lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ.16/08/2018 ತುಂಬೆ (ತುಮಕೂರು ಬೈಸಿಕಲ್ ಪೊಲೀಸ್)     ಜನಸ್ನೇಹಿ... >> :: ಪತ್ರಿಕಾ ಪ್ರಕಟಣೆ :: ದಿನಾಂಕ. 14.08.2018. 2018 ನೇ ಜುಲೈ ತಿಂಗಳಲ್ಲಿ ತುಮಕೂರು ನಗರ ವೃತ್ತದ... >> ಪತ್ರಿಕಾ ಪ್ರಕಟಣೆ ದಿನಾಂಕ 14/08/2018     ಸಿರಾ ತಾಲ್ಲೋಕ್ ತಾವರೆಕೆರೆ ಗ್ರಾಮದಲ್ಲಿರುವ... >> ಪತ್ರಿಕಾ ಪ್ರಕಟಣೆ   ಅಂತರ್ ರಾಜ್ಯ ಕಳ್ಳನ ಬಂಧನ, 75 ಸಾವಿರ ರೂ ಬೆಲೆಬಾಳುವ 10 ಮೊಬೈಲ್... >> ಪ ತ್ರಿ ಕಾ  ಪ್ರ ಕ ಟ ಣೆ ದಿನಾಂಕ: 03/08/2018 ತುಮಕೂರು ನಗರದಲ್ಲಿ ಒಟ್ಟು 3,420 ಅಭ್ಯರ್ಥಿಗಳಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ : 23.07.2018. ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ ದಿನಾಂಕ:- 23/07/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಕನ್ನ... >> : ಪತ್ರಿಕಾ ಪ್ರಕಟಣೆ  : : ದಿನಾಂಕ:21-07-2018 : -: ಮನೆಕಳ್ಳನ ಬಂಧನ :  7.5 ಲಕ್ಷ ರೂ ಮೌಲ್ಯದ ವಡವೆ... >> ಪತ್ರಿಕಾ ಪ್ರಕಟಣೆ ದಿನಾಂಕ : 20-07-18 ಸ್ಮಾರ್ಟ್ ಸಿಟಿ ಅಧಿಕಾರಿಗಳೆಂದು ವಂಚಿಸಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 20-07-2018       ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< May 2018 >
Mo Tu We Th Fr Sa Su
  1 3 4 5 6
7 8 9 10 11 12 13
14 15 16 17 18 19 20
21 22 23 24 25 26 27
28 29 30 31      
Wednesday, 02 May 2018
ಅಪರಾಧ ಘಟನೆಗಳು 2-05-18

ಅಮೃತೂರು ಪೊಲೀಸ್‌ ಠಾಣಾ ಮೊನಂ-93/2018, ಕಲಂ-279, 304(ಎ) ಐಪಿಸಿ 134(ಎ&ಬಿ),187 ಐಎಂವಿ

