lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ. ದಿನಾಂಕ : 10-07-2018   ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 09-07-2018 ಕೊಲೆ ಆರೋಪಿಗಳ ಬಂಧನ ******* ದಿನಾಂಕ 04.07.2018 ರಂದು... >>   ಪತ್ರಿಕಾ ಪ್ರಕಟಣೆ ದಿನಾಂಕ : 07-07-2018. ಪೂರ್ವಾನುಮತಿ ಪಡೆಯದೇ ಹೆದ್ದಾರಿ ತಡೆ ನಡೆಸಿ,... >> ದಿನಾಂಕ.03.07.2018. ಪತ್ರಿಕಾ ಪ್ರಕಟಣೆ ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ 11 ಲಕ್ಷ 70 ಸಾವಿರ ಬೆಲೆ ಬಾಳುವ ಚಿನ್ನ-ಬೆಳ್ಳಿ  ಹಾಗೂ ಮೊಬೈಲ್‌‌‌... >>   ಪತ್ರಿಕಾ ಪ್ರಕಟಣೆ. ತುಮಕೂರು ಜಿಲ್ಲಾ ಪೊಲೀಸ್, ತುಮಕೂರು. ಕೋರಾ ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 27.06.2018 ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಸಾರ್ವಜನಿಕರ... >> ಪತ್ರಿಕಾ ಪ್ರಕಟಣೆ ದಿನಾಂಕ:- 23/06/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಖನ್ನ... >> ಪತ್ರಿಕಾ ಪ್ರಕಟಣೆ ದಿನಾಂಕ: 21-06-2018. ಸುಲಿಗೆಕೋರರ ಬಂಧನ: ದಿನಾಂಕ:18-06-2018 ರಂದು... >>   ಪೊಲೀಸ್ ಪ್ರಕಟಣೆ ತುಮಕೂರು ಜಿಲ್ಲಾ ಪೊಲೀಸ್ ಪ್ರಕಟಣೆ   ಆತ್ಮೀಯ ನಾಗರೀಕರಲ್ಲಿ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< January 2018 >
Mo Tu We Th Fr Sa Su
1 2 3 4 5 6 7
8 9 10 11 12 13 14
15 16 17 18 19 20 21
22 23 24 25 26 27 28
29 30 31        
January 2018

Wednesday, 31 January 2018

ಅಪರಾಧ ಘಟನೆಗಳು 31-01-18

ಮಧುಗಿರಿ ಪೊಲೀಸ್ ಠಾಣಾ CR : 14/2018, u/s 279,337 IPC

ಪಿರ್ಯಾದಿ ಲಿಂಗೇಶ ಬಿನ್ ಚಿಕ್ಕಣ್ಣ, 26 ವರ್ಷ, ಗೊಲ್ಲರು, ಜಿರಾಯ್ತಿ, ಹುಣಸೇಮರದಹಟ್ಟಿ, ಕಸಬಾ ಹೋಬಳಿ, ಮಧುಗಿರಿ ತಾಲ್ಲೂಕುರವರು ಠಾಣೆಗೆ ಹಾಜರಾಗಿ ನೀಡಿದ ಸಾರಾಂಶವೆನೆಂದರೆ ಪಿರ್ಯಾದಿಯ ಅಣ್ಣ ಶಿವಣ್ಣರವರ ಮಗಳಾದ ಶಿವಲಿಂಗಮ್ಮನವರಿಗೆ ಸುಮಾರು 13 ವರ್ಷ ವಯಸ್ಸಾಗಿದ್ದು, ಮಧುಗಿರಿ ಟೌನ್ ಶ್ರೀ ಸಿದ್ದಾರ್ಥ ಪ್ರೌಢಶಾಲೆಯಲ್ಲಿ 8 ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಪ್ರತಿದಿನ ಬಸ್ಸಿನಲ್ಲಿ ಮಧುಗಿರಿಗೆ ಶಾಲೆಗೆ ಬಂದು ಹೋಗುತ್ತಿದ್ದಳು. ಎಂದಿನಂತೆ ದಿನಾಂಕ: 24-01-2018 ರಂದು ಬೆಳಿಗ್ಗೆ ಶಾಲೆಗೆಂದು ಮಧುಗಿರಿಗೆ ಬಂದು, ನಂತರ ನೆಂಟರ ಮನೆಗೆ ಹೋಗಬೇಕೆಂತಾ ವಾಪಸ್ ನಮ್ಮೂರಿಗೆ KA-06-C-5586 ನೇ ಮಾರುತಿ ಕೃಪ ಬಸ್ಸಿನಲ್ಲಿ ಹತ್ತಿಕೊಂಡು ಊರಿಗೆ ಬರುತ್ತಿದ್ದಾಗ, ಬೆಳಿಗ್ಗೆ ಸುಮಾರು 10.15 ಗಂಟೆಯ ಸಮಯದಲ್ಲಿ ಹುಣಸೇಮರಹಟ್ಟಿ ಗೇಟ್ ಹತ್ತಿರ, ಬಸ್ಸು ನಿಲ್ಲಿಸಿದ್ದು, ಶಿವಲಿಂಗಮ್ಮಳು ಬಸ್ಸಿನ ಮುಂದಿನ ಬಾಗಿಲಿನಿಂದ ಇಳಿಯುತ್ತಿರುವುದನ್ನು ಗಮನಿಸದೇ, ಬಸ್ಸಿನ ಚಾಲಕ ಬಸ್ಸನ್ನು ಅಜಾಗರೂಕತೆಯಿಂದ ಮುಂದಕ್ಕೆ ಚಾಲನೆ ಮಾಡಿದ್ದರಿಂದ, ಶಿವಲಿಂಗಮ್ಮಳು ಬಸ್ಸಿನ ಮುಂಭಾಗದ ಡೋರ್ ನಿಂದ ಕೆಳಕ್ಕೆ ಬಿದ್ದಿದ್ದು, ಆಕೆಯ ಗದ್ದಕ್ಕೆ, ದವಡೆಯ ಎರಡು ಕಡೆ, ತಲೆಗೆ ಪೆಟ್ಟು ಬಿದ್ದು, ರಕ್ತಗಾಯವಾಗಿರುತ್ತದೆ. ಹಲ್ಲುಗಳಿಗೂ ಸಹ ಏಟಾಗಿರುತ್ತದೆ. ಬಸ್ಸಿನಲ್ಲಿದ್ದ ಹುಣಸೇಮರದಹಟ್ಟಿ ಗ್ರಾಮದ ರಾಮಯ್ಯ.ಕೆ ರವರು ಹಾಗೂ ಬಸ್ಸಿನಲ್ಲಿದ್ದ ಇತರೆಯವರು ಶಿವಲಿಂಗಮ್ಮನವರನ್ನು ಅದೇ ಬಸ್ಸಿನಲ್ಲಿ ಕೊರಟಗೆರೆ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಚಿಕಿತ್ಸಗೆ ದಾಖಲಿಸಿರುತ್ತಾರೆ. ನಂತರ ಪಿರ್ಯಾದಿ ಮತ್ತು ಅವರ ಅತ್ತಿಗೆ ಕರಿಯಮ್ಮನವರು ಕೊರಟಗೆರೆ ಸರ್ಕಾರಿ ಆಸ್ಪತ್ರೆಗೆ ಹೋಗಿ ವೈದ್ಯರ ಮೇರೆಗೆ ಹೆಚ್ಚಿನ ಚಿಕಿತ್ಸೆಗೆ ತುಮಕೂರು ಜನರಲ್ ಆಸ್ಪತ್ರೆಗೆ ಕರೆದುಕೊಂಡು ಹೊಗಿ ಒಳರೋಗಿಯಾಗಿ ದಾಖಲಿಸಿ, ಚಿಕಿತ್ಸೆ ಕೊಡಿಸುತ್ತಿದ್ದು, ಗಾಯಾಳು ಶಿವಲಿಂಗಮ್ಮನವರನ್ನು ಉಪಚರಿಸಿ ನೋಡಿಕೊಂಡು ಆಸ್ಪತ್ರೆಯಲ್ಲಿದ್ದುದರಿಂದ ಈ ತಡವಾಗಿ ಠಾಣೆಗೆ ಹಾಜರಾಗಿ, ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಅಪಘಾತ ವುಂಟು ಮಾಡಿದ KA-06-C-5586 ನೇ ಮಾರುತಿ ಕೃಪ ಬಸ್ಸಿನ ಚಾಲಕನ ವಿರುದ್ದ ಸೂಕ್ತ ಕಾನೂನು ರಿತ್ಯಾ ಕ್ರಮ ಜರುಗಿಸಬೇಕೆಂದು ತಮ್ಮಲ್ಲಿ ಕೋರುತ್ತೇನೆಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ 21/2018 ಕಲಂ 279.337 ಐಪಿಸಿ

ದಿನಾಂಕ-30/01/2018 ರಂದು ಮಧ್ಯಾಹ್ನ 3-00 ಗಂಟೆಗೆ ಪಿರ್ಯಾದಿಯಾದ ಡಿ ಎನ್ ನರಸಿಂಹಮೂರ್ತಿ ಬಿನ್ ಲೇಟ್ ನಿಂಗಯ್ಯ, 43 ವರ್ಷ, ದೊಡ್ಡಗುಣಿ, ಹೆಬ್ಬೂರು ಹೋಬಳಿ, ತುಮಕೂರು ತಾಲ್ಲೋಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂಧರೆ ದಿನಾಂಕ-24/01/2018 ರಂದು ಬೆಳಿಗ್ಗೆ 8-30 ಗಂಟೆ ಸಮಯದಲ್ಲಿ 13 ವರ್ಷದ ವಯಸ್ಸಿನ ನನ್ನ ಮಗನಾದ ಡಿ ಎನ್ ಪ್ರದೀಪನೊಂದಿಗೆ ಗಿರಿನಾಯಕನಪಾಳ್ಯದ ನಮ್ಮ ನೆಂಟರ ಮನೆಯಿಂದ ಕುಣಿಗಲ್ ಗೆ ಆಸ್ಪತ್ರೆಗೆ ಹೋಗಲು ತುಮಕೂರು ಕುಣಿಗಲ್ ರಸ್ತೆಯ ಹೆಬ್ಬೂರಿನ ಬೋರೇಗೌಡ ಪೆಟ್ರೋಲ್ ಬಂಕ್ ಬಳಿ ಬಸ್ಸಿಗಾಗಿ ಕಾಯುತ್ತಿರುವಾಗ ಹೆಬ್ಬೂರಿನ ಕಡೆಯಿಂದ ಒಂದು ಬೈಕಿನಲ್ಲಿ ಇಬ್ಬರು ವ್ಯಕ್ತಿಗಳು ಬರುತ್ತಿದ್ದು ಅದರ ಸವಾರ ಅತೀವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ನಾವು ನಿಂತಿದ್ದ ಸ್ಥಳದಲ್ಲಿ ಒಂದು ನಾಯಿ ಅಡ್ಡ ಬಂದ ಕಾರಣ ಸಡನ್ ಆಗಿ ಗಾಡಿ ನಿಲ್ಲಿಸಲಾಗದೆ ನನ್ನ ಪಕ್ಕದಲ್ಲಿ ನಿಂತಿದ್ದ ನನ್ನ ಮಗ ಡಿ ಎನ್ ಪ್ರದೀಪನಿಗೆ ಡಿಕ್ಕಿ ಹೊಡೆಯಿಸಿ ಅಪಘಾತಪಡಿಸಿದ್ದರಿಂದ ನನ್ನ ಮಗ ಕೆಳಕ್ಕೆ ಬಿದ್ದು ಮೈ ಕೈಗಳಿಗೆ, ತಲೆಗೆ, ಕಾಲಿಗೆ ಪೆಟ್ಟಾಗಿ, ಎಡಗಾಲು ಮುರಿದಿದ್ದು ಹಾಗೂ ರಕ್ತ ಗಾಯಗಳಾದವು, ಬೈಕಿನಲ್ಲಿದ್ದವರು ಸಹ ರಸ್ತೆಯ ಮೇಲೆ ಬಿದ್ದರು. ಆಗ ಬೈಕಿನ ಹಿಂಭಾಗದಲ್ಲಿ ಕುಳಿತಿದ್ದ ನಮ್ಮ ಊರಿನವನೇ ಆದ ಶಶಿಧರ ಡಿ ಜಿ ಬಿನ್ ಗಂಗಾಧರಯ್ಯ, ಮತ್ತು ಚಾಲಕನಾಗಿದ್ದ ಕಾಳಪ್ಪ ಬಿನ್ ಮರಿನರಸಯ್ಯ ಆಗಿದ್ದರು, ಕಾಳಪ್ಪನಿಗೆ ಯಾವುದೇ ಗಾಯಗಳಾಗಿರಲಿಲ್ಲ ಮತ್ತು ಶಶಿಧರ ರವರಿಗೆ ಎಡಗಾಲು, ಎಡಗೈ, ಮೈ ಕೈಗಳಿಗೆ ಗಾಯಗಳಾಗಿದ್ದವು, ಬೈಕಿನ ನಂಬರ್ ನೋಡಲಾಗಿ ಕೆಎ-05-ಇಎಕ್ಸ್-9461 ಆಗಿದ್ದು, ನಂತರ ಅಲ್ಲಿಯೇ ಇದ್ದ ಜನರು ಆಂಬುಲೆನ್ಸ್ ಗೆ ಫೋನ್ ಮಾಡಿ ಕರೆಸಿದರು, ಆಗ ಆಂಬುಲೆನ್ಸ್ ನಲ್ಲಿ ನನ್ನ ಮಗ ಮತ್ತು ಶಶಿಧರ ರವರನ್ನು ಕರೆದುಕೊಂಡು ತುಮಕೂರಿನ ಜಿಲ್ಲಾ ಆಸ್ಪತ್ರೆಗೆ ಕೆರೆದುಕೊಂಡು ಹೋಗಿ ಓಳರೋಗಿಯಾಗಿ ದಾಖಲು ಮಾಡಿದೆನು. ನಂತರ ವೈಧ್ಯರ ಸಲಹೆಯಂತೆ 2 ದಿನಗಳ ನಂತರ ಹೆಚ್ಚಿನ ಚಿಕಿತ್ಸೆಗಾಗಿ ನನ್ನ ಮಗನನ್ನು ಬೆಂಗಳೂರಿನ ಸಂಜಯ್‌ಗಾಂದಿ ಆಸ್ಪತ್ರೆಗೆ ಸೇರಿಸಿ ಓಳರೋಗಿಯಾಗಿ ಚಿಕಿತ್ಸೆ ಕೊಡಿಸುತ್ತಿರುತ್ತೇನೆ, ಶಶಿಧರ್ ರವರು ತುಮಕೂರಿನ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾರೆ, ಆದ್ದರಿಂದ ಈ ಅಫಘಾತಕ್ಕೆ ಕಾರಣನಾದ ಕೆಎ-05-ಇಎಕ್ಸ್-9461 ನೇ ಬಜಾಜ್ ಸಿಟಿ100 ರ ಚಾಲಕ ಕಾಳಪ್ಪ ರವರ ಮೇಲೆ ಕಾನೂನಿನ ರೀತ್ಯಾ ಕ್ರಮ ಜರುಗಿಸಬೇಕೆಂದು ನನ್ನ ಮಗನನ್ನು ಆಸ್ಪತ್ರೆಯಲ್ಲಿ ಯಾರು ನೋಡಿಕೊಳ್ಳಲು ಇಲ್ಲದಿದ್ದರಿಂದ ಈ ದಿನ ತಡವಾಗಿ ಬಂದು ದೂರು ನೀಡಿರುತ್ತೇನೆ, ಮತ್ತು ಅಪಘಾತಪಡಿಸಿದ ದ್ವಿಚಕ್ರ ವಾಹನವು ಬೋರೇಗೌಡ ಪೆಟ್ರೋಲ್ ಬಂಕ್ ಬಳಿ ಇರುತ್ತೆ ಎಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಬಡವನಹಳ್ಳಿ ಪೊಲೀಸ್ ಠಾಣಾ ಮೊ ನಂ 09/2018  -  ಕಲಂ 279-337 ಐಪಿಸಿ ರೆ/ವಿ 134(ಎ)(ಬಿ) & 187 ಐ ಎಂ ವಿ ಆಕ್ಟ್‌‌

ದಿನಾಂಕ:-30/01/2018 ರಂದು ಮದ್ಯಾಹ್ನ 1-00 ಗಂಟೆ ಸಮಯದಲ್ಲಿ ಬಿಟ್ಟನಕುರಿಕೆ ಗ್ರಾಮದ ವಾಸಿ ಪುಷ್ಟಲತಾ ಕೊಂ ಹನುಮಂತರಾಯ  ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ, ದಿ:28/01/2018 ರಂದು ನನ್ನ ಗಂಡ ಹನುಮಂತರಾಯ ನನ್ನನ್ನು ತವರು ಮನೆಯಿಂದ ಕರೆದುಕೊಂಡು ಬರಲು ಕೆಎ-06-ಇಪಿ-7481 ನೇ ನಂಬರಿನ ಸ್ಲ್ಪೆಂಡರ್‌ ಪ್ಲಸ್‌ ಬೈಕ್‌ ನಲ್ಲಿ ಸಂಜೆ 4-00 ಗಂಟೆಗೆ ಬಿಟ್ಟನಕುರಿಕೆ ಬಿಟ್ಟು ಬಿಟ್ಟನಕುರಿಕೆ-ವಿರುಪಗೊಂಡನಹಳ್ಳಿ ರಸ್ತೆಯಲ್ಲಿ ಬರುವಾಗ ವಿರುಪಗೊಂಡನಹಳ್ಳಿ ಕೆರೆ ಹತ್ತಿರ ಸಂಜೆ ಸುಮಾರು 5-30 ಗಂಟೆ ಸಮಯದಲ್ಲಿ ವಿರುಪಗೊಂಡನಹಳ್ಳಿ ಕಡೆಯಿಂದ ಕೆಎ-06-ಟಿಎ-8665 ನೇ ನಂಬರಿನ ಟ್ರಾಕ್ಟರ್‌‌ ಅನ್ನು ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ನನ್ನ ಗಂಡನ ಬೈಕ್‌ ಗೆ ಡಿಕ್ಕಿ ಹೊಡೆಸಿದ್ದರಿಂದ ನನ್ನ ಗಂಡನ ಬಲಗಾಲಿನ ಮೂಳೆ ಮುರಿದಿದ್ದು, ಎಡಗಾಲಿಗೂ ಪೆಟ್ಟುಗಳು ಆಗಿರುತ್ತವೆ. ಅಲ್ಲಿದ್ದ ಸಾರ್ವಜನಿಕರು ನನ್ನ ಗಂಡನಿಗೆ ಉಪಚರಿಸಿ 108 ವಾಹನದಲ್ಲಿ ಮಧುಗಿರಿ ಆಸ್ಪತ್ರೆಗೆ ದಾಖಲಿಸಿದ್ದು, ಮೊಬೈಲ್‌ ಮೂಲಕ ವಿಚಾರ ತಿಳಿದು ನಾನು ಮಧುಗಿರಿಗೆ ಹೋಗಿ ವೈದ್ಯರ ಸಲಹೆಯಂತೆ ಗಾಯಾಳು ನನ್ನ ಗಂಡನನ್ನು ತುಮಕೂರಿನ ಆದಿತ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದು, ಟ್ರಾಕ್ಟರ್‌ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಅಂಶವಾಗಿರುತ್ತೆ.

 

 

 

 

 Tuesday, 30 January 2018

ಅಪರಾಧ ಘಟನೆಗಳು 30-01-18

ತಿಪಟೂರು ನಗರ ಪೊಲೀಸ್ ಠಾಣಾ ಮೊ. ನಂ 09/2018 ಕಲಂ: 324, 307, 504 ಐಪಿಸಿ

ದಿನಾಂಕ:29-01-2018 ರಂದು ಗಾಯಾಳು ಚಂದ್ರಶೇಖರ್‌ @ ಚಂದ್ರ ರವರು ತಿಪಟೂರಿನ ಕುಮಾರ್‌ ಅಸ್ಪತ್ರೆಯಲ್ಲಿ  ನೀಡಿದ ಹೇಳಿಕೆ ಅಂಶವೇನೆಂದರೆ, ದಿನಾಂಕ:29-01-2018 ರಂದು ನಾನು ನನ್ನ ಹತ್ತಿರ ಕೆಲಸ ಮಾಡುತ್ತಿದ್ದ ಪುಟ್ಟಸ್ವಾಮಿ, ಕುಮಾರ ಮೂರು ಜನರು ನನ್ನ ಬಾಬ್ತು ಕಾರಿನಲ್ಲಿ ಸಂಜೆ ಸುಮಾರು 06-30 ಗಂಟೆ ಸಮಯದಲ್ಲಿ ತಿಪಟೂರಿನ ತಿರುಮಲ ವೈನ್‌ ಸ್ಟೋರ್‌ ಪಕ್ಕ ಇರುವ ಬೀಡಾ ಅಂಗಡಿ ಮುಂಭಾಗ ಕಾರನ್ನು ನಿಲ್ಲಿಸಿ ಬೀಡಾ ತೆಗೆದುಕೊಳ್ಳಲು ಹೋಗುತ್ತಿದ್ದಾಗ ಬೀಡಾ ಅಂಗಡಿ ಮುಂದೆ ನಿಂತಿದ್ದ ಗಾಂಧಿನಗರದ ಲಾರಿ ಡ್ರೈವರ್‌ ಮೊಹಿದ್ದಿನ್‌ ಎಂಬುವನು ಏನೋ ಚಂದ್ರ ಕಾರ್‌ ತೆಗೆದುಕೊಂಡು ಓಡಾಡುತ್ತಿದ್ದಿಯಾ ನನಗೆ ಡ್ರಿಂಕ್ಸ್‌ ಕೊಡಿಸು ಅಂದ ಆಗ ನಾನು ನನ್ನ ಹತ್ತಿರ ದುಡ್ಡು ಇಲ್ಲವೆಂದಾಗ, ಏನೋ ಬೋಳಿಮಗನೇ, ಸೂಳೆಮಗನೇ ಕಾರ್‌ ತಗೊಂಡು ಓಡಾಡ್ತಿಯಾ ದುಡ್ಡು ಕೇಳಿದರೆ ಇಲ್ಲ ಅಂತಿಯಾ ಅಂತ ಅಂದವನೇ ಬಾರ್‌ ಮುಂಭಾಗ ಇದ್ದ ಒಂದು ಬೀರು ಬಾಟಲಿಯನ್ನು ತೆಗೆದುಕೊಂಡು ಹೊಡೆದು ಚೂರಾದ ಬಾಟಲಿಯಿಂದ ನನ್ನ ಹೊಟ್ಟೆಗೆ ಚುಚ್ಚಿ ಸಾಯಿಸಲು ಬಂದನು. ಆಗ ನಾನು ತಪ್ಪಿಸಿಕೊಳ್ಳಲು ಹೋದಾಗ ನನ್ನ ಬಲಗಾಲ ಮುಂಡಿ ಚಿಪ್ಪಿನ ಹತ್ತಿರ ಚುಚ್ಚಿ ರಕ್ತಗಾಯಪಡಿಸಿದ ಅಷ್ಟರಲ್ಲಿ ನನ್ನ ಜೊತೆಯಿದ್ದ ಪುಟ್ಟಸ್ವಾಮಿ ಮತ್ತು ಕುಮಾರ್‌‌ ಇಬ್ಬರು ಜಗಳ ಬಿಡಿಸಿದರು. ನನ್ನ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಲು ಪ್ರಯತ್ನಿಸಿರುವ ಮೊಹಿದ್ದೀನ್‌ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂತ ಕುಮಾರ್‌ ಆಸ್ಪತ್ರೆಯಲ್ಲಿ ರಾತ್ರಿ 07-30 ಗಂಟೆಯಿಂದ 08-00 ಗಂಟೆಯವರೆಗೆ ಗಾಯಾಳುವಿನ ಹೇಳಿಕೆ ಪಡೆದು ರಾತ್ರಿ 08-15 ಗಂಟೆಗೆ ಠಾಣೆಗೆ  ಬಂದು ಪ್ರಕರಣ ದಾಖಲಿಸಿರುತ್ತೆ.

 

ಹೆಬ್ಬೂರು  ಪೊಲೀಸ್ ಠಾಣಾ ಮೊ.ನಂ. 19/2018 ಕಲಂ 354,323,341,504 ರೆ/ವಿ 149  ಐ.ಪಿ.ಸಿ.

