lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ : 17-03-2018 -: ಚೂರಿಯಿಂದ ಇರಿದು ದರೋಡೆ ಮಾಡುತ್ತಿದ್ದ ಆರೋಪಿಗಳ... >> ಪ್ರತಿಕಾ ಪ್ರಕಟಣೆ. ದಿ: 16/03/18 ಮೂವರು ಮನೆ ಕಳ್ಳರ ಬಂಧನ, 5 ಲಕ್ಷ ಮೌಲ್ಯದ... >> ಪತ್ರಿಕಾ ಪ್ರಕಟಣೆ ದಿನಾಂಕ: 15-03-2018 ಎ.ಟಿ.ಎಂ ನಲ್ಲಿ ಹಣ ಡ್ರಾ ಮಾಡಿಕೊಡುವುದಾಗಿ ... >> ತುಮಕೂರು ಜಿಲ್ಲಾ ಪೊಲೀಸ್ ಪತ್ರಿಕಾ ಪ್ರಕಟಣೆ ದಿ: 15-03-2018 ತುಮಕೂರು ಜಿಲ್ಲಾ ಪೊಲೀಸ್... >> ಪತ್ರಿಕಾ ಪ್ರಕಟಣೆ. ದಿನಾಂಕ. 07.03.2018. ಕೊಡಗೇನಹಳ್ಳಿ ಠಾಣಾ ಸರಹದ್ದು ಸಿಂಗನಹಳ್ಳಿ... >> ಪತ್ರಿಕಾ ಪ್ರಕಟಣೆ ದಿನಾಕ : 27/02/2018 ಒಂಟಿ ಮನೆ ಡಕಾಯಿತಿ ಮಾಡುತ್ತಿದ್ದ ಕುಖ್ಯಾತ... >> : ಪತ್ರಿಕಾ ಪ್ರಕಟಣೆ : : ದಿನಾಂಕ: 24-02-2018 :     ದಿನಾಂಕ 19-02-2018 ರಂದು ಪಿರ್ಯಾದಿ ಲೀಲಾವತಿ... >> ಪತ್ರಿಕಾ ಪ್ರಕಟಣೆ ದಿನಾಂಕ:14-02-2018. : : ಇಬ್ಬರು ಬ್ಯಾಂಕ್ ಕಳ್ಳರ ಬಂಧನ : 20,11,950=00 ಮಾಲು ಜಪ್ತು : :... >> ಜಿಲ್ಲಾ ಪೊಲೀಸ್ ಕಛೇರಿ, ತುಮಕೂರು. ದಿ:12.02.2018 :  ಪತ್ರಿಕಾ ಪ್ರಕಟಣೆ  : ದಿನಾಂಕ 12.02.2018... >> ಪತ್ರಿಕಾ ಪ್ರಕಟಣೆ. ದಿನಾಂಕ: 12/02/2018 ರಂದು ತುಮಕೂರು ಜಿಲ್ಲೆ, ತುರುವೇಕೆರೆ ಪೊಲೀಸ್ ಠಾಣೆಯ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< March 2018 >
Mo Tu We Th Fr Sa Su
      1 2 3 4
5 6 7 8 9 10 11
12 13 14 15 16 17 18
19 20 21 22 23 24 25
26 27 28 29 30 31  
March 2018

Saturday, 17 March 2018

ಪತ್ರಿಕಾ ಪ್ರಕಟಣೆ ದಿ 17-03-2018

ಪತ್ರಿಕಾ ಪ್ರಕಟಣೆ

ದಿನಾಂಕ : 17-03-2018

-: ಚೂರಿಯಿಂದ ಇರಿದು ದರೋಡೆ ಮಾಡುತ್ತಿದ್ದ ಆರೋಪಿಗಳ ಬಂಧನ :-

ದಿನಾಂಕ:-22.02.2018 ರಂದು ಸಂಜೆ ಸುಮಾರು 7.40 ಗಂಟೆ ಸಮಯದಲ್ಲಿ ಕೊರಟಗೆರೆ ಟೌನ್ನ ದೊಡ್ಡೇಗೌಡ ಪೆಟ್ರೋಲ್ ಬಂಕ್ ಬಳಿ ಹನುಮಂತರಾಯಪ್ಪ ಎಂಬುವವರು ಕೆಲಸ ಮುಗಿಸಿಕೊಂಡು ನಡೆದುಕೊಂಡು  ಹೋಗುತ್ತಿದ್ದಾಗ, ಯಾರೋ ಮೂರು ಜನ ಆಸಾಮಿಗಳು ಪಲ್ಸರ್ ಬೈಕ್ ನಲ್ಲಿ ಬಂದು, ಪೆಟ್ರೋಲ್ ಬಂಕ್ ಬಗ್ಗೆ ಕೇಳುವ ನೆಪ ಮಾಡಿಕೊಂಡು ಸದರಿ ಆಸಾಮಿಯ ಮೇಲೆ ಹಲ್ಲೆ ಮಾಡಿ ಚೂರಿಯಿಂದ ಇರಿದು, ಆತನ ಬಳಿ ಇದ್ದ 300/- ರೂ ನಗದು ಹಾಗೂ ಒಂದು ಮೊಬೈಲ್ನ್ನು ಕಿತ್ತುಕೊಂಡು ಪರಾರಿಯಾಗಿರುತ್ತಾರೆ. ಹಾಗೂ ಇದೇ ಮಾದರಿಯಲ್ಲಿ ದಿನಾಂಕ:-26.02.2018 ರಂದು ಸಂಜೆ ಸುಮಾರು 7.20 ಗಂಟೆ ಸಮಯದಲ್ಲಿ ಪಲ್ಸರ್ ಬೈಕ್ನಲ್ಲಿ ಬಂದಂತಹ ಮೂರು ಜನ ಆಸಾಮಿಗಳು, ಕೊರಟಗೆರೆ ಟೌನ್  ಬೈಪಾಸ್ ರಸ್ತೆಯ ಸಮೀಪದಲ್ಲಿ ಕುಳಿತು ಮಾತನಾಡುತ್ತಿದ್ದ ಇಬ್ಬರು ವ್ಯಕ್ತಿಗಳ ಬಳಿ ಬಂದು ಪೆಟ್ರೋಲ್ ಬಂಕ್ ಬಗ್ಗೆ ಕೇಳುವ ನೆಪ ಮಾಡಿಕೊಂಡು ಸದರಿ ಆಸಾಮಿಯ ಮೇಲೆ ಕಲ್ಲಿನಿಂದ ತಲೆಗೆ ಹೊಡೆದು ಆತನ ಬಳಿ ಇದ್ದ, ಮೊಬೈಲ್ನ್ನು ಕಿತ್ತುಕೊಂಡು ಪರಾರಿಯಾಗಿರುತ್ತಾರೆ. ಈ ಬಗ್ಗೆ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣಗಳು ದಾಖಲಾಗಿರುತ್ತವೆ.

 

ಸದರಿ ಪ್ರಕರಣದ ಆರೋಪಿಗಳ ಮತ್ತು ಮಾಲು ಪತ್ತೆ ಬಗ್ಗೆ ಮಾನ್ಯ ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರವರು ವಿಶೇಷ ತಂಡವನ್ನು ರಚನೆ ಮಾಡಿದ್ದು, ಸದರಿ ತಂಡವು ದರೋಡೆ ಮಾಡುವ ಪ್ರವೃತ್ತಿಯುಳ್ಳ ಆಸಾಮಿಗಳ  ಬಗ್ಗೆ ಅಕ್ಕಪಕ್ಕದ  ಠಾಣೆಗಳಲ್ಲಿ ಮಾಹಿತಿಯನ್ನು ಸಂಗ್ರಹಿಸಿ ಈ ತಂಡವು ಪ್ರಕರಣದ ಆರೋಪಿಗಳಾದ

 

1] ಕಿರಣ್ @ ಜಡೇ ಬಿನ್ ಚನ್ನಬಸವಯ್ಯ 22 ವರ್ಷ ಆದಿ ಕನರ್ಾಟಕ ಜನಾಂಗ ಚಿಕ್ಕಶೆಟ್ಟಿಕೆರೆ ಮಾಯಸಂದ್ರ ಹೋಬಳಿ ತುರುವೆಕೆರೆ ತಾಲ್ಲೂಕು ತುಮಕೂರು

2] ಮಾರುತಿ ಆರ್ ಬಿನ್ ರಂಗನಾಥ ಹೌಸಿಂಗ್ ಬೋರ್ಡ ಸಿರಾಗೇಟ್ ತುಮಕೂರು ಟೌನ್

3] ಶಿವರಾಜು @ ಶಿವ ಬಿನ್ ಚಿನಿಗಯ್ಯ 23 ವರ್ಷ ಅಜ್ಜಪ್ಪನಹಳ್ಳಿ ರಸ್ತೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ ಯಲ್ಲಾಪುರ ತುಮಕೂರು ತಾಲ್ಲೂಕು

4] ಮಲ್ಲೇಶ್ ಎಸ್.ಎ ಬಿನ್ ಲೇಟ್ ಅಂಜಿನಪ್ಪ 30 ವರ್ಷ ಸೋಂಪುರ ಗ್ರಾಮ ಕಸಬಾ ಹೋ ಮಧುಗಿರಿ ತಾಲ್ಲೂಕು

5] ಮಂಜುನಾಥ ಕೆ ಆರ್ ಬಿನ್ ಕೆ.ರತ್ನಚಾರಿ 29 ವರ್ಷ ಆಚಾರರು ಜನಾಂಗ ಚಿನ್ನ ಬೆಳ್ಳಿ ಮಾಡುವ  ಕೆಲಸ ವಾಸ:-ಪಿಲಿಗೊಂಡ್ಲು ರೊಳ್ಳ ಮಂಡಲ್ ಮಡಕಶಿರಾ ತಾಲ್ಲೂಕು ಅನಂತಪುರ ಜಿಲ್ಲೆ

 

ರವರನ್ನು ಬಂಧಿಸಿದ್ದು, ಕೊರಟಗೆರೆ ಪೊಲೀಸ್ ಠಾಣೆಯ 02 ದರೋಡೆ ಹಾಗೂ 01 ಮನೆ ಕಳುವು, ತುಮಕೂರು ಎನ್.ಇ.ಪಿ.ಎಸ್ ಪೊಲೀಸ್ ಠಾಣೆಯ 01 ದ್ವಿ ಚಕ್ರ ವಾಹನ ಕಳುವು, ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆಯ 01 ದ್ವಿ ಚಕ್ರ ವಾಹನ ಕಳುವು, ದಾಬಸ್ ಪೇಟೆಯ 02 ದ್ವಿ ಚಕ್ರ ವಾಹನ ಕಳುವು ಹಾಗೂ ಮಧುಗಿರಿ ಪೊಲೀಸ್ ಠಾಣೆಯ 01 ಸರಗಳ್ಳತನ, ಹಾಗೂ ಆಂದ್ರರಾಜ್ಯದ ರೊಳ್ಳೆ ಪೊಲೀಸ್ ಠಾಣೆಯ 01 ದರೋಡೆ  ಪ್ರಕರಣಗಳನ್ನು ಭೇದಿಸಿ ಆರೋಪಿಗಳ ಕಡೆಯಿಂದ 30 ಗ್ರಾಂ ತೂಕದ ಚಿನ್ನದ ವಡವೆಗಳು 110 ಗ್ರಾಂ ತೂಕದ ಬೆಳ್ಳಿ, 04 ದ್ವಿ ಚಕ್ರ ವಾಹನಗಳು, 02 ಮೊಬೈಲ್ಗಳು ಹಾಗೂ 02 ಲಾಂಗ್, ಒಂದು ಡ್ರಾಗನ್, ಒಂದು ಚಾಕು, ಪರ್ಸ, ಕಬ್ಬಿಣದ ರಾಡ್ ವಶಪಡಿಸಿಕೊಂಡಿರುತ್ತಾರೆ. ಒಟ್ಟು 3,25,000/- ರೂ  ಬೆಲೆ ಬಾಳುವ ವಡವೆ ಮತ್ತು ದ್ವಿ ಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದು, ಒಟ್ಟು 09 ಪ್ರಕರಣಗಳನ್ನು ಭೇದಿಸುವಲ್ಲಿ ಯಶ್ವಸಿಯಾಗಿರುತ್ತಾರೆ.

 

ಪ್ರಕರಣಕ್ಕೆ ಸಂಬಂದಿಸಿದ ಆರೋಪಿಗಳು ಮಧ್ಯ ವ್ಯಸನಿಗಳಾಗಿ ದುಶ್ವಟಗಳಿಗೆ ಬಲಿಯಾಗಿ ದುಶ್ವಟಗಳಿಗೆ ಹಣದ ಅವಶ್ಯಕತೆ ಇದ್ದುದರಿಂದ ಒಂಟಿ ಮನೆಗಳು ಹಾಗೂ  ಒಂಟಿಯಾಗಿ ಓಡಾಡುವ ಜನರನ್ನು ಗುರಿಯಾಗಿಸಿಕೊಂಡು ದರೋಡೆ ಮಾಡುತ್ತಿದ್ದು ಸದರಿ ಆಸಾಮಿಗಳ ಮೇಲೆ ಈಗಾಗಲೇ ತುರುವೇಕೆರೆ, ತುಮಕೂರು ನಗರ, ಕೋರಾ, ಮಧುಗಿರಿ, ಮೊದಲಾದ ಕಡೆಗಳಲ್ಲಿ ಕೊಲೆ,ದರೋಡೆ ಹಾಗೂ ಕಳುವು ಪ್ರಕರಣಗಳು ಇರುತ್ತವೆ.

 

ಆರೋಪಿಗಳ ಪತ್ತೆಗಾಗಿ ಶ್ರಮಿಸಿದ ಕೊರಟಗೆರೆ ವೃತ್ತ ನಿರೀಕ್ಷಕಕರಾದ ಮುನಿರಾಜು ಮತ್ತು ಶ್ರೀ ಮಹೇಶ್ ಬಿ ಮತ್ತು ಕೊರಟಗೆರೆ ಪೊಲೀಸ್ ಠಾಣಾ ಪಿ.ಎಸ್.ಐ ಶ್ರೀ ಮಂಜುನಾಥ ಬಿ.ಸಿ ಹಾಗೂ ಸಿಬ್ಬಂದಿಗಳಾದ ಮಂಜುನಾಥ, ನಾರಾಯಣ, ಗಂಗಾಧರ, ಸೋಮನಾಥ, ಪ್ರಶಾಂತ, ರಂಗನಾಥ, ಚಂದ್ರಶೇಖರ್, ಲೋಹಿತ್, ರಮೇಶ್, ರಂಗನಾಥ ರವರುಗಳನ್ನೊಳಗೊಂಡ ತಂಡವನ್ನು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕಕರು  ಅಭಿನಂದಿಸಿರುತ್ತಾರೆ.


ಅಪರಾಧ ಘಟನೆಗಳು 17-03-18

ಹುಲಿಯೂರುದುರ್ಗ ಪೊಲೀಸ್‌ ಠಾಣಾ  ಮೊ.ನಂ. 86/2018  ಕಲಂ: 302. 307 R/W 34  ಐಪಿಸಿ

ದಿನಾಂಕ:16-03-2018 ರಂದು ರಾತ್ರಿ 8-30 ಗಂಟೆಗೆ ಪಿರ್ಯಾದಿ ಜಿ.ಪಿ.ಸಂತೋಷ ಬಿನ್‌ ಪುಟ್ಟಸ್ವಾಮಿ  ಬೈರನಾಯಕನಹಳ್ಳಿ ಗ್ರಾಮ ಕುಣಿಗಲ್‌ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ ಬೈರನಾಯಕನಹಳ್ಳಿ ಗ್ರಾಮದ ವಾಸಿ ನಮ್ಮ ಮಾವ ಹೊಂಬಯ್ಯ @ ನಾಥಪ್ಪರವರಿಗೆ ಮೂರು ಜನ ಗಂಡು ಮಕ್ಕಳಿದ್ದು ಒಂದನೇ ಕಪನಯ್ಯ, ಎರಡನೇ ಚನ್ನಯ್ಯ @ ಚಿಕ್ಕಣ್ಣ, ಮೂರನೇ ಶಿವಲಿಂಗಯ್ಯ ಎಂಬ ಮಕ್ಕಳಿರುತ್ತಾರೆ. ಎಲ್ಲರಿಗೂ ಮದುವೆಯಾಗಿ ಒಟ್ಟಾಗಿ ಇರುತ್ತಾರೆ.  ಹೊಂಬಯ್ಯರವರಿಗೆ ಸುಮಾರು 4 ಎಕರೆ ಜಮೀನಿದ್ದು, ಈ ಜಮೀನು ಜೊತಗೆ ಒಂದು ಎಕರೆ ಜಮೀನನ್ನು ಗೌರಮ್ಮ @ ಕಾಡಮ್ಮ ರವರು ಬೈರನಾಯಕನಹಳ್ಳಿ ವಾಸಿ ಬುಡ್ಡಯ್ಯರವರಿಂದ ಕ್ರಯಕ್ಕೆ ಪಡೆದಿರುತ್ತಾರೆ. ಹೊಂಬಯ್ಯರವರ ಚಿಕ್ಕಪ್ಪರವರ ಮಗ ಜವರೇಗೌಡ   ರವರ ಮೊದಲನೇ  ಚನ್ನಯ್ಯ @ ಪಾಪಯ್ಯ, ಎರಡನೇ ಮಗನಾದ ಮುದ್ದರಾಜು ಇವರುಗಳಿದ್ದು, ಇವರ ತಂದೆ ಜವರೇಗೌಡ ರವರು ಬುಡ್ಡಯ್ಯರವರಿಗೆ ಸುಮಾರು ಒಂದು ಎಕರೆ ಜಮೀನನ್ನು ಸುಮಾರು ನಲವತ್ತು ವರ್ಷಗಳ ಹಿಂದೆ ಮಾರಾಟ ಮಾಡಿರುತ್ತಾರೆ. ಇದೇ ಜಮೀನನ್ನು ಗೌರಮ್ಮ ರವರು ಸುಮಾರು ಮೂವತ್ತೈದು ವರ್ಷಗಳ ಇಂದೆ ಬುಡ್ಡಯ್ಯರವರಿಂದ ಕ್ರಯಕ್ಕೆ ತೆಗೆದುಕೊಂಡಿರುತ್ತಾರೆ. ಇದೇ ಜಮೀನನ್ನು ಮುದ್ದರಾಜುರವರು ತಮ್ಮ ತಂದೆ ಜವರೇಗೌಡ ರವರು ಈ ಜಮೀನನ್ನು ಯಾರಿಗೂ ಮಾರಾಟ ಮಾಡಿಲ್ಲವೆಂದು ಸುಳ್ಳು ಖಾತೆ ಮಾಡಿಸಿಕೊಂಡಿದ್ದು, ಈ ವಿಚಾರದಲ್ಲಿ ಗೌರಮ್ಮ ಮತ್ತು ಇವರ ಮಕ್ಕಳು, ಮುದ್ದರಾಜು ಮತ್ತು ಚನ್ನಯ್ಯರವರ ವಿರುದ್ಧ  ಕುಣಿಗಲ್ ಸಿವಿಲ್ ನ್ಯಾಯಾಲಯದಲ್ಲಿ  ದಾವೆ ಹೂಡಿದ್ದು, ನ್ಯಾಯಾಲಯದಲ್ಲಿ ಗೌರಮ್ಮ ಮತ್ತು ಮಕ್ಕಳ ಪರವಾಗಿ ನ್ಯಾಯಾಲಯದಲ್ಲಿ ಆದೇಶವಾಗಿರುತ್ತದೆ. ಈ ವಿಚಾರವಾಗಿ ಮುದ್ದರಾಜು, ಚನ್ನಯ್ಯ @ ಪಾಪಯ್ಯ ಇವರುಗಳು ಕಪನಯ್ಯ ಮತ್ತು ಕುಟುಂಬದ ಮೇಲೆ ದ್ವೇಶ ಸಾದಿಸುತ್ತಿದ್ದರು. ಕೋರ್ಟ್‌ ನಲ್ಲಿ ಗೌರಮ್ಮನ ಪರವಾಗಿ ಆದ ಒಂದು ಎಕರೆ ಜಮೀನು ತಮಗೆ ಸೇರಬೇಕೆಂದು ಮುದ್ದರಾಜು ಮತ್ತು ಮನೆಯವರು ಗಲಾಟೆ ಮಾಡುತ್ತಿದ್ದರು. ದಿನಾಂಕ: 16-3-2018 ರಂದು ಸಾಯಂಕಾಲ ಸುಮಾರು 4-00 ಗಂಟೆಯಲ್ಲಿ ನಾನು ಬೆಂಗಳೂರಿನಿಂದ ಬೈರನಾಯಕನಹಳ್ಳಿಗೆ ಬಂದಿದ್ದು, ಸಂಜೆ 5-30 ಗಂಟೆ ಸಮಯದಲ್ಲಿ ಇದೇ ಜಮೀನಿನ ವಿಚಾರದಲ್ಲಿ ಅವರ ಜಮೀನಿನ ಹುಲ್ಲಿನ ಮೆದೆ ಹತ್ತಿರ ಮುದ್ದರಾಜು ರವರು ದೊಣ್ಣೆಯಿಂದ ಕಪನಯ್ಯ ಮತ್ತು ಚನ್ನಯ್ಯರವರಿಗೆ ಅವರ ಜಮೀನಿನ ಹತ್ತಿರ ಹೊಡೆಯಲು ಅಟ್ಟಾಡಿಸಿದರು. ಆಗ ಗ್ರಾಮಸ್ಥರು ಜಗಳವನ್ನು ಬಿಡಿಸಿದರು.  ನಂತರ ಸಂಜೆ 6-30 ಗಂಟೆ ಸಮಯದಲ್ಲಿ  ಬೈರನಾಯಕನಹಳ್ಳಿ ಗ್ರಾಮದ ಪರಿಶಿಷ್ಟ ಜನಾಂಗದ ಕಾಲೋನಿಯ ಹತ್ತಿರ ಇರುವ ಕಪನಯ್ಯರವರ ದನದಕೊಟ್ಟಿಗೆ ಹತ್ತಿರ ಬಂದು ಎಮ್ಮೆಯನ್ನು ಕಟ್ಟು ಹಾಕುವ ಸಮಯದಲ್ಲಿ ಮುದ್ದರಾಜು ಹಾಗೂ ಈತನ ಹೆಂಡತಿ ಶಿಲ್ಪ ರವರು ಕೊಲೆ ಮಾಡುವ ಉದ್ದೇಶದಿಂದ ಶಿಲ್ಪಾ ತನ್ನ ಗಂಡ ಮುದ್ದರಾಜು ರವರಿಗೆ ಚಾಕುವನ್ನು ನೀಡಿ ಈ ದಿನ ಇವರನ್ನು ಇಲ್ಲಿಯೇ ಕೊಲೆ ಮಾಡಿ ಮುಗಿಸಿಬೀಡು ಎಂದು ಹೇಳಿ ಗಂಡ ಮುದ್ದರಾಜು ಕೈಗೆ ಚಾಕು ನೀಡಿದಾಗ, ಮುದ್ದರಾಜು ಚಾಕುವಿನಿಂದ ಕಪನಯ್ಯನ ಹೊಟ್ಟೆಗೆ ತಿವಿದಾಗ, ಕಪನಯ್ಯ ತಮ್ಮ ಚನ್ನಯ್ಯ @ ಚಿಕ್ಕಣ್ಣ ಇವರು ಬೀಡಿಸಿಕೊಳ್ಳಲು ಬಂದಾಗ ಶಿಲ್ಪಾ ರವರು ಚನ್ನಯ್ಯ @ ಚಿಕ್ಕಣ್ಣನನ್ನು ಹಿಡಿದುಕೊಂಡು ಇವನಿಗೂ ತಿವಿದು ಸಾಯಿಸು ಎಂದು ತನ್ನ ಗಂಡ ಮುದ್ದರಾಜುಗೆ ಹೇಳಿದಾಗ ಮುದ್ದರಾಜುನು  ಚನ್ನಯ್ಯ @ ಚಿಕ್ಕಣ್ಣನ ಹೊಟ್ಟೆಗೆ ತಿವಿದು,  ಈ ಗಲಾಟೆ ನಡೆದಾಗ ಕಪನಯ್ಯನ ಹೆಂಡತಿ ಶಾಂತಮ್ಮ, ಕಪನಯ್ಯನ ತಾಯಿ ಗೌರಮ್ಮ ಇವರುಗಳು ಇದ್ದು, ತಕ್ಷಣ ನಾನು ನನ್ನ ವಾಹನದಲ್ಲಿ ಕಪನಯ್ಯ ಮತ್ತು ಚನ್ನಯ್ಯ @ ಚಿಕ್ಕಣ್ಣ ಇವರುಗಳನ್ನು ಕುಣಿಗಲ್ ಸರ್ಕಾರಿ ಆಸ್ಪತ್ರೆ ಬರುವಾಗ ಮಾರ್ಗ ಮಧ್ಯ ಕಪನಯ್ಯ  ತೀರಿಕೊಂಡಿದ್ದು, ನಾವು ಡಿ ಹೊಸಹಳ್ಳಿ ಸಿಂಗೋನಹಳ್ಳಿ ಗೇಟ್ ಹತ್ತಿರ ಬರುವಷ್ಟರಲ್ಲಿ ಎದುರಿಗೆ ಆಂಬುಲೆನ್ಸ್ ಬಂದಾಗ ನಾವು ಅಂಬುಲೆನ್ಸ್‌ ನಲ್ಲಿ ಕಪನಯ್ಯನ ಶವವನ್ನು ಮತ್ತು ಗಾಯಾಳು ಚನ್ನಯ್ಯ@ ಚಿಕ್ಕಣ್ಣರವರನ್ನು ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ಕರೆತಂದಿರುತ್ತೇವೆ. ಚನ್ನಯ್ಯ @ ಚಿಕ್ಕಣ್ಣನಿಗೆ ವೈದ್ಯರು ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಶ್ರೀ ಆದಿಚುಂಚನಗಿರಿ ಆಸ್ಪತ್ರೆಗೆ ಕಳುಹಿಸಿರುತ್ತಾರೆ. ಕಪನಯ್ಯರವರನ್ನು ಕೊಲೆ ಮಾಡಿರುವ ಹಾಗೂ ಚನ್ನಯ್ಯ @ ಚಿಕ್ಕಣ್ಣರವರಿಗೆ ಕೊಲೆ ಪ್ರಯತ್ನ ನಡೆಸಿರುವ ಮುದ್ದರಾಜು ಮತ್ತು ಈತನ ಹೆಂಡತಿ ಶಿಲ್ಪಾ ರವರುಗಳ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ನೀಡಿರುವ ದೂರಿನ ಅಂಶವಾಗಿರುತ್ತೆ.

ಹೊಸಬಡಾವಣೆ ಪೊಲೀಸ್ ಠಾಣಾ ಮೊ.ನಂ. 52/2018 U/S 427, 504 IPC

ದಿನಾಂಕ : 16/03/2018 ರಂದು ರಾತ್ರಿ 8-30  ಗಂಟೆಯಲ್ಲಿ ಪಿರ್ಯಾದಿ ಶಿವರಾಜು ಬಿನ್ ಲೇಟ್ ಮುಳ್ಳಕಟ್ಟಯ್ಯ (51) ಕಾವಲುಗಾರ ಕೆಲಸ, ಸಿದ್ಧಗಂಗಾ ಆಸ್ಪತ್ರೆ ವಾಸ ಮುತ್ಸಂದ್ರ ತುಮಕೂರು ತಾಲ್ಲೋಕ್ ರವರು ಹಾಗೂ ಇತರರು ಠಾಣೆಗೆ ಒಬ್ಬ ಆಸಾಮಿಯನ್ನು ಕರೆದುಕೊಂಡು ಬಂದು ಹಾಜರು ಪಡಿಸಿ ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯು ಈ ದಿವಸ ಸಂಜೆ 7-45 ಗಂಟೆಯಲ್ಲಿ ಎಂದಿನಂತೆ ಸಿದ್ಧಗಂಗಾ ಆಸ್ಪತ್ರೆಯ ಮುಂಬಾಗಿಲಿನ ಬಳಿ ಕಾವಲು ಕರ್ತವ್ಯ ನಿರ್ವಹಿಸುತ್ತಿರುವಾಗ್ಗೆ ಆರೋಪಿ ನಾಗರಾಜ ನಾಯ್ಕ ಬಿನ್ ಕಿಮ್ಯಾನಾಯ್ಕ, 36 ವರ್ಷ, ಕಣಿವೇನಹಳ್ಳಿ ತಾಂಡಾ, ಪಾವಗಡ ತಾಲ್ಲೋಕ್, ರವರು ಕ್ರಿಕೆಟ್ ಬ್ಯಾಟ್ ಹಿಡಿದುಕೊಂಡು ಬಂದವನೇ ಏಕಾಏಕಿ ಆಸ್ಪತ್ರೆಯ ಸೆನ್ಸಾರ್ ಗಾಜಿನ ಬಾಗಿಲಿಗೆ  ಕ್ರಿಕೆಟ್ ಬ್ಯಾಟ್‌ ನಿಂದ ಹೊಡೆದು ಬಾಗಿಲನ್ನು ಪುಡಿ ಮಾಡಿದ್ದು ಆತನನ್ನು ಆಸ್ಪತ್ರೆಯ ಸಿಬ್ಬಂದಿಗಳ ಸಹಾಯದಿಂದ ಹಿಡಿದು ವಿಚಾರ ಮಾಡಲಾಗಿ ಆತನ ಅಣ್ಣನನ್ನು ಆಸ್ಪತ್ರೆಗೆ ಚಿಕಿತ್ಸೆಗೆ ಸೇರಿಸಿದ್ದು ಆಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲವೆಂದು ಆಸ್ಪತ್ರೆಯ ಸಿಬ್ಬಂದಿಗಳಿಗೆ ಬೋಳಿಮಕ್ಕಳ ಎಂದು ಅವ್ಯಾಚ್ಯ ಶಬ್ದಗಳಿಂದ ಬೈಯ್ದಿದ್ದು ಆಸ್ಪತ್ರೆಯ ಸೆನ್ಸಾರ್ ಡೋರ್ ಪುಡಿಯಾಗಿ ಸುಮಾರು 50,000/-ರೂ ನಷ್ಠವಾಗಿರುತ್ತದೆ ಆದ್ದರಿಂದ ಮೇಲ್ಕಂಡ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದೆ

ಪಟ್ಟನಾಯಕನಹಳ್ಳಿ ಪೊಲೀಸ್ ಠಾಣಾ ಯು.ಡಿ.ಆರ್ ನಂ 11-18 ಕಲಂ 174 ಸಿ ಆರ್ ಪಿ ಸಿ

ದಿನಾಂಕ:16/03/2018 ರಂದು ಸಂಜೆ 05:30 ಗಂಟೆಗೆ, ಬಾಬು ಬಿನ್ ಇಮಾಂ ಸಾಬ್, ಬ್ರಹ್ಮಸಂದ್ರ ಗ್ರಾಮ,ಸಿರಾ ತಾಲ್ಲೂಕ್  ವಾಸಿ ರವರು, ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಪಿರ್ಯಾದಿರವರ ತಂದೆಗೆ 03 ಜನ ಹೆಣ್ಣು ಮಕ್ಕಳಿದ್ದು ಮತ್ತು ಒಂದು ಗಂಡು ಒಟ್ಟು  04 ಜನ ಮಕ್ಕಳಿದ್ದು  ಅಕ್ಕ ಹುಸೇನ್ ಬಿ, ತಂಗಿ ಮುಬೀನಾ ಬಿ, ಬ್ರಹ್ಮಸಂದ್ರ ಗ್ರಾಮದಲ್ಲಿ ವಿವಾಹಮಾಡಿದ್ದು ಕೊನೇ ತಂಗಿ ಶಬೀನಾಳನ್ನು ಎಮ್ಮೆದೊಡ್ಡಿ ಗ್ರಾಮ, ಕಲ್ಯಾಣ ದುರ್ಗ ತಾ,ಆಂದ್ರಪ್ರದೇಶ ರಾಜ್ಯದ ಚಾಂದ್ ಪಾಶಾರವರಿಗೆ ಈಗ್ಗೆ 09 ವರ್ಷಗಳ ಹಿಂದೆ ವಿವಾಹಮಾಡಿಕೊಟ್ಟಿದ್ದು ,ಮದುವೆ ಆದಾಗಿನಿಂದ ಪಿರ್ಯಾದಿಮನೆಯಲ್ಲೇ ವಾಸವಾಗಿದ್ದಳು.ಇವರಿಗೆ 3ನೇ ತರಗತಿ ವ್ಯಾಸಂಗ ಮಾಡುವ 07 ವರ್ಷದ ಮಗಳಿದ್ದು ಪಿರ್ಯಾದಿ ತಂಗಿ ಶಬೀನಾಳಿಗೆ ಈಗ್ಗೆ ಸುಮಾರು 03 ವರ್ಷಗಳಿಂದ ಆಗಾಗ್ಗೇ ಬುದ್ದಿಭ್ರಮಣೆಯಾದಂತೆ ಆಡುತ್ತಿದ್ದು, ದೆವ್ವ ಹಿಡಿದಂತೆ ಆಡುತ್ತಿದ್ದಳು ಈ ಬಗ್ಗೆ ಅನೇಕ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದರೂ ಗುಣಮುಖರಾಗಿರಲಿಲ್ಲ ಈಕೆಯು ಎರಡು- ಮೂರು ಬಾರಿ ನೇಣು ಹಾಕಿಕೊಳ್ಳಲು ಪ್ರಯತ್ನಿಸಿದ್ದಳು ಅದನ್ನು ಕಂಡ ನಾವುಗಳು ತಡೆದಿದ್ದೆವು. ಆದರೆ ದಿನಾಂಕ:16/03/2018 ರಂದು ಮಧ್ಯಾಹ್ನ ಸುಮಾರು 12:30 ಗಂಟೆಗೆ  ಪಿರ್ಯಾದಿ ತಂಗಿ ಶಬೀನಾಳು ಪಿರ್ಯಾದಿ ಗ್ರಾಮದ ಚಿಕ್ಕನಾಗಪ್ಪರವರ ಪಾಳು ಭೂಮಿಯ ಪಕ್ಕ ಒಂದು ಮರಕ್ಕೆ ವೇಲಿನಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾಳೆ.ಯಾವುದೇ ಅನುಮಾನ ಇರುವುದಿಲ್ಲ. ಮುಂದಿನ ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ,ನಂ-74/2018 ಕಲಂ 341,324, 504,506, ಐಪಿಸಿ

ದಿನಾಂಕ 16-03-2018 ರಂದು ಬೆಳಿಗ್ಗೆ 10-15 ಗಂಟೆಗೆ ಪಿರ್ಯಾದಿಯಾದ ನಂಜಮ್ಮ ಕೋಂ ಹನುಮಂತರಾಯಪ್ಪ, 46 ವರ್ಷ, ಒಕ್ಕಲಿಗ ಜನಾಂಗ, ಗೃಹಿಣಿ, ಉಪ್ಪಾರಹಳ್ಳಿ, ತುಮಕೂರು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿದ ದೂರಿನ ಅಂಶವೇನೆಂಧರೆ ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು, ನಮ್ಮ ಯಜಮಾನರ ತಂದೆಯವರಾದ ಲೇಟ್ ಗಂಗಣ್ಣರವರ ಬಾಬ್ತು ಹುಳ್ಳೇನಹಳ್ಳಿ ಸರ್ವೇ ನಂ-160, 161, 162 ರಲ್ಲಿ 2 ಎಕರೆ 30 ಗುಂಟೆ ಜಮೀನಿದ್ದು, ಈ ಜಮೀನಿನಲ್ಲಿ ತೆಂಗಿನ  ಗಿಡಗಳು ಇರುತ್ತವೆ. ಈಗ್ಗೆ ಸುಮಾರು 3 ವರ್ಷಗಳ ಹಿಂದೆ ಇದೇ ಗ್ರಾಮದ ವಾಸಿ ಹನುಂತರಾಯಪ್ಪ ರವರಿಗೆ ವ್ಯವಸಾಯ ಮಾಡಲೆಂದು ಜಮೀನಿನಲ್ಲಿ ಬೆಳೆದ ಬೆಳೆಯನ್ನು ನೀವೇ ತೆಗೆದುಕೊಳ್ಳುವಂತೆ ಹಾಗೂ ನನಗೆ ತೆಂಗಿನ ಸಸಿಗಳನ್ನು ಮಾತ್ರ ನಮಗೆ ಬೆಳಸಿ ಕೊಡುವಂತೆ ಮಾತನಾಡಿ ಜಮೀನನ್ನು ಹನುಮಂತರಾಯಪ್ಪ ರವರ ಸುಬರ್ದಿಗೆ ಕೊಟ್ಟಿದ್ದೆವು. ನಂತರ ಹನುಮಂತರಾಯಪ್ಪ ರವರು ನಮ್ಮ  ತೋಟವನ್ನು ಸರಿಯಾಗಿ ನೋಡಿಕೊಳ್ಳದೆ ಇದ್ದುದರಿಂದ ನೀವು ನಮ್ಮ ತೆಂಗಿನ ತೋಟವನ್ನು ಇನ್ನು ಮುಂದೆ ನೋಡಿಕೊಳ್ಳುವುದು ಬೇಡಾ ಎಂತಾ ಹೇಳಿದ್ದು, ಆದರೂ ಸಹ ನಮ್ಮ ತೆಂಗಿನ ತೋಟವನ್ನು ಬಿಡದ ಹನುಮಂತರಾಯಪ್ಪ ರವರು 16ನೇ ಡಿಸಂಬರ್‌ 2017 ರಲ್ಲಿ ನಾವುಗಳು ತೆಂಗಿನತೋಟದಲ್ಲಿ ತೆಂಗಿನಕಾಯಿಯನ್ನು ಕೀಳಲು ಹೋದಾಗ ಆ ದಿನ ಹನುಮಂತರಾಯಪ್ಪ ಹಾಗೂ ಆತನ ಹೆಂಡತಿ ನಾಗರತ್ನಮ್ಮ ರವರುಗಳು ನಮ್ಮ ಮೇಲೆ ಗಲಾಟೆ ಮಾಡಿ ಹೊಡೆದಿದ್ದು, ಸದರಿ ವಿಚಾರವಾಗಿ ಹೆಬ್ಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು, ಹೀಗಿದ್ದರೂ ಸಹ ದಿನಾಂಕ 16-03-2018 ರಂದು ನಾವುಗಳು ಹುಳ್ಳೇನಹಳ್ಳಿಯಲ್ಲಿರುವ ಸರ್ವೇ ನಂ-160, 161, 162 ರ ಜಮೀನಿನಲ್ಲಿರುವ ತೆಂಗಿನ ಕಾಯಿಗಳನ್ನು ಕಿತ್ತುಕೊಂಡು ಯಾವುದೋ ಒಂದು ಗೂಡ್ಸ್‌‌ ವಾಹನದಲ್ಲಿ ತುಂಬಿಕೊಂಡು ಬರುವಾಗ್ಗೆ, ಬೆಳಗ್ಗೆ ಸುಮಾರು 09-30 ಗಂಟೆ ಸಮಯದಲ್ಲಿ ಹುಳ್ಳೇನಹಳ್ಳಿ ಗ್ರಾಮದ ತಿಮ್ಮಯ್ಯರವರ ವಾಸದ ಮನೆಯ ಹಿಂಬಾಗದ ಸಾರ್ವಜನಿಕ ರಸ್ತೆಯಲ್ಲಿ ನಾಗರತ್ನಮ್ಮ ಎಂಬುವರು ನಮ್ಮ ವಾಹನವನ್ನು ಮತ್ತು ನನ್ನನ್ನು ತಡೆದು ಅಡ್ಡಗಟ್ಟಿ ನಿಮ್ಮ ವಾಹನವನ್ನು ಹಾಗೂ ಅದರಲ್ಲಿರುವ ತೆಂಗಿನ ಕಾಯಿಗಳನ್ನು ತೆಗೆದುಕೊಂಡು ಹೋಗಲು  ನಾನು ಬಿಡುವುದಿಲ್ಲಾ, ತೆಂಗಿನ ತೋಟ ನಿಮ್ಮ ಅಪ್ಪನದೇನೆ? ಸೂಳೆ ಮುಂಡೆ ಎಂದು ಅವಾಚ್ಯ ಶಬ್ದಗಳಿಂದ ಬೈದು ಅಲ್ಲಿಯೇ ಬಿದ್ದಿದ್ದ ಒಂದು ತೆಂಗಿನ ಎಡಮಟ್ಟೆಯಿಂದ ನನ್ನ ಎಡ ಬುಜಕ್ಕೆ ಹೊಡೆದು, ಹಾಗೂ ತಲೆಗೆ ಹೊಡೆದು  ಮೂಗೇಟು ಪಡಿಸಿದಳು. ನಂತರ ನನ್ನನ್ನು ಅಲ್ಲಿಯೇ ಇದ್ದ ನಮ್ಮ ಮಗ ಶೇಖರ್  ಮತ್ತು ತುಮಕೂರು ಬನಶಂಕರಿ ವಾಸಿ ಕುಮಾರ ಎಂಬುವವರು ಬಂದು  ಜಗಳ ಬಿಡಿಸಿದರು. ನಂತರ ನಾಗರತ್ನ ರವರು ಲೇ ಮುಂಡೆ ಈ ತೆಂಗಿನ ತೋಟಕ್ಕೆ ಇನ್ನೊಂದು ಸಾರಿ ನೀನು ಬಂದರೆ ನಿನ್ನನ್ನು ಕೊಲೆ ಮಾಡುತ್ತೇನೆ ಎಂತಾ ಕೊಲೆ ಬೆದರಿಕೆ ಹಾಕಿದಳು. ನನಗೆ ಅಡ್ಡಗಟ್ಟಿ ಹೊಡೆದು ಅವಾಚ್ಯ ಶಬ್ದಗಳಿಂದ ಬೈದು ಪ್ರಾಣ ಬೆದರಿಕೆ ಹಾಕಿದ ಮೇಲ್ಕಂಡವರುಗಳು ಮೇಲೆ ಮುಂದಿನ ಕಾನೂನು ರೀತ್ಯಾ ಕ್ರಮ  ಜರುಗಿಸಬೇಕೆಂದು ಈ ಮೂಲಕ ಕೋರಿರುತ್ತೇನೆ ಎಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಾಗಿಸಿರುತ್ತೆ.

ಕಳ್ಳಂಬೆಳ್ಳ  ಪೊಲೀಸ್‌ ಠಾಣಾ ಮೊ.ನಂ: 60/2018 ಕಲಂ: 279, 304() ಐಪಿಸಿ.

ದಿನಾಂಕ: 16/03/2018 ರಂದು ಬೆಳಿಗ್ಗೆ 10-00 ಗಂಟೆಗೆ ಪಿರ್ಯಾದಿ ಆರ್.ಕಾರ್ತಿಕ್ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ, ನಾನು DD-03-L-9801 ನೇ ಲಾರಿಯ 2ನೇ ಚಾಲಕನಾಗಿ,  ಮನೋಹರನ್.ಜಿ. ರವರು 1ನೇ ಚಾಲಕನಾಗಿ ಕೆಲಸ ಮಾಡುತ್ತಿದ್ದು, ದಿನಾಂಕ: 15-03-2018 ರಂದು ಬೆಳಿಗ್ಗೆ 11-00 ಗಂಟೆಯಲ್ಲಿ ತಮಿಳು ನಾಡಿದ ತಿರುಪುರ್ ನಲ್ಲಿ ಕಾಟನ್ ಬಂಡಲ್ ಗಳನ್ನು ಲೋಡ್ ಮಾಡಿಕೊಂಡು ಮುಂಬೈಗೆ ಹೋಗುತ್ತಿದ್ದೆವು. ಲಾರಿಯನ್ನು 1ನೇ ಚಾಲಕ ಜಿ.ಮನೋಹರ್ ರವರು ಚಾಲನೆ ಮಾಡುತ್ತಿದ್ದರು.  ಬೆಂಗಳೂರು-ತುಮಕೂರು ಮಾರ್ಗವಾಗಿ ಮುಂಬೈಕಡೆಗೆ ಎನ್.ಹೆಚ್.48 ರಸ್ತೆಯಲ್ಲಿ ಹೋಗುತ್ತಿದ್ದಾಗ, ದಿನಾಂಕ: 15-03-2018 ರಂದು ಮದ್ಯರಾತ್ರಿ ಸುಮಾರು 12-00 ಗಂಟೆ ಸಮಯದಲ್ಲಿ ಸಿರಾ ತಾಲ್ಲೂಕ್ ಕಳ್ಳಂಬೆಳ್ಳ ಟೋಲ್ ಸಮೀಪ ನಮ್ಮ ಲಾರಿಯ ಚಾಲಕ ಲಾರಿಯನ್ನು ಅತಿವೇಗವಾಗಿ ಚಾಲನೆಮಾಡಿಕೊಂಡು ಹೋಗಿ ಟೋಲ್ ಬಳಿ ಹಣ ಕಟ್ಟಲು ನಿಂತಿದ್ದ ಒಂದು ಲಾರಿಯ ಹಿಂಬಾಗಕ್ಕೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದ, ಪರಿಣಾಮ ಚಾಲಕ ಜಿ.ಮನೋಹರನ್ ಸ್ಟೇರಿಂಗ್ ಬಳಿ ಸಿಕ್ಕಿ ಹಾಕಿಕೊಂಡು ಹೊಟ್ಟೆಗೆ ಸ್ಟೇರಿಂಗ್ ಅಪ್ಪಳಿಸಿಕೊಂಡು ಲಾರಿ ಮುಂಬಾಗ ಜಕಂಗೊಂಡಿದ್ದು ನಂತರ ನಾನು ಲಾರಿಯಿಂದ ಇಳಿದು ಮುಂಭಾಗದ ಮುಂದ ನಿಂತಿದ್ದ ಲಾರಿಯ ನಂಬರ್ ನೋಡಲಾಗಿ TN-28-AM-2423 ಆಗಿದ್ದು, ನಂತರ ಅಲ್ಲಿದ್ದ ಇತರೆ ಲಾರಿ ಚಾಲಕರು ಹಾಗೂ ನಾನು ಸೇರಿ ಚಾಲಕ ಮನೋಹರನ್ ರವರನ್ನು ಹೊರತೆಗೆದು ಸ್ಥಳಕ್ಕೆ ಬಂದ ಆಂಬ್ಯುಲೆನ್ಸ್ ವಾಹನದಲ್ಲಿ ಗಾಯಾಳುವನ್ನು ತುಮಕೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ಆಸ್ಪತ್ರೆಗೆ ಕರೆದುಕೊಡು ಹೋಗುತ್ತಿದ್ದಾಗ ಮಾರ್ಗ ಮದ್ಯೆದಲ್ಲಿ ಚಾಲಕ ಮನೋಹರನ್ ಅರ್ದರಾತ್ರಿ ಸುಮಾರು 2-00 ಗಂಟೆ ಸಮಯದಲ್ಲಿ ಮೃತಪಟ್ಟಿದ್ದು, ನಂತರ ಮೃತದೇಹವನ್ನು ವಾಪಸ್ ತುಮಕೂರು ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿರಿಸಿರುತ್ತೇನೆ.  ಈ ಅಪಘಾತವು ನಮ್ಮ ಲಾರಿಯ ಚಾಲಕನ ಅತಿವೇಗ ಮತ್ತು ಅಜಾಗರೂಕತೆಯಿಂದ ಉಂಟಾಗಿರುತ್ತದೆ.  ಈ ಅಪಘಾತದಲ್ಲಿ ನನಗೆ ಯಾವುದೇ ಪೆಟ್ಟುಗಳು ಬಿದ್ದಿರುವುದಿಲ್ಲ.  ಮುಂದಿನ ಕ್ರಮ ಜರುಗಿಸಬೇಕೆಂದು ಕೋರುತ್ತೇನೆ.  ನನಗೆ ಕನ್ನಡ ಬಾರದ ಕಾರಣ ನಾನು ತಮಿಳಿನಲ್ಲಿ ನನ್ನ ಸ್ನೇಹಿತರಾದ ಎಸ್.ಗೋವಿಂದ್ ರವರು ಕನ್ನಡಕ್ಕೆ ತರ್ಜಿಮೆ ಮಾಡಿ ಬರೆದಿರುತ್ತಾರೆ.  ಅಪಘಾತದ ವಿಚಾರವನ್ನು ಸಂಬಂದಿಕರಿಗೆ ತಿಳಿಸಿ ತಡವಾಗಿ ಬಂದು ದೂರು ನೀಡಿರುತ್ತೇನೆಂದು ನೀಡಿದ ಪಿರ್ಯಾದು ಮೇರೆಗೆ ಪ್ರಕರಣ ದಾಖಲಿಸಿಕೊಂಡು ಪ್ರಕರಣ ದಾಖಲಾಗಿಸಿರುತ್ತೆ.Friday, 16 March 2018

ಪ್ರತಿಕಾ ಪ್ರಕಟಣೆ. ದಿ: 16/03/18

ಪ್ರತಿಕಾ ಪ್ರಕಟಣೆ.