ದಿನಾಂಕ: 02-05-2018 ರಂದು ಬೆಳಿಗ್ಗೆ 7-20 ಗಂಟೆಗೆ ಪಿರ್ಯಾದಿ ವೆಂಕಟೇಶ.ಎಂ.ಜೆ ಬಿನ್ ಜವರೇಗೌಡ, 36 ವರ್ಷ, ಜೋಡಿಮಲ್ಲಪ್ಪನಹಳ್ಳಿ ಗ್ರಾಮ, ಕಟ್ಟಾಯ ಹೋಬಳಿ, ಹಾಸನ ತಾಲೋಕ್ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ ನನ್ನ ತಂದೆಯವರಾದ ಜವರೇಗೌಡ ಬಿನ್ ಯಾಲಕ್ಕಿಗೌಡರವರು ದಿನಾಂಕ: 01-05-2018 ರಂದು ಮಂಗಳವಾರ ರಾತ್ರಿ ಸುಮಾರು 8-00 ಗಂಟೆ ಸಮಯದಲ್ಲಿ ಎಡೆಯೂರು ನಗರದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ನಮ್ಮ ಸಂಬಂದಿಕರ ಮದುವೆ ಇದ್ದ ಕಾರಣ ಬಂದಿದ್ದರು. ನಮ್ಮ ತಂದೆಯವರು ಎನ್.ಹೆಚ್.-75 ರಸ್ತೆಯ ಎಡೆಬದಿಯಲ್ಲಿ ರಸ್ತೆ ದಾಟಲು ನಿಂತಿದ್ದು, ಸುಮಾರು 8-10 ಗಂಟೆ ಸಮಯದಲ್ಲಿ ಬೆಂಗಳೂರು ಕಡೆಯಿಂದ ಹಾಸನದ ಕಡೆಗೆ ಹೋಗುತ್ತಿದ್ದ ಕಾರು ವೇಗವಾಗಿ ಡಿಕ್ಕಿ ಹೊಡೆದು ನನ್ನ ತಂದೆಯವರು ಮರಣ ಹೊಂದಿರುತ್ತಾರೆ. ಅಪಘಾತವನ್ನು ಮಾಡಿದ ಕಾರು ಯಾವುದು ಎಂಬುದು ಸಹ ತಿಳಿದು ಬಂದಿರುವುದಿಲ್ಲ. ಸದರಿ ಅಪಘಾತದ ಬಗ್ಗೆ ನನ್ನ ಸಂಬಂದಿಕ ಡಿ.ಎಸ್ ನಾಗೇಶ್ ಬಿನ್ ಲೇಟ್ ಶ್ರೀನಿವಾಸರವರು ನನಗೆ ಸುಮಾರು 8-20 ರ ಸಮಯದಲ್ಲಿ ಪೋನ್ ಮಾಡಿ ನಿಮ್ಮ ತಂದೆಯವರು ಕಾರು ಅಪಘಾತದಲ್ಲಿ ಮರಣವನ್ನು ಹೊಂದಿರುತ್ತಾರೆ ಎಂದು ತಿಳಿಸಿದ ನಂತರ ನಾನು ಬಿಜಿಎಸ್ ಆಸ್ಪತ್ರೆಗೆ ಬಂದು ನಮ್ಮ ತಂದೆಯವರ ಶವವನ್ನು ನೋಡಿ ತಮ್ಮ ಠಾಣೆಗೆ ಈ ದಿನ ದೂರನ್ನು ನೀಡಿರುತ್ತೇನೆ. ತಾವುಗಳು ದಯಮಾಡಿ ನನ್ನ ತಂದೆಯವರಿಗೆ ಅಪಘಾತವನ್ನು ಉಂಟು ಮಾಡಿದ ವಾಹನವನ್ನು ಪತ್ತೆ ಹಚ್ಚಿ ಸದರಿ ವಾಹನ ಚಾಲಕನ ಮೇಲೆ ಹಾಗೂ ನಮ್ಮ ತಂದೆಯವರ ಶವ ಮಹಜರ್ ನಡೆಸಿಕೊಡಬೇಕಾಗಿ ತಮ್ಮಲ್ಲಿ ಕಳಕಳಿಯಿಂದ ಪ್ರಾರ್ಥಿಸಿಕೊಳ್ಳುತ್ತೇನೆ ಎಂದು ಇದ್ದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿರುತ್ತೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ ಮೊ ನಂ-104/2018  ಕಲಂ-504, 506, 323, 324, 448 ರೆ/ವಿ 149  ಐಪಿಸಿ

