lowborn Tumakuru District Police | Tumkur Police | Karnataka Police | Tumakuru District Police | Tumkur Police | Karnataka Police

Dr. Divya V. Gopinath IPS,
Superintendent of Police,
Tumakuru Dt., Karnataka.

Message from SP

ಪತ್ರಿಕಾ ಪ್ರಕಟಣೆ :: ದಿನಾಂಕ 12-12-2017  :: ತುಮಕೂರು ನಗರದಲ್ಲಿ ಮೂಲ ಆ.ಐ. ಸ್ಮಾಟ್‌ ಕಾರ್ಡಗಳ... >> ಪತ್ರಿಕಾ ಪ್ರಕಟಣೆ : ದಿನಾಂಕ:-05-12-2017 : ಚಾಳಿಬಿದ್ದ ಅಪರಾಧಿಗಳಿಂದ ಸುಮಾರು ಒಟ್ಟು 5, 00, 100/- ರೂ... >> ಜಯನಗರ ಪೊಲೀಸ್ ಠಾಣಾ ಮೊ.ನಂ. 156/2017 ಕಲಂ 20 (ಬಿ) ಎನ್‌.ಡಿ.ಪಿ.ಎಸ್ ಆಕ್ಟ್‌ ದಿನಾಂಕ: 25-11-2017 ರಂದು... >> ತುಮಕೂರು ಜಿಲ್ಲಾ ಪೊಲೀಸ್ ಪತ್ರಿಕಾ ಪ್ರಕಟಣೆ   ತುಮಕೂರು ನಗರದಲ್ಲಿ ಒಂಟಿಯಾಗಿ... >>   New BEAT BEST STAFF AND BEST CRIME DETECTION BEST STAFF >> NEW BEAT BEST STAFF AND BEST CRIME DETECTION STAFF >> ಶಿರಾ ಗೇಟ್ ರಸ್ತೆಯ ಆಗಲೀಕರಣ ಹಿನ್ನಲೆ ಸಂಚಾರ ಮಾರ್ಗದಲ್ಲಿ ಬದಲಾವಣೆ. >> ಪತ್ರಿಕಾ ಪ್ರಕಟಣೆ ದಿನಾಂಕ:19-11-2017. ಅಕ್ರಮವಾಗಿ ಗಾಂಜಾ ಸೊಪ್ಪು ಮಾರಾಟ ಮಾಡುತ್ತಿದ್ದ... >> ಪತ್ರಿಕಾ ಪ್ರಕಟಣೆ ದಿನಾಂಕ:17-11-2017. ಮೂರು ಜನ ಅಂತರ ರಾಜ್ಯ ಕಳ್ಳರ ಬಂಧನ : 8 ಲಕ್ಷದ 50 ಸಾವಿರ... >> ದಿನಾಂಕ.17.11.2017. ಪತ್ರಿಕಾ ಪ್ರಕಟಣೆ. ತುಮಕೂರು ಜಿಲ್ಲೆ ಕಳ್ಳಂಬೆಳ್ಳ ಪೊಲೀಸ್... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ
December 2017

Saturday, 16 December 2017

Crime Incidents 16-12-17

ಕೆ.ಬಿ.ಕ್ರಾಸ್ ಪೊಲೀಸ್ ಠಾಣಾ ಮೊ ನಂ 103/2017 ಕಲಂ 302 201 ಐಪಿಸಿ

ದಿನಾಂಕ:15.12.2017 ರಂದು ಸಂಜೆ 6-30 ಗಂಟೆಗೆ ಫಿರ್ಯಾದು ಶಿವಲಿಂಗಯ್ಯ ಬಿನ್ ಲೇಟ್ ಶಿವಣ್ಣ, 60 ವರ್ಷ, ಲಿಂಗಾಯ್ತರು, ಜಿರಾಯ್ತಿ, ಬಿಳಿಗೆರೆ ಕಿಬ್ಬನಹಳ್ಳಿ ಹೋಬಳಿ, ತಿಪಟೂರು ತಾಲ್ಲೋಕ್ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು ನಾವು ನಮ್ಮ ತಂದೆ ತಾಯಿಗೆ ಮೂರು ಜನ ಗಂಡು ಮಕ್ಕಳಿದ್ದು ನಾನು ಮೊದಲನೆಯವನಾಗಿದ್ದು ಎರಡನೇ ನಾಗರಾಜು ಮೂರನೇ ರಾಜಶೇಖರಯ್ಯನಾಗಿದ್ದು ನಮ್ಮಗಳಿಗೆ ಮದುವೆಯಾಗಿ ಸಂಸಾರ ಸಮೇತ ಬೇರೆ ಬೇರೆ ವಾಸವಾಗಿರುತ್ತೇವೆ, ನನ್ನ ತಮ್ಮ ನಾಗರಾಜು ತುರುವೇಕೆರೆ ತಾಲ್ಲೋಕ್ ಗೊಪ್ಪೇನಹಳ್ಳಿಯಲ್ಲಿ ಮದುವೆಯಾಗಿದ್ದು ಈತನಿಗೆ ಇಬ್ಬರು ಮಕ್ಕಳಿರುತ್ತಾರೆ, ಈಗ್ಗೆ ಐದಾರು ವರ್ಷಗಳ ಹಿಂದೆ ಬೆಂಗಳೂರಿಗೆ ಹೋಗಿ ಅಲ್ಲೇ ವಾಸವಾಗಿದ್ದು ಊರಿಗೆ ಬಂದು ಹೋಗುತ್ತಿರುತ್ತಾನೆ, ನಾನು ಈ ದಿನ ಮಧ್ಯಾಹ್ನ ದಿನಾಂಕ:15.12.2017 ರಂದು 3-45 ಗಂಟೆ ಸಮಯದಲ್ಲಿ ನಮ್ಮ ಮನೆಯ ಹತ್ತಿರ ಇರುವಾಗ್ಗೆ ನಮ್ಮೂರಿನ ಚಂದ್ರಶೇಖರಯ್ಯನವರ ಮಗ ಸಿದ್ದಲಿಂಗಮೂರ್ತಿರವರು ನಮ್ಮ ತೋಟದ ಬಾವಿಯಲ್ಲಿ ವಾಸನೆ ಬರುತ್ತಿದ್ದು, ಏನೋ ಬಾವಿಯಲ್ಲಿ ಬಿದ್ದು ಸತ್ತಿರಬಹುದು ಎಂದು ನಮ್ಮೂರಿನವರಿಗೆ ತಿಳಿಸಿದ್ದು ನಮಗೂ ಕೂಡ ವಿಚಾರ ತಿಳಿದಿದ್ದು ನಾನು ಮತ್ತು ನಮ್ಮೂರಿನವರು ಚಂದ್ರಶೇಖರಯ್ಯನವರ ತೋಟದ ಹತ್ತಿರ ಬಂದು ಬಾವಿಯಲ್ಲಿ ನೋಡಿದ್ದು ಬಾವಿಯಲ್ಲಿ ನೀರು ಇಲ್ಲದೇ ಇದ್ದು ಬಾವಿಯಲ್ಲಿ ಏನೋ ಸತ್ತಿರಬಹುದೆಂದು ಮೊದಲು ಪೊಲೀಸರಿಗೆ ವಿಚಾರ ತಿಳಿಸೋಣವೆಂತ ಕೆ ಬಿ ಕ್ರಾಸ್ ಪೊಲೀಸ್ ಠಾಣೆಗೆ ಹೋಗಿ ವಿಚಾರ ತಿಳಿಸಿದ್ದು, ಆನಂತರ ಕೆ ಬಿ ಕ್ರಾಸ್ ಪೊಲೀಸರು ಸ್ಥಳಕ್ಕೆ ಬಂದಿದ್ದು ಬಾವಿಯಲ್ಲಿದ್ದ ಹೆಣದ ಮೇಲೆ ಇದ್ದ ತೆಂಗಿನ ಗರಿಯನ್ನು ತೆಗೆಸಿದ್ದು ಒಂದು ಹೆಣ ಮುಖ ಕೆಳಗಲಾಗಿ ಬಿದ್ದಿದ್ದು ಇದನ್ನು ಬಾವಿಯಿಂದ ಮೇಲಕ್ಕೆತ್ತಿಸಿ ನೋಡಿದಾಗ ಹೆಣವು ಕೊಳೆತ ಸ್ಥಿತಿಯಲ್ಲಿದ್ದು ಈ ಹೆಣದ ಬಲಗೈನ ಮಧ್ಯದ ಬೆರಳು ಮೊಂಡಾಗಿದ್ದು ಇದನ್ನು ನೋಡಿ ನಾನು ಈ ಮೊದಲೇ ನನ್ನ ತಮ್ಮ ನಾಗರಾಜು ನ ಬೆರಳು ಮೊಂಡಾಗಿದ್ದು ತಿಳಿದಿದ್ದರಿಂದ ಹಾಗೂ ಈತನು ತೊಟ್ಟಿದ್ದ ಬಟ್ಟೆಗಳನ್ನು ನೋಡಿ ಇದು ನನ್ನ ತಮ್ಮ ನಾಗರಾಜುವಿನ ಶವವೆಂದು ಗುರ್ತಿಸಿದ್ದು  ನಾಗರಾಜು ಆತನ ಹೆಂಡತಿ ಜೊತೆ ತನ್ನ ಹೆಂಡತಿಗೆ ಯಾವುದೋ ಅಕ್ರಮ ಸಂಭಂದ ಇರುವುದಾಗಿ ಇವರುಗಳ ಮಧ್ಯೆ ಆಗಾಗ್ಗೆ ಊರಿಗೆ ಬಂದಾಗ ಮತ್ತು ಬೆಂಗಳೂರಿನಲ್ಲಿ ಜಗಳವಾಗುತ್ತಿದ್ದು ಈ ವಿಚಾರ ನನಗೂ ಕೂಡ ತಿಳಿದಿದ್ದು ಇದರ ಬಗ್ಗೆ ಠಾಣೆಗೆ ಕೂಡ ದೂರು ಹೋಗಿದ್ದು ನಮಗೆ ಇವರ ವಿಚಾರ ಬೇಡ ಅಂತಾ ಸುಮ್ಮನಿದ್ದೆವು ನನ್ನ ತಮ್ಮ ಈಗ್ಗೆ 6 ತಿಂಗಳಿನಿಂದ ಬೆಂಗಳೂರಿನಿಂದ ವಾಪಾಸ್ಸು ಬಂದು ನಮ್ಮೂರಿನ ಆತನ ಬಾಬ್ತು ತೋಟದ ಮನೆಯಲ್ಲಿ ವಾಸವಾಗಿ ಇಲ್ಲೇ ಇದ್ದನು ,ನನ್ನ ತಮ್ಮ ನಾಗರಾಜನನ್ನು ಯಾರೋ ಅಸಾಮಿಗಳು ಯಾವುದೋ ಉದ್ದೇಶದಿಂದ ಸುಮಾರು ಮೂರ್ನಾಲ್ಕು ದಿನಗಳ ಹಿಂದೆ ಕೊಲೆ ಮಾಡಿ ಯಾರಿಗೂ ಗೊತ್ತಾಗದ ರೀತಿಯಲ್ಲಿ ಬಾವಿಯಲ್ಲಿ ಹಾಕಿ ಹೆಣದ ಮೇಲೆ ತೆಂಗಿನ ಒಣಗರಿಗಳನ್ನು ಮುಚ್ಚಿ ಹೋಗಿದ್ದು ನನ್ನ ತಮ್ಮ ನಾಗರಾಜನನ್ನು ಕೊಲೆ ಮಾಡಿರುವ ಅಸಾಮಿಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ಕೋರಿರುತ್ತೇನೆ ಇತ್ಯಾದಿ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ  .

 

ಹುಲಿಯೂರುದುರ್ಗ ಪೊಲೀಸ್‌ ಠಾಣಾ; ಮೊ ನಂ: 240/2017 ಕಲಂ: 279 337 IPC

ದಿನಾಂಕ 15-12-2017 ರಂದು ಮದ್ಯಾಹ್ನ 2-30 ಗಂಟೆಯ ಸಮಯಕ್ಕೆ ಕೊರಟಕೆರೆ ತಾಲ್ಲೂಕು ಹೊಳವನಹಳ್ಳಿ ಹೋಬಳಿ ಅರಸಾಪುರ ಗ್ರಾಮದ ವಾಸಿ ಮಂಜುನಾಥ ಬಿನ್ ಎ, ನಾಗರಾಜಯ್ಯರವರು ಠಾಣಿಗೆ ಹಾಜರ್ ಆಗಿ ನೀಡಿದ ದೂರಿನ ಆಂಶವೇನೆಂದರೆ ದಿನಾಂಕ 15-12-2017 ರಂದು ಬೆಳಿಗ್ಗೆ 11-30 ಗಂಟೆಯ ಸಮಯದಲ್ಲಿ ಪಿರ್ಯಾದಿ ಬಾಬ್ತು ಕೆಎ-22-ಪಿ-4782 ನೇ ನಂಬರಿನ ಬುಲೆರೋ ವಾಹನದಲ್ಲಿ ಹುಲಿಯೂರುದುರ್ಗ ಠಾಣಾ ಸರಹದ್ದಿನ ಅಂಗರಹಳ್ಳಿ ಗ್ರಾಮದ ಪುಟ್ಟಸ್ವಾಮಿ ರವರ ಜಮೀನಿನ ಪಕ್ಕ ಹಾದು ಹೋಗಿರುವ ಮಾಗಡಿ ಹುಲಿಯೂರುದುರ್ಗ ರಸ್ತೆಯಲ್ಲಿ ಹುಲಿಯೂರುದುರ್ಗ ಕಡೆಗೆ ಬರುತ್ತಿದಾಗ ಅದೇ ಸಮಯಕ್ಕೆ ಹುಲಿಯೂರುದುರ್ಗ ಕಡೆಯಿಂದ ಕೆಎ-02-ಎ,ಬಿ-6543 ನೇ ನಂಬರಿನ ಆಟೋ ಚಾಲಕ ತನ್ನ ಆಟೋವನ್ನು ಅತೀ ವೇಗ ಮತ್ತು ಅಜಾರಗೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಬುಲೆರೊ ವಾಹನಕ್ಕೆ ಡಿಕ್ಕಿ ಹೊಡೆಸಿ ಅಪಾಘತ ಪಡಿಸಿದರ ಪರಿಣಾಮ ಬುಲೆರೊ ವಾಹನದ ಮುಂಬಾಗ ಜಕ್ಕಂ ಗೊಂಡಿರುತ್ತೆ, ಬುಲೆರೊ ವಾಹನದಲ್ಲಿದ್ದ ರವಿಕುಮಾರ, ರಾಜೇಶರೆಡ್ಡಿ,ಯಾವುದೇ ಗಾಯವಗೈರೆ ಆಗಿರುವುದಿಲ್ಲ, ಆಟೋ ಚಾಲಕನಿಗೆ ಮೂಗಿಗೆ ,ಎದೆಗೆ ಪೆಟ್ಟು ಬಿದಿರುತ್ತೆ, ಆಟೋದ ಮುಂಭಾಗ ಜಕ್ಕಗೊಂಡಿರುತ್ತೆ, ಆಟೋ ಚಾಲಕನ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂತ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತೆ.

ಹುಲಿಯೂರುದುರ್ಗ ಪೊಲೀಸ್‌ ಠಾಣಾ; ಮೊ ನಂ: 241/2017 ಕಲಂ: 279 337 IPC

ದಿನಾಂಕ 15-12-2017 ರಂದು ರಾತ್ರಿ 7-00 ಗಂಟೆಯ ಸಮಯಕ್ಕೆ ಹಿತ್ತಲಪುರ ಗ್ರಾಮದ ವಾಸಿ ಕಿರಣ್ ಕುಮಾರ ಬಿನ್ ಶಿವಣ್ಣರವರು ಠಾಣಿಗೆ ಹಾಜರ್ ಆಗಿ ನೀಡಿದ ದೂರಿನ ಅಂಶವೇನೆಂದರೆ ದಿನಾಂಕ 12-12-2017 ರಂದು ರಾತ್ರಿ 7-00 ಗಂಟೆಯ ಸಮಯದಲ್ಲಿ ಪಿರ್ಯಾಧಿ ತಂದೆ ಶಿವಣ್ಣರವರು ತನ್ನ ಬಾಬ್ತು ಕೆಎ-06- ಇ-ಜಿ-4148 ನೇ ನಂಬರಿನ ದ್ವಿ ಚಕ್ರವಾಹನದಲ್ಲಿ ಬೀಸೆಗೌಡನದೊಡ್ಡಿ ಕ್ರಾಸ್ ಬಳಿ ಟಿ,ಎಂ, ರಸ್ತೆಯಲ್ಲಿ ಹೋಗುತ್ತಿದಾಗ ಅದೇ ಸಮಯಕ್ಕೆ ಹಿಂಭಾಗದಿಂದ ಬಂದ RJ-30-GA-604 ನೇ ಲಾರಿಯ ಚಾಲಕ ತನ್ನ ಲಾರಿಯನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಶಿವಣ್ಣರವರ ಬೈಕಿಗೆ ಡಿಕ್ಕಿ ಹೊಡೆಸಿ,ಲಾರಿಯನ್ನು ಸ್ಥಳದಲ್ಲಿ ನಿಲ್ಲಿಸದೇ ತೆಗೆದುಕೊಂಡು ಹೋಗಿರುತ್ತಾರೆ. ಈ ಅಪಘಾತದಿಂದ ಶಿವಣ್ಣರವರಿಗೆ ತಲೆಗೆ, ಮೈಕೈಗೆ ಪೆಟ್ಟು ಬಿದಿರುತ್ತೆ, ಈ ಅಪಘಾತ ನೋಡಿದ ವೆಂಕಟೇಶ,ರವರು ಗಾಯಾಳು ಶಿವಣ್ಣರವರನ್ನು ಉಪಚರಿಸಿ ನಂತರ  ಈ  ಅಪಘಾತವಾದ ಬಗ್ಗೆ ವೆಂಕಟೇಶರವರು ಪಿರ್ಯಾದಿಗೆ ತಿಳಿಸಿದಾಗ ಪಿರ್ಯಾಧಿಯು ಅಪಘಾತವಾದ ಸ್ಥಳಕ್ಕೆ ಬಂದು ಗಾಯಾಳು ಶಿವಣ್ಣರವರಿಗೆ ಚಿಕ್ಕಿತ್ಸೆಗೆ ಕೊಡಿಸಲು 108 ವಾಹನದಲ್ಲಿ ಕುಣಿಗಲ್ ಸರ್ಕಾರಿ ಆಸ್ಪತ್ರೆ ಕರೆದುಕೊಂಡು ಹೋಗಿ ಚಿಕ್ಕಿತ್ಸೆ ಕೊಡಿಸಿ , ನಂತರ ವೈದ್ಯರ ಸಲಹೆ ಮೇರೆ ಹೆಚ್ಚಿನ ಚಿಕ್ಕಿತ್ಸೆ ಬೆಂಗಳೂರಿನ ನಿಮ್ಯಾನ್ ಆಸ್ಪತ್ರೆಯಲ್ಲಿ ಚಿಕ್ಕಿತ್ಸೆ ಕೊಡಿಸಿ ನಂತರ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕ್ಕಿತ್ಸೆ ಕೊಡಿಸಿ, ನಂತರ ಬೆಂಗಳೂರಿನ ಅನುಪಮ ಆಸ್ಪತ್ರೆಯಲ್ಲಿ ಬಳರೋಗಿಯಾಗಿ ಚಿಕ್ಕಿತ್ಸೆ ಪಡೆಯುತ್ತಿರುತ್ತಾರೆ, ಗಾಯಾಳು ಶಿವಣ್ಣರವರನ್ನು  ಯಾರು ನೋಡಿಕೊಳ್ಳವವರು ಯಾರು ಇಲ್ಲದ ಕಾರಣ ಈ ದಿನ ತಡವಾಗಿ ಠಾಣಿಗೆ ಬಂದು ಮೇಲ್ಕಂಡ RJ-30-GA-604 ನೇ ಲಾರಿಯ ಚಾಲಕನ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂತ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲು ಮಾಡಿಕೊಂಡು ತನಿಖೆಕೈಗೊಂಡಿರುತ್ತೆ,

ಕುಣಿಗಲ್ ಪೊಲೀಸ್ ಠಾಣಾ ಮೊ.ನಂ;589/2017 ಕಲಂ;279, 304(ಎ) ಐ ಪಿ ಸಿ

ದಿನಾಂಕ: 15/12/2017 ರಂದು ರಾತ್ರಿ 7-15 ಗಂಟೆ ಸಮಯದಲ್ಲಿ ಈ  ಕೇಸಿನ ಪಿರ್ಯಾದಿ ಮಧು ಬಿನ್ ಲಿಂಗಪ್ಪ @ ಸಣ್ಣಪ್ಪ, 26 ವರ್ಷ, ವಕ್ಕಲಿಗರು, ಬಿ.ಎಂ ಆಟೋ ಮ್ಯಾಟ್ಸ್ ಕಂಪನಿಯ ಮಾಲೀಕ, ಹಾಲಿ ವಾಸ: ಶ್ರೀನಿವಾಸ ನಗರ, ಪೈಪ್ ಲೈನ್ ಹತ್ತಿರ, ಸುಂಕದಕಟ್ಟೆ, ಬೆಂಗಳೂರು, ಸ್ವಂತ ಊರು: ಸೊಂಡೆಕೊಪ್ಪ ಗ್ರಾಮ, ಅಮೃತೂರು ಹೋಬಳಿ, ಕುಣಿಗಲ್  ತಾಲ್ಲೊಕು.  ಎಂಬುವರು ಠಾಣೆಗೆ  ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ಪಿರ್ಯಾದಿ  ಮತ್ತು ಪಿರ್ಯಾದಿ ತಂದೆ ಲಿಂಗಪ್ಪ @ ಸಣ್ಣಪ್ಪ ರವರು  ಬೆಂಗಳೂರಿನ ಶ್ರೀನಿವಾಸನಗರದ ಪೈಪ್ ಲೈನ್ ಹತ್ತಿರ, ಸುಂಕದಕಟ್ಟೆ, ಬೆಂಗಳೂರು ನಲ್ಲಿ ವಾಸವಾಗಿದ್ದು,  ಪಿರ್ಯಾದಿ ಬಿ.ಎಂ ಆಟೋಮ್ಯಾಟ್ಸ್  ಕಂಪನಿಯನ್ನು ನಡೆಸುತ್ತಿದ್ದು, ಪಿರ್ಯಾದಿ ತಂದೆ ಪಿರ್ಯಾದಿ ಜೊತೆಯಲ್ಲಿಯೇ ಇದ್ದು, ಪೇಂಟಿಂಗ್ ಕೆಲಸ ಮತ್ತು ಗಾರೆ ಕೆಲಸ ಮಾಡಿಕೊಂಡಿದ್ದು, ದಿನಾಂಕ: 15/12/2017 ರಂದು ಪಿರ್ಯಾದಿ ತಂದೆ ಲಿಂಗಪ್ಪ @ ಸಣ್ಣಪ್ಪ ರವರು ಸ್ವಂತ ಊರಾದ ಕುಣಿಗಲ್ ತಾಲ್ಲೊಕು ಸೊಂಡೆಕೊಪ್ಪ ಗ್ರಾಮಕ್ಕೆ ಬರಲು ಬಸ್ಸಿನಲ್ಲಿ ಕುಣಿಗಲ್ ಗೆ ಬಂದು ಕೆ.ಎಸ್.ಆರ್.ಟಿ.ಸಿ ಬಸ್ಡಾಂಡಿನಲ್ಲಿ ಇಳಿದು ಸಂಜೆ ಸುಮಾರು 4-00 ಗಂಟೆ ಸಮಯದಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಸ್ಡಾಂಡ್ ಮುಂಭಾಗ ಆಟೋ ಸ್ಡಾಂಡ್ ಪಕ್ಕದಲ್ಲಿ ಅಂದರೆ ಎಡರಸ್ತೆಯಲ್ಲಿ ಕುಣಿಗಲ್ ಸರ್ಕಲ್ ಕಡೆಗೆ ಬರಲು ಪಶ್ಚಿಮಾಭಿಮುಖವಾಗಿ  ನಡೆದುಕೊಂಡು  ಬರುತ್ತಿರಬೇಕಾದರೆ  ಅದೇ ಸಮಯಕ್ಕೆ ಅಂಚೇಪಾಳ್ಯ ಕಡೆಯಿಂದ ಕುಣಿಗಲ್ ಕಡೆಗೆ ಬಂದಂತಹ ಸ್ಕೂಲ್ ಬಸ್ಸಿನ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಪಿರ್ಯಾದಿ ತಂದೆಗೆ ಹಿಂದಿನಿಂದ ಡಿಕ್ಕಿ ಹೊಡೆಸಿ ಅಪಘಾತವುಂಟುಮಾಡಿದ್ದು,  ಈ ಅಪಘಾತದಿಂದ ಪಿರ್ಯಾದಿ ತಂದೆ ರಸ್ತೆಗೆ ಬಿದ್ದಿದ್ದು,  ಸದರಿ ಬಸ್ಸಿನ ಚಕ್ರ ಮೇಲೆ ಹರಿದಿರುತ್ತದೆ. ಸದರಿ ಅಪಘಾತವನ್ನು ಕಣ್ಣಾರೆ ನೋಡಿದ  ಕೊತ್ತಗೆರೆ ಹೋಬಳಿ ದಾಸನಪುರ ಗ್ರಾಮದ  ಚಿಕ್ಕರಂಗಯ್ಯನ ಮಗನಾದ ವರದರಾಜು  ಮತ್ತು ಸಾರ್ವಜನಿಕರು ಸ್ಥಳಕ್ಕೆ ಬಂದು ನೋಡಲಾಗಿ ಅಪಘಾತ ಮಾಡಿದ ಬಸ್ ನಂಬರ್: ಕೆ.ಎ-06 ಡಿ-1862 ಆಗಿರುತ್ತದೆ.  ಪಿರ್ಯಾದಿ ತಂದೆಗೆ ತೀವ್ರ ಸ್ವರೂಪದ ಪೆಟ್ಟುಗಳಾಗಿದ್ದು, ವರದರಾಜು ಮತ್ತು ಸಾರ್ವಜನಿಕರು  ಪಿರ್ಯಾದಿ ತಂದೆಯನ್ನು ತುರ್ತುವಾಹನದಲ್ಲಿ ಹಾಕಿಕೊಂಡು ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ಬಂದು ತೋರಿಸಲಾಗಿ ವೈದ್ಯಾಧಿಕಾರಿಗಳು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದು, ಶವವನ್ನು ಶವಾಗಾರದಲ್ಲಿ  ಇರಿಸಿರುತ್ತಾರೆ. ವರದರಾಜುರವರು ಪಿರ್ಯಾದಿಗೆ  ಪೋನ್ ಮುಖಾಂತರ ವಿಚಾರ ತಿಳಿಸಿದಾಗ ಪಿರ್ಯಾದಿ  ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ಬಂದು ಪಿರ್ಯಾದಿ ತಂದೆಯ ಶವವನ್ನು ನೋಡಿ  ಅಪಘಾತವಾದ ಬಗ್ಗೆ ಸಂಪೂರ್ಣ ವಿವರವನ್ನು ಪಡೆದುಕೊಂಡು ಠಾಣೆಗೆ ಹಾಜರಾಗಿ  ಅಪಘಾತವುಂಟುಮಾಡಿದ      ಕೆ.ಎ-06 ಡಿ-1862 ನೇ ನಂಬರಿನ ಸ್ಕೂಲಿನ ಬಸ್ಸಿನ ಮೇಲೆ ಕಾನೂನು ಕ್ರಮ ಕೈಗೊಳ್ಳಿ ಎಂತ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಕೊಂಡು ತನಿಖೆ ಕೈಗೊಂಡಿರುತ್ತೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ 229/2017 ಕಲಂ 341,323,324,504,506 ರೆ/ವಿ 34 ಐ.ಪಿ.ಸಿ

