lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ.16/08/2018 ತುಂಬೆ (ತುಮಕೂರು ಬೈಸಿಕಲ್ ಪೊಲೀಸ್)     ಜನಸ್ನೇಹಿ... >> :: ಪತ್ರಿಕಾ ಪ್ರಕಟಣೆ :: ದಿನಾಂಕ. 14.08.2018. 2018 ನೇ ಜುಲೈ ತಿಂಗಳಲ್ಲಿ ತುಮಕೂರು ನಗರ ವೃತ್ತದ... >> ಪತ್ರಿಕಾ ಪ್ರಕಟಣೆ ದಿನಾಂಕ 14/08/2018     ಸಿರಾ ತಾಲ್ಲೋಕ್ ತಾವರೆಕೆರೆ ಗ್ರಾಮದಲ್ಲಿರುವ... >> ಪತ್ರಿಕಾ ಪ್ರಕಟಣೆ   ಅಂತರ್ ರಾಜ್ಯ ಕಳ್ಳನ ಬಂಧನ, 75 ಸಾವಿರ ರೂ ಬೆಲೆಬಾಳುವ 10 ಮೊಬೈಲ್... >> ಪ ತ್ರಿ ಕಾ  ಪ್ರ ಕ ಟ ಣೆ ದಿನಾಂಕ: 03/08/2018 ತುಮಕೂರು ನಗರದಲ್ಲಿ ಒಟ್ಟು 3,420 ಅಭ್ಯರ್ಥಿಗಳಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ : 23.07.2018. ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ ದಿನಾಂಕ:- 23/07/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಕನ್ನ... >> : ಪತ್ರಿಕಾ ಪ್ರಕಟಣೆ  : : ದಿನಾಂಕ:21-07-2018 : -: ಮನೆಕಳ್ಳನ ಬಂಧನ :  7.5 ಲಕ್ಷ ರೂ ಮೌಲ್ಯದ ವಡವೆ... >> ಪತ್ರಿಕಾ ಪ್ರಕಟಣೆ ದಿನಾಂಕ : 20-07-18 ಸ್ಮಾರ್ಟ್ ಸಿಟಿ ಅಧಿಕಾರಿಗಳೆಂದು ವಂಚಿಸಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 20-07-2018       ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< November 2017 >
Mo Tu We Th Fr Sa Su
    1 2 3 4 5
6 7 8 9 10 11 12
13 14 15 16 17 18 19
20 21 22 23 24 25 26
27 28 29 30      
November 2017

Thursday, 30 November 2017

Crime Incidents 30-11-17

ಪಟ್ಟನಾಯಕನಹಳ್ಳಿಪೊಲೀಸ್ ಠಾಣಾ ಮೊ ನಂ 130/17 ಕಲಂ 87ಕೆ ಪಿ ಆಕ್ಟ್

ದಿನಾಂಕ:29/11/2017 ರಂದು ಮದ್ಯಾಹ್ನ 03:00ಗಂಟೆ ಸಮಯದಲ್ಲಿ ಪಿರ್ಯಾದಿ  ಹೆಚ್ ವಿ ಸುದರ್ಶನ್ ಸಿ.ಪಿ.ಐ  ಶಿರಾ ರವರು ಶಿರಾ ಗ್ರಾಮಾಂತರ ವೃತ್ತ ಕಛೇರಿಯಲ್ಲಿದ್ದಾಗ ಪಟ್ಟನಾಯಕನಹಳ್ಳಿ ಪೊಲೀಸ್ ಠಾಣಾ ಸರಹದ್ದಿನ ಕರಿದಾಸರಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಪಾಠ ಶಾಲೆಯ  ಹಿಂಭಾಗದ ಸಾರ್ವಜನಿಕ ಸ್ಥಳದಲ್ಲಿ ಯಾರೊ ಆಸಾಮಿಗಳು ದುಂಡಾಕಾರವಾಗಿ ಕುಳಿತುಕೊಂಡು ಹಣವನ್ನು ಪಣವಾಗಿಕಟ್ಟಿಕೊಂಡು ಕಾನೂನು  ಬಾಹಿರ ಇಸ್ಪೀಟ್ ಜೂಜಾಟ ಆಡುತ್ತಿದ್ದರೆಂತ  ಖಚಿತ ಬಾತ್ಮೀ ಬಂದ ಮೇರೆಗೆ ನಾನು ದಾಳಿಮಾಡಲು ಸಾಯಂಕಾಲ 04:00 ಗಂಟೆಗೆ ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದುಕೊಂಡು ಪಟ್ಟನಾಯಕಹಳ್ಳಿ ಪೊಲೀಸ್ ಠಾಣೆಯ ಪಿ ಎಸ್ ಐ ಚಂದ್ರಶೇಖರ್, ಸಿಬ್ಬಂದಿಗಳು ಮತ್ತು ಪಂಚಾಯ್ತುದಾರರುಗಳನ್ನು ಇಲಾಖಾ ಜೀಪಿನಲ್ಲಿ ಕರೆದುಕೊಂಡು  ಹೋಗಿ ಮೇಲ್ಕಂಡ  ಸ್ಥಳದ  ಸ್ವಲ್ಪ ದೂರದ ಮರೆಯಲ್ಲಿ ಜೀಪನ್ನು ನಿಲ್ಲಿಸಿ ಜೀಪಿನಿಂದ  ಇಳಿದು ನೋಡಲಾಗಿ ಯಾರೊ ಆಸಾಮಿಗಳು  ಸ್ಥಳದಲ್ಲಿ ದುಂಡಾಕಾರವಾಗಿ ಕುಳಿತುಕೊಂಡಿದ್ದ  ಇಸ್ಪೀಟ್ ಎಲೆಗಳ ಸಹಾಯದಿಂದ  ಕಾನೂನು ಬಾಹಿರ  ಇಸ್ಪೀಟ್ ಜೂಜಾಟ ಆಡುತ್ತಿದ್ದ ಆಸಾಮಿಗಳ ಮೇಲೆ ಪಂಚರ ಸಮಕ್ಷಮ  ನಾನು  ಸಿಬ್ಬಂದಿಗಳು ದಾಳಿ ಮಾಡಿ ಆಸಾಮಿಗಳನ್ನು ಹಿಡಿದು ಅವರುಗಳ ಹೆಸರು ಮತ್ತು ವಿಳಾಸ ಕೇಳಲಾಗಿ 1)ಮುದ್ದರಾಜು ಬಿನ್  ಮಾಹದೇವಪ್ಪ , ಸುಮಾರು 42ವರ್ಷ, ಕುಂಚಿಟಿಗರು, ಜಿರಾಯ್ತಿ, ಕರಿದಾಸರಹಳ್ಳಿ ಗ್ರಾಮ, ಶಿರಾ ತಾ  2) ಕರಿಯಣ್ಣ ಬಿನ್ ಚಿಕ್ಕಣ್ಣ,47ವರ್ಷ, ವಕ್ಕಲಿಗರು, ಜಿರಾಯ್ತಿ, ಕರಿದಾಸರಹಳ್ಳಿ ಗ್ರಾಮ, ಶಿರಾ ತಾ 3)ರಂಗನಾಥ ಬಿನ್ ಲೇಟ್ ರಂಗಣ್ಣ, ಸುಮಾರು 35ವರ್ಷ, ವಕ್ಕಲಿಗರು, ಜಿರಾಯ್ತಿ, ಕರಿದಾಸರಹಳ್ಳಿ ಗ್ರಾಮ, ಶಿರಾ ತಾ    4) ಶ್ರೀನಿವಾಸ  ಬಿನ್ ಗೋವಿಂದಪ್ಪ, 39ವರ್ಷ, ವಕ್ಕಲಿಗರು, ಜಿರಾಯ್ತಿ, ಕರಿದಾಸರಹಳ್ಳಿ ಗ್ರಾಮ, ಶಿರಾ ತಾ 5) ಶಿವಣ್ಣ ಬಿನ್  ಲೇಟ್  ತಾಡಪ್ಪ, ಸುಮಾರು 35ವರ್ಷ, ಛಲವಾದಿ ಜನಾಂಗ, ಕೂಲಿಕೆಲಸ, ಕರಿದಾಸರಹಳ್ಳ  ಗ್ರಾಮ, ಶಿರಾ ತಾ 6) ರಾಮಣ್ಣ  ಬಿನ್ ಲೇಟ್ ಸಂಜೀವಪ್ಪ, ಸುಮಾರು 70ವರ್ಷ, ಮಡಿವಾಳ ಜನಾಂಗ, ಕರಿದಾಸರಹಳ್ಳಿ  ಗ್ರಾಮ, ಶಿರಾ ತಾಲ್ಲೋಕ್ ಎಂತ ತಿಳಿಸಿದ್ದು, ಆಕಾಡದಲ್ಲಿ ಚಲ್ಲಾಪಿಲ್ಲಿಯಾಗಿ ಬಿದ್ದಿದ್ದ ಹಣವನ್ನು ಏಣಿಸಲಾಗಿ 8140/-ರೂ ನಗದು ಹಣ, 52  ಇಸ್ಪೀಟ್ ಎಲೆಗಳು,  2 ಸ್ಯಾಮಸಂಗ್ ಮೊಬೈಲ್ , 1 ಇಂಟೆಕ್ಸ್  ಮತ್ತು  1 ಜಿನೆಕ್ಸ್ ಮೊಬೈಲ್  ಮತ್ತು  ಒಂದು ಹಳೇಯ  ನ್ಯೂಸ್ ಪೇಪರ್ ಅನ್ನು ಸಂಜೆ 05:30 ಗಂಟೆಯಿಂದ ಸಂಜೆ 06:30ಗಂಟೆಯವರೆಗೆ ಪಂಚನಾಮೆ ಬರೆದು ಪಂಚನಾಮೆ ಮೂಲಕ ಮಾಲುಗಳನ್ನು ,ಆಸಾಮಿಗಳನ್ನು ವಶಕ್ಕೆ ಪಡೆದು ರಾತ್ರಿ 07:30 ಗಂಟೆಗೆ ವಾಪಸ್ ಬಂದು  ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆಗೆ ಬಂದು   ಆಸಾಮಿಗಳನ್ನು ಮತ್ತು ಮಾಲುಗಳನ್ನು ನೀಡಿ ಮುಂದಿನ ಕ್ರಮ ಜರುಗಿಸಲು ಸೂಚಿಸಿದ್ದನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಮಿಡಿಗೇಶಿ ಪೊಲೀಸ್ ಠಾಣಾ ಮೊ.ಸಂ.106/2017, ಕಲಂ:279, 304(ಎ) ಐಪಿಸಿ.

ದಿನಾಂಕ:29/11/2017 ರಂದು ಮದ್ಯಾಹ್ನ 03:00 ಗಂಟೆಗೆ ಪಿರ್ಯಾದಿ ರಾಜಮ್ಮ ಕೋಂ ಶಿವರಾಮ, 24 ವರ್ಷ, ವಕ್ಕಲಿಗ ಜನಾಂಗ, ಜಿರಾಯ್ತಿ, ರೆಡ್ಡಿಹಳ್ಳಿ ಗ್ರಾಮ, ಮಿಡಿಗೇಶಿ  ಹೋಬಳಿ, ಮಧುಗಿರಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ಮೇಲ್ಕಂಡ ವಿಳಾಸದಲ್ಲಿ ನಾನು, ನನ್ನ ಗಂಡ ಶಿವರಾಮ ಹಾಗೂ ಒಂದೂವರೆ ವರ್ಷದ ನಮ್ಮ ಗಂಡು ಮಗು ಹಾಗೂ ನನ್ನ ಅತ್ತೆಯೊಂದಿಗೆ ವಾಸವಾಗಿರುತ್ತೆನೆ. ನನ್ನ ಗಂಡ ಶಿವರಾಮ ರವರು ಈ ದಿನ ಅಂದರೆ ದಿನಾಂಕ:29/11/2017 ರಂದು ಮದ್ಯಾಹ್ನ ಸುಮಾರು 01:30 ಗಂಟೆಯ ಸಮಯದಲ್ಲಿ ಕೆಲಸ ನಿಮಿತ್ತಾ ನಮ್ಮ ಊರಿಗೆ ಬಂದಿದ್ದ ತಾಡಿ ಗ್ರಾಮದ ವಾಸಿಯಾದ ಮಂಜುನಾಥ ಎಂಬುವರ ದ್ವಿ ಚಕ್ರ ವಾಹನದಲ್ಲಿ ಕೆಲಸ ನಿಮಿತ್ತಾ ಮಿಡಿಗೇಶಿಗೆ ಹೋಗಿ ಬರುತ್ತೇನೆಂತ ಮನೆಯಲ್ಲಿದ್ದ ನನಗೆ ಹೇಳಿ ಮಂಜುನಾಥ ರವರ ಬಾಬ್ತು ದ್ವಿಚಕ್ರ ವಾಹನದ ಹಿಂಬದಿಯಲ್ಲಿ ನನ್ನ ಗಂಡ ಶಿವರಾಮರವರು ಕುಳಿತುಕೊಂಡು ಮಿಡಿಗೇಶಿಗೆ ಬಂದರು. ನಮ್ಮ ಮನೆಯಿಂದ ನನ್ನ ಗಂಡ ಹೊರಟು ಬಂದ ಸುಮಾರು ಅರ್ಧ ಗಂಟೆಯ ನಂತರ ನಮ್ಮ ಗ್ರಾಮದ ಗ್ರಾಮ ಪಂಚಾಯ್ತಿ ಮೆಂಬರ್ ಆದ ರಾಜಣ್ಣ ಎಂಬುವರು ಪೋನ್ ಮಾಡಿ ನಾನು ಈ ದಿನ ಮದ್ಯಾಹ್ನ ಸುಮಾರು 02:00 ಗಂಟೆಯ ಸಮಯದಲ್ಲಿ ಕಸಾಪುರ ಗ್ರಾಮದ ಹತ್ತಿರವಿರುವ ಶನಿಮಹಾತ್ಮ ದೇವಸ್ಥಾನದ ಬಳಿ ಹುಣಸೆಗಿಡದ ಕೆಳಗೆ ಕುಳಿತ್ತಿದ್ದೆನು, ಅದೇ ಸಮಯಕ್ಕೆ ಕಸಾಪುರದ ಕಡೆಯಿಂದ ಮಿಡಿಗೇಶಿ ಕಡೆಗೆ ಹೋಗಲು ರೆಡ್ಡಿಹಳ್ಳಿ-ಮಿಡಿಗೇಶಿ ರಸ್ತೆಯಲ್ಲಿ ಬಂದ ಕೆಎ-64-ಎಲ್-5443 ನೇ ನಂಬರಿನ ದ್ವಿಚಕ್ರ ವಾಹನದ ಸವಾರನು ತನ್ನ ದ್ವಿಚಕ್ರ ವಾಹನವನ್ನು ಅತಿ ಜೋರಾಗಿ ಮತ್ತು ಅಡ್ಡಾದಿಡ್ಡಿಯಾಗಿ ಓಡಿಸಿಕೊಂಡು ಬಂದು ಹುಣಸೆ ಮರದ ಹತ್ತಿರ ರಸ್ತೆ ಪಕ್ಕವಿರುವ ಕಲ್ಲು ಗುಂಡಿಗೆ ಡಿಕ್ಕಿ ಹೊಡಿಸಿದ್ದರಿಂದ ಸದರಿ ದ್ವಿಚಕ್ರ ವಾಹನದ ಹಿಂಬದಿಯಲ್ಲಿ ಕುಳಿತಿದ್ದ ನಿನ್ನ ಗಂಡ ಶಿವರಾಮನು ಕೆಳಕ್ಕೆ ಅಂಗಾತವಾಗಿ ಬಿದ್ದನು. ಆಗ ಅಲ್ಲಿಯೇ ಇದ್ದ ನಾನು ಕೆಳಗೆ ಬಿದ್ದಿದ್ದ ನಿನ್ನ ಗಂಡನ ಬಳಿ ಹೋಗಿ ನೋಡಲಾಗಿ ಶಿವರಾಮನ ಮೂಗು, ಬಾಯಿ ಹಾಗೂ ಕಿವಿಗಳಲ್ಲಿ ರಕ್ತ ಬರುತ್ತಿತ್ತು. ಆಗ ನಾನು ಮತ್ತು ಸದರಿ  ದ್ವಿಚಕ್ರ ವಾಹನದ ಸವಾರ ಮಂಜುನಾಥ ಇಬ್ಬರೂ ಸೇರಿ ನಿನ್ನ ಗಂಡನನ್ನು ಉಪಚರಿಸುತ್ತಿದ್ದಾಗ ನಿನ್ನ ಗಂಡ ಶಿವರಾಮನು ಸ್ಥಳದಲ್ಲಿಯೇ ಮೃತಪಟ್ಟನು. ಆದ್ದರಿಂದ ನೀನು ಬೇಗ ಬಾ ಎಂತ ತಿಳಿಸಿದರು, ವಿಷಯ ತಿಳಿದ  ನಾನು ನಮ್ಮ ಗ್ರಾಮದ ದತ್ತಾತ್ರೆಯ ರವರ ಜೊತೆಯಲ್ಲಿ ಅಪಘಾತ ನಡೆದ ಸ್ಥಳಕ್ಕೆ ಹೋಗಿ ನೋಡಲಾಗಿ ವಿಚಾರ ನಿಜವಾಗಿತ್ತು. ಅಪಘಾತಪಡಿಸಿ ನನ್ನ ಗಂಡನ ಸಾವಿಗೆ ಕಾರಣನಾದ ಕೆಎ-64-ಎಲ್-5443 ನೇ ದ್ವಿಚಕ್ರ ವಾಹನದ ಸವಾರ ಮಂಜುನಾಥನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ಪಿರ್ಯಾದು ಅಂಶವಾಗಿರುತ್ತೆ.

 

ನಗರ ಸಂಚಾರಿ ಪೊಲೀಸ್ ಠಾಣೆ ಮೊ.ಸಂ 232/2017 ಕಲಂ 279, 304[A]   IPC 134(A)(B) 187 IMV ACT

 

ದಿನಾಂಕ 29-11-2017 ರಂದು ಪಿರ್ಯಾದಿ  ಶರತ್ ಬಿನ್ ಪಳನಿ  ಮರಳೂರುದಿನ್ನೆ  ತುಮಕೂರು ರವರು  ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನಂದರೆ ನನ್ನ ತಂದೆಯವರಾದ  ಬಿ ಪಳನಿ ರವರು ಪ್ರತಿ ನಿತ್ಯ  ಎ ಪಿ ಎಂ ಸಿ ಯಾರ್ಡ  ಗೆ ಕೂಲಿ ಕೆಲಸಕ್ಕೆ  ಹೋಗುತ್ತಿದ್ದರು    ಒಂದೊಂದು  ದಿನ  ಕೆಲಸ ಜಾಸ್ತಿ ಇದ್ದಾಗ  ಬೆಳಗಿನ ಜಾವ ಮನೆಗೆ ಬರುತ್ತಿದ್ದರು.  ಈ ದಿನ ದಿನಾಂಕ 29-11-2017  ರಂದು ಬೆಳಗ್ಗೆ 7-30 ಗಂಟೆ ಸಮಯದಲ್ಲಿ ನಾನು ಮನೆಯಲ್ಲಿರುವಾಗ್ಗೆ  ಬಟವಾಡಿ ಹತ್ತಿರದಿಂದ ಯಾರೋ ಒಬ್ಬರು ಸಾರ್ವಜನಿಕರು ಪೋನ್ ಮಾಡಿ ಬಟವಾಡಿ ಹತ್ತಿರ  ಎ ಪಿ  ಎಂ ಸಿ ಯಾರ್ಡ  ಎದುರಿನ  ಶಿರಾ ಕಡೆ ಹೋಗುವ  ಪ್ಲೈ ಓವರ್ ನ  ಎನ್ ಹೆಚ್ 48 ರಸ್ತೆಯಲ್ಲಿ  ನಿಮ್ಮ ತಂದೆಗೆ ಯಾವುದೋ ವಾಹನದದಿಂದ ಅಪಘಾತವಾಗಿ  ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ ತಕ್ಷಣ  ಬಾ ಎಂದು  ತಿಳಿಸಿದರು.  ತಕ್ಷಣ ನಾನು ನಮ್ಮ ಸಂಬಂದಿಕರು ಎಲ್ಲರೂ ಅಪಘಾತ  ಸ್ಥಳಕ್ಕೆ ಹೋಗಿ  ನೋಡಲಾಗಿ  ನನ್ನ ತಂದೆ ಬಿ. ಪಳನಿ 49 ವರ್ಷ ರವರಿಗೆ  ಯಾವುದೋ  ವಾಹನದಿಂದ ಅಪಘಾತವಾಗಿ  ಕಾಲು ಕೈ ಗಳು  ಮುಖಕ್ಕೆ  ಮೈ ಗೆ ತೀವ್ರವಾಗಿ ಪೆಟ್ಟು ಬಿದ್ದು  ಜಜ್ಜಿದಂತಾಗಿ  ತೀವ್ರ ರಕ್ತ ಸ್ರಾವವಾಗಿ  ಸ್ಥಳದಲ್ಲಿಯೇ  ಮೃತಪಟ್ಟಿರುವುದು ಕಂಡು ಬಂತು ಅಲ್ಲಿ ನೆರೆದಿದ್ದ ಸಾರ್ವಜನಿಕರಿಂದ ವಿಚಾರ ತಿಳಿಯಲಾಗಿ  ನನ್ನ ತಂದೆ  ಎ ಪಿ ಎಂ ಸಿ ಯಾರ್ಡ ನಲ್ಲಿ ಕೂಲಿ ಕೆಲಸ  ಮುಗಿಸಿಕೊಂಡು ಮದ್ಯ ರಾತ್ರಿ ವಾಪಸ್  ಮನೆಗೆ  ಬರಲೆಂದು ಇದೇ ಬಟವಾಡಿ ಎ ಪಿ  ಎಂ ಸಿ ಯಾರ್ಡ  ಎದುರಿನ  ಶಿರಾ ಕಡೆ ಹೋಗುವ  ಎನ್ ಹೆಚ್ 48  ಪ್ಲೈ ಓವರ್  ರಸ್ತೆಯನ್ನು   ದಾಟುತ್ತಿರುವ  ಸಮಯದಲ್ಲಿ  ಅದೇ ಸಮಯಕ್ಕೆ   ಬೆಂಗಳೂರು ಕಡೆಯಿಂದ ಬಂದ   ಯಾವುದೋ ಅಪರಿಚಿತ ವಾಹನವನ್ನು  ಅದರ ಚಾಲಕ ಅತೀ ವೇಗ   ಮತ್ತು ಅಜಾಗರೂಕತೆಯಿಂದ    ಓಡಿಸಿಕೊಂಡು ಬಂದು  ರಸ್ತೆ ದಾಟುತ್ತಿದ್ದ ನಮ್ಮ ತಂದೆಗೆ ಡಿಕ್ಕಿ ಹೊಡೆದು  ಅಪಘಾತಪಡಿಸಿ  ನಿಲ್ಲಿಸದೆ  ಹೊರಟು ಹೋಗಿರುತ್ತಾನೆ   ಹಾಗೂ  ಈ ಅಪಘಾತವು  ಈ ದಿನ  ದಿನಾಂಕ 29-11-2017 ರಂದು ಬೆಳಗಿನ ಜಾವ 4-00 ಗಂಟೆಯಿಂದ 5-00 ಗಂಟೆಯ ಮದ್ಯದಲ್ಲಿ ಕೆಲಸ  ಮುಗಿಸಿಕೊಂಡು ವಾಪಸ್ ಮನೆಗೆ  ಬರುವ ಸಮಯದಲ್ಲಿ  ಆಗಿರಬಹುದೆಂತ ತಿಳಿಯಿತು.  ನಂತರ  ಸ್ಥಳಕ್ಕೆ ಬಂದ  ಟ್ರಾಪಿಕ್  ಪೊಲೀಸ್ ರವರು   ನನ್ನ ತಂದೆ   ಶವವನ್ನು  ಜಿಲ್ಲಾ  ಸರ್ಕಾರಿ ಆಸ್ವತ್ರೆಗೆ   ತೆಗೆದುಕೊಂಡು ಹೋದರು  ನಂತರ ನಾನು ನಮ್ಮ ಸಂಬಂದಿಕರಿಗೆಲ್ಲಾ ಮಾಹಿತಿ  ತಿಳಿಸಿ  ಠಾಣೆಗೆ ಬಂದು  ಈ ನನ್ನ ದೂರನ್ನು  ನೀಡುತ್ತಿದ್ದೇನೆ.  ನನ್ನ ತಂದೆಯವರ  ಸಾವಿಗೆ  ಕಾರಣವಾದ  ಯಾವುದೋ  ಅಪರಿಚಿತ ವಾಹನವನ್ನು ಹಾಗೂ  ಚಾಲಕನನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿರುತ್ತೇನೆ.    ಎಂತ  ನೀಡಿದ ದೂರನ್ನು  ಪಡೆದು ಪ್ರಕರಣ ದಾಖಲು ಮಾಡಿ ಪ್ರ ವ ವರದಿಯನ್ನು ಮಾನ್ಯ ಘನ ನ್ಯಾಯಾಲಯಕ್ಕೂ   ನಖಲುಗಳನ್ನು ತುರ್ತು ವರದಿಯೊಂದಿಗೆ ಇಲಾಖಾ  ಮೇಲಾಧಿಕಾರಿಗಳಿಗೂ ಸಲ್ಲಿಸಿಕೊಂಡಿರುತ್ತೆ

