lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ. ದಿನಾಂಕ : 10-07-2018   ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 09-07-2018 ಕೊಲೆ ಆರೋಪಿಗಳ ಬಂಧನ ******* ದಿನಾಂಕ 04.07.2018 ರಂದು... >>   ಪತ್ರಿಕಾ ಪ್ರಕಟಣೆ ದಿನಾಂಕ : 07-07-2018. ಪೂರ್ವಾನುಮತಿ ಪಡೆಯದೇ ಹೆದ್ದಾರಿ ತಡೆ ನಡೆಸಿ,... >> ದಿನಾಂಕ.03.07.2018. ಪತ್ರಿಕಾ ಪ್ರಕಟಣೆ ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ 11 ಲಕ್ಷ 70 ಸಾವಿರ ಬೆಲೆ ಬಾಳುವ ಚಿನ್ನ-ಬೆಳ್ಳಿ  ಹಾಗೂ ಮೊಬೈಲ್‌‌‌... >>   ಪತ್ರಿಕಾ ಪ್ರಕಟಣೆ. ತುಮಕೂರು ಜಿಲ್ಲಾ ಪೊಲೀಸ್, ತುಮಕೂರು. ಕೋರಾ ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 27.06.2018 ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಸಾರ್ವಜನಿಕರ... >> ಪತ್ರಿಕಾ ಪ್ರಕಟಣೆ ದಿನಾಂಕ:- 23/06/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಖನ್ನ... >> ಪತ್ರಿಕಾ ಪ್ರಕಟಣೆ ದಿನಾಂಕ: 21-06-2018. ಸುಲಿಗೆಕೋರರ ಬಂಧನ: ದಿನಾಂಕ:18-06-2018 ರಂದು... >>   ಪೊಲೀಸ್ ಪ್ರಕಟಣೆ ತುಮಕೂರು ಜಿಲ್ಲಾ ಪೊಲೀಸ್ ಪ್ರಕಟಣೆ   ಆತ್ಮೀಯ ನಾಗರೀಕರಲ್ಲಿ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< October 2017 >
Mo Tu We Th Fr Sa Su
            1
2 3 4 5 6 7 8
9 10 11 12 14 15
16 17 18 19 20 21 22
23 24 25 26 27 28 29
30 31          
Friday, 13 October 2017
Crime Incidents 13-10-17

ಚೇಳೂರು  ಪೊಲೀಸ್   ಠಾಣಾ  ಮೊ. ನಂ 155/2017   ಕಲಂ 379 ಐ.ಪಿ.ಸಿ