ದಿನಾಂಕ 15/12/2017 ರಂದು ತುಮಕೂರು ಜಿಲ್ಲಾ ಸರ್ಕಾರಿ ಅಸ್ಪತ್ರೆಯಲ್ಲಿ ಓಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರು ಮೋಹನ್ ಕುಮಾರ ಬಿನ್  ಗಂಗರಾಜು, 32 ವರ್ಷ, ವಕ್ಕಲಿಗರು, ಜಿರಾಯ್ತಿ, ಗಳಿಗೇನಹಳ್ಳಿ, ಹೆಬ್ಬೂರು ಹೋಬಳಿ, ತುಮಕೂರು ತಾಲ್ಲೋಕು (ಮೊ.ನಂ-9148493977)  ಎಂಬುವರು ನೀಡಿದ ಹೇಳಿಕೆ ಅಂಶವೇನೆಂದರೆ,  ನಮ್ಮ ತಂದೆ ಗಂಗರಾಜು ಜಿ.ಬಿ. ರವರು ದಿನಾಂಕ 14/12/2017 ರಂದು ತುಮಕೂರಿನಲ್ಲಿ ವಕೀಲರನ್ನು ಕಾಣಲು ಮದ್ಯಾಹ್ನ ತುಮಕೂರಿಗೆ ಹೋಗಿದ್ದು, ನಂತರ  ರಾತ್ರಿ 8-00 ಗಂಟೆಗೆ ನಮ್ಮ ತಂದೆ ಪೋನ್ ಮಾಡಿ ಸಂಪಂಗಿರಾಮ ಬಸ್ಸಿನಲ್ಲಿ ಊರಿಗೆ ಬರುತ್ತೇನೆ ನಿಂಗಿಕಟ್ಟೆ ಕ್ರಾಸ್ ಬಳಿ ಭಾ ಎಂದು ಹೇಳಿದರು. ಅದರಂತೆ ನಾನು ನನ್ನ ಸ್ನೇಹಿತನಾದ ರಾಕೇಶ್‌ನನ್ನು ಜೊತೆಯಲ್ಲಿ ಕರೆದುಕೊಂಡು ನನ್ನ ಅಣ್ಣನ ಬೈಕ್ ನಂ ಕೆಎ-06-ಇಜೆ-8691 ನೇ ಹೊಂಡಾ ಶೈನ್‌ ನಲ್ಲಿ ನಿಂಗೀಕಟ್ಟೆ ಕ್ರಾಸ್‌ಗೆ ರಾತ್ರಿ 8-45 ಗಂಟೆ ಸಮಯಕ್ಕೆ ಬಂದೆವು. ತುರುಚಿನ ಕಟ್ಟೆ ಕ್ರಾಸ್‌ನಲ್ಲಿ ನಮ್ಮ ತಂದೆ ಗಂಗರಾಜು ಅನಾಮದೇಯ ವ್ಯಕ್ತಿಯ ಕೊರಳು ಪಟ್ಟಿ ಹಿಡಿದುಕೊಂಡಿದ್ದು, ಒಬ್ಬರಿಗೊಬ್ಬರು ಗಲಾಟೆ ಮಾಡಿಕೊಳ್ಳುತ್ತಿದ್ದರು. ನಾನು ನಮ್ಮ ತಂದೆಯನ್ನು ವಿಚಾರ ಕೇಳಲಾಗಿ ಈತನ ಜೊತೆಯಲ್ಲಿದ್ದ ರಾಜಣ್ಣ ಎಂಬವರು ನನ್ನ ಬಳಿ ಮೊಬೈಲ್  ಕೇಳಿದ ನಾನು ಕೊಡಲಿಲ್ಲ. ಸದರಿ ನನ್ನ ಮೊಬೈಲ್‌ನ ವಿಚಾರವಾಗಿ ನನಗೂ ಹಾಗು ರಾಜಣ್ಣ ರವರ ಜೊತೆಯಲ್ಲಿದ್ದ ಸ್ವಾಮಿ ಎಂಬ ಈತನಿಗೂ ಗಲಾಟೆಯಾಗುತ್ತಿದೆ ಎಂದು ಹೇಳಿದರು. ಅಷ್ಟು ಹೊತ್ತಿಗೆ ರಾಜಣ್ಣ ಹಾಗು ಕರಡೀಗೆರೆ ಕಾವಲ್‌ನ ಕೆಲವರು ಬಂದು ನಮ್ಮ ಬೈಕನ್ನು ಅಡ್ಡಕಟ್ಟಿ ಬೋಳಿ ಮಕ್ಕಳಾ ಸೂಳೇ ಮಕ್ಕಳಾ ಎಂತ ಅವ್ಯಾಚ್ಚ ಶಬ್ದಗಳಿಂದ ಬೈಯುತ್ತಾ ನಮ್ಮ ತಂದೆಗೆ ರಾಜಣ್ಣ ಎಂಬುವರು ಬಂದು ಕಲ್ಲಿನಿಂದ ಬಲಕಣ್ಣಿಗೆ ಬಲಮೊಣಕಾಲಿಗೆ ಹೊಡೆದು ಗಾಯಮಾಡಿದರು. ನಂತರ ಸ್ವಾಮಿ ಎನ್ನುವರು ಕೈಗಳಿಂದ ನನ್ನ ಎಡ ಮೊಣಕೈಗೆ ಹಾಗು ಎಡಕಣ್ಣಿಗೆ ಹೊಡೆದು ನೋವುಂಟು ಮಾಡಿದರು. ಎಲ್ಲರೂ ಈ ನನ್ನ ಮಕ್ಕಳನ್ನು ಕೊಲೆ ಮಾಡಿ ಸಾಯಿಸಬೇಕೆಂತ ಕೊಲೆ ಬೆದರಿಕೆ ಹಾಕುತ್ತಿದ್ದರು. ನಾವು ಇಲ್ಲೇ ಇದ್ದರೆ ಹೊಡೆಯುತ್ತಾರೆಂತಾ ಹೆದರಿ ನಾವು ತಂದಿದ್ದ ಮೋಟಾರ್ ಸೈಕಲನ್ನು ಅಲ್ಲೇ ಬಿಟ್ಟು ನಾನು ನಮ್ಮ ತಂದೆ ಜಿ.ಬಿ. ಗಂಗರಾಜು, ರಾಕೇಶ್ ಅಲ್ಲಿಂದ ಓಡಿ ಹೋದೆವು. ನಂತರ ರಸ್ತೆಯಲ್ಲಿ ಸಿಕ್ಕ ಅಟೋದಲ್ಲಿ ರಾತ್ರಿಯೇ ತುಮಕೂರು ಸರ್ಕಾರಿ ಅಸ್ಪತ್ರೆಗೆ ಚಿಕಿತ್ಸೆಗೆ ದಾಖಲಾದೆವು. ನಮ್ಮನ್ನು ತಡೆದು ಹೊಡೆದು ಬೈಯ್ದು ಪ್ರಾಣ ಬೆದರಿಕೆ ಹಾಕಿದ ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ ಹೇಳಿಕೆಯನ್ನು ಪಡೆದು ಸಂಜೆ 5-30 ಗಂಟೆಗೆ ಠಾಣೆಗೆ ಬಂದು ಪ್ರಕರಣ ದಾಖಲಿಸಿಕೊಂಡಿರುತ್ತೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ 227/2017 ಕಲಂ 323,324,341,504,506 ರೆ/ವಿ 34 ಐಪಿಸಿ

ದಿನಾಂಕ 15-12-2017 ರಂದು ಮಧ್ತಾಹ್ನ 2-00 ಗಂಟೆಗೆ ಪಿರ್ಯಾದಿಯಾದ ಗಂಗಲಕ್ಷ್ಮಮ್ಮ ಕೋಂ ರಾಜಣ್ಣ, 35 ವರ್ಷ, ಆದಿ ಕರ್ನಾಟಕ ಜನಾಂಗ, ಕೂಲಿ ಕೆಲಸ, ಕರಡಿಗೆರೆ ಕಾವಲ್‌ (ತುರುಚನಕಟ್ಟೆ), ಹೆಬ್ಬೂರು ಹೋಬಳಿ, ತುಮಕೂರು ತಾಲ್ಲೂಕು & ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂಧರೆ ನಾನು ಮೇಲ್ಕಂಡ ವಿಳಾಸದಲ್ಲಿ ನನ್ನ ಯಜಮಾನರಾದ ರಾಜಣ್ಣ ಹಾಗೂ ಮಕ್ಕಳೊಂದಿಗೆ ವಾಸವಾಗಿರುತ್ತೇನೆ. ದಿನಾಂಕ: 14-12-2017 ರಂದು ನನ್ನ ಯಜಮಾನರಾದ ರಾಜಣ್ಣ ರವರು ತುಮಕೂರಿಗೆ ಕೂಲಿ ಕೆಲಸಕ್ಕೆ ಹೋಗಿದ್ದವರು ನಂತರ ವಾಪಸ್ ನಮ್ಮ ಗ್ರಾಮಕ್ಕೆ ಬರಲೆಂದು ರಾತ್ರಿ ಸುಮಾರು 09-00 ಗಂಟೆ ಸಮಯದಲ್ಲಿ ನಿಂಗಿಕಟ್ಟೆ ಕ್ರಾಸ್‌ನ ಬಳಿ ದ್ವಿಚಕ್ರ ವಾಹನದಲ್ಲಿ ಬರುತ್ತಿರುವಾಗ್ಗೆ, ಪಕ್ಕದ ಗ್ರಾಮವಾದ ಗಳಿಗೇನಹಳ್ಳಿ ಗ್ರಾಮದ ವಾಸಿಯಾದ ಗಂಗಣ್ಣ ಮತ್ತು ಅವರ ಮಗ ಮೋಹನ್‌ ಕುಮಾರ್ ಹಾಗೂ ಮೋಹನ್‌ ಕುಮಾರ್‌ನ ಸ್ನೇಹಿತನಾದ ಮೇಣಸಂದ್ರ ಗ್ರಾಮದ ವಾಸಿಯಾದ ರಾಕೇಶ ಎಲ್ಲರೂ ಸೇರಿಕೊಂಡು ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ನನ್ನ ಗಂಡ ರಾಜಣ್ಣ ರವರನ್ನು ಅಡ್ಡಗಟ್ಟಿ ಗಂಗಣ್ಣ ರವರು ನನ್ನ ಮೊಬೈಲ್‌ ಅನ್ನು ನೀನು ತೆಗೆದುಕೊಂಡಿರುತ್ತೀಯಾ ಎಂತಾ ಎಲ್ಲರೂ ಸೇರಿಕೊಂಡು ಕೈಗಳಿಂದ ನನ್ನ ಗಂಡ ರಾಜಣ್ಣ ರವರಿಗೆ ತಲೆಗೆ, ಎದೆಯ ಭಾಗಕ್ಕೆ ಹಾಗೂ ಮುಖಕ್ಕೆ ಹೊಡೆದು ರಕ್ತಗಾಯಪಡಿಸಿರುತ್ತಾರೆ. ಆಗ ರಾಜಣ್ಣ ರವರು ಕೂಗಿಕೊಂಡಾಗ ನನ್ನ ಅಳಿಯನಾದ ಸಂತೋಷ್‌ ಕುಮಾರ್ ಹಾಗೂ ನಮ್ಮ ಗ್ರಾಮದ ವಾಸಿಯಾದ ಸ್ವಾಮಿ ಇಬ್ಬರೂ ಹೋಗಿ ರಾಜಣ್ಣ ರವರನ್ನು ಮೇಲ್ಕಂಡವರುಗಳಿಂದ ಬಿಡಿಸಲು ಹೋದಾಗ ಗಂಗಣ್ಣ ರವರು ಒಂದು ಕಲ್ಲಿನಿಂದ ಸ್ವಾಮಿ ರವರ ಎಡ ತೋಳಿಗೆ ಹೊಡೆದು ಪೆಟ್ಟು ಮಾಡಿರುತ್ತಾನೆ. ನಂತರ ಮೇಲ್ಕಂಡವರುಗಳೆಲ್ಲರೂ ನನ್ನ ಗಂಡ ರಾಜಣ್ಣ ರವರನ್ನು ಕುರಿತು ಬೋಳಿ ಮಗನೇ ನಿನ್ನನ್ನು ಇಷ್ಟಕ್ಕೇ ಸುಮ್ಮನೆ ಬಿಡುವುದಿಲ್ಲ, ನಿನ್ನ ಪ್ರಾಣ ತೆಗೆಯುತ್ತೇವೆಂತಾ ಪ್ರಾಣ ಬೆದರಿಕೆ ಹಾಕಿ ಅವರುಗಳು ತಂದಿದ್ದ ಕೆಎ-06-ಇ.ಜೆ-8691 ನೇ ದ್ವಿಚಕ್ರ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಎಲ್ಲರೂ ಅಲ್ಲಿಂದ ಹೊರಟು ಹೋಗಿರುತ್ತಾರೆ. ನಂತರ ಸದರಿ ಗಲಾಟೆಯ ವಿಚಾರವನ್ನು ನನ್ನ ಅಳಿಯನಾದ ಸಂತೋಷ್‌ ಕುಮಾರ್ ರವರು ನನಗೆ ತಿಳಿಸಿದರು. ನಂತರ ಸ್ಥಳಕ್ಕೆ ಹೋಗಿ ನೋಡಲಾಗಿ ನನ್ನ ಗಂಡ ರಾಜಣ್ಣ ರವರಿಗೆ ತಲೆಗೆ, ಎದೆಯ ಭಾಗಕ್ಕೆ ಹಾಗೂ ಮುಖಕ್ಕೆ ಗಾಯವಾಗಿತ್ತು. ನಂತರ ಗಾಯಗೊಂಡಿದ್ದ ನನ್ನ ಗಂಡ ರಾಜಣ್ಣ ರವರನ್ನು ಸ್ಥಳಕ್ಕೆ ಬಂದ ಯಾವುದೋ ಒಂದು ವಾಹನದಲ್ಲಿ ನಮ್ಮ ಗ್ರಾಮದ ವಾಸಿಯಾದ ಗಂಗಣ್ಣ ಬಿನ್ ಲೇ|| ನರಸಯ್ಯ ಹಾಗೂ ನನ್ನ ಮೈದುನನಾದ ರಂಗಸ್ವಾಮಿ ರವರುಗಳು ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದರು. ಆದ್ದರಿಂದ ನನ್ನ ಗಂಡ ರಾಜಣ್ಣ ಹಾಗೂ ನಮ್ಮ ಗ್ರಾಮದ ವಾಸಿಯಾದ ಸ್ವಾಮಿ ರವರುಗಳ ಮೇಲೆ ಗಲಾಟೆ ಮಾಡಿರುವ ಮೇಲ್ಕಂಡವರುಗಳ ಮೇಲೆ ಕಾನೂನು ರೀತ್ಯಾ ಮುಂದಿನ ಕ್ರಮ ಜರುಗಿಸಬೇಕೆಂದು ನನ್ನ ಗಂಡ ರಾಜಣ್ಣ ರವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದರಿಂದ ಈ ದಿವಸ ತಡವಾಗಿ ಬಂದು ದೂರು ನೀಡುತ್ತಿದ್ದೇನೆ ಎಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ 228/2017 ಕಲಂ 279,337 ಐ. ಪಿ.ಸಿ

ದಿನಾಂಕ 15/12/2017 ರಂದು ಮದ್ಯಾಹ್ನ 2-45 ಗಂಟೆಗೆ ಪಿರ್ಯಾದಿ ಕೆ.ಕೆ. ವಿಜಯಲಕ್ಷ್ಮೀ ರವರು ಠಾಣೆಗೆ ಹಾಜರಾಗಿ ನೀಡಿದ ಪಿರ್ಯಾದು ಅಂಶವೇನೆಂದರೆ, ನನ್ನ ಯಜಮಾನರಾದ ಧನಂಜಯ್ಯ ನವರು ದಿನಾಂಕ 10-12-2017 ರಂದು  ನಮ್ಮ ಯಜಮಾನವರ ಸ್ನೇಹಿತರು ಮರಣ ಹೊಂದಿದ್ದರಿಂದ ಅವರ ಅಂತ್ಯಕ್ರಿಯೆಗೆ ಹೋಗಲು ಅವರ ಬಾಬ್ತು ಕೆಎ-06-ಇಜೆ-5419 ನೇ  ದ್ವಿಚಕ್ರ ವಾಹದಲ್ಲಿ ಬೆಳಿಗ್ಗೆ 9-30 ಗಂಟೆಗೆ ಮನೆ ಬಿಟ್ಟು ಕಲ್ಲೂರಿಗೆ ಹೋಗಿದ್ದರು. ನಂತರ ಅದೇ ದಿನ ನನ್ನ ಯಜಮಾನರು ಮದ್ಯಾಹ್ನ ಸುಮಾರು  3-30 ಗಂಟೆಯಲ್ಲಿ ನಾನು ಮನೆಯಲ್ಲಿ ಇರುವಾಗ್ಗೆ  ನನ್ನ ಯಜಮಾನರು ನನಗೆ ಪೋನ್ ಮಾಡಿ ನಾನು ಅಂತ್ಯಕ್ರಿಯೆ ಮುಗಿಸಿಕೊಂಡು ಬರುವಾಗ ತುಮಕೂರು ನಗರದ ವಾಸಿ ಲಕ್ಷ್ಮಮ್ಮ ಎಂಬುವರು ನಾನು ತುಮಕೂರಿಗೆ ಬರುತ್ತೇನೆಂತ ಹೇಳಿದ್ದರಿಂದ ನಾನು ಮತ್ತು ಲಕ್ಷ್ಮಮ್ಮ ಇಬ್ಬರು ನನ್ನ ಬಾಬ್ತು ದ್ವಿಚಕ್ರ ವಾಹನದಲ್ಲಿ ಹೆಬ್ಬೂರು - ಸಿ.ಎಸ್. ಪುರ ರಸ್ತೆ ಮಾರ್ಗವಾಗಿ ತುಮಕೂರಿಗೆ ಬರಲು ಜೆಲ್ಲಿಪಾಳ್ಯ ತಿರುವಿನಲ್ಲಿ ಮದ್ಯಾಹ್ನ 3-15 ಬರುತ್ತಿರುವಾಗ್ಗೆ ಹೆಬ್ಬೂರು ಕಡೆಯಿಂದ ಒಂದು ಕಾರು ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ನಮ್ಮ ಕೆಎ-06-ಇಜೆ-5419 ನೇ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ನನಗೆ  ಬಲಗಾಲಿಗೆ ತೀವ್ರ ಸ್ವರೂಪದ ಗಾಯವಾಗಿ ಬಲಗೈಗೆ ರಕ್ತಗಾಯವಾಗಿರುತ್ತೆ ಮತ್ತು ನನ್ನ ದ್ವಿಚಕ್ರ ವಾಹನದ ಹಿಂಬದಿಯಲ್ಲಿ ಕುಳಿತ್ತಿದ್ದ ಲಕ್ಷ್ಮಮ್ಮನವರಿಗೆ ಎಡಗೈ ಎಡಗಾಲಿನ ಪಾದದ ಬಳಿ ರಕ್ತಗಾಯವಾಗಿ ಬಲಮೊಣಕೈಗೆ ತೀವ್ರ ಸ್ವರೂಪದ ಗಾಯವಾಗಿದ್ದವು. ನಮ್ಮ ಹಿಂದೆ ಬರುತ್ತಿದ್ದ ಕೃಷ್ಣಪ್ಪ ಎಂಬುವರು ಬಂದು ನಮ್ಮಗಳನ್ನು ಮೇಲಕ್ಕೆ ಎತ್ತಿ ಉಪಚರಿಸಿದ್ದು ನಂತರ ಅಪಘಾತ ಮಾಡಿದ ವಾಹನವನ್ನು ನೋಡಲಾಗಿ ಕೆಎ-09-ಎಂ-8821 ನೇ ಕಾರಾಗಿದ್ದು , ಕಾರಿನ ಮುಂಭಾಗ ಜಖಂ ಗೊಂಡಿದ್ದು,  ನಮ್ಮ ದ್ವಿಚಕ್ರ ವಾಹನವು ಸಹ ಜಖಂಗೊಂಡಿರುತ್ತೆ. ಅಪಘಾತ ಮಾಡಿದ ಕಾರಿನ ಚಾಲಕನ ಹೆಸರು ತಿಳಿಯಲಾಗಿ ವಸಂತ ಅಂತ ತಿಳಿಯಿತು. ನಂತರ ಸ್ಥಳಕ್ಕೆ ಬಂದ ಯಾವುದೋ ಒಂದು ವಾಹನದಲ್ಲಿ ನಮ್ಮಗಳನ್ನು ತುಮಕೂರು ನಗರದ ಅದಿತ್ಯ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗಾಗಿ ಸೇರಿಸಿರುತ್ತಾರೆಂತ ನನಗೆ ಪೋನ್ ಮಾಡಿ ತಿಳಿಸಿದ್ದರಿಂದ ನಾನು ಆದಿತ್ಯ ಆಸ್ಪತ್ರೆಗೆ ಹೋಗಿ ನೋಡಲಾಗಿ ಅಪಘಾತವಾಗಿರುವ ವಿಚಾರ ನಿಜವಾಗಿತ್ತು. ಈ ಅಪಘಾತವಾದ ಬಗ್ಗೆ  ಕೆಎ-09-8821 ನೇ ಕಾರಿನ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಮ್ಮ ಕೆಎ-06-ಇಜೆ-5419 ನೇ ದ್ವಿಚಕ್ರ ವಾಹನಕ್ಕೆ ಅಪಘಾತ ಮಾಡಿದ್ದು, ನಮ್ಮ ಯಜಮಾನರಿಗೆ ತೀವ್ರ ಸ್ವರೂಪ ಗಾಯವಾಗಿದ್ದು ಚಿಕಿತ್ಸೆ ಕೊಡಿಸುತ್ತಿದ್ದರಿಂದ ನನ್ನ ಯಜಮಾನರನ್ನು ನೋಡಿಕೊಳ್ಳಲು ಯಾರು ಇಲ್ಲದಿದ್ದರಿಂದ ನನ್ನ ಯಜಮಾನರನ್ನು ನೋಡಿಕೊಳ್ಳುತ್ತಿದ್ದರಿಂದ ಈ ದಿವಸ ತಡವಾಗಿ ಅಪಘಾತ ಮಾಡಿದ ಕೆಎ-09-ಎಂ-8821 ನೇ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು  ನೀಡಿದ ಪಿರ್ಯಾದು ಪಡೆದು ಪ್ರಕರಣ ನೊಂದಾಯಿಸಿಕೊಂಡಿರುತ್ತೇನೆ.

