lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ 16.01.2018 ವೇಶ್ಯಾವಾಟಿಕೆ ದಂಧೆಗೆ ಮಹಿಳೆಯರ ಸಾಗಾಣಿಕೆ... >> :  ಪತ್ರಿಕಾ ಪ್ರಕಟಣೆ  : ತುಮಕೂರು ನಗರದ ದೊಂತಿ ಏಜೇನ್ಸಿಯಲ್ಲಿ ಸಿಗರೇಟ್ ಕಳವು ಮಾಡಿದ... >> ಠಾಣಾ  ದಾಖಲಾತಿಗಳ ನಿರ್ವಹಣೆ ಕಾರ್ಯಗಾರ ದಿನಾಂಕ 13/1/2018           >> -:  ಪತ್ರಿಕಾ ಪ್ರಕಟಣೆ.  :-   ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ.ನಂ: 301/2017 ಕಲಂ 457, 380... >> >> -: ದಿನಾಂಕ : 19 -12 -17  :- :  ಪತ್ರಿಕಾ ಪ್ರಕಟಣೆ : ಕೋಮು ಪ್ರಚೋದನಕಾರಿ ಹೇಳಿಕೆಗಳ... >> ಪತ್ರಿಕಾ ಪ್ರಕಟಣೆ :: ದಿನಾಂಕ 12-12-2017  :: ತುಮಕೂರು ನಗರದಲ್ಲಿ ಮೂಲ ಆ.ಐ. ಸ್ಮಾಟ್‌ ಕಾರ್ಡಗಳ... >> ಪತ್ರಿಕಾ ಪ್ರಕಟಣೆ : ದಿನಾಂಕ:-05-12-2017 : ಚಾಳಿಬಿದ್ದ ಅಪರಾಧಿಗಳಿಂದ ಸುಮಾರು ಒಟ್ಟು 5, 00, 100/- ರೂ... >> ತುಮಕೂರು ಜಿಲ್ಲಾ ಪೊಲೀಸ್ ಪತ್ರಿಕಾ ಪ್ರಕಟಣೆ   ತುಮಕೂರು ನಗರದಲ್ಲಿ ಒಂಟಿಯಾಗಿ... >>   New BEAT BEST STAFF AND BEST CRIME DETECTION BEST STAFF >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< August 2017 >
Mo Tu We Th Fr Sa Su
  1 2 3 4 5 6
7 8 9 10 11 12 13
14 15 16 17 18 19 20
21 22 23 24 25 26 27
28 29 30 31      
August 2017

Thursday, 31 August 2017

Crime Incidents 31-08-17

ಚೇಳೂರು ಪೊಲೀಸ್ ಠಾಣಾ ಮೊ.ನಂ:135 /2017 ಕಲಂ. 457.380 .ಐ.ಪಿ.ಸಿ

ದಿನಾಂಕ;30/08/2017  ರಂದು   ಸಂಜೆ 7-00  ಗಂಟೆಗೆ  ಪಿರ್ಯಾದಿ ತಿಪ್ಪೇಸ್ವಾಮಿರವರು  ಠಾಣೆಗೆ  ಹಾಜರಾಗಿ  ನೀಡಿದ  ಪಿರ್ಯಾದು ಅಂಶವೇನಂದರೆ,   ನಾನು  ಈಗ್ಗೆ   02  ವರ್ಷಗಳಿಂದ  ಗುಬ್ಬಿ  ತಾಲ್ಲೋಕ್ ನಲ್ಲಿ  ಬಿ.ಎಸ್. ಎನ್. ಎಲ್   ಇಲಾಖೆಯ  ಉಪ ವಿಭಾಗಾಧಿಕಾರಿಯಾಗಿ   ಕರ್ತವ್ಯ   ನಿರ್ವಹಿಸುತ್ತಿರುತ್ತೇನೆ.  ಗುಬ್ಬಿ  ತಾಲ್ಲೋಕ್,    ಚೇಳೂರು  ಹೋ,  ಅಂಕಸಂದ್ರ   ಬಳಿ  ಇರುವ  ಬಿ.ಎಸ್.ಎನ್.ಎಲ್  ಮೊಬೈಲ್  ಟವ ರ್  ಇದ್ದು,  ಈ  ಟವರ್  ನ   ಸೆಕ್ಯೂರಿಯನ್ನು  ಹುಬ್ಬಳಿಯ  M K Belawadi contractor   ರವರಿಗೆ  ನೀಡಿದ್ದು,  ಈ ಸೆಕ್ಯೂರಿಟಿ  ಏಜೆನ್ಸಿ  ರವರು  ಶ್ರೀ  ಶಿವರಾಜು  ಮತ್ತು  ಶ್ರೀ ನಾಗರಾಜು ರಾವ್  ರವರನ್ನು   ನೇಮಕ   ಮಾಡಿಕೊಂಡಿರುತ್ತಾರೆ.   ದಿನಾಂಕ; 26/08/2017  ರಂದು  ಬೆಳಗ್ಗೆ  6-15  ಗಂಟೆ  ಸಮಯದಲ್ಲಿ   ನಾನು ಮನೆಯಲ್ಲಿ  ಇದ್ದಾಗ  ಅಂಕಸಂದ್ರ  ಮೊಬೈಲ್  ಟವರ್  ನ ವಾಚ್  ಮತ್ತು  ವಾರ್ಡ್  ಆಗಿ  (watch and ward )  ಆಗಿ  ಕೆಲಸ  ಮಾಡುತ್ತಿರುವ   ಶಿವರಾಜು  ರವರು  ನನಗೆ  ಪೋನ್  ಮಾಡಿ   ದಿನಾಂಕ: 25/08/2017  ರಂದು  ರಾತ್ರಿ 10-00  ಗಂಟೆ  ಸಮಯದಲ್ಲಿ  ನನ್ನ  ಹೆಂಡತಿಗೆ  ಅನಾರೋಗ್ಯದ  ನಿಮಿತ್ತ  ನಾನು ಟವರ್  ನ ವಾಚ್  ಮತ್ತು  ವಾರ್ಡ್    (watch and ward ) ನ   ಕೆಲಸವನ್ನು  ಬಿಟ್ಟು   ನಮ್ಮ  ಊರಿಗೆ  ವಾಪಸ್ಸು  ಹೋಗಿದ್ದು,    ನಾನು  ವಾಪಸ್ಸು  ಕೆಲಸಕ್ಕೆ  ಬರದೇ   ದಿನಾಂಕ; 26/08/2017   ರಂದು  ಬೆಳಗ್ಗೆ  6-00  ಗಂಟೆಗೆ  ಟವರ್   ಬಳಿ  ಬಂದು  ನೋಡಿದೆ   ದಿನಾಂಕ; 25/08/2017  ರಂದು  ರಾತ್ರಿ  ಯಾವುದೋ  ಸಮಯದಲ್ಲಿ  ಯಾರೋ ಕಳ್ಳರು  ಟವರ್   ವೈರ್, ಬ್ಯಾಟರಿಯನ್ನು   ಕಳ್ಳತನ  ಮಾಡಿಕೊಂಡು  ಹೋಗಿರುತ್ತಾರೆ.  ಎಂದು   ತಿಳಿಸಿದನು  ಆಗ  ನಾನು  ಅಂಕಸಂದ್ರ  ಟವರ್  ಬಳಿ  ಬಂದು  ನೋಡಿದೆ.  ದಿನಾಂಕ; 25/08/2017  ರಂದು   ರಾತ್ರಿ  ಕರ್ತವ್ಯದಲ್ಲಿದ್ದ  ಶಿವರಾಜು ಆತನ  ಹೆಂಡತಿಗೆ  ಅನಾರೋಗ್ಯದ  ಕಾರಣ  ಯಾರಿಗೂ  ತಿಳಿಸದೇ, ಆತನ  ಊರಿಗೆ  ಹೋಗಿದ್ದು,  ಕಳ್ಳರು ಟವರ್  ಗೆ  ಸಂಬಂದಿಸಿದ 1) 12 V  180 AH  DG STARTER  BATTRY  2) 120 SQMM COPPER  MULTISTRAND  POWER CABLE – 85 MTRS ( APPROX) 3) 4x16 SQMM COPPER CABLE  17 MTRS ( APPROX)   ಇವುಗಳನ್ನು  ಯಾರೋ  ಕಳ್ಳರು ಕಳವು  ಮಾಡಿಕೊಂಡು  ಹೋಗಿರುತ್ತಾರೆ. ಇವುಗಳ  ಅಂದಾಜು  ಮೌಲ್ಯ  ಸುಮಾರು 95.600=00 ರೂಗಳಾಗಿರುತ್ತವೆ . ಈ  ವಿಚಾರವನ್ನು  ನಮ್ಮ  ಮೇಲಾಧಿಕಾರಿಗಳಿಗೆ  ಮತ್ತು  ಸೆಕ್ಯೂರಿಟಿ   ಏಜೆನ್ಸಿರವರಿಗೆ   ತಿಳಿಸಿ.   ಈ  ದಿನ  ತಡವಾಗಿ   ಬಂದು  ದೂರು  ನೀಡಿರುತ್ತೇನೆ.   ಆದ್ದರಿಂದ  ಮುಂದಿನ  ಕಾನೂನು ರೀತ್ಯ  ಕ್ರಮ  ಜರುಗಿಸಲು  ಕೋರಿ  ಇತ್ಯಾದಿಯಾದ  ಪಿರ್ಯಾದು  ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೆ.   

 Wednesday, 30 August 2017

Crime Incidents 30-08-17

ಅಮೃತೂರು ಪೊಲೀಸ್‌ ಠಾಣಾ ಮೊನಂ-165/2017, ಕಲಂ- 279, 304(ಎ) ಐಪಿಸಿ

 