ದಿ: 16/03/18

ಮೂವರು ಮನೆ ಕಳ್ಳರ ಬಂಧನ, 5 ಲಕ್ಷ ಮೌಲ್ಯದ ಚಿನ್ನಾಭರಣಗಳು, ಐದು ದ್ವಿಚಕ್ರ ವಾಹನಗಳು, ಲ್ಯಾಪ್ಟಾಪ್ ಮತ್ತು ಮೊಬೈಲ್‌ ಗಳ  ವಶ

 

ದಿ:26-12-2017ರಂದು ರಾತ್ರಿ ಯಾರೋ ಕಳ್ಳರು ಪಾವಗಡ ಪಟ್ಟಣದ ರಾಮಾಂಜಿನೇಯ್ಯಶೆಟ್ಟಿ ರವರ ಮನೆಯ ಬೀಗ ಮುರಿದು ಒಳಗೆ ಪ್ರವೇಶಿಸಿ ಮನೆಯಲ್ಲಿದ್ದ ಚಿನ್ನಾಭರಣಗಳು ಹಾಗೂ ಹಣವನ್ನು ಕಳುವು ಮಾಡಿಕೊಂಡು ಹೋಗಿದ್ದು ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತೆ.

ಪ್ರಕರಣದಲ್ಲಿ ಆರೋಪಿಗಳಾದ ಹೇಮಂತಕುಮಾರ್, ಕಾಂತೇಶ, ಸಂತೋಷ ರವರುಗಳನ್ನು ಬಂಧಿಸಿದ್ದು, ಆರೋಪಿಯಾದ ಕಾಂತೇಶ ಪಾವಗಡ ತಾಲ್ಲೂಕು ಕನ್ನಮೇಡಿ ಗ್ರಾಮದ ವಾಸಿಯಾಗಿದ್ದು ಪಾವಗಡ ಪೊಲೀಸ್ ಠಾಣೆಯಲ್ಲಿ ಮನೆ ಕಳುವು ಪ್ರಕರಣದ ಎಂ.ಓ.ಬಿ. ಅಸಾಮಿಯಾಗಿರುತ್ತಾನೆ. ಆರೋಪಿಗಳು ಪಟ್ಟಣದ ರಾಮಾಂಜಿನೇಯ್ಯಶೆಟ್ಟಿ ಮತ್ತು ಧನುಂಜಯ್ಯರವರ ಮನೆಗಳಲ್ಲಿ ಕಳುವು ಮಾಡಿದ್ದು, ಆರೋಪಿಗಳಿಂದ 2.50 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಮತ್ತು ಲ್ಯಾಪ್ಟಾಪ್, ಮೊಬೈಲ್ ಪೋನ್ಗಳು ಹಾಗೂ ಆರೋಪಿಗಳು ದೊಡ್ಡಬಳ್ಳಾಪುರದಲ್ಲಿ ಕಳುವು ಮಾಡಿದ್ದ 5 ಮೋಟಾರ್ ಸೈಕಲ್ಗಳನ್ನು ಸಹ ವಶಕ್ಕೆ ಪಡೆದಿರುತ್ತೆ.

ಆರೋಪಿಗಳು ಪಾವಗಡದ ಮನೆಗಳಲ್ಲಿ ಕಳುವು ಮಾಡಿರುವ ಕೆಲವು ಮಾಲುಗಳನ್ನು ಬೆಂಗಳೂರಿನ ಯಲಹಂಕ ಅಥಿಕ ಗೋಲ್ಡ್ ಕಂಪನಿಗೆ ಮಾರಾಟ ಮಾಡಿದ್ದು, ಸದರಿ ಕಂಪನಿಯವರು ಸ್ವೀಕರಿಸಿರುವ ಕಳುವು ಮಾಲುಗಳನ್ನು ಹಿಂದಿರುಗಿಸಿರುವುದಿಲ್ಲ.

ಈ ಪತ್ತೆ ಕಾರ್ಯಕ್ಕಾಗಿ ಶ್ರೀ ಓ.ಬಿ. ಕಲ್ಲೇಶಪ್ಪ, ಡಿ.ವೈ.ಎಸ್.ಪಿ. ಮಧುಗಿರಿ ಉಪವಿಭಾಗ ರವರ ಮಾರ್ಗದರ್ಶನದಲ್ಲಿ ಪಾವಗಡ ವೃತ್ತ ನಿರೀಕ್ಷಕರಾದ ಶ್ರೀ.ಹೆಚ್.ಜಿ.ಮಹೇಶ್, ಪಿ.ಎಸ್.ಐ. ಮಧುಸೂದನ್ ಮತ್ತು ಸಿಬ್ಬಂದಿಗಳಾದ ಎ.ಎಸ್.ಐ. ರಾಮಾಂಜಿನೇಯ್ಯ, ಗೋವಿಂದರಾಜು, ಸೋಮಶೇಖರ್, ಜಿ.ಟಿ.ಶ್ರೀನಿವಾಸ್, ಮಂಜುನಾಥ್, ಭರತ್, ಸಾಧಿಕ್, ಜಾವೀದ್ ಗಂಗಾಧರಪ್ಪರವರುಗಳು ಆರೋಪಿಗಳನ್ನು ಬಂಧಿಸಿ ಮಾಲುಗಳನ್ನು ವಶಪಡಿಸಿಕೊಳ್ಳಲು ಶ್ರಮಿಸಿರುತ್ತಾರೆ. ಈ ಪತ್ತೆ ತಂಡಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ||ದಿವ್ಯ ವಿ.ಗೋಪಿನಾಥ್, ಐ.ಪಿ.ಎಸ್ ರವರು ಶ್ಲಾಘಿಸಿರುತ್ತಾರೆ.


 

 

 

ಪ್ರತಿಕಾ ಪ್ರಕಟಣೆ.

ದಿ: 16/03/18


ಹೆದ್ದಾರಿ ಸುಲಿಗೆ ಕೋರರ ಬಂಧನ, ಮೂರು ಬೈಕು ಮತ್ತು ಒಂದು ಚಾಕು, ನಗದು ಹಣ, ಇತರೆ ದಾಖಲಾತಿಗಳು ವಶ

 

ದಿನಾಂಕ: 12/3/2018 ರಂದು  ಸಂಜೆ 6-30 ಗಂಟೆಯಲ್ಲಿ ಪಿರ್ಯಾದಿ ಪಿಲೀಪ್ ಮದನ್ ಕುಮಾರ್, ಅಮ್ಮಸಂದ್ರ, ತುರುವೆಕೆರೆ ತಾಲ್ಲೊಕ್ ಇವರು ಕೆಎ-44-ಯು-2200 ನೇ ಆಕ್ಟೀವ್ ಹೊಂಡಾ ವಾಹನದಲ್ಲಿ ಬೆಂಗಳೂರಿನಿಂದ ಅಮ್ಮಸಂದ್ರಕ್ಕೆ ಎನ್ ಹೆಚ್-75 ರಸ್ತೆ ಯಲ್ಲಿ ಚೊಟ್ನಹಳ್ಳಿ ಬಳಿ ಹಮಾಮ್ ಹತ್ತಿರ ಹೋಗುತ್ತಿರುವಾಗ, 4 ಜನ ಅಪರಿಚಿತರು ದ್ವಿಚಕ್ರವಾಹನಗಳನ್ನು ಬಂದು ಪಿರ್ಯಾದಿಯನ್ನು ಅಡ್ಡಗಟ್ಟಿ  ಚಾಕು ತೋರಿಸಿ ಹೆದರಿಸಿ ಪಿರ್ಯಾದಿ ಬಳಿ ಇದ್ದ 2800/- ರೂ ಹಣವನ್ನು ಮತ್ತು ಕೆಎ-44-ಯು-2200 ನೇ ಆಕ್ಟೀವ್ ಹೊಂಡಾ ವಾಹನವನ್ನು ಕಿತ್ತುಕೊಂಡು ಹೋಗಿದ್ದು, ಈ ಸಂಬಂಧವಾಗಿ ಕುಣಿಗಲ್ ಪೊಲೀಸ್ ಠಾಣಾ ಮೊ ನಂ;166/2018, ಕಲಂ;392, ರೆ/ವಿತ್ 34 ಐಪಿಸಿ ರೀತ್ಯ ಪ್ರಕರಣ ದಾಖಲಾಗಿರುತ್ತೆ.

ಆರೋಪಿತರುಗಳ ವಿವರ

1)ಸಮೀರ್ ಖಾನ್ @ ಸೇಬು ಬಿನ್ ಲೇಟ್ ಸರ್ದಾರ್, 19 ವರ್ಷ, ಮುಸ್ಲಿಂ ಜನಾಂಗ, ಕಾರು ಡ್ರೈವರ್, ಹಾಲಿ ವಾಸ ಕೇರ್ ಆಫ್ ಸತ್ಯನಾರಾಯಣ, ಬಡಾವಣೆ ಆರ್ಚ್ ರೋಡ್, ಕಮಲಾನಗರ, ಮಾರ್ಕೆಟ್ ಹತ್ತಿರ ಬೆಂಗಳೂರು ಸ್ವಂತ ಊರು. ಬಿಳಿದೇವಾಲಯ, ಕಸಬಾ ಹೋಬಳಿ, ಕುಣಿಗಲ್ ತಾಲ್ಲೊಕ್

2) ಚೇತನ್ ಬಿ ಎಲ್ @ ಚೇತು ಬಿನ್ ಲೇಟ್ ಬಿ ಕೆ ಲಕ್ಷ್ಮಣ್ 21 ವರ್ಷ, ಆದಿ ಕರ್ನಾಟಕ, ಎಲೆಕ್ಟ್ರೀಯನ್ ವಾಸ; ಬಿಳಿದೇವಾಲಯ ಕಸಬಾ ಹೋಬಳಿ, ಕುಣಿಗಲ್ ತಾಲ್ಲೊಕ್ ಇವರುಗಳು  ಇತರೆ ಇಬ್ಬರೊಂದಿಗೆ ಸೇರಿ ಕೃತ್ಯವೆಸಗಿರುವುದು ಪತ್ತೆಯಾಗಿರುತ್ತದೆ.

ತನಿಖಾ  ಸಮಯದಲ್ಲಿ  ಆರೋಪಿಗಳು  ಕೃತ್ಯಕ್ಕೆ ಉಪಯೋಗಿಸಿದ 3 ದ್ವಿಚಕ್ರವಾಹನ ಇವುಗಳ ಒಟ್ಟು ಬೆಲೆ ಸುಮಾರು 75,000/-ರೂ ಹಾಗೂ 1100/- ರೂ ಸಾವಿರ ನಗದು,(ಒಟ್ಟು 76.100/-ರೂ) ಒಂದು ಚಾಕು, ಮೊಬೈಲ್ ಪೋನ್ , ನಂಬರ್ ಪ್ಲೇಟ್ ಮತ್ತು ಇತರೆ ದಾಖಲಾತಿಗಳನ್ನು ವಶಪಡಿಸಿಕೊಂಡಿರುತ್ತೆ.

ಈ ಕಾರ್ಯಾಚರಣೆಯಲ್ಲಿ ಸುಲಿಗೆ  ಆರೋಪಿಗಳ  ಪತ್ತೆ ಬಗ್ಗೆ  ಕುಣಿಗಲ್  ಉಪವಿಭಾಗದ ಡಿ ಎಸ್ ಪಿ ರವರ ನೇತೃತ್ವದಲ್ಲಿ ಕುಣಿಗಲ್ ವೃತ್ತ ನಿರೀಕ್ಷಕರವರು ಆರೋಪಿತರನ್ನು ಬಂಧಿಸುವಲ್ಲಿ ಶ್ರಮಿಸಿರುತ್ತಾರೆ.   ಕುಣಿಗಲ್ ವೃತ್ತ ನಿರೀಕ್ಷಕರವರಾದ ಎ.ಎನ್ ಅಶೋಕ್ ಕುಮಾರ್  ಪಿ.ಎಸ್.ಐ ರವರುಗಳಾದ  ಪುಟ್ಟಸ್ವಾಮಿ,  ಶ್ರೀ.ಪುಟ್ಟೇಗೌಡ ಮತ್ತು ಸಿಬ್ಬಂದಿಯವರುಗಳು ಭಾಗವಹಿಸಿದ್ದರು.

ತುಮಕೂರು ನಗರ ಹಾಗೂ ಗ್ರಾಮಾಂತರಗಳಲ್ಲಿ ಇರುವ ಎಟಿಎಂ ಗಳಲ್ಲಿ ಮುಗ್ದ ಜನರನ್ನು ನಂಬಿಸಿ ಹಣವನ್ನು ಎಟಿಎಂ ನಿಂದ ಡ್ರಾ ಮಾಡಿಕೊಡುವುದಾಗಿ ಹೇಳಿ ಮೋಸ ಮಾಡುವವರಿದ್ದು, ಸಾರ್ವಜನಿಕರು ಎಚ್ಚರದಿಂದ ವ್ಯವಹರಿಸಲು ಪೊಲೀಸ್ ಇಲಾಖೆ ಮನವಿ.

ಜಿಲ್ಲಾ ಪೊಲೀಸ್ ಕಛೇರಿ,

ತುಮಕೂರು ಜಿಲ್ಲೆ, ತುಮಕೂರು.


ಅಪರಾಧ ಘಟನೆಗಳು 16-03-18

ಸಿ.ಎಸ್ ಪುರ ಪೊಲೀಸ್ ಠಾಣೆ  ಮೊ.ಸಂ : 279, 337.304 (J) ಐಪಿಸಿ  ರೆ/ವಿ 134(ಎ & ಬಿ)  187 ಐ.ಎಂ.ವಿ

ದಿನಾಂಕ:15.03.2018 ರಂದು ಈ ಕೇಸಿನ ಫಿರ್ಯಾದಿ ರಂಗಸ್ವಾಮಿ  ಬಿನ್  ಲೇಟ್  ರಂಗಯ್ಯ, 45 ವರ್ಷ, ವಕ್ಕಲಿಗರು, ಕೂಲಿ  ಕೆಲಸ, ಪಡುಗುಡಿ  ಗ್ರಾಮ, ಸಿ.ಎಸ್.ಪುರ ಹೋಬಳಿ, ಗುಬ್ಬಿ ತಾಲ್ಲೂಕುರವರು  ಠಾಣೆಗೆ ಹಾಜರಾಗಿ  ನೀಡಿದ  ದೂರಿನ ಸಾರಾಂಶವೆಂದರೆ,  ದಿನಾಂಕ:15.03.2018 ರಂದು ರಾತ್ರಿ ಸುಮಾರು 9.15 ಗಂಟೆ ಸಮಯದಲ್ಲಿ ಈ ಕೇಸಿನ ಫಿರ್ಯಾದಿಯಾದ ರಂಗಸ್ವಾಮಿ & ತಮ್ಮ  ಗ್ರಾಮದ ಮಂಜುನಾಥರವರ  ಜೊತೆ ಊಟ ಮಾಡಿದ ನಂತರ, ಹಾಗೆ ಮಾತನಾಡಿಕೊಂಡು , ಪಡುಗುಡಿ ಗ್ರಾಮದ ಯಾಲಕ್ಕೀಗೌಡರವರ  ಮನೆಯ ನೇರದಲ್ಲಿ ಅಂದರೆ, ಕಲ್ಲೂರು-ಸಿ.ಎಸ್.ಪುರ ಎಸ್.ಹೆಚ್-84 ರಸ್ತೆಯ ಎಡಬದಿಯಲ್ಲಿ ಸಿ.ಎಸ್.ಪುರ ಕಡೆಗೆ ನಡೆದುಕೊಂಡು ಹೋಗುತ್ತಿರಬೇಕಾದರೆ, ಇದೇ ಸಮಯಕ್ಕೆ ಕಲ್ಲೂರಿನಿಂದ-ಸಿ.ಎಸ್.ಪುರ ಕಡೆಗೆ ಬರುತಿದ್ದ ಕೆ.ಎ-06ಇಯು-685 ನೇ ಬಜಾಜ್ ಪಲ್ಸರ್  ದ್ವಿ ಚಕ್ರವಾಹನದ ಸವಾರನು ತನ್ನ  ವಾಹನವನ್ನು ಅತಿ ಜೋರಾಗಿ & ಅಡ್ಡಾದಿಡ್ಡಿಯಾಗಿ ಓಡಿಸಿಕೊಂಡು  ಬಂದು, ಹಿಂದಿನಿಂದ ಮಂಜುನಾಥ & ಫಿರ್ಯಾದಿ ರಂಗಸ್ವಾಮಿರವರಿಗೆ ಡಿಕ್ಕಿ ಹೊಡೆದ ಪರಿಣಾಮ, ಮಂಜುನಾಥರವರಿಗೆ ತಲೆಗೆ ಪೆಟ್ಟು ಬಿದ್ದು,ತೀವ್ರತರದ ರಕ್ತಗಾಯಗಳಾಗಿರುತ್ತೆ. ಹಾಗೂ ಫಿರ್ಯಾದಿ ರಂಗಸ್ವಾಮಿಗೆ ಸೊಂಟ ಹಾಗೂ ಬಲಭಾಗದ ತೊಡೆಗೆ  ಪೆಟ್ಟು ಬಿದ್ದಿರುತ್ತೆ. ನಂತರ ಯಾವುದೋ ಒಂದು ವಾಹನದಲ್ಲಿ ಇದೇ ಗ್ರಾಮದ ಯಾಲಕ್ಕೀಗೌಡರವರು ಸಿ.ಎಸ್.ಪುರ ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದು, ಗಾಯಾಳು ಮಂಜುನಾಥರವರನ್ನು  ಪರೀಕ್ಷಿಸಿದ ಆಸ್ಪತ್ರೆಯ ಸಿಬ್ಬಂದಿ ಮಂಜುನಾಥ ರವರು ಈಗಾಗಲೇ ಮೃತಪಟ್ಟಿರುತ್ತಾರೆ ಎಂದು ತಿಳಿಸಿದ್ದು, ಫಿರ್ಯಾದಿ ರಂಗಸ್ವಾಮಿರವರು ಪ್ರಥಮ ಚಿಕಿತ್ಸೆ ಪಡೆದುಕೊಂಡಿರುತ್ತಾರೆ, ಅಪಘಾತಪಡಿಸಿದ  ನಂತರ ಕೆ.ಎ-06ಇಯು-685 ನೇ ಬಜಾಜ್ ಪಲ್ಸರ್  ದ್ವಿ ಚಕ್ರವಾಹನದ ಸವಾರನು ವಾಹನ ಅಲ್ಲಿಯೇ ಬಿಟ್ಟು ಪರಾರಿಯಾಗಿರುತ್ತಾನೆ ಎಂದು ಇತ್ಯಾದಿಯಾಗಿ ನೀಡಿದ ದೂರನ್ನು  ಸ್ವೀಕರಿಸಿ ಪ್ರಕರಣ ದಾಖಲಿಸಿರುತ್ತೆ

ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ ನಂ. 75/2018 ಕಲಂ 279, 304(ಎ) ಐ.ಪಿ.ಸಿ ರೆ/ವಿ 187 ಐಎಂವಿ ಆಕ್ಟ್

ತುಮಕೂರು ತಾಲ್ಲೋಕ್ ಕಸಬಾ ಹೋಬಳಿ ಯಲ್ಲಾಪುರ ಗ್ರಾಮದ ಗಂಗರಾಜು ಬಿನ್ ಲೇಟ್ ಗಂಗಪ್ಪ ರವರು ನೀಡಿದ ದೂರಿನ ಅಂಶವೇನೆಂದರೆ, ನಾನು ನಮ್ಮ ತಾಯಿ ಗಂಗಮ್ಮ, ತಂಗಿ ಗಂಗಮ್ಮ ರವರೊಂದಿಗೆ ಯಲ್ಲಾಪುರ ಗ್ರಾಮದಲ್ಲಿ ವಾಸವಾಗಿದ್ದು ಈ ದಿನ ದಿ:15/03/2018 ರಂದು ರಾತ್ರಿ ಯಲ್ಲಾಪುರದ ಓಂಕಾರ ಹೋಟೆಲ್‌ನಲ್ಲಿ ಊಟ ಮುಗಿಸಿಕೊಂಡು ರಾತ್ರಿ 8-20 ಗಂಟೆ ಸಮಯದಲ್ಲಿ ನಮ್ಮ ತಾಯಿ ಗಂಗಮ್ಮ ರವರು ಹೋಟೆಲ್ ಮುಂಭಾಗ ರಸ್ತೆಯನ್ನು ದಾಟುತ್ತಿದ್ದಾಗ ಕೊರಟಗೆರೆ-ತುಮಕೂರು ರಸ್ತೆಯಲ್ಲಿ ಕೊರಟಗೆರೆ ಕಡೆಯಿಂದ KA-06-B-8500 ನೇ ಟೆಂಪೋ ಟ್ರಾವೆಲ್ಲರ್ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಗಂಗಮ್ಮ ರವರಿಗೆ ಡಿಕ್ಕಿ ಹೊಡೆಸಿ ಅಪಘಾತ ಉಂಟುಮಾಡಿದ್ದರಿಂದ ಗಂಗಮ್ಮ ರವರಿಗೆ ತಲೆಗೆ ಪೆಟ್ಟು ಬಿದ್ದು ರಕ್ತಗಾಯವಾಗಿದ್ದು ಸಾರ್ವಜನಿಕರು 108 ಆಂಬುಲೆನ್ಸ್ ನಲ್ಲಿ ತುಮಕೂರು ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆ ಕಳುಹಿಸಿದ್ದು, ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾಗ ಚಿಕಿತ್ಸೆ ಫಲಕಾರಿಯಾಗದೇ ರಾತ್ರಿ 9-15 ಗಂಟೆಗೆ ಮೃತಪಟ್ಟಿರುತ್ತಾರೆ. ನಮ್ಮ ತಾಯಿಗೆ ಅಪಘಾತ ಉಂಟುಮಾಡಿ ಸಾವಿಗೆ ಕಾರಣನಾಗಿರುವ KA-06-B-8500ನೇ ಟೆಂಪೋ ಟ್ರಾವೆಲ್ಲರ್ ಚಾಲಕ ವಾಹನವನ್ನು ಬಿಟ್ಟು ಪರಾರಿಯಾಗಿದ್ದು, ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿದೆ.