ದಿನಾಂಕ 29/01/2018 ರಂದು ಮದ್ಯಾಹ್ನ 15-00 ಗಂಟೆಗೆ ಪಿರ್ಯಾದಿ ಜಮುನಾ ಕೋಂ ನಾಗರಾಜು, ಭೋವಿಪಾಳ್ಯ,  ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನಾಂಶವೇನೆಂದರೆ,  ದಿನಾಂಕ 26/01/2018 ರಂದು ಬೆಳಿಗ್ಗೆ 9-00 ಗಂಟೆಯ ಸಮಯದಲ್ಲಿ ನಾನು ನಮ್ಮ ಗ್ರಾಮದಲ್ಲಿರುವ ವೀರ ದಿಮ್ಮಮ್ಮ ದೇವಸ್ಥಾನಕ್ಕೆ ಪೊಜೆಗೆಂದು  ಹೋಗುತ್ತಿರುವಾಗ್ಗೆ ದೇವಸ್ಥಾನದ ಮುಂಭಾಗ ಹಿಂದೆ ನೀರಿನ ವಿಚಾರದಲ್ಲಿ ಗಲಾಟೆ ಮಾಡಿದ ವಿಚಾರದಲ್ಲಿ ನಮ್ಮ ಗ್ರಾಮದ ವಾಸಿಗಳಾದ ರಾಮಕೃಷ್ಣಪ್ಪ ಹಾಗು ಈತನ ಹೆಂಡತಿ ಗಂಗಮ್ಮ ಮತ್ತು ಇವರ ಮಗಳು ರೂಪ,  ವೆಂಕಟೇಶ ಬಿನ್ ಲಕ್ಕಪ್ಪ ಹಾಗು ಈತನ ಹೆಂಡತಿ ಸುನಿತಾ ರವರುಗಳು ನನ್ನನ್ನು ಅಡ್ಟಗಟ್ಟಿ ಲೇ ಸೂಳೆ ಮುಂಡೆ, ಲೋಪರ್ ಮುಂಡೆ ಅಂತಾ ಅವ್ಯಾಚ್ಚ ಶಬ್ದಗಳಿಂದ ಬೈಯ್ದು ನಮ್ಮ ಹುಡುಗಿಯು ನೀರು ಹಿಡಿಯಲು ಬಂದರೆ ಗಲಾಟೆ ಮಾಡುತ್ತೀಯೇನೆ ಸೂಳೇ ಅಂತಾ ಬೈಯ್ದು  ರಾಮಕೃಷ್ಣಪ್ಪ ಎಂಬುವವನು ನನ್ನ ಜುಟ್ಟನ್ನು ಹಿಡಿದು ಕೆಳಕ್ಕೆ ಕೆಡವಿಕೊಂಡು ಬೆನ್ನಿಗೆ ಕೈಯಿಂದ ಹೊಡೆದು ನಾನು ತೊಟ್ಟಿದ್ದ ನೈಟಿಯನ್ನು ಹಿಡಿದು ಹರಿದು ಹಾಕಿದನು. ರೂಪ ಹಾಗು ಗಂಗಮ್ಮ ರವರು ನನ್ನನ್ನು ಕಾಲುಗಳಿಂದ ಎಡಭಾಗದ ಪಕ್ಕಗೆ ಒದ್ದು ಮೈ ಕೈ ನೋವುಂಟು ಮಾಡಿರುತ್ತಾರೆ. ವೆಂಕಟೇಶ ಹಾಗು ಈತನ ಹೆಂಡತಿ ಸುನಿತಾ ರವರು ನನ್ನ ಜುಟ್ಟನ್ನು ಎಳೆದಾಡಿ ಕೈಗಳಿಂದ ತಲೆಗೆ ಕೆನ್ನೆಗೆ ಹೊಡೆದು ನೋವುಂಟು ಮಾಡಿದರು. ಅಷ್ಟರಲ್ಲಿ ನಾನು ಕಿರುಚಿಕೊಂಡಾಗ ನಮ್ಮ ಗ್ರಾಮದ ವಾಸಿಗಳಾದ ಗೀತಾ ಕೋಂ ಶ್ರೀನಿವಾಸ, ಹಾಗೂ ರಾಜ ಬಿನ  ದಾಸಪ್ಪ ರವರು ಬಂದು ಜಗಳ ಬಿಡಿಸಿದರು. ನಂತರ ನಮ್ಮ ಯಜಮಾನರಾದ  ನಾಗರಾಜು ರವರು ಬಂದು ನನ್ನನ್ನು ನಮ್ಮ ದ್ಚಿಚಕ್ರ ವಾಹನದಲ್ಲಿ ಗಾಯಾಳುವಾದ ನನ್ನನ್ನು ತುಮಕೂರು ಜಿಲ್ಲಾ ಆಸ್ಪತ್ರೆಗೆ ತಂದು ಚಿಕಿತ್ಸೆಗೆ ದಾಖಲ್ಮಾಡಿರು. ನಾನು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ  ಪಡೆದು ಮೇಲ್ಕಂಡ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಈ ದಿನ ತಡವಾಗಿ ಬಂದು ಊರು ನೀಡಿದ್ದರ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ.ನಂ. 20/2018 ಕಲಂ 354,323,341,504,506 ರೆ/ವಿ 34 ಐ.ಪಿ.ಸಿ

ದಿನಾಂಕ 29/01/2018 ರಂದು ಮದ್ಯಾಹ್ನ 15-30 ಗಂಟೆಗೆ ಪಿರ್ಯಾದಿ ರೂಪ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನಾಂಶವೇನೆಂದರೆ, ನಮ್ಮ ಗ್ರಾಮದ ವಾಸಿಯಾದ ನಾಗರಾಜುರವರ ಹೆಂಡತಿ ಜಮುನಾ ರವರು ನನ್ನ ಶೀಲದ ಬಗ್ಗೆ ಅವಹೇಳನ ರೀತಿಯಲ್ಲಿ ಬೇರೆಯವರೊಂದಿಗೆ ಹೇಳಿಕೊಂಡಿದ್ದಳು. ಈ ವಿಚಾರವಾಗಿ ಆಕೆಯನ್ನು ಬೈದುಕೊಂಡಿದ್ದೆವು. ದಿನಾಂಕ 26/01/2017 ರಂದು ಬೆಳಿಗ್ಗೆ 9-30 ಗಂಟೆಯ ಸಮಯದಲ್ಲಿ ನಾನು ನಮ್ಮ ಗ್ರಾಮದ ಸಾರ್ವಜನಿಕ ಕುಡಿಯುವ ನೀರಿನ ಟ್ಯಾಂಕ್ ಬಳಿ ನೀರು ಹಿಡಿಯಲು ಹೋಗುತ್ತಿದ್ದಾಗ ಟ್ಯಾಂಕನ ಮುಂಭಾಗದ ಸಾರ್ವಜನಿಕ ರಸ್ತೆಯಲ್ಲಿ ನಮ್ಮ  ಗ್ರಾಮದ ವಾಸಿಗಳಾದ ಜಮುನಾ ಕೋಂ ನಾಗರಾಜು ನಾಗರಾಜ ಬಿನ್ ಸಂಜೀವಯ್ಯ ಮತ್ತು ಪವನ್ ಕುಮಾರ್ ಬಿನ್ ನಾಗರಾಜು ಇವರುಗಳು ನನ್ನನ್ನು ರಸ್ತೆಯಲ್ಲಿ ಅಡ್ಡಗಟ್ಟಿ ತಡೆದು ಸೂಳೆಮುಂಡೆ ಬೇವರ್ಸಿ ಮುಂಡೆ, ಏನೇ ಬೈದುಕೊಳ್ಳುತ್ತಿದ್ದೆ ಅಂತ ಅವ್ಯಾಚ್ಚ ಶಬ್ದಗಳಿಂದ ಗಲಾಟೆ ಮಾಡದರು. ನಾಗರಾಜು ಎಂಬುವನು ನನ್ನ ಜುಟ್ಟು ಹಿಡಿದು ಕೆಳಕ್ಕೆ ಕಡವಿಕೊಂಡು ಕಾಲುಗಳಿಂದ ಎದೆಯ ಬಾಗಕ್ಕೆ  ತುಳಿದನು. ಪವನ್ ಕುಮಾರ್ ಎಂಬುವನು ನಾನು ಹಾಕಿದ್ದ ಚೂಡಿದಾರದ ಟಾಪ್‌ನ್ನು  ಹರಿದು ಹಾಕಿದನು. ಜಮುನಾ ಎಂಬುವಳು ನನ್ನ ಜುಟ್ಟು ಹಿಡಿದು ಎಳೆದಾಡಿ ಕೈಗಳಿಂದ  ಮುಖಕ್ಕೆ ಬೆನ್ನಿಗೆ ಹೊಡೆದಳು. ಆಷ್ಟರಲ್ಲಿ ನಾನು ಕಿರಿಚಿಕೊಳ್ಳುತ್ತಿದ್ದಾಗ ನಮ್ಮ ಗ್ರಾಮದವರೆ ಆದ ವೆಂಕಟ ಲಕ್ಷ್ಮಮ್ಮ ಕೋಂ ಜಯಣ್ಣ ಮತ್ತು ಕುಮಾರ ಬಿನ್ ರಂಗಸ್ವಾಮಯ್ಯ ರವರುಗಳು ಬಂದು ಜಗಳ ಬಿಡಿಸಿದರು. ಆಗ ಮೇಲ್ಕಂಡವರು ಸೂಳೆ ಮುಂಡೆ ನಿನ್ನನ್ನು  ಇಷ್ಟಕ್ಕೆ ಬಿಡುವುದಿಲ್ಲ ಕೊಲೆ ಮಾಡುತ್ತೇವೆ ಎಂದು ಪ್ರಾಣ ಬೆದರಿಕೆ ಹಾಕಿ ಹೊರಟು ಹೋದರು. ನಂತರ ನನ್ನನ್ನು  ಯಾವುದೋ ವಾಹನದಲ್ಲಿ ನಮ್ಮ ತಾಯಿ ಗಂಗಮ್ಮ ಮತ್ತು ನಮ್ಮ ಅಜ್ಜಿ ಜಯಮ್ಮ ರವರು ತುಮಕೂರಿನ ಸರ್ಕಾರಿ ಅಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರು. ನಂತರ ನಾನು ಚಿಕಿತ್ಸೆ ಪಡೆದು ಮೇಲ್ಕಂಡವರುಗಳ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ನೊಂದಾಯಿಸಿಕೊಂಡಿರುತ್ತೆ.

 

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ 18/2018 ಕಲಂ 379 ಐಪಿಸಿ

ದಿನಾಂಕ:29-01-2018 ರಂದು ಮಧ್ಯಾಹ್ನ 2-00 ಗಂಟೆಗೆ ಪಿರ್ಯಾದಿಯಾದ ಎಂ,ಸಿ,ನಾರಾಯಣಪ್ಪ ಬಿನ್ ಲೇ|| ಚಿಕ್ಕೀರಪ್ಪ, 62 ವರ್ಷ, ಭಜಂತ್ರಿ ಜನಾಂಗ, ವೃತ್ತಿ ಕಸುಬು, ಮಸ್ಕಲ್‌, ಗೂಳೂರು ಹೋಬಳಿ, ತುಮಕೂರು ತಾಲ್ಲೂಕು & ಜಿಲ್ಲೆರವರು  ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೆನೆಂಧರೆ ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ನಾನು ಕೆಎ-06-ಇ.ಕೆ-3672 ನೇ ಟಿ,ವಿ,ಎಸ್ ಎಕ್ಸ್‌ ಸೂಪರ್ ಹೆವಿ ಡ್ಯೂಟಿ ದ್ವಿಚಕ್ರ ವಾಹನದ ಆರ್‌/ಸಿ ಮಾಲೀಕನಾಗಿದ್ದು, ಸದರಿ ನನ್ನ ಬಾಬ್ತು ಮೇಲ್ಕಂಡ ದ್ವಿಚಕ್ರ ವಾಹನದಲ್ಲಿ ನಾನು ದಿನಾಂಕ; 14-01-2018 ರಂದು ಮಸ್ಕಲ್‌ ಗ್ರಾಮದಿಂದ ಹೊನ್ನುಡಿಕೆ ಸಂತೆಗೆ ಹೋಗಿದ್ದು, ಹೊನ್ನುಡಿಕೆ ಸಂತೆಯ ಪಕ್ಕದಲ್ಲೆ ರಸ್ತೆಯ ಬದಿಯಲ್ಲಿ ಸಾಯಂಕಾಲ ಸುಮಾರು 04-00 ಗಂಟೆ ಸಮಯದಲ್ಲಿ ನನ್ನ ಬಾಬ್ತು ಮೇಲ್ಕಂಡ ದ್ವಿಚಕ್ರ ವಾಹನವನ್ನು ಹ್ಯಾಂಡಲ್‌ ಲಾಕ್ ಮಾಡಿ ನಿಲ್ಲಿಸಿ ಸಂತೆಗೆ ಹೋಗಿದ್ದು, ನಂತರ ಸಂತೆ ಮುಗಿಸಿಕೊಂಡು ಸಾಯಂಕಾಲ ಸುಮಾರು 05-30 ಗಂಟೆ ಸಮಯದಲ್ಲಿ ವಾಪಸ್ ಬಂದು ನೋಡಲಾಗಿ ನನ್ನ ಟಿ,ವಿ,ಎಸ್ ದ್ವಿಚಕ್ರ ವಾಹನ ಸ್ಥಳದಲ್ಲಿ ಇರಲಿಲ್ಲ. ಯಾರೋ ಕಳ್ಳರು ನನ್ನ ಬಾಬ್ತು ದ್ವಿಚಕ್ರ ವಾಹನವನ್ನು ಕಳವು ಮಾಡಿಕೊಂಡು ಹೋಗಿದ್ದರು. ಸದರಿ ಟಿ,ವಿ,ಎಸ್ ದ್ವಿಚಕ್ರ ವಾಹನವು ಸುಮಾರು 15,000/- ರೂಪಾಯಿ ಬೆಲೆ ಬಾಳುವುದಾಗಿರುತ್ತೆ. ಆದ್ದರಿಂದ ನನ್ನ ಬಾಬ್ತು ಮೇಲ್ಕಂಡ ದ್ವಿಚಕ್ರ ವಾಹನವನ್ನು ಪತ್ತೆ ಮಾಡಿ ಆರೋಪಿತರ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಬೇಕೆಂದು, ನಾನು ಇಲ್ಲಿಯವರೆವಿಗೂ ದ್ವಿಚಕ್ರ ವಾಹನವನ್ನು ಎಲ್ಲಾ ಕಡೆ ಹುಡುಕಾಗಿ ಎಲ್ಲಿಯೂ ಸಿಗಲಿಲ್ಲವಾದ್ದರಿಂದ ತಡವಾಗಿ ಬಂದು ದೂರನ್ನು ನೀಡುತ್ತಿದ್ದೇನೆ ಎಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

 Monday, 29 January 2018

ಅಪರಾಧ ಘಟನೆಗಳು 29-01-18

ಪಟ್ಟನಾಯಕನಹಳ್ಳಿ ಪೊಲೀಸ್ ಠಾಣಾ ಮೊನಂ 13-18 ಕಲಂ 279,304(ಎ) ಐಪಿಸಿ ಮತ್ತು 187 ಐ ಎಂ ವಿ ಆಕ್ಟ್

ದಿನಾಂಕ:28-01-18 ರಂದು ಬೆಳಿಗ್ಗೆ 10:30ಗಂಟೆಗೆ ಪಿರ್ಯಾದಿ ಸತೀಶ ಬಿನ್ ಮಹಾಲಿಂಗಯ್ಯ, ಹೊಸಹಳ್ಳಿ ಗ್ರಾಮ, ಶಿರಾ ತಾಲ್ಲೂಕ್ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ಪಿರ್ಯಾದಿಯ ಚಿಕ್ಕಮ್ಮರಾದ ರಾಜಮ್ಮ ಕೊಂ ಸಿದ್ದೇಶಪ್ಪ ರವರು ದಿನಾಂಕ:27-01-18 ರಂದು  ಬೆಳಿಗ್ಗೆ ಸುಮಾರು 09:30 ಗಂಟೆ ಸಮಯದಲ್ಲಿ  ಜಮೀನಿನ ಬಳಿ ಹೋಗಲು ಕೆಂಚಮ್ಮ ರವರ ಮನೆಯ ಮುಂಭಾಗದ  ರಸ್ತೆಯಲ್ಲಿ  ನಡೆದುಕೊಂಡು ಹೋಗುತ್ತಿರುವಾಗ ಎದುರುಗಡೆಯಿಂದ ಬಂದ ಕೆಎ-64-ಕ್ಯೂ-1214ನೇ ಹಿರೊ ಸ್ಪ್ಲೆಂಡರ್ ಪ್ಲಸ್  ಮೋಟಾರು ಸೈಕಲ್ ಸವಾರ  ಕರಿಯಪ್ಪ ಬಿನ್  ಸಣ್ಣೀರಪ್ಪ, ಗೊಲ್ಲಹಳ್ಳಿ ಗ್ರಾಮ, ಶಿರಾ ತಾಲ್ಲೂಕ್ ರವರು ತನ್ನ ಮೋಟಾರು ಸೈಕಲ್ ನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ  ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿ ಚಿಕ್ಕಮ್ಮ ರವರಿಗೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿ ತನ್ನ ಮೋಟಾರು ಸೈಕಲ್ ನ್ನು ತೆಗೆದುಕೊಂಡು ಹೋಗಿದ್ದು,ಅಪಘಾತದಲ್ಲಿ ಪಿರ್ಯಾದಿ ಚಿಕ್ಕಮ್ಮ ರಾಜಮ್ಮ ರವರಿಗೆ ತಲೆಗೆ ತೀವ್ರತರವಾದ ಪೆಟ್ಟುಗಳು ಬಿದ್ದಿದ್ದು, ಅಲ್ಲೇ ಇದ್ದ ಮೂರ್ಖಣಪ್ಪ ಮತ್ತು ಈಶ್ವರಪ್ಪ ರವರು ಸ್ಥಳಕ್ಕೆ ಬಂದು ಗಾಯಾಳುವನ್ನು ಉಪಚರಿಸಿ ನಂತರ  ಗಾಯಾಳು ರಾಜಮ್ಮ ರವರನ್ನು ಚಿಕಿತ್ಸೆಗಾಗಿ ಶಿರಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಹೆಚ್ಚಿನ  ಚಿಕಿತ್ಸೆಗಾಗಿ ಬೆಂಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ   ಒಳರೋಗಿಯಾಗಿ ದಾಖಿಸಿ ಚಿಕಿತ್ಸೆ ಕೊಡಿಸುತ್ತಿರುವಾಗ ಚಿಕಿತ್ಸೆ ಫಲಕಾರಿಯಾಗದೇ ಇದೇ ದಿನ ರಾತ್ರಿ 08:00 ಗಂಟೆ ಮೃತಪಟ್ಟಿರುತ್ತಾರೆ. ಅಪಘಾತಪಡಿಸಿ ಮೇಲ್ಕಂಡ ಮೋಟಾರು  ಸೈಕಲ್ ಸವಾರನ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು  ನೀಡಿದ ಲಿಖಿತ ಪಿರ್ಯಾದನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ 17/2018 ಕಲಂ 87 ಕೆ.ಪಿ.ಆಕ್ಟ್

ದಿನಾಂಕ-28/01/2018 ರಂದು ರಾತ್ರಿ 11-25 ಗಂಟೆಗೆ ಠಾಣಾ ಎನ್ ಸಿ ಆರ್ ನಂ- 32/2018 ಅನ್ನು ಪರಿವರ್ತಿಸಿ ಕಲಂ 87 ಕೆ,ಪಿ ಆಕ್ಟ್‌ ರೀತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲು ಅನುಮತಿಗಾಗಿ ಘನ ನ್ಯಾಯಾಲಯಕ್ಕೆ ನೀಡಿರುವ ವರಧಿಯ ಅಂಶವೇನೆಂಧರೆ ದಿನಾಂಕ:28-01-2018 ರಂದು ರಾತ್ರಿ 07-30 ಗಂಟೆಗೆ ಡಿ,ಎ,ಆರ್ ಎ.ಹೆಚ್.ಸಿ-73, ಜಯರಾಮ್‌,ಜಿ ರವರು ತಂದು ಹಾಜರ್ಪಡಿಸಿದ ತುಮಕೂರು ಡಿ,ಸಿ,ಬಿ ಸಬ್‌ ಇನ್ಸ್‌ ಪೆಕ್ಟರ್‌ ಶ್ರೀ ಕೇಶವಮೂರ್ತಿ ರವರು ನೀಡಿರುವ ವರದಿಯ ಅಂಶವೇನೆಂದರೆ, ನಾನು ತುಮಕೂರು ಡಿ,ಸಿ,ಬಿ ಬ್ರಾಂಚ್‌ನಲ್ಲಿ 27-12-2017 ರಿಂದ ಕರ್ತವ್ಯ ನಿರ್ವಹಿಸುತ್ತಿದ್ದು, ಈ ದಿವಸ ಮಾನ್ಯ ತುಮಕೂರು ಜಿಲ್ಲಾ ಎಸ್,ಪಿ ಸಾಹೇಬರವರು ಹೆಬ್ಬೂರು ಹೋಬಳಿ, ಪಟ್ಟೇಗೌಡನಪಾಳ್ಯದ ಸಾರ್ವಜನಿಕ ಸ್ಥಳದಲ್ಲಿ ಕೆಲವು ಆಸಾಮಿಗಳು ಅಂದರ್ ಬಾಹರ್ ಎಂಬ ಇಸ್ಪೀಟು ಜೂಜಾಟವಾಡುತ್ತಿರುತ್ತಾರೆಂತಾ ಮಾಹಿತಿ ನೀಡಿ ದಾಳಿ ಮಾಡಿ ಹಿಡಿಯುವಂತೆ ಸೂಚಿಸಿದ್ದು, ಹಾಗೂ ಸದರಿ ದಾಳಿಗೆ ನನ್ನೊಂದಿಗೆ ಅಮೃತೂರು ಪೊಲೀಸ್‌ ಠಾಣೆಯ ಪಿ,ಎಸ್,ಐ ಶ್ರೀ ಅನಿಲ್ ಕುಮಾರ್‌ ಹಾಗೂ ಗುಬ್ಬಿ ಠಾಣೆಯ ಪಿ,ಎಸ್,ಐ ಶ್ರೀ ಗಂಗಾಧರಯ್ಯ ರವರುಗಳನ್ನು ಹಾಗೂ 10 ಜನ ಸಿಬ್ಬಂದಿಗಳನ್ನು ನನ್ನೊಂದಿಗೆ ನೇಮಕ ಮಾಡಿದ್ದು, ಅದರಂತೆ ನಾವು ಒಂದು ಖಾಸಗಿ ವಾಹನದಲ್ಲಿ ಸಾಯಂಕಾಲ 05-00 ಗಂಟೆ ಸಮಯದಲ್ಲಿ ತುಮಕೂರಿನಿಂದ ಹೊರಟು, ಹೆಬ್ಬೂರಿನಲ್ಲಿ ಪಂಚಾಯ್ತುದಾರರಾದ ಸೈಯದ್ ಮನ್ಸೂರ್‌ ಬಿನ್ ಸೈಯದ್ ಜಲಾಲುದ್ದೀನ್‌, 40 ವರ್ಷ, ಮುಸ್ಲಿಂ, ವ್ಯಾಪಾರ, ಗಳಗ, ಕಸಬಾ ಹೋಬಳಿ, ಗುಬ್ಬಿ ತಾಲ್ಲೂಕು ಹಾಗೂ ಬಾಳಾರಾದ್ಯ ಬಿನ್ ಲೇ|| ಸಿದ್ದಮಲ್ಲಯ್ಯ, 38 ವರ್ಷ, ಲಿಂಗಾಯಿತರು, ವ್ಯಾಪಾರ, ಪಂಡಿತನಹಳ್ಳಿ, ಕಸಬಾ ಹೋಬಳಿ, ಗುಬ್ಬಿ ತಾಲ್ಲೂಕು ರವರುಗಳನ್ನು ನಮ್ಮೊಂದಿಗೆ ಕರೆದುಕೊಂಡು ಸಾಯಂಕಾಲ 06-00 ಗಂಟೆ ಸಮಯದಲ್ಲಿ ಹೆಬ್ಬೂರು ಹೋಬಳಿ ಪಟ್ಟೆಗೌಡನ ಪಾಳ್ಯ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ 16 ಜನ ಆಸಾಮಿಗಳು ವೃತ್ತಾಕಾರವಾಗಿ ಕುಳಿತುಕೊಂಡು ಅಂದರ್ ಬಾಹರ್ ಎಂಬ ಇಸ್ಪೀಟು ಜೂಜಾಟ ಆಡುತ್ತಿರುವುದು ಕಂಡು ಬಂದಿದ್ದು, ಸದರಿ ಆಸಾಮಿಗಳ ಪೈಕಿ ಇಬ್ಬರು ಆಸಾಮಿಗಳು ನಮ್ಮನ್ನು ನೋಡಿ ಓಡಿ ಹೋದರು. ನಂತರ ನಾನು ಮತ್ತು ನಮ್ಮ ಸಿಬ್ಬಂದಿಗಳು ಉಳಿದ 14 ಜನ ಆಸಾಮಿಗಳನ್ನು ಸುತ್ತುವರೆದು ಮೇಲಕ್ಕೆ ಏಳದಂತೆ ತಾಕೀತು ಮಾಡಿದ್ದು, ಸದರಿ ಆಸಾಮಿಗಳ ಪೈಕಿ ಒಬ್ಬ ಆಸಾಮಿಯ ಕೈಯಲ್ಲಿ ಇಸ್ಪೀಟು ಎಲೆಗಳಿದ್ದು ಆತನ ಹೆಸರು ವಿಳಾಸ ಕೇಳಲಾಗಿ 1) ಉಮೇಶ್‌ ಗೌಡ ಬಿನ್ ಮಹಿಮಣ್ಣ, ಕುಂಟರಾಯನಪಾಳ್ಯ ಎಂತಾ ತಿಳಿಸಿದನು. ಆತನ ಬಲಮಗ್ಗುಲಲ್ಲಿ ಕುಳಿತ್ತಿದ್ದವರ ಹೆಸರು ವಿಳಾಸವನ್ನು ಕ್ರಮವಾಗಿ ಕೇಳಲಾಗಿ 2) ನಂದನ್‌ಕುಮಾರ್ ಬಿನ್ ನರಸಿಂಹಯ್ಯ, ಸಿರಿವರ 3) ವೆಂಕಟೇಶ್‌ ಬಿನ್ ರಾಮಯ್ಯ, ಗಳಗ 4) ಮಂಜುನಾಥ್ ಬಿನ್ ಪದ್ಮನಾಭ, ಬಟವಾಡಿ, ತುಮಕೂರು, 5) ಹೇಮಂತ್‌ ಬಿನ್ ಚಿದಂಬರ್‌, ಭೈರಸಂದ್ರ, ಗೂಳೂರು ಹೋಬಳಿ, 6) ಕಾಂತರಾಜು ಬಿನ್ ಲೇ|| ಗೌಡಯ್ಯ, ದೇವರಾಯಪಟ್ಟಣ, ತುಮಕೂರು 7) ಆನಂದರಾಮು ಬಿನ್ ರಾಮಯ್ಯ, ಅಂಬೇಡ್ಕರ್‌ ನಗರ, ತುಮಕೂರು, 8) ಶಶಿಧರ ಬಿನ್ ಬಸವರಾಜು, ಎಂ,ಎನ್‌,ಪಾಳ್ಯ, ತುಮಕೂರು, 9) ವಿಜಯಕುಮಾರ್ ಬಿನ್ ಬಸಪ್ಪ, ಗೋಕುಲ ಬಡಾವಣೆ, ತುಮಕೂರು 10) ಸುನಿಲ್‌ ಕುಮಾರ್ ಬಿನ್ ಸಿದ್ದರಾಮಯ್ಯ, ದೇವರಾಯಪಟ್ಟಣ, ತುಮಕೂರು 11) ಚೇತನ್‌ ಬಿನ್ ನರಸಿಂಹಮೂರ್ತಿ, ಎಂ,ಎನ್‌,ಪಾಳ್ಯ, ತುಮಕೂರು 12) ಪಾಲನೇತ್ರೀಯ ಬಿನ್ ಶಿವಕುಮಾರ್, ಎಂ,ಎನ್,ಪಾಳ್ಯ, ತುಮಕೂರು 13) ರೂಪೇಶ್‌ ಬಿನ್ ಬಸವರಾಜು, ಗೋಕುಲ ಬಡಾವಣೆ, ತುಮಕೂರು ಹಾಗೂ 14) ಬಸವರಾಜು ಬಿನ್ ಯಲ್ಲಪ್ಪ, ಮಾರುತಿ ನಗರ, ಆರ್,ಎಂ,ವಿ 2 ನೇ ಸ್ಟೇಜ್‌, ಬೆಂಗಳೂರು ಎಂತಾ ತಿಳಿಸಿದರು. ಓಡಿ ಹೋದವರ ಹೆಸರು ವಿಳಾಸ ತಿಳಿಯಲಾಗಿ 15) ಮನು, ದೇವರಾಯಪಟ್ಟಣ, ತುಮಕೂರು 16) ವೀರಭದ್ರಯ್ಯ, ದೇವರಾಯಪಟ್ಟ, ತುಮಕೂರು ಎಂತಾ ತಿಳಿಸಿದರು. ನಂತರ ಆಸಾಮಿಗಳು ಅಖಾಡದಲ್ಲಿ ಪಣವಾಗಿಟ್ಟಿದ್ದ ಹಣವನ್ನು ಎಣಿಸಲಾಗಿ 1,26,660/- ರೂಗಳಿದ್ದವು, ಆಟಕ್ಕೆ ಉಪಯೋಗಿಸಿದ್ದ ಇಸ್ಪೀಟು ಎಲೆಗಳನ್ನು ಎಣಿಸಲಾಗಿ 52 ಇಸ್ಪೀಟು ಎಲೆಗಳಿದ್ದವು. ಸ್ಥಳದಲ್ಲಿ ಆಸಾಮಿಗಳಿಗೆ ಸೇರಿದ 5 ದ್ವಿಚಕ್ರ ವಾಹನಗಳಿದ್ದವು. ನಂತರ ಜೂಜಾಟವಾಡಲು ಪಣವಾಗಿಟ್ಟಿದ್ದ 1,26,660/- ರೂಗಳನ್ನು, ಆಟಕ್ಕೆ ಉಪಯೋಗಿಸಿದ್ದ 52 ಇಸ್ಪೀಟು ಎಲೆಗಳನ್ನು ಹಾಗೂ ಆಟಕ್ಕೆ ಉಪಯೋಗಿಸಿದ್ದ ಒಂದು ಪ್ಲಾಸ್ಟಿಕ್‌ ಕವರ್‌ ಅನ್ನು, ಸ್ಥಳದಲ್ಲಿ ದೊರೆತ 5 ದ್ವಿಚಕ್ರ ವಾಹನಗಳನ್ನು ಪಂಚನಾಮೆ ಕ್ರಮ ಜರುಗಿಸಿ ವಶಕ್ಕೆ ಪಡೆದು, ಮೇಲ್ಕಂಡ 14 ಜನ ಆಸಾಮಿಗಳನ್ನು ರಾತ್ರಿ 07-00 ಗಂಟೆ ಸಮಯದಲ್ಲಿ ವಶಕ್ಕೆ ಪಡೆದು ಮುಂದಿನ ಕ್ರಮ ಜರುಗಿಸಲು ಹೆಬ್ಬೂರು ಪೊಲೀಸ್ ಠಾಣೆಯ ಠಾಣಾಧಿಕಾರಿಯವರಿಗೆ ಕಳುಹಿಸಿರುವ ವರದಿಯನ್ನು ಪಡೆದು ಠಾಣಾ ಎನ್.ಸಿ.ಆರ್ ನಂ 32/2018 ರಲ್ಲಿ ದಾಖಲಿಸಿರುತ್ತೆ ಎಂದು ನ್ಯಾಯಾಲಯದ ಅನುಮತಿಯನ್ನು ಪಡೆದ ವರಧಿಯನ್ನು ಪಡೆದು ಠಾಣಾ ಮೊ ನಂ 17/2018 ಕಲಂ 87 ಕೆ.ಪಿ.ಆಕ್ಟ್ ರೀತ್ಯಾ ಪ್ರಕರಣವನ್ನು ದಾಖಲಿಸಿರುತ್ತೆ.

