lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ : 17-03-2018 -: ಚೂರಿಯಿಂದ ಇರಿದು ದರೋಡೆ ಮಾಡುತ್ತಿದ್ದ ಆರೋಪಿಗಳ... >> ಪ್ರತಿಕಾ ಪ್ರಕಟಣೆ. ದಿ: 16/03/18 ಮೂವರು ಮನೆ ಕಳ್ಳರ ಬಂಧನ, 5 ಲಕ್ಷ ಮೌಲ್ಯದ... >> ಪತ್ರಿಕಾ ಪ್ರಕಟಣೆ ದಿನಾಂಕ: 15-03-2018 ಎ.ಟಿ.ಎಂ ನಲ್ಲಿ ಹಣ ಡ್ರಾ ಮಾಡಿಕೊಡುವುದಾಗಿ ... >> ತುಮಕೂರು ಜಿಲ್ಲಾ ಪೊಲೀಸ್ ಪತ್ರಿಕಾ ಪ್ರಕಟಣೆ ದಿ: 15-03-2018 ತುಮಕೂರು ಜಿಲ್ಲಾ ಪೊಲೀಸ್... >> ಪತ್ರಿಕಾ ಪ್ರಕಟಣೆ. ದಿನಾಂಕ. 07.03.2018. ಕೊಡಗೇನಹಳ್ಳಿ ಠಾಣಾ ಸರಹದ್ದು ಸಿಂಗನಹಳ್ಳಿ... >> ಪತ್ರಿಕಾ ಪ್ರಕಟಣೆ ದಿನಾಕ : 27/02/2018 ಒಂಟಿ ಮನೆ ಡಕಾಯಿತಿ ಮಾಡುತ್ತಿದ್ದ ಕುಖ್ಯಾತ... >> : ಪತ್ರಿಕಾ ಪ್ರಕಟಣೆ : : ದಿನಾಂಕ: 24-02-2018 :     ದಿನಾಂಕ 19-02-2018 ರಂದು ಪಿರ್ಯಾದಿ ಲೀಲಾವತಿ... >> ಪತ್ರಿಕಾ ಪ್ರಕಟಣೆ ದಿನಾಂಕ:14-02-2018. : : ಇಬ್ಬರು ಬ್ಯಾಂಕ್ ಕಳ್ಳರ ಬಂಧನ : 20,11,950=00 ಮಾಲು ಜಪ್ತು : :... >> ಜಿಲ್ಲಾ ಪೊಲೀಸ್ ಕಛೇರಿ, ತುಮಕೂರು. ದಿ:12.02.2018 :  ಪತ್ರಿಕಾ ಪ್ರಕಟಣೆ  : ದಿನಾಂಕ 12.02.2018... >> ಪತ್ರಿಕಾ ಪ್ರಕಟಣೆ. ದಿನಾಂಕ: 12/02/2018 ರಂದು ತುಮಕೂರು ಜಿಲ್ಲೆ, ತುರುವೇಕೆರೆ ಪೊಲೀಸ್ ಠಾಣೆಯ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< March 2018 >
Mo Tu We Th Fr Sa Su
      2 3 4
5 6 7 8 9 10 11
12 13 14 15 16 17 18
19 20 21 22 23 24 25
26 27 28 29 30 31  
Thursday, 01 March 2018
ಅಪರಾಧ ಘಟನೆಗಳು 01-03-18

ವೈ ಎನ್ ಹೊಸಕೋಟೆ ಪೊಲೀಸ್ ಠಾಣಾ ಮೊ. ನಂ- 20/2018 ಕಲಂ: 87 ಕೆ.ಪಿ.ಆಕ್ಟ್

