lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ. ದಿನಾಂಕ : 10-07-2018   ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 09-07-2018 ಕೊಲೆ ಆರೋಪಿಗಳ ಬಂಧನ ******* ದಿನಾಂಕ 04.07.2018 ರಂದು... >>   ಪತ್ರಿಕಾ ಪ್ರಕಟಣೆ ದಿನಾಂಕ : 07-07-2018. ಪೂರ್ವಾನುಮತಿ ಪಡೆಯದೇ ಹೆದ್ದಾರಿ ತಡೆ ನಡೆಸಿ,... >> ದಿನಾಂಕ.03.07.2018. ಪತ್ರಿಕಾ ಪ್ರಕಟಣೆ ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ 11 ಲಕ್ಷ 70 ಸಾವಿರ ಬೆಲೆ ಬಾಳುವ ಚಿನ್ನ-ಬೆಳ್ಳಿ  ಹಾಗೂ ಮೊಬೈಲ್‌‌‌... >>   ಪತ್ರಿಕಾ ಪ್ರಕಟಣೆ. ತುಮಕೂರು ಜಿಲ್ಲಾ ಪೊಲೀಸ್, ತುಮಕೂರು. ಕೋರಾ ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 27.06.2018 ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಸಾರ್ವಜನಿಕರ... >> ಪತ್ರಿಕಾ ಪ್ರಕಟಣೆ ದಿನಾಂಕ:- 23/06/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಖನ್ನ... >> ಪತ್ರಿಕಾ ಪ್ರಕಟಣೆ ದಿನಾಂಕ: 21-06-2018. ಸುಲಿಗೆಕೋರರ ಬಂಧನ: ದಿನಾಂಕ:18-06-2018 ರಂದು... >>   ಪೊಲೀಸ್ ಪ್ರಕಟಣೆ ತುಮಕೂರು ಜಿಲ್ಲಾ ಪೊಲೀಸ್ ಪ್ರಕಟಣೆ   ಆತ್ಮೀಯ ನಾಗರೀಕರಲ್ಲಿ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< April 2018 >
Mo Tu We Th Fr Sa Su
            1
2 3 4 5 6 7 8
9 10 11 12 13 14 15
16 17 18 19 20 21 22
23 24 25 26 27 28 29
30            
April 2018

Monday, 30 April 2018

ಅಪರಾಧ ಘಟನೆಗಳು 30-04-18

ಮಿಡಿಗೇಶಿ ಪೊಲೀಸ್ ಠಾಣಾ ಮೊ.ನಂ.47/2018, ಕಲಂ: 279,337, IPC134(A&B) 187 IMV Act

ದಿನಾಂಕ:29/04/2018 ರಂದು ಸಂಜೆ 05:15 ಗಂಟೆಗೆ ಪಿರ್ಯಾದಿ ಶಿವಣ್ಣ.ಎಸ್.ಆರ್. ಬಿನ್ ಲೇ||ರಾಮಯ್ಯ, 45 ವರ್ಷ, ಭೋವಿ ಜನಾಂಗ, ಕಲ್ಲು ಕೆಲಸ, ಸಿದ್ದರಪಾಳ್ಯ ಗ್ರಾಮ, ತುಮಕೂರು ಕಸಬಾ, ತುಮಕೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೇ, ನಾನು ಮತ್ತು ನನ್ನ ಅಣ್ಣ ಹನುಮಂತರಾಯಪ್ಪ ರವರ ಮಗನಾದ ರಾಜು, 35 ವರ್ಷ ಇಬ್ಬರು ನಮ್ಮ ಊರಿನ ಬಳಿ ಕಲ್ಲು ಕೆಲಸ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇವೆ. ದಿನಾಂಕ:24/04/2018 ರಂದು ಬೆಳಿಗ್ಗೆ ನನ್ನ ಅಣ್ಣನ ಮಗನಾದ ರಾಜು ಕೆಲಸ ನಿಮಿತ್ತಾ ಮಡಕಶಿರಾಕ್ಕೆ ಹೋಗಿ ಬರುತ್ತೇನೆಂತ ನಮಗೆ ಹೇಳಿ ಕೆಎ-64-ಕೆ-9905 ನೇ ಬೈಕಿನಲ್ಲಿ ಮನೆಯಿಂದ ಹೊರಟು ಬಂದನು. ನಂತರ ಇದೇ ದಿನ ಸಾಯಂಕಾಲ ಸುಮಾರು 05:15 ಗಂಟೆಯ ಸಮಯಕ್ಕೆ ಕ್ಯಾತಗೊಂಡನಹಳ್ಳಿ ಗ್ರಾಮದ ಪುಟ್ಟಸ್ವಾಮಿ ಎಂಬುವರು ನನ್ನ ಮೊಬೈಲ್ ಗೆ ಪೋನ್ ಮಾಡಿ ನಿಮ್ಮ ಸಂಬಂಧಿ ರಾಜು ಎಂಬುವರು ಕೆಎ-64-ಕೆ-9905 ನೇ ದ್ವಿ ಚಕ್ರ ವಾಹನದಲ್ಲಿ ನಮ್ಮ ಗ್ರಾಮದ ಹತ್ತಿರ ಬಿದರೆಕೆರೆ ಕೆರೆ ಕೋಡಿ ಸಮೀಪ ಮಧುಗಿರಿ-ಪಾವಗಡ ಮುಖ್ಯ ರಸ್ತೆಯಲ್ಲಿ ಇದೇ ದಿನ ಸಾಯಂಕಾಲ ಸುಮಾರು 05:00 ಗಂಟೆಯ ಸಮಯದಲ್ಲಿ ಮಧುಗಿರಿ ಕಡೆಯಿಂದ ಮಡಕಶಿರಾದ ಕಡೆಗೆ ಹೋಗುತ್ತಿದ್ದಾಗ, ಅದೇ ರಸ್ತೆಯಲ್ಲಿ ಅದೇ ಸಮಯಕ್ಕೆ ಮಡಕಶಿರಾ ಕಡೆಯಿಂದ ಎದುರಿಗೆ ಬಂದ ಕೆಎ-40-ಎ-0919 ನೇ ಲಾರಿ ಚಾಲಕ ತನ್ನ ಲಾರಿಯನ್ನು ಅತಿಜೋರಾಗಿ ಅಜಾಗರುಕತೆಯಿಂದ ಓಡಿಸಿಕೊಂಡು ಬಂದು ನಿಮ್ಮ ಸಂಬಂಧಿ ರಾಜು ಹೋಗುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆಸಿದ ಪರಿಣಾಮ ನಿಮ್ಮ ಸಂಬಂಧಿ ರಾಜು ರವರು ಬೈಕ್ ಸಮೇತ ರಸ್ತೆ ಮೇಲೆ ಬಿದ್ದರು, ಕೂಡಲೇ ಅಲ್ಲಿಯೇ ಇದ್ದ ನಾನು ರಾಜು ರವರ ಸಮೀಪಕ್ಕೆ ಹೋಗಿ ನೋಡಲಾಗಿ ರಾಜು ರವರ ಬಲಗೈನ ಬೆರಳುಗಳಿಗೆ ಹಾಗೂ ಮೈಕೈಗೆ ಪೆಟ್ಟುಗಳು ಬಿದ್ದು ಗಾಯಗಳಾಗಿರುತ್ತವೆ, ಗಾಯಗೊಂಡಿರುವ ರಾಜು ರವರನ್ನು ನಾನು ಉಪಚರಿಸುತ್ತಿದ್ದಾಗ ರಾಜು ರವರಿಗೆ ಅಪಘಾತಪಡಿಸಿದ ಲಾರಿಯ ಚಾಲಕ ಲಾರಿಯನ್ನು ತೆಗೆದುಕೊಂಡು ಮಧುಗಿರಿ ಕಡೆ ಹೊರಟು ಹೋದನು. ನಂತರ ಅದೇ ರಸ್ತೆಯಲ್ಲಿ ಬಂದ ಯಾವುದೊ ವಾಹನದಲ್ಲಿ ರಾಜು ರವರನ್ನು ಚಿಕಿತ್ಸೆಗೆಗಾಗಿ ಮಿಡಿಗೇಶಿ ಆಸ್ಪತ್ರೆಗೆ ಕಳುಹಿಸಿಕೊಡುತ್ತಿದ್ದೇನೆ ನೀವು ಮಿಡಿಗೇಶಿ ಸರ್ಕಾರಿ ಆಸ್ಪತ್ರೆಗೆ ಬನ್ನಿ ಎಂದು ವಿಚಾರ ತಿಳಿಸಿದರು. ವಿಷಯ ತಿಳಿದ ನಾನು ಕೂಡಲೇ ರಾಜು ರವರ ಹೆಂಡತಿ ಕವಿತ ರವರೊಂದಿಗೆ ಮಿಡಿಗೇಶಿ ಸರ್ಕಾರಿ ಆಸ್ಪತ್ರೆಗೆ ಬಂದು ನೋಡಲಾಗಿ ವಿಚಾರ ನಿಜವಾಗಿತ್ತು. ರಾಜು ರವರ ಬಲಗೈನ ಬೆರಳುಗಳಿಗೆ, ಮೈಕೈಗೆ ಪೆಟ್ಟುಗಳು ಬಿದ್ದು ರಕ್ತಗಾಯಗಳಾಗಿದ್ದವರಿಗೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ್ದರು. ನಂತರ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗೆಗಾಗಿ ರಾಜ ರವರನ್ನು ಮಧುಗಿರಿ, ತುಮಕೂರು ಸರ್ಕಾರಿ ಆಸ್ಪತ್ರೆಗಳಿಗೆ ಕರೆದಕೊಂಡು ಹೋಗಿ ಚಿಕಿತ್ಸೆ ಕೊಡಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರ ಸಲಹೆ ಮೇರೆಗೆ ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲು ಮಾಡಿ, ಚಿಕಿತ್ಸೆ ಕೊಡಿಸಿ ದಿನಾಂಕ:27/04/2018 ರಂದು ರಾಜು ರವರನ್ನು ಆಸ್ಪತ್ರೆಯಿಂದ ಡಿಸ್‌‌ ಚಾರ್ಚ್‌ ಮಾಡಿಸಿಕೊಂಡು ಬಂದು ಮನೆಯಲ್ಲಿ ಬಿಟ್ಟು ಆತನ ಯೋಗಕ್ಷೇಮವನ್ನು ನೋಡಿಕೊಳ್ಳುವಂತೆ ಆತನ ಹೆಂಡತಿ ಕವಿತ ರವರಿಗೆ ತಿಳಿಸಿ ಈ ದಿನ ಅಂದರೆ ದಿನಾಂಕ:29/04/2018 ರಂದು ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು, ಈ ಅಪಘಾತಕ್ಕೆ ಕಾರಣನಾದ ಕೆಎ-40-ಎ-0919 ನೇ ಲಾರಿ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ಪಿರ್ಯಾದು ಅಂಶವಾಗಿರುತ್ತೆ.

ಬಡವನಹಳ್ಳಿ ಪೊಲೀಸ್ ಠಾಣಾ ಮೊ ನಂ 70/2017 - ಕಲಂ 279 ಐಪಿಸಿ.

ದಿ:- 28/04/2018 ರಂದು ಸಂಜೆ 5-00 ಗಂಟೆಗೆ ಪಿರ್ಯಾದಿ ಬಿ ಹೆಚ್‌ ಮಂಜುನಾಥ ಬಿನ್‌ ಹನುಮಂತರಾಯಪ್ಪ, ಭೀಮನಕುಂಟೆ ಗ್ರಾಮ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ನಾನು 2016 ನೇ ಸಾಲಿನಲ್ಲಿ ಜೀವನೋಪಯಕ್ಕಾಗಿ ಟಯೋಟಾ ಕಂಪನಿಯ ETS KA-64-2207 ನೇ ನಂಬರಿನ ಕಾರನ್ನು ಲೋನ್‌ ನಲ್ಲಿ ಖರೀದಿಸಿ ಬೆಂಗಳೂರಿನಲ್ಲಿ ಓಡಿಸಿಕೊಂಡು ಜೀವನ ಮಾಡಿಕೊಂಡಿದ್ದೆನು. ನನ್ನ ಕಾರಿಗೆ ನಮ್ಮ ಗ್ರಾಮದ ನಾಗರಾಜಪ್ಪ ರವರ ಮಗ ಹನುಮಂತೇಗೌಡ ರವರನ್ನು ಚಾಲಕನಾಗಿ ಇಟ್ಟುಕೊಂಡಿದ್ದೆನು. ದಿ:24/04/2018 ರಂದು ಬೆಂಗಳೂರಿನಿಂದ ರಂಟವಾಳಕ್ಕೆ ಬಾಡಿಗೆ ಇದುದ್ದರಿಂದ ಚಾಲಕ ಕಾರನ್ನು ತೆಗೆದುಕೊಂಡು ಬಾಡಿಗೆದಾರರನ್ನು ರಂಟವಾಳಕ್ಕೆ ಡ್ರಾಪ್‌ ಮಾಡಿ ವಾಪಾಸ್ ಬರುವಾಗ ಮದ್ಯಾಹ್ನ ಸುಮಾರು 12-30 ಗಂಟೆ ಸಮಯದಲ್ಲಿ ಬಡಿಗೊಂಡನಹಳ್ಳಿ ಸಮೀಪ ದೊಡ್ಡಲಿಂಗಪ್ಪ ರವರ ಜಮೀನಿನ ಬಳಿ ರಸ್ತೆಯಲ್ಲಿ ತಿರುವು ಇದ್ದು, ಎದುರು ಕಡೆಯಿಂದ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಸೈಡ್‌ ಕೊಡಲು ಕಾರನ್ನು ಅಜಾಗರೂಕತೆಯಿಂದ ಓಡಿಸಿದ್ದರಿಂದ ಕಾರು ಹತೋಟಿಗೆ ಸಿಗದೆ ಆಯ ತಪ್ಪಿ ಪಲ್ಟಿಯೊಡೆದು ಪುಟ್ ಪಾತ್‌ ರಸ್ತೆಯ ಪಕ್ಕದ ಹೊಂಗೆ ಮತ್ತು ತುಗಲಿ ಮರಗಳಿಗೆ ಡಿಕ್ಕಿ ಹೊಡೆಸಿದ್ದರಿಂದ ಕಾರು ಪೂರ್ಣ ಜಖಂ ಗೊಂಡಿರುತ್ತೆ. ಚಾಲಕನಿಗೆ ಯಾವುದೇ ಗಾಯಗಳಾಗಿರುವುದಿಲ್ಲ ನನಗೆ ಬೆಂಗಳೂರಿನಲ್ಲಿ ಕೆಲಸ ಇದುದ್ದರಿಂದ ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಅಂಶವಾಗಿರುತ್ತೆ.Sunday, 29 April 2018

ಅಪರಾಧ ಘಟನೆಗಳು 29-04-18

ಬಡವನಹಳ್ಳಿ ಪೊಲೀಸ್ ಠಾಣೆ ಮೊ.ಸಂ 69/2018  ಕಲಂ  279, 304(ಎ ) ಐಪಿಸಿ  187 ಐ.ಎಂ.ವಿ ಆಕ್ಟ್

ದಿನಾಂಕ:- 28/04/2018 ರಂದು ಮದ್ಯಾಹ್ನ  12-30 ಗಂಟೆಗೆ ಫಿರ್ಯಾದಿ ಭೀಮಣ್ಣ ಬಿನ್‌ ಹನುಮಂತರಾಯಪ್ಪ ದೊಡ್ಡೇರಿ ಗ್ರಾಮ  ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ, ದಿ:28/04/2018 ರಂದು ಈ ದಿನ ಬೆಳಗ್ಗೆ 10-30 ಗಂಟೆ ಸಮಯದಲ್ಲಿ ನಾನು ಮತ್ತು ನಮ್ಮೂರಿನ ಬಿ ಸಿ ಪಾಲಾಕ್ಷ ಇಬ್ಬರು ದಂಡಿನದಿಬ್ಬದ ವೆಂಕಟಪ್ಪ ರವರಿಗೆ ಹೂವನ್ನು ಹಾಕಿ, ವಾಪಾಸ್ ಊರಿಗೆ ಹೋಗಲು ದಂಡಿನದಿಬ್ಬ ಬಸ್‌ ನಿಲ್ದಾಣದ ಬಳಿ ಬೆಳಗ್ಗೆ 11-10 ಗಂಟೆ ಸಮಯದಲ್ಲಿ ಶಂಕರಮ್ಮ ಕೊಂ ಸಿದ್ದಪ್ಪ ರವರ ಹೋಟೆಲ್‌ ಮುಂಭಾಗದ ಪುಟ್‌ ಪಾತ್‌ ರಸ್ತೆಯಲ್ಲಿ ನಿಂತಿದ್ದಾಗ ಶಿರಾ ಕಡೆಯಿಂದ ಒಂದು ಟ್ರಾಕ್ಟರ್‌ ಅನ್ನು ಚಾಲಕ ಅತಿವೇಗ ಮತ್ತು ಅಜಾಗೂರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಮ್ಮ ಮೇಲೆ ಬಂದಾಗ ನಾನು ಎಗರಿ ತಪ್ಪಿಸಿಕೊಂಡೆ , ನನ್ನ ಪಕ್ಕ ನಿಂತಿದ್ದ ಪಾಲಾಕ್ಷನಿಗೆ ಟ್ರಾಕ್ಟರ್‌ ಡಿಕ್ಕಿ ಹೊಡೆಸಿದ್ದರಿಂದ ಕೆಳಗೆ ಬಿದ್ದ , ಆಗ ಹಿಂದಿನ ಚಕ್ರ ಪಾಲಾಕ್ಷನ ಎದೆಯ ಮೇಲೆ ಹತ್ತಿತು. ತಕ್ಷಣ ನಾನು ಅಲ್ಲಿದ್ದ ಜನರ ಸಹಾಯದಿಂದ ಟ್ರಾಕ್ಟರ್‌ ಅನ್ನು ಮುಂದೆ ತಳ್ಳಿ ಪಾಲಾಕ್ಷ ನನ್ನು ಹೊರಗೆ ಎಳೆದುಕೊಂಡು ಸಿದ್ದರಾಜು ಮತ್ತು ಇತರರ ಸಹಾಯದಿಂದ ಗಾಯಾಳುವನ್ನು  ಆಟೋದಲ್ಲಿ ಹಾಕಿಕೊಂಡು ದೊಡ್ಡೇರಿ ಆಸ್ಪತ್ರೆಗೆ ಕಳುಹಿಸಿ, ಟ್ರಾಕ್ಟರ್‌ ನಂಬರ್‌ ನೋಡಲಾಗಿ ಇಂಜಿನ್‌ ನಂ NCEZ2698 ಅಗಿದ್ದು, ಟ್ರಾಲಿ ನಂಬರ್‌ KA-02-T-2071 ಆಗಿರುತ್ತೆ. ಗಾಯಾಳುವನ್ನು ದೊಡ್ಡೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಅವರ ಸಂಬಂದಿಕರಾದ ಜಗಧೀಶ್‌ ಡಿ ಎಂ ಎಂಬುವವರಿಗೆ  ಪೋನ್‌ ಮೂಲಕ ವಿಚಾರ ತಿಳಿಸಿ, ಅವರನ್ನ ಕರೆಯಿಸಿ ಕೊಂಡು ವೈದ್ಯರ ಸಲಹೆಯಂತೆ ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ದಾಖಲು ಮಾಡಿದಾಗ ಬೆಳಗ್ಗೆ 11-45 ಗಂಟೆಗೆ ಮೃತ ಪಟ್ಟಿರುತ್ತಾನೆಂತಾ ತಿಳಿಸಿರುತ್ತಾರೆ. ಅಪಘಾತ ಪಡಿಸಿದ ಟ್ರಾಕ್ಟರ್ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂತಾ ನೀಡಿದ ದೂರಿನ ಅಂಶವಾಗಿರುತ್ತೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ-100/2018 ಕಲಂ 379 ಐಪಿಸಿ