ವೈ ಎನ್  ಹೊಸಕೋಟೆ  ಪೊಲೀಸ್ ಠಾಣಾ ಮೊ. ನಂ 97/2017  ಕಲಂ:279,337, 304(a) IPC

ದಿನಾಂಕ:29/11/2017 ರಂದು ಬೆಳಿಗ್ಗೆ 10:00 ಗಂಟೆಗೆ ಪಿರ್ಯಾದಿ ನಾಗರಾಜು ಬಿನ್ ಫಕೀರಪ್ಪ, 38 ವರ್ಷ, ನಾಯಕ ಜನಾಂಗ, ಜಿರಾಯ್ತಿ ಕೆಲಸ ನೀಲಮ್ಮನಹಳ್ಳಿ ಗ್ರಾಮ, ಪಾವಗಡ ತಾ|| ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ  ದಿನಾಂಕ:28/11/2017 ರಂದು ಬೆಳಿಗ್ಗೆ  ನಮ್ಮ ತಂದೆಯ ಅಣ್ಣನಾದ ಲೇ|| ದೊಡ್ಡ ಓಬಳಪ್ಪ  ರವರ ಮಗ ಸುಬ್ಬರಾಯ ಮತ್ತು ನಮ್ಮ ಗ್ರಾಮದ   ರಂಗಪ್ಪ ಬಿನ್ ಹನುಮಂತರಾಯಪ್ಪ ಇಬ್ಬರೂ ಕೂಲಿಕೆಸಲಕ್ಕೆಂದು  ತನ್ನ ಬಾಬ್ತು ಕೆ.ಎ-64-ಈ-8322ನೇ ಹಿರೋ ಹೆಚ್.ಎಪ್. ಡಿಲಕ್ಸ್ ದ್ವಿ ಚಕ್ರ ವಾಹನದಲ್ಲಿ ಹೋಗಿದ್ದರು, ದಿನಾಂಕ:28/11/2017 ರಂದು ಸಂಜೆ 6:45 ಗಂಟೆ ಸಮಯದಲ್ಲಿ  ನಾನು ನಮ್ಮ ಮನೆಯ ಬಳಿ ಇರುವಾಗ್ಗೆ ಯಾರೋ ನನಗೆ ಪೋನ್ ಮಾಡಿ ನಿನ್ನ ದೊಡ್ಡಪ್ಪನ ಮಗ ಸುಬ್ಬರಾಯನಿಗೆ ಸೂಲನಾಯಕನಹಳ್ಳಿ ಗ್ರಾಮದ ಬಳಿ  ಅಪಘಾತವಾಗಿದೆ ಬನ್ನಿ ಎಂತ ತಿಳಿಸಿದ್ದು , ಆಗ ನಾನು ಮತ್ತು ನಮ್ಮ ಗ್ರಾಮದ ನಾಗಭೂಷಣ ರವರುಗಳು ಸೂಲನಾಯಕನಹಳ್ಳಿ  ಗ್ರಾಮದ ಬಳಿ ಹೋಗಿ ನೋಡಲಾಗಿ ಸುಬ್ಬರಾಯ ಮತ್ತು ರಂಗಪ್ಪ ರವರಿಗೆ ಅಪಘಾತವಾಗಿ ರಸ್ತೆಯಲ್ಲಿ ಬಿದ್ದಿದ್ದು ಸುಬ್ಬರಾಯನಿಗೆ ತಲೆಗೆ , ಬಲಕಾಲು , ಬೆನ್ನಿಗೆ ಹಾಗೂ ಮರ್ಮಾಂಗಕ್ಕೆ ಪೆಟ್ಟು ಬಿದ್ದು ರಕ್ತಗಾಯವಾಗಿದ್ದು , ಬೈಕ್ ನ ಹಿಂಬದಿಯಲ್ಲಿ ಕುಳಿತ್ತಿದ್ದ ರಂಗಪ್ಪನಿಗೆ ಬಲಕೈಗೆ ಪೆಟ್ಟಾಗಿದ್ದು ರಂಗಪ್ಪನನ್ನು ವಿಚಾರ ಮಾಡಲಾಗಿ ತಾನು ಮತ್ತು ಸುಬ್ಬರಾಯ ಕೂಲಿಕೆಲಸ ಮುಗಿಸಿಕೊಂಡು ಸಂಜೆ 6:00 ಗಂಟೆಗೆ ಸೂಲನಾಯಕನಹಳ್ಳಿ ಗ್ರಾಮದ ಗಂಗಮ್ಮ ಕೋಂ ಸತ್ಯಪ್ಪ ರವರ ಜಮೀನಿನಲ್ಲಿ  ಸೀತಾಫಲ ಹಣ್ಣು ಕಿತ್ತುಕೊಂಡು ವಾಪಸ್ ನೀಲಮ್ಮನಹಳ್ಳಿಗೆ ಬರಲೆಂದು ಸೂಲನಾಯಕನಹಳ್ಳಿ ಯಿಂದ ನೀಲಮ್ಮನಹಳ್ಳಿಗೆ ಹೋಗಲು ಸುಬ್ಬರಾಯ ತನ್ನ ಬೈಕ್ನ್ನು ಚಾಲನೆ ಮಾಡುತ್ತಿದ್ದು ನಾನು ಬೈಕ್ ನಲ್ಲಿ ಹಿಂಬದಿಯಲ್ಲಿ ಸೀತಾಫಲ ಹಣ್ಣಿನ ಚೀಲವನ್ನು  ಇಟ್ಟುಕೊಂಡು ಕುಳಿತ್ತಿದ್ದು ಸುಬ್ಬರಾಯನು ಸೀತಾಫಲ ಹಣ್ಣಿನ ಚೀಲವನ್ನು ಬೈಕ್ ಟ್ಯಾಂಕ್ ಮೇಲೆ ಇಟ್ಟುಕೊಂಡು   ಸೂಲನಾಯನಹಳ್ಳಿ ಯಿಂದ  ಬಳ್ಳಾರಿ ರಸ್ತೆ ಕಡೆಗೆ ಬರುತ್ತಿರುವಾಗ್ಗೆ  ಸಂಜೆ ಸುಮಾರು 6:30 ಗಂಟೆ ಸಮಯದಲ್ಲಿ ತನ್ನ ಬಾಬ್ತು ಕೆ.ಎ-64-ಈ-8322ನೇ ಬೈಕ್ ನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು  ಟ್ಯಾಂಕ್ ಮೇಲಿದ್ದ ಸೀತಾಫಲದ ಮೂಟೆಯಿಂದಾಗಿ ಹ್ಯಾಂಡಲ್ ನ್ನು ಸರಿಯಾಗಿ ತಿರುಗಿಸಲಾಗದೇ ರಸ್ತೆ ಮದ್ಯದಲ್ಲಿ ಗುಂಡಿ ತಪ್ಪಿಸಲು ಹೋಗಿ ಬಿದ್ದು ಅಪಘಾತವಾಗಿರುತ್ತದೆಂತ ತಿಳಿಸಿದನು, ಆಗ ನಾನು ಮತ್ತು ನನ್ನ ಜೊತೆ ಬಂದಿದ್ದ ನಾಗಭೂಷಣ ರವರು ಸ್ಥಳಕ್ಕೆ 108 ಆಂಬ್ಯೂಲನ್ಸ್ ಕರೆಸಿಕೊಂಡು ಗಾಯಾಳುಗಳನ್ನು ಪಾವಗಡ ಸರ್ಕಾರಿ  ಆಸ್ಪತ್ರೆ ಬಳಿಗೆ  ರಾತ್ರಿ ಸುಮಾರು 7:15 ಗಂಟೆಗೆ ಕರೆದುಕೊಂಡು ಹೋಗಿದ್ದು  ಆಸ್ಪತ್ರೆ ಬಳಿಗೆ  ಹೋಗುವಷ್ಟರಲ್ಲಿ ಸುಬ್ಬರಾಯನು ಮೃತಪಟ್ಟಿದ್ದು, ರಂಗಪ್ಪನನ್ನು ಚಿಕಿತ್ಸೆ ಬಗ್ಗೆ  ಆಸ್ಪತ್ರೆಗೆ ಸೇರಿಸಿರುತ್ತೇವೆ,  ಸುಬ್ಬರಾಯನು ತನ್ನ ಬಾಬ್ತು ಕೆ.ಎ-64-ಈ-8322ನೇ ಹೀರೋ ಹೆಚ್.ಎಫ್.ಡಿಲಕ್ಸ್ ಬೈಕ್ ನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ್ದರಿಂದ ಈ ಅಪಘಾತ ಸಂಭವಿಸಿರುತ್ತದೆಂತ , ಸುಬ್ಬರಾಯನ ಶವ ಪಾವಗಡ ಸರ್ಕಾರಿ ಆಸ್ಪತ್ರೆ ಶವಾಗಾರದಲ್ಲಿರುತ್ತದೆ. ನಾನು ರಾತ್ರಿ ವೇಳೆಯಾದ್ದರಿಂದ ಈ ದಿನ ಬೆಳಿಗ್ಗೆ ಬಂದು ಠಾಣೆಗೆ ದೂರು ನೀಡಿರುತ್ತೇನೆ, ತಾವು ಮುಂದಿನ  ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂತ ಇತ್ಯಾದಿಯಾಗಿ ನೀಡಿದ ಲಿಖಿತ ದೂರನ್ನು ಪ್ರಕರಣದಾಖಲಿಸಿರುತ್ತದೆ

 

ಬಡವನಹಳ್ಳಿ ಪೊಲೀಸ್ ಠಾಣಾ ಮೊ ನಂ 102/2017 ಕಲಂ 427-431 ಐಪಿಸಿ

ದಿನಾಂಕ:29/11/2017 ರಂದು ಮದ್ಯಾಹ್ನ 1-00 ಗಂಟೆ ಸಮಯದಲ್ಲಿ ಯೋಗ ಶ್ರೀನಿವಾಶ್‌‌ ಬಿ ಟಿ , ಚಂದ್ರಗಿರಿ ಗ್ರಾಮ ಪಂಚಾಯತಿಯ ಪಂಚಾಯತಿ ಅಭಿವೃದ್ಧಿ ಅಧಿಕಾರಿ  ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ,  ಚಂದ್ರಗಿರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಲ್ಲೇನಹಳ್ಳಿ ಗೊಲ್ಲರಹಟ್ಟಿ ಗ್ರಾಮದಲ್ಲಿ ಗ್ರಾಮ ಪಂಚಾಯತಿ ವತಿಯಿಂದ ಗ್ರಾಮ ಠಾಣಾ ವ್ಯಾಪ್ತಿಯಲ್ಲಿ ಅಂಗನವಾಡಿ ಕಟ್ಟಡ ನಿಮರ್ಿಸಲಾಗುತ್ತಿತ್ತು. ಸದರಿ ಕಟ್ಟಡವು ಪಾಯದ ಹಂತದಲ್ಲಿದ್ದಾಗ ಕೆ.ಈರಣ್ಣ ಬಿನ್ ಲೇ ಕದುರದಾಸಪ್ಪ ಎಂಬುವ ಆಸಾಮಿಯು ದಿನಾಂಕ: 23-11-2017 ರ ಸಂಜೆ 5 ರಿಂದ 5-30 ರ ಸಮಯದಲ್ಲಿ ಕಟ್ಟಡದ ಕಲ್ಲುಗಳನ್ನು ಕಿತ್ತು ವಿರುಕ್ತಿಗೊಳಿಸಿ ನಷ್ಟ ಉಂಟುಮಾಡಿರುತ್ತಾನೆ. ಈ ಸಮಯದಲ್ಲಿ ಸದರಿ ಕೃತ್ಯವನ್ನು ಗ್ರಾಮದ ಸಿದ್ದಪ್ಪ ಬಿನ್ ವದ್ದಿಗಪ್ಪ ಮತ್ತು ಜೋಗಣ್ಣ ಬಿನ್ ರಂಗಣ್ಣ, ಮತ್ತು ಇತರರು ನೋಡಿರುತ್ತಾರೆ. ಇದೇ ಕೆ.ಈರಣ್ಣ ಬಿನ್ ಲೇ ಕದುರದಾಸಪ್ಪ ಎಂಬುವನು ತನ್ನ ಮನೆಗೆ ಓಡಾಡಲು ಬೇರೆಕಡೆಯಿಂದ ಜಾಗಯಿದ್ದರೂ ಸಹ, ಇದೇ ಕಟ್ಟಡ ನಿಮರ್ಾಣ ಕಾಮಗಾರಿ ಹಂತದಲ್ಲಿ ನಮ್ಮ ಮನೆಗೆ ಒಡಾಡಲು ಜಾಗಬೇಕೆಂದು ಇದೇ ಬಡವನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಎನ್.ಸಿ.ಆರ್ ಪ್ರಕರಣವನ್ನು ದಾಖಲಿಸಿ ನ್ಯಾಯಾಲಯದಿಂದ ತಡೆಯಾಜ್ಞೆ ತಂದು ಪೊಲೀಸರಿಗೆ ತಿಳಿಸಿ ಕಟ್ಟಡ ಕಾಮಗಾರಿಯನ್ನು ತಡೆಯಿಡಿದಿರುತ್ತಾನೆ. ಮತ್ತು ಈ ಬಗ್ಗೆ ಪ್ರಕರಣವು ನ್ಯಾಯಾಲಯದಲ್ಲಿ ಇನ್ನು ಜಾರಿ ಇರುವುದರಿಂದ ಮತ್ತು ಪಂಚಾಯತಿಯಿಂದ ಮತ್ತೊಂದು ಪ್ರಕರಣವನ್ನು ನ್ಯಾಯಾಲಯದಲ್ಲಿ ದಾಖಲಿಸಿರುವುದರಿಂದ ಪಂಚಾಯತಿಯಿಂದ ಕಾಮಗಾರಿಯನ್ನು ಸಹ ಮುಂದುವರೆಸಿರುವುದಿಲ್ಲ. ಈ ಸಮಯದಲ್ಲಿ ಸದರಿ ವ್ಯಕ್ತಿಯು ಕಟ್ಟಡದ ಕಲ್ಲುಗಳನ್ನು ಕಿತ್ತು ವಿರುಕ್ತಿಗೊಳಿಸಿ ನಷ್ಟ ಉಂಟುಮಾಡಿರುತ್ತ್ತಾನೆ. ಮಲ್ಲೇನಹಳ್ಳಿ ಗೊಲ್ಲರಹಟ್ಟಿ ಗ್ರಾಮದಲ್ಲಿ ಸುಮಾರು 45 ಅಂಗನವಾಡಿಗೆ ತೆರಳುವ ಮಕ್ಕಳು  ಮತ್ತು ಗರ್ಭಿಣಿ ಬಾಣಂತಿಯರಿಗೆ ಮದ್ಯಾಹ್ನ ಬಿಸಿ ಊಟ ಮತ್ತು ಕಿಶೋರಿಯರಿಗೆ ಪೌಷ್ಟಿಕ ಆಹಾರ ನೀಡುವ ಕಾರ್ಯಕ್ರಮಗಳಿಗೆ ಅಡ್ಡಿಯಾಗಿದೆ.   ಅದ್ದರಿಂದ ಸದರಿ ಕೆ.ಈರಣ್ಣ ಬಿನ್ ಲೇ ಕದುರದಾಸಪ್ಪ ಇವರು ನ್ಯಾಯಾಲಯ ಮತ್ತು ಪೊಲೀಸ್ ಠಾಣೆಗಳ ಬಗ್ಗೆ ಎಲ್ಲಾ ಅರಿವು ಉಳ್ಳವರಾಗಿದ್ದು, ಇವರು ಬುದ್ದಿಪೂರ್ವಕವಾಗಿ ದುರುದ್ದೇಶದಿಂದ ಅಕ್ರಮವಾಗಿ ಮಲ್ಲೇನಹಳ್ಳಿ ಗೊಲ್ಲರಹಟ್ಟಿಯಲ್ಲಿ ಗ್ರಾಮ ಪಂಚಾಯತಿಯಿಂದ ನಿಮರ್ಿಸುತ್ತಿದ್ದ ಅಂಗನವಾಡಿನ ಕಟ್ಟಡಪಾಯದ ಕಲ್ಲುಗಳನ್ನು ಕಿತ್ತು  ನಷ್ಟ ಉಂಟುಮಾಡಿರುವ ಇವರ ಮೇಲೆ ಸೂಕ್ತ ಮೊಕದ್ದಮೆಯನ್ನು ದಾಖಲಿಸಿ ಕ್ರಮ ಕೈಗೊಳ್ಳಬೇಕೆಂದು ಮೌಖಿಕವಾಗಿ ಮೇಲಧಿಕಾರಿಗಳಿಗೆ ತಿಳಿಸಿ ಈ ದಿನ ತಡವಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 Wednesday, 29 November 2017

Crime Incidents 29-11-17

ಕೆ.ಬಿ.ಕ್ರಾಸ್ ಪೊಲೀಸ್ ಠಾಣಾ ಮೊ ನಂ 100/2017 ಕಲಂ 279,304(ಎ)

ದಿನಾಂಕ:-29.11.2017 ರಂದು ಬೆಳಗ್ಗೆ 09.15 ಗಂಟೆಯ ಸಮಯದಲ್ಲಿ ಪಿರ್ಯಾದಿ ಲಕ್ಷ್ಮೀಶ ಕೆ.ಎಸ್ ಬಿನ್ ಕೆ.ಆರ್ ಶಿವಣ್ಣ ರವರು ಠಾಣೆಗೆ ಹಾಜರಾಗಿ ನೀಡಿದ ದೂರು ಏನೆಂದರೆ, ದಿನಾಂಕ:-29.11.2017 ರಂದು ಬೆಳಗ್ಗೆ ನನ್ನ ಅತ್ತೆಯವರಾದ ಇಂದ್ರಮ್ಮನವರಿಗೆ ಉಷಾರಿಲ್ಲದ ಕಾರಣ ನೋಡಿಕಂಡು ಬರಲು ಬಿಳಿಗೆರ ಗ್ರಾಮಕ್ಕೆ ಹೋಗಿದ್ದು ಅತ್ತೆಯ ಮನೆಯಲ್ಲಿ ಇರುವಾಗ ಬೆಳಿಗ್ಗೆ ಸುಮಾರು 07-15 ಗಂಟೆಯ ಸಮಯದಲ್ಲಿ ಬಿಳಿಗೆರೆ ಗ್ರಾಮದ ಎನ್.ಹೆಚ್. 206 ರಸ್ತೆಯ ಕೆ.ಇ.ಬಿ ಆಪೀಸ್ ಸಮೀಪ ನಿಮ್ಮ ಮಾವನರಿಗೆ ಅಪಘಾತವಾಗಿದೆ ಎಂದು ತಿಳಿಸಿದ ಮೇರೆಗೆ ನಾನು ಕೂಡಲೇ ಸ್ಥಳಕ್ಕೆ ಹೋಗಿ ನೋಡಲಾಗಿ ನಮ್ಮ ಮಾವ ಬಿ. ಪುರುಷೋತ್ತಮ್ ರವರು ತೋಟಕ್ಕೆ ಹೋಗಿ ವಾಪಸ್ ಮನೆಗೆ ಬರಲು ಬೆಳಗ್ಗೆ ಸುಮಾರು 07.00 ಗಂಟೆಯ ಸಮಯದಲ್ಲಿ ಅವರ ಬಾಬ್ತು ಕೆ.ಎ. 44-ಕೆ-9354ನೇ ಡಿಸ್ಕವರ್ ಬೈಕಿನಲ್ಲಿ ಎನ್.ಹೆಚ್ 206 ರಸ್ತೆಯಲ್ಲಿ ಕೆ.ಇ.ಬಿ. ಅಪೀಸ್ ಪಕ್ಕದ ಪಂಚರ್ ಅಂಗಡಿ ಮುಂಬಾಗದಲ್ಲಿ ಎಡಗಡೆ ಬರುತ್ತಿರುವಾಗ್ಗೆ ತಿಪಟೂರು ಕಡೆಯಿಂದ ಬಂದ ಕಾರಿನ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಕಾರನ್ನು ನಡೆಸಿಕೊಂಡು ಬಂದು ಹಿಂದಿನಿಂದ ಡಿಕ್ಕಿ ಹೊಡೆಸಿದ ಪರಿಣಾಮ ನಮ್ಮ ಮಾವನವರು ಕೆಳಕ್ಕೆ ಬಿದ್ದು ಪೆಟ್ಟಾಗಿ ರಕ್ತ ಗಾಯಗಳಾಗಿದ್ದು ಬೈಕ್ ಸಹ ಜಖಂ ಆಗಿದ್ದು ಅಪಘಾತವೆಸಗಿದ ವಾಹನದ ನಂಬರ್ ನೋಡಲಾಗಿ ಕೆ.ಎ-13-ಎನ್-6726ನೇ ಮಾರುತಿ ಸಿಯಾಜ್ ಕಾರಾಗಿದ್ದು ಚಾಲಕನ ಹೆಸರು ತಿಳಿಯಲಾಗಿ ಹೆಚ್.ಜಿ. ವೆಂಕಟೇಶ ಬಾಬು , ಅರಸೀಕೆರೆ ಟೌನ್ ಎಂದು ತಿಳಿದು ಬಂದಿದ್ದು ಕೂಡಲೇ ಸ್ಥಳಕ್ಕೆ 108 ಅಂಬುಲೆನ್ಸ್ ಕರೆಸಿ ಸಾರ್ವಜನಿಕರ ಸಹಾಯದಿಂದ ಚಿಕಿತ್ಸೆ ಬಗ್ಗೆ ತಿಪಟೂರು ಜನರಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದ್ದು , ವೈದ್ಯರು ಚಿಕಿತ್ಸೆ ನೀಡುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಈ ದಿನ ಬೆಳಿಗ್ಗೆ 08-10 ಗಂಟೆಯ ಸಮಯದಲ್ಲಿ ನನ್ನ ಮಾವ  ಮೃತರಾಗಿರುತ್ತಾರೆ ಈ ಸಾವಿಗೆ ಮೇಲ್ಕಂಡ ಕಾರಿನ ಚಾಲಕನ ನಿರ್ಲಕ್ಷತೆಯ ಕಾರಣವಾಗಿರುತ್ತೆ. ಈ ಅಪಘಾತಕ್ಕೆ ಕಾರಣರಾದ ಕೆ.ಎ-13-ಎನ್-6726ನೇ ಮಾರುತಿ ಸಿಯಾಜ್  ಕಾರಿನ ಚಾಲಕನ ಮೇಲೆ ಸೂಕ್ತ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ನೀಡಿದ ದೂರಿನಂತೆ ಪ್ರಕರಣ ದಾಖಲಿಸಿರುತ್ತೆ.

ಅಮೃತೂರು ಪೊಲೀಸ್ ಠಾಣೆಯ ಮೊನಂ-214/2017 ಕಲಂ-379 ಐಪಿಸಿ.

