lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ. ದಿನಾಂಕ : 10-07-2018   ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 09-07-2018 ಕೊಲೆ ಆರೋಪಿಗಳ ಬಂಧನ ******* ದಿನಾಂಕ 04.07.2018 ರಂದು... >>   ಪತ್ರಿಕಾ ಪ್ರಕಟಣೆ ದಿನಾಂಕ : 07-07-2018. ಪೂರ್ವಾನುಮತಿ ಪಡೆಯದೇ ಹೆದ್ದಾರಿ ತಡೆ ನಡೆಸಿ,... >> ದಿನಾಂಕ.03.07.2018. ಪತ್ರಿಕಾ ಪ್ರಕಟಣೆ ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ 11 ಲಕ್ಷ 70 ಸಾವಿರ ಬೆಲೆ ಬಾಳುವ ಚಿನ್ನ-ಬೆಳ್ಳಿ  ಹಾಗೂ ಮೊಬೈಲ್‌‌‌... >>   ಪತ್ರಿಕಾ ಪ್ರಕಟಣೆ. ತುಮಕೂರು ಜಿಲ್ಲಾ ಪೊಲೀಸ್, ತುಮಕೂರು. ಕೋರಾ ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 27.06.2018 ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಸಾರ್ವಜನಿಕರ... >> ಪತ್ರಿಕಾ ಪ್ರಕಟಣೆ ದಿನಾಂಕ:- 23/06/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಖನ್ನ... >> ಪತ್ರಿಕಾ ಪ್ರಕಟಣೆ ದಿನಾಂಕ: 21-06-2018. ಸುಲಿಗೆಕೋರರ ಬಂಧನ: ದಿನಾಂಕ:18-06-2018 ರಂದು... >>   ಪೊಲೀಸ್ ಪ್ರಕಟಣೆ ತುಮಕೂರು ಜಿಲ್ಲಾ ಪೊಲೀಸ್ ಪ್ರಕಟಣೆ   ಆತ್ಮೀಯ ನಾಗರೀಕರಲ್ಲಿ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< December 2017 >
Mo Tu We Th Fr Sa Su
        1 2 3
4 5 6 7 8 9 10
11 12 13 14 15 16 17
18 19 20 21 22 23 24
25 26 27 28 29 31
Saturday, 30 December 2017
Crime incidents 30-12-17

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 151/2017 ಕಲಂ 379 ಐ.ಪಿ.ಸಿ

ದಿನಾಂಕ 29/12/2017 ರಂದು ಬೆಳಿಗ್ಗೆ 10-30 ಗಂಟೆಗೆ ರಾಜಣ್ಣ ಸಿ.ಹೆಚ್. ಚಟ್ನಹಳ್ಳಿ, ತಿಪಟೂರುರವರು ನೀಡಿದ ಲಿಖಿತ ದೂರು ಏನೆಂದರೆ ದಿನಾಂಕ 27/12/2017 ರಂದು ನಮ್ಮ ಮನೆ ಪಕ್ಕದಲ್ಲಿರುವ ಕುರಿ ದೊಡ್ಡಿಯಲ್ಲಿ(ಕೊಪ್ಪಲು) ಮೇಲ್ಕಂಡ 21 ಕುರಿ ಹಾಗು ಮೇಕೆಮರಿಗಳನ್ನು ಕೂಡಿರುತ್ತೇನೆ,ನಾನು ಮರುದಿವಸ ಅಂದರೆ  ದಿನಾಂಕ 28/12/2017 ರಂದು ಬೆಳಗಿನ ಜಾವ 05:30 ಗಂಟೆ ಸಮಯದಲ್ಲಿ ಕುರಿದೊಡ್ಡಿಹತ್ತಿರ ಬಂದು ನಾನು ನೋಡಲಾಗಿ ಕುರಿದೊಡ್ಡಿಯಲ್ಲಿ 2 ಕುರಿಮರಿ ಮತ್ತು 4 ಮೇಕೆ ಮರಿಗಳು ಇದ್ದವು ಉಳಿದ ಮೇಕೆ ಮತ್ತು ಕುರಿಮರಿಗಳು ಕಾಣಲಿಲ್ಲ, ನಾನು ಗಾಬರಿಯಾಗಿ ಅಕ್ಕಪಕ್ಕದ ಸ್ಥಳಗಳಲ್ಲಿ ಹುಡುಕಾಡಿ ಎಲ್ಲೂ ಪತ್ತೆಯಾಗದ ಕಾರಣ ಈ ದಿನ ತಡವಾಗಿ ಬಂದು ನನ್ನ ಬಾಬ್ತು 11 ಕುರಿಮರಿಗಳು ಮತ್ತು 04 ಮೇಕೆಮರಿಗಳನ್ನು ರಾತ್ರಿ ಯಾವುದೋ ಸಮಯದಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಇವುಗಳ ಒಟ್ಟು ಬೆಲೆ ಸುಮಾರು 46,000/-ರೂಗಳು ಅಂದಾಜು ಆಗಿರುತ್ತದೆ ಎಂತ ನೀಡಿದ ದೂರು ಪಡೆದು ಕೇಸು ದಾಖಲಿಸಿರುತ್ತದೆ.

