lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ. ದಿನಾಂಕ : 10-07-2018   ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 09-07-2018 ಕೊಲೆ ಆರೋಪಿಗಳ ಬಂಧನ ******* ದಿನಾಂಕ 04.07.2018 ರಂದು... >>   ಪತ್ರಿಕಾ ಪ್ರಕಟಣೆ ದಿನಾಂಕ : 07-07-2018. ಪೂರ್ವಾನುಮತಿ ಪಡೆಯದೇ ಹೆದ್ದಾರಿ ತಡೆ ನಡೆಸಿ,... >> ದಿನಾಂಕ.03.07.2018. ಪತ್ರಿಕಾ ಪ್ರಕಟಣೆ ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ 11 ಲಕ್ಷ 70 ಸಾವಿರ ಬೆಲೆ ಬಾಳುವ ಚಿನ್ನ-ಬೆಳ್ಳಿ  ಹಾಗೂ ಮೊಬೈಲ್‌‌‌... >>   ಪತ್ರಿಕಾ ಪ್ರಕಟಣೆ. ತುಮಕೂರು ಜಿಲ್ಲಾ ಪೊಲೀಸ್, ತುಮಕೂರು. ಕೋರಾ ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 27.06.2018 ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಸಾರ್ವಜನಿಕರ... >> ಪತ್ರಿಕಾ ಪ್ರಕಟಣೆ ದಿನಾಂಕ:- 23/06/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಖನ್ನ... >> ಪತ್ರಿಕಾ ಪ್ರಕಟಣೆ ದಿನಾಂಕ: 21-06-2018. ಸುಲಿಗೆಕೋರರ ಬಂಧನ: ದಿನಾಂಕ:18-06-2018 ರಂದು... >>   ಪೊಲೀಸ್ ಪ್ರಕಟಣೆ ತುಮಕೂರು ಜಿಲ್ಲಾ ಪೊಲೀಸ್ ಪ್ರಕಟಣೆ   ಆತ್ಮೀಯ ನಾಗರೀಕರಲ್ಲಿ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< October 2017 >
Mo Tu We Th Fr Sa Su
            1
2 3 4 5 6 7 8
9 10 11 12 13 14 15
17 18 19 20 21 22
23 24 25 26 27 28 29
30 31          
Monday, 16 October 2017
Crime Incidents 16-10-17

ಹುಲಿಯೂರುದುರ್ಗ ಪೊಲೀಸ್‌ ಠಾಣಾ; ಮೊ ನಂ 197/2017 ಕಲಂ: 279, 304(A) IPC

ದಿನಾಂಕ: 15-10-2017 ರಂದು ಬೆಳಿಗ್ಗೆ 09-00 ಗಂಟೆಗೆ ಪಿರ್ಯಾದಿಯಾದ ಶ್ರೀ ಪುಟ್ಟರಾಜು @ ರಾಜಣ್ಣ ಬಿನ್ ಲೇಟ್ ಮಾದಪ್ಪ, ಸುಮಾರು 65 ವರ್ಷ, ಲಿಂಗಾಯ್ತರು, ಜಿರಾಯ್ತಿ ಕೆಲಸ, ಕೆಂಕೆರೆ, ಹುಲಿಯೂರುದುರ್ಗ ಹೋಬಳಿ, ಕುಣಿಗಲ್ ತಾಲ್ಲೋಕು ರವರು ಠಾಣೆಗೆ ಹಾಜರಾಗಿ ನೀಡಿದ ಹೇಳಿಕೆಯ ದೂರಿನ ಅಂಶವೇನೆಂದರೆ ಪಿರ್ಯಾದಿಗೆ 02 ಹೆಣ್ಣು ಮಕ್ಕಳು, ಒಬ್ಬ ಗಂಡು ಮಗ ಇರುತ್ತಾರೆ. ಗಂಡು ಮಗನಾದ ಮಹದೇವಪ್ರಸಾದ್, 24 ವರ್ಷ, ಈತನು ದಿನಾಂಕ: 14-10-2017 ರಂದು ಸಂಜೆ 06-30 ಗಂಟೆಯಲ್ಲಿ ಮನೆಗೆ ಸಾಮಾನು ತೆಗೆದುಕೊಂಡು ಬರಲು KA06-EP-4813 ನೇ ನಂಬರಿನ ಹೀರೋ ಹೊಂಡಾ ಪ್ಯಾಷನ್ ಪ್ಲಸ್ ಬೈಕಿನಲ್ಲಿ ಹುಲಿಯೂರುದುರ್ಗಕ್ಕೆ ಬಂದಿದ್ದು, ಮನೆಯ ಸಾಮಾನು ತೆಗದುಕೊಂಡು ವಾಪಸ್ ಊರಿಗೆ ಬರಲು ನಿಂಗಿಕೊಪ್ಪಲು ಗ್ರಾಮದ ಬಳಿ ಇರುವ ಹುಲಿಯೂರುದುರ್ಗಕ್ಕೆ ನೀರು ಸರಬರಾಜು ಮಾಡುವ ನೀರಿನ ಟ್ಯಾಂಕ್ ಬಳಿ ರಸ್ತೆಯ ಎಡಭಾಗದಲ್ಲಿ ಬರುತ್ತಿರುವಾಗ ರಸ್ತೆಯ ಬದಿಯಲ್ಲಿ ಇರುವ ಮರಕ್ಕೆ ತನ್ನ ಬೈಕನ್ನು ಡಿಕ್ಕಿ ಹೊಡೆಸಿ ಕೆಳಕ್ಕೆ ಬಿದ್ದು ಈತನ ತಲೆಗೆ ಏಟು ಬಿದ್ದು ರಕ್ತಗಾಯವಾಗಿರುತ್ತೆ. ಎಂದು ಅಪಘಾತ ನೋಡಿದ ಸಾರ್ವಜನಿಕರು ಪಿರ್ಯಾದಿಗೆ ಪೋನ್ ಮಾಡಿ ತಿಳಿಸಿದರು. ಆಗ ಪಿರ್ಯಾದಿ, ಅವರ ಗ್ರಾಮದ ನಟರಾಜು ರವರು ಅಪಘಾತವಾದ ಸ್ಥಳಕ್ಕೆ ಬಂದು ನೋಡಿದಾಗ ಪಿರ್ಯಾದಿಯ ಮಗ ತನ್ನ ಬೈಕನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆಯ ಬದಿಯಲ್ಲಿರುವ ಮರಕ್ಕೆ ಡಿಕ್ಕಿ ಹೊಡೆಸಿ ಸ್ವತಃ ಅಪಘಾತ ಮಾಡಿಕೊಂಡಿರುತ್ತಾನೆ. ಈ ಅಪಘಾತವು ರಾತ್ರಿ 07-00 ಗಂಟೆಯ ಸಮಯದಲ್ಲಾಗಿರುತ್ತೆ. ಅಪಘಾತದಿಂದ ತಲೆಗೆ ಪೆಟ್ಟು ಬಿದ್ದು ರಕ್ತಗಾಯವಾಗಿದ್ದ ಪಿರ್ಯಾದಿಯ ಮಗನಿಗೆ ಚಿಕಿತ್ಸೆ ಕೊಡಿಸಲು ಪಿರ್ಯಾದಿ ಮತ್ತು ನಟರಾಜು ರವರು 108 ವಾಹನದಲ್ಲಿ ಕರೆದುಕೊಂಡು ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಕೊಡಿಸಿ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರು ನಿಮ್ಹಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ವೈದ್ಯರು ನೋಡಿದಾಗ ಪಿರ್ಯಾದಿಯ ಮಗ ಮಹದೇವಪ್ರಸಾದ್ ಮೃತಪಟ್ಟಿರುತ್ತಾನೆಂತ ತಿಳಿಸಿರುತ್ತಾರೆ. ಆಗ ಪಿರ್ಯಾದಿಯ ಮಗನ ಮೃತದೇಹವನ್ನು ಕುಣಿಗಲ್ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿರುತ್ತೆ. ಮುಂದಿನ ಕ್ರಮ ಜರುಗಿಸಬೇಕೆಂತ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲು ಮಾಡಿರುತ್ತೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ.ನಂ 180/2017 ಕಲಂ 279,304(ಎ) ಐಪಿಸಿ ರೆ/ವಿ 134(ಬಿ), 187 ಐಎಂವಿ ಆಕ್ಟ್

ದಿನಾಂಕ:15-10-2017 ರಂದು ಸಂಜೆ 6-00 ಗಂಟೆಗೆ ಪಿರ್ಯಾದಿಯಾದ ಶಿವರಾಜು ಬಿನ್ ನಾಗರಾಜು, 21 ವರ್ಷ, ಸಿಳ್ಳೇಕ್ಯಾತ ಜನಾಂಗ, ವಾದ್ಯ ನುಡಿಸುವ ಕೆಲಸ, ಅವ್ವೇರಹಳ್ಳಿ, ಸಿ,ಎಸ್,ಪುರ ಹೋಬಳಿ, ಗುಬ್ಬಿ ತಾಲ್ಲೂಕು, ತುಮಕೂರು ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂಧರೆ ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು, ನನ್ನ ತಂದೆಯಾದ ನಾಗರಾಜು ರವರು ಕೂಲಿ ಕೆಲಸ ಮಾಡಿಕೊಂಡು ಜೀವನ ಮಾಡಿಕೊಂಡಿದ್ದು, ದಿನಾಂಕ: 15-10-2017 ರಂದು ನನ್ನ ತಂದೆ ನಾಗರಾಜು ರವರು ತಮ್ಮ ಬಾಬ್ತು ಕೆಎ-06-ಇ.ಎಕ್ಸ್‌-8620 ನೇ ದ್ವಿಚಕ್ರ ವಾಹನದಲ್ಲಿ ಬೆಳಿಗ್ಗೆ ಸುಮಾರು 08-00 ಗಂಟೆ ಸಮಯದಲ್ಲಿ ನಮ್ಮ ಗ್ರಾಮದ ನಮ್ಮ ಮನೆಯಿಂದ ಹೊರಟು ಹೆಬ್ಬೂರು ಹೋಬಳಿ, ಅಜ್ಜೇಗೌಡನಪಾಳ್ಯದ ನಮ್ಮ ಸಂಬಂದಿಕರ ಮನೆಗೆ ಹೋಗಿದ್ದರು. ಇದೇ ದಿವಸ ನಾನು ನನ್ನ ಸ್ವಂತ ಕೆಲಸದ ಮೇಲೆ ಹೆಬ್ಬೂರಿಗೆ ಬಂದಿದ್ದು, ಸಾಯಂಕಾಲ ಸುಮಾರು 05-15 ಗಂಟೆ ಸಮಯದಲ್ಲಿ ನಾನು ಹೆಬ್ಬೂರಿನ ಬಸ್ ನಿಲ್ದಾಣದಲ್ಲಿ ಇರುವಾಗ್ಗೆ, ನಮ್ಮ ಗ್ರಾಮದ ವಾಸಿಯಾದ ಲಕ್ಷ್ಮಣ್‌ ಬಿನ್ ವೀರನರಸೇಗೌಡ ರವರು ನನಗೆ ಪೋನ್ ಮಾಡಿ ಹೆಬ್ಬೂರಿನ ಗದ್ದೆ ಬೈಲಿನ ಬಳಿ ನಿಮ್ಮ ತಂದೆಯವರು ತುಮಕೂರು ಕಡೆಯಿಂದ ಹೆಬ್ಬೂರು ಕಡೆಗೆ ದ್ವಿಚಕ್ರ ವಾಹನದಲ್ಲಿ ರಸ್ತೆಯ ಎಡಭಾಗದಲ್ಲಿ ಹೋಗುತ್ತಿರುವಾಗ್ಗೆ, ಎದುರಿಗೆ ಕುಣಿಗಲ್‌ ಕಡೆಯಿಂದ ಬಂದಂತಹ ಒಂದು ಬೊಲೇರೋ ವಾಹನದ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ರಸ್ತೆಯ ಎಡಭಾಗದಿಂದ ಬಲಭಾಗಕ್ಕೆ ಬಂದು ನಿಮ್ಮ ತಂದೆಯವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ಅಫಘಾತಪಡಿಸಿದ್ದು, ನಿಮ್ಮ ತಂದೆಯವರು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆಂತ ತಿಳಿಸಿದರು. ನಂತರ ನಾನು ಸ್ಥಳಕ್ಕೆ ಹೋಗಿ ನೋಡಲಾಗಿ ಅಪಘಾತವಾಗಿರುವುದು ನಿಜವಾಗಿತ್ತು. ನನ್ನ ತಂದೆ ನಾಗರಾಜು ರವರಿಗೆ ತಲೆಗೆ, ಕೈ ಕಾಲುಗಳಿಗೆ ಹಾಗೂ ದೇಹದ ಇತರೆ ಭಾಗಗಳಿಗೆ ಏಟು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದರು. ನನ್ನ ತಂದೆಯವರ ದ್ವಿಚಕ್ರ ವಾಹನವು ರಸ್ತೆಯ ಪಕ್ಕದಲ್ಲೇ ಬಿದ್ದಿತ್ತು. ಅಪಘಾತಪಡಿಸಿದ ಬೊಲೇರೋ ವಾಹನವು ರಸ್ತೆ ಪಕ್ಕದ ಗದ್ದೆ ಬೈಲಿನಲ್ಲಿ ಬಿದ್ದಿತ್ತು. ಸದರಿ ಬೊಲೇರೋ ವಾಹನದ ನಂಬರ್ ನೋಡಲಾಗಿ ಕೆಎ-05-ಎ.ಎಫ್‌-1198 ನೇ ಬೊಲೇರೋ ವಾಹನವಾಗಿತ್ತು. ಅಪಘಾತವಾದ ಸಮಯದ ಸಾಯಂಕಾಲ ಸುಮಾರು 05-00 ಗಂಟೆ ಎಂತಲೂ, ಅಪಘಾತಪಡಿಸಿದ ಬೊಲೇರೋ ವಾಹನದ ಚಾಲಕ ತನ್ನ ವಾಹನವನ್ನು ಸ್ಥಳದಲ್ಲೇ ಬಿಟ್ಟು ಓಡಿ ಹೋದನೆಂತಲೂ ತಿಳಿಯಿತು. ನನ್ನ ತಂದೆ ನಾಗರಾಜು ರವರ ಮೃತ ದೇಹ, ಅಫಘಾತಪಡಿಸಿದ ಬೊಲೇರೋ ವಾಹನ ಹಾಗೂ ಅಪಘಾತಕ್ಕೊಳಗಾದ ದ್ವಿಚಕ್ರ ವಾಹನಗಳು ಕೃತ್ಯ ನಡೆದ ಸ್ಥಳದಲ್ಲೇ ಇರುತ್ತವೆ. ಆದ್ದರಿಂದ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಈ ಅಪಘಾತಕ್ಕೆ ಕಾರಣನಾದ ಕೆಎ-05-ಎ.ಎಫ್‌-1198 ನೇ ಬೊಲೇರೋ ವಾಹನದ ಚಾಲಕನ ಮೇಲೆ ಕಾನೂನು ರೀತ್ಯಾ ಮುಂದಿನ ಕ್ರಮ ಜರುಗಿಸಬೇಕೆಂದು ಈ ಮೂಲಕ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ ಎಂದು ನೀಡಿದ ದೂರನ್ನು ಪಡೆದು ಠಾಣಾ ಮೊ ನಂ 180/2017 ಕಲಂ 279,304(ಎ) ಐಪಿಸಿ ರೆ/ವಿ 134(ಬಿ), 187 ಐಎಂವಿ ಆಕ್ಟ್ ರೀತ್ಯಾ ಪ್ರಕರಣವನ್ನು ದಾಖಲಿಸಿರುತ್ತೆ.