ದಿನಾಂಕ: 28-11-2017 ರಂದು 21-05 ಗಂಟೆಯಲ್ಲಿ ಪಿರ್ಯಾದಿ ಲಾವಣ್ಯ.ಎಸ್. ಕೋಂ ಶ್ರೀಧರ್.ಕೆ.ವಿ, 38 ವರ್ಷ, ಆರ್ಯ ವೈಶ್ಯ ಜನಾಂಗ, ಗೃಹಿಣಿ, ನಂ-113, ಮಖಾನ್ ರೋಡ್, ಶಿವಾಜಿ ನಗರ, ಬೆಂಗಳೂರು-01 ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ ನಾನು ಮೇಲೆ ಹೇಳಿದ ವಿಳಾಸದಲ್ಲಿ ನಾನು ನನ್ನ ಗಂಡ ಮತ್ತು ಮಕ್ಕಳೊಂದಿಗೆ ವಾಸವಾಗಿದ್ದು ಜೀವನ ಮಾಡಿಕೊಂಡಿರುತ್ತೇನೆ. ದಿನಾಂಕ: 03-11-2017 ರಂದು ಚನ್ನರಾಯಪಟ್ಟಣದಲ್ಲಿ ನಮ್ಮ ದೊಡ್ಡಪ್ಪ ರವರ ಮನೆಯಲ್ಲಿ ಗೃಹಪ್ರವೇಶವನ್ನು ಮುಗಿಸಿಕೊಂಡು ನಾನು ನನ್ನ ಗಂಡ ಶ್ರೀಧರ್, ನನ್ನ ಮಗಳು ಹೇಮಶ್ರೀ, ನನ್ನ ಮಗ ಶ್ರೀವತ್ಸ, ನನ್ನ ತಮ್ಮ ದಿಲೀಪ್ ಕುಮಾರ್, ನನ್ನ ನಾದಿನಿ ಪುಷ್ಟ, ನನ್ನ ತಮ್ಮನ ಮಗ ಹೃಷಿಕೇಶ್, ನನ್ನ ತಮ್ಮನ ಮಗಳು ಕೃತಿಕಾ ಹಾಗೂ ನನ್ನ ತಾಯಿ ಸರಸ್ಪತಮ್ಮ ಎಲ್ಲರೂ ನನ್ನ ತಮ್ಮನ ಸ್ನೇಹಿತನ ಇನ್ನೋವಾ ಕಾರು ನಂಬರ್-ಕೆಎ-02, ಎಂಎಸ್-504 ನೇ ಕಾರಿನಲ್ಲಿ ಚನ್ನರಾಯಪಟ್ಟಣದಿಂದ ಎಡೆಯೂರು ಮಾರ್ಗವಾಗಿ ಬೆಂಗಳೂರಿಗೆ ಹಿಂತಿರುಗಿ ಹೋಗುತ್ತಿರಬೇಕಾದರೆ ಕುಣಿಗಲ್ ತಾಲೋಕ್, ಎಡೆಯೂರು ಹೋಬಳಿ, ಚಾಕೇನಹಳ್ಳಿ ಗ್ರಾಮದ ಬಳಿ ನಮ್ಮ ಮುಂದೆ ಅಂದರೆ ಬೆಂಗಳೂರು ಕಡೆಗೆ ಹೋಗುತ್ತಿದ್ದ ಯಾವುದೋ ಒಂದು ಲಾಂಗ್ ಟ್ರಕ್ ಲಾರಿಯ ಬಲಭಾಗದಿಂದ ನನ್ನ ತಮ್ಮ ಸೈಡ್ ಹೊಡೆಯಲು ಹೋದಾಗ ಆ ಲಾಂಗ್ ಟ್ರಕ್ ಲಾರಿಯ ಚಾಲಕ ಯಾವುದೇ ಸಿಗ್ನಲ್ ನೀಡದೇ ಏಕಾ ಏಕಿ ಅಜಾಗರೂಕತೆಯಿಂದ ತನ್ನ ಟ್ರಕ್ ಲಾರಿಯನ್ನು ಬಲಭಾಗಕ್ಕೆ ತೆಗೆದುಕೊಂಡಿದ್ದರಿಂದ ನನ್ನ ತಮ್ಮ ಕಾರನ್ನು ನಿಯಂತ್ರಿಸಲಾಗದೇ ಆ ಟ್ರಕ್ ಲಾರಿಯ ಹಿಂಭಾಗಕ್ಕೆ ನಮ್ಮ ಕಾರು ಅಪಘಾತವಾಗಿ ಕಾರಿನ ಮುಂಭಾಗ ಜಖಂ ಆಗಿದ್ದು, ಕಾರಿನಲ್ಲಿದ್ದ ನನಗೆ ಮತ್ತು ಮೇಲೆ ತಿಳಿಸಿರುವ ಎಲ್ಲರಿಗೂ ಸಣ್ಣಪುಟ್ಟಗಾಯಗಳಾಗಿದ್ದು, ನಮ್ಮ ತಾಯಿಯವರಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮದ್ಯೆ ಮೃತಪಟ್ಟಿರುತ್ತಾರೆ. ಅಪಘಾತ ಸಮಯದಲ್ಲಿ ನಮ್ಮ ಬಳಿ ಇದ್ದ ಒಂದು ಡಬ್ಬಿಯಲ್ಲಿ ಹಾಕಿ ಇಟ್ಟುಕೊಂಡಿದ್ದ ವಡವೆಗಳನ್ನು ಯಾರೋ ಅಪರಿಚಿತ ವ್ಯಕ್ತಿಗಳು ಕಳ್ಳತನ ಮಾಡಿರುತ್ತಾರೆ. ಅವುಗಳೆಂದರೆ 1) ಚಿನ್ನದ ಕರಿಮಣಿ ಎರಡು ಬಳೆ, 2) ಎರಡು ಬಿಳಿ ಕಲ್ಲಿನ ಬಳೆ, 3) ಒಂದು ಸಾದಾ ಬಳೆ, 4) ಒಂದು ಚಿನ್ನದ ಸರದ ಜೊತೆ ಮೀನಿನ ಪೆಂಡೆಂಟ್, 5) ಒಂದು ಚಿನ್ನದ ಬ್ರಾಸ್ ಲೆಟ್, 6) ಒಂದು ಹಸಿರು ಕಲ್ಲಿನ ಉಂಗುರ, 7) ಒಂದು ಬಿಳಿ ಕಲ್ಲಿನ ನೆಕ್ಲೆಸ್, 8) ಒಂದು ಚಿಕ್ಕ ನೆಕ್ಲೆಸ್ ಇವುಗಳ ಒಟ್ಟು ತೂಕ 290 ಗ್ರಾಂ ಗಳಾಗಿರುತ್ತವೆ. ಈ ಮೇಲ್ಕಂಡ ಎಲ್ಲಾ ವಡವೆಗಳನ್ನು ನನ್ನ ಮದುವೆ ಕಾಲದಲ್ಲಿ ನಮ್ಮ ತಂದೆ ತಾಯಿ ಮತ್ತು ನನ್ನ ಗಂಡನ ಕಡೆಯವರು ಹಾಗೂ ಸಂಬಂದಿಗಳು ಉಡುಗೊರೆಯಾಗಿ ನೀಡಿರುತ್ತಾರೆ. ನಮ್ಮ ತಾಯಿ ನಿಧನದಿಂದ ನಾವುಗಳು ದುಖಿಃತರಾಗಿದ್ದು, ಆ ಸಮಯದಲ್ಲಿ ನಾವು ಠಾಣೆಗೆ ಬಂದು ದೂರು ನೀಡಲು ಸಾದ್ಯವಾಗಲಿಲ್ಲ. ಅವರ ತಿಥಿ ಕಾರ್ಯವನ್ನು ಮುಗಿಸಿಕೊಂಡು ನೀಡೋಣವೆಂದುಕೊಂಡಿದ್ದು ಅಷ್ಟರಲ್ಲಿ ಚಿಕ್ಕಜಾಲ ಪೊಲೀಸರು ನಮಗೆ ಕರೆ ಮಾಡಿ ನಿಮ್ಮ ವಡವೆಗಳನ್ನು ಕಳ್ಳತನ ಮಾಡಿರುವವರು ಸಿಕ್ಕಿದ್ದಾರೆ ನೀವು ಬಂದು ನಿಮ್ಮ ವಡವೆಗಳನ್ನು ಗುರುತಿಸಿ ಎಂದು ತಿಳಿಸಿದ ನಂತರ ನಾವು ಠಾಣೆಗೆ ಹೋಗಿ ವಡವೆಗಳನ್ನು ನೋಡಿದಾಗ ಅವುಗಳು ನಮ್ಮದಾಗಿರುತ್ತವೆ. ಕಳ್ಳನ ಬಗ್ಗೆ ವಿಚಾರ ಮಾಡಿದಾಗ ಸೋಮಶೇಖರ.ಎಸ್ @ ಮನೆ ಬಿನ್ ಶಿವಯ್ಯ, 33 ವರ್ಷ, ವಾಸ: ನಂ-22, ಎಲ್.ಐ.ಸಿ ಕಾಲೋನಿ, ಬಿ.ಕೆ ನಗರ, ಯಶವಂತಪುರ, ಬೆಂಗಳೂರು ಎಂದು ತಿಳಿಸಿದರು. ಆದ್ದರಿಂದ ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದೇವೆ. ನಮ್ಮ ವಡವೆಗಳನ್ನು ಕಳವು ಮಾಡಿರುವವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ದೂರು ನೀಡುತ್ತಿದ್ದೇವೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿರುತ್ತೆ.

ತಿಪಟೂರು ನಗರ ಪೊಲೀಸ್ ಠಾಣಾ ಮೊ .ನಂ- 182/2017 ಕಲಂ: 392 ಐ.ಪಿ.ಸಿ

ದಿನಾಂಕ : 28/11/2017  ರಂದು ರಾತ್ರಿ 8-00  ಗಂಟೆಗೆ ಪಿರ್ಯಾದಿ ಸಿ.ಕೆ ಲಲಿತಶ್ರೀ @ ಚಂದನ ರವರು ಠಾಣೆಗೆ ಹಾಜರಾಗಿ ನೀಡಿರುವ ದೂರಿನ ಅಂಶವೇನೆಂದರೆ,  ದಿನಾಂಕ:27/11/2017 ರಂದು ರಾತ್ರಿ ಸುಮಾರು 7.45 ಗಂಟೆಯಲ್ಲಿ  ತಿಪಟೂರು ಟೌನ್‌ ಕಲ್ಪತರು ಕ್ರಿಡಾಂಗಣದ ಹಿಂಬಾಗ ಇರುವ ಸುಬ್ರಮಣ್ಯ ದೇವಸ್ದಾನಕ್ಕೆ ಹೋಗಲು ನಾನು ಮತ್ತು ನನ್ನ ಗಂಡ ಮನೆಯಿಂದ ಹೊರಟಿದ್ದು, ನನ್ನ ಗಂಡ ಕಾರಿನ ಕೀ ತರಲು ಮತ್ತೆ ವಾಪಸ್‌ ಮನೆಗೆ ಹೋಗಿದ್ದು, ನಾನು ಮುಂದೆ ಹೋಗುತ್ತಿರುಣವೆಂದು ನಮ್ಮ ಮನೆಯಿಂದ ಸುಮಾರು 100 ಮೀಟರ್‌ ದೂರದಲ್ಲಿ ಚರ್ಚ್‌ ಕಾಂಪೌಂಡ್ ತಿರುವಿನಲ್ಲಿ  ನಡೆದುಕೊಂಡು ಹೋಗುತ್ತಿದ್ದಾಗ ಕಾಲು ಸ್ವಲ್ಪ ಎಡವಿ ಅಲ್ಲಿಯೇ ಇದ್ದ ಮನೆಯ ಮುಂದೆ ಒಂದು ಜಗುಲಿ  ಮೇಲೆ ಕುಳಿತುಕೊಂಡಾಗ ಯಾರೋ ಇಬ್ಬರು ವ್ಯಕ್ತಿಗಳು ಬೈಕ್‌ನಲ್ಲಿ ಬಂದು ಸ್ವಲ್ಪ ದೂರ ಹೋಗಿ ಬೈಕ್‌ನ್ನು ನಿಲ್ಲಿಸಿ ಹಿಂಬದಿ ಕುಳಿತವನು ವಾಪಸ್‌ ನನ್ನ ಬಳಿ ಬಂದವನೆ ಏಕಾಏಕೀ ನನ್ನ ಕಣ್ಣಿಗೆ ಕಾರದಪುಡಿಯನ್ನು ಎರಚಿ ನನ್ನ ಕುತ್ತಿಗೆಯಲ್ಲಿದ್ದ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಓಡಿಹೋಗಿ ಬೈಕ್‌ನ್ನು ಹತ್ತಿಕೊಂಡು ಪಂಪ್‌ಹೌಸ್‌ ರಸ್ತೆ ಕಡೆಗೆ ಹೊರಟು ಹೋದರು. ನನ್ನ ಚಿನ್ನದ ಮಾಂಗಲ್ಯಸರ, ತಾಳಿ, ಗುಂಡು ಸೇರಿ ಸುಮಾರು 35-40 ಗ್ರಾಂ ತೂಕವುಳ್ಳ ಚಿನ್ನದ ಮಾಂಗಲ್ಯ  ಸರವಾಗಿರುತ್ತದೆ. ಇದರ ಬೆಲೆ ಸುಮಾರು 1,10,000=00 ರೂ ಗಳಾಗಿರುತ್ತದೆ, ನನ್ನ ಚಿನ್ನದ ಸರವನ್ನು ಕಿತ್ತುಕೊಂಡು ಹೋದ ವ್ಯಕ್ತಿಗಳು ದೃಢಕಾಯ ವ್ಯಕ್ತಿಗಳಾಗಿದ್ದು, ಸುಮಾರು 35 ವರ್ಷ ವಯಸ್ಸಿನವರಾಗಿರುತ್ತಾರೆ. ನನ್ನ ಕಣ್ಣಿಗೆ ಕಾರದ ಪುಡಿ ಬಿದ್ದು, ತಲೆನೋವು ಬಂದಿದ್ದರಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಈ ದಿನ ದಿನಾಂಕ:28/11/2017 ರಂದು ತಡವಾಗಿ ಬಂದು ದೂರು ನೀಡಿರುತ್ತೇನೆ. ಆದ್ದರಿಂದ ನನ್ನ ಚಿನ್ನದ ಸರವನ್ನು ಕಿತ್ತುಕೊಂಡು ಹೋಗಿರುವ ಆಸಾಮಿಗಳನ್ನು ಪತ್ತೆ ಮಾಡಿ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ಕೋರಿ ನೀಡಿರುವ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಹುಲಿಯೂರುದುರ್ಗ ಪೊಲೀಸ್‌ ಠಾಣಾ; ಮೊ ನಂ: 231/2017 ಕಲಂ: 323, 504, 506, 149  IPC 3(1)(C), 3(1)(R), 3(1)(S), 3(2)(V-A) SC/ST (PA) ACT – 1989

ದಿನಾಂಕ: 28-11-2017 ರಂದು ಸಂಜೆ 04-30 ಗಂಟೆಗೆ ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೋಕು ಹುಲಿಯೂರುದುರ್ಗ ಹೋಬಳಿ ಟಿ-ಕೆಂಪನಹಳ್ಳಿ ಗ್ರಾಮದ ವಾಸಿಯಾದ ಶಿವನಂಜಯ್ಯ ಬಿನ್  ರಂಗಯ್ಯ ಸುಮಾರು 48 ವರ್ಷ, ಪರಿಶಿಷ್ಟ ಜಾತಿ ಜನಾಂಗ, ವ್ಯವಸಾಯ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಾನು ದಿನಾಂಕ;-07-08-2017 ರಂದು ಸಂಜೆ ಸುಮಾರು 07-00 ಗಂಟೆ ಸಮಯದಲ್ಲಿ ನಮ್ಮೂರಾದ ಟಿ-ಕೆಂಪನಹಳ್ಳಿ ಗ್ರಾಮದಲ್ಲಿ ನಾನು ನಮ್ಮ ಮನೆಯಿಂದ ಬಸ್ ಸ್ಟಾಂಡ್ ಕಡೆಗೆ ನಡೆದುಕೊಂಡು ನಮ್ಮೂರಿನ ಕಣಕಯ್ಯ ಮತ್ತು ಮಾದಯ್ಯ ರವರ ಮನೆಯ ಮುಂಭಾಗ ಇರುವ ಸಾರ್ವಜನಿಕ ಟಾರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ್ಗೆ ಏಕಾಏಕಿ ನಮ್ಮೂರಿನ ಸವರ್ಣಿಯ ಲಿಂಗಾಯತ ಜನಾಂಗದ ಶಿವರತ್ನಮ್ಮ ಕೋಂ ಮಹದೇವಯ್ಯ, ಶಾಂತಮಲ್ಲಯ್ಯ ಬಿನ್ ಲೇಟ್ ದುಬ್ಬಯ್ಯ, ಮಹದೇವಮ್ಮ ಕೋಂ ಶಾಂತಮಲ್ಲಯ್ಯ, ಶಿವಮಾದಯ್ಯ ಬಿನ್ ದುಬ್ಬಯ್ಯ, ನಂಜಮ್ಮ ಕೋಂ ಶಿವಮಾದಯ್ಯ, ಮಹದೇವಯ್ಯ ಬಿನ್ ಲೇಟ್ ದುಬ್ಬಯ್ಯ, ಇವರುಗಳು ನನ್ನನ್ನು ವಯಕ್ತಿಕ ವಿವಾದದ ಹಿನ್ನೆಲೆಯಲ್ಲಿ ಲೇ ಮಾದಿಗ ನನ್ನ ಮಗನೆ ನಮ್ಮ ವಿಚಾರಕ್ಕೆ ಬರುತ್ತೀಯಾ ಬೋಳಮಗನೆ ಎಂದು ಕೆಟ್ಟ ಪದಗಳಿಂದ ಬೈದು ಜಾತಿ ನಿಂದನೆ ಮಾಡಿ ಎಲ್ಲಾರು ನನಗೆ ಕೈಗಳಿಂದ ಮೈ ಮೇಲೆ ಮುಖಕ್ಕೆ ತಲೆಗೆ ಹೊಡೆದು ಲೇ ಹೊಲೆಮಾದಿಗ ನಮ್ಮ ವಿಚಾರಕ್ಕೆ ಬಂದರೆ ನಿನ್ನ ಜೀವಂತವಾಗಿ ಬಿಡುವುದಿಲ್ಲ ಎಂದು ಕೊಲೆ ಬೆದರಿಕೆ ಹಾಕಿದರು ಹಾಗ ಅಲ್ಲಿಯೇ ಇದ್ದ ನಮ್ಮೂರಿನ ಮಹದೇವಯ್ಯ ಮತ್ತು ನಿಂಗಣ್ಣ ಬಂದು ಜಗಳವನ್ನು ಬಿಡಿಸಿದರು ನಾನು ನಂತರ ಸುಮ್ಮನಾಗಿದ್ದು ಗ್ರಾಮದಲ್ಲಿ ಒಂಟಿಯಾಗಿದ್ದರಿಂದ ನನಗೆ ಆದಂತಹ ತೊಂದರೆ ನನಗೆ ಮತ್ತು ನನ್ನ ಕುಟುಂಬದವರಿಗೆ ಆಗಬಾರದೆಂದು ನಿರ್ಧರಿಸಿ ಈ ದಿನ ತಡವಾಗಿ ಪೋಲೀಸ್ ಠಾಣೆಗೆ ಬಂದು ದೂರು ನೀಡುತ್ತಿದ್ದೇನೆ ನನಗೆ ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿರುವ ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ಕೋರುತ್ತೇನೆ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಅಂಶವಾಗಿರುತ್ತೆ

ಮಧುಗಿರಿ ಪೊಲೀಸ್ ಠಾಣಾ ಮೊ.ಸಂ 212/2017 u/s 420 IPC.

ಪಿರ್ಯಾದಿ ಆಶಾ ಕೋಂ ರಂಗನಾಥ, 26 ವರ್ಷ, ಕೂಲಿಕೆಲಸ, ಸಿದ್ದಾಪುರ ಗೇಟ್, ಕಸಬಾ ಹೋಬಳಿ, ಮಧುಗಿರಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ಪಿರ್ಯಾದಿಗೆ ಮದುವೆಯಾಗಿ 4 ವರ್ಷ ವಾಗಿದ್ದು, ಮಕ್ಕಳಿರುವುದಿಲ್ಲ. ಪಿರ್ಯಾದಿಯು ಸುಮಾರು 1 ವರ್ಷದಿಂದ ಮಧುಗಿರಿ ಟೌನ್ ಇಸ್ಲಾಂಪುರದಲ್ಲಿರುವ ಮಯೂರ ಬೀಡಿ ವರ್ಕ್ಸ್ ನಲ್ಲಿ ಕೂಲಿಕೆಲಸಕ್ಕೆ ಹೋಗುತ್ತಿದ್ದು, ಪತಿ ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿರುತ್ತಾರೆ. ಪಿರ್ಯಾದಿಯು ದಿನಾಂಕ: 18-11-2017 ರಂದು ಇಸ್ಲಾಂಪುರದ ಮಯೂರ ಬೀಡಿ ವರ್ಕ್ಸ್ ನಲ್ಲಿ ಕೆಲಸ ಮಾಡುತ್ತಿದ್ದಾಗ, ಸುಮಾರು 30-32 ವರ್ಷ ವಯಸ್ಸಿನ ಯಾರೋ ಒಬ್ಬ ವ್ಯಕ್ತಿ ಪಿರ್ಯಾದಿ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಬಂದು, ಮಕ್ಕಳಿಲ್ಲದವರಿಗೆ ಮಕ್ಕಳಾಗುವ ಔಷಧಿಯನ್ನು ಕೊಡುತ್ತೇನೆ, ಮಾರ್ಕೆಟ್ ನಲ್ಲಿ ಇದು ಸುಮಾರು 20-25 ಸಾವಿರ ಆಗುತ್ತದೆಂತಾ ತಿಳಿಸಿದ್ದು, ಪಿರ್ಯಾದಿಗೆ ಮಕ್ಕಳಿಲ್ಲದ್ದರಿಂದ ಮಕ್ಕಳಾಗಬಹುದೆಂತಾ ನಂಬಿ ಆ ದಿನ ಔಷಧಿಯನ್ನು 4000/- ರೂ ಕೊಟ್ಟು ಖರೀದಿಸಿರುತ್ತಾರೆ. ಆತನು  ಪ್ರತಿವಾರ ಬರುತ್ತೇನೆಂತಾ ತಿಳಿಸಿ ಹೋಗಿದ್ದು, ದಿನಾಂಕ: 27-11-2017 ರಂದು ರಾತ್ರಿ ಸುಮಾರು 07.30 ಗಂಟೆಗೆ ಫೋನ್ ಮಾಡಿ ನಾಳೆ ಬರುತ್ತೇನೆಂತಾ ತಿಳಿಸಿ, ಅದರಂತೆ ದಿನಾಂಕ: 28-11-2017 ಬೆಳಿಗ್ಗೆ 09.30 ಪಿರ್ಯಾದಿ ಒಬ್ಬಳೆ ಮನೆಯಲ್ಲಿದ್ದಾಗ ಆ ಆಸಾಮಿಯು ಮನೆಗೆ ಬಂದು ಸ್ವಲ್ಪ ಸಮಯದ ನಂತರ ಕುಡಿಯಲು 1 ಲೋಟ ನೀರು ಕೊಡು ಎಂತಾ ಕೇಳಿರುತ್ತಾನೆ. ಪಿರ್ಯಾದಿಯು ಅಡಿಗೆ ಮನೆಯಿಂದ ಲೋಟದಲ್ಲಿ ಕುಡಿಯಲು ನೀರು ತಂದು ಕೊಟ್ಟಿರುತ್ತಾರೆ. ಆದಾದ ನಂತರ ಆ ವ್ಯಕ್ತಿಯು ಒಂದು ಕರವಸ್ತ್ರವನ್ನು ಪಿರ್ಯಾದಿಯ ಮುಖದ ಹತ್ತಿರ ಹಿಡಿದಿದ್ದು, ಪಿರ್ಯಾದಿಯು ಪ್ರಜ್ಞೆ ತಪ್ಪಿ, ನಂತರ ಸುಮಾರು 20 ನಿಮಿಷದ ನಂತರ ಎಚ್ಚರಗೊಂಡಾಗ ಪಿರ್ಯಾದಿಯ ಕತ್ತಿನಲ್ಲಿದ್ದ ಸುಮಾರು 30 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಕೊರಳಿನಲ್ಲಿರಲಿಲ್ಲ. ಆಗ ಪಿರ್ಯಾದಿಯು ಗಾಬರಿಗೊಂಡು ಮನೆ ಒಳಗೆ-ಹೊರಗೆ ಹುಡುಕಾಡಿದ್ದು, ಆ ವ್ಯಕ್ತಿಯು ಪತ್ತೆಯಾಗಲಿಲ್ಲ. ಆತನು ಪಿರ್ಯಾದಿಯ  ಗಮನವನ್ನು ಬೇರೆಡೆಗೆ ಸೆಳೆದು ಸುಮಾರು 80,000/- ಬೆಲೆ ಬಾಳುವ ಚಿನ್ನದ ಮಾಂಗಲ್ಯಸರವನ್ನು ಮೋಸದಿಂದ ತೆಗೆದುಕೊಂಡು ಹೋಗಿದ್ದು, ಗಮನವನ್ನು ಬೇರೆಡೆಗೆ ಸೆಳೆದು ಮೋಸದಿಂದ ತೆಗೆದುಕೊಂಡು ಹೋಗಿರುವ ಮಾಂಗಲ್ಯ ಸರವನ್ನು ಪತ್ತೆಮಾಡಿ, ಮೋಸ ಮಾಡಿರುವ ವ್ಯಕ್ತಿಯ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಕೋರುತ್ತೇನೆಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