ದಿನಾಂಕ:28-04-2018 ರಂದು ಮಧ್ಯಾಹ್ನ 1-00 ಗಂಟೆಗೆ ಪಿರ್ಯಾದಿಯಾದ ಚಂದನ್‌‌ ಬಿನ್‌ ವಿರುಪಾಕ್ಷಯ್ಯ, 23 ವರ್ಷ, ಲಿಂಗಾಯುತರು, ವಿದ್ಯಾರ್ಥಿ, ಬಳ್ಳಗೆರೆ, ಹೆಬ್ಬೂರು ಹೋಬಳಿ, ತುಮಕೂರು ತಾಲ್ಲೂಕು & ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂಧರೆ ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ಏನೆಂದರೆ ನಮ್ಮ ಮನೆಯಲ್ಲಿ ಎರಡು ಎಮ್ಮೆಗಳನ್ನು ಸಾಕಿಕೊಂಡಿದ್ದು, ಅದನ್ನು ನಮ್ಮ ತಂದೆಯವರಾದ ವಿರುಪಾಕ್ಷಯ್ಯ ರವರು ನೋಡಿಕೊಳ್ಳುತ್ತಿದ್ದರು. ಅದರಂತೆ ದಿನಾಂಕ 18-04-2018 ರಂದು ನಮ್ಮ ತಂದೆ ನಮ್ಮ ಎರಡು ಎಮ್ಮೆಗಳನ್ನು ನಮ್ಮ ಜಮೀನಿನಲ್ಲಿ ಮೇಯಿಸಿಕೊಂಡು ಸಂಜೆ ಹಾಲನ್ನು ಕರೆದು ನಮ್ಮ ಮನೆಯ ಪಕ್ಕದಲ್ಲಿರುವ ಧನದ ಕೊಟ್ಟಿಗೆಯಲ್ಲಿ ಎರಡು ಎಮ್ಮೆಗಳನ್ನು ಕಟ್ಟಿ ಹಾಕಿ ಮನೆಯಲ್ಲಿ ಮಲಗಿದ್ದು, ನಂತರ ರಾತ್ರಿ 01-15 ಸಮಯದಲ್ಲಿ ಕೊಟ್ಟಿಗೆಯಿಂದ ನಾಯಿ ಬೊಗಳುವ ಶಬ್ದ ಕೇಳಿಸುತ್ತಿದ್ದುದರಿಂದ ನಾನು ನಮ್ಮ ತಂದೆ ಮನೆಯಿಂದ ಹೊರಗೆ ಬಂದು ಕೊಟ್ಟಿಗೆಯಲ್ಲಿ ನೋಡಲಾಗಿ ಕೊಟ್ಟಿಗೆಯಲ್ಲಿದ್ದ ನಮ್ಮ ಎರಡೂ ಎಮ್ಮೆಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನಂತರ ನಾನು ನಮ್ಮ ತಂದೆ ಮನೆಯಿಂದ ಸ್ವಲ್ಪ ಮುಂದೆ ಹೋಗಿ ನೋಡಲಾಗಿ ಯಾರೋ ಕಳ್ಳರು ಬಿಳಿಯ ಬುಲೆರೋ ವಾಹನದಲ್ಲಿ ನಮ್ಮ ಎಮ್ಮೆಗಳನ್ನು ತುಂಬಿಕೊಂಡು ಹೋಗುತ್ತಿದ್ದು, ನಾನು ನಮ್ಮ ತಂದೆ ಸದರಿ ಬುಲೆರೋ ವಾಹನವನ್ನು ಹಿಡಿಯಲು ಹೋಗುವಷ್ಟರಲ್ಲಿ ಅವರುಗಳು ವಾಹನ ಸಮೇತ ಅಲ್ಲಿಂದ ಪರಾರಿಯಾದರು. ಆದ್ದರಿಂದ ನಮ್ಮ ಬಾಬ್ತು ಎಮ್ಮೆಗಳನ್ನು ಕಳವು ಮಾಡಿಕೊಂಡು ಹೋಗಿರುವ ಆಸಾಮಿಗಳನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಈ ಮೂಲಕ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ. ನಾನು ನಮ್ಮ ತಂದೆ ನಮ್ಮ ಎಮ್ಮೆಗಳನ್ನು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಹಾಗೂ ದನದ ಜಾತ್ರೆಗಳಲ್ಲಿ ಹುಡುಕಿ ಈ ದಿನ ತಡವಾಗಿ ಬಂದು ದೂರನ್ನು ನೀಡುತ್ತಿದ್ದೇನೆ ಎಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆSaturday, 28 April 2018

ಅಪರಾಧ ಘಟನೆಗಳು 28-04-18

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ-99/2018 ಕಲಂ 32,34 ಕೆ.ಇ.ಆಕ್ಟ್

ದಿನಾಂಕ:27-04-2018 ರಂದು ಬೆಳಿಗ್ಗೆ 8-15 ಗಂಟೆಗೆ ಪಿ,ಎಸ್,ಐ ಶ್ರೀ ಮುರುಳಿ,ಟಿ, ರವರು ಠಾಣೆಗೆ ಹಾಜರಾಗಿ ನೀಡಿದ ವರಧಿಯ ಅಂಶವೇನೆಂಧರೆ ದಿನಾಂಕ: 26-04-2018 ರಂದು ರಾತ್ರಿ ರೌಂಡ್ಸ್‌ ಕರ್ತವ್ಯವನ್ನು ನಿರ್ವಹಿಸಿಕೊಂಡು ದಿನಾಂಕ:27-04-2018 ರಂದು ಇಲಾಖಾ ಜೀಪ್‌ನಲ್ಲಿ ಹೊನ್ನುಡಿಕೆ ಕಡೆಯಿಂದ ಹೆಬ್ಬೂರಿಗೆ ಬರಲೆಂದು ಬೆಳಿಗ್ಗೆ 07-30 ಗಂಟೆ ಸಮಯದಲ್ಲಿ ಹೊನ್ನುಡಿಕೆ ಹ್ಯಾಂಡ್‌ಪೋಸ್ಟ್‌‌‌ ನ  ಬಳಿ ಬರುತ್ತಿರುವಾಗ್ಗೆ, ಹೊನ್ನುಡಿಕೆ ಹ್ಯಾಂಡ್‌ಪೋಸ್ಟ್‌ ನ ಬಳಿ ಒಬ್ಬ ಆಸಾಮಿಯು ಒಂದು ದ್ವಿಚಕ್ರ ವಾಹನದಲ್ಲಿ ಮುಂಭಾಗದಲ್ಲಿ ಒಂದು ಪ್ಲಾಸ್ಟಿಕ್‌ ಚೀಲದಲ್ಲಿ ಏನನ್ನೋ ಇಟ್ಟುಕೊಂಡು ನಾಗವಲ್ಲಿ ಕಡೆಯಿಂದ ಹೊನ್ನುಡಿಕೆ ಕಡೆಗೆ ಬರುತ್ತಿದ್ದವನನ್ನು ಜೀಪ್‌ ನಿಲ್ಲಿಸಿ ವಿಚಾರ ಮಾಡುತ್ತಿದ್ದಂತೆಯೇ, ಆಸಾಮಿಯು ತನ್ನ ದ್ವಿಚಕ್ರ ವಾಹನವನ್ನು ಹಾಗೂ ಸದರಿ ಪ್ಲಾಸ್ಟಿಕ್‌ ಚೀಲವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋದನು. ನಂತರ ಸದರಿ ಚೀಲವನ್ನು ಪರಿಶೀಲಿಸಲಾಗಿ ಚೀಲದಲ್ಲಿ 180 ಎಂ,ಎಲ್‌ನ 130 ಮದ್ಯ ತುಂಬಿದ ಟೆಟ್ರಾ ಪ್ಯಾಕೇಟ್‌ಗಳಿದ್ದವು.  ದ್ವಿಚಕ್ರ ವಾಹನವನ್ನು ಪರಿಶೀಲಿಸಲಾಗಿ ಕೆಎ-06-ಇ.ಎನ್‌-1274 ನೇ ನಂಬರ್‌ನ ದ್ವಿಚಕ್ರ ವಾಹನವಾಗಿತ್ತು. ಸದರಿ ಆಸಾಮಿಯು ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡಲು ಸಾಗಾಣಿಕೆ ಮಾಡುತ್ತಿದ್ದು, ಸದರಿ ಮೇಲ್ಕಂಡ ದ್ವಿಚಕ್ರ ವಾಹನವನ್ನು ಹಾಗೂ ಮದ್ಯ ತುಂಬಿದ ಟೆಟ್ರಾ ಪ್ಯಾಕೇಟ್‌ಗಳನ್ನು ವಶಕ್ಕೆ ಪಡೆದು ಬೆಳಿಗ್ಗೆ 08-15 ಗಂಟೆಗೆ ಠಾಣೆಗೆ ತಂದು ಕೊಟ್ಟ ವರಧಿಯನ್ನು ಸ್ವೀಕರಿಸಿ  ಠಾಣಾ ಮೊ ನಂ-99/2018 ಕಲಂ 32,34 ಕೆ.ಇ.ಆಕ್ಟ್ ರೀತ್ಯಾ ಪ್ರಕರಣವನ್ನು ದಾಖಲಿಸಿರುತ್ತೆ.

ಹುಳಿಯಾರು ಪೊಲೀಸ್ ಠಾಣಾ ಮೊ.ನಂ 41/2018, ಕಲಂ: 323, 324, 504, 506 IPC.

ದಿನಾಂಕ 27/04/2018 ರಂದು ರಾತ್ರಿ 08-00 ಗಂಟೆಗೆ ಪಿರ್ಯಾದುದಾರರಾದ ಗೋವಿಂದರಾಜು ಬಿನ್ ತಿಮ್ಮಯ್ಯ, ಸಬಗಬೋವಿಹಟ್ಟಿ, ಕಂದಿಕೆರೆ ಹೋಬಳಿ, ಚಿಕ್ಕನಾಯಕನಹಳ್ಳಿ ತಾಲ್ಲೂಕು ಇವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ನನ್ನ ತಮ್ಮ ಮಂಜುನಾಥನಿಗೆ ಈಗ್ಗೆ 3 ವರ್ಷಗಳ ಹಿಂದೆ ಮದುವೆಯಾಗಿರುತ್ತದೆ. ಆದರೆ ಈತನ ಹೆಂಡತಿ ಈತನನ್ನು ಬಿಟ್ಟು ತವರು ಮನೆಯಲ್ಲಿರುತ್ತಾಳೆ. ಆಗಿನಿಂದ ನನ್ನ ತಮ್ಮ ನಮ್ಮ ಗ್ರಾಮದ ಕೆಂಚಪ್ಪನ ಹೆಂಡತಿ ಶಾರದಮ್ಮ ರವರೊಂದಿಗೆ ವಿಶ್ವಾಸದಿಂದ ಮಾತನಾಡಿಕೊಂಡಿರುವುದಕ್ಕೆ ಶಾರದಮ್ಮನ ತಮ್ಮ ಮೈಲಕೆಬ್ಬೆ ಬೋವಿ ಕಾಲೋನಿ ವಾಸಿ ಹನುಮಂತ ಬಿನ್ ತಿಮ್ಮಯ್ಯ ಈತನು ನನ್ನ ತಮ್ಮ ಮಂಜುನಾಥನಿಗೆ ಹಲವು ಬಾರಿ ಗಲಾಟೆ ಮಾಡಿರುತ್ತಾನೆ. ದಿನಾಂಕ 26/04/2018 ರಂದು ಸಂಜೆ 06-00 ಗಂಟೆಗೆ ಶಾರದಮ್ಮ ಮತ್ತು ಮಂಜುನಾಥ ಇಬ್ಬರೂ ಊರಿನಲ್ಲಿ ಇರುವುದಿಲ್ಲ. ಇವರನ್ನು ಹುಡುಕಿ ಕರೆತಂದು ದಿನಾಂಕ 27/04/2018 ರಂದು ಸಂಜೆ 04-00 ಗಂಟೆ ಸಮಯದಲ್ಲಿ ಊರಿನ ದೇವಸ್ಥಾನದ ಮುಂದೆ ಪಂಚಾಯಿತಿ ಮಾಡಲು ಊರಿನ ಜನ ಸೇರಿದ್ದು,ಆಗ ನಾನು ನನ್ನ ತಮ್ಮ ಮಂಜುನಾಥ, ಮಾದೇನಹಳ್ಳಿ ರಮೇಶ ಮತ್ತು ಗ್ರಾಮದ ಇತರರು ನಮ್ಮ ಮನೆಯಿಂದ ದೇವಸ್ಥಾನದ ಬಳಿ ಹೋಗಲು ನಡೆದು ಕೊಂಡು ಶಶಿಕುಮಾರ ರವರ ಮನೆಯ ಬಳಿ ಹೋಗುತ್ತೀರುವಾಗ, ಅಲ್ಲಿಗೆ ಬಂದ ಹನುಮಂತನು ಮಂಜುನಾಥನಿಗೆ ಕೈಯಿಂದ ಹೊಡೆದು ಅವಾಚ್ಯ ಶಬ್ದಗಳಿಂದ ಬೈದು ತನ್ನ ಜೇಬಿನಲ್ಲಿದ್ದ ಚಾಕುವನ್ನು ತೆಗದು ಏಕಾಏಕೀ ಮಂಜುನಾಥನಿಗೆ ಚುಚ್ಚಿ ನಿನ್ನನ್ನು ಸಾಯಿಸದೇ ಬಿದುವುದಿಲ್ಲವೆಂದು ಪ್ರಾಣ ಬೆದರಿಕೆ ಹಾಕಿರುತ್ತಾನೆ. ತಕ್ಷಣ ನಾನು ಮತ್ತು ಊರಿನ ಇತರರು ಮಂಜುನಾಥನನ್ನು ಕಾರಿನಲ್ಲಿ ಹುಳಿಯಾರು ಆಸ್ಪತ್ರೆಗೆ ಕರೆದುಕೊಂಡು ಬಂದು, ನಂತರ ಚಿಕ್ಕನಾಯಕನಹಳ್ಳಿ ಆಸ್ಪತ್ರೆಗೆ ಕಳುಹಿಸಿ ಠಾಣೆಗೆ ಬಂದು ನನ್ನ ತಮ್ಮನ ಮೇಲೆ ಹಲ್ಲೆ ಮಾಡಿದ ಹನುಮಂತನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

ಜಯನಗರ ಪೊಲೀಸ್ ಠಾಣಾ ಮೊ ನಂ 68/2018 ಕಲಂ 454, 380 ಐಪಿಸಿ

ದಿನಾಂಕ: 27-04-2018 ರಂದು ಮದ್ಯಾಹ್ನ 3-15 ಗಂಟೆಗೆ ತುಮಕೂರು ಟೌನ್‌, ಉಪ್ಪಾರಹಳ್ಳಿ ಬಡಾವಣೆ, ಶಿವಮೂಕಾಂಬಿಕ ನಗರ ವಾಸಿ ಹೆಚ್‌.ಎಸ್ ಶ್ರೀನಿವಾಸರಾವ್ ಬಿನ್ ಲೇಟ್ ಸುಬ್ಬರಾವ್ ರವರು ಠಾಣೆಗೆ ಹಾಜರಾಗಿ ನೀಡಿದ ಕಂಪ್ಯೂಟರ್ ಮುದ್ರಿತ ದೂರಿನ ಅಂಶವೇನೆಂದರೆ, ನಮ್ಮ ತಾಯಿ ಮೀನಾಕ್ಷಮ್ಮ ರವರು ಬೆಂಗಳೂರಿನ ನಾಗರಬಾವಿಯಲ್ಲಿ ನಮ್ಮ ಮಗ ಹರ್ಷ ಹೆಚ್.ಎಸ್. ರವರ ಮನೆಯಲ್ಲಿದ್ದು, ನಮ್ಮ ತಾಯಿಯವರಿಗೆ ಆರೋಗ್ಯ ಸರಿಯಿಲ್ಲದ ಕಾರಣ ಅವರನ್ನು ನೋಡಿಕೊಂಡು ಬರಲೆಂದು ದಿನಾಂಕ: 20-04-2018 ರಂದು ಬೆಳಿಗ್ಗೆ ಸುಮಾರು 8-30 ಗಂಟೆಗೆ ಮನೆಗೆ ಬೀಗ ಹಾಕಿಕೊಂಡು, ಮನೆಯ ಕಾಂಪೌಂಡ್‌‌ ಗೇಟಿನ ಬೀಗದ ಕೀಯನ್ನು ನಮ್ಮ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಜಯಮ್ಮ ಎಂಬುವರಿಗೆ ಕೊಟ್ಟು, ನಾವು ಬೆಂಗಳೂರಿಗೆ ಹೋಗಿ 2-3 ದಿನ ಬಿಟ್ಟು ಬರುವುದಾಗಿ, ಪ್ರತಿ ದಿನ ಕಾಂಪೌಂಡ್‌‌‌‌ನಲ್ಲಿ ಮನೆಯ ಮುಂದೆ ಕಸ ಹೊಡೆಯುವಂತೆ ತಿಳಿಸಿ ನಾವು ಸಂಸಾರ ಸಮೇತ ಬೆಂಗಳೂರಿನಲ್ಲಿರುವ  ನಮ್ಮ ಮಗನ ಮನೆಗೆ ಹೋಗಿದ್ದೆವು.    ಹೀಗಿರುವಲ್ಲಿ ದಿನಾಂಕ: 24-04-2018 ರಂದು ಮದ್ಯಾಹ್ನ ಸುಮಾರು 1-30 ಗಂಟೆ ಸಮಯದಲ್ಲಿ ನಮ್ಮ ಮನೆಯ ಸಮೀಪದಲ್ಲಿಯೇ ವಾಸವಾಗಿರುವ ನಮ್ಮ ಭಾವನ ಸೊಸೆ ಪ್ರತಿಭಾ ಎಂಬುವರು ನನಗೆ ಪೋನ್ ಮಾಡಿ ನಿಮ್ಮ ಮನೆಯ ಬೀಗ ಹೊಡೆದು ಕಳ್ಳತನವಾಗಿರುವ ವಿಚಾರ ತಿಳಿಸಿದರು.   ನಾನು ತಕ್ಷಣ ಗಾಬರಿಯಲ್ಲಿ ಬೆಂಗಳೂರಿನಿಂದ  ತುಮಕೂರಿಗೆ ಬಂದು ನಮ್ಮ ಮನೆಯ ಬಳಿಗೆ ಹೋಗಿ ನೋಡಲಾಗಿ, ನಮ್ಮ ಮನೆಯ ಮುಂಭಾಗಿಲಿಗೆ ಹಾಕಿದ್ದ ಡೋರ್‌‌ಲಾಕ್‌‌‌ ಬೀಗ ಹಾಗೂ ಪ್ರತ್ಯೇಕ ಬೀಗವನ್ನು  ಯಾರೋ ಕಳ್ಳರು ಯಾವುದೋ ಆಯುಧದಿಂದ ಮೀಟಿ ಹೊಡೆದು ಮನೆಯೊಳಗೆ ಪ್ರವೇಶ ಮಾಡಿ, ಮನೆಯ ರೂಮಿನಲ್ಲಿದ್ದ ಗಾಡ್ರೇಜ್‌‌‌ ಬೀರುವಿನ ಬಾಗಿಲನ್ನೂ ಸಹಾ ಯಾವುದೋ ಆಯುಧದಿಂದ ಮೀಟಿ ತೆಗೆದು ಬೀರುವಿನ ಲಾಕರನ್ನೂ ಸಹಾ ಮೀಟಿ ತೆಗೆದು ಲಾಕರ್‌‌ನಲ್ಲಿದ್ದ  ಈ ಕೆಳಕಂಡ ಚಿನ್ನದ ಹಾಗೂ ಬೆಳ್ಳಿಯ ವಡವೆಗಳನ್ನು ಕಳವು ಮಾಡಿಕೊಂಡು ಬೀರುವಿನಲ್ಲಿಟ್ಟಿದ್ದ ಇತರೇ ವಸ್ತುಗಳನ್ನೆಲ್ಲಾ ಚೆಲ್ಲಾಪಿಲ್ಲಿಯಾಗಿ ರೂಮಿನಲ್ಲಿ ಬಿಸಾಡಿ ಹೋಗಿರುತ್ತಾರೆ. ಸ್ಥಳದಲ್ಲಿಯೇ ಇದ್ದ ನಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಜಯಮ್ಮ ಎಂಬುವರು ನಾನು ಈ ದಿನ ಬೆಳಿಗ್ಗೆ 8-00 ಗಂಟೆಗೆ ಕಾಂಪೌಂಡ್‌‌‌ ಗೇಟಿನ ಬೀಗ ತೆಗೆದು ಸುಮಾರು ಅರ್ದಗಂಟೆ ಮನೆಯ ಮುಂದಿನ ಕಸವನ್ನೆಲ್ಲಾ ಗುಡಿಸಿ, ರಂಗೋಲಿ ಬಿಟ್ಟು ಕೆಲಸ ಮುಗಿಸಿಕೊಂಡು ಅಕ್ಕ-ಪಕ್ಕದ ಮನೆಗಳಿಗೆ ಹೋಗಿ ಅಲ್ಲಿಯೂ ಕೆಲಸ ಮಾಡಿಕೊಂಡು ವಾಪಾಸ್ಸು ಮದ್ಯಾಹ್ನ 12-30 ಗಂಟೆ ಸಮಯಕ್ಕೆ ನಿಮ್ಮ ಮನೆಯ ಬಳಿ ಬಂದಾಗ, ಮನೆಯ ಬಾಗಿಲು ಅರ್ಧ ತೆರೆದಿದ್ದು, ಕೂಗಲಾಗಿ ಯಾರೂ ಮಾತನಾಡದೇ ಇದ್ದರಿಂದ ಹತ್ತಿರ ಹೋಗಿ ನೋಡಿದಾಗ ಮನೆಯ ಬಾಗಿಲನ್ನು ಯಾರೋ ಕಳ್ಳರು ಮೀಟಿ ತೆಗೆದು ಬೀಗ ಹೊಡೆದು ಮನೆಯೊಳಗೆ ಹೋಗಿರುವುದು ಕಂಡು ಬಂದಿದ್ದು,  ಈ ವಿಚಾರವನ್ನು ನಾನು ತಕ್ಷಣ ನಿಮ್ಮ ಸಂಬಂಧಿ ಪ್ರತಿಭಾ ಎಂಬುವರಿಗೆ ತಿಳಿಸಿದೆನೆಂತಾ, ಅವರು ಸಹಾ ನಿಮ್ಮ ಮನೆಯ ಬಳಿಗೆ ಬಂದು ನೋಡಿ ನಂತರ ಕಳ್ಳತನವಾಗಿರುವ ವಿಚಾರವನ್ನು ನಿಮಗೆ ಪೋನ್ ಮಾಡಿ ತಿಳಿಸಿರುವುದಾಗಿ ವಿಚಾರ ತಿಳಿಸಿದರು. ‌ ಕಳುವಾಗಿರುವ ಚಿನ್ನದ ವಡವೆಗಳು :-  1) ಒಂದು ಎಳೆಯ ಬಂಗಾರದ ಚೈನ್‌‌‌ ( ಪೆಂಡೆಂಟ್‌‌ ಸೇರಿ )  ತೂಕ ಸುಮಾರು 24 ಗ್ರಾಂ 980 ಮಿಲಿ  ಬೆಲೆ ಸುಮಾರು 43,806/- ರೂ. 2) ಒಂದು ಹಸಿರು ಕಲ್ಲಿನ ಉಂಗುರ  ತೂಕ ಸುಮಾರು 6 ಗ್ರಾಂ ಬೆಲೆ ಸುಮಾರು 18,000/- ರೂ. 3) ಒಂದು ಕೆಂಪು ಕಲ್ಲಿನ ಉಂಗುರ  ತೂಕ ಸುಮಾರು 3 ಗ್ರಾಂ 260 ಮಿಲಿ ಬೆಲೆ ಸುಮಾರು 10,500/- ರೂ. 4) ಒಂದು ಜೊತೆ ಬಿಳಿಯ ಕಲ್ಲಿನ ಓಲೆ  ತೂಕ ಸುಮಾರು 4 ಗ್ರಾಂ 360 ಮಿಲಿ  ಬೆಲೆ ಸುಮಾರು 15,700/- ರೂ. ಚಿನ್ನದ ವಡವೆಗಳ ಒಟ್ಟು ತೂಕ ಸುಮಾರು 38 ಗ್ರಾಂ  ಬೆಲೆ ಸುಮಾರು 88,000/- ರೂ. ಬೆಳ್ಳಿಯ ವಡವೆಗಳು :- 1) ಒಂದು ಬೆಳ್ಳಿಯ ಲಕ್ಷ್ಮಿ ವಿಗ್ರಹದ ಮುಖವಾಡ ತೂಕ ಸುಮಾರು 250 ಗ್ರಾಂ 2) ಬೆಳ್ಳಿಯ ಪೂಜಾ ದೀಪ 3) ಒಂದು ಬೆಳ್ಳಿಯ ಮುಚ್ಚಳ ಇರುವ ಕುಂಕುಮದ ಭರಣಿ  4)ಹಾಲು ಹಾಕುವ ಬೆಳ್ಳಿಯ ವಳಲೆ, ಬೆಳ್ಳಿಯ ವಡವೆಗಳ ಒಟ್ಟು ತೂಕ ಸುಮಾರು 400 ಗ್ರಾಂ ಇದ್ದು ಬೆಲೆ ಸುಮಾರು 20,000/- ರೂ. ಚಿನ್ನದ ಹಾಗೂ ಬೆಳ್ಳಿಯ ವಡವೆಗಳ ಒಟ್ಟು ಮೌಲ್ಯ 1,08,000/- ರೂ.ಗಳಾಗುತ್ತದೆ. ಮನೆಯಲ್ಲಿ ಕಳುವಾಗಿರುವ ವಿಚಾರವನ್ನು ನಮ್ಮ ಮಗ ಹಾಗೂ ಸಂಬಂಧಿಕರಿಗೆ ತಿಳಿಸಿ, ಮನೆಯಲ್ಲೆಲ್ಲಾ ಕೂಲಂಕುಶವಾಗಿ ಪರಿಶೀಲನೆ ಮಾಡಿ, ನಮ್ಮ ಮಗ ಹಾಗೂ ಸಂಬಂಧಿಕರ ಜೊತೆ ಚರ್ಚಿಸಿ ಈ ದಿನ ತಡವಾಗಿ ಪೊಲೀಸ್ ಠಾಣೆಗೆ ಬಂದು ದೂರು ನೀಡುತ್ತಿದ್ದೇನೆ.  ಆದ್ದರಿಂದ  ತಾವು ದಯಮಾಡಿ ಹಗಲು ವೇಳೆಯಲ್ಲಿ ನಮ್ಮ ಮನೆಯ ಬಾಗಿಲನ್ನು ಮೀಟಿ ತೆಗೆದು ಮನೆಯೊಳಗೆ ಪ್ರವೇಶ ಮಾಡಿ, ಬೀರುವಿನಲ್ಲಿಟ್ಟಿದ್ದ ಮೇಲ್ಕಂಡ ಚಿನ್ನದ ಹಾಗೂ ಬೆಳ್ಳಿಯ ವಡವೆಗಳನ್ನು ಕಳವು ಮಾಡಿಕೊಂಡು ಹೋಗಿರುವ ಕಳ್ಳರನ್ನು ಪತ್ತೆ ಮಾಡಿ ಅವರಿಂದ ಚಿನ್ನದ ಹಾಗೂ ಬೆಳ್ಳಿಯ ವಡವೆಗಳನ್ನು ಕೊಡಿಸಿಕೊಟ್ಟು, ಅವರ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿರುವ ದೂರಿನ ಮೇರೆಗೆ ಠಾಣಾ ಮೊ.ನಂ. 68/2018 ಕಲಂ 454, 380 ಐ.ಪಿ.ಸಿ. ರೀತ್ಯಾ ಪ್ರಕರಣ ದಾಖಲಿಸಿಕೊಂಡು ಪ್ರ.ವ. ವರದಿಯನ್ನು ಘನ ನ್ಯಾಯಾಲಯಕ್ಕೆ ಸಲ್ಲಿಸಿಕೊಂಡು ತನಿಖೆ ಕೈಗೊಂಡಿರುತ್ತೆ.