ಚೇಳೂರು  ಪೊಲೀಸ್   ಠಾಣಾ  ಮೊ. ನಂ 158/2017   ಕಲಂ 279 ಐ.ಪಿ.ಸಿ

ದಿನಾಂಕ:15/10/2017  ರಂದು   ನಾನು  ಮನೆ  ದೇವರಾದ  ಗುಬ್ಬಿ  ತಾಲ್ಲೋಕ್,  ನಿಟ್ಟೂರು  ಹೋ,   ಸಾಗಸಂದ್ರ  ಗ್ರಾಮದ  ಶ್ರೀ  ಕೆಂಪಮ್ಮ  ದೇವಿ  ದೇವಸ್ಥಾನಕ್ಕೆ  ಹೋಗಲು  ನನ್ನ ಅಣ್ಣನ  ಬಾಬ್ತು  ಕೆಎ-13 ಬಿ-7045  ನೇ  ಟಯೋಟಾ  ಇಟಿಎಸ್   ಕಾರಿನ್ನು   ಬಾಡಿಗೆ   ಮಾಡಿಕೊಂಡು    ಕಾರಿನ  ಚಾಲಕನಾಗಿ  ಸತೀಶ್ ರವರನ್ನು  ಕರೆದುಕೊಂಡು   ಇಬ್ಬರೂ     ಬೆಂಗಳೂರಿನಿಂದ   ಬೆಳಗಿನ  ಜಾವ 4-00  ಗಂಟೆಗೆ   ಬಿಟ್ಟು  ತುಮಕೂರು,  ಗುಬ್ಬಿ  ನಿಟ್ಟೂರು   ಮಾರ್ಗ ವಾಗಿ  ಎಂ. ಎನ್  ಕೋಟೆ  ಮೇಲೆ   ಸಾಗಸಂದ್ರ  ಗ್ರಾಮಕ್ಕೆ  ಹೋಗುತ್ತಿರುವಾಗ   ಬೆಳಗ್ಗೆ 6-00   ಗಂಟೆ   ಸಮಯದಲ್ಲಿ  ಎಂ.ಎನ್  ಕೋಟೆ  ಗ್ರಾಮದ  ಹೊರವಲಯದ  ಶ್ರೀ  ಕೊಲ್ಲಾಪುರದಮ್ಮ  ದೇವಸ್ಥಾನದ  ಸಮೀಪ  ಕೆಎ-13 ಬಿ-7045  ನೇ     ಚಾಲಕ  ಸತೀಶ್ ರವರು   ಚಾಲನೆ  ಮಾಡುತ್ತಿದ್ದ  ಕಾರನ್ನು  ಅತೀವೇಗ  ಮತ್ತು  ಅಜಾಗರೂ  ಕತೆಯಿಂದ  ಓಡಿಸಿಕೊಂಡು  ಹೋಗಿ  ರಸ್ತೆಯ  ಬದಿ  ಇದ್ದ  ಮರಕ್ಕೆ  ಡಿಕ್ಕಿ  ಹೊಡೆಸಿ  ಅಪಘಾತ  ಪಡಿಸಿದನು, ಅಪಘಾತ  ಪಡಿಸಿದ  ಪರಿಣಾಮ  ಕಾರಿನಲ್ಲಿ  ಇದ್ದ ನನಗಾಗಲೀ   ಕೆಎ-13 ಬಿ-7045  ಕಾರಿನ  ಚಾಲಕ  ಸತೀಶನಿಗಾಗಲೀ   ಯಾವುದೇ   ತೊಂದರೆಗಳಾಗಿರುವುದಿಲ್ಲ. ಅಪಘಾತವಾದ   ಕಾರಿನ  ಮುಂಭಾಗದ  ಬಂಪರ್, ಮುಂಭಾಗದ  ಬಾನೆಟ್, ಮುಂಭಾಗ  ದೊಡ್ಡ ಗ್ಲಾಸ್ , ಕಾರಿನ  ಎಸಿ. ಹಾಗೀ  ಇತರೆ   ಭಾಗಗಳಿಗೆ   ಪೆಟ್ಟು ಬಿದ್ದು,   ಜಖಂಗೊಂಡಿರುತ್ತವೆ.  ಅಪಘಾತವಾದ  ಕಾರು  ಸ್ಥಳದಲ್ಲಿ  ಇರುತ್ತೆ.  ಆದ್ದರಿಂದ ಈ ಅಪಘಾತಕ್ಕೆ   ಕಾರಣರಾದ  ಕೆಎ-13 ಬಿ-7045  ನೇ  ಟಯೋಟಾ  ಇಟಿಎಸ್   ಕಾರಿನ  ಚಾಲಕ   ಮೇಲೆ  ಮುಂದಿನ  ಕಾನೂನು  ರೀತ್ಯ  ಕ್ರಮ  ಜರುಗಿಸಲು   ಕೋರಿ ಇತ್ಯಾದಿಯಾದ  ಪಿರ್ಯಾದು ಅಂಶ.

ಹುಲಿಯೂರುದುರ್ಗ ಪೊಲೀಸ್‌ ಠಾಣಾ; ಮೊ ನಂ 198/2017 ಕಲಂ: 279, 337 IPC

ದಿನಾಂಕ: 15-10-2017 ರಂದು ಬೆಳಿಗ್ಗೆ 10-00 ಗಂಟೆಗೆ ಪಿರ್ಯಾದಿಯಾದ ಶ್ರೀಮತಿ ಮಮತ ಕೋಂ ಗಿರೀಶ, ಸುಮಾರು 33 ವರ್ಷ, ಬಲಿಜಿಗರು, ಮನೆಗೆಲಸ, ನಂ:8, ಮುನಿರಾಜು ಬಿಲ್ಡಿಂಗ್, 2 ನೇ ಕ್ರಾಸ್, ವಿನಾಯಕನಗರ, ಬೆಂಗಳೂರು ಸ್ವಂತ ಊರು-ಯಲಗಲವಾಡಿ, ಹುತ್ರಿದುರ್ಗ ಹೋಬಳಿ, ಕುಣಿಗಲ್ ತಾ. ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ  ದಿನಾಂಕ: 14-10-2017 ರಂದು ಬೆಳಿಗ್ಗೆ ಪಿರ್ಯಾದಿಯ ಯಜಮಾನರಾದ ಗಿರೀಶ್ ರವರು ಮತ್ತು ಪಿರ್ಯಾದಿಯ ಅಕ್ಕ ಶೋಭಾ ರವರು ಗಿರೀಶ್ ರವರ ಕೆಎ-41-ಇಬಿ-1625 ನೇ ಹೀರೋ ಪ್ಯಾಷನ್ ಪ್ರೋ ದ್ವಿಚಕ್ರ ವಾಹನದಲ್ಲಿ ಅಮೃತೂರಿನ ಸೊಸೈಟಿಯಲ್ಲಿ ರೇಷನ್ ತರಲು ಹೋದರು. ಸಂಜೆ 05-00 ಗಂಟೆ ಸಮಯಕ್ಕೆ ಅಮೃತೂರಿನ ಸರ್ಕಾರಿ ಆಸ್ಪತ್ರೆಯ ನರ್ಸ್ ರವರು ಪಿರ್ಯಾದಿಯವರ ಗಂಡನ ಮೊಬೈಲ್ ನಿಂದ ಪಿರ್ಯಾದಿಗೆ ಕರೆ ಮಾಡಿ ದಿ: 14-10-2017 ರಂದು ಸಂಜೆ 04-30 ಗಂಟೆ ಸಮಯದಲ್ಲಿ ರಾಘವನ ಹೊಸೂರು ಗೇಟ್ ಬಿಟ್ಟು ಸ್ವಲ್ಪ ಮುಂದೆ ನಿಮ್ಮ ಯಜಮಾನರು ನಿಮ್ಮ ಅಕ್ಕ ಶೋಭಾ ರವರು ಮೋಟಾರ್ ಸೈಕಲ್ ನಲ್ಲಿ ಅಮೃತೂರು ಹೆಚ್ ದುರ್ಗ ರಸ್ತೆಯ ಎಡಬದಿಯಲ್ಲಿ ಬರುತ್ತಿದ್ದಾಗ ಅದೇ ಸಮಯಕ್ಕೆ ಹುಲಿಯೂರುದುರ್ಗದ ಕಡೆಯಿಂದ ಬಂದ ಕೆಎ-01-ಎ.ಎಫ್-4665 ನೇ ಮಾರುತಿ ಸುಜುಕಿ  ರಿಟ್ಸ್ ಕಾರಿನ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಿಮ್ಮ ಯಜಮಾನರ ಬೈಕಿಗೆ ಡಿಕ್ಕಿ ಹೊಡೆಸಿದ್ದರಿಂದ ನಿಮ್ಮ ಯಜಮಾನರಿಗೆ ಮತ್ತು ನಿಮ್ಮ ಅಕ್ಕಳಿಗೆ ಅಪಘಾತದಿಂದ ಪೆಟ್ಟು ಬಿದ್ದು ಗಾಯಗಳಾಗಿರುತ್ತೆ. ಅಮೃತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆ ವೈದ್ಯರ ಸಲಹೆ ಮೇರೆಗೆ ಆಂಬ್ಯುಲೆನ್ಸ್ ನಲ್ಲಿ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದಾರೆ ಎಂತ ತಿಳಿಸಿದ್ದು, ಪಿರ್ಯಾದಿಯು ಸಪ್ತಗಿರಿ ಆಸ್ಪತ್ರೆಗೆ ಹೋಗಿ ನೋಡಲಾಗಿ ಪಿರ್ಯಾದಿಯ ಯಜಮಾನರಿಗೆ ಎಡಕಾಲು ತೊಡೆಗೆ, ಎಡಭಾಗದ ಮುಖಕ್ಕೆ, ಹಣೆಗೆ, ಬಲಕಾಲಿನ ಮೊಣಕಾಲಿಗೆ, ಎಡಗೈ ಗೆ, ತಲೆಗೆ, ರಕ್ತಗಾಯಗಳಾಗಿದ್ದವು. ಶೋಭಾ ರವರಿಗೆ ಬಲಗೈ ಮೊಣಕೈ ಗೆ, ಬಲಕಾಲಿಗೆ, ತುಟಿಗೆ, ಹಣೆಗೆ, ಬೆನ್ನಿಗೆ ರಕ್ತಗಾಯಗಳಾಗಿದ್ದವು. ಪಿರ್ಯಾದಿಯು ದಿ:15-10-017 ರಂದು ಅಪಘಾತವಾದ ಸ್ಥಳಕ್ಕೆ ಹೋಗಿ ನೋಡಿದಾಗ ಪಿರ್ಯಾದಿಯ ಗಂಡನ ಬೈಕಿಗೆ ಡಿಕ್ಕಿಪಡಿಸಿದ ಕಾರು ಸಹ ಸ್ಥಳದಲ್ಲಿಯೇ ಇದ್ದು ಎರಡೂ ವಾಹನ ಗಳು ಜಖಂಗೊಂಡಿದ್ದವು. ಪಿರ್ಯಾದಿಯು ಆಸ್ಪತ್ರೆಗೆ ಹೋಗಿ ತನ್ನ ಗಂಡನನ್ನು ಮತ್ತು ಅಕ್ಕನನ್ನು ನೋಡಿಕೊಂಡು ಬಂದು ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು, ಈ ಅಪಘಾತಕ್ಕೆ ಕಾರಣವಾದ ಕೆಎ-01-ಎ.ಎಫ್-4665 ನೇ ಮಾರುತಿ ಸುಜುಕಿ  ರಿಟ್ಸ್ ಕಾರಿನ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲು ಮಾಡಿರುತ್ತೆ.

ಹುಲಿಯೂರುದುರ್ಗ ಪೊಲೀಸ್‌ ಠಾಣಾ; ಮೊ ನಂ 199/2017 ಕಲಂ: 32, 34 K E ACT

ದಿನಾಂಕ;-15-10-2017 ರಂದು ಮಧ್ಯಾಹ್ನ 03-15 ಗಂಟೆಗೆ ಪಿರ್ಯಾದುದಾರರಾದ ಮಂಜು ಬಿ,ಪಿ ಪಿ,ಎಸ್,ಐ, ಹುಲಿಯೂರುದುರ್ಗ ಪೊಲೀಸ್ ಠಾಣೆ ರವರು ಠಾಣಾ ಹೆಚ್,ಸಿ-462 ರಮೇಶ  ರವರ ಮುಖೇನ ಕಳುಹಿಸಿ ಕೊಟ್ಟ ದೂರಿನ ಅಂಶವೇನೆಂದರೆ ಹುಲಿಯೂರುದುರ್ಗ ಪೊಲೀಸ್ ಠಾಣೆಯ ಪಿ,ಎಸ್,ಐ ಆದ ನಾನು ದಿನಾಂಕ;-15-10-2017 ರಂದು ಮಧ್ಯಾಹ್ನ 02-00 ಗಂಟೆಯ ಸಮಯದಲ್ಲಿ ಠಾಣೆಯಲ್ಲಿದ್ದಾಗ ಕಾಡುಬೋರನಹಳ್ಳಿ ಗ್ರಾಮದ ಸಂಪಿಗಯ್ಯ ಬಿನ್ ಜವರಯ್ಯ ಎಂಬುವವನು ತನ್ನ ಚಿಲ್ಲರೆ ಅಂಗಡಿಯ ಮುಂದೆ ಅಕ್ರಮವಾಗಿ  ಹಣ ಸಂಪಾದನೆ ಮಾಡುವ ಉದ್ದೇಶದಿಂದ ಮಧ್ಯದ ಪ್ಯಾಕೇಟ್ ಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ಬಾತ್ಮಿದಾರರಿಂದ ಬಂದ ಖಚಿತ ಮಾಹಿತಿಯ ಮೇಲೆ ನನ್ನ ಸಿಬ್ಬಂದಿಯಾದ ಹೆಚ್,ಸಿ-462 ರಮೇಶ, ಹಾಗೂ ಪಿ,ಸಿ 915 ಷಡಾಕ್ಷರಿ, ಹಾಗೂ ಚಾಲಕರಾದ ಎ,ಪಿ,ಸಿ-211  ಪರಮೇಶ್ವರ  ರವರ ಜೊತೆ ಇಲಾಖಾ ಜೀಪಿನಲ್ಲಿ ಠಾಣೆಯನ್ನು ಮಧ್ಯಾಹ್ನ 02-10 ಗಂಟೆಗೆಯ ಸಮಯದಲ್ಲಿ ಬಿಟ್ಟು ಉಜ್ಜನಿ ಮಾರ್ಗವಾಗಿ ಕಾಡುಬೋರನಹಳ್ಳಿ ಗ್ರಾಮದ ವಾಸಿ ಸಂಪಿಗಯ್ಯ ಬಿನ್ ಜವರಯ್ಯ ರವರ ಅಂಗಡಿಯ ಬಳಿ ಮಧ್ಯಾಹ್ನ ಸುಮಾರು 02-40 ಗಂಟರಯ ಸಮಯಕ್ಕೆ ಪಕ್ಕದಲ್ಲಿ ಹೊಂಚು ಹಾಕಿ ನೋಡಿದಾಗ ಸಾರ್ವಜನಿಕರು ಮಧ್ಯದ ಪ್ಯಾಕೇಟ್ ಗಳನ್ನು ಖರೀದಿ ಮಾಡುತ್ತಿದ್ದು ನಾವು ದಾಳಿ ಮಾಡಲು ಮುಂದಾದಾಗ ನಮ್ಮನ್ನು ನೋಡಿ ಸದರಿ ಗಿರಾಕಿಗಳು ಓಡಿ ಹೋದರು ಆಗ ಅಂಗಡಿಯಲ್ಲಿದ್ದ ಅಸಾಮಿಯ ಹೆಸರು ವಿಳಾಸವನ್ನು ಕೇಳಲಾಗಿ ಸಂಪಿಗಯ್ಯ ಬಿನ್ ಜವರಯ್ಯ 60 ವರ್ಷ, ವಕ್ಕಲಿಗ ಜನಾಂಗ, ಕಾಡುಬೋರನಹಳ್ಳಿ ಹುಲಿಯೂರುದುರ್ಗ ಹೋಬಳಿ ಕುಣಿಗಲ್ ತಾಲ್ಲೋಕು ಎಂದು ತಿಳಿಸಿದನು ಆತನ ಅಂಗಡಿಯ ಮುಂದೆ ಇದ್ದ ಮಧ್ಯದ ಪ್ಯಾಕೇಟ್ ಗಳ ಬಗ್ಗೆ ವಿಚಾರ ಮಾಡಿದಾಗ ಇವುಗಳನ್ನು ಉಜ್ಜನಿಯ ವೆಂಕಟೇಶ್ವರ ವೈನ್ ಸ್ಟೋರ್ ನಿಂದ ತೆಗೆದುಕೊಂಡು ಬಂದು ಹೆಚ್ಚಿನ ಹಣಕ್ಕಾಗಿ ಮಾರಾಟ ಮಾಡುತ್ತಿದ್ದು ನನ್ನ ಬಳಿ ಇವುಗಳನ್ನು ಮಾರಾಟ ಮಾಡಲು ಯಾವುದೇ ಪರವಾನಗಿ ಇರುವುದಿಲ್ಲ ಎಂದು ತಿಳಿಸಿದನು, ಆಗ ಆಸಾಮಿಯ ಅಂಗಡಿಯ ಮುಂದೆ ಇದ್ದ ಮಧ್ಯದ ಪ್ಯಾಕೇಟ್ ಗಳನ್ನು ಪರಿಶೀಲಿಸಲಾಗಿ 90 ಮಿ,ಲೀ ನ HAYWARDS GHEERS WHISKY ಆಗಿದ್ದು ಒಟ್ಟು 46 ಫ್ಯಾಕೇಟ್ ಗಳು ಇರುತ್ತೆ,90 ಎಂ,ಎಲ್ ನ ಒಂದು ಫ್ಯಾಕೇಟ್ ನ ಬೆಲೆ 28 ರೂ 13 ಪೈಸೆ ಆಗಿರುತ್ತೆ, 46 ಫ್ಯಾಕೇಟಗಳ ಬೆಲೆ 1293 ರೂ 98 ಪೈಸೆ ಆಗಿರುತ್ತೆ ಆರೋಪಿಯು ಯಾವುದೇ ಪರವಾನಗಿ ಪಡೆಯದೆ ಹಣ ಸಂಪಾದನೆ ಮಾಡುವ ಉದ್ದೇಶದಿಂದ ತನ್ನ ಅಂಗಡಿಯಲ್ಲಿ ಸಾರ್ವಜನಿಕರಿಗೆ ಮಧ್ಯದ ಫ್ಯಾಕೆಟ್ ಗಳನ್ನು ಮಾರಾಟ ಮಾಡುತ್ತಿದ್ದರಿಂದ ಈತನ ವಿರುದ್ದ ಪ್ರಕರಣ ದಾಖಲು ಮಾಡಲು ಕಳುಹಿಸಿಕೊಟ್ಟ ದೂರನ್ನು ಪಡೆದು ಠಾಣಾ ಮೊ,ನಂ 199/2017 ರಲ್ಲಿ ದಾಖಲಿಸಿದೆ

