lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿ 19.04.18 ಪೊಲೀಸ್ ಇಲಾಖೆಯು ಈ ಮೂಲಕ ಸಾರ್ವಜನಿಕರಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ: 15-05-2018 ರಂದು ತುಮಕೂರು ನಗರದ ವಿಶ್ವವಿದ್ಯಾನಿಲಯ ಕಲಾ... >>     ಪತ್ರಿಕಾ ಪ್ರಕಟಣೆ. ದಿನಾಂಕ: 10-05-2018 8 ಲಕ್ಷ ಬೆಲೆ ಬಾಳುವ ಮೊಬೈಲ್ ಮತ್ತು  ವಾಹನ ಕಳ್ಳರ... >> ಪತ್ರಿಕಾ ಪ್ರಕರಣೆ, ದಿನಾಂಕ: 07-05-18 ವಾರಸುದಾರರಿಲ್ಲದ 2,98,01,000/- ರೂ  ಹಣ ಪತ್ತೆ     ದಿನಾಂಕ:... >> ಪತ್ರಿಕಾ ಪ್ರಕಟಣೆ:- -:ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿಯ ಬಂಧನ:- ದಿನಾಂಕ :... >> ಪತ್ರಿಕಾ ಪ್ರಕಟಣೆ ದಿಃ25-04-2018. ದಿನಾಂಕ:24-04-2018 ರ ರಾತ್ರಿ 3 ಜನ ಅನುಮಾನಸ್ಪದ ವ್ಯಕ್ತಿಗಳು... >> ಪತ್ರಿಕಾ ಪ್ರಕಟಣೆ ದಿನಾಂಕ: 21-04-2018. ಕೊಲೆ ಆರೋಪಿಯ ಬಂಧನ:   ಹೆಬ್ಬೂರು ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 17.04.2018 ತುಮಕೂರು ಜಿಲ್ಲಾ ಪೊಲೀಸರ ಭರ್ಜರಿ ಬೇಟೆ: 65 ಕೆ.ಜಿ.... >> : ಪತ್ರಿಕಾ ಪ್ರಕಟಣೆ : ದಿನಾಂಕ:- 16-04-2018 ದಿನಾಂಕ;- 14-04-18 ರಂದು ರಾತ್ರಿ  2018 ರ ವಿಧಾನಸಭಾ... >> -: ಪತ್ರಿಕಾ ಪ್ರಕಟಣೆ :- ಈ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡುವುದೇನೆಂದರೆ,... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< May 2018 >
Mo Tu We Th Fr Sa Su
  1 2 4 5 6
7 8 9 10 11 12 13
14 15 16 17 18 19 20
21 22 23 24 25 26 27
28 29 30 31      
Thursday, 03 May 2018
ಅಪರಾಧ ಘಟನೆಗಳು 3-05-18

ತಿಪಟೂರು ಪೊಲೀಸ್ ಠಾಣೆ  ಯು.ಡಿ.ಆರ್‌ ನಂ 11/2018 ಕಲಂ 174 ಸಿಆರ್‌ಪಿಸಿ