ದಿನಾಂಕ; 12/10/2017  ರಂದು  ಸಂಜೆ 5-00  ಗಂಟೆ  ಸಮಯದಲ್ಲಿ  ಪಿರ್ಯಾದಿ  ಜಿ. ಶ್ರೀನಿವಾಸ್ ರವರು  ಠಾಣೆಗೆ ಹಾಜರಾಗಿ  ನೀಡಿದ  ಪಿರ್ಯಾದು ಅಂಶವೇನಂದರೆ, ನಾನು  ಈಗ್ಗೆ  ಸುಮಾರು  08 ವರ್ಷಗಳಿಂದ   ರತ್ತನ್  ಇಂಡಿಯಾ  ಪವರ್ ಲಿಮಿಟೆಡ್  ಕಂಪನಿಯಲ್ಲಿ  ಮ್ಯಾನೇಜರ್  ಆಗಿ  ಕೆಲಸ  ನಿರ್ವಹಿಸುತ್ತಿರುತ್ತೇನೆ.  ಈಗ್ಗೆ  ಸುಮಾರು 01  ವರ್ಷಗಳ   ಹಿಂದೆ   ಬೆಸ್ಕಾಂ ಕಂಪನಿಯವರು  ಸೋಲಾರ್   ಪವರ್  ಅಳವಡಿಸಿ    ಅದರಿಂದ  ಬರುವ  ವಿದ್ಯುತ್  ಅನ್ನು  ನಾವು  ಖರೀದಿಸುತ್ತೇವೆ.   ಎಂದು  ಜಾಹಿರಾತನ್ನು  ನಿಡಿದ್ದು,  ಇದಕ್ಕೆ   ತುಮಕೂರು  ಜಿಲ್ಲೆ,  ಗುಬ್ಬಿ  ತಾಲ್ಲೋಕ್,   ಹಾಗಲವಾಡಿ  ಹೋಬಳಿ  ಜೋಗಿಹಳ್ಳಿ  ಗ್ರಾಮದ  ಸಮೀಪ  ಇರುವ  ತಿಮ್ಮರಾಯ ಸ್ವಾಮಿ   ಕೋಳಿ   ಫಾರಂ . ನ  ಮಾಲೀಕರರತಾದ   ಕುಮಾರ್  ಎನ್.  ರವರು  ಅರ್ಜಿಯನ್ನು  ಹಾಕಿತ್ತು  ಅವರಿಗೆ  ಬೆಸ್ಕಾಂ  ಕಂಪನಿಯಿಂದ  ಸೋಲಾರ್  ಅಳವಡಿಸಲು  ವಿದ್ಯುತ್  ಉತ್ಪಾದನೆ  ಮಾಡಲು   ಅನುಮತಿ   ದೊರೆತ್ತಿರುತ್ತೆ.  ಈ  ಬಗ್ಗೆ  ಕುಮಾರ್  ಮತ್ತು  ಬೆಂಗಳೂರು ಪವರ್  ಟ್ರಾನಿಕ್ಸ್  ಕಂಪನಿಯವರಿಗೆ   ಪರಿಚಯ ವಿದ್ದು,  ಪವರ್ ಟ್ರಾನಿಕ್ಸ್  ಕಂಪನಿಯವರು  ನಮ್ಮ  ರತ್ತನ್  ಇಂಡಿಯಾ  ಪವರ್ ಲಿಮಿಟೆಡ್  ಕಂಪನಿಯವರಿಗೆ  ತುಮಕೂರು  ಜಿಲ್ಲೆ,  ಗುಬ್ಬಿ  ತಾಲ್ಲೋಕ್,   ಹಾಗಲವಾಡಿ  ಹೋಬಳಿ  ಜೋಗಿಹಳ್ಳಿ  ಗ್ರಾಮದ  ಸಮೀಪ  ಇರುವ  ತಿಮ್ಮರಾಯ ಸ್ವಾಮಿ   ಕೋಳಿ   ಫಾರಂಗೆ  ಸೋಲಾರ್  ಉಪಕರಣಗಳನ್ನು  ಅಳವಡಿಸಿ  ಇದರಿಂದ  ಬರುವ  ಆಧಾಯವನ್ನು  ಕುಮಾರ್  ಮತ್ತು  ನಮ್ಮ  ಕಂಪನಿಗೂ  ಹಂಚ್ಚಿಕೊಳ್ಳುವಂತೆ   ಮಾತು ಕತೆಯಾಗಿ  ಅದರಂತೆ   ತಿಮ್ಮರಾಯ ಸ್ವಾಮಿ   (ಫೌಲ್ಟ್ರೀ)  ಕೋಳಿ   ಫಾರಂ ನಲ್ಲಿ  ಒಟ್ಟು  08  ಶೆಡ್‌ಗಳಿದ್ದು,  ಈ 08 ಶೆಡ್ ಗಳಿಗೆ  ನಮ್ಮ  ಕಂಪನಿಯಿಂದ   ಅದಕ್ಕೆ ತಕ್ಕಂತೆ  