lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿ 19.04.18 ಪೊಲೀಸ್ ಇಲಾಖೆಯು ಈ ಮೂಲಕ ಸಾರ್ವಜನಿಕರಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ: 15-05-2018 ರಂದು ತುಮಕೂರು ನಗರದ ವಿಶ್ವವಿದ್ಯಾನಿಲಯ ಕಲಾ... >>     ಪತ್ರಿಕಾ ಪ್ರಕಟಣೆ. ದಿನಾಂಕ: 10-05-2018 8 ಲಕ್ಷ ಬೆಲೆ ಬಾಳುವ ಮೊಬೈಲ್ ಮತ್ತು  ವಾಹನ ಕಳ್ಳರ... >> ಪತ್ರಿಕಾ ಪ್ರಕರಣೆ, ದಿನಾಂಕ: 07-05-18 ವಾರಸುದಾರರಿಲ್ಲದ 2,98,01,000/- ರೂ  ಹಣ ಪತ್ತೆ     ದಿನಾಂಕ:... >> ಪತ್ರಿಕಾ ಪ್ರಕಟಣೆ:- -:ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿಯ ಬಂಧನ:- ದಿನಾಂಕ :... >> ಪತ್ರಿಕಾ ಪ್ರಕಟಣೆ ದಿಃ25-04-2018. ದಿನಾಂಕ:24-04-2018 ರ ರಾತ್ರಿ 3 ಜನ ಅನುಮಾನಸ್ಪದ ವ್ಯಕ್ತಿಗಳು... >> ಪತ್ರಿಕಾ ಪ್ರಕಟಣೆ ದಿನಾಂಕ: 21-04-2018. ಕೊಲೆ ಆರೋಪಿಯ ಬಂಧನ:   ಹೆಬ್ಬೂರು ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 17.04.2018 ತುಮಕೂರು ಜಿಲ್ಲಾ ಪೊಲೀಸರ ಭರ್ಜರಿ ಬೇಟೆ: 65 ಕೆ.ಜಿ.... >> : ಪತ್ರಿಕಾ ಪ್ರಕಟಣೆ : ದಿನಾಂಕ:- 16-04-2018 ದಿನಾಂಕ;- 14-04-18 ರಂದು ರಾತ್ರಿ  2018 ರ ವಿಧಾನಸಭಾ... >> -: ಪತ್ರಿಕಾ ಪ್ರಕಟಣೆ :- ಈ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡುವುದೇನೆಂದರೆ,... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< April 2018 >
Mo Tu We Th Fr Sa Su
            1
2 3 4 5 6 7 8
9 10 11 12 13 14 15
16 17 18 19 20 21 22
23 24 26 27 28 29
30            
Wednesday, 25 April 2018
ಪತ್ರಿಕಾ ಪ್ರಕಟಣೆ ದಿಃ25-04-18.

ಪತ್ರಿಕಾ ಪ್ರಕಟಣೆ

ದಿಃ25-04-2018.


ದಿನಾಂಕ:24-04-2018 ರ ರಾತ್ರಿ 3 ಜನ ಅನುಮಾನಸ್ಪದ ವ್ಯಕ್ತಿಗಳು ಹಳ್ಳಿಯೊಂದರಲ್ಲಿ ಇದ್ದು, ಅವರುಗಳನ್ನು ಗ್ರಾಮಸ್ಥರು ಹಿಡಿದುಕೊಂಡಿರುತ್ತಾರೆ ಎಂಬಂತಹ ಮಾಹಿತಿಯನ್ನು ಪೊಲೀಸ್ ಸಬ್ ಇನ್ಸ್ಪೆಕ್ಟರ್, ತುಮಕೂರು ನಗರ ಪೊಲೀಸ್ ಠಾಣೆ ರವರಿಗೆ ಬಂದಿರುತ್ತದೆ.