ದಿನಾಂಕ:01/05/2018 ರಂದು ಮಧ್ಯಾಹ್ನ 3-30 ಗಂಟೆಗೆ ಎ.ಎಸ್‌.ಐ. ನರಸಿಂಹರಾಜು ರವರು ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ  ಗಾಯಾಳು ನರಸಿಂಹಮೂರ್ತಿ ಎಲ್‌.ಟಿ. ಬಿನ್‌ ತಿಮ್ಮಪ್ಪ ಎಲ್‌. ಲಕ್ಕೇನಹಳ್ಳಿ ಗ್ರಾಮ, ಹೆಬ್ಬೂರು ಹೋಬಳಿ, ತುಮಕೂರು ತಾಲ್ಲೂಕ್‌ ರವರ ಹೇಳಿಕೆ ಪಡೆದು ಠಾಣೆಗೆ ಹಾಜರುಪಡಿಸಿದ ಹೇಳಿಕೆ ಅಂಶವೆನೆಂದರೆ  ನಾನು ಮತ್ತು ನನ್ನ ತಮ್ಮ ಸುರೇಶ್‌ ಎಲ್‌.ಟಿ. ಹಾಗೂ  ಸುರೇಶ್‌ ಎಲ್‌.ಟಿ. ರವರ ಪತ್ನಿ ಮಹಾಲಕ್ಷ್ಮಿ ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು, ನಮ್ಮ ತಾಯಿ ಅಣ್ಣನ ಮಗ ಮರಿಲಿಂಗೇಗೌಡ ಹಾಗೂ ಅವರ ಮಕ್ಕಳಾದ ರಾಜೇಶ್‌‌ ಬೆಂಗಳೂರಿನಲ್ಲಿದ್ದು, ದರ್ಶನಗೌಡ ತಂದೆ, ತಾಯಿ ರಂಗನಾಥಪುರದಲ್ಲಿ ವಾಸವಾಗಿರುತ್ತಾರೆ. ಮರಿಲಿಂಗೇಗೌಡ ಹಾಗೂ ಆತನ ಚಿಕ್ಕಪ್ಪನವರಾದ ಲೇಟ್‌ ಹಟ್ಟಪ್ಪಗೌಡನ ಮಕ್ಕಳಿಗೆ ಜಮೀನಿನ ವಿಚಾರದಲ್ಲಿ ಹಿಂದಿನಿಂದಲೂ ಗಲಾಟೆಯಿದ್ದು, ಈ ವಿಚಾರವಾಗಿ ನಮ್ಮ ಅಣ್ಣನಾದ ಪ್ರಭಾಕರ ಎಲ್‌.ಟಿ. ರವರು ಸ್ಥಳದಲ್ಲಿ ಗಲಾಟೆ ಮಾಡಿಕೊಳ್ಳಬೇಡಿ. ಜಮೀನು ಮಾರುವುದಾದರೆ ನಿಮ್ಮ ಚಿಕ್ಕಪ್ಪನ ಮಕ್ಕಳಿಗೆ ಮಾರು ಎಂತಾ ಮರಿಲಿಂಗೇಗೌಡ ರವರಿಗೆ ತಿಳಿಸಿದ್ದರು. ಈ  ಜಮೀನಿನ ವಿಚಾರವಾಗಿ ಮರಿಲಿಂಗೇಗೌಡ ನ ಚಿಕ್ಕಪ್ಪನ ಮಕ್ಕಳಿಗೆ ಸಪೋರ್ಟ್‌ ಮಾಡುತ್ತಾರೆಂತೆ ದಿ:30/04/2018 ರಂದು ರಾತ್ರಿ ಸುಮಾರು 12 ಗಂಟೆ ಸಮಯದಲ್ಲಿ ರಂಗನಾಥಪುರ ಗ್ರಾಮದ ವಾಸಿ ಮರಿಲಿಂಗೇಗೌಡ ನ ಮಕ್ಕಳಾದ ರಾಜೇಶ್‌ ಮತ್ತು ದರ್ಶನ್‌ಗೌಡ  ರವರು  ಹಾಗೂ ಇವರ ಜೊತೆಯಲ್ಲಿ ಸುಮಾರು 7-8 ಜನರು ನಾವು ಮಲಗಿದ್ದ,ನಮ್ಮ ಮನೆಯ ಬಳಿ ಬಂದು ಏಕಾಏಕಿ ಬಾಗಿಲನ್ನು ಕಾಲಿನಿಂದ ಒದ್ದು, ಒಳನುಗ್ಗಿ ಮನೆಯಲ್ಲಿ ಮಲಗಿದ್ದ ನಮ್ಮಗಳನ್ನು ಕುರಿತುನೀವು ನಮ್ಮ ತಂದೆ ಚಿಕ್ಕಪ್ಪನಿಗೆ ಜಮೀನು ವಿಚಾರವಾಗಿ ಸಪೋರ್ಟ್‌ ಮಾಡುತ್ತೀರಾ, ಲೋಫರ್‌ ನನ್‌ ಮಕ್ಕಳಾ, ಸೂಳೇ ಮಕ್ಕಳಾ ಎಂತಾ ಬೈಯ್ದು ಕೊಂಡು, ನನಗೆ ರಾಜೇಶ್‌ ಮತ್ತು ದರ್ಶನ್‌ಗೌಡ  ಇಬ್ಬರು ಸೇರಿ ಅಡಿಕೆ ದಬ್ಬೆಯಿಂದ ತಲೆ ಹಿಂಭಾಗಕ್ಕೆ, ಎರಡೂ ಕೈಗಳಿಗೆ ಹೊಟ್ಟೆಯ ಭಾಗಕ್ಕೆ ಹೊಡೆದು ರಕ್ತಗಾಯಪಡಿಸಿದರು. ಬಿಡಿಸಲು ಬಂದ ನನ್ನ ತಮ್ಮ ಸುರೇಶ ಎಲ್‌.ಟಿ. ರವರಿಗೆ ಅದೇ ಅಡಿಕೆ ದಬ್ಬೆಯಿಂದ ಎಡಕೈ, ಭುಜ, ಬೆನ್ನಿಗೆ ಹೊಡೆದರು. ಅವರ ಜೊತೆಯಲ್ಲಿ ಬಂದಿದ್ದವರು ಸಹಾ ಸದರಿ ಅಡಿಕೆ ದಬ್ಬೆಯಿಂದ ನನಗೂ ಮತ್ತು ನನ್ನ ತಮ್ಮನಿಗೂ ಕೆಲವರು ಹೊಡೆದರು. ಕೆಲವರು ಕೈಗಳಿಂದ ಮೈ ಕೈಗೆ ಹೊಡೆದು, ಕಾಲುಗಳಿಂದ ಒದ್ದರು. ಆಗ ಅಲ್ಲೆ ಇದ್ದ ಮಹಾಲಕ್ಷ್ಮಮ್ಮ ಜೋರಾಗಿ ಬಾಯಿ ಬಡಿದುಕೊಂಡು ನನ್ನ ಗಂಡ ಹಾಗೂ ನನ್ನ ಭಾವನನ್ನು ಹೊಡೆಯುತ್ತಿದ್ದಾರೆ ಬಿಡಿಸಿ, ಎಂತಾ ಕಿರುಚಾಡಿದಾಗ ನಮ್ಮ ಗ್ರಾಮದ ಎಲ್‌.ಆರ್‌. ಹನುಮಂತರಾಜು ಹಾಗೂ ಲಕ್ಷ್ಮಿಕಾಂತ ರವರು ಬಂದು ಗಲಾಟೆ ಬಿಡಿಸಿದರು. ಆಗ ಬಂದಿದ್ದವರೆಲ್ಲರೂ ಅಲ್ಲಿಂದ ಹೋಗುವಾಗ ಈ ನನ್ನ ಮಕ್ಕಳು ಜಮೀನು ವಿಚಾರವಾಗಿ ಬಂದರೆ ಕೊಲೆ ಮಾಡಿ ಸಾಯಿಸಬೇಕೆಂತಾ ಕೊಲೆ ಬೆದರಿಕೆ ಹಾಕಿ ಅವರು ಬಂದ ದಾರಿಯಲ್ಲಿ ಹೊರಟು ಹೋದರು. ನಂತರ ಬಂದಿದ್ದವರು 108 ಅಂಬುಲೆನ್ಸ್ ಗೆ ಫೋನ್‌ ಮಾಡಿ ಕರೆಸಿ, ಅದರಲ್ಲಿ ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ನನ್ನನ್ನು ಹಾಗೂ ನನ್ನ ತಮ್ಮ ಸುರೇಶ್‌ ಎಲ್‌.ಟಿ. ರವರನ್ನು ಕರೆದುಕೊಂಡು ಬಂದು ದಾಖಲಿಸಿರುತ್ತಾರೆ. ಹಾಲಿ ನಾವು ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿರುತ್ತೇವೆ. ನಮಗೆ ಅವಾಚ್ಯ ಶಬ್ದಗಳಿಂದ ಬೈದು  ಅಡಿಕೆ ದಬ್ಬೆಯಿಂದ ಹೊಡೆದು, ಪ್ರಾಣ ಬೆದರಿಕೆ ಹಾಕಿರುವ  ರಾಜೇಶ್‌ ಮತ್ತು ದರ್ಶನ್‌ಗೌಡ  ಹಾಗೂ ಇತರೆ ಹೆಸರು ಗೊತ್ತಿಲ್ಲದ 7 ರಿಂದ 8 ಜನರ ಮೇಲೆ ಕಾನೂನು ರೀತ್ಯಾ ಮುಂದಿನ ಕ್ರಮ ಜರುಗಿಸಬೇಕೆಂದು ಗ್ರಾಮದಲ್ಲಿ ಪ್ರಮುಖರು ರಾಜಿ ಪಂಚಾಯ್ತಿ ಮಾಡುವುದಾಗಿ ತಿಳಿಸಿದ್ದರಿಂದ ಹಾಗೂ ಇಲ್ಲಿಯವರೆವಿಗೂ ಯಾವುದೇ ರೀತಿಯ ರಾಜಿ ಪಂಚಾಯ್ತಿ ಮಾಡಲಿಲ್ಲವಾದ್ದರಿಂದ ಈ ದಿವಸ ತಡವಾಗಿ ಬಂದು ದೂರು ನೀಡುತ್ತಿದ್ದೇನೆ ಎಂತಾ ನೀಡಿದ ಹೇಳಿಕೆ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 63 guests online
Content View Hits : 322825