INVERTER  ( ಇನ್ ವರ್ ಟರ್)  ಗಳನ್ನು  ಮತ್ತು  ಸೋಲಾರ್  ವಿದ್ಯುತ್   ಉತ್ಪಾದನೆ  ಮಾಡುವ  ಇತರೆ ಉಪಕರಣಗಳನ್ನು  ಅಳವಡಿಸಿ  ಹೋಗಿದ್ದು,   ದಿನಾಂಕ;07/09/2017  ರಂದು  ನಮ್ಮ  ಕಂಪನಿಯ  ಗೌರವ್ ದೀಕ್ಷಿತ್   ಮತ್ತು  ರಾಜ್  ಕುಮಾರ್  ರವರು   ನಾವು  ಅಳವಡಿಸಿದ್ದ   ತಿಮ್ಮರಾಯಪ್ಪ   ಪೌಲ್ಟ್ರೀ  ಫಾರಂ  ಹತ್ತಿರ  ಬಂದು  ನೋಡಲಾಗಿ  ಶೆಡ್ ನ  01 ಮತ್ತು 02  ಹಾಗೂ  03  ನೇ  ಶೆಡ್ ಗಳಲ್ಲಿ  ಅಳವಡಿಸಿದ್ದ  1)  03 INVERTER- 50 K W  RS -  9.24.000=00 ರೂ ಮೌಲ್ಯ ಮತ್ತು  ಇದಕ್ಕೆ  ಅಳವಡಿಸಿದ್ದ  ಉಪಕರಣಗಳಾದ  2)  01  M C B -63 A – RS 1200=00   3) 80 M C 4 CONNECTOR – APPX  RS10000=00  4) 01 GOAB – 11K V  ISOLATER  PART  RS 25.000=00 5) EARTHING  CABLE AND  MISCELLANEOUS   ELECTRONIC    ITEMS   RS 50000=00   ಗಳನ್ನು  ಒಟ್ಟು  ಮೌಲ್ಯ 10,10.200.00=00   ಆಗಿದ್ದು,  ಇವುಗಳನ್ನು  ಯಾರೋ  ಕಳ್ಳರು   ಯಾವುದೋ   ವೇಳೆಯಲ್ಲಿ  ಕಳ್ಳತನ  ಮಾಡಿಕೊಂಡು  ಹೋಗಿರುತ್ತಾರೆ.  ಎಂದು  ವಿಚಾರ  ತಿಳಿಸಿದರು.    ನಾನು  ದಿನಾಂಕ; 16/09/2017  ರಂದು   ಬಂದು  ನೋಡಲಾಗಿ  ಮೇಲ್ಕಂಡ  ಉಪಕರಣಗಳು  ಕಳ್ಳತನವಾಗಿರುತ್ತವೆ.   ಈ  ವಿಚಾರವನ್ನು  ನಮ್ಮ   ಕಂಪನಿಯ  ಮುಖ್ಯಸ್ಥರಿಗೆ ಮತ್ತು  ಇತರೆಯವರಿಗೆ   ತಿಳಿಸಿ  ಈ  ದಿನ  ತಡವಾಗಿ  ಬಂದು  ದೂರು  ನೀಡುತ್ತಿರುತ್ತೇನೆ.   ಆದ್ದರಿಂದ  ಕಳ್ಳರನ್ನು  ಪತ್ತೆ  ಮಾಡಿ ಕಳುವಾಗಿರುವ  ಮೇಲ್ಕಂಡ  ಉಪಕರಣಗಳನ್ನು ಪತ್ತೆ  ಮಾಡಿಕೊಡಲು  ಕೋರಿ ಇತ್ಯಾದಿಯಾದ  ಪಿರ್ಯಾದು ಅಂಶ.

 

ಪಟ್ಟನಾಯಕನಹಳ್ಳಿ ಪೊಲೀಸ್ ಠಾಣಾ ಮೊ ನಂ 115/17 ಕಲಂ 323.324.354,448,504,506 ಐಪಿಸಿ