ಮೇಲ್ಕಂಡ ಮಾಹಿತಿ ಮೇರೆಗೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ರವರು ಚೋಳಂಬಳ್ಳಿ ಗ್ರಾಮಕ್ಕೆ ಹೋಗಿದ್ದು, ಆ ಸಂದರ್ಭದಲ್ಲಿ 15-20 ಜನರ ಗುಂಪು 3 ಜನರ ಮೇಲೆ ಹಲ್ಲೆ ನಡೆಸುತ್ತಿದ್ದುದನ್ನು ನೋಡಿ ಅವರನ್ನು ಬಿಡಿಸಿದ್ದು, ಈ 3 ಜನರ ಪೈಕಿ ಒಬ್ಬನ ಕೈಯಲ್ಲಿ ಪಿಸ್ತೂಲ್ ಇರುತ್ತದೆ. ಪೊಲೀಸ್ ಸಬ್ ಇನ್ಸ್ಪೆಕ್ಟರ್, ತುಮಕೂರು ನಗರ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಗಳು ಸದರಿ 3 ಜನ ಆರೋಪಿಗಳನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದು, ಸಾರ್ವಜನಿಕರು ಹಲ್ಲೆ ಮಾಡಿದ್ದರಿಂದ ತುಮಕೂರು ನಗರ ಠಾಣೆ ಅಪರಾಧ ಸಂಖ್ಯೆ. 127/18 (ಸಾರ್ವಜನಿಕರಿಂದ ಹಲ್ಲೆಗೆ ಸಂಬಂಧಿಸಿದಂತೆ) ರೀತ್ಯ ಪ್ರಕರಣ ದಾಖಲಾಗಿರುತ್ತದೆ.

ಆನಂತರ ಆರೋಪಿಗಳ ಬಗ್ಗೆ ವಿಚಾರಿಸಲಾಗಿ ಅವರುಗಳ ಹೆಸರು 1)ಮಹಮ್ಮದ್ ಅಫ್ತಾ, 39 ವರ್ಷ, ಬೆಂಗಳೂರು ನಗರ ವಾಸಿ 2) ಸಯ್ಯಾದ್ ಖಾಸಿಂ ಸಾಬ್, 35 ವರ್ಷ, ಬೆಂಗಳೂರು ನಗರ ವಾಸಿ 3) ಶೇಖರ್, 23 ವರ್ಷ, ಹೊಸಕೋಟೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಎಂದು ತಿಳಿದು ಬಂದಿರುತ್ತದೆ. ಇವರುಗಳ ಪೈಕಿ, ಮಹಮ್ಮದ್ ಅಫ್ತಾ ಎಂಬುವವರಿಂದ ಪಿಸ್ತೂಲ್ ನ್ನು  ಪೊಲೀಸ್ ಸಬ್ ಇನ್ಸ್ಪೆಕ್ಟರ್ ರವರು ವಶಕ್ಕೆ ಪಡೆದುಕೊಂಡು ತುಮಕೂರು ನಗರ ಠಾಣೆ ಅಪರಾಧ ಸಂಖ್ಯೆ. 128/18 (ಅಕ್ರಮ ಶಸ್ತಾಸ್ತ್ರ ಹೊಂದಿರುವ ಬಗ್ಗೆ) ರೀತ್ಯ ಮತ್ತೊಂದು ಪ್ರಕರಣವನ್ನು ದಾಖಲಿಸಿಕೊಂಡು ತನಿಖಾ ವಿಧಾನಗಳನ್ನು ಅನುಸರಿಸುತ್ತಿರುವಾಗ ಆರೋಪಿ ಮಹಮ್ಮದ್ ಆಪ್ತಾ ಎಂಬುವವರು ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಕುಸಿದು ಬಿದ್ದಿದ್ದು, ತಕ್ಷಣವೇ ಸದರಿ ಆರೋಪಿಯನ್ನು ತುಮಕೂರು ಜಿಲ್ಲಾ ಸಕರ್ಾರಿ ಆಸ್ಪತ್ರೆಗೆ ದಾಖಲಿಸಲಾಗಿರುತ್ತದೆ. ಪರೀಕ್ಷೆ ನಡೆಸಿದ ವೈದ್ಯಾಧಿಕಾರಿಗಳು ಆರೋಪಿಯು ಮರಣ ಹೊಂದಿರುವುದಾಗಿ ತಿಳಿಸಿರುತ್ತಾರೆ. ಇದರ ಆಧಾರದ ಮೇರೆಗೆ ಕೊಲೆ ಪ್ರಕರಣವೊಂದನ್ನು ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ದಾಖಲಿಸಿಕೊಂಡು ಮುಂದಿನ ತನಿಖೆಯನ್ನು ಡಿ.ಎಸ್.ಪಿ. ಮಧುಗಿರಿ ಉಪ ವಿಭಾಗ ರವರಿಗೆ ವಹಿಸಲಾಗಿರುತ್ತದೆ.  ಈ ಪ್ರಕರಣವು ಕಸ್ಟೋಡಿಯಲ್ ಡೆತ್ ಪ್ರಕರಣವಾಗಿರುವುದರಿಂದ ಮಾನ್ಯ ರಾಜ್ಯ ಮಾನವ ಹಕ್ಕುಗಳ ಆಯೋಗದ ಮಾರ್ಗಸೂಚಿಯಲ್ಲಿನಂತೆ ಮುಂದಿನ ತನಿಖೆಗಾಗಿ ಸಿ.ಐ.ಡಿ. ಘಟಕಕ್ಕೆ ವಹಿಸಲಾಗುವುದು.

