lowborn Tumakuru District Police | Tumkur Police | Karnataka Police | Tumakuru District Police | Tumkur Police | Karnataka Police

Dr. Divya V. Gopinath IPS,
Superintendent of Police,
Tumakuru Dt., Karnataka.

Message from SP

  : : ಪತ್ರಿಕಾ ಪ್ರಕಟಣೆ : : ::   ದಿನಾಂಕ: 21-09-2017 : : ದಿನಾಂಕ: 20-09-2017 ರಂದು ಕಳವು ಪ್ರಕರಣಗಳಲ್ಲಿ... >> ಜಿಲ್ಲಾ ಪೊಲೀಸ್ ಕಛೇರಿ, ತುಮಕೂರು ಜಿಲ್ಲೆ, ಅಡಿಕೆ ತೋಟದ ಹರಾಜು ಪ್ರಕ್ರಿಯೆ ಪತ್ರಿಕಾ... >> :- ಪತ್ರಿಕಾ ಪ್ರಕಟಣೆ   :- ದಿನಾಂಕ: 19-09-2017.   ದಿನಾಂಕ:19-09-2017 ರಂದು ಬೆಳಿಗಿನ ಜಾವ... >> ::  Press Note  :: Date : 15-09-17   ಹೆಬ್ಬೂರು ಪೊಲೀಸ್ ಠಾಣೆಯ ಮೊ ನಂ -158/2017 ಕಲಂ 379 ಐಪಿಸಿ ಪ್ರಕರಣದ ಸಂಬಂಧ... >> :: ಪತ್ರಿಕಾ ಪ್ರಕಟಣೆ   ::   : ದಿನಾಂಕ 11/09/2017  :   ದಿನಾಂಕ 02/09/2017 ರಂದು ದಂಡಿನಶಿವರ ಪೊಲೀಸ್... >> :: ಪತ್ರಿಕಾ ಪ್ರಕಟಣೆ :: ದಿನಾಂಕ: 29.08.2017 ಕೋರ ಪೊಲೀಸ್ ಠಾಣಾ ಮೊ.ನಂ. 154/2017 ಕಲಂ: 379, 511 ಐಪಿಸಿ ... >> ಪತ್ರಿಕಾ ಪ್ರಕಟಣೆ ತುಮಕೂರು ಜಿಲ್ಲೆಯ ಸಮಸ್ತ ನಾಗರೀಕರಿಗೆ ಗೌರಿ-ಗಣೇಶ ಹಬ್ಬದ... >> ದಿನಾಂಕ 23-08-2017 ರಂದು ತುಮಕೂರು ಜಿಲ್ಲಾ  ಹೆಚ್ಚುವರಿ ಪೊಲೀಸ್‌ ಆಧೀಕ್ಷಕರಾಗಿ ಶೋಭರಾಣೆ ... >> ಪತ್ರಿಕಾ ಪ್ರಕಟಣೆ. 48 ಗಂಟೆಗಳಲ್ಲಿ    ಕೊಲೆ ಆರೋಪಿಯ ಬಂಧನ ******* ದಿನಾಂಕ 08/08/2017 ರಂದು... >> :: ಪತ್ರಿಕಾ ಪ್ರಕಟಣೆ :: ಬೆಂಗಳೂರು ನಗರದ ಸಿಪಿಸಿ/ಮಪಿಸಿ ಹುದ್ದೆಗಳ ನೇಮಕಾತಿ ಸಂಬಂಧ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

Report Archive

< September 2017 >
Mo Tu We Th Fr Sa Su
        1 2 3
4 5 6 7 8 9 10
11 12 13 14 15 16 17
18 19 20 21 22 23 24
25 26 27 28 29 30  
September 2017

Tuesday, 26 September 2017

Crime Incidents 26-09-17

ಹೊಸಬಡಾವಣೆ ಪೊಲೀಸ್ ಠಾಣಾ ಮೊ. ಸಂ. 1145/2017 U/S 323, 353, 504  IPC

ದಿ: 26-09-2017 ರಂದು ಬೆಳಗಿನ ಜಾವ 2-30 ಗಂಟೆಯಲ್ಲಿ ಪಿರ್ಯಾದಿ ಗೊಲ್ಲಾಳಪ್ಪ ಬಿರಾದಾರ (38) ಸಂಚಾರ ನಿರೀಕ್ಷರು, ಕೆ.ಎಸ್.ಆರ್.ಟಿ.ಸಿ. ಶಾಂತಿನಗರ, ಬೆಂಗಳೂರು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯು ಕೇಂದ್ರ ಕಚೇರಿಯ ಆದೇಶದ ಮೇರೆಗೆ ಪಿರ್ಯಾದಿಯು ಬೆಳಗಿನ ಜಾವ ಸುಮಾರು 1-07 ಗಂಟೆ ಯಲ್ಲಿ ತಮ್ಮ ಸಹೋದ್ಯೋಗಿಗಳೊಂದಿಗೆ ತುಮಕೂರು ಜಾಸ್ ಟೋಲ್ ಸಮೀಪ ಕೆ.ಎ. 34 ಎಫ್ 1273 ನೇ ಕೆ.ಎಸ್.ಆರ್.ಟಿ.ಸಿ ಬಸ್‌ ನ್ನು ಹತ್ತಿ ತಪಾಸಣೆ ಮಾಡುತ್ತಿದ್ದು ಸದರಿ ಬಸ್ಸಿನ  ನಿರ್ವಾಹಕರ ಕೆಲವೊಂದು ನ್ಯೂನತೆಗಳು ಕಂಡು ಬಂದ ಮೇರೆಗೆ  ಪಿರ್ಯಾದಿಯು ಅಪರಾಧ ಜ್ಞಾಪನ ಪತ್ರವನ್ನು ತಯಾರಿಸಿ ನಿರ್ವಾಹಕರಾದ ಫಿರ್ದೋಸ್ ಖಾನ್ ರವರಿಗೆ ನೀಡಲು ಹೋದಾಗ ನಿರ್ವಾಹಕರಾದ ಫಿರ್ದೋಸ್ ಖಾನ್ ರವರು ಜ್ಞಾಪನವನ್ನು ಸ್ವೀಕರಿಸದೆ ಉದ್ಧಟತನದಿಂದ ವರ್ತಿಸಿದ್ದಲ್ಲದೆ ಪಿರ್ಯಾದಿ ಮೇಲೆ ಕೈಗಳಿಂದ ಹಲ್ಲೆ ಮಾಡಿ, ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ  ಸರ್ಕಾರಿ ಕರ್ತವ್ಯ ನಿರ್ವಹಿಸಲು ಅಡ್ಡಿ ಪಡಿಸಿದ್ದಲ್ಲದೆ  ಬಸ್ ತಿರುವಿನಲ್ಲಿ  ನಿಧಾನಗತಿಯಲ್ಲಿ ಹೋಗುವಾಗ ಬಸ್ ನಿಂದ ಧುಮುಕಿ ಓಡಿಹೋಗಿರುತ್ತಾರೆ ಆದ್ದರಿಂದ ಫಿರ್ದೋಸ್ ಖಾನ್ ರವರ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ  ಪ್ರಕರಣ ದಾಖಲಿಸಿದೆ.

 

ಜಯನಗರ ಪೊಲೀಸ್ ಠಾಣಾ ಮೊ.ನಂ. 130/2017 ಕಲಂ 454, 457, 380 ಐಪಿಸಿ

ದಿನಾಂಕ: 25-09-2017 ರಂದು ರಾತ್ರಿ 8-15 ಗಂಟೆಗೆ ತುಮಕೂರು ಟೌನ್‌, ಸಪ್ತಗಿರಿ ಬಡಾವಣೆ ವಾಸಿ ಶ್ರೀಮತಿ ಸುಬ್ಬಲಕ್ಷ್ಮಮ್ಮ ಟಿ.ಎನ್ ಕೋಂ ಭಕ್ತವತ್ಸಲಂ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ, ನಾನು  ಬೆಂಗಳೂರಿನ ಚಿಕ್ಕಬೊಮ್ಮಸಂದ್ರದಲ್ಲಿ ನಮ್ಮ ತಾಯಿಯ ಮನೆಯಲ್ಲಿ ಅನಂತಪದ್ಮನಾಭ ವ್ರತ ಪೂಜಾ ಕಾರ್ಯಕ್ರಮ ಇದ್ದರಿಂದ ದಿನಾಂಕ: 22-09-2017 ರಂದು ಬೆಳಿಗ್ಗೆ ಸುಮಾರು 11-00 ಗಂಟೆಗೆ ಮನೆಗೆ ಡೋರ್ ಲಾಕ್ ಹಾಕಿಕೊಂಡು ಮನೆಯ ಮುಂಭಾಗ ಕಬ್ಬಿಣದ ಗ್ರಿಲ್ಸ್‌ ಡೋರ್‌ಗಳಿಗೂ ಸಹ ಲಾಕ್ ಮಾಡಿಕೊಂಡು ಬೆಂಗಳೂರಿಗೆ ಹೋಗಿದ್ದೆನು.  ಅಲ್ಲಿಂದ ಈ ದಿನ ದಿನಾಂಕ: 25-09-2017 ರಂದು ಸಂಜೆ ಸುಮಾರು 4-35 ಗಂಟೆ  ಸಮಯಕ್ಕೆ ನಮ್ಮ ಮನೆಯ ಬಳಿಗೆ ಬಂದಾಗ ಯಾರೋ ಕಳ್ಳರು ನಮ್ಮ ಮನೆಯ ಮುಂಭಾಗ ಮೆಟ್ಟಿಲ ಕೆಳಗೆ ಇದ್ದ ಕಬ್ಬಿಣದ ಗ್ರಿಲ್ ಡೋರಿಗೆ ಹಾಕಿದ್ದ ಲಾಕ್‌ ಅನ್ನು  ಮೀಟಿ ಅಲ್ಲಿಂದ ಹೋಗಿ ಮನೆಯ ಮುಂಭಾಗಿಲಿಗೆ ಹಾಕಿದ್ದ ಡೋರ್ ಲಾಕ್‌ ಅನ್ನು  ಸಹ ಯಾವುದೋ ಆಯುಧದಿಂದ ಮೀಟಿ ಮನೆಯ ಒಳಗೆ ಹೋಗಿ ಕಳುವು ಮಾಡಿರುವುದು ಕಂಡು ಬಂದಿದ್ದು, ನಾನು ಮನೆಯ ಒಳಗೆ ಹೋಗಿ ನೋಡಲಾಗಿ ಮನೆಯ ರೂಮಿನಲ್ಲಿದ್ದ 2 ಗಾಡ್ರೇಜ್‌ ಬೀರುವಿನ ಬಾಗಿಲುಗಳು ತೆರೆದಿದ್ದು, ಒಂದು ಬೀರುವಿನಲ್ಲಿಟ್ಟಿದ್ದ ಸುಮಾರು 40 ಗ್ರಾಂ ತೂಕದ ಚಿನ್ನದ ಲಾಂಗ್ ಚೈನ್‌, 3 ಜೊತೆ ಚಿನ್ನದ ಓಲೆ ಹಾಗೂ ಬೆಳ್ಳಿ ಸಾಮಾನುಗಳಾದ ಒಂದು ಬಾದಾಮಿ ಆಕಾರದ ತಟ್ಟೆ, ಒಂದು ಗುಂಡಾಕಾರದ ತಟ್ಟೆ, 5 ಕುಂಕುಮದ ಬಟ್ಟಲುಗಳು, ಒಂದು ಬೆಳ್ಳಿಯ ಚಂಬು, 1 ಪಂಚಪತ್ರೆ ಉದ್ದರಣೆ, ಒಂದು ಜೊತೆ ಚಿಕ್ಕ ಆರತಿ ದೀಪ ಹಾಗೂ ಚಿಕ್ಕ ತಟ್ಟೆ ಇವುಗಳನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ.  ಕಳುವಾಗಿರುವ ಚಿನ್ನದ ವಡವೆಗಳು ಅಂದಾಜು ಸುಮಾರು 60 ಗ್ರಾಂ ಆಗಿದ್ದು, ಬೆಲೆ ಸುಮಾರು 1,50,000 ರೂ ಆಗಿರುತ್ತೆ.  ಬೆಳ್ಳಿ ಸಾಮಾನುಗಳ ಸುಮಾರು 1 ಕೆ.ಜಿ ಯಷ್ಟಿದ್ದು, ಬೆಲೆ ಸುಮಾರು 35,000 ರೂ ಆಗಿರುತ್ತೆ.  ನಮ್ಮ ಮನೆಗೆ ಯಾರೋ ಕಳ್ಳರು ದಿನಾಂಕ: 22-09-2017 ರಿಂದ ದಿನಾಂಕ: 25-09-2017 ರ ನಡುವೆ ಯಾವಾಗಲೂ ಮನೆಯ ಬಾಗಿಲ ಡೋರ್ ಲಾಕ್‌ ನ್ನು ಮೀಟಿ ಮನೆ ಒಳಗೆ ಪ್ರವೇಶ ಮಾಡಿ ಬೀರುವಿನಲ್ಲಿಟ್ಟಿದ್ದ ಚಿನ್ನದ ವಡವೆಗಳು ಹಾಗೂ ಬೆಳ್ಳಿ ಸಾಮಾನುಗಳನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ. ನಾನು ನಮ್ಮ ಮನೆಯಲ್ಲಿ ಕಳುವು ಆಗಿರುವ ವಿಚಾರವನ್ನು ನನ್ನ ಮಗಳು, ಅಳಿಯ ಹಾಗೂ ಸಂಬಂಧಿಕರಿಗೆ ತಿಳಿಸಿ ನಾನು ಸಹ ನಮ್ಮ ಮನೆಯಲ್ಲಿ ವಿವರವಾಗಿ ಚಕ್ ಮಾಡಿಕೊಂಡು ಈ ದಿನ ದಿನಾಂಕ: 25-09-2017 ರಂದು ರಾತ್ರಿ ಪೊಲೀಸ್ ಠಾಣೆಗೆ ತಡವಾಗಿ ಬಂದು ದೂರು ನೀಡಿರುತ್ತೇನೆ. ತಾವು ದಯಮಾಡಿ ಆರೋಪಿಗಳನ್ನು ಪತ್ತೆ ಮಾಡಿ ನಮ್ಮ ಮನೆಯಲ್ಲಿ ಕಳುವು ಮಾಡಿರುವ ಚಿನ್ನದ ವಡವೆ ಹಾಗೂ ಬೆಳ್ಳಿಯ ಸಾಮಾನುಗಳನ್ನು ಹುಡುಕಿಸಿಕೊಡಲು ಕೋರಿ ಇತ್ಯಾದಿಯಾಗಿ ನೀಡಿರುವ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಹೊಸಬಡಾವಣೆ ಪೊಲೀಸ್ ಠಾಣಾ CR 114/2017 U/S 379  IPC

ದಿನಾಂಕ:-25/09/2017 ರಂದು  ಮದ್ಯಾಹ್ನ 01-00 ಗಂಟೆಗೆ ಪಿರ್ಯಾದಿ ಮನು,ಎ,ಜಿ. ಬಿನ್ ಗುರುರಾಜ್, ಎಆರ್. ವಾಸ  ಎಪಿಎಂಸಿ ಹರೀಶ್ ರವರ ಪ್ರಾವಿಜನ್ ಸ್ಟೋರ್ ಹತ್ತಿರ 4ನೇ ಕ್ರಾಸ್, ವಿದ್ಯಾನಗರ, ತುಮಕೂರು. ರವರು ನೀಡಿದ ದೂರಿನ ಅಂಶವೆನೆಂದರೆ  ಪಿರ್ಯಾದಿಯು  KTM DUKE 200 CC ನೇ  KA 64J 7000 ನೇ ದ್ವಿ ಚಕ್ರ ವಾಹನವನ್ನು ಹೊಂದಿದ್ದು ದಿನಾಂಕ:-06/09/2017 ರಂದು ಮದ್ಯಾಹ್ನ ಸುಮಾರು 01-00 ಗಂಟೆಗೆ ಮೇಲ್ಕಂಡ ಬೈಕ್ ನಲ್ಲಿ ಗಂಗೋತ್ರಿನಗರ 8ನೇ ಕ್ರಾಸ್ ನಲ್ಲಿ ವಾಸವಾಗಿರುವ ಶರಣ್ ರವರ ರೂಂ ಹತ್ತಿರ ಬಂದಿದ್ದು ಬೈಕನ್ನ ಶರಣ್ ರವರ ರೂಂ ಮುಂಭಾಗ ರಸ್ತೆ ಬದಿಯಲ್ಲಿ ನಿಲ್ಲಿಸಿ ರೂನೊಳಗೆ ಹೋಗಿದ್ದು ಮದ್ಯಾಹ್ನ ಸುಮಾರು 03-00 ಗಂಟೆಗೆ ಹೊರಗೆ ಬಂದು ನೋಡಲಾಗಿ ಮೇಲ್ಕಂಡ ದ್ವಿ ಚಕ್ರ ವಾಹನವನ್ನು ಯಾರೋ ಕಳವು ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರು

 



Monday, 25 September 2017

Crime Incidents 25-09-17

ಕೆ.ಬಿ.ಕ್ರಾಸ್ ಪೊಲೀಸ್ ಠಾಣಾ ಮೊ ನಂ 71/2017  ಕಲಂ 279,337,304(ಎ) IPC.