ಪಟ್ಟನಾಯಕನಹಳ್ಳಿ ಠಾಣಾ ಮೊ ನಂ 117/17 ಕಲಂ 15(ಎ), 32(3) ಕರ್ನಾಟಕ  ಅಬಕಾರಿ ಕಾಯ್ದೆ

ಮಾನ್ಯ ಡಿ ಎಸ್ ಪಿ ಸಾಹೇಬ ರವರು  ತುಮಕೂರು ಗ್ರಾಮಾಂತರ ಉಪವಿಭಾಗ, ಶಿರಾ ಅಬಕಾರಿ ಪ್ರಕರಣಗಳನ್ನು ದಾಖಲಿಸಲು ನಿಸ್ತಂತು ಸಂದೇಶದ ಮುಖಾಂತರ ತಿಳಿಸಿದ್ದರ ಮೇರೆಗೆ ದಿನಾಂಕ:15-10-2017 ರಂದು  ಮದ್ಯಾಹ್ನ 12:30 ಗಂಟೆಗೆ  ಪಿರ್ಯಾದಿ ಚಂದ್ರಶೇಖರ್ ಪಿ.ಎಸ್.ಐ ರವರು ಠಾಣೆಯಲ್ಲಿದ್ದಾಗ ಇವರಿಗೆ  ದೂರವಾಣಿ ಮುಖಾಂತರ ಠಾಣಾ ವ್ಯಾಪ್ತಿಯ  ಪೂಜಾರ್ ಮುದ್ದನಹಳ್ಳಿ ಗೇಟ್ ನ ಬಳಿ ಇರುವ ಪ್ರಯಾಣಿಕರ ತಂಗುದಾಣದ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮತ್ತು ಹೆಣ್ಣು ಮಕ್ಕಳಿಗೆ ಓಡಾಡಲು ತೊಂದರೆಯಾಗುವ ರೀತಿಯಲ್ಲಿ ಮದ್ಯಪಾನ ಮಾಡುತ್ತಿದ್ದಾನೆ ಎಂತ ಖಚಿತ ಬಾತ್ಮೀ ಬಂದ ಮೇರೆಗೆ ಪಂಚಾಯ್ತುದಾರರನ್ನು ಠಾಣೆಗೆ ಬರಮಾಡಿಕೊಂಡು ಈ ವಿಚಾರವನ್ನು ತಿಳಿಸಿ ದಾಳಿ ಕಾಲದಲ್ಲಿ ನೀವುಗಳು ಪಂಚಾಯ್ತಿದಾರರಾಗಿ ಇದ್ದು ಸಹಕರಿಸಲು ಕೋರಿದ್ದರ ಮೇರೆಗೆ ಅವರುಗಳು ಒಪ್ಪಿದ ನಂತರ ಪಂಚರನ್ನು ಮತ್ತು ಸಿಬ್ಬಂದಿಯವರುಗಳನ್ನು ಸರ್ಕಾರಿ ಜೀಪಿನಲ್ಲಿ ಕೂರಿಸಿಕೊಂಡು ಪೂಜಾರ್ ಮುದ್ದನಹಳ್ಳಿ ಗೇಟ್ ನ ಸಮೀಪ  ಸ್ವಲ್ಪ ದೂರದಲ್ಲಿ ಜೀಪನ್ನು ಮರೆಯಲ್ಲಿ ನಿಲ್ಲಿಸಿ  ನೋಡಲಾಗಿ ಮೇಲ್ಕಂಡ ಸ್ಥಳದಲ್ಲಿ ಒಬ್ಬ ಆಸಾಮಿಯು ಮಧ್ಯದ ಪಾಕೇಟ್ ಗಳಿಂದ ಮದ್ಯಪಾನ ಮಾಡುತ್ತಿದ್ದು ಪಂಚರ ಸಮಕ್ಷಮ ಪಿರ್ಯಾದಿ ಮತ್ತು ಸಿಬ್ಬಂದಿಗಳೊಂದಿಗೆ  ಆಸಾಮಿಯ  ಮೇಲೆ  ದಾಳಿ ಮಾಡಿ ಆತನ ಹೆಸರು ಮತ್ತು ವಿಳಾಸ ಕೇಳಲಾಗಿ ಮಂಜುನಾಥ ಬಿನ್ ಸಣ್ಣಸಿದ್ದಪ್ಪ, 26ವರ್ಷ, ಹಂದಿಜೋಗರು, ಕೂಲಿಕೆಲಸ, ಪೂಜಾರ್ ಮುದ್ದನಹಳ್ಳಿ ಗೇಟ್ ಶಿರಾ ತಾಲ್ಲೋಕ್ ಎಂತ ತಿಳಿಸಿದ್ದು ಈತನ ಬಳಿ ಪರಿಶೀಲಿಸಲಾಗಿ180ಎಂ.ಎಲ್ ಓಲ್ಡ್ ತಾವರಿನ್ 4ಪಾಕೇಟ್ಗಳು,1ಪ್ಲಾಸ್ಟಿಕ್ ಲೋಟ, 1ಲೀಟರ್ ವಾಟರ್ ಬಾಟಲ್ ದೊರೆತಿದ್ದು ಮದ್ಯಾಹ್ನ 01:00ಗಂಟೆಯಿಂದ 02:00 ಗಂಟೆಯ ವರೆಗೆ ಪಂಚರ ಸಮಕ್ಷಮ ಪಂಚನಾಮೆ ಮಾಡಿ   ಆಸಾಮಿ ಮತ್ತು ಮಾಲುಗಳನ್ನು ವಶಕ್ಕೆ ಪಡೆದು ಪಿಸಿ-601 ಮಂಜುನಾಥ ಮತ್ತು ಪಿಸಿ-649 ಯತೀಶ್ ಕುಮಾರ್ ರವರೊಂದಿಗೆ ಮುಂದಿನ ಕ್ರಮ  ಜರುಗಿಸುವಂತೆ  ವರದಿಯನ್ನು ನೀಡಿ ಆಸಾಮಿ ಮತ್ತು ಮಾಲೀನ ಸಮೇತ  ಪೊಲೀಸ್ ಠಾಣೆಗೆ  ಕಳುಹಿಸಿಕೊಟ್ಟು ಠಾಣಾಧಿಕಾರಿ ರವರಿಗೆ  ಕಾನೂನು ರೀತ್ಯಾ  ಕ್ರಮ ಜರುಗಿಸಲು ಸೂಚಿಸಿ ನೀಡಿ ಕಳುಹಿಸಿದ ವರದಿಯನ್ನು ಪಡೆದು ಮದ್ಯಾಹ್ನ 02:15 ಗಂಟೆಗೆ  ಠಾಣಾ ಮೊ ನಂ 117/17 ಕಲಂ 15(ಎ), 32(3) ಕರ್ನಾಟಕ  ಅಬಕಾರಿ ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

ಹುಲಿಯೂರುದುರ್ಗ ಪೊಲೀಸ್‌ ಠಾಣಾ; ಮೊ ನಂ 200/2017 ಕಲಂ: 15(A), 32(3) K E ACT

ದಿನಾಂಕ;-15-10-2017 ರಂದು ಸಂಜೆ 05-30 ಗಂಟೆಗೆ ಪಿರ್ಯಾದುದಾರರಾದ ಮಂಜು ಬಿ,ಪಿ ಪಿ,ಎಸ್,ಐ, ಹುಲಿಯೂರುದುರ್ಗ ಪೊಲೀಸ್ ಠಾಣೆ ರವರು ಠಾಣಾ ಪಿ,ಸಿ-915 ಷಡಾಕ್ಷರಿ ರವರ ಮುಖೇನ ಕಳುಹಿಸಿ ಕೊಟ್ಟ ದೂರಿನ ಅಂಶವೇನೆಂದರೆ ಈ ದಿವಸ ದಿನಾಂಕ;-15-10-2017 ರಂದು ಸಂಜೆ 04-50 ಗಂಟೆಯಲ್ಲಿ ನಾನು ಪೊಲೀಸ್ ಠಾಣೆಯಲ್ಲಿ ಇರುವಾಗ್ಗೆ ಠಾಣಾ ಸರಹದ್ದು ಹಳೇವೂರು ಗ್ರಾಮದ ದೇವಸ್ಥನದ ಪಕ್ಕದಲ್ಲಿರುವ ಸಾರ್ವಜನಿಕ ಸ್ಥಳವಾದ ಬಸ್ ನಿಲ್ದಾಣದಲ್ಲಿ ಒಬ್ಬ ಆಸಾಮಿಯು ಕುಳಿತುಕೊಂಡು ಮಧ್ಯಪಾನ ಮಾಡುತ್ತಿರುತ್ತಾನೆ ಎಂದು ಮಾಹಿತಿ ಬಂದಿದ್ದು ಆತನ ಮೇಲೆ ದಾಳಿ ಮಾಡಿ ಕಾನೂನು ಕ್ರಮ ಜರುಗಿಸುವ ಸಲುವಾಗಿ ಪಂಚಾಯ್ತಿದಾರರನ್ನು ಠಾಣೆಗೆ ಬರಮಾಡಿಕೊಂಡು ಅವರಿಗೆ ವಿಚಾರವನ್ನು ತಿಳಿಸಿ ದಾಳಿ ಮಾಡುವ ಸಮಯದಲ್ಲಿ ನೀವುಗಳು ನಮ್ಮೊಂದಿಗೆ ಪಂಚಾಯ್ತಿದಾರರಾಗಿ ಸಹಕರಿಸುವಂತೆ ಕೇಳಿಕೊಂಡಿದ್ದು ಅದಕ್ಕೆ ಅವರು ಒಪ್ಪಿದ್ದು ನಂತರ ಸಂಜೆ 04-55 ಗಂಟೆಗೆ ಠಾಣೆಯನ್ನು ಬಿಟ್ಟು ಪಂಚಾಯ್ತಿದಾರರು ಮತ್ತು ಸಿಬ್ಬಂದಿಯವರೊಂದಿಗೆ ಇಲಾಖಾ ಜೀಪಿನಲ್ಲಿ ಸಂಜೆ 05-10 ಗಂಟೆಗೆ ಹಳೇವೂರು ದೇವಸ್ಥನದ ಪಕ್ಕದಲ್ಲಿರುವ ಸಾರ್ವಜನಿಕ ಬಸ್ ನಿಲ್ದಾಣದಲ್ಲಿ ಸದರಿ ಅಸಾಮಿ ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟುಕೊಂಡು ಮಧ್ಯಪಾನ ಮಡುತ್ತಿದ್ದು ಆತನ ಹೆಸರು ವಿಳಾಸ ಕೇಳಲಾಗಿ ಹನುಮಂತ ಬಿನ್ ನರಸಿಂಹಯ್ಯ 40 ವರ್ಷ, ತಿಗಳ ಜನಾಂಗ ಕೋಳಿ ಅಂಗಡಿ ವ್ಯಾಪಾರ ಹಳೇವೂರು ಹುಲಿಯೂರುದುರ್ಗ ಹೋಬಳಿ ಕುಣಿಗಲ್ ತಾಲ್ಲೋಕು ಎಂದು ತಿಳಿಸಿದ್ದು ಸದರಿ ಸ್ಥಳದಲ್ಲಿ ಆತನ ಮುಂದೆ ಇದ್ದ ಮಧ್ಯದ ಪ್ಯಾಕೇಟ್ ಗಳನ್ನು ಪರಿಶೀಲನೆ ಮಾಡಲಾಗಿ 180 ಎಂ,ಎಲ್ ನ OLD TAVERN WHISKY ಎರೆಡು ಫ್ಯಾಕೇಟ್ ಗಳು ಇದ್ದು ಅವುಗಳಲ್ಲಿ ಒಂದು ಖಾಲಿಯಾಗಿರುತ್ತೆ, ಒಂದು ಪ್ಯಾಕೇಟ್ ಓಪನ್ ಆಗದೆ ಮಧ್ಯ ತುಂಬಿರುತ್ತೆ, ಮತ್ತು ಒಂದು ಪ್ಲಾಸ್ಟಿಕ್ ಲೋಟವು ಸಹ ಇರುತ್ತೆ, ಈ ಸದರಿ ಆಸಮಿಯೂ ಸಾರ್ವಜನಿಕ ಸ್ಥಳದಲ್ಲಿ ಮಧ್ಯಪಾನ ಮಾಡುತ್ತಿದ್ದರಿಂದ ಈತನ ಮೇಲೆ ಕಲಂ 15 (ಎ), 32(3) ಕೆ,ಇ ಆಕ್ಟ್ ರೀತ್ಯ ಪ್ರಕರಣ ದಾಖಲಿಸಲು ಕಳುಹಿಸಿಕೊಟ್ಟ ದೂರನ್ನು ಪಡೆದು ಠಾಣಾ ಮೊ,ನಂ 200/2017 ರಂತೆ ದೂರು ದಾಖಲಿಸಿರುತ್ತೆ,

