lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ: 21-06-2018. ಸುಲಿಗೆಕೋರರ ಬಂಧನ: ದಿನಾಂಕ:18-06-2018 ರಂದು... >>   ಪೊಲೀಸ್ ಪ್ರಕಟಣೆ ತುಮಕೂರು ಜಿಲ್ಲಾ ಪೊಲೀಸ್ ಪ್ರಕಟಣೆ   ಆತ್ಮೀಯ ನಾಗರೀಕರಲ್ಲಿ... >> ತುಮಕೂರು ಜಿಲ್ಲೆಯಲ್ಲಿ 2018 ನೇ ಮೇ ಮಾಹೆಯಲ್ಲಿ ಸಂಭವಿಸಿದ ರಸ್ತೆ ಅಪಘಾತಗಳ ಅಂಕಿ ಅಂಶಗಳ... >> ಪತ್ರಿಕಾ ಪ್ರಕಟಣೆ ದಿ 19.04.18 ಪೊಲೀಸ್ ಇಲಾಖೆಯು ಈ ಮೂಲಕ ಸಾರ್ವಜನಿಕರಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ: 15-05-2018 ರಂದು ತುಮಕೂರು ನಗರದ ವಿಶ್ವವಿದ್ಯಾನಿಲಯ ಕಲಾ... >>     ಪತ್ರಿಕಾ ಪ್ರಕಟಣೆ. ದಿನಾಂಕ: 10-05-2018 8 ಲಕ್ಷ ಬೆಲೆ ಬಾಳುವ ಮೊಬೈಲ್ ಮತ್ತು  ವಾಹನ ಕಳ್ಳರ... >> ಪತ್ರಿಕಾ ಪ್ರಕರಣೆ, ದಿನಾಂಕ: 07-05-18 ವಾರಸುದಾರರಿಲ್ಲದ 2,98,01,000/- ರೂ  ಹಣ ಪತ್ತೆ     ದಿನಾಂಕ:... >> ಪತ್ರಿಕಾ ಪ್ರಕಟಣೆ:- -:ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿಯ ಬಂಧನ:- ದಿನಾಂಕ :... >> ಪತ್ರಿಕಾ ಪ್ರಕಟಣೆ ದಿಃ25-04-2018. ದಿನಾಂಕ:24-04-2018 ರ ರಾತ್ರಿ 3 ಜನ ಅನುಮಾನಸ್ಪದ ವ್ಯಕ್ತಿಗಳು... >> ಪತ್ರಿಕಾ ಪ್ರಕಟಣೆ ದಿನಾಂಕ: 21-04-2018. ಕೊಲೆ ಆರೋಪಿಯ ಬಂಧನ:   ಹೆಬ್ಬೂರು ಪೊಲೀಸ್ ಠಾಣಾ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< March 2018 >
Mo Tu We Th Fr Sa Su
      1 2 3 4
5 6 7 8 9 10 11
12 14 15 16 17 18
19 20 21 22 23 24 25
26 27 28 29 30 31  
Tuesday, 13 March 2018
ಅಪರಾಧ ಘಟನೆಗಳು 13-03-18

ಬಡವನಹಳ್ಳಿ ಪೊಲೀಸ್ ಠಾಣಾ ಮೊ.ನಂ:34/2018 ಕಲಂ:354 [ಎ] & [ಡಿ] ಐ.ಪಿ.ಸಿ

