lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ: 21-06-2018. ಸುಲಿಗೆಕೋರರ ಬಂಧನ: ದಿನಾಂಕ:18-06-2018 ರಂದು... >>   ಪೊಲೀಸ್ ಪ್ರಕಟಣೆ ತುಮಕೂರು ಜಿಲ್ಲಾ ಪೊಲೀಸ್ ಪ್ರಕಟಣೆ   ಆತ್ಮೀಯ ನಾಗರೀಕರಲ್ಲಿ... >> ತುಮಕೂರು ಜಿಲ್ಲೆಯಲ್ಲಿ 2018 ನೇ ಮೇ ಮಾಹೆಯಲ್ಲಿ ಸಂಭವಿಸಿದ ರಸ್ತೆ ಅಪಘಾತಗಳ ಅಂಕಿ ಅಂಶಗಳ... >> ಪತ್ರಿಕಾ ಪ್ರಕಟಣೆ ದಿ 19.04.18 ಪೊಲೀಸ್ ಇಲಾಖೆಯು ಈ ಮೂಲಕ ಸಾರ್ವಜನಿಕರಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ: 15-05-2018 ರಂದು ತುಮಕೂರು ನಗರದ ವಿಶ್ವವಿದ್ಯಾನಿಲಯ ಕಲಾ... >>     ಪತ್ರಿಕಾ ಪ್ರಕಟಣೆ. ದಿನಾಂಕ: 10-05-2018 8 ಲಕ್ಷ ಬೆಲೆ ಬಾಳುವ ಮೊಬೈಲ್ ಮತ್ತು  ವಾಹನ ಕಳ್ಳರ... >> ಪತ್ರಿಕಾ ಪ್ರಕರಣೆ, ದಿನಾಂಕ: 07-05-18 ವಾರಸುದಾರರಿಲ್ಲದ 2,98,01,000/- ರೂ  ಹಣ ಪತ್ತೆ     ದಿನಾಂಕ:... >> ಪತ್ರಿಕಾ ಪ್ರಕಟಣೆ:- -:ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿಯ ಬಂಧನ:- ದಿನಾಂಕ :... >> ಪತ್ರಿಕಾ ಪ್ರಕಟಣೆ ದಿಃ25-04-2018. ದಿನಾಂಕ:24-04-2018 ರ ರಾತ್ರಿ 3 ಜನ ಅನುಮಾನಸ್ಪದ ವ್ಯಕ್ತಿಗಳು... >> ಪತ್ರಿಕಾ ಪ್ರಕಟಣೆ ದಿನಾಂಕ: 21-04-2018. ಕೊಲೆ ಆರೋಪಿಯ ಬಂಧನ:   ಹೆಬ್ಬೂರು ಪೊಲೀಸ್ ಠಾಣಾ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< March 2018 >
Mo Tu We Th Fr Sa Su
      1 2 3 4
5 6 8 9 10 11
12 13 14 15 16 17 18
19 20 21 22 23 24 25
26 27 28 29 30 31  
Wednesday, 07 March 2018
ಪತ್ರಿಕಾ ಪ್ರಕಟಣೆ ದಿ 7-03-18

ಪತ್ರಿಕಾ ಪ್ರಕಟಣೆ.

ದಿನಾಂಕ. 07.03.2018.

ಕೊಡಗೇನಹಳ್ಳಿ ಠಾಣಾ ಸರಹದ್ದು ಸಿಂಗನಹಳ್ಳಿ ಗ್ರಾಮದ ಗೋವಿಂದರಾಜುರವರ ಮನೆಯಲ್ಲಿ ದಿನಾಂಕ. 22.02.2018 ರಿಂದ 24.02.2018 ರ ಮಧ್ಯೆ  ಒಟ್ಟು 81 ಗ್ರಾಂ ತೂಕದ ಚಿನ್ನಭಾರಣಗಳು ಹಾಗೂ 28,000 ರೂ ನಗದು ಹಣವನ್ನು ಯಾರೂ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಈ ಬಗ್ಗೆ ಕೊಡಿಗೇನಹಳ್ಳಿ ಠಾಣೆಯಲ್ಲಿ ಮೊನಂ 36/2018 ಕಲಂ 454-457-380 ಐಫಿಸಿ  ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.

ಪ್ರಕರಣದ ಆರೋಪಿಗಳ ಪತ್ತೆ ಬಗ್ಗೆ ವಿಶೇಷ ತಂಡವನ್ನು ರಚಿಸಿದ್ದು, ಈ ತಂಡವು ಕೇವಲ 10 ದಿನದಲ್ಲಿ  ಪ್ರಕರಣದ ಅರೋಪಿತರುಗಳಾದ ಅಂಜನೇಯಲು ಬಿನ್ ಲೇ:ನಾರಯಣಪ್ಪ 47 ವರ್ಷ ಸಿಳ್ಳೆಕ್ಯಾತ ಜನಾಂಗ ಜಿರಾಯ್ತಿ  ಜಾಜುರಾಯನಹಳ್ಳಿ, ಪಾವಗಡ ತಾಲ್ಲೂಕು ಮತ್ತು  ರಾಮದಾಸ್  ಬಿನ್ ಲೇ;ಮಾರಪ್ಪ 35 ವರ್ಷ ಸಿಳ್ಳೆಕ್ಯಾತ ಜನಾಂಗ ಜಿರಾಯ್ತಿ ಪಳ್ಳವಳ್ಳಿ ಗ್ರಾಮ ಪಾವಗಡ ತಾಲ್ಲೂಕು ರವರುಗಳನ್ನು  ಪತ್ತೆ ಮಾಡಿ ಇವರುಗಳಿಂದ ಈ ಪ್ರಕರಣಕ್ಕೆ ಸಂಬಂಧಪಟ್ಟ 81 ಗ್ರಾಂ ಚಿನ್ನಾಭರಣ ಹಾಗೂ  ಇದೇ ಆರೋಪಿಗಳು ಭಾಗಿಯಾಗಿರುವ