ಹುಲಿಯೂರುದುರ್ಗ ಪೊಲೀಸ್‌ ಠಾಣಾ; ಮೊ ನಂ 201/2017 ಕಲಂ: 15(A), 32(3) K E ACT

ದಿನಾಂಕ;-15-10-2017 ರಂದು ಸಂಜೆ 07-40 ಗಂಟೆಗೆ ಪಿರ್ಯಾದುದಾರರಾದ ಮಂಜು ಬಿ,ಪಿ ಪಿ,ಎಸ್,ಐ, ಹುಲಿಯೂರುದುರ್ಗ ಪೊಲೀಸ್ ಠಾಣೆ ರವರು ಠಾಣಾ ಪಿ,ಸಿ-426 ರಂಗಸ್ವಾಮಿ ರವರ ಮುಖೇನ ಕಳುಹಿಸಿ ಕೊಟ್ಟ ದೂರಿನ ಅಂಶವೇನೆಂದರೆಈ ದಿವಸ ದಿನಾಂಕ;-15-10-2017 ರಂದು ಸಂಜೆ 07-00 ಗಂಟೆ ಸಮಯದಲ್ಲಿ ನಾನು ಠಾಣೆಯಲ್ಲಿ ಇರುವಾಗ ಠಾಣಾ ಸರಹದ್ದು ಹುಲಿಯೂರುದುರ್ಗ ಟೌನ್ ಹಳೇಪೇಟೆ ಸಾರ್ವಜನಿಕ ಸ್ಥಳವಾದ ಬಸ್ ನಿಲ್ದಾಣದಲ್ಲಿ ಒಬ್ಬ ಆಸಾಮಿ ಬಸ್ ನಿಲ್ದಾಣದ ಒಳಗೆ ಕುಳಿತುಕೊಂಡು ಮಧ್ಯಪಾನ ಮಾಡುತ್ತಿದ್ದಾನೆ ಅಂತ ಆತನ ಮೇಲೆ ದಾಳಿ ಮಾಡಿ ಕಾನೂನು ಕ್ರಮ ಜರುಗಿಸುವ ಸಲುವಾಗಿ ಪಂಚಾಯ್ತಿದಾರರನ್ನು ಠಾಣೆಗೆ ಬರಮಾಡಿಕೊಂಡು ಅವರಿಗೆ ವಿಚಾರವನ್ನು ತಿಳಿಸಿ ದಾಳಿ ಮಾಡುವ ಸಮಯದಲ್ಲಿ ನೀವುಗಳು ನಮ್ಮೊಂದಿಗೆ ಪಂಚಾಯ್ತಿದಾರರಾಗಿ ಸಹಕರಿಸುವಂತೆ ಕೇಳಿಕೊಂಡಿದ್ದು ಅದಕ್ಕೆ ಅವರು ಒಪ್ಪಿದ್ದು ನಂತರ ಸಂಜೆ 07-05 ಗಂಟೆಗೆ ಠಾಣೆಯನ್ನು ಬಿಟ್ಟು ಪಂಚಾಯ್ತಿದಾರರು ಮತ್ತು ಸಿಬ್ಬಂದಿಯವರೊಂದಿಗೆ ಇಲಾಖಾ ಜೀಪಿನಲ್ಲಿ ಸಂಜೆ 07-10 ಗಂಟೆಗೆ ಹಳೇಪೇಟೆ ಸಾರ್ವಜನಿಕ ಬಸ್ ನಿಲ್ದಾಣದಲ್ಲಿ ಸದರಿ ಅಸಾಮಿ ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟುಕೊಂಡು ಮಧ್ಯಪಾನ ಮಡುತ್ತಿದ್ದು ಆತನ ಹೆಸರು ವಿಳಾಸ ಕೇಳಲಾಗಿ ಹೆಚ್,ಕೆ ರಾಜು ಬಿನ್ ಲೇಟ್ ಕರಿಪುಟ್ಟಯ್ಯ ಸುಮಾರು 48 ವರ್ಷ ವಕ್ಕಲಿಗರು ಟೀ ಅಂಗಡಿ ವ್ಯಾಪಾರ ಅಣತಹಳ್ಳಿ ರಸ್ತೆ ಹುಲಿಯೂರುದುರ್ಗ ಟೌನ್ ಕುಣಿಗಲ್ ತಾಲ್ಲೋಕು ಎಂತ ತಿಳಿಸಿದ್ದು ಸದರಿ ಸ್ಥಳದಲ್ಲಿ ಆತನ ಮುಂದೆ ಇದ್ದ ಮಧ್ಯದ ಪ್ಯಾಕೇಟ್ ಗಳನ್ನು ಪರಿಶೀಲನೆ ಮಾಡಲಾಗಿ 90 ಎಂ,ಎಲ್ ನ ORIGINAL CHOICE ನ ಎರೆಡು ಫ್ಯಾಕೇಟ್ ಗಳು ಮತ್ತು 90 ಎಂ,ಎಲ್ ನ 3ACES WHISKY  ಒಂದು ಫ್ಯಾಕೇಟ್ ಇದ್ದು ಅವುಗಳಲ್ಲಿ , ಒಂದು ಪ್ಯಾಕೇಟ್ ಓಪನ್ ಆಗದೆ ಮಧ್ಯ ತುಂಬಿರುತ್ತೆ, ಮತ್ತು ಒಂದು ಪ್ಲಾಸ್ಟಿಕ್ ಲೋಟವು ಸಹ ಇರುತ್ತೆ, ಈ ಸದರಿ ಆಸಾಮಿಯೂ ಸಾರ್ವಜನಿಕ ಸ್ಥಳದಲ್ಲಿ ಮಧ್ಯಪಾನ ಮಾಡುತ್ತಿದ್ದರಿಂದ ಈತನ ಮೇಲೆ ಕಲಂ 15 (ಎ), 32(3) ಕೆ,ಇ ಆಕ್ಟ್ ರೀತ್ಯ ಪ್ರಕರಣ ದಾಖಲಿಸಲು ಕಳುಹಿಸಿಕೊಟ್ಟ ದೂರನ್ನು ಪಡೆದು ಠಾಣಾ ಮೊ,ನಂ 201/2017 ರಂತೆ ದೂರು ದಾಖಲಿಸಿರುತ್ತೆ,

ಮಧುಗಿರಿ ಪೊಲೀಸ್ ಠಾಣಾ ಮೊ. ನಂ:190/2017 u/s 36[B] KE ACT.

ಪಿರ್ಯಾದಿ ಶ್ರೀ ಮಾರುತಿನಾಯ್ಕ ಪಿಸಿ-351ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೆನೆಂದರೆ ಈ ದಿನ ದಿನಾಂಕ: 15-10-2017 ರಂದು ಬೆಳಿಗ್ಗೆ 09.10 ಗಂಟೆಗೆ ಮಧುಗಿರಿ ಟೌನ್ ನಲ್ಲಿ ಗಸ್ತು ಮಾಡುತ್ತಿದ್ದಾಗ, ಗಣೇಶ ದೇವಸ್ಥಾನದ ಹತ್ತಿರ ಇರುವ ಮಧು ವೈನ್ಸ್ ನಲ್ಲಿ ಅವಧಿಗೆ ಮುಂಚಿತವಾಗಿ ವೈನ್ಸ್ ಬಾಗಿಲು ತೆಗೆದು ಸಾರ್ವಜನಿಕರಿಗೆ ಮದ್ಯವನ್ನು ಮಾರಾಟ ಮಾಡುತ್ತಿರುತ್ತಾರೆ ಎಂಬ ಖಚಿತ ವರ್ತಮಾನ ಬಂದ ಮೇರೆಗೆ ಪಿರ್ಯಾದಿಯು ಮಧು ವೈನ್ಸ್ ಹತ್ತಿರ ಖುದ್ದು ಬೇಟಿ ನೀಡಿ ಗಮನ ಹರಿಸಲಾಗಿ ಯಾರೋ ಒಬ್ಬ ಆಸಾಮಿಯು ಅವಧಿಗೆ ಮುಂಚಿತವಾಗಿ ವೈನ್ಸ್ ಬಾಗಿಲನ್ನು ತೆಗೆದು ನಿಯಮ ಉಲ್ಲಂಘಿಸಿ ಪ್ಯಾಕೇಟ್ ಸಮೇತ ಹಾಗು ಚಿಲ್ಲರೆ ವ್ಯಾಪಾರ ಮಾಡುತ್ತಿರುವುದು ಕಂಡು ಬಂದಿರುತ್ತೆ. ಈ ಬಗ್ಗೆ ಮುಂದಿನ ಕಾನೂನು ರಿತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೆ.

ಮಧುಗಿರಿ ಪೊಲೀಸ್ ಠಾಣಾ ಮೊ. ನಂ 192/2017 u/s 32[3],15[A] KE ACT.

ಪಿರ್ಯಾದಿ ಶ್ರೀಕಂಠಪ್ಪ ಕೆ.ಸಿ ಪಿಸಿ-371 ರವರು ಈ ದಿನ ದಿನಾಂಕ: 15-10-2017 ರಂದು ಸಂಜೆ 06.30 ಗಂಟೆಯ ಸಮಯದಲ್ಲಿ ಮಧುಗಿರಿ ತಾಲ್ಲೂಕು,ಕಸಬಾ ಹೋಬಳಿ, ಮರಬಳ್ಳಿ, ಶೆಟ್ಟಿಹಳ್ಳಿ, ಮಾಡಗಾನಹಟ್ಟಿ ಗ್ರಾಮದ ಕಡೆ ಗಸ್ತು ಮಾಡುತ್ತಿರುವಾಗ್ಗೆ, ಮಾಡಗಾನಹಟ್ಟಿ ಗ್ರಾಮದ ಗೇಟ್ ನಲ್ಲಿ ರಂಗನಾಥ ಬಿನ್ ಈರಣ್ಣರವರು ತನ್ನ ಬಾಬ್ತು ಚಿಲ್ಲರೆ ಅಂಗಡಿಗೆ ಹೊಂದಿಕೊಂಡಂತೆ ಇರುವ ಒಂದು ಗುಡಿಸಲಿನಲ್ಲಿ ಯಾವುದೇ ಪರವಾನಗಿ ಇಲ್ಲದೇ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿರುತ್ತಾನೆಂತಾ ಬಾತ್ಮೀದಾರರಿಂದ ಮಾಹಿತಿ ಬಂದಿದ್ದರಿಂದ ಕೂಡಲೇ ಸಂಜೆ 06.45 ಗಂಟೆಗೆ ಪಿರ್ಯಾದಿಯು ಮೇಲ್ಕಂಡ ಸ್ಥಳಕ್ಕೆ ಹೋಗಿ ಪರಿಶೀಲಿಸಲಾಗಿ ಸದರಿ ರಂಗನಾಥ ಬಿನ್ ಈರಣ್ಣ ಎಂಬುವರು ತನ್ನ ಬಾಬ್ತು ಚಿಲ್ಲರೆ ಅಂಗಡಿಗೆ ಹೊಂದಿಕೊಂಡಂತೆ ಇರುವ ಒಂದು ಗುಡಿಸಲಿನಲ್ಲಿ ಮದ್ಯ ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿತು. ನಂತರ ಸದರಿ ಆಸಾಮಿಯ ಬಗ್ಗೆ ವಿಚಾರ ಮಾಡಲಾಗಿ ರಂಗನಾಥ ಬಿನ್ ಈರಣ್ಣ, 26 ವರ್ಷ, ಗೊಲ್ಲರು, ಮಾಡನಾಗಹಟ್ಟಿ, ಕಸಬಾ ಹೋಬಳಿ, ಮಧುಗಿರಿ ತಾಲ್ಲೂಕು ಎಂದು ತಿಳಿಸಿರುತ್ತಾರೆ. ನಂತರ ನಿನ್ನ ಚಿಲ್ಲರೆ ಅಂಗಡಿಗೆ ಹೊಂದಿಕೊಂಡಂತೆ ಇರುವ ಗುಡಿಸಲಿನಲ್ಲಿ ಮದ್ಯಸೇವನೆ ಮಾಡಲು ಪರವಾನಗಿ ಇದೆಯೇ ಎಂದು ಸದರಿ ರಂಗನಾಥ ಬಿನ್ ಈರಣ್ಣರವರನ್ನು ಕೇಳಲಾಗಿ ನಮ್ಮ ಬಾಬ್ತು ಚಿಲ್ಲರೆ ಅಂಗಡಿಗೆ ಹೊಂದಿಕೊಂಡಂತೆ ಇರುವ ಗುಡಿಸಲಿನಲ್ಲಿ ಮದ್ಯಸೇವನೆ ಮಾಡಲು ಯಾವುದೇ ಪರವಾನಗಿ ಇರುವುದಿಲ್ಲವೆಂತಾ ತಿಳಿಸಿದ್ದರಿಂದ ಪಿರ್ಯಾದಿಯು ಠಾಣೆಗೆ ವಾಪಸ್ ಆಗಿ ಈ ಬಗ್ಗೆ ಮುಂದಿನ ಕ್ರಮ ಜರುಗಿಸಬೇಕೆಂದು ನೀಡಿದ ವರದಿ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ

ಚೇಳೂರು  ಪೊಲೀಸ್   ಠಾಣಾ  ಮೊ. ನಂ 159/2017   ಕಲಂ 15(A) 32(3) K.E.ACT

ದಿನಾಂಕ;15/10/2017  ರಂದು ಬೆಳಗ್ಗೆ 11-00 ಗಂಟೆ  ಸಮಯದಲ್ಲಿ  ನನಗೆ  ಬಂದ  ಖಚಿತ  ಮಾಹಿತಿಯ  ಮೇರೆಗೆ  ಠಾಣಾ  ಸಿಬ್ಬಂದಿ ಹಾಗೂ  ಪಂಚಾಯ್ತಿದಾರರೊಂದಿಗೆ   ಚೇಳೂರು  ಪೊಲೀಸ್  ಠಾಣಾ  ಸರಹದ್ದು,  ಗುಬ್ಬಿ  ತಾ, ಚೇಳೂರು ಹೋ, ಜಾಲಗುಣಿ  ಗ್ರಾಮದ  ಅರಳಿಕಟ್ಟೆ  ಬಳಿ  ಸಾರ್ವಜನಿಕ  ಸ್ಥಳದಲ್ಲಿ  ಸಾರ್ವಜನಿಕರಿಗೆ  ಅಸಹ್ಯವಾಗುವ  ರೀತಿಯಲ್ಲಿ  ಒಂದು  ಪ್ಲಾಸ್ಟಿಕ್  ಲೋಟ , ಎರಡು  ಮದ್ಯದ ಪಾಕೇಟ್ ಹಾಗೂ  ಒಂದು ನೀರಿನ ಬಾಟಲ್ ಇಟ್ಟುಕೊಂಡು ಮದ್ಯಪಾನ  ಮಾಡುತ್ತಿದ್ದ ಆಸಾಮಿಯ   ಮೇಲೆ  ದಾಳಿ  ಮಾಡಿ  ಹಿಡಿದುಕೊಂಡು  ಈತನ  ಹೆಸರು  ವಿಳಾಸ  ಕೇಳಲಾಗಿ ಬವರಾಜು  ಬಿನ್  ರಾಮಸ್ವಾಮಯ್ಯ, 45 ವರ್ಷ, ನಾಯಕ  ಜನಾಂಗ,  ವ್ಯವಸಾಯ  ಕೆಲಸ,  ಜಾಲಗುಣಿ ಗ್ರಾಮ,  ಚೇಳೂರು  ಹೋ,  ಗುಬ್ಬಿ ತಾಲ್ಲೋಕ್. ಎಂದು  ನುಡಿದ್ದು,   ಆರೋಪಿಯು ಕೃತ್ಯಕ್ಕೆ ಬಳಸಿದ್ದ  ಒಂದು 90 ಎಂ. ಎಲ್.ನ. ರಾಜಾ ವಿಸ್ಕಿ  ಟೆಟ್ರಾ  ಪ್ಯಾಕ್ ಮದ್ಯದ ಪಾಕೇಟ್ ,   ಒಂದು ಅರ್ದ ಅರ್ದ ಮದ್ಯ ಇರುವ 90 ಎಂ. ಎಲ್.ನ. ರಾಜಾ ವಿಸ್ಕಿ  ಟೆಟ್ರಾ  ಪ್ಯಾಕ್, ಮತ್ತು  ಒಂದು ಪ್ಲಾಸ್ಟಿಕ್  ಲೋಟ, ಹಾಗೂ ಅರ್ದ ನೀರಿರುವ 02  ಲೀಟರ್ ನೀರಿನ ಬಾಟಲ್ ಇವರುಗಳನ್ನು ಈ ದಿನ ಮಧ್ಯಾಹ್ನ  12-00  ಗಂಟೆಯಿಂದ 1-00  ಗಂಟೆಯ ವರೆವಿಗೆ  ಪಂಚನಾಮೆಯನ್ನು ಬರೆದು ಅಮಾನತತು ಪಡಿಸಿಕೊಂಡು  ವಾಪಸ್ಸು ಠಾಣೆಗೆ  ಹಾಜರಾಗಿ ಸ್ವತ: ಪ್ರಕರಣ  ದಾಖಲಿಸಿರುತ್ತೆ.