ಜಯನಗರ ಪೊಲೀಸ್ ಠಾಣೆಯಲ್ಲಿ  ಮೊ.ನಂ. 169/2017 ಕಲಂ 392 ಐ.ಪಿ.ಸಿ

ದಿನಾಂಕ: 29-12-2017 ರಂದು ಬೆಳಿಗ್ಗೆ 10-30 ಗಂಟೆ ಸಮಯದಲ್ಲಿ ತುಮಕೂರು ಟೌನ್ ಸಿದ್ದರಾಮೇಶ್ವರ ಬಡಾವಣೆಯ ವಾಸಿ ಉಮಾದೇವಿ ಡಿ.ಎನ್ ಕೋಂ.ಲೇ|| ಚಂದ್ರಶೇಖರ್‌‌ ಎಂಬುವರು ಪೊಲೀಸ್ ಠಾಣೆಗೆ ಹಾಜರಾಗಿ, ಈ ದಿನ ದಿನಾಂಕ: 29-12-2017 ರಂದು ಬೆಳಿಗ್ಗೆ ಸುಮಾರು 6-15 ಗಂಟೆ ಸಮಯದಲ್ಲಿ ನಾನು ನಮ್ಮ ಮನೆಯನ್ನು ಬಿಟ್ಟು ವಿಶಾಲಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಧನುರ್ಮಾಸದ ಪ್ರಯುಕ್ತ ಶಿವ ಪೂಜೆ ಇದ್ದುದ್ದರಿಂದ ಪೂಜೆಗೆ ಹೋಗಿದ್ದು, ಪೂಜೆ ಮುಗಿಸಿಕೊಂಡು ಸುಮಾರು 8-30 ಗಂಟೆಯಲ್ಲಿ ನಮ್ಮ ಮನೆಗೆ ಹೋಗಲು ಮಾರುತಿನಗರ-ಸಾಬರಪಾಳ್ಯ  40 ಅಡಿ ಮುಖ್ಯರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಸಾಬರಪಾಳ್ಯ ಸಮೀಪ ಮಾರುತಿ ನಗರ ಕಡೆಯಿಂದ ಯಾವುದೋ ಒಂದು ದ್ವಿ ಚಕ್ರ ವಾಹನದಲ್ಲಿ ಬಂದ ಇಬ್ಬರು ವ್ಯಕ್ತಿಗಳು ನನ್ನ ಸಮೀಪಕ್ಕೆ ಬಂದವರೇ ದ್ವಿ ಚಕ್ರ ವಾಹನದಲ್ಲಿ ಕುಳಿತಿದ್ದ ಒಬ್ಬ ವ್ಯಕ್ತಿ ಸಡನ್ನಾಗಿ ದ್ವಿ ಚಕ್ರ ವಾಹನದಿಂದ ಕೆಳಕ್ಕೆ ಇಳಿದವನೇ ನನ್ನ ಕೊರಳಿಗೆ ಕೈ ಹಾಕಿ ನನ್ನ ಕೊರಳಲ್ಲಿದ್ದ ಎರಡು ಎಳೆಯ ಚಿನ್ನದ ಮಾಂಗಲ್ಯದ ಸರವನ್ನು ಕಿತ್ತುಕೊಂಡು ಪುನ: ಅದೇ ದ್ವಿ ಚಕ್ರ ವಾಹನದಲ್ಲಿ ಕುಳಿತುಕೊಂಡು ಸಾಬರಪಾಳ್ಯದ ಕಡೆಗೆ ಜೋರಾಗಿ ದ್ವಿ ಚಕ್ರ ವಾಹನವನ್ನು ಓಡಿಸಿಕೊಂಡು ಹೊರಟು ಹೋಗಿರುತ್ತಾರೆ.  ನನ್ನಿಂದ ಕಿತ್ತುಕೊಂಡು ಹೋಗಿರುವ ಚಿನ್ನದ ಮಾಂಗಲ್ಯದ ಸರವು ಎರಡು ಎಳೆಯ ಚಿನ್ನದ ಮಾಂಗಲ್ಯದ ಸರವಾಗಿದ್ದು, ಇದರಲ್ಲಿ  ಎರಡು ಕರಿಯ ಮಣಿ, ಎರಡು ಕೆಂಪು ಹವಳ ಇದ್ದು, ಎಲ್ಲಾ ಸೇರಿ ಸುಮಾರು 65 ಗ್ರಾಂ ತೂಕ ಇರುತ್ತೆ.   ಸುಮಾರು 1,65,000/- ರೂ. ಬೆಲೆ ಬಾಳುತ್ತದೆ.   