ದಿನಾಂಕ:12-10-2017 ರಂದು  ಮದ್ಯಾಹ್ನ 01:30 ಗಂಟೆಗೆ ಪಿರ್ಯಾದಿ ಸಣ್ಣಹನುಮಕ್ಕೆ ಕೊಂ ದೊಡ್ಡಯ್ಯ, ಬೆಟ್ಟಪನ್ನಹಳ್ಳಿ, ಶಿರಾ ತಾ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ  ದೂರಿನ ಸಾರಾಂಶವೇನೆಂದರೆ, ದಿ:10-10-2017 ರಂದು ರಾತ್ರಿ 08:30 ಚಂಗಾವರ ಗ್ರಾಮದ ಸರ್ವೆ ನಂ 228/1ರ  ಧನದ ಕೊಟ್ಟಿಗೆಗೆ ಹೋಗುವ ದಾರಿ ಮಧ್ಯೆ  ಅಂದರೆ ಬೇವಿನಾಳಮ್ಮ ದೇವಸ್ಥಾನದ  ಹಿಂಬದಿಯಲ್ಲಿ ಪುಟ್ಟಹನುಮಂತಪ್ಪ ರವರನ್ನು ಮಾತನಾಡಿಸಿ ನಂತರ ಪುಟ್ಟಹನುಮಂತಪ್ಪ ರವರ ಮನೆಗೆ ಹೋಗಿ  ಪುಟ್ಟ ಹನುಮಂತಪ್ಪ ಅವರ ಹೆಂಡತಿ ರಂಗಮ್ಮ ರವರ ಬಳಿ  ಕೌಟುಂಬಿಕ ಕಷ್ಠಗಳನ್ನು ಮಾತನಾಡುತ್ತಿರುವಾಗ ಸದರಿ ಗ್ರಾಮದ ವಾಸಿಯಾದ ಮೋಹನ ಬಿನ್ ಗುಡ್ಡಪ್ಪ, ಮತ್ತು ರಾಮಯ್ಯ ಬಿನ್ ಚಿಕ್ಕಕರಿಯಪ್ಪ  ಏಕಾಏಕಿ ಪುಟ್ಟಹನುಮಂತಪ್ಪ ರವರ ಮನೆಯೊಳಗೆ ನುಗ್ಗಿ  ಬಾಗಿಲು ಹಾಕಿಕೊಂಡು  ಪಿರ್ಯಾದಿಯನ್ನು ದೊಣ್ಣೆಯಿಂದ ಹೊಡೆದು ದೈಹಿಕವಾಗಿ ಹಲ್ಲೇ ನಡೆಸಿದ್ದು, ನೋವುಂಟು ಮಾಡಿ  ಅವಾಚ್ಯ ಶಬ್ದಗಳಿಂದ ಬೈಯ್ದು  ಮೋಹನ  ಪಿರ್ಯಾದಿ ಜಾಕೀಟ್ ಗೆ ಕೈ ಹಾಕಿ  ಜಾಕೀಟ್ ಅನ್ನು ಹರಿದು ಹಾಕಿ , ರಾಮಯ್ಯ ಬಿನ್ ಚಿಕ್ಕಕರಿಯಪ್ಪ ಮಚ್ಚು ಕುಡುಗೋಲು  ಹಿಡಿದು   ನಿನ್ನ ವಂಶವನ್ನು ಸರ್ವನಾಶ ಮಾಡುತ್ತೇವೆಂದ ಪ್ರಾಣ  ಭೆದರಿಕೆ ಹಾಕಿದ್ದು  ಹಾಗೂ ಗಲಾಟೆ ಬಿಡಲಸಲು ಬಂದ ಪುಟ್ಟಹನುಮಂತಪ್ಪ ರವರಿಗೆ ಸಹ ದೊಣ್ಣೆಯಿಂದ ಮೋಹನ  ಹೊಡೆದು ನೋವುಂಟು ಮಾಡಿರುತ್ತಾರೆ. ಪಿರ್ಯಾದಿಗು ಮತ್ತು ಆರೋಪಿಗಳ ಮದ್ಯ   ಸಿವಿಲ್ ವ್ಯಾಜ್ಯ ಇದ್ದು ತೊಂದರೆ ಕೊಡುತ್ತಿರುತ್ತಾರೆ ಇವರುಗಳ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂತ ಇತ್ಯಾದಿಯಾಗಿ ನೀಡಿದ ಲಿಖಿತ ದೂರನ್ನು ಪಡೆದು  ಪ್ರಕರಣ ದಾಖಲಿಸಿರುತ್ತೆ.

ಮಿಡಿಗೇಶಿ ಪೊಲೀಸ್ ಠಾಣಾ ಮೊ.ಸಂ.91/2017, ಕಲಂ:324, 504, 506 ಐಪಿಸಿ.