1] ಬಡವನಹಳ್ಳಿ ಠಾಣಾ ಮೊನಂ 29/2018 ಕಲಂ 457-380 ಐಪಿಸಿ

2] ಮಿಡಿಗೇಶಿ ಪೊಲೀಸ್ ಠಾಣಾ ಮೊನಂ 20/2018 ಕಲಂ 457-380 ಐಪಿಸಿ

3] ಗೌರಿಬಿದನೂರು ಪೊಲೀಸ್ ಠಾಣಾ ಮೊನಂ 183/2017 ಕಲಂ 379 ಐಪಿಸಿ

ಪ್ರಕರಣಗಳನ್ನು ಭೇದಿಸಿ ಈ ನಾಲ್ಕು ಪ್ರಕರಣಗಳಿಗೆ ಸಂಬಂದಪಟ್ಟಂತೆ  ಆರೋಪಿಗಳಿಂದ ಒಟ್ಟು 149 ಗ್ರಾಂ ತೂಕದ ಚಿನ್ನಭಾರಣಗಳು, 100 ಗ್ರಾಂ ತೂಕದ ಬೆಳ್ಳಿಆಭರಣಗಳು ಹಾಗೂ ಕೃತ್ಯಕ್ಕೆ ಬಳಸಿದಂತಹ 2 ಹಿರೋಹೊಂಡಾ ಪ್ಯಾಷನ್ ಪ್ರೋ ದ್ವಿ ಚಕ್ರವಾಹನಗಳನ್ನು ಹಾಗೂ ನ್ಯೂನೋಸ್ಕೈ ಕಂಪನಿಯ ಒಂದು ಸ್ಕ್ರೀನ್ ಟಚ್ ಮೊಬೈಲ್ ಒಟ್ಟು 6 ಲಕ್ಷ ರೂ ಬೆಲೆಯ ಮಾಲನ್ನು ವಶಪಡಿಸಿಕೊಂಡಿರುತ್ತಾರೆ.

ಆರೋಪಿಗಳನ್ನು ಪತ್ತೆ ಹಚ್ಚಲು ಶ್ರಮಿಸಿದ ಮಧುಗಿರಿ ಉಪವಿಭಾಗದ ಡಿಎಸ್‌‌ಪಿ ಶ್ರೀ ಕಲ್ಲೇಶಪ್ಪರವರ ನೇತೃತ್ವದಲ್ಲಿ ಮಧುಗಿರಿ ಪೊಲೀಸ್ ಸರ್ಕಲ್ ಇನ್ಸ್ ಪೆಕ್ಟರ್ ಶ್ರೀ. ಅಂಬರೀಶ್, ಬಡವನಹಳ್ಳಿ ಠಾಣಾ ಇನ್ಸ್‌‌ಪೆಕ್ಟರ್ ಶ್ರೀ ಗಂಗಾಧರ, ಕೊಡಿಗೇನಹಳ್ಳಿ ಠಾಣೆ ಪಿ ಎಸ್ ಐ ಮೋಹನ್ ಕುಮಾರ್ ಹಾಗೂ ಮಧುಗಿರಿ ಪೊಲೀಸ್ ಠಾಣೆಯ ಪಿ ಎಸ್ ಐ ಎಸ್.ಎಲ್.ಆರ್. ರೆಡ್ಡಿ ಹಾಗೂ ಸಿಬ್ಬಂದಿಗಳಾದ ನಟರಾಜು, ರಂಗನಾಥ, ಜಯಪ್ರಕಾಶ್ ರಂಗಧಾಮಯ್ಯ, ಹಾಗೂ ನರಸಿಂಹರಾಜು, ಸುರೇಶ್ ನಾಯ್ಕ, ರಮೇಶ್ ರವರುಗಳನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಅಭಿನಂದಿಸಿರುತ್ತಾರೆ.ಪತ್ರಿಕಾ ಪ್ರಕಟಣೆ

ದಿನಾಂಕ 04.03.2018 ರಂದು ರಾತ್ರಿ 09.00 ಗಂಟೆ ವೇಳೆಯಲ್ಲಿ ಹೊಸ ಬಡಾವಣೆ ಪೊಲೀಸ್ ಠಾಣಾ ಸರಹದ್ದು  ಎಸ್.ಐ.ಟಿ ಬಡಾವಣೆ 6 ನೇ ಕ್ರಾಸ್ ನಲ್ಲಿ  ನವೀನ್ ಕುಮಾರ್ ಮತ್ತು ಸಂದರ್ಶ ಎಂಬ ಹುಡುಗರಿಗೆ ಚಾಕುವಿನಿಂದ ಹಲ್ಲೆ ಮಾಡಿ ಕೊಲೆ ಮಾಡಲು ಪ್ರಯತ್ನ ಪಟ್ಟಿದ್ದ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಹೊಸ ಬಡಾವಣೆ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಯಶಸ್ವಿಯಾಗಿರುತ್ತಾರೆ.

ಘಟನೆ ಹಿನ್ನಲೆ. :

ದಿನಾಂಕ 04.03.2018 ರಂದು ರಾತ್ರಿ 09.00 ಗಂಟೆ ವೇಳೆಯಲ್ಲಿ  ಎಸ್.ಐ.ಟಿ ಬಡಾವಣೆ 6 ನೇ ಕ್ರಾಸ್ ನ ವಾಸಿಗಳಾದ  ನವೀನಕುಮಾರ ಮತ್ತು ಸಂದರ್ಶ ಎಂಬ ಹುಡುಗರ ಮೇಲೆ 1) ಪುನೀತ ಬಿನ್ ರಾಜಣ್ಣ. 19 ವರ್ಷ  ಪಿಯುಸಿ ವಿದ್ಯಾಥರ್ಿ  4 ನೇ ಕ್ರಾಸ್ ಗೋಕುಲ ಹೆಚ್.ಎಂ.ಟಿ. ಹಿಂಬಾಗ ಕ್ಯಾತ್ಸಂದ್ರ. ತುಮಕೂರು 2) ರಂಜನ್ ಕುಮಾರ್ ಬಿನ್ ರಂಗನಾಥ. 19 ವರ್ಷ ಬಿ.ಸಿ.ಎ. ವಿದ್ಯಾಥರ್ಿ 6 ನೇ ಕ್ರಾಸ್ ಎಸ್.ಐ.ಟಿ ಬಡಾವಣೆ ತುಮಕೂರು. ಸ್ವಂತ ಸ್ಥಳ : ಶಿರಾ ನಗರ 3) ನವೀನ್.ಟಿ. ಬಿನ್ ರಾಮಮೋಹನರೆಡ್ಡಿ. 20 ವರ್ಷ   ರೆಡ್ಡಿ ಜನಾಂಗ  ಬಿ.ಸಿ.ಎ. ವಿದ್ಯಾಥರ್ಿ  ಕುವೆಂಪುನಗರ ತುಮಕೂರು  ಮತ್ತು 4) ಮಹೇಶ್ ಕುಮಾರ್ ಬಿನ್ ಶಿವಕುಮಾರ್  19 ವರ್ಷ ಪಿಯುಸಿ ವಿದ್ಯಾಥರ್ಿ  ಆರ್.ವಿ. ಕಾಲೋನಿ ತುಮಕೂರು  ರವರುಗಳು   ಗಲಾಟೆ ಮಾಡಿ  ಕೊಲೆ ಮಾಡುವ ಉದ್ದೇಶದಿಂದ ಚಾಕುವಿನಿಂದ  ನವೀನಕುಮಾರ  ಮತ್ತು ಸಂದರ್ಶ ರವರಿಗೆ ಹಲ್ಲೆ ಮಾಡಿದ್ದು ಈ ಸಂಬಂದ ಹೊಸ ಬಡಾವಣೆ ಠಾಣೆಯಲ್ಲಿ  ನಾಲ್ಕು ಜನರ ವಿರುದ್ದ ಪ್ರಕರಣ ದಾಖಲಾಗಿತ್ತು.

ಮಾನ್ಯ ಪೊಲೀಸ್ ಅಧೀಕ್ಷಕರು ತುಮಕೂರು ಜಿಲ್ಲೆ. ತುಮಕೂರು. ಹೆಚ್ಚುವರಿ ಪೊಲೀಸ್ ಅಧೀಕ್ಷಕರು ತುಮಕೂರು ಜಿಲ್ಲೆ. ತುಮಕೂರು.  ಪೊಲೀಸ್ ಉಪಾಧೀಕ್ಷಕರು  ತುಮಕೂರು ನಗರ ಉಪ ವಿಭಾಗ ತುಮಕೂರು ಹಾಗು ವೃತ್ತ ನಿರೀಕ್ಷಕರು ತಿಲಕ್ಪಾಕರ್್ ವೃತ್ತ  ಇವರ ಮಾರ್ಗದರ್ಶನದಲ್ಲಿ  ಹೊಸ ಬಡಾವಣೆ ಪೊಲೀಸ್ ಠಾಣೆಯ 1. ಕಾಂತರಾಜು. ಎ.ಎಸ್.ಐ.  2) ಮಧುಸೂದನ್. ಎ.ಎಸ್.ಐ 3) ಮಂಜುನಾಥ. ಆರ್, 4) ಮಂಜುನಾಥ. ಟಿ.ಎಸ್.  ಹಾಗು 5) ಅನಿಲ್ ಕುಮಾರ್ ಎಂ.ಜೆ ರವರುಗಳು ಎರಡು ತಂಡಗಳಾಗಿ ತಮ್ಮ ಕರ್ತವ್ಯ ನಿರ್ವಹಣೆ ಮಾಡಿ ದಿನಾಂಕ 06.03.2018 ರಂದು ಮೇಲ್ಕಂಡ ನಾಲ್ಕು ಜನ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುತ್ತಾರೆ.  ಆರೋಪಿಗಳನ್ನು  ಈ ದಿನ ನ್ಯಾಯಾಂಗ ಬಂದನಕ್ಕೆ ಬಿಡಲಾಗಿದೆ.  ಆರೋಪಿಗಳನ್ನು ಪತ್ತೆ ಮಾಡಿದ ಸಿಬ್ಬಂದಿಗಳನ್ನು ಮಾನ್ಯ ಪೊಲೀಸ್ ಅಧೀಕ್ಷಕರು ತುಮಕೂರು ಜಿಲ್ಲೆ ತುಮಕೂರು ರವರು ಅಭಿನಂದಿಸಿರುತ್ತಾರೆ.