ಆರೋಪಿ ಮಹಮದ್ ಆಪ್ತಾ ಎಂಬುವವನ ಮೇಲೆ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಲಾಭಕ್ಕಾಗಿ ಕೊಲೆ ಪ್ರಕರಣ, ಬೆಂಗಳೂರು ನಗರದ ಜ್ಙಾನಭಾರತಿ ಮತ್ತು ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ  ದರೋಡೆ ತಯಾರಿಯಂತಹ ಪ್ರಕರಣಗಳು ಹಾಗೂ ಹೆಣ್ಣೂರು ಮತ್ತು ಭಾರತಿ ನಗರ ಪೊಲೀಸ್ ಠಾಣೆಗಳಲ್ಲಿ ಕಳ್ಳತನದ ಪ್ರಕರಣಗಳು ದಾಖಲಾಗಿರುವ ಬಗ್ಗೆ ಮಾಹಿತಿ ಇರುತ್ತದೆ.


ಅಪರಾಧ ಘಟನೆಗಳು 25-04-18

ಮಿಡಿಗೇಶಿ ಪೊಲೀಸ್ ಠಾಣಾ ಮೊನಂನಂ46/2018, ಕಲಂ: 279,337,304(A) IPC

ದಿನಾಂಕ:23/04/2018 ರಂದು ಸಂಜೆ 05:00 ಗಂಟೆ ಸಮಯದಲ್ಲಿ ಪಿರ್ಯಾದಿ ಕೇಶವ ಬಿನ್ ಬಸವಂತಪ್ಪ, 36 ವರ್ಷ, ಈಡಿಗರ ಜನಾಂಗ, ಜಿರಾಯ್ತಿ ಕೆಲಸ, ತಲಗಡ್ಡೆ ಗ್ರಾಮ, ಜಡೆ ಹೋಬಳಿ, ಸೊರಬ ತಾಲ್ಲೋಕು, ಶಿವಮೊಗ್ಗ ಜಿಲ್ಲೆ, ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನಂಶವೇನೆಂದರೆ  ನಮ್ಮ ತಂದೆ ಬಸವಂತಪ್ಪ ತಾಯಿ ಗಂಗಮ್ಮ ರವರಿಗೆ ಇಬ್ಬರು ಗಂಡು ಮಕ್ಕಳು ಹಾಗೂ ಇಬ್ಬರೂ ಹೆಣ್ಣು ಮಕ್ಕಳಿದ್ದು ಎಲ್ಲರಿಗೂ ಮದುವೆಗಳಾಗಿರುತ್ತವೆ. ನನ್ನ ತಮ್ಮನಾದ ಗಜೇಂದ್ರ ಆತನ  ಹೆಂಡತಿ ರಂಜಿತಾ ನಮ್ಮ ತಂದೆ ತಾಯಿಯೊಂದಿಗೆ  ಒಟ್ಟಿಗೆ ವಾಸವಿದ್ದು, ನಾನು ನನ್ನ ಹೆಂಡತಿ ಮಕ್ಕಳೊಂದಿಗೆ ಅದೇ ಮನೆಯಲ್ಲಿ ಬೇರೆ ವಾಸವಿರುತ್ತೇನೆ. ನನ್ನ ತಮ್ಮ ಗಜೇಂದ್ರ 32 ವರ್ಷ ರವರು ಬೆಂಗಳೂರಿನಲ್ಲಿ  ಎಮಿಷನ್ ಟೆಸ್ಟ್ ಕೆಲಸ ಮಾಡಿಕೊಂಡಿದ್ದು ವಾರಕ್ಕೊಮ್ಮೆ ಊರಿಗೆ ಬಂದು ಹೆಂಡತಿಯನ್ನು ಹಾಗೂ ನಮ್ಮ ತಂದೆ ತಾಯಿಗಳನ್ನು, ನಮ್ಮನ್ನು ನೋಡಿಕೊಂಡು ಯೋಗಕ್ಷೇಮವನ್ನು ವಿಚಾರಿಸಿಕೊಂಡು ಹೋಗುತ್ತಿದ್ದನು. ಈಗಿರುವಾಗ  ದಿನಾಂಕ:22/04/2018 ರಂದು ಸಂಜೆ ನನ್ನ ತಮ್ಮ ಗಜೇಂದ್ರನು ನಮ್ಮ ಮನೆಗೆ ಪೋನ್ ಮಾಡಿ ವಿದುರಾಶ್ವತದಲ್ಲಿ  