lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ.16/08/2018 ತುಂಬೆ (ತುಮಕೂರು ಬೈಸಿಕಲ್ ಪೊಲೀಸ್)     ಜನಸ್ನೇಹಿ... >> :: ಪತ್ರಿಕಾ ಪ್ರಕಟಣೆ :: ದಿನಾಂಕ. 14.08.2018. 2018 ನೇ ಜುಲೈ ತಿಂಗಳಲ್ಲಿ ತುಮಕೂರು ನಗರ ವೃತ್ತದ... >> ಪತ್ರಿಕಾ ಪ್ರಕಟಣೆ ದಿನಾಂಕ 14/08/2018     ಸಿರಾ ತಾಲ್ಲೋಕ್ ತಾವರೆಕೆರೆ ಗ್ರಾಮದಲ್ಲಿರುವ... >> ಪತ್ರಿಕಾ ಪ್ರಕಟಣೆ   ಅಂತರ್ ರಾಜ್ಯ ಕಳ್ಳನ ಬಂಧನ, 75 ಸಾವಿರ ರೂ ಬೆಲೆಬಾಳುವ 10 ಮೊಬೈಲ್... >> ಪ ತ್ರಿ ಕಾ  ಪ್ರ ಕ ಟ ಣೆ ದಿನಾಂಕ: 03/08/2018 ತುಮಕೂರು ನಗರದಲ್ಲಿ ಒಟ್ಟು 3,420 ಅಭ್ಯರ್ಥಿಗಳಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ : 23.07.2018. ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ ದಿನಾಂಕ:- 23/07/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಕನ್ನ... >> : ಪತ್ರಿಕಾ ಪ್ರಕಟಣೆ  : : ದಿನಾಂಕ:21-07-2018 : -: ಮನೆಕಳ್ಳನ ಬಂಧನ :  7.5 ಲಕ್ಷ ರೂ ಮೌಲ್ಯದ ವಡವೆ... >> ಪತ್ರಿಕಾ ಪ್ರಕಟಣೆ ದಿನಾಂಕ : 20-07-18 ಸ್ಮಾರ್ಟ್ ಸಿಟಿ ಅಧಿಕಾರಿಗಳೆಂದು ವಂಚಿಸಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 20-07-2018       ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< April 2018 >
Mo Tu We Th Fr Sa Su
            1
2 3 5 6 7 8
9 10 11 12 13 14 15
16 17 18 19 20 21 22
23 24 25 26 27 28 29
30            
Wednesday, 04 April 2018
ಅಪರಾಧ ಘಟನೆಗಳು 04-04-18

ಕಳ್ಳಂಬೆಳ್ಳ  ಪೊಲೀಸ್‌ ಠಾಣಾ ಮೊ.ನಂ: 96/2018 ಕಲಂ-279, 304(ಎ) ಐಪಿಸಿ ರೆ/ವಿ 187 ಐಎಂವಿ ಆಕ್ಟ್

