lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ. ದಿನಾಂಕ : 10-07-2018   ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 09-07-2018 ಕೊಲೆ ಆರೋಪಿಗಳ ಬಂಧನ ******* ದಿನಾಂಕ 04.07.2018 ರಂದು... >>   ಪತ್ರಿಕಾ ಪ್ರಕಟಣೆ ದಿನಾಂಕ : 07-07-2018. ಪೂರ್ವಾನುಮತಿ ಪಡೆಯದೇ ಹೆದ್ದಾರಿ ತಡೆ ನಡೆಸಿ,... >> ದಿನಾಂಕ.03.07.2018. ಪತ್ರಿಕಾ ಪ್ರಕಟಣೆ ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ 11 ಲಕ್ಷ 70 ಸಾವಿರ ಬೆಲೆ ಬಾಳುವ ಚಿನ್ನ-ಬೆಳ್ಳಿ  ಹಾಗೂ ಮೊಬೈಲ್‌‌‌... >>   ಪತ್ರಿಕಾ ಪ್ರಕಟಣೆ. ತುಮಕೂರು ಜಿಲ್ಲಾ ಪೊಲೀಸ್, ತುಮಕೂರು. ಕೋರಾ ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 27.06.2018 ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಸಾರ್ವಜನಿಕರ... >> ಪತ್ರಿಕಾ ಪ್ರಕಟಣೆ ದಿನಾಂಕ:- 23/06/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಖನ್ನ... >> ಪತ್ರಿಕಾ ಪ್ರಕಟಣೆ ದಿನಾಂಕ: 21-06-2018. ಸುಲಿಗೆಕೋರರ ಬಂಧನ: ದಿನಾಂಕ:18-06-2018 ರಂದು... >>   ಪೊಲೀಸ್ ಪ್ರಕಟಣೆ ತುಮಕೂರು ಜಿಲ್ಲಾ ಪೊಲೀಸ್ ಪ್ರಕಟಣೆ   ಆತ್ಮೀಯ ನಾಗರೀಕರಲ್ಲಿ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< December 2017 >
Mo Tu We Th Fr Sa Su
        1 2 3
4 5 6 7 8 9 10
11 12 13 14 15 16 17
18 19 20 21 22 23 24
25 26 27 28 29 30
Sunday, 31 December 2017
Crime incidents 31-12-17

 

ಹುಲಿಯೂರುದುರ್ಗ  ಪೊಲೀಸ್‌  ಠಾಣಾ; ಯುಡಿಆರ್ ನಂ 37/2017 ಕಲಂ: 174 ಸಿ ಆರ್ ಪಿ. ಸಿ