 

 Friday, 15 December 2017

Crime Incidents 15-12-17

ಹುಳಿಯಾರು ಪೊಲೀಸ್ ಠಾಣಾ ಮೊ.ನಂ.152/2017, ಕಲಂ:- 379, 429 ರೆ/ವಿ 34 ಐಪಿಸಿ

ದಿನಾಂಕ 14/12/2017 ರಂದು ರಾತ್ರಿ 10-30 ಗಂಟೆಗೆ ರಾಮಯ್ಯ ಕೆ.ಎಂ ಬಿನ್ ಮೂಡಲಗಿರಿಯಪ್ಪ, 65 ವರ್ಷ, ಬಲಿಜಿಗರು, ಹಿಂದೂಜಾಗರಣಾ ವೇಧಿಕೆ ಅಧ್ಯಕ್ಷರು, ಹುಳಿಯಾರು ವಾಸ: ಇಂದಿರಾನಗರ ಹುಳಿಯಾರು ಟೌನ್, ಚಿಕ್ಕನಾಯಕನಹಳ್ಳಿ ತಾಲ್ಲೂಕು ಇವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಹುಳಿಯಾರು ಆಂಜನೇಯ ಸ್ವಾಮಿ ದೇವಸ್ಥಾನದ ಬಸವನನ್ನು ಕದ್ದೊಯ್ದಿರುವ ಬಗ್ಗೆ, ಹುಳಿಯಾರಿನ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಒಂದು ಬಸವ ಇದ್ದು, ದಿನಾಂಕ 13/12/2017 ರಂದು ರಾತ್ರಿ 12-00 ಗಂಟೆ ಅಥವಾ 12-30 ಗಂಟೆ ಸಮಯದಲ್ಲಿ ಇಬ್ಬರು ವ್ಯಕ್ತಿಗಳು ಎ.ಪಿ.ಎಂ.ಸಿ ಎದುರು ಸೋಮಜ್ಜನಪಾಳ್ಯ ರಸ್ತೆಯಲ್ಲಿ ಕಂಪನಹಳ್ಳಿ ಕಡೆಗೆ ಎಳೆದುಕೊಂಡು ಹೋಗುತಲಿರುವುದನ್ನು ನಮ್ಮ ನಾಗರೀಕರು ನೋಡಿರುತ್ತಾರೆ. ನಂತರ ಬಸವನ ಕಾಲುಗಳನ್ನು ಕಟ್ಟಿ ಒಂದು ಟೆಂಪೋದಲ್ಲಿ ಕರೆದುಕೊಂಡು ಹೋಗುವಾಗ ಉಸಿರುಕಟ್ಟಿ ಸತ್ತಿರುತ್ತದೆ. ಆದ್ದರಿಂದ ಮೇಲ್ಕಂಡ ವಿಷಯವನ್ನು ತಮ್ಮ ಗಮನಕ್ಕೆ ತಂದಿರುತ್ತೇವೆ. ಸತ್ತಿರುವ ಬಸವಣ್ಣನನ್ನು ಬಾಣಸಂದ್ರದಿಂದ ಮುಂದೆ ನೀರುಗುಂದ ಪಾಳ್ಯದಲ್ಲಿ ಬಿಸಾಕಿ ಹೋಗಿರುತ್ತಾರೆ. ಈ ವಿಷಯಕ್ಕೆ ತಾವುಗಳು ಸೂಕ್ತ ಕ್ರಮ ಜರುಗಿಸಿ ನಮ್ಮ ನಾಗರೀಕರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ನೀಡಿದ ಲಿಖಿತ ದೂರಿನ ಮೇರೆಗೆ ಠಾಣಾ ಮೊ.ನಂ 152/2017 ಕಲಂ 379, 429 ರೆ/ವಿ 34 ಐಪಿಸಿ ರೀತ್ಯ ಪ್ರಕರಣ ದಾಖಲಿಸಿರುತ್ತೆ.

ತಿಪಟೂರು ನಗರ ಪೊಲೀಸ್ ಠಾಣಾ ಮೊ.ನಂ. 187/2017 ಕಲಂ: 279, 304() ಐಪಿಸಿ

ದಿನಾಂಕ:14/12/2017 ರಂದು ಬೆಳಗ್ಗೆ 07.30 ಗಂಟೆಗೆ ಪಿರ್ಯಾದಿ ಮೂರ್ತಿ ಸಿ.ಡಿ.ಎಸ್‌ ಬಿನ್‌ ದೊಡ್ಡಯ್ಯ ಸಿ.ಕೆ, 57 ವರ್ಷ, ಕುರುಬ ಜನಾಂಗ, ದೈಹಿಕ ಶಿಕ್ಷಣ ಅಧಿಕಾರಿ, ಬಿಇಓ ಅಫೀಸ್‌, ವಾಸ- ಮನೆ ನಂಬರ್‌ 333, 2ನೇ ಕ್ರಾಸ್‌‌, 2ನೇ ಮುಖ್ಯ ರಸ್ತೆ, ಶಾರದನಗರ, ತಿಪಟೂರು ನಗರ ರವರು  ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ಪಿರ್ಯಾದಿಯ ಅಕ್ಕನ ಮಗಳು ಪೂಜಾ ತನ್ನ ತಾಯಿ ಲೀಲಾವತಿಯನ್ನು ಕೆಎ44ಇ8792 ನೇ ಹೊಂಡಾ ಆಕ್ಟಿವಾ  ಮೋಟಾರ್‌ ಸೈಕಲ್‌ನಲ್ಲಿ ಕೂರಿಸಿಕೊಂಡು ದಿನಾಂಕ:13/12/2017 ರಂದು ಹಾಸನ ರಸ್ತೆಯಿಂದ ತನ್ನ ಮನೆಯ ಕಡೆಗೆ ಬರಲು ಬೈಪ್‌‌ ಅಪೀಸ್‌ ಮುಂದಿನ ರಸ್ತೆಯ ಎಲ್‌ ಐ ಸಿ ರಾಜಣ್ಣ ನವರ ಮನೆಯ ರಸ್ತೆಯಲ್ಲಿ ರಾತ್ರಿ ಸುಮಾರು 07.00 ಗಂಟೆ ಸಮಯದಲ್ಲಿ ತನ್ನ ಬೈಕ್‌ನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಹಂಪ್ಸ್‌ ಬಳಿ ಸಡನ್‌ ಆಗಿ ಬ್ರೇಕ್‌ ಹಾಕಿದ್ದರಿಂದ ಹಿಂಬದಿ ಕುಳಿತಿದ್ದ ಲೀಲಾವತಿ ಕೆಳಕ್ಕೆ ಬಿದ್ದು ತಲೆಯ ಹಿಂಬಾಗಕ್ಕೆ ಪೆಟ್ಟು ಬಿದ್ದು ರಕ್ತಗಾಯವಾಗಿದ್ದು, ಚಿಕಿತ್ಸೆಗಾಗಿ ತಿಪಟೂರು ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು, ವೈದ್ಯರು ಬೆಂಗಳೂರಿನ ನಿಮಾನ್ಸ್‌ ಆಸ್ಪತ್ರೆಗೆ ಚಿಕಿತ್ಸೆಗಾಗಿ ಲೀಲಾವತಿರವರನ್ನು ಕರೆದುಕೊಂಡು ಹೋಗಲು ತಿಳಿಸಿದ್ದು, ಬೆಂಗಳೂರಿಗೆ ಕರೆದುಕೊಂಡು ಹೋಗುತ್ತಿದ್ದಾಗ ರಾತ್ರಿ ಸುಮಾರು 10.30 ಗಂಟೆ ಸಮಯದಲ್ಲಿ ಬೆಂಗಳೂರು ಸಮೀಪ ಗೊರಗುಂಟೆಪಾಳ್ಯ ಮಾರ್ಗ ಮಧ್ಯೆ ಲೀಲಾವತಿ ಮೃತಪಟ್ಟಿರುತ್ತಾರೆ. ಮೃತೆ ಲೀಲಾವತಿ ರವರ ಶವವನ್ನು ತಿಪಟೂರು ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ಇಟ್ಟಿರುತ್ತೆ. ಈ ಅಪಘಾತಕ್ಕೆ ಕಾರಣಳಾಗಿರುವ ಪೂಜಾ ರವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿರುತ್ತೆ

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ 226/2017 ಕಲಂ 279,337 ಐಪಿಸಿ

ದಿನಾಂಕ:14-12-2017 ರಂದು ಮದ್ಯಾಹ್ನ  2-30 ಗಂಟೆಗೆ ಪಿರ್ಯಾದಿಯಾದ ಹೆಚ್,ಪುಟ್ಟಣ್ಣ ಬಿನ್ ಲೇ|| ಹನುಮಯ್ಯ, 59 ವರ್ಷ, ಒಕ್ಕಲಿಗರು, ಕೆ,ಎಸ್,ಆರ್,ಟಿ,ಸಿ ಡಿಪೋ ಮ್ಯಾನೇಜರ್‌, ಕೋಡಿಮುದ್ದನಹಳ್ಳಿ, ಹೆಬ್ಬೂರು ಹೋಬಳಿ, ತುಮಕೂರು ತಾಲ್ಲೂಕು & ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೇಂಧರೆ ನಾನು ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ  ಕೆ,ಎಸ್,ಆರ್,ಟಿ,ಸಿ ಡಿಪೋ ಮ್ಯಾನೇಜರ್‌ ಆಗಿ ಕೆಲಸ ಮಾಡಿಕೊಂಡಿದ್ದು, ನನ್ನ ಗ್ರಾಮವಾದ ಕೋಡಿಮುದ್ದನಹಳ್ಳಿಗೆ ಬಂದು ಹೋಗುತ್ತಿರುತ್ತೇನೆ. ಹೀಗಿರುವಾಗ್ಗೆ, ನಾನು ದಿನಾಂಕ: 27-11-2017 ರಂದು ನಾಗಮಂಗಲದಿಂದ ಕೋಡಿಮುದ್ದನಹಳ್ಳಿ ಗ್ರಾಮಕ್ಕೆ ಬಂದಿದ್ದು, ನಂತರ ನಾಗಮಂಗಲಕ್ಕೆ ಹೋಗಲು ದಿನಾಂಕ:28-11-2017 ರಂದು ಬೆಳಿಗ್ಗೆ ರಸ್ತೆಪಾಳ್ಯದಲ್ಲಿ ಒಂದು ಆಟೋವನ್ನು ಹತ್ತಿಕೊಂಡು ಹೆಬ್ಬೂರಿಗೆ ಬರಲೆಂದು ಬರುತ್ತಿರುವಾಗ್ಗೆ ಬೆಳಿಗ್ಗೆ ಸುಮಾರು 07-45 ಗಂಟೆ ಸಮಯದಲ್ಲಿ ಸದರಿ ಆಟೋ ಚಾಲಕನು ಆಟೋವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ರಸ್ತೆಯ ಮೇಲೆ ಆಟೋ ವನ್ನು ಅಜ್ಜೆಗೌಡನಪಾಳ್ಯ ಗೇಟ್‌ ಹಿಂಭಾಗಕ್ಕೆ ಎಡಕ್ಕೆ ಬೀಳಿಸಿ ಅಪಘಾತಪಡಿಸಿದನು. ಸದರಿ ಆಟೋ ರಿಕ್ಷಾದಲ್ಲಿದ್ದ ನನಗೆ ಎಡಭುಜಕ್ಕೆ ಹಾಗೂ ಎಡಗಾಲಿನ ಮಂಡಿಗೆ ಏಟು ಬಿದ್ದು ಗಾಯವಾಯಿತು. ಹಾಗೂ ಸದರಿ ಆಟೋ ರಿಕ್ಷಾದಲ್ಲಿದ್ದ ಮತ್ತೊಬ್ಬ ಪ್ರಯಾಣಿಕನಾದ ರಸ್ತೆಪಾಳ್ಯ ಗ್ರಾಮದ ಪಾಲಾಕ್ಷ ಎಂಬುವರಿಗೆ ಏಟಾಯಿತು. ನಂತರ ಅಫಘಾತಪಡಿಸಿದ ಆಟೋ ರಿಕ್ಷಾದ ನಂಬರ್ ನೋಡಲಾಗಿ ಕೆಎ-06-ಡಿ-6879 ಆಗಿತ್ತು. ಆಟೋ ಚಾಲಕನ ಹೆಸರು ವಿಳಾಸ ತಿಳಿಯಲಾಗಿ ನಂಜೇಗೌಡನಪಾಳ್ಯದ ವಾಸಿಯಾದ ವೆಂಕಟೇಶ್‌ ಬಿನ್ ರಾಜಣ್ಣ ಎಂತಾ ತಿಳಿಯಿತು. ಚಾಲಕನಾದ ವೆಂಕಟೇಶ್‌ ರವರಿಗೆ ಯಾವುದೇ ರೀತಿಯ ಗಾಯಗಳಾಗಿರಲಿಲ್ಲ. ನನಗೆ ಭುಜಕ್ಕೆ ನೋವಾಗಿದೆಯೆಂದುಕೊಂಡು ಅಲ್ಲಿಂದ ಕೆಲಸದ ಮೇಲೆ ನಾಗಮಂಗಲಕ್ಕೆ ಹೊರಟು ಹೋದೆನು. ನಂತರ ಅದೇ ದಿವಸ ಸಾಯಂಕಾಲ ನನಗೆ ಭುಜದ ಬಳಿ ಊತ ಕಾಣಿಸಿಕೊಂಡು ನೋವು ತಡೆಯಲು ಸಾಧ್ಯವಾಗಲಿಲ್ಲವಾದ್ದರಿಂದ ನಾಗಮಂಗಲ ಸರ್ಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು ಅಲ್ಲಿನ ವೈದ್ಯರ ಸಲಹೆ ಮೇರೆಗೆ ತುಮಕೂರಿನ ಹೇಮಾವತಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿ ಚಿಕಿತ್ಸೆ ಪಡೆದೆನು. ಆದ್ದರಿಂದ ಕೆಎ-06-ಡಿ-6879 ನೇ ಆಟೋ ರಿಕ್ಷಾವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಈ ಅಪಘಾತಕ್ಕೆ ಕಾರಣನಾದ ವೆಂಕಟೇಶ್‌ ಬಿನ್ ರಾಜಣ್ಣ ರವರ ಮೇಲೆ ಕಾನೂನು ರೀತ್ಯಾ ಮುಂದಿನ ಕ್ರಮ ಜರುಗಿಸಬೇಕೆಂದು ನೀಡಿದ ದೂರು.

ಕ್ಯಾತ್ಸಂದ್ರ ಪೊಲೀಸ್ ಠಾಣಾ ಮೊ.ನಂ: 310/2017, ಕಲಂ: 399.402. ಐಪಿಸಿ.

ದಿನಾಂಕ: 14-12-2017 ರಂದು ಬೆಳಗಿನ ಜಾವ : 05-20 ಗಂಟೆಗೆ ಠಾಣಾ ಪಿಸಿ: 980 ಸೈಯದ್ ರಿಫತ್ ಅಲಿ ರವರು ಠಾಣೆಗೆ ಹಾಜರಾಗಿ ಠಾಣಾ ಪಿ.ಎಸ್.ಐ.ರವರು ಪಂಡಿತನಹಳ್ಳಿ ಗೇಟಿನಿಂದ ಠಾಣೆಗೆ ಕಳುಹಿಸಿಕೊಟ್ಟಿದ್ದ ವರದಿಯನ್ನು ಹಾಜರುಪಡಿಸಿದ್ದನ್ನು ಪಡೆದು ಪರಿಶೀಲಿಸಲಾಗಿ  ಈ ದಿವಸ ದಿನಾಂಕ: 14/12/2017 ರಂದು ಬೆಳಗಿನ ಜಾವ ಸುಮಾರು 04-30 ಗಂಟೆಯ ಸಮಯದಲ್ಲಿ ಕ್ಯಾತ್ಸಂದ್ರ ಪೊಲೀಸ್ ಠಾಣೆಯ ಪಿ.ಎಸ್.ಐ. ಆದ ನಾನು ಠಾಣಾ ಸರಹದ್ದಿನ ಚೊಕ್ಕೇನಹಳ್ಳಿಯ ಜಾಸ್ ಟೋಲ್ ಗೇಟಿನ ಬಳಿ ಸಿಬ್ಬಂದಿಯೊಂದಿಗೆ ಗಸ್ತು ಮಾಡುತ್ತಿದ್ದಾಗ ಆ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಬಂದ ಯಾರೋ ಬಾತ್ಮಿದಾರರು ನಮ್ಮ ಪೊಲೀಸ್ ಜೀಪಿನ ಬಳಿಗೆ ಬಂದು ಪಂಡಿತನಹಳ್ಳಿ ಗೇಟ್ ಬಳಿ ಇರುವ ಎನ್.ಹೆಚ್-48 ರಸ್ತೆಯಲ್ಲಿ ಯಾರೋ 4-5 ಜನ ಆಸಾಮಿಗಳು ಅನುಮಾನಾಸ್ಪದವಾಗಿ ನಿಂತಿರುತ್ತಾರೆಂದು ಮತ್ತು ಅವರುಗಳ ಬಳಿ ಚಾಕು ಮತ್ತು ಕಬ್ಬಿಣದ ರಾಡುಗಳು ಇದ್ದು ಇವರುಗಳು ಯಾವುದೋ ದುರುದ್ದೇಶದಿಂದ ಯಾರನ್ನೋ ದರೋಡೆ ಮಾಡಲು ಹೊಂಚು ಹಾಕುತ್ತಿರುತ್ತಾರೆಂದು ಬಾತ್ಮಿ ನೀಡಿದ್ದರಿಂದ ಕೂಡಲೇ ನಾನು ಮತ್ತು ಸಿಬ್ಬಂದಿಗಳಾದ ಪಿಸಿ: 980 ಸೈಯದ್ ರಿಫತ್ ಅಲೀ, ಪಿಸಿ:296 ಕಿರಣ್, ಪಿಸಿ:903 ಕುಮಾರ್ ರವರುಗಳೊಂದಿಗೆ  ಹೋಗಿ  ಪಂಡಿತನಹಳ್ಳಿ ಗೇಟಿನಿಂದ ಸುಮಾರು ನೂರು ಮೀಟರ್ ದೂರದಲ್ಲಿ ಬೆಳಗಿನ ಜಾವ ಸುಮಾರು 04-45 ಗಂಟೆಯಲ್ಲಿ ವಾಹನದಿಂದ ಇಳಿದು ನಡೆದುಕೊಂಡು ಹೋಗಿ ಕತ್ತಲಿನಲ್ಲಿ ನಿಂತು ಪಂಡಿತನಹಳ್ಳಿ ಗೇಟ್  ಬಳಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ಬೇರೆ ವಾಹನಗಳ ಬೆಳಕಿನಲ್ಲಿ ನೋಡಿದಾಗ ಯಾರೋ 4-5 ಜನ ಆಸಾಮಿಗಳು ಆಯುಧಗಳನ್ನು ಹಿಡಿದುಕೊಂಡು ನಿಂತಿರುವುದು ಕಂಡು ಬಂತು. ಅ ಗುಂಪಿನಲ್ಲಿದ್ದ ಒಬ್ಬ ವ್ಯಕ್ತಿಯು ಉಳಿದವರಿಗೆ ನೀವು ರಸ್ತೆಯಲ್ಲಿ ಬರುವ ಮೋಟಾರ್ ಬೈಕ್ ಸವಾರರಿಗೆ ಅಡ್ರೆಸ್ ಕೇಳುವ ನೆಪದಲ್ಲಿ ಅವರನ್ನು ನಿಲ್ಲಿಸಿ ಅವರನ್ನು ವಿಚಾರ ಮಾಡುತ್ತಿರಿ, ನಾವುಗಳು ಒಟ್ಟಾಗಿ  ಸಡನ್ನಾಗಿ ಬಂದು ಅವರಿಗೆ ಚಾಕು ತೋರಿಸಿ ಹೆದರಿಸಿ, ಅವರ ಬಳಿ ಇರುವ ಹಣ, ಮೊಬೈಲ್ ಹಾಗೂ ಒಡವೆಗಳನ್ನು ಕಿತ್ತುಕೊಳ್ಳೋಣ ಎಂತಾ ಹೇಳುತ್ತಿದ್ದನು. ಆಗ ನಾನು, ನಮ್ಮ ಸಿಬ್ಬಂದಿಯೊಂದಿಗೆ ಅವರನ್ನು ಸುತ್ತುವರೆದು ಅವರನ್ನು ವಶಕ್ಕೆ ಪಡೆದು ಅವರುಗಳ ಹೆಸರು ಮತ್ತು ವಿಳಾಸವನ್ನು ಕೇಳಿದಾಗ 1] ಅರುಣ್ ಕುಮಾರ್ ಬಿನ್ ಗೋವಿಂದರಾಜು, 20ವರ್ಷ, ವಕ್ಕಲಿಗರು, ಹೂವಿನ ವ್ಯಾಪಾರ, ವಾಸ: ಎನ್.ಆರ್.ಕಾಲೋನಿ, 1ನೇ ಕ್ರಾಸ್, ಪೂಜಮ್ಮನ ದೇವಸ್ಥಾನದ ಹತ್ತಿರ, ಕೋತಿತೋಪು, ತುಮಕೂರು ಟೌನ್. 2] ಅಭಿಶೇಕ್ ಬಿನ್ ನರಸಿಂಹಮೂರ್ತಿ, 20ವರ್ಷ, ಎ.ಕೆ.ಜನಾಂಗ, ಮೆಡಿಕಲ್ ಡಿಸ್ಟ್ರಿಬ್ಯೂಟರ್ ಕೆಲಸ, ವಾಸ: ಶರಾಫ್ ನಾಗಣ್ಣನ ಪಾಳ್ಯ, ಹೆಚ್.ಎಂ.ಎಸ್. ಶಾಲೆ ಹತ್ತಿರ, ಶಿರಾ ಗೇಟ್, ತುಮಕೂರು ಟೌನ್. 3] ಟಿ.ಎನ್. ನರಸಿಂಹಮೂರ್ತಿ @ ಗುಂಡ ಬಿನ್ ಚಿನ್ನಪ್ಪ, 20ವರ್ಷ, ಎ.ಕೆ.ಜನಾಂಗ, ಪೈಂಟಿಂಗ್ ಕೆಲಸ, ವಾಸ: ಶಾರದದೇವಿ ನಗರ, ಜೆ.ಪಿ.ಸ್ಕೂಲ್ ಹತ್ತಿರ, ಕೋತಿತೋಪು, ತುಮಕೂರು ಟೌನ್. 4] ಸಿ. ಲೋಕೇಶ್ ಬಿನ್ ಚಂದ್ರನಾಯ್ಕ, 20ವರ್ಷ, ಲಂಬಾಣಿ ಜನಾಂಗ, ಲೋಡರ್ ಕೆಲಸ, ವಾಸ: 8ನೇ ಮೈಲಿ ಹತ್ತಿರ, ದೀಪಕ್ ಸ್ಟಾಪ್, ರಾಮಯ್ಯ ಲೇಔಟ್, 13ನೇ ಕ್ರಾಸ್, ಬೆಂಗಳೂರು ಸಿ.ಟಿ. ಸ್ವಂತ ಊರು: ಹರಪ್ಪನ ತಾಲ್ಲೂಕು, ಉತ್ತಗಟ್ಟಿ ಗ್ರಾಮ, ದಾವಣಗೆರೆ ಜಿಲ್ಲೆ. 5] ಶಶಿಕುಮಾರ್ ಬಿನ್ ಲೇಟ್: ಸಿದ್ದಗಂಗಪ್ಪ, 20ವರ್ಷ, ವಕ್ಕಲಿಗರು, ಖಾಸಗಿ ಕಂಪನಿಯಲ್ಲಿ ಕೆಲಸ, ವಾಸ: ಚಿನ್ನಿವಾರನಹಳ್ಳಿ, ಬೆಳಧರ ಪೋಸ್ಟ್, ಕೋರಾ ಹೋಬಳಿ, ತುಮಕೂರು ತಾಲ್ಲೂಕು & ಜಿಲ್ಲೆ. ಎಂದು ತಿಳಿಸಿದರು. ಇವರುಗಳು  ರಸ್ತೆಯಲ್ಲಿ ಬರುವ ವಾಹನ ಸವಾರರ ಬಳಿ ಇರುವ ಹಣ ಮತ್ತು ಇತರೆ ಬೆಲೆಬಾಳುವ ವಸ್ತುಗಳನ್ನು ಕಿತ್ತುಕೊಂಡು ಹೋಗಲು ಹೊಂಚು ಹಾಕುತ್ತಿರುವುದಾಗಿ ತಿಳಿಸಿದ್ದರಿಂದ ಇವರುಗಳನ್ನು ಚೆಕ್ ಮಾಡಿದಾಗ ಇಬ್ಬರ ಬಳಿ 2 ಕಬ್ಬಿಣದ ರಾಡುಗಳು, ಇಬ್ಬರ ಬಳಿ 2 ಚಾಕುಗಳು, ಒಬ್ಬನ ಬಳಿ ಒಂದು ಕಾರದ ಪುಡಿಯ ಪಾಕೇಟ್ ದೊರೆತಿರುತ್ತೆ. ಅದ್ದರಿಂದ ದರೋಡೆ ಮಾಡುವ ಉದ್ದೇಶಕ್ಕಾಗಿ ಸಿದ್ದತೆ ಮಾಡಿಕೊಂಡು ಹೊಂಚು ಹಾಕುತ್ತಿದ್ದ ಈ 5 ಜನ ಆಸಾಮಿಗಳ ಮೇಲೆ ಎಫ್.ಐ.ಆರ್. ದಾಖಲಿಸಿ ಕ್ರಮಕೈಗೊಳ್ಳಲು ಸೂಚಿಸಿದ್ದರಿಂದ ಠಾಣಾ ಮೊ.ನಂ: 310/2017, ಕಲಂ:399.402. ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿ ಪ್ರವ ವರದಿಯನ್ನು ಘನ ನ್ಯಾಯಾಲಯಕ್ಕೆ ಸಲ್ಲಿಸಿಕೊಂಡು ತನಿಖೆ ಕೈಗೊಂಡಿರುತ್ತೆ.

