ದಂಡಿನಶಿವರ ಪೊಲೀಸ್ ಠಾಣಾ ಮೊ.ನಂ 123-2017 ಕಲಂ 379 ಐ.ಪಿ,ಸಿ
ದಿನಾಂಕ 13/12/2017 ರಂದು ಪಿರ್ಯಾಧುದಾರರಾದ ಹೆಚ್.ಆರ್, ತೇಜಸ್ವಿ ರವರು ಠಾಣೆಗೆ ಹಾಜರಾಗಿ ನೀಡಿದ ಪಿರ್ಯಾದು ಅಂಶವೇನೆಂದರೆ ನಾನು ಸುಮಾರು 05 ವರ್ಷಗಳಿಂದ ತಿಪಟೂರು ವಿಭಾಗೀಯ ಕಛೇರಿ, ಬೇಸ್ಕಾಂ ನಲ್ಲಿ ಸೇವೆ ಸಲ್ಲಿಸುತ್ತಿದ್ದು, ನಾನು ಪ್ರತಿ ದಿನ ಅಮ್ಮಸಂದ್ರದಿಂದ ತಿಪಟೂರಿಗೆ ರೈಲಿನಲ್ಲಿಪ್ರಯಾಣ ಮಾಡುತ್ತಿರುತ್ತೇನೆ, ರೈಲಿಗೆ ಹೋಗಲು ಹೋನ್ನೇನಹಳ್ಳಿಯಿಂದ ಅಮ್ಮಸಂದ್ರಕ್ಕೆ ನನ್ನ ಬಾಬ್ತು ಬೈಕ್ ನಲ್ಲಿ ಬಂದು ನಂತರ ರೈಲಿನಲ್ಲಿ ತಿಪಟೂರಿಗೆ ಹೋಗುತ್ತಿರುತ್ತೇನೆ, ದಿನಾಂಕ 08/09/2017 ರಂದು ಬೆಳಿಗ್ಗೆ ಸುಮಾರು 09-00 ಗಂಟೆಗೆ ರೈಲ್ವೆ ನಿಲ್ದಾಣದ ಪಕ್ಕದಲ್ಲಿ ನನ್ನ ಬಾಬ್ತು ಕೆ,ಎ 44 ಜೆ 3440 ನೇ ಬಜಾಜ್ ದ್ವಿಚಕ್ರವಾಹನವನ್ನು ನಿಲ್ಲಿಸಿ ತಿಪಟೂರಿಗೆ ಕೆಲಸಕ್ಕೆ ಹೋಗಿ ಮತ್ತೆ ಸಂಜೆ 06-30 ಕ್ಕೆ ವಾಪಾಸ್ ಬಂದಾಗ ದ್ವಿಚಕ್ರವಾಹನ ಕಳ್ಳತನವಾಗಿರುವುದು ಕಂಡು ಬಂದಿರುತ್ತೆ. ಸದರಿ ನನ್ನ ವಾಹನದ ಸಂಖ್ಯೆ ಕೆ,ಎ 44 ಜೆ 3440 ನೇ ಬಜಾಜ್ ದ್ವಿಚಕ್ರವಾಹನವಾಗಿದ್ದು, 150 ಸಿ,ಸಿ ಸಾರ್ಮಥ್ಯವನ್ನು ಹೊಂದಿರುತ್ತೆ.ಮತ್ತುಕಪ್ಪುಬಣ್ಣದ ದ್ವಿಚಕ್ರವಾಹನವಾಗಿರುತ್ತೆ. ನಾನು ಅಕ್ಕಪಕ್ಕದ ಮನೆಯವರನ್ನು ವಿಚಾರಸಿದ್ದು, ಯಾರು ಸಹ ಬೈಕ್ ನ ಬಗ್ಗೆ ಮಾಹಿತಿ ನೀಡಿರುವುದಿಲ್ಲ. ನಾನು ಎಲ್ಲಾ ಕಡೆ ಹುಡುಕಾಡಿದರು ಕಳವು ವಾಗಿರುವ ನನ್ನ ಬಾಬ್ತು ದ್ವಿಚಕ್ರವಾಹನ ಪತ್ತೆಯಾಗದೆ ಇರುವುರಿಂದ ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದು, ಕಳ್ಳತನವಾಗಿರುವ ನನ್ನ ದ್ವಿಚಕ್ರವಾಹನವನ್ನು ಪತ್ತೆ ಮಾಡಿಕೊಡಬೇಕೆಂತ ಇತ್ಯಾದಿಯಾಗಿ ಕೋರುತ್ತೇನೆಂತ ನೀಡಿದ ಪಿರ್ಯಾದು ಅಂಶವಾಗಿರುತ್ತೆ.
ಚೇಳೂರು ಪೊಲೀಸ್ ಠಾಣಾ ಮೊ. ನಂ 185/2017 ಕಲಂ 323. 498(ಎ), 504 ಐ.ಪಿ.ಸಿ ಮತ್ತು ಕಲಂ 3 ಮತ್ತು 4 ಡಿ.ಪಿ..ಆಕ್ಟ್
ದಿನಾಂಕ; 13/12/2017 ರಂದು ಮಧ್ಯಾಹ್ನ 2-00 ಗಂಟೆಗೆ ಪಿರ್ಯಾದಿ ಶ್ರೀ ಮತಿ ಅನಿತ ರವರು ಠಾಣೆಗೆ ಹಾಜರಾಗಿ ನೀಡಿದ ಪಿರ್ಯಾದು ಅಂಶವೇನಂದರೆ, ನಮ್ಮ ತಂದೆ- ತಾಯಿಗೆ ನಾವು 03 ಜನ ಮಕ್ಕಳಿದ್ದು, 1 ನೇ ನರಸಿಂಹ ಮೂರ್ತಿ, 2 ನೇ ನಾನು 3 ನೇ ದಿವ್ಯ ಎಂಬುವರಾಗಿದ್ದು, ನನ್ನ ತಂದೆ ತಾಯಿಗಳು ನನ್ನನ್ನು ದಿನಾಂಕ; 27-28/03/2014 ರಂದು ಗುಬ್ಬಿ ತಾಲ್ಲೋಕ್. ನಿಟ್ಟೂರು ಹೋ, ಕಂಚಿಗನಹಳ್ಳಿ ಗ್ರಾಮದ ಗಿರಿಯಪ್ಪನವರ ಮೊದಲನೆಯ ಮಗ ಯೋಗೀಶ್ ರವರೊಂದಿಗೆ ಹಿಂದೂ ಸಂಪ್ರದಾಯದಂತೆ ಮದುವೆ ಮಾಡಿಕೊಟ್ಟಿದ್ದು, ಮದುವೆಯ ಕಾಲದಲ್ಲಿ ವರನಿಗೆ ಒಂದು ಕೊರಳ ಚೈನು, ಉಂಗುರ, 2.000.00 ರೂ ಹಣ ಹಾಗೂ ನನಗೆ ಮಾಂಗಲ್ಯ ಸರ ಮತ್ತು ಒಂದು ಜೊತೆ ಕಿವಿಯ ಓಲೆ ಕೊಟ್ಟು ಮದುವೆ ಮಾಡಿದ್ದರು. ದಿನಾಂಕ; 31/07/2014 ರಂದು ಗುಬ್ಬಿ ನೊಂದಣಿ ಕಛೇರಿಯಲ್ಲಿ ವಿವಾಹ ನೊಂದಣಿ ಮಾಡಿಸಿರುತ್ತೆ. ನಾನು ಮದುವೆಯಾದ ಮೇಲೆ ನನ್ನ ಗಂಡ ನನ್ನ ಅತ್ತೆ ದಿವಾಕರಮ್ಮ ಮಾವ ಗಿರಿಯಪ್ಪ, ನನ್ನ ಮೈಧ ನಾಗರಾಜು ಮತ್ತು ಶಶಿ ಕುಮಾರ್ , ಎಲ್ಲರೂ ಒಂದೇ ಮನೆಯಲ್ಲಿ ವಾಸವಾಗಿರುತ್ತೇವೆ. ನಾನು ಮತ್ತು ನನ್ನ ಗಂಡ ಮದುವೆಯಾದ ಮೇಲೆ 01 ವರ್ಷಗಳ ಕಾಲ ಅನ್ಯೋನ್ಯವಾಗಿ ಎಲ್ಲಾರೊಂದಿಗೆ ಸಂಸಾರ ಮಾಡಿಕೊಂಡಿದ್ದೆವು. ನಂತರ ನನ್ನ ಗಂಡ ಯೋಗೀಶ್ ಮತ್ತು ಅತ್ತೆ ದಿವಾಕರಮ್ಮ ಮಾವ ಗಿರಿಯಪ್ಪ ನನ್ನ ಮೈಧುನರಾದ ನಾಗರಾಜು, ಮತ್ತು ಶಶಿ ಕುಮಾರ್ ಎಲ್ಲಾರೂ ನಿನ್ನ ತಂದೆ ಮದುವೆಯ ಕಾಲದಲ್ಲಿ ನಿಮ್ಮ ತಂದೆ ನೀಡಿರುವ ವರದಕ್ಷಿಣೆ ಹಣ ಮತ್ತು ವಡವೆಗಳು ಸಾಕಾಗುತ್ತಿಲ್ಲ. ನೀನು ನಿಮ್ಮ ತಂದೆಯ ಮನೆಗೆ ಹೋಗಿ ಇನ್ನೂ ಹೆಚ್ಚಿಗೆ ವರದಕ್ಷಿಣೆ ಹಣ ಮತ್ತು ವಡವೆಗಳನ್ನು ತೆಗೆದುಕೊಂಡು ಬಾ ಎಂದು ನನ್ನ ಗಂಡ ಮತ್ತು ನನ್ನ ಅತ್ತೆ ಮಾವ ಹಾಗೂ ಮೈದನರು ಎಲ್ಲಾರೂ ಸೇರಿಕೊಂಡು ಕೈಗಳಿಂದ ಹೊಡೆದು ನಮ್ಮ ತಂದೆಯ ಮನೆಗೆ ಕಳುಹಿಸಿದರು. ನಾನು ನಮ್ಮ ತಂದೆಯ ಮನೆಗೆ ಬಂದು ನನ್ನ ತಂದೆ ಮತ್ತು ತಾಯಿಗೆ ತಿಳಿಸಿದನು. ಆಗ ನನ್ನ ತಂದೆ - ತಾಯಿ ಮತ್ತು ನನ್ನ ಅಣ್ಣ ನರಸಿಂಹ ಮೂರ್ತಿ ಹಾಗೂ ನಮ್ಮ ಸಂಬಂದಿ ಕೊಂಡ್ಲಿ ಗ್ರಾಮದ ಸಿದ್ದರಾಮಯ್ಯ ಮತ್ತು ಕೊಂಡಾಪುರ ಗ್ರಾಮದ ನಾಗೇಶ್ ಎಲ್ಲಾರೂ ಸೇರಿಕೊಂಡು ರಾಜಿ ಪಂಚಾಯ್ತಿ ಮಾಡಿ 10.000 ರೂ ಹಣವನ್ನು ಕೊಟ್ಟು ನನ್ನನ್ನು ಅವರ ಮನೆಯಲ್ಲಿ ಬಿಟ್ಟು ಬಂದಿದ್ದರು. ಬಿಟ್ಟು ಬಂದ ಸುಮಾರು 06 ತಿಂಗಳ ಕಾಲ ನನ್ನನ್ನು ಚೆನ್ನಾಗಿ ನೋಡಿಕೊಂಡಿದ್ದು, ನಂತರ ನನ್ನ ಗಂಡ ಯಾರದೋ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡು ಮನೆಗೆ ಸರಿಯಾಗ ಬರದೇ, ರಾತ್ರಿ ಯಾವುದೋ ವೇಳೆಯಲ್ಲಿ ಬಂದು ನನ್ನನ್ನು ಅವ್ಯಾಚ್ಯ ಶಬ್ದಗಳಿಂದ ಸೂಳೆ ಮುಂಡೆ ಬೊಳಿ ಮುಂಡೆ ಎಂದು ಬೈದು ಕೈಗಳಿಂದ ಹೊಡೆದು ನಿನ್ನನ್ನು ನಾನು ಸಾಕಲು ಆಗಲ್ಲ ನೀನು ನಿನ್ನ ತವರು ಮನೆಗೆ ಹೋಗಿ ಇನ್ನು ಹೆಚ್ಚಿನ ವಡವೆ ಮತ್ತು ಹಣವನ್ನು ತೆಗೆದುಕೊಂಡು ಎಂದು ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದರು. ನಾನು ಈ ವಿಚಾರವನ್ನು ನಮ್ಮ ತಂದೆ- ತಾಯಿಗೆ ತಿಳಿಸದೇ ಅವರು ಕೊಡುವ ಹಿಂಸೆಯನ್ನು ಸಹಿಸಿಕೊಂಡು ಅವರ ವನೆಯಲ್ಲಿಯೇ ಇದ್ದೆನು. ದಿನಾಂಕ; 12/08/2017 ರಂದು ರಾತ್ರಿ ನನ್ನ ಗಂಡ ನಮ್ಮ ಮನೆಗೆ ಬಂದಿರುವುದಿಲ್ಲ ದಿನಾಂಕ; 13/08/2017 ರಂದು ಬೆಳಗ್ಗೆ 7-00 ಗಂಟೆ ಸಮಯದಲ್ಲಿ ನನ್ನ ಗಂಡ ಮನೆಗೆ ಬಂದರು ಎಲ್ಲಿಯೋ ಹೋಗಿದ್ದು, ಮನೆಗೆ ಬಂದಾಗ ನಾನು ರಾತ್ರಿ ಎಲ್ಲಿಗೆ ಹೋಗಿದ್ದೆ ಎಂದು ಕೇಳಿದಕ್ಕೆ ನನ್ನ ಗಂಡ ನಾನು ಎಲ್ಲಿಯಾದರೂ ಹೋಗುತ್ತೇನೆ. ನೀನು ಯಾವಳೇ ಕೇಳೋದಿಕ್ಕೆ ಎಂದು ಗಲಾಟೆ ಮಾಡಿದ ಅಷ್ಟರಲ್ಲಿ ಮನೆಯಲ್ಲಿಯೇ ಇದ್ದ ನನ್ನ ಅತ್ತೆ ಮಾವ ಮೈದುನರು ಎಲ್ಲಾರೂ ಬಂದು ಅವ್ಯಾಚ್ಯ ಶಬ್ದಗಳಿಂದ ಬೈದು ನಿನ್ನನ್ನು ಮದುವೆ ಮಾಡಿಕೊಂದು 04 ವರ್ಷವಾದರೂ ಮಕ್ಕಳಾಗಲಿಲ್ಲ ನಿನ್ನನ್ನು ಸಾಕುವುದೇ ದಂಡ ನೀನು ನಮ್ಮ ಮನೆಯಲ್ಲಿ ಇರಬೇಕು ಎಂದರೆ ನಿನ್ನ ತವರು ಮನೆಗೆ ಹೋಗಿ 50.000 ರೂ ಹಣ ವಡವೆಗಳನ್ನು ತೆಗೆದುಕೊಂಡು ಬಾ ಎಂದು ಎಲ್ಲಾರೂ ಸೇರಿಕೊಂಡು ದೈಹಿಕ ವಾಗಿ ಮತ್ತು ಮಾನಸಿಕವಾಗಿ ಹಿಂಸೆ ನೀಡಿ ನನ್ನನ್ನು ಮನೆಯಿಂದ ಹೊರ ಹಾಕಿದರು. ಆಗ ನಾನು ನನ್ನ ತವರು ಮನೆಗೆ ಬಂದು ಈ ವಿಚಾರವನ್ನು ನಮ್ಮ ತಂದೆ ತಾಯಿಎ ತಿಳಿಸಿದೆನು. ಆಗ ನನ್ನ ತಂದೆ ತಾಯಿ ಎಲ್ಲಾರು ನ್ಯಾಯ ಪಂಚಾಯ್ತಿ ಮಾಡೋಣ ಎಂದು ನನ್ನ ತವರು ಮನೆಯಲ್ಲಿ ಇಟ್ಟುಕೊಂಡರು. ಹೇಳಿ ಕಳುಹಿಸಿದರು ಸಹ ಇಷ್ಟು ದಿನ ವಾದರು ನನ್ನ ಗಂಡ ಹಾಗೂ ಅವರ ಮನೆಯವರು ನ್ಯಾಯಕ್ಕೆ ಬರದೇ ಇದ್ದುದ್ದರಿಂದ ಈ ದಿನ ತಡವಾಗಿ ಬಂದು ದೂರು ನೀಡಿರುತ್ತೇನೆ. ನನಗೆ ಹೆಚ್ಚಿನ ವರದಕ್ಷಿಣೆ ಹಣವನ್ನು ತೆಗೆದುಕೊಂಡು ಬಾ ಎಂದು ಅವ್ಯಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ಹೊಡೆದು ದೈಹಿಕವಾಗಿ ಮತ್ತು ಮಾನಸಿಕ ಹಿಂದೆ ನೀಡಿದವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ಇತ್ಯಾದಿಯಾದ ಪಿರ್ಯಾದು ಅಂಶ
|