ದಿನಾಂಕ;-30-12-2017 ರಂದು ಬೆಳಿಗ್ಗೆ 10-15 ಗಂಟೆ ಸಮಯದಲ್ಲಿ ಪಿರ್ಯಾದುದಾರರಾದ ಬೆಟ್ಟಸ್ವಾಮಿ @ ಪಾಪ ಬಿನ್ ಮಾಯಣ್ಣ 24 ವರ್ಷ, ವಕ್ಕಲಿಗರು, ವ್ಯವಸಾಯ, ಬೀಚನಹಳ್ಳಿ ಗ್ರಾಮ, ಹುಲಿಯೂರುದುರ್ಗ ಹೋಬಳಿ ರವರು ಠಾಣೆಗೆ ಹಾಜರಾಗಿ ನೀಡಿದಊರಿನ ಅಂಶವೇನೆಂದರೆ, ನಮ್ಮ ತಂದೆಯವರು ವ್ಯವಸಾಯ ಹಾಗೂ ಎಳನೀರು ವ್ಯಾಪಾರ ಮಾಡಿಕೊಂಡು ಜೀವನ ಮಾಡುತ್ತಿದ್ದರು ನಮ್ಮ ತಂದೆಗೆ ಇಬ್ಬರು ಮಕ್ಕಳಿದ್ದು ಮೊದಲನೆಯವರು ನಮ್ಮ ಅಕ್ಕ ಮಂಜುಳ ಆಗಿದ್ದು ಈಕೆಗೆ ಮದುವೆಯಾಗಿರುತ್ತೆ ನಾನು ಒಬ್ಬ ಗಂಡು ಮಗನಿರುತ್ತೇನೆ, ನಮ್ಮ ತಂದೆ ಪ್ರತಿ ದಿವಸ ಸಂಜೆ ಹೊತ್ತಿನಲ್ಲಿ ಕುಡಿಯುವ ಅಭ್ಯಾಸವಿತ್ತು ನಾನು ನಮ್ಮ ಜಮೀನಿನಲ್ಲಿ ಕಡಲೆಕಾಯಿ ಬೆಳೆಯನ್ನು ಇಟ್ಟಿರುತ್ತೇವೆ, ಹೊಲದ ಹತ್ತಿರ ರಾತ್ರಿ ಹೊತ್ತಿನಲ್ಲಿ ನಮ್ಮ ತಂದೆ ಕಡಲೆಕಾಯಿ ಬೆಳೆಯನ್ನು ಕಾಯುವ ಸಲುವಾಗಿ ಜಮೀನಿನ ಹತ್ತಿರ ಗುಡಿಸಿಲಿನಲ್ಲಿ ಮಲಗಿಕೊಳ್ಳುತ್ತಿದ್ದರು ಮಾಮೂಲಿನಂತೆ ನೆನ್ನೆ ದಿವಸ ದಿನಾಂಕ;-29-12-2017 ರಂದು ರಾತ್ರಿ ಊಟ ಮಾಡಿಕೊಂಡು ಜಮೀನಿನ ಹತ್ತಿ ಹೋಗುತ್ತೇನೆ ಎಂದು ಹೇಳಿ ಹೋಗಿದ್ದರು, ಈ ದಿವಸ ದಿನಾಂಕ;-30-12-2017 ರಂದು ನಮ್ಮ ತಂದೆ ವಾಪಸ್ ಬೆಳಿಗ್ಗೆ ಮನೆಯ ಹತ್ತಿರಕ್ಕೆ ಬರಲಿಲ್ಲ ನಂತರ ನಾನು ನಮ್ಮ ಜಮೀನಿನ ಹತ್ತಿರಕ್ಕೆ ಹೋಗಿ ನೋಡಿದೆ ನಮ್ಮ ತಂದೆ ಜಮೀನಿನ ಹತ್ತಿರವೂ ಇರಲಿಲ್ಲ ಆಗ ನಾನು ನಮ್ಮ ತಂದೆ ಎಲ್ಲಿಯೋ ಹೋಗಿರಬೇಕೆಂದು ನಾನು ಮನೆಯ ಹತ್ತಿಕ್ಕೆ ವಾಪಸ್ ಬಂದು ಬಿಟ್ಟೆ, ಈ ದಿವಸ ಬೆಳಿಗ್ಗೆ 09-00 ಗಂಟೆಯ ಸಮಯದಲ್ಲಿ ನಾನು ಮನೆಯ ಹತ್ತರವಿದ್ದಾಗ ಹಳೆವೂರು ಕೆರೆಯಲ್ಲಿ ಯಾರೋ ಬಿದ್ದು ಸತ್ತು ಹೋಗಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದರು, ಆಗ ನಾನು ಮತ್ತು ನಮ್ಮ ಊರಿನವರು ಸೇರಿಕೊಂಡು ಕೆರೆಯ ಹತ್ತಿರಕ್ಕೆ ಹೋಗಿ ನೋಡಲಾಗಿ ನಮ್ಮ ತಂದೆಯ ಹೆಣವು ನೀರಿನಲ್ಲಿ ತೇಲುತ್ತಿತ್ತು ಆಗ ಊರಿನ ಜನರು ಸೇರಿಕೊಂಡು ನಮ್ಮ ತಂದೆಯ ಹೆಣವನ್ನು ನೀರಿನಿಂದ ಹೊರಕ್ಕೆ ತೆಗೆಸಿ ಕೆರೆಯ ಏರಿಯ ದಡದಲ್ಲಿ ಇಟ್ಟಿರುತ್ತೇವೆ, ನಮ್ಮ ತಂದೆ ನೆನ್ನೆಯ ದಿವಸ ದಿನಾಂಕ;-29-12-2017 ರಂದು ರಾತ್ರಿ ನಮ್ಮ ಜಮೀನಿನ ಹತ್ತಿರಕ್ಕೆ ಹೋಗುವಾಗ ನಮ್ಮ ತಂದೆ ಕೆರೆಯಲ್ಲಿ ನೀರನ್ನು ಮುಟ್ಟಲು ಹೋಗಿಯೋ ಅಥವಾ ಇನ್ನಯಾವುದೋ ಕಾರಣಕ್ಕಾಗಿ ಹೋಗಿದ್ದಾಗಿ ಆಕಸ್ಮಿಕವಾಗಿ ಕೆರೆಯ ನೀರಿನಲ್ಲಿ ಬಿದ್ದು ಮೃತಪಟ್ಟಿರುತ್ತಾರೆ, ನಮ್ಮ ತಂದೆಯ ಸಾವಿನಲ್ಲಿ ಯಾವುದೇ ಅನುಮಾನವಿರುವುದಿಲ್ಲ ಆದ್ದರಿಂದ ತಾವು ಸ್ಥಳಕ್ಕೆ ಬಂದು ಕಾನೂನು ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ನೀಡಿದ ದೂರಿನ ಅಂಶವಾಗಿರುತ್ತೆ

ಹುಲಿಯೂರುದುರ್ಗ ಪೊಲೀಸ್‌ ಠಾಣಾ; ಮೊ ನಂ: 248/2017 ಕಲಂ:  324   504   506  ಐಪಿಸಿ

ದಿನಾಂಕ: 30-12-2017 ರಂದು ಮಧ್ಯಾಹ್ನ 02-30 ಗಂಟೆಗೆ ಗುಡ್ಡರಾಜು ಬಿನ್ ಲೇಟ್ ಮುನಿರಂಗಯ್ಯ, ಸುಮಾರು 40 ವರ್ಷ, ವಕ್ಕಲಿಗರು, ಜಿರಾಯ್ತಿ ಕೆಲಸ, ತಾವರೆಕೆರೆ, ಹುಲಿಯೂರುದುರ್ಗ ಹೋಬಳಿ, ಕುಣಿಗಲ್ ತಾ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ ಪಿರ್ಯಾದಿಯ ಹೆಂಡತಿಯಾದ ಶ್ವೇತ ರವರು ಅವರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾಗಿದ್ದು, ಹಾಗೂ ಅದೇ ಗ್ರಾಮದ ರಾಮಸಂಜೀವಮೂರ್ತಿ ರವರ ಹೆಂಡತಿ ವರಲಕ್ಷ್ಮಿ ರವರು ಸದರಿ ಮೇಲ್ಕಂಡ ಶಾಳೆಯಲ್ಲಿ ಅಡುಗೆ ಕೆಲಸ ಮಾಡಿಕೊಂಡಿರುತ್ತಾರೆ. ವರಲಕ್ಷ್ಮಿಯು ಶಾಲೆಯಲ್ಲಿ ಮಾಡಿದ ಊಟವನ್ನು ಮಕ್ಕಳ ಕೈಯಲ್ಲಿ ಅವರ ಮನೆಗೆ ಕಳುಹಿಸಿಕೊಡುತ್ತಿದ್ದು, ಈ ವಿಚಾರ ಶ್ವೇತ ರವರಿಗೆ ತಿಳಿದು ವರಲಕ್ಷ್ಮಿಗೆ ಮಕ್ಕಳಿಗೆ ಮಾಡಿರುವ ಅಡುಗೆಯನ್ನು ನಿಮ್ಮ ಮನೆಗೆ ಕಳಿಸಿ ಮಕ್ಕಳಿಗೆ ಅನ್ಯಾಯ ಮಾಡುತ್ತೀಯಾ ಎಂತ ಬುದ್ದಿ ಹೇಳಿದ್ದರು. ಈ ವಿಚಾರವನ್ನು ವರಲಕ್ಷ್ಮಿಯು ಆಕೆಯ ಗಂಡ ರಾಮಸಂಜೀವಮೂರ್ತಿ ಗೆ ತಿಳಿಸಿದ್ದರಿಂದ ಆತನು ದಿನಾಂಕ: 27-12-2017 ರಂದು ರಾತ್ರಿ 09-00 ಗಂಟೆಯಲ್ಲಿ ಪಿರ್ಯಾದಿಯು ಅವರ ಗ್ರಾಮದ ರಂಗಸ್ವಾಮಿ ರವರ ಪೆಟ್ಟಿಗೆ ಅಂಗಡಿಯ ಬಳಿಗೆ ಹೋಗಿ ವಾಪಸ್ ಮನೆಗೆ ಹೋಗುತ್ತಿರುವಾಗ ಬಂದು ಏಕಾಏಕಿ ಪಿರ್ಯಾದಿಯ ಮೇಲೆ ಗಲಾಟೆ ಮಾಡಿ “ ನನ್ನ ಹೆಂಡತಿ ಮಕ್ಕಳ ಕೈಯಲ್ಲಿ ಮನೆಗೆ ಊಟ ಕಳುಹಿಸಿದರೆ ನಿಮಗೇನು , ನನ್ನ ಮಗನೇ, ನೀನು ಅಧ್ಯಕ್ಷರ ಗಂಡನಾದರೆ ನನಗೇನು, ಲೋಫರ್ ನನ್ನ ಮಗನೇ´ ಎಂತ ಬಾಯಿಗೆ ಬಂದಂತೆ ಬೈದು ಅಲ್ಲೇ ಬಿದ್ದಿದ್ದ ಒಂದು ಕಲ್ಲಿನಿಂದ ಪಿರ್ಯಾದಿಯ ಬಲಕಣ್ಣಿನ ಮೇಲ್ಬಾಗಕ್ಕೆ ಹೊಡೆದು ರಕ್ತಗಾಯಪಡಿಸಿದನು. ಆಗ ಪಿರ್ಯಾದಿಯು ಕಣ್ಣುಗಳು ಮಂಜಾಗಿ ಕೆಳಕ್ಕೆ ಬಿದ್ದು ಹೋಗಿದ್ದು, ಆಗ ಪಿರ್ಯಾದಿಯ ಗ್ರಾಮದವರಾದ ಅಂಗಡಿಯ ಮಾಲೀಕ ರಂಗಸ್ವಾಮಿ ಮತ್ತು ಮೇದರದೊಡ್ಡಿ ಗ್ರಾಮದ ಹೊನ್ನಗಂಗಯ್ಯ ರವರ ಮಗನಾದ ಪರಮೇಶ ರವರು ಬಂದು ಜಗಳ ಬಿಡಿಸಿ ಸಮಾಧಾನಪಡಿಸಿದರು. ನಂತರ ಪಿರ್ಯಾದಿಯನ್ನು ಚಿಕಿತ್ಸೆಗೆ 108 ವಾಹನದಲ್ಲಿ ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತಾರೆ. ಪಿರ್ಯಾದಿಯು ಕುಣಿಗಲ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗೆ ಬೆಳ್ಳೂರು ಎ ಸಿ ಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡಿರುತ್ತಾರೆ. ಪಿರ್ಯಾದಿಯ ಮೇಲೆ ಗಲಾಟೆ ಮಾಡಿ ಹೊಡೆದ ರಾಮಸಂಜೀವಮೂರ್ತಿ ರವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲು ಮಾಡಿರುತ್ತೆ.


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 74 guests online
Content View Hits : 302223