 

 Wednesday, 13 December 2017

Crime Incidents 13-12-17

ಅಮೃತೂರು ಪೊಲೀಸ್ ಠಾಣಾ ಮೊನಂ-222/2017 ಕಲಂ-506 ರೆ/ವಿ 34 ಐಪಿಸಿ

ದಿನಾಂಕ:- 12/12/2017 ರಂದು ರಾತ್ರಿ 8-30 ಗಂಟೆಗೆ ನ್ಯಾಯಾಲಯದ ಕರ್ತವ್ಯದ ಸಿಬ್ಬಂದಿಯಾದ ಸಿ.ಪಿ.ಸಿ.-834 ಧನಂಜಯ್ಯ ರವರು ಠಾಣೆಗೆ ಹಾಜರಾಗಿ,  ಹಾಜರು ಪಡಿಸಿದ Addl.Civil Judge & JMFC. Dt.12/12/2017, M.T. No;- 646/17 ನ್ಯಾಯಾಲಯದ ಪಿಸಿಆರ್ ನಂಬರ್-364/2017 ರ ದೂರಿನ ಅಂಶವೇನೆಂದರೆ, ಕುಣಿಗಲ್ ತಾಲ್ಲೂಕು ಅಮೃತೂರು ಹೋಬಳಿ ಶಾನುಭೋಗನಹಳ್ಳಿಯಲ್ಲಿ ಸರ್ವೇ ನಂಬರ್‌ 46/15 ರಲ್ಲಿ ನನ್ನ ಪಿತ್ರಾರ್ಜಿತ ಆಸ್ತಿ ಒಂದೂವರೆ ಎಕರೆ ಜಮೀನಿರುತ್ತದೆ.ಇದರಲ್ಲಿ ಇಪ್ಪತ್ತೆರಡು ಗುಂಟೆ ಜಮೀನಿನಲ್ಲಿ ಕೊಳವೆ ಭಾವಿಯನ್ನು ಹಾಕಿಸಿರುತ್ತೇನೆ, ನನು ಸದರಿ ಜಮೀನಿನಲ್ಲಿ ಅನುಭವದಲ್ಲಿದ್ದೆನೆ. ಆದರೂ ಕೂಡ ಇದೇ ಗ್ರಾಮದ ಎ.ಟಿ.ಶ್ರಿನಿವಾಸ್ ಬಿನ್ ಲೇಟ್. ತಿಮ್ಮಯ್ಯ ಇವರು ಕಂದಾಯ ಇಲಾಖೆ ಅಧಿಕಾರಿಗಳಿಗೆ ಲಂಚ ಕೊಟ್ಟು ನನ್ನ ಬಾಬ್ತು ಒಂದೂವರೆ ಎಕರೆ ಜಮೀನಲ್ಲಿ ಇಪ್ಪತ್ತೆರಡು ಗುಂಟೆ ಜಮೀನನ್ನು ಅಕ್ರಮವಾಗಿ ಖಾತೆ ಮಾಡಿಸಿಕೊಂಡಿರುತ್ತಾರೆ, ಅಕ್ರಮ ಖಾತೆಯನ್ನು ಹೊರತು ಪಡಿಸಿ ಇವರ ಬಳಿ ಯಾವುದೇ ಭೋಗ್ಯ, ಆಧಾರ, ಕ್ರಯದ ಪತ್ರಗಳು ಇಲ್ಲದ ಕಾರಣ ನನ್ನನ್ನು ಕೊಲೆಗೈದು ನನ್ನ ಆಸ್ತಿಯನ್ನು ಕಬಳಿಸುವ ದುರುದ್ದೇಶದಿದಂದ ಪದೇ ಪದೇ ನನ್ನನ್ನು ಕೊಲೆಗೈಯ್ಯಲು ಯತ್ನಿಸುತ್ತಲೇ ಇದ್ದಾರೆ. ಅಂತೆಯೇ ದಿನಾಂಕ:- 18/11/2017 ನೇ ಶನಿವಾರದಂದು ಸುಮಾರು ರಾತ್ರಿ 11-00 ಗಂಟೆ ವೇಳೆಯಲ್ಲಿ ನೀರನ್ನು ಹಾಯಿಸಲು ಹೋದಾಗ 1) ಎ,ಟಿ.ಶ್ರಿನಿವಾಸ್ ಬಿನ್ ಲೇಟ್ ತಿಮ್ಮಯ್ಯ, 2) ಜಾನಕಮ್ಮ ಕೋಂ ಎ,ಟಿ.ಶ್ರಿನಿವಾಸ್, 3) ಗಿರೀಶ್ ಬಿನ್ ಎ,ಟಿ.ಶ್ರಿನಿವಾಸ್, 4) ಹರೀಶ ಬಿನ್ ಎ,ಟಿ.ಶ್ರಿನಿವಾಸ್, 5) ಲೋಹಿತ್ ಬಿನ್ ಎ,ಟಿ.ಶ್ರಿನಿವಾಸ್, 6) ಸಿದ್ದೇಗೌಡ ಬಿನ್ ಅಣ್ಣಯ್ಯ, 7) ರಾಜ ಬಿನ್ ಮರಿಯಪ್ಪ ಅಮೃತೂರು ರವರುಗಳು ಮಾರಕಾಸ್ತ್ರಗಳನ್ನು ಹಿಡಿದು ಏಕಾಏಕಿ ನನ್ನ ಮೇಲೆ ಹಲ್ಲೆಮಾಡಲು ಮುಂದಾದರು, ತಕ್ಷಣವೇ ಇವರುಗಳನ್ನು ಕಂಡ ನಾನು ನನ್ನ ಕೈನಲ್ಲಿದ್ದ ಗುದ್ದಲಿಯನ್ನು ಬಿಸಾಡಿ ಓಡಿ ಹೋಗಿ ಶಾನುಭೋಗನಹಳ್ಳಿಯನ್ನು ಸೇರಿ ಪ್ರಾಣವನ್ನು ಉಳಿಸಿ ಕೊಂಡಿರುತ್ತೇನೆ, ಇದರಿಂದಾಗಿ ನನಗೆ ಪ್ರಾಣ ಭಯವಾಗಿರುತ್ತದೆ. ಹಾಗೇನಾದರೂ ನನ್ನ ಪ್ರಾಣ ಹಾನಿಯಾದಲ್ಲಿ ಮೇಲ್ಕಂಡ ಏಳು ಜನ ದುಷ್ಕರ್ಮಿಗಳೇ ಹೊಣೆಗಾರರಾಗಿರುತ್ತಾರೆ, ಆದ್ದರಿಂದ ಇ ಬಗ್ಗೆ ಮತ್ತು ಅಕ್ರಮ ಖಾತೆಯನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಂಡು ನನಗೆ ರಕ್ಷಣೆ ಮತ್ತು ನ್ಯಾಯ ದೊರಕಿಸಿ ಕೊಡಬೇಕೆಂದು ಪ್ರಾರ್ಥಿಸುತ್ತೇನೆ ಸ್ವಾಮಿ, ಎಂಬುದಾಗಿ ಇರುವ ದೂರು ಅರ್ಜಿಯಾಗಿರುತ್ತೆ ಎಂದು ಇದ್ದ ನ್ಯಾಯಾಲಯದ ನಿರ್ದೇಶಿತ ಪಿರ್ಯಾದಿನ ಆದೇಶದ ಪ್ರತಿಯೊಂದಿಗೆ ಲಗತ್ತಿಸಿರುವ ದೂರು ಪ್ರತಿಯನ್ನು ಪಡೆದು ಪ್ರಕರಣವನ್ನು ದಾಖಲಿಸಿರುತ್ತೆ.

ಮಧುಗಿರಿ ಪೊಲೀಸ್ ಠಾಣೆ ಮೊ.ಸಂ  218/17  ಕಲಂ  324,504, 506 IPC

ದಿನಾಂಕ: 11-12-2017 ರಂದು ಸಂಜೆ ಸುಮಾರು 06.00 ಗಂಟೆಯ ಸಮಯದಲ್ಲಿ ಹೆಂಡತಿ ಸಣ್ಣನಿಂಗಮ್ಮರವರು ಮನೆಯ ಮುಂದೆ ಕುಳಿತಿದ್ದಾಗ, ಅದೇ ಗ್ರಾಮದ  ನರಸಿಂಹಯ್ಯನು ವಿನಾಕಾರಣ ಜಗಳ ತೆಗೆದು, ಪಿರ್ಯಾದಿಗೆ ಸೂಳೆ ಮಗನೇ, ಬೋಳಿಮಗನೇ ಎಂತಾ ಅವಾಚ್ಯವಾಗಿ ಬೈಯ್ದು, ಅಲ್ಲಿಯೇ ಬಿದ್ದಿದ್ದ ರಿಪೀಸ್ ದೊಣ್ಣೆಯಿಂದ ಪಿರ್ಯಾದಿಯ ಬಲಗೈ ಬೆರಳಿಗೆ, ಎಡಗೈ ಮುಂಗೈಗೆ ಹೊಡೆದು ರಕ್ತಗಾಯ ಪಡಿಸಿದ್ದು, ಪಿರ್ಯಾದಿಯು ಕಿರುಚಿಕೊಂಡಾಗ ಅಲ್ಲಿಯೇ ನಿಂತಿದ್ದ ಕೋಟೆ ಕಲ್ಲಪ್ಪರವರು ಪಿರ್ಯಾದಿಯನ್ನು ಬಿಡಿಸಿಕೊಂಡಿದ್ದು, ಆಗ ನರಸಿಂಹಯ್ಯನು ಈ ದಿನ ಬದುಕಿಕೊಂಡೆ ಇನ್ನೋಂದು ದಿನ ನಿನಗೆ ಒಂದು ಗತಿ ಕಾಣಿಸುತ್ತೇನೆಂತಾ ಪ್ರಾಣ ಬೆದರಿಕೆ ಹಾಕಿ ರಿಪೀಸ್ ದೊಣ್ಣೆಯನ್ನು ಅಲ್ಲಿಯೇ ಬಿಸಾಕಿ ಹೊರಟು ಹೋಗಿರುತ್ತಾರೆ. ಆ ದಿನ ಅವೇಳೆಯಾದ್ದರಿಂದ ಹಾಗೂ ಆಸ್ಪತ್ರೆಗೆ ಕರೆದುಕೊಂಡು ಹೋಗುವವರು ಯಾರು ಇಲ್ಲದ ಕಾರಣ ನಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವುದಿಲ್ಲ. ಈ ದಿನ ನೋವು ಜಾಸ್ತಿಯಾದ್ದರಿಂದ ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದಿದ್ದು, ರಿಪೀಸ್ ದೊಣ್ಣೆಯಿಂದ ಹಲ್ಲೆ ಮಾಡಿ, ಅವಾಚ್ಯವಾಗಿ ಬೈಯ್ದು, ಪ್ರಾಣ ಬೆದರಿಕೆ ಹಾಕಿರುವ ನರಸಿಂಹಯ್ಯನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ತಮ್ಮಲ್ಲಿ ಕೋರಿ ತಡವಾಗಿ ಠಾಣೆಗೆ ಹಾಜರಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.Tuesday, 12 December 2017

Crime Incidents 12-12-17

ಹುಳಿಯಾರು ಪೊಲೀಸ್ ಠಾಣಾ ಮೊ.ನಂ.151/2017, ಕಲಂ:- K.M.M.C.RULE 1994 (U/s-44); MMDR ACT 1957 (U/s-21(1)); IPC 1860 (U/s-379)

ದಿನಾಂಕ:-11-12-2017 ರಂದು ಬೆಳಗ್ಗೆ 9.30 ಗಂಟೆಗೆ ಪಿ.ಎಸ್. ರವರು ಠಾಣೆಗೆ ಬಂದು ನೀಡಿದ ಜ್ಞಾಪನದ ಸಾರಾಂಶವೇನೆಂದರೆ, ದಿನಾಂಕ:-11-12-2017 ರಂದು ಬೆಳಿಗ್ಗೆ 8.30 ಗಂಟೆ ಸಮಯದಲ್ಲಿ ನಾನು ಹುಳಿಯಾರು ಪೊಲೀಸ್ ಠಾಣೆಯಲ್ಲಿದ್ದಾಗ ಬರಕನಹಾಳ್ ಗ್ರಾಮದ ಬೀಟ್ ಸಿಬ್ಬಂದಿ ಪಿಸಿ-506 ನಾಗರಾಜು ರವರು ನನ್ನ ಬಳಿ ಬಂದು  ಹುಳಿಯಾರು ಪೊಲೀಸ್ ಠಾಣಾ ಸರಹದ್ದು ಬರಕನಹಾಳ್ ಗ್ರಾಮದ ಬಳಿ ಇರುವ ಕೆರೆಯಲ್ಲಿ ಅಕ್ರಮವಾಗಿ ಕಳ್ಳತನದಿಂದ ಒಂದು ಟಿಪ್ಪರ್ ಲಾರಿಗೆ  ಮರಳನ್ನು ತುಂಬುತ್ತಿರುವುದಾಗಿ ನನಗೆ ಭಾತ್ಮೀ ಬಂದಿರುತ್ತದೆಂದು ಹೇಳಿದ್ದು, ನಾನು, ಗುಪ್ತ ಮಾಹಿತಿ ಸಿಬ್ಬಂದಿ ಹೆಚ್.ಸಿ 315 ಎಂ.ಆರ್ ಶಂಕರ್ ಮತ್ತು ಬೀಟ್ ಸಿಬ್ಬಂದಿ ಪಿಸಿ-506 ನಾಗರಾಜು ರವರೊಂದಿಗೆ ಇಲಾಖಾ ಜೀಪಿನಲ್ಲಿ ಬರಕನಹಾಳ್ ಗ್ರಾಮದ ಕೆರೆಯ ಬಳಿ ಬೆಳಗ್ಗೆ 08:50 ಗಂಟೆಗೆ ಹೋಗಿ ನೊಡಲಾಗಿ ಯಾರೋ ಒಬ್ಬ ಆಸಾಮಿಯು ಬರಕನಹಾಳ್ ಗ್ರಾಮದ ಕೆರೆಯಲ್ಲಿ ಒಂದು ಟಿಪ್ಪರ್ ಲಾರಿಯನ್ನು ನಿಲ್ಲಿಸಿಕೊಂಡು ಟಿಪ್ಪರ್ ತುಂಬಾ ಮರಳನ್ನು ತುಂಬಿಕೊಂಡು ನಿಂತಿದ್ದು ನಮ್ಮನ್ನು ಕಂಡ ತಕ್ಷಣ ಸದರಿ ಆಸಾಮಿಯು ಓಡಿಹೋಗಲು ಮುಂದಾಗಿದ್ದು, ನಂತರ ನಾವುಗಳು ಈತನನ್ನು ಹಿಡಿಯಲು ಪ್ರಯತ್ನಿಸಿದ್ದು ಈತನು ನಮಗೆ ಸಿಗದೆ ಓಡಿಹೋದನು, ನಂತರ ನಿಂತಿದ್ದ ಟಿಪ್ಪರ್ ಲಾರಿಯನ್ನು ಅನ್ನು ಪರಿಶೀಲಿಸಲಾಗಿ ಟಿಪ್ಪರ್ ತುಂಬಾ ಮರಳು ತುಂಬಿದ್ದು ಕಂಡು ಬಂದಿದ್ದು,  ಸದರಿ ಟಿಪ್ಪರ್ ಲಾರಿಯನ್ನು ಪರಿಶೀಲನೆ ಮಾಡಲಾಗಿ ಕೆಎ-44-8430 ನೇ ನಂಬರಿನ  ಟಿಪ್ಪರ್ ಲಾರಿಯಾಗಿದ್ದು, ಸದರಿ ಟಿಪ್ಪರ್ ಲಾರಿಯ ಚಾಲಕನು ಮರಳು ತುಂಬಲು ಸರ್ಕಾರದಿಂದ ಯಾವುದೇ ಪರವಾನಗಿ ಪಡೆಯದೆ, ಸರ್ಕಾರಕ್ಕೆ ಯಾವುದೇ ರೀತಿಯ ಹಣವನ್ನು ಪಾವತಿ ಮಾಡದೇ ಬರಕನಹಾಳ್ ಗ್ರಾಮದ  ಕೆರೆಯಿಂದ ಕಳ್ಳತನದಿಂದ ಮರಳನ್ನು ತುಂಬಿಕೊಂಡು  ಸಾಗಿಸುತ್ತಿರುವುದು,  ತಿಳಿದು ಬಂದ ಮೇರೆಗೆ ಸ್ಥಳದಲ್ಲಿ ಬೀಟ್ ಪಿಸಿ-506 ನಾಗರಾಜು ರವರನ್ನು ಬಿಟ್ಟು ಹೆಚ್.ಸಿ 315 ಶಂಕರ್ ಎಂ.ಆರ್ ರವರೊಂದಿಗೆ ವಾಪಸ್ ಠಾಣೆಗೆ ಬಂದು ಓಡಿ ಹೋದ ಟಿಪ್ಪರ್ ಲಾರಿಯ ಚಾಲಕ ಮತ್ತು ಮಾಲೀಕನ ಮೇಲೆ ಪ್ರಕರಣ ದಾಖಲು ಮಾಡಿ ಮುಂದಿನ ಕ್ರಮ ಕೈಗೊಳ್ಳಲು ಸೂಚಿಸಿ ನೀಡಿದ ಜ್ಞಾಪನದ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

ಪಟ್ಟನಾಯಕನಹಳ್ಳಿ ಪೊಲೀಸ್ ಠಾಣಾ ಯು ಡಿ ಆರ್ ನಂ 23/17 ಕಲಂ 174 ಸಿ ಆರ್ ಪಿ ಸಿ

ದಿನಾಂಕ:11-12-2017 ರಂದು  ಬೆಳಿಗ್ಗೆ 10:30 ಗಂಟೆಗೆ  ಪಿರ್ಯಾದಿ  ಬೇಬಿ ಕೊಂ ನಾಗರಾಜು, 32ವರ್ಷ, ಹಂದಿಕುಂಟೆ ಗ್ರಾಮ, ಶಿರಾ ತಾಲ್ಲೋಕ್ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಶಂವೇನೆಂದರೆ, ಪಿರ್ಯಾದಿ ರವರು ಈಗ್ಗೆ ಸುಮಾರು 16 ವರ್ಷಗಳ ಹಿಂದೆ  ಹಂದಿಕುಂಟೆ ಗ್ರಾಮದ ದೊಡ್ಡಗೋವಿಂದಪ್ಪ ರವರ ಮಗನಾದ ನಾಗರಾಜು ರವರನ್ನು  ವಿವಾಹವಾಗಿದ್ದು,3 ಜನ ಹೆಣ್ಣು ಮಕ್ಕಳಿದ್ದು, ಅನ್ಯೂನ್ಯವಾಗಿ ಸಂಸಾರ ಮಾಡಿಕೊಂಡಿದ್ದು,ಪಿರ್ಯಾದಿ ರವರು 4-5 ವರ್ಷಗಳಿಂದ ವ್ಯವಸಾಯದಿಂದ  ಮಳೆ –ಬೆಳೆ ಇಲ್ಲದೆ ನಷ್ಠವಾಗಿದ್ದು, ಪಿರ್ಯಾದಿ ಗಂಡನ ಮಾವ ಮೂಡಲಗಿರಿಯಪ್ಪ ರವರು ಬ್ಯಾಂಕಿನಿಂದ  ಸಾಲ ಪಡೆದು 2ಸೀಮೆಹಸುಗಳನ್ನು ಕೊಡಿಸಿದ್ದು, ಈಗ್ಗೆ  2ವರ್ಷಗಳ ಹಿಂದೆ ಪಿರ್ಯಾದಿ ರವರ ಸಂಬಂಧಿಕರ ಜಮೀನನ್ನು ಖರೀದಿಸಲು  ಅವರಿವರ ಬಳಿ ಕೈ ಸಾಲ ಮಾಡಿ ಸಾಲ ತಿರಿಸುವ ಬಗೆ ಹೇಗೆ  ಹಾಗೂ ಹೆಣ್ಣುಮಕ್ಕಳ ವಿಧ್ಯಾಭ್ಯಾಸ , ಮದುವೆ  ಮಾಡುವ ಬಗೆ ಹೇಗೆ, ಸಾಲಗಾರರಿಗೆ ಏನು ಹೇಳಬೇಕು, ಸಾಲ ತಿರಿಸುವುದು ಹೇಗೆ ಎಂದು ಯಾವಗಲು ಚಿಂತೆ ಮಾಡುತ್ತಿದ್ದು, ಪಿರ್ಯಾದಿ ರವರು ದೇವರು ಇದ್ದಾನೆ ಎಂದು ಸಮಧಾನ ಪಡಿಸುತ್ತಿದ್ದು, ದಿನಾಂಕ:10-12-17 ರಂದು ರಾತ್ರಿ ಸುಮಾರು 01:00 ಗಂಟೆ ಸಮಯದಲ್ಲಿ ದನಗಳಿಗೆ ಮೇವು ಹಾಕಿ ಬರುವುದಾಗಿ  ತಿಳಿಸಿ ಮನೆಯಿಂದ  ಬಂದು ಹುಲ್ಲಿನ ರೊಪ್ಪದಲ್ಲಿರುವ ಹುಣಸೆ ಮರಕ್ಕೆ ನೇಣು  ಹಾಕಿಕೊಂಡು ಮೃಪಟ್ಟಿರುತ್ತಾರೆ. ಪಿರ್ಯಾದಿ ಗಂಡ ನಾಗರಾಜು ರವರು ಜಮೀನು ಖರೀದಿಸಲು ಹಾಗೂ ಸೀಮೆ ಹಸುಗಳನ್ನು ಕೊಳ್ಳಲು ಮಾಡಿದ್ದು ಸಾಲವನ್ನು  ಹೇಗೆ ತಿರಿಸುವುದು ಎಂದು ಚಿಂತಿಸುತ್ತಾ ಜಿಗುಪ್ಸೆಗೊಂಡು ನೇಣು ಹಾಕಿಕೊಂಡು ಮೃತಪಟ್ಟಿರುತ್ತಾರೆ ಮುಂದಿನ ಕ್ರಮ ಜರುಗಿಸಲು ನೀಡಿದ ಲಿಖಿತ ಪಿರ್ಯಾದನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ

ಹೊಸಬಡಾವಣೆ ಪೊಲೀಸ್ ಠಾಣಾ CR 158/2017 U/S 143, 147, 323, 324, 427, 504, 506, R/w 149 IPC