ಚೇಳೂರು ಪೊಲೀಸ್  ಠಾಣಾ  ಮೊ. ನಂ23/2018 ಕಲಂ 379  ಐ.ಪಿ.ಸಿ

ದಿನಾಂಕ;28/01/2018 ರಂದು  ಬೆಳಗ್ಗೆ 9-00  ಗಂಟೆ  ಸಮಯದಲ್ಲಿ  ಪಿರ್ಯಾದಿ  ರಂಗಸ್ವಾಮಯ್ಯ  ನವರು  ಠಾಣೆಗೆ  ಹಾಜರಾಗಿ  ನೀಡಿದ  ಪಿರ್ಯಾದು ಅಂಶವೇನಂದರೆ,  ನನ್ನ  ಹೆಸರಿನಲ್ಲಿ   ಗೌರಿಪುರ ಗ್ರಾಮದ   ಸರ್ವೆ   ನಂಬರ್  45  ರಲ್ಲಿ 1 ಎಕರೆ   ಜಮೀನಿದ್ದು,   ಈ  ಜಮೀನಿನಲ್ಲಿ  ಕೊಳವೆ  ಬಾವಿಯನ್ನು  ಕೊರೆಸಿ   ಈಜಮೀನಿನಲ್ಲಿ  ಅಡಿಕೆ  ತೋಟ   ಬೆಳೆಸಿರುತ್ತೆನೆ.  ನಮ್ಮ  ಮನೆಗೂ  ಮತ್ತು  ತೋಟಕ್ಕೆ   ಸುಮಾರು  1  ಕಿ.ಲೋ. ಮೀಟರ್  ದೂರ  ಇರುತ್ತೆ.  ನಾವು   ಪ್ರತಿದಿನ   ತೊಟದ  ಕೆಲಸ  ಮುಗಿಸಿಕೊಂಡು  ಸಂಜೆ  ವಾಪಸ್ಸು  ಮನೆಗೆ  ಬರುತ್ತಿರುತ್ತೇವೆ.   ದಿನಾಂಕ;27/01/2018  ರಂದು   ಸಂಜೆ 6-00  ಗಂಟೆ  ಸಮಯದಲ್ಲಿ  ತೋಟದ  ಕೆಲಸ  ಮುಗಿಸಿಕೊಂಡು  ವಾಪಸ್ಸು  ಬಂದಿರುತ್ತೇವೆ.  ಪ್ರತಿ  ದಿನದಂತೆ    ದಿನಾಂಕ; 28/01/2018  ರಂದು  ಬೆಳಗ್ಗೆ  7-00  ಗಂಟೆ  ಸಮಯದಲ್ಲಿ  ನಮ್ಮ  ಜಮೀನಿನ  ಬಳಿಗೆ  ಹೋದಾಗ   ನನ್ನ ತೊಟದಲ್ಲಿ  ಬೋರ್  ವೆಲ್ ಗೆ  ಅಳವಡಿಸಿದ್ದ ಕಬ್ಬಿಣದ ಡಬ್ಬದಲ್ಲಿ  ಇಟ್ಟಿದ್ದ  ಸಬಿ.ಟಿ.ಕೋ   ಕಂಪನಿಯ 10  ಹೆಚ್.ಪಿ ಸ್ಟಾಟರ್ ಅನ್ನು  ಯಾರೋ  ಕಳ್ಳರು   ದಿನಾಂಕ;27/01/2018  ರಂದು   ರಾತ್ರಿ  ಯಾವುದೋ ಸಮಯದಲ್ಲಿ ಕಳ್ಳತನ  ಮಾಡಿಕೊಂಡು   ಹೋಗಿರುತ್ತಾರೆ   ಈ ಸ್ಟಾಟರ್  ಬೆಲೆ  ಸುಮಾರು 12.000=00  ರೂಗಳಾಗಿರುತ್ತೆ.  ನನ್ನ ಬಾಬ್ತು  ಜಮೀನಿನಲ್ಲಿ  ಇಟ್ಟಿದ್ದ  ಸ್ಟಾಟರ್  ಅನ್ನು  ಕಳ್ಳತನ  ಮಾಡಿರುವ  ಆಸಾಮಿಗಳ  ಮೇಲೆ  ಕಾನೂನು  ರೀತ್ಯ  ಕ್ರಮ  ಜರುಗಿಸಲು  ಕೋರಿ ಇತ್ಯಾದಿಯಾದ  ಪಿರ್ಯಾದು ಅಂಶ.

ಚೇಳೂರು ಪೊಲೀಸ್  ಠಾಣಾ  ಮೊ. ನಂ24/2018 ಕಲಂ 379  ಐ.ಪಿ.ಸಿ

ದಿನಾಂಕ;28/01/2018  ರಂದು ಬೆಳಗ್ಗೆ 10-00  ಗಂಟೆಗೆ   ಪಿರ್ಯಾದಿ  ಮಂಜುನಾಥ  ರವರು  ಠಾಣೆಗೆ  ಹಾಜರಾಗಿ   ನೀಡಿದ ಪಿರ್ಯಾದು ಅಂಶವೇನಂದರೆ,  ನಾನು   ಗುಬ್ಬಿ  ಟೌನ್  ನಲ್ಲಿ   ವಾಸವಾಗಿದ್ದು,   ನನ್ನ   ಹೆಸರಿನಲ್ಲಿ ಗುಬ್ಬಿ  ತಾ.   ಚೇಳೂರು  ಹೋ,  ಗೌರಿಪುರ ಗ್ರಾಮದ   ಸರ್ವೆ   ನಂಬರ್  46 ರಲ್ಲಿ 1.30 ಎಕರೆ   ಜಮೀನಿದ್ದು,   ಈ  ಜಮೀನಿನಲ್ಲಿ  ಕೊಳವೆ  ಬಾವಿಯನ್ನು  ಕೊರೆಸಿ   ಈ ಜಮೀನಿನಲ್ಲಿ ತೆಂಗಿನ  ತೋಟ  ಬೆಳೆಸಿರುತ್ತೆನೆ.   ನಾನು  ಪ್ರತಿ  ದಿನ  ನಮ್ಮ  ತೊಟದ ಬಳಿಗೆ  ಬಂದು   ಕೆಲಸ  ಮುಗಿಸಿಕೊಂಡು  ಸಂಜೆ  ವಾಪಸ್ಸು  ಗುಬ್ಬಿಗೆ   ಹೋಗುತ್ತೇವೆ, ದಿನಾಂಕ;27/01/2018  ರಂದು   ಸಂಜೆ 5-00  ಗಂಟೆ  ಸಮಯದಲ್ಲಿ  ತೋಟದ  ಕೆಲಸ  ಮುಗಿಸಿಕೊಂಡು  ವಾಪಸ್ಸು  ಗುಬ್ಬಿಗೆ  ಹೋಗಿದ್ದು,   ನಾನು ಪ್ರತಿ  ದಿನದಂತೆ    ದಿನಾಂಕ; 28/01/2018  ರಂದು  ಬೆಳಗ್ಗೆ  8-00  ಗಂಟೆ  ಸಮಯದಲ್ಲಿ  ನಮ್ಮ  ಜಮೀನಿನ  ಬಳಿಗೆ  ಹೋದಾಗ   ನಮ್ಮ  ಜಮೀನಿನಲ್ಲಿ  ಇದ್ದ   ಕರೆಂಟ್  ರೂಂ ನಲ್ಲಿ  ಇಟ್ಟಿದ್ದ  ಬೋರ್  ವೆಲ್ ಗೆ  ಅಳವಡಿಸಿದ್ದ   ಬಿ.ಟಿ.ಕೋ   ಕಂಪನಿಯ 12.5   ಹೆಚ್.ಪಿ ಸ್ಟಾಟರ್ ಅನ್ನು  ಯಾರೋ  ಕಳ್ಳರು   ದಿನಾಂಕ;27/01/2018  ರಂದು   ರಾತ್ರಿ  ಯಾವುದೋ ಸಮಯದಲ್ಲಿ ಕಳ್ಳತನ  ಮಾಡಿಕೊಂಡು   ಹೋಗಿರುತ್ತಾರೆ. ನಮ್ಮ ಕರೆಂಟ್  ರೂಮಿಗೆ  ಬೀಗ ಹಾಕಿರುವುದಿಲ್ಲ.   ಕರೆಂಟ್  ರೂಂ ನಲ್ಲಿ  ಇದ್ದ  ನಮ್ಮ  ಬಾಬ್ತು ಸ್ಟಾಟರ್ ಅನ್ನು   ಕಳ್ಳತನ  ಮಾಡಿ ಕೊಂಡು  ಹೋಗಿರುತ್ತಾರೆ.  ಈ ಸ್ಟಾಟರ್  ಬೆಲೆ  ಸುಮಾರು 12.250 =00  ರೂಗಳಾಗಿರುತ್ತೆ.  ನನ್ನ ಬಾಬ್ತು  ಜಮೀನಿನಲ್ಲಿ  ಇಟ್ಟಿದ್ದ  ಸ್ಟಾಟರ್  ಅನ್ನು  ಕಳ್ಳತನ  ಮಾಡಿರುವ  ಆಸಾಮಿಗಳ  ಮೇಲೆ  ಕಾನೂನು  ರೀತ್ಯ  ಕ್ರಮ  ಜರುಗಿಸಲು  ಕೋರಿ  ಇತ್ಯಾದಿಯಾದ   ಪಿರ್ಯಾದು  ಅಂಶ.

ಚೇಳೂರು ಪೊಲೀಸ್  ಠಾಣಾ  ಮೊ. ನಂ25/2018 ಕಲಂ 379  ಐ.ಪಿ.ಸಿ

ದಿನಾಂಕ 28/1/2018  ರಂದು ಪಿರ್ಯಾದಿ ಶಿವ ಕುಮಾರ್ ರವರು ಠಾಣೆಗೆ ಹಾಜರಾಗಿ  ನೀಡಿದ ಪಿರ್ಯಾದು ಅಂಶವೇನಂದರೆ ಸಾತೇನಹಳ್ಳಿ  ಗ್ರಾಮದ  ಸರ್ವೆ  ನಂಬರ್  36  ರಲ್ಲಿ  1-8  ಗುಂಟೆ   ಜಮೀನಿದ್ದು,   ಈ  ಜಮಿನಿನಲ್ಲಿ   ಕೊಳವೆ  ಬಾವಿಯನ್ನು  ಕೊರೆಸಿ   ಅಡಿಕೆ    ಮತ್ತು  ತೆಂಗಿನ  ತೋಟ   ಬೆಳೆಸಿರುತ್ತೆನೆ.   ತೋಟದಲ್ಲಿಯೇ  ವಾಸದ  ಮನೆ  ಇರುತ್ತೆ. ದಿನಾಂಕ; 27/01/2018  ರಂದು   ಸಂಜೆ 6-00 ಗಂಟೆ  ಸಮಯದಲ್ಲಿ  ತೋಟದ  ಕೆಲಸ  ಮುಗಿಸಿಕೊಂಡು  ಮನೆಯ  ಬಳಿಗೆ  ಬಂದಿದ್ದು, ಮನೆಯುಲ್ಲಿ  ಇದ್ದಾಗ   ದಿನಾಂಕ;28/01/2018  ರಂದು  ಬೆಳಗಿನ  ಜಾವ 3-00  ಗಂಟೆ  ಸಮಯದಲ್ಲಿ  ನಮ್ಮ   ಮನೆಯ  ಬಳಿ  ಇದ್ದ   ನಾಯಿಗಳು  ಬೊಗುಳುವ  ಶಬ್ದ ಕೇಳಿಸಿತು.  ಆಗ  ನಾನು  ನಮ್ಮ  ಮನೆಯಿಂದ  ಹೊರಗೆ   ಬಂದಾಗ  ನಾಯಿಗಳು  ನನ್ನ   ಬೋರ್  ವೆಲ್ ನ  ಕಡೆ  ನೋಡಿಕೊಂಡು  ಬೋಗುಳುತಿದ್ದವು. ಆಗ    ನಾನು  ನಮ್ಮ  ಬೋರ್  ವೆಲ್  ಗೆ  ಅಳವಡಿಸಿದ್ದ  ಸ್ಟಾಟರ್   ಬಳಿಗೆ  ಹೋಗಿ  ನೊಡಲಾಗಿ  ನಮ್ಮ  ಬೋರ್  ವೆಲ್  ಗೆ  ಅಳವಡಿಸಿದ್ದ ಕಬ್ಬಿಣದ  ಡಬ್ಬದಲ್ಲಿ   ಇಟ್ಟಿದ್ದ   ಬಿ.ಟಿ.ಕೋ   ಕಂಪನಿಯ 10 ಹೆಚ್.ಪಿ ಸ್ಟಾಟರ್ ಅನ್ನು  ಯಾರೋ  ಕಳ್ಳರು  ಕಳ್ಳತನ  ಮಾಡಿಕೊಂಡು   ಹೋಗಿರುತ್ತಾರೆ. ದಿನಾಂಕ;28/01/2018  ರಂದು  ಬೆಳಗಿನ   ಜಾವ 3-00  ಗಂಟೆ  ಸಮಯದಲ್ಲಿ   ಯಾರೋ  ಕಳ್ಳರು  ನನ್ನ  ಬಾಬ್ತು ಬಿ.ಟಿ.ಕೋ   ಕಂಪನಿಯ 10 ಹೆಚ್.ಪಿ ಸ್ಟಾಟರ್ ಅನ್ನು  ಕಳ್ಳತನ  ಮಾಡಿಕೊಂಡು  ಹೋಗಿರುತ್ತಾರೆ.  ಈ ಸ್ಟಾಟರ್  ಬೆಲೆ  ಸುಮಾರು 12.000=00  ರೂಗಳಾಗಿರುತ್ತೆ.  ನನ್ನ ಬಾಬ್ತು  ಜಮೀನಿನಲ್ಲಿ  ಇಟ್ಟಿದ್ದ  ಸ್ಟಾಟರ್  ಅನ್ನು  ಕಳ್ಳತನ  ಮಾಡಿರುವ  ಆಸಾಮಿಗಳ  ಮೇಲೆ  ಕಾನೂನು  ರೀತ್ಯ  ಕ್ರಮ  ಜರುಗಿಸಲು  ಕೋರಿ ಇತ್ಯಾದಿಯಾದ ಪಿರ್ಯಾದು ಅಂಶ.

ಚೇಳೂರು ಪೊಲೀಸ್  ಠಾಣಾ  ಮೊ. ನಂ 26 /2018 ಕಲಂ 379  ಐ.ಪಿ.ಸಿ

ದಿನಾಂಕ;28/01/2018 ರಂದು  ಮಧ್ಯಾಹ್ನ 3-30  ಗಂಟೆಗೆ  ಪಿರ್ಯಾದಿ ಮಲ್ಲೆಶಯ್ಯ  ನವರು  ಠಾಣೆಗೆ  ಹಾಜರಾಗಿ  ನೀಡಿದ  ಪಿರ್ಯಾದು ಅಂಶವೇನಂದರೆ,  ನಮ್ಮ  ಬಾಬ್ತು  ಕೊಡಿಪಾಳ್ಯ   ಗ್ರಾಮದಲ್ಲಿ ಸರ್ವೆ ನಂ 34 ರ ಲ್ಲಿ  10 ಕುಂಟೆ    ಜಮೀನಿದ್ದು. ಈ  ಜಮೀನಿನಲ್ಲಿ  ಕೊಳವೆ  ಬಾವಿಯನ್ನು  ಕೊರೆಸಿ   ಈ  ಜಮೀನಿನಲ್ಲಿ  ಅಡಿಕೆ  ಮತ್ತು  ತೆಂಗಿನ  ತೋಟ   ಬೆಳೆಸಿರುತ್ತೇನೆ.  ನಾವು   ಪ್ರತಿದಿನ   ತೊಟದ  ಕೆಲಸ  ಮುಗಿಸಿಕೊಂಡು  ಸಂಜೆ  ವಾಪಸ್ಸು  ಮನೆಗೆ  ಬರುತ್ತಿರುತ್ತೇವೆ.   ದಿನಾಂಕ;27/01/2018  ರಂದು  ರಾತ್ರಿ  8-00  ಗಂಟೆ  ಸಮಯದಲ್ಲಿ  ನಮ್ಮ  ತೋಟಕ್ಕೆ  ಬೋರ್  ವೆಲ್  ನಿಂದ ನೀರನ್ನು  ಹಾಯಿಸಿ  ಮನೆಗೆ  ಹೋಗಿ  ಮನೆಗೆ  ಹೋಗಿರುತ್ತೇನೆ. ದಿನಾಂಕ; 28/01/2018  ರಂದು  ಬೆಳಗಿನ  ಜಾವ 5-00   ಗಂಟೆ  ಸಮಯದಲ್ಲಿ  ನಮ್ಮ  ಬಾಬ್ತು ಜಮೀನಿಗೆ  ನೀರು  ಹರಿಸಲು  ಬಂದು   ಬೋರ್  ವೆಲ್ ಗೆ  ಅಳವಡಿಸಿದ್ದ ಕಬ್ಬಿಣದ ಡಬ್ಬದಲ್ಲಿ  ಇಟ್ಟಿದ್ದ  ಬಿ.ಟಿ.ಕೋ   ಕಂಪನಿಯ 12.5 ಹೆಚ್.ಪಿ ಸ್ಟಾಟರ್ ಅನ್ನು  ಯಾರೋ  ಕಳ್ಳರು   ದಿನಾಂಕ;27/01/2018  ರಂದು   ರಾತ್ರಿ  ಯಾವುದೋ ಸಮಯದಲ್ಲಿ ಕಳ್ಳತನ  ಮಾಡಿಕೊಂಡು   ಹೋಗಿರುತ್ತಾರೆ   ಈ ಸ್ಟಾಟರ್  ಬೆಲೆ  ಸುಮಾರು 12.000=00  ರೂಗಳಾಗಿರುತ್ತೆ.  ನನ್ನ ಬಾಬ್ತು  ಜಮೀನಿನಲ್ಲಿ  ಇಟ್ಟಿದ್ದ  ಸ್ಟಾಟರ್  ಅನ್ನು  ಕಳ್ಳತನ  ಮಾಡಿರುವ  ಆಸಾಮಿಗಳ  ಮೇಲೆ  ಕಾನೂನು  ರೀತ್ಯ  ಕ್ರಮ  ಜರುಗಿಸಲು  ಕೋರಿ ಇತ್ಯಾದಿಯಾದ  ಪಿರ್ಯಾದು ಅಂಶ.