ದಿನಾಂಕ:12/10/2017 ರಂದು ಸಂಜೆ 06:45 ಗಂಟೆಗೆ ಪಿರ್ಯಾದಿ ನರಸಿಂಹರಾಜು ಬಿನ್ ಲೇ||ನರಸಪ್ಪ, 28 ವರ್ಷ, ವಕ್ಕಲಿಗರು, ಕಸಾಪುರ ಗ್ರಾಮ, ಮಿಡಿಗೇಶಿ ಹೋಬಳಿ, ಮಧುಗಿರಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಾನು ನಮ್ಮ ಗ್ರಾಮದಲ್ಲಿ ನನ್ನ ಅತ್ತೆ ಲಕ್ಷ್ಮಮ್ಮನವರ ಮನೆಯಲ್ಲಿ ದಿನಾಂಕ:11/10/2017 ರ ರಾತ್ರಿ ಸುಮಾರು 08:00 ಗಂಟೆ ಸಮಯದಲ್ಲಿ ಊಟ ಮಾಡಿಕೊಂಡು 08:30 ರ ಸುಮಾರಿಗೆ ವಾಪಸ್ಸು ನಮ್ಮ ಮನೆಗೆ ಬರುವಾಗ ದಾರಿಯಲ್ಲಿ ಎ.ಕೆ.ಕಾಲೋನಿಯ ಸಮುದಾಯ ಭವನದ ಹತ್ತಿರ ಇದೇ ಕಸಾಪುರ ಗ್ರಾಮದ ವಾಸಿ ಹರಿಜನ ಜನಾಂಗಕ್ಕೆ ಸೇರಿದ ಕೆ.ಕೆ.ತಿಪ್ಪಣ್ಣನವರ ಮಗ ಮಹೇಶ್ @ ಕಂಚಿ ಎಂಬುವನು ಏನು ಕಾರಣ ಇಲ್ಲದೆ ಏಕಾಏಕಿ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಅಲ್ಲಿಯೇ ಬಿದ್ದಿದ್ದ ಹೆಂಚನ್ನು ತೆಗೆದುಕೊಂಡು ನನ್ನ ತಲೆ ಹಾಗೂ ಎಡ ಕಣ್ಣಿಗೆ ಬಲವಾಗಿ ಹೊಡೆದು ರಕ್ತ ಗಾಯಪಡಿಸಿರುತ್ತಾನೆ. ಆಗ ಅಲ್ಲಿಯೇ ಇದ್ದ ನಮ್ಮ ಗ್ರಾಮದ ವಾಸಿಗಳಾದ ಸಂಗನಬಸಪ್ಪ, ಕೆ.ಎಸ್.ಗೋವಿಂದರಾಜ ಹಾಗೂ ಮಂಡಿನಾಗರಾಜ ಇವರುಗಳು ನಮ್ಮ ಜಗಳ ಬಿಡಿಸಿ ರಕ್ತ ಸ್ರಾವವಾಗುತ್ತಿದ್ದ ನನ್ನನ್ನು ಉಪಚರಿಸಿ ನೀರು ಕುಡಿಸಿ ಯಾವುದೋ ಖಾಸಗಿ ವಾಹನದಲ್ಲಿ ಮಧುಗಿರಿಯ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿರುತ್ತಾರೆ. ಚಿಕಿತ್ಸೆ ಪಡೆದುಕೊಂಡು ತಡವಾಗಿ ಬಂದು ಈ ದೂರು ನೀಡಿರುತ್ತೇನೆ ಮತ್ತು ನಿನೇನಾದರು ಈ ಬಗ್ಗೆ ಪೊಲೀಸದರಿಗೆ ದೂರು ಕೊಟ್ಟರೆ ನಿನಗೆ ಒಂದು ಗತಿ ಕಾಣಿಸಿ ಸಾಯಿಸುತ್ತೇನೆ ಎಂತ ಜೀವ ಬೆದರಿಕೆ ಹಾಕಿರುತ್ತಾನೆ. ಆದ್ದರಿಂದ ಮೇಲ್ಕಾಣಿಸಿದ ಮಹೇಶ @ ಕಂಚಿ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ನೀಡಿದ ಪಿರ್ಯಾದು ಅಂಶವಾಗಿರುತ್ತೆ.