ದಿ: 11-12-2017 ರಂದು ಬೆಳಗ್ಗೆ 11-30  ಗಂಟೆಗೆ ಪಿರ್ಯಾದಿ ಸಚಿನ್ ಬಿನ್ ತಿಮ್ಮಪ್ಪ ಗೌಡ, (29) ವಕ್ಕಲಿಗ ಜನಾಂಗ, ಮ್ಯಾನೇಜರ್ ನಕ್ಷತ್ರ ಬಾರ್ ಬಿ.ಹೆಚ್ ರಸ್ತೆ, ತುಮಕೂರು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ :  10-12-2017 ರಂದು ರಾತ್ರಿ  ಸುಮಾರು 9-45 ಗಂಟೆ ಸಮಯದಲ್ಲಿ ತುಮಕೂರು ನಗರ ವಾಸಿಗಳಾದ ರಕ್ಷಿತ್ ಹಾಗೂ  ವಂಶಿ ಎಂಬುವರು ಪಿರ್ಯಾದಿ ಬಾರ್‌ಗೆ ಬಂದು ಮದ್ಯಪಾನ ಮಾಡುತ್ತಿದ್ದು ಮದ್ಯಪಾನ ಮಾಡುತ್ತಿದ್ದ ಸಮಯದಲ್ಲಿ ಕುಡಿದು ಜೋರಾಗಿ ಮಾತನಾಡಿಕೊಂಡು ಬಿಲ್ ಕೊಡಲು ಹತ್ತಿರ ಬರುವವರ ತರಹ ಬಂದು ಬಿಲ್ ಕೊಡದೆ ಹೋಗುತ್ತಿದ್ದು ಅವರುಗಳನ್ನು ಪಿರ್ಯಾದಿಯು ಕರೆಸಿ ಬಿಲ್ ಕೇಳಲಾಗಿ  ಅವರುಗಳು ಪಿರ್ಯಾದಿ  ಮೇಲೆ ಜಗಳ ತೆಗೆದು ಬಾಯಿಗೆ ಬಂದಂತೆ ಸೂಳೆಮಗನೇ ಕನ್ನಡ ಸಂಘದವರಿಗೆ ಹಣ ಕೇಳುತ್ತೀಯಾ ಈ ದಿವಸ ನಿನಗೊಂದು ಗತಿ ಕಾಣಿಸುತ್ತೇವೆ ತಾಳು ಎಂದು ಹೇಳಿ ಹೋದವರೆ 10 ನಿಮಿಷಗಳ ತರುವಾಯ ಅವರ ಜೊತೆಯಲ್ಲಿ ಆಟೋ ಕನ್ಸಲ್ ಟೆಂಟ್ ಸ್ವಾಮಿ ಹಾಗೂ ಇನ್ನೂ ಮೂರು ಜನ ಹುಡುಗರನ್ನು ಕರೆದುಕೊಂಡು ಬಂದು ಪಿರ್ಯಾದಿಗೆ  ಕೈಗಳಿಂದ ಹೊಡೆದು ಕಾಲುಗಳಿಂದ ಒದ್ದು ನೋವು ಪಡಿಸಿದ್ದಲ್ಲದೆ ವಿಕೆಟ್‌ ನಿಂದ ಪಿರ್ಯಾದಿಗೆ ಹೊಡೆದು  ಕಲ್ಲಿನಿಂದ  ಪಿರ್ಯಾದಿ ಬಾರ್‌ನ ಗ್ಲಾಸು, ಕಿಟಕಿ ಗ್ಲಾಸುಗಳನ್ನು  ಹೊಡೆದುಹಾಕಿ ಸುಮಾರು 25,000/-ರೂ ನಷ್ಟು ನಷ್ಠ ಉಂಟು ಮಾಡಿರುತ್ತಾರೆ  ಈ ಬಗ್ಗೆ  ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ನೀಡಿದ ದೂರು

 

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ 224/2017 ಕಲಂ 279, 337 ಐಪಿಸಿ

ದಿನಾಂಕ-11/12/2017 ರಂದು ಬೆಳಗ್ಗೆ 09-15 ಗಂಟೆಗೆ ಪಿರ್ಯಾದುದಾರರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ,  ದಿನಾಂಕ: 10-12-2017 ರಂದು ನನ್ನ ತಮ್ಮನಾದ ವೆಂಕಟಪ್ಪ ರವರು ತಮ್ಮ ಸ್ವಂತ ಕೆಲಸದ ಮೇಲೆ ಹೆಬ್ಬೂರಿಗೆ ಬಂದಿದ್ದು, ನಂತರ ಅದೇ ದಿವಸ ಸಾಯಂಕಾಲ ಸುಮಾರು 04-00 ಗಂಟೆ ಸಮಯದಲ್ಲಿ ನನ್ನ ತಮ್ಮ ವೆಂಕಟಪ್ಪ ರವರು ಹೆಬ್ಬೂರಿನ ಎಸ್,ಬಿ,ಐ ಬ್ಯಾಂಕ್‌ ಮುಂಭಾಗದ ತುಮಕೂರು-ಕುಣಿಗಲ್‌ ರಸ್ತೆಯನ್ನು ಎಸ್,ಬಿ,ಐ ಬ್ಯಾಂಕ್ ಕಡೆಯಿಂದ ಚಿಕ್ಕವೆಂಕಟಪ್ಪ ರವರ ಅಂಗಡಿಯ ಕಡೆಗೆ ದಾಟುತ್ತಿರುವಾಗ್ಗೆ, ತುಮಕೂರು ಕಡೆಯಿಂದ ಕುಣಿಗಲ್‌ ಕಡೆಗೆ ಹೋಗಲು ಬಂದ ಕೆಎ-06-ಡಿ-5887 ನೇ ಟೆಂಪೋ ಟ್ರಾವೆಲರ್‌ ವಾಹನದ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ರಸ್ತೆಯನ್ನು ದಾಟುತ್ತಿದ್ದ ನನ್ನ ತಮ್ಮ ವೆಂಕಟಪ್ಪ ರವರಿಗೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದ ಪರಿಣಾಮ ನನ್ನ ತಮ್ಮ ವೆಂಕಟಪ್ಪ ರವರಿಗೆ ತಲೆಗೆ, ಬಲಭುಜ ಹಾಗೂ ದೇಹದ ಇತರೆ ಭಾಗಗಳಿಗೆ ಏಟು ಬಿದ್ದು ರಕ್ತಗಾಯಗಳಾಗಿರುತ್ತೆ. ಸದರಿ ಅಪಘಾತದ ವಿಚಾರವನ್ನು ಸ್ಥಳದಲ್ಲಿಯೇ ಇದ್ದ ನಮ್ಮ ಗ್ರಾಮದ ವಾಸಿಯೇ ಆದ ಸತೀಶ್‌ ಬಿನ್ ಗಂಗಣ್ಣ ರವರು ನನಗೆ ಪೋನ್ ಮಾಡಿ ತಿಳಿಸಿದರು. ನಂತರ ಗಾಯಗೊಂಡಿದ್ದ ವೆಂಕಟಪ್ಪ ರವರನ್ನು ಸತೀಶ್‌ ಬಿನ್ ಗಂಗಣ್ಣ ಹಾಗೂ ಅಫಘಾತಪಡಿಸಿದ ಟೆಂಪೋ ಟ್ರಾವೆಲರ್‌ ವಾಹನದ ಚಾಲಕನಾದ ಚಿದಾನಂದ ಇಬ್ಬರೂ ಸೇರಿಕೊಂಡು ಅಫಘಾತಪಡಿಸಿದ ಟೆಂಪೋ ಟ್ರಾವೆಲರ್‌ ವಾಹನದಲ್ಲಿ ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದು, ನಂತರ ನಾನು ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಹೋಗಿ ನೋಡಲಾಗಿ ಅಪಘಾತವಾಗಿರುವುದು ನಿಜವಾಗಿತ್ತು. ನಂತರ ಅಲ್ಲಿನ ವೈದ್ಯರ ಸಲಹೆ ಮೇರೆಗೆ ನನ್ನ ತಮ್ಮ ವೆಂಕಟಪ್ಪ ರವರನ್ನು 108 ಆಂಬುಲೆನ್ಸ್ ವಾಹನದಲ್ಲಿ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿರುತ್ತೇವೆ. ಆದ್ದರಿಂದ ಈ ಅಪಘಾತಕ್ಕೆ ಕಾರಣನಾದ ಕೆಎ-06-ಡಿ-5887 ನೇ ಟೆಂಪೋ ಟ್ರಾವೆಲರ್‌ ವಾಹನದ ಚಾಲಕನಾದ ಚಿದಾನಂದ ರವರ ಮೇಲೆ ಕಾನೂನು ರೀತ್ಯಾ ಮುಂದಿನ ಕ್ರಮ ಜರುಗಿಸಬೇಕೆಂದು ನೀಡಿದ ಲಿಖಿತ ದೂರನ್ನು ಪಡೆದು ಠಾಣಾ ಪ್ರಕರಣ ದಾಖಲಿಸಿರುತ್ತೆ,

ಕೆ.ಬಿ.ಕ್ರಾಸ್ ಪೊಲೀಸ್ ಠಾಣಾ ಮೊ ನಂ 101/2017 ಕಲಂ 279,337, 304() ಐಪಿಸಿ

ದಿನಾಂಕ:-10/11.12.2017 ರಂದು ಮಧ್ಯರಾತ್ರಿ 02-15 ರಲ್ಲಿ ಕೆ ಬಿ ಕ್ರಾಸ್ ಪೊಲೀಸ್ ಠಾಣೆಯ ಸಿಪಿಸಿ-990 ರವರು ಬೆಳ್ಳೂರು ಆದಿ ಚುಂಚನಗಿರಿ ಬಿ ಜಿ ಎಸ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ರಾಜ ಬಿನ್ ಸುಬ್ಬಯ್ಯ ಎನ್ನುವವರ ಹೇಳಿಕೆಯನ್ನು ಪಡೆದು ವಾಪಾಸ್ಸು ಠಾಣೆಗೆ ಬಂದು ನೀಡಿದ ಹೇಳಿಕೆ ಅಂಶವೇನೆಂದರೆ  ಗಾಯಾಳು ರಾಜ ಮತ್ತು ಅವರ ಸ್ನೇಹಿತರೊಂದಿಗೆ  ಕಡಪದ ವೆಂಕಟ ಸುಬ್ಬಾರೆಡ್ಡಿ ಎನ್ನುವವರ ಸುಪರ್ದಿನಲ್ಲಿ ರಸ್ತೆ ಕೆಲಸಕ್ಕೆಂದು ತಿಪಟೂರಿಗೆ ಬಂದಿದ್ದು ನಮ್ಮಗಳನ್ನು ತಿಪಟೂರಿನಿಂದ ಕೆ ಬಿ ಕ್ರಾಸ್ ನ ಹಿಂಡಿಸ್ಕೆರೆ ಸಮೀಪ ರಸ್ತೆ ಕಾಮಗಾರಿ ಕೆಲಸಕ್ಕೆ ಕಳುಹಿಸಿದ್ದು ನಾವುಗಳು ಅದರಂತೆ ದಿನಾಂಕ:10.12.2017 ರಂದು ಹಿಂಡಿಸ್ಕೆರೆ ಗ್ರಾಮದ ಹತ್ತಿರ ರಸ್ತೆ ಕಾಮಗಾರಿ ಕೆಲಸ ಮುಗಿಸಿ ಸಂಜೆ ಕುಂದೂರು ಗ್ರಾಮದಲ್ಲಿ ಮಾಡಿರುವ ಬಾಡಿಗೆ ಮನೆಗೆ ಹೋಗಲು ಈ ರಸ್ತೆ ಕಾಮಗಾರಿ ಕೆಲಸಕ್ಕೆ ಬಾಡಿಗೆಗೆ ಪಡೆದಿದ್ದ ಕುಂದೂರು ಗ್ರಾಮದ ಹಾಲೇಶ್ ಎಂಬುವವರ ಬಾಬ್ತು ನೀರಿನ ಟ್ಯಾಂಕರ್ ಟ್ರಾಕ್ಟರ್ ನಲ್ಲಿ ನಾನು ಮತ್ತು ನನ್ನ ಸ್ನೇಹಿತರಾದ ಕುಶ, ವಿಜಯ್ ಕುಮಾರ ಗೋಪಾಲ ,ಚಿನ್ನ, ಸುಬ್ಬರಾಯಿಡು, ಶ್ರೀರಾಮ್  ರವರುಗಳ ಜೊತೆ ಸದರಿ ಟ್ರಾಕ್ಟರ್ ನ ಇಂಜಿನ್ ಮೇಲೆ ಎಲ್ಲರೂ ಕುಳಿತು ಕುಶ ರವರ ಚಾಲನೆಯಲ್ಲಿ ಕೆ ಬಿ ಕ್ರಾಸ್ ಗೆ ಬಂದು ಹೋಟೆಲ್ ನಲ್ಲಿ ಊಟ ಕಟ್ಟಿಸಿಕೊಂಡು ಆನಂತರ ಕಂದೂರಿನ  ಮನೆಗೆ ಹೋಗಲು ಎನ್ ಹೆಚ್ 150(ಎ) ರಸ್ತೆಯಲ್ಲಿ ಸಂಜೆ ಸುಮಾರು 6-45 ರಲ್ಲಿ ಕುಂದೂರು ಗ್ರಾಮದ ಹತ್ತಿರ ಇರುವ ಹೇಮಾವತಿ ಚಾನೆಲ್ ನ ಬ್ರಿಡ್ಜ್ ಸಮೀಪ ಟ್ರಾಕ್ಟರ್ ಚಾಲಕ ಕುಶ ಅತೀ ವೇಗ ಮತ್ತು ಅಜಾಗರೂಕತೆಯಿಂದ  ಟ್ರಾಕ್ಟರ್ ಚಲಾಯಿಸಿಕೊಂಡು ಹೋಗಿ  ಹೇಮಾವತಿ ನಾಲೆ ಬ್ರಿಡ್ಜ್ ಗೆ ಡಿಕ್ಕಿ ಹೊಡೆಸಿ ಹೇಮಾವತಿ ನಾಲೆಗೆ ಬೀಳಿಸಿದ ಪರಿಣಾಮ ಚಾಲಕ ಕುಶ ಸದರಿ ಟ್ರಾಕ್ಟರ್ ನ ಇಂಜಿನ್ ಕೆಳಗೆ ಸಿಕ್ಕಿ ಸ್ಥಳದಲ್ಲೇ ಮೃತ ಹೊಂದಿದ್ದು ಇನ್ನುಳಿದ ನಮ್ಮಗಳಿಗೆ ರಕ್ತಗಾಯಗಳಾಗಿದ್ದು ಅಲ್ಲಿಗೆ ಬಂದ ಸಾರ್ವಜನಿಕರು 108 ಆ್ಯಂಬುಲೆನ್ಸ್ ಕರೆಸಿ ತುರುವೇಕೆರೆ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ಕಳುಹಿಸಿಕೊಟ್ಟಿದ್ದು ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆ ಬಗ್ಗೆ ಬೆಳ್ಳೂರಿನ ಆದಿ ಚುಂಚನಗಿರಿ ಬಿ ಜಿ ಎಸ್ ಆಸ್ಪತ್ರೆಗೆ ಅ್ಯಂಬುಲೆನ್ಸ್ ನಲ್ಲಿ ಕಳುಹಿಸಿಕೊಟ್ಟಿದ್ದು ಮಾರ್ಗ ಮಧ್ಯೆ ಸಮಯ ಸುಮಾರು 8-45ರಲ್ಲಿ ಗಾಯಾಳು ಸುಬ್ಬರಾಯಿಡು ಮೃತನಾಗಿದ್ದು ಇನ್ನುಳಿದ ನಾವುಗಳು ಬಿ ಜಿ ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಮೃತ ಸುಬ್ಬರಾಯಿಡು ಶವ ಬಿಜಿಎಸ್ ಆಸ್ಪತ್ರೆಯಲ್ಲಿದ್ದು ಈ ಅಫಘಾತಕ್ಕೆ ಮೇಲ್ಕಂಡ ಚಾಲಕ ಕುಶ ರವರ ಅತೀ ವೇಗ ಮತ್ತು ಅಜಾಗರೂಕತೆಯೇ ಕಾರಣವಾಗಿದ್ದು ಸದರಿ ಚಾಲಕನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹಾಗೂ ಸದರಿ ಟ್ರಾಕ್ಟರ್ ನ ನಂಬರ್ ನನಗೆ ತಿಳಿದಿಲ್ಲವೆಂದು ತೆಲಗು ಭಾಷೆಯಲ್ಲಿ ನೀಡಿದ ಹೇಳಿಕೆಯನ್ನು ಕೆ ಬಿ ಕ್ರಾಸ್ ಪೊಲೀಸ್ ಠಾಣೆ ಸಿಪಿಸಿ-458 ರಮೇಶ್ ರವರು ಕನ್ನಡಕ್ಕೆ ಅನುವಾದ ಮಾಡಿ ಹೇಳಿದಂತೆ ಹೇಳಿಕೆಯನ್ನು ಸಮಯ ರಾತ್ರಿ 11-15 ರಿಂದ ಮಧ್ಯರಾತ್ರಿ 12-00 ಗಂಟೆಯವರೆಗೆ ಪಡೆದು ವಾಪಾಸ್ ಠಾಣೆಗೆ ಮಧ್ಯರಾತ್ರಿ 02-15 ಗಂಟೆಗೆ ಮುಂದಿನ ಕ್ರಮದ ಬಗ್ಗೆ ನೀಡಿದ ಹೇಳಿಕೆಯ ವರದಿಯನ್ನು ಪಡೆದು ಠಾಣಾ ಮೊ ನಂ 101/2017 ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೆ.

 


Press Note 12-12-17

ಪತ್ರಿಕಾ ಪ್ರಕಟಣೆ

:: ದಿನಾಂಕ 12-12-2017  ::

ತುಮಕೂರು ನಗರದಲ್ಲಿ ಮೂಲ ಆ.ಐ. ಸ್ಮಾಟ್‌ ಕಾರ್ಡಗಳ ಮೇಲೆ ಡಿ.ಟಿ.ಪಿ. ಮೂಲಕ ನಕಲಿ ಬ್ಯಾಡ್ಜ್ ನಂಬರುಗಳನ್ನು ನೀಡಿ ನಕಲಿ ಪರವಾನಗಿಗಳನ್ನು ಮಾಡಿ ಕೊಡುತ್ತಿದ್ದ ಆರೋಪಿ ಬಂಧನ.

ತುಮಕೂರು ನಗರ ಪೊಲೀಸ್ ಠಾಣಾ ಮೊ.ನಂ:201/2017 ಕಲಂ 420 468 471 ಐ.ಪಿ.ಸಿ.

ತುಮಕೂರು ನಗರದಲ್ಲಿ ಅಕ್ರಮವಾಗಿ ಪಮರ್ಿಟ್ ಇಲ್ಲದೆ ಬೋಗಸ್ ಡಿ.ಎಲ್.ಗಳನ್ನು ಮತ್ತು ಒಂದೇ ಡಿ.ಎಲ್. ಮೇಲೆ 3-4 ಪರ್ಮಿಟ್ ಗಳನ್ನು ಪಡೆದು ಕಾನೂನು ವಿರುದ್ದವಾಗಿ ಆಟೋ ಚಾಲನೆ ಮಾಡುತ್ತಿರುವುದನ್ನು ನಿಯಂತ್ರಿಸಲು ಪೊಲೀಸ್ ಮತ್ತು ಅರ್.ಟಿ.ಓ. ಸಹಯೋಗದೊಂದಿಗೆ ತುಮಕೂರು ನಗರದಲ್ಲಿ ಸಂಚರಿಸುವ ಆಟೋ ರೀಕ್ಷಾಗಳಿಗೆ ಟಿ.ಟಿ.ಪಿ ಮತ್ತು ದಾಖಲಾತಿಗಳನ್ನು ಪರಿಶೀಲನೆಯನ್ನು ದಿನಾಂಕ 08-12-2017 ರಂದು ಬೆಳಿಗ್ಗೆ 11-00 ಗಂಟೆ ಸಮಯದಲ್ಲಿ ತುಮಕೂರು ಜಿಲ್ಲಾ ಸಶಸ್ತ್ರ ಪಡೆ ಮೈಧಾನದಲ್ಲಿ ಮಾಡುತ್ತಿರುವಾಗ ತುಮಕೂರು ನಗರದ ಮೆಳೆಕೋಟೆ ವಾಸಿ ಸಲೀಂ ಪಾಷ ರವರ ದಾಖಲಾತಿಗಳನ್ನು ಪರಿಶೀಲಿಸಲಾಗಿ ಮೂಲ ಚಾಲನಾ ಪರವಾನಗಿಯಲ್ಲಿ ನಕಲಿ ಬ್ಯಾಡ್ಜ್ ನಂಬರನ್ನು ಹಾಕಿರುವುದು ಕಂಡು ಬಂದಿದ್ದು ಸದರಿ ಸಲೀಂ ಪಾಷಾ ರವರು ನಕಲಿ ಬ್ಯಾಡ್ಜ್ ನಂಬರನ್ನು ಮಾಡಿಕೊಟ್ಟವರ ಮೇಲೆ ದೂರು ನೀಡಿದ್ದರ ಮೇರೆಗೆ ಪ್ರಕರಣ ದಾಖಲಾಗಿರುತ್ತೆ.

 

ತುಮಕೂರು ನಗರ ಠಾಣೆಯ ಅಧಿಕಾರಿಗಳು ಅರೋಪಿ ಜಗದೀಶ್ ಬಸವಂತಪ್ಪ ಪೂಜಾರ್ ಬಿನ್ ಬಸವಂತಪ್ಪ ಪೂಜಾರ್, ನಂದಿ ಗ್ರಾಫೀಕ್ಸ್ ನಲ್ಲಿ ಡಿ.ಟಿ.ಪಿ. ಮತ್ತು ಪ್ರಿಂಟಿಂಗ್ ಕೆಲಸ, ಉಸಿರಾ ನಿಲಯ, ವೀರಭದ್ರಸ್ವಾಮಿ ದೇವಸ್ಥಾನದ ಮುಂಭಾಗ, ಚಿಕ್ಕಪೇಟೆ, ತುಮಕೂರು ಟೌನ್, ರವರನ್ನು ಹಿಡಿದು ವಿಚಾರ ಮಾಡಲಾಗಿ ಶ್ರೀಕಾಂತ್ ಎಂಬ ವ್ಯಕ್ತಿಯು ಮೂಲ ಡಿ.ಎಲ್.ಗಳನ್ನು ತಂದು ನೀಡುತ್ತಿದ್ದು, ಶ್ರೀಕಾಂತನೊಂದಿಗೆ ಸೇರಿಕೊಂಡು ಮೂಲ ಡಿ.ಎಲ್.ಗಳ ಮೇಲೆ ಡಿ.ಟಿ.ಪಿ. ಮೂಲಕ ನಕಲಿ ಬ್ಯಾಡ್ಜ್ ನಂಬರ್ ಮತ್ತು ವಾಯಿದೆ ದಿನಾಂಕಗಳನ್ನು ಚಿಕ್ಕಪೇಟೆಯಲ್ಲಿರುವ ಆರೋಪಿತ ನಂದಿ ಗ್ರಾಫೀಕ್ ಸೆಂಟರ್ ನಲ್ಲಿ ಪ್ರಿಂಟ್ ಮಾಡಿಕೊಡುತ್ತಿದ್ದವನನ್ನು ದಿನಾಂಕ 11-12-2017 ರಂದು ಬಂಧಿಸಲಾಗಿದೆ.

 

ಸದರಿ ಆರೋಪಿಯನ್ನು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಡಾ. ದಿವ್ಯಾ ವಿ. ಗೋಪಿನಾಥ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಶೋಭಾರಾಣಿ,  ಹಾಗೂ ಪೊಲೀಸ್ ಉಪಾಧೀಕ್ಷಕರಾದ ಶ್ರೀ ನಾಗರಾಜು ರವರುಗಳ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕಕರಾದ ಶ್ರೀ ಎಂ.ಪಿ. ಗಂಗಲಿಂಗಯ್ಯ, ಶ್ರೀ ಕೆ.ಸಿ.ವಿಜಯಕುಮಾರ್ ಪಿ.ಎಸ್.ಐ ಹಾಗೂ ಸಿಬ್ಬಂದಿ ಮಂಜುನಾಥ.ಆರ್.ಪಿ., ರವರುಗಳು ಆರೋಪಿಯನ್ನು ಬಂಧಿಸಿರುತ್ತಾರೆ.  ಆರೋಪಿಯನ್ನು ಪತ್ತೆ ಮಾಡಿದ ತಂಡಕ್ಕೆ ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ರವರು ಶ್ಲಾಘಿಸಿರುತ್ತಾರೆ.Monday, 11 December 2017

Crime Incidents 11-12-17

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣಾ ಯುಡಿಆರ್ ನಂ 10/2017 ಕಲಂ 174 ಸಿ.ಆರ್.ಪಿ.ಸಿ.

