lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ : 20-07-18 ಸ್ಮಾರ್ಟ್ ಸಿಟಿ ಅಧಿಕಾರಿಗಳೆಂದು ವಂಚಿಸಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 20-07-2018       ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 09-07-2018 ಕೊಲೆ ಆರೋಪಿಗಳ ಬಂಧನ ******* ದಿನಾಂಕ 04.07.2018 ರಂದು... >>   ಪತ್ರಿಕಾ ಪ್ರಕಟಣೆ ದಿನಾಂಕ : 07-07-2018. ಪೂರ್ವಾನುಮತಿ ಪಡೆಯದೇ ಹೆದ್ದಾರಿ ತಡೆ ನಡೆಸಿ,... >> ದಿನಾಂಕ.03.07.2018. ಪತ್ರಿಕಾ ಪ್ರಕಟಣೆ ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ 11 ಲಕ್ಷ 70 ಸಾವಿರ ಬೆಲೆ ಬಾಳುವ ಚಿನ್ನ-ಬೆಳ್ಳಿ  ಹಾಗೂ ಮೊಬೈಲ್‌‌‌... >>   ಪತ್ರಿಕಾ ಪ್ರಕಟಣೆ. ತುಮಕೂರು ಜಿಲ್ಲಾ ಪೊಲೀಸ್, ತುಮಕೂರು. ಕೋರಾ ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 27.06.2018 ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಸಾರ್ವಜನಿಕರ... >> ಪತ್ರಿಕಾ ಪ್ರಕಟಣೆ ದಿನಾಂಕ:- 23/06/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಖನ್ನ... >> ಪತ್ರಿಕಾ ಪ್ರಕಟಣೆ ದಿನಾಂಕ: 21-06-2018. ಸುಲಿಗೆಕೋರರ ಬಂಧನ: ದಿನಾಂಕ:18-06-2018 ರಂದು... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< October 2017 >
Mo Tu We Th Fr Sa Su
            1
2 3 4 5 6 7 8
9 10 11 12 13 14 15
16 17 18 19 20 21 22
23 24 25 26 27 28 29
30 31          
October 2017

Tuesday, 31 October 2017

Crime Incidents 31-10-17

ಅಮೃತೂರು ಪೊಲೀಸ್ ಠಾಣಾ ಮೊನಂ 201/2017 ಕಲಂ  279, 337 IPC R/W 134(ಎ &ಬಿ ), 187 ಐ.ಎಂ.ವಿ ಆಕ್ಟ್ .

ದಿನಾಂಕ: 30-10-2017 ರಂದು ರಾತ್ರಿ 9-30 ಗಂಟೆಗೆ ಪಿರ್ಯಾದಿ ಕುಣಿಗಲ್ ತಾಲೋಕ್, ಅಮೃತೂರು ಹೋಬಳಿ, ಬಿಸಿನೆಲೆ ಗ್ರಾಮದ ಹುಚ್ಚೇಗೌಡ ಬಿನ್ ಲೇಟ್ ಕೃಷ್ಣಪ್ಪ, 33 ವರ್ಷ, ಒಕ್ಕಲಿಗರು, ವ್ಯವಸಾಯ ಕಸುಬು ರವರು ನೀಡಿದ ಲಿಖಿತ ದೂರಿನ ಅಂಶವೇನೆಂದರೆ ದಿನಾಂಕ: 29-10-2017 ರಂದು ಮದ್ಯಾಹ್ನ ಸುಮಾರು 12-50 ಗಂಟೆಯಲ್ಲಿ ನಾನು ನಮ್ಮ ಮನೆಯ ಬಳಿ ಇದ್ದಾಗ ನಮ್ಮ ಗ್ರಾಮದ ಕರಿಯಪ್ಪರವರ ಮಗ ನಾಗರಾಜುರವರು ನನಗೆ ಪೋನ್ ಮಾಡಿ ನಿಮ್ಮ ಅತ್ತಿಗೆ ಗಿರಿಜ ರವರಿಗೆ ನಮ್ಮ ಗ್ರಾಮದ ಬಸ್ ನಿಲ್ದಾಣದ ಬಳಿ ರಸ್ತೆಯಲ್ಲಿ ಟ್ರಾಕ್ಟರ್ ನಿಂದ ಅಪಘಾತವಾಗಿದೆ ನೀನು ಬೇಗ ಬಾ ಎಂದು ತಿಳಿಸಿದರು. ಕೂಡಲೇ ನಾನು ಬಂದು ನೋಡಲಾಗಿ ನಮ್ಮ ಅತ್ತಿಗೆ ಗಿರಿಜ ರವರಿಗೆ ಅಪಘಾತವಾಗಿದ್ದು ನಿಜವಾಗಿತ್ತು. ಜನರು ನಮ್ಮ ಅತ್ತಿಗೆಯವರಿಗೆ ಶುಶ್ರೂಷೆ ಮಾಡುತ್ತಿದ್ದರು. ಅಪಘಾತದ ಬಗ್ಗೆ ವಿಚಾರ ಮಾಡಲಾಗಿ ನಮ್ಮ ಅತ್ತಿಗೆ ಗಿರಿಜಾ ರವರು ಮಾರ್ಕೋನಹಳ್ಳಿ ಜಲಾಶಯದ ಬಳಿ ಇರುವ ನಮ್ಮ ಜಮೀನಿನಿಂದ ಹುಲ್ಲನ್ನು ಹೊತ್ತಿಕೊಂಡು ಮಾರ್ಕೋನಹಳ್ಳಿ ಕಡೆಯಿಂದ ನಮ್ಮ ಗ್ರಾಮದ ಬಸ್ ನಿಲ್ದಾಣದ ಬಳಿ ಅರಳಿ ಮರದ ಹತ್ತಿರ ರಸ್ತೆಯ ಎಡಭಾಗದಲ್ಲಿ ನಮ್ಮ ಗ್ರಾಮದ ಕಡೆಗೆ ಬರುತ್ತಿರುವಾಗ್ಗೆ ಮದ್ಯಾಹ್ನ ಸುಮಾರು 12-45 ಗಂಟೆಯಲ್ಲಿ ಕಾಡಶೆಟ್ಟಿಹಳ್ಳಿ ಕಡೆಯಿಂದ ಬಂದ ಟ್ರಾಕ್ಟರ್ ಚಾಲಕ ಅತಿವೇಗವಾಗಿ ಬಂದು ನಮ್ಮ ಅತ್ತಿಗೆಗೆ ಹಿಂದಿನಿಂದ ಡಿಕ್ಕಿ ಹೊಡೆಸಿ ಟ್ರಾಕ್ಟರ್ ಅನ್ನು ನಿಲ್ಲಿಸಿ ಓಡಿ ಹೋಗಿರುತ್ತಾನೆಂದು ತಿಳಿಸಿದರು. ಈ ಅಪಘಾತದಿಂದ ನಮ್ಮ ಅತ್ತಿಗೆ ಗಿರಿಜಾರವರಿಗೆ ಬಲಗಾಲಿನ ಮಂಡಿ, ಪಾದ, ಕಣಕಾಲಿಗೆ, ತೊಡೆಗೆ , ಎಡಗಾಲಿನ ಬೆರಳುಗಳಿಗೆ ಪೆಟ್ಟು ಬಿದ್ದು ರಕ್ತಗಾಯಗಳಾಗಿರುತ್ತವೆ. ಭುಜಕ್ಕೆ, ಬಲ ಕಪಾಲಕ್ಕೆ ಪೆಟ್ಟಾಗಿರುತ್ತೆ. ನಂತರ ಅಲ್ಲೇ ರಸ್ತೆಯಲ್ಲಿ ನಿಂತಿದ್ದ ನಮ್ಮ ಅತ್ತಿಗೆಗೆ ಅಪಘಾತಪಡಿಸಿರುವ ಟ್ರಾಕ್ಟರ್ ನಂಬರ್ ನೋಡಲಾಗಿ ಕೆಎ-06, ಟಿಸಿ-0873 ಮತ್ತು ಟ್ರೈಲರ್ ನಂಬರ್ ಕೆಎ-06, ಟಿಸಿ-0874 ಆಗಿತ್ತು. ನಾನು ಕೂಡಲೇ 108 ಅಂಬ್ಯುಲೆನ್ಸ್ ಗೆ ಪೋನ್ ಮಾಡಿ ಕರೆಸಿಕೊಂಡು ನಮ್ಮ ಅತ್ತಿಗೆಯವರನ್ನು ನಾಗಮಂಗಲ ತಾಲೋಕ್, ಬೆಳ್ಳೂರು ಕ್ರಾಸ್, ಬಿ.ಜಿ ನಗರದಲ್ಲಿರುವ ಎ.ಸಿ ಗಿರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿರುತ್ತೇವೆ. ನಮ್ಮ ಅತ್ತಿಗೆಯವರಿಗೆ ಹೆಚ್ಚಿನ ಪೆಟ್ಟುಗಳು ಬಿದ್ದಿದ್ದರಿಂದ ಅವರಿಗೆ ಚಿಕಿತ್ಸೆ ಕೊಡಿಸಿ ಈ ದಿನ ತಡವಾಗಿ ಬಂದು ದೂರು ನೀಡಿರುತ್ತೇನೆ. ನಮ್ಮ ಅತ್ತಿಗೆಯವರಿಗೆ ಅಪಘಾತಪಡಿಸಿ ಟ್ರಾಕ್ಟರ್ ನಿಲ್ಲಿಸಿ ಓಡಿ ಹೋಗಿರುವ ಟ್ರಾಕ್ಟರ್ ಚಾಲಕನ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕೋರುತ್ತೇನೆ ಎಂದು ಇದ್ದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿರುತ್ತೆ.

ಹುಲಿಯೂರುದುರ್ಗ ಪೊಲೀಸ್‌ ಠಾಣಾ; ಮೊ ನಂ: 214/2017   ಕಲಂ:  279, 337  ಐಪಿಸಿ

ದಿನಾಂಕ 30/10/2017 ರಂದು ಮದ್ಯಾಹ್ನ 03-00 ಗಂಟೆಗೆ ಈ ಕೇಸಿನ ಪಿರ್ಯಾದಿ ಹನುಮಂತೇಗೌಡ ಬಿನ್ ಲೇಟ್ ಬೆಟ್ಟೇಗೌಡ ಸಿಂಗೋನಹಳ್ಳಿ ಕೊತ್ತಗೆರೆ ಹೋಬಳಿ ಕುಣಿಗಲ್ ತಾಲ್ಲೋಕ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ನಾನು ದಿನಾಂಕ 27/10/2017 ರಂದು ನನ್ನ ದೊಡ್ಡಮ್ಮ ರವರ ಮನೆಯಾದ ಹೊಂಬೇಗೌಡನಪಾಳ್ಯ ಗ್ರಾಮಕ್ಕೆ ಬಂದಿದ್ದು ನಮ್ಮ ದೊಡ್ಡಮ್ಮ ಲಕ್ಷಮ್ಮ ರವರ ಜೊತೆಯಲ್ಲಿ ಜಮೀನಿನ ವಿಚಾರವನ್ನು ಮಾತನಾಡಿಕೊಂಡು ಸಂಜೆ 06-00 ಗಂಟೆ ಸಮಯದಲ್ಲಿ ನಮ್ಮ ದೊಡ್ಡಮ್ಮರವರ ಮನೆಯ ಮುಂದೆ ಅಮೃತೂರು ಹುಲಿಯೂರು ದುರ್ಗ ರಸ್ತೆಯಲ್ಲಿ ಪಕ್ಕದ ಮನೆಯವರಾದ ಶಂಕರಪ್ಪರವರ ಜೊತೆಯಲ್ಲಿ ಮಾತನಾಡುತ್ತಿರುವಾಗ ಅಮೃತೂರು ಕಡೆಯಿಂದ ಬಂದ ದ್ವಿಚಕ್ರ ವಾಹನದ ಸವಾರನು ತನ್ನ ದ್ವಿಚಕ್ರವಾಹವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ನಮ್ಮ ದೊಡ್ಡಮ್ಮ ಲಕ್ಷ್ಮಮ್ಮರವರಿಗೆ ಡಿಕ್ಕಿ ಹೊಡಿಸಿ ಅಪಘಾತ ಪಡಿಸಿದ್ದು  ಪರಿಣಾಮ ನಮ್ಮ ದೊಡ್ಡಮ್ಮರವರಿಗೆ ಎಡಮೊಣಕಾಲಿನ ಕೆಳಗೆ ಮತ್ತು   ಬಲ ಮೊಣಕೈ  ರಕ್ತಗಾಯವಾಗಿರುತ್ತೆ  ಬಲ ಪಕ್ಕೆಗೆ ಪೆಟ್ಟು ಬಿದ್ದಿರುತ್ತೆ ಅಪಘಾತ ಪಡಿಸಿದ ದ್ವಿಚಕ್ರವಾಹನ ನಂಬರ ನೋಡಲಾಗಿ  ಕೆ.ಎ-05 ಜೆ.ಜೆ -4754 ನೇ ದ್ವಿಚಕ್ರವಾಹನ ವಾಗಿರುತ್ತೆ. ತಕ್ಷಣ ತಮ್ಮ ದೊಡ್ಡಮ್ಮರವರನ್ನು ನಾನು ಮತ್ತು ನಾಗರಾಜು ರವರು  ಸೇರಿ ಅಂಬುಲೇನ್ಸ್ ನಲ್ಲಿ ಕುಣಿಗಲ್ ಎಂ.ಎಂ ಆಸ್ಪತ್ರೆಗೆ ಕರೆದು ಕೊಂಡು ಹೋಗಿ  ಚಿಕಿತ್ಸೆ ಕೊಡಿಸಿ ನಂತರ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ಕೆಂಪೇಗೌಡ ಆಸ್ಪತ್ರೆಗೆ ದಾಖಲಿಸಿದ್ದು, ತಡವಾಗಿ ಬಂದು ದೂರು ನೀಡಿರುತ್ತೇನೆ. ಅಪಘಾತ ಪಡಿಸಿದ ಕೆ.ಎ-05 ಜೆ.ಜೆ -4754 ನೇ ದ್ವಿಚಕ್ರವಾಹನ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಿ ಎಂತ ನೀಡಿದ ದೂರನ್ನು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

ಕಳ್ಳಂಬೆಳ್ಳ  ಪೊಲೀಸ್‌ ಠಾಣಾ ಮೊ.ನಂ: 246/2017 ಕಲಂ-279,337 304(ಎ) ಐಪಿಸಿ ರೆ/ವಿ 187 ಐಎಂವಿ ಆಕ್ಟ್.

ದಿನಾಂಕ:3010/17 ರಂದು ಬೆಳಗ್ಗೆ 8-30 ಗಂಟೆಗೆ ಈ ಕೇಸಿನ ಪಿರ್ಯಾದಿ ರಂಗನಾಥ ಬಿನ್ ರಂಗನಾಥಪ್ಪ, ಯರಮಾದನಹಳ್ಳಿ, ಶಿರಾ ತಾಲ್ಲೋಕು.ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ ದಿನಾಂಕ:29/10/17 ರಂದು ಬೆಳಗ್ಗೆ ನಾನು ನನ್ನ ಸ್ವಂತ ಕೆಲಸದ ನಿಮಿತ್ತ ಕಳ್ಳಂಬೆಳ್ಳ ಬಂಗ್ಲೆಗೆ ಬಂದಿದ್ದು, ಮದ್ಯಾಹ್ನ 3 ಗಂಟೆ ಸಮಯದಲ್ಲಿ ನಾನು ನನ್ನ ಬಾಬ್ತು ಮೋಟರ್ ಸೈಕಲ್ ನಲ್ಲಿ ನನ್ನ ಊರಿಗೆ ಹೋಗಲು ಕಳ್ಳಂಬೆಳ್ಳ ಕೆರೆಯ ಏರಿಯ ಹಿಂಭಾಗ ಹೋಗುತ್ತಿದ್ದಾಗ ಕನ್ನೇರಮ್ಮ ದೇವಸ್ಥಾನದ ಪಕ್ಕದಲ್ಲಿ ನಮ್ಮ ಊರಿನವರಾದ ಮಂಜುನಾಥ ಮತ್ತು ಆತನ ತಂದೆ ಸಣ್ಣಹಾಲಪ್ಪ ಮತ್ತು ರಂಗಶಾಮಯ್ಯ ಮೂವರೂ ರಸ್ತೆಯ ಎಡಭಾಗದ ಫುಟ್ ಪಾತ್ ರಸ್ತೆಯಲ್ಲಿ ಒಂದು ಮೋಟರ್ ಸೈಕಲನ್ನು ನಿಲ್ಲಿಸಿಕೊಂಡು ಮಾತನಾಡುತ್ತಿದ್ದಾಗ, ಒಂದು ಐಶರ್ ಮಿನಿ ಲಾರಿ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ರಸ್ತೆಯ ಪಕ್ಕದಲ್ಲಿ ನಿಂತಿದ್ದ ಮೇಲ್ಕಂಡ ಮೂವರಿಗೆ ಡಿಕ್ಕಿ ಹೊಡೆಸಿ ಅಪಘಾತ ಉಂಟು ಮಾಡಿದನು. ಕೂಡಲೇ ನಾನು ನನ್ನ ಮೋಟರ್ ಸೈಕಲನ್ನು ರಸ್ತೆಯ ಪಕ್ಕ ನಿಲ್ಲಿಸಿ ನೋಡಲಾಗಿ ಮೂವರಿಗೂ ತಲೆಗೆ ಕೈಕಾಲುಗಳಿಗೆ ಏಟುಗಳು ಬಿದ್ದು ರಕ್ತಗಾಯಗಳಾಗಿದ್ದವು ಅಪಘಾತಪಡಿಸಿದ ಐಶರ್ ಲಾರಿ ನಂಬರ್ ನೋಡಲಾಗಿ ಕೆಎ-36-ಎ-1228 ಆಗಿತ್ತು, ಮೋಟರ್ ಸೈಕಲ್ ನಂಬರ್ ಕೆಎ-44-ಆರ್-8047 ಆಗಿತ್ತು ಚಾಲಕ ಲಾರಿ ಬಿಟ್ಟು ಓಡಿ ಹೋದನು. ನಂತರ ನಾನು 108 ಆಂಬುಲೆನ್ಸ್ ಗೆ ಕರೆ ಮಾಡಿ ಗಾಯಾಳುಗಳನ್ನು ಸಿರಾ ಆಸ್ಪತ್ರೆಗೆ ತೋರಿಸಿ ವೈದ್ಯರು ಹೇಳಿದಂತೆ ಗಾಯಾಳುಗಳನ್ನು ತುಮಕೂರಿನ ಸರ್ಕಾರಿ ಆಸ್ಪತ್ರೆಗೆ ತೋರಿಸಿ ವೈದ್ಯರು ಹೇಳಿದಂತೆ ಗಾಯಾಳುಗಳನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಪರೀಕ್ಷೆ ಮಾಡಿ ಮಂಜುನಾಥ ಮರಣ ಹೊಂದಿರುತ್ತಾನೆಂದು ತಿಳಿಸಿದರು. ಹೆಣವನ್ನು ಮಾರ್ಚರಿಗೆ ಸಾಗಿಸಿ ಗಾಯಾಳುಗಳಾದ ಸಣ್ಣಹಾಲಪ್ಪನನ್ನು ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ದಾಖಲಿಸಿ ನಂತರ ರಂಗಶಾಮಯ್ಯನಿಗೂ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ತೋರಿಸಿ ನಂತರ ವೈದ್ಯರು ಹೇಳಿದಂತೆ ಆತನನ್ನು ತುಮಕೂರಿನ ಆಸ್ಪತ್ರೆಗೆ ದಾಖಲಿಸಿ ನಂತರ ಈ ಎಲ್ಲಾ ವಿಚಾರವನ್ನು ಸಂಬಂಧಿಕರಿಗೆ ತಿಳಿಸಿ ಈಗ ತಡವಾಗಿ ಬಂದು ದೂರನ್ನು ನೀಡುತ್ತಿದ್ದೇನೆ. ಆದ್ದರಿಂದ ಮೇಲ್ಕಂಡ ಐಶರ್ ಲಾರಿ ನಂಬರ್ ಕೆಎ-36-ಎ-1228 ರ ಚಾಲಕನನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಿ ಎಂತ ಇತ್ಯಾದಿ ನೀಡಿದ ದೂರಿನ ಮೇರೆಗೆ ಠಾಣಾ ದಾಖಲಿಸಿ ತನಿಖೆ ಕೈಗೊಂಡಿರುತ್ತೆ .

 Monday, 30 October 2017

Crime Incidents 30-10-17

ಹೆಬ್ಬೂರು  ಪೊಲೀಸ್ ಠಾಣಾ ಮೊ,ನಂ-193/2017 ಕಲಂ 279,283 ಐಪಿಸಿ

ದಿನಾಂಕ-29-10-2017 ರಂದು ಪಿರ್ಯಾದಿ ಮಂಜುನಾಥ್‌ ಬಿನ್‌ ನಾಗಪ್ಪ, 31 ವರ್ಷ, ಆದಿಕರ್ನಾಟಕ ಜನಾಂಗ, ವೆಲ್ಡಿಂಗ್‌ ಕೆಲಸ, ನಾಗವಲ್ಲಿ, ಹೆಬ್ಬೂರು ಹೋಬಳಿ, ತುಮಕೂರು ತಾಲ್ಲೂಕು & ಜಿಲ್ಲೆ ರವರು ಟೈಪ್‌ಮಾಡಿಸಿಕೊಟ್ಟ ದೂರಿನ ಅಂಶವೇನೆಂದರೆ, ನಾನು ದಿನಾಂಕ:28-10-2017 ರಂದು ನನ್ನ ಸ್ವಂತ ಕೆಲಸದ ಮೇಲೆ ನನ್ನ ಬಾಬ್ತು ದ್ವಿಚಕ್ರ ವಾಹನದಲ್ಲಿ ತುಮಕೂರಿಗೆ ಹೋಗಿದ್ದು, ನಂತರ ವಾಪಸ್ ನಾಗವಲ್ಲಿಗೆ ಬರಲೆಂದು ದಿನಾಂಕ:29-10-2017 ರಂದು ಬೆಳಗಿನ ಜಾವ ಸುಮಾರು 12-30 ಗಂಟೆ ಸಮಯದಲ್ಲಿ ದ್ವಿಚಕ್ರ ವಾಹನದಲ್ಲಿ ಹೊನ್ನುಡಿಕೆ ಹ್ಯಾಂಡ್‌ಪೋಸ್ಟ್ ನ ಬಳಿ ತುಮಕೂರು-ಕುಣಿಗಲ್‌ ಟಾರ್ ರಸ್ತೆಯಲ್ಲಿ ಬರುತ್ತಿರುವಾಗ್ಗೆ, ತುಮಕೂರು ಕಡೆಯಿಂದ ಕುಣಿಗಲ್‌ ಕಡೆಗೆ ಹೋಗುವ ಒಂದು ಕ್ಯಾಂಟರ್‌ ವಾಹನದ ಚಾಲಕ ತನ್ನ ವಾಹನವನ್ನು ಹೊನ್ನುಡಿಕೆ ಹ್ಯಾಂಡ್‌ ಪೋಸ್ಟ್‌‌ ನ ಬಳಿ ತುಮಕೂರು-ಕುಣಿಗಲ್ ಟಾರ್ ರಸ್ತೆಯಲ್ಲಿ ಯಾವುದೇ ಮುನ್ಸೂಚನೆಯನ್ನು ನೀಡದೆ ಸಂಚಾರಕ್ಕೆ ತೊಂದರೆಯಾಗುವಂತೆ ನಿರ್ಲಕ್ಷ್ಯತನದಿಂದ ತನ್ನ ವಾಹನವನ್ನು ರಸ್ತೆಯಲ್ಲಿ ನಿಲ್ಲಿಸಿದ್ದು, ಆಗ ಅದೇ ಸಮಯಕ್ಕೆ ತುಮಕೂರು ಕಡೆಯಿಂದ ಕುಣಿಗಲ್ ಕಡೆಗೆ ಹೋಗಲು ಬಂದ ಒಂದು ಕಾರಿನ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ರಸ್ತೆಯಲ್ಲಿ ಯಾವುದೇ ಮುನ್ಸೂಚನೆಯನ್ನು ನೀಡದೆ ಸಂಚಾರಕ್ಕೆ ತೊಂದರೆಯಾಗುವಂತೆ ನಿರ್ಲಕ್ಷ್ಯತನದಿಂದನಿಲ್ಲಿಸಿದ್ದ ಕ್ಯಾಂಟರ್ ವಾಹನಕ್ಕೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದನು. ಪರಿಣಾಮವಾಗಿ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿತು. ಕ್ಯಾಂಟರ್ ವಾಹನದ ಹಿಂಭಾಗ ಸಹ ಸ್ವಲ್ಪ ಡ್ಯಾಮೇಜ್‌ ಆಯಿತು. ನಂತರ ನಾನು ಕ್ಯಾಂಟರ್‌ ವಾಹನದ ನಂಬರ್ ನೋಡಲಾಗಿ ಕೆಎ-03-ಎ-4258 ಆಗಿತ್ತು. ಕಾರಿನ ನಂಬರ್ ನೋಡಲಾಗಿ ಕೆಎ-06-ಎನ್‌-7927 ನೇ ಎರ್ಟಿಗಾ ಕಾರಾಗಿತ್ತು. ಈ ಅಪಘಾತವು ಕೆಎ-03-ಎ-4258 ನೇ ಕ್ಯಾಂಟರ್‌ ವಾಹನದ ಚಾಲಕನು ತನ್ನ ವಾಹನವನ್ನು ಯಾವುದೇ ಮುನ್ಸೂಚನೆಯನ್ನು ನೀಡದೆ ಸಂಚಾರಕ್ಕೆ ತೊಂದರೆಯಾಗುವಂತೆ ನಿರ್ಲಕ್ಷ್ಯತನದಿಂದ ರಸ್ತೆಯಲ್ಲಿ ನಿಲ್ಲಿಸಿದ್ದರಿಂದ ಹಾಗೂ ಕೆಎ-06-ಎನ್‌-7927 ನೇ ಎರ್ಟಿಗಾ ಕಾರಿನ ಚಾಲಕನು ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿದ್ದರಿಂದ ಉಂಟಾಗಿರುತ್ತೆ. ಆದ್ದರಿಂದ ಸದರಿ ಮೇಲ್ಕಂಡ ಎರಡೂ ವಾಹನಗಳ ಚಾಲಕರುಗಳ ಮೇಲೆ ಕಾನೂನು ರೀತ್ಯಾ ಮುಂದಿನ ಕ್ರಮ ಜರುಗಿಸಬೇಕೆಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲು ಮಾಡಿರುತ್ತೆ.

ಹುಳಿಯಾರು ಪೊಲೀಸ್ ಠಾಣಾ ಮೊ.ನಂ 136/2017, ಕಲಂ 324 ಐಪಿಸಿ.