ದಿ 03/04/2018 ರಂದು ಬೆಳಗ್ಗೆ 9-30 ಗಂಟೆಗೆ ಪಿರ್ಯಾದಿ ದೇವರಾಜು @ ನವೀನ  ಠಾಣೆಗೆ ಹಾಜರಾಗಿ ನೀಡಿದ ದೂರಿನಂಶವೇನೆಂದರೆ ನಾನು ಕೆ.ಎ-11-9926 ನೇ ವೀರಭದ್ರಸ್ವಾಮಿ ರವರಿಗೆ ಸೇರಿದ ಲಾರಿಗೆ ಚಾಲಕನಾಗಿ ಕೆಲಸ ಮಾಡುತ್ತಿದ್ದು ದಿ: 02/04/2018 ರಂದು ರಾತ್ರಿ ರಾಣಿಬೆನ್ನೂರು ನಲ್ಲಿ ಮೆಕ್ಕೆ ಜೋಳ  ತುಂಬಿಕೊಂಡು ಹೊಸಕಣಿವೆಗೆ ಹೋಗಲು ಸಿರಾ-ತುಮಕೂರು ಮಾರ್ಗವಾಗಿ ಎನ್ ಹೆಚ್ 48 ರಸ್ತೆಯಲ್ಲಿ ಬರುತ್ತಿರುವಾಗ ದಿ 03/04/2018 ರಂದು ಬೆಳಗಿನ ಜಾವ ಸುಮಾರು 5.30 ಗಂಟೆ ಸಮಯದಲ್ಲಿ  ದೊಡ್ಡಾಲದಮರ ಸಮೀಪ ಸೇತುವೆ ಹತ್ತಿರ ಹೋಗುತ್ತಿರುವಾಗ ತುಮಕೂರು-ಸಿರಾ ಎನ್ ಹೆಚ್48 ರಸ್ತೆಯಲ್ಲಿ ಎಡಬಾಗಕ್ಕೆ ನನ್ನ ಸ್ನೇಹಿತ ದಾವುದ ಖಾನ್ ನ ಲಾರಿ ನಿಂತಿದ್ದು  ನಾನು ಹಾರ್ನ ಹೊಡಿದಾಗ ದಾವುದಖಾನ್ ನಿಲ್ಲಿಸಿದ್ದ ಲಾರಿಯಿಂದ ಯಾರು ನೋಡದೆ ಇದ್ದುದರಿಂದ ನಾನು  ಲಾರಿ ಹತ್ತಿರ ಹೋಗಿ ನೋಡಲಾಗಿ ಲಾರಿಯ ಪಕ್ಕ ಬಲಬಾಗದಲ್ಲಿ ರಸ್ತೆಯ ಮೇಲೆ ಇಬ್ಬರು ವ್ಯಕ್ತಿಗಳು ಮೃತಪಟ್ಟಿದ್ದು ಕಂಡು ಬಂದಿದ್ದು ಲಾರಿಯ ಬಲಬಾಗ ಬಾಡಿ ಜಖಂ ಆಗಿದ್ದು ಸತ್ತವರು ಮುಖವು ಪಾಲಿಶ ತೌಡಿನಿಂದ ಮುಚ್ಚಿತ್ತು ನಾನು ಕೂಡಲೇ ದಾವುದ ಖಾನ್ ಮೋಬೈಲ್ ಗೇ ಕರೆ ಮಾಡಿ ವಿಚಾರ ಮಾಡಿದಾಗ  ದಾವುದ್ ಖಾನ್ ನಾನು ಲಾರಿಗೆ ಬಂದಿಲ್ಲ ನನ್ನ ಮಾವ ನಾಸಿರ್ ಪಾಷ ಬಂದಿದ್ದಾರೆ ಎಂದು ತಿಳಿಸಿದರು. ನಾನು ಅವರಿಗೆ ಲಾರಿಯಲ್ಲಿ ಇದ್ದ ಬ್ಬರೂ ಸತ್ತು ಬಿದ್ದಿದ್ದಾರೆ ಎಂದು ತಿಳಿಸಿದೆ. ಆಗ ದಾವುದ್ ಖಾನ್ ನನಗೆ ನನ್ನ ಮಾವ  ಪೈರೋಜ್ ಖಾನ್ ಇರುತ್ತಾರೆ. ನೋಡಿ ಎಂದು ಹೇಳಿದೆ. ಆಗ ನಾನು ಮುಖದಲ್ಲಿ ಪಾಲಿಶ್ ತವಡನ್ನು ಹೊರೆಸಿ ನೋಡಲಾಗಿ ಒಬ್ಬರು ನಾಸಿರ್ ಪಾಷ ಇನ್ನೊಬ್ಬರು ಪೈರೋಜ್ ಖಾನ್ ಆಗಿದ್ದರು. ನಂತರ ದಾವುದ್ ಖಾನ್ ಗೆ ನಿನ್ನ ಮಾವ ಪೈರೋಜ್ ಖಾನ್ ಆಗಿದ್ದರು. ನಂತರ ದಾವುದ್ ಖಾನ್ ಗೆ ನಿನ್ನ ಮಾವ ಪೈರೋಜ್ ಖಾನ್ ರವರು ಮೃತಪಟ್ಟಿದ್ದಾರೆ ಬಾ ಎಂತ ತಿಳಿಸಿದೆ. ಸ್ಥಳದಲ್ಲಿ ನೋಡಿದರೆ ಕೆಎ-53-9269 ಲಾರಿ ಆಗಿದ್ದು ಈ ಲಾರಿಯು ರಸ್ತೆಯ ಡಭಾಗದಲ್ಲಿ ನಿಂತಿದ್ದು, ಹಿಂಭಾಗದ ಬಲಭಾಗದ ಟೈರ್ ಹೊಡೆದು ಹೋಗಿದ್ದು, ಟೈರ್ ಚೇಂಜ್ ಮಾಡಿ ಚಕ್ರಕ್ಕೆ ಕೊಟ್ಟಿದ್ದ ಜಾಕ್ ಅಲ್ಲಿ ಇತ್ತು ಲಾರಿಯ ಬಲಭಾಗದ ಬಾಡಿ ಜಖಂಗೊಂಡು ಬಲಭಾಗದ ಮಿರರ್ ಹೊಡೆದು ಟಾರ್ ಪಾಲ್ ಹರಿದು ಪಾಲಿಷ್ ತವಡು ಚಲ್ಲಿರುವುದನ್ನು ನೋಡಿದರೆ ಯಾವುದೋ ಲಾರಿ, ನಾಸಿರ್ ಪಾಷ ಮತ್ತು ಪೈರೋಜ್ ಖಾನ್ ಟೈರ್ ಬದಲಿಸುತ್ತಿದ್ದಾಗ ಲಾರಿಯ ಹಿಂಭಾಗ ತುಮಕೂರು ಕಡೆಯಿಂದ ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಈ ಲಾರಿಯ ಬಲಭಾಗದ ಬಾಡಿಗೆ ಉಜ್ಜಿದ್ದರಿಂದ ಇಬ್ಬರು ಮಧ್ಯೆ ಸಿಕ್ಕಿ ಹಾಕಿಕೊಂಡು ಪೆಟ್ಟುಗಳು ಬಿದ್ದು  ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಲಾರಿಯ ಚಾಲಕ ಲಾರಿಯನ್ನು ನಿಲ್ಲಿಸದೇ ಹೊರಟು ಹೋಗಿರುತ್ತಾನೆ. ಈ ಅಪಘಾತವು ಈ ದಿನ ಬೆಳಗಿನ ಜಾವ ಸುಮಾರು 4-00 ಗಂಟೆ ಸಮಯದಲ್ಲಿ ಆಗಿರುತ್ತೆ. ನಂತರ ಸ್ಥಳಕ್ಕೆ ಬಂದ ಪೊಲೀಸರು ಹೈವೆ ಆಂಬುಲೆನ್ಸ್ ನಲ್ಲಿ 2 ಶವಗಳನ್ನು ತುಮಕೂರು ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಕಳುಹಿಸಿರುತ್ತಾರೆ. ಮೃತರ ಸಂಬಂಧಿಕರನ್ನು ಕರೆಸಿಕೊಂಡು ಅವರು ಬಂದ ನಂತರ ತಡವಾಗಿ ಬಂದು ಠಾಣೆಗೆ ದೂರು ನೀಡಿರುತ್ತೇನೆ. ಅಪಘಾತಪಡಿಸಿ ಪರಾರಿಯಾಗಿರುವ ಲಾರಿ ಮತ್ತು ಚಾಲಕನ್ನು ಪತ್ತೆ ಮಾಡಿ ಕ್ರಮಜರುಗಿಸಿ ಎಂತ ಇತ್ಯಾದಿ ನೀಡಿದ ದೂರಿನ ಮೇರೆಗೆ ಪ್ರಕರಣ ಪ್ರಕರಣ ದಾಖಲು ಮಾಡಿರುತ್ತೆ.

ಹೊನ್ನವಳ್ಳಿ ಪೊಲೀಸ್ ಠಾಣೆ ಮೊ.ಸಂಖ್ಯೆ ಮೊ.ನಂ.17/2018 ಕಲಂ.279,337 ಐಪಿಸಿ ರೆ/ವಿ 187 ಐಎಂವಿ ಆಕ್ಟ್‌

ದಿನಾಂಕ:03.04.2018 ರಂದು ರಾತ್ರಿ 7-45 ಗಂಟೆ ಸಮಯದಲ್ಲಿ ತಿಪಟೂರು ತಾಲ್ಲೂಕು, ಹೊನ್ನವಳ್ಳಿ ಹೋಬಳಿ ಬಿ.ಹೊಸೂರು ಗ್ರಾಮದ ನಾಗರಾಜು ಬಿನ್‌‌‌ ಮಡಿವಾಳಪ್ಪ, ಸುಮಾರು 35 ವರ್ಷ, ಮಡಿವಾಳರ ಜನಾಂಗ, ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೆನೆಂದರೆ, ದಿನಾಂಕ:03.04.2018 ರಂದು ನಮ್ಮೂರಿನಲ್ಲಿ ಅಡವಪ್ಪ ಸ್ವಾಮಿ ಜಾತ್ರೆ ಇದ್ದುದರಿಂದ ಹೊಸ ಬಟ್ಟೆಯನ್ನು ತೆಗೆದುಕೊಂಡು ಹೋಗಲು ನಾನು ಮತ್ತು ನಮ್ಮೂರಿನ ಗಂಗಶೆಟ್ಟಿರವರ ಅಡವೀಶ ಇಬ್ಬರೂ ಅಡವೀಶರವರ  ಕೆ.