lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ. ದಿನಾಂಕ : 10-07-2018   ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 09-07-2018 ಕೊಲೆ ಆರೋಪಿಗಳ ಬಂಧನ ******* ದಿನಾಂಕ 04.07.2018 ರಂದು... >>   ಪತ್ರಿಕಾ ಪ್ರಕಟಣೆ ದಿನಾಂಕ : 07-07-2018. ಪೂರ್ವಾನುಮತಿ ಪಡೆಯದೇ ಹೆದ್ದಾರಿ ತಡೆ ನಡೆಸಿ,... >> ದಿನಾಂಕ.03.07.2018. ಪತ್ರಿಕಾ ಪ್ರಕಟಣೆ ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ 11 ಲಕ್ಷ 70 ಸಾವಿರ ಬೆಲೆ ಬಾಳುವ ಚಿನ್ನ-ಬೆಳ್ಳಿ  ಹಾಗೂ ಮೊಬೈಲ್‌‌‌... >>   ಪತ್ರಿಕಾ ಪ್ರಕಟಣೆ. ತುಮಕೂರು ಜಿಲ್ಲಾ ಪೊಲೀಸ್, ತುಮಕೂರು. ಕೋರಾ ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 27.06.2018 ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಸಾರ್ವಜನಿಕರ... >> ಪತ್ರಿಕಾ ಪ್ರಕಟಣೆ ದಿನಾಂಕ:- 23/06/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಖನ್ನ... >> ಪತ್ರಿಕಾ ಪ್ರಕಟಣೆ ದಿನಾಂಕ: 21-06-2018. ಸುಲಿಗೆಕೋರರ ಬಂಧನ: ದಿನಾಂಕ:18-06-2018 ರಂದು... >>   ಪೊಲೀಸ್ ಪ್ರಕಟಣೆ ತುಮಕೂರು ಜಿಲ್ಲಾ ಪೊಲೀಸ್ ಪ್ರಕಟಣೆ   ಆತ್ಮೀಯ ನಾಗರೀಕರಲ್ಲಿ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< December 2017 >
Mo Tu We Th Fr Sa Su
        1 2
4 5 6 7 8 9 10
11 12 13 14 15 16 17
18 19 20 21 22 23 24
25 26 27 28 29 30 31
Sunday, 03 December 2017
Crime Incidents 3-12-17

ಹೊಸಬಡಾವಣೆ ಪೊಲೀಸ್ ಠಾಣಾ ಮೊ.ನಂ.156/2017 U/S 341, 323, 504, 506 r/w 34  IPC