ದಿನಾಂಕ:-29/10/2017 ರಂದು ರಾತ್ರಿ 08-00 ಗಂಟೆಗೆ ರಾಜ್ ಕಿರಣ್ ಬಿನ್ ಲೇ ಶಿವಕುಮಾರ್, 27 ವರ್ಷ, ಕೂಲಿ ಕೆಲಸ, ಲಿಂಗಾಯತರು, ಇಂದಿರಾನಗರ, ಹುಳಿಯಾರು ಟೌನ್ ಚಿ.ನಾ ಹಳ್ಳಿ ತಾಲ್ಲೂಕು ಇವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಾನು ಕೂಲಿಯಿಂದ ಜೀವನ ಮಾಡಿಕೊಂಡಿದ್ದು, ದಿನಾಂಕ 28/10/2017 ರಂದು ನಾನು ಕೆಲಸ ಮುಗಿಸಿಕೊಂಡು ರಾತ್ರಿ ಸುಮಾರು 12-30 ರ ಸಮಯದಲ್ಲಿ ನಾನು ಮನೆಗೆ ಹೋದೆ. ಆಗ ನನಗೆ ಮತ್ತು ನನ್ನ ಹೆಂಡತಿಯಾದ ಪ್ರೀತಿ ರವರಿಗೂ ಯಾವುದೋ ಚಿಕ್ಕ-ಪುಟ್ಟ ವಿಚಾರಕ್ಕೆ ಗಲಾಟೆಯಾಗಿದ್ದು ಸರಿಯಷ್ಟೇ, ನಾನು ಗಲಾಟೆ ಮಾಡಿ ಅವರಿಗೆ ಬೈಯ್ದು ಮಲಗಿದ್ದಾಗ ದಿನಾಂಕ 29/10/2017 ರಂದು ಬೆಳಿಗ್ಗೆ 05-30 ಗಂಟೆ ಸಮಯದಲ್ಲಿ ನನ್ನ ಮೇಲೆ ನನ್ನ ಹೆಂಡತಿ ಪ್ರೀತಿ ರವರು ಚೆಕ್ಕೆ ಕಲ್ಲು ತೆಗೆದುಕೊಂಡು ಬಂದು ನನ್ನ ತಲೆಗೆ ಹಾಗೂ ಎಡಗೈಗೆ ಹೊಡೆದಿದ್ದರಿಂದ ರಕ್ತಗಾಯವಾಗಿರುತ್ತೆ. ನನಗೆ ಹೊಡೆದು ರಕ್ತಗಾಯ ಪಡಿಸಿದ ನನ್ನ ಹೆಂಡತಿ ಮೇಲೆ ಕಾನೂನು ಕ್ರಮ ಜರುಗಿಸಿ ರಕ್ಷಣೆ ನೀಡಬೇಕೆಂದು ನೀಡಿದ ಲಿಖಿತ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.Sunday, 29 October 2017

Crime Incidents 29-10-17

ತುಮಕೂರು ನಗರ ಸಂಚಾರಿ ಪೊಲೀಸ್ ಠಾಣೆ ಮೊ.ಸಂ 206/17 ಕಲಂ 279, 304( ಎ) ಐಪಿಸಿ

ದಿನಾಂಕ 29-10-2017 ರಂದು ಬೆಳಗ್ಗೆ 9-30 ಗಂಟೆಗೆ ಪಿರ್ಯಾದಿ ಶ್ರೀನಿವಾಸ್ ಬಿನ್ ಅಂಜನಪ್ಪ ಮುನಿಸಾಮಪ್ಪ ಲೇ ಔಟ್ ಬೆಂಗಳೂರು 17 ರವರು ಠಾಣೆಗೆ ಹಾಜರಾಗಿ  ನೀಡಿದ  ಲಿಖಿತ ದೂರಿನ ಅಂಶವೇನಂದರೆ ದಿನಾಂಕ 29-10-2017 ರಂದು ಬೆಳಗಿನ ಜಾವ 5-00 ಗಂಟೆಗೆ  ನನ್ನ ಮಗ  ವೇಣುಗೋಪಾಲ್  ಮತ್ತು ತನ್ನ ಸ್ನೇಹಿತ  ಶಂಕರ್  ಜೋಶಿ  ಇಬ್ಬರೂ   ಇನ್ನೊಬ್ಬ ಸ್ನೇಹಿತ ನ ಮದುವೆಗೆ  ಚಿತ್ರ ದುರ್ಗಕ್ಕೆ ಹೋಗಿ ಬರುತ್ತೇನೆಂದು  ಹೇಳಿ  ಮನೆಯಿಂದ  ಶಂಕರ್  ಜೋಶಿ ರವರ ಬಾಬ್ತು  ಕೆಎ-01-ಹೆಚ್  ಡಬ್ಲಯೂ -0153 ನೇ  ಬೈಕ್ ನಲ್ಲಿ  ಶಂಕರ್   ಜೋಶಿ ಬೈಕ್ ಸವಾರಿ ಮಾಡಿಕೊಂಡು ನನ್ನ ಮಗ    ವೇಣುಗೋಪಾಲ್ ಹಿಂಬದಿಯಲ್ಲಿ ಕುಳಿತು  ಚಿತ್ರದುರ್ಗಕ್ಕೆ ಹೋಗಿ ಬರುತ್ತೇಂದು ಹೇಳಿ ಮನೆಯಿಂದ ಹೋದರು.  ಈ ದಿನ ಬೆಳಗ್ಗೆ 7-15 ಗಂಟೆ ಸಮಯದಲ್ಲಿ   ತುಮಕೂರಿನಿಂದ ಯಾರೋ   ಸಾರ್ವಜನಿಕರು ನನ್ನ ಮಗ  ವೇಣುಗೋಪಾಲ್ ರವರ  ಮೊಬೈಲ್  ನಿಂದ  ಪೋನ್  ಮಾಡಿ ಈ ನಂಬರ್ ನ ವ್ಯಕ್ತಿ  ತುಮಕೂರು  ಶ್ರೀ ರಾಜ್ ಟಾಕೀಸ್ ಬಳಿ  ಶಿರಾ ಕಡೆಗೆ ಹೋಗುವ ಎನ್ ಹೆಚ್ 48 ರಸ್ತೆಯ ಮೇಲ್ಸೇತುವೆ ರಸ್ತೆಯಲ್ಲಿ ಹೋಗುತ್ತಿರುವಾಗ್ಗೆ   ಲಾರಿಯಿಂದ ಅಪಘಾತವಾಗಿದೆ  ಬೈಕ್ ಸವಾರಿ  ಮಾಡುತ್ತಿದ್ದ ಹುಡುಗ ಹಾಗೂ ಹಿಂಬದಿಯಲ್ಲಿ ಕುಳಿತಿದ್ದ  ಹುಡುಗ ಇಬ್ಬರೂ ಸ್ಥಳದಲ್ಲಿಯೇ   ಮೃತಪಟ್ಟಿರುತ್ತಾರೆ  ತಕ್ಷಣ ತುಮಕೂರಿಗೆ ಬನ್ನಿ ಎಂದು ತಿಳಿಸಿದರು  ಆಗ ನಾನು ಮತ್ತು ನಮ್ಮ ಸಂಬಂದಿಕರು ತುಮಕೂರು ಶ್ರೀ ರಾಜ್ ಟಾಕೀಸ್ ಬಳಿ ಬಂದು ಅಪಘಾತವಾದ ಸ್ಥಳವನ್ನು  ನೋಡಿದಾಗ ಅಲ್ಲಿ  ರಸ್ತೆಯಲ್ಲಿ  ರಕ್ತದ  ಕಲೆ ಇರುವುದು ಕಂಡು ಬಂತು,. ನಂತರ  ಅಪಘಾತನೆಡೆದ ಸ್ಥಳದಲ್ಲಿ  ಸಾರ್ವಜನಿಕರು  ಮೃತಪಟ್ಟಿದ್ದ ಇಬ್ಬರು   ವ್ಯಕ್ತಿಗಳ  ಶವಗಳನ್ನು ಜಿಲ್ಲಾ ಸರ್ಕಾರಿ ಆಸ್ವತ್ರೆಗೆ  ಆಂಬುಲೆನ್ಸ್ ನಲ್ಲಿ ತೆಗದುಕೊಂಡು ಹೋಗಿರುತ್ತಾರೆಂದು  ತಿಳಿಸಿದರು   ನಾವು  ತುಮಕೂರು ಜಿಲ್ಲಾ ಸರ್ಕಾರಿ ಆಸ್ವತ್ರೆಗೆ ಬಂದು ನೋಡಲಾಗಿ ನನ್ನ ಮಗ  ವೇಣುಗೋಪಾಲ್  ತಲೆಗೆ  ಹಾಗೂ ಮೈ ಕೈಗೆ ತೀವ್ರವಾಗಿ ಪೆಟ್ಟುಬಿದ್ದು  ರಕ್ತ ಶ್ರಾವವಾಗಿ ಮೃತಪಟ್ಟಿದ್ದನು. ನಂತರ  ಮಗನ ಸ್ನೇಹಿತ ಶಂಕರ್ ಜೋಶಿ ರವರನ್ನು   ನೋಡಲಾಗಿ  ಇವರಿಗೂ ಸಹ  ತಲೆಗೆ ಹಾಗೂ ಮೈ ಕೈ ಗಳಿಗೆ ತೀವ್ರವಾಗಿ ಪೆಟ್ಟು ಬಿದ್ದು  ರಕ್ತ ಶ್ರಾವ ವಾಗಿ ಮೃತಪಟ್ಟಿದ್ದರು.    ನಂತರ ಅಪಘಾತ ನೆಡೆದ ಸ್ಥಳದಲ್ಲಿದ್ದ ಸಾರ್ವಜನಿಕರಿಂದ   ಹಾಗೂ ಆಸ್ವತ್ರೆಯ ಬಳಿ ಇದ್ದ   ಸಾರ್ವಜನಿಕರಿಂದ ತಿಳಿದುಬಂದ ಅಂಶವೇನಂದರೆ  ಶಂಕರ್ ಜೋಶಿ ರವರು ತನ್ನ  ಕೆಎ-01-ಹೆಚ್ ಡಬ್ಲಯೂ -0153 ನೇ  ಬೈಕ್ ನಲ್ಲಿ ನನ್ನ ಮಗ  ವೇಣುಗೋಪಾಲ್ ರವರನ್ನು ಹಿಂಬದಿಯಲ್ಲಿ ಕೂರಿಸಿಕೊಂಡು ಶ್ರೀ ರಾಜ್ ಟಾಕೀಸ್ ಎದುರಿನ  ಎನ್ ಹೆಚ್ 48 ಮೇಲ್ಸೇತುವೆ  ರಸ್ತೆಯಲ್ಲಿ  ಶಿರಾ ಕಡೆಗೆ ಈ  ದಿನ  ಬೆಳಗ್ಗೆ 6-45 ಗಂಟೆ ಯಲ್ಲಿ  ಬರುವಾಗ್ಗೆ  ಅದೇ ಸಮಯಕ್ಕೆ  ಇದರ  ಹಿಂದಿನಿಂದ ಬಂದ  ಟಿಎನ್-77-ಎಪ್-3552 ನೇ   ಲಾರಿಯನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಇವರ  ಬಲಬಾಗದಿಂದ ಓವರ್ ಟೇಕ್ ಮಾಡಿ  ಯಾವುದೇ ಸೂಚನೆಯನ್ನು ನೀಡದೆ  ತಕ್ಷಣ ಲಾರಿಯನ್ನು ಎಡಬಾಗಕ್ಕೆ  ತಿರುಗಿಸಿದಾಗ  ಲಾರಿಯು ನನ್ನ ಮಗ  ಹಾಗೂ  ಶಂಕರ್ ಜೋಶಿ ರವರು  ಹೋಗುತ್ತಿದ್ದ  ಬೈಕ್  ಗೆ ಡಿಕ್ಕಿ ಹೊಡೆದಾಗ  ಬೈಕ್ ಆಯ ತಪ್ಪಿ  ಬೈಕ್ ಸಮೇತ ಇಬ್ಬರೂ ರಸ್ತೆಯ  ಮೇಲೆ  ಬಿದ್ದಾಗ  ಇವರ  ಮೇಲೆ ಲಾರಿಯ  ಚಕ್ರ ಹರಿದು ಇವರಿಗೆ ತೀವ್ರವಾಗಿ  ಪೆಟ್ಟುಗಲಾಗಿ  ಸ್ಥಳದಲ್ಲಿಯೇ  ಮೃತಪಟ್ಟಿರುತ್ತಾರೆಂತ ತಿಳಿಯಿತು. ನಂತರ ನಾನು ನಮ್ಮ  ಸಂಬಂದಿಕರು  ಜಿಲ್ಲಾ ಆಸ್ವತ್ರೆಯಿಂದ ಠಾಣೆಯ ಬಳಿ ಬಂದು ಈ ನನ್ನ  ದೂರು ನೀಡುತ್ತಿದ್ದೇನೆ . ಈ ಅಪಘಾತಕ್ಕೆ   ಟಿಎನ್-77-ಎಪ್-3552 ನೇ   ಲಾರಿಯ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯ  ಚಾಲನೆಯೇ  ಕಾರಣವಾಗಿದ್ದು ಚಾಲಕನ ಮೇಲೆ  ಕಾನೂನು ರೀತ್ಯಾ ಕ್ರಮ ಜರುಗಿಸಿ  ಎಂತ ನೀಡಿದ ದೂರನ್ನು ಪಡೆದು   ಪ್ರಕರಣ ದಾಖಲು  ಮಾಡಿ ತನಿಖೆ ಕೈಗೊಂಡಿರುತ್ತೆ.

ಮಿಡಿಗೇಶಿ ಪೊಲೀಸ್ ಠಾಣಾ ಮೊ.ಸಂ.100/2017, ಕಲಂ:279, 304(ಎ) ಐಪಿಸಿ.

ದಿನಾಂಕ:29/10/2017 ರಂದು ಬೆಳಿಗ್ಗೆ 07:15 ಗಂಟೆಗೆ ಪಿರ್ಯಾದಿ ನರಸಿಂಹಮೂರ್ತಿ ಬಿನ್ ಲೇ||ಕೆಂಚಪ್ಪ, 39 ವರ್ಷ, ಗೊಲ್ಲರ ಜನಾಂಗ, ವ್ಯವಸಾಯ, ಪಡಸಾಲಹಟ್ಟಿ ಗ್ರಾಮ, ಮಿಡಿಗೇಶಿ ಹೋಬಳಿ, ಮಧುಗಿರಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಾನು ಮೇಲ್ಕಂಡ ವಿಳಾಸದಲ್ಲಿ ನನ್ನ ಹೆಂಡತಿ, ಮಕ್ಕಳು ಹಾಗೂ ನನ್ನ ತಾಯಿ ಬೊಮ್ಮಕ್ಕ, ನನ್ನ ಅಣ್ಣ ದಾಸಪ್ಪ ರವರುಗಳೊಂದಿಗೆ ವಾಸವಾಗಿರುತ್ತೇನೆ. ನಮ್ಮ ತಂದೆ ತಾಯಿಗೆ ಒಟ್ಟು 04 ಜನ ಮಕ್ಕಳಿದ್ದು ಅದರಲ್ಲಿ ಇಬ್ಬರೂ ಹೆಣ್ಣು ಮಕ್ಕಳಿಗೆ ಹಾಗೂ ನನಗೆ ಮದುವೆಯಾಗಿದ್ದು, ನನ್ನ ಅಣ್ಣ ದಾಸಪ್ಪನವರು ಮನೆಗೆ ಹಿರಿಯ ಮಗನಾಗಿದ್ದು ನಮ್ಮ ತಂದೆಯ ಮರಣದ ನಂತರ ಕುಟುಂಬದ ಜವಾಬ್ದಾರಿ ತಾನೇ ನಿರ್ವಹಿಸಬೇಕಾಗಿದ್ದರಿಂದ ಆತನು ಮದುವೆಯಾಗದೇ ನಮ್ಮೊಂದಿಗೆ ವಾಸವಾಗಿದ್ದನು. ನಮ್ಮ ಅಣ್ಣ ದಾಸಪ್ಪನವರು ಪ್ರತಿ ವರ್ಷ ಕಾರ್ತಿಕ  ಮಾಸದಲ್ಲಿ ಪ್ರತಿ ದಿನ ಮುಂಜಾನೇ ನಮ್ಮ ಊರಿನಿಂದ ಗಿರಿಯಮ್ಮನಪಾಳ್ಯ ಗ್ರಾಮದಲ್ಲಿರುವ ಶ್ರೀ.ವೆಂಕಟರಮಣಸ್ವಾಮಿ ದೇವಸ್ಥಾನಕ್ಕೆ ಹೋಗಿ ಬರುತ್ತಿದ್ದರು. ಅದೇ ರೀತಿ ಈ ದಿನ ಅಂದರೆ ದಿನಾಂಕ:29/10/2017 ರಂದು ಬೆಳಿಗ್ಗೆ ಸುಮಾರು 05:00 ಗಂಟೆಗೆ ನಮ್ಮ ಅಣ್ಣ ದಾಸಪ್ಪ ರವರು ದೇವಸ್ಥಾನಕ್ಕೆ ಹೋಗಿ ಬರುತ್ತೇನೆಂತ ಮನೆಯಲ್ಲಿ ಹೇಳಿ ಹೋದರು. ನಮ್ಮ ಅಣ್ಣ ದಾಸಪ್ಪ ನವರು ಮನೆಯಿಂದ ಹೊರಗಡೆ ಹೋದ ಅರ್ಧಮುಕ್ಕಾಲು ಗಂಟೆಯ ನಂತರ ಗಿರಿಯಮ್ಮನಪಾಳ್ಯದ ಗೋವಿಂದರಾಜು ಎಂಬುವರು ನನಗೆ ಪೋನ್ ಮಾಡಿ ನಿಮ್ಮ ಅಣ್ಣ ದಾಸಪ್ಪನವರು ನಮ್ಮ ಗ್ರಾಮದಲ್ಲಿರುವ ದೇವಸ್ಥಾನಕ್ಕೆ ಬಂದು ದೇವರಿಗೆ ನಮಸ್ಕಾರ ಮಾಡಿಕೊಂಡು ವಾಪಸ್ಸ್ ನಿಮ್ಮ ಊರಿಗೆ ಬರುವ ಸಲುವಾಗಿ ಇದೇ ದಿನ ಬೆಳಿಗ್ಗೆ ಸುಮಾರು 05:45 ಗಂಟೆಯ ಸಮಯದಲ್ಲಿ ವೆಂಕಟರಮಣಸ್ವಾಮಿ ದೇವಸ್ಥಾನದ ಮುಂಭಾಗದ ಮಧುಗಿರಿ-ಪಾವಗಡ ಮುಖ್ಯ ರಸ್ತೆಯಲ್ಲಿ ರಸ್ತೆಯನ್ನು ದಾಟುತ್ತಿದ್ದಾಗ ಅದೇ ಸಮಯಕ್ಕೆ ಹೊಸಕೆರೆ ಕಡೆಯಿಂದ ಬಂದಂತಹ. ಕೆಎ-06-ಎಫ್-1154 ನೇ ಕೆ.ಎಸ್.ಆರ್.ಟಿ.ಸಿ. ಬಸ್ಸಿನ ಚಾಲಕ ಬಸ್ಸನ್ನು ತುಂಬಾ ಜೋರಾಗಿ ಮತ್ತು ಅಡ್ಡದಿಡ್ಡಿಯಾಗಿ ಓಡಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ನಿಮ್ಮ ಅಣ್ಣ ದಾಸಪ್ಪನಿಗೆ ಡಿಕ್ಕಿ ಹೊಡೆಸಿ ಅಪಘಾತ ಉಂಟುಮಾಡಿದನು. ಆಗ ಅಲ್ಲಿಯೇ ದೇವಸ್ಥಾನದ ಎದುರಿಗೆ ಇರುವ ಅರಳಿ ಕಟ್ಟೆಯ ಬಳಿ ಬಸ್ಸಿಗಾಗಿ ಕಾಯುತ್ತಾ ನಿಂತಿದ್ದ ನಾನು ತಕ್ಷಣ ನಿಮ್ಮ ಅಣ್ಣ ದಾಸಪ್ಪನ ಬಳಿ ಹೋಗಿ ನೋಡಲಾಗಿ ಅಪಘಾತದಲ್ಲಿ ನಿಮ್ಮ ಅಣ್ಣ ದಾಸಪ್ಪನ ತಲೆ ಪೂರ್ಣ ಜಜ್ಜಿ ಹೋಗಿ ಸ್ಥಳದಲ್ಲಿಯೇ ಸತ್ತು ಹೋಗಿದ್ದಾರೆ ನೀನು ಬೇಗ ಇಲ್ಲಿಗೆ ಬಾ ಎಂತ ತಿಳಿಸಿದರು. ಕೂಡಲೇ ನಾನು ನಮ್ಮ ಗ್ರಾಮದ ಚಿತ್ತಣ್ಣ ಬಿನ್ ಲೇ||ಬೊಮ್ಮಣ್ಣರವರೊಂದಿಗೆ ಸ್ಥಳಕ್ಕೆ ಬಂದು ನೋಡಲಾಗಿ ವಿಚಾರ ನಿಜವಾಗಿತ್ತು. ಅಪಘಾತಪಡಿಸಿದ ಕೆಎ-06-ಎಫ್-1154 ನೇ ಕೆ.ಎಸ್.ಆರ್.ಟಿ.ಸಿ. ಬಸ್ಸು ಸ್ಥಳದಲ್ಲಿಯೇ ನಿಂತಿದ್ದು ಅದರ ಚಾಲಕ ಇರಲಿಲ್ಲ. ಈ ಅಪಘಾತ ಉಂಟುಮಾಡಿ ನನ್ನ ಅಣ್ಣ ದಾಸಪ್ಪನವರ ಸಾವಿಗೆ ಕಾರಣನಾದ ಕೆಎ-06-ಎಫ್-1154 ನೇ ಕೆ.ಎಸ್.ಆರ್.ಟಿ.ಸಿ.ಬಸ್ಸಿನ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಅಂಶವಾಗಿರುತ್ತೆ

ಹುಲಿಯೂರುದುರ್ಗ ಪೊಲೀಸ್‌ ಠಾಣಾ; ಮೊ ನಂ: 212/2017 ಕಲಂ: 304(A) ಐಪಿಸಿ

ದಿನಾಂಕ: 28-10-2017 ರಂದು ರಾತ್ರಿ 08-00 ಗಂಟೆಗೆ ಪಿರ್ಯಾದಿ ರಿಲೀಸ್ ಎಕ್ಕ ಬಿನ್ ಮಾಶೋದ ಎಕ್ಕ, ಸುಮಾರು 22 ವರ್ಷ, ಕ್ರಿಶ್ಚಿಯನ್, ಚೂರಿಚೊಕ್ಕ ಗ್ರಾಮ, ಬೊಲ್ಬಾ ಥಾನ, ಕಾಡೋಪಾನಿ ಪೋಸ್ಟ್, ಶಿಂದೆಗ ಜಿಲ್ಲೆ, ಜಾರ್ಕಂಡ್ ರಾಜ್ಯ ಹಾಲಿ ವಾಸ- ಮಧು ಸ್ಟೋನ್ ಕ್ರಷರ್, ಮಾಗಡಿ ರೋಡ್, ಹುಲಿಯೂರುದುರ್ಗ ಹೋಬಳಿ, ಕುಣಿಗಲ್ ತಾ. ಪೋನ್ ನಂಬರ್. 7353297796 ರವರು ಠಾಣೆಗೆ ಹಾಜರಾಗಿ ನೀಡಿದ ಹೇಳಿಕೆಯ ದೂರಿನ ಅಂಶವೇನೆಂದರೆ  “ನಾನು ಮತ್ತು  ಅಲ್ಟಾಲಕ ಬಿನ್ ಕುಮಾರ್ ಎಕ್ಕ ಮತ್ತು ಜಯಂತ್ ಎಕ್ಕ ಬಿನ್ ಬಿಲಾಸ್ ಎಕ್ಕ ಎಂಬುವರು 2017 ಜನವರಿಯಿಂದ ಕೂಲಿ ಕೆಲಸ ಮಾಡಿಕೊಂಡಿದ್ದು ದಿನಾಂಕ: 28/10/2017 ರಂದು ಎಂದಿನಂತೆ ನಾವು ಮಧು ಸ್ಟೋನ್ ಕ್ರಶರ್ ಗೆ ಬೆಳಿಗ್ಗೆ ಸುಮಾರು 07-00 ಗಂಟೆಗೆ  ಕೆಲಸಕ್ಕೆ ಹೋಗಿದ್ದು ನಾನು ಮತ್ತು ಅಲ್ಟಾಲಕ ಬಿನ್ ಕುಮಾರ್ ಎಕ್ಕ ಎಂಬುವರೊಂದಿಗೆ ಒಂದು ಕಡೆ ಕೆಲಸ ಮಾಡುತ್ತಿದ್ದು, ಜಯಂತ್ ಎಕ್ಕ ಎಂಬುವರು ನಮ್ಮ ಪಕ್ಕದಲ್ಲಿ ಕೆಲಸ ಮಾಡುತ್ತಿದ್ದನು. ಇದೇ ದಿನ ಬೆಳಿಗ್ಗೆ 08-00 ಗಂಟೆಯಲ್ಲಿ ಜಯಂತ್ ಎಕ್ಕ ಎಂಬುವನು ನೀರು ಬಿಡಲು ನಲ್ಲಿಯ ಬಳಿ ಹೋಗಿ ನೀರನ್ನ ಬಿಡುವಾಗ ಡಿ.ಜಿ ಗೆ ಹಾಕಿದ್ದ ಅರ್ಥಿಂಗ್ ವೈರ್ ನ್ನ ಸರಿಯಾಗಿ ಜೋಡಿಸಿದೇ ಪೈಪಿನ ಪಕ್ಕದಲ್ಲೇ ಭೂಮಿಯ ಮೇಲೆ ಬಿಟ್ಟಿದ್ದು,  ಜಯಂತ ಎಕ್ಕ ಎಂಬುವನು ಅದನ್ನು ತಿಳಿಯದೇ ನೀರಿನ ಪೈಪ್ ನ್ನ ಮುಟ್ಟಿದ್ದರಿಂದ ಪೈಪ್ ಪಕ್ಕದ ಗುಂಡಿಯಲ್ಲಿ ನಿಂತಿದ್ದ ನೀರಿನಿಂದ ವಿದ್ಯುತ್ ಸ್ಪರ್ಶವಾಗಿ ಕೆಳಕ್ಕೆ ಬಿದ್ದು ಒದ್ದಾಡುತ್ತಿದ್ದವನನ್ನ ನಾಗಪ್ಪ, ಮಧುಸೂದನ್ ಮತ್ತು ಅಜಯ್ ಟುಪ್ಪು ಎಂಬುವರು ಮಧುಸೂದನ್ ಎಂಬುವರ ಇನ್ನೋವ ಕಾರಿನಲ್ಲಿ ಎ.ಸಿ.ಗಿರಿ ಆಸ್ಪತ್ರೆಗೆ ಕರೆದು ಕೊಂಡು ಹೋಗಿದ್ದು ಚಿಕಿತ್ಸೆ ಪಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತ ಪಟ್ಟಿರುತ್ತಾನೆ ಎಂದು ವೈದ್ಯರು ತಿಳಿಸಿದರು. ಈತನ ಸಾವಿಗೆ ಕ್ರಶರ್ ಮಾಲೀಕರಾದ ಮಧುಸೂದನ್ ಎಂಬುವರು ಯಾವುದೇ ಮುಂಜಾಗ್ರತೆ ಕ್ರಮ ಕೈಗೊಳ್ಳದೆ  ನಿರ್ಲಕ್ಷತೆಯಿಂದ ಅರ್ಥಿಂಗ್ ವೈರನ್ನು ಭೂಮಿಯ ಮೇಲೆ ಬಿಟ್ಟಿದ್ದು ವಿದ್ಯುತ್ ಸ್ಪರ್ಶವಾಗಿ ಜಯಂತ್ ಎಕ್ಕ ಎಂಬುವರು ಮರಣ ಹೊಂದಿರುತ್ತಾನೆ. ಆದ್ದರಿಂದ ಕ್ರಶರ್ ನ ಮಾಲೀಕರಾದ ಮಧುಸೂದನ್ ಎಂಬುವರ ಮೇಲೆ ಕಾನೂನಿನ ರೀತ್ಯ ಕ್ರಮ ಜರುಗಿಸಬೇಕೆಂದು, ನಾನು ಆಸ್ಪತ್ರೆಯಿಂದ ವಾಪಸ್ ಬಂದು ಜಯಂತ್ ಎಕ್ಕ ಎಂಬುವರ ಮನೆಗೆ ವಿಚಾರ ತಿಳಿಸಿ ಈಗ ತಡವಾಗಿ ಬಂದು ದೂರು ನೀಡಿರುತ್ತೇನೆ.” ಎಂತ ಇತ್ಯಾದಿಯಾಗಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲು ಮಾಡಿರುತ್ತೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ,ನಂ-192/2017 ಕಲಂ 32, 34 ಕೆ,ಇ ಆಕ್ಟ್‌

ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ಪಿ,ಎಸ್,ಐ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀಕಾಂತ್,ಎಸ್‌ ಆದ ನಾನು ದಿನಾಂಕ:28-10-2017 ರಂದು ತುಮಕೂರು ನಗರದಲ್ಲಿ ವಿಶೇಷ ಕರ್ತವ್ಯವನ್ನು ಮುಗಿಸಿಕೊಂಡು ತುಮಕೂರಿನಿಂದ ಹೆಬ್ಬೂರಿಗೆ ವಾಪಸ್‌ ಬರುತ್ತಿರುವಾಗ್ಗೆ, ಮಧ್ಯಾಹ್ನ 02-00 ಗಂಟೆ ಸಮಯದಲ್ಲಿ ಹೆಬ್ಬೂರು - ಸಿ.ಎಸ್.ಪುರ ರಸ್ತೆಯ ಒಂದು ದ್ವಿಚಕ್ರ ವಾಹನದಲ್ಲಿ ಒಬ್ಬ ಆಸಾಮಿಯು ಒಂದು ಬಟ್ಟೆಬ್ಯಾಗ್‌‌ನಲ್ಲಿ ಏನನ್ನೋ ತೆಗೆದುಕೊಂಡು ಹೋಗುತ್ತಿದ್ದು,ನಂತರ ನಾವುಗಳು ಅನುಮಾನಗೊಂಡು ಹಿಂದೆಯೇ ಜೀಪ್‌ನಲ್ಲಿ ಹೋಗಿ ದೊಡ್ಡಗೊಲ್ಲಹಳ್ಳಿ ಗ್ರಾಮದ ವೆಂಕಟಪ್ಪ ಎಂಬುವರ ಮನೆ ಬಳಿಯ ರಸ್ತೆಯಲ್ಲಿ ನಿಲ್ಲಿಸಿ ಸದರಿ ಆಸಾಮಿಯನ್ನು ನಿಲ್ಲಿಸಿ ವಿಚಾರ ಮಾಡುತ್ತಿರುವಾಗ್ಗೆ, ಸದರಿ ಆಸಾಮಿಯು ಸ್ಥಳದಿಂದ ಓಡಿ ಹೋಗಲು ಪ್ರಯತ್ನಿಸಿದವನನ್ನು ನನ್ನ ಜೊತೆಯಲ್ಲಿದ್ದ ಗುಪ್ತ ಮಾಹಿತಿ ಪಿ.ಸಿ.220 ಮಂಜುನಾಥ ರವರು ಹಿಡಿದುಕೊಂಡರು. ನಂತರ ಸದರಿ ಆಸಾಮಿಯನ್ನು ವಿಚಾರ ಮಾಡಲಾಗಿ  ವೆಂಕಟೇಶ್ ಬಿನ್ ಚಿಕ್ಕ ರಾಮಾಂಜನೇಯ, 24 ವರ್ಷ, ಬೋವಿ ಜನಾಂಗ, ಸಂಜೀವಿನಿ ವೈನ್ಸ್‌ ನಲ್ಲಿ ಸಪ್ಲೈಯರ್ ಕೆಲಸ,  ಮಾವಿನಹಳ್ಳಿ, ಸಿ.ಎಸ್. ಪುರ ಹೋಬಳಿ, ಗುಬ್ಬಿ ತಾಲ್ಲೋಕು, ತುಮಕೂತು ಜಿಲ್ಲೆ ಎಂತಾ ತಿಳಿಸಿದನು. ದ್ವಿಚಕ್ರ ವಾಹನದ ನಂಬರ್ ನೋಡಲಾಗಿ KA-06-ET-8668 ನೇ ಹೋಂಡಾ ಆಕ್ಟೀವಾ ದ್ವಿಚಕ್ರ ವಾಹನವಾಗಿತ್ತು. ನಂತರ ಸದರಿ ಬಟ್ಟೆ ಬ್ಯಾಗ್‌‌ ಅನ್ನು ಪರಿಶೀಲಿಸಲಾಗಿ ಮದ್ಯ ತುಂಬಿದ ಸಾಚೆಟ್‌ಗಳು ಹಾಗೂ ಟೆಟ್ರಾ ಪ್ಯಾಕ್‌ಗಳಿದ್ದವು. ಆಸಾಮಿಯನ್ನು ಸದರಿ ಮದ್ಯದ ಬಗ್ಗೆ ವಿಚಾರ ಮಾಡಲಾಗಿ ಮಾವಿನಹಳ್ಳಿಯಲ್ಲಿರುವ ಸಂಜೀವಿನಿ  ವೈನ್ಸ್‌‌‌ನಿಂದ ಇದೇ ದೊಡ್ಡಗೊಲ್ಲಹಳ್ಳಿ  ಗ್ರಾಮದಲ್ಲಿ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದನು. ಈ ರೀತಿಯಾಗಿ ಮದ್ಯ ಮಾರಾಟ ಮಾಡಲು ನಿನ್ನ ಬಳಿ ಯಾವುದಾದರೂ ಪರವಾನಗೀ ಇದೆಯೇ ಎಂತಾ ಕೇಳಲಾಗಿ ಯಾವುದೇ ರೀತಿಯ ಪರವಾನಗಿ ಇರುವುದಿಲ್ಲವೆಂತಲೂ,ಅಕ್ರಮವಾಗಿ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿರುವುದಾಗಿಯೂ ತಿಳಿಸಿದ್ದರಿಂದ, ಸ್ಥಳದಲ್ಲಿಯೇ ದ್ವಿಚಕ್ರ ವಾಹನವನ್ನು, ಮದ್ಯ ತುಂಬಿದ ಒಂದು ಬಟ್ಟೆ ಬ್ಯಾಗ್ ನ್ನು ಹಾಗೂ ಮದ್ಯವನ್ನು ವಶಕ್ಕೆ ಪಡೆದು ಆಸಾಮಿಯೊಂದಿಗೆ ಮಧ್ಯಾಹ್ನ 2-40 ಗಂಟೆಗೆ ಠಾಣೆಗೆ ಬಂದು ಈತನ ವಿರುದ್ದ ಹೆಬ್ಬೂರು ಪೊಲೀಸ್ ಠಾಣಾ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