ದಿನಾಂಕ: 30-08-2017 ರಂದು ಬೆಳಿಗ್ಗೆ 08-30 ಗಂಟೆಯಲ್ಲಿ ಕೆ.ಸಿ.ಶಿವರಾಜು ಬಿನ್ ಲೇಟ್ ಸಿ.ಚನ್ನಯ್ಯ, 46 ವರ್ಷ, ಒಕ್ಕಲಿಗರು, ಜಿರಾಯ್ತಿ, ಕಚ್ಚೋನಹಳ್ಳಿ, ಅಮೃತೂರು ಹೋಬಳಿ, ಕುಣಿಗಲ್ ತಾಲ್ಲೂಕ್ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ ದಿ: 29-08-2017 ರಂದು ನಾನು ಮತ್ತು ಜಿನ್ನಾಗರ ಗ್ರಾಮದ ಬಲರಾಮು ರವರು ನಮ್ಮ ಸ್ವಂತ ಕೆಲಸದ ನಿಮಿತ್ತ ನಮ್ಮ ಬೈಕಿನಲ್ಲಿ ಯಡಿಯೂರಿಗೆ ಹೋಗಿದ್ದು, ನಮ್ಮ ಕೆಲಸ ಮುಗಿಸಿಕೊಂಡು ವಾಪಸ್ ನಮ್ಮೂರಿಗೆ ಹೋಗಲೆಂದು ಮದ್ಯಾಹ್ನ ಸುಮಾರು 2-30 ಗಂಟೆ ಸಮಯದಲ್ಲಿ ಅಗ್ರಹಾರ ಗೇಟ್ ಬಳಿ ಎನ್.ಹೆಚ್-75 ರ ರಸ್ತೆಯಲ್ಲಿ ಹೋಗುತ್ತಿದ್ದಾಗ ನಮ್ಮ ಮುಂದೆ ನಮ್ಮೂರಿನ ನಮ್ಮ ಸಂಬಂದಿಕರಾದ ಕೆ.ಜೆ.ರಾಮಕೃಷ್ಣಪ್ಪ ಬಿನ್ ಲೇಟ್ ಜವರಯ್ಯ ಎಂಬುವವರೂ ಸಹ ತಮ್ಮ ಕೆ.ಎ-06 ಇ.ಯು-8016 ರ ಟಿ.ವಿ.ಎಸ್. ಎಕ್ಸ್.ಎಲ್. ಹೆವಿ ಡ್ಯೂಟಿ ಬೈಕಿನಲ್ಲಿ ರಸ್ತೆಯ ಎಡಪಕ್ಕದಲ್ಲಿ ಹೋಗುತ್ತಿದ್ದು, ಅಗ್ರಹಾರ ಗೇಟ್ ನಲ್ಲಿ ಕೆ.ಜೆ.ರಾಮಕೃಷ್ಣಪ್ಪ ರವರು ಸಿಂಗೋನಹಳ್ಳಿ ಕಡೆಗೆ ಹೋಗಲು ತಮ್ಮ ಬೈಕನ್ನು ಸ್ವಲ್ಪ ಸ್ಲೋ ಮಾಡಿದಾಗ ಅದೇ ಸಮಯಕ್ಕೆ ಹಾಸನ ಕಡೆಯಿಂದ ಬೆಂಗಳೂರು ಕಡೆಗೆ ಹೋಗಲು ಬಂದ ಒಂದು ಶಿಫ್ಟ್ ಕಾರಿನ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದವನೇ ಕೆ.ಜೆ.ರಾಮಕೃಷ್ಣಪ್ಪ ರವರ ಬೈಕಿಗೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದನು. ಈ ಅಪಘಾತದಿಂದ ಕೆ.ಜೆ.ರಾಮಕೃಷ್ಣಪ್ಪ ರವರು ಬೈಕ್ ಸಮೇತ ರಸ್ತೆಯ ಮೇಲೆ ಬಿದ್ದರು. ತಕ್ಷಣ ನಾವು ನಮ್ಮ ಬೈಕನ್ನು ರಸ್ತೆಯ ಪಕ್ಕಕ್ಕೆ ನಿಲ್ಲಿಸಿ ಹೋಗಿ ನೋಡಲಾಗಿ, ಕೆ.ಜೆ.ರಾಮಕೃಷ್ಣಪ್ಪ ರವರಿಗೆ ತಲೆಗೆ, ಮುಖಕ್ಕೆ, ಮೈಕೈಗೆ ಪೆಟ್ಟುಗಳು ಬಿದ್ದು ರಕ್ತಗಾಯಗಳಾಗಿದ್ದವು. ಈ ಅಪಘಾತಪಡಿಸಿದ ಕಾರಿನ ನಂಬರ್ ನೋಡಲಾಗಿ ಕೆ.ಎ-40 ಎಂ-2184 ರ ಮಾರುತಿ ಶಿಫ್ಟ್ ಕಾರಾಗಿತ್ತು. ನಂತರ ಅಲ್ಲಿಗೆ ಬಂದ ಸಾರ್ವಜನಿಕರ ಸಹಾಯದಿಂದ ಕೆ.ಜೆ.ರಾಮಕೃಷ್ಣಪ್ಪ ರವರನ್ನು ಉಪಚರಿಸಿ, 108 ಅಂಬ್ಯೂಲೆನ್ಸ್ ನಲ್ಲಿ ಚಿಕಿತ್ಸೆಗಾಗಿ ಬೆಳ್ಳೂರಿನ ಎ.ಸಿ.ಗಿರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದೆವು. ನಂತರ ಅಲ್ಲಿಯ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಯಶವಂತಪುರದಲ್ಲಿರುವ ಸ್ಪರ್ಷ ಆಸ್ಪತ್ರೆಗೆ ಅಂಬ್ಯೂಲೆನ್ಸ್ ನಲ್ಲಿ ಕರೆದುಕೊಂಡು ಹೋಗಿ ದಾಖಲು ಮಾಡಿದೆವು. ಸ್ಪರ್ಷ ಆಸ್ಪತ್ರೆಯಲ್ಲಿ ಕೆ.ಜೆ.ರಾಮಕೃಷ್ಣಪ್ಪ ರವರು ಚಿಕಿತ್ಸೆ ಪಡೆಯುತ್ತಿರುವಾಗ್ಗೆ, ಚಿಕಿತ್ಸೆ ಫಲಕಾರಿಯಾಗದೆ ಅದೇ ದಿನ ರಾತ್ರಿ ಸುಮಾರು 11-00 ಗಂಟೆ ಸಮಯದಲ್ಲಿ ಮೃತಪಟ್ಟಿರುತ್ತಾರೆ. ಈ ಬಗ್ಗೆ ನಮ್ಮ ಸಂಬಂಧಿಕರಿಗೆ ವಿಚಾರ ತಿಳಿಸಿ ಈಗ ಬಂದು ದೂರು ನೀಡುತ್ತಿದ್ದೇನೆ. ಮೃತ ಕೆ.ಜೆ.ರಾಮಕೃಷ್ಣಪ್ಪ ರವರ ಶವವು ಸ್ಪರ್ಷ ಆಸ್ಪತ್ರೆಯಲ್ಲಿಯೇ ಇರುತ್ತೆ. ಆದ್ದರಿಂದ ಈ ಅಪಘಾತಕ್ಕೆ ಕಾರಣನಾದ ಕೆ.ಎ-40 ಎಂ-2184 ರ ಮಾರುತಿ ಶಿಫ್ಟ್ ಕಾರಿನ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕೆಂದು ಕೋರುತ್ತೇನೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿರುತ್ತೆ.

ಹುಲಿಯೂರುದುರ್ಗ ಪೊಲೀಸ್‌ ಠಾಣಾ ಹುಲಿಯೂರುದುರ್ಗ ಪೊಲೀಸ್‌ ಠಾಣಾ; ಮೊ ನಂ;180/2017 ಕಲಂ;279,304(ಎ), ಐಪಿಸಿ ಜೊತೆಗೆ ಕಲಂ;122,177 ಐ ಎಂ ವಿ ಆಕ್ಟ್

ದಿನಾಂಕ;29/08/2017 ರಂದು ಬೆಳಿಗ್ಗೆ 6-30 ಗಂಟೆಗೆ ಕುಣಿಗಲ್ ತಾಲ್ಲೊಕ್, ದೊಡ್ಡಮಾವತ್ತೂರು ಗ್ರಾಮದ ವಾಸಿಯಾದ ಲೇಟ್ ಬಾಸ್ಕರಚಾರಿ ರವರ ಮಗನಾದ ಶ್ರೀನಿವಾಸ್ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನಂಶವೇನೆಂದರೆ ದಿನಾಂಕ;28/08/2017 ರಂದು ಪಿರ್ಯಾದಿ ತಮ್ಮ ತೋಟಕ್ಕೆ ಹೋಗಿದ್ದು ವಾಪಸ್ ಮನೆಗೆ ಹೋಗಲೆಂದು ರಾತ್ರಿ ಸುಮಾರು 11-00 ಗಂಟೆ ಸಮಯದಲ್ಲಿ ಹಳೆಮಾವಿನತೊರೆ ಬ್ರಿಡ್ಜ್ ಬಳಿ ನಡೆದುಕೊಂಡು ಬರುತ್ತಿರಬೇಕಾದರೆ ಅದೇ ಸಮಯಕ್ಕೆ ಒಬ್ಬ ಲಾರಿ ಚಾಲಕ ತನ್ನ ಲಾರಿಯನ್ನು ಕುಣಿಗಲ್-ಮದ್ದೂರು ಮುಖ್ತಯ ರಸ್ತೆಯ ಮದ್ಯಭಾಗದಲ್ಲಿ ಯಾವುದೇ ಇಂಡಿಕೇಟರ್, ಸಿಗ್ನಲ್ ಹಾಕದೇ ಯಾವುದೇ ಮುಂಜಾಗ್ರತಕ್ರಮ ವಹಿಸದೆ ತನ್ನ ಲಾರಿಯನ್ನು ರಸ್ತೆ ಮದ್ಯದಲ್ಲಿ ನಿಲ್ಲಿಸಿದ್ದ ಪರಿಣಾಮ ಕುಣಿಗಲ್ ಕಡೆಯಿಂದ ಹುಲಿಯೂರುದುರ್ಗ ಕಡೆಗೆ ಹೋಗಲು ಬರುತ್ತಿದ್ದ ದ್ವಿಚಕ್ರವಾಹನದ ಚಾಲಕನಿಗೆ ಸದರಿ ಲಾರಿ ಕಾಣದ ಪರಿಣಾಮ ಲಾರಿಯ ಹಿಂಭಾಗಕ್ಕೆ ದ್ವಿಚಕ್ರವಾಹನ ಡಿಕ್ಕಿಯಾಗಿ ಅಪಘಾತ ಸಂಭವಿಸಿದ್ದು, ತಕ್ಷಣ ಪಿರ್ಯಾದಿಯು ಹೋಗಿ ದ್ವಿಚಕ್ರವಾಹನದ ಸವಾರನನ್ನು ಉಪಚರಿಸಿ ಹೆಸರು ವಿಳಾದ ಕೇಳಲಾಗಿ ಶ್ರೀನಿವಾಸ ಬಿನ್ ನಾಗರಾಜಚಾರ್, 25ವರ್ಷ, ಕಾರ್ಪೆಂಟರ್ ಕೆಲಸ, ರಮಣಬ್ಕಾಕ್, ಮದ್ದೂರು ರಸ್ತೆ, ಕುಣಿಗಲ್ ವಾಸಿ ಎಂದು ತಿಳಿಸಿದ್ದು, ನಂತರ ಪಿರ್ಯಾದಿ ಲಾರಿಯ ನಂಬರ್ ನೋಡಲಾಗಿ ಎಂ.ಹೆಚ್-12-ಕ್ಯೂ-9593  ಆಗಿದ್ದು, ಹಾಗೂ ದ್ವಿಚಕ್ರವಾಹನಕ್ಕೆ ನಂಬರ್ ಪ್ಲೇಟ್ ಇಲ್ಲದಿದ್ದು ಇಂಜಿನ್ ನಂಬರ್ ಜೆ ಎಫ್‌ 39ಇಯು1088077 ಆಗಿದ್ದು ಹೊಂಡಾ ಡಿಯೋ ಆಗಿರುತ್ತದೆ, ನಂತರ ಪಿರ್ಯಾದಿಯು ಗಾಯಾಳು ಶ್ರೀನಿವಾಸ್ ನನ್ನು ಚಿಕಿತ್ಸೆಗೆಂದು ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾದರೆ ಕುಣಿಗಲ್ ಟೌನ್ ಬಳಿ ಮೃತಪಟ್ಟಿದ್ದು ನಂತರ ಪಿರ್ಯಾದಿಯು ಶ್ರೀನಿವಾಸ್ ರವರ ಸಂಬಂಧಿಕರಿಗೆ ವಿಚಾರ ತಿಳಿಸಿ ಕರೆಸಿಕೊಂಡು ಮೃತ ಶ್ರೀನಿವಾಸ್ ರವರ ಶವವನ್ನು ಕುಣಿಗಲ್ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿರುತ್ತೆ. ಹಾಗೂ ಲಾರಿ ಚಾಲಕನ ಅಜಾಗರೂಕತೆ ಮುಖ್ಯ ಕಾರಣವಾಗಿದ್ದು,  ಸದರಿ ಅಪಘಾತವು ಬ್ರಿಡ್ಜ್ ಮೇಲೆ ಆದ ಕಾರಣ ಯಾವುದೇ ಪುಟ್ ಪಾತ್ ಇರುವುದಿಲ್ಲ ಹಾಗೂ ಲಾರಿಯಲ್ಲಿ ಕಬ್ಬು ತುಂಬಿರುತ್ತೆ, ಆದ್ದರಿಂದ  ಈ ದಿನ ತಡವಾಗಿ ಠಾಣೆಗೆ ಬಂದು ಮೇಲ್ಕಂಡ ಲಾರಿ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕಂತ ನೀಡಿದ ದೂರನ್ನು ಪಡೆದು ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತೆ.

 