ಅಪರಾಧ ಘಟನೆಗಳು 07-03-18

ವೈ. ಎನ್  ಹೊಸಕೋಟೆ  ಪೊಲೀಸ್ ಠಾಣಾ ಮೊ. ನಂ-  22/2018   ಕಲಂ: 78 Cls 3 Kp Act

ದಿನಾಂಕ:06/03/2018 ರಂದು ರಾತ್ರಿ 7:00 ಗಂಟೆ ಸಮಯದಲ್ಲಿ ತಿರುಮಣಿ ವೃತ್ತದ ಸಿ.ಪಿ,.ಐ ರವರು ಠಾಣೆಗೆ ಹಾಜರಾಗಿ ನೀಡಿದ ವರದಿ ಅಂಶವೇನೆಂದರೆ  ಈ ದಿನ ದಿನಾಂಕ:06/03/2018 ರಂದು ಸಂಜೆ 5:00 ಗಂಟೆ ಸಮಯದಲ್ಲಿ ನಾನು ವೈ ಎನ್ ಹೊಸಕೋಟೆ ಪೋಲೀಸ್ ಠಾಣಾ ಸರಹದ್ದು ದೊಡ್ಡಹಳ್ಳಿ ಗ್ರಾಮದಲ್ಲಿ ಸಂಜೆ ಗಸ್ತು ನಿರ್ವಹಿಸುತ್ತಿರುವಾಗ್ಗೆ  ದೊಡ್ಡಹಳ್ಳಿ ಗ್ರಾಮದ   ಅರುಣ್ ಎಂಬುವವರ ಹೋಟಲ್  ಬಳಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟ ನಡೆಯುತ್ತಿದೆ ಎಂತ ಬಂದ ಖಚಿತ ವರ್ತಮಾನದ ಮೇರೆಗೆ ಪಂಚಾಯ್ತರನ್ನು ಬರಮಾಡಿಕೊಂಡು ಸಿಬ್ಬಂದಿಯೊಂದಿಗೆ  ಮೇಲ್ಕಂಡ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ  ದೊಡ್ಡಹಳ್ಳಿ  ಗ್ರಾಮದ ಅರುಣ್ ರವರ ಹೋಟಲ್ ಬಳಿ  ಒಬ್ಬ ಆಸಾಮಿಯು ನಿಂತುಕೊಂಡು ಸಾರ್ವಜನಿಕರನ್ನು ಕೂಗಿ ಕರೆಯುತ್ತಾ ಬನ್ನಿ ಮಟ್ಕಾ ನಂಬರ್ ಬರೆಸಿಕೊಳ್ಳಿ 1 ರೂಗೆ 70 ರೂ ಕೊಡುತ್ತೇವೆಂದು  ಕೂಗಿ ಹೇಳುತ್ತಿದ್ದು ಮತ್ತೊಬ್ಬ ಆಸಾಮಿಯು ಸಾರ್ವಜನಿಕರಿಂದ  ಹಣವನ್ನು ಪಣಕ್ಕೆ ಕಟ್ಟಿಸಿಕೊಂಡು ಮಟ್ಕಾ ಚೀಟಿ ಬರೆದುಕೊಡುತ್ತಿದ್ದು   ನಂತರ ನಾನು ಮತ್ತು ಸಿಬ್ಬಂದಿ ಹಾಗೂ ಪಂಚರೊಂದಿಗೆ ದಾಳಿ ನಡೆಸಿದ್ದು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಅಲ್ಲಿ ನೆರೆದಿದ್ದ ಜನರು ಜನರು ಓಡಿ ಹೋಗಿದ್ದು , ಮತ್ತು ಮಟ್ಕಾ ನಂಬರ್ ಬರೆಸಿಕೊಳ್ಳಿ ಎಂತ ಕೂಗಿ ಹೇಳುತ್ತಿದ್ದ ಆಸಾಮಿ ಓಡಿ ಹೋಗಿರುತ್ತಾನೆ, ಮಟ್ಕಾ ಚೀಟಿ ಬರೆದು ಕೊಡುತ್ತಾ ಹಣವನ್ನು ಪಣಕ್ಕೆ ಕಟ್ಟಿಸಿಕೊಳ್ಳುತ್ತಿದ್ದ ಆಸಾಮಿ ಸಿಕ್ಕಿದ್ದು ಆತನ ಹೆಸರು ವಿಳಾಸ ಕೇಳಲಾಗಿ 1]  ರಮೇಶ ಬಿನ್ ಮುತ್ಯಾಲಪ್ಪ, 29 ವರ್ಷ, ಭೋವಿ ಜನಾಂಗ, ಕೂಲಿಕೆಲಸ, ಸ್ವಂತ ಊರು ವೆಂಕಟಾಪುರ, ರಾಮಗಿರಿ ಮಂಡಲ್ ಎ.ಪಿ. ಹಾಲಿ ವಾಸ ದೊಡ್ಡಹಳ್ಳಿ ಗ್ರಾಮ.ಪಾವಗಡ ತಾ|| ಎಂತ ತಿಳಿಸಿದ್ದು ಆತನ ಬಳಿ ಮಟ್ಕಾ ನಂಬರ್ ಬರೆದಿರುವ ಚೀಟಿ , ಒಂದು ಲೆಡ್ ಪೆನ್ ಮತ್ತು 1600=00 ರೂ ನಗದು ಹಣ ಇದ್ದು ಪೋಲೀಸರು ಪಂಚನಾಮೆ ಯೊಂದಿಗೆ ವಶಕ್ಕೆ ತೆಗೆದುಕೊಂಡಿರುತ್ತಾರೆ .ಮಟ್ಕಾ ನಂಬರ್ ಬರೆಸಿಕೊಳ್ಳಿ ಎಂತ ಕೂಗಿ ಹೇಳುತ್ತಿದ್ದ ಆಸಾಮಿ ಓಡಿ ಹೋಗಿದ್ದು ಆತನ ಹೆಸರು ವಿಳಾಸ ತಿಳಿಯಲಾಗಿ ವೀರೇಶ ಬಿನ್ ಗಂಗಪ್ಪ, ಬೋವಿ ಜನಾಂಗ, ದೊಡ್ಡಹಳ್ಳಿ,ಪಾವಗಡ ತಾ|| ಎಂತ ತಿಳಿದಿರುತ್ತೆ, ಆತನ ಬಳಿ ಇದ್ದ  ಮಟ್ಕಾ ನಂಬರ್ ಗಳನ್ನು  ಬರೆದಿರುವ ಒಂದು  ಚೀಟಿ, ಒಂದು ಲೆಡ್ ಪೆನ್ ಹಾಗೂ ಪಣಕ್ಕೆ ಕಟ್ಟಿಸಿಕೊಂಡಿದ್ದ 1600=00 ರೂ ನಗದು ಹಣ ಇದ್ದು,   ಪಂಚರ ಸಮಕ್ಷಮ ಪಂಚನಾಮೆ ಮುಖೇನ ವಶಪಡಿಸಿಕೊಂಡು  ಪ್ರಕರಣ  ದಾಖಲಿಸಿರುತ್ತದೆ.