ಮಿಡಿಗೇಶಿ ಪೊಲೀಸ್ ಠಾಣಾ ಮೊ.ಸಂ.93/2017, ಕಲಂ:15(ಎ),32(3), ಕೆ.ಇ. ಆಕ್ಟ್.

ದಿನಾಂಕ:15/10/2017 ರಂದು ಬೆಳಿಗ್ಗೆ 10:15 ಗಂಟೆಗೆ ಠಾಣಾ ಸಿಪಿಸಿ-476 ವಿನಯ್ ಕುಮಾರ್.ಎಂ.ಎಸ್. ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಅಂಶವೇನೆಂದರೆ, ದಿನಾಂಕ:15/10/2017 ರಂದು ನನಗೆ ಠಾಣಾಧಿಕಾರಿಯವರು ಠಾಣಾ ಗುಪ್ತ ಮಾಹಿತಿ ಕರ್ತವ್ಯ ನೇಮಿಸಿದ್ದು, ಅದರಂತೆ ನಾನು ಠಾಣಾ ಸರಹದ್ದು ಗ್ರಾಮಗಳಲ್ಲಿ ಗಸ್ತು ಮಾಡಿಕೊಂಡು ಮಾಹಿತಿ ಸಂಗ್ರಹಿಸಿಕೊಂಡು ಇದೇ ದಿನ ಬೆಳಿಗ್ಗೆ 09:45 ಗಂಟೆಯಲ್ಲಿ ನಾನು ಮಿಡಿಗೇಶಿ ಗ್ರಾಮದಲ್ಲಿ ಗಸ್ತು ಮಾಡುತ್ತಿರುವಾಗ್ಗೆ ಮಿಡಿಗೇಶಿ ಗ್ರಾಮದ ಬಸ್ಸ್ ನಿಲ್ದಾಣದ ಬಳಿಯಿರುವ ನಂಜುಂಡೇಶ್ವರ ಎಂಬುವರು ತನ್ನ ಬಾಬ್ತು ಚಿಲ್ಲರೆ ಅಂಗಡಿಗೆ ಹೊಂದಿಕೊಂಡಂತೆ ಇರುವ ಒಂದು ಸಿಮೆಂಟ್ ಶೀಟಿನ ಶೆಡ್ಡಿನಲ್ಲಿ ಯಾವುದೇ ಪರವಾನಗಿ ಇಲ್ಲದೇ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುತ್ತಾನೆಂತ ಮಾಹಿತಿ ಬಂದಿದ್ದರಿಂದ ಕೂಡಲೇ ಬೆಳಿಗ್ಗೆ 10:00 ಗಂಟೆಯಲ್ಲಿ ಮೇಲ್ಕಂಡ ಸ್ಥಳಕ್ಕೆ ಹೋಗಿ ಪರಿಶೀಲಿಸಲಾಗಿ ಸದರಿ ನಂಜುಡೇಶ್ವರ ಎಂಬುವರು ತನ್ನ ಬಾಬ್ತು ಚಿಲ್ಲರೆ ಅಂಗಡಿಗೆ ಹೊಂದಿಕೊಂಡಂತೆ ಇರುವ ಸಿಮೆಂಟ್ ಶೀಟಿನ ಶೆಡ್ಡಿನಲ್ಲಿ ಮದ್ಯ ಸೇವನೆ ಮಾಡಲು ಸಾರ್ವಜನಿಕರಿಗೆ ಅವಕಾಶ ಮಾಡಿಕೊಟ್ಟಿರುವುದು ಕಂಡುಬಂದಿತು. ನಂತರ ಸದರಿ ಅಸಾಮಿಯ ಹೆಸರು, ವಿಳಾಸದ ಬಗ್ಗೆ ವಿಚಾರ ಮಾಡಲಾಗಿ  ನಂಜುಂಡೇಶ್ವರ ಬಿನ್ ಲೇ||ತಿಪ್ಪೇಸ್ವಾಮಿ, 40 ವರ್ಷ, ಲಿಂಗಾಯ್ತರು, ಚಿಲ್ಲರೆ ಅಂಗಡಿ ವ್ಯಾಪಾರ, ಮಾರುತಿ ನಗರ, ಮಿಡಿಗೇಶಿ ಗ್ರಾಮ, ಮಧುಗಿರಿ ತಾಲ್ಲೂಕು ಎಂದು ತಿಳಿಸಿರುತ್ತಾನೆ. ನಂತರ ನಿನ್ನ ಅಂಗಡಿಯ ಬಳಿ ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡಲು ಸ್ಥಳಾವಕಾಸ ಮಾಡಿಕೊಡಲು ಪರವಾನಗಿ ಇದೆಯೇ ಎಂದು ಸದರಿ ನಂಜುಡೇಶ್ವರನನ್ನು ಕೇಳಲಾಗಿ, ನನ್ನ ಬಾಬ್ತು ಚಿಲ್ಲರೆ ಅಂಗಡಿಯ ಬಳಿ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ನೀಡುವ ಯಾವುದೇ ಪರವಾನಗಿ ಇಲ್ಲವೆಂತ ತಿಳಿಸಿದ್ದರಿಂದ ನಾನು ಠಾಣೆಗೆ ವಾಪಸ್ಸ್ ಆಗಿ ಮುಂದಿನ ಕ್ರಮಕ್ಕಾಗಿ ಈ ನನ್ನ ವರದಿ ನಿವೇದಿಸಿಕೊಂಡಿರುತ್ತೇನೆ ಎಂತ ನೀಡಿದ ವರದಿಯ ಅಂಶವಾಗಿರುತ್ತೆ.

ಮಿಡಿಗೇಶಿ ಪೊಲೀಸ್ ಠಾಣಾ ಮೊ.ಸಂ.94/2017, ಕಲಂ:15(ಎ),32(3), ಕೆ.ಇ. ಆಕ್ಟ್.

ದಿನಾಂಕ:15/10/2017 ರಂದು ಬೆಳಿಗ್ಗೆ 11:20 ಗಂಟೆಗೆ ಠಾಣಾ ಸಿಪಿಸಿ-221 ರವಿಕುಮಾರ್.ಕೆ.ಎನ್. ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಅಂಶವೇನೆಂದರೆ, ಈ ದಿನ ಅಂದರೆ ದಿನಾಂಕ:15/10/2017 ರಂದು ನನಗೆ ಠಾಣಾಧಿಕಾರಿಯವರು ನನಗೆ ಠಾಣಾ ಸರಹದ್ದು ಗ್ರಾಮಗಳ ಗಸ್ತು ಕರ್ತವ್ಯ ನೇಮಿಸಿದ್ದು, ಅದರಂತೆ ನಾನು ಬೆಳಿಗ್ಗೆ 11:00 ಗಂಟೆಯಲ್ಲಿ ನಾನು ಮಿಡಿಗೇಶಿ ಗ್ರಾಮದಲ್ಲಿ ಗಸ್ತು ಮಾಡುತ್ತಿರುವಾಗ್ಗೆ ಮಿಡಿಗೇಶಿ ಗ್ರಾಮದ ಹರಿಜನ ಕಾಲೋನಿಯ ವಾಸಿಯಾದ ನರಸಿಂಹಮೂರ್ತಿ ಬಿನ್ ಲೇ||ಹನುಮಂತಪ್ಪ ಎಂಬುವರು ತನ್ನ ಬಾಬ್ತು ಮನೆಯ ಪಕ್ಕದಲ್ಲಿ ಮನೆಗೆ ಹೊಂದಿಕೊಂಡಂತೆ ಇರುವ ಶೀಟಿನ ರೂಮಿನಲ್ಲಿ ಯಾವುದೇ ಪರವಾನಗಿ ಇಲ್ಲದೇ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುತ್ತಾನೆಂತ ಮಾಹಿತಿ ಬಂದಿದ್ದರಿಂದ ಕೂಡಲೇ ಬೆಳಿಗ್ಗೆ 11:10 ಗಂಟೆಯಲ್ಲಿ ಮೇಲ್ಕಂಡ ಸ್ಥಳಕ್ಕೆ ಹೋಗಿ ಪರಿಶೀಲಿಸಲಾಗಿ ಸದರಿ ನರಸಿಂಹಮೂರ್ತಿ ಎಂಬುವರು ತನ್ನ ಬಾಬ್ತು ಮನೆಯ ಪಕ್ಕದಲ್ಲಿ ಮನೆಗೆ ಹೊಂದಿಕೊಂಡಂತೆ ಇರುವ ಶೀಟಿನ ರೂಮಿನಲ್ಲಿ ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿರುವುದು ಕಂಡುಬಂದಿತು. ನಂತರ ಸದರಿ ಅಸಾಮಿಯ ಹೆಸರು, ವಿಳಾಸದ ಬಗ್ಗೆ ವಿಚಾರ ಮಾಡಲಾಗಿ  ನರಸಿಂಹಮೂರ್ತಿ ಬಿನ್ ಲೇ||ಹನುಮಂತಪ್ಪ, 45 ವರ್ಷ, ಎ.ಕೆ.ಜನಾಂಗ, ಕೂಲಿ ಕೆಲಸ, ಹರಿಜನ ಕಾಲೋನಿ, ಮಿಡಿಗೇಶಿ ಗ್ರಾಮ, ಮಧುಗಿರಿ ತಾಲ್ಲೂಕು ಎಂದು ತಿಳಿಸಿರುತ್ತಾನೆ. ನಂತರ ನಿನ್ನ ಮನೆಯ ಪಕ್ಕದ ರೂಮಿನಲ್ಲಿ ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಡಲು ಪರವಾನಗಿ ಇದೆಯೇ ಎಂದು ಸದರಿ ನರಸಿಂಹಮೂರ್ತಿಯನ್ನು ಕೇಳಲಾಗಿ, ನಮ್ಮ ಮನೆಯ ಪಕ್ಕದ ರೂಮಿನಲ್ಲಿ ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ನೀಡುವ ಯಾವುದೇ ಪರವಾನಗಿ ಇಲ್ಲವೆಂತ ತಿಳಿಸಿದ್ದರಿಂದ ನಾನು ಠಾಣೆಗೆ ವಾಪಸ್ಸ್ ಆಗಿ ಮುಂದಿನ ಕ್ರಮಕ್ಕಾಗಿ ಈ ನನ್ನ ವರದಿ ನಿವೇದಿಸಿಕೊಂಡಿರುತ್ತೇನೆ ಎಂತ ನೀಡಿದ ವರದಿಯ ಅಂಶವಾಗಿರುತ್ತೆ.

ಮಿಡಿಗೇಶಿ ಪೊಲೀಸ್ ಠಾಣಾ ಮೊ.ಸಂ.95/2017, ಕಲಂ:15(ಎ),32(3), ಕೆ.ಇ. ಆಕ್ಟ್.

ದಿನಾಂಕ:15/10/2017 ರಂದು ಮದ್ಯಾಹ್ನ 12:20 ಗಂಟೆಗೆ ಠಾಣಾ ಸಿ.ಹೆಚ್.ಸಿ-217 ಮಹಂತೇಶ್.ಇ. ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಅಂಶವೇನೆಂದರೆ, ಈ ದಿನ ಅಂದರೆ ದಿನಾಂಕ:15/10/2017 ರಂದು ನನಗೆ ಠಾಣಾಧಿಕಾರಿಯವರು ನನಗೆ ಠಾಣಾ ಸರಹದ್ದು ಗ್ರಾಮಗಳ ಗಸ್ತು ಕರ್ತವ್ಯ ನೇಮಿಸಿದ್ದು, ಅದರಂತೆ ನಾನು ಬೆಳಿಗ್ಗೆ 11:45 ಗಂಟೆಯಲ್ಲಿ ನಾನು ನಲ್ಲೇಕಾಮನಹಳ್ಳಿ ಕಡೆ ಗ್ರಾಮದಲ್ಲಿ ಗಸ್ತು ಮಾಡುತ್ತಿರುವಾಗ್ಗೆ ಬಿದರೆಕೆರೆ ಗ್ರಾಮದ ವಾಸಿಯಾದ ಚಿಕ್ಕಓಬಳಪ್ಪ ಬಿನ್ ಪೆನ್ನಪ್ಪ ಎಂಬುವರು ತನ್ನ ಬಾಬ್ತು ಚಿಲ್ಲರೆ ಅಂಗಡಿಗೆ ಹೊಂದಿಕೊಂಡಂತೆ ಇರುವ ಒಂದು ರೂಮಿನಲ್ಲಿ ಯಾವುದೇ ಪರವಾನಗಿ ಇಲ್ಲದೇ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುತ್ತಾನೆಂತ ಮಾಹಿತಿ ಬಂದಿದ್ದರಿಂದ ಕೂಡಲೇ ಮದ್ಯಾಹ್ನ 12:00 ಗಂಟೆಯಲ್ಲಿ ಮೇಲ್ಕಂಡ ಸ್ಥಳಕ್ಕೆ ಹೋಗಿ ಪರಿಶೀಲಿಸಲಾಗಿ ಸದರಿ ಚಿಕ್ಕಓಬಳಪ್ಪ ಎಂಬುವರು ತನ್ನ ಬಾಬ್ತು ಚಿಲ್ಲರೆ ಅಂಗಡಿಗೆ ಹೊಂದಿಕೊಂಡಂತೆ ಇರುವ ಒಂದು ರೂಮಿನಲ್ಲಿ ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿರುವುದು ಕಂಡುಬಂದಿತು. ನಂತರ ಸದರಿ ಅಸಾಮಿಯ ಹೆಸರು, ವಿಳಾಸದ ಬಗ್ಗೆ ವಿಚಾರ ಮಾಡಲಾಗಿ  ಚಿಕ್ಕ ಓಬಳಪ್ಪ ಬಿನ್ ಪೆನ್ನಪ್ಪ, 42 ವರ್ಷ, ಈಡಿಗರು, ಚಿಲ್ಲರೆ ಅಂಗಡಿಯ ವ್ಯಾಪಾರ, ಬಿದರೆಕೆರೆ ಗ್ರಾಮ, ಮಿಡಿಗೇಶಿ ಹೋಬಳಿ, ಮಧುಗಿರಿ ತಾಲ್ಲೂಕು ಎಂದು ತಿಳಿಸಿರುತ್ತಾನೆ. ನಂತರ ನಿನ್ನ ಚಿಲ್ಲರೆ ಅಂಗಡಿಗೆ ಹೊಂದಿಕೊಂಡಂತೆ ಇರುವ ರೂಮಿನಲ್ಲಿ ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಡಲು ಪರವಾನಗಿ ಇದೆಯೇ ಎಂದು ಸದರಿ ಚಿಕ್ಕ ಓಬಳಪ್ಪನನ್ನು ಕೇಳಲಾಗಿ, ನನ್ನ ಬಾಬ್ತು ಚಿಲ್ಲರೆ ಅಂಗಡಿಗೆ ಹೊಂದಿಕೊಂಡಂತೆ ಇರುವ ರೂಮಿನಲ್ಲಿ ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಡಲು ಯಾವುದೇ ಪರವಾನಗಿ ಇಲ್ಲವೆಂತ ತಿಳಿಸಿದ್ದರಿಂದ ನಾನು ಠಾಣೆಗೆ ವಾಪಸ್ಸ್ ಆಗಿ ಮುಂದಿನ ಕ್ರಮಕ್ಕಾಗಿ ಈ ನನ್ನ ವರದಿ ನಿವೇದಿಸಿಕೊಂಡಿರುತ್ತೇನೆ ಎಂತ ನೀಡಿದ ವರದಿಯ ಅಂಶವಾಗಿರುತ್ತೆ.