ದಂಡಿನಶಿವರ ಪೊಲೀಸ್ ಠಾಣಾ ಮೊ.ನಂ 96/2017 ಕಲಂ 465.468.420. ರೆ/ವಿ 34 .ಪಿ.ಸಿ

ದಿನಾಂಕ 29/08/2017 ರಂದು ಮದ್ಯಾಹ್ನ 04-00 ಗಂಟೆಗೆ ಪಿರ್ಯಾದಿ ಕೆ, ಬಸವಯ್ಯ ಬಿನ್ ಲೇ ಕೊಡಯ್ಯ ರವರು ಠಾಣೆಗೆ ಹಾಜರಾಗಿ ನೀಡಿದ ಪಿರ್ಯಾಧು ಅಂಶವೇನೆಂಧರೆ ನಾನು ಮತ್ತು ನನ್ನ ಹೆಂಡತಿ ಲಕ್ಷ್ಮಿದೇವಮ್ಮ ಇಬ್ಬರ ಹೆಸರಿನಲ್ಲಿ ಅಮ್ಮಸಂದ್ರದ ಎಸ್.ಬಿ,ಎಂ  ಬ್ಯಾಂಕಿನಲ್ಲಿ ಉಳಿತಾಯದ ಜಂಟಿ ಖಾತೆಯನ್ನು 2006 ನೇ ಸಾಲಿನಲ್ಲಿ ಮಾಡಿಸಿದ್ದು. ನಮ್ಮ ಉಳಿತಾಯ ಖಾತೆಯ ಸಂಖ್ಯೆ 64002946357 ಆಗಿರುತ್ತೆ. ಈ ಖಾತೆಗೆ ನಾನು ಹಣವನ್ನು ಜಮಾ ಮಾಡುತ್ತಿದ್ದು, ಪಾಸ್ ಪುಸ್ತಕಕ್ಕೆ ಎಂಟರಿ ಮಾಡಿಸುತ್ತಿದ್ದೆ, ದಿನಾಂಕ 19/07/2017 ರಂದು ಬ್ಯಾಂಕಿಗೆ ಹೋಗಿ ಪಾಸ್ ಪುಸ್ತಕಕ್ಕೆ ಎಂಟರಿ ಮಾಡಿಸಿದಾಗ, 3471=00 ರೂ ಹಣ ಇರುವುದು ಕಂಡು ಬಂತು,ಕೂಡಲೇ ನಾನು ಬ್ಯಾಂಕಿನ ವ್ಯವಸ್ಥಾಪಕರನ್ನು ಬೇಟಿ ಮಾಡಿ ವಿಚಾರ ಮಾಡಲಾಗಿ, ದಿನಾಂಕ 31/03/2016 ರಲ್ಲಿ ನೀವು 2.80.000=00 ರೂ ಹಣವನ್ನು ವಿಥ್ ಡ್ರಾ ಮಾಡಿರುತ್ತೀರಿ ಎಂದು ತಿಳಿಸಿದರು, ಅದಕ್ಕೆ ನಾನು ಯಾವುದೇ ಹಣವನ್ನು ವಿಥ್ ಡ್ರಾ ಮಾಡಿರುವುದಿಲ್ಲವೆಂದು ಮನವಿಯನ್ನು ಸಲ್ಲಿಸಲು ಯತ್ನಿಸಿದಾಗ ಯಾವುದೇ ಮನವಿಯನ್ನು ಸ್ವೀಕರಿಸಿರುವುದಿಲ್ಲ. ಈ ಸಂಬಂಧವಾಗಿ ನಾನು ಬೆಂಗಳೂರಿನ ಎಸ್.ಬಿ,ಐ ಬ್ಯಾಂಕ್ ಮುಖ್ಯ ಕಛೇರಿಗೆ ಹೋಗಿ ಈ ಬಗ್ಗೆ ದೂರು ನೀಡಿದೆ. ಅವರು ಅಮ್ಮಸಂದ್ರದ ಬ್ಯಾಂಕಿಗೆ ಮನವಿಯನ್ನು ಸಲ್ಲಿಸಲು ತಿಳಿಸಿದರು, ಆದರಂತೆ ನಾನು ದಿನಾಂಕ 24/07/2017 ರಂದು ಅಮ್ಮಸಂದ್ರದ ಎಸ್.ಬಿ,ಐ ಬ್ಯಾಂಕಿನ ವ್ಯವಸ್ಥಾಪಕರಿಗೆ ಮನವಿಯನ್ನು ಸಲ್ಲಿಸಿದೆ. ಅವರು ನನಗೆ ದಿನಾಂಕ 31/08/2016 ರಂದು 2.80.000=00 ರೂಗಳನ್ನು ಬ್ಯಾಂಕಿನಲ್ಲಿ ಹಣವನ್ನು ವಿಥ್ ಡ್ರಾ ಮಾಡಿರುವ ಬಗ್ಗೆ ವಿಥ್ ಡ್ರಾ ಲೀಫ್ ನ ಜೆರಾಕ್ಸ್ ಪ್ರತಿಯನ್ನು ನೀಡಿದರು, ಅದರಲ್ಲಿರುವ ಸಹಿ ನನ್ನದಲ್ಲ. ಇದನ್ನೇಲ್ಲಾ ಗಮನಿಸಿದರೆ. ಬ್ಯಾಂಕನವರೆ ನನಗೆ ಮೋಸ ಮಾಡಿರುವುದು ಕಂಡು ಬಂದಿರುತ್ತದೆ. ವ್ಯವಸ್ಥಾಪಕರು ಒಂದು ತಿಂಗಳ ಕಾಲವಕಾಶ ನೀಡಿದ್ದರು, ಒಂದು ತಿಂಗಳ ನಂತರ ಬ್ಯಾಂಕಿಗೆ ಹೋಗಿ ವ್ಯವಸ್ಥಾಪಕನ್ನು ಭೇಟಿ ಮಾಡಿ ವಿಚಾರ ಮಾಡಲಾಗಿ ಸಹಿ ನಿಮ್ಮದೆ ಆಗಿರುತ್ತದೆ ನಾನು ಎನು ಮಾಡಲು ಬರುವುದಿಲ್ಲವೆಂದು ಉಢಾಫೆ ಉತ್ತರ ನೀಡಿರುತ್ತಾರೆ. ಆದ್ದರಿಂದ ದಿನಾಂಕ 31/08/2016 ರಂದು ಕರ್ತವ್ಯ ನಿರ್ವಹಿಸಿರುವ ಮೇಲ್ಕಂಡ ಬ್ಯಾಂಕಿನ ವ್ಯವಸ್ಥಾಪಕರು ಮತ್ತು ಕ್ಯಾಷಿಯರ್, ಸೇರಿ ಅಥವಾ ಬೇರೆಯವರಿಂದಲೋ ನನ್ನ ಸಹಿಯನ್ನು ನಕಲಿ ಮಾಡಿ 2.80.000=00 ರೂ ಹಣವನ್ನು ಮೊಸದಿಂದ ಡ್ರಾ ಮಾಡಿರುತ್ತಾರೆ. ಹಾಲಿ ಬ್ಯಾಂಕ್ ಎಸ್.ಬಿ,ಎಂ ನಿಂದ ಎಸ್.ಬಿ,ಐ ಆಗಿ ಪರಿರ್ವತನೆ ಆಗಿರುತ್ತದೆ. ಆದ್ದರಿಂದ ವ್ಯವಸ್ಥಾಪಕರು ಮತ್ತು ಕ್ಯಾಷಿಯರ್ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕೋರುತ್ತೇನೆ. ದಿನಾಂಕ 31/08/2017 ರಂದು ಬೆಳಿಗ್ಗೆ 11 ರಿಂದ ಸಾಯಂಕಾಲ 04-00 ಗಂಟೆಯ ಮದ್ಯೆ ಈ ಘಟನೆ ನಡೆದಿರುತ್ತದೆ. ಎಂತ ಇತ್ಯಾದಿಯಾಗಿ ನೀಡಿದ ದೂರುನ್ನು ಸ್ವೀಕರಿಸಿ ಈ  ಪ್ರಕರಣ ದಾಖಲಿಸಿರುತ್ತೆ

 

 Tuesday, 29 August 2017

Press Note 29-08-17

:: ಪತ್ರಿಕಾ ಪ್ರಕಟಣೆ ::

ದಿನಾಂಕ: 29.08.2017


ಕೋರ ಪೊಲೀಸ್ ಠಾಣಾ ಮೊ.ನಂ. 154/2017 ಕಲಂ: 379, 511 ಐಪಿಸಿ


ವಸಂತನರಸಾಪುರ ಕೈಗಾರಿಕಾ ಪ್ರದೇಶದ 2ನೇ ಹಂತದಲ್ಲಿ ದಿನಾಂಕ: 24.08.2017 ರ ರಾತ್ರಿ 11-00 ಗಂಟೆಯಲ್ಲಿ 3,60,000-00 ರೂ ಬೆಲೆ ಬಾಳುವ ಅಲ್ಯುಮಿನಿಯಂ ವೈರ್ ಅನ್ನು ಕಟ್ ಮಾಡಿ ಕಳವು ಮಾಡಿದ್ದು, ದಿನಾಂಕ: 25.08.2017 ರಾತ್ರಿ 12-00 ಗಂಟೆ ಸಮಯದಲ್ಲಿ 1,20,000-00 ರೂ ಬೆಲೆ ಬಾಳುವ ಅಲ್ಯುಮಿನಿಯಂ ವೈರನ್ನು ಕಳ್ಳತನ ಮಾಡಲು ಪ್ರಯತ್ನಿಸಿದ್ದ ಆರೋಪಿಗಳನ್ನು ಬಿನ್ನಟ್ಟಿದ್ದು, ಕೆಎ 51 ಸಿ 8968 ನೇ ಟಾಟಾ ಏಸ್ ಅನ್ನು ಅಕ್ಷಯ ಕಾಲೇಜು ಮುಂಭಾಗ ಬಿಟ್ಟು ಓಡಿ ಹೋಗಿದ್ದರು. ಈ ಸಂಬಂದ ಠಾಣಾ ಮೊ.ನಂ. 154/2017 ಕಲಂ: 379, 511 ಐಪಿಸಿ ರೀತ್ಯ ಪ್ರಕರಣ ದಾಖಲಾಗಿರುತ್ತೆ. ಸದರಿ ಪ್ರಕರಣವು ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ನಡೆದಿರುವ ಕೃತ್ಯವಾಗಿದ್ದು, ಈ ಪ್ರಕರಣದಿಂದ ಸದರಿ ಕೈಗಾರಿಕಾ ಪ್ರದೇಶದಲ್ಲಿನ ಪ್ರಮುಖ ಕಂಪನಿಗಳ ಮಾಲೀಕರು ಭಯಬೀತರಾಗಿದ್ದು, ಪೊಲೀಸ್ ಇಲಾಖೆಗೆ ಸವಾಲಾಗಿದ್ದ ಪ್ರಕರಣವಾಗಿತ್ತು.


ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳವರಾದ ಶ್ರೀಮತಿ.ಡಾ.ದಿವ್ಯಾಗೋಪಿನಾಥ್ ಐ.ಪಿ.ಎಸ್ ರವರು ಕಳ್ಳತನ ಪ್ರಕರಣದ ಆರೋಪಿಗಳ ಮತ್ತು ಮಾಲು ಪತ್ತೆಗಾಗಿ ವಿಶೇಷ ಪೊಲೀಸ್ ತಂಡವನ್ನು ತುಮಕೂರು ಗ್ರಾಮಾಂತರ ವೃತ್ತ ನಿರೀಕ್ಷಕರವರಾದ ಶ್ರೀ.ಎ.ಕೆ.ತಿಮ್ಮಯ್ಯರವರ ನೇತೃತ್ವದಲ್ಲಿ ರಚಿಸಿದ್ದರು. ತುಮಕೂರು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ.ಮತಿ.ಶೋಭಾರಾಣಿ ಕೆ.ಎಸ್.ಪಿ.ಎಸ್ ಮತ್ತು ತುಮಕೂರು ನಗರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ.ನಾಗರಾಜು ಕೆ.ಎಸ್.ಪಿ.ಎಸ್ ರವರ ಮಾರ್ಗದರ್ಶನದಲ್ಲಿ ತುಮಕೂರು ಗ್ರಾಮಾಂತರ ವೃತ್ತದ ಸಿಪಿಸಿ ಶ್ರೀ.ಎ.ಕೆ.ತಿಮ್ಮಯ್ಯ, ಕೋರ ಪೊಲೀಸ್ ಠಾಣಾ ಸಬ್ ಇನ್ಸ್ ಪೆಕ್ಟರ್ ರವರಾದ ಶ್ರೀ.ರವಿಕುಮಾರ್.ಸಿ, ಹಾಗೂ ಸಿಬ್ಬಂದಿಗಳಾದ ಶ್ರೀ.ರಾಮಯ್ಯ.ಡಿ.ಸಿ,  ಶ್ರೀ.ಪ್ರಸನ್ನಕುಮಾರ್, ಶ್ರೀ.ನವೀನ್ ಕುಮಾರ್, ಶ್ರೀ.ದಿವಾಕರ್, ಶ್ರೀ.ಮಾಲತೇಶ್, ಶ್ರೀ.ದಿಲೀಪ್ ಕುಮಾರ್ ಮತ್ತು ಶ್ರೀ.ರಂಗನಾಥ್ ರವರನ್ನೊಳಗೊಂಡ ವಿಶೇಷ ಪೊಲೀಸ್ ತಂಡ ಆರೋಪಿಗಳು ಬಿಟ್ಟು ಹೋಗಿದ್ದ ಕೆಎ 51 ಸಿ 8968 ನೇ ಟಾಟಾ ಏಸ್ ವಾಹನದ ಮಾಲೀಕರ ವಿವರದ ಆಧಾರದ ಮೇಲೆ ಈ ದಿನ ದಿನಾಂಕ: 28.08.2017 ರಂದು ಅಂತರರಾಜ್ಯ ಕಳ್ಳರಾದ ಆಂದ್ರಪ್ರದೇಶ ರಾಜ್ಯದ ಹಿಂಧೂಪುರ ಟೌನ್ ನ 1] ಇಂತಿಯಾಜ್ 2] ಶಬ್ಬೀರ್.ಪಿ 3] ಶೇಖ್ ಶಾಹಿದ್.ಎಸ್ 4] ಕಲೀಂ ಬಾಷಾ.ಡಿ 5] ಇಮ್ರಾನ್ ಬೇಗ್.ಬಿ @ ಇಮ್ಮು ಅಕ್ಕಿರಾಂಪುರ ಗ್ರಾಮದ 6] ನಯಾಜ್ 7] ಸಿದ್ದರಾಜು.ಆರ್ ಕೊರಟಗೆರೆ ಟೌನ್ ನ 8] ಸಮೀಉಲ್ಲಾ ರವರುಗಳನ್ನು ಪತ್ತೆ ಮಾಡಿ ದಸ್ತಗಿರಿ ಮಾಡಿ, ಒಟ್ಟು 4,80,000-00 ರೂ ಬೆಲೆ ಬಾಳುವ ಅಲ್ಯುಮಿನಿಯಂ ವೈರ್ ಗಳನ್ನು ಪತ್ತೆ ಮಾಡಿರುತ್ತಾರೆ. ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಶ್ರಮಿಸಿದ ವಿಶೇಷ ತಂಡವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ.ಮತಿ.ಡಾ.ದಿವ್ಯಾಗೋಪಿನಾಥ್ ಐ.ಪಿ.ಎಸ್ ರವರು ಪ್ರಶಂಸಿರುತ್ತಾರೆ.