ದಿನಾಂಕ: 03/05/2018 ರಂದು 00:30 ಗಂಟೆಗೆ ಪಿರ್ಯಾದುದಾರರಾದ ರಘು ಬಿನ್‌ ಜಯಣ್ಣ, ಅಣ್ಣಾಮಲ್ಲೇನಹಳ್ಳಿ, ಕಿಬ್ಬನಹಳ್ಳಿ ಹೋಬಳಿ, ತಿಪಟೂರು ತಾಲ್ಲೋಕ್‌ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ,  ನನ್ನ ಹೆಂಡತಿ ಶ್ರೀಮತಿ ಲತಾ ರವರು ಗರ್ಭಿಣಿಯಾಗಿದ್ದು, ದಿನಾಂಕ:01-05-2018 ರ ಬೆಳಗಿನ ಜಾವ ತಿಪಟೂರು ಸರ್ಕಾರಿ ಆಸ್ಪತ್ರೆಗೆ ಹೆರಿಗೆಗಾಗಿ ದಾಖಲು ಮಾಡಲಾಗಿದ್ದು. ಡಾಕ್ಟರ್‌ ರವರು ಹೆರಿಗೆ ಮಾಡಿಸಿದ್ದು, ಸಿಸೇರಿಯನ್‌ ಮುಖಾಂತರ ಹೆರಿಗೆಯನ್ನು ಮಾಡಿಸಿರುತ್ತಾರೆ. ಈ ಸಮಯದಲ್ಲಿ ಬಾಣಂತಿಯಾದ ಲತಾ ರವರು ಪ್ರಜ್ಞಾಹೀನ ಸ್ದಿತಿಯಲ್ಲಿದ್ದು, ಎಚ್ಚರವಾಗದೇ ಇದ್ದಾಗ ಇವರು ನನ್ನ ಹೆಂಡತಿ ಲತಾ ರವರನ್ನು ಹಾಸನದ ಎಸ್‌ಎಸ್‌ಎಂ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಚಿಕಿತ್ಸೆ ಪಡೆಯುವಾಗ ನನ್ನ ಹೆಂಡತಿ ಲತಾ ರವರು ದಿನಾಂಕ:02-05-2018 ರಂದು ಸುಮಾರು 5-30 ಗಂಟೆಯಲ್ಲಿ ಆಸ್ಪತ್ರೆಯಲ್ಲಿ ಮರಣ ಹೊಂದಿರುತ್ತಾರೆ. ಆದ್ದರಿಂದ ತಾವುಗಳು ಇದರ ಬಗ್ಗೆ ಕೂಲಂಕೂಷವಾಗಿ ತನಿಖೆಯನ್ನು ಮಾಡಿ ಚಿಕಿತ್ಸೆ ಪಡೆಯುವಾಗ ಆಕಸ್ಮಿಕವಾಗಿ ಮೃತಪಟ್ಟಿರುವ ನನ್ನ ಪತ್ನಿ ಲತಾ ರ ಸಾವಿನ ನಿಜವಾದ ಕಾರಣವನ್ನು ವೈದ್ಯಕೀಯ ಪರೀಕ್ಷೆಯ ಮುಖಾಂತರ ತಿಳಿಯಬೇಕಾಗಿ ಕಾನೂನುಕ್ರಮ ಕೈಗೊಂಡು ನ್ಯಾಯ ಒದಗಿಸಿಕೊಡಬೇಕಂತ ನೀಡಿದ ಪಿರ್ಯಾದು ಪಡೆದು ಪ್ರಕರಣ ದಾಖಲಿಸಿರುತ್ತೆ.

ಅಮೃತೂರು ಪೊಲೀಸ್‌ ಠಾಣಾ ಮೊನಂ-94/2018, ಕಲಂ-397 ಐಪಿಸಿ

ದಿನಾಂಕ: 02-05-2018 ರಂದು ಬೆಳಿಗ್ಗೆ 8-30 ಗಂಟೆಗೆ ಶ್ರೀಮತಿ ಲವ್ ಜಾಯ್ ಫರ್ನಾಂಡಿಸ್ ಕೋಂ ಡೊನಾಲ್ಡ್ ಜಿ.ಫರ್ನಾಂಡಿಸ್, 55 ವರ್ಷ,ರೋಮನ್ ಕ್ಯಾಥೋಲಿಕ್, ಡಿ.ಎಲ್.ಎಸ್. ಪಿಲ್ & ಪ್ಲೈ ಪೆಟ್ರೋಲ್ ಬಂಕಿನ ಮಾಲೀಕರು,ಸಿದ್ದಾಪುರ, ಕುಣಿಗಲ್ ತಾಲ್ಲೂಕ್ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ ನಾನು ಕುಣಿಗಲ್ ತಾಲ್ಲೂಕ್, ಎಡೆಯೂರು ಹೋಬಳಿ ಸಿದ್ದಾಪುರ ಗ್ರಾಮದ ಬಳಿ ಡಿ.ಎಸ್.ಎಸ್. ಪಿಲ್ & ಪ್ಲೈ ಎಂಬ ಹೆಸರಿನಲ್ಲಿ 24 ಗಂಟೆ ಸರ್ವಿಸ್ ನ ಪೆಟ್ರೋಲ್ ಬಂಕನ್ನು ನಡೆಸುತ್ತಿರುತ್ತೇನೆ. ದಿ: 02-05-2018 ರಂದು ಬೆಳಗಿನ ಜಾವ ಸುಮಾರು 5-00 ಗಂಟೆ ಸಮಯದಲ್ಲಿ ನಮ್ಮ ಬಂಕಿನ ಕ್ಯಾಶಿಯರ್ ಶಿವರಾಜು ರವರು ನನಗೆ ಪೋನ್ ಮಾಡಿ, ಈ ದಿನ ಬೆಳಗಿನ ಜಾವ ಸುಮಾರು 3-30 ಗಂಟೆ ಸಮಯದಲ್ಲಿ ನಾನು ಮತ್ತು ರಂಗಸ್ವಾಮಿ, ನಾಗೇಶ ಹಾಗೂ ಪವನ್ ಟ್ರಾನ್ಸ್ ಪೋರ್ಟ್‌ ನ ಡ್ರೈವರ್ ರಮೇಶ್ ರವರು ಬಂಕಿನ ಆಫೀಸ್ ಮುಂಭಾಗದಲ್ಲಿ ಮಲಗಿದ್ದಾಗ, ಯಾರೋ 5 ಜನ ಅಪರಿಚಿತ ವ್ಯಕ್ತಿಗಳು ಮುಖಕ್ಕೆ ಮುಸುಕು ಹಾಕಿಕೊಂಡು ನಮ್ಮ ಬಂಕಿನ ಬಳಿ ಬಂದು ನಮ್ಮನ್ನು ಎಬ್ಬಿಸಿ, ನಮಗೆ ಲಾಂಗು ಮತ್ತು ರಾಡುಗಳನ್ನು ತೋರಿಸಿ, ಅವರಲ್ಲಿ 3 ಜನರು ರಂಗಸ್ವಾಮಿ, ನಾಗೇಶ ಮತ್ತು ರಮೇಶ್ ರವರನ್ನು ಹಿಡಿದುಕೊಂಡು ಆಫೀಸ್ ನ ಹಿಂಭಾಗಕ್ಕೆ ಎಳೆದುಕೊಂಡು ಹೋಗಿ ಕೂರಿಸಿಕೊಂಡರು. ಉಳಿದ ಇನ್ನಿಬ್ಬರು ನನಗೆ ಲಾಂಗು ಮತ್ತು ರಾಡನ್ನು ತೋರಿಸಿ ನಮಗೆ ದುಡ್ಡು ಬೇಕು ಎಲ್ಲಿದೆ ಕೊಡು ಇಲ್ಲದಿದ್ದರೆ ನಿನ್ನನ್ನು ಸಾಯಿಸುತ್ತೇವೆಂದು ಹೆದರಿಸಿ, ನನ್ನನ್ನು ಆಫೀಸ್ ರೂಂ ನ ಓಳಕ್ಕೆ ಎಳೆದುಕೊಂಡು ಹೋಗಿ, ಲಾಂಗಿನ ಹಿಂಬದಿಯಿಂದ ನನ್ನ ಎಡಗೈ ಬುಜಕ್ಕೆ ಹೊಡೆದು ಗಾಯಗೊಳಿಸಿ, ನನ್ನ ಬಳಿ ಇದ್ದ 9,437/- ರೂ ಹಣವನ್ನು ಕಿತ್ತುಕೊಂಡು, ನಂತರ ನಿಮ್ಮ ಟೈಬಲ್ ನ ಡ್ರಾನಲ್ಲಿದ್ದ ಎರಡು ದಿನದ ಕ್ಯಾಷ್ 1,96,590/- ರೂ ಹಣವನ್ನು ಎತ್ತಿಕೊಂಡು, ರಂಗಸ್ವಾಮಿಯ ಬಳಿ ಇದ್ದ 35,380/- ರೂ ಹಣವನ್ನು ಕಿತ್ತುಕೊಂಡು ಹೈವೆಗೆ ಹೋಗಿ ಯಾವುದೋ ಒಂದು ವಾಹನದಲ್ಲಿ ಹತ್ತಿಕೊಂಡು ಹೊರಟು ಹೋಗಿರುತ್ತಾರೆ. ಬೇಗ ಬನ್ನಿ ಎಂದು ತಿಳಿಸಿದನು. ತಕ್ಷಣ ನಾನು ಬಂಕಿನ ಬಳಿ ಬಂದು ನೋಡಲಾಗಿ ನಮ್ಮ ಆಫೀಸ್ ರೂಂ ನ ಟೇಬಲ್ ಡ್ರಾಗಳು ತೆಗೆದಿದ್ದು, ಕಾಗದ ಪತ್ರಗಳು ಚಲ್ಲಾಪಿಲ್ಲಿಯಾಗಿದ್ದವು. ನಂತರ ನಮ್ಮ ಶಿವರಾಜು, ರಂಗಸ್ವಾಮಿ, ನಾಗೇಶ ರವರನ್ನು ವಿಚಾರ ಮಾಡಲಾಗಿ ಮೇಲಿನಂತೆ ಮತ್ತೆ ತಿಳಿಸಿ, ಶಿವರಾಜುನನ್ನು ಹಿಡಿದುಕೊಂಡಿದ್ದ ಇಬ್ಬರಲ್ಲಿ ಒಬ್ಬನು ರಾಡು ಹಿಡಿದುಕೊಂಡು ಹಿಂದಿ ಮಾತನಾಡುತ್ತಿದ್ದನು. ಇನ್ನೋಬ್ಬನು ದಪ್ಪಗಿದ್ದು ಲಾಂಗ್ ಹಿಡಿದಿದ್ದನು. ಉಳಿದವರು ರಾಡುಗಳನ್ನು ಹಿಡಿದು ಕನ್ನಡ ಮಾತನಾಡುತ್ತಿದ್ದರೆಂತ ತಿಳಿಸಿದರು. ಆದ್ದರಿಂದ ನಮ್ಮ ಬಂಕಿಗೆ ಆಯುಧದೊಂದಿಗೆ ಬಂದು ನಮ್ಮ ಕೆಲಸಗಾರರನ್ನು ಹೆದರಿಸಿ, ಹೊಡೆದು, 2,41,407/- ರೂ ಹಣವನ್ನು ದರೋಡೆ ಮಾಡಿಕೊಂಡು ಹೋಗಿರುವ 5 ಜನ ಅಪರಿಚಿತ ವ್ಯಕ್ತಿಗಳನ್ನು ಪತ್ತೆ ಮಾಡಿ, ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರುತ್ತೇನೆ ಎಂದು ಇದ್ದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿರುತ್ತೆ.