 Friday, 27 April 2018

ಅಪರಾಧ ಘಟನೆಗಳು 27-04-18

ತಾವರೆಕೆರೆ ಪೊಲೀಸ್ ಠಾಣಾ ಮೊ ನಂ-: 26/2018 ಐ.ಪಿ.ಸಿ  498[ಎ], 354, 355, 376[ಡಿ] ಐಪಿಸಿ

ದಿನಾಂಕ:26-04-2018 ರಂದು ರಾತ್ರಿ 9-15 ರಿಂದ 10-30 ಗಂಟೆವರೆಗೆ ಬೆಂಗಳೂರು ಗೋಷಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಗಾಯಾಳು ಮಹಾಲಕ್ಷ್ಮೀ ಕೋಂ ಲಕ್ಷ್ಮಣ, 25 ವರ್ಷ, ಕುಂಚಿಟಿಗರು, ಕುಂಬಾರಹಳ್ಳಿ,  ಗೌಢಗೆರೆ ಹೋಬಳಿ, ಸಿರಾ ತಾಲ್ಲೋಕ್ ರವರು ಮಹಿಳಾ ವೈದ್ಯಾಧಿಕಾರಿ ಹಾಗೂ ನೊಂದ ಮಹಿಳೆಯ ತಾಯಿ ಪುಟ್ಟಮ್ಮ ಮತ್ತು ಮ.ಪಿ.ಸಿ-801 ಮಂಗಳಮ್ಮರವರ ಸಮ್ಮುಖದಲ್ಲಿ ಕೊಟ್ಟ ಹೇಳಿಕೆಯ ಅಂಶ ಏನೆಂದರೆ, ನಾನು ಮೇಲೆ ಹೇಳಿ ಬರೆಸಿರುವ ವಿಳಾಸದ ವಾಸಿಯಾಗಿದ್ದು, ನನಗೆ ಈಗ್ಗೆ ಸುಮಾರು 5 ವರ್ಷಗಳ ಹಿಂದೆ ನಮ್ಮ ತಂದೆ-ತಾಯಿಯವರು ನನ್ನಿಷ್ಠದಂತೆ ಕುಂಬಾರಹಳ್ಳಿ ವಾಸಿ ಲಕ್ಷ್ಮಣ ರವರಿಗೆ ಕೊಟ್ಟು ಮಧುವೆ ಮಾಡಿದ್ದು, ಮಧುವೆ ನಂತರ ನಾನು ಕುಂಬಾರಹಳ್ಳಿಯಲ್ಲಿಯೇ ನನ್ನ ಗಂಡ ಲಕ್ಷ್ಮಣ, ಅತ್ತೆ ಸತ್ಯಮ್ಮ ಹಾಗೂ ಮಾವ ಸಿದ್ದಪ್ಪ ರವರೊಂದಿಗೆ ವಾಸವಿದ್ದು, ಹಾಲಿ ಈಗ ನಮ್ಮ ಮಾವ ಸಿದ್ದಪ್ಪರವರು ತೀರಿಕೊಂಡಿರುತ್ತಾರೆ.  ನಮಗೆ 5 ವರ್ಷದ ಸಮಂತಾ ಎಂಬ ಒಬ್ಬ ಹೆಣ್ಣು ಮಗಳು,  ಸುಮಾರು 4 ವರ್ಷದ ಯಶವಂತ ಎಂಬ ಒಬ್ಬ ಗಂಡು ಮಗ ಇರುತ್ತಾರೆ. ಈ ಮದ್ಯೆ ನನಗೆ ಆಗಾಗ ಹೊಟ್ಟೆನೋವು ಕಾಣಿಸಿಕೊಂಡು ಸುಸ್ತು ಆಗುತಿತ್ತು. ನನ್ನ ಗಂಡ ಆಸ್ಪತ್ರೆಗೆ ತೋರಿಸಿ ತವರು ಮನೆಗೆ ಬರುತಿದ್ದರು. ಈಗ್ಗೆ ಸುಮಾರು 3 ತಿಂಗಳಿಂದೆಯೂ ಸಹ ಹೆಚ್ಚಾಗಿ ಸುತ್ತು ಆಗುತಿದ್ದರಿಂದ ನನ್ನ ಗಂಡನೇ ಸಿರಾ ಸರ್ಕಾರಿ ಆಸ್ಪತ್ರೆಯಲ್ಲಿ ತೋರಿಸಿ ಜವನಗೊಂಡನಹಳ್ಳಿ ಸಮೀಪ ಇರುವ ಸುವರ್ಣಮುಖಿ ನಗರದಲ್ಲಿನ ನನ್ನ ತವರು ಮನೆಗೆ ಬಿಟ್ಟಿದ್ದರು. ವಾರಕ್ಕೆ-ಹದಿನೈದು ದಿನಕ್ಕೊಮ್ಮೆ ಬಂದು ಹೋಗುತಿದ್ದರು. ದಿನಾಂಕ:19-04-18 ರಂದು ಗುರುವಾರ ಬೆಳಿಗ್ಗೆ ಸುಮಾರು 10-00 ಗಂಟೆಗೆ ಮಾವನಾದ ಶಿವಣ್ಣರವರು ನಾನಿದ್ದ ನನ್ನ ತವರು ಮನೆಗೆ ಬಂದು ದಿನಾಂಕ:20-04-18 ರಂದು ಗೃಹ ಪ್ರವೇಶ ಇದೆ ಎಂದು ನಮ್ಮ ತಂದೆಯವರಿಗೆ ತಿಳಿಸಿ ನನ್ನನ್ನು ಬೈಕಿನಲ್ಲಿ ಕೂರಿಸಿಕೊಂಡು ಕುಂಬಾರಹಳ್ಳಿಗೆ ಕರೆದುಕೊಂಡು ಹೋಗಿದ್ದು,ನಾನು ನನ್ನ ಗಂಡನ ಮನೆ ಹಾಗೂ ನನ್ನ ಮಾವ ಶಿವಣ್ಣರವರ ಮನೆಯಲ್ಲಿದ್ದುಕೊಂಡು ಗೃಹ ಪ್ರವೇಶ ಕಾರ್ಯ ಮುಗಿಸಿದ  ನಂತರ   ದಿನಾಂಕ:21-04-18 ರಂದು ಮದ್ಯಾಹ್ನ ಸುಮಾರು 12-00 ಗಂಟೆಯಲ್ಲಿ ನನ್ನ ಗಂಡನ ಮನೆಯ ಬಳಿ ಇದ್ದಾಗ ನಮ್ಮ ಅಜ್ಜಿ ಹನುಮಕ್ಕ, ನನ್ನ ಗಂಡನ ತಾಯಿಯಾದ ಅತ್ತೆ ಸತ್ಯಮ್ಮ, ಮತ್ತೊಂದು ಅತ್ತೆ ಲಕ್ಷ್ಮೀದೇವಿ ಇವರುಗಳು ನನ್ನನ್ನು ಕುರಿತು ಅಂತಳೋ, ಇಂತಳು, ತಿನ್ನೋದಿಕ್ಕೆ ಬಂದಿದ್ದೀಯಾ, ಯಾರು ಕರೆದುಕೊಂಡು ಬಂದಿದ್ದು ಎಂದೆಲ್ಲಾ ಬೈದು ತವರು ಮನೆಗೆ ಹೋಗು ಎಂದು ಹಿಂಸಿಸುತ್ತಾ ದಬ್ಬಾಡಿದರು. ಆಗ ಅಲ್ಲೇ ಇದ್ದ ನನ್ನ ಗಂಡ  ಮತ್ತು  ಮಾವ ಶಿವಣ್ಣ ರವರು ಸಹ ಸೂಳೆ ಮುಂಡೆ, ಬೇವರ್ಸಿ ಮುಂಡೆ ಎಂದೆಲ್ಲಾ ಬೈದು ಚಪ್ಪಲಿಗಳಿಂದ ಹೊಡೆದು, ತವರು ಮನೆಗೆ ಏಕೆ ಹೋಗಲ್ಲ ಎಂದು ಹಿಂಸೆ ಮಾಡಿಕೊಂಡು ನನ್ನನ್ನು ಮನೆಯ ಒಳಗಡೆ ಎಳೆದುಕೊಂಡು ಹೋಗುವಾಗ ಸಂಬಂಧಿಗಳಾದ ಅಭಿ, ಕಿರಣ, ಮತ್ತು ಮಾವ ಶಿವಣ್ಣರವರು ಬಾಯಿಗೆ ಬಟ್ಟೆ ಇಟ್ಟು ಕೈಗಳಿಂದ  ಹೊಡೆದು ಎಳದಾಡಿ, ಕಿರಣ ಮತ್ತು ಅಭಿ ಎಂಬುವರು ನನ್ನನ್ನು ಬಲವಂತವಾಗಿ ಹಿಡಿದುಕೊಂಡು ಇಬ್ಬರು ನನ್ನ ಮೇಲೆ ಅತ್ಯಾಚಾರ ಮಾಡಿ ನಂತರ ಮನೆಯಿಂದ ಹೊರಗಡೆ ಎಳೆದುಕೊಂಡು ಹೋಗಿ ಶಿವಣ್ಣ, ಕಿರಣ ಮತ್ತು ಅಭಿ ರವರು ನನ್ನನ್ನು ಕೈಗಳಿಂದ ಬಿಗಿಯಾಗಿ ಹಿಡಿದುಕೊಂಡು ಬೈಕಿನಲ್ಲಿ ಕೂರಿಸಿಕೊಂಡು ಹೋಗುವಾಗ ಬೈಕನ್ನು ಕಿರಣ ಓಡಿಸುತಿದ್ದು, ಶಿವಣ್ಣ ಮತ್ತು ಅಭಿ ಬಿಗಿಯಾಗಿ ಹಿಡಿದುಕೊಂಡು ನನ್ನನ್ನು ತವರು ಮನೆಯ ಬಳಿಗೆ ಕರೆದುಕೊಂಡು ಹೋಗಿ ಬಿಟ್ಟು ಹೋದರು.  ಆಗ ಸಮಯ ಸಂಜೆ ಸುಮಾರು 4-00 ಗಂಟೆ ಆಗಿತ್ತು. ಆಗ ಮಾರಕ್ಕ ಎಂಬುವರು ನೋಡಿ ನಮ್ಮ ತಂದೆಗೆ ಫೋನ್ ಮಾಡಿ ಕರೆಸಿಕೊಂಡರು. ನಮ್ಮ ತಂದೆ ನನ್ನನ್ನು ತಾವರೆಕೆರೆ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದರು. ಅಲ್ಲಿ ಡಾಕ್ಟರ್‌ ಇರಲಿಲ್ಲ. ನಂತರ ಸಿರಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ, ನಂತರ ಅದೇ ದಿನ ತುಮಕೂರು ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತೋರಿಸಿಕೊಂಡು ಅದೇ ದಿನ ವಾಪಾಸ್‌ ಮನೆಗೆ ಬಂದೆವು. ಮಾರನೇ ದಿನ ದಿನಾಂಕ: 22-04-18 ರಂದು ಬೆಳಿಗ್ಗೆ 10-11 ಗಂಟೆಗೆ ಸಿರಾ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ 25-04-18 ರ ಸಂಜೆ 4-00 ಗಂಟೆವರೆಗೂ ಅಲ್ಲೆ ಚಿಕಿತ್ಸೆ ಪಡೆದು ಬಿಡುಗಡೆಯಾಗಿ ನನ್ನ ತಂದೆ-ತಾಯಿ, ತಂಗಿ ಹಾಗೂ ಅಜ್ಜಿ ಜೊತೆ ಬೆಂಗಳೂರು ಅಂದ್ರಳ್ಳಿಯಲ್ಲಿರುವ ತಂಗಿ ಸುಮಾ ರವರ ಮನೆಗೆ ಹೋಗಿ ಆ ದಿನ  ರಾತ್ರಿ ಅಲ್ಲೇ ಇದ್ದು ದಿನಾಂಕ:26-04-18 ರಂದು ಬೆಳಿಗ್ಗೆ ಮಹಿಳಾ ಸಾಂತ್ವಾನ ಕೇಂದ್ರಕ್ಕೆ ಹೋಗಿ ಅಲ್ಲಿಂದ ಘೋಷಾ ಆಸ್ಪತ್ರೆಗೆ ಬಂದು ಚಿಕಿತ್ಸೆಗೆ ದಾಖಲಾಗಿರುತ್ತೇನೆ. ಈ ಘಟನೆಯಿಂದ ನನ್ನ ಹೊಟ್ಟೆ, ಮೈಕೈಗೆ ಹಾಗೂ ಮರ್ಮಸ್ಥಾನದ ಬಳಿ ನೋವಾಗಿದ್ದು, ಈ ರೀತಿಯ ಘಟನೆಗೆ ಕಾರಣರಾಗಿರುವ ಮೇಲಿನವರುಗಳ ವಿರುದ್ಧ ಕ್ರಮ ಜರುಗಿಸಬೇಕೆಂದು ತಮ್ಮಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆಂತ ಇತ್ಯಾದಿ ನೀಡಿದ ಹೇಳಿಕೆಯನ್ನು ಪಡೆದು ದಿನಾಂಕ:27-04-18 ರಂದು ಮುಂಜಾನೆ 3-30 ಗಂಟೆಗೆ ವಾಪಾಸ್‌ ಠಾಣೆಗೆ ಬಂದು  ಪ್ರಕರಣ ದಾಲಿಸಿರುತ್ತೆ.  

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ-98/2018 ಕಲಂ 379 ಐಪಿಸಿ

ದಿನಾಂಕ:26-04-2018 ರಂದು ಬೆಳಿಗ್ಗೆ 11-00 ಗಂಟೆಗೆ ಪಿರ್ಯಾದಿಯಾದ ಭ್ರಮರಾಂಬ(ಸುಧಾ) ಕೋಂ ಮಹದೇವಸ್ವಾಮಿ, 47 ವರ್ಷ, ಲಿಂಗಾಯಿತರು, ಗೃಹಿಣಿ, ಹೊಸ ಪೋಸ್ಟ್‌ ಆಫೀಸ್‌ ಪಕ್ಕ, ಹೆಬ್ಬೂರು, ತುಮಕೂರು ತಾಲ್ಲೂಕು & ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂಧರೆ ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ದಿನಾಂಕ: 12-04-2018 ರಂದು ಹೆಬ್ಬೂರಿನ ವೀರಭದ್ರೇಶ್ವರ ಸ್ವಾಮಿ ಜಾತ್ರೆ ಇದ್ದುದ್ದರಿಂದ ನಾನು ಸದರಿ ಜಾತ್ರೆಗೆಂದು ಹೋಗಿದ್ದು, ಸದರಿ ಜಾತ್ರೆಗೆ ಹೋಗುವಾಗ ನಾನು ನನ್ನ ಚಿನ್ನದ ಮಾಂಗಲ್ಯ ಸರವನ್ನು ಹಾಕಿಕೊಂಡು ಹೋಗಿದ್ದೆನು. ನಂತರ ಅದೇ ದಿವಸ ಮದ್ಯಾಹ್ನ ಸುಮಾರು 01-00 ಗಂಟೆ ಸಮಯದಲ್ಲಿ ವೀರಭದ್ರೇಶ್ವರ ಸ್ವಾಮಿ ತೇರನ್ನು ಎಳೆಯುವ ಸಮಯದಲ್ಲಿ ನನ್ನ ಕತ್ತಿನಲ್ಲಿದ್ದ ಚಿನ್ನದ ಮಾಂಗಲ್ಯ ಸರವನ್ನು ನೋಡಿಕೊಂಡಿದ್ದೆನು. ನಂತರ ತೇರನ್ನು ಎಳೆದ 10 ನಿಮಿಷಗಳ ನಂತರ ಮದ್ಯಾಹ್ನ ಸುಮಾರು 01-10 ಗಂಟೆ ಸಮಯದಲ್ಲಿ ನಾನು ನನ್ನ ಕತ್ತಿನಲ್ಲಿದ್ದ ಚಿನ್ನದ ಮಾಂಗಲ್ಯ ಸರವನ್ನು ನೋಡಿಕೊಳ್ಳಲಾಗಿ ಚಿನ್ನದ ಮಾಂಗಲ್ಯ ಸರವು ಇರುವುದಿಲ್ಲ. ದಿನಾಂಕ: 12-04-2018 ರಂದು ಮದ್ಯಾಹ್ನ ಸುಮಾರು 01-00 ಗಂಟೆಯಿಂದ ಮದ್ಯಾಹ್ಯ ಸುಮಾರು 01-10 ಗಂಟೆಯ ಮದ್ಯೆ ಯಾರೋ ಕಳ್ಳರು ನನ್ನ ಕುತ್ತಿಗೆಯಲ್ಲಿದ್ದ ಚಿನ್ನದ ಮಾಂಗಲ್ಯ ಸರವನ್ನು ಕಳ್ಳತನ ಮಾಡಿರುತ್ತಾರೆ. ಆದ್ದರಿಂದ ನನ್ನ ಚಿನ್ನದ ಮಾಂಗಲ್ಯ ಸರವನ್ನು ಕಳ್ಳತನ ಮಾಡಿರುವ ಆಸಾಮಿಯನ್ನು ಪತ್ತೆ ಮಾಡಿ ಆತನ ಮೇಲೆ ಕಾನೂನು ರೀತಿ ಮುಂದಿನ ಕ್ರಮ ಜರುಗಿಸಬೇಕೆಂದು ಈ ಮೂಲಕ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ. ಕಳ್ಳತನವಾಗಿರುವ ನನ್ನ ಚಿನ್ನದ ಮಾಂಗಲ್ಯ ಸರದ ಬೆಲೆಯನ್ನು ತಿಳಿಯಬೇಕಾಗಿರುತ್ತೆ. ನಾನು ಕಳ್ಳತನವಾಗಿರುವ ಚಿನ್ನದ ಮಾಂಗಲ್ಯ ಸರವನ್ನು ಎಲ್ಲಾ ಕಡೆ ಹುಡುಕಾಡಿ ಎಲ್ಲಿಯೂ ಸಿಗಲಿಲ್ಲವಾದ್ದರಿಂದ ಈ ದಿವಸ ತಡವಾಗಿ ಬಂದು ದೂರು ನೀಡುತ್ತಿದ್ದೇನೆ ಎಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ವೈ ಎನ್  ಹೊಸಕೋಟೆ  ಪೊಲೀಸ್ ಠಾಣಾ ಮೊ. ನಂ- 44/2018 ಕಲಂ: .143.147.148.341,323.324.504.506 RW 149 IPC