Crime Incidents 29-08-17

ತಾವರೇಕೆರೆ ಪೊಲೀಸ್ ಠಾಣೆ ಮೊ.ಸಂ  117/17 ಕಲಂ 379 IPC 21[1] , 21[2] , 21[4A] , MMRD ACT, & 42 , 44 KMMCR

 

ದಿನಾಂಕ: 28-08-2017 ರಂದು  ASI ರಂಗನಾಥರವರು ನೀಡಿದ ವರದಿಯ ಸಾರಾಂಶ ದಿನಾಂಕ-28-08-2017 ರಂದು ಮುಂಜಾನೆ 05-45 ಗಂಟೆ ಸಮಯದಲ್ಲಿ ರಾತ್ರಿ ಗಸ್ತು ಮುಗಿಸಿಕೊಂಡು ಠಾಣೆಯಲ್ಲಿ ವಿಶ್ರಾಂತಿಯಲ್ಲಿರುವಾಗ ತಾವರೆಕೆರೆ ಪೊಲೀಸ್ ಠಾಣಾ ಸರಹದ್ದು, ಹುಣಸೇಹಳ್ಳಿ ಸಮೀಪದ ಸರ್ಕಾರಿ ಸುವರ್ಣಮುಖಿ  ಹಳ್ಳದಲ್ಲಿ ಯಾರೋ ಮರಳನ್ನು ಕಳ್ಳತನದಿಂದ ಟ್ರಾಕ್ಟರಗೆ ತುಂಬಿ ಮಾರಾಟ ಮಾಡಲು ಸಾಗಿಸುತ್ತಿರುತ್ತಾರೆಂತ PSI ರವರು ನೀಡಿದ ಮಾಹಿತಿ ಮೇರೆಗೆ HC-392 ಆನಂದ್ ರವರನ್ನು ಕೂಡಲೇ ಠಾಣೆಗೆ ಕರೆಸಿಕೊಂಡು  ಮೇಲ್ಕಂಡ ಸ್ಥಳಕ್ಕೆ ಮುಂಜಾನೆ ಸುಮಾರು 06-30 ಗಂಟೆಗೆ ಹೋಗಿ, ನೋಡಲಾಗಿ, ಹುಣಸೇಹಳ್ಳಿ ಸಮೀಪವಿರುವ ಸರ್ಕಾರಿ ಸುವರ್ಣಮುಖಿ ಹಳ್ಳದಲ್ಲಿ ಟ್ರಾಕ್ಟರ್ ನ್ನು ನಿಲ್ಲಿಸಿಕೊಂಡು ಮರಳು ತುಂಬುತ್ತಿದ್ದವರು, ನಮ್ಮನ್ನು ನೋಡಿ ಮರಳು ತುಂಬಿದ ಟ್ರಾಕ್ಟರ್ ನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಲು ಪ್ರಯತ್ನಿಸಿದವರನ್ನು  ಬೆನ್ನಟ್ಟಿ ಹಿಡಿದು ಹೆಸರು ಕೇಳಲಾಗಿ ಭೂತರಾಜು ಬಿನ್ ರಾಮಲಿಂಗಪ್ಪ 24ವರ್ಷ ಡ್ರೈವರ್ ಕೆಲಸ ಕುಂಚಿಟಿಗರು ಕೆ.ರಂಗನಹಳ್ಳಿ ಸಿರಾ ತಾಲೂಕ್  ನಾನು ಈ ಟ್ರಾಕ್ಟರನ ಚಾಲಕನಾಗಿದ್ದು ಓಡಿಹೋದ ನವೀನಕುಮಾರ ಬಿನ್ ಕರಿಯಣ್ಣ ಕೆ.ರಂಗನಹಳ್ಳಿ ಹಾಗೂ ಈ ಟ್ರಾಕ್ಟರನ ಮಾಲೀಕರು ಸೇರಿಕೊಂಡು ಮರಳು ತುಂಬಲು ಬಂದಿದ್ದು ಎಂತ ತಿಳಿಸಿದ್ದು. ನಂತರ ಟ್ರಾಕ್ಟರ್ ನ ಬಳಿ  ಹೋಗಿ, ನೋಡಲಾಗಿ AP-26 AF-0034 ನೇ ಟ್ರಾಕ್ಟರ್ ಇಂಜಿನ್ ಆಗಿದ್ದು, ಟ್ರೈಲರ್ ನಂಬರ್ AP-26 AF-0035 ಆಗಿರುತ್ತೆ. ಈ ಟ್ರಾಕ್ಟರ್ ಟ್ರೈಲರ್ ನಲ್ಲಿ ಪೂರಾ ಮರಳು ಲೋಡ್ ತುಂಬಿರುತ್ತೆ.ಹಾಗೂ ಸ್ಥಳದಲ್ಲಿ 4 ಬಾಂಡ್ಲಿ,2 ಸಲಾಕೆ ಇದ್ದು. ಸದರಿ ಟ್ರಾಕ್ಟರ್ ನ ಕಾವಲಿಗೆ ಸ್ಥಳದಲ್ಲಿ HC-392 ಆನಂದ್ ರವರನ್ನು ಬಿಟ್ಟು.ಸಿಕ್ಕಿಬಿದ್ದ ಆರೋಪಿ ಭೂತರಾಜುನನ್ನು ವಶಕ್ಕೆ ಪಡೆದು ಠಾಣೆಗೆ ಕರೆದುಕೊಂಡು ಬಂದಿರುತ್ತೆ. ಈ ಟ್ರಾಕ್ಟರನ ಮಾಲೀಕ ಮತ್ತು ಚಾಲಕ ಭೂತರಾಜು ಹಾಗೂ ಓಡಿಹೋದ ನವೀನಕುಮಾರ ಬಿನ್ ಕರಿಯಣ್ಣ ಕೆ.ರಂಗನಹಳ್ಳಿ ರವರುಗಳು  ಸೇರಿಕೊಂಡು  ಸರ್ಕಾರದ ಯಾವುದೇ ಪರವಾನಗಿ ಇಲ್ಲದೇ ಅಕ್ರಮವಾಗಿ ಮರಳನ್ನು ಕಳ್ಳತನದಿಂದ ತುಂಬಿ  ಮಾರಾಟ ಮಾಡಲು ಸಾಗಾಣಿಕೆ ಮಾಡುತ್ತಿದ್ದು ಕಂಡು ಬಂದಿದ್ದು ಇವರುಗಳ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಲು ಸೂಚಿಸಿರುತ್ತದೆ.

 

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ-154/2017 ಕಲಂ 279,337 ಐಪಿಸಿ ರೆ/ವಿ 134(ಎ)&(ಬಿ), 187 ಐಎಂವಿ ಆಕ್ಟ್

ದಿನಾಂಕ-28-08-2017 ರಂದು ಮಧ್ಯಾಹ್ನ 1-00 ಗಂಟೆಗೆ ಪಿರ್ಯಾದಿಯಾದ ಗಿರಿಯಪ್ಪ ಬಿನ್ ಭೈರಪ್ಪ, 46 ವರ್ಷ, ಒಕ್ಕಲಿಗರು, ಜಿರಾಯ್ತಿ, ಶೆಟ್ಟಪ್ಪನಹಳ್ಳಿ, ಗೂಳೂರು ಹೋಬಳಿ, ತುಮಕೂರು ತಾಲ್ಲೂಕು & ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ನನ್ನ ಅತ್ತೆಯಾದ ಅಂದರೆ ನನ್ನ ತಂದೆಯ ಅಕ್ಕಳಾದ ಸುಮಾರು 60 ವರ್ಷ ವಯಸ್ಸಿನ ಗಂಗಮ್ಮ ರವರು ಅವಿವಾಹಿತರಾಗಿದ್ದು, ಹೆಬ್ಬೂರು ಹೋಬಳಿ, ಬೊಮ್ಮನಹಳ್ಳಿ ಗ್ರಾಮದಲ್ಲಿ ಒಬ್ಬರೇ ವಾಸವಾಗಿರುತ್ತಾರೆ. ನನ್ನ ಅತ್ತೆ ಗಂಗಮ್ಮ ರವರು ದಿನಾಂಕ:26-08-2017 ರಂದು ಬೊಮ್ಮನಹಳ್ಳಿ ಗ್ರಾಮದಿಂದ ಶೆಟ್ಟಪ್ಪನಹಳ್ಳಿ ಗ್ರಾಮದ ನಮ್ಮ ಮನೆಗೆ ಬಂದಿದ್ದು, ನಂತರ ದಿನಾಂಕ:27-08-2017 ರಂದು ವಾಪಸ್ ಊರಿಗೆ ಹೋಗುವುದಾಗಿ ಹೇಳಿದ್ದು, ನಾನು ನನ್ನ ಬಾಬ್ತು ದ್ವಿಚಕ್ರ ವಾಹನದಲ್ಲಿ ಮದ್ಯಾಹ್ನ ನಾಗವಲ್ಲಿಯ ಬಸ್‌ ನಿಲ್ದಾಣಕ್ಕೆ ಕರೆದುಕೊಂಡು ಬಂದೆನು. ಮದ್ಯಾಹ್ನ ಸುಮಾರು 01-00 ಗಂಟೆ ಸಮಯದಲ್ಲಿ ನಾಗವಲ್ಲಿಯ ಬಸ್‌ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಾ ನಿಂತಿರುವಾಗ್ಗೆ, ತುಮಕೂರಿನ ಕಡೆಯಿಂದ ಬಂದ ಕೆಎ-44-795 ನೇ ಖಾಸಗಿ ಬಸ್ಸಿನ ಚಾಲಕ ತನ್ನ ಬಸ್ಸನ್ನು ನಾಗವಲ್ಲಿ ಬಸ್‌ ನಿಲ್ದಾಣದಲ್ಲಿ ನಿಲ್ಲಿಸಿದ್ದು, ನನ್ನ ಅತ್ತೆ ಗಂಗಮ್ಮ ರವರು ಸದರಿ ಬಸ್‌ನ ಮುಂದಿನ ಡೋರ್‌ನಲ್ಲಿ ಹತ್ತುತ್ತಿರುವಾಗ್ಗೆ, ಸದರಿ ಬಸ್ಸಿನ ಚಾಲಕ ತನ್ನ ಬಸ್ಸನ್ನು ಅಜಾಗರೂಕತೆಯಿಂದ ಏಕಾಏಕಿ ಮುಂದಕ್ಕೆ ಚಲಿಸಿದ್ದರಿಂದ ನನ್ನ ಅತ್ತೆ ಗಂಗಮ್ಮ ರವರು ಬಸ್ಸಿನ ಡೋರ್‌ನ ಮೆಟ್ಟಿಲಿನಿಂದ ಕೆಳಗೆ ಬಿದ್ದರು, ಬೀಳುವಾಗ ಬಸ್ಸಿನ ಬಾಡಿ ನನ್ನ ಅತ್ತೆ ಗಂಗಮ್ಮ ರವರ ಬಲಗಾಲಿಗೆ ಹೊಡೆದು ಕಾಲಿಗೆ ತೀವ್ರತರವಾದ ಗಾಯವಾಯಿತು. ನಂತರ ಅಲ್ಲಿಯೇ ಇದ್ದ ನಾನು ಮತ್ತು ದೊಮ್ಮನಕುಪ್ಪೆ ಗ್ರಾಮದ ವಾಸಿಯಾದ ರಾಜಣ್ಣ ಬಿನ್ ಲೇ|| ಗಂಗಯ್ಯ ಇಬ್ಬರೂ ಸೇರಿಕೊಂಡು ನನ್ನ ಅತ್ತೆ ಗಂಗಮ್ಮ ರವರನ್ನು ಉಪಚರಿಸಿದೆವು. ಅಫಘಾತಪಡಿಸಿದ ಬಸ್ಸಿನ ಚಾಲಕನು ತನ್ನ ಬಸ್ಸನ್ನು ಸ್ಥಳದಲ್ಲೇ ಬಿಟ್ಟು ಓಡಿ ಹೋದನು. ನಂತರ ಸ್ಥಳಕ್ಕೆ ಬಂದ 108 ಆಂಬುಲೆನ್ಸ್‌‌‌ನಲ್ಲಿ ಗಾಯಗೊಂಡಿದ್ದ ನನ್ನ ಅತ್ತೆ ಗಂಗಮ್ಮ ರವರನ್ನು ನಾನು ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದೆನು. ನಾನು ನನ್ನ ಅತ್ತೆ ಗಂಗಮ್ಮ ರವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದರಿಂದ ಈ ದಿವಸ ತಡವಾಗಿ ಬಂದು ಅಪಘಾತಪಡಿಸಿದ ಕೆಎ-44-795 ನೇ ಖಾಸಗಿ ಬಸ್ಸಿನ ಚಾಲಕನ ಮೇಲೆ ಕಾನೂನು ರೀತ್ಯಾ ಮುಂದಿನ ಕ್ರಮ ಜರುಗಿಸಬೇಕೆಂದು ಈ ಮೂಲಕ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ. ಅಫಘಾತಪಡಿಸಿದ ಬಸ್ಸು ಸ್ಥಳದಲ್ಲೇ ಇರುತ್ತೆ ಎಂದು ನೀಡಿದ ಲಿಖಿತ ದೂರನ್ನು ಪಡೆದು ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

ಹೆಬ್ಬೂರು  ಪೊಲೀಸ್ ಠಾಣಾ ಯು.ಡಿ.ಆರ್‌. ನಂ-21/2017 ಕಲಂ 174 ಸಿಆರ್‌ಪಿಸಿ

ದಿನಾಂಕ-28-08-2017 ರಂದು ಮಧ್ಯಾಹ್ನ 12-30 ಗಂಟೆಗೆ ಪಿರ್ಯಾದಿಯಾದ ಎಸ್ ಗಂಗಯ್ಯ ಬಿನ್ ಲೇಟ್ ಸಿದ್ದಯ್ಯ, 72 ವರ್ಷ, ಜಿರಾಯ್ತಿ, ಬಿದರಕಟ್ಟೆ ಗ್ರಾಮ, ಗೂಳೂರು ಹೋಬಳಿ, ತುಮಕೂರು ತಾಲ್ಲೂಕು & ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಿದ್ದು, ನನಗೆ 4 ಜನ ಹೆಣ್ಣು ಮಕ್ಕಳು ಮತ್ತು 32 ವರ್ಷದ ಸಿದ್ದಲಿಂಗೇಗೌಡ ಎಂಬುವವನು ಒಬ್ಬನೇ ಮಗನಿದ್ದು ವ್ಯವಸಾಯ ಮಾಡಿಕೊಂಡು ಇದ್ದೇವು. ದಿನಾಂಕ-27/08/2017 ರಂದು ಭೆಳಿಗ್ಗೆ ನನ್ನ ಮಗನಿಗೆ ಸುಗ್ಗನಹಳ್ಳಿ ಬಳಿ ಇರುವ ಶ್ರೀ ಲಕ್ಷ್ಮೀರಂಗನಾಥಸ್ವಾಮಿಯ ದೇವಸ್ಥಾನಕ್ಕೆ ಹೋಗಲು ತಿಳಿಸಿದ್ದು, ಅದರಂತೆ ನನ್ನ ಮಗ ಸ್ನಾನ ಮಾಡಲು ಹಂಡೆಯ ಒಲೆಗೆ ಬೆಂಕಿ ಹಚ್ಚಿ ಮನೆಯ ಬಳಿ ಇರುವಾಗ ಆದೇ ಸಮಯಕ್ಕೆ ಮಗನು ಸ್ನೇಹಿತರ ಜೊತೆ ಮಾತನಾಡಿಕೊಂಡು ಬೆಳಿಗ್ಗೆ 9-00 ಗಂಟೆಗೆ ಮನೆಯಿಂದ ಹೊರಗಡೆ ಹೋದನು, ಅದೇ ದಿನ ಬೆಳಿಗ್ಗೆ 11-45 ಗಂಟೆಯಲ್ಲಿ ನಮ್ಮ ಮನೆಯ ಬಳಿ ಇದ್ದಾಗ ನಮ್ಮ ಗ್ರಾಮದವರು ಬಂದು ನಿನ್ನ ಮಗ ಸಿದ್ದಲಿಂಗೇಗೌಡ ಚಿಕ್ಕಕೊರಟಕೆರೆ ಬಳಿ ಇರುವ ದೇವರ ಅಮಾನಿಕೆರೆಯಲ್ಲಿ ನೀರಿಗೆ ಬಿದ್ದು ಮೃತಪಟ್ಟಿರುತ್ತಾನೆಂದು ತಿಳಿಸಿದರು, ನಾನು ಕೂಡಲೆ ದೇವರ ಅಮಾನಿಕೆರೆ ಬಳಿ ಬಂದು ವಿಷಯ ತಿಳಿಯಲಾಗಿ ನಮ್ಮ ಗ್ರಾಮದ ಚಿಕ್ಕ ಮಕ್ಕಳು ಗಣಪತಿ ಇಟ್ಟಿದ್ದು, ಟ್ರ್ಯಾಕ್ಟರ್‌ನಲ್ಲಿ ಕೆರೆಯ ಬಳಿ ಬಿಡಲು ಬಂದಾಗ ನನ್ನ ಮಗ ಸಿದ್ದಲಿಂಗೇಗೌಡ  ಸಹ ಜೊತೆಯಲ್ಲಿ ಬಂದು ಸುಮಾರು 11-30 ಗಂಟೆಯಲ್ಲಿ ಗಣಪತಿ ವಿಸರ್ಜನೆ ಮಾಡಲು ದೇವರ ಕೆರೆಯ ನೀರಿನಲ್ಲಿ ಈಜಲು ಹೋಗಿ ಸುಸ್ತಾಗಿ ಕೆರೆಯ ನೀರಿನಲ್ಲಿ ಮುಳುಗಿ ಮೇಲಕ್ಕೆ ಬಂದಿರುವುದಿಲ್ಲವೆಂತಾ ತಿಳಿಯಿತು, ನಂತರ ಈ ದಿನ ಅಂದರೆ ದಿನಾಂಕ-28/08/2017 ರಂದು ತುಮಕೂರು ನಗರದ ಅಗ್ನಿಶಾಮಕ ಧಳ ಮತ್ತು ಸಾರ್ವಜನಿಕರ ಸಹಾಯದಿಂದ ದೇವರ ಕೆರೆಯಲ್ಲಿ ನನ್ನ ಮಗನ ಮೃತ ದೇಹವು ಮಧ್ಯಾಹ್ನ 12-00 ಗಂಟೆಯಲ್ಲಿ ಪತ್ತೆ ಮಾಡಿ ಕೆರೆಯ ದಡದ ಮೇಲೆ ಮಲಗಿಸಿರುತ್ತಾರೆ, ನನ್ನ ಮಗ ಸಿದ್ದಲಿಂಗೇಗೌಡನು ಗಣಪತಿ ವಿಸರ್ಜನೆ ಮಾಡಿ ಈಜಾಡಿ ಸುಸ್ತಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುತ್ತಾನೆ ವಿನಹ ಬೇರೆ ಯಾವ ಅನುಮಾನಗಳು ಇರುವುದಿಲ್ಲ, ಆದರೂ ಕೂಡ ನನ್ನ ಮಗನ ನಿಜವಾದ ಮರಣ ಕಾರಣ ತಿಳಿಯಲು ಕಾನೂನು ಕ್ರಮ  ಕೈಗೊಳ್ಳಬೇಕೆಂದು ತಮ್ಮಲ್ಲಿ ಕೋರಿದೆ ಎಂದು ನೀಡಿದ ದೂರನ್ನು ಪಡೆದು ಪ್ರಕರಣವನ್ನು ದಾಖಲಿಸಿರುತ್ತೇನೆ.

ಹುಲಿಯೂರುದುರ್ಗ ಪೊಲೀಸ್‌ ಠಾಣಾ 179/2017 ಕಲಂ. 279 337 ಐ ಪಿ ಸಿ

ದಿನಾಂಕ: 28-08-2017 ರಂದು ಸಂಜೆ 05-30 ಗಂಟೆ ಸಮಯದಲ್ಲಿ ಟಿ.ಕೆ.ಗಂಗತಿಮ್ಮಯ್ಯ ಬಿನ್ ಲೇಟ್ ಕೆಂಚಪ್ಪ, ಕುವೆಂಪುನಗರ, ಮಾಗಡಿ ಮೈನ್ ರೋಡ್ ಬೆಂಗಳೂರು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ ದಿನಾಂಕ: 20-08-2017 ರಂದು ಸಂಜೆ ಸುಮಾರು 05-35 ಗಂಟೆಯಲ್ಲಿ ಪಿರ್ಯಾದಿಯ ತಮ್ಮನ ಮಗ ಟಿ.ಎನ್.ಚಂದ್ರಶೇಖರಯ್ಯ ಪೋನ್ ಮಾಡಿ ದೊಡ್ಡಮ್ಮ ಶಾಂತಮ್ಮ ರವರಿಗೆ ಅಪಘಾತವಾಗಿರುತ್ತೆ. ಹುಲಿಯೂರುದುರ್ಗ ಐಬಿ ಪೆಟ್ರೋಲ್ ಬಂಕ್ ಹತ್ತಿರ ಬರುವಂತೆ ತಿಳಿಸಿದ್ದರಿಂದ ಪಿರ್ಯಾದಿಯು ಹುಲಿಯೂರುದುರ್ಗದಿಂದ ಕೂಡಲೇ ಸ್ಥಳಕ್ಕೆ ಹೋಗಿ ನೋಡಲಾಗಿ ಪಿರ್ಯಾದಿಯ ಹೆಂಡತಿ ಶಾಂತಮ್ಮ ರವರಿಗೆ ತಲೆಗೆ ತೀವ್ರ ಸ್ವರೂಪದ ರಕ್ತಗಾಯವಾಗಿದ್ದು ಪ್ರಜ್ಞೆ ಇರಲಿಲ್ಲ. ನಂತರ ಪಿರ್ಯಾದಿ ಮತ್ತು ದ್ವಿಚಕ್ರ ವಾಹನದ ಸವಾರನಾದ ಟಿ.ಎನ್.ಚಂದ್ರಶೇಖರಯ್ಯ ರವರು ಸೇರಿ ಯಾವುದೋ ಕಾರಿನಲ್ಲಿ ಹಾಕಿಕೊಂಡು ಚಿಕಿತ್ಸೆಗಾಗಿ ಬೆಂಗಳೂರು ಗೊರಗುಂಟೆಪಾಳ್ಯದ ಸ್ಪರ್ಶ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲು ಮಾಡಿದ್ದು, ನಂತರ ಪಿರ್ಯಾದಿಯು ಅಪಘಾತದ ಬಗ್ಗೆ ತನ್ನ ತಮ್ಮನ ಮಗನಾದ  ಟಿ.ಎನ್.ಚಂದ್ರಶೇಖರಯ್ಯ ನನ್ನು ಕೇಳಲಾಗಿ “ನಾನು ಕೆಎ-02-ಹೆಚ್.ಕೆ-8262 ನೇ ದ್ವಿಚಕ್ರ ವಾಹನದಲ್ಲಿ ಹಿಂಬದಿಯಲ್ಲಿ ದೊಡ್ಡಮ್ಮರಾದ ಶಾಂತಮ್ಮ ರವರನ್ನು ಕೂರಿಸಿಕೊಂಡು ತಂಗಚ್ಚಿಹಳ್ಳಿಯಿಂದ ಹುಲಿಯೂರುದುರ್ಗಕ್ಕೆ ಬರುತ್ತಿದ್ದಾಗ ಹುಲಿಯೂರುದುರ್ಗ ಐಬಿ ಪೆಟ್ರೋಲ್ ಬಂಕ್ ಮುಂಭಾಗ ರಸ್ತೆಯಲ್ಲಿ ಗುಂಡಿ ಇರುವುದನ್ನು ಗಮನಿಸದೇ ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಹೋಗಿ ರಸ್ತೆಯಲ್ಲಿನ ಗುಂಡಿಯಲ್ಲಿ ಇಳಿಸಿದ್ದರಿಂದ ನಾನು ಮತ್ತು ದೊಡ್ಡಮ್ಮ ಶಾಂತಮ್ಮ ಇಬ್ಬರೂ ದ್ವಿಚಕ್ರ ವಾಹನದ ಸಮೇತ ರಸ್ತೆಯ ಮೇಲೆ ಬಿದ್ದು ಹೋದೆವು. ನನಗೆ ಸಣ್ಣ ಪುಟ್ಟ ಗಾಯವಾಗಿದ್ದು, ದೊಡ್ಡಮ್ಮ ರವರಿಗೆ ತಲೆಗೆ ತೀವ್ರ ರಕ್ತಗಾಯವಾಯಿತು. ಅಪಘಾತವಾದ ಸಮಯ ಸಂಜೆ 05-30 ಗಂಟೆ ಆಗಿತ್ತು ”  ಎಂತ ತಿಳಿಸಿದನು.ಆದ್ದರಿಂದ ಈ ಅಪಘಾತಕ್ಕೆ ಕಾರಣನಾದ ಕೆಎ-02-ಹೆಚ್.ಕೆ-8262 ನೇ ದ್ವಿಚಕ್ರ ವಾಹನದ ಚಾಲಕನಾದ ಟಿ.ಎನ್.ಚಂದ್ರಶೇಖರಯ್ಯ ನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು, ಪಿರ್ಯಾದಿಯು ತನ್ನ ಹೆಂಡತಿ ಶಾಂತಮ್ಮಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಅಲ್ಲಿಯೇ ಇದ್ದು ಈ ದಿನ ತಡವಾಗಿ ಠಾಣೆಗೆ ಬಂದು ದೂರು  ನೀಡುತ್ತಿದ್ದನ್ನು ಪಡೆದು ಪ್ರಕರಣ ದಾಖಲು ಮಾಡಿರುತ್ತೆ.