ದಿನಾಂಕ 24/09/2017 ರಂದು ರಾತ್ರಿ 08.15 ಗಂಟೆಗೆ ಪಿರ್ಯಾದಿ ವೆಂಕಟೇಶ್ ಬಿನ್ ಕೃಷ್ಣಪ್ಪ, 40 ವರ್ಷ, ಆದಿ ಕರ್ನಾಟಕ ಜನಾಂಗ, ಗಾರೆಕೆಲಸ, ಮಾರನಗೆರೆ ಕಾಲೋನಿ, ತಿಪಟೂರು ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ನಮ್ಮ ತಂದೆಯವರಿಗೆ ನಾವು ಒಟ್ಟು 06 ಜನ ಮಕ್ಕಳಿದ್ದು ನಾನು 02ನೇಯವನಾಗಿರುತ್ತೇನೆ. ನನ್ನ ತಮ್ಮ ಗಂಗಾಧರ 03ನೇಯವನಾಗಿರುತ್ತಾನೆ. ಈ ದಿನ ಸಂಜೆ 6 ಗಂಟೆಯ ಸಮಯದಲ್ಲಿ ನನ್ನ ಮೊಬೈಲ್ ಗೆ ಯಾರೋ ಸಾರ್ವಜನಿಕರು ಕರೆ ಮಾಡಿ  ನಿಮ್ಮ ತಮ್ಮ ಗಂಗಾಧರ ಮತ್ತು ನಿಮ್ಮೂರಿನ ಕೃಷ್ಣಮೂರ್ತಿ ಎಂಬುವರಿಗೆ ಜಯಂತಿಗ್ರಾಮದ ಹತ್ತಿರ  ಅಫಘಾತವಾಗಿರುತ್ತೆ. ನಿಮ್ಮ ತಮ್ಮ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆಂತ  ವಿಚಾರ ತಿಳಿಸಿದ್ದು ನಾನು ಕೂಡಲೇ ನನ್ನ ಸ್ನೇಹಿತರ ಜೊತೆ ಅಪಘಾತವಾದ ಸ್ಥಳಕ್ಕೆ ಬಂದು ನೋಡಲಾಗಿ  ಈ ಅಪಘಾತ ನಿಜವಾಗಿದ್ದು ನನ್ನ ತಮ್ಮ ಸ್ಥಳದಲ್ಲಿಯೇ ಸಾವನ್ನಪ್ಪಿರುವುದಾಗಿ ತಿಳಿದಿದ್ದು ಆ ನಂತರ ವಿಚಾರ ತಿಳಿಯಲಾಗಿ ನಮ್ಮೂರಿನ ವಾಸಿ ಈರಪ್ಪನವರ ಮಗ ಕೃಷ್ಣಮೂರ್ತಿಯವರ ಜೊತೆಯಲ್ಲಿ ನನ್ನ ತಮ್ಮ ಗಂಗಾಧರ ಚೇಳೂರಿನ ಹತ್ತಿರ ಹಾರನಹಳ್ಳಿಗೆ ಹಬ್ಬಕ್ಕೆಂದು ಹೋಗಲು ಕೃಷ್ಣಮೂರ್ತಿಯವರ ಬಾಬ್ತು KA-44 R-8038 HERO PASSION PRO ಬೈಕಿನಲ್ಲಿ  ತಿಪಟೂರು ಬಿಟ್ಟು ಈ ದಿನ ಸಂಜೆ ಸುಮಾರು 05.45 ಗಂಟೆಯ ಸಮಯದಲ್ಲಿ  ಕೆ.ಬಿ.ಕ್ರಾಸ್ ಪೊಲೀಸ್ ಠಾಣಾ ಸರಹದ್ದಿನ NH-206 ರಸ್ತೆಯ ಜಯಂತಿಗ್ರಾಮದ ಬಳಿ ರಸ್ತೆಯ ಎಡಬದಿಯಲ್ಲಿ ಹೋಗುತ್ತಿರಬೇಕಾದರೆ ಕೆ.ಬಿ. ಕ್ರಾಸ್ ಕಡೆಯಿಂದ ಬಂದ KA-44 5951 ನೇ ನಂಬರಿನ ಮಹೀಂದ್ರ ಬುಲೇರೋ ಗೂಡ್ಸ್ ವಾಹನದ  ಚಾಲಕ ತನ್ನ ವಾಹನವನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಕೃಷ್ಣಮೂರ್ತಿಯವರು ಓಡಿಸುತ್ತಿದ್ದ ಬೈಕಿಗೆ ಢಿಕ್ಕಿ ಹೊಡೆಸಿದ ಪರಿಣಾಮ  ಬೈಕಿನ ಹಿಂಬದಿಯಲ್ಲಿ ಕುಳಿತ್ತಿದ್ದ ನನ್ನ ತಮ್ಮನಿಗೆ  ಪೆಟ್ಟು ಬಿದ್ದು ರಕ್ತ ಗಾಯಗಳಾಗಿ ಸ್ಥಳದಲ್ಲೆ ಮೃತಪಟ್ಟಿದ್ದು ಬೈಕ್ ಚಾಲಕ ಕೃಷ್ಣಮೂರ್ತಿಗೆ ಹಾಗೂ ಮಹೀಂದ್ರ ಬುಲೇರೋ ಗೂಡ್ಸ್ ವಾಹನದಲ್ಲಿದ್ದವರಿಗೆ ಕೂಡ ಪೆಟ್ಟು ಬಿದ್ದು ರಕ್ತ ಗಾಯಗಳಾಗಿದ್ದು ಎರಡೂ ವಾಹನಗಳು ಜಖಂಗೊಂಡಿದ್ದು ಗಾಯಾಳುಗಳನ್ನು 108 ಆಂಬುಲೆನ್ಸ್ ತರಿಸಿ ತಿಪಟೂರು ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದು ನನ್ನ ತಮ್ಮ ಗಂಗಾಧರನ ಶವವನ್ನು ಸಹ ತಿಪಟೂರು ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಪೊಲೀಸರು ಸಾಗಿಸಿರುತ್ತಾರೆಂತ ವಿಷಯ ತಿಳಿದಿದ್ದು ನಂತರ ನಾನು ತಿಪಟೂರು ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಹೋಗಿ ಶವಗಾರದಲ್ಲಿದ್ದ ಶವವನ್ನು ನೋಡಿದ್ದು, ಇದು ನನ್ನ ತಮ್ಮ ಗಂಗಾಧರನ ಶವವಾಗಿರುತ್ತೆ. ನಂತರ ನಾನು ಕೆ.ಬಿ.ಕ್ರಾಸ್ ಪೊಲೀಸ್ ಠಾಣೆಗೆ ವಾಪಾಸ್ ಬಂದು ಈ ಅಪಘಾತಕ್ಕೆ ಕಾರಣಾನಾದ KA-44 5951 ನೇ ಮಹೀಂದ್ರ ಬುಲೇರೋ ಗೂಡ್ಸ್ ವಾಹನದ  ಚಾಲಕನ ಮೇಲೆ ಕಾನೂನಿನ ರೀತ್ಯಾ ಕ್ರಮ ಕೈಗೊಳ್ಳಿ ಎಂಬಿತ್ಯಾದಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

ಮಧುಗಿರಿ ಪೊಲೀಸ್ ಠಾಣಾ ಮೊ.ಸಂ :181/2017 u/s 279,337 IPC

ಪಿರ್ಯಾದಿ ಪಿ.ಹನುಮಂತರಾಯ ಬಿನ್ ಲೇಟ್ ಪಾತಲಿಂಗಪ್ಪ ರೆಡ್ಡಿ ಕಾಲೋನಿ ಪಾವಗಡ ಟೌನ್ ರವರು ಠಾಣೆಗೆ  ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ  ಪಿರ್ಯಾದಿಯ ಮಗಳಾದ ಹೆಚ್ .ಪ್ರತಿಮಾ ರವರು ತುಮಕೂರು ವಿ.ವಿ ಯಲ್ಲಿ ಪ್ರಥಮ ವರ್ಷದ ಬಿಕಾಂ ವ್ಯಾಸಂಗ ಮಾಡುತ್ತಿದ್ದು ,ದಿನಾಂಕ;14-09-2017 ರಂದು ಮದ್ಯಾಹ್ನ ಮಧುಗಿರಿ ತಾಲ್ಲೂಕು ಹುಣಸೆಮರದಹಟ್ಟಿ ಗ್ರಾಮದ ಬಳಿ ನನ್ನ ಮಗಳು ಹೆಚ್. ಪ್ರತಿಮಾಳಿಗೆ ರಸ್ತೆ ಆಪಘಾತವಾಗಿರುತ್ತದೆ ಎಂದು ವಿಚಾರ ತಿಳಿದು ನಂತರ ನನ್ನ ಮಗಳು ಚಿಕಿತ್ಸೆ ಪಡೆಯುತ್ತಿದ್ದ ನಿಮಾನ್ಸ್  ಆಸ್ಪತ್ರೆಗೆ ಹೋಗಿ ಈ ಅಪಘಾತದ ಬಗ್ಗೆ ತಿಳಿಯಲಾಗಿ ನನ್ನ ಸ್ವಂತ ಊರಾದ ಕಡಪಲಕೆರೆ ಗ್ರಾಮದ ಮಂಜುನಾಥ ತಂದೆ ಲೇಟ್ ಮಾರಪ್ಪ ರವರೊಂದಿಗೆ KA-04 HP-2532 ದ್ವಿಚಕ್ರ ವಾಹನದಲ್ಲಿ ಮಡಕಶಿರಾದಿಂದ ತುಮಕೂರಿಗೆ ಹೋಗುತ್ತಿರುವಾಗ್ಗೆ ಮಾರ್ಗ ಮಧ್ಯೆ ಮದ್ಯಾಹ್ನ 01-00 ಗಂಟೆ ಸಮಯದಲ್ಲಿ ಮಧುಗಿರಿ ತಾಲ್ಲೂಕು ಹುಣಸೆಮರದಹಟ್ಟಿ ಗ್ರಾಮದ ಬಳಿ ಸದರಿ KA-04 HP-2532 ದ್ವಿಚಕ್ರವಾಹನವನ್ನು ಚಾಲನೆ ಮಾಡುತ್ತಿದ್ದ ಮಂಜುನಾಥರವರು ಸದರಿ ದ್ವಿಚಕ್ರ ವಾಹನವನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ದ್ವಿಚಕ್ರವಾಹನದ ಮೇಲೆ ನಿಯಂತ್ರಣ ತಪ್ಪಿ ವಾಹನದೊಂದಿಗೆ ರಸ್ತೆ ಮೇಲೆ ಬಿದ್ದ ಕಾರಣ ಸದರಿ ದ್ವಿಚಕ್ರವಾಹನದಲ್ಲಿ ಹಿಂಬದಿ ಕುಳಿತಿದ್ದ ನನ್ನ ಮಗಳು ಪ್ರತಿಮಾ ಹೆಚ್. ರವರ ತಲೆ ಮೈ.ಕೈಗಳಿಗೆ.ಗಾಯಗಳಾಗಿದ್ದು ಮಂಜುನಾಥನಿಗೂ ಗಾಯಗಳಾಗಿದ್ದು ನಂತರ 108 ವಾಹನದಲ್ಲಿ ಗಾಯಾಳುವನ್ನು ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಬಂದು ಚಿಕಿತ್ಸೆ ಪಡೆದು ನಂತರ ಅಂಬುಲೆನ್ಸ್ ನಲ್ಲಿ ತುಮಕೂರು ಜಿಲ್ಲಾ ಆಸ್ಪತ್ರೆಗ ಬಂದು ಚಿಕಿತ್ಸೆ ಪಡೆದು ನಂತರ ಹೆಚ್ಚಿನ ಚಿಕಿತ್ಸೆಗೆ ನಿಮಾನ್ಸ್ ಆಸ್ಪತ್ರೆಗೆ ಬಂದು ಚಿಕಿತ್ಸೆಗೆ ದಾಖಲಾಗಿರುವುದು ತಿಳಿಯಿತು ನನ್ನ ಮಗಳು ಪ್ರತಿಮಾರವರನ್ನು ನಾನು ನೋಡಿ ಕೊಳ್ಳುತ್ತಿದ್ದರಿಂದ ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದು ಆದ್ದರಿಂದ ಈ ಅಪಘಾತ ಮಾಡಿದ KA-04 HP-2532 ದ್ವಿಚಕ್ರ ವಾಹನ ಹಾಗೂ ಇದರ ಚಾಲಕ ಮಂಜುನಾಥರವರ ಮೇಲೆ ಕಾನೂನಿನ ರೀತ್ಯಾಕ್ರಮ ಜರುಗಿಸಬೇಕೆಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

ಹೊನ್ನವಳ್ಳಿಪೊಲೀಸ್ ಠಾಣೆ   ಮೊನಂ 118/2017 ಕಲಂ 279.337. ಐಪಿಸಿ

ದಿನಾಂಕ: 24/09/2017 ರಂದು ಮದ್ಯಾಹ್ನ 3-15  ಗಂಟೆಗೆ ಕೇಸಿನ ಪಿರ್ಯಾದಿದಾರರಾದ ಕೇಶಮೂರ್ತಿ ಬಿನ್‌ ಪುಟ್ಟಲಿಂಗೇಗೌಡ  ಅಂಚೆಕೊಪ್ಪಲು ರವರು ಠಾಣೆಗೆ ಹಾಜರಾಗಿ ನೀಡಿದ ಪಿರ್ಯಾದು ಅಂಶವೇನೆಂದರೆ ದಿನಾಂಕ 23/09/2017 ರಂದು ಮದ್ಯಾಹ್ನ ಸುಮಾರು 3-00 ಗಂಟೆ ಸಮಯದಲ್ಲಿ ನನ್ನ ತಂದೆ ಪುಟ್ಟಲಿಂಗೇಗೌಡರವರು ತಿಪಟೂರಿಗೆ ಹೋಗಿ ಹಗ್ಗ ತರುವುದಾಗಿ ಹೇಳಿ ಹೋಗಿದ್ದು ಸಂಜೆ 4.10 ಸಮಯದಲ್ಲಿ ಶಶಿಧರ ಬಿನ್‌ ಲೇ ಗಂಗೇಗೌಡರವರು 4-00 ಗಂಟೆ ಸಮಯದಲ್ಲಿ  ಫೋನ್‌ ಮಾಡಿ ನಿಮ್ಮ ತಂದೆಗೆ ಬೈಕಿನಿಂದ ಬಿದ್ದು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ಕಲುಹಿಸಿರುವುದಾಗಿ ತಿಳಿಸಿದ್ದು ಎಂದು ಹೇಳಿದ್ದರಿಂದ ನಾನು ತಿಪಟೂರು ಹೇಮಾವತಿ ಆಸ್ಪತ್ರೆಗೆ ಹೋಗಿ ನೋಡಿ ವಿಚಾರ ಮಾಡಿದ್ದು ಅಂಚೆಕೊಪ್ಪಲು ಗೇಟ್‌ ನಿಂದ ತಿಪಟೂರಿಗೆ ಬರಲು ಬಸ್ಸಿಗಾಗಿ ಕಾಯುತ್ತಿರುವಾಗ ಅರಸೀಕೆರೆ ಕಡೆಯಿಂದ ಬರುತ್ತಿದ್ದ ಕೆಎ.04.ಇವೈ 4518 ನೇ ಹೀರೋಹೊಂಡಾ ಸ್ಪ್ಲೆಂಡರ್‌ ಪ್ಲಸ್‌‌‌‌ ದ್ವಿಚಕ್ರ ವಾಹನದಲ್ಲಿ ಹತ್ತಿಕೊಂಡು ಹೋಗುವಾಗ ಸಂಜೆ 4-00 ಸಮಯದಲ್ಲಿ ಸಿದ್ದಾಪುರ ಹತ್ತಿರ ರಸ್ತೆ ತಿರುವಿನಲ್ಲಿ ಬೈಕು ಸವಾರ ಇದ್ದಕ್ಕಿಂದಂತೆ ಬ್ರೇಕ್‌ ಹಾಕಿದ್ದರಿಂಧ ಆಯಾತಪ್ಪಿ ಕೆಳಗೆ ಬಿದ್ದು ಎಡಕುಂಡಿಯ ಹತ್ತಿರ ಪೆಟ್ಟಾಗಿರುತ್ತೆ ನಂತರ   ಯಾವುದೋ ಒಂದು ವಾಹನ ತಿಪಟೂರು  ಆಸ್ಪತ್ರೆಗೆ ಕಳುಹಿಸಿರುತ್ತಾರೆ, ಬೈಕ್‌ ಸವಾರನ ಹೆಸರು ಎಂ.ಬಿ ಸೋಮಶೇಖಯ್ಯ  ಬಿನ್‌ ಲೇ ಬಸವಲಿಂಗಯ್ಯ  ಮಲ್ಲೇನಹಳ್ಳಿ ಎಂದು ಗೊತ್ತಾಗಿರುತ್ತೆ, ಈ ಅಪಘಾತಕ್ಕೆ ಬೈಕ್‌ ಸವಾರನ ಅತೀವೇಗ ಮತ್ತು ಅಜಾಗರೂಕತೆ ಕಾರಣ ಎಂಬುದಾಗಿ ತಿಳಿಸಿದರು .ಈ ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಠಾಣೆಗೆ ತಡವಾಗಿ ಬಂದು ದೂರು ನೀಡಿರುತ್ತೇನೆ. ಆದ್ದರಿಂದ ಈ ಅಪಘಾತಕ್ಕೆ ಕಾರಣವಾದ ಕೆಎ 04.ಇವೈ 4518  ನೇ ಬೈಕ್‌ನ  ಚಾಲಕ ಮೇಲೆ ಕಾನೂನು ಕ್ರಮ ಕೈಗೊಳ್ಳಲು ನೀಡಿನ ದೂರನ್ನು ಪಡೆದು ಪ್ರಕರಣ ದಾಖಲು ಮಾಡಿರುತ್ತದೆ.