ಸಿ.ಎಸ್,.ಪುರ ಠಾಣಾ ಮೊ.ನಂ: 14/2018. ಕಲಂ:323. 324. 504 ರೆ/ವಿ 34 ಐಪಿಸಿ

ದಿನಾಂಕ:28.01.2018 ರಂದು ಫಿರ್ಯಾದಿಯಾದ  ದ್ರಾಕ್ಷಾಯಿಣಿ  ಕೊಂ ರಾಮಚಂದ್ರ, 26 ವರ್ಷ, ಬೋವಿ ಜನಾಂಗ, ಎಸ್.ಕೊಡಗೇಹಳ್ಳಿ, ಕಸಬಾ ಹೋಬಳಿ, ಗುಬ್ಬಿ ತಾಲ್ಲೂಕುರವರು  ಸಂಜೆ 4.00 ಗಂಟೆಗೆ ಠಾಣೆಗೆ ಹಾಜರಾಗಿ  ನೀಡಿದ ದೂರಿನ ಸಾರಾಂಶವೆಂದರೆ, ಈಗ್ಗೆ ಒಂದು ವಾರದ ಹಿಂದೆ ನನ್ನ  ಒಂದನೇ ಮೈದುನನಾದ  ಮಣಿರಾಜನು ನಮ್ಮ ಗ್ರಾಮಕ್ಕೆ  ಬಂದಿದ್ದು,  ನಮ್ಮ ಗ್ರಾಮದವರೇ ಆದ  ಮುನಿರಾಜ ಬಿನ್ ಚೆಲಪ್ಪ ಎಂಬುವನು  ಕೆಲಸಕ್ಕೆ ಅಂತ ಬಂದು ಪಿಕಾಸಿಯನ್ನು ನನ್ನ ಮೈದುನನಾದ ಮಣಿರಾಜನ ಕಡೆಯಿಂದ ತೆಗೆದುಕೊಂಡು  ಹೋಗಿದ್ದು, ದಿನಾಂಕ:25.01.2018 ರಂಧು  ಸುಮಾರು 11.00 ಗಂಟೆ ಸಮಯದಲ್ಲಿ ನಮ್ಮ ಯಜಮಾನರ ತಂಗಿ ಮಗಳಾದ  ಶಾರದ ಪಿಕಾಸಿಯನ್ನು ವಾಪಸ್ಸು ಕೇಳಲು  ಹೋದಾಗ, ಮುನಿರಾಜನ ತಾಯಿ  ವೆಂಕಟಲಕ್ಷ್ಮಮ್ಮ  ನಿಮ್ಮ  ಪಿಕಾಸಿಯನ್ನು  ನಾವು ಯಾಕೇ ತರಲಿ ಎಂದು ಲೋಫರ್ ಮುಂಡೆ ಎಂದು ಅವಾಚ್ಯ ಶಬ್ದಗಳಿಂದ  ಬೈದಳು ಎಂದು  ಶಾರದ ಬಂದು ತಿಳಿಸಿದಳು, ನಂತರ ಮಧ್ಯಾಹ್ನ  12.00 ಗಂಟೆ ಸಮಯದಲ್ಲಿ  ನಾನು & ನನ್ನ ಯಜಮಾನ ಇಬ್ಬರೂ ಮನೆಯ ಮುಂದೆ ಕುಳಿತಿದ್ದಾಗ , ನಮ್ಮೂರಿನ  ಮುನಿರಾಜು & ಆತನ ಆತಯಿ  ವೆಂಕಟಲಕ್ಷ್ಮಮ್ಮ  ಇಬ್ಬರೂ  ಬಂದು ನಮ್ಮ  ಮೇಲೆ  ಗಲಾಟೆ ತೆಗೆದು, ಮುನಿರಾಜ ನಮ್ಮ ಯಜಮಾನರ ತಲೆಯ ಬಲಭಾಗಕ್ಕೆ  ಅಡಕೆ ದೆಬ್ಬೆಯಿಂದ ಹೊಡೆದು ರಕ್ತಗಾಯ ಪಡಿಸಿದ, ವೆಂಕಟಲಕ್ಷ್ಮಮ್ಮ ಬೆನ್ನಿಗೆ ಕೈಯಿಂದ ಗುದ್ದಿದಳು, ನಂತರ ಮುನಿರಾಜು & ಆತನ ತಾಯಿ ಅಡಕೆ ದಬ್ಬೆಯನ್ನು ಅಲ್ಲಿಯೇ ಬಿಸಾಡಿ ಹೊರಟುಹೋದರು ಇತ್ಯಾದಿಯಾಗಿ  ನೀಡಿದ ದೂರನ್ನು  ಸ್ವೀಕರಿಸಿ ದಾಖಲಿಸಿರುತ್ತೆSunday, 28 January 2018

ಅಪರಾಧ ಘಟನೆಗಳು 28-01-18

ಟ್ರಾಫೀಕ್ ಪೊಲೀಸ್ ಠಾಣೆ ಮೊ.ಸಂ 17/2018  279,304(a)  IPC  134(a)(b) 187 IMV Act

ದಿನಾಂಕ 27.01.2018 ರಂದು ಬೆಳಿಗ್ಗೆ 6-30 ಗಂಟೆಗೆ ಪಿರ್ಯಾದಿ ನೀಡಿದ, ದೂರಿನ ಅಂಶವೇನೆಂದರೆ ನಾನು ಮತ್ತು ಆಂಜನಮೂರ್ತಿ ಇಬ್ಬರೂ ವಿಚಾರ ಮಾಡಲಾಗಿ ಈ ದಿವಸ ಲೋಕೇಶ್ ರವರು ಕೆಲಸ ಮುಗಿಸಿಕೊಂಡು  ಆತನ ಕೆಎ.06.ವಿ.2759 ನೇ  ದ್ವಿಚಕ್ರ ವಾಹನದಲ್ಲಿ  ತುಮಕೂರು ಕಡೆಯಿಂದ ಹೆಗ್ಗೆರೆ ಕಡೆಗೆ ಸಿದ್ದಾರ್ಥ ಮೆಡಿಕಲ್ ಕಾಲೇಜು ಆಸ್ಪತ್ರೆ ಮುಂಭಾಗ ಅಂದರೆ ಶ್ರೀರಾಮ ಮೆಡಿಕಲ್ ಸ್ಟೋರ್ ಮುಂಭಾಗ ಎನ್.ಹೆಚ್.206 ರಸ್ತೆಯ ಎಡಭಾಗದಲ್ಲಿ ಹೋಗುತ್ತಿರುವಾಗ ಲೋಕೇಶ್ ರವರ ಹಿಂಭಾಗದಿಂದ ಅಂದರೆ ತುಮಕೂರು ಕಡೆಯಿಂದ ಒಂದು ಕಾರನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಮದ್ಯಾಹ್ನ  2-15 ಗಂಟೆ ಸಮಯದಲ್ಲಿ ಲೋಕೇಶ್ ರವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದ ಪರಿಣಾಮ ಲೋಕೇಶ್ ರವರು ವಾಹನ ಸಮೇತ ರಸ್ತೆಯ ಮೇಲೆ ಬಿದ್ದರು. ಅಪಘಾತಪಡಿಸಿದ ಕಾರನ್ನು ಅದರ ಚಾಲಕ ನಿಲ್ಲಿಸದೇ ಹೆಗ್ಗೇರೆ ಕಡೆಗೆ ಹೊರಟು ಹೋಗಿದ್ದರಿಂದ ಕಾರಿನ ನಂಬರ್ ನೊಡಲು ಸಾದ್ಯವಾಗಲಿಲ್ಲ. ತಕ್ಷಣ ನಾನು ಲೋಕೇಶ್ ರವರನ್ನು ಸಿದ್ದಾರ್ಥ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕರೆದುಕೊಂಡು ಹೋಗಿ  ನಂತರ ವೈದ್ಯರು ಗಾಯಾಳು ಲೋಕೇಶ್ ರವರನ್ನು ಹೆಚ್ಚಿನ ಚಿಕಿತ್ಸೆಗಾಗಿ ನಿಮ್ಹಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದರಿಂದ ಬೆಂಗಳೂರು ನಿಮ್ಹಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುತ್ತಿದ್ದಾಗ ದಿನಾಂಕ 26.01.2018 ರಂದು ರಾತ್ರಿ ಸುಮಾರು 9-00 ಗಂಟೆ ಸಮಯದಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಬೆಂಗಳೂರು ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ. ಲೋಕೆಶ್ ರವರ ಸಾವಿಗೆ ಕಾರಣನಾದ ಯಾವುದೋ ಕಾರು ಮತ್ತು ಅದರ ಚಾಲಕನನ್ನು ಪತ್ತೆ ಮಾಡಿ ಕಾರಿನ ಚಾಲಕನ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ಣೀಡಿದ ದೂರನ್ನು ಪಡೆದು ಕೇಸು ದಾಖಲಿಸಿ ತನಿಖೆ ಕೈಗೊಂಡಿರುತ್ತೇನೆ.

ಪಟ್ಟನಾಯಕನಹಳ್ಳಿ ಪೊಲೀಸ್ ಠಾಣಾ ಯು ಡಿ ಆರ್ ನಂ 04-18 ಕಲಂ 174 ಸಿ ಆರ್ ಪಿ ಸಿ

ದಿನಾಂಕ:27-01-18 ರಂದು ಮದ್ಯಾಹ್ನ 03:00ಗಂಟೆಗೆ ಪಿರ್ಯಾದಿ ಗೌರಮ್ಮ ಕೊಂ ಹನುಮಂತರಾಯಪ್ಪ, ಸುಮಾರು 40ವರ್ಷ, ನಾಯಕ ಜನಾಂಗ,  ಕೂಲಿಕೆಲಸ,  ಚಿರತಹಳ್ಳಿ ಗ್ರಾಮ, ಶಿರಾ ತಾಲ್ಲೂಕ್ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ಪಿರ್ಯಾದಿ ಗೌರಮ್ಮ ರವರಿಗೆ ನಾಲ್ಕು ಜನ ಹೆಣ್ಣು ಮಕ್ಕಳಿದ್ದು, 3ಜನ ಹೆಣ್ಣು ಮಕ್ಕಳಿಗೆ ಮದುವೆಯಾಗಿದ್ದು, ಚಿಕ್ಕಮಗಳಾದ ಸಂಗೀತಾ ಶಿರಾದಲ್ಲಿ ಪಿಯುಸಿ  ವಿದ್ಯಾಭ್ಯಾಸ ಮಾಡುತ್ತಿದ್ದು, ಪಿರ್ಯಾದಿ ಗಂಡ ಹನುಮಂತರಾಯಪ್ಪನು  ಮೇಕೆ ಕಾಯುವ ಕೆಲಸ ಮಾಡುತ್ತಿದ್ದು, ದಿನಾಂಕ:27-01-18ರಂದು ಬೆಳಿಗ್ಗೆ 09:10 ಗಂಟೆಗೆ  ಪಿರ್ಯಾದಿಯ ಬಳಿ ತನ್ನ ಗಂಡ ನನಗೆ ಎದೆ ನೋವು ಎಂತ  ತಿಳಿಸಿ ಮೇಕೆಗಳನ್ನು  ಮೇಯಿಸಲು ಹೊಲದ ಕಡೆ ಹೋಗಿದ್ದು, ಇದೇ ದಿನ ಮದ್ಯಾಹ್ನ 02:30 ಗಂಟೆ ಸಮಯದಲ್ಲಿ ಪಿರ್ಯಾದಿ ಸಂಬಂಧಿಕರ ಜಮೀನಿನಲ್ಲಿರುವ ಹುಣಸೆ ಮರ ಹತ್ತಿ ಮೇಕೆಗಳಿಗೆ ಹುಣಸೆ ಸೊಪ್ಪನ್ನು ಕಡಿಯುತ್ತಿರುವಾಗ  ಆಕ್ಮೀಕವಾಗಿ ಕಾಲು ಜಾರಿ ಆಯ ತಪ್ಪಿ ಕೆಳಕ್ಕೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದು, ಈ ವಿಚಾರವನ್ನು ಕುಮಾರ್ ರವರು ಮನೆಯ ಬಳಿ ಬಂದು ತಿಳಿಸಿದ್ದು ಪಿರ್ಯಾದಿ ಮತ್ತು ಗ್ರಾಮಸ್ಥರು ಹೋಗಿ  ಸ್ಥಳಕ್ಕ ಹೋಗಿ ನೋಡಲಾಗಿ ಪಿರ್ಯಾದಿ ಗಂಡ ಮೃತಪಟ್ಟಿರುವುದು ನಿಜವಾಗಿತ್ತು. ಹನುಮಂತರಾಯಪ್ಪ ರವರು ಹುಣಸೆ ಸೊಪ್ಪನ್ನು ಕಡಿಯುವಾಗ ಆಕಸ್ಮೀಕವಾಗಿ ಕಾಲು ಜಾರಿ ಮೃತಪಟ್ಟಿರುತ್ತಾರೆ ವಿನಃ   ಬೇರೆ ಯಾವುದೇ ಅನುಮಾನ  ಇರುವುದಿಲ್ಲ ಕಾನೂನು ರೀತ್ಯಾ ಕ್ರಮ ಜರುಗಿಸಲು ನೀಡಿದ ಲಿಖಿತ ಪಿರ್ಯಾದನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.Saturday, 27 January 2018

ಅಪರಾಧ ಘಟನೆಗಳು 27-01-18

ಹೆಬ್ಬೂರು  ಪೊಲೀಸ್ ಠಾಣಾ ಯು,ಡಿ,ಆರ್ ನಂ 01/2018 ಕಲಂ 174 ಸಿ,ಆರ್,ಪಿ,ಸಿ

ದಿನಾಂಕ: 26-01-2018 ರಂದು ಬೆಳಿಗ್ಗೆ 11-00 ಗಂಟೆಗೆ ಪಿರ್ಯಾದುದಾರರಾದ ವೆಂಕಟೇಶ್‌ ಬಿನ್ ತಿಮ್ಮಯ್ಯ, 45 ವರ್ಷ, ಒಕ್ಕಲಿಗರು, ವ್ಯವಸಾಯ, ಚೋಳೇನಹಳ್ಳಿ, ಗೂಳೂರು ಹೋಬಳಿ, ತುಮಕೂರು ತಾಲ್ಲೂಕು & ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ನನಗೆ ಶ್ರೀನಿವಾಸ್ ಹಾಗೂ ಭವ್ಯ ಎಂಬ ಇಬ್ಬರು ಮಕ್ಕಳಿದ್ದು, ನಾನು ವ್ಯವಸಾಯ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇನೆ.  ದಿನಾಂಕ: 25-01-2018 ರಂದು ರಾತ್ರಿ ನಾನು ಮತ್ತು ನನ್ನ ಮಗ ಶ್ರೀನಿವಾಸ, ನನ್ನ ಮಗಳು 12 ವರ್ಷ ವಯಸ್ಸಿನ ಭವ್ಯ ಹಾಗೂ ನಮ್ಮ ಗ್ರಾಮದ ಗಂಗಾಧರಯ್ಯ ಹಾಗೂ ಅವರ ಮಗ ರಂಗನಾಥ ಎಲ್ಲರೂ ಸೇರಿಕೊಂಡು ಎ,ಕೆ,ಕಾವಲ್‌ ಗ್ರಾಮದಲ್ಲಿರುವ ಸುಗ್ಗಪ್ಪ ರವರ ಜಮೀನಿನಲ್ಲಿ ನಮ್ಮ ಬಾಬ್ತು ರಾಗಿ ಹುಲ್ಲನ್ನು ಒಕ್ಕಣೆ ಮಾಡಲೆಂದು ನಮ್ಮ ಗ್ರಾಮದ ವಾಸಿಯಾದ ಗೋಪಾಲಯ್ಯ ರವರ ಬಾಬ್ತು ಒಕ್ಕಣೆ ಯಂತ್ರದ ಸಹಾಯದಿಂದ ರಾಗಿ ಹುಲ್ಲನ್ನು ಒಕ್ಕಣೆ ಮಾಡುತ್ತಿರುವಾಗ್ಗೆ, ರಾತ್ರಿ ಸುಮಾರು 09-30 ಗಂಟೆ ಸಮಯದಲ್ಲಿ ನನ್ನ ಮಗಳಾದ ಭವ್ಯ ರವರು ಸದರಿ ರಾಗಿ ಒಕ್ಕಣೆ ಯಂತ್ರಕ್ಕೆ ರಾಗಿ ಮಿದಿಯನ್ನು ಹಾಕುತ್ತಿರುವಾಗ್ಗೆ, ಭವ್ಯ ರವರು ಚಳಿಗೆ ಹಾಗೂ ಧೂಳು ಬೀಳದಂತೆ ಮುಖಕ್ಕೆ ಹಾಗೂ ತಲೆಗೆ ಕಟ್ಟಿದ್ದ ಲುಂಗಿ ರಾಗಿ ಒಕ್ಕಣೆ ಯಂತ್ರದ ಫ್ಯಾನ್‌ ನ ಬೆಲ್ಟ್ ಗೆ ಸಿಕ್ಕಿಹಾಕಿಕೊಂಡಿದ್ದು, ಅದನ್ನು ಬಿಡಿಸಿಕೊಳ್ಳುವ ವೇಳೆ ಭವ್ಯ ರವರ ಬಲಗೈ ಸಮೇತ ಮಿಷನ್‌ಗೆ ಸಿಕ್ಕಿಹಾಕಿಕೊಂಡಿದ್ದು, ಬಲಗೈನ ಮೂರು ಬೆರಳುಗಳಿಗೆ, ತೋಳಿಗೆ ಹಾಗೂ ಪಕ್ಕೆಗೆ ಪೆಟ್ಟು ಬಿದ್ದು ರಕ್ತಗಾಯಗಳಾದವು. ನಂತರ ನಾನು ಮತ್ತು ಗಂಗಾಧರಯ್ಯ ಇಬ್ಬರೂ ಸೇರಿಕೊಂಡು ಭವ್ಯ ರವರನ್ನು ತುಮಕೂರಿನ ಆದಿತ್ಯ ಆಸ್ಪತ್ರೆಗೆ ಹೋಗಿದ್ದು, ನಂತರ ಅಲ್ಲಿನ ವೈದ್ಯರ ಸಲಹೆ ಮೇರೆಗೆ ತುಮಕೂರಿನ ಸಿದ್ದಗಂಗಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ, ಅಲ್ಲಿನ ವೈದ್ಯರ ಸಲಹೆ ಮೇರೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವಾಗ್ಗೆ ಮಾರ್ಗ ಮದ್ಯೆ ರಾತ್ರಿ ಸುಮಾರು 01-00 ಗಂಟೆ ಸಮಯದಲ್ಲಿ ನನ್ನ ಮಗಳು ಭವ್ಯ ರವರು ಮೃತಪಟ್ಟಿರುತ್ತಾರೆ. ನಂತರ ನನ್ನ ಮಗಳು ಭವ್ಯ ರವರ ಮೃತದೇಹವನ್ನು ನಮ್ಮ ಮನೆಯ ಬಳಿಗೆ ತಂದಿರುತ್ತೇನೆ. ನನ್ನ ಮಗಳು ಭವ್ಯ ರವರು ರಾಗಿ ಒಕ್ಕಣೆ ಯಂತ್ರಕ್ಕೆ ರಾಗಿ ಮಿದಿಯನ್ನು ಕೊಡುವಾಗ್ಗೆ ಆಕಸ್ಮಿಕವಾಗಿ ಮುಖಕ್ಕೆ ಕಟ್ಟಿದ್ದ ಬಟ್ಟೆ ಸಿಲುಕಿ ಕೈ, ತೋಳು ಹಾಗೂ ಪಕ್ಕೆಗೆ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆಯೇ ವಿನಃ ಆಕೆಯ ಸಾವಿನಲ್ಲಿ ಬೇರೆ ಯಾವುದೇ ಅನುಮಾನವಿರುವುದಿಲ್ಲ. ಈ ದಿವಸ ನಮ್ಮ ಗ್ರಾಮದ ಪ್ರಮುಖರು ದೂರು ಕೊಡುವಂತೆ ತಿಳಿಸಿದ್ದರಿಂದ ಈ ದಿವಸ ತಡವಾಗಿ ಬಂದು ಮುಂದಿನ ಕ್ರಮ ಜರುಗಿಸಬೇಕೆಂದು ಈ ಮೂಲಕ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ ಎಂತಾ ನೀಡಿದ ದೂರನ್ನು ಪಡೆದು ಕರಣ ದಾಖಲಿಸಿರುತ್ತೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ,ನಂ-16/2018 ಕಲಂ 279, 304(ಎ) ಐ,ಪಿ,ಸಿ

ದಿನಾಂಕ: 26-01-2018 ರಂದು ಸಾಯಂಕಾಲ 05-00 ಗಂಟೆ ಸಮಯದಲ್ಲಿ ಪಿರ್ಯಾದುದಾರರಾದ ಲಕ್ಷ್ಮಯ್ಯ ಬಿನ್ ಲೇ|| ಚಿಕ್ಕಣ್ಣ, 55 ವರ್ಷ, ಬನ್ನಿಕುಪ್ಪೆ, ಸಿಂಗಾನಹಳ್ಳಿ ಪೋಸ್ಟ್‌, ಹೆಬ್ಬೂರು ಹೋಬಳಿ, ತುಮಕೂರು ತಾಲ್ಲೂಕು & ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ, ನಾನು ಈ ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದುಕೊಂಡು ಕೂಲಿ ಮಾಡಿಕೊಂಡು ಜೀವನ ನಡೆಸಿಕೊಂಡಿರುತ್ತೇನೆ. ನನ್ನ ನಾದಿನಿಯನ್ನು ಕೊಡಿಗೇನಹಳ್ಳಿಗೆ ಕೊಟ್ಟು ಮದುವೆ ಮಾಡಿರುತ್ತೇವೆ. ನನ್ನ ನಾದಿನಿಯ ಮಗನಾದ ಶಿವರಾಜು ಬಿನ್ ಮೂರ್ತಪ್ಪ, 18 ವರ್ಷ ನಮ್ಮ ಊರಿಗೆ ಬಂದಿದ್ದು, ಕೊಡಿಗೇನಹಳ್ಳಿಗೆ ಹೋಗಲು ನಮ್ಮ ಅಣ್ಣನ ಮಗನಾದ ಲಕ್ಷ್ಮಣ ರವರ ಬಾಬ್ತು ಆಕ್ಟಿವಾ ಹೋಂಡಾ ನಂ ಕೆಎ-06-ಇ.ವೈ-7276 ರಲ್ಲಿ ದಿನಾಂಕ; 25-01-2018 ರಂದು ನಮ್ಮ ಊರಿನಿಂದ 3 ಗಂಟೆಗೆ ಹೊರಟು ಕೆ,ಜಿ,ಟೆಂಪಲ್‌ ರಸ್ತೆಯ ತಿಮ್ಮೇಗೌಡನಪಾಳ್ಯದ ಹತ್ತಿರ ಹೋಗುತ್ತಿರುವಾಗ ಸದರಿ ವಾಹನವನ್ನು ಲಕ್ಷ್ಮಣ ಓಡಿಸುತ್ತಿದ್ದ ನಮ್ಮ ನಾದಿನಿಯ ಮಗನಾದ ಶಿವರಾಜ ರವರು ಹಿಂಬದಿಯಲ್ಲಿ ಕುಳಿತುಕೊಂಡು ಹೋಗುತ್ತಿರುವಾಗ ಸದರಿ ಕೆ,ಜಿ,ಟೆಂಪಲ್‌ ರಸ್ತೆಯ ದುರಸ್ತಿ ಕಾರ್ಯ ನಡೆಯುತ್ತಿದ್ದು ಸದರಿ ವಾಹನವನ್ನು ಲಕ್ಷ್ಮಣ ಸಾಯಂಕಾಲ ಸುಮಾರು 04-00 ಗಂಟೆ ಸಮಯದಲ್ಲಿ ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿ ರಸ್ತೆಯ ಗುಂಡಿಯನ್ನು ತಪ್ಪಿಸಲು ಹೋಗಿ ಮತ್ತೊಂದು ಗುಂಡಿಗೆ ಇಳಿಸಿದಾಗ ಹಿಂಬದಿ ಸವಾರನಾದ ಶಿವರಾಜ ರವರು ವಾಹನದಿಂದ ಕೆಳಗೆ ಬಿದ್ದಾಗ ಶಿವರಾಜ ರವರ ತಲೆಗೆ ಬಲವಾದ ಪೆಟ್ಟು ಬಿದ್ದು ಅಲ್ಲಿಂದ ಕೊಡಿಗೇನಹಳ್ಳಿ ಮಂಜುನಾಥ ರವರು ಶಿವರಾಜನನ್ನು ಉಪಚರಿಸಿ ಯಾವುದೋ ವಾಹನದಲ್ಲಿ ತುಮಕೂರು ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತಾರೆ. ನಂತರ ಅಲ್ಲಿನ ವೈದ್ಯರು ಪರೀಕ್ಷೆ ಮಾಡಿದಾಗ ಶಿವರಾಜ ರವರು ಮಾರ್ಗ ಮದ್ಯೆ ಮೃತಪಟ್ಟಿರುತ್ತಾರೆಂತ ತಿಳಿಸಿರುತ್ತಾರೆ. ನಂತರ ಮಂಜುನಾಥ ರವರು ನಮಗೆ ಪೋನ್ ಮಾಡಿ ತಿಳಿಸಿದ್ದು, ನಾನು ಹಾಗೂ ನನ್ನ ನಾದಿನಿಯ ಗಂಡನಾದ ಮೂರ್ತಪ್ಪ ರವರು ಬೆಂಗಳೂರಿನಲ್ಲಿ ನಮ್ಮ ಚಿಕ್ಕಮ್ಮ ನವರು ತೀರಿಕೊಂಡಿರುವುದರಿಂದ ನಾವು ನಮ್ಮ ಚಿಕ್ಕಮ್ಮನ ಮಣ್ಣನ್ನು ಮುಗಿಸಿಕೊಂಡು ಬಂದು ಈ ದಿನ ತಡವಾಗಿ ಈ ದೂರನ್ನು ನೀಡಿರುತ್ತೇನೆ. ಆದ್ದರಿಂದ ಈ ಮೇಲ್ಕಂಡ ರೀತಿಯಲ್ಲಿ ಅಪಘಾತವನ್ನುಂಟು ಮಾಡಿದ ಆಕ್ಟಿವಾ ವಾಹನದ ಚಾಲಕನಾದ ಲಕ್ಷ್ಮಣ ರವರ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಬೇಕೆಂದು ತಮ್ಮಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ ಎಂತಾ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಕುಣಿಗಲ್ ಪೊಲೀಸ್ ಠಾಣಾ ಮೊ.ನಂ; 45/2018 ಕಲಂ;279,304(ಎ) ಐ.ಪಿ.ಸಿ