ದಿನಾಂಕ:12/03/2018 ರಂದು ಬೆಳಗ್ಗೆ 11-30 ಗಂಟೆಯಲ್ಲಿ ಫಿರ್ಯಾದಿ ಬೆಲ್ಲದಮಡುಗು ವಾಸಿ ಕುಲವಂತಿ ಸಾಖ್ಯೇಲರ್‌ ರವರು ಠಾಣೆಗೆ ಹಾಜರಾಗಿ, ದಿ:09/03/18 ರಂದು ರಾತ್ರಿ 7 ಗಂಟೆ ಸಮಯದಲ್ಲಿ ನಾನು ಟಾಯ್ಲೆಟ್‌ಗೆ ಹೋಗಿ ವಾಪಾಸ್‌ ಬರುತ್ತಿದ್ದಾಗ ನಮ್ಮ ಕಾಲೋನಿಯ ಹಳೆ ಪೆಟ್ಟಿಗೆ ಅಂಗಡಿ ಹತ್ತಿರ ನಮ್ಮ ಗ್ರಾಮದ ಲೋಕೇಶ ಉರುಫ್‌ ಲೋಕಿ ಬಿನ್‌ ಕದರಪ್ಪ ನನ್ನನ್ನು, ನೀನು ಮೊದಲಿಗಿಂತ ಈಗ ಚೆನ್ನಾಗಿದ್ದೀಯ ಎದೆಗಳು ದಪ್ಪವಾಗಿ ಇವೆ ಹಿಡಿದುಕೊಳ್ಳೋಕೆ ಕರೆಕ್‌ಟಾಗಿ ಸಿಗುತ್ತವೆ ಒಂದು ಸಾರಿ ನಿನ್ನ ಮಾಡಬೇಕು ಪರ್‌ಮಿಷನ್‌ ಕೊಡು ಎಂದು ನನ್ನ ಎದೆಯನ್ನು ಮುಟ್ಟೋಕೆ ಬಂದಿರುತ್ತಾನೆ ಕೈ ಹಿಡಿದು ಎಳೆದಾಡಿರುತ್ತಾನೆ ಆಗ ನಾನು ಬೈದೆ ಆಗ ಅವನು ಬರೀ 100 ರೂ ಕೊಟ್ಟರೆ 200 ರೂ ಬಿಸಾಕಿದರೆ ಎಂತೆಂತಾ ಹುಡಿಗೀರು ಬರುತ್ತಾರೆ ನೀನು ನನ್ನನ್ನು ಆಟ ಆಡಿಸ್ತೀಯ ಆಯ್ತು ಎಲ್ಲಿಗೆ ಹೋಗ್ತೀಯ ಸಿಕ್ತೀಯ ಬಿಡು ನಿನ್ನ ಶೇಪ್‌ ನೋಡು ಹೆಂಗೈತೆ ಯಾಕೆ ಮೊಂಡಾಟ ಆಡ್ತೀಯ ನೀನು ಒಂದೇ ಒಂದು ಸಾರಿ ಬಾ ಆಮೇಲೆ ನಿನ್ನ ಕೇಳದೇ ಇಲ್ಲ ಎಂದು ನನ್ನನ್ನು ಪೀಡಿಸಿರುತ್ತಾನೆ ಇದರಿಂದ ನನ್ನ ಮನಸ್ಸಿಗೆ ತುಂಬಾ ಆಘಾತುಂಟಾಗಿರುತ್ತದೆ. ಮತ್ತು ನೋವುಂಟಾಗಿರುತ್ತದೆ. ಈ ಮೊದಲು ಆವಾಗ ಆವಾಗ ನನ್ನನ್ನು ಕೆಟ್ಟದಾಗಿ ನೋಡುತ್ತಿದ್ದು ಕೆಟ್ಟದಾಗಿ ಮಾತಾಡುತ್ತಿದ್ದ ನಾನು ಹಲವಾರು ಬಾರಿ ಬುದ್ದಿ ಹೇಳಿ ಬಯುತ್ತಿದ್ದೆ ಇದುವರೆಗೂ ಇವನಿಗೆ ತಿಳುವಳಿಕೆ ಹೇಳಿದರೂ ಇವನು ಬದಲಾಗುವ ಸ್ಥಿತಿ ಕಾಣುತ್ತಿಲ್ಲ ಆದ್ದರಿಮದ ಇವನನ್ನು ಠಾನೆಗೆ ಕರೆಸಿ ಬುದ್ದಿ  ಹೇಳಿ ಕಾನೂನು ರೀತಿ ಕ್ರಮ ಜರುಗಿಸಿ ನನ್ನ ತಂಟೆಗೆ ಬಾರದಂತೆ ಬಂದೋಬಸ್ತ್‌ ಮಾಡಬೇಕೆಂದು ನೀಡಿದ ಫಿರ್ಯಾದು ಅಂಶವಾಗಿರುತ್ತೆ.