ಎ.44.ಕ್ಯೂ.7825 ನೇ ಬಜಾಜ್‌‌ ಡಿಸ್ಕವರ್‌‌ ಬೈಕಿನಲ್ಲಿ ಹೊನ್ನವಳ್ಳಿಗೆ ಬಂದಿದ್ದೆವು. ಅದೇ ರೀತಿ ನಮ್ಮೂರಿನ ನನ್ನ ತಾಯಿ ಸೋಮಕ್ಕನವರ ತಮ್ಮನಾದ ಮೈಲಾರಪ್ಪನ ಮಗನಾದ ಕೇಶವಮೂರ್ತಿ @ ಸ್ವಾಮಿ ಎಂಬುವನು ಹೊನ್ನವಳ್ಳಿಗೆ ನಮ್ಮೂರಿನ ಶಿವರಾಜ್‌‌ರವರ ಮಗನಾದ ಅಡವೀಶಪ್ಪರವರಿಗೆ ಸೇರಿದ ಕೆ.ಎ.44.ಕೆ.5585 ನೇ ಬಜಾಜ್‌‌ ಡಿಸ್ಕವರ್‌‌ ಬೈಕ್‌‌ನಲ್ಲಿ ಬಂದಿದ್ದನು . ನಾವಿಬ್ಬರೂ ಹೊನ್ನವಳ್ಳಿಯಲ್ಲಿ ಬಟ್ಟೆಯನ್ನು ತೆಗೆದುಕೊಂಡ ನಂತರ ವಾಪಾಸ್‌ ಊರಿಗೆ ಹೋಗಲು ಬೆಳಿಗ್ಗೆ ಸುಮಾರು 11 ಗಂಟೆ ಸಮಯದಲ್ಲಿ ಬಿದರೇಗುಡಿ-ಹುಳಿಯಾರು ರಸ್ತೆಯಲ್ಲಿರುವ ಮಹಾ ನವಮಿ ಮಂಟಪದ ಹತ್ತಿರ ರಸ್ತೆ ತಿರುವಿನಲ್ಲಿ ಹೋಗುತ್ತಿದ್ದೆವು. ಕೇಶವಮೂರ್ತಿ @ ಸ್ವಾಮಿ ನಮ್ಮ ಬೈಕಿನ ಮುಂದೆ ಹೋಗುತ್ತಿದ್ದ. ನಾವು ಅವನ ಬೈಕಿಗೆ ಸ್ವಲ್ಪ ದೂರದಲ್ಲಿ ಹೋಗುತ್ತಿದ್ದೆವು. ಮಹಾನವಮಿ ಮಂಟಪಕ್ಕೆ ಸ್ವಲ್ಪ ದೂರದ ಹಿಂದೆ ತಿರುವಿನಲ್ಲಿ ಹೋಗುತ್ತಿರುವಾಗ ಎದುರಿಗೆ ಹುಳಿಯಾರು ಕಡೆಯಿಂದ ಕೆ.ಎ.16.ಬಿ.6904 ನೇ ನಂಬರಿನ ಪ್ರಕಾಶ ಬಸ್‌‌‌‌ ರಸ್ತೆಯ ಬಲಭಾಗದಲ್ಲಿ ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬರುತ್ತಿದ್ದು ಅದನ್ನು ನೋಡಿ ಹೆದರಿದ ಕೇಶವಮೂರ್ತಿ @ ಸ್ವಾಮಿ ಅವನ ಬೈಕನ್ನು ಆತನ ಬಲಭಾಗಕ್ಕೆ ತೆಗೆದುಕೊಂಡಾಗ, ಬಸ್ಸಿನ ಡ್ರೈವರ್‌ ಇದ್ದಕ್ಕಿದ್ದಂತೆ ಬಸ್ಸನ್ನು ಆತನ ಎಡಭಾಗಕ್ಕೆ ತೆಗೆದುಕೊಂಡು ಹೋಗಿ ಕೇಶವಮೂರ್ತಿ @ ಸ್ವಾಮಿ ಹೋಗುತ್ತಿದ್ದ ಬೈಕ್‌‌ಗೆ ಡಿಕ್ಕಿ ಹೊಡೆಸಿದ್ದರಿಂದ ಕೇಶವಮೂರ್ತಿ @ ಸ್ವಾಮಿಗೆ ತಲೆಯ ಹಿಂಭಾಗ, ಬಲಭುಜ ಮತ್ತು ಮುಖಕ್ಕೆ ಪೆಟ್ಟುಗಳಾಗಿ ಗಾಯಗಳಾಗಿರುತ್ತವೆ. ಬೈಕ್‌‌ ಬಸ್ಸಿನ ಮುಂಭಾಗ ಕೆಳಗಡೆ ಸಿಕ್ಕಿ ಹಾಕಿಕೊಂಡು ಜಖಂ ಆಗಿರುತ್ತೆ. ಬಸ್ಸಿನ ಡ್ರೈವರ್‌‌ ಬಸ್ಸನ್ನು ಅಲ್ಲಿಯೇ ಬಿಟ್ಟು ಓಡಿ ಹೋದನು. ಪೆಟ್ಟಾಗಿದ್ದ ಕೇಶವಮೂರ್ತಿ @ ಸ್ವಾಮಿಯನ್ನು ನಾನು ಮತ್ತು ಅಡವೀಶ ಇಬ್ಬರೂ 108 ಆಂಬುಲೆನ್ಸ್‌ ನಲ್ಲಿ ಕರೆದುಕೊಂಡು