ಬಡವನಹಳ್ಳಿ ಪೊಲೀಸ್ ಠಾಣಾ ಯು ಡಿ ಆರ್‌‌ ನಂ 19/2017 ಕಲಂ 174  ಸಿ ಆರ್‌ ಪಿ ಸಿ

ದಿನಾಂಕ:28/10/2017 ರಂದು ಸಂಜೆ 5-30 ಗಂಟೆ ಸಮಯದಲ್ಲಿ ಪಿರ್ಯಾದಿ ನಾಗಣ್ಣ ಬಿನ್ ಲೇ ಕರಿಯಣ್ಣ, 65 ವರ್ಷ, ಗೊಲ್ಲರು, ದೊಡ್ಡೇರಿ ಗೊಲ್ಲರಹಟ್ಟಿ, ದೊಡ್ಡೇರಿ ಹೋ, ಮಧುಗಿರಿ ತಾ ರವರು ಎಂಬುವವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ ನನಗೆ ಮೂರು ಜನ ಗಂಡು ಮಕ್ಕಳು ಮತ್ತು ಮೂರು ಜನ ಹೆಣ್ಣು ಮಕ್ಕಳಿದ್ದು, ಮೊದಲನೇ ದೇವರಾಜ, ಎರಡನೇ ಪ್ರಸನ್ನ ಕುಮಾರ, ಮೂರನೇ ಮಂಜುನಾಥ ಆಗಿರುತ್ತಾರೆ. ಹೆಣ್ಣು ಮಕ್ಕಳಿಗೆ ಮದುವೆಯಾಗಿದ್ದು, ತಮ್ಮ ತಮ್ಮ ಗಂಡಂದಿರ ಮನೆಗಳಲ್ಲಿ ವಾಸವಿರುತ್ತಾರೆ. ಮೂರು ಜನ ಗಂಡು ಮಕ್ಕಳಿಗೂ ಇನ್ನು ಮದುವೆಯಾಗಿರುವುದಿಲ್ಲ. ನಾನು ಮತ್ತು ನನ್ನ ಹೆಂಡತಿ ದೊಡ್ಡಕ್ಕ ಹಾಗೂ ಗಂಡು ಮಕ್ಕಳು ಒಟ್ಟು ಕುಟುಂಬದಲ್ಲಿ ವ್ಯವಸಾಯ ಮತ್ತು ಕುಲ ಕಸುಬಾದ ಕುರಿ ಸಾಗಾಣಿಕೆಯನ್ನು ಮಾಡಿಕೊಂಡು ಜೀವನ ಸಾಗಿಸುತ್ತಿರುತ್ತೇವೆ. ಈಗೀರುವಾಗ್ಗೆ ನಾವುಗಳು ಸಾಕಿದ್ದ ಸುಮಾರು 30 ಕುರಿಗಳನ್ನು ಮೇಯಿಸಲು ನನ್ನ ಮೊದಲನೇ ಮಗ ದೇವರಾಜ ಮತ್ತು ಮೂರನೇ ಮಗ ಮಂಜುನಾಥ ಈ ದಿನ  ಬೆಳಿಗ್ಗೆ 10-30 ಗಂಟೆಯಲ್ಲಿ ಬಯಲಿಗೆ ಹೊಡೆದುಕೊಂಡು ಹೋಗಿದ್ದರು. ಮದ್ಯಾಹ್ನ 3-30 ಗಂಟೆಯಲ್ಲಿ ನನ್ನ ಮಕ್ಕಳು ಗಿರೇಗೊಂಡನಹಳ್ಳಿ ಗ್ರಾಮದ ಕೆರೆಯಂಗಳದಲ್ಲಿ ಕುರಿಗಳಿದ್ದ ಖಾಯಿಲೆಗಾಗಿ ಔಷಧಿಯನ್ನು ಹಾಕಿ ಕೆರೆಯ ದಡದಲ್ಲಿ ಬಟ್ಟೆ ಬಿಚ್ಚಿಟ್ಟು, ಮೈ ತೊಳೆದುಕೊಳ್ಳಲೆಂದು ಕೆರೆಯ ದಡಕ್ಕೆ ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ನನ್ನ ಮಗ ದೇವರಾಜ ನೀರಿಗೆ ಬಿದ್ದು  ಮೃತಪಟ್ಟಿರುತ್ತಾನೆಂದು ತಿಳಿಯಿತು. ಕೆರೆಯ ಬಳಿಗೆ ಹೋದೆ ಅಲ್ಲಿ ನನ್ನ ಇನ್ನೊಬ್ಬ ಮಗ ಮಂಜುನಾಥ ಮತ್ತು ಗ್ರಾಮಸ್ಥರು ಸೇರಿದ್ದರು. ಮಂಜುನಾಥ ನಡೆದ ವಿಚಾರವನ್ನು ತಿಳಿಸಿದ. ಸ್ವಲ್ಪ ಹೊತ್ತಿನಲ್ಲಿ ಅಂಗ್ನಿಶಾಮಕ ದಳದವರು ಬಂದು ನೀರಿನಲ್ಲಿದ್ದ ನನ್ನ ಮಗ ದೇವರಾಜನ ಮೃತ ದೇಹವನ್ನು ಪತ್ತೆ ಮಾಡಿ ಹೊರ ತೆಗೆದಿರುತ್ತಾರೆ. ನನ್ನ ಮಗ ದೇವರಾಜ ಕುರಿಗಳಿಗೆ ಔಷಧಿ ಹಾಕಿ ನಂತರ ಕೆರೆಯ ನೀರಿನಲ್ಲಿ ಮೈ ತೊಳೆದುಕೊಳ್ಳಲೆಂದು ನೀರಿನ ದಡಕ್ಕೆ ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ಈಜುಬಾರದೇ ಮೃತಪಟ್ಟಿರುತ್ತಾನೆ. ನನ್ನ ಮಗನ ಸಾವಿನಲ್ಲಿ ಯಾರ ಮೇಲೂ ಯಾವುದೇ ಅನುಮಾನ ಇರುವುದಿಲ್ಲ.ಮುಂದಿನ ಕ್ರಮ ಜರುಗಿಸಬೇಕೆಂತ ನೀಡಿದ ದೂರಿನ ಅಂಶವಾಗಿರುತ್ತೆ.Saturday, 28 October 2017

Crime Incidents 28-10-17

ಚೇಳೂರು  ಪೊಲೀಸ್  ಠಾಣಾ   ಮೊ. ನಂ: 168/2017  ಕಲಂ 323.504.307.114. ರೆ/ವಿ 149 ಐ.ಪಿ.ಸಿ

ದಿನಾಂಕ;28/10/2017 ರಂದು  ಬೆಳಗ್ಗೆ 06-00  ಗಂಟೆಗೆ ನಮ್ಮ ಠಾಣಾ ಹೆಚ್‌,ಸಿ, 350 ನಟರಾಜುರವರು ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಗೆ ಬೇಟಿ ನೀಡಿ ಗಾಯಾಳು ಅಪ್ರಾಪ್ತ ವಯಸ್ಕಳಾಗಿದ್ದು ಹೇಳಿಕೆ ಕೊಡುವ ಸ್ಥಿತಿಯಲ್ಲಿ ಇಲ್ಲದೇ ಇದ್ದದ್ದುರಿಂದ ಆತಳ ತಾಯಿ ಶಾರದಮ್ಮರವರು ನೀಡಿದ ಲಿಖಿತ ಪಿರ್ಯಾದು ಅಂಶವೇನಂದರೆ, ನನ್ನನ್ನು ಹೀಗ್ಗೆ 17 ವರ್ಷಗಳ ಹಿಂದೆ ಚಿಕ್ಕನಾಯ್ಕನಹಳ್ಳಿ ತಾಲ್ಲೋಕು, ಹುಳಿಯಾರು ಹೋಬಳಿ, ಹಂದಿಗನಾಡು ಗ್ರಾಮದ ತಿಮ್ಮಯ್ಯನವರ ಮಗನಾದ ನಾಗರಾಜು  ಎಂಬುವರಿಗೆ ಕೊಟ್ಟು ಮದುವೆ ಮಾಡಿಕೊಟ್ಟಿದ್ದು, ನಾನು ಮದುವೆ ಆಗಿನಿಂದಲೂ ನಮ್ಮ ತವರು ಮನೆಯಲ್ಲಿ ಪಿನ್ನೇನಹಳ್ಳಿ ಗ್ರಾಮದಲ್ಲಿ ವಾಸವಾಗಿರುತ್ತೇನೆ ,ನನಗೆ 15 ವರ್ಷದ ಬೃಂದಾ ಎಂಬ ಒಂದು ಹೆಣ್ಣು ಮಗು ಇರುತ್ತೆ, ನನ್ನ ಮಗಳು ಎಸ್‌,ಎಸ್‌,ಎಲ್,ಸಿ ಯನ್ನು ಮುರಾರ್ಜಿದೇಸಾಯಿ ಸ್ಕೂಲ್‌ನಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದು ಶಾಲಾ ಆಸ್ಟಲ್‌ನಲ್ಲಿ ಇರುತ್ತಾರೆ, ನಾನು ಪಿನ್ನೇನಹಳ್ಳಿ ಗ್ರಾಮದಲ್ಲಿ ಹೀಗ್ಗೆ ಒಂದು ವರ್ಷದ ಹಿಂದೆ ಒಂದು  ಮನೆಯನ್ನು  ಕಟ್ಟಿರುತ್ತೇನೆ. ನಾನು  ಆಶಾ  ಕಾರ್ಯ  ಕರ್ತೆಯಾಗಿ  ಕೆಲಸ ಮಾಡುತ್ತಿದ್ದು,  ನಾನು  ಕೆಲಸ  ಮಾಡುವ  ಕಡೆಯಲ್ಲಿ  ಯಾರನ್ನಾದರೂ  ಚೆನ್ನಾಗಿ  ಮಾತ ನಾಡಿಸಿದರೆ  ನನ್ನ  ಮೇಲೆ  ಅನುಮಾನ  ಪಡುತ್ತಿದ್ದು,  ನಾನು  ಮತ್ತು ನನ್ನ  ಗಂಡ  ಈ  ಹಿಂದೆ  ಒಂದು  ಬಾರಿ  ಗಲಾಟೆ   ಮಾಡಿಕೊಂಡು  ಮನೆಯ  ಶಿಟನ್ನು  ಹೊಡೆದು ನನಗೆ  ಸೀಮೆ  ಎಣ್ಣೆ  ಸುರಿದು  ಬೆಂಕಿ  ಹಚ್ಚಿಲು  ಬರುತ್ತಿದ್ದನು. ಅದಕ್ಕೆ   ನಾನು  ಅದರ  ಬಗ್ಗೆ  ದೂರು  ನೀಡಿದ್ದೆನು.  ಅಳಿಲುಘಟ್ಟ  ಗ್ರಾಮದ  ದೇವರಾಜು  ಬಂದು  ಅವನನ್ನು  ಬಿಡಿಸಿಕೊಂಡು   ಹೋಗಿ  ನನ್ನ  ಮಗಳನ್ನು  ಕೊಲೆ  ಮಾಡುವುದಾಗಿ  ಹೇಳಿ  ಕೊಟ್ಟಿದ್ದನ್ನು  ಅವರ  ಅಪ್ಪ  ಅಮ್ಮ  ತಮ್ಮಂದಿರೂ  ಹೇಳಿಕೊಟ್ಟಿದ್ದಾರೆ   ಈ  ವಿಚಾರದಲ್ಲಿ  ಈಗ್ಗೆ  01  ತಿಂಗಳ  ಹಿಂದೆ  ಮನೆ ಬಿಟ್ಟು  ಎಲ್ಲಿಯೋ  ಹೋಗಿದ್ದವನು  ದಿನಾಂಕ; 27/10/2017  ರಂದು  ಸಂಜೆ  6-00  ಗಂಟೆ  ಸಮಯದಲ್ಲಿ  ನಾನು  ಮತ್ತು  ನನ್ನ  ಮಗಳು  ಇದ್ದ  ಮನೆಯ  ಬಳಿ  ಬಂದು  ನನ್ನ  ಮೇಲೆ  ಗಲಾಟೆ  ಮಾಡಿ  ಅವ್ಯಾಚ್ಯ   ಶಬ್ದಗಳಿಂದ  ಸೂಳೆ  ಮುಂಡೆ  ಬೋಳಿ  ಮುಂಡೆ   ಕೈಗಳಿಂದ  ಹೊಡೆದನು. ನನ್ನನ್ನು   ಮತ್ತು ನನ್ನ  ಮಗಳನ್ನು  ಕೊಲೆ  ಮಾಡುವ  ಉದ್ದೇಶದಿಂದ  ಅವನೇ  ತಂದಿದ್ದ   ಮಚ್ಚಿನಿಂದ  ನನಗೆ  ಹೊಡೆಯಲು   ಬಂದಾಗ  ನನ್ನ  ಜೊತೆಯಲ್ಲಿ  ಇದ್ದ  ನನ್ನ  ಮಗಳಾದ  ಬೃಂದಾರವರನ್ನು   ಅಟ್ಟಿಸಿಕೊಂಡು  ಹೋಗಿ ಮಚ್ಚಿನಿಂದ   ಕತ್ತಿಗೆ  ಹೊಡೆದು   ಕೈಗಳನ್ನು  ಕಡಿದು  ಕೆನ್ನೆಯನ್ನು  ಕಡಿದು  ಎಡ ಹಣೇಗೆ  ಎಡ  ಕೈಗೆ  ಎಡ ಕೈ  ಬೆರಳುಗಳಿಗೆ    ಬಲ  ಗದ್ದಕ್ಕೆ   ಬೆನ್ನಿಗೆ  ಕಚ್ಚಿನಿಂದ  ಹೊಡೆದು  ರಕ್ತ ಗಾಯ  ಮಾಡಿರುತ್ತಾನೆ.  ಅಷ್ಟರಲ್ಲಿ  ಅಲ್ಲಿಯೇ  ಇದ್ದ   ಸಿದ್ದಯ್ಯ   ಬಿನ್  ದೊಡ್ಡ  ಸಿದ್ದಯ್ಯ,  ಮತ್ತು  ಗಂಗಮ್ಮ  ಕೋಂ  ಮೂಟೆಗೌಡರು,  ಬಂದು  ಬಿಡಿಸಿ   ಗಾಯಗಳಾಗಿದ್ದ  ನನ್ನ ಮಗಳನ್ನು  ಯಾವುದೋ  ವಾಹನದಲ್ಲಿ   ನಾನು  ಮತ್ತು  ಯೋಗೀಶ್  ಇಬ್ಬರೂ  ಸೇರಿ  ಹೊಸಕೆರೆ  ಆಸ್ಪತ್ರೆಗೆ  ಕರೆದುಕೊಂಡು  ಬಂದು  ಪ್ರಥಮ  ಚಿಕಿತ್ಸೆ  ಕೊಡಿಸಿ  ಹೆಚ್ಚಿನ  ಚಿಕಿತ್ಸೆಗಾಗಿ  ತುಮಕೂರು  ಜಿಲ್ಲಾ  ಆಸ್ಪತ್ರೆಗೆ   ಕರೆದುಕೊಂಡು  ಬಂದು  ವೈದ್ಯರ  ಸಲಹೆಯ  ಮೇರೆಗೆ  ಹೆಚ್ಚಿನ  ಚಿಕಿತ್ಸೆಗಾಗಿ  ಬೆಂಗಳೂರು  ವಿಕ್ಟೋರಿಯಾ  ಆಸ್ಪತ್ರೆಗೆ  ಕರೆದುಕೊಂಡು  ಬಂದು  ಚಿಕಿತ್ಸೆ  ಕೊಡಿಸುತ್ತಿರುತ್ತೇವೆ,  ನನ್ನ  ಗಂಡ   ನಾಗರಾಜು  ಸಂಸಾರದ  ವಿಚಾರದಲ್ಲಿ   ನನ್ನ  ಮೇಲೆ  ಜಗಳ  ತೆಗೆದು  ನನ್ನ  ಮಗಳಿಗೆ  ಮಚ್ಚಿನಿಂದ   ಹೊಡೆದಿರುತ್ತಾನೆ.  ನನ್ನ  ಗಂಡ  ನಾಗರಾಹು  ಮತ್ತು  ಅಳಿಲುಘಟ್ಟ  ದೇವರಾಜು   ನನ್ನ  ಗಂಡನ  ತಂದೆ  ತಿಮ್ಮಯ್ಯ  ತಾಯಿ  ಗಂಗಮ್ಮ  ತಮ್ಮಂದಿರಾದ  ಕೃಷ್ಣ ಮೂರ್ತಿ   ಭೂತರಾಜು , ಸತೀಶ ಇವರುಗಳ  ಮೇಲೆ  ಕಾನೂನು  ರೀತ್ಯ   ಕ್ರಮ  ಜರುಗಿಸಲು   ಕೋರಿ ಇತ್ಯಾದಿಯಾದ   ಪಿರ್ಯಾದು  ಅಂಶ.

ಹುಳಿಯಾರು ಪೊಲೀಸ್ ಠಾಣಾ ಮೊ.ನಂ 135/2017, ಕಲಂ 87 ಕೆ.ಪಿ ಆಕ್ಟ್.

ದಿನಾಂಕ 27/10/2017 ರಂದು ಸಂಜೆ 06-30 ಗಂಟೆಗೆ ಪಿಎಸ್.ಐ ರವರು ಠಾಣೆಗೆ ಹಾಜರಾಗಿ ನೀಡಿದ ಜ್ಞಾಪನದ ಅಂಶವೇನೆಂದರೆ, ದಿನಾಂಕ:-27-10-2017 ರಂದು ಸಂಜೆ 04:15 ಗಂಟೆಗೆ ನಾನು ಹುಳಿಯಾರು ಪೊಲೀಸ್ ಠಾಣೆಯಲ್ಲಿದ್ದಾಗ ಹುಳಿಯಾರು ಠಾಣಾ ಸರಹದ್ದು ಹುಳಿಯಾರು ಟೌನ್ ನಲ್ಲಿರುವ ನೀರಿನ ಅಣೆಕಟ್ಟೆಯ ಆವರಣದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಯಾರೋ ಆಸಾಮಿಗಳು ಹಣವನ್ನು ಪಣವಾಗಿ ಕಟ್ಟಿಕೊಂಡು ಕಾನೂನು ಬಾಹಿರ ಅಂದರ್ - ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿರುವುದಾಗಿ ಮಾಹಿತಿ ಬಂದಿದ್ದು, ಅಕ್ರಮ ಜೂಜಾಟದ  ಮೇಲೆ ದಾಳಿ  ಮಾಡುವ  ಬಗ್ಗೆ  ನ್ಯಾಯಾಲಯದಿಂದ  ಅನುಮತಿ ಪಡೆದಿದ್ದು, ಠಾಣೆಗೆ ಪಂಚರನ್ನು ಬರಮಾಡಿಕೊಂಡು ಪಂಚರೊಂದಿಗೆ ಸಿಬ್ಬಂದಿಯವರನ್ನು ಕರೆದುಕೊಂಡು ಇಲಾಖಾ ಜೀಪಿನಲ್ಲಿ ಸಂಜೆ 04:45 ಗಂಟೆಗೆ ಹುಳಿಯಾರು ಟೌನಿನಲ್ಲಿರುವ ಅಣೆಕಟ್ಟೆಕಟ್ಟೆಯಿಂದ ಸ್ವಲ್ಪ ದೂರದಲ್ಲಿ ಬೇಲಿಯ ಮರೆಯಲ್ಲಿ  ಜೀಪನ್ನು ನಿಲ್ಲಿಸಿ ನೋಡಲಾಗಿ ಆಣೆಕಟ್ಟೆಯ ಆವರಣದ ಸಾರ್ವಜನಿಕ ಸ್ಥಳದಲ್ಲಿ 5 ಜನ ಅಸಾಮಿಗಳು ನೆಲದ ಮೇಲೆ ವೃತ್ತಾಕಾರವಾಗಿ ಕುಳಿತುಕೊಂಡು ಮದ್ಯದಲ್ಲಿ ಒಂದು ಪ್ಲಾಸ್ಟಿಕ್ ಚೀಲವನ್ನು ಹಾಕಿಕೊಂಡು  ಹಣವನ್ನು ಪಣಕ್ಕೆ ಕಟ್ಟಿಕೊಂಡು ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ್ – ಬಾಹರ್ ಎಂತ ಹೇಳುತ್ತಾ ಇಸ್ಪೀಟ್ ಜೂಜಾಟವಾಡುತ್ತಿದ್ದು, ಸದರಿಯವರನ್ನು ಸುತ್ತುವರೆದು ದಾಳಿ ಮಾಡಿ ಮೇಲೆ ಹೇಳದಂತೆ ತಿಳಿಸಿ ಅಸಾಮಿಗಳ ಹೆಸರು ಮತ್ತು ವಿಳಾಸವನ್ನು ತಿಳಿಯಲಾಗಿ 1) ರಘು ಬಿನ್ ಬಸವರಾಜು, ಕೆಂಕೆರೆ, 2)ಮಂಜುನಾಥ ಬಿನ್ ಈಶ್ವರಪ್ಪ, ಚಿಕ್ಕಬಿದರೆ, 3) ಈಶ್ವರಯ್ಯ ಬಿನ್ ಸಿದ್ದಯ್ಯ,  ಚಿಕ್ಕಬಿದರೆ, 4) ಜಬೀವುಲ್ಲ ಬಿನ್ ನಝೀರ್ ಸಾಬ್,  ಆಚಾರಬೀದಿ, ಹುಳಿಯಾರು ಹೌನ್, 5) ಆಕಾಶ್ ಬಿನ್ ಶೇಖರ್, ಇಂದಿರಾನಗರ, ಹುಳಿಯಾರು ಟೌನ್, ಸದರಿ ಆಸಾಮಿಗಳನ್ನು ಹಾಗೂ ಕಾನೂನು ಬಾಹಿರ ಇಸ್ಪೀಟ್ ಜೂಜಾಟಕ್ಕೆ ಪಣವಾಗಿ ಕಟ್ಟಿಕೊಂಡಿದ್ದ ಒಟ್ಟು 10320/- ರೂ ನಗದು ಹಣವನ್ನು ಇಸ್ಪೀಟ್ ಜೂಜಾಟಕ್ಕೆ ಬಳಿಸಿದ್ದ 52 ಇಸ್ಪೀಟ್ ಎಲೆಗಳನ್ನು ಹಾಗೂ ನೆಲಕ್ಕೆ ಹಾಸಿಕೊಂಡಿದ್ದ ಒಂದು ಪ್ಲಾಸ್ಟಿಕ್ ಚೀಲವನ್ನು ಪಂಚರ ಸಮಕ್ಷಮ ಪಂಚನಾಮ ಕ್ರಮ ಜರುಗಿಸಿ ವಶಕ್ಕೆ ಪಡೆದು ಮೇಲ್ಕಂಡ ಆಸಾಮಿಗಳು ಮತ್ತು ಮಾಲಿನೊಂದಿಗೆ ವಾಪಸ್ ಠಾಣೆಗೆ ಬಂದು ಪ್ರಕರಣ ದಾಖಲಿಸಲು ಸೂಚಿಸಿ ನೀಡಿದ ಜ್ಞಾಪನದ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