Sunday, 24 September 2017

Crime Incidents 24-09-17

ಜಯನಗರ ಪೊಲೀಸ್ ಠಾಣಾ ಮೊ.ನಂ. 129/2017 ಕಲಂ 454, 457, 380 ಐಪಿಸಿ

ದಿನಾಂಕ: 23-09-2017 ರಂದು ಸಂಜೆ 5-30 ಗಂಟೆಗೆ ತುಮಕೂರು ಟೌನ್‌, ಗೋಕುಲ ಬಡಾವಣೆ ವಾಸಿ ಚಿಂತಾಮಣಿಶಿಂಧೆ ಬಿನ್ ಲೇಟ್ ಹುಲಗಪ್ಪಶಿಂಧೆ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ, ದಿನಾಂಕ: 21-09-2017 ರಂದು ಬೆಳಿಗ್ಗೆ ಸುಮಾರು 6-30 ಗಂಟೆಯಲ್ಲಿ  ನಾನು ನನ್ನ ಸಂಸಾರದ ಸಮೇತ ನಮ್ಮ ಮನೆಗೆ ಡೋರ್‌ಲಾಕ್‌‌  ಮಾಡಿಕೊಂಡು ನಮ್ಮ ಸಂಬಂಧಿಕರ ಊರಾದ ಆಂದ್ರಪ್ರದೇಶದ ಅನಂತಪುರಕ್ಕೆ ಹೋಗಿದ್ದೆವು.   ಈ ದಿನ ದಿನಾಂಕ: 23-09-2017 ರಂದು ಬೆಳಿಗ್ಗೆ ಸುಮಾರು 11-00 ಗಂಟೆ ಸಮಯಕ್ಕೆ ವಾಪಾಸ್ಸು ನಮ್ಮ ಮನೆಗೆ ಬಂದಿದ್ದು, ಮನೆಯ ಬಳಿ ನೋಡಲಾಗಿ ನಮ್ಮ ಮನೆಯ ಮುಂಭಾಗಿಲಿಗೆ ಹಾಕಿದ್ದ  ಡೋರ್‌‌ಲಾಕ್‌‌ ಅನ್ನು ಯಾರೋ ಕಳ್ಳರು ಮನೆಯೊಳಗೆ ಮೀಟಿ ತೆಗೆದು ಮನೆಯೊಳಗೆ ಪ್ರವೇಶ ಮಾಡಿ, ಮನೆಯ ರೂಮಿನಲ್ಲಿ ಇಟ್ಟಿದ್ದ ಗಾಡ್ರೇಜ್‌‌ ಬೀರುವಿನ ಬಾಗಿಲನ್ನೂ ಸಹಾ ಮೀಟಿ ತೆಗೆದು ಬೀರುವಿನಲ್ಲಿಟ್ಟಿದ್ದ ಒಂದು ಚಿನ್ನದ ಲಾಂಗ್‌‌ ಚೈನ್, ಒಂದು ಚಿನ್ನದ ನೆಕ್ಲೆಸ್‌, ಎರಡು ಬಳೆಗಳು, ಹಾಗೂ ಮೂರು ಉಂಗುರಗಳನ್ನು ಹಾಗೂ ದೇವರ ಮನೆಯಲ್ಲಿ ಇಟ್ಟಿದ್ದ ಬೆಳ್ಳಿಯ ಒಂದು ಚೆಂಬು, ಬೆಳ್ಳಿಯ ದೀಪಗಳು, ಎರಡು ಕುಂಕುಮದ ಬಟ್ಟಲು ಗಳನ್ನು ಹಾಗೂ ಡ್ರಸಿಂಗ್‌‌ ಟೇಬಲ್‌‌ ಬಳಿ ಇಟ್ಟಿದ್ದ ಸ್ಯಾಮ್‌ಸಾಂಗ್‌‌ ಟಚ್‌‌ ಸ್ಕೀನ್‌‌ ಮೊಬೈಲ್‌  ಹಾಗೂ ಲವಾ ಕಂಪನಿಯ ಕೀ ಪ್ಯಾಡ್‌‌ ಮೊಬೈಲ್‌‌ ಪೋನ್‌‌‌ಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.   ಮೇಲ್ಕಂಡ ಚಿನ್ನದ ವಡವೆಗಳು ಅಂದಾಜು ಸುಮಾರು 100 ಗ್ರಾಂ ಆಗಬಹುದಿದ್ದು, ಬೆಲೆ ಸುಮಾರು 2,50,000 ರೂಪಾಯಿ ಬೆಳ್ಳಿಯ ವಡವೆಗಳು ಸುಮಾರು ಅಂದಾಜು ಒಂದು ಕೆ.ಜಿ. ತೂಕ ಇದ್ದು ಬೆಲೆ ಸುಮಾರು 30,000 ರೂಪಾಯಿ ಮೊಬೈಲ್‌‌ ಪೋನ್‌‌ಗಳು ಎರಡರಿಂದ ಸುಮಾರು 10,000 ಸಾವಿರ ರೂಪಾಯಿಗಳಾಗುತ್ತೆ. ನಮ್ಮ ಮನೆಗೆ ಯಾರೋ ಕಳ್ಳರು ದಿನಾಂಕ: 21-09-2017 ರಿಂದ ದಿನಾಂಕ: 23-09-2017 ರ ನಡುವೆ ಯಾವಾಗಲೋ ನಮ್ಮ ಮನೆಯ ಬಾಗಿಲ ಡೋರ್‌ಲಾಕ್‌‌ ಮೀಟಿ ಮನೆಯೊಳಗೆ ಪ್ರವೇಶ ಮಾಡಿ ಮೇಲ್ಕಂಡ ವಡವೆಗಳನ್ನು ಹಾಗೂ ಮೊಬೈಲ್‌‌ ಪೋನ್‌ಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.   ನಾನು ನಮ್ಮ ಮನೆಯಲ್ಲಿ ಕಳುವಾಗಿರುವ ವಿಚಾರವನ್ನು ನಮ್ಮ ಸಂಬಂಧಿಕರಿಗೆಲ್ಲಾ ತಿಳಿಸಿ ನಾನೂ ಸಹಾ ನಮ್ಮ ಮನೆಯಲ್ಲಿ ಎಲ್ಲಾ ವಿವರವಾಗಿ ಚೆಕ್‌‌ ಮಾಡಿಕೊಂಡು ಈ ದಿನ ದಿನಾಂಕ 23-09-2017 ರಂದು ಸಾಯಂಕಾಲ ಪೊಲೀಸ್ ಠಾಣೆಗೆ ತಡವಾಗಿ ಬಂದು ಈ ದೂರು ನೀಡಿರುತ್ತೇನೆ. ತಾವು ದಯಮಾಡಿ ಆರೋಪಿಗಳನ್ನು ಪತ್ತೆ ಮಾಡಿ ನಮ್ಮ ಮನೆಯಲ್ಲಿ ಕಳವು ಮಾಡಿರುವ ವಡವೆಗಳನ್ನು ಹಾಗೂ ಮೊಬೈಲ್‌‌ ಪೋನ್‌‌ಗಳನ್ನು ಕೊಡಿಸಿಕೊಡಲು ಕೋರಿ ನೀಡಿರುವ ದೂರಿನ ಅಂಶವಾಗಿರುತ್ತೆ.

 

ಮಧುಗಿರಿ ಪೊಲೀಸ್ ಠಾಣಾ ಮೊ.ಸಂ :180/2017 u/s 379 IPC

ಈ ಕೇಸಿನ ಪಿರ್ಯಾದಿ ಶ್ರೀಮತಿ ಮಂಜುಳ ಕೋಂ ಲೇ.ಅಮರನಾಥ, 45 ವರ್ಷ, ಜೆ.ಎಸ್ ಆಸ್ಪತ್ರೆಯಲ್ಲಿ ಸಹಾಯಕಿ, ಸರ್ಕಾರಿ ಆಸ್ಪತ್ರೆಯ ಪಕ್ಕ, ಮಧುಗಿರಿ ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ಪಿರ್ಯಾದಿಯು ಮಧುಗಿರಿ ಟೌನ್ ನ ಜೆ.ಎಸ್ ಆಸ್ಪತ್ರೆಯಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದು, ಪ್ರತಿದಿನ ತನ್ನ ಬಾಬ್ತು KA-06-EK-2545 Hero Plessore Moped ದ್ವಿಚಕ್ರವಾಹನದಲ್ಲಿ ಬಂದು ಹೋಗುತ್ತಿದ್ದು, ಎಂದಿನಂತೆ ದಿನಾಂಕ: 21-09-2017 ರಂದು ಬೆಳಿಗ್ಗೆ 10.30 ಗಂಟೆಗೆ ಕೆಲಸಕ್ಕೆ ಬಂದು ಮದ್ಯಾಹ್ನ ಊಟಕ್ಕೆ ಹೋಗಿ, ಊಟ ಮುಗಿಸಿಕೊಂಡು ಸಂಜೆ 05.30 ಗಂಟೆಗೆ  ತನ್ನ ಬಾಬ್ತು ದ್ವಿಚಕ್ರವಾಹನವನ್ನು ಜೆ.ಎಸ್‌ ಆಸ್ಪತ್ರೆಯ ಮುಂಭಾಗದಲ್ಲಿನ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿ, ಆಸ್ಪತ್ರೆಗೆ ಕೆಲಸಕ್ಕೆ ಹೋಗಿರುತ್ತಾರೆ. ನಂತರ ಕೆಲಸ ಮುಗಿಸಿಕೊಂಡು ರಾತ್ರಿ ಸುಮಾರು 08.15 ಗಂಟೆಗೆ ಮನೆಗೆ ಹೋಗಲು ದ್ವಿಚಕ್ರವಾಹನ ನಿಲ್ಲಿಸಿದ್ದ ಸ್ಥಳಕ್ಕೆ ಬಂದು ನೋಡಲಾಗಿ, ದ್ವಿಚಕ್ರವಾಹನ ನಿಲ್ಲಿಸಿದ್ದ ಸ್ಥಳದಲ್ಲಿರಲಿಲ್ಲ. ಆಗ ಪಿರ್ಯಾದಿಯು  ಗಾಬರಿಗೊಂಡು ಅಕ್ಕ-ಪಕ್ಕ ವಿಚಾರ ಮಾಡಿದ್ದು, ಪತ್ತೆಯಾಗಲಿಲ್ಲ. ಯಾರೋ ಕಳ್ಳರು ಪಿರ್ಯಾದಿ ಬಾಬ್ತು KA-06-EK-2545 Hero Plessore Moped ದ್ವಿಚಕ್ರವಾಹನವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಸದರಿ ದ್ವಿಚಕ್ರವಾಹನದ ಈಗಿನ ಬೆಲೆ ಸುಮಾರು 21,000/- ರೂ ಗಳಾಗುತ್ತದೆ. ಪಿರ್ಯಾದಿಯು ಅಂದಿನಿಂದ ಇಂದಿನವರೆಗೂ ಹುಡುಕಾಡಿದ್ದು, ಪತ್ತೆಯಾಗಿರುವುದಿಲ್ಲ. ಆದ್ದರಿಂದ ಈ ದಿನ ತಡವಾಗಿ ಠಾಣೆಗೆ ಹಾಜರಾಗಿ ಕಳ್ಳತನವಾಗಿರುವ ತನ್ನ ಬಾಬ್ತು KA-06-EK-2545 Hero Plessore Moped ದ್ವಿಚಕ್ರವಾಹನವನ್ನು ಪತ್ತೆ ಮಾಡಿ, ಕಳ್ಳತನ ಮಾಡಿರುವ  ವ್ಯಕ್ತಿಯ ವಿರುದ್ದ ಸೂಕ್ತ ಕಾನೂನು ರಿತ್ಯಾ ಕ್ರಮ ಜರುಗಿಸಬೇಕೆಂದು ತಮ್ಮಲ್ಲಿ ಕೋರುತ್ತೇನೆಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

ತಿಪಟೂರು ನಗರ ಪೊಲೀಸ್ ಠಾಣಾ ಮೊ .ನಂ- 156/2017 ಕಲಂ: 279 ,337 ಐ.ಪಿ.ಸಿ

ದಿನಾಂಕ: 23/09/2017 ರಂದು ಮಧ್ಯಾಹ್ನ 12-30 ಗಂಟೆಗೆ ಪಿರ್ಯಾದಿ ಭರತ್ ರಾಜ್ ಬಿನ್ ಕಾಶಿರಾಮ್ ಪ್ರಸಾದ್, 54 ವರ್ಷ, ವಕೀಲರು, ರಜಪೂತ ಜನಾಂಗ, 2ನೇ ಮುಖ್ಯರಸ್ತೆ, ವಿನಾಯಕನಗರ, ತಿಪಟೂರು ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ, ನಾನು ದಿನಾಂಕ: 08/09/2017 ರಂದು ರಾತ್ರಿ ಸುಮಾರು 11-20 ಗಂಟೆಯ ಸಮಯದಲ್ಲಿ ಕೆ.ಎ-44 ಕ್ಯೂ- 5884 ನೇ ಫ್ಯಾಷನ್ ಪ್ರೋ ದ್ವಿಚಕ್ರ ವಾಹನದಲ್ಲಿ ವಿನಾಯಕನಗರದ ನಮ್ಮ ಮನೆಗೆ ಹೋಗಲು ಎನ್.ಹೆಚ್ -206 ರಸ್ತೆಯಲ್ಲಿ ಗುರುದರ್ಶನ್ ಹೋಟೆಲ್ ಮುಂಭಾಗ ಯು ಟರ್ನ್ ನಲ್ಲಿ ತಿರುಗಿಸಿಕೊಂಡು ಹೋಗುತ್ತಿರುವಾಗ ಅದೇ ಸಮಯಕ್ಕೆ ಬಸ್ ನಿಲ್ದಾಣದ ಕಡೆಯಿಂದ ಕೆ.ಎ-44 ಎಸ್-7766 ನೇ ಫ್ಯಾಷಿಯೋ ದ್ವಿಚಕ್ರ ವಾಹನದ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ನಾನು ಚಾಲನೆ ಮಾಡುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ನಾನು ದ್ವಿಚಕ್ರ ವಾಹನದ ಸಮೇತ ಬಲಮಗ್ಗುಲಿಗೆ ಬಿದ್ದು, ನನಗೆ ಬಲಗೈ ರಟ್ಟೆಗೆ, ಎಡಗೈ ಮೊಣಕೈಗೆ, ಎಡಗಾಲು ಮಂಡಿಗೆ ಮತ್ತು ಎಡಪಕ್ಕೆಗೆ ಪೆಟ್ಟುಗಳು ಬಿದ್ದಿರುತ್ತೆ. ಆಗ ಅಲ್ಲೆ ಹೋಟೆಲ್ ಬಳಿ ಇದ್ದ ಈ ಅಪಘಾತವನ್ನು ನೋಡಿದ ಶಂಕರಮೂರ್ತಿ & ಅಶೋಕ ಎಂಬುವರು ಸ್ಥಳಕ್ಕೆ ಬಂದು ನನ್ನನ್ನು ಚಿಕಿತ್ಸೆಗಾಗಿ ತಿಪಟೂರು ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು ನಂತರ ಅಲ್ಲಿನ ವೈದ್ಯರ ಸಲಹೆಯಂತೆ ತಿಪಟೂರು ಹೇಮಾವತಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿ ಈ ದಿನ ತಡವಾಗಿ ಬಂದು ಅಪಘಾತ ಮಾಡಿರುವ ಮೇಲ್ಕಂಡ ಕೆ.ಎ-44 ಎಸ್-7766 ನೇ ಫ್ಯಾಷಿಯೋ ದ್ವಿಚಕ್ರ ವಾಹನದ ಚಾಲಕನಾದ ನೊಣವಿನಕೆರೆಯ ಮನೋಹರ ಎಂಬುವರ .ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ನೀಡಿರುವ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.



