lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿ 19.04.18 ಪೊಲೀಸ್ ಇಲಾಖೆಯು ಈ ಮೂಲಕ ಸಾರ್ವಜನಿಕರಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ: 15-05-2018 ರಂದು ತುಮಕೂರು ನಗರದ ವಿಶ್ವವಿದ್ಯಾನಿಲಯ ಕಲಾ... >>     ಪತ್ರಿಕಾ ಪ್ರಕಟಣೆ. ದಿನಾಂಕ: 10-05-2018 8 ಲಕ್ಷ ಬೆಲೆ ಬಾಳುವ ಮೊಬೈಲ್ ಮತ್ತು  ವಾಹನ ಕಳ್ಳರ... >> ಪತ್ರಿಕಾ ಪ್ರಕರಣೆ, ದಿನಾಂಕ: 07-05-18 ವಾರಸುದಾರರಿಲ್ಲದ 2,98,01,000/- ರೂ  ಹಣ ಪತ್ತೆ     ದಿನಾಂಕ:... >> ಪತ್ರಿಕಾ ಪ್ರಕಟಣೆ:- -:ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿಯ ಬಂಧನ:- ದಿನಾಂಕ :... >> ಪತ್ರಿಕಾ ಪ್ರಕಟಣೆ ದಿಃ25-04-2018. ದಿನಾಂಕ:24-04-2018 ರ ರಾತ್ರಿ 3 ಜನ ಅನುಮಾನಸ್ಪದ ವ್ಯಕ್ತಿಗಳು... >> ಪತ್ರಿಕಾ ಪ್ರಕಟಣೆ ದಿನಾಂಕ: 21-04-2018. ಕೊಲೆ ಆರೋಪಿಯ ಬಂಧನ:   ಹೆಬ್ಬೂರು ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 17.04.2018 ತುಮಕೂರು ಜಿಲ್ಲಾ ಪೊಲೀಸರ ಭರ್ಜರಿ ಬೇಟೆ: 65 ಕೆ.ಜಿ.... >> : ಪತ್ರಿಕಾ ಪ್ರಕಟಣೆ : ದಿನಾಂಕ:- 16-04-2018 ದಿನಾಂಕ;- 14-04-18 ರಂದು ರಾತ್ರಿ  2018 ರ ವಿಧಾನಸಭಾ... >> -: ಪತ್ರಿಕಾ ಪ್ರಕಟಣೆ :- ಈ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡುವುದೇನೆಂದರೆ,... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< April 2018 >
Mo Tu We Th Fr Sa Su
            1
2 3 4 5 6 7 8
9 10 11 12 13 14 15
16 17 19 20 21 22
23 24 25 26 27 28 29
30            
Wednesday, 18 April 2018
ಅಪರಾಧ ಘಟನೆಗಳು 18-04-18

ಹುಳಿಯಾರು ಪೊಲೀಸ್ ಠಾಣಾ ಯು.ಡಿ.ನಂ 06/2018, ಕಲಂ: 174 ಸಿ.ಆರ್.ಪಿ.ಸಿ.