ದಿನಾಂಕ:26/04/2018 ರಂದು ಮದ್ಯಾಹ್ನ 12:30 ಗಂಟೆಗೆ ಪಿರ್ಯಾದಿ ಆನಂದ ಕುಮಾರ ಬಿನ್ ಓಬಳಪ್ಪ,28 ವರ್ಷ, ನಾಯಕ ಜನಾಂಗ, ಕೂಲಿ ಕೆಲಸ ಕೆ.ರಾಂಪುರ ಗ್ರಾಮ, ಪಾವಗಡ ತಾ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ  ನಮ್ಮ ಗ್ರಾಮದಲ್ಲಿ ಅನಿಲ ಬಿನ್ ಲಕ್ಷ್ಮೀನರಸಪ್ಪ, ಮತ್ತು ಮಾರುತಿ ಬಿನ್ ಲಕ್ಷ್ಮೀನರಸಪ್ಪ, ಎಂಬುವವರು ಈಗ್ಗೆ ಸುಮಾರು ಒಂದು ತಿಂಗಳ ಹಿಂದೆ ಸಣ್ಣ ಪುಟ್ಟ ಗಲಾಟೆ ಮಾಡಿಕೊಂಡಿದ್ದು ಗ್ರಾಮದಲ್ಲಿ ರಾಜಿ ಮಾಡಿಕೊಂಡಿರುತ್ತೇವೆ, ಇದೇ ದ್ವೇಷದಿಂದ ನಮ್ಮ ಕಡೆಯವರನ್ನು ಹೊಡೆಯಬೇಕೆಂಬ ಉದ್ದೇಶದಿಂದ ನಮ್ಮ ಕಡೆಯವರನ್ನು ಹೊಡೆಯಬೇಕೆಂದು  ದಿನಾಂಕ:25/04/2018 ರಂದು ರಾತ್ರಿ ಸುಮಾರು 7:00 ಗಂಟೆ ಸಮಯದಲ್ಲಿ ನಮ್ಮ ಮಾವ ವೆಂಕಟೇಶಪ್ಪ ಬಿನ್ ನರಸಿಂಹಪ್ಪ ಊರಿನ ಮದ್ಯಭಾಗದಲ್ಲಿರುವ ಪಾಂಡುರಂಗಪ್ಪ ಎಂಬುವವರ ಮನೆಯ ಮುಂದೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ್ಗೆ ನಮ್ಮ ಗ್ರಾಮದ ನಮ್ಮ ಜನಾಂಗದ 1] ಅನಿಲ ಬಿನ್ ಲಕ್ಷ್ಮೀ ನರಸಪ್ಪ ,26 ವರ್ಷ 2] ಮಾರುತಿ ಬಿನ್ ಲಕ್ಷ್ಮೀ ನರಸಪ್ಪ ,23 ವರ್ಷ, 3] ನಾಗರಾಜು ಬಿನ್ ರಾಮಲಿಂಗಪ್ಪ ,26 ವರ್ಷ 4] ಗಜೇಂದ್ರ ಬಿನ್ ಗಂಗಪ್ಪ , 26 ವರ್ಷ, 5] ಅನಿಲ ಬಿನ್ ಕೃಷ್ಣಪ್ಪ 23 ವರ್ಷ, 6] ಗಂಗಪ್ಪ ಬಿನ್ ಲೇ|| ಹನುಮಂತರಾಯಪ್ಪ, 27 ವರ್ಷ, 7] ಅಕ್ಕಮ್ಮ ಕೋಂ ಲಕ್ಷ್ಮೀನರಸಪ್ಪ ,35 ವರ್ಷ, 8] ಕಾಮಕ್ಷಮ್ಮ ಕೋಂ ಕೃಷ್ಣಪ್ಪ, 35 ವರ್ಷ ,9]ರಾಮಾಂಜಿನಮ್ಮ ಕೋಂ ರಾಮಲಿಂಗಪ್ಪ ,40 ವರ್ಷ ರವರುಗಳು ಅಕ್ರಮ ಗುಂಪುಕಟ್ಟಿಕೊಂಡು ಕೈಗಳಲ್ಲಿ ಇಟ್ಟಿಗೆ ಮತ್ತು ಕಲ್ಲುಗಳನ್ನು  ಹಿಡಿದುಕೊಂಡು ಬಂದು ನಮ್ಮ ಮಾವ ವೆಂಕಟೇಶಪ್ಪನನ್ನು ರಸ್ತೆಯಲ್ಲಿ ಅಡ್ಡಗಟ್ಟಿ ಸೂಳೇ ಮಗನೇ, ನಾವು ನಿನ್ನನ್ನು ಮತ್ತು ನಿನ್ನ ಕಡೆಯವರನ್ನು ಯಾವತ್ತೋ ಮುಗಿಸ ಬೇಕಿತ್ತು ಇನ್ನು ಬಿಟ್ಟುಕೊಂಡಿದ್ದಿವೀ ಎಂತ ಗಲಾಟೆ ತೆಗೆದು ಮಾರುತಿ ಎಂಬುವವನು ತನ್ನ ಕೈಲಿದ್ದ ಇಟ್ಟಿಗೆ ಯಿಂದ ನಮ್ಮ ಮಾವನ ಎಡ ಕಣ್ಣಿನ ಹತ್ತಿರ ಹೊಡೆದ್ದಾಗ್ಗೆ ನಮ್ಮ ಮಾವ ಕಿರುಚಿಕೊಂಡು ಕೆಳಕ್ಕೆ ಬಿದ್ದು ಹೋದಾಗ್ಗೆ ನಾನು ತಿಮ್ಮರಾಜು ಬಿನ್ ಕಾಮರಾಜು, ಧನಂಜಯ ಬಿನ್ ಓಬಳಪ್ಪ ರವರುಗಳು ಗಲಾಟೆ ಬಿಡಿಸಲು ಹೋದಾಗ್ಗೆ ಮೇಲ್ಕಂಡವರೆಲ್ಲರೂ ನಮ್ಮನ್ನು ಏ ಸೂಳೇ ಮಕ್ಕಳ ನಿಮ್ಮನ್ನು ಬಿಡುವುದಿಲ್ಲವೆಂತ ಏಕಾ ಏಕಿ ನಮ್ಮಗಳ ಮೇಲೆರಗಿ ನಮ್ಮಗಳನ್ನು ಕೈಗಳಿಂದ ಮೈ ಕೈಗೆ ಹೊಡೆದು ಮೈ ಕೈ ನೋವುಂಟು ಮಾಡಿದ್ದು ನಾಗರಾಜು ಬಿನ್ ರಾಮಲಿಂಗಪ್ಪ ಎಂಬುವವನು ತಿಮ್ಮರಾಜು ಎದೆಗೆ ಇಟ್ಟಿಗೆ ಯಿಂದ ಹೊಡೆದಿರುತ್ತಾನೆ, ಗಜೇಂದ್ರ ಬಿನ್ ಗಂಗಪ್ಪ ಎಂಬುವವನು ಧನಂಜಯನ ಎದೆಗೆ ಇಟ್ಟಿಗೆ ಯಿಂದ ಹೊಡೆದಿರುತ್ತಾನೆ. ಈ ಗಲಾಟೆಯನ್ನು ನೋಡಲು ಬಂದಿದ್ದ ಲಕ್ಷ್ಮೀನಾಯಕ ಬಿನ್ ಲೇ|| ಓಬಳನಾಯಕ  ಎಂಬ ಹುಡಗನಿಗೆ ಅನಿಲ ಬಿನ್ ಲಕ್ಷ್ಮೀನರಸಪ್ಪ ಎಂಬುವವನು ಕಲ್ಲಿನಿಂದ ಎಡಕಾಲು ಮುರಿದು ಹೋಗುವಂತೆ ಹೊಡೆದು ಗಾಯ ಮಾಡಿರುತ್ತಾನೆ, ಮೇಲ್ಕಂಡವರೆಲ್ಲರೂ ನಮ್ಮನ್ನು ಕೆಳಕ್ಕೆ ಹಾಕಿಕೊಂಡು ಕಾಲುಗಳಿಂದ ತುಳಿದು , ಕೈಗಳಿಂದ ಮೈ ಕೈಗಳಿಗೆ ಗುದ್ದಿ ನಿಮ್ಮನ್ನು ಕೊಲೆ ಮಾಡಿ ಸಾಯಿಸುವವರೆವಿಗೂ ಬಿಡುವುದಿಲ್ಲ, ನಿಮ್ಮನ್ನು ಊರಿನಲ್ಲಿ ಇರುವುದಕ್ಕೆ ಬಿಡುವುದಿಲ್ಲ ಎಂತ ಗಲಾಟೆ ಮಾಡುತ್ತಿರುವಾಗ್ಗೆ ನಮ್ಮ ಗ್ರಾಮದ ಅನಿಲ ಬಿನ್ ಅಂಜಿನಪ್ಪ, ಮತ್ತು ಅಂಜಿನಪ್ಪ ಬಿನ್ ಮಂದಲಪಲ್ಲಿ ಹನುಮಂತಪ್ಪ ಎಂಬುವವರು ಗಲಾಟೆ ಬಿಡಿಸಿದ್ದು ಆರೋಪಿಗಳೆಲ್ಲರೂ ಗಲಾಟೆ ಬಿಡಿಸಿದ್ದು ಆರೋಪಿತರೆಲ್ಲರೂ ನಿಮ್ಮಮ್ಮನ್ನ ಕ್ಯಾಯ ನಿಮ್ಮನ್ನು ಸಾಯಿಸಿದೇ ಬಿಡುವುದಿಲ್ಲವೆಂತ ಬೈಯ್ದುಕೊಂಡು ಹೋಗಿರುತ್ತಾರೆ, ಗಾಯವಾಗಿದ್ದ ನಮ್ಮನ್ನು ಪಾವಗಡ ಸರ್ಕಾರಿ ಆಸ್ಪತ್ರೆಗೆ ಯಾವುದೋ ವಾಹನದಲ್ಲಿ ಕಡೆದುಕೊಂಡು ಹೋಗಿ ಚಿಕಿತ್ಸೆಗೆ ಸೇರಿಸಿದ್ದು ನಾನು ಆಸ್ಪತ್ರೆಯಲ್ಲಿ ನಮ್ಮವರಿಗೆ ಚಿಕಿತ್ಸೆ ಕೊಡಿಸಿ ಈ ದಿನ ತಡವಾಗಿ ಬಂದು ದೂರು ನೀಡಿರುತ್ತೇನೆ. ಕಾನೂನು ಕ್ರಮ ಕೈಗೊಂಡು ನ್ಯಾಯ ದೊರಕಿಸಿ ಕೊಡಬೇಕೆಂತ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತದೆ.Thursday, 26 April 2018

ಪತ್ರಿಕಾ ಪ್ರಕಟಣೆ ದಿ26-04-18

ಪತ್ರಿಕಾ ಪ್ರಕಟಣೆ:-

-:ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿಯ ಬಂಧನ:-

ದಿನಾಂಕ : 26-04-2018

ದಿನಾಂಕ:-20.02.2018 ರಂದು ರಾತ್ರಿ ವೇಳೆಯಲ್ಲಿ ಹೊಳವನಹಳ್ಳಿಯಲ್ಲಿರುವ ಸೈಯದ್ ಹುಸೇನ್ ಸಾಬ್ ಬಿನ್ ಲೇಟ್ ಸೈಯದ್ ಎಂಬುವವರಿಗೆ ಸೇರಿದ ಮೊಬೈಲ್ ಅಂಗಡಿಯನ್ನು ಕಳ್ಳತನ ಮಾಡಿ ಅಂಗಡಿಯಲ್ಲಿದ್ದ ರೂ 1,72,136/- ರೂ ಬೆಲೆ ಬಾಳುವ ಒಟ್ಟು 27 ಮೊಬೈಲ್ಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,

ಸದರಿ ಪ್ರಕರಣದ ಆರೋಪಿಯನ್ನು ಪತ್ತೆ ಹಚ್ಚಲು ಹೊರಟಾಗ ಆರೋಪಿಯು ಹಾಲಿ ಚಿಕ್ಕಬಳ್ಳಾಪುರ ಕಾರಾಗೃಹದಲ್ಲಿರುವ ವಿಚಾರ ತಿಳಿದು, ನಜೀರ್ @ ಅಮರ್ ಬಿನ್ ಲೇಟ್ ಕರೀಂ ಸಾಬ್ @ ಕೃಷ್ಣಪ್ಪ 25 ವರ್ಷ ಮುಸ್ಲಿಂ ಜನಾಂಗ ಮುತ್ತೂರು ದೊಡ್ಡಬಳ್ಳಾಪುರ ಟೌನ್ ವಾಸಿಯನ್ನು ನ್ಯಾಯಾಂಗ ಬಂಧನದಿಂದ ಪೊಲೀಸ್ ವಶಕ್ಕೆ ಪಡೆದು ಆರೋಪಿಯ ಕಡೆಯಿಂದ ಸುಮಾರು 1,25,000/- ರೂ ಬೆಲೆ ಬಾಳುವ 08 ಬೇಸಿಕ್ ಸೆಟ್ ಮೊಬೈಲ್ಗಳನ್ನು ಹಾಗೂ 08 ಸ್ಮಾಟರ್್ ಪೋನ್ಗಳನ್ನು ವಶಪಡಿಸಿಕೊಂಡು ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಯ ಪತ್ತೆ ಬಗ್ಗೆ ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ.ದಿವ್ಯ ವಿ ಗೋಪಿನಾಥರವರು, ತುಮಕೂರು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಡಾ.ವಿ.ಜೆ.ಶೋಭಾರಾಣಿರವರು, ಮಧುಗಿರಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀಓ.ಬಿ.ಕಲ್ಲೇಶಪ್ಪರವರುಗಳ ಮಾರ್ಗದರ್ಶನದಲ್ಲಿ  ಹಾಗೂ ಕೊರಟಗೆರೆ ಆರಕ್ಷಕ ವೃತ್ತ ನಿರೀಕ್ಷಕರಾದ ಶ್ರೀ ಮಹೇಶ್.ಬಿ, ನೇತೃತ್ವದಲ್ಲಿ, ಕೊರಟಗೆರೆ ಪೊಲೀಸ್ ಆರಕ್ಷಕ ಉಪ ನಿರೀಕ್ಷಕರಾದ ಶ್ರೀಮಂಜುನಾಥ ಬಿಸಿ  ಹಾಗೂ ಸಿಬ್ಬಂದಿಗಳಾದ ಮಂಜುನಾಥ್, ಸೋಮನಾಥ, ರಂಗನಾಥ, ಚಂದ್ರಶೇಖರ್, ಚನ್ನಮಲ್ಲಿಕಾಜರ್ುನ, ಪ್ರಶಾಂತ, ಪಾಂಡುರಂಗರಾವ್ ಜಿಲ್ಲಾ ಪೊಲೀಸ್ ಕಛೇರಿಯ ನರಸಿಂಹರಾಜು ರವರುಗಳನ್ನೊಳಗೊಂಡ ತಂಡವನ್ನು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕಕರು ಅಭಿನಂದಿಸಿರುತ್ತಾರೆ.

 


ಅಪರಾಧ ಘಟನೆಗಳು 26-04-18

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ ನಂ 35/2018 ಕಲಂ 279,337 ಐ.ಪಿ.ಸಿ

ದಿನಾಂಕ:25-04-18 ರಂದು   ಮಧ್ಯಾಹ್ನ  2-30 ಗಂಟೆಗೆ  ಈ ಕೇಸಿನ ಪಿರ್ಯಾದಿ ದೇವರಾಜು ಬಿನ್  ಮುನಿಯಪ್ಪ, 39 ವರ್ಷ, ದೇವರಹಳ್ಳಿ, ತಿಪಟೂರು ತಾ ರವರು ಠಾಣೆಗೆ ಹಾಜರಾಗಿ  ನೀಡಿದ  ಲಿಖಿತ ದೂರಿನ ಸಾರಾಂಶವೇನೆಂದರೆ,  ಇಂದು  ಕೆಎ-44, ಟಿ-1294, ಟಿ-1295 ನೇ ಟ್ರಾಕ್ಟರ್  ನಲ್ಲಿ  ನಾನು ಚಾಲಕಾಗಿ ತಿಪಟೂರಿನಲ್ಲಿ ಜೆಲ್ಲಿಯನ್ನು ಅನ್ ಲೋಡ್  ಮಾಡಿ ವಾಪಸ್  ದೇವರಹಳ್ಳಿಗೆ  ಹೋಗಲು ಸುಮಾರು  ಬೆಳಿಗ್ಗೆ 11-00 ಗಂಟೆ ಸಮಯದಲ್ಲಿ  ಎನ್. ಹೆಚ್ 206 ರಸ್ತೆಯಲ್ಲಿ ಕೋಟನಾಯ್ಕನಹಳ್ಳಿ-ಹುಚ್ಚಗೊಂಡನಹಳ್ಳಿ ರಸ್ತೆಯ ನಿರ್ಮಲ ಡಾಬಾ  ಹತ್ತಿರ  ರಸ್ತೆಯ ಎಡಭಾಗದಲ್ಲಿ ಚಾಲನೆ ಮಾಡಿಕೊಂಡು  ಹೋಗುವಾಗ  ಎದುರಿಗೆ  ಅಂದರೆ ಕೆ.ಬಿ ಕ್ರಾಸ್  ಕಡೆಯಿಂದ  ಬಂದ  ಕೆಎ-09,ಎಪ್-5253 ನೇ ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ ತನ್ನ ವಾಹನವನ್ನು ಅತಿ ವೇಗ & ಆಜಾಗರೂಕತೆಯಿಂದ  ಚಾಲನೆ ಮಾಡಿಕೊಂಡು ಬಂದು  ನಾನು ಓಡಿಸುತ್ತಿದ್ದ  ಮೇಲ್ಕಂಡ ಟ್ರಾಕ್ಟರ್  ಡಿಕ್ಕಿ ಹೊಡೆಸಿದ್ದರಿಂದ  ಟ್ರೈಲರ್ ನ  ತೊಟ್ಲು ಬೇರ್ಪಟ್ಟು, ರಸ್ತೆಯ ಸೇತುವೆಯ ಕೆಳಕ್ಕೆ ಬಿದ್ದರಿರುತ್ತೆ   ಹಾಗೂ ಕೆ.ಎಸ್.ಆರ್.ಟಿ.ಸಿ ಬಸ್  ನ  ಮುಂಬದಿಯ ಬಲಭಾಗ ಜಖಂಗೊಂಡು  ಚಾಲಕ  ಪ್ರಶಾಂತ್ ರವರಿಗೆ  ರಕ್ತಗಾಯವಾಗಿರುತ್ತೆ  ಈ ಅಪಘಾತಕ್ಕೆ  ಕಾರಣವಾದ  ಕೆಎ-09,ಎಪ್-5253 ನೇ ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ ಪ್ರಶಾಂತ್  ರವರ ಮೇಲೆ  ಕಾನೂನು ಕ್ರಮ ಕೈಗೊಳ್ಳಿ ಎಂತಾ ನೀಡಿದ  ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

ಹೊನ್ನವಳ್ಳಿ ಪೊಲೀಸ್ ಠಾಣೆ ಠಾಣಾ ಮೊ ನಂ 24/2018 ಕಲಂ:279.337. ಐಪಿಸಿ

ದಿನಾಂಕ 25/04/2018 ರಂದು ಮದ್ಯಾಹ್ನ 12-15  ರಿಂದ 1-00 ಗಂಟೆಯವರೆಗೆ ತಿಪಟೂರು ಜನರಲ್‌ ಆಸ್ವತ್ರೆಯಲ್ಲಿ ಓಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ರಂಜಿತ್‌ ಬಿನ್‌ ರಮೇಶ 19 ವರ್ಷ ಉಪ್ಪಾರ ಜನಾಂಗ ಕೂಲಿಕೆಲಸ ಹಾಲೇನಹಳ್ಳಿ ಹೊನ್ನವಳ್ಳಿ  ಹೋಬಳಿ, ತಿಪಟೂರು ತಾಲ್ಲೂಕು ರವರು ನೀಡಿದ ಹೇಳಿಕೆಯ ಅಂಶ ಏನೆಂದರೆ ದಿನಾಂಕ -24/04/2018 ರಂದು ನಾನು ನಮ್ಮ ಸಂಬಂಧಿಕರ ಮನೆ ವಗವನಘಟ್ಟಕ್ಕೆ ನನ್ನ ಕೆಎ 13.ಇಎಂ.0636 ನೇ ಹಿರೋಅಚೀವರ್‌ ಬೈಕ್‌ನಲ್ಲಿ ಹೋಗಿ ಈ ದಿನ ದಿನಾಂಕ 25/04/2018 ರಂದು ವಾಪಸ್‌ ಊರಿಗೆ ಹೋಗಲು ಬೆಳಿಗ್ಗೆ 9-30 ರಲ್ಲಿ ನಮ್ಮೂರಿನ ಹತ್ತಿರ ತಿಪಟೂರು ಹುಳಿಯಾರು ರಸ್ತೆಯಲ್ಲಿ ಹಾಲೇನಹಳ್ಳಿ ಗೇಟ್‌ ತಿರುವಿನಲ್ಲಿ ಹೋಗಿತ್ತಿರುವಾಗ ಎದುರು ಕಡೆಯಿಂದ ಒಂದು ಲಾರಿ ಬರುತ್ತಿದ್ದು, ಸದರಿ ಲಾರಿ ಹಿಂಭಾಗದಿಂದ ಬರುತ್ತಿದ್ದ, ಕೆಎ.06.ಆರ್‌.3394 ನೇ ಹೀರೋಹೊಂಡಾ ಸ್ಪೆಂಡರ್‌ ಪ್ಲೆಸ್‌ ಬರುತ್ತಿದ್ದ ಅಸಾಮಿ ಲಾರಿಯನ್ನು ಓವರ್‌ಟೇಕ್‌ ಮಾಡಿಕೊಂಡು ಮುಂದೆ ಬಂದು ನನ್ನ ಬೈಕ್‌ ಹೋಗುತಿದ್ದ  ಎಡಭಾಗಕ್ಕೆ ಡಿಕ್ಕಿ ಹೊಡೆಸಿದನು.ಇದರಿಂದ ನಾನು ಮತ್ತು ಎದುರು ಬೈಕ್‌ ಸವಾರ ಇಬ್ಬರು ಕೆಳಗೆ ಬಿದ್ದೇವು ನನಗೆ ಬಲಗಾಲಿಗೆ , ಎಡಕಾಲಿಗೆ ಮತ್ತು ಹಣೆಗೆ ಪೆಟ್ಟಾಗಿರುತ್ತೆ. ಎದುರು ಬೈಕ್‌ ಸವಾರನಿಗೂ ಪೆಟ್ಟಾಗಿರುತ್ತೆ. ಎರಡು ಬೈಕ್‌ ಜಕಂ ಆಗಿರುತ್ತವೆ. ಅಪಘಾತ ನೋಡಿದ ಜನರು ನಮ್ಮಿಬ್ಬರನ್ನು 108 ವಾಹನದಲ್ಲಿ ಕರೆದುಕೊಂಡು ಬಂದು ತಿಪಟೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿರುತ್ತಾರೆ ಎದುರುಗಡೆ ಬಂದ ಬೈಕ್‌ ಸವಾರನ ಹೆಸರು ಬಸವರಾಜು ಹಾಲ್ಕುರಿಕೆ ಎಂದು ಗೊತ್ತಾಗಿರುತ್ತೆ. ಈ ಅಪಘಾತಕ್ಕೆ ಬಸವರಾಜುರವರು ಬೈಕನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಹೊಡೆಸಿದ್ದರಿಂದ, ಸದರಿ ಬೈಕ್‌ ಚಾಲಕನ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳಲು ನೀಡಿದ ಹೇಳಿಕೆಯನ್ನು  ಪಡೆದು ಠಾಣೆಗೆ ಮದ್ಯಾಹ್ನ 1-30 ಗ ಗಂಟೆಗೆ ಬಂದು ಠಾಣಾ ಮೊ ನಂ 24/2018 ಕಲಂ:279.337. ಐಪಿಸಿ ರೀತ್ಯಾ ಪ್ರಕರಣ ದಾಖಲು ಮಾಡಿರುತ್ತೆನೆWednesday, 25 April 2018

ಪತ್ರಿಕಾ ಪ್ರಕಟಣೆ ದಿಃ25-04-18.