ತಿಪಟೂರು ನಗರ ಪೊಲೀಸ್ ಠಾಣಾ ಮೊ .ನಂ- 164/2017 ಕಲಂ: 279,337 ಐಪಿಸಿ

ದಿನಾಂಕ:12-10-2017 ರಂದು ಬೆಳಗ್ಗೆ 11-45 ಗಂಟೆಗೆ ಪಿರ್ಯಾದಿ  ಅಶೋಕ್ ಕುಮಾರ್ ಬಿನ್ ಶಂಕರಪ್ಪ, 29 ವರ್ಷ, ಕುರುಬರು, ಜಿರಾಯ್ತಿ, ತೋಟದ ಮನೆ, ತಡಸೂರು ತಿಪಟೂರು ತಾಲ್ಲೋಕ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ದಿನಾಂಕ: 10/10/2017 ರಂದು ನಾನು ನಮ್ಮ ಮನೆಯಲ್ಲಿ ಇದ್ದಾಗ ಮಧ್ಯಾಹ್ನ 1-30 ಗಂಟೆಯಲ್ಲಿ ನಮ್ಮೂರಿನ ಸುರೇಶ್ ರವರು ನನಗೆ ಫೊನ್ ಮಾಡಿ, ತಿಪಟೂರು ನಗರದ ಪಾಲಿಟೆಕ್ನಿಕ್ ಕಾಲೇಜು ಮುಂಭಾಗ ನಿಮ್ಮ ಅತ್ತೆ-ಮಾವನವರಿಗೆ ಅಪಘಾತವಾಗಿದ್ದು, ಅವರನ್ನು ಯಾವುದೋ ಆಟೋದಲ್ಲಿ ತಿಪಟೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆ ದಾಖಲಿಸಿರುತ್ತೇವೆ ಬೇಗ ಬಾ ಎಂದು ತಿಳಿಸಿದ್ದು, ನಾನು ತಕ್ಷಣ ಆಸ್ಪತ್ರೆಯ ಬಳಿ ಬಂದು ನೋಡಲಾಗಿ  ನಮ್ಮ ಅತ್ತೆ ಶಿವಗಂಗಮ್ಮ ಮತ್ತು ಮಾವನವರಾದ ಧನಂಜಯ ರವರಿಗೆ  ಅಪಘಾತದಿಂದ ಪೆಟ್ಟಾಗಿದ್ದು ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ನಂತರ ನಮ್ಮ ಮಾವನವರನ್ನು ಅಪಘಾತದ ಬಗ್ಗೆ ವಿಚಾರ ಮಾಡಲಾಗಿ ದಿನಾಂಕ: 10/10/2017 ರಂದು ಬೆಳಿಗ್ಗೆ 11-00 ಗಂಟೆಯ ಸಮಯದಲ್ಲಿ ನಾನು ಕೆ.ಎ-02 ಇ.ಜಿ-8948 ಬಜಾಜ್ ಬಾಕ್ಸರ್ ದ್ವಿಚಕ್ರವಾಹನದಲ್ಲಿ ನಾನು ಮತ್ತು ನಿಮ್ಮ ಅತ್ತೆ ಶಿವಗಂಗಮ್ಮ ಇಬ್ಬರು ಕೆಲಸದ ಮೇಲೆ ತಿಪಟೂರಿಗೆ ಹೊರಟು, ತಿಪಟೂರಿನಲ್ಲಿ ಕೆಲಸ ಮುಗಿಸಿಕೊಂಡು ವಾಪಸ್ ಊರಿಗೆ ಹೋಗಲು ಪಾಲಿಟೆಕ್ನಿಕ್ ಕಾಲೇಜು ಮುಂಭಾಗ, ಹಾಸನ ರಸ್ತೆಯ ಎಡಭಾಗದಲ್ಲಿ ಹೋಗುತ್ತಿರುವಾಗ ಮಧ್ಯಾಹ್ನ ಸುಮಾರು 1-00 ಗಂಟೆಯ ಸಮಯದಲ್ಲಿ ನಮ್ಮ ಹಿಂಭಾಗದಿಂದ ವಾಹನದ ನಂ- ಕೆ.