ದಿನಾಂಕ 10/12/17 ರಂದು ಬೆಳಗ್ಗೆ 08-15 ಗಂಟೆಗೆ ಶಿವಶಂಕರಪ್ಪ ತಡಸೂರು ರವರು ಠಾಣೆಗೆ ಹಾಜರಾಗಿ ನೀಡಿದ  ದೂರಿನ ಅಂಶವೇನೆಂದರೆ, ನನ್ನ ತಂಗಿ ಪುಷ್ಪಲತಾ 5 ನೆಯವಳು. ಈಕೆಯನ್ನು ಈಗ್ಗೆ 15 ವರ್ಷಗಳ ಹಿಂದೆ ಹಾಸನ ಜಿಲ್ಲೆ ಬಿ.ಪಿ. ಕೊಪ್ಪಲಿನ ಚಂದ್ರಶೇಖರ್ ರವರಿಗೆ ಮದುವೆ ಮಾಡಿಕೊಟ್ಟಿದ್ದರು. ನನ್ನ ತಂಗಿ ಬಾವ ಚೆನ್ನಾಗಿದ್ದರು. ನನ್ನ ತಂಗಿಗೆ ಮಕ್ಕಳಾಗಿರಲಿಲ್ಲ. ಇದೇ ವಿಚಾರಕ್ಕೆ ಕೊರಗಿನಿಂದ ಮಾನಸಿಕವಾಗಿ ಖಾಯಲೆಗೊಳಗಾಗಿದ್ದಳು. ಈ ಬಗ್ಗೆ 3 ವರ್ಷಗಳಿಂದ ಬೆಂಗಳೂರು ನಿಮಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದೆವು. ಹೀಗಿರುವಾಗ ನನ್ನ ತಂಗಿ ಗಂಡನ ಮನೆ ಮತ್ತು ತವರು ಮನೆಗೆ ಓಡಾಡಿಕೊಂಡಿದ್ದಳು. ನಂತರ ಎಲ್ಲಿಗೋ ಹೋಗಿ ಇರುತ್ತಿದ್ದಳು. ನಾವುಗಳು ಹುಡುಕಿ ಕರೆದುಕೊಂಡು ಬರುತ್ತಿದ್ದೆವು. ದಿನಾಂಕ 07/12/2017 ರಂದು ನನ್ನ ತಂಗಿ ನನ್ನ ತಮ್ಮ ಶ್ರೀಧರನ ಮನೆಗೆ ಬಂದು ಅಲ್ಲಿಯೇ ಉಳಿದಿದ್ದಳು. ನಾನು ದಿನಾಂಕ 10/12/2017 ರಂದು ಬೆಳಗ್ಗೆ ಸುಮಾರು 7 ಗಂಟೆಯಲ್ಲಿ ಪ್ರತಿದಿನದಂತೆ ನಾನು ನಮ್ಮ ತೋಟದ ಹತ್ತಿರ ಬಂದಾಗ ಪುಷ್ಪಲತಾಳು ನಮ್ಮ ಶ್ರೀಧರನ ತೆಂಗಿನ ತೋಟದಲ್ಲಿನ ಎಳ್ಳಿಕಾಯಿ ಮರಕ್ಕೆ ಹಗ್ಗದಿಂದ ಕುಣಿಕೆ ಬಿಗಿದುಕೊಂಡು ನೇತಾಡುತ್ತಿದ್ದಳು. ಈ ಬಗ್ಗೆ ನನ್ನ ತಮ್ಮ ಶ್ರೀಧರ ಮತ್ತು ಇತರರಿಗೆ ವಿಷಯ ತಿಳಿಸಿ ನನ್ನ ಬಾವನಿಗೂ ವಿಷಯ ತಿಳಿಸಿರುತ್ತೇನೆ. ನನ್ನ ತಂಗಿ ಮಾನಸಿಕವಾಗಿ ಮಕ್ಕಳಿಲ್ಲ ಎಂದು ನೊಂದು ಕೊರಗಿನಿಂದ ಜಿಗುಪ್ಸೆ ಹೊಂದಿ ತನ್ಮೂಲಕ ತಾನೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾಳೆ. ಇದರಲ್ಲಿ ಯಾವುದೇ ಅನುಮಾನ ಇರುವುದಿಲ್ಲ. ಇತ್ಯಾದಿ ನೀಡಿದ ದೂರನ್ನು ಪಡೆದು ಠಾಣಾ ಯು.ಡಿ.ಆರ್ ನಂಬರ್ 10/2017 ಕಲಂ 174 ಸಿ.ಆರ್.ಪಿ.ಸಿ ರೀತ್ಯ ಪ್ರಕರಣ ದಾಖಲಿಸಿರುತ್ತೆ.

ಹುಲಿಯೂರುದುರ್ಗ ಪೊಲೀಸ್‌ ಠಾಣಾ; ಮೊ ನಂ: 239/2017 ಕಲಂ: 279 337 IPC

ಈ ಕೇಸಿನ ಸಾರಾಂಶವೇನೆಂದರೆ ದಿನಾಂಕ: 10-12-2017 ರಂದು ಮಧ್ಯಾಹ್ನ 03-30 ಗಂಟೆಗೆ ಅಶೋಕ್ ವಿ ಬಿನ್ ವೆಂಕಟಶೆಟ್ಟಿ, ನಂ: 3508/ಸಿ, 6ನೇ ಅಡ್ಡ ರಸ್ತೆ, ಗಾಯಿತ್ರಿನಗರ, ಬೆಂಗಳೂರು ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ  ದಿನಾಂಕ: 10-12-2017 ರಂದು ಪಿರ್ಯಾದಿಯು ತನ್ನ ಸ್ನೇಹಿತರಾದ ಅಪ್ಜಲ್ ರವರ ಬಾಬ್ತು KA03-NA-0593 ನೇ ಕಾರಿನಲ್ಲಿ ತಮ್ಮ ಹೆಂಡತಿ ಉಷಾ, ಮಗಳು ಖುಷಿ, ಅಕ್ಕ ಮೀನಾಕ್ಷಿ, ಮಾವ ಶಶಿಕುಮಾರ್ ರವರೊಂದಿಗೆ ಹುಲಿಯೂರುದುರ್ಗದ ಶ್ರೀ ಹುಲಿಯೂರಮ್ಮ ದೇವಸ್ಥಾನಕ್ಕೆ ಪೂಜೆಗೆಂದು ಬಂದಿದ್ದು ಕಾರನ್ನು ಪಿರ್ಯಾದಿಯೇ ಚಾಲನೆ ಮಾಡುತ್ತಿದ್ದು, ಮಾಗಡಿ ಹುಲಿಯೂರುದುರ್ಗ ಮಾರ್ಗವಾಗಿ ನೀಲಸಂದ್ರದ ಹತ್ತಿರ ಕರೇಕಲ್ಲು ಗುಡ್ಡೆ ಹತ್ತಿರ ಮಧ್ಯಾಹ್ನ 01-00 ಗಂಟೆ ಸಮಯದಲ್ಲಿ ಬರುತ್ತಿರುವಾಗ್ಗೆ  ಅದೇ ಸಮಯಕ್ಕೆ ಎದುರಿಗೆ ಹುಲಿಯೂರುದುರ್ಗದ ಕಡೆಯಿಂದ ಬಂದ ಒಬ್ಬ ಕಾರಿನ ಚಾಲಕನು ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಪಿರ್ಯಾದಿ ಚಾಲನೆ ಮಾಡುತ್ತಿದ್ದ ಕಾರಿಗೆ ಡಿಕ್ಕಿಪಡಿಸಿದ್ದರಿಂದ ಪಿರ್ಯಾದಿಯ ಕಾರಿನಲ್ಲಿದ್ದ ಅವರ ಹೆಂಡತಿ ಉಷಾ ರವರಿಗೆ ಹಣೆಯ ಮುಂಭಾಗ ರಕ್ತಗಾಯಗಳಾಗಿದ್ದು ಬೇರೆ ಯಾರಿಗೂ ಸಹ ಗಾಯಗಳು ಆಗಿರುವುದಿಲ್ಲ.  ನಂತರ ಪಿರ್ಯಾದಿಯು ಡಿಕ್ಕಿಪಡಿಸಿದ ಕಾರಿನ ನಂಬರ್ ನೋಡಲಾಗಿ  KA11-A-7002  ನೇ ಇಂಡಿಕಾ ಸಿಲ್ವರ್ ಕಾರು ಆಗಿರುತ್ತೆ. ನಂತರ ಪಿರ್ಯಾದಿಯು ತಕ್ಷಣ ರಸ್ತೆಯಲ್ಲಿ ಬಂದ ಯಾವುದೋ ಒಂದು ವಾಹನದಲ್ಲಿ ಅವರ ಹೆಂಡತಿ ಉಷಾ ರವರನ್ನು ಅವರ ಅಕ್ಕ, ಮಾವ ರವರ ಜೊತೆಯಲ್ಲಿ ಬೆಂಗಳೂರಿಗೆ ಆಸ್ಪತ್ರೆಗೆ ಕಳುಹಿಸಿರುತ್ತಾರೆ. ಅಪಘಾತಪಡಿಸಿದ ಕಾರಿನಲ್ಲಿದ್ದ ಸುರೇಶ್ ರವರಿಗೂ ಹಣೆಗೆ, ಎದೆ ಭಾಗಕ್ಕೂ ಎಡಕೈ ಗೆ ಪೆಟ್ಟು ಬಿದ್ದಿರುತ್ತೆ. ಅಪಘಾತವಾದ ಎರಡೂ ಕಾರುಗಳು ಸ್ಥಳದಲ್ಲೇ ಇರುತ್ತವೆ. ಆದ್ದರಿಂದ ಈ ಅಪಘಾತಕ್ಕೆ ಕಾರಣನಾದ ಚಾಲಕ ರವಿ ರವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲು ಮಾಡಿರುತ್ತೆ.


Crime Incidents 10-12-17

ಕ್ಯಾತ್ಸಂದ್ರ ಪೊಲೀಸ್ ಠಾಣಾ ಮೊ.ನಂ: 309/2017, ಕಲಂ: 324.354.504.506.ರೆ/ವಿ.34.ಐಪಿಸಿ. ಮತ್ತು ಕಲಂ.3(1)(r) 3(1) 3(5a) SC/ST PA.Act.

ದಿನಾಂಕ.09/12/2017 ರಂದು ಸಾಯಂಕಾಲ 4.00 ಗಂಟಗೆ ಪಿರ್ಯಾದಿ ಲಕ್ಷ್ಮೀಪತಯ್ಯ ಬಿನ್ ಲೇಟ್ ಗಂಗಲಕ್ಷ್ಮಯ್ಯ  ಕೋಳಿಹಳ್ಳಿ ಗ್ರಾಮ ಊರ್ಡಿಗೆರೆ  ಹೋಬಳಿ ತುಮಕೂರು ತಾಲ್ಲೂಕು. ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ನಮ್ಮ ಬಾಬ್ತು ಕೋಳಿಹಳ್ಳಿ ಗ್ರಾಮಕ್ಕೆ ಸೇರಿದ ಸರ್ವೇ ನಂ.108 ರಲ್ಲಿ 35 ಗುಂಟೆ ಸರ್ವೇ ನಂ.17/1 ರಲ್ಲಿ 1 ಎಕರೆ 12. ಗುಂಟೆ ಜಮೀನಿಗಳು ಇದ್ದು  ಸದರಿ ಜಮೀನುಗಳ ಬಗ್ಗೆ ಗಂಗಮ್ಮ ಕೋಂ ಹನುಮಯ್ಯ ರವರು ಸುಳ್ಳುದಾಖಲೆಗಳನ್ನು ಸೃಷ್ಟಿಸಿಕೊಂಡು ಅವರುಗಳ ಹೆಸರುಗಳಿಗೆ ಮಾಡಿಸಿಕೊಂಡಿದ್ದು ಇದಕ್ಕೆ ನಾವು ಸಿವಿಲ್ ನ್ಯಾಯಾಲಯದಲ್ಲಿ ಕೇಸು ಹಾಕಿಕೊಂಡು ಅನುಭವದಲ್ಲಿ ಇರುತ್ತೇವೆ. ದಿನಾಂಕ.01/12/2017 ರಂದು ಬೆಳಿಗ್ಗೆ 9.30 ಗಂಟೆಯಲ್ಲಿ ನಾನು ನನ್ನ ಹೆಂಡತಿ ಕೆಂಪಮ್ಮ ನನ್ನ ಮಗ ಯೋಗಿಶ್ ಮೂರು ಜನರು ಹೊಲದಲ್ಲಿ ತೊಗರಿ ಕಾಯಿಗಳನ್ನುಕಿಳುತ್ತಿರುವಾಗ್ಗೆ ಮಂಜುನಾಥ ಬಿನ್ ಹನುಮಯ್ಯ ಬಂದವನೇ ಏನೋ ನಾಯಕ ಜಾತಿಯ ಸೂಳೆಮಗನೇ ನಿನಗೆ ಹೇಳಿದ್ದೆ ಈ ಜಮೀನಿನಲ್ಲಿ ತೊಗರಿಕಾಯಿ ಕೀಳಬೇಡ ಎಂದು ಆದರೂ ಬಂದಿದ್ದೀಯಾ ಎಂದು ಬೈದು ನನ್ನ ಹೆಂಡತಿಯ ಮೈ ಮೇಲಿದ್ದ ಬಟ್ಟೆಗಳನ್ನು ಹರಿದು ಹಾಕಿ ಅವಮಾನ ಮಾಡಿರುತ್ತಾನೆ.ಪುಟ್ಟಯ್ಯನಪಾಳ್ಯದ ಪಟ್ಟರಾಜು ಬಿನ್ ವೀರಣ್ಣ ಈತನ ಹೆಂಡತಿ ಪದ್ಮಮ್ಮ ಕೋಂ ಪುಟ್ಟರಾಜು ಇವರುಗಳು ಬಂದು ಏನ್ರೋ ನಾಯಕ ಜಾತಿ ಸೂಳೆಮಗನೇ ಇತ್ಯಾದಿಯಾಗಿ ಬೈದು ಪುಟ್ಟರಾಜನು ದೊಣ್ಣೆಯನ್ನು ಹಿಡಿದುಕೊಂಡು ಬಂದು ತಲೆಯ ಮುಂಭಾಗದ ಎಡಬಾಗಕ್ಕೆ ಹೊಡೆದು ರಕ್ತ ಗಾಯಪಡಿಸಿ ಈ ನಾಯಕ ಜಾತಿ ಮುಂಡೆನಾ ಇಲ್ಲಿಯೇ ಸಾಯಿಸಿಬಿಡುತ್ತೇನೆಂದು ಆಕೆಯ ಮೈ ಮೇಲಿದ್ದ ಬಟ್ಟೆಗಳನ್ನು ಕಿತ್ತುಹಾಕಿ ಅವಮಾನ ಪಡಿಸಿರುತ್ತಾರೆ. ಇತ್ಯಾದಿಯಾಗಿ ನೀಡಿದ ದೂರನ್ನು ಪಡೆದು ಮೊ.ನಂ;309/17.ಕಲಂ. 324.354.504.506.ರೆ/ವಿ.34.ಐಪಿಸಿ. ಮತ್ತು ಕಲಂ.3(1)(r) 3(1)(s) 3(5a) SC/ST PA.Act. ರೀತ್ಯಾ ಪ್ರಕರಣ ದಾಖಲಿಸಿ ಪ್ರವ ವರದಿಯನ್ನು ಘನ ನ್ಯಾಯಾಲಯಕ್ಕೆ ಸಲ್ಲಿಸಿಕೊಂಡು ಈ ತುರ್ತು ವರದಿ ತಮ್ಮ ಅವಘಹನೆಗಾಗಿ ಸಲ್ಲಿಸಿಕೊಂಡಿರುತ್ತೆ.Saturday, 09 December 2017

Crime Incidents 09-12-17

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ 223/2017 ಕಲಂ 279, ಐಪಿಸಿ

ದಿನಾಂಕ:08-12-2017 ರಂದು ರಾತ್ರಿ 9-30 ಗಂಟೆಗೆ ಪಿರ್ಯಾದಿಯಾದ ರವಿಕುಮಾರ್ ಬಿನ್ ಗಂಗಹನುಮಯ್ಯ, 43 ವರ್ಷ, ನಾಯಕ ಜನಾಂಗ, ಬ್ಯಾಡ್ಜ ನಂ-10608, ಕೆ.ಎಸ್.ಆರ್.ಟಿ.ಸಿ ಬಸ್ಸ್ ಡ್ರೈವರ್, ತುಮಕೂರು ಘಟಕ-01, ವಾಸ;- 5 ನೇ ಕ್ರಾಸ್, ಕುವೆಂಪು ನಗರ, ಗುಬ್ಬಿ ಟೌನ್, ತುಮಕೂರು ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ನಾನು ಕೆ.ಎಸ್.ಆರ್.ಟಿ.ಸಿ ತುಮಕೂರು ಘಟಕ-01 ರಲ್ಲಿ ಬಸ್ ಡ್ರೈವರ್ ಆಗಿ ಈಗ್ಗೆ ಸುಮಾರು 12 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದು, ಅದರಂತೆ ದಿನಾಂಕ:08-12-2017 ರಂದು ಬೆಳಿಗ್ಗೆ 8-00 ಗಂಟೆಗೆ ಕರ್ತವ್ಯಕ್ಕೆ ಹಾಜರಾಗಿ ಕೆಎ-17-ಎಫ್ -1186 ನೇ ಕೆಎಸ್‌ಆರ್‌ಟಿಸಿ ಬಸ್ ನ ಚಾಲಕ ಕರ್ತವ್ಯಕ್ಕೆ ನಾನು ಮತ್ತು ಸದರಿ ಬಸ್ಸಿನ ನಿರ್ವಾಹಕ ಕರ್ತವ್ಯಕ್ಕೆ ರೇವಣಸಿದ್ದಪ್ಪ ಬ್ಯಾಡ್ಜ್ ನಂ-15006, ರವರಿಗೆ ನೇಮಕಗೊಂಡಿದ್ದು, ಅದರಂತೆ ನಾವುಗಳು ಸದರಿ ಬಸ್ಸನ್ನು ಬೆಳಿಗ್ಗೆ 8-30 ಗಂಟೆಗೆ ತುಮಕೂರು ಬಿಟ್ಟು, -ಗುಬ್ಬಿಯಿಂದ-ಹೆಬ್ಬೂರಿನ ಕೆಎಸ್‌ಆರ್‌ಟಿಸಿ ಬಸ್ಸ್ ನಿಲ್ದಾಣಕ್ಕೆ ಬಂದು ಅಲ್ಲಿಂದ ಕುಣಿಗಲ್ ತುಮಕೂರು ಟಾರ್ ರಸ್ತೆ, ಸಿ ಎಸ್ ಪುರ ಕ್ರಾಸ್‌ನ ಕಡೆ ರಾತ್ರಿ ಸುಮಾರು 8-30 ಗಂಟೆ ಸಮಯದಲ್ಲಿ ನಾನು ಬಸ್ಸ್‌ನ ಇಂಡಿಕೇಟರ್ ಗಳನ್ನು ಹಾಕಿಕೊಂಡು ಎಡಭಾಗಕ್ಕೆ ತಿರುಗಿಸುತ್ತಿದ್ದಾಗ ಕುಣಿಗಲ್ ಕಡೆಯಿಂದ ಬಂದ ಲಾರಿಯ ಚಾಲಕ ತನ್ನ ಲಾರಿಯನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ನಾನು ತಿರುಗಿಸುತ್ತಿದ್ದ ಕೆ.ಎಸ್.ಆರ್‌.ಟಿಇಸಿ ಬಸ್ಸನ ಹಿಂಭಾಗಕ್ಕೆ ಡಿಕ್ಕಿ ಹೊಡೆಯಿಸಿ ಅಪಘಾತ ಪಡಿಸಿದ್ದರಿಂದ ಬಸ್ಸಿಗೂ ಲಾರಿಗೂ ಜಕ್ಕಂ ಆಗಿರುತ್ತೆ, ಅದೇ ವೇಳೇಯಲ್ಲಿ ಕುಣಿಗಲ್ ಕಡೆಯಿಂದ ಹೆಬ್ಬೂರಿನ ಕಡೆಗೆ ಲಾರಿ ಪಕ್ಕದಲ್ಲೇ ಬರುತ್ತಿದ್ದ ಕೆಎ-06-ಸಿ-2458 ನೇ ಮಿನಿಬಸ್ಸಿಗೂ ಸಹ ಲಾರಿಯು ಡಿಕ್ಕಿಹೊಡೆಯಿಸಿ ಅಪಘಾತಪಡಿಸಿದ್ದರಿಂದ ಮಿನಿಬಸ್ಸು ಸಹ ಜಕ್ಕಂಗೊಂಡಿದ್ದು, ನಾನು ಬಸ್ಸ್ ಇಳಿದು ಅಪಘಾತ ಪಡಿಸಿದ ಲಾರಿಯ ನಂಬರ್ ನೋಡಲಾಗಿ ಎನ್.ಎಲ್-01-ಕೆ-6058 ನೇ ಲಾರಿಯಾಗಿದ್ದು, ಈ ಅಪಘಾತದಲ್ಲಿ ಯಾರಿಗೂ ಸಹ ರಕ್ತ ಗಾಯಗಳಾಗಿರುವುದಿಲ್ಲ. ಈ ಅಪಘಾತಕ್ಕೆ ಕಾರಣನಾದ ಎನ್.ಎಲ್-01-ಕೆ-6058 ನೇ ಲಾರಿಯ ಚಾಲಕನ  ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ದೂರು ನೀಡಿರುತ್ತೇನೆ. ಹಾಗೂ ಅಪಘಾತವಾದ ವಾಹನಗಳು ರಸ್ತೆಯ ಬದಿಯಲ್ಲಿ ಇರುತ್ತವೆ ಎಂದು ನೀಡಿದ ದೂರನ್ನು ಪಡೆದು ಠಾಣಾ ಮೊ ನಂ 223/2017 ಕಲಂ 279 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

ಹುಲಿಯೂರುದುರ್ಗ ಪೊಲೀಸ್‌ ಠಾಣಾ; ಮೊ ನಂ: 237/2017 ಕಲಂ: 323 324 326 504  ರೆ/ವಿ 34 IPC

ಈ ಕೇಸಿನ ಸಾರಾಂಶವೇನೆಂದರೆ ದಿನಾಂಕ: 08-12-2017 ರಂದು ಮಧ್ಯಾಹ್ನ 04-30 ಗಂಟೆಗೆ ಕುಣಿಗಲ್ ತಾಲ್ಲೋಕು ಹುಲಿಯೂರುದುರ್ಗ ಹೋಬಳಿ ತಾವರೆಕೆರೆ ದಾಖ್ಲೆ ಹೊಸದೊಡ್ಡಿ ಗ್ರಾಮದ ವಾಸಿಯಾದ ಪ್ರದೀಪ ಬಿನ್ ಗಂಗಬೋರೇಗೌಡ, ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ ದಿನಾಂಕ;-08-12-2017 ರ ಮಧ್ಯಾನ 12-00 ಗಂಟೆಯ ಸಮಯದಲ್ಲಿ ಇದೇ ಹೊಸದೊಡ್ಡಿ ಗ್ರಾಮದ ನಿವಾಸಿಗಳಾದ ಬೋರೇಗೌಡ @ ಸ್ವಾಮಿ ಬಿನ್ ಕೆಂಪಯ್ಯ, ಜಗದೀಶ ಬಿನ್ ಮೋಟಪ್ಪ, ರೇಣುಕಮ್ಮ ಕೋಂ ಕೆಂಪಯ್ಯ ಎಂಬುವವರು ನಮ್ಮ ಮನೆಯ ಮುಂದೆ ಟ್ರಾಕ್ಟರ್ ಮೂಲಕ ಮಣ್ಣನ್ನು ಹಾಕಿಸುತ್ತಿರುವಾಗ್ಗೆ ಆಗ ನಮ್ಮ ತಂದೆಯಾಗ ಗಂಗಬೋರೇಗೌಡ ರವರು ಏಕೆ ಮಣ್ಣನ್ನು ಹಾಕಿಸುತ್ತಿದ್ದೀರಿ ಈ ರಸ್ತೆಯ ವಿಚಾರ ಈಗಾಗಲೆ ಮಾನ್ಯ ತಾಲ್ಲೋಕು ದಂಢಾಧಿಕಾರಿಗಳ ನ್ಯಾಯಾಲಯದಲ್ಲಿ ವಿಚಾರಣೆ ನೆಡೆಯುತ್ತಿದೆ ನೀವುಗಳು ಏಕೆ ಈ ರೀತಿ ದೌರ್ಜನ್ಯದಿಂದ ಮಣ್ಣು ಹಾಕಿಸುತ್ತಿದ್ದೀರಲ್ಲಾ ಎಂದು ಕೇಳಲು ಹೋಗಿದ್ದಕ್ಕೆ ಸದರಿ ಬೋರೇಗೌಡ @ ಸ್ವಾಮಿ, ಜಗದೀಶ ಬಿನ್ ಮೋಟಪ್ಪರವರು ಬಾಯಿಗೆ ಬಂದಂತೆ ಏನೋ ಸೂಳೇಮಗನೆ ಬೋಳಿಮಗನೆ, ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು  ಅಲ್ಲದೇ ಅಲ್ಲೇ ಬಿದ್ದಿದ್ದ ದೊಣ್ಣೆಯಿಂದ ಬೋರೇಗೌಡ @ ಸ್ವಾಮಿ ಎಂಬುವವರು ನಮ್ಮ ತಂದೆ ಗಂಗಬೋರೇಗೌಡ ರವರಿಗೆ ತಲೆಯ ಮೇಲೆ ಬಲವಾಗಿ ಹೊಡೆದು ರಕ್ತಗಾಯ ಪಡಿಸುತ್ತಿವಾಗ್ಗೆ ಆಗ ನಾಣು ಓಡಿ ಹೋಗಿ ಏಕಪ್ಪಾ ಈ ರೀತಿ ಜಗಳ ತೆಗೆದು ಹಲ್ಲೆ ಮಾಡುತ್ತಿದ್ದೀರಲ್ಲಾ ಎಂದು ವಿಚಾರ ಮಾಡಲು ಹೋದಾಗ ಸದರಿ ಬೋರೇಗೌಡ @ ಸ್ವಾಮಿ, ಜಗದೀಶ ಬಿನ್ ಮೋಟಪ್ಪ ನನಗೆ ಅಲ್ಲೆ ಬಿದ್ದಿದ್ದ ದೊಣ್ಣೆಯಿಂದ ನನ್ನ ಎಡಗೈ ಮೇಲೆ ಬೋರೇಗೌಡ @ ಸ್ವಾಮಿ ನನ್ನನ್ನು ಗಟ್ಟಿಯಾಗಿ ಹಿಡಿದುಕೊಂಡು ಜಗದೀಶನು ನನ್ನೆಡಗೈ ಮೇಲೆ ಬಲವಾಗಿ ಹೊಡೆದು ಮೂಳೆ ಮುರಿಯುವಂತೆ ಮಾಡುತ್ತಿರುವಾಗ್ಗೆ ನಮ್ಮ ತಾಯಿ ಕೆಂಪಮ್ಮ ಓಡಿಬಂದು ಜಗಳ ಬಿಡಿಸುವುದಕ್ಕೆ ಮುಂದಾದಾಗ ಸದರಿ ರೇಣುಕಮ್ಮ ಕೋಂ ಕೆಂಪಯ್ಯ ಎಂಬುವವರು ನನ್ನನ್ನು ಹಿಡಿದು ಜುಟ್ಟನ್ನು ಹಿಡಿದು ಎಳೆದಾಡಿ ಬಾಯಿಗೆ ಬಂದಂತೆ ಸದರಿ ಮೇಲ್ಕಂಡ ಮೂರು ಜನ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವಾಗ್ಗೆ ಸದರಿ ಬೋರೇಗೌಡ @ಸ್ವಾಮಿ ಎಂಬುವವನು ಅಲ್ಲೇ ಬಿದ್ದಿದ್ದ ಕಲ್ಲಿನಿಂದ ನಮ್ಮ ತಾಯಿ ಕೆಂಪಮ್ಮ ರವರಿಗೆ ಬಲಗಾಲಿನ ಮೇಲೆ ಎತ್ತಿಹಾಕಿ ಮೂಳೆ ಮುರಿಯುವಂತೆ ಮಾಡಿರುತ್ತಾನೆ ನಂತರ ಈ ಜಗಳ ನೋಡಿ ಗ್ರಾಮದ ಶಾಂತಮ್ಮ ಕೋಂ ಚನ್ನಯ್ಯ, ಚಲುವರಂಗಯ್ಯ ಬಿನ್ ಗುಡ್ಡಯ್ಯ ಎಂಬುವವರು ಜಗಳ ಬಿಡಿಸಿ ಸಮಾದಾನ ಪಡಿಸಿರುತ್ತಾರೆ ಆದ್ದರಿಂದ ಸದರಿ ಮೇಲ್ಕಂಡವರುಗಳ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಿ ನಮಗೆ ಸೂಕ್ತ ರೀತಿಯ ನ್ಯಾಯ ದೊರಕಿಸಿ ಕೊಡಬೇಕೆಂದು ಇತ್ಯಾದಿಯಾಗಿ ನೀಡಿದ ದೂರಿನ ಅಂಶವಾಗಿರುತ್ತೆ