ದಿನಾಂಕ ; 02-12-2017 ರಂದು ಮಧ್ಯಾಹ್ನ  2-30 ಗಂಟೆಗೆ ಪಿರ್ಯಾದಿ ಶ್ರೀ ವಾಗೀಶ್ ಬಿನ್ ಪಂಚಾಕ್ಷರಯ್ಯ (31) ಬಿಟಿವಿ ಜಿಲ್ಲಾ ವರದಿಗಾರರು, ವಾಸ 1ನೇ ಕ್ರಾಸ್, ಸಿದ್ಧರಾಮೇಶ್ವರ ಬಡಾವಣೆ, ತುಮಕೂರು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ಪಿರ್ಯಾದಿಗೆ ದಿನಾಂಕ 02.12.2017 ರಂದು ಬೆಳಿಗ್ಗೆ 09.30 ಗಂಟೆಗೆ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರೊಬ್ಬರಿಂದ ಉಡುಪಿ ಡಿಲೆಕ್ಸ್ ಹೋಟೆಲ್ ನಲ್ಲಿ ಪತ್ರಿಕಾಗೋಷ್ಟಿ ಇದ್ದು ಬರುವಂತೆ ತಿಳಿಸಿದ ಮೇರೆಗೆ ಪಿರ್ಯಾದಿರವರು ಉಡುಪಿ ಡಿಲಕ್ಸ್ ಹೋಟೆಲ್‌‌ಗೆ  ತೆರಳಿ 9-45  ಗಂಟೆಯಲ್ಲಿ ಜ್ಯೋತಿಗಣೇಶ್ ರವರಿಂದ ಪತ್ರಿಕಾಗೋಷ್ಠಿ ವಿಚಾರವನ್ನು ಟಿ.ವಿಗಾಗಿ ಬೈಟ್ ಪಡೆದು ಹಿಂತಿರುಗುವಷ್ಟರಲ್ಲಿ  ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ  ರವಿಶಂಕರ್. @ ಹೆಬ್ಬಾಕ ರವಿ ಮತ್ತು ತುಮಕೂರು ಮಹಾನಗರ ಪಾಲಿಕೆ ಸದಸ್ಯರಾದ ನಾಗೇಶ್ @ ಬಾವಿಕಟ್ಟೆ ನಾಗಣ್ಣ ಮತ್ತು ಅವರೊಂದಿಗೆ ಇದ್ದ ಕೆಲವು ಅವರ ಸಹವರ್ತಿಗಳು ಏಕಾಏಕಿ ಪಿರ್ಯಾದಿಯನ್ನು  ಬಲವಂತವಾಗಿ ಅಡ್ಡಗಟ್ಟಿ ಏನೋ ಬೋಳಿಮಗನೆ ನಮ್ಮ ಮೇಲೆ ಇಲ್ಲಸಲ್ಲದ ವರದಿ ಮಾಡುತ್ತೀಯ ಎಂದು ಏಕಾಏಕಿ ಕೈಗಳಿಂದ ಬಲವಾಗಿ ಪಿರ್ಯಾದಿ ಬೆನ್ನಿಗೆ ಮುಖಕ್ಕೆ ಎದೆಗೆ ಬಲವಾಗಿ ಥಳಿಸಿದ್ದಲ್ಲದೆ  ಹೀನಾಯವಾಗಿ ಸೂಳೆ ಮಗನೆ, ಬೋಳಿಮಗನೆ ಎಂದು ಬೈಯುತ್ತಾ  ರವಿಶಂಕರ್ ರವರು ಕಾಲಿನಿಂದ ಪಿರ್ಯಾದಿ  ಮರ್ಮಾಂಗಕ್ಕೆ ಒದ್ದಿರುತ್ತಾರೆ ಅಲ್ಲದೆ  ಬಾವಿಕಟ್ಟೆ ನಾಗಣ್ಣ ರವರು ಪಿರ್ಯಾದಿಯನ್ನು   ಜೀವಂತವಾಗಿ  ಉಳಿಸುವುದಿಲ್ಲ ಮಗನೇ ಎಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ. ನಾಗಣ್ಣ ಮತ್ತು ರವಿಶಂಕರ್ ರವರುಗಳು  ಸೇರಿ ಪಿರ್ಯಾದಿ  ಬಟ್ಟೆಯನ್ನು ಹರಿದುಹಾಕಿ  ಅವಮಾನ ಮಾಡುತ್ತಿದ್ದಾಗ ಅವರ ಜೊತೆಯಲ್ಲಿದ್ದ ಅವರ ಸಹವರ್ತಿಗಳು  ಪಿರ್ಯಾದಿಯನ್ನು ಹಿಡಿದು ಕೈಗಳಿಂದ ಹೊಡೆದು ಕಾಲುಗಳಿಂದ ಒದ್ದು ನೋವು ಪಡಿಸಿರುತ್ತಾರೆ. ಈ ಬಗ್ಗೆ ಮೇಲ್ಕಂಡವರ ವಿರುದ್ಧ ಕಾನೂನು ರೀತ್ಯಾ ಕ್ರಮ ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ನೀಡಿದ ದೂರು.  

 

ಹುಳಿಯಾರು ಪೊಲೀಸ್ ಠಾಣಾ ಮೊ.ನಂ.147/2017, ಕಲಂ:-397 ರೆ/ವಿ 34 ಐಪಿಸಿ.

ದಿನಾಂಕ 02/12/2017 ರಂದು ಬೆಳಗಿನ ಜಾವ 02-45 ಗಂಟೆ ಸಮಯದಲ್ಲಿ ಫಾತಿಮಾಬಿ ಕೋಂ ಅಹಮದ್, 41 ವರ್ಷ, ಮುಸ್ಲೀಂ ಜನಾಂಗ, ನರ್ಸ್ ಕೆಲಸ, ನುರಾನಿ ಮಸೀದಿ ಹತ್ತಿರ, ಆರ್.ಜಿ ಸರ್ಕಲ್, ಹುಳಿಯಾರು ಟೌನ್ ಇವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ, ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ನನಗೆ ಈಗ್ಗೆ ಸುಮಾರು 13 ವರ್ಷಗಳ ಹಿಂದೆ ಅಹಮದ್ ಎಬುವವರೊಂದಿಗೆ ಮದುವೆಯಾಗಿದ್ದು, ನನ್ನ ಗಂಡ ಬೆಂಗಳೂರಿನಲ್ಲಿದ್ದು, ನನಗೆ ಸೋನು ಎಂಬ ಮಗನಿದ್ದು, ಇವನು ಕಳ್ಳಂಬೆಳ್ಳದ ನಮ್ಮ ಅಕ್ಕನ ಮನೆಯಲ್ಲಿರುತ್ತಾನೆ. ನಾನು ಒಬ್ಬಳೇ ಗಾಣದಾಳು ಗ್ರಾಮದ ಸನಾವುಲ್ಲಾ ಎಂಬುವವರ ಮನೆಯಲ್ಲಿ ಈಗ್ಗೆ 5 ವರ್ಷಗಳಿಂದ ಬಾಡಿಗೆಗೆ ವಾಸವಿದ್ದು, ಇದೇ ಮನೆಯಲ್ಲಿಯೇ ಅಕ್ಕಪಕ್ಕದ ಸಾರ್ವಜನಿಕರಿಗೆ ಸಣ್ಣಪುಟ್ಟ ಚಿಕಿತ್ಸೆ ಕೊಡುತ್ತಾ ಸಾರ್ವಜನಿಕ ಸೇವೆ ಮಾಡಿಕೊಂಡು ಜೀವನ ನಡೆಸಿಕೊಂಡಿರುತ್ತೇನೆ.  ದಿನಾಂಕ 01/12/2017 ರಂದು ರಾತ್ರಿ ನಾನು ಮನೆಯಲ್ಲಿ ಒಬ್ಬಳೇ ಮಲಗಿಕೊಂಡಿದ್ದೆನು. ಇದೇ ದಿನ ರಾತ್ರಿ ಸುಮಾರು 12-45 ಗಂಟೆಗೆ ಯಾರೋ ನಮ್ಮ ಮನೆಯ ಬಾಗಿಲು ಬಡಿದ ಶಬ್ದ ಕೇಳಿ ನಾನು ಮನೆಯ ಮುಂದೆ ಇದ್ದ ಲೈಟ್ ಹಾಕಿ ಸ್ವಲ್ಪ ಬಾಗಿಲು ತೆಗೆದು ನೋಡಲಾಗಿ ಸುಮಾರು 24-25 ವರ್ಷ ವಯಸ್ಸಿನ ಅಪರಿಚಿತ ಇಬ್ಬರು ಗಂಡಸರು ಬಾಗಿಲ ಮುಂದೆ ನಿಂತಿದ್ದು, ಅದರಲ್ಲಿ ಒಬ್ಬ ಮುಖಕ್ಕೆ ಕಪ್ಪು ಟವಲನ್ನು ಸುತ್ತಿಕೊಂಡಿದ್ದನು. ಕಪ್ಪು ಟವಲನ್ನು ಸುತ್ತಿಕೊಂಡಿದ್ದ ವ್ಯಕ್ತಿ ನನಗೆ ಕಾಲು ನೋವಾಗಿದೆ ಡ್ರೆಸಿಂಗ್ ಮಾಡಿ ಎಂದು ಕೇಳಿದನು. ನಾನು ಡ್ರೆಸಿಂಗ್ ಮೇಟಿರಿಯಲ್ಸ್ ಇಲ್ಲ ಬೇರೆ ಆಸ್ಪತ್ರೆಗೆ ಹೋಗಿ ಎಂದು ಹೇಳಿ ನಾನು ಬಾಗಿಲು ಮುಚ್ಚಿಕೊಳ್ಳಲು ಹೋದೆ, ಅಷ್ಟರಲ್ಲಿ ಕಪ್ಪು ಟವಲನ್ನು