ನನ್ನ ಸ್ನೇಹಿತನಾದ ಮಧುಗಿರಿ ತಾಲ್ಲೋಕಿನ ತೊಂಡೋಟಿ ಗ್ರಾಮದ ವಾಸಿ ಮಂಜುನಾಥ ರವರ ಮಧುವೆ ಕಾರ್ಯಕ್ರಮವಿದ್ದು  ಕಾರಿನಲ್ಲಿ ನನ್ನ ಸ್ನೇಹಿತರ ಜೊತೆಯಲ್ಲಿ ಮಧುವೆಗೆ ಬಂದಿರುತ್ತೇನೆಂತ  ಹೇಳಿದ್ದನು. ನಂತರ ಈ  ದಿನ ಅಂದರೆ ದಿನಾಂಕ:23/04/2018 ರಂದು ಸುಮಾರು 01:30 ಎ.ಎಂ.ಗೆ ನನ್ನ ಸ್ನೇಹಿತನಾದ ಜಗಧೀಶ ಎಂಬುವನು ನಮ್ಮ ಮನೆಯ ಬಳಿ ಬಂದು  ಮದುವೆಗೆ ಹೋಗಿದ್ದ ಗಜೇಂದ್ರರವರ ಕಾರು ಮಧುಗಿರಿ ತಾಲ್ಲೋಕಿನ ಗಿರಿಯಮ್ಮನಪಾಳ್ಯದ ಹತ್ತಿರ ಮಧುಗಿರಿ ಪಾವಗಡ ರಸ್ತೆಯಲ್ಲಿ ಅಪಘಾತವಾಗಿ ಕಾರಿನಲ್ಲಿದ್ದ ನಿನ್ನ ತಮ್ಮ ಗಜೇಂದ್ರನಿಗೆ  ಹಾಗೂ ಆತನ ಸ್ನೇಹಿತರಿಗೆ ಪೆಟ್ಟುಗಳು ಬಿದ್ದು ನಿನ್ನ ತಮ್ಮ ಗಜೇಂದ್ರನಿಗೆ ಸಿರಿಯಸ್ ಆಗಿದೆಯಂತೆ ಆತನನ್ನು ಚಿಕಿತ್ಸೆಗೆ ತುಮಕೂರಿಗೆ ಕರೆದುಕೊಂಡು ಹೋಗುತ್ತಿದ್ದಾರೆ ಎಂತ  ಆತನ ಜೊತೆಯಲ್ಲಿದ್ದ ಹನುಮಂತ ಎಂಬುವರು ನನಗೆ ಪೋನ್ ಮಾಡಿ ತಿಳಿಸಿದರೆಂತ ವಿಷಯ ತಿಳಿಸಿದನು. ವಿಷಯ ತಿಳಿದ ನಾನು ಕೂಡಲೇ ನನ್ನ ಸ್ನೇಹಿತರಾದ ಬಸವರಾಜು ಮತ್ತು ಮಧುಚಂದ್ರರವರೊಂದಿಗೆ ಊರಿನಿಂದ ಹೊರಟು ತುಮಕೂರಿನಲ್ಲಿರುವ ಸರ್ಕಾರಿ ಆಸ್ಪತ್ರೆಯ ಬಳಿ ಬಂದು ನೋಡಲಾಗಿ ನನ್ನ ತಮ್ಮ ಗಜೇಂದ್ರನು ಮೃತಪಟ್ಟಿದ್ದು ಆತನ ಶವ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿತ್ತು. ನನ್ನ ತಮ್ಮನ ಜೊತೆ ಕಾರಿನಲ್ಲಿದ್ದ ಹನುಮಂತನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆತನನ್ನು ವಿಚಾರ ಮಾಡಲಾಗಿ ಈ ದಿನ ಅಂದರೆ ದಿನಾಂಕ:22/04/2018 ರಂದು ಬೆಳಿಗ್ಗೆ ವಿದುರಾಶ್ವತ್ತದಲ್ಲಿ  ನಮ್ಮ ಸ್ನೇಹಿತ ಮಧುಗಿರಿ ತಾಲ್ಲೋಕಿನ ತೊಂಡೋಟಿ ಗ್ರಾಮದ ವಾಸಿ ಮಂಜುನಾಥ ರವರ ಮಧುವೆ ಕಾರ್ಯಕ್ರಮವಿದ್ದು ನಾನು ಮತ್ತು ನಿನ್ನ ತಮ್ಮ ಗಜೇಂದ್ರ ಹಾಗೂ ನಮ್ಮ ಸ್ನೇಹಿತರಾದ ಗಿರೀಶ್,ಕಿರಣ್, ಹಾಗೂ ಶ್ರೀಕಾಂತ್ ಎಲ್ಲರೂ ನಾವುಗಳು ಕೆಲಸ ಮಾಡುತ್ತಿದ್ದ ಎಮಿಷನ್ ಟೆಸ್ಟ್ ಸೆಂಟರ್ನ ಮಾಲೀಕರಾದ ಜನಾರ್ಧನ ರವರ ಬಾಬ್ತು ಕೆಎ-01-ಎಂ.