಡಿಸಲು ಬೆಳ್ಳೂರು ಕ್ರಾಸ್‌‌ನ ದೊಡ್ಡಜಡಕ  ಗ್ರಾಮದ ನಾಟಿವೈದ್ಯರ ಬಳಿಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ನಾಟಿ ವೈದ್ಯರು ಪರೀಕ್ಷಿಸಿ ಫೈಲ್ಸ್ ಜಾಸ್ತಿಯಾಗಿರುವುದರಿಂದ ಚಿಕಿತ್ಸೆ ಕೊಡಲು ನಮ್ಮಿಂದ ಸಾಧ್ಯವಿಲ್ಲ ಬೆಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ  ತಿಳಿಸಿದರು ನಾವು ಬೆಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಈ ದಿನ ಬೆಳಿಗ್ಗೆ 10:00 ಗಂಟೆಗೆ  ತಿಪಟೂರಿಗೆ ಬಂದು ತಿಪಟೂರು ಬಸ್‌ ನಿಲ್ದಾಣದಲ್ಲಿ ನಮ್ಮ ಅಜ್ಜಿ ದೊಡ್ಡಮ್ಮ ಮತ್ತು ಮಾವ ರಾಜಶೇಖರ್‌ರವರನ್ನು ಕುಳ್ಳರಿಸಿ ನಾನು ಹಣ ಹೊಂದಿಸಿಕೊಂಡು ಬರುವುದಾಗಿ ಹೇಳಿ ಹೋದೆನು ನಂತರ ನಾನು ಸುಮಾರು 11:15  ಗಂಟೆಗೆ ಬಸ್ ನಿಲ್ದಾಣಕ್ಕೆ ವಾಪಸ್ ಬಂದಾಗ ನಮ್ಮ ಮಾವ ಬಸ್‌ ನಿಲ್ದಾಣದಲ್ಲಿ ಇರಲಿಲ್ಲ ಅಜ್ಜಿಯನ್ನು ಕೇಳಲಾಗಿ ಟಾಯ್ಲೆಟ್‌ಗೆ ಹೋಗಿ ಬರುವುದಾಗಿ ಹೇಳಿ ಹೋದವನು ಬಂದಿಲ್ಲವೆಂದು ತಿಳಿಸಿದರು ನಾನು ಬಸ್ ನಿಲ್ದಾಣದಲ್ಲಿ ಹುಡುಕಾಡಿ ಕಾಣದೆ ಇದ್ದುದ್ದರಿಂದ ವಾಪಸ್ ಮಡೇನೂರಿಗೆ ಹೋಗಿ ಮನೆಯ ಬಳಿ ನೋಡಿ ಪಕ್ಕದ ಮನೆಯವರನ್ನು ವಿಚಾರಮಾಡಲಾಗಿ ನಮ್ಮ ಮಾವ ರಾಜಶೇಖರನು ತೋಟದ ಕಡೆ ಹೋದರೆಂದು ತಿಳಿಸಿದರು, ನಾನು ತೋಟದ ಬಳಿ ಹೋಗಿ ನೋಡಿದಾಗ ನಮ್ಮ ಮಾವ ತೋಟದಲ್ಲಿದ್ದ ಏಣಿಯ ಸಹಾಯದಿಂದ ಹಲಸಿನ ಮರಕ್ಕೆ ಸೀರೆಯನ್ನು ಬಿಗಿದು  ನೇಣುಹಾಕಿಕೊಂಡು ಮೃತ ಪಟ್ಟಿದ್ದರು  ನಂತರ ನಾನು ನನ್ನ ಸ್ನೇಹಿತ ಮಡೇನೂರು ವಾಸಿ ಆಟೋ ಚಾಲಕ ಕುಶನಿಗೆ ಫೋನ್ ಮಾಡಿ ಕರೆಯಿಸಿಕೊಂಡು ಜೀವವಿದ್ದರೆ ಆಸ್ಪತ್ರೆಗೆ ಕೊಂಡೊಯ್ಯಲು ನಮ್ಮ ಮಾವನನ್ನು ಕೆಳಕ್ಕೆ ಇಳಿಸಿ ನೋಡಲಾಗಿ ನಮ್ಮ ಮಾವ ಮೃತ ಪಟ್ಟಿದ್ದರು. ನಮ್ಮ ಮಾವ ರಾಜಶೇಖರ್‌ರವರು ತಮಗಿದ್ದ ಫೈಲ್ಸ್‌ ಖಾಯಿಲೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ತನ್ಮೂಲಕ ತಾನೇ ಬೆಳಿಗ್ಗೆ 11-30 ಗಂಟೆ ಸಮಯದಲ್ಲಿ ಹಲಸಿನ ಮರಕ್ಕೆ ನೇಣು ಹಾಕಿಕೊಂಡು ಮೃತ ಪಟ್ಟಿರುತ್ತಾರೆಂತ ಇತ್ಯಾದಿ.


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 50 guests online
Content View Hits : 272927