ಸುತ್ತಿಕೊಂಡಿದ್ದ ವ್ಯಕ್ತಿ ತನ್ನ ಬಳಿ ಇದ್ದ ಚಾಕುವಿನಿಂದ ನನ್ನ ಮೂಗಿಗೆ ಇರಿದು ರಕ್ತಗಾಯ ಪಡಿಸಿ ಬಾಗಿಲು ತಳ್ಳಿಕೊಂಡು ಇಬ್ಬರು ಮನೆಯ ಒಳಗಡೆ ಬಂದು, ನನಗೆ ಚಾಕುವಿನಿಂದ ಹೆದರಿಸಿ ಬಾಯಿಗೆ ಕಿರುಚದಂತೆ ಬಟ್ಟೆ ಕಟ್ಟಿ, ನನ್ನ ಎರಡೂ ಕೈಗಳನ್ನು ವೇಲ್ ನಿಂದ ಕಟ್ಟಿದರು. ನೀನು ಏನು ಮಾಡುತ್ತಿದ್ದಿಯಾ ಎಂತಾ ಗೊತ್ತು, ನೀನು ಒಬ್ಬಳೇ ಇದ್ಧೀಯಾ ಎಂತಾಲೂ ಗೊತ್ತು, ನಿನ್ನ ಬಳಿ ಇರುವ ಎಲ್ಲಾ ವಡವೆಗಳು ಮತ್ತು ಹಣವನ್ನು ತೆಗದುಕೊಡು, ಇಲ್ಲ ಎಂದರೆ ನಿನ್ನನ್ನು ಇಲ್ಲಿಯೇ ಸಾಯಿಸಿಬಿಡುತ್ತೇನೆ ಎಂದು ಚಾಕುವನ್ನು ಹಿಡಿದುಕೊಂಡಿದ್ದ ವ್ಯಕ್ತಿ ಹೆದರಿಸುತ್ತಿದ್ದ. ನನ್ನ ಬಟ್ಟೆಯ ಮೇಲೆ ಮತ್ತು ನೆಲದ ಮೇಲೆ ರಕ್ತ ಸೋರುತ್ತಿತ್ತು. ನನ್ನನ್ನು ಸಾಯಿಸಬೇಡಿ ಎಂದು ಹೇಳುತ್ತಿದ್ದೆ. ಇನ್ನೊಬ್ಬಾತ ಮನೆಯ ರೂಮಿನ ಬೀರುವನ್ನು ತೆಗೆದು ಬಟ್ಟೆ ಬರೆಗಳನ್ನು ಕೊಡವಿ ಹುಡುಕಾಡಿ ನಂತರ ನನ್ನ ಬಳಿ ಬಂದು ವಡವೆ ಮತ್ತು ಹಣವನ್ನು ಎಲ್ಲಿ ಇಟ್ಟಿದ್ದೀಯಾ ತೆಗೆದುಕೊಡು ಇಲ್ಲ ಎಂದರೆ ನಿನ್ನನ್ನು ಸಾಯಿಸುತ್ತೇವೆ ಎಂದು ನನ್ನನ್ನು ರೆಟ್ಟೆ ಹಿಡಿದು ಎಳೆದುಕೊಂಡು ರೂಮಿಗೆ ಹೋದರು. ನಾನು ಕೀ ಇಟ್ಟಿದ್ದ ಪಾರ್ಸ್ ಅನ್ನು ತೆಗೆದು ಕೊಟ್ಟೆ, ಕೀಯನ್ನು ತೆಗೆದುಕೊಂಡು ಬೀರುವಿನ ಸೀಕ್ರೇಟ್ ಬಾಕ್ಸ್ ನಲ್ಲಿದ್ದ 5 ಜೊತೆ ಓಲೆಗಳು, 1 ನೆಕ್ಲೇಸ್, ಒಂದು ತಾಳಿ ಚೈನು, ಒಂದು ಗೋಮಾಳ ಸರವನ್ನು, ಒಂದು ಬ್ರಾಸ್ ಲೈಟ್, ಒಂದು ಕೊರಳ ಚೈನು ಮತ್ತು ಒಂದು ಜೊತೆ ಚಿನ್ನದ ಡ್ರಾಪ್ಸ್ ಎತ್ತಿಕೊಂಡರು, ಮತ್ತು ಕೆಂಪು ಪರ್ಸ್ ನಲ್ಲಿದ್ದ 18000 ರೂ ಹಣ ಮತ್ತು ಚಿಲ್ಲರೆ ಹಣ ಸುಮಾರು 6000 ರೂ ಒಟ್ಟು ಸುಮಾರು 24000 ರೂ ಹಣ ಎತ್ತಿಕೊಂಡರು. ಮತ್ತೆ ನಾನು ಮೈ ಮೇಲೆ ಹಾಕಿಕೊಂಡಿದ್ದ ಒಂದು ಜೊತೆ ಕಿವಿ ಓಲೆ, ಒಂದು ಲೇಡಿಸ್ ಬ್ರಾಸ್ ಲೈಟ್, ಕೈ ಬೆರಳುಗಳಿಗೆ ಹಾಕಿಕೊಂಡಿದ್ದ ಮೂರು ಚಿನ್ನದ ಉಂಗುರ ಒಂದು ಬೆಳ್ಳಿ ಉಂಗುರ ಮತ್ತು ಒಂದು ಬೆಳ್ಳಿ ಚೈನು, ಒಂದು ಜೊತೆ ಬೆಳ್ಳಿಯ ಕಾಲು ಚೈನುಗಳನ್ನು  ನನ್ನನ್ನು ಹೆದರಿಸಿ ಬಿಚ್ಚಿಸಿಕೊಂಡರು. ಎಲ್ಲಾ ವಡವೆಗಳು ಸೇರಿ ಒಟ್ಟು ಸುಮಾರು 200 ಗ್ರಾಂ ನಷ್ಟು ಹಾಗೂ ಬೆಳ್ಳಿಯ ವಡವೆಗಳು ಸುಮಾರು 60-70 ಗ್ರಾಂ ಆಗಿರುತ್ತೆ. ಇವುಗಳ ಬೆಲೆ ಸುಮಾರು 2,00,000/- ರೂಗಳಾಗಿರುತ್ತೆ. ಆಮೇಲೆ ಸುಮಾರು ರಾತ್ರಿ 01-10 ಗಂಟೆಗೆ ಆಚೆ ಹೋಗುವಾಗ ನನ್ನ ಕಾಲುಗಳನ್ನು ಮೊಬೈಲ್ ಚಾರ್ಜರ್ ವೈರ್ ನಿಂದ ಕಟ್ಟಿ ಹಾಸಿಗೆ ಮೇಲೆ ಹುರುಳಿಸಿ, ಪೊಲೀಸರಿಗೆ ಹೇಳಿದರೆ ನೀನು ಒಬ್ಬಳೇ ಇರುತ್ತೀಯಾ ಎಂತಾ ಗೊತ್ತು ನಿನ್ನನ್ನು ಬಿಡುವುದಿಲ್ಲ ಸಾಯಿಸಿಬಿಡುತ್ತೇವೆ ಎಂದು ಮನೆಯ ಬಾಗಿಲ ಹೊರಗೆ ಹೋಗುವಾಗ ಡೋರ್ ಲಾಕ್ ಹಾಕಿಕೊಂಡು ಹೋದರು. ನಾನು ನನ್ನ ಕೈಗೆ ಕಟ್ಟಿದ್ದ ಬಟ್ಟೆಯನ್ನು ಬಿಚ್ಚಿಕೊಂಡು ನಮ್ಮ ಮನೆಯ ಪಕ್ಕದ ವೆಂಕಟೇಶ್ ಎಂಬುವವರಿಗೆ ಫೋನ್ ಮಾಡಿ ಮನೆಯ ಬಾಗಿಲು ತೆಗೆಯುವಂತೆ ಹೇಳಿದೆ. ಅವರು ಮನೆಯ ಬಳಿ ಬಂದು ನಿಮ್ಮ ಮನೆಯ ಡೋರ್ ಲಾಕ್ ಆಗಿದೆ ಎಂದು ತಿಳಿಸಿದರು. ನಾನು ಮನೆಯ ಬಾಗಿಲಿಗೆ ಹಾಕಿದ್ದ ಡೋರ್ ಲಾಕ್‌ನ ಸ್ಕ್ರೂಗಳನ್ನು ಒಳಗಿನಿಂದ ಸ್ಕ್ರೂ ಡ್ರೈವರ್ ನಿಂದ ಬಿಚ್ಚಿ ಹೊರಬಂದೆ. ವಿಚಾರವನ್ನು ವೆಂಕಟೇಶ್ ರವರಿಗೆ ತಿಳಿಸಿ, ಅವರೊಂದಿಗೆ ಪೊಲೀಸ್ ಠಾಣೆಗೆ ಬಂದು, ನನಗೆ ಗಾಯಪಡಿಸಿ ನನ್ನ ವಡವೆಗಳು ಮತ್ತು ಹಣವನ್ನು ಕಿತ್ತುಕೊಂಡು ಹೋದ ಇಬ್ಬರು ವ್ಯಕ್ತಿಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿದ ಲಿಖಿತ ದೂರಿನ ಮೇರೆಗೆ ಪ್ರಕರಣ ದಾಖಲಾಗಿರುತ್ತೆ.


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 76 guests online
Content View Hits : 302225