ಮಿಡಿಗೇಶಿ ಪೊಲೀಸ್ ಠಾಣಾ ಮೊ.ಸಂ.96/2017, ಕಲಂ:15(ಎ),32(3), ಕೆ.ಇ. ಆಕ್ಟ್.

ದಿನಾಂಕ:15/10/2017 ರಂದು ಮದ್ಯಾಹ್ನ 01:00 ಗಂಟೆಗೆ ಠಾಣಾ ಸಿಪಿಸಿ-956 ನಾರಾಯಣ.ವಿ. ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಅಂಶವೇನೆಂದರೆ, ಈ ದಿನ ಅಂದರೆ ದಿನಾಂಕ:15/10/2017 ರಂದು ನನಗೆ ಠಾಣಾಧಿಕಾರಿಯವರು ನನಗೆ ಠಾಣಾ ಸರಹದ್ದು ಗ್ರಾಮಗಳ ಗಸ್ತು ಕರ್ತವ್ಯ ನೇಮಿಸಿದ್ದು, ಅದರಂತೆ ನಾನು ಮದ್ಯಾಹ್ನ 12:30 ಗಂಟೆಯಲ್ಲಿ ನಾನು ಬೇಡತ್ತೂರು, ಶ್ರಾವಣಗುಡಿ ಗ್ರಾಮಗಳ ಕಡೆ ಗಸ್ತು ಮಾಡುತ್ತಿರುವಾಗ್ಗೆ ಬಿದರೆಕೆರೆ ಗ್ರಾಮದ ವಾಸಿಯಾದ ಸಿದ್ದಪ್ಪ ಬಿನ್ ಲೇ||ಗಂಗಪ್ಪ ಎಂಬುವರು ತನ್ನ ಬಾಬ್ತು ಚಿಲ್ಲರೆ ಅಂಗಡಿಗೆ ಹೊಂದಿಕೊಂಡಂತೆ ಇರುವ ಒಂದು ಕೊಠಡಿಯಲ್ಲಿ ಯಾವುದೇ ಪರವಾನಗಿ ಇಲ್ಲದೇ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುತ್ತಾನೆಂತ ಬಾತ್ಮೀ ಬಂದಿದ್ದರಿಂದ ಕೂಡಲೇ ಇದೇ ದಿನ ಮದ್ಯಾಹ್ನ 12:45 ಗಂಟೆಯಲ್ಲಿ ಮೇಲ್ಕಂಡ ಸ್ಥಳಕ್ಕೆ ಹೋಗಿ ಪರಿಶೀಲಿಸಲಾಗಿ ಸದರಿ ಸಿದ್ದಪ್ಪ ಬಿನ್ ಲೇ||ಗಂಗಪ್ಪ ಎಂಬುವರು ತನ್ನ ಬಾಬ್ತು ಚಿಲ್ಲರೆ ಅಂಗಡಿಗೆ ಹೊಂದಿಕೊಂಡಂತೆ ಇರುವ ಒಂದು ಕೊಠಡಿಯಲ್ಲಿ ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿರುವುದು ಕಂಡುಬಂದಿತು. ನಂತರ ಸದರಿ ಅಸಾಮಿಯ ಹೆಸರು, ವಿಳಾಸದ ಬಗ್ಗೆ ವಿಚಾರ ಮಾಡಲಾಗಿ  ಸಿದ್ದಪ್ಪ ಬಿನ್ ಲೇ||ಗಂಗಪ್ಪ, 54 ವರ್ಷ, ಈಡಿಗರು, ಚಿಲ್ಲರೆ ಅಂಗಡಿಯ ವ್ಯಾಪಾರ, ಬಿದರೆಕೆರೆ ಗ್ರಾಮ, ಮಿಡಿಗೇಶಿ ಹೋಬಳಿ, ಮಧುಗಿರಿ ತಾಲ್ಲೂಕು ಎಂದು ತಿಳಿಸಿರುತ್ತಾನೆ. ನಂತರ ನಿನ್ನ ಚಿಲ್ಲರೆ ಅಂಗಡಿಗೆ ಹೊಂದಿಕೊಂಡಂತೆ ಇರುವ ಕೊಠಡಿಯಲ್ಲಿ ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಡಲು ಪರವಾನಗಿ ಇದೆಯೇ ಎಂದು ಸದರಿ ಸಿದ್ದಪ್ಪನನ್ನು ಕೇಳಲಾಗಿ, ನನ್ನ ಬಾಬ್ತು ಚಿಲ್ಲರೆ ಅಂಗಡಿಗೆ ಹೊಂದಿಕೊಂಡಂತೆ ಇರುವ ಕೊಠಡಿಯಲ್ಲಿ ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಡಲು ಯಾವುದೇ ಪರವಾನಗಿ ಇಲ್ಲವೆಂತ ತಿಳಿಸಿದ್ದರಿಂದ ನಾನು ಠಾಣೆಗೆ ವಾಪಸ್ಸ್ ಆಗಿ ಮುಂದಿನ ಕ್ರಮಕ್ಕಾಗಿ ಈ ನನ್ನ ವರದಿ ನಿವೇದಿಸಿಕೊಂಡಿರುತ್ತೇನೆ ಎಂತ ನೀಡಿದ ವರದಿಯ ಅಂಶವಾಗಿರುತ್ತೆ.

ಮಿಡಿಗೇಶಿ ಪೊಲೀಸ್ ಠಾಣಾ ಮೊ.ಸಂ.97/2017, ಕಲಂ:15(ಎ),32(3), ಕೆ.ಇ. ಆಕ್ಟ್.

ದಿನಾಂಕ:15/10/2017 ರಂದು ಮದ್ಯಾಹ್ನ 02:00 ಗಂಟೆಗೆ ಠಾಣಾ ಸಿಪಿಸಿ-476 ವಿನಯ್ ಕುಮಾರ್.ಎಂ.ಎಸ್. ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಅಂಶವೇನೆಂದರೆ, ಈ ದಿನ ಅಂದರೆ ದಿನಾಂಕ:15/10/2017 ರಂದು ನನಗೆ ಠಾಣಾಧಿಕಾರಿಯವರು ನನಗೆ ಠಾಣಾ ಸರಹದ್ದು ಗುಪ್ತ ಮಾಹಿತಿ ಕರ್ತವ್ಯ ನೇಮಿಸಿದ್ದು, ಅದರಂತೆ ನಾನು ಮದ್ಯಾಹ್ನ 01:30 ಗಂಟೆಯಲ್ಲಿ ನಾನು ರೆಡ್ಡಿಹಳ್ಳಿ, ಬೆನಹಕನಹಳ್ಳಿ, ಅಯ್ಯನಹಳ್ಳಿ ಗ್ರಾಮಗಳ ಕಡೆ ಗಸ್ತು ಮಾಡುತ್ತಿರುವಾಗ್ಗೆ ಚಂದ್ರಬಾವಿ ಗ್ರಾಮದ ವಾಸಿಯಾದ ನಾಗೇಂದ್ರಪ್ಪ ಬಿನ್ ಆಂಜಿನಪ್ಪ ಎಂಬುವರು ತನ್ನ ಬಾಬ್ತು ಚಿಲ್ಲರೆ ಅಂಗಡಿಗೆ ಹೊಂದಿಕೊಂಡಂತೆ ಇರುವ ಒಂದು ರೂಮಿನಲ್ಲಿ ಯಾವುದೇ ಪರವಾನಗಿ ಇಲ್ಲದೇ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುತ್ತಾನೆಂತ ಬಾತ್ಮೀ ಬಂದಿದ್ದರಿಂದ ಕೂಡಲೇ ಮದ್ಯಾಹ್ನ 01:45 ಗಂಟೆಯಲ್ಲಿ ಮೇಲ್ಕಂಡ ಸ್ಥಳಕ್ಕೆ ಹೋಗಿ ಪರಿಶೀಲಿಸಲಾಗಿ ಸದರಿ ನಾಗೇಂದ್ರಪ್ಪ ಬಿನ್ ಆಂಜಿನಪ್ಪ ಎಂಬುವರು ತನ್ನ ಬಾಬ್ತು ಚಿಲ್ಲರೆ ಅಂಗಡಿಗೆ ಹೊಂದಿಕೊಂಡಂತೆ ಇರುವ ಒಂದು ರೂಮಿನಲ್ಲಿ ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿರುವುದು ಕಂಡುಬಂದಿತು. ನಂತರ ಸದರಿ ಅಸಾಮಿಯ ಹೆಸರು, ವಿಳಾಸದ ಬಗ್ಗೆ ವಿಚಾರ ಮಾಡಲಾಗಿ ನಾಗೇಂದ್ರಪ್ಪ ಬಿನ್ ಆಂಜಿನಪ್ಪ, 52 ವರ್ಷ, ಈಡಿಗರು, ಚಿಲ್ಲರೆ ಅಂಗಡಿಯ ವ್ಯಾಪಾರ, ಚಂದ್ರಬಾವಿ ಗ್ರಾಮ, ಮಿಡಿಗೇಶಿ ಹೋಬಳಿ, ಮಧುಗಿರಿ ತಾಲ್ಲೂಕು ಎಂದು ತಿಳಿಸಿರುತ್ತಾನೆ. ನಂತರ ನಿನ್ನ ಚಿಲ್ಲರೆ ಅಂಗಡಿಗೆ ಹೊಂದಿಕೊಂಡಂತೆ ಇರುವ ರೂಮಿನಲ್ಲಿ ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಡಲು ಪರವಾನಗಿ ಇದೆಯೇ ಎಂದು ಸದರಿ ನಾಗೇದ್ರಪ್ಪನನ್ನು ಕೇಳಲಾಗಿ, ನನ್ನ ಬಾಬ್ತು ಚಿಲ್ಲರೆ ಅಂಗಡಿಗೆ ಹೊಂದಿಕೊಂಡಂತೆ ಇರುವ ರೂಮಿನಲ್ಲಿ ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಡಲು ಯಾವುದೇ ಪರವಾನಗಿ ಇಲ್ಲವೆಂತ ತಿಳಿಸಿದ್ದರಿಂದ, ನಾನು ಠಾಣೆಗೆ ವಾಪಸ್ಸ್ ಆಗಿ ಮುಂದಿನ ಕ್ರಮಕ್ಕಾಗಿ ಈ ನನ್ನ ವರದಿ ನಿವೇದಿಸಿಕೊಂಡಿರುತ್ತೇನೆ ಎಂತ ನೀಡಿದ ವರದಿಯ ಅಂಶವಾಗಿರುತ್ತೆ.

ಮಿಡಿಗೇಶಿ ಪೊಲೀಸ್ ಠಾಣಾ ಮೊ.ಸಂ.98/2017, ಕಲಂ:15(ಎ),32(3), ಕೆ.ಇ. ಆಕ್ಟ್.

ದಿನಾಂಕ:15/10/2017 ರಂದು ಮದ್ಯಾಹ್ನ 02:45 ಗಂಟೆಗೆ ಠಾಣಾ ಸಿ.ಹೆಚ್.ಸಿ-96 ಬಸವರಾಜು.ಎಂ.ಎಲ್. ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಅಂಶವೇನೆಂದರೆ, ದಿನಾಂಕ:15/10/2017 ರಂದು ನನಗೆ ಠಾಣಾಧಿಕಾರಿಯವರು ನನಗೆ ಠಾಣಾ ಸರಹದ್ದು ಗ್ರಾಮಗಳ ಗಸ್ತು ಕರ್ತವ್ಯ ನೇಮಿಸಿದ್ದು, ಅದರಂತೆ ನಾನು ಮದ್ಯಾಹ್ನ 02:15 ಗಂಟೆಯಲ್ಲಿ ನಾನು ನಾರಪ್ಪನಹಳ್ಳಿ, ಲಕ್ಷ್ಮೀಪುರ ಗ್ರಾಮಗಳ ಕಡೆ ಗಸ್ತು ಮಾಡುತ್ತಿರುವಾಗ್ಗೆ  ಚಂದ್ರಬಾವಿ ಗ್ರಾಮದ ವಾಸಿಯಾದ ಜಬೀ ಬಿನ್ ವಾಜಿದ್ ಎಂಬುವರು ತನ್ನ ಬಾಬ್ತು ಕೋಳಿ ಅಂಗಡಿಗೆ ಹೊಂದಿಕೊಂಡಂತೆ ಇರುವ ಒಂದು ಕೊಠಡಿಯಲ್ಲಿ  ಯಾವುದೇ ಪರವಾನಗಿ ಇಲ್ಲದೇ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುತ್ತಾನೆಂತ ಬಾತ್ಮೀ ಬಂದಿದ್ದರಿಂದ ಕೂಡಲೇ ಮದ್ಯಾಹ್ನ 02:30 ಗಂಟೆಯಲ್ಲಿ ಮೇಲ್ಕಂಡ ಸ್ಥಳಕ್ಕೆ ಹೋಗಿ ಪರಿಶೀಲಿಸಲಾಗಿ ಸದರಿ ಜಬೀ ಬಿನ್ ವಾಜಿದ್ ಎಂಬುವರು ತನ್ನ ಬಾಬ್ತು ಕೋಳಿ ಅಂಗಡಿಗೆ ಹೊಂದಿಕೊಂಡಂತೆ ಇರುವ ಒಂದು ಕೊಠಡಿಯಲ್ಲಿ ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿರುವುದು ಕಂಡುಬಂದಿತು. ನಂತರ ಸದರಿ ಅಸಾಮಿಯ ಹೆಸರು, ವಿಳಾಸದ ಬಗ್ಗೆ ವಿಚಾರ ಮಾಡಲಾಗಿ  ಜಬೀ ಬಿನ್ ವಾಜಿದ್, 32 ವರ್ಷ, ಮುಸ್ಲೀಂ ಜನಾಂಗ, ಕೋಳಿ ಅಂಗಡಿ ವ್ಯಾಪಾರ, ಚಂದ್ರಬಾವಿ ಗ್ರಾಮ, ಮಿಡಿಗೇಶಿ ಹೋಬಳಿ, ಮಧುಗಿರಿ ತಾಲ್ಲೂಕು ಎಂದು ತಿಳಿಸಿರುತ್ತಾನೆ. ನಂತರ ನಿನ್ನ ಕೋಳಿ ಅಂಗಡಿಗೆ ಹೊಂದಿಕೊಂಡಂತೆ ಇರುವ ಕೊಠಡಿಯಲ್ಲಿ ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಡಲು ಪರವಾನಗಿ ಇದೆಯೇ ಎಂದು ಸದರಿ ಜಬೀ ಎಂಬುವನನ್ನು ಕೇಳಲಾಗಿ, ನಮ್ಮ ಬಾಬ್ತು ಕೋಳಿ ಅಂಗಡಿಗೆ ಹೊಂದಿಕೊಂಡಂತೆ ಇರುವ ಕೊಠಡಿಯಲ್ಲಿ ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಡಲು ಯಾವುದೇ ಪರವಾನಗಿ ಇಲ್ಲವೆಂತ ತಿಳಿಸಿದ್ದರಿಂದ, ನಾನು ಠಾಣೆಗೆ ವಾಪಸ್ಸ್ ಆಗಿ ಮುಂದಿನ ಕ್ರಮಕ್ಕಾಗಿ ಈ ನನ್ನ ವರದಿ ನಿವೇದಿಸಿಕೊಂಡಿರುತ್ತೇನೆ ಎಂತ ನೀಡಿದ ವರದಿಯ ಅಂಶವಾಗಿರುತ್ತೆ.

ಜಯನಗರ ಪೊಲೀಸ್ ಠಾಣಾ ಮೊ.ನಂ. 136/2017 ಕಲಂ 323, 324, 504, 506 ರೆ/ವಿ 34 ಐಪಿಸಿ

ದಿನಾಂಕ: 14-10-2017 ರಂದು ಮದ್ಯಾಹ್ನ 1-30 ಗಂಟೆಗೆ ತುಮಕೂರು ಟೌನ್‌, ಬಡ್ಡಿಹಳ್ಳಿ, ಚಿದ್ದಲಿಹನುಮಾಪುರ ವಾಸಿ ಜಯಲಕ್ಷ್ಮೀ ಕೋಂ ಶಿವರಾಜು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ, ನಮ್ಮ ಮನೆಯ ಪಕ್ಕದಲ್ಲಿ ನಮ್ಮ ಭಾವ ಅಂದರೆ ನನ್ನ ಗಂಡನ ಅಣ್ಣನಾದ ಕೃಷ್ಣಪ್ಪ ರವರು ವಾಸವಾಗಿರುತ್ತಾರೆ.  ಇತ್ತೀಚೆಗೆ ಮಳೆ ಜಾಸ್ತಿ ಬಂದು ನಮ್ಮ ಮನೆಯ ಕಡೆ ಇರುವ ಕೃಷ್ಣಪ್ಪ ರವರ ಮನೆಯ  ಕಾಂಪೌಂಡಿನ ಪಾಯವೆಲ್ಲಾ ಕೊರೆದಿದ್ದು, ದಿನಾಂಕ: 12-10-2017 ರಂದು ಸಾಯಂಕಾಲ ಸುಮಾರು 5-30 ಗಂಟೆ ಸಮಯದಲ್ಲಿ ನಾನು ನಮ್ಮ ಮನೆಯ ಮುಂದೆ ಕೆಲಸ ಮಾಡುತ್ತಿದ್ದಾಗ, ಕೃಷ್ಣಪ್ಪ ಹಾಗೂ ಅವರ ಮಗ ರವೀಶ ರವರುಗಳು ಏಕಾಏಕಿ ನಮ್ಮ ಮನೆಯ ಬಳಿಗೆ ಬಂದವರೇ ನಮ್ಮ ಕಾಂಪೌಂಡ್‌‌‌ ಕಡೆಗೆ ನೀನು ಏಕೆ ನೀರು ತಿರುವಿದ್ದೀಯಾ ನಮ್ಮ ಕಾಂಪೌಂಡಿನ ಪಾಯವೆಲ್ಲಾ ಕೊರೆದು ಕಾಂಪೌಂಡ್‌‌ ಗೋಡೆ ಬಿದ್ದು ಹೋಗುತ್ತದೆ ನಿನಗಷ್ಟೂ ಗೊತ್ತಾಗುವುದಿಲ್ಲವೇನೆ ಸೂಳೆ ಮುಂಡೆ, ಆದರಗಿತ್ತಿ ಎಂತಾ ಏಕಾಏಕಿ ಜಗಳ ತೆಗೆದು ಕೃಷ್ಣಪ್ಪನು ಕೈಗಳಿಂದ ನನ್ನ ಬೆನ್ನಿನ ಮೇಲೆ ಹೊಡೆದನು.  ನಂತರ ಕೃಷ್ಣಪ್ಪನ ಮಗ ರವೀಶನು ಕಾಲಿನಿಂದ ನನ್ನ ರೊಂಡಿಗೆ ಒದ್ದನು.  ನಂತರ ಕೃಷ್ಣಪ್ಪನು ನಮ್ಮ ಮನೆಯ ಮುಂದೆಯೇ ಇದ್ದ ಕಬ್ಬಿಣದ ಹಾರೆಕೋಲನ್ನು ತೆಗೆದುಕೊಂಡು ಏಕಾಏಕಿ ನನ್ನ ತಲೆಯ ಬಲಭಾಗಕ್ಕೆ ಹೊಡೆದು ರಕ್ತಗಾಯಪಡಿಸಿದನು. ಅಷ್ಟರಲ್ಲಿ ನಾನು ಅಯ್ಯಯ್ಯೋ ಎಂತಾ ಜೋರಾಗಿ ಕಿರುಚಿಕೊಂಡಾಗ ನನ್ನ ಮಗ ಅರುಣ್‌‌‌ಕುಮಾರ್‌ ಹಾಗೂ ಅಲ್ಲೇ ಸಮೀಪದಲ್ಲಿದ್ದ ರಾಮಣ್ಣನ ಮಗ ನಾಗೇಶ, ರೇವಣಪ್ಪ ರವರ ಹೆಂಡತಿ ಸಾವಿತ್ರಮ್ಮ  ರವರುಗಳು ಬಂದು ಕೃಷ್ಣಪ್ಪನ ಕೈಯ್ಯಲ್ಲಿದ್ದ ಹಾರೆಕೋಲನ್ನು ಕಿತ್ತಿ ಬಿಸಾಕಿ ಜಗಳ ಬಿಡಿಸಿರುತ್ತಾರೆ.  ನಂತರ ನನ್ನ ಮಗ ಅರುಣ್‌‌ಕುಮಾರನು ನನ್ನನ್ನು ಉಪಚರಿಸುತ್ತಿದ್ದಾಗ ಕೃಷ್ಣಪ್ಪ ಹಾಗೂ ಅವರ ಮಗ ರವೀಶ ರವರುಗಳು ನನ್ನನ್ನು ಕುರಿತು ಏ ಮುಂಡೆ ನಿನ್ನನ್ನು ಇಷ್ಟಕ್ಕೇ ಬಿಡುವುದಿಲ್ಲ ಕೊಲೆ ಮಾಡುತ್ತೇವೆಂತಾ ಕೊಲೆ ಬೆದರಿಕೆ ಹಾಕಿ ಹೋಗಿರುತ್ತಾರೆ.  ನಂತರ ಗಾಯಗೊಂಡಿದ್ದ ನನ್ನನ್ನು ನನ್ನ ಮಗ ಅರುಣ್‌‌‌ಕುಮಾರ ಯಾವುದೋ ಒಂದು ಆಟೋದಲ್ಲಿ ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿ ಚಿಕಿತ್ಸೆ  ಕೊಡಿಸಿರುತ್ತಾನೆ. ನನಗೆ ಹೊಡೆದು ಗಲಾಟೆ ಮಾಡಿ ಪ್ರಾಣ ಬೆದರಿಕೆ ಹಾಕಿರುವ ಕೃಷ್ಣಪ್ಪ ಹಾಗೂ ಅವರ ಮಗ ರವೀಶ ರವರುಗಳು ನಮ್ಮ ಸಂಬಂಧಿಕರೇ ಆದ್ದರಿಂದ  ನಾನು ಬೆಂಗಳೂರಿನಲ್ಲಿರುವ ನನ್ನ ಮಕ್ಕಳಾದ ಪದ್ಮಾ ಹಾಗೂ ಶ್ವೇತಾ ರವರುಗಳನ್ನು ಕರೆಸಿಕೊಂಡು ಅವರಿಗೆ ಹಾಗೂ ನಮ್ಮ ಕೆಲವು ಸಂಬಂಧಿಕರಿಗೆ ನಡೆದ ಘಟನೆಯ ಬಗ್ಗೆ  ತಿಳಿಸಿ, ಅವರೊಂದಿಗೆ ಚರ್ಚಿಸಿ ಈ ದಿನ ದಿನಾಂಕ: 14-10-2017 ರಂದು ತಡವಾಗಿ ಪೊಲೀಸ್ ಠಾಣೆಗೆ ಬಂದು ಈ ದೂರು ನೀಡಿರುತ್ತೇನೆ.  ಆದ್ದರಿಂದ ತಾವು ದಯಮಾಡಿ ನನಗೆ ಕೈಗಳಿಂದ ಹಾಗೂ ಕಬ್ಬಿಣದ ಹಾರೆಕೋಲಿನಿಂದ ಹೊಡೆದು ಪ್ರಾಣಬೆದರಿಕೆ ಹಾಕಿರುವ ಮೇಲ್ಕಂಡ ಕೃಷ್ಣಪ್ಪ ಹಾಗೂ ಅವರ ಮಗ ರವೀಶ ರವರ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿರುವ ಪಿರ್ಯಾದು ಅಂಶವಾಗಿರುತ್ತೆ.


Crime Incidents 15-10-17

ಹುಳಿಯಾರು ಪೊಲೀಸ್ ಠಾಣಾ ಮೊ.ನಂ 126/2017, ಕಲಂ 87 ಕೆ.ಪಿ ಆಕ್ಟ್.

ದಿನಾಂಕ:-14-10-2017 ರಂದು ಮದ್ಯಾಹ್ನ 1.30 ಕ್ಕೆ ಪಿ.ಎಸ್.ಐ ರವರು  ಠಾಣೆಗೆ ಹಾಜರಾಗಿ ನೀಡಿದ ಜ್ಞಾಪನದ ಸಾರಾಂಶವೇನೆಂದರೆ, ದಿನಾಂಕ:-14.10.2017 ರಂದು ಬೆಳಗ್ಗೆ 11.30 ಗಂಟೆಗೆ ನಾನು ಹುಳಿಯಾರು ಪೊಲೀಸ್ ಠಾಣೆಯಲ್ಲಿದ್ದಾಗ ಹುಳಿಯಾರು ಠಾಣಾ ಸರಹದ್ದು ಹುಳಿಯಾರು ಹೋಬಳಿ ಕಂಪನಹಳ್ಳಿ ಗ್ರಾಮದ ಪ್ರಾಥಮಿಕ ಸರ್ಕಾರಿ ಶಾಲಾ ಆವರಣದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಯಾರೋ ಆಸಾಮಿಗಳು ಹಣವನ್ನು ಪಣವಾಗಿ ಕಟ್ಟಿಕೊಂಡು ಕಾನೂನು ಬಾಹಿರ ಅಂದರ್ - ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿರುವುದಾಗಿ ಮಾಹಿತಿ ಬಂದಿದ್ದು, ಅಕ್ರಮ ಜೂಜಾಟದ  ಮೇಲೆ   ದಾಳಿ  ಮಾಡುವ  ಬಗ್ಗೆ  ನ್ಯಾಯಾಲಯದಿಂದ  ಅನುಮತಿ ಪಡೆದಿದ್ದು, ಠಾಣೆಗೆ ಪಂಚರನ್ನು ಬರಮಾಡಿಕೊಂಡು ಪಂಚರೊಂದಿಗೆ ಸಿಬ್ಬಂದಿಯವರನ್ನು ಕರೆದುಕೊಂಡು ಇಲಾಖಾ ಜೀಪಿನಲ್ಲಿ ಕಂಪನಹಳ್ಳಿ ಗ್ರಾಮದ ಶಾಲಾ ಕಾಂಪೌಂಡ್ ಬಳಿ ಜೀಪನ್ನು ಮರೆಯಲ್ಲಿ ನಿಲ್ಲಿಸಿ ನೋಡಲಾಗಿ ಪ್ರಾಥಮಿಕ ಸರ್ಕಾರಿ ಶಾಲಾ ಆವರಣದಲ್ಲಿ  ಸಾರ್ವಜನಿಕ ಸ್ಥಳದಲ್ಲಿ 4 ಜನ ಅಸಾಮಿಗಳು ನೆಲದ ಮೇಲೆ ವೃತ್ತಾಕಾರವಾಗಿ ಕುಳಿತುಕೊಂಡು ಮದ್ಯದಲ್ಲಿ ಒಂದು ಪ್ಲಾಸ್ಟಿಕ್ ಚೀಲವನ್ನು ಹಾಕಿಕೊಂಡು  ಹಣವನ್ನು ಪಣಕ್ಕೆ ಕಟ್ಟಿಕೊಂಡು ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ್ – ಬಾಹರ್ ಎಂತ ಹೇಳುತ್ತಾ ಇಸ್ಪೀಟ್ ಜೂಜಾಟವಾಡುತ್ತಿದ್ದು, ಸದರಿಯವರನ್ನು ಸುತ್ತುವರೆದು ದಾಳಿ ಮಾಡಿ ಮೇಲೆ ಹೇಳದಂತೆ ತಿಳಿಸಿದಾಗ್ಯೂ ಈ ನಾಲ್ಕು ಜನರಲ್ಲಿ ಇಬ್ಬರು ಸ್ಥಳದಿಂದ ನಮ್ಮ ಕೈಗೆ ಸಿಗದೆ ಓಡಿ ಹೋದರು, ಉಳಿದ ಅಸಾಮಿಗಳ ಹೆಸರು ಮತ್ತು ವಿಳಾಸವನ್ನು ತಿಳಿಯಲಾಗಿ 1) ಜಾಫರ್ ಬಿನ್ ಖಾಸಿಂ ಸಾಬ್, 35 ವರ್ಷ, ಮುಸ್ಲಿಂ ಜನಾಂಗ, ಕಂಪನಹಳ್ಳಿ,  ಹುಳಿಯಾರು ಹೋಬಳಿ, ಚಿ. ನಾ ಹಳ್ಳಿ ತಾಲ್ಲೂಕು ಎಂತ ತಿಳಿಸಿದ್ದು ಈತನ ಮುಂಭಾಗ 300/- ರೂ ನಗದು ಹಣ ಇರುತ್ತೆ 2) ದಾದಾಪೀರ್ ಬಿನ್ ಶೇಖ್ ಸಮೀವುಲ್ಲಾ, 28 ವರ್ಷ, ಮುಸ್ಲಿಂ ಜನಾಂಗ, ಕಂಪನಹಳ್ಳಿ  ಹುಳಿಯಾರು ಹೋಬಳಿ, ಚಿ. ನಾ ಹಳ್ಳಿ ತಾಲ್ಲೂಕು ಎಂತ ತಿಳಿಸಿದ್ದು ಈತನ ಮುಂಭಾಗ 400/- ರೂ ನಗದು ಹಣ ಇರುತ್ತೆ. ಅಖಾಡದಲ್ಲಿದ್ದ ಹಣವನ್ನು ಎಣಿಸಲಾಗಿ 430/- ರೂ ಇರುತ್ತೆ. ನಂತರ ಓಡಿ ಹೋದ ಆಸಾಮಿಗಳ ಹೆಸರು ವಿಳಾಸ ಕೇಳಲಾಗಿ ಇಬ್ರಾಹಿಂ ಬಿನ್ ಪೀರ್ ಸಾಬ್, ಸುಮಾರು 22 ವರ್ಷ, ಮುಸ್ಲಿಂ ಜನಾಂಗ, ಕಂಪನಹಳ್ಳಿ, ಹುಳಿಯಾರು ಹೋಬಳಿ, ಮತ್ತೊಬ್ಬನ ಹೆಸರು ಅನ್ವರ್ ಸಾಬ್ ಬಿನ್ ಪೀರ್ ಸಾಬ್, ಸುಮಾರು 30 ವರ್ಷ, ಮುಸ್ಲಿಂ ಜನಾಂಗ, ಕಂಪನಹಳ್ಳಿ ಹುಳಿಯಾರು ಹೋಬಳಿ, ಎಂತ ತಿಳಿದು ಬಂದಿದ್ದು, ಸದರಿ ಆಸಾಮಿಗಳನ್ನು ಹಾಗೂ ಕಾನೂನು ಬಾಹಿರ ಇಸ್ಪೀಟ್ ಜೂಜಾಟಕ್ಕೆ ಪಣವಾಗಿ ಕಟ್ಟಿಕೊಂಡಿದ್ದ ಒಟ್ಟು 1130/- ರೂ ನಗದು ಹಣವನ್ನು ಇಸ್ಪೀಟ್ ಜೂಜಾಟಕ್ಕೆ ಬಳಿಸಿದ್ದ 52 ಇಸ್ಪೀಟ್ ಎಲೆಗಳನ್ನು ಹಾಗೂ ನೆಲಕ್ಕೆ ಹಾಸಿಕೊಂಡಿದ್ದ ಒಂದು ಪ್ಲಾಸ್ಟಿಕ್ ಚೀಲವನ್ನು ಪಂಚರ ಸಮಕ್ಷಮ ಮದ್ಯಾಹ್ನ 12:00 ಗಂಟೆಯಿಂದ 1.00 ಗಂಟೆಯವರೆಗೆ ಲ್ಯಾಪ್ ಟಾಪ್ ಮೂಲಕ ಪಂಚನಾಮ ಕ್ರಮ ಜರುಗಿಸಿ ವಶಕ್ಕೆ ಪಡೆದು ಮೇಲ್ಕಂಡ ಆಸಾಮಿಗಳು ಮತ್ತು ಮಾಲಿನೊಂದಿಗೆ ವಾಪಸ್ ಠಾಣೆಗೆ ಬಂದು ಠಾಣಾಧಿಕಾರಿಯವರಿಗೆ ಮುಂದಿನ ಕ್ರಮ ಜರುಗಿಸಲು ಸೂಚಿಸಿ ಜ್ಞಾಪನವನ್ನು ನೀಡಿರುತ್ತೇನೆ.  ಎಂತ ನೀಡಿದ ಜ್ಞಾಪನದಂತೆ ಠಾಣಾ ಮೊ ನಂ-126/2017 ಕಲಂ-87 ಕೆ ಪಿ ಆಕ್ಟ್ ರೀತ್ಯ ಪ್ರಕರಣ ದಾಖಲಿಸಿರುತ್ತೆ.