ಪತ್ರಿಕಾ ಪ್ರಕಟಣೆ

ದಿಃ25-04-2018.


ದಿನಾಂಕ:24-04-2018 ರ ರಾತ್ರಿ 3 ಜನ ಅನುಮಾನಸ್ಪದ ವ್ಯಕ್ತಿಗಳು ಹಳ್ಳಿಯೊಂದರಲ್ಲಿ ಇದ್ದು, ಅವರುಗಳನ್ನು ಗ್ರಾಮಸ್ಥರು ಹಿಡಿದುಕೊಂಡಿರುತ್ತಾರೆ ಎಂಬಂತಹ ಮಾಹಿತಿಯನ್ನು ಪೊಲೀಸ್ ಸಬ್ ಇನ್ಸ್ಪೆಕ್ಟರ್, ತುಮಕೂರು ನಗರ ಪೊಲೀಸ್ ಠಾಣೆ ರವರಿಗೆ ಬಂದಿರುತ್ತದೆ.

ಮೇಲ್ಕಂಡ ಮಾಹಿತಿ ಮೇರೆಗೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ರವರು ಚೋಳಂಬಳ್ಳಿ ಗ್ರಾಮಕ್ಕೆ ಹೋಗಿದ್ದು, ಆ ಸಂದರ್ಭದಲ್ಲಿ 15-20 ಜನರ ಗುಂಪು 3 ಜನರ ಮೇಲೆ ಹಲ್ಲೆ ನಡೆಸುತ್ತಿದ್ದುದನ್ನು ನೋಡಿ ಅವರನ್ನು ಬಿಡಿಸಿದ್ದು, ಈ 3 ಜನರ ಪೈಕಿ ಒಬ್ಬನ ಕೈಯಲ್ಲಿ ಪಿಸ್ತೂಲ್ ಇರುತ್ತದೆ. ಪೊಲೀಸ್ ಸಬ್ ಇನ್ಸ್ಪೆಕ್ಟರ್, ತುಮಕೂರು ನಗರ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಗಳು ಸದರಿ 3 ಜನ ಆರೋಪಿಗಳನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದು, ಸಾರ್ವಜನಿಕರು ಹಲ್ಲೆ ಮಾಡಿದ್ದರಿಂದ ತುಮಕೂರು ನಗರ ಠಾಣೆ ಅಪರಾಧ ಸಂಖ್ಯೆ. 127/18 (ಸಾರ್ವಜನಿಕರಿಂದ ಹಲ್ಲೆಗೆ ಸಂಬಂಧಿಸಿದಂತೆ) ರೀತ್ಯ ಪ್ರಕರಣ ದಾಖಲಾಗಿರುತ್ತದೆ.

ಆನಂತರ ಆರೋಪಿಗಳ ಬಗ್ಗೆ ವಿಚಾರಿಸಲಾಗಿ ಅವರುಗಳ ಹೆಸರು 1)ಮಹಮ್ಮದ್ ಅಫ್ತಾ, 39 ವರ್ಷ, ಬೆಂಗಳೂರು ನಗರ ವಾಸಿ 2) ಸಯ್ಯಾದ್ ಖಾಸಿಂ ಸಾಬ್, 35 ವರ್ಷ, ಬೆಂಗಳೂರು ನಗರ ವಾಸಿ 3) ಶೇಖರ್, 23 ವರ್ಷ, ಹೊಸಕೋಟೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಎಂದು ತಿಳಿದು ಬಂದಿರುತ್ತದೆ. ಇವರುಗಳ ಪೈಕಿ, ಮಹಮ್ಮದ್ ಅಫ್ತಾ ಎಂಬುವವರಿಂದ ಪಿಸ್ತೂಲ್ ನ್ನು  ಪೊಲೀಸ್ ಸಬ್ ಇನ್ಸ್ಪೆಕ್ಟರ್ ರವರು ವಶಕ್ಕೆ ಪಡೆದುಕೊಂಡು ತುಮಕೂರು ನಗರ ಠಾಣೆ ಅಪರಾಧ ಸಂಖ್ಯೆ. 128/18 (ಅಕ್ರಮ ಶಸ್ತಾಸ್ತ್ರ ಹೊಂದಿರುವ ಬಗ್ಗೆ) ರೀತ್ಯ ಮತ್ತೊಂದು ಪ್ರಕರಣವನ್ನು ದಾಖಲಿಸಿಕೊಂಡು ತನಿಖಾ ವಿಧಾನಗಳನ್ನು ಅನುಸರಿಸುತ್ತಿರುವಾಗ ಆರೋಪಿ ಮಹಮ್ಮದ್ ಆಪ್ತಾ ಎಂಬುವವರು ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಕುಸಿದು ಬಿದ್ದಿದ್ದು, ತಕ್ಷಣವೇ ಸದರಿ ಆರೋಪಿಯನ್ನು ತುಮಕೂರು ಜಿಲ್ಲಾ ಸಕರ್ಾರಿ ಆಸ್ಪತ್ರೆಗೆ ದಾಖಲಿಸಲಾಗಿರುತ್ತದೆ. ಪರೀಕ್ಷೆ ನಡೆಸಿದ ವೈದ್ಯಾಧಿಕಾರಿಗಳು ಆರೋಪಿಯು ಮರಣ ಹೊಂದಿರುವುದಾಗಿ ತಿಳಿಸಿರುತ್ತಾರೆ. ಇದರ ಆಧಾರದ ಮೇರೆಗೆ ಕೊಲೆ ಪ್ರಕರಣವೊಂದನ್ನು ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ದಾಖಲಿಸಿಕೊಂಡು ಮುಂದಿನ ತನಿಖೆಯನ್ನು ಡಿ.ಎಸ್.ಪಿ. ಮಧುಗಿರಿ ಉಪ ವಿಭಾಗ ರವರಿಗೆ ವಹಿಸಲಾಗಿರುತ್ತದೆ.  ಈ ಪ್ರಕರಣವು ಕಸ್ಟೋಡಿಯಲ್ ಡೆತ್ ಪ್ರಕರಣವಾಗಿರುವುದರಿಂದ ಮಾನ್ಯ ರಾಜ್ಯ ಮಾನವ ಹಕ್ಕುಗಳ ಆಯೋಗದ ಮಾರ್ಗಸೂಚಿಯಲ್ಲಿನಂತೆ ಮುಂದಿನ ತನಿಖೆಗಾಗಿ ಸಿ.ಐ.ಡಿ. ಘಟಕಕ್ಕೆ ವಹಿಸಲಾಗುವುದು.

ಆರೋಪಿ ಮಹಮದ್ ಆಪ್ತಾ ಎಂಬುವವನ ಮೇಲೆ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಲಾಭಕ್ಕಾಗಿ ಕೊಲೆ ಪ್ರಕರಣ, ಬೆಂಗಳೂರು ನಗರದ ಜ್ಙಾನಭಾರತಿ ಮತ್ತು ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ  ದರೋಡೆ ತಯಾರಿಯಂತಹ ಪ್ರಕರಣಗಳು ಹಾಗೂ ಹೆಣ್ಣೂರು ಮತ್ತು ಭಾರತಿ ನಗರ ಪೊಲೀಸ್ ಠಾಣೆಗಳಲ್ಲಿ ಕಳ್ಳತನದ ಪ್ರಕರಣಗಳು ದಾಖಲಾಗಿರುವ ಬಗ್ಗೆ ಮಾಹಿತಿ ಇರುತ್ತದೆ.


ಅಪರಾಧ ಘಟನೆಗಳು 25-04-18

ಮಿಡಿಗೇಶಿ ಪೊಲೀಸ್ ಠಾಣಾ ಮೊನಂನಂ46/2018, ಕಲಂ: 279,337,304(A) IPC

ದಿನಾಂಕ:23/04/2018 ರಂದು ಸಂಜೆ 05:00 ಗಂಟೆ ಸಮಯದಲ್ಲಿ ಪಿರ್ಯಾದಿ ಕೇಶವ ಬಿನ್ ಬಸವಂತಪ್ಪ, 36 ವರ್ಷ, ಈಡಿಗರ ಜನಾಂಗ, ಜಿರಾಯ್ತಿ ಕೆಲಸ, ತಲಗಡ್ಡೆ ಗ್ರಾಮ, ಜಡೆ ಹೋಬಳಿ, ಸೊರಬ ತಾಲ್ಲೋಕು, ಶಿವಮೊಗ್ಗ ಜಿಲ್ಲೆ, ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನಂಶವೇನೆಂದರೆ  ನಮ್ಮ ತಂದೆ ಬಸವಂತಪ್ಪ ತಾಯಿ ಗಂಗಮ್ಮ ರವರಿಗೆ ಇಬ್ಬರು ಗಂಡು ಮಕ್ಕಳು ಹಾಗೂ ಇಬ್ಬರೂ ಹೆಣ್ಣು ಮಕ್ಕಳಿದ್ದು ಎಲ್ಲರಿಗೂ ಮದುವೆಗಳಾಗಿರುತ್ತವೆ. ನನ್ನ ತಮ್ಮನಾದ ಗಜೇಂದ್ರ ಆತನ  ಹೆಂಡತಿ ರಂಜಿತಾ ನಮ್ಮ ತಂದೆ ತಾಯಿಯೊಂದಿಗೆ  ಒಟ್ಟಿಗೆ ವಾಸವಿದ್ದು, ನಾನು ನನ್ನ ಹೆಂಡತಿ ಮಕ್ಕಳೊಂದಿಗೆ ಅದೇ ಮನೆಯಲ್ಲಿ ಬೇರೆ ವಾಸವಿರುತ್ತೇನೆ. ನನ್ನ ತಮ್ಮ ಗಜೇಂದ್ರ 32 ವರ್ಷ ರವರು ಬೆಂಗಳೂರಿನಲ್ಲಿ  ಎಮಿಷನ್ ಟೆಸ್ಟ್ ಕೆಲಸ ಮಾಡಿಕೊಂಡಿದ್ದು ವಾರಕ್ಕೊಮ್ಮೆ ಊರಿಗೆ ಬಂದು ಹೆಂಡತಿಯನ್ನು ಹಾಗೂ ನಮ್ಮ ತಂದೆ ತಾಯಿಗಳನ್ನು, ನಮ್ಮನ್ನು ನೋಡಿಕೊಂಡು ಯೋಗಕ್ಷೇಮವನ್ನು ವಿಚಾರಿಸಿಕೊಂಡು ಹೋಗುತ್ತಿದ್ದನು. ಈಗಿರುವಾಗ  ದಿನಾಂಕ:22/04/2018 ರಂದು ಸಂಜೆ ನನ್ನ ತಮ್ಮ ಗಜೇಂದ್ರನು ನಮ್ಮ ಮನೆಗೆ ಪೋನ್ ಮಾಡಿ ವಿದುರಾಶ್ವತದಲ್ಲಿ  ನನ್ನ ಸ್ನೇಹಿತನಾದ ಮಧುಗಿರಿ ತಾಲ್ಲೋಕಿನ ತೊಂಡೋಟಿ ಗ್ರಾಮದ ವಾಸಿ ಮಂಜುನಾಥ ರವರ ಮಧುವೆ ಕಾರ್ಯಕ್ರಮವಿದ್ದು  ಕಾರಿನಲ್ಲಿ ನನ್ನ ಸ್ನೇಹಿತರ ಜೊತೆಯಲ್ಲಿ ಮಧುವೆಗೆ ಬಂದಿರುತ್ತೇನೆಂತ  ಹೇಳಿದ್ದನು. ನಂತರ ಈ  ದಿನ ಅಂದರೆ ದಿನಾಂಕ:23/04/2018 ರಂದು ಸುಮಾರು 01:30 ಎ.ಎಂ.ಗೆ ನನ್ನ ಸ್ನೇಹಿತನಾದ ಜಗಧೀಶ ಎಂಬುವನು ನಮ್ಮ ಮನೆಯ ಬಳಿ ಬಂದು  ಮದುವೆಗೆ ಹೋಗಿದ್ದ ಗಜೇಂದ್ರರವರ ಕಾರು ಮಧುಗಿರಿ ತಾಲ್ಲೋಕಿನ ಗಿರಿಯಮ್ಮನಪಾಳ್ಯದ ಹತ್ತಿರ ಮಧುಗಿರಿ ಪಾವಗಡ ರಸ್ತೆಯಲ್ಲಿ ಅಪಘಾತವಾಗಿ ಕಾರಿನಲ್ಲಿದ್ದ ನಿನ್ನ ತಮ್ಮ ಗಜೇಂದ್ರನಿಗೆ  ಹಾಗೂ ಆತನ ಸ್ನೇಹಿತರಿಗೆ ಪೆಟ್ಟುಗಳು ಬಿದ್ದು ನಿನ್ನ ತಮ್ಮ ಗಜೇಂದ್ರನಿಗೆ ಸಿರಿಯಸ್ ಆಗಿದೆಯಂತೆ ಆತನನ್ನು ಚಿಕಿತ್ಸೆಗೆ ತುಮಕೂರಿಗೆ ಕರೆದುಕೊಂಡು ಹೋಗುತ್ತಿದ್ದಾರೆ ಎಂತ  ಆತನ ಜೊತೆಯಲ್ಲಿದ್ದ ಹನುಮಂತ ಎಂಬುವರು ನನಗೆ ಪೋನ್ ಮಾಡಿ ತಿಳಿಸಿದರೆಂತ ವಿಷಯ ತಿಳಿಸಿದನು. ವಿಷಯ ತಿಳಿದ ನಾನು ಕೂಡಲೇ ನನ್ನ ಸ್ನೇಹಿತರಾದ ಬಸವರಾಜು ಮತ್ತು ಮಧುಚಂದ್ರರವರೊಂದಿಗೆ ಊರಿನಿಂದ ಹೊರಟು ತುಮಕೂರಿನಲ್ಲಿರುವ ಸರ್ಕಾರಿ ಆಸ್ಪತ್ರೆಯ ಬಳಿ ಬಂದು ನೋಡಲಾಗಿ ನನ್ನ ತಮ್ಮ ಗಜೇಂದ್ರನು ಮೃತಪಟ್ಟಿದ್ದು ಆತನ ಶವ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿತ್ತು. ನನ್ನ ತಮ್ಮನ ಜೊತೆ ಕಾರಿನಲ್ಲಿದ್ದ ಹನುಮಂತನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆತನನ್ನು ವಿಚಾರ ಮಾಡಲಾಗಿ ಈ ದಿನ ಅಂದರೆ ದಿನಾಂಕ:22/04/2018 ರಂದು ಬೆಳಿಗ್ಗೆ ವಿದುರಾಶ್ವತ್ತದಲ್ಲಿ  ನಮ್ಮ ಸ್ನೇಹಿತ ಮಧುಗಿರಿ ತಾಲ್ಲೋಕಿನ ತೊಂಡೋಟಿ ಗ್ರಾಮದ ವಾಸಿ ಮಂಜುನಾಥ ರವರ ಮಧುವೆ ಕಾರ್ಯಕ್ರಮವಿದ್ದು ನಾನು ಮತ್ತು ನಿನ್ನ ತಮ್ಮ ಗಜೇಂದ್ರ ಹಾಗೂ ನಮ್ಮ ಸ್ನೇಹಿತರಾದ ಗಿರೀಶ್,ಕಿರಣ್, ಹಾಗೂ ಶ್ರೀಕಾಂತ್ ಎಲ್ಲರೂ ನಾವುಗಳು ಕೆಲಸ ಮಾಡುತ್ತಿದ್ದ ಎಮಿಷನ್ ಟೆಸ್ಟ್ ಸೆಂಟರ್ನ ಮಾಲೀಕರಾದ ಜನಾರ್ಧನ ರವರ ಬಾಬ್ತು ಕೆಎ-01-ಎಂ.ಡಿ.4095 ನೇ ಮಾರುತಿ ಸ್ವಿಪ್ಟ್ ಕಾರಿನಲ್ಲಿ  ವಿಧುರಾಶ್ವಕ್ಕೆ ಬಂದು ನನ್ನ ಸ್ನೇಹಿತನ ಮಧುವೆ ಕಾರ್ಯಕ್ರಮ ಮುಗಿಸಿಕೊಂಡು ನಂತರ ವದು-ವರರನ್ನು  ತೊಂಡೋಟಿ ಗ್ರಾಮಕ್ಕೆ ಬಿಟ್ಟು ವಾಪಾಸ್ ಬೆಂಗಳೂರಿಗೆ ಹೋಗಲು ಅದೇ ಕಾರಿನಲ್ಲಿ  ಐ.ಡಿ.ಹಳ್ಳಿ ಹೊಸಕೆರೆ ಮಾರ್ಗವಾಗಿ ಮದುಗಿರಿ- ಪಾವಗಡ ರಸ್ತೆಯಲ್ಲಿ ಗಿರಿಯಮ್ಮನ ಪಾಳ್ಯದ ಹತ್ತಿರ ಅದೇ ದಿನ ರಾತ್ರಿ ಸುಮಾರು 11:00 ಗಂಟೆ ಸಮಯದಲ್ಲಿ ಹೋಗುತ್ತಿದ್ದಾಗ ಮೇಲ್ಕಂಡ  ಕೆಎ-01-ಎಂ.ಡಿ.4095 ನೇ ಕಾರನ್ನು ಚಾಲನೆ ಮಾಡುತ್ತಿದ್ದ ಶ್ರೀಕಾಂತ್ ಎಂಬುವನು ಕಾರನ್ನು ಅತಿ ಜೋರಾಗಿ ಮತ್ತು ಅಡ್ಡಾದಿಡ್ಡಿಯಾಗಿ ಚಾಲನೆ ಮಾಡಿ ನಮ್ಮ ಕಾರಿನ ಮುಂದೆ ರಸ್ತೆಯಲ್ಲಿ ಹೋಗುತ್ತಿದ್ದ ಯಾವುದೋ ವಾಹನಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತವುಂಟು ಮಾಡಿದ್ದರಿಂದ ಕಾರು ಜಖಂ ಆಗಿ  ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತ್ತಿದ್ದ ನನ್ನ ಎರಡು ಕೈಗಳಿಗೆ ಹಾಗೂ ತಲೆಗೆ ಪೆಟ್ಟುಗಳು ಬಿದ್ದು  ರಕ್ತಗಾಯಗಳಾದವು, ನಂತರ ನನ್ನ ಪಕ್ಕದಲ್ಲಿ ಕುಳಿತಿದ್ದ ಗಿರೀಶನಿಗೆ ಹಣೆಗೆ ಹಾಗೂ ಕಿರಣ್ ಗೆ ಎಡಕಣ್ಣಿಗೆ, ಹಾಗೂ ಕಾರನ್ನು ಚಾಲನೆ ಮಾಡುತ್ತಿದ್ದ ಶ್ರೀಕಾಂತನಿಗೆ ತಲೆಗೆ ಮತ್ತು ಕುತ್ತಿಗೆಗೆ ಪೆಟ್ಟುಗಳು ಬಿದ್ದು ರಕ್ತಗಾಯಗಳಾಗಿದ್ದವು. ಸದರಿ ಕಾರಿನ ಮುಂದಿನ ಸೀಟಿನಲ್ಲಿ ಕುಳಿತ್ತಿದ್ದ ನಿನ್ನ ತಮ್ಮ ಗಜೇಂದ್ರನಿಗೆ ಮುಖಕ್ಕೆ, ತಲೆಗೆ,ಎದೆಗೆ, ಹಾಗೂ ಎರಡು ಕಾಲುಗಳಿಗೆ ತೀವ್ರ ತರವಾದ ಪೆಟ್ಟುಗಳು ಬಿದ್ದು ರಕ್ತಗಾಯಗಳಾಗಿದ್ದವು. ಅಷ್ಠರಲ್ಲಿ ಅಪಘಾತದ  ವಿಚಾರ ತಿಳಿದು ಸ್ಥಳಕ್ಕೆ ಬಂದ ಯಾರೋ ಸಾರ್ವಜನಿಕರು ನಮ್ಮನ್ನು ಆಂಬ್ಯೂಲೆನ್ಸ್ ನಲ್ಲಿ ಆಸ್ಪತ್ರೆಗೆ ಕಳುಹಿಸಿಕೊಟ್ಟರು. ಗಾಯಗೊಂಡಿದ್ದ ನಮ್ಮಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದಾಗ ಗಜೇಂದ್ರನು ಆಸ್ಪತ್ರೆಯಲ್ಲಿಯೇ ಮೃತಪಟ್ಟನು. ಗಿರೀಶ್,ಕಿರಣ್,ಶ್ರೀಕಾಂತ, ರವರನ್ನು  ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು ನಾನು ಇಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದೇನೆಂತ ವಿಷಯ ತಿಳಿಸಿದನು. ಆದ್ದರಿಂದ ದಿನಾಂಕ:22/04/2018 ರಂದು ರಾತ್ರಿ ಸುಮಾರು 11:00 ಗಂಟೆ ಸಮಯದಲ್ಲಿ ಈ ಅಪಘಾತವುಂಟು ಮಾಡಿ ನನ್ನ ತಮ್ಮ ಗಜೇಂದ್ರನ ಸಾವಿಗೆ ಕಾರಣನಾದ  ಕೆಎ-01-ಎಂ.ಡಿ. 4095 ನೇ ಕಾರಿನ ಚಾಲಕ ಶ್ರೀಕಾಂತನ ಮೇಲೆ ಕಾನೂನು ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