 

ಹುಲಿಯೂರುದುರ್ಗ ಪೊಲೀಸ್‌ ಠಾಣಾ  ಮೊ.ನಂ. 84/2018  ಕಲಂ: 323 324 504 506   149  ಐಪಿಸಿ

ದಿನಾಂಕ: 15/03/2018 ರಂದು  ಸಂಜೆ 4;45 ಗಂಟೆಗೆ ಹುಲಿಯೂರುದುರ್ಗ ಹೋಬಳಿ, ಚಿಕ್ಕಮಾವತ್ತೂರು ಗ್ರಾಮದ ವಾಸಿಯಾದ ಶ್ರೀನಿವಾಸಶೆಟ್ಟಿ ರವರ ಮಗ ಕೇಶವ ಸಿ.ಎಸ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ. “ದಿನಾಂಕ: 15/03/2018 ರಂದು 3;30 ಗಂಟೆ ಸಮಯದಲ್ಲಿ  ನಮ್ಮ ಮಾವ ಲೋಕೇಶ್ ಡಿ ಸಿ ರವರಿಗೆ ಬರಭೇಕಾಗಿದ್ದ ಜಮೀನಿನ ಭಾಗವನ್ನು ಕೇಳಲು ದೊಡ್ಡಮಾವತ್ತೂರಿಗೆ ಹೋದಾಗ. ಕಂಡಶೆಟ್ಟಿ, ಜಗದೀಶ, ರಮೇಶ, ಪ್ರದೀಪ, ಹಾಗೂ ಇತರರು ಕೈಗಳಿಂದ, ದೊಣ್ಣೆಗಳು ಮತ್ತು ರಾಡುಗಳಿಂದ ಮಾರಣಾಂತಿಕವಾಗಿ, ಕೇಶವ್ ಸಿ ಎಸ್ ಹಾಗೂ ಸ್ನೆಹಿತರ ಮೇಲೆ ಅವಾಚ್ಯ ಶಬ್ದಗಳಿಂದ ಭೈದು ಹೊಡೆದು ಹಲ್ಲೆ ಮಾಡಿರುತ್ತಾರೆ. ಈ ಗಲಾಟೆಯಲ್ಲಿ ಚಂದ್ರಶೇಖರ್,ಉಮೇಶ್ ರವರುಗಳಿಗೆ ಹೊಡೆದು. ರಕ್ತಗಾಯವಾಗಿಸಿದ್ದು ಈ ಗಲಾಟೆ ನಡೆಯುವಾಗ ಶ್ರೀನಿವಾಸಶೆಟ್ಟಿ ಸಿ ಜೆ ಹಾಗೂ ಲೋಕೇಶ್ ಡಿ ಸಿ ಇವರಿಬ್ಬರು ಗಲಾಟೆ ಬಿಡಿಸಿದರು. ಅಷ್ಟಕ್ಕೆ ಸುಮ್ಮನಾಗದ ಅವರು ನಿಮ್ಮನ್ನು ಇಷ್ಟಕ್ಕೆ ಬಿಡುವುದಿಲ್ಲ. ಕೊಲೆ ಮಾಡಿಯೇ ತೀರುತ್ತೆವೆ ಎಂದು ಕೊಲೆ ಬೆದರಿಕೆ ಹಾಕಿರುತ್ತಾರೆ. ಆದ್ದರಿಂದ ನಮಗೆ ಹಲ್ಲೆ ಮಾಡಿರುವ  ಮೇಲ್ಕಂಡವರುಗಳ ಮೇಲೆ ಕಾನೂನು ರೀತ್ಯಾ ಕ್ರಮಕೈಗೊಳ್ಳಬೇಕೆಂದು”  ನೀಡಿದ ದೂರನ್ನು ಪಡೆದು ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿರುತ್ತೆ .

ಹುಲಿಯೂರುದುರ್ಗ ಪೊಲೀಸ್‌ ಠಾಣಾ  ಮೊ.ನಂ. 85/2018  ಕಲಂ: 323 324 504 506   34  ಐಪಿಸಿ

 

ದಿನಾಂಕ: 15-03-2018 ರಂದು ರಾತ್ರಿ 07-30  ಗಂಟೆಗೆ ಕಂಡಶೆಟ್ಟಿ ಬಿನ್ ಲೇಟ್ ಚನ್ನಪ್ಪ, ಸುಮಾರು 48 ವರ್ಷ, ಬಲಿಜಿಗರು, ಡ್ರೈವರ್ ಕೆಲಸ, ದೊಡ್ಡಮಾವತ್ತೂರು , ಹುಲಿಯೂರುದುರ್ಗ ಹೋಬಳಿ, ಕುಣಿಗಲ್ ತಾ. ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ಈ ದಿನ ದಿನಾಂಕ:15-03-2018 ರಂದು ಮದ್ಯಾಹ್ನ 03-30 ಗಂಟೆಯಲ್ಲಿ ಪಿರ್ಯಾದಿಯು ಅವರ ಗ್ರಾಮದಲ್ಲಿ ತಮ್ಮಗಳ ಜಮೀನಿನ ವಿಚಾರವಾಗಿ  ಪಿರ್ಯಾದಿಯ ತಮ್ಮನಾದ ಲೋಕೇಶ, ಈತನ ಭಾವ ಶ್ರೀನಿವಾಸಶೆಟ್ಟಿ ಬಿನ್ ಲೇ.ವೆಂಕಟಪ್ಪ ರವರುಗಳು ತಮ್ಮ ಮಕ್ಕಳುಗಳಾದ 1ನೇ ಚಂದ್ರಶೇಖರ , 2 ನೇ ಕೇಶವ, 3ನೇ ಪಿರ್ಯಾದಿಯ ಅಕ್ಕನ ಮಗನಾದ ಕನಕಪುರ ತಾಲ್ಲೋಕಿನ ಕುತಗೊಂಡನಹಳ್ಳಿ ಗ್ರಾಮದ ವಾಸಿಯಾದ ಉಮೇಶ, ಇವರುಗಳು ಸೇರಿಕೊಂಡು ಪಿರ್ಯಾದಿಯ ಗ್ರಾಮದ  ಲೇಟ್ ಚಿಕ್ಕಣ್ಣ ರವರ ಮಗ ಜಗದೀಶ ಎಂಬುವವರ ತೋಟದಲ್ಲಿ ಪಿರ್ಯಾದಿಯು ಜಗದೀಶನ ಜೊತೆ ಇದ್ದಾಗ  ಮೇಲ್ಕಂಡ 04 ಜನರು ಕಾರಿನಲ್ಲಿ ಬಂದು ಏಕಾಏಕಿ ಗಲಾಟೆ ಮಾಡಿದ್ದು, ಉಮೇಶ ಎಂಬುವನು ಕಾಲಿನಿಂದ ಪಿರ್ಯಾದಿಗೆ ಒದ್ದು ಕೆಳಕ್ಕೆ ಬೀಳಿಸಿ ಮತ್ತೆ ಉಳಿದ ಮೂರು ಜನರು ದೊಣ್ಣೆಯಿಂದ ಹೊಡೆದು ಮೂಗೇಟು ಮಾಡಿದ್ದು ಪಿರ್ಯಾದಿ ಕೂಗಿಕೊಂಡಿದ್ದು ಆಗ   ಅವರ ಗ್ರಾಮದ ಜಗಣ್ಣ ಮತ್ತು ಡಾಬಾ ರಮೇಶ ರವರು ಜಗಳ ಬಿಡಿಸಲು ಬಂದಿದ್ದು ಇವರಿಗೂ ಸಹ ದೊಣ್ಣೆಯಿಂದ ಹೊಡೆದಿದ್ದು ರಮೇಶ ರವರಿಗೆ ಬಲಗೈ ಗೆ ಬಲವಾಗಿ ಪೆಟ್ಟು ಬಿದ್ದು ಗಾಯವಾಗಿರುತ್ತೆ. ಮೇಲ್ಕಂಡವರು ಈ ದಿನ ಮಧ್ಯಾಹ್ನ 01-00 ಗಂಟೆ ಸಮಯದಲ್ಲಿ ಪಿರ್ಯಾದಿಯ ಅತ್ತೆಯ ಊರಾದ ಮೋದೂರು ಗ್ರಾಮಕ್ಕೆ ಹೋಗಿ ಪಿಯಾ್ದಿಯ ಭಾಮೈದನ ಹೆಂಡತಿಯಾದ ಪ್ರೇಮ ಎಂಬುವವರನ್ನು ಕಂಡಶೆಟ್ಟಿ ಬಂದಿದ್ದಾನಾ ಎಂತ ಅವಾಚ್ಯ ಶಬ್ದಳಿಂದ ಬೈದು ಕಂಡಶೆಟ್ಟಿಯ ತಲೆ ಕತ್ತರಿಸಿಕೊಂಡು ಹೋಗುತ್ತೇವೆ ಎಂತ ಬೆದರಿಕೆ ಹಾಕಿ ನಂತರ ದೊಡ್ಡಮಾವತ್ತೂರಿಗೆ ಬಂದು ಗಲಾಟೆ ಮಾಡಿರುತ್ತಾರೆ. ಇವರು ಕೆಎ.02.ಎಇ-7679 ನೇ ಕಾರಿನಲ್ಲಿ ಬಂದು ಗಲಾಟೆ ಮಾಡಿರುತ್ತಾರೆ. ಇವರುಗಳ ಮೇಲೆ ಸೂಕ್ತ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು, ಪಿರ್ಯಾದಿಯು ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡು ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು ಇತ್ಯಾದಿಯಾಗಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲು ಮಾಡಿರುತ್ತೆ.

 

ಪಟ್ಟನಾಯಕನಹಳ್ಳಿ ಪೊಲೀಸ್ ಠಾಣಾ ಮೊ ನಂ 25-18 ಕಲಂ 279,337 ಐಪಿಸಿ

ದಿನಾಂಕ:15-03-18 ರಂದು  ಸಂಜೆ 06:45 ಗಂಟೆಗೆ ಪಿರ್ಯಾದಿ ಲೋಕೇಶ  ಬಿನ್ ಈಶ್ವರಯ್ಯ, ಕುಂಚಿಟಿಗರು, ಹೊಸಹಳ್ಳಿ ಗ್ರಾಮ, ಶಿರಾ ತಾಲ್ಲೋಕ್  ರವರು  ಠಾಣೆಗೆ ಹಾಜರಾಗಿ  ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ,  ದಿನಾಂಕ:11-03-2018 ರಂದು  ಪಿರ್ಯಾದಿ ಮತ್ತು  ಪಿರ್ಯಾದಿ ತಂದೆ ಈಶ್ವರಯ್ಯ  ರವರು ಶಿರಾಕ್ಕೆ ಹೋಗಲು ಹೊಸಹಳ್ಳಿಯಿಂದ ಪಟ್ಟನಾಯನಹಳ್ಳಿ ರಸ್ತೆಯ  ಎಡ ಬದಿಯಲ್ಲಿ ಇಬ್ಬರು ನಡೆದುಕೊಂಡು ಬರುತ್ತಿರುವಾಗ ಸಂಜೆ 04:30 ಗಂಟೆ ಸಮಯದಲ್ಲಿ  ಹಿಂದಗಡೆಯಿಂದ ಬಂದ  ಕೆಎ-64-ಜೆ-7481 ಮೋಟಾರು ಸೈಕಲ್  ಸವಾರ  ಮುದ್ದರಾಜು, ಜ್ಯೋತಿನಗರ, ಶಿರಾ ಟೌನ್ ರವರು ತನ್ನ  ಬಾಬ್ತು ಮೊಟಾರು ಸೈಕಲ್ ನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೇ ಮಾಡಿಕೊಂಡು ಬಂದು  ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಬರುತ್ತಿದ್ದ ಪಿರ್ಯಾದಿ ತಂದೆ ಈಶ್ವರಯ್ಯ ರವರಿಗೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದರ ಪರಿಣಾಮ  ಈಶ್ವರಯ್ಯ ರಸ್ತೆಯ ಮೇಲೆ ಬಿದ್ದು, ಬಲಕಾಲಿಗೆ  ಬಲವಾದ ಪೆಟ್ಟು ಬಿದ್ದು ಮೈಕೈಗೆ ಪೆಟ್ಟುಗಳು ಬಿದ್ದು, ಅಲ್ಲಿಗೆ ಬಂದ  ಮಹೇಶ  ಮತ್ತು ಲಕ್ಷ್ಮಣ ರವರು ಸೇರಿ ಉಪಚಿರಿಸಿ ಸ್ಥಳಕ್ಕೆ ಬಂದ 108 ಅಂಬುಲೆನ್ಸ್  ವಾಹನದಲ್ಲಿ  ಶಿರಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ವೈದ್ಯರ ಸಲಹೇ  ಮೇರೆಗೆ  ಹೆಚ್ಚಿನ  ಚಿಕಿತ್ಸೆಗೆ ತುಮಕೂರಿನ ಹೇಮಾವತಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲು ಮಾಡಿ  ಚಿಕಿತ್ಸೆ ಕೊಡಿಸಿ  ಈ ದಿನ ತಡವಾಗಿ  ಠಾಣೆಗೆ ಬಂದು ಅಪಘಾತಪಡಿಸಿ  ಕೆಎ-64-ಜೆ-7481 ಮೋಟಾರು ಸೈಕಲ್  ಸವಾರನ ಮೇಲೆ ಕಾನೂನು  ರೀತ್ಯಾ ಕ್ರಮ  ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲು  ಮಾಡಿರುತ್ತೆ

ಹೊಸಬಡಾವಣೆ ಪೊಲೀಸ್ ಠಾಣಾ ಮೊ ನಂ 48/2018 U/S 96(A) KP Act

ದಿ: 15/03/2018 ರಂದು ಬೆಳಗ್ಗೆ 5-30 ಗಂಟೆಗೆ ಪಿರ್ಯಾದಿ ಶ್ರೀ ಪೂರ್ಣೇಂದ್ರ ಸ್ವಾಮಿ. ಸಿಪಿಸಿ 989 ಹೊಸ ಬಡಾವಣೆ ಪೊಲೀಸ್ ಠಾಣೆ, ತುಮಕೂರು ರವರು ಆರೋಪಿಯಾದ ಚರಣ್ ಕುಮಾರ್ @ ಚರಣ ಬಿನ್ ಚೆನ್ನಬಸವ, 27 ವರ್ಷ, ಮಹಾಲಕ್ಷ್ಮಿ ನಗರ, ಬಟವಾಡಿ ಈತನನ್ನು ಠಾಣೆಗೆ ಹಾಜರು ಪಡಿಸಿ ನೀಡಿದ ದೂರಿನ ಸಾರಾಂಶವೇನೆಂದರೆ ಈ ದಿವಸ ಪಿರ್ಯಾದಿಯು ಠಾಣಾ ಸರಹದ್ದಿನಲ್ಲಿ ರಾತ್ರಿ ಗಸ್ತು ಕಾರ್ಯದಲ್ಲಿ ಇರುವಾಗ್ಗೆ ಬೆಳಗಿನ ಜಾವ 5-00 ಗಂಟೆಯಲ್ಲಿ ವಿದ್ಯಾನಗರದ ಮಧುರ ಪಿಜಿ ಸೆಂಟರ್ ಬಳಿ ಆರೋಪಿಯು ಕೈನಲ್ಲಿ ಕಬ್ಬಿಣದ ರಾಡನ್ನು ಹಿಡಿದುಕೊಂಡು  ಕಳವು ಮಾಡಲು ಹೊಂಚು ಹಾಕುತ್ತಿದ್ದುದು ಕಂಡು ಬಂದ ಮೇರೆಗೆ ಆತನನ್ನು ಹಿಡಿದು ಠಾಣೆಗೆ ಹಾಜರು ಪಡಿಸಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದೆ

ಹೊಸಬಡಾವಣೆ ಪೊಲೀಸ್ ಠಾಣಾ ಮೊ ನಂ 49/2018 U/S 379 IPC

 

ದಿನಾಂಕ 15/03/2018 ರಂದು  ಸಂಜೆ 4-00 ಗಂಟೆಗೆ ಪಿರ್ಯಾದಿ  ರಂಗನಾಥ,ಜಿ ಬಿನ್ ಗರುಡಪ್ಪ. ವಾಸ :- 7ನೇ ಕ್ರಾಸ್, ಶ್ರೀರಾಮನಗರ, ತುಮಕೂರು. ಸ್ವಂತ ಊರು :- ಹೊಸಪೇಟೆ, ಮಾಗಡಿ ಟೌನ್, ರಾಮನಗರ ಜಿಲ್ಲೆ. ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ದಿ: 12/03/2018 ರಂದು ರಾತ್ರಿ 10-00 ಗಂಟೆಯಲ್ಲಿ ಪಿರ್ಯಾದಿಯು ತಮ್ಮ ಬಾಬ್ತು KA 06 EV 5824 ನೇ ಪಲ್ಸರ್ ದ್ವಿ ಚಕ್ರ ವಾಹನವನ್ನು ಸರ್ಕಾರಿ ಜೂನಿಯರ್ ಕಾಲೇಜು  ಮೈದಾನದ ಪಕ್ಕ ನಿಲ್ಲಿಸಿ ಮೈದಾನದಲ್ಲಿ ತಮ್ಮ ಸ್ನೇಹಿತರಾದ ಆದರ್ಶ್‌ ರವರನ್ನು ಮಾತನಾಡಿಸಿಕೊಂಡು 10-45 ಗಂಟೆ ಸಮಯದಲ್ಲಿ ವಾಪಸ್ ಬಂದು ನೋಡಲಾಗಿ ಸದರಿ ವಾಹನವು ನಾಪತ್ತೆಯಾಗಿದ್ದು ಯಾರೋ ಕಳವು ಮಾಡಿಕೊಂಡು ಹೋಗಿರುತ್ತಾರೆಂದು  ನೀಡಿದ ದೂರಿನ ಮೇರೆಗೆ ಠಾಣಾ ಮೊ,ನಂ: 49/2018 ಕಲಂ -379 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

ಹುಲಿಯೂರುದುರ್ಗ ಪೊಲೀಸ್‌ ಠಾಣಾ  ಮೊ.ನಂ. 84/2018  ಕಲಂ: 323 324 504 506   149  ಐಪಿಸಿ

ದಿನಾಂಕ: 15/03/2018 ರಂದು  ಸಂಜೆ 4;45 ಗಂಟೆಗೆ ಹುಲಿಯೂರುದುರ್ಗ ಹೋಬಳಿ, ಚಿಕ್ಕಮಾವತ್ತೂರು ಗ್ರಾಮದ ವಾಸಿಯಾದ ಶ್ರೀನಿವಾಸಶೆಟ್ಟಿ ರವರ ಮಗ ಕೇಶವ ಸಿ.ಎಸ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ. “ದಿನಾಂಕ: 15/03/2018 ರಂದು 3;30 ಗಂಟೆ ಸಮಯದಲ್ಲಿ  ನಮ್ಮ ಮಾವ ಲೋಕೇಶ್ ಡಿ ಸಿ ರವರಿಗೆ ಬರಭೇಕಾಗಿದ್ದ ಜಮೀನಿನ ಭಾಗವನ್ನು ಕೇಳಲು ದೊಡ್ಡಮಾವತ್ತೂರಿಗೆ ಹೋದಾಗ. ಕಂಡಶೆಟ್ಟಿ, ಜಗದೀಶ, ರಮೇಶ, ಪ್ರದೀಪ, ಹಾಗೂ ಇತರರು ಕೈಗಳಿಂದ, ದೊಣ್ಣೆಗಳು ಮತ್ತು ರಾಡುಗಳಿಂದ ಮಾರಣಾಂತಿಕವಾಗಿ, ಕೇಶವ್ ಸಿ ಎಸ್ ಹಾಗೂ ಸ್ನೆಹಿತರ ಮೇಲೆ ಅವಾಚ್ಯ ಶಬ್ದಗಳಿಂದ ಭೈದು ಹೊಡೆದು ಹಲ್ಲೆ ಮಾಡಿರುತ್ತಾರೆ. ಈ ಗಲಾಟೆಯಲ್ಲಿ ಚಂದ್ರಶೇಖರ್,ಉಮೇಶ್ ರವರುಗಳಿಗೆ ಹೊಡೆದು. ರಕ್ತಗಾಯವಾಗಿಸಿದ್ದು ಈ ಗಲಾಟೆ ನಡೆಯುವಾಗ ಶ್ರೀನಿವಾಸಶೆಟ್ಟಿ ಸಿ ಜೆ ಹಾಗೂ ಲೋಕೇಶ್ ಡಿ ಸಿ ಇವರಿಬ್ಬರು ಗಲಾಟೆ ಬಿಡಿಸಿದರು. ಅಷ್ಟಕ್ಕೆ ಸುಮ್ಮನಾಗದ ಅವರು ನಿಮ್ಮನ್ನು ಇಷ್ಟಕ್ಕೆ ಬಿಡುವುದಿಲ್ಲ. ಕೊಲೆ ಮಾಡಿಯೇ ತೀರುತ್ತೆವೆ ಎಂದು ಕೊಲೆ ಬೆದರಿಕೆ ಹಾಕಿರುತ್ತಾರೆ. ಆದ್ದರಿಂದ ನಮಗೆ ಹಲ್ಲೆ ಮಾಡಿರುವ  ಮೇಲ್ಕಂಡವರುಗಳ ಮೇಲೆ ಕಾನೂನು ರೀತ್ಯಾ ಕ್ರಮಕೈಗೊಳ್ಳಬೇಕೆಂದು”  ನೀಡಿದ ದೂರನ್ನು ಪಡೆದು ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿರುತ್ತೆ .