ದಿನಾಂಕ: 26/01/2018 ರಂದು ಸಂಜೆ 5-00 ಗಂಟೆ ಸಮಯದಲ್ಲಿ ಈ ಕೇಸಿನ ಪಿರ್ಯಾದಿ ರಾಮಕೃಷ್ಣಯ್ಯ ಬಿನ್ ಕಾಳಗೇರಯ್ಯ, 45 ವರ್ಷ, ವಕ್ಕಲಿಗರು, ಕಾರ್ಮಿಕ ಕೆಲಸ, ಮೊದಲನೇ ಬಲರಸ್ತೆ, 15 ನೇ ಕ್ರಾಸ್, ಹೊಯ್ಸಳ ನಗರ, ಸುಂಕದಕಟ್ಟೆ, ಬೆಂಗಳೂರು  ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ,  ದಿನಾಂಕ: 26/01/2018 ರಂದು ಪಿರ್ಯಾದಿ ಮತ್ತು ಪಿರ್ಯಾದಿ ಸಂಬಂದಿಕರಾದ  ಶಿವಲಿಂಗಮೂರ್ತಿ ಬಿನ್ ನಾಗಯ್ಯ, 36 ವರ್ಷ, ಅಂದ್ರಹಳ್ಳಿ, ಬೆಂಗಳೂರು -91 ಹಾಗೂ ಲಕ್ಷ್ಮಮ್ಮ ಕೋಂ ಲೇಟ್ ನಾರಾಯಣಪ್ಪ, ವಾರ್ಡ ನಂ: 71, ಹೇರೋವಳ್ಳಿ, ಸುಂಕದಕಟ್ಟೆ, ಬೆಂಗಳೂರು-91  ಇವರುಗಳು  ಕುಣಿಗಲ್ ತಾಲ್ಲೊಕು  ಗಾಣಿಮೇಸ್ತ್ರಿಪಾಳ್ಯಕ್ಕೆ ಬರಲೆಂದು ಪಿರ್ಯಾದಿ ತನ್ನ ಬಾಬ್ತು ಬೈಕಿನಲ್ಲಿ ಹಾಗೂ ಶಿವಲಿಂಗಮೂರ್ತಿ ಮತ್ತು ಲಕ್ಷ್ಮಮ್ಮ ರವರುಗಳು ಅವರ ಬಾಬ್ತು  ಬೈಕ್ ನಂಬರ್ ಕೆ.ಎ-04 ಜೆ.ಬಿ-6610 ನೇ ಬೈಕಿನಲ್ಲಿ ಬೆಳಿಗ್ಗೆ ಬೆಂಗಳೂರಿನಿಂದ ಹೊರಟು ಮಾಗಡಿ ಮಾರ್ಗವಾಗಿ ಮಾಗಡಿ-ಸಂತೇಪೇಟೆ-ಕುಣಿಗಲ್  ಮಾರ್ಗವಾಗಿ ಬರುತ್ತಿರುವಾಗ ಬೆಳಿಗ್ಗೆ ಸುಮಾರು 10-30 ಗಂಟೆ ಸಮಯದಲ್ಲಿ ಕಣಿವೇಪಾಳ್ಯದ ಕಟ್ಟೆಯ ಬಳಿ ಸದರಿ ರಸ್ತೆಯಲ್ಲಿ ಪಿರ್ಯಾದಿ ಮುಂದೆ ಸುಮಾರು 100 ಅಡಿ ಅಂತರದಲ್ಲಿ ಬೈಕ್ ಅನ್ನು ಶಿವಲಿಂಗಮೂರ್ತಿ ಚಾಲನೆಮಾಡಿಕೊಂಡು ಸದರಿ ಬೈಕಿನಲ್ಲಿ  ಲಕ್ಷ್ಮಮ್ಮ ರವರನ್ನು ಹಿಂಬದಿ ಸವಾರಳಾಗಿ ಕೂರಿಸಿಕೊಂಡು ತನ್ನ ಬೈಕ್ ಅನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ನಿಯಂತ್ರಣ ತಪ್ಪಿ ಬೈಕ್ ಸಮೇತ ಕೆಳಗೆ ಬಿದ್ದಿದ್ದು,  ಸದರಿ ಅಪಘಾತದಿಂದ ಹಿಂಬದಿ ಸವಾರಳಾದ ಲಕ್ಷ್ಮಮ್ಮ ರವರಿಗೆ ಮುಖಕ್ಕೆ, ತಲೆಗೆ, ಮೈಕೈಗೆ ಪೆಟ್ಟು ಬಿದ್ದು,  ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ನಂತರ ಪಿರ್ಯಾದಿ ಮೃತರ  ಶವವನ್ನು  ಗಾಣಿಮೇಸ್ತ್ರಿಪಾಳ್ಯಕ್ಕೆ ಸಾಗಿಸಿ ಮೃತರ ವಾರಸುದಾರರಿಗೆ ವಿಚಾರ ತಿಳಿಸಿ ಅವರನ್ನು ಕರೆಸಿಕೊಂಡು ನಂತರ ಮೃತಳ ಶವವನ್ನು ಕುಣಿಗಲ್ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿ ನಂತರ  ಕುಣಿಗಲ್ ಪೊಲೀಸ್ ಠಾಣೆಗೆ ಹಾಜರಾಗಿ  ಅಪಘಾತ ಮಾಡಿದ ಕೆ.ಎ-04 ಜೆ.ಬಿ-6610 ನೇ ಬೈಕಿನ ಚಾಲಕ ಶಿವಲಿಂಗಮೂರ್ತಿ ರವರ ಮೇಲೆ ಕಾನೂನು ಕ್ರಮ ಕೈಗೊಳ್ಳಿ ಎಂತ ನೀಡಿದ ದೂರನ್ನು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೆ.

ಹುಲಿಯೂರುದುರ್ಗ ಠಾಣಾ ಮೊ ನಂ 19/2018 ಕಲಂ 279, 304(ಎ) ಐಪಿಸಿ

ದಿನಾಂಕ: 25-01-2018 ರಂದು ರಾತ್ರಿ 11-00 ಗಂಟೆಗೆ ಕುಣಿಗಲ್ ತಾಲ್ಲೋಕು ಹುಲಿಯೂರುದುರ್ಗ ಹೋಬಳಿ ಸಿದ್ದಯ್ಯನಕೆರೆಪಾಳ್ಯ ಗ್ರಾಮದ ವಾಸಿಯಾದ ರಂಗಸ್ವಾಮಯ್ಯ ಬಿನ್ ಲೇಟ್ ಗಂಗಯ್ಯ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ ದಿನಾಂಕ: 25-01-2018 ರಂದು ರಾತ್ರಿ ಸುಮಾರು 09-00 ಗಂಟೆ ಸಮಯದಲ್ಲಿ ಪಿರ್ಯಾದಿಯು ಮನೆಯಲ್ಲಿರುವಾಗ್ಗೆ ಯಾರೋ ಪೋನ್ ಮಾಡಿ ತಿಳಿಸಿದ ಅಂಶವೇನೆಂದರೆ “ ನಿನ್ನ ತಮ್ಮ ಕುಮಾರ್ ಎಸ್ ಜಿ ಮತ್ತು ನಿಮ್ಮ ಸಂಬಂಧಿಕರಾದ ರಂಗಸ್ವಾಮಿ ರವರಿಗೆ ಡಿ.ಹೊಸಹಳ್ಳಿ ಗ್ರಾಮದ ಹತ್ತಿರ ತುಮಕೂರು-ಮದ್ದೂರು ರಸ್ತೆಯಲ್ಲಿ ಲಾರಿ ಮತ್ತು ಮೋಟಾರು ಸೈಕಲ್ ಗೆ ಅಪಘಾತವಾಗಿ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿರುತ್ತಾರೆ ಎಂತ” ತಿಳಿಸಿದ್ದರಿಂದ ಪಿರ್ಯಾದಿ ಮತ್ತು ಅವರ ಗ್ರಾಮದ ನಾಗರಾಜು ಇಬ್ಬರೂ ಡಿ.ಹೊಸಹಳ್ಳಿ ಹತ್ತಿರ ಹೋಗಿ ನೋಡಲಾಗಿ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿರುವುದು ಖಚಿತವಾಗಿತ್ತು. ಇದೇ ದಿನ ಸಂಜೆ ಪಿರ್ಯಾದಿಯ ತಮ್ಮ ಕುಮಾರ ಎಸ್ ಜಿ ಮತ್ತು ನಾಗರಾಜು ರವರ ಮಗ ರಂಗಸ್ವಾಮಿ ಇಬ್ಬರೂ ಕೆಲಸದ ನಿಮಿತ್ತ ಹುಲಿಯೂರುದುರ್ಗಕ್ಕೆ ರಂಗಸ್ವಾಮಿಯ ದ್ವಿಚಕ್ರ ವಾಹನವಾದ ಕೆಎ02-ಹೆಚ್.ಯು-2802 ನೇ ಮೋಟಾರು ಸೈಕಲ್ ನಲ್ಲಿ ಹಿಂಬದಿಯಲ್ಲಿ ಕುಮಾರ ನನ್ನು ಕೂರಿಸಿಕೊಂಡು ವಾಪಸ್ ಸಿದ್ದಯ್ಯನಕೆರೆಪಾಳ್ಯಕ್ಕೆ ರಾತ್ರಿ 08-50 ಗಂಟೆ ಸಮಯದಲ್ಲಿ ಬರುತ್ತಿರುವಾಗ ರಸ್ತೆಯ ಎಡಬದಿಯಲ್ಲಿ ಯಾವುದೇ ಸಿಗ್ನಲ್ ಲೈಟನ್ನು ಹಾಕದೇ ನಿಲ್ಲಿಸಿದ್ದ  ಕೆಎ10-2545 ನೇ ಲಾರಿಗೆ ಮೋಟಾರು ಸೈಕಲ್ ಸವಾರ ರಂಗಸ್ವಾಮಿ ಅತಿವೇಗ & ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆಸಿದ ಪರಿಣಾಮ ಹಿಂಬದಿಯಲ್ಲಿ ಕುಳಿತಿದ್ದ ಕುಮಾರ ಮತ್ತು ಮೋಟಾರು ಸೈಕಲ್ ಓಡಿಸುತ್ತಿದ್ದ ರಂಗಸ್ವಾಮಿಗೆ ರಕ್ತಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆ.Thursday, 25 January 2018

ಅಪರಾಧ ಘಟನೆಗಳು 25-01-18

ಬಡವನಹಳ್ಳಿ ಪೊಲೀಸ್ ಠಾಣೆ ಮೊ.ಸಂ 06/2018 ಕಲಂ  279, 304(ಎ)ಐಪಿಸಿ

 

ದಿ:24/01/2018 ರಂದು ಬೆಳಗ್ಗೆ 10-30 ಗಂಟೆಗೆ  ಪಿರ್ಯಾದಿ  ತಿಮ್ಮರಾಜು ಬಿನ್‌ ಲೇಟ್‌ ಪುಟ್ಟತಿಮ್ಮಯ್ಯ, ವೀರಣ್ಣನಹಳ್ಳಿ ಗ್ರಾಮ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ, ನಮ್ಮ ತಂದೆಗೆ ನಿಂಗಮ್ಮ ಮತ್ತು ಗಿರಿಯಮ್ಮ ಎಂಬ ಇಬ್ಬರು ಪತ್ನಿಯರಿದ್ದು, ನಾನು ಹಿರಿಯ ಹೆಂಡತಿ ನಿಂಗಮ್ಮ  ನ ಮಗನಾಗಿರುತ್ತೇನೆ.  ನನ್ನ ತಂದೆಯ ಎರಡನೇ ಹೆಂಡತಿ  ಗಿರಿಯಮ್ಮ ರವರಿಗೆ  ಮಹೇಶ ಮತ್ತು ಪದ್ಮ ಎಂಬ ಇಬ್ಬರು ಮಕ್ಕಳಿರುತ್ತಾರೆ. ಪದ್ಮಳಿಗೆ ಮದುವೆಯಾಗಿರುತ್ತೆ.  ನನ್ನ ತಮ್ಮ ಸುಮಾರು  25 ವರ್ಷ ವಯಸ್ಸಿನ ಮಹೇಶ , ಆವಿನಮಡಗು ಗ್ರಾಮದ ಕಣಿಮಯ್ಯ ರವರ ಬಾಬ್ತು ಕೆಎ-64-2486 ನೇ ನಂಬರಿನ ಪ್ಯಾಸೆಂಜರ್‌ ಆಟೋವನ್ನು ಅಗ್ರಿಮೆಂಟ್‌ ಮಾಡಿಸಿಕೊಂಡು  ಈತನೇ ಓಡಿಸುತ್ತಿದ್ದ, ಮಹೇಶ ಪ್ರತಿದಿನ ಬೆಳಗ್ಗೆ  ಆಟೋದಲ್ಲಿ ಅಕ್ಕ-ಪಕ್ಕದ ಊರುಗಳಿಂದ ಕೂಲಿ ಆಳುಗಳನ್ನು ಕರೆದುಕೊಂಡು ವಸಂತನರಸಾಪುರದ ಕೈಗಾರಿಕಾ ಪ್ಯಾಕ್ಟರಿಗಳಿಗೆ ಬಿಟ್ಟು ಮತ್ತೆ ಸಂಜೆ ಕೂಲಿ ಆಳುಗಳನ್ನು ಆಟೋದಲ್ಲಿ ಕರೆದು ಕೊಂಡು ಊರುಗಳಿಗೆ ಬಿಟ್ಟು ಮನೆಗೆ ಬರುತ್ತಿದ್ದನು. ದಿನಾಂಕ:23/01/2018 ರಂದು ನನ್ನ ತಮ್ಮ ಕೂಲಿ ಆಳುಗಳನ್ನು ಅವರ ಊರುಗಳಿಗೆ ಬಿಟ್ಟು ಮನೆಗೆ ಬಂದಿರುತ್ತಾನೆಂದು  ವಿಚಾರ ತಿಳಿದಿತ್ತು.  ನಿನ್ನೆ ರಾತ್ರಿ ನಾನು ಮನೆಯಲ್ಲಿ ಮಲಗಿದ್ದಾಗ ಬೆಳಗಿನ ಜಾವ  5-00 ಗಂಟೆಗೆ ಬಸವರಾಜು ಪೋನ್‌ ಮಾಡಿ ನಿನ್ನ ತಮ್ಮ ನಿಗೆ ಅಪಘಾತ ವಾಗಿ ಮೃತನಾಗಿರುತ್ತನೆಂದು ತಿಳಿಸಿದರು. ನಾನು ನನ್ನ ತಮ್ಮನ ಮನೆಯ ಹತ್ತಿರ ಹೋಗಿ ನೋಡಿದೆ ನನ್ನ ತಮ್ಮನಿಗೆ ಬಲಭಾಗದ ಕೆನ್ನೆ, ಬಲಭಾಗದ ಪಕ್ಕೆ ಮತ್ತು ಎದೆಗೆ ಪೆಟ್ಟುಗಳಾಗಿ ಮೃತನಾಗಿದ್ದ , ನನ್ನ ತಮ್ಮ ನಿನ್ನೆ  ರಾತ್ರಿ ಯಾವುದೇ ಕಾರ್ಯ ನಿಮಿತ್ತ ಗಿಡದಾಗಲಹಳ್ಳಿ ಕಡೆ ಆಟೋದಲ್ಲಿ  ಹೋಗುವಾಗ ರಾತ್ರಿ ಸುಮಾರು 3-30 ಗಂಟೆ ಸಮಯದಲ್ಲಿ ಬೋರಾಗುಂಟೆ ಸಮೀಪ ಹಸಿರು ಶಕ್ತಿ ಬೈಪ್‌ ಸಂಸ್ಥೆ ಕಟ್ಟಡದ ಮುಂಭಾಗದ ರಸ್ತೆಯಲ್ಲಿ ಆಟೋ ಬಲಬದಿಗೆ ಉರುಳಿದ್ದರಿಂದ ಅಪಘಾತವಾಗಿದ್ದು, ಅಲ್ಲೇ ಹಸಿರುಶಕ್ತಿಯ ಹತ್ತಿರ ಕಾವಲು ಇದ್ದ ರಂಗನಾಥಪ್ಪ ಅಪಘಾತವನ್ನು ನೋಡಿ ನಮ್ಮೂರಿನ ಹನುಮಂತರಾಯಪ್ಪನಿಗೆ ಪೋನ್‌ ಮಾಡಿ ವಿಚಾರ ತಿಳಿಸಿದ್ದು, ಆಗ ಹನುಮಂತರಾಯಪ್ಪ , ಬೊಮ್ಮಣ್ಣ , ಜೂಲಪ್ಪ ಸ್ಥಳಕ್ಕೆ ಹೋಗಿ ನನ್ನ ತಮ್ಮ ಇನ್ನು ಉಸಿರಾಟವಿದ್ದರಿಂದ ಆತನನ್ನು ಒಂದು ಬೈಕ್‌ ನಲ್ಲಿ ಚಿಕಿತ್ಸೆಗಾಗಿ ಕರೆದುಕೊಂಡು ಬರುವಾಗ ನಮ್ಮ ಗ್ರಾಮದ ಕಟ್ಟೆಯ ಸಮೀಪ ಮಾರ್ಗ ಮದ್ಯೆ ತಮ್ಮ ಮಹೇಶ ಮೃತನಾದ ಎಂಬ ವಿಚಾರ ನನಗೆ ತಿಳಿಸಿದರು. ನನ್ನ ತಮ್ಮನ ಶವ ಅವರ ಬಾಬ್ತು ಮನೆಯ ಮುಂಭಾಗ ಇರುತ್ತೆ. ನನ್ನ ತಮ್ಮ ನೆನ್ನೆ ರಾತ್ರಿ ಆಟೋ ತೆಗೆದುಕೊಂಡು  ಗಿಡದಾಗಲಹಳ್ಳಿ ಕಡೆ ಹೋಗುವಾಗ ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿದ್ದರಿಂದ ಆಟೋ ಬಲಬದಿಗೆ ಉರುಳಿ ನನ್ನ ತಮ್ಮನಿಗೆ ಬಲವಾದ ಪೆಟ್ಟುಗಳು ಬಿದ್ದು ಮೃತನಾಗಿರುತ್ತಾನೆ. ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ಪಿರ್ಯಾದು ಪಡೆದು ಪ್ರಕರಣ ದಾಖಲಿಸಿರುತ್ತೆ.Wednesday, 24 January 2018

ಅಪರಾಧ ಘಟನೆಗಳು 24-01-18

ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ ನಂ. 13/2018 ಕಲಂ 279, 304(ಎ) ಐ.ಪಿ.ಸಿ ರೆ/ವಿ 187 ಐಎಂವಿ ಆಕ್ಟ್

ದಿನಾಂಕ:23/01/2018 ರಂದು ಸಂಜೆ 6-30 ಗಂಟೆಗೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೋಕ್ ಎಂ.ಕೆ ಹೊಸೂರು ಗ್ರಾಮದ ವಾಸಿ ದೇವಿಕಾ ಕೋಂ ದೇವರಾಜು ರವರು ನೀಡಿದ ದೂರಿನ ಅಂಶವೇನೆಂದರೆ, ನಾನು, ನನ್ನ ಗಂಡ ದೇವರಾಜು ಬಿನ್ ಲಕ್ಷ್ಮಣ ಮತ್ತು ನನ್ನ ಮಕ್ಕಳೊಂದಿಗೆ ಹಾಗೂ ಮಾವ ಲಕ್ಷ್ಮಣರವರೊಂದಿಗೆ ಕೊರಟಗೆರೆ ತಾಲ್ಲೋಕ್ ಜಂಪೇನಹಳ್ಳಿ ಗ್ರಾಮದ ರಾಮಕೃಷ್ಣ ರವರ ಮನೆಯಲ್ಲಿ ವಾಸವಾಗಿದ್ದು, ನನ್ನ ಗಂಡ ದೇವರಾಜು ರವರು ಚಾಪೆ ವ್ಯಾಪಾರ ಮಾಡಿಕೊಂಡಿದ್ದು, ದಿ:21/01/2018 ರಂದು ರಾತ್ರಿ ಸುಮಾರು 10-00 ಗಂಟೆ ಸಮಯದಲ್ಲಿ ತುಮಕೂರಿಗೆ ನಮ್ಮ ಬಾಬ್ತು KA-06-EZ-0444ನೇ ದ್ವಿಚಕ್ರ ವಾಹನದಲ್ಲಿ ಹೋದರು. ನಂತರ ಮಾರನೇ ದಿನ ದಿ:22/01/2018 ರಂಧು ಬೆಳಿಗ್ಗೆ 8-00 ಗಂಟೆ ಸಮಯದಲ್ಲಿ ನನ್ನ ಗಂಡನ ಮೊಬೈಲ್ ನಂಬರಿಗೆ ಪೋನ್ ಮಾಡಿದಾಗ ದಿಲೀಪ್ ಎಂಬುವರು ಮೊಬೈಲ್‌ನಲ್ಲಿ ಮಾತನಾಡಿದರು. ವಿಚಾರ ಮಾಡಲಾಗಿ ರಾತ್ರಿ 12-00 ಗಂಟೆ ಸಮಯದಲ್ಲಿ ಮಧುಗಿರಿ-ತುಮಕೂರು ರಸ್ತೆಯಲ್ಲಿ ಅಂತರಸನಹಳ್ಳಿಯ SVS ಮಾರ್ಟ್‌ ಹತ್ತಿರ ನಾನು ಬರುತ್ತಿರುವಾಗ್ಗೆ  ಒಂದು ದ್ವಿಚಕ್ರ ವಾಹನ ಜಖಂಗೊಂಡು ಒಬ್ಬ ವ್ಯಕ್ತಿ ಅಪಘಾತದಿಂಧ ಪೆಟ್ಟು ಬಿದ್ದು ನರಳುತ್ತಿದ್ದದನ್ನು ಕಂಡು ನಾನೇ ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ವೈದ್ಯರ ಸಲಹೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಬಂಧಿರುತ್ತೇನೆ. ಅವರ ಮೊಬೈಲ್ ಒಡೆದು ಹೋಗಿದ್ದರಿಂದ ಅವರ ಹೆಸರು ವಿಳಾಸ ತಿಳಿಯುವ ಸಲುವಾಗಿ ಸಿಮ್‌ನ್ನು ನನ್ನ ಮೊಬೈಲ್‌ಗೆ ಹಾಕಿಕೊಂಡು ಮಾತನಾಡಿರುತ್ತೇನೆ. ಸಿಮ್‌ನ್ನು ಆಸ್ಪತ್ರೆಯ ಪೊಲೀಸರ ಕೈಗೆ ಕೊಟ್ಟು ಹೋಗುತ್ತೇನೆ ನೀವು ಆಸ್ಪತ್ರೆಯ ಬಳಿ ಬನ್ನಿ ಎಂಧು ಎಂದು ತಿಳಿಸಿದರು. ಆಗ ನಾನು ಯಾವ ವಾಹನ ಅಪಘಾತ ಪಡಿಸಿದ್ದು ಎಂದು ಕೇಳಲಾಗಿ KA-03-Z-1530ನೇ ಟಾಟಾ ಸುಮೋ ವಾಹನ ಅಪಘಾತವನ್ನುಂಟು ಮಾಡಿದ್ದು ಚಾಲಕನ ಹೆಸರು ಕೇಳಲಾಗಿ ಶ್ರೀನಿವಾಸಮೂರ್ತಿ ಬಿನ್ ಮಣ್ಣಾರಯ್ಯ, ತುಮಕೂರು ಎಂದು ತಿಳಿಸಿ ಗಾಯಾಳುವಿನ ಯೋಗಕ್ಷೇಮವನ್ನು ವಿಚಾರಿಸದೇ ಹೊರಟು ಹೋದ ಎಂದರು. ಆಗ ನಾನು ಮತ್ತು ನನ್ನ ಸಂಬಂದಿಕರು ವಿಕ್ಟೋರಿಯಾ ಆಸ್ಪತ್ರೆಯ ಬಳಿ ಹೋಗಿ ವಿಚಾರ ಮಾಡಲಾಗಿ ದಿ:22/01/2018 ರಂದು ಬೆಳಿಗ್ಗೆ 9-00 ಗಂಟೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ತಿಳಿಯಿತು. ದಿ:21-22/01/2018 ರಂದು ರಾತ್ರಿ 12-00 ಗಂಟೆ ಸಮಯದಲ್ಲಿ KA-03-Z-1530ನೇ ಟಾಟಾ ಸುಮೋ ವಾಹನದ ಚಾಲಕ ಶ್ರೀನಿವಾಸಮೂರ್ತಿ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಹೋಗಿ ನನ್ನ ಗಂಡನ KA-06-EZ-0444ನೇ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ಗಾಯಾಳುವಿಗೆ ಚಿಕಿತ್ಸೆ ಕೊಡಿಸದೇ ಹೊರಟುಹೋಗಿರುವ ವಾಹನ ಸವಾರ ಮತ್ತು ನನ್ನ ಗಂಡನ ಸಾವಿಗೆ ಕಾರಣವಾಗಿರುವ ವಾಹನವನ್ನು ಪತ್ತೆಮಾಡಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ಆಸ್ಪತ್ರೆಯಿಂದ ಈ ದಿನ ವಾಪಾಸ್ ತಡವಾಗಿ ಬಂದು ನೀಡಿದ ದೂರನ್ನು ಪಡೆದು ಠಾಣಾ ಪ್ರಕರಣ ದಾಖಲು ಮಾಡಿರುತ್ತೆ.