ಚೇಳೂರು  ಪೊಲೀಸ್  ಠಾಣಾ  ಯು.ಡಿ  ಆರ್  ನಂ 08/2018  ಕಲಂ 174  ಸಿ.ಆರ್.ಪಿ.ಸಿ

ದಿನಾಂಕ12/03/2018  ರಂದು  ಮಧ್ಯಾಹ್ನ 1-00 ಗಂಟೆಗೆ ಪಿರ್ಯಾದಿ ಲಕ್ಷ್ಮಕ್ಕ ರವರು  ಠಾಣೆಗೆ  ಹಾಜರಾಗಿ   ನೀಡಿದ ಪಿರ್ಯಾದು  ಅಂಶವೇನಂದರೆ, ನಮ್ಮ ಯಜಮಾನರಾದ ಕೆಂಪಸಿದ್ದಯ್ಯರವರು ಹೀಗ್ಗೆ ಸುಮಾರು ವರ್ಷಗಳ ಹಿಂದೆ ಮರಣ ಹೊಂದಿರುತ್ತಾರೆ, ನಮಗೆ ಒಟ್ಟು 7 ಜನ ಮಕ್ಕಳಿದ್ದು ,6 ಜನ ಹೆಣ್ಣು ಮಕ್ಕಳು,1 ಗಂಡು ಮಗನಿರುತ್ತಾನೆ ,ನಮ್ಮ 6 ಜನ ಹೆಣ್ಣು ಮಕ್ಕಳಿಗೂ ಮದುವೆ ಮಾಡಿದ್ದು ಅವರುಗಳು ಅವರ ಗಂಡನ ಮನೆಯಲ್ಲಿ ವಾಸವಾಗಿರುತ್ತಾರೆ, ಕೊನೆಯ ಮಗನಾದ ಪಾಲಾಕ್ಷರವರಿಗೆ ನನ್ನ ಮೊದಲನೆಯ ಮಗಳಾದ ಕೆಂಪರಾಜಮ್ಮರವರ ಮಗಲಾದ ವಿನೋದಮ್ಮ ಎಂಬುವರನ್ನು ಹೀಗ್ಗೆಸುಮಾರು 5 ವರ್ಷಗಳ ಹಿಂದೆ ಮದುವೆ ಮಾಡಿಕೊಂಡಿರುತ್ತೇನೆ. ಮದುವೆಯಾದ ಮೇಲೆ ನನ್ನ ಮಗ ಮತ್ತು ನನ್ನ ಸೊಸೆ ನಮ್ಮ ಮನೆಯಲ್ಲಿ ಒಟ್ಟಿಗೆ ವಾಸವಾಗಿರುತ್ತೇವೆ, ಮದುವೆಯಾದ 6 ತಿಂಗಳ ನಂತರ ನನ್ನ ಸೊಸೆ ವಿನೋದಮ್ಮರವರು ನನ್ನ ಮಗನನ್ನು ಬಿಟ್ಟು ಅವರ ತವರು ಮನೆಗೆ ಹೋಗಿದ್ದು ಅವಳು ಅವರ ತವರು ಮನಗೆ ಹೋಗಿ ಅಲ್ಲಿಯೇ ವಾಸವಾಗಿದ್ದು, ಹೀಗ್ಗೆ 6 ತಿಂಗಳ ಹಿಂದೆ ನನ್ನ ಸೊಸೆ ಅವಳೆ ನಮ್ಮ ಮನೆಗೆ ಬಂದು ನನ್ನ ಮಗನ ಜೊತೆ ಸಂಸಾರ ಮಾಡಿಕೊಂಡಿದ್ದು ,ಸುಮಾರು 4 ತಿಂಗಳ ಕಾಲ ನಮ್ಮ ಮನೆಯಲ್ಲಿ ನನ್ನ ಮಗನ ಜೊತೆ ಅನ್ನೀನ್ಯ ಸಂಸಾರ ಮಾಡಿಕೊಂಡಿದ್ದಳು, ಹೀಗ್ಗೆ 2 ತಿಂಗಳ ಹಿಂದೆ ಮತ್ತೆ ವಿನೋದಮ್ಮರವರು ನಮ್ಮ ಮನೆಯನ್ನು ಬಿಟ್ಟು ಅವರ ತವರು ಮನೆಗೆ ಹೋಗಿದ್ದಳು .