ಕೆ.ಬಿ.ಕ್ರಾಸ್ ಪೊಲೀಸ್ ಠಾಣಾ ಮೊ.ನಂ-44/2018 ಕಲಂ-379 ಐಪಿಸಿ

ದಿನಾಂಕ:-15.03.2018 ರಂದು ಬೆಳಗ್ಗೆ 10.00 ಗಂಟೆಗೆ ಪಿರ್ಯಾದುದಾರರಾದ ಕೆ.ಪಿ ರಾಜಶೇಖರಯ್ಯ ಪಾರುಪತ್ತೇದಾರರು ಶ್ರೀ ಲಕ್ಷ್ಮಿನರಸಿಂಹಸ್ವಾಮಿ ದೇವಸ್ಥಾನ ಹತ್ಯಾಳುಬೆಟ್ಟರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ಶ್ರೀ ಲಕ್ಷ್ಮಿನರಸಿಂಹಸ್ವಾಮಿ ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿದ್ದು, ಇದರಲ್ಲಿ ಒಟ್ಟು 03 ಹುಂಡಿಗಳನ್ನು ಸ್ಥಾಪಿಸಲಾಗಿರುತ್ತೆ.  ಎರಡು ಹುಂಡಿಗಳು ದೇವಾಲಯದ ನವರಂಗ ಮಂಟಪದಲ್ಲಿದ್ದು, ಮತ್ತೊಂದು ಹುಂಡಿ NH-206 ರಸ್ತೆ ಪಕ್ಕದಲ್ಲಿರುವ ಗೋಪುರದಲ್ಲಿ ಸ್ಥಾಪಿಸಲಾಗಿರುತ್ತೆ. ದಿನಾಂಕ:-14.03.2018 ರಂದು ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು NH-206 ರಸ್ತೆ ಪಕ್ಕದ ಗೋಪುರದಲ್ಲಿರುವ ಹುಂಡಿಯನ್ನು ಹೊಡೆದು ಅದರಲ್ಲಿದ್ದ ಹಣವನ್ನು ತೆಗೆದುಕೊಂಡು ಹೋಗಿರುತ್ತಾರೆ. ಈ ಹುಂಡಿಯಲ್ಲಿ ಸುಮಾರು 2 ಸಾವಿರದಿಂದ 3 ಸಾವಿರ ರೂಪಾಯಿಗಳು ಇರಬಹುದು. ಹುಂಡಿಯನ್ನು ಹೊಡೆದು ಅದರಲ್ಲಿದ್ದ ಹಣವನ್ನು ಕಳ್ಳತನ ಮಾಡಿರುವವರನ್ನು ಪತ್ತೆ ಮಾಡಿ ಸೂಕ್ತ ಕ್ರಮಕೈಗೊಳ್ಳಲು ಕೋರಿ ನೀಡಿದ ದೂರನ್ನು ಪಡೆದು ಠಾಣಾ ಮೊ.ನಂ-44/2018 ಕಲಂ-379 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

ತಿಪಟೂರು ನಗರ ಪೊಲೀಸ್ ಠಾಣಾ ಮೊ.ನಂ 29/2018 ಕಲಂ: 379 ಐ.ಪಿ.ಸಿ

ದಿನಾಂಕ: 15/03/2018 ರಂದು ತುಮಕೂರು ಜಿಲ್ಲಾ ಪೊಲೀಸ್ ಕಛೇರಿಯಿಂದ ಟಪಾಲ್ ಮೂಲಕ ಬಂದ ಕೃತ್ಯ ನಡೆದ ಸ್ಥಳದ ಆಧಾರದ ಮೇಲೆ ಹಾಸನ ಜಿಲ್ಲೆ ಅರಸೀಕೆರೆ ರೈಲ್ವೇ ಪೊಲೀಸ್ ಠಾಣೆಯಿಂದ ವರ್ಗಾವಣೆ ನೀಡಿರುವ ಠಾಣಾ ಮೊ.ನಂ 02/2018 ಕಲಂ: 379 ಐ.ಪಿ.ಸಿ ಪ್ರಕರಣದ ಕಡತದ ಸಾರಾಂಶವೇನೆಂದರೆ, ಈ ಪ್ರಕರಣದ ಪಿರ್ಯಾದುದಾರರಾದ ಡಾ|| ಹರೀಶ್ ಬಿನ್ ದಯಾಶಂಕರ್, 40 ವರ್ಷ, ಭಾವಸಾರ ಕ್ಷತ್ರಿಯಾ, 4ನೇ ಕ್ರಾಸ್, ಗೋವಿನಪುರ ತಿಪಟೂರು ಟೌನ್ ರವರು ದಿ:05/01/2018 ರಂದು ಠಾಣೆಗೆ ಹಾಜರಾಗಿ ಒಂದು ಲಿಖಿತ ದೂರು ನೀಡಿದ್ದು ನೋಡಲಾಗಿ ನಾನು ದಿ:09.12.2017 ರಂದು  ಮಧ್ಯಾಹ್ನ 03-00 ಗಂಟೆಗೆ ತಿಪಟೂರು ರೈಲು ನಿಲ್ದಾಣಕ್ಕೆ ರೈಲುಗಾಡಿಯಲ್ಲಿ ಬರುವ ನನ್ನ ಸ್ನೇಹಿತನನ್ನು ಕರೆದುಕೊಂಡು ಹೋಗಲು ನನ್ನ ದ್ವಿ ಚಕ್ರ ವಾಹನ ಸ್ಪೇಂಡರ್ ಪ್ಲಸ್ KA-44 E-8817 ರಲ್ಲಿ ಬಂದಿದ್ದು ದ್ವಿ ಚಕ್ರ ವಾಹನವನ್ನು ತಿಪಟೂರು ರೈಲು ನಿಲ್ದಾಣದ ಮುಖ್ಯ ದ್ವಾರದ ಮುಂಭಾಗದಲ್ಲಿ ಇರುವ ವಾಹನಗಳು ಸಂಚರಿಸುವ ಜಾಗದಲ್ಲಿ ಮರದ ಕೆಳಗಡೆ ನಿಲ್ಲಿಸಿ ರೈಲು ನಿಲ್ದಾಣದ ಒಳಗೆ ಹೋಗಿ ನನ್ನ ಸ್ನೇಹಿತನನ್ನು ಕರೆದುಕೊಂಡು ವಾಪಸ್ಸು ಬಂದು ನನ್ನ ದ್ವಿ ಚಕ್ರ ವಾಹನವನ್ನು ನೋಡಲಾಗಿ ಸ್ಥಳದಲ್ಲಿ ಇರಲಿಲ್ಲ. ನನ್ನ ದ್ವಿ ಚಕ್ರ ವಾಹನವನ್ನು ಯಾರೋ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನನ್ನ ದ್ವಿ ಚಕ್ರ ವಾಹನದ ENGIN NO- 07A15E16795, CHASIS NO -07A16F22731 ಆಗಿದ್ದು ಈ ವಾಹನವನ್ನು 2009 ನೇ ಇಸವಿಯಲ್ಲಿ ಖರೀದಿಸಿದ್ದು ದ್ವಿ ಚಕ್ರ ವಾಹನದ ಬೆಲೆ ಸುಮಾರು 38000/- ರೂ ಆಗಿರುತ್ತದೆ. ನನ್ನ ದ್ವಿ ಚಕ್ರ ವಾಹನವನ್ನು ಎಲ್ಲಾ ಕಡೆ ಹುಡುಕಾಡಿದ್ದು ಸಿಕ್ಕಿರುವುದಿಲ್ಲ.  ಆದ್ದರಿಂದ  ಈ ದಿನ ತಡವಾಗಿ ಬಂದು ಕಳ್ಳತನವಾಗಿರುವ ನನ್ನ ದ್ವಿ ಚಕ್ರ ವಾಹನವನ್ನು ಪತ್ತೇ ಮಾಡಿಕೊಡಬೇಕೆಂದು ಕೋರಿ ನೀಡಿದ ದೂರಿನ ಕಡತವನ್ನು ಪರಿಶೀಲಿಸಿ ಬೆಳಿಗ್ಗೆ 11-30 ಗಂಟೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆThursday, 15 March 2018

ಪತ್ರಿಕಾ ಪ್ರಕಟಣೆ ದಿ 15-03-18

ಪತ್ರಿಕಾ ಪ್ರಕಟಣೆ

ದಿನಾಂಕ: 15-03-2018

ಎ.ಟಿ.ಎಂ ನಲ್ಲಿ ಹಣ ಡ್ರಾ ಮಾಡಿಕೊಡುವುದಾಗಿ  ವಂಚಿಸುತ್ತಿದ್ದ ಆರೋಪಿ ಅಂದರ್‌.

ದಿನಾಂಕ-14-03-2018 ರಂದು ಮದ್ಯಾಹ್ನ ಸುಮಾರು 12.30 ಗಂಟೆ ಸಮಯದಲ್ಲಿ ಪಿರ್ಯಾದಿ ಬತುಲ್ಲಾ ಉನ್ನಿಸಾ ರವರು ಸಿರಾ ಟೌನ್  ಬಾಲಾಜಿ ನಗರದಲ್ಲಿ ಸಿದ್ದಪ್ಪ ಲೇ ಔಟ್ ನಲ್ಲಿ ಇರುವ ಕಾರ್ಪೋರೇಷನ್ ಬ್ಯಾಂಕಿನ  ಎಟಿಎಂ ನಲ್ಲಿ ಹಣ ಡ್ರಾ ಮಾಡಲು ಹೋಗಿದ್ದು ಆ ವೇಳೆಗಾಗಲೇ ಎ ಟಿ ಎಂ ರೂಂ ನಲ್ಲಿ ಒಬ್ಬ ಅಪರಿಚಿತ ವ್ಯಕ್ತಿ ಇದ್ದು  ಆಕೆ ಒಳಗೆ ಹೋದ ತಕ್ಷಣ ಅಪರಿಚಿತ ವ್ಯಕ್ತಿ  ಹಣ ಡ್ರಾ ಮಾಡಿ ಕೊಡುತ್ತೆನೆಂತ ಕೇಳಿ ಆಕೆಯ ಬಳೀ ಇದ್ದ ಎ ಟಿ ಎಂ ಕಾರ್ಡನ್ನು ಕೊಟ್ಟು ಎಷ್ಟು ಹಣ ಇದೆ ಚೆಕ್‌ ಮಾಡಿ ಎಂದು  ಸೀಕ್ರೇಟ್‌‌ ನಂಬರ್‌ನ್ನು  ಹೇಳಿದಾಗ ಆತನು ಸರ್ವರ್ ಬಿಸಿ ಇದೇ ಬ್ಯಾಂಕಿನ ಆಪೀಸ್ ಒಳಗಡೆ ಹೋಗಿ ಕೇಳಿ ಎಂದು ತಿಳಿಸಿರುತ್ತಾನೆ. ತಕ್ಷಣ ಆಕೆ ಪಕ್ಕದಲ್ಲಿ ಇದ್ದ ಕಾಪೋರೇಷನ್ ಬ್ಯಾಂಕಿನ ಒಳಗಡೆ ಹೋಗಿ ವಿಚಾರ ಮಾಡಿದಾಗ  ಬ್ಯಾಂಕಿನವರು 10,000/- ರೂ ಹಣ ಡ್ರಾ ಆಗಿದೆ ಅಂತ ತಿಳಿಸಿರುತ್ತಾರೆ. ವಾಪಸ್‌ ಎ ಟಿ ಎಂ ರೂಂ ಬಳಿ ಬಂದಾಗ  ಅಪರಿಚಿತ ವ್ಯಕ್ತಿ ಕೆಎ-40.ಎಂ-0617 ನೇ ಬಿಳಿ ಸ್ಕಾರ್ಪಿಯೋ ಕಾರಿನಲ್ಲಿ ಹೊರಟು ಹೋಗಿರುತ್ತಾನೆ. ಇದೇ ತರಹ ಮುಬಸಿರಾ ಎನ್ನುವವರ ಎಟಿಎಂ ಕಾರ್ಡ್‌ ನಿಂದ 5000/- ರೂ ಹಣ  ಡ್ರಾ ಮಾಡಿ ಮೋಸ ಮಾಡಿರುವ ಬಗ್ಗೆ  ಶಿರಾ ನಗರ ಠಾಣಾ ಮೊ.ನಂ 134/2018 ಕಲಂ 420 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

ಈ ಪ್ರಕರಣದ ತನಿಖೆ ಕಾಲದಲ್ಲಿ ಕೃತ್ಯವೆಸಗಿದ್ದ ಅರುಣ್ ಕುಮಾರ್ ಬಿನ್ ಲೇಟ್ ಮಲ್ಲೇಶಪ್ಪ  ಸುಮಾರು 25 ವರ್ಷ ಕುಂಚಿಟಿಗರು ಜನಾಂಗ,  ರಿಯಲ್ ಎಸ್ಟೇಟ್ ಬ್ರೋಕರ್,  ಮಾದೇನಹಳ್ಳಿ ಗ್ರಾಮದ ಬುಕ್ಕಾಪಟ್ಣ ಹೋಬಳಿ, ಸಿರಾ ತಾಲೂಕ್ ಈತನ್ನನ್ನು ಪತ್ತೆಮಾಡಿ ಕೃತ್ಯಕ್ಕೆ  ಉಪಯೋಗಿಸಿದ್ದ ಕೆಎ-40.ಎಂ-0617 ಸ್ಕಾರ್ಪಿಯೋ  ವಾಹನ  ಹಾಗೂ  ಆರೋಪಿಯಿಂದ 25,000/- ರೂ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ.

 

ಶ್ರೀ.ವೆಂಕಟೇಶ್‌‌ನಾಯ್ಡು.ಕೆ.ಎಸ್, ತುಮಕೂರು ಗ್ರಾ.  ಡಿ.ಎಸ್.ಪಿ ರವರ ಮಾರ್ಗದಶನದಲ್ಲಿ  ಶ್ರೀ. ವಿ ಲಕ್ಷ್ಮ್ ಯ್ಯ ಪಿ .ಐ ಶಿರ      ಶಿರಾ ನಗರ ಠಾಣೆ ನೇತೃತ್ವದಲ್ಲಿ   ಶ್ರೀ ಲಕ್ಷ್ಮಿನಾರಯಣ ಪಿ.ಎಸ್.ಐ ಶಿರಾ ನಗರ ಠಾಣೆ  ಮತ್ತು ಸಿಬ್ಬಂದ್ದಿರವರು   ಆರೋಪಿಯನ್ನು ಪತ್ತೆ ಹಚ್ಚಲು ಶ್ರಮಿಸಿದ್ದು, ಸಂಬಂಧಪಟ್ಟ ಸಿಬ್ಬಂದಿಯವರನ್ನು ಜಿಲ್ಲಾ ಪೊಲೀಸ್‌ ಅಧೀಕ್ಷಕರು ಶ್ಲಾಘನೆ ಮಾಡಿರುತ್ತಾರೆ.

 

ತುಮಕೂರು ನಗರ ಹಾಗೂ ಗ್ರಾಮಾಂತರಗಳಲ್ಲಿ ಇರುವ ಎಟಿಎಂ ಗಳಲ್ಲಿ ಮುಗ್ದ ಜನರನ್ನು ನಂಬಿಸಿ ಹಣವನ್ನು ಎಟಿಎಂ ನಿಂದ ಡ್ರಾ ಮಾಡಿಕೊಡುವುದಾಗಿ ಹೇಳಿ ಮೋಸ ಮಾಡುವವರಿದ್ದು, ಸಾರ್ವಜನಿಕರು ಎಚ್ಚರದಿಂದ ವ್ಯವಹರಿಸಲು ಪೊಲೀಸ್ ಇಲಾಖೆ ಮನವಿ.


ಪತ್ರಿಕಾ ಪ್ರಕಟಣೆ ದಿ 15-03-18

ತುಮಕೂರು ಜಿಲ್ಲಾ ಪೊಲೀಸ್ ಪತ್ರಿಕಾ ಪ್ರಕಟಣೆ

ದಿ: 15-03-2018

ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರು, ತುಮಕೂರು ಜಿಲ್ಲೆಯ ಸಮಸ್ತ ನಾಗರೀಕರಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ ದಿನಾಂಕ: 18-03-2018 ರಂದು ನಡೆಯುವ ಯುಗಾದಿ ಹಬ್ಬದ ಆಚರಣೆ ಸಮಯದಲ್ಲಿ ಕಲ್ಯಾಣ ಮಂಟಪ, ಹೋಟೆಲ್, ವಸತಿ ಗೃಹಗಳು, ಮನೆ, ತೋಟದ ಮನೆಗಳು, ರಸ್ತೆಯ ಬದಿಗಳಲ್ಲಿ ಟೆಂಟ್ ನಿರ್ಮಿಸಿಕೊಂಡು ಜೂಜಾಡುವುದನ್ನು ನಿಷೇದಿಸಲಾಗಿದೆ. ಇಂದಿನಿಂದ ಈ ಸಂಬಂಧ ಯಾವುದೇ ರೀತಿಯ ಜೂಜಾಟ ಕಂಡುಬಂದಲ್ಲಿ ಅವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತದೆ. ಹಾಗೂ ಇದಕ್ಕೆ ಪ್ರೋತ್ಸಾಹಿಸಿದ ಸ್ಥಳದ ಮಾಲೀಕರು/ ಮಧ್ಯವರ್ತಿಗಳ ಮೇಲು ಕಾನೂನು ರೀತಿ ಕ್ರಮ ಜರುಗಿಸಲಾಗುವುದು. ಮತ್ತು ಇದಕ್ಕೆ ಸಂಬಂಧಿಸಿದ ಚರ ಮತ್ತು ಸ್ಥಿರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಹಾಗೂ ಅಕ್ರಮ ಜೂಜಾಟದಲ್ಲಿ ತೊಡಗುವವರ ವಿರುದ್ದ ಗೂಂಡಾ ಕಾಯ್ದೆ ಅಡಿಯಲ್ಲಿ ಕ್ರಮ ಜರುಗಿಸಲಾಗುವುದು.

ಆದ್ದರಿಂದ ಸಾರ್ವಜನಿಕರು ಯಾವುದೇ ರೀತಿಯ ಜೂಜಾಟದಲ್ಲಿ ತೊಡಗುವುದಾಗಲಿ ಅದಕ್ಕೆ ಅವಕಾಶ ಮಾಡಿಕೊಡುವುದಾಗಲಿ ಪ್ರೋತ್ಸಾಹ ಕೊಡುವುದಾಗಲಿ ಮಾಡಬಾರದಾಗಿ ಈ ಮೂಲಕ ಎಚ್ಚರಿಕೆ ನೀಡಲಾಗಿದೆ. ಜೂಜಾಟದ ಬಗ್ಗೆ ಮಾಹಿತಿ ಇದ್ದಲ್ಲಿ ಸಾರ್ವಜನಿಕರು ಮೊಬೈಲ್ ಸಂ: 9480802900 ಗೆ ಸಂಪರ್ಕಿಸಿ ಮಾಹಿತಿ ನೀಡಲು ಕೋರಿದೆ.

ಜಿಲ್ಲಾ ಪೊಲೀಸ್ ಕಛೇರಿ.

ತುಮಕೂರು ಜಿಲ್ಲೆ, ತುಮಕೂರು


ಅಪರಾಧ ಘಟನೆಗಳು 15-03-18

ವೈ ಎನ್  ಹೊಸಕೋಟೆ  ಪೊಲೀಸ್ ಠಾಣಾ ಮೊ. ನಂ-  25/2018   ಕಲಂ: 32(3)K E Act

 

ದಿನಾಂಕ:14/03/2018  ರಂದು ರಾತ್ರಿ  8:00 ಗಂಟೆಗೆ  ತಿರುಮಣಿ ವೃತ್ತದ ಸಿ.ಪಿ.ಐ ರವರಾದ ಶ್ರೀ ಜಿ.ಟಿ ಶ್ರೀಶೈಲಮೂರ್ತಿ  ರವರು ನೀಡಿದ ಪಂಚನಾಮೆ ವರದಿ ಅಂಶವೇನೆಂದರೆ ಈ  ದಿನ ದಿನಾಂಕ:14/03/2018 ರಂದು ಸಾಯಂಕಾಲ 6:00 ಗಂಟೆ ಸಮಯದಲ್ಲಿ  ನಾನು ವೈ.ಎನ್ ಹೊಸಕೋಟೆ ಪೋಲಿಸ್  ಠಾಣಾ ಸರಹದ್ದು ಪೋತಗಾನಹಳ್ಳಿ  ಗ್ರಾಮದ ಗೇಟ್ ಬಳಿ ಗಸ್ತಿನಲ್ಲಿರುವಾ ಗ್ಗೆ ಮಂಜುನಾಥ ಬಿನ್ ಸಕ್ರಪ್ಪ, 37 ವರ್ಷ, ಲಂಬಾಣೀ ಜನಾಂಗ. ಅಂಗಡಿ ವ್ಯಾಪಾರ ಪೋತಗಾನಹಳ್ಳಿ ,ಪಾವಗಡ ತಾ|| ಈತನು ಜನರಿಗೆ ಮಧ್ಯಸೇವನೆ ಮಾಡಲು ತನ್ನ ಅಂಗಡಿ ಬಳಿ ಅಕ್ರಮವಾಗಿ  ಸ್ಥಳಅವಕಾಶ ಮಾಡಿಕೊಟ್ಟಿದ್ದಾನೆಂತ ಖಚಿತ ಮಾಹಿತಿ ಬಂದಿದ್ದರಿಂದ ಪಂಚಾಯ್ತುದಾರನ್ನು ಬರಮಾಡಿಕೊಂಡು ಪೋತಗಾನಹಳ್ಳಿ ಗ್ರಾಮದ ಮಂಜುನಾಥ ಎಂಬುವವರ ಅಂಗಡಿ ಸಮೀಪ ಹೋಗಿ ನೋಡಲಾಗಿ ಸಾರ್ವಜನಿಕ ಗಿರಾಕಿಗಳು   ಮದ್ಯ ಸೇವನೆ ಮಾಡುತ್ತಿದ್ದು ದಾಳಿ ಮಾಡಲು ಹೋದಾಗ್ಗ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಸ್ಥಳದಲ್ಲಿ ಇದ್ದ ಜನರು ಓಡಿ ಹೋಗಿರುತ್ತಾರೆ, ಸ್ಥಳದಲ್ಲಿ 02 ಪ್ಲಾಸ್ಟಿಕ್ ಗ್ಲಾಸ್ ಮತ್ತು ಮದ್ಯ ತುಂಬಿದ್ದ   180 ಎಂ .ಎಲ್ ನ 07 ಓಲ್ಡ್ ಟವರಿನ್ ಟೆಟ್ರಾ ಪ್ಯಾಕೆಟ್  ಹಾಗೂ 90 ಎಂ.ಎಲ್ ನ 14 ಬೆಂಗಳೂರು ಮಾಲ್ಟ್ ವಿಸ್ಕಿ ಟೆಟ್ರಾ ಪ್ಯಾಕಟ್ ಬಿದ್ದಿದ್ದು ಸದರಿಯವುಗಳನ್ನು ಪಂಚನಾಮ ಮುಖೇನ ಮಾನತ್ತು ಪಡಿಸಿಕೊಂಡು ಈ ಸ್ಥಳದಲ್ಲಿ ಕುಡಿಯಲು ಸ್ಥಳ ಅವಕಾಶ ಮಂಜುನಾಥ ಬಿನ್ ಸಕ್ರಪ್ಪ, 37 ವರ್ಷ, ಲಂಬಾಣೀ ಜನಾಂಗ. ಅಂಗಡಿ ವ್ಯಾಪಾರ ಪೋತಗಾನಹಳ್ಳಿ ,ಪಾವಗಡ ತಾ|| ರವರನ್ನು ವಶಕ್ಕೆ ಪಡೆದು ಠಾಣೆಗೆ ಹಾಜರಾಗಿ ಮುಂದಿನ ಕ್ರಮಕ್ಕಾಗಿ ನೀಡಿದ ಪಂಚನಾಮೆ ವರದಿ ಪಡೆದು ಆಸಾಮಿ ವಿರುದ್ದ ಪ್ರಕರಣ ದಾಖಲಿಸಿದೆ