ತುಮಕೂರು ಜಿಲ್ಲೆ, ಶಿರಾ ತಾಲೋಕ್, ಕಳ್ಳಂಬೆಳ್ಳ  ಪೊಲೀಸ್‌ ಠಾಣಾ ಮೊ.ನಂ: 270/2017 ಕಲಂ-279,337 304(ಎ) ಐಪಿಸಿ

ದಿನಾಂಕ:28/11/2017 ರಂದು ಮದ್ಯಾಹ್ನ 2-00 ಗಂಟೆಯಲ್ಲಿ ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪಿರ್ಯಾದಿ ಟಿ.ವಿ ವಿಶ್ವಾಸ್ ರವರ  ಹೇಳಿಕೆಯನ್ನು ಪಿ.ಎಸ್.ಐ ರವರು ಮದ್ಯಾಹ್ನ 12-30 ಗಂಟೆಯಿಂದ 1-00 ಗಂಟೆವರೆಗೂ ಪಡೆದುಕೊಂಡು ಹೆಚ್,ಸಿ 85 ಮಂಜುನಾಥ್ ಆದ ನನ್ನೊಂದಿಗೆ ಠಾಣೆಗೆ ಕಳುಹಿಸಿದ ಹೇಳಿಕೆ ಅಂಶವೇನೆಂದರೆ ಟಿ.ವಿ ವಿಶ್ವಾಸ್ ಆದ ನಾನು  ಬೆಂಗಳೂರಿನ ಜೆ.ವಿ ಕಾಲೇಜಿನಲ್ಲಿ ಬಿ.ಬಿ.ಎಂ ವ್ಯಾಸಾಂಗ ಮಾಡುತ್ತಿರುತ್ತೇನೆ. ಹೆಚ್.ಎಸ್.ಆರ್ ಲೇಔಟ್ ವಾಸಿ ಪವನ್ ರವರು ನನ್ನ ಸ್ನೇಹಿತರಾಗಿರುತ್ತಾರೆ. ದಿನಾಂಕ:28/11/17 ರಂದು ನಾನು ನನ್ನ ಸ್ನೇಹಿತ ಪವನ್ ಇಬ್ಬರೂ ಕಾರಿನಲ್ಲಿ ಲಾಂಗ್ ಡ್ರೈವ್ ಹೋಗಲು ತೀರ್ಮಾನಿಸಿ ಬೆಳಗ್ಗೆ ಸುಮಾರು 9-30 ಗಂಟೆಗೆ ಬೆಂಗಳೂರಿನಿಂದ ಪವನ್ ರವರ ಬಾಬ್ತು ಕೆಎ-01-ಎಂ.ಎಲ್ 2426 ನೇ COROLLA ALTIS ಕಾರಿನಲ್ಲಿ ಹೊರಟೆವು ಕಾರನ್ನು ನನ್ನ ಸ್ನೇಹಿತ ಪವನ್ ರವರು ಚಾಲನೆ ಮಾಡುತ್ತಿದ್ದರು, ನಾನು ಮತ್ತು ಪವನ್ ಬೆಂಗಳೂರಿನಿಂದ ಚಿತ್ರದುರ್ಗ ಕಡೆಗೆ ಹೋಗುತ್ತಿದ್ದಾಗ ಈ ದಿನ ಬೆಳಗ್ಗೆ ಸುಮಾರು 11-45 ಗಂಟೆ ಸಮಯದಲ್ಲಿ ತುಮಕೂರು ಶಿರಾ ಎನ್.ಹೆಚ್ 48 ರಸ್ತೆಯಲ್ಲಿ ಜೋಗಿಹಳ್ಳಿ ಬಳಿ ಪವನ್ ಕಾರನ್ನು ಅತೀವೇಗ ಮತ್ತು ನಿರ್ಲಕ್ಷತೆಯಿಂದ ಚಾಲನೆ ಮಾಡಿದ ಪರಿಣಾಮ ಕಾರು ನನ್ನ ಸ್ನೇಹಿತನ ನಿಯಂತ್ರಣ ತಪ್ಪಿ ರಸ್ತೆ ಎಡಭಾಗಕ್ಕೆ ಪಲ್ಟಿಯಾಗಿ ಬಿತ್ತು ಕಾರಿನಲ್ಲಿದ್ದ ನನಗೆ ಬಲಕಾಲಿಗೆ ತಲೆಗೆ ಪೆಟ್ಟು ಬಿದ್ದು ರಕ್ತಗಾಯವಾಯಿತು, ಪವನ್ ನ ತಲೆಗೆ ಮೈಕೈಗೆ ಪೆಟ್ಟು ಬಿದ್ದು ಸ್ಥಳದಲ್ಲಿಯೇ ಮೃತಪಟ್ಟನು. ನಂತರ ಅಲ್ಲಿದ್ದ ಸಾರ್ವಜನಿಕರು ಯಾರೋ ನನ್ನನ್ನು 108 ಆಂಬುಲೆನ್ಸ್ ನಲ್ಲಿ ಚಿಕಿತ್ಸೆಗಾಗಿ ತುಮಕೂರಿನ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು ನಾನು ತುಮಕೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತೇನೆ. ಈ ಅಪಘಾತವು ನನ್ನ ಸ್ನೇಹಿತ ಪವನ್ ರವರ ಅತೀವೇಗ ಚಾಲನೆಯಿಂದ ಉಂಟಾಗಿರುತ್ತೆ. ಮುಂದಿನ ಕ್ರಮ ಎಂತ ಇತ್ಯಾದಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತೆ.Tuesday, 28 November 2017

Crime Incidents 28-11-17

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ 217/2017 ಕಲಂ 279,337 ಐಪಿಸಿ ರೆ/ವಿ 134(ಎ&ಬಿ), 187 ಐಎಂವಿ ಆಕ್ಟ್

ದಿನಾಂಕ:27-11-2017 ರಾತ್ರಿ 8-00 ಗಂಟೆಗೆ ಪಿರ್ಯಾದಿಯಾದ ಲೋಕೇಶ್ ಎಸ್.ಎನ್. ಬಿನ್ ನಾಗರಾಜು. 23 ವರ್ಷ, ವಕ್ಕಲಿಗರು ಜನಾಂಗ, ಜಿರಾಯ್ತಿ, ಸಾರಂಗಿ. ಸಂತೆಬಾಚಹಳ್ಳಿ, ಹೋಬಳಿ, ಕೆ.ಆರ್.ಪೇಟೆ ತಾಲ್ಲೂಕು, ಮಂಡ್ಯ ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಿರುತ್ತೇನೆ, ದಿನಾಂಕ:26-11-2017 ರಂದು ನಾನು ಮತ್ತು ನನ್ನ ದೊಡ್ಡಪ್ಪನ ಮಗನಾದ ನವೀನ್ ರವರು ನಾವಿಬ್ಬರು ಸ್ವಂತ ಕೆಲಸದ ನಿಮಿತ್ತ ತುಮಕೂರಿಗೆ ಹೋಗಿದ್ದು, ನಂತರ ನಾವುಗಳು ನಮ್ಮ ಗ್ರಾಮಕ್ಕೆ ಹೋಗಲೆಂದು ನಾನು ನನ್ನ ತಂದೆಯ ಬಾಬ್ತು ದ್ವಿಚಕ್ರವಾಹನದಲ್ಲಿ ಮತ್ತು ನನ್ನ ದೊಡ್ಡಪ್ಪನ ಮಗ ನವೀನ್ ರವರು ಅವರ ತಂದೆ ಗಣೇಶ್ ರವರ ಬಾಬ್ತು ಕೆಎ-54-ಜೆ-3990 ಹಿರೋ ಸ್ಪಂಡರ್ ಪ್ಲಸ್ ದ್ವಿಚಕ್ರ ವಾಹನದಲ್ಲಿ ಸವಾರಿ ಮಾಡಿಕೊಂಡು ನಾವೀಬ್ಬರು ತಮ್ಮ ತಮ್ಮ ದ್ವಿಚಕ್ರವಾಹನದಲ್ಲಿ ತುಮಕೂರು –ಕುಣಿಗಲ್ ರಸ್ತೆಯ ಮಾರ್ಗವಾಗಿ ಬರುತ್ತಿದ್ದು, ಈ ದಿನ ರಾತ್ರಿ ಸುಮಾರು 7-15 ಗಂಟೆ ಸಮಯದಲ್ಲಿ ತುಮಕೂರು ಕಡೆಯಿಂದ ಕುಣಿಗಲ್ ಕಡೆಗೆ ಎಸ್ ಎನ್ ಪಾಳ್ಯ ಗ್ರಾಮದ ಹೇಮಾವತಿ ವಸತಿ ಗೃಹಗಳ ಬಳಿ ಬರುತ್ತಿರುವಾಗ ಕುಣಿಗಲ್ ಕಡೆಯಿಂದ ತುಮಕೂರಿನ ಕಡೆಗೆ ಹೋಗುತ್ತಿದ್ದ ಕೆಎ-01-ಡಿ-3442 ನೇ ಲಾರಿಯ ಚಾಲಕನು ಅತೀವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ತನ್ನ ಲಾರಿಯನ್ನು ರಸ್ತೆಯ ಎಡಭಾಗದಿಂದ ಬಲಭಾಗಕ್ಕೆ ಬಂದು ಎದುರಿಗೆ ಅಂದರೆ ತುಮಕೂರಿನಿಂದ ಕುಣಿಗಲ್ ಕಡೆಗೆ ಬರುತಿದ್ದ ನವೀನನ ಕೆಎ-54-ಜೆ-3990 ಹಿರೋ ಸ್ಪಂಡರ್ ಪ್ಲಸ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಪಡಿಸಿ ಅಪಘಾತಪಡಿಸಿದ್ದು, ನಂತರ ಸದರಿ ಲಾರಿಯ ಚಾಲಕನು ತನ್ನ ವಾಹವನ್ನು ಸ್ಥಳದಲ್ಲಿಯೇ ನಿಲ್ಲಿಸಿ ಓಡಿಹೋದನು. ನಂತರ ನಾನು ನವೀನನನ್ನು ಉಪಚರಿಸಿ ನೋಡಲಾಗಿ ಮುಖಕ್ಕೆ, ಎದೆಭಾಗಕ್ಕೆ, ತೀವ್ರತರವಾದ ಗಾಯವಾಗಿದ್ದು, ಮತ್ತು ಎಡಗೈಗೆ ಹಾಗೂ ದೇಹದ ಇತರ ಕಡೆಗಳಿಗೆ ಗಾಯಗಳಾಗಿದ್ದು, ನಂತರ ನಾನು ಸಾರ್ವಜನಿಕರ ಸಹಾಯದಿಂದ ಸ್ಥಳಕ್ಕೆ ಬಂದು 108 ಆಂಬುಲೆನ್ಸ್ ವಾಹನದಲ್ಲಿ ತುಮಕೂರಿನ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ, ಅಲ್ಲಿನ ವೈಧ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಇ.ಎಸ್.ಐ. ಆಸ್ಪತ್ರೆಗೆ ದಾಖಲಿಸಿರುತ್ತೇನೆ. ಆದ್ದರಿಂದ ಅತಿವೇಗ ಮತ್ತು ಅಜಾಗರೂಕತೆಯಿಂದ ಕೆಎ-01-ಡಿ-3442 ನೇ ಲಾರಿಯನ್ನು ಓಡಿಸಿ ಈ ಅಪಘಾತಕ್ಕೆ ಕಾರಣನಾದ ಚಾಲಕನ ಮೇಲೆ ಕಾನೂನು ರೀತ್ಯಾ ಮುಂದಿನ ಕ್ರಮ ಜರುಗಿಸಬೇಕೆಂದು ನಾನು ಗಾಯಾಳು ನವೀನನನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದರಿಂದ ಈ ದಿವಸ ತಡವಾಗಿ ಬಂದು ದೂರು ನೀಡುತ್ತಿದ್ದೇನೆ. ಅಪಘಾತ ಪಡಿಸಿದ ಮತ್ತು ಅಪಘಾತಕ್ಕೋಳಗಾದ ಎರಡು ವಾಹನಗಳು ಸ್ಥಳದಲ್ಲಿಯೇ ಇರುತ್ತವೆ ಎಂದು ನೀಡಿದ ದೂರನ್ನು ಪಡೆದು ಠಾಣಾ ಮೊ ನಂ 217/2017 ಕಲಂ 279,337 ಐಪಿಸಿ ರೆ/ವಿ 134(ಎ&ಬಿ), 187 ಐಎಂವಿ ಆಕ್ಟ್ ರೀತ್ಯಾ ಪ್ರಕರಣವನ್ನು ದಾಖಲಿಸಿರುತ್ತೆ.

ಮಿಡಿಗೇಶಿ ಪೊಲೀಸ್ ಠಾಣಾ ಮೊ.ಸಂ.105/2017, ಕಲಂ:87 ಕೆ.ಪಿ.ಆಕ್ಟ್.

ದಿನಾಂಕ:27/11/2017 ರಂದು ಮದ್ಯಾಹ್ನ 12:30 ಗಂಟೆಗೆ ಠಾಣಾ ಸರಹದ್ದು ಗಸ್ತಿನಲ್ಲಿದ್ದ ಠಾಣಾ ಸಿಪಿಸಿ-476 ವಿನಯ್ ಕುಮಾರ್.ಎಂ.ಎಸ್. ರವರು ವಾಪಸ್ಸ್ ಠಾಣೆಗೆ ಹಾಜರಾಗಿ, ಈ ದಿನ ಠಾಣಾಧಿಕಾರಿಯವರು ನನಗೆ ಮಿಡಿಗೇಶಿ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ಗ್ರಾಮಗಳಲ್ಲಿ ಗಸ್ತು ಮಾಡಿಕೊಂಡು ಗುಪ್ತ ಮಾಹಿತಿ ಸಂಗ್ರಹಿಸಿಕೊಂಡು ಬರುವಂತೆ ನೇಮಿಸಿದ್ದು, ಅದರಂತೆ ನಾನು ಚಿನ್ನೇನಹಳ್ಳಿ,ತಿಪ್ಪಗೊಂಡನಹಳ್ಳಿ, ಗ್ರಾಮಗಳಲ್ಲಿ ಗಸ್ತು ಮಾಡಿಕೊಂಡು ನಂತರ ಹೊಸಕೆರೆ ಗ್ರಾಮಕ್ಕೆ ಹೋಗಿ ಗಸ್ತಿನಲ್ಲಿದ್ದಾಗ ಮದ್ಯಾಹ್ನ ಸುಮಾರು 12:00 ಗಂಟೆಯ ಸಮಯದಲ್ಲಿ ಹೊಸಕೆರೆ ಗ್ರಾಮದಲ್ಲಿರುವ ಶ್ರೀ ಅನ್ನಪೂರ್ಣೇಶ್ವರಿ ವೈನ್ಸ್ ಅಂಗಡಿಯ ಹಿಂಭಾಗ ಸಾರ್ವಜನಿಕ ಸ್ಥಳದಲ್ಲಿ ಸುಮಾರು 04-05 ಜನರು ಒಂದು ಕಡೆ ಸೇರಿಕೊಂಡು ಇಸ್ಪೀಟ್ ಎಲೆಗಳ ಸಹಾಯದಿಂದ ಹಣವನ್ನು ಪಣವಾಗಿ ಕಟ್ಟಿಕೊಂಡು ಅಂದರ್-ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿರುವ ಬಗ್ಗೆ ಮಾಹಿತಿ ಬಂದಿರುತ್ತೆ ಎಂತ ಮುಂದಿನ ಕ್ರಮಕ್ಕಾಗಿ ನೀಡಿದ ವರದಿಯ ಅಂಶವಾಗಿರುತ್ತೆ.

 Monday, 27 November 2017

Crime Incidents 27-11-17

ಮಿಡಿಗೇಶಿ ಪೊಲೀಸ್ ಠಾಣಾ ಮೊ.ಸಂ.104/2017, ಕಲಂ:279, 304(ಎ) ಐಪಿಸಿ ರೆ/ವಿ 134(ಎ & ಬಿ), 187 ಐ.ಎಂ.ವಿ.ಆಕ್ಟ್.

ದಿನಾಂಕ:26/11/2017 ರಂದು ಬೆಳಿಗ್ಗೆ 07:00 ಗಂಟೆಗೆ ಕೃತ್ಯ ನಡೆದ ಸ್ಥಳದಲ್ಲಿಯೇ ಪಿರ್ಯಾದಿ ಗೋವಿಂದರಾಜು ಬಿನ್ ಬಳ್ಳೇಕಟ್ಟಪ್ಪ, 41 ವರ್ಷ, ಗೊಲ್ಲರು, ಮಾಜಿ ಗ್ರಾ.ಪಂ.ಸದಸ್ಯ, ಹೆಚ್.ಗೊಲ್ಲರಹಟ್ಟಿ ಗ್ರಾಮ, ಮಿಡಿಗೇಶಿ ಹೋಬಳಿ, ಮಧುಗಿರಿ ತಾಲ್ಲೂಕು ರವರು ನೀಡಿದ ದೂರಿನ ಅಂಶವೇನೆಂದರೆ, ಈ ದಿವಸ ದಿನಾಂಕ:26/11/2017 ರಂದು ಬೆಳಿಗ್ಗೆ ಸುಮಾರು 04:45 ಗಂಟೆ ಸಮಯಕ್ಕೆ ನಮ್ಮ ಸಂಬಂಧಿಯೊಬ್ಬರನ್ನು ಬೆಂಗಳೂರಿಗೆ ಕಳುಹಿಸುವ ಸಲುವಾಗಿ ಹೊಸಕೆರೆ ಗ್ರಾಮದ ಬಸ್ಸ್ ನಿಲ್ದಾಣಕ್ಕೆ ಬರಲು ನನ್ನ ಬಾಬ್ತು ದ್ವಿ ಚಕ್ರ ವಾಹನದಲ್ಲಿ ನಮ್ಮ ಗ್ರಾಮದಿಂದ ಮಧುಗಿರಿ-ಪಾವಗಡ ಮುಖ್ಯ ರಸ್ತೆಯಲ್ಲಿ ಹೊಸಕೆರೆಗೆ ಹೋಗುತ್ತಿದ್ದಾಗ, ಹೊಸಕೆರೆ ಗ್ರಾಮದ ಎಸ್.ಎಲ್.ಆರ್. ಜವಳಿ ಅಂಗಡಿಯ ಮುಂಭಾಗ ಸೇತುವೆ ಗೋಡೆ ಹತ್ತಿರ ರಸ್ತೆಯಲ್ಲಿ ಯಾರೋ ಒಬ್ಬ ಅಪರಿಚಿತ ಆಸಾಮಿ ಬಿದ್ದಿರುವುದನ್ನು ನೋಡಿ ಆತನ ಹತ್ತಿರ ಹೋಗಿ ನೋಡಿದಾಗ ಸದರಿ ಆಸಾಮಿಗೆ ಯಾವುದೋ ಅಪರಿಚಿತ ವಾಹನ ಇದೇ ದಿನ ಬೆಳಗಿನ ಜಾವ ಸುಮಾರು 03:30 ರಿಂದ 04:30 ಗಂಟೆಯ ನಡುವೆ ಯಾವುದೋ ಸಮಯದಲ್ಲಿ ಡಿಕ್ಕಿ ಹೊಡೆಸಿ ಅಪಘಾತ ಉಂಟುಮಾಡಿ ಹೋಗಿರುವುದರಿಂದ, ಅಪರಿಚಿತ ವ್ಯಕ್ತಿಯ ತಲೆಗೆ ಮತ್ತು ಎಡ ಭುಜಕ್ಕೆ ತೀರ್ವ ಸ್ವರೂಪದ ಪೆಟ್ಟುಗಳು ಬಿದ್ದು ತಲೆಯಲ್ಲಿ ತೀರ್ವ ತರಹದ ರಕ್ತಗಾಯವಾಗಿ ತಲೆಯಲ್ಲಿ ಮತ್ತು ಕಿವಿಗಳಲ್ಲಿ ರಕ್ತ ಬಂದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಆದ್ದರಿಂದ ಅಪರಿಚಿತ ವ್ಯಕ್ತಿಗೆ ಡಿಕ್ಕಿ ಹೊಡೆಸಿ ಅಪಘಾತ ಉಂಟುಮಾಡಿ ಆತನ ಸಾವಿಗೆ ಕಾರಣನಾದ ಅಪರಿಚಿತ ವಾಹನವನ್ನು ಪತ್ತೆಮಾಡಿ ಮುಂದಿನ ಕ್ರಮ ಜರುಗಿಸಬೇಕೆಂದು ತಮ್ಮಲ್ಲಿ ಕೋರಿಕೊಳ್ಳುತ್ತೇನೆ. ಅಪರಿಚಿತ ವ್ಯಕ್ತಿಯು ಸುಮಾರು 40 ರಿಂದ 45 ವರ್ಷ ವಯಸ್ಸುಳ್ಳವನಾಗಿರುತ್ತಾನೆಂತ ನೀಡಿದ ಪಿರ್ಯಾದನ್ನು ಪಡೆದುಕೊಂಡು ಠಾಣೆಗೆ ವಾಪಸ್ಸ್ ಆಗಿ ಇದೇ ದಿನ ಬೆಳಿಗ್ಗೆ 07:30 ಗಂಟೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.Sunday, 26 November 2017