ದಂಡಿನಶಿವರ ಪೊಲೀಸ್ ಠಾಣಾ  ಮೊ ನಂ 07/2018 ಕಲಂ 279.304 (ಎ)  ಐ.ಪಿ.ಸಿ

ದಿನಾಂಕ: 23/01/2018 ರಂದು ಈ ಕೇಸಿನ ಪಿರ್ಯಾದಿ ರಂಜಿತಾ ಕೋಂ ಲೇ. ಶಶಿಧರ.  21 ವರ್ಷ.  ಅಗಸ ಜನಾಂಗ.  ಗೃಹಿಣಿ. ದೊಂಬರನಹಳ್ಳಿ. ದಂಡಿನಶಿವರ ಹೋಬಳಿ, ತುರುವೇಕೆರೆ ತಾಲ್ಲೋಕ್.  ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ನಾನು ಅಕ್ಕಳಸಂದ್ರದ ಮಹದೇವಯ್ಯ ಮತ್ತು ಮಂಜುಳಾ ರವರ ಮಗಳಾಗಿದ್ದು. ನಾನು ದೊಂಬರನಹಳ್ಳಿ ಗ್ರಾಮದ ಆದಿ ಕರ್ನಾಟಕ ಜನಾಂಗದ ಬಸವರಾಜು ರವರ ಮಗನಾದ ಶಶಿಧರ ರವರನ್ನು ಪ್ರೀತಿಸಿ ಮದುವೆಯಾಗಿರುತ್ತೇನೆ. ನಮಗೆ 03 ವರ್ಷದ ಚಿರಾಗ್ ಎಂಬ ಗಂಡು ಮಗು ಇರುತ್ತಾನೆ.    ದಿನಾಂಕ: 22/01/2018 ರಂದು ರಾತ್ರಿ ಸುಮಾರು 07-00 ಗಂಟೆಯ ಸಮಯದಲ್ಲಿ ನನ್ನ ಗಂಡ ಶಶಿಧರ ( 24 ವರ್ಷ. ಜಿರಾಯ್ತಿ.)  ಅವರ ಬಾಬ್ತು ಕೆ.ಎ 04 ಜೆ. ಡಿ 8338 ರ ಹಿರೋ ಸ್ಪ್ಲೇಂಡರ್ ಪ್ಲಸ್  ದ್ವಿಚಕ್ರವಾಹನದಲ್ಲಿ ದೊಂಬರನಹಳ್ಳಿ ಊರಿನೊಳಗಿಂದ ಕಣದ ಬಳಿಗೆ ಮೇಲ್ಕಂಡ ದ್ವಿಚಕ್ರವಾಹನವನ್ನು ಚಲಾಯಿಸಿಕೊಂಡು  ದೊಂಬರನಹಳ್ಳಿಯ ಮುನಿಯಪ್ಪ ರವರ ಮನೆಯ ಸಮೀಪ ಮುತ್ತಿನಮ್ಮ ದೇವಸ್ಥಾನದ ಬಳಿ ತೋವಿನಕೆರೆ - ದೊಂಬರನಹಳ್ಳಿ ಗೇಟ್ ರಸ್ತೆಯ ಎಡಪಕ್ಕ ಹೋಗುತ್ತಿರುವಾಗ್ಗೆ. ಎದುರು ಕಡೆಯಿಂದ  ಅಂದರೆ ದೊಂಬರನಹಳ್ಳಿ ಗೇಟ್ ಕಡೆಯಿಂದ ದೊಂಬರನಹಳ್ಳಿ ಕಡೆಗೆ ಕೆ.ಎ 44 ಟಿ 3031 – ಟಿ 3032 ರ ಮೆಸ್ಸೇ ಫರ್ಗೂಸನ್ 1035 ಡಿ.ಐ.  ರ ಟ್ರಾಕ್ಟರ್ ಟ್ರೈಲರ್ ಅನ್ನು ಅದರ ಚಾಲಕ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ನನ್ನ ಗಂಡ ಹೋಗುತ್ತಿದ್ದ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆಯಿಸಿ ಅಪಘಾತ ಪಡಿಸಿದ ಪರಿಣಾಮ ನನ್ನ ಗಂಡನ ಎದೆಗೆ ಮತ್ತು ತಲೆಗೆ ತೀವ್ರವಾದ ಪೆಟ್ಟು ಬಿದ್ದು ರಕ್ತಗಾಯವಾಗಿದ್ದು. ಈ  ಅಪಘಾತದ ವಿಚಾರವನ್ನು ಗ್ರಾಮಸ್ಥರು ತಿಳಿಸಿದ್ದು. ನಾನು ಸ್ಥಳಕ್ಕೆ ಹೋಗಿ ನೋಡಿದೆ. ಅಷ್ಟರಲ್ಲಿ ನನ್ನ ಮಾವ ಬಸವರಾಜು ಸಹ ಸ್ಥಳಕ್ಕೆ ಬಂದಿದ್ದು. ಯಾವುದೋ ಒಂದು ಕಾರ್ ಮಾಡಿಕೊಂಡು ನನ್ನ ಗಂಡನನ್ನು ಕರೆದುಕೊಂಡು ಹೋಗುವಾಗ ಯಾರೋ 108 ಗೆ ಕರೆ ಮಾಡಿದ್ದು. ಕೊಂಡಜ್ಜಿ ಕ್ರಾಸ್ ನಿಂದ 108 ಆಂಬುಲೇನ್ಸ್ ನಲ್ಲಿ  ನನ್ನ ಗಂಡನನ್ನು ತುರುವೇಕೆರೆ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರ ಸಲಹೆ ಮೇರೆಗೆ ಅದೇ ದಿನ ರಾತ್ರಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸುತ್ತಿದ್ದು. ಚಿಕಿತ್ಸೆ ಫಲಕಾರಿಯಾಗದೆ  ನನ್ನ ಗಂಡ ಶಶಿಧರ ರಾತ್ರಿ ಸುಮಾರು 11-00 ಗಂಟೆಗೆ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಮೃತ ಪಟ್ಟಿರುತ್ತಾರೆ. ಮೇಲ್ಕಂಡ ಟ್ರಾಕ್ಟರ್ ಚಾಲಕ ಮಾಡಿದ ಅಪಘಾತವೇ ನನ್ನ ಗಂಡನ ಸಾವಿಗೆ ಕಾರಣವಾಗಿರುತ್ತೆ. ಆತನ ಹೆಸರು ವಿಳಾಸ ತಿಳಿಯಬೇಕಾಗಿರುತ್ತೆ. ಆದ್ದರಿಂದ ಮೇಲ್ಕಂಡ ಟ್ರಾಕ್ಟರ್ ಚಾಲಕನ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರುತ್ತೇನೆಂತ ಇತ್ಯಾದಿಯಾಗಿ ನೀಡಿದ ದೂರನ್ನು ಸ್ವೀಕರಿಸಿ ಪ್ರಕರಣ ದಾಖಲಿಸಿಕೊಂಡಿರುತ್ತೆ.

ಜಯನಗರ ಪೊಲೀಸ್ ಠಾಣಾ ಮೊ.ನಂ. 15/2018 ಕಲಂ 160 ಐಪಿಸಿ.

ದಿನಾಂಕ: 23-01-2018 ರಂದು ಬೆಳಿಗ್ಗೆ 11-20 ಗಂಟೆ ಠಾಣಾ ಹೆಚ್‌.ಸಿ 239 ರವರು ಠಾಣೆಗೆ ಹಾಜರಾಗಿ ಆರೋಪಿತರುಗಳನ್ನು ಹಾಗೂ ವರದಿಯನ್ನು ಹಾಜರುಪಡಿಸಿ ನೀಡಿದ ವರದಿ ಅಂಶವೇನೆಂದರೆ, ನನಗೆ ಗುಪ್ತ ಮಾಹಿತಿ ಸಂಗ್ರಹ ಕರ್ತವ್ಯಕ್ಕಾಗಿ ನೇಮಕ ಮಾಡಿದ್ದು, ನೇಮಕದಂತೆ ನಾನು ಠಾಣಾ ಸರಹದ್ದಿನಲ್ಲಿ ಗುಪ್ತ ಮಾಹಿತಿ ಸಂಗ್ರಹಿಸುತ್ತಿರುತ್ತೇನೆ.  ಈ ದಿನ ದಿನಾಂಕ: 23-01-2018 ರಂದು ಬೆಳಿಗ್ಗೆ ನಾನು ನಮ್ಮ ಠಾಣಾ ಸರಹದ್ದಿನ ಶೆಟ್ಟಿಹಳ್ಳಿ ಮುಖ್ಯರಸ್ತೆಯಲ್ಲಿ ಗಸ್ತು ಮಾಡುತ್ತಿದ್ದಾಗ, ಸಪ್ತಗಿರಿ ಬಡಾವಣೆಯಲ್ಲಿ ವಾಸವಾಗಿರುವ ಗೋಲ್ಡನ್‌‌ ಚಿಕನ್‌‌ ಸೆಂಟರ್‌‌ ಮಾಲೀಕನಾದ ಚಿದಾನಂದ @ ಚಿದಾ ಬಿನ್. ಲೇ|| ಸಿದ್ದಲಿಂಗಯ್ಯ ರವರ ವಾಸದ ಮನೆಯ ಬಳಿ 7-8 ಜನರು ಸಾರ್ವಜನಿಕರ ನೆಮ್ಮದಿಗೆ ಭಂಗ ಉಂಟಾಗುವಂತೆ ಕೈ ಕೈ ಮಿಲಾಯಿಸುತ್ತಾ ಜಗಳ ಮಾಡಿಕೊಳ್ಳುತ್ತಿದ್ದಾರೆಂತಾ ಮಾಹಿತಿ ಬಂದಿದ್ದು,  ತಕ್ಷಣ ಬೆಳಿಗ್ಗೆ 10-30 ಗಂಟೆ ಸಮಯಕ್ಕೆ ನಾನು ಸಪ್ತಗಿರಿ ಬಡಾವಣೆಯಲ್ಲಿರುವ ಚಿದಾನಂದ @ ಚಿದಾ ರವರ ಮನೆಯ ಬಳಿಗೆ ಹೋದಾಗ ಅವರ ಮನೆಯ ಮುಂದೆ ಒಟ್ಟು 8 ಜನರು ಹಣಕಾಸಿನ ವಿಚಾರವಾಗಿ ಜಗಳ ಮಾಡಿಕೊಳ್ಳುತ್ತಾ ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ಭೈದುಕೊಳ್ಳುತ್ತಾ ಒಬ್ಬರಿಗೊಬ್ಬರು ಕೈ ಕೈ ಮೀಲಾಸುತ್ತಿದ್ದರು.  ಅವರನ್ನು  ನಾನು ಗಲಾಟೆ ಮಾಡಿಕೊಳ್ಳಬಾರದೆಂದು ಸೂಕ್ತ ತಿಳುವಳಿಕೆ ಹೇಳಿದರೂ ಸಹಾ ಅದೇ ರೀತಿ ವರ್ತಿಸುತ್ತಿದ್ದರು.  ಆಗ ನಾನು ಸದರಿಯವರುಗಳ ಹೆಸರು ವಿಳಾಸ ಕೇಳಲಾಗಿ ಚಿದಾನಂದ ಜಿ.ಎಸ್. @ ಚಿದಾ  ಬಿನ್. ಲೇ|| ಸಿದ್ದಲಿಂಗಯ್ಯ, 39 ವರ್ಷ, ಲಿಂಗಾಯಿತರು, ಗೋಲ್ಡನ್‌‌ ಚಿಕನ್‌‌ ಸೆಂಟರ್‌ ಮಾಲೀಕರು, ವಾಸ ನಳಂದ ಕಾನ್ವೆಂಟ್‌‌‌ ಹತ್ತಿರ, ಸಪ್ತಗಿರಿ ಬಡಾವಣೆ, ತುಮಕೂರು ಟೌನ್ 2] ಸಿ. ನೇತ್ರಾ ಕೋಂ. ಚಿದಾನಂದ ಜಿ.ಎಸ್. @ ಚಿದಾ 27 ವರ್ಷ, ಲಿಂಗಾಯಿತರು, ವಕೀಲರು, ವಾಸ ನಳಂದ ಕಾನ್ವೆಂಟ್‌‌‌ ಹತ್ತಿರ, ಸಪ್ತಗಿರಿ ಬಡಾವಣೆ, ತುಮಕೂರು ಟೌನ್  3] ಲಲಿತಾ ಕೋಂ. ಚಂದ್ರಯ್ಯ, 43 ವರ್ಷ, ಬೋವಿ ಜನಾಂಗ, ಗೃಹಿಣಿ, ವಾಸ ಪೊಲೀಸ್ ವಸತಿ ಗೃಹ, ಕುದೂರು, ಮಾಗಡಿ ತಾಲ್ಲೂಕು 4]ಮಾರುತಿ ಎಸ್. ಹೆಚ್. ಬಿನ್. ಹನುಮಂತರಾಯಪ್ಪ, 21 ವರ್ಷ, ನಾಯಕರು, ಗೋಲ್ಡನ್‌‌ ಚಿಕನ್‌‌ ಸೆಂಟರ್‌‌‌ ನಲ್ಲಿ ಕೆಲಸ, ವಾಸ ಶೆಟ್ಟಿಹಳ್ಳಿ, ತುಮಕೂರು ಟೌನ್ 5] ಆನಂದಬಾಬು ಬಿನ್. ಲೇ|| ವೆಂಕಟೇಶ್‌‌, 28 ವರ್ಷ, ಬೋವಿ ಜನಾಂಗ, 6 ನೇ ಕ್ರಾಸ್, ರಾಘವೇಂದ್ರ ಬಡಾವಣೆ, ತುಮಕೂರು 6]ಚಂದ್ರಕಾಂತ ಬಿನ್ ಲೇ|| ವೆಂಕಟೇಶ್‌‌, 23 ವರ್ಷ, ಬೋವಿ ಜನಾಂಗ, 6 ನೇ ಕ್ರಾಸ್, ರಾಘವೇಂದ್ರ ಬಡಾವಣೆ, ತುಮಕೂರು 7] ಲಕ್ಷ್ಮಮ್ಮ ಕೋಂ. ಲೇ|| ವೆಂಕಟೇಶ್‌‌, 45 ವರ್ಷ, ಬೋವಿ ಜನಂಗ, 6 ನೇ ಕ್ರಾಸ್, ರಾಘವೇಂದ್ರ ಬಡಾವಣೆ, ತುಮಕೂರು 8]ಶಿವಕುಮಾರ್‌‌ ಬಿನ್. ಲೇ|| ವೆಂಕಟಪ್ಪ, 49 ವರ್ಷ, ಬೋವಿ ಜನಾಂಗ, 6 ನೇ ಕ್ರಾಸ್, ರಾಘವೇಂದ್ರ ಬಡಾವಣೆ, ತುಮಕೂರು ರವರಿಗೆ ಸಾರ್ವಜನಿಕ ಸ್ಥಳದಲ್ಲಿ ಈ ರೀತಿ ಗಲಾಟೆ ಮಾಡಿಕೊಳ್ಳಬೇಡವೆಂದು ನಾನು ಎಷ್ಟು ತಿಳುವಳಿಕೆ ಹೇಳಿದರೂ ಸಹಾ ಅದೇ ರೀತಿ ವರ್ತಿಸುತ್ತಿದ್ದರಿಂದ ಎಲ್ಲರನ್ನೂ ವಶಕ್ಕೆ ತೆಗೆದುಕೊಂಡು ಬೆಳಿಗ್ಗೆ 11-15 ಗಂಟೆಗೆ  ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ಮುಂದಿನ ಕ್ರಮಕ್ಕಾಗಿ ನೀಡಿದ ವರದಿ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

ಸಿ ಎಸ್ ಪುರ ಪೊಲೀಸ್ ಠಾಣೆ  ಮೊ.ಸಂ 7/2018    u/s   323  324   r/w 34 ipc

ದಿನಾಂಕ-23/01/2018 ರಂದು  ಪಿರ್ಯಾದಿ   ಚಿಕ್ಕೇಗೌಡ  ಬಿನ್ ಲೇಟ್ ಕೆಂಪರಂಗಯ್ಯ  ರವರು ಠಾಣೆಗೆ ಹಾಜರಾಗಿ  ನೀಡಿದ ದೂರಿನ ಅಂಶವೇನೆಂದರೆ ಪಿರ್ಯಾದಿಯು  ತನ್ನ ಗ್ರಾಮದ ಬಳಿ  ದಿನಾಂಕ-18/01/2018 ರಂದು  ಟ್ರಾಕ್ಟರ್ ನಲ್ಲಿ  ಸಾಯಂಕಾಲ 5-00 ಗಂಟೆ ಸಮಯದಲ್ಲಿ ಮಣ್ಣನ್ನು   ತುಂಬಿಸಿಹೊಡೆಯುತ್ತಿದ್ದಾಗ, ಆಗ ನರಸಿಂಹಯ್ಯನ  ಮಗ ರಾಮಯ್ಯ [ಗ್ರಾ .ಪಂಚಾಯ್ತಿ ಸದಸ್ಯ ] ಎಂಬುವನು ನಾವು ಮಣ್ಣನ್ನು ಹೊಡೆಯುತ್ತಿದ್ದ ಟ್ರಾಕ್ಟರನ್ನು  ತಡೆದು ನಮ್ಮ ಕೆರೆಯಲ್ಲಿ ಏಕೆ ಮಣ್ಣನ್ನು  ತುಂಬುತ್ತೀರಾ  ಎಂತಾ ಗಲಾಟೆಮಾಡಿ ಮಣ್ಣನ್ನು  ಅಲ್ಲೇ ಸುರಿಸಿದನು, ನಂತರ ದಿನಾಂಕ-19/1/18 ರಂದು ಬೆಳಿಗ್ಗೆ 8-00 ಗಂಟೆಗೆ  ನಮ್ಮೂರಿನ ಡೈರಿ ಬಳಿ ಇದ್ದಾಗ  ರಾಮಯ್ಯನು ಕೆ.ಎ.06 ಸಿಬಿ 2149 ನೇ ಟ್ರಾಕ್ಟರ್ ನಲ್ಲಿ ಬಂದನು ಆಗ ನಾನು ಟ್ರಾಕ್ಟರ್ ಅನ್ನು ನಿಲ್ಲಿಸಿ ಯಾಕೆ  ರಾತ್ರಿ ಗಲಾಟೆ ಮಾಡಿದೆ ಎಂತಾ ಕೇಳಿದೆ ಆಗ ರಾಮಯ್ಯ ಎಡಮಟ್ಟೆಯಿಂದ  ಬೆನ್ನಿಗೆ & ಕೈ ಕಾಲಿಗೆ ಹೊಡೆದನು , ಆತನ ಜೊತೆ ಇದ್ದ ನಂದೀಶ  & ವೆಂಕಟೇಶ  ಬೈದರು , ರಾಮಯ್ಯ ಇದೇ ಟ್ರಾಕ್ಟರ್ ನಿಂದ ನಿಮ್ಮ ಮೇಲೆ ಹತ್ತಿಸುತ್ತೇನೆ ಎಂತಾ ಬೆದರಿಕೆ ಹಾಕಿದ ಎಂತಾ ಇತ್ಯಾದಿ ದೂರನ್ನು ಪಡೆದು ಠಾಣಾ ಮೊ.ನಂ 7/18 323 324  504  506 ರೆ/ವಿ 34 ಐ.ಪಿಸಿ  ರೀತ್ಯಾ ದಾಖಲಿಸಿದೆTuesday, 23 January 2018