 

ತುಮಕೂರು ನಗರ ಪೊಲೀಸ್‌ ಠಾಣಾ  ಮೊ.ನಂ. 69/2018 U/S  379 IPC 1860

ದಿನಾಂಕ 06-03-2018 ರಂದು ಸಂಜೆ 07-00 ಗಂಟೆಗೆ ಪಿರ್ಯಾದಿ ಬಸವರಾಜು ಬಿನ್ ತಮ್ಮಯ್ಯ ಅರೇಹಳ್ಳಿ, ಗುಬ್ಬಿ ತಾಲ್ಲೋಕು ರವರು ಠಾಣೆಗೆ ಹಾಜರಾಗಿ ನೀಡಿದ ಪಿರ್ಯಾದು ಅಂಶವೆನೆಂದರೆ,  ದಿನಾಂಕ 21-01-2018 ರಂದು ನಾನು ನಮ್ಮ ಜಮೀನಿಗೆ ಮೋಟರ್ ಮತ್ತು ಕೇಬಲ್ ತರಲು 30,000/- ರೂ.ಗಳನ್ನು ನಮ್ಮ ಮನೆಯಿಂದ ತೆಗೆದುಕೊಂಡು ಹೊಸಕೆರೆ ಗ್ರಾಮದಲ್ಲಿ ಬೆಳಿಗ್ಗೆ ಸುಮಾರು 10-15 ಗಂಟೆ ಸಮಯದಲ್ಲಿ ರಾಘವೇಂದ್ರ ಬಸ್ಸನ್ನು ಹತ್ತಿಕೊಂಡು ಪ್ರಯಾಣಿಸಿ ತುಮಕೂರಿನ ನಗರದ ಟೌನ್ ಹಾಲ್ ಸರ್ಕಲ್ ನಲ್ಲಿ ಇಳಿಯುವಾಗ ಬೆಳಿಗ್ಗೆ ಸುಮಾರು 11-15 ಗಂಟೆ ಸಮಯದಲ್ಲಿ ನನ್ನ ಜೇಬಿನಲ್ಲಿದ್ದ 30,000/- ರೂ. ಹಣವನ್ನು ಯಾರೋ ಅಪರಿಚಿತರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಅವರನ್ನು ಹಿಡಿದು ಕಾನೂನು ಕ್ರಮ ಜರುಗಿಸಿ ಇತ್ಯಾದಿ.