ಎ-44 ಕ್ಯೂ- 676 ನೇ ದ್ವಿಚಕ್ರ ವಾಹನಲ್ಲಿ ಇಬ್ಬರು ಕಾಲೇಜು ಹುಡುಗಿಯುರು ಕುಳಿತುಕೊಂಡು ಬರುತ್ತಿದ್ದು, ದ್ವಿಚಕ್ರ ವಾಹನವನ್ನು ಓಡಿಸುತ್ತಿದ್ದ ವಿಧ್ಯಾರ್ಥಿನಿಯು ಅತಿವೇಗ ಮತ್ತು ಅಜಾಗರೂಕತೆಯಿಂದ ತನ್ನ ಗಾಡಿಯನ್ನು ಓಡಿಸಿಕೊಂಡು ನಮ್ಮ ಗಾಡಿಯನ್ನು ಎಡಗಡೆಯಿಂದ ಓವರ್‌ಟೇಕ್ ಮಾಡಿ ನಂತರ ಸಡನ್ ಆಗಿ ಯಾವುದೇ ಸಂಚಾರಿ ಸೂಚನೆಯನ್ನು ನೀಡದೇ ನಮ್ಮ ಮುಂಭಾಗದಲ್ಲಿ ಬಲಭಾಗಕ್ಕೆ ಕಾಲೇಜು ಕಡೆಗೆ ತಿರುಗಿಸಿಕೊಳ್ಳಲು ನಮ್ಮ ಬೈಕಿಗೆ ಅಡ್ಡ ಬಂದು ಡಿಕ್ಕಿ ಹೊಡೆಸಿ ಅಪಘಾತಪಡಿಸಿದರು. ಈ ಅಪಘಾತದಿಂದ ನಾನು ಮತ್ತು ನಿಮ್ಮ ಅತ್ತೆ  ಶಿವಗಂಗಮ್ಮ ಇಬ್ಬರು ಬೈಕಿನ ಸಮೇತ ರಸ್ತೆಯಲ್ಲಿ ಕೆಳಗೆ ಬಿದ್ದಿದ್ದು, ನನಗೆ ಹಣೆಗೆ, ಬಲಗೈಗೆ, ಮತ್ತು ಬಲಗಾಲು ಮಂಡಿಗೆ ಪೆಟ್ಟುಬಿದ್ದು ರಕ್ತಗಾಯವಾಗಿರುತ್ತೆ. ಮತ್ತು ನಿಮ್ಮ ಅತ್ತೆಗೆ ಹಿಂದಲೆಗೆ, ಬಲಭುಜಕ್ಕೆ, ಬಲಗೈ ಮತ್ತು ಬಲಮಂಡಿಗೆ ಪೆಟ್ಟು ಬಿದ್ದಿದ್ದು ರಕ್ತಗಾಯವಾಗಿರುತ್ತೆ. ನಂತರ ಅಲ್ಲಿದ್ದ ನಮ್ಮೂರಿನ ಸುರೇಶ್ ಹಾಗೂ ಇತರರು ನಮ್ಮನ್ನು ಆಟೋದಲ್ಲಿ ತಿಪಟೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗೆ ಸೇರಿಸಿರುತ್ತಾರೆ. ಅದನ್ನು ಓಡಿಸುತ್ತಿದ್ದವರು ಕಾಲೇಜು ವಿಧ್ಯಾರ್ಥಿನಿಯಾಗಿದ್ದು, ಹೆಸರು ಹಾಗೂ ವಿಳಾಸ ತಿಳಿದುಬಂದಿರುವುದಿಲ್ಲ. ಎಂದು ತಿಳಿಸಿರುತ್ತಾರೆ. ನಮ್ಮ ಅತ್ತೆ ಶಿವಗಂಗಮ್ಮ ನವರನ್ನು ಹೆಚ್ಚಿನ  ಚಿಕಿತ್ಸೆಗಾಗಿ ಹಾಸನ ನಗರದ  ಯೂನಿಟಿ ಆಸ್ಪತ್ರೆಗೆ ದಾಖಲಿಸಿ ಎಂ.ಆರ್.ಐ ಸ್ಕ್ಯಾನ್ ಮಾಡಿಸಿ ನಂತರ ತಿಪಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದು, ನಮ್ಮ ಅತ್ತೆ ಮತ್ತು ಮಾವ ಧನಂಜಯ ಇಬ್ಬರೂ ಒಳರೋಗಿಯಾಗಿ  ಚಿಕಿತ್ಸೆ ಪಡೆಯುತ್ತಿರುತ್ತಾರೆ. ನಾನು ಅವರಿಗೆ ಚಿಕಿತ್ಸೆ ಕೊಡಿಸಿ ನಂತರ ಈ ದಿವಸ ತಡವಾಗಿ ಪೊಲೀಸ್ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು, ನಮ್ಮ ಅತ್ತೆ ಮತ್ತು ಮಾವನವರಿಗೆ ಅಪಘಾತಪಡಿಸಿರುವ ಮೇಲ್ಕಂಡ ಕೆ.ಎ-44 ಕ್ಯೂ- 676 ನೇ ವಾಹನದ ಚಾಲಕರನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

ಮಧುಗಿರಿ ಪೊಲೀಸ್ ಠಾಣಾ CR :189/2017 u/s 279,337 IPC r/w 187 IMV Act.