ದಿನಾಂಕ:27/02/2018 ರಂದು ಬೆಳಿಗ್ಗೆ 11:30 ಗಂಟೆಗೆ ತಿರುಮಣಿ ವೃತ್ತ ನಿರೀಕ್ಷಕರಾದ ಶ್ರೀಶೈಲಮೂರ್ತಿ ರವರು ಠಾಣೆಗೆ ಹಾಜರಾಗಿ ನೀಡಿದ ಪಂಚನಾಮೆ ಅಂಶವೇನೆಂದರೆ ಈ ದಿನ ದಿನಾಂಕ:27/02/2018 ರಂದು ಶಿರಾ ಗ್ರಾಮಾಂತರ ವೃತ್ತ ನಿರೀಕ್ಷಕರಾದ ಶ್ರೀ ಸುದರ್ಶನ್ ಮತ್ತು ಕಳ್ಳಂಬೆಳ್ಳ ಪೋಲೀಸ್ ಠಾಣಾ ಸಿಬ್ಬಂದಿರವರುಗಳಾದ ಸಿ.ಪಿ.ಸಿ:836ಪ್ರಭುದೇವ, ಮತ್ತು ಸಿ.ಪಿ.ಸಿ: 186 ಶ್ರೀನಿವಾಸ ರವರುಗಳೊಂದಿಗೆ ವೈ ಎನ್ ಹೊಸಕೋಟೆ ಪೋಲಿಸ್ ಠಾಣಾ ಸರಹದ್ದು ಇಂದ್ರಬೆಟ್ಟ  ಗ್ರಾಮದ  ಸರ್ಕಾರಿ ಹಳ್ಳದ  ಸಮೀಪ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ನಡೆಯುತ್ತಿದೆ ಎಂತ ಬಂದ ಖಚಿತ ವರ್ತಮಾನದ ಮೇರೆಗೆ ಪಂಚರನ್ನು ಬರಮಾಡಿಕೊಂಡು ಮೇಲ್ಕಂಡ ಸಿಬ್ಬಂದಿಯೊಂದಿಗೆ ಮೇಲ್ಕಂಡ ಸ್ಥಳಕ್ಕೆ ಸರ್ಕಾರಿ ಜೀಪ್ ನಲ್ಲಿ ಹೋಗಿ ಸ್ವಲ್ಪ ದೂರದಲ್ಲಿ ಜೀಪ್ ನಿಲ್ಲಿಸಿ ಮರೆಯಲ್ಲಿ ನಿಂತು ನೋಡಲಾಗಿ ಇಂದ್ರಬೆಟ್ಟ ಗ್ರಾಮದ ಸರ್ಕಾರಿ ಹಳ್ಳದಲ್ಲಿ ಸುಮಾರು 07-08 ಜನರು   ಗುಂಡಾಕಾರವಾಗಿ ಕುಳಿತು ಹಣವನ್ನು ಪಣಕ್ಕೆ ಕಟ್ಟಿಕೊಂಡು ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದ ಆಸಾಮಿಗಳ ಮೇಲೆ ದಾಳಿ ಮಾಡಿ ಸುತ್ತುವರೆದು ಹಿಡಿಯಲು ಹೋದಾಗ್ಗೆ ಜನರು ಓಡಿ ಹೋಗಿದ್ದು ಸ್ಥಳದಲ್ಲಿ ಪಣಕ್ಗಕೆ ಕಟ್ಟಿದ್ದ ಹಣ ಇಸ್ಪೀಟ್ ಎಲೆಗಳು 200 ರೂಪಾಯಿ ನಗದು ಹಣವಿದ್ದು ಸದರಿ ವಸ್ತುಗಳನ್ನು ಅಮಾನತ್ತು ಪಡಿಸಿಕೊಂಡು  ಇಸ್ಪೀಟ್ ಜೂಜಾಟ ಆಡುತ್ತಿದ್ದ ಒಬ್ಬ ಆಸಾಮಿಯು ಕೈಗೆ ಸಿಕ್ಕಿದ್ದು ಆತನ ಹೆಸರು ವಿಳಾಸ ಕೇಳಲಾಗಿ 1] ವೆಂಕಟೇಶ ಬಿನ್ ಲೇ|| ನಾರಾಯಣಪ್ಪ,ನಾಯಕ ಜನಾಂಗ, ನಾಗಲಾಪುರ ಎಂತ ತಿಳಿಸಿದ್ದು    ಈತನು ಓಡಿ ಹೋದವರ ಹೆಸರು ವಿಳಾಸ ತಿಳಿಸಿದ್ದು 2] ರಾಮಮೂರ್ತಿ ಬಿನ್ ದಾಸಪ್ಪ, 3] ಚಂದ್ರಪ್ಪ 4] ಮಂದುಲ ಪರಮೆಶ  ಬಿನ್ ವೆಂಕಟಪ್ಪ 5] ರವಿ ಬಿನ್ ಹನುಮಪ್ಪ, ಇಂದ್ರಬೆಟ್ಟ 6]ರಾಮಕೃಷ್ಣ ಬಿನ್ ಹನುಮಂತಪ್ಪ 7] ಶಿವ ಬಿನ್ ಚೌಡಪ್ಪ 8] ರಾಜಪ್ಪ ಎಂತ ತಿಳಿಸಿದ್ದು   ಸ್ಥಳದಲ್ಲಿ ಇಸ್ಪೀಟ್ ಜೂಜಾಟಕ್ಕೆ ಪಣಕ್ಕೆ ಕಟ್ಟಿದ್ದ ಹಣ ವನ್ನು ಎಣಿಸಲಾಗಿ  