 

 Monday, 28 August 2017

Court Special Drive Programme.

 


Crime Incidents 28-08-17

ಹೊಸಬಡಾವಣೆ ಪೊಲೀಸ್ ಠಾಣಾ ಮೊ.ಸಂ 102/2017 U/S 380  IPC

 

ದಿನಾಂಕ:-27/08/2017 ರಂದು ಮದ್ಯಾಹ್ನ 01-45 ಗಂಟೆಗೆ ಪಿರ್ಯಾದಿ ಶ್ರೀಮತಿ ಜಲಜ  ಕೋಂ ಲೇಟ್ ಎಸ್, ದೊಡ್ಡಣ್ಣ, ವಾಸ  ನಂ: 4655  1ನೇ ಕ್ರಾಸ್, ಮುನ್ಸಿಪಲ್ ಲೇಔಟ್, ಸಿದ್ದಗಂಗಾ ಬಡಾವಣೆ, ತುಮಕೂರು ವಾಸಿ ರವರು ಠಾಣೆಗೆ ಹಾಜರಾಗಿ ನೀಡಿದ  ದೂರಿನ ಸಾರಾಂಶವೆನೆಂದರೆ  ಪಿರ್ಯಾದಿಯು ಮೂರು ದಿವಸಗಳ ಹಿಂದೆ ಹಬ್ಬದ ಸಲುವಾಗಿ ಮನೆಗೆ ಬೀಗ ಹಾಕಿಕೊಂಡು ಮೈಸೂರಿನಲ್ಲಿರುವ ಕಿರಿಯ ಮಗನ ಮನೆಗೆ ಹೋಗಿದ್ದ ಸಂದರ್ಭದಲ್ಲಿ ಪಿರ್ಯಾದಿ ಹಿರಿಯ ಮಗನಾದ ಆರೋಪಿ ಶುಭಾಷಯ್ ರವರು ಪಿರ್ಯಾದಿ ಮನೆಗೆ ಪ್ರವೇಶ ಮಾಡಿ ಪಿರ್ಯಾದಿಗೆ ಸಂಬಂಧಿಸಿದ  ಸುಮಾರು 12- 15 ಲಕ್ಷ ಬೆಲೆ ಬಾಳುವ ಬೆಳ್ಳಿ ಸಾಮಾನುಗಳನ್ನು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ಕ್ರಮ ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತದೆ.

 

ಕುಣಿಗಲ್ ಪೊಲೀಸ್ ಠಾಣಾ ಮೊ.ನಂ-450/2017, ಕಲಂ-279, 337, 304(ಎ) ಐ.ಪಿ.ಸಿ

ದಿನಾಂಕ: 27-08-2017 ರಂದು ಮಧ್ಯಾಹ್ನ 1-00 ಗಂಟೆ ಸಮಯದಲ್ಲಿ ಈ ಕೇಸಿನ ಪಿರ್ಯಾದಿ ನಾಗರಾಜು @ ಕೀರ್ತಿ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ದಿ; 27-08-17 ರಂದು ಬೆಳಿಗ್ಗೆ 11-30 ಗಂಟೆ ಸಮಯದಲ್ಲಿ ನಾನು ಮತ್ತು ನಮ್ಮ ಗ್ರಾಮದ ನಂಜಪ್ಪ ರವರ ಮಗ ಕೇಶವಮೂರ್ತಿ @ ಸುನಿಲ್ ರವರು ಎನ್.ಹೆಚ್-75 ರಸ್ತೆ, ಬಿದನಗೆರೆ ಯು-ಟರ್ನ್ ಹತ್ತಿರ ಸರ್ವೀಸ್ ರಸ್ತೆಯಲ್ಲಿ ಮಾತನಾಡಿಕೊಂಡು ನಿಂತಿದ್ದೆವು. ಅದೇ ಸಮಯಕ್ಕೆ ಬೆಂಗಳೂರು ಕಡೆಯಿಂದ ಒಂದು ಬೈಕಿನಲ್ಲಿ ಇಬ್ಬರು ಆಸಾಮಿಗಳು ಬೈಕಿನ ಬಲಭಾಗದ ಇಂಡಿಕೇಟರ್ ಹಾಕಿಕೊಂಡು ಯು-ಟರ್ನ್ ನಲ್ಲಿ ಬಿದನಗೆರೆ ಕಡೆಗೆ ಹೋಗಲು ರಸ್ತೆಯ ಎಡಭಾಗದ ಉತ್ತರ ದಿಕ್ಕಿನ ಅಂಚಿನಲ್ಲಿ ರಸ್ತೆಯನ್ನು ದಾಟುತ್ತಿರುವಾಗ, ಅದೇ ಸಮಯಕ್ಕೆ ಎಡೆಯೂರು ಕಡೆಯಿಂದ ಬೆಂಗಳೂರು ಕಡೆಗೆ ಹೋಗಲು ಬಂದಂತಹ ಒಬ್ಬ ಬೈಕ್ ಸವಾರ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಎಡರಸ್ತೆಯ ಅಂಚಿನಲ್ಲಿ ಹೋಗುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆಸಿದನು. ಅಪಘಾತವನ್ನು ನೋಡಿ ಹೋಗಿ ನೋಡಲಾಗಿ ಅಪಘಾತಕ್ಕೀಡಾದ ಬೈಕಿನ ಹಿಒಂಬದಿ ಸವಾರ ಸಾಲುಪಾಳ್ಯ ಗ್ರಾಮದ ಚಿಕ್ಕಬೋರಯ್ಯ ರವರ ಮಗ ಗಂಗಯ್ಯ ಎಂತ ತಿಳಿಯಿತು. ಈತನಿಗೆ ತಲೆಗೆ, ಕೈಕಾಲುಗಳಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದವು. ಬೈಕ್ ಚಾಲನೆ ಮಾಡುತ್ತಿದ್ದವನ ಹೆಸರು ಗಂಗಯ್ಯನ ಮಗ ಚೇತನ್ ಎಂದು ತಿಳಿದು ಬಂದಿತು. ಈತನಿಗೆ ಹೊಟ್ಟೆಗೆ, ಕೈ ಕಾಲುಗಳಿಗೆ ಏಟುಗಳು ಬಿದ್ದಿದ್ದವು. ಅಪಘಾತಕ್ಕೀಡಾದ ಬೈಕ್ ನಂಬರ್ ನೋಡಲಾಗಿ ಕೆಎ-02 ಜೆಕ್ಯೂ-5802 ಆಗಿತ್ತು. ಅಪಘಾತಪಡಿಸಿದ ಬೈಕ್ ನಂಬರ್ ನೋಡಲಾಗಿ ಕೆಎ-05 ಜೆವೈ-6969 ಆಗಿತ್ತು. ನಾವುಗಳು ಗಾಯಾಳುಗಳನ್ನು ಆಂಬುಲೆನ್ಸ್ ನಲ್ಲಿ ಹಾಕಿಕೊಂಡು ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ಬರುತ್ತಿರುವಾಗ ಕುಣಿಗಲ್ ಟೌನ್ ಕಲ್ಲು ಬಿಲ್ಡಿಂಗ್ ಹತ್ತಿರ ಬರುವಷ್ಟರಲ್ಲಿ ಗಂಗಯ್ಯ ರವರು ಮೃತಪಟ್ಟಿರುತ್ತಾರೆ. ಮೃತ ಗಂಗಯ್ಯನನ್ನು ವೈದ್ಯಾಧಿಕಾರಿಗಳಿಗೆ ತೋರಿಸಿ ಮೃತಪಟ್ಟಿರುವುದನ್ನು ಖಚಿತಪಡಿಸಿದ್ದರಿಂದ ಕುಣಿಗಲ್ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇಟ್ಟಿರುತ್ತೇವೆ. ಗಾಯಾಳು ಚೇತನ್ ರವರಿಗೆ ಪ್ರಥಮ ಚಿಕಿತ್ಸೆ ಕೊಡಿಸಿ ವೈದ್ಯರ ಸಲಹೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಎಸಿ ಗಿರಿ ಆಸ್ಪತ್ರೆಗೆ ಕಳುಹಿಸಿ ಕೊಟ್ಟಿರುತ್ತೇವೆ. ಆದ್ದರಿಂದ ತಾವುಗಳು ಅಪಘಾತ ಪಡಿಸಿದ ಕೆಎ-05 ಜೆವೈ-6969 ರ ಬೈಕ್ ಚಾಲಕನ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರನ್ನು ಪಡೆದು ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತೆ,

ಬಡವನಹಳ್ಳಿ ಪೊಲೀಸ್ ಠಾಣಾ ಮೊ ನಂ 73/2017 - ಕಲಂ 279-337 ಐಪಿಸಿ ರೆ/ವಿ  134(ಎ)(ಬಿ)  ಐ ಎಂ ವಿ ಆಕ್ಟ್‌. .

ದಿನಾಂಕ:- 27/08/2017 ರಂದು  ಮದ್ಯಾಹ್ನ 4-00 ಗಂಟೆಗೆ ಪಿರ್ಯಾದಿ ಆರ್‌ ಟಿ ರಂಗನಾಥ ಬಿನ್‌‌‌ ತಿಮ್ಮಣ್ಣ ರಂಟವಾಳ ಗ್ರಾಮ ಎಂಬುವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ,  ದಿನಾಂಕ:26/08/2017 ರಂದು ನನ್ನ ತಮ್ಮ ಮಂಜುನಾಥ ಮಧುಗಿರಿಗೆ ಕೆಲಸಕ್ಕೆ ಹೋಗಿ ಸಂಜೆ ವಾಪಾಸ್ ಬರುವಾಗ ಕೆಎ-06-ಇಕೆ-3216 ನೇ ನಂಬರಿನ ಬಜಾಜ್‌‌ ಡಿಸ್ಕವರಿ ಬೈಕ್‌‌ ನ ಹಿಂಬದಿಯಲ್ಲಿ ಕುಳಿತಿದ್ದು , ಬೈಕ್ ಅನ್ನು ಸಿದ್ದಾಪುರ ಗ್ರಾಮದ ನರಸಿಂಹಮೂರ್ತಿ ಎಂಬುವರು ಓಡಿಸುತ್ತಿದ್ದು, ಕೈಮರ ಮಾರ್ಗವಾಗಿ  ತೊಣಚಗೊಂಡನಹಳ್ಳಿಯ ಹತ್ತಿರ  ಒಂದು ಮನೆಯ ಹತ್ತಿರ ರಾತ್ರಿ 7-30 ಗಂಟೆ ಸಮಯದಲ್ಲಿ ಹೋಗುವಾಗ ಎದುರುಗಡೆಯಿಂದ ಕೆಎ-02-ಎ ಎಫ್‌‌-3691 ನೇ ನಂಬರಿನ ಕಾರನ್ನು ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿ , ನರಸಿಂಹಮೂರ್ತಿ ಓಡಿಸುತ್ತಿದ್ದ ಬೈಕ್‌‌ ಗೆ ಡಿಕ್ಕಿ ಹೊಡೆಸಿದ್ದರಿಂದ ನರಸಿಂಹಮೂರ್ತಿ ಗೆ ಕೈ ಕಾಲುಗಳಿಗೆ ಪೆಟ್ಟುಗಳು ಬಿದ್ದು, ರಕ್ತಗಾಯಗಳಾಗಿರುತ್ತವೆ. ನನ್ನ ತಮ್ಮ ಮಂಜುನಾಥನಿಗೆ ಬಲಗಾಲು ಮುರಿದು ರಕ್ತಗಾಯಗಳಾಗಿದ್ದು, 108 ವಾಹನದಲ್ಲಿ ಮಧುಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನನ್ನ ತಮ್ಮನನ್ನು ತುಮಕೂರಿನಲ್ಲಿ ಆದಿತ್ಯ ನರ್ಸಿಂಗ್‌‌ ಹೋಂಗೆ ದಾಖಲಿಸಿರುತ್ತೇನೆ. ಚಾಲಕ ಕಾರನ್ನು ಬಿಟ್ಟು ಹೋಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಗಾಯಾಳುವಿಗೆ ಚಿಕಿತ್ಸೆ ಕೊಡಿಸಿ ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದು ಚಾಲಕನ ಮೇಲೆ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಅಂಶವಾಗಿರುತ್ತೆ.Sunday, 27 August 2017