ಅಪರಾಧ ಘಟನೆಗಳು 23-01-18

ಹುಲಿಯೂರುದುರ್ಗ ಪೊಲೀಸ್‌ ಠಾಣಾ  ಮೊ.ನಂ. 06/2018, ಕಲಂ: 87 ಕೆ ಪಿ ಆಕ್ಟ್

ದಿನಾಂಕ:21-01-2018  ರಂದು ಸಂಜೆ 4-35  ಗಂಟೆಗೆ ಠಾಣಾ ಪಿಎಸ್‌ಐ ಸಾಹೇಬರಾದ ಶ್ರೀ ಮಂಜು, ಬಿ.ಪಿ  ರವರು  ನಮ್ಮ ಠಾಣಾ ಸಿಬ್ಬಂದಿಯಾದ ಶರತ್‌ ಪಿಸಿ-479  ರವರ ಮುಖೇನ ಕಳುಹಿಸಿದ ದೂರಿನ ಅಂಶವೇನೆಂದರೆ   ಈ ದಿವಸ ದಿನಾಂಕ:21-01-2018  ರಂದು  ಮದ್ಯಾಹ್ನ 2-45 ಗಂಟೆಯಲ್ಲಿ ಪಿಎಸ್‌‌ಐ ಸಾಹೇಬರು  ಪೊಲೀಸ್‌ ಠಾಣೆಯಲ್ಲಿರುವಾಗ ಹುಲಿಯೂರುದುರ್ಗ ಪೊಲೀಸ್ ಠಾಣಾ ಸರಹದ್ದು ನಿಡಸಾಲೆ ಗ್ರಾಮದಲ್ಲಿರುವ ಹುಚ್ಚಮ್ಮದೇವಿ ದೇವಸ್ಥಾನದ ಮುಂಭಾಗದ ಆವರಣದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೆಲವರು ಅಂದರ್‌ ಬಾಹರ್‌ ಇಸ್ವೀಟ್‌ ಜೂಜಾಟ ನೆಡೆಯುತ್ತಿದೆ ಎಂದು ಮಾಹಿತಿ ಬಂದಿದ್ದು ಜೂಜಾಟವಾಡುತ್ತಿರುವವರ ಮೇಲೆ ದಾಳಿ ಮಾಡಿ ಕಾನೂನು ಕ್ರಮ ಜರುಗಿಸುವ ಸಲುವಾಗಿ ಪಂಚಾಯ್ತದಾರರನ್ನು ಠಾಣೆಗೆ ಬರಮಾಡಿಕೊಂಡು ಅವರಿಗೆ ವಿಚಾರವನ್ನು ತಿಳಿಸಿ ದಾಳಿ ಮಾಡುವ ಸಮಯದಲ್ಲಿ  ನೀವುಗಳು ನಮ್ಮೊಂದಿಗೆ ಪಂಚಾಯ್ತದಾರರಾಗಿ ಬಂದು ಸಹಕರಿಸುವಂತೆ ಅವರಿಗೆ ತಿಳಿಸಿ ಅವರು ಒಪ್ಪಿದ ನಂತರ ಮದ್ಯಾಹ್ನ 3-10  ಗಂಟೆಗೆ ಠಾಣೆಯನ್ನು ಬಿಟ್ಟು ಪಿ.ಎಸ್‌.ಐ ಸಾಹೇಬರು, ಪೊಲೀಸ್ ಸಿಬ್ಬಂದಿ ಮತ್ತು  ಪಂಚಾಯ್ತುದಾರರೊಂದಿಗೆ ಇಲಾಖಾ ಜೀಪ್‌ನಲ್ಲಿ  ಮದ್ಯಾಹ್ನ 3-30 ಗಂಟೆಯ ಸಮಯಕ್ಕೆ ನಿಡಸಾಲೆ ಗ್ರಾಮಕ್ಕೆ ಹೋಗಿ ಸ್ವಲ್ಪ ದೂರದಲ್ಲಿಯೇ ಜೀಪ್‌‌ ನಿಲ್ಲಿಸಿ ಅಲ್ಲಿಂದ ನೆಡೆದುಕೊಂಡು ಹೋಗಿ ದೇವಸ್ಥಾನದ ಮರೆಯಲ್ಲಿ  ನಿಂತುಕೊಂಡು ನೋಡಲಾಗಿ ಸಾರ್ವಜನಿಕ ಸ್ಥಳವಾದ ದೇವಸ್ಥಾನದ ಮುಂಭಾಗದ ಆವರಣದಲ್ಲಿ ಐದು ಜನರು ಕುಳಿತುಕೊಂಡು ಹಣವನ್ನು ಪಣವಾಗಿ ಕಟ್ಟಿಕೊಂಡು ಇಸ್ಪೀಟು ಎಲೆಗಳಿಂದ  ಆಚೆ, ಒಳಗೆ (ಅಂದರ್-ಬಾಹರ್)  ಎಂತ ಮಾತನಾಡಿಕೊಳ್ಳುತ್ತಾ ಜೂಜಾಟವಾಡುತ್ತಿದ್ದುದು ಕಂಡು ಬಂತು.  ಕೂಡಲೇ ಪಿಎಸ್‌ಐ ಸಾಹೇಬರು  ಮತ್ತು ನಮ್ಮ ಸಿಬ್ಬಂದಿಯವರು ಸೇರಿಕೊಂಡು ಜೂಜಾಟವಾಡುತ್ತಿದ್ದವರನ್ನು ಸುತ್ತುವರಿದು ದಾಳಿ ಮಾಡಲು ಹೋಗುವಷ್ಟರಲ್ಲಿ ಜೂಜಾಟವಾಡುತ್ತಿದ್ದವರು ಸಮವಸ್ತ್ರದಲ್ಲಿದ್ದ ಪೊಲೀಸ್‌ರನ್ನು  ನೋಡಿ ಎದ್ದು ಓಡಿ ಹೋಗಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ಆಗ ಅವರನ್ನು ಸುತ್ತುವರಿದು  4 ಜನ ಆಸಾಮಿಗಳನ್ನು ಸ್ಥಳದಲ್ಲಿಯೇ ಹಿಡಿದುಕೊಂಡೆವು. ಉಳಿದ ಒಬ್ಬ ಆಸಾಮಿಯು  ಅಲ್ಲಿಂದ ತಪ್ಪಿಸಿಕೊಂಡು ಓಡಿ ಹೋಗಿರುತ್ತಾನೆ.  ಸ್ಥಳದಲ್ಲಿ ಹಿಡಿದುಕೊಂಡ ಆಸಾಮಿಗಳ ಹೆಸರು ವಿಳಾಸವನ್ನು ಕೇಳಲಾಗಿ 1) ಹೆಚ್‌‌.ಕೆ.ನಾಗರಾಜು ಬಿನ್ ಲೇಟ್‌‌ ಕಾವೇರಿಗೌಡ ಸುಮಾರು 46 ವರ್ಷ ವಕ್ಕಲಿಗರು ವ್ಯವಸಾಯ ಕೆಲಸ ಹೊಸಹಳ್ಳಿದೊಡ್ಡಿ ಹುಲಿಯೂರುದುರ್ಗ ಹೋಬಳಿ ಕುಣಿಗಲ್ ತಾಲ್ಲೂಕು 2) ಅರುಣೇಶ್‌‌ ಉರುಫ್‌‌  ಬಿನ್ ಪಂಚಾಕ್ಷರಿ ಸುಮಾರು 32 ವರ್ಷ ಲಿಂಗಾಯಿತರು  ವ್ಯವಸಾಯ ಕೆಲಸ ನಿಡಸಾಲೆ ಗ್ರಾಮ ಹುಲಿಯೂರುದುರ್ಗ ಹೋಬಳಿ ಕುಣಿಗಲ್‌ ತಾಲ್ಲೂಕು 3) ಪುಟ್ಟರಾಮ ಉರುಫ್‌ ಕಂಡಿ ಬಿನ್ ಲೇಟ್‌‌ ತಿಮ್ಮೇಗೌಡ ಸುಮಾರು 46 ವರ್ಷ ವಕ್ಕಲಿಗರು ವ್ಯವಸಾಯ ಕೆಲಸ ಬಸವಲಿಂಗನದೊಡ್ಡಿ ಗ್ರಾಮ ಆತಗೂರು ಹೋಬಳಿ ಮದ್ದೂರು ತಾಲ್ಲೂಕು 4) ಆರ್‌.ರಮೇಶ ಬಿನ್ ಲೇಟ್‌ ರೇವಣ್ಣ  ಸುಮಾರು 36 ವರ್ಷ ಕುರುಬರು ವ್ಯವಸಾಯ ಕೆಲಸ ಯಡನಹಳ್ಳಿ ಗ್ರಾಮ ಆತಗೂರು ಹೋಬಳಿ  ಮದ್ದೂರು ತಾಲ್ಲೂಕು ಎಂದು ತಿಳಿಸಿರುತ್ತಾರೆ.  ಓಡಿ ಹೋದ ಆಸಾಮಿ  ಹೆಸರನ್ನು  ಹಿಡಿದುಕೊಂಡ ಆಸಾಮಿಗಳಿಂದ ತಿಳಿಯಲಾಗಿ 5) ನಿಂಗರಾಜು ಬಿನ್ ಲೇಟ್‌ ಶಿವಲಿಂಗಯ್ಯ ಸುಮಾರು 40 ವರ್ಷ ವಕ್ಕಲಿಗರು ವ್ಯವಸಾಯ ಕೆಲಸ ಕೆಬ್ಬಳ್ಳಿ ಗ್ರಾಮ ಹುಲಿಯೂರುದುರ್ಗ ಹೋಬಳಿ ಕುಣಿಗಲ್ ತಾಲ್ಲೂಕು  ಎಂದು ತಿಳಿಸಿರುತ್ತಾರೆ.  ನಂತರ ಸ್ಥಳದಲ್ಲಿ ಜೂಜಾಟವಾಡುತ್ತಿದ್ದ ಅಖಾಡದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಹಣವನ್ನು ಎಣಿಕೆ ಮಾಡಲಾಗಿ 5370-00 ರೂ ನಗದು ಹಣ, 52 ಇಸ್ಪೀಟು ಎಲೆಗಳು ಮತ್ತು ಒಂದು ಹಳೆಯ ಟವಲ್ ಇರುತ್ತೆ. ಆದ್ದರಿಂದ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿ ಕಟ್ಟಿಕೊಂಡು ಇಸ್ಪೀಟು ಜೂಜಾಟವಾಡುತ್ತಿದ್ದ ಮೇಲ್ಕಂಡ ಐದು  ಜನ ಅಸಾಮಿಗಳ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ  ಇತ್ಯಾದಿಯಾಗಿ ದೂರಿನ ಅಂಶವಾಗಿದ್ದು ದೂರನ್ನು ಪಡೆದುಕೊಂಡು ಠಾಣಾ ಎನ್‌ಸಿಆರ್‌ ನಂಬರ್‌ 30/2018  ರಲ್ಲಿ ನೋಂದಾಯಿಸಿಕೊಂಡಿರುತ್ತೆ.   ಈ ದೂರು ಅಸಂಜ್ಞೆಯ  ದೂರು ಆಗಿದ್ದು ಆರೋಪಿತರ ವಿರುದ್ದ ಪ್ರಕರಣ ದಾಖಲು ಮಾಡಿಕೊಂಡು ತನಿಖೆಯನ್ನು ಕೈಗೊಳ್ಳಲು ಅನುಮತಿಯನ್ನು ನೀಡಬೇಕೆಂದು ಘನ ನ್ಯಾಯಾಲಯದಲ್ಲಿ ದಿನಾಂಕ:21-01-2018  ರಂದು  ಮನವಿಯನ್ನು ಸಲ್ಲಿಸಿಕೊಂಡಿದ್ದು  ಘನ ನ್ಯಾಯಾಲಯವು ಅನುಮತಿಯನ್ನು ನೀಡಿದ್ದು ದಿನಾಂಕ:21-01-2018  ರಂದು  ರಾತ್ರಿ 9-10  ಗಂಟೆಗೆ  ಪ್ರಕರಣ ದಾಖಲು ಮಾಡಿರುತ್ತೆ.

ಪಟ್ಟನಾಯಕನಹಳ್ಳಿ ಪೊಲೀಸ್ ಠಾಣಾ ಯು ಡಿ ಆರ್ ನಂ 03-18 ಕಲಂ 174 ಸಿ ಆರ್ ಪಿ ಸಿ

ದಿನಾಂಕ:22-01-18 ರಂದು ಮದ್ಯಾಹ್ನ 01:15 ಗಂಟೆಗೆ  ಪಿರ್ಯಾದಿ  ನಂದಿನಿ ಕೊಂ ಸತೀಶ, ಹಾರೋಗೆರೆ ಗ್ರಾಮ, ಶಿರ ತಾಲ್ಲೋಕ್  ಹಾಲಿ ವಾಸ ವಿದ್ಯಾನಗರ, ತುಮಕೂರು ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ,  ಪಿರ್ಯಾದಿ ನಂದಿನ ರವರು ಈಗ್ಗೆ ಸುಮಾರು 17ವರ್ಷಗಳ ಹಿಂದೆ ಹಾರೊಗೆರೆ ಗ್ರಾಮದ  ವಾಸಿ ಸತೀಶ್ ರವರೊಂದಿಗೆ ವಿವಾಹವಾಗಿದ್ದು, ಆಕಾಶ್ ಮತ್ತು ಸಾರಿಕಾ ಎಂಬ ಮಕ್ಕಳಿದ್ದು,  ಈಗ್ಗೆ ಸುಮಾರು 10 ವರ್ಷಗಳ ಹಿಂದೆ ತುಮಕೂರಿಗೆ ಹೋಗಿ ಮಕ್ಕಳನ್ನು ಶಾಲೆಗೆ ಸೇರಿಸಿ ಬಾಡಿಗೆ ಮಾಡಿಕೊಂಡು  ವಾಸವಿದ್ದು, ಪಿರ್ಯಾದಿ ಗಂಡ ಸತೀಶ ರವರು ಖಾಸಗಿ ಬಸ್ಸಿನಲ್ಲಿ ಏಜೆಂಟ್ ಕೆಲಸ ಮಾಡಿಕೊಂಡಿದ್ದು,  ಇವರು ಮಕ್ಕಳ ವಿಧ್ಯಾಭ್ಯಾಸ ಮತ್ತು ಸಂಸಾರ ನಿರ್ವಹಣೆಗಾಗಿ ಅವರಿವರ ಬಳಿ ಕೈ ಸಾಲ ಮಾಡಿಕೊಂಡು, ತುಮಕೂರಿನ ಪೈನಾನ್ಸ್ ನಲ್ಲಿ ಮತ್ತು ಪ ನಾ ಹಳ್ಳಿ ಕೆನರಾ ಬ್ಯಾಂಕಿನಲ್ಲಿ  ಸಹ ಸಾಲ ಮಾಡಿಕೊಂಡಿದ್ದರು ಕೊಂಡಿದ್ದು,ಸಾಲದವರೆ ಜಾಸ್ತಿಯಾಗಿದ್ದು ಅವರಿವರ ಬಳಿ ಮಾಡಿರುವ ಕೈ ಸಾಲದವರು ಬಂದು ಹಣ ಕೇಳಿದರೆ ಮರ್ಯಾದೆ  ಹೋಗುತ್ತದೆ ಎಂದು  ಯಾವಗಲು ಚಿಂತೆ ಮಾಡುತ್ತಿದ್ದರು, ಇವರಿಗೆ ಧೈರ್ಯ ಹೇಳುತ್ತಿದ್ದೇನು, ಇತ್ತೀಚಿಗೆ ಗ್ರಾಮದಲ್ಲಿರುವ ಜಮೀನಿನಲ್ಲಿ  ದಾಳಿಂಬೆ  ಬೆಳೆ ಇಡಲು  ಸಾಮಾಗ್ರಿಗಳನ್ನು ಕೊಳ್ಳಲು ಸಾಲ ಮಾಡಿದ್ದರು, ಜಮೀನಿನಲ್ಲಿರುವ ಕೊಳವೆ  ಬಾವಿಯಲ್ಲಿ ನೀರು ನಿಂತು ಹೋಗಿದ್ದು, ಪಿರ್ಯಾದಿ ಗಂಡ  ಸತೀಶ ರವರು  ದಿನಾಂಕ:21-01-18 ರಂದು ತುಮಕೂರಿನಿಂದ ಊರಿಗೆ ಹೋಗಿ  ಬರುತ್ತೇನೆಂದು ಪಿರ್ಯಾದಿಗೆ ಹೇಳಿ ಬಂದಿದ್ದು, ಈ ದಿನ ದಿನಾಂಕ:22-01-18 ರಂದು  ಬೆಳಿಗ್ಗೆ 07:00 ಗಂಟೆ ಸಮಯದಲ್ಲಿ ಪಿರ್ಯಾದಿ ರವರ  ಅತ್ತೆ  ಪಿರ್ಯಾದಿ  ಗಂಡನಿಗೆ ಕಾಪಿಕೊಡಲು  ಹೋದಾಗ ವಾಸದ ಮನೆಯ ಹಾಲ್ ನಲ್ಲಿರುವ ಕಬ್ಬಿಣದ ಕೊಂಕಣಿಗೆ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ ಎಂತ ತಿಳಿಸಿದ್ದು ನಾನು ಊರಿಗೆ ಬಂದು ನೋಡಲಾಗಿ ನನ್ನ ಗಂಡ ಮೃತಪಟ್ಟಿರುವುದು ನಿಜವಾಗಿತ್ತು. ಪಿರ್ಯಾದಿ ಗಂಡ ಸತೀಶ ರವರು  ಅವರಿವರ  ಬಳಿ ಮಾಡಿರುವ ಕೈ ಸಾಲ ಮತ್ತು  ಬ್ಯಾಂಕ್ ಸಾಲವನ್ನು ತಿರಿಸುವ ದಾರಿ ಕಾಣೆದೆ  ಜೀವನದಲ್ಲಿ ಜಿಗುಪ್ಸೆಗೊಂಡು ತನ್ಮೂಲಕ  ತಾನೇ ನೇಣು  ಹಾಕಿಕೊಂಡು ಮೃತಪಟ್ಟಿರುತ್ತಾರೆ  ಮೃತನ ಸಾವಿನಲ್ಲಿ ಯಾವುದೇ ಅನುಮಾನ  ಇರುವುದಿಲ್ಲ  ಮುಂದಿನ ಕ್ರಮ ಜರುಗಿಸಲು ನೀಡಿದ ಲಿಖಿತ ಪಿರ್ಯಾದನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಸಿ.ಎಸ್.ಪುರ ಪೊಲೀಸ್ ಠಾಣಾ ಮೊ.ನಂ:04/2018. ಕಲಂ: 323. 324. 504 ರೆ/ವಿ 34 ಐಪಿಸಿ

ದಿನಾಂಕ:22.01.2018 ರಂದು ಈ ಕೇಸಿನ ಫಿರ್ಯಾದಿಯಾದ  ರಾಮಯ್ಯ  ಬಿನ್ ಲೇಟ್ ಜುಂಜಯ್ಯ, 45 ವರ್ಷ, ಗೊಲ್ಲರ ಜನಾಂಗ, ನಾಗಸಂದ್ರ ಮಜರೆ ಗೊಲ್ಲರಹಟ್ಟಿ , ಕಸಬಾ ಹೋಬಳಿ, ಗುಬ್ಬಿ ತಾಲ್ಲೂಕುರವರು ನೀಡಿದ ದೂರಿನ ಸಾರಾಂಶವೆಂದರೆ, ದಿನಾಂಕ:21.01.2018 ರಂದು  ರಾತ್ರಿ ರಸ್ತೆ  ಕೆಲಸ ಮಾಡುವವರು  ನಮ್ಮ ಮನೆಯ ಬುಡದಲ್ಲಿ  ಕಲ್ಲು ಸುರಿಸುವಾಗ  ನಮ್ಮ ಮನೆಯ ಗೋಡೆಗೆ ಕಲ್ಲು ತಗುಲಿ  ಗೋಡೆ ಕಿತ್ತುಹೋಗಿರುತ್ತದೆ, ಆಗ ನಾನು  ಮತ್ತು ನನ್ನ  ಹೆಂಡತಿ  ವಿನೋದಮ್ಮ ಗೋಡೆ ಕಿತ್ತುಹೋದ ವಿಚಾರದಲ್ಲಿ  ಬೈದುಕೊಳ್ಳುತಿದ್ದಾಗ , ರಾತ್ರಿ ಸುಮಾರು 10.30 ಗಂಟೆ ಸಮಯದಲ್ಲಿ  ನಮ್ಮ ಪಕ್ಕದ  ಮನೆಯವರಾದ  ಬಸವರಾಜು  ಬಿನ್ ಮಾರಯ್ಯ & ಈತನ ಹೆಂಡತಿ ರತ್ನಮ್ಮ  ಎಂಬುವರು ಯಾರನ್ನೋ ಬೈದುಕೊಳ್ಳತ್ತೀರಾ  ಬೋಳಿಮಗನೇ  ಎಂಧು, ನನ್ನ ಹೆಂಡತಿಯನ್ನು  ಬೇವರ್ಸಿ ಮುಂಡೆ ಎಂದು ಬೈದು ಇಬ್ಬರೂ ಏಕಾಏಕಿ  ನಮ್ಮ ಮನೆಯ ಬಳಿ  ಬಂದು ಏಕಾಏಕಿ  ಜಗಳ ತೆಗೆದು  ಬಸವರಾಜು ಅಲ್ಲೆ ಬಿದ್ದಿದ್ದ  ದೊಣ್ಣೆಯನ್ನು ತೆಗೆದುಕೊಂಡು  ನನ್ನ  ತಲೆಯ ಹಿಂಭಾಗದ ಎಡಭಾಗಕ್ಕೆ  ಹೊಡೆದು ರಕ್ತಗಾಯ ಪಡಿಸಿದ, ಈತನ ಹೆಂಡತಿ  ರತ್ನಮ್ಮ  ನನ್ನ ಹೆಂಡತಿ ವಿನೋದಮ್ಮರವರನ್ನು  ಜುಟ್ಟು ಹಿಡಿದುಕೊಂಡು , ಕೈಗಳಿಂದ ಹೊಡೆದು  ಮೈಕೈ ನೋವುಂಟು ಮಾಡಿದರು ಎಂದು ಇತ್ಯಾದಿಯಾಗಿ ನೀಡಿದ ದೂರನ್ನು ಸ್ವೀಕರಿಸಿ ಪ್ರಕರಣ ದಾಖಲಿಸಿರುತ್ತೆ.

ಪಟ್ಟನಾಯಕನಹಳ್ಳಿ ಪೊಲೀಸ್ ಠಾಣಾ ಮೊ ನಂ 12-2018 ಕಲಂ 279,337 ಐಪಿಸಿ ಮತ್ತು 134(ಎ)(ಬಿ),187 ಐ ಎಂ ವಿ ಆಕ್ಟ್

ದಿನಾಂಕ:22-01-18 ರಂದು ಮದ್ಯಾಹ್ನ 12:00 ಗಂಟೆಗೆ ಪಿರ್ಯಾದಿ ಎಂ ಟಿ ರಾಮಣ್ಣ ಬಿನ್ ತಿಮ್ಮಣ್ಣ, ಮುದ್ದರಂಗನಹಳ್ಳಿ ಗ್ರಾಮ, ಶಿರಾ ತಾಲ್ಲೋಕ್  ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ದಿನಾಂಕ:18-01-18 ರಂದು ಪಿರ್ಯಾದಿ  ಹೆಂಡತಿ  ತಾಯಮ್ಮ  ರವರು  ಕಾರ್ಯದ ನಿಮಿತ್ತಾ  ಉದ್ದರಾಮನಹಳ್ಳಿ ಕ್ರಾಸ್ ನಲ್ಲಿರುವ ತಮ್ಮ ಸಂಬಂದಿಕರ ಮನೆಗೆ ಹೋಗಿ  ವಾಪಸ್ ಮನೆಗೆ  ಬರಲು  ಉದ್ದರಾಮನಹಳ್ಳಿ ಕ್ರಾಸ್ ನಲ್ಲಿ ಬೆಳಿಗ್ಗೆ 06:00 ಗಂಟೆಗೆ  ನಡೆದುಕೊಂಡು ಬರುತ್ತಿರುವಾಗ ಬರಗೂರು ಕಡೆಯಿಂದ ಬಂದ ಕೆಎ-64-ಎಲ್-9604 ರ ಮೋಟಾರು ಸೈಕಲ್ ಸವಾರ ಮಂಜುನಾಥ, ತರೂರು ಗ್ರಾಮ,  ಶಿರಾ ತಾಲ್ಲೋಕ್ ರವರು  ತನ್ನ  ಮೋಟಾರು ಸೈಕಲ್ ನ್ನು  ಅತಿವೇಗ ಮತ್ತು ಅಜಾಗರೂತೆಯಿಂದ  ಓಡಿಸಿಕೊಂಡು ಬಂದು ತಾಯಮ್ಮ ರವರಿಗೆ ಡಿಕ್ಕಿ ಹೊಡೆಸಿ ತನ್ನ ಮೋಟಾರು ಸೈಕಲ್ ನ್ನು ನಿಲ್ಲಿಸದೆ ಹೊರಟು ಹೋಗಿರುತ್ತಾನೆ, ಅಪಘಾತದಲ್ಲಿ ತಾಯಮ್ಮ ರವರಿಗೆ ಬಲಕಾಲಿನ ತೊಡೆಗೆ ಪೆಟ್ಟುಗಳು ಬಿದ್ದು  ರಕ್ತಗಾಯಗಳಾಗಿದ್ದು ಗಾಯಾಳುವಾದ  ತಾಯಮ್ಮ ರವರನ್ನು  ಚಿಕಿತ್ಸೆಗಾಗಿ ಶಿರಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ  ಚಿಕಿತ್ಸೆ  ಕೊಡಿಸಿ  ವೈದ್ಯರ ಸಲಹೇ ಮೇರೆಗೆ  ತುಮಕೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ  ಒಳರೋಗಿಯಾಗಿ ದಾಖಲಿಸಿ ಚಿಕಿತ್ಸೆ  ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು ಅಪಘಾತಪಡಿಸಿದ ಮೇಲ್ಕಂಡ ಮೋಟಾರು ಸೈಕಲ್ ಸವಾರ ಮೇಲೆ ಕಾನೂನು  ರೀತ್ಯಾ  ಕ್ರಮ  ಕೈಗೊಳ್ಳಲು ನೀಡಿದ ಲಿಖಿತ ಪಿರ್ಯಾದನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಹೊನ್ನವಳ್ಳಿ ಠಾಣಾ ಮೊ.ನಂ.01/2018 ಕಲಂ. 323.504.506.417.341 r/w 34 ಐಪಿಸಿ