ಪಟ್ಟನಾಯಕನಹಳ್ಳಿ ಪೊಲೀಸ್ ಠಾಣಾ ಯು ಡಿ ಆರ್ 13-18 ಕಲಂ 174 ಸಿ ಆರ್ ಪಿ ಸಿ

ದಿನಾಂಕ:-02-05-18 ರಂದು ಮದ್ಯಾಹ್ನ 01-00 ಗಂಟೆಗೆ  ಶಿವಣ್ಣ ಬಿನ್ ಶ್ರೀರಾಮಯ್ಯ, ಉದ್ದರಾಮನಹಳ್ಳಿ  ಗ್ರಾಮ, ಶಿರಾ ತಾಲ್ಲೂಕ್ ರವರು ಠಾಣೆಗ ಹಾಜರಾಗಿ  ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ,  ಈಗ್ಗೆ ಸುಮಾರು 01 ವಾರದ ಹಿಂದೆ  ದಿನಾಂಕ:22-04-18 ರಂದು  ಸುಮಾರು 80 ವರ್ಷ ವಯಸ್ಸಿನ  ಅಪರಿಚಿತ ಮುದುಕಿ ಉದ್ದರಾಮನಹಳ್ಳಿ ಗೇಟ್ ನಿಂದ ಸುಮಾರು ಅರ್ಧ ಕಿ.ಮೀಟರ್ ದೂರದಲ್ಲಿ  ಶಿರಾ-ಅಮರಾಪುರ ರಸ್ತೆಯ ಪಕ್ಕದ ಪುಟ್  ಪಾತ್ ರಸ್ತೆಯಲ್ಲಿ  ಒಂದು ಮರದ ಕೆಳಗೆ ನಿಶಕ್ತಿಗೊಂಡು ಕುಳಿತಿದ್ದು, ಮುದುಕಿಯನ್ನು ವಿಚಾರಿಸಲಾಗಿ  ತೊದಲುತ್ತಿದ್ದು  ಸ್ವಷ್ಠವಾಗಿ  ಮಾತನಾಡುವುದು ಗೊತ್ತಾಗುತ್ತಿರಲಿಲ್ಲ , ಆದರು ಸಹ ಸ್ವಲ್ಪ ಮಾತನಾಡಿಸಿ ಕೇಳಿದಾಗ ಗಂಗಮ್ಮ , ಹುಳಿಗೆರೆ ಎಂತ  ಹೇಳಿದ್ದು ಪಿರ್ಯಾದಿ ರವರು 108 ಅಂಬುಲೆನ್ಸ್ ಗೆ   ಕರೆ ಮಾಡಿ ಶಿರಾ ಸರ್ಕಾರಿ ಆಸ್ಪತ್ರೆಗೆ ಚಿಕತ್ಸೆಗಾಗಿ ಕಳುಹಿಸಿಕೊಟ್ಟಿದ್ದು ಚಿಕಿತ್ಸೆ ಪಡೆಯುತ್ತಿದ್ದ ಮುದುಕಿ  ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ:02-05-2018 ರಂದು 12-00 ಗಂಟೆಗೆ ಶಿರಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ  ಮೃತಪಟ್ಟಿರುತ್ತಾಳೆಂತ ಮಾಹಿತಿ  ಬಂದ ಮೇರೆಗೆ  ಮುದುಕಿಯ ವಾರಸುದಾರನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ನೀಡಿದ ಲಿಖಿತ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 44 guests online
Content View Hits : 272925