ನನ್ನ ಮಗ ಪಾಲಾಕ್ಷ ಮತ್ತು ನಾನು ನಮ್ಮ ಮನೆಯಲ್ಲಿಯೇ ಇದ್ದೆವು , ನನ್ನ ಮಗ ಅವನ ಹೆಂಡತಿಯಾದ ವಿನೋದಮ್ಮರವರು ಬಿಟ್ಟು ಹೋದಾಗಿನಿಂದಲೂ ಜೀವನದಲ್ಲಿ ಜಿಗುಪ್ಸೆ ಹೋದಿದ್ದನು, ದಿನಾಂಕ12/03/2018 ಬೆಳಗ್ಗೆ  9-00 ಗಂಟೆಯ ಸಮಯದಲ್ಲಿ ನನ್ನ ಮಗ ಪಾಲಾಕ್ಷರವರು ತೋಟಕ್ಕೆ ನೀರು ಹಾಯಿಸುವುದಾಗಿ ಮನೆಯಲ್ಲಿ ನನಗೆ ಹೇಳಿ ನಮ್ಮ ಬಾಪ್ತು ತೋಟಕ್ಕೆ ಹೋಗಿದ್ದು, ನಾನು ಮನೆಯಲ್ಲಿ ಇದ್ದಾಗ ನಮ್ಮ ಗ್ರಾಮದ ನಮ್ಮ ಸಂಬಂದಿ ಮಂಜನಾಥ್ ಬಿನ್ ಲಿಂಗಪ್ಪರವರು ನಮ್ಮ ಮನೆಯ ಹತ್ತಿರ 12-30ಗಂಟೆಯ ಸಮಯದಲ್ಲಿ  ಬಂದು ನಿನ್ನ ಮಗ ಪಾಲಾಕ್ಷರವರು ನಿಮ್ಮ ಹಲಸಿನ ಮರಕ್ಕೆ ಹಗ್ಗದಿಂದ ನೇಣು ಜೀರಿಕೊಂಡು ಮೃತಪಟ್ಟಿರುತ್ತಾನೆಂತ ವಿಚಾರವನ್ನು ತಿಳಿಸಿದರು, ನಾನು ಮತ್ತು ನಮ್ಮ ಸಂಬಂದಿಕರು ಹೋಗಿ ನೋಡಿ ನನ್ನ ಮಗನಾದ ಪಾಲಾಕ್ಷರವರು ನಮ್ಮ ಬಾಪ್ತು ಹಲಸಿನ ಮರದ ಕೊಂಬೆಗೆ ಹಗ್ಗದಿಂದ ನೇಣು ಜೀರಿಕೊಂಡು ಮೃತ ಪಟ್ಟಿರುತ್ತಾನೆ ,ನನ್ನ ಮಗ ಅವನ ಹೆಂಡತಿ ವಿನೋದಮ್ಮ ಅವರ ತವರು ಮನೆಯಿಂದ ಬರದಿದ್ದಕ್ಕಿ ಮನನೊಂದು ಜೀವನದಲ್ಲಿಜಿಗುಪ್ಸೆ ಹೊಂದಿ ಸಾಯಲೇ ಬೇಕೆಂಬ ದ್ದೇಶ್ಯದಿಂದ ತನ್ಮೂಲಕ ತಾನೇ ಹಗ್ಗದಿಂದ ನಮ್ಮ ಬಾಪ್ತು ಅಲಸಿನ ಮರದ ಕೊಂಬೆಗೆ ನೇಣು ಜೀರಿಕೊಂಡು ದಿನಾಂಕ12/03/2018 ರಂದು  ಸುಮಾರು 10-00   ರಿಂದ  ಮಧ್ಯಾಹ್ನ 12-00  ಗಂಟೆಯ  ಮಧ್ಯೆ ಸಮಯದಲ್ಲಿ  ಮೃತಪಟ್ಟಿರುತ್ತೆ.  ಮೃತನ ಸಾವಿನಲ್ಲಿ ಯಾವುದೇ ಅನುಮಾನವಿರುವುದಿಲ್ಲಾ.  ಆದ್ದರಿಂದ   ಮುಂದಿನ  ಕಾನೂನು  ರೀತ್ಯ  ಕ್ರಮ  ಜರುಗಿಸಲು  ಕೋರಿ  ಇತ್ಯಾದಿಯಾದ  ಪಿರ್ಯಾದು  ಅಂಶ.

ಮಿಡಿಗೇಶಿ ಪೊಲೀಸ್ ಠಾಣಾ ಯು.ಡಿ.ಆರ್.ನಂ.02/2018, ಕಲಂ: 174 ಸಿ.ಆರ್.ಪಿ.ಸಿ.