ದಂಡಿನಶಿವರ ಪೊಲೀಸ್ ಠಾಣಾ ಮೊ.ನಂ 41/2018 ಕಲಂ 279.337 .ಪಿ.ಸಿ

ದಿನಾಂಕ : 06/03/2018 ರಂದು ಈ ಕೇಸಿನ ಪಿರ್ಯಾದಿ ರಘು ಬಿನ್ ಸಿದ್ದಲಿಂಗಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ಪಿರ್ಯಾದು  ಅಂಶವೇನೆಂದರೆ ದಿನಾಂಕ : 24/02/2018 ರಂದು ತುರುವೇಕೆರೆಯ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಅಡಿಗೆ ಕೆಲಸ ಮುಗಿಸಿಕೊಂಡು ಎನ್ ರಾಂಪುರಕ್ಕೆ ಹೋಗಲು ನನ್ನ ಬಾಬ್ತು ಕೆ.ಎ 06 ಇ.ಯು. 2568 ನೇ ಹಿರೋ ಪ್ಯಾಷನ್ ಪ್ರೋ ದ್ವೀಚಕ್ರ ವಾಹದನದಲ್ಲಿ ನಾನು ಬೈಕ್ ಸವಾರನಾಗಿ ಮತ್ತು ಬೈಕ್ ನ ಹಿಂಬದಿಯಲ್ಲಿ ನಮ್ಮ ಸಂಬಂಧಿಕರಾದ ಅಂದರೆ ನಮ್ಮ ಜೊತೆಯಲ್ಲಿಯೇ ಅಡಿಗೆ ಕೆಲಸ ಮಾಡುವ ಹಳೇ ಗುಬ್ಬಿಯ ವಾಸಿ ಗಿರೀಶ್ ಬಿನ್ ಲೇ ಚನ್ನಬಸವಯ್ಯ. 24 ವರ್ಷ  ರವರನ್ನು ಕುಳ್ಳರಿಸಿಕೊಂಡು ತುರುವೇಕೆರೆ-ನಿಟ್ಟೂರು ರಸ್ತೆಯಲ್ಲಿ ಎನ್. ರಾಂಪುರಕ್ಕೆ ಹೋಗಲು ಹೋಗುತ್ತಿರುವಾಗ್ಗೆ. ಅಂಗರೇಖನಹಳ್ಳಿ-ಸಂಪಿಗೆಯ ನಡುವೆ ಇರುವ ಹಂಪ್ಸ್ ನ ಬಳಿಯ  ರಸ್ತೆಯಲ್ಲಿ ಹೋಗುತ್ತಿರುವಾಗ್ಗೆ. ಸಂಜೆ ಸುಮಾರು 07-30 ಗಂಟೆಯ ಸಮಯದಲ್ಲಿ ರಸ್ತೆಯಲ್ಲಿ ಗುಂಡಿಗಳು ಇದ್ದ ಕಾರಣ ನಿಧಾನವಾಗಿ ನಾನು ಬೈಕ್ ಅನ್ನು ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ, ಹಿಂದಿನಿಂದ ಬಂದ ಕೆ.ಎ 06 ಇ ಕ್ಯೂ 6104 ನೇ ಟಿ.ವಿ.ಎಸ್ ಸ್ಟೋರ್ಟ್ ದ್ವೀಚಕ್ರವಾಹನದ ಚಾಲಕ ತನ್ನ ವಾಹನವನ್ನು ಅತಿವೇಗವಾಗಿ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಹಿಂಬದಿಯಿಂದ ನಾನು ಹೋಗುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆಯಿಸಿ ಅಪಘಾತ ಪಡಿಸಿದ ಪರಿಣಾಮ ನಾನು ಮತ್ತು ನನ್ನ ಬೈಕ್ ನ ಹಿಂಬಧಿಯಲ್ಲಿ ಕುಳಿತ್ತಿದ್ದ ಗಿರೀಶ್ ಇಬ್ಬರೂ ಕೆಳಗೆ ಬಿದ್ದವು. ನನಗೆ ಬಲಗೈ ಪೆಟ್ಟು ಬಿತ್ತು.  ನಂತರ ಗಿರೀಶ್ ನನ್ನು ನೋಡಲಾಗಿ ಆತನಿಗೆ ಬಲಗಾಲಿನ ಮಂಡಿ ಮತ್ತು ಬಲಗಾಲಿನ ಪಾದಕ್ಕೆ ತೀವ್ರ ಸ್ವರೂದ ಗಾಯಗಳಾಯಿತು, ನಂತರ ಅಪಘಾತ ಪಡಿಸಿದ ಚಾಲಕನನ್ನು ನೋಡಲಾಗಿ ಆತನು ನಮ್ಮೂರಿನ ಸಂದೀಪ ಆರ್.ಎನ್. ಬಿನ್ ಲೇ ನಂಜುಂಡಪ್ಪ. 24 ವರ್ಷ. ಲಿಂಗಾಯ್ತರು ಆಗಿದ್ದು. ಆತನು ನಮ್ಮ ಹಿಂದೆ ಬರುತ್ತಿದ್ದು. ಅತಿವೇಗವಾಗಿ ಬೈಕ್ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆಯಿಸಿ ಅಪಘಾತಪಡಿಸಿರುತ್ತಾನೆ. . ನಂತರ ಯಾವುದೋ ಒಂದು ಬಾಡಿಗೆ ಆಟೋದಲ್ಲಿ ನಾನು ಮತ್ತು ಗಿರೀಶ್ ಗುಬ್ಬಿ ಆಸ್ಪತ್ರೆಗೆ ಹೋಗಿ ಪ್ರಥಮ ಚಿಕಿತ್ಸೆ ಪಡೆದೆವು. ನನಗೆ ಹೆಚ್ಚಿನ ಗಾಯ ಆಗಿರಲಿಲ್ಲ. ಗಿರೀಶ್ ನಿಗೆ ಹೆಚ್ಚಿನ ಗಾಯಗಳಾದ್ದರಿಂದ ವೈದ್ಯರ ಸಲಹೆ ಮೇರೆಗೆ ತುಮಕೂರಿನ ಎಂ.ಸಿ ಕೀಲು ಮತ್ತು ಮೂಳೆ ಚಿಕಿತ್ಸಾ ಕೇಂದ್ರದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ಸೇರಿಸಿದ್ದು. ಗಿರೀಶ ಹಾಲಿ ಮೇಲ್ಕಂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾನೆ.  ಗಿರೀಶ್ ರವರ ತಂದೆ ಹಾಲಿ ಮೃತ ಪಟ್ಟಿದ್ದು. ನಾನೇ ಆಸ್ಪತ್ರೆಯಲ್ಲಿ ಗಿರೀಶನಿಗೆ ಶಸ್ತ್ರ ಚಿಕಿತ್ಸೆ ಮಾಡಿಸಿ ನೋಡಿಕೊಳ್ಳುತ್ತಿದ್ದರಿಂದ ಇಲ್ಲಿಯವರೆಗೆ ಠಾಣೆಗೆ ಬಂದು ದೂರು ನೀಡಲು ಸಾಧ್ಯವಾಗಿರುವುದಿಲ್ಲ. ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದು. ಮೇಲ್ಕಂಡ ಕೆ.ಎ 06 ಇ ಕ್ಯೂ 6104 ನೇ ಟಿ.ವಿ.ಎಸ್ ಸ್ಟೋರ್ಟ್ ದ್ವೀಚಕ್ರವಾಹನದ ಚಾಲಕನಾದ ಸಂದೀಪ ಆರ್.ಎನ್. ಬಿನ್ ಲೇ ನಂಜುಂಡಪ್ಪ ರವರ ಮೇಲೆ ಕಾನೂನು ರೀತ್ಯ ಕ್ರಮ ಕೈಗೊಳ್ಳಲು ಕೋರುತ್ತೇನೆಂತ ಇತ್ಯಾದಿಯಾಗಿ ನೀಡಿದ ಪಿರ್ಯಾದನ್ನು ಸ್ವೀಕರಿಸಿ ಈ ಪ್ರಕರಣ ದಾಖಲಿಸಿರುತ್ತೆ.