ಡಿ.4095 ನೇ ಮಾರುತಿ ಸ್ವಿಪ್ಟ್ ಕಾರಿನಲ್ಲಿ  ವಿಧುರಾಶ್ವಕ್ಕೆ ಬಂದು ನನ್ನ ಸ್ನೇಹಿತನ ಮಧುವೆ ಕಾರ್ಯಕ್ರಮ ಮುಗಿಸಿಕೊಂಡು ನಂತರ ವದು-ವರರನ್ನು  ತೊಂಡೋಟಿ ಗ್ರಾಮಕ್ಕೆ ಬಿಟ್ಟು ವಾಪಾಸ್ ಬೆಂಗಳೂರಿಗೆ ಹೋಗಲು ಅದೇ ಕಾರಿನಲ್ಲಿ  ಐ.ಡಿ.ಹಳ್ಳಿ ಹೊಸಕೆರೆ ಮಾರ್ಗವಾಗಿ ಮದುಗಿರಿ- ಪಾವಗಡ ರಸ್ತೆಯಲ್ಲಿ ಗಿರಿಯಮ್ಮನ ಪಾಳ್ಯದ ಹತ್ತಿರ ಅದೇ ದಿನ ರಾತ್ರಿ ಸುಮಾರು 11:00 ಗಂಟೆ ಸಮಯದಲ್ಲಿ ಹೋಗುತ್ತಿದ್ದಾಗ ಮೇಲ್ಕಂಡ  ಕೆಎ-01-ಎಂ.ಡಿ.4095 ನೇ ಕಾರನ್ನು ಚಾಲನೆ ಮಾಡುತ್ತಿದ್ದ ಶ್ರೀಕಾಂತ್ ಎಂಬುವನು ಕಾರನ್ನು ಅತಿ ಜೋರಾಗಿ ಮತ್ತು ಅಡ್ಡಾದಿಡ್ಡಿಯಾಗಿ ಚಾಲನೆ ಮಾಡಿ ನಮ್ಮ ಕಾರಿನ ಮುಂದೆ ರಸ್ತೆಯಲ್ಲಿ ಹೋಗುತ್ತಿದ್ದ ಯಾವುದೋ ವಾಹನಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತವುಂಟು ಮಾಡಿದ್ದರಿಂದ ಕಾರು ಜಖಂ ಆಗಿ  ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತ್ತಿದ್ದ ನನ್ನ ಎರಡು ಕೈಗಳಿಗೆ ಹಾಗೂ ತಲೆಗೆ ಪೆಟ್ಟುಗಳು ಬಿದ್ದು  ರಕ್ತಗಾಯಗಳಾದವು, ನಂತರ ನನ್ನ ಪಕ್ಕದಲ್ಲಿ ಕುಳಿತಿದ್ದ ಗಿರೀಶನಿಗೆ ಹಣೆಗೆ ಹಾಗೂ ಕಿರಣ್ ಗೆ ಎಡಕಣ್ಣಿಗೆ, ಹಾಗೂ ಕಾರನ್ನು ಚಾಲನೆ ಮಾಡುತ್ತಿದ್ದ ಶ್ರೀಕಾಂತನಿಗೆ ತಲೆಗೆ ಮತ್ತು ಕುತ್ತಿಗೆಗೆ ಪೆಟ್ಟುಗಳು ಬಿದ್ದು ರಕ್ತಗಾಯಗಳಾಗಿದ್ದವು. ಸದರಿ ಕಾರಿನ ಮುಂದಿನ ಸೀಟಿನಲ್ಲಿ ಕುಳಿತ್ತಿದ್ದ ನಿನ್ನ ತಮ್ಮ ಗಜೇಂದ್ರನಿಗೆ ಮುಖಕ್ಕೆ, ತಲೆಗೆ,ಎದೆಗೆ, ಹಾಗೂ ಎರಡು ಕಾಲುಗಳಿಗೆ ತೀವ್ರ ತರವಾದ ಪೆಟ್ಟುಗಳು ಬಿದ್ದು ರಕ್ತಗಾಯಗಳಾಗಿದ್ದವು. ಅಷ್ಠರಲ್ಲಿ ಅಪಘಾತದ  ವಿಚಾರ ತಿಳಿದು ಸ್ಥಳಕ್ಕೆ ಬಂದ ಯಾರೋ ಸಾರ್ವಜನಿಕರು ನಮ್ಮನ್ನು