Crime Incidents 26-11-17

ಜಯನಗರ ಪೊಲೀಸ್ ಠಾಣಾ ಮೊ.ನಂ. 156/2017 ಕಲಂ 20 (ಬಿ) ಎನ್.ಡಿ.ಪಿ.ಎಸ್ ಆಕ್ಟ್

ದಿನಾಂಕ: 25-11-2017 ರಂದು ಬೆಳಿಗ್ಗೆ 11-00 ಗಂಟೆಯಲ್ಲಿ ಠಾಣಾ ಪಿಎಸ್‌ಐ ರವರು ಠಾಣೆಗೆ ಹಾಜರಾಗಿ ನೀಡಿದ ವರದಿ ಅಂಶವೇನೆಂದರೆ,  ದಿನಾಂಕ: 25-11-2017 ರಂದು ಬೆಳಿಗ್ಗೆ: 10-00 ಗಂಟೆಯಲ್ಲಿ ನಾನು ಮತ್ತು ಠಾಣೆಯ ಅಪರಾಧ ವಿಭಾಗ ಸಿಬ್ಬಂದಿಗಳಾದ ತಿಪ್ಪೇಸ್ವಾಮಿ ಬಿ.ಟಿ ಹೆಚ್‌.ಸಿ 134, ಲೋಕೇಶ್ ಕೆ.ಎಸ್ ಸಿಪಿಸಿ 614, ನರಸಿಂಹಮೂರ್ತಿ ಸಿಪಿಸಿ 291 ರವರುಗಳು ಜಯನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಕಳವು ಪ್ರಕರಣಗಳಲ್ಲಿ ಆರೋಪಿಗಳ ಮತ್ತು ಮಾಲುಪತ್ತೆಗಾಗಿ ಠಾಣಾ ಸರಹದ್ದಿನ ರಾಘವೇಂದ್ರ ನಗರದಲ್ಲಿ ಗಸ್ತಿನಲ್ಲಿರುವಾಗ್ಗೆ ಈ ದಿನ ಬೆಳಿಗ್ಗೆ: 10-30 ಗಂಟೆಯಲ್ಲಿ ಯಾರೋ ಬಾತ್ಮಿದಾರರು ನನಗೆ ಪೋನ್ ಮಾಡಿ ಶೆಟ್ಟಿಹಳ್ಳಿ ಮುಖ್ಯರಸ್ತೆಯಲ್ಲಿರುವ  HMS ಕಾಲೇಜು ಮುಂಭಾಗ ವಿಷ್ಣು ಪಿ. ಪ್ರಮೋದ್  ಎಂಬ ವ್ಯಕ್ತಿಯು ಅಕ್ರಮವಾಗಿ ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿರುತ್ತಾನೆಂದು ಮಾಹಿತಿ ನೀಡಿದ್ದರಿಂದ ನಾನು ಮತ್ತು ಸಿಬ್ಬಂದಿಗಳು HMS ಕಾಲೇಜು ಸಮೀಪದ ಸ್ಥಳಕ್ಕೆ ಈ ದಿನ ಬೆಳಿಗ್ಗೆ: 10-45 ಗಂಟೆಗೆ ಭೇಟಿ ನೀಡಿದ್ದು ಅಲ್ಲಿ ಕಾಲೇಜು ಬಲಭಾಗದಲ್ಲಿರುವ ಟೀ ಅಂಗಡಿಯ ಹತ್ತಿರ ಒಬ್ಬ ವ್ಯಕ್ತಿಯು ಒಂದು ಕಪ್ಪು ಬಣ್ಣದ ಪ್ಲಾಸ್ಟಿಕ್‌ ಕವರ್ ಹಿಡಿದುಕೊಂಡು ನಿಂತಿದ್ದು ಆತನ ಬಳಿ ಹೋಗುತ್ತಿದ್ದಾಗ ಆತನು ನಮ್ಮನ್ನು ನೋಡಿ ಓಡಿ ಹೋಗಲು ಪ್ರಯತ್ನಿಸಿದ್ದು, ನಾವು ಆತನನ್ನು ಬೆನ್ನಟ್ಟಿ ಹಿಡಿದು ಆತನ ಬಳಿ ಇದ್ದ ಕಪ್ಪು ಬಣ್ಣದ ಪ್ಲಾಸ್ಟಿಕ್ ಕವರ್‌ ಅನ್ನು ಪರಿಶೀಲಿಸಿದಾಗ ಅದರಲ್ಲಿ ಗಾಂಜಾಸೊಪ್ಪು ಇರುವುದನ್ನು ಖಚಿತಪಡಿಸಿಕೊಂಡಿದ್ದು, ಆತನ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಆತನು ತನ್ನ ಹೆಸರನ್ನು ವಿಷ್ಣು ಪಿ ಪ್ರಮೋದ್ ಬಿನ್ ಎಮ್‌.ಎನ್‌ ಪದ್ಮನಾಭನ್‌, 21 ವರ್ಷ, ವಿದ್ಯಾರ್ಥಿ, ವೈಷ್ಣವ ಜನಾಂಗ, 2 ನೇ ಕ್ರಾಸ್, ಅಶೋಕನಗರ, ದೋಭಿಘಾಟ್ ರಸ್ತೆ, ತುಮಕೂರು ಟೌನ್‌ ಎಂದು ತಿಳಿಸಿರುತ್ತಾನೆ. ಸದರಿ ವ್ಯಕ್ತಿಯನ್ನು ಮತ್ತು ಆತನ ಬಳಿ ಇರುವ ಗಾಂಜಾ ಸೊಪ್ಪಿನ ಕಪ್ಪು ಬಣ್ಣದ ಪ್ಲಾಸ್ಟಿಕ್ ಕವರ್ ಅನ್ನು ಸ್ಥಳದಲ್ಲಿಯೇ ಜೋಪಾನವಾಗಿ ನೋಡಿಕೊಂಡಿರುವಂತೆ ಸ್ಥಳದಲ್ಲಿ ಠಾಣಾ ಸಿಬ್ಬಂದಿಗಳಾದ ತಿಪ್ಪೇಸ್ವಾಮಿ ಬಿ.ಟಿ ಹೆಚ್‌.ಸಿ 134, ಲೋಕೇಶ್ ಕೆ.ಎಸ್ ಸಿಪಿಸಿ 614, ನರಸಿಂಹಮೂರ್ತಿ ಸಿಪಿಸಿ 291 ರವರನ್ನು ಬಿಟ್ಟಿದ್ದು, ಈತನ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸುವ ಸಲುವಾಗಿ ವಾಪಸ್ಸು ಠಾಣೆಗೆ ಬಂದಿದ್ದು ಈತನ ಮೇಲೆ ಎಫ್.ಐ.ಆರ್. ದಾಖಲಿಸಿ ವರದಿ ಮಾಡಲು ಸೂಚಿಸಿದ್ದರ ಮೇರೆಗೆ ಪ್ರಕರಣ ದಾಖಲಿಸಿರುತ್ತೆ

 

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ 215/2017 ಕಲಂ 279,337 ಐಪಿಸಿ

ದಿನಾಂಕ:25-11-2017 ರಂದು ರಾತ್ರಿ 9-15 ಗಂಟೆಗೆ ಪಿರ್ಯಾದಿಯಾದ ಮಹದೇವಯ್ಯ ಬಿನ್ ಭೈರಪ್ಪ, 36 ವರ್ಷ, ಒಕ್ಕಲಿಗರು, ವ್ಯವಸಾಯ, ಬೊಮ್ಮನಹಳ್ಳಿ, ಸಿರಿವರ ಪೋಸ್ಟ್‌, ಹೆಬ್ಬೂರು ಹೋಬಳಿ, ತುಮಕೂರು ತಾಲ್ಲೂಕು & ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೇಂಧರೆ ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ದಿನಾಂಕ:24-11-2017 ರಂದು ನಾನು ಮತ್ತು ನಮ್ಮ ಗ್ರಾಮದ ವಾಸಿಯಾದ ರಾಜಣ್ಣ ಇಬ್ಬರೂ ನಮ್ಮ ಸ್ವಂತ ಕೆಲಸದ ಮೇಲೆ ನಮ್ಮ ಗ್ರಾಮದಿಂದ ಸಿರಿವರ ಹ್ಯಾಂಡ್‌ಪೋಸ್ಟ್ ಗೆ ಬರುತ್ತಿರುವಾಗ್ಗೆ, ಸಿರಿವರ ಹ್ಯಾಂಡ್‌ಪೋಸ್ಟ್‌‌‌-ಕೆ,ಜಿ,ಟೆಂಪಲ್‌ ರಸ್ತೆಯಲ್ಲಿನ ಡಿ,ಎಸ್,ಪಾಳ್ಯ ಹಾಗೂ ಬೊಮ್ಮನಹಳ್ಳಿಗೆ ಹೋಗುವ ಕ್ರಾಸ್‌ನಲ್ಲಿ ಮದ್ಯಾಹ್ನ ಸುಮಾರು 01-00 ಗಂಟೆಗೆ ಸಿರಿವರ ಹ್ಯಾಂಡ್‌ಪೋಸ್ಟ್‌ ಕಡೆಯಿಂದ ಕೆಎ-06-ಇ.ಟಿ-4093 ನೇ ಹೀರೋ ಸ್ಪ್ಲೆಂಡರ್ ಫ್ರೋ ದ್ವಿಚಕ್ರ ವಾಹನದ ಸವಾರನು ಹಿಂಬದಿಯಲ್ಲಿ ಒಬ್ಬ ಆಸಾಮಿಯನ್ನು ಕೂರಿಸಿಕೊಂಡು ಕೆ,ಜಿ,ಟೆಂಪಲ್ ಕಡೆಗೆ ತನ್ನ ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ಬೊಮ್ಮನಹಳ್ಳಿ ಕಡೆಯಿಂದ ಸಿರಿವರ ಹ್ಯಾಂಡ್‌ಪೋಸ್ಟ್‌ ಕಡೆಗೆ ಹೋಗಲು ಬಂದ ಕೆಎ-06-ಇ.ಯು-2184 ನೇ ಟಿ,ವಿ,ಎಸ್ ಎಕ್ಸ್‌.ಎಲ್ ಸೂಪರ್ ಹೆವಿ ಡ್ಯೂಟಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದ ಪರಿಣಾಮ ಎರಡೂ ದ್ವಿಚಕ್ರ ವಾಹನದಲ್ಲಿದ್ದವರು ದ್ವಿಚಕ್ರ ವಾಹನ ಸಮೇತ ಕೆಳಗೆ ಬಿದ್ದರು. ನಂತರ ನಾನು ಹಾಗೂ ರಾಜಣ್ಣ ಇಬ್ಬರು ಸದರಿಯವರುಗಳನ್ನು ಉಪಚರಿಸಿ ನೋಡಲಾಗಿ, ಕೆಎ-06-ಇ.ಯು-2184 ನೇ ಟಿ,ವಿ,ಎಸ್ ಎಕ್ಸ್‌.ಎಲ್ ಸೂಪರ್ ಹೆವಿ ಡ್ಯೂಟಿ ದ್ವಿಚಕ್ರ ವಾಹನದ ಸವಾರನು ನಮ್ಮ ಗ್ರಾಮದ ವಾಸಿಯಾದ ಮುನಿರಾಜು ಆಗಿದ್ದು, ಹಿಂಬದಿಯಲ್ಲಿ ಕುಳಿತ್ತಿದ್ದವರು ಆತನ ತಂಗಿ ಲತಾಮಣಿ ಆಗಿದ್ದರು. ಮುನಿರಾಜು ರವರಿಗೆ ಮುಖಕ್ಕೆ ಹಾಗೂ ತಲೆಯ ಭಾಗಕ್ಕೆ ತೀವ್ರತರವಾದ ಏಟು ಬಿದ್ದು ರಕ್ತಗಾಯಗಳಾಗಿದ್ದವು. ಲತಾಮಣಿ ರವರಿಗೆ ತರಚಿದ ಗಾಯಗಳಾಗಿದ್ದವು. ಕೆಎ-06-ಇ.ಟಿ-4093 ನೇ ಹೀರೋ ಸ್ಪ್ಲೆಂಡರ್ ಫ್ರೋ ದ್ವಿಚಕ್ರ ವಾಹನದಲ್ಲಿದ್ದ ಇಬ್ಬರಿಗೂ ಗಾಯಗಳಾಗಿದ್ದವು. ಸದರಿಯವರುಗಳ ಹೆಸರು ವಿಳಾಸ ತಿಳಿಯಲಿಲ್ಲ. ನಂತರ ಗಾಯಗೊಂಡಿದ್ದ ಮುನಿರಾಜು ರವರನ್ನು ಸ್ಥಳಕ್ಕೆ ಬಂದ ಯಾವುದೋ ಒಂದು ಆಟೋದಲ್ಲಿ ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದೆನು. ಮತ್ತೊಂದು ದ್ವಿಚಕ್ರ ವಾಹನದಲ್ಲಿದ್ದ ಗಾಯಾಳುಗಳನ್ನು ಅಲ್ಲಿಯೇ ಇದ್ದ ಸಾರ್ವಜನಿಕರು ಯಾವುದೋ ಒಂದು ವಾಹನದಲ್ಲಿ ಆಸ್ಪತ್ರೆಗೆ ಕಳುಹಿಸಿಕೊಟ್ಟರು. ಮುನಿರಾಜುರವರನ್ನು ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದು, ನಂತರ ಮುನಿರಾಜು ರವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ನಂತರ ಅಲ್ಲಿಂದ ಬೆಂಗಳೂರಿನ ಮೆಡ್‌ಕೇರ್‌ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದೆವು. ಆದ್ದರಿಂದ ಸದರಿ ಅಪಘಾತಕ್ಕೆ ಕಾರಣರಾದ ಕೆಎ-06-ಇ.ಟಿ-4093 ನೇ ಹೀರೋ ಸ್ಪ್ಲೆಂಡರ್ ಫ್ರೋ ದ್ವಿಚಕ್ರ ವಾಹನದ ಸವಾರನ ಮೇಲೆ ಕಾನೂನು ರೀತ್ಯಾ ಮುಂದಿನ ಕ್ರಮ ಜರುಗಿಸಬೇಕೆಂದು ಈ ಮೂಲಕ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ. ಮೇಲ್ಕಂಡ ಎರಡೂ ದ್ವಿಚಕ್ರ ವಾಹನಗಳು ಸಿರಿವರ ಹ್ಯಾಂಡ್‌ಪೋಸ್ಟ್ ನ ಪ್ರದೀಪ್‌ ರವರ ಹೋಟೆಲ್‌ನ ಬಳಿ ನಿಲ್ಲಿಸಿರುತ್ತೆ. ನಾನು ಮುನಿರಾಜು ರವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದರಿಂದ ಈ ದಿವಸ ತಡವಾಗಿ ಬಂದು ದೂರು ನೀಡುತ್ತಿದ್ದೇನೆಎಂದು ನೀಡಿದ ದೂರನ್ನು ಪಡೆದು ಠಾಣಾ ಮೊ ನಂ 215/2017 ಕಲಂ 279,337 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.Friday, 24 November 2017

New BEAT BEST STAFF AND BEST CRIME DETECTION STAFF

 

New BEAT BEST STAFF AND BEST CRIME DETECTION BEST STAFF


Best Crime Detection staff and New Beat Best Staff

NEW BEAT BEST STAFF AND BEST CRIME DETECTION STAFFThursday, 23 November 2017

Crime incidents 23-11-17

ತಿಪಟೂರು ನಗರ ಪೊಲೀಸ್ ಠಾಣಾ ಮೊ.ನಂ- 179/2017 ಕಲಂ: ಹೆಂಗಸು ಕಾಣೆಯಾಗಿದ್ದಾಳೆ.

ದಿನಾಂಕ: 22/11/2017 ರಂದು ಸಂಜೆ 4-30 ಗಂಟೆಗೆ ಪಿರ್ಯಾದಿ ರಂಗಸ್ವಾಮಿ ಬಿನ್ ಹುನುಮಂತಯ್ಯ 32ವರ್ಷ, ಕಂಚಾಘಟ್ಟ, ತಿಪಟೂರು ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಾನು ಅರಸೀಕೆರೆ ತಾಲ್ಲೋಕ್ ಕಲ್ಲುಸಾದರಹಳ್ಳಿ ಗ್ರಾಮದ ಸಣ್ಣಪ್ಪ ಎಂಬುವರ ಮಗಳಾದ ರೂಪ ಇವರನ್ನು ದಿನಾಂಕ: 28/08/2016 ರಂದು ವಿವಾಹವಾಗಿದ್ದು, ದಿನಾಂಕ:04/10/2017 ರಂದು ಬೆಳಿಗ್ಗೆ 6-30 ಗಂಟೆಯ ಸಮಯದಲ್ಲಿ ನಾನು ಮನೆಯಲ್ಲಿ ಮಲಗಿರುವಾಗ್ಗೆ ನನ್ನ ಪತ್ನಿ ರೂಪ (30.ವರ್ಷ) ಹಲ್ಲು ನೋವು ಆಸ್ಪತ್ರೆಗೆ ತೋರಿಸುತ್ತೇನೆಂದು ಹೇಳಿ ಮನೆಯಿಂದ ಹೊರಗೆ ಹೋಗಿದ್ದು, ವಾಪಸ್ ಮನೆಗೆ ಬಂದಿರುವುದಿಲ್ಲ. ನಾನು ಅವರ ತಂದೆ- ತಾಯಿಯವರನ್ನು ವಿಚಾರ ಮಾಡಿದ್ದು,ಹಾಗೂ ಅವರ ಊರಿಗೆ 3 ಬಾರಿ ಹೋಗಿಬಂದಿದ್ದು ಮತ್ತು ಇದುವರೆವಿಗೂ ಎಲ್ಲಾ ಕಡೆ ಹುಡುಕಿದರೂ ಸಹ ಎಲ್ಲಿಯೂ ಸಹ ನನ್ನ ಪತ್ನಿಯ ಬಗ್ಗೆ ಮಾಹಿತಿ ತಿಳಿದುಬಂದಿರುವುದಿಲ್ಲ.ಆದ್ದರಿಂದ ಕಾಣೆಯಾಗಿರುವ ನನ್ನ ಪತ್ನಿ ರೂಪ ರವರನ್ನು ಪತ್ತೆ ಮಾಡಿಕೊಡಬೇಕೆಂದು ಕೋರಿ ನೀಡರುವ ದೂರನ್ನು ಪಡೆದು ಪ್ರರಕಣ ದಾಖಲಿಸಿರುತ್ತೆ.

ಹುಳಿಯಾರು ಪೊಲೀಸ್ ಠಾಣಾ ಮೊ.ನಂ.144/2017, ಕಲಂ 379 ಐ.ಪಿ.ಸಿ.

ದಿನಾಂಕ 22/11/2017 ರಂದು ಬೆಳಿಗ್ಗೆ 11-00 ಗಂಟೆಗೆ ಪಿರ್ಯಾದಿ ಕೆ.ಜಿ ಮಲ್ಲಯ್ಯ ಬಿನ್ ಗಂಗಾಧರಯ್ಯ, 56 ವರ್ಷ, ಲಿಂಗಾಯತರು, ಕೆಂಕೆರೆ, ಹುಳಿಯಾರು ಹೋಬಳಿ, ಚಿಕ್ಕನಾಯಕನಹಳ್ಳಿ ತಾಲ್ಲೂಕು ಇವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ದಿನಾಂಕ 18/11/2017 ರಂದು ರಾತ್ರಿ 11-00 ಗಂಟೆಗೆ ನನ್ನ ದ್ವಿಚಕ್ರ ವಾಹನವನ್ನು ನನ್ನ ಮನೆಯ ಮುಂದೆ ನಿಲ್ಲಿಸಿ ಬೈಕಿನ ಕೀ ಹಾಕಿ ಹ್ಯಾಂಡಲ್ ಲಾಕ್ ಮಾಡಿ ಮಲಗಿಕೊಂಡಿದ್ದೆ. ದಿನಾಂಕ 19/11/2017 ರಂದು ಬೆಳಗಿನ ಜಾವ 03-30 ರ ಸಮಯದಲ್ಲಿ ನಿದ್ರೆಯಿಂದ ಎದ್ದು ಹೊರಬಂದು ನೋಡಿದಾಗ ನನ್ನ ಬೈಕು ನಿಂತಿದ್ದನ್ನು ಕಂಡು ನೋಡಿ ಮತ್ತೆ ಮಲಗಿಕೊಂಡೆನು. ಮತ್ತೆ ಬೆಳಿಗ್ಗೆ 06-00 ಗಂಟೆ ಸಮಯದಲ್ಲಿ ಎದ್ದು ನೋಡಿದಾಗ ನನ್ನ ಬೈಕು ನಮ್ಮ ಮನೆಯ ಮುಂದೆ ಇರಲಿಲ್ಲ. ನನ್ನ ದ್ವಿಚಕ್ರ ವಾಹನದ ಅಂದಾಜು ಮೌಲ್ಯ 38,000 ರೂ ಗಳಾಗಿರುತ್ತೆ. ಆದ್ದರಿಂದ ತಾವುಗಳು ಕಳ್ಳತನವಾಗಿರುವ ನನ್ನ ಬೈಕನ್ನು ಪತ್ತೆಮಾಡಿಕೊಡಬೇಕೆಂದು ನೀಡಿದ ಲಿಖಿತ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ 212/2017 ಕಲಂ 109 ಸಿಆರ್‌ಪಿಸಿ.

ದಿನಾಂಕ-22 -11-2017 ರಂದು ಬೆಳಗಿನ ಜಾವ 5-45 ಗಂಟೆಗೆ ರಾತ್ರಿ ಗಸ್ತಿನ ಸಿಬ್ಬಂದಿಯಾದ ರಾಜಣ್ಣ, ಹೆಚ್ ಸಿ 360 ರವರು ಠಾಣೆಗೆ ಹಾಜರಾಗಿ ನೀಡಿದ ವರಧಿಯ ಅಂಶವೇನೆಂದರೆ ದಿನಾಂಕ:-21-11-2017 ರಂದು ನಾನು ಮತ್ತು ಪಿ,ಸಿ-312, ರಘುರಾಮ್ ಎಸ್. ಇಬ್ಬರೂ ಹೆಬ್ಬೂರು ಮತ್ತು ನಾಗವಲ್ಲಿ ರಾತ್ರಿ ಗಸ್ತು ಕರ್ತವ್ಯಕ್ಕೆ ನೇಮಕಗೊಂಡಿದ್ದು, ನೇಮಕದಂತೆ ನಾವುಗಳು ದಿನಾಂಕ:21/11/2017 ರಂದು ಬೆಳಿಗಿನಜಾವ 03-30 ಗಂಟೆಗೆ ಸಮಯದಲ್ಲಿ ಹೆಬ್ಬೂರು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ  ಗಸ್ತು ಕರ್ತವ್ಯ ನಿರ್ವಹಿಸುತ್ತಿರುವಾಗ್ಗೆ, ಹೆಬ್ಬೂರಿನ ಬಸ್‌ ನಿಲ್ದಾಣದ ಮುಂದಿನ ಐಓಬಿ ಬ್ಯಾಂಕ್ ನ ಎಟಿಎಂ ಮುಂದೆ ಒಬ್ಬ ಆಸಾಮಿಯು ಕಳ್ಳತನವನ್ನು ಮಾಡುವ ಉದ್ದೇಶದಿಂದ ಹೊಂಚು ಹಾಕುತ್ತಿದ್ದು, ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ತಮ್ಮ ಇರುವಿಕೆಯನ್ನು ಮರೆಮಾಚಿಕೊಳ್ಳಲು ಸಂತೆ ಮೈದಾನದ ಬಳಿಯಿರುವ ಎಟಿಎಂ ಹಿಂದೆ ಅವಿತುಕೊಂಡಿದವನನ್ನು ಹಿಡಿದು ವಿಚಾರಿಸಾಗಿ, ಹೆಸರು ವಿಳಾಸವನ್ನು ಕೇಳಲಾಗಿ, ಒಂದು ಸಾರಿ ಒಂದು ಹೆಸರ ಮತ್ತು ವಿಳಾಸವನ್ನು ಮತ್ತೊಂದು ಸಾರಿ ಮತ್ತೊಂದು ಹೆಸರನ್ನು ತಿಳಿಸಿದ್ದರ ಮೇರೆಗೆ ಧನಂಜಯ್ಯ ಬಿನ್ ನಾಗರಾಜು, 28 ವರ್ಷ, ಮಡಿವಾಳರು, ಜನತಾ ಕಾಲೋನಿ, ಹೆಬ್ಬೂರು, ತುಮಕೂರು ತಾಲ್ಲೋಕು & ಜಿಲ್ಲೆ ಎಂದು ತಿಳಿಸಿದ್ದು, ಸದರಿ ಆಸಾಮಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆ ತಂದು ನೀಡಿದ ವರಧಿ ಮತ್ತು ಆಸಾಮಿಯನ್ನು ಪಡೆದು ಪ್ರಕರಣ ದಾಖಲಿಸಿರುತ್ತೇನೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ 213/2017 ಕಲಂ 279,337 ಐಪಿಸಿ.