ದಿನಾಂಕ:12/03/2018 ರಂದು ಸಂಜೆ 06:15 ಗಂಟೆಗೆ ಪಿರ್ಯಾದಿ ಪಿ.ಆರ್.ರಂಗನಾಥಪ್ಪ ಬಿನ್ ರಂಗಪ್ಪ, 60 ವರ್ಷ, ಬಲಿಜ  ಜನಾಂಗ, ಜಿರಾಯ್ತಿ, ನರಸಂಬೂದಿ ಗ್ರಾಮ, ಅಗಳಿ ಮಂಡಲ್, ಮಡಕಶಿರಾ ತಾಲ್ಲೂಕು, ಅನಂತಪುರ ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನನ್ನ ಮಗಳಾದ 26 ವರ್ಷ ವಯಸ್ಸಿನ ಕವಿತ ಎಂಬುವಳನ್ನು ಈಗ್ಗೆ 06 ವರ್ಷಗಳ ಹಿಂದೆ ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಮಜರೆ ಜಂಗಮ್ಮಯ್ಯನಪಾಳ್ಯದ ವಾಸಿ ಅನಂತರಾಮು ಬಿನ್ ಹನುಮಪ್ಪ ಎಂಬುವರಿಗೆ ಕೊಟ್ಟು ಮದುವೆ ಮಾಡಿದ್ದು, ಇವರುಗಳಿಗೆ ಎರಡು ಮಕ್ಕಳಿದ್ದು, ಸಂಸಾರದಲ್ಲಿ ಅನ್ಯೂನ್ಯವಾಗಿದ್ದರು. ಈಗಿರುವಾಗ ನನ್ನ ಮಗಳಾದ ಕವಿತ ಳಿಗೆ ಎರಡನೇ ಮಗುವಿಗೆ ಹೆರಿಗೆಯಾದ ಒಂದು ತಿಂಗಳ ನಂತರ ಸನ್ನಿ ತರಹ ಆಗಿ ನನ್ನ ಮಗಳಿಗೆ ಮಾನಸಿಕವಾಗಿ ಜ್ಞಾನ ಸರಿಯಿರಲಿಲ್ಲ. ಆದ್ದರಿಂದ ನನ್ನ ಮಗಳನ್ನು ನನ್ನ ಅಳಿಯ ಮತ್ತು ಮನೆಯವರು ತುಮಕೂರಿನ ಶ್ರೀದೇವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರೂ ಸಹ, ನನ್ನ ಮಗಳಿಗೆ ಇದ್ದ ಸನ್ನಿ ಖಾಯಿಲೆ ವಾಸಿಯಾಗಿರಲಿಲ್ಲ. ಈಗಿರುವಾಗ ಈ ದಿನ ಅಂದರೆ ದಿನಾಂಕ:12/03/2018 ರಂದು ಮದ್ಯಾಹ್ನ ಸುಮಾರು 02:30 ಗಂಟೆಯ ಸಮಯದಲ್ಲಿ ಮನೆಯಲ್ಲಿ ಯಾರು ಇಲ್ಲದೇ ಇದ್ದಾಗ ನನ್ನ ಮಗಳು ಕವಿತ ಳು ಮನೆಯ ಮುಂಭಾಗಿಲನ್ನು ಹಾಕಿಕೊಂಡು ಮನೆಯ ಒಳಗಡೆ ಮನೆಯಲ್ಲಿದ್ದ ಸೀಮೆ ಎಣ್ಣೆಯನ್ನು ತನ್ನ ಮೈಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದರಿಂದ ಮೈಯೆಲ್ಲಾ ಸುಟ್ಟಗಾಯಗಳಾಗಿ ಮನೆಯಲ್ಲಿಯೇ ಮೃತಪಟ್ಟಿರುತ್ತಾಳೆ. ನನ್ನ ಮಗಳ ಸಾವಿನಲ್ಲಿ ಬೇರೆ ಯಾವುದೇ ಅನುಮಾನವಿರುವುದಿಲ್ಲ, ಆದ್ದರಿಂದ ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ನೀಡಿದ ದೂರಿನ ಅಂಶ.


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 63 guests online
Content View Hits : 289596