ಆಂಬ್ಯೂಲೆನ್ಸ್ ನಲ್ಲಿ ಆಸ್ಪತ್ರೆಗೆ ಕಳುಹಿಸಿಕೊಟ್ಟರು. ಗಾಯಗೊಂಡಿದ್ದ ನಮ್ಮಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದಾಗ ಗಜೇಂದ್ರನು ಆಸ್ಪತ್ರೆಯಲ್ಲಿಯೇ ಮೃತಪಟ್ಟನು. ಗಿರೀಶ್,ಕಿರಣ್,ಶ್ರೀಕಾಂತ, ರವರನ್ನು  ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು ನಾನು ಇಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದೇನೆಂತ ವಿಷಯ ತಿಳಿಸಿದನು. ಆದ್ದರಿಂದ ದಿನಾಂಕ:22/04/2018 ರಂದು ರಾತ್ರಿ ಸುಮಾರು 11:00 ಗಂಟೆ ಸಮಯದಲ್ಲಿ ಈ ಅಪಘಾತವುಂಟು ಮಾಡಿ ನನ್ನ ತಮ್ಮ ಗಜೇಂದ್ರನ ಸಾವಿಗೆ ಕಾರಣನಾದ  ಕೆಎ-01-ಎಂ.ಡಿ. 4095 ನೇ ಕಾರಿನ ಚಾಲಕ ಶ್ರೀಕಾಂತನ ಮೇಲೆ ಕಾನೂನು ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

ಜಯನಗರ ಪೊಲೀಸ್ ಠಾಣಾ ಮೊ ನಂ 67/2018 ಕಲಂ 143,147,148,323,324,341,504,506 ರೆ.ವಿತ್‌ 149

ದಿನಾಂಕ: 24/04/2018 ರಂದು ರಾತ್ರಿ 7-15 ಗಂಟೆಗೆ ತುಮಕೂರು ಟೌನ್‌, ಮರಳೂರು ದಿಣ್ಣೆ, 10 ನೇ ಕ್ರಾಸ್ ವಾಸಿ ಸಜ್ಜಾದ್ ಅಹಮ್ಮದ್‌ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ, ನಾನು ಈಗ್ಗೆ 9 ವರ್ಷಗಳ ಹಿಂದೆ ಎಮ್ ಅಬ್ದುಲ್ಲಾ ರವರ 3 ನೇ ಮಗಳು ಆಯಿಶಾ ಖುಬ್ರ ಎಂಬುವರನ್ನು ಮದುವೆಯಾಗಿದ್ದು ನಮಗೆ 3 ಜನ ಮಕ್ಕಳಿರುತ್ತಾರೆ.  ನಾನು ಸುಮಾರು 4 ವರ್ಷಗಳಿಂದ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡಿಕೊಂಡು ಅಲ್ಲಿಯೇ ಇದ್ದೆನು.  ಈಗ್ಗೆ ಸುಮಾರು ಹಿಂದೆ ನನಗೂ ಹಾಗೂ ನನ್ನ ಹೆಂಡತಿಗೂ ಸಂಸಾರಿಕ ವಿಚಾರದಲ್ಲಿ ಮನಸ್ತಾಪ ಬಂದು ನಮ್ಮ ತಂದೆ ತಾಯಿಯ ಮನೆಯಲ್ಲಿದ್ದ ನನ್ನ ಹೆಂಡತಿ ಅವರ ತವರು ಮನೆಗೆ ಹೋಗಿ ಅಲ್ಲಿಯೇ ಇರುತ್ತಾಳೆ.  