ತಾವು ದಯಮಾಡಿ ನನ್ನ ಮಾಂಗಲ್ಯದ ಸರವನ್ನು ಅಪಹರಿಸಿಕೊಂಡು ಹೋಗಿರುವ ಆರೋಪಿಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಿ, ನನ್ನ ಮಾಂಗಲ್ಯದ ಸರವನ್ನು ಕೊಡಿಸಿಕೊಡಬೇಕೆಂದು ಇತ್ಯಾದಿಯಾಗಿ ನೀಡಿದ ಲಿಖಿತ ದೂರನ್ನು ಸ್ವೀಕರಿಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ 237/2017 ಕಲಂ 279,337  ಐಪಿಸಿ

ದಿನಾಂಕ:29-12-2017 ರಂದು ಮದ್ಯಾಹ್ನ 02-30 ಗಂಟೆ ಸಮಯದಲ್ಲಿ ಪಿರ್ಯಾದುದಾರರಾದ ಸವಿತಾ ಕೋಂ ರಾಮಮೂರ್ತಿ, 31 ವರ್ಷ, ನಾಯಕ ಜನಾಂಗ, ಅಂಗನವಾಡಿಯಲ್ಲಿ ಕೆಲಸ, ಹೊಸಹಳ್ಳಿ, ಸೋಂಪುರ ಹೋಬಳಿ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ, ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ನನ್ನ ಗಂಡನಾದ ರಾಮಮೂರ್ತಿ ರವರು ದಿನಾಂಕ: 28-12-2017 ರಂದು ತನ್ನ ಸ್ನೇಹಿತನಾದ ನಮ್ಮ ಗ್ರಾಮದ ವಾಸಿ ಮೋಹನ್‌ಕುಮಾರ್ ರವರೊಂದಿಗೆ ಗೂಳೂರು ಹೋಬಳಿ, ವರದನಹಳ್ಳಿ ಗ್ರಾಮದಲ್ಲಿರುವ ಮೋಹನ್‌ ಕುಮಾರ್ ರವರ ಸಂಬಂಧಿಕರ ಮನೆಗೆ ಹೋಗಿದ್ದು, ನಂತರ ವಾಪಸ್ ಊರಿಗೆ ಬರಲೆಂದು ನನ್ನ ಗಂಡ ರಾಮಮೂರ್ತಿ ಹಾಗೂ ಮೋಹನ್‌ ಕುಮಾರ್ ಇಬ್ಬರೂ ಮದ್ಯಾಹ್ನ ಸುಮಾರು 01-00 ಗಂಟೆ ಸಮಯದಲ್ಲಿ ವರದನಹಳ್ಳಿಯ ಬಳಿ ಶಿವಗಂಗೆ-ಹೊನ್ನುಡಿಕೆ ಟಾರ್ ರಸ್ತೆಯಲ್ಲಿರುವ ಸಾಸಲುಪಾಳ್ಯ ಗೇಟ್‌ನಲ್ಲಿ ಶಿವಗಂಗೆ ಕಡೆಗೆ ಹೋಗಲು ರಸ್ತೆಯ ಎಡಬದಿ ಬಸ್ಸಿಗಾಗಿ ಕಾಯುತ್ತಾ ನಿಂತಿರುವಾಗ್ಗೆ, ಸಾಸಲು ಕಡೆಯಿಂದ ಬಂದ ಕೆಎ-06-ಇ.ಎಸ್-2101 ನೇ ಹೀರೋ ಹೋಂಡಾ ಫ್ಯಾಷನ್‌ ಫ್ರೋ ದ್ವಿಚಕ್ರ ವಾಹನದ ಸವಾರ ತನ್ನ ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ರಸ್ತೆ ಎಡಭಾಗದ ಪುಟ್‌ಪಾತ್‌ನಲ್ಲಿ ನಿಂತಿದ್ದ ನನ್ನ ಗಂಡ ರಾಮಮೂರ್ತಿ ರವರಿಗೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದ ಪರಿಣಾಮ ನನ್ನ ಗಂಡ ರಾಮಮೂರ್ತಿ ರವರ ಎರಡೂ ಕಾಲಿಗೆ ತೀವ್ರತರವಾದ ಏಟು ಬಿದ್ದಿದ್ದು ಹಾಗೂ ದೇಹದ ಇತರೆ ಭಾಗಗಳಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಸದರಿ ಅಪಘಾತದ ವಿಚಾರವನ್ನು ನನ್ನ ಗಂಡನ ಜೊತೆಯಲ್ಲಿಯೇ ಇದ್ದ ಮೋಹನ್ ಕುಮಾರ್ ರವರು ನನಗೆ ಪೋನ್ ಮಾಡಿ ತಿಳಿಸಿದರು. ನಂತರ ಗಾಯಗೊಂಡಿದ್ದ ರಾಮಮೂರ್ತಿ ರವರನ್ನು ಸ್ಥಳಕ್ಕೆ ಬಂದ ಯಾವುದೋ ಒಂದು ವಾಹನದಲ್ಲಿ ತುಮಕೂರಿನ ಹೇಮಾವತಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿರುತ್ತಾರೆ. ನಂತರ ನಾನು ತುಮಕೂರಿನ ಹೇಮಾವತಿ ಆಸ್ಪತ್ರೆಗೆ ಹೋಗಿ ನೋಡಲಾಗಿ ನನ್ನ ಗಂಡ ರಾಮಮೂರ್ತಿ ರವರು ಅಫಘಾತದಿಂದ ಗಾಯಗೊಂಡಿರುವುದು ನಿಜವಾಗಿತ್ತು. ಆದ್ದರಿಂದ ತನ್ನ ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿ ಈ ಅಫಘಾತಕ್ಕೆ ಕಾರಣನಾದ ಕೆಎ-06-ಇ.ಎಸ್-2101 ನೇ ಹೀರೋ ಹೋಂಡಾ ಫ್ಯಾಷನ್‌ ಫ್ರೋ ದ್ವಿಚಕ್ರ ವಾಹನದ ಸವಾರನ ಮೇಲೆ ಕಾನೂನು ರೀತ್ಯಾ ಮುಂದಿನ ಕ್ರಮ ಜರುಗಿಸಬೇಕೆಂದು ನನ್ನ ಗಂಡ ರಾಮಮೂರ್ತಿ ರವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದರಿಂದ ಈ ದಿವಸ ತಡವಾಗಿ ಬಂದು ದೂರು ನೀಡುತ್ತಿದ್ದೇನೆ. ಅಫಘಾತಪಡಿಸಿದ ದ್ವಿಚಕ್ರ ವಾಹನ ಅಫಘಾತವಾದ ಸ್ಥಳದಲ್ಲಿಯೇ ಇರುವ ರಾಜಣ್ಣ ರವರ ಮನೆಯ ಬಳಿ ನಿಲ್ಲಿಸಿರುತ್ತೇಂತಾ ಮೋಹನ್‌ ಕುಮಾರ್ ರವರು ತಿಳಿಸಿರುತ್ತಾರೆ ಎಂತಾ ನೀಡಿದ ಲಿಖಿತ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಸಿ.ಎಸ್.ಪುರ ಠಾಣಾ ಮೊ.ನಂ:112/2017. ಕಲಂ:279. 337 ಐಪಿಸಿ  ಮತ್ತು 134(ಎ&ಬಿ) ರೆ/ವಿ 187 ಐ.ಎಂ.ವಿ ಆಕ್ಟ್

ದಿನಾಂಕ:18/12/2017 ರಂದು ಗುಬ್ಬಿ  ತಾಲ್ಲೂಕು ಸಿ.ಎಸ್.ಪುರ  ಹೋಬಳಿ, ಸಿ.ಕೊಡಗೇಹಳ್ಳಿ ಗ್ರಾಮದ ಬಳಿ ಇರುವ ಹೊನ್ನಮ್ಮ ದೇವಿ ದೇವಸ್ಥಾನಕ್ಕೆ ಪೂಜೆ ಮಾಡಿಸುವ ಸಲುವಾಗಿ ನಾನು & ನನ್ನ ತಮ್ಮ  ಶಿವಕುಮಾರ  ಹಾಗೂ ಸಂಬಂದಿ  ವಿಜಯಕುಮಾರ ಮೂರು ಜನರು ಬೈಕುಗಳಲ್ಲಿ ದೇವಸ್ಥಾನಕ್ಕೆ  ಬಂದು ಪೂಜೆ ಮಾಡಿಸಿಕೊಂಡು, ಬೆಳಗ್ಗೆ 11.30 ಗಂಟೆ ಸಮಯದಲ್ಲಿ ವಾಪಸ್ಸು ಸಿ.