ದಿನಾಂಕ:22-11-2017 ರಂದು ಮಧ್ಯಾಹ್ನ 1-00 ಗಂಟೆಗೆ ಪಿರ್ಯಾದಿಯಾದ ಎಸ್ ರಂಗಸ್ವಾಮಿ ಬಿನ್ ಶಿವಶಂಕರಯ್ಯ, 42 ವರ್ಷ, ಒಕ್ಕಲಿಗರು, ಜಿರಾಯ್ತಿ, ಚೋಳೇನಹಳ್ಳಿ, ಗುಳೂರು ಹೋಬಳಿ, ತುಮಕೂರು ತಾಲ್ಲೂಕು & ಜಿಲ್ಲೆರವರು ಠಾಣೆಗೆ ಹಾಜರಾಗಿ ನೀಡಿದ ಟೈಪ್ ಮಾಡಿಸಿದ ದೂರಿನ ಅಂಶವೇನೆಂಧರೆ ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು, ದಿನಾಂಕ-19/11/2017 ರಂದು ನನ್ನ ಚಿಕ್ಕಪ್ಪನ ಮಗನಾದ ಉಮೇಶ್ ಎಸ್.ರವರ ಬಾಬ್ತು ಕೆಎ-52-ಹೆಚ್ -7132 ನೇ ಪ್ಯಾಷನ್ ಪ್ರೋ ದ್ವಿಚಕ್ರ ವಾಹನದಲ್ಲಿ ಉಮೇಶ್ ನು ಮತ್ತು ನನ್ನ ತಮ್ಮನಾದ ಎಸ್ ಶ್ರೀನಿವಾಸ್ ನನ್ನು ಸದರಿ ದ್ವಿಚಕ್ರವಾಹನದ ಹಿಂಬದಿಯಲ್ಲಿ ಕೂರಿಸಿಕೊಂಡು ಸ್ವಂತ ಕೆಲಸ ನಿಮಿತ್ತ ನರುಗನಹಳ್ಳಿ ಗ್ರಾಮಕ್ಕೆ ಹೋಗಿದ್ದು, ನಂತರ ಇದೇ ದಿನ ವಾಪಸ್ ಬರುವಾಗ ಬೆಳಿಗ್ಗೆ ಸುಮಾರು 11-00 ಗಂಟೆ ಸಮಯದಲ್ಲಿ ನರುಗನಹಳ್ಳಿಯಿಂದ ತುಮಕೂರಿನ ಕಡೆಗೆ ಬರಲೆಂದು ತುಮಕೂರು - ಶಿವಗಂಗೆ ರಸ್ತೆಯ,  ಹೊನ್ನುಡಿಗೆ ಹ್ಯಾಂಡ್ ಪೋಸ್ಟ್ ಹತ್ತಿರ ರಸ್ತೆಯ ಎಡಭಾಗದಲ್ಲಿ ಬರುತ್ತಿರುವಾಗ್ಗೆ ಅವರ ಎದುರಿಗೆ ಅಂದರೆ ತುಮಕೂರಿನ ಕಡೆಯಿಂದ ಹೊನ್ನುಡಿಕೆ ಕಡೆಗೆ ಬಂದು ಮಹೇಂಧ್ರ ಬುಲೆರೋ ವಾಹನದ ಚಾಲಕ ತನ್ನ ವಾಹನವನ್ನು  ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ರಸ್ತೆಯ ಎಡಭಾಗದಲ್ಲಿ ಬರುತ್ತಿದ್ದ  ಕೆಎ-52-ಹೆಚ್ -7132 ನೇ ಪ್ಯಾಷನ್ ಪ್ರೋ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಪಡಿಸಿದ್ದರಿಂದ ರಸ್ತೆಯ ಮೇಲೆ ಬಿದ್ದು, ಉಮೇಶನ ಬಲಗಾಲಿಗೆ ತೀವ್ರತರವಾದ ಗಾಯವಾಗಿದ್ದು, ತಲೆಗೆ ಮತ್ತು ದೇಹದ ಇತರೇ ಭಾಗಗಳಿಗೆ ತರಚಿದ ಗಾಯವಾಗಿರುತ್ತದೆ, ಮತ್ತು ದ್ವಿಚಕ್ರವಾಹನದ ಹಿಂಬದಿಯಲ್ಲಿ ಕುಳಿತ್ತಿದ್ದ ತಮ್ಮ ಶ್ರೀನಿವಾಸ್ ರವರಿಗೆ ಎಡಗೈಗೆ ಮತ್ತು ಬಲಗೈಗೆ  ತೀವ್ರತರವಾದ ಗಾಯವಾಗಿದ್ದು ಮತ್ತು ದೇಹದ ಇತರೇ ಭಾಗಗಳಿಗೆ ತರಚಿದ ಗಾಯವಾಗಿರುತ್ತದೆ, ನಂತರ ಈ ಅಪಘಾತ ಪಡಿಸಿದ ಮಹೇಂಧ್ರ ಬುಲೆರೋ ವಾಹವನ್ನು ನೋಡಲಾಗಿ ಕೆಎ-06-ಎನ್-5497 ನೇ ಆಗಿದ್ದು, ಸದರಿ ವಾಹನದ ಚಾಲಕನಾದ ಕೃಷ್ಣಪ್ಪ ಕೆ.ಆರ್ ಬಿನ್ ರಾಮಯ್ಯ ಕೆ.ಪಿ., 39 ವರ್ಷ, ವಕ್ಕಲಿಗರು, ಕೈದಾಳ, ಗುಳೂರು ಹೋಬಳಿ, ತುಮಕೂರು ತಾಲ್ಲೂಕು & ಜಿಲ್ಲೆ ರವರು ಮತ್ತು ಚಿಕ್ಕಸಾರಂಗಿ ವಾಸಿಯಾದ ಲೋಕೇಶ್ ಮತ್ತು ನಮ್ಮ ಗ್ರಾಮದ ವಾಸಿಯಾದ ರಂಗನಾಥರವರ ಸಹಾಯದಿಂದ ಅಪಘಾತ ಪಡಿಸಿದ ಮಹೇಂಧ್ರ ಬುಲೆರೋ ವಾಹನದಲ್ಲಿ ಗಾಯಗೊಂಡಿದ್ದ ಸದರಿ ಇಬ್ಬರೂ ಆಸಾಮಿಗಳನ್ನು ತುಮಕೂರಿನ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯರಲ್ಲಿ ಚಿಕಿತ್ಸೆ ಕೊಡಿಸಿದರು ಎಂದು ಸದರಿ ಅಪಘಾತವಾದ ಬಗ್ಗೆ ನನಗೆ ನಮ್ಮ ಗ್ರಾಮದ ವಾಸಿಯಾದ ರಂಗನಾಥರವರು ದೂರವಾಣಿ ಮೂಲಕ ತಿಳಿಸಿದರು ನಂತರ ನಾನು ತುಮಕೂರಿನ ಜಿಲ್ಲಾ ಆಸ್ಪತ್ರೆಗೆ ಬಂದು ನೀಡಲಾಗಿ ನನ್ನ ತಮ್ಮ ಶ್ರೀನಿವಾಸ ಮತ್ತು ಉಮೇಶ್ ರವರಿಗೆ ಅಪಘಾತವಾಗಿರುವುದು ನಿಜವಾಗಿತ್ತು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಇಬ್ಬರನ್ನು ತುಮಕೂರಿಗೆ ಹೇಮಾವತಿ ಆಸ್ಪತ್ರೆಗೆ ಕರೆದುಕೊಂಡು ಚಿಕಿತ್ಸೆಯನ್ನು ಕೊಡಿಸುತ್ತಿರುತ್ತೇವೆ, ಆದ್ದರಿಂದ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಈ ಅಪಘಾತಕ್ಕೆ ಕಾರಣನಾದ ಕೆಎ-06-ಎನ್-5497 ನೇ  ಮಹೇಂಧ್ರ ಬುಲೆರೋ ವಾಹನದ ಚಾಲಕನಾದ ಕೃಷ್ಣಪ್ಪ ಕೆ.ಆರ್ ಬಿನ್ ರಾಮಯ್ಯ ರವರ ಮೇಲೆ ಕಾನೂನು ರೀತ್ಯಾ ಮುಂದಿನ ಕ್ರಮ ಜರುಗಿಸಬೇಕೆಂದು ಈ ಮೂಲಕ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ. ಗಾಯಾಳುವಿಗೆ ಚಿಕಿತ್ಸೆ ಕೊಡಿಸುತ್ತಿದ್ದರಿಂದ ಈ ದಿವಸ ತಡವಾಗಿ ಬಂದು ದೂರು ನೀಡಿರುತ್ತೇನೆ ಎಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಬಡವನಹಳ್ಳಿ ಪೊಲೀಸ್ ಠಾಣೆ ಮೊ.ನಂ.98/2017 ಕಲಂ 279,304 (ಎ) ಭಾದಂಸಂ. ರೆ/ವಿ 134 (ಎ) & (ಬಿ) ಐ ಎಂವಿ ಆಕ್ಟ್.

ದಿನಾಂಕ:19/11/2017 ರಂದು ಬೆಳಗ್ಗೆ 11-00 ಗಂಟೆಯಲ್ಲಿ ಫಿರ್ಯಾದಿ ಕೂನ್ನಹಳ್ಳಿ ವಾಸಿ ತಿಮ್ಮಣ್ಣ ರವರು ಠಾಣೆಗೆ ಹಾಜರಾಗಿ, ನನ್ನ ಮಗನಾದ ಶಿವಣ್ಣ ಸುಮಾರು 50 ವರ್ಷ ಈತನು ಈ ದಿನ ಬೆಳಗ್ಗೆ 7 ಗಂಟೆ ಸಮಯದಲ್ಲಿ ಕೂನ್ನಹಳ್ಳಿಯಲ್ಲಿ ಹಾಲನ್ನು ಡೈರಿಗೆ ಹಾಕಿ ತನ್ನದೇ ಆದ ದ್ವಿಚಕ್ರ ವಾಹನ ಸೂಪರ್‌ ಎಕ್ಸ್ಎಲ್‌ ಕೆ.ಎ-06 ಇಡಿ-5752 ರಲ್ಲಿ ಮನೆಗೆ ಬರುತ್ತಿರುವಾಗ ಶಿರಾ ಕಡೆಯಿಂದ ಬಂದಂತಹ ಒಂದು ನಾಲ್ಕು ಚಕ್ರದ ವಾಹನ ಕೆ.ಎ-47 ಎಂ-2314 ಹುಂಡೈ ಕಾರು ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನನ್ನ ಮಗನ ದ್ವಿಚಕ್ರ ವಾಹನಕ್ಕೆ ಡಿಕ್ಕಿಪಡಿಸಿದ ಪರಿಣಾಮ ಶಿವಣ್ಣನಿಗೆ ತಲೆಗೆ ಪೆಟ್ಟಾಗಿ ಎರಡೂ ಕಾಲುಗಳಿಗೂ ಪೆಟ್ಟಾಗಿ ರಕ್ತ ಸಿಕ್ತ ಗಾಯಗಳಾಗಿರುತ್ತದೆ. ತಕ್ಷಣ ಶಿವಣ್ಣನ ಹೆಂಡತಿಯಾದ ಗಂಗಮ್ಮ ಮತ್ತು ಮಗ ರಂಗನಾಥಗೌಡ  ಗಾಯಾಳುವನ್ನು ಯಾವುದೋ ಒಂದು ವಾಹನದಲ್ಲಿ ಶಿರಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ 108ರ ಮುಖಾಂತರ ತುಮಕೂರಿನ ಸಿದ್ದಗಂಗಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿರುತ್ತೇವೆ. ಆದುದರಿಂದ ತಾವುಗಳು ಕೆ.ಎ-47 ಎಂ-2314 ರ ಕಾರು ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ  .          ಈ ದಿನ  ಮೃತನ ತಂದೆ ತಿಮ್ಮಣ್ಣ  ರವರು ಠಾಣೆಗೆ ಹಾಜರಾಗಿ, ಈ ಪ್ರಕರಣದ ಗಾಯಾಳು ಶಿವಣ್ಣ ಬಿನ್‌ ತಿಮ್ಮಣ್ಣ  ರವರನ್ನು  ತುಮಕೂರಿನ ಸಿದ್ದಗಂಗಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದು, ಸಿದ್ದಗಂಗಾ ಆಸ್ಪತ್ರೆಯ ವೈದ್ಯಾದಿಕಾರಿಗಳು ಹೆಚ್ಚಿನ ಚಿಕಿತ್ಸೆ ಬಗ್ಗೆ ತುಮಕೂರು ಜಿಲ್ಲಾ  ಆಸ್ಪತ್ರೆಗೆ  ಕಳುಹಿಸಿದ್ದು,  ಆಸ್ಪತ್ರೆ ಬಳಿಗೆ ಬೆಳಗ್ಗೆ 10-20 ಗಂಟೆ ಸಮಯದಲ್ಲಿ  ನನ್ನ ಮಗ ಶಿವಣ್ಣ ಚಿಕಿತ್ಸೆ ಫಲಕಾರಿಯಾಗದೆ  ಮೃತಪಟ್ಟಿರುತ್ತಾರೆಂತಾ, ಮೃತನ ಶವ ತುಮಕೂರು ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿದ್ದು,   ಮುಂದಿನ ಕ್ರಮ ಜರುಗಿಸಬೇಕೆಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

 

 Wednesday, 22 November 2017

Crime incidents 22-11-17

ತಿಪಟೂರು ನಗರ ಪೊಲೀಸ್ ಠಾಣಾ ಮೊ .ನಂ- 178/2017 ಕಲಂ: 279,337 ಐ.ಪಿ.ಸಿ.

ದಿನಾಂಕ: 21/11/2017 ರಂದು ಬೆಳಿಗ್ಗೆ 10-30 ಗಂಟೆಗೆ ಪಿರ್ಯಾದಿ ಮರುಳಸಿದ್ದಪ್ಪ ಬಿನ್ ಲೇಟ್ ಶಿವಣ್ಣ, 2ನೇ ಕ್ರಾಸ್, ಗುರುದರ್ಶನ್ ಹೋಟೆಲ್ ಹಿಂಭಾಗ, ವಿನಾಯಕನಗರ, ತಿಪಟೂರು ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಾನು 18/11/2017 ರಂದು ಬೆಳಿಗ್ಗೆ 8-30 ಗಂಟೆಯ ಸಮಯದಲ್ಲಿ ತಿಪಟೂರು ನಗರದ ಬಾಲಕಿಯರ ಪದವಿ ಪೂರ್ವ ಕಾಲೇಜು ಮುಂಭಾಗದ ಬಿ,ಹೆಚ್ ರಸ್ತೆಯ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಅದೇ ಸಮಯಕ್ಕೆ ಬಸ್ ನಿಲ್ದಾಣದ ಕಡೆಯಿಂದ ಹಾಸನ ಸರ್ಕಲ್ ಕಡೆಗೆ ಹೋಗಲು ಕೆ.ಎ-44 ಎಸ್-8633 ನೇ ಆಕ್ಟೀವ್ ಹೋಂಡಾ ದ್ವಿಚಕ್ರ ವಾಹನದ ಸವಾರ ನೊಣವಿನಕೆರೆ ವಾಸಿ ಲಿಖಿತ್ ಬಿನ್ ಲೇಟ್ ಶಿವಣ್ಣ ರವರು ಅತೀವೇಗ ಹಾಗೂ ಅಜಾಗರೂಕತೆಯಿಂದ ತನ್ನ ಬೈಕ್ ನ್ನು ಓಡಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ನನಗೆ ಡಿಕ್ಕಿ ಹೊಡೆಸಿದ ಪರಿಣಾಮ ನಾನು ನೆಲಕ್ಕೆ ಬಿದ್ದು ಪ್ರಜ್ಞೆ ತಪ್ಪಿದ್ದು, ನನಗೆ ಎಡಗಡೆ ಭುಜದ ಹತ್ತಿರ ಮೂಳೆ ಮುರಿದಿದ್ದು, ಕಣ್ಣಿನ ಭಾಗದಲ್ಲಿ ಪೆಟ್ಟು ಬಿದ್ದಿರುತ್ತದೆ.ನಂತರ ನನ್ನನ್ನು ಯಾರೋ ತಿಪಟೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆದಿರುತ್ತೇನೆ. ಇದುವರೆವಿಗೂ ಅಪಘಾತಪಡಿಸುವ ವ್ಯಕ್ತಿಯು ನಮ್ಮ ಕಷ್ಟ-ಸುಖಗಳನ್ನು ವಿಚಾರ ಮಾಡಲು ಬಂದಿರುವುದಿಲ್ಲ. ಆದ್ದರಿಂದ ನನಗೆ ಅಪಘಾತ ಪಡಿಸಿರುವ ಮೇಲ್ಕಂಡ ಕೆ.ಎ-44 ಎಸ್-8633 ನೇ ಆಕ್ಟೀವ್ ಹೋಂಡಾ ದ್ವಿಚಕ್ರ ವಾಹನದ ಸವಾರ ನೊಣವಿನಕೆರೆ ವಾಸಿ ಲಿಖಿತ್ ಬಿನ್ ಲೇಟ್ ಶಿವಣ್ಣ ರವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೋರಿ ನೀಡಿರುವ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಬಡವನಹಳ್ಳಿ ಪೊಲೀಸ್ ಠಾಣಾ ಮೊ.ನಂ.101/2017 ಕಲಂ 279,304(ಎ) ಐಪಿಸಿ.

ದಿನಾಂಕ 21/11/2017 ರಂದು ಸಂಜೆ 5-30 ಗಂಟೆ ಸಮಯದಲ್ಲಿ ಪಿರ್ಯಾದಿ ಮಂಜುನಾಥ ಬಿನ್ ಲೇ, ಯರಗುಂಟಪ್ಪ,  ಶಾಗದಡು ಗ್ರಾಮ, ಬುಕ್ಕಾಪಟ್ನ ಹೋಬಳಿ ಶಿರಾ ತಾ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ನಮ್ಮ ತಂದೆಗೆ  ಗಿರಿರಾಜು, ನಾನು, ಶಾರದಮ್ಮ ಮತ್ತು ತಿಪ್ಪೇಸ್ವಾಮಿ ಎಂಬ ಒಂದು ಹೆಣ್ಣು ಮತ್ತು ಮೂರು ಗಂಡು ಒಟ್ಟು 04 ಜನ ಮಕ್ಕಳಿರುತ್ತೇವೆ. ನಾನು ಬೇರೆ ವಾಸವಿದ್ದು, ನನ್ನ ಅಣ್ಣ ಗಿರಿರಾಜು ಮತ್ತು ತಮ್ಮ ತಿಪ್ಪೇಸ್ವಾಮಿ ಜೊತೆಯಲ್ಲೇ ವಾಸವಿದ್ದರು. ತಮ್ಮ ತಿಪ್ಪೇಸ್ವಾಮಿ ಮದುವೆಯಾಗಿರುವುದಿಲ್ಲ. ಈ ದಿನ ದಿನಾಂಕ:21/11/2017 ರಂದು ಮದ್ಯಾಹ್ನ 3-45 ಗಂಟೆ ಸಮಯದಲ್ಲಿ ನಾನು ಮನೆಯಲ್ಲಿದ್ದಾಗ ತಾವರೆಕೆರೆ ಪೊಲೀಸ್‌ ಠಾಣೆಯಿಂದ ಪೋನ್‌ ಮಾಡಿ ಬಡವನಹಳ್ಳಿ ಸಮೀಪ ದೊಡ್ಡ ಸೇತುವೆ ಬಳಿ ಬೈಕಿನಲ್ಲಿ ಬರುತ್ತಿದ್ದ ನಿನ್ನತಮ್ಮ ತಿಪ್ಪೆಸ್ವಾಮಿಗೆ ಕೆ.ಎಸ್.ಆರ್.ಟಿ.ಸಿ.ಬಸ್‌ ಡಿಕ್ಕಿ ಹೊಡೆದು ಅಪಘಾತವಾಗಿ ಮೃತರಾಗಿರುವ ವಿಚಾರ ತಿಳಿಸಿದರು. ಕೂಡಲೇ ನಾನು ನಮ್ಮ ಸಂಬಂದಿಕರೊಂದಿಗೆ ಬಡವನಹಳ್ಳಿಯ ಆಸ್ಪತ್ರೆಯ ಬಳಿ ಬಂದು ನೋಡಿದೆ ನನ್ನ ತಮ್ಮನ ತಲೆಗೆ ಪೆಟ್ಟುಗಳು ಬಿದ್ದು ಮೃತನಾಗಿದ್ದನು. ಈ ದಿನ ಬೆಳಗ್ಗೆ ನನ್ನ ತಮ್ಮ ತಿಪ್ಪೇಸ್ವಾಮಿ ಆತನ ಕೆಲಸದ ನಿಮಿತ್ತ ಮದುಗಿರಿಗೆ ಹೋಗಿ ಆತನ ಬಾಬ್ತು  KA-02-Y-1094 ರ ಹಿರೋಹೊಂಡಾ ಸಿಡಿ 100 ಬೈಕ್‌ ನಲ್ಲಿ ವಾಪಾಸ್ ಊರಿಗೆ ಬರಲು ಬಡವನಹಳ್ಳಿ ಸಮೀಪದ ದೊಡ್ಡ ಸೇತುವೆ ಬಳಿ ಮದ್ಯಾಹ್ನ 3-30 ಗಂಟೆ ಸಮಯದಲ್ಲಿ ಬರುವಾಗ ಶಿರಾ ಕಡೆಯಿಂದ ಚಿಂತಾಮಣಿ ಕಡೆಗೆ ಹೋಗುತ್ತಿದ್ದ KA-27-F-0571 ನೇ ನಂಬರಿನ ಕೆ.ಎಸ್.ಆರ್.ಟಿ.ಸಿ. ಬಸ್‌ ಅನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಹೋಗಿ ನನ್ನ ತಮ್ಮ ಓಡಿಸುತ್ತಿದ್ದ  ಬೈಕಿಗೆ ಡಿಕ್ಕಿ ಹೊಡೆಸಿದ್ದರಿಂದ  ಬೈಕ್‌ ನಲ್ಲಿದ್ದ ನನ್ನ ತಮ್ಮನ ತಲೆಗೆ ಬಲವಾದ ಪೆಟ್ಟು ಬಿದ್ದು ರಕ್ತ ಸ್ರಾವವಾಗಿ ನನ್ನ ತಮ್ಮ ಮೃತನಾಗಿರುತ್ತಾನೆಂದು ಸ್ಥಳದಲ್ಲಿ ಅಪಘಾತವನ್ನು ಪ್ರತ್ಯಕ್ಷವಾಗಿ ನೋಡಿದ ಉಮೇಶ್‌ ಬಿನ್‌‌‌ ಲಕ್ಷ್ಮಯ್ಯ, ಆಪನಹಳ್ಳಿ ಗ್ರಾಮ ಎಂಬುವವರಿಂದ ತಿಳಿಯಿತು. ಸರ್ಕಾರಿ ಬಸ್‌ ಚಾಲಕನ ಹೆಸರು ವಿಳಾಸ ತಿಳಿಯಲಾಗಿ, ನಾಗರಾಜು ಬಿನ್ ಲೇಟ್‌ ಕರಿಯಪ್ಪ, 54 ವರ್ಷ, ಕೆ ಎಸ್ ಆರ್ ಟಿ ಸಿ ಬಸ್‌‌ ಚಾಲಕ, ಬ್ಯಾಜ್ಡ್‌ ನಂ  588, ಆರ್ಥಿಕೋಟೆ, ಹಿರಿಯೂರು ತಾಲ್ಲೂಕು, ಚಿತ್ರದುರ್ಗ ಜಿಲ್ಲೆ ಎಂತಾ ತಿಳಿದಿದ್ದು, ಅಪಘಾತ ಪಡಿಸಿದ ಬಸ್‌‌ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು  ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ 210/2017 ಕಲಂ 279,304(ಎ), ಐಪಿಸಿ ರೆ/ವಿ 134(ಎ&ಬಿ), 187 ಐಎಂವಿ ಆಕ್ಟ್