ಅಮೃತೂರು ಪೊಲೀಸ್‌ ಠಾಣಾ ಮೊನಂ-73/2018, ಕಲಂ-279, 304(ಎ) ಐಪಿಸಿ 134(ಎ&ಬಿ), 187 ಐಎಂವಿ ಆಕ್ಟ್

ದಿನಾಂಕ: 14-03-2018 ರಂದು ರಾತ್ರಿ 9-40 ಗಂಟೆಯಲ್ಲಿ ಪಿರ್ಯಾದಿ ರಾಮಲಿಂಗಯ್ಯ.ಬಿ.ಆರ್ ಬಿನ್ ರಾಮಚಂದ್ರಯ್ಯ, 59 ವರ್ಷ, ಪರಿಶಿಷ್ಟ ಜಾತಿ(ಎ.ಕೆ), ಸೆಕ್ಯೂರಿಟಿ ಕೆಲಸ, ದೀಪಕ್ ಬ್ಯಾಂಕ್ ಬೆಂಗಳೂರು. ವಾಸ: ಡೋರ್ ನಂಬರ್-20, 5ನೇ ಮುಖ್ಯ ರಸ್ತೆ, ಆರ್.ಜೆ ಕಾಲೋನಿ, ಲಕ್ಷ್ಮಿನಾರಾಯಣಪುರ, ಬೆಂಗಳೂರು-560021 ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ದಿನಾಂಕ: 14-03-2018 ರಂದು ಮದ್ಯಾಹ್ನ 2-00 ಗಂಟೆಗೆ ಬೆಂಗಳೂರನ್ನು ಬಿಟ್ಟು ಕುಣಿಗಲ್ ತಾಲೋಕ್, ಕಂಚಗಾಲಪುರ ಗ್ರಾಮದಲ್ಲಿ ನಮ್ಮ ಸೋದರ ಮಾವನವರಾದ ಸಟ್ಟಪ್ಪ @ ತಿಮ್ಮಯ್ಯ ರವರ ಸಾವಿಗೆ ಸಂಜೆ 5-00 ಗಂಟೆಗೆ ಬಂದಿದ್ದು, ನಾವು ಗ್ರಾಮದಲ್ಲಿರುವಾಗ್ಗೆ ಸಂಜೆ ಸುಮಾರು 6-15 ಗಂಟೆ ಸಮಯದಲ್ಲಿ ನನ್ನ ಮೊಬೈಲ್ ನಂಬರ್ ಗೆ ಯಾರೋ ಕರೆ ಮಾಡಿ ನಿಮ್ಮ ಮೊಬೈಲ್ ನಂಬರ್ ಅನ್ನು ಹೊಂದಿರುವ ಒಬ್ಬ ಹುಡುಗ ಸಿದ್ದಾಪುರ ಮಸೀದಿ ನೇರದಲ್ಲಿ ಕೆಎ-05, ಹೆಚ್.ಹೆಚ್-5925 ನೇ ಪಲ್ಸರ್ ಬೈಕಿನಲ್ಲಿ ಹೋಗುತ್ತಿದ್ದಾಗ ಬಿಳಿ ಬಣ್ಣದ ಸ್ವಿಪ್ಟ್ ಡಿಜೈರ್ ಕಾರಿನ ಚಾಲಕ ಅಪಘಾತಪಡಿಸಿ ಆಕ್ಸಿಡೆಂಟ್ ಮಾಡಿ ಕಾರನ್ನು ನಿಲ್ಲಿಸದೇ ಹೊರಟು ಹೋಗಿರುತ್ತಾನೆ ಎಂದು ತಿಳಿಸಿದರು. ಕೂಡಲೇ ನಾನು ನಮ್ಮ ಸಂಬಂದಿ ಕಂಚಗಾಲಪುರದ ವಾಸಿ ಹರೀಶ್ ರವರೊಂದಿಗೆ ಬಂದು ವಿಚಾರ ಮಾಡಲಾಗಿ ಅಲ್ಲಿ ಬಿದ್ದಿದ್ದ ಬೈಕ್ ನನ್ನ ಮಗನ ಬೈಕಾಗಿತ್ತು. ನನ್ನ ಮಗನನ್ನು 108 ಅಂಬ್ಯುಲೆನ್ಸ್ ನಲ್ಲಿ ಆದಿಚುಂಚನಗಿರಿ ಆಸ್ಪತ್ರೆಗೆ ಸಾಗಿಸಿದ್ದರು. ನಂತರ ನಾನು ಹರೀಶ್ ರವರೊಂದಿಗೆ ಆದಿಚುಂಚನಗಿರಿ ಆಸ್ಪತ್ರೆಗೆ ಹೋಗುವಷ್ಟರಲ್ಲಿ ನನ್ನ ಮಗ ಅಪಘಾತದಿಂದಾದ ತೀವ್ರಗಾಯಗಳಿಂದಾಗಿ ಮೃತಪಟ್ಟಿದ್ದನು. ನಂತರ ನಾನು ಆಕ್ಸಿಡೆಂಟ್ ನ ಬಗ್ಗೆ ವಿಚಾರ ಮಾಡಲಾಗಿ ನನ್ನ ಮಗನು ಬೆಂಗಳೂರಿನಿಂದ ನಮ್ಮ ಮಾವನವರ ಶವ ಸಂಸ್ಕಾರಕ್ಕಾಗಿ ಬೆಂಗಳೂರಿನಿಂದ ಕಂಚಗಾಲಪುರಕ್ಕೆ ಬರಲು ಎನ್.ಹೆಚ್-75 ರಸ್ತೆಯ ಸಿದ್ದಾಪುರ ಮಸೀದಿ ನೇರದಲ್ಲಿ ಬರುತ್ತಿರುವಾಗ್ಗೆ ಸಂಜೆ ಸುಮಾರು 5-45 ಗಂಟೆ ಸಮಯದಲ್ಲಿ ನನ್ನ ಮಗನ ಬೈಕ್ ನ ಹಿಂದೆ ಬರುತ್ತಿದ್ದ ಯಾವುದೋ ಒಂದು ಬಿಳಿ ಬಣ್ಣದ ಹಳದಿ ಬಣ್ಣದ ಬೋರ್ಡ್ ಹೊಂದಿದ್ದ ಸ್ವಿಪ್ಟ್ ಡಿಜೈರ್ ಕಾರಿನ ಚಾಲಕ ಹಿಂದಿನಿಂದ ಅತಿವೇಗವಾಗಿ  ತನ್ನ ಕಾರನ್ನು ಚಾಲನೆ ಮಾಡಿಕೊಂಡು ಬಂದು ನನ್ನ ಮಗನು ಚಲಾಯಿಸುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆಸಿ ಕಾರನ್ನು ನಿಲ್ಲಿಸದೇ ಹೊರಟು ಹೋಗಿರುತ್ತಾನೆಂದು ತಿಳಿಸಿದರು. ನಂತರ ನಾನು ಆಸ್ಪತ್ರೆಯ ಬಳಿಗೆ ತೆರಳಿ ವಿಚಾರಿಸಿದಾಗ ರಾಕೇಶನನ್ನು ಚಿಕಿತ್ಸೆಗಾಗಿ 108 ಅಂಬ್ಯುಲೆನ್ಸ್ ನಲ್ಲಿ ಆದಿಚುಂಚನಗಿರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸುತ್ತಿರುವಾಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಸಂಜೆ ಸುಮಾರು  6-45 ಗಂಟೆಗೆ ಸತ್ತು ಹೋದನೆಂದು ತಿಳಿಸಿದರು. ನನ್ನ ಮಗನು ಚಲಾಯಿಸುತ್ತಿದ್ದ ಬೈಕ್ ಗೆ ವೇಗವಾಗಿ ಬಂದು ಹಿಂದಿನಿಂದ ಡಿಕ್ಕಿ ಹೊಡೆಸಿ ಅಪಘಾತಪಡಿಸಿ ನನ್ನ ಮಗನ ಸಾವಿಗೆ ಕಾರಣನಾಗಿರುವ ಕಾರಿನ ಚಾಲಕನ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕೋರುತ್ತೇನೆ. ಎಂದು ಇದ್ದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿರುತ್ತೆ.

ತಿಪಟೂರು ಗ್ರಾಮಾಂತರ ಪೊಲೀಸ್  ಠಾಣಾ ಮೊ.ನಂ 14/2018 ಕಲಂ 323,324,504 ರೆ/ವಿ 149 ಐ.ಪಿ.ಸಿ

ದಿನಾಂಕ:-14/03/2018 ರಂದು ಶ್ರೀಮತಿ ಕವಿತ ಕೋಂ ಧನಂಜಯ್ಯ, 32 ವರ್ಷ, ಗೃಹಿಣಿ, ಭೋವಿ ಜನಾಂಗ, ಬಂಡೆಗೇಟ್ , ಕಸಬಾ ಹೋಬಳಿ, ತಿಪಟೂರು ತಾಲ್ಲೂಕ್ ರವರು ಸಂಜೆ 06-15 ಗಂಟೆಯಿಂದ 06-45 ಪಿ.ಎಂ ಗಂಟೆವರೆಗೆ ತಿಪಟೂರು ಸರ್ಕಾರಿ ಆಸ್ಪತ್ರೆಯಲ್ಲಿ ನೀಡಿದ ಹೇಳಿಕೆ ಅಂಶವೇನೆಂದರೆ, ಈ ದಿನ ದಿನಾಂಕ:-14/03/2018 ರಂದು ಸಂಜೆ 05-00 ಗಂಟೆ ಸಮಯದಲ್ಲಿ ನನ್ನ ಗುಡಿಸಲು ಮನೆ ಮುಂದೆ ಇರುವಾಗ ಈ ಗುಡಿಸಲು ಇರುವ ಜಾಗದ ವಿಚಾರಕ್ಕೆ ನಮ್ಮ ಗ್ರಾಮದ ರಾಮಕೃಷ್ಣ ಬಿನ್ ಲೇಟ್ ವೆಂಕಟಯ್ಯ, ನಾಗರಾಜು ಬಿನ್ ವೆಂಕಟಯ್ಯ, ರವೀಶ ಬಿನ್ ಯಲ್ಲಪ್ಪ, ಜಯಮ್ಮ ಕೋಂ ಲೇಟ್ ಯಲ್ಲಪ್ಪ, ಹೇಮಾವತಿ ಕೋಂ ರಾಮಕೃಷ್ಣ, ಗೀತಾ ಕೋಂ ರಮೇಶ, ಲಕ್ಷ್ಮಮ್ಮ ಕೋಂ ನಾಗರಾಜ, ರವರು ಬಂದು ನಮ್ಮೊಂದಿಗೆ ಜಗಳಮಾಡಿ  ನೀನು ಹಾಕಿಕೊಂಡಿರುವ ಗುಡಿಸಲು ಜಾಗ ನಮಗೆ ಸೇರಬೇಕಾಗಿದ್ದು, ಇಲ್ಲಿಂದ  ಜಾಗ ಖಾಲಿ ಮಾಡು ಎಂತಾ ಬಾಯಿಗೆ ಬಂದಂತೆ  ಎಲ್ಲರೂ ಸೂಳೆ ಮುಂಡೆ ಬೋಳಿಮುಂಡೆ ಎಂತಾ ಅವಾಚ್ಯ ಶಬ್ದಗಳಿಂದ  ಬೈಯ್ಯುತ್ತಿರುವಾಗ ರಾಮಕೃಷ್ಣರವರು ಕುಡುಗೋಲಿನಿಂದ ನನ್ನ ಬಲ ಕೈ ರಟ್ಟೆಗೆ ಹೊಡೆದು ರಕ್ತಗಾಯ ಪಡಿಸಿರುತ್ತಾನೆ, ಜಯಮ್ಮರವರು ಕೈಯಿಂದ ತಲೆಗೆ ಹೊಡೆದರು, ಹೇಮಾವತಿ ಮತ್ತು ಗೀತಾ ರವರು ಕೈಯಿಂದ ಎದೆಗೆ ಗುದ್ದಿರುತ್ತಾರೆ,  ಈ ಸಮಯಕ್ಕೆ ದೊಡ್ಡಮ್ಮ ಕೋಂ ನಾಗರಾಜು, ಮಂಜುನಾಥ ಬಿನ್ ತಿಮ್ಮಯ್ಯ  ಹಾಗೂ ಅಜ್ಜಯ್ಯ ರವರು ಬಂದು ಜಗಳ ಬಿಡಿಸಿರುತ್ತಾರೆ, ನಂತರ ನನ್ನನ್ನು ತಿಪಟೂರು ಸರ್ಕಾರಿ ಆಸ್ಪತ್ರೆಗೆ ಅಜ್ಜಯ್ಯರವರು ಚಿಕಿತ್ಸೆಗಾಗಿ ದಾಖಲಿಸಿರುತ್ತಾರೆ,  ಆದ್ದರಿಂದ ನನ್ನ ಮೇಲೆ ಹೊಡೆದು ರಕ್ತಗಾಯಪಡಿಸಿ ಅವಾಚ್ಯಶಬ್ದಗಳಿಂದ ಬೈದ ಮೇಲ್ಕಂಡವರ ಮೇಲೆ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ಆಸ್ಪತ್ರೆಯಲ್ಲಿ ನೀಡಿದ ಹೇಳಿಕೆ ಪಡೆದು  ಪ್ರಕರಣ ದಾಖಲಿಸಿರುತ್ತೆWednesday, 14 March 2018

ಅಪರಾಧ ಘಟನೆಗಳು 14-03-18

ಹೊನ್ನವಳ್ಳಿ ಪೊಲೀಸ್ ಠಾಣೆ ಯು.ಡಿ.ಆರ್‌. ನಂ.04/2018 ಕಲಂ. 174 ಸಿಆರ್‌ಪಿಸಿ

ದಿನಾಂಕ:13.03.2018 ರಂದು ರಾತ್ರಿ 11-15 ಗಂಟೆ ಸಮಯದಲ್ಲಿ ತಿಪಟೂರು ತಾ: ಹೊನ್ನವಳ್ಳಿ ಹೋಬಳಿ, ಭೈರನಾಯ್ಕನಹಳ್ಳಿ ವಾಸಿ ಶಂಕರಪ್ಪ ಬಿನ್‌‌ ಶಿವಣ್ಣ, ಸುಮಾರು 70 ವರ್ಷರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ಪಿರ್ಯಾದು ಅಂಶವೇನೆಂದರೆ ನನ್ನ ಮಗನಾದ ಕಾಂತರಾಜು ಸುಮಾರು 36 ವರ್ಷ, ಈತನು ಸುಮಾರು 1 ವರ್ಷದಿಂದ ನಮ್ಮೂರಿನ ವಸಂತಕುಮಾರ ಬಿನ್‌‌ ಸಿದ್ದಮಲ್ಲಯ್ಯಲೇಟ್‌ ರವರಿಗೆ ಸೇರಿದ ಕೆ.ಎ.53.9346 ನೇ ಐಷರ್‌‌‌ ಕ್ಯಾಂಟರ್‌‌‌ ಲಾರಿಯಲ್ಲಿ ಡ್ರೈವರಾಗಿ ಕೆಲಸ ಮಾಡುತ್ತಿದ್ದನು. ದಿನಾಂಕ:11.03.2018 ರಂದು ಮದ್ಯಾಹ್ನ ಸುಮಾರು ಒಂದು ಗಂಟೆಯಲ್ಲಿ ನನ್ನ ಮಗ ಕಾಂತರಾಜು ಸದರಿ ಕ್ಯಾಂಟರ್‌ ವಾಹನವನ್ನು ನಮ್ಮೂರಿನ ಹೆಬ್ಬಾಗಿಲಿನ ರಸ್ತೆಯಲ್ಲಿ ನಿಲ್ಲಿಸಿಕೊಂಡು ತೊಳೆಯುತ್ತಿದ್ದ ಸಮಯದಲ್ಲಿ ವಾಹನ ಯಾಂತ್ರಿಕ ದೋಷದಿಂದ ಆಕಸ್ಮಾತ್ತಾಗಿ ಮುಂದೆ ಹರಿದು ಬಂದಿದ್ದರಿಂದ  ನನ್ನ ಮಗ ಕಾಂತರಾಜು ಕ್ಯಾಂಟರ್‌‌ ಮತ್ತು ರಸ್ತೆ ಪಕ್ಕದಲ್ಲಿದ್ದ ಟೆಲಿಪೋನ್‌‌ ಕಂಬದ ಮದ್ಯೆ ಸಿಕ್ಕಿ ಹಾಕಿಕೊಂಡಿದ್ದರಿಂದ ಕಾಂತರಾಜುರವರ ಬಲಗೈಗೆ ಮತ್ತು ಬಲಪಕ್ಕೆಗೆ ಹಾಗೂ ಇತರೆ ಭಾಗಗಳಿಗೆ ತೀವ್ರವಾದ ಪೆಟ್ಟುಗಳಾಗಿದ್ದು, ಕೂಡಲೇ ಅಲ್ಲಿದ್ದ ನಮ್ಮೂರಿನ ಚೆನ್ನಬಸಪ್ಪನವರ ಮೊಮ್ಮಗ ಮಧುಸೂಧನ ಮತ್ತು ಕ್ಯಾಂಟರ್‌‌‌ ಮಾಲೀಕರಾದ ವಸಂತಕುಮಾರ್‌‌ ಇನ್ನೂ ಮುಂತಾದವರು ನೋಡಿ ಪೆಟ್ಟಾಗಿದ್ದ ನನ್ನ ಮಗನನ್ನು 108 ರಲ್ಲಿ ತಿಪಟೂರಿನ ಜನರಲ್‌‌ ಆಸ್ಪತ್ರೆಗೆ ಚಿಕಿತ್ಸೆಗೆ ಸೇರಿಸಿದ್ದು, ನಂತರ ಈ ವಿಚಾರವನ್ನು ತಿಳಿದುಕೊಂಡ ನಾನು ತಿಪಟೂರು ಜನರಲ್‌‌‌ ಆಸ್ಪತ್ರೆಗೆ ಬಂದು, ಅಲ್ಲಿಂದ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿನ ಹೇಮಾವತಿ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ನಂತರ ಅದೇ ದಿನ ಅಲ್ಲಿಂದ ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುತ್ತಿದ್ದೆವು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನನ್ನ ಮಗ ದಿನಾಂಕ:13.03.2018 ರಂದು ಮದ್ಯಾಹ್ನ ಸುಮಾರು 1 ಗಂಟೆ ಸಮಯದಲ್ಲಿ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ. ನನ್ನ ಮಗನಿಗೆ ಕ್ಯಾಂಟರ್‌‌‌‌‌‌ ವಾಹನ ಆಕಸ್ಮಿಕವಾಗಿ ಮುಂದೆ ಬಂದಿದ್ದರಿಂದ ಅಪಘಾತವಾಗಿ ಮೃತಪಟ್ಟಿರುತ್ತಾನೆ. ಈತನ ಮರಣದ ವಿಚಾರದಲ್ಲಿ ಬೇರೆ ಯಾವ ಅನುಮಾನ ಇರುವುದಿಲ್ಲ. ಆದ್ದರಿಂದ ಈ ಬಗ್ಗೆ ಮುಂದಿನ ಕಾನೂನು  ಕ್ರಮ ಕೈಗೊಳ್ಳಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ. ನಾನು ಇದುವರೆವಿಗೂ ನನ್ನ ಮಗನ ಆರೈಕೆಯಲ್ಲಿ ಆಸ್ಪತ್ರೆಯಲ್ಲಿದ್ದುದರಿಂದ ದೂರು ಕೊಡುವವರು ಯಾರೂ ಇಲ್ಲದ ಕಾರಣ ಈ ದಿನ ದಿನಾಂಕ:13.03.2018 ರಂದು ರಾತ್ರಿ ತಡವಾಗಿ ಬಂದು ದೂರನ್ನು ನೀಡಿರುತ್ತೇನೆ ಎಂಬುದಾಗಿ ಇದ್ದ ದೂರನ್ನು ಪ್ರಕರಣ ದಾಖಲಿಸಿರುತ್ತೆ.

ತುಮಕೂರು ನಗರ ಪೊಲೀಸ್‌ ಠಾಣಾ  ಮೊ.ನಂ.77/2018 ಕಲಂ 323.324.504.506.ರೆ/ವಿ 34 ಐ.ಪಿ.ಸಿ.