ಹುಲಿಯೂರುದುರ್ಗ ಪೊಲೀಸ್‌ ಠಾಣಾ; ಮೊ ನಂ: 238/2017 ಕಲಂ: 324 506 r/w 34 IPC

ಈ ಕೇಸಿನ ಸಾರಾಂಶವೇನೆಂದರೆ ದಿನಾಂಕ:08-12-2017 ರಂದು ಸಂಜೆ 06-30 ಗಂಟೆಗೆ ಬೋರೇಗೌಡ ಬಿನ್ ಕೆಂಪಯ್ಯ, ಸುಮಾರು 25 ವರ್ಷ, ವಕ್ಕಲಿಗರು, ಜಿರಾಯ್ತಿ, ತಾವರೆಕೆರೆ ದಾಖಲೆ, ಹೊಸದೊಡ್ಡಿ ಗ್ರಾಮ, ಹುಲಿಯೂರುದುರ್ಗ ಹೋಬಳಿ, ಕುಣಿಗಲ್ ತಾ ರವರು ಠಾಣೆಗೆ ಹಾಜರಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ ದಿನಾಂಕ: 08-12-2017 ರಂದು ಮಧ್ಯಾಹ್ನ 12-15 ಗಂಟೆಯಲ್ಲಿ  ರಸ್ತೆಯಲ್ಲಿ ಮಣ್ಣು ಹಾಕಿರುವ ವಿಚಾರವಾಗಿ ಪಿರ್ಯಾದಿಯ  ಗ್ರಾಮದ ವಾಸಿಗಳಾದ 1)ಗಂಗಬೋರೇಗೌಡ @ ಶಿವಣ್ಣ ಬಿನ್ ಭೈರಯ್ಯ 2) ಪ್ರದೀಪ್ ಕುಮಾರ್ ಬಿನ್ ಗಂಗಬೋರೇಗೌಡ 3)ಕೆಂಪಮ್ಮ ಕೋಂ ಗಂಗಬೋರೇಗೌಡ ಇವರೆಲ್ಲರೂ ಸೇರಿ  ಹಳೇ ದ್ವೇಷದ ಹಿನ್ನಲೆಯಲ್ಲಿ ದೊಣ್ಣೆಯಿಂದ ಪಿರ್ಯಾದಿಗೆ ತಲೆಯ ಮದ್ಯಭಾಗಕ್ಕೆ ಬಲವಾಗಿ ಹೊಡೆದ ಪರಿಣಾಮ  ರಕ್ತಗಾಯವಾಗಿ ದೇಹದ ಇತರೆ ಭಾಗಗಳಿಗೆ ಹೊಡೆದು ಸಣ್ಣಪುಟ್ಟ ಗಾಯಗಳಾಗಿರುತ್ತೆ. ಈ ಗಲಾಟೆಯು ಪಿರ್ಯಾದಿಯ ಮನೆಯ ಹತ್ತಿರದಲ್ಲೇ ನಡೆದಿರುತ್ತೆ. ಗಲಾಟೆ ನಡೆಯುತ್ತಿದ್ದಾಗ ಪಿರ್ಯಾದಿಯವರ ಗ್ರಾಮದ ವಾಸಿಗಳಾಧ ರಮೇಶ ಹೆಚ್ ಕೆ ಬಿನ್ ಲೇಟ್ ಕೆಂಪಯ್ಯ ಹಾಗೂ ರಮೇಶ್ ಬಿನ್ ಲೇಟ್ ಕೆಂಚರಂಗಯ್ಯ ರವರು ಬಂದು ಗಲಾಟೆಯನ್ನು ಬಿಡಿಸಿರುತ್ತಾರೆ. ರಸ್ತೆಯಲ್ಲಿ ಗುಂಡಿಗಳಿಗೆ ಮಣ್ಣು ಹಾಕಿರುವ ವಿಚಾರವಾಗಿ ಗಲಾಟೆ ಮಾಡಿ ನಂತರ ಪಿರ್ಯಾದಿಗೆ ಹೊಡೆದು ಸಾಯಿಸಿ ಬಿಡುತ್ತೇವೆ ಎಂತ ಪ್ರಾಣ ಬೆದರಿಕೆ ಹಾಕಿರುತ್ತಾರೆ. ಪ್ರದೀಪ್ ಕುಮಾರ್ ಎಂಬಾತನು ಬಂದು ಬಂದೂಕು ಮತ್ತು 04 ನಾಯಿಗಳನ್ನು ಸಾಕಿದ್ದಲ್ಲದೇ ಇವನ ಮೇಲೆ ಯಾರಾದರೂ ಗಲಾಟೆ ಮಾಡಿದರೆ ನಿಮಗೆ ಬಂದೂಕಿನಿಂದ ಸುಟ್ಟು ಬಿಡುತ್ತೇನೆ ಎಂದು ಬೆದರಿಕೆ ಹಾಕಿರುತ್ತಾನೆ. ಆದ್ದರಿಂದ ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ ಪಿರ್ಯಾದನ್ನು ಪಡೆದು ಠಾಣಾ ಮೊ ನಂ 238/2017 ಕಲಂ 324 506 ರೆ/ವಿ 34 ಐಪಿಸಿ ರೀತ್ಯಾ ಪ್ರಕರಣ ದಾಖಲು ಮಾಡಿರುತ್ತೆ.

ಮಿಡಿಗೇಶಿ ಪೊಲೀಸ್ ಠಾಣಾ ಮೊ.ಸಂ.109/2017, ಕಲಂ: 279, 337 ಐ.ಪಿ.ಸಿ.

ದಿನಾಂಕ:08/12/2017 ರಂದು ಮದ್ಯಾಹ್ನ 02:30 ಗಂಟೆಗೆ ಪಿರ್ಯಾದಿ ನರೇಂದ್ರಬಾಬು ಬಿನ್ ನಾಗರಾಜು, 27 ವರ್ಷ, ವಕ್ಕಲಿಗರು, (ಹೆಚ್.ಡಿ.ಎಫ್.ಸಿ.ಬ್ಯಾಂಕಿನಲ್ಲಿ ಅಸಿಸ್ಟೆಂಟ್ ಮ್ಯಾನೇಜರ್) ಕೆಎ-06-ಎನ್-8170 ನೇ ಕಾರಿನ ಮಾಲೀಕ ಮತ್ತು ಚಾಲಕ, 35 ನೇ ವಾರ್ಡ್, ದೇವರಾಯಪಟ್ಟಣ, ತುಮಕೂರು ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ಈ ದಿನ ಅಂದರೆ ದಿನಾಂಕ:08/12/2017 ರಂದು  ನನ್ನ ಸ್ನೇಹಿತನ ಊರಾದ ಮದುಗಿರಿ ತಾಲ್ಲೂಕಿನ ಕೃಷ್ಣಾಪುರ ಗ್ರಾಮಕ್ಕೆ ಬರಲು ನಾನು, ನನ್ನ ತಮ್ಮ ರಘು ಹಾಗೂ ನನ್ನ ಸ್ನೇಹಿತ ವರುಣ್ ರವರೊಂದಿಗೆ ನನ್ನ ಬಾಬ್ತು      ಕೆಎ-06-ಎನ್-8170 ನೇ ಐ-20 ಕಾರಿನಲ್ಲಿ  ಇದೇ ದಿನ ಬೆಳಿಗ್ಗೆ ತುಮಕೂರಿನಿಂದ ಹೊರಟು ಮಧುಗಿರಿ, ಹೊಸಕೆರೆ ಮಾರ್ಗವಾಗಿ ಮಧುಗಿರಿ-ಪಾವಗಡ ಮುಖ್ಯರಸ್ತೆಯಲ್ಲಿ ಮಧುಗಿರಿ ಕಡೆಯಿಂದ ಬಂದು ಕೃಷ್ಣಾಪುರ ಗೇಟ್ ನಲ್ಲಿ ಕೃಷ್ಣಾಪುರ ಗ್ರಾಮದ ಕಡೆಗೆ ಹೋಗಲು ಇದೇ ದಿನ ಮದ್ಯಾಹ್ನ ಸುಮಾರು 12:45 ಗಂಟೆ ಸಮಯದಲ್ಲಿ ನನ್ನ ಬಾಬ್ತು ಕಾರಿನ ಬಲಭಾಗದ ಇಂಡಿಕೇಟರನ್ನು ಹಾಕಿಕೊಂಡು ಹಾಗೂ ಕೈಸನ್ನೇಯಿಂದ ಸಿಗ್ನಲ್ ತೋರಿಸಿಕೊಂಡು ಮುಖ್ಯರಸ್ತೆಯಿಂದ ಕಾರನ್ನು ಬಲಭಾಗಕ್ಕೆ ತಿರುಗಿಸಿಕೊಳ್ಳುತ್ತಿದ್ದಾಗ ಅದೇ ರಸ್ತೆಯಲ್ಲಿ ಅದೇ ಸಮಯಕ್ಕೆ ನನ್ನ ಕಾರಿನ ಹಿಂದೆ ಮಧುಗಿರಿ ಕಡೆಯಿಂದ ಬಂದ ಎಪಿ-27-ಬಿಎಲ್-3397 ನೇ ದ್ವಿಚಕ್ರ ವಾಹನದ ಸವಾರ ತನ್ನ ವಾಹನವನ್ನು ಅತಿ ಜೋರಾಗಿ ಮತ್ತು ಅಡ್ಡಾದಿಡ್ಡಿಯಾಗಿ ಓಡಿಸಿಕೊಂಡು ಬಂದು ಮೇಲ್ಕಂಡ ನನ್ನ ಬಾಬ್ತು ಕಾರಿಗೆ ಹಿಂದಿನಿಂದ ಡಿಕ್ಕಿ ಹೊಡಿಸಿ ಅಪಘಾತವುಂಟು ಮಾಡಿದ್ದರಿಂದ ಸದರಿ ಕಾರಿನ ಹಿಂಭಾಗದ ಬಂಪರ್, ಡಿಕ್ಕಿ ಡೋರ್, ಹಿಂಭಾಗದ ಗ್ಲಾಸ್, ರಿವರ್ಸ್ ಕ್ಯಾಮೇರಾ, ಸೆನ್ಸಾರ್, ಇಂಡಿಕೇಟರ್ಗಳು ಜಖಂ ಆಗಿರುತ್ತವೆ. ಸದರಿ ದ್ವಿಚಕ್ರ ವಾಹನದ ಸವಾರ ನನ್ನ ಕಾರಿಗೆ ಡಿಕ್ಕಿ ಹೊಡೆಸಿ ನಂತರ ರಸ್ತೆ ಮೇಲೆ ಬಿದ್ದಿದ್ದರಿಂದ ದ್ವಿಚಕ್ರ ವಾಹನದ ಸವಾರನಿಗೆ ಮತ್ತು ಆತನ ಹಿಂಬದಿಯಲ್ಲಿ ಕುಳಿತಿದ್ದ ಇನ್ನಿಬ್ಬರಿಗೂ ಸಹ ಪೆಟ್ಟುಗಳು ಬಿದ್ದಿರುತ್ತವೆ. ಆದ್ದರಿಂದ ಮೇಲ್ಕಂಡ ನನ್ನ ಬಾಬ್ತು ಕೆಎ-06-ಎನ್-8170 ನೇ ಐ-20 ಕಾರಿಗೆ ಡಿಕ್ಕಿ ಹೊಡೆಸಿ ಅಪಘಾತವುಂಟುಮಾಡಿದ ಎಪಿ-27-ಬಿಎಲ್-3397 ನೇ ದ್ವಿಚಕ್ರ ವಾಹನದ ಸವಾರನ ಮೇಲೆ ಕಾನೂನು ರಿತ್ಯ ಕ್ರಮ ಜರುಗಿಸಬೇಕೆಂದು ನೀಡಿ ಪಿರ್ಯಾದು ಅಂಶವಾಗಿರುತ್ತೆ.Friday, 08 December 2017

Crime Incidents 08-12-17

ಮಧುಗಿರಿ ಪೊಲೀಸ್ ಠಾಣಾ CR :214/2017 u/s 279,337 IPC.

ಪಿರ್ಯಾದಿ ಯಲ್ಲಮ್ಮ ಕೋಂ ರಂಗಧಾಮಯ್ಯ, 28 ವರ್ಷ, ಕುರುಬ ಜನಾಂಗ, ವಡೇರಹಳ್ಳಿ, ಕಸಬಾ ಹೋಬಳಿ, ಮಧುಗಿರಿ ತಾಲ್ಲೂಕುರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ಪಿರ್ಯಾದಿಯ ಗಂಡ ರಂಗಧಾಮಯ್ಯರವರು ದಿನಾಂಕ: 04-12-2017 ರಂದು ಮುಂಜಾನೆ 05.30 ಗಂಟೆಯ ಸಮಯದಲ್ಲಿ ತನ್ನ ಬಾಬ್ತು ಟೀ ಅಂಗಡಿಗೆ ಹಾಲು ತರಲು ಬಸವನಹಳ್ಳಿಗೆ K.S.R.T.C ಡಿಪೋದ ಮುಂಬಾಗದ ಮಧುಗಿರಿ-ಪಾವಗಡ ರಸ್ತೆಯ ಎಡಭಾಗದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಪಾವಗಡ ಕಡೆಯಿಂದ AP-02-TC-4388 ನೇ ಲಾರಿಯ ಚಾಲಕ ಗೋವಿಂದರವರು ಲಾರಿಯನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು  ಬಂದು ಪಿರ್ಯಾದಿಯ ಯಜಮಾನರಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಮಾಡಿದ ಪರಿಣಾಮ ರಂಗಧಾಮಯ್ಯನವರ ತಲೆಗೆ, ಮುಖಕ್ಕೆ ಗಾಯಗಳಾಗಿರುತ್ತದೆ. ಯಾವುದೋ ಒಂದು ಆಟೋದಲ್ಲಿ ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿ ನಂತರ ವೈದ್ಯರ ಸಲಹೆ ಮೇರೆಗೆ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪಿರ್ಯಾದಿಯು ಗಾಯಾಳುವನ್ನು ನೋಡಿಕೊಂಡು ಆಸ್ಪತ್ರೆಯಲ್ಲಿದ್ದುದರಿಂದ ಈ ದಿನ ತಡವಾಗಿ ಠಾಣೆಗೆ  ಹಾಜರಾಗಿ ಅಪಘಾತ ಮಾಡಿದ AP-02-TC-4388 ನೇ ಲಾರಿಯ ಚಾಲಕ ಗೋವಿಂದ ಹಾಗೂ ಲಾರಿಯ ವಿರುದ್ದ ಸೂಕ್ತ ಕಾನೂನು ರಿತ್ಯಾ ಕ್ರಮ ಜರುಗಿಸಬೇಕೆಂದು ಕೋರುತ್ತೇನೆಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

.ಹುಲಿಯೂರುದುರ್ಗ ಪೊಲೀಸ್‌ ಠಾಣಾ; ಮೊ ನಂ: 236/2017 ಕಲಂ: 324 r/w 34 IPC

ಈ ಕೇಸಿನ ಸಾರಾಂಶವೇನೆಂದರೆ ಈ ಕೇಸಿನ ಸಾರಾಂಶವೇನೆಂದರೆ ದಿನಾಂಕ: 07-12-2017 ರಂದು ಬೆಳಿಗ್ಗೆ 10-00 ಗಂಟೆಗೆ ಕುಣಿಗಲ್ ತಾಲ್ಲೋಕು ಕಸಬಾ ಹೋಬಳಿ ಹೆಗ್ಗಡತಿಹಳ್ಳಿ ಗ್ರಾಮದ ವಾಸಿಯಾದ ವನಿತಾ ಕೋಂ ಸುರೇಶ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ ನಾನು ಹುಲಿಯೂರುದುರ್ಗ ಪೊಲೀಸ್ ಠಾಣೆಗೆ ನನ್ನ ಗಂಡ ಸುರೇಶ ಕುಮಾರನ ಮೇಲೆ ದೂರು ನೀಡಿದ್ದು ದೂರಿನ ವಿಚಾರವಾಗಿ ದಿನಾಂಕ;-06-12-2017 ರಂದು ಪೊಲೀಸ್ ಠಾಣೆಗೆ ಹಾಜರಾಗಿದ್ದು ಠಾಣೆಯಲ್ಲಿ ನನ್ನ ಗಂಡ ಸುರೇಶ್ ಕುಮಾರ ಈತನ ತಾಯಿ ಪುಟ್ಟನರಸಮ್ಮ, ಸುರೇಶ್ ಕುಮಾರನ ಅಣ್ಣ ಚಂದ್ರ, ಹಾಗೂ ತಂಗಿಯ ಗಂಡ ನಾಗರಾಜು ರವರು ಪೊಲೀಸ್ ಠಾಣೆಯಲ್ಲಿ ಹೇಳಿಕೆ ಕೊಟ್ಟು ಸಂಜೆ 09-00 ಗಂಟೆಗೆ ವಾಪಸ್ ಹೋಗುವಾಗ ಸಂತೇಮಾವತ್ತೂರು ಹೆಗ್ಗಡತಿಹಳ್ಳಿ ಮದ್ಯೆ ಬಸವಣ್ಣನ ದೇವಸ್ಥಾನದ ಮುಂಭಾಗದ ರಸ್ತೆಯಲ್ಲಿ ನನ್ನ ಮೇಲೆ ಈ ಮೇಲ್ಕಂಡ ನಾಲ್ಕು ಜನರು ಗಲಾಟೆ ಮಾಡಿ ಜಗಳ ತೆಗೆದು ಬಾಯಿಗೆ ಬಂದಂತೆ ಬೈದು ಸುರೇಶ ಕಲ್ಲು ಹಾಗೂ ರಬ್ಬರ್ ಕಟ್ಟಿಯಿಂದ ನನ್ನ ಕಾಲುಗಳಿಗೆ ಸೊಂಟಕ್ಕೆ ಹೊಡೆದನು ಉಳಿದ ಮೂರು ಜನನರು ಕೈಗಳಿಂದ ಹಿಡಿದು ಎಳೆದಾಡಿ ಕೆಳಕ್ಕೆ ಕೆಡವಿಕೊಂಡು ಕಾಲಿನಿಂದ ತುಳಿದು ನೋವುಂಟು ಮಾಡಿರುತ್ತಾರೆ, ನನ್ನ ಬಳಿಯಿಂದ ಒಂದು ಮೊಬೈಲ್ ಹಾಗೂ ಒಂದು ಸಾವಿರ ರೂಪಾಯಿಗಳನ್ನು ನನ್ನ ಗಂಡ ಸುರೇಶ್ ಕುಮಾರ ತೆಗೆದುಕೊಂಡಿರುತ್ತಾನೆ, ಈ ಗಲಾಟೆಯಾಗುವಾಗನನ್ನ ಬಲಗಾಲಿನ ಕಾಲು ಚೈನು ಎಡ ಕಿವಿಯ ಮೇಲದಬಾಗದ ಒಂದು ಚಿನ್ನದ ಓಲೆ ಬಿದ್ದು ಹೋಗಿರುತ್ತೆ, ಅಷ್ಟರಲ್ಲಿ ಅಲ್ಲಿಗೆ ಬಂದ ನಮ್ಮ ಗ್ರಾಮದ ವಾಸಿ ಹೊನ್ನಯ್ಯನ ಮಗ ರಾಜ ರಂಬುವವನು ಜಗಳ ಬಿಡಿಸಿರುತ್ತಾನೆ, ನಾನು ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು ಈ ದಿನ ದಿನಾಂಕ;-07-12-2017 ರಂದು ಠಾಣೆಗೆ ಹಾಜರಾಗಿ ನೀಡಿದ ಹೇಳಿಕೆಯ ದೂರಿನ ಅಂಶವಾಗಿರುತ್ತೆ

ಶಿರಾ  ಪೊಲೀಸ್ ಠಾಣಾ ಮೊ ನಂ 480/2017 ಕಲಂ 279.427. ಐಪಿಸಿ

ದಿನಾಂಕ 06-12-2017 ರಂದು ಬೆಳಿಗ್ಗೆ 11-00 ಗಂಟೆಗೆ ಪಿರ್ಯಾದಿ ಸೋಮಶೇಖರ್ ಬಿನ್ ಕೆ.ಎಲ್.ಅಂಜಪ್ಪಶೆಟ್ಟಿ, 51 ವರ್ಷ, ವೈಶ್ಯರು, ನಂದಿನಿ ಬೇಕರಿ ಮಾಲೀಕರು ಶಿರಾ ಬಸ್ ನಿಲ್ದಾಣ, ಶಿರಾ ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ಪಿರ್ಯಾದುನ ಆಂಶವೇನೆಂದರೆ ದಿನಾಂಕ:06-12-2017 ರಂದು ಪ್ರತಿದಿನದಂತೆ ನಾವು ರಾತ್ರಿ 10-00 ಗಂಟೆಗೆ ನಂದಿನಿ ಬೇಕರಿಯಲ್ಲಿ ವ್ಯಾಪಾರ ಮುಗಿಸಿಕೊಂಡು ಬಾಗಿಲು ಹಾಕಿಕೊಂಡು ಮನೆಗ ಹೋದೆನು. ರಾತ್ರಿ ಬೇಕರಿಯಲ್ಲಿ ನಮ್ಮ ಕೆಲಸಗಾರರಾದ ಸುರೇಶ ಮತ್ತು ಶಂಕರಾನಂದ ರವರು ಮಲಗಿದ್ದರು. ಬೆಳಗಿನ ಜಾವ ಸುಮಾರು 03-00 ಗಂಟೆಗೆ ಸುರೇಶ ನಮ್ಮ ಮನೆಯ ಬಳಿ ಬಂದು ಈ ದಿನ ಬೆಳಗಿನ ಜಾವ ಸುಮಾರು 02-30 ಗಂಟೆಯಲ್ಲಿ KA-22-B-3822 ನೇ ಬಸ್ಸಿನ ಚಾಸ್ಸಿಯನ್ನು ಅದರ ಚಾಲಕ ಶಬ್ಬೀರ್ ಅಹಮದ್ ಬಿನ್ ಅಬ್ದುಲ್ ವಹೀದ್, ಗರಿಮಾರನಹಟ್ಟಿ, ಶಿರಾ ಟೌನ್ ರವರು ಶಿರಾ ಟೌನ್ ಐ.ಬಿ ಸರ್ಕಲ್ ಕಡೆಯಿಂದ ಬಸ್ ನಿಲ್ದಾಣದ ಕಡೆಗೆ ಹಳೇ ಎನ್.ಹೆಚ್-4 ರಸ್ತೆಯಲ್ಲಿ ಅತಿವೇಗ ಮತ್ತು ನಿರ್ಲಕ್ಷತನದಿಂದ ಚಾಲನೆ ಮಾಡಿಕೊಂಡು ಬಂದು ನಂದಿನಿ ಬೇಕರಿಯ ಮುಂಬಾಗದ ಕಬ್ಬಿಣದ ರೋಲಿಂಗ್ ಷಟ್ಟರ್ ಬಾಗಿಲಿಗೆ ಡಿಕ್ಕಿ ಹೊಡೆದು, ಅಪಘಾತಪಡಿಸಿದನು, ಪರಿಣಾಮ ಬಾಗಿಲು ಪೂರ್ಣ ಮುರಿದು ಹೋಗಿ, ಬೇಕರಿಯ ಒಳಗೆ ಇದ್ದ ಗಾಜಿನ 03 ಷೋಕೇಸ್ ಗಳು ಮತ್ತು ಷೋಕೇಸ್ ಗಳಲ್ಲಿದ್ದ  ಸಿಹಿ ಮತ್ತು ಖಾರ ಹಾಗೂ ಕೇಕ್ ಗಳು ಜಖಂ ಆಗಿ ಹಾಳಾಗಿರುತ್ತವೆ ಎಂದು ತಿಳಿಸಿದನು, ತಕ್ಷಣ ನಾನು ಬೇಕರಿಯ ಬಳಿ ಬಂದು ನೊಡಲಾಗಿ, ಅಪಘಾತಪಡಿಸಿದ ಬಸ್ಸಿನ ಚಾಸ್ಸಿ ಸ್ಥಳದಲ್ಲಿದ್ದು, ಚಾಲಕ ಸಹಾ ಸ್ಥಳದಲ್ಲಿ ಇದ್ದನು. ಬೇಕರಿಯ ಮುಂಬಾಗದ ಕೆನಾಫಿ, ಮುಂದಿನ ಕಬ್ಬಿಣದ ರೋಲಿಂಗ್ ಷಟ್ಟರ್, ಅಂಗಡಿಯ ಒಳಭಾಗದ ಡಿಸೈನ್ ಐಟಂ ಗಳು ಮತ್ತು 03 ಷೋಕೇಸ್ ಗಳು ಜಖಂ ಆಗಿ, ಸಿಹಿ ಮತ್ತು ಖಾರ ಹಾಗೂ ಕೇಕ್ ಗಳು ಜಖಂ ಆಗಿ ಹಾಳಾಗಿದ್ದವು, ಇದರಿಂದ ಸುಮಾರು ನನಗೆ 05 ಲಕ್ಷ ರೂ ನಷ್ಟ ಉಂಟಾಗಿರುತ್ತೆ. ಸದರಿ ಅಪಘಾತವು ಬಸ್ಸಿನ ಚಾಸ್ಸಿ ಚಾಲಕನ ಅತಿವೇಗ ಮತ್ತು ನಿರ್ಲಕ್ಷತನದಿಂದ ಉಂಟಾಗಿರುತ್ತೆ. ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ಕೋರಿತ್ತೇನೆ. ಎಂಬುದು ಪಿರ್ಯಾದಿಯ ಆಂಶವಾಗಿರುತ್ತೆ.