ದಿನಾಂಕ 17/04/2018 ರಂದು ಬೆಳಿಗ್ಗೆ 09-00 ಗಂಟೆಗೆ ಪಿರ್ಯಾದುದಾರರಾದ ರಾಜನಾಯ್ಕ ಬಿನ್ ರಾಂಜಿನಾಯ್ಕ ಮತ್ತು ಮುನಿಯಾನಾಯ್ಕ ಬಿನ್ ಲಾಲ್ಯಾನಾಯ್ಕ, ಲಂಬಾಣಿ ಜನಾಂಗ, ಗಿಲ್ಯಾನಾಯ್ಕನ ತಾಂಡ್ಯ, ದಸೂಡಿ ಗ್ರಾಮ ಪಂಚಾಯಿತಿ, ಹುಳಿಯಾರು ಹೋಬಳಿ, ಚಿ.ನಾ ಹಳ್ಳಿ ತಾಲ್ಲೂಕು, ಇವರು ಬರೆದುಕೊಟ್ಟ ದೂರಿನ ಅಂಶವೇನೆಂದರೆ, ಏನೆಂದರೆ ನಮ್ಮ ಮಕ್ಕಳಾದ ಬಸವರಾಜು (12 ವರ್ಷ) ಬಿನ್ ರಾಜನಾಯ್ಕ, 6 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ದಸೂಡಿ ಪ್ರಾಥಮಿಕ ಪಾಠಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುತ್ತಾನೆ. ಹಾಗೂ ನಿತಿನ್ (11 ವರ್ಷ) ಬಿನ್ ಮುನಿಯನಾಯ್ಕ, 5 ನೇ ತರಗತಿಯಲ್ಲಿ ದಸೂಡಿ ಪ್ರಾಥಮಿಕ ಪಾಠಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಇಬ್ಬರೂ ದಿನಾಂಕ:16/04/2018 ಸುಮಾರು 04:50 ಗಂಟೆಗೆ ದನಗಳಿಗೆ ನೀರು ಕುಡಿಸಲು ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ದೇವರ ಮರಡಿ ಕೆರೆಯಲ್ಲಿ ಸಾವನ್ನಪ್ಪಿರುತ್ತಾರೆ. ಮುಂದಿನ  ಸೂಕ್ತ ಕ್ರಮಕ್ಕಾಗಿ  ತಮ್ಮಲ್ಲಿ  ಪ್ರಾರ್ಥಿಸಿಕೊಳ್ಳುತ್ತೇವೆ ಎಂತ ನೀಡಿದ ದೂರನ್ನು ಪಡೆದು ಯು.ಡಿ.ಆರ್ ಪ್ರಕರಣ ದಾಖಲಿಸಿರುತ್ತೆ.

ಬಡವನಹಳ್ಳಿ ಪೊಲೀಸ್ ಠಾಣೆ ಮೊ.ಸಂ  61/2018 ಕಲಂ  25 ಆಯುದ ಕಾಯ್ದೆ

ದಿ: 17/04/2018 ರಂದು ಬೆಳಗಿನ ಜಾವ 5-00 ಗಂಟೆಗೆ ಠಾಣಾ ಸಿಬ್ಬಂದಿಯಾದ ನಾಗರಾಜು  ಎ ಎಸ್ ಐ ರವರು ಠಾಣೆಗೆ ಬಂದು ನೀಡಿದ ವರದಿ ಅಂಶವೇನೆಂದರೆ, ನನಗೆ ಪ್ಲೈಯಿಂಗ್‌ ಸ್ಕ್ವಾಡ್‌ ಗೆ ನೇಮಕ ಮಾಡಿದ್ದು, ಪ್ಲೈಯಿಂಗ್‌ ಸ್ಕ್ವಾಡ್‌ ನ ಮುಖ್ಯಸ್ಥರಾಗಿ   ಶ್ರೀ  ಕೆಂಪಹನುಮಯ್ಯ, ಶಿಶು ಅಭಿವೃದ್ದಿ ಯೋಜನಾಧಿಕಾರಿ, ಮಧುಗಿರಿ  ಮತ್ತು ನಾಗರಾಜು ಹೆಚ್‌ ಜಿ 497 , ಮಧುಗಿರಿ ಘಟಕದ ಹೋಂ ಗಾರ್ಡ್  ಹಾಗೂ ವಿಡಿಯೋ ಗ್ರಾಫರ್ ಮಧು ಮತ್ತು  ಪ್ಲೈಯಿಂಗ್‌ ಸ್ಕ್ವಾಡ್‌ಗೆ  ನೀಡಿರುವ ಕೆಎ-01-ಜಿ-3367 ನೇ ನಂಬರಿನ ಜೀಪ್ ಗೆ  ಲಕ್ಷ್ಮೀಪತಿ ರವರು ಚಾಲಕರಾಗಿರುತ್ತಾರೆ.  ಈ ಪ್ಲೈಯಿಂಗ್‌ ಸ್ಕ್ವಾಡ್‌ ದಿನಾಂಕ:30/03/2018 ರಿಂದ ಸದರಿಯಂತೆ ಕರ್ತವ್ಯ ನಿರ್ವಹಿಸುತ್ತಿರುತ್ತೇನೆ. ಪ್ಲೈಯಿಂಗ್‌ ಸ್ಕ್ವಾಡ್‌ನಲ್ಲಿ  ದಿ:16/04/2018 ರಂದು ರಾತ್ರಿ 10-00 ಗಂಟೆಯಿಂದ ಮಧುಗಿರಿ ಟೌನ್‌ ನಲ್ಲಿ ರೌಂಡ್ಸ್‌ ಮಾಡಿಕೊಂಡು ನಂತರ ಸಿದ್ದಾಪುರ, ತಿಮ್ಲಾಪುರ, ಸಿಡಿದರಗಲ್ಲು, ಬಡವನಹಳ್ಳಿ, ರಂಗಾಪುರ, ಆವಿನಮಡಗು ,ವೀರಣ್ಣನಹಳ್ಳಿ ಬಿಟ್ಟು ಗಿಡದಾಗಲಹಳ್ಳಿ ಗ್ರಾಮದ ಕಡೆ ಹೋಗುತ್ತಿರುವಾಗ್ಗೆ ಬೋರಾಗುಂಟೆ - ಗಿಡದಾಗಲಹಳ್ಳಿ ಮದ್ಯೆ ದಿ:17/04/2018 ರ ಬೆಳಗಿನ ಜಾವ 4-00 ಗಂಟೆ ಸಮಯದಲ್ಲಿ ಒಂದು ದ್ವಿಚಕ್ರ ವಾಹನ ನಂಬರ್‌  KA-06-EW-7985 ನೇ ನಂಬರಿನ ವಾಹನದಲ್ಲಿ ಇಬ್ಬರು ಆಸಾಮಿಗಳು  ಗಿಡದಾಗಲಹಳ್ಳಿ ಕಡೆಗೆ ಹೋಗುತ್ತಿದ್ದು, ಹಿಂಬದಿಯಲ್ಲಿ ಕುಳಿತಿದ್ದ ಸವಾರನು ತನ್ನ ಹೆಗಲ ಮೇಲೆ ಒಂದು ಬಂದೂಕನ್ನು ಇಟ್ಟುಕೊಂಡಿದ್ದು ನಮಗೆ ಕಾಣಿಸಿತು. ಜೀಪ್‌ ಅನ್ನು ಮುಂದೆ ನಿಲ್ಲಿಸಿ ಬೈಕ್‌ ನಲ್ಲಿದ್ದವರನ್ನು  ತಡೆದು ನಿಲ್ಲಿಸಿ  ಬಂದೂಕು ಇರುವ ಬಗ್ಗೆ  ವಿಚಾರ ಮಾಡಲಾಗಿ ಹೀರೇಮರದಕ್ಕಿ  ಬೇಟೆಯಾಡಲು ಹೋಗುತ್ತಿರುವುದಾಗಿ ತಿಳಿಸಿದನು. ಈತನ ಹೆಸರು ವಿಳಾಸ ಕೇಳಲಾಗಿ  ನಾಗರಾಜ ಬಿನ್ ಸಿದ್ದಮಲ್ಲಯ್ಯ , ತಿಗಳರ ಜನಾಂಗ, ಜಿರಾಯ್ತಿ, ಜೋಗಿ ಹಳ್ಳಿ ಗ್ರಾಮ ಕಳ್ಳಂಬೆಳ್ಳ ಹೋಬಳಿ, ಶಿರಾ ತಾಲ್ಲೂಕು ಎಂತಾ ತಿಳಿಸಿದ . ಈತನ ವಿಚಾರಣೆ ಮಾಡುವಾಗ ಬೈಕ್‌ ಓಡಿಸುತ್ತಿದ್ದ ವ್ಯಕ್ತಿ  ಅಲ್ಲಿಂದ ಕತ್ತಲಲ್ಲಿ ಓಡಿ ಹೋದ . ತಪ್ಪಿಸಿಕೊಂಡ ಆಸಾಮಿಯ ಹೆಸರು ವಿಳಾಸದ ಬಗ್ಗೆ  ನಾಗರಾಜನನ್ನು  ಕೇಳಿದಾಗ ರಾಮಕೃಷ್ಣಪ್ಪ @ ಕೃಷ್ಣಪ್ಪ @ ಪಾಪಣ್ಣ , ತಿಗಳರು, ಗೂಳಅರಿವೆ ಗ್ರಾಮ, ತುಮಕೂರು ತಾಲ್ಲೂಕು ಎಂತಾ ತಿಳಿಸಿದನು. ನಂತರ ನಾಗರಾಜನನ್ನು ಕುರಿತು ಸದರಿ ಬಂದೂಕನ್ನು ಹೊಂದಿರಲು ಪರವಾನಿಗೆ ಇದೆಯೇ ಎಂದು ಕೇಳಲಾಗಿ ಇಲ್ಲವೆಂದು ತಿಳಿಸಿದನು. ಈತನ ಬಳಿ ಒಂದು ನೀಲಿ ಬಣ್ಣದ ಕೈ ಚೀಲವಿದ್ದು, ಸದರಿ ಕೈ ಚೀಲವನ್ನು ಪರಿಶೀಲಿಸಲಾಗಿ ಚೀಲದಲ್ಲಿ ಎರಡು ಪ್ಲಾಸ್ಟಿಕ್‌ ಡಬ್ಬಿ ಇದ್ದು, ಒಂದು ಪ್ಲಾಸ್ಟಿಕ್‌ ಡಬ್ಬಿಯಲ್ಲಿ ಅರ್ದದಷ್ಟು ಕರಿಮದ್ದಿನ ಪೌಡರ್‌ ಮತ್ತೊಂದು ಡಬ್ಬಿಯಲ್ಲಿ ಸ್ಟೀಲ್‌ ಬಾಲ್ಸ್‌ ಗಳು ಇರುತ್ತವೆ. ಬಂದೂಕು ಮತ್ತು ಮದ್ದನ್ನು ಉಪಯೋಗಿಸಲು ಯಾವುದೇ ಪರವಾನಿಗೆ ಇಲ್ಲದೆ ಇರುವುದರಿಂದ ನಾಗರಾಜನನ್ನು ಮತ್ತು  ಆತನ ಬಳಿ ಇದ್ದ ಮದ್ದು ಮತ್ತು ಬಾಲ್ಸ್‌ ಗಳನ್ನು  ಹಾಗೂ  ಮೇಲ್ಕಂಡ ದ್ವಿಚಕ್ರ ವಾಹನವನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ದಿ:17/04/2018 ರಂದು  ಬೆಳಗಿನ ಜಾವ 5-00 ಗಂಟೆಗೆ ಬಂದು  ಇದ್ದ ಸಂಗತಿಯನ್ನು ವರದಿ ಮಾಡಿ ಮುಂದಿನ ಕ್ರಮದ ಬಗ್ಗೆ  ಎ ಎಸ್ ಐ ನಾಗರಾಜು ಬಿ ರವರು ನೀಡಿದ  ವರದಿ ಮೇರೆಗೆ ಠಾಣಾ  ಮೊ ನಂ 61/2018 ಕಲಂ 25 ಆಯುಧ ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 64 guests online
Content View Hits : 272933