ಹೋಗಿ ತಿಪಟೂರು ಜನರಲ್‌‌ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುತ್ತಿರುತ್ತೇವೆ. ಕೇಶವಮೂರ್ತಿ @ ಸ್ವಾಮಿ ತಿಪಟೂರು ಜನರಲ್‌‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು ಇನ್ನೂ ಸರಿಯಾಗಿ ಮಾತನಾಡಲು ಆಗದೇ ಇರುವುದರಿಂದ ನಾನು ತಿಪಟೂರು ಜನರಲ್‌‌ ಆಸ್ಪತ್ರೆಯಿಂದ ತಡವಾಗಿ ಬಂದು ದೂರನ್ನು ನೀಡುತ್ತಿರುತ್ತೇನೆ. ಬಸ್ಸಿನ ಡ್ರೈವರ್‌‌ ಹೆಸರು ಮತ್ತು ವಿಳಾಸ ಗೊತ್ತಿಲ್ಲ. ಅದರೆ ಡ್ರೈವರ್‌ ಮುಖವನ್ನು ನಾವು ನೋಡಿರುತ್ತೇವೆ. ಮತ್ತೊಮ್ಮೆ ನೋಡಿದರೆ ಗುರ್ತಿಸುತ್ತೇವೆ. ಈ ಅಪಘಾತಕ್ಕೆ ಕಾರಣವಾಗಿರುವ ಕೆ.ಎ.16.ಬಿ.6904 ನೇ ನಂಬರಿನ ಪ್ರಕಾಶ ಬಸ್‌‌‌‌ ಡ್ರೈವರ್‌‌ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ಕೇಳಿಕೊಳ್ಳುತ್ತೇನೆ. ಎಂದು ಇದ್ದ ಸದರಿ ದೂರನ್ನು ಪಡೆದು ಪ್ರಕರಣ ದಾಖಲು ಮಾಡಿರುತ್ತೆ.

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆಯ 25-2018 ಕಲಂ 379 ಐಪಿಸಿ

ದಿನಾಂಕ:03-04-18 ರಂದು   ಸಂಜೆ 6-30 ಗಂಟೆಗೆ ಈ ಕೇಸಿಒನ ಪಿರ್ಯಾದಿ  ಶಿಲ್ಪ ಬಿ.ಎಲ್. ಕೋಂ ಹರೀಶ್, 27 ವರ್ಷ, ಲಿಂಗಾಯ್ತರು, ಗೃಹಿಣಿ, ಶಾರದಾ ನಗರ, ತಿಪಟೂರು ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ  ದೂರಿನ ಅಂಶವೇನೆಂದರೆ,  ನಾನು ದಿ:01-04-18 ರಂದು  ತಿಪಟೂರು ತಾ. ಈಚನೂರು  ಗ್ರಾಮದಲ್ಲಿ ನಮ್ಮ  ಸಂಬಂಧಿಕರ  ಮನೆಯಿದ್ದು ಅಲ್ಲಿ ಕೆಂಪಮ್ಮ ದೇವರ  ಜಾತ್ರಾ ಉತ್ಸವ  ಇದ್ದ ಕಾರಣ  ನಾನು & ನಮ್ಮ  ತಾಯಿ  ಶ್ರೀಮತಿ ನೀಲಮ್ಮ ರವರೊಂದಿಗೆ  ಅಲ್ಲಿಗೆ ಹೋಗಿದ್ದೆವು  ಜಾತ್ರೆ ನಡೆಯುವಾಗ ಮಧ್ಯಾಹ್ನ  ಸುಮಾರು 1-45 ಗಂಟೆ ಸಮಯದಲ್ಲಿ  ರಥ ಎಳೆಯುವಾಗ ತುಂಬಾ ಜನಸಂದಣೆಯಿದ್ದು ಜನಗಳ ಮಧ್ಯೆ ನಾನು ಇದ್ದೆ ಆಗ ರಥ ಎಳೆಯುವಾಗ  ನಾನು ನನ್ನ ಕೊರಳಿನಲ್ಲಿದ್ದ  ಚಿನ್ನದ ಮಾಂಗಲ್ಯದ ಸರವನ್ನು ನೋಡಿಕೊಂಡೆ ಕಾಣಲಿಲ್ಲ  ತಕ್ಷಣ  ನಾನು ಜನಸಂದಣಿಯಲ್ಲಿ   