ಬಡವನಹಳ್ಳಿ ಪೊಲೀಸ್ ಠಾಣಾ ಯು ಡಿ ಆರ್‌‌ ನಂ 22/2017 ಕಲಂ 174  ಸಿ ಆರ್‌ ಪಿ ಸಿ

ದಿನಾಂಕ:07/12/2017 ರಂದು ಬೆಳಗ್ಗೆ 09-00 ಗಂಟೆಗೆ ಪಿರ್ಯಾದಿ ಲೋಕೇಶ ಕೆ ಬಿನ್ ಕುನ್ನಪ್ಪ ಕಾಟಗೊಂಡನಹಳ್ಳಿ ರವರು ಠಾಣೆಗೆ ಹಾಜರಾಗಿ, ನನಗೆ ಕವನ, ಮಹಾಲಕ್ಷ್ಮಿ ಮತ್ತು ಸಿದ್ದೇಶ ಎಂಬ ಮೂರು ಜನ ಮಕ್ಕಳಿದ್ದು ಮಹಾಲಕ್ಷ್ಮಿ ನಮ್ಮೂರಿನ ಸರ್ಕಾರಿ ಶಾಲೆಯಲ್ಲಿ 2ನೇ ತರಗತಿ ಓದುತ್ತಿದ್ದವಳು ದಿ:03/12/17 ರ ಬಾನುವಾರ ಮದ್ಯಾಹ್ನ 2-00 ಗಂಟೆಯಲ್ಲಿ ತನ್ನ ಸ್ನೇಹಿತರೊಂದಿಗೆ ಕಡ್ಲೇ ಕಾಯಿ ಸುಡಲು ನಮ್ಮೂರಿನ ನರಸಿಂಹ ಸ್ವಾಮಿ ದೇವಸ್ಥಾನದ ಬಳಿ ಹೋಗಿ ಪೇಪರ್ ಹಾಕಿ ಬೆಂಕಿ ಹಚ್ಚಿ ಕಡ್ಲೇಕಾಯಿ ಸುಡುತ್ತಿದ್ದಾಗ ಆಕಸ್ಮಿಕವಾಗಿ ನನ್ನ ಮಗಳ ಬಟ್ಟೆಗೆ ಬೆಂಕಿ ತಗುಲಿ ಹತ್ತಿಕೊಂಡಾಗ ಮನೆ ಹತ್ತಿರ ಓಡಿ ಬಂದಿದ್ದನ್ನು ಕಂಡ ನಮ್ಮೂರಿನ ಪುಟ್ಟಮ್ಮ ಮತ್ತು ಆಕೆಯ ಗಂಡ ಬೆಂಕಿ ಆರಿಸಿದ್ದು ವಿಚಾರ ತಿಳಿದ ನಾವು ಸಹ ಹೊರಗೆ ಬಂದು ನೊಡಲಾಗಿ ನನ್ನ ಮಗಳ ಕಾಲು ಹೊಟ್ಟೆ ಬೆನ್ನಿನಲ್ಲಿ ಸುಟ್ಟಗಾಯಗಳಾಗಿದ್ದು ಚಿಕಿತ್ಸೆಗಾಗಿ ಹೊಸಕೆರೆ ಸರ್ಕಾರಿ ಆಸ್ಪತ್ರೆ ಮಧುಗಿರಿ ಮತ್ತು ತುಮಕೂರು ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿ ನಂತರ ಬೆಂಗಲೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಕೊಡಿಸಲಾಘಿ ಚಿಕಿತ್ಸೆ ಫಲಕಾರಿಯಾಗದೆ ದಿ:06/12/17 ರ ಮದ್ಯ ರಾತ್ರಿ 12-15 ಗಂಟೆಯಲ್ಲಿ ಮೃತ ಪಟ್ಟಿರುತ್ತಾಳೆ ಇವಳ ಸಾವಿನಲ್ಲಿ ಅನುಮಾನವಿಲ್ಲ  ಮುಂದಿನ ಕ್ರಮ ಜರುಗಿಸಬೇಕೆಂದು ನಿಡಿದ ಪಿರ್ಯಾದು ಅಂಶವಾಗಿರುತ್ತೆ.

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 146/2017 ಕಲಂ 323,324, 504,506 ರೆ:ವಿ 34 ಐ.ಪಿ.ಸಿ

ದಿನಾಂಕ:07-12-17 ರಂದು  ಬೆಳಿಗ್ಗೆ  8-45 ಗಂಟೆಯಿಂದ  9-15 ಗಂಟೆಯವೆರೆಗೆ ಈ ಕೇಸಿನ ಗಾಯಾಳು  ಸವಿತಾ ಕೋಂ ವೀರಣ್ಣ, 38 ವರ್ಷ, ಗೃಹಿಣಿ, ಲಿಂಗಾಯ್ತರು ನ್ಯಾಕೇನಹಳ್ಳಿ, ಕಿಬ್ಬನಹಳ್ಳಿ ಹೋಬಳಿ,ತಿಪಟೂರು ತಾ ರವರು  ರವರು  ತಿಪಟೂರು ಸರ್ಕಾರಿ  ಆಸ್ಪತ್ರೆಯಲ್ಲಿ  ನೀಡಿದ ಹೇಳಿಕೆ  ಅಂಶವೇನೆಂದರೆ,  ದಿ:06-12-17  ಸಂಜೆ  5-00 ಗಂಟೆ ಸಮಯದಲ್ಲಿ  ನಾನು  ನನ್ನ ಗಂಡ ವೀರಣ್ಣ ರವರೊಂದಿಗೆ ,  ನಮ್ಮ ಜಮೀನಿನಲ್ಲಿರುವಾಗ  ನಮ್ಮ ಗ್ರಾಮದ ಶಂಕರಮ್ಮ  ರವರು  ನನ್ನ ಗಂಡನೊಂದಿಗೆ  ಜಮೀನಿನ  ಬದಿ ಹುಲ್ಲಿನ ವಿಚಾರವಾಗಿ  ಜಗಳ  ಮಾಡುತ್ತಿದ್ದು ನಾನು ಹೋಗಿ ಏಕೆ  ಜಗಳ ಮಾಡುತ್ತಿರುವೆ   ಎಂತಾ ಕೇಳಿದ್ದಕ್ಕೆ  ನೀನು ಯಾರೇ  ಸೂಳೆ ಮುಂಡೆ, ಬೋಳಿ ಮುಂಡೆ  ಎಂತಾ ಅವಾಚ್ಯ ಶಬ್ದಗಳಿಂದ  ಬೈಯ್ದು ನನ್ನ ವಿಚಾರಕ್ಕೆ ಬಂದರೆ ಸರಿಯಿರುವುದಿಲ್ಲವೆಂತಾ,  ಶಂಕರಮ್ಮ ತನ್ನ ಕೈಲಿದ್ದ  ಕುಡುಗೋಲಿನಿಂದ  ನನ್ನ ತಲೆಗೆ ಹೊಡೆದರು ಅಲ್ಲಿಗೆ ಬಂದ ಸುಜಾತಳು ಸಹ ನನಗೆ ಕೈಗಳಿಂದ ಹೊಡೆದು, ಕಾಲಿನಿಂದ ಹೊದ್ದರು ಇದೇ ಕೊನೆ   ಇನ್ನು ನನ್ನ ಸಹವಾಸಕ್ಕೆ  ಬಂದರೆ  ಕೊಲೆ ಮಾಡುತ್ತೇನಂತ ಪ್ರಾಣ ಬೆದರಿಕೆ  ಹಾಕಿದರು  ಈ ವೇಳೆಯಲ್ಲಿ ನನ್ನ ತಲೆಯಲ್ಲಿ ರಕ್ತ  ಬರುತ್ತಿದ್ದರಿಂದ ನನ್ನ ಗಂಡ ವೀರಣ್ನ  ನನ್ನನ್ನು ತಿಪಟೂರು ಸರ್ಕಾರಿ ಆಸ್ಪತ್ರೆಗೆ  ಚಿಕಿತ್ಸೆಗೆ  ಸೇರಿಸಿರುತ್ತಾರೆ  ನನ್ನ ತಲೆಗೆ  ಹೊಡೆದು, ರಕ್ತಗಾಯಪಡಸಿ ಪ್ರಾಣಬೆದರಿಕೆ ಹಾಲಿರುವ ಶಂಕರಮ್ಮ & ಸುಜಾತ ರವರ ಮೇಲೆ  ಕಾನೂನು ರೀತ್ಯಾ ಕ್ರಮ ಜರುಗಿಸಿ ಎಂತಾ ನೀಡಿದ ಹೇಳಿಕೆ  ಪಡೆದು  ಬೆಳಿಗ್ಗೆ 9-30 ಗಂಟೆಗೆ ಠಾಣಾ  ಮೊ.ನಂ 146/17, ಕಲಂ 323,324, 504, 506 ರೆ:ವಿ 34 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ

 Thursday, 07 December 2017

Crime Incidents 7-12-17

ಬಡವನಹಳ್ಳಿ ಪೊಲೀಸ್ ಠಾಣೆ ಮೊ.ಸಂ 104/2017  ಕಲಂ  87 ಕೆ.ಪಿ ಆಕ್ಟ್

ದಿನಾಂಕ;06/12/2017 ರಂದು ಬೆಳಗ್ಗೆ 08-15 ಗಂಟೆಯಲ್ಲಿ ಸಮಯದಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ರವರು  ಠಾಣೆಯಲ್ಲಿದ್ದಾಗ, ಠಾಣಾ ಸರಹದ್ದು ರಂಟವಳಲು ಗ್ರಾಮದ ರಾಮಚಂದ್ರಪ್ಪ ರವರ ಹುಲ್ಲು ಬಣವೆಯ ಮುಂಬಾಗ ಸಾರ್ವಜನಿಕ ಮಣ್ಣಿನ ರಸ್ತೆಯಲ್ಲಿ ಇಸ್ಟೀಟ್‌ ಜೂಜಾಟ ಆಡುತ್ತಿರುವ ಬಗ್ಗೆ ಠಾಣಾ ಗುಪ್ತ ಮಾಹಿತಿ ಸಿಬ್ಬಂದಿಯಾದ ರಂಗನಾಥ್ ಸಿಪಿಸಿ-949 ರವರು ನೀಡಿದ ಮಾಹಿತಿ ಮೇರೆಗೆ ಸಿಬ್ಬಂದಿಯಾದ ಪಿಸಿ1001 ಸತೀಶ್ ಗೌಡ, ಪಿ.ಸಿ 700 ಸಿದ್ದಲಿಂಗಪ್ಪ, ಪಿಸಿ 1015 ಯೋಗೀಶ್‌, ಪಿಸಿ 286 ಶ್ರೀನಿವಾಸ ಕುಮಾರ್ ಪಿಸಿ 567 ಮಹೇಶ್‌‌‌  ಪಿಸಿ 331 ಜಗಧೀಶ್‌‌  ಹಾಗೂ ಪಂಚರೊಂದಿಗೆ ಬೆಳಗ್ಗೆ 8-30 ಗಂಟೆಗೆ ಠಾಣೆ ಬಿಟ್ಟು 9-00 ಗಂಟೆಗೆ ರಂಟವಾಳ ಗ್ರಾಮಕ್ಕೆ ಹೋಗಿ ಸ್ವಲ್ಪ ದೂರದಲ್ಲಿ ಜೀಪನ್ನು ನಿಲ್ಲಿಸಿ  ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ರಾಮಚಂದ್ರಪ್ಪ ರವರ ಹುಲ್ಲು ಬಣವೆಯ ಮುಂಬಾಗ ಸಾರ್ವಜನಿಕ ಮಣ್ಣಿನ ರಸ್ತೆಯಲ್ಲಿ ಸುಮಾರು ಜನರು ದುಂಡಾಕಾರವಾಗಿ ಕುಳಿತುಕೊಂಡು ಒಳಗೆ – ಹೊರಗೆ ಎಂದು ಹೇಳುತ್ತಾ ಹಣವನ್ನು ಪಣವಾಗಿ ಕಟ್ಟಿಕೊಂಡು ಇಸ್ಟೀಟ್‌ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಸಿಬ್ಬಂದಿಯೊಂದಿಗೆ ಒಮ್ಮೆಗೆ ದಾಳಿ ಮಾಡಿದಾಗ 8 ಜನ ಸಿಕ್ಕಿದ್ದು, ಅವರ ಹೆಸರು ವಿಳಾಸ ಕೇಳಲಾಗಿ 1] ಸಣ್ಣೀರಪ್ಪ ಬಿನ್ ಲೇ, ಯಲ್ಲಪ್ಪ, 50 ವರ್ಷ, ಭೋವಿ, ಕೂಲಿ ಕೆಲಸ, ಕೃಷ್ಣಪುರ, ಮಿಡಿಗೇಶಿ ಹೋ, ಮಧುಗಿರಿ ತಾ, 2] ಗೌಸ್ ಪೀರ್ ಬಿನ್ ಅಬ್ದುಲ್ಲಾ, 32 ವರ್ಷ, ಮುಸ್ಲಿಂ, ಸಜ್ಜೇಹೊಸಹಳ್ಳಿ, ಮಧುಗಿರಿ ತಾ. 3] ಸುರೇಶ ಬಿನ್ ನಿಂಗಪ್ಪ, 45 ವರ್ಷ, ನಾಯಕರು, ಗಿರೇನಾಯಕನಪಾಳ್ಯ, ರೊಳ್ಳೆ ಮಂಡಲ್, ಮಡಕಶಿರಾ ತಾ. 4] ಹನುಮಂತರಾಯಪ್ಪ ಬಿನ್ ಮುದ್ದರಂಗಪ್ಪ, 32 ವರ್ಷ, ಮಡಿವಾಳರು, ಮಂದಲಹಳ್ಳಿ, ಗುಡಿಬಂಡೆ ಮಂಡಲ್, ಮಡಕಶಿರಾ ತಾ. 5] ಶ್ರೀನಿವಾಸ ಬಿನ್ ಸಣ್ಣ ತಿಮ್ಮಣ್ಣ, 40 ವರ್ಷ, ಮಡಿವಾಳರು, ರಂಟವಾಳ, ಮಧುಗಿರಿ ತಾ. 6] ಶಶಿಧರ ಬಿನ್ ಸಣ್ಣವೀರಕ್ಯಾತಪ್ಪ, 35 ವರ್ಷ, ವಕ್ಕಲಿಗರು, ಎಸ್. ರಾಯಪುರ, ಗುಡಿಬಂಡೆ ಮಂಡಲ್, ಮಡಕಶಿರಾ ತಾ. 7] ಸಂಜೀವಮೂರ್ತಿ ಬಿನ್ ಲೇ ಆದಪ್ಪ, 29 ವರ್ಷ, ಕುಂಬಾರರು, ಹೂವಿನಹಳ್ಳಿ, ಅಗಳಿ ಮಂಡಲ್, ಮಡಕಶಿರಾ ತಾ. 8] ತಿಮ್ಮರೆಡ್ಡಿ ಬಿನ್ ಮುದ್ದರಂಗಪ್ಪ, 30 ವರ್ಷ, ನಾಯಕರು, ರತ್ನಗಿರಿ, ರೊಳ್ಳೆ ಮಂಡಲ್, ಮಡಕಶಿರಾ ತಾ ಎಂದು ತಿಳಿಸಿದ್ದು, ಜೂಜಾಟಕ್ಕೆ ಪಣವಾಗಿ ಕಟ್ಟಿ ಅಖಾಡದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದದ್ದ ಹಣವನ್ನು ಸಂಗ್ರಹಿಸಿ ಎಣಿಸಲಾಗಿ  5400/- ರೂಗಳು, 52 ಇಸ್ಟೀಟ್‌ ಎಲೆಗಳು ಹಾಗೂ ಒಂದು ಹಳೆಯ ನ್ಯೂಸ್ ಪೇಪರ್‌ ಗಳನ್ನು ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡು ಪಂಚನಾಮೆ ಮಾಲು ಮತ್ತು ಆರೋಪಿಗಳೊಂದಿಗೆ ಠಾಣೆಗೆ ಬೆಳಿಗ್ಗೆ 10-30 ಗಂಟೆಗೆ ಬಂದು, ಆರೋಪಿತರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಸೂಚಿಸಿ ನೀಡಿದ ವರದಿ ಪಡೆದು ಅಸಂಜ್ಞೇಯ ಪ್ರಕರಣವಾದ್ದರಿಂದ  ಘನ ನ್ಯಾಯಾಲಯದ ಅನುಮತಿ ಪಡೆದು ಪ್ರಕರಣ ದಾಖಲಿಸಿರುತ್ತೆ.

 

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 145/2017 ಕಲಂ 323,324,354,504,506,ರೆ/ವಿ  34 ಐ.ಪಿ.ಸಿ
.

ದಿನಾಂಕ:-06/12/2017 ರಂದು ರಾತ್ರಿ 08-30  ಗಂಟೆಗೆ ಪಿರ್ಯಾದಿ ಸುಜಾತ ಕೊಂ ಎನ್ .ಡಿ ಲೋಕೇಶಪ್ಪ 40 ವರ್ಷ ನ್ಯಾಕೇನಹಳ್ಳಿ ಕಿಬ್ಬನಹಳ್ಳಿ ಹೋಬಳಿ ತಿಪಟೂರು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ ದಿನಾಂಕ 06/12/2017 ರಂದು ಸಂಜೆ ಸುಮಾರು 05:00ಗಂಟೆ ಸಮಯದಲ್ಲಿ ನಾನು ನಮ್ಮ ತೋಟಕ್ಕೆ ದನಗಳನ್ನು ಹಿಡಿದುಕೊಂಡು ಬರಲು ಹೋದಾಗ ಅಲ್ಲಿ ನಮ್ಮ ಗ್ರಾಮದ ವೀರಣ್ಣ ಬದಿ ಹುಲ್ಲಿನ ವಿಚಾರವಾಗಿ ನಮ್ಮ ಅಕ್ಕ ಶಂಕರಮ್ಮರವರೊಂದಿಗೆ ಜಗಳವಾಡುತ್ತಿದ್ದು ಬಾಯಿಗೆ ಬಂದಂತೆ ಸೂಳೆ ಮುಂಡೆ ಲೋಪರ್ ಮುಂಡೆ ಎಂದು ಕೆಟ್ಟ ಕೆಟ್ಟದ್ದಾಗಿ ಬೈಯುತ್ತಿದ್ದು ನಮ್ಮ ಅಕ್ಕ ಏಕೆ ಎಂದು ಕೇಳುತ್ತಿರುವಾಗ ವೀರಣ್ಣ ನನ್ನ ಅಕ್ಕನಿಗೆ ಕೈಯಿಂದ ಮೈಗೆ ಹೊಡೆದು ತನ್ನ ಕೈಯಲ್ಲಿದ್ದ ಕುಡುಗೋಲಿನಿಂದ ಅಕ್ಕನಿಗೆ ತಲೆಗೆ ಹೊಡೆದ, ಆಗ ಆಕೆಗೆ ರಕ್ತ ಆಗಿತ್ತು ಆದರೂ ಸಹ ವೀರಣ್ಣ ಕಾಲಿನಿಂದ ನನ್ನ ಅಕ್ಕನಿಗೆ ಒದ್ದ ನಾನು ಬಿಡಿಸಲು ಹೋದಾಗ ನನಗೂ ಸಹ ವೀರಣ್ಣ ಮತ್ತು ಆತನ ಹೆಂಡತಿ ಸವಿತಾ ನನಗೆ ಮತ್ತು ನನ್ನ ಅಕ್ಕನಿಗೆ ಕೆಟ್ಟ ಕೆಟ್ಟದಾಗಿ ಬೈದು ಆಕೆಯೂ ಸಹ ನನಗೆ ಮತ್ತು ನನ್ನ ಅಕ್ಕನಿಗೆ ಕೈಯಿಂದ ಹೊಡೆದಳು. ವೀರಣ್ಣ ನನ್ನ ಅಕ್ಕನ ಬಟ್ಟೆಯನ್ನು ಸಹ ಹರಿದಿರುತ್ತಾನೆ.ನಮ್ಮ ಅಕ್ಕನ ರವಿಕೆ ಹರಿದು ಅವಳಿಗೆ ಅವಮಾನವಾಗಿರುತ್ತದೆ.ಆದರೂ ಸಹ ವೀರಣ್ಣ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲವೆಂತ  ಪ್ರಾಣ ಭಯಪಡಿಸಿ ಕೊಲೆ ಮಾಡುತ್ತೇನೆಂತ ಬೆದರಿಕೆ ಹಾಕಿರುತ್ತಾನೆ.ಆಗ ಅಲ್ಲಿಗೆ ಬಂದ ನಮ್ಮ ಗ್ರಾಮದ ವಿಶ್ವನಾಥ ಬಿನ್ ಮಲ್ಲಿಕಾರ್ಜುನಯ್ಯರವರು ನಮ್ಮಿಬ್ಬರಿಗೂ ಬುದ್ದಿ ಹೇಳಿ ಜಗಳ ಬಿಡಿಸಿರುತ್ತಾರೆ. ನಮ್ಮ ಅಕ್ಕನಿಗೆ ತಲೆಗೆ ರಕ್ತಗಾಯವಾಗಿದ್ದರಿಂದ ನಾನು ಮತ್ತು  ವಿಶ್ವನಾಥ ತಿಪಟೂರಿನ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆಗೆ ದಾಖಲು ಮಾಡಿರುತ್ತೇವೆ. ಎಂತ ನೀಡಿದ ದೂರನ್ನು ಸ್ವೀಕರಿಸಿ  ಪ್ರಕರಣ ದಾಖಲಿಸಿರುತ್ತೆ.

 

 


Page 1 of 2
Start
Prev
1

Report a Crime


Tumkur Police App

Helpline Contacts

POLICE
100
POLICE CONTROL ROOM
0816-2278000
AMBULANCE
108
FIRE BRIGADE
101
BESCOM HELPLINE
1912
SENIOR CITIZEN HELPLINE
1090
WOMEN HELPLINE
1091
CHILD HELPLINE
1098
SP OFFICE
0816-2275451
ADDITIONAL SP
0816-2274130
DEPUTY COMMISSIONER
0816-2272480
DISTRICT GENERAL HOSPITAL
0816-2278377
DISTRICT RTO OFFICE
0816-2278473

Gundappa
9448617529

Tilak
9739596920

Nandeesh
9845134445

Pasha
9900089813

Hyder
9980976954


 

Today's Weather

We have 42 guests online
Content View Hits : 212343