ನಾನು ಸೌದಿ ಅರೇಬಿಯಾದಿಂದ ದಿನಾಂಕ: 29-03-2018 ರಂದು ವಾಪಾಸ್ ತುಮಕೂರು ಟೌನ್ ಮರಳೂರು ದಿಣ್ಣೆಯಲ್ಲಿರುವ ನಮ್ಮ ತಂದೆ ಮನಗೆ ಬಂದಿದ್ದು, ವಿಚಾರ ಗೊತ್ತಾಗಿ ನನ್ನ ಹೆಂಡತಿ ಹಾಗೂ ನನ್ನ ಹೆಂಡತಿ ಕಡೆಯವರು ನಮ್ಮ ಮನೆಯ ಬಳಿಗೆ ಬಂದು ರಾಜಿ ಸಂದಾನ ಮಾಡಿ ನನ್ನ ಹೆಂಡತಿಯನ್ನು ನಮ್ಮ ಮನೆಯಲ್ಲಿಯೇ ಬಿಟ್ಟು ಹೋಗಿದ್ದರು.  ಸುಮಾರು ಒಂದು ವಾರಗಳ ಕಾಲ ನನ್ನ ಹೆಂಡತಿ ನಮ್ಮ ಮನೆಯಲ್ಲಿಯೇ ನಮ್ಮ ತಂದೆ ತಾಯಿ ನನ್ನ ಜೊತೆಯಲ್ಲಿಯೇ ವಾಸವಾಗಿದ್ದು ನಂತರ ಮತ್ತೆ ನನಗೂ ಹಾಗೂ ನನ್ನ ಹೆಂಡತಿಗೂ ಸಾಂಸಾರಿಕ  ವಿಚಾರದಲ್ಲಿ ಜಗಳವಾಗಿ ವಾಪಾಸ್ ತವರು ಮನೆಗೆ ಹೋಗಿದ್ದಳು. ದಿನಾಂಕ: 16-04-2018 ರಂದು ಬೆಳಿಗ್ಗೆ ಸುಮಾರು 11-30 ಗಂಟೆ ಸಮಯದಲ್ಲಿ ನನ್ನ ಹೆಂಡತಿ ತಂದೆ ಎಮ್.ಅಬ್ದುಲ್ಲಾ ರವರ ಮಕ್ಕಳಾದ ಮಹಮ್ಮದ್ ಮೋಯಿನ್, ಮಹಮ್ಮದ್ ಪಾರೋಕ್‌ ಹಾಗೂ ಅವರ ಸಂಬಂಧಿಕರಾದ ಶಬ್ಬೀರ್, ತೌಸೀಫ್ ರವರೊಂದಿಗೆ ನಮ್ಮ ಮನೆಯ ಬಳಿಗೆ ಬಂದು ಮನೆಯ ಮುಂದೆ ನಿಂತಿದ್ದ ನನ್ನನ್ನು ಅಡ್ಡಗಟ್ಟಿ ತಡೆದು ಮುಂದಕ್ಕೆ ಹೋಗದಂತೆ ತಡೆದು ನಿಲ್ಲಿಸಿ ಎಲ್ಲರೂ ಸೇರಿ ನನ್ನ ಮೇಲೆ ಏಕಾಏಕಿ ಜಗಳ ತೆಗೆದು ಅವಾಚ್ಯ ಶಬ್ದಗಳಾದ ತೇರಿ ಮಾಕೀ ಚೂತ್‌ ಸುವರ್ ಕೇ ಬಚ್ಚೇ ಎಂತ ಬೈಯುತ್ತಾ ನಿನ್ನ ಹೆಂಡತಿ ಜೊತೆ ಸಂಸಾರ ಮಾಡದೇ ಸೌದಿ ಅರೇಬಿಯಾಕ್ಕೆ ಹೋಗುತ್ತಿಯೇನೋ ನಿನಗೆ ನಮ್ಮ ಹುಡುಗಿಯನ್ನು ಕೊಟ್ಟಿರುವುದು ಸಂಸಾರ ಮಾಡಲೆಂದು ಸಂಸಾರ ಮಾಡದೇ ನಮ್ಮ ಮಗಳನ್ನು ನಮ್ಮ ಮನೆಗೆ ಕಳುಹಿಸಿದ್ದೀಯೇನೋ ಎಂತ ಜಗಳ ತೆಗೆದು ಮಹಮ್ಮದ್ ಮೋಯಿನ್ ಆತನ ಕೈಯಲ್ಲಿದ್ದ ದೊಣ್ಣೆಯಿಂದ ನನ್ನ ಬಲಗಣ್ಣಿನ ಮೇಲ್ಭಾಗ ಎಡಭಾಗದ ಎಡಕಾಲಿನ ತೊಡೆಗೆ ಹೊಡೆದು ರಕ್ತಗಾಯಪಡಿಸಿದನು.  ಉಳಿಕೆಯವರಾದ ಎಮ್‌.ಅಬ್ದುಲ್ಲಾ, ಮಹಮ್ಮದ್ ಫಾರೂಕ್, ಶಬ್ಬೀರ್ ಹಾಗೂ ತೌಸಿಫ್ ರವರುಗಳು ಕೆಳಕ್ಕೆ ಕೆಡವಿಕೊಂಡು ಕೈಗಳಿಂದ ಮೈಮೇಲೆಲ್ಲಾ ಹೊಡೆದು ನೋವುಂಟು ಮಾಡಿರುತ್ತಾರೆ.  