ಬಿದ್ದಿರಬಹುದೆಂತಾ ಹುಡುಕಡಲಾಗಿ  ಸರ ಸಿಗಲಿಲ್ಲ  ಜನಸಂದಣಿಯಲ್ಲಿ ಯಾರೋ ಕಳ್ಳರು ನನ್ನ  ಸುಮಾರು 35 ಗ್ರಾಂ ನ  ಚಿನ್ನದ ಮಾಂಗಲ್ಯದ ಸರವನ್ನು  ಕಳವು ಮಡಿಕೊಡು ಹೋಗಿರುತ್ತರೆ  ಅದರ ಬೆಲೆ  ಸುಮರು 65,000-00 ರೂಗಳಾಗಿದ್ದು  ನನ್ನ  ಚಿನ್ನದ  ಸರವನ್ನು ಕಳ್ಳತನ ಮಾಡಿರುವ ಕಳ್ಳರನ್ನು ಪತ್ತೆಹಚ್ಚಿ  ನನ್ನ  ಮಾಂಗಲ್ಯದ  ಸರವನ್ನು ಕೊಡಿಸಿಕೊಡಬೇಕಂತ   ಹಾಗೂ ನನ್ನ  ಸರ ಕಳ್ಳತನವಾಗಿರುವ  ವಿಚಾರವನ್ನು ನಮ್ಮ ಮನೆಯವರಿಗೆ  ತಿಳಿಸಿ ಈ ದಿನ ತಡವಾಗಿ ಬಂದು ದೂರು ನೀಡಿರುತ್ತೇನೆ  ಎಂತಾ ದೂರು ನೀಡಿದ ಮೇರೆಗೆ ಠಾಣಾ  ಮೊ.ನಂ 25/2018, ಕಲಂ 379 ಐಪಿಸಿ  ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ

ತಿಪಟೂರು ನಗರ ಪೊಲೀಸ್ ಠಾಣಾ ಮೊ. ನಂ - 40/2018 ಕಲಂ: 279,337 IPC

ದಿನಾಂಕ:03-04-2018 ರಂದು ಸಂಜೆ 05-30 ಗಂಟೆಗೆ ಪಿರ್ಯಾದುದಾರರಾದ ಸಿದ್ದಲಿಂಗಪ್ರಸಾದ್‌ ಆರ್‌.ಯು ಬಿನ್‌ ಆರ್‌.ಎಸ್‌ ಉಮಾಪತಿ‌, 38 ವರ್ಷ, ಲಿಂಗಾಯಿತರು, ಸತ್ತೆರಾಮನಹಳ್ಳಿ, ಹೊನ್ನವಳ್ಳಿ ಹೋಬಳಿ, ತಿಪಟೂರು ತಾಲ್ಲೋಕ್‌ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನಂದರೆ, ದಿನಾಂಕ: 03-04-2018 ರಂದು ಮಧ್ಯಾಹ್ನ 3-30 ಗಂಟೆ ಸಮಯದಲ್ಲಿ ನಮ್ಮ ಚಿಕ್ಕಪ್ಪನ ಮಗನಾದ ಸಚಿನ್‌ ನನಗೆ ಫೋನ್‌ ಮಾಡಿ ನಮ್ಮ ತಂದೆ ಆರ್‌.ಎಸ್‌ ಈಶ್ವರಯ್ಯ ನವರು ಚುನಾವಣೆ ಮೀಟಿಂಗ್‌ ಮುಗಿಸಿಕೊಂಡು ತಿಪಟೂರು ತಾಲ್ಲೋಕ್‌ ಕಛೇರಿಯಿಂದ ಹೊರಗೆ ಬರಲು ಬರುತ್ತಿದ್ದಾಗ ಮತ್ತೋಂದು ಬೈಕಿನ ಚಾಲಕ ಅಪಘಾತ  ಉಂಟುಮಾಡಿ ಅಪ್ಪಾಜಿಗೆ ಪೆಟ್ಟಾಗಿದೆ ತಿಪಟೂರು ಸರ್ಕಾರಿ ಆಸ್ಪತ್ರೆ ಬಳಿ ಬಾ ಎಂತ ತಿಳಿಸಿದಾಗ ನಾನು ಕೂಡಲೇ ತಿಪಟೂರು ಸರ್ಕಾರಿ ಆಸ್ಪತ್ರೆ ಬಳಿ ಹೋಗಿ ನೋಡಿದಾಗ ಸಚಿನ್‌ ರವರ ತಂದೆ ನಮ್ಮ ಚಿಕ್ಕಪ್ಪನಾದ ತಿಪಟೂರು ಕೃಷಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಈಶ್ವರಪ್ಪ ರವರು ಅಪಘಾತದಲ್ಲಿ ಪೆಟ್ಟಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಈ ಅಪಘಾತದ ಬಗ್ಗೆ ನಮ್ಮ ಚಿಕ್ಕಪ್ಪ ಈಶ್ವರಯ್ಯ ಮತ್ತು ಅವರ ಜೋತೆಯಲ್ಲಿದ್ದ  ಶಿವಸ್ವಾಮಿ ಎಂಬುವರನ್ನು ಕೇಳಲಾಗಿ ನನಗೆ ಚುನಾವಣೆ ನಿಮಿತ್ತ ಎಸ್‌.