ದಿನಾಂಕ-20/11/2017 ರಂದು ರಾತ್ರಿ 9-15 ಗಂಟೆಗೆ ಪಿರ್ಯಾದಿಯಾದ ರಾಜಣ್ಣ ಬಿ ಬಿನ್ ಲೇಟ್ ಬೆಟ್ಟಸ್ವಾಮಯ್ಯ, 53 ವರ್ಷ, ವಕ್ಕಲಿಗರು, ಜಿರಾಯ್ತಿ, ಬೊಮ್ಮನಹಳ್ಳಿ ಹೆಬ್ಬೂರು, ತುಮಕೂರು ತಾಲ್ಲೂಕು & ಜಿಲ್ಲೆ ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂಧರೆ ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು, ದಿನಾಂಕ-19-11-2017 ರಂದು ನನ್ನ ತಮ್ಮನಾದ ಸುಮಾರು 50 ವರ್ಷ ವಯಸ್ಸಿನ ಶಿವಣ್ಣರವರು ನಮ್ಮ ಗ್ರಾಮದ ವಾಸಿ ಶ್ರೀಧರರವರ ಬಾಬ್ತು ಕೆಎ-06-ಇಎಫ್-3008 ಯಮಹಾ ದ್ವಿಚಕ್ರ ವಾಹನದಲ್ಲಿ ಸ್ವಂತ ಕೆಲಸ ನಿಮಿತ್ತ ತುಮಕೂರಿಗೆ ಹೋಗಿ ವಾಪಸ್ ನಮ್ಮ ಗ್ರಾಮಕ್ಕೆ ಬರಲೆಂದು ಸದರಿ ದ್ವಿಚಕ್ರವಾಹನದಲ್ಲಿ ತುಮಕೂರಿನಿಂದ ನಾಗವಲ್ಲಿ ಕಡೆಗೆ ಮಧ್ಯಾಹ್ನ ಸುಮಾರು 3-45 ಗಂಟೆ ಸಮಯದಲ್ಲಿ ಸದರಿ ದ್ವಿಚಕ್ರವಾಹನವನ್ನು ಚಾಲನೆ ಮಾಡಿಕೊಂಡು ತುಮಕೂರು-ಕುಣಿಗಲ್ ರಸ್ತೆಯ ಸೋಪನಹಳ್ಳಿ ಗೇಟ್ ಹತ್ತಿರ ಬರುತ್ತಿರುವಾಗ್ಗೆ ಎದುರು ಕಡೆಯಿಂದ ಅಂದರೆ ನಾಗವಲ್ಲಿ ಕಡೆಯಿಂದ ತುಮಕೂರಿನ ಕಡೆಗೆ ಬಂದ ಟಿಪ್ಪರ್ ಲಾರಿಯ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ನನ್ನ ತಮ್ಮನು ಬರುತ್ತಿದ್ದ ಕೆಎ-06-ಇಎಫ್-3008 ಯಮಹಾ ದ್ವಿಚಕ್ರ ವಾಹನದಕ್ಕೆ ಡಿಕ್ಕಿ ಹೊಡೆಸಿ ಸದರಿ ಟಿಪ್ಪರ್ ಲಾರಿಯ ಚಾಲಕ ತನ್ನ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಹೋದನು ಎಂದು ಅಲ್ಲೇ ಇದ್ದ ಪನ್ನಸಂದ್ರ ಗ್ರಾಮದ ನರಸೇಗೌಡ @ ಪಾಪಣ್ಣ ರವರು ಅಪಘಾತವಾದ ದ್ವಿಚಕ್ರವಾಹನದ ಸವಾರನನ್ನು ನೋಡಲಾಗಿ ಶಿವಣ್ಣನ ಬಲಗಾಲಿಗೆ ಮತ್ತು ಎದೆಯ ಭಾಗಕ್ಕೆ ತೀವ್ರತರವಾದ ಗಾಯವಾಗಿದ್ದು, ಮತ್ತು ತಲೆಗೆ ಹಾಗೂ ದೇಹದ ಇತರೆ ಭಾಗಗಳಿಗೆ ತರಚಿದ ಗಾಯಗಳಾಗಿರುತ್ತವೆ, ನಂತರ ಅಪಘಾತ ಪಡಿಸಿದ ಟಿಪ್ಪರ್ ಲಾರಿಯನ್ನು ನೋಡಲಾಗಿ ಕೆಎ-13-ಎ-3994 ನೇ ಆಗಿದ್ದು, ನಂತರ ನನ್ನ ತಮ್ಮನ ಮಗನಾದ ಹೇಮಂತರವರಿಗೆ ದೂರವಾಣಿ ಮೂಲಕ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡು ನರಸೇಗೌಡ, ಹೇಮಂತ್ ಮತ್ತು ಸಾರ್ವಜನಿಕರ ಸಹಾಯದಿಂದ ಗಾಯಾಳುವನ್ನು ಉಪಚರಿಸಿ ನಂತರ ಸ್ಥಳಕ್ಕೆ ಬಂದು 108 ನೇ ಅಂಬುಲೆನ್ಸ್ ವಾಹನದಲ್ಲಿ ತುಮಕೂರು ಜಲ್ಲಾ ಆಸ್ಪತ್ರೆಗೆ ಕರದುಕೊಂಡು ಹೋಗಿ ವೈಧ್ಯರಲ್ಲಿ ತೋರಿಸಲಾಗಿ ನಂತರ ನಾನು ಸಹ ಜಿಲ್ಲಾ ಆಸ್ಪತ್ರೆಗೆ ಬಂದು ನೋಡಲಾಗಿ ನಮ್ಮ ತಮ್ಮನಿಗೆ ಅಪಘಾತವಾಗಿರುವುದು ನಿಜವಾಗಿದ್ದು, ನಂತರ ಅಲ್ಲಿನ ವೈಧ್ಯರ ಸಲಹೆ ಮೇರೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಒಳರೋಗಿಯಾಗಿ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದು, ನಂತರ ಈ ದಿನ ದಿನಾಂಕ-20/11/2017 ರಂದು ರಾತ್ರಿ 7-00 ಗಂಟೆಗೆ ವೈಧ್ಯರು ಚಿಕಿತ್ಸೆ ಫಲಕಾರಿಯಾಗದೇ ನಮ್ಮ ತಮ್ಮ ಶಿವಣ್ಣರವರು ಮೃತಪಟ್ಟಿರುತ್ತಾರೆಂತಾ ತಿಳಿಸಿದರು, ಆದ್ದರಿಂದ ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಈ ಅಪಘಾತಕ್ಕೆ ಕಾರಣನಾದ ಕೆಎ-13-ಎ-3994 ಟಿಪ್ಪರ್ ಲಾರಿಯ ಚಾಲಕನ ಮೇಲೆ ಕಾನೂನು ರೀತ್ಯಾ ಮುಂದಿನ ಕ್ರಮ ಜರುಗಿಸಬೇಕೆಂದು ಕೇಳಿಕೊಳ್ಳುತ್ತೇನೆ, ನನ್ನ ತಮ್ಮ ಶಿವಣ್ಣರವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದರಿಂದ ಈ ದಿವಸ ತಡವಾಗಿ ಬಂದು ದೂರು ನೀಡುತ್ತಿದ್ದೇನೆ. ನನ್ನ ತಮ್ಮ ಶಿವಣ್ಣ ರವರ ಮೃತ ದೇಹವು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರದಲ್ಲಿರುತ್ತೆ ಎಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

 

 

 

 Tuesday, 21 November 2017

Crime Incident 21-11-17

ತಿಪಟೂರು ನಗರ ಪೊಲೀಸ್ ಠಾಣಾ ಮೊ .ನಂ- 177/2017 ಕಲಂ: 3,4,5 & 6 ಐ.ಟಿ.ಪಿ ಆಕ್ಟ್.

ದಿನಾಂಕ: 20/11/2017 ರಂದು ಸಂಜೆ 4-15 ಗಂಟೆಗೆ ಮಾನ್ಯ ಪಿ.ಐ ಸಾಹೇಬರವರು ನೀಡಿದ ಜ್ಞಾಪನದ ಅಂಶವೇನೆಂದರೆ, ದಿನಾಂಕ. 20-11-2017 ರಂದು ಮಧ್ಯಾಹ್ನ 1-30 ಗಂಟೆಗೆ ತಿಪಟೂರು ಟೌನ್‌ ಷಡಕ್ಷರಿ ಮಠ ಬಡಾವಣೆಯ ಕಂಚಾಗಟ್ಟ ರಸ್ತೆಯ 1 ನೇ ಕ್ರಾಸ್‌‌ನ ನಟರಾಜುರವರಿಗೆ ಸೇರಿದ ಮನೆಯನ್ನು ಬಾಡಿಗೆಗೆ ಪಡೆದು ವಾಸಿಸುತ್ತಿರುವ ಶ್ರೀಮತಿ ರೂಪಾ ಸಿ ಎಂ ಕೋಂ ಉಮೇಶ್‌‌ ರವರು ತನ್ನ ಮನೆಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆಂಬ ಬಗ್ಗೆ ಖಚಿತ ಮಾಹಿತಿ ಮೇರೆಗೆ ಘನ ನ್ಯಾಯಾಲಯದಿಂದ ಅನುಮತಿ ಪಡೆದು ಠಾಣೆಗೆ ಅರ್ಜಿ ವಿಚಾರಣೆಗೆಂದು ಬಂದಿದ್ದ ಪಂಚರಾದ ಮನು, ರವಿ ಮತ್ತು ಮಹಿಳಾ ಸಿಬ್ಬಂದಿಯೊಂದಿಗೆ ಮಧ್ಯಾಹ್ನ 2-15 ಗಂಟೆಗೆ ಮೇಲ್ಕಂಡ ಮನೆಗೆ ಹೋಗಿ ದಾಳಿ ನಡೆಸಿದಾಗ, ಒಬ್ಬ ಹೆಂಗಸು ಒಬ್ಬ ಗಂಡಸಿನೊಂದಿಗೆ ಆ ಮನೆಯ ಬೆಡ್‌ ರೂಮಿನಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದು.ಸದರಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದವಳನ್ನು ವಿಚಾರ ಮಾಡಿದಾಗ ಲಕ್ಷ್ಮೀ ಕೋಂ ಶಿವಾನಾಯ್ಕ @ ಕೃಷ್ಣ ಸುಮಾರು 35 ವರ್ಷ ನಾಯಕ ಜನಾಂಗ ಕೂಲಿಕೆಲಸ ಮತ್ತು ಗೃಹಿಣಿ ಗಿರಿಕ್ಷೇತ್ರ ನುಗ್ಗೆಹಳ್ಳಿ ಹೋಬಳಿ ಚನ್ನರಾಯಪಟ್ಟಣ ತಾ: ಹಾಸನ ಜಿಲ್ಲೆ. ಎಂದು ಈ ಮನೆಯಲ್ಲಿ ವಾಸವಾಗಿರುವ ರೂಪಾ ಸಿ ಎಂ ಇವರು ನನ್ನನ್ನು ಆಗಾಗ್ಗೆ ಬರಮಾಡಿಕೊಂಡು ಒಬ್ಬ ಗಂಡಸಿನೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೆ 300-00 ರೂ ಹಣವನ್ನು ಕೊಡುತ್ತಿದ್ದಳು. ಅದೇ ರೀತಿ ಈ ದಿನವು ಸಹ ನನ್ನನ್ನು ಕರೆಸಿಕೊಂಡು 300-00 ರೂ ಹಣ ಕೊಟ್ಟು, ರೇಣುಕಯ್ಯ ಎಂಬುವನೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಬಿಟ್ಟಿದ್ದಳು. ಎಂದು ನುಡಿದಿರುತ್ತಾಳೆ. ಮತ್ತು ಇದೇ ಮನೆಯ ಮತ್ತೊಂದು ಬೆಡ್‌ ರೂಮ್‌‌ನಲ್ಲಿ ಮತ್ತೊಬ್ಬ ಹೆಂಗಸಿದ್ದು, ಆಕೆಯ ಹೆಸರು ವಿಳಾಸವನ್ನು ತಿಳಿಯಲಾಗಿ ಸೌಮ್ಯ ಕೊಂ ರಾಜೇಶ್‌ ಸುಮಾರು 22 ವರ್ಷ ಭೋವಿ ಜನಾಂಗ ಗೃಹಿಣಿ ಮತ್ತು ಕೂಲಿ ಕೆಲಸ ವಾಸ:ದೋಬಿಗಾಟ್ 3 ನೇ ಕ್ರಾಸ್‌ ತುಮಕೂರು ಟೌನ್‌‌. ಎಂದು ತಿಳಿಸಿ ನನ್ನನ್ನು ಸಹ ರೂಪಾಳು ಆಗಾಗ್ಗೆ ತನ್ನ ಮನೆಗೆ ಕರೆಸಿಕೊಂಡು ಗಂಡಸನ್ನು ಕರೆಸಿ, ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೆ 300-00 ರೂ ಹಣ ಕೊಡುತ್ತಿದ್ದಳು. ಅದರಂತೆ ಈ ದಿನವು ಸಹ ಬಂದಿದ್ದು, ಗಂಡಸರನ್ನು ಕರೆಸುವುದಾಗಿ ಹೇಳಿ ತನ್ನ ಮನೆಯ ರೂಮ್‌‌ನಲ್ಲಿ ಕೂರಿಸಿದ್ದಳೆಂದು ತಿಳಿಸಿದ್ದು, ಪಂಚರ ಸಮಕ್ಷಮ ಮಧ್ಯಾಹ್ನ 2-45 ಗಂಟೆಯಿಂದ 3-45 ಗಂಟೆಯವರೆಗೆ ಪಂಚನಾಮೆ ಕ್ರಮವನ್ನು ಜರುಗಿಸಿ, ಪಂಚನಾಮೆಯ ಕಾಲದಲ್ಲಿ ಆರೋಪಿ ಸಿ.ಎಂ ರೂಪ ರವರ ಬಳಿ ಇದ್ದ ಒಂದು ಸ್ಯಾಮ್ ಸಂಗ್ ಮೊಬೈಲ್, ಹಾಗೂ 200/- ನಗದು ಮತ್ತು ನೊಂದ ಹೆಂಗಸು ಲಕ್ಷ್ಮೀ ಇವರ ಬಳಿ ಇದ್ದ 300/- ರೂ ನಗದನ್ನು ಹಾಗೂ ಲೈಂಗಿಕ ಕ್ರಿಯೆಗೆ ಉಪಯೋಗಸಲು ಇಟ್ಟುಕೊಂಡಿದ್ದ ಎರಡು ಕಾಂಡೋಮ್ ಗಳನ್ನು ಪಂಚನಾಮೆಯ ಮೂಲಕ ಅಮಾನತ್ತುಪಡಿಸಿಕೊಂಡು ಆರೋಪಿತರುಗಳಾದ ಶ್ರೀಮತಿ ಸಿ.ಎಂ ರೂಪ ಮತ್ತು ರೇಣುಕಯ್ಯ ಹಾಗೂ ನೊಂದ ಮಹಿಳೆಯರಾದ ಲಕ್ಷ್ಮೀ ಹಾಗೂ ಸೌಮ್ಯ ರವರುಗಳನ್ನು ವಶಕ್ಕೆ ಪಡೆದಿದ್ದು, ಸದರಿ ಮನೆಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ರೂಪಾ ಸಿ ಎಂ ಕೋಂ ಉಮೇಶ್‌‌ ಸುಮಾರು 32 ವರ್ಷ, ಕುರುಬ ಜನಾಂಗ, ಗೃಹಿಣಿ ಮತ್ತು ಬಟ್ಟೆ ಹೊಲಿಯುವ ಕೆಲಸ. ವಾಸ: ಕಂಚಾಗಟ್ಟ ರಸ್ತೆಯ 1ನೇ ಕ್ರಾಸ್‌‌ ಷಡಕ್ಷರಿ ಮಠ ಬಡಾವಣೆ ತಿಪಟೂರು ಟೌನ್‌‌ ಮತ್ತು ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ರೇಣುಕಯ್ಯ ಬಿನ್ ಚಿಕ್ಕಣ್ಣ ವಾಸುದೇವರಹಳ್ಳಿ ತಿಪಟೂರು ತಾ: ರವರುಗಳನ್ನು ಮ.ಎ.ಎಸ್.ಐ ಶಮೀನ್, ಪಿ.ಸಿ-968 ಮಂಜುನಾಥ್ ಹಾಗೂ ಪಿ.ಸಿ-157 ಮೋಹನ್ ಕುಮಾರ್ ಮತ್ತು ಮ,ಪಿ.ಸಿ-751 ಲತಾ ರವರ ಬೆಂಗಾವಲಿನಲ್ಲಿ ಠಾಣೆಗೆ ಕರೆತಂದಿದ್ದು, ಕೃತ್ಯಕ್ಕೆ ಸಂಬಂದಿಸಿದ 500/- ರೂ ನಗದು, ಒಂದು ಸ್ಯಾಮ್ ಸಂಗ್ ಮೊಬೈಲ್, ಹಾಗೂ ಎರಡು ಉಪಯೋಗಿಸದೇ ಇರುವ ಕಾಂಡೋಮ್ ಗಳೊಂದಿಗೆ ಹಾಜರುಪಡಿಸುತ್ತಿದ್ದು, ಮೇಲ್ಕಂಡವರುಗಳ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಜ್ಞಾಪನವನ್ನು ನೀಡಿದ್ದು, ಪ್ರಕರಣ ದಾಖಲಿಸಿರುತ್ತೆ.

ಮಿಡಿಗೇಶಿ ಪೊಲೀಸ್ ಠಾಣಾ ಮೊ.ಸಂ.103/2017, ಕಲಂ:498(ಎ) ರೆ/ವಿ 34 ಐಪಿಸಿ ಮತ್ತು ಕಲಂ: 4 ಡಿ.ಪಿ.ಆಕ್ಟ್.

ದಿನಾಂಕ:20/11/2017 ರಂದು ಸಂಜೆ 06:30 ಗಂಟೆಗೆ ಪಿರ್ಯಾದಿ ರೇಖಾ.ಟಿ. ಕೋಂ ವೆಂಕಟೇಶಪ್ಪ.ಟಿ.ಎನ್, 32 ವರ್ಷ, ಭೋವಿ ಜನಾಂಗ, ಗೃಹಿಣಿ, ತೊಂಡೋಟಿ ಗ್ರಾಮ, ಐ.ಡಿ.ಹಳ್ಳಿ ಹೋಬಳಿ, ಮಧುಗಿರಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನನಗೆ ಮಧುವೆಯಾಗಿ 01 ವರ್ಷ, 09 ತಿಂಗಳು ಆಗಿದ್ದು, 11 ತಿಂಗಳ ಹೆಣ್ಣು ಮಗು ಇರುತ್ತದೆ. ನಾನು ಗರ್ಭಿಣಿ ಸಂದರ್ಭದಿಂದ ಇಲ್ಲಿಯವರೆಗೆ ಈ ಮಗು ನನ್ನದಲ್ಲಾ ಗರ್ಭಪಾತ ಮಾಡಿಸು ಎಂತ ನನಗೆ, ನನ್ನ ಗಂಡ ವೆಂಕಟೇಶಪ್ಪ ನನಗೆ ದೈಹಿಕವಾಗಿ ಹಲ್ಲೆ ನಡೆಸುತ್ತಿದ್ದರು. ನನ್ನ ಅತ್ತೆ ಗಂಗಮ್ಮ ಮತ್ತು ನನ್ನ ಗಂಡ ಇಬ್ಬರು ಸೇರಿಕೊಂಡು ನನಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ನೀಡಿ ವರದಕ್ಷಿಣೆ ತರಬೇಕೆಂದು ಹಿಂಸೆ ನೀಡುತ್ತಿದ್ದರಿಂದ ನಾನು ದಿನಾಂಕ:28/07/2016 ರಂದು ಭದ್ರಾವತಿ ತಾಲ್ಲೂಕು ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ನಂತರ ದಿನಾಂಕ:14/11/2016 ರಂದು ನಮ್ಮ ಊರಿಗೆ ಬಂದು ಗ್ರಾಮದ ಹಿರಿಯರ ಸಮಕ್ಷಮದಲ್ಲಿ ರಾಜಿ ಪಂಚಾಯ್ತಿ ಮಾಡಿಸಿ ಇನ್ನೂ ಮುಂದೆ ಈ ರೀತಿ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳುತ್ತೇನೆಂದು ಲಿಖಿತ ಬರವಣಿಗೆ ನೀಡದ್ದರ ಮೇರೆಗೆ ನಾವುಗಳು ಹಿರಿಯರ ಪಂಚಾಯ್ತಿಗೆ ಮನ್ನಣಿ ನೀಡಿ ಪುನಃ ನನ್ನ ಗಂಡನ ಮನೆಗೆ ಬಂದು ಸಾಂಸಾರಿಕ ಜೀವನ ನಡೆಸುತ್ತಿದ್ದಾಗ, ಒಂದು ತಿಂಗಳು ಸುಮ್ಮನಿದ್ದು ನಂತರ ಹಳೆಯ ಚಾಳಿಯನ್ನು ಮುಂದುವರೆಸಿ, ವರದಕ್ಷಿಣೆ ಹಣ ತರದಿದ್ದರೇ, ಮಗುವನ್ನು ಹಾಗೂ ನಿನ್ನನ್ನು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚುತ್ತೇನೆಂತ ಸೀಮೆ ಎಣ್ಣೆಯನ್ನು ತಂದು ಮನೆಯಲ್ಲಿ ಇಟ್ಟಿದ್ದರು. ದಿನಾಂಕ:01/10/2017 ರಂದು ಬೆಳಿಗ್ಗೆ 09:00 ಗಂಟೆಯಲ್ಲಿ ನನ್ನ ಗಂಡ ಮತ್ತು ಅತ್ತೆ ಹಿಂಸೆ ನೀಡಿದ್ದರಿಂದ ಹಿಂಸೆ ತಾಳಲಾರದೆ ನನ್ನ ತಂದೆಗೆ ಪೋನ್ ಮುಖಾಂತರ ವಿಷಯ ತಿಳಿಸಿದ್ದು, ವಿಷಯ ತಿಳಿದು ಊರಿಗೆ ಬಂದ ನನ್ನ ತಂದೆ ನನ್ನನ್ನು ದಿನಾಂಕ:02/10/2017 ರಂದು ಮಧುಗಿರಿ ತಾಲ್ಲೂಕು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದರು. ಚಿಕಿತ್ಸೆ ಪಡೆದು ನಂತರ ನನ್ನ ತಂದೆಯ ಜೊತೆಯಲ್ಲಿ ನನ್ನ ತವರು ಮನೆಗೆ ಹೋಗಿರುತ್ತೇನೆ. ನನ್ನ 11 ತಿಂಗಳ ಮಗುವಿನ ಹಾರೈಕೆ ತುಂಬಾ ಅವಶ್ಯಕವಾಗಿರುವುದರಿಂದ ಹಾಗೂ ಮಗುವಿನ ಆರೋಗ್ಯ ಸರಿಯಿಲ್ಲದ ಕಾರಣ ಈ ದಿನ ತಡವಾಗಿ ಬಂದು ದೂರು ದಾಖಲಿಸಿರುತ್ತೇನೆಂತ ಇತ್ಯಾದಿಯಾಗಿ ನೀಡಿದ ಪಿರ್ಯಾದು ಅಂಶವಾಗಿರುತ್ತೆ.

ಮಧುಗಿರಿ ಪೊಲೀಸ್ ಠಾಣಾ CR :210/2017 u/s 279,337 IPC.