ಚೇಳೂರು  ಪೊಲೀಸ್   ಠಾಣಾ  ಮೊ. ನಂ: 168/2017  ಕಲಂ 279.304(ಎ) ಐ.ಪಿ.ಸಿ

ದಿನಾಂಕ;27/10/2017  ರಂದು  ಮದ್ಯಾಹ್ನ 3-00  ಗಂಟೆಗೆ  ಪಿರ್ಯಾದಿ  ರೂಪ  ಶ್ರೀ  ರವರು  ಠಾಣೆಗೆ  ಹಾಜರಾಗಿ  ನೀಡಿದ  ಪಿರ್ಯಾದು ಅಂಶವೇನಂದರೆ, ಈಗ್ಗೆ   ಸುಮಾರು 15  ದಿನಗಳ  ಹಿಂದೆ  ನಮ್ಮ  ಸಂಬಂದಿ  ನನ್ನ  ತಂಗಿ  ಮಗ   ರಾಮನಗರ (ಜಿಲ್ಲೆ)  ರಾಮನಗರ ( ತಾ) ಕಸಬಾ  ಹೋ,  ಗಂಗರಾಜನಹಳ್ಳಿ  ಗ್ರಾಮದ   ನಾಗರಾಜುರವರ  ಮಗನಾದ   ತರುಣ ಎಂಬುವರಿಗೆ  ಶಾಲೆಯ  ರಜೆ  ಇದ್ದುದ್ದರಿಂದ ತರುಣ್ ರವರನ್ನು  ಕರೆದುಕೊಂಡು  ಬಂದಿದ್ದು,  ನಮ್ಮ  ಮನೆಯಲ್ಲಿ  ಇದ್ದನು.   ದಿನಾಂಕ;27/10/2017 ರಂದು ಬೆಳಗ್ಗೆ  10-00  ಗಂಟೆ  ಸಮಯದಲ್ಲಿ  ನಮ್ಮ  ಬಾಬ್ತು   ಸಾತೇನಹಳ್ಳಿ  ಗೇಟ್  ನಲ್ಲಿ  ಇರುವ  ಅಂಗಡಿಯ  ಹತ್ತಿರ ಇದ್ದೆನು.   ಆಗ  ನನ್ನ  ಗಂಡ   ಪ್ರಕಾಶ್ ಮತ್ತು  ತರುಣ್  ಇಬ್ಬರೂ  ನನ್ನ  ಬಾಬ್ತು  ಕೆಎ-06-ಯು-6882  ನೇ  ಟಿ.ವಿ.ಎಸ್. ಎಕ್ಸ್  ಎಲ್  ಹೆವಿಡ್ಯೂಟಿ   ವಾಹನದಲ್ಲಿ  ಬಂದು  ನನಗೆ  ಮನೆಯ  ಹತ್ತಿರ  ಬರುವಂತೆ  ತಿಳಿಸಿ  ಅವರು  ನಮ್ಮ  ಬಾಬ್ತು ಕೆಎ-06-ಯು-6882  ನೇ  ಟಿ.ವಿ.ಎಸ್. ಎಕ್ಸ್  ಎಲ್  ಹೆವಿಡ್ಯೂಟಿ    ದ್ವಿ- ಚಕ್ರ  ವಾಹನದಲ್ಲಿ   ಹೋಗಿ   ನಮ್ಮ  ಗ್ರಾಮದ  ಚೇಳೂರು-  ತುಮಕೂರು  ರಸ್ತೆಯಲ್ಲಿ  ಇರುವ  ನಂದಿನಿ  ಹಾಲಿನ ಡೈರಿಯ  ಬಳಿಗೆ  ರಸ್ತೆಯ  ಬದಿಯಲ್ಲಿ  ಕೆಎ-06-ಯು-6882  ನೇ  ಟಿ.ವಿ.ಎಸ್. ಎಕ್ಸ್  ಎಲ್  ಹೆವಿಡ್ಯೂಟಿ    ದ್ವಿ- ಚಕ್ರ  ವಾಹನವನ್ನು  ನಿಲ್ಲಿಸಿ  ನನ್ನ  ಗಂಡ  ಹಾಲಿನ  ಡೈರಿಗೆ  ಹೋದರು.  ನನ್ನ  ತಂಗಿ  ಮಗ  ತರುಣ್  ಸದರಿ  ದ್ವಿ- ಚಕ್ರ  ವಾಹನದ  ಮೇಲೆ  ಕುಳಿತುಕೊಂಡಿದ್ದನು. ನಾನು  ಮನೆಯ  ಕಡೆಗೆ  ಅದೇ  ರಸ್ತೆಯಲ್ಲಿ  ಬರುತ್ತಿದ್ದಾಗ   ಬೆಳಗ್ಗೆ 10-30  ಗಂಟೆ  ಸಮಯದಲ್ಲಿ  ಚೇಳೂರು  ಕಡೆಯಿಂದ  ತುಮಕೂರು  ಕಡೆಗೆ ಬಂದ  ಕೆಎ-50-ಎ-1665 ನೇ  ಕಾರಿನ  ಚಾಲಕ  ತನ್ನ  ಕಾರನ್ನು  ಅತೀವೇಗ  ಮತ್ತು  ಅಜಾಗರೂ  ಕತೆಯಿಂದ  ಓಡಿಸಿಕೊಂಡು  ಬಂದು  ರಸ್ತೆಯ  ಬದಿಯಲ್ಲಿ   ಟಿ.ವಿ.ಎಸ್. ಎಕ್ಸ್  ಎಲ್  ಹೆವಿಡ್ಯೂಟಿಗೆ  ಡಿಕ್ಕಿ  ಹೊಡೆಸಿದ  ಪರಿಣಾಮ  ದ್ವಿ- ಚಕ್ರ  ವಾಹನದ  ಮೇಲೆ  ಕುಳಿತ್ತಿದ್ದ  ತರುಣ್  ಕೆಳಗೆ  ಬಿದ್ದನು. ಆಗ  ನಾನು  ಮತ್ತು  ಹಾಲಿನ  ಡ್ರೈರಿಯ  ಬಳಿ  ಇದ್ದ  ನನ್ನ  ಗಂಡ ಪ್ರಕಾಶ್   ಮತ್ತು   ಗ್ರಾಮದವರು   ಅಲ್ಲಿಗೆ   ಬಂದು  ನೋಡಲಾಗಿ  ತರುಣ್ ತಲೆಗೆ  ಪೆಟ್ಟು  ಬಿದ್ದು,   ರಕ್ತ ಸ್ರಾವವಾಗುತ್ತಿತ್ತು.  ಆಗ  ನಾನು  ಮತ್ತು ನನ್ನ  ಗಂಡ  ಪ್ರಕಾಶ್  ಹಾಗೂ  ಅಪಘಾತ  ಪಡಿಸಿದ   ಕಾರಿನ   ಚಾಲಕ  ಮೂರು  ಜನರು  ಸೇರಿಕೊಂಡು   ಗಾಯಗಳಾಗಿದ್ದ  ತರುಣ್  ನನ್ನು ರಸ್ತೆಯಲ್ಲಿ  ಬರುತ್ತಿದ್ದ ಯಾವುದೋ   ವಾಹನದಲ್ಲಿ  ಹಾಕಿಕೊಂಡು   ತುಮಕೂರು  ಜಿಲ್ಲಾ   ಸರ್ಕಾರಿ  ಆಸ್ಪತ್ರೆಗೆ  ಕರೆದುಕೊಂಡು  ಹೋದಾಗ  ತುಮಕೂರು  ಜಿಲ್ಲಾ  ಆಸ್ಪತ್ರೆಯ  ಮುಂಭಾಗ  ಬೆಳಗ್ಗೆ 11-30  ಗಂಟೆ  ಸಮಯದಲ್ಲಿ  ಮೃತಪಟ್ಟನು.  ಮೃತ  ದೇಹವು  ತುಮಕೂರು  ಜಿಲ್ಲಾ  ಆಸ್ಪತ್ರೆಯ  ಶವಗಾರದಲ್ಲಿ  ಇರುತ್ತೆ.  ಈ  ಅಪಘಾತಕ್ಕೆ  ಕೆಎ-50-ಎ-1665 ನೇ  ಕಾರಿನ   ಚಾಲಕ  ಅತೀ ವೇಗ  ಮತ್ತು  ಅಜಾಗರೂ  ಕತೆಯಿಂದ  ಓಡಿಸಿಕೊಂಡು  ಬಂದು  ರಸ್ತೆಯ  ಬದಿ  ಇದ್ದ ಟಿ.ವಿ.ಎಸ್. ಗೆ  ಡಿಕ್ಕಿ  ಹೊಡೆಸಿದ  ಪರಿಣಾಮ  ಟಿ.ವಿ.ಎಸ್  ಮೇಲೆ  ಕುಳಿತ್ತಿದ್ದ  ತರುಣ್  ಕೆಳೆಗೆ  ಬಿದ್ದು,  ಆತನ  ತಲೆಗೆ  ಪೆಟ್ಟು ಬಿದ್ದು ಮೃತಪಟ್ಟಿರುತ್ತಾನೆ.  ಅಪಘಾತ  ಪಡಿಸಿದ   ಚಾಲಕನ  ಹೆಸರು   ವಿಳಾಸ  ಗೊತ್ತಿರುವುದಿಲ್ಲ.  ಈ  ವಿಚಾರವನ್ನು  ತರುಣ್  ತಂದೆ- ತಾಯಿಗೆ  ತಿಳಿಸಿ  ಈ  ದಿನ  ತಡವಾಗಿ  ಬಂದು  ದೂರು  ನೀಡಿರುತ್ತೇನೆ.  ಈ  ಅಪಘಾತಕ್ಕೆ  ಕಾರಣನಾದ  ಕೆಎ-50-ಎ-1665 ನೇ   ಕಾರಿನ   ಚಾಲಕನ  ಮೇಲೆ  ಕಾನೂನು  ರೀತ್ಯ  ಕ್ರಮ  ಜರುಗಿಸಲು ಇತ್ಯಾದಿಯಾದ  ಪಿರ್ಯಾದು ಅಂಶ.

ತಿಪಟೂರು ನಗರ ಪೊಲೀಸ್ ಠಾಣಾ ಯು.ಡಿ.ಆರ್ .ನಂ- 15/2017 ಕಲಂ: 174 ಸಿ.ಆರ್.ಪಿ.ಸಿ

ದಿನಾಂಕ:27-10-2017 ರಂದು ಪಿರ್ಯಾಧಿ ಸೋಮಶೇಖರ ಬಿನ್ ಹನುಮಪ್ಪ, 65 ವರ್ಷ, ಮಂಜುನಾಥನಗರ, ತಿಪಟೂರು ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ನನ್ನ ಮಗ 26 ವರ್ಷದ ವಿಜಯಕುಮಾರ ರವರು ನಮ್ಮ ಜೊತೆ ವಾಸವಾಗಿರದೆ ಹೆಂಡತಿ ಮಕ್ಕಳೊಂದಿಗೆ ಬೇರೆ ವಾಸವಾಗಿದ್ದು, ಈ ದಿನ ಬೆಳಿಗ್ಗೆ ನಾನು ಕೆಲಸ ಮಾಡುವ ಅಂಗಡಿಯ ಬಳಿ ಬಂದು ನಾನು ಸಾಲ ಮಾಡಿಕೊಂಡಿದ್ದೇನೆ ನಾನು ಬದುಕುವುದಿಲ್ಲವೆಂದು ಹೇಳಿದ್ದು ಆದರೂ ನಾನು ಅವನಿಗೆ ಧೈರ್ಯವಾಗಿರು ಎಂದು ಹೇಳಿದ್ದೆನು. ವಿಜಯಕುಮಾರ ರವರ ಹೆಂಡತಿ ತವರು ಮನೆಗೆ ಹೋಗಿದ್ದು ಅವನು ಮನೆಯಲ್ಲಿ ಒಬ್ಬನೇ ಇದ್ದನು. ಸಂಜೆ 7-30 ಗಂಟೆ ಸಮಯದಲ್ಲಿ ಗೋಪಿ ಎಂಬುವರು ನಮ್ಮ ಮನೆಯ ಬಳಿ ಬಂದು ವಿಜಯಕುಮಾರ ರವರು ಮನೆಯಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆಂದು ಹೇಳಿದ್ದು. ನಾನು ಅಲ್ಲಿಗೆ ಹೋಗಿ ನೋಡಿದಾಗ ಮನೆಯ ಹಿಂಭಾಗ ಶೀಟ್ ಕೆಳಗಡೆ ಕಂಬಿಗೆ ವೈರ್ ನಿಂದ ನೇಣು ಹಾಕಿಕೊಂಡಿದ್ದು. ಈತನು ಮದ್ಯಾಹ್ನ 3-00 ಗಂಟೆಯಿಂದ 5-00 ಗಂಟೆ ಒಳಗಡೆ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ. ಈತನು ಮದ್ಯಪಾನ ಮಾಡಿಕೊಂಡು ಓಡಾಡುತ್ತಿದ್ದು. ಈತನು ಸಾಲ ಮಾಡಿಕೊಂಡಿದ್ದರಿಂದ ನೇಣುಹಾಕಿಕೊಂಡು ಮೃತಪಟ್ಟಿರುತ್ತಾನೆ ಎಂದು ನೀಡಿದ ದೂರಿನ ಮೇರೆಗೆ ಕೇಸು ದಾಖಲು ಮಾಡಿರುತ್ತೆ.Friday, 27 October 2017

Crime Incidents 27-10-17

ತಿಪಟೂರು ನಗರ ಪೊಲೀಸ್ ಠಾಣಾ ಮೊ .ನಂ- 169/2017 ಕಲಂ: 380 ಐಪಿಸಿ

ದಿನಾಂಕ: 26/10/2017 ರಂದು ರಾತ್ರಿ 8-45 ಗಂಟೆಗೆ ಪಿರ್ಯಾದಿ ಶ್ರೀಮತಿ ಸುಮಿತ್ರ ಕೋಂ ಶಿವಾನಂದಯ್ಯ, 47 ವರ್ಷ, ಲಿಂಗಾಯಿತರು, ಗೃಹಿಣಿ, ಗೋವಿನಪುರ, 8ನೇ ಕ್ರಾಸ್‌, ಹಾಲ್ಕುರಿಕೆ ರಸ್ತೆ, ತಿಪಟೂರು ಟೌನ್‌ ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ದಿನಾಂಕ: 26/10/2017 ರಂದು ಬೆಳಿಗ್ಗೆ 10-15 ಗಂಟೆಯಲ್ಲಿ ತಿಪಟೂರು ಟೌನ್ ಸಿದ್ದರಾಮೇಶ್ವರನಗರದ 2ನೇ ಕ್ರಾಸ್ ನಲ್ಲಿ ವಾಸವಾಗಿರುವ ನಮ್ಮ ತಾಯಿ ಕಾತ್ಯಾಯಿಣಿ ನನಗೆ ಫೋನ್ ಮಾಡಿ ಮನೆಯಲ್ಲಿ ಕಳ್ಳತನವಾಗಿದೆ ಬಾ ಎಂದು ತಿಳಿಸಿದ್ದು, ನಾನು ನಮ್ಮ ತಾಯಿಯ ಮನೆಗೆ ಬಂದು ವಿಚಾರ ಮಾಡಲಾಗಿ, ಬೆಳಿಗ್ಗೆ 9-30 ಗಂಟೆಯಲ್ಲಿ ನಮ್ಮ ಮನೆಯಲ್ಲಿ ಕೆಲಸ ಮಾಡುವ ಗೌರಮ್ಮನವರು ಮನೆಯ ಕೆಲಸವನ್ನು ಮುಗಿಸಿ ಮನೆಯಿಂದ ಹೋಗಿದ್ದು, ನಾನು ಸ್ನಾನ ಮಾಡಲು ಮರೆತು ಮನೆಯ ಮುಖ್ಯ ಬಾಗಿಲನ್ನು ಹಾಕದೇ ಸ್ನಾನ ಮಾಡಲು ಹೋಗಿ ನಂತರ ಸ್ನಾನ ಮುಗಿಸಿ ಹೊರಗೆ ಬಂದು ನೋಡಿದಾಗ ಮನೆಯ ಮುಖ್ಯ ಬಾಗಿಲು ತೆರೆದಿತ್ತು. ನನಗೆ ಗಾಬರಿಯಾಗಿ ಸ್ನಾನ ಮಾಡಲು ಹೋಗುವಾಗ ಕೈಯಲ್ಲಿದ್ದ ಎರಡು ಬಳೆಗಳನ್ನು ಬಿಚ್ಚಿಟ್ಟಿದ್ದ ರೂಮಿಗೆ ಹೋಗಿ ನೋಡಲಾಗಿ ಬಳೆಗಳು ಕಾಣಲಿಲ್ಲ. ನಂತರ ಅದೇ ರೂಮಿನ ವಾಲ್ ಡ್ರೂಪ್ ಬೀರುವಿನ ಬಾಕ್ಸ್ ನಲ್ಲಿ ಇಟ್ಟಿದ್ದ 30 ಗ್ರಾಂ ತೂಕದ ಸರ, 6 ಗ್ರಾಂ ತೂಕದ ಓಲೆ, ಸಹ ಇರಲಿಲ್ಲ. ನಾನು ಬೆಳಿಗ್ಗೆ 10-00 ಗಂಟೆಯ ಸಮಯದಲ್ಲಿ ನಾನು ಸ್ನಾನಕ್ಕೆ ಹೋದಾಗ ಮನೆಯ ಬಾಗಿಲನ್ನು ತೆರೆದಿದ್ದರಿಂದ ಯಾರೋ ಕಳ್ಳರು ಮನೆಯೊಳಗೆ ಬಂದು ನಮ್ಮ ಮನೆಯಲ್ಲಿದ್ದ ಮೇಲ್ಕಂಡ ವಡವೆಗಳನ್ನು ಕಳ್ಳತನ ಮಾಡಿರುತ್ತಾರೆ ಎಂದು ತಿಳಿಸಿದರು. ನಾವು ಹೋಗುವಷ್ಟರಲ್ಲಿ ತಮ್ಮ ತಾಯಿ ಮತ್ತು ಅಕ್ಕಪಕ್ಕದ ಮನೆಯವರು ಮನೆಯಲ್ಲಿ ಓಡಾಡಿದ್ದರು. ಕಳುವಾಗಿರುವ 28 ಗ್ರಾಂ ತೂಕದ ಎರಡು ಬಳೆಗಳು, 30 ಗ್ರಾಂ ತೂಕದ ಸರ, ಹಾಗೂ 6 ಗ್ರಾಂ ತೂಕದ ಓಲೆ ಇವುಗಳ ಬೆಲೆ ಸುಮಾರು 1 ಲಕ್ಷ ರೂಗಳಾಗಬಹುದು. ಈ ವಿಚಾರವನ್ನು ಬೆಂಗಳೂರಿನ ನಮ್ಮ ಸಂಬಂದಿಕರಿಗೆ ತಿಳಸಿ ಕಳವು ಮಾಡಿರುವ ಕಳ್ಳರು ಮತ್ತು ವಡವೆಗಳನ್ನು ಪತ್ತೆಮಾಡಿ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ತಡವಾಗಿ ಬಂದು ದೂರು ನೀಡಿರುತ್ತೇನೆ ಎಂತಾ ಇತ್ಯಾದಿಯಾಗಿ ದೂರು ನೀಡಿದ್ದು ಪ್ರಕರಣ ದಾಖಲಿಸಿರುತ್ತೆ.

ದಂಡಿನಶಿವರ ಪೊಲೀಸ್ ಠಾಣೆ ಮೊ ನಂ 109/2017 ಕಲಂ 143.448.323.324.341.504.506.376.511.ರೆ/ವಿ 149 .ಐ.ಪಿ.ಸಿ

ದಿನಾಂಕ 26/10/2017 ರಂದು ಪಿರ್ಯಾಧಿ ಶಿವಮ್ಮ ಕೋಂ ಲೇ ಕಲ್ಲಪ್ಪ ,. 38 ವರ್ಷ, ಗೊಲ್ಲರು, ಗೃಹಿಣಿ, ಮಾರತಮ್ಮನಹಳ್ಳಿ ಗೊಲ್ಲರಹಟ್ಟಿ, ದಂಡಿನಶಿವರ ಹೋಬಳಿ, ತುರುವೇಕೆರೆ ತಾಲ್ಲೋಕ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ನಾನು ತುರುವೇಕೆರೆ ತಾಲ್ಲೋಕ್, ಮಾರತಮ್ಮನಹಳ್ಳಿ ಗೊಲ್ಲರಹಟ್ಟಿ ದೊಡ್ಡಜುಂಜಯ್ಯ ರವರ ಮಗನಾದ ಕಲ್ಲಪ್ಪ ರವರನ್ನು ಮದುವೆಯಾಗಿದ್ದು,, ನಮಗೆ ಇಬ್ಬರೂ ಮಕ್ಕಳಿರುತ್ತಾರೆ. ನನ್ನ ಗಂಡ ಕಲ್ಲಪ್ಪ ಕ್ಯಾನ್ಸರ್ ಕಾಯಿಲೆಯಿಂದ ಮೃತಪಟ್ಟಿರುತ್ತಾರೆ. ನನ್ನ ಗಂಡ ಜೀವಂತವಾಗಿರುವಾಗಲೇ ನಾವು ಸಂಸಾರ ಸಮೇತ ಬೇರೆ ವಾಸವಾಗಿದ್ದೇವು, ನನ್ನ ಗಂಡನ ಅಣ್ಣ ಸಣ್ಣತಿಮ್ಮಯ್ಯ ರವರು ನನ್ನ ಗಂಡ ಮೃತಪಟ್ಟ ನಂತರ ನಮ್ಮ ಮಕ್ಕಳನ್ನು ಅವರ ಮನೆಯಲ್ಲಿ ಇಟ್ಟುಕೊಂಡು ಓದಿಸುತ್ತಿರುತ್ತಾರೆ. ಮೊದಲೇ ವಿಭಾಗವಾಗಿದ್ದ ಜಮೀನನ್ನು ಸಣ್ಣತಿಮ್ಮಯ್ಯ ರವರೇ ಅನುಭವಿಸುತ್ತಿರುತ್ತಾರೆ. ಈಗ್ಗೆ ಕಳೆದ ಒಂದು ವರ್ಷದ ಹಿಂದೆ ಸಣ್ಣತಿಮ್ಮಯ್ಯ ರವರು ನನ್ನ ಮೇಲೆ ಪದೇ ಪದೇ ಜಗಳ ಮಾಡಿ ನಾನು ಹೇಳಿದಂತೆ ಕೇಳಬೇಕು, ನನ್ನ ಹೆಂಡತಿಯ ತರಹ ಇರಬೇಕು ಎನ್ನುತ್ತಿದ್ದು ಇದಕ್ಕೆ ನಾನು ವಿರೋದಿಸುತ್ತಲೇ ಇದ್ದೆ, ಈ ವಿಚಾರವನ್ನು ನಮ್ಮ ಸಂಬಂಧಿಕರಿಗಾಗಲಿ, ನನ್ನ ಮಕ್ಕಳಿಗಾಗಲಿ ಹೇಳಿರಲಿಲ್ಲ. ದಿನಾಂಕ 24/10/2017 ರಂದು ನನ್ನ ಮಗ ಧರಣೀಶ ಕಾಲೇಜಿಗೆ ಹೋದ ನಂತರ ನನ್ನ ಮಾವ ಸಣ್ಣತಿಮ್ಮಯ್ಯ ಏಕಾಏಕಿ ನನ್ನ ಮನೆಯೊಳಗೆ ನುಗ್ಗಿ ನನ್ನನ್ನು ಹಿಡಿದುಕೊಂಡು ಏಳೆದಾಡಿ ಬಟ್ಟೆ ಎಳೆದು ಕೆಳಕ್ಕೆ ಕೆಡವಿಕೊಂಡು ಅತ್ಯಾಚಾರಕ್ಕೆ ಪ್ರಯತ್ನಪಟ್ಟನು, ನಾನು ಕಿರುಚಿಕೊಂಡಾಗ ನನ್ನನ್ನು ಕುರಿತು ಸೂಳೇ ಮುಂಡೆ, ಆದರಗಿತ್ತಿ ಎಂತ ಇತ್ಯಾದಿಯಾಗಿ ಅವಾಚ್ಯಶಬ್ದಗಳಿಂದ ಬೈದು, ಕೈಯಿಂದ ನನ್ನ ಕೆನ್ನೆಗೆ ಹೊಡೆದ, ಅಷ್ಟರಲ್ಲಿ ಅಲ್ಲಿಗೆ ಸಣ್ಣತಿಮ್ಮಯ್ಯ ಹೆಂಡತಿ ಸರೋಜಮ್ಮ, ಮಗ ಶಾಂತಕುಮಾರ, ತಂಗಿ ದೇವಿರಮ್ಮ, ಸರೋಜಮ್ಮ ರವರ ಅಕ್ಕ ಜಯಮ್ಮ, ಮತ್ತು ಜಯಮ್ಮನ ಮಗ ಸುರೇಶ, ಎಲ್ಲರೂ ಬಂದು ನನ್ನನ್ನು ಮನೆಯಿಂದ ಖಾಲಿ ಮಾಡಿಸಲು ಸಂಚು ಹಾಕಿ ಜಗಳ ತೆಗೆದು ಮೇಲ್ಕಂಡ ಎಲ್ಲರೂ ಕೈಗಳಿಂದ ನನ್ನ ಮೈ ಕೈ ಮೇಲೆ ಹೊಡೆದು ನೋವುಂಟು ಮಾಡಿದರು.  ಸರೋಜಮ್ಮ ನನ್ನ ಜುಟ್ಟು ಹಿಡಿದು ಮನೆಯಿಂದ ಹೊರಗೆ ಎಳೆದಳು, ಸಣ್ಣತಿಮ್ಮಯ್ಯ ಅಲ್ಲಿಯೇ ಬಿದ್ದಿದ್ದ ಒಂದು ದೊಣ್ಣೆಯಿಂದ ನನ್ನ ಬಲ ಭುಜಕ್ಕೆ ಹೊಡೆದ, ಈ ಹಲ್ಲೆಯಿಂದ ನನ್ನ ಮೂಗಿನಲ್ಲಿ, ಬಾಯಲ್ಲಿ ರಕ್ತ ಬಂತು, ನಂತರ ಸಣ್ಣತಿಮ್ಮಯ್ಯನ ಕಾರಿಗೆ ನನ್ನನ್ನು ಸಣ್ಣತಿಮ್ಮಯ್ಯ, ದೇವಿರಮ್ಮ, ಸಣ್ಣತಿಮ್ಮಯ್ಯನ ತಂಗಿ ಚಿಕ್ಕಮ್ಮ ಇವರುಗಳು ಸೇರಿ ನನ್ನನ್ನು ಕಾರಿಗೆ ಹಾಕಿಕೊಂಡರು, ಕಾರನ್ನು ಶಾಂತಕುಮಾರ ಚಲಾಯಿಸಿಕೊಂಡು ಕಲ್ಲೂರು ಕ್ರಾಸ್ ಹೋಗಿ, ಕಲ್ಲೂರು ಕ್ರಾಸ್ ನಲ್ಲಿ ಕಾರಿನಿಂದ ನನ್ನನ್ನು ಹೊರದಬ್ಬಿ, ನೀನು ಮತ್ತೆ ವಾಪಾಸ್ ಬಂದರೆ ನಿನ್ನನ್ನು ಜೀವಂತವಾಗಿ ಉಳಿಸುವುದಿಲ್ಲ, ನಿನ್ನನ್ನು ಮುಗಿಸಿ ಹಾಕುತ್ತೇವೆ ಎಂದು ಕೊಲೆ ಬೆದರಿಕೆ ಹಾಕಿ ವಾಪಾಸ್ ಹೊರಡುವ ಸಮಯದಲ್ಲಿ ನನ್ನ ಸಂಬಂಧಿಕರಾದ ತುರುವೇಕೆರೆ ತಾಲ್ಲೋಕ್, ಮಾಚೇನಹಳ್ಳಿ ಗೊಲ್ಲರಹಟ್ಟಿಯ ರೇಣುಕಮ್ಮ ಕೋಂ ಕರಿಯಣ್ಣ, ಮತ್ತು ಗುಬ್ಬಿ ತಾಲ್ಲೋಕಿನ ಬಾನಿಹಟ್ಟಿಯ ನಾಗರತ್ನ ಕೋಂ ಕೆಂಪಯ್ಯ ರವರುಗಳು ಸ್ಥಳದಲ್ಲಿದ್ದು, ನನ್ನನ್ನು ನೋಡಿ ಮೂಗಲ್ಲಿ, ಬಾಯಲ್ಲಿ ರಕ್ತ ಬರುತ್ತಿದ್ದನ್ನು ನೋಡಿ ವಿಚಾರಿಸಿದರು, ನಾನು ಮೇಲ್ಕಂಡ ಘಟನೆಯನ್ನು ಇಬ್ಬರಿಗೂ ತಿಳಿಸಿದೆ, ನಂತರ ಅವರು ನನ್ನನ್ನು 108 ಅಂಬುಲೇನ್ಸ್ ನಲ್ಲಿ ಗುಬ್ಬಿ ಸರ್ಕಾರಿ ಆಸ್ಪತ್ರೆಗೆ ಸೇರಿಸಿದರು, ನನ್ನ ಮೇಲೆ ಹಲ್ಲೆ ನಡೆಸಿದ ಸಮಯ ಆ ದಿನ ಬೆಳಿಗ್ಗೆ 08-00 ಗಂಟೆಯಿಂದ 08-30 ಗಂಟೆಯವರೆಗೆ ಆಗಿರುತ್ತೆ, ಆದ್ದರಿಂದ ನನ್ನ ಮೇಲೆ ಅತ್ಯಾಚಾರಕ್ಕೆ ಪ್ರಯತ್ನಿಸಿ, ಹಲ್ಲೆ ನಡೆಸಿದ ಮೇಲ್ಕಂಡವರುಗಳ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರುತ್ತೇನೆಂತ ಮತ್ತು ನಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆ ಹೊಂದಿ ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದೇನೆಂತ ಇತ್ಯಾದಿಯಾಗಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ 190/2017 ಕಲಂ 279,304(ಎ), ಐಪಿಸಿ ರೆ/ವಿ 134(ಎ&ಬಿ), 187 ಐಎಂವಿ ಆಕ್ಟ್

ದಿನಾಂಕ:26-10-2017 ರಂದು ಮಧ್ಯಾಹ್ನ 3-00 ಗಂಟೆಗೆ ಪಿರ್ಯಾದಿಯಾದ ಮಂಜುನಾಥ್‌,ವಿ ಬಿನ್ ಲೇ|| ವೆಂಕಟರಮಣಯ್ಯ, 29 ವರ್ಷ, ಒಕ್ಕಲಿಗರು, ಜಿರಾಯ್ತಿ, ಮರಾಡಿಗರಪಾಳ್ಯ, ಹೆಬ್ಬೂರು ಹೋಬಳಿ, ತುಮಕೂರು ತಾಲ್ಲೂಕು & ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂಧರೆ ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು, ನನ್ನ ತಾಯಿಯ ತಾಯಿಯಾದ (ಅಜ್ಜಿ) ಸುಮಾರು 70 ವರ್ಷ ವಯಸ್ಸಿನ ಗಂಗಮ್ಮ ರವರಿಗೆ ವಿವಾಹವಾಗಿ ತನ್ನ ಗಂಡನ ಮನೆಯಾದ ಕೊತ್ತಗೆರೆ ಹೋಬಳಿ, ದೊಡ್ಡಮಳಲವಾಡಿಯಲ್ಲಿ ಇದ್ದು, ಗಂಗಮ್ಮ ರವರಿಗೆ ಶೇನಮ್ಮ ಎಂಬ ಒಬ್ಬಳೇ ಮಗಳಿದ್ದು, ಶೇನಮ್ಮ ರವರನ್ನು ಈಗ್ಗೆ ಸುಮಾರು 30 ವರ್ಷಗಳ ಹಿಂದೆ ಮರಾಡಿಗರಪಾಳ್ಯದ ವೆಂಕಟರಮಣಯ್ಯ ರವರಿಗೆ ಕೊಟ್ಟು ಮದುವೆ ಮಾಡಿಕೊಟ್ಟಿದ್ದು, ಶೇನಮ್ಮ ರವರು ಈಗ್ಗೆ 20 ವರ್ಷಗಳ ಹಿಂದೆ ಮೃತಪಟ್ಟಿದ್ದು, ಗಂಗಮ್ಮ ರವರು ತನ್ನ ಗಂಡ ಶಾನಯ್ಯ ರವರು ಮೃತಪಟ್ಟ ನಂತರ ಈಗ್ಗೆ ಸುಮಾರು 25 ವರ್ಷಗಳಿಂದ ನಮ್ಮ ಮನೆಯಲ್ಲಿಯೇ ವಾಸವಿದ್ದರು. ದಿನಾಂಕ:26-10-2017 ರಂದು ನಮ್ಮ ಅಜ್ಜಿಯಾದ ಗಂಗಮ್ಮ ರವರು ಆರೋಗ್ಯ ಸರಿಯಿಲ್ಲದ ಕಾರಣ ಹೆಬ್ಬೂರಿನ ಸರ್ಕಾರಿ ಆಸ್ಪತ್ರೆಗೆ ತೋರಿಸಲೆಂದು ನಮ್ಮ ಗ್ರಾಮದಿಂದ ಹೆಬ್ಬೂರಿಗೆ ಹೋಗಿದ್ದರು. ಇದೇ ದಿವಸ ಮದ್ಯಾಹ್ನ ಸುಮಾರು 01-00 ಗಂಟೆ ಸಮಯದಲ್ಲಿ ನಾನು ನಮ್ಮ ಗ್ರಾಮದ ನಮ್ಮ ಮನೆಯಲ್ಲಿ ಇರುವಾಗ್ಗೆ, ಬೈಚೇನಹಳ್ಳಿ ಗ್ರಾಮದ ವಾಸಿಯಾದ ಸುರೇಶ ಬಿನ್ ಲೇ|| ಗಂಗಚಿಕ್ಕಯ್ಯ ರವರು ನನಗೆ ಪೋನ್ ಮಾಡಿ ನಿಮ್ಮ ಅಜ್ಜಿ ಗಂಗಮ್ಮ ರವರು ಮದ್ಯಾಹ್ನ ಸುಮಾರು 12-45 ಗಂಟೆ ಸಮಯದಲ್ಲಿ ಹೆಬ್ಬೂರಿನ ವಿಧಾತ್ರಿ ಆಸ್ಪತ್ರೆಯ ಮುಂಭಾಗದ ಕುಣಿಗಲ್‌- ತುಮಕೂರು ಟಾರ್ ರಸ್ತೆಯ ಎಡಭಾಗದಲ್ಲಿ ಕುಣಿಗಲ್‌ ಕಡೆಯಿಂದ ಹೆಬ್ಬೂರಿನ ಬಸ್‌ ನಿಲ್ದಾಣದ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ್ಗೆ, ಹಿಂದಿನಿಂದ ಅಂದರೆ ಕುಣಿಗಲ್ ಕಡೆಯಿಂದ ತುಮಕೂರು ಕಡೆಗೆ ಹೋಗಲು ಬಂದ ಕೆಎ-06-ಪಿ-5657 ನೇ ಕಾರಿನ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ರಸ್ತೆಯ ಎಡಭಾಗಕ್ಕೆ ಬಂದು ನಿಮ್ಮ ಅಜ್ಜಿ ಗಂಗಮ್ಮ ರವರಿಗೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದನು. ಪರಿಣಾಮವಾಗಿ ಗಂಗಮ್ಮ ರವರಿಗೆ ತಲೆಗೆ, ಬಲಗಾಲಿಗೆ ಹಾಗೂ ದೇಹದ ಇತರೆ ಭಾಗಗಳಿಗೆ ಏಟು ಬಿದ್ದು ರಕ್ತಗಾಯಗಳಾಗಿರುತ್ತೇಂತಲೂ ಹಾಗೂ ಅಘಫಾತಪಡಿಸಿದ ಕಾರಿನ ಚಾಲಕ ತನ್ನ ಕಾರನ್ನು ಸ್ಥಳದಲ್ಲೇ ಬಿಟ್ಟು ಓಡಿ ಹೋದನೆಂತಾ ತಿಳಿಸಿದರು. ನಂತರ ನಾನು ಸ್ಥಳಕ್ಕೆ ಹೋಗಿ ನೋಡಲಾಗಿ ಅಫಘಾತದಿಂದ ನನ್ನ ಅಜ್ಜಿ ಗಂಗಮ್ಮ ರವರು ಗಾಯಗೊಂಡಿರುವುದು ನಿಜವಾಗಿತ್ತು. ನಂತರ ನಾನು ಮತ್ತು ನನ್ನ ತಮ್ಮ ಕೃಷ್ಣಸ್ವಾಮಿ ಇಬ್ಬರೂ ಸೇರಿಕೊಂಡು ಗಾಯಗೊಂಡಿದ್ದ ನಮ್ಮ ಅಜ್ಜಿಯನ್ನು ಹೆಬ್ಬೂರಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ, ನಂತರ ಅಲ್ಲಿನ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿನ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯರಲ್ಲಿ ತೋರಿಸಲಾಗಿ, ಪರಿಶೀಲಿಸಿದ ವೈದ್ಯಾಧಿಕಾರಿಗಳು ನನ್ನ ಅಜ್ಜಿ ಗಂಗಮ್ಮ ರವರು ಮೃತಪಟ್ಟಿರುವುದಾಗಿ ತಿಳಿಸಿದರು. ನನ್ನ ಅಜ್ಜಿ ಗಂಗಮ್ಮ ರವರ ಮೃತ ದೇಹವು ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿರುತ್ತೆ. ಆದ್ದರಿಂದ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಈ ಅಪಘಾತಕ್ಕೆ ಕಾರಣನಾದ ಕೆಎ-06-ಪಿ-5657 ನೇ ಕಾರಿನ ಚಾಲಕನ ಮೇಲೆ ಕಾನೂನು ರೀತ್ಯಾ ಮುಂದಿನ ಕ್ರಮ ಜರುಗಿಸಬೇಕೆಂದು ಈ ಮೂಲಕ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ ಎಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಹೊಸಬಡಾವಣೆ ಪೊಲೀಸ್ ಠಾಣೆ ಮೊ.ಸಂ 132/2017 ಕಲಂ 381ಐಪಿಸಿ

ದಿನಾಂಕ:-26/10/2017 ರಂದು ಪಿರ್ಯಾದಿ ಸಿ ಪ್ರಕಾಶ್ ಕುಮಾರ್ ಬಿನ್ ಲೇಟ್ ಚನ್ನಯ್ಯ, ವಾಸ ಶ್ರೀ, ಚನ್ನಬಸವೇಶ್ವರ ನಿಲಯ, 8ನೇ ಕ್ರಾಸ್, 5ನೇ ಅಡ್ಡರಸ್ತೆ, ಎಸ್ ಎಸ್ ಪುರಂ, ತುಮಕೂರು ವಾಸಿರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ಪಿರ್ಯಾದಿಯು ಈಗ್ಗೆ ಸುಮಾರು 45 ವರ್ಷಗಳಿಂದ ವಾಸವಾಗಿದ್ದು ನಮ್ಮ ಮನೆಯಲ್ಲಿ ನಾನು ಹೆಂಡತಿಯಾದ ಶ್ರೀಮತಿ ಮಂಜುಳ, ಮಗನಾದ ಟಿ,ಪಿ.ಶರತ್ , ನನ್ನ ತಮ್ಮನಾದ ಸಿ, ಕುಮಾರ ಸ್ವಾಮಿ ಹಾಗೂ ನನ್ನ ತಾಯಿ ಕೆ,ಎಸ್, ರಾಜಮ್ಮ. ವಾಸವಾಗಿರುತ್ತೇವೆ. ಸುಮಾರು 04 ತಿಂಗಳ ಹಿಂದೆ ನಮ್ಮ ಮನೆಯ ಹತ್ತಿರ ವಾಸವಾಗಿರುವ ಶ್ರೀಮತಿ ಧನಲಕ್ಷ್ಮಿ ಕೋಂ ಆನಂದ , ರವರನ್ನ ನಮ್ಮ ಮನೆಯ ಕೆಲಸಕ್ಕೆ ಸೇರಿಸಿಕೊಂಡಿದ್ದು ಅವರು ಮನೆ ಕಸ ಗುಡಿಸುವುದು, ನೆಲ ಸಾರಿಸುವುದು, ಮತ್ತು ಬಟ್ಟೆ ಹೊಗೆಯುವ ಕೆಲಸ ಮಾಡಿಕೊಂಡಿದ್ದರು. ಧನಲಕ್ಷ್ಮಿ ರವರವರು ನಮ್ಮ ಮನೆಯ ಎಲ್ಲಾ ರೂಂಗಳಲ್ಲಿ ಓಡಾಡಿಕೊಂಡು ಕೆಲಸ ಮಾಡಿಕೊಂಡಿದ್ದರು. ಹೀಗಿರುವಾಗ ದಿನಾಂಕ:-14/10/2017 ರಂದು  ಬೆಳಿಗ್ಗೆ  ಸುಮಾರು 11-00 ಗಂಟೆಗೆ ಧನಲಕ್ಷ್ಮಿ ರವರು ನಮ್ಮ ಮನೆಗೆ ಕೆಲಸಕ್ಕೆ ಬಂದಿದ್ದು ಅದೇ ಸಮಯದಲ್ಲಿ ನಮ್ಮ ತಾಯಿ ಯವರು ಸ್ನಾನ ಮಾಡುತ್ತಿದ್ದು ಬೆನ್ನು ಉಜ್ಜಲು ಓಣಿಯಲ್ಲಿ ಪಾತ್ರೆ ತೊಳೆಯುತ್ತಿದ್ದ ಧನಲಕ್ಷ್ಮಿ ರವರನ್ನ ಕರೆದು ಬೆನ್ನು ತಿಕ್ಕಿಸಿಕೊಂಡರು. ಸ್ವಲ್ಪ ಸಮಯದ ನಂತರ ನಮ್ಮ ತಾಯಿ ಸ್ನಾನ ಮಾಡುವಾಗ ಮಾಮೂಲಿನಂತರ ಸ್ನಾನದ ಮನೆಯ ನಲ್ಲಿಗೆ ಸುಮಾರು 45 ಗ್ರಾಂ ತೂಕವಿರುವ ಚಿನ್ನದ ಹವಳದ ಸರ ಮತ್ತು ಶಿವಲಿಂಗವಿಡುವ ಕರಡಿಗೆಯನ್ನು ನೇತು ಹಾಕಿದ್ದರು ಇವುಗಳ ಪೈಕಿ ಕರಡಿಗೆ ಮಾತ್ರ ಇದ್ದು ಚಿನ್ನದ ಸರ ನಾಪತ್ತೆಯಾಗಿರುವುದಾಗಿ ನಮ್ಮ ತಾಯಿ ತಿಳಿಸಿದರು. ನಾನು ನೀವು ಬೇರೆ ಕಡೆ ಇಟ್ಟು ಮರೆತಿರಬಹುದು ಸರಿಯಾಗಿ ಹುಡುಕಿ ಎಂದು ಹೇಳಿದೆನು ನಂತರ ನಾವುಗಳು ಸೇರಿಕೊಂಡು ಹುಡುಕಿ ನೋಡಲಾಗಿ ಚಿನ್ನದ ಸರ ಸಿಗಲಿಲ್ಲ. ನಂತರ ನಮ್ಮ ತಾಯಿಯವರು ತಾನು ಚಿನ್ನದ ಸರವನ್ನ ಸ್ನಾನದ ಮನೆಯಲ್ಲಿರುವ ನಲ್ಲಿಗೆ ನೇತು ಹಾಕಿದ್ದು ಖಚಿತವಾಗಿರುತ್ತೆ. ನಾನು ಸ್ನಾನ ಮಾಡುವಾಗ ಶ್ರೀಮತಿ ಧನಲಕ್ಷ್ಮಿ ಸ್ನಾನದ ಮನೆಗೆ ಬಂದಿದ್ದಳು ಆಕೆಯೇ ತೆಗೆದುಕೊಂಡಿರುವ ಸಾದ್ಯತೆ ಇರುತ್ತದೆ ಎಂದು ನಮ್ಮ ತಾಯಿ ಖಚಿತಪಡಿಸಿದರು. ನಂತರ ನಾವು ನಮ್ಮ ಮನೆಯವರು ಈ ಬಗ್ಗೆ ಶ್ರೀಮತಿ ಧನಲಕ್ಷ್ಮಿ ಯನ್ನ ವಿಚಾರಿಸಲಾಗಿ ಮೊದಲಿಗೆ ನಾನು ತೆಗೆದುಕೊಂಡಿರುವುದಿಲ್ಲ ಅಂತ ಹೇಳಿ ನಂತರ ಅನುಮಾನಾಸ್ಪದವಾಗಿ ವರ್ತಿಸಿ ಮನೆ ಬಾಡಿಗೆ ಕಟ್ಟಲು ಹಾಗೂ ಇತರೆ ಕಾರಣಗಳಿಗೆ ಹಣದ ಅವಶ್ಯಕತೆ ಇರುವುದರಿಂದ ನಾನೇ ಚಿನ್ನದ ಸರವನ್ನ ತೆಗೆದುಕೊಂಡಿರುತ್ತೇನೆ ವಾಪಸ್ಸು ತಂದು ಕೊಡುತ್ತೇನೆ ಎಂದು ಒಪ್ಪಿಕೊಂಡಿದ್ದು ಇದುವರೆವಿಗೂ ನಮ್ಮ ತಾಯಿಯ ಚಿನ್ನದ ಸರವನ್ನ ತಂದು ಕೊಟ್ಟಿರುವುದಿಲ್ಲ. ಚಿನ್ನದ ಸರದ ಬೆಲೆಯು  ಸುಮಾರು 01 ಲಕ್ಷದ 30 ಸಾವಿರ ( ಒಂದು ಲಕ್ಷದ ಮೂವತ್ತು ಸಾವಿರ ) ರೂಪಾಯಿ. ಬೆಲೆ ಬಾಳುವಂತದ್ದಾಗಿರುತ್ತದೆ. ಆದ್ದರಿಂದ ಈ ದಿನ ತಡವಾಗಿ ಬಂದು ದೂರು ನೀಡಿರುತ್ತೇನೆ. ನಮ್ಮ ಮನೆಯ ಕೆಲಸದಾಕೆ ಶ್ರೀಮತಿ ಧನಲಕ್ಷ್ಮಿ ರವರ ವಿರುದ್ದ ಕಾನೂನು ಕ್ರಮ ಕೈಗೊಂಡು ಚಿನ್ನದ ಸರವನ್ನ ಪತ್ತೆ ಮಾಡಿಕೊಡಬೇಕೆಂದು ತಮ್ಮಲ್ಲಿ ಕೋರಿಕೊಳ್ಳುತ್ತೇನೆಂದು ನೀಡಿದ  ದೂರಿನ ಮೇರೆಗೆ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತೆ.

 Thursday, 26 October 2017

Crime Incidents 26-10-17

ಸಂಚಾರ ಪೊಲೀಸ್ ಠಾಣಾ ಮೊ.ನಂ: 201/2017 ಕಲಂ 279,337,304() ಐಪಿಸಿ

ದಿನಾಂಕ 25.10.2017 ರಂದು   ಬೆಳಿಗ್ಗೆ 11-00  ಗಂಟೆಗೆ  ಪಿರ್ಯಾದಿ   ಅಲ್ಲಮಪ್ರಭು ಬಿನ್ ಲೇ.ಕಂಚಿರಾಯ, 28ವರ್ಷ, ಲಿಂಗಾಯಿತರು, ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಅಕೌಂಟೆಂಟ್, ವಾಸ: ಸಾರಿಗೆಹಳ್ಳಿ, ತುರುವೇಕೆರೆ ತಾ,,    ಇವರು ನೀಡಿದ ದೂರಿನ ಅಂಶವೇನೆಂದರೆ ನನ್ನ ಭಾವ ಚಂದ್ರಶೇಖರ್, 22 ವರ್ಷ, ವಾಷಿಂಗ್ ಮಿಷಿನ್ ಸರ್ವೀಸ್ ಕೆಲಸ, ವಾಸ: ಟಿಬಿ ಕ್ರಾಸ್, ಮಾಯಸಂದ್ರ, ತುರುವೇಕೆರೆ ತಾ,, ರವರು ತನ್ನ ಕೆಎ.44.ಜೆ.7990 ನೇ ಬೈಕಿನಲ್ಲಿ ಆತನ ಸ್ನೇಹಿತ ಕಾಂತರಾಜು , 30ವರ್ಷ, ಪೀಣ್ಯಾ, ಬೆಂಗಳೂರು ರವರನ್ನು ಕೂರಿಸಿಕೊಂಡು  ಇಬ್ಬರೂ ಗುಬ್ಬಿ ತಾ,, ನಿಟ್ಟೂರಿಗೆ    ಹೋಗಲು      ತುಮಕೂರು ನಗರದ ಮುಖಾಂತರ ತುಮಕೂರು ಗುಬ್ಬಿ ರಿಂಗ್ ರಸ್ತೆ ಜಂಕ್ಷನ್ ನಲ್ಲಿ  ಎನ್.ಹೆಚ್.206 ರಸ್ತೆಯಲ್ಲಿ ಬೆಳಿಗ್ಗೆ 9-00 ಗಂಟೆ ಸಮಯದಲ್ಲಿ ಹೋಗುತ್ತಿರುವಾಗ   ದಿಬ್ಬೂರು ರಸ್ತೆಯಿಂದ    ಕೆಎ.42.1125 ನೇ ಲಾರಿಯನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು  ಬಂದು ಕೆಎ.44.ಜೆ.7990   ನೇ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದ ಪರಿಣಾಮ ಇಬ್ಬರೂ ಬೈಕ್ ಸಮೇತ ರಸ್ತೆಯ ಮೇಲೆ ಬಿದ್ದಾಗ ಕಾಂತರಾಜು ರವರ ಕಾಲುಗಳಿಗೆ ಪೆಟ್ಟು ಬಿದ್ದು ರಕ್ತಗಾಯಗಳಾಗಿ,  ಚಂದ್ರಶೇಖರ್ ರವರಿಗೆ ಕಾಲಿಗೆ, ಕೈಗಳಿಗೆ, ಎಡಭುಜಕ್ಕೆ, ಎಡಎದೆಯ ಭಾಗಕ್ಕೆ, ಪೆಟ್ಟು ಬಿದ್ದು ರಕ್ತಗಾಯಗಳಾಗಿ   ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಿ,  ಚಿಕಿತ್ಸೆ ಕೊಡಿಸುತ್ತಿರುವಾಗ, ಚಿಕಿತ್ಸೆ ಫಲಕಾರಿಯಾಗದೇ ಅಪಘಾತದಿಂದಾದ ರಕ್ತಗಾಯಗಳಿಂದ  ಚಂದ್ರಶೇಖರ್ ರವರು ಬೆಳಿಗ್ಗೆ  10-00 ಗಂಟೆ ಸಮಯದಲ್ಲಿ ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ ಎಂದು ನೀಡಿದ  ಪಿರ್ಯಾದು ಮೇರೆಗೆ ಪ್ರಕರಣ ದಾಖಲಿಸಿರುತ್ತೆ .

 

ಹುಲಿಯೂರುದುರ್ಗ ಪೊಲೀಸ್‌ ಠಾಣಾ; ಮೊ ನಂ: 210/2017 ಕಲಂ: 279, 304(A) ಐಪಿಸಿ

ದಿನಾಂಕ 25/10/2017 ರಂದು ಸಂಜೆ 05-00 ಗಂಟೆಗೆ ಈ ಕೇಸಿನ ಪಿರ್ಯಾದಿ  ಅಂಕೇಗೌಡ ಬಿನ್ ಲೇಟ್ ಶಿವರಾಮಯ್ಯ  35 ವರ್ಷ, ವಕ್ಕಲಿಗರು, ಜಿರಾಯ್ತಿ, ಗಿಡದ ಕೆಂಚನಹಳ್ಳಿ, ಹುಲಿಯೂರು ದುರ್ಗ ಹೋಬಳಿ, ಕುಣಿಗಲ್ ತಾಲ್ಲೋಕ್  ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ  “ನಾನು ದಿನಾಂಕ 25/10/2017 ರಂದು  ಬೆಳಿಗ್ಗೆ ನನ್ನ ಸ್ವಂತ ಕೆಲಸದ ಮೇಲೆ ಮದ್ದೂರಿಗೆ ಹೋಗಿ ಕೆಲಸ ಮುಗಿಸಿಕೊಂಡು ಇದೇ  ದಿನ ಮದ್ಯಾಹ್ನ 03-30 ಗಂಟೆ ಸಮಯದಲ್ಲಿ ಹುಲಿಯೂರುದುರ್ಗ ಹತ್ತಿರ ಇರುವ ಕೃಷ್ಣಪ್ಪನಕೊಪ್ಪಲು ಗ್ರಾಮದ ಹತ್ತಿರ ತುಮಕೂರು – ಮದ್ದೂರು ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಹುಲಿಯೂರುದುರ್ಗದ ಕಡೆ ಬರುತ್ತಿರುವಾಗ್ಗೆ ಮದ್ದೂರು ಕಡೆಯಿಂದ ಬಂದ  ಕೆ.ಎ-06-ಇ.ವಿ-948 ನೇ ಪಲ್ಸರ್ ಬೈಕಿನ ಸವಾರ ಹಾಗೂ ಹಿಂಬದಿಯಲ್ಲಿ ಕುಳಿತ್ತಿದ್ದ ವ್ಯಕ್ತಿ ಇಬ್ಬರು ಬೈಕ್ ನಲ್ಲಿ ತುಮಕೂರು ಕಡೆಗೆ ಹೋಗುತ್ತಿರುವಾಗ್ಗೆ ರಸ್ತೆಯಲ್ಲಿ ಸ್ವಲ್ಪ ಸೈಡಿನಲ್ಲಿ ನಿಂತಿದ್ದ  ಯಾವುದೇ ಸಿಗ್ನಲ್ ಇಲ್ಲದೆ ನಿಂತಿದ್ದ ಎಂ.ಹೆಚ್-12 ಡಿ.ಟಿ-4622 ನೇ ಲಾರಿಗೆ ಮೋಟಾರ್ ಭೈಕಿನ ಸವಾರ ಇದನ್ನು ಗಮನಿಸದೇ ಅಜಾಗರೂಕತೆಯಿಂದ ತನ್ನ  ಬೈಕ್ ನ್ನು ಓಡಿಸಿಕೊಂಡು ಬಂದು ಯಾವುದೇ ಸಿಗ್ನಲ್ ಇಲ್ಲದೇ  ರಸ್ತೆಯಲ್ಲಿ ನಿಂತಿದ್ದ ಟಿಪ್ಪರ್ ಲಾರಿ ಹಿಂಬಾಗಕ್ಕೆ ಡಿಕ್ಕಿ ಹೊಡಿಸಿದ ಪರಿಣಾಮ ಅಪಘಾತ ಉಂಟಾಗಿದ್ದು  ಈ ಅಪಘಾತದಿಂದ  ಬೈಕ್ ಮುಂಭಾಗ ಪೂರ ಜಖಂಗೊಂಡು ಬೈಕ್ ಸವಾರ ಮತ್ತು ಹಿಂಬದಿ ಸವಾರನಿಗೆ ತಲೆಗೆ ತೀವ್ರ ರಕ್ತಗಾಗಯಗಳಾಗಿ  ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ.  ಮೋಟಾರ್ ಸೈಕಲ್ ನ ಹಿಂಬದಿಯಲ್ಲಿ ಕುಳಿತ್ತಿದ್ದ ವ್ಯಕ್ತಿಯ ಹೆಸರು ವಿಳಾಸ ತಿಳಿಯಲಾಗಿ ಅಕ್ಷಯ್ ಬಿನ್ ತಿಪ್ಪೆಸ್ವಾಮಿ, ಸೊಪ್ಪಿನ ಹಟ್ಟಿ, ಶಿರಾಟೌನ್ ಎಂತ ತಿಳಿಯಿತು ಅಪಘಾತಕ್ಕೀಡಾದ ಬೈಕ್ ಮತ್ತು ಟಿಪ್ಪರ್ ಲಾರಿ ಸ್ಥಳದಲ್ಲಿಯೇ ಇರುತ್ತೆ. ಬೈಕ ಸವಾರ ಮತ್ತು ಹಿಂಬದಿಯ ಸವಾರ ಇಬ್ಬರ ಮೃತ ದೇಹಗಳು ಸ್ಥಳದಲ್ಲಿಯೇ ಇದ್ದು ತಾವು ಸ್ಥಳಕ್ಕೆ ಬಂದು ಪರಿಶೀಲಿಸಿ ಮುಂದಿನ  ಕಾನೂನು  ಕೈಗೊಳ್ಳಬೇಕೆಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

ಹುಲಿಯೂರುದುರ್ಗ ಪೊಲೀಸ್‌ ಠಾಣಾ ಯು.ಡಿ. ಆರ್  ಸಂಖ್ಯೆ 31/2017 ಕಲಂ: 174 ಸಿ. ಆರ್ .ಪಿ.ಸಿ

ದಿನಾಂಕ 25/10/2017 ರಂದು  ಬೆಳಿಗ್ಗೆ 10-00 ಗಂಟೆಗೆ ಈ ಕೇಸಿನ ಪಿರ್ಯಾದಿ ಸಿದ್ದನಂಜಯ್ಯ ಬಿನ್ ಲೇಟ್ ಬಸವರಾಜು  ಮಾದಪ್ಪನಹಳ್ಲಿ ಹುಲಿಯೂರು ದುರ್ಗ ಹೋಬಳಿ ಕುಣಿಗಲ್ ತಾಲ್ಲೋಕ್ ರವರು ಠಾಣೆಗೆ ಹಾಜರಾಗಿ ನೀಡಿದ ಹೇಳಿಕೆ ಪಿರ್ಯಾದು ಅಂಶವೇನೆಂದರೆ ನನ್ನ ತಾಯಿ ಜಯಮ್ಮ ರವರ ಅಣ್ಣ ನಾದ ಲೇಟ್ ಗಂಗಯ್ಯ ರವರಿಗೆ ಇಬ್ಬರು ಗಂಡು ಮಕ್ಕಳು ಒಂದು ಹೆಣ್ಣ ಮಗಳಿರುತ್ತಾಳೆ. ಮಗಳಿಗೆ ಮತ್ತು ಹಿರಿಯ ಮಗ ಮಂಜು ರವರಿಗೆ ಮದುವೆಯಾಗಿರುತ್ತೆ. ಮಹೇಶ ಎಂಬುವನಿಗೆ ವಿವಾಹ ಆಗಿರುವುದಿಲ್ಲ ಇಬ್ಬರು ಗಂಡು ಮಕ್ಕಳು ಸಹ ಬೆಂಗಳೂರಿನಲ್ಲಿ ಡ್ರೈವರ್ ಕೆಲಸ ಮಾಡಿಕೊಂಡು ಇದ್ದು ದಿನಾಂಕ 21/10/2017 ರಂದು ಬೆಂಗಳೂರಿನಿಂದ ಬೊಮ್ಮನಹಳ್ಳಿಗೆ ಬಂದು ಅವರ ತಾಯಿ ಪರಿಮಳ ಕಡೆ ನನಗೆ ಈಗ್ಗೆ 1 ವಾರದಿಂಧ ಆರೋಗ್ಯ ಸರಿ ಇಲ್ಲದೆ ಚಿಕಿತ್ಸೆ ಪಡೆಯುತ್ತಿದ್ದೆ ನನಗೆ ಹೊಟ್ಟೆಯಲ್ಲಿ ಲಿವರ್ ತೂತ ಬಿದ್ದಿರುವುದಾಗಿ  ತಿಳಿದು ಬಂದಿರುತ್ತೆ. ಅದಕ್ಕಾಗಿ ಮಾತ್ರೆ ತೆಗೆದು ಕೊಳ್ಳುತ್ತಿದ್ದೇನೆ ಎಂದು ಹೇಳಿದ್ದು ರಾತ್ರಿ ಊಟ ಮಾಡಿ ಮಲಗುವ ಮಾತ್ರೆಗಳನ್ನು ಹೆಚ್ಚಾಗಿ ತೆಗೆದು ಕೊಂಡಿದ್ದು ತಕ್ಷಣ ಬಾಯಿಂದ ವಾಂತಿಯಾಗಿ ಸುಸ್ತಾಗಿದ್ದವನನ್ನು ಕುಣಿಗಲ್ ಸರ್ಕಾರಿ ಆಸ್ಪತ್ರೆಗಾಗಿ  ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಅಲ್ಲಿನ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಗೆ ದಾಖಲಿಸಿ ಚಿಕಿತ್ಸೆ ಪಲಕಾರಿಯಾಗದೇ ದಿನಾಂಕ 25/10/2017 ರಂದು ಬೆಳಗಿನ ಜಾವ ಸುಮಾರು 05-00 ಗಂಟೆ ಸಮಯದಲ್ಲಿ ನನ್ನ ಮಾವ ಮಹೇಶ ಮೃತಪಟ್ಟಿರುತ್ತಾನೆ.  ಆದ್ದರಿಂದ ತಾವು ಬಂದು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಬೇಕೆಂದು  ನನ್ನ ಹೇಳಿಕೆ ನೀಡಿರುತ್ತಾರೆಂದು ನೀಡಿದ ಪಿರ್ಯಾದಿ ಹೇಳಿಕೆ ಪಡೆದು ಪ್ರಕರಣದ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.Wednesday, 25 October 2017

Crime Incidents 25-10-17

ತಿಪಟೂರು ನಗರ ಪೊಲೀಸ್ ಠಾಣಾ ಮೊ .ನಂ- 167/2017 ಕಲಂ: 15(ಎ), 32(3) ಕೆ.ಇ.ಆಕ್ಟ್.