Saturday, 23 September 2017

Crime Incidents 23-09-17

ಹೊಸಬಡಾವಣೆ ಪೊಲೀಸ್ ಠಾಣಾ ಮೊ .ನಂ 113/2017 U/S 341, 307  IPC

ದಿನಾಂಕ : 22-09-2017 ರಂದು ಮಧ್ಯಾಹ್ನ ಸುಮಾರು 3-30 ಗಂಟೆ ಯಲ್ಲಿ ಪಿರ್ಯಾದಿ ಮಂಜುನಾಥ್. ಟಿ.ಎಸ್. ಸಿಪಿಸಿ 648 ರವರು ಠಾಣೆಯಲ್ಲಿ ನೀಡಿದ ದೂರಿನ ಸಾರಾಂಶವೇನೆಂದರೆ  ಆರೋಪಿ ದೇವರಾಜು ಬಿನ್ ಪ್ರತಾಪ್, 25 ವರ್ಷ, ಲಿಂಗಾಯಿತ ಜನಾಂಗ, ಪಾನಿಪುರಿ ಅಂಗಡಿ ವ್ಯಾಪಾರ, ಎಸ್.ಐ.ಟಿ ಮುಖ್ಯ ರಸ್ತೆ, ತುಮಕೂರು  ಹಾಗೂ ಗಾಯಾಳು ಶ್ರೀಮತಿ ಅಂಜಲಿ ಕೋಂ ಮಂಜುನಾಥ್  (24 )ಖಾಸಾ ಅಣ್ಣ ತಂಗಿಯಾಗಿದ್ದು ಅಂಜಲಿ ರವರು ಮದುವೆಯಾದ ನಂತರವೂ ಸಹಾ ಪಿರ್ಯಾದಿಗೆ ನಿವೇಶನ ಕೊಡಿಸು, ಸೋಫಾಸೆಟ್ ಕೊಡಿಸು ಎಂದು ಪದೇ ಪದೇ ತವರಿಗೆ ಬಂದು ಹಿಂಸೆ ನೀಡುತ್ತಿದ್ದು ದಿ: 22-09-17 ರಂದು ಸಹಾ ಗಂಡನ ಮನೆಯಿಂದ ತುಮಕೂರಿಗೆ ಬಂದು ಸಂಜೆ ಹಾಗೂ ಈ ದಿವಸ ಮಧ್ಯಾಹ್ನ 1-30 ಗಂಟೆ ಸಮಯದಲ್ಲಿಯೂ ಸಹಾ ಮನೆಯಲ್ಲಿ  ಗಲಾಟೆ ಮಾಡಿದ್ದರಿಂದ ಆರೋಪಿಯು ಇವಳನ್ನು ಹೀಗೇ ಬಿಟ್ಟರೆ ಜಗಳ ಮಾಡಿ ಮರ್ಯಾದೆ ತೆಗೆಯುತ್ತಾಳೆಂದು ಯೋಚಿಸಿ ಮನೆಯಲ್ಲಿಟ್ಟಿದ್ದ ಚಾಕುವನ್ನು ತೆಗೆದುಕೊಂಡು ಅಂಜಲಿರವರನ್ನು ಹಿಂಬಾಲಿಸಿಕೊಂಡು ಎಸ್.ಎಸ್. ಪುರಂ 15ನೇ ಕ್ರಾಸ್‌ ನಲ್ಲಿ ಅಂಜಲಿ ರವರು ನಡೆದುಕೊಂಡು ಬರುತ್ತಿರುವಾಗ್ಗೆ ಆಕೆಯನ್ನು ಅಡ್ಡಗಟ್ಟಿ  ಚಾಕುವಿನಿಂದ ಕುತ್ತಿಗೆ ಕುಯ್ದಿದ್ದು ಅದೇ ಸಮಯದಲ್ಲಿ ಅದೇ ರಸ್ತೆಯಲ್ಲಿ ಹೋಗುತ್ತಿದ್ದ ಪಿರ್ಯಾದಿಯು ಘಟನೆಯನ್ನು ನೋಡಿ ಆರೋಪಿಯನ್ನು ಸ್ಥಳಿಯರ ಸಹಾಯದಿಂದ ಹಿಡಿದು ಠಾಣೆಗೆ ಕಳುಹಿಸಿ ಗಾಯಾಳುವನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದೆ

ತಿಪಟೂರು ನಗರ ಪೊಲೀಸ್ ಠಾಣಾ ಮೊ .ನಂ- 155/2017 ಕಲಂ: 78 ಕ್ಲಾಸ್ (3) ಕೆ.ಪಿ.ಆಕ್ಟ್.

ದಿನಾಂಕ : 22/09/2017 ರಂದು ಮಧ್ಯಾಹ್ನ 4-00 ಗಂಟೆಗೆ ಮಾನ್ಯ ಪಿ.ಐ ಸಾಹೇಬರವರು ಠಾಣಾ ಪಿ.ಸಿ-968 ಮಂಜುನಾಥ್  ರವರ ಮೂಲಕ ಕಳುಹಿಸಿದ ಜ್ಞಾಪನದ ಅಂಶವೇನೆಂದರೆ, ದಿನಾಂಕ: 22/09/2017 ರಂದು ಮಧ್ಯಾಹ್ನ 2-00 ಗಂಟೆ ಸಮಯದಲ್ಲಿ ನಾನು ಠಾಣೆಯಲ್ಲಿದ್ದಾಗ ನಮ್ಮ ಗಾಂಧಿನಗರದ ಉಪಠಾಣೆಯ ಹೆಚ್.ಸಿ-32 ಉಸ್ಮಾನ್ ಸಾಬ್ ಹಾಗೂ ಬೀಟ್ ಸಿಬ್ಬಂದಿಯಾದ ಪಿ.ಸಿ-968 ಮಂಜುನಾಥ್ ರವರಿಂದ ತಿಪಟೂರು ಟೌನ್ ಗಾಂದಿನಗರದ ಗುರಪ್ಪನಕಟ್ಟೆ 10ನೇ ಕ್ರಾಸ್ ಬಳಿ ರಂಗಪುರ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ಪ್ಯಾರೇಜಾನ್ ಬಿನ್ ಸಯ್ಯದ್ ಕರೀಂ ರವರು ಸಾರ್ವಜನಿಕರನ್ನು ಸೇರಿಸಿಕೊಂಡು ಅವರಿಂದ ಹಣ ಪಡೆದು, ಮಟ್ಕಾ ಜೂಜಾಟ ಆಡುತ್ತಿದ್ದಾರೆಂತ ಖಚಿತ ವರ್ತಮಾನ ಬಂದಿದ್ದು, ಈತನನ್ನು ದಾಳಿ ಮಾಡಿ ಬಂದಿಸಲು ಘನ ನ್ಯಾಯಾಲಯದಿಂದ ಅನುಮತಿ ಪಡೆದು, ಹೆಚ್.ಸಿ-32 ಉಸ್ಮಾನ್ ಸಾಬ್, ಪಿ.ಸಿ-968 ಮಂಜುನಾಥ್, ಪಿ.ಸಿ-210 ಅಶೋಕ್  ಮತ್ತು ಪಂಚರುಗಳೊಂದಿಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಪ್ಯಾರೇಜಾನ್ ರವರು ಮೇಲ್ಕಂಡ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಂದ ಹಣವನ್ನು ಪಡೆದು ಅವರು ಹೇಳುತ್ತಿದ್ದ ನಂಬರ್ ಗಳನ್ನು ಒಂದು ಚೀಟಿಗೆ ಪೆನ್ನಿನಿಂದ ಬರೆದುಕೊಳ್ಳುತ್ತಾ 1 ರೂಗೆ 80 ರೂ ಕೊಡುತ್ತೇನೆಂದು ಮಟಕಾ ಜೂಜಾಟವಾಡುತ್ತಿದ್ದವನನ್ನು ಸಿಬ್ಬಂದಿಯರೊಂದಿಗೆ ಹಿಡಿದು, ಹೆಸರು ವಿಳಾಸ ಕೇಳಲಾಗಿ ಪ್ಯಾರೇಜಾನ್ ಬಿನ್ ಸಯ್ಯದ್ ಕರೀಂ, 60 ವರ್ಷ, ಮುಸ್ಲೀಂ ಜನಾಂಗ, ಅಮಾಲಿ ಕೆಲಸ, 10ನೇ ಕ್ರಾಸ್  ಗುರಪ್ಪನಕಟ್ಟೆ, ಗಾಂಧಿನಗರ, ತಿಪಟೂರು ಟೌನ್ ಎಂತ ತಿಳಿಸಿದ್ದು, ಈತನನ್ನು ಮಧ್ಯಾಹ್ನ 03-30  ಗಂಟೆಗೆ ವಶಕ್ಕೆ ಪಡೆದಿರುತ್ತೆ. ಹಾಗೂ ಈತನ ಬಳಿ  2230/- ರೂ  ನಗದು ಹಣ,  ಮಟ್ಕಾ ನಂಬರ್ ಬರೆದಿರುವ ಒಂದು ಚೀಟಿ ಮತ್ತು ಒಂದು ಲೆಡ್ ಪೆನ್ನು ಇದ್ದು, ಈತನ ವಿರುದ್ದ ಪ್ರಕರಣ ದಾಖಲಿಸಿ ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ಜ್ಞಾಪನವನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಬಡವನಹಳ್ಳಿ ಪೊಲೀಸ್ ಠಾಣಾ ಮೊ ನಂ 79/2017 - ಕಲಂ 279-337 ಐಪಿಸಿ ರೆ/ವಿ  134(ಎ)(ಬಿ)  ಐ ಎಂ ವಿ ಆಕ್ಟ್‌. .

ದಿನಾಂಕ:-22/09/2017 ರಂದು ಮದ್ಯಾಹ್ನ 3-30 ಗಂಟೆಗೆ ಪಿರ್ಯಾದಿ ಶ್ರೀನಿವಾಸ ಬಿನ್ ತಿಮ್ಮಣ್ಣ ಕಂಬತನಹಳ್ಳಿ   ಗ್ರಾಮ, ಮಧುಗಿರಿ ತಾ ಎಂಬುವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ನಾನು ದೊಡ್ಡೇರಿ ಹೋಬಳಿ ಮಾದೇನಹಳ್ಳಿ ಗ್ರಾಮದ ಸಿದ್ದಗಂಗಯ್ಯರವರ ಮನೆಯ ಮೇಲ್ಛಾವಣೆಯ ಕಾಂಕ್ರೀಟ್ ಕೆಲಸ ಒಪ್ಪಿಕೊಂಡಿದ್ದು,  ದಿನಾಂಕ:02/08/2017 ರಂದು ಕೆಲಸ ಮಾಡಲು ನಾನು ಮತ್ತು ನನ್ನ ಸ್ನೇಹಿತ ಬಾಲು ಕೆಲಸಕ್ಕೆ ಬಂದು ಕೆಲಸ ಮುಗಿಸಿಕೊಂಡು ಸಂಜೆ 5-00 ಗಂಟೆಯಲ್ಲಿ ಶೌಚಕ್ಕೆಂದು ನಾನು ಮತ್ತು ನನ್ನ ಸ್ನೇಹಿತ ಬಾಲು ರಸ್ತೆ ಎಡಬದಿಯಲ್ಲಿ ನಡೆದುಕೊಂಡು ಹೋಗುವಾಗ, ದಂಡಿನದಿಬ್ಬದ ಕಡೆಯಿಂದ ಬರುತ್ತಿದ್ದ ಟ್ರಾಕ್ಟರ್ ಅನ್ನು ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿದ್ದರಿಂದ ಟ್ರಾಕ್ಟರ್ ನನ್ನ ಎರಡು ಕಾಲುಗಳ ಮೇಲೆ ಹಾಗೂ ಬಾಲುವಿನ ಮೇಲೆ ಟ್ರಾಕ್ಟರ್ ಹರಿದಿದ್ದರಿಂದ, ನನ್ನ ಎರಡು ಕಾಲುಗಳು ಮುರಿದು ಬಾಲುವಿನ ಸೊಂಟ ಮುರಿದಿರುತ್ತೆ. ಅಲ್ಲಿ ಕೆಲಸಕ್ಕೆ ಬಂದಿದ್ದವರು ಯಾವುದೋ ಒಂದು ವಾಹನದಲ್ಲಿ ನಮ್ಮನ್ನು ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿನ ಹೇಮಾವತಿ ಆಸ್ಪತ್ರೆಗೆ ಸೇರಿಸಿದ್ದು ನಾನು ಚಿಕಿತ್ಸೆ ಪಡೆದಿರುತ್ತೇನೆ ನಮಗೆ ಅಪಘಾತ ಪಡಿಸಿದ ಟ್ರಾಕ್ಟರ್ ನಂ ಕೆಎ-64 ಟಿ-1520 ಆಗಿದ್ದು, ಚಾಲಕನ  ಹೆಸರು ಸರೇಶ ಬಿನ್ ರಂಗನಾಥ ನಾಗೇನಹಳ್ಳಿ ಹಾಲಿ ವಾಸ ಬಡವನಹಳ್ಳಿ ಎಂತಾ ತಿಳಿದು ಬಂದಿರುತ್ತೆ. ನಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಈ ದಿನ  ತಡವಾಗಿ ಬಂದು ದೂರು ನೀಡುತ್ತಿದ್ದು ಟ್ರಾಕ್ಟರ್ ಚಾಲಕನ ಮೇಲೆ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಅಂಶವಾಗಿರುತ್ತೆ.

ವೈ ಎನ್  ಹೊಸಕೋಟೆ  ಪೊಲೀಸ್ ಠಾಣಾ ಮೊ. ನಂ-  89/2017   ಕಲಂ: 323.324.504.506 RW 34 IPC

ದಿನಾಂಕ:22/09/2017 ರಂದು ಮದ್ಯಾಹ್ನ 12:00 ಗಂಟೆಗೆ ಪಿರ್ಯಾದಿ ನಾಗಭೂಷಣ ಬಿನ್ ಲೇ|| ಪೆದ್ದಾಯಪ್ಪ 40 ವರ್ಷ ಹೆಚ್.ಪಿ ಪೆಟ್ರೋಲ್ ಬಂಕ್ ಮುಂಭಾಗ ಚಿಲ್ಲರೆ ಅಂಗಡಿ ವ್ಯಾಪಾರ ವೈ.ಎನ್ ಹೊಸಕೋಟೆ ಟೌನ್ ಪಾವಗಡ ತಾ|| ರವರು ನೀಡಿದ ಲಿಖೀತ ದೂರಿನ ಅಂಶವನೆಂದರೆ ನಾನು ನಮ್ಮೂರಿನ ಹೆಚ್.ಪಿ ಪೆಟ್ರೋಲ್ ಬಂಕ್ ಮುಂಭಾಗ ನಮ್ಮ ತಂದೆಗೆ ಸೇರಿದ ಪಿತ್ರಾರ್ಜಿತ ಜಮೀನು ಇದ್ದು ಸದರಿ ಜಮೀನಿನಲ್ಲಿ ನಾನು ಒಂದು ಮನೆ ಕಟ್ಟಿಕೊಂಡು,ರಸ್ತೆ ಪಕ್ಕದಲ್ಲಿ ಪೆಟ್ಟಿಗೆ ಅಂಗಡಿ ಇಟ್ಟುಕೊಂಡು ಜೀವನ ಮಾಡುತ್ತಿರುತ್ತೇನೆ, ದಿನಾಂಕ:21/09/2017 ರಂದು ಸಂಜೆ 4:30 ಗಂಟೆಯಲ್ಲಿ ನಾವು ಹೊಸದಾಗಿ ಕಟ್ಟಿರುವ ಮನೆಯ ಮುಂದೆ  ಶೀಟ್ ಹಾಕುತ್ತಿದ್ದಾಗ ನಮ್ಮ ಅಣ್ಣಂದಿರಾದ ಹನುಮಪ್ಪ ಮತ್ತು ರಘು ಇಬ್ಬರೂ ಬಂದು ಶೀಟ್ ಹಾಕುವುದನ್ನು ನಿಲ್ಲಿಸಿ ನೀನು ಶೀಟ್ ಹಾಕಬೇಡ ಈ ಜಾಗದಲ್ಲಿ ನನಗೆ ಒಂದು ನಿವೇಶನ ಬರಬೇಕು ನಿವೇಶನ ಕೊಡುವವರೆವಿಗೂ ಮತ್ತು ಈ ಬಗ್ಗೆ ನ್ಯಾಯಾಲಯದಲ್ಲಿ ನಡೆಯುತ್ತಿರುವ ದಾವೆ ಮುಕ್ತಾಯ ಆಗುವವರೆವಿಗೂ ಶೀಟ್ ಹಾಕಬೇಡ ಎಂತ ಹೇಳಿದರು ಅದಕ್ಕೆ ನಾನು ಈಗಾಗಲೇ ನಿಮ್ಮ ಭಾಗಕ್ಕೆ ಬಂದಿರುವ ಜಮೀನನ್ನು ನೀವು ಮಾರಿಕೊಂಡು ವಿನಾಃ ಕಾರಣ ಕೋರ್ಟ ನಲ್ಲಿ ಕೇಸ್ ಹಾಕಿಕೊಂಡು ನನಗೆ ಯಾಕೆ ತೊಂದರೆ ಕೊಡಲು ಬಂದಿದ್ದೀರಾ ಎಂದಿದ್ದಕ್ಕೆ ಹನುಮಪ್ಪ ಎಂಬುವವನು ನೀನು ಶೀಟ್ ಹಾಕಬೇಡ ಸೂಳೇ ಮಗನೇ ಎಂತ ನನ್ನನ್ನು ಹಿಡಿದುಕೊಂಡ ಆಗ ರಘು ಗಡಾರಿಯಿಂದ ನನ್ನ ಬಲ ಕೈ ಭುಜಕ್ಕೆ ಹೊಡೆದು ನೋವುಂಟು ಮಾಡಿದ.  ನಾನು ಕೆಳಕ್ಕೆ ಬಿದ್ದು ಒದ್ದಾಡುತ್ತಿದ್ದಾಗ ಅವರುಗಳಿಬ್ಬರು ನನ್ನನ್ನು ಕೈಗಳಿಂದ ಗುದ್ದಿ ಕಾಲಿನಿಂದ ಒದ್ದು ನೋವುಂಟು ಮಾಡಿ ನೀನೇನಾದರೂ ಮನೆಗೆ ಶೀಟ್ ಹಾಕಿದರೆ ನಿನ್ನನ್ನು ಕೊಲೆ ಮಾಡಿ ಸಾಯಿಸುತ್ತೇವೆಂತ ಪ್ರಾಣಬೆದರಿಕೆ ಹಾಕಿ ಹೋದರು. ಇವರು ಈ ಹಿಂದೆಯೂ ಕೂಡ ನನ್ನ ಹೊಸ ಮನೆಗೆ ಕರೆಂಟ್ ವೈರ್ ಎಳೆದುಕೊಳ್ಳುವಾಗ ತೊಂದರೆ ಮಾಡಿರುತ್ತಾರೆ, ಈ ಗಲಾಟೆಯನ್ನು ನನ್ನ ಹೆಂಡತಿ ಉಮಾ ಮತ್ತು ಅಂಜನೇಯ ಬಿನ್ ಮಲ್ಲೇಶ ರವರು ನೋಡಿರುತ್ತಾರೆ, ನಂತರ ನನ್ನನ್ನು ಆಂಜನೇಯ  ವೈ ಎನ್ ಹೊಸಕೋಟೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ವೈದ್ಯರ ಸಲಹೆ ಯಂತೆ ಪಾವಗಡ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರು, ನಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಈ ದಿನ ತಡವಾಗಿ ಬಂದು ಮೇಲ್ಕಂಡವರುಗಳ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕೆಂತ ಇತ್ಯಾದಿಯಾಗಿ  ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತದೆ



Friday, 22 September 2017

Press Note 21-09-17

 

: : ಪತ್ರಿಕಾ ಪ್ರಕಟಣೆ : :

::   ದಿನಾಂಕ: 21-09-2017 : :

ದಿನಾಂಕ: 20-09-2017 ರಂದು ಕಳವು ಪ್ರಕರಣಗಳಲ್ಲಿ ಮಾಲು ಮತ್ತು ಆರೋಪಿಗಳ ಪತ್ತೆಗಾಗಿ ಸಿಬ್ಬಂದಿಯವರಾದ ಮುನಾವರ್ ಪಾಷ, ಸೈಮನ್‌‌ ವಿಕ್ಟರ್, ಲೋಕೇಶ, ಪರಶುರಾಮ ರವರುಗಳಿಗೆ ನೇಮಕ ಮಾಡಿದ್ದು, ಸದರಿ ಸಿಬ್ಬಂದಿಯವರು ಗಸ್ತಿನಲ್ಲಿರುವಾಗ್ಗೆ ರಾತ್ರಿ ಸುಮಾರು 8-00 ಗಂಟೆ ಸಮಯದಲ್ಲಿ  ಉಪ್ಪಾರಹಳ್ಳಿ ರೈಲ್ವೆ ಬ್ರಿಡ್ಜ್‌ ಪಕ್ಕ ಗೂಡ್‌‌‌ಶೆಡ್‌‌ ಕಾಲೋನಿ‌ ಕಡೆಗೆ ಹೋಗುವ ರಸ್ತೆಯಲ್ಲಿ ಉಪ್ಪಾರಹಳ್ಳಿ ಕಡೆಯಿಂದ ಒಬ್ಬ ವ್ಯಕ್ತಿ ಬರುತ್ತಿದ್ದವನು ಪೊಲೀಸರನ್ನು ನೋಡಿ ಮುಖ ಮರೆಮಾಚುತ್ತಾ ಓಡಲು ಪ್ರತ್ನಿಸಿದವನನ್ನು ಸಿಬ್ಬಂದಿಯವರು ಬೆನ್ನಟ್ಟಿ ಹಿಡಿದುಕೊಂಡಾಗ ಸದರಿ ಆಸಾಮಿಯು ಜಯನಗರ ಪೊಲೀಸ್ ಠಾಣೆಯ ಹಾಲಿ ಎಂ.ಓ.ಬಿ. ಆಸಾಮಿಯಾದ ಸಿಖಂದರ್‌ @ ಭೇಟ ಬಿನ್ ಏಜಾಸ್ @ ಮೈಸೂರಿ, 20 ವರ್ಷ, ವೆಲ್ಡಿಂಗ್‌‌ ಕೆಲಸ, ವಾಸ ಹಬೀಬಿಯಾ ಮಸೀದಿ ಹಿಂಭಾಗ, 17 ನೇ ಕ್ರಾಸ್‌, ಶಾಂತಿನಗರ, ತುಮಕೂರು ಆಗಿದ್ದು, ಆತನ ಪ್ಯಾಂಟಿನ ಬಲಭಾಗದ ಜೇಬಿನಲ್ಲಿ ಚಿನ್ನದಂತಿರುವ ಒಂದು ಸರ ಹಾಗೂ ಒಂದು ಉಂಗುರ ಇದ್ದು, ಸದರಿ ವಡವೆಗಳ ಬಗ್ಗೆ ಸಮಂಜಸವಾದ ಉತ್ತರ ನೀಡದ ಕಾರಣ ಸದರಿ ವಡವೆಗಳನ್ನು ಕಳವು ಮಾಡಿಕೊಂಡು ತಂದಿರಬಹುದೆಂಬ ಅನುಮಾನದ ಮೇರೆಗೆ ಆಸಾಮಿಯನ್ನು ಮಾಲಿನ ಸಮೇತ ಜಯನಗರ ಪೊಲೀಸ್ ಠಾಣೆಗೆ ರಾತ್ರಿ 8-30 ಗಂಟೆಗೆ ತಂದು ಹಾಜರ್ಪಡಿಸಿದ್ದು, ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರವರಾದ ಡಾ:ದಿವ್ಯಾ ವಿ.ಗೋಪಿನಾಥ್, ಐ.ಪಿ.ಎಸ್,  ಹೆಚ್ಚುವರಿ ಪೊಲೀಸ್ ಅಧೀಕ್ಷಕರವರಾದ ಡಾ: ಶೋಭಾರಾಣಿ ಕೆ.ಎಸ್.ಪಿ.ಎಸ್, ರವರ ಮಾರ್ಗದರ್ಶನದಲ್ಲಿ ತುಮಕೂರು ಉಪವಿಭಾಗದ ಪ್ರಭಾರ ಡಿ.ವೈ.ಎಸ್.ಪಿ. ಸಾಹೇಬರಾದ ಶ್ರೀ ಧರ್ಮೇಂಧ್ರ ಹೆಚ್.ಎನ್. ಹಾಗೂ ತಿಲಕ್‌‌ಪಾರ್ಕ್‌ ವೃತ್ತದ ಸಿ.ಪಿ.ಐ. ಶ್ರೀ ಟಿ.ಎಸ್. ರಾಧಕೃಷ್ಣ ರವರ ನೇತೃತ್ವದಲ್ಲಿ ಜಯನಗರ ಪೊಲೀಸ್ ಠಾಣಾ ಪಿ.ಎಸ್.ಐ ಶ್ರೀ ನವೀನ್‌‌ ಹೆಚ್.ಎಸ್. ಹಾಗೂ ಸಿಬ್ಬಂದಿಯವರು ಸಿಖಂದರ್‌ @ ಭೇಟ ಬಿನ್ ಏಜಾಸ್ @ ಮೈಸೂರಿಯನ್ನು ವಿಚಾರಣೆಗೊಳಪಡಿಸಿದ್ದು, ವಿಚಾರಣಾ ಕಾಲದಲ್ಲಿ ತಾನು ಹಾಗೂ ಶಾಂತಿನಗರ ವಾಸಿ ರಾಖೇಶ ಬಿನ್. ನಾರಾಯಣಪ್ಪ ಇಬ್ಬರೂ ಸೇರಿ ಈಗ್ಗೆ ಸುಮಾರು ಒಂದು ತಿಂಗಳ ಹಿಂದೆ ತುಮಕೂರು ರೈಲ್ವೆ ನಿಲ್ದಾಣದಲ್ಲಿ ರೈಲಿನಲ್ಲಿ ಸ್ಲೀಪರ್‌‌ಕೋಚ್‌‌ನಲ್ಲಿ ಮಲಗಿದ್ದ ಒಂದು ಹೆಂಗಸಿನ ಬಳಿ ಇದ್ದ ವ್ಯಾನಿಟಿ ಬ್ಯಾಗನ್ನು ಕಳವು ಮಾಡಿಕೊಂಡು ಹೋಗಿದ್ದು, ವ್ಯಾನಿಟಿ ಬ್ಯಾಗಿನಲ್ಲಿ ಚಿನ್ನದ ವಡವೆಗಳು ಹಾಗೂ ಹಣ ಇತ್ತೆಂದು  ಸುಳಿವು ನೀಡಿದ್ದರ ಮೇರೆಗೆ ಮತ್ತೊಬ್ಬ ಆರೋಪಿ ರಾಖೇಶ @ ರಾಕಿ ಬಿನ್. ನಾರಾಯಣಪ್ಪ, 19 ವರ್ಷ, ವಕ್ಕಲಿಗರು, ಪ್ರೈವೇಟ್‌‌ ಪ್ಯಾಕ್ಟರಿಯಲ್ಲಿ ಕೆಲಸ, ಕಾವೇರಿ ಸ್ಕೂಲ್‌‌ ಹತ್ತಿರ, ಶಾಂತಿನಗರ, ತುಮಕೂರು ಈತನನ್ನು ದಸ್ತಗಿರಿ ಮಾಡಿಕೊಂಡು ಇವರುಗಳ ಬಳಿ ದೊರೆತ ಸುಮಾರು 9, 14, 500  ಲಕ್ಷ ರೂಪಾಯಿ ಬೆಲೆಬಾಳುವ ಸುಮಾರು 357 ಗ್ರಾಂ ತೂಕದ ಚಿನ್ನದ ವಡವೆಗಳಾದ 1) ಒಂದು ಕರಿಯಮಣಿಯ ಚಿನ್ನದ ಸರ,  2) ಎರಡು ಚಿನ್ನದ ಕೊರಳ ಚೈನು 3) ಒಂದು ಚಿನ್ನದ ರೂಬಿ ಚೈನ್ 4) ನಾಲ್ಕು ಚಿನ್ನದ ಬಳೆಗಳು  5) ಎರಡು ಚಿನ್ನದ ಜೊತೆ ಓಲೆ-ಜುಂಕಿ  6) 3 ಚಿನ್ನದ ಉಂಗುರಗಳು  ಹಾಗೂ ಸುಮಾರು 82 ಗ್ರಾಂ ತೂಕದ ಚಿನ್ನದ ಗಟ್ಟಿಯನ್ನು ವಶಪಡಿಸಿಕೊಂಡಿದ್ದು, ಈ ಬಗ್ಗೆ ತುಮಕೂರು ಜಯನಗರ ಪೊಲೀಸ್ ಠಾಣೆಯಲ್ಲಿ ಮೊ.ನಂ. 128/2017 ಕಲಂ 41 ಕ್ಲಾಸ್(ಡಿ) 102 ಸಿ.ಆರ್.ಪಿ.ಸಿ.  ರೆ/ವಿತ್ 379 ಐ.ಪಿ.ಸಿ. ರೀತ್ಯಾ ಪ್ರಕರಣವು ದಾಖಲಾಗಿರುತ್ತೆ. ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ತುಮಕೂರು ಜಿಲ್ಲಾ ಎಸ್.ಪಿ.ಸಾಹೇಬರವರು ಅಭಿನಂದಿಸಿರುತ್ತಾರೆ.

 


Crime Incidents 22-09-17

ಪಟ್ಟನಾಯಕನಹಳ್ಳಿ ಪೊಲೀಸ್ ಠಾಣಾ ಯು ಡಿ ಆರ್ ನಂ 14/2017 ಕಲಂ 174 ಸಿ ಆರ್ ಪಿ ಸಿ

ದಿನಾಂಕ:20-09-17 ರಂದು ಮದ್ಯಾಹ್ನ 02:30 ಗಂಟೆಗೆ ಪಿರ್ಯಾದಿ ಗಾಳಪ್ಪ ಬಿನ್ ಲೇಟ್ ಸಣ್ಣಪ್ಪ, ಕದಿರೇಹಳ್ಳಿ ಗ್ರಾಮ, ಶಿರಾ  ತಾಲ್ಲೋಕ್ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ಪಿರ್ಯಾದಿ ಮತ್ತು ಪಿರ್ಯಾದಿ ಹೆಂಡತಿ ಗಂಗಮ್ಮ ಜೀವನೋಪಯಕ್ಕಾಗಿ ಕೂಲಿಕೆಲಸ ಮಾಡುತ್ತಿದ್ದು ಇವರಿಗೆ 8ವರ್ಷದ ಹಣ್ಣು ಮಗು 6ವರ್ಷದ ಗಂಡು ಮಗು ಇದ್ದು ಪಿರ್ಯಾದಿಯವರಿಗೆ ಕದಿರೆಹಳ್ಳಿ ಗ್ರಾಮದ ಸ ನಂ 75ರಲ್ಲಿ 3 ಏಕರೆ ಜಮೀನಿ ಇದ್ದು ಸದರಿ ಜಮೀನಿನಲ್ಲಿ ಕಡಲೆಕಾಯಿ ಬೆಳೆ ಹಾಕಿದ್ದು, ಕಳೆ ಬಂದಿರುವುದರಿಂದ ಪಿರ್ಯಾದಿ ಮತ್ತು ಪಿರ್ಯಾದಿ ಹೆಂಡತಿ ಗಂಗಮ್ಮ ರವರು ಈ ದಿನ ಜಮೀನಿಗೆ ಕಳೆಕಿಳಲು ಹೋಗಿದ್ದು ಮಧ್ಯಾಹ್ನ ಸುಮಾರು 12:00 ಗಂಟೆಯಲ್ಲಿ ಪಿರ್ಯಾದಿ  ಹೆಂಡತಿ ಗಂಗಮ್ಮ ರವರು ಜಮೀನಲ್ಲಿ ಕೆಲಸ ಮಾಡುತ್ತದ್ದಾಗ ಗಂಗಮ್ಮರವರ ಬಲಪಾದದ ಬಳಿ ಯಾವುದೋ ವಿಷ ಪುರಿತ ಹಾವು ಕಚ್ಚಿದ್ದು ಚಿಕಿತ್ಸೆಗಾಗಿ ಅಕ್ಕ ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದವರ ಸಹಾಯದಿಂದ ಬರಗೂರು ಆಸ್ಪತ್ರಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗಿ ಪರೀಕ್ಷಿಸಿದ ವೈದ್ಯರು ಗಂಗಮ್ಮ ಮೃತಪಟ್ಟರುವುದಾಗಿ ತಿಳಿಸಿದ್ದು ಶವವು ಬರಗೂರು ಆಸ್ಪತ್ರಯಲ್ಲಿದ್ದು ಸ್ಥಳಕ್ಕೆ  ಬಂದು ಮುಂದಿನ ಕ್ರಮ ಜರುಗಿಸಲು ನೀಡಿದ ಪಿರ್ಯಾದನ್ನು ಪಡೆದು ಪ್ರಕರಣ ದಾಖಿಲಿಸಿರುತ್ತೆ

 

ಹೆಬ್ಬೂರು  ಪೊಲೀಸ್ ಠಾಣಾ ಮೊ,ನಂ-165/2017 ಕಲಂ 160 ಐ,ಪಿ,ಸಿ

ದಿನಾಂಕ:21-09-2017 ರಂದು ರಾತ್ರಿ 09-30 ಗಂಟೆಗೆ ಠಾಣಾ ಪಿ,ಸಿ-220, ಮಂಜುನಾಥ್‌,ಎಂ ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಅಂಶವೇನೆಂದರೆ, ದಿನಾಂಕ:21-09-2017 ರಂದು ನಾನು ಗುಪ್ತ ಮಾಹಿತಿ ಸಂಗ್ರಹಿಸಲೆಂದು ನರುಗನಹಳ್ಳಿ, ಹುಳ್ಳೇನಹಳ್ಳಿ, ಚೋಳಂಬಳ್ಳಿ ಕಡೆಗಳಿಗೆ ಹೋಗಿದ್ದು, ನಂತರ ಹೊನ್ನುಡಿಕೆಗೆ ಹೋಗಿ ಹೊನ್ನುಡಿಕೆ ಉಪಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿ,ಸಿ-783 ಮಹೇಶ್‌,ಎಂ,ಸಿ ರವರೊಂದಿಗೆ ಬನದಪಾಳ್ಯ, ಕಲ್ಲುಪಾಳ್ಯ, ಕೋಡಿಹಳ್ಳಿ ಕಡೆಗಳಿಗೆ ಹೋಗಲೆಂದು ಇಬ್ಬರೂ ದ್ವಿಚಕ್ರ ವಾಹನದಲ್ಲಿ ಬನದಪಾಳ್ಯದಲ್ಲಿ ಹೊನ್ನುಡಿಕೆ-ಕುದೂರು ರಸ್ತೆಯಲ್ಲಿ ಹೋಗುತ್ತಿರುವಾಗ್ಗೆ, ರಾತ್ರಿ ಸುಮಾರು 08-00 ಗಂಟೆ ಸಮಯದಲ್ಲಿ ಬನದಪಾಳ್ಯ ಗೇಟ್‌ನ ಬಳಿ ಇರುವ ಕಟಿಂಗ್‌ ಶಾಪ್‌ ಮುಂಭಾಗದಲ್ಲಿ ಜನಗಳು ಗುಂಪು ಕಟ್ಟಿಕೊಂಡಿದ್ದು ನಾವುಗಳು ದ್ವಿಚಕ್ರ ವಾಹನವನ್ನು ನಿಲ್ಲಿಸಿ ನೋಡಲಾಗಿ, ಎರಡು ಗುಂಪುಗಳ ಮದ್ಯೆ ಗಲಾಟೆ ನಡೆಯುತ್ತಿದ್ದು, ಸಾರ್ವಜನಿಕ ಸ್ಥಳದಲ್ಲಿ ಒಬ್ಬರಿಗೊಬ್ಬರು ಕೈ ಕೈ ಮಿಲಾಯಿಸಿಕೊಂಡು ಸಾರ್ವಜನಿಕರ ನೆಮ್ಮದಿ ಹಾಗೂ ಶಾಂತಿಗೆ ಭಂಗ ಉಂಟಾಗುವಂತೆ ಹೊಡೆದಾಡುತ್ತಿದ್ದರು. ಸಮವಸ್ತ್ರದಲ್ಲಿದ್ದ ನಾವುಗಳು ಅವರುಗಳನ್ನು ಬಿಡಿಸಿ ಒಂದು ಗುಂಪಿನವರ ಹೆಸರು ವಿಳಾಸವನ್ನು ಕೇಳಲಾಗಿ, 1) ಮುನೀರ್ ಪಾಷಾ @ ತೌಫೀಕ್‌ ಬಿನ್ ಅಲ್ತಾಫ್‌ ಪಾಷಾ, 24 ವರ್ಷ, ಮುಸ್ಲಿಂ, ಎಂ,ಎಸ್ಸಿ ವಿದ್ಯಾರ್ಥಿ, ತಾವರೇಕೆರೆ, ಹೆಬ್ಬೂರು ಹೋಬಳಿ 2) ವಸೀಂ ಪಾಷಾ ಬಿನ್ ಲೇ|| ಅಬ್ದುಲ್‌ ಕರೀಂ, 24 ವರ್ಷ, ಮುಸ್ಲಿಂ, ಕೂಲಿ ಕೆಲಸ, ಹಳೇ ಪೇಟೆ, ಹುಲಿಯೂರು ದುರ್ಗ, ಕುಣಿಗಲ್‌ ತಾಲ್ಲೂಕು, ತುಮಕೂರು ಜಿಲ್ಲೆ ಎಂತಾ ತಿಳಿಸಿದರು. ಮತ್ತೊಂದು ಗುಂಪಿನವರ ಹೆಸರು ವಿಳಾಸ ಕೇಳಲಾಗಿ 1) ಶಿವರಾಜ್‌ ಕುಮಾರ್‌,ಎನ್‌ ಬಿನ್ ನಾರಾಯಣಪ್ಪ, 24 ವರ್ಷ, ಲಿಂಗಾಯಿತರು, ಜಿರಾಯ್ತಿ, ಬನದಪಾಳ್ಯ, ಹೆಬ್ಬೂರು ಹೋಬಳಿ 2) ವಸಂತ್‌ ಕುಮಾರ್,ಬಿ,ಹೆಚ್ ಬಿನ್ ಹನುಮಂತಯ್ಯ, 23 ವರ್ಷ, ಲಿಂಗಾಯಿತರು, ಪ್ರೈವೇಟ್‌ ಕಂಪನಿಯಲ್ಲಿ ಕೆಲಸ, ಬನದಪಾಳ್ಯ, ಹೆಬ್ಬೂರು ಹೋಬಳಿ ಎಂತಾ ತಿಳಿಸಿದರು. ನಂತರ ಸದರಿಯವರುಗಳನ್ನು ಗಲಾಟೆ ಮಾಡಿಕೊಳ್ಳಲು ಕಾರಣವೇನೆಂತಾ ಕೇಳಲಾಗಿ ನಾವುಗಳು ಫೇಸ್‌ ಬುಕ್‌ನಲ್ಲಿ ಕಾಮೆಂಟ್‌ ಮಾಡಿದ ವಿಚಾರವಾಗಿ ಗಲಾಟೆ ಮಾಡಿಕೊಂಡೆವೆಂತಾ ತಿಳಿಸಿದರು. ನಂತರ ಮೇಲ್ಕಂಡ ಆಸಾಮಿಗಳನ್ನು ರಾತ್ರಿ 09-30 ಗಂಟೆಗೆ ಠಾಣೆಗೆ ಕರೆತಂದು ಮಾನ್ಯ ಪಿ,ಎಸ್,ಐ ಸಾಹೇಬರವರ ಮುಂದೆ ಹಾಜರ್‌ ಪಡಿಸಿ ಈ ವರದಿಯನ್ನು ನೀಡಿರುತ್ತೇನೆ ಎಂತಾ ನೀಡಿದ ರಿಪೋರ್ಟ್‌ ಅನ್ನು ಪಡೆದು ಪ್ರಕರಣವನ್ನು ದಾಖಲಿಸಿರುತ್ತೆ.