ಅಷ್ಟರಲ್ಲಿ ಅಲ್ಲಿಯೇ ಇದ್ದ ನಮ್ಮ ಮೊಹಲ್ಲಾ ವಾಸಿಗಳಾದ ಇರ್ಫಾನ್ ಬಿನ್ ಶಫೀಉಲ್ಲಾ ಹಾಗೂ ನಮ್ಮ ಸಂಬಂಧಿ ಕೋಣೆಮಾದೇನಹಳ್ಳಿ ವಾಸಿ ಗೌಸ್‌ಪೀರ್ ಬಿನ್ ಮಹಮ್ಮದ್ ಹಬೀದ್ ರವರು ಜಗಳ ಬಿಡಿಸಿ ಮಹಮ್ಮದ್ ಮೋಯಿನ್ ಕೈಯಲ್ಲಿದ್ದ ದೊಣ್ಣೆಯನ್ನು ಕಿತ್ತು ಬಿಸಾಕಿರುತ್ತಾರೆ.  ಆದರೂ ಸಹ ಮೇಲ್ಕಂಡವರೆಲ್ಲಾ ಹೊಗುವಾಗ ನಿನ್ನನ್ನು ಇಷ್ಟಕ್ಕೆ ಬಿಡುವುದಿಲ್ಲ ಕೊಲೆ ಮಾಡಿಯೇ ತೀರುತ್ತೇವೆ ಎಂತ ಕೊಲೆ ಬೆದರಿಕೆ ಹಾಕಿ ಅಲ್ಲಿಂದ ಹೊರಟು ಹೋಗಿರುತ್ತಾರೆ. ನಂತರ ಗಾಯಗೊಂಡಿದ್ದ ನನ್ನನ್ನು ನಮ್ಮ ಮಾವ ಕರೀಂ ಎಂಬುವರು ಯಾವುದೋ ಆಟೋದಲ್ಲಿ ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಅಲ್ಲಿಂದ ನನ್ನನ್ನು ಅರುಣ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ಚಿಕಿತ್ಸೆಗೆ ದಾಖಲು ಮಾಡಿರುತ್ತಾರೆ.  ನಾನು ದಿನಾಂಕ: 16-04-2018 ರಿಂದ 18-04-2018 ರವರೆಗೆ ಅರುಣಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತೇನೆ.  ನಡೆದ ಘಟನೆ ಬಗ್ಗೆ ದೂರು ಕೊಡಲು ಹೊರಟಾಗ ನಮ್ಮ ಮಾವ ಕರೀಂ ರವರು ಗಲಾಟೆ ಮಾಡಿದವರು ನಿನ್ನ ಹೆಂಡತಿಯ ತವರು ಮನೆಕಡೆಯವರು ಹಿರಿಯರನ್ನು ಸೇರಿಸಿ ನ್ಯಾಯ ಪಂಚಾಯಿತಿ ಮಾಡಿ ಬಗೆಹರಿಸಿಕೊಳ್ಳೋಣ ಎಂತ ತಿಳಿಸಿದ್ದು ನನ್ನ ಹೆಂಡತಿ ಕಡೆಯವರು ನ್ಯಾಯ ಪಂಚಾಯಿತಿಗೆ ಬರದ ಕಾರಣ ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದು ನನಗೆ ಹೊಡೆದು ಅವಾಚ್ಯ ಶಬ್ದಗಳಿಂದ ಬೈಯ್ದು ಪ್ರಾಣ ಬೆದರಿಕೆ ಹಾಕಿರುವ ಮೇಲ್ಕಂಡವರ ಮೇಲೆ ಕ್ರಮ ಜರುಗಿಸಲು ಕೋರಿ ನೀಡಿರುವ ಪಿರ್ಯಾದು ಮೇರೆಗೆ ಪ್ರಕರಣ ದಾಖಲಿಸಿರುತ್ತೆ.


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 62 guests online
Content View Hits : 272933