ದಿನಾಂಕ: 17-11-2017 ರಂದು ಸಂಜೆ ಸುಮಾರು 07.00 ಗಂಟೆ ಸಮಯದಲ್ಲಿ ಪಿರ್ಯಾದಿ ಸವಿತ ಕೋಂ ನರಸಿಂಹಮೂರ್ತಿ, 45 ವರ್ಷ, ಟಿ.ವಿ ವೆಂಕಟಸ್ವಾಮಿ ಬಡಾವಣೆ, ಮಧುಗಿರಿ ಟೌನ್ ರವರು ತನ್ನ ಗಂಡನೊಂದಿಗೆ ಮಧುಗಿರಿ ಟೌನ್ ಜೆ.ಎಸ್‌ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆಗೆಂದು ಬಂದಿದ್ದು, ಡಾಕ್ಟರ್ ಇಲ್ಲದ ಕಾರಣ ಕಾಯುತ್ತಿದ್ದು, ನಂತರ ಪಿರ್ಯಾದಿಯ ಯಜಮಾನರು ಮೂತ್ರ ವಿಜರ್ಸನೆಗೆಂದು ಹೈವೆ ರೋಡ್ ಅನ್ನು ದಾಟಲು ನಿಂತಿದ್ದಾಗ, ತಾಲ್ಲೂಕು ಆಫೀಸ್ ಕಡೆಯಿಂದ KA-06-ES-7225 ನೇ ದ್ವಿಚಕ್ರವಾಹನದ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು, ರಸ್ತೆ ಬದಿ ನಿಂತಿದ್ದ ನರಸಿಂಹಮೂರ್ತಿ ಜಿ.ಎಸ್‌ ರವರಿಗೆ ಡಿಕ್ಕಿ ಹೊಡೆದ ಪರಿಣಾಮ, ನರಸಿಂಹಮೂರ್ತಿ ಜಿ.ಎಸ್ ರವರಿಗೆ ತಲೆಯ ಹಿಂಬಾಗದಲ್ಲಿ ತೀವ್ರ ತರ ಗಾಯವಾಗಿದ್ದು, ಎಡಗಣ್ಣಿನ ಹುಬ್ಬಿನ ಮೇಲೆ ಬಲವಾದ ಪೆಟ್ಟು ಬಿದ್ದು, ರಕ್ತಗಾಯವಾಗಿರುತ್ತದೆ. ಜೆ.ಎಸ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು, ನಂತರ ಯಾವುದೋ ಕಾರಿನಲ್ಲಿ ತುಮಕೂರು ಸಿದ್ದಗಂಗಾ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಿರುತ್ತಾರೆ. ಪಿರ್ಯಾದಿಯು ಗಾಯಾಳುವನ್ನು ನೋಡಿಕೊಂಡು ಇದ್ದುದರಿಂದ ಈ ದಿನ ತಡವಾಗಿ ದೂರು ನೀಡುತ್ತಿದ್ದು, ಅಪಘಾತ ಮಾಡಿದ KA-06-ES-7225 ನೇ ದ್ವಿಚಕ್ರವಾಹನದ ಚಾಲಕ ಮತ್ತು ವಾಹನದ ಮೇಲೆ ಸೂಕ್ತ ಕಾನೂನು ರಿತ್ಯಾ ಕ್ರಮ ಜರುಗಿಸಬೇಕೆಂದು ತಮ್ಮಲ್ಲಿ ಕೋರುತ್ತೇನೆಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

ಬಡವನಹಳ್ಳಿ ಪೊಲೀಸ್ ಠಾಣಾ ಮೊ.ನಂ.99/2017 ಕಲಂ 457 380 ಐಪಿಸಿ.

ದಿನಾಂಕ:20/11/2017 ರಂದು ಮದ್ಯಾಹ್ನ 02-30 ಗಂಟೆಯಲ್ಲಿ ಫಿರ್ಯಾದಿ ಬಡವನಹಳ್ಳಿ ವಾಸಿ ಈರಪ್ಪ ರವರು ಠಾಣೆಗೆ ಹಾಜರಾಗಿ, ದಿನಾಂಕ:18/11/2017 ರಂದು ಬೆಳಗ್ಗೆ 10-00 ಗಂಟೆಯಲ್ಲಿ ನಮ್ಮ ಮನೆಗೆ ಬೀಗವನ್ನು ಹಾಕಿಕೊಂಡು ನಮ್ಮ ಸಂಬಂಧಿಕರ ತಿಥಿ ಕಾರ್ಯಕ್ಕೆಂದು ನಾನು ನನ್ನ ಹೆಂಡತಿ ದೊಡ್ಡಕ್ಕ ಮತ್ತು ಮಗ ನರಸಿಂಹಮೂರ್ತಿ ರವರೆಲ್ಲರೂ ಸಹ ಕೊರಟಗೆರೆ ತಾ. ದೊಡ್ಡಸಾಗ್ಗೆರೆ  ಗ್ರಾಮಕ್ಕೆ ಹೋಗಿದ್ದೆವು. ದಿನಾಂಕ:19/11/2017 ರಂದು ಸಂಜೆ 5-00 ಗಂಟೆ ಸಮಯಕ್ಕೆ ನಾವು ನಮ್ಮ ಮನೆಗೆ ಬಂದಾಗ ನಮ್ಮ ಮನೆಯಲ್ಲಿ ಕಳ್ಳತನವಾಗಿರುವುದು ಕಂಡು ಬಂತು ರಾತ್ರಿ ಯಾರೋ ಕಳ್ಳರು ಯಾವುದೊ ಆಯುಧದಿಂದ ನಮ್ಮ ಮನೆಯ ಬಾಗಿಲ ಚಿಲಕವನ್ನು ಮೀಟಿ ತೆಗೆದು ನಮ್ಮ ಮನೆಯೊಳಗೆ ನುಗ್ಗಿ ಮನೆಯಲ್ಲಿದ್ದ ಎರಡು ಬೀರುಗಳ ಬಾಗಿಲನ್ನು ಹೊಡೆದು ಬಟ್ಟೆಯನ್ನೆಲ್ಲಾ ಚಿಲ್ಲಾಡಿ ಬೀರುವಿನಲ್ಲಿದ್ದ ಸುಮಾರು 10 ಗ್ರಾಂ ತೂಕದ ಸುಮಾರು 15000/- ರೂ ಬೆಲೆ ಬಾಳುವ ಒಂದು ಜೊತೆ ವಾಲೆ ಮತ್ತು ಹ್ಯಾಂಗಿಗ್ಸ್‌. 2000/- ರೂ ನಗದು ಹಣ. ಮನೆಯಲ್ಲಿ ನಿಲ್ಲಿಸಿದ್ದ ಸುಮಾರು 30000/- ರೂ ಬೆಲೆ ಬಾಳುವ ಕೆಎ-05 ಜೆ.ಡಿ-8105 ನಂಬರಿನ ಡಿಸ್ಕವರಿ ಬೈಕ್‌ ಅನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನಮ್ಮ ಮನೆಯಲ್ಲಿ ಕಳ್ಳತನವಾಗಿರುವ ಎಲ್ಲಾ ಮಾಲಿನ ಒಟ್ಟು ಬೆಲೆ 47000/- ರೂಗಳಾಗಿರುತ್ತೆ. ನಮ್ಮ ಮನೆಯ ಪಕ್ಕದಲ್ಲಿ ನವೀನ್‌ ಕುಮಾರ ಮತ್ತು ಅವನ ತಾಯಿ ಪಾರ್ವತಮ್ಮ ರವರುಗಳು ವಾಸವಿದ್ದು ಪಾರ್ವತಮ್ಮ ಇತ್ತೀಚೆಗೆ ನಲ್ಲಿ ಹತ್ತಿರ ನೀರು ಹಿಡಿಯಲು ಹೋಗಿದ್ದಾಗ ಜಾರಿ ಬಿದ್ದು ಕೈ ಮುರಿದುಕೊಂಡಿದ್ದರಿಂದ ಅವರೂ ಸಹ ದಿನಾಂಕ:18/11/17 ರಂದು ಮೆಡಿಕಲ್‌ ಚೆಕ್‌ ಅಪ್‌ ಗೆ ತುಮಕೂರಿಗೆ ತಾಯಿ ಮಗ ಹೋಗಿದ್ದರು ಅವರ ಮನೆಯ ಬಾಗಿಲ ಬೀಗವನ್ನೂ ಸಹ ಮರಿದು ಕಳ್ಳತನ ಮಾಡಿರುವಂತೆ ಕಂಡಿದ್ದರಿಂದ ಅವರಿಗೆ ಫೋನ್‌ ಮೂಲಕ ವಿಚಾರ ತಿಳಿಸಲಾಗಿ ಅವರು ರಾತ್ರಿ ಬಂದು ನೋಡಿದರು ಅವರ ಮನೆಯಲ್ಲಿಯೂ ಸಹ ನಮ್ಮ ಮನೆಯಲ್ಲಿ ಕಳ್ಳತನ ಮಾಡಿದ್ದಂತೆ ಯಾರೋ ಕಳ್ಳರು ಯಾವುದೋ ಆಯುಧದಿಂದ ಮನೆಯ ಚಿಲಕವನ್ನು ಮೀಟಿ ತೆಗೆದು ಅವರ ಮನೆಯೊಳಗೆ ನುಗ್ಗಿ ಮನೆಯಲ್ಲಿದ್ದ ಬೀರುವಿನ ಬಾಗಿಲನ್ನು ಹೊಡೆದು ಬಟ್ಟೆಯನ್ನೆಲ್ಲಾ ಚಿಲ್ಲಾಡಿ ಬೀರುವಿನಲ್ಲಿದ್ದ ಸುಮಾರು 15000/- ರೂ ಬೆಲೆ ಬಾಳುವ ಒಂದು ಜೊತೆ ವಾಲೆ. ಸುಮಾರು 2000/- ರೂ ಬೆಲೆ ಬಾಳುವ ಒಂದು ಜೊತೆ ದೀಪದ ಬೆಳ್ಳಿ ಬಟ್ಟಲು. ಸುಮಾರು 1000/- ರೂ ಬೆಲೆ ಬಾಳುವ ಒಂದು ಜೊತೆ ಅರಿಶಿನ ಕುಂಕುಮದ ಬಟ್ಟಲು. ಸುಮಾರು 2000/- ರೂ ಬೆಲೆ ಬಾಳುವ ಎರಡು ರೇಷ್ಮೆ ಸೀರೆಗಳು. ಮತ್ತು ಅಡುಗೆ ಮನೆಯ ಬಾಕ್ಸ್ ನಲ್ಲಿದ್ದ 5000/- ನಗದು ಹಣ. ಮನೆಯಲ್ಲಿದ್ದ ಸುಮಾರು 3000/- ರೂ ಬೆಲೆ ಬಾಳುವ ಮೂರು ಡಕ್‌ಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದೂ ಮತ್ತು ಅವರ  ಮನೆಯಲ್ಲಿ ಕಳ್ಳತನವಾಗಿರುವ ಎಲ್ಲಾ ಮಾಲಿನ ಒಟ್ಟು ಬೆಲೆ 28000/- ರೂಗಳಾಗಿರುತ್ತೆಂದು ನವೀನ್‌ ಕುಮಾರ್‌ ತಿಳಿಸಿದರು. ನಮ್ಮ ಮತ್ತು ನವೀನ್‌ ಕುಮಾರ್‌ ಮನೆಯಲ್ಲಿ ಒಟ್ಟು 75000/- ರೂ ಬೆಲೆ ಬಾಳುವ ವಡವೆ, ವಸ್ತ್ರ ಮತ್ತು ವಾಹನವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ರಾತ್ರಿ ಅವೇಳೆಯಾದ್ದರಿಂದ ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದೇವೆ. ನಮ್ಮ ಮನೆಯಲ್ಲಿ ಕಳ್ಳತನ ಮಾಡಿರುವ ಕಳ್ಳರನ್ನು ಮತ್ತು ಮಾಲುಗಳನ್ನು ಪತ್ತೆ ಮಾಡಿಕೊಡಬೇಕೆಂದು ನೀಡಿದ ಲಿಖಿತ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ 210/2017 ಕಲಂ 279,304(ಎ), ಐಪಿಸಿ ರೆ/ವಿ 134(ಎ&ಬಿ), 187 ಐಎಂವಿ ಆಕ್ಟ್

ದಿನಾಂಕ-20/11/2017 ರಂದು ರಾತ್ರಿ 9-15 ಗಂಟೆಗೆ ಪಿರ್ಯಾದಿಯಾದ ರಾಜಣ್ಣ ಬಿ ಬಿನ್ ಲೇಟ್ ಬೆಟ್ಟಸ್ವಾಮಯ್ಯ, 53 ವರ್ಷ, ವಕ್ಕಲಿಗರು, ಜಿರಾಯ್ತಿ, ಬೊಮ್ಮನಹಳ್ಳಿ ಹೆಬ್ಬೂರು, ತುಮಕೂರು ತಾಲ್ಲೂಕು & ಜಿಲ್ಲೆ ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂಧರೆ ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು, ದಿನಾಂಕ-19-11-2017 ರಂದು ನನ್ನ ತಮ್ಮನಾದ ಸುಮಾರು 50 ವರ್ಷ ವಯಸ್ಸಿನ ಶಿವಣ್ಣರವರು ನಮ್ಮ ಗ್ರಾಮದ ವಾಸಿ ಶ್ರೀಧರರವರ ಬಾಬ್ತು ಕೆಎ-06-ಇಎಫ್-3008 ಯಮಹಾ ದ್ವಿಚಕ್ರ ವಾಹನದಲ್ಲಿ ಸ್ವಂತ ಕೆಲಸ ನಿಮಿತ್ತ ತುಮಕೂರಿಗೆ ಹೋಗಿ ವಾಪಸ್ ನಮ್ಮ ಗ್ರಾಮಕ್ಕೆ ಬರಲೆಂದು ಸದರಿ ದ್ವಿಚಕ್ರವಾಹನದಲ್ಲಿ ತುಮಕೂರಿನಿಂದ ನಾಗವಲ್ಲಿ ಕಡೆಗೆ ಮಧ್ಯಾಹ್ನ ಸುಮಾರು 3-45 ಗಂಟೆ ಸಮಯದಲ್ಲಿ ಸದರಿ ದ್ವಿಚಕ್ರವಾಹನವನ್ನು ಚಾಲನೆ ಮಾಡಿಕೊಂಡು ತುಮಕೂರು-ಕುಣಿಗಲ್ ರಸ್ತೆಯ ಸೋಪನಹಳ್ಳಿ ಗೇಟ್ ಹತ್ತಿರ ಬರುತ್ತಿರುವಾಗ್ಗೆ ಎದುರು ಕಡೆಯಿಂದ ಅಂದರೆ ನಾಗವಲ್ಲಿ ಕಡೆಯಿಂದ ತುಮಕೂರಿನ ಕಡೆಗೆ ಬಂದ ಟಿಪ್ಪರ್ ಲಾರಿಯ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ನನ್ನ ತಮ್ಮನು ಬರುತ್ತಿದ್ದ ಕೆಎ-06-ಇಎಫ್-3008 ಯಮಹಾ ದ್ವಿಚಕ್ರ ವಾಹನದಕ್ಕೆ ಡಿಕ್ಕಿ ಹೊಡೆಸಿ ಸದರಿ ಟಿಪ್ಪರ್ ಲಾರಿಯ ಚಾಲಕ ತನ್ನ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಹೋದನು ಎಂದು ಅಲ್ಲೇ ಇದ್ದ ಪನ್ನಸಂದ್ರ ಗ್ರಾಮದ ನರಸೇಗೌಡ @ ಪಾಪಣ್ಣ ರವರು ಅಪಘಾತವಾದ ದ್ವಿಚಕ್ರವಾಹನದ ಸವಾರನನ್ನು ನೋಡಲಾಗಿ ಶಿವಣ್ಣನ ಬಲಗಾಲಿಗೆ ಮತ್ತು ಎದೆಯ ಭಾಗಕ್ಕೆ ತೀವ್ರತರವಾದ ಗಾಯವಾಗಿದ್ದು, ಮತ್ತು ತಲೆಗೆ ಹಾಗೂ ದೇಹದ ಇತರೆ ಭಾಗಗಳಿಗೆ ತರಚಿದ ಗಾಯಗಳಾಗಿರುತ್ತವೆ, ನಂತರ ಅಪಘಾತ ಪಡಿಸಿದ ಟಿಪ್ಪರ್ ಲಾರಿಯನ್ನು ನೋಡಲಾಗಿ ಕೆಎ-13-ಎ-3994 ನೇ ಆಗಿದ್ದು, ನಂತರ ನನ್ನ ತಮ್ಮನ ಮಗನಾದ ಹೇಮಂತರವರಿಗೆ ದೂರವಾಣಿ ಮೂಲಕ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡು ನರಸೇಗೌಡ, ಹೇಮಂತ್ ಮತ್ತು ಸಾರ್ವಜನಿಕರ ಸಹಾಯದಿಂದ ಗಾಯಾಳುವನ್ನು ಉಪಚರಿಸಿ ನಂತರ ಸ್ಥಳಕ್ಕೆ ಬಂದು 108 ನೇ ಅಂಬುಲೆನ್ಸ್ ವಾಹನದಲ್ಲಿ ತುಮಕೂರು ಜಲ್ಲಾ ಆಸ್ಪತ್ರೆಗೆ ಕರದುಕೊಂಡು ಹೋಗಿ ವೈಧ್ಯರಲ್ಲಿ ತೋರಿಸಲಾಗಿ ನಂತರ ನಾನು ಸಹ ಜಿಲ್ಲಾ ಆಸ್ಪತ್ರೆಗೆ ಬಂದು ನೋಡಲಾಗಿ ನಮ್ಮ ತಮ್ಮನಿಗೆ ಅಪಘಾತವಾಗಿರುವುದು ನಿಜವಾಗಿದ್ದು, ನಂತರ ಅಲ್ಲಿನ ವೈಧ್ಯರ ಸಲಹೆ ಮೇರೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಒಳರೋಗಿಯಾಗಿ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದು, ನಂತರ ಈ ದಿನ ದಿನಾಂಕ-20/11/2017 ರಂದು ರಾತ್ರಿ 7-00 ಗಂಟೆಗೆ ವೈಧ್ಯರು ಚಿಕಿತ್ಸೆ ಫಲಕಾರಿಯಾಗದೇ ನಮ್ಮ ತಮ್ಮ ಶಿವಣ್ಣರವರು ಮೃತಪಟ್ಟಿರುತ್ತಾರೆಂತಾ ತಿಳಿಸಿದರು, ಆದ್ದರಿಂದ ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಈ ಅಪಘಾತಕ್ಕೆ ಕಾರಣನಾದ ಕೆಎ-13-ಎ-3994 ಟಿಪ್ಪರ್ ಲಾರಿಯ ಚಾಲಕನ ಮೇಲೆ ಕಾನೂನು ರೀತ್ಯಾ ಮುಂದಿನ ಕ್ರಮ ಜರುಗಿಸಬೇಕೆಂದು ಕೇಳಿಕೊಳ್ಳುತ್ತೇನೆ, ನನ್ನ ತಮ್ಮ ಶಿವಣ್ಣರವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದರಿಂದ ಈ ದಿವಸ ತಡವಾಗಿ ಬಂದು ದೂರು ನೀಡುತ್ತಿದ್ದೇನೆ. ನನ್ನ ತಮ್ಮ ಶಿವಣ್ಣ ರವರ ಮೃತ ದೇಹವು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರದಲ್ಲಿರುತ್ತೆ ಎಂದು ನೀಡಿದ ದೂರನ್ನು ಪಡೆದು ಠಾಣಾ ಮೊ ನಂ 210/2017 ಕಲಂ 279,304(ಎ), ಐಪಿಸಿ ರೆ/ವಿ 134(ಎ&ಬಿ), 187 ಐಎಂವಿ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿದೆ.

ಪಟ್ಟನಾಯಕನಹಳ್ಳಿ  ಪೊಲೀಸ್ ಠಾಣಾ  ಯು ಡಿ ಆರ್ ನಂ 22/17 ಕಲಂ  174 ಸಿ ಆರ್ ಪಿ ಸಿ

ದಿನಾಂಕ:20-11-17 ರಂದು ಸಂಜೆ 03:15 ಗಂಟೆಗೆ ಪಿರ್ಯಾದಿ ರಂಗನಾಥ ರವರು ಠಾಣೆಗೆ ಹಾಜರಾಗಿ  ನೀಡಿದ  ಲಿಖಿತ ದೂರಿನ ಸಾರಾಂಶವೇನೆಂದರೆ, ಪಿರ್ಯಾದಿ ರವರು  ತನ್ನ  ತಾಯಿ ಲಕ್ಷ್ಮಮ್ಮ,  ಹೆಂಡತಿ ರಂಗಮ್ಮ ಮತ್ತು 3 ಜನ ಮಕ್ಕಳೊಂದಿಗೆ ಸಂಸಾರದಲ್ಲಿದ್ದು, ಜೀವನೋಪಯಕ್ಕಾಗು ಕೂಲಿಕೆಲಸ ಮಾಡುತ್ತಿದ್ದು,  ಪಿರ್ಯಾದಿ ಮಗ ಶಿವಣ್ಣ ಬಿನ್ ರಂಗನಾಥಪ್ಪ, ಸುಮಾರು 17 ವರ್ಷ, ರವರು ವಿದ್ಯಾಭ್ಯಾಸವನ್ನು ನಿಲ್ಲಿಸಿ  ಸರ್ವೆನಂ 123 ರಲ್ಲಿರುವ 1 ½ ಕರೆ ಜಮೀನಿನಲ್ಲಿ  ವ್ಯವಸಾಯ ಮಾಡುತ್ತಿದ್ದು  ಪ್ರತಿದಿನದಂತೆ ದನಗಳಿಗೆ ನೀರು ಕುಡಿಸಿ ಮೈತೊಳೆದುಕೊಂಡು  ಬರುತ್ತಿದ್ದು  ಅದೇ ರೀತಿ ಈ ದಿನ ದಿನಾಂಕ 20-11-17 ರಂದು ಮದ್ಯಾಹ್ನ 02:45 ಗಂಟೆಗೆ  ದನಗಳಿಗೆ  ನೀರು ಕುಡಿಸಲು  ಹೆಂದೊರೆ ಕೆರೆಗೆ   ಹೋಗಿದ್ದು  ದನಗಳು ಬೆದರಿ  ನೀರಿನಲ್ಲಿ ಮುಂದಕ್ಕೆ ಎಳೆದುಕೊಂಡು  ಹೋಗಿ ಈಜು  ಬಾರದೆ  ನೀರಿನಲ್ಲಿ ಮುಳುಗಿ   ಮೃತಪಟ್ಟಿರುತ್ತಾನೆ  ಇತ್ಯಾದಿಯಾಗಿ ನೀಡಿದ  ಲಿಖಿತ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಹೊಸಬಡಾವಣೆ ಪೊಲೀಸ್ ಠಾಣಾ CR 148/2017 U/S 448, 504, 506B R/W 34 IPC.

ದಿ: 20-11-2017 ರಂದು  ಸಂಜೆ 5-30 ಗಂಟೆಗೆ ಪಿರ್ಯಾದಿ ದೇವರಾಜು ಬಿ.ಎಲ್. ಬಿನ್ ನರಸಿಂಹಯ್ಯ (53) ವಿಬಿಡಿ ವೈನ್ಸ್ ನಲ್ಲಿ ಕೆಲಸ,. ವಾಸ ಎಸ್.ಎಸ್. ಪುರಂ, ತುಮಕೂರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ಪಿರ್ಯಾದಿಯು ಈ ದಿವಸ ಮಧ್ಯಾಹ್ನ 2-00 ಗಂಟೆಯಲ್ಲಿ ಕೆಲಸ ನಿರ್ವಹಿಸುವಾಗ್ಗೆ ಅಂಗಡಿಯೊಳಗೆ ಅತಿಕ್ರಮ ಪ್ರವೇಶ ಮಾಡಿದ  ಜಯನಗರ ವಾಸಿ ವಿನಯ್ ಹಾಗೂ ಕುವೆಂಪುನಗರ ವಾಸಿಯಾದ ಕಾರ್ತಿಕ್ ಎಂಬುವರುಗಳು ಕುಡಿಯಲು ಎಣ್ಣೆ ಕೊಡು ಎಂದು ಕೇಳಿದರೆ ಹಣ ಕೇಳುತ್ತೀಯಾ ಬೋಳಿಮಗನೇ ನಾವು ಈ ಏರಿಯಾ ಲೀಡರ್‌ ಗಳು ನಾವು ಯಾರು ಎಂದು ತೋರಿಸಬೇಕಾ ನಿನಗೆ ಎಂದು ಅಲ್ಲಿಯೇ ಇದ್ದ ಬಿಯರ್ ಬಾಟಲ್‌ ನ್ನು ಹೊಡೆದು ಪಿರ್ಯಾದಿಗೆ  ಬೆದರಿಕೆ ಹಾಕಿದ್ದಲ್ಲದೆ  ನಾವುಗಳು ಬಂದಾಗಲೆಲ್ಲಾ ಹೀಗೇ ಇರಬೇಕು ಎಂದು ಬೆದರಿಕೆ ಹಾಕಿ ಹೋಗಿದ್ದು ಈ ಬಗ್ಗೆ ಕಾನೂನು ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ನೀಡಿದ ದೂರನ್ನು ಸ್ವೀಕರಿಸಿ ಠಾಣಾ ಮೊ.ನಂ 148/2017 ಕಲಂ 448, 506, 506(ಬಿ) R/W 34 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿದೆ.


Page 1 of 3
Start
Prev
1

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 44 guests online
Content View Hits : 322811