ಹೊನ್ನವಳ್ಳಿ ಪೊಲೀಸ್ ಠಾಣೆ    ಮೊ,ನಂ-116/2017 ಕಲಂ- 143.147.148.324.307.504.506 ರೆ,ವಿ 149 ಐಪಿಸಿ

ದಿನಾಂಕ-22/09/2017 ರಂದು ಬೆಳಿಗ್ಗೆ 1-30 ಗಂಟೆಯಲ್ಲಿ ತಿಪಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಕಬ್ಬಿನಕೆರೆ  ಕಸಬಾ ಹೋ|| ಗ್ರಾಮದ ಶ್ರೀಮತಿ ಪಾಪಮ್ಮ ಕೋಂ ಸಣ್ಣಪ್ಪ ನೀಡಿದ ಹೇಳಿಕೆ ಅಂಶವೇನೆಂದರೆ. ಪಿರ್ಯಾದಿಯ ಮದಲನೆಯ ಸೂಸೆ ದೇವಮ್ಮಳು  ದಿನಾಂಕ 21/09/2017 ರಂದು ಮದ್ಯಾಹ್ನ 2-00 ಗಂಟೆ ಸಮಯದಲ್ಲಿ ಮನೆಯಿಂದ ಹೋದವಳು ವಾಪಸ್‌ ಬಾರದೇ ಇದ್ದುದರಿಂದ ದೇವಮ್ಮ ತವರು ಮನೆಗೆ ಹೋಗಿರ ಬಹುದೆಂದು ನಾವು ತಿಳಿದು ನನ್ನ ಗಂಡ ಸಣ್ಣಪ್ಪ ದೇವಮ್ಮಳ ತಂದೆ ಗುರುಸ್ವಾಮಿಗೆ ಪೋನ್‌ ಮಾಡಿ ವಿಚಾರ ತಿಳಿಸಿದ್ದು, ನಂತರ ಇದೇ ದಿನ ರಾತ್ರಿ  ಸುಮಾರು 9-00 ಗಂಟೆಗೆ ನಮ್ಮ ಮನೆಯ ಮುಂದೆ ನಾನು ಸಣ್ಣಪ್ಪ, ಮಕ್ಕಳಾದ ಕುಮಾರ,ಸಿದ್ದೇಶ ಹಾಗೂ ನಾದಿನಿ ಕಮಲಮ್ಮರೊಂದಿಗೆ ಕುಳಿತಿರುವಾಗ್ಗೆ ವೀರಭದ್ರಸ್ವಾಮಿ ಬಿನ್‌ ಗುರುಸ್ವಾಮಿ, ಕುಮಾರ ಬಿನ್‌ ಗುರುಸ್ವಾಮಿ ಹಾಗೂ ಜಯಪುರದ ಪ್ರದೀಪ ಬಿನ್‌ ಸೋಮಾಬೋವಿ ಹಾಗೂ ಚೇತನ ಬಿನ್‌ ಸೋಮಬೋವಿ  ರವರುಗಳು ಬೈಕ್‌ನಲ್ಲಿ ಮನೆಯ ಬಳಿ ಬಂದು ನಮ್ಮ ದೇವಮ್ಮ ಎಲ್ಲಿ ಎಂದು ಕೇಳಿ ಏಕಾಏಕಿ ಸೂಳೇಮಕ್ಕಳ , ಬೀಳಿಮಕ್ಕಳ ಅಂತ ಬೈದು ವೀರಭದ್ರಸ್ವಾಮಿಯು ತನ್ನ ಕೈಯಲ್ಲಿದ್ದ ರಾಡಿನಿಂದ ಸಿದ್ದೇಶನ ತಲೆಗೆ  ಕೊಲೆ ಮಾಡುವ ಉದ್ದೇಶದಿಂದ ಹೊಡೆದು ಭಾರಿ ರಕ್ತಗಾಯ ಪಡಿಸಿದ, ಆತನ ಜೊತೆಯಲ್ಲಿ ಬಂದಿದ್ದ  ಯೋಗೀಶನು ತನ್ನ ಕೈಯಲ್ಲಿದ್ದ ದೊಣ್ಣೆಯಿಂದ ಪಿರ್ಯಾದಿಯ ಗಂಡ ಸಣ್ಣಪ್ಪನಿಗೆ ತಲೆಗೆ ಕೊಲೆ ಮಾಡುವ ಉದ್ದೇಶದಿಂದ ಹೊಡೆದು ಭಾರಿ ರಕ್ತ ಗಾಯ ಮಾಡಿರುತ್ತಾರೆ, ಹಾಗೂ ಪ್ರದೀಪ ತನ್ನ ಕೈಯಲ್ಲಿದ್ದ ದೊಣ್ಣೇಯಿಂದ ನ್ನ ಬಲ ಕೈಗೆ ಹೊಡೆದು ಗಾಯ ಪಡಿಸಿರುತ್ತಾನೆ , ಆಗ ಸ್ಥಳದಲ್ಲಿದ್ದ ಕಮಲಮ್ಮ ನನ್ನ ಸೂಸೆ ಸುನಂದ ರವರು ಜಗಳ ಬಿಡಿಸಿ ಸಮಾಧಾನ ಮಾಡಿರುತ್ತಿರುವಾಗ ನಮ್ಮ ದೇವಮ್ಮಳನ್ನು ಮನೆಗೆ ಕರೆದುಕೊಂಡು ಬರದಿದ್ದರೆ ನಿಮ್ನ್ನು ಜೀವಂತವಾಗಿ ಭೂಮಿಯ ಮೇಲೆ ಉಳಿಸುವುದಿಲ್ಲಾ ಕೊಲೆ ಮಾಡುತ್ತೇವೆ   ಎಂದು ಪ್ರಾಣ ಬೆದರಿಕೆ ಹಾಕಿ ತಮ್ಮ ಕೈಯಲ್ಲಿದ್ದ ರಾಡ್‌ ಮತ್ತು ದೊಣ್ಣೆಗಳನ್ನು ಅಲ್ಲಿ ಬಿಸಾಡಿ ಹೋಗಿರುತ್ತಾರೆ. ಗಯಗೊಂಡ ನಮ್ಮನ್ನು 108 ಅಂಬುಲೇನ್ಸ್‌  ವಾಹನದಲ್ಲಿ ತಿಪಟೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಬಂದು ದಾಖಲು ಮಾಡಿ ಚಿಕಿತ್ಸೆ ಕೊಡಿಸಿರುತ್ತಾರೆ .ಆದ್ದರಿಂದ ನಮ್ಮ ಮೇಲೆ ಕೊಲೆ ಮಾಡುವ ಉದ್ದೇಶದಿಂದ ಹೊಡೆದು ರಕ್ತಗಾಯ ಪಡಿಸಿದ ಮೇಲ್ಕಂಡವರ  ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕೆಂದು ನೀಡಿದ ಹೇಳಿಕೆಯ್ನು ಪಡೆದು ವಾಪಸ್ ಠಾಣೆಗೆ  ಪ್ರಕರಣ ದಾಖಲಿಸಿರುತ್ತೇನೆ.

ಹೊನ್ನವಳ್ಳಿ ಪೊಲೀಸ್ ಠಾಣೆ   ಮೊ,ನಂ-115/2017 ಕಲಂ- 324 504 506 ರೆ,ವಿ 34 ಐಪಿಸಿ

ದಿನಾಂಕ-22/09/2017 ರಂದು ಬೆಳಿಗ್ಗೆ 12-45 ಗಂಟೆಯಲ್ಲಿ ತಿಪಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಕಾಟಮ್ಮದೇವರ ಹಟ್ಟಿ ಕಂದಿಕೆರೆ ಹೋ|| ಗ್ರಾಮದ ವೀರಭದ್ರಸ್ವಾಮಿ ಬಿನ್‌ ಗುರುಸ್ವಾಮಿ  ರವರು ನೀಡಿದ ಹೇಳಿಕೆ ಅಂಶವೇನೆಂದರೆ. ಪಿರ್ಯಾದಿಯ ತಂಗಿ ದೇವಮ್ಮಳನ್ನು ಈಗ್ಗೆ ಸುಮಾರು 8 ವರ್ಷಗಳ ಹಿಂದೆ ಕಬ್ಬಿನಕೆರೆ ಗ್ರಾಮದ ತೋಟದ ಮನೆಯ ವಾಸಿ ಕುಮಾರ ಬಿನ್‌ ಸಣ್ಣಪ್ಪ ನಿಗೆ ವಿವಾಹಮಾಡಿ ಕೊಟ್ಟಿದ್ದು,  ದಿನಾಂಕ-21/09/2017 ರಂದು ಸಂಜೆ ಸಣ್ಣಪ್ಪ ಫೋನ್‌ ಮಾಡಿ ದೇವಮ್ಮ ಮದ್ಯಾಹ್ನ  ಮನೆಯಿಂದ ಹೋದವಳು ಬಂದಿರುವುದಿಲ್ಲಾ ನಿಮ್ಮ ಮನೆಗೆ ಬಂದಿರುತ್ತಾಳಾ ಇಲ್ಲವೋ ಎಂದು ವಿಚಾರ ಮಾಡಿದ್ದು, ಸಂಜೆಯಾದರು ಪಿರ್ಯಾದಿಯ ತಂಗಿ ಮನೆಗೆ ಬರದ ಕಾರಣ, ಅನುಮಾನ ಬಂದು ನಾನು,ಜಯಪುರ ವಾಸಿ ಪ್ರದೀಪ ಬಿನ್‌ ಸೋಮಬೋವಿ,ನಮ್ಮ ಗ್ರಾಮದ ನವೀನ ಬಿನ್‌ ಲೇ|| ನರಸಿಂಹಯ್ಯ ಮತ್ತು ಯೋಗೀಶ ಬಿನ್‌ ಲೇ|| ಹನುಮಂತಯ್ಯರವರ ಜೊತೆ ಕಬ್ಬಿನಕೆರೆ ಗ್ರಾಮದ ವಾಸಿ ನಮ್ಮ ಮಾವನ ಮನೆಗೆ ರಾತ್ರಿ 8-30 ಗಂಟೆಗೆ ಹೋಗಿ ನನ್ನ ತಂಗಿ ಎಲ್ಲಿ ಎಂತ ಕೇಳಿದಕ್ಕೆ ಏಕಾಏಕಿ ಜಗಳ ತೆಗೆದು ಪಾಪಮ್ಮಲು ಕಾರದ ಪುಡಿಯನ್ನು ಎರಚಿದಾಗ ಕುಮಾರ ತನ್ನ ಕೈಯಲ್ಲಿ ರಾಡನ್ನು ಹಿಡಿದುಕೊಂಡು ಬಂದು ಪ್ರದೀಪ ಮತ್ತು ಯೋಗೀಶನ ತಲೆಗೆ ಹೋಡೆದು ರಕ್ತಗಾಯ ಪಡಿಸಿದರು ಸಣ್ಣಪ್ಪ ಪಿರ್ಯಾದಿಗೆ ಕಲ್ಲಿನಿಂದ ಹೊಡೆದು ಗಾಯ ಪಡಿಸಿದರು ಅಲ್ಲದೇ ಮೇಲ್ಕಂಡ ಪಾಪಮ್ಮ ಸಣ್ಣಪ್ಪ ಕುಮಾರ ಸಿದ್ದೇಶ ರವರುಗಳು ಬೋಳಿಮಕ್ಕಳ ಸೂಳೇಮಕ್ಕಳ ನಮ್ಮ ಮನೆಯ ಬಾಗಿಲಿಗೆಬಂದು ನಮ್ಮನ್ನೇ ಕೇಳುತ್ತಿರಾ ನಿಮ್ಮನ್ನು ಜೀವಂತವಾಗಿ ಬಿಡುವುದಿಲ್ಲಾ ಎಂದು ಕೊಲೆ ಬೆದರಿಕೆ ಹಾಕಿರುತ್ತಾರೆ . ಸ್ಥಳದಲ್ಲಿದ್ದ ನವೀನ ಜಗಳ ಬಿಡಿಸಿ ಗಾಯಾಗಗೊಂಡ ನಮ್ಮನ್ನು ಬೈಕಿನಲ್ಲಿ ತಿಪಟೂರು ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಕೊಡಿಸಿರುತ್ತಾರೆ .ಮೇಲ್ಕಂಡ ನಾಲ್ಕು ಜನರ  ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕೆಂದು ನೀಡಿದ ಹೇಳಿಕೆಯ್ನು ಪಡೆದು ವಾಪಸ್ ಠಾಣೆಗೆ ಬೆಳಿಗ್ಗೆ  02-00 ಗಂಟೆಗೆ ಬಂದು ಪ್ರಕರಣ ದಾಖಲಿಸಿರುತ್ತೇನೆ.