ದಿನಾಂಕ : 24/10/2017 ರಂದು ಬೆಳಿಗ್ಗೆ 10-45 ಗಂಟೆಗೆ ಪಿಐ ತಿಪಟೂರು ನಗರ ಠಾಣೆ  ರವರು ಠಾಣೆಗೆ ಹಾಜರಾಗಿ ಆರೋಪಿ, ಮಾಲುಗಳು ಮತ್ತು ಅಮಾನತ್ತು ಪಂಚನಾಮೆಯೊಂದಿಗೆ ನೀಡಿದ ಜ್ಞಾಪನದ ಅಂಶವೇನೆಂದರೆ, ನಾನು ದಿನಾಂಕ: 24-10-2017 ರಂದು ಬೆಳಿಗ್ಗೆ 8-30 ಗಂಟೆ ಸಮಯದಲ್ಲಿ ತಿಪಟೂರು ನಗರ ಠಾಣಾ ವ್ಯಾಪ್ತಿಯಲ್ಲಿ ಪಿಸಿ 530 ಓಂಕಾರಮೂರ್ತಿ ಮತ್ತು ಪಿಸಿ 571 ಡಿ.ವಿ ನಂದೀಶ್‌ ರವರೊಂದಿಗೆ ಬೆಳಗಿನ  ನಗರ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದಾಗ ಭಾತ್ಮಿದಾರರು ನನಗೆ ಫೋನ್‌ ಮಾಡಿ ತಿಪಟೂರು ರೈಲ್ವೆ ಸ್ಟೇಷನ್‌ನಿಂದ ಮಾವಿನತೋಪಿಗೆ ಹೋಗುವ ಸಾರ್ವಜನಿಕ ರಸ್ತೆಯಲ್ಲಿ ಒಬ್ಬ ಅಸಾಮಿಯು 3-4 ಮಧ್ಯದ ಪ್ಯಾಕೇಟ್‌ ಅನ್ನು ಇಟ್ಟುಕೊಂಡು ಇದರಲ್ಲಿ ಒಂದು ಮಧ್ಯದ ಪ್ಯಾಕೇಟ್‌ ಅನ್ನು ಓಪನ್‌ ಮಾಡಿ ಒಂದು ಪ್ಲಾಸ್ಟಿಕ್ ಲೋಟದಲ್ಲಿ ಹಾಕಿದ್ದು, ಪಕ್ಕದಲ್ಲಿ ಒಂದು ಹಳೆಯ ಪ್ಲಾಸ್ಟಿಕ್ ಚಂಬಿನಲ್ಲಿ ನೀರನ್ನು  ಇಟ್ಟುಕೊಂಡು ಮದ್ಯಪಾನ ಮಾಡುತ್ತಿದ್ದು, ನಂತರ ಸ್ದಳದಲ್ಲಿ ಇದ್ದ ಅಸಾಮಿಯನ್ನು ನಮ್ಮ ಸಿಬ್ಬಂದಿಯವರ ಮೂಲಕ ಬೆಳಗ್ಗೆ 9-20 ಕ್ಕೆ ಹಿಡಿದು  ಸದರಿ ಸ್ಥಳಕ್ಕೆ ಸ್ಥಳದಲ್ಲಿದ್ದ ಪಂಚರನ್ನು ಬರಮಾಡಿಕೊಂಡು ವಿಚಾರವನ್ನು ತಿಳಿಸಿ, ಬಂದಿಸಿದ ಅಸಾಮಿಯನ್ನು ವಿಚಾರ ಮಾಡಲಾಗಿ ಆತನ ಹೆಸರು ಜಗದೀಶ್‌‌ ಬಿನ್‌ ಸಿದ್ದಲಿಂಗಯ್ಯ, 45 ವರ್ಷ, ದೇವಾಂಗ ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ - ಶನಿಮಹಾತ್ಮ ದೇವಸ್ದನದ ಬಳಿ ಎಸ್‌. ಎಸ್‌ ಗಾರ್ಡ್‌‌ನ್‌ ಮಾವಿನ ತೋಪು, ತಿಪಟೂರು ಟೌನ್‌ ಎಂತ ತಿಳಿಸಿದ್ದು,  ಸ್ದಳದಲ್ಲಿ ಆಸಾಮಿಯು ಇಟ್ಟುಕೊಂಡಿದ್ದ ವಸ್ತುಗಳನ್ನು ಪರಿಶೀಲನೆ ಮಾಡಲಾಗಿ 90 ಎಂ.ಎಲ್‌ನ    ಹೈವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ ಟೆಟ್ರಾ ಪಾಕೇಟ್ ಬೆಲೆ ಒಂದಕ್ಕೆ 28.13 ಪೈಸೆ ಎಂತ ಬರೆದಿರುವ ಮಧ್ಯ ತುಂಬಿದ ಸೀಲ್‌ ಓಪನ್‌ ಮಾಡದ 3 ಟೆಟ್ರಾ ಪ್ಯಾಕೇಟ್‌‌ ಮತ್ತು ಮತ್ತೊಂದು ಓಪನ್‌ ಮಾಡಿದ್ದ  90 ಎಂ.ಎಲ್ ನ ಹೈವಾರ್ಡ್ಸ್ ಚೀರ್ಸ್ ವಿಸ್ಕಿ ಮಧ್ಯದ ಟೆಟ್ರಾ ಪಾಕೇಟ್ ಇದ್ದು, ಈ ಮೂರು ತುಂಬಿರುವ ಮತ್ತು ಒಂದು ಖಾಲಿ ಮದ್ಯದ ಟೆಟ್ರಾ ಪಾಕೇಟ್ ಹಾಗೂ ಒಂದು ಪ್ಲಾಸ್ಟಿಕ್ ಲೋಟ ಮತ್ತು ಒಂದು ಪ್ಲಾಸ್ಟಿಕ್‌  ಚಂಬು ಇದ್ದು, ಈತನು ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ದಳದಲ್ಲಿ ಮಧ್ಯಪಾನ ಮಾಡುತ್ತಿದ್ದ ಸ್ದಳವನ್ನು ಪರಿಶೀಲಿಸಲಾಗಿ ಸದರಿ ಸ್ದಳವು ತಿಪಟೂರು ರೈಲ್ವೆ ಸ್ಟೇಷನ್‌‌ನಿಂದ ಮಾವಿನತೋಪಿಗೆ ಹೋಗುವ ಸಾರ್ವಜನಿಕ ರಸ್ತೆಯಾಗಿದ್ದು, ಆರೋಪಿಯಿಂದ ಮೇಲ್ಕಂಡ ಮಾಲುಗಳನ್ನು ಹಾಗೂ ಆರೋಪಿಯನ್ನು ಪಂಚರ ಸಮಕ್ಷಮ ಬೆಳಿಗ್ಗೆ 9-30 ಗಂಟೆಯಿಂದ 10-30 ಗಂಟೆಯವರೆಗೆ ಪಂಚನಾಮೆಯ ಕ್ರಮ ಕೈಗೊಂಡು ವಶಕ್ಕೆ ಪಡೆದು ಮಾಲು ಮತ್ತು ಆರೋಪಿಯೊಂದಿಗೆ ಠಾಣೆಗೆ ಬಂದು ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ಇತ್ಯಾಧಿಯಾಗಿ ನೀಡಿದ ಜ್ಞಾಪನವನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಮಧುಗಿರಿ ಪೊಲೀಸ್ ಠಾಣಾ ಮೊ.ಸಂ 196/2017 u/s 279,304 [A] IPC.

ಪಿರ್ಯಾದಿ ಲೊಕೇಶ್ ಬಿನ್ ಸಣ್ಣೀರಪ್ಪ, 32 ವರ್ಷ, ನಾಯಕ ಜನಾಂಗ, ಕೆರೆಗಳ ಪಾಳ್ಯ, ಕಸಬಾ ಹೋಬಳಿ, ಮಧುಗಿರಿ ತಾಲ್ಲೂಕುರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ಪಿರ್ಯಾದಿಯ ಅಣ್ಣ ಜಯರಾಮ್ ಕೆ.ಎಸ್‌ ರವರು ಮಧುಗಿರಿ ಟೌನ್ ಆಯಿಲ್ ರವಿಯವರ ಬಳಿ ಟೆಂಫೋ ಚಾಲಕನಾಗಿ ಕೆಲಸ ಮಾಡುತ್ತಿದ್ದು. ಪ್ರತಿದಿನ ಬೆಳಿಗ್ಗೆ ಕೆಲಸಕ್ಕೆ ಬಂದು ರಾತ್ರಿ ಊರಿಗೆ ಬರುತ್ತಿದ್ದರು. ಈಗಿರುವಾಗ್ಗೆ ದಿನಾಂಕ: 23-10-2017 ರಂದು ರಾತ್ರಿ 10.40 ಗಂಟೆಗೆ ಪಿರ್ಯಾದಿಯು ಮನೆಯಲ್ಲಿದ್ದಾಗ, ನಾಗಪ್ಪ ರವರು ಪಿರ್ಯಾದಿಗೆ ಪೋನ್ ಮಾಡಿ ನಿಮ್ಮಣ್ಣ ಜಯರಾಮ್ ರವರಿಗೆ ಅಪಘಾತವಾಗಿರುತ್ತದೆಂತಾ ತಿಳಿಸಿದ ಮೇರೆಗೆ ಪಿರ್ಯಾದಿಯು ಸ್ಥಳಕ್ಕೆ ಹೋಗಿ ನೋಡಲಾಗಿ, ವಿಚಾರ ನಿಜವಾಗಿದ್ದು, ಸ್ಥಳದಲ್ಲಿದ್ದ ಕಾಮರಾಜುರವರನ್ನು ವಿಚಾರ ಮಾಡಲಾಗಿ ದಿನಾಂಕ: 23-10-2017 ರಂದು ರಾತ್ರಿ ಸುಮಾರು 10.30 ಗಂಟೆಯ ಜಯರಾಮ್ ಕೆ.ಎಸ್ ರವರು ಕೆಲಸ ಮುಗಿಸಿಕೊಂಡು ಮಧುಗಿರಿ-ತುಮಕೂರು ಮುಖ್ಯರಸ್ತೆಯಲ್ಲಿ ಮಧುಗಿರಿಯಿಂದ ಹರಿಹರರೊಪ್ಪ ಕ್ರಾಸ್ ಮುಂದೆ ಪಾಳುಬಿದ್ದಿರುವ ಕುಷ್ಠರೋಗದ ಆಸ್ಪತ್ರೆ-ಸೇತುವೆ ಮದ್ಯೆ ವೀರಣ್ಣನವರ ಜಮೀನಿನ ನೇರದಲ್ಲಿ  ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಊರಿಗೆ ಬರುತ್ತಿದ್ದಾಗ, ಅದೇ ವೇಳೆಗೆ ಮಧುಗಿರಿ ಕಡೆಯಿಂದ ಬಂದ KA-64-K-3612 ಪ್ಯಾಷನ್ ಪ್ರೋ ದ್ವಿಚಕ್ರವಾಹನದ ಚಾಲಕ ಎಸ್‌.ಕುಮಾರ್ ರವರು, ದ್ವಿಚಕ್ರವಾಹವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು, ಹಿಂಬದಿಯಿಂದ ಜಯರಾಮ್ ರವರಿಗೆ ಡಿಕ್ಕಿ ಹೊಡೆದ ಪರಿಣಾಮ, ಜಯರಾಮ್ ಕೆ.ಎಸ್ ರವರ ತಲೆಗೆ, ಮುಖ, ದವಡೆಗೆ, ಎಡಕಾಲಿಗೆ, ಮೂಗಿಗೆ, ಬೆನ್ನಿಗೆ ಮತ್ತಿತರೆ ಕಡೆದ ಪೆಟ್ಟು ಬಿದ್ದು, ರಕ್ತಗಾಯವಾಗಿರುತ್ತದೆ. ತಕ್ಷಣ ಅಲ್ಲಿಯೇ ನಡೆದುಕೊಂಡು ಬರುತ್ತಿದ್ದ ಕಾಮರಾಜು ಕೆ.ಎಂ, ಹಾಗೂ ನಾಗಪ್ಪರವರು ಉಪಚರಿಸಿರುತ್ತಾರೆ. ನಂತರ ಗಾಯಾಳು ಜಯರಾಮ್ ರವರನ್ನು ಯಾವುದೋ ಆಟೋದಲ್ಲಿ ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು, ಚಿಕಿತ್ಸೆ ಕೊಡಿಸಿ, ನಂತರ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸಗೆ ತುಮಕೂರು ಜಿಲ್ಲಾಸ್ಪತ್ರೆಗೆ ಆಂಬುಲೆನ್ಸ್ ನಲ್ಲಿ ಕರೆದುಕೊಂಡು ಒಳರೋಗಿಯಾಗಿ ದಾಖಲಿಸಿ, ಚಿಕಿತ್ಸೆ ಕೊಡಿಸುವಾಗ ದಿನಾಂಕ:24-10-2017 ರಂದು ಬೆಳಗಿನ ಜಾವ ಸುಮಾರು 04.00 ಗಂಟೆಯ ಸಮಯದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿಯೇ ಮೃತಪಟ್ಟಿರುತ್ತಾರೆ. ಪಿರ್ಯಾದಿಯ ಅಣ್ಣನ ಜಯರಾಮ್ ಕೆ.ಎಸ್‌ ರವರ ಸಾವಿಗೆ ಕಾರಣನಾದ KA-64-K-3612 ಪ್ಯಾಷನ್ ಪ್ರೋ ದ್ವಿಚಕ್ರವಾಹನದ ಚಾಲಕ ಎಸ್‌.ಕುಮಾರ್ ರವರ ವಿರುದ್ದ ಸೂಕ್ತ ಕಾನೂನು ರಿತ್ಯಾ ಕ್ರಮ ಜರುಗಿಸಬೇಕೆಂದು ಕೋರುತ್ತೇನೆಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.Tuesday, 24 October 2017

Crime Incidents 24-10-17

ಅಮೃತೂರು ಪೊಲೀಸ್ ಠಾಣಾ ಮೊನಂ-200/2017 ಕಲಂ-143, 147, 323, 324, 354, 504, 506 ರೆ/ವಿ 149 ಐಪಿಸಿ.

ದಿನಾಂಕ: 23-10-2017 ರಂದು 21-10 ಗಂಟೆಯಲ್ಲಿ ಪಿರ್ಯಾದಿ ಮಹೇಶ್.ಹೆಚ್,ಆರ್ ಬಿನ್ ರಾಮಣ್ಣ, 30 ವರ್ಷ, ಒಕ್ಕಲಿಗರು, ನ್ಯೂಸ್ ಪೇಪರ್ ಹಂಚುವ ಕೆಲಸ, ನಂ-48/28, 4ನೇ ಕ್ರಾಸ್, ಜೈ ಮಾರುತಿ ನಗರ, ನಂದಿನಿ ಲೇ ಔಟ್, ಬೆಂಗಳೂರು-96, ಸ್ವಂತ ಊರು: ಹೊಸಹಳ್ಳಿ ಗ್ರಾಮ, ಅಮೃತೂರು ಹೋಬಳಿ, ಕುಣಿಗಲ್ ತಾಲೋಕ್ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ ನಾನು ಮೇಲಿನ ವಿಳಾಸದಲ್ಲಿ ವಾಸವಾಗಿದ್ದು, ಈ ದಿನ ದಿನಾಂಕ: 23-10-2017 ರಂದು ಬೆಳಿಗ್ಗೆ ನಾನು ಮತ್ತು ನಮ್ಮ ಅಣ್ಣ ಸುರೇಶ್ ರವರು ನಮ್ಮ ಸ್ವಗ್ರಾಮ ಹೊಸಹಳ್ಳಿಗೆ ಬಂದಿದ್ದು, ನಮ್ಮ ಮನೆಯ ಬಚ್ಚಲು ನೀರು ಹೊರಗೆ ಹೋಗಲು ನಮ್ಮ ಮನೆಯ ಪಕ್ಕ ಪೈಪನ್ನು ನೆಲದಲ್ಲಿ ಅದಿಯುತ್ತಿದ್ದೆವು. ಮದ್ಯಾಹ್ನ ಸುಮಾರು 1-00 ಗಂಟೆ ಸಮಯದಲ್ಲಿ ನಮ್ಮ ಊರಿನ ಗಂಗಣ್ಣ ಬಿನ್ ಲೇಟ್ ಮಾಯಣ್ಣಗೌಡರವರ ಪೈಪ್ ಅದಿಯುವ ವಿಚಾರದಲ್ಲಿ ನಮ್ಮ ಮೇಲೆ ಜಗಳ ಮಾಡಿ ಪೈಪ್ ಅದಿಯಬೇಡಿ ಎಂದು ಗಲಾಟೆ ಮಾಡಿದ್ದರು. ಆದರೆ ನಾವು ನಮ್ಮ ಜಾಗದಲ್ಲಿ ಪೈಪ್ ಅದ್ದಿಕೊಳ್ಳುತ್ತೇವೆ ಎಂದು ಹೇಳಿದ್ದಕ್ಕೆ ನನ್ನ ಮಕ್ಕಳ ನಿಮಗೆ ಬೆಂಗಳೂರಿನಲ್ಲಿರುವ ನನ್ನ ಮಕ್ಕಳನ್ನು ಕರೆಸಿ ಒಂದು ಗತಿ ಕಾಣಿಸುತ್ತೇವೆ ಎಂದು ಬೆದರಿಕೆ ಹಾಕಿದ್ದರು. ನಾವು ಅವರ ಮಕ್ಕಳು ಬಂದ ಮೇಲೆ ವಿಚಾರವನ್ನು ಬಗೆಹರಿಸಿಕೊಂಡರಾಯಿತೆಂದು ಪೈಪ್ ಅದಿಯುವುದನ್ನು ನಿಲ್ಲಿಸಿ ಸುಮ್ಮನಾದೆವು. ನಂತರ ಇದೇ ದಿನ ಸಂಜೆ ಸುಮಾರು 5-00 ಗಂಟೆ ಸಮಯದಲ್ಲಿ ನಾವು ಮನೆಯಲ್ಲಿದ್ದಾಗ ನಮ್ಮ ಮನೆಯ ಹೊರಗೆ ಗಂಗಣ್ಣನ ಮಕ್ಕಳಾದ ನಾಗರಾಜು, ಪುಟ್ಟರಾಜು, ಯೋಗೇಶ, ಪ್ರಕಾಶ ಹಾಗೂ ಗಂಗಣ್ಣ ಎಲ್ಲರೂ ಸೇರಿಕೊಂಡು ಮನೆಯ ಹೊರಗೆ ಬನ್ನಿರೋ ಸೂಳೆ ಮಕ್ಕಳಾ, ಬೋಳಿ ಮಕ್ಕಳಾ ಎಂದು ಇತ್ಯಾದಿಯಾಗಿ ಅವಾಚ್ಯವಾಗಿ ಬೈದು ಕೂಗಾಡುತ್ತಿದ್ದರು. ಮನೆಯ ಒಳಗಿದ್ದ ನಾನು ನನ್ನ ಅಣ್ಣ ಸುರೇಶ, ನನ್ನ ತಾಯಿ ಸಾಕಮ್ಮ ರವರು ಏನೆಂದು ವಿಚಾರ ಮಾಡಲು ಮನೆಯ ಹೊರಗಡೆ ಬಂದೆವು. ಅಷ್ಟರಲ್ಲಿ ಬೈದಾಡುತ್ತಿದ್ದ ನಾಗರಾಜನು ಅಲ್ಲಿಯೇ ಬಿದ್ದಿದ್ದ ಕಲ್ಲನ್ನು ಎತ್ತಿಕೊಂಡು ನನ್ನ ಅಣ್ಣನಾದ ಸುರೇಶನ ತಲೆಯ ಹಿಂಭಾಗಕ್ಕೆ ಹೊಡೆದು ರಕ್ತಗಾಯಪಡಿಸಿದನು. ಅವನನ್ನು ಬಿಡಿಸಿಕೊಳ್ಳಲು ನಾನು ಮತ್ತು ನಮ್ಮ ತಾಯಿ ಹೋದಾಗ ಪುಟ್ಟರಾಜ ಹಾಗೂ ಪ್ರಕಾಶ ನಮ್ಮನ್ನು ಹಿಡಿದುಕೊಂಡರು. ಯೋಗೇಶನು ಅಲ್ಲಿಯೇ ಇದ್ದ ಮತ್ತೊಂದು ಕಲ್ಲನ್ನು ತೆಗೆದುಕೊಂಡು ನನ್ನ ಮುಖದ ಮೇಲೆ ಹಣೆಗೆ ಹೊಡೆದು ಗಾಯಗೊಳಿಸಿದನು. ನಂತರ ನನ್ನ ತಾಯಿಗೆ ಸಹ ನಾಗರಾಜನು ಅದೇ ಕಲ್ಲಿನಿಂದ ಮುಖದ ಮೇಲೆ ಹೊಡೆದು ಗಾಯಗೊಳಿಸಿದನು.  ನಂತರ ಗಂಗಣ್ಣನು ನನ್ನ ತಾಯಿಯ ಕಪಾಳಕ್ಕೆ ಹೊಡೆದನು. ನಾಗರಾಜನು ನನ್ನ ತಾಯಿಗೆ ಕಾಲಿನಿಂದ ಒದ್ದನು. ಇತರರು ಸಹ ನಮ್ಮ ತಾಯಿಗೆ ಹೊಲಸು ಮಾತುಗಳಿಂದ ಬೈದು ಎಲ್ಲರೆದುರು ಅಪಮಾನ ಪಡಿಸಿರುತ್ತಾರೆ. ಅಷ್ಟರಲ್ಲಿ ನಮ್ಮ ಊರಿನ ತಮ್ಮಣ್ಣರವರ ಮಗ ಸ್ವಾಮಿ ಮತ್ತು ನಮ್ಮ ಜೊತೆ ಬೆಂಗಳೂರಿನಿಂದ ಬಂದಿದ್ದ ನನ್ನ ಸ್ನೇಹಿತ ಸತೀಶ ಹಾಗೂ ಊರಿನ ಜನಗಳು ಜಗಳವನ್ನು ಬಿಡಿಸಿದರು. ನಾನು ನಮ್ಮದೇ ಕಾರಿನಲ್ಲಿ ನಮ್ಮ ಅಣ್ಣ ಮತ್ತು ನಾನು ನನ್ನ ತಾಯಿ ನನ್ನ ಸ್ನೇಹಿತ ಸತೀಶ್ ರವರ ಜೊತೆಯಲ್ಲಿ ಅಮೃತೂರಿನ ಸರ್ಕಾರಿ ಆಸ್ಪತ್ರೆಗೆ ಬಂದು ಪ್ರಥಮ ಚಿಕಿತ್ಸೆ ಪಡೆದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ನಾವು ಮೂರು ಜನ ಕುಣಿಗಲ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತೇವೆ. ಈ ರೀತಿಯಾಗಿ  ನಮ್ಮ ಮೇಲೆ ವಿನಾ ಕಾರಣ ಗುಂಪು ಕಟ್ಟಿಕೊಂಡು ಜಗಳ ತೆಗೆದು ನಮಗೆ ಹೊಡೆದು ನಮ್ಮ ತಾಯಿಗೆ ಸಹ ಹೊಡೆದು ಎಲ್ಲರೆದುರು ಅಪಮಾನ ಪಡಿಸಿದ ನಾಗರಾಜ, ಪುಟ್ಟರಾಜ, ಪ್ರಕಾಶ, ಯೋಗೇಶ ಮತ್ತು ಇವರ ತಂದೆ ಗಂಗಣ್ಣ ರವರ ಮೇಲೆ ಕಾನೂನು ಕ್ರಮ ಜರುಗಿಸಿ ನಮಗೆ ರಕ್ಷಣೆ ನೀಡಬೇಕೆಂದು ನಮ್ಮ ದೂರನ್ನು ನೀಡುತ್ತಿದ್ದೇನೆ ಎಂದು ಇದ್ದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿರುತ್ತೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ 189/2017 ಕಲಂ 279,337 ಐಪಿಸಿ ರೆ/ವಿ 134(ಎ&ಬಿ), 187 ಐಎಂವಿ ಆಕ್ಟ್

ದಿನಾಂಕ:23-10-2017 ರಂದು ಸಂಜೆ 6-30 ಗಂಟೆ ಸಮಯದಲ್ಲಿ ಪಿರ್ಯಾದಿಯಾದ ಗಂಗರಾಮಯ್ಯ ಬಿನ್ ಮಾಯಣ್ಣ, 41 ವರ್ಷ, ಗಾರೆ ಕೆಲಸ, ನಾಯಕರು, ಚಿಕ್ಕಸಾರಂಗಿ, ಗೂಳೂರು ಹೋಬಳಿ, ತುಮಕೂರು ತಾಲ್ಲೂಕು & ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಟೈಪ್ ಮಾಡಿಸಿದ ದೂರಿನ ಅಂಶವೇನೆಂಧರೆ ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ನಾನು ದಿನಾಂಕ;23-10-2017 ರಂದು ಸಾಯಂಕಾಲ ಸುಮಾರು 05-00 ಗಂಟೆ ಸಮಯದಲ್ಲಿ ನಮ್ಮ ಗ್ರಾಮದಲ್ಲಿದ್ದಾಗ, ಹೊನ್ನುಡಿಕೆ ಹ್ಯಾಂಡ್‌ಪೋಸ್ಟ್ ನಿಂದ ಸಾರ್ವಜನಿಕರೊಬ್ಬರು ಪೋನ್‌ ಮಾಡಿ ನಿಮ್ಮ ಸಂಬಂಧಿಕರೊಬ್ಬರು ತುಮಕೂರು ಕಡೆಯಿಂದ ಕೆಎ-06-ಇ.ಆರ್-7537 ನೇ ಹೋಂಡಾ ಯುನಿಕಾರ್ನ್ ದ್ವಿಚಕ್ರ ವಾಹನದಲ್ಲಿ ಹಿಂಬದಿಯಲ್ಲಿ ಒಂದು ಹೆಂಗಸನ್ನು ಕೂರಿಸಿಕೊಂಡು ಬಂದು ಹೊನ್ನುಡಿಕೆ ಹ್ಯಾಂಡ್‌ಪೋಸ್ಟ್ ನಲ್ಲಿರುವ ಚಿಕ್ಕಸಾರಂಗಿ ಕ್ರಾಸ್‌ ಕಡೆಗೆ ತನ್ನ ದ್ವಿಚಕ್ರ ವಾಹನವನ್ನು ಸಂಜೆ ಸುಮಾರು 4-45 ಗಂಟೆ ಸಮಯದಲ್ಲಿ ತಿರುಗಿಸಿಕೊಳ್ಳುತ್ತಿರುವಾಗ್ಗೆ, ಸದರಿ ದ್ವಿಚಕ್ರ ವಾಹನದ ಹಿಂಬದಿಯಿಂದ ಅಂದರೆ ತುಮಕೂರು ಕಡೆಯಿಂದ ಕುಣಿಗಲ್‌ ಕಡೆಗೆ ಹೋಗಲು ಬಂದ ಕೆಎ-06-ಎಂ-9121 ನೇ ಟಾಟಾ ಮಾಂಜಾ ಕಾರಿನ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಮುಂಭಾಗದಲ್ಲಿ ಹೋಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ನಂತರ ಎದುರುಗಡೆಯಿಂದ ಅಂದರೆ ಕುಣಿಗಲ್ ಕಡೆಯಿಂದ ತುಮಕೂರು ಕಡೆಗೆ ಹೋಗಲು ಬಂದ ಕೆಎ-04-ಎ.ಎ-3936 ನೇ ಇಟಿಯಾಸ್‌ ಕಾರಿಗೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದ್ದು, ದ್ವಿಚಕ್ರ ವಾಹನದಲ್ಲಿದ್ದವರು ಗಾಯಗೊಂಡಿದ್ದು, ಕೆಎ-04-ಎ.ಎ-3936 ನೇ ಇಟಿಯಾಸ್‌ ಕಾರಿನಲ್ಲಿದ್ದವರಿಗೂ ಸಹ ಗಾಯಗಳಾಗಿದ್ದು, ಅಫಘಾತಪಡಿಸಿದ ಕೆಎ-06-ಎಂ-9121 ನೇ ಟಾಟಾ ಮಾಂಜಾ ಕಾರಿನ ಚಾಲಕ ತನ್ನ ಕಾರನ್ನು ಸ್ಥಳದಲ್ಲೇ ಬಿಟ್ಟು ಓಡಿ ಹೋದನೆಂತಾ ತಿಳಿಸಿದರು. ನಾನು ತಕ್ಷಣ ಹೊನ್ನುಡಿಕೆ ಹ್ಯಾಂಡ್‌ಪೋಸ್ಟ್‌ಗೆ ಹೋಗಿ ನೋಡಲಾಗಿ ಅಪಘಾತವಾಗಿರುವುದು ನಿಜವಾಗಿದ್ದು, ನನ್ನ ಸಂಬಂಧಿಯಾದ ಪ್ರೇಮ್‌ಕುಮಾರ್‌ @ ಪ್ರೇಮ್‌ ರವರು ದ್ವಿಚಕ್ರ ವಾಹನದ ಸವಾರನಾಗಿದ್ದು, ನನ್ನ ಹೆಂಡತಿ ವೀಣಾ ರವರು ಹಿಂಬದಿ ಸವಾರರಾಗಿದ್ದು, ನನ್ನ ಅಳಿಯ ಪ್ರೇಮ್‌ಕುಮಾರ್ @ ಪ್ರೇಮ್ ರವರಿಗೆ ತಲೆಗೆ, ಎಡಗಾಲಿಗೆ ಹಾಗೂ ಸೊಂಟಕ್ಕೆ ಏಟು ಬಿದ್ದು ರಕ್ತಗಾಯಗಳಾಗಿದ್ದು, ನನ್ನ ಹೆಂಡತಿ ವೀಣಾ ರವರಿಗೆ ತಲೆಗೆ, ಬಲಗಾಲಿನ ಮಂಡಿಗೆ ಏಟು ಬಿದ್ದು ರಕ್ತಗಾಯವಾಗಿತ್ತು. ಕೆಎ-04-ಎ.ಎ-3936 ನೇ ಇಟಿಯಾಸ್‌ ಕಾರಿನಲ್ಲಿದ್ದವರಿಗೂ ಸಹ ಗಾಯಗಳಾಗಿರುತ್ತೇಂತಾ ವಿಚಾರ ತಿಳಿಯಿತು. ನಂತರ ನಾನು ಸ್ಥಳಕ್ಕೆ ಬಂದ 108 ವಾಹನದಲ್ಲಿ ಗಾಯಗೊಂಡಿದ್ದ ಪ್ರೇಮ್‌ಕುಮಾರ್ @ ಪ್ರೇಮ್‌ ಹಾಗೂ ವೀಣಾ ರವರುಗಳನ್ನು ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದೆನು. ಅಪಘಾತಪಡಿಸಿದ ಕಾರು ಹಾಗೂ ಅಪಘಾತಕ್ಕೊಳಗಾದ ದ್ವಿಚಕ್ರ ವಾಹನ ಮತ್ತು ಕಾರು ಸ್ಥಳದಲ್ಲೇ ಇರುತ್ತವೆ. ಆದ್ದರಿಂದ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಈ ಅಪಘಾತಕ್ಕೆ ಕಾರಣನಾದ ಕೆಎ-06-ಎಂ-9121 ನೇ ಟಾಟಾ ಮಾಂಜಾ ಕಾರಿನ ಚಾಲಕನ ಮೇಲೆ ಕಾನೂನು ರೀತ್ಯಾ ಮುಂದಿನ ಕ್ರಮ ಜರುಗಿಸಬೇಕೆಂದು ಈ ಮೂಲಕ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ ಎಂದು ನೀಡಿದ ದೂರನ್ನು ಪಡೆದು ಠಾಣಾ ಮೊ ನಂ 189/2017 ಕಲಂ 279,337 ಐಪಿಸಿ ರೆ/ವಿ 134(ಎ&ಬಿ), 187 ಐಎಂವಿ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

 

ಹುಳಿಯಾರು ಪೊಲೀಸ್ ಠಾಣಾ ಮೊ.ನಂ 133/2017, ಕಲಂ 279, 337 ಐಪಿಸಿ ರೆ/ವಿ 187 ಐ.ಎಂ.ವಿ ಆಕ್ಟ್.