ದಿನಾಂಕ:13/03/2018 ರಂದು ಬೆಳಿಗ್ಗೆ 11-00 ಗಂಟೆಗೆ ಪಿರ್ಯಾದಿ ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ನನಗೆ 5 ಜನ ಮಕ್ಕಳಿದ್ದು, ಆಟೋ ಓಡಿಸಿ ಕೊಂಡು ಜೀವನ ಸಾಗಿಸುತ್ತಿರುತ್ತೇನೆ. 5ನೇ ಮಗನಾದ ಸುಮರು 23 ವರ್ಷದ ಸಿದ್ಧಿಕ್ ಪಾಷ ಈತನು ದಿನಾಂಕ:10/03/2018 ರಂದು ರಾತ್ರಿ ಸುಮಾರು 11-00 ಗಂಟೆಯಲ್ಲಿ ಮನೆಯನ್ನು ಬಿಟ್ಟು ತುಮಕೂರು ಶಿರಾಗೇಟ್ನಲ್ಲಿ ಉರುಸ್ ಇದುದ್ದರಿಂದ ನನ್ನ ಮಗ ಸಿದ್ಧಿಕ್ ಪಾಷ ಆತನ ಸ್ನೇಹಿತರೊಂದಿಗೆ ಹೋಗಿದ್ದನು.ಅದೇ ದಿನ ರಾತ್ರಿ 12-00 ಗಂಟೆ ಸುಮಯದಲ್ಲಿ ನನ್ನ ಮಗ ದ್ವಿಚಕ್ರ ವಾಹನವನ್ನು ನಿಲ್ಲಿಸುವಾಗ ದ್ವಿಚಕ್ರ ವಾಹನ ನಿಲ್ಲಿಸುವ ವಿಚಾರವಾಗಿ ಸಲ್ಮಾನ್ ಖಾನ್, ಜೀಯಾ ಉಲ್ಲಾ, ರಫೀಕ್ ಮತ್ತು ಜಾವಿದ್ ರವರುಗಳು ಏಕಾಏಕಿ ನನ್ನ ಮಗನ ಮೇಲೆ ಜಗಳ ತೆಗೆದು ಅವಾಚ್ಯ ಶಬ್ಧಗಳಿಂದ ಬೈದು ಎಲ್ಲರೂ ಸೇರಿಕೊಂಡು ನನ್ನ ಮಗನಿಗೆ ಕೈಮುಷ್ಠಿಯಿಂದ ಮುಖಕ್ಕೆ, ಮೂಗಿಗೆ, ಎದೆಗೆ ಹೊಟ್ಟೆ, ಮತ್ತು ಬಲಗಣ್ಣಿನ ಕೆಳಭಾಗಕ್ಕೆ ಹೊಡೆದು ರಕ್ತ ಗಾಯ ಪಡಿಸಿ ನಂತರ ಸಲ್ಮಾನ್ ಎಂಬುವವನು ದೊಣ್ಣೆಯಿಂದ ತಲೆಗೆ, ಪಕ್ಕೆಗೆ, ತೊಡೆಗೆ ಹೊಡೆದು ನೋವುಂಟು ಮಾಡಿರುತ್ತಾನೆ. ನಂತರ ಎಲ್ಲರೂ ಸೇರಿಕೊಂಡು ನಿನ್ನನ್ನು ಇಷ್ಟಕ್ಕೆ ಬಿಡುವುದಿಲ್ಲವೆಂದು ಪ್ರಾಣಬೆದರಿಕೆ ಹಾಕಿ ಎಲ್ಲರೂ ಓಡಿ ಹೋದರು ಎಂದು ನನ್ನ ಮಗ ದಿನಾಂಕ:11/03/2018 ರಂದು ಬೆಳಗಿನ ಜಾವ 5-30 ಗಂಟೆಗೆ ಮನೆಗೆ ಬಂದಾಗ ಈ ವಿಚಾರವನ್ನು ತಿಳಿಸಿದನು. ಆತನಿಗೆ ತುಂಬಾ ಪೆಟ್ಟು ಬಿದ್ದು, ಸುಸ್ತಾಗಿದ್ದರಿಂದ ನಾನು ಮತ್ತು ನನ್ನ ಸಂಬಂಧಿಕರು ನನ್ನ ಮಗನನ್ನು ತುಮಕೂರು ಜಿಲ್ಲಾ ಸಕರ್ಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಿರುತ್ತೇವೆ. ಈಗ ನನ್ನ ಮಗ ತುಮಕೂರು ಜಿಲ್ಲಾ ಸಕರ್ಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾನೆ. ಆದ್ದರಿಂದ ನನ್ನ ಮಗನಿಗೆ ಈ ರೀತಿ ಹಲ್ಲೆ ಮಾಡಿದ ಮೇಲ್ಕಂಡವರ ಮೇಲೆ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ನನ್ನ ಮಗನಿಗೆ ಚಿಕಿತ್ಸೆ ಕೊಡಿಸಿ ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

ತುಮಕೂರು ನಗರ ಪೊಲೀಸ್‌ ಠಾಣಾ  ಮೊ.ನಂ.78/2018 ಕಲಂ 379  ಐ.ಪಿ.ಸಿ.

ತುಮಕೂರು ನಗರದ  ಸಿರಾ ಗೇಟ್ ವಾಸಿ ಗಿರೀಶ್ ಎನ್ ರವರು ತುಮಕೂರು ಜಿಲ್ಲಾ ಪೊಲೀಸ್ ಕಚೇರಿಗೆ ಹೋಗಿ ದೂರಿನೊಂದಿಗೆ ದಿನಾಂಕ:13.03.18 ರಂದು  ಮದ್ಯಾಹ್ನ 01-30  ಗಂಟೆಗೆ ಪೊಲೀಸ್ ಠಾಣೆಗೆ ಹಾಜರಾಗಿ ನೀಡಿದ  ದೂರಿನ  ಅಂಶವೇನೆಂದರೆ ದಿನಾಂಕ:13.03.18 ರಂದು  ಬೆಳಿಗ್ಗೆ 09-00 ಗಂಟೆಯಲ್ಲಿ ಪಿರ್ಯಾದಿ ತುಮಕೂರು ನಗರದ  ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಬೆಂಗಳೂರಿಗೆ ಹೋಗಲು  ಬಸ್ ಹತ್ತುತ್ತಿದ್ದಾಗ  ಯಾರೋ ಇಬ್ಬರು ಅಪರಿಚಿತ ವ್ಯಕ್ತಿಗಳು ಸೇರಿ ನನ್ನ ಪಾಕೆಟ್ ನಲ್ಲಿದ್ದ ಮೊಬೈಲ್ ಪೋನ್ ಅನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.  ನನ್ನ ಮೊಬೈಲ್ ವಿವರ IMEI No:356905/07/194486/2 , Model: Samsung Galaxy S7, Mobile No:8197222428  ಆಗಿರುತ್ತೆ.ಇದರ ಬೆಲೆ ಸುಮಾರು 30,000/- ರೂ ಗಳಾಗುತ್ತೆ. ಸದರಿ ಮೊಬೈಲ್ ಪೋನ್ ಅನ್ನು ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ,ನಂ-73/2018 ಕಲಂ 279, ಐ.ಪಿ.ಸಿ

ದಿನಾಂಕ 13-03-2018 ರಂದು ಬೆಳಗ್ಗೆ ಸುಮಾರು 11-00 ಗಂಟೆಗೆ ಪಿರ್ಯಾದುದರರಾದ ಬಿ,ಜಿ ಮಾರೇಗೌಡ ಬಿನ್‌‌ ಗಂಗಯ್ಯ, 49 ವರ್ಷ, ಒಕ್ಕಲಿಗ ಜನಾಂಗ, ಕಂಟ್ರಾಕ್ಟರ್‌‌, ಬೊಮ್ಮನಹಳ್ಳಿ, ಊರ್ಡಿಗೆರೆ ಹೋಬಳಿ, ತುಮಕೂರು ತಾಲ್ಲೂಕು, ತುಮಕೂರು ಜಿಲ್ಲೆ ರವರು ಠಾಣೆಗೆ ಹಾಜರಾಗಿ ಬರೆಸಿಕೊಟ್ಟ ಲಿಖಿತ ದೂರಿನ ಅಂಶವೇನೆಂದರೆ, ಏನೆಂದರೆ, ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ನಾನು ಕೆಎ-06-ಡಿ-1558 ನೇ ಟಾಟಾ ಟಿಪ್ಪರ್‌‌ ಲಾರಿಯ ಮಾಲೀಕನಾಗಿದ್ದು, ಈ ನನ್ನ ಟಿಪ್ಪರ್‌‌ ಲಾರಿಗೆ ಲಕ್ಷ್ಮಿನಾರಾಯಣ ಬಿ,ಪಿ ರವರನ್ನು ಚಾಲಕನನ್ನಾಗಿ ನೇಮಕ ಮಾಡಿಕೊಂಡಿರುತ್ತೇನೆ. ದಿನಾಂಕ 08-02-2018 ರಂದು ನಮ್ಮ ಟಿಪ್ಪರ್‌ ಲಾರಿಗೆ ಜಾಸ್‌ ಟೋಲ್‌ ಬಳಿ ಇರುವ ಎಸ್‌,ಸಿ,ಎಸ್‌,ಸಿ ಕ್ರಷರ್‌‌ನಲ್ಲಿ ಜಲ್ಲಿಯನ್ನು ತುಂಬಿಕೊಂಡು ಮಸ್ಕಲ್‌ ಬಳಿ ಇರುವ ಬೊಮ್ಮನಹಳ್ಳಿಗೆ ಹೋಗಲು ಹೊನ್ನುಡಿಕೆ ಮಾರ್ಗವಾಗಿ ನಮ್ಮ ಟಿಪ್ಪರ್‌ ಲಾರಿಯ ಚಾಲಕ ತನ್ನ ಟಿಪ್ಪರ್‌‌ ಲಾರಿಯನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೊಗುತ್ತಿದ್ದಾಗ ಮದ್ಯಾಹ್ನ ಸುಮಾರು 12-30 ಗಂಟೆ ಸಮಯದಲ್ಲಿ ಚೋಳಂಬಳ್ಳಿ-ಅರೇಹಳ್ಳಿ ಮಧ್ಯೆ ರಸ್ತೆಯಲ್ಲಿ ಎಮ್ಮೆ ಅಡ್ಡ ಬಂದಿದ್ದದ್ದರಿಂದ ಟಿಪ್ಪರ್‌ ಲಾರಿಯನ್ನು ಎಡಕ್ಕೆ ಎಳೆದು ರಸ್ತೆ ಪಕ್ಕದಲ್ಲಿರುವ ಹಳ್ಳಕ್ಕೆ ಬೀಳಿಸಿ ಅಪಘಾತ ಮಾಡಿದ್ದು, ಆಗ ಅಲ್ಲಿಯೇ ಹೋಗುತ್ತಿದ್ದ ಗೊಲ್ಲಹಳ್ಳಿ ವಾಸಿ ರವಿಶಂಕರ್‌‌ ರವರು ಪೋನ್‌ ಮಾಡಿ ವಿಚಾರ ತಿಳಿಸಿದರು. ನಾನು ಕೂಡಲೇ ಸ್ಥಳಕ್ಕೆ ಹೋಗಿ ನೋಡಲಾಗಿ ಅಪಘಾತವಾಗಿರುವುದು ನಿಜವಾಗಿತ್ತು. ಟಿಪ್ಪರ್‌ ಲಾರಿಯನ್ನು ನೋಡಲಾಗಿ ಅದರ ಚಾರ್ಸಿ ಬೆಂಡಾಗಿರುತ್ತೆ. ಬ್ಲೇಡ್‌‌ ಪಟ್ಟಿಗಳು ಕಟ್ಟಾಗಿರುತ್ತೆ. ಕ್ರೌನ್‌ ಪಿನ್‌ ಡ್ಯಾಮೇಜ್‌ ಆಗಿರುತ್ತೆ. ಕ್ಯಾಬಿನ್‌‌ ಹಾಗೂ ಬಾಡಿ ಜಖಂಗೊಂಡಿರುತ್ತೆ. ಈ ಅಪಘಾತದಲ್ಲಿ ಟಿಪ್ಪರ್‌ ಲಾರಿಯ ಚಾಲಕನಾದ ಲಕ್ಷ್ಮೀನಾರಾಯಣ ಬಿ,ಪಿ ರವರಿಗೆ ಯಾವುದೇ ರೀತಿಯ ಪೆಟ್ಟುಗಳು ಬಿದ್ದಿರುವುದಿಲ್ಲಾ. ನಾನು ನನ್ನ ಮಗಳ ಮದುವೆ ಕಾರ್ಯದಲ್ಲಿದ್ದುದರಿಂದ ನನ್ನ ಮಗಳ ಮದುವೆ ಕಾರ್ಯ ಮುಗಿಸಿಕೊಂಡು ನಂತರ ದೇವತಾ ಕಾರ್ಯವನ್ನು ಸಹ ಮುಗಿಸಿಕೊಂಡು ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದೇನೆ. ಸದರಿ ಅಪಘಾತಕ್ಕೀಡಾದ ಟಿಪ್ಪರ್‌ ಲಾರಿಯನ್ನು ಚೋಳಂಬಳ್ಳಿ ಗ್ರಾಮದ ಮಸೀದಿ ಮುಂಭಾಗದಲ್ಲಿ ನಿಲ್ಲಿಸಿರುತ್ತೆನೆ. ಆದ್ದರಿಂದ ಅಪಘಾತ ಮಾಡಿದ ನಮ್ಮ ಟಿಪ್ಪರ್‌‌ ಲಾರಿ ಚಾಲಕ ಲಕ್ಷ್ಮೀನಾರಾಯಣ ಬಿ,ಪಿ ರವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಈ ಮೂಲಕ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ ಎಂದು ನೀಡಿದ ದೂರನ್ನು ಪಡೆದು ಠಾಣಾ ಮೊ,ನಂ 72/2018 ಕಲಂ 279, ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿದೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ,ನಂ-73/2018 ಕಲಂ 279, ಐ.ಪಿ.ಸಿ

ದಿನಾಂಕ 13-03-2018 ರಂದು ಬೆಳಗ್ಗೆ ಸುಮಾರು 11-00 ಗಂಟೆಗೆ ಪಿರ್ಯಾದುದರರಾದ ಬಿ,ಜಿ ಮಾರೇಗೌಡ ಬಿನ್‌‌ ಗಂಗಯ್ಯ, 49 ವರ್ಷ, ಒಕ್ಕಲಿಗ ಜನಾಂಗ, ಕಂಟ್ರಾಕ್ಟರ್‌‌, ಬೊಮ್ಮನಹಳ್ಳಿ, ಊರ್ಡಿಗೆರೆ ಹೋಬಳಿ, ತುಮಕೂರು ತಾಲ್ಲೂಕು, ತುಮಕೂರು ಜಿಲ್ಲೆ ರವರು ಠಾಣೆಗೆ ಹಾಜರಾಗಿ ಬರೆಸಿಕೊಟ್ಟ ಲಿಖಿತ ದೂರಿನ ಅಂಶವೇನೆಂದರೆ, ಏನೆಂದರೆ, ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ನಾನು ಕೆಎ-06-ಡಿ-1558 ನೇ ಟಾಟಾ ಟಿಪ್ಪರ್‌‌ ಲಾರಿಯ ಮಾಲೀಕನಾಗಿದ್ದು, ಈ ನನ್ನ ಟಿಪ್ಪರ್‌‌ ಲಾರಿಗೆ ಲಕ್ಷ್ಮಿನಾರಾಯಣ ಬಿ,ಪಿ ರವರನ್ನು ಚಾಲಕನನ್ನಾಗಿ ನೇಮಕ ಮಾಡಿಕೊಂಡಿರುತ್ತೇನೆ. ದಿನಾಂಕ 08-02-2018 ರಂದು ನಮ್ಮ ಟಿಪ್ಪರ್‌ ಲಾರಿಗೆ ಜಾಸ್‌ ಟೋಲ್‌ ಬಳಿ ಇರುವ ಎಸ್‌,ಸಿ,ಎಸ್‌,ಸಿ ಕ್ರಷರ್‌‌ನಲ್ಲಿ ಜಲ್ಲಿಯನ್ನು ತುಂಬಿಕೊಂಡು ಮಸ್ಕಲ್‌ ಬಳಿ ಇರುವ ಬೊಮ್ಮನಹಳ್ಳಿಗೆ ಹೋಗಲು ಹೊನ್ನುಡಿಕೆ ಮಾರ್ಗವಾಗಿ ನಮ್ಮ ಟಿಪ್ಪರ್‌ ಲಾರಿಯ ಚಾಲಕ ತನ್ನ ಟಿಪ್ಪರ್‌‌ ಲಾರಿಯನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೊಗುತ್ತಿದ್ದಾಗ ಮದ್ಯಾಹ್ನ ಸುಮಾರು 12-30 ಗಂಟೆ ಸಮಯದಲ್ಲಿ ಚೋಳಂಬಳ್ಳಿ-ಅರೇಹಳ್ಳಿ ಮಧ್ಯೆ ರಸ್ತೆಯಲ್ಲಿ ಎಮ್ಮೆ ಅಡ್ಡ ಬಂದಿದ್ದದ್ದರಿಂದ ಟಿಪ್ಪರ್‌ ಲಾರಿಯನ್ನು ಎಡಕ್ಕೆ ಎಳೆದು ರಸ್ತೆ ಪಕ್ಕದಲ್ಲಿರುವ ಹಳ್ಳಕ್ಕೆ ಬೀಳಿಸಿ ಅಪಘಾತ ಮಾಡಿದ್ದು, ಆಗ ಅಲ್ಲಿಯೇ ಹೋಗುತ್ತಿದ್ದ ಗೊಲ್ಲಹಳ್ಳಿ ವಾಸಿ ರವಿಶಂಕರ್‌‌ ರವರು ಪೋನ್‌ ಮಾಡಿ ವಿಚಾರ ತಿಳಿಸಿದರು. ನಾನು ಕೂಡಲೇ ಸ್ಥಳಕ್ಕೆ ಹೋಗಿ ನೋಡಲಾಗಿ ಅಪಘಾತವಾಗಿರುವುದು ನಿಜವಾಗಿತ್ತು. ಟಿಪ್ಪರ್‌ ಲಾರಿಯನ್ನು ನೋಡಲಾಗಿ ಅದರ ಚಾರ್ಸಿ ಬೆಂಡಾಗಿರುತ್ತೆ. ಬ್ಲೇಡ್‌‌ ಪಟ್ಟಿಗಳು ಕಟ್ಟಾಗಿರುತ್ತೆ. ಕ್ರೌನ್‌ ಪಿನ್‌ ಡ್ಯಾಮೇಜ್‌ ಆಗಿರುತ್ತೆ. ಕ್ಯಾಬಿನ್‌‌ ಹಾಗೂ ಬಾಡಿ ಜಖಂಗೊಂಡಿರುತ್ತೆ. ಈ ಅಪಘಾತದಲ್ಲಿ ಟಿಪ್ಪರ್‌ ಲಾರಿಯ ಚಾಲಕನಾದ ಲಕ್ಷ್ಮೀನಾರಾಯಣ ಬಿ,ಪಿ ರವರಿಗೆ ಯಾವುದೇ ರೀತಿಯ ಪೆಟ್ಟುಗಳು ಬಿದ್ದಿರುವುದಿಲ್ಲಾ. ನಾನು ನನ್ನ ಮಗಳ ಮದುವೆ ಕಾರ್ಯದಲ್ಲಿದ್ದುದರಿಂದ ನನ್ನ ಮಗಳ ಮದುವೆ ಕಾರ್ಯ ಮುಗಿಸಿಕೊಂಡು ನಂತರ ದೇವತಾ ಕಾರ್ಯವನ್ನು ಸಹ ಮುಗಿಸಿಕೊಂಡು ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದೇನೆ. ಸದರಿ ಅಪಘಾತಕ್ಕೀಡಾದ ಟಿಪ್ಪರ್‌ ಲಾರಿಯನ್ನು ಚೋಳಂಬಳ್ಳಿ ಗ್ರಾಮದ ಮಸೀದಿ ಮುಂಭಾಗದಲ್ಲಿ ನಿಲ್ಲಿಸಿರುತ್ತೆನೆ. ಆದ್ದರಿಂದ ಅಪಘಾತ ಮಾಡಿದ ನಮ್ಮ ಟಿಪ್ಪರ್‌‌ ಲಾರಿ ಚಾಲಕ ಲಕ್ಷ್ಮೀನಾರಾಯಣ ಬಿ,ಪಿ ರವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಈ ಮೂಲಕ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ ಎಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿದೆ.Tuesday, 13 March 2018

ಅಪರಾಧ ಘಟನೆಗಳು 13-03-18

ಬಡವನಹಳ್ಳಿ ಪೊಲೀಸ್ ಠಾಣಾ ಮೊ.ನಂ:34/2018 ಕಲಂ:354 [ಎ] & [ಡಿ] ಐ.ಪಿ.ಸಿ

ದಿನಾಂಕ:12/03/2018 ರಂದು ಬೆಳಗ್ಗೆ 11-30 ಗಂಟೆಯಲ್ಲಿ ಫಿರ್ಯಾದಿ ಬೆಲ್ಲದಮಡುಗು ವಾಸಿ ಕುಲವಂತಿ ಸಾಖ್ಯೇಲರ್‌ ರವರು ಠಾಣೆಗೆ ಹಾಜರಾಗಿ, ದಿ:09/03/18 ರಂದು ರಾತ್ರಿ 7 ಗಂಟೆ ಸಮಯದಲ್ಲಿ ನಾನು ಟಾಯ್ಲೆಟ್‌ಗೆ ಹೋಗಿ ವಾಪಾಸ್‌ ಬರುತ್ತಿದ್ದಾಗ ನಮ್ಮ ಕಾಲೋನಿಯ ಹಳೆ ಪೆಟ್ಟಿಗೆ ಅಂಗಡಿ ಹತ್ತಿರ ನಮ್ಮ ಗ್ರಾಮದ ಲೋಕೇಶ ಉರುಫ್‌ ಲೋಕಿ ಬಿನ್‌ ಕದರಪ್ಪ ನನ್ನನ್ನು, ನೀನು ಮೊದಲಿಗಿಂತ ಈಗ ಚೆನ್ನಾಗಿದ್ದೀಯ ಎದೆಗಳು ದಪ್ಪವಾಗಿ ಇವೆ ಹಿಡಿದುಕೊಳ್ಳೋಕೆ ಕರೆಕ್‌ಟಾಗಿ ಸಿಗುತ್ತವೆ ಒಂದು ಸಾರಿ ನಿನ್ನ ಮಾಡಬೇಕು ಪರ್‌ಮಿಷನ್‌ ಕೊಡು ಎಂದು ನನ್ನ ಎದೆಯನ್ನು ಮುಟ್ಟೋಕೆ ಬಂದಿರುತ್ತಾನೆ ಕೈ ಹಿಡಿದು ಎಳೆದಾಡಿರುತ್ತಾನೆ ಆಗ ನಾನು ಬೈದೆ ಆಗ ಅವನು ಬರೀ 100 ರೂ ಕೊಟ್ಟರೆ 200 ರೂ ಬಿಸಾಕಿದರೆ ಎಂತೆಂತಾ ಹುಡಿಗೀರು ಬರುತ್ತಾರೆ ನೀನು ನನ್ನನ್ನು ಆಟ ಆಡಿಸ್ತೀಯ ಆಯ್ತು ಎಲ್ಲಿಗೆ ಹೋಗ್ತೀಯ ಸಿಕ್ತೀಯ ಬಿಡು ನಿನ್ನ ಶೇಪ್‌ ನೋಡು ಹೆಂಗೈತೆ ಯಾಕೆ ಮೊಂಡಾಟ ಆಡ್ತೀಯ ನೀನು ಒಂದೇ ಒಂದು ಸಾರಿ ಬಾ ಆಮೇಲೆ ನಿನ್ನ ಕೇಳದೇ ಇಲ್ಲ ಎಂದು ನನ್ನನ್ನು ಪೀಡಿಸಿರುತ್ತಾನೆ ಇದರಿಂದ ನನ್ನ ಮನಸ್ಸಿಗೆ ತುಂಬಾ ಆಘಾತುಂಟಾಗಿರುತ್ತದೆ. ಮತ್ತು ನೋವುಂಟಾಗಿರುತ್ತದೆ. ಈ ಮೊದಲು ಆವಾಗ ಆವಾಗ ನನ್ನನ್ನು ಕೆಟ್ಟದಾಗಿ ನೋಡುತ್ತಿದ್ದು ಕೆಟ್ಟದಾಗಿ ಮಾತಾಡುತ್ತಿದ್ದ ನಾನು ಹಲವಾರು ಬಾರಿ ಬುದ್ದಿ ಹೇಳಿ ಬಯುತ್ತಿದ್ದೆ ಇದುವರೆಗೂ ಇವನಿಗೆ ತಿಳುವಳಿಕೆ ಹೇಳಿದರೂ ಇವನು ಬದಲಾಗುವ ಸ್ಥಿತಿ ಕಾಣುತ್ತಿಲ್ಲ ಆದ್ದರಿಮದ ಇವನನ್ನು ಠಾನೆಗೆ ಕರೆಸಿ ಬುದ್ದಿ  ಹೇಳಿ ಕಾನೂನು ರೀತಿ ಕ್ರಮ ಜರುಗಿಸಿ ನನ್ನ ತಂಟೆಗೆ ಬಾರದಂತೆ ಬಂದೋಬಸ್ತ್‌ ಮಾಡಬೇಕೆಂದು ನೀಡಿದ ಫಿರ್ಯಾದು ಅಂಶವಾಗಿರುತ್ತೆ.