ಎಸ್‌.ಟಿ ಅಧಿಕಾರಿಯಾಗಿ ಕರ್ತವ್ಯಕ್ಕೆ ನೇಮಕವಾಗಿದ್ದು, ಈ ದಿನ ತಿಪಟೂರು ತಾಲ್ಲೋಕ್‌ ಕಛೇರಿಯಲ್ಲಿ ಚುನಾವಣೆ ಮೀಟಿಂಗ್‌ ಇದ್ದುದರಿಂದ ಇದಕ್ಕೆ ಹಾಜರಾಗಿ ಮೀಟಿಂಗ್‌ ಮುಗಿದ ನಂತರ ಮಧ್ಯಾನ್ಹ 3 ಗಂಟೆ ಸಮಯದಲ್ಲಿ ನನ್ನ ಕೆಎ-44-ಯು-4123 ಹೀರೊ ಸ್ಲೆಂಡರ್‌ ದ್ವಿಚಕ್ರ ವಾಹನದಲ್ಲಿ ತಾಲ್ಲೋಕ್‌ ಕಛೇರಿ ಮುಂಭಾಗ ರಸ್ತೆಗೆ ಬಂದಾಗ ಇದೇ ಸಮಯಕ್ಕೆ ಐಬಿ ಸರ್ಕಲ್‌ ಕಡೆಯಿಂದ ಹಾಸನ ಸರ್ಕಲ್‌ ಕಡೆ ಹೋಗಲು ಬಂದ ಬಿಳಿ ಮತ್ತು ಕಪ್ಪು ಬಣ್ಣದ ನಂಬರ್‌ ಇಲ್ಲದ ಹೊಸ ಪಲ್ಸರ್‌‌ ಎನ್‌ಎಸ್‌ 200 ದ್ವಿಚಕ್ರ ವಾಹನದ ಚಾಲಕ ಬೈಕ್‌ನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಬೈಕಿಗೆ ಡಿಕ್ಕಿ ಹೊಡೆಸಿದ ಪರಿಣಾಮ ನನ್ನ ಬೈಕ್‌ ಜಖಂಗೊಂಡು ನನ್ನ ಬಲಗಾಗಲಿಗೆ, ಬಲಗೈ ಹಾಗೂ ಬಲಗೈ ಬೆರಳುಗಳಿಗೆ ಮತ್ತು ಮುಖಕ್ಕೆ ರಕ್ತ ಗಾಯಗಳಾದವು ಹಾಗೂ ಅಪಘಾತ ಉಂಟುಮಾಡಿದ ಬೈಕಿನಲ್ಲಿದ್ದವರಿಗೂ ಪೆಟ್ಟುಗಳಾದವು. ಆಗ ನನ್ನ ಜೊತೆಯಿದ್ದ ನಮ್ಮ ಸಹೊದ್ಯೋಗಿ ಶಿವಸ್ವಾಮಿ ಹಾಗೂ ಇತರರು ನನ್ನನ್ನು ಚಿಕಿತ್ಸೆಗಾಗಿ ತಿಪಟೂರು ಸರ್ಕಾರಿ ಆಸ್ಪತ್ರೆಗೆ ಸೇರಿಸಿದರು ಎಂದು ಅಪಘಾತದ ಬಗ್ಗೆ ನಮ್ಮ ಚಿಕ್ಕಪ್ಪನವರು ತಿಳಿಸಿದರು. ಆದ್ದರಿಂದ ಅಪಘಾತ ಉಂಟುಮಾಡಿದ ನಂಬರ್‌ ಇಲ್ಲದ ಕಪ್ಪು ಮತ್ತು ಬಿಳಿ ಬಣ್ಣದ ಪಲ್ಸರ್‌ ಎನ್‌ಎಸ್‌ 200 ದ್ವಿಚಕ್ರ ವಾಹನದ ಚಾಲಕನ ಮೇಲೆ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಸಿ.ಎಸ್.ಪುರ ಪೊಲೀಸ್ ಠಾಣಾ ಮೊ.ನಂ:56/2018. ಕಲಂ:279.337 ಐಪಿಸಿ