ದಿನಾಂಕ:23/10/2017 ರಂದು ಸಾಯಂಕಾಲ 04-30 ಗಂಟೆಗೆ ಪಿರ್ಯಾದಿ ದೇವರಾಜು ಬಿನ್ ಹನುಮಂತಯ್ಯ, 46 ವರ್ಷ, ಮಡಿವಾಳ ಜನಾಂಗ, ದಸೂಡಿ, ಹುಳಿಯಾರು ಹೋಬಳಿ, ಚಿ.ನಾ ಹಳ್ಳಿ ತಾಲ್ಲೂಕು ಇವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ದಿನಾಂಕ 20/10/2017 ರಂದು ರಾತ್ರಿ 08-00 ಗಂಟೆ ಸಮಯದಲ್ಲಿ ನನ್ನ ಮಗನಾದ ರಘು ಡಿ.ಡಿ ಮತ್ತು ಈತನ ಸ್ನೇಹಿತನಾದ ಕರುಣಾಕರ ರವರುಗಳು ನಮ್ಮ ಜಮೀನಿನ ಹತ್ತಿರ ಹೋಗಲು ಕೆ.ಎ 44 ಹೆಚ್.ಕ್ಯೂ 4295 ನೇ ಬೈಕಿನಲ್ಲಿ ದಸೂಡಿ ಪಕ್ಕದ ಗವಿಯಪ್ಪನ ಪಾಳ್ಯದ ಬಳಿ ಹೋಗುತ್ತಿರುವಾಗ ಎದುರುಗಡೆಯಿಂದ ಅತಿವೇಗ ಮತ್ತು ಅಜಾಗರೂಕತೆಯಿಂದ ಬಂದ ಕೆ.ಎ 53 ಎ 2817 ನೇ ಕಾರಿನ ಚಾಲಕ ನಮ್ಮ ಕೆ.ಎ 44 ಹೆಚ್.ಕ್ಯೂ 4295 ನೇ ದ್ವಿಚಕ್ರ ವಾಹನಕ್ಕೆ ಡಿಕ್ಕಿಹೊಡೆಸಿದ ಪರಿಣಾಮ ನನ್ನ ಮಗ ಮತ್ತು ಹಿಂದೆ ಕುಳಿತಿದ್ದ ಆತನ ಸ್ನೇಹಿತ ಕರುಣಾಕರನಿಗೆ ಅಪಘಾತವಾಗಿದ್ದು, ಕಾರಿನ ಚಾಲಕ ಕಾರನ್ನು ಸ್ಥಳದಲ್ಲೇ ಬಿಟ್ಟು ಓಡಿ ಹೋಗಿರುತ್ತಾನೆ. ನನ್ನ ಮಗ ರಘು ರವರಿಗೆ ಬಲಗಾಲು ಮುರಿದಿದ್ದು ಮತ್ತು ದೇಹದ ಇತರೆ ಬಾಗಗಳಿಗೆ ಗಾಯಗಳಾಗಿರುತ್ತೆ. ಹಾಗೂ ಕರುಣಾಕರನಿಗೆ ಬಲಗಾಲು ಮುರಿದಿದ್ದು ದೇಹದ ಇತರೆ ಬಾಗಗಳಿಗೆ ಗಾಯಗಳಾಗಿರುತ್ತೆ. ಆಗ ಸ್ಥಳದಲ್ಲಿದ್ದ ಇದ್ದ ರಮೇಶ ಮತ್ತು ನಾಗರಾಜು ಎಂಬುವವರು ಉಪಚರಿಸಿ, ರಮೇಶ್ ಎಂಬುವವರು ನನಗೆ ಫೋನ್ ಮೂಲಕ ಅಪಘಾತವಾಗಿರುವ ವಿಚಾರ ತಿಳಿಸಿದರು. ನಂತರ ಹುಳಿಯಾರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ನಾನು ಆಸ್ಪತ್ರೆಗೆ ಬಂದು ನಂತರ ಚಿಕ್ಕನಾಯಕನಹಳ್ಳಿ ಆಸ್ಪತ್ರೆಗೆ ಬಂದು ಪ್ರಥಮ ಚಿಕಿತ್ಸೆ ಕೊಡಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಹೋಗಿ ನಂತರ ವೈದ್ಯರ ಸಲಹೆ ಮೇರೆಗೆ ಹೇಮಾವತಿ ಕೀಲು ಮೂಳೆ ಆಸ್ಪತ್ರೆಗೆ ಸೇರಿಸಿ ಆಪರೇಷನ್ ಮಾಡಿಸಿದ್ದು, ಕರುಣಾಕರನಿಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ಸೇರಿಸಿ ಆಪರೇಷನ್ ಮಾಡಿಸಿರುತ್ತೆ. ನನ್ನ ಮಗ ಮತ್ತು ಕರುಣಾಕನನ್ನು ನೋಡಿಕೊಳ್ಳಲು ಯಾರು ಇಲ್ಲದೇ ಇದ್ದುದ್ದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಈ ದಿನ ತಡವಾಗಿ ಬಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

ಮಿಡಿಗೇಶಿ ಪೊಲೀಸ್ ಠಾಣಾ ಯು.ಡಿ.ಆರ್.ನಂ.19/2017, ಕಲಂ:174 ಸಿ.ಆರ್.ಪಿ.ಸಿ.

ದಿ:23/10/2017 ರಂದು ಬೆಳಿಗ್ಗೆ 09:15 ಗಂಟೆಗೆ ಪಿರ್ಯಾದಿ ಧನಂಜಯ.ಹೆಚ್.ಆರ್. ಬಿನ್ ಲೇ||ರಾಮಚಂದ್ರಯ್ಯ,       21 ವರ್ಷ, ಎ.ಡಿ.ಜನಾಂಗ, 02 ನೇ ವರ್ಷದ ಬಿ.ಎಸ್ಸಿ.ವಿದ್ಯಾರ್ಥಿ, ಹೊಸಕೆರೆ ಗ್ರಾಮ, ಮಿಡಿಗೇಶಿ ಹೋಬಳಿ, ಮಧುಗಿರಿ ತಾಲ್ಲೂಕುರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಮ್ಮ ತಂದೆ-ತಾಯಿಗೆ ಇಬ್ಬರು ಹೆಣ್ಣು ಮಕ್ಕಳು, ಒಬ್ಬ ಗಂಡು ಮಗನಿರುತ್ತೇನೆ, ನನ್ನ ತಂಗಿಯಾದ ಮಾನಸ.ಹೆಚ್.ಆರ್. ಎಂಬುವರು ಮಧುಗಿರಿಯ ಪ್ರಥಮ ದರ್ಜೆ ಕಾಲೇಜಿನಲ್ಲಿ 02 ನೇ ವರ್ಷದ ಬಿ.ಎ. ವ್ಯಾಸಂಗ ಮಾಡುತ್ತಿದ್ದಳು. ನನ್ನ ತಂಗಿ ಮಾನಸ ರವರು ದಿನ ನಿತ್ಯ ಹೊಸಕೆರೆಯಿಂದ ಮಧುಗಿರಿಗೆ ಕಾಲೇಜಿಗೆ ಬಸ್ಸಿನಲ್ಲಿ ಹೋಗಿ ಬರುತ್ತಿದ್ದಳು. ನನ್ನ ತಂಗಿ ಮಾನಸರವರಿಗೆ ಈ ತಿಂಗಳ ಕೊನೆಯ ವಾರದಲ್ಲಿ ಅರ್ಧವಾರ್ಷಿಕ ಪರೀಕ್ಷೆ ಇದ್ದು, ಮನೆಯಲ್ಲಿ ಓದಿಕೊಳ್ಳುತ್ತಿದ್ದಳು. ದಿ:21/10/2017 ರಂದು ನಮ್ಮ ಗ್ರಾಮದಲ್ಲಿಯೇ ನಮ್ಮ ಸಂಬಂಧಿಕರೊಬ್ಬರ ಮನೆಯಲ್ಲಿ ಶ್ರೀ.ಸತ್ಯನಾರಾಯಣ ಸ್ವಾಮಿ ಪೂಜಾ ಕಾರ್ಯಕ್ರಮ ಇಟ್ಟುಕೊಂಡಿದ್ದರು. ಸದರಿ ಕಾರ್ಯಕ್ರಮಕ್ಕೆ ನನ್ನ ತಂಗಿಯಾದ ಮಾನಸ ರವರ ಹೋಗಿ ಬರುತ್ತೇನೆಂತ ಬೆಳಿಗ್ಗೆ ನಮ್ಮ ತಾಯಿಯನ್ನು ಕೇಳಿದಾಗ ನಮ್ಮ ತಾಯಿಯು ನಿನಗೆ ಪರೀಕ್ಷೆ ಹತ್ತಿರದಲ್ಲೇ ಇದೆ, ಎಲ್ಲಗೂ ಹೋಗ ಬೇಡ ಮನೆಯಲ್ಲಿಯೇ ಇದ್ದುಕೊಂಡು ಓದುಕೋ ಎಂತ ಬುದ್ದಿವಾದ ಹೇಳಿ, ನಾನು ಮತ್ತು ನನ್ನ ತಾಯಿ ಲಕ್ಷ್ಮಮ್ಮ ಇಬ್ಬರು ಬೆಳಿಗ್ಗೆ 11:00 ಗಂಟೆಗೆ ಮನೆಯಿಂದ ಹೊರಟು ನಮ್ಮ ಸಂಬಂಧಿಕರ ಮನೆಗೆ ಶ್ರೀ.ಸತ್ಯನಾರಾಯಣ ಸ್ವಾಮಿ ಪೂಜಾ ಕಾರ್ಯಕ್ರಮಕ್ಕೆ ಹೋದೆವು. ನಂತರ ಪೂಜೆ ಮುಗಿಸಿಕೊಂಡು ಅದೇ ದಿನ ಅಂದರೆ ದಿ:21/10/2017 ರಂದು ಸಾಯಂಕಾಲ ಸುಮಾರು 04:00 ಗಂಟೆಗೆ ವಾಪಸ್ಸ್ ನಮ್ಮ ಮನೆಗೆ ಬಂದಾಗ ಮನೆಯಲ್ಲಿ ನನ್ನ ತಂಗಿ ಮಾನಸ ರವರು ಮನೆಯ ಬಾಗಿಲನ್ನು ಮುಂದಕ್ಕೆ ಬಿಟ್ಟು ಮನೆಯಲ್ಲಿ ಮಲಗಿದ್ದಳು, ನಾನು ಮತ್ತು ನನ್ನ ತಾಯಿ ಎಷ್ಟು ಕೂಗಿದರೂ ಎದ್ದೇಳದೇ ಅರೆ ಪ್ರಜ್ಞಾವಸ್ಥೆಯಲ್ಲಿ ಇದ್ದಳು. ಆಗ ನಮಗೆ ಗಾಬರಿಯಾಗಿ ನಾನ ಮತ್ತು ನನ್ನ ತಾಯಿ ಇಬ್ಬರು ನನ್ನ ತಂಗಿ ಮಾನಸಳನ್ನು ಏಕೆ ಈ ರೀತಿ ಇರುವೇ ಏನು ಮಾಡಿಕೊಂಡೆ ಎಂತ ಕೇಳಿದಕ್ಕೆ ಪೂಜೆಗೆ ನನ್ನನ್ನು  ಕಳುಹಿಸದಿದ್ದಕ್ಕೆ ನನ್ನ ಮನಸಿಗೆ ಬೇಜಾರ ಮಾಡಿಕೊಂಡು ನಾನು ಮನೆಯಲ್ಲಿದ್ದ ಯಾವುದೋ ಹಳೆಯ ಮಾತ್ರೆಗಳನ್ನು ನುಂಗಿರುತ್ತೇನೆಂತ ತಿಳಿಸಿದಳು. ಕೂಡಲೇ ನಾವು ಯಾವುದೋ ವಾಹನದಲ್ಲಿ ನನ್ನ ತಂಗಿ ಮಾನಸಳನ್ನು ಕರೆದುಕೊಂಡು ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿಕೊಂಡು, ನಂತರ ಅಲ್ಲಿಂದ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿಕೊಂಡು ನಂತರ ದಿ:22/10/2017 ರಂದು ವೈಧ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಲು, ವಿಕ್ಟೋರಿಯ ಆಸ್ಪತ್ರೆಯ ಕಾಂಪೌಂಡ್ ಒಳಗೆ ಹೋದಾಗ ನನ್ನ ತಂಗಿ ಮಾನಸಳು ನೆನ್ನೆ ಅಂದರೆ ದಿ:22/10/2017 ರಂದು ಮದ್ಯಾಹ್ನ ಸುಮಾರು 03:30 ಗಂಟೆಯ ಸಮಯದಲ್ಲಿ ಮೃತಪಟ್ಟಳು. ಆದ್ದರಿಂದ ನನ್ನ ತಂಗಿ ಮಾನಸಳ ಶವವನ್ನು ವಿಕ್ಟೋರಿಯ ಆಸ್ಪತ್ರೆಯ ಒಳಗೆ ತೆಗೆದುಕೊಂಡು ಹೋಗದೆ ವಾಪಸ್ಸ್ ಮಧುಗಿರಿ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ತಂದು ಇಟ್ಟು, ವಿಚಾರವನ್ನು ನಮ್ಮ ಸಂಬಂಧಿಕರುಗಳಿಗೆ ತಿಳಿಸಿ ಈ ದಿನ ಅಂದರೆ ದಿ:23/10/2017 ರಂದು ತಡವಾಗಿ ಬಂದು ದೂರು ನೀಡುತ್ತಿದ್ದು, ನಮ್ಮ ತಂಗಿ ಮಾನಸ ರವರ ಸಾವಿನಲ್ಲಿ ಬೇರೆ ಯಾವುದೇ ಅನುಮಾನವಿರುವುದಿಲ್ಲ ಆದ್ದರಿಂದ ತಾವು ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರು.

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆಯ 134/2017 ಕಲಂ 279, 337, 304(ಎ) ಐಪಿಸಿ

ದಿನಾಂಕ:-23/10/2017 ರಂದು ಬೆಳಗ್ಗೆ 9-45 ಗಂಟೆಗೆ ಪಿರ್ಯಾದಿ ಶ್ರೀಮತಿ ಗಂಗಮ್ಮ ಕೋಂ ಸಿದ್ದಯ್ಯ ಲೇಟ್, 65ವರ್ಷ, ಉಪ್ಪಾರ ಜನಾಂಗ, ಕೆರೆಬಂಡಿ ಪಾಳ್ಯ, ಹೊನ್ನವಳ್ಳಿ ಹೋಬಳಿ,  ತಿಪಟೂರು ತಾ.  ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ ದಿನಾಂಕ:22/10/2017 ರಂದು ಬೆಳಗ್ಗೆ 10-45 ಗಂಟೆ ಸಮಯದಲ್ಲಿ ಪಿರ್ಯಾದಿರವರು ತನ್ನ ಮಗನಾದ 45ವರ್ಷದ ಬಸವರಾಜು ರವರೊಂದಿಗೆ  ಶಿವರ ಗ್ರಾಮದ ತಮ್ಮ ಸಂಬಂದಿಕರ ಗೃಹಪ್ರವೇಶಕ್ಕೆ ಊರಿನಿಂದ ಕೆ.ಎ.04-ಇ.ಸಿ-1233 ನೇ ಬೈಕ್ ನ ಹಿಂಬದಿಯಲ್ಲಿ ಕುಳಿತುಕೊಂಡು ಹೊರಟಿದ್ದು ಬೈಕನ್ನು ಬಸವರಾಜು ರವರು ಓಡಿಸುತ್ತಿದ್ದು, ಶಿವರ ಎಡವನಹಳ್ಳಿ ರಸ್ತೆಯ ಮಂಟಪನ ಕಟ್ಟೆಯ ಬಳಿ ರಸ್ತೆಯ ಎಡಬದಿಯಲ್ಲಿ ಬಸವರಾಜು ಕೆ.ಎ.04-ಇ.ಸಿ.-1233 ನೇ ಬೈಕನ್ನು ಚಾಲನೆ ಮಾಡಿಕೊಂಡು ಶಿವರ ಕಡೆ ಹೋಗುವಾಗ ಶಿವರ ಕಡೆಯಿಂದ ಕೆ.ಎ06-ಕ್ಯೂ-2829 ನೇ ಬೈಕ್ ನ ಚಾಲಕನಾದ ಯಶವಂತ, ಸೋಮೇನಹಳ್ಳಿ,  ಅರಸೀಕೆರೆ ತಾ. ರವರು ಬೈಕನ್ನು ಅತಿವೇಗ ಮತ್ತು ನಿರ್ಲಕ್ಷತೆಯಿಂದ ಓಡಿಸಿಕೊಂಡು ಬಂದು ಬಸವರಾಜುರವರ ಬೈಕಿಗೆ ಡಿಕ್ಕಿ ಹೊಡೆಸಿದ ಪರಿಣಾಮ ಬಸವರಾಜುರವರ ತಲೆಗೆ ಬಲವಾದ ಪೆಟ್ಟುಬಿದ್ದು, ಪಿರ್ಯಾದಿ ಮತ್ತು ಆರೋಪಿರವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಸ್ಥಳಕ್ಕೆ ಬಂದ ಬಸವರಾಜು ಮತ್ತು ನಂಜಪ್ಪ ರವರು 108 ವಾಹನವನ್ನು ಕರೆಸಿಕೊಂಡು ಗಾಯಾಳುಗಳನ್ನು ತಿಪಟೂರು ಸರ್ಕಾರಿ ಆಸ್ಪತ್ರೆಗೆ ಕಳಿಸಿದ್ದು, ಪಿರ್ಯಾದಿ ಮಗನನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರು ನಿಮ್ಹಾನ್ಸ್ ಆಸ್ಪತ್ರೆಗೆ ಸೇರಿಸಿದ್ದು ಈ ದಿನ ದಿನಾಂಕ:23/10/17 ರಂದು ಬೆಳಗಿನ ಜಾವ ಚಿಕಿತ್ಸೆ ಫಲಕಾರಿಯಾಗದೆ  ಮೃತಪಟ್ಟಿರುತ್ತಾರೆ. ಆದ ಕಾರಣ ಕೆ.ಎ.06-ಕ್ಯೂ-2829 ನೇ ಬೈಕ್ ಚಾಲಕ ಯಶವಂತನ   ವಿರುದ್ದ ಮುಂದಿನ ಕಾನೂನು ಕ್ರಮ ಕೈಗೊಳ್ಳಿ ಎಂತಾ ಹಾಗೂ ಚಿಕಿತ್ಸೆ  ಪಡೆದು ತಡವಾಗಿ ಬಂದು ದೂರು ನೀಡಿರುತ್ತೇನೆ ಎಂತ  ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿ  ತನಿಖೆ ಕೈಗೊಂಡಿರುತ್ತೆ.Monday, 23 October 2017

Crime Incidents 23-10-17

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ 186/2017 ಕಲಂ 87 ಕೆ.ಪಿ.ಆಕ್ಟ್

ದಿನಾಂಕ: 22-10-2017 ರಂದು ಮದ್ಯಾಹ್ನ: 3-00 ಗಂಟೆಯಲ್ಲಿ ನಾನು ಹೆಬ್ಬೂರು ಹತ್ತಿರ ಗಸ್ತು ಮಾಡುತ್ತಿದ್ದಾಗ ಬಾತ್ಮಿದಾರರು ನನಗೆ ಪೋನ್ ಮಾಡಿ ಹೆಬ್ಬೂರು ಠಾಣಾ ಸರಹದ್ದಿನ ಚೋಳಂಬಳ್ಳಿ ಮಜಿರೆ, ಸೂಲೆಮಾನ್ ಪಾಳ್ಯ ಗ್ರಾಮದ ಆಲದ ಮರದ ಕೆಳಗೆ ಸಾರ್ವಜನಿಕ ಸ್ಥಳದಲ್ಲಿ ಯಾರೋ ಸುಮಾರು ಜನ ಆಸಾಮಿಗಳು ಹಣವನ್ನು ಪಣವಾಗಿ ಕಟ್ಟಿಕೊಂಡು ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿರುತ್ತಾರೆಂದು ಖಚಿತ ಮಾಹಿತಿ ನೀಡಿರುತ್ತಾರೆ. ಆದ್ದರಿಂದ ಸದರಿ ಇಸ್ಪೀಟ್ ಜೂಜಾಟಗಾರರ ಮೇಲೆ ದಾಳಿ ಮಾಡಿ ಪ್ರಕರಣ ದಾಖಲಿಸಲು ಗೌರವಾನ್ವಿತ ನ್ಯಾಯಾಲಯದಲ್ಲಿ ಅನುಮತಿ ಪಡೆದು, ಅದರಂತೆ ನಾನು ಮತ್ತು ನಮ್ಮ ಸಿಬ್ಬಂದಿಗಳು ಮತ್ತು ಪಂಚರೊಂದಿಗೆ ಚೋಳಂಬಳ್ಳಿ ಮಜಿರೆ, ಸೂಲೆಮಾನ್ ಪಾಳ್ಯ ಗ್ರಾಮದ ಆಲದ ಮರದ ಬಳಿ  ಸ್ವಲ್ಪ ದೂರದಲ್ಲಿ ವಾಹನವನ್ನು ನಿಲ್ಲಿಸಿ, ಎಲ್ಲರೂ ಕೆಳಗೆ ನಿಂತು ನೋಡಲಾಗಿ, 6 ಜನ ಆಸಾಮಿಗಳು ವೃತ್ತಾಕಾರವಾಗಿ ಕುಳಿತುಕೊಂಡು ಇಸ್ಪೀಟು ಜೂಜಾಟ ಆಡುತ್ತಿದ್ದು, ಒಳಗೆ 50 ಹೊರಗೆ 100 ರೂಪಾಯಿ ಎಂತಾ ಕೂಗಾಡುತ್ತಿದ್ದವರನ್ನು ಸಬ್ ಇನ್ಸ್‌ಪೆಕ್ಟರ್‌ ರವರು ಹಾಗೂ ಸಿಬ್ಬಂದಿಯವರು ಸುತ್ತುವರೆದು ಯಾರೂ ಮೇಲಕ್ಕೆ ಏಳದಂತೆ ತಾಕೀತು ಮಾಡುತ್ತಿರುವಾಗ್ಗೆ 6 ಜನರ ವ್ಯಕ್ತಿಗಳು ಓಡಲು ಶುರು ಮಾಡಿದ್ದು ಅವರುಗಳನ್ನು ಸಿಬ್ಬಂದಿಗಳು ಬೆನ್ನಟ್ಟಲಾಗಿ ಇಬ್ಬರನ್ನು ಹಿಡಿದು ಇಬ್ಬರು ಆಸಾಮಿಗಳ ಪೈಕಿ ಒಬ್ಬ ಆಸಾಮಿಯ ಕೈಯಲ್ಲಿ ಇಸ್ಪೀಟು ಎಲೆಗಳಿದ್ದು, ಆತನ ಹೆಸರು ವಿಳಾಸ ಕೇಳಲಾಗಿ 1) ಅಮ್ಜಾದ್ ಖಾನ್ @ ಅಮ್ಜಾದ್ ಬಿನ್ ಗುಲಾಬ್ ಖಾನ್, 36 ವರ್ಷ, ಮುಸ್ಲಿಂ ಜನಾಂಗ, ನಾರಾಯಣ ಕ್ಲಿನಿಕ್, ಭಾರತಿ ಮೆಡಿಕಲ್, ಶಾಂತಿನಗರ, ತುಮಕೂರು 2) ಸುರೇಶ್  ಬಿನ್ ತಿಮ್ಮಯ್ಯ 42 ವರ್ಷ, ವಕ್ಕಿಲಿಗರು ಜನಾಂಗ, ಎಳನೀರು ವ್ಯಾಪಾರ, ಕೊಟ್ಟಿಗೆಗೊಲ್ಲಹಳ್ಳಿ, ಗುಳೂರು  ಹೋಬಳಿ, ತುಮಕೂರು ತಾಲ್ಲೋಕು  ಮತ್ತು ಓಡಿ ಹೋದರವನ್ನು ವಿಚಾರ ಮಾಡಿ ಹೆಸರು ವಿಳಾಸ ತಿಳಿಯಲಾಗಿ 3) ನಯಾಜ್, ಆಟೋ ಚಾಲಕ, ಚೋಳಂಬಳ್ಳಿ, ವಾಸ ಶಾಂತಿ ನಗರ, ತುಮಕೂರು 4) ಕೃಷ್ಣ ಬಿನ್ ಗಂಗಯ್ಯ, 35 ವರ್ಷ, ವಕ್ಕಲಿಗರು, ಆಟೋ ಚಾಲಕ, ಕೊಟ್ಟಿಗೆಗೊಲ್ಲಹಳ್ಳಿ, ಗುಳೂರು  ಹೋಬಳಿ, ತುಮಕೂರು ತಾಲ್ಲೋಕು 5) ನಾರಾಯಣ ಬಿನ್ ನರಸಿಂಹಮೂರ್ತಿ, 20 ವರ್ಷ, ವಕ್ಕಲಿಗರು ಜನಾಂಗ, ಫ್ಯಾಕ್ಟರಿ ಕೆಲಸ, ಕೊಟ್ಟಿಗೆಗೊಲ್ಲಹಳ್ಳಿ, ಗುಳೂರು  ಹೋಬಳಿ, ತುಮಕೂರು ತಾಲ್ಲೋಕು 6) ಸಲೀಂ,  ಆಟೋ ಚಾಲಕ, 5 ನೇ ಕ್ರಾಸ್, ಮರಳೂರು ದಿಣ್ಣೆ, ತುಮಕೂರು ಎಂತಾ ತಿಳಿಸಿದರು. ನಂತರ ಆಸಾಮಿಗಳು ಅಖಾಡದಲ್ಲಿ ಪಣವಾಗಿಟ್ಟಿದ್ದ ಹಣವನ್ನು ಎಣಿಸಲಾಗಿ 2,700/-ರೂಗಳಿದ್ದವು, ಆಟಕ್ಕೆ ಉಪಯೋಗಿಸಿದ್ದ ಇಸ್ಪೀಟು ಎಲೆಗಳನ್ನು ಎಣಿಸಲಾಗಿ 52 ಇಸ್ಪೀಟು ಎಲೆಗಳು ಮತ್ತು ಒಂದು ಹಳೆಯ ಗೋಣಿ ಚೀಲ ದೊರೆತಿದ್ದು, ನಂತರ ಸಬ್‌ ಇನ್ಸ್‌ಪೆಕ್ಟರ್‌ ರವರು ಜೂಜಾಟವಾಡಲು ಪಣವಾಗಿಟ್ಟಿದ್ದ ಹಣವನ್ನು ಎಣಿಸಲಾಗಿ 2,700/- ರೂಗಳಿದ್ದವು, ಆಟಕ್ಕೆ ಉಪಯೋಗಿಸಿದ್ದ ಇಸ್ಪೀಟು ಎಲೆಗಳನ್ನು ಎಣಿಸಲಾಗಿ 52 ಇಸ್ಪೀಟು ಎಲೆಗಳು ಮತ್ತು ಒಂದು ಹಳೆಯ ಗೋಣಿ ಚೀಲ ಅನ್ನು, ಸ್ಥಳದಲ್ಲಿ ಅಮಾನತ್ತು ಪಡಿಸಿಕೊಂಡು, ಸದರಿ ಇಬ್ಬರು ಆಸಾಮಿಗಳನ್ನು ವಶಕ್ಕೆ ಪಡೆದು ಪಂಚನಾಮೆಯೊಂದಿಗೆ ವಾಪಸ್ ಸಂಜೆ 5-30 ಗಂಟೆಗೆ ಬಂದು ಠಾಣಾ ಮೊ ನಂ 186/2017 ಕಲಂ 87 ಕೆ.ಪಿ.ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿರುತ್ತೇನೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ-187/2017 ಕಲಂ 324,504,506,143 ರೆ/ವಿ 149 ಐಪಿಸಿ

ದಿನಾಂಕ-22/10/2017 ರಂದು ಸಂಜೆ 6-30 ಗಂಟೆಗೆ ಪಿರ್ಯಾದಿಯಾದ ಪವಿತ್ರ ಕೋಂ ಮಂಜುನಾಥ, 31 ವರ್ಷ, ಬಳ್ಳಗೆರೆ, ಹೆಬ್ಬೂರು ಹೋಬಳಿ, ತುಮಕೂರು ತಾಲ್ಲೊಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖೀತ ದೂರಿನ ಅಂಶವೇನೆಂಧರೆ ಈ ದಿನ ಮಧ್ಯಾಹ್ನ 2-00 ರಿಂದ 2-30 ರ ಸಮಯದಲ್ಲಿ ನಾವು ನಮ್ಮ ಜಮೀನಿನಲ್ಲಿ ಮನೆಯ ಸುತ್ತ-ಮುತ್ತ ಜೆಸಿಬಿ ಯಿಂದ ಸ್ವಚ್ಚ ಮಾಡಿಸುವಾಗ ನಮ್ಮ ಮನೆಯ ಬಾಡಿಗೆ ಮನೆಯಲ್ಲಿರುವ ಗೋವಿಂದಪ್ಪನವರು ಯಾವುದೇ ಹಕ್ಕು ಪತ್ರ ಮತ್ತು ಕ್ರಯಪತ್ರವಿಲ್ಲದೇ ಅಕ್ರಮವಾಗಿ ಗುಂಪು ಕಟ್ಟಿಕೊಂಡು, ನನಗೆ ಮತ್ತು ನನ್ನ ಅತ್ತೆಯಾದ ಭಾಗ್ಯಮ್ಮನವರಿಗೆ ಗೋವಿಂದಪ್ಪ ಮತ್ತು ಆತನ ಹೆಂಡತಿ ಮಮತ, ಅವರ ಮಕ್ಕಳಾದ ಗೌಮತಿ, ಗೀತಾಂಜಲಿ,ಹಾಗೂ  ತಮ್ಮಂದಿರಾದ ರವೀಂದ್ರ ಮತ್ತು ಮಹೇಂದ್ರ ಎಂಬುವವರು ನಮಗೆ ಕೆಟ್ಟ ಅವ್ಯಾಚ್ಯ ಶಬ್ದಗಳಿಂದ ಬೈದರು ಮತ್ತು ಜುಟ್ಟು ಹಿಡಿದು ನನ್ನನ್ನು ಏಳೆದಾಡಿದರೂ, ಗೋವಿಂದಪ್ಪರವರು ನನಗೆ ದೊಣ್ಣೆಯಿಂದ ಹೊಡೆದು ಗಾಯಗೊಳಿಸಿದರು. ಮತ್ತು ನನ್ನ ಮತ್ತು ನನ್ನ ಕುಂಟುಂಬವನ್ನು ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದರು. ಮತ್ತು ನಮ್ಮ ಜಾಗದಲ್ಲಿ ಬಾಡಿಗೆ ಮನೆಯಲ್ಲಿ ಇರುವ ಇವರು ಅಕ್ರಮವಾಗಿ ಖಾತೆ ದಾಖಲಿಸಿಕೊಂಡಿರುತ್ತಾರೆ ಮತ್ತು ನಮಗೆ ಯಾವುದೇ ರೀತಿಯ ಬಾಡಿಗೆಯನ್ನು ಕೊಡುತ್ತಿಲ್ಲ, ಇದಕ್ಕೆ ಮಮತರವರ ತಮ್ಮ ರವೀಂದ್ರ ಮತ್ತು ಮಹೇಂದ್ರರವರ ಕುಮ್ಮಕ್ಕಿನಿಂದ ಈ ರೀತಿ ಮಾಡುತ್ತಿರುತ್ತಾರೆ, ನಮ್ಮ ಕುಟುಂಬಕ್ಕೆ ಏನಾದರೂ ತೊಂದರೆಯಾದಲ್ಲಿ ರವೀಂದ್ರ ಮತ್ತು ಮಹೇಂದ್ರ ಮತ್ತು ಗೋವಿಂದಪ್ಪ ನವರ ಕುಟುಂಬವೇ ಕಾರವಾಗಿರುತ್ತಾರೆ, ಆದ್ದರಿಂದ ನಮಗೆ ಸೂಕ್ತವಾದ ಕಾನೂನಿನ ರಕ್ಷಣೆಯನ್ನು ನೀಡಬೇಕೆಂದು ಮತ್ತು ಆಸ್ತಿಯನ್ನು ರಕ್ಷಣೆ ಮಾಡಿಕೊಡಬೇಕೆಂದು ಹಾಗೂ ಮೇಲ್ಕಂಡವರ ಮೇಲೆ ಕಾನೂನಿನ ಕ್ರಮ ಜರುಗಿಸಬೇಕೆಂದು ನಮ್ಮ ಗ್ರಾಮದ ಹಿರಿಯರು ನ್ಯಾಯಪಂಚಾಯತಿ ಮಾಡುತ್ತೇವೆ ಎಂದು ಹೇಳಿದ ಕಾರಣ ತಡವಾಗಿ ಬಂದು ದೂರು ನೀಡಿರುತ್ತೇವೆ ಎಂದು ನೀಡಿದ ದೂರನ್ನು ಪಡೆದು ಠಾಣಾ ಮೊ ನಂ-187/2017 ಕಲಂ 324,504,506,143 ರೆ/ವಿ 149 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ.ನಂ. 187/2017 ಕಲಂ 279,337,ಐಪಿಸಿ ರೆ/ವಿ 134(ಎ&ಬಿ), 187 ಐ ಎಂ ವಿ ಆಕ್ಟ್