ಚೇಳೂರು  ಪೊಲೀಸ್  ಠಾಣಾ  ಯು.ಡಿ  ಆರ್  ನಂ 08/2018  ಕಲಂ 174  ಸಿ.ಆರ್.ಪಿ.ಸಿ

ದಿನಾಂಕ12/03/2018  ರಂದು  ಮಧ್ಯಾಹ್ನ 1-00 ಗಂಟೆಗೆ ಪಿರ್ಯಾದಿ ಲಕ್ಷ್ಮಕ್ಕ ರವರು  ಠಾಣೆಗೆ  ಹಾಜರಾಗಿ   ನೀಡಿದ ಪಿರ್ಯಾದು  ಅಂಶವೇನಂದರೆ, ನಮ್ಮ ಯಜಮಾನರಾದ ಕೆಂಪಸಿದ್ದಯ್ಯರವರು ಹೀಗ್ಗೆ ಸುಮಾರು ವರ್ಷಗಳ ಹಿಂದೆ ಮರಣ ಹೊಂದಿರುತ್ತಾರೆ, ನಮಗೆ ಒಟ್ಟು 7 ಜನ ಮಕ್ಕಳಿದ್ದು ,6 ಜನ ಹೆಣ್ಣು ಮಕ್ಕಳು,1 ಗಂಡು ಮಗನಿರುತ್ತಾನೆ ,ನಮ್ಮ 6 ಜನ ಹೆಣ್ಣು ಮಕ್ಕಳಿಗೂ ಮದುವೆ ಮಾಡಿದ್ದು ಅವರುಗಳು ಅವರ ಗಂಡನ ಮನೆಯಲ್ಲಿ ವಾಸವಾಗಿರುತ್ತಾರೆ, ಕೊನೆಯ ಮಗನಾದ ಪಾಲಾಕ್ಷರವರಿಗೆ ನನ್ನ ಮೊದಲನೆಯ ಮಗಳಾದ ಕೆಂಪರಾಜಮ್ಮರವರ ಮಗಲಾದ ವಿನೋದಮ್ಮ ಎಂಬುವರನ್ನು ಹೀಗ್ಗೆಸುಮಾರು 5 ವರ್ಷಗಳ ಹಿಂದೆ ಮದುವೆ ಮಾಡಿಕೊಂಡಿರುತ್ತೇನೆ. ಮದುವೆಯಾದ ಮೇಲೆ ನನ್ನ ಮಗ ಮತ್ತು ನನ್ನ ಸೊಸೆ ನಮ್ಮ ಮನೆಯಲ್ಲಿ ಒಟ್ಟಿಗೆ ವಾಸವಾಗಿರುತ್ತೇವೆ, ಮದುವೆಯಾದ 6 ತಿಂಗಳ ನಂತರ ನನ್ನ ಸೊಸೆ ವಿನೋದಮ್ಮರವರು ನನ್ನ ಮಗನನ್ನು ಬಿಟ್ಟು ಅವರ ತವರು ಮನೆಗೆ ಹೋಗಿದ್ದು ಅವಳು ಅವರ ತವರು ಮನಗೆ ಹೋಗಿ ಅಲ್ಲಿಯೇ ವಾಸವಾಗಿದ್ದು, ಹೀಗ್ಗೆ 6 ತಿಂಗಳ ಹಿಂದೆ ನನ್ನ ಸೊಸೆ ಅವಳೆ ನಮ್ಮ ಮನೆಗೆ ಬಂದು ನನ್ನ ಮಗನ ಜೊತೆ ಸಂಸಾರ ಮಾಡಿಕೊಂಡಿದ್ದು ,ಸುಮಾರು 4 ತಿಂಗಳ ಕಾಲ ನಮ್ಮ ಮನೆಯಲ್ಲಿ ನನ್ನ ಮಗನ ಜೊತೆ ಅನ್ನೀನ್ಯ ಸಂಸಾರ ಮಾಡಿಕೊಂಡಿದ್ದಳು, ಹೀಗ್ಗೆ 2 ತಿಂಗಳ ಹಿಂದೆ ಮತ್ತೆ ವಿನೋದಮ್ಮರವರು ನಮ್ಮ ಮನೆಯನ್ನು ಬಿಟ್ಟು ಅವರ ತವರು ಮನೆಗೆ ಹೋಗಿದ್ದಳು .ನನ್ನ ಮಗ ಪಾಲಾಕ್ಷ ಮತ್ತು ನಾನು ನಮ್ಮ ಮನೆಯಲ್ಲಿಯೇ ಇದ್ದೆವು , ನನ್ನ ಮಗ ಅವನ ಹೆಂಡತಿಯಾದ ವಿನೋದಮ್ಮರವರು ಬಿಟ್ಟು ಹೋದಾಗಿನಿಂದಲೂ ಜೀವನದಲ್ಲಿ ಜಿಗುಪ್ಸೆ ಹೋದಿದ್ದನು, ದಿನಾಂಕ12/03/2018 ಬೆಳಗ್ಗೆ  9-00 ಗಂಟೆಯ ಸಮಯದಲ್ಲಿ ನನ್ನ ಮಗ ಪಾಲಾಕ್ಷರವರು ತೋಟಕ್ಕೆ ನೀರು ಹಾಯಿಸುವುದಾಗಿ ಮನೆಯಲ್ಲಿ ನನಗೆ ಹೇಳಿ ನಮ್ಮ ಬಾಪ್ತು ತೋಟಕ್ಕೆ ಹೋಗಿದ್ದು, ನಾನು ಮನೆಯಲ್ಲಿ ಇದ್ದಾಗ ನಮ್ಮ ಗ್ರಾಮದ ನಮ್ಮ ಸಂಬಂದಿ ಮಂಜನಾಥ್ ಬಿನ್ ಲಿಂಗಪ್ಪರವರು ನಮ್ಮ ಮನೆಯ ಹತ್ತಿರ 12-30ಗಂಟೆಯ ಸಮಯದಲ್ಲಿ  ಬಂದು ನಿನ್ನ ಮಗ ಪಾಲಾಕ್ಷರವರು ನಿಮ್ಮ ಹಲಸಿನ ಮರಕ್ಕೆ ಹಗ್ಗದಿಂದ ನೇಣು ಜೀರಿಕೊಂಡು ಮೃತಪಟ್ಟಿರುತ್ತಾನೆಂತ ವಿಚಾರವನ್ನು ತಿಳಿಸಿದರು, ನಾನು ಮತ್ತು ನಮ್ಮ ಸಂಬಂದಿಕರು ಹೋಗಿ ನೋಡಿ ನನ್ನ ಮಗನಾದ ಪಾಲಾಕ್ಷರವರು ನಮ್ಮ ಬಾಪ್ತು ಹಲಸಿನ ಮರದ ಕೊಂಬೆಗೆ ಹಗ್ಗದಿಂದ ನೇಣು ಜೀರಿಕೊಂಡು ಮೃತ ಪಟ್ಟಿರುತ್ತಾನೆ ,ನನ್ನ ಮಗ ಅವನ ಹೆಂಡತಿ ವಿನೋದಮ್ಮ ಅವರ ತವರು ಮನೆಯಿಂದ ಬರದಿದ್ದಕ್ಕಿ ಮನನೊಂದು ಜೀವನದಲ್ಲಿಜಿಗುಪ್ಸೆ ಹೊಂದಿ ಸಾಯಲೇ ಬೇಕೆಂಬ ದ್ದೇಶ್ಯದಿಂದ ತನ್ಮೂಲಕ ತಾನೇ ಹಗ್ಗದಿಂದ ನಮ್ಮ ಬಾಪ್ತು ಅಲಸಿನ ಮರದ ಕೊಂಬೆಗೆ ನೇಣು ಜೀರಿಕೊಂಡು ದಿನಾಂಕ12/03/2018 ರಂದು  ಸುಮಾರು 10-00   ರಿಂದ  ಮಧ್ಯಾಹ್ನ 12-00  ಗಂಟೆಯ  ಮಧ್ಯೆ ಸಮಯದಲ್ಲಿ  ಮೃತಪಟ್ಟಿರುತ್ತೆ.  ಮೃತನ ಸಾವಿನಲ್ಲಿ ಯಾವುದೇ ಅನುಮಾನವಿರುವುದಿಲ್ಲಾ.  ಆದ್ದರಿಂದ   ಮುಂದಿನ  ಕಾನೂನು  ರೀತ್ಯ  ಕ್ರಮ  ಜರುಗಿಸಲು  ಕೋರಿ  ಇತ್ಯಾದಿಯಾದ  ಪಿರ್ಯಾದು  ಅಂಶ.

ಮಿಡಿಗೇಶಿ ಪೊಲೀಸ್ ಠಾಣಾ ಯು.ಡಿ.ಆರ್.ನಂ.02/2018, ಕಲಂ: 174 ಸಿ.ಆರ್.ಪಿ.ಸಿ.

ದಿನಾಂಕ:12/03/2018 ರಂದು ಸಂಜೆ 06:15 ಗಂಟೆಗೆ ಪಿರ್ಯಾದಿ ಪಿ.ಆರ್.ರಂಗನಾಥಪ್ಪ ಬಿನ್ ರಂಗಪ್ಪ, 60 ವರ್ಷ, ಬಲಿಜ  ಜನಾಂಗ, ಜಿರಾಯ್ತಿ, ನರಸಂಬೂದಿ ಗ್ರಾಮ, ಅಗಳಿ ಮಂಡಲ್, ಮಡಕಶಿರಾ ತಾಲ್ಲೂಕು, ಅನಂತಪುರ ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನನ್ನ ಮಗಳಾದ 26 ವರ್ಷ ವಯಸ್ಸಿನ ಕವಿತ ಎಂಬುವಳನ್ನು ಈಗ್ಗೆ 06 ವರ್ಷಗಳ ಹಿಂದೆ ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಮಜರೆ ಜಂಗಮ್ಮಯ್ಯನಪಾಳ್ಯದ ವಾಸಿ ಅನಂತರಾಮು ಬಿನ್ ಹನುಮಪ್ಪ ಎಂಬುವರಿಗೆ ಕೊಟ್ಟು ಮದುವೆ ಮಾಡಿದ್ದು, ಇವರುಗಳಿಗೆ ಎರಡು ಮಕ್ಕಳಿದ್ದು, ಸಂಸಾರದಲ್ಲಿ ಅನ್ಯೂನ್ಯವಾಗಿದ್ದರು. ಈಗಿರುವಾಗ ನನ್ನ ಮಗಳಾದ ಕವಿತ ಳಿಗೆ ಎರಡನೇ ಮಗುವಿಗೆ ಹೆರಿಗೆಯಾದ ಒಂದು ತಿಂಗಳ ನಂತರ ಸನ್ನಿ ತರಹ ಆಗಿ ನನ್ನ ಮಗಳಿಗೆ ಮಾನಸಿಕವಾಗಿ ಜ್ಞಾನ ಸರಿಯಿರಲಿಲ್ಲ. ಆದ್ದರಿಂದ ನನ್ನ ಮಗಳನ್ನು ನನ್ನ ಅಳಿಯ ಮತ್ತು ಮನೆಯವರು ತುಮಕೂರಿನ ಶ್ರೀದೇವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರೂ ಸಹ, ನನ್ನ ಮಗಳಿಗೆ ಇದ್ದ ಸನ್ನಿ ಖಾಯಿಲೆ ವಾಸಿಯಾಗಿರಲಿಲ್ಲ. ಈಗಿರುವಾಗ ಈ ದಿನ ಅಂದರೆ ದಿನಾಂಕ:12/03/2018 ರಂದು ಮದ್ಯಾಹ್ನ ಸುಮಾರು 02:30 ಗಂಟೆಯ ಸಮಯದಲ್ಲಿ ಮನೆಯಲ್ಲಿ ಯಾರು ಇಲ್ಲದೇ ಇದ್ದಾಗ ನನ್ನ ಮಗಳು ಕವಿತ ಳು ಮನೆಯ ಮುಂಭಾಗಿಲನ್ನು ಹಾಕಿಕೊಂಡು ಮನೆಯ ಒಳಗಡೆ ಮನೆಯಲ್ಲಿದ್ದ ಸೀಮೆ ಎಣ್ಣೆಯನ್ನು ತನ್ನ ಮೈಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದರಿಂದ ಮೈಯೆಲ್ಲಾ ಸುಟ್ಟಗಾಯಗಳಾಗಿ ಮನೆಯಲ್ಲಿಯೇ ಮೃತಪಟ್ಟಿರುತ್ತಾಳೆ. ನನ್ನ ಮಗಳ ಸಾವಿನಲ್ಲಿ ಬೇರೆ ಯಾವುದೇ ಅನುಮಾನವಿರುವುದಿಲ್ಲ, ಆದ್ದರಿಂದ ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ನೀಡಿದ ದೂರಿನ ಅಂಶ.Monday, 12 March 2018

ಅಪರಾಧ ಘಟನೆಗಳು 12-03-18

ಜಯನಗರ ಪೊಲೀಸ್ ಠಾಣಾ ಯುಡಿಆರ್ ನಂ. 02/2018 ಕಲಂ 174 ಸಿಆರ್‌ಪಿಸಿ

ದಿನಾಂಕ: 11-03-2018 ರಂದು ಬೆಳಿಗ್ಗೆ 9-30 ಗಂಟೆಗೆ ತುಮಕೂರು ಟೌನ್‌ ಗೆದ್ದಲಹಳ್ಳಿ ವಾಸಿ ಮೋಹನ್‌‌ಕುಮಾರ @ ಕುಮಾರ ಬಿನ್ ವೆಂಕಟಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ಕಂಪ್ಯೂಟರ್ ಮುದ್ರಿತ ದೂರಿನ ಅಂಶವೇನೆಂದರೆ, ನಾನು ಈ ದಿನ ದಿನಾಂಕ: 11-03-2018 ರಂದು ಬೆಳಿಗ್ಗೆ ಸುಮಾರು 7-30 ಗಂಟೆ ಸಮಯದಲ್ಲಿ ತುಮಕೂರು ಟೌನ್ ಜಯನಗರ ತರಕಾರಿ ಮಾರ್ಕೆಟ್‌‌ ಸಮೀಪ ಇರುವ ಗಾರೆನರಸಯ್ಯನಕಟ್ಟೆಯ ಬಳಿಗೆ ಲೆಟ್ರಿನ್‌‌ ಮಾಡಲು ಹೋಗಿದ್ದೆನು.  ಅದೇ ಸಮಯದಲ್ಲಿ ಒಬ್ಬ ವ್ಯಕ್ತಿಯು ಬಜಾಜ್‌‌ ಡಿಸ್ಕವರ್‌‌‌‌ ಬೈಕಿನಲ್ಲಿ ಗಾರೆನರಸಯ್ಯನ ಕಟ್ಟೆಯ ಬಳಿಗೆ ಲೆಟ್ರಿನ್‌‌‌ ಮಾಡಲು ಬಂದು, ಮೋಟಾರ್‌‌ ಬೈಕನ್ನು ಗಾರೆನರಸಯ್ಯನಕಟ್ಟೆಯ ಏರಿಯ ಹಿಂಭಾಗದಲ್ಲಿ ನಿಲ್ಲಿಸಿ,  ಗಾರೆನರಸಯ್ಯನಕಟ್ಟೆ ಅಂಗಳಲ್ಲಿ ಲೆಟ್ರಿನ್‌‌ ಮಾಡಿ, ನೀರು ಮುಟ್ಟಲು ಹೋದಾಗ ಆಕಸ್ಮಿಕವಾಗಿ ಗಾರೆನರಸಯ್ಯನಕಟ್ಟೆಯ ನೀರಿಗೆ ಮಕಾಡೆಯಾಗಿ ಬಿದ್ದಿದ್ದು, ತಕ್ಷಣ ನಾನು ಕಿರುಚಿಕೊಂಡು ಸ್ಥಳದಲ್ಲಿ ಬಿದ್ದಿದ್ದ ಒಂದು ಧಾರವನ್ನು ಎಸೆದು ಸದರಿ ವ್ಯಕ್ತಿಯನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದ್ದು, ಆದರೆ ಸದರಿ ವ್ಯಕ್ತಿಯು ನೀರಿನೋಳಗೆ ಮುಳುಗಿ ಹೋದರು.   ನಂತರ ನಾನು ಈ ವಿಚಾರವನ್ನು ಜಯನಗರ  ಪೊಲೀಸರಿಗೆ ತಿಳಿಸಿದ್ದು, ಪೊಲೀಸರು ಅಗ್ನಿಶಾಮಕ ಸಿಬ್ಬಂದಿಯವರನ್ನು ಕರೆಸಿಕೊಂಡು, ಗಾರೆನರಸಯ್ಯನಕಟ್ಟೆ ಕೆರೆಯ ನೀರಿನಲ್ಲಿ ಮುಳುಗಿದ್ದ ವ್ಯಕ್ತಿಯನ್ನು ಈ ದಿನ ಬೆಳಿಗ್ಗೆ ಸುಮಾರು 9-00 ಗಂಟೆಯ ವೇಳೆಗೆ ಮೇಲಕ್ಕೆ ಎತ್ತಿದ್ದು, ಸದರಿ ವ್ಯಕ್ತಿಯು ತುಮಕೂರು ಟೌನ್ ಮೆಳೇಕೋಟೆಯ ವಾಸಿ ಗಾರೆ ಕೆಲಸ ಮಾಡಿಸುವ ಮೇಸ್ತ್ರಿ ಗಂಗರಾಜು ಎಂಬುದಾಗಿ ತಿಳಿದು ಬಂದಿರುತ್ತೆ.   ಆದ್ದರಿಂದ ತಾವು ಗಾರೆನರಸಯ್ಯನಕಟ್ಟೆಯ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಮೃತ ಗಂಗರಾಜು ರವರ ವಾರಸುದಾರರನ್ನು ಪತ್ತೆ ಮಾಡಿ ಅವರನ್ನು ಕರೆಸಿಕೊಂಡು, ಶವದ ಮೇಲೆ ಮುಂದಿನ ಕ್ರಮ ಜರುಗಿಸಲು ಕೋರಿ ನೀಡಿರುವ ಪಿರ್ಯಾದು ಅಂಶವಾಗಿರುತ್ತೆ.

ಕೆ.ಬಿ.ಕ್ರಾಸ್ ಪೊಲೀಸ್ ಠಾಣಾ ಮೊ ನಂ 43/2018 ಕಲಂ 279,304(ಎ)  ಐಪಿಸಿ

ದಿನಾಂಕ:10.03.2018 ರಂದು ರಾತ್ರಿ 7-40 ಗಂಟೆಗೆ ಫಿರ್ಯಾದು ಬಿ ಹರೀಶ ಬಿನ್ ಸಿ ಬಸವಲಿಂಗಯ್ಯ, 52 ವರ್ಷ, ಲಿಂಗಾಯ್ತರು, ಜಿರಾಯ್ತಿ ಬಿಳಿಗೆರೆ, ಕಿಬ್ಬನಹಳ್ಳಿ ಹೋ, ತಿಪಟೂರು ತಾ|| ರವರು  ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ಈ ದಿನ ದಿನಾಂಕ:10.03.2018 ರಂದು ಸಂಜೆ 6-00 ಗಂಟೆ ಸಮಯದಲ್ಲಿ ಎನ್ ಹೆಚ್-206 ರಸ್ತೆಯ ಪಕ್ಕದಲ್ಲಿರುವ ನಮ್ಮ ಮನೆಯ ಹತ್ತಿರ ನಾನು ಕೆಲಸ ಮಾಡುತ್ತಿರುವಾಗ್ಗೆ, ಈ ಸಮಯದಲ್ಲಿ ನಮ್ಮೂರಿನ ವಾಸಿ ಲೇಟ್ ಬಸವರಾಜುರವರ ಮಗನಾದ ಬಿ ಶಿವಶಂಕರ ರವರು ತನ್ನ ಬಾಬ್ತು ಕೆಎ-44 ಜೆ-0570 ನೇ ಟಿ ವಿ ಎಸ್ ಹೆವಿ ಡ್ಯೂಟಿ ದ್ವಿಚಕ್ರ ವಾಹನದಲ್ಲಿ ಬಿಳಿಗೆರೆಯಿಂದ ಕೆ ಬಿ ಕ್ರಾಸ್ ಕಡೆಗೆ ಎನ್ ಹೆಚ್-206 ರಸ್ತೆಯ ಎಡ ಬದಿಯಲ್ಲಿ ಹೋಗುತ್ತಿರಬೇಕಾದರೆ ಈ ವೇಳೆಯಲ್ಲಿ ಕೆ ಬಿ ಕ್ರಾಸ್ ಕಡೆಯಿಂದ ಒಂದು ಕಾರನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದವನೇ ರಸ್ತೆಯ ಬಲಬದಿಗೆ ಹೋಗಿ ಶಿವಶಂಕರ ರವರು ಚಲಾಯಿಸುತ್ತಿದ್ದ ಕೆಎ-44 ಜೆ-0570 ನೇ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿದ್ದು, ನಾನು ಕೂಡಲೇ ಸ್ಥಳಕ್ಕೆ ಹೋಗಿ ನೋಡಲಾಗಿ ಶಿವಶಂಕರರವರು ಸ್ಥಳದಲ್ಲೇ ಪೆಟ್ಟುಬಿದ್ದು ಮೃತಪಟ್ಟಿದ್ದು, ಎರಡು ವಾಹನಗಳು ಜಖಂಗೊಂಡಿರುತ್ತವೆ ಡಿಕ್ಕಿ ಹೊಡೆಸಿದ ಕಾರಿನ ನಂಬರ್ ನೋಡಲಾಗಿ ಕೆಎ-04 ಎಮ್ ಎಫ್-1023 ನೇ ಮಹಿಂದ್ರಾ ಸ್ಕಾರ್ಫಿಯೋ ಕಾರು ಆಗಿರುತ್ತೆ, ನಂತರ ಮೃತ ಶಿವಶಂಕರ ರವರ ಶವವನ್ನು ತಿಪಟೂರು ಸರ್ಕಾರಿ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಿರುತ್ತೇವೆ, ಶವವು ತಿಪಟೂರು ಆಸ್ಪತ್ರೆ ಶವಾಗಾರದಲ್ಲಿ ಇರುತ್ತೆ, ಈ ಅಫಘಾತಕ್ಕೆ ಕೆಎ-04 ಎಮ್ ಎಫ್-1023 ನೇ ಮಹಿಂದ್ರಾ ಸ್ಕಾರ್ಫಿಯೋ ಕಾರಿನ ಅತೀ ವೇಗ ಮತ್ತು ನಿರ್ಲಕ್ಷತೆಯೇ ಕಾರಣವಾಗಿದ್ದು ಈತನ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಲು ಕೋರಿ ಇತ್ಯಾದಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿಕೊಂಡು ಪ್ರಕರಣ ತನಿಖೆಯಲ್ಲಿರುತ್ತೆ.


Page 1 of 3
Start
Prev
1

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 52 guests online
Content View Hits : 258148