ಜಯನಗರ ಪೊಲೀಸ್ ಠಾಣಾ ಮೊ ನಂ 67/2018 ಕಲಂ 143,147,148,323,324,341,504,506 ರೆ.ವಿತ್‌ 149

ದಿನಾಂಕ: 24/04/2018 ರಂದು ರಾತ್ರಿ 7-15 ಗಂಟೆಗೆ ತುಮಕೂರು ಟೌನ್‌, ಮರಳೂರು ದಿಣ್ಣೆ, 10 ನೇ ಕ್ರಾಸ್ ವಾಸಿ ಸಜ್ಜಾದ್ ಅಹಮ್ಮದ್‌ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ, ನಾನು ಈಗ್ಗೆ 9 ವರ್ಷಗಳ ಹಿಂದೆ ಎಮ್ ಅಬ್ದುಲ್ಲಾ ರವರ 3 ನೇ ಮಗಳು ಆಯಿಶಾ ಖುಬ್ರ ಎಂಬುವರನ್ನು ಮದುವೆಯಾಗಿದ್ದು ನಮಗೆ 3 ಜನ ಮಕ್ಕಳಿರುತ್ತಾರೆ.  ನಾನು ಸುಮಾರು 4 ವರ್ಷಗಳಿಂದ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡಿಕೊಂಡು ಅಲ್ಲಿಯೇ ಇದ್ದೆನು.  ಈಗ್ಗೆ ಸುಮಾರು ಹಿಂದೆ ನನಗೂ ಹಾಗೂ ನನ್ನ ಹೆಂಡತಿಗೂ ಸಂಸಾರಿಕ ವಿಚಾರದಲ್ಲಿ ಮನಸ್ತಾಪ ಬಂದು ನಮ್ಮ ತಂದೆ ತಾಯಿಯ ಮನೆಯಲ್ಲಿದ್ದ ನನ್ನ ಹೆಂಡತಿ ಅವರ ತವರು ಮನೆಗೆ ಹೋಗಿ ಅಲ್ಲಿಯೇ ಇರುತ್ತಾಳೆ.  ನಾನು ಸೌದಿ ಅರೇಬಿಯಾದಿಂದ ದಿನಾಂಕ: 29-03-2018 ರಂದು ವಾಪಾಸ್ ತುಮಕೂರು ಟೌನ್ ಮರಳೂರು ದಿಣ್ಣೆಯಲ್ಲಿರುವ ನಮ್ಮ ತಂದೆ ಮನಗೆ ಬಂದಿದ್ದು, ವಿಚಾರ ಗೊತ್ತಾಗಿ ನನ್ನ ಹೆಂಡತಿ ಹಾಗೂ ನನ್ನ ಹೆಂಡತಿ ಕಡೆಯವರು ನಮ್ಮ ಮನೆಯ ಬಳಿಗೆ ಬಂದು ರಾಜಿ ಸಂದಾನ ಮಾಡಿ ನನ್ನ ಹೆಂಡತಿಯನ್ನು ನಮ್ಮ ಮನೆಯಲ್ಲಿಯೇ ಬಿಟ್ಟು ಹೋಗಿದ್ದರು.  ಸುಮಾರು ಒಂದು ವಾರಗಳ ಕಾಲ ನನ್ನ ಹೆಂಡತಿ ನಮ್ಮ ಮನೆಯಲ್ಲಿಯೇ ನಮ್ಮ ತಂದೆ ತಾಯಿ ನನ್ನ ಜೊತೆಯಲ್ಲಿಯೇ ವಾಸವಾಗಿದ್ದು ನಂತರ ಮತ್ತೆ ನನಗೂ ಹಾಗೂ ನನ್ನ ಹೆಂಡತಿಗೂ ಸಾಂಸಾರಿಕ  ವಿಚಾರದಲ್ಲಿ ಜಗಳವಾಗಿ ವಾಪಾಸ್ ತವರು ಮನೆಗೆ ಹೋಗಿದ್ದಳು. ದಿನಾಂಕ: 16-04-2018 ರಂದು ಬೆಳಿಗ್ಗೆ ಸುಮಾರು 11-30 ಗಂಟೆ ಸಮಯದಲ್ಲಿ ನನ್ನ ಹೆಂಡತಿ ತಂದೆ ಎಮ್.ಅಬ್ದುಲ್ಲಾ ರವರ ಮಕ್ಕಳಾದ ಮಹಮ್ಮದ್ ಮೋಯಿನ್, ಮಹಮ್ಮದ್ ಪಾರೋಕ್‌ ಹಾಗೂ ಅವರ ಸಂಬಂಧಿಕರಾದ ಶಬ್ಬೀರ್, ತೌಸೀಫ್ ರವರೊಂದಿಗೆ ನಮ್ಮ ಮನೆಯ ಬಳಿಗೆ ಬಂದು ಮನೆಯ ಮುಂದೆ ನಿಂತಿದ್ದ ನನ್ನನ್ನು ಅಡ್ಡಗಟ್ಟಿ ತಡೆದು ಮುಂದಕ್ಕೆ ಹೋಗದಂತೆ ತಡೆದು ನಿಲ್ಲಿಸಿ ಎಲ್ಲರೂ ಸೇರಿ ನನ್ನ ಮೇಲೆ ಏಕಾಏಕಿ ಜಗಳ ತೆಗೆದು ಅವಾಚ್ಯ ಶಬ್ದಗಳಾದ ತೇರಿ ಮಾಕೀ ಚೂತ್‌ ಸುವರ್ ಕೇ ಬಚ್ಚೇ ಎಂತ ಬೈಯುತ್ತಾ ನಿನ್ನ ಹೆಂಡತಿ ಜೊತೆ ಸಂಸಾರ ಮಾಡದೇ ಸೌದಿ ಅರೇಬಿಯಾಕ್ಕೆ ಹೋಗುತ್ತಿಯೇನೋ ನಿನಗೆ ನಮ್ಮ ಹುಡುಗಿಯನ್ನು ಕೊಟ್ಟಿರುವುದು ಸಂಸಾರ ಮಾಡಲೆಂದು ಸಂಸಾರ ಮಾಡದೇ ನಮ್ಮ ಮಗಳನ್ನು ನಮ್ಮ ಮನೆಗೆ ಕಳುಹಿಸಿದ್ದೀಯೇನೋ ಎಂತ ಜಗಳ ತೆಗೆದು ಮಹಮ್ಮದ್ ಮೋಯಿನ್ ಆತನ ಕೈಯಲ್ಲಿದ್ದ ದೊಣ್ಣೆಯಿಂದ ನನ್ನ ಬಲಗಣ್ಣಿನ ಮೇಲ್ಭಾಗ ಎಡಭಾಗದ ಎಡಕಾಲಿನ ತೊಡೆಗೆ ಹೊಡೆದು ರಕ್ತಗಾಯಪಡಿಸಿದನು.  ಉಳಿಕೆಯವರಾದ ಎಮ್‌.ಅಬ್ದುಲ್ಲಾ, ಮಹಮ್ಮದ್ ಫಾರೂಕ್, ಶಬ್ಬೀರ್ ಹಾಗೂ ತೌಸಿಫ್ ರವರುಗಳು ಕೆಳಕ್ಕೆ ಕೆಡವಿಕೊಂಡು ಕೈಗಳಿಂದ ಮೈಮೇಲೆಲ್ಲಾ ಹೊಡೆದು ನೋವುಂಟು ಮಾಡಿರುತ್ತಾರೆ.  ಅಷ್ಟರಲ್ಲಿ ಅಲ್ಲಿಯೇ ಇದ್ದ ನಮ್ಮ ಮೊಹಲ್ಲಾ ವಾಸಿಗಳಾದ ಇರ್ಫಾನ್ ಬಿನ್ ಶಫೀಉಲ್ಲಾ ಹಾಗೂ ನಮ್ಮ ಸಂಬಂಧಿ ಕೋಣೆಮಾದೇನಹಳ್ಳಿ ವಾಸಿ ಗೌಸ್‌ಪೀರ್ ಬಿನ್ ಮಹಮ್ಮದ್ ಹಬೀದ್ ರವರು ಜಗಳ ಬಿಡಿಸಿ ಮಹಮ್ಮದ್ ಮೋಯಿನ್ ಕೈಯಲ್ಲಿದ್ದ ದೊಣ್ಣೆಯನ್ನು ಕಿತ್ತು ಬಿಸಾಕಿರುತ್ತಾರೆ.  ಆದರೂ ಸಹ ಮೇಲ್ಕಂಡವರೆಲ್ಲಾ ಹೊಗುವಾಗ ನಿನ್ನನ್ನು ಇಷ್ಟಕ್ಕೆ ಬಿಡುವುದಿಲ್ಲ ಕೊಲೆ ಮಾಡಿಯೇ ತೀರುತ್ತೇವೆ ಎಂತ ಕೊಲೆ ಬೆದರಿಕೆ ಹಾಕಿ ಅಲ್ಲಿಂದ ಹೊರಟು ಹೋಗಿರುತ್ತಾರೆ. ನಂತರ ಗಾಯಗೊಂಡಿದ್ದ ನನ್ನನ್ನು ನಮ್ಮ ಮಾವ ಕರೀಂ ಎಂಬುವರು ಯಾವುದೋ ಆಟೋದಲ್ಲಿ ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಅಲ್ಲಿಂದ ನನ್ನನ್ನು ಅರುಣ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ಚಿಕಿತ್ಸೆಗೆ ದಾಖಲು ಮಾಡಿರುತ್ತಾರೆ.  ನಾನು ದಿನಾಂಕ: 16-04-2018 ರಿಂದ 18-04-2018 ರವರೆಗೆ ಅರುಣಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತೇನೆ.  ನಡೆದ ಘಟನೆ ಬಗ್ಗೆ ದೂರು ಕೊಡಲು ಹೊರಟಾಗ ನಮ್ಮ ಮಾವ ಕರೀಂ ರವರು ಗಲಾಟೆ ಮಾಡಿದವರು ನಿನ್ನ ಹೆಂಡತಿಯ ತವರು ಮನೆಕಡೆಯವರು ಹಿರಿಯರನ್ನು ಸೇರಿಸಿ ನ್ಯಾಯ ಪಂಚಾಯಿತಿ ಮಾಡಿ ಬಗೆಹರಿಸಿಕೊಳ್ಳೋಣ ಎಂತ ತಿಳಿಸಿದ್ದು ನನ್ನ ಹೆಂಡತಿ ಕಡೆಯವರು ನ್ಯಾಯ ಪಂಚಾಯಿತಿಗೆ ಬರದ ಕಾರಣ ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದು ನನಗೆ ಹೊಡೆದು ಅವಾಚ್ಯ ಶಬ್ದಗಳಿಂದ ಬೈಯ್ದು ಪ್ರಾಣ ಬೆದರಿಕೆ ಹಾಕಿರುವ ಮೇಲ್ಕಂಡವರ ಮೇಲೆ ಕ್ರಮ ಜರುಗಿಸಲು ಕೋರಿ ನೀಡಿರುವ ಪಿರ್ಯಾದು ಮೇರೆಗೆ ಪ್ರಕರಣ ದಾಖಲಿಸಿರುತ್ತೆ.Tuesday, 24 April 2018

ಅಪರಾಧ ಘಟನೆಗಳು 24-04-18

ಜಯನಗರ ಪೊಲೀಸ್ ಠಾಣಾ ಮೊ ನಂ 65/2018 ಕಲಂ 454, 457, 380 ಐಪಿಸಿ

ದಿನಾಂಕ: 23-04-2018 ರಂದು ಸಂಜೆ 4-00 ಗಂಟೆಯಲ್ಲಿ ತುಮಕೂರು ಟೌನ್‌, ಯಾದವನಗರ, 4 ನೇ ಕ್ರಾಸ್‌ ವಾಸಿಯಾದ ಎಸ್.ಡಿ. ಗೋವಿಂದರಾಜು ಬಿನ್. ಲೇ|| ದೊಡ್ಡಯ್ಯ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ಮಧುಗಿರಿ ತಾಲ್ಲೂಕು ಬ್ಯಾಲ್ಯ ಗ್ರಾಮದಲ್ಲಿ ನಮ್ಮ ಅತ್ತೆಯವರ ತಿಥಿ ಕಾರ್ಯ ಇದ್ದರಿಂದ ನಿನ್ನೆ ದಿನ, ದಿನಾಂಕ: 22-04-2018 ರಂದು ಸಾಯಂಕಾಲ ಸುಮಾರು 4-00 ಗಂಟೆ ಸಮಯದಲ್ಲಿ ನಮ್ಮ ಮನೆಗೆ ಬೀಗ ಹಾಕಿಕೊಂಡು, ನಮ್ಮ ಸಂಸಾರ ಸಮೇತ ನಾವು ಮಧುಗಿರಿ ತಾಲ್ಲೂಕು ಬ್ಯಾಲ್ಯ ಗ್ರಾಮಕ್ಕೆ ಹೋಗಿದ್ದೆವು.  ಊರಿನಲ್ಲಿ ಕಾರ್ಯ ಮುಗಿಸಿಕೊಂಡು ಈ ದಿನ ದಿನಾಂಕ: 23-04-2018 ರಂದು ಬೆಳಿಗ್ಗೆ ಸುಮಾರು 8-30 ಗಂಟೆ ಸಮಯದಲ್ಲಿ ವಾಪಾಸ್ಸು ಮನೆಯ ಬಳಿಗೆ ಬಂದು, ಮನೆಯ ಮುಂದಿನ ಕಾಂಪೌಂಡ್‌‌ ಗೇಟ್‌‌ಗೆ ಹಾಕಿದ್ದ  ಬೀಗ ಹಾಗೂ ಮುಂಭಾಗಿಲಿಗೆ ಹಾಕಿದ್ದ ಬೀಗವನ್ನು ತೆಗೆದು ಮನೆಯ ಒಳಗೆ ಹೋಗಿ ನೋಡಲಾಗಿ, ಯಾರೋ ಕಳ್ಳರು ನಮ್ಮ ಮನೆಯ ಹಿಂಭಾಗಿಲನ್ನು ಮೀಟಿ, ಮನೆಯೊಳಗೆ ಪ್ರವೇಶ ಮಾಡಿ, ಮನೆಯ ರೂಮಿನಲ್ಲಿ ಇಟ್ಟಿದ್ದ ಗಾಡ್ರೇಜ್‌‌‌ ಬೀರುವನ್ನು ರೂಮಿನಲ್ಲಿಯೇ ಇದ್ದ ಮಂಚದ ಮೇಲೆ ಅಂಗಾತ ಮಲಗಿಸಿ ಯಾವುದೋ ಆಯುಧದಿಂದ ಬೀರುವಿನ ಬಾಗಿಲನ್ನು ಮೀಟಿ ತೆಗೆದು, ಬೀರುವಿನ ಒಳಗೆ ಇಟ್ಟಿದ್ದ ಸೀಕ್ರೇಟ್‌‌ ಲಾಕರ್‌‌‌‌ ಕೀ ನಿಂದ ಸೀಕ್ರೇಟ್‌‌ ಲಾಕರ್‌‌ ಡೋರನ್ನು ತೆಗೆದು, ಅದರಲ್ಲಿ ಇಟ್ಟಿದ್ದ 1) ಎರಡು ಚಿನ್ನದ ಬಳೆಗಳು ಸುಮಾರು 20 ಗ್ರಾಂ 2) ಒಂಟಿ ಎಳೆಯ ಚಿನ್ನದ ಕೊರಳ ಚೈನು ಇದರಲ್ಲಿ ಡಿಸೈನ್‌‌ ಡಾಲರ್‌‌ ಇರುತ್ತೆ.  ತೂಕ  ಸುಮಾರು 15 ಗ್ರಾಂ  3) ಒಂದು ಒಂಟಿ ಎಳೆಯ ಚಿನ್ನದ ಕೊರಳ ಚೈನು ತೂಕ ಸುಮಾರು 13 ಗ್ರಾಂ  4) ಒಂದು ಮೂರು ಕಲ್ಲಿನ ಚಿನ್ನದ ಉಂಗುರ ತೂಕ ಸುಮಾರು 5 ಗ್ರಾಂ  5) ಒಂದು ಪ್ಲೈನ್ ಡಿಸೈನ್‌‌ ಉಂಗುರ ತೂಕ ಸುಮಾರು 5 ಗ್ರಾಂ 6) 3 ಚಿಕ್ಕ ಮಕ್ಕಳ ಉಂಗುರ ತೂಕ ಸುಮಾರು 3 ಗ್ರಾಂ 7) ಒಂದು ಜೊತೆ ಚಿನ್ನದ ವಾಲೆ- ಜುಂಕಿ ತೂಕ ಸುಮಾರು 3 ಗ್ರಾಂ  8) ಒಂದು ಜೊತೆ ಕೆಂಪು ಕಲ್ಲಿನ ಓಲೆ  ತೂಕ ಸುಮಾರು 3 ಗ್ರಾಂ  9) ಒಂದು ಜೊತೆ ಚಿನ್ನದ ಹ್ಯಾಂಗೀಸ್‌‌‌ ತೂಕ ಸುಮಾರು 3 ಗ್ರಾಂ 10) ಒಂದು ಜೊತೆ ಬಿಳಿಯ ಕಲ್ಲಿನ ಓಲೆ ತೂಕ ಸುಮಾರು 4 ಗ್ರಾಂ  ಮೇಲ್ಕಂಡ ಚಿನ್ನದ ವಡವೆಗಳೆಲ್ಲಾ ಸೇರಿ ಒಟ್ಟು ಸುಮಾರು 74 ಗ್ರಾಂ ತೂಕವಿದ್ದು ಬೆಲೆ ಸುಮಾರು 1,10,000/- ರೂ. ಆಗುತ್ತದೆ. ಇದರ ಜೊತೆಯಲ್ಲಿಯೇ ಬೆಳ್ಳಿಯ ವಡವೆಗಳಾದ 11) ಒಂದು ಬೆಳ್ಳಿಯ ಲೋಟ, 12) ಒಂದು ಬೆಳ್ಳಿಯ ಲಕ್ಷ್ಮಿ ಮುಖವಾಡ  13) ಬೆಳ್ಳಿಯ ವೆಂಕಟೇಶ್ವರಸ್ವಾಮಿ ವಿಗ್ರಹ 14) 4 ಜೊತೆ ಚಿಕ್ಕ ಬೆಳ್ಳಿಯ ದೀಪಲೆ ಕಂಭ 15) 4 ಜೊತೆ ಬೆಳ್ಳಿಯ ಕುಂಕುಮದ ಬಟ್ಟಲು,  ಬೆಳ್ಳಿಯ ವಡವೆಗಳು ಒಟ್ಟು ½ ಕೆ.ಜಿ. ತೂಕವಿದ್ದು ಬೆಲೆ ಸುಮಾರು 20,000/- ರೂ.ಗಳಾಗುತ್ತೆ.   ಯಾರೋ ಕಳ್ಳರು ನಿನ್ನೆ ದಿನ ದಿನಾಂಕ: 22-04-2018 ರಂದು ರಾತ್ರಿ ವೇಳೆಯಲ್ಲಿ ನಮ್ಮ ಮನೆಯ ಹಿಂಭಾಗಿಲನ್ನು ಮೀಟಿ ತೆಗೆದು, ಹಿಂಬಾಗಿಲಿನಿಂದ ಮನೆಯೊಳಗೆ ಪ್ರವೇಶ ಮಾಡಿ, ಮನೆಯ ರೂಮಿನಲ್ಲಿ ಬೀರುವಿನಲ್ಲಿ ಇಟ್ಟಿದ್ದ ಮೇಲ್ಕಂಡ ಚಿನ್ನದ ಹಾಗೂ ಬೆಳ್ಳಿಯ ವಡವೆಗಳನ್ನು ಬೀರುವನ್ನು ಮೀಟಿ ತೆಗೆದು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳುವಾಗಿರುವ ವಸ್ತುಗಳ ಬಗ್ಗೆ ನಾವು ನಮ್ಮ ಮನೆಯಲ್ಲಿ ಕೂಲಂಕುಶವಾಗಿ ಪರಿಶೀಲಿಸಿ, ಕಳುವಾಗಿರುವ ವಿಚಾರವನ್ನು ನಮ್ಮ ಸಂಬಂಧಿಕರಿಗೆ ತಿಳಿಸಿ ಈಗ ತಡವಾಗಿ ಪೊಲೀಸ್ ಠಾಣೆಗೆ ಬಂದು ದೂರು ನೀಡುತ್ತಿದ್ದೇನೆ.  ತಾವು ದಯಮಾಡಿ ಕಳುವಾಗಿರುವ ಮೇಲ್ಕಂಡ ಚಿನ್ನ-ಬೆಳ್ಳಿಯ ವಡವೆಗಳನ್ನು ಪತ್ತೆ ಮಾಡಿ ಕಳವು ಮಾಡಿರುವ ಆರೋಪಿಗಳ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

ಅಮೃತೂರು ಪೊಲೀಸ್ ಠಾಣಾ ಮೊನಂ-89/2018 ಕಲಂ-341, 324, 504, 506 ರೆ/ವಿ 34 ಐಪಿಸಿ.