Crime Incidents 21-09-17

ಜಯನಗರ ಪೊಲೀಸ್ ಠಾಣೆ ಮೊ.ಸಂ 16/2017 ಕಲಂ 174 (c) Crpc

 

ದಿನಾಂಕ: 21/09/2017 ರಂದು ರಾತ್ರಿ 7.30 ಗಂಟೆಯ ಸಮಯದಲ್ಲಿ ತುಮಕೂರು ಟೌನ್‌ ಜಯನಗರ ಪೂರ್ವ 2 ನೇ ಮೈನ್‌ ರಸ್ತೆಯಲ್ಲಿ ವಾಸವಾಗಿರುವ ಸತೀಶ್‌‌ ಸಿ.ಎ  ಬಿನ್. ಲೇ|| ಸಿ.ಎಸ್. ಅನಂತರಾಮು ಎಂಬುವವರು ಠಾಣೆಗೆ ಹಾಜರಾಗಿ, ನಮಗೆ ಸಿ.ಎಸ್. ಸುಪ್ರಜ ಎಂಬ ಒಬ್ಬಳೇ ಮಗಳಿದ್ದು, ಆಕೆಯು ತುಮಕೂರು ಟೌನ್ ಬಟವಾಡಿಯಲ್ಲಿರುವ ಸಿದ್ದಗಂಗಾ ಪಾಲಿಟೆಕ್ನಿಕ್‌‌ ಕಾಲೇಜಿನಲ್ಲಿ ಅಂತಿಮ ವರ್ಷದ ಡಿಪ್ಲೋಮೋ ವ್ಯಾಸಂಗ ಮಾಡುತ್ತಿದ್ದಳು. ನನ್ನ ಪತ್ನಿ ಲಲಿತಾ ಡಿ.ಎನ್. ಇದೇ ತುಮಕೂರು ಟೌನ್ ವಿಜಯನಗರದಲ್ಲಿರುವ ಸರ್ವೋದಯ ಪ್ರೈಮರಿ ಸ್ಕೂಲ್‌‌ನಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿರುತ್ತಾರೆ. ನಾನು ಪ್ರತಿದಿನ ಬೆಳಿಗ್ಗೆ ಸುಮಾರು 8-00 ಗಂಟೆಗೆ ಮನೆಯನ್ನು ಬಿಟ್ಟು ನನ್ನ ಹೆಂಡತಿ ಲಲತಾಳನ್ನು ಸ್ಕೂಲಿಗೆ ಬಿಟ್ಟು ಕೆಲಸಕ್ಕೆ ಹೋಗುತ್ತಿರುತ್ತೇನೆ.   ನಾವಿಬ್ಬರೂ ಕೆಲಸಕ್ಕೆ ಹೋದ ನಂತರ ನಮ್ಮ ಮಗಳು ಸುಪ್ರಜ ಕಾಲೇಜಿಗೆ ಬೆಳಿಗ್ಗೆ 8-15 ಕ್ಕೆ ಹೋಗಿ ಸಾಯಂಕಾಲ ಸುಮಾರು 4-45 ಕ್ಕೆ ಮನೆಗೆ ಬರುತ್ತಿದ್ದಳು.  ಪ್ರತಿದಿನದಂತೆ ನಾನು, ನನ್ನ ಹೆಂಡತಿ ಲಲಿತಾ ಈ ದಿನ ಬೆಳಿಗ್ಗೆ ಮನೆಯಲ್ಲಿ ತಿಂಡಿ ತಿಂದು ಬೆಳಿಗ್ಗೆ 8-00 ಗಂಟೆಗೆ ಮನೆಯನ್ನು ಬಿಟ್ಟು, ನನ್ನ ಹೆಂಡತಿಯನ್ನು ಅವರ ಸ್ಕೂಲ್‌‌ ಬಳಿ ಬಿಟ್ಟು ನಾನು ಶ್ರೀದೇವಿ ಇಂಜಿನಿಯರಿಂಗ್‌ ಕಾಲೇಜಿಗೆ ಹೋಗಿದ್ದೆನು. ಸಾಯಂಕಾಲ ವಾಪಾಸ್ಸು ಬೈಕಿನಲ್ಲಿ ಬರುವಾಗ ಪೋನ್‌‌ ರಿಂಗ್‌ ಆಗಿದ್ದು, ನಾನು ಬೈಕ್‌‌ನಲ್ಲಿ ಬರುತ್ತಿದ್ದರಿಂದ ಪೋನ್‌‌ ರಿಸೀವ್‌‌ ಮಾಡಲಿಲ್ಲ, ಸುಮಾರು 5-00 ಗಂಟೆ ಸಮಯದಲ್ಲಿ ನಾನು ನಮ್ಮ ಮನೆಯ ಬಳಿಗೆ ಬಂದಾಗ ನಮ್ಮ ಮನೆಯ ಮುಂದೆ ಜನರು ಗುಂಪು ಸೇರಿದ್ದು, ಮನೆಯ ಮುಂದೆ ನನ್ನ ತಮ್ಮ ಮಹೇಶ್‌‌ ಹಾಗೂ ನನ್ನ ಹೆಂಡತಿ ಜೋರಾಗಿ  ಆಳುತ್ತಿದ್ದು, ನಮ್ಮ ಮಗಳು ಸುಪ್ರಜ ಮಹಡಿಯ ಮೇಲೆ ರೂಮಿನಲ್ಲಿ ನೇಣು ಹಾಕಿಕೊಂಡಿದ್ದಾಳೆಂತಾ ತಿಳಿಸಿದರು.  ನಾನು ಗಾಬರಿಯಲ್ಲಿ ಮಹಡಿಯ ಮೇಲೆ ರೂಮಿನ ಬಳಿಗೆ ಹೋಗಿ ನೋಡಲಾಗಿ ನಮ್ಮ ಮಗಳೂ ಸುಪ್ರಜ ಚೂಡೀಧಾರ್‌‌ನ ವೇಲಿನಿಂದ ಕುತ್ತಿಗೆಗೆ ಬಿಗಿದುಕೊಂಡು ರೂಮಿನಲ್ಲಿರುವ ಪ್ಯಾನಿಗೆ ನೇಣುಹಾಕಿಕೊಂಡು ಮೃತಪಟ್ಟು ನೇತಾಡುತ್ತಿದ್ದಳು. ನನ್ನ ಹೆಂಡತಿಯನ್ನು ವಿಚಾರ ಮಾಡಿದ್ದಕ್ಕೆ ನಾನು ಸಾಯಂಕಾಲ ಸುಮಾರು 4-30 ಗಂಟೆಗೆ ಮನೆಗೆ ಬಂದಿದ್ದು, ಮನೆಯ ಮುಂದೆ ಕಾಂಪೌಂಡ್‌‌ನಲ್ಲಿ ಸಪ್ರಜಳ ಸ್ಕೂಟರ್‌‌ ನಿಂತಿದ್ದು, ಮುಂಬಾಗಲಿನ ಬೀಗ ತೆಗೆದು ಒಳಗೆ ಹೋಗಿದ್ದು, ಸುಪ್ರಜಳನ್ನು ಕೂಗಿದೆನು. ಮಾತನಾಡದೇ ಇದ್ದರಿಂದ ಎಲ್ಲೋ ಸುಪ್ರಜಳು ಮಲಗಿರಬಹುದೆಂದು ನಾನು ಮನೆಯ ಕೆಲಸ ಮಾಡುತ್ತಿದ್ದು, ಕಾಫಿ ಮಾಡಿಕೊಂಡು ಈಗ 5 ನಿಮಿಷ ಮುಂಚೆ ಸುಪ್ರಜಳಿಗೆ ಕೊಡಲು ಆಕೆಯ ರೂಮಿನ ಬಳಿಗೆ ಹೋದಾಗ ಆಕೆಯು ಯಾವಾಗಲೋ ನೇಣುಹಾಕಿಕೊಂಡು  ಮೃತಪಟ್ಟು ನೇತಾಡುತ್ತಿದ್ದಳೆಂತಾ  ವಿಚಾರ ತಿಳಿಸಿದಳು.   ನಮ್ಮ ಮಗಳು ಯಾವ ಕಾರಣಕ್ಕಾಗಿ ಈ ರೀತಿ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾಳೆಂತಾ ನಮಗೆ ಗೊತ್ತಿರುವುದಿಲ್ಲ.  ಆಕೆಯು ವಿದ್ಯಾಬ್ಯಾಸದಲ್ಲಿ ಬೇಸರಗೊಂಡೋ, ಇಲ್ಲವೇ ಸ್ನೇಹಿತರ ಮೇಲೆ ಬೇಜಾರು ಮಾಡಿಕೊಂಡೋ ಅಥವಾ ಇನ್ಯಾವುದೋ ಕಾರಣಕ್ಕಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ತನ್ಮೂಲಕ ತಾನೇ ಈ ರೀತಿ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾಳೆ ಎಂತ ಕಂಡುಬಂದಿರುತ್ತೆ. ಆದರು ಸಹ ನನ್ನ ಮಗಳ ಸಾವಿನಲ್ಲಿ ಅನುಮಾನ ಇರುತ್ತದೆ.  ತಾವು ದಯಮಾಡಿ ಮುಂದಿನ ಕ್ರಮ ಜರುಗಿಸಿ ನನ್ನ ಮಗಳ ಸಾವಿನ ಬಗ್ಗೆ ಸ್ಪಷ್ಟ ಕಾರಣವನ್ನು ತಿಳಿಸಿಕೊಡಲು ಕೋರುತ್ತೇನೆಂತ  ಇತ್ಯಾದಿಯಾಗಿ ಪಿರ್ಯಾದಿ ಅಂಶವಾಗಿರುತ್ತೆ.



Wednesday, 20 September 2017

ಅಡಿಕೆ ತೋಟದ ಹರಾಜು ಪ್ರಕ್ರಿಯೆ ಪತ್ರಿಕಾ ಪ್ರಕಟಣೆ

ಜಿಲ್ಲಾ ಪೊಲೀಸ್ ಕಛೇರಿ,

ತುಮಕೂರು ಜಿಲ್ಲೆ,

ಅಡಿಕೆ ತೋಟದ ಹರಾಜು ಪ್ರಕ್ರಿಯೆ ಪತ್ರಿಕಾ ಪ್ರಕಟಣೆ


ತುಮಕೂರು ನಗರದ ಬಟವಾಡಿಯಲ್ಲಿರುವ ಜಿಲ್ಲಾ ಪೊಲೀಸ್ ಕಛೇರಿಯ ಆವರಣದಲ್ಲಿರುವ ಅಡಿಕೆ ತೋಟದ ಹರಾಜು ಪ್ರಕ್ರಿಯೆಯನ್ನು ದಿನಾಂಕ 22-09-2017 ರಂದು ಬೆಳಿಗ್ಗೆ 11-00 ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ನಡೆಸಲಾಗುವುದು. ಆಸಕ್ತ ಸಾರ್ವಜನಿಕರು ಸದರಿ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಪೊಲೀಸ್ ಕಛೇರಿಯ ಸ್ಥಿರ ದೂರವಾಣಿ ಸಂಖ್ಯೆ: 0815-2271580 (ನಗದು ವಿಭಾಗದ ವಿಷಯ ನಿರ್ವಾಹಕರನ್ನು) ಸಂಪರ್ಕಿಸುವುದು.


Press Note 19-09-17

:- ಪತ್ರಿಕಾ ಪ್ರಕಟಣೆ   :-

ದಿನಾಂಕ: 19-09-2017.

 

ದಿನಾಂಕ:19-09-2017 ರಂದು ಬೆಳಿಗಿನ ಜಾವ ಕ್ಯಾತ್ಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯ ಮಂಚಕಲ್ ಕುಪ್ಪೆ ಬಳಿ ತುಮಕೂರು-ಬೆಂಗಳೂರು ನಡುವಿನ ಎನ್.ಹೆಚ್.48 ರಸ್ತೆಯಲ್ಲಿ ಕ್ಯಾತ್ಸಂದ್ರ ಪೊಲೀಸ್ ಠಾಣೆಯ ಪಿ.ಎಸ್.ಐ. ಡಿ.ಎಲ್.ರಾಜು ಮತ್ತು ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿಗಳಾದ ಮೋಹನ್ ಕುಮಾರ್., ರಮೇಶ್, , ಸೈಯದ್ ರಿಫತ್ ಅಲೀ, ರವರುಗಳು ಅಮಾವಾಸೆ ನಾಕಾಬಂಧೀ ಪ್ರಯುಕ್ತ ಗಸ್ತು ಮಾಡುತ್ತಿರುವಾಗ್ಗೆ ಈ ದಿನ ಬೆಳಿಗ್ಗೆ ಸುಮಾರು 05-00 ಗಂಟೆಯಲ್ಲಿ ಆನಂದ್ ಬಿಹಾರಿ ಹೋಟೆಲ್ ಎದುರು AP-22-Y-1641 TOYOTA INNOVA ಕಂಪನಿಯ ಕಾರಿನಲ್ಲಿ ಅಕ್ರಮವಾಗಿ ರಕ್ತ ಚಂದನದ ಮರದ ತುಂಡುಗಳನ್ನು ಬೆಂಗಳೂರು ಕಡೆಗೆ ಸಾಗಾಣಿಕೆ ಮಾಡುತ್ತಿದ್ದ 4 ಜನ ಅಂತರ್ ರಾಜ್ಯ ಕಳ್ಳಸಾಗಾಣಿಕೆದಾರರಾದ 1] ಶೇಖ್ ಷಾವಲೀ @ ಮುನ್ನಾ ಬಿನ್ ಷಾಷಾವಲಿ , 28ವರ್ಷ, ಮುಸ್ಲಿಂ ಜನಾಂಗ, ಡ್ರೈವರ್ ಕೆಲಸ, ನಂ:13/184/52, ಎಂ.ಜಿ.ಕಾಲೋನಿ, ವಾರ್ಡ್ ನಂಬರ್: 13, ಅನಂತಪುರ ಟೌನ್. ಆಂಧ್ರಪ್ರದೇಶ ರಾಜ್ಯ, 2] ನಾಗೀರೆಡ್ಡಿ ಶ್ರೀನಿವಾಸಲು ರೆಡ್ಡಿ ಬಿನ್ ವೆಂಕಟಸುಬ್ಬಾರೆಡ್ಡಿ, 21 ವರ್ಷ, ವ್ಯವಸಾಯ, ಕಾಪು ಜನಾಂಗ, ನಂ: 10/25/ಎ, ರೆಡ್ಡಿವಾರಿಪಲ್ಲಿ, ಇಟ್ರಂಪೇಟಾ, ಮುನ್ನೇಲಿ, ಬಿಕೋಡೂರು ತಾಲ್ಲೂಕು, ಕಡಪ ಜಿಲ್ಲೆ, ಆಂಧ್ರಪ್ರದೇಶ ರಾಜ್ಯ, 3] ಕಾಕರ್ಲ ಅಮೀರ್ ಬಾಷಾ ಬಿನ್ ನಾಗೋರ್, 24ವರ್ಷ, ಮುಸ್ಲಿಂ ಜನಾಂಗ, ನಂ: 11/27, ಸಿರಿಗಿರಿಪಲ್ಲಿ, ಮುನ್ನೇಲಿ, ಬಿಕೋಡೂರು ತಾಲ್ಲೂಕು, ಕಡಪ ಜಿಲ್ಲೆ, ಆಂಧ್ರಪ್ರದೇಶ ರಾಜ್ಯ, 4] ಜಿ.ಚರಣ್ ಕುಮಾರ್ ಬಿನ್ ಜಿ.ಮುರುಳಿಧರ್, 24ವರ್ಷ, ಬ್ರಾಹ್ಮಣ ಜನಾಂಗ, ಪದವಿ ವಿದ್ಯಾರ್ಥಿ, ನಂ:4/2/1, ಸೋಮನಾಥನಗರ್, ಅನಂತಪುರ ಟೌನ್, ಆಂಧ್ರಪ್ರದೇಶ ರಾಜ್ಯ ಎಂಬ ಕಳ್ಳಸಾಗಾಣಿಕೆ ಗಾರರನ್ನು ಕ್ಯಾತ್ಸಂದ್ರ ವೃತ್ತದ ಸಿ.ಪಿ.ಐ. ರಾಮಕೃಷ್ಣಯ್ಯ ಸಿ.ಹೆಚ್.ರವರ ನಿರ್ದೇಶನದಂತೆ ಹಾಗೂ ತುಮಕೂರು ಉಪವಿಭಾಗದ ಪ್ರಭಾರ ಡಿ.ವೈ.ಎಸ್.ಪಿ. ಸಾಹೇಬರಾದ ಶ್ರೀ ಧರ್ಮೇಂಧ್ರ ಹೆಚ್.ಎನ್. ಮತ್ತು ತುಮಕೂರು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರವರಾದ ಡಾ: ಶೋಭಾರಾಣಿ ಕೆ.ಎಸ್.ಪಿ.ಎಸ್. ಹಾಗೂ ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರವರಾದ ಡಾ:ದಿವ್ಯಾ ವಿ.ಗೋಪಿನಾಥ್, ಐ.ಪಿ.ಎಸ್. ರವರ ಮಾರ್ಗದರ್ಶನದಲ್ಲಿ ಆರೋಪಿಗಳನ್ನು ಮಾಲು ಸಮೇತವಾಗಿ ವಶಕ್ಕೆ ಪಡೆದು ದಸ್ತಗಿರಿ ಮಾಡಿದ್ದು ಇವರುಗಳಿಂದ ಸುಮಾರು 01 ಲಕ್ಷ ರೂ ಮೌಲ್ಯದ ರಕ್ತ ಚಂದನದ ಮರದ ತುಂಡುಗಳನ್ನು ಹಾಗೂ 6 ಲಕ್ಷ ರೂ ಮೌಲ್ಯದ AP-22-Y-1641 TOYOTA INNOVA ಕಂಪನಿಯ ಕಾರನ್ನು ವಶಪಡಿಸಿಕೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ತುಮಕೂರು ಜಿಲ್ಲಾ ಎಸ್.ಪಿ.ಸಾಹೇಬರವರು ಅಭಿನಂದಿಸಿರುತ್ತಾರೆ.


Crime Incidents 20-09-17

ಚೇಳೂರು ಪೊಲೀಸ್ ಠಾಣಾ ಮೊ. ನಂ 146/2017 ಕಲಂ 143.147.188.341.323.504.506.353. ರೆ/ವಿ 149 .ಪಿ.ಸಿ

ದಿನಾಂಕ; 19/09/2017  ರಂದು  ಮದ್ಯಾಹ್ನ  2-00   ಗಂಟೆಗೆ   ಪಿರ್ಯಾಧಿ  ಪ್ರಭಾಕರ್ ರವರು  ಠಾಣೆಗೆ  ಹಾಜರಾಗಿ  ನೀಡಿದ  ಪಿರ್ಯಾದು ಅಂಶವೇನಂದರೆ, ನಾನು  ಈಗ್ಗೆ  ಸುಮಾರು 01  ವರ್ಷಗಳಿಂದ  ಕೆಲಸ   ನಿರ್ವಹಿಸುತ್ತಿರುತ್ತೇನೆ.   ಪ್ರಸ್ತುತ ವರ್ಷದ ಬರಗಾಲದ ಪರಿಸ್ಥಿತಿಯಲ್ಲಿ, ವ್ಯವಸಾಯ ಹಾಗೂ ಕುಡಿಯುವ ನೀರಿನ ಪೂರೈಕೆಯ ಬಗ್ಗೆ ಮಾನ್ಯ ತುಮಕೂರು  ಜಿಲ್ಲಾಧಿಕಾರಿಗಳ  ಸಮ್ಮುಖದಲ್ಲಿ  ಹೇಮಾವತಿ ನದಿ ವ್ಯಾಪ್ತಿಗೆ ಒಳಪಡುವ ಪ್ರದೇಶಗಳ  ಸರ್ಕಾರಿ  ಅಧಿಕಾರಿಗಳ ಸಭೆ ಜರುಗಿರುತ್ತದೆ, ಈ ಸಭೆಯಲ್ಲಿ ಕುಡಿಯುವ ನೀರಿಗೆ ಪ್ರಥಮ ಆದ್ಯತೆ ನೀಡಲಾಗಿತ್ತು, ಅಂತೆಯೇ , ಮೊದಲಿಗೆ  ತುಮಕೂರು  ಬುಗುಡನಹಳ್ಳಿ  ಕೆರೆಗೆ  ನೀರನ್ನು ಹರಿಸಿ ,  ನಂತರ   ಕುಣಿಗಲ್  ಕೆರೆಗೆ  ನೀರನ್ನು ಹರಿಸಲಾಗುತ್ತಿದೆ. ಚೇಳೂರು ಹಾಗೂ ಅಕ್ಕ- ಪಕ್ಕದ  ವ್ಯಾಪ್ತಿಯ   ಕೆರೆಗಳಿಗೆ ಕುಡಿಯುವ ನೀರನ್ನು ಹರಿಸುವ ಪ್ರಸ್ತಾಪ ವಿರುತ್ತದೆ, ಸದರಿ  ಸಭೆಯಲ್ಲಿ ಮಾನ್ಯ  ತುಮಕೂರು   ಜಿಲ್ಲಾಧಿಕಾರಿಯವರು   ಹೇಮಾವತಿ  ನಾಲೆ  ಹರಿಯುವ  ಎಲ್ಲಾ  ಎಸ್ಕೇಪ್  ಮತ್ತು  ತೂಬ್  ಗಳನ್ನು  ವೆಲ್ಡ್  ಮಾಡಿ  ನೀರನ್ನು  ಮುಂದೆ  ಹರಿಸಲು  ಆದೇಶ  ಮಾಡಿದ್ದು,  ಹೇಮಾವತಿ  ನಾಲೆಯ  ಅಕ್ಕ- ಪಕ್ಕ  100 ಮೀಟರ್  ಅಂತರದಲ್ಲಿ  ಕಲಂ 144  ಸಿ.ಆರ್.ಪಿ.ಸಿ  ರೀತ್ಯ  ನಿಷೇದಾಜ್ಞೆಯನ್ನು  ಜಾರಿ  ಮಾಡಿದ್ದು, ಅದರಂತೆ   ದಿನಾಂಕ; 31/08/2017 ರಂದು  ಚೇಳೂರು ಹೇಮಾವತಿ  ನಾಲಾ  ವಿತರಣಾ  ಉಪ  ವಿಭಾಗದ   ಹೇಮಾವತಿ  ನಾಲೆಯಲ್ಲಿ  ಬರುವ   ಎಲ್ಲಾ ಎಸ್ಕೇಪ್  ಮತ್ತು  ತೂಬ್ ಗಳನ್ನು ಸಂಪೂರ್ಣವಾಗಿ  ಬಂದ್  ಮಾಡಿಕೊಂಡು   ಬರುತ್ತಿರುವಾಗ್ಗೆ   ಗುಬ್ಬಿ  ತಾಲ್ಲೋಕ್, ನಿಟ್ಟೂರು  ಹೋ,   ಸೋಮಲಾಪುರ  ಗ್ರಾಮದ  ಸಮೀಪ   ಸೋಮಲಾಪುರ  ಗ್ರಾಮದ  ಕೆರೆಗೆ  ಹೋಗುವ  ನೇರ  ತೂಬ್ ಅನ್ನು   ನಾನು  ಮತ್ತು  ನನ್ನ  ಸಿಬ್ಬಂದಿಯವರಾದ   ಸಹಾಯಕ  ಇಂಜಿಯರ್  ನಾಗಭೂಷಣ್ , ಕೆ.ಇ.ಬಿ. ಅಧಿಕಾರಿಗಳು  , ಮಾನ್ಯ  ಗುಬ್ಬಿ    ವೃತ್ತ  ನಿರೀಕ್ಷಕರು,  ಚೇಳೂರು  ಪೊಲೀಸ್  ಠಾಣೆಯ  ಸಬ್ ಇನ್ಸ್  ಪೆಕ್ಟರ್  ರವರು ,  ಮತ್ತು  ಅವರ  ಸಿಬ್ಬಂದಿಯೊಂದಿಗೆ  ನಾವು  ಸೋಮಲಾಪುರ  ಗ್ರಾಮದ  ಕೆರೆಗೆ  ಬರುವ  ನೇರ  ತೂಬ್ ಅನ್ನು  ವೆಲ್ಡ್  ಮಾಡಿಸುತ್ತಿರುವಾಗ್ಗೆ   ಬೆಳಗ್ಗೆ ಸುಮಾರು 11-00  ಗಂಟೆ   ಸಮಯದಲ್ಲಿ  ಹೇಮಾವತಿ  ನಾಲೆಯ  ಅಕ್ಕ- ಪಕ್ಕ  100 ಮೀಟರ್  ಅಂತರದಲ್ಲಿ  ಕಲಂ 144  ಸಿ.ಆರ್.ಪಿ.ಸಿ  ರೀತ್ಯ  ನಿಷೇದಾಜ್ಞೆಯನ್ನು  ಜಾರಿ  ಮಾಡಿದ್ದರು ಸಹ  ಸೋಮಲಾಪುರದ  ಮತ್ತು  ಅಕ್ಕ- ಪಕ್ಕದ  ಗ್ರಾಮದ   ಸುಮಾರು 25 ರಿಂದ 30  ಜನ  ಗ್ರಾಮಸ್ಥರುಗಳು  ಬಂದು  ಇದು  ಕುಡಿಯುವ  ನೀರಿಗೆ   ಮಂಜೂರಾಗಿದ್ದು,  ಈ ತೂಬನ್ನು  ನೀವು  ಏಕೆ  ಮುಚ್ಚುತ್ತೀರಾ  ಎಂದು  ಕೇಳುತ್ತಿರುವಾಗ್ಗೆ  ಸೋಮಲಾಪುರ  ಗ್ರಾಮದ  ವಾಸಿ   ಚಲುವರಾಜು  ಬಿನ್  ಚನ್ನಕೇಶವಯ್ಯ   ಎಂಬುವನು   ಆಕಸ್ಮಿಕವಾಗಿ  ಹೇಮಾವತಿ  ನಾಲೆಯಲ್ಲಿ  ಹರಿಯುತ್ತಿದ್ದ  ನೀರಿಗೆ  ಬಿದ್ದು  ಮೃತಪಟ್ಟು,   ಹೇಮಾವತಿ  ನೀರಿನಲ್ಲಿ  ಮೃತ  ದೇಹವು  ಮುಳುಗಿದ್ದು,  ಈ  ವಿಚಾರವನ್ನು  ಇಟ್ಟುಕೊಂಡು  ಅಲ್ಲಿ  ಸೇರಿದ್ದ   ಸೀಬೆಗೌಡ  (  ಪಟೇಲ),  ಹಾಗೂ  ಇತರೆಯವರು  ನೀವು  ನಮ್ಮ  ತೂಬನ್ನು  ಮುಚ್ಚಲು  ಬಂದು  ಅನವಶ್ಯಕವಾಗಿ   ಚಲುವರಾಜನನ್ನು   ಬಲಿ ತೆಗೆದುಕೊಂಡಿರುತ್ತೀರಾ  ನಿಮ್ಮಗಳನ್ನು  ಈ ದಿವಸ  ಬಿಡುವುದಿಲ್ಲ, ಎಂದು  ನಮ್ಮಗಳ  ಜೀಪುಗಳ  ಟೈರ್ ಗಳ  ಗಾಳಿಯನ್ನು  ಬಿಟ್ಟು   ಈ  ನನ್ನ ಮಕ್ಕಳನ್ನು  ಹಿಡಿದುಕೊಂಡು   ಇದೇ ಚಾನಲ್ ಗೆ  ಎತ್ತಿ  ಹಾಕಿರೋ  ಎಂದು  ನನ್ನನ್ನು  ಎಲ್ಲಾರೂ  ಸೇರಿಕೊಂಡು   ಕೈಗಳಿಂದ  ಹೊಡೆದರು.  ಅಷ್ಟರಲ್ಲಿ  ಪೋಲೀಸ್   ಸಿಬ್ಬಂದಿಯವರು  ಬಂದು  ಸಮಾಧಾನ  ಮಾಡಿದರು  ಅಷ್ಟರಲ್ಲಿ   ಸುಮಾರು 500  ರಿಂದ 600  ಜನರು  ಸೇರಿಕೊಂಡು   ಚೇಳೂರು-  ನಿಟ್ಟೂರು   ರಸ್ತೆಯನ್ನು  ಸೋಮಲಾಪುರ  ಗ್ರಾಮದ   ಬಳಿ  ಬಂದ್   ಮಾಡಿ   ಬಸ್ ನಿಲ್ದಾಣದ  ಮುಂಭಾಗ  ಕಟ್ಟಿಗೆ  ಮತ್ತು  ಟೈರ್ ಗಳನ್ನು  ಹಾಕಿ  ಬೆಂಕಿಯನ್ನು  ಇಟ್ಟು   ಸಾರ್ವಜನಿಕರ  ವಾಹನಗಳ  ಸಂಚಾರಕ್ಕೆ  ತಡೆಯುಂಟುಮಾಡಿರುತ್ತಾರೆ.  ಈ  ವಿಚಾರ ಮಾನ್ಯ  ಜಿಲ್ಲಾಧಿಕಾರಿಯವರಿಗೆ  ಮತ್ತು  ಮಾನ್ಯ  ತುಮಕೂರು  ಪೊಲೀಸ್  ವರಿಷ್ಠಾಧಿಕಾರಿರವರಿಗೆ  ತಿಳಿದು  ಸ್ಥಳಕ್ಕೆ   ಆಗಮಿಸಿ  ಜನರ  ಹತ್ತಿರ   ಸಂದಾನ  ಮಾಡುಲು  ಹೋದಾಗ  ಅಕ್ರಮ  ಗುಂಪುಕಟ್ಟಿಕೊಂಡು ಪ್ರತಿ ಭಟನೆ  ಮಾಡುತ್ತಿದ್ದ ಜನರು  ಡಿ.ಸಿ ಸಾಹೇಬರವರನ್ನು  ಮತ್ತು  ಎಸ್.ಪಿ  ಮೇಡಂರವರನ್ನು   ಅವ್ಯಾಚ್ಯ  ಶಬ್ದಗಳಿಂದ  ಬೈದಿರುತ್ತಾರೆ.   ಮಾನ್ಯ  ತುಮಕೂರು  ಜಿಲ್ಲಾ  ಪೊಲೀಸ್ ಅದೀಕ್ಷಕರವರು  ಮೃತ  ಚಲುವರಾಜುರವರ  ಸಂಬಂದಿಕರನ್ನು   ಸಮಾಧಾನ  ಪಡಿಸಲು   ಹೋದಾಗ  ಸೋಮಲಾಪುರ  ಗ್ರಾಮ,  ಪಾರ್ವತಮ್ಮ ,  ರೇಣುಕಮ್ಮ ,  ಶಾರದಮ್ಮ  ಚೇಳೂರು ಗ್ರಾಮ ಪಂಚಾಯ್ತಿ ಅದ್ಯಕ್ಷೆ,  ರವರುಗಳು  ಮಾನ್ಯ  ಜಿಲ್ಲಾ  ಪೊಲೀಸ್  ವರಿಷ್ಟಾಧಿಕಾರಿಗಳನ್ನು  ಹಿಡಿದುಕೊಂಡು    ನೂಕಿ  ತಳಾಡಿದರು,  ಇದಕ್ಕೆಲ್ಲಾ  ಕಾರಣರಾದ  ಹೇಮಾವತಿ  ಚಾನಲ್ ನ ಅಧಿಕಾರಿಗಳು  ಪುನಃ  ಈ  ತೂಬನ್ನು  ಮುಚ್ಚಲು  ಬಂದರೆ  ನಿಮ್ಮನ್ನು  ಕೊಲೆ  ಮಾಡಿ  ಇದೇ  ಚಾನಲ್  ಗೆ  ಎಸೆಯುತ್ತೇವೆ .  ಎಂದು  ಪ್ರಾಣ ಬೆದರಿಕೆ  ಹಾಕಿದರು.   ಈ  ಗಲಾಟೆಯಲ್ಲಿ  ಸೋಮಲಾಪುರ  ಗ್ರಾಮದ   ಸೀಬೆಗೌಡ (  ಪಟೇಲ್ )   ಮುಂದಾಳತ್ವ ವನ್ನು  ವಹಿಸಿಕೊಂಡಿದ್ದು,  ಇವರ  ಜೊತೆಯಾಗಿ   ಸೋಮಲಾಪುರ ಗ್ರಾಮದ  ,ಕುಮಾರಸ್ವಾಮಿ, ದಿಲೀಪ್,  ರಂಗಸ್ವಾಮಿ,   ಉಲ್ಲೇಕೆರೆ ಪಾಳ್ಯದ  ಉದಯ,  ತಿಪ್ಪೂರು  ಗ್ರಾಮದ  ವಾಸಿ  ಸಂತೋಷ (  ಮಂಡಿ ವ್ಯಾಪಾರಿ)   ಚೇಳೂರು  ಗ್ರಾಮದ,   ಮೋಹನ್  ಕುಮಾರ  ಬಿನ್  ಚಿಕ್ಕ ಸಿದ್ದಪ್ಪ,  ಮತ್ತು ಶಾರದಮ್ಮ ,    ಹೊಸಹಳ್ಳಿ ಗ್ರಾಮ  ಸಿದ್ದರಾಮ, ಬೆಟ್ಟದಹಳ್ಳಿ  ಗ್ರಾಮದ  ಪರಮೇಶ್ , ಬಸವರಾಜು  ಬಿನ್  ಮಲ್ಲಯ್ಯ, ಮಲ್ಲೇನಹಳ್ಳಿ  ಗ್ರಾಮ,  ಹಾಗೂ  ಇತರೆಯವರು 100 ರಿಂದ 150  ಜನರು  ಸೇರಿಕೊಂಡು   ಈ  ಗಲಾಟೆಯನ್ನು  ಮಾಡಿ  ನಮ್ಮಗಳನ್ನು  ಮತ್ತು  ಕೆ.ಇ.ಬಿ. ಅಧಿಕಾರಿಗಳನ್ನು  ಮತ್ತು  ಪೊಲೀಸಿನವರನ್ನು  ಸರ್ಕಾರಿ  ಕೆಲಸವನ್ನು  ಮಾಡಲು  ಬಿಡದೆ  ಅಡ್ಡಿಪಡಿಸಿ,  ಅವ್ಯಾಚ್ಯ  ಶಬ್ದಗಳಿಂದ  ಬೈದು ನನ್ನನ್ನು  ಕೈಗಳಿಂದ  ಹೊಡೆದು,  ಕೊಲೆ  ಬೆದರಿಕೆ  ಹಾಕಿರುತ್ತಾರೆ.  ಈ  ವಿಚಾರವನ್ನು   ನಮ್ಮ  ಮೇಲಾಧಿಕಾರಿಗಳಿಗೆ  ತಿಳಿಸಿ   ಸದರಿ  ಚಾನಲ್ ನಲ್ಲಿ  ನೀರು  ಹರಿಯುತ್ತಿದ್ದರಿಂದ ,  ಈಗ  ಪಿರ್ಯಾದು  ನೀಡಿದರೆ ,   ಕೆಲಸ  ನಿರ್ವಹಿಸಲು  ತೊಂದರೆಯಾಗುತ್ತದೆ.   ಹಾಗಾಗಿ  ನೀರು  ನಿಲ್ಲಿಸುವ  ಸಮಯದಲ್ಲಿ   ದೂರು  ನೀಡುವಂತೆ   ಮೌಖಿಕವಾಗಿ   ಸೂಚನೆ ನೀಡಿದ್ದು,    ಅವರು  ಈ ದಿನ ಚೇಳೂರು  ಪೊಲೀಸ್  ಠಾಣೆಗೆ  ದೂರು  ನೀಡುವಂತೆ   ತಿಳಿಸಿದರ  ಮೇರೆಗೆ  ಈ  ದಿನ  ತಡವಾಗಿ  ಬಂದು  ದೂರು  ನೀಡಿರುತ್ತೇನೆ.   ಮೇಲ್ಕಂಡವರ  ಮೇಲೆ  ಕಾನೂನು  ರೀತ್ಯ  ಕ್ರಮ  ಜರುಗಿಸಲು  ಕೋರಿ ಇತ್ಯಾದಿಯಾದ  ಪಿರ್ಯಾದು ಅಂಶ


Page 1 of 3
Start
Prev
1

Report a Crime


Tumkur Police App

Helpline Contacts

POLICE
100
POLICE CONTROL ROOM
0816-2278000
AMBULANCE
108
FIRE BRIGADE
101
BESCOM HELPLINE
1912
SENIOR CITIZEN HELPLINE
1090
WOMEN HELPLINE
1091
CHILD HELPLINE
1098
SP OFFICE
0816-2275451
ADDITIONAL SP
0816-2274130
DEPUTY COMMISSIONER
0816-2272480
DISTRICT GENERAL HOSPITAL
0816-2278377
DISTRICT RTO OFFICE
0816-2278473

Gundappa
9448617529

Tilak
9739596920

Nandeesh
9845134445

Pasha
9900089813

Hyder
9980976954


 

Today's Weather

We have 77 guests online
Content View Hits : 166224