ಅಮೃತೂರು ಪೊಲೀಸ್‌ ಠಾಣಾ ಮೊನಂ-65/2018, ಕಲಂ-279, 337, 304(ಎ) ಐಪಿಸಿ ರೆ/ವಿ 134(ಎ&ಬಿ), 187 ಐಎಂವಿ ಆಕ್ಟ್

ದಿನಾಂಕ: 06-03-2018 ರಂದು ಬೆಳಿಗ್ಗೆ 10-00 ಗಂಟೆಗೆ ಪಿರ್ಯಾದಿ ಎನ್. ರವಿಕುಮಾರ್ ಬಿನ್ ಎಂ ನಾರಾಯಣಪ್ಪ, 47 ವರ್ಷ, ಬಲಜಿಗರು, ರೇಷ್ಮೆ ವ್ಯಾಪಾರ, ನಂ-41, ಎಇಸಿಎಸ್‌ 3 ನೇ ಸ್ಟೇಜ್, ನಾಗಶೆಟ್ಟಿಹಳ್ಳಿ, ಬೆಂಗಳೂರು-94, ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ ದಿನಾಂಕ: 05-03-2018 ರಂದು ನನ್ನ ಅಣ್ಣನ ಮಗನಾದ ವಿಜಯ್ ಸಾಗರ್ ಗೋಪಾಲ್ ಎಂಬುವವನು ತನ್ನ ಸ್ನೇಹಿತನಾದ ಜಿತಿನ್ ರೆಡ್ಡಿ ರವರ ಜೊತೆಯಲ್ಲಿ ಕೆಎ-04 ಹೆಚ್‌ಪಿ-484 ರ ಹೊಂಡಾ ಎವಿಯೇಟರ್ ಬೈಕಿನಲ್ಲಿ ಎಡೆಯೂರು ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಬರುವುದಾಗಿ ಹೇಳಿ ಹೋಗಿದ್ದರು. ಆ ದಿನ ರಾತ್ರಿ ಎಡೆಯೂರಿನಲ್ಲಿಯೇ ಉಳಿದುಕೊಂಡಿದ್ದು, ಬೆಳಿಗ್ಗೆ ಬರುವುದಾಗಿ ತಿಳಿಸಿದ್ದರು. ನಂತರ ದಿನಾಂಕ: 06-03-2018 ರಂದು ಬೆಳಿಗ್ಗೆ ಸುಮಾರು 6-40 ಗಂಟೆ ಸಮಯದಲ್ಲಿ ಜಿತಿನ್ ರೆಡ್ಡಿ ರವರು ನನಗೆ ಪೋನ್ ಮಾಡಿ ಈ ದಿನ ಬೆಳಿಗ್ಗೆ ಸುಮಾರು 6-00 ಗಂಟೆ ಸಮಯದಲ್ಲಿ ಕೆಎ-04 ಹೆಚ್‌ಪಿ-484 ರ ಹೊಂಡಾ ಎವಿಯೇಟರ್ ಬೈಕಿನಲ್ಲಿ ವಿಜಯ್ ಸಾಗರ್ ಗೋಪಾಲ್ ಚಾಲಕನಾಗಿ ನಾನು ಹಿಂಬದಿ ಸವಾರನಾಗಿ ಎಡೆಯೂರಿನಿಂದ ಬೆಂಗಳೂರಿಗೆ ಬರಲು ಕುಣಿಗಲ್ ತಾಲ್ಲೋಕ್, ಎಡೆಯೂರು ಹೋಬಳಿ, ಅವರಗೆರೆ ಗೇಟ್ ಬಳಿ ಇರುವ ಹೆಚ್.ಪಿ ಪೆಟ್ರೋಲ್ ಬಂಕ್‌ನ ಹತ್ತಿರ ಬೈಕಿನಲ್ಲಿ ಬರುತ್ತಿರುವಾಗ್ಗೆ ನಮ್ಮ ಹಿಂದಿನ ಅಂದರೆ ಹಾಸನ ಕಡೆಯಿಂದ ಬೆಂಗಳೂರು ಕಡೆಗೆ ಹೋಗಲು ಬಂದ ಯಾವುದೋ ಒಂದು ಬಸ್ಸಿನ ಚಾಲಕ ತನ್ನ ಬಸ್ಸನ್ನು ಅತಿವೇಗವಾಗಿ ಚಲಾಯಿಸಿಕೊಂಡು ಬಂದು ನಮ್ಮ ಬೈಕಿಗೆ ತಗುಲಿಸಿದ್ದರಿಂದ ನಾನು ಮತ್ತು ವಿಜಯ್ ಸಾಗರ್ ಗೋಪಾಲ್ ಆಯತಪ್ಪಿ ರಸ್ತೆಯ ಮೇಲೆ ಬಿದ್ದುದ್ದರಿಂದ ನನಗೆ ಎಡಗೈ ಮೊಣಕೈಗೆ ಸ್ವಲ್ಪ ತರಚಿದ ಗಾಯವಾಗಿ, ಮೈಕೈಗೆ  ಮೂಗೇಟಾಗಿತ್ತು. ವಿಜಯ್ ಸಾಗರ್ ಗೋಪಾಲನಿಗೆ ತಲೆಗೆ ಪೆಟ್ಟು ಬಿದ್ದು ಮೂಗು ಮತ್ತು ಕಿವಿಯಲ್ಲಿ ರಕ್ತ ಬಂದು ಕೈ ಮತ್ತು ಕಾಲು ಮುರಿದಿತ್ತು. ನಂತರ ಅಲ್ಲಿಗೆ ಬಂದ ಸಾರ್ವಜನಿಕರ ಸಹಾಯದಿಂದ ಆತನನ್ನು ಉಪಚರಿಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಪ್ರಯತ್ನಿಸುವಷ್ಟರಲ್ಲಿ ವಿಜಯ್ ಸಾಗರ್ ಗೋಪಾಲನು ಸ್ಥಳದಲ್ಲಿಯೇ ಮೃತಪಟ್ಟನು. ಈ ಅಪಘಾತಕ್ಕೆ ಕಾರಣವಾದ ಬಸ್ಸಿನ ನಂಬರನ್ನು ನಾನು ಗಾಬರಿಯಲ್ಲಿ ನೋಡಲಾಗಲಿಲ್ಲ. ನಂತರ ಮೃತ ವಿಜಯ್ ಸಾಗರ್ ಗೋಪಾಲನ ಶವವನ್ನು ಆಂಬುಲೆನ್ಸ್‌ ನಲ್ಲಿ ಕುಣಿಗಲ್ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ತೆಗೆದುಕೊಂಡು ಹೋಗಿ ಇಟ್ಟಿರುತ್ತೇನೆ. ಬೇಗ ಬನ್ನಿ ಎಂದು ತಿಳಿಸಿದನು. ತಕ್ಷಣ ವಿಷಯ ತಿಳಿದ ನಾನು ನಮ್ಮ ಅಣ್ಣನ ಮನೆಯವರಿಗೆ ವಿಚಾರವನ್ನು ತಿಳಿಸಿ ಕೂಡಲೇ ಕುಣಿಗಲ್ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಬಂದು ಶವವನ್ನು ನೋಡಿ ವಿಚಾರ ಮಾಡಲಾಗಿ ನಮ್ಮ ಅಣ್ಣನ ಮಗ ವಿಜಯ್ ಸಾಗರ್ ಗೋಪಾಲ್ ಅಪಘಾತದಲ್ಲಿ ಮೃತಪಟ್ಟಿದ್ದು ನಿಜವಾಗಿತ್ತು. ಆದ್ದರಿಂದ ಈ ಅಪಘಾತಕ್ಕೆ ಕಾರಣವಾದ ಬಸ್ಸನ್ನು ಮತ್ತು ಚಾಲಕನನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರುತ್ತೇನೆ ಎಂದು ಇತ್ಯಾದಿಯಾಗಿ ಇದ್ದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿರುತ್ತೆ.