ಹುಳಿಯಾರು ಪೊಲೀಸ್ ಠಾಣಾ ಮೊ.ನಂ 127/2017, ಕಲಂ 78 (3) ಕೆ.ಪಿ ಆಕ್ಟ್.

ದಿನಾಂಕ:- 14-10-2017 ರಂದು ಮದ್ಯಾಹ್ನ  3.15 ಗಂಟೆಗೆ ಠಾಣಾ ಪಿ.ಎಸ್.ಐ ರವರು ನೀಡಿದ ಜ್ಞಾಪನದ ಅಂಶವೇನೆಂದರೆ, ದಿನಾಂಕ:14-10-2017 ರಂದು ಮದ್ಯಾಹ್ನ 1.40 ಗಂಟೆಗೆ ನಾನು ಹುಳಿಯಾರು ಪೊಲೀಸ್ ಠಾಣೆಯಲ್ಲಿದ್ದಾಗ ಹುಳಿಯಾರು ಟೌನ್ ಆರ್.ಜಿ ಸರ್ಕಲ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟ ನಡೆಯುತ್ತಿದೆ ಎಂತಾ ಖಚಿತ ವರ್ತಮಾನ ಬಂದಿದ್ದು ಠಾಣೆಗೆ ಪಂಚರನ್ನು ಬರಮಾಡಿಕೊಂಡು ನಾನು, ಸಿಬ್ಬಂದಿ ಮತ್ತು ಪಂಚರೊಂದಿಗೆ ಇಲಾಖಾ ಜೀಪಿನಲ್ಲಿ ಆರ್.ಜಿ ಸರ್ಕಲ್ ಬಳಿ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಒಬ್ಬ ಆಸಾಮಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರನ್ನು ಗುಂಪು ಕಟ್ಟಿಸಿಕೊಂಡು 1 ರೂಪಾಯಿಗೆ 70 ರೂಪಾಯಿ ಕೊಡುತ್ತೇನೆ ನಿಮ್ಮ ನಿಮ್ಮ ಅದೃಷ್ಠ ಸಂಖ್ಯೆಗಳನ್ನು ಬರೆಸಿ ಎಂದು ಕೂಗೂತ್ತಾ ಸಾರ್ವಜನಿಕರಿಂದ ಹಣವನ್ನು ಪಣವಾಗಿ ಕಟ್ಟಿಸಿಕೊಂಡು ಮಟ್ಕಾ ನಂಬರ್ ಬರೆಯುತ್ತಿದ್ದವನ ಮೇಲೆ ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ನಡೆಸಿ ಆಸಾಮಿಯನ್ನು ಹಿಡಿದುಕೊಂಡು ಹೆಸರು ವಿಳಾಸ ಕೇಳಲಾಗಿ ಮಂಜು ಬಿನ್ ಅಣ್ಣಪ್ಪ, 48 ವರ್ಷ, ಗಾಣಿಗ ಶೆಟ್ಟರು, ನೂರಾನಿ ಮಸೀದಿ ಹತ್ತಿರ,  ಹುಳಿಯಾರು ಟೌನ್, ಚಿಕ್ಕನಾಯ್ಕನಹಳ್ಳಿ ತಾ// ಎಂತ ತಿಳಿಸಿದ್ದು,  ಆತನ ಬಳಿ ಇದ್ದ 260/- ರೂ ನಗದು ಹಣ, ಮಟ್ಕಾ ನಂಬರ್ ಬರೆದಿರುವ ಒಂದು ಮಟ್ಕಾ ಚೀಟಿ , ಒಂದು ಬಾಲ್ ಪೆನ್ ಅನ್ನು ಪಂಚರ ಸಮಕ್ಷಮ ಸಂಜೆ 02:00 ಗಂಟೆಯಿಂದ 03:00 ಗಂಟೆಯವರೆಗೆ ಪಂಚನಾಮೆ ಬರೆದು ಪಂಚನಾಮೆ ಮೂಲಕ ಆರೋಪಿ ಮತ್ತು ಒಟ್ಟು 260/- ರೂ ನಗದು ಹಣ, ಮಟ್ಕಾ ನಂಬರ್ ಬರೆದಿರುವ ಒಂದು  ಮಟ್ಕಾ ಚೀಟಿ, 1 ಬಾಲ್ ಪೆನ್ನು ಅನ್ನು ಅಮಾನತ್ತುಪಡಿಸಿಕೊಂಡು ವಾಪಸ್‌‌ ಠಾಣೆಗೆ ಬಂದು ಆರೋಪಿಯ ವಿರುದ್ಧ  ಕ್ರಮ ಜರುಗಿಸಲು ಜ್ಞಾಪನವನ್ನು ನೀಡಿರುತ್ತೇನೆ. ಎಂತ ನೀಡಿದ ಜ್ಞಾಪನದ ಅಂಶದಂತೆ ಠಾಣಾ ಮೊ ನಂ-127/2017 ಕಲಂ-78 (3) ಕೆ ಪಿ ಆಕ್ಟ್ ರೀತ್ಯ ಪ್ರಕರಣ ದಾಖಲಿಸಿರುತ್ತೆ.

ಹುಳಿಯಾರು ಪೊಲೀಸ್ ಠಾಣಾ ಮೊ.ನಂ 128/2017, ಕಲಂ 15(ಎ), 32 (3) ಕೆ.ಇ ಆಕ್ಟ್.

ದಿನಾಂಕ:-14-10-2017 ರಂದು ಸಂಜೆ 4.45 ಗಂಟೆಗೆ ಎ.ಎಸ್.ಐ ರಾಜಣ್ಣ ರವರು ಠಾಣೆಗೆ ಬಂದು ನೀಡಿದ ಜ್ಞಾಪನದ ಸಾರಾಂಶವೇನೆಂದರೆ ಹುಳಿಯಾರು ಪೊಲೀಸ್ ಠಾಣೆಯಲ್ಲಿ ಎ.ಎಸ್.ಐ ಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಎಂ.ಆರ್ ರಾಜಣ್ಣ ಆದ ನಾನು ದಿನಾಂಕ:14.10.2017 ರಂದು ಮದ್ಯಾಹ್ನ 02:00 ಗಂಟೆ ಸಮಯದಲ್ಲಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಭಾತ್ಮೀದಾರರು ನನಗೆ ಪೋನ್ ಮಾಡಿ ಹುಳಿಯಾರು ಹೋಬಳಿ ಹೆಚ್ ಮೇಲನಹಳ್ಳಿ ಗ್ರಾಮದಲ್ಲಿರುವ ಸಾರ್ವಜನಿಕರಿಗೆ ಶುದ್ದ ಕುಡಿಯುವ ನೀರು ಕೊಡುವ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ಆಸಾಮಿ ಮದ್ಯದ ಟೆಟ್ರಾ ಪ್ಯಾಕೇಟ್ ಗಳನ್ನು ಇಟ್ಟುಕೊಂಡು ಒಂದು ಟೆಟ್ರಾ ಪ್ಯಾಕೇಟ್ ಅನ್ನು ಓಪನ್ ಮಾಡಿ ಮದ್ಯಪಾನ ಮಾಡುತ್ತಿರುತ್ತಾನೆ ಎಂತ ಮಾಹಿತಿ ಬಂದಿದ್ದು ನಾನು ಮತ್ತು ಬೀಟ್ ಸಿಬ್ಬಂದಿ ಪಿ.ಸಿ 739 ಮಂಜಪ್ಪ ರವರು ಖಾಸಗೀ ಜೀಪಿನಲ್ಲಿ ಸದರಿ ಸ್ಥಳಕ್ಕೆ ಮದ್ಯಾಹ್ನ 02:45 ಗಂಟೆಗೆ ಹೋಗಿ ನೋಡಲಾಗಿ ಒಬ್ಬ ಆಸಾಮಿ ಹೆಚ್ ಮೇಲನಹಳ್ಳಿ ಗ್ರಾಮದಲ್ಲಿರುವ ಸಾರ್ವಜನಿಕರಿಗೆ ಶುದ್ದ ಕುಡಿಯುವ ನೀರು ಕೊಡುವ ಸಾರ್ವಜನಿಕ ಸ್ಥಳದಲ್ಲಿ 1 ಮದ್ಯದ ಪ್ಯಾಕೇಟ್ ಅನ್ನು ಇಟ್ಟುಕೊಂಡು ಮತ್ತೊಂದು ಮದ್ಯದ ಪ್ಯಾಕೇಟ್ ಅನ್ನು ಓಪನ್ ಮಾಡಿ ಒಂದು ಪ್ಲಾಸ್ಟಿಕ್ ಲೋಟದಲ್ಲಿ ಹಾಕಿಕೊಂಡು ಪಕ್ಕದಲ್ಲಿ ಒಂದು ಹಳೆಯ ಪ್ಲಾಸ್ಟಿಕ್ ಜೆಗ್ ಅನ್ನು ಇಟ್ಟುಕೊಂಡು ಮದ್ಯಪಾನ ಮಾಡುತ್ತಿದ್ದು ಆತನನ್ನು ಹಿಡಿದು ಸದರಿ ಸ್ಥಳಕ್ಕೆ ಸ್ಥಳದಲ್ಲಿದ್ದ ಪಂಚರನ್ನು ಬರಮಾಡಿಕೊಂಡು ವಿಚಾರವನ್ನು ತಿಳಿಸಿ ಆತನನ್ನು ವಿಚಾರ ಮಾಡಲಾಗಿ ಆತನ ಹೆಸರು ರಂಗನಾಥ ಬಿನ್ ಕುಶಣ್ಣ, 29 ವರ್ಷ, ಸರ್ಪ ವಕ್ಕಲಿಗರು ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರ, ಹೆಚ್. ಮೇಲನಹಳ್ಳಿ, ಹುಳಿಯಾರು ಹೋಬಳಿ, ಚಿ. ನಾ ಹಳ್ಳಿ ತಾಲ್ಲೂಕು ಎಂತ ತಿಳಿಸಿರುತ್ತಾನೆ ಸ್ಥಳದಲ್ಲಿ ಆತನ ಬಳಿ ಇದ್ದ ಓಲ್ಡ್ ತಾವರಿನ್ ವಿಸ್ಕಿ 180 ಎಂ.ಎಲ್ ಎಂತ ಬರೆದಿರುವ ಮದ್ಯದ ಟೆಟ್ರಾ ಪ್ಯಾಕೇಟ್ ಬೆಲೆ 68.56 ಪೈಸೆ ಎಂತ ಬರೆದಿರುವ ಒಂದು ತುಂಬಿದ ಸೀಲ್ ಓಪನ್ ಮಾಡದ 1 ಟೆಟ್ರಾ ಪ್ಯಾಕೇಟ್ ಮತ್ತು ಮತ್ತೊಂದು ಓಪನ್ ಮಾಡಿದ್ದ ಒಂದು ಓಲ್ಡ್ ತಾವರಿನ್ ವಿಸ್ಕಿ 180 ಎಂ.ಎಲ್ ಎಂತ ಬರೆದಿರುವ ಮದ್ಯದ ಟೆಟ್ರಾ ಪ್ಯಾಕೇಟ್ ಬೆಲೆ 68.56 ಪೈಸೆ ಎಂತ ಬರೆದಿರುವ ಖಾಲಿ ಇರುವ ಒಂದು ಮದ್ಯದ ಟೆಟ್ರಾ ಪ್ಯಾಕೇಟ್ ಹಾಗೂ ಒಂದು ಪ್ಲಾಸ್ಟಿಕ್ ಲೋಟ ಇದ್ದು ಆತನು ಮದ್ಯಪಾನ ಮಾಡುತ್ತಿದ್ದ ಸ್ಥಳವನ್ನು ಪರಿಶೀಲಿಸಲಾಗಿ ಸದರಿ ಸ್ಥಳವು ಹೆಚ್ ಮೇಲನಹಳ್ಳಿ ಗ್ರಾಮದಿಂದ ಗುರುವಾಪುರ ಗ್ರಾಮಕ್ಕೆ ಹೋಗುವ ಟಾರ್ ರಸ್ತೆಯ ಎಡಭಾಗದಲ್ಲಿರುವ ಶುದ್ದ ಕುಡಿಯುವ ನೀರು ಕೊಡುವ ಸಾರ್ವಜನಿಕ ಸ್ಥಳವಾಗಿದ್ದು ಮಣ್ಣಿನಿಂದ ಕೂಡಿದ ಸ್ಥಳವಾಗಿರುತ್ತೆ ಸದರಿ ಸ್ಥಳದಿಂದ ಪೂರ್ವಕ್ಕೆ ಸುಮಾರು 8 ಅಡಿ ದೂರದಲ್ಲಿ ಒಂದು ಅರಳೀಕಟ್ಟೆ ಇರುತ್ತೆ  ಆರೋಪಿಯಿಂದ ಮೇಲ್ಕಂಡ ಮದ್ಯದ 1) ಓಲ್ಡ್ ತಾವರಿನ್ ವಿಸ್ಕಿ 180 ಎಂ.ಎಲ್ ನ ಒಂದು ತುಂಬಿದ ಸೀಲ್ ಓಪನ್ ಮಾಡದ 1 ಟೆಟ್ರಾ ಪ್ಯಾಕೇಟ್ 2) ಓಲ್ಡ್ ತಾವರಿನ್ ವಿಸ್ಕಿ 180 ಎಂ.ಎಲ್ ನ ಒಂದು ಖಾಲಿ ಇರುವ ಒಂದು ಮದ್ಯದ ಟೆಟ್ರಾ ಪ್ಯಾಕೇಟ್ 3) ಒಂದು ಪ್ಲಾಸ್ಟಿಕ್ ಲೋಟ 4) ಒಂದು ಹಳೆಯ ಪ್ಲಾಸ್ಟಿಕ್ ಜೆಗ್ ಹಾಗೂ ಆರೋಪಿಯನ್ನು ಪಂಚರ ಸಮಕ್ಷಮ ಮದ್ಯಾಹ್ನ 3:00 ಗಂಟೆಯಿಂದ ಸಂಜೆ 04:00 ಗಂಟೆಯವರೆಗೆ ಪಂಚನಾಮ ಕ್ರಮವನ್ನು ಕೈಗೊಂಡು ವಶಕ್ಕೆ ಪಡೆದು ಮಾಲು ಮತ್ತು ಆರೋಪಿಯೊಂದಿಗೆ ಠಾಣೆಗೆ ಬಂದು ಮುಂದಿನ ಕ್ರಮ ಕೈಗೊಳ್ಳಲು ಜ್ಞಾಪನವನ್ನು ನೀಡಿರುತ್ತೇನೆ ಎಂತ ನೀಡಿದ ಜ್ಞಾಪನದಂತೆ ಠಾಣಾ ಮೊ ನಂ-128/2017 ಕಲಂ-15 ಎ, 32 (3) ಕೆ ಇ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 78 guests online
Content View Hits : 302226