ಎಸ್.ಪುರ ಕೆರೆಯ ಕೋಡಿಹಳ್ಳದ  ಸಮೀಪ  ನಾನು & ನಮ್ಮ ಸಂಬಂದಿ ವಿಜಯ್ ಕುಮಾರ್  ನನ್ನ ಬೈಕಿನಲ್ಲಿ  ಹಾಗೂ ನನ್ನ  ತಮ್ಮನಾದ ಶಿವಕುಮಾರ್ ನು ಅವನ ಬಾಬ್ತು ಕೆ.ಎ-06ಇಎಕ್ಸ್-8009 ನೇ ಬೈಕಿನಲ್ಲಿ ರಸ್ತೆಯ ಎಡಬದಿಯಲ್ಲಿ ಬರುತ್ತಿರುವಾಗ್ಗೆ, ಅದೇ ಸಮಯಕ್ಕೆ  ಎದುರುಗಡೆಯಿಂದ  ಅಂದರೆ  ಸಿ.ಎಸ್.ಪುರದ ಕಡೆಯಿಂದ ಒಬ್ಬ ಆಸಾಮಿಯು ಅವನ ಬಾಬ್ತು ಕೆ.ಎ-06ಇಜೆ-9999 ದ್ವಿ ಚಕ್ರವಾಹನದಲ್ಲಿ  ಅತಿ ವೇಗ & ಅಜಾಗರುಕತೆಯಿಂಧ ಓಡಿಸಿಕೊಂಡು  ಬಂದು ನನ್ನ  ಮುಂದೆ ಹೋಗುತಿದ್ದ ನನ್ನ ತಮ್ಮ ಶಿವಕುಮಾರ ನ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ನನ್ನ ತಮ್ಮ  ವಾಹನದ ಸಮೇತ ಕೆಳಗೆ ಬಿದ್ದಿದ್ದು, ಹಿಂದೆ ಬರುತಿದ್ದ  ನಾವು ತಕ್ಷಣ ಹೋಗಿ ನನ್ನ ತಮ್ಮನನ್ನು ಮೇಲಕ್ಕೆ ಎತ್ತಿ ಉಪಚರಿಸಿ  ನೋಡಲಾಗಿ,. ನನ್ನ ತಮ್ಮ ಶಿವಕುಮಾರನ ತಲೆಗೆ, ಮುಖಕ್ಕೆ ಹಾಗೂ ಮೈಕೈಗೆ ಪೆಟ್ಟು ಬಿದ್ದು, ರಕ್ತಗಾಯವಾಗಿತ್ತು, ತಕ್ಷಣ ನಾನು & ವಿಜಯ್ ಕುಮಾರ್ ಇಬ್ಬರೂ ಯಾವುದೋ ಒಂದು ವಾಹನದಲ್ಲಿ  ನನ್ನ ತಮ್ಮನನ್ನು ತುಮಕೂರಿನ ಸಿದ್ದಗಂಗಾ ಆಸ್ಪತ್ರೆಗೆ  ಕರೆದುಕೊಂಡು ಹೋಗಿ ಒಳರೋಗಿಯಾಗಿ ಚಿಕಿತ್ಸೆ ಕೊಡಿಸಿದ್ದು, ನನ್ನ  ತಮ್ಮನನ್ನು ನೋಡಿಕೊಳ್ಳಲು ಯಾರು ಇಲ್ಲದ ಕಾರಣ ಚಿಕಿತ್ಸೆ ಕೊಡಿಸಿ  ಈ ದಿನ ತಡವಾಗಿ ಬಂದು ದೂರು ನೀಡಿರುತ್ತೇನೆ, ನನ್ನ ತಮ್ಮನ ಬೈಕಿಗೆ ಅತಿ ವೇಗ & ಅಜಾಗರುಕತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಹೊಡೆದು ಅಪಘತಪಡಿಸಿ, ಗಾಯಾಳುವಿಗೆ  ಚಿಕಿತ್ಸೆ ಕೊಡಿಸದೇ ಸ್ಥಳದಿಂದ ಹೋದ ಕೆ.ಎ-06ಇಜೆ-9999 ದ್ವಿ ಚಕ್ರವಾಹನ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ನೀಡಿದ ಫಿರ್ಯಾದು ಮೇರೆಗೆ  ಪ್ರಕರಣ ದಾಖಲಿಸಿರುತ್ತೆ.

 


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 74 guests online
Content View Hits : 302224