200 =00 ರೂ ಗಳಿದ್ದು ,ಸ್ಥಳದಲ್ಲಿ ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದ 52 ಇಸ್ಪೀಟ್ ಎಲೆಗಳನ್ನು ಪಂಚರ ಸಮಕ್ಷಮ ಬೆಳಿಗ್ಗೆ 10:00 ಗಂಟೆಯಿಂದ 11:00 ಗಂಟೆ ವರೆವಿಗೆ ಪಂಚನಾಮೆ ಮುಖೇನ ಅಮಾನತ್ತು  ಪಡಿಸಿಕೊಂಡು  ಮಾಲು ಮತ್ತು ಪಂಚನಾಮೆಯನ್ನು ಠಾಣೆಗೆ ಬೆಳಿಗ್ಗೆ 11:30ಗಂಟೆಗೆ  ಬಂದು ಅಸಾಮಿಗಳ ವಿರುದ್ದ  ನೀಡಿದ ವರದಿಯನ್ನು ಪಡೆದು ಠಾಣಾ ಎನ್.ಸಿ.ಆರ್ : 18/2018  ರಲ್ಲಿ ನೊಂದಾಯಿಸಿ ಈ ಪ್ರಕರಣವು ಅಸಂಜ್ಞೇಯ ಅಪರಾಧವಾಗಿರುವುದರಿಂದ ಮುಂದಿನ ತನಿಖೆ ಕೈಗೊಳ್ಳಲು ಘನ ನ್ಯಾಯಾಲಯವು ಸಂಜ್ಞೇಯ ಅಪರಾಧವಾಗಿ ಪರಿಗಣಿಸಿ ಕಲಂ :87 ಕೆ.ಪಿ. ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲು ಅನುಮತಿ ನೀಡ ಬೇಕಾಗಿ ಘನ ನ್ಯಾಯಾಲಯದಲ್ಲಿ ಕೋರಿದ್ದು ದಿನಾಂಕ:28/02/2018  ರಂದು ನ್ಯಾಯಲಯವು ಅನುಮತಿ ಆದೇಶ ನೀಡಿದ್ದರಿಂದ ದಿನಾಂಕ:28/02/2018 ರಂದು ಬೆಳಿಗ್ಗೆ 11:30   ಗಂಟೆಗೆ ಆಸಾಮಿಗಳ ವಿರುದ್ದ ಠಾಣಾ ಮೊ.ನಂ:20/2018  ಕಲಂ:87 ಕೆ.ಪಿ.ಆಕ್ಟ್ ರೀತ್ಯಾ ಪ್ರಕರಣ  ದಾಖಲಿಸಿರುತ್ತದೆ,

ಹೆಬ್ಬೂರು ಪೊಲೀಸ್ ಠಾಣಾ ಮೊ.ನಂ. 67/2018 ಕಲಂ - 392 ಐ.ಪಿ.ಸಿ,

ದಿನಾಂಕ:28-02-2018 ರಂದು  ಸಂಜೆ 4-00 ಗಂಟೆಗೆ ಪಿರ್ಯಾದಿಯಾದ ಸುನಿತ ಕೋಂ ಶ್ರೀನಿವಾಸ್, 33 ವರ್ಷ, ಒಕ್ಕಲಿಗರು, ಗೃಹಿಣಿ, ರಾಮಕೃಷ್ಣಾಪುರ, ಹೆಬ್ಬೂರು ಹೋಬಳಿ, ತುಮಕೂರು ತಾಲ್ಲೂಕು & ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೇಂದರೆ ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು, ದಿನಾಂಕ: 27-02-2018 ರಂದು ನಾನು ಮೇಲ್ಕಂಡ ನಮ್ಮ ಗ್ರಾಮದಿಂದ ಸಿ,ಎಸ್,ಪುರ ಹೋಬಳಿಯ ಕೊಡಗೆಹಳ್ಳಯಲ್ಲಿರುವ ನನ್ನ ತಂಗಿಯಾದ ಅನಿತಾ ರವರ ಮನೆಗೆ ಹೋಗಿದ್ದು, ನಂತರ ವಾಪಸ್ ನಮ್ಮ ಗ್ರಾಮಕ್ಕೆ ಹೋಗಲು ಈ ದಿವಸ ಅಂದರೆ ದಿನಾಂಕ: 28-02-2018 ರಂದು ಮದ್ಯಾಹ್ನ ಸುಮಾರು 12-00 ಗಂಟೆ ಸಮಯದಲ್ಲಿ ಸಿ,ಎಸ್,ಪುರ ಬಸ್‌ ನಿಲ್ದಾಣದಲ್ಲಿ ಬಸ್ಸನ್ನು ಹತ್ತಿ ಮದ್ಯಾಹ್ನ ಸುಮಾರು 12-30 ಗಂಟೆ ಸಮಯದಲ್ಲಿ ದೊಡ್ಡಗೊಲ್ಲಹಳ್ಳಿ ಗ್ರಾಮದಲ್ಲಿ ಬಸ್ಸಿನಿಂದ ಇಳಿದು, ರಾಮಕೃಷ್ಣಾಪುರಕ್ಕೆ ಹೋಗಲೆಂದು ದೊಡ್ಡಗೊಲ್ಲಹಳ್ಳಿ-ರಾಮಕೃಷ್ಣಾಪುರ ಮಣ್ಣಿನ ರಸ್ತೆಯಲ್ಲಿ ಬೋವಿಪಾಳ್ಯದ ವೆಂಕಟಪ್ಪ ರವರ ತೋಟದ ಬಳಿ ನಡೆದುಕೊಂಡು ಹೋಗುತ್ತಿರುವಾಗ್ಗೆ, ಮದ್ಯಾಹ್ನ ಸುಮಾರು 12-45 ಗಂಟೆ ಸಮಯದಲ್ಲಿ ನನ್ನ ಎದುರಿನಿಂದ ಅಂದರೆ ರಾಮಕೃಷ್ಣಾಪುರ ಕಡೆಯಿಂದ ಒಂದು ದ್ವಿಚಕ್ರ ವಾಹನದಲ್ಲಿ ಇಬ್ಬರು ಆಸಾಮಿಗಳು ಬಂದು ದ್ವಿಚಕ್ರ ವಾಹನವನ್ನು ನನ್ನಿಂದ ಸ್ಪಲ್ಪ ಮುಂದಕ್ಕೆ ಹೋಗಿ ನಿಲ್ಲಿಸಿದ್ದು, ಸದರಿ ದ್ವಿಚಕ್ರ ವಾಹನದ ಸವಾರನು ಹೆಲ್ಮೆಟ್‌ ಧರಿಸಿದ್ದು, ಹಿಂದೆ ಕುಳಿತ್ತಿದ್ದ ಮತ್ತೊಬ್ಬ ಆಸಾಮಿಯು ನನ್ನ ಬಳಿ ಬಂದು ನನ್ನ ಕುತ್ತಿಗೆಯನ್ನು ಹಿಡಿದುಕೊಂಡು ನನ್ನನ್ನು ರಸ್ತೆ ಪಕ್ಕದ ಗಿಡಗಂಟಿಗಳಿರುವ ಜಾಗಕ್ಕೆ ತಳ್ಳಿ ನನ್ನ ಕುತ್ತಿಗೆಯಲ್ಲಿದ್ದ ಸುಮಾರು 40 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡನು. ನಾನು ಜೋರಾಗಿ ಕಿರುಚಿಕೊಂಡಿದ್ದು ಸ್ಥಳದಲ್ಲಿ ಯಾರೂ ಇಲ್ಲದ್ದರಿಂದ ದ್ವಿಚಕ್ರ ವಾಹನವನ್ನು ಹತ್ತಿಕೊಂಡು ಇಬ್ಬರೂ ಆಸಾಮಿಗಳು ದೊಡ್ಡಗೊಲ್ಲಹಳ್ಳಿ ಗ್ರಾಮದ ಕಡೆಗೆ ಜೋರಾಗಿ ಹೊರಟು ಹೋದರು. ನಾನು ಗಾಬರಿಯಲ್ಲಿದ್ದರಿಂದ ದ್ವಿಚಕ್ರ ವಾಹನದ ನಂಬರ್ ನೋಡಲು ಸಾಧ್ಯವಾಗಲಿಲ್ಲ. ಆದ್ದರಿಂದ ನನ್ನ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋದ ಆಸಾಮಿಗಳನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಮುಂದಿನ ಕ್ರಮ ಜರುಗಿಸಬೇಕೆಂದು ಈ ಮೂಲಕ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ ಎಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 41 guests online
Content View Hits : 258145