ದಿನಾಂಕ  22/10/2017 ರಂದು ರಾತ್ರಿ 9-15 ಗಂಟೆಗೆ ಪಿರ್ಯಾದಿಯಾದ ಸಿ.ಸುರೇಶ್ ಬಿನ್ ಚಿಕ್ಕರಂಗಯ್ಯ,42 ವರ್ಷ, ಬೈಚೇನಹಳ್ಳಿ, ಹೆಬ್ಬೂರು ಹೋಬಳಿ, ತುಮಕೂರು ತಾಲ್ಲೋಕು ಠಾಣೆಗೆ ಹಾಜರಾಗಿ ಬರೆದುಕೊಟ್ಟ ದೂರಿನಾಂಶವೇನೆಂದರೆ ದಿನಾಂಕ 22/10/2017 ರಂದು ಬೆಳಿಗ್ಗೆ 6-30 ಗಂಟೆಗೆ ನಮ್ಮ ಗ್ರಾಮದಿಂದ ಪ್ರತಿದಿನ ಹೆಬ್ಬೂರು ಗ್ರಾಮದ ಕಾಲೇಜಿನ ಅವರಣದಲ್ಲಿ ಜಾಗಿಂಗ್ ಮಾಡಿಕೊಂಡು ನಮ್ಮ ಊರಿಗೆ ಹಿಂದಿರುಗುವ ಸಮಯದಲ್ಲಿ ಹೆಬ್ಬೂರು ಗ್ರಾಮದ ತುಮಕೂರು-ಕುಣಿಗಲ್ ರಸ್ತೆಯ ಎಡಬದಿಯಲ್ಲಿ ಪಶುವೈದ್ಯ ಆಸ್ಪತ್ರೆಯ ಮುಂಭಾಗ ನಡೆದುಕೊಂಡು ಹೋಗುತ್ತಿದಾಗ ಬೆಳಿಗ್ಗೆ 7-00 ಗಂಟೆಗೆ ಸಮಯ ಆಗಿತ್ತು. ಅದೇ ಸಮಯಕ್ಕೆ ಗುಬ್ಬಿ ತಾಲ್ಲೋಕು ಸಿ.ಎಸ್. ಪುರ ಹೋಬಳಿ ದೊಡ್ಡ ಚೆಂಗಾವಿ ಗ್ರಾಮದ ವಾಸಿ  ಸುಮಾರು 35 ವರ್ಷ ವಯಸ್ಸಿನ  ಇಸ್ಮಾಯಿಲ್ ಬಿನ್ ಗೌಸ ಮೊಹಿದ್ದೀನ್ ಎಂಬುವರು ಅವರಿಗೆ ಸೇರಿದ ಕೆಎ-06-ಡಿ-0067 ಪ್ಯಾಸೆಂಜರ್ ಅಟೋ ರಿಕ್ಷಾವನ್ನು ಸದರಿ ರಸ್ತೆಯ ಎಡಬದಿಯಲ್ಲಿ ನಿಲ್ಲಿಸಿಕೊಂಡು ನಿಂತಿದ್ದಾಗ ಅದೇ ಸಮಯಕ್ಕೆ ತುಮಕೂರು ಕಡೆಯಿಂದ ಕುಣಿಗಲ್ ಕಡೆ ಹೋಗಲು ಬಂದ ಒಂದು ಇನ್ನೋವಾ ಕಾರನ್ನು ಅದರ ಚಾಲಕ ಕಾರನ್ನು ಅತಿವೇಗ ಮತ್ತು ಅಜಾಗರೂಕರೆಯಿಂದ  ಚಾಲನೆ ಮಾಡಿಕೊಂಡು ಬಂದುವನೇ ರಭಸದಿಂದ ಸದರಿ ಆಟೋ ರಿಕ್ಷಾಗೆ ಡಿಕ್ಕಿ ಹೊಡಿಸಿ ಅಪಘಾತ ಪಡಿಸಿದ ಪರಿಣಾಮ  ಅಟೋ   ರಿಕ್ಷಾ ಚಾಲಕ ಸೈಯದ್  ಇಸ್ಮಾಯಿಲ್ ರವರಿಗೆ ತಲೆಗೆ, ಬಲಭುಜಕ್ಕೆ  ಬಲಕಾಲಿನ ಮಂಡಿ ಕೆಳಗೆ ತೀವ್ರ ತರಹದ ಪೆಟ್ಟು ಬಿದ್ದು ರಕ್ತ ಸಾವ್ರವಾಯಿತು, ತಕ್ಷಣ ನಾನು  ಗಾಯಾಳುವನ್ನು ಉಪಚರಿಸಿದೆ, ನಂತರ ಸೈಯದ್ ಇಸ್ಮಾಯಿಲ್‌ನಿಗೆ ಅಪಘಾತ ಪಡಿಸಿದ  ಕಾರು ನಂಬರ್ ನೋಡಲಾಗಿ ಕೆಎ-64-ಎಂ-0533 ನೇ ಇನ್ನೋವಾ ಕಾರು ಆಗಿತ್ತು. ಅಟೋ ಮತ್ತು ಕಾರು ಎರಡು ವಾಹನಗಳು ಜಖಂ ಆಗಿ ಸ್ಥಳದಲ್ಲಿಯೇ ಇದ್ದವು. ತಕ್ಷಣ ಸಾರ್ವಜನಿಕರ ಸಹಾಯಕದ 108 ಅಂಬುಲೇನ್ಸ್‌ನಲ್ಲಿ ಚಿಕಿತ್ಸೆ ತುಮಕೂರು ನಗರದ ಅದಿತ್ಯ ಅಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿ ಈ ದಿನ ಠಾಣೆಗೆ ತಡವಾಗಿ ಬಂದು  ಅಪಘಾತ ಪಡಿಸಿದ ಕೆಎ-64-ಎಂ-0533 ನೇ ಕಾರಿನ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿಕೊಂಡಿರುತ್ತೆ.

ಮಿಡಿಗೇಶಿ ಪೊಲೀಸ್ ಠಾಣಾ ಯು.ಡಿ.ಆರ್.ನಂ.18/2017, ಕಲಂ:174 ಸಿ.ಆರ್.ಪಿ.ಸಿ.

ದಿನಾಂಕ:22/10/2017 ರಂದು ಮದ್ಯಾಹ್ನ 01:00 ಗಂಟೆಗೆ ಪಿರ್ಯಾದಿ ರಮೇಶ.ಎನ್. ಬಿನ್ ಲೇ||ನರಸಿಂಹಪ್ಪ, 30 ವರ್ಷ, ಕುರುಬ ಜನಾಂಗ, ಕೂಲಿ ಕೆಲಸ, ತಿಪ್ಪಾಪುರ ಗ್ರಾಮ, ಐ.ಡಿ.ಹಳ್ಳಿ ಹೋಬಳಿ, ಮಧುಗಿರಿ ತಾಲ್ಲೋಕು. ಹಾಲಿವಾಸ-ವಿನಾಯಕ ನಗರ, ನಾಗಸಂದ್ರ ಪೋಸ್ಟ್, ತುಮಕೂರು ಮೈನ್ ರೋಡ್, ಬೆಂಗಳೂರು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಾನು ಹಾಲಿ ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡು ನನ್ನ ಹೆಂಡತಿ ಮಕ್ಕಳು ಹಾಗೂ ನನ್ನ ತಮ್ಮ ಸುರೇಶನೊಂದಿಗೆ ವಾಸವಾಗಿರುತ್ತೇನೆ. ನಮ್ಮ ಸ್ವಂತ ಊರಾದ ತಿಪ್ಪಾಪುರದಲ್ಲಿ ನಮ್ಮ ಬಾಬ್ತು ಹಳೆಯ ಮನೆಯಿದ್ದು, ಸದರಿ ಮನೆಯಲ್ಲಿ ನಮ್ಮ ತಂದೆಯ ತಾಯಿ ಅಂದರೆ ನಮ್ಮ ಅಜ್ಜಿ ಲಕ್ಷ್ಮಮ್ಮ ಕೋಂ ಲೇ||ಚಿಕ್ಕರಾಮಯ್ಯ, 80 ವರ್ಷರವರು ಹಾಗೂ ನಮ್ಮ ತಾಯಿ ಲಕ್ಷ್ಮಮ್ಮರವರು ವಾಸವಾಗಿದ್ದರು. ಈಗ್ಗೆ 03-04 ದಿನಗಳ ಹಿಂದೆ ನನ್ನ ತಮ್ಮನಿಗೆ ಹುಷಾರಿಲ್ಲದ ಕಾರಣ ನಮ್ಮ ತಾಯಿ ಲಕ್ಷ್ಮಮ್ಮ ತಿಪ್ಪಾಪುರದಿಂದ ಬೆಂಗಳೂರಿನ ನಮ್ಮ ಮನೆಗೆ ಬಂದಿದ್ದು, ತಿಪ್ಪಾಪುರದಲ್ಲಿ ನಮ್ಮ ಅಜ್ಜಿ ಲಕ್ಷ್ಮಮ್ಮ ಒಬ್ಬರೆ ಇದ್ದರು. ಈ ದಿನ ಅಂದರೆ ದಿನಾಂಕ:22/10/2017 ರಂದು ಬೆಳಿಗ್ಗೆ ಸುಮಾರು 10:30 ಗಂಟೆಯ ಸಮಯದಲ್ಲಿ ನಮ್ಮ ಚಿಕ್ಕಪ್ಪನಾದ ರಾಮಚಂದ್ರಯ್ಯ ಎಂಬುವರು ಪೋನ್ ಮಾಡಿ ಊರಿನಲ್ಲಿದ್ದ ನಿಮ್ಮ ಬಾಬ್ತು ಹಳೆ ಮನೆಯ ಸ್ವಲ್ಪ ಭಾಗದ ಮೇಲ್ಛಾವಣೆಯು ಇದೇ ದಿನ ಬೆಳಿಗ್ಗೆ ಸುಮಾರು 10:00 ಗಂಟೆಯ ಸಮಯದಲ್ಲಿ ಕುಸಿದು ಬಿದ್ದು ಮನೆಯ ಒಳಗಡೆ ಇದ್ದ ನಿಮ್ಮ ಅಜ್ಜಿ ಲಕ್ಷ್ಮಮ್ಮ ರವರು ಕುಸಿದು ಬಿದ್ದ ಮೇಲ್ಛಾವಣಿಯ ಮಣ್ಣಿನ ಅಡಿಗೆ ಸಿಕ್ಕಿ ಸತ್ತು ಹೋಗಿದ್ದಾರೆ. ನೀವು ಬೇಗ ಊರಿಗೆ ಬನ್ನಿ ಎಂತ ತಿಳಿಸಿದರು. ಕೂಡಲೇ ನಾನು ಬೆಂಗಳೂರಿನಿಂದ ಹೊರಟು ತಿಪ್ಪಾಪುರಕ್ಕೆ ಬಂದು ನೋಡಲಾಗಿ ವಿಚಾರ ನಿಜವಾಗಿದ್ದು, ಮಣ್ಣಿನ ಅಡಿಯಲ್ಲಿ ಲಕ್ಷ್ಮಮ್ಮ ರವರು ಸಿಕ್ಕಿಕೊಂಡು ಮೃಪಟ್ಟಿದ್ದರು. ನಂತರ ನಾನು ಮತ್ತು ನನ್ನ ತಮ್ಮ ಸುರೇಶ ಇಬ್ಬರು ಸೇರಿ ಮಣ್ಣಿನ ಅಡಿಯಲ್ಲಿ ಸಿಕ್ಕಿಕೊಂಡಿದ್ದ ನಮ್ಮ ಅಜ್ಜಿ ಲಕ್ಷ್ಮಮ್ಮ ರವರ ಮೃತ ದೇಹವನ್ನು ಹೊರಗೆ ತೆಗೆದಿರುತ್ತೇವೆ. ನಮ್ಮ ಅಜ್ಜಿ ಲಕ್ಷ್ಮಮ್ಮ ರವರ ಸಾವಿನಲ್ಲಿ ಬೇರೆ ಯಾವುದೇ ಅನುಮಾನವಿರುವುದಿಲ್ಲ, ಆದ್ದರಿಂದ ಆಕಸ್ಮಿಕವಾಗಿ ಹಳೆ ಮನೆಯ ಮೇಲ್ಛಾವಣಿ ಕುಸಿದು ಮೃತಪಟ್ಟಿರುವ ನಮ್ಮ ಅಜ್ಜಿ ಲಕ್ಷ್ಮಮ್ಮ ರವರ ಮೃತ ದೇಹದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೋರಿ ನೀಡಿದ ಪಿರ್ಯಾದು ಅಂಶವಾಗಿರುತ್ತೆ.

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣಾ ಯುಡಿಆರ್ ನಂ 08/2017 ಕಲಂ 174 ಸಿ.ಆರ್.ಪಿ.ಸಿ.

ದಿನಾಂಕ: 22-10-17 ರಂದು  ಬೆಳಿಗ್ಗೆ 10-00 ಗಂಟೆಗೆ ಈ ಕೇಸಿನ ಪಿರ್ಯಾದಿ  ನಾಗರಾಜು ಬಿನ್ ಶಿವಣ್ಣ, 45 ವರ್ಷ, ಕುರುಬರು ದಸರಿಘಟ್ಟ, ತಿಪಟೂರು ತಾ ರವರು  ಠಾಣೆಗೆ ಹಾಜರಾಗಿ ನೀಡಿದ  ದೂರಿನ ಅಂಶವೇನೆಂದರೆ, ನನಗೆ ಕಾವ್ಯ  ಎಂಬ 15 ವರ್ಷದ ಮಗಳಿದ್ದು  ಈ  ದಿನ ದಿ:22-10-17 ರಂದು  ಬೆಳಿಗ್ಗೆ 9-00 ಗಂಟೆ ಸಮಯದಲ್ಲಿ  ನನ್ನ ಮಗಳಾದ  ಕಾವ್ಯ & ಮಗ  ವರ್ಧನ  ರವರು ಹಸುವಿನ ಕರುವಿನ ಮೈ ತೊಳೆಯಲು  ನಮ್ಮ ಮನೆ ಮುಂದೆ  ನೀರಿರುವ  ಕಟ್ಟೆಗೆ  ಹೋಗಿದ್ದು ಸ್ವಲ್ಪ ಸಮಯದ ನಂತರ  ನನ್ನ ಮಗ ಕೂಗಿಕೊಂಡಿದ್ದು  ನಾನು & ನಮ್ಮ ಗ್ರಾಮದ ಮಂಜಣ್ಣ, ತಿಮ್ಮಯ್ಯ ಹಾಗೂ  ವೆಂಕಟೇಶ್  ರವರು ಹೋಗಿ ನೋಡಲಾಗಿ  ಕರುವಿನ ಮೈ ತೊಳೆಯಲು  ಹೋದ  ನನ್ನ ಮಗಳ  ಕಾಲಿಗೆ ಕರುವಿನ ಹಗ್ಗ  ಸುತ್ತಿ ಹಾಕಿಕೊಂಡು  ಕರು ನೀರಿರುವ  ಗುಂಡಿಗೆ ಎಳೆದುಕೊಂಡು ಹೋದ ಪರಿಣಾಮ ನನ್ನ ಮಗಳು ಕಾವ್ಯ ಆಕಸ್ಮಿಕವಾಗಿ  ನೀರಿಗೆ ಬಿದ್ದು , ಮುಳುಗುತ್ತಿದ್ದು  ನಾವುಗಳು ಆಕೆಯನ್ನು ಮೇಲಕ್ಕೆ ಎತ್ತಿ  ನೋಡಲಾಗಿ   ಅಷ್ಟರಲ್ಲಿ ಆಕೆ ನೀರು ಕುಡಿದು ಉಸಿರುಕಟ್ಟಿ ಮೃತಪಟ್ಟಿದ್ದಳು.  ನನ್ನ ಮಗಳು ಕರುವಿನ  ಮೈ  ತೊಳೆಯಲು ಹೋಗಿ ಆಕಸ್ಮಿಕವಾಗಿ ನೀರಿಗೆ  ಬಿದ್ದು ಮೃತಪಟ್ಟಿರುತ್ತಾಳೆ  ಮುಂದಿನ ಕಾನೂನು ಕ್ರಮ ಜರುಗಿಸಿ ಎಂತಾ ಪಿರ್ಯಾದಿ ನೀಡಿದ  ದೂರು ಪಡೆದು  ಠಾಣಾ ಯು.ಡಿ.ಆರ್ ನಂ 08/17 ಕಲಂ 174 ಸಿ.ಆರ್.ಪಿ.ಸಿ ರೀತ್ಯಾ  ಕೇಸು ದಾಖಲಿಸಿರುತ್ತೆSunday, 22 October 2017

Crime Incidents 22-10-17

ತಿಪಟೂರು ನಗರ ಪೊಲೀಸ್ ಠಾಣಾ ಮೊ .ನಂ- 166/2017 ಕಲಂ: 379 ಐ.ಪಿ.ಸಿ

 

ದಿನಾಂಕ: 21/10/2017 ರಂದು ಮಧ್ಯಾಹ್ನ 12-00 ಗಂಟೆಗೆ ಪಿರ್ಯಾದಿ ನಿಶಾಂತ್ ಶ್ರೀವಸ್ತವ, ಸ್ಟೇಷನ್ ಮಾಸ್ಟರ್, ಬಾಣಸಂದ್ರ ರೈಲ್ವೇ ಸ್ಟೇಷನ್ ವಾಸ: ವಿನಾಯಕನಗರ, ತಿಪಟೂರು ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ದಿನಾಂಕ: 18/09/2017 ರಂದು ರಾತ್ರಿ ತಿಪಟೂರು ಟೌನ್ ವಿನಾಯಕನಗರದಲ್ಲಿರುವ ನಮ್ಮ ಮನೆಯ ಮುಂಭಾಗದಲ್ಲಿ  ನನ್ನ ಸಹೋದರ ವಿಕಾಸ್ ಕುಮಾರ್ ಸಿಂನ್ಹ ರವರ ಹೆಸರಿನಲ್ಲಿರುವ ಎ.ಪಿ-01 ಎ.ಡಿ-8227 ನೇ ಕೆಂಪು ಬಣ್ಣದ ಪಲ್ಸರ್-180 ದ್ವಿಚಕ್ರ ವಾಹನವನ್ನು ನಿಲ್ಲಿಸಿದ್ದು, ದಿನಾಂಕ: 19/09/2017 ರಂದು ಬೆಳಿಗ್ಗೆ 6-00 ಗಂಟೆಗೆ ನೋಡಲಾಗಿ ಸದರಿ ವಾಹನವು ನಿಲ್ಲಿಸಿದ್ದ ಸ್ಥಳದಲ್ಲಿ ಇರಲಿಲ್ಲ. ನಂತರ ಗಾಬರಿಯಾಗಿ ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ ಹಾಗೂ ಇತರೆ ಕಡೆಗಳಲ್ಲಿ ಹಾಗೂ ಇದುವರೆವಿಗೂ ಎಲ್ಲಾ ಕಡೆ ಹುಡುಕಲಾಗಿ ನನ್ನ ಬಾಬ್ತು ಮೇಲ್ಕಂಡ ಎ.ಪಿ-01 ಎ.ಡಿ-8227 ನೇ ಪಲ್ಸರ್-180 ದ್ವಿಚಕ್ರ ವಾಹನವು ಪತ್ತೆಯಾಗಿರುವುದಿಲ್ಲ. ಇದರ ಅಂದಾಜು ಬೆಲೆ ಸುಮಾರು 40,000/- ರೂಗಳಾಗಿದ್ದು, ಸದರಿ ದ್ವಿಚಕ್ರ ವಾಹನವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಪತ್ತೆ ಮಾಡಿಕೊಡಬೇಕೆಂದು ಕೋರಿ ನೀಡಿರುವ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

 

ಜಯನಗರ ಪೊಲೀಸ್ ಠಾಣಾ ಮೊ.ನಂ.  142/201 ಕಲಂ 341, 323, 324, 504, 506 ರೆ/ವಿ 34 ಐಪಿಸಿ

ದಿನಾಂಕ: 21-10-2017 ರಂದು ರಾತ್ರಿ 9-15 ಗಂಟೆಯಲ್ಲಿ ತುಮಕೂರು ತಾಲ್ಲೂಕು, ಗೂಳೂರು ಹೋಬಳಿ, ಮಂಚಗೋಡನಹಳ್ಳಿ ಗ್ರಾಮದ ವಾಸಿ ನಾಗಮ್ಮ ಕೋಂ ದಾಸಪ್ಪರವರು ಠಾಣೆಗೆ ಹಾಜರಾಗಿ ನೀಡಿದ ಅರ್ಜಿ ಅಂಶವೇನೆಂದರೆ, ನಾವು  ನಮ್ಮೂರ ಸಮೀಪ ಇರುವ ಸಂಕಾಪುರ ವಾಸಿ ಶಿವಣ್ಣ ರವರ ಅಡಿಕೆ ತೋಟದ ನಿಗಾ ನೋಡಿಕೊಳ್ಳುತ್ತಿದ್ದು ದಿನಾಂಕ: 21-10-2017 ರಂದು ಬೆಳಿಗ್ಗೆ 6-00 ಗಂಟೆಗೆ ನಮ್ಮ ಯಜಮಾನರಾದ ದಾಸಪ್ಪ ರವರು ಶಿವಣ್ಣರವರ ತೋಟಕ್ಕೆ ಹೋಗಿ ಅಡಿಕೆ ಪಟ್ಟೆಗಳನ್ನು ಆಯ್ದುಕೊಂಡು ವಾಪಾಸ್ ಮನೆಯ ಕಡೆಗೆ ಬರುತ್ತಿರುವಾಗ ಬೆಳಿಗ್ಗೆ 6-30 ಗಂಟೆ ಸಮಯದಲ್ಲಿ ಉತ್ತರಕಟ್ಟೆ ಕೆರೆ ಕೋಡಿಯ ಬಳಿ ಲಕ್ಷ್ಮಣ ಕುಮಾರ @ ಬಾಬು ಹಾಗೂ ಅವರ ಹೆಂಡತಿ ಹೇಮಾ ರವರುಗಳು ನನ್ನ ಗಂಡನನ್ನು ತಡೆದು ಗಲಾಟೆ ಮಾಡುತ್ತಿದ್ದು, ನಮ್ಮ ಯಜಮಾನರು ಕಿರುಚಿಕೊಳ್ಳುತ್ತಿದ್ದರಿಂದ ನಾನು ಗಾಬರಿಯಲ್ಲಿ ಅಲ್ಲಿಗೆ ಹೋಗಿ ನೋಡಲಾಗಿ ಲಕ್ಷ್ಮಣ ಕುಮಾರ @ ಬಾಬು ಹಾಗೂ ಅವರ ಹೆಂಡತಿ ಹೇಮಾ ರವರು ನಮ್ಮ ಯಜಮಾನರನ್ನು ಅಡ್ಡಗಟ್ಟಿ ನಿಲ್ಲಿಸಿ ಶಿವಣ್ಣ ರವರ ಅಡಿಕೆ ತೋಟದಲ್ಲಿ ಏಕೆ ಅಡಿಕೆ ಪಟ್ಟೆಗಳನ್ನು ತೆಗೆದುಕೊಂಡು ಬರುತ್ತೀಯಾ ಎಂತ ಏಕಾಏಕಿ ಜಗಳ ತೆಗೆದು ಲಕ್ಷ್ಮಣ ಕುಮಾರ @ ಬಾಬು ಕೈಗಳಿಂದ ನನ್ನ ಗಂಡನ ಬೆನ್ನಿನ ಮೇಲೆಲ್ಲಾ ಹೊಡೆದು ಕೆಳಕ್ಕೆ ಬೀಳಿಸಿ ಅಲ್ಲಿಯೇ ಬಿದ್ದಿದ್ದ ಕಲ್ಲನ್ನು ತೆಗೆದುಕೊಂಡು ಮುಂದೆಲೆಗೆ ಗುದ್ದಿ ರಕ್ತಗಾಯಪಡಿಸಿರುತ್ತಾರೆ.  ಬಾಬು ರವರ ಹೆಂಡತಿ ಹೇಮಾ ಕಾಲಿನಿಂದ ನನ್ನ ಗಂಡನ ಎಡಗಾಲಿಗೆ ಬೆನ್ನಿಗೆ ಜಾಡಿಸಿ ಒದ್ದಳು.  ಅಷ್ಟರಲ್ಲಿ ನಾನು ನನ್ನ ಗಂಡನನ್ನು ಬಿಡಿಸಿಕೊಳ್ಳಲು ಹೋದಾಗ ಹೇಮಾ ನನ್ನ ಜುಟ್ಟನ್ನು ಹಿಡಿದು ಎಳೆದಾಡಿ ಕೈಗಳಿಂದ ಮೈಮೇಲೆಲ್ಲಾ ಹೊಡೆದಳು.  ಅಷ್ಟರಲ್ಲಿ ಅಲ್ಲಿಗೆ ಬಂದ ನನ್ನ ಅಳಿಯ ಯಶಪಾಲ್ ಜಗಳ ಬಿಡಿಸಿದ್ದು ಆದರೂ ಸಹ ಮೇಲ್ಕಂಡವರು ನನ್ನನ್ನು ಮತ್ತು ನನ್ನ ಗಂಡನನ್ನು ಕುರಿತು ನಿಮ್ಮನ್ನು ಇಷ್ಟಕ್ಕೆ ಬಿಡುವುದಿಲ್ಲ.  ಸೂಳೆ ಮಕ್ಕಳಾ, ಬೋಳಿ ಮಕ್ಕಳಾ, ಊರಿನಲ್ಲಿ ನಮ್ಮನ್ನು ಎದುರು ಹಾಕಿಕೊಂಡು ಅದೇಗೆ ಬಾಳುತ್ತೀರಾ, ಇಂದೆಲ್ಲಾ ನಾಳೆ ಕೊಲೆ ಮಾಡಿಯೇ ತೀರುತ್ತೇವೆಂತ ಕೊಲೆ ಬೆದರಿಕೆ ಹಾಕಿ ಹೊರಟು ಹೋದರು.  ರಕ್ತಗಾಯಗಳಾಗಿದ್ದ ನನ್ನ ಗಂಡ ದಾಸಪ್ಪನನ್ನು ನನ್ನ ಅಳಿಯ ಯಶಪಾಲ್ ತುಮಕೂರಿಗೆ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋದನು.   ನನಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತಹ ಪೆಟ್ಟುಗಳು ಇಲ್ಲದ ಕಾರಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವುದಿಲ್ಲ.  ಈ ಘಟನೆಯ ವಿಚಾರವನ್ನು ನನ್ನ ಹೆಣ್ಣುಮಕ್ಕಳು ಹಾಗೂ ಅಳಿಯಂದಿಯರಿಗೆ ತಿಳಿಸಿದ್ದು, ಅವರು ಪೊಲೀಸ್ ಠಾಣೆಗೆ ದೂರು ಕೊಡುವಂತೆ ತಿಳಿಸಿದ್ದರಿಂದ ಈ ದಿನ ತಡವಾಗಿ ಬಂದು ಠಾಣೆಯಲ್ಲಿ ದೂರು ನೀಡುತ್ತಿದ್ದು, ಮೇಲ್ಕಂಡ ಲಕ್ಷ್ಮಣ ಕುಮಾರ @ ಬಾಬು ಹಾಗೂ ಅವರ ಹೆಂಡತಿ ಹೇಮಾ ರವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂತ ಇತ್ಯಾದಿಯಾಗಿ ಪಿರ್ಯಾದು ಅಂಶವಾಗಿರುತ್ತೆ.

 


Page 1 of 4
Start
Prev
1

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 49 guests online
Content View Hits : 304475