ದಿನಾಂಕ: 21-04-2018 ರಂದು ರಾತ್ರಿ 8-10 ಗಂಟೆಯಲ್ಲಿ ಪಿರ್ಯಾದಿ ಎಂ.ವಿ.ಕೆಂಪಯ್ಯ ಬಿನ್ ಲೇಟ್ ವೆಂಕಟೇಗೌಡ, 58 ವರ್ಷ, ಒಕ್ಕಲಿಗರು, ಜಿರಾಯ್ತಿ, ಮಂಟ್ಯಾ ಗ್ರಾಮ, ಎಡೆಯೂರು ಹೋಬಳಿ, ಕುಣಿಗಲ್ ತಾಲ್ಲೂಕ್ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ,       ಕುಣಿಗಲ್ ತಾಲ್ಲೂಕ್, ಎಡೆಯೂರು ಹೋಬಳಿ, ಮಂಟ್ಯಾ ಗ್ರಾಮದ ಸರ್ವೆ ನಂ-53/2, 52/2 ರಲ್ಲಿ ನನ್ನ ವ್ಯವಸಾಯದ ಜಮೀನು ಇದ್ದು, ಈ ನನ್ನ ಜಮೀನಿಗೆ ನಾವು ಮತ್ತು ನಮ್ಮ ಗ್ರಾಮಸ್ಥರುಗಳು ಅವರವರ ಜಮೀನುಗಳಿಗೆ ಓಡಾಡಲು ಸರ್ಕಾರಿ ನಕಾಶೆಯಂತೆ ಇದ್ದ ಬಂಡಿ ಜಾಡನ್ನು ತೂಬಿನಕೆರೆ ಗ್ರಾಮದ ಹನುಮೇಗೌಡ ಬಿನ್ ಚಿಕ್ಕಹನುಮಯ್ಯ ಮತ್ತು ಆತನ ಹೆಂಡತಿ ಬೋರಮ್ಮ ಹಾಗೂ ಆತನ ತಮ್ಮಂದಿರಾದ ಕೃಷ್ಣ, ಲಕ್ಷ್ಮಣ ರವರುಗಳು ತಕರಾರು ಮಾಡಿ ತೊಂದರೆಕೊಡುತ್ತಿದ್ದುದ್ದರಿಂದ ನಾವು ಕಾನೂನು ಬದ್ದವಾಗಿ ಹೋಗಿದ್ದರಿಂದ ದಿ: 16-08-2017 ರಂದು ಮಾನ್ಯ ಕುಣಿಗಲ್ ತಹಶೀಲ್ದಾರ್ ರವರ ಆದೇಶದಂತೆ ತಾಲ್ಲೂಕ್ ಸವೇಯರ್ ಮತ್ತು ಆರ್.ಐ. ರವರುಗಳು ಸರ್ವೆ ಮಾಡಿ ಸರ್ಕಾರಿ ನಕಾಶೆಯಲ್ಲಿದ್ದಂತೆ ಬಂಡಿ ಜಾಡನ್ನು ಸಾರ್ವಜನಿಕರ ಸಂಚಾರಕ್ಕಾಗಿ ಅವರ ಸಮುಖದಲ್ಲೇ ಮುಕ್ತಗೊಳಿಸಿಕೊಟ್ಟರು. ಇದೇ ದ್ವೇಷವನ್ನು ಮನಸ್ಸಿನಲ್ಲಿಟ್ಟು ಕೊಂಡಿದ್ದ  ಮೇಲಿನ ನಾಲ್ಕೂ ಜನರು ಸೇರಿ ತೆರುವಾಗಿದ್ದ ಬಂಡಿ ಜಾಡಿನಲ್ಲಿ ನಾವುಗಳು ತಿರುಗಾಡದಂತೆ ದಾರಿಗೆ ಗುಂಡಿಗಳನ್ನು ಹೊಡೆದು ನೀರನ್ನು ಬಿಟ್ಟು ಕೆಸರು ಮಾಡಿ ಅಡ್ಡಿ ಪಡಿಸಿದ್ದು, ನಾನು ಮತ್ತು ನಮ್ಮ ಅಣ್ಣ ಚೌಡಯ್ಯ ರವರು ನಮ್ಮ ಜಮೀನಿಗೆ ಹೋಗಲು ಈ  ದಿನ ಅದರೆ ದಿ: 21-04-2018 ರಂದು ಬಂಡಿ ಜಾಡಿನಲ್ಲಿದ್ದ ಗುಂಡಿಗಳನ್ನು ಮುಚ್ಚಿಸಲು ಸರ್ಕಾರಿ ಗೋಮಾಳದ ಬಳಿ ಇರುವ ಬಂಡಿ ಜಾಡಿಗೆ ಹೋದಾಗ ಮೇಲಿನ ಎಲ್ಲರೂ ಏಕಾಏಕಿ ನನ್ನ ಬಳಿಗೆ ಬಂದು ಬೋಳಿ ಮಗನೇ, ಸೂಳೇ ಮಗನೇ, ನಿಮ್ಮಪ್ಪನದೇನೋ ಜಾಗ, ನೀನಾರಾ ಇಲ್ಲಗೆ ಬರೋಕೆ ಎಂದು ಕೆಟ್ಟ ಕೆಟ್ಟದಾಗಿ ನನ್ನನ್ನು ಬೈದು, ಹನುಮೇಗೌಡನು ತಂದಿದ್ದ ಒಂದು ದೊಣ್ಣೆಯಿಂದ ನನ್ನ ಹೊಟ್ಟೆಗೆ ಹೊಡೆದನು. ಆಗ ನಾನು ನೋವಾಗಿ ಕೂಗಿಕೊಂಡು ನೆಲದ ಮೇಲೆ ಕುಳಿತುಕೊಂಡೆನು. ನನ್ನನ್ನು ಬಿಡಿಸಲು ಬಂದ ನಮ್ಮ ಅಣ್ಣ ಚೌಡಯ್ಯ ರವರನ್ನು ಎಲ್ಲರೂ ಹಿಡಿದುಕೊಂಡು ಕೈಗಳಿಂದ ಹೊಡೆದು, ನೆಲಕ್ಕೆ ಕೆಡವಿಕೊಂಡು ಕಾಲಿನಿಂದ ತಿಳಿದು, ನಮ್ಮನ್ನು ಕುರಿತು ಎಲ್ಲರೂ ಸೇರಿ ಇನ್ನೋಂದು ಸಾರಿ ಇಲ್ಲಿಗೆ ಬಂದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲವೆಂತ ಪ್ರಾಣ ಬೆದರಿಕೆ ಹಾಕಿ ಹೊರಟು ಹೋದರು. ಹೋಗುವಾಗ  ಹನುಮೇಗೌಡನು ತನ್ನ ಕೈಯಲ್ಲಿದ್ದ ದೊಣ್ಣೆಯನ್ನು ನಮ್ಮ ಕಡೆಗೆ ಎಸೆದು ನಿಮಗೊಂದು ಗತಿ ಕಾಣಿಸುತ್ತೇನೆಂದು ಹೇಳಿಕೊಂಡು ಹೋದನು. ನಂತರ ನಾನು ಮತ್ತು ನಮ್ಮ ಅಣ್ಣ ಚೌಡಯ್ಯ ರವರು ನಮಗಾದ ಗಾಯಗಳಿಗೆ ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು ಈ ಬಂದು ದೂರು ನೀಡುತ್ತಿದ್ದೇವೆ. ಆದ್ದರಿಂದ ನಮ್ಮ ಮೇಲೆ ಹಲ್ಲೆ ಮಾಡಿರುವ ತೂಬಿನಕೆರೆ ಗ್ರಾಮದ ಹನುಮೇಗೌಡ ಬಿನ್ ಚಿಕ್ಕಹನುಮಯ್ಯ ಮತ್ತು ಆತನ ಹೆಂಡತಿ ಬೋರಮ್ಮ ಹಾಗೂ ಆತನ ತಮ್ಮಂದಿರಾದ ಕೃಷ್ಣ, ಲಕ್ಷ್ಮಣ ರವರುಗಳ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರುತ್ತೇನೆ ಎಂದು ಇದ್ದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿರುತ್ತೆ.

ತಿಪಟೂರು ಗ್ರಾಮಾಂತರ ಪೊಲೀಸ್  ಠಾಣಾ ಮೊ ನಂ 33/2018 ಕಲಂ 279,337,304(a) IPC ಮತ್ತು  187 IMV Act

ದಿನಾಂಕ 23/04/2018 ರಂದು ತಿಪಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ದಯಾನಂದ,ಪಟ್ರೇಹಳ್ಳಿ,ಹೊನ್ನವಳ್ಳಿ ಹೋಬಳಿ,ತಿಪಟೂರು ತಾ,ರವರು ಬೆಳಿಗ್ಗೆ 06:15 ರಿಂದ 6:45 ಗಂಟೆಯವರೆಗೆ ನೀಡಿದ ಹೇಳಿಕೆಯ ಅಂಶವೇನೆಂದರೆ,ದಿನಾಂಕ 22/04/2018 ರಂದು ನಾನು ಮತ್ತು ವಿಠ್ಠಲಾಪುರದ ದಿಲೀಪ್ ,ನನ್ನ ಮಾವ ಚಂದ್ರಶೇಖರ ರವರನ್ನು ತಿಪಟೂರಿಗೆ ಕರೆಸಿಕೊಂಡು ಅವರ ಬೈಕ್ ಆದ KA 44 R 6098 ನೇ ಬಜಾಜ್ ಸಿ.ಟಿ.100 ದ್ವಿಚಕ್ರ ವಾಹನದಲ್ಲಿ ಮಂಜುನಾಥ ನಗರದ ಹತ್ತಿರ ರಸ್ತೆಯ ಎಡಭಾಗದಲ್ಲಿ ಹೋಗುತ್ತಿರುವಾಗ ರಾತ್ರಿ 11:50 ಗಂಟೆ ಸಮಯದಲ್ಲಿ ಹಿಂದಿನಿಂದ ಯಾವುದೋ  ಅಪರಿಚಿತ ಕಾರು ಅದರ ಚಾಲಕ ಅತಿವೇಗೆ ಮತ್ತು  ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆಸಿದ್ದರಿಂದ ನಾವುಗಳು ಬೈಕ್ ಸಮೇತ ಕೆಳಕ್ಕೆ ಬಿದ್ದೆವು ಈ ಅಪಘಾತದಲ್ಲಿ ನನಗೆ ಮತ್ತು ದಿಲೀಪ ಮತ್ತು ಚಂದ್ರಶೇಖರರವರಿಗೆ ಪೆಟ್ಟು ಬಿದ್ದಿರುತ್ತದೆ, ,ದಿಲೀಪ್ ರವರಿಗೆ ತಲೆಗೆ ಪಟ್ಟು ಬಿದ್ದು ತೀವ್ರ ರಕ್ತ ಸ್ರಾವ ವಾದ್ದರಿಂದ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾರೆ, , ಎಂತ ನೀಡಿದ ಹೇಳಿಕೆ ಮೇರೆಗೆ ಠಾಣಾ ಮೊ ನಂ 33/2018 ಕಲಂ 279,337,304(a) IPC ಮತ್ತು  187 IMV Act ರೀತ್ಯಾ ಪ್ರಕರಣ ದಾಖಲಿಸಿರುತ್ತದೆ.

ಕಳ್ಳಂಬೆಳ್ಳ  ಪೊಲೀಸ್‌ ಠಾಣಾ ಮೊ.ನಂ: 108/2018. ಕಲಂ-279, 304(ಎ) ಐಪಿಸಿ

ದಿನಾಂಕ:23/04/2018 ರಂದು 4-00 ಎ.ಎಂ. ಗಂಟೆಗೆ ಈ ಕೇಸಿನ ಪಿರ್ಯಾದಿ ಧನಲಕ್ಷ್ಮೀ ಕೋಂ ಸಿದ್ದಗಂಗಪ್ಪ, 37 ವರ್ಷ, ಬೋವಿ ಜನಾಂಗ, ಅಜ್ಜೇನಹಳ್ಳಿ ಕಾಲೋನಿ, ಕಳ್ಳಂಬೆಳ್ಳ ಹೋಬಳಿ, ಸಿರಾ ತಾಲ್ಲೂಕ್ ಎಂಬುವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ,  ನನಗೆ ಅಜ್ಜೇನಹಳ್ಳಿ ಕಾಲೋನಿಯ ಸಿದ್ದಗಂಗಪ್ಪ ರವರೊಂದಿಗೆ ಮದುವೆಯಾಗಿದ್ದು, 16 ವರ್ಷದ ತರುಣೇಶ್ , 15 ವರ್ಷದ ಪ್ರಭು ಎಂಬ ಇಬ್ಬರು ಗಂಡು ಮಕ್ಕಳಿರುತ್ತಾರೆ. ನಾನು ದಿನಾಂಕ: 19/04/2018 ರಂದು ನನ್ನ ಮಕ್ಕಳೊಂದಿಗೆ ನನ್ನ ತವರು ಮನೆಯಾದ ದಾಬಸ್ ಪೇಟೆ ಹತ್ತಿರ ಇರುವ ಬಾಪೂಜಿ ನಗರಕ್ಕೆ ಹೋಗಿದ್ದೆನು.  ದಿನಾಂಕ: 22/04/2018 ರಂದು ರಾತ್ರಿ ಸುಮಾರು 9-00 ಗಂಟೆ ಸಮಯದಲ್ಲಿ ನಾನು ನನ್ನ ತವರು ಮನೆಯಲ್ಲಿದ್ದಾಗ ನನ್ನ ಅಕ್ಕನ ಮಗ ಪವನ್ ನನಗೆ ಪೋನ್ ಮಾಡಿ ನಾನು ಮತ್ತು ಅಜ್ಜೇನಹಳ್ಳಿಯ ಮಂಜುನಾಥರವರೊಂದಿಗೆ ಈದಿನ ರಾತ್ರಿ ಸುಮಾರು 8-30 ಗಂಟೆಯಲ್ಲಿ ಕಳ್ಳಂಬೆಳ್ಳ ಬಸ್ ನಿಲ್ದಾಣದ ಹತ್ತಿರ ಮಾತನಾಡುತ್ತಾ ನಿಂತಿದ್ದೆವು, ಅದೇ ಸಮಯಕ್ಕೆ ಚಿಕ್ಕಪ್ಪ ಸಿದ್ದಗಂಗಪ್ಪರವರು ಸಹ ಅಲ್ಲಿಗೆ ಬಂದರು, ನಾನು ಎಲ್ಲಿಗೆ ಹೋಗುತ್ತಿಯಾ ಎಂತ ಕೇಳಿದೆ ಅದಕ್ಕೆ ಚಿಕ್ಕಪ್ಪ ನಿಮ್ಮ ಚಿಕ್ಕಮ್ಮ ಮತ್ತು ಮಕ್ಕಳನ್ನು ನೋಡಲು ಬಾಪೂಜಿನಗರಕ್ಕೆ ಹೋಗುತ್ತಿದ್ದೇನೆ ಎಂತ ತಿಳಿಸಿ ಬಾಪೂಜಿನಗರಕ್ಕೆ ಹೋಗಲು ಕಳ್ಳಂಬೆಳ್ಳ ಬಸ್ ನಿಲ್ದಾಣದ ಹತ್ತಿರ ಬಸ್ ಗಾಗಿ ರಸ್ತೆಯ ಬದಿ ಕಾಯ್ಯುತ್ತಾ ಚಿಕ್ಕಪ್ಪ ನಿಂತಿರುವಾಗ್ಗೆ, ಒಂದು ಕೆಎಸ್‌ಆರ್‌ಟಿಸಿ ಬಸ್ಸನ್ನು ಅದರ ಚಾಲಕ ಸಿರಾ ಕಡೆಯಿಂದ ಸಿರಾ-ತುಮಕೂರು ಎನ್.ಹೆಚ್.48 ರಸ್ತೆಯಲ್ಲಿ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆಮಾಡಿಕೊಂಡು ಬಂದು ಬಸ್ ಗಾಗಿ ಕಾಯ್ಯುತ್ತಾ ರಸ್ತೆಯ ಎಡ ಬದಿಯಲ್ಲಿ ನಿಂತಿದ್ದ ಚಿಕ್ಕಪ್ಪನಿಗೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದ, ಈ ಡಿಕ್ಕಿ ಹೊಡೆದ ರಭಸಕ್ಕೆ ಚಿಕ್ಕಪ್ಪ ಎಗರಿ ಎಡಬದಿಯ ಸರ್ವಿಸ್ ರಸ್ತೆಯ ಮೇಲೆ ಬಿದ್ದರು.  ಇದನ್ನು ನೋಡಿದ ನಾನು ಮತ್ತು ಮಂಜುನಾಥ ಹತ್ತಿರ ಹೋಗಿ ನೋಡಲಾಗಿ, ಚಿಕ್ಕಪ್ಪ ಸಿದ್ದಗಂಗಪ್ಪ ರವರ ತಲೆಗೆ, ಮುಖಕ್ಕೆ, ಮೈಕೈಗೆ ಇತರೆ ಕಡೆ ಬಸ್ ಅಪಘಾತದಿಂದ ಪೆಟ್ಟುಬಿದ್ದು ರಸ್ತೆಯ ಮೇಲೆ ಒದ್ದಾಡುತ್ತಾ ಸ್ಥಳದಲ್ಲಿಯೇ ಮೃತಪಟ್ಟರು, ನಂತರ ಅಪಘಾತದ ವಿಚಾರ ತಿಳಿದು ಅಪಘಾತ ಸ್ಥಳಕ್ಕೆ ಬಂದ ಪೊಲೀಸ್ ನವರು ಹೈವೇ ಆಂಬ್ಯುಲೆನ್ಸ್ ನಲ್ಲಿ ಚಿಕ್ಕಪ್ಪನ ಶವವನ್ನು ಸಿರಾ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ತೆಗೆದುಕೊಂಡು ಹೋದರು, ಚಿಕ್ಕಪ್ಪನಿಗೆ ಅಪಘಾತ ಪಡಿಸಿದ ಕೆಎಸ್‌ಆರ್‌ಟಿ ಬಸ್ ನಂ. KA-17-F-1574 ಆಗಿದ್ದು, ಈ ಬಸ್ ಚಾಲಕನ ಹೆಸರು ದ್ಯಾಮಪ್ಪ ಬಿ ತಮ್ಮಣ್ಣನವರ್ ಆಗಿರುತ್ತೆ ಎಂತ ತಿಳಿಸಿದ,  ನಂತರ ನಾನು ನನ್ನ ತಂದೆ ತಾಯಿಯವರಿಗೆ ನಮ್ಮ ಯಜಮಾನರಿಗಾದ ಅಪಘಾತದ ವಿಚಾರತಿಳಿಸಿ ನಮ್ಮ ತವರು ಮನೆಯಿಂದ ಹೊರಟು ಅಜ್ಜೇನಹಳ್ಳಿಗೆ ಬಂದು ನಮ್ಮ ಸಂಬಂದಕರೊಂದಿಗೆ ಚರ್ಚಿಸಿ ಈಗ ತಡವಾಗಿ ಠಾಣೆಗೆ ಬಂದು ದೂರು ನೀಡಿರುತ್ತೇನೆ. ನಮ್ಮ ಯಜಮಾನರಾದ ಸಿದ್ದಗಂಗಪ್ಪರವರಿಗೆ ಅಪಘಾತಪಡಿಸಿ ಅವರ ಸಾವಿಗೆ ಕಾರಣನಾದ KA-17-F-1574 ನೇ ನಂಬರಿನ ಕೆಎಸ್‌ಆರ್‌ಟಿಸಿ ಬಸ್ ಚಾಲಕ ದ್ಯಾಮಪ್ಪ ಬಿ ತಮ್ಮಣ್ಣನವರ್ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸ ಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಠಾಣಾ ಮೊ.ನಂ. 108/2018, ಕಲಂ- 279, 304(ಎ) ಐಪಿಸಿ ರೀತ್ಯ ಪ್ರಕರಣ ದಾಖಲಿಸಿಕೊಂಡು ಪ್ರಥಮ ವರ್ತಮಾನ ವರದಿಯನ್ನು ಘನ ನ್ಯಾಯಾಲಯಕ್ಕೆ ಹಾಗೂ ತುರ್ತು ವರ್ತಮಾನ ವರದಿಯನ್ನು ಇಲಾಖಾ ಮೇಲಾಧಿಕಾರಿಯವರಿಗೆ ಇ-ಮೇಲ್‌ ಮೂಲಕ ನಿವೇದಿಸಿಕೊಂಡಿರುತ್ತೆ.