ದಿನಾಂಕ:03.04.2018 ರಂದು ಈ ಕೇಸಿನ ಫಿರ್ಯಾದಿಯಾದ  ವಿಜಯ್ ಬಿನ್ ಲೇಟ್ ನರಸಿಂಹಯ್ಯ, 38 ವರ್ಷ, ಒಕ್ಕಲಿಗರು, ಕಾಳಂಜಿಹಳ್ಳಿ  ಗ್ರಾಮ, ಕಸಬಾ ಹೋಬಳಿ. ತುರುವೆಕೆರೆ ತಾಲ್ಲೂಕುರವರು  ಠಾಣೆಗೆ  ಹಾಜರಾಗಿ ನೀಡಿದ ದೂರಿನ ಸಾರಾಂಶವೆಂದರೆ,  ನಾನು ಎಸ್.ಎಸ್.ಮಂಜುನಾಥರವರಿಂಧ ಕೆ.ಎ-09ಸಿ-5794 ಟಾಟಾ ಟಿಪ್ಪರ್ ಲಾರಿಯನ್ನು  ತೆಗೆದುಕೊಂಡಿದ್ದು, ಸದರಿ ಲಾರಿಯ ಮಾಲೀಕತ್ವ  ನನ್ನ  ಹೆಸರಿಗೆ  ಇನ್ನೂ ವರ್ಗಾವಣೆ ಆಗಿರುವುದಿಲ್ಲಾ, ನಾನು ಪ್ರತಿದಿನ ಜಲ್ಲಿಯನ್ನು ನಮ್ಮ ಬಾಬ್ತು ಲಾರಿ ನಂ. ಕೆ,.ಎ09ಸಿ-5794 ನೇ ಟಿಪ್ಪರ್ ಲಾರಿಯಲ್ಲಿ ತುಮಕೂರು ಟೌನಿನಿಂದ ಲೋಡ್ ಮಾಡಿಕೊಂಡು  ಬಂದು ಗಿರಾಕಿಗಳಿಗೆ ಬಾಡಿಗೆ ಹೊಡೆಯುತಿದ್ದು, ಸದರಿ ಲಾರಿಗೆ ಜೀವಂತ್ ಕುಮಾರ್ ರವರನ್ನು ಚಾಲಕನಾಗಿ  ನಾನು ನೇಮಕಮಾಡಿದ್ದು, ಅದರಂತೆ   ದಿನಾಂಕ:01.04.2018 ರಂದು  ಬೆಳಗ್ಗೆ  ತುರುವೆಕೆರೆಯಿಂದ  ಹೊರಟು  ಸಿ.ಎಸ್.ಪುರ ಟೌನ್ ಬಳಿ ಕಲ್ಲೂರು ಕಡೆಯಿಂದ  ಬೆಳಗ್ಗೆ 6.30 ಗಂಟೆ ಸಮಯದಲ್ಲಿ  ತುಮಕೂರು ಕಡೆ ಹೋಗಬೇಕಾದರೆ. ಸಿ.ಎಸ್.ಪುರ ಗ್ರಾಮದ ಕೃಷ್ಣ ಮೂರ್ತಿರವರ  ಮನೆಯ ನೇರದಲ್ಲಿ ರಸ್ತೆಗೆ  ಹಾಕಿದ್ದ ಡಿವೈಡರ್ ಗೆ  ಲಾರಿಯ ಚಾಲಕನಾದ  ಜೀವಂತ್ ಕುಮಾರ್ ರವರು  ಲಾರಿಯನ್ನು ಅತಿ ವೇಗ & ಅಜಾಗರುಕತೆಯಿಂದ ಓಡಿಸಿಕೊಂಡು  ಹೋಗಿ ರಸ್ತೆಯ ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಲಾರಿಯ ಮುಂದಿನ ಬಲಭಾಗದ ಟೈರು ಹೊಡೆದು, ಆಕ್ಸೆಲ್ ಕಟ್ಟಾಗಿರುತ್ತೆ, ಇದೇ ವೇಳೆಗೆ ಲಾರಿಯ ಹಿಂದೆ ಬರುತಿದ್ದ  ವೆಂಕಟೇಗೌಡನ ಪಾಳ್ಯದ  ಮೋಹನ ಬಿನ್ ವೆಂಕಟೇಶ, ಎಂಬುವರು ಅವರ ತಾಯಿ ಗೌರಮ್ಮರವರನ್ನು  ಕೂರಿಸಿಕೊಂಡು ಕೆ.ಎ-06ಇಜೆ-4489 ಪಲ್ಸರ್   ಬೈಕಿನಲ್ಲಿ  ಬರುತಿದ್ದು, ಸದರಿಯವರು ಲಾರಿಗೆ ಹಿಂದಿನಿಂದ  ಬಂದು ಡಿಕ್ಕಿ ಹೊಡೆದ ಪರಿಣಾಮ ಮೋಹನ್ ರವರಿಗೆ ತಲೆಗೆ, ಮುಖಕ್ಕೆ ಪೆಟ್ಟಾಗಿರುತ್ತೆ, ಈ ಅಪಘಾತಕ್ಕೆ ನಮ್ಮ ಲಾರಿಯ ಚಾಲಕನಾದ ಜೀವಂತ್ ಕುಮಾರ್ ರವರೇ ಕಾರಣರಾಗಿರುತ್ತಾರೆ ಎಂದು ಇತ್ಯಾದಿ  ನೀಡಿದ ದೂರನ್ನು ಸ್ವೀಕರಿಸಿ ಪ್ರಕರಣ ದಾಖಲಾಗಿರುತ್ತೆ


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 78 guests online
Content View Hits : 322830