 

ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ.ನಂ 68/2018 ಕಲಂ 3,4,5,7 & 8 ಐ ಟಿ ಪಿ ಆಕ್ಟ್  1956 ಮತ್ತು 370  ರೆ/ವಿ 34 ಐ ಪಿ ಸಿ

ದಿನಾಂಕ: 05/03/2018 ರಂದು ಸಂಜೆ 6-30 ಗಂಟೆ ಸಮಯದಲ್ಲಿ ಪಿರ್ಯಾದಿ ಕೆ ಆರ್ ರಾಘವೇಂದ್ರ ಪಿ ಐ ಜಿಲ್ಲಾ ಸಿ ಇ ಎನ್ ಸಿ ಪೊಲಿಸ್ ಠಾಣೆ ರವರು ನೀಡಿದ ದೂರಿನ ಅಂಶವೆನೆಂದರೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಅಂತರಸನಹಳ್ಳಿ ಭೋವಿ ಪಾಳ್ಯದ ಕೆ ಐ ಎ ಡಿ ಬಿ ಕಾಂಪೌಂಡ್ ಪಕ್ಕದಲ್ಲಿರುವ ರಾಜಣ್ಣ ರವರ ಶೀಟಿನ ಮನೆಯಲ್ಲಿ ಭಾಡಿಗೆಗೆ ವಾಸವಾಗಿರುವ ಗಜೇಂದ್ರ @ ಗಣೇಶ ಎಂಬುವರು ಹೊರಗಡೆಯಿಂಧ ಹೆಣ್ಣುಮಕ್ಕಳನ್ನು ಕರೆಯಿಸಿ ವೇಶ್ಯಾವಾಟಿಕೆಯನ್ನು ನಡೆಸುತ್ತಿದ್ದಾರೆಂದು ಮಾಹಿತಿ ಬಂದ ಮೇರೆಗೆ  ಪಿ ಎಸ್ ಐ  ಕಾಂತರಾಜು ಮತ್ತು ಶ್ರೀಮತಿ ವಿಜಯ ಲಕ್ಷ್ಮೀ, ಸಿಬ್ಬಂದಿಗಳಾದ ಹೆಚ್ ಸಿ 317 ನಾಗರಾಜು ಹೆಚ್ ಸಿ 225 ಮಲ್ಲೇಶ್ ರವರೊಂದಿಗೆ ರವರೊಂದಿಗೆ ಸಂಜೆ ಸುಮಾರು 6-00 ಗಂಟೆಗೆ ಸದರಿ ಸ್ಥಳದ ಬಳಿ ಹೋಗಿ ಅಲ್ಲಿ ಕೆ ಐ ಎ ಡಿ ಬಿ ಕಾಂಪೌಂಡ್ ನ ಮರೆಯಲ್ಲಿ ನಿಂತು ನೋಡಲಾಗಿ ರಾಜಣ್ಣ ರವರ ಶೀಟ್ ಮನೆಯ ಮುಂಬಾಗ ನಾಲ್ಕೂ ಜನರಿದ್ದು ಅದರಲ್ಲಿ ಒಬ್ಬ ಪುರುಷನಿಂದ ಗಜೇಂದ್ರನು ಹಣ ಪಡೆದು ಒಬ್ಬ ಹೆಂಗಸ್ಸನ್ನು ಅವನ ಜೋತೆ ಮಾಡಿ ಶೀಟಿನ ಮನೆಯ ಒಳಗೆ ಕಳುಹಿಸಿಕೊಟ್ಟನು.ಅಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವುದನ್ನು ಖಚಿತ ಪಡಿಸಿಕೊಂಡು ಸ್ಥಳದಲ್ಲಿ ಸದರಿ ಆರೋಪಿಗಳ ಬಗ್ಗೆ ನಿಗಾವಹಿಸುವಂತೆ ಪಿ ಎಸ್ ಐ ಮತ್ತು ಸಿಬ್ಬಂದಿಗಳಿಗೆ ಸೂಚನೆ ನೀಡಿ ಠಾಣೆಗೆ ಆಗಮಿಸಿ ವರದಿಯನ್ನು ನೀಡಿದ್ದು ವೆಶ್ಯಾವಾಟಿಕೆ ನಡೆಸುತ್ತಿರುವ ಗಜೆಂದ್ರ ಮತ್ತು ಇತರೆಯವರ ವಿರುದ್ದ  ಕಾನೂನು ಕ್ರಮ ಜರುಗಿಸಲು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 80 guests online
Content View Hits : 289605