ದಿನಾಂಕ 22/01/2017 ರಂದು ಮದ್ಯಾಹ್ನ 3-00 ಗಂಟೆಗೆ ತಿಪಟೂರು ತಾಲೋಕು ಹೊನ್ನವಳ್ಳಿ ಹೋಬಳಿ ಬಿ,ಬೈರಾಪುರ ಗ್ರಾಮದ ವಾಸಿ ಧರಣಿ ತಂದೆ ವೀರಭದ್ರೇಗೌಡ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೆನೆಂದರೆ ಪಿರ್ಯಾದಿಗೆ ಈಗ್ಗೆ ಸುಮಾರು 15 ವರ್ಷಗಳ ಹಿಂದೆ ಬೈರಾಪುರ ಗ್ರಾಮದ ಗದ್ದಿಪ್ಪನವರ ಮಗನಾದ ಕುಮಾರಸ್ವಾಮಿ ಎಂಬುವವರೋಂದಿಗೆ ವಿವಾಹವಾಗಿದ್ದು ಸಂಸಾರದಲ್ಲಿ ಅನ್ಯೂನ್ಯವಾಗಿದ್ದು ಚಂದನ 14 ವರ್ಷದ ಹೆಣ್ಣು ಮಗಳು  ಹಾಗೂ 12 ವರ್ಷದ ಚರಣ ಎಂಬ ಗಂಡು ಮಗನಿರುತ್ತಾನೆ ನನ್ನ ಗಂಡನಾದ ಕುಮಾರ ಸ್ವಾಮಿಯ ಸ್ನೇಹಿತನಾದ ನಮ್ಮ ಗ್ರಾಮದ ಶಶಿಧರ ತಂದೆ ಬಸವರಾಜು ನಮ್ಮ ಮನೆಗೆ 6 ವರ್ಷಗಳಿಂದ ಬಂದು ಹೋಗುತ್ತಿದ್ದು ನನ್ನ ಜೋತೆ ಸ್ನೇಹ ಬೆಳೆಸಿ ನಿನ್ನ ಗಂಡ ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುವುದಿಲ್ಲ ನಾನು ಬಿಎಂಟಿಸಿ ಕಂಡಕ್ಟರ್ ಆಗಿದ್ದು ಬರುವ ಸಂಭಳದಲ್ಲಿ ನಿನ್ನನ್ನು ಮತ್ತು ನಿನ್ನ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಗಂಡನನ್ನು ಬಿಟ್ಟು ಬಾ ಅಂತಾ ನಂಬಿಸಿದ ಆತನ ಮಾತನ್ನು ನಂಬಿ ದಿನಾಂಕ 28/04/2017 ರಲ್ಲಿ ತಿಪಟೂರು ಘನ ನ್ಯಾಯಲಯದಿಂದ ವಿಚ್ಚೇದನ ಪಡೆದು ಕುಮಾರಸ್ವಾಮಿಯವರಿಂದ ದೂರವಾಗಿರುತ್ತೇನೆ ಶಶಿಧರನು ನನ್ನ ಜೊತೆ ಇರುವಾಗ ನನ್ನಿಂದ ಹಣವನ್ನು ಕೊಡುವುದಾಗಿ ಪಡೆದು ಕೊಡದೆ ವಂಚಿಸಿರುತ್ತಾನೆ ಹಾಗೂ ಶಶಿಧರನ ಅಣ್ಣನಾದ ರವಿಯವರು ದಿನಾಂಕ 18/11/2017 ರಂದು ಸಂಜೆ 7.30 ರ ಸಮಯದಲ್ಲಿ ನಾನು ಬಿದರೆಗುಡಿಯ ಚಿಕ್ಕಮ್ಮನ ದೇವಾಲಯದ ಬಳಿ ಹೋಗುವಾಗ ರವಿ ಇತನ ತಾಯಿ ನಿಂಗಮ್ಮನೋಂದಿಗೆ ಬಂದು ನನ್ನನ್ನು ತಡೆದು ಸೂಳೆ ಮುಂಡೆ ಬೇವರ್ಸಿ ಮುಂಡೆ ಅಂತಾ ಅವ್ಯಚ್ಯ ಶಬ್ದಗಳಿಂದ ಬೈದು ಅಲ್ಲೆ ಇದ್ದ ದೊಣ್ಣೆಯಿಂದ ರವಿ ಹೊಡೆಯಲು ಪ್ರಯತ್ನಿಸಿದ್ದು  ನಿಂಗಮ್ಮರವರು ಜುಟ್ಟು ಹಿಡಿದು ಎಳೆದಾಡಿ ಮೈಕೈಗೆ ಹೊಡೆದು ನೋವುಂಟುಮಾಡಿರುತ್ತಾರೆ ಹಾಗೂ ಇನ್ನು ಮುಂದೆ ಶಶಿಧರನ ತಂಟೆಗೆ ಬಂದರೆ ನಿನ್ನನ್ನು ಜಿವಂತವಾಗಿ ಉಳಿಸಿವುದಿಲ್ಲ ಎಂದು ಕೊಲೆಬೆದರಿಕೆ ಹಾಕಿರುತ್ತಾರೆ ಈ ದಿನ ದಿನಾಂಕ 22/01/2017 ರಂದು ಶಶಿಧರನು ಬೇರೊಂದು ಹುಡುಗಿಯ ಜೊತೆ ಮದುವೆಯಾಗಿರುವುದು ತಿಳಿದು ಬಂತು ನಾನು ಇಷ್ಟು ದಿನ ಶಶಿಧರನ ಕುಟುಂಬದವರ ಮೇಲೆ ದೂರು ನೀಡಬಾರದೆಂದು ಸುಮ್ಮನಿದ್ದು ಶಶಿಧರ ನನಗೆ ವಂಚಿಸಿ ಬೇರೊಂದು ಮದುವೆಯಾಗಿದ್ದರಿಂದ ತಡವಾಗಿ ಠಾಣೆಗೆ ಬಂದು ಮುಂದಿನ ಕಾನೂನು ಕ್ರಮಕ್ಕಾಗಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲು ಮಾಡಿರುತ್ತೆ.Monday, 22 January 2018

ಅಪರಾಧ ಘಟನೆಗಳು 22-01-18

ಹಂದನಕೆರೆ  ಪೊಲೀಸ್ ಠಾಣೆ ಮೊ.ಸಂ 06/2018 ಕಲಂ 279,304(J) ಐಪಿಸಿ 187 ಐ.ಎಂ.ವಿ ಆಕ್ಟ್

ದಿನಾಂಕ:21/08/2018 ರಂದು ರಾತ್ರಿ 07.30 ಗಂಟೆಗೆ ಪಿರ್ಯಾದಿ ಚಿ ನಾ ಹಳ್ಳಿ ತಾಲ್ಲೂಕ್. ಸಬ್ಬೇಹಳ್ಳಿ ವಾಸಿ ರಾಜಣ್ಣ ಬಿನ್ ಗಂಗಣ್ಣ  ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಈ ದಿನ ತನ್ನ ಸ್ವಂತ ಕಾರ್ಯ ನಿಮಿತ್ತ ಹಾಸನಕ್ಕೆ ಹೋಗಿದ್ದು, ಪಿರ್ಯಾದಿರವರಿಗೆ  ದಿನಾಂಕ:21/01/2018 ರಂದು ಮಧ್ಯಾಹ್ನ ಸುಮಾರು 02.30 ಗಂಟೆಯಲ್ಲಿ ತಮ್ಮೂರಿನ ಸಿದ್ದರಾಜು ರವರು ಫೋನ್ ಮಾಡಿ ನಿಮ್ಮ ಅಣ್ಣ ಕುಮಾರನಿಗೆ ಚೋರಗೊಂಡನಹಳ್ಳಿ ಮತ್ತು ದೊಡ್ಡಯೆಣ್ಣೆಗೆರೆ ರಸ್ತೆಯಲ್ಲಿ  ಅಪಘಾತವಾಗಿ ಮೃತಪಟ್ಟಿರುತ್ತಾರೆ. ಎಂದು ತಿಳಿಸಿದರು. ಆ ಮೇರೆಗೆ ಪಿರ್ಯಾದಿರವರು ಸ್ಥಳಕ್ಕೆ ಬಂದು  ನೋಡಿದಾಗ  ಪಿರ್ಯಾದಿರವರ ಅಣ್ಣನ ಶವ ರಸ್ತೆಯ ಪಕ್ಕದ  ಪುಟ್ ಪಾತ್ ನಲ್ಲಿ ಬಿದ್ದಿತ್ತು. ಮೃತನ ಬಾಬ್ತು ಕೆಎ.44.ಹೆಚ್.6451  ನೇ ಟಿವಿಎಸ್ XL Super ವಾಹನವು  ರಸ್ತೆ  ಮೇಲೆ  ಮುಂಭಾಗ ಜಖಂ ಆಗಿ ಬಿದ್ದಿತ್ತು. ನಂತರ ಪಿರ್ಯಾದಿರವರ ಅಲ್ಲಿದ್ದ ಸಾರ್ವಜನಿಕರನ್ನು ವಿಚಾರ ಮಾಡಲಾಗಿ  ಪಿರ್ಯಾದಿರವರ ಅಣ್ಣ ತನ್ನ ಟಿವಿಎಸ್ ವಾಹನದಲ್ಲಿ ಮಧ್ಯಾಹ್ನ ಸುಮಾರು 01.45 ಗಂಟೆಯ ಸಮಯದಲ್ಲಿ ದೊಡ್ಡಯೆಣ್ಣೆಗೆರೆ ಕಡೆಯಿಂದ ಚೋರಗೊಂಡನಹಳ್ಳಿ ಕಡೆಗೆ ರಸ್ತೆಯ ಎಡಬದಿಯಲ್ಲಿ ಹೋಗುತ್ತಿರುವಾಗ ಎದುರುಗಡೆಯಿಂದ ಬಂದ ಒಂದು ಟ್ರಾಕ್ಟರ್ ನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು  ಡಿಕ್ಕಿ ಹೊಡೆಸಿದ ಕಾರಣ ತಲೆಗೆ ಪೆಟ್ಟುಗಳು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿರುತ್ತಾರೆ ಹಾಗು ಟ್ರಾಕ್ಟರ್ ನ್ನು ಅದರ ಚಾಲಕ ಸ್ಥಳದಿಂದ ತೆಗೆದುಕೊಂಡು ಹೊರಟು ಹೋಗಿರುತ್ತಾನೆ.  ಟ್ರಾಕ್ಟರ್ ಚೌಳಕಟ್ಟೆಯ ಹನುಮಂತರಾಯಪ್ಪ ಬಿನ್ ತಿಮ್ಮಯ್ಯ ಅಲಿಯಾಸ್ ಸೊಸೈಟಿ  ಹನುಮಂತರಾಯಪ್ಪ ರವರ ಸಂಬಂಧಿಕರ ಟ್ರಾಕ್ಟರ್  ಆಗಿರುತ್ತದೆ ಅಂತ ತಿಳಿದುಬಂದಿರುತ್ತದೆ.ಆದ್ದರಿಂದ  ತನ್ನ ಅಣ್ಣ ಕುಮಾರಸ್ವಾಮಿಯ ಬಾಬ್ತು  ಟಿವಿಎಸ್  ವಾಹನಕ್ಕೆ ಡಿಕ್ಕಿ ಹೊಡೆಸಿ ಕುಮಾರಸ್ವಾಮಿಯವರಿಗೆ ರಕ್ತಗಾಯವಾಗಿ ಮೃತಪಡಲು ಕಾರಣನಾದ ಟ್ರಾಕ್ಟರ್ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕೆಂದು ಪಿರ್ಯಾದಿರವರ ಅತ್ತಿಗೆಗೆ ತಿಳುವಳಿಕೆ ಇಲ್ಲದಿರುವುದರಿಂದ ಅವರ ಪರವಾಗಿ ಪಿರ್ಯಾದಿರವರ ದೂರು ನೀಡಿ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಈ ಪ್ರಕರಣ.

ವೈ ಎನ್  ಹೊಸಕೋಟೆ  ಪೊಲೀಸ್ ಠಾಣಾ ಮೊ. ನಂ-  02/2018   ಕಲಂ: .324.504.506 IPC

ದಿನಾಂಕ:21/01/2018 ರಂದು ಬೆಳಿಗ್ಗೆ.11:30 ಗಂಟೆಗೆ ಪಾವಗಡ ತಾ|| ಭೀಮನಕುಂಟೆ ಗ್ರಾಮದ ವಾಸಿ ಪಿರ್ಯಾದಿ ಮುರಳಿ ಕೃಷ್ಣ ಬಿನ್ ಲೇ|| ಭೀಮಣ್ಣ, 40 ವರ್ಷ,ಕಮ್ಮ ವಕ್ಕಲಿಗ ಜನಾಂಗ,ಜಿರಾಯ್ತಿಕೆಲಸ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ   ದಿನಾಂಕ:19/01/2018 ರಂದು ಬೆಳಿಗ್ಗೆ ಸುಮಾರು 11:00 ಗಂಟೆ ಸಮಯದಲ್ಲಿ ನಮ್ಮ ಗ್ರಾಮದ ಗೊಲ್ಲರ ಜನಾಂಗಕ್ಕೆ ಸೇರಿದ ಕೃಷ್ಣಮೂರ್ತಿ ಬಿನ್ ಬಜ್ಜಪ್ಪ ಎಂಬುವವರ ಹಸುವು ನಮ್ಮ ಹೊಲದಲ್ಲಿ ಕಡಲೆಗಿಡಗಳನ್ನು ಮೇಯ್ಯುತ್ತಿರುವಾಗ ನಾನು ಅವರ ಹಸುವನ್ನು ಕರೆದುಕೊಂಡು ಬಂದು ಕೃಷ್ಣಮೂರ್ತಿ ರವರ ಮನೆಯ ಹತ್ತಿರ ಕಟ್ಟಿ ಹಾಕಿ ಕೃಷ್ಣಮೂರ್ತಿ ರವರ ತಾಯಿಗೆ ಹೇಳಿ ನಮ್ಮ ಹಸುವನ್ನು ಕಟ್ಟಿ ಹಾಕಿ ಈ ತರಹ ಹೊಲದ ಕಡೆ ಹಸುವನ್ನು ಬಿಡಬೇಡಿ ಎಂದು ನಿಮ್ಮ ಮಗನಿಗೆ ಹೇಳಿ ಎಂದು ಅವರ ತಾಯಿಗೆ ಹೇಳಿ ನಮ್ಮ ಮನೆಯ ಕಡೆ ಬೆಳಿಗ್ಗೆ 11:30 ಗಂಟೆ ಸಮಯದಲ್ಲಿ ಹೋಗುತ್ತಿದ್ದಾಗ ಮನೆಯೊಳಗಿದ್ದ ಕೃಷ್ಣಮೂರ್ತಿ ನೀನ್ಯಾವನೋ ಬೋಳಿ ಮಗನೆ ನಮ್ಮ ಹಸುವನ್ನು ಕರೆದುಕೊಂಡು ಬರುವುದಕ್ಕೆ ನಮ್ಮ ಹಸು ಎಷ್ಟು ಮೇಯ್ಯುತ್ತದೆ ಅದರ ಬೆಲೆ ಎಷ್ಟಾಗುತ್ತದೆ ಹೇಳು ನಾನು ನಿನಗೆ ಬಿಸಾಡುತ್ತೇನೆಂತ ಉದ್ದಟತನದಿಂದ ಮಾತನಾಡಿದನು, ನಾನು ಅದಕ್ಕೆ ಯಾಕೆ ಹೀಗೆ ಮಾತನಾಡುತ್ತೀಯಾ ನಿಮ್ಮ ಹಸುವನ್ನು ಕರೆದುಕೊಂಡು ಬಂದು ನಿಮ್ಮ ಮನೆಯ ಹತ್ತಿರ ಬಿಟ್ಟಿದ್ದಕ್ಕೆ ಯಾಕೆ ಹೀಗೆ ಮಾತನಾಡುತ್ತೀಯ ಎಂತ ಹೇಳಿದ್ದಕ್ಕೆ ಕೃಷ್ಣಮೂರ್ತಿಯು ಏಕಾ-ಏಕಿ ಸೂಳೇ ಮಗನೇ ನನೆಗೆ ಎದುರು ಮಾತನಾಡುತ್ತೀಯಾ ಎಂತ ಬೈಯ್ದು ಅಲ್ಲಿಯೇ ಬಿದ್ದಿದ್ದ ಇಟ್ಟಿಗೆಯನ್ನು ತೆಗೆದುಕೊಂಡು ನನ್ನ ತಲೆಗೆ ಹೊಡೆದು ರಕ್ತಗಾಯ ಪಡಿಸಿ, ನಮ್ಮ ಹಸು ಏನಾದರೂ ನಿಮ್ಮ ಹೊಲಕ್ಕೆ ಬಂದು ಮೇಯ್ಯುತ್ತಿದ್ದಾಗ ಅದಕ್ಕೇನಾದರೂ ಮಾಡಿದರೆ ನಿನ್ನನ್ನು ಕೊಲೆ ಮಾಡಿ ಸಾಯಿಸುತ್ತೇನೆಂತ ಪ್ರ್ರಾಣಬೆದರಿಕೆ ಹಾಕಿದನು ನಾನು ಗಾಯಗೊಂಡು ಕೆಳಕ್ಕೆ ಬಿದ್ದಾಗ ಸ್ಥಳದಲ್ಲಿದ್ದ ನನ್ನ ಮಗ ಪ್ರವೀಣಕುಮಾರ್ .ಬಿ.ಎಂ ಮತ್ತು ನಮ್ಮ ಗ್ರಾಮದ ಗೊಲ್ಲರ ಜನಾಂಗದ ನಾಗರಾಜು ಬಿನ್ ನರಸಿಂಹಪ್ಪ ,36 ವರ್ಷ ಹಾಗೂ ಅಶೋಕ ಬಿನ್ ಮಾರಣ್ಣ. ಪ.ಜಾತಿ ರವರುಗಳು ಜಗಳ ಬಿಡಿಸಿ ಸಮಾಧಾನ ಪಡಿಸಿದ್ದು, ನಂತರ ನನ್ನ ಮಗ ನನ್ನನ್ನು ವೈ ಎನ್ ಹೊಸಕೋಟೆ  ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿದ್ದು, ನಾನು ಚಿಕಿತ್ಸೆ ಪಡೆದು ಈ ದಿನ ತಡವಾಗಿ ಬಂದು ದೂರು ನೀಡುತ್ತಿರುತೇನೆ, ನನ್ನ ಮೇಲೆ ಗಲಾಟೆ ಮಾಡಿ ಅವಾಚ್ಯ ಶಬ್ದಗಳಿಂದ ಬೈಯ್ದು ಇಟ್ಟಿಗೆ ಯಿಂದ ನನ್ನ ತಲೆಗೆ ಹೊಡೆದು ಗಾಯಪಡಿಸಿರುವ ಕೃಷ್ಣಮೂರ್ತಿ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂತ ಇತ್ಯಾದಿಯಾಗಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತದೆ.Sunday, 21 January 2018

ಅಪರಾಧ ಘಟನೆಗಳು 21-01-18

ಮಿಡಿಗೇಶಿ ಪೊಲೀಸ್ ಠಾಣಾ ಮೊ.ಸಂ.08/2018, ಕಲಂ: 279, 304(ಎ) ಐ.ಪಿ.ಸಿ. ರೆ/ವಿ 134(ಎ&ಬಿ), 187 ಐಎಂವಿ ಆಕ್ಟ್.

ದಿನಾಂಕ:20/01/2018 ರಂದು ರಾತ್ರಿ 11:15 ಗಂಟೆಗೆ ಪಿರ್ಯಾದಿ ಕೃಷ್ಣಪ್ಪ.ಹೆಚ್. ಬಿನ್ ಲೇ||ಹನುಮಂತರಾಯಪ್ಪ, 36 ವರ್ಷ, ವಕ್ಕಲಿಗ ಜನಾಂಗ ಐ.ತೊಣಸನಪಲ್ಲಿ ಗ್ರಾಮ, ಅಗಳಿ ಮಂಡಲ್, ಮಡಕಶಿರಾ ತಾಲ್ಲೂಕು, ಅನಂತಪುರ ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರೇನೆಂದರೆ, ನಮ್ಮ ತಂದೆ ತಾಯಿಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಇಬ್ಬರೂ ಗಂಡು ಮಕ್ಕಳಿದ್ದು ಎಲ್ಲರಿಗೂ ಮದುವೆಗಳಾಗಿರುತ್ತವೆ. ನಾನು ಮತ್ತು ನನ್ನ ತಮ್ಮ ಬೋಜರಾಜ @ ಬೋಜಪ್ಪ, ಸುಮಾರು 31 ವರ್ಷ ಇಬ್ಬರು ನಮ್ಮ ನಮ್ಮ ಹೆಂಡತಿ ಮಕ್ಕಳೊಂದಿಗೆ ಬೆಂಗಳೂರಿನಲ್ಲಿ ಒಂದೇ ಏರಿಯಾದಲ್ಲಿ ಬೇರೆ ಬೇರೆ ವಾಸವಾಗಿರುತ್ತೇವೆ. ಮಡಕಶಿರಾದಲ್ಲಿ ನಮ್ಮ ಸಂಬಂದಿಯೊಬ್ಬರ ಮಧುವೆ ಕಾರ್ಯಕ್ರಮವಿದ್ದು ಸದರಿ ಮಧುವೆ ಕಾರ್ಯಕ್ರಮಕ್ಕೆ ಮಡಕಶಿರಾಕ್ಕೆ ಹೋಗಲು ಈ ದಿನ ಅಂದರೆ ದಿನಾಂಕ:20/01/2018 ರಂದು ನಾನು ಮತ್ತು ನಮ್ಮ ಸಂಬಂಧಿ ರಮೇಶ ಇಬ್ಬರೂ ನನ್ನ ಬಾಬ್ತು ಕೆಎ-04-ಹೆಚ್ಎಸ್-5772 ನೇ ಬೈಕಿನಲ್ಲಿ ಹಾಗೂ ನನ್ನ ತಮ್ಮ ಬೋಜರಾಜ @ ಬೋಜಪ್ಪ  ಮತ್ತು ಆತನ ಬಾಮೈದನಾದ ನಾಗೇಂದ್ರ, ಸುಮಾರು 27 ವರ್ಷ ಇಬ್ಬರೂ ಕೆಎ-02-ಜೆಜೆ-1215 ನಂಬರಿನ ಬೈಕಿನಲ್ಲಿ  ಇದೇ ದಿನ ಸಂಜೆ ಸುಮಾರು 06:30 ಗಂಟೆಗೆ ಬೆಂಗಳೂರಿನಿಂದ ಹೊರಟು ದಾಬಸ್ ಪೇಟೆ, ಕೊರಟಗೆರೆ, ಮಧುಗಿರಿ,ಮಾರ್ಗವಾಗಿ ಮಧುಗಿರಿ-ಪಾವಗಡ ಮುಖ್ಯ ರಸ್ತೆಯಲ್ಲಿರುವ ಗಿರಿಯಮ್ಮನಪಾಳ್ಯದ ಹತ್ತಿರ ಇದೇ ದಿನ ರಾತ್ರಿ ಸುಮಾರು 09:30 ಗಂಟೆ ಸಮಯದಲ್ಲಿ ಹೋಗುತ್ತಿರುವಾಗ್ಗೆ ನಮ್ಮ ಹಿಂದೆ ಅದೇ ರಸ್ತೆಯಲ್ಲಿ ಮಧುಗಿರಿ ಕಡೆಯಿಂದ ಪಾವಗಡ ಕಡೆಗೆ ಹೋಗಲು ಬರುತ್ತಿದ್ದ ಕೆಎ-16-ಎ-6181 ನೇ ಲಾರಿ ಚಾಲಕ ತನ್ನ ಲಾರಿಯನ್ನು ಅತಿ ವೇಗವಾಗಿ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆಯಲ್ಲಿ ಬರುತ್ತಿದ್ದ ನಮ್ಮಗಳ ಬೈಕುಗಳನ್ನು ಸೈಡ್ ಹೊಡೆದು ಯಾವುದೇ ಸಿಗ್ನಲ್ ತೋರಿಸದೇ ಎಕಾಏಕಿ ರಸ್ತೆಯ ಎಡ ಬದಿಗೆ ಬಂದು ನಮ್ಮ ಮುಂದೆ ಹೋಗುತ್ತಿದ್ದ ನನ್ನ ತಮ್ಮನ ಬಾಬ್ತು ಕೆಎ-02-ಜೆಜೆ-1215 ನೇ ಬೈಕಿಗೆ ಎಡ ಬದಿಯಿಂದ ಅಪ್ಪಳಿಸಿದ ಪರಿಣಾಮ ಸದರಿ ಬೈಕನ್ನು ಚಾಲನೆ ಮಾಡಿಕೊಂಡು ಬರುತ್ತಿದ್ದ  ನನ್ನ ತಮ್ಮ ಬೋಜರಾಜ @ ಬೋಜಪ್ಪ  ಮತ್ತು ಆತನ ಹಿಂಬದಿಯ ಸವಾರನಾದ ನಾಗೇಂದ್ರ ಇಬ್ಬರೂ ಬೈಕ್ ಸಮೇತ ರಸ್ತೆಯ ಮೇಲೆ ಬಿದ್ದರು. ತಕ್ಷಣ ನಾವು ನಮ್ಮ  ಬೈಕನ್ನು ನಿಲ್ಲಿಸಿ ನಾನು ಮತ್ತು ರಮೇಶ ಇಬ್ಬರೂ ಹತ್ತಿರ ಹೋಗಿ ನೋಡಲಾಗಿ ನನ್ನ ತಮ್ಮ ಭೋಜರಾಜು @ ಭೋಜಪ್ಪನಿಗೆ ಹಾಗೂ ನಾಗೇಂದ್ರ ರವರಿಗೆ ತಲೆಗೆ, ಮುಖಕ್ಕೆ, ಎದೆಗೆ, ಮೈಕೈಗೆ ತೀರ್ವ ತರವಾದ ಪೆಟ್ಟುಗಳು ಬಿದ್ದು ಮೂಗು, ಬಾಯಿ ಮತ್ತು ಕಿವಿಗಳಲ್ಲಿ ರಕ್ತ ಬರುತ್ತಿದ್ದು ಉಪಚರಿಸುತ್ತಿದಾಗ ಭೋಜರಾಜು @ ಭೋಜಪ್ಪ ಮತ್ತು ನಾಗೇಂದ್ರ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟರು. ಆ ಸಮಯದಲ್ಲಿ ಅಪಘಾತಪಡಿಸಿದ ಲಾರಿಯ ಚಾಲಕ ಲಾರಿಯನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾದನು. ನಂತರ ಬೋಜರಾಜು @ ಭೋಜಪ್ಪ ಮತ್ತು ನಾಗೇಂದ್ರ ರವರ ಮೃತ ದೇಹಗಳನ್ನು ಯಾವುದೋ ಒಂದು ವಾಹನದಲ್ಲಿ ಮಧುಗಿರಿ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ತೆಗೆದುಕೊಂಡು ಹೋಗಿ ಇಟ್ಟು ನಮ್ಮ ಸಂಬಂಧಿಕರುಗಳಿಗೆ ವಿಚಾರವನ್ನು ತಿಳಿಸಿದ ನಂತರ ಈಗ ಠಾಣೆಗೆ ಬಂದು ಈ ಅಪಘಾತಕ್ಕೆ ಕಾರಣನಾದ ಮೇಲ್ಕಂಡ ಕೆಎ-16-ಎ-6181 ನೇ ಲಾರಿ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಅಂಶವಾಗಿರುತ್ತೆ.


Page 1 of 4
Start
Prev
1

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 38 guests online
Content View Hits : 302186