ತಿಪಟೂರು ಗ್ರಾಮಾಂತರ ಠಾಣಾ ಮೊ ನಂ 34/2018 ಕಲಂ 279,337,ಐ.ಪಿ.ಸಿ

ದಿನಾಂಕ23/04/2018 ರಂದು ಮದ್ಯಾಹ್ನ 12-15 ಗಂಟೆಗೆ ಎಂ ಎಸ್  ಮಾದಿಹಳ್ಳಿ,ಕಸಬಾ ಹೋಬಳಿ,ತಿಪಟೂರು ತಾಲ್ಲೋಕು,ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ,ದಿನಾಂಕ-22-04-2018 ರಂದು ನನ್ನ ತಮ್ಮನ ಮಗನಾದ ಧನಂಜಯ್ಯ ಬಿನ್ ರವೀಶರವರು ಮಾದಿಹಳ್ಳಿ ಹಾಲಿನ ಡೈರಿಗೆ ಹಾಲು ಹಾಕಿ ವಾಪಸ್ ಮನೆಗೆ ಹೋಗಲು ತನ್ನ ಬಾಬ್ತು KA-06 EC-5335 ನೇ ದ್ವಿಚಕ್ರ ವಾಹನದಲ್ಲಿ ರಾತ್ರಿ 07-30 ಗಂಟೆ ಸಮಯದಲ್ಲಿ ಮಾದಿಹಳ್ಳಿ ಗ್ರಾಮದಿಂದ ಎನ್ ಹೆಚ್ 206 ರಸ್ತೆಗೆ ಬಂದು ರಸ್ತೆಯ ಎಡ ಭಾಗ ರಸ್ತೆಯಲ್ಲಿ ದ್ವಿಚಕ್ರವಾಹನದಲ್ಲಿ ಹೋಗುತ್ತಿರುವಾಗ ಹಿಂದಿನಿಂದ ಅಂದರೆ ಅರಸೀಕೆರೆ ಕಡೆಯಿಂದ ಬಂದು KA-18 F-765 ನೇ ಕೆ ಎಸ್ ಆರ್ ಟಿ ಸಿ ಬಸ್ ಚಾಲಕ  ತನ್ನ ವಾಹನವನ್ನು ಅತೀವೇಗ ಮತ್ತು ಅಜಾಗರುಕತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಹೊಡಸಿದಾಗ ಧನಂಜಯ್ಯರವರು ದ್ವಿಚಕ್ರವಾಹನ ಸಮೇತ ಕೆಳಕ್ಕೆ ಬಿದ್ದರು, ತಲೆಗೆ ಪೆಟ್ಟು ಬಿದ್ದಿರುತ್ತೆ. ಎಂತ ನೀಡಿದ ದೂರಿನ ಮೇರೆಗೆ ಠಾಣಾ ಮೊ ನಂ 34/2018 ಕಲಂ 279,337 ಐ.ಪಿ.ಸಿ ರೀತ್ಯಾ ಕೇಸು ದಾಖಲಿಸಿರುತ್ತದೆ.

 Monday, 23 April 2018

ಅಪರಾಧ ಘಟನೆಗಳು 23-04-18

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣಾ ಯುಡಿಆರ್ ನಂ 05/2018 ಕಲಂ 174 ಸಿ.ಆರ್.ಪಿ.ಸಿ.

 

ದಿನಾಂಕ:22-04-17 ರಂದು ಮಧ್ಯಾಹ್ನ 1-30 ಗಂಟೆಗೆ ಈ ಕೇಸಿನ ಪಿರ್ಯಾದಿ  ಶ್ರೀಮತಿ ನಂದಿನಿ ಕೋಂ  ಜಯರಾಮ್, ಟಿ.ಎಂ. ಮಂಜುನಾಥ ನಗರ, ರವರು  ಠಾಣೆಗೆ ಹಾಜರಾಗಿ ನೀಡಿದ  ಅರ್ಜಿಯ ಅಂಶವೆನೆಂದರೆ  ನಾನು ಈಗ್ಗೆ  10 ವರ್ಷಗಳ ಹಿಂದೆ  ಹಾಸನ ಜಿಲ್ಲೆಯ ಗುಂಡಕನಹಳ್ಳಿ ಗ್ರಾಮದ  ನಂಜುಂಡೇಗೌಡರ ಮಗ ಜಯರಾಮ್ ವರೊಂದಿಗೆ   ವಿವಾಹವಾಗಿದ್ದು  ಮನಗೆ 09 ವರ್ಷದ ಕುಂದನ  ಎಂಬ ಮಗಳಿರುತ್ತಾಳೆ. ಮದುವೆಯಾದಗಿನಿಂದಲೂ ನಾವಿಬ್ಬರೂ ಅನ್ಯೂನ್ಯವಾಗಿರುತ್ತೇವೆ. ನಾನು ನನ್ನ ತವರು ಮನೆ ಮಂಜುನಾಥ ನಗರದಲ್ಲಿ ಮಗ್ಗದ ಕೆಲಸಕ್ಕೆ  ಹೋಗುತ್ತಿರುತ್ತೇನೆ ನಮ್ಮ ಯಜಮಾನರು  ಸ್ವಲ್ಪ ದಿನ   ಕಾಯಿ ಫ್ಯಾಕ್ಟರಿಯಲ್ಲಿ  ಕೆಲಸ ಮಾಡುತ್ತಿದ್ದೆವು. ಹೀಗಿರುವಾಗ ನಮ್ಮ  ಯಜಮಾನರಿಗೆ  ಸುಮಾರು  06 ವರ್ಷಗಳಿಂದ ಬಿ.ಪಿ., ಷುಗರ್, & ಲಿವರ್  ಸಮಸ್ಯೆ ಇದ್ದು , ಈಗ್ಗೆ  04 ವರ್ಷಗಳಿಂದ ಅವರು ಸರಿಯಾಗಿ  ಮಾತನಾಡದೆ ಸಮಸ್ಯೆಯಾಗಿದ್ದು ಈ ಬಗ್ಗೆ  ತಿಪಟೂರು ಸರ್ಕಾರಿ ಆಸ್ಪತ್ರೆಯಲ್ಲಿ  ಚಿಕಿತ್ಸೆ ಕೊಡಿಸಿದ್ದೆವು  ನಮ್ಮ  ಅವರು  ಮಾನಸಿಕವಾಗಿ ಕೊರಗಿ ಮಾತಿನ ಮೇಲೆ ಹಿಡಿತವಿರಲಿಲ್ಲ ನಾವು ಅವರನ್ನು ಚನ್ನಾಗಿ ನೋಡಿಕೊಳ್ಳುತ್ತಿದ್ದೆವು  ಅವರ  ಸಂಬಧಿಕರು ಸಹ ಬಂದು ಹೋಗುತ್ತಿದ್ದರು. ಹೀಗಿರುವಾಗ  ದಿ:22-04-18 ರಂದು  ನಾನು & ನಮ್ಮ  ತಂದೆ ತಾಯಿ  ನನ್ನ ಮಗಳು  ಹಾಗೂ  ನನ್ನ  ತಮ್ಮನ  ಸಂಸಾರ  ಸಮೇತ  ಸಂಬಂಧಿಕರ ಮದುವೆಗೆ  ಚನ್ನರಾಯಪಟ್ಟಣ ತಾ. ನಾಗರನವಿಲೆಗೆ  ಬೆಳಿಗ್ಗೆ  9-30 ಗಂಟೆಗೆ ಹೊರೆಟೆವು ನಮ್ಮ  ಯಜಮಾನರು ಮನೆಯಲ್ಲೆ ಇದ್ದರು ನಾನು  ಸುಮಾರು 12-30 ಗಂಟೆ ಸಮಯದಲ್ಲಿ   ನನ್ನ  ತಮ್ಮ ಮುತ್ತುರಾಜ್  ಗೆ ಪೋನ್ ಮಾಡಿದಾಗ  ಆತನು ನನ್ನನ್ನು ಬೇಗ ಬಾ  ಎಂತಾ ಹೇಳಿದ  ನಾನು ವಿಚಾರ  ಮಾಡಲಾಗಿ  ಸದರಿ ವಿಚಾರ  ತಿಳಿಸಿದ್ದು  ನಾವೆಲ್ಲಾರೂ ನಮ್ಮ ಮನೆಗೆ  ಬಂದು ನೋಡಿದಾಗ ನಮ್ಮ ಯಜಮಾನರಾದ ಜಯರಾಮ್ ರವರು  ಮನೆಯ ತೊಲೆಗೆ  ನೇಣು ಹಾಕಿಕೊಂಡು ಆತ್ಮಹತ್ಯೆ  ಮಾಡಿಕೊಂಡು  ಮೃತಪಟ್ಟಿದ್ದರು  ನಮ್ಮ ಯಜಮಾನರು  ಮಾನಸಿಕವಾಗಿ ಕುಗ್ಗಿದ್ದರು ಅಲ್ಲದೆ  ಅವರಿಗೆ  ಆರೋಗ್ಯದ  ಸಮಸ್ಯೆಯಿಂದ  ಚಿಕಿತ್ಸೆ  ಪಡೆಯುತ್ತಿದ್ದು  ಇದರಿಂದ  ಜೀವನದಲ್ಲಿ ಜಿಗುಪ್ಸೆ ಹೊಂದಿ  ಚಿಂತೆ ಮಾಡಿಕೊಂಡು ತನ್ಮೂಲಕ ತಾನೇ  ನೇಣು ಹಾಕಿಕೊಂಡು  ಮೃತಪಟ್ಟಿರುತ್ತಾರೆ  ಇವರ   ಸಾವಿನಲ್ಲಿ ಯವುದೇ ಅನುಮಾವಿರುವುದಿಲ್ಲ ಮುಂದಿನ ಕಾನೂನು ಕ್ರಮ ಜರುಗಿಸಿ ಎಂತಾ ನೀಡಿದ  ದೂರಿನ ಪ್ರಕರಣ ದಾಖಲಿಸಿರುತ್ತೆ.

 

ತಿಪಟೂರು ನಗರ ಪೊಲೀಸ್ ಠಾಣಾ ಮೊ. ನಂ - 54/2018 ಕಲಂ:342,504,506,509, 420 ರೆ/ವಿ 34 ಐ.ಪಿ.ಸಿ.

ದಿನಾಂಕ:22/04/2018 ರಂದು ರಾತ್ರಿ 7-00 ಗಂಟೆಗೆ ತಿಪಟೂರು ಡಿ.ವೈ.ಎಸ್.ಪಿ ಕಛೇರಿಯಿಂದ ಟಪಾಲು ಮೂಲಕ ತಂದು ಹಾಜರುಪಡಿಸಿದ ಜ್ಞಾಪನವನ್ನು ಪಡೆದಿದ್ದು, ಸದರಿ ಜ್ಞಾಪನದ ಅಂಶವೇನೆಂದರೆ, ದಿನಾಂಕ:05/04/2018 ರಂದು ಪಿರ್ಯಾದಿ ಮಹೇಶ್ ರವರು ನೀಡಿರುವ ದೂರಿನ ಮೇರೆಗೆ ತಿಪಟೂರು ನಗರ ಠಾಣೆಯಲ್ಲಿ ಠಾಣಾ ಮೊ.ನಂ 41/2018 ಕಲಂ; 323,504,506,448,363 ರೆ/ವಿ 34 ಐ.ಪಿ.ಸಿ ಮತ್ತು 3(1) (r), 3(1) (s), 3(2) (Va) SC/ST (PA) Act-2015 ರೀತ್ಯಾ ಪ್ರಕರಣ ದಾಖಲು ಮಾಡಿದ್ದು, ಸದರಿ ಪ್ರಕರಣದಲ್ಲಿನ ಅಪಹರಣಕ್ಕೊಳಗಾದ ಎನ್ನಲಾದ ಸಂತ್ರಸ್ತೆ ಶೀತಲ್ ಪುರೋಹಿತ್ ರವರರಿಂದ ತುಮಕೂರು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸಿ.ಜೆ.ಎಂ ನ್ಯಾಯಾಲಯದಲ್ಲಿ ಕಲಂ; 164 ರೀತ್ಯಾ ಹೇಳಿಕೆಯನ್ನು ಪಡೆದಿದ್ದು, ಸದರಿ ಹೇಳಿಕೆಯ ಅಂಶವೇನೆಂದರೆ, ಮಹೇಶ್ ಹೆಚ್,ಎಂ ಎಂಬುವರ ಅಂಗಡಿಗೆ ಮೊಬೈಲ್ ರೀಚಾರ್ಜ ಮಾಡಿಸಲು ಹೋಗುತ್ತಿದ್ದು, ಆತನು ನನಗೆ ಕಳೆದ ಒಂದು ವರ್ಷದಿಂದ ಪರಿಚಯವಿರುತ್ತಾನೆ. ಆತನು ನಿನ್ನನ್ನು ಪ್ರೀತಿಸುತ್ತಿದ್ದೇನೆ. ಮದುವೆಯಾಗಬೇಕೆಂದು ಪೀಡಿಸುತ್ತಿದ್ದ. ನಾನು ನಮ್ಮ ಮನೆಯಲ್ಲಿ ಒಪ್ಪುವುದಿಲ್ಲ ಎಂದು ಹೇಳುತ್ತಿದ್ದೆ. ಆದರೆ ಆತನು ಮದುವೆ ಮಾಡಿಕೊಳ್ಳದಿದ್ದರೆ ನಾನು ಸಾಯುತ್ತೇನೆಂದು ಬ್ಲೇಡಿನಿಂದ ಕೈಯನ್ನು ಕೊಯ್ದುಕೊಳ್ಳುತ್ತಿದ್ದ. ಮತ್ತು ನಾನು ಗೌಡ ಜನಾಂಗಕ್ಕೆ ಸೇರಿದವನೆಂದು ನನ್ನಲ್ಲಿ ಎರಡು ಕಾರುಗಳಿವೆ 10 ಎಕರೆ ಜಮೀನು ಇದೆ ಮತ್ತು ಎಂ.ಎ ಡಿಗ್ರಿ ಮಾಡಿದ್ದೇನೆ ಎಂದು ಹೇಳಿದ್ದನು. ದಿನಾಂಕ: 22/02/2018 ರಂದು ಮಹೇಶನು ಏನೋ ಮಾತನಾಡಬೇಕೆಂದು ಅವರ ಮನೆಗೆ ಕರೆದುಕೊಂಡು ಹೋಗಿದ್ದು, ನನ್ನ ಕೂಡಿ ಹಾಕಿ ನಂತರ ಮೊಬೈಲ್ ಕಿತ್ತುಕೊಂಡು ಹಾಸನದ ಶೆಟ್ಟಿಹಳ್ಳಿಯಲ್ಲಿರುವ ಅವರ ಅತ್ತೆಯ ಮನೆಗೆ ಕರೆದುಕೊಂಡು ಹೋಗಿ ಆ ಮನೆಯಲ್ಲಿದ್ದ ಅವರ ಅಣ್ಣ, ಅತ್ತಿಗೆ, ಮತ್ತು ಇನ್ನೊಬ್ಬ ಸಂಬಂದಲ್ಲಿ ತಮ್ಮ ಎಲ್ಲರೂ ನನ್ನನ್ನು ಎಲ್ಲಿಯೂ ಹೋಗದ ಹಾಗೆ ನಿರ್ಬಂಧ ವಿಧಿಸಿದರು. ನಂತರ ಹೊಸಹಳ್ಳಿ ಧರ್ಮಸ್ಥಳ, ಬೆಂಗಳೂರಿನ ರಾಜಗೋಪಾಲನಗರ ಮತ್ತು ತಿರುಪತಿಗೆ ಕರೆದುಕೊಂಡು ಹೋಗಿದ್ದು, ನಂತರ ದಿನಾಂಕ: 09/03/2018 ರಂದು ಬೆಂಗಳೂರಿನಲ್ಲಿ ರಘುರಾಮ್ ಎಂಬ ನ್ಯಾಯವಾದಿಯಿಂದ ಹಣ ಕೊಟ್ಟು, ಮಹೇಶನ ಅತ್ತಿಗೆ ರಾಧ ಮತ್ತು ಅಣ್ಣ ಧರ್ಮ ಎಂಬುವರು ನನ್ನ ಅಕ್ಕ ಭಾವ ಎಂದು ನಟಿಸಿ ವಿವಾಹ ನೊಂದಣಿ ಮಾಡಿಸಿ ಅದೇ ದಿನ ದೃಡೀಕರಣ ಪತ್ರ ತೆಗೆದುಕೊಂಡಿರುತ್ತಾರೆ. ಮತ್ತು ನಿಮ್ಮ ಮನೆಯವರ ಜೊತೆ ಮಾತನಾಡಿ ನಿನ್ನ ಕುಟುಂಬದವರ ಜೊತೆ ಹೋದರೆ ಸಾಯುತ್ತೇನೆಂದು ಬೆದರಿಕೆಯನ್ನು ಹಾಕಿದ್ದು, ತಿಪಟೂರು ನಗರ ಠಾಣೆಗೆ ಬಂದು ಹೇಳಿಕೆಯನ್ನು ನೀಡಿ ನಂತರ ಮಹೇಶನ ಜೊತೆಯಲ್ಲಿ ಅವರ ಮನೆಗೆ ಹೋಗಿದ್ದೆನು. ಮಹೇಶನು ಕುಡಿದುಕೊಂಡು ಮನೆಗೆ ಬಂದು ಹೊಡೆಯುವುದು ಬಡಿಯುವುದು ಮಾಡುತ್ತಾ ಕೋಣೆಯ ಒಳಗೆ ಕೂಡಿ ಹಾಕಿರುತ್ತಾನೆ.ನಂತರ ನನ್ನ ಅಣ್ಣ ಮತ್ತು ಚಿಕ್ಕಪ್ಪ ಕೌನ್ಸಿಲರ್ ಪ್ರಸನ್ನಕುಮಾರ್ ಜೊತೆ ಮನೆಗೆ ಬಂದಿದ್ದು, ಆ ವೇಳೆಯಲ್ಲಿ ಎಲ್ಲಾ ವಿಚಾರವನ್ನು ತಿಳಿಸಿ ನನ್ನನ್ನು ಇಲ್ಲಿಂದ ಕರೆದುಕೊಂಡು ಹೋಗಿ ಎಂದು ಹೇಳಿದ್ದೆ. ದಿನಾಂಕ: 03/04/2018 ರಂದು ಮಹೇಶನು ಇನ್ನು ಸಾಂಪ್ರದಾಯವಾಗಿ ಮದುವೆಯಾಗಿಲ್ಲದೇ ಇದ್ದುದರಿಂದ ದಿನಾಂಕ: 20/04/2018 ಮದುವೆ ನಿಶ್ಚಯ ಮಾಡಿಕೊಂಡು ಮದುವೆಯ ಕರೆಯೋಲೆ ಮಾಡಿಸಲು ಹೋಗಿದ್ದು, ತಂಗಿ ಸ್ನಾನ ಮಾಡಲು ಹೋಗಿದ್ದು, ಈ ಸಮಯದಲ್ಲಿ ನಾನು ಮನೆಯಿಂದ ತಪ್ಪಿಸಿಕೊಂಡು ನಮ್ಮ ಮನೆಗೆ ಹೋಗಿದ್ದು, ನಮ್ಮ ಅಣ್ಣ ನನ್ನನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಲು ಹೋಗುತ್ತಿರುವಾಗ ಮಹೇಶ್ ಕಾರಿನಲ್ಲಿ ಬಂದವನೆ ನನ್ನನ್ನು ಎಳೆದುಕೊಂಡು ಹೋಗಲು ಪ್ರಯತ್ನ ಪಟ್ಟಾಗ ನಾವು ವಾಹನದಿಂದ ಬಿದ್ಗದಿರುತ್ತೇವೆ. ಆಗ ಮಹೇಶ ಅಣ್ಣನನ್ನು ಮತ್ತು ನನ್ನನ್ನು ಕೆಟ್ಟ ಕೆಟ್ಟ ಮಾತುಗಳಿಂದ ಬೈಯುತ್ತಾ ಬಂದುಬಿಟ್ಟಿದ್ದೀಯಾ ನಿನ್ನನ್ನು ಬಿಡುವುದಿಲ್ಲ ಎಂದು ಹೇಳಿದ್ದು, ನಂತರ ಅಲ್ಲಿ ಜನ ಸೇರಿದ್ದು  ಹೊರಟು ಹೋಗಿರುತ್ತಾನೆ. ಮಹೇಶನು ಪರಿಶಿಷ್ಟ ಜಾತಿಗೆ ಸೇರಿದವನೆಂದು ನನ್ನ ಶಾಲಾ ವರ್ಗಾವಣೆಯ  ಪ್ರ.ಪ್ರತ್ರವನ್ನು ಕೇಳಿದಾಗ ಗೊತ್ತಾಗಿರುತ್ತೆ. ಮತ್ತು ಅದಕ್ಕೋಸ್ಕರವೇ ಮದುವೆ ನೋಂದಣಿ ಮಾಡಿಸಿರುತ್ತಾರೆಂದು ಗೊತ್ತಾಗಿರುತ್ತೆ. ಎಂದು ಹೇಳಿಕೆಯನ್ನು ನೀಡಿದ್ದು, ಸದರಿ ಹೇಳಿಕೆಯ ಮೇರೆಗೆ ಮುಂದಿನ ಕ್ರಮದ ಬಗ್ಗೆ ನೀಡದ ಜ್ಞಾಪನವನ್ನು ಪಡೆದು ಪ್ರಕರಣ ದಾಖಲಿಸಿಕೊಂಡಿರುತ್ತೆ.


Page 1 of 4
Start
Prev
1

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 75 guests online
Content View Hits : 302218