ಪಿರ್ಯಾದಿ ನಟರಾಜು ಬಿ.ಕೆ ಬಿನ್ ಕಾವಲಪ್ಪ, 34 ವರ್ಷ, ವಕ್ಕಲಿಗರು, ಜಿರಾಯ್ತಿ, ಬಸವನಹಳ್ಳಿ, ಕಸಬಾ ಹೋಬಳಿ, ಮಧುಗಿರಿ ತಾಲ್ಲೂಕುರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ಪಿರ್ಯಾದಿಯ ಚಿಕ್ಕಪ್ಪನವರಾದ ಶಿವಣ್ಣನವರು ದಿನಾಂಕ: 06-10-2017 ರಂದು ಸಂಜೆ 05.15 ಗಂಟೆಯ ಸಮಯದಲ್ಲಿ ತನ್ನ ಬಾಬ್ತು KA-06-EN-7554 ನೇ ದ್ವಿಚಕ್ರವಾಹನದಲ್ಲಿ ಮಧುಗಿರಿ ಸಿವಿಲ್ ಬಸ್ಟಾಂಡ್ ಕಡೆಯಿಂದ ಭಕ್ತರಹಳ್ಳಿ ಕಡೆಗೆ ಮಧುಗಿರಿ ಟೌನ್ ಕೃಷಿ ಇಲಾಖೆಯ ಹತ್ತಿರ ಹೋಗುತ್ತಿದ್ದಾಗ, ಅದೇ ರಸ್ತೆಯಲ್ಲಿ ಶಿರಾ ಕಡೆಯಿಂದ ಬರುತ್ತಿದ್ದ KA-06-D-9637 ನೇ ಟಯೋಟಾ ಎ.ಟಿ.ಎಸ್‌ ಕಾರಿನ ಚಾಲಕ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿಯ ಚಿಕ್ಕಪ್ಪನವರ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದು ಅಪಘಾತ ಮಾಡಿ, ಕಾರನ್ನು ಸ್ಥಳದಲ್ಲಿ ನಿಲ್ಲಿಸದೇ ಹೊರಟು ಹೋಗಿರುತ್ತಾನೆ. ಈ ಅಪಘಾತದಿಂದ ಪಿರ್ಯಾದಿಯ ಚಿಕ್ಕಪ್ಪನವರ ತಲೆಗೆ ಗಾಯಗಳಾಗಿರುತ್ತದೆ. ಗಾಯಾಳು ಶಿವಣ್ಣನವರನ್ನು ಸ್ಥಳೀಯರಾದ ಮಂಜುನಾಥ ಹಾಗೂ ಸಂಜೀವಯ್ಯನವರು ಆಟೋದಲ್ಲಿ ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಚಿಕಿತ್ಸೆಗೆ ದಾಖಲಿಸಿರುತ್ತಾರೆ. ನಂತರ ವೈದ್ಯರ ಸಲಹೆ ಮೇರೆಗೆ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ, ಅಲ್ಲಿಂದ ಎಂ,ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದು, ಪಿರ್ಯಾದಿಯು ಗಾಯಾಳುವನ್ನು ನೋಡಿಕೊಂಡು ಆಸ್ಪತ್ರೆಯಲ್ಲಿದ್ದುದರಿಂದ ಈ ದಿನ ತಡವಾಗಿ ಠಾಣೆಗೆ ಹಾಜರಾಗಿ ಈ ಅಪಘಾತ ಮಾಡಿದ  KA-06-D-9637 ನೇ ಟಯೋಟಾ ಎ.ಟಿ.ಎಸ್‌ ಕಾರು ಮತ್ತು  ಚಾಲಕನ ವಿರುದ್ದ ಕಾನೂನು ರಿತ್ಯಾ ಕ್ರಮ ಜರುಗಿಸಬೇಕೆಂದು ಕೋರುತ್ತೇನೆಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

 


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 78 guests online
Content View Hits : 302226