Crime Incidents 27-08-17

ವೈ ಎನ್  ಹೊಸಕೋಟೆ  ಪೊಲೀಸ್ ಠಾಣಾ ಮೊ. ನಂ-  84/2017   ಕಲಂ: 32(3)K E Act

ದಿನಾಂಕ:26/08/2017 ರಂದು ರಾತ್ರಿ 7:00 ಗಂಟೆಯಲ್ಲಿ  ಶ್ರೀ ಜಿ.ಟಿ ಶ್ರೀಶೈಲಮೂರ್ತಿ ಸಿ.ಪಿ.ಐ ತಿರುಮಣಿ ವೃತ್ತ ರವರು ನೀಡಿದ ವರದಿ ಅಂಶವೇನೆಂದರೆ  ವೈ ಎನ್ ಹೊಸಕೋಟೆ  ಪೋಲಿಸ್ ಠಾಣಾ ವ್ಯಾಪ್ತಿ  ಮರಿದಾಸನಹಳ್ಳಿ ಗ್ರಾಮದಲ್ಲಿ ಚಂದ್ರಣ್ಣ ಎಂಬುವವರು ತನ್ನ ಪೆಟ್ಟಿಗೆ ಅಂಗಡಿ ಬಳಿ  ಸಾರ್ವಜನಿಕರಿಗೆ ಮದ್ಯಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿದ್ದಾನೆಂತ ಮಾಹಿತಿ ಇದ್ದು ಸ್ಥಳಕ್ಕೆ ಸಿಬ್ಬಂದಿಯಾದ   ಪಿ.ಸಿ:708 ಶೌಕತ್ ಲಾಲಸಾ ಕುರಿ ಹಾಗೂ ಪಂಚಾಯ್ತುದರರೊಂದಿಗೆ ಹೋಗಿ ನೋಡಲಾಗಿ ಕೆಲವು ಗಿರಾಕಿಗಳು ಪೆಟ್ಟಿಗೆ ಅಂಗಡಿ ಬಳಿ ಮದ್ಯ ಕುಡಿಯಲು ಕುಳಿತಿದ್ದು ನಮ್ಮನ್ನು ಕಂಡು ಓಡಿ ಹೋದರು, ನಂತರ ಸ್ಥಳದಲ್ಲಿ ಮದ್ಯ ಕುಡಿಯಲು ಸ್ಥಳಅವಕಾಶ ಮಾಡಿಕೊಟ್ಟಿದ್ದ ವ್ಯಕ್ತಿಯನ್ನು ಹಿಡಿದು  ಹೆಸರು ವಿಳಾಸ ಕೇಳಲಾಗಿ  ಚಂದ್ರಣ್ಣ ಬಿನ್ ಲೇ|| ನಾರಾಯಣಪ್ಪ, 49 ವರ್ಷ, ಗೊಲ್ಲರ ಜನಾಂಗ, ಅಂಗಡಿವ್ಯಾಪಾರ, ಕತಿಕ್ಯಾತನಹಳ್ಳಿ || ಎಂತ ತಿಳಿಸಿದ್ದು ಸ್ಥಳದಲ್ಲಿ ಇದ್ದ ಮದ್ಯದ ಪ್ಯಾಕೆಟ್ ಗಳನ್ನು ಪರಿಶೀಲಿಸಲಾಗಿ ಮದ್ಯ ತುಂಬಿದ್ದ  05  ಓಲ್ಡ್ ಟೆವರಿನ್   180 ಎಂ.ಎಲ್ ನ ಟೆಟ್ರಾ ಪ್ಯಾಕೆಟ್ ಹಾಗೂ   02 ಪ್ಲಾಸ್ಟಿಕ್ ಲೋಟಗಳು ಇದ್ದು ಇವುಗಳ ಒಟ್ಟು ಬೆಲೆ  342=00 ರೂ ಗಳಾಗಿರುತ್ತದೆ , ಇವುಗಳನ್ನು ಪಂಚರ ಸಮಕ್ಷಮ ಪಂಚನಾಮೆ ಮುಖೇನ ಮುಂದಿನ ನಡುವಳಿಕೆಗಾಗಿ ಅಮಾನತ್ತು ಪಡಿಸಿಕೊಂಡು ಠಾಣೆಗೆ ಆರೋಪಿ , ಮಾಲು ಮತ್ತು ಪಂಚನಾಮೆ ಸಹಿತ ಮುಂದಿನ ಕ್ರಮಕ್ಕಾಗಿ ಹಾಜರುಪಡಿಸಿದ್ದನ್ನು ಪಡೆದು ಕೊಂಡು  ಪ್ರಕರಣ ದಾಖಲಿಸಿರುತ್ತದೆ

ಕೆ.ಬಿ.ಕ್ರಾಸ್ ಪೊಲೀಸ್ ಠಾಣಾ ಮೊ ನಂ 64/2017  ಕಲಂ 323,324,504 R/W 34 IPC THE SC/ST U/S 3(1)(S) ACT

ಪಿರ್ಯಾದಿ ಕೃಷ್ಣಮೂರ್ತಿ ಬಿನ್ ಮೂಡಲಗಿರಿಯಪ್ಪ ರವರಿಂದ ದಿನಾಂಕ:-26.08.2017 ರಂದು ಬೆಳಿಗ್ಗೆ 11-30 ಗಂಟೆಗೆ ತಿಪಟೂರು ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವಿನಿಂದ ಪಡೆದುಕೊಂಡ ಹೇಳಿಕೆಯ ಅಂಶವೇನೆಂದರೆ, ದಿನಾಂಕ 24-08-2017 ರಂದು ಹತ್ಯಾಳ್ ಬೆಟ್ಟಗೇಟ್ ನಲ್ಲಿ ನನ್ನ ತಮ್ಮ ವಿನಯಾ ಜಯಣ್ಣನ ಮಗ ಗುರು ಎಂಬುವರ ಬೀಡ ಅಂಗಡಿಯಲ್ಲಿ ಬೀಡ ತಿಂದು ನಂತರ ಮಾತಿಗೆ ಮಾತು ಬೆಳೆದು ಜಗಳವಾಗಿದ್ದು ಇದರ ವಿಷಯವಾಗಿ ದಿನಾಂಕ:-25.08.2017 ರಂದು ರಾತ್ರಿ 08.30 ಗಂಟೆ ಸಮಯದಲ್ಲಿ ನನ್ನ ತಮ್ಮ ವಿನಯನ ಜೊತೆಯಲ್ಲಿ ನಡೆದ ಗಲಾಟೆ ವಿಷಯವನ್ನು ಅಂಗಡಿ ಮಾಲೀಕ ಗುರುವಿನ ತಂದೆ ತಂದೆ ಜಯಣ್ಣರವರನ್ನು ವಿಚಾರ ಕೇಳುತ್ತಿರುವಾಗ್ಗೆ ಗುರು ನಿನ್ನತಾಯಿನಾಕ್ಯಾಯ ಎಂದು ಭೈಯುತ್ತಾ ಮಾದಿಗ ನನ್ನ ಮಕ್ಕಳ ನಿಮ್ಮದೆಲ್ಲ ಜಾಸ್ತಿಯಾಯಿತು ಎಂದು ನೂಕಿದ ಆಗ ಗುಡ್ಡದಪಾಳ್ಯದ ವಾಸಿ ನರಸಿಂಹಮೂರ್ತಿ ರವರ ಮಗ ಸ್ವಾಮಿ ನನ್ನನ್ನು ಹಿಡಿದುಕೊಂಡು ಇವನು ಸಹ ಮಾದಿಗ ನನ್ನ ಮಕ್ಕಳ ಎಂದು ನನ್ನ ಬೆನ್ನಿಗೆ ದೊಣ್ಣೆಯಿಂದ ಹೊಡೆದನು ಮತ್ತು ಕರಿಯ ಗುಡ್ಡದಪಾಳ್ಯದ ವಾಸಿ ಇವನನ್ನು ಬಿಡಬೇಡಿ ಹೊಡಿರಿ ಎಂದು ಕೂಗಿಕೊಂಡು ಸ್ವಾಮಿ ಕೈಯಲ್ಲಿದ್ದ ದೊಣ್ಣೆಯನ್ನು ಕಿತ್ತುಕೊಂಡು ಇವನು ಸಹ ಬೆನ್ನಿಗೆ ಹೊಡೆದನು. ಸ್ವಾಮಿ ಮತ್ತು ಕರಿಯ ನನ್ನ ಬಟ್ಟೆಗಳನ್ನು ಎಳೆದು ಹರಿದು ಹಾಕಿರುತ್ತಾರೆ. ಇದೇ ಸಮಯದಲ್ಲಿ ಅಲ್ಲೇ ಇದ್ದ ನಮ್ಮ ಗ್ರಾಮದ ವಾಸಿಗಳಾದ ಬಸವರಾಜ ಮತ್ತು ತಿಮ್ಮಯ್ಯ ರವರ ಮಗ ಶಶಿಕುಮಾರ್ ರವರುಗಳು ಜಗಳ ಬಿಡಿಸಿದರು. ನಂತರ ನನ್ನನ್ನು 108 ಆಂಬುಲೆನ್ಸ್ ನಲ್ಲಿ ತಿಪಟೂರು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿರುತ್ತಾರೆ. ನನ್ನ ಮೇಲೆ ಗಲಾಟೆ ಮಾಡಿ ಹೊಡೆದು ಜಾತಿ ನಿಂದನೆ ಮಾಡಿರುವವರ ವಿರುದ್ಧ ಕಾನೂನು ರೀತಿಯ ಕ್ರಮ ಜರುಗಿಸಬೇಕೆಂದು ಕೇಳಿಕೊಂಡ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.Saturday, 26 August 2017

Crime Incidents 26-08-17

ಹುಳಿಯಾರು ಪೊಲೀಸ್ ಠಾಣಾ ಮೊ.ನಂ. 112/2017, ಕಲಂ 87 ಕೆ.ಪಿ ಆಕ್ಟ್.

ದಿನಾಂಕ:-25.08.2017 ರಂದು ಸಂಜೆ 06:00 ಗಂಟೆಗೆ ಠಾಣಾ ಪಿ.ಎಸ್.ಐ ರವರು ನೀಡಿದ ಜ್ಞಾಪನದ ಸಾರಾಂಶವೇನೆಂದರೆ, ದಿನಾಂಕ:-25.08.2017 ರಂದು ಮದ್ಯಾಹ್ನ 3.00 ಗಂಟೆಗೆ ನಾನು ಹುಳಿಯಾರು ಪೊಲೀಸ್ ಠಾಣೆಯಲ್ಲಿದ್ದಾಗ ಹುಳಿಯಾರು ಠಾಣಾ ಸರಹದ್ದು ಹುಳಿಯಾರು ಹೋಬಳಿ ಕೆಂಕೆರೆ  ಗ್ರಾಮದ ಸಮೀಪ ಇರುವ ವರಲಮ್ಮ ದೇವಸ್ಥಾನದ  ಹಿಂದೆ ಸಾರ್ವಜನಿಕ ಸ್ಥಳದಲ್ಲಿ ಯಾರೋ ಆಸಾಮಿಗಳು ಹಣವನ್ನು ಪಣವಾಗಿ ಕಟ್ಟಿಕೊಂಡು ಕಾನೂನು ಬಾಹಿರ ಅಂದರ್ - ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿರುವುದಾಗಿ ಮಾಹಿತಿ ಬಂದಿದ್ದು, ಅಕ್ರಮ ಜೂಜಾಟದ  ಮೇಲೆ   ದಾಳಿ  ಮಾಡುವ  ಬಗ್ಗೆ  ನ್ಯಾಯಾಲಯದಿಂದ  ಅನುಮತಿ ಪಡೆದಿದ್ದು, ಠಾಣೆಗೆ ಪಂಚರನ್ನು ಬರಮಾಡಿಕೊಂಡು ಪಂಚರೊಂದಿಗೆ ಸಿಬ್ಬಂದಿಯವರನ್ನು ಕರೆದುಕೊಂಡು ಇಲಾಖಾ ಜೀಪಿನಲ್ಲಿ ಕೆಂಕೆರೆ ಗ್ರಾಮಕ್ಕೆ ಹೋಗಿ  ಗ್ರಾಮದಿಂದ ಸ್ವಲ್ಪ ದೂರದಲ್ಲಿ ಜೀಪನ್ನು ಮರೆಯಲ್ಲಿ ನಿಲ್ಲಿಸಿ ನೋಡಲಾಗಿ ವರಲಮ್ಮನ ದೇವಸ್ಥಾನದ ಹಿಂಭಾಗ  ಸಾರ್ವಜನಿಕ ಸ್ಥಳದಲ್ಲಿ 4 ಜನ ಅಸಾಮಿಗಳು ನೆಲದ ಮೇಲೆ ವೃತ್ತಾಕಾರವಾಗಿ ಕುಳಿತುಕೊಂಡು ಮದ್ಯದಲ್ಲಿ ಒಂದು ಪ್ಲಾಸ್ಟಿಕ್ ಚೀಲವನ್ನು ಹಾಕಿಕೊಂಡು  ಹಣವನ್ನು ಪಣಕ್ಕೆ ಕಟ್ಟಿಕೊಂಡು ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ್ – ಬಾಹರ್ ಎಂತ ಹೇಳುತ್ತಾ ಇಸ್ಪೀಟ್ ಜೂಜಾಟವಾಡುತ್ತಿದ್ದು, ಸದರಿಯವರನ್ನು ಸುತ್ತುವರೆದು ದಾಳಿ ಮಾಡಿ ಮೇಲೆ ಹೇಳದಂತೆ ತಿಳಿಸಿ ಅಸಾಮಿಗಳ ಹೆಸರು ಮತ್ತು ವಿಳಾಸವನ್ನು ತಿಳಿಯಲಾಗಿ 1) ರಾಮಚಂದ್ರ ಬಿನ್ ರಂಗಪ್ಪ, ಕೆಂಕೆರೆ,  ಹುಳಿಯಾರು ಹೋಬಳಿ, ಚಿ. ನಾ ಹಳ್ಳಿ ತಾಲ್ಲೂಕು 2) ಚಂದನ್ ಬಿನ್ ತಮ್ಮಯ್ಯ, ಕೆಂಕೆರೆ, ಹುಳಿಯಾರು ಹೋಬಳಿ, ಚಿ. ನಾ ಹಳ್ಳಿ ತಾಲ್ಲೂಕು 3) ಗಂಗಾಧರಯ್ಯ ಬಿನ್ ಮಲ್ಲಯ್ಯ, ಕೆಂಕೆರೆ, ಹುಳಿಯಾರು ಹೋಬಳಿ, ಚಿ. ನಾ ಹಳ್ಳಿ ತಾಲ್ಲೂಕು 4) ಸಿದ್ದೇಶ್ ಬಿನ್ ಕೊಟ್ಟೂರಪ್ಪ,  ಕೆಂಕೆರೆ, ಹುಳಿಯಾರು ಹೋಬಳಿ, ಚಿ. ನಾ ಹಳ್ಳಿ ತಾಲ್ಲೂಕು ಎಂತ ತಿಳಿಸಿದ್ದು, ಸದರಿ ಆಸಾಮಿಗಳನ್ನು ಹಾಗೂ ಕಾನೂನು ಬಾಹಿರ ಇಸ್ಪೀಟ್ ಜೂಜಾಟಕ್ಕೆ ಪಣವಾಗಿ ಕಟ್ಟಿಕೊಂಡಿದ್ದ ಒಟ್ಟು 1220/- ರೂ ನಗದು ಹಣವನ್ನು ಇಸ್ಪೀಟ್ ಜೂಜಾಟಕ್ಕೆ ಬಳಿಸಿದ್ದ 52 ಇಸ್ಪೀಟ್ ಎಲೆಗಳನ್ನು ಹಾಗೂ ನೆಲಕ್ಕೆ ಹಾಸಿಕೊಂಡಿದ್ದ ಒಂದು ಪ್ಲಾಸ್ಟಿಕ್ ಚೀಲವನ್ನು ಪಂಚರ ಸಮಕ್ಷಮ ಸಂಜೆ   04:45 ಗಂಟೆಯಿಂದ 05:45 ಗಂಟೆಯವರೆಗೆ ಲ್ಯಾಪ್ ಟಾಪ್ ಮೂಲಕ ಪಂಚನಾಮ ಕ್ರಮ ಜರುಗಿಸಿ ವಶಕ್ಕೆ ಪಡೆದು ಮೇಲ್ಕಂಡ ಆಸಾಮಿಗಳು ಮತ್ತು ಮಾಲಿನೊಂದಿಗೆ ವಾಪಸ್ ಠಾಣೆಗೆ ಬಂದು ಠಾಣಾಧಿಕಾರಿಯವರಿಗೆ ಮುಂದಿನ ಕ್ರಮ ಜರುಗಿಸಲು ಸೂಚಿಸಿ ನೀಡಿದ ಜ್ಞಾಪನದಂತೆ ಠಾಣಾ ಮೊ ನಂ-112/2017 ಕಲಂ-87 ಕೆ ಪಿ ಆಕ್ಟ್ ರೀತ್ಯ ಪ್ರಕರಣ ದಾಖಲಿಸಿರುತ್ತೆ.

ಮಧುಗಿರಿ ಪೊಲೀಸ್ ಠಾಣಾ ಮೊ.ನಂ. 163/2017 u/s 354[A],448,323 IPC

ಪಿರ್ಯಾದಿ ದೊಡ್ಡಕ್ಕ ಕೋಂ ಲೇ.ಪಾಪಣ್ಣ, 40 ವರ್ಷ, ಕುರುಬರು, ಕ.ಸಿ ರೊಪ್ಪ, ಕಸಬಾ ಹೋಬಳಿ, ಮಧುಗಿರಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ಪಿರ್ಯಾದಿಯು ದಿನಾಂಕ: 24-08-2017 ರಂದು ಎಂದಿನಂತೆ ರಾತ್ರಿ ತನ್ನ ಮನೆಯಲ್ಲಿ ಮಲಗಿದ್ದಾಗ ರಾತ್ರಿ ಸುಮಾರು 09.30 ಗಂಟೆಯ ಸಮಯದಲ್ಲಿ ಆರೋಪಿ-ಪ್ರಕಾಶನು ಮನೆಯ ಬಾಗಿಲನ್ನು ತಟ್ಟಿದ್ದರಿಂದ, ಪಿರ್ಯಾದಿಯು ತನ್ನ ಮಗನೆಂದು ತಿಳಿದು ಮನೆಯ ಕದವನ್ನು ತೆಗೆದಾಗ ಆತನು ಪಿರ್ಯಾದಿಯ ಮನೆಗೆ ಅಕ್ರಮ ಪ್ರವೇಶ ಮಾಡಿ, ಯಾವುದೋ ಹಳೆಯ ದ್ವೇಶದಿಂದ ಪಿರ್ಯಾದಿಯ ಜುಟ್ಟು ಹಿಡಿದು ಬಿಗಿಯಾಗಿ ಹಿಡಿಕೊಂಡು ಪಿರ್ಯಾದಿಯು ಕಿರುಚಾಡಿದರೂ ಸಹ ಬಿಡದೇ ಎಳೆದಾಡಿ, ಆಕೆಯು ತೊಟ್ಟಿದ್ದ ಬಟ್ಟೆಗಳನ್ನು ಕಿತ್ತು, ತುಟಿ, ಕುತ್ತಿಗೆ, ಎಡಕೈಗೆ ಕಚ್ಚಿ ಗಾಯಗೊಳಿಸಿ, ಮೈಕೈ ನೋವುಂಟು ಮಾಡಿದ್ದು, ಪಿರ್ಯಾದಿಯ ಕಿರುಚಾಟ ಕೇಳಿ ಮಾವನ ಮಗಳು  ಯಶೋದಮ್ಮ ರವರು ಬಿಡಿಸಿಕೊಂಡಿರುತ್ತಾರೆ. ನಂತರ ಯಾವುದೋ ಆಟೋದಲ್ಲಿ ಮಧುಗಿರಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಗ್ರಾಮದಲ್ಲಿ ಸಂಬಂದಿಕರಲ್ಲಿ ವಿಚಾರ ಮಾಡಿ, ಈ ದಿನ ತಡವಾಗಿ ಠಾಣೆಗೆ ಬಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

 


Press Note 25-08-17

ಪತ್ರಿಕಾ ಪ್ರಕಟಣೆ


ತುಮಕೂರು ಜಿಲ್ಲೆಯ ಸಮಸ್ತ ನಾಗರೀಕರಿಗೆ ಗೌರಿ-ಗಣೇಶ ಹಬ್ಬದ ಶುಭಾಷಯಗಳನ್ನು ಜಿಲ್ಲಾ ಪೊಲೀಸ್ ವತಿಯಿಂದ ಕೋರುತ್ತೇವೆ. ಹಬ್ಬದ ಸಂಧರ್ಭದಲ್ಲಿ ಸಾರ್ವಜನಿಕರ ಸುರಕ್ಷತೆ, ಅನುಕೂಲತೆ ಮತ್ತು ಹಿತದೃಷ್ಠಿಯಿಂದ ಸಾರ್ವಜನಿಕರಲ್ಲಿ ಈ ಸಂಧರ್ಭವನ್ನು  ಸಂತೋಷದಿಂದ ಮತ್ತು ಸುರಕ್ಷಿತವಾಗಿ ಆಚರಿಸಲು ತಿಳಿಸಲಾಗಿದೆ.

ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡುವವರು ಪೇಂಡಾಲ್ಗಳಿಗೆ ಆಳವಡಿಸುವ  ವಿದ್ಯುತ್ ಸಂಪರ್ಕವನ್ನು ಸುರಕ್ಷಿತವಾಗಿ ಬೆಸ್ಕಾಂ ನ ಅನುಮತಿ ಪತ್ರದೊಂದಿಗೆ ಪಡೆಯುವುದು. ಹಾಗೂ ಸದಾಕಾಲ ಪೇಂಡಾಲ್ನಲ್ಲಿ ಸ್ವಯಂ ಸೇವಕರು ಇರುವುದು. ಗಣೇಶ ಮೂರ್ತಿಗಳನ್ನು  ವಿಸರ್ಜನೆ ಮಾಡುವ ವೇಳೆ, ಮೆರವಣಿಗೆಯಿಂದ ಇತರೆ ಸಾರ್ವಜನಿಕರಿಗೆ ಅನಗತ್ಯವಾಗಿ ತೊಂದರೆಯಾಗದಂತೆ ನಡೆದುಕೊಳ್ಳುವುದು. ಅದಷ್ಟು ಬೇಗನೆ ಸೂರ್ಯಸ್ತದೊಳಗೆ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡುವುದು. ಹಬ್ಬದ ಪ್ರಯುಕ್ತ ಪೊಲೀಸ್ ಇಲಾಖೆವತಿಯಿಂದ ನೀಡಲಾದ ನಿರ್ದೇಶನಗಳನ್ನು ಪಾಲಿಸ ಬೇಕು ಮತ್ತು ಅಗತ್ಯ ಸಂದರ್ಭಗಳಲ್ಲಿ ಸಂಬಂಧಿಸಿದ ಪೊಲೀಸ್ ಠಾಣೆಗೆ ಸಂಪರ್ಕಿಸುವುದು .

 

ನಿಮ್ಮ ರಕ್ಷಣೆ ನಮ್ಮ ಹೊಣೆ. ಎಲ್ಲಾ ನಾಗರೀಕರಿಗೂ ಮತ್ತೊಮ್ಮೆ ಶುಭ ಕೋರಿ ಸಂತೋಷದಿಂದ ಹಬ್ಬ ಆಚರಿಸುವಿರೆಂದು ಹಾರೈಸುತ್ತೇನೆ.

ಪೊಲೀಸ್‌ ಆಧೀಕ್ಷಕರು

ತುಮಕೂರು ಜಿಲ್ಲೆ ತುಮಕೂರುThursday, 24 August 2017

Adl.SP Madam Report

ದಿನಾಂಕ 23-08-2017 ರಂದು ತುಮಕೂರು ಜಿಲ್ಲಾ  ಹೆಚ್ಚುವರಿ ಪೊಲೀಸ್‌ ಆಧೀಕ್ಷಕರಾಗಿ ಶೋಭರಾಣೆ  ಕೆ.ಎಸ್.ಪಿ.ಎಸ್ ರವರು ಪ್ರಭಾರ ಪೊಲೀಸ್ ಆಧೀಕ್ಷಕರಾಗಿದ್ದ ನಗರ ಉಪ ವಿಭಾಗದ ಡಿ.ವೈ.ಎಸ್.ಪಿ  ನಾಗರಾಜು ರವರಿಂದ ಆಧೀಕಾರ ಸ್ವೀಕರಿಸಿದರು


Page